೦೦೦ ಸೂಚನೆ ಸೋಲದಲಿ ...{Loading}...
ಸೂಚನೆ: ಸೋಲದಲಿ ಮನನೊಂದ ಧರಣೀ
ಪಾಲರನು ಸಂತೈಸಿಯಂಧನೃ
ಪಾಲ ಕಳುಹಿದರಿವರು ಹೊರವಂಟರು ಪುರಾಂತರವ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂ : ಸೋಲಿನಿಂದ ಮನನೊಂದಿದ್ದ ಪಾಂಡವರನ್ನು ಸಮಾಧಾನಪಡಿಸಿ ಧೃತರಾಷ್ಟ್ರ ಕಳಿಸಿಕೊಟ್ಟ. ಅವರು ಪಟ್ಟಣವನ್ನು ಬಿಟ್ಟು ಹೊರಟರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಸೂಚನೆ: ಸೋಲದಲಿ ಮನನೊಂದ ಧರಣೀ
ಪಾಲರನು ಸಂತೈಸಿಯಂಧನೃ
ಪಾಲ ಕಳುಹಿದರಿವರು ಹೊರವಂಟರು ಪುರಾಂತರವ
೦೦೧ ನಿಯತಮತಿ ಚಿತ್ತವಿಸು ...{Loading}...
ನಿಯತಮತಿ ಚಿತ್ತವಿಸು ಜನಮೇ
ಜಯ ಮಹೀಪತಿ ದೇವತಾ ಭ
ಕ್ತಿಯಲದೇನಾಶ್ಚರ್ಯವೊ ಶಿವಶಿವಾ ಮಹಾದೇವ
ಜಯ ಜಯೆಂದುದು ನಿಖಿಳಜನ ಝಾ
ಡಿಯಲಿ ಝೋಂಪಿಸಿ ಸೆಳೆವ ಸೀರೆಗೆ
ಲಯವ ಕಾಣೆನು ಕರುಣವೆಂತುಟೋ ದೇವಕೀಸುತನ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೈವಭಕ್ತಿಯಲ್ಲಿ ಅದೆಂತಹ ಆಶ್ಚರ್ಯವಿದೆಯೋ ಶಿವ ಶಿವಾ ! ಮಹಾದೇವಾ ! ಆ ದೇವಕೀಸುತನ ಕರುಣೆ ಎಂತಹುದೋ ! ಆ ದುಶ್ಶಾಸನ ಸ್ವೇಚ್ಛೆಯಾಗಿ ಕೈ ಹಾಕಿ ಕೀಳುತ್ತಿದ್ದರೂ ದ್ರೌಪದಿಯ ಸೀರೆ ಕೊನೆಮುಟ್ಟುವಂತೆಯೇ ಇರಲಿಲ್ಲ ! ಅಕ್ಷಯವಾಗಿತ್ತು ಸಭೆಯಲ್ಲಿದ್ದ ಸಮಸ್ತ ಜನರೂ ‘ಜಯಜಯ’ ಎಂದು ಉದ್ಘೋಷಿಸಿದರು.
ಪದಾರ್ಥ (ಕ.ಗ.ಪ)
ಝೋಂಪಿಸಿ-ರಭಸದಿಂದ
ಮೂಲ ...{Loading}...
ನಿಯತಮತಿ ಚಿತ್ತವಿಸು ಜನಮೇ
ಜಯ ಮಹೀಪತಿ ದೇವತಾ ಭ
ಕ್ತಿಯಲದೇನಾಶ್ಚರ್ಯವೊ ಶಿವಶಿವಾ ಮಹಾದೇವ
ಜಯ ಜಯೆಂದುದು ನಿಖಿಳಜನ ಝಾ
ಡಿಯಲಿ ಝೋಂಪಿಸಿ ಸೆಳೆವ ಸೀರೆಗೆ
ಲಯವ ಕಾಣೆನು ಕರುಣವೆಂತುಟೋ ದೇವಕೀಸುತನ ॥1॥
೦೦೨ ಉಗಿದು ಹಾಯ್ಕುವ ...{Loading}...
ಉಗಿದು ಹಾಯ್ಕುವ ಖಳನ ನಿಡುದೋ
ಳುಗಳು ಬಳಲಿದವಳ್ಳೆ ಹೊಯ್ದವು
ಢಗೆಯ ಡಾವರವಾಯ್ತು ಬಹಳ ಸ್ವೇದಜಲ ಜಡಿಯೆ
ತೆಗೆದು ನಿಂದನು ಸೀರೆಯೊಟ್ಟಿಲು
ಗಗನವನು ಗಾಹಿಸಿತು ಗರುವೆಯ
ಬಗೆಗೆ ಬೀಸರವಿಲ್ಲ ಬೆರಗಾದುದು ಮಹಾಸ್ಥಾನ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಳೆದೆಳೆದು ಹಾಕುತ್ತಿದ್ದ ಆ ದುಷ್ಟನ ನೀಳವಾದ ತೋಳುಗಳು ಬಳಲಿದುವು. ಅಳ್ಳೆ ಹೊಡೆದುಕೊಳ್ಳತೊಡಗಿತು. ಧಗೆ ಹೆಚ್ಚಿ ಬಾಯಾರಿತು. ಮೈಯೆಲ್ಲ ಬೆವರಿತು. ಹಿಂದೆ ಸರಿದು ನಿಂತ. ಎಳೆದು ಹಾಕಿದ ಸೀರೆಯ ರಾಶಿ ಗಗನವನ್ನು ಮುಟ್ಟಿತ್ತು. ಆ ಹಿರಿಮೆಯ ದ್ರೌಪದಿಯ ಮನಸ್ಸಿಗೆ ತನ್ನ ಅಳಲು ವ್ಯರ್ಥವೆನಿಸಲಿಲ್ಲ. ಆ ಆಸ್ಥಾನವೆಲ್ಲ ಬೆರಗಾಯಿತು
ಪದಾರ್ಥ (ಕ.ಗ.ಪ)
ಉಗಿದು ಹಾಯ್ಕು-ಕಿತ್ತು ಹಾಕು, ಢಗೆಯ ಡಾವರ-ಧಗೆಯ ತಾಪ, ಒಟ್ಟಿಲು-ರಾಶಿ, ಗಾಹಿಸಿತು-ವ್ಯಾಪಿಸಿತು
ಮೂಲ ...{Loading}...
ಉಗಿದು ಹಾಯ್ಕುವ ಖಳನ ನಿಡುದೋ
ಳುಗಳು ಬಳಲಿದವಳ್ಳೆ ಹೊಯ್ದವು
ಢಗೆಯ ಡಾವರವಾಯ್ತು ಬಹಳ ಸ್ವೇದಜಲ ಜಡಿಯೆ
ತೆಗೆದು ನಿಂದನು ಸೀರೆಯೊಟ್ಟಿಲು
ಗಗನವನು ಗಾಹಿಸಿತು ಗರುವೆಯ
ಬಗೆಗೆ ಬೀಸರವಿಲ್ಲ ಬೆರಗಾದುದು ಮಹಾಸ್ಥಾನ ॥2॥
೦೦೩ ಆ ಮಹಾಸತಿ ...{Loading}...
ಆ ಮಹಾಸತಿ ಶಿವಶಿವಾ ಲ
ಜ್ಜಾಮಹೋದಧಿ ಬತ್ತುವುದೆ ನಿ
ರ್ನಾಮರೇ ಕುಂತೀಸುತರು ಪಥ್ಯರೆ ಪರಾಭವಕೆ
ಆ ಮುಕುಂದನ ದಿವ್ಯನಾಮ
ಪ್ರೇಮರಸಕಿದು ಸಿದ್ಧಿಯೆಂದೆನ
ಲಾ ಮಹಾಸ್ಥಾನದಲಿ ಬೆಳೆದುದು ಬೆರಗು ಬಿಂಕದಲಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಕೆ ಮಹಾಸತಿ ! ಶಿವ ಶಿವಾ ! ಲಜ್ಜೆಯೆಂಬ ಮಹಾಸಾಗರ ಬತ್ತಿಹೋಗುವುದೇ ? ಕುಂತೀಸುತರು ನಿರ್ನಾಮರೇ ? ಅಪಮಾನಕ್ಕೆ
ಗುರಿಯಾಗುವವರೇ ? ಆ ಮುಕುಂದನ ದಿವ್ಯನಾಮ ಪ್ರೇಮರಸಕ್ಕೆ ಇದು ಸಿದ್ಧಿ-ಎಂಬಂತೆ ಆ ಮಹಾ ಆಸ್ಥಾನದಲ್ಲಿ ಬೆರಗು ಬಿಂಕ ಬೆಳೆಯಿತು.
ಪದಾರ್ಥ (ಕ.ಗ.ಪ)
ಬಿಂಕ-ಗರ್ವ
ಮೂಲ ...{Loading}...
ಆ ಮಹಾಸತಿ ಶಿವಶಿವಾ ಲ
ಜ್ಜಾಮಹೋದಧಿ ಬತ್ತುವುದೆ ನಿ
ರ್ನಾಮರೇ ಕುಂತೀಸುತರು ಪಥ್ಯರೆ ಪರಾಭವಕೆ
ಆ ಮುಕುಂದನ ದಿವ್ಯನಾಮ
ಪ್ರೇಮರಸಕಿದು ಸಿದ್ಧಿಯೆಂದೆನ
ಲಾ ಮಹಾಸ್ಥಾನದಲಿ ಬೆಳೆದುದು ಬೆರಗು ಬಿಂಕದಲಿ ॥3॥
೦೦೪ ಅಹಹ ದೈವಪ್ರೇಮವಿದೆಲಾ ...{Loading}...
ಅಹಹ ದೈವಪ್ರೇಮವಿದೆಲಾ
ಮಹಿಳೆಯಲಿ ಮಾನವರ ಕೃತಿ ಗೆಲ
ಬಹುದೆ ಗರುವೆಯ ಗಾಹಿಸಿತು ಗೋವಿಂದನಭಿಧಾನ
ಅಹಿತವಹ ಕುರುರಾಜಕುಲ ಘನ
ಗಹನ ಭೀಮ ಧನಂಜಯಾದ್ಯರ
ವಿಹರಣದಲಿ ವಿನಾಶವಹುದೆಂದುದು ಬುಧಸ್ತೋಮ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಹಹ ! ಮಹಿಳೆಯ ವಿಷಯದಲ್ಲಿ ದೈವಪ್ರೇಮವೆಂದರೆ ಇದಲ್ಲವೇ ? ಮಾನವರ ಕೃತಿ ದೈವಪ್ರೇಮವನ್ನು ಗೆಲ್ಲಬಲ್ಲುದೆ ?
ಗೋವಿಂದನ ನಾಮ ಇವಳಲ್ಲಿ ಪ್ರಭಾವಿಸಿತು. ಅಹಿತರಾದ ಕುರುರಾಜ ಕುಲವೆಂಬ ದಟ್ಟಡವಿ ಭೀಮ ಅರ್ಜುನಾದಿಗಳ ವಿಹಾರದಿಂದ ವಿನಾಶವಾಗುತ್ತದೆ ಎಂದು ಅಲ್ಲಿದ್ದ ವಿದ್ವಾಂಸರ ಸಮೂಹ ಹೇಳಿತು.
ಪದಾರ್ಥ (ಕ.ಗ.ಪ)
ಗರುವೆಯ-ಮಾನಳನ್ನು, ಗಾಹಿಸಿತು-ಮುಳುಗಿಸಿತು
ಮೂಲ ...{Loading}...
ಅಹಹ ದೈವಪ್ರೇಮವಿದೆಲಾ
ಮಹಿಳೆಯಲಿ ಮಾನವರ ಕೃತಿ ಗೆಲ
ಬಹುದೆ ಗರುವೆಯ ಗಾಹಿಸಿತು ಗೋವಿಂದನಭಿಧಾನ
ಅಹಿತವಹ ಕುರುರಾಜಕುಲ ಘನ
ಗಹನ ಭೀಮ ಧನಂಜಯಾದ್ಯರ
ವಿಹರಣದಲಿ ವಿನಾಶವಹುದೆಂದುದು ಬುಧಸ್ತೋಮ ॥4॥
೦೦೫ ಬೆಗಡಿನಲಿ ಮುದಖೇದ ...{Loading}...
ಬೆಗಡಿನಲಿ ಮುದಖೇದ ನಯನಾಂ
ಬುಗಳೊಳಾನಂದಾಶ್ರು ಶೋಕದ
ಬಗೆಯೊಳುಬ್ಬಿದ ನಗೆಯಲಾ ಸ್ವೇದದಲಿ ರೋಮಾಂಚ
ದುಗುಡದಲಿ ಪರಿತೋಷ ಕಂದಿದ
ಮೊಗದಲುಜ್ಜ್ವಲವೃತ್ತಿ ಭೀಷ್ಮಾ
ದಿಗಳೊಳಗೆ ಪಲ್ಲಟಿಸುತಿರ್ದುದು ಪಡಿಮಹೂರ್ತದಲಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಶ್ಚರ್ಯದೊಡನೆ ಸಂತೋಷ ದುಃಖ ! ದುಃಖದ ಕಣ್ಣೀರಿನ ಜೊತೆಗೆ ಆನಂದಾಶ್ರು ! ಶೋಕದ ಮನಸ್ಸಿನಲ್ಲಿ ಉಬ್ಬಿದ ನಗೆ !
ಬೆವರಿನೊಡನೆ ಹರ್ಷದ ರೋಮಾಂಚ ! ದುಃಖದೊಡನೆ ಪರಿತೋಷ ! ಕಂದಿದ ಮುಖದಲ್ಲಿ ಉಜ್ಜ್ವಲ ಪ್ರವೃತ್ತಿ ! ಹೀಗೆ ಮನಸ್ಸಿನ ಭಾವನೆಗಳು ಭೀಷ್ಮನೇ ಮೊದಲಾದವರಲ್ಲಿ ಪ್ರತಿಕ್ಷಣವೂ ಬದಲಾಗುತ್ತಿತ್ತು
ಪದಾರ್ಥ (ಕ.ಗ.ಪ)
ಮೂಲ ...{Loading}...
ಬೆಗಡಿನಲಿ ಮುದಖೇದ ನಯನಾಂ
ಬುಗಳೊಳಾನಂದಾಶ್ರು ಶೋಕದ
ಬಗೆಯೊಳುಬ್ಬಿದ ನಗೆಯಲಾ ಸ್ವೇದದಲಿ ರೋಮಾಂಚ
ದುಗುಡದಲಿ ಪರಿತೋಷ ಕಂದಿದ
ಮೊಗದಲುಜ್ಜ್ವಲವೃತ್ತಿ ಭೀಷ್ಮಾ
ದಿಗಳೊಳಗೆ ಪಲ್ಲಟಿಸುತಿರ್ದುದು ಪಡಿಮಹೂರ್ತದಲಿ ॥5॥
೦೦೬ ನೆನೆದೆ ನೀನನುಚಿತವನೀ ...{Loading}...
ನೆನೆದೆ ನೀನನುಚಿತವನೀ ಹೊ
ತ್ತಿನಲಿ ದ್ರುಪದಾತ್ಮಜೆಯ ದೈವದ
ನೆನಹಿನಲಿ ದೂರಡಗಿತರೆಬೆಳೆಸಾದುದಪಕೀರ್ತಿ
ವನಿತೆಯನು ಬಿಡು ಪಾಂಡು ನೃಪ ನಂ
ದನರ ನೀನೊಲಿದಂತೆ ಮಾಡುವು
ದನುನಯವು ನಿನಗೆಂದು ನುಡಿದನು ವಿದುರ ಕುರುಪತಿಗೆ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ವಿದುರನು ಕುರುಪತಿಗೆ “ನೋಡು, ನೀನು ಪಾಂಡವರಿಗೆ ಅನುಚಿತವಾದುದನ್ನು ನೆನೆದೆ. ಆದರೆ ಈಗ ದ್ರೌಪದಿಯ ದೈವಸ್ಮರಣೆಯ ಕಾರಣದಿಂದ ನಿನಗೆ ಬರಲಿದ್ದ ದೂರು ಹೋಯಿತು. ಪೂರ್ತಿಯಾಗಿ ಬರಲಿದ್ದ ಅಪಕೀರ್ತಿ ಅರೆಬೆಳಸಾಯಿತು.
ಈಗ ದ್ರೌಪದಿಯನ್ನು ಬಿಡುಗಡೆ ಮಾಡು. ಪಾಂಡವರ ವಿಷಯದಲ್ಲಿ ನಿನ್ನಿಚ್ಛೆಯಂತೆ ನಡೆದುಕೊ. ಹೀಗೆ ಮಾಡಿದರೆ ನಿನಗೆ ಒಳ್ಳೆಯದು’ ಎಂದ
ಪದಾರ್ಥ (ಕ.ಗ.ಪ)
ಮೂಲ ...{Loading}...
ನೆನೆದೆ ನೀನನುಚಿತವನೀ ಹೊ
ತ್ತಿನಲಿ ದ್ರುಪದಾತ್ಮಜೆಯ ದೈವದ
ನೆನಹಿನಲಿ ದೂರಡಗಿತರೆಬೆಳೆಸಾದುದಪಕೀರ್ತಿ
ವನಿತೆಯನು ಬಿಡು ಪಾಂಡು ನೃಪ ನಂ
ದನರ ನೀನೊಲಿದಂತೆ ಮಾಡುವು
ದನುನಯವು ನಿನಗೆಂದು ನುಡಿದನು ವಿದುರ ಕುರುಪತಿಗೆ ॥6॥
೦೦೭ ದೈವವೀ ದ್ರೌಪದಿಗೆ ...{Loading}...
ದೈವವೀ ದ್ರೌಪದಿಗೆ ಸೀರೆಯ
ನೀವುದಲ್ಲದೆ ಬಿಡಿಸಲಾಪುದೆ
ದೈವತೊತ್ತಿರ ಹುರುಡುಗೆಲಸದ ಹಿಂಡುಗೂಟದಲಿ
ದೈವವಿವಳಿಗೆ ತಾನಲೇ ತ
ನ್ನೈವರಿಕ್ಕಿದ ಮಾತು ರಿಪುಗಳ
ಮೈವಳಿಯ ನುಡಿಗಾರ ನೀ ಸಾರೆಂದನಾ ಭೂಪ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ದುರ್ಯೋಧನ ಅವನನ್ನು ಜರೆದು ದೈವವು ಈ ದ್ರೌಪದಿಗೆ ಸೀರೆಯನ್ನು ಕೊಟ್ಟೀತೇ ಹೊರತು ಸೆರೆಯನ್ನು ಬಿಡಿಸುತ್ತದೆಯೇ? ಹುರುಪಿನಿಂದ ಕೆಲಸ ಮಾಡುವ ದಾಸಿಯರ ಹಿಂಡಿನಲ್ಲಿ ಇವಳು ಇರಬೇಕಾದದ್ದು. ಇವಳಿಗೆ ದೈವವು ನಾನೇ. ಅವಳ ಆ ಐವರೇ ಕೊಟ್ಟ ಮಾತು ಅದು. ನೀನು ಶತ್ರುಗಳ ಅಧೀನದಲ್ಲಿದ್ದು ಅವರ ಪರವಾಗಿ ಮಾತನಾಡುವವ. ನೀನು ಹೋಗು ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ದೈವವೀ ದ್ರೌಪದಿಗೆ ಸೀರೆಯ
ನೀವುದಲ್ಲದೆ ಬಿಡಿಸಲಾಪುದೆ
ದೈವತೊತ್ತಿರ ಹುರುಡುಗೆಲಸದ ಹಿಂಡುಗೂಟದಲಿ
ದೈವವಿವಳಿಗೆ ತಾನಲೇ ತ
ನ್ನೈವರಿಕ್ಕಿದ ಮಾತು ರಿಪುಗಳ
ಮೈವಳಿಯ ನುಡಿಗಾರ ನೀ ಸಾರೆಂದನಾ ಭೂಪ ॥7॥
೦೦೮ ನೀತಿ ಮರುಳನು ...{Loading}...
ನೀತಿ ಮರುಳನು ವಿದುರನೀತನ
ಮಾತಿನಲಿ ಫಲವೇನು ತೊತ್ತಿರೊ
ಳೀ ತಳೋದರಿ ಬೆರೆಸಿ ಬದುಕಲಿ ಕರ್ಣ ಕಳುಹಿವಳ
ಈ ತತುಕ್ಷಣ ದೃಷ್ಟಿಬಂಧನ
ವೇತರಲಿ ಮಾಡಿದಳೊ ಲಜ್ಜಾ
ಜಾತವುಳಿದುದು ಬೆಳೆದ ಸೀರೆಯ ಕಟ್ಟಿ ಹೊರಿಸೆಂದ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನ ಮತ್ತೆ ಕರ್ಣನ ಕಡೆ ತಿರುಗಿ “ನೀತಿ ಮರುಳನು ವಿದುರ. ಈತನ ಮಾತು ಕಟ್ಟಿಕೊಂಡೇನು? ಈ ತಳೋದರಿ ದಾಸಿಯರ ಗುಂಪಿನಲ್ಲಿ ಬದುಕಲಿ. ಕರ್ಣ ಈ ಕ್ಷಣವೇ ಇವಳನ್ನು ಅಲ್ಲಿಗೆ ಕಳಿಸು. ಅದೇನು ಕಣ್ಣುಕಟ್ಟು ಮಾಡಿದಳೋ, ಇವಳ ಲಜ್ಜೆ ಉಳಿಯಿತು. ಅಕ್ಷಯವಾಗಿ ಬೆಳೆದಿದೆಯಲ್ಲ ಸೀರೆ, ಇದನ್ನೆಲ್ಲ ಕಟ್ಟಿ ಹೊರಿಸು.
ಪದಾರ್ಥ (ಕ.ಗ.ಪ)
ಮೂಲ ...{Loading}...
ನೀತಿ ಮರುಳನು ವಿದುರನೀತನ
ಮಾತಿನಲಿ ಫಲವೇನು ತೊತ್ತಿರೊ
ಳೀ ತಳೋದರಿ ಬೆರೆಸಿ ಬದುಕಲಿ ಕರ್ಣ ಕಳುಹಿವಳ
ಈ ತತುಕ್ಷಣ ದೃಷ್ಟಿಬಂಧನ
ವೇತರಲಿ ಮಾಡಿದಳೊ ಲಜ್ಜಾ
ಜಾತವುಳಿದುದು ಬೆಳೆದ ಸೀರೆಯ ಕಟ್ಟಿ ಹೊರಿಸೆಂದ ॥8॥
೦೦೯ ಇವಳಲೇ ನಮ್ಮಿನಿಬರಭಿಮಾ ...{Loading}...
ಇವಳಲೇ ನಮ್ಮಿನಿಬರಭಿಮಾ
ನವನು ಸೆಳೆದಳಲಾ ಸ್ವಯಂವರ
ಭವನದಲಿ ಭಂಗಿಸಿದಳೆಮ್ಮನು ಸಭೆಯೊಳೆಡಹಿದರೆ
ಇವಳು ಬಹುವಿಧ ಪುಣ್ಯ ಶಕ್ತಿಯೊ
ಳೆವಗೆ ಸಿಲುಕಿದಳಿಂದು ತೊತ್ತಿರ
ಸವಡಿವೇಟದ ಸವಿಯ ಸುರಿಯಲಿ ಭಂಡ ಮಿಂಡರಲಿ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವಳೇ ಅಲ್ಲವೆ ಆ ಸ್ವಯಂವರ ಭವನದಲ್ಲಿ ನಮ್ಮ ಇಷ್ಟೂ ಜನರ ಅಭಿಮಾನವನ್ನು ಸೆಳೆದುಬಿಟ್ಟವಳು ? ಆ ಮಯ ಸಭೆಯಲ್ಲಿ
ನಾನು ಮುಗ್ಗರಿಸಿದಾಗ ನನ್ನನ್ನು ಅಪಹಾಸ್ಯ ಮಾಡಿದಳು. ನಾನಾ ಪುಣ್ಯಶಕ್ತಿಗಳಿಂದ ಇವಳು ನಮ್ಮ ಕೈಗೆ ಸಿಕ್ಕಿಬಿದ್ದಳು. ಈಗ ಆ ದಾಸಿಯರ ಜೊತೆ ಸೇರಿ ಭಂಡಮಿಂಡರ ಜೊತೆ ಸವಡಿವೇಟದ ಸವಿಯನ್ನು ಸುರಿದುಕೊಳ್ಳಲಿ ಎಂದ.
ಪದಾರ್ಥ (ಕ.ಗ.ಪ)
ಸವಡಿವೇಟ-ಹಲವು ಪುರುಷರೊಡನೆ ಕೂಡುವುದು
ಮೂಲ ...{Loading}...
ಇವಳಲೇ ನಮ್ಮಿನಿಬರಭಿಮಾ
ನವನು ಸೆಳೆದಳಲಾ ಸ್ವಯಂವರ
ಭವನದಲಿ ಭಂಗಿಸಿದಳೆಮ್ಮನು ಸಭೆಯೊಳೆಡಹಿದರೆ
ಇವಳು ಬಹುವಿಧ ಪುಣ್ಯ ಶಕ್ತಿಯೊ
ಳೆವಗೆ ಸಿಲುಕಿದಳಿಂದು ತೊತ್ತಿರ
ಸವಡಿವೇಟದ ಸವಿಯ ಸುರಿಯಲಿ ಭಂಡ ಮಿಂಡರಲಿ ॥9॥
೦೧೦ ಬೂತುಗೆಡೆವನೊಳೆಮ್ಬೆನೇ ಮರು ...{Loading}...
ಬೂತುಗೆಡೆವನೊಳೆಂಬೆನೇ ಮರು
ಮಾತನೆಲೆ ಗಾಂಗೇಯ ತಮ್ಮದು
ನೀತಿಯೇ ತಾನಿವರ ಧನವೇ ಧರ್ಮಮಾರ್ಗದಲಿ
ಸೋತನರಸನು ತನ್ನನೆನ್ನನು
ಸೋತುದನುಚಿತವೆಂಬ ಬೆಡಗಿನ
ಮಾತನರಿಯದ ಮೂಢರನು ಸುಡಲೆಂದಳಿಂದುಮುಖಿ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನ ಮಾತು ಕೇಳಿ ಅಸಹ್ಯಗೊಂಡ ದ್ರೌಪದಿ “ಈ ಹೊಲಸುನುಡಿಗಳನ್ನಾಡುತಿರುವ ಇವನೊಡನೆ ಮರುಮಾತನ್ನಾಡಲೇ ? ಭೀಷ್ಮ ತಾವು ಮಾಡುತ್ತಿರುವುದು ಸರಿಯೆ ? ಧರ್ಮಮಾರ್ಗದಲ್ಲಿ ನಾನು ಇವರ ಧನವೇ ? ಅರಸ ತನ್ನನ್ನು ಸೋತ. ನನ್ನನ್ನು ಸೋತದ್ದು ಉಚಿತವಲ್ಲ ಎಂಬ ಮರ್ಮದ ಮಾತನ್ನು ಅರಿಯದ ಈ ಮೂರ್ಖರನ್ನು ಸುಡಲಿ” ಎಂದನು
ಪದಾರ್ಥ (ಕ.ಗ.ಪ)
ಬೂತುಗೆಡೆವನೊಳು-ಹೊಲಸುನಡೆಯುಳ್ಳವನೊಡನೆ
ಮೂಲ ...{Loading}...
ಬೂತುಗೆಡೆವನೊಳೆಂಬೆನೇ ಮರು
ಮಾತನೆಲೆ ಗಾಂಗೇಯ ತಮ್ಮದು
ನೀತಿಯೇ ತಾನಿವರ ಧನವೇ ಧರ್ಮಮಾರ್ಗದಲಿ
ಸೋತನರಸನು ತನ್ನನೆನ್ನನು
ಸೋತುದನುಚಿತವೆಂಬ ಬೆಡಗಿನ
ಮಾತನರಿಯದ ಮೂಢರನು ಸುಡಲೆಂದಳಿಂದುಮುಖಿ ॥10॥
೦೧೧ ಸೋತುದಿಲ್ಲಾ ನಿನ್ನ ...{Loading}...
ಸೋತುದಿಲ್ಲಾ ನಿನ್ನ ಸೋತುದ
ನೀತಿಯೆಂಬುದು ವಿಹಿತವೇ ತಾ
ನೀತ ನುಡಿಯಲಿ ಧರ್ಮಪುತ್ರನು ಸತ್ಯಸಂಧನಲೆ
ನೀ ತಳೋದರಿ ತರಿಚುಗೆಡೆದೀ
ಮಾತಿನಲಿ ತಾ ಬಿಡುವೆನೇ ನಿ
ನ್ನಾತಗಳ ನುಡಿಸೆಂದು ಖಳ ಧಟ್ಟಿಸಿದನಂಗನೆಯ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನ್ನನ್ನು ಸೋತದ್ದು ಸುಳ್ಳೆ ? ಸೋತದ್ದು ಅನೀತಿಯೆನ್ನುವುದು ಸರಿಯೇ ? ಈ ಧರ್ಮಪುತ್ರ ಸತ್ಯಸಂಧ ತಾನೇ, ಅವನೇ ಹೇಳಲಿ….. ನೀನು ಸ್ತ್ರೀ, ನೀನು ಹೀಯಾಳಿಸಿದ ಈ ಮಾತನ್ನು ಇಷ್ಟಕ್ಕೆ ಬಿಡುವೆನೆ ? ನಿನ್ನ ಪತಿಗಳನ್ನೇ ಕೇಳು ಎಂದು ದಟ್ಟಿಸಿದ.
ಪದಾರ್ಥ (ಕ.ಗ.ಪ)
ತರಿಚುಗೆಡೆ-ಹೀಯಾಳಿಸು, ಮೂದಲಿಸು
ಮೂಲ ...{Loading}...
ಸೋತುದಿಲ್ಲಾ ನಿನ್ನ ಸೋತುದ
ನೀತಿಯೆಂಬುದು ವಿಹಿತವೇ ತಾ
ನೀತ ನುಡಿಯಲಿ ಧರ್ಮಪುತ್ರನು ಸತ್ಯಸಂಧನಲೆ
ನೀ ತಳೋದರಿ ತರಿಚುಗೆಡೆದೀ
ಮಾತಿನಲಿ ತಾ ಬಿಡುವೆನೇ ನಿ
ನ್ನಾತಗಳ ನುಡಿಸೆಂದು ಖಳ ಧಟ್ಟಿಸಿದನಂಗನೆಯ ॥11॥
೦೧೨ ಜೀಯ ಮಾತೇನಿವಳೊಡನೆ ...{Loading}...
ಜೀಯ ಮಾತೇನಿವಳೊಡನೆ ರಿಪು
ರಾಯರಿಗೆ ದಾಸತ್ವವಾಗಲು
ಬಾಯಬಡಿಕೆಯದಾರೊಡವೆ ತದ್ದಾಸ ಧನವಲ್ಲ
ಆಯತಾಕ್ಷಿಯನಿನ್ನು ನಿಮ್ಮ ಪ
ಸಾಯಿತೆಯರಲಿ ಕೂಡು ತೊತ್ತಿರ
ಲಾಯಬೇಡುಪಕಾರವೆಂದೆರಗಿದನು ಕಲಿಕರ್ಣ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಡುವೆ ಕರ್ಣ ಬಾಯಿ ಹಾಕಿದ “ಜೀಯ, ಇವಳ ಹತ್ತಿರ ಏನು ಮಾತು? ಶತ್ರು ರಾಜರಿಗೇ ದಾಸತ್ವವುಂಟಾಗಿರಲು ಈ ಬಾಯಿಬಡಿಕೆ ಯಾರ ಒಡವೆ ? ಆ ದಾಸರ ಧನವೇ ಅಲ್ಲವೆ ? ಈ ಆಯತಾಕ್ಷಿಯನ್ನು ನಿನ್ನ ಪಸಾಯ್ತೆಯರೊಡನೆ ಸೇರಿಸು. ದಾಸಿಯರ ಸಂಗಡ ಬೇಡ. ಇದು ನಾವು ಅವಳಿಗೆ ಮಾಡುವ ಉಪಕಾರ ಎಂದು ದುರ್ಯೋಧನನಿಗೆ ಎರಗಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಜೀಯ ಮಾತೇನಿವಳೊಡನೆ ರಿಪು
ರಾಯರಿಗೆ ದಾಸತ್ವವಾಗಲು
ಬಾಯಬಡಿಕೆಯದಾರೊಡವೆ ತದ್ದಾಸ ಧನವಲ್ಲ
ಆಯತಾಕ್ಷಿಯನಿನ್ನು ನಿಮ್ಮ ಪ
ಸಾಯಿತೆಯರಲಿ ಕೂಡು ತೊತ್ತಿರ
ಲಾಯಬೇಡುಪಕಾರವೆಂದೆರಗಿದನು ಕಲಿಕರ್ಣ ॥12॥
೦೧೩ ಎಲೆಗೆ ಭಜಿಸಾ ...{Loading}...
ಎಲೆಗೆ ಭಜಿಸಾ ಕೌರವಾನ್ವವಯ
ತಿಲಕನನು ನಿನ್ನವರ ಮರೆ ನಿ
ನ್ನುಳಿವ ನೆನೆಯೀ ಸಮಯದಲಿ ಕಾಲೋಚಿತ ಕ್ರಮವ
ಬಳಸು ನೀನೆನೆ ಗಜರಿದಳು ಕುರು
ತಿಲಕನನು ತರಿದೊಟ್ಟಿ ರಣದಲಿ
ತಿಳಿರಕುತದಲಿ ದಣಿವನನಿಲಜನೆಂದಳಿಂದುಮುಖಿ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ದ್ರೌಪದಿಗೆ “ಎಲೆಗೆ ಕೌರವವಂಶ ತಿಲಕನನ್ನು ಭಜಿಸು. ನಿನ್ನವರನ್ನು ಮರೆತು ಬಿಡು. ಸಮಯೋಚಿತವಾಗಿ ನಡೆದುಕೊಂಡು ನೀನು ಉಳಿಯುವ ರೀತಿಯನ್ನು ಕಂಡುಕೊ” ಎಂದ. ದ್ರೌಪದಿ ಕೆರಳಿ, ಅವನನ್ನು ಗದರಿಸಿ “ಈ ಕುರುತಿಲಕನನ್ನು ಯುದ್ಧದಲ್ಲಿ ತರಿದು ಹಾಕಿ ಅವನ ತಿಳಿರಕ್ತದಿಂದ ತೃಪ್ತಿಪಡುವನು ಭೀಮ !” ಎಂದಳು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಎಲೆಗೆ ಭಜಿಸಾ ಕೌರವಾನ್ವವಯ
ತಿಲಕನನು ನಿನ್ನವರ ಮರೆ ನಿ
ನ್ನುಳಿವ ನೆನೆಯೀ ಸಮಯದಲಿ ಕಾಲೋಚಿತ ಕ್ರಮವ
ಬಳಸು ನೀನೆನೆ ಗಜರಿದಳು ಕುರು
ತಿಲಕನನು ತರಿದೊಟ್ಟಿ ರಣದಲಿ
ತಿಳಿರಕುತದಲಿ ದಣಿವನನಿಲಜನೆಂದಳಿಂದುಮುಖಿ ॥13॥
೦೧೪ ಏಕೆ ಕೆಣಕಿದೆ ...{Loading}...
ಏಕೆ ಕೆಣಕಿದೆ ಕರ್ಣ ಬೂತಿನ
ಬೀಕಲಿನ ಬದಗಿಯನು ಸಮರದೊ
ಳೀಕೆಯನಿಲಜ ಮುರಿವನೆನುತವೆ ತನ್ನ ಮುಂಜೆರಗ
ನೂಕಿ ತೊಡೆಗಳ ತೋರಿಸುತ ಲೋ
ಕೈಕ ವೀರನನೇಡಿಸಿದರ
ವ್ಯಾಕುಲನ ಮನ ಖಂಡಿಯೋದುದು ಖತಿಯ ಹೊಯ್ಲಿನಲಿ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಯ್ದುಳಿದ ಈ ಹೊಲಸು ಜಾರೆಯನ್ನು ಏಕೆ ಕೆಣಕಿದೆ ಕರ್ಣ ? ಯುದ್ಧದಲ್ಲಿ ಇವಳ ಅನಿಲಜ ನನ್ನನ್ನು ಕೊಲ್ಲುವನಂತೆ ! ಎಂದು ಹಂಗಿಸುತ್ತಾ ದುರ್ಯೋಧನ ತನ್ನ ಮುಂದಿನ ಸೆರಗನ್ನು ಎತ್ತಿ ತೊಡೆಗಳನ್ನು ತೋರಿಸುತ್ತಾ ಆ ಲೋಕೈಕ ವೀರನಾದ ಭೀಮನನ್ನು ಹಿಯ್ಯಾಳಿಸಿದ. ಅದುವರೆಗೆ ಅವ್ಯಾಕುಲನಾಗಿ ಕುಳಿತಿದ್ದ ಭೀಮನ ಮನಸ್ಸು ಆ ಮಾತನ್ನು ಕೇಳಿದೊಡನೆ ರೋಷದ ಹೊಯ್ದಾಟದಿಂದ ಒಡೆದು ಹೋಯಿತು.
ಪದಾರ್ಥ (ಕ.ಗ.ಪ)
ಬೂತು-ನಾಚಿಕೆಗೆಟ್ಟ, ಬೀಕಲಿನ-ಬಾಡಿದ, ಆಯ್ದು ಉಳಿದ, ಬದಗಿ-ವೇಶ್ಯೆ, ಖಂಡಿಯೋದದು-ಒಡೆದು ಹೋಯಿತು
ಮೂಲ ...{Loading}...
ಏಕೆ ಕೆಣಕಿದೆ ಕರ್ಣ ಬೂತಿನ
ಬೀಕಲಿನ ಬದಗಿಯನು ಸಮರದೊ
ಳೀಕೆಯನಿಲಜ ಮುರಿವನೆನುತವೆ ತನ್ನ ಮುಂಜೆರಗ
ನೂಕಿ ತೊಡೆಗಳ ತೋರಿಸುತ ಲೋ
ಕೈಕ ವೀರನನೇಡಿಸಿದರ
ವ್ಯಾಕುಲನ ಮನ ಖಂಡಿಯೋದುದು ಖತಿಯ ಹೊಯ್ಲಿನಲಿ ॥14॥
೦೧೫ ನೋಡಿದನು ಪರಿಘವನು ...{Loading}...
ನೋಡಿದನು ಪರಿಘವನು ಕಡೆಗ
ಣ್ಣಾಡಿತಿವದಿರ ಮೇಲೆ ಮೈಯಲಿ
ಝಾಡಿಗೆದರಿತು ರೋಮ ಝಳಪಿಸಿತರುಣಮಯ ನಯನ
ಮೂಡಿತುರಿ ಸುಯ್ಲಿನಲಿ ರೋಷದ
ಬೀಡು ಭೀಮನ ಕಂಡು ಧರ್ಮಜ
ಬೇಡಿಕೊಂಡನು ತನ್ನ ಕೊರಳಿನ ಬೆರಳ ಸನ್ನೆಯಲಿ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರಿಘವನ್ನು ನೋಡಿದ. ಅವನ ಕಡೆಗಣ್ಣು ಅವರ ಮೇಲೆ ಹರಿಯಿತು. ಮೈಯ ರೋಮಗಳೆಲ್ಲ ಎದ್ದು ನಿಂತವು. ಕಣ್ಣುಗಳಲ್ಲಿ ಕೆಂಪು ಕಾಂತಿ ಮಿಂಚಿತು. ನಿಟ್ಟುಸಿರಿನಲ್ಲಿ ಉರಿ ಕಾರಿತು. ಭೀಮ ರೋಷದ ಬೀಡಾಗಿಬಿಟ್ಟ ! ಭೀಮ ಕೆರಳಿದುದನ್ನು ನೋಡಿದ ಧರ್ಮಜ ತನ್ನ ಕೊರಳಿನ ಹಾಗೂ ಬೆರಳಿನ ಸಂಜ್ಞೆಯಿಂದ ಅವನನ್ನು ಸುಮ್ಮನಿರಲು ಬೇಡಿಕೊಂಡ.
ಪದಾರ್ಥ (ಕ.ಗ.ಪ)
ಮೂಲ ...{Loading}...
ನೋಡಿದನು ಪರಿಘವನು ಕಡೆಗ
ಣ್ಣಾಡಿತಿವದಿರ ಮೇಲೆ ಮೈಯಲಿ
ಝಾಡಿಗೆದರಿತು ರೋಮ ಝಳಪಿಸಿತರುಣಮಯ ನಯನ
ಮೂಡಿತುರಿ ಸುಯ್ಲಿನಲಿ ರೋಷದ
ಬೀಡು ಭೀಮನ ಕಂಡು ಧರ್ಮಜ
ಬೇಡಿಕೊಂಡನು ತನ್ನ ಕೊರಳಿನ ಬೆರಳ ಸನ್ನೆಯಲಿ ॥15॥
೦೧೬ ಸೈರಿಸಕಟಾ ಭೀಮ ...{Loading}...
ಸೈರಿಸಕಟಾ ಭೀಮ ರೋಷ ವಿ
ಕಾರಕಿದು ಹೊತ್ತಲ್ಲ ಸರ್ವ ವಿ
ಕಾರದಲಿ ಕೌರವರು ಮೆರೆಯಲಿ ಕಾಲವವರದಲ
ಧಾರುಣೀಶನ ಧರ್ಮತತ್ವದ
ಸಾರವುಳಿವುದೆ ಸಾಕು ಮಿಕ್ಕಿನ
ನಾರಿ ಧನವಭಿಮಾನ ಬೇಯಲಿಯೆಂದನಾ ಪಾರ್ಥ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಸಂದರ್ಭವನ್ನರಿತುಕೊಂಡ ಪಾರ್ಥ ಅವನನ್ನು ಸಂತೈಸುತ್ತಾ “ಸೈರಿಸು ಅಕಟಾ ! ಭೀಮ ವಿಕಾರವಾದ ರೋಷಕ್ಕೆ ಇದು ಹೊತ್ತಲ್ಲ. ಎಲ್ಲ ವಿಕಾರಗಳಿಂದಲೂ ಕೌರವರು ಬೇಕಾದರೆ ಮೆರೆಯಲಿ ಏಕೆಂದರೆ ಕಾಲ ಅವರದು ನಮ್ಮ ರಾಜ ಯುಧಿಷ್ಠಿರನ ಧರ್ಮದ ನಿಲುವು ಸಾರವತ್ತಾಗಿ ಉಳಿದರೆ ಸಾಕು. ಇನ್ನುಳಿದ ನಾರಿ, ಧನ, ಅಭಿಮಾನ ಬೇಕಿದ್ದರೆ ಬೆಂದು ಹೋಗಲಿ” ಎಂದ
ಪದಾರ್ಥ (ಕ.ಗ.ಪ)
ಮೂಲ ...{Loading}...
ಸೈರಿಸಕಟಾ ಭೀಮ ರೋಷ ವಿ
ಕಾರಕಿದು ಹೊತ್ತಲ್ಲ ಸರ್ವ ವಿ
ಕಾರದಲಿ ಕೌರವರು ಮೆರೆಯಲಿ ಕಾಲವವರದಲ
ಧಾರುಣೀಶನ ಧರ್ಮತತ್ವದ
ಸಾರವುಳಿವುದೆ ಸಾಕು ಮಿಕ್ಕಿನ
ನಾರಿ ಧನವಭಿಮಾನ ಬೇಯಲಿಯೆಂದನಾ ಪಾರ್ಥ ॥16॥
೦೧೭ ಕ್ಷಮೆಯೆ ...{Loading}...
ಕ್ಷಮೆಯೆ ಧನವೆಂದಿದ್ದೆವಿವಳಲಿ
ಮಮತೆಯನು ಮಾಡಿದೆವೆ ನಾವು
ಭ್ರಮಿಸುವರೆ ದೇವೇಂದ್ರ ತೃಣವಿವನಾವ ಪಾಡೆವಗೆ
ರಮಣಿಯಾಡಿದ ಧರ್ಮಪದವಿದು
ಕುಮತಿಗಳ ಮತವಲ್ಲದಿದ್ದರೆ
ತಮಗೆ ದಾಸಿಯೆ ದ್ರುಪದನಂದನೆಯೆಂದನಾ ಪಾರ್ಥ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಾವು ಕ್ಷಮೆಯೇ ಧರ್ಮ ಎಂದಿದ್ದೆವು. ಇವಳ ವಿಷಯದಲ್ಲಿ ಮಮತೆಯನ್ನು ತೋರಿದೆವೆ ? ನಾವು ಭ್ರಮೆಗೊಂಡು ಹೋರಾಟಕ್ಕೆ ನಿಲ್ಲುವಂತಿದ್ದರೆ ದೇವೇಂದ್ರನೇ ನಮಗೆ ತೃಣಸಮಾನ, ಇವನು ಯಾವ ಪಾಡು ನಮಗೆ ? ರಮಣಿ ಆಡಿದ ಧರ್ಮದ ಈ ಮಾತು ಕುಮತಿಗಳ ಅಭಿಪ್ರಾಯ. ಹಾಗಲ್ಲದಿದ್ದರೆ ದ್ರುಪದನಂದನೆ ನಮಗೆ ದಾಸಿಯೆ ?” ಎಂದು ವ್ಯಾಖ್ಯಾನಿಸಿದ ಪಾರ್ಥ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಕ್ಷಮೆಯೆ ಧನವೆಂದಿದ್ದೆವಿವಳಲಿ
ಮಮತೆಯನು ಮಾಡಿದೆವೆ ನಾವು
ಭ್ರಮಿಸುವರೆ ದೇವೇಂದ್ರ ತೃಣವಿವನಾವ ಪಾಡೆವಗೆ
ರಮಣಿಯಾಡಿದ ಧರ್ಮಪದವಿದು
ಕುಮತಿಗಳ ಮತವಲ್ಲದಿದ್ದರೆ
ತಮಗೆ ದಾಸಿಯೆ ದ್ರುಪದನಂದನೆಯೆಂದನಾ ಪಾರ್ಥ ॥17॥
೦೧೮ ಶ್ರುತಿ ತದರ್ಥ ...{Loading}...
ಶ್ರುತಿ ತದರ್ಥ ಸ್ಮೃತಿಗಳಲಿ ಪಂ
ಡಿತರು ಪರಿಣಿತರುಂಟು ಪಾರ್ಥ
ಸ್ಮೃತಿಯ ಬಳಿಕಾದರಿಸುವೆವು ನಿಮಗಾದ ದಾಸ್ಯದಲಿ
ಕೃತಕವಿಲ್ಲದೆ ನಡೆದು ತೋರಾ
ಸತಿಯ ಸೆರೆಯನು ಬಿಡಿಸಲೆಮ್ಮೀ
ಕ್ಷಿತಿಯೊಳಾರುಂಟೆಂದು ಕೌರವರಾಯ ಗರ್ಜಿಸಿದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಶ್ರುತಿ ಮತ್ತು ಅದರ ಅರ್ಥವನ್ನೊಳಗೊಂಡ ಸ್ಮೃತಿಗಳನ್ನು ಬಲ್ಲ ಪಂಡಿತರು ಪರಿಣತರು ಇದ್ದಾರೆ, ಪಾರ್ಥ, ಸ್ಮೃತಿಯನ್ನು ಬಳಿಕ ನೋಡೋಣ. ಈಗ ನಿಮಗೆ ಪ್ರಾಪ್ತವಾಗಿರುವ ದಾಸ್ಯದಲ್ಲಿ ಕೃತಕತೆಯಿಲ್ಲದೆ ನಡೆದು ತೋರಿಸಿ. ದ್ರೌಪದಿಯ ಸೆರೆಯನ್ನು ಬಿಡಿಸುವುದಕ್ಕೆ ನಮ್ಮ ಈ ಭೂಮಿಯ ಮೇಲೆ ಯಾರಿದ್ದಾರೆ ? ಎಂದು ಕೌರವ ಗರ್ಜಿಸಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಶ್ರುತಿ ತದರ್ಥ ಸ್ಮೃತಿಗಳಲಿ ಪಂ
ಡಿತರು ಪರಿಣಿತರುಂಟು ಪಾರ್ಥ
ಸ್ಮೃತಿಯ ಬಳಿಕಾದರಿಸುವೆವು ನಿಮಗಾದ ದಾಸ್ಯದಲಿ
ಕೃತಕವಿಲ್ಲದೆ ನಡೆದು ತೋರಾ
ಸತಿಯ ಸೆರೆಯನು ಬಿಡಿಸಲೆಮ್ಮೀ
ಕ್ಷಿತಿಯೊಳಾರುಂಟೆಂದು ಕೌರವರಾಯ ಗರ್ಜಿಸಿದ ॥18॥
೦೧೯ ಭಾಷೆಯೇಕಿವನೊಡನೆ ದ್ರೌಪದಿ ...{Loading}...
ಭಾಷೆಯೇಕಿವನೊಡನೆ ದ್ರೌಪದಿ
ದಾಸಿಯಲ್ಲೆಂಬವನ ದಿವಸವ
ದೇಸು ಬಲ ಹೋ ಪೂತು ಮಝ ತಾನಿಂದ್ರಸುತನೆಂಬ
ಐಸರಲಿ ದೇವೇಂದ್ರ ತೃಣ ಗಡ
ವೈಸಲೇ ನೀ ಮುನಿದಡೀ ನುಡಿ
ದಾಸಭಾವದ ಬಣಗುಗಳಿಗೇಕೆಂದನಾ ಕರ್ಣ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಡುವೆ ಕರ್ಣ ವ್ಯಂಗ್ಯವಾಗಿ ಮಾತನಾಡಿದ “ಇವನೊಡನೆ ಮಾತೇಕೆ ದ್ರೌಪದಿ ದಾಸಿಯಲ್ಲ ಎಂಬುವನು ಎಷ್ಟು ದಿನ ಬದುಕಿಯಾನು, ಅವನ ಬಲವೆಷ್ಟಿದ್ದೀತು ? ಹೋ ! ಪೂತು, ಮಝ ! ತಾನು ಇಂದ್ರನ ಮಗನೆಂಬಷ್ಟರಿಂದಲೇ ದೇವೇಂದ್ರನೇ ತೃಣಕ್ಕೆ ಸಮಾನ ಎನ್ನುವನಲ್ಲಾ ! ನೀನು ಕೋಪಗೊಂಡುದಕ್ಕೆ ದಾಸಭಾವದ ಈ ದುರ್ಬಲರಿಗೆ ಈ ಮಾತೇಕೆ ? ಎಂದ
ಪದಾರ್ಥ (ಕ.ಗ.ಪ)
ಮೂಲ ...{Loading}...
ಭಾಷೆಯೇಕಿವನೊಡನೆ ದ್ರೌಪದಿ
ದಾಸಿಯಲ್ಲೆಂಬವನ ದಿವಸವ
ದೇಸು ಬಲ ಹೋ ಪೂತು ಮಝ ತಾನಿಂದ್ರಸುತನೆಂಬ
ಐಸರಲಿ ದೇವೇಂದ್ರ ತೃಣ ಗಡ
ವೈಸಲೇ ನೀ ಮುನಿದಡೀ ನುಡಿ
ದಾಸಭಾವದ ಬಣಗುಗಳಿಗೇಕೆಂದನಾ ಕರ್ಣ ॥19॥
೦೨೦ ನೂಕಿಸಾ ತೊತ್ತಿರ ...{Loading}...
ನೂಕಿಸಾ ತೊತ್ತಿರ ಮನೆಗೆ ತಡ
ವೇಕೆ ತರುಣಿಯನಿನ್ನು ನೀನು ವಿ
ವೇಕದಲಿ ನನ್ನಂತೆ ತೆಗೆ ಸಾಕಿವರ ಮಾತೇನು
ಈ ಕುಠಾರರ ಕಳುಹಿ ಕಳೆ ತಾ
ವೇಕೆ ನೃಪಸಭೆಯಲಿ ವರಾಸನ
ವೇಕೆನುತ ಕುರುಪತಿಗೆ ನುಡಿದನು ಕರ್ಣ ಖಾತಿಯಲಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ದುರ್ಯೋಧನ ಕಡೆ ತಿರುಗಿ “ಆ ತರುಣಿಯನ್ನು ನೂಕಿಸಯ್ಯಾ ದಾಸಿಯರ ಮನೆಗೆ, ಏಕೆ ತಡ, ಇನ್ನು ನೀನು ವಿವೇಕದಿಂದ ನನ್ನಂತೆ ನಡೆದುಕೊ, ಸಾಕು. ಇವರ ಮಾತೇನು ? ಈ ಕುಠಾರರನ್ನು ಕಳುಹಿಸಿ ಬಿಡು. ಅವರೇಕೆ ಈ ರಾಜರ ಸಭೆಯಲ್ಲಿ? ಅವರಿಗೆ ಈ ಶ್ರೇಷ್ಠವಾದ ಆಸನಗಳೇಕೆ ?” ಎಂದು ಕುಪಿತನಾಗಿ ದುರ್ಯೋಧನನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ನೂಕಿಸಾ ತೊತ್ತಿರ ಮನೆಗೆ ತಡ
ವೇಕೆ ತರುಣಿಯನಿನ್ನು ನೀನು ವಿ
ವೇಕದಲಿ ನನ್ನಂತೆ ತೆಗೆ ಸಾಕಿವರ ಮಾತೇನು
ಈ ಕುಠಾರರ ಕಳುಹಿ ಕಳೆ ತಾ
ವೇಕೆ ನೃಪಸಭೆಯಲಿ ವರಾಸನ
ವೇಕೆನುತ ಕುರುಪತಿಗೆ ನುಡಿದನು ಕರ್ಣ ಖಾತಿಯಲಿ ॥20॥
೦೨೧ ಅಹುದಲೇ ಬಳಿಕೇನು ...{Loading}...
ಅಹುದಲೇ ಬಳಿಕೇನು ನೀನತಿ
ಬಹಳ ಮತಿಯೈ ಕರ್ಣ ನೀನೀ
ಕುಹಕ ಕೋಟಿಯನೆತ್ತ ಬಲ್ಲೆ ವೃಥಾಭಿಮಾನಿಗಳ
ರಹಣಿ ಸಾಕಂತಿರಲಿ ತೊತ್ತಿರ
ಸಹಚರರ ಸೂಳಾಯಿತರ ಕರೆ
ಮಹಿಳೆಯನು ನೂಕೆಂದು ದುಶ್ಯಾಸನಗೆ ನೇಮಿಸಿದ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನಿಗೆ ಕರ್ಣನ ಮಾತು ಹಿಡಿಸಿತು. “ಹೌದಲ್ಲವೇ ! ಇನ್ನೇನು ನೀನು ಅತಿ ಬುದ್ಧಿವಂತನಯ್ಯಾ ಕರ್ಣ ! ನೀನು
ಈ ಕುಹಕ ಕೋಟಿಗಳನ್ನೆಲ್ಲ ಎಲ್ಲಿ ಬಲ್ಲೆ ? ವೃಥಾಭಿಮಾನಿಗಳಾಗಿರುವ ಇವರ ಗೊಡವೆ ಸಾಕು. ಸಾಕಂತಿರಲಿ”-ಎಂದು ದುಶ್ಶಾಸನನಿಗೆ
“ತೊತ್ತಿರ (ದಾಸಿಯರ) ಸಹಚರರಾದ ಸೂಳಾಯ್ತರನ್ನು ಕರೆದು ಈ ಮಹಿಳೆಯನ್ನು ನೂಕು” ಎಂದು-ಆಜ್ಞೆ ಮಾಡಿದ.
ಪದಾರ್ಥ (ಕ.ಗ.ಪ)
ರಹಣಿ-ಸಂಬಂಧ, ಸೂಳಾಯಿತರ-ಪರಿಚಾರಿಕೆಯರ, ದಾಸಿಯರ
ಮೂಲ ...{Loading}...
ಅಹುದಲೇ ಬಳಿಕೇನು ನೀನತಿ
ಬಹಳ ಮತಿಯೈ ಕರ್ಣ ನೀನೀ
ಕುಹಕ ಕೋಟಿಯನೆತ್ತ ಬಲ್ಲೆ ವೃಥಾಭಿಮಾನಿಗಳ
ರಹಣಿ ಸಾಕಂತಿರಲಿ ತೊತ್ತಿರ
ಸಹಚರರ ಸೂಳಾಯಿತರ ಕರೆ
ಮಹಿಳೆಯನು ನೂಕೆಂದು ದುಶ್ಯಾಸನಗೆ ನೇಮಿಸಿದ ॥21॥
೦೨೨ ಸುಳಿವ ಹುಲ್ಲೆಯ ...{Loading}...
ಸುಳಿವ ಹುಲ್ಲೆಯ ಸೋಹಿನಲಿ ಕು
ಕ್ಕುಳಿಸಿದರೆ ಕುಕ್ಕುರನ ಕೈಯಲಿ
ತಳುವಹುದೆ ಜನಮೇಜಯ ಕ್ಷಿತಿಪಾಲ ನಿನ್ನವರ
ಬಳಲಿಕೆಯನೇನೆಂಬೆನೈ ಹಿಡಿ
ದೆಳೆಯೆ ಹಲುಬಿದಳಕಟ ರಾಯನ
ಲಲನೆಗೀ ವಿಧಿಯೇ ಮಹಾದೇವೆಂದುದಖಿಳಜನ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಣ್ಣಿಗೆ ಬಿದ್ದ ಹುಲ್ಲೆಯ ಮರಿಯನ್ನು ಅಟ್ಟಿಸಿಕೊಂಡು ಹೋದಾಗ ಓಡುತ್ತಿದ್ದ ಹುಲ್ಲೆ ಕುಸಿದು ಬಿದ್ದರೆ ಹಿಡಿಯುವುದು
ನಾಯಿಗೆ ತಡವಾಗುತ್ತದೆಯೇ ? ದುಶ್ಶಾಸನ ಹಿಡಿದೆಳೆದ. ದ್ರೌಪದಿಯನ್ನು ‘ಅಯ್ಯೋ ಧರ್ಮರಾಜನ ಪತ್ನಿಗೆ ಇಂತಹ ಸ್ಥಿತಿ ಬಂದಿತೇ, ಮಹಾದೇವ !”ಎಂದು ಅಲ್ಲಿದ್ದ ಸಭಾಸದರು ಮರುಗಿದರು.
ಪದಾರ್ಥ (ಕ.ಗ.ಪ)
ಸೋಹಿನಲಿ-ಬೆನ್ನಟ್ಟಿ ಹೋದಾಗ
ಮೂಲ ...{Loading}...
ಸುಳಿವ ಹುಲ್ಲೆಯ ಸೋಹಿನಲಿ ಕು
ಕ್ಕುಳಿಸಿದರೆ ಕುಕ್ಕುರನ ಕೈಯಲಿ
ತಳುವಹುದೆ ಜನಮೇಜಯ ಕ್ಷಿತಿಪಾಲ ನಿನ್ನವರ
ಬಳಲಿಕೆಯನೇನೆಂಬೆನೈ ಹಿಡಿ
ದೆಳೆಯೆ ಹಲುಬಿದಳಕಟ ರಾಯನ
ಲಲನೆಗೀ ವಿಧಿಯೇ ಮಹಾದೇವೆಂದುದಖಿಳಜನ ॥22॥
೦೨೩ ಮಾಣಿಸೈ ಗಾಙ್ಗೇಯ ...{Loading}...
ಮಾಣಿಸೈ ಗಾಂಗೇಯ ಗುರು ನಿ
ಮ್ಮಾಣೆಯಡಿ ಕೃಪ ಕೃಪೆಯ ಮಾಡೈ
ರಾಣಿವಾಸಂಗಳಿರ ನಿಲಿಸಿರೆ ನಿಮ್ಮ ಮೈದುನನ
ಪ್ರಾಣವಿದ ಕೊಳ ಹೇಳಿರೌ ಸಾ
ಕೂಣೆಯವ ಹೊರಲಾರೆನೆನುತಾ
ರಾಣಿ ಹಲುಬಿದಳೊಡೆಮುರುಚಿ ಹೆಣಗಿದಳು ಖಳನೊಡನೆ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿ ಅವನ ಕೈಯಿಂದ ತನ್ನನ್ನು ರಕ್ಷಿಸುವಂತೆ ಎಲ್ಲರನ್ನೂ ಗೋಗರೆಯ ತೊಡಗಿದಳು. “ಭೀಷ್ಮ, ತಪ್ಪಿಸಯ್ಯ, ಗುರು ದ್ರೋಣ, ನಿಮ್ಮ ಪಾದದಾಣೆ, ಕೃಪ, ಕೃಪೆ ಮಾಡಯ್ಯ, ರಾಣಿವಾಸದವರೆ, ನಿಮ್ಮ ಮೈದುನನನ್ನು ತಡೆಯಿರಿ. ನನ್ನ ಪ್ರಾಣವನ್ನೇ ತೆಗೆಯಲು ಹೇಳಿರಿ. ಸಾಕು ನಾನಿನ್ನು ಈ ದೋಷವನ್ನು ಹೊರಲಾರೆ” ಎಂದು ಹಲುಬುತ್ತಾ ಅವನ ಕೈಯಿಂದ ತನ್ನನ್ನು ಬಿಡಿಸಿಕೊಳ್ಳಲು ಹೆಣಗಾಡಿದಳು.
ಪದಾರ್ಥ (ಕ.ಗ.ಪ)
ಮಣಿಸು-ತಪ್ಪಿಸು, ಊಣೆಯ-ದೋಷ, ಅಪವಾದ
ಮೂಲ ...{Loading}...
ಮಾಣಿಸೈ ಗಾಂಗೇಯ ಗುರು ನಿ
ಮ್ಮಾಣೆಯಡಿ ಕೃಪ ಕೃಪೆಯ ಮಾಡೈ
ರಾಣಿವಾಸಂಗಳಿರ ನಿಲಿಸಿರೆ ನಿಮ್ಮ ಮೈದುನನ
ಪ್ರಾಣವಿದ ಕೊಳ ಹೇಳಿರೌ ಸಾ
ಕೂಣೆಯವ ಹೊರಲಾರೆನೆನುತಾ
ರಾಣಿ ಹಲುಬಿದಳೊಡೆಮುರುಚಿ ಹೆಣಗಿದಳು ಖಳನೊಡನೆ ॥23॥
೦೨೪ ಮಾವ ನಿಮ್ಮಯ ...{Loading}...
ಮಾವ ನಿಮ್ಮಯ ನೇತ್ರವಂತ
ರ್ಭಾವದಲಿ ಬೆರೆಸಿದೊಡೆ ವಿಜ್ಞಾ
ನಾವಲಂಬನ ದಿಟ್ಟಿ ಬೆಂದುದೆ ನಿಮ್ಮ ಹೃದಯದಲಿ
ದೇವಿಯರಿಗಿದು ಸೊಗಸಲಾ ಸ
ಖ್ಯಾವಳಿಗೆ ಸೇರುವುದಲಾ ನಿ
ರ್ಜೀವರಾದಿರೆ ನೀವೆನುತ ಹಲುಬಿದಳು ಲಲಿತಾಂಗಿ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಾವ, ನಿಮ್ಮ ಕಣ್ಣು ಹೊರಗೆ ಕಾಣಲಾರದಾದರೂ ಅಂತರ್ಭಾವದಲ್ಲಿ ಬೆರೆಸಿದರೆ ವಿಜ್ಞಾನಾವಲಂಬನದ ದೃಷ್ಟಿ ನಿಮ್ಮ ಅಂತರಂಗದಲ್ಲಿ ಬೆಂದು ಹೋಯಿತೆ ? ದೇವಿಯರಿಗೆಲ್ಲ ನನ್ನ ಸ್ಥಿತಿ ಪ್ರಿಯವೆನಿಸಿತೆ ? ಗೆಳತಿಯರಿಗೆಲ್ಲ ಮೆಚ್ಚಿಕೆಯಾಯಿತೆ ? ಎಲ್ಲರೂ
ಸುಮ್ಮನಿರುವಿರಲ್ಲಾ, ನಿರ್ಜೀವರಾಗಿಬಿಟ್ಟಿರಾ ?” ಎಂದು ದ್ರೌಪದಿ ಹಲುಬಿದಳು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಮಾವ ನಿಮ್ಮಯ ನೇತ್ರವಂತ
ರ್ಭಾವದಲಿ ಬೆರೆಸಿದೊಡೆ ವಿಜ್ಞಾ
ನಾವಲಂಬನ ದಿಟ್ಟಿ ಬೆಂದುದೆ ನಿಮ್ಮ ಹೃದಯದಲಿ
ದೇವಿಯರಿಗಿದು ಸೊಗಸಲಾ ಸ
ಖ್ಯಾವಳಿಗೆ ಸೇರುವುದಲಾ ನಿ
ರ್ಜೀವರಾದಿರೆ ನೀವೆನುತ ಹಲುಬಿದಳು ಲಲಿತಾಂಗಿ ॥24॥
೦೨೫ ಕ್ಷಿತಿಯೆ ಬಿಡಿಸಾ ...{Loading}...
ಕ್ಷಿತಿಯೆ ಬಿಡಿಸಾ ಸೆರಗನೆಲೆ ಪಾ
ರ್ವತಿಯೆ ತನ್ನದು ಧರ್ಮವಾದೊಡೆ
ಗತಿ ತನಗೆ ನೀವಾಗಿರೌ ಕಮಲಾದಿಶಕ್ತಿಗಳೆ
ಸತಿಯಹಲ್ಯಾದಿತಿ ವರಾರುಂ
ಧತಿ ಮಹಾ ಮಾಯಾದಿ ದೇವ
ಪ್ರತತಿ ಬಿಡಿಸಿರೆ ಸೆರಗನೆಂದೊರಲಿದಳು ಪಾಂಚಾಲೆ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಓ ಭೂಮಿತಾಯಿ ನನ್ನ ಸೆರಗನ್ನು ಬಿಡಿಸು - ಎಲೆ ಪಾರ್ವತಿ, ನನ್ನದು ಧರ್ಮವಾಗಿದ್ದಲ್ಲಿ ನೀವೇ ನನಗೆ ಗತಿಯಾಗಿರಿ ಕಮಲಾದಿ ಶಕ್ತಿಗಳೆ ಸತಿ, ಅಹಲ್ಯೆ, ಅದಿತಿ, ವರ ಅರುಂಧತಿ, ಮಹಾಮಾಯೆ ಮೊದಲಾದ ದೇವತಾ ಸಮೂಹವೇ ನನ್ನ ಸೆರಗನ್ನು ಬಿಡಿಸಿರಿ.
ಪದಾರ್ಥ (ಕ.ಗ.ಪ)
ಕ್ಷಿತಿ-ಭೂಮಿ
ಮೂಲ ...{Loading}...
ಕ್ಷಿತಿಯೆ ಬಿಡಿಸಾ ಸೆರಗನೆಲೆ ಪಾ
ರ್ವತಿಯೆ ತನ್ನದು ಧರ್ಮವಾದೊಡೆ
ಗತಿ ತನಗೆ ನೀವಾಗಿರೌ ಕಮಲಾದಿಶಕ್ತಿಗಳೆ
ಸತಿಯಹಲ್ಯಾದಿತಿ ವರಾರುಂ
ಧತಿ ಮಹಾ ಮಾಯಾದಿ ದೇವ
ಪ್ರತತಿ ಬಿಡಿಸಿರೆ ಸೆರಗನೆಂದೊರಲಿದಳು ಪಾಂಚಾಲೆ ॥25॥
೦೨೬ ಅನ್ಧನೊಬ್ಬನೆ ಮಾವ ...{Loading}...
ಅಂಧನೊಬ್ಬನೆ ಮಾವ ನೀವೇ
ನಂಧರಾದಿರೆ ಪಾಂಡು ಕರುಣಾ
ಸಿಂಧು ನೀ ಸೈರಿಸುವುದೇ ತನ್ನೀ ವಿಪತ್ತಿನಲಿ
ಅಂಧಕಾಸುರಮಥನ ನೀನೇ
ಬಂಧಿಸಿದೆಲಾ ಪೂರ್ವ ವರ ಸಂ
ಬಂಧವನು ನೀ ಸೆರಗ ಬಿಡಿಸೆಂದೊರಲಿದಳು ತರಳೆ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನನ್ನ ಒಬ್ಬ ಮಾವ ಅಂಧನಾದ ಸರಿ, ಪಾಂಡು ನೀವೂ ಅಂಧರಾದಿರಾ ! ಈ ವಿಪತ್ತಿನಲ್ಲಿರುವ ನನ್ನನ್ನು ಸಹಿಸಿಕೊಳ್ಳುವಿರಾ ? ಕರುಣಾಸಿಂಧು ! ಅಂಧಕಾಸುರ ಮಥನನಾದ ಹರನೆ, ನನ್ನ ಸಂಬಂಧವನ್ನು ಕೂಡಿಸಲು ನೀನೇ ಕಾರಣನಾದೆಯಲ್ಲವೆ, ಈ ಸೆರಗನ್ನು ಇವನ ಕೈಯಿಂದ ಬಿಡಿಸು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಅಂಧನೊಬ್ಬನೆ ಮಾವ ನೀವೇ
ನಂಧರಾದಿರೆ ಪಾಂಡು ಕರುಣಾ
ಸಿಂಧು ನೀ ಸೈರಿಸುವುದೇ ತನ್ನೀ ವಿಪತ್ತಿನಲಿ
ಅಂಧಕಾಸುರಮಥನ ನೀನೇ
ಬಂಧಿಸಿದೆಲಾ ಪೂರ್ವ ವರ ಸಂ
ಬಂಧವನು ನೀ ಸೆರಗ ಬಿಡಿಸೆಂದೊರಲಿದಳು ತರಳೆ ॥26॥
೦೨೭ ಸೊಸೆಯಲಾ ದೇವೇನ್ದ್ರಯೆನ್ನಯ ...{Loading}...
ಸೊಸೆಯಲಾ ದೇವೇಂದ್ರಯೆನ್ನಯ
ಘಸಣಿ ಯಾರದು ಹಿರಿಯ ಮಾವನ
ವಶವಲಾ ತ್ರೈಜಗದ ಜೀವರ ಜೀವ ವಿಭ್ರಮಣ
ಉಸುರು ನಿನ್ನಾಧೀನವೀ ದು
ವ್ರ್ಯಸನಿಗಳ ಕೊಂಡಾಡುವರೆ ಕರು
ಣಿಸು ಸಮೀರಣಯೆಂದು ಹಲುಬಿದಳಾಶ್ವಿನೇಯರಿಗೆ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೇವೇಂದ್ರ ನಿನಗೆ ನಾನು ಸೊಸೆಯಲ್ಲವೆ? ನನ್ನ ಈ ದುಃಖ ಯಾರದು ? ಮೂರು ಲೋಕದ ಜೀವರ ಜೀವ ವಿಭ್ರಮಣ ಹಿರಿಯ ಮಾವನಾದ ಯಮನ ವಶವೇ ಅಲ್ಲವೆ ? ಎಲ್ಲರ ಉಸಿರು ನಿನ್ನ ಅಧೀನವಲ್ಲವೆ ಸಮೀರಣ, ಈ ದುವ್ರ್ಯಸನಿಗಳನ್ನು ಕೊಂಡಾಡುವರೆ, ನನಗೆ ಕರುಣೆ ತೋರಿ, ಅಶ್ವಿನೀದೇವತೆಗಳೆ, ಎಂದು ದ್ರೌಪದಿ ಹಲುಬಿದಳು
ಪದಾರ್ಥ (ಕ.ಗ.ಪ)
ಮೂಲ ...{Loading}...
ಸೊಸೆಯಲಾ ದೇವೇಂದ್ರಯೆನ್ನಯ
ಘಸಣಿ ಯಾರದು ಹಿರಿಯ ಮಾವನ
ವಶವಲಾ ತ್ರೈಜಗದ ಜೀವರ ಜೀವ ವಿಭ್ರಮಣ
ಉಸುರು ನಿನ್ನಾಧೀನವೀ ದು
ವ್ರ್ಯಸನಿಗಳ ಕೊಂಡಾಡುವರೆ ಕರು
ಣಿಸು ಸಮೀರಣಯೆಂದು ಹಲುಬಿದಳಾಶ್ವಿನೇಯರಿಗೆ ॥27॥
೦೨೮ ಮಾವದಿರು ಮೊದಲಾದ ...{Loading}...
ಮಾವದಿರು ಮೊದಲಾದ ದಿಕ್ಪಾ
ಲಾವಳಿಗೆ ನಮಿಸಿದೆನು ನೈದಿಲ
ತಾವರೆಯ ಮಿತ್ರರಿಗೆ ಮಂಡೆಯೊಳಿಟ್ಟೆನಂಜುಳಿಯ
ಕಾವುದೆನ್ನನು ಹೆಂಗುಸಲ್ಲಾ
ಹಾವು ಹಲಬರ ನಡುವೆ ಸಾಯದು
ದೇವರಿಗೆ ದೂರೈದಲೆಂದೊರಲಿದಳು ಲಲಿತಾಂಗಿ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮಾವನಾದ ಇಂದ್ರನೇ ಮೊದಲಾದ ದಿಕ್ಪಾಲಕರಿಗೆ ನಮಿಸಿದೆ, ಸೂರ್ಯಚಂದ್ರರಿಗೂ ಮಂಡೆಯಲ್ಲಿ ಕೈ ಜೋಡಿಸಿ ವಂದಿಸಿದೆ, ಕಾಪಾಡಿ ನನ್ನನ್ನು, ನಾನು ಹೆಂಗಸಲ್ಲವೆ ? ಹಾವು ಹಲಬರ ನಡುವೆ ಸಾಯದು. ಯಾವ ದೇವರಿಗೂ ದೂರು ಮುಟ್ಟಲಿಲ್ಲ” ಹೀಗೆ ದ್ರೌಪದಿ ಬಗೆ ಬಗೆಯಾಗಿ ಹಂಬಲಿಸಿದಳು
ಪದಾರ್ಥ (ಕ.ಗ.ಪ)
ಮೂಲ ...{Loading}...
ಮಾವದಿರು ಮೊದಲಾದ ದಿಕ್ಪಾ
ಲಾವಳಿಗೆ ನಮಿಸಿದೆನು ನೈದಿಲ
ತಾವರೆಯ ಮಿತ್ರರಿಗೆ ಮಂಡೆಯೊಳಿಟ್ಟೆನಂಜುಳಿಯ
ಕಾವುದೆನ್ನನು ಹೆಂಗುಸಲ್ಲಾ
ಹಾವು ಹಲಬರ ನಡುವೆ ಸಾಯದು
ದೇವರಿಗೆ ದೂರೈದಲೆಂದೊರಲಿದಳು ಲಲಿತಾಂಗಿ ॥28॥
೦೨೯ ಬಾಯ ಬಿಡಲೇಕಕಟ ...{Loading}...
ಬಾಯ ಬಿಡಲೇಕಕಟ ಬಳಲಿದೆ
ತಾಯೆ ಕೈದೋರಿಸರು ನಿನ್ನಯ
ರಾಯರೈವರು ಕೆಲಬಲದ ಜನರೇನು ಮಾಡುವರು
ನ್ಯಾಯ ನಿನ್ನದು ದೈವದೊಲುಮೆಯ
ದಾಯ ತಪ್ಪಿತು ಬರಿದೆ ಧೈರ್ಯದ
ಬೀಯ ಮಾಡದಿರೆಂದು ನುಡಿದನು ವಿದುರನಂಗನೆಗೆ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿದುರ ದ್ರೌಪದಿಗೆ ಸಮಯೋಚಿತವಾದ ಬುದ್ಧಿವಾದ ಹೇಳಿದ. “ಯಾಕೆ ಹೀಗೆ ಹಂಬಲಿಸುವೆ ತಾಯಿ, ಬಳಲಿದ್ದೀಯೆ. ನಿನ್ನ ಐವರು ರಾಯರೂ ಕೈದೋರಿಸಲು ಆಗದವರಾಗಿದ್ದಾರೆ. ಹಾಗಿರುವಾಗ ಅಕ್ಕಪಕ್ಕದ ಜನರೇನು ಮಾಡಿಯಾರು ? ನ್ಯಾಯ ನಿನ್ನದು. ಆದರೆ ದೈವದ ಒಲುಮೆಯ ದಾಯ ತಪ್ಪಿತು. ವೃಥಾ ಧೈರ್ಯವನ್ನು ಕಳೆದು ಕೊಳ್ಳಬೇಡ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಬಾಯ ಬಿಡಲೇಕಕಟ ಬಳಲಿದೆ
ತಾಯೆ ಕೈದೋರಿಸರು ನಿನ್ನಯ
ರಾಯರೈವರು ಕೆಲಬಲದ ಜನರೇನು ಮಾಡುವರು
ನ್ಯಾಯ ನಿನ್ನದು ದೈವದೊಲುಮೆಯ
ದಾಯ ತಪ್ಪಿತು ಬರಿದೆ ಧೈರ್ಯದ
ಬೀಯ ಮಾಡದಿರೆಂದು ನುಡಿದನು ವಿದುರನಂಗನೆಗೆ ॥29॥
೦೩೦ ಎಲೆಗೆ ನಿನ್ನವರೇನ ...{Loading}...
ಎಲೆಗೆ ನಿನ್ನವರೇನ ಮಾಡುವ
ರೊಲೆಯಳಡಗಿದ ಕೆಂಡವಿವರ
ಗ್ಗಳಿಕೆ ನಂದಿದುದೆನುತ ಮುಂಜೆರಗೆತ್ತಿ ಮಾನಿನಿಗೆ
ಖಳನು ತೊಡೆಗಳ ತೋರಿಸಿದೊಡತಿ
ಮುಳಿದು ಕೊಟ್ಟಳು ಶಾಪವನು ನಿ
ನ್ನಳಿವು ತೊಡೆಯಲಿ ಮುಗಿವುದೆಂದಳು ಮುಗುದೆ ಖಾತಿಯಲಿ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ದುರ್ಯೋಧನ ಅವಳನ್ನು ಅಪಹಾಸ್ಯಮಾಡುತ್ತಾ “ಎಲಗೇ ನಿನ್ನವರು ಏನು ಮಾಡುತ್ತಾರೆ ? ಅವರ ಸಾಮಥ್ರ್ಯವೆಲ್ಲ
ಒಲೆಯಲ್ಲಿ ಅಡಗಿದ ಬೆಂಕಿ, ಅದೂ ನಂದಿ ಹೋಯಿತು ? ಹೀಗೆನ್ನುತ್ತಾ ತನ್ನ ಮುಂಜೆರಗನ್ನೆತ್ತಿ ಅವಳಿಗೆ ತನ್ನ ತೊಡೆಗಳನ್ನು ತೋರಿಸಿದ. ಕ್ರುದ್ಧಳಾದ ದ್ರೌಪದಿ ಅಲ್ಲೇ ನಿನ್ನ ತೊಡೆಯಲ್ಲೇ ನಿನಗೆ ಸಾವುಂಟಾಗಲಿ ಎಂದು ಆ ಕ್ಷಣವೇ ಶಾಪ ಕೊಟ್ಟಳು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಎಲೆಗೆ ನಿನ್ನವರೇನ ಮಾಡುವ
ರೊಲೆಯಳಡಗಿದ ಕೆಂಡವಿವರ
ಗ್ಗಳಿಕೆ ನಂದಿದುದೆನುತ ಮುಂಜೆರಗೆತ್ತಿ ಮಾನಿನಿಗೆ
ಖಳನು ತೊಡೆಗಳ ತೋರಿಸಿದೊಡತಿ
ಮುಳಿದು ಕೊಟ್ಟಳು ಶಾಪವನು ನಿ
ನ್ನಳಿವು ತೊಡೆಯಲಿ ಮುಗಿವುದೆಂದಳು ಮುಗುದೆ ಖಾತಿಯಲಿ ॥30॥
೦೩೧ ಕಡಲ ತೆರೆಗಳ ...{Loading}...
ಕಡಲ ತೆರೆಗಳ ತುರುಬಿ ತುಡುಕುವ
ವಡಬನಂದದಿ ಮೇಘಪಟಲವ
ನೊಡೆದು ಸೂಸುವ ಸಿಡಿಲಿನಂದದಿ ಸಭೆಯೊಳಡಹಾಯ್ದು
ಕುಡಿ ಕುಠಾರನ ರಕುತವನು ತಡೆ
ಗಡಿ ಸುಯೋಧನನೂರುಗಳನಿ
ಮ್ಮಡಿಸಿ ಮುನಿಯಲಿ ಧರ್ಮಸುತನೆನುತೆದ್ದನಾ ಭೀಮ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದರಿಂದ ಪ್ರಚೋದಿತನಾದ ಭೀಮನನ್ನು ಈಗ ಹಿಡಿವವರಿಲ್ಲ ! ಮೇಲೆ ಬಿದ್ದು ಆಕ್ರಮಣ ಮಾಡಿ ಕಡಲ ತೆರೆಗಳನ್ನೆಲ್ಲ
ಹಿಡಿಯುವ ವಡಬಾಗ್ನಿಯಂತೆ, ಮೇಘ ಪಟಲವನ್ನು ಸೀಳಿಕೊಂಡು ಹೊರಹೊಮ್ಮುವ ಸಿಡಿಲಿನಂತೆ ಭೀಮ ಆ ಸಭೆಯಲ್ಲಿ ನುಗ್ಗಿ
ಬಂದು “ಕುಡಿ ಕುಠಾರನ ರಕ್ತವನ್ನು ! ತಡೆಗಡಿ ಸುಯೋಧನನ ತೊಡೆಗಳನ್ನು ! ಧರ್ಮಸುತ ಬೇಕಾದರೆ ಎರಡರಷ್ಟು ಕೋಪಗೊಳ್ಳಲಿ ! ಎನ್ನುತ್ತಾ ಮೇಲೆದ್ದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಕಡಲ ತೆರೆಗಳ ತುರುಬಿ ತುಡುಕುವ
ವಡಬನಂದದಿ ಮೇಘಪಟಲವ
ನೊಡೆದು ಸೂಸುವ ಸಿಡಿಲಿನಂದದಿ ಸಭೆಯೊಳಡಹಾಯ್ದು
ಕುಡಿ ಕುಠಾರನ ರಕುತವನು ತಡೆ
ಗಡಿ ಸುಯೋಧನನೂರುಗಳನಿ
ಮ್ಮಡಿಸಿ ಮುನಿಯಲಿ ಧರ್ಮಸುತನೆನುತೆದ್ದನಾ ಭೀಮ ॥31॥
೦೩೨ ಹೆದರು ಹೊಕ್ಕುದು ...{Loading}...
ಹೆದರು ಹೊಕ್ಕುದು ಸಭೆಗೆ ಕೌರವ
ನೆದೆ ಬಿರಿದುದಾಸ್ಥಾನ ಜಲನಿಧಿ
ಕದಡಿತುಕ್ಕಿದ ಬೆರಗಿನಲಿ ಬೆಳ್ಳಾದನವನೀಶ
ಹದನಹುದು ಹಾಯೆನುತಲಿದ್ದರು
ವಿದುರ ಭೀಷ್ಮ ದ್ರೋಣರಿತ್ತಲು
ಕೆದರುಗೇಶದ ಕಾಂತೆ ಹುದಿದಳು ಹರುಷ ಪುಳಕದಲಿ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಭೆಯಲ್ಲಿದ್ದವರೆಲ್ಲ ಹೆದರಿದರು. ಕೌರವನ ಎದೆ ಬಿರಿಯಿತು. ಸಮುದ್ರದಂತಿದ್ದ ಆಸ್ಥಾನ ಕದಡಿತು. ಉಕ್ಕಿದ ಬೆರಗಿನಿಂದ
ಧೃತರಾಷ್ಟ್ರ ಪೆಚ್ಚಾದ. ವಿದುರ, ಭೀಷ್ಮ ದ್ರೋಣರು ಹೀಗಾಯಿತಲ್ಲ, ಹಾ !’ ಎನ್ನುತ್ತಿದ್ದರು ಈ ಕಡೆ ಅತ್ತ ತಲೆ ಕೆದರಿದ್ದ ಆ ಕಾಂತೆ ತುಂಬಿದ ಹರ್ಷದಿಂದ ರೋಮಾಂಚನಗೊಂಡಳು.
ಪದಾರ್ಥ (ಕ.ಗ.ಪ)
ಬೆಳ್ಳಾಗು-ಪೆಚ್ಚಾಗು
ಮೂಲ ...{Loading}...
ಹೆದರು ಹೊಕ್ಕುದು ಸಭೆಗೆ ಕೌರವ
ನೆದೆ ಬಿರಿದುದಾಸ್ಥಾನ ಜಲನಿಧಿ
ಕದಡಿತುಕ್ಕಿದ ಬೆರಗಿನಲಿ ಬೆಳ್ಳಾದನವನೀಶ
ಹದನಹುದು ಹಾಯೆನುತಲಿದ್ದರು
ವಿದುರ ಭೀಷ್ಮ ದ್ರೋಣರಿತ್ತಲು
ಕೆದರುಗೇಶದ ಕಾಂತೆ ಹುದಿದಳು ಹರುಷ ಪುಳಕದಲಿ ॥32॥
೦೩೩ ಒಡೆಯನೈತರಲಿಕ್ಷುದೋಟದ ಬಡ ...{Loading}...
ಒಡೆಯನೈತರಲಿಕ್ಷುದೋಟದ
ಬಡ ನರಿಗಳೋಡುವವೊಲೀಕೆಯ
ಹಿಡಿದಡಳೆವ ಖಳ ಹಾಯ್ದನಾ ಕೌರವನ ಹೊರೆಗಾಗಿ
ನುಡಿ ತರುಣಿ ತನ್ನಾಣೆ ಭೀತಿಯ
ಬಿಡಿಸಿದೆನಲಾ ರಾಯನಾಜ್ಞೆಯ
ತಡಿಕೆವಲೆ ನುಗ್ಗಾಯ್ತು ಹೋಗಿನ್ನೆಂದನಾ ಭೀಮ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಬ್ಬಿನ ತೋಟದ ಯಜಮಾನ ಬಂದಕೂಡಲೇ ತೋಟದಲ್ಲಿ ಅಡಗಿಕೊಂಡಿದ್ದ ಬಡ ನರಿಗಳೆಲ್ಲ ಹೇಗೆ ಹೆದರಿ ಓಡುವುವೋ ಹಾಗೆ ಆಕೆಯನ್ನು ಹಿಡಿದೆಳೆಯುತ್ತಿದ್ದ ದುಷ್ಟ ದುಶ್ಶಾಸನ ಓಡಿ ಹೋಗಿ ದುರ್ಯೋಧನನ ಹಿಂದೆ ಅಡಗಿಕೊಂಡ. ಭೀಮ ದ್ರೌಪದಿಗೆ “ನುಡಿ ತರುಣಿ, ತನ್ನಾಣೆ, ನಿನ್ನ ಭಯವನ್ನು ಬಿಡಿಸಿದೆನಲ್ಲವೇ ? ರಾಜನಾಜ್ಞೆಯೆಂಬ ತಡಿಕೆ ಬಲೆ ಮುರಿದು ನುಗ್ಗಾಯ್ತು ಹೋಗಿನ್ನು !” ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಒಡೆಯನೈತರಲಿಕ್ಷುದೋಟದ
ಬಡ ನರಿಗಳೋಡುವವೊಲೀಕೆಯ
ಹಿಡಿದಡಳೆವ ಖಳ ಹಾಯ್ದನಾ ಕೌರವನ ಹೊರೆಗಾಗಿ
ನುಡಿ ತರುಣಿ ತನ್ನಾಣೆ ಭೀತಿಯ
ಬಿಡಿಸಿದೆನಲಾ ರಾಯನಾಜ್ಞೆಯ
ತಡಿಕೆವಲೆ ನುಗ್ಗಾಯ್ತು ಹೋಗಿನ್ನೆಂದನಾ ಭೀಮ ॥33॥
೦೩೪ ಉರಿವ ಕೋಪಾಗ್ನಿಯಲಿ ...{Loading}...
ಉರಿವ ಕೋಪಾಗ್ನಿಯಲಿ ಕರ್ಣನ
ಶಿರದ ಭಾಂಡದಲಿವನ ನೊರೆ ನೆ
ತ್ತರಿನಲಿವನಗ್ರಜನ ಕೊಬ್ಬಿದ ನೆಣನ ಕೊಯ್ಕೊಯ್ದು
ದುರುಳ ಶಕುನಿಯ ಕಾಳಿಜದೊಳೊಡೆ
ವೆರೆಸಿ ಕುದಿಸಿ ಮಹೋಗ್ರಭೂತದ
ನೆರವಿಗುಣಲಿಕ್ಕುವೆನು ಸತಿ ಕೇಳ್ ಎಂದನಾ ಭೀಮ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಉರಿಯುವ ಕೋಪಾಗ್ನಿಯಲ್ಲಿ, ಕರ್ಣನ ತಲೆಯ ಭಾಂಡದಲ್ಲಿ, ದುಶ್ಶಾಸನನ ನೊರೆ ರಕ್ತದಲ್ಲಿ, ಇವನ ಅಣ್ಣನ ಕೊಬ್ಬನ್ನು
ಕೊಯ್ಕೊಯ್ದು ಹಾಕಿ, ದುಷ್ಟ ಶಕುನಿಯ ಯಕೃತ್ತನ್ನು ಅದರೊಡನೆ ಬೆರಸಿ ಕುದಿಸಿ ಮಹೋಗ್ರಭೂತಗಳ ಗುಂಪಿಗೆ ಉಣ್ಣಲು
ಬಡಿಸುತ್ತೇನೆ !” ಸತಿ, ಕೇಳು
ಪದಾರ್ಥ (ಕ.ಗ.ಪ)
ಮೂಲ ...{Loading}...
ಉರಿವ ಕೋಪಾಗ್ನಿಯಲಿ ಕರ್ಣನ
ಶಿರದ ಭಾಂಡದಲಿವನ ನೊರೆ ನೆ
ತ್ತರಿನಲಿವನಗ್ರಜನ ಕೊಬ್ಬಿದ ನೆಣನ ಕೊಯ್ಕೊಯ್ದು
ದುರುಳ ಶಕುನಿಯ ಕಾಳಿಜದೊಳೊಡೆ
ವೆರೆಸಿ ಕುದಿಸಿ ಮಹೋಗ್ರಭೂತದ
ನೆರವಿಗುಣಲಿಕ್ಕುವೆನು ಸತಿ ಕೇಳೆಂದನಾ ಭೀಮ ॥34॥
೦೩೫ ಕೊಮ್ಬೆನೇ ಧರ್ಮಜನ ...{Loading}...
ಕೊಂಬೆನೇ ಧರ್ಮಜನ ಧರ್ಮದ
ಡೊಂಬನೀ ಮುದುಗುರುಡನಿಕ್ಕಿದ
ನಂಬುಗೆಯ ವಿಷವೈಸಲೇ ತಲೆಗೇರಿತಗ್ರಜನ
ಡೊಂಬಿಗರ ಡಾವರಿಗರಿವದಿರ
ತಿಂಬೆನೀಗಳೆ ತರುಣಿ ಕೇಳೆನು
ತಂಬುಜಾಕ್ಷಿಯ ಸಂತವಿಟ್ಟನು ಕುರುಳ ನೇರಿಸುತ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧರ್ಮಜನ ಬೂಟಾಟಿಕೆಯ ಧರ್ಮವನ್ನು ಲಕ್ಷಿಸುತ್ತೇನೆಯೇ ? ಈ ಮುದಿಗುರುಡ ಬಡಿಸಿದ ನಂಬಿಕೆಯ ವಿಷ ಅಣ್ಣನ ತಲೆಗೆ ಏರಿಬಿಟ್ಟಿತಲ್ಲವೇ ? ದುಷ್ಟರೂ ಮೋಸಗಾರರೂ ಆದ ಇವರನ್ನು ಈಗಲೇ ತಿಂದುಹಾಕಿ ಬಿಡುತ್ತೇನೆ. ತರುಣಿ ಕೇಳು” ಎಂದು ಅವಳನ್ನು ಸಮಾಧಾನಪಡಿಸಿದ.
ಪದಾರ್ಥ (ಕ.ಗ.ಪ)
ಡೊಂಬು-ಬೂಟಾಟಿಕೆ, ಡೊಂಬಿಗರ-ಮೋಸಗಾರರ
ಮೂಲ ...{Loading}...
ಕೊಂಬೆನೇ ಧರ್ಮಜನ ಧರ್ಮದ
ಡೊಂಬನೀ ಮುದುಗುರುಡನಿಕ್ಕಿದ
ನಂಬುಗೆಯ ವಿಷವೈಸಲೇ ತಲೆಗೇರಿತಗ್ರಜನ
ಡೊಂಬಿಗರ ಡಾವರಿಗರಿವದಿರ
ತಿಂಬೆನೀಗಳೆ ತರುಣಿ ಕೇಳೆನು
ತಂಬುಜಾಕ್ಷಿಯ ಸಂತವಿಟ್ಟನು ಕುರುಳ ನೇರಿಸುತ ॥35॥
೦೩೬ ಇಳಿದನರ್ಜುನನಾ ಸಭಾಮಂ ...{Loading}...
ಇಳಿದನರ್ಜುನನಾ ಸಭಾಮಂ
ಡಲದ ವೇದಿಯನಹಹ ಧರ್ಮಜ
ನುಳಿವನೇ ನುಡಿಯೆಡಹಿದರೆ ಸಿಗುರೇಳ್ಗು ಸದ್ಗುಣಕೆ
ಕಳವಳದ ಕಾಹುರದ ಕಾಲುವೆ
ಗೊಳಗು ಕೊಡದಿರು ಭೀಮ ರಿಪುಗಳ
ಹಿಡಿವಡಿದು ಹೊತ್ತಲ್ಲೆನಿತ ಹಿಡಿದನು ವೃಕೋದರನ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನ ಆ ಸಭಾಮಂಡಲದ ವೇದಿಕೆಯನ್ನು ಇಳಿದು ಬಂದ. ಅಣ್ಣನ ಚಾರಿತ್ರ್ಯಕ್ಕೆ ಎಲ್ಲಿ ಕಳಂಕ ಬಂದಿತೋ ಎಂಬ ಚಿಂತೆ ಅವನಿಗೆ. ಆದ್ದರಿಂದ ಭೀಮನಿಗೆ “ಧರ್ಮಜನ ಮಾತಿಗೆ ನಾವು ತಪ್ಪಿ ನಡೆದರೆ ಅವನ ಸದ್ಗುಣಕ್ಕೆ ಸಿಗುರು ಏಳುವುದಿಲ್ಲವೇ? ಕಳವಳದ ಪ್ರವಾಹಕ್ಕೆ ಅವಕಾಶ ಕೊಡಬೇಡ ಭೀಮ. ಶತ್ರುಗಳನ್ನು ಹಿಡಿಯಬೇಕಾದರೆ ಇದು ಸಮಯವಲ್ಲ.” ಎಂದು ಭೀಮನನ್ನು ತಡೆಯಲು ಹೋದ.
ಪದಾರ್ಥ (ಕ.ಗ.ಪ)
ಕಾಹುರ-ಕಾಡಿನ ಪ್ರವಾಹ
ಮೂಲ ...{Loading}...
ಇಳಿದನರ್ಜುನನಾ ಸಭಾಮಂ
ಡಲದ ವೇದಿಯನಹಹ ಧರ್ಮಜ
ನುಳಿವನೇ ನುಡಿಯೆಡಹಿದರೆ ಸಿಗುರೇಳ್ಗು ಸದ್ಗುಣಕೆ
ಕಳವಳದ ಕಾಹುರದ ಕಾಲುವೆ
ಗೊಳಗು ಕೊಡದಿರು ಭೀಮ ರಿಪುಗಳ
ಹಿಡಿವಡಿದು ಹೊತ್ತಲ್ಲೆನಿತ ಹಿಡಿದನು ವೃಕೋದರನ ॥36॥
೦೩೭ ಮಾಣಲದು ಕೌರವರ ...{Loading}...
ಮಾಣಲದು ಕೌರವರ ನೂರ್ವರ
ಗೋಣ ಬನ ಕಾಳಗದದೊಳೆನ್ನಯ
ಕೇಣಿ ತನ್ನಯ ಗದೆಗೆ ದುರಿಯೋಧನನ ತೊಡೆಗಳಿಗೆ
ವಾಣಿಯವು ದುಶ್ಶಾಸನನ ತನಿ
ಶೋಣಿತವ ತಾ ಕುಡಿಯದಿರೆ ನಿ
ನ್ನಾಣೆ ಸೈರಣೆಗಿದುವೆ ಫಲವೆಂದೊದರಿದನು ಭೀಮ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆದರೆ ಭೀಮ ಅದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. “ಹೋಗಲಿ ಅದು. ಯುದ್ಧದಲ್ಲಿ ನೂರ್ವರು ಕೌರವರ ಕುತ್ತಿಗೆಗಳ
ತೋಟವಿದೆಯಲ್ಲ ಇದು ನನಗೆ ಗುತ್ತಿಗೆ. ನನ್ನ ಗದೆಗೂ ದುರ್ಯೋಧನನ ತೊಡೆಗಳಿಗೂ ವಾಣಿಜ್ಯಸಂಬಂಧ. ದುಶ್ಶಾಸನನ ತನಿರಕ್ತವನ್ನು
ನಾನು ಕುಡಿಯದಿದ್ದರೆ ನಿನ್ನಾಣೆ, ಇದುವರೆಗೆ ನಾನು ಸೈರಣೆಯಿಂದ ಇರುವುದಕ್ಕೆ ಅದೇ ಫಲ” ಎಂದು ಕೂಗಾಡಿದ.
ಪದಾರ್ಥ (ಕ.ಗ.ಪ)
ಕೇಣಿ-ಗುತ್ತಿಗೆ, ವಾಣಿಯ-ವ್ಯಾಪಾರ, ಶೋಣಿತ-ರಕ್ತ
ಮೂಲ ...{Loading}...
ಮಾಣಲದು ಕೌರವರ ನೂರ್ವರ
ಗೋಣ ಬನ ಕಾಳಗದದೊಳೆನ್ನಯ
ಕೇಣಿ ತನ್ನಯ ಗದೆಗೆ ದುರಿಯೋಧನನ ತೊಡೆಗಳಿಗೆ
ವಾಣಿಯವು ದುಶ್ಶಾಸನನ ತನಿ
ಶೋಣಿತವ ತಾ ಕುಡಿಯದಿರೆ ನಿ
ನ್ನಾಣೆ ಸೈರಣೆಗಿದುವೆ ಫಲವೆಂದೊದರಿದನು ಭೀಮ ॥37॥
೦೩೮ ಧರಣಿ ಜಲಪಾವಕ ...{Loading}...
ಧರಣಿ ಜಲಪಾವಕ ಸಮೀರಾ
ದ್ಯರುಗಳರಿತಿರಿ ಶಕ್ರ ನೈಋತ
ವರುಣ ವಾಯು ಕುಬೇರ ಯಮರೆಂಬಖಿಳ ದಿಗಧಿಪರು
ಬರೆದುಕೊಂಡಿರಿ ಭಾಷೆಯನು ಸುರ
ನರ ಫಣಿವ್ರಜವೆಂಬ ಭೀಮನ
ಧರಧಧುರದ ಧಟ್ಟಣೆಗೆ ಧೃತಿಗೆಟ್ಟುದು ಕುರುಸ್ತೋಮ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಭೂಮಿ, ನೀರು, ಅಗ್ನಿ, ವಾಯು ಮೊದಲಾದವರೇ. ಅರಿತಿರಿ ಇಂದ್ರ ನೈರುತಿ ವರುಣ, ವಾಯು, ಕುಬೇರ, ಯಮ, ಎಂಬ
ಅಖಿಳ ದಿಕ್ಪತಿಗಳೇ ಸುರ ನರ ಉರಗಗಳೇ ಈ ನನ್ನ ಭಾಷೆಯನ್ನು ಬರೆದುಕೊಂಡಿರಿ. ಎಂದು ಭೀಮನು ಕೆರಳಿ ಥಟ್ಟಿಸಿದ. ಅವನ
ಧರಧುರದ ಧಟ್ಟಣೆಗೆ ಕೌರವ ಸಮೂಹವೆಲ್ಲ ಧೃತಿಗೆಟ್ಟಿತು.
ಪದಾರ್ಥ (ಕ.ಗ.ಪ)
ಧರಧುರದ-ಆವೇಶದಿಂದ ಕೂಡಿದ
ಮೂಲ ...{Loading}...
ಧರಣಿ ಜಲಪಾವಕ ಸಮೀರಾ
ದ್ಯರುಗಳರಿತಿರಿ ಶಕ್ರ ನೈಋತ
ವರುಣ ವಾಯು ಕುಬೇರ ಯಮರೆಂಬಖಿಳ ದಿಗಧಿಪರು
ಬರೆದುಕೊಂಡಿರಿ ಭಾಷೆಯನು ಸುರ
ನರ ಫಣಿವ್ರಜವೆಂಬ ಭೀಮನ
ಧರಧಧುರದ ಧಟ್ಟಣೆಗೆ ಧೃತಿಗೆಟ್ಟುದು ಕುರುಸ್ತೋಮ ॥38॥
೦೩೯ ಬರಸಿರೈ ಭಾಷೆಯನು ...{Loading}...
ಬರಸಿರೈ ಭಾಷೆಯನು ದೇವಾ
ಸುರರ ಸಾಕ್ಷಿಯಲಾಯ್ತು ಕರ್ಣನ
ಕೊರಳಿಗೆನ್ನಯ ಬಾಣಕುಂಗುರವುಡಿಕೆಯಿಂದಿನಲಿ
ಸುರ ನರೋರಗರರಿದೆರೆಂದ
ಬ್ಬರಿಸಿದನು ಕಲಿಪಾರ್ಥ ಶಕುನಿಯ
ಶಿರಕೆ ಕೊಟ್ಟೆನು ಸಂಚಕಾರವನೆಂದ ಸಹದೇವ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೇವಾಸುರರ ಸಾಕ್ಷಿಯಲ್ಲಿ ನಮ್ಮ ಶಪಥಗಳನ್ನೂ ಬರೆದಿಟ್ಟುಕೊಳ್ಳಿ ಎಂದು ಅರ್ಜುನ ಕರ್ಣನ ಕೊರಳಿಗೂ ನನ್ನ ಬಾಣಕ್ಕೂ
ಇಂದು ನಿಶ್ಚಿತಾರ್ಥವಾಯಿತು. ಸುರನರೋರಗರು ತಿಳಿದಿರಿ” ಎಂದಬ್ಬರಿಸಿದ. ಸಹದೇವ “ಶಕುನಿಯ ತಲೆಗೆ ನಾನು ಸಂಚಕಾರ ಕೊಟ್ಟಿದ್ದೇನೆ” ಎಂದ
ಪದಾರ್ಥ (ಕ.ಗ.ಪ)
ಉಂಗುರವುಡಿಕೆ-ಉಂಗುರವಿಟ್ಟ ನಿಶ್ಚಿತಾರ್ಥ
ಮೂಲ ...{Loading}...
ಬರಸಿರೈ ಭಾಷೆಯನು ದೇವಾ
ಸುರರ ಸಾಕ್ಷಿಯಲಾಯ್ತು ಕರ್ಣನ
ಕೊರಳಿಗೆನ್ನಯ ಬಾಣಕುಂಗುರವುಡಿಕೆಯಿಂದಿನಲಿ
ಸುರ ನರೋರಗರರಿದೆರೆಂದ
ಬ್ಬರಿಸಿದನು ಕಲಿಪಾರ್ಥ ಶಕುನಿಯ
ಶಿರಕೆ ಕೊಟ್ಟೆನು ಸಂಚಕಾರವನೆಂದ ಸಹದೇವ ॥39॥
೦೪೦ ಅರಸ ಕೇಳಾಶ್ಚರ್ಯವನು ...{Loading}...
ಅರಸ ಕೇಳಾಶ್ಚರ್ಯವನು ಗಜ
ಪುರದೊಳಗೆ ನೆಲ ಬಾಯ ಬಿಟ್ಟುದು
ಸುರಿದುದರುಣಾಂಬುವಿನ ಮಳೆ ತತ್ಪುರದ ಮಧ್ಯದಲಿ
ನರಿಗಳವನಿಪನಗ್ನಿ ಹೋತ್ರದೊ
ಳೊರಲಿದವು ಸಸ್ವೇದದಲಿ ಹೂಂ
ಕರಿಸುತಿರ್ದವು ದೇವತಾ ಪ್ರತಿಮೆಗಳು ನಗರಿಯಲಿ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ನಡೆದ ಉತ್ಪಾತಗಳನ್ನು ನೋಡಿ ಹಸ್ತಿನಾಪುರದಲ್ಲಿ ನೆಲ ಬಾಯಿಬಿಟ್ಟಿತು. ಆ ಪುರದ ನಡುವೆ ರಕ್ತದ ಮಳೆ ಸುರಿಯಿತು.
ರಾಜನ ಅಗ್ನಿಹೋತ್ರದಲ್ಲಿ ನರಿಗಳು ಊಳಿಟ್ಟವು. ದೇವತಾ ಪ್ರತಿಮೆಗಳು ಬೆವರಿಟ್ಟು ಹೂಂಕರಿಸುತ್ತಿದ್ದವು.
ಪದಾರ್ಥ (ಕ.ಗ.ಪ)
ಸ್ವೇದ-ಬೆವರು
ಮೂಲ ...{Loading}...
ಅರಸ ಕೇಳಾಶ್ಚರ್ಯವನು ಗಜ
ಪುರದೊಳಗೆ ನೆಲ ಬಾಯ ಬಿಟ್ಟುದು
ಸುರಿದುದರುಣಾಂಬುವಿನ ಮಳೆ ತತ್ಪುರದ ಮಧ್ಯದಲಿ
ನರಿಗಳವನಿಪನಗ್ನಿ ಹೋತ್ರದೊ
ಳೊರಲಿದವು ಸಸ್ವೇದದಲಿ ಹೂಂ
ಕರಿಸುತಿರ್ದವು ದೇವತಾ ಪ್ರತಿಮೆಗಳು ನಗರಿಯಲಿ ॥40॥
೦೪೧ ಉಗುಳಿದವು ಕುಳುಗಿಡಿಗಳನು ...{Loading}...
ಉಗುಳಿದವು ಕುಳುಗಿಡಿಗಳನು ಕೈ
ದುಗುಳು ವಾರುವ ಪಟ್ಟದಾನೆ
ಳೊಗುಮಿಗೆಯ ಕಂಬನಿಗಳಭ್ರದಿ ಧೂಮಕೇತುಗಳು
ನೆಗಳಿದವು ಬಿರುಗಾಳಿ ಗಿರಿಗಳ
ಮಗುಚಿ ಮುರಿದವು ದೇವತಾ ಭವ
ನಗಳ ಶಿಖರವನಂತವದ್ಭುತವಾಯ್ತು ನಿಮಿಷದಲಿ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಯುಧಗಳು ಕಿಡಿಗಳನ್ನು ಕಾರಿದುವು. ಪಟ್ಟದಾನೆ ಕುದುರೆಗಳು ಮಿತಿಮೀರಿ ಕಣ್ಣೀರು ಸುರಿಸಿದುವು. ಧೂಮಕೇತುಗಳು
ಕಾಣಿಸಿಕೊಂಡವು. ಬಿರುಗಾಳಿಯೆದ್ದು ಬೆಟ್ಟಗಳು ಮಗುಚಿಕೊಂಡವು. ದೇವಾಲಯದ ಶಿಖರಗಳು ಮುರಿದುಬಿದ್ದುವು. ನಿಮಿಷ ಮಾತ್ರದಲ್ಲಿ ಆ ಅದ್ಭುತಗಳು ಕಾಣಿಸಿದವು.
ಪದಾರ್ಥ (ಕ.ಗ.ಪ)
ವಾರುವ-ಕುದುರೆ
ಮೂಲ ...{Loading}...
ಉಗುಳಿದವು ಕುಳುಗಿಡಿಗಳನು ಕೈ
ದುಗುಳು ವಾರುವ ಪಟ್ಟದಾನೆ
ಳೊಗುಮಿಗೆಯ ಕಂಬನಿಗಳಭ್ರದಿ ಧೂಮಕೇತುಗಳು
ನೆಗಳಿದವು ಬಿರುಗಾಳಿ ಗಿರಿಗಳ
ಮಗುಚಿ ಮುರಿದವು ದೇವತಾ ಭವ
ನಗಳ ಶಿಖರವನಂತವದ್ಭುತವಾಯ್ತು ನಿಮಿಷದಲಿ ॥41॥
೦೪೨ ಬಾರಿಸಿತು ದೆಸೆದೆಸೆಗಳಲಿ ...{Loading}...
ಬಾರಿಸಿತು ದೆಸೆದೆಸೆಗಳಲಿ ಹಾ
ಹಾ ರವಾವಿರ್ಭಾವ ತೊಳಗಿರೆ
ತಾರಿಕೆಗಳಿನ ಬಿಂಬವನು ಝೋಂಪಿಸಿದನಾ ರಾಹು
ತೋರಣದಲುರಿ ತಳಿತು ರಾಜ
ದ್ವಾರ ಹೊಗೆದುದು ದೆಸೆಗಳಂಬರ
ಧಾರುಣಿಯೊಳುತ್ಪಾತ ಬಿಗಿದುದು ಮೊಗೆದುದದ್ಭುತವ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಿಕ್ಕುದಿಕ್ಕುಗಳಲ್ಲಿ ಹಾಹಾರವ ಕೇಳಿ ಬಂದಿತು. ಹಗಲಲ್ಲೇ ನಕ್ಷತ್ರಗಳು ಕಂಡವು ಸೂರ್ಯ ಬಿಂಬವನ್ನು ರಾಹು ಆಕ್ರಮಿಸಿದ. ತೋರಣದಲ್ಲಿ ಉರಿ ಕಂಡಿತು. ರಾಜದ್ವಾರ ಹೊಗೆಯಾಡತೊಡಗಿತು. ದಿಕ್ಕುಗಳಲ್ಲಿ ಆಕಾಶದಲ್ಲಿ ಭೂಮಿಯಲ್ಲಿ ಇಂತಹ ಉತ್ಪಾತಗಳು ಕಾಣಿಸಿಕೊಂಡವು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಬಾರಿಸಿತು ದೆಸೆದೆಸೆಗಳಲಿ ಹಾ
ಹಾ ರವಾವಿರ್ಭಾವ ತೊಳಗಿರೆ
ತಾರಿಕೆಗಳಿನ ಬಿಂಬವನು ಝೋಂಪಿಸಿದನಾ ರಾಹು
ತೋರಣದಲುರಿ ತಳಿತು ರಾಜ
ದ್ವಾರ ಹೊಗೆದುದು ದೆಸೆಗಳಂಬರ
ಧಾರುಣಿಯೊಳುತ್ಪಾತ ಬಿಗಿದುದು ಮೊಗೆದುದದ್ಭುತವ ॥42॥
೦೪೩ ನಡುಗಿತಿಳೆ ನಡು ...{Loading}...
ನಡುಗಿತಿಳೆ ನಡು ಹಗಲುಗತ್ತಲೆ
ಯಡಸಿತಾಕಾಶದಲಿ ಹೆಮ್ಮರ
ನುಡಿದು ಬಿದ್ದುವು ಸಲಿಲವುಕ್ಕಿತು ಕೊಡೆ ಕೆರೆತೊರೆಯ
ಉಡಿದವವದಿರ ಕೈಯ್ಯ ಕೈದುಗ
ಳೊಡನೊಡನೆ ಸಿಡಿಲೆರಗಿತಾ ಸಭೆ
ಸೆಡೆದುದಲ್ಲಿಯದಲ್ಲಿ ಹುದುಗಿತು ಭೀತಿಗರ ಹೊಡೆದು ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಮಿ ನಡುಗಿತು. ನಡುಹಗಲಲ್ಲೇ ಆಕಾಶದಲ್ಲಿ ಕತ್ತಲೆ ಆವರಿಸಿತು. ಹೆಮ್ಮರಗಳು ಮುರಿದುಬಿದ್ದವು. ಕೆರೆತೊರೆಗಳ ನೀರು
ಇದ್ದಕ್ಕಿದ್ದಂತೆ ಉಕ್ಕಿತು. ಕೌರವನ ಸೈನಿಕರ ಕೈಯಲ್ಲಿದ್ದ ಆಯುಧಗಳು ಹಾಗೆ ಹಾಗೇ ಮುರಿದುಬಿದ್ದುವು. ಸಿಡಿಲೆರಗಿತು. ಸಭೆಯಲ್ಲಿದ್ದವರಿಗೆಲ್ಲ ದಿಗಿಲುಂಟಾಗಿ ಅವರವರು ಅಲ್ಲಲ್ಲೇ ಸೆಡೆತುಕೊಂಡು ಅಡಗಿಕೊಂಡರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ನಡುಗಿತಿಳೆ ನಡು ಹಗಲುಗತ್ತಲೆ
ಯಡಸಿತಾಕಾಶದಲಿ ಹೆಮ್ಮರ
ನುಡಿದು ಬಿದ್ದುವು ಸಲಿಲವುಕ್ಕಿತು ಕೊಡೆ ಕೆರೆತೊರೆಯ
ಉಡಿದವವದಿರ ಕೈಯ್ಯ ಕೈದುಗ
ಳೊಡನೊಡನೆ ಸಿಡಿಲೆರಗಿತಾ ಸಭೆ
ಸೆಡೆದುದಲ್ಲಿಯದಲ್ಲಿ ಹುದುಗಿತು ಭೀತಿಗರ ಹೊಡೆದು ॥43॥
೦೪೪ ಅಹಹ ಭೂತಕ್ಷೋಭವಿದು ...{Loading}...
ಅಹಹ ಭೂತಕ್ಷೋಭವಿದು ನಿ
ರ್ದಹಿಸುವುದು ಕುರುಕುಲವನಕಟೀ
ಮಹಿಳೆಯೊರಲಿದಳಮರ ನಿಕರಕೆ ದೈವಕೃತವಿದಲೆ
ಕುಹಕಿ ಮಕ್ಕಳನಿಕ್ಕಿ ಮೌನದೊ
ಳಿಹರೆ ಬಾ ಧೃತರಾಷ್ಟ್ರ ಪಾಂಡವ
ಮಹಿಳೆಯನು ಸಂತೈಸು ನಡೆ ನಡೆಯೆಂದನಾ ಭೀಷ್ಮ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಉತ್ಪಾತಗಳನ್ನು ಕಂಡ ಭೀಷ್ಮ ಕುರುವಂಶಕ್ಕೆ ಕೇಡಾಗಲಿರುವುದನ್ನು ನಿರೀಕ್ಷಿಸಿ ಧೃತರಾಷ್ಟ್ರನ ಬಳಿ ಹೋಗಿ ಅಹಹ, ಈ ಭೌತಪ್ರಪಂಚದಲ್ಲಿ ಆಗುತ್ತಿರುವ ಕ್ಷೋಭೆ ಕೌರವ ಕುಲವನ್ನು ದಹಿಸಿಹಾಕಿಬಿಡುತ್ತದೆ. ಅಕಟಾ ಈ ಮಹಿಳೆ ದೇವತೆಗಳಿಗೆಲ್ಲ ಮೊರೆಯಿಟ್ಟಳು. ಅದಕ್ಕೇ ಇವೆಲ್ಲ ದೈವಕೃತವಾದುವು. ಈ ದುಷ್ಟ ಮಕ್ಕಳನ್ನು ಮುಂದೆ ಬಿಟ್ಟು ಮೌನವಾಗಿ ಕುಳಿತುಕೊಳ್ಳುವುದೆ? ಬಾ ಧೃತರಾಷ್ಟ್ರ. ಆ ಪಾಂಡವ ಮಹಿಳೆಯನ್ನು ಸಮಾಧಾನಪಡಿಸು ನಡಿ ನಡಿ” ಎಂದು ಕರೆತಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಅಹಹ ಭೂತಕ್ಷೋಭವಿದು ನಿ
ರ್ದಹಿಸುವುದು ಕುರುಕುಲವನಕಟೀ
ಮಹಿಳೆಯೊರಲಿದಳಮರ ನಿಕರಕೆ ದೈವಕೃತವಿದಲೆ
ಕುಹಕಿ ಮಕ್ಕಳನಿಕ್ಕಿ ಮೌನದೊ
ಳಿಹರೆ ಬಾ ಧೃತರಾಷ್ಟ್ರ ಪಾಂಡವ
ಮಹಿಳೆಯನು ಸಂತೈಸು ನಡೆ ನಡೆಯೆಂದನಾ ಭೀಷ್ಮ ॥44॥
೦೪೫ ಇದಕೆ ನಿಸ್ಸನ್ದೇಹವೇ ...{Loading}...
ಇದಕೆ ನಿಸ್ಸಂದೇಹವೇ ವರ
ಸುದತಿಯನು ನೀ ಬೇಡಿಕೊಳು ಯ
ಜ್ಞದಲಿ ಪಾವಕಗುದಿಸಿದಳು ಪಾಂಚಾಲೆ ಮಾನಿನಿಯೆ
ಇದು ಭವತ್ಸಂತಾನ ವಿಲಯಾ
ಸ್ಪದ ಕಣಾ ನಡೆ ಪಾಪಿಯೆಂದನಾ
ವಿದುರ ಗುರು ಕೃಪರೌಕಿದರು ಧೃತರಾಷ್ಟ್ರ ಭೂಪತಿಯ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ವಿಷಯದಲ್ಲಿ ಸಂದೇಹವೇ ಇಲ್ಲ. ಆ ಶ್ರೇಷ್ಠ ಮಹಿಳೆಯನ್ನು ಬೇಡಿಕೊ. ಅವಳು ಯಜ್ಞದಲ್ಲಿ ಅಗ್ನಿಯಿಂದ ಜನಿಸಿದವಳು. ಆ ಪಾಂಚಾಲೆ ಏನು ಕೇವಲ ಹೆಂಗಸೇ ? ಇದು ನಿನ್ನ ಮಕ್ಕಳ ನಾಶವನ್ನು ಸೂಚಿಸುತ್ತಿದೆಯಯ್ಯಾ, ಪಾಪಿ, ನಡೆ” ಎಂದು ವಿದುರ, ಗುರು, ಕೃಪರೂ ಅವನನ್ನು ಒತ್ತಾಯಿಸಿದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಇದಕೆ ನಿಸ್ಸಂದೇಹವೇ ವರ
ಸುದತಿಯನು ನೀ ಬೇಡಿಕೊಳು ಯ
ಜ್ಞದಲಿ ಪಾವಕಗುದಿಸಿದಳು ಪಾಂಚಾಲೆ ಮಾನಿನಿಯೆ
ಇದು ಭವತ್ಸಂತಾನ ವಿಲಯಾ
ಸ್ಪದ ಕಣಾ ನಡೆ ಪಾಪಿಯೆಂದನಾ
ವಿದುರ ಗುರು ಕೃಪರೌಕಿದರು ಧೃತರಾಷ್ಟ್ರ ಭೂಪತಿಯ ॥45॥
೦೪೬ ಖೇದ ಮಿಗೆ ...{Loading}...
ಖೇದ ಮಿಗೆ ನಡೆತಂದು ನೃಪತಿ ತ
ಳೋದರಿಯ ನುಡಿಸಿದನು ಮಗಳೆ ವಿ
ಷಾದವನು ಬಿಡು ಮಾತ ಮನ್ನಿಸು ಮಾವ ನಾ ನಿನಗೆ
ಈ ದುರಾತ್ಮರ ಮಾತು ಬೇಡ ವಿ
ಭೇದವೇ ದುಸ್ಸಳೆಗೆ ನಿನಗೆಂ
ದಾದರಿಸಿ ನುಡಿದನು ವಿಪತ್ತಿನಲಾ ಮಹಾಸತಿಯ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನಿಗೆ ದುಃಖ ಹೆಚ್ಚಿತು. ಬಂದು ದ್ರೌಪದಿಯನ್ನು ಮಾತನಾಡಿಸಿದ. “ಮಗಳೇ ವಿಷಾದವನ್ನು ಬಿಡು. ಮಾತನ್ನು ಕೇಳು.
ನಾನು ನಿನಗೆ ಮಾವ. ಈ ದುರಾತ್ಮರ ಮಾತು ಕೇಳಬೇಡ. ದುಶ್ಶಳೆಗೂ ನಿನಗೂ ಭೇದವುಂಟೇ ?” ಎಂದು ವಿಪತ್ತು ಬಂದಾಗ ಆ ಮಹಾಸತಿಯನ್ನು ಆದರದಿಂದ ಮಾತನಾಡಿಸಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಖೇದ ಮಿಗೆ ನಡೆತಂದು ನೃಪತಿ ತ
ಳೋದರಿಯ ನುಡಿಸಿದನು ಮಗಳೆ ವಿ
ಷಾದವನು ಬಿಡು ಮಾತ ಮನ್ನಿಸು ಮಾವ ನಾ ನಿನಗೆ
ಈ ದುರಾತ್ಮರ ಮಾತು ಬೇಡ ವಿ
ಭೇದವೇ ದುಸ್ಸಳೆಗೆ ನಿನಗೆಂ
ದಾದರಿಸಿ ನುಡಿದನು ವಿಪತ್ತಿನಲಾ ಮಹಾಸತಿಯ ॥46॥
೦೪೭ ಮಗಳಹೆನು ಸೊಸೆಯಹೆನು ...{Loading}...
ಮಗಳಹೆನು ಸೊಸೆಯಹೆನು ನಿಮ್ಮಯ
ಮಗನ ಕಣ್ಣಿಗೆ ಕಾಳಕೂಟದ
ಮಗಳೊ ಸೊಸೆಯೋ ನಾದಿನಿಯೊ ಬೆಸಗೊಳ್ಳಿ ನಿಮ್ಮವನ
ಅಗಡು ಮಾಡಿದ ನಿಮ್ಮ ಮಕ್ಕಳ
ವಿಗಡತನಕಂಜಿದರೊ ದುರಿತದ
ಸೊಗಡಿಗಂಜಿದರೋ ಪೃಥಾ ಸುತರೆಂದಳಿಂದುಮುಖಿ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿ ಧೃತರಾಷ್ಟ್ರನಿಗೆ ಸರಿಯಾಗಿ ಉತ್ತರ ಕೊಟ್ಟಳು. “ನಿಮಗೆ ಮಗಳಾಗುತ್ತೇನೆ, ಸೊಸೆಯಾಗುತ್ತೇನೆ ಎಲ್ಲಾ ಸರಿ. ಆದರೆ
ನಿಮ್ಮ ಮಗನ ಕಣ್ಣಿಗೆ ನಾನು ಕಾಳಕೂಟದ ಮಗಳೋ ಸೊಸೆಯೋ ನಾದಿನಿಯೋ ಕೇಳಿ ನಿಮ್ಮ ಮಗನನ್ನೇ. ಪೃಥೆಯ ಮಕ್ಕಳು,
ದುಷ್ಟತನ ಮಾಡಿದ ನಿಮ್ಮ ಮಕ್ಕಳ ಕ್ರೌರ್ಯಕ್ಕೆ ಹೆದರಿ ಸುಮ್ಮನಿದ್ದಾರೋ ಪಾಪದ ಸೊಗಡಿಗೆ ಹೆದರಿ ಸುಮ್ಮನಿದ್ದಾರೋ ?”
ಪದಾರ್ಥ (ಕ.ಗ.ಪ)
ಅಗಡು ಮಾಡಿದ-ದುಷ್ಟತನದಿಂದ ನಡೆದುಕೊಂಡ, ವಿಗಡತನ-ಕ್ರೌರ್ಯ
ಮೂಲ ...{Loading}...
ಮಗಳಹೆನು ಸೊಸೆಯಹೆನು ನಿಮ್ಮಯ
ಮಗನ ಕಣ್ಣಿಗೆ ಕಾಳಕೂಟದ
ಮಗಳೊ ಸೊಸೆಯೋ ನಾದಿನಿಯೊ ಬೆಸಗೊಳ್ಳಿ ನಿಮ್ಮವನ
ಅಗಡು ಮಾಡಿದ ನಿಮ್ಮ ಮಕ್ಕಳ
ವಿಗಡತನಕಂಜಿದರೊ ದುರಿತದ
ಸೊಗಡಿಗಂಜಿದರೋ ಪೃಥಾ ಸುತರೆಂದಳಿಂದುಮುಖಿ ॥47॥
೦೪೮ ಧರ್ಮ ನಿಮ್ಮದು ...{Loading}...
ಧರ್ಮ ನಿಮ್ಮದು ತಾಯೆ ಕಿಲ್ಬಿಷ
ಕರ್ಮವೆಮ್ಮದು ಲೋಕವರಿಯಲು
ನಿರ್ಮಲರು ನೀವ್ ಪಾಪ ಪಂಕಿಲ ಹೃದಯರಾವ್ ಜಗಕೆ
ದುರ್ಮತಿಗಳಿವದಿರ ಕುಚೇಷ್ಟೆಯ
ನೆಮ್ಮನೀಕ್ಷಿಸಿ ಮರೆ ಮಗಳೆ ಸ
ದ್ಧರ್ಮಮತಿಗಳು ನೀವೆನುತ ತಿಳುಹಿದನು ದ್ರೌಪದಿಯ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ ತಗ್ಗಿದ. “ಧರ್ಮ ನಿಮ್ಮದು ತಾಯೇ, ಪಾಪ ಕರ್ಮ ನಮ್ಮದು. ನೀವು ನಿರ್ಮಲರು ಎಂದು ಲೋಕವೆಲ್ಲ ಬಲ್ಲುದು.
ನಾವು ಪಾಪದ ಕೆಸರಿನಿಂದ ಮಲಿನ ಹೃದಯರಾದವರು. ನಮ್ಮನ್ನು ನೋಡಿ ಆ ದುರ್ಮತಿಗಳ ಕುಚೇಷ್ಟೆಯನ್ನು ಮರೆ ಮಗಳೆ. ನೀವು ಸದ್ಧರ್ಮಮತಿಗಳು” ಎಂದು ದ್ರೌಪದಿಯನ್ನು ಸಂತೈಸಿದ.
ಪದಾರ್ಥ (ಕ.ಗ.ಪ)
ಪಂಕಿಲ-ಕೆಸರು
ಮೂಲ ...{Loading}...
ಧರ್ಮ ನಿಮ್ಮದು ತಾಯೆ ಕಿಲ್ಬಿಷ
ಕರ್ಮವೆಮ್ಮದು ಲೋಕವರಿಯಲು
ನಿರ್ಮಲರು ನೀವ್ ಪಾಪ ಪಂಕಿಲ ಹೃದಯರಾವ್ ಜಗಕೆ
ದುರ್ಮತಿಗಳಿವದಿರ ಕುಚೇಷ್ಟೆಯ
ನೆಮ್ಮನೀಕ್ಷಿಸಿ ಮರೆ ಮಗಳೆ ಸ
ದ್ಧರ್ಮಮತಿಗಳು ನೀವೆನುತ ತಿಳುಹಿದನು ದ್ರೌಪದಿಯ ॥48॥
೦೪೯ ದುರುಳರೆನ್ನವದಿರು ದುರನ್ತಃ ...{Loading}...
ದುರುಳರೆನ್ನವದಿರು ದುರಂತಃ
ಕರಣರಾವ್ ದುಶ್ಚೇಷ್ಟೆಯೆಮ್ಮದು
ದುರಭಿಮತ ದುಷ್ಪೂರ್ವರೆನ್ನ ಕುಮಾರರಭಿದಾನ
ಕರುಣಿಗಳು ಕಮನೀಯ ಗುಣ ಬಂ
ಧುರರು ಶೌರ್ಯಬಲ ಪ್ರಭಾವೋ
ತ್ತರರು ನಿನ್ನವರೆಂದು ನಯದಲಿ ತಿಳುಹಿದನು ಸತಿಯ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನನ್ನ ಮಕ್ಕಳು ದುಷ್ಟರು, ನಾವು ಕೆಟ್ಟ ಅಂತಃಕರಣದವರು. ನಾವು ಮಾಡಿದ್ದು ಕೆಟ್ಟ ಕೆಲಸ. ನಮ್ಮದು ದುರಭಿಮತ. ನನ್ನ ಮಕ್ಕಳುಗಳ ಹೆಸರೇ ದುಸ್ ದುರ್ ನಿಂದ ಪ್ರಾರಂಭವಾಗುವುದು ನಿನ್ನವರು ಕರುಣಿಗಳು, ಮನೋಹರವಾದ ಗುಣವುಳ್ಳವರು, ಸಲ್ಲಕ್ಷಣವಂತರು ಶೌರ್ಯಬಲ ಪ್ರಭಾವಗಳಲ್ಲಿ ಎಲ್ಲರನ್ನೂ ಮೀರಿಸಿದವರು” ಎಂದು ನಯವಾಗಿ ಹೇಳಿ ಸಮಾಧಾನ ಪಡಿಸಿದ.
ಪದಾರ್ಥ (ಕ.ಗ.ಪ)
ದುಷ್ಪೂರ್ವ-ದುಷ್ ದುರ್ ಎಂಬ ಉಪಸರ್ಗದಿಂದ ಕೂಡಿದವರೇ ನನ್ನ ಮಕ್ಕಳೆಲ್ಲ (ದುರ್ಯೋಧನ, ದುಶ್ಶಾಸನ, ದುರ್ಮರ್ಷಣ, ದುಷ್ಕರ್ಣ ಇ)
ಮೂಲ ...{Loading}...
ದುರುಳರೆನ್ನವದಿರು ದುರಂತಃ
ಕರಣರಾವ್ ದುಶ್ಚೇಷ್ಟೆಯೆಮ್ಮದು
ದುರಭಿಮತ ದುಷ್ಪೂರ್ವರೆನ್ನ ಕುಮಾರರಭಿದಾನ
ಕರುಣಿಗಳು ಕಮನೀಯ ಗುಣ ಬಂ
ಧುರರು ಶೌರ್ಯಬಲ ಪ್ರಭಾವೋ
ತ್ತರರು ನಿನ್ನವರೆಂದು ನಯದಲಿ ತಿಳುಹಿದನು ಸತಿಯ ॥49॥
೦೫೦ ತಾಯೆ ಬೇಡೌ ...{Loading}...
ತಾಯೆ ಬೇಡೌ ವರವ ತಾನ
ನ್ಯಾಯದಲಿ ನಿಮ್ಮನು ನಿರರ್ಥಕ
ನೋಯಿಸಿದೆನದ ನೆನೆಯದದಿರಿ ಸರ್ವಾಪರಾಧವನು
ದಾಯಗೆಡೆ ನಿನ್ನವರು ಕೊಲುವರೆ
ಕಾಯಲಾಪವರುಂಟೆ ವರ ಸ
ತ್ಯಾಯುಧರಲೇ ನೀವೆನುತ ತಿಳುಹಿದನು ಧೃತರಾಷ್ಟ್ರ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ತಾಯೆ ವರವನ್ನು ಬೇಡು ಕೊಡುವೆ. ನಾನು ಅನ್ಯಾಯವಾಗಿ ನಿರರ್ಥಕವಾಗಿ ನಿಮ್ಮನ್ನು ನೋಯಿಸಿದೆ. ನನ್ನ
ಸರ್ವಾಪರಾಧವನ್ನು ನೆನೆಯಬೇಡ. ದಾಯ ತಪ್ಪಿ ನಿಮ್ಮವರು ಕೊಲ್ಲುವ ಹಾಗಿದ್ದರೆ ನಮ್ಮನ್ನು ರಕ್ಷಿಸುವವರಾರಿದ್ದಾರೆ ? ನೀವು ವರ ಸತ್ಯಾಯುಧರಾದವರಲ್ಲವೇ ?” ಎಂದು ಸಂತೈಸಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ತಾಯೆ ಬೇಡೌ ವರವ ತಾನ
ನ್ಯಾಯದಲಿ ನಿಮ್ಮನು ನಿರರ್ಥಕ
ನೋಯಿಸಿದೆನದ ನೆನೆಯದದಿರಿ ಸರ್ವಾಪರಾಧವನು
ದಾಯಗೆಡೆ ನಿನ್ನವರು ಕೊಲುವರೆ
ಕಾಯಲಾಪವರುಂಟೆ ವರ ಸ
ತ್ಯಾಯುಧರಲೇ ನೀವೆನುತ ತಿಳುಹಿದನು ಧೃತರಾಷ್ಟ್ರ ॥50॥
೦೫೧ ವರನನಿತ್ತಿರೆ ಮಾವ ...{Loading}...
ವರನನಿತ್ತಿರೆ ಮಾವ ಭೂಮೀ
ಶ್ವರರ ದಾಸ್ಯವ ಬಿಟ್ಟು ಕಳೆ ಮ
ತ್ತೆರಡನೆಯ ವರವೇನು ವಚನಿಸು ಕೊಟ್ಟೆ ನಾ ನಿನಗೆ
ನರ ವೃಕೋದರ ನಕುಲ ಸಹದೇ
ವರಿಗೆ ಕೊಡಿ ಶಸ್ತ್ರಾಸ್ತ್ರ ಗಜರಥ
ತುರಗ ನಿಕರವನೆಂದಡೆಂದನು ಮತ್ತೆ ಧೃತರಾಷ್ಟ್ರ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮಾಧಾನಗೊಂಡ ದ್ರೌಪದಿ ವರವನ್ನು ಬೇಡಿದಳು. “ವರವನ್ನು ಕೊಡುವಂತಿದ್ದರೆ, ಮಾವ, ಭೂಮೀಶ್ವರರ ದಾಸ್ಯವನ್ನು ಬಿಡಿಸು. ಅದಕ್ಕೆ ಸಮ್ಮತಿಸಿದ ಧೃತರಾಷ್ಟ್ರ ಎರಡನೆಯ ವರವೇನು ಕೇಳು ನಾನು ಕೊಟ್ಟೆ” ಎಂದ. ಅದಕ್ಕೆ ದ್ರೌಪದಿ “ಅರ್ಜುನ, ವೃಕೋದರ ನಕುಲ ಸಹದೇವನಿಗೆ ಶಸ್ತ್ರಾಸ್ತ್ರಗಳನ್ನು ಗಜರಥತುರಗಗಳನ್ನು ಕೊಡಿ “ಎಂದಳು.
ಪದಾರ್ಥ (ಕ.ಗ.ಪ)
ಮೂಲ ...{Loading}...
ವರನನಿತ್ತಿರೆ ಮಾವ ಭೂಮೀ
ಶ್ವರರ ದಾಸ್ಯವ ಬಿಟ್ಟು ಕಳೆ ಮ
ತ್ತೆರಡನೆಯ ವರವೇನು ವಚನಿಸು ಕೊಟ್ಟೆ ನಾ ನಿನಗೆ
ನರ ವೃಕೋದರ ನಕುಲ ಸಹದೇ
ವರಿಗೆ ಕೊಡಿ ಶಸ್ತ್ರಾಸ್ತ್ರ ಗಜರಥ
ತುರಗ ನಿಕರವನೆಂದಡೆಂದನು ಮತ್ತೆ ಧೃತರಾಷ್ಟ್ರ ॥51॥
೦೫೨ ವರವೆರಡು ಸನ್ದವು ...{Loading}...
ವರವೆರಡು ಸಂದವು ಮನೋರಥ
ಭರಿತವಾಗಲಿ ಮತ್ತೆ ಹೇಳೆನೆ
ತರುಣಿಯೆಂದಳು ಧರ್ಮಶಾಸ್ತ್ರ ಪ್ರಕಟ ಪದ್ದತಿಯ
ವರವು ವೈಶ್ಯರಿಗೊಂದು ನೃಪಸತಿ
ಗೆರಡು ನೃಪರಿಗೆ ಮೂರು ಭೂದೇ
ವರಿಗೆ ನೂರಧಿಕಾರವೆಂದಳು ನಗುತ ಪಾಂಚಾಲೆ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎರಡು ವರಗಳನ್ನು ಕೊಟ್ಟಿದ್ದೇನೆ” ನಿನ್ನ ಮನೋರಥ ಪೂರ್ಣವಾಗಲಿ, ಮತ್ತೆ ಕೇಳು ಕೊಡುವೆ” ಎಂದ. ದ್ರೌಪದಿ
ಧರ್ಮಶಾಸ್ತ್ರವನ್ನೇ ಉದಾಹರಿಸಿದಳು. “ವೈಶ್ಯರಿಗೆ ಒಂದು ವರವಾದರೆ, ರಾಜಪತ್ನಿಗೆ ಎರಡು ವರ. ರಾಜರಿಗೆ ಮೂರು, ಬ್ರಾಹ್ಮಣರಿಗೆ ನೂರು, ಇವು ಅಧಿಕಾರಯುತವಾದುದು ಎಂದಳು ಪಾಂಚಾಲೆ ನಗುತ್ತಾ.
ಪದಾರ್ಥ (ಕ.ಗ.ಪ)
ಮೂಲ ...{Loading}...
ವರವೆರಡು ಸಂದವು ಮನೋರಥ
ಭರಿತವಾಗಲಿ ಮತ್ತೆ ಹೇಳೆನೆ
ತರುಣಿಯೆಂದಳು ಧರ್ಮಶಾಸ್ತ್ರ ಪ್ರಕಟ ಪದ್ದತಿಯ
ವರವು ವೈಶ್ಯರಿಗೊಂದು ನೃಪಸತಿ
ಗೆರಡು ನೃಪರಿಗೆ ಮೂರು ಭೂದೇ
ವರಿಗೆ ನೂರಧಿಕಾರವೆಂದಳು ನಗುತ ಪಾಂಚಾಲೆ ॥52॥
೦೫೩ ಹಾರಲತಿಶಯ ತೃಷ್ಣೆ ...{Loading}...
ಹಾರಲತಿಶಯ ತೃಷ್ಣೆ ನಾಶಕೆ
ಕಾರಣವಲೇ ಮಾವ ವರವಿದು
ಭಾರಿಯಾದರೆ ಬೇಡ ಲಘುವನು ಕರುಣಿಸುವುದೆನಲು
ಭಾರವಾವುದು ಮಗಳೆ ಕೊಟ್ಟೆನು
ಧಾರುಣೀಪತಿ ಬಿಜಯಮಾಡಲಿ
ವೈರಬಂಧದ ಕಂದು ಕಲೆಯನು ಮರೆದು ಕಳೆಯೆಂದ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅತಿ ದಾಹವನ್ನು ನಿರೀಕ್ಷಿಸಿದರೆ ನಾಶಕ್ಕೆ ಕಾರಣವಾಗುವುದಿಲ್ಲವೇ ಮಾವಾ, ನಾನು ಕೇಳಿರುವ ಈ ವರ ಭಾರವಾದರೆ ಬೇಡ.
ಲಘುವಾದದ್ದನ್ನೇ ಕರುಣಿಸು” ಎಂದಳು. ಅದಕ್ಕೆ ಧೃತರಾಷ್ಟ್ರ “ಭಾರವಾವುದು ಮಗಳೆ, ಕೊಟ್ಟೆ. ಧರ್ಮರಾಜ ಹೊರಡಲಿ, ಶತ್ರುತ್ವದ
ಕಂದು ಕಲೆಯನ್ನು ಮರೆತುಬಿಡು” ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಹಾರಲತಿಶಯ ತೃಷ್ಣೆ ನಾಶಕೆ
ಕಾರಣವಲೇ ಮಾವ ವರವಿದು
ಭಾರಿಯಾದರೆ ಬೇಡ ಲಘುವನು ಕರುಣಿಸುವುದೆನಲು
ಭಾರವಾವುದು ಮಗಳೆ ಕೊಟ್ಟೆನು
ಧಾರುಣೀಪತಿ ಬಿಜಯಮಾಡಲಿ
ವೈರಬಂಧದ ಕಂದು ಕಲೆಯನು ಮರೆದು ಕಳೆಯೆಂದ ॥53॥
೦೫೪ ಪೂತುರೇ ಪಾಞ್ಚಾಲೆ ...{Loading}...
ಪೂತುರೇ ಪಾಂಚಾಲೆ ಭುವನ
ಖ್ಯಾತೆಯಾದೆಗೆ ಜಾಗು ನಿನ್ನಯ
ಬೈತಲೆಯ ಮಣಿ ಮಾರುವೋದುದ ಮತ್ತೆ ಬಿಡಿಸಿದಲೆ
ಬೀತ ಮರ ಫಲವಾಯ್ತಲಾ ನಿ
ನ್ನಾತಗಳ ಬಹುಖೇದ ಜಲಧಿಗೆ
ಸೇತುವಾದೆಗೆ ನೀನೆನುತ ತಲೆದೂಗಿದನು ಕರ್ಣ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣ ದ್ರೌಪದಿಯನ್ನು ವ್ಯಂಗ್ಯಮಾಡಿ ಹೊಗಳಿದ “ಪೂತುರೇ ಪಾಂಚಾಲೇ ! ಲೋಕಪ್ರಸಿದ್ಧಿಯನ್ನು ಪಡೆದುಬಿಟ್ಟೆ. ಭೇಷ್ ! ಮಾರಿಹೋಗಿದ್ದ ನಿನ್ನ ಬೈತಲೆ ಮಣಿಯನ್ನು ಮತ್ತೆ ಪಡೆದುಕೊಂಡೆಯಲ್ಲಾ ! ಬರಡಾಗಿದ್ದ ಮರ ಫಲ ಬಿಟ್ಟಿತಲ್ಲವೇ ! ನಿನ್ನ ಪತಿಗಳ ಮಹಾದುಃಖದ ಸಮುದ್ರಕ್ಕೆ ನೀನೇ ಸೇತುವೆಯಾದೆ” ಎಂದು ತಲೆದೂಗಿದನು ಕರ್ಣ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಪೂತುರೇ ಪಾಂಚಾಲೆ ಭುವನ
ಖ್ಯಾತೆಯಾದೆಗೆ ಜಾಗು ನಿನ್ನಯ
ಬೈತಲೆಯ ಮಣಿ ಮಾರುವೋದುದ ಮತ್ತೆ ಬಿಡಿಸಿದಲೆ
ಬೀತ ಮರ ಫಲವಾಯ್ತಲಾ ನಿ
ನ್ನಾತಗಳ ಬಹುಖೇದ ಜಲಧಿಗೆ
ಸೇತುವಾದೆಗೆ ನೀನೆನುತ ತಲೆದೂಗಿದನು ಕರ್ಣ ॥54॥
೦೫೫ ಹೊಕ್ಕಗೂಡಿನ ಹುಲಿಗಳನು ...{Loading}...
ಹೊಕ್ಕಗೂಡಿನ ಹುಲಿಗಳನು ಹೊರ
ಗಿಕ್ಕಿದೆಯಲಾ ಇರುಬಿನಲಿ ಬಿ
ದ್ದೆಕ್ಕಲಂಗಳ ನೋಯಲೀಯದೆ ಕೆಲಕೆ ತೆಗೆದೆಯಲ
ಸೊಕ್ಕಿದುರು ಮೀನುಗಳ ಗಂಟಲೊ
ಳಿಕ್ಕಿದವಲಾ ಗಾಣ ಗಂಟಲ
ಸಿಕ್ಕ ಬಿಡಿಸಿದೆ ಗರುವೆ ನೀನೆಂದುಲಿದನಾ ಕರ್ಣ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಗೂಡನ್ನು ಹೊಕ್ಕ ಹುಲಿಗಳನ್ನು ಹೊರಗೆ ಇಟ್ಟೆಯಲ್ಲವೇ ! ಹಳ್ಳದಲ್ಲಿ ಸಿಕ್ಕಿಕೊಂಡಿದ್ದ ಹಂದಿಗಳನ್ನು ಅದಕ್ಕೆ ನೋವಾಗದಂತೆ ಪಕ್ಕಕ್ಕೆ ಕರೆದುಬಿಟ್ಟೆಯಲ್ಲ ! ಸೊಕ್ಕಿದ ಮೀನುಗಳ ಗಂಟಲಲ್ಲಿ ಸಿಕ್ಕಿಕೊಂಡಿದ್ದ ಗಾಳವನ್ನು ಬಿಡಿಸಿ ಬಿಡುಗಡೆ ಮಾಡಿದ ಧೀರೆ ನೀನು” ಎಂದು ಕರ್ಣ ಹೊಗಳಿದ.
ಪದಾರ್ಥ (ಕ.ಗ.ಪ)
ಎಕ್ಕಲ-ಹಂದಿ
ಮೂಲ ...{Loading}...
ಹೊಕ್ಕಗೂಡಿನ ಹುಲಿಗಳನು ಹೊರ
ಗಿಕ್ಕಿದೆಯಲಾ ಇರುಬಿನಲಿ ಬಿ
ದ್ದೆಕ್ಕಲಂಗಳ ನೋಯಲೀಯದೆ ಕೆಲಕೆ ತೆಗೆದೆಯಲ
ಸೊಕ್ಕಿದುರು ಮೀನುಗಳ ಗಂಟಲೊ
ಳಿಕ್ಕಿದವಲಾ ಗಾಣ ಗಂಟಲ
ಸಿಕ್ಕ ಬಿಡಿಸಿದೆ ಗರುವೆ ನೀನೆಂದುಲಿದನಾ ಕರ್ಣ ॥55॥
೦೫೬ ಘುಡುಘಡಿಸಿದನು ರೋಷವಹ್ನಿಯ ...{Loading}...
ಘುಡುಘಡಿಸಿದನು ರೋಷವಹ್ನಿಯ
ತಡಿಯ ಹೊಕ್ಕನು ಬಿಗಿದ ಹುಬ್ಬಿನ
ಬಿಡೆಯ ಬವರಿಯ ಲಳಿಯ ಲವಣಿಯ ಲೋಚನ ದ್ವಯದ
ಕಡು ಮುಳಿಸಿನುಬ್ಬಟೆಯ ಮಾರುತಿ
ಕಡುಹಿನಲಿ ಭುಗುಭುಗಿಪ ಭಾರಿಯ
ಕಿಡಿಗೆದರಿ ನೋಡಿದನು ಬಾಗಿಲ ಲಾಳವಿಂಡಿಗೆಯ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣದ ವ್ಯಂಗ್ಯವಾದ ಮಾತುಗಳು ಭೀಮನನ್ನು ಕೆರಳಿಸಿದುವು. ಅವನು ಘಡುಘಡಿಸಿದ ! ರೋಷಾಗ್ನಿಯ ದಡವನ್ನು ಹೊಕ್ಕ. ಹುಬ್ಬು ಗಂಟಿಕ್ಕಿದ. ಎರಡು ಕಣ್ಣುಗಳೂ ತಿರುಗ ತೊಡಗಿ ಕಾಂತಿಯನ್ನು ಹೊರಚೆಲ್ಲಿದುವು. ಕಡುಮುಳಿಸಿನ ಉದ್ವೇಗದಿಂದ ಕೂಡಿದ
ಮಾರುತಿ ಮಹಾ ಶಕ್ತಿಯನ್ನು ಪ್ರಕಟಿಸಿ ಭುಗು ಭುಗು ಎನ್ನುತ್ತಾ ಭಾರೀ ಕಿಡಿಗಳನ್ನು ಚೆಲ್ಲುತ್ತಾ ಆಯುಧವನ್ನಾಗಿಸಿಕೊಳ್ಳಲು ಮುಖ್ಯದ್ವಾರದ ಭಾರೀ ಅಗುಳಿಯನ್ನು ನೋಡಿದ.
ಪದಾರ್ಥ (ಕ.ಗ.ಪ)
ಕಡುಹು-ಸಾಮಥ್ರ್ಯ
ಮೂಲ ...{Loading}...
ಘುಡುಘಡಿಸಿದನು ರೋಷವಹ್ನಿಯ
ತಡಿಯ ಹೊಕ್ಕನು ಬಿಗಿದ ಹುಬ್ಬಿನ
ಬಿಡೆಯ ಬವರಿಯ ಲಳಿಯ ಲವಣಿಯ ಲೋಚನ ದ್ವಯದ
ಕಡು ಮುಳಿಸಿನುಬ್ಬಟೆಯ ಮಾರುತಿ
ಕಡುಹಿನಲಿ ಭುಗುಭುಗಿಪ ಭಾರಿಯ
ಕಿಡಿಗೆದರಿ ನೋಡಿದನು ಬಾಗಿಲ ಲಾಳವಿಂಡಿಗೆಯ ॥56॥
೦೫೭ ಹಗೆಗಳೇ ಕೌರವರು ...{Loading}...
ಹಗೆಗಳೇ ಕೌರವರು ತೆಗೆ ಬಲು
ವಗೆ ಕಣಾ ಕಾಮಾದಿ ರಿಪುಗಳು
ಸೆಗಳಿಕೆಯ ಸಸಿಯಾಗವೇ ನಿಜ ಸತ್ಯ ಭಾಷೆಗಳು
ಉಗುಳುಗಳು ರೋಷವನು ರಾಧೆಯ
ಮಗ ವಿಕಾರಿ ಕಣಾ ವೃಕೋದರ
ಬೆಗಡುಗೊಳಿಸದಿರೆಮ್ಮನೆಂದನು ಧರ್ಮನಂದನನು ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನ ಆವೇಶವನ್ನರಿತ ಧರ್ಮನಂದನ ಕೂಡಲೇ " ಕೌರವರು, ಹಗೆಗಳೇ, ಅಲ್ಲ. ಮಹಾಶತ್ರುಗಳು ಕ್ರಾಮಕ್ರೋಧಾದಿಗಳು. ನನ್ನ ಸತ್ಯ, ಭಾಷೆಗಳು ಬೇಸಿಗೆಯಲ್ಲಿ ಬೆಂದ ಸಸ್ಯದಂತೆ ಬಾಡಿಹೋಗುವುದಿಲ್ಲವೇ ? ನಿನ್ನ ರೋಷವನ್ನೆಲ್ಲ ಉಗುಳಿಬಿಡು.
ಈ ರಾಧೇಯ ವಿಕಾರಸ್ವಭಾವದವನಯ್ಯಾ. ನಮ್ಮನ್ನು ಭಯಪಡಿಸಬೇಡಪ್ಪಾ” ಎಂದ.
ಪದಾರ್ಥ (ಕ.ಗ.ಪ)
ಸೆಗಳಿಕೆಯ-ನೀರುಕಾಣದ
ಮೂಲ ...{Loading}...
ಹಗೆಗಳೇ ಕೌರವರು ತೆಗೆ ಬಲು
ವಗೆ ಕಣಾ ಕಾಮಾದಿ ರಿಪುಗಳು
ಸೆಗಳಿಕೆಯ ಸಸಿಯಾಗವೇ ನಿಜ ಸತ್ಯ ಭಾಷೆಗಳು
ಉಗುಳುಗಳು ರೋಷವನು ರಾಧೆಯ
ಮಗ ವಿಕಾರಿ ಕಣಾ ವೃಕೋದರ
ಬೆಗಡುಗೊಳಿಸದಿರೆಮ್ಮನೆಂದನು ಧರ್ಮನಂದನನು ॥57॥
೦೫೮ ಬಾ ವೃಕೋದರ ...{Loading}...
ಬಾ ವೃಕೋದರ ನಕುಲ ಬಾ ಸಹ
ದೇವ ಬಾರೈ ತಮ್ಮ ಫಲಗುಣ
ದೇವಿಯರು ನೀವ್ ಬನ್ನಿಯೆನಲವನೀಶನೈತಂದು
ಆವುದೈ ಕರ್ತವ್ಯ ನೀವೇ
ದೈವ ಗುರುಪಿತರೆಂದು ಮಿಗೆ ಸಂ
ಭಾವನೋಕ್ತಿಯನಾಡಿದನು ಧೃತರಾಷ್ಟ್ರ ಭೂಪತಿಗೆ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಷ್ಟು ಹೊತ್ತಿಗೆ ಈ ಕಡೆ ಧೃತರಾಷ್ಟ್ರ ಪ್ರೀತಿಯಿಂದ “ಬಾ ವೃಕೋದರ, ನಕುಲ ಬಾ, ಸಹದೇವ ಬಾರಯ್ಯ. ಬಾ ತಮ್ಮ ಫಲುಗುಣ,
ದೇವಿ ನೀನೂ ಬಾ” ಎಂದು ಆ ಮಕ್ಕಳನ್ನೆಲ್ಲ ಬಳಿಗೆ ಕರೆಯಲು ಧರ್ಮರಾಯನೂ ಒಡನೆ ಬಂದು “ಹೇಳಿ ನಮ್ಮ ಕರ್ತವ್ಯವೇನು, ನೀವೇ
ಈಗ ನಮ್ಮ ದೈವ, ಗುರು, ಪಿತರು ಎಂದು ಧೃತರಾಷ್ಟ್ರನನ್ನು ಗೌರವದಿಂದ ಮಾತನಾಡಿಸಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಬಾ ವೃಕೋದರ ನಕುಲ ಬಾ ಸಹ
ದೇವ ಬಾರೈ ತಮ್ಮ ಫಲಗುಣ
ದೇವಿಯರು ನೀವ್ ಬನ್ನಿಯೆನಲವನೀಶನೈತಂದು
ಆವುದೈ ಕರ್ತವ್ಯ ನೀವೇ
ದೈವ ಗುರುಪಿತರೆಂದು ಮಿಗೆ ಸಂ
ಭಾವನೋಕ್ತಿಯನಾಡಿದನು ಧೃತರಾಷ್ಟ್ರ ಭೂಪತಿಗೆ ॥58॥
೦೫೯ ಮಕ್ಕಳೆನಗಲ್ಲವರು ನೀವೇ ...{Loading}...
ಮಕ್ಕಳೆನಗಲ್ಲವರು ನೀವೇ
ಮಕ್ಕಳೈವರು ಮಗನೆ ನಮ್ಮದು
ಮಕ್ಕಳಾಟಿಕೆಯಾಯ್ತಲಾ ಸೌಬಲನ ದೆಸೆಯಿಂದ
ಮಿಕ್ಕು ನೀ ಸೈರಿಸುವುದೆಮ್ಮದು
ಬಕ್ಕುಡಿಯ ಬೇಳಂಬ ನಿಮ್ಮಲಿ
ಕಕ್ಕುಲಿತೆಯಿಲ್ಲೆಂದು ತೆಗೆದಪ್ಪಿದನು ಧರ್ಮಜನ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ಸರಿಯಾಗಿ ಧೃತರಾಷ್ಟ್ರನೂ ಕೂಡ ಯುಧಿಷ್ಠಿರನೊಡನೆ “ಅವರು ನನಗೆ ಮಕ್ಕಳಲ್ಲ. ನೀವೇ ನನ್ನ ಮಕ್ಕಳು ! ಆ ಶಕುನಿಯ ದೆಸೆಯಿಂದ ಮಕ್ಕಳಾಟಿಕೆಯಾಯಿತಲ್ಲಾ ! ಇದನ್ನು ನೀನು ಸೈರಿಸಿಕೊಳ್ಳಬೇಕು. ನಾವು ದೈನ್ಯದಲ್ಲಿದ್ದೇವೆ. ನಿಮ್ಮಲಿ ಅನುಮಾನವಿಲ್ಲ ಎಂದು ಧರ್ಮಜನನ್ನು ತೆಗೆದಪ್ಪಿಕೊಂಡನು.
ಪದಾರ್ಥ (ಕ.ಗ.ಪ)
ಬಕ್ಕುಡಿಯ ಬೇಳಂಬ-ದೀನಸ್ಥಿತಿ
ಕಕ್ಕಲಿತೆ -ಅನುಮಾನ
ಮೂಲ ...{Loading}...
ಮಕ್ಕಳೆನಗಲ್ಲವರು ನೀವೇ
ಮಕ್ಕಳೈವರು ಮಗನೆ ನಮ್ಮದು
ಮಕ್ಕಳಾಟಿಕೆಯಾಯ್ತಲಾ ಸೌಬಲನ ದೆಸೆಯಿಂದ
ಮಿಕ್ಕು ನೀ ಸೈರಿಸುವುದೆಮ್ಮದು
ಬಕ್ಕುಡಿಯ ಬೇಳಂಬ ನಿಮ್ಮಲಿ
ಕಕ್ಕುಲಿತೆಯಿಲ್ಲೆಂದು ತೆಗೆದಪ್ಪಿದನು ಧರ್ಮಜನ ॥59॥
೦೬೦ ಎನ್ನನೀಕ್ಷಿಸಿ ಮಗನೆ ...{Loading}...
ಎನ್ನನೀಕ್ಷಿಸಿ ಮಗನೆ ಮರೆ ನಿನ
ಗನ್ಯಳೇ ಗಾಂಧಾರಿ ಪಿತನೆಂ
ದೆನ್ನ ಕಾಬಿರಿ ವೃದ್ಧನೆಂದು ಗತಾಕ್ಷ ತಾನೆಂದು
ಮನ್ನಿಸುವಿರೆಲೆ ಮಕ್ಕಳಿರ ಸಂ
ಪನ್ನಸತ್ಯರು ನೀವು ಕರ್ಮಿಗ
ಳೆನ್ನವರು ದೋಷಾಭಿಸಂಧಿಯ ಮರೆದು ಕಳೆಯೆಂದ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮಗನೇ, ನನ್ನನ್ನು ನೋಡಿ, ಆದದ್ದನ್ನೆಲ್ಲ ಮರೆತುಬಿಡು, ಗಾಂಧಾರಿಯೇನು ನಿನಗೆ ಹೊರಗಿನವಳೇ ? ನನ್ನನ್ನು ನೀವು ತಂದೆಯೆಂದು ಕಾಣುವಿರಿ. ಏನೋ ಮುದುಕ, ಕಣ್ಣಿಲ್ಲದವನು ಎಂದು ಕ್ಷಮಿಸುವಿರಲ್ಲವೇ ಮಕ್ಕಳೇ ? ನೀವು ಸತ್ಯಸಂಪನ್ನರು ನನ್ನ ಮಕ್ಕಳು ಕರ್ಮ ಮಾಡಿದವರು. ದೋಷಾಭಿಸಂಧಿಯನ್ನು ಮರೆತುಬಿಡಿ.
ಪದಾರ್ಥ (ಕ.ಗ.ಪ)
ಕಾಬಿರಿ-ಕಾಣುವಿರಿ
ಮೂಲ ...{Loading}...
ಎನ್ನನೀಕ್ಷಿಸಿ ಮಗನೆ ಮರೆ ನಿನ
ಗನ್ಯಳೇ ಗಾಂಧಾರಿ ಪಿತನೆಂ
ದೆನ್ನ ಕಾಬಿರಿ ವೃದ್ಧನೆಂದು ಗತಾಕ್ಷ ತಾನೆಂದು
ಮನ್ನಿಸುವಿರೆಲೆ ಮಕ್ಕಳಿರ ಸಂ
ಪನ್ನಸತ್ಯರು ನೀವು ಕರ್ಮಿಗ
ಳೆನ್ನವರು ದೋಷಾಭಿಸಂಧಿಯ ಮರೆದು ಕಳೆಯೆಂದ ॥60॥
೦೬೧ ರೂಢಿಗಗ್ಗದ ರಾಜಸೂಯದ ...{Loading}...
ರೂಢಿಗಗ್ಗದ ರಾಜಸೂಯದ
ಲುಡಿ ನಿರ್ಜರ ಕಟಕವನು ಖಯ
ಖೋಡಿಯಿಲ್ಲದೆ ನಿಲಿಸಿದೈ ತ್ರಿದಿವದಲಿ ಪಾಂಡುವನು
ಮಾಡುವೆಯಲಾ ಮಗನೆಯೆನ್ನೀ
ಗೂಡ ಬಿಸುಟರೆ ಸುರರ ಸಂಗಡ
ವಾಡುವಂತಿರೆ ತನಗೆ ಗತಿ ನೀನಲ್ಲದಾರೆಂದ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಲೋಕಕ್ಕೇ ಬಹು ಶ್ರೇಷ್ಠವೆನ್ನಿಸಿದ ರಾಜಸೂಯ ಯಾಗ ಮಾಡಿ ದೇವತಾಸಮೂಹಕ್ಕೆಲ್ಲ ತೃಪ್ತಿಯಾಗುವಂತೆ ಉಣಿಸಿ ಯಾವ ಲೋಪದೋಷವೂ ಇಲ್ಲದೆ ಪೂರ್ಣಗೊಳಿಸಿ ಪಾಂಡುವನ್ನು ಸ್ವರ್ಗದಲ್ಲಿ ನೆಲೆಗೊಳಿಸಿದೆಯಲ್ಲ ! ಮಗನೇ, ನಾನು ಸಹ ಈ ಶರೀರದ ಗೂಡನ್ನು ತ್ಯಜಿಸಿದ ಮೇಲೆ ಪಾಂಡುವಿನಂತೆ ನನ್ನನ್ನೂ ಸುರರಸಂಗಡ ನೆಲೆಗೊಳಿಸುವೆಯಲ್ಲವೇ ? ನನಗೆ ನೀನಲ್ಲದೆ ಗತಿ ಬೇರೆ ಯಾರಿದ್ದಾರೆ ?
ಪದಾರ್ಥ (ಕ.ಗ.ಪ)
ಮೂಲ ...{Loading}...
ರೂಢಿಗಗ್ಗದ ರಾಜಸೂಯದ
ಲುಡಿ ನಿರ್ಜರ ಕಟಕವನು ಖಯ
ಖೋಡಿಯಿಲ್ಲದೆ ನಿಲಿಸಿದೈ ತ್ರಿದಿವದಲಿ ಪಾಂಡುವನು
ಮಾಡುವೆಯಲಾ ಮಗನೆಯೆನ್ನೀ
ಗೂಡ ಬಿಸುಟರೆ ಸುರರ ಸಂಗಡ
ವಾಡುವಂತಿರೆ ತನಗೆ ಗತಿ ನೀನಲ್ಲದಾರೆಂದ ॥61॥
೦೬೨ ಪಾಲಿಸವನಿಯನೆನ್ನ ಮಕ್ಕಳ ...{Loading}...
ಪಾಲಿಸವನಿಯನೆನ್ನ ಮಕ್ಕಳ
ಖೂಳತನವನು ಮನಕೆ ತಾರದಿ
ರಾಲಿಸದಿರಪರಾಧಿ ವಾಚಾಳರ ವಚೋತ್ತರವ
ಕಾಲ ದೇಶಾಗಮದ ನಿಗಮದ
ಡಾಳವರಿದೈಹಿಕ ಪರತ್ರ ವಿ
ಟಾಳಿಸದೆ ನಡೆ ಕಂದಯೆಂದನು ಮರಳಿ ತೆಗೆದಪ್ಪಿ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ರಾಜ್ಯಭಾರ ಮಾಡು. ನನ್ನ ಮಕ್ಕಳ ದುಷ್ಟತನವನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡ ಅಪರಾಧಿಗಳಾದ ವಾಚಾಳರ ಮಾತುಗಳನ್ನಾಲಿಸಬೇಡ. ಕಾಲ ದೇಶಗಳ, ಆಗಮ ನಿಗಮಗಳ ಸಾರವನ್ನರಿತು ಇಹ ಪರಗಳ ಹಿತ ಹಾಳಾಗದಂತೆ ನಡೆ ಕಂದ” ಎಂದು ಧೃತರಾಷ್ಟ್ರ ಮತ್ತೊಮ್ಮೆ ಧರ್ಮಜನನ್ನು ತೆಗೆದಪ್ಪಿಕೊಂಡ.
ಪದಾರ್ಥ (ಕ.ಗ.ಪ)
ಡಾಳವರಿದು-ಸಾರವನ್ನು ತಿಳಿದು
ಮೂಲ ...{Loading}...
ಪಾಲಿಸವನಿಯನೆನ್ನ ಮಕ್ಕಳ
ಖೂಳತನವನು ಮನಕೆ ತಾರದಿ
ರಾಲಿಸದಿರಪರಾಧಿ ವಾಚಾಳರ ವಚೋತ್ತರವ
ಕಾಲ ದೇಶಾಗಮದ ನಿಗಮದ
ಡಾಳವರಿದೈಹಿಕ ಪರತ್ರ ವಿ
ಟಾಳಿಸದೆ ನಡೆ ಕಂದಯೆಂದನು ಮರಳಿ ತೆಗೆದಪ್ಪಿ ॥62॥
೦೬೩ ತರಿಸಿದನು ಮಡಿ ...{Loading}...
ತರಿಸಿದನು ಮಡಿ ವರ್ಗದಮಲಾಂ
ಬರವನಂಬುಜಮುಖಿಗೆ ರತ್ನಾ
ಭರಣವನು ವಿವಿಧಾನುಲೇಪನ ಚಿತ್ರಸಂಪುಟವ
ಅರಸನಿತ್ತನು ವೀಳಯವ ಕ
ರ್ಪುರದ ತವಲಾಯಿಗಳನಭ್ಯಂ
ತರಕಿವರ ಕಳುಹಿದನು ಗಾಂಧಾರಿಯನು ಕಾಣಿಸಿದ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ಮಡಿವರ್ಗದ ಶ್ರೇಷ್ಠ ವಸ್ತ್ರಗಳನ್ನು ತರಿಸಿದ. ದ್ರೌಪದಿಗಾಗಿ ರತ್ನಾಭರಣಗಳನ್ನೂ ನಾನಾ ಅನುಲೇಪನಗಳ ಚಿತ್ರಸಂಪುಟವನ್ನೂ ತರಿಸಿದ. ಅವರೆಲ್ಲರಿಗೂ ಕರ್ಪೂರ ವೀಳಯವನ್ನಿತ್ತು ಗಾಂಧಾರಿಯನ್ನು ಕಾಣಲು ಒಳಕ್ಕೆ ಕಳುಹಿಸಿದ.
ಪದಾರ್ಥ (ಕ.ಗ.ಪ)
ತವಲಾಯಿ-ತಾಂಬೂಲ
ಮೂಲ ...{Loading}...
ತರಿಸಿದನು ಮಡಿ ವರ್ಗದಮಲಾಂ
ಬರವನಂಬುಜಮುಖಿಗೆ ರತ್ನಾ
ಭರಣವನು ವಿವಿಧಾನುಲೇಪನ ಚಿತ್ರಸಂಪುಟವ
ಅರಸನಿತ್ತನು ವೀಳಯವ ಕ
ರ್ಪುರದ ತವಲಾಯಿಗಳನಭ್ಯಂ
ತರಕಿವರ ಕಳುಹಿದನು ಗಾಂಧಾರಿಯನು ಕಾಣಿಸಿದ ॥63॥
೦೬೪ ನೋಡಲಾಗದು ಮಕ್ಕಳಿರ ...{Loading}...
ನೋಡಲಾಗದು ಮಕ್ಕಳಿರ ಕುಲ
ಗೇಡಿಗರ ಕಪಟವನು ನಮ್ಮನು
ನೋಡಿ ಮರೆವುದು ಪಾಂಡುವೆಂದಿಹುದಂಧ ಭೂಪತಿಯ
ನಾಡೆ ನೊಂದೌ ತಾಯೆ ಬಾ ಮಗ
ಮಾಡಿದನುಚಿತ ಕರ್ಮವೆಲ್ಲವ
ಮಾಡಿದೆನು ತಾನೆಂದಳಾ ದ್ರೌಪದಿಗೆ ಗಾಂಧಾರಿ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಾಂಧಾರಿ ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಳು. “ಮಕ್ಕಳೇ ಕುಲಗೇಡಿಗಳಾದ ಮಕ್ಕಳು ಮಾಡಿದ ಕಪಟವನ್ನು ನೋಡಬೇಡಿ. ನಮ್ಮನ್ನು ನೋಡಿ ಎಲ್ಲವನ್ನೂ ಮರೆತುಬಿಡಿ. ಅಂಧ ಭೂಪತಿಯನ್ನೇ ಪಾಂಡುವೆಂದು ತಿಳಿಯಿರಿ” ಎಂದು ಮತ್ತೆ ದ್ರೌಪದಿಯ ಕಡೆ ನೋಡಿ “ತುಂಬ ನೊಂದೆಯಮ್ಮ ತಾಯಿ, ಬಾ. ಮಗ ಮಾಡಿದ ಅನುಚಿತ ಕರ್ಮವನ್ನೆಲ್ಲ ನಾನೇ ಮಾಡಿದೆನೆಂದು
ತಿಳಿದು ಮನ್ನಿಸಿ ಬಿಡು” ಎಂದಳು.
ಪದಾರ್ಥ (ಕ.ಗ.ಪ)
ಮೂಲ ...{Loading}...
ನೋಡಲಾಗದು ಮಕ್ಕಳಿರ ಕುಲ
ಗೇಡಿಗರ ಕಪಟವನು ನಮ್ಮನು
ನೋಡಿ ಮರೆವುದು ಪಾಂಡುವೆಂದಿಹುದಂಧ ಭೂಪತಿಯ
ನಾಡೆ ನೊಂದೌ ತಾಯೆ ಬಾ ಮಗ
ಮಾಡಿದನುಚಿತ ಕರ್ಮವೆಲ್ಲವ
ಮಾಡಿದೆನು ತಾನೆಂದಳಾ ದ್ರೌಪದಿಗೆ ಗಾಂಧಾರಿ ॥64॥
೦೬೫ ಮರೆದೆನಾಗಳೆ ವಿಗಡ ...{Loading}...
ಮರೆದೆನಾಗಳೆ ವಿಗಡ ವಿಧಿಯೆ
ಚ್ಚರಿಸಿದರೆ ಹರಿಭಕ್ತಿ ಮುಖದಲಿ
ಮುರಿದುದೆಮ್ಮಯ ಪೂರ್ವ ದುಷ್ಪ್ರಾರಬ್ಧ ಕರ್ಮಫಲ
ಹೆರರನೆಂಬುದು ಖೂಳತನವೇ
ನರಿಯದವರೇ ಪಾಂಡುಸುತರೆಂ
ದುರುಬೆಯಲಿ ಬಿನ್ನವಿಸಿದಳು ಗಾಂಧಾರಿಗಬುಜಾಕ್ಷಿ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾನು ಆಗಲೇ ಮರೆತುಬಿಟ್ಟೆ. ಕ್ರೂರವಿಧಿ ನಮ್ಮನ್ನು ಬಡಿದೆಚ್ಚರಿಸಿತು. ನಾವು ಹಿಂದೆ ಮಾಡಿದ್ದ ದುಷ್ಟಕರ್ಮದ ಫಲ ಹರಿಭಕ್ತಿಯ
ಮೂಲಕ ಪರಿಹಾರವಾಯಿತು. ನಮ್ಮ ಕರ್ಮಕ್ಕೆ ಬೇರೆಯವರನ್ನು ಗುರಿಮಾಡುವುದು ಖೂಳತನ. ಪಾಂಡವರೇನು ಅದನ್ನು ಅರಿಯದವರೇ ?” ಎಂದು ಉದ್ವೇಗದಿಂದ ವಿಜ್ಞಾಪಿಸಿಕೊಂಡಳು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಮರೆದೆನಾಗಳೆ ವಿಗಡ ವಿಧಿಯೆ
ಚ್ಚರಿಸಿದರೆ ಹರಿಭಕ್ತಿ ಮುಖದಲಿ
ಮುರಿದುದೆಮ್ಮಯ ಪೂರ್ವ ದುಷ್ಪ್ರಾರಬ್ಧ ಕರ್ಮಫಲ
ಹೆರರನೆಂಬುದು ಖೂಳತನವೇ
ನರಿಯದವರೇ ಪಾಂಡುಸುತರೆಂ
ದುರುಬೆಯಲಿ ಬಿನ್ನವಿಸಿದಳು ಗಾಂಧಾರಿಗಬುಜಾಕ್ಷಿ ॥65॥
೦೬೬ ಸಾಕು ನೇಮವ ...{Loading}...
ಸಾಕು ನೇಮವ ಕೊಡಿಯೆನುತ ಕುಂ
ತೀ ಕುಮಾರರು ಬೀಳುಕೊಂಡರು
ನೂಕಿ ಹೊಕ್ಕುದು ದಾರವಟ್ಟದಲಿವರ ಪರಿವಾರ
ತೋಕಿದವು ಸೀಗುರಿಗಳೆಡ ಬಲ
ದಾಕೆಯಲಿ ಪಾಂಡವ ಕುಮಾರಾ
ನೀಕ ಬೆರೆಸಿತು ಗಜತುರಗ ರಥ ಪಾಯದಳ ಸಹಿತ ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸಾಕು, ಅಪ್ಪಣೆ ಕೊಡಿ “ಎಂದು ಕುಂತೀಕುಮಾರರು ಬೀಳ್ಕೊಂಡರು. ಇವರ ಪರಿವಾರದವರೆಲ್ಲ ಹೆಬ್ಬಾಗಿಲಿನಲ್ಲಿ ನುಗ್ಗಿಬಂದರು.
ಎಡಬಲಗಳಲ್ಲಿ ಸ್ತ್ರೀಯರು ಸೀಗುರಿಗಳನ್ನು ಬೀಸುತ್ತಿದ್ದರು. ಪಾಂಡವರು ಗಜತುರಗರಥಪದಾತಿ ಸೈನ್ಯದೊಡಗೂಡಿದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಸಾಕು ನೇಮವ ಕೊಡಿಯೆನುತ ಕುಂ
ತೀ ಕುಮಾರರು ಬೀಳುಕೊಂಡರು
ನೂಕಿ ಹೊಕ್ಕುದು ದಾರವಟ್ಟದಲಿವರ ಪರಿವಾರ
ತೋಕಿದವು ಸೀಗುರಿಗಳೆಡ ಬಲ
ದಾಕೆಯಲಿ ಪಾಂಡವ ಕುಮಾರಾ
ನೀಕ ಬೆರೆಸಿತು ಗಜತುರಗ ರಥ ಪಾಯದಳ ಸಹಿತ ॥66॥
೦೬೭ ಕಳೆದೆವೇ ಖಳರೊಡ್ಡಿದಿರುಬಿನ ...{Loading}...
ಕಳೆದೆವೇ ಖಳರೊಡ್ಡಿದಿರುಬಿನ
ಕುಳಿಗಳನು ಕೈತಪ್ಪು ಮಾಡದೆ
ಸಲಹಿದೆವೆ ಸತ್ತಯವನು ಸುಜನರ ಕಲೆಗೆ ಸಂದೆವಲೆ
ಕಳವಳದ ಕಡುಗಡಲೊಳಾಳದೆ
ಸುಳಿದೆವಿತ್ತಲು ಶಿವ ಶಿವಾ ಯದು
ತಿಲಕ ಗದುಗಿನ ವೀರ ನಾರಾಯಣನ ಕರುಣದಲಿ ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆ ಖಳರು ಒಡ್ಡಿದ ಇಕ್ಕಟ್ಟಿನ ಕುಳಿಗಳಲ್ಲಿ ಬೀಳದೆ ತಪ್ಪಿಸಿಕೊಂಡೆವಲ್ಲ ! ಕೈತಪ್ಪು ಮಾಡದೆ ಸತ್ಯವನ್ನು ಕಾಪಾಡಿಕೊಂಡೆಯಲ್ಲ ! ಸುಜನರ ಗುಂಪಿಗೆ ಸೇರಿದೆವಲ್ಲ ! ಕಳವಳದ ಮಹಾಸಾಗರದಲ್ಲಿ ಮುಳುಗಿಹೋಗದೆ ಈ ಕಡೆ ಪಾರಾಗಿ ಬಂದೆವಲ್ಲ ಶಿವ, ಶಿವಾ !
ಇದೆಲ್ಲ ಯದುತಿಲಕನಾದ ವೀರನಾರಾಯಣನ ಕೃಪೆ !” ಎಂದುಕೊಂಡರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಕಳೆದೆವೇ ಖಳರೊಡ್ಡಿದಿರುಬಿನ
ಕುಳಿಗಳನು ಕೈತಪ್ಪು ಮಾಡದೆ
ಸಲಹಿದೆವೆ ಸತ್ತಯವನು ಸುಜನರ ಕಲೆಗೆ ಸಂದೆವಲೆ
ಕಳವಳದ ಕಡುಗಡಲೊಳಾಳದೆ
ಸುಳಿದೆವಿತ್ತಲು ಶಿವ ಶಿವಾ ಯದು
ತಿಲಕ ಗದುಗಿನ ವೀರ ನಾರಾಯಣನ ಕರುಣದಲಿ ॥67॥