೧೫

೦೦೦ ಸೂಚನೆ ಸೋಲದಲಿ ...{Loading}...

ಸೂಚನೆ: ಸೋಲದಲಿ ಮನನೊಂದ ಧರಣೀ
ಪಾಲರನು ಸಂತೈಸಿಯಂಧನೃ
ಪಾಲ ಕಳುಹಿದರಿವರು ಹೊರವಂಟರು ಪುರಾಂತರವ

೦೦೧ ನಿಯತಮತಿ ಚಿತ್ತವಿಸು ...{Loading}...

ನಿಯತಮತಿ ಚಿತ್ತವಿಸು ಜನಮೇ
ಜಯ ಮಹೀಪತಿ ದೇವತಾ ಭ
ಕ್ತಿಯಲದೇನಾಶ್ಚರ್ಯವೊ ಶಿವಶಿವಾ ಮಹಾದೇವ
ಜಯ ಜಯೆಂದುದು ನಿಖಿಳಜನ ಝಾ
ಡಿಯಲಿ ಝೋಂಪಿಸಿ ಸೆಳೆವ ಸೀರೆಗೆ
ಲಯವ ಕಾಣೆನು ಕರುಣವೆಂತುಟೋ ದೇವಕೀಸುತನ ॥1॥

೦೦೨ ಉಗಿದು ಹಾಯ್ಕುವ ...{Loading}...

ಉಗಿದು ಹಾಯ್ಕುವ ಖಳನ ನಿಡುದೋ
ಳುಗಳು ಬಳಲಿದವಳ್ಳೆ ಹೊಯ್ದವು
ಢಗೆಯ ಡಾವರವಾಯ್ತು ಬಹಳ ಸ್ವೇದಜಲ ಜಡಿಯೆ
ತೆಗೆದು ನಿಂದನು ಸೀರೆಯೊಟ್ಟಿಲು
ಗಗನವನು ಗಾಹಿಸಿತು ಗರುವೆಯ
ಬಗೆಗೆ ಬೀಸರವಿಲ್ಲ ಬೆರಗಾದುದು ಮಹಾಸ್ಥಾನ ॥2॥

೦೦೩ ಆ ಮಹಾಸತಿ ...{Loading}...

ಆ ಮಹಾಸತಿ ಶಿವಶಿವಾ ಲ
ಜ್ಜಾಮಹೋದಧಿ ಬತ್ತುವುದೆ ನಿ
ರ್ನಾಮರೇ ಕುಂತೀಸುತರು ಪಥ್ಯರೆ ಪರಾಭವಕೆ
ಆ ಮುಕುಂದನ ದಿವ್ಯನಾಮ
ಪ್ರೇಮರಸಕಿದು ಸಿದ್ಧಿಯೆಂದೆನ
ಲಾ ಮಹಾಸ್ಥಾನದಲಿ ಬೆಳೆದುದು ಬೆರಗು ಬಿಂಕದಲಿ ॥3॥

೦೦೪ ಅಹಹ ದೈವಪ್ರೇಮವಿದೆಲಾ ...{Loading}...

ಅಹಹ ದೈವಪ್ರೇಮವಿದೆಲಾ
ಮಹಿಳೆಯಲಿ ಮಾನವರ ಕೃತಿ ಗೆಲ
ಬಹುದೆ ಗರುವೆಯ ಗಾಹಿಸಿತು ಗೋವಿಂದನಭಿಧಾನ
ಅಹಿತವಹ ಕುರುರಾಜಕುಲ ಘನ
ಗಹನ ಭೀಮ ಧನಂಜಯಾದ್ಯರ
ವಿಹರಣದಲಿ ವಿನಾಶವಹುದೆಂದುದು ಬುಧಸ್ತೋಮ ॥4॥

೦೦೫ ಬೆಗಡಿನಲಿ ಮುದಖೇದ ...{Loading}...

ಬೆಗಡಿನಲಿ ಮುದಖೇದ ನಯನಾಂ
ಬುಗಳೊಳಾನಂದಾಶ್ರು ಶೋಕದ
ಬಗೆಯೊಳುಬ್ಬಿದ ನಗೆಯಲಾ ಸ್ವೇದದಲಿ ರೋಮಾಂಚ
ದುಗುಡದಲಿ ಪರಿತೋಷ ಕಂದಿದ
ಮೊಗದಲುಜ್ಜ್ವಲವೃತ್ತಿ ಭೀಷ್ಮಾ
ದಿಗಳೊಳಗೆ ಪಲ್ಲಟಿಸುತಿರ್ದುದು ಪಡಿಮಹೂರ್ತದಲಿ ॥5॥

೦೦೬ ನೆನೆದೆ ನೀನನುಚಿತವನೀ ...{Loading}...

ನೆನೆದೆ ನೀನನುಚಿತವನೀ ಹೊ
ತ್ತಿನಲಿ ದ್ರುಪದಾತ್ಮಜೆಯ ದೈವದ
ನೆನಹಿನಲಿ ದೂರಡಗಿತರೆಬೆಳೆಸಾದುದಪಕೀರ್ತಿ
ವನಿತೆಯನು ಬಿಡು ಪಾಂಡು ನೃಪ ನಂ
ದನರ ನೀನೊಲಿದಂತೆ ಮಾಡುವು
ದನುನಯವು ನಿನಗೆಂದು ನುಡಿದನು ವಿದುರ ಕುರುಪತಿಗೆ ॥6॥

೦೦೭ ದೈವವೀ ದ್ರೌಪದಿಗೆ ...{Loading}...

ದೈವವೀ ದ್ರೌಪದಿಗೆ ಸೀರೆಯ
ನೀವುದಲ್ಲದೆ ಬಿಡಿಸಲಾಪುದೆ
ದೈವತೊತ್ತಿರ ಹುರುಡುಗೆಲಸದ ಹಿಂಡುಗೂಟದಲಿ
ದೈವವಿವಳಿಗೆ ತಾನಲೇ ತ
ನ್ನೈವರಿಕ್ಕಿದ ಮಾತು ರಿಪುಗಳ
ಮೈವಳಿಯ ನುಡಿಗಾರ ನೀ ಸಾರೆಂದನಾ ಭೂಪ ॥7॥

೦೦೮ ನೀತಿ ಮರುಳನು ...{Loading}...

ನೀತಿ ಮರುಳನು ವಿದುರನೀತನ
ಮಾತಿನಲಿ ಫಲವೇನು ತೊತ್ತಿರೊ
ಳೀ ತಳೋದರಿ ಬೆರೆಸಿ ಬದುಕಲಿ ಕರ್ಣ ಕಳುಹಿವಳ
ಈ ತತುಕ್ಷಣ ದೃಷ್ಟಿಬಂಧನ
ವೇತರಲಿ ಮಾಡಿದಳೊ ಲಜ್ಜಾ
ಜಾತವುಳಿದುದು ಬೆಳೆದ ಸೀರೆಯ ಕಟ್ಟಿ ಹೊರಿಸೆಂದ ॥8॥

೦೦೯ ಇವಳಲೇ ನಮ್ಮಿನಿಬರಭಿಮಾ ...{Loading}...

ಇವಳಲೇ ನಮ್ಮಿನಿಬರಭಿಮಾ
ನವನು ಸೆಳೆದಳಲಾ ಸ್ವಯಂವರ
ಭವನದಲಿ ಭಂಗಿಸಿದಳೆಮ್ಮನು ಸಭೆಯೊಳೆಡಹಿದರೆ
ಇವಳು ಬಹುವಿಧ ಪುಣ್ಯ ಶಕ್ತಿಯೊ
ಳೆವಗೆ ಸಿಲುಕಿದಳಿಂದು ತೊತ್ತಿರ
ಸವಡಿವೇಟದ ಸವಿಯ ಸುರಿಯಲಿ ಭಂಡ ಮಿಂಡರಲಿ ॥9॥

೦೧೦ ಬೂತುಗೆಡೆವನೊಳೆಮ್ಬೆನೇ ಮರು ...{Loading}...

ಬೂತುಗೆಡೆವನೊಳೆಂಬೆನೇ ಮರು
ಮಾತನೆಲೆ ಗಾಂಗೇಯ ತಮ್ಮದು
ನೀತಿಯೇ ತಾನಿವರ ಧನವೇ ಧರ್ಮಮಾರ್ಗದಲಿ
ಸೋತನರಸನು ತನ್ನನೆನ್ನನು
ಸೋತುದನುಚಿತವೆಂಬ ಬೆಡಗಿನ
ಮಾತನರಿಯದ ಮೂಢರನು ಸುಡಲೆಂದಳಿಂದುಮುಖಿ ॥10॥

೦೧೧ ಸೋತುದಿಲ್ಲಾ ನಿನ್ನ ...{Loading}...

ಸೋತುದಿಲ್ಲಾ ನಿನ್ನ ಸೋತುದ
ನೀತಿಯೆಂಬುದು ವಿಹಿತವೇ ತಾ
ನೀತ ನುಡಿಯಲಿ ಧರ್ಮಪುತ್ರನು ಸತ್ಯಸಂಧನಲೆ
ನೀ ತಳೋದರಿ ತರಿಚುಗೆಡೆದೀ
ಮಾತಿನಲಿ ತಾ ಬಿಡುವೆನೇ ನಿ
ನ್ನಾತಗಳ ನುಡಿಸೆಂದು ಖಳ ಧಟ್ಟಿಸಿದನಂಗನೆಯ ॥11॥

೦೧೨ ಜೀಯ ಮಾತೇನಿವಳೊಡನೆ ...{Loading}...

ಜೀಯ ಮಾತೇನಿವಳೊಡನೆ ರಿಪು
ರಾಯರಿಗೆ ದಾಸತ್ವವಾಗಲು
ಬಾಯಬಡಿಕೆಯದಾರೊಡವೆ ತದ್ದಾಸ ಧನವಲ್ಲ
ಆಯತಾಕ್ಷಿಯನಿನ್ನು ನಿಮ್ಮ ಪ
ಸಾಯಿತೆಯರಲಿ ಕೂಡು ತೊತ್ತಿರ
ಲಾಯಬೇಡುಪಕಾರವೆಂದೆರಗಿದನು ಕಲಿಕರ್ಣ ॥12॥

೦೧೩ ಎಲೆಗೆ ಭಜಿಸಾ ...{Loading}...

ಎಲೆಗೆ ಭಜಿಸಾ ಕೌರವಾನ್ವವಯ
ತಿಲಕನನು ನಿನ್ನವರ ಮರೆ ನಿ
ನ್ನುಳಿವ ನೆನೆಯೀ ಸಮಯದಲಿ ಕಾಲೋಚಿತ ಕ್ರಮವ
ಬಳಸು ನೀನೆನೆ ಗಜರಿದಳು ಕುರು
ತಿಲಕನನು ತರಿದೊಟ್ಟಿ ರಣದಲಿ
ತಿಳಿರಕುತದಲಿ ದಣಿವನನಿಲಜನೆಂದಳಿಂದುಮುಖಿ ॥13॥

೦೧೪ ಏಕೆ ಕೆಣಕಿದೆ ...{Loading}...

ಏಕೆ ಕೆಣಕಿದೆ ಕರ್ಣ ಬೂತಿನ
ಬೀಕಲಿನ ಬದಗಿಯನು ಸಮರದೊ
ಳೀಕೆಯನಿಲಜ ಮುರಿವನೆನುತವೆ ತನ್ನ ಮುಂಜೆರಗ
ನೂಕಿ ತೊಡೆಗಳ ತೋರಿಸುತ ಲೋ
ಕೈಕ ವೀರನನೇಡಿಸಿದರ
ವ್ಯಾಕುಲನ ಮನ ಖಂಡಿಯೋದುದು ಖತಿಯ ಹೊಯ್ಲಿನಲಿ ॥14॥

೦೧೫ ನೋಡಿದನು ಪರಿಘವನು ...{Loading}...

ನೋಡಿದನು ಪರಿಘವನು ಕಡೆಗ
ಣ್ಣಾಡಿತಿವದಿರ ಮೇಲೆ ಮೈಯಲಿ
ಝಾಡಿಗೆದರಿತು ರೋಮ ಝಳಪಿಸಿತರುಣಮಯ ನಯನ
ಮೂಡಿತುರಿ ಸುಯ್ಲಿನಲಿ ರೋಷದ
ಬೀಡು ಭೀಮನ ಕಂಡು ಧರ್ಮಜ
ಬೇಡಿಕೊಂಡನು ತನ್ನ ಕೊರಳಿನ ಬೆರಳ ಸನ್ನೆಯಲಿ ॥15॥

೦೧೬ ಸೈರಿಸಕಟಾ ಭೀಮ ...{Loading}...

ಸೈರಿಸಕಟಾ ಭೀಮ ರೋಷ ವಿ
ಕಾರಕಿದು ಹೊತ್ತಲ್ಲ ಸರ್ವ ವಿ
ಕಾರದಲಿ ಕೌರವರು ಮೆರೆಯಲಿ ಕಾಲವವರದಲ
ಧಾರುಣೀಶನ ಧರ್ಮತತ್ವದ
ಸಾರವುಳಿವುದೆ ಸಾಕು ಮಿಕ್ಕಿನ
ನಾರಿ ಧನವಭಿಮಾನ ಬೇಯಲಿಯೆಂದನಾ ಪಾರ್ಥ ॥16॥

೦೧೭ ಕ್ಷಮೆಯೆ ...{Loading}...

ಕ್ಷಮೆಯೆ ಧನವೆಂದಿದ್ದೆವಿವಳಲಿ
ಮಮತೆಯನು ಮಾಡಿದೆವೆ ನಾವು
ಭ್ರಮಿಸುವರೆ ದೇವೇಂದ್ರ ತೃಣವಿವನಾವ ಪಾಡೆವಗೆ
ರಮಣಿಯಾಡಿದ ಧರ್ಮಪದವಿದು
ಕುಮತಿಗಳ ಮತವಲ್ಲದಿದ್ದರೆ
ತಮಗೆ ದಾಸಿಯೆ ದ್ರುಪದನಂದನೆಯೆಂದನಾ ಪಾರ್ಥ ॥17॥

೦೧೮ ಶ್ರುತಿ ತದರ್ಥ ...{Loading}...

ಶ್ರುತಿ ತದರ್ಥ ಸ್ಮೃತಿಗಳಲಿ ಪಂ
ಡಿತರು ಪರಿಣಿತರುಂಟು ಪಾರ್ಥ
ಸ್ಮೃತಿಯ ಬಳಿಕಾದರಿಸುವೆವು ನಿಮಗಾದ ದಾಸ್ಯದಲಿ
ಕೃತಕವಿಲ್ಲದೆ ನಡೆದು ತೋರಾ
ಸತಿಯ ಸೆರೆಯನು ಬಿಡಿಸಲೆಮ್ಮೀ
ಕ್ಷಿತಿಯೊಳಾರುಂಟೆಂದು ಕೌರವರಾಯ ಗರ್ಜಿಸಿದ ॥18॥

೦೧೯ ಭಾಷೆಯೇಕಿವನೊಡನೆ ದ್ರೌಪದಿ ...{Loading}...

ಭಾಷೆಯೇಕಿವನೊಡನೆ ದ್ರೌಪದಿ
ದಾಸಿಯಲ್ಲೆಂಬವನ ದಿವಸವ
ದೇಸು ಬಲ ಹೋ ಪೂತು ಮಝ ತಾನಿಂದ್ರಸುತನೆಂಬ
ಐಸರಲಿ ದೇವೇಂದ್ರ ತೃಣ ಗಡ
ವೈಸಲೇ ನೀ ಮುನಿದಡೀ ನುಡಿ
ದಾಸಭಾವದ ಬಣಗುಗಳಿಗೇಕೆಂದನಾ ಕರ್ಣ ॥19॥

೦೨೦ ನೂಕಿಸಾ ತೊತ್ತಿರ ...{Loading}...

ನೂಕಿಸಾ ತೊತ್ತಿರ ಮನೆಗೆ ತಡ
ವೇಕೆ ತರುಣಿಯನಿನ್ನು ನೀನು ವಿ
ವೇಕದಲಿ ನನ್ನಂತೆ ತೆಗೆ ಸಾಕಿವರ ಮಾತೇನು
ಈ ಕುಠಾರರ ಕಳುಹಿ ಕಳೆ ತಾ
ವೇಕೆ ನೃಪಸಭೆಯಲಿ ವರಾಸನ
ವೇಕೆನುತ ಕುರುಪತಿಗೆ ನುಡಿದನು ಕರ್ಣ ಖಾತಿಯಲಿ ॥20॥

೦೨೧ ಅಹುದಲೇ ಬಳಿಕೇನು ...{Loading}...

ಅಹುದಲೇ ಬಳಿಕೇನು ನೀನತಿ
ಬಹಳ ಮತಿಯೈ ಕರ್ಣ ನೀನೀ
ಕುಹಕ ಕೋಟಿಯನೆತ್ತ ಬಲ್ಲೆ ವೃಥಾಭಿಮಾನಿಗಳ
ರಹಣಿ ಸಾಕಂತಿರಲಿ ತೊತ್ತಿರ
ಸಹಚರರ ಸೂಳಾಯಿತರ ಕರೆ
ಮಹಿಳೆಯನು ನೂಕೆಂದು ದುಶ್ಯಾಸನಗೆ ನೇಮಿಸಿದ ॥21॥

೦೨೨ ಸುಳಿವ ಹುಲ್ಲೆಯ ...{Loading}...

ಸುಳಿವ ಹುಲ್ಲೆಯ ಸೋಹಿನಲಿ ಕು
ಕ್ಕುಳಿಸಿದರೆ ಕುಕ್ಕುರನ ಕೈಯಲಿ
ತಳುವಹುದೆ ಜನಮೇಜಯ ಕ್ಷಿತಿಪಾಲ ನಿನ್ನವರ
ಬಳಲಿಕೆಯನೇನೆಂಬೆನೈ ಹಿಡಿ
ದೆಳೆಯೆ ಹಲುಬಿದಳಕಟ ರಾಯನ
ಲಲನೆಗೀ ವಿಧಿಯೇ ಮಹಾದೇವೆಂದುದಖಿಳಜನ ॥22॥

೦೨೩ ಮಾಣಿಸೈ ಗಾಙ್ಗೇಯ ...{Loading}...

ಮಾಣಿಸೈ ಗಾಂಗೇಯ ಗುರು ನಿ
ಮ್ಮಾಣೆಯಡಿ ಕೃಪ ಕೃಪೆಯ ಮಾಡೈ
ರಾಣಿವಾಸಂಗಳಿರ ನಿಲಿಸಿರೆ ನಿಮ್ಮ ಮೈದುನನ
ಪ್ರಾಣವಿದ ಕೊಳ ಹೇಳಿರೌ ಸಾ
ಕೂಣೆಯವ ಹೊರಲಾರೆನೆನುತಾ
ರಾಣಿ ಹಲುಬಿದಳೊಡೆಮುರುಚಿ ಹೆಣಗಿದಳು ಖಳನೊಡನೆ ॥23॥

೦೨೪ ಮಾವ ನಿಮ್ಮಯ ...{Loading}...

ಮಾವ ನಿಮ್ಮಯ ನೇತ್ರವಂತ
ರ್ಭಾವದಲಿ ಬೆರೆಸಿದೊಡೆ ವಿಜ್ಞಾ
ನಾವಲಂಬನ ದಿಟ್ಟಿ ಬೆಂದುದೆ ನಿಮ್ಮ ಹೃದಯದಲಿ
ದೇವಿಯರಿಗಿದು ಸೊಗಸಲಾ ಸ
ಖ್ಯಾವಳಿಗೆ ಸೇರುವುದಲಾ ನಿ
ರ್ಜೀವರಾದಿರೆ ನೀವೆನುತ ಹಲುಬಿದಳು ಲಲಿತಾಂಗಿ ॥24॥

೦೨೫ ಕ್ಷಿತಿಯೆ ಬಿಡಿಸಾ ...{Loading}...

ಕ್ಷಿತಿಯೆ ಬಿಡಿಸಾ ಸೆರಗನೆಲೆ ಪಾ
ರ್ವತಿಯೆ ತನ್ನದು ಧರ್ಮವಾದೊಡೆ
ಗತಿ ತನಗೆ ನೀವಾಗಿರೌ ಕಮಲಾದಿಶಕ್ತಿಗಳೆ
ಸತಿಯಹಲ್ಯಾದಿತಿ ವರಾರುಂ
ಧತಿ ಮಹಾ ಮಾಯಾದಿ ದೇವ
ಪ್ರತತಿ ಬಿಡಿಸಿರೆ ಸೆರಗನೆಂದೊರಲಿದಳು ಪಾಂಚಾಲೆ ॥25॥

೦೨೬ ಅನ್ಧನೊಬ್ಬನೆ ಮಾವ ...{Loading}...

ಅಂಧನೊಬ್ಬನೆ ಮಾವ ನೀವೇ
ನಂಧರಾದಿರೆ ಪಾಂಡು ಕರುಣಾ
ಸಿಂಧು ನೀ ಸೈರಿಸುವುದೇ ತನ್ನೀ ವಿಪತ್ತಿನಲಿ
ಅಂಧಕಾಸುರಮಥನ ನೀನೇ
ಬಂಧಿಸಿದೆಲಾ ಪೂರ್ವ ವರ ಸಂ
ಬಂಧವನು ನೀ ಸೆರಗ ಬಿಡಿಸೆಂದೊರಲಿದಳು ತರಳೆ ॥26॥

೦೨೭ ಸೊಸೆಯಲಾ ದೇವೇನ್ದ್ರಯೆನ್ನಯ ...{Loading}...

ಸೊಸೆಯಲಾ ದೇವೇಂದ್ರಯೆನ್ನಯ
ಘಸಣಿ ಯಾರದು ಹಿರಿಯ ಮಾವನ
ವಶವಲಾ ತ್ರೈಜಗದ ಜೀವರ ಜೀವ ವಿಭ್ರಮಣ
ಉಸುರು ನಿನ್ನಾಧೀನವೀ ದು
ವ್ರ್ಯಸನಿಗಳ ಕೊಂಡಾಡುವರೆ ಕರು
ಣಿಸು ಸಮೀರಣಯೆಂದು ಹಲುಬಿದಳಾಶ್ವಿನೇಯರಿಗೆ ॥27॥

೦೨೮ ಮಾವದಿರು ಮೊದಲಾದ ...{Loading}...

ಮಾವದಿರು ಮೊದಲಾದ ದಿಕ್ಪಾ
ಲಾವಳಿಗೆ ನಮಿಸಿದೆನು ನೈದಿಲ
ತಾವರೆಯ ಮಿತ್ರರಿಗೆ ಮಂಡೆಯೊಳಿಟ್ಟೆನಂಜುಳಿಯ
ಕಾವುದೆನ್ನನು ಹೆಂಗುಸಲ್ಲಾ
ಹಾವು ಹಲಬರ ನಡುವೆ ಸಾಯದು
ದೇವರಿಗೆ ದೂರೈದಲೆಂದೊರಲಿದಳು ಲಲಿತಾಂಗಿ ॥28॥

೦೨೯ ಬಾಯ ಬಿಡಲೇಕಕಟ ...{Loading}...

ಬಾಯ ಬಿಡಲೇಕಕಟ ಬಳಲಿದೆ
ತಾಯೆ ಕೈದೋರಿಸರು ನಿನ್ನಯ
ರಾಯರೈವರು ಕೆಲಬಲದ ಜನರೇನು ಮಾಡುವರು
ನ್ಯಾಯ ನಿನ್ನದು ದೈವದೊಲುಮೆಯ
ದಾಯ ತಪ್ಪಿತು ಬರಿದೆ ಧೈರ್ಯದ
ಬೀಯ ಮಾಡದಿರೆಂದು ನುಡಿದನು ವಿದುರನಂಗನೆಗೆ ॥29॥

೦೩೦ ಎಲೆಗೆ ನಿನ್ನವರೇನ ...{Loading}...

ಎಲೆಗೆ ನಿನ್ನವರೇನ ಮಾಡುವ
ರೊಲೆಯಳಡಗಿದ ಕೆಂಡವಿವರ
ಗ್ಗಳಿಕೆ ನಂದಿದುದೆನುತ ಮುಂಜೆರಗೆತ್ತಿ ಮಾನಿನಿಗೆ
ಖಳನು ತೊಡೆಗಳ ತೋರಿಸಿದೊಡತಿ
ಮುಳಿದು ಕೊಟ್ಟಳು ಶಾಪವನು ನಿ
ನ್ನಳಿವು ತೊಡೆಯಲಿ ಮುಗಿವುದೆಂದಳು ಮುಗುದೆ ಖಾತಿಯಲಿ ॥30॥

೦೩೧ ಕಡಲ ತೆರೆಗಳ ...{Loading}...

ಕಡಲ ತೆರೆಗಳ ತುರುಬಿ ತುಡುಕುವ
ವಡಬನಂದದಿ ಮೇಘಪಟಲವ
ನೊಡೆದು ಸೂಸುವ ಸಿಡಿಲಿನಂದದಿ ಸಭೆಯೊಳಡಹಾಯ್ದು
ಕುಡಿ ಕುಠಾರನ ರಕುತವನು ತಡೆ
ಗಡಿ ಸುಯೋಧನನೂರುಗಳನಿ
ಮ್ಮಡಿಸಿ ಮುನಿಯಲಿ ಧರ್ಮಸುತನೆನುತೆದ್ದನಾ ಭೀಮ ॥31॥

೦೩೨ ಹೆದರು ಹೊಕ್ಕುದು ...{Loading}...

ಹೆದರು ಹೊಕ್ಕುದು ಸಭೆಗೆ ಕೌರವ
ನೆದೆ ಬಿರಿದುದಾಸ್ಥಾನ ಜಲನಿಧಿ
ಕದಡಿತುಕ್ಕಿದ ಬೆರಗಿನಲಿ ಬೆಳ್ಳಾದನವನೀಶ
ಹದನಹುದು ಹಾಯೆನುತಲಿದ್ದರು
ವಿದುರ ಭೀಷ್ಮ ದ್ರೋಣರಿತ್ತಲು
ಕೆದರುಗೇಶದ ಕಾಂತೆ ಹುದಿದಳು ಹರುಷ ಪುಳಕದಲಿ ॥32॥

೦೩೩ ಒಡೆಯನೈತರಲಿಕ್ಷುದೋಟದ ಬಡ ...{Loading}...

ಒಡೆಯನೈತರಲಿಕ್ಷುದೋಟದ
ಬಡ ನರಿಗಳೋಡುವವೊಲೀಕೆಯ
ಹಿಡಿದಡಳೆವ ಖಳ ಹಾಯ್ದನಾ ಕೌರವನ ಹೊರೆಗಾಗಿ
ನುಡಿ ತರುಣಿ ತನ್ನಾಣೆ ಭೀತಿಯ
ಬಿಡಿಸಿದೆನಲಾ ರಾಯನಾಜ್ಞೆಯ
ತಡಿಕೆವಲೆ ನುಗ್ಗಾಯ್ತು ಹೋಗಿನ್ನೆಂದನಾ ಭೀಮ ॥33॥

೦೩೪ ಉರಿವ ಕೋಪಾಗ್ನಿಯಲಿ ...{Loading}...

ಉರಿವ ಕೋಪಾಗ್ನಿಯಲಿ ಕರ್ಣನ
ಶಿರದ ಭಾಂಡದಲಿವನ ನೊರೆ ನೆ
ತ್ತರಿನಲಿವನಗ್ರಜನ ಕೊಬ್ಬಿದ ನೆಣನ ಕೊಯ್ಕೊಯ್ದು
ದುರುಳ ಶಕುನಿಯ ಕಾಳಿಜದೊಳೊಡೆ
ವೆರೆಸಿ ಕುದಿಸಿ ಮಹೋಗ್ರಭೂತದ
ನೆರವಿಗುಣಲಿಕ್ಕುವೆನು ಸತಿ ಕೇಳ್ ಎಂದನಾ ಭೀಮ ॥34॥

೦೩೫ ಕೊಮ್ಬೆನೇ ಧರ್ಮಜನ ...{Loading}...

ಕೊಂಬೆನೇ ಧರ್ಮಜನ ಧರ್ಮದ
ಡೊಂಬನೀ ಮುದುಗುರುಡನಿಕ್ಕಿದ
ನಂಬುಗೆಯ ವಿಷವೈಸಲೇ ತಲೆಗೇರಿತಗ್ರಜನ
ಡೊಂಬಿಗರ ಡಾವರಿಗರಿವದಿರ
ತಿಂಬೆನೀಗಳೆ ತರುಣಿ ಕೇಳೆನು
ತಂಬುಜಾಕ್ಷಿಯ ಸಂತವಿಟ್ಟನು ಕುರುಳ ನೇರಿಸುತ ॥35॥

೦೩೬ ಇಳಿದನರ್ಜುನನಾ ಸಭಾಮಂ ...{Loading}...

ಇಳಿದನರ್ಜುನನಾ ಸಭಾಮಂ
ಡಲದ ವೇದಿಯನಹಹ ಧರ್ಮಜ
ನುಳಿವನೇ ನುಡಿಯೆಡಹಿದರೆ ಸಿಗುರೇಳ್ಗು ಸದ್ಗುಣಕೆ
ಕಳವಳದ ಕಾಹುರದ ಕಾಲುವೆ
ಗೊಳಗು ಕೊಡದಿರು ಭೀಮ ರಿಪುಗಳ
ಹಿಡಿವಡಿದು ಹೊತ್ತಲ್ಲೆನಿತ ಹಿಡಿದನು ವೃಕೋದರನ ॥36॥

೦೩೭ ಮಾಣಲದು ಕೌರವರ ...{Loading}...

ಮಾಣಲದು ಕೌರವರ ನೂರ್ವರ
ಗೋಣ ಬನ ಕಾಳಗದದೊಳೆನ್ನಯ
ಕೇಣಿ ತನ್ನಯ ಗದೆಗೆ ದುರಿಯೋಧನನ ತೊಡೆಗಳಿಗೆ
ವಾಣಿಯವು ದುಶ್ಶಾಸನನ ತನಿ
ಶೋಣಿತವ ತಾ ಕುಡಿಯದಿರೆ ನಿ
ನ್ನಾಣೆ ಸೈರಣೆಗಿದುವೆ ಫಲವೆಂದೊದರಿದನು ಭೀಮ ॥37॥

೦೩೮ ಧರಣಿ ಜಲಪಾವಕ ...{Loading}...

ಧರಣಿ ಜಲಪಾವಕ ಸಮೀರಾ
ದ್ಯರುಗಳರಿತಿರಿ ಶಕ್ರ ನೈಋತ
ವರುಣ ವಾಯು ಕುಬೇರ ಯಮರೆಂಬಖಿಳ ದಿಗಧಿಪರು
ಬರೆದುಕೊಂಡಿರಿ ಭಾಷೆಯನು ಸುರ
ನರ ಫಣಿವ್ರಜವೆಂಬ ಭೀಮನ
ಧರಧಧುರದ ಧಟ್ಟಣೆಗೆ ಧೃತಿಗೆಟ್ಟುದು ಕುರುಸ್ತೋಮ ॥38॥

೦೩೯ ಬರಸಿರೈ ಭಾಷೆಯನು ...{Loading}...

ಬರಸಿರೈ ಭಾಷೆಯನು ದೇವಾ
ಸುರರ ಸಾಕ್ಷಿಯಲಾಯ್ತು ಕರ್ಣನ
ಕೊರಳಿಗೆನ್ನಯ ಬಾಣಕುಂಗುರವುಡಿಕೆಯಿಂದಿನಲಿ
ಸುರ ನರೋರಗರರಿದೆರೆಂದ
ಬ್ಬರಿಸಿದನು ಕಲಿಪಾರ್ಥ ಶಕುನಿಯ
ಶಿರಕೆ ಕೊಟ್ಟೆನು ಸಂಚಕಾರವನೆಂದ ಸಹದೇವ ॥39॥

೦೪೦ ಅರಸ ಕೇಳಾಶ್ಚರ್ಯವನು ...{Loading}...

ಅರಸ ಕೇಳಾಶ್ಚರ್ಯವನು ಗಜ
ಪುರದೊಳಗೆ ನೆಲ ಬಾಯ ಬಿಟ್ಟುದು
ಸುರಿದುದರುಣಾಂಬುವಿನ ಮಳೆ ತತ್ಪುರದ ಮಧ್ಯದಲಿ
ನರಿಗಳವನಿಪನಗ್ನಿ ಹೋತ್ರದೊ
ಳೊರಲಿದವು ಸಸ್ವೇದದಲಿ ಹೂಂ
ಕರಿಸುತಿರ್ದವು ದೇವತಾ ಪ್ರತಿಮೆಗಳು ನಗರಿಯಲಿ ॥40॥

೦೪೧ ಉಗುಳಿದವು ಕುಳುಗಿಡಿಗಳನು ...{Loading}...

ಉಗುಳಿದವು ಕುಳುಗಿಡಿಗಳನು ಕೈ
ದುಗುಳು ವಾರುವ ಪಟ್ಟದಾನೆ
ಳೊಗುಮಿಗೆಯ ಕಂಬನಿಗಳಭ್ರದಿ ಧೂಮಕೇತುಗಳು
ನೆಗಳಿದವು ಬಿರುಗಾಳಿ ಗಿರಿಗಳ
ಮಗುಚಿ ಮುರಿದವು ದೇವತಾ ಭವ
ನಗಳ ಶಿಖರವನಂತವದ್ಭುತವಾಯ್ತು ನಿಮಿಷದಲಿ ॥41॥

೦೪೨ ಬಾರಿಸಿತು ದೆಸೆದೆಸೆಗಳಲಿ ...{Loading}...

ಬಾರಿಸಿತು ದೆಸೆದೆಸೆಗಳಲಿ ಹಾ
ಹಾ ರವಾವಿರ್ಭಾವ ತೊಳಗಿರೆ
ತಾರಿಕೆಗಳಿನ ಬಿಂಬವನು ಝೋಂಪಿಸಿದನಾ ರಾಹು
ತೋರಣದಲುರಿ ತಳಿತು ರಾಜ
ದ್ವಾರ ಹೊಗೆದುದು ದೆಸೆಗಳಂಬರ
ಧಾರುಣಿಯೊಳುತ್ಪಾತ ಬಿಗಿದುದು ಮೊಗೆದುದದ್ಭುತವ ॥42॥

೦೪೩ ನಡುಗಿತಿಳೆ ನಡು ...{Loading}...

ನಡುಗಿತಿಳೆ ನಡು ಹಗಲುಗತ್ತಲೆ
ಯಡಸಿತಾಕಾಶದಲಿ ಹೆಮ್ಮರ
ನುಡಿದು ಬಿದ್ದುವು ಸಲಿಲವುಕ್ಕಿತು ಕೊಡೆ ಕೆರೆತೊರೆಯ
ಉಡಿದವವದಿರ ಕೈಯ್ಯ ಕೈದುಗ
ಳೊಡನೊಡನೆ ಸಿಡಿಲೆರಗಿತಾ ಸಭೆ
ಸೆಡೆದುದಲ್ಲಿಯದಲ್ಲಿ ಹುದುಗಿತು ಭೀತಿಗರ ಹೊಡೆದು ॥43॥

೦೪೪ ಅಹಹ ಭೂತಕ್ಷೋಭವಿದು ...{Loading}...

ಅಹಹ ಭೂತಕ್ಷೋಭವಿದು ನಿ
ರ್ದಹಿಸುವುದು ಕುರುಕುಲವನಕಟೀ
ಮಹಿಳೆಯೊರಲಿದಳಮರ ನಿಕರಕೆ ದೈವಕೃತವಿದಲೆ
ಕುಹಕಿ ಮಕ್ಕಳನಿಕ್ಕಿ ಮೌನದೊ
ಳಿಹರೆ ಬಾ ಧೃತರಾಷ್ಟ್ರ ಪಾಂಡವ
ಮಹಿಳೆಯನು ಸಂತೈಸು ನಡೆ ನಡೆಯೆಂದನಾ ಭೀಷ್ಮ ॥44॥

೦೪೫ ಇದಕೆ ನಿಸ್ಸನ್ದೇಹವೇ ...{Loading}...

ಇದಕೆ ನಿಸ್ಸಂದೇಹವೇ ವರ
ಸುದತಿಯನು ನೀ ಬೇಡಿಕೊಳು ಯ
ಜ್ಞದಲಿ ಪಾವಕಗುದಿಸಿದಳು ಪಾಂಚಾಲೆ ಮಾನಿನಿಯೆ
ಇದು ಭವತ್ಸಂತಾನ ವಿಲಯಾ
ಸ್ಪದ ಕಣಾ ನಡೆ ಪಾಪಿಯೆಂದನಾ
ವಿದುರ ಗುರು ಕೃಪರೌಕಿದರು ಧೃತರಾಷ್ಟ್ರ ಭೂಪತಿಯ ॥45॥

೦೪೬ ಖೇದ ಮಿಗೆ ...{Loading}...

ಖೇದ ಮಿಗೆ ನಡೆತಂದು ನೃಪತಿ ತ
ಳೋದರಿಯ ನುಡಿಸಿದನು ಮಗಳೆ ವಿ
ಷಾದವನು ಬಿಡು ಮಾತ ಮನ್ನಿಸು ಮಾವ ನಾ ನಿನಗೆ
ಈ ದುರಾತ್ಮರ ಮಾತು ಬೇಡ ವಿ
ಭೇದವೇ ದುಸ್ಸಳೆಗೆ ನಿನಗೆಂ
ದಾದರಿಸಿ ನುಡಿದನು ವಿಪತ್ತಿನಲಾ ಮಹಾಸತಿಯ ॥46॥

೦೪೭ ಮಗಳಹೆನು ಸೊಸೆಯಹೆನು ...{Loading}...

ಮಗಳಹೆನು ಸೊಸೆಯಹೆನು ನಿಮ್ಮಯ
ಮಗನ ಕಣ್ಣಿಗೆ ಕಾಳಕೂಟದ
ಮಗಳೊ ಸೊಸೆಯೋ ನಾದಿನಿಯೊ ಬೆಸಗೊಳ್ಳಿ ನಿಮ್ಮವನ
ಅಗಡು ಮಾಡಿದ ನಿಮ್ಮ ಮಕ್ಕಳ
ವಿಗಡತನಕಂಜಿದರೊ ದುರಿತದ
ಸೊಗಡಿಗಂಜಿದರೋ ಪೃಥಾ ಸುತರೆಂದಳಿಂದುಮುಖಿ ॥47॥

೦೪೮ ಧರ್ಮ ನಿಮ್ಮದು ...{Loading}...

ಧರ್ಮ ನಿಮ್ಮದು ತಾಯೆ ಕಿಲ್ಬಿಷ
ಕರ್ಮವೆಮ್ಮದು ಲೋಕವರಿಯಲು
ನಿರ್ಮಲರು ನೀವ್ ಪಾಪ ಪಂಕಿಲ ಹೃದಯರಾವ್ ಜಗಕೆ
ದುರ್ಮತಿಗಳಿವದಿರ ಕುಚೇಷ್ಟೆಯ
ನೆಮ್ಮನೀಕ್ಷಿಸಿ ಮರೆ ಮಗಳೆ ಸ
ದ್ಧರ್ಮಮತಿಗಳು ನೀವೆನುತ ತಿಳುಹಿದನು ದ್ರೌಪದಿಯ ॥48॥

೦೪೯ ದುರುಳರೆನ್ನವದಿರು ದುರನ್ತಃ ...{Loading}...

ದುರುಳರೆನ್ನವದಿರು ದುರಂತಃ
ಕರಣರಾವ್ ದುಶ್ಚೇಷ್ಟೆಯೆಮ್ಮದು
ದುರಭಿಮತ ದುಷ್ಪೂರ್ವರೆನ್ನ ಕುಮಾರರಭಿದಾನ
ಕರುಣಿಗಳು ಕಮನೀಯ ಗುಣ ಬಂ
ಧುರರು ಶೌರ್ಯಬಲ ಪ್ರಭಾವೋ
ತ್ತರರು ನಿನ್ನವರೆಂದು ನಯದಲಿ ತಿಳುಹಿದನು ಸತಿಯ ॥49॥

೦೫೦ ತಾಯೆ ಬೇಡೌ ...{Loading}...

ತಾಯೆ ಬೇಡೌ ವರವ ತಾನ
ನ್ಯಾಯದಲಿ ನಿಮ್ಮನು ನಿರರ್ಥಕ
ನೋಯಿಸಿದೆನದ ನೆನೆಯದದಿರಿ ಸರ್ವಾಪರಾಧವನು
ದಾಯಗೆಡೆ ನಿನ್ನವರು ಕೊಲುವರೆ
ಕಾಯಲಾಪವರುಂಟೆ ವರ ಸ
ತ್ಯಾಯುಧರಲೇ ನೀವೆನುತ ತಿಳುಹಿದನು ಧೃತರಾಷ್ಟ್ರ ॥50॥

೦೫೧ ವರನನಿತ್ತಿರೆ ಮಾವ ...{Loading}...

ವರನನಿತ್ತಿರೆ ಮಾವ ಭೂಮೀ
ಶ್ವರರ ದಾಸ್ಯವ ಬಿಟ್ಟು ಕಳೆ ಮ
ತ್ತೆರಡನೆಯ ವರವೇನು ವಚನಿಸು ಕೊಟ್ಟೆ ನಾ ನಿನಗೆ
ನರ ವೃಕೋದರ ನಕುಲ ಸಹದೇ
ವರಿಗೆ ಕೊಡಿ ಶಸ್ತ್ರಾಸ್ತ್ರ ಗಜರಥ
ತುರಗ ನಿಕರವನೆಂದಡೆಂದನು ಮತ್ತೆ ಧೃತರಾಷ್ಟ್ರ ॥51॥

೦೫೨ ವರವೆರಡು ಸನ್ದವು ...{Loading}...

ವರವೆರಡು ಸಂದವು ಮನೋರಥ
ಭರಿತವಾಗಲಿ ಮತ್ತೆ ಹೇಳೆನೆ
ತರುಣಿಯೆಂದಳು ಧರ್ಮಶಾಸ್ತ್ರ ಪ್ರಕಟ ಪದ್ದತಿಯ
ವರವು ವೈಶ್ಯರಿಗೊಂದು ನೃಪಸತಿ
ಗೆರಡು ನೃಪರಿಗೆ ಮೂರು ಭೂದೇ
ವರಿಗೆ ನೂರಧಿಕಾರವೆಂದಳು ನಗುತ ಪಾಂಚಾಲೆ ॥52॥

೦೫೩ ಹಾರಲತಿಶಯ ತೃಷ್ಣೆ ...{Loading}...

ಹಾರಲತಿಶಯ ತೃಷ್ಣೆ ನಾಶಕೆ
ಕಾರಣವಲೇ ಮಾವ ವರವಿದು
ಭಾರಿಯಾದರೆ ಬೇಡ ಲಘುವನು ಕರುಣಿಸುವುದೆನಲು
ಭಾರವಾವುದು ಮಗಳೆ ಕೊಟ್ಟೆನು
ಧಾರುಣೀಪತಿ ಬಿಜಯಮಾಡಲಿ
ವೈರಬಂಧದ ಕಂದು ಕಲೆಯನು ಮರೆದು ಕಳೆಯೆಂದ ॥53॥

೦೫೪ ಪೂತುರೇ ಪಾಞ್ಚಾಲೆ ...{Loading}...

ಪೂತುರೇ ಪಾಂಚಾಲೆ ಭುವನ
ಖ್ಯಾತೆಯಾದೆಗೆ ಜಾಗು ನಿನ್ನಯ
ಬೈತಲೆಯ ಮಣಿ ಮಾರುವೋದುದ ಮತ್ತೆ ಬಿಡಿಸಿದಲೆ
ಬೀತ ಮರ ಫಲವಾಯ್ತಲಾ ನಿ
ನ್ನಾತಗಳ ಬಹುಖೇದ ಜಲಧಿಗೆ
ಸೇತುವಾದೆಗೆ ನೀನೆನುತ ತಲೆದೂಗಿದನು ಕರ್ಣ ॥54॥

೦೫೫ ಹೊಕ್ಕಗೂಡಿನ ಹುಲಿಗಳನು ...{Loading}...

ಹೊಕ್ಕಗೂಡಿನ ಹುಲಿಗಳನು ಹೊರ
ಗಿಕ್ಕಿದೆಯಲಾ ಇರುಬಿನಲಿ ಬಿ
ದ್ದೆಕ್ಕಲಂಗಳ ನೋಯಲೀಯದೆ ಕೆಲಕೆ ತೆಗೆದೆಯಲ
ಸೊಕ್ಕಿದುರು ಮೀನುಗಳ ಗಂಟಲೊ
ಳಿಕ್ಕಿದವಲಾ ಗಾಣ ಗಂಟಲ
ಸಿಕ್ಕ ಬಿಡಿಸಿದೆ ಗರುವೆ ನೀನೆಂದುಲಿದನಾ ಕರ್ಣ ॥55॥

೦೫೬ ಘುಡುಘಡಿಸಿದನು ರೋಷವಹ್ನಿಯ ...{Loading}...

ಘುಡುಘಡಿಸಿದನು ರೋಷವಹ್ನಿಯ
ತಡಿಯ ಹೊಕ್ಕನು ಬಿಗಿದ ಹುಬ್ಬಿನ
ಬಿಡೆಯ ಬವರಿಯ ಲಳಿಯ ಲವಣಿಯ ಲೋಚನ ದ್ವಯದ
ಕಡು ಮುಳಿಸಿನುಬ್ಬಟೆಯ ಮಾರುತಿ
ಕಡುಹಿನಲಿ ಭುಗುಭುಗಿಪ ಭಾರಿಯ
ಕಿಡಿಗೆದರಿ ನೋಡಿದನು ಬಾಗಿಲ ಲಾಳವಿಂಡಿಗೆಯ ॥56॥

೦೫೭ ಹಗೆಗಳೇ ಕೌರವರು ...{Loading}...

ಹಗೆಗಳೇ ಕೌರವರು ತೆಗೆ ಬಲು
ವಗೆ ಕಣಾ ಕಾಮಾದಿ ರಿಪುಗಳು
ಸೆಗಳಿಕೆಯ ಸಸಿಯಾಗವೇ ನಿಜ ಸತ್ಯ ಭಾಷೆಗಳು
ಉಗುಳುಗಳು ರೋಷವನು ರಾಧೆಯ
ಮಗ ವಿಕಾರಿ ಕಣಾ ವೃಕೋದರ
ಬೆಗಡುಗೊಳಿಸದಿರೆಮ್ಮನೆಂದನು ಧರ್ಮನಂದನನು ॥57॥

೦೫೮ ಬಾ ವೃಕೋದರ ...{Loading}...

ಬಾ ವೃಕೋದರ ನಕುಲ ಬಾ ಸಹ
ದೇವ ಬಾರೈ ತಮ್ಮ ಫಲಗುಣ
ದೇವಿಯರು ನೀವ್ ಬನ್ನಿಯೆನಲವನೀಶನೈತಂದು
ಆವುದೈ ಕರ್ತವ್ಯ ನೀವೇ
ದೈವ ಗುರುಪಿತರೆಂದು ಮಿಗೆ ಸಂ
ಭಾವನೋಕ್ತಿಯನಾಡಿದನು ಧೃತರಾಷ್ಟ್ರ ಭೂಪತಿಗೆ ॥58॥

೦೫೯ ಮಕ್ಕಳೆನಗಲ್ಲವರು ನೀವೇ ...{Loading}...

ಮಕ್ಕಳೆನಗಲ್ಲವರು ನೀವೇ
ಮಕ್ಕಳೈವರು ಮಗನೆ ನಮ್ಮದು
ಮಕ್ಕಳಾಟಿಕೆಯಾಯ್ತಲಾ ಸೌಬಲನ ದೆಸೆಯಿಂದ
ಮಿಕ್ಕು ನೀ ಸೈರಿಸುವುದೆಮ್ಮದು
ಬಕ್ಕುಡಿಯ ಬೇಳಂಬ ನಿಮ್ಮಲಿ
ಕಕ್ಕುಲಿತೆಯಿಲ್ಲೆಂದು ತೆಗೆದಪ್ಪಿದನು ಧರ್ಮಜನ ॥59॥

೦೬೦ ಎನ್ನನೀಕ್ಷಿಸಿ ಮಗನೆ ...{Loading}...

ಎನ್ನನೀಕ್ಷಿಸಿ ಮಗನೆ ಮರೆ ನಿನ
ಗನ್ಯಳೇ ಗಾಂಧಾರಿ ಪಿತನೆಂ
ದೆನ್ನ ಕಾಬಿರಿ ವೃದ್ಧನೆಂದು ಗತಾಕ್ಷ ತಾನೆಂದು
ಮನ್ನಿಸುವಿರೆಲೆ ಮಕ್ಕಳಿರ ಸಂ
ಪನ್ನಸತ್ಯರು ನೀವು ಕರ್ಮಿಗ
ಳೆನ್ನವರು ದೋಷಾಭಿಸಂಧಿಯ ಮರೆದು ಕಳೆಯೆಂದ ॥60॥

೦೬೧ ರೂಢಿಗಗ್ಗದ ರಾಜಸೂಯದ ...{Loading}...

ರೂಢಿಗಗ್ಗದ ರಾಜಸೂಯದ
ಲುಡಿ ನಿರ್ಜರ ಕಟಕವನು ಖಯ
ಖೋಡಿಯಿಲ್ಲದೆ ನಿಲಿಸಿದೈ ತ್ರಿದಿವದಲಿ ಪಾಂಡುವನು
ಮಾಡುವೆಯಲಾ ಮಗನೆಯೆನ್ನೀ
ಗೂಡ ಬಿಸುಟರೆ ಸುರರ ಸಂಗಡ
ವಾಡುವಂತಿರೆ ತನಗೆ ಗತಿ ನೀನಲ್ಲದಾರೆಂದ ॥61॥

೦೬೨ ಪಾಲಿಸವನಿಯನೆನ್ನ ಮಕ್ಕಳ ...{Loading}...

ಪಾಲಿಸವನಿಯನೆನ್ನ ಮಕ್ಕಳ
ಖೂಳತನವನು ಮನಕೆ ತಾರದಿ
ರಾಲಿಸದಿರಪರಾಧಿ ವಾಚಾಳರ ವಚೋತ್ತರವ
ಕಾಲ ದೇಶಾಗಮದ ನಿಗಮದ
ಡಾಳವರಿದೈಹಿಕ ಪರತ್ರ ವಿ
ಟಾಳಿಸದೆ ನಡೆ ಕಂದಯೆಂದನು ಮರಳಿ ತೆಗೆದಪ್ಪಿ ॥62॥

೦೬೩ ತರಿಸಿದನು ಮಡಿ ...{Loading}...

ತರಿಸಿದನು ಮಡಿ ವರ್ಗದಮಲಾಂ
ಬರವನಂಬುಜಮುಖಿಗೆ ರತ್ನಾ
ಭರಣವನು ವಿವಿಧಾನುಲೇಪನ ಚಿತ್ರಸಂಪುಟವ
ಅರಸನಿತ್ತನು ವೀಳಯವ ಕ
ರ್ಪುರದ ತವಲಾಯಿಗಳನಭ್ಯಂ
ತರಕಿವರ ಕಳುಹಿದನು ಗಾಂಧಾರಿಯನು ಕಾಣಿಸಿದ ॥63॥

೦೬೪ ನೋಡಲಾಗದು ಮಕ್ಕಳಿರ ...{Loading}...

ನೋಡಲಾಗದು ಮಕ್ಕಳಿರ ಕುಲ
ಗೇಡಿಗರ ಕಪಟವನು ನಮ್ಮನು
ನೋಡಿ ಮರೆವುದು ಪಾಂಡುವೆಂದಿಹುದಂಧ ಭೂಪತಿಯ
ನಾಡೆ ನೊಂದೌ ತಾಯೆ ಬಾ ಮಗ
ಮಾಡಿದನುಚಿತ ಕರ್ಮವೆಲ್ಲವ
ಮಾಡಿದೆನು ತಾನೆಂದಳಾ ದ್ರೌಪದಿಗೆ ಗಾಂಧಾರಿ ॥64॥

೦೬೫ ಮರೆದೆನಾಗಳೆ ವಿಗಡ ...{Loading}...

ಮರೆದೆನಾಗಳೆ ವಿಗಡ ವಿಧಿಯೆ
ಚ್ಚರಿಸಿದರೆ ಹರಿಭಕ್ತಿ ಮುಖದಲಿ
ಮುರಿದುದೆಮ್ಮಯ ಪೂರ್ವ ದುಷ್ಪ್ರಾರಬ್ಧ ಕರ್ಮಫಲ
ಹೆರರನೆಂಬುದು ಖೂಳತನವೇ
ನರಿಯದವರೇ ಪಾಂಡುಸುತರೆಂ
ದುರುಬೆಯಲಿ ಬಿನ್ನವಿಸಿದಳು ಗಾಂಧಾರಿಗಬುಜಾಕ್ಷಿ ॥65॥

೦೬೬ ಸಾಕು ನೇಮವ ...{Loading}...

ಸಾಕು ನೇಮವ ಕೊಡಿಯೆನುತ ಕುಂ
ತೀ ಕುಮಾರರು ಬೀಳುಕೊಂಡರು
ನೂಕಿ ಹೊಕ್ಕುದು ದಾರವಟ್ಟದಲಿವರ ಪರಿವಾರ
ತೋಕಿದವು ಸೀಗುರಿಗಳೆಡ ಬಲ
ದಾಕೆಯಲಿ ಪಾಂಡವ ಕುಮಾರಾ
ನೀಕ ಬೆರೆಸಿತು ಗಜತುರಗ ರಥ ಪಾಯದಳ ಸಹಿತ ॥66॥

೦೬೭ ಕಳೆದೆವೇ ಖಳರೊಡ್ಡಿದಿರುಬಿನ ...{Loading}...

ಕಳೆದೆವೇ ಖಳರೊಡ್ಡಿದಿರುಬಿನ
ಕುಳಿಗಳನು ಕೈತಪ್ಪು ಮಾಡದೆ
ಸಲಹಿದೆವೆ ಸತ್ತಯವನು ಸುಜನರ ಕಲೆಗೆ ಸಂದೆವಲೆ
ಕಳವಳದ ಕಡುಗಡಲೊಳಾಳದೆ
ಸುಳಿದೆವಿತ್ತಲು ಶಿವ ಶಿವಾ ಯದು
ತಿಲಕ ಗದುಗಿನ ವೀರ ನಾರಾಯಣನ ಕರುಣದಲಿ ॥67॥

+೧೫ ...{Loading}...