೦೦೦ ಸೂಚನೆ ದ್ಯೂತಮುಖದಲಿ ...{Loading}...
ಸೂಚನೆ: ದ್ಯೂತಮುಖದಲಿ ನಿಖಿಳ ರಾಜ್ಯವ
ಸೋತು ತನ್ನನುಜಾತ ಮುನಿ ಸಂ
ಘಾತ ಸಹಿತವವನೀಶ ವನವಾಸಕ್ಕೆ ಹೊರವಂಟ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂ : ದ್ಯೂತದ ಎದುರು ತನ್ನ ಸಮಸ್ತ ರಾಜ್ಯವನ್ನು ಸೋತು ಯುಧಿಷ್ಠಿರ ತನ್ನ ತಮ್ಮಂದಿರ ಮುನಿ ಸಮೂಹದೊಡನೆ ವನವಾಸಕ್ಕೆ ಹೊರಟ
ಪದಾರ್ಥ (ಕ.ಗ.ಪ)
ಮೂಲ ...{Loading}...
ಸೂಚನೆ: ದ್ಯೂತಮುಖದಲಿ ನಿಖಿಳ ರಾಜ್ಯವ
ಸೋತು ತನ್ನನುಜಾತ ಮುನಿ ಸಂ
ಘಾತ ಸಹಿತವವನೀಶ ವನವಾಸಕ್ಕೆ ಹೊರವಂಟ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಕುಂತಿಯ ನಂದನರು ತ
ಮ್ಮಾಳೊಡನೆ ಹೇಳಿದರು ಸೌಭದ್ರಾದಿ ತನಯರಿಗೆ
ಬಾಲಕಿಯ ಬೇಳಂಬವನು ಜೂ
ಜಾಳಿಗಳ ಜಜ್ಝಾರತನವನು
ಕೇಳಿ ಬೈದುದು ಸೇನೆ ಖತಿಯಲಿ ಖಳಚತುಷ್ಟಯವ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುಂತೀತನಯರು ತಮ್ಮ ವೀರರೊಡನೆ ಅಭಿಮನ್ಯುವೇ ಮೊದಲಾದ ಮಕ್ಕಳೊಡನೆ ದ್ರೌಪದಿಗೆ ಉಂಟಾದ ದುಃಖಗಳನ್ನು ಜೂಜಾಳಿಗಳ ದುಷ್ಟತನವನ್ನು ತಿಳಿಸಿದರು. ಅದನ್ನಾಲಿಸಿದ ಸೇನೆ ಕ್ರುದ್ಧರಾಗಿ ಆ ಖಳಚತುಷ್ಟಯವನ್ನು ಬೈದರು.
ಪದಾರ್ಥ (ಕ.ಗ.ಪ)
ಬೇಳೆಂಬ-ದುಃಖ, ಜಜ್ಝಾರತನ-ದುಷ್ಟತನ
ಟಿಪ್ಪನೀ (ಕ.ಗ.ಪ)
ಚತುಷ್ಟಯ : ದುರ್ಯೋಧನ, ಕರ್ಣ, ದುಶ್ಶಾಸನ, ಶಕುನಿ
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಕುಂತಿಯ ನಂದನರು ತ
ಮ್ಮಾಳೊಡನೆ ಹೇಳಿದರು ಸೌಭದ್ರಾದಿ ತನಯರಿಗೆ
ಬಾಲಕಿಯ ಬೇಳಂಬವನು ಜೂ
ಜಾಳಿಗಳ ಜಜ್ಝಾರತನವನು
ಕೇಳಿ ಬೈದುದು ಸೇನೆ ಖತಿಯಲಿ ಖಳಚತುಷ್ಟಯವ ॥1॥
೦೦೨ ಎತ್ತಿತೀ ಪಾಳಯವು ...{Loading}...
ಎತ್ತಿತೀ ಪಾಳಯವು ನಿಜಪುರ
ದತ್ತ ತಿರುಗಿತು ಜನಜನಿತ ರಾ
ಜೋತ್ತಮನ ಕಡೆಯಾಯ್ತು ಸತ್ಯಕ್ಷಮೆ ಪರಾಕ್ರಮಕೆ
ಇತ್ತಲಡುಪಾಯ್ಬೇಗೆ ಬಿಸುಗುದಿ
ಕಿತ್ತಡವು ಕಾರ್ಪಣ್ಯ ಕಪಟ ಖ
ಳೋತ್ತಮರ ಹೃದಯದಲಿ ಹುದುಗಿತು ನೃಪತಿ ಕೇಳ್ ಎಂದ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಲ್ಲಿ ಪಾಳಯ ಬಿಟ್ಟಿದ್ದ ಸೈನ್ಯ ಮತ್ತೆ ಪಟ್ಟಣದ ಕಡೆಗೆ ಹೊರಟಿತು. ಸಮಸ್ತರೂ ಸತ್ಯ ಕ್ಷಮೆ ಪರಾಕ್ರಮಗಳ ಪಕ್ಷದಲ್ಲಿದ್ದ ರಾಜೋತ್ತಮನಾದ ಯುಧಿಷ್ಠಿರನ ಕಡೆಗಿದ್ದರು. ಈ ಕಡೆ ಖಳೋತ್ತಮರ ಹೃದಯದಲ್ಲಿ ವ್ಯಥೆ, ಬೇಗೆ, ಬೇಗುದಿ, ಅಸಮಾಧಾನ, ಕಾರ್ಪಣ್ಯ, ಕಪಟಗಳು ತುಂಬಿದುವು.
ಪದಾರ್ಥ (ಕ.ಗ.ಪ)
ಅಡುಪಾಯ-ವ್ಯಥೆ, ಕಿತ್ತಡ-ಅಸಮಾಧಾನ
ಮೂಲ ...{Loading}...
ಎತ್ತಿತೀ ಪಾಳಯವು ನಿಜಪುರ
ದತ್ತ ತಿರುಗಿತು ಜನಜನಿತ ರಾ
ಜೋತ್ತಮನ ಕಡೆಯಾಯ್ತು ಸತ್ಯಕ್ಷಮೆ ಪರಾಕ್ರಮಕೆ
ಇತ್ತಲಡುಪಾಯ್ಬೇಗೆ ಬಿಸುಗುದಿ
ಕಿತ್ತಡವು ಕಾರ್ಪಣ್ಯ ಕಪಟ ಖ
ಳೋತ್ತಮರ ಹೃದಯದಲಿ ಹುದುಗಿತು ನೃಪತಿ ಕೇಳೆಂದ ॥2॥
೦೦೩ ರವಿಯುದಯದಲಿ ಕೌರವೇನ್ದ್ರನ ...{Loading}...
ರವಿಯುದಯದಲಿ ಕೌರವೇಂದ್ರನ
ಭವನಕೈತಂದನು ಕುಠಾರರ
ಜವಳಿಯನು ಕರೆಸಿದನು ರಾಧಾಸುತನ ಸೌಬಲನ
ಅವನಿಪತಿ ಗಾಂಧಾರಿಯರು ಪಾಂ
ಡವರ ಮನ್ನಿಸಿ ಕಳುಹಿದರು ತ
ಮ್ಮವನಿಗೈದಿದರೆಂದನಾ ದುಶ್ಯಾಸನನು ನಗುತ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೂರ್ಯೋದಯವಾದಾಗ ಕೌರವೇಂದ್ರ ತನ್ನ ರಾಜಭವನಕ್ಕೆ ಬಂದ. ಕುಠಾರದ್ವಯರಾದ ಕರ್ಣ ಶಕುನಿಗಳನ್ನು ಕರೆಸಿದ. ಆಗ ದುಶ್ಶಾಸನ ಹೇಳಿದ. ಧೃತರಾಷ್ಟ್ರ ರಾಜ ಮತ್ತು ಗಾಂಧಾರಿಯರು ಪಾಂಡವರನ್ನು ಗೌರವಿಸಿ ಕಳಿಸಿಕೊಟ್ಟರು. ಅವರು ತಮ್ಮ ರಾಜ್ಯಕ್ಕೆ ಹೊರಟರು ಎಂದು ನಕ್ಕ.
ಪದಾರ್ಥ (ಕ.ಗ.ಪ)
ಜವಳಿ-ಜೋಡಿ
ಮೂಲ ...{Loading}...
ರವಿಯುದಯದಲಿ ಕೌರವೇಂದ್ರನ
ಭವನಕೈತಂದನು ಕುಠಾರರ
ಜವಳಿಯನು ಕರೆಸಿದನು ರಾಧಾಸುತನ ಸೌಬಲನ
ಅವನಿಪತಿ ಗಾಂಧಾರಿಯರು ಪಾಂ
ಡವರ ಮನ್ನಿಸಿ ಕಳುಹಿದರು ತ
ಮ್ಮವನಿಗೈದಿದರೆಂದನಾ ದುಶ್ಯಾಸನನು ನಗುತ ॥3॥
೦೦೪ ಮುರಿಮುರಿದು ಪಟ್ಟಣವ ...{Loading}...
ಮುರಿಮುರಿದು ಪಟ್ಟಣವ ನೋಡುತ
ನರ ವೃಕೋದರರೌಡುಗಚ್ಚುತ
ತಿರುಗಿದರು ಗಡ ಗಾಢ ಬದ್ಧಭೃಕುಟಿ ಭೀಷಣರು
ಕರಿಯ ಸೊಗಡಿನ ಮೃಗಪತಿಗೆ ಮೈ
ಹರಿದ ಹಂದಿಗೆ ನೊಂದ ಹಾವಿಂ
ಗರಸ ಮೈ ಚಾಚಿದೆಯಲಾ ನೀನೆಂದನಾ ಶಕುನಿ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮತ್ತೆ ಮುಂದುವರಿದು ಹೋಗುವಾಗ ಅರ್ಜುನ ಭೀಮರು ಪಟ್ಟಣವನ್ನು ನೋಡುತ್ತಾ ಅವಡುಗಚ್ಚುತ್ತಾ ತಿರುಗಿದರು. ಗಾಢವಾಗಿ ಹುಬ್ಬುಗಳನ್ನು ಗಂಟುಹಾಕಿಕೊಂಡಿದ್ದರು. ತುಂಬ ಭಯಂಕರವಾಗಿದ್ದರು ಎಂದ. ಶಕುನಿ. ದುರ್ಯೋಧನನಿಗೆ “ಆನೆಯ ವಾಸನೆ ಹಿಡಿದ ಸಿಂಹಕ್ಕೆ ದೇಹಕ್ಕೆ ಗಾಯವಾದ ಹಂದಿಗೆ ಏಟುತಿಂದು ನೊಂದ ಹಾವಿಗೆ ನೀನು ಸಿಕ್ಕಿಹಾಕಿಕೊಂಡಂತಾಯಿತಲ್ಲಾ” ಎಂದ.
ಪದಾರ್ಥ (ಕ.ಗ.ಪ)
ಸೊಗಡು-ವಾಸನೆ
ಮೂಲ ...{Loading}...
ಮುರಿಮುರಿದು ಪಟ್ಟಣವ ನೋಡುತ
ನರ ವೃಕೋದರರೌಡುಗಚ್ಚುತ
ತಿರುಗಿದರು ಗಡ ಗಾಢ ಬದ್ಧಭೃಕುಟಿ ಭೀಷಣರು
ಕರಿಯ ಸೊಗಡಿನ ಮೃಗಪತಿಗೆ ಮೈ
ಹರಿದ ಹಂದಿಗೆ ನೊಂದ ಹಾವಿಂ
ಗರಸ ಮೈ ಚಾಚಿದೆಯಲಾ ನೀನೆಂದನಾ ಶಕುನಿ ॥4॥
೦೦೫ ಅವರ ಹೆಣ್ಡಿರ ...{Loading}...
ಅವರ ಹೆಂಡಿರ ಮುಂದಲೆಯ ಹಿಡಿ
ದವಗಡವ ಮಾಡಿಸಿದೆ ಪಟ್ಟದ
ಯುವತಿಯಾಕೆಯ ಭಂಗಬಡಿಸಿದೆ ನಿನ್ನಲಾಪನಿತ
ಅವಳ ದೈವೋದಯವದೈಸಲೆ
ಸವಡಿ ಸೀರೆಯ ಸುತ್ತು ಸಡಿಲದು
ನಿವಗದಾಗಳೆ ಮರೆದು ಹಿಂಗಿದುದೆಂದನಾ ಕರ್ಣ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರ ಹೆಂಡಿರನ್ನು ಮುಂದಲೆ ಹಿಡಿದು ಎಳೆಸಿ ಅವಮಾನ ಮಾಡಿದೆ. ಆ ಪಟ್ಟದ ಯುವತಿಯನ್ನು ನಿನ್ನ ಕೈಯಲ್ಲಾದಷ್ಟು ಭಂಗಗೊಳಿಸಿದೆ. ಅವಳ ಭಾಗ್ಯೋದಯವಲ್ಲವೇ? ಜೋಡಿಸೀರೆಯ ಸುತ್ತು ಸಡಿಲವಾಗಲಿಲ್ಲ. ನಿಮಗೆ ಅದಾಗಲೇ ಮರೆತು ಹೋಗಿಬಿಟ್ಟಿತಲ್ಲಾ !" ಎಂದ ಕರ್ಣ
ಪದಾರ್ಥ (ಕ.ಗ.ಪ)
ಮೂಲ ...{Loading}...
ಅವರ ಹೆಂಡಿರ ಮುಂದಲೆಯ ಹಿಡಿ
ದವಗಡವ ಮಾಡಿಸಿದೆ ಪಟ್ಟದ
ಯುವತಿಯಾಕೆಯ ಭಂಗಬಡಿಸಿದೆ ನಿನ್ನಲಾಪನಿತ
ಅವಳ ದೈವೋದಯವದೈಸಲೆ
ಸವಡಿ ಸೀರೆಯ ಸುತ್ತು ಸಡಿಲದು
ನಿವಗದಾಗಳೆ ಮರೆದು ಹಿಂಗಿದುದೆಂದನಾ ಕರ್ಣ ॥5॥
೦೦೬ ಬೊಪ್ಪನಿತ್ತನು ವರವೆನಗದು ...{Loading}...
ಬೊಪ್ಪನಿತ್ತನು ವರವೆನಗದು
ತಪ್ಪಿಸಲು ತೀರುವುದೆ ಭೀಮನ
ದರ್ಪಕರ್ಜುನನುಬ್ಬಟೆಗೆ ಮಾಡಿದೆವು ಮದ್ದುಗಳ
ತಪ್ಪಿಸಿತಲೇ ದೈವಗತಿ ನ
ಮ್ಮಪ್ಪನೇ ಕೆಡಿಸಿದನು ನವಗಿ
ನ್ನಪ್ಪುದಾಗಲಿಯೆಂದು ಸುಯ್ದನು ಕೌರವರರಾಯ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಪ್ಪ ಅವರಿಗೆ ವರವನ್ನು ಕೊಟ್ಟ. ಅದನ್ನು ತಪ್ಪಿಸಲು ಸಾಧ್ಯವೇ ? ಭೀಮನ ದರ್ಪಕ್ಕೂ ಅರ್ಜುನನ ಪರಾಕ್ರಮಕ್ಕೂ ಮದ್ದುಗಳನ್ನು ಮಾಡಿದೆವು. ಆದರೆ ದೈವಗತಿ ತಪ್ಪಿಸಿಬಿಟ್ಟಿತಲ್ಲ ! ನಮ್ಮಪ್ಪನೇ ಎಲ್ಲವನ್ನೂ ಕೆಡಿಸಿಬಿಟ್ಟ. ಇನ್ನು ನಮಗೆ ಆದದ್ದಾಗಲಿ" ಎಂದು ಕೌರವರಾಜ ನಿಟ್ಟುಸಿರು ಬಿಟ್ಟ.
ಪದಾರ್ಥ (ಕ.ಗ.ಪ)
ಉಬ್ಬಟೆ-ಪರಾಕ್ರಮ
ಮೂಲ ...{Loading}...
ಬೊಪ್ಪನಿತ್ತನು ವರವೆನಗದು
ತಪ್ಪಿಸಲು ತೀರುವುದೆ ಭೀಮನ
ದರ್ಪಕರ್ಜುನನುಬ್ಬಟೆಗೆ ಮಾಡಿದೆವು ಮದ್ದುಗಳ
ತಪ್ಪಿಸಿತಲೇ ದೈವಗತಿ ನ
ಮ್ಮಪ್ಪನೇ ಕೆಡಿಸಿದನು ನವಗಿ
ನ್ನಪ್ಪುದಾಗಲಿಯೆಂದು ಸುಯ್ದನು ಕೌರವರರಾಯ ॥6॥
೦೦೭ ಜಯವಹುದೆ ನಿರ್ವೇದದಲಿ ...{Loading}...
ಜಯವಹುದೆ ನಿರ್ವೇದದಲಿ ನಿ
ರ್ಭಯವಹುದೆ ಬಿಸುಸುಯ್ಲಿನಲಿ ನಿ
ರ್ನಯವಹುದೆ ರಿಪು ನೃಪರಿಗಿದು ತಾ ನೀತಿ ಮಾರ್ಗದಲಿ
ನಿಯತವಿದು ನಿಶ್ಯೇಷ ನಿಮ್ಮ
ನ್ವಯಕೆ ನಿರ್ವಾಹವನು ಗಾಂಧಾ
ರಿಯಲಿ ನಿಮ್ಮಯ್ಯನಲಿ ಬೆಸಗೊಳ್ಳೆಂದನಾ ಶಕುನಿ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ವೈರಾಗ್ಯದಿಂದಿದ್ದರೆ ಜಯ ದೊರೆಯುತ್ತದೆಯೋ ? ನಿಟ್ಟುಸಿರು ಬಿಡುತ್ತಿದ್ದರೆ ನಿರ್ಭಯವುಂಟಾಗುತ್ತದೆಯೇ ? ರಾಜನೀತಿಯ ಮಾರ್ಗದಲ್ಲಿ ಇದರಿಂದ ಶತ್ರುರಾಜರ ಮೇಲೆ ನಿರ್ಣಯವಾಗಿ ಏನಾದರೂ ಪ್ರಭಾವವುಂಟಾಗುತ್ತದೆಯೇ? ಇದು ನಿಶ್ಚಯ ನಿಮ್ಮ ವಂಶ ನಿಶ್ಶೇಷವಾಗಿಬಿಡುತ್ತದೆ. ಅದಕ್ಕೆ ಪರಿಹಾರವೇನೆಂದು ಗಾಂಧಾರಿಯಲ್ಲೂ ನಿಮ್ಮ ಅಯ್ಯನಲ್ಲೂ ಬೆಸಗೊಳ್ಳು” ಎಂದು ಶಕುನಿ ಸಲಹೆ ಕೊಟ್ಟ.
ಪದಾರ್ಥ (ಕ.ಗ.ಪ)
ನಿರ್ವೇದ-ವೈರಾಗ್ಯ
ಮೂಲ ...{Loading}...
ಜಯವಹುದೆ ನಿರ್ವೇದದಲಿ ನಿ
ರ್ಭಯವಹುದೆ ಬಿಸುಸುಯ್ಲಿನಲಿ ನಿ
ರ್ನಯವಹುದೆ ರಿಪು ನೃಪರಿಗಿದು ತಾ ನೀತಿ ಮಾರ್ಗದಲಿ
ನಿಯತವಿದು ನಿಶ್ಯೇಷ ನಿಮ್ಮ
ನ್ವಯಕೆ ನಿರ್ವಾಹವನು ಗಾಂಧಾ
ರಿಯಲಿ ನಿಮ್ಮಯ್ಯನಲಿ ಬೆಸಗೊಳ್ಳೆಂದನಾ ಶಕುನಿ ॥7॥
೦೦೮ ಅರಸ ಕೇಳ್ ...{Loading}...
ಅರಸ ಕೇಳ್ ಧೃತರಾಷ್ಟ್ರ ಭೂಪತಿ
ಯರಮನೆಗೆ ನಡೆತಂದರೀ ನಾ
ಲ್ವರು ವಿಷಾದವಿಡಂಬ ವಿಹ್ವಲಕರಣವೃತ್ತಿಯಲಿ
ಪರಿಮಿತದಿ ಕುಳ್ಳಿರಿಸಿದರು ಸಹ
ಚರನ ಶೋಧಿಸಿ ಕಡು ರಹಸ್ಯದೊ
ಳರಸಿಯನು ಬರಹೇಳಿದರು ಗಾಂಧಾರಿ ದೇವಿಯನು ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ ರಾಜ ಅರಮನೆಗೆ ಬಂದಾಗ ಈ ನಾಲ್ಕು ಜನರೂ ವಿಷಾದದ ನಟನೆಗಳಿಂದ ಕಲಕಿಹೋದ ಚಿತ್ತವುಳ್ಳವರಾಗಿ ಬಂದು ಪರಿಮಿತವಾಗಿ ಆತನನ್ನು ಕುಳ್ಳಿರಿಸಿದರು. ಸಹಚರನನ್ನೂ ಶೋಧಿಸಿದರು. ಯಾರಿಗೂ ಬಯಲಾಗದಂತೆ ಅತಿ ರಹಸ್ಯದಿಂದ ಗಾಂಧಾರಿದೇವಿಯನ್ನೂ ಅಲ್ಲಿಗೆ ಕರೆಸಿದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಅರಸ ಕೇಳ್ ಧೃತರಾಷ್ಟ್ರ ಭೂಪತಿ
ಯರಮನೆಗೆ ನಡೆತಂದರೀ ನಾ
ಲ್ವರು ವಿಷಾದವಿಡಂಬ ವಿಹ್ವಲಕರಣವೃತ್ತಿಯಲಿ
ಪರಿಮಿತದಿ ಕುಳ್ಳಿರಿಸಿದರು ಸಹ
ಚರನ ಶೋಧಿಸಿ ಕಡು ರಹಸ್ಯದೊ
ಳರಸಿಯನು ಬರಹೇಳಿದರು ಗಾಂಧಾರಿ ದೇವಿಯನು ॥8॥
೦೦೯ ಅವರ ದಾಸ್ಯವ ...{Loading}...
ಅವರ ದಾಸ್ಯವ ಬಿಡಿಸಿ ನೀ ರಾ
ಜ್ಯವನು ಕರುಣಿಸಿ ನೀತಿಯಲಿ ನಿ
ಮ್ಮವರ ಕಳುಹಿದಿರೆಂದು ಕೇಳಿದೆವಾಯ್ತು ಪರಿತೋಷ
ಅವರು ನಿವಗತಿ ಭಕ್ತರೈ ಬಾಂ
ಧವರಲೇ ತಪ್ಪೇನು ಧರ್ಮ ಪ್ರವರರಿಗೆ
ನೀವೊಲಿದಿರೆಂದನು ಕೌರವರರಾಯ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರ ದಾಸ್ಯವನ್ನು ಬಿಡಿಸಿ ನೀವು ರಾಜ್ಯವನ್ನು ಕರುಣಿಸಿ ನೀತಿಯಿಂದ ನಿಮ್ಮವರನ್ನು ಕಳುಹಿಸಿದಿರಿ ಎಂದು ಕೇಳಿದೆವು. ತುಂಬ ಸಂತೋಷವಾಯಿತು. ಅವರು ನಿಮಗೆ ಅತಿ ಭಕ್ತರಲ್ಲವೆ, ಬಾಂಧವರಲ್ಲವೇ, ತಪ್ಪೇನು ಆ ಧರ್ಮಪ್ರವರರಿಗೆ ನೀವು ಒಲಿದಿರಿ" ಎಂದ ಕೌರವರ ರಾಯ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಅವರ ದಾಸ್ಯವ ಬಿಡಿಸಿ ನೀ ರಾ
ಜ್ಯವನು ಕರುಣಿಸಿ ನೀತಿಯಲಿ ನಿ
ಮ್ಮವರ ಕಳುಹಿದಿರೆಂದು ಕೇಳಿದೆವಾಯ್ತು ಪರಿತೋಷ
ಅವರು ನಿವಗತಿ ಭಕ್ತರೈ ಬಾಂ
ಧವರಲೇ ತಪ್ಪೇನು ಧರ್ಮ ಪ್ರವರರಿಗೆ
ನೀವೊಲಿದಿರೆಂದನು ಕೌರವರರಾಯ ॥9॥
೦೧೦ ನಾವಲೇ ಹೊರಗವರ ...{Loading}...
ನಾವಲೇ ಹೊರಗವರ ಹೆಂಡಿರ
ಹೇವಗೆಡಿಸಿದೆವವರ ಸೋಲಿಸಿ
ಜೀವ ಮಾತ್ರವನುಳುಹಿ ಸೆಳೆದೆವು ಸಕಲ ವಸ್ತುಗಳ
ನೀವು ಕರುಣಿಸಿದಿರಿ ಕೃಪಾರಸ
ಭಾವ ಹಿರಿಯರಲುಂಟೆಲೇ ತ
ಪ್ಪಾವುದೈ ತಪ್ಪಾವುದೆನುತಲ್ಲಾಡಿದನು ಶಿರವ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಾವಲ್ಲವೇ ಹೊರಗಿನವರು ? ಅವರ ಹೆಂಡಿರನ್ನು ಅಪಮಾನಗೊಳಿಸಿದೆವು. ಅವರನ್ನು ಸೋಲಿಸಿ ಜೀವವೊಂದನ್ನು ಬಿಟ್ಟು ಸಕಲ
ವಸ್ತುಗಳನ್ನು ಸೆಳೆದುಕೊಂಡು ಬಿಟ್ಟೆವು. ನೀವು ಅದನ್ನೆಲ್ಲ ಮತ್ತೆ ಅವರಿಗೆ ಕರುಣಿಸಿದಿರಿ. ಹಿರಿಯರಾದ ನಿಮ್ಮಲ್ಲಿ ಕೃಪಾರಸ ಭಾವ ಉಂಟಲ್ಲವೇ ? ಅದರಲ್ಲಿ ತಪ್ಪೇನು ತಪ್ಪೇನು ?” ಎಂದು ತಲೆಯಾಡಿಸಿದ
ಪದಾರ್ಥ (ಕ.ಗ.ಪ)
ಹೇವಗೆಡಿಸಿದವರು-ಅವಮಾನಗೊಳಿಸಿದವರು
ಮೂಲ ...{Loading}...
ನಾವಲೇ ಹೊರಗವರ ಹೆಂಡಿರ
ಹೇವಗೆಡಿಸಿದೆವವರ ಸೋಲಿಸಿ
ಜೀವ ಮಾತ್ರವನುಳುಹಿ ಸೆಳೆದೆವು ಸಕಲ ವಸ್ತುಗಳ
ನೀವು ಕರುಣಿಸಿದಿರಿ ಕೃಪಾರಸ
ಭಾವ ಹಿರಿಯರಲುಂಟೆಲೇ ತ
ಪ್ಪಾವುದೈ ತಪ್ಪಾವುದೆನುತಲ್ಲಾಡಿದನು ಶಿರವ ॥10॥
೦೧೧ ತಾಯೆ ನೇಮವೆ ...{Loading}...
ತಾಯೆ ನೇಮವೆ ಹಗೆಯ ಕೈಯಲಿ
ಸಾಯಲಾರೆವು ಸಾಗರಾಂತದ
ರಾಯರಿಲ್ಲಾ ಹೊರೆಯಲಾಪೆವು ಬೆಂದ ಬಸುರುಗಳ
ಕಾಯಿದನು ಕರುಣದಲಿ ತಂದೆ ಸ
ಹಾಯವಹ ಪಾಂಡವರ ಕೂಡಿಯೆ
ರಾಯ ಬದುಕಿರಲೆಮ್ಮ ಕಳುಹೆಂದೆರಗಿದನು ಪದಕೆ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ತಾಯೆ, ನಮಗೆ ಅಪ್ಪಣೆಯೆ ? ಶತ್ರುಗಳ ಕೈಯಿಂದ ನಾವು ಸಾಯಲಾರೆವು. ಸಾಗರಾಂತದವರೆಗೂ ರಾಜರುಗಳಿಲ್ಲವೇ, ನಮ್ಮ
ಬೆಂದ ಬಸಿರುಗಳನ್ನು ಹೇಗೋ ಹೊರೆಯುತ್ತೇವೆ. ತಂದೆ ನಮ್ಮನ್ನು ಇದುವರೆಗೆ ಕಾಪಾಡಿದರು. ನಿಮಗೆ ಬೆಂಬಲವಾಗುವ ಪಾಂಡವರೊಡಗೂಡಿಯೇ ರಾಜ ಬದುಕಿರಲಿ. ನಮ್ಮನ್ನು ಕಳುಹಿಸು” ಎಂದು ಗಾಂಧಾರಿಯ ಪಾದಗಳಿಗೆ ಎರಗಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ತಾಯೆ ನೇಮವೆ ಹಗೆಯ ಕೈಯಲಿ
ಸಾಯಲಾರೆವು ಸಾಗರಾಂತದ
ರಾಯರಿಲ್ಲಾ ಹೊರೆಯಲಾಪೆವು ಬೆಂದ ಬಸುರುಗಳ
ಕಾಯಿದನು ಕರುಣದಲಿ ತಂದೆ ಸ
ಹಾಯವಹ ಪಾಂಡವರ ಕೂಡಿಯೆ
ರಾಯ ಬದುಕಿರಲೆಮ್ಮ ಕಳುಹೆಂದೆರಗಿದನು ಪದಕೆ ॥11॥
೦೧೨ ಏಕೆ ಬೆಸಗೊಳ್ಳಬಲೆ ...{Loading}...
ಏಕೆ ಬೆಸಗೊಳ್ಳಬಲೆ ಸುತರವಿ
ವೇಕ ವಿಷಮಗ್ರಹ ವಿಕಾರ
ವ್ಯಾಕರಣ ದುರ್ಲಲಿತ ದುಷ್ಕೃತವೀಪ್ರಳಾಪವಿದು
ಈ ಕುಲವನೀ ಪುರವನೀ ಲ
ಕ್ಷ್ಮೀಕರವನೀ ಜಗವನೀ ವಿಭ
ವಾಕೃತಿಯನಂಬುಧಿಯೊಳದ್ದುವ ನಿನ್ನ ಮಗನೆಂದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ ಗಾಂಧಾರಿಯನ್ನು ಕುರಿತು “ಮಗ ಏಕೆ ಹೀಗಾಡುತ್ತಿದ್ದಾನೆ ಕೇಳು. ಸುತರ ಅವಿವೇಕವೆಂಬ ವಿಷಮಗ್ರಹ ವಿಕಾರದಿಂದ,
ಅವ್ಯಾಕರಣ ದುರ್ಲಲಿತ ದುಷ್ಕೃತದಿಂದ ಬಂದಿರುವ ಪ್ರಲಾಪವಿದು. ಈ ಕುಲವನ್ನು ಈ ಪುರವನ್ನು ಈ ಲಕ್ಷ್ಮೀಕರವನ್ನು ಈ ಜಗತ್ತನ್ನು
ಈ ವಿಭವಾಕೃತಿಯನ್ನು ಸಮುದ್ರದಲ್ಲಿ ಮುಳುಗಿಸಿ ಬಿಡುತ್ತಿದ್ದಾನೆ ನಿನ್ನ ಮಗ” ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಏಕೆ ಬೆಸಗೊಳ್ಳಬಲೆ ಸುತರವಿ
ವೇಕ ವಿಷಮಗ್ರಹ ವಿಕಾರ
ವ್ಯಾಕರಣ ದುರ್ಲಲಿತ ದುಷ್ಕೃತವೀಪ್ರಳಾಪವಿದು
ಈ ಕುಲವನೀ ಪುರವನೀ ಲ
ಕ್ಷ್ಮೀಕರವನೀ ಜಗವನೀ ವಿಭ
ವಾಕೃತಿಯನಂಬುಧಿಯೊಳದ್ದುವ ನಿನ್ನ ಮಗನೆಂದ ॥12॥
೦೧೩ ಸರಹಸುಗೆಯಿನ್ದರ್ಧರಾಜ್ಯದ ...{Loading}...
ಸರಹಸುಗೆಯಿಂದರ್ಧರಾಜ್ಯದ
ಸಿರಿಗೆ ಯೋಗ್ಯರು ಬಾಹುಸತ್ವಕೆ
ಸುರರು ಸರಿಯಿಲ್ಲಿವರ ಪಾಡೇ ಮನುಜ ಜಂತುಗಳು
ಚರಿತವೆಂಬರೆ ಋಷಿಗಳಿಗೆ ಗೋ
ಚರಿಸದವರಾಚರಣೆ ನಿನಗೆಂ
ತರಿ ವಿನಾಶನ ಸಿದ್ಧಿಯೆಂದನು ಮಗಗೆ ಧೃತರಾಷ್ಟ್ರ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸರಿಭಾಗವಾಗಿ ಅರ್ಧರಾಜ್ಯಕ್ಕೆ ಪಾಂಡವರು ಅರ್ಹರು. ಅವರು ಬಾಹುಬಲಕ್ಕೆ ದೇವತೆಗಳೂ ಸಾಟಿಯಲ್ಲ. ಇನ್ನು ಮನುಜ ಜಂತುಗಳ ಪಾಡೇನು ? ಅವರ ನಡತೆ ಋಷಿಗಳಲ್ಲಿಯೂ ಕಾಣುವುದಿಲ್ಲ. ಹಾಗಿರುವಾಗ ನಿನಗೆ ಶತ್ರುವಿನ ನಾಶ ಹೇಗೆ ಸಿದ್ಧಿಸೀತು ಎಂದು ನೀನೇ ತಿಳಿದುಕೊ” ಎಂದ ಮಗನಿಗೆ ಧೃತರಾಷ್ಟ್ರ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಸರಹಸುಗೆಯಿಂದರ್ಧರಾಜ್ಯದ
ಸಿರಿಗೆ ಯೋಗ್ಯರು ಬಾಹುಸತ್ವಕೆ
ಸುರರು ಸರಿಯಿಲ್ಲಿವರ ಪಾಡೇ ಮನುಜ ಜಂತುಗಳು
ಚರಿತವೆಂಬರೆ ಋಷಿಗಳಿಗೆ ಗೋ
ಚರಿಸದವರಾಚರಣೆ ನಿನಗೆಂ
ತರಿ ವಿನಾಶನ ಸಿದ್ಧಿಯೆಂದನು ಮಗಗೆ ಧೃತರಾಷ್ಟ್ರ ॥13॥
೦೧೪ ಬೇಹವರು ಸರಿರಾಜ್ಯಕದು ...{Loading}...
ಬೇಹವರು ಸರಿರಾಜ್ಯಕದು ಸಂ
ದೇಹವೇ ಮೇಲವರು ಸತ್ವದ
ಸಾಹಸದ ಸತ್ಯದ ಸದಾಚಾರದ ನಿವಾಸರಲೆ
ಸ್ನೇಹಿತರು ನಿನಗವರ ಮೇಗವ
ಗಾಹಿಸಿದೆವನ್ಯಾಯದಲಿ ಸ
ದ್ರೋಹರಾವಿನ್ನೆಮಗೆ ನೇಮವೆಯೆನುತ ಹೊರವಂಟ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ದುರ್ಯೋಧನನ ಉತ್ತರ “ಸರಿರಾಜ್ಯಕ್ಕೆ ಸಲ್ಲುವವರು ಅವರು, ಆ ವಿಷಯದಲ್ಲಿ ಸಂದೇಹವೇ ? ಅದಲ್ಲದೆ ಅವರು ಸತ್ವ
ಸಾಹಸ ಸತ್ಯ ಸದಾಚಾರಗಳಲ್ಲಿ ನೆಲಸಿದವರು. ನಿಮಗೆ ಸ್ನೇಹಿತರು. ಅವರ ಮೇಲೆ ಅನ್ಯಾಯವಾಗಿ ಆಕ್ರಮಣ ಮಾಡಿದವರು ನಾವೇ.
ನಾವೇ ದ್ರೋಹಿಗಳು, ಅಪ್ಪಣೆ ಕೊಡಿ” ಎಂದು ಅವನು ಹೊರಟೇಬಿಟ್ಟ.
ಪದಾರ್ಥ (ಕ.ಗ.ಪ)
ಅವಗಾಹಿಸು-ಆಕ್ರಮಣ ಮಾಡು
ಮೂಲ ...{Loading}...
ಬೇಹವರು ಸರಿರಾಜ್ಯಕದು ಸಂ
ದೇಹವೇ ಮೇಲವರು ಸತ್ವದ
ಸಾಹಸದ ಸತ್ಯದ ಸದಾಚಾರದ ನಿವಾಸರಲೆ
ಸ್ನೇಹಿತರು ನಿನಗವರ ಮೇಗವ
ಗಾಹಿಸಿದೆವನ್ಯಾಯದಲಿ ಸ
ದ್ರೋಹರಾವಿನ್ನೆಮಗೆ ನೇಮವೆಯೆನುತ ಹೊರವಂಟ ॥14॥
೦೧೫ ಕಲಕಿತರಸನ ಕರಣ ...{Loading}...
ಕಲಕಿತರಸನ ಕರಣ ಕಂಗಳ
ಕುಳಿಗಳಲಿ ನೀರೂರೆತವಕಟಕ
ಟೆಲೆಗೆ ಕರೆಯಾ ಪಾಪಿ ಮಗನನು ಕುರುಕುಲಾಂತಕನ
ಸೆಳೆದು ತಂದರು ಕರ್ಣ ಶಕುನಿಗ
ಳಳಲಿಗನ ತೆಗೆದಪ್ಪಿದರು ಕುರು
ತಿಲಕ ನಿನ್ನುಳಿದೊಡಲ ಹಿಡಿವೆನೆಯೆಂದನಂಧ ನೃಪ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ ರಾಜನ ಅಂತಃಕರಣ ಕಲಕಿತು. ಕಣ್ಣಿನ ಕುಳಿಗಳಲ್ಲಿ ನೀರು ಸ್ರವಿಸತೊಡಗಿತು. “ಅಕಟಕಟ ! ಎಲೇ ಕರೆಯೇ ಆ ನಿನ್ನ ಪಾಪಿ ಮಗನನ್ನು ಕುರುಕುಲಾಂತಕನನ್ನು !“ಎಂದ. ಕರ್ಣ ಶಕುನಿಗಳು ಹೋಗಿ ಅವನನ್ನು ಎಳೆದು ತಂದರು. ಧೃತರಾಷ್ಟ್ರ ದುಃಖಿತನಾದ
ದುರ್ಯೋಧನನನ್ನು ಹಿಡಿದಪ್ಪಿಕೊಂಡು “ಕುರುತಿಲಕ ನಿನ್ನನ್ನು ಬಿಟ್ಟು ನಾನು ಈ ದೇಹದೊಡನೆ ಉಳಿಯುತ್ತೇನೆಯೇ ?” ಎಂದ.
ಪದಾರ್ಥ (ಕ.ಗ.ಪ)
ಅಳಲಿಗ-ದುಃಖಿತ
ಮೂಲ ...{Loading}...
ಕಲಕಿತರಸನ ಕರಣ ಕಂಗಳ
ಕುಳಿಗಳಲಿ ನೀರೂರೆತವಕಟಕ
ಟೆಲೆಗೆ ಕರೆಯಾ ಪಾಪಿ ಮಗನನು ಕುರುಕುಲಾಂತಕನ
ಸೆಳೆದು ತಂದರು ಕರ್ಣ ಶಕುನಿಗ
ಳಳಲಿಗನ ತೆಗೆದಪ್ಪಿದರು ಕುರು
ತಿಲಕ ನಿನ್ನುಳಿದೊಡಲ ಹಿಡಿವೆನೆಯೆಂದನಂಧ ನೃಪ ॥15॥
೦೧೬ ಏನು ಮಾಡುವೆವವರ ...{Loading}...
ಏನು ಮಾಡುವೆವವರ ಕೆಡಿಸುವ
ಡೇನು ಹದನನು ಕಂಡೆ ದೈವಾ
ಧೀನನಿಷ್ಠರ ಮುರಿವುದರಿದನ್ಯಾಯ ತಂತ್ರದಲಿ
ಏನು ನಿನ್ನಭಿಮತವು ನಿನ್ನೊಳ
ಗಾನು ಹೊರಗೇ ಕಂದ ನುಡಿ ದು
ಮ್ಮಾನ ಬೇಡೆನ್ನಾಣೆನುತ ಸಂತೈಸಿದನು ಮಗನ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅವರನ್ನು ಹಾಳುಮಾಡುವುದಕ್ಕೆ ಏನು ಮಾಡೋಣ ? ಏನು ವಿಧಾನವನ್ನು ಯೋಜಿಸುವೆ ? ದೈವಾಧೀನನಿಷ್ಠರಾದ ಅವರನ್ನು ಅನ್ಯಾಯ ತಂತ್ರಗಳಿಂದ ಸೋಲಿಸುವುದು ಸಾಧ್ಯವಿಲ್ಲ. ನಿನ್ನ ಅಭಿಪ್ರಾಯವೇನು ? ನಿನ್ನಲ್ಲಿ ನಾನು ಹೊರಗಿನವನೇ ಕಂದ, ಹೇಳು,
ದುಃಖ ಬೇಡ ನಿನ್ನಾಣೆ” ಎಂದು ಮಗನನ್ನು ಸಂತೈಸಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಏನು ಮಾಡುವೆವವರ ಕೆಡಿಸುವ
ಡೇನು ಹದನನು ಕಂಡೆ ದೈವಾ
ಧೀನನಿಷ್ಠರ ಮುರಿವುದರಿದನ್ಯಾಯ ತಂತ್ರದಲಿ
ಏನು ನಿನ್ನಭಿಮತವು ನಿನ್ನೊಳ
ಗಾನು ಹೊರಗೇ ಕಂದ ನುಡಿ ದು
ಮ್ಮಾನ ಬೇಡೆನ್ನಾಣೆನುತ ಸಂತೈಸಿದನು ಮಗನ ॥16॥
೦೧೭ ನೊನ್ದರವರಗ್ಗಳಿಸಿ ಹೃದಯದೊ ...{Loading}...
ನೊಂದರವರಗ್ಗಳಿಸಿ ಹೃದಯದೊ
ಳೊಂದಿ ಬೆರಸರು ಮರಹು ತೆರಹಿನೊ
ಳಂದಗೆಡಿಸುವರಲ್ಲದುಳುಹರು ನಿನ್ನ ಸಂತತಿಯ
ಒಂದು ಸತ್ತಿಗೆ ನಮ್ಮದಿಲ್ಲಿಗೆ
ನಿಂದುದೆನಿಸಲಿ ನಾವು ನಿಲಲವ
ರೊಂದು ಸತ್ತಿಗೆಯಾಗಿ ಸಲಹಲಿ ಸಕಳ ಭೂತಳವ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅವರು ಅತಿಶಯವಾಗಿ ನೊಂದಿದ್ದಾರೆ. ಹೃತ್ಪೂರ್ವಕವಾಗಿ ನಮ್ಮೊಡನೆ ಹೊಂದಿಕೊಂಡು ಬದುಕಲಾರರು. ಮರೆವಿನಲ್ಲಾಗಲಿ,
ತೆರವಿನಲ್ಲಾಗಲಿ ನಿನ್ನ ವಂಶವನ್ನು ನಾಶ ಮಾಡಿಯಾರೇ ಹೊರತು ಉದ್ಧಾರ ಮಾಡುವವರಲ್ಲ. ಸಮಸ್ತ ಭೂ ತಳವನ್ನೂ ನಾವಿಲ್ಲಿ ಒಂದೇ ಛತ್ರದ ಅಡಿಯಲ್ಲಿ ಆಳಬೇಕು. ಇಲ್ಲವೇ ಒಂದೇ ಛತ್ರದ ಅಡಿಯಲ್ಲಿ ಅವರು ಅಲ್ಲಿ ಆಳಬೇಕು.
ಪದಾರ್ಥ (ಕ.ಗ.ಪ)
ಮೂಲ ...{Loading}...
ನೊಂದರವರಗ್ಗಳಿಸಿ ಹೃದಯದೊ
ಳೊಂದಿ ಬೆರಸರು ಮರಹು ತೆರಹಿನೊ
ಳಂದಗೆಡಿಸುವರಲ್ಲದುಳುಹರು ನಿನ್ನ ಸಂತತಿಯ
ಒಂದು ಸತ್ತಿಗೆ ನಮ್ಮದಿಲ್ಲಿಗೆ
ನಿಂದುದೆನಿಸಲಿ ನಾವು ನಿಲಲವ
ರೊಂದು ಸತ್ತಿಗೆಯಾಗಿ ಸಲಹಲಿ ಸಕಳ ಭೂತಳವ ॥17॥
೦೧೮ ಹುದುವ ಸೈರಿಸಿ ...{Loading}...
ಹುದುವ ಸೈರಿಸಿ ಬಳಸಿದರು ದುರು
ಪದಿಯನವರೈವರು ಧರಿತ್ರಿಯ
ಹುದುವ ಸೈರಿಸಲಾರೆನವರೊಡನಿಂದು ಮೊದಲಾಗಿ
ಒದೆದು ಕಳೆ ನಮ್ಮಿನಿಬರನು ನೇ
ಹದಲಿ ಸಲಹೈವರನು ನೀನಿಂ
ದೊದೆವುದೈವರ ನಮ್ಮ ಹಿಡಿ ಬೇರಿಲ್ಲ ಮತವೆಂದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅವರೇನೋ ಹೊಂದಾಣಿಕೆಯಿಂದ ದ್ರೌಪದಿಯನ್ನು ಐವರೂ ಬಳಸಿಕೊಂಡು ಬದುಕುವರು. ಆದರೆ ರಾಜ್ಯವನ್ನು ಹಾಗೆ ಹಂಚಿಕೊಂಡು ಬದುಕುವುದನ್ನು ನಾವು ಸೈರಿಸಲಾರೆವು. ಇಂದಿನಿಂದ ನಮ್ಮಿಷ್ಟು ಜನರನ್ನು ಒದ್ದು ಆಚೆಗೆ ಕಳಿಸಿಬಿಡು, ಐವರನ್ನೂ ಪ್ರೀತಿಯಿಂದ ಸಲಹು. ನೀನು ಇಂದೇ ಆ ಐವರನ್ನು ಒದ್ದು ನಮ್ಮನ್ನು ಹಿಡಿ ಅಥವಾ ನಮ್ಮನ್ನು ಒದ್ದು ಅವರನ್ನು ಹಿಡಿ” ಎಂದ.
ಪದಾರ್ಥ (ಕ.ಗ.ಪ)
ಹುದು-ಹಂಚಿಕೊಂಡು ಬಾಳುವುದು
ಮೂಲ ...{Loading}...
ಹುದುವ ಸೈರಿಸಿ ಬಳಸಿದರು ದುರು
ಪದಿಯನವರೈವರು ಧರಿತ್ರಿಯ
ಹುದುವ ಸೈರಿಸಲಾರೆನವರೊಡನಿಂದು ಮೊದಲಾಗಿ
ಒದೆದು ಕಳೆ ನಮ್ಮಿನಿಬರನು ನೇ
ಹದಲಿ ಸಲಹೈವರನು ನೀನಿಂ
ದೊದೆವುದೈವರ ನಮ್ಮ ಹಿಡಿ ಬೇರಿಲ್ಲ ಮತವೆಂದ ॥18॥
೦೧೯ ಅನಿಲಜನ ಬಾಯ್ಬಡಿಕತನವ ...{Loading}...
ಅನಿಲಜನ ಬಾಯ್ಬಡಿಕತನವ
ರ್ಜುನನ ಬರಿಬೊಬ್ಬಾಟ ಸಹದೇ
ವನ ಸಗರ್ವದ ಮಾತು ಮೈಯಿಕ್ಕುವವು ಬಳಿಕಿನಲಿ
ಮನೆಮೊಗವ ಕಾಣಿಸದೆ ಘನ ಕಾ
ನನದೊಳಗೆ ಸುಳಿವಂತೆ ಮಂತ್ರವ
ನೆನೆದೆನಿದು ನಿಮ್ಮಡಿಯ ಚಿತ್ತಕೆ ಬಹರೆ ಬೆಸಸೆಂದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಭೀಮನ ಬಾಯ್ಬಡಿಕತನ, ಅರ್ಜುನನ ಬರಿಯ ಬೊಬ್ಬಾಟ, ಸಹದೇವನ ಸಗರ್ವದ ಮಾತು ಎಲ್ಲಾ ಬಿದ್ದು ಉರುಳಿಹೋಗುತ್ತವೆ. ಅವರು ಮತ್ತೆ ಮನೆಯ ಮುಖವನ್ನೇ ಕಾಣದಂತೆ ಅವರು ಗೊಂಡಾರಣ್ಯದಲ್ಲೇ ಸುಳಿದಾಡುತ್ತಿರಬೇಕು ಅಂತಹ ಮಂತ್ರವನ್ನು ಯೋಜಿಸಿದ್ದೇನೆ. ನಿಮ್ಮ ಮನಸ್ಸಿಗೆ ಒಪ್ಪಿಗೆಯಾದರೆ ಹೇಳಿ” ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಅನಿಲಜನ ಬಾಯ್ಬಡಿಕತನವ
ರ್ಜುನನ ಬರಿಬೊಬ್ಬಾಟ ಸಹದೇ
ವನ ಸಗರ್ವದ ಮಾತು ಮೈಯಿಕ್ಕುವವು ಬಳಿಕಿನಲಿ
ಮನೆಮೊಗವ ಕಾಣಿಸದೆ ಘನ ಕಾ
ನನದೊಳಗೆ ಸುಳಿವಂತೆ ಮಂತ್ರವ
ನೆನೆದೆನಿದು ನಿಮ್ಮಡಿಯ ಚಿತ್ತಕೆ ಬಹರೆ ಬೆಸಸೆಂದ ॥19॥
೦೨೦ ಮರುಳು ಮಗನೇ ...{Loading}...
ಮರುಳು ಮಗನೇ ಶಿವ ಶಿವಾ ಮನ
ಬರಡನೇ ತಾನಕಟ ನಿಮ್ಮೈ
ಶ್ವರಿಯ ಹಗೆ ದಾಯಾದ್ಯರುಗಳಭ್ಯುದಯದಲಿ ಸೊಗಸೆ
ದುರುಳರವದಿರು ದೈವಮುಖದೆ
ಚ್ಚರಿಕೆ ಘನಕೆಡರೆಂದು ಮೇಗರೆ
ಹೊರೆಮನದ ಸೂಸಕದ ನೇಹವನರಸುತಿಹೆನೆಂದ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮರುಳು ಮಗನೇ, ಶಿವ ಶಿವಾ ! ನನ್ನ ಮನಸ್ಸೇನು ಬಂಜರಾಗಿಬಿಟ್ಟಿದೆಯೇ ? ಅಯ್ಯೋ, ನಿಮ್ಮ ಐಶ್ವರ್ಯ ನನಗೆ ಶತ್ರುವೇ ?
ದಾಯಾದಿಗಳ ಅಭ್ಯುದಯ ನನಗೆ ಪ್ರಿಯವೆ ? ಆ ದುರುಳರಿಗೆ ದೈವಮುಖದ ಎಚ್ಚರಿಕೆ ಘನವಾಗಿದೆಯೆಂದು ಒಳಗೆ ಮನಸ್ಸು ಹೊರೆಯಾಗಿದ್ದರೂ ಹೊರಗೆ ತೋರಿಕೆಯ ಸ್ನೇಹವನ್ನು ಪ್ರಕಟಿಸುತ್ತಿದ್ದೇನೆ” ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಮರುಳು ಮಗನೇ ಶಿವ ಶಿವಾ ಮನ
ಬರಡನೇ ತಾನಕಟ ನಿಮ್ಮೈ
ಶ್ವರಿಯ ಹಗೆ ದಾಯಾದ್ಯರುಗಳಭ್ಯುದಯದಲಿ ಸೊಗಸೆ
ದುರುಳರವದಿರು ದೈವಮುಖದೆ
ಚ್ಚರಿಕೆ ಘನಕೆಡರೆಂದು ಮೇಗರೆ
ಹೊರೆಮನದ ಸೂಸಕದ ನೇಹವನರಸುತಿಹೆನೆಂದ ॥20॥
೦೨೧ ಕರೆಸಿಕೊಡಿ ನೀವಿಲ್ಲಿಗವರೈ ...{Loading}...
ಕರೆಸಿಕೊಡಿ ನೀವಿಲ್ಲಿಗವರೈ
ವರನು ಜೂಜಿನಲೊಂದು ಹಲಗೆಯ
ಲರಸ ನೀ ಚಿತ್ತವಿಸು ಹನ್ನೆರಡಬುದ ವಿಪಿನದಲಿ
ವರುಷವೊಂದಜ್ಞಾತವದರೊಳ
ಗರಿದೆವಾದೊಡೆ ಮರಳಿ ವಿಪಿನಕೆ
ವರುಷ ಹನ್ನೆರಡಕ್ಕೆ ಕೊಡುವೆವು ಮತ್ತೆ ವೀಳೆಯವ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಐದು ಜನರನ್ನು ನೀವು ಇಲ್ಲಿಗೆ ಕರೆಸಿಕೊಡಿ. ಜೂಜಿನಲ್ಲಿ ಒಂದು ಹಲಗೆಯಲ್ಲಿ, ಅರಸಾ ಯೋಚಿಸಿ ನೋಡು. ಹನ್ನೆರಡು ವರ್ಷ ಕಾಡಿನಲ್ಲಿ ವಾಸ, ಒಂದು ವರ್ಷ ಅಜ್ಞಾತವಾಸ. ಆ ಅಜ್ಞಾತವಾಸದಲ್ಲಿ ಅವರನ್ನು ಕಂಡು ಹಿಡಿದರೆ ಮತ್ತೆ ಹನ್ನೆರಡು ವರ್ಷ ಕಾಡಿಗೆ ಹೋಗಲು ವೀಳೆಯ ಕೊಡುತ್ತೇವೆ.”
ಪದಾರ್ಥ (ಕ.ಗ.ಪ)
ಮೂಲ ...{Loading}...
ಕರೆಸಿಕೊಡಿ ನೀವಿಲ್ಲಿಗವರೈ
ವರನು ಜೂಜಿನಲೊಂದು ಹಲಗೆಯ
ಲರಸ ನೀ ಚಿತ್ತವಿಸು ಹನ್ನೆರಡಬುದ ವಿಪಿನದಲಿ
ವರುಷವೊಂದಜ್ಞಾತವದರೊಳ
ಗರಿದೆವಾದೊಡೆ ಮರಳಿ ವಿಪಿನಕೆ
ವರುಷ ಹನ್ನೆರಡಕ್ಕೆ ಕೊಡುವೆವು ಮತ್ತೆ ವೀಳೆಯವ ॥21॥
೦೨೨ ಅಹುದು ಮನ್ತ್ರವಿದೆನ್ದು ...{Loading}...
ಅಹುದು ಮಂತ್ರವಿದೆಂದು ಚಿತ್ತಕೆ
ಬಹರೆ ಕಳುಹಿ ಮನುಷ್ಯರನು ಕರೆ
ಸಹಿತರನು ವಿದುರಾದಿಗಳ ಕೊಂಡೆಯಕೆ ಕಿವಿಗೊಡದೆ
ಕುಹಕವುಂಟೇ ನಮ್ಮ ಕಳುಹುವು
ದಹ ಮತವ ಬೆಸೆಸೆನಲು ನಿಮ್ಮೊಳು
ಕುಹಕವೊಂಟೇ ಮಗನೆ ಕರೆಸುವೆನೀಗ ಪಾಂಡವರ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸರಿ, ಇದು ಒಳ್ಳೆಯ ಆಲೋಚನೆ ಎಂದು ನಿಮ್ಮ ಚಿತ್ತಕ್ಕೆ ಒಪ್ಪಿಗೆಯಾದರೆ ಜನರನ್ನು ಕಳಿಸಿ ಶತ್ರುಗಳನ್ನು ಕರೆಸಿ. ವಿದುರಾದಿಗಳ ಚಾಡಿಯ ಮಾತಿಗೆ ಕಿವಿಗೊಡಬೇಡಿ. ಅದರಲ್ಲಿ ಏನೋ ಕುಹಕವಿದೆ ಎನ್ನಿಸಿದರೆ ನಮ್ಮನ್ನೇ ಕಳಿಸಿಬಿಡಿ. ನಿಮ್ಮ ಅಭಿಪ್ರಾಯವೇನು ತಿಳಿಸಿ ಎಂದ. ಆ ಕೂಡಲೆ ಧೃತರಾಷ್ಟ್ರ “ನಿಮ್ಮಲ್ಲಿ ಕುಹುಕವುಂಟೇ ಮಗನೇ, ಈಗಲೇ ಪಾಂಡವರನ್ನು ಕರೆಸುತ್ತೇನೆ” ಎಂದ.
ಪದಾರ್ಥ (ಕ.ಗ.ಪ)
ಕೊಂಡೆಯ-ಚಾಡಿ
ಮೂಲ ...{Loading}...
ಅಹುದು ಮಂತ್ರವಿದೆಂದು ಚಿತ್ತಕೆ
ಬಹರೆ ಕಳುಹಿ ಮನುಷ್ಯರನು ಕರೆ
ಸಹಿತರನು ವಿದುರಾದಿಗಳ ಕೊಂಡೆಯಕೆ ಕಿವಿಗೊಡದೆ
ಕುಹಕವುಂಟೇ ನಮ್ಮ ಕಳುಹುವು
ದಹ ಮತವ ಬೆಸೆಸೆನಲು ನಿಮ್ಮೊಳು
ಕುಹಕವೊಂಟೇ ಮಗನೆ ಕರೆಸುವೆನೀಗ ಪಾಂಡವರ ॥22॥
೦೨೩ ಪ್ರಾತಿಕಾಮಿಕ ಬಾ ...{Loading}...
ಪ್ರಾತಿಕಾಮಿಕ ಬಾ ಯುಧಿಷ್ಟಿರ
ಭೂತಳೇಶನ ಕರೆದು ತಾರೈ
ತಾತ ಕಳುಹಿದನೆಂಬುದಿಂದ್ರಪ್ರಸ್ಥದಲ್ಲಿರಲಿ
ಪ್ರೀತಿಪೂರ್ವಕವಲ್ಲದಲಿ ವಿ
ಘಾತಿಯಿಲ್ಲೆಂದುಚಿತ ವಚನದೊ
ಳಾತಗಳನೊಡಗೊಂಡು ಬಾ ಹೋಗೆಂದನಂಧನೃಪ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರಾತಿಕಾಮಿಕನನ್ನು ಕರೆದು “ಪ್ರಾತಿಕಾಮಿಕ ಬಾ, ಯುಧಿಷ್ಠಿರ ರಾಜನನ್ನು ಕರೆದು ತಾ. ಅವನು ಇಂದ್ರಪ್ರಸ್ಥದಲ್ಲಿದ್ದರೂ ಅಲ್ಲಿಂದಲೇ
ಕರೆದು ತಾ. ತಂದೆ ಕಳಿಸಿದರು ಎಂದು ಹೇಳು. ಪ್ರೀತಿ ಪೂರ್ವಕವಾಗಿ ಕಳಿಸಿದ್ದಾರೆ. ಅಲ್ಲಿ ಏನೂ ವಿಘಾತಿಯಿಲ್ಲ್ಲ ಎಂದು ಉಚಿತವಾದ
ಮಾತುಗಳಿಂದ ಒಪ್ಪಿಸಿ ಕರೆದುಕೊಂಡು ಬಾ ಹೋಗು.” ಎಂದು ಆಜ್ಞಾಪಿಸಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಪ್ರಾತಿಕಾಮಿಕ ಬಾ ಯುಧಿಷ್ಟಿರ
ಭೂತಳೇಶನ ಕರೆದು ತಾರೈ
ತಾತ ಕಳುಹಿದನೆಂಬುದಿಂದ್ರಪ್ರಸ್ಥದಲ್ಲಿರಲಿ
ಪ್ರೀತಿಪೂರ್ವಕವಲ್ಲದಲಿ ವಿ
ಘಾತಿಯಿಲ್ಲೆಂದುಚಿತ ವಚನದೊ
ಳಾತಗಳನೊಡಗೊಂಡು ಬಾ ಹೋಗೆಂದನಂಧನೃಪ ॥23॥
೦೨೪ ಕೇಳಿದರು ಭೀಷ್ಮಾದಿಗಳು ...{Loading}...
ಕೇಳಿದರು ಭೀಷ್ಮಾದಿಗಳು ಬರ
ಹೇಳಿದರೆ ಪಾಂಡವರನಕಟಾ
ಹೇಳಿದರೆ ಕೌರವರ ನೂರ್ವರನಂತಕಾಲಯಕೆ
ಹೇಳಿದರೆ ಹೇಳಿಗೆಯ ಹಾವಿನ
ಮೇಲು ಮುಚ್ಚಳ ಮುರಿಯಲೆಂದಿದ
ಕೇಳಿದೆವೆ ಕೌತುಕವನೆಂದರು ಕುದಿದು ತಮ್ಮೊಳಗೆ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮಾದಿಗಳು ಈ ವಿಷಯವನ್ನು ಕೇಳಿದರು. ಅವರಿಗೆ ಆಘಾತವೆನಿಸಿತು. “ಅಕಟಾ ! ಬರಹೇಳಿದರೆ ಪಾಂಡವರನ್ನು. ಕೌರವರು
ನೂರ್ವರನ್ನೂ ಯಮನ ಆಲಯಕ್ಕೆ ಹೋಗೆಂದು ಹೇಳಿದರೇ ? ಹಾವಿನ ಬುಟ್ಟಿಯ ಮೇಲು ಮುಚ್ಚಳವನ್ನು ಕಿತ್ತುಹಾಕು ಎಂದು ಹೇಳಿದರೇ ? ಇಂತಹ ಕೌತುಕವನ್ನು ನಾವು ಕೇಳಿದೆವೇ ?” ಎಂದು ತಮ್ಮೊಳಗೇ ಕುದಿದರು.
ಪದಾರ್ಥ (ಕ.ಗ.ಪ)
ಅಂತಕಾಲಯ-ಯಮನಲೋಕ, ಹೇಳಿಗೆ-ಬುಟ್ಟಿ
ಮೂಲ ...{Loading}...
ಕೇಳಿದರು ಭೀಷ್ಮಾದಿಗಳು ಬರ
ಹೇಳಿದರೆ ಪಾಂಡವರನಕಟಾ
ಹೇಳಿದರೆ ಕೌರವರ ನೂರ್ವರನಂತಕಾಲಯಕೆ
ಹೇಳಿದರೆ ಹೇಳಿಗೆಯ ಹಾವಿನ
ಮೇಲು ಮುಚ್ಚಳ ಮುರಿಯಲೆಂದಿದ
ಕೇಳಿದೆವೆ ಕೌತುಕವನೆಂದರು ಕುದಿದು ತಮ್ಮೊಳಗೆ ॥24॥
೦೨೫ ಉರುವ ಮಕ್ಕಳನಿಕ್ಕಿ ...{Loading}...
ಉರುವ ಮಕ್ಕಳನಿಕ್ಕಿ ಸಾಧಿಸು
ವರಿಕೆ ಯಾವುದು ಹೇಳಲಾಗದೆ
ಕುರಿಗಳೇ ನಿನ್ನವರು ಬಲ್ಲರೆ ಮೇಲಣಪಜಯವ
ಮರುಗುವಳು ಗಾಂಧಾರಿ ಮಕ್ಕಳ
ಹರುವ ಕಂಡರೆ ಮೇಲೆ ನಿನಗೇ
ನರಿಯಬಾರದಲಾ ಮರುಳೆಯೆಂದಳಲಿದನು ಭೀಷ್ಮ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮ ಸ್ವಗತ “ಉತ್ತಮರಾದ ಮಕ್ಕಳನ್ನು ಬಲಿಕೊಟ್ಟು ಸಾಧಿಸುವ ಬುದ್ಧಿವಂತಿಕೆ ಎಂತಹುದು? ಮಕ್ಕಳಿಗೆ ತಿಳಿವಳಿಕೆ ಹೇಳಲಾಗುವುದಿಲ್ಲವೇ ? ನಿನ್ನ ಮಕ್ಕಳೇನು ಕುರಿಗಳೇ ? ಅನಂತರ ಪ್ರಾಪ್ತವಾಗುವ ಅಪಜಯವನ್ನು ಅವರು ಬಲ್ಲರೆ ? ಮಕ್ಕಳು ಹಾಳಾಗುವುದನ್ನು ಕಂಡು ಗಾಂಧಾರಿ ಆಮೇಲೆ ಮರುಗುತ್ತಾಳೆ. ಮೂರ್ಖ ನೀನಾದರೂ ತಿಳಿಯಬಾರದೇ ?” ಎಂದು ವ್ಯಾಕುಲಗೊಂಡ.
ಪದಾರ್ಥ (ಕ.ಗ.ಪ)
ಹರುವು-ನಾಶ
ಮೂಲ ...{Loading}...
ಉರುವ ಮಕ್ಕಳನಿಕ್ಕಿ ಸಾಧಿಸು
ವರಿಕೆ ಯಾವುದು ಹೇಳಲಾಗದೆ
ಕುರಿಗಳೇ ನಿನ್ನವರು ಬಲ್ಲರೆ ಮೇಲಣಪಜಯವ
ಮರುಗುವಳು ಗಾಂಧಾರಿ ಮಕ್ಕಳ
ಹರುವ ಕಂಡರೆ ಮೇಲೆ ನಿನಗೇ
ನರಿಯಬಾರದಲಾ ಮರುಳೆಯೆಂದಳಲಿದನು ಭೀಷ್ಮ ॥25॥
೦೨೬ ಕೊಮ್ಬುದೇ ಖಳಜನಕೆ ...{Loading}...
ಕೊಂಬುದೇ ಖಳಜನಕೆ ಸಾಧುಗ
ಳೆಂಬ ಮಾತು ವಿಧಾತೃಕಲ್ಪಿತ
ವೆಂಬ ವಿಷದುಗ್ಗಡಕೆ ಗಾರುಡವೇನ ಮಾಡುವದು
ತುಂಬುವುದು ಬತ್ತುವುದು ಕಾಲನ
ಡೊಂಬಿದಾರಿಗೆ ಸಾಧ್ಯ ನಾವೇ
ನೆಂಬುದಿದಕೆಂದಳಲಿದರು ಭೀಷ್ಮಾದಿ ಸಜ್ಜನರು ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದುಷ್ಟರಿಗೆ ಸಾಧುಗಳು ಹೇಳಿದ ಮಾತು ಹಿಡಿಸುತ್ತದೆಯೇ ? ವಿಧಾತನೇ ಕಲ್ಪಿಸಿದ ವಿಷದ ಉತ್ಕಟತೆಗೆ ಗಾರುಡಮಂತ್ರ ಏನು ಮಾಡೀತು ? ತುಂಬುವುದು-ಬತ್ತುವುದು ಇದು ಕಾಲನೇ ಮಾಡುವ ಮಾಯೆ. ಇದನ್ನು ತಪ್ಪಿಸಲು ಯಾರಿಗೆ ಸಾಧ್ಯ ? ಇದಕ್ಕೆ ನಾವೇನು ಹೇಳೋಣ”-ಎಂದು ಭೀಷ್ಮಾದಿಗಳು ದುಃಖಿಸಿದರು.
ಪದಾರ್ಥ (ಕ.ಗ.ಪ)
ಉಗ್ಗಡ-ಉತ್ಕಟತೆ, ಡೊಂಬು-ಮಾಯೆ
ಮೂಲ ...{Loading}...
ಕೊಂಬುದೇ ಖಳಜನಕೆ ಸಾಧುಗ
ಳೆಂಬ ಮಾತು ವಿಧಾತೃಕಲ್ಪಿತ
ವೆಂಬ ವಿಷದುಗ್ಗಡಕೆ ಗಾರುಡವೇನ ಮಾಡುವದು
ತುಂಬುವುದು ಬತ್ತುವುದು ಕಾಲನ
ಡೊಂಬಿದಾರಿಗೆ ಸಾಧ್ಯ ನಾವೇ
ನೆಂಬುದಿದಕೆಂದಳಲಿದರು ಭೀಷ್ಮಾದಿ ಸಜ್ಜನರು ॥26॥
೦೨೭ ಇವರ ವಞ್ಚಿಸಿ ...{Loading}...
ಇವರ ವಂಚಿಸಿ ರಜನಿ ಮಧ್ಯದೊ
ಳವನ ಕಳುಹಿದಡಾತನೈತಂ
ದಿವರ ಪಾಳಯದೊಳಗೆ ಹೊಕ್ಕನು ಹಲವು ಪಯಣದಲಿ
ಅವನಿಪತಿ ಮರುದಿವಸ ಬೀಡೆ
ತ್ತುವ ನಿಧಾನವನರಿದು ರಾಯನ
ಭವನಿಕೆಯ ಹೊರಬಾಹೆಯಲಿ ದಂಡಿಗೆಯನವನಿಳಿದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವರ ಕಣ್ಣು ತಪ್ಪಿಸಿ ನಡುರಾತ್ರಿಯಲ್ಲಿ ಪ್ರಾತಿಕಾಮಿಯನ್ನು ಕಳಿಸಲು, ಅವನು ಹಲವು ದಿನಗಳ ಪ್ರಯಾಣ ಮಾಡಿ ಪಾಂಡವರ ಪಾಳೆಯವನ್ನು ಹೊಕ್ಕ. ಯುಧಿಷ್ಠಿರ ರಾಜ ಮಾರನೆಯ ದಿನ ಬೀಡೆತ್ತುವ ಏರ್ಪಾಟನ್ನು ನೋಡಿ, ರಾಜನ ಭವನದ ಮುಂದೆ ಪಲ್ಲಕ್ಕಿಯಲ್ಲಿ ಕುಳಿತವನು ಬಂದಿಳಿದ.
ಪದಾರ್ಥ (ಕ.ಗ.ಪ)
ಹೊರಬಾಹೆಯಲಿ-ಹೊರಭಾಗದಲ್ಲಿ
ಮೂಲ ...{Loading}...
ಇವರ ವಂಚಿಸಿ ರಜನಿ ಮಧ್ಯದೊ
ಳವನ ಕಳುಹಿದಡಾತನೈತಂ
ದಿವರ ಪಾಳಯದೊಳಗೆ ಹೊಕ್ಕನು ಹಲವು ಪಯಣದಲಿ
ಅವನಿಪತಿ ಮರುದಿವಸ ಬೀಡೆ
ತ್ತುವ ನಿಧಾನವನರಿದು ರಾಯನ
ಭವನಿಕೆಯ ಹೊರಬಾಹೆಯಲಿ ದಂಡಿಗೆಯನವನಿಳಿದ ॥27॥
೦೨೮ ಕರೆದು ಹೇಳಿದನಾತ ...{Loading}...
ಕರೆದು ಹೇಳಿದನಾತ ಪಡಿಹಾ
ರರಿಗೆ ತಾನೈ ಪ್ರಾತಿಕಾಮಿಕ
ನರಸ ಕಳುಹಲು ಬಂದೆನಗ್ಗದ ರಾಜಕಾರಿಯಕೆ
ಧರಣಿಪಾಲಂಗರುಹಿಯೆನೆ ನೃಪ
ವರೆಗೆ ಬಿನ್ನಹ ಮಾಡೆ ಕರೆಸಿದ
ಡಿರದೆ ಹೊಕ್ಕನು ದೂತನಂದಾ ರಾಯನೋಲಗವ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಳಿದವನು ಬಾಗಿಲು ಕಾಯುವವರಿಗೆ ಹೇಳಿದ “ನಾನಯ್ಯ, ಪ್ರಾತಿಕಾಮಿಕ. ಧೃತರಾಷ್ಟ್ರ ರಾಜ ಕಳಿಸಿದ್ದರಿಂದ ಬಂದೆ. ಮುಖ್ಯವಾದ ರಾಜಕಾರಣವಿದೆ. ನಿಮ್ಮ ರಾಜನಿಗೆ ತಿಳಿಸಿ ಎಂದ. ಅವರು ಹೋಗಿ ಯುಧಿಷ್ಠಿರ ರಾಜನಿಗೆ ವಿಜ್ಞಾಪಿಸಿಕೊಂಡರು. ಅವನು ಪ್ರಾತಿಕಾಮಿಯನ್ನು ಕಳಿಸಿದ. ಅವನು ರಾಜನ ಓಲಗವನ್ನು ಪ್ರವೇಶಿಸಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಕರೆದು ಹೇಳಿದನಾತ ಪಡಿಹಾ
ರರಿಗೆ ತಾನೈ ಪ್ರಾತಿಕಾಮಿಕ
ನರಸ ಕಳುಹಲು ಬಂದೆನಗ್ಗದ ರಾಜಕಾರಿಯಕೆ
ಧರಣಿಪಾಲಂಗರುಹಿಯೆನೆ ನೃಪ
ವರೆಗೆ ಬಿನ್ನಹ ಮಾಡೆ ಕರೆಸಿದ
ಡಿರದೆ ಹೊಕ್ಕನು ದೂತನಂದಾ ರಾಯನೋಲಗವ ॥28॥
೦೨೯ ದರುಶನವನಿತ್ತವನಿಪಾಲನ ...{Loading}...
ದರುಶನವನಿತ್ತವನಿಪಾಲನ
ಚರಣದಲಿ ಮೈಯಿಕ್ಕಿ ನಿಂದನು
ನರ ವೃಕೋದರ ನಕುಲ ಸಹದೇವರಿಗೆ ಕೈಮುಗಿದು
ಧರಣಿಪನ ಮೊಗಸನ್ನೆಯಲಿ ಕು
ಳ್ಳಿರಲಿದೇನೈ ಪ್ರಾತಿಕಾಮಿಕ
ಬರವು ಬೇಗದೊಳಾಯ್ತೆನುತ ಬೆಸಗೊಂಡನಾ ಭೀಮ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರಾತಿಕಾಮಿಕ ಕಾಣಿಸಿಕೊಂಡು ಯುಧಿಷ್ಠಿರನಿಗೆ ನಮಸ್ಕರಿಸಿ ನಿಂತುಕೊಂಡ. ಅರ್ಜುನ, ಭೀಮ, ನಕುಲ, ಸಹದೇವನಿಗೆ ಕೈಮುಗಿದ. ಯುಧಿಷ್ಠಿರನ ಮುಖ ಸಂಜ್ಞೆಯಂತೆ ಕುಳಿತ. “ಇದೇನಯ್ಯ ಪ್ರಾತಿಕಾಮಿಕ ಬಂದದ್ದು ? ಇಷ್ಟು ಬೇಗನೆ ಬಂದು ಬಿಟ್ಟಿದ್ದೀಯಲ್ಲ!” ಎಂದು ಭೀಮ ಪ್ರಶ್ನಿಸಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ದರುಶನವನಿತ್ತವನಿಪಾಲನ
ಚರಣದಲಿ ಮೈಯಿಕ್ಕಿ ನಿಂದನು
ನರ ವೃಕೋದರ ನಕುಲ ಸಹದೇವರಿಗೆ ಕೈಮುಗಿದು
ಧರಣಿಪನ ಮೊಗಸನ್ನೆಯಲಿ ಕು
ಳ್ಳಿರಲಿದೇನೈ ಪ್ರಾತಿಕಾಮಿಕ
ಬರವು ಬೇಗದೊಳಾಯ್ತೆನುತ ಬೆಸಗೊಂಡನಾ ಭೀಮ ॥29॥
೦೩೦ ಬರವು ಬೇರೇನೊಡೆಯರಟ್ಟಿದ ...{Loading}...
ಬರವು ಬೇರೇನೊಡೆಯರಟ್ಟಿದ
ರರಸನಲ್ಲಿಗೆ ಹಿಂದೆ ಜೂಜಿನೊ
ಳೊರಸೊರಸು ಮಿಗೆ ಮಸೆದುದಿತ್ತಂಡಕ್ಕೆ ಮನ ಮುನಿಸು
ಹರೆದು ಹೋಯ್ತದು ಹೃದಯ ಶುದ್ಧಿಯೊ
ಳೆರಡರಸುಗಳು ಜೂಜನಾಡಲಿ
ಮರಳಿ ಬಿಜಯಂಗೈವುದೆಂದಟ್ಟಿದನು ಧೃತರಾಷ್ಟ್ರ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವನು ಉತ್ತರಕೊಟ್ಟ. “ಬರವು ಬೇರೇನು, ಒಡೆಯರು ರಾಜನಲ್ಲಿಗೆ ಕಳಿಸಿದರು. ಹಿಂದೆ ಜೂಜಿನಲ್ಲಿ ಪರಸ್ಪರ ತುಂಬ ತಿಕ್ಕಾಟ,
ನಡೆದು ಬಿಟ್ಟಿತು. ಎರಡು ಪಕ್ಷದವರಿಗೂ ಮನಸ್ಸಿಗೆ ಮುನಿಸುಂಟಾಗಿತ್ತು. ಅದೆಲ್ಲ ಕಳೆದುಹೋಯಿತು. ಈಗ ಹೃದಯಶುದ್ಧಿಯಿಂದ
ಅರಸುಗಳು ಜೂಜಾಡಲಿ. ಪುನಃ ದಯಮಾಡಿಸಬೇಕು ಎಂದು ಧೃತರಾಷ್ಟ್ರ ಕಳಿಸಿದ್ದಾನೆ ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಬರವು ಬೇರೇನೊಡೆಯರಟ್ಟಿದ
ರರಸನಲ್ಲಿಗೆ ಹಿಂದೆ ಜೂಜಿನೊ
ಳೊರಸೊರಸು ಮಿಗೆ ಮಸೆದುದಿತ್ತಂಡಕ್ಕೆ ಮನ ಮುನಿಸು
ಹರೆದು ಹೋಯ್ತದು ಹೃದಯ ಶುದ್ಧಿಯೊ
ಳೆರಡರಸುಗಳು ಜೂಜನಾಡಲಿ
ಮರಳಿ ಬಿಜಯಂಗೈವುದೆಂದಟ್ಟಿದನು ಧೃತರಾಷ್ಟ್ರ ॥30॥
೦೩೧ ಮರಳಿ ಕರೆಸುವುದೆನ್ದು ...{Loading}...
ಮರಳಿ ಕರೆಸುವುದೆಂದು ಕಂಬನಿ
ವೆರಸಿ ಕುರುಪತಿ ಪಿತನ ಚಿತ್ತವ
ಕರಗಿಸಿದನೋ ಮೇಣು ತಾ ಕರೆಸಿದಳೊ ಗಾಂಧಾರಿ
ಕರೆಸುವವದಿರು ಭಂಡರೋ ಮೇ
ಣ್ಮರಳಿ ಹೋಹರು ಭಂಡರೋ ನೀ
ನರಿವವುದೇನೈ ಪ್ರಾತಿಕಾಮಿಕಯೆಂದನಾ ಭೀಮ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ಭೀಮ “ಮತ್ತೆ ಕರೆಸಬೇಕೆಂದು ಕುರುಪತಿ ಕಣ್ಣೀರು ಸುರಿಸಿ ತಂದೆಯ ಚಿತ್ತವನ್ನು ಕರಗಿಸಿದನೋ, ಅಥವಾ ಗಾಂಧಾರಿ ತಾನಾಗಿ ಕರೆಸುತ್ತಿರುವಳೋ ? ಕರೆಸುವವರು ಭಂಡರೋ ಅಥವಾ ಮತ್ತೆ ಹೋಗುವವರು ಭಂಡರೋ, ನೀನು ಏನು ಹೇಳುವೆಯಯ್ಯಾ ಪ್ರಾತಿಕಾಮಿಕ ? ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಮರಳಿ ಕರೆಸುವುದೆಂದು ಕಂಬನಿ
ವೆರಸಿ ಕುರುಪತಿ ಪಿತನ ಚಿತ್ತವ
ಕರಗಿಸಿದನೋ ಮೇಣು ತಾ ಕರೆಸಿದಳೊ ಗಾಂಧಾರಿ
ಕರೆಸುವವದಿರು ಭಂಡರೋ ಮೇ
ಣ್ಮರಳಿ ಹೋಹರು ಭಂಡರೋ ನೀ
ನರಿವವುದೇನೈ ಪ್ರಾತಿಕಾಮಿಕಯೆಂದನಾ ಭೀಮ ॥31॥
೦೩೨ ಬೊಪ್ಪನವರಟ್ಟಿದರೆ ಶಿವ ...{Loading}...
ಬೊಪ್ಪನವರಟ್ಟಿದರೆ ಶಿವ ಶಿವ
ತಪ್ಪ ನೆನೆವರೆ ಭೀಮ ಸೈರಿಸು
ತಪ್ಪನಾಡದೆ ನಮಗೆ ಮುನಿವಳೆ ತಾಯಿ ಗಾಂಧಾರಿ
ತಪ್ಪಲೊಮ್ಮಿಗೆ ಪಾಂಡು ಕುಂತಿಗೆ
ಮುಪ್ಪಿನಲಿ ಮರುಳಾಟವಾಗಲಿ
ತಪ್ಪುವನೆ ಧೃತರಾಷ್ಟ್ರನೆಂದನು ನಗುತ ಯಮಸೂನು ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಆದರೆ ಯಮಸೂನು ತನ್ನ ಸ್ವಭಾವಕ್ಕನುಗುಣವಾಗಿ “ತಂದೆಯವರು ಕರೆಯಲಟ್ಟಿದರೆ ಶಿವ, ಶಿವ, ತಪ್ಪನ್ನೆಣಿಸುತ್ತಾರೇನಯ್ಯ ಭೀಮ, ಸೈರಿಸು ತಪ್ಪು ಮಾತಾಡಿದೆ. ತಾಯಿ ಗಾಂಧಾರಿಗೆ ನಮ್ಮ ಮೇಲೆ ಕೋಪವೆ ? ಪಾಂಡುವಾದರೂ ಒಮ್ಮೆ ಕುಂತಿಗೆ ತಪ್ಪುಮಾಡಬಹುದು. ಆದರೆ ಧೃತರಾಷ್ಟ್ರ ಗಾಂಧಾರಿಯರ ನಡುವೆ ಮುಪ್ಪಿನ ದೆಸೆಯಿಂದ ಮರುಳಾಟವೇ ನಡೆದರೂ ಧೃತರಾಷ್ಟ್ರ ತಪ್ಪುಮಾಡುವನೆ ? ಎಂದ ನಗುತ್ತ ಯಮಸೂನು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಬೊಪ್ಪನವರಟ್ಟಿದರೆ ಶಿವ ಶಿವ
ತಪ್ಪ ನೆನೆವರೆ ಭೀಮ ಸೈರಿಸು
ತಪ್ಪನಾಡದೆ ನಮಗೆ ಮುನಿವಳೆ ತಾಯಿ ಗಾಂಧಾರಿ
ತಪ್ಪಲೊಮ್ಮಿಗೆ ಪಾಂಡು ಕುಂತಿಗೆ
ಮುಪ್ಪಿನಲಿ ಮರುಳಾಟವಾಗಲಿ
ತಪ್ಪುವನೆ ಧೃತರಾಷ್ಟ್ರನೆಂದನು ನಗುತ ಯಮಸೂನು ॥32॥
೦೩೩ ಖಳರು ಮೊದಲಲಿ ...{Loading}...
ಖಳರು ಮೊದಲಲಿ ಕೌರವರು ಕಲಿ
ಮೊಳೆಯನಂಕುರಿಸಿವ ಕುವಿದ್ಯಾ
ಕಲಿತ ಮಾಯರು ಕರ್ಣ ಶಕುನಿಗಳವರ ಸಂಗದಲಿ
ತಿಳಿದು ನಡೆವವನಲ್ಲವಿದು ನಿ
ರ್ಮಲದ ನೀತಿಗೆ ಸಲ್ಲ ನಿಜ ಪಿತ
ನೊಳಗು ನಿರ್ಮಳವಿಲ್ಲವೆಂದನು ನಗುತ ಕಲಿಭೀಮ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕೌರವರು ಮೊದಲೇ ದುಷ್ಟರು. ದುಷ್ಟತನದ ಮೊಳಕೆಯನ್ನು ಚಿಗುರಿಸುವ ಕುವಿದ್ಯೆಯಿಂದ ಕೂಡಿದ ಮೋಸಗಾರರು, ಅವರ
ಸಹಚರರಾಗಿರುವವರು ಕರ್ಣ ಶಕುನಿಗಳು. ಧೃತರಾಷ್ಟ್ರ ಸ್ವಂತ ತಿಳಿವಳಿಕೆಯಿಂದ ನಡೆಯುವವನಲ್ಲ. ಇದು ನಿರ್ಮಲವಾದ ನೀತಿಗೆ ಹೊಂದುವಂತಹುದಲ್ಲ. ತಂದೆಯ ಅಂತಃಕರಣವೂ ನಿರ್ಮಲವಾದುದಲ್ಲ” ಎಂದು ಭೀಮ ನಗುತ್ತಾ ಹೆಳಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಖಳರು ಮೊದಲಲಿ ಕೌರವರು ಕಲಿ
ಮೊಳೆಯನಂಕುರಿಸಿವ ಕುವಿದ್ಯಾ
ಕಲಿತ ಮಾಯರು ಕರ್ಣ ಶಕುನಿಗಳವರ ಸಂಗದಲಿ
ತಿಳಿದು ನಡೆವವನಲ್ಲವಿದು ನಿ
ರ್ಮಲದ ನೀತಿಗೆ ಸಲ್ಲ ನಿಜ ಪಿತ
ನೊಳಗು ನಿರ್ಮಳವಿಲ್ಲವೆಂದನು ನಗುತ ಕಲಿಭೀಮ ॥33॥
೦೩೪ ನೆನಹಿನಭಿಮತವಲ್ಲ ದುರ್ಯೋ ...{Loading}...
ನೆನಹಿನಭಿಮತವಲ್ಲ ದುರ್ಯೋ
ಧನನ ಸೌಬಲ ಕರ್ಣರಭಿಮತ
ಜನಪ ಧೃತರಾಷ್ಟ್ರನಿಗೆ ಗಾಂಧಾರಿಗೆಯಲಂಘ್ಯವಿದು
ಅನುನಯದ ಹೊತ್ತಲ್ಲ ನೀವ್ ಹ
ಸ್ತಿನಪುರಿಯ ಹೊಕ್ಕಾಗ ಘನ ಕಾ
ನನಕೆ ಗಮಿಸುವಿರೆಂದರಾ ಧೌಮ್ಯಾದಿ ಮಂತ್ರಿಗಳು ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇದು ಧೃತರಾಷ್ಟ್ರ ಸ್ವಯಂ ಚಿಂತಿಸಿ ಹೇಳಿಕಳಿಸಿರುವ ಅಭಿಪ್ರಾಯವಲ್ಲ. ದುರ್ಯೋಧನ ಕರ್ಣ ಶಕುನಿಗಳ ಅಭಿಪ್ರಾಯವನ್ನು ಧೃತರಾಷ್ಟ್ರ ಗಾಂಧಾರಿಗಳು ಮೀರಲಾರರು. ಇದು ಪರಸ್ಪರ ಸ್ನೇಹವರ್ಧನೆಯ ಸಮಯವಲ್ಲ. ನೀವು ಹಸ್ತಿನಾಪುರವನ್ನು ಹೊಕ್ಕರೆ ದಟ್ಟವಾದ ಅರಣ್ಯವನ್ನೇ ಪ್ರವೇಶಿಸುವಿರಿ” ಎಂದು ಧೌಮ್ಯರೇ ಮೊದಲಾದ ಮಂತ್ರಿಗಳು ಹೇಳಿದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ನೆನಹಿನಭಿಮತವಲ್ಲ ದುರ್ಯೋ
ಧನನ ಸೌಬಲ ಕರ್ಣರಭಿಮತ
ಜನಪ ಧೃತರಾಷ್ಟ್ರನಿಗೆ ಗಾಂಧಾರಿಗೆಯಲಂಘ್ಯವಿದು
ಅನುನಯದ ಹೊತ್ತಲ್ಲ ನೀವ್ ಹ
ಸ್ತಿನಪುರಿಯ ಹೊಕ್ಕಾಗ ಘನ ಕಾ
ನನಕೆ ಗಮಿಸುವಿರೆಂದರಾ ಧೌಮ್ಯಾದಿ ಮಂತ್ರಿಗಳು ॥34॥
೦೩೫ ಕರೆಯೆ ಕಾದುವುದಾಡುವುದು ...{Loading}...
ಕರೆಯೆ ಕಾದುವುದಾಡುವುದು ಸಂ
ಗರಕೆ ಜೂಜಿಂಗಿದು ಮಹೀಶರ
ಪರಮ ಧರ್ಮವಲೇ ನಿಧಾನಿಸೆ ವೈದಿಕಾಂಗದಲಿ
ಗುರುವಲಾ ಧೃತರಾಷ್ಟ್ರನಾತನು
ಕರೆಸಿದಲ್ಲಿ ವಿಘಾತಿ ಬಂದರೆ
ಬರಲಿ ಸೈರಿಸಬಲ್ಲೆನೆಂದನು ಧರ್ಮನಂದನನು ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ವೈದಿಕಾಂಗದಲ್ಲಿ ಯೋಚಿಸಿ ನೋಡಿದ್ದೇ ಆದರೆ, ಯುದ್ಧಕ್ಕೆ ಜೂಜಿಗೆ ಯಾರಾದರೂ ಕರೆದರೆ ಹೋಗಿ ಯುದ್ಧಮಾಡುವುದು
ಮತ್ತು ಜೂಜಾಡುವುದು ರಾಜರಿಗೆ ಪರಮಧರ್ಮವಲ್ಲವೇ ? ಧೃತರಾಷ್ಟ್ರ ನಮಗೆ ಗುರುವಲ್ಲವೇ ! ಆತನೇ ಕರೆಸಿರುವಾಗ ಅದರಿಂದ ತೊಂದರೆ ಬಂದರೆ ಬರಲಿ. ನಾನು ಸಹಿಸಬಲ್ಲೆ” ಎಂದ ಧರ್ಮನಂದನ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಕರೆಯೆ ಕಾದುವುದಾಡುವುದು ಸಂ
ಗರಕೆ ಜೂಜಿಂಗಿದು ಮಹೀಶರ
ಪರಮ ಧರ್ಮವಲೇ ನಿಧಾನಿಸೆ ವೈದಿಕಾಂಗದಲಿ
ಗುರುವಲಾ ಧೃತರಾಷ್ಟ್ರನಾತನು
ಕರೆಸಿದಲ್ಲಿ ವಿಘಾತಿ ಬಂದರೆ
ಬರಲಿ ಸೈರಿಸಬಲ್ಲೆನೆಂದನು ಧರ್ಮನಂದನನು ॥35॥
೦೩೬ ಜನಪನಾಜ್ಞೆಯ ಮೀರಿ ...{Loading}...
ಜನಪನಾಜ್ಞೆಯ ಮೀರಿ ಬಳಸುವು
ದನುಚಿತವು ನಮಗಿನ್ನು ಭೀಮಾ
ರ್ಜುನ ನಕುಲ ಸಹದೇವರಭಿಮತವೆಮ್ಮ ಮತವೆನಲು
ಮನ ಮೊದಲು ಕರಣಂಗಳಾತ್ಮಂ
ಗನುಚರರೊ ಬಾಧಕರೊ ನಿಮ್ಮಯ
ಮನಕೆ ಚೆಮ್ಮಾವುಗೆಗಳೆಂದರು ಪವನಜಾದಿಗಳು ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಜನಪನಾದ ಧೃತರಾಷ್ಟ್ರನ ಆಜ್ಞೆಯನ್ನು ಮೀರಿ ನಡೆಯುವುದು ಉಚಿತವಲ್ಲ. ಭೀಮಾರ್ಜುನ ನಕುಲ ಸಹದೇವರ ಅಭಿಪ್ರಾಯವೇ ನನ್ನ ಅಭಿಪ್ರಾಯ” ಎಂದು ಯುಧಿಷ್ಠಿರ ಹೇಳಲು, ಪವನಜಾದಿಗಳು “ಮನಸ್ಸಿನಾದಿಯಾಗಿ ಇಂದ್ರಿಯಗಳು ಆತ್ಮಕ್ಕೆ ಅನುಚರರೋ
ಬಾಧಕರೋ ? ನಿಮ್ಮ ಮನಸ್ಸಿಗೆ ನಾವು ಚಮ್ಮಾವುಗೆಗಳು” ಎಂದರು.
ಪದಾರ್ಥ (ಕ.ಗ.ಪ)
ಚಮ್ಮಾವುಗೆಗಳು-ಪಾದರಕ್ಷೆಗಳು
ಮೂಲ ...{Loading}...
ಜನಪನಾಜ್ಞೆಯ ಮೀರಿ ಬಳಸುವು
ದನುಚಿತವು ನಮಗಿನ್ನು ಭೀಮಾ
ರ್ಜುನ ನಕುಲ ಸಹದೇವರಭಿಮತವೆಮ್ಮ ಮತವೆನಲು
ಮನ ಮೊದಲು ಕರಣಂಗಳಾತ್ಮಂ
ಗನುಚರರೊ ಬಾಧಕರೊ ನಿಮ್ಮಯ
ಮನಕೆ ಚೆಮ್ಮಾವುಗೆಗಳೆಂದರು ಪವನಜಾದಿಗಳು ॥36॥
೦೩೭ ಮರಳಿ ಪಾಳೆಯ ...{Loading}...
ಮರಳಿ ಪಾಳೆಯ ಬಿಡಲಿ ಶಿಷ್ಟರ
ಕರೆಸಿ ಪೇಳೆನುತವನಿಪತಿ ಗಜ
ಪುರಿಗೆ ತಿರುಗಿದನರಿಯನೇ ಕೌರವನ ಕೃತ್ರಿಮವ
ಕೊರಳಲಿಕ್ಕಿದ ವಿಧಿಯ ಕಣ್ಣಿಯ
ಹುರಿ ಬಲುಹಲೇ ಧರ್ಮಸುತನೊಡ
ಮುರಿಚಲಾಪನೆ ಕೇಳು ಜನಮೇಜಯ ಮಹೀಪಾಲ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮತ್ತೆ ಪಾಳೆಯವನ್ನು ಬಿಡಲಿ, ಶಿಷ್ಟರನ್ನು ಕರೆಸಿಹೇಳು” ಎನ್ನುತ್ತಾ ಯುಧಿಷ್ಠಿರ ಹಸ್ತಿನಾಪುರಕ್ಕೆ ತಿರುಗಿದ. ಕೌರವನ ಮೋಸವನ್ನು ಅವನೇನು ತಿಳಿಯನೇ? ವಿಧಿಯೇ ಅವನ ಕೊರಳಿಗೆ ಹಾಕಿದ ನೇಣು ತುಂಬ ಬಲವಾದುದು, ಅದನ್ನವನು ಕಳಚಿಕೊಳ್ಳಲು ಸಾಧ್ಯವೇ ?
ಪದಾರ್ಥ (ಕ.ಗ.ಪ)
ಮೂಲ ...{Loading}...
ಮರಳಿ ಪಾಳೆಯ ಬಿಡಲಿ ಶಿಷ್ಟರ
ಕರೆಸಿ ಪೇಳೆನುತವನಿಪತಿ ಗಜ
ಪುರಿಗೆ ತಿರುಗಿದನರಿಯನೇ ಕೌರವನ ಕೃತ್ರಿಮವ
ಕೊರಳಲಿಕ್ಕಿದ ವಿಧಿಯ ಕಣ್ಣಿಯ
ಹುರಿ ಬಲುಹಲೇ ಧರ್ಮಸುತನೊಡ
ಮುರಿಚಲಾಪನೆ ಕೇಳು ಜನಮೇಜಯ ಮಹೀಪಾಲ ॥37॥
೦೩೮ ಸುತರು ಸಚಿವರು ...{Loading}...
ಸುತರು ಸಚಿವರು ಮಂತ್ರಿಗಳು ನಿಜ
ಸತಿಯರಾಪ್ತರು ಬಂಧುಗಳು ಭೂ
ಪತಿಗಳನುಜರು ಬುಧರು ಚಾತುರ್ಬಲದ ನಾಯಕರು
ಮತವು ಮರಳುವದಲ್ಲ ಧರಣೀ
ಪತಿಯನುತ್ಸಾಹಿಸುವ ಗತಿ ಸಂ
ಗತವಲೇ ನವಗೆನುತ ನಡೆದುದು ಬುಧಜನಸ್ತೋಮ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುತರು, ಸಚಿವರು ಮಂತ್ರಿಗಳು, ಸತಿಯರು, ಆಸಕ್ತರು, ಬಂಧುಗಳು, ರಾಜರು ತಮ್ಮಂದಿರು ವಿದ್ವಾಂಸರು ಚತುರಂಗ ಸೇನೆಯ ನಾಯಕರು ತಮ್ಮ ಅಭಿಪ್ರಾಯ ಯಾವಾಗಲೂ ರಾಜನನ್ನು ಉತ್ಸಾಹಗೊಳಿಸುವ ದಿಕ್ಕಿಗೇ ಸೇರಬೇಕಾದುದಲ್ಲವೆ ಎಂದುಕೊಂಡು ಸಮಸ್ತರೂ ಯುಧಿಷ್ಠಿರನ ಮಾರ್ಗವನ್ನನುಸರಸಿ ಹೊರಟರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಸುತರು ಸಚಿವರು ಮಂತ್ರಿಗಳು ನಿಜ
ಸತಿಯರಾಪ್ತರು ಬಂಧುಗಳು ಭೂ
ಪತಿಗಳನುಜರು ಬುಧರು ಚಾತುರ್ಬಲದ ನಾಯಕರು
ಮತವು ಮರಳುವದಲ್ಲ ಧರಣೀ
ಪತಿಯನುತ್ಸಾಹಿಸುವ ಗತಿ ಸಂ
ಗತವಲೇ ನವಗೆನುತ ನಡೆದುದು ಬುಧಜನಸ್ತೋಮ ॥38॥
೦೩೯ ಭರದ ಪಯಣದಲಿವರು ...{Loading}...
ಭರದ ಪಯಣದಲಿವರು ಹಸ್ತಿನ
ಪುರದ ಹೊರಬಾಹೆಯಲಿ ಬಿಟ್ಟರು
ಪರಿರಚಿತ ಗಜ ತುರಗ ಶಾಲೆಯ ವಿಪುಳ ವೀಧಿಯಲಿ
ಬಿರಿಯೆ ನೆಲನಳ್ಳಿರಿವ ವಾದ್ಯದ
ಮೊರೆವ ಭೇರಿಯ ಬಹಳ ಕಹಳ
ಸ್ವರದ ಕಳಕಳ ತೀವಿತಬುಜ ಭವಾಂಡ ಖರ್ಪರವ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಡಗರದ ಪ್ರಯಾಣ ಮಾಡಿ ಇವರು ಹಸ್ತಿನಾಪುರದ ಹೊರಭಾಗದಲ್ಲಿ ಬೀಡುಬಿಟ್ಟರು. ಗಜಶಾಲೆ ತುರಗಶಾಲೆ ಮೊದಲಾದುವನ್ನೆಲ್ಲ ಸಜ್ಜುಗೊಳಿಸಿದ್ದ ವಿಶಾಲವಾದ ಬೀದಿಯಲ್ಲಿ ಸೇನೆಯನ್ನೆಲ್ಲ ನೆಲೆಗೊಳಿಸಿದರು. ನೆಲ ಬಿರಿಯುವಂತೆ ಶಬ್ದ ಮಾಡುತ್ತಿದ್ದ ವಾದ್ಯಗಳ ಮತ್ತು ಮೋರೆಯುತ್ತಿದ್ದ ಭೇರಿಗಳ ಮತ್ತು ಕಹಳೆಗಳ ಗದ್ದಲ ಮೇಲಿನ ಬ್ರಹ್ಮಾಂಡದ ಚಿಪ್ಪನ್ನು ಹೋಗಿ ತಟ್ಟುತ್ತಿತ್ತು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಭರದ ಪಯಣದಲಿವರು ಹಸ್ತಿನ
ಪುರದ ಹೊರಬಾಹೆಯಲಿ ಬಿಟ್ಟರು
ಪರಿರಚಿತ ಗಜ ತುರಗ ಶಾಲೆಯ ವಿಪುಳ ವೀಧಿಯಲಿ
ಬಿರಿಯೆ ನೆಲನಳ್ಳಿರಿವ ವಾದ್ಯದ
ಮೊರೆವ ಭೇರಿಯ ಬಹಳ ಕಹಳ
ಸ್ವರದ ಕಳಕಳ ತೀವಿತಬುಜ ಭವಾಂಡ ಖರ್ಪರವ ॥39॥
೦೪೦ ಏನಿದದ್ಭುತ ರಭಸವಿದೆಲಾ ...{Loading}...
ಏನಿದದ್ಭುತ ರಭಸವಿದೆಲಾ
ಮಾನನಿಧಿಗಳು ಮರಳಿ ಕುಂತೀ
ಸೂನುಗಳ ಬಲ ಬಂದು ಬಿಟ್ಟುದು ಪುರದ ಬಾಹೆಯಲಿ
ಏನು ಕೌರವರೊಡನೆ ಶರ ಸಂ
ಧಾನವೋ ವಿನಯಾನುಗುಣ ಸಂ
ಧಾನವೋ ತಾನೆನುತ ಗಜಬಜಿಸಿದುದು ಗಜನಗರ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏನಿದದ್ಭುತರಭಸ ಎಂದು ನೋಡಿ ಓ ಮಾನನಿಧಿಗಳಾದ ಕುಂತೀಸೂನುಗಳ ಸೈನ್ಯ ಬಂದು ಊರ ಹೊರಗೆ ಬೀಡುಬಿಟ್ಟಿದೆ !
ಇದೇನು ಕೌರವರೊಡನೆ ಶರಸಂಧಾನವೋ ವಿನಯಾನುಗುಣ ಸಂಧಾನವೋ ! ಎಂದು ಹಸ್ತಿನಾಪುರದ ಜನ ಗಜಬಜಿಸಿದರು.
ಪದಾರ್ಥ (ಕ.ಗ.ಪ)
ಬಾಹೆಯಲಿ-ಹೊರಭಾಗದಲ್ಲಿ
ಮೂಲ ...{Loading}...
ಏನಿದದ್ಭುತ ರಭಸವಿದೆಲಾ
ಮಾನನಿಧಿಗಳು ಮರಳಿ ಕುಂತೀ
ಸೂನುಗಳ ಬಲ ಬಂದು ಬಿಟ್ಟುದು ಪುರದ ಬಾಹೆಯಲಿ
ಏನು ಕೌರವರೊಡನೆ ಶರ ಸಂ
ಧಾನವೋ ವಿನಯಾನುಗುಣ ಸಂ
ಧಾನವೋ ತಾನೆನುತ ಗಜಬಜಿಸಿದುದು ಗಜನಗರ ॥40॥
೦೪೧ ಪುರವ ಹೊಕ್ಕನು ...{Loading}...
ಪುರವ ಹೊಕ್ಕನು ನೃಪತಿ ಪರಿಮಿತ
ಪರಿಜನದಲಾ ರಾಜಬೀದಿಯ
ನೆರವಿ ನೆರವಿಯ ಜನದ ಪುನರಾಗಮನ ವಿಸ್ಮಯವ
ಪರಿಣತ ಸ್ತ್ರೀಬಾಲ ವೃದ್ಧರ
ವಿರಸ ವಚನವನಾಲಿಸುತ ನೃಪ
ನರಮನೆಗೆ ಬಂದೆರಗಿದನು ಧೃತರಾಷ್ಟ್ರನಂಘ್ರಿಯಲಿ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಜ ಪರಿಮಿತ ಪರಿಜನದೊಡನೆ ಪುರವನ್ನು ಪ್ರವೇಶಿಸಿದ. ರಾಜ ಬೀದಿಗಳಲ್ಲಿ ಪುರಜನರು ಇವರ ಪುನರಾಗಮನವನ್ನು ಕಂಡು ವಿಸ್ಮಿತರಾದರು. ಪರಿಣತರಾದವರು ಸ್ತ್ರೀಯರು ಬಾಲರು ವೃದ್ಧರು ವಿರಸದ ಮಾತುಗಳನ್ನಾಡಿಕೊಳ್ಳುತ್ತಿದ್ದರು. ಅದನ್ನು
ಕೇಳಿಸಿಕೊಳ್ಳುತ್ತಾ ರಾಜ ಅರಮನೆಗೆ ಬಂದು ಧೃತರಾಷ್ಟ್ರನ ಪಾದಗಳಿಗೆ ಎರಗಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಪುರವ ಹೊಕ್ಕನು ನೃಪತಿ ಪರಿಮಿತ
ಪರಿಜನದಲಾ ರಾಜಬೀದಿಯ
ನೆರವಿ ನೆರವಿಯ ಜನದ ಪುನರಾಗಮನ ವಿಸ್ಮಯವ
ಪರಿಣತ ಸ್ತ್ರೀಬಾಲ ವೃದ್ಧರ
ವಿರಸ ವಚನವನಾಲಿಸುತ ನೃಪ
ನರಮನೆಗೆ ಬಂದೆರಗಿದನು ಧೃತರಾಷ್ಟ್ರನಂಘ್ರಿಯಲಿ ॥41॥
೦೪೨ ಸೋಲದಲಿ ಮನನೊನ್ದು ...{Loading}...
ಸೋಲದಲಿ ಮನನೊಂದು ಹೋದುದು
ಹೋಲದೆಮ್ಮಭಿಮತಕೆ ನಿಮ್ಮೊಳು
ಮೇಳದಿಂದೊಂದಾಗಿ ಮಜ್ಜನ ಭೋಜನಾದಿಗಳ
ಲೀಲೆಯಲಿ ಮಾಡುವುದು ಸದ್ಯೂ
ತಾಳಿಯಲಿ ರಮಿಸುವುದು ಮನದ ವಿ
ಟಾಳವಿಲ್ಲದೆ ಬದುಕಿ ನಿಮ್ಮೊಳಗೆಂದನಂಧನೃಪ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನೀವು ಸೋಲಿನಿಂದ ಮನಸ್ಸು ನೊಂದುಕೊಂಡು ಹೋದದ್ದು ನಮಗೆ ಸರಿತೋರಲಿಲ್ಲ. ನಿಮ್ಮೊಡನೆ ಒಟ್ಟುಗೂಡಿ ಒಂದಾಗಿ ಸೇರಿ ಮಜ್ಜನ ಭೋಜನ ವಿನೋದಗಳಿಂದ ಕಾಲವನ್ನು ಕಳೆಯಬೇಕು. ಸದ್ಯೂತಾವಳಿಯಿಂದ ಸಂತೋಷಗೊಳ್ಳಿ. ಮನೋವಿಕಾರವಿಲ್ಲದೆ ಎಲ್ಲರೂ ಸೇರಿ ಬದುಕಿ ಎಂದ ಅಂಧನೃಪ.
ಪದಾರ್ಥ (ಕ.ಗ.ಪ)
ವಿಟಾಳವಿಲ್ಲದೆ-ಯಾವ ಮನೋವಿಕಾರವೂ ಇಲ್ಲದೆ
ಮೂಲ ...{Loading}...
ಸೋಲದಲಿ ಮನನೊಂದು ಹೋದುದು
ಹೋಲದೆಮ್ಮಭಿಮತಕೆ ನಿಮ್ಮೊಳು
ಮೇಳದಿಂದೊಂದಾಗಿ ಮಜ್ಜನ ಭೋಜನಾದಿಗಳ
ಲೀಲೆಯಲಿ ಮಾಡುವುದು ಸದ್ಯೂ
ತಾಳಿಯಲಿ ರಮಿಸುವುದು ಮನದ ವಿ
ಟಾಳವಿಲ್ಲದೆ ಬದುಕಿ ನಿಮ್ಮೊಳಗೆಂದನಂಧನೃಪ ॥42॥
೦೪೩ ಕೃತಕವಿಲ್ಲದೆ ಬನ್ದೆ ...{Loading}...
ಕೃತಕವಿಲ್ಲದೆ ಬಂದೆ ನೀನೀ
ವ್ಯಥಿಕರಕೆ ಮನ ಬಹರೆ ಸುಖ ಸಂ
ಗತ ಸುಹೃದ್ದ್ಯೂತದಲಿ ರಮಿಸೈ ಕಂದ ಹೋಗೆಂದು
ಸುತತನದ ಸೌಹಾರ್ದ ಸಂಭಾ
ವಿತದ ಹೊರಬಾಹೆಯಲಿ ಧರಣೀ
ಪತಿಯನುಪಚರಿಸಿದನು ಚದುರಿಗತನದಿ ಧೃತರಾಷ್ಟ್ರ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಯಾವ ಕಪಟವೂ ಇಲ್ಲದೆ ಬಂದೆ ನೀನು. ಈ ಸಂದರ್ಭದಲ್ಲಿ ನಿನಗೆ ಪ್ರಿಯವೆನಿಸಿದರೆ ಸುಹುದ್ದ್ಯೂತದಲ್ಲಿ ರಮಿಸು, ಕಂದ ! ಹೋಗು”, ಬಹಿರಂಗದಲ್ಲಿ ಮಗ ಎಂಬ ಸ್ನೇಹಭಾವವನ್ನು ತೋರಿಸಿ ಚದುರತನದಿಂದ ಯುಧಿಷ್ಠಿರ ರಾಜನನ್ನು ಧೃತರಾಷ್ಟ್ರ ಉಪಚರಿಸಿದ.
ಪದಾರ್ಥ (ಕ.ಗ.ಪ)
ವ್ಯತಿಕರ-ಸಂದರ್ಭ
ಮೂಲ ...{Loading}...
ಕೃತಕವಿಲ್ಲದೆ ಬಂದೆ ನೀನೀ
ವ್ಯಥಿಕರಕೆ ಮನ ಬಹರೆ ಸುಖ ಸಂ
ಗತ ಸುಹೃದ್ದ್ಯೂತದಲಿ ರಮಿಸೈ ಕಂದ ಹೋಗೆಂದು
ಸುತತನದ ಸೌಹಾರ್ದ ಸಂಭಾ
ವಿತದ ಹೊರಬಾಹೆಯಲಿ ಧರಣೀ
ಪತಿಯನುಪಚರಿಸಿದನು ಚದುರಿಗತನದಿ ಧೃತರಾಷ್ಟ್ರ ॥43॥
೦೪೪ ಸರ್ವಲೋಕ ವಿನಾಶಕರವೀ ...{Loading}...
ಸರ್ವಲೋಕ ವಿನಾಶಕರವೀ
ಗುರ್ವಣೆಯ ದೈವಾಭಿಪಾಕಕೆ
ದರ್ವಿಯಾಯಿತು ಧರ್ಮಪುತ್ರನ ಬುದ್ಧಿವಿಸ್ತಾರ
ಸರ್ವಜನವೊಂದೆಸೆ ಯುಧಿಷ್ಟಿರ
ನೋರ್ವನೊಂದೆಸೆ ಶಕುನಿ ಕೌರವ
ರೀರ್ವರೊಂದೆಸೆ ಜೂಜಿನಭಿಮತರಸವ ಕೇಳ್ ಎಂದ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸರ್ವಲೋಕ ವಿನಾಶಕರವಾದ, ವಿಧಿಯೇ ತಯಾರಿಸಿದ ಈ ಭಯಾನಕವಾದ ಅಡುಗೆಗೆ ಧರ್ಮಜನ ವಿಸ್ತಾರವಾದ ಬುದ್ಧಿ ಸೌಟಿನಂತಾಯಿತು. ಎಲ್ಲ ಜನರೂ ಒಂದು ಕಡೆಗಾದರೆ ಯುಧಿಷ್ಠಿರನೊಬ್ಬನೇ ಒಂದು ಕಡೆ. ಶಕುನಿ ಕೌರವರು ಇನ್ನೊಂದು ಕಡೆ.
ಪದಾರ್ಥ (ಕ.ಗ.ಪ)
ದೈವಾಭಿಪಾಕಕೆ-ದೈವವೇ ತಯಾರಿಸಿದ ಅಡುಗೆಗೆ, ದರ್ವಿ-ಬಡಿಸುವ ಸೌಟು
ಮೂಲ ...{Loading}...
ಸರ್ವಲೋಕ ವಿನಾಶಕರವೀ
ಗುರ್ವಣೆಯ ದೈವಾಭಿಪಾಕಕೆ
ದರ್ವಿಯಾಯಿತು ಧರ್ಮಪುತ್ರನ ಬುದ್ಧಿವಿಸ್ತಾರ
ಸರ್ವಜನವೊಂದೆಸೆ ಯುಧಿಷ್ಟಿರ
ನೋರ್ವನೊಂದೆಸೆ ಶಕುನಿ ಕೌರವ
ರೀರ್ವರೊಂದೆಸೆ ಜೂಜಿನಭಿಮತರಸವ ಕೇಳೆಂದ ॥44॥
೦೪೫ ಬನ್ದು ಕುಳ್ಳಿರ್ದುದು ...{Loading}...
ಬಂದು ಕುಳ್ಳಿರ್ದುದು ಸಭಾಸದ
ವೃಂದ ನೆರೆದುದು ಮತ್ತೆ ಜೂಜಿನ
ದಂದುಗದ ದುವ್ರ್ಯಸನ ಮುಸುಕಿತು ಧರ್ಮನಂದನನ
ತಂದು ಮಣಿಮಯ ಸಾರಿವಲಗೆಯ
ನಂದು ಮೋಹರಿಸಿದರು ಜೂಜಿಂ
ಗಿಂದು ಕುಲದ ಮಹಿಶನನುವಾದನು ಸರಾಗದಲಿ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಭಾಸದರೆಲ್ಲ ಬಂದು ಕುಳಿತರು. ಜೂಜಿನ ಕೋಟಲೆಯ ದುಶ್ಚಟ ಮತ್ತೆ ಧರ್ಮನಂದನನನ್ನು ಆವರಿಸಿಕೊಂಡಿತು. ರತ್ನಮಯವಾದ ಸಾರಿಯ ಹಲಗೆಯನ್ನು ತಂದಿಟ್ಟರು. ಸಾರಿಗಳನ್ನು ಜೋಡಿಸಿದರು. ಆ ಇಂದುಕುಲದ ರಾಜ ಜೂಜಿಗೆ ಸಂತೋಷದಿಂದ ಸಿದ್ಧವಾದ.
ಪದಾರ್ಥ (ಕ.ಗ.ಪ)
ದುವ್ರ್ಯಸನ-ದುಶ್ಚಟ
ಮೂಲ ...{Loading}...
ಬಂದು ಕುಳ್ಳಿರ್ದುದು ಸಭಾಸದ
ವೃಂದ ನೆರೆದುದು ಮತ್ತೆ ಜೂಜಿನ
ದಂದುಗದ ದುವ್ರ್ಯಸನ ಮುಸುಕಿತು ಧರ್ಮನಂದನನ
ತಂದು ಮಣಿಮಯ ಸಾರಿವಲಗೆಯ
ನಂದು ಮೋಹರಿಸಿದರು ಜೂಜಿಂ
ಗಿಂದು ಕುಲದ ಮಹಿಶನನುವಾದನು ಸರಾಗದಲಿ ॥45॥
೦೪೬ ಎಳ್ಳನಿತು ಖಯಖೋಡಿ ...{Loading}...
ಎಳ್ಳನಿತು ಖಯಖೋಡಿ ಚಿತ್ತದೊ
ಳಿಲ್ಲ ನಿಜ ಪಾಂಡಿತ್ಯ ಪರಿಣತಿ
ಬಿಲ್ಲ ಬಿಸುಟುದು ಬೆದರಿಹೋಯ್ತು ವಿವೇಕವಿಸ್ತಾರ
ಖುಲ್ಲರೊಡನೆಯೆ ಖೇಳಮೇಳಕೆ
ಚಲ್ಲಣವ ವೆಂಟಣಿಸಲಾ ಜನ
ವೆಲ್ಲ ಮರುಗಿತು ಧರ್ಮಜನ ಮರುಜೂಜಿನುಬ್ಬಟೆಗೆ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಲೇಶಮಾತ್ರವಾದರೂ ಚಿತ್ತದಲ್ಲಿ ಅಳುಕು ಸಂಕೋಚವೆಂಬುದಿಲ್ಲ. ಸ್ವಂತಪಾಂಡಿತ್ಯ ಪರಿಣತಿ ಎಂಬ ಬಿಲ್ಲು ಬಿಸುಡಿ ಹೋಯಿತು. ವಿಸ್ತಾರವಾದ ವಿವೇಕವೂ ಬೆದರಿ ಹೊರಟುಹೋಯಿತು. ಆ ದುಷ್ಟರೊಡನೆಯೇ ವಿನೋದಕೇಳಿಗೆ ಚಲ್ಲಣ ಧರಿಸಿ ಸಿದ್ಧವಾಗಲು, ಧರ್ಮರಾಜನ ಮರುಜೂಜಿನ ಉತ್ಸಾಹವನ್ನು ಕಂಡು ಜನ ಮರುಗಿದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಎಳ್ಳನಿತು ಖಯಖೋಡಿ ಚಿತ್ತದೊ
ಳಿಲ್ಲ ನಿಜ ಪಾಂಡಿತ್ಯ ಪರಿಣತಿ
ಬಿಲ್ಲ ಬಿಸುಟುದು ಬೆದರಿಹೋಯ್ತು ವಿವೇಕವಿಸ್ತಾರ
ಖುಲ್ಲರೊಡನೆಯೆ ಖೇಳಮೇಳಕೆ
ಚಲ್ಲಣವ ವೆಂಟಣಿಸಲಾ ಜನ
ವೆಲ್ಲ ಮರುಗಿತು ಧರ್ಮಜನ ಮರುಜೂಜಿನುಬ್ಬಟೆಗೆ ॥46॥
೦೪೭ ತೆಗೆದು ಸಾರಿಯ ...{Loading}...
ತೆಗೆದು ಸಾರಿಯ ಹೂಡಿ ಹಾಸಂ
ಗಿಗಳ ಹೊಸೆದನು ಶಕುನಿ ಧರ್ಮಜ
ಹೊಗಳು ಹೊಣೆಯನು ವಚನಿಸೊಡ್ಡವನಿದು ವಿನೋದವಲೆ
ಬಗೆವಡೊಂದೇ ಹಲಗೆ ಮೇಲಣ
ದುಗುಣ ಸಲ್ಲದು ಜೂಜುಗಾರರ
ವಿಗಡತನನವಲ್ಲೆಂದು ನೃಪತಿಗೆ ಸೂಸಿದನು ನಗೆಯ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾರಿಯನ್ನು ತೆಗೆದುಹೂಡಿ ಹಾಸಂಗಿಯನ್ನು ಹೊಸೆಯುತ್ತಾ “ಹೊಣೆಯನ್ನು ಹೊಗಳು, ಪಣವನ್ನು ಒಡ್ಡು. ವಿನೋದಕ್ಕಾಗಿ
ನಾವು ಆಡುತ್ತೇವಲ್ಲವೆ ? ಒಂದೇ ಹಲಗೆ, ಅದರ ಮೇಲೆ ದ್ವಿಗುಣ ಸಲ್ಲದು ಜೂಜುಗಾರರ ದುಷ್ಟತನವಲ್ಲ” ಎಂದು ಶಕುನಿ ಹೇಳುತ್ತಾನೆ.
ಪದಾರ್ಥ (ಕ.ಗ.ಪ)
ಮೂಲ ...{Loading}...
ತೆಗೆದು ಸಾರಿಯ ಹೂಡಿ ಹಾಸಂ
ಗಿಗಳ ಹೊಸೆದನು ಶಕುನಿ ಧರ್ಮಜ
ಹೊಗಳು ಹೊಣೆಯನು ವಚನಿಸೊಡ್ಡವನಿದು ವಿನೋದವಲೆ
ಬಗೆವಡೊಂದೇ ಹಲಗೆ ಮೇಲಣ
ದುಗುಣ ಸಲ್ಲದು ಜೂಜುಗಾರರ
ವಿಗಡತನನವಲ್ಲೆಂದು ನೃಪತಿಗೆ ಸೂಸಿದನು ನಗೆಯ ॥47॥
೦೪೮ ಲಲಿತ ರಾಗದ ...{Loading}...
ಲಲಿತ ರಾಗದ ರಸದ ಗೋರಿಯ
ಬಿಲುಸವಿಯ ಮೃಗದಂತೆ ವಿಷಯದ
ಕುಳಿಯೊಳಗೆ ಕಾಲ್ದೊಡಕಿ ಬಿದ್ದ ಸುಯೋಗಿಯಂದದಲಿ
ಕಲಿತ ವಿಕಳಾವೇಶದಲಿ ವಿ
ಹ್ವಲಿತ ವಿವಿಧಶ್ರೋತ್ರ ನಯ ಸಂ
ಚಲಿತನೆಂದನು ಶಕುನಿ ನೀ ನುಡಿಯೊಡ್ಡವೇನೆಂದು ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮನೋಹರವಾದ ರಾಗರಸದ ಗಾನಕ್ಕೆ ಮರುಳಾಗಿ ಬಿಲ್ಲ ಸವಿಯನ್ನು ಕಾಣುವ ಜಿಂಕೆಯಂತೆ, ವಿಷಯ ಸುಖದ ಬಯಕೆಯಿಂದ ಕಾಲ್ತೊಡಕಿ ಹಳ್ಳಕ್ಕೆ ಬಿದ್ದ ಸುಯೋಗಿಯಂತೆ ವಿಕಳಾವೇಶದಿಂದ ಕೂಡಿ ವಿಹ್ವಲಗೊಂಡ ಕಿವಿಕಣ್ಣುಗಳಿಂದ ಪ್ರಚೋದಿಸಲ್ಪಟ್ಟ ಯುಧಿಷ್ಠಿರನು ಶಕುನಿಗೆ ನೀನು ಒಡ್ಡವೇನೆಂದು ಹೇಳು ಎಂದ.
ಪದಾರ್ಥ (ಕ.ಗ.ಪ)
ಗೋರಿ-ಜಿಂಕೆಯನ್ನು ಮರುಳಗೊಳಿಸಿ ಬಲೆಗೆ, ಆಕರ್ಷಿಸುವ ಮೃಧುಮಧುರ ಸಂಗೀತ
ಮೂಲ ...{Loading}...
ಲಲಿತ ರಾಗದ ರಸದ ಗೋರಿಯ
ಬಿಲುಸವಿಯ ಮೃಗದಂತೆ ವಿಷಯದ
ಕುಳಿಯೊಳಗೆ ಕಾಲ್ದೊಡಕಿ ಬಿದ್ದ ಸುಯೋಗಿಯಂದದಲಿ
ಕಲಿತ ವಿಕಳಾವೇಶದಲಿ ವಿ
ಹ್ವಲಿತ ವಿವಿಧಶ್ರೋತ್ರ ನಯ ಸಂ
ಚಲಿತನೆಂದನು ಶಕುನಿ ನೀ ನುಡಿಯೊಡ್ಡವೇನೆಂದು ॥48॥
೦೪೯ ಧರಣಿಪತಿ ಕೇಳ್ ...{Loading}...
ಧರಣಿಪತಿ ಕೇಳ್ ನಿನ್ನ ಧಾರಿಣಿ
ಕುರುಪತಿಯ ನೆಲನೊಡ್ಡ ನಿಮ್ಮೀ
ಯೆರಡರಸುಗಳೊಳಾರು ಸೋತರು ಸೋತ ಭೂಪತಿಗೆ
ವರುಷ ಹನ್ನೆರಡರಲಿ ವನದೊಳ
ಗಿರವು ಮೇಣಜ್ಞಾತವೊಂದೇ
ವರುಷ ಹದಿನಾಲ್ಕರಲಿ ಹೊಗುವುದು ತಮ್ಮ ಪಟ್ಟಣವ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಕುನಿಗೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಯಿತು ! “ರಾಜ ಕೇಳು, ನಿನ್ನ ರಾಜ್ಯ ಕುರುಪತಿಯ ರಾಜ್ಯ ಎರಡೇ ಒಡ್ಡ. ಇಬ್ಬರು ರಾಜರಲ್ಲಿ ಯಾರು ಸೋತರೂ, ಸೋತ ರಾಜನಿಗೆ ಕಾಡಿನಲ್ಲಿ ಹನ್ನೆರಡು ವರ್ಷ ವಾಸ, ಅನಂತರ ಒಂದೇ ವರ್ಷ ಅಜ್ಞಾತವಾಸ, ಹದಿನಾಲ್ಕನೇ ವರ್ಷ ಪಟ್ಟಣಕ್ಕೆ ಹಿಂತಿರುಗುವುದು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಧರಣಿಪತಿ ಕೇಳ್ ನಿನ್ನ ಧಾರಿಣಿ
ಕುರುಪತಿಯ ನೆಲನೊಡ್ಡ ನಿಮ್ಮೀ
ಯೆರಡರಸುಗಳೊಳಾರು ಸೋತರು ಸೋತ ಭೂಪತಿಗೆ
ವರುಷ ಹನ್ನೆರಡರಲಿ ವನದೊಳ
ಗಿರವು ಮೇಣಜ್ಞಾತವೊಂದೇ
ವರುಷ ಹದಿನಾಲ್ಕರಲಿ ಹೊಗುವುದು ತಮ್ಮ ಪಟ್ಟಣವ ॥49॥
೦೫೦ ಮರೆಯಲಿಹುದಜ್ಞಾತ ವಾಸದೊ ...{Loading}...
ಮರೆಯಲಿಹುದಜ್ಞಾತ ವಾಸದೊ
ಳರಿದರಾದೊಡೆ ಮತ್ತೆ ವನದಲಿ
ಚರಿಸುವುದು ಹನ್ನೆರಡು ವರುಷವು ಸತ್ಯಭಾಷೆಯಲಿ
ಮುರಿದು ತಪ್ಪಿದ ನೃಪನನೀಶ್ವರ
ನರಿವನೈಸಲೆ ರಾಜಧರ್ಮವ
ಮೆರೆವರಾಡುವುದೊಡ್ಡವೀ ಪರಿಯೆಂದನಾ ಶಕುನಿ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಜ್ಞಾತವಾಸದಲ್ಲಿ ಯಾರಿಗೂ ಕಾಣಿಸಿಕೊಳ್ಳದಂತೆ ಮರೆಯಾಗಿರಬೇಕು. ಕಂಡರೆ ಮತ್ತೆ ಹನ್ನೆರಡು ವರ್ಷ ವನವಾಸ. ಆಡಿದ ಮಾತನ್ನು ಉಳಿಸಿಕೊಳ್ಳಬೇಕು. ಮಾತಿಗೆ ತಪ್ಪಿದರೆ ಆ ರಾಜನನ್ನು ಈಶ್ವರನೇ ನೋಡಿಕೊಳ್ಳುತ್ತಾನೆ. ರಾಜಧರ್ಮವನ್ನು ಮೆರೆಯುವಂತಿದ್ದರೆ ಇದು ಒಡ್ಡ” ಎಂದನು ಶಕುನಿ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಮರೆಯಲಿಹುದಜ್ಞಾತ ವಾಸದೊ
ಳರಿದರಾದೊಡೆ ಮತ್ತೆ ವನದಲಿ
ಚರಿಸುವುದು ಹನ್ನೆರಡು ವರುಷವು ಸತ್ಯಭಾಷೆಯಲಿ
ಮುರಿದು ತಪ್ಪಿದ ನೃಪನನೀಶ್ವರ
ನರಿವನೈಸಲೆ ರಾಜಧರ್ಮವ
ಮೆರೆವರಾಡುವುದೊಡ್ಡವೀ ಪರಿಯೆಂದನಾ ಶಕುನಿ ॥50॥
೦೫೧ ಅಞ್ಜುವರೆ ನಿಲು ...{Loading}...
ಅಂಜುವರೆ ನಿಲು ಜೂಜುಗಾರರ
ಭಂಜವಣೆಗೊಳಗಹರೆ ಬಾ ನೃಪ
ರೆಂಜಲಿಸಿ ಬಿಡಬಹುದೆ ಪರಮ ದ್ಯೂತ ರಸಸುಧೆಯ
ರಂಜಕರು ನಾವಲ್ಲ ಜೂಜಿಗೆ
ಕಂಜಭವ ತಾನೆನ್ನೊಡನೆ ಕೆಲ
ರಂಜದಿಹರಾರೆಂದು ಗರುವವ ಸೂಸಿದನು ಶಕುನಿ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಂಜುವ ಹಾಗಿದ್ದರೆ ನಿಲ್ಲು. ಜೂಜುಗಾರರ ಪ್ರತಿಷ್ಠೆಗೆ ಒಳಗಾಗುವಂತಿದ್ದರೆ ಬಾ. ಈ ಪರಮದ್ಯೂತವೆಂಬ ಸುಧಾರಸವನ್ನು
ನೃಪರು ಎಂಜಲಿಸಿ ಬಿಟ್ಟು ಬಿಡುತ್ತಾರೆಯೇ ? ನಾವು ಬರೀ ರಂಜಕರಲ್ಲ. ಜೂಜಿನ ಬ್ರಹ್ಮನೇ ನಾನು ನನ್ನೊಡನೆ ಆಟಕ್ಕೆ ಹೆದರದಿರುವವರಾರು ?” ಎಂದು ಶಕುನಿ ತನ್ನ ಗರ್ವವನ್ನು ಹೊಗಳಿಕೊಂಡ.
ಪದಾರ್ಥ (ಕ.ಗ.ಪ)
ಭಂಜವಣೆ-ಪ್ರತಿಷ್ಠೆ
ಮೂಲ ...{Loading}...
ಅಂಜುವರೆ ನಿಲು ಜೂಜುಗಾರರ
ಭಂಜವಣೆಗೊಳಗಹರೆ ಬಾ ನೃಪ
ರೆಂಜಲಿಸಿ ಬಿಡಬಹುದೆ ಪರಮ ದ್ಯೂತ ರಸಸುಧೆಯ
ರಂಜಕರು ನಾವಲ್ಲ ಜೂಜಿಗೆ
ಕಂಜಭವ ತಾನೆನ್ನೊಡನೆ ಕೆಲ
ರಂಜದಿಹರಾರೆಂದು ಗರುವವ ಸೂಸಿದನು ಶಕುನಿ ॥51॥
೦೫೨ ಉಗ್ರಭಾಷೆಯದೇಕೆ ಶಿವಶಿವ ...{Loading}...
ಉಗ್ರಭಾಷೆಯದೇಕೆ ಶಿವಶಿವ
ವಿಗ್ರಹ ಪ್ರತಿಮುಖದ ವಿಷಮಾ
ವಗ್ರಹದಲಿದು ಬೆಂದುಹೋಗದೆ ಭರತಸಂತಾನ
ನಿಗ್ರಹಿಸಲೇಕಕಟ ಕುರುಕುಲ
ದಗ್ರಿಯನನೆಂದಖಿಳ ಸಚಿವರು
ದಗ್ರಚರಿತರು ಮುರಿದು ನುಡಿದರು ನೀತಿವಚನದಲಿ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇಂತಹ ಉಗ್ರಭಾಷೆಯೇಕೆ, ಶಿವ ಶಿವ ! ಜೂಜಿನ ಸ್ಪರ್ಧೆಯ ವಿಷಮವಾದ ಹಿಡಿತಕ್ಕೆ ಸಿಕ್ಕಿ ಭರತವಂಶ ಬೆಂದುಹೋಗುವುದಿಲ್ಲವೆ ? ಈ ಕುರುಕುಲದ ಅಗ್ರಮಾನ್ಯನಾದವನನ್ನು ಹೀಗೆ ಒತ್ತಾಯಿಸುದೇಕೆ? É” ಎಂದು ಸಮಸ್ತ ಸಚಿವರೂ ಶ್ರೇಷ್ಠ
ಚಾರಿತ್ರವುಳ್ಳವರೂ ನೀತಿಯುಕ್ತ ಮಾತುಗಳಿಂದ ಶಕುನಿಯನ್ನು ಖಂಡಿಸಿದರು.
ಪದಾರ್ಥ (ಕ.ಗ.ಪ)
ವಿಷಮಾವಗ್ರಹ - ?
ಮೂಲ ...{Loading}...
ಉಗ್ರಭಾಷೆಯದೇಕೆ ಶಿವಶಿವ
ವಿಗ್ರಹ ಪ್ರತಿಮುಖದ ವಿಷಮಾ
ವಗ್ರಹದಲಿದು ಬೆಂದುಹೋಗದೆ ಭರತಸಂತಾನ
ನಿಗ್ರಹಿಸಲೇಕಕಟ ಕುರುಕುಲ
ದಗ್ರಿಯನನೆಂದಖಿಳ ಸಚಿವರು
ದಗ್ರಚರಿತರು ಮುರಿದು ನುಡಿದರು ನೀತಿವಚನದಲಿ ॥52॥
೦೫೩ ವಿದುರ ಗುರು ...{Loading}...
ವಿದುರ ಗುರು ಗುರುಸೂನು ಬಾಹ್ಲಿಕ
ನದಿಯ ಮಗ ಗಾಂಧಾರಿ ಕುಂತೀ
ಸುದತಿ ಭೂರಿಶ್ರವ ಯುಯುತ್ಸು ವಿಕರ್ಣ ಸೃಂಜಯರು
ಇದು ವಿಷಮವೆಂದಾ ಕೃಪ ದ್ರೌ
ಪದಿ ವೃಕೋದರ ಪಾರ್ಥ ಯಮಳರು
ಕುದಿದರೊಳಗೊಳಗಾಡಲಮ್ಮದೆ ರಾಯನಿದಿರಲಿ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿದುರ , ದ್ರೋಣ, ಅಶ್ವತ್ಥಾಮ, ಬಾಹ್ಲಿಕ, ಭೀಷ್ಮ, ಗಾಂಧಾರಿ, ಕುಂತಿ, ಭೂರಿಶ್ರವ, ಯುಯುತ್ಸು, ವಿಕರ್ಣ, ಸೃಂಜಯರು ಇದು ವಿಷಮವಾದುದು ಎಂದರು. ಆ ಕೃಪ, ದ್ರೌಪದಿ, ಭೀಮ, ಅರ್ಜುನ, ನಕುಲ ಸಹದೇವರು ರಾಜನ ಎದುರು ಹೇಳಲಾರದೆ ಒಳಗೇ ಕುದಿದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ವಿದುರ ಗುರು ಗುರುಸೂನು ಬಾಹ್ಲಿಕ
ನದಿಯ ಮಗ ಗಾಂಧಾರಿ ಕುಂತೀ
ಸುದತಿ ಭೂರಿಶ್ರವ ಯುಯುತ್ಸು ವಿಕರ್ಣ ಸೃಂಜಯರು
ಇದು ವಿಷಮವೆಂದಾ ಕೃಪ ದ್ರೌ
ಪದಿ ವೃಕೋದರ ಪಾರ್ಥ ಯಮಳರು
ಕುದಿದರೊಳಗೊಳಗಾಡಲಮ್ಮದೆ ರಾಯನಿದಿರಲಿ ॥53॥
೦೫೪ ಕ್ಷಿತಿಪ ಕೇಳ್ ...{Loading}...
ಕ್ಷಿತಿಪ ಕೇಳ್ ದುವ್ರ್ಯಸನ ವಿಷಮ
ವ್ಯತಿಕರದ ಭಾಷೆಯನು ನೃಪ ಮಿಗೆ
ಪತಿಕರಿಸಿದನು ಹೊಸೆದು ಹಾಸಂಗಿಗಳ ಹಾಯ್ಕಿದನು
ಸತಿಯ ದಕ್ಷಿಣ ನಯನವೀ ಭೂ
ಪತಿಯ ವಾಮ ಭುಜಾಕ್ಷಿಗಳು ದು
ರ್ಗತಿಯ ಸೂಚಿಸಿ ತೋರುತಿರ್ದವು ಧರ್ಮನಂದನನ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುವ್ರ್ಯಸನದ ಈ ವಿಷಮ ಸಂದರ್ಭದ ಪಣವನ್ನು ಯುಧಿಷ್ಠಿರ ಅತಿಶಯವಾಗಿ ಸ್ವೀಕರಿಸಿಬಿಟ್ಟ. ಹಾಸಂಗಿಗಳನ್ನು ಹೊಸೆದು
ಹಾಕಿಬಿಟ್ಟ. ದ್ರೌಪದಿಯ ಬಲಗಣ್ಣು ರಾಜನ ಎಡಭುಜ ಅದುರಿ ಧರ್ಮನಂದನನ ದುರ್ಗತಿಯನ್ನು ಸೂಚಿಸಿತು.
ಪದಾರ್ಥ (ಕ.ಗ.ಪ)
ಪತಿಕರಿಸು-ಸ್ವೀಕರಿಸು
ಮೂಲ ...{Loading}...
ಕ್ಷಿತಿಪ ಕೇಳ್ ದುವ್ರ್ಯಸನ ವಿಷಮ
ವ್ಯತಿಕರದ ಭಾಷೆಯನು ನೃಪ ಮಿಗೆ
ಪತಿಕರಿಸಿದನು ಹೊಸೆದು ಹಾಸಂಗಿಗಳ ಹಾಯ್ಕಿದನು
ಸತಿಯ ದಕ್ಷಿಣ ನಯನವೀ ಭೂ
ಪತಿಯ ವಾಮ ಭುಜಾಕ್ಷಿಗಳು ದು
ರ್ಗತಿಯ ಸೂಚಿಸಿ ತೋರುತಿರ್ದವು ಧರ್ಮನಂದನನ ॥54॥
೦೫೫ ದಾಯವೇ ಮಝ ...{Loading}...
ದಾಯವೇ ಮಝ ಪೂತು ದುಗತಿಗ
ನಾಯಸವಲೇ ಚೌಕವೊಂದೇ
ಕಾಯಲಾಗದೆ ಹಾಯ್ಕ ಹಾಯ್ಕೆಂದೊದರಿ ಗರ್ಜಿಸಿದ
ರಾಯ ಸೋತನು ಧರ್ಮಸುತ ಕುರು
ರಾಯ ಗೆಲಿದನು ಕಟ್ಟು ಗುಡಿಯನು
ರಾಯನೂರೊಳಗೆಂದು ಮಿಗೆ ಬೊಬ್ಬಿರಿದನಾ ಶಕುನಿ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸರಿ, ಯುಧಿಷ್ಠಿರ “ದಾಯವೇ, ಮಝಪೂತು ! ದುಗ ತಿಗ ಅನಾಯಾಸವಲ್ಲವೇ ? ಚೌಕವೊಂದೇ ಕಾಯಲಾಗದೆ ಹಾಕು ಹಾಕು” ಎಂದು ಗರ್ಜಿಸಿದ. “ಧರ್ಮಸುತ ಸೋತನು ಕುರುರಾಯ ಗೆದ್ದನು ! ರಾಯನ ಊರಿನಲ್ಲಿ ಕಟ್ಟು ಗುಡಿಯನ್ನು ಎಂದು ಶಕುನಿ ಬೊಬ್ಬಿರಿಸಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ದಾಯವೇ ಮಝ ಪೂತು ದುಗತಿಗ
ನಾಯಸವಲೇ ಚೌಕವೊಂದೇ
ಕಾಯಲಾಗದೆ ಹಾಯ್ಕ ಹಾಯ್ಕೆಂದೊದರಿ ಗರ್ಜಿಸಿದ
ರಾಯ ಸೋತನು ಧರ್ಮಸುತ ಕುರು
ರಾಯ ಗೆಲಿದನು ಕಟ್ಟು ಗುಡಿಯನು
ರಾಯನೂರೊಳಗೆಂದು ಮಿಗೆ ಬೊಬ್ಬಿರಿದನಾ ಶಕುನಿ ॥55॥
೦೫೬ ಹಣುಗಿತರಸನ ವದನ ...{Loading}...
ಹಣುಗಿತರಸನ ವದನ ತಾಳಿಗೆ
ಯೊಣಗಿತವನಿಗೆ ನಟ್ಟದಿಟ್ಟಿಯ
ಮಣಿದ ನೆನಹಿನ ಮುರಿದ ಮಹಿಮೆಯ ತಾಗಿದಪದೆಸೆಯ
ಜುಣುಗಿದುಬ್ಬಿನ ಸತ್ಯದಲಿ ಕೇ
ವಣಿಸಿದರಿವಿನ ವಿಕೃತ ಕರ್ಮದ
ಕುಣಿಕೆಗೊಲೆದೊಲೆದರಸನಿದ್ದನು ಹೊತ್ತ ದುಗುಡದಲಿ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನ ಮುಖ ತಗ್ಗಿತು. ಗಂಟಲು ಒಣಗಿತು. ನೆಲದಮೇಲೆ ದೃಷ್ಟಿ ನೆಲಸಿತು. ನೆನಪು ತಗ್ಗಿತು. ಮಹಿಮೆ ಮುರಿಯಿತು. ಅಪಖ್ಯಾತಿ ತಗುಲಿತು. ಉತ್ಸಾಹ ಅಡಗಿತು. ಅರಿವು ಸತ್ಯದಲ್ಲೇ ಸಿಕ್ಕಿಕೊಂಡಿತು. ಕರ್ಮದ ಕುಣಿಕೆಗೆ ಸಿಕ್ಕಿಕೊಂಡ ಅರಸ ದುಃಖವನ್ನು ಹೊತ್ತುಕೊಂಡಿದ್ದ.
ಪದಾರ್ಥ (ಕ.ಗ.ಪ)
ತಾಳಿಗೆ-ಗಂಟಲು, ಜುಣುಗಿದ-ಅಡಗಿದ
ಮೂಲ ...{Loading}...
ಹಣುಗಿತರಸನ ವದನ ತಾಳಿಗೆ
ಯೊಣಗಿತವನಿಗೆ ನಟ್ಟದಿಟ್ಟಿಯ
ಮಣಿದ ನೆನಹಿನ ಮುರಿದ ಮಹಿಮೆಯ ತಾಗಿದಪದೆಸೆಯ
ಜುಣುಗಿದುಬ್ಬಿನ ಸತ್ಯದಲಿ ಕೇ
ವಣಿಸಿದರಿವಿನ ವಿಕೃತ ಕರ್ಮದ
ಕುಣಿಕೆಗೊಲೆದೊಲೆದರಸನಿದ್ದನು ಹೊತ್ತ ದುಗುಡದಲಿ ॥56॥
೦೫೭ ಉಬ್ಬು ಮುರಿದುದು ...{Loading}...
ಉಬ್ಬು ಮುರಿದುದು ತಮ್ಮೊಳೊಬ್ಬರ
ನೊಬ್ಬರೀಕ್ಷಿಸಿ ಕೈಯ್ಯಗಲ್ಲದ
ನಿಬ್ಬರದ ನಿಡುಸುಯ್ಲು ಖೋಡಿಯ ಮನದ ಕಳ್ಗುದಿಯ
ಜಬ್ಬುಲಿಯ ಜಾಣಿಕೆಯ ಚಿಂತೆಯ
ಹಬ್ಬುಗೆಯ ಹರವಸದ ಖೇದದ
ಮಬ್ಬಿನಲಿ ಹಣಗಿದರು ಪವನಜ ಫಲುಗುಣಾದಿಗಳು ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮ ಅರ್ಜುನಾದಿಗಳ ಉತ್ಸಾಹ ಅಡಗಿತು. ತಮ್ಮ ತಮ್ಮಲ್ಲೇ ಒಬ್ಬರ ಮುಖವನ್ನೊಬ್ಬರು ನೋಡುತ್ತಾ, ಕೈಯ ಮೇಲೆ ಗಲ್ಲವನ್ನು ಹೊತ್ತು ಬಲವಾಗಿ ನಿಟ್ಟುಸಿರು ಬಿಟ್ಟರು. ಮನಸ್ಸು ಸಂಕಟದಲ್ಲಿ ಬೆಂದು ಕುದಿಯಿತು. ದುರ್ಬಲಗೊಂಡ ಜಾಣ್ಮೆಯ ಚಿಂತೆ ಹಬ್ಬಿತು.
ಪರವಶದ ದುಃಖದ ಮಬ್ಬಿನಲ್ಲಿ ಅಡಗಿದರು.
ಪದಾರ್ಥ (ಕ.ಗ.ಪ)
ಜಬ್ಬುಲಿಯ-ದುರ್ಬಲಗೊಂಡ, ಹರವಸ-ಪರವಶತೆ, ಹಣಗಿದರು-ಅಡಗಿಕೊಂಡರು
ಮೂಲ ...{Loading}...
ಉಬ್ಬು ಮುರಿದುದು ತಮ್ಮೊಳೊಬ್ಬರ
ನೊಬ್ಬರೀಕ್ಷಿಸಿ ಕೈಯ್ಯಗಲ್ಲದ
ನಿಬ್ಬರದ ನಿಡುಸುಯ್ಲು ಖೋಡಿಯ ಮನದ ಕಳ್ಗುದಿಯ
ಜಬ್ಬುಲಿಯ ಜಾಣಿಕೆಯ ಚಿಂತೆಯ
ಹಬ್ಬುಗೆಯ ಹರವಸದ ಖೇದದ
ಮಬ್ಬಿನಲಿ ಹಣಗಿದರು ಪವನಜ ಫಲುಗುಣಾದಿಗಳು ॥57॥
೦೫೮ ಕಣ್ಡನೇ ಧೃತರಾಷ್ಟ್ರನನು ...{Loading}...
ಕಂಡನೇ ಧೃತರಾಷ್ಟ್ರನನು ಕೈ
ಕೊಂಡನೇ ವನದೀಕ್ಷೆಯನು ಪಿತ
ನಂಡಲೆದು ಕೃಷ್ಣಾಜಿನವನುಡುಗೊರೆಯನಿತ್ತನಲೆ
ಚಂಡಿಗೊಂಡರೆ ನನಗೆ ನಿನ್ನಿನ
ಭಂಡತನ ಬಾರದಲೆ ವನವಾ
ಖಂಡಲಪ್ರಸ್ಥವಲೆ ನಿನಗಿನ್ನೆಂದಳಿಂದುಮುಖಿ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿಯ ಪ್ರತಿಕ್ರಿಯೆಯಿದು “ಹೋಗಿ ಕಂಡನೇ ಧೃತರಾಷ್ಟ್ರನನ್ನು ? ವನದೀಕ್ಷೆಯನ್ನು ಸ್ವೀಕರಿಸಿದನೇ ? ಆ ತಂದೆ ಬಲಾತ್ಕರಿಸಿ
ಕೃಷ್ಣಾಜಿನದ ಉಡುಗೊರೆಯನ್ನು ಕೊಟ್ಟನಲ್ಲವೆ ? ಎಷ್ಟೇ ಚಂಡಿ ಹಿಡಿದರೂ ನನಗೆ ನೆನ್ನೆ ಆದ ಭಂಡತನ ಬರುವುದಿಲ್ಲ ತಾನೇ ? ನಿನಗೆ ಇನ್ನು ವನವೇ ಇಂದ್ರಪ್ರಸ್ಥವಲ್ಲವೇ ? ಎಂದು ಯುಧಿಷ್ಠಿರನನ್ನು ಹಂಗಿಸಿದಳು.
ಪದಾರ್ಥ (ಕ.ಗ.ಪ)
ಆಖಂಡಲ-ದೇವೇಂದ್ರ
ಮೂಲ ...{Loading}...
ಕಂಡನೇ ಧೃತರಾಷ್ಟ್ರನನು ಕೈ
ಕೊಂಡನೇ ವನದೀಕ್ಷೆಯನು ಪಿತ
ನಂಡಲೆದು ಕೃಷ್ಣಾಜಿನವನುಡುಗೊರೆಯನಿತ್ತನಲೆ
ಚಂಡಿಗೊಂಡರೆ ನನಗೆ ನಿನ್ನಿನ
ಭಂಡತನ ಬಾರದಲೆ ವನವಾ
ಖಂಡಲಪ್ರಸ್ಥವಲೆ ನಿನಗಿನ್ನೆಂದಳಿಂದುಮುಖಿ ॥58॥
೦೫೯ ಕಳೆದು ಬಿಸುಟರು ...{Loading}...
ಕಳೆದು ಬಿಸುಟರು ಮತ್ತೆ ರತ್ನಾ
ವಳಿಯ ವಿವಿಧಾಭರಣವನು ಪರಿ
ಲಲಿತ ಕೃಷ್ಣಾಜಿನವ ಹೊದೆದರು ಹಾಯ್ಕಿ ಹಚ್ಚಟವ
ನಳಿನಮುಖಿ ನಳನಳಿಪ ಮುಕ್ತಾ
ವಳಿಯಲಂಕಾರವನುಗಿದು ಸಭೆ
ಯೊಳಗೆ ಬಿಸುಟಳು ನಿಂದಳಬಲೆ ನಿಜಾಭಿರೂಪದಲಿ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರೆಲ್ಲರೂ ನಾನಾ ರತ್ನಾಭರಣಗಳನ್ನೆಲ್ಲ ಕಿತ್ತೆಸೆದರು. ಮೃದುವಾದ ಕೃಷ್ಣಾಜಿನವನ್ನು ಹೊದೆದರು. ಹಚ್ಚಡವನ್ನು ತೆಗೆದುಹಾಕಿದರು. ದ್ರೌಪದಿ ನಳನಳಿಸುವ ಮುತ್ತಿನ ಆಭರಣಗಳನ್ನೆಲ್ಲ ತೆಗೆದು ಸಭೆಯಲ್ಲಿ ಎಸೆದಳು. ತನ್ನ ಸರಳ ರೂಪದಲ್ಲಿ ನಿಂತಳು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಕಳೆದು ಬಿಸುಟರು ಮತ್ತೆ ರತ್ನಾ
ವಳಿಯ ವಿವಿಧಾಭರಣವನು ಪರಿ
ಲಲಿತ ಕೃಷ್ಣಾಜಿನವ ಹೊದೆದರು ಹಾಯ್ಕಿ ಹಚ್ಚಟವ
ನಳಿನಮುಖಿ ನಳನಳಿಪ ಮುಕ್ತಾ
ವಳಿಯಲಂಕಾರವನುಗಿದು ಸಭೆ
ಯೊಳಗೆ ಬಿಸುಟಳು ನಿಂದಳಬಲೆ ನಿಜಾಭಿರೂಪದಲಿ ॥59॥
೦೬೦ ಸಾಲದೇ ನಿಮಗಿನ್ನು ...{Loading}...
ಸಾಲದೇ ನಿಮಗಿನ್ನು ಕೌರವ
ರೋಲಗದ ಫಲವಾಯ್ತಲಾ ವನ
ಮಾಲೆ ಕೊರಳಿಂಗಲ್ಲ ಚರಣಾಭರಣವಾಯಿತೆಲೆ
ಬೀಳುಕೊಳಿರೇ ಬೊಪ್ಪನವರನು
ಮೇಲೆ ಮೋಹದ ತಾಯಲಾ ನಡೆ
ಹೇಳಿ ಕಳುಹಿಸಿಕೊಂಬೆವೆಂದನು ಭೂಪತಿಗೆ ಭೀಮ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮಸೇನನೂ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ. “ಸಾಲದೇ ನಿಮಗೆ ಇನ್ನೂ? ಮತ್ತೆ ಆಗಬೇಕಾದದ್ದಿದೆಯೇ ? ಕೌರವನ
ಸಭೆಯಲ್ಲಿ ಫಲ ದೊರೆಯಿತಲ್ಲಾ ! ಕೊರಳಿಗೆ ಹಾಕಿಕೊಳ್ಳಬೇಕಾದ ವನಮಾಲೆ ಕಾಲಿನ ಆಭರಣವಾಯಿತಲ್ಲಾ ! ಹೋಗಿ ಬೊಪ್ಪನವರನ್ನು ಬೀಳ್ಕೊಳ್ಳಿ ! ಆಮೇಲೆ, ಮೋಹದ ತಾಯಿಯಲ್ಲವೇ ? ಗಾಂಧಾರಿ, ಹೇಳಿ ಕಳುಹಿಸಿಕೊಳ್ಳೋಣ ನಡೆಯಿರಿ-ಎಂದ,
ಪದಾರ್ಥ (ಕ.ಗ.ಪ)
ಮೂಲ ...{Loading}...
ಸಾಲದೇ ನಿಮಗಿನ್ನು ಕೌರವ
ರೋಲಗದ ಫಲವಾಯ್ತಲಾ ವನ
ಮಾಲೆ ಕೊರಳಿಂಗಲ್ಲ ಚರಣಾಭರಣವಾಯಿತೆಲೆ
ಬೀಳುಕೊಳಿರೇ ಬೊಪ್ಪನವರನು
ಮೇಲೆ ಮೋಹದ ತಾಯಲಾ ನಡೆ
ಹೇಳಿ ಕಳುಹಿಸಿಕೊಂಬೆವೆಂದನು ಭೂಪತಿಗೆ ಭೀಮ ॥60॥
೦೬೧ ಬನ್ದರಿವರರಮನೆಗೆ ನೇಮವೆ ...{Loading}...
ಬಂದರಿವರರಮನೆಗೆ ನೇಮವೆ
ಯೆಂದು ಪದಕೆರಗಿರೆ ಕಣಿ ನೀ
ರಿಂದ ನನೆದನು ತಂದೆ ಮಕ್ಕಳ ಬಿಟ್ಟು ಬದುಕುವನೆ
ಇಂದುಮುಖಿ ಮರುಗಿದಳು ನಾವಿ
ನ್ನೆಂದು ಕಾಬೆವು ನಿಮ್ಮನಕಟಕ
ಟೆಂದಳತಿ ಮೋಹಿತೆಯಲಾ ಕುಂತೀ ಕುಮಾರರಿಗೆ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲ್ಲರೂ ಧೃತರಾಷ್ಟ್ರನ ಅರಮನೆಗೆ ಬಂದರು. ಧೃತರಾಷ್ಟ್ರ ಗಾಂಧಾರಿ ಇದ್ದರು. ಅವರ ಪಾದಗಳಿಗೆ ಎರಗಿ “ಅಪ್ಪಣೆಯೇ ?” ಎಂದು ಕೇಳಿದರು. ಕಣ್ಣ ನೀರಿನಿಂದ ನೆನೆದ ತಂದೆ “ಮಕ್ಕಳನ್ನು ಬಿಟ್ಟು ಹೇಗೆ ಬದುಕಲಿ?” ಎಂದು ಪೇಚಾಡಿದ. ಗಾಂಧಾರಿಯೂ ಮರುಗಿದಳು. “ನಾವು ಇನ್ನೆಂದು ಕಾಣುತ್ತೇವೆ ನಿಮ್ಮನ್ನು ಅಕಟಕಟಾ !” ಎಂದಳು. ಕುಂತಿಯ ಮಕ್ಕಳನ್ನು ಕಂಡರೆ ಅವಳಿಗೆ ಅತಿ
ಮೋಹವಲ್ಲವೇ ?
ಪದಾರ್ಥ (ಕ.ಗ.ಪ)
ಮೂಲ ...{Loading}...
ಬಂದರಿವರರಮನೆಗೆ ನೇಮವೆ
ಯೆಂದು ಪದಕೆರಗಿರೆ ಕಣಿ ನೀ
ರಿಂದ ನನೆದನು ತಂದೆ ಮಕ್ಕಳ ಬಿಟ್ಟು ಬದುಕುವನೆ
ಇಂದುಮುಖಿ ಮರುಗಿದಳು ನಾವಿ
ನ್ನೆಂದು ಕಾಬೆವು ನಿಮ್ಮನಕಟಕ
ಟೆಂದಳತಿ ಮೋಹಿತೆಯಲಾ ಕುಂತೀ ಕುಮಾರರಿಗೆ ॥61॥
೦೬೨ ವನದೊಳತ್ಯಾಯಾಸ ನೀವೆಂ ...{Loading}...
ವನದೊಳತ್ಯಾಯಾಸ ನೀವೆಂ
ತನುಭಿಸುವಿರಿ ಪಾಪಿ ದುರ್ಯೋ
ಧನನದುರ್ಜನ ಸಂಗ ನಿವಗಿದು ಸಿಂಗಿಯಾದುದಲೆ
ವನಿತೆ ನಿಮ್ಮೊಡನೆಂತು ತೊಳಲುವ
ಳನವರತ ಗಿರಿ ಗುಹೆಯ ಘಟ್ಟವ
ನೆನುತ ನುಡಿದಳು ಕುಟಿಲಗರ್ಭದ ಗುಣದ ಬೆಳವಿಗೆಯ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಡಿನಲ್ಲಿ ಅತಿ ಕಷ್ಟಗಳನ್ನು ನೀವು ಹೇಗೆ ಅನುಭವಿಸುವಿರಿ ? ಪಾಪಿ ದುರ್ಯೋಧನನ ದುಷ್ಟ ಸಹವಾಸ ನಿಮ್ಮ ಪಾಲಿಗೆ ವಿಷವಾಯಿತಲ್ಲ ! ಪಾಪ ಈ ಹೆಣ್ಣು ಕಾಡಿನಲ್ಲಿ ಸದಾ ನಿಮ್ಮೊಡನೆ ಬೆಟ್ಟ, ಗುಹೆ, ಘಟ್ಟ ಎಂದು ಹೇಗೆ ತೊಳಲಾಟವನ್ನು ಅನುಭವಿಸಿಯಾಳು?” ಎಂದು ಹೊಟ್ಟೆಯಲ್ಲಿ ಬಹುವಾಗಿ ಅದುಮಿ ಇಟ್ಟುಕೊಂಡಿದ್ದ ಕುಟಿಲತೆಯ ಮಾತುಗಳನ್ನು ಆಡಿದಳು.
ಪದಾರ್ಥ (ಕ.ಗ.ಪ)
ಸಿಂಗಿ-ವಿಷ
ಮೂಲ ...{Loading}...
ವನದೊಳತ್ಯಾಯಾಸ ನೀವೆಂ
ತನುಭಿಸುವಿರಿ ಪಾಪಿ ದುರ್ಯೋ
ಧನನದುರ್ಜನ ಸಂಗ ನಿವಗಿದು ಸಿಂಗಿಯಾದುದಲೆ
ವನಿತೆ ನಿಮ್ಮೊಡನೆಂತು ತೊಳಲುವ
ಳನವರತ ಗಿರಿ ಗುಹೆಯ ಘಟ್ಟವ
ನೆನುತ ನುಡಿದಳು ಕುಟಿಲಗರ್ಭದ ಗುಣದ ಬೆಳವಿಗೆಯ ॥62॥
೦೬೩ ಬೀಳುಕೊಡಿರೇ ಸಾಕು ...{Loading}...
ಬೀಳುಕೊಡಿರೇ ಸಾಕು ಬಹಳ ಕೃ
ಪಾಳುಗಳಲಾ ವಿಧಿಯ ಚಿತ್ತ ವಿ
ಟಾಳ ಗತಿಗೇನಾಯ್ತು ಹದಿಮೂರಬುದವವಧಿಯಲೆ
ಮೇಲೆ ನಿಮ್ಮಾತ್ಮಜರಿಗವನೀ
ಪಾಲನೆಯ ಪರುಟವದ ಪಟ್ಟವ
ಪಾಲಿಸುವರಿದಕೇನು ಹೊಲ್ಲೆಹವೆಂದನಾ ಧೌಮ್ಯ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರ ಬೂಟಾಟಿಕೆಯ ನಾಟಕವನ್ನು ನೋಡುತ್ತಿದ್ದ ಧೌಮ್ಯ ಹೇಳುತ್ತಾನೆ ! “ಬೀಳ್ಕೊಡಿರಿ ಸಾಕು ಬಹಳ ಕೃಪಾಳುಗಳಲ್ಲವೇ ನೀವು? ವಿಧಿಯ ಚಿತ್ತದಿಂದ ಆದ ದುರ್ಗತಿಗೆ ಏನು ಮಾಡುವುದಕ್ಕಾಗುತ್ತದೆ ? ಕೇವಲ ಹದಿಮೂರು ವರ್ಷಗಳಷ್ಟೇ ಅಲ್ಲವೇ ? ಅದೂ ಅಲ್ಲದೆ ಅವರಿಲ್ಲದಿದ್ದರೂ ರಾಜ್ಯಪಾಲನೆ ಮಾಡಲು ನಿಮ್ಮ ಮಕ್ಕಳಿದ್ದಾರಲ್ಲ ! ಕೊರತೆಯೇನಾಯಿತು ?” ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಬೀಳುಕೊಡಿರೇ ಸಾಕು ಬಹಳ ಕೃ
ಪಾಳುಗಳಲಾ ವಿಧಿಯ ಚಿತ್ತ ವಿ
ಟಾಳ ಗತಿಗೇನಾಯ್ತು ಹದಿಮೂರಬುದವವಧಿಯಲೆ
ಮೇಲೆ ನಿಮ್ಮಾತ್ಮಜರಿಗವನೀ
ಪಾಲನೆಯ ಪರುಟವದ ಪಟ್ಟವ
ಪಾಲಿಸುವರಿದಕೇನು ಹೊಲ್ಲೆಹವೆಂದನಾ ಧೌಮ್ಯ ॥63॥
೦೬೪ ಫಳಕುಜದ ಪಲ್ಲವದ ...{Loading}...
ಫಳಕುಜದ ಪಲ್ಲವದ ಪದಕರ
ತಳದ ವಿಪುಲ ತಮಾಲ ಪತ್ರದ
ಲಲಿತ ಕೇತಕಿ ನಖದ ದಾಡಿಮ ದಂತಪಂಗ್ತಿಗಳ
ನಳಿನ ನಯನದ ಮಧುಪ ಕುಲ ಕುಂ
ತಳದ ವನಸಿರಿ ಸವತಿಯಾದಳು
ಜಲಜಮುಖಿ ಪಾಂಚಾಲೆಗೆಂದನು ಧೌಮ್ಯಮುನಿ ನಗುತ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಫಲವೃಕ್ಷದ ಚಿಗುರೇ ಅಂಗೈ ಅಂಗಾಲುಗಳು ಸಮೃದ್ಧವಾದ ಹೊಂಗೆಯ ಮರದ ಎಲೆಗಳೇ ಉಡುಗೆ, ಕೇದಗೆಯ ಹೂವೇ ಉಗುರುಗಳು, ದಾಳಿಂಬೆಯೇ ದಂತ ಪಂಕ್ತಿಗಳು ತಾವರೆಗಳೇ ಕಣ್ಣುಗಳು ದುಂಬಿಗಳ ಹಿಂಡೇ ತಲೆಗೂದಲು ಇವಳು ವನಶ್ರೀ. ಕಮಲಮುಖಿಯಾದ ಪಾಂಚಾಲೆಗೆ ಈ ವನಶ್ರೀ ಸವತಿಯಾದಳು” ಎಂದು ಧೌಮ್ಯ ಹಾಸ್ಯಮಾಡಿದ.
ಪದಾರ್ಥ (ಕ.ಗ.ಪ)
ಕುಜ-ಮರ, ತಮಾಲ-ಹೊಂಗೆ, ಕೇತಕಿ-ಕೇದಗೆ, ದಾಡಿಮ-ದಾಳಿಂಬೆ
ಮೂಲ ...{Loading}...
ಫಳಕುಜದ ಪಲ್ಲವದ ಪದಕರ
ತಳದ ವಿಪುಲ ತಮಾಲ ಪತ್ರದ
ಲಲಿತ ಕೇತಕಿ ನಖದ ದಾಡಿಮ ದಂತಪಂಗ್ತಿಗಳ
ನಳಿನ ನಯನದ ಮಧುಪ ಕುಲ ಕುಂ
ತಳದ ವನಸಿರಿ ಸವತಿಯಾದಳು
ಜಲಜಮುಖಿ ಪಾಂಚಾಲೆಗೆಂದನು ಧೌಮ್ಯಮುನಿ ನಗುತ ॥64॥
೦೬೫ ಇವರು ಕಳುಹಿಸಿಕೊಣ್ಡರಾ ...{Loading}...
ಇವರು ಕಳುಹಿಸಿಕೊಂಡರಾ ನೃಪ
ಭವನವನು ಹೊರವಂಟರೊಡನು
ತ್ಸವ ವಿಹೀನರು ವಿದುರ ಭೀಷ್ಮ ದ್ರೋಣ ಗೌತಮರು
ಅವನಿಪತಿ ದುರ್ಯೋಧನಾದಿಗ
ಳವನ ಸಹಭವರುಳಿಯೆ ಬಂದುದು
ವಿವಿಧಜನದೊತ್ತೊತ್ತೆ ಮಸಗಿತು ರಾಜಬೀದಿಯಲಿ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರು ಬೀಳ್ಕೊಂಡರು. ರಾಜಭವನವನ್ನು ಬಿಟ್ಟು ಹೊರಟರು. ಅವರ ಜೊತೆಗೆ ಹರ್ಷವಿಹೀನರಾಗಿ ವಿದುರ ಭೀಷ್ಮ, ದ್ರೋಣ, ಕೃಪರು ಹೊರಟರು. ದುರ್ಯೋಧನ ಮತ್ತು ಅವನ ತಮ್ಮಂದಿರ ಹೊರತಾಗಿ ಪುರದ ನಾನಾ ಜನರು ಜೊತೆಯಲ್ಲಿ ಬಂದರು. ಆ ರಾಜಬೀದಿಯಲ್ಲಿ ಅವರನ್ನು ನೋಡಲು ಜನರು ಒತ್ತೊತ್ತೆಯಾಗಿ ಸೇರಿದ್ದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಇವರು ಕಳುಹಿಸಿಕೊಂಡರಾ ನೃಪ
ಭವನವನು ಹೊರವಂಟರೊಡನು
ತ್ಸವ ವಿಹೀನರು ವಿದುರ ಭೀಷ್ಮ ದ್ರೋಣ ಗೌತಮರು
ಅವನಿಪತಿ ದುರ್ಯೋಧನಾದಿಗ
ಳವನ ಸಹಭವರುಳಿಯೆ ಬಂದುದು
ವಿವಿಧಜನದೊತ್ತೊತ್ತೆ ಮಸಗಿತು ರಾಜಬೀದಿಯಲಿ ॥65॥
೦೬೬ ಸನ್ದಣಿಸಿದುದು ಕೇರಿಕೇರಿಯ ...{Loading}...
ಸಂದಣಿಸಿದುದು ಕೇರಿಕೇರಿಯ
ಮಂದಿ ಮನೆಮನೆ ಮೇಲೆ ಘನತರು
ವೃಂದದಲಿ ಪುರಸದನ ಶಿಖರೌಘದಲಿ ಶೋಕಿಸುತ
ನಿಂದುದಲ್ಲಿಯದಲ್ಲಿ ನೋಟಕ
ರಿಂದ ಕೆತ್ತುದು ಬೀದಿ ಪುರಜನ
ಬಂದಿಯಲಿ ಸಿಲುಕಿದ ನೃಪಾಲರು ನಡೆದರೊಗ್ಗಿನಲಿ ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವರನ್ನು ನೋಡಲು ಕೇರಿಕೇರಿಯ ಮಂದಿ ಗುಂಪುಗೂಡಿದರು. ಮನೆ ಮನೆಗಳ ಮೇಲೆ ಮರಗಳ ಮೇಲೆ ಪುರಭವನದ ಶಿಖರಗಳಲ್ಲಿ ಜನ ಶೋಕಿಸುತ್ತಾ ನಿಂತಿದ್ದರು. ನೋಟಕರಿಂದ ಬೀದಿ ತುಂಬಿ ಹೋಗಿತ್ತು. ಅವರ ನಡುವೆ ಸಿಕ್ಕಿಕೊಂಡ ಪಾಂಡವರು ಒಟ್ಟಾಗಿ ಮುಂದುವರಿದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಸಂದಣಿಸಿದುದು ಕೇರಿಕೇರಿಯ
ಮಂದಿ ಮನೆಮನೆ ಮೇಲೆ ಘನತರು
ವೃಂದದಲಿ ಪುರಸದನ ಶಿಖರೌಘದಲಿ ಶೋಕಿಸುತ
ನಿಂದುದಲ್ಲಿಯದಲ್ಲಿ ನೋಟಕ
ರಿಂದ ಕೆತ್ತುದು ಬೀದಿ ಪುರಜನ
ಬಂದಿಯಲಿ ಸಿಲುಕಿದ ನೃಪಾಲರು ನಡೆದರೊಗ್ಗಿನಲಿ ॥66॥
೦೬೭ ಕುತ್ತುದಲೆಗಳ ಮೃಗದ ...{Loading}...
ಕುತ್ತುದಲೆಗಳ ಮೃಗದ ತೊಗಲಿನ
ಸುತ್ತು ಹೊದಕೆಗಳೆಡದ ಕೈಗಳೊ
ಳೆತ್ತಿದಾಯುಧ ತತಿಯ ಭಂಗದ ಭೂರಿ ತಾಪದಲಿ
ಹೊತ್ತುವೆದೆಗಳ ಹೊಗೆವ ಮೋರೆಯ
ಕಿತ್ತಡದ ಕಡುಗೋಪ ಸಮತೆಗ
ಳಿತ್ತಡಿಯ ತಡವಾಯ್ತು ನೃಪರೈತಂದರೊಗ್ಗಿನಲಿ ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಗ್ಗಿಸಿದ ತಲೆಗಳುಳ್ಳವರಾಗಿ, ಜಿಂಕೆಯ ಚರ್ಮಗಳನ್ನು ಉಟ್ಟು ಹೊದೆದು, ಎಡಗೈಗಳಲ್ಲಿ ಆಯುಧಗಳನ್ನು ಎತ್ತಿ ಹಿಡಿದು.
ತಮಗಾದ ಅಪಮಾನದಿಂದ ವಿಶೇಷ ತಾಪಗೊಂಡವರಾಗಿ, ಎದೆಯಲ್ಲಿ ಉರಿ ಜ್ವಲಿಸುತ್ತಿರಲು ಮುಖಗಳಲ್ಲಿ ಅಸಮಾಧಾನದ ಹೊಗೆ ಹೊಮ್ಮುತ್ತಿತ್ತು. ಮೋಸದಿಂದ ಉಂಟಾದ ಕಡುಗೋಪ ಒಂದು ಕಡೆ ಸಹಜವಾಗಿ ಅವರಲ್ಲಿದ್ದ ಸಮಾಧಾನ ಒಂದು ಕಡೆ ಹೀಗೆ ವಿಭಿನ್ನ ಭಾವಗಳು ಅವರೆಲ್ಲ ಒಟ್ಟುಗೂಡಿ ನಡೆಯುತ್ತಿದ್ದಾಗ ಕಂಡುಬರುತ್ತಿದ್ದವು.
ಪದಾರ್ಥ (ಕ.ಗ.ಪ)
ಕುತ್ತುದಲೆ-ತಗ್ಗಿಸಿದ ತಲೆ,
ಪಾಠಾನ್ತರ (ಕ.ಗ.ಪ)
ಸುವತೆ -ಸಮತೆ
ಮೈ.ವಿ.ವಿ.
ಮೂಲ ...{Loading}...
ಕುತ್ತುದಲೆಗಳ ಮೃಗದ ತೊಗಲಿನ
ಸುತ್ತು ಹೊದಕೆಗಳೆಡದ ಕೈಗಳೊ
ಳೆತ್ತಿದಾಯುಧ ತತಿಯ ಭಂಗದ ಭೂರಿ ತಾಪದಲಿ
ಹೊತ್ತುವೆದೆಗಳ ಹೊಗೆವ ಮೋರೆಯ
ಕಿತ್ತಡದ ಕಡುಗೋಪ ಸಮತೆಗ
ಳಿತ್ತಡಿಯ ತಡವಾಯ್ತು ನೃಪರೈತಂದರೊಗ್ಗಿನಲಿ ॥67॥
೦೬೮ ಮುನ್ದಣಾತನು ಪಾರ್ಥನಾತನ ...{Loading}...
ಮುಂದಣಾತನು ಪಾರ್ಥನಾತನ
ಹಿಂದೆ ಭೂಪತಿ ಧರ್ಮಪುತ್ರನ
ಹಿಂದೆ ಮಾದ್ರೀತನಯರಿಬ್ಬರ ಹಿಂದೆ ಪಾಂಚಾಲೆ
ಹಿಂದೆ ಕುಂತೀದೇವಿಯಾಕೆಯ
ಹಿಂದಣಾತನು ಭೀಮನೆಂದಾ
ಮಂದಿ ತೋರಿದುದೊಬ್ಬರೊಬ್ಬರಿಗಿವರನೀಕ್ಷಿಸುತ ॥68॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲ್ಲರಿಗಿಂತ ಮುಂದೆ ಅರ್ಜುನ, ಅವನ ಹಿಂದೆ ಧರ್ಮಪುತ್ರ, ಅವನ ಹಿಂದೆ ನಕುಲ ಸಹದೇವರು, ಅವರ ಹಿಂದೆ ಪಾಂಚಾಲೆ
ಅವಳ ಹಿಂದೆ ಕುಂತಿ, ಎಲ್ಲರ ಹಿಂದೆ ಭೀಮ. ಹೀಗೆ ಸಾಲುಗಟ್ಟಿ ನಡೆದರು. ಜನರು ಒಬ್ಬರಿಗೊಬ್ಬರು ಯಾರು ಎಂಬುದನ್ನು ಗುರುತಿಸಿ ತೋರಿಸುತ್ತಿದ್ದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಮುಂದಣಾತನು ಪಾರ್ಥನಾತನ
ಹಿಂದೆ ಭೂಪತಿ ಧರ್ಮಪುತ್ರನ
ಹಿಂದೆ ಮಾದ್ರೀತನಯರಿಬ್ಬರ ಹಿಂದೆ ಪಾಂಚಾಲೆ
ಹಿಂದೆ ಕುಂತೀದೇವಿಯಾಕೆಯ
ಹಿಂದಣಾತನು ಭೀಮನೆಂದಾ
ಮಂದಿ ತೋರಿದುದೊಬ್ಬರೊಬ್ಬರಿಗಿವರನೀಕ್ಷಿಸುತ ॥68॥
೦೬೯ ಹರನ ಜೋಡು ...{Loading}...
ಹರನ ಜೋಡು ಮುರಾಂತಕನ ಸಮ
ದೊರೆ ವಿರಿಂಚನ ಪಾಡು ಶಕ್ರನ
ಸರಿಸದವರಿಗೆ ಭಂಗವೀ ವಿಧಿಯೀ ವಿಪತ್ತುಗಳೆ
ನರರನೀ ಕೌರವರ ಮಿಕ್ಕಿನ
ನೊರಜುಗಳ ಪಾಡೇನು ಶಿವಶಿವ
ಕರುಣಿಯಲ್ಲ ವಿಧಾತ್ರನೆಂದುದು ನೆರೆದ ಜನನಿಕರ ॥69॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹರನಿಗೆ ಸಮಾನರು, ಮುರಾಂತಕನಿಗೆ ಸರಿಸಮ, ಬ್ರಹ್ಮನಿಗೆ ಸರಿಸಾಟಿ, ಇಂದ್ರನಿಗೆ ಸರಿಜೋಡಿ ಇಂಥವರಿಗೆ ಅಪಮಾನ, ಇಂತಹ ಸ್ಥಿತಿ, ಇಂತಹ ವಿಪತ್ತುಗಳೇ ! ಇಂಥವರಿಗೇ ಹೀಗಾದ ಮೇಲೆ ಸಾಮಾನ್ಯ ಮಾನವರ, ಈ ಕೌರವರ, ನೊರಜುಗಳ ಪಾಡೇನು? ಶಿವ, ಶಿವ, ಆ ವಿಧಾತ್ರನಿಗೆ ಕರುಣೆಯಿಲ್ಲ” ಎಂದು ಅಲ್ಲಿ ಸೇರಿದ ಜನ ಮಾತನಾಡಿಕೊಳ್ಳುತ್ತಿದ್ದರು.
ಪದಾರ್ಥ (ಕ.ಗ.ಪ)
ವಿರಿಂಚ-ಬ್ರಹ್ಮ, ಶಕ್ರ-ಇಂದ್ರ
ಮೂಲ ...{Loading}...
ಹರನ ಜೋಡು ಮುರಾಂತಕನ ಸಮ
ದೊರೆ ವಿರಿಂಚನ ಪಾಡು ಶಕ್ರನ
ಸರಿಸದವರಿಗೆ ಭಂಗವೀ ವಿಧಿಯೀ ವಿಪತ್ತುಗಳೆ
ನರರನೀ ಕೌರವರ ಮಿಕ್ಕಿನ
ನೊರಜುಗಳ ಪಾಡೇನು ಶಿವಶಿವ
ಕರುಣಿಯಲ್ಲ ವಿಧಾತ್ರನೆಂದುದು ನೆರೆದ ಜನನಿಕರ ॥69॥
೦೭೦ ಕೇಳಿದಭಿಮನ್ಯು ಪ್ರಮುಖ ...{Loading}...
ಕೇಳಿದಭಿಮನ್ಯು ಪ್ರಮುಖ ಭೂ
ಪಾಲ ತನುಜರು ಸಚಿವರಾಪ್ತರು
ಪಾಳೆಯದ ತಲ್ಲಣದ ಖಯಖೋಡಿಯ ಮನೋವ್ಯಥೆಯ
ಹೇಳಲರಿಯೆನು ಬಂದು ಕಂಡರು
ಗೋಳಿಡುತ ಪದಕೆರಗಿದರು ನೃಪ
ನಾಲಿ ನೀರೇರಿದುವು ನನೆದರು ನಯನವಾರಿಯಲಿ ॥70॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಭಿಮನ್ಯುವೇ ಮೊದಲಾದ ರಾಜರ ಮಕ್ಕಳುಗಳಲ್ಲಿ ಪ್ರಮುಖರಾದವರು , ಸಚಿವರು, ಆಪ್ತರು ಮತ್ತು ಸೈನ್ಯದವರ ತಲ್ಲಣ, ಕೊರಗು, ಮನೋವ್ಯಥೆಗಳನ್ನು ಹೇಳಲು ಸಾಧ್ಯವಿಲ್ಲ. ಅವರೆಲ್ಲರೂ ಗೋಳಿಡುತ್ತಾ ಬಂದು ಕಂಡರು. ಕಾಲುಗಳಿಗೆ ಎರಗಿದರು. ಯುಧಿಷ್ಠಿರನ ಕಣ್ಣುಗಳಿಂದ ಸುರಿದ ನೀರಿನಿಂದ ಅವರು ನೆನೆದರು.
ಪದಾರ್ಥ (ಕ.ಗ.ಪ)
ಖಯಖೋಡಿ-ತಲ್ಲಣ ಕೊರಗು
ಮೂಲ ...{Loading}...
ಕೇಳಿದಭಿಮನ್ಯು ಪ್ರಮುಖ ಭೂ
ಪಾಲ ತನುಜರು ಸಚಿವರಾಪ್ತರು
ಪಾಳೆಯದ ತಲ್ಲಣದ ಖಯಖೋಡಿಯ ಮನೋವ್ಯಥೆಯ
ಹೇಳಲರಿಯೆನು ಬಂದು ಕಂಡರು
ಗೋಳಿಡುತ ಪದಕೆರಗಿದರು ನೃಪ
ನಾಲಿ ನೀರೇರಿದುವು ನನೆದರು ನಯನವಾರಿಯಲಿ ॥70॥
೦೭೧ ಕರೆಸಿದನು ಪರಿವಾರವನು ...{Loading}...
ಕರೆಸಿದನು ಪರಿವಾರವನು ನಿಮ
ಗರಸು ಕೌರವನೆಮ್ಮ ಗಜ ರಥ
ತುರಗ ಕೊಟ್ಟಿಗೆಯೆತ್ತು ಭಂಡಿ ಕೊಟಾರ ಕೊಪ್ಪರಿಗೆ
ಸರಕು ಸರ್ವಸ್ವಗಳು ಕೌರವ
ನರಮನೆಗೆ ನಡೆಯಲಿ ವನಾಂತದೊ
ಳಿರವು ನಮಗೆಂದರುಹಿದನು ಸಚಿವರಿಗೆ ಸಹದೇವ ॥71॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುಧಿಷ್ಠಿರ ತನ್ನ ಪರಿವಾರದವರನ್ನು ಕರೆಸಿದ. “ಇನ್ನು ಮುಂದೆ ನಿಮಗೆ ರಾಜ ಕೌರವ. ನಮ್ಮ ಗಜ, ರಥ, ಕುದುರೆ, ಕೊಟ್ಟಿಗೆ, ಎತ್ತು, ಭಂಡಿ, ಕೊಠಾರ, ಕೊಪ್ಪರಿಗೆ ಸರಕು ಸರ್ವಸ್ವಗಳೂ ಕೌರವ ರಾಜನಿಗೇ ! ಎಲ್ಲವೂ ಅವನ ಅರಮನೆಗೇ ಹೋಗಲಿ ನಮಗೆ ಕಾಡಿನೊಳಗೆ ವಾಸ” ಎಂದು ಸಹದೇವ ಸಚಿವರಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಕೊಟಾರ-ಉಗ್ರಾಣ
ಮೂಲ ...{Loading}...
ಕರೆಸಿದನು ಪರಿವಾರವನು ನಿಮ
ಗರಸು ಕೌರವನೆಮ್ಮ ಗಜ ರಥ
ತುರಗ ಕೊಟ್ಟಿಗೆಯೆತ್ತು ಭಂಡಿ ಕೊಟಾರ ಕೊಪ್ಪರಿಗೆ
ಸರಕು ಸರ್ವಸ್ವಗಳು ಕೌರವ
ನರಮನೆಗೆ ನಡೆಯಲಿ ವನಾಂತದೊ
ಳಿರವು ನಮಗೆಂದರುಹಿದನು ಸಚಿವರಿಗೆ ಸಹದೇವ ॥71॥
೦೭೨ ಕರಿಗಳನು ಕೌರವನ ...{Loading}...
ಕರಿಗಳನು ಕೌರವನ ಮಾವಂ
ತರಿಗೆ ಕೈಗೊಳಿಸಿದರು ರಥಹಯ
ತುರುಗಳಂ ಕೈವರ್ತಿಸಿತು ಸೂತರಿಗೆ ಗೋವರಿಗೆ
ಸರಕನವನಿಪನನುಚರರಿಗು
ತ್ತರಿಸಿದರು ಪಾರಕವನೊಪ್ಪಿಸಿ
ವರ ಸುಭಟರಳವಡಿಸಿಕೊಂಡರು ಕಾನನೋಚಿತವ ॥72॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆನೆಗಳನ್ನೆಲ್ಲ ಕೌರವನ ಕಡೆಯ ಮಾಹುತರಿಗೆ ಒಪ್ಪಿಸಿದರು. ರಥದ ಕುದುರೆಗಳನ್ನೂ ಸೈನ್ಯದ ಕುದುರೆಗಳನ್ನು ಸೂತರಿಗೆ, ಗೋವುಗಳನ್ನು ಗೋಪಾಲಕರಿಗೆ ಒಪ್ಪಿಸಿದರು. ಸರಕನ್ನು ಕೌರವನ ಅನುಚರರಿಗೆ ಹಸ್ತಾಂತರಿಸಿದರು. ತಮ್ಮ ತಮ್ಮ ಹೊಣೆಯನ್ನೆಲ್ಲ ಒಪ್ಪಿಸಿಕೊಟ್ಟು ಸುಭಟರು ಕಾನನಕ್ಕೆ ಯೋಗ್ಯವಾದಂತಹ ಉಡುಪುಗಳನ್ನು ಧರಿಸಿದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಕರಿಗಳನು ಕೌರವನ ಮಾವಂ
ತರಿಗೆ ಕೈಗೊಳಿಸಿದರು ರಥಹಯ
ತುರುಗಳಂ ಕೈವರ್ತಿಸಿತು ಸೂತರಿಗೆ ಗೋವರಿಗೆ
ಸರಕನವನಿಪನನುಚರರಿಗು
ತ್ತರಿಸಿದರು ಪಾರಕವನೊಪ್ಪಿಸಿ
ವರ ಸುಭಟರಳವಡಿಸಿಕೊಂಡರು ಕಾನನೋಚಿತವ ॥72॥
೦೭೩ ಹರಿದರಿನ್ದ್ರಪ್ರಸ್ಥಕಾತನ ...{Loading}...
ಹರಿದರಿಂದ್ರಪ್ರಸ್ಥಕಾತನ
ಚರರು ಸಚಿವರು ಹೊಕ್ಕು ಪಾಂಡವ
ರರಮನೆಯ ಮುದ್ರಿಸಿದರಲ್ಲಿಯ ನಾಡು ಬೀಡುಗಳ
ಕರೆಸಿ ಕಾಣಿಕೆಗೊಂಡು ಠಾಣಾಂ
ತರದ ನಾಯಕವಾಡಿಗಳ ಸಂ
ವರಣೆಗಳ ಸಂತವಿಸಿದರು ಕುರುರಾಜ ಮುದ್ರೆಯಲಿ ॥73॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನ ಚರರೂ ಸಚಿವರೂ ಇಂದ್ರಪ್ರಸ್ಥಕ್ಕೆ ಹೋಗಿ ಪಾಂಡವರ ಅರಮನೆಯನ್ನು ಪ್ರವೇಶಿಸಿ ಅದನ್ನು ಮುದ್ರಿಸಿದರು. ಅಲ್ಲಿನ ನಾಡುಬೀಡುಗಳಿಗೂ ತಮ್ಮ ಮುದ್ರೆ ಮಾಡಿದರು. ಠಾಣಾಂತರಗಳ ನಾಯಕರನ್ನು ಕರೆಸಿ ಅವರಿಂದ ಕಾಣಿಕೆ ತೆಗೆದುಕೊಂಡರು. ಕುರುರಾಜನ ಮುದ್ರೆಯಿಂದ ಎಲ್ಲವನ್ನೂ ಅಳವಡಿಸಿದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಹರಿದರಿಂದ್ರಪ್ರಸ್ಥಕಾತನ
ಚರರು ಸಚಿವರು ಹೊಕ್ಕು ಪಾಂಡವ
ರರಮನೆಯ ಮುದ್ರಿಸಿದರಲ್ಲಿಯ ನಾಡು ಬೀಡುಗಳ
ಕರೆಸಿ ಕಾಣಿಕೆಗೊಂಡು ಠಾಣಾಂ
ತರದ ನಾಯಕವಾಡಿಗಳ ಸಂ
ವರಣೆಗಳ ಸಂತವಿಸಿದರು ಕುರುರಾಜ ಮುದ್ರೆಯಲಿ ॥73॥
೦೭೪ ಅರಸ ಕೇಳಾಶ್ಚರ್ಯವನು ...{Loading}...
ಅರಸ ಕೇಳಾಶ್ಚರ್ಯವನು ಗಜ
ಪುರದ ಬೀದಿಯೊಳಿವರು ಬರುತಿರೆ
ದುರುಳ ದುಶ್ಯಾಸನನು ಮಿಗೆ ಹರಿತಂದನೇಡಿಸುತ
ಬೆರರಲನಾಡಿಸಿ ಹೋದರೀ ಹೋ
ದರಸು ಕಾನನದೆತ್ತು ಪುನರಪಿ
ಸರಿದವೆತ್ತುಗಳೆನುತ ಬಂದನು ಹಿಂದೆ ಪವನಜನ ॥74॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ಹಸ್ತಿನಾಪುರದ ಬೀದಿಯಲ್ಲಿ ಪಾಂಡವರು ನಡೆದು ಬರುತ್ತಿರುವಾಗ ಆ ದುಷ್ಟ ದುಶ್ಶಾಸನನು ಓಡಿಬಂದು, ಬೆರಳಾಡಿಸಿ ಅವರನ್ನು ಅವಹೇಳನೆ ಮಾಡುತ್ತಾ “ಹೋದರು ಇಗೋ ಹೋದರು ! ಅರಸು ಕಾನನದ ಎತ್ತು ! ಕಾಡಿನಿಂದ ಬಂದಿದ್ದ ಈ ಎತ್ತುಗಳು ಮತ್ತೆ ಕಾಡಿಗೇ ಹೋಗುತ್ತಿವೆ. !” ಎನ್ನುತ್ತಾ ಭೀಮನನ್ನು ಹಿಂಬಾಲಿಸಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಅರಸ ಕೇಳಾಶ್ಚರ್ಯವನು ಗಜ
ಪುರದ ಬೀದಿಯೊಳಿವರು ಬರುತಿರೆ
ದುರುಳ ದುಶ್ಯಾಸನನು ಮಿಗೆ ಹರಿತಂದನೇಡಿಸುತ
ಬೆರರಲನಾಡಿಸಿ ಹೋದರೀ ಹೋ
ದರಸು ಕಾನನದೆತ್ತು ಪುನರಪಿ
ಸರಿದವೆತ್ತುಗಳೆನುತ ಬಂದನು ಹಿಂದೆ ಪವನಜನ ॥74॥
೦೭೫ ತಿರುಗಿಕಣ್ಡನು ಭೀಮನುಬ್ಬಿದ ...{Loading}...
ತಿರುಗಿಕಂಡನು ಭೀಮನುಬ್ಬಿದ
ಹರುಷಹೃದಯನ ಮನದ ರೋಷದೊ
ಳರಸನನು ನೋಡಿದನು ಭೂಪತಿ ಮೊಗದ ಸನ್ನೆಯಲಿ
ತಿರುಹಿದನು ತಮ್ಮನನು ಗದೆಯನು
ತಿರುಗಿಹಾಯಿಕಿ ಹಿಡಿದು ಮಾರುತಿ
ಯರಸನಾಜ್ಞೆಯೊಳಂಜಿ ನಡೆದನು ನೃಪತಿ ಕೇಳ್ ಎಂದ ॥75॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೃದಯದಲ್ಲಿ ಹರ್ಷ ತುಂಬಿ ಉಬ್ಬಿದ ದುಶ್ಶಾಸನನ್ನು ಭೀಮ ಹಿಂತಿರುಗಿ ನೋಡಿದ. ಅವನಿಗೆ ರೋಷವೇರಿತು, ಅಣ್ಣನ ಕಡೆ
ನೋಡಿದ. ಆದರೆ ಭೂಪತಿ ಮುಖದ ಸಂಜ್ಞೆಯಿಂದಲೇ ಅವನನ್ನು ಸಮಾಧಾನಪಡಿಸಿ, ಅವನನ್ನು ಹಿಡಿದು ಕೈಯ ಗದೆಯನ್ನು
ತಿರುಗಿಸಿ ಹಾಕಿದ. ಭೀಮ ಅರಸನ ಆಜ್ಞೆಗೆ ಅಂಜಿ ಸುಮ್ಮನೆ ನಡೆದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ತಿರುಗಿಕಂಡನು ಭೀಮನುಬ್ಬಿದ
ಹರುಷಹೃದಯನ ಮನದ ರೋಷದೊ
ಳರಸನನು ನೋಡಿದನು ಭೂಪತಿ ಮೊಗದ ಸನ್ನೆಯಲಿ
ತಿರುಹಿದನು ತಮ್ಮನನು ಗದೆಯನು
ತಿರುಗಿಹಾಯಿಕಿ ಹಿಡಿದು ಮಾರುತಿ
ಯರಸನಾಜ್ಞೆಯೊಳಂಜಿ ನಡೆದನು ನೃಪತಿ ಕೇಳೆಂದ ॥75॥
೦೭೬ ಪುರವ ಹೊರವಣ್ಟಿವರು ...{Loading}...
ಪುರವ ಹೊರವಂಟಿವರು ಗಂಗಾ
ವರನದಿಯ ತೀರದಲಿ ನಿಂದರು
ಪರಿಜನವ ಕಳುಹಿದರು ಧೃತರಾಷ್ಟ್ರನ ಪಸಾಯಿತರ
ಗುರುಜನಕೆ ಪೊಡವಂಟು ಬೀಳ್ಕೊಂ
ಡರು ನದೀಜ ದ್ರೋಣ ಕೃಪರನು
ಕರೆದು ಕುಂತಿಯ ನಿಲಿಸಿದರು ವಿದುರನ ನಿವಾಸದಲಿ ॥76॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವರು ಪಟ್ಟಣವನ್ನು ದಾಟಿದ ಮೇಲೆ ಮುಂದೆ ಗಂಗಾತೀರದವರೆಗೆ ನಡೆದು ಅಲ್ಲಿ ನಿಂತರು. ಪರಿಜನರನ್ನೂ ಧೃತರಾಷ್ಟ್ರನ ಪಸಾಯಿತರನ್ನೂ ಹಿಂದಕ್ಕೆ ಕಳಿಸಿದರು. ಗುರುಜನಕ್ಕೆಲ್ಲ ವಂದಿಸಿದರು. ಭೀಷ್ಮ, ದ್ರೋಣ, ಕೃಪ ಮೊದಲಾದವರಿಂದ ಬೀಳ್ಕೊಂಡರು. ವಿದುರನ ಮನೆಯಲ್ಲಿ ಕುಂತಿಯನ್ನು ನಿಲಿಸಿದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಪುರವ ಹೊರವಂಟಿವರು ಗಂಗಾ
ವರನದಿಯ ತೀರದಲಿ ನಿಂದರು
ಪರಿಜನವ ಕಳುಹಿದರು ಧೃತರಾಷ್ಟ್ರನ ಪಸಾಯಿತರ
ಗುರುಜನಕೆ ಪೊಡವಂಟು ಬೀಳ್ಕೊಂ
ಡರು ನದೀಜ ದ್ರೋಣ ಕೃಪರನು
ಕರೆದು ಕುಂತಿಯ ನಿಲಿಸಿದರು ವಿದುರನ ನಿವಾಸದಲಿ ॥76॥
೦೭೭ ಕಳುಹಿ ಮರಳಿದು ...{Loading}...
ಕಳುಹಿ ಮರಳಿದು ವಿದುರನರಸನ
ನಿಲಯಕೈತಂದನು ಕುಮಾರರ
ಕಳುಹಿ ಬಂದೈ ತಮ್ಮ ಮತವೇನಾ ಯುಧಿಷ್ಟಿರನ
ಉಳಿದವರ ಹದನೇನು ದುರುಪದಿ
ಲಲನೆಯೇನೆಂದಳು ನಿದಾನವ
ತಿಳಿದು ಬಂದೈ ಹೇಳೆನುತ ಧೃತರಾಷ್ಟ್ರ ಬೆಸಗೊಂಡ ॥77॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲ್ಲರನ್ನೂ ಕಳಿಸಿಕೊಟ್ಟ ಮೇಲೆ ವಿದುರನು ಧೃತರಾಷ್ಟ್ರನ ಅರಮನೆಗೆ ಹಿಂತಿರುಗಿದ. ಧೃತರಾಷ್ಟ್ರ “ಕುಮಾರರನ್ನು ಕಳಿಸಿ ಬಂದೆಯಾ, ತಮ್ಮ ? ಆ ಯುಧಿಷ್ಠಿರನ ಅಭಿಪ್ರಾಯವೇನು ? ಉಳಿದವರ ವಿಷಯವೇನು ? ದ್ರೌಪದಿ ಏನೆಂದಳು? ಅವರ ನಿರ್ಣಯವನ್ನು ತಿಳಿದುಕೊಂಡು ಬಂದೆಯಾ ? ಹೇಳು” ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಕಳುಹಿ ಮರಳಿದು ವಿದುರನರಸನ
ನಿಲಯಕೈತಂದನು ಕುಮಾರರ
ಕಳುಹಿ ಬಂದೈ ತಮ್ಮ ಮತವೇನಾ ಯುಧಿಷ್ಟಿರನ
ಉಳಿದವರ ಹದನೇನು ದುರುಪದಿ
ಲಲನೆಯೇನೆಂದಳು ನಿದಾನವ
ತಿಳಿದು ಬಂದೈ ಹೇಳೆನುತ ಧೃತರಾಷ್ಟ್ರ ಬೆಸಗೊಂಡ ॥77॥
೦೭೮ ಮುನಿಪ ಜಪಿಸುತ ...{Loading}...
ಮುನಿಪ ಜಪಿಸುತ ಹೋದನಗ್ನಿಯ
ವಿನುತ ಸೂಕ್ತವನೆತ್ತು ಗೈದುವಿ
ನನಿಲಜನು ದುಗುಡದಲಿ ಫಲುಗುಣ ಯಮಳರೊಂದಾಗಿ
ವನಿತೆಯನು ನಡುವಿಟ್ಟು ಹೊರವಂ
ಟನು ಯುಧಿಷ್ಠಿರ ನೃಪತಿ ನಿಯತದಿ
ನೆನೆವುತಿದ್ದನು ವೀರನಾರಾಯಣನ ಪದಯುಗವ ॥78॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ವಿದುರನು “ಧೌಮ್ಯಮುನಿ ಅಗ್ನಿ ಸೂಕ್ತವನ್ನು ಪಠಿಸುತ್ತ ಮುಂದೆ ಹೋದ. ಭೀಮಾರ್ಜುನ ಯಮಳರು ಕೈಯಲ್ಲಿ ಆಯುಧಗಳನ್ನು
ಎತ್ತಿ ಹಿಡಿದುಕೊಂಡು, ದ್ರೌಪದಿಯನ್ನು ನಡುವೆ ಇಟ್ಟುಕೊಂಡು ದುಗುಡದಿಂದ ಹೋದರು. ಯುಧಿಷ್ಠಿರ ರಾಜನು ನಿಯತವಾಗಿ ವೀರ ನಾರಾಯಣನ ಪದಯುಗವನ್ನು ನೆನೆಯುತ್ತಾ ಹೊರಟ.” ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಮುನಿಪ ಜಪಿಸುತ ಹೋದನಗ್ನಿಯ
ವಿನುತ ಸೂಕ್ತವನೆತ್ತು ಗೈದುವಿ
ನನಿಲಜನು ದುಗುಡದಲಿ ಫಲುಗುಣ ಯಮಳರೊಂದಾಗಿ
ವನಿತೆಯನು ನಡುವಿಟ್ಟು ಹೊರವಂ
ಟನು ಯುಧಿಷ್ಠಿರ ನೃಪತಿ ನಿಯತದಿ
ನೆನೆವುತಿದ್ದನು ವೀರನಾರಾಯಣನ ಪದಯುಗವ ॥78॥
೦೭೯ ಇತಿ ಶ್ರೀಮದಚಿನ್ತ್ಯ ...{Loading}...
ಇತಿ ಶ್ರೀಮದಚಿಂತ್ಯ ಮಹಿಮ ಗದುಗಿನ
ವೀರನಾರಾಯಣ ಚರಣಾರವಿಂದ ಮಕರಂದ
ಮಧುಪಾನ ಪರಿಪುಷ್ಟ ವಚಃ ಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾಮಂಜರಿಯೊಳ್
ಸಭಾಪರ್ವಂ ಸಮಾಪ್ತಮಾದುದು.
ಸರ್ವ-ಟೀಕೆಗಳು ...{Loading}...
ಮೂಲ ...{Loading}...
ಇತಿ ಶ್ರೀಮದಚಿಂತ್ಯ ಮಹಿಮ ಗದುಗಿನ
ವೀರನಾರಾಯಣ ಚರಣಾರವಿಂದ ಮಕರಂದ
ಮಧುಪಾನ ಪರಿಪುಷ್ಟ ವಚಃ ಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾಮಂಜರಿಯೊಳ್
ಸಭಾಪರ್ವಂ ಸಮಾಪ್ತಮಾದುದು.