೦೦೦ ಸೂಚನೆ ರಾಯ ...{Loading}...
ಸೂಚನೆ: ರಾಯ ಪಾಂಡವರರಸಿ ಕಮಲ ದ
ಳಾಯತಾಕ್ಷಿಯ ಪರಿಭವವನೆರೆ
ಕಾಯಿದುದೆಲಾ ವೀರನಾರಾಯಣನ ಸಿರಿನಾಮ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂ : ಪಾಂಡವರ ಅರಸಿಯಾದ ದ್ರೌಪದಿಗೆ ಸಂಭವಿಸುತ್ತಿದ್ದ ಅಪಮಾನದಿಂದ ಆಕೆಯನ್ನು ವೀರನಾರಾಯಣನ ಸಿರಿನಾಮ ಕಾಪಾಡಿತಲ್ಲವೇ ?
ಪದಾರ್ಥ (ಕ.ಗ.ಪ)
ಮೂಲ ...{Loading}...
ಸೂಚನೆ: ರಾಯ ಪಾಂಡವರರಸಿ ಕಮಲ ದ
ಳಾಯತಾಕ್ಷಿಯ ಪರಿಭವವನೆರೆ
ಕಾಯಿದುದೆಲಾ ವೀರನಾರಾಯಣನ ಸಿರಿನಾಮ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ವಿದುರನ ಮಾತ ಮುರಿದು ನೃ
ಪಾಲನೆಚ್ಚರಿಸಿದನು ಕಣುಸನ್ನೆಯಲಿ ಸೌಬಲನ
ಏಳು ಧರ್ಮಜ ಸೋತೆಲಾ ನಿ
ನ್ನಾಳು ಕುದುರೆಯನಿನ್ನು ಸಾಕು ದ
ಯಾಳುವಲ್ಲ ಸುಯೋಧನನು ಧನವಿಲ್ಲ ನಿನಗೆಂದ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿದುರನ ಮಾತನ್ನು ಖಂಡಿಸಿ ದುರ್ಯೋಧನ ಶಕುನಿಯನ್ನು ಮುಂದುವರಿಸುವಂತೆ ಕಣ್ಣುಸನ್ನೆಯಿಂದ ಎಚ್ಚರಿಸಿದ. ಶಕುನಿ
ಧರ್ಮಜನನ್ನು ಹಂಗಿಸಿ ಮಾತನಾಡತೊಡಗಿದ. “ಏಳು ಧರ್ಮಜ, ಸೋತೆಯಲ್ಲಾ ನಿನ್ನ ಪದಾತಿ ಸೈನ್ಯವನ್ನು ಕುದುರೆಯ ಸೈನ್ಯವನ್ನು . ಸಾಕು. ಸುಯೋಧನ ದಯಾಳುವಲ್ಲ. ನಿನ್ನಲ್ಲಿ ಹೇಗೂ ಆಡಲು ಧನವಿಲ್ಲ.” ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ವಿದುರನ ಮಾತ ಮುರಿದು ನೃ
ಪಾಲನೆಚ್ಚರಿಸಿದನು ಕಣುಸನ್ನೆಯಲಿ ಸೌಬಲನ
ಏಳು ಧರ್ಮಜ ಸೋತೆಲಾ ನಿ
ನ್ನಾಳು ಕುದುರೆಯನಿನ್ನು ಸಾಕು ದ
ಯಾಳುವಲ್ಲ ಸುಯೋಧನನು ಧನವಿಲ್ಲ ನಿನಗೆಂದ ॥1॥
೦೦೨ ತೆಗೆವೆನೇ ಸಾರಿಗಳ ...{Loading}...
ತೆಗೆವೆನೇ ಸಾರಿಗಳ ನಿನ್ನೀ
ನಗೆಮೊಗದ ಸಿರಿ ಸೀದು ಕರಿಯಾ
ಯ್ತುಗುಳುತಿದೆ ನಿನ್ನನುಜರಿಂಗಿತ ರೋಷಪಾವಕನ
ಸೊಗಸು ಬೀಯದು ರಪಣವಿಲ್ಲದ
ಬೆಗಡು ನೋಯದು ಕ್ಷತ್ರಧರ್ಮದ
ತಗಹು ಸಾಯದು ನಿನಗೆನುತ ಗಹಗಹಿಸಿದನು ಶಕುನಿ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತೆಗೆದುಬಿಡಲೇ ಸಾರಿಗಳನ್ನೆಲ್ಲ ? ನಿನ್ನ ಈ ನಗೆಮುಖದ ಸಂಪತ್ತು ಸೀದು ಹೋಗಿ ಕರಿಕಾಗಿಬಿಟ್ಟಿದೆ ! ನಿನ್ನ ತಮ್ಮಂದಿರನ್ನು ನೋಡಿದರೆ ಅವರ ಮನೋಭಾವವು ರೋಷಾಗ್ನಿಯನ್ನು ಉಗುಳುತ್ತಿದೆ. ಆದರೂ ನಿನಗೆ ಜೂಜಿನ ಅಭಿರುಚಿ ಹೋಗಲಿಲ್ಲ. ಜೂಜಿಗೆ ಒಡ್ಡಲು ಹಣ ಇಲ್ಲವಲ್ಲಾ ಎಂಬ ಭಯ ನಿನ್ನನ್ನು ನೋಯಿಸುತ್ತಿಲ್ಲ. ಕ್ಷಾತ್ರದ ತಾಮಸ ನಿನ್ನನ್ನು ಬಿಡಲಿಲ್ಲ ಎಂದು ಶಕುನಿ ಗಹಗಹಿಸಿ ನಕ್ಕ.
ಪದಾರ್ಥ (ಕ.ಗ.ಪ)
ಮೂಲ ...{Loading}...
ತೆಗೆವೆನೇ ಸಾರಿಗಳ ನಿನ್ನೀ
ನಗೆಮೊಗದ ಸಿರಿ ಸೀದು ಕರಿಯಾ
ಯ್ತುಗುಳುತಿದೆ ನಿನ್ನನುಜರಿಂಗಿತ ರೋಷಪಾವಕನ
ಸೊಗಸು ಬೀಯದು ರಪಣವಿಲ್ಲದ
ಬೆಗಡು ನೋಯದು ಕ್ಷತ್ರಧರ್ಮದ
ತಗಹು ಸಾಯದು ನಿನಗೆನುತ ಗಹಗಹಿಸಿದನು ಶಕುನಿ ॥2॥
೦೦೩ ಎಲವೋ ಸೌಬಲ ...{Loading}...
ಎಲವೋ ಸೌಬಲ ವಿತ್ತವೀಸರ
ಲಳಿದುದೆ ನೀ ನಗುವವೋಲ್ನ
ಮ್ಮೊಳಗು ಡಿಳ್ಳವೆ ರಪಣವಿದೆಲ್ಲಾ ಬಹಳ ಭಂಡಾರ
ಸುಳಿಸು ಹಾಸಂಗಿಗಳ ಮೋಹರ
ಗೊಳಿಸು ಸಾರಿಯನೊಂದು ರೇಖೆಯ
ಬಳಿಯಲೊಂದೇ ಕೋಟಿ ಧನವೆಂದೊದರಿದನು ಭೂಪ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ಕೆರಳಿದ ಧರ್ಮರಾಜ “ಎಲವೋ ಸೌಬಲ, ನನ್ನ ಧನ ಇಷ್ಟರಲ್ಲೇ ಮುಗಿದುಹೋಯಿತೇ ? ನೀನು ನನ್ನನ್ನು ನೋಡಿ ನಗುವ ಮಟ್ಟಿಗೆ ನನ್ನೊಳಗಿನ ಶಕ್ತಿ ಕುಗ್ಗಿಹೋಯಿತೆಂದು ತಿಳಿದೆಯಾ ? ಬಹಳ ಭಂಡಾರದ ಧನವಿದೆಯಯ್ಯಾ ! ಹಾಕು ದಾಳಗಳನ್ನು, ಸಾರಿಗಳನ್ನೆಲ್ಲ ಜೋಡಿಸು. ಒಂದು ರೇಖೆಯ ಬಳಿಗೆ ಒಂದು ಕೋಟಿ ಧನ ಪಣ ಎಂದು ಕೂಗಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಎಲವೋ ಸೌಬಲ ವಿತ್ತವೀಸರ
ಲಳಿದುದೆ ನೀ ನಗುವವೋಲ್ನ
ಮ್ಮೊಳಗು ಡಿಳ್ಳವೆ ರಪಣವಿದೆಲ್ಲಾ ಬಹಳ ಭಂಡಾರ
ಸುಳಿಸು ಹಾಸಂಗಿಗಳ ಮೋಹರ
ಗೊಳಿಸು ಸಾರಿಯನೊಂದು ರೇಖೆಯ
ಬಳಿಯಲೊಂದೇ ಕೋಟಿ ಧನವೆಂದೊದರಿದನು ಭೂಪ ॥3॥
೦೦೪ ದುಗುಣಕಿಕ್ಕಿದನರಸನಾಚೆಗೆ ...{Loading}...
ದುಗುಣಕಿಕ್ಕಿದನರಸನಾಚೆಗೆ
ತೆಗೆದನವ ಮೂರೆಂದು ನಾಲ್ಕ
ಕ್ಕುಗಿದನವನಿಪನೈದ ಕಳೆದನು ಬಹಳವನು ಶಕುನಿ
ತೆಗೆದ ನಿಮ್ಮಡಿಗರಸನವನಾ
ತ್ರಿಗುಣ ಪಂಚಕ ಸಪ್ತ ನವಮ
ಪ್ರಗುಣವೆಂದನು ಶಕುನಿ ಸೋಲಿಸಿದನು ಮಹೀಪತಿಯ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುಧಿಷ್ಠಿರನು ಹಿಂದೆ ಇಟ್ಟಿದ್ದ ಎರಡರಷ್ಟಕ್ಕೆ ಪಣವನ್ನಿಟ್ಟ. ಅದನ್ನು ಆಚೆಗೆ ತೆಗೆದನು ಶಕುನಿ. ಯುಧಿಷ್ಠಿರ ಮೂರರಷ್ಟಕ್ಕೆ ಇಟ್ಟ. ಶಕುನಿ ಇದನ್ನು ಕಳೆದ. ಯುಧಿಷ್ಠಿರ ಅದರ ಇಮ್ಮಡಿಗೆ ತೆಗೆದ. ಅವನು ಅದರ ಮೂರರಷ್ಟು ಎಂದ. ಹೀಗೆ ಏರಿಸುತ್ತಾ ಐದು, ಏಳು, ಪ್ರಗುಣ ಎಂದರು. ಕಡೆಗೆ ಶಕುನಿ ಧರ್ಮಜನನ್ನು ಸೋಲಿಸಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ದುಗುಣಕಿಕ್ಕಿದನರಸನಾಚೆಗೆ
ತೆಗೆದನವ ಮೂರೆಂದು ನಾಲ್ಕ
ಕ್ಕುಗಿದನವನಿಪನೈದ ಕಳೆದನು ಬಹಳವನು ಶಕುನಿ
ತೆಗೆದ ನಿಮ್ಮಡಿಗರಸನವನಾ
ತ್ರಿಗುಣ ಪಂಚಕ ಸಪ್ತ ನವಮ
ಪ್ರಗುಣವೆಂದನು ಶಕುನಿ ಸೋಲಿಸಿದನು ಮಹೀಪತಿಯ ॥4॥
೦೦೫ ಎಣಿಸಿದನು ರೇಖೆಗಳ ...{Loading}...
ಎಣಿಸಿದನು ರೇಖೆಗಳ ನಿಮ್ಮೊಡ
ಗಣಿತ ಸಂಖ್ಯಾ ಸಿದ್ಧವಸ್ತುವ
ನೆಣಿಸಲರ್ಬುದ ಸಂಖ್ಯೆಯಾಯಿತು ಹಲಗೆಯೊಂದರಲಿ
ಗುಣನಿಧಿಯೆ ಮಗುಳೊಡ್ಡಲಾಪರೆ
ಪಣವ ಸಬುದಿಸು ಕೇಳ್ವೆನೆನೆ ನೃಪ
ಗುಣಶಿರೋಮಣಿ ಧರ್ಮಸುತ ನಸು ನಗುತಲಿಂತೆಂದ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರೇಖೆಗಳನ್ನು ಎಣಿಸಿದಾಗ ಪರಸ್ಪರರು ಏರಿಸಿದ ಗಣಿತದ ಪ್ರಕಾರ ಒಂದೇ ಹಲಗೆಗೆ ಅರ್ಬುದ ಸಂಖ್ಯೆಯಾಯಿತು. ಶಕುನಿ ಮತ್ತೆ
ಧರ್ಮಜನನ್ನು “ಗುಣನಿಧಿಯೆ, ಮತ್ತೆ ಪಣವನ್ನು ಒಡ್ಡಬಲ್ಲೆಯಾದರೆ ಆ ಪಣವನ್ನು ಹೆಸರಿಸು” ಎಂದ. ಅದಕ್ಕೆ ಆ ನೃಪಶಿರೋಮಣಿ ನಗುತ್ತಲೇ ಹೇಳಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಎಣಿಸಿದನು ರೇಖೆಗಳ ನಿಮ್ಮೊಡ
ಗಣಿತ ಸಂಖ್ಯಾ ಸಿದ್ಧವಸ್ತುವ
ನೆಣಿಸಲರ್ಬುದ ಸಂಖ್ಯೆಯಾಯಿತು ಹಲಗೆಯೊಂದರಲಿ
ಗುಣನಿಧಿಯೆ ಮಗುಳೊಡ್ಡಲಾಪರೆ
ಪಣವ ಸಬುದಿಸು ಕೇಳ್ವೆನೆನೆ ನೃಪ
ಗುಣಶಿರೋಮಣಿ ಧರ್ಮಸುತ ನಸು ನಗುತಲಿಂತೆಂದ ॥5॥
೦೦೬ ಹೂಡು ಸಾರಿಯ ...{Loading}...
ಹೂಡು ಸಾರಿಯ ರೇಖೆ ರೇಖೆಗೆ
ಮಾಡಿದರ್ಬುದ ಧನ ಸುಯೋಧನ
ನಾಡಿ ನೋಡಲಿ ಹಾಯ್ಕು ಹಾಸಂಗಿಗಳ ಹಾಯ್ಕೆನುತ
ಆಡಿದನು ಯಮಸೂನು ಖಾಡಾ
ಖಾಡಿಯಲಿ ಸಾರಿಗಳೊಡನೆ ಹೋ
ಗಾಡಿದನು ಭಂಡಾರವನು ಭೂಪಾಲ ಕೇಳ್ ಎಂದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾರಿಯ ರೇಖೆ ರೇಖೆಗೆ ಅರ್ಬುದ ಧನವನ್ನು ಒಡ್ಡಿದ್ದೇನೆ. ಸುಯೋಧನನು ಆಡಿನೋಡಲಿ. ಹಾಕು ದಾಳಗಳನ್ನು ಹಾಕು”
ಎಂದ. ಹೀಗೆ ಖಾಡಾಖಾಡಿಯಾಗಿ ಸಾರಿಗಳೊಡನೆ ಸೆಣೆಸಿದ. ಆವೇಶದ ಯುದ್ಧದಲ್ಲಿ ತನ್ನ ಸಮಸ್ತ ಭಂಡಾರವನ್ನೂ ಕಳೆದುಕೊಂಡ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಹೂಡು ಸಾರಿಯ ರೇಖೆ ರೇಖೆಗೆ
ಮಾಡಿದರ್ಬುದ ಧನ ಸುಯೋಧನ
ನಾಡಿ ನೋಡಲಿ ಹಾಯ್ಕು ಹಾಸಂಗಿಗಳ ಹಾಯ್ಕೆನುತ
ಆಡಿದನು ಯಮಸೂನು ಖಾಡಾ
ಖಾಡಿಯಲಿ ಸಾರಿಗಳೊಡನೆ ಹೋ
ಗಾಡಿದನು ಭಂಡಾರವನು ಭೂಪಾಲ ಕೇಳೆಂದ ॥6॥
೦೦೭ ಸಾರಿ ಸೋತವು ...{Loading}...
ಸಾರಿ ಸೋತವು ಸೋಲು ನಿನಗನು
ಸಾರಿ ನೀವೈವರು ವನಾಂತಕೆ
ಸಾರಿ ಸಾಕಿನ್ನೊಡ್ಡಲಾಪರೆ ಮತ್ತೆ ನುಡಿ ಧನವ
ಭೂರಮಣ ಹೇಳೆನಲು ರೇಖೆಯ
ಭಾರಿಯೊಡ್ಡಕೆ ಪದ್ಮ ಸಂಖ್ಯೆಯ
ಭೂರಿ ಧನವಿದೆ ರಪಣವೆಂದನು ನಗುತ ಯಮಸೂನು ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸಾರಿಯ ಆಟ ಸೋತಿತು. ಸೋಲು ನಿನ್ನನ್ನು ಅನುಸರಿಸಿಯೇ ಬಂತು. ಆದ್ದರಿಂದ ನೀವು ಕಾಡಿನೊಳಕ್ಕೆ ಹೋಗಿ. ಇನ್ನೂ ನೀನು
ಪಣವನ್ನು ಒಡ್ಡಬಲ್ಲೆಯಾದರೆ ಧನವೆಷ್ಟು ಹೇಳು” ಎಂದ ಶಕುನಿ. ಅದಕ್ಕೆ ಯಮಸೂನು ನಗುತ್ತಲೇ ಹೇಳಿದ. “ರೇಖೆಯ ಭಾರೀ ಒಡ್ಡಕ್ಕೆ
ಪದ್ಮಸಂಖ್ಯೆಯ ಮಹತ್ತಾದ ಧನವನ್ನು ಪಣವೆಂದು ಹೇಳಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಸಾರಿ ಸೋತವು ಸೋಲು ನಿನಗನು
ಸಾರಿ ನೀವೈವರು ವನಾಂತಕೆ
ಸಾರಿ ಸಾಕಿನ್ನೊಡ್ಡಲಾಪರೆ ಮತ್ತೆ ನುಡಿ ಧನವ
ಭೂರಮಣ ಹೇಳೆನಲು ರೇಖೆಯ
ಭಾರಿಯೊಡ್ಡಕೆ ಪದ್ಮ ಸಂಖ್ಯೆಯ
ಭೂರಿ ಧನವಿದೆ ರಪಣವೆಂದನು ನಗುತ ಯಮಸೂನು ॥7॥
೦೦೮ ಬರಹಕಿಮ್ಮಡಿ ನೂರು ...{Loading}...
ಬರಹಕಿಮ್ಮಡಿ ನೂರು ಮಡಿ ಸಾ
ವಿರದ ಮಡಿ ಪರಿಯಂತವಿಕ್ಕಿತು
ಹರುಷ ನನೆ ಕೊನೆಯಾಯ್ತು ಹೆಚ್ಚಿತು ಕಲಿಮಲಾವೇಶ
ಸ್ಥಿರವೆ ಹಿಂಗಿತು ವಾಸಿ ಪಾಡಿನ
ದುರುಳತನವುಬ್ಬೆದುದಡಿಗಡಿ
ಗರಸನೊಡ್ಡಿದ ಮೇಲೆ ಮೇಲೊಡ್ಡವನು ವಿರಚಿಸಿದ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬರಹಕ್ಕೆ ಎರಡರಷ್ಟು, ನೂರರಷ್ಟು, ಸಾವಿರದಷ್ಟು ಎಂದು ಪರಸ್ಪರ ಪಣವನ್ನು ಏರಿಸುತ್ತ ಹೋದರು. ಕಲಿಮಲಾವೇಶ
ಹೆಚ್ಚಿತು. ಅವರ ಹರ್ಷ ಹೆಚ್ಚಿ ನನೆಕೊನೆಯಾಯ್ತು. ಸ್ಥಿರತೆ ಇಲ್ಲವಾಯಿತು. ಪಟ್ಟುಹಿಡಿವ ಹಟದ ದುರುಳತನ ಅಧಿಕವಾಯಿತು. ಧರ್ಮಜ ಒಡ್ಡದ ಮೇಲೆ ಮೇಲೊಡ್ಡವನ್ನು ಹೇಳುತ್ತಲೇ ಹೋದ.
ಪದಾರ್ಥ (ಕ.ಗ.ಪ)
ಕಲಿಮಲ - ಪೈಪೋಟಿಯ ತಾಮಸ
ನನೆಕೊನೆ - ಚಿಗುರನ್ನು ಚಿವುಟಿ ಹಾಕುವುದು.
ಮೂಲ ...{Loading}...
ಬರಹಕಿಮ್ಮಡಿ ನೂರು ಮಡಿ ಸಾ
ವಿರದ ಮಡಿ ಪರಿಯಂತವಿಕ್ಕಿತು
ಹರುಷ ನನೆ ಕೊನೆಯಾಯ್ತು ಹೆಚ್ಚಿತು ಕಲಿಮಲಾವೇಶ
ಸ್ಥಿರವೆ ಹಿಂಗಿತು ವಾಸಿ ಪಾಡಿನ
ದುರುಳತನವುಬ್ಬೆದುದಡಿಗಡಿ
ಗರಸನೊಡ್ಡಿದ ಮೇಲೆ ಮೇಲೊಡ್ಡವನು ವಿರಚಿಸಿದ ॥8॥
೦೦೯ ತೀರಿತಿನ್ದ್ರಪ್ರಸ್ಥದುರು ಭಂ ...{Loading}...
ತೀರಿತಿಂದ್ರಪ್ರಸ್ಥದುರು ಭಂ
ಡಾರ ತನ್ನರಮನೆಯ ಪೈಕದ
ವಾರಕದ ಭಂಗಾರವೊಡ್ಡಿತು ಕೋಟಿ ಸಂಖ್ಯೆಯಲಿ
ಸೇರಿತದು ಕುರುಪತಿಗೆ ರಾಯನ
ನಾರಿಯರ ವಿವಿಧಾಭರಣ ಸಿಂ
ಗಾರವೊಡ್ಡಿತು ಕೊಂಡು ಮುಳುಗಿತು ಖಡ್ಡತನ ನೃಪನ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾಗಾಗಿ ಇಂದ್ರಪ್ರಸ್ಥದ ಮಹಾಭಂಡಾರದಲ್ಲಿದ್ದ ಹಣವೆಲ್ಲ ತೀರಿತು. ಅನಂತರ ಅರಮನೆಗೆ ಸೇರಿದ ವಾರಸ್ತ್ರೀಯರ ಕೋಟಿಗಟ್ಟಲೆ
ಬಂಗಾರದ ಆಭರಣಗಳನ್ನು ಒಡ್ಡಿದ. ಅದೂ ಕುರುಪತಿಗೆ ಸೇರಿತು. ಅನಂತರ ತನ್ನ ಅಂತಃಪುರದ ಸ್ತ್ರೀಯರ ವಿವಿಧಾಭರಣ
ಶೃಂಗಾರ ವಸ್ತುಗಳನ್ನೆಲ್ಲ ಒಡ್ಡಿದ. ಧರ್ಮಜನ ಹಟಮಾರಿತನದಿಂದ ಎಲ್ಲವೂ ಅವನಿಗೇ ಸೇರಿ ಇವನನ್ನು ಮುಳುಗಿಸಿತು.
ಪದಾರ್ಥ (ಕ.ಗ.ಪ)
ಮೂಲ ...{Loading}...
ತೀರಿತಿಂದ್ರಪ್ರಸ್ಥದುರು ಭಂ
ಡಾರ ತನ್ನರಮನೆಯ ಪೈಕದ
ವಾರಕದ ಭಂಗಾರವೊಡ್ಡಿತು ಕೋಟಿ ಸಂಖ್ಯೆಯಲಿ
ಸೇರಿತದು ಕುರುಪತಿಗೆ ರಾಯನ
ನಾರಿಯರ ವಿವಿಧಾಭರಣ ಸಿಂ
ಗಾರವೊಡ್ಡಿತು ಕೊಂಡು ಮುಳುಗಿತು ಖಡ್ಡತನ ನೃಪನ ॥9॥
೦೧೦ ನಕುಲ ಸಹದೇವಾರ್ಜುನರ ...{Loading}...
ನಕುಲ ಸಹದೇವಾರ್ಜುನರ ಮಣಿ
ಮಕುಟ ಕರ್ಣಾಭರಣ ಪದಕಾ
ದಿಕ ಸಮಸ್ತಾಭರಣವೊಡ್ಡಿತು ಹಲಗೆಯೊಂದರಲಿ
ವಿಕಟ ಮಾಯಾ ವಿಷಮ ಕರ್ಮವ
ನಕಟ ಬಲ್ಲನೆ ಸಾಧುಜನ ಸೇ
ವಕನು ಸೋತನು ಸಾಧ್ಯವಹುದೇ ವಿಧಿಯ ಮುಳಿಸಿನಲಿ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಕುಲ, ಸಹದೇವ, ಅರ್ಜುನರ ರತ್ನಕಿರೀಟ ಕರ್ಣಾಭರಣ ಪದಕ ಮೊದಲಾದ ಸಮಸ್ತ ಆಭರಣವನ್ನು ಒಂದೇ ಹಲಗೆಗೆ ಒಡ್ಡಿ ಸೋತ. ಇದು ವಿಧಿಯ ಮುಳಿಸು. ಈ ವಿಕಟ ಮಾಯಾ ವಿಷಮ ಕರ್ಮವನ್ನು ಸಾಧು ಜನ ಸೇವಕನಾದ ಧರ್ಮಜ ಅರಿಯುವನೇ ?
ಪದಾರ್ಥ (ಕ.ಗ.ಪ)
ಮೂಲ ...{Loading}...
ನಕುಲ ಸಹದೇವಾರ್ಜುನರ ಮಣಿ
ಮಕುಟ ಕರ್ಣಾಭರಣ ಪದಕಾ
ದಿಕ ಸಮಸ್ತಾಭರಣವೊಡ್ಡಿತು ಹಲಗೆಯೊಂದರಲಿ
ವಿಕಟ ಮಾಯಾ ವಿಷಮ ಕರ್ಮವ
ನಕಟ ಬಲ್ಲನೆ ಸಾಧುಜನ ಸೇ
ವಕನು ಸೋತನು ಸಾಧ್ಯವಹುದೇ ವಿಧಿಯ ಮುಳಿಸಿನಲಿ ॥10॥
೦೧೧ ಸೋತೆಲಾ ಕೌನ್ತೇಯ ...{Loading}...
ಸೋತೆಲಾ ಕೌಂತೇಯ ನಿಮಿಷಕೆ
ಬೀತುದೇ ನಿನ್ನಖಿಳ ಸಿರಿ ವಿ
ಖ್ಯಾತಿ ಬರತುದೆ ವೇಡೆಗೆದರಿತೆ ಮನದ ವಾಸಿಗಳ
ಪ್ರೀತಿಯುಂಟೇ ನಿಮಗೆ ಮತ್ತೀ
ದ್ಯೂತದಲಿ ಧನವಿಲ್ಲಲಾ ಗ
ರ್ವಾತಿರೇಕವ ಬೀಳುಗೊಂಡಿರೆಯೆಂದನಾ ಶಕುನಿ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗಲೂ ಶಕುನಿ ಬಿಡಲಿಲ್ಲ. ಮತ್ತೆ ಯುಧಿಷ್ಠಿರನನ್ನು ಹಂಗಿಸಿದ. ಕೌಂತೇಯಾ, ಸೋತೆಯಲ್ಲಾ ! ನಿಮಿಷ ಮಾತ್ರದಲ್ಲಿ ನಿನ್ನ ಸಮಸ್ತ ಸಂಪತ್ತನ್ನು ಕಳೆದುಕೊಂಡು ಬಿಟ್ಟೆ. ನೀನುಗಳಿಸಿದ ಪ್ರಖ್ಯಾತಿಯೆಲ್ಲ ಬತ್ತಿ ಹೋಯಿತು. ನಿನ್ನ ದರ್ಪದ ಕೋಟೆಯೆಲ್ಲ ಮುರಿದುಬಿದ್ದಿತೆ ? ನಿನಗೆ ಇನ್ನೂ ದ್ಯೂತದ ಮೇಲೆ ಅಕ್ಕರೆಯಿದೆಯೇ ? ಇದ್ದರೂ ಜೂಜಾಡಲು ನಿನ್ನಲ್ಲಿ ಹಣವಿಲ್ಲವಲ್ಲಾ !
ನಿನ್ನ ಗರ್ವದ ಅತಿರೇಕವನ್ನೆಲ್ಲ ಕಳೆದುಕೊಂಡು ಬಿಟ್ಟೆಯಾ ? ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಸೋತೆಲಾ ಕೌಂತೇಯ ನಿಮಿಷಕೆ
ಬೀತುದೇ ನಿನ್ನಖಿಳ ಸಿರಿ ವಿ
ಖ್ಯಾತಿ ಬರತುದೆ ವೇಡೆಗೆದರಿತೆ ಮನದ ವಾಸಿಗಳ
ಪ್ರೀತಿಯುಂಟೇ ನಿಮಗೆ ಮತ್ತೀ
ದ್ಯೂತದಲಿ ಧನವಿಲ್ಲಲಾ ಗ
ರ್ವಾತಿರೇಕವ ಬೀಳುಗೊಂಡಿರೆಯೆಂದನಾ ಶಕುನಿ ॥11॥
೦೧೨ ಖಿನ್ನನಾದನು ರಾಜ್ಯಲಕ್ಷ್ಮಿಯ ...{Loading}...
ಖಿನ್ನನಾದನು ರಾಜ್ಯಲಕ್ಷ್ಮಿಯ
ಬೆನ್ನ ಕಂಡನು ಬಳಚಿ ಹೋದ ನಿ
ಜೋನ್ನತಿಯಲವನೀಶನಿದ್ದನು ಮುರಿದ ಮಹಿಮೆಯಲಿ
ಇನ್ನು ಪಣವೇನೋ ವಿರೋಧಿಗ
ಳೆನ್ನ ಭಂಗಿಸಿ ನುಡಿದರದಕಿ
ನ್ನೆನ್ನಿನಿಕ್ಕಿ ದ್ಯೂತವಿಜಯವ ಸಾಧಿಸುವೆನೆಂದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುಧಿಷ್ಠಿರ ತೀವ್ರವಾಗಿ ದುಃಖಗೊಂq. ರಾಜ್ಯಲಕ್ಷ್ಮಿ ತನ್ನನ್ನು ಬಿಟ್ಟು ಹೋಗುತ್ತಿದ್ದಾಗ ಅವಳ ಬೆನ್ನನ್ನು ಕಂಡ. ಅವನ ಹಿರಿತನವೆಲ್ಲ ಕಡಿದುಹೋಯಿತು. ಮಹಿಮೆಯೆಲ್ಲ ನಾಶವಾಯಿತು. ಇಂತಹ ಹೀನಸ್ಥಿತಿಯಲ್ಲಿದ್ದ. ಇನ್ನು ಪಣವೇನನ್ನು ಒಡ್ಡಲಿ ? ವಿರೋಧಿಗಳು ನನ್ನನ್ನು ಅಪಮಾನಗೊಳಿಸಿ ಮಾತನ್ನಾಡುತ್ತಾರೆ. ಆದ್ದರಿಂದ ನನ್ನನ್ನೇ ಪಣವಾಗಿ ಒಡ್ಡಿ ಈ ದ್ಯೂತದಲ್ಲಿ ವಿಜಯವನ್ನು ಸಾಧಿಸಿಕೊಳ್ಳುತ್ತೇನೆ ಎಂದುಕೊಂಡ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಖಿನ್ನನಾದನು ರಾಜ್ಯಲಕ್ಷ್ಮಿಯ
ಬೆನ್ನ ಕಂಡನು ಬಳಚಿ ಹೋದ ನಿ
ಜೋನ್ನತಿಯಲವನೀಶನಿದ್ದನು ಮುರಿದ ಮಹಿಮೆಯಲಿ
ಇನ್ನು ಪಣವೇನೋ ವಿರೋಧಿಗ
ಳೆನ್ನ ಭಂಗಿಸಿ ನುಡಿದರದಕಿ
ನ್ನೆನ್ನಿನಿಕ್ಕಿ ದ್ಯೂತವಿಜಯವ ಸಾಧಿಸುವೆನೆಂದ ॥12॥
೦೧೩ ಎಲವೊ ಫಡ ...{Loading}...
ಎಲವೊ ಫಡ ಫಡ ಶಕುನಿ ಗರ್ವದ
ತಳಿ ಮುರಿವುದೇ ನಿನ್ನ ದುರ್ಮತಿ
ಗಳಿಗೆ ಹೂಡಿದ ದುರ್ಗವಿದೆ ತನ್ನಂತರಂಗದಲಿ
ಉಳಿದ ಧನವೇಗುವುದು ಜೀವ
ಸ್ಥಳವಿದೇ ಮೇಲೊಡ್ಡವೊಂದೇ
ಹಲಗೆಗೊಡ್ಡಿದೆನೆನ್ನ ನಕುಲನೆಂದನಾ ಭೂಪ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ತನ್ನನ್ನು ಹಂಗಿಸಿದ ಶಕುನಿಗೆ ಉತ್ತರ ಕೊಡುತ್ತಾನೆ. “ಎಲವೋ ಫಡ ಫಡ ! ಶಕುನಿ, ಗರ್ವದ ತಳಿ ಕೊನೆಗೊಳ್ಳುತ್ತದೆಯೇನಯ್ಯಾ ! ನಿನ್ನಂತಹ ದುಷ್ಟರಿಗಾಗಿ ಹೂಡಿದ ದುರ್ಗವೇ ಇದೆ. ತನ್ನ ಅಂತರಂಗದಲ್ಲಿ ಉಳಿದ ಧನ ಏನು
ಮಾಡುವುದಯ್ಯ ? ಈಗ ಜೀವಸ್ಥಲವನ್ನು ಮೇಲೊಡ್ಡವಾಗಿ ಒಡ್ಡುತ್ತಿದ್ದೇನೆ. ಇದೇ ನನ್ನ ನಕುಲನನ್ನು ಒಂದೇ ಹಲಗೆಗೆ ಒಡ್ಡಿದೆ” ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಎಲವೊ ಫಡ ಫಡ ಶಕುನಿ ಗರ್ವದ
ತಳಿ ಮುರಿವುದೇ ನಿನ್ನ ದುರ್ಮತಿ
ಗಳಿಗೆ ಹೂಡಿದ ದುರ್ಗವಿದೆ ತನ್ನಂತರಂಗದಲಿ
ಉಳಿದ ಧನವೇಗುವುದು ಜೀವ
ಸ್ಥಳವಿದೇ ಮೇಲೊಡ್ಡವೊಂದೇ
ಹಲಗೆಗೊಡ್ಡಿದೆನೆನ್ನ ನಕುಲನೆಂದನಾ ಭೂಪ ॥13॥
೦೧೪ ವಾಸಿಗನುಜನನೊಡ್ಡಿದರೆ ನಮ ...{Loading}...
ವಾಸಿಗನುಜನನೊಡ್ಡಿದರೆ ನಮ
ಗೀಸರಲಿ ಭಯವೇನು ನೋಡುವೆ
ವೈಸಲೇ ನೃಪ ಹಾಯ್ಕು ಹಾಸಂಗಿಗಳ ಹಾಯ್ಕೆನುತ
ಆ ಶಕುನಿ ಪೂರ್ವಾರ್ಜಿತದ ಡೊ
ಳ್ಳಾಸದಲಿ ಡಾವರಿಸಿ ಧರ್ಮವಿ
ನಾಶಿ ನಕುಲನ ಗೆಲಿದು ಬೊಬ್ಬಿರಿದನವನಿಪನ ಜರೆದ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಿನ್ನ ಹಟಕ್ಕಾಗಿ ನಿನ್ನ ತಮ್ಮನನ್ನು ಒಡ್ಡಿದರೆ ಇಷ್ಟರಿಂದ ನಮಗೆ ಭಯವೇನು ? ನೋಡೇ ಬಿಡೋಣ, ರಾಜಾ, ಹಾಕು ದಾಳಗಳನ್ನು ಹಾಕು !” ಎಂದ. ಧರ್ಮವಿನಾಶಿಯಾದ ಶಕುನಿ ಪೂರ್ವಾರ್ಜಿತದ ಮೋಸವಿದ್ಯೆಯಲ್ಲಿ ವಿಜೃಂಭಿಸಿ ನಕುಲನನ್ನು ಗೆದ್ದು ಅಬ್ಬರಿಸುತ್ತಾ ಯುಧಿಷ್ಠಿರನನ್ನೇ ಜರೆದ.
ಪದಾರ್ಥ (ಕ.ಗ.ಪ)
ವಾಸಿ - ಪಣ
ಮೂಲ ...{Loading}...
ವಾಸಿಗನುಜನನೊಡ್ಡಿದರೆ ನಮ
ಗೀಸರಲಿ ಭಯವೇನು ನೋಡುವೆ
ವೈಸಲೇ ನೃಪ ಹಾಯ್ಕು ಹಾಸಂಗಿಗಳ ಹಾಯ್ಕೆನುತ
ಆ ಶಕುನಿ ಪೂರ್ವಾರ್ಜಿತದ ಡೊ
ಳ್ಳಾಸದಲಿ ಡಾವರಿಸಿ ಧರ್ಮವಿ
ನಾಶಿ ನಕುಲನ ಗೆಲಿದು ಬೊಬ್ಬಿರಿದನವನಿಪನ ಜರೆದ ॥14॥
೦೧೫ ಅರಸ ಸೋತೈ ...{Loading}...
ಅರಸ ಸೋತೈ ನಕುಲನನು ಹೇ
ವರಿಸದಿರು ಹೇಳೊಡ್ಡವನು ವಿ
ಸ್ತರಿಸಲೊಂದೇ ಹಲಗೆ ಸೋಲ್ವುದು ಹೇಳು ಹೇಳೆನಲು
ವರಿಸಿದೆನು ಸಹದೇವನನು ನೆರೆ
ಮರಳಿಚುವೆನೆನ್ನಖಿಳ ವಸ್ತೂ
ತ್ಕರವನೆಂದನು ಧರ್ಮನಂದನನರಸ ಕೇಳ್ ಎಂದ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸಾ ನೀನು ನಕುಲನನ್ನು ಸೋತುಬಿಟ್ಟೆ. ಬೇಸರಗೊಳ್ಳಬೇಡ. ಹಾಕುವುದು ಒಂದೇ ಹಲಗೆ, ಸೋಲುವುದು ಅಥವಾ ಗೆಲ್ಲುವುದು. ಒಡ್ಡವನ್ನು ಹೇಳು” ಎಂದ. “ಸಹದೇವನನ್ನು ಆಯ್ಕೆಮಾಡಿದ್ದೇನೆ. ಅದರಿಂದ ನಾನು ಕಳೆದುಕೊಂಡ ಸಮಸ್ತ ವಸ್ತುರಾಶಿಯನ್ನು ಹಿಂದಕ್ಕೆ ಪಡೆಯುತ್ತೇನೆ” ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಅರಸ ಸೋತೈ ನಕುಲನನು ಹೇ
ವರಿಸದಿರು ಹೇಳೊಡ್ಡವನು ವಿ
ಸ್ತರಿಸಲೊಂದೇ ಹಲಗೆ ಸೋಲ್ವುದು ಹೇಳು ಹೇಳೆನಲು
ವರಿಸಿದೆನು ಸಹದೇವನನು ನೆರೆ
ಮರಳಿಚುವೆನೆನ್ನಖಿಳ ವಸ್ತೂ
ತ್ಕರವನೆಂದನು ಧರ್ಮನಂದನನರಸ ಕೇಳೆಂದ ॥15॥
೦೧೬ ಹರಿಬದಲಿ ತನ್ನಖಿಳ ...{Loading}...
ಹರಿಬದಲಿ ತನ್ನಖಿಳ ವಸ್ತೂ
ತ್ಕರವ ಮರಳಿಚುವನು ಮಹೀಪತಿ
ಕಿರಿಯ ತಮ್ಮನವೊಡ್ಡಿದನು ಮಾದ್ರೀ ಕುಮಾರಕನ
ಅರಸ ದಾಯವೆ ಬಾ ಜಯಾಂಗದ
ಸಿರಿಯೆ ಬಾ ಕುರುರಾಯ ರಾಜೋ
ತ್ಕರುಷ ಸಿದ್ಧಿಯೆ ಬಾಯೆನುತ ಗರ್ಜಿಸಿದನಾ ಶಕುನಿ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಹಂಚಿಕೆಯಿಂದ ಈ ಮಾದ್ರೀಕುಮಾರನನ್ನು, ತನ್ನ ಕಿರಿಯ ತಮ್ಮನನ್ನು ಒಡ್ಡಿ ತನ್ನ ವಸ್ತುರಾಶಿಯನ್ನೆಲ್ಲ ಹಿಂದಕ್ಕೆ ಪಡೆದುಬಿಡುತ್ತಾನಂತೆ ! ಎಂದು ಹಾಸ್ಯಮಾಡಿ ಶಕುನಿ “ಅರಸು ದಾಯವೇ ಬಾ, ಜನಾಂಗದ ಸಿರಿಯೇ ಬಾ, ಕುರುರಾಜನ ರಾಜ್ಯೋತ್ಕರ್ಷಸಿದ್ಧಿಯೇ ಬಾ” ಎಂದು ಅಬ್ಬರಿಸಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಹರಿಬದಲಿ ತನ್ನಖಿಳ ವಸ್ತೂ
ತ್ಕರವ ಮರಳಿಚುವನು ಮಹೀಪತಿ
ಕಿರಿಯ ತಮ್ಮನವೊಡ್ಡಿದನು ಮಾದ್ರೀ ಕುಮಾರಕನ
ಅರಸ ದಾಯವೆ ಬಾ ಜಯಾಂಗದ
ಸಿರಿಯೆ ಬಾ ಕುರುರಾಯ ರಾಜೋ
ತ್ಕರುಷ ಸಿದ್ಧಿಯೆ ಬಾಯೆನುತ ಗರ್ಜಿಸಿದನಾ ಶಕುನಿ ॥16॥
೦೧೭ ಏನ ಬಣ್ಣಿಸುವೆನು ...{Loading}...
ಏನ ಬಣ್ಣಿಸುವೆನು ವಿಕಾರಿಗ
ಳೇನ ನೆನೆಯರು ಕಪಟ ವಿಧದಲಿ
ಮಾನನಿಧಿ ತಾ ಸೋತನನುಜದ್ವಯ ಮಹಾಧನವ
ಗ್ಲಾನಿಚಿತ್ತದೊಳಿಲ್ಲಲೇ ಸುಮ
ನೋನುರಾಗವೆ ಭೀಮ ಪಾರ್ಥರು
ತಾನಿದೊಮ್ಮಿಗೆ ಬದುಕಿದರು ನಿಮಗೆಂದನಾ ಶಕುನಿ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏನು ವರ್ಣಿಸಲಿ, ಈ ಕಪಟ ವಿಧಾನದಲ್ಲಿ ಆ ವಿಕಾರಿಗಳು ಏನನ್ನು ತಾನೇ ಯೋಚಿಸುವುದಿಲ್ಲ ? ಯಮಸೂನು ತನ್ನ ಇಬ್ಬರು ತಮ್ಮಂದಿರೆಂಬ ಮಹಾಧನವನ್ನು ಸೋತುಬಿಟ್ಟ. ಶಕುನಿ ಅಷ್ಟಕ್ಕೇ ಬಿಟ್ಟಾನೇ ? ನಿನ್ನ ಮನಸ್ಸಿನಲ್ಲಿ ದುಃಖವೇನಿಲ್ಲವಲ್ಲ ! ಮನಸ್ಸಿನಲ್ಲಿ
ಸಂತೋಷವೇ ಇರಬೇಕು. ಏಕೆಂದರೆ ಸಧ್ಯ ಭೀಮಾರ್ಜುನರು ನಿನ್ನ ಪಾಲಿಗೆ ಉಳಿದುಕೊಂಡರು." ಎಂದು ಹಂಗಿಸಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಏನ ಬಣ್ಣಿಸುವೆನು ವಿಕಾರಿಗ
ಳೇನ ನೆನೆಯರು ಕಪಟ ವಿಧದಲಿ
ಮಾನನಿಧಿ ತಾ ಸೋತನನುಜದ್ವಯ ಮಹಾಧನವ
ಗ್ಲಾನಿಚಿತ್ತದೊಳಿಲ್ಲಲೇ ಸುಮ
ನೋನುರಾಗವೆ ಭೀಮ ಪಾರ್ಥರು
ತಾನಿದೊಮ್ಮಿಗೆ ಬದುಕಿದರು ನಿಮಗೆಂದನಾ ಶಕುನಿ ॥17॥
೦೧೮ ಭೇದಮನ್ತ್ರವ ಮಾಡಿ ...{Loading}...
ಭೇದಮಂತ್ರವ ಮಾಡಿ ನಮ್ಮನು
ಭೇದಿಸುವ ಗಡ ಸುಬಲ ಸುತನಕ
ಟೀ ದುರಾತ್ಮನ ನೋಡಿರೈ ಸಭ್ಯರು ಶಿವಾಯೆನುತ
ಆ ದುರಾಗ್ರಹಿ ಲೋಕಜನ ಪರಿ
ವಾದಪದನಿರ್ಭೀತನಕ್ಷ ವಿ
ನೋದ ಕರ್ದಮ ಮಗ್ನನೊಡ್ಡಿದನಾ ಧನಂಜಯನ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಯ್ಯೋ ಈ ಶಕುನಿ ಅಣ್ಣತಮ್ಮಂದಿರಾದ ನಮ್ಮಲ್ಲಿ ಭೇದವನ್ನುಂಟುಮಾಡುತ್ತಿದ್ದಾನಲ್ಲ. ಸಭ್ಯರಾದ ನೀವೇ ನೋಡಿ ಈ ದುರಾತ್ಮನನ್ನು, ಶಿವಾ !” ಎನ್ನುತ್ತಾ ಹಟಮಾಡಿ ಆ ಕೆಟ್ಟ ಕೆಲಸಕ್ಕೆ ಯುಧಿಷ್ಠಿರ, ಲೋಕದ ಜನರ ಅಪವಾದದ ಪದವಿ ತನಗೆ ಬರುತ್ತದಲ್ಲಾ ಎಂಬ ಭಯವೇ ಇಲ್ಲದವನಾಗಿ, ಪಗಡೆಯಾಟದ ವಿನೋದವೆಂಬ ಕೆಸರಿನಲ್ಲಿ ಮಗ್ನನಾಗಿ ಅರ್ಜುನನ್ನು ಒಡ್ಡಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಭೇದಮಂತ್ರವ ಮಾಡಿ ನಮ್ಮನು
ಭೇದಿಸುವ ಗಡ ಸುಬಲ ಸುತನಕ
ಟೀ ದುರಾತ್ಮನ ನೋಡಿರೈ ಸಭ್ಯರು ಶಿವಾಯೆನುತ
ಆ ದುರಾಗ್ರಹಿ ಲೋಕಜನ ಪರಿ
ವಾದಪದನಿರ್ಭೀತನಕ್ಷ ವಿ
ನೋದ ಕರ್ದಮ ಮಗ್ನನೊಡ್ಡಿದನಾ ಧನಂಜಯನ ॥18॥
೦೧೯ ಎಲೆ ಧನಞ್ಜಯ ...{Loading}...
ಎಲೆ ಧನಂಜಯ ನಿನ್ನನೊಡ್ಡಿದ
ಛಲಿ ಯುಧಿಷ್ಠಿರನಿಲ್ಲಿ ಸೋತರೆ
ಬಳಿಕ ನಿನ್ನನು ಮಾರಿದನಲಾ ಕೌರವೇಶ್ವರಗೆ
ತಿಳಿದು ಭೀಮಾರ್ಜುನರು ನೀವ್ ನಿ
ಮ್ಮೊಳಗೆ ಬಲಿದಿಹುದೆನಲು ಖತಿಯಲಿ
ಮುಳಿದು ಬೈದರು ಭೀಮ ಪಾರ್ಥರು ಸುಬಲ ನಂದನನ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಕುನಿ ಅರ್ಜುನನನ್ನು ಚುಚ್ಚಿ ಕೆರಳಿಸುತ್ತಾನೆ. “ಎಲೆ ಧನಂಜಯ, ಹಟಮಾರಿಯಾದ ಯುಧಿಷ್ಠಿರ ಜೂಜಿಗೆ ನಿನ್ನನ್ನೊಡ್ಡಿದ. ನಿನ್ನನ್ನು ಸೋತರೆ ಕೌರವೇಶ್ವರನಿಗೆ ನಿನ್ನನ್ನು ಮಾರಿಬಿಟ್ಟಂತೆ ! ಇದನ್ನು ತಿಳಿದುಕೊಂಡು ಭೀಮಾರ್ಜುನರು ನೀವು ಸ್ವತಂತ್ರವಾಗಿ ಗಟ್ಟಿಯಾಗಿ ಕುಳಿತುಕೊಳ್ಳಿ” ಎಂದ. ಕ್ರುದ್ಧರಾದ ಭೀಮಾರ್ಜುನರು ಶಕುನಿಯನ್ನು ನಿಂದಿಸಿದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಎಲೆ ಧನಂಜಯ ನಿನ್ನನೊಡ್ಡಿದ
ಛಲಿ ಯುಧಿಷ್ಠಿರನಿಲ್ಲಿ ಸೋತರೆ
ಬಳಿಕ ನಿನ್ನನು ಮಾರಿದನಲಾ ಕೌರವೇಶ್ವರಗೆ
ತಿಳಿದು ಭೀಮಾರ್ಜುನರು ನೀವ್ ನಿ
ಮ್ಮೊಳಗೆ ಬಲಿದಿಹುದೆನಲು ಖತಿಯಲಿ
ಮುಳಿದು ಬೈದರು ಭೀಮ ಪಾರ್ಥರು ಸುಬಲ ನಂದನನ ॥19॥
೦೨೦ ದೇಹಿಗೆರವೇ ದೇಹಬಲವೋ ...{Loading}...
ದೇಹಿಗೆರವೇ ದೇಹಬಲವೋ
ದೇಹಿ ಭೂಪತಿ ಧರ್ಮಪುತ್ರನ
ದೇಹವಾವಿದರೊಳಗೆ ನಿನ್ನ ಕುಮಂತ್ರ ಭಾವಿತದ
ಊಹೆಗೊಂಬುದೆ ಕಪಟದಿಂದವ
ಗಾಹಿಸುವೆ ಸಾಕಿನ್ನು ಮೇಲಣ
ಗಾಹುಗತಕಗಳೆಮ್ಮೊಳೆಂದರು ಜರೆದು ಸೌಬಲನ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇಹಿಯನ್ನು ಬಿಟ್ಟು ದೇಹಬಲವಿರುತ್ತದೆಯೇ ಶಕುನಿ ? ಧರ್ಮಪುತ್ರನು ದೇಹಿ. ನಾವು ದೇಹ. ಇದರೊಳಗೆ ನಿನ್ನ ದುರಾಲೋಚನೆಯ ಊಹೆ ಕೆಲಸಕ್ಕೆ ಬರುತ್ತದೆಯೇ ? ಕಪಟ ತನದಿಂದ ನೀನು ಒಳಗಿಳಿಯಲು ನೋಡುವೆ, ಸಾಕು ಇನ್ನು ನಮ್ಮಲ್ಲಿ ನಿನ್ನ ಮೇಲುಮೇಲಿನ ಮೋಸತಟವಟಗಳು ಎಂದು ಭೀಮಾರ್ಜುನರು ಜರೆದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ದೇಹಿಗೆರವೇ ದೇಹಬಲವೋ
ದೇಹಿ ಭೂಪತಿ ಧರ್ಮಪುತ್ರನ
ದೇಹವಾವಿದರೊಳಗೆ ನಿನ್ನ ಕುಮಂತ್ರ ಭಾವಿತದ
ಊಹೆಗೊಂಬುದೆ ಕಪಟದಿಂದವ
ಗಾಹಿಸುವೆ ಸಾಕಿನ್ನು ಮೇಲಣ
ಗಾಹುಗತಕಗಳೆಮ್ಮೊಳೆಂದರು ಜರೆದು ಸೌಬಲನ ॥20॥
೦೨೧ ಮೇಲೆ ಹೇಳುವುದೇನು ...{Loading}...
ಮೇಲೆ ಹೇಳುವುದೇನು ಸಾರಿಯ
ಸಾಲು ಮುರಿದುದು ಸೆರೆಯ ಕಳವಿನ
ಕಾಲು ಕೀಲ್ಗಳನಾರು ಬಲ್ಲರು ಕುಟಿಲ ಕೋವಿದರ
ಹೇಳುವದರಿಮ್ಮುನ್ನ ಶಕುನಿಗೆ
ಬೀಳುವುದು ಬೇಕಾದ ದಾಯವು
ಕೌಳಿಕದ ವಿಧಿಪಾಶ ತೊಡಕಿತು ನೀಗಿತರ್ಜುನನ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇನ್ನು ಹೇಳಬೇಕಾದುದೇನು ? ಸಾರಿಯ ಸಾಲು ಮುರಿಯಿತು. ಕುಟಿಲತೆಯಲ್ಲಿ ಪಂಡಿತರಾಗಿರುವವರ ವರ್ತನೆಯನ್ನು, ಚಲನವಲನಗಳನ್ನೂ ಯಾರು ಬಲ್ಲರು ? ಹೇಳುವುದಕ್ಕೆ ಮೊದಲೇ ಶಕುನಿಗೆ ಬೇಕಾದ ಗರ ಬೀಳುತ್ತದೆ ! ಈ ಕುತಂತ್ರದ ವಿಧಿಯ
ಪಾಶ ಯುಧಿಷ್ಠಿರನಿಗೆ ತೊಡಕಾಯಿತು. ಅರ್ಜುನನನ್ನು ನೀಗಿತು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಮೇಲೆ ಹೇಳುವುದೇನು ಸಾರಿಯ
ಸಾಲು ಮುರಿದುದು ಸೆರೆಯ ಕಳವಿನ
ಕಾಲು ಕೀಲ್ಗಳನಾರು ಬಲ್ಲರು ಕುಟಿಲ ಕೋವಿದರ
ಹೇಳುವದರಿಮ್ಮುನ್ನ ಶಕುನಿಗೆ
ಬೀಳುವುದು ಬೇಕಾದ ದಾಯವು
ಕೌಳಿಕದ ವಿಧಿಪಾಶ ತೊಡಕಿತು ನೀಗಿತರ್ಜುನನ ॥21॥
೦೨೨ ಸೋತಿರರಸರೆ ಮತ್ತೆ ...{Loading}...
ಸೋತಿರರಸರೆ ಮತ್ತೆ ಹೇಳೀ
ದ್ಯೂತ ಶಿಖಿಗಾಹುತಿಯನೆನೆ ಕುಂ
ತೀತನುಜನೊಡ್ಡಿದನು ವಿಗಡ ಬಕಾಸುರಾಂತಕನ
ಆತುದೊಂದರೆಗಳಿಗೆ ಸೌಬಲ
ಸೋತ ಧರ್ಮಜ ಗೆಲಿದ ಧರ್ಮಜ
ಸೋತ ಸೌಬಲ ಗೆಲಿದನೆಂಬವೊಲಾಯ್ತು ಘನ ರಭಸ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮತ್ತೆ ಶಕುನಿ ಯುಧಿಷ್ಠಿರನಿಗೆ “ಸೋತಿರಿ ಅರಸರೆ ! ಈ ದ್ಯೂತವೆಂಬ ಅಗ್ನಿಗೆ ಆಹುತಿಯನ್ನು ಮತ್ತೆ ಹೇಳಿ ಎನ್ನಲು ಕುಂತೀ ತನಯ ಬಕಾಸುರನನ್ನು ಕೊಂದ ಭೀಮನನ್ನೇ ಒಡ್ಡಿದ. ಆ ಆಟದ ರಭಸದಲ್ಲಿ ಕೇವಲ ಒಂದು ಅರ್ಧ ಘಳಿಗೆ ಶಕುನಿ ಸೋತ ಧರ್ಮಜ ಗೆದ್ದ. ಇಲ್ಲ ಇಲ್ಲ ಧರ್ಮಜ ಸೋತ ಶಕುನಿ ಗೆದ್ದ ಎಂಬಂತೆ ಕಂಡಿತು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಸೋತಿರರಸರೆ ಮತ್ತೆ ಹೇಳೀ
ದ್ಯೂತ ಶಿಖಿಗಾಹುತಿಯನೆನೆ ಕುಂ
ತೀತನುಜನೊಡ್ಡಿದನು ವಿಗಡ ಬಕಾಸುರಾಂತಕನ
ಆತುದೊಂದರೆಗಳಿಗೆ ಸೌಬಲ
ಸೋತ ಧರ್ಮಜ ಗೆಲಿದ ಧರ್ಮಜ
ಸೋತ ಸೌಬಲ ಗೆಲಿದನೆಂಬವೊಲಾಯ್ತು ಘನ ರಭಸ ॥22॥
೦೨೩ ಆ ಹಲಗೆ ...{Loading}...
ಆ ಹಲಗೆ ಸೋತುದು ಯುಧಿಷ್ಠಿರ
ನೂಹೆ ಮುರಿದುದು ಮುಂದುಗೆಟ್ಟನು
ರಾಹು ಹಿಡಿದ ಹಿಮಾಂಶು ಮಂಡಲದುಳಿದ ಕಳೆಯಂತೆ
ತೋಹಿನಲಿ ತೊಟ್ಟಿಸಿದ ಮೃಗದವೊ
ಲೂಹೆಯಳಿದುದು ಯಂತ್ರಸೂತ್ರದ
ಹೂಹೆಯಂತಿರೆ ನೃಪತಿ ತೆತ್ತನು ಹಗೆಗೆ ತನುಧನವ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಹಲಗೆ ಸೋತಿತು. ಯುಧಿಷ್ಠಿರನ ಊಹೆ ವ್ಯರ್ಥವಾಯಿತು. ಅವನು ಮುಂದೆ ಏನು ಮಾಡಬೇಕು ಎಂಬುದನ್ನು
ತಿಳಿಯದಾದ. ಅವನ ಸ್ಥಿತಿ ಇಡೀ ಚಂದ್ರನನ್ನು ರಾಹುವು ನುಂಗಿ ಒಂದು ಕಳೆಯನ್ನು ಮಾತ್ರ ಉಳಿಸಿರುವಂತೆ ಆಯಿತು. ಜಿಂಕೆಯನ್ನು
ಅಟ್ಟಿಕೊಂಡು ಬಂದು, ಇನ್ನೇನು ಕೊಲ್ಲಲಿರುವ ಹಂತಕ್ಕೆ ಬಂದಿತು ಎಂದಾಗ ಅದು ಬೇಟೆಗಾರನ ಕೈಗೆ ಸಿಕ್ಕಿ ಹಾಕಿಕೊಂಡಂತಾಗಿತ್ತು.
ಏನು ಮಾಡಬೇಕೆಂದು ಊಹಿಸಲೂ ಅವಕಾಶವಿಲ್ಲದೆ ಸೂತ್ರದ ಗೊಂಬೆಯಂತೆ ಆಗಿ ತನ್ನ ತನುಧನವನ್ನು ಕೂಡ ಶತ್ರುವಿಗೆ ಒಪ್ಪಿಸಿಬಿಟ್ಟ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಆ ಹಲಗೆ ಸೋತುದು ಯುಧಿಷ್ಠಿರ
ನೂಹೆ ಮುರಿದುದು ಮುಂದುಗೆಟ್ಟನು
ರಾಹು ಹಿಡಿದ ಹಿಮಾಂಶು ಮಂಡಲದುಳಿದ ಕಳೆಯಂತೆ
ತೋಹಿನಲಿ ತೊಟ್ಟಿಸಿದ ಮೃಗದವೊ
ಲೂಹೆಯಳಿದುದು ಯಂತ್ರಸೂತ್ರದ
ಹೂಹೆಯಂತಿರೆ ನೃಪತಿ ತೆತ್ತನು ಹಗೆಗೆ ತನುಧನವ ॥23॥
೦೨೪ ಜನಪ ಮಾರಿದೆ ...{Loading}...
ಜನಪ ಮಾರಿದೆ ಭೀಮಸೇನಾ
ರ್ಜುನರು ಸಹಿತೊಡಹುಟ್ಟಿದರ ನಿ
ರ್ಧನಿಕನಾಗಿಯು ಮತ್ತೆ ಬಿಡದೇ ದ್ಯೂತದುವ್ರ್ಯಸನ
ಎನಲು ಶಕುನಿಯು ಜರೆದು ತಾನೇ
ಧನವಲಾ ಸಾಕೊಂದು ಹಲಗೆಯೊ
ಳೆನಗೆ ಜಯವೀ ದಾಯವೆಂದೊಡ್ಡಿದನು ಜನನಾಥ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮತ್ತೆ ಶಕುನಿ “ಜನಪ, ಭೀಮಸೇನ ಅರ್ಜುನರು ಸಹಿತ ಒಡಹುಟ್ಟಿದವರನ್ನೆಲ್ಲ ಮಾರಿಬಿಟ್ಟೆ. ಈಗ ನಿರ್ಧನಿಕನಾಗಿದ್ದರೂ ಇನ್ನೂ ಬಿಡದೆ ಈ ಜೂಜಿನ ದುಶ್ಚಟ ?” ಎಂದ. ಯುಧಿಷ್ಠಿರ ಅವನನ್ನು ಜರೆದು “ನಾನೇ ಧನ, ಸಾಕು. ಒಂದು ಹಲಗೆಯಲ್ಲಿ ಜಯಗಳಿಸುತ್ತೇನೆ” ಎಂದು ತನ್ನನ್ನೇ ಪಣವಾಗಿ ಒಡ್ಡಿಕೊಂಡ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಜನಪ ಮಾರಿದೆ ಭೀಮಸೇನಾ
ರ್ಜುನರು ಸಹಿತೊಡಹುಟ್ಟಿದರ ನಿ
ರ್ಧನಿಕನಾಗಿಯು ಮತ್ತೆ ಬಿಡದೇ ದ್ಯೂತದುವ್ರ್ಯಸನ
ಎನಲು ಶಕುನಿಯು ಜರೆದು ತಾನೇ
ಧನವಲಾ ಸಾಕೊಂದು ಹಲಗೆಯೊ
ಳೆನಗೆ ಜಯವೀ ದಾಯವೆಂದೊಡ್ಡಿದನು ಜನನಾಥ ॥24॥
೦೨೫ ಹೇಳಲೇನದನವರು ರಚಿಸಿದ ...{Loading}...
ಹೇಳಲೇನದನವರು ರಚಿಸಿದ
ಬೇಳುವೆಯನಾ ಶಕುನಿಯೊಡ್ಡಿದ
ಕಾಲು ಕುಣಿಕೆಯೊಳಾರು ಬೀಳರು ನೃಪತಿ ನಿಮಿಷದಲಿ
ಬೀಳುಗೊಟ್ಟನು ತನ್ನನಾ ಜನ
ಜಾಲವಿದ್ದುದು ಬಿಗಿದ ಬೆರಗಿನೊ
ಳಾಲಿಸುವುರೇ ಜೀಯ ಪಣವೇನೆಂದನಾ ಶಕುನಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವರು ರಚಿಸಿದ ಯಜ್ಞವನ್ನು ಏನು ಹೇಳೋಣ ? ಆ ಶಕುನಿ ಒಡ್ಡಿದ ಕಾಲ ಕುಣಿಕೆಗೆ ಯಾರು ತಾನೇ ಸಿಕ್ಕಿ ಬೀಳರು ?
ನಿಮಿಷಮಾತ್ರದಲ್ಲಿ ಧರ್ಮರಾಯ ತನ್ನನ್ನೇ ಕಳೆದುಕೊಂಡುಬಿಟ್ಟ. ಅಲ್ಲಿದ್ದ ಜನಸಮೂಹವೆಲ್ಲ ಬಿಗಿದ ಬೆರಗಿನಲ್ಲಿದ್ದರು. ಆಗ ಶಕುನಿ
ಯುಧಿಷ್ಠಿರನಿಗೆ “ಕೇಳಿಸುತ್ತಿದೆಯೇ ಜೀಯಾ, ಮತ್ತೆ ಪಣವೇನು?” ಎಂದು ಕೇಳಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಹೇಳಲೇನದನವರು ರಚಿಸಿದ
ಬೇಳುವೆಯನಾ ಶಕುನಿಯೊಡ್ಡಿದ
ಕಾಲು ಕುಣಿಕೆಯೊಳಾರು ಬೀಳರು ನೃಪತಿ ನಿಮಿಷದಲಿ
ಬೀಳುಗೊಟ್ಟನು ತನ್ನನಾ ಜನ
ಜಾಲವಿದ್ದುದು ಬಿಗಿದ ಬೆರಗಿನೊ
ಳಾಲಿಸುವುರೇ ಜೀಯ ಪಣವೇನೆಂದನಾ ಶಕುನಿ ॥25॥
೦೨೬ ಎಲವೊ ಸೌಬಲ ...{Loading}...
ಎಲವೊ ಸೌಬಲ ಸಾಕಿದೊಂದೇ
ಹಲಗೆ ಸರ್ವಸ್ವಾಪಹಾರವ
ನಿಳುಹುವೆನು ನೀಲಾಳಕಿಯನೊಡ್ಡುವೆನು ಬಾಲಕಿಯ
ಉಳಿದ ಧನವೆಮ್ಮೈವರಿಗೆ ನಿ
ಷ್ಖಲಿತವಿದು ಹೂಡೆನಲು ಹರುಷದ
ಲಳಿಯ ಚೌಪಟಮಲ್ಲ ಸಾರಿಯ ಸಾಲ ಜೋಡಿಸಿದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ಉತ್ತರವಾಗಿ ಯುಧಿಷ್ಠಿರ “ಎಲವೋ ಸೌಬಲ, ಇನ್ನು ಇದೊಂದೇ ಹಲಗೆ ಸಾಕು. ನಾನು ಇದುವರೆಗೆ ಕಳೆದುಕೊಂಡ ಸರ್ವಸ್ವವನ್ನು ಹಿಂದಕ್ಕೆ ಪಡೆಯುವೆನು, ಕಪ್ಪು ಮುಂಗುರುಳುಳ್ಳ ದ್ರೌಪದಿಯನ್ನು ಒಡ್ಡುತ್ತೇನೆ. ಇದು ನಮ್ಮೈವರಿಗೂ ಧೃಢವಾಗಿ ಸೇರಿದಂತಹ ಧನ. ಹೂಡು ಎಂದ. ನಾಲ್ಕೂ ಮಾರ್ಗಗಳಿಂದ ಮೇಲೆ ಬಿದ್ದ ಶತ್ರುಗಳನ್ನು ಏಕಾಕಿಯಾಗಿ ಎದುರಿಸುವ ಸಾಮಥ್ರ್ಯವಿದ್ದ
ಚೌಪಟಮಲ್ಲನಾದ ಶಕುನಿ ಹರ್ಷದ ಲಹರಿಯಿಂದ ಸಾರಿಗಳನ್ನು ಜೋಡಿಸಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಎಲವೊ ಸೌಬಲ ಸಾಕಿದೊಂದೇ
ಹಲಗೆ ಸರ್ವಸ್ವಾಪಹಾರವ
ನಿಳುಹುವೆನು ನೀಲಾಳಕಿಯನೊಡ್ಡುವೆನು ಬಾಲಕಿಯ
ಉಳಿದ ಧನವೆಮ್ಮೈವರಿಗೆ ನಿ
ಷ್ಖಲಿತವಿದು ಹೂಡೆನಲು ಹರುಷದ
ಲಳಿಯ ಚೌಪಟಮಲ್ಲ ಸಾರಿಯ ಸಾಲ ಜೋಡಿಸಿದ ॥26॥
೦೨೭ ಆಡಿದನು ಯಮಸೂನು ...{Loading}...
ಆಡಿದನು ಯಮಸೂನು ಮಿಗೆ ಹೋ
ಗಾಡಿದನು ಮನುಮಥನ ಖಾಡಾ
ಖಾಡಿ ಖಾತಿಯಕಟ ಮದನನ ಮಂತ್ರದೇವತೆಯ
ಕೂಡೆ ತಿವಿದನು ಕಟ್ಟಿದನು ಕಳಿ
ದೋಡಿಸಿದ ಸಾರಿಗಳ ಸೋಲದ
ಖೋಡಿಯನು ಚಿತ್ರಿಸಿದನರಸನು ಚಿತ್ತಭಿತ್ತಿಯಲಿ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಮಸೂನು ಆಡಿದ. ಮನ್ಮಥನ ದ್ವಂದ್ವಯುದ್ಧದ, ಸಾಹಸಿ ಮನ್ಮಥನ ಮಂತ್ರದೇವತೆ ಎಂಬಂತೆ ಸೌಂದರ್ಯವತಿಯಾಗಿದ್ದ
ದ್ರೌಪದಿಯನ್ನು ಸೋತು ಕಳೆದುಕೊಂಡ. ಅದಾದ ಕೂಡಲೇ ಕಳೆದು ಓಡಿಸಿದ್ದ ಸಾರಿಗಳನ್ನೆಲ್ಲ ಒಟ್ಟು ಸೇರಿಸಿ ತಿವಿದು ಕಟ್ಟಿದ ತನ್ನ ಚಿತ್ತಭಿತ್ತಿಯಲ್ಲಿ ಸೋಲಿನ ಕೆಟ್ಟ ಪರಿಣಾಮವನ್ನು ಚಿತ್ರಿಸಿಕೊಂಡ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಆಡಿದನು ಯಮಸೂನು ಮಿಗೆ ಹೋ
ಗಾಡಿದನು ಮನುಮಥನ ಖಾಡಾ
ಖಾಡಿ ಖಾತಿಯಕಟ ಮದನನ ಮಂತ್ರದೇವತೆಯ
ಕೂಡೆ ತಿವಿದನು ಕಟ್ಟಿದನು ಕಳಿ
ದೋಡಿಸಿದ ಸಾರಿಗಳ ಸೋಲದ
ಖೋಡಿಯನು ಚಿತ್ರಿಸಿದನರಸನು ಚಿತ್ತಭಿತ್ತಿಯಲಿ ॥27॥
೦೨೮ ಬೆರಗು ಬೆಳೆದುದು ...{Loading}...
ಬೆರಗು ಬೆಳೆದುದು ಮನದ ಮಿಡುಕಿನ
ಮರುಕ ಮುಂದಲೆಗೊಟ್ಟುದರಿವಿನ
ಸೆರಗು ಹಾರಿತು ಲಜ್ಜೆ ಬೆಳಗಿತು ಬಿಟ್ಟ ಬೀದಿಯಲಿ
ಉರುಬಿತಪದೆಸೆ ರಾಜ್ಯಲಕ್ಷ್ಮಿಯ
ತುರುಬು ಕೈದೊಳಸಾಯ್ತು ಹಗೆಗಾ
ನರಿಯೆನರಸನ ವಿರಸ ಚೇತೋಭಾವ ಭಂಗಿಗಳ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೆರಗು ಬೆಳೆಯಿತು, ಮನುಷ್ಯನ ಸಂಕಟದೊಡಗೂಡಿದ ದುಃಖ ಹಣೆಚಾಚಿಕೊಂಡು ಮುಂದೆ ಬಂದಿತು. ಅರಿವಿನ ಉತ್ತರೀಯ ಹಾರಿತು. ತೆರೆದ ಬೀದಿಯಲ್ಲಿ ಲಜ್ಜೆ ಬೆಳಗಿತು. ಅಪಖ್ಯಾತಿ ಹರಡಿತು. ರಾಜ್ಯಲಕ್ಷ್ಮಿಯ ತುರುಬು ಶತ್ರುಗಳ ಕೈಗೆ ಸಿಕ್ಕಿ ಎಳೆದಾಡಲ್ಪಟ್ಟಿತು.
ಯುಧಿಷ್ಠಿರನ ಮನದಲ್ಲಿ ಉದ್ಭವವಾದ ವಿರಸದ ನಾನಾ ಭಾವ ಭಂಗಿಗಳನ್ನು ತಿಳಿಯಲು ಸಾಧ್ಯವಾಗಲಿಲ್ಲ.
ಪದಾರ್ಥ (ಕ.ಗ.ಪ)
ಉರುಬಿತು-ಹರಡಿತು, ಕೈದೊಳಸಾಯ್ತು-ಕೈಗೆ ಸಿಕ್ಕಿ ಎಳೆದಾಡಲ್ಪಟ್ಟಿತು
ಮೂಲ ...{Loading}...
ಬೆರಗು ಬೆಳೆದುದು ಮನದ ಮಿಡುಕಿನ
ಮರುಕ ಮುಂದಲೆಗೊಟ್ಟುದರಿವಿನ
ಸೆರಗು ಹಾರಿತು ಲಜ್ಜೆ ಬೆಳಗಿತು ಬಿಟ್ಟ ಬೀದಿಯಲಿ
ಉರುಬಿತಪದೆಸೆ ರಾಜ್ಯಲಕ್ಷ್ಮಿಯ
ತುರುಬು ಕೈದೊಳಸಾಯ್ತು ಹಗೆಗಾ
ನರಿಯೆನರಸನ ವಿರಸ ಚೇತೋಭಾವ ಭಂಗಿಗಳ ॥28॥
೦೨೯ ಮೊಳೆನಗೆಯ ಕಟಕಿಗಳ ...{Loading}...
ಮೊಳೆನಗೆಯ ಕಟಕಿಗಳ ಹದಿರಿನ
ಹಳಿವುಗಳ ಸನ್ನೆಗಳ ಸವಿಬೈ
ಗುಳಿನ ಜಾಣಿನನೋಟಗಳ ಜೊತ್ತಿನ ನವಾಯಿಗಳ
ಒಳದೆಗಹಿನುಬ್ಬುಗಳ ಮೀಸೆಯೊ
ಳಿಳಿವ ಬೆರಳ್ಗಳ ಕರ್ಣ ಸೈಂಧವ
ಖಳತಿಲಕ ದುಶ್ಶಾಸನಾದಿಗಳಿದ್ದರೀಚೆಯಲಿ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅತ್ತ ಕರ್ಣ, ಸೈಂಧವ, ಖಳರಿಗೆ ತಿಲಕ ಪ್ರಾಯನಾದ ದುಶ್ಶಾಸನ ಮೊದಲಾದವರು ನಸುನಗುವನ್ನು ಬೀರುತ್ತಾ, ವ್ಯಂಗ್ಯದ,
ಚಮತ್ಕಾರದ, ಸವಿಬೈಗುಳಿನ ಮಾತುಗಳನ್ನು ತಮ್ಮಲ್ಲೆ ಆಡಿಕೊಳ್ಳುತ್ತಾ, ಜಾಣ್ಮೆಯ ನೋಟವನ್ನು ಬೀರುತ್ತಾ, ಹೊಸ ಬಗೆಯ ಮೋಸಕ್ಕೆ ಆಶ್ರಯ ಕೊಡುತ್ತಾ, ಹುಬ್ಬುಗಳನ್ನು ಒಳಸರಿಸಿಕೊಂಡು ಮೀಸೆಯ ಮೇಲೆ ಬೆರಳಾಡಿಸುತ್ತಾ ಇದ್ದರು.
ಪದಾರ್ಥ (ಕ.ಗ.ಪ)
ಕಟಕ-ದುಷ್ಟ, ಹದಿರು-ವ್ಯಂಗ್ಯ, ಜೊತ್ತು-ಮೋಸ, ಒಳದೆಗಹಿನ-ಒಳಕ್ಕೆಸರಿಸಿದ
ಮೂಲ ...{Loading}...
ಮೊಳೆನಗೆಯ ಕಟಕಿಗಳ ಹದಿರಿನ
ಹಳಿವುಗಳ ಸನ್ನೆಗಳ ಸವಿಬೈ
ಗುಳಿನ ಜಾಣಿನನೋಟಗಳ ಜೊತ್ತಿನ ನವಾಯಿಗಳ
ಒಳದೆಗಹಿನುಬ್ಬುಗಳ ಮೀಸೆಯೊ
ಳಿಳಿವ ಬೆರಳ್ಗಳ ಕರ್ಣ ಸೈಂಧವ
ಖಳತಿಲಕ ದುಶ್ಶಾಸನಾದಿಗಳಿದ್ದರೀಚೆಯಲಿ ॥29॥
೦೩೦ ಕಳಕಳದ ಕನ್ದೆರವೆಗಳ ...{Loading}...
ಕಳಕಳದ ಕಂದೆರವೆಗಳ ಕುರು
ಕುಲದ ನಿರ್ಮೂಲನದ ನಿಶ್ಚಯ
ದೊಳಗುವರಿದಾಲೋಚನೆಯ ನಿದ್ರ್ರವದ ತಾಳಿಗೆಯ
ತಳಿತ ಮೋನದ ಬೀತ ಹರುಷದ
ಜಲದ ನಯನದಲಿದ್ದರಾ ವಿ
ಹ್ವಲರು ಭೀಷ್ಮ ವಿಕರ್ಣ ವಿದುರ ದ್ರೋಣ ಗೌತಮರು ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇನ್ನೊಂದು ಕಡೆ ಭೀಷ್ಮ, ವಿಕರ್ಣ, ವಿದುರ, ದ್ರೋಣ, ಕೃಪರು ವಿಹ್ವಲರಾಗಿ ವ್ಯಾಕುಲಗೊಂಡು ಕಣ್ತೆರೆದು ನೋಡುತ್ತಾ, ಕುರುವಂಶ ನಿರ್ಮೂಲವಾಗುವುದು ನಿಶ್ಚಯ ಎಂದು ತಮ್ಮ ತಮ್ಮೊಳಗೇ ಆಲೋಚಿಸುತ್ತಾ, ಗಂಟಲು ಒಣಗಿ ಮೌನವನ್ನು ತಾಳಿ ಹರ್ಷವನ್ನು ಕಳೆದುಕೊಂಡು, ಕಣ್ಣೀರು ಸುರಿಸುತ್ತಾ ಇದ್ದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಕಳಕಳದ ಕಂದೆರವೆಗಳ ಕುರು
ಕುಲದ ನಿರ್ಮೂಲನದ ನಿಶ್ಚಯ
ದೊಳಗುವರಿದಾಲೋಚನೆಯ ನಿದ್ರ್ರವದ ತಾಳಿಗೆಯ
ತಳಿತ ಮೋನದ ಬೀತ ಹರುಷದ
ಜಲದ ನಯನದಲಿದ್ದರಾ ವಿ
ಹ್ವಲರು ಭೀಷ್ಮ ವಿಕರ್ಣ ವಿದುರ ದ್ರೋಣ ಗೌತಮರು ॥30॥
೦೩೧ ಇಟ್ಟ ಮೂಗಿನ ...{Loading}...
ಇಟ್ಟ ಮೂಗಿನ ಬೆರಳ ನೆಲದಲಿ
ನಟ್ಟ ದೃಷ್ಟಿಯ ಕಳವು ಜೂಜಿನ
ದಿಟ್ಟರಾಟಕೆ ಬಲಿದ ಬೆರಗಿನ ಬಿಗಿದ ಖಾತಿಗಳ
ತಟ್ಟಿಸುವ ರಿಪುವರ್ಗ ಶಿಖಿಯಲಿ
ಸುಟ್ಟ ಕರಣ ಚತುಷ್ಟಯದ ಜಗ
ಜಟ್ಟಿಗಳು ಭೀಮಾರ್ಜುನಾದಿಗಳಿರ್ದರೀಚೆಯಲಿ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈಚೆಯ ಕಡೆ ಜಗಜಟ್ಟಿಗಳಾಗಿದ್ದ ಭೀಮ ಅರ್ಜುನರೇ ಮೊದಲಾದವರು ದಿಗ್ಭ್ರಮೆಯಿಂದ ಮೂಗಿನ ಮೇಲೆ ಬೆರಳಿಟ್ಟುಕೊಂಡು,
ನೆಲದಲ್ಲಿಯೇ ದೃಷ್ಟಿಯನ್ನು ನೆಟ್ಟವರಾಗಿ, ಶತ್ರುಗಳ ದಿಟ್ಟತನದ ಮೋಸದ ಜೂಜಿನ ಆಟಕ್ಕೆ ಬೆರಗಾಗಿ ರೋಷಾವಿಷ್ಟರಾಗಿದ್ದಾರೆ. ಶತ್ರುಗಳ ಕಡೆಯಿಂದ ತಮಗೆ ತಟ್ಟುತ್ತಿದ್ದ ಬೆಂಕಿಯಲ್ಲಿ ಅವರ ಕರಣ ಚತುಷ್ಟಯಗಳೂ ಸುಟ್ಟು ಕರಕಾಗಿದ್ದುವು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಇಟ್ಟ ಮೂಗಿನ ಬೆರಳ ನೆಲದಲಿ
ನಟ್ಟ ದೃಷ್ಟಿಯ ಕಳವು ಜೂಜಿನ
ದಿಟ್ಟರಾಟಕೆ ಬಲಿದ ಬೆರಗಿನ ಬಿಗಿದ ಖಾತಿಗಳ
ತಟ್ಟಿಸುವ ರಿಪುವರ್ಗ ಶಿಖಿಯಲಿ
ಸುಟ್ಟ ಕರಣ ಚತುಷ್ಟಯದ ಜಗ
ಜಟ್ಟಿಗಳು ಭೀಮಾರ್ಜುನಾದಿಗಳಿರ್ದರೀಚೆಯಲಿ ॥31॥
೦೩೨ ಹಾಸ ಗರ್ವದ ...{Loading}...
ಹಾಸ ಗರ್ವದ ಮೋನದಲಿ ಸಂ
ತೋಷ ಗರ್ವದ ದುಗುಡದಲಿ ಸುವಿ
ಳಾಸ ಗರ್ವದ ಖೇದದಲಿ ಮದಗರ್ವ ಚಿಂತೆಯಲಿ
ವೈಸಿಕದ ಕಣಿ ಕುಟಿಲ ಮಂತ್ರದ
ಮೀಸಲಳಿಯದ ಕುಹಕ ವಿದ್ಯಾ
ವಾಸಗೃಹ ಧೃತರಾಷ್ಟ್ರನಿದ್ದನು ವಿಕೃತ ಭಾವದಲಿ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇನ್ನೊಂದು ಕಡೆ ಧೃತರಾಷ್ಟ್ರ ಪರಸ್ಪರ ವಿರುದ್ಧ ಭಾವಗಳಿಂದ, ವಿಕೃತ ಭಾವಗಳಿಂದ ಕೂಡಿದ್ದ. ಒಂದು ಕಡೆ ವಿನೋದದ ಗರ್ವ
ಆದರೆ ಮೌನ, ಸಂತೋಷದ ಗರ್ವ ಆದರೆ ದುಃಖ, ಮಹಾವಿಲಾಸದ ಗರ್ವ ಆದರೆ ಖೇದ, ಮದ ಗರ್ವ ಆದರೆ ಚಿಂತೆ ! ಹಾಗಾಗಿ ಮೋಸದ ಗಣಿಯೆನಿಸಿ, ಕುಟಿಲ ತಂತ್ರ ಹಾಗೂ ಮೀಸಲಳಿಯದ ಕುಹುಕ ವಿದ್ಯೆಯ ವಾಸಗೃಹವೆನಿಸಿದ್ದ.
ಪದಾರ್ಥ (ಕ.ಗ.ಪ)
ವೈಸಿಕದ ಕಣಿ-ಮೋಸದ ಗಣಿ
ಮೂಲ ...{Loading}...
ಹಾಸ ಗರ್ವದ ಮೋನದಲಿ ಸಂ
ತೋಷ ಗರ್ವದ ದುಗುಡದಲಿ ಸುವಿ
ಳಾಸ ಗರ್ವದ ಖೇದದಲಿ ಮದಗರ್ವ ಚಿಂತೆಯಲಿ
ವೈಸಿಕದ ಕಣಿ ಕುಟಿಲ ಮಂತ್ರದ
ಮೀಸಲಳಿಯದ ಕುಹಕ ವಿದ್ಯಾ
ವಾಸಗೃಹ ಧೃತರಾಷ್ಟ್ರನಿದ್ದನು ವಿಕೃತ ಭಾವದಲಿ ॥32॥
೦೩೩ ಜನಪತಿಯ ಜಾಡ್ಯವನು ...{Loading}...
ಜನಪತಿಯ ಜಾಡ್ಯವನು ಭೀಮಾ
ರ್ಜುನರ ಸೈರಣೆಗಳನು ದುರ್ಯೋ
ಧನನ ದುಶ್ಚೇಷ್ಟೆಯನು ಶಕುನಿಯ ಸಾರ ಕೃತ್ರಿಮವ
ತನತನಗೆ ಕಂಡರು ಮಹೀಸುರ
ಜನಪ ವೈಶ್ಯ ಚತುರ್ಥರುಕ್ಕಿದ
ಮನದಳಲಿನಲಿ ಬೈದರಚ್ಯುತ ಹರ ಚತುರ್ಮುಖರ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಜನ ಜಡತನವನ್ನೂ ಭೀಮಾರ್ಜುನರ ಸಹನೆಯನ್ನೂ ದುರ್ಯೋಧನನ ದುಷ್ಟ ಚೇಷ್ಟೆಯನ್ನು ಶಕುನಿಯ ಸಾರವತ್ತಾದ ಕೃತ್ರಿಮವನ್ನು ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ -ಈ ಚತುರ್ವರ್ಣದವರೂ ತಾವು ತಾವೇ ಪ್ರತ್ಯಕ್ಷವಾಗಿ ಕಂಡು ಮನೋವ್ಯಥೆಯಿಂದ ಬ್ರಹ್ಮ ವಿಷ್ಣು ಮಹೇಶ್ವರ ಈ ತ್ರಿಮೂರ್ತಿಗಳನ್ನು ನಿಂದಿಸಿದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಜನಪತಿಯ ಜಾಡ್ಯವನು ಭೀಮಾ
ರ್ಜುನರ ಸೈರಣೆಗಳನು ದುರ್ಯೋ
ಧನನ ದುಶ್ಚೇಷ್ಟೆಯನು ಶಕುನಿಯ ಸಾರ ಕೃತ್ರಿಮವ
ತನತನಗೆ ಕಂಡರು ಮಹೀಸುರ
ಜನಪ ವೈಶ್ಯ ಚತುರ್ಥರುಕ್ಕಿದ
ಮನದಳಲಿನಲಿ ಬೈದರಚ್ಯುತ ಹರ ಚತುರ್ಮುಖರ ॥33॥
೦೩೪ ನ್ಯಾಯವೆಮ್ಮದು ಮುನ್ನ ...{Loading}...
ನ್ಯಾಯವೆಮ್ಮದು ಮುನ್ನ ಸೋತಿರಿ
ಜೀಯ ನಿಮ್ಮೊಡಹುಟ್ಟಿದರು ಸಹಿ
ತಾಯತಾಕ್ಷಿಯ ಬಳಿಕ ಸೋತಿರಿ ಬಲುಹ ಮಾಡೆವೆಲೆ
ರಾಯನೊಲಿದುದ ಮಾಡಲಾವ
ನ್ಯಾಯವರ್ತಿಗಳಲ್ಲಲೇ ಬೆಸ
ಸಾ ಯುಧಿಷ್ಠಿರಯೆನುತ ಕೈಗಳ ಮುಗಿದನಾ ಶಕುನಿ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಕುನಿ, ತಾನು, ತಪ್ಪು ಮಾಡಿದರೂ ತಪ್ಪಿತಸ್ಥನಲ್ಲವೆಂಬಂತೆ “ನಾವು ನ್ಯಾಯದಿಂದ ನಡೆದುಕೊಳ್ಳುವವರು. ಜೀಯ ! ನೀವು ನಿಮ್ಮ ಒಡಹುಟ್ಟಿದವರನ್ನು ನಿಮಗಿಂತ ಮೊದಲೇ ಸೋತಿರಿ. ಆದರೆ ಆಯತಾಕ್ಷಿಯಾದ ದ್ರೌಪದಿಯನ್ನು ಅನಂತರ ಸೋತಿರಿ. ನಾವು ಬಲತ್ಕಾರ ಮಾಡಲಿಲ್ಲ. ಅಲ್ಲವೇ? ಕುರುರಾಜನು ತನ್ನಿಷ್ಟ ಬಂದಂತೆ ಮಾಡಲಿ. ನಾವು ಅನ್ಯಾಯವರ್ತಿಗಳಲ್ಲ ತಾನೇ ? ಹೇಳಯ್ಯ ಯುಧಿಷ್ಠಿರ” ಎಂದು ಕೈಮುಗಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ನ್ಯಾಯವೆಮ್ಮದು ಮುನ್ನ ಸೋತಿರಿ
ಜೀಯ ನಿಮ್ಮೊಡಹುಟ್ಟಿದರು ಸಹಿ
ತಾಯತಾಕ್ಷಿಯ ಬಳಿಕ ಸೋತಿರಿ ಬಲುಹ ಮಾಡೆವೆಲೆ
ರಾಯನೊಲಿದುದ ಮಾಡಲಾವ
ನ್ಯಾಯವರ್ತಿಗಳಲ್ಲಲೇ ಬೆಸ
ಸಾ ಯುಧಿಷ್ಠಿರಯೆನುತ ಕೈಗಳ ಮುಗಿದನಾ ಶಕುನಿ ॥34॥
೦೩೫ ಗೆಲಿದು ಕೊಟ್ಟೆನು ...{Loading}...
ಗೆಲಿದು ಕೊಟ್ಟೆನು ಸಕಲ ಚಾತು
ರ್ಬಲವನಾ ಭಂಡಾರ ಸಹಿತ
ಗ್ಗಳೆಯರೈವರ ಕಮಲಮುಖಿಯನು ರಾಜ್ಯ ಸಿರಿಸಹಿತ
ಕಲಶವಿಟ್ಟೆನು ಕೊಟ್ಟ ಭಾಷೆಗೆ
ಎಲೆ ಸುಯೋಧನಯೆಂದು ನಯನಾಂ
ಗುಲಿಯ ಸಂಕೇತದಲಿ ಸನ್ನೆಯ ಮಾಡಿದನು ಶಕುನಿ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ಶಕುನಿ ಕುರುರಾಜನತ್ತ ತಿರುಗಿ “ನೋಡಪ್ಪಾ ಕುರುರಾಜ, ಯುಧಿಷ್ಠಿರನ ರಾಜ್ಯಸಂಪತ್ತಿನ ಸಮೇತ ಅವನ ಚತುರಂಗ
ಬಲವನ್ನು ಭಂಡಾರವನ್ನೂ ಅಗ್ಗಳೆಯರಾದ ಐವರು ಪಾಂಡವರನ್ನೂ ಕಮಲಮುಖಿ ದ್ರೌಪದಿಯನ್ನು, ನಿನಗೆ ಗೆದ್ದುಕೊಟ್ಟಿದ್ದೇನೆ. ನಾನು ಕೊಟ್ಟಿದ್ದ ಭಾಷೆಗೆ ಕಳಸವಿಟ್ಟಿದ್ದೇನೆ ಎಂದು ಹೇಳುವಂತೆ ಕಣ್ಣು ಮತ್ತು ಬೆರಳಿನ ಸಂಕೇತಗಳಿಂದ ಅವನಿಗೆ ಸೂಚಿಸಿದನು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಗೆಲಿದು ಕೊಟ್ಟೆನು ಸಕಲ ಚಾತು
ರ್ಬಲವನಾ ಭಂಡಾರ ಸಹಿತ
ಗ್ಗಳೆಯರೈವರ ಕಮಲಮುಖಿಯನು ರಾಜ್ಯ ಸಿರಿಸಹಿತ
ಕಲಶವಿಟ್ಟೆನು ಕೊಟ್ಟ ಭಾಷೆಗೆ
ಎಲೆ ಸುಯೋಧನಯೆಂದು ನಯನಾಂ
ಗುಲಿಯ ಸಂಕೇತದಲಿ ಸನ್ನೆಯ ಮಾಡಿದನು ಶಕುನಿ ॥35॥
೦೩೬ ವಿದುರ ಬಾ ...{Loading}...
ವಿದುರ ಬಾ ನಮ್ಮಾಕೆಯಾ ದ್ರೌ
ಪದಿಯ ಕರೆ ಬೆಸಗೊಂಬೆ ತೊತ್ತಿರ
ಸದನದಿಚ್ಛೆಯೊ ರಾಣಿವಾಸದ ಮನೆಯಪೇಕ್ಷಿತವೋ
ಬೆದರಬೇಡಿನ್ನಬುಜಮುಖಿಗಾ
ವುದು ಮನೋರಥವೆಮ್ಮೊಳುಂಟೆಂ
ಬುದು ಲತಾಂಗಿಯ ಕರೆವುದೆಂದನು ಕೌರವರ ರಾಯ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಕುನಿಯ ಸಂಜ್ಞೆಯನ್ನು ಗ್ರಹಿಸಿದ ದುರ್ಯೋಧನ ವಿದುರನನ್ನು ಕರೆದು “ವಿದುರ, ಬಾ. ನಮ್ಮಾಕೆಯಾದ ಆ ದ್ರೌಪದಿಯನ್ನು ಕರೆ. ಅವಳನ್ನು ಕೇಳುವೆ. ಅವಳಿಗೆ ದಾಸಿಯರ ಮನೆಯಲ್ಲಿರಿವುದು ಇಷ್ಟವೋ ರಾಣೀವಾಸದಲ್ಲಿ ಇರುವುದು ಇಷ್ಟವೋ ಎಂದು. ನೀನೇನೂ ಹೆದರಬೇಡ. ಅವಳ ಇಷ್ಟವೇನು ಎಂಬುದನ್ನು ತಿಳಿಯಬೇಕು. ಆದ್ದರಿಂದ ಕರೆದು ತಾ” ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ವಿದುರ ಬಾ ನಮ್ಮಾಕೆಯಾ ದ್ರೌ
ಪದಿಯ ಕರೆ ಬೆಸಗೊಂಬೆ ತೊತ್ತಿರ
ಸದನದಿಚ್ಛೆಯೊ ರಾಣಿವಾಸದ ಮನೆಯಪೇಕ್ಷಿತವೋ
ಬೆದರಬೇಡಿನ್ನಬುಜಮುಖಿಗಾ
ವುದು ಮನೋರಥವೆಮ್ಮೊಳುಂಟೆಂ
ಬುದು ಲತಾಂಗಿಯ ಕರೆವುದೆಂದನು ಕೌರವರ ರಾಯ ॥36॥
೦೩೭ ಸಿಡಿಲ ಪೊಟ್ಟಣಗಟ್ಟಿ ...{Loading}...
ಸಿಡಿಲ ಪೊಟ್ಟಣಗಟ್ಟಿ ಸೇಕವ
ಕೊಡುವರೇ ಹರನೇತ್ರ ವಹ್ನಿಯೊ
ಳಡಬಳವ ಸುಡಬಗೆದಲಾ ಮರುಳೇ ಮಹೀಪತಿಯೆ
ಹೆಡೆತಲೆಯ ತುರಿಸುವರೆ ಹಾವಿನ
ಹೆಡೆಯೊಳಕಟಾ ಪಾಂಡುಪುತ್ರರ
ಮಡದಿ ತೊತ್ತಹಳೇ ಶಿವಾ ಎಂದಳಲಿದನು ವಿದುರ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- (ದುರ್ಯೋಧನನ ದುರಹಂಕಾರದ ಮಾತು ಸಹನೆಯಾಗಲಿಲ್ಲ.) ವಿದುರನಿಗೆ ದುಃಖವೂ ಕೋಪವೂ ಬಂದು ಅªನು ಎಚ್ಚರಿಕೆಯ ಮಾತನ್ನಾಡುತ್ತಾನೆ. " ಶಾಖವನ್ನೂ ಕೊಡಲು ಸಿಡಿಲನ್ನು ಪೊಟ್ಟಣ ಕಟ್ಟಿ ಯಾರಾದರೂ ಬಳಸುತ್ತಾರೆಯೆ ? ಹರನ ಹಣೆಗಣ್ಣಿನ ಬೆಂಕಿಯಲ್ಲಿ ಮಾಂಸವನ್ನು ಸುಡಬೇಕೆಂದು ಬಯಸುತ್ತಾರೆಯೇ ? ಅಯ್ಯೋ ಮೂರ್ಖ ರಾಜ ! ಹಾವಿನ ಹೆಡೆಯಿಂದ ಹೆಡತಲೆಯನ್ನು ಕರೆದುಕೊಳ್ಳಬೇಕೆಂದು ಯಾರಾದರೂ ಬಯಸುತ್ತಾರೆಯೇ ? ಅಯ್ಯೋ, ಪಾಂಡುಪುತ್ರರ ಮಡದಿ ನಿನಗೆ ದಾಸಿಯಾಗುವವಳೇ ಶಿವಾ”! ಎಂದು ವ್ಯಥೆಗೊಂಡ.
ಪದಾರ್ಥ (ಕ.ಗ.ಪ)
ಅಡಬಳ-ಮಾಂಸ
ಮೂಲ ...{Loading}...
ಸಿಡಿಲ ಪೊಟ್ಟಣಗಟ್ಟಿ ಸೇಕವ
ಕೊಡುವರೇ ಹರನೇತ್ರ ವಹ್ನಿಯೊ
ಳಡಬಳವ ಸುಡಬಗೆದಲಾ ಮರುಳೇ ಮಹೀಪತಿಯೆ
ಹೆಡೆತಲೆಯ ತುರಿಸುವರೆ ಹಾವಿನ
ಹೆಡೆಯೊಳಕಟಾ ಪಾಂಡುಪುತ್ರರ
ಮಡದಿ ತೊತ್ತಹಳೇ ಶಿವಾ ಎಂದಳಲಿದನು ವಿದುರ ॥37॥
೦೩೮ ಕಾಳಕೂಟದ ತೊರೆಗಳಲಿ ...{Loading}...
ಕಾಳಕೂಟದ ತೊರೆಗಳಲಿ ಜಲ
ಕೇಳಿಯೇ ಕಾಲಾಂತಕನ ದಂ
ಷ್ಟ್ರಾಳಿಯಲಿ ನವಿಲುಯ್ಯಲೆಯ ನೀವಾಡಲಾಪಿರಲೆ
ಕಾಲರುದ್ರನ ಲಳಿಯ ನಾಟ್ಯದ
ಕೇಳಿಕೆಗೆ ನೀವರ್ತಿಕಾರರೆ
ಹೋಲದೋ ಶಿವಯೆನುತ ಕಂಬನಿದುಂಬಿದನು ವಿದುರ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- (ಅಷ್ಟಕ್ಕೆ ತಡೆಯಲಿಲ್ಲ.) “ಕಾಲಕೂಟದ ನದಿಯಲ್ಲಿ ಜಲಕ್ರೀಡೆಯಾಡುವುದೇ? ಕಾಲ ಯಮನ ದಾಡೆಗಳಲ್ಲಿ ನವಿಲುಯ್ಯಾಲೆಯನ್ನು ಆಡಬಲ್ಲಿರಾ? ಪ್ರಳಯಕಾಲದ ರುದ್ರನ ರಭಸದ ನಾಟ್ಯವನ್ನು ನೀವು ಬಯಸುತ್ತಿರುವಿರಲ್ಲಾ ! ನಿಮಗೆ ಸರಿಹೊಂದುವುದಿಲ್ಲವಪ್ಪಾ , ಶಿವಾ !” ಎಂದು ವಿದುರ ಕಣ್ಣೀರಿಟ್ಟ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಕಾಳಕೂಟದ ತೊರೆಗಳಲಿ ಜಲ
ಕೇಳಿಯೇ ಕಾಲಾಂತಕನ ದಂ
ಷ್ಟ್ರಾಳಿಯಲಿ ನವಿಲುಯ್ಯಲೆಯ ನೀವಾಡಲಾಪಿರಲೆ
ಕಾಲರುದ್ರನ ಲಳಿಯ ನಾಟ್ಯದ
ಕೇಳಿಕೆಗೆ ನೀವರ್ತಿಕಾರರೆ
ಹೋಲದೋ ಶಿವಯೆನುತ ಕಂಬನಿದುಂಬಿದನು ವಿದುರ ॥38॥
೦೩೯ ಬಡಗಲುತ್ತರಕುರು ನರೇನ್ದ್ರರ ...{Loading}...
ಬಡಗಲುತ್ತರಕುರು ನರೇಂದ್ರರ
ನಡುಗಿಸಿದರುದಯಾದ್ರಿ ತನಕವೆ
ನಡೆದು ಮುರಿದರು ಮೂಡಣರಸುಗಳತುಳ ಭುಜಬಲರ
ಪಡುವಲಗಣಿತ ಯವನ ತೆಂಕಲು
ಗಡೆ ವಿಭೀಷಣನೀ ಮಹೀಶರ
ಬಡಿದ ಪಾಂಡವರರಸಿ ತೊತ್ತಹಳೇ ಶಿವಾಯೆಂದ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಪಾಂಡವರು ರಾಜಸೂಯಯಾಗದ ಸಂದರ್ಭದಲ್ಲಿ ಉತ್ತರದಿಕ್ಕಿನಲ್ಲಿ ಉತ್ತರ ಕುರು ರಾಜರವರೆಗೆ ಎಲ್ಲ ಕ್ಷತ್ರಿಯರನ್ನು
ನಡುಗಿಸಿದರು. ಪೂರ್ವದಲ್ಲಿ ಉದಯಾದ್ರಿಯವರೆಗೆ ಇದ್ದ ಮಹಾಬಲಶಾಲಿಗಳಾದ ರಾಜರನ್ನೆಲ್ಲ ಸದೆಬಡಿದರು. ಪಶ್ಚಿಮದಲ್ಲಿ ಯವನರನ್ನು ದಕ್ಷಿಣದಲ್ಲಿ ವಿಭೀಷಣನನ್ನೂ ಗೆದ್ದು ಬಂದರು. ಅಂತಹ ಪಾಂಡವರ ರಾಣಿ ನಿನಗೆ ದಾಸಿಯಾಗುವಳೇ ?
ಪದಾರ್ಥ (ಕ.ಗ.ಪ)
ಬಡಗಲು-ಉತ್ತರ, ಪಡುವ-ಪಶ್ಚಿಮ, ತೆಂಕಲು-ದಕ್ಷಿಣ, ತೊತ್ತು-ದಾಸಿ
ಮೂಲ ...{Loading}...
ಬಡಗಲುತ್ತರಕುರು ನರೇಂದ್ರರ
ನಡುಗಿಸಿದರುದಯಾದ್ರಿ ತನಕವೆ
ನಡೆದು ಮುರಿದರು ಮೂಡಣರಸುಗಳತುಳ ಭುಜಬಲರ
ಪಡುವಲಗಣಿತ ಯವನ ತೆಂಕಲು
ಗಡೆ ವಿಭೀಷಣನೀ ಮಹೀಶರ
ಬಡಿದ ಪಾಂಡವರರಸಿ ತೊತ್ತಹಳೇ ಶಿವಾಯೆಂದ ॥39॥
೦೪೦ ತಿರುವ ಕೊರಳಲಿ ...{Loading}...
ತಿರುವ ಕೊರಳಲಿ ತೊಡಿಸಲಾರದೆ
ತೆರಳಿದರು ಚತುರಂಗ ಪೃಥ್ವೀ
ಶ್ವರರು ಮಾಗಧ ಚೈದ್ಯ ಮೊದಲಾದತುಲ ಭುಜಬಲರು
ತಿರುವನೇರಿಸಿ ಧನುವನುಗಿದ
ಬ್ಬರಿಸಿ ಗಗನದ ಯಂತ್ರಮತ್ಸ್ಯವ
ಮುರಿದ ಪಾಂಡವರರಸಿ ತೊತ್ತಹಳೇ ಶಿವಾಯೆಂದ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದ್ರೌಪದಿಯ ಸ್ವಯಂವರ ಸಮಯದಲ್ಲಿ, ಮತ್ಸ್ಯಯಂತ್ರವನ್ನು ಭೇದಿಸಬೇಕಾದಾಗ ಮಾಗಧ ಚೈದ್ಯ ಮೊದಲಾದ ಭುಜಬಲವುಳ್ಳ
ರಾಜರುಗಳೂ ಚತುರಂಗ ಪೃಥ್ವೀಶ್ವರರೂ ಧನುಸ್ಸಿಗೆ ತಿರುವನ್ನು ಏರಿಸಲು ಕೂಡ ಸಾಧ್ಯವಾಗದೆ ಅಪಮಾನಿತರಾಗಿ ಹಿಂತಿರುಗಿದರು.
ಆಗ ತಿರುವನ್ನೇರಿಸಿ ಎತ್ತಿ ಅಬ್ಬರಿಸಿ ಗಗನದಲ್ಲಿದ್ದ ಯಂತ್ರಮತ್ಸ್ಯವನ್ನು ಭೇದಿಸಿದ ಪಾಂಡವರ ಅರಸಿ ನಿನಗೆ ದಾಸಿಯಾಗುವವಳೇ, ಶಿವಾ!
ಪದಾರ್ಥ (ಕ.ಗ.ಪ)
ಮೂಲ ...{Loading}...
ತಿರುವ ಕೊರಳಲಿ ತೊಡಿಸಲಾರದೆ
ತೆರಳಿದರು ಚತುರಂಗ ಪೃಥ್ವೀ
ಶ್ವರರು ಮಾಗಧ ಚೈದ್ಯ ಮೊದಲಾದತುಲ ಭುಜಬಲರು
ತಿರುವನೇರಿಸಿ ಧನುವನುಗಿದ
ಬ್ಬರಿಸಿ ಗಗನದ ಯಂತ್ರಮತ್ಸ್ಯವ
ಮುರಿದ ಪಾಂಡವರರಸಿ ತೊತ್ತಹಳೇ ಶಿವಾಯೆಂದ ॥40॥
೦೪೧ ಬಕನ ಮುರಿದರು ...{Loading}...
ಬಕನ ಮುರಿದರು ವನದಲಿ ಹಿಡಿಂ
ಬಕನ ಹಣಿದರು ಮಾಗಧನ ಸು
ಪ್ರಕಟಬಲನಂಬುಜದ ನಾಳವನಾನೆ ಕೀಳ್ವಂತೆ
ಸಕಲಜನ ನೃಪರರಿಯೆ ಸೀಳಿದ
ರಕಟ ಮಾರಿಯ ಬೇಟವೇ ಪಾ
ತಕವಲಾ ಪಾಂಚಾಲೆ ತೊತ್ತಹಳೆ ಶಿವಾಯೆಂದ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಬಕಾಸುರನನ್ನು ಕೊಂದರು, ಕಾಡಿನಲ್ಲಿ ಹಿಡಿಂಬನನ್ನು ಕೊಂದರು. ಮಹಾಬಲಶಾಲಿಯೆಂದು ಪ್ರಸಿದ್ಧನಾಗಿದ್ದ ಜರಾಸಂಧನನ್ನು ಆನೆಯು ತಾವರೆಯ ನಾಳವನ್ನು ಸೀಳಿದಂತೆ ಲೀಲಾಜಾಲವಾಗಿ ಸೀಳಿ ಎಸೆದರೆಂಬುದನ್ನು ಸಕಲ ರಾಜರೂ ಬಲ್ಲರು, ! ಅಂಥವg ಪತ್ನಿಯಾದ ಪಾಂಚಾಲೆ ನಿನಗೆ ದಾಸಿಯಾಗುವವಳೆ ? ಮಾರಿಯೊಡನೆ ನಿನ್ನ ಪ್ರಣಯಚೇಷ್ಟೆಯೇ ? ಅದು ಪಾಪ !
ಪದಾರ್ಥ (ಕ.ಗ.ಪ)
ಹಣಿ-ಬಡಿದುಹಾಕು, ಕೊಲ್ಲು
ಮೂಲ ...{Loading}...
ಬಕನ ಮುರಿದರು ವನದಲಿ ಹಿಡಿಂ
ಬಕನ ಹಣಿದರು ಮಾಗಧನ ಸು
ಪ್ರಕಟಬಲನಂಬುಜದ ನಾಳವನಾನೆ ಕೀಳ್ವಂತೆ
ಸಕಲಜನ ನೃಪರರಿಯೆ ಸೀಳಿದ
ರಕಟ ಮಾರಿಯ ಬೇಟವೇ ಪಾ
ತಕವಲಾ ಪಾಂಚಾಲೆ ತೊತ್ತಹಳೆ ಶಿವಾಯೆಂದ ॥41॥
೦೪೨ ಸೋಲಿಸಿದೆ ನೀನೀಗಲೀ ...{Loading}...
ಸೋಲಿಸಿದೆ ನೀನೀಗಲೀ ನರ
ಪಾಲರನು ಜೂಜಿನಲಿ ಮೇಲಣ
ಕಾಳಗದ ಕಳನೊಳಗೆ ಕವಿತಹ ಕೋಲ ತೋಹಿನಲಿ
ಸೋಲವೊಂದಕೆ ನೂರು ನೂರರ
ಮೇಲೆ ಸಾವಿರ ಸಾವಿರದ ಮೈ
ಸಾಲ ಲಕ್ಷವನಂತವಾಗಿಯೆ ತೆಗೆವರವರೆಂದೆ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈಗ ನೀನು ಈ ನರಪಾಲಕರನ್ನು ಜೂಜಿನಲ್ಲಿ ಸೋಲಿಸಿದೆ, ನಿಜ. ಆದರೆ ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಅನಂತರ ಯುದ್ಧ ಕ್ಷೇತ್ರದಲ್ಲಿ ನಡೆವ ಕಾಳಗದಲ್ಲಿ ಅವರ ಬಾಣಗಳು ನಿಮ್ಮ ಮೇಲೆ ಕವಿದು ಬರುವಾಗ ಈಗ ಅವರು ಪಡೆದ ಒಂದೊಂದು ಸೋಲಿಗೂ ನೂರರಂತೆ, ನೂರರ ಮೇಲೆ ಸಾವಿರದಂತೆ, ಸಾವಿರದ ಮೈಸಾಲ ಬಡ್ಡಿ ಬೆಳೆದು ಲಕ್ಷವಾದಂತೆ ಅನಂತವಾಗಿಯೇ ಸೇಡು ತೀರಿಸಿಕೊಳ್ಳುವರು.
ಪದಾರ್ಥ (ಕ.ಗ.ಪ)
ಕೋಲ ತೋಹು-ಬಾಣಗಳು ಕವಿದು ಬರುವುದು
ಮೂಲ ...{Loading}...
ಸೋಲಿಸಿದೆ ನೀನೀಗಲೀ ನರ
ಪಾಲರನು ಜೂಜಿನಲಿ ಮೇಲಣ
ಕಾಳಗದ ಕಳನೊಳಗೆ ಕವಿತಹ ಕೋಲ ತೋಹಿನಲಿ
ಸೋಲವೊಂದಕೆ ನೂರು ನೂರರ
ಮೇಲೆ ಸಾವಿರ ಸಾವಿರದ ಮೈ
ಸಾಲ ಲಕ್ಷವನಂತವಾಗಿಯೆ ತೆಗೆವರವರೆಂದೆ ॥42॥
೦೪೩ ಎಳೆದು ತರಿಸಾ ...{Loading}...
ಎಳೆದು ತರಿಸಾ ದ್ರೌಪದಿಯ ನೀ
ಕಳಕಳಕೆ ಕೈಗೊಟ್ಟವೋಲ
ಸ್ಖಲಿತರಿಹರಕ್ಷಮತೆಯಲಿ ತತ್ಸಮಯ ಪರಿಯಂತ
ಬಳಿಕ ನೂರ್ವರ ಸತಿಯರಕ್ಕೆಯ
ಕಳವಳದ ಬಿಡುಮುಡಿಯ ಬಸುರಿನ
ತಳದ ಬಿರುಪೊಯ್ಲುಗಳ ಭಂಗವ ಕಾಂಬರಿವರೆಂದ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈಗ ನೀನು ಆ ದ್ರೌಪದಿಯನ್ನು ಎಳೆದು ತರಿಸು. ಅವರಿಗೆ ಆ ಸಮಯ ಬರುವವರೆಗೆ ನಿನ್ನ ಈ ಕಳಕಳಕ್ಕೆ ಅವರೇ
ಸಹಾಯಕರಾಗಿ ನಿಂತರೋ ಎಂಬಂತೆ ಅಲುಗಾಡದೆ ಸುಮ್ಮನಿರುತ್ತಾರೆ. ಅನಂತರ ನೀವು ನೂರ್ವರೂ ಹತರಾದಾಗ ನೂರ್ವರ
ಪತ್ನಿಯರೂ ವ್ಯಾಕುಲದಿಂದ ಅಳುತ್ತಾ ತಲೆ ಬಿರಿಹೊಯ್ದುಕೊಂಡು ಅಂಗೈಯಿಂದ ಹೊಟ್ಟೆಯನ್ನು ಬಡಿದುಕೊಳ್ಳುತ್ತಾ ಭಂಗವನ್ನು ಅನುಭವಿಸುವುದನ್ನು ಕಾಣಬೇಕಾಗುತ್ತದೆ ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಎಳೆದು ತರಿಸಾ ದ್ರೌಪದಿಯ ನೀ
ಕಳಕಳಕೆ ಕೈಗೊಟ್ಟವೋಲ
ಸ್ಖಲಿತರಿಹರಕ್ಷಮತೆಯಲಿ ತತ್ಸಮಯ ಪರಿಯಂತ
ಬಳಿಕ ನೂರ್ವರ ಸತಿಯರಕ್ಕೆಯ
ಕಳವಳದ ಬಿಡುಮುಡಿಯ ಬಸುರಿನ
ತಳದ ಬಿರುಪೊಯ್ಲುಗಳ ಭಂಗವ ಕಾಂಬರಿವರೆಂದ ॥43॥
೦೪೪ ಇವನವರ ಬಹಿರಙ್ಗ ...{Loading}...
ಇವನವರ ಬಹಿರಂಗ ಜೀವ
ವ್ಯವಹರಣೆಯಾತನು ವೃಥಾ ತಾ
ನಿವನ ಕೆಣಕಿದೆನಕಟ ಬೋಧಭ್ರಾಂತಿ ಬಾಹಿರನ
ಇವನಿರಲಿ ಬಾ ಪ್ರಾತಿಕಾಮಿಕ
ಯುವತಿಯನು ಕರೆ ಹೋಗು ನೀನೆನ
ಲವ ಹಸಾದವ ಹಾಯ್ಕಿ ಬಂದನು ದೇವಿಯರಮನೆಗೆ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿದುರನಿಗೆ ಹೇಳಿದ್ದೇ ತಪ್ಪಾಯಿತು ಎಂದುಕೊಂಡ ದುರ್ಯೋಧನ. ಇವನು ಈ ಪಾಂಡವರ ಹೊರಗಿನ
ಜೀವದಂತೆ ವ್ಯವಹಾರ ಮಾಡುತ್ತಿದ್ದಾನೆ. ನಾನು ವ್ಯರ್ಥವಾಗಿ ಇವನನ್ನು ಕೆಣಕಿದಂತಾಯಿತು. ತಾನೇ ಮಹಾ ತಿಳಿದವನೆಂದು ಭ್ರಮೆಗೊಂಡಿದ್ದಾನೆ. ಇವನಿರಲಿ” ಎಂದು, ಪ್ರತಿಕಾಮಿಯನ್ನು ಕರೆದು “ನೀನು ಆ ಯುವತಿಯನ್ನು ಕರೆದು ತಾ, ಹೋಗು” ಎಂದ. ಅವನು “ಹಸಾದ” ಎಂದು ದ್ರೌಪದಿಯಿದ್ದ ಅರಮನೆಗೆ ಬಂದ.
ಪದಾರ್ಥ (ಕ.ಗ.ಪ)
ಟಿಪ್ಪನೀ (ಕ.ಗ.ಪ)
ಪ್ರಾತಿಕಾಮಿ - ಪ್ರಾತಿಕಾಮಿ ಎಂದರೆ ಸೇವಕ, ವಾರ್ತಾಹರ ಎಂದರ್ಥ. ಈಗ ಒಬ್ಬ ಸೂತ. ಪಾಂಡವರು ಜೂಜಿನಲ್ಲಿ ದ್ರೌಪದಿಯನ್ನು ಕೂಡ ಪಣಕ್ಕೆ ಒಡ್ಡಿ ಕಳೆದುಕೊಂಡಿದ್ದಾಗ ರಾಜಸಭೆಯಲ್ಲಿ ಕೌರವನು ಪ್ರಾತಿಕಾಮಿಯನ್ನು ಕರೆದು ‘‘ಪಾಂಡವರ ಭಯಬೇಡ. ನೀನು ಹೋಗಿ ದ್ರೌಪದಿಯನ್ನು ಇಲ್ಲಿಗೆ ಕರೆದುಕೊಂಡು ಬಾ’’ ಎಂದು ಹೇಳಿದ. ಆತ ದ್ರೌಪದಿಯ ಬಳಿಗೆ ಬಂದು
‘‘ರಾಜಕುಮಾರಿ! ಧರ್ಮರಾಜನು ದ್ಯೋತೋನ್ಮತ್ತನಾಗಿ ಎಲ್ಲ ಸೋತು ಕೊನೆಗೆ ನಿನ್ನನ್ನೂ ಪಂದ್ಯದಲ್ಲಿ ಒಡ್ಡಿ ಸೋತಿದ್ದಾನೆ. ಈಗ ನೀನು ಕೌರವನ ದಾಸಿ. ಈ ಕೂಡಲೇ ನಿನ್ನನ್ನು ರಾಜ್ಯಸಭೆಗೆ ಕರೆತರಲು ಅಪ್ಪಣೆಯಾಗಿದೆ’’ ಎಂದು ಹೇಳಿದ. ದ್ರೌಪದಿ ನಂಬಲಿಲ್ಲ.
ಪ್ರಾತಿಕಾಮಿ! ಏನು ಮಾತಾಡುತ್ತಿದ್ದೀ? ಯಾವ ರಾಜನು ತಾನೇ ಹೆಂಡತಿಯನ್ನು ಒಡ್ಡಿ ಜೂಜಾಡುತ್ತಾನೆ ಹೇಳು. ಬೇರೆ ಧನ ಇರಲಿಲ್ಲವೆ?
ಪ್ರಾತಿಕಾಮಿ: ಇಲ್ಲ. ಎಲ್ಲ ಕಳೆದುಕೊಂಡ. ಮೊದಲು ಸೋದರರನ್ನು ಅನಂತರ ತನ್ನನ್ನು ಅನಂತರ ನಿನ್ನನ್ನು ಒಡ್ಡಿ ಸೋತ.
ದ್ರೌಪದಿ: ಪ್ರಾತಿಕಾಮಿ ಮೊದಲು ತನ್ನನ್ನು ಸೋತುಕೊಂಡು ಅನಂತರ ನನ್ನನ್ನು ಸೋತನೆ? ಈ ಬಗೆಗೆ ನಿಖರವಾಗಿ ತಿಳಿದು ಬಂದು ಹೇಳು.
ಪ್ರಾತಿಕಾಮಿ ಮತ್ತೆ ರಾಜಸಭೆಗೆ ಬಂದ. ಕೌರವನು ಸಿಟ್ಟಿನಿಂದ, ದ್ರೌಪದಿ ಸಭೆಗೆ ಬಂದು ಪ್ರಶ್ನೆ ಕೇಳಲಿ ಎಂದು ಉತ್ತರಿಸಿದ. ಹಿಂದಕ್ಕೆ ಬಂದ ಪ್ರಾತಿಕಾಮಿಗೆ ‘ಹೋಗಲಿ ಹಿರಿಯರನ್ನಣಾದರೂ ಕೇಳಿಕೊಂಡು ಬಾ; ಎಂದು ದ್ರೌಪದಿ ಮತ್ತೆ ಹಿಂದಕ್ಕೆ ಕಳಿಸಿದಳು. ಅಲ್ಲಿಂದಿಲ್ಲಿಗೆ ಮತ್ತೆ ಇಲ್ಲಿಂದ ಅಲ್ಲಿಗೆ ಲಾಳಿಯಾಡಬೇಕಾಗಿ ಬಂದ ಪ್ರಾತಿಕಾಮಿ ಸಭೆಗೆ ಎಲ್ಲವನ್ನೂ ಹೇಳಿದ. ಹಿರಿಯರು ತಾನೇ ಏನು ಹೇಳುತ್ತಾರೆ? ಮತ್ತೆ ಕೌರವನು ಒರಡು ಮಾತುಗಳನ್ನಾಡಿ ದ್ರೌಪದಿಯನ್ನು ಎಳದು ತರುವಂತೆ ಸ್ರಚಿಸಿದ. ಆದರೆ ಪ್ರಾತಿಕಾಮಿ ಮತ್ತೆ ದ್ರೌಪದಿಯ ಬಳಿಗೆ ಹೋಗು ನಿರಾಕರಿಸಿದ. ಅವನಿಗೆ ಮತ್ತೆ ಹೋಗಲು ಹೆದರಿಕೆಯೋ ಅಥವಾ ದ್ರೌಪದಿ ಇನ್ನೇನಾದರೂ ಪ್ರಶ್ನೆ ಕೇಳಿ ಮತ್ತೆ ಹಿಂದಕ್ಕೆ ಕಳುಹಿಸಿಯಾದಳೆಂಬ ಅನುಮಾನವೋ ಹೇಳುವುದು ಕಷ್ಟ. ಅಷ್ಟೇ ಅಲ್ಲದೆ ದ್ರೌಪದಿಯ ಮಾತಿನಲ್ಲಿ ಸತ್ಯಾಂಶವಿದೆ ಎಂಬ ಸಂಗತಿಯೂ ಅವನಿಗೆ ಗೊತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ದ್ರೌಪದಿಯ ವಾಕ್ಚಾತುರ್ಯದ ಮೋಡಿಗೆ ಎಂಥವನೂ ಮರುಳಾಗಬೇಕಲ್ಲವೇ?
ಪ್ರಾತಿಕಾಮಿ ತನಗೆ ಕೊಟ್ಟ ಕೆಲಸವನ್ನಷ್ಟೆ ಮಾಡಿ ಮುಗಿಸುವುದಿಲ್ಲ ಎಂಬುದು ಅವನ ಮಾತುಗಳಿಂದ ಸ್ಪಷ್ಟವಾಗುತ್ತದೆ. ಧರ್ಮರಾಯನು ‘ದ್ಯೂತೋನ್ಮತ್ತ’ನಾಗಿ ಎಂದು ಹೇಳುವ ಮಾತು ಬರಿಯ ಮಾತಾಗದೆ ವಿಚಾರ ವಿಮರ್ಶೆಯೂ ಆಗುತ್ತದೆ. ಸುದ್ದಿ ಹೇಳಲು ಬಂದ ಪ್ರಾತಿಕಾಮಿಯು ಆ ಬಗೆಗೆ ತನ್ನ ವೈಯಕ್ತಿಕ ಟೀಕೆಯನ್ನೂ ಸೇರಿಸುವಷ್ಟು ಸ್ವತಂತ್ರ ವಿಚಾರಪರನಾಗಿರುವುದನ್ನು ನೋಡಿ ಬರಿಯ ಸುದ್ದಿ ಹೇಳುವುದರ ಜತೆಗೆ ತನ್ನ ಟೀಕೆಯನ್ನೂ ಸೇರಿಸುತ್ತಾನೆ. ಅವನ ಮಾತು ಇದು:
‘‘ಮಹಾರಾಣಿ! ಈಗ ಕೌರವರಿಗೆ ವಿನಾಶಕಾಲ ಬಂದಿದೆಯೆಂದು ಭಾವಿಸುತ್ತೇನೆ. ನಿನನ್ನು ರಾಜಸಭೆಗೆ ಬರಮಾಡಿಕೊಳ್ಳುವಷ್ಟು ನೀಚಕಾರ್ಯಕ್ಕೆ ಇಳಿದಿದ್ದಾನೆ.’’
ಇದು ತುಂಬ ತೂಕವಾದ ಮಾತು. ಸೇವಕರಲ್ಲಿ ಕೂಡ ಇಂಥ ವಿವೇಚನೆ ಬೆಳೆದಿರುವುದು ಅವರ ವೃತ್ತಿಗೇ ಭೂಷಣವನ್ನು ತರುವ ಸಂಗತಿಯಾಗಿದೆ. ಅಲ್ಲದೆ ಮತ್ತೆ ಮೂರನೆಯ ಸಲ ದ್ರೌಪದಿಯನ್ನು ಕರೆಯಲು ತಾನು ಹೋಗುವುದಿಲ್ಲ ಎಂದು ನಿರಾಕರಿಸುವುದರಲ್ಲೂ ಅವನ ಧೈರ್ಯ ಮನೋಭಾವ ವ್ಯಕ್ತವಾಗುತ್ತದೆ. ‘ಓಲೆಕಾರನಿಗೇಕೆ ತಂದ ಸುದ್ದಿಯ ಚಿಂತೆ’ ಎಂಬ ಮಾತು ಇಂಥವರಿಗೆ ಅನ್ವಯಿಸುವುದಿಲ್ಲ.
ಮೂಲ ...{Loading}...
ಇವನವರ ಬಹಿರಂಗ ಜೀವ
ವ್ಯವಹರಣೆಯಾತನು ವೃಥಾ ತಾ
ನಿವನ ಕೆಣಕಿದೆನಕಟ ಬೋಧಭ್ರಾಂತಿ ಬಾಹಿರನ
ಇವನಿರಲಿ ಬಾ ಪ್ರಾತಿಕಾಮಿಕ
ಯುವತಿಯನು ಕರೆ ಹೋಗು ನೀನೆನ
ಲವ ಹಸಾದವ ಹಾಯ್ಕಿ ಬಂದನು ದೇವಿಯರಮನೆಗೆ ॥44॥
೦೪೫ ಬನ್ದು ಬಾಗಿಲ ...{Loading}...
ಬಂದು ಬಾಗಿಲ ಕಾಹಿಗಳ ಕರೆ
ದೆಂದನರಸಿಗೆ ಬಿನ್ನವಿಸಿ ತಾ
ಬಂದ ಹದನನು ಕಾರ್ಯವುಂಟೆನೆ ಹಲವು ಬಾಗಿಲಲಿ
ಬಂದುದಲ್ಲಿಯದಲ್ಲಿಗರುಹಿಸ
ಲಿಂದುಮುಖಿ ಕೇಳಿದಳು ಬರ ಹೇ
ಳೆಂದರಾತನ ಹೊಗಿಸಿದರು ಹೊಕ್ಕನು ಸತೀಸಭೆಯ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರಾತಿಕಾಮಿ ಬಂದು, ಬಾಗಿಲು ಕಾಯುತ್ತಿದ್ದವರನ್ನು ಕರೆದು “ಅರಸಿಯ ಬಳಿ ತನ್ನ ಕಾರ್ಯವುಂಟು. ತಾನು ಬಂದಿರುವ ವಿಷಯವನ್ನು ಆಕೆಗೆ ಬಿನ್ನವಿಸಿ” ಎಂದ. ಆ ಬಾಗಿಲು ಕಾಯುವವನಿಂದ ಒಳಗೆ ಹಲವು ಬಾಗಿಲು ಕಾಯುವವರು ಒಬ್ಬರಿಂದೊಬ್ಬರು
ವಿಷಯ ತಿಳಿದು ದ್ರೌಪದಿಗೆ ಸುದ್ದಿ ಮುಟ್ಟಿಸಿದರು. ಅದನ್ನು ತಿಳಿದು ಆಕೆ “ಬರಹೇಳು” ಎಂದಳು. ಸರಿ ಅವನನ್ನು ಒಳಕ್ಕೆ ಬಿಟ್ಟರು. ಅವನು ಸತೀಸಭೆಯನ್ನು ಪ್ರವೇಶಿಸಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಬಂದು ಬಾಗಿಲ ಕಾಹಿಗಳ ಕರೆ
ದೆಂದನರಸಿಗೆ ಬಿನ್ನವಿಸಿ ತಾ
ಬಂದ ಹದನನು ಕಾರ್ಯವುಂಟೆನೆ ಹಲವು ಬಾಗಿಲಲಿ
ಬಂದುದಲ್ಲಿಯದಲ್ಲಿಗರುಹಿಸ
ಲಿಂದುಮುಖಿ ಕೇಳಿದಳು ಬರ ಹೇ
ಳೆಂದರಾತನ ಹೊಗಿಸಿದರು ಹೊಕ್ಕನು ಸತೀಸಭೆಯ ॥45॥
೦೪೬ ಹೊಳೆವ ಕಙ್ಗಳ ...{Loading}...
ಹೊಳೆವ ಕಂಗಳ ಕಾಂತಿಗಳ ಥಳ
ಥಳಿಪ ವದನಪ್ರಭೆಯ ರತ್ನಾ
ವಳಿಯ ಬಹುವಿಧ ರಶ್ಮಿಗಳ ಲಾವಣ್ಯ ಲಹರಿಗಳ
ಎಳೆನಗೆಯ ಸುಲಿಪಲ್ಲ ಮುಕ್ತಾ
ವಳಿಯ ನಖ ದೀಧಿತಿಯ ಬೆಳಗಿನ
ಬಳಗವೆನೆ ಬಾಲಕಿಯರಿದ್ದರು ಸತಿಯ ಬಳಸಿನಲಿ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಳಗೆ ಹೋಗಿ ನೋಡುತ್ತಾನೆ, ದ್ರೌಪದಿ ಬಾಲಕಿಯರ ನಡುವೆ ಕುಳಿತಿದ್ದಾಳೆ. ಅವರ ಕಣ್ಣುಗಳು ಕಾಂತಿಯಿಂದ ಹೊಳೆಹೊಳೆಯುತ್ತಿವೆ. ಅವರ ಮುಖ ಕಾಂತಿ ಥಳಥಳಿಸುತ್ತಿದೆ. ಅವರು ಧರಿಸಿದ್ದ ಆಭರಣಗಳ ರತ್ನಾವಳಿಯ ಬಗೆಬಗೆಯ ರಶ್ಮಿಗಳು ಲಾವಣ್ಯಮಯವಾಗಿ ಸುತ್ತಲೂ ಹರಡುತ್ತಿವೆ. ಅವರು ನಸುನಗುವಾಗ ಮುತ್ತಿನ ಸಾಲಿನಂತಿರುವ ಹಲ್ಲುಗಳ, ಹೊಳಪು, ಉಗುರುಗಳ ಕಾಂತಿ ಹೊರಹೊಮ್ಮುತ್ತಿವೆ.
ಪದಾರ್ಥ (ಕ.ಗ.ಪ)
ಸುಲಿಪಲ್ಲು-ಸ್ವಚ್ಛವಾದ ಹಲ್ಲು, ದೀಧಿತಿ-ಕಾಂತಿ
ಮೂಲ ...{Loading}...
ಹೊಳೆವ ಕಂಗಳ ಕಾಂತಿಗಳ ಥಳ
ಥಳಿಪ ವದನಪ್ರಭೆಯ ರತ್ನಾ
ವಳಿಯ ಬಹುವಿಧ ರಶ್ಮಿಗಳ ಲಾವಣ್ಯ ಲಹರಿಗಳ
ಎಳೆನಗೆಯ ಸುಲಿಪಲ್ಲ ಮುಕ್ತಾ
ವಳಿಯ ನಖ ದೀಧಿತಿಯ ಬೆಳಗಿನ
ಬಳಗವೆನೆ ಬಾಲಕಿಯರಿದ್ದರು ಸತಿಯ ಬಳಸಿನಲಿ ॥46॥
೦೪೭ ಗಿಳಿಯ ಮೆಲು ...{Loading}...
ಗಿಳಿಯ ಮೆಲು ನುಡಿಗಳ ವಿನೋದದಿ
ಕೆಲರು ವೀಣಾಧ್ವನಿಯ ರಹಿಯಲಿ
ಕೆಲರು ಸರಸ ಸುಗಂಧ ಸಂಗೀತದ ಸಮಾಧಿಯಲಿ
ಕೆಲರು ನೆತ್ತದಲಮಳ ಮುಕ್ತಾ
ವಳಿಯ ಚೆಲುವಿನ ಚದುರೆಯರು ಕಂ
ಗೊಳಿಸಿತಬಲೆಯ ಮಣಿಯ ಮಂಚದ ಸುತ್ತುವಳೆಯದಲಿ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿ ಕುಳಿತಿದ್ದ ರತ್ನ ಮಂಚದ ಸುತ್ತಲೂ ನೆರೆದಿದ್ದ ಆ ಬಾಲಿಕೆಯರಲ್ಲಿ ಕೆಲವರು ಗಿಳಿಯಂತೆ ವಿನೋದವಾಗಿ ಮೆಲು
ನುಡಿಗಳನ್ನು ಆಡುತ್ತಿದ್ದಾರೆ. ಕೆಲವರು ವೀಣಾಧ್ವನಿ ಮಾಡುತ್ತಾ ಅದರ ಇಂಪಿನಲ್ಲಿ ತಲ್ಲೀನರಾಗಿದ್ದಾರೆ. ಕೆಲವರು ಸರಸ ಸುಗಂಧ ಸಂಗೀತದ ಸಮಾಧಿಯಲ್ಲಿದ್ದಾರೆ. ಕೆಲವರು ಪಗಡೆಯ ಆಟದಲ್ಲಿ ತಲ್ಲೀನರಾಗಿದ್ದಾರೆ. ಹೀಗೆ ಆ ಚೆಲುವಿನ ಚದುರೆಯರು ಕಂಗೊಳಿಸುತ್ತಿದ್ದರು.
ಪದಾರ್ಥ (ಕ.ಗ.ಪ)
ರಹಿ- ಉತ್ಸಾಹ, ಸಂಭ್ರಮ
ಮೂಲ ...{Loading}...
ಗಿಳಿಯ ಮೆಲು ನುಡಿಗಳ ವಿನೋದದಿ
ಕೆಲರು ವೀಣಾಧ್ವನಿಯ ರಹಿಯಲಿ
ಕೆಲರು ಸರಸ ಸುಗಂಧ ಸಂಗೀತದ ಸಮಾಧಿಯಲಿ
ಕೆಲರು ನೆತ್ತದಲಮಳ ಮುಕ್ತಾ
ವಳಿಯ ಚೆಲುವಿನ ಚದುರೆಯರು ಕಂ
ಗೊಳಿಸಿತಬಲೆಯ ಮಣಿಯ ಮಂಚದ ಸುತ್ತುವಳೆಯದಲಿ ॥47॥
೦೪೮ ಸಕಲ ಶಕ್ತಿಪರೀತ ...{Loading}...
ಸಕಲ ಶಕ್ತಿಪರೀತ ವಿಮಳಾಂ
ಬಿಕೆಯವೋಲ್ ವರಮಂತ್ರ ದೇವೀ
ನಿಕರ ಮಧ್ಯದಿ ಶೋಭಿಸುವ ಸಾವಿತ್ರಿಯಂದದಲಿ
ವಿಕಟ ರಶ್ಮಿ ನಿಬದ್ಧ ರತ್ನ
ಪ್ರಕರ ಮಧ್ಯದ ಕೌಸ್ತುಭದವೊಲ್
ಚಕಿತ ಬಾಲಮೃಗಾಕ್ಷಿ ಮೆರೆದಳು ಯುವತಿ ಮಧ್ಯದಲಿ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಯುವತಿಯರ ಮಧ್ಯದಲ್ಲಿದ್ದ ದ್ರೌಪದಿ ಸಕಲ ಶಕ್ತಿಗಳಿಂದ ಸುತ್ತುವರಿಯಲ್ಪಟ್ಟ ವಿಮಳಾಂಬಿಕೆಯಂತೆ, ವರ ಮಂತ್ರ
ದೇವೀನಿಕರದ ನಡುವೆ ಶೋಭಿಸುವ ಸಾವಿತ್ರೀ ದೇವಿಯಂತೆ ನಾನಾ ವಿಧದ ರಶ್ಮಿಗಳನ್ನು ಹೊರ ಚೆಲ್ಲುತ್ತಿರುವ ರತ್ನಗಳ ರಾಶಿಯ ನಡುವೆ ಶೋಭಿಸುವ ಕೌಸ್ತುಭ ರತ್ನದಂತೆ ಬೆಳಗುತ್ತಿದ್ದಳು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಸಕಲ ಶಕ್ತಿಪರೀತ ವಿಮಳಾಂ
ಬಿಕೆಯವೋಲ್ ವರಮಂತ್ರ ದೇವೀ
ನಿಕರ ಮಧ್ಯದಿ ಶೋಭಿಸುವ ಸಾವಿತ್ರಿಯಂದದಲಿ
ವಿಕಟ ರಶ್ಮಿ ನಿಬದ್ಧ ರತ್ನ
ಪ್ರಕರ ಮಧ್ಯದ ಕೌಸ್ತುಭದವೊಲ್
ಚಕಿತ ಬಾಲಮೃಗಾಕ್ಷಿ ಮೆರೆದಳು ಯುವತಿ ಮಧ್ಯದಲಿ ॥48॥
೦೪೯ ಸುತ್ತಲೆಸೆಯೆ ವಿಲಾಸಿನೀಜನ ...{Loading}...
ಸುತ್ತಲೆಸೆಯೆ ವಿಲಾಸಿನೀಜನ
ಹತ್ತು ಸಾವಿರ ನಡುವೆ ಕಂಡನು
ಮತ್ತಕಾಶಿನಿಯನು ಪತಿವ್ರತೆಯರ ಶಿರೋಮಣಿಯ
ಹತ್ತಿರೈತರಲಂಜಿಸಿದನು ತ
ನ್ನುತ್ತಮಾಂಗಕೆ ಕರಯುಗವ ಚಾ
ಚುತ್ತ ಬಿನ್ನಹ ಮಾಡಿದನು ಪಾಂಚಾಲ ನಂದನೆಗೆ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ವಿಳಾಸಿನೀ ಜನರು ಹತ್ತು ಸಾವಿರ ಮಂದಿ ಸುತ್ತಲೂ ಕಂಗೊಳಿಸುತ್ತಿರಲು ಅವರ ನಡುವೆ ಪತಿವ್ರತೆಯರ ಶಿರೋಮಣಿಯಾದ ಈ ಲಾವಣ್ಯವತಿ ದ್ರೌಪದಿ ಕುಳಿತಿರಲು ಪ್ರಾತಿಕಾಮಿ ಹತ್ತಿರ ಹೋಗಲು ಅಂಜಿದ. ದೂರದಿಂದಲೇ ತನ್ನ ಹಣೆಯ ಬಳಿ ಕರಯಗವನ್ನು ಜೋಡಿಸಿ ಆಕೆಗೆ ಬಿನ್ನಹ ಮಾಡಿಕೊಂಡ.
ಪದಾರ್ಥ (ಕ.ಗ.ಪ)
ಮತ್ತಕಾಶಿನಿ-ಸುಂದರಿ, ದ್ರೌಪದಿ
ಮೂಲ ...{Loading}...
ಸುತ್ತಲೆಸೆಯೆ ವಿಲಾಸಿನೀಜನ
ಹತ್ತು ಸಾವಿರ ನಡುವೆ ಕಂಡನು
ಮತ್ತಕಾಶಿನಿಯನು ಪತಿವ್ರತೆಯರ ಶಿರೋಮಣಿಯ
ಹತ್ತಿರೈತರಲಂಜಿಸಿದನು ತ
ನ್ನುತ್ತಮಾಂಗಕೆ ಕರಯುಗವ ಚಾ
ಚುತ್ತ ಬಿನ್ನಹ ಮಾಡಿದನು ಪಾಂಚಾಲ ನಂದನೆಗೆ ॥49॥
೦೫೦ ತಾಯೆ ಬಿನ್ನಹವಿನ್ದು ...{Loading}...
ತಾಯೆ ಬಿನ್ನಹವಿಂದು ನಿಮ್ಮಯ
ರಾಯ ಸೋತನು ಜೂಜಿನಲಿ ಕುರು
ರಾಯ ಗೆಲಿದನು ಕೋಶವನು ಗಜತುರಗ ರಥಸಹಿತ
ನೋಯಲಾಗದು ಹಲವು ಮಾತೇ
ನಾ ಯುಧಿಷ್ಠಿರನೃಪತಿ ಸೋತನು
ತಾಯೆ ಭೀಮಾರ್ಜುನ ನಕುಲ ಸಹದೇವ ನೀವ್ಸಹಿತ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ತಾಯೆ, ಇಗೋ ವಿಜ್ಞಾಪನೆ ಮಾಡಿಕೊಳ್ಳುತ್ತಿದ್ದೇನೆ. ನಿಮ್ಮ ರಾಯ ಜೂಜಿನಲ್ಲಿ ಸೋತ. ಕುರುರಾಯ ಗಜ ತುರುಗ ರಥಸಹಿತ ಕೋಶವನ್ನು ಗೆದ್ದುಬಿಟ್ಟ. ನೊಂದುಕೊಳ್ಳಬಾರದು. ಹಲವು ಮಾತೇನು. ಯುಧಿಷ್ಠಿರ ರಾಜ ಸೋತನು ತಾಯೆ. ಭೀಮಾರ್ಜುನ ನಕುಲ ಸಹದೇವ ಹಾಗೂ ನಿಮ್ಮನ್ನೂ ಸೇರಿಸಿ”.
ಪದಾರ್ಥ (ಕ.ಗ.ಪ)
ಮೂಲ ...{Loading}...
ತಾಯೆ ಬಿನ್ನಹವಿಂದು ನಿಮ್ಮಯ
ರಾಯ ಸೋತನು ಜೂಜಿನಲಿ ಕುರು
ರಾಯ ಗೆಲಿದನು ಕೋಶವನು ಗಜತುರಗ ರಥಸಹಿತ
ನೋಯಲಾಗದು ಹಲವು ಮಾತೇ
ನಾ ಯುಧಿಷ್ಠಿರನೃಪತಿ ಸೋತನು
ತಾಯೆ ಭೀಮಾರ್ಜುನ ನಕುಲ ಸಹದೇವ ನೀವ್ಸಹಿತ ॥50॥
೦೫೧ ಅರಳಿದಮ್ಬುಜ ವನಕೆ ...{Loading}...
ಅರಳಿದಂಬುಜ ವನಕೆ ಮಂಜಿನ
ಸರಿಯು ಸುರಿವಂದದಲಿ ಸುಗ್ಗಿಯ
ಸಿರಿಯ ಹೊಸ ಬೆಳುದಿಂಗಳನು ಬಲುಮುಗಿಲು ಕವಿದಂತೆ
ಚರನ ಬಿನ್ನಹಕರಸಿ ಮೊದಲಾ
ಗಿರೆ ಸಮಸ್ತ ಸಖೀಜನದ ಮುಖ
ಸರಸಿರುಹ ಬಾಡಿದವು ಮುಸುಕಿತು ಮೌನಮಯಜಲಧಿ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಚರನು ಬಿನ್ನವಿಸಿಕೊಂಡ ಮಾತುಗಳನ್ನು ಕೇಳಿದೊಡನೆ ಅರಳಿದ ಕಮಲಗಳ ವನಕ್ಕೆ ಮಂಜಿನ ಮಳೆ ಸುರಿದಂತಾಯಿತು. ಸುಗ್ಗಿಯ ವೈಭವದ ಹೊಸ ಬೆಳದಿಂಗಳು ಬಂದಾಗ ಇದ್ದಕ್ಕಿದ್ದಂತೆ ಕಾರ್ಮೋಡಗಳು ಕವಿದಂತಾಯಿತು. ಅಲ್ಲಿ ಸೇರಿದ್ದ ಎಲ್ಲ ಸಖೀಜನರ ಮುಖಗಳು ಬಾಡಿದವು. ಮೌನ ಸರ್ವತ್ರ ವ್ಯಾಪಿಸಿತು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಅರಳಿದಂಬುಜ ವನಕೆ ಮಂಜಿನ
ಸರಿಯು ಸುರಿವಂದದಲಿ ಸುಗ್ಗಿಯ
ಸಿರಿಯ ಹೊಸ ಬೆಳುದಿಂಗಳನು ಬಲುಮುಗಿಲು ಕವಿದಂತೆ
ಚರನ ಬಿನ್ನಹಕರಸಿ ಮೊದಲಾ
ಗಿರೆ ಸಮಸ್ತ ಸಖೀಜನದ ಮುಖ
ಸರಸಿರುಹ ಬಾಡಿದವು ಮುಸುಕಿತು ಮೌನಮಯಜಲಧಿ ॥51॥
೦೫೨ ದೂತ ಹೇಳೈ ...{Loading}...
ದೂತ ಹೇಳೈ ತಂದೆ ಜೂಜನ
ಜಾತರಿಪುವಾಡಿದನೆ ಸೋತನೆ
ಕೈತವದ ಬಲೆಗಾರರವದಿರು ಶಕುನಿ ಕೌರವರು
ದ್ಯೂತದಲಿ ಮುನ್ನೇನನೊಡ್ಡಿದ
ಸೋತನೇನನು ಶಿವ ಶಿವಾ ನಿ
ರ್ಧೂತಕಿಲ್ಬಿಷನರಸನೆಂದಳು ದ್ರೌಪದಾದೇವಿ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿ ಮಾತ್ರ ಸ್ವಲ್ಪವೂ ವಿಚಲಿತಳಾಗದೆ ಪ್ರಾತಿಕಾಮಿಯಿಂದ ನಡೆದ ಘಟನೆಗಳನ್ನೆಲ್ಲ ವಿವರವಾಗಿ ಕೇಳಿ ತಿಳಿದುಕೊಂಡಳು.
“ದೂತ ಹೇಳೈ ತಂದೆ, ಜೂಜನ್ನು ಅಜಾತ ಶತ್ರುವಾದ ಧರ್ಮರಾಜ ಆಡಿದನೆ ? ಸೋತನೆ ? ಆ ಶಕುನಿ ಕೌರವರಿದ್ದಾರಲ್ಲ ಅವರು ಮೋಸದ ಬಲೆಗಾರರು ! ಜೂಜಿನಲ್ಲಿ ಮೊದಲು ಏನನ್ನು ಒಡ್ಡಿದ, ಏನನ್ನು ಸೋತ ? ಶಿವ ಶಿವಾ ! ಅರಸ ಯಾವ ಕಿಲ್ಬಿಷವೂ ಇಲ್ಲದವನು.
ಪದಾರ್ಥ (ಕ.ಗ.ಪ)
ಮೂಲ ...{Loading}...
ದೂತ ಹೇಳೈ ತಂದೆ ಜೂಜನ
ಜಾತರಿಪುವಾಡಿದನೆ ಸೋತನೆ
ಕೈತವದ ಬಲೆಗಾರರವದಿರು ಶಕುನಿ ಕೌರವರು
ದ್ಯೂತದಲಿ ಮುನ್ನೇನನೊಡ್ಡಿದ
ಸೋತನೇನನು ಶಿವ ಶಿವಾ ನಿ
ರ್ಧೂತಕಿಲ್ಬಿಷನರಸನೆಂದಳು ದ್ರೌಪದಾದೇವಿ ॥52॥
೦೫೩ ತಾಗಿದುದಲಾ ನಾರದಾದ್ಯರ ...{Loading}...
ತಾಗಿದುದಲಾ ನಾರದಾದ್ಯರ
ನಾಗತವನರುಹಿದರು ಹಿಂದೆ ವಿ
ಯೋಗವಾಯಿತೆ ಲಕ್ಷ್ಮಿಗಿಂದ್ರ ಪ್ರಸ್ಥಪುರವರದ
ಹೋಗಲದು ಮುನ್ನೇನನೊಡ್ಡಿದ
ನೀಗಿದನು ಗಡ ತನ್ನನೆಂತಿದ
ರಾಗು ಹೋಗೇನೆಂದು ನುಡಿದಳು ಪ್ರಾತಿಕಾಮಿಕನ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹಿಂದೆಯೇ ನಾರದರೇ ಮೊದಲಾದವರು ಮುಂದೆ ಆಗುವುದನ್ನೆಲ್ಲ ತಿಳಿಸಿದ್ದರು. ಅದು ನಡೆದೇ ಹೋಯಿತೇ ! ಇಂದ್ರಪ್ರಸ್ಥ
ಪುರದ ಲಕ್ಷ್ಮಿಗೆ ನಮ್ಮಿಂದ ವಿಯೋಗವುಂಟಾಯಿತೇ ? ಹೋಗಲಿ ಅದು, ಪ್ರಾತಿಕಾಮಿಕ ಹೇಳು. ಮೊದಲು ಏನನ್ನು ಒಡ್ಡಿದ. ತನ್ನನ್ನೇ ಹೇಗೆ ನೀಗಿದ, ಇದರ ಆಗು ಹೋಗುಗಳನ್ನೆಲ್ಲ ತಿಳಿಸಿಪ್ಪಾ” ಎಂದಳು.
ಪದಾರ್ಥ (ಕ.ಗ.ಪ)
ಅನಾಗತ-ಮುಂದೆ ಬರುವ, ಭವಿಷ್ಯ
ಮೂಲ ...{Loading}...
ತಾಗಿದುದಲಾ ನಾರದಾದ್ಯರ
ನಾಗತವನರುಹಿದರು ಹಿಂದೆ ವಿ
ಯೋಗವಾಯಿತೆ ಲಕ್ಷ್ಮಿಗಿಂದ್ರ ಪ್ರಸ್ಥಪುರವರದ
ಹೋಗಲದು ಮುನ್ನೇನನೊಡ್ಡಿದ
ನೀಗಿದನು ಗಡ ತನ್ನನೆಂತಿದ
ರಾಗು ಹೋಗೇನೆಂದು ನುಡಿದಳು ಪ್ರಾತಿಕಾಮಿಕನ ॥53॥
೦೫೪ ಮೊದಲಲರ್ಥವ ಹೆಸರುಗೊಣ್ಡೊ ...{Loading}...
ಮೊದಲಲರ್ಥವ ಹೆಸರುಗೊಂಡೊ
ಡ್ಡಿದನು ಸೋತನು ಮರಳೆ ಮಗುಳೊ
ಡ್ಡಿದನು ಹೇರಾಳದಲಿ ಧನವನು ಕರಿಘಟಾವಳಿಯ
ಕುದುರೆ ರಥ ನಿಮ್ಮಡಿಯ ಮೇಳದ
ಸುದತಿಯರೊಡ್ಡಿದನು ಸೋತನು
ತುದಿಯಲನುಜರನೊಡ್ಡಿ ಸೋತನು ತಾಯೆ ಕೇಳ್ ಎಂದ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮೊದಲು ಧನವನ್ನು ಹೆಸರಿಸಿ ಒಡ್ಡಿ ಸೋತ. ಅದನ್ನು ಮರಳಿಸಿಕೊಳ್ಳಲೆಂದು ಮತ್ತೆ ಒಡ್ಡಿದನು. ಮತ್ತೆ ಮತ್ತೆ ಹೇರಳವಾದ ಧನವನ್ನು ಆನೆಗಳ ಸಮೂಹವನ್ನು ಕುದುರೆಗಳ, ರಥಗಳ ಸಮೂಹವನ್ನು ಒಡ್ಡಿ ಸೋತ. ನಿಮ್ಮ ಸೇವೆಗೆ ಸೇರಿದ ಸ್ತ್ರೀಯರನ್ನೆಲ್ಲ ಒಡ್ಡಿ ಸೋತ. ಕಡೆಯಲ್ಲಿ ತಮ್ಮಂದಿರನ್ನೆಲ್ಲ ಒಡ್ಡಿ ಸೋತನು” ತಾಯೆ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಮೊದಲಲರ್ಥವ ಹೆಸರುಗೊಂಡೊ
ಡ್ಡಿದನು ಸೋತನು ಮರಳೆ ಮಗುಳೊ
ಡ್ಡಿದನು ಹೇರಾಳದಲಿ ಧನವನು ಕರಿಘಟಾವಳಿಯ
ಕುದುರೆ ರಥ ನಿಮ್ಮಡಿಯ ಮೇಳದ
ಸುದತಿಯರೊಡ್ಡಿದನು ಸೋತನು
ತುದಿಯಲನುಜರನೊಡ್ಡಿ ಸೋತನು ತಾಯೆ ಕೇಳೆಂದ ॥54॥
೦೫೫ ಬಳಿಕ ತನ್ನನೆ ...{Loading}...
ಬಳಿಕ ತನ್ನನೆ ಸೋತನಲ್ಲಿಂ
ಬಳಿಕ ನಿಮ್ಮಡಿಗಳಿಗೆ ಬಂದುದು
ಖಳರು ಶಕುನಿ ಸುಯೋಧನರು ನೀವಾಗಳೆಂದಿರಲೆ
ಅಳುಕಬೇಡಿನ್ನೇನು ಭೂಪತಿ
ತಿಲಕ ತನ್ನನು ಮುನ್ನ ಸೋಲಿದು
ಬಳಿಕ ತನ್ನನು ಸೋತನೇ ಹೇಳೆಂದಳಿಂದುಮುಖಿ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅನಂತರ ತನ್ನನ್ನೇ ಒಡ್ಡಿ ಸೋತ. ಆ ಬಳಿಕ ನಿಮ್ಮನ್ನು ಒಡ್ಡಿದುದು. ನೀವು ಆಗಲೇ ಹೇಳಿದರೆಲ್ಲ ಶಕುನಿ ಸುಯೋಧನರು, ಅವರು ನಿಜವಾಗಿ ದುಷ್ಟರು” ಎಂದ ಪ್ರಾತಿಕಾಮಿ. ದ್ರೌಪದಿ ವಿವೇಚಿಸಿ ಪರಿಸ್ಥಿತಿಯನ್ನೆಲ್ಲ ಅರ್ಥ ಮಾಡಿಕೊಂಡಳು. ಕೊನೆಯಲ್ಲಿ ನಡೆದ
ಘಟನೆಯನ್ನು ದೃಢಪಡಿಸಿಕೊಂಡಳು. “ಅಂಜಬೇಡ, ಪ್ರಾತಿಕಾಮಿ ಹೇಳು, ಭೂಪತಿಲಕ ತನ್ನನ್ನು ಮೊದಲು ಸೋತು ಬಳಿಕ ನನ್ನನ್ನು ಸೋತನೇ ?” ಎಂದು ಕೇಳಿದಳು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಬಳಿಕ ತನ್ನನೆ ಸೋತನಲ್ಲಿಂ
ಬಳಿಕ ನಿಮ್ಮಡಿಗಳಿಗೆ ಬಂದುದು
ಖಳರು ಶಕುನಿ ಸುಯೋಧನರು ನೀವಾಗಳೆಂದಿರಲೆ
ಅಳುಕಬೇಡಿನ್ನೇನು ಭೂಪತಿ
ತಿಲಕ ತನ್ನನು ಮುನ್ನ ಸೋಲಿದು
ಬಳಿಕ ತನ್ನನು ಸೋತನೇ ಹೇಳೆಂದಳಿಂದುಮುಖಿ ॥55॥
೦೫೬ ಅಹುದು ತನ್ನನು ...{Loading}...
ಅಹುದು ತನ್ನನು ಮುನ್ನ ಸೋತನು
ಮಹಿಳೆಗೊಡ್ಡಿದೆನೆಂದು ನಿಮ್ಮನು
ಮಹಿಪ ಸೋತನು ತಾಯೆ ಬಿಜಯಂಗೈಯ್ಯಬೇಹುದೆನೆ
ವಿಹಿತವಿದು ಮಾನುಷವೆ ದೈವದ
ಕುಹಕವೈಸಲೆ ಮಗನೆ ತಾನೇ
ಬಹೆನು ನೀ ಹೋಗೊಮ್ಮೆ ಹೇಳೀ ಮಾತನಾ ಸಭೆಗೆ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೌದು ಅರಸ ತನ್ನನ್ನು ಮೊದಲು ಸೋತ. ಅನಂತರ ಮಹಿಳೆಯನ್ನು ಒಡ್ಡಿದೆ ಎಂದು ಹೇಳಿ ನಿಮ್ಮನ್ನು ಒಡ್ಡಿ ಸೋತ, ತಾಯೆ” ಎಂದು ಹೇಳಿ ಪ್ರಾತಿಕಾಮಿ “ಬಿಜಯ ಮಾಡಬೇಕು” ಎಂದು ವಿನಂತಿಸಿಕೊಂಡು ತನ್ನ ಕರ್ತವ್ಯವನ್ನು ನಿರ್ವಹಿಸಿದ. ಇದೆಲ್ಲ ಮನುಷ್ಯಕೃತವಾಗಿ ನಡೆದದ್ದೇ ? ದೈವದ ಕುಹಕವಲ್ಲವೇ ? ಎಂದು ಚಿಂತಿಸಿ ದ್ರೌಪದಿ ಪ್ರಾತಿಕಾಮಿಗೆ “ಮಗನೇ, ನಾನೇ ಬರುತ್ತೇನೆ. ನೀನು ಹೋಗು. ಆದರೆ ಒಮ್ಮೆ ಈ ನನ್ನ ಮಾತನ್ನು ಆ ಸಭೆಗೆ ಹೇಳು ಎಂದಳು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಅಹುದು ತನ್ನನು ಮುನ್ನ ಸೋತನು
ಮಹಿಳೆಗೊಡ್ಡಿದೆನೆಂದು ನಿಮ್ಮನು
ಮಹಿಪ ಸೋತನು ತಾಯೆ ಬಿಜಯಂಗೈಯ್ಯಬೇಹುದೆನೆ
ವಿಹಿತವಿದು ಮಾನುಷವೆ ದೈವದ
ಕುಹಕವೈಸಲೆ ಮಗನೆ ತಾನೇ
ಬಹೆನು ನೀ ಹೋಗೊಮ್ಮೆ ಹೇಳೀ ಮಾತನಾ ಸಭೆಗೆ ॥56॥
೦೫೭ ಮುನ್ನ ತನ್ನನು ...{Loading}...
ಮುನ್ನ ತನ್ನನು ಸೋತ ಬಳಿಕಿನೊ
ಳೆನ್ನ ಸೋತರೆ ಸಲುವುದೇ ಸಂ
ಪನ್ನ ವಿಮಲಜ್ಞಾನರರಿದೀ ಪ್ರಶ್ನೆಗುತ್ತರವ
ಎನ್ನ ಮೆಚ್ಚಿಸಿಕೊಡಲಿ ತಾ ಬಹೆ
ನೆನ್ನು ಹೋಗೆನಲವನು ಭಯದಲಿ
ತನ್ನೊಳಗೆ ನಡುಗುತ್ತ ಬಂದನು ಕೌರವನ ಸಭೆಗೆ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮೊದಲೇ ತನ್ನನ್ನು ಸೋತುಕೊಂಡ ಮೇಲೆ (ಮತ್ತೆ ಆಡುವುದಕ್ಕೆ ತನಗೇ ಸ್ವಾತಂತ್ರ್ಯವಿಲ್ಲದಾಗ) ನನ್ನನ್ನು ಸೋತರೆ ಅದು ನ್ಯಾಯ ಸಮ್ಮತವಾಗುತ್ತದೆಯೇ ? ಶ್ರೇಷ್ಠ ಜ್ಞಾನವಂತರಾಗಿರುವವರು ನಿನಗೆ ಒಪ್ಪಿಗೆಯಾಗುವಂತೆ ಈ ಪ್ರಶ್ನೆಗೆ ಉತ್ತರ ಕೊಡಲಿ. ಆಗ ನಾನು ಬರುತ್ತೇನೆ ಹೋಗು” ಎಂದಳು. ಪ್ರಾತಿಕಾಮಿ ಭಯದಿಂದ ನಡುಗುತ್ತಲೇ ಕೌರವನ ಸಭೆಗೆ ಬಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಮುನ್ನ ತನ್ನನು ಸೋತ ಬಳಿಕಿನೊ
ಳೆನ್ನ ಸೋತರೆ ಸಲುವುದೇ ಸಂ
ಪನ್ನ ವಿಮಲಜ್ಞಾನರರಿದೀ ಪ್ರಶ್ನೆಗುತ್ತರವ
ಎನ್ನ ಮೆಚ್ಚಿಸಿಕೊಡಲಿ ತಾ ಬಹೆ
ನೆನ್ನು ಹೋಗೆನಲವನು ಭಯದಲಿ
ತನ್ನೊಳಗೆ ನಡುಗುತ್ತ ಬಂದನು ಕೌರವನ ಸಭೆಗೆ ॥57॥
೦೫೮ ಜೀಯ ದೇವಿಯರೆನ್ದ ...{Loading}...
ಜೀಯ ದೇವಿಯರೆಂದ ಮಾತಿದು
ರಾಯ ಮುನ್ನವೆ ತನ್ನ ಸೋತಬು
ಜಾಯತಾಕ್ಷಿಯ ಬಳಿಕ ಸೋತರೆ ಧರ್ಮಸೂಕ್ಷ್ಮದಲಿ
ರಾಯಸಭೆಯಲಿ ಹಿರಿಯರರಿದದ
ರಾಯತವನರುಹಿದರೆ ಬಹೆನೆಂ
ದಾ ಯುವತಿ ಬಿನ್ನಹವ ಮಾಡಿದಳೆಂದು ಕೈಮುಗಿದ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಂದು ಹೇಳಿದ “ಜೀಯ, ದೇವಿಯವರು ಹೇಳಿದ ಮಾತಿದು. ರಾಜ ಮೊದಲು ಸೋತು ಬಳಿಕ ಅಬ್ಜಾಯತಾಕ್ಷಿಯನ್ನು
ಸೋತರೆ ಧರ್ಮಸೂಕ್ಷ್ಮ ಹೇಗೆ ? ರಾಜಸಭೆಯಲ್ಲಿ ಹಿರಿಯರಿದ್ದಾರೆ. ಅರಿತವರಿದ್ದಾರೆ. ತಿಳಿದು ಹೇಳಿದರೆ ಬರುತ್ತೇನೆ ಎಂದು. ಆಕೆ ಹೇಳಿದಳು” ಎಂದು ಕೈಮುಗಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಜೀಯ ದೇವಿಯರೆಂದ ಮಾತಿದು
ರಾಯ ಮುನ್ನವೆ ತನ್ನ ಸೋತಬು
ಜಾಯತಾಕ್ಷಿಯ ಬಳಿಕ ಸೋತರೆ ಧರ್ಮಸೂಕ್ಷ್ಮದಲಿ
ರಾಯಸಭೆಯಲಿ ಹಿರಿಯರರಿದದ
ರಾಯತವನರುಹಿದರೆ ಬಹೆನೆಂ
ದಾ ಯುವತಿ ಬಿನ್ನಹವ ಮಾಡಿದಳೆಂದು ಕೈಮುಗಿದ ॥58॥
೦೫೯ ರಾಯ ಸೋತನು ...{Loading}...
ರಾಯ ಸೋತನು ತನ್ನ ನಾವ
ನ್ಯಾಯದಲಿ ತಹುದಿಲ್ಲ ತೊತ್ತಿರ
ಲಾಯದಲಿ ಕೂಡುವೆವು ಕರೆಯೆನಲಿವನು ಗರ ಹೊಡೆದು
ವಾಯುಸುತನಂಜಿಸುವನೆಂದೀ
ನಾಯಿ ಬೆದರಿದನಕಟ ದೂತನ
ಬಾಯ ನೋಡಾಯೆನುತ ಮಿಗೆ ಗರ್ಜಿಸಿದ ಕುರುರಾಯ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ರಾಜನೇ ಅವಳನ್ನು ಸೋತ, ನಾವೇನೂ ಅನ್ಯಾಯದಿಂದ ಅವಳನ್ನು ಕರೆತರುತ್ತಿಲ್ಲ. ಅವಳನ್ನು ದಾಸಿಯರ ಲಾಯದಲ್ಲಿ
ಕೂಡೋಣ ಕರೆದುಕೊಂಡು ಬಾ ಎಂದರೆ ಇಲ್ಲಿ ಗರಬಡಿದಂತೆ ಬಂದು ನಿಂತಿದ್ದಾನೆ. ! ಈ ನಾಯಿ ಭೀಮಸೇನ ಅಂಜಿಸುವನೆಂದು
ಹೆದರಿದ್ದಾನೆ. ಅಯ್ಯೋ ಈ ದೂತನ ಬಾಯಿನೋಡಿ” ಎಂದು ಕುರುರಾಜ ಗರ್ಜಿಸಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ರಾಯ ಸೋತನು ತನ್ನ ನಾವ
ನ್ಯಾಯದಲಿ ತಹುದಿಲ್ಲ ತೊತ್ತಿರ
ಲಾಯದಲಿ ಕೂಡುವೆವು ಕರೆಯೆನಲಿವನು ಗರ ಹೊಡೆದು
ವಾಯುಸುತನಂಜಿಸುವನೆಂದೀ
ನಾಯಿ ಬೆದರಿದನಕಟ ದೂತನ
ಬಾಯ ನೋಡಾಯೆನುತ ಮಿಗೆ ಗರ್ಜಿಸಿದ ಕುರುರಾಯ ॥59॥
೦೬೦ ತಮ್ಮ ಬಾರೈ ...{Loading}...
ತಮ್ಮ ಬಾರೈ ಹೋಗು ದಿಟ ನೀ
ನಮ್ಮುವರೆ ಹಿಡಿದೆಳೆದು ತಾ ನೃಪ
ರೆಮ್ಮ ಕಿಂಕರರೈವರಿವರಿದ್ದೇನ ಮಾಡುವರು
ತಮ್ಮ ಕರ್ಮವಿಪಾಕ ಗತಿ ನೆರೆ
ತಮ್ಮನೇ ಕೆಡಿಸುವುದು ಧರ್ಮ ವಿ
ದೆಮ್ಮ ಕಾರಣವಲ್ಲ ನೀ ಹೋಗೆಂದನಾ ಭೂಪ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ತಮ್ಮ ದುಶ್ಯಾಸನನ್ನು ಕರೆದ. ತಮ್ಮ ಬಾರಯ್ಯ ಹೋಗು. ನಿನಗೆ ಸಾಧ್ಯವಾದರೆ ಅವಳನ್ನು ಎಳೆದು ತಾ. ನಮ್ಮ ದಾಸರಾದ ಈ ಐವರು ರಾಜರುಗಳಿದ್ದು ಏನು ಮಾಡುತ್ತಾರೆ. ಅವರು ಮಾಡಿದ ಕರ್ಮವಿಪಾಕ ಅವರನ್ನೇ ಕೆಡಿಸುತ್ತದೆ. ಈ ಧರ್ಮವೆಂಬುದು ನಮ್ಮ ಕಾರಣದಿಂದ ಆದದ್ದಲ್ಲ. ನೀನು ಹೋಗು” ಎಂದ.
ಪದಾರ್ಥ (ಕ.ಗ.ಪ)
ಪಾಠಾನ್ತರ (ಕ.ಗ.ಪ)
ಕಿಂಕರರೈವರಿದ್ದೇನ-ಕಿಂಕರರೈವರಿವರಿದ್ದೇನ : ಸಭಾಪರ್ವ, ಮೈ.ವಿ.ವಿ. , ಎಸ್ ಬಸಪ್ಪ
ಮೂಲ ...{Loading}...
ತಮ್ಮ ಬಾರೈ ಹೋಗು ದಿಟ ನೀ
ನಮ್ಮುವರೆ ಹಿಡಿದೆಳೆದು ತಾ ನೃಪ
ರೆಮ್ಮ ಕಿಂಕರರೈವರಿವರಿದ್ದೇನ ಮಾಡುವರು
ತಮ್ಮ ಕರ್ಮವಿಪಾಕ ಗತಿ ನೆರೆ
ತಮ್ಮನೇ ಕೆಡಿಸುವುದು ಧರ್ಮ ವಿ
ದೆಮ್ಮ ಕಾರಣವಲ್ಲ ನೀ ಹೋಗೆಂದನಾ ಭೂಪ ॥60॥
೦೬೧ ಗಾಳಿಯಳ್ಳೆಯನಿರಿಯಲಗ್ನಿ ...{Loading}...
ಗಾಳಿಯಳ್ಳೆಯನಿರಿಯಲಗ್ನಿ
ಜ್ವಾಲೆಯಲಿ ತಟ್ಟಿಯವೆ ಕಡುಹಿನ
ಕಾಳಕೂಟದ ನದಿಗೆ ನಂಜಿನ ಹೊನಲು ಬೆರೆಸಿದರೆ
ವಾಳೆಯವೆ ದುಶ್ಶಾಸನನು ಜಗ
ದೂಳಿಗದ ದುರುದುಂಬಿ ಕುರುಪತಿ
ಮೇಲೆ ನೇಮಿಸಲುಚಿತಗೈವನೆ ಭೂಪ ಕೇಳ್ ಎಂದ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಾಳಿ ಅಗ್ನಿಯ ಪಕ್ಕೆಯನ್ನು ತಿವಿದರೆ ಜ್ವಾಲೆ ಏಳುವುದು ತಡವಾದೀತೇ ? ತೀವ್ರವಾದ ಕಾಲಕೂಟದ ನದಿಗೆ ನಂಜಿನ ಹೊಳೆ ಬಂದು ಸೇರಿದರೆ ನಂಜಿನ ತೀವ್ರತೆ ಕಮ್ಮಿಯಾದೀತೆ? ದುಶ್ಯಾಸನನು ಮೊದಲೇ ಜಗದೂಳಿಗದ ದುರದುಂಬಿ. ಇನ್ನು ಕುರುರಾಜನೇ ಆಜ್ಞೆಯಿತ್ತು ನೇಮಿಸಿರಲಾಗಿ ಅವನಿಂದ ಒಳ್ಳೆಯದಾದೀತೇ ?
ಪದಾರ್ಥ (ಕ.ಗ.ಪ)
ತಟ್ಟಿಯ-ತಡ, ಕಡುಹಿನ-ತೀವ್ರವಾದ, ಹೊನಲು-ಪ್ರವಾಹ
ಮೂಲ ...{Loading}...
ಗಾಳಿಯಳ್ಳೆಯನಿರಿಯಲಗ್ನಿ
ಜ್ವಾಲೆಯಲಿ ತಟ್ಟಿಯವೆ ಕಡುಹಿನ
ಕಾಳಕೂಟದ ನದಿಗೆ ನಂಜಿನ ಹೊನಲು ಬೆರೆಸಿದರೆ
ವಾಳೆಯವೆ ದುಶ್ಶಾಸನನು ಜಗ
ದೂಳಿಗದ ದುರುದುಂಬಿ ಕುರುಪತಿ
ಮೇಲೆ ನೇಮಿಸಲುಚಿತಗೈವನೆ ಭೂಪ ಕೇಳೆಂದ ॥61॥
೦೬೨ ಹರಿದನವ ಬೀದಿಯಲಿ ...{Loading}...
ಹರಿದನವ ಬೀದಿಯಲಿ ಬಿಡುದಲೆ
ವೆರೆಸಿ ಸತಿಯರಮನೆಯ ಬಾಗಿಲ
ಚರರು ತಡೆದರೆ ಮೆಟ್ಟಿದನು ತಿವಿದನು ಕಠಾರಿಯಲಿ
ತರುಣಿಯರು ಕಂಡಂಜಿ ಹೊಕ್ಕರು
ಸರಸಿಜಾಕ್ಷಿಯ ಮರೆಯನೀ ಖಳ
ನುರವಣಿಸಿದನು ರಾಹು ತಾರಾಧಿಪನ ತಗುಳ್ವಂತೆ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವನು ತಲೆಯನ್ನು ಕೆದರಿಕೊಂಡು ಬೀದಿಯಲ್ಲಿ ಧಾವಿಸಿದ. ಆ ಸತಿಯ ಅರಮನೆಗೆ ಹೋದ. ಬಾಗಿಲು ಕಾಯುವವರು ತಡೆದರೆ ಅವರನ್ನು ಮೆಟ್ಟಿದ. ಕಠಾರಿಯಿಂದ ತಿವಿದ. ಒಳಗಿದ್ದ ಸ್ತ್ರೀಯರು ಹೆದರಿ ದ್ರೌಪದಿಯ ಹಿಂದೆ ಅಡಗಿಕೊಂಡರು. ಈ ದುಷ್ಟ, ರಾಹು ಚಂದ್ರನನ್ನು ಆಕ್ರಮಿಸುವಂತೆ ದ್ರೌಪದಿಯ ಬಳಿಗೆ ನುಗ್ಗಿದ.
ಪದಾರ್ಥ (ಕ.ಗ.ಪ)
ತಗುಳ್ವಂತೆ-ಆಕ್ರಮಿಸುವಂತೆ
ಮೂಲ ...{Loading}...
ಹರಿದನವ ಬೀದಿಯಲಿ ಬಿಡುದಲೆ
ವೆರೆಸಿ ಸತಿಯರಮನೆಯ ಬಾಗಿಲ
ಚರರು ತಡೆದರೆ ಮೆಟ್ಟಿದನು ತಿವಿದನು ಕಠಾರಿಯಲಿ
ತರುಣಿಯರು ಕಂಡಂಜಿ ಹೊಕ್ಕರು
ಸರಸಿಜಾಕ್ಷಿಯ ಮರೆಯನೀ ಖಳ
ನುರವಣಿಸಿದನು ರಾಹು ತಾರಾಧಿಪನ ತಗುಳ್ವಂತೆ ॥62॥
೦೬೩ ಬನ್ದನಿವನಬುಜಾಕ್ಷಿಯಿದಿರಲಿ ...{Loading}...
ಬಂದನಿವನಬುಜಾಕ್ಷಿಯಿದಿರಲಿ
ನಿಂದನೆಲೆಗೇ ಗರುವತನವಿದು
ಹಿಂದೆ ಸಲುವುದು ಸಲ್ಲದಿರು ಕುರುರಾಜ ಭವನದಲಿ
ಇಂದು ಮೆರೆ ನಡೆ ನಮ್ಮ ತೊತ್ತಿರ
ಮುಂದೆ ಮೆರೆ ನಡೆ ಮಂಚದಿಂದಿಳಿ
ಯೆಂದು ಜರೆದನು ಕೌರವಾನುಜನಾ ಮಹಾಸತಿಯ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿಯ ಮುಂದೆ ನಿಂತು “ಎಲಗೇ ನಿನ್ನ ದೊಡ್ಡಸ್ತಿಕೆಯೆಲ್ಲ ಹಿಂದೆ ನಡೆಯಿತು. ಇನ್ನು ಕುರು ರಾಜಭವನದಲ್ಲಿ ನಡೆಯುವುದಿಲ್ಲ. ಈಗ ದಾಸಿಯರ ಮುಂದೆ ಮೆರೆಯುವಂತೆ ನಡೆ. ಇಳಿ ಮಂಚದಿಂದ ಎಂದು ಜರೆದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಬಂದನಿವನಬುಜಾಕ್ಷಿಯಿದಿರಲಿ
ನಿಂದನೆಲೆಗೇ ಗರುವತನವಿದು
ಹಿಂದೆ ಸಲುವುದು ಸಲ್ಲದಿರು ಕುರುರಾಜ ಭವನದಲಿ
ಇಂದು ಮೆರೆ ನಡೆ ನಮ್ಮ ತೊತ್ತಿರ
ಮುಂದೆ ಮೆರೆ ನಡೆ ಮಂಚದಿಂದಿಳಿ
ಯೆಂದು ಜರೆದನು ಕೌರವಾನುಜನಾ ಮಹಾಸತಿಯ ॥63॥
೦೬೪ ಜನಪನನುಜನು ನೀನೆನಗೆ ...{Loading}...
ಜನಪನನುಜನು ನೀನೆನಗೆ ಮೈ
ದುನನಲೇ ತಪ್ಪೇನು ಯಮ ನಂ
ದನನು ಸೋಲಲಿ ನನ್ನ ಪ್ರಶ್ನೆಗೆ ಕೊಡಲಿ ಮರುಮಾತ
ಅನುಜ ಕೇಳೈ ಪುಷ್ಪವತಿ ತಾ
ನೆನಗೆ ರಾಜಸಭಾ ಪ್ರವೇಶವ
ದನುಚಿತವಲೇ ಹೇಳೆನಲು ಖಳರಾಯ ಖತಿಗೊಂಡ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವನು ಅಷ್ಟು ದುಡುಕಿದರೂ ದ್ರೌಪದಿ ತಾಳ್ಮೆಯಿಂದ, ಗೌರವದಿಂದಲೇ ಅವನನ್ನು ಮಾತನಾಡಿಸುತ್ತಾಳೆ. “ಧರ್ಮರಾಜನಿಗೂ
ನೀನು ತಮ್ಮನೇ. ನನಗೆ ಮೈದುನನಲ್ಲವೇ ? ತಪ್ಪೇನು ! ಯಮನಂದನನು ಸೋಲಲಿ ಆದರೆ ನನ್ನ ಪ್ರಶ್ನೆಗೆ ಪ್ರತಿಯಾಗಿ ಉತ್ತರ ಕೊಡಲಿ. ತಮ್ಮ ಕೇಳು ನಾನು ಪುಷ್ಪವತಿಯಾಗಿದ್ದೇನೆ. ರಜಸ್ವಲೆಯಾದವಳು ರಾಜಸಭೆಯನ್ನು ಪ್ರವೇಶಿಸುವುದು ಅನುಚಿತವಲ್ಲವೇ ಹೇಳು” ಎಂದಳು. ಆ ಖಳರ ರಾಜ ಕ್ರುದ್ಧನಾಗಿಬಿಟ್ಟ.
ಪದಾರ್ಥ (ಕ.ಗ.ಪ)
ಪುಷ್ಪವತಿ-ರಜಸ್ವಲೆ
ಮೂಲ ...{Loading}...
ಜನಪನನುಜನು ನೀನೆನಗೆ ಮೈ
ದುನನಲೇ ತಪ್ಪೇನು ಯಮ ನಂ
ದನನು ಸೋಲಲಿ ನನ್ನ ಪ್ರಶ್ನೆಗೆ ಕೊಡಲಿ ಮರುಮಾತ
ಅನುಜ ಕೇಳೈ ಪುಷ್ಪವತಿ ತಾ
ನೆನಗೆ ರಾಜಸಭಾ ಪ್ರವೇಶವ
ದನುಚಿತವಲೇ ಹೇಳೆನಲು ಖಳರಾಯ ಖತಿಗೊಂಡ ॥64॥
೦೬೫ ಎಲ್ಲಿಯದು ದುಷ್ಪ್ರಶ್ನೆ ...{Loading}...
ಎಲ್ಲಿಯದು ದುಷ್ಪ್ರಶ್ನೆ ಮರು ಮಾ
ತೆಲ್ಲಿಯದು ನೀ ಪುಷ್ಪವತಿಯಾ
ಗಿಲ್ಲಿ ಫಲವತಿಯಾಗು ನಡೆ ಕುರುರಾಯಭವನದಲಿ
ಖುಲ್ಲರೈವರು ತಮ್ಮ ಸೋತರು
ಬಲ್ಲವಿಕೆಯುಚಿತವನು ಮೌಳಿಯ
ನಲ್ಲಿ ತೋರಾಯೆನುತ ತಪ್ಪಿದನಹಹ ಸಿರಿಮುಡಿಗೆ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುಶ್ಶಾಸನ ತನ್ನ ದುಷ್ಟತನದ ಪರಮಾವಧಿಗೇರುತ್ತಾನೆ. “ಎಲ್ಲಿಯದು ದುಷ್ಪ್ರಶ್ನೆ ? ಮರುಮಾತೆಲ್ಲಿಯದಯಿಲ್ಲಿ ನೀನು ಪುಷ್ಪವತಿಯಾಗಿದ್ದರೆ ಕುರುರಾಜ ಭವನದಲಿ. ಫಲವತಿಯಾಗು ನಡೆ .ಖೂಳರು ಐವರು ತಮ್ಮನ್ನೇ ಸೋತುಕೊಂಡರು. ನಿನ್ನ ಬುದ್ಧಿವಂತಿಕೆಯ ಔಚಿತ್ಯವನ್ನು ಅಲ್ಲಿ ತೋರಿಸು. ನಡೆ” ಎಂದು ದ್ರೌಪದಿಯ ಸಿರಿಮುಡಿಗೆ ಕೈಹಾಕಿ ತಪ್ಪು ಮಾಡಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಎಲ್ಲಿಯದು ದುಷ್ಪ್ರಶ್ನೆ ಮರು ಮಾ
ತೆಲ್ಲಿಯದು ನೀ ಪುಷ್ಪವತಿಯಾ
ಗಿಲ್ಲಿ ಫಲವತಿಯಾಗು ನಡೆ ಕುರುರಾಯಭವನದಲಿ
ಖುಲ್ಲರೈವರು ತಮ್ಮ ಸೋತರು
ಬಲ್ಲವಿಕೆಯುಚಿತವನು ಮೌಳಿಯ
ನಲ್ಲಿ ತೋರಾಯೆನುತ ತಪ್ಪಿದನಹಹ ಸಿರಿಮುಡಿಗೆ ॥65॥
೦೬೬ ಆ ಮಹೀಶಕ್ರತುವರದೊಳು ...{Loading}...
ಆ ಮಹೀಶಕ್ರತುವರದೊಳು
ದ್ದಾಮ ಮುನಿಜನರಚಿತ ಮಂತ್ರ
ಸ್ತೋಮ ಪುಷ್ಕಲ ಪೂತ ಪುಣ್ಯಜಲಾಭಿಷೇಚನದ
ಶ್ರೀಮುಡಿಗೆ ಕೈಯಿಕ್ಕಿದನು ವರ
ಕಾಮಿನೀ ನಿಕುರುಂಬವಕಟಕ
ಟಾ ಮಹಾಸತಿ ಶಿವ ಶಿವಾಯೆಂದೊದರಿತಲ್ಲಲ್ಲಿ ॥66॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಸಿರಿಮುಡಿ ಸಾಮಾನ್ಯವಾದುದಲ್ಲ. ಆ ಮಹಾ ಶ್ರೇಷ್ಠವಾದ ರಾಜಸೂಯ ಯಾಗದಲ್ಲಿ ಮಹಾಶ್ರೇಷ್ಠರಾದಂತಹ ಋಷಿಗಳಿಂದ ಉಚ್ಚರಿಸಲ್ಪಟ್ಟ ಮಂತ್ರಗಳಿಂದ ಪವಿತ್ರಗೊಳಿಸಲ್ಪಟ್ಟ ಪುಣ್ಯಜಲದ ಅಭಿಷೇಕದಿಂದ ಪರಿಪೂತವಾದದ್ದು. ಅಂತಹ ಸಿರಿಮುಡಿಗೆ ಕೈಹಾಕಿದ. ಹಿಡಿದುಕೊಂಡು ಎಳೆದ. ಅಲ್ಲಿದ್ದ ಸ್ತ್ರೀಯರ ಸಮೂಹ ಅಕಟಕಟಾ ! ಮಹಾಸತಿ ! ಶಿವ ಶಿವಾ ! ಎಂದು ಅಲ್ಲಲ್ಲೇ ಕೂಗಿಕೊಂಡರು.
ಪದಾರ್ಥ (ಕ.ಗ.ಪ)
ನಿಕುರುಂಬ-ಸಮೂಹ
ಮೂಲ ...{Loading}...
ಆ ಮಹೀಶಕ್ರತುವರದೊಳು
ದ್ದಾಮ ಮುನಿಜನರಚಿತ ಮಂತ್ರ
ಸ್ತೋಮ ಪುಷ್ಕಲ ಪೂತ ಪುಣ್ಯಜಲಾಭಿಷೇಚನದ
ಶ್ರೀಮುಡಿಗೆ ಕೈಯಿಕ್ಕಿದನು ವರ
ಕಾಮಿನೀ ನಿಕುರುಂಬವಕಟಕ
ಟಾ ಮಹಾಸತಿ ಶಿವ ಶಿವಾಯೆಂದೊದರಿತಲ್ಲಲ್ಲಿ ॥66॥
೦೬೭ ಕೆದರಿದವು ಸೂಸಕದ ...{Loading}...
ಕೆದರಿದವು ಸೂಸಕದ ಮುತ್ತುಗ
ಳುದುರಿದವು ಸೀಮಂತ ಮಣಿಗಳ
ಹೊದರು ಮುರಿದವು ಕರ್ಣಪೂರದ ರತ್ನದೋಲೆಗಳು
ಸುದತಿಯರು ಗೋಳಿಡುತ ಬರೆ ಮೆ
ಟ್ಟಿದನು ತಿವಿದನು ಕಾಲಲಡಬಿ
ದ್ದುದು ಸಖೀಜನವೆಳೆದು ಝಾಡಿಸಿ ಜರೆದು ಝೋಂಪಿಸಿದ ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೈತಲೆಯ ಆಭರಣದ ಗೊಂಚಲಿನ ಮುತ್ತುಗಳೆಲ್ಲ ಉದುರಿದವು. ಸೀಮಂತ ಮಣಿಗಳ ಗುಚ್ಛವೂ ಮುರಿದು ಬಿತ್ತು. ಕಿವಿಯಾಭರಣವಾದ ರತ್ನದ ಓಲೆಗಳೂ ಕಳಚಿಬಿದ್ದುವು. ಸುದತಿಯರು ಗೋಳಿಡುತ್ತ ಅಡ್ಡಬರಲು ಅವರನ್ನು ಅವನು ಮೆಟ್ಟಿದ, ತಿವಿದ. ಸಖೀಜನರು ಅವನ ಕಾಲಿಗೆ ಅಡ್ಡಬಿದ್ದರೆ ಅವರನ್ನು ಝಾಡಿಸಿದ, ಜರೆದ, ಝೋಂಪಿಸಿದ.
ಪದಾರ್ಥ (ಕ.ಗ.ಪ)
ಸೂಸಕ-ಗೊಂಚಲು, ಹೊದರು-ಕಾಂತಿ
ಮೂಲ ...{Loading}...
ಕೆದರಿದವು ಸೂಸಕದ ಮುತ್ತುಗ
ಳುದುರಿದವು ಸೀಮಂತ ಮಣಿಗಳ
ಹೊದರು ಮುರಿದವು ಕರ್ಣಪೂರದ ರತ್ನದೋಲೆಗಳು
ಸುದತಿಯರು ಗೋಳಿಡುತ ಬರೆ ಮೆ
ಟ್ಟಿದನು ತಿವಿದನು ಕಾಲಲಡಬಿ
ದ್ದುದು ಸಖೀಜನವೆಳೆದು ಝಾಡಿಸಿ ಜರೆದು ಝೋಂಪಿಸಿದ ॥67॥
೦೬೮ ಮಣಿದ ತನುವಿನ ...{Loading}...
ಮಣಿದ ತನುವಿನ ವೇಗಗತಿಯಲಿ
ಝಣಝಣಿಪ ನೂಪುರದ ರವ ಕಂ
ಕಣದ ದನಿ ಕೇವಣದ ಹೊಂಗಿರುಗೆಜ್ಜೆಗಳ ರಭಸ
ಗಣಿಕೆಯರ ಕೆಳದಿಯರ ಹಾಹಾ
ರಣಿತಕಿವು ನೆರವಾದವಾ ಪ
ಟ್ಟಣವ ತುಂಬಿತು ಶೋಕವದನೇನೆಂಬೆನದ್ಭುತವ ॥68॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುಸಿದ ದ್ರೌಪದಿಯ ದೇಹವನ್ನು ರಭಸದಿಂದ ಎಳೆದುಕೊಂಡು ಹೋಗುತ್ತಿದ್ದಾಗ ಅವಳ ನೂಪುರದ ಧ್ವನಿ ಕಂಕಣಗಳ ಧ್ವನಿ, ಠೇವಣಿಸಿದ ಚಿನ್ನದ ಕಿರುಗೆಜ್ಜೆಗಳ ಧ್ವನಿ ಝಣಝಣಿಸುತ್ತಿತ್ತು. ಜೊತೆಗೂಡಿಬರುತ್ತಿದ್ದ ಗಣಿಕೆಯರ ಗೆಳತಿಯರ ಹಾಹಾ ಎಂಬ ರೋದನಕ್ಕೆ ಅದು ಹಿಮ್ಮೇಳವಾಯಿತು. ಆ ಶೋಕದ ಧ್ವನಿ ಆ ಪಟ್ಟಣವನ್ನೆಲ್ಲ ತುಂಬಿತು.
ಪದಾರ್ಥ (ಕ.ಗ.ಪ)
ಕೇವಣದ - ಖಚಿತಗೊಳಿಸಿದ
ಮೂಲ ...{Loading}...
ಮಣಿದ ತನುವಿನ ವೇಗಗತಿಯಲಿ
ಝಣಝಣಿಪ ನೂಪುರದ ರವ ಕಂ
ಕಣದ ದನಿ ಕೇವಣದ ಹೊಂಗಿರುಗೆಜ್ಜೆಗಳ ರಭಸ
ಗಣಿಕೆಯರ ಕೆಳದಿಯರ ಹಾಹಾ
ರಣಿತಕಿವು ನೆರವಾದವಾ ಪ
ಟ್ಟಣವ ತುಂಬಿತು ಶೋಕವದನೇನೆಂಬೆನದ್ಭುತವ ॥68॥
೦೬೯ ಹಡಪಗಿತಿಯರು ಸೀಗುರಿಯ ...{Loading}...
ಹಡಪಗಿತಿಯರು ಸೀಗುರಿಯ ಕ
ನ್ನಡಿಯವರು ಮೇಳದ ವಿನೋದದ
ನುಡಿನಗೆಯ ಸಖಿಯರು ಪಸಾಯ್ತೆಯರಾಪ್ತ ದಾಸಿಯರು
ಒಡನೆ ಬಂದರು ಕಂಬನಿಯ ಬಿಡು
ಮುಡಿಯ ಹಾಹಾರವದ ರಭಸದ
ನಡೆಯಲಖಿಳ ವಿಲಾಸಿನಿಯರು ಸಹಸ್ರ ಸಂಖ್ಯೆಯಲಿ ॥69॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಡಪಗಿತ್ತಿಯರು, ಸೀಗುರಿಯವರು, ಕನ್ನಡಿಯವರು, ಮೇಳದ ವಿನೋದದ ನುಡಿನಗೆಯ ಸಖಿಯರು, ಪಸಾಯ್ತೆಯರು, ಆಪ್ತದಾಸಿಯರು ಹೀಗೆ ಸಹಸ್ರಸಂಖ್ಯೆಯ ವಿಳಾಸಿನಿಯರು ಕಣ್ಣೀರನ್ನು ಮಿಡಿಯುತ್ತಾ ತಲೆ ಕೆದರಿಕೊಂಡು ಹಾಹಾ ಎಂದು ರೋದನ ಮಾಡುತ್ತಾ ರಭಸದಿಂದ ಹಿಂಬಾಲಿಸಿ ನಡೆದುಹೋದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಹಡಪಗಿತಿಯರು ಸೀಗುರಿಯ ಕ
ನ್ನಡಿಯವರು ಮೇಳದ ವಿನೋದದ
ನುಡಿನಗೆಯ ಸಖಿಯರು ಪಸಾಯ್ತೆಯರಾಪ್ತ ದಾಸಿಯರು
ಒಡನೆ ಬಂದರು ಕಂಬನಿಯ ಬಿಡು
ಮುಡಿಯ ಹಾಹಾರವದ ರಭಸದ
ನಡೆಯಲಖಿಳ ವಿಲಾಸಿನಿಯರು ಸಹಸ್ರ ಸಂಖ್ಯೆಯಲಿ ॥69॥
೦೭೦ ನಗೆಮೊಗವನೊಮ್ಮೆಯು ಪಯೋಧರ ...{Loading}...
ನಗೆಮೊಗವನೊಮ್ಮೆಯು ಪಯೋಧರ
ಯುಗಳ ನೋಡುವ ಸಖ್ಯದಲಿ ದೃಗು
ಯುಗಳ ಜಲಬಿಂದುಗಳಿಗಾ ಜಲಬಿಂದು ಸುರಿವಂತೆ
ಒಗುವ ಖಂಡಿತ ಹಾರ ಮುಕ್ತಾ
ಳಿಗಳು ಮೆರೆದವು ಮಾನಿನಿಯರು
ಬ್ಬೆಗದ ರೋದನ ರೌರವದೊಳೈತಂದಳಿಂದುಮುಖಿ ॥70॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸ್ತನಗಳ ಜೋಡಿಗೆ ನಗೆಮುಖವನ್ನು ಒಮ್ಮೆಯೂ ನೋಡುವ ಸಖ್ಯ ಫಲಿಸದಾಗ ಅವು ಸುರಿಸಿದ ಕಣ್ಣೀರ ಹನಿಗಳೋ ಎಂಬಂತೆ ಎದೆಯ ಮೇಲಿನ ಮುತ್ತಿನ ಹಾರ ತುಂಡಾಗಿ ಮುತ್ತುಗಳು ಉದುರಿದುವು. ಕಣ್ಣಿಂದ ಉದುರುತ್ತಿದ್ದ ಜಲಬಿಂದುಗಳಿಗೆ ಅವು
ಸಾಟಿಯಾದುವು. ಮಾನಿನಿಯರು ಉದ್ವೇಗದಿಂದ ರೋದಿಸುತ್ತಿರಲು ಆ ರೋದನದ ರೌರವ ನರಕದಲ್ಲೇ ದ್ರೌಪದಿ ರಾಜಸಭೆ ಸೇರಿದಳು.
ಪದಾರ್ಥ (ಕ.ಗ.ಪ)
ಪಯೋಧರ-ಸ್ತನ
ಮೂಲ ...{Loading}...
ನಗೆಮೊಗವನೊಮ್ಮೆಯು ಪಯೋಧರ
ಯುಗಳ ನೋಡುವ ಸಖ್ಯದಲಿ ದೃಗು
ಯುಗಳ ಜಲಬಿಂದುಗಳಿಗಾ ಜಲಬಿಂದು ಸುರಿವಂತೆ
ಒಗುವ ಖಂಡಿತ ಹಾರ ಮುಕ್ತಾ
ಳಿಗಳು ಮೆರೆದವು ಮಾನಿನಿಯರು
ಬ್ಬೆಗದ ರೋದನ ರೌರವದೊಳೈತಂದಳಿಂದುಮುಖಿ ॥70॥
೦೭೧ ಬೆದರುಗಙ್ಗಳ ಬಿಟ್ಟ ...{Loading}...
ಬೆದರುಗಂಗಳ ಬಿಟ್ಟ ಮಂಡೆಯ
ಹುದಿದ ಹಾಹಾರವದ ತೊಡಕಿದ
ಪದಯುಗದ ಮೇಲುದಿನ ಬೀದಿಯ ಧೂಳಿ ಧೂಸರದ
ವದನಕಮಲದ ಖಳನ ವಾಮಾಂ
ಗದಲಿ ಬಾಗಿದ ತನುಲತೆಯ ವರ
ಸುದತಿ ಬಂದಳು ರಾಜಸಭೆಗೆ ನೃಪಾಲ ಕೇಳ್ ಎಂದ ॥71॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುಶ್ಶಾಸನನು ತನ್ನ ಎಡತೋಳಿನಿಂದ ಅದುಮಿಹಿಡಿದು ರಸ್ತೆಯಲ್ಲಿ ದ್ರೌಪದಿಯನ್ನು ಎಳೆತರುತ್ತಿದ್ದಾನೆ. ಅವಳು ಬೆದರುಗಣ್ಣುಗಳನ್ನು
ಬಿಡುತ್ತಿದ್ದಾಳೆ. ತಲೆಕೂದಲೆಲ್ಲ ಕೆದರಿದೆ. ಹಾಹಾ ಎಂದು ರೋದಿಸುತ್ತಿದ್ದಾಳೆ. ಅವಳ ಮೇಲು ಹೊದಿಕೆ ಜಾರಿ ಕಾಲುಗಳಿಗೆ ತೊಡುಕುತ್ತಿದೆ. ಬೀದಿಯ ದೂಳಿನಿಂದ ಮುಖವೆಲ್ಲ ಧೂಸರವಾಗಿದೆ. ಆ ಖಳನ ಎಡಪಾಶ್ರ್ವದಲ್ಲಿ ಅವಳ ತನುಲತೆ ಬಾಗಿದೆ. ಆ ಅವಸ್ಥೆಯಲ್ಲಿ ಅವಳು ರಾಜಸಭೆಗೆ ಬಂದಳು.
ಪದಾರ್ಥ (ಕ.ಗ.ಪ)
ಮೇಲುದು-ಮೇಲುಹೊದಿಕೆ
ಮೂಲ ...{Loading}...
ಬೆದರುಗಂಗಳ ಬಿಟ್ಟ ಮಂಡೆಯ
ಹುದಿದ ಹಾಹಾರವದ ತೊಡಕಿದ
ಪದಯುಗದ ಮೇಲುದಿನ ಬೀದಿಯ ಧೂಳಿ ಧೂಸರದ
ವದನಕಮಲದ ಖಳನ ವಾಮಾಂ
ಗದಲಿ ಬಾಗಿದ ತನುಲತೆಯ ವರ
ಸುದತಿ ಬಂದಳು ರಾಜಸಭೆಗೆ ನೃಪಾಲ ಕೇಳೆಂದ ॥71॥
೦೭೨ ಅಹಹ ಪಾಣ್ಡವ ...{Loading}...
ಅಹಹ ಪಾಂಡವ ರಾಯ ಪಟ್ಟದ
ಮಹಿಳೆಗೀ ವಿಧಿಯೇ ಮಹಾಕ್ರತು
ವಿಹಿತ ಮಂತ್ರ ಜಲಾಭಿಷಿಕ್ತ ಕಚಾಗ್ರಕಿದು ವಿಧಿಯೆ
ಮಿಹಿರ ಬಿಂಬವ ಕಾಣದೀನೃಪ
ಮಹಿಳೆಗಿದು ವಿಧಿಯೇ ವಿಧಾತನ
ಕುಹಕವೈಸಲೆ ಶಿವ ಶಿವಾಯೆಂದರು ಸಭಾಜನರು ॥72॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಪಾಂಡವ ರಾಜನ ಪಟ್ಟದ ರಾಣಿಗೆ ಇಂತಹ ಸ್ಥಿತಿ ಬಂದಿತೇ ? ರಾಜಸೂಯಯಾಗದಂತಹ ಮಹಾಯಜ್ಞದಲ್ಲಿ ಮಂತ್ರಪೂರ್ವಕವಾಗಿ ಋಷಿಗಳಿಂದ ಜಲಾಭಿಷೇಕವನ್ನು ಪಡೆದ ಕೂದಲುಗಳನ್ನು ಪಡೆದ ದ್ರೌಪದಿಗೆ ಇಂತಹ ಸ್ಥಿತಿ ಬಂದಿತೇ ?
ಅಂತಃಪುರದಲ್ಲಿ ಪತಿವ್ರತೆಯಾಗಿದ್ದುಕೊಂಡು ಹೊರಗೆ ಸೂರ್ಯಬಿಂಬವನ್ನೇ ಕಾಣದ ಈ ಮಹಿಳೆಗೆ ಈ ಅವಸ್ಥೆಯೇ? ಇದು ವಿಧಿಯ ಕುಹಕವೇ ನಿಜ. ಶಿವ ಶಿವಾ!” ಎಂದು ಸಭಾಸದರು ಮಾತನಾಡಿಕೊಂಡರು.
ಪದಾರ್ಥ (ಕ.ಗ.ಪ)
ಕಚ-ಕೂದಲು, ಮಿಹಿರಬಿಂಬ-ಸೂರ್ಯಬಿಂಬ
ಮೂಲ ...{Loading}...
ಅಹಹ ಪಾಂಡವ ರಾಯ ಪಟ್ಟದ
ಮಹಿಳೆಗೀ ವಿಧಿಯೇ ಮಹಾಕ್ರತು
ವಿಹಿತ ಮಂತ್ರ ಜಲಾಭಿಷಿಕ್ತ ಕಚಾಗ್ರಕಿದು ವಿಧಿಯೆ
ಮಿಹಿರ ಬಿಂಬವ ಕಾಣದೀನೃಪ
ಮಹಿಳೆಗಿದು ವಿಧಿಯೇ ವಿಧಾತನ
ಕುಹಕವೈಸಲೆ ಶಿವ ಶಿವಾಯೆಂದರು ಸಭಾಜನರು ॥72॥
೦೭೩ ತುಳುಕಿದವು ಕಮ್ಬನಿಗಳಾ ...{Loading}...
ತುಳುಕಿದವು ಕಂಬನಿಗಳಾ ಸಭೆ
ಯೊಳಗೆ ದುಶ್ಯಾಸನ ಸುಯೋಧನ
ಖಳ ಶಿರೋಮಣಿ ಶಕುನಿ ಕರ್ಣ ಜಯದ್ರಥಾದ್ಯರಿಗೆ
ತಳಿತುದದ್ಭುತಹರ್ಷ ಮುಖ ಮಂ
ಡಲಕೆ ಸೀರೆಯನವುಚಿ ನಯನೋ
ದ್ಗಳಿತ ಜಲಧಾರೆಯಲಿ ನೆನೆದುದು ಸಭೆ ವಿಷಾದದಲಿ ॥73॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಸಭೆಯಲ್ಲಿದ್ದವರ ಕಣ್ಣುಗಳಿಂದ ನೀರು ಉಕ್ಕಿ ಹರಿಯುತ್ತಿತ್ತು. ಆದರೆ ಅದರಿಂದ ದುಶ್ಶಾಸನ, ದುರ್ಯೋಧನ, ಶಕುನಿ, ಕರ್ಣ, ಜಯದ್ರಥಾದಿಗಳಿಗೆ ಮಾತ್ರ ಅದ್ಭುತ ಹರ್ಷವುಂಟಾಯಿತು. ಉಳಿದ ಸಭೆಯ ಜನರೆಲ್ಲ ತಮ್ಮ ಮುಖಮಂಡಲಕ್ಕೆ ವಸ್ತ್ರದ ಸೆರಗನ್ನು ಮುಚ್ಚಿಕೊಂಡು ವಿಷಾದದಿಂದ, ಕಣ್ಣುಗಳಿಂದ ಉಕ್ಕಿಹರಿಯುತ್ತಿದ್ದ ಜಲಧಾರೆಯಿಂದ ನೆನೆಯುತ್ತಿದ್ದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ತುಳುಕಿದವು ಕಂಬನಿಗಳಾ ಸಭೆ
ಯೊಳಗೆ ದುಶ್ಯಾಸನ ಸುಯೋಧನ
ಖಳ ಶಿರೋಮಣಿ ಶಕುನಿ ಕರ್ಣ ಜಯದ್ರಥಾದ್ಯರಿಗೆ
ತಳಿತುದದ್ಭುತಹರ್ಷ ಮುಖ ಮಂ
ಡಲಕೆ ಸೀರೆಯನವುಚಿ ನಯನೋ
ದ್ಗಳಿತ ಜಲಧಾರೆಯಲಿ ನೆನೆದುದು ಸಭೆ ವಿಷಾದದಲಿ ॥73॥
೦೭೪ ವ್ಯಾಕುಲವನಿದ ಕಾಮ್ಬ ...{Loading}...
ವ್ಯಾಕುಲವನಿದ ಕಾಂಬ ಕಣ್ಣುಗ
ಳೇಕೆ ರಾಜಕುಮಾರಿಯೀಕೆಯ
ಶೋಕ ರಸವನು ಕುಡಿವ ಕರ್ಣದ್ವಯವಿದೇಕೆಮಗೆ
ಏಕೆ ವಿಧಿ ನಿರ್ಮಿಸಿದನೋ ನಾ
ವೇಕೆ ಸಪ್ರಾಣರೊ ಶಿವಾಯೆಂ
ದಾ ಕುಠಾರರ ಬೈದುದಾ ಸಭೆಯಲಿ ಬುಧವ್ರಾತ ॥74॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಸಭೆಯಲ್ಲಿದ್ದ ವಿದ್ವಾಂಸರುಗಳಿಗೆಲ್ಲ ಎಷ್ಟೊಂದು ಸಂಕಟವುಂಟಾಗಿತ್ತೆಂದರೆ ಆ ವಿಧಿ ನಮಗೆ ಈ ರಾಜಕುಮಾರಿಯನ್ನು
ಇಂತಹ ಅವಸ್ಥೆಯಲ್ಲಿ ನೋಡಲೆಂದೇ ಈ ಕಣ್ಣುಗ¼ನ್ನು ಸೃಷ್ಟಿಸಿದನೆ? ? ಈ ಶೋಕರಸವನ್ನು ಕುಡಿಯಲೆಂದು ನಮಗೆ ಕಿವಿಗಳನ್ನು ಸೃಷ್ಟಿಸಿದನೇ? ಇದನ್ನೆಲ್ಲ ನೋಡಿಯೂ ನಾವೇಕೆ ಇನ್ನೂ ಜೀವಂತವಾಗಿದ್ದೇವೆ ? ಶಿವಾ ! ಎಂದು ಆ ಕುಠಾರರನ್ನು ಬೈಯುತ್ತಿದ್ದರು.
ಪದಾರ್ಥ (ಕ.ಗ.ಪ)
ವ್ಯಾಕುಲ-ವ್ಯಥೆ, ಕುಠಾರ-ದುಷ್ಟ
ಮೂಲ ...{Loading}...
ವ್ಯಾಕುಲವನಿದ ಕಾಂಬ ಕಣ್ಣುಗ
ಳೇಕೆ ರಾಜಕುಮಾರಿಯೀಕೆಯ
ಶೋಕ ರಸವನು ಕುಡಿವ ಕರ್ಣದ್ವಯವಿದೇಕೆಮಗೆ
ಏಕೆ ವಿಧಿ ನಿರ್ಮಿಸಿದನೋ ನಾ
ವೇಕೆ ಸಪ್ರಾಣರೊ ಶಿವಾಯೆಂ
ದಾ ಕುಠಾರರ ಬೈದುದಾ ಸಭೆಯಲಿ ಬುಧವ್ರಾತ ॥74॥
೦೭೫ ವನಜಮುಖಿಯಕ್ಕೆಯನು ದುಶ್ಶಾ ...{Loading}...
ವನಜಮುಖಿಯಕ್ಕೆಯನು ದುಶ್ಶಾ
ಸನನ ದುರ್ನೀತಿಯನು ದುರ್ಯೋ
ಧನನ ದುಶ್ಚೇಷ್ಟೆಯನು ಕಂಡೀ ಭೀಮ ಫಲುಗುಣರು
ಮನದೊಳಗೆ ಕೌರವನ ಕರುಳನು
ತನಿ ರಕುತದಲಿ ಕುದಿಸಿದರು ವಾ
ಜನಿಕ ಕರ್ಮಕ್ರಿಯೆಗೆ ನೆನೆವುದನರಿದನಾ ಭೂಪ ॥75॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಮಲಮುಖಿಯ ಅಳುವನ್ನು ದುಶ್ಶಾಸನನ ದುರ್ನೀತಿಯನ್ನು ದುರ್ಯೋಧನನ ದುಶ್ಚೇಷ್ಟೆಯನ್ನೂ ನೋಡಿ ಭೀಮಾರ್ಜುನರು
ಮನದಲ್ಲೇ ಆ ಕೌರವನ ಕರುಳನ್ನು ಅವನ ರಕ್ತದಲ್ಲೇ ಹಾಕಿ ಕುದಿಸಿದರು ! ಇವರು ವಾಜನಿಕ ಕರ್ಮಕ್ರಿಯೆಗೆ ಯೋಚಿಸುತ್ತಿದ್ದಾರೆಂಬುದನ್ನು ಯುಧಿಷ್ಠಿರ ಗಮನಿಸಿದ.
ಪದಾರ್ಥ (ಕ.ಗ.ಪ)
ಅಕ್ಕೆ-ಅಳು, ವಾಜನಿಕ-ಯಜ್ಞಕ್ಕೆ ಸಂಬಂಧಿಸಿದ (ಕ-ಕ. ನಿಘಂಟು. ಕ.ಸ.ಪ)
ಮೂಲ ...{Loading}...
ವನಜಮುಖಿಯಕ್ಕೆಯನು ದುಶ್ಶಾ
ಸನನ ದುರ್ನೀತಿಯನು ದುರ್ಯೋ
ಧನನ ದುಶ್ಚೇಷ್ಟೆಯನು ಕಂಡೀ ಭೀಮ ಫಲುಗುಣರು
ಮನದೊಳಗೆ ಕೌರವನ ಕರುಳನು
ತನಿ ರಕುತದಲಿ ಕುದಿಸಿದರು ವಾ
ಜನಿಕ ಕರ್ಮಕ್ರಿಯೆಗೆ ನೆನೆವುದನರಿದನಾ ಭೂಪ ॥75॥
೦೭೬ ಹುಬ್ಬಿನಲಿ ನಿಲಿಸಿದನು ...{Loading}...
ಹುಬ್ಬಿನಲಿ ನಿಲಿಸಿದನು ಪವನಜ
ನುಬ್ಬಟೆಯನರ್ಜುನನ ವಿಕೃತಿಯ
ನಿಬ್ಬರಾಲಾಪವನು ಧರ್ಮರಹಸ್ಯ ನಿಷ್ಠೆಯಲಿ
ಹಬ್ಬಿದುದು ಭೀಷ್ಮಂಗೆ ಶೋಕದ
ಮಬ್ಬು ಗುರು ಗೌತಮರು ವಿದುರನು
ಸರ್ಬ ಖೇದಾಂಬುಧಿಯೊಳದ್ದರು ಭೂಪ ಕೇಳ್ ಎಂದ ॥76॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದನ್ನರಿತ ಅವನು ತನ್ನ ಹುಬ್ಬಿನ ಸಂಜ್ಞೆಯಿಂದ ಭೀಮನನ್ನು ತಡೆದ. ಅರ್ಜುನನಲ್ಲಾದ ಮನೋವಿಕಾರವನ್ನು ನಿಲ್ಲಿಸಿದ. ಧರ್ಮರಹಸ್ಯಪಾಲನೆಯ ನಿಷ್ಠೆಯಿಂದ ಇಬ್ಬರ ಆಲಾಪವನ್ನು ಅಡಗಿಸಿದ. ಭೀಷ್ಮನಿಗೂ ಶೋಕದ ಮಂಕು ಕವಿಯಿತು. ದ್ರೋಣ ಕೃಪ ವಿದುರರು ಅತಿಯಾದ ದುಃಖದಲ್ಲಿ ಮುಳುಗಿದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಹುಬ್ಬಿನಲಿ ನಿಲಿಸಿದನು ಪವನಜ
ನುಬ್ಬಟೆಯನರ್ಜುನನ ವಿಕೃತಿಯ
ನಿಬ್ಬರಾಲಾಪವನು ಧರ್ಮರಹಸ್ಯ ನಿಷ್ಠೆಯಲಿ
ಹಬ್ಬಿದುದು ಭೀಷ್ಮಂಗೆ ಶೋಕದ
ಮಬ್ಬು ಗುರು ಗೌತಮರು ವಿದುರನು
ಸರ್ಬ ಖೇದಾಂಬುಧಿಯೊಳದ್ದರು ಭೂಪ ಕೇಳೆಂದ ॥76॥
೦೭೭ ಅರಸಕೇಳೈ ಬಳಿಕ ...{Loading}...
ಅರಸಕೇಳೈ ಬಳಿಕ ಹಸ್ತಿನ
ಪುರದೊಳಾಯ್ತೀ ವಾರ್ತೆ ಬಳಿಕೀ
ಪುರದ ಬಹಿರೋದ್ಯಾನ ವೀಧಿಗಳೊಳಗೆ ಹರಹಿನಲಿ
ಅರಸಿಯರು ಸೌಭದ್ರನವರೈ
ವರ ಕುಮಾರರು ಮಂತ್ರಿಗಳು ಮು
ಖ್ಯರು ಪಸಾಯ್ತರು ಕೇಳಿದರು ಪಾಂಡವ ಪರಾಜಯವ ॥77॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಸ್ತಿನಾಪುರದಲ್ಲಿ ಇದೆಲ್ಲ ನಡೆಯುತ್ತಿದ್ದರೆ, ಈ ವಾರ್ತೆ ಅನಂತರ ಪುರದ ಬಹಿರುದ್ಯಾನ ಬೀದಿಗಳಲ್ಲೆಲ್ಲ ಹರಡಿತು. ಅಲ್ಲಿದ್ದ ಅರಸಿಯರು, ಅಭಿಮನ್ಯು ಐವರು ಪಾಂಡವರ ಕುಮಾರರು ಮಂತ್ರಿಗಳು ಮುಖ್ಯರು ಪಾಂಡವ ಪರಾಜಯದ ಸುದ್ದಿಯನ್ನು ಕೇಳಿದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಅರಸಕೇಳೈ ಬಳಿಕ ಹಸ್ತಿನ
ಪುರದೊಳಾಯ್ತೀ ವಾರ್ತೆ ಬಳಿಕೀ
ಪುರದ ಬಹಿರೋದ್ಯಾನ ವೀಧಿಗಳೊಳಗೆ ಹರಹಿನಲಿ
ಅರಸಿಯರು ಸೌಭದ್ರನವರೈ
ವರ ಕುಮಾರರು ಮಂತ್ರಿಗಳು ಮು
ಖ್ಯರು ಪಸಾಯ್ತರು ಕೇಳಿದರು ಪಾಂಡವ ಪರಾಜಯವ ॥77॥
೦೭೮ ಬನ್ದರಿದಿರೊಳು ಕೌರವರ ...{Loading}...
ಬಂದರಿದಿರೊಳು ಕೌರವರ ಕಡೆ
ನಂದನರ ಕಡೆ ಯಾವುದೆನೆ ಸಾ
ವಂದದಲಿ ಹೊಯ್ದಾಡಿ ಹಿಡಿವೆವು ಸುರರ ಸೂಳೆಯರ
ಎಂದು ತಮ್ಮೊಳು ನೆರೆದು ಸೇನಾ
ವೃಂದ ಸಜ್ಜೋಡಿನಲಿ ಕಾಳಗ
ಕಂದು ಮೋಹರಿಸಿದರು ಹಸ್ತಿನಪುರದ ಬಾಹೆಯಲಿ ॥78॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕ್ರುದ್ಧರಾಗಿ ಕೌರವರ ಕಡೆಯವರು, ಅವರ ನಂದನರ ಕಡೆಯವರು ಯಾರೇ ಎದುರಿಗೆ ಬಂದರೂ ಸಾಯುವಂತೆ ಹೋರಾಡಿ
ಸುರಮಹಿಳೆಯರನ್ನು ಸೇರುತ್ತೇವೆ ಎಂದು ತಾವು ತಾವೇ ಗುಂಪುಸೇರಿ ಸೇನೆಯನ್ನು ಸಜ್ಜುಗೊಳಿಸಿಕೊಂಡು ಹಸ್ತಿನಾಪುರದ ಹೊರಗೆ ಯುದ್ಧಕ್ಕೆ ಸಿದ್ಧರಾದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಬಂದರಿದಿರೊಳು ಕೌರವರ ಕಡೆ
ನಂದನರ ಕಡೆ ಯಾವುದೆನೆ ಸಾ
ವಂದದಲಿ ಹೊಯ್ದಾಡಿ ಹಿಡಿವೆವು ಸುರರ ಸೂಳೆಯರ
ಎಂದು ತಮ್ಮೊಳು ನೆರೆದು ಸೇನಾ
ವೃಂದ ಸಜ್ಜೋಡಿನಲಿ ಕಾಳಗ
ಕಂದು ಮೋಹರಿಸಿದರು ಹಸ್ತಿನಪುರದ ಬಾಹೆಯಲಿ ॥78॥
೦೭೯ ಇತ್ತಲಬಲೆಯ ವಿಧಿಯ ...{Loading}...
ಇತ್ತಲಬಲೆಯ ವಿಧಿಯ ಕೇಳತಿ
ಮತ್ತನೈ ಧೃತರಾಷ್ಟ್ರ ಸುತನೀ
ಮತ್ತಗಜಗಾಮಿನಿಯ ಬಿಡಿಸಿದನವನ ಕೈಯಿಂದ
ನೆತ್ತ ಸೋತುದು ನಿನ್ನನೊಡ್ಡಿ ನೃ
ಪೋತ್ತಮನು ಸಲೆ ಮಾರ ಮಾರಿದ
ನತ್ತಡೇನಹುದೆಲೆಗೆ ತೊತ್ತಿರ ಹಿಂಡ ಹೊಗುಯೆಂದ ॥79॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕಡೆ ಮದದಿಂದ ಕೂಡಿದ ಸುಯೋಧನನು ಗಜಗಾಮಿನಿಯಾದ ದ್ರೌಪದಿಯನ್ನು ತಮ್ಮನ ಕೈಯಿಂದ ಬಿಡಿಸಿ “ನಿನ್ನನ್ನು ಒಡ್ಡಿ ಜೂಜಿನಲ್ಲಿ ಸೋಲಲಾಯಿತು. ಯುಧಿಷ್ಠಿರರಾಜ ನಿನ್ನನ್ನು ಪೂರ್ಣವಾಗಿ ಮಾರಿಬಿಟ್ಟ. ಈಗ ನೀನು ಅತ್ತರೆ ಏನು ಪ್ರಯೋಜನ ?
ಹೋಗಿ ದಾಸಿಯರ ಗುಂಪನ್ನು ಸೇರು” ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಇತ್ತಲಬಲೆಯ ವಿಧಿಯ ಕೇಳತಿ
ಮತ್ತನೈ ಧೃತರಾಷ್ಟ್ರ ಸುತನೀ
ಮತ್ತಗಜಗಾಮಿನಿಯ ಬಿಡಿಸಿದನವನ ಕೈಯಿಂದ
ನೆತ್ತ ಸೋತುದು ನಿನ್ನನೊಡ್ಡಿ ನೃ
ಪೋತ್ತಮನು ಸಲೆ ಮಾರ ಮಾರಿದ
ನತ್ತಡೇನಹುದೆಲೆಗೆ ತೊತ್ತಿರ ಹಿಂಡ ಹೊಗುಯೆಂದ ॥79॥
೦೮೦ ಲಲಿತ ಬುದ್ಧಿಗಳೀಗ ...{Loading}...
ಲಲಿತ ಬುದ್ಧಿಗಳೀಗ ನೋಡಿರಿ
ಲಲನೆಯನು ಸತಿ ದಿಟ್ಟೆಯೆನ್ನದಿ
ರೆಲೆ ಸುಯೋಧನ ರಾಜಸಭೆಯಿದು ದೋಷರಹಿತವಲೆ
ಗೆಲುವಿದೆಂತುಟೊ ತನ್ನ ಸೋಲಿದು
ಬಳಿಕ ಸೋತರೆ ಧರ್ಮಗತಿಯನು
ತಿಳಿದು ಹೇಳಲಿ ತತ್ಸಭಾಸದರೆಂದಳಿಂದುಮುಖಿ ॥80॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ದ್ರೌಪದಿ ದಿಟ್ಟತನದಿಂದ ಸಭೆಯನ್ನುದ್ದೇಶಿಸಿ “ಪ್ರಜ್ಞಾವಂತರೆ, ನೀವೇ ನೋಡಿರಿ. ಈ ಸತಿ ದಿಟ್ಟೆ ಎನ್ನಬೇಡಿ. ಎಲೆ ಸುಯೋಧನ, ಈ ರಾಜಸಭೆ ದೋಷರಹಿತವಾದುದಲ್ಲವೇ ? ತನ್ನನ್ನೇ ಸೋತು ಪರಾಧೀನನಾದ ಮೇಲೆ ನನ್ನನ್ನು ಸೋತರೆ ಅದು ಹೇಗೆ ಸೋಲು ಎಂದು ಧರ್ಮಗತಿಯನ್ನು ಈ ಸಭಾಸದರೇ ತಿಳಿದು ಹೇಳಲಿ ಎಂದಳು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಲಲಿತ ಬುದ್ಧಿಗಳೀಗ ನೋಡಿರಿ
ಲಲನೆಯನು ಸತಿ ದಿಟ್ಟೆಯೆನ್ನದಿ
ರೆಲೆ ಸುಯೋಧನ ರಾಜಸಭೆಯಿದು ದೋಷರಹಿತವಲೆ
ಗೆಲುವಿದೆಂತುಟೊ ತನ್ನ ಸೋಲಿದು
ಬಳಿಕ ಸೋತರೆ ಧರ್ಮಗತಿಯನು
ತಿಳಿದು ಹೇಳಲಿ ತತ್ಸಭಾಸದರೆಂದಳಿಂದುಮುಖಿ ॥80॥
೦೮೧ ಹಿರಿಯರಿಲ್ಲದ ಸಭೆ ...{Loading}...
ಹಿರಿಯರಿಲ್ಲದ ಸಭೆ ಮನುಷ್ಯರ
ನೆರವಿಯದು ಸಭೆಯಲ್ಲ ಮೂರ್ಖರು
ಹಿರಿಯರಲ್ಲ ಯಥಾರ್ಥ ಭಾಷಣ ಭೀತಚೇತನರು
ಹಿರಿಯರಿದೆ ಸಾಮಾಜಿಕರು ಸ
ಚ್ಚರಿತರಿದೆಲಾ ಸ್ತ್ರೀಮತವನು
ತ್ತರಿಸಲಾಗದೆ ಧರ್ಮಶಾಸ್ತ್ರದೊಳೆಂದಳಿಂದುಮುಖಿ ॥81॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹಿರಿಯರಿಲ್ಲದ ಸಭೆ ಕೇವಲ ಮನುಷ್ಯರ ಗುಂಪು. ಅದು ಸಭೆಯಲ್ಲ. ಅಲ್ಲಿರುವ ಮೂರ್ಖರು ಹಿರಿಯರಲ್ಲ. ಇದ್ದದ್ದನ್ನು ಇದ್ದ ಹಾಗೆಯೇ ಹೇಳಲಾರದೆ ಭಯಗೊಂಡ ಚೇತನವುಳ್ಳವರು. ಇಲ್ಲಿ ಹಿರಿಯರಿದ್ದೀರಿ. ಸಚ್ಚರಿತರಿದ್ದೀರಿ, ಸಾಮಾಜಿಕರಿದ್ದೀರಿ. ಧರ್ಮಶಾಸ್ತ್ರದಂತೆ ಈ ಸ್ತ್ರೀಯ ಅಭಿಪ್ರಾಯಕ್ಕೆ ಉತ್ತರವನ್ನು ಹೇಳಿ” ಎಂದಳು.
ಮೂಲ ...{Loading}...
ಹಿರಿಯರಿಲ್ಲದ ಸಭೆ ಮನುಷ್ಯರ
ನೆರವಿಯದು ಸಭೆಯಲ್ಲ ಮೂರ್ಖರು
ಹಿರಿಯರಲ್ಲ ಯಥಾರ್ಥ ಭಾಷಣ ಭೀತಚೇತನರು
ಹಿರಿಯರಿದೆ ಸಾಮಾಜಿಕರು ಸ
ಚ್ಚರಿತರಿದೆಲಾ ಸ್ತ್ರೀಮತವನು
ತ್ತರಿಸಲಾಗದೆ ಧರ್ಮಶಾಸ್ತ್ರದೊಳೆಂದಳಿಂದುಮುಖಿ ॥81॥
೦೮೨ ಚಪಳೆ ಫಡ ...{Loading}...
ಚಪಳೆ ಫಡ ಹೋಗಿವಳು ಹಲಬರ
ನುಪಚರಿಸುವುದನರಿಯಲಾದುದು
ದ್ರುಪದನಂದನೆ ನಡೆ ವಿಳಾಸಿನಿಯರ ವಿಧಾನದಲಿ
ಕೃಪಣನೇ ಕುರುರಾಯ ನಿನಗಿ
ನ್ನಪದೆಸೆಯ ಹೊಲೆ ಹೋಯ್ತು ರಾಯನ
ವಿಪುಳ ವಿಭವವನನುಭವಿಸು ನಡೆಯೆಂದನಾ ಕರ್ಣ ॥82॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಕರ್ಣ “ಚಪಳೆ ಫಡ, ಹೋಗು ! ಇವಳು ಹಲವು ಪುರುಷರನ್ನು ಉಪಚರಿಸುವವಳು ಎಂಬುದನ್ನು ತಿಳಿದಿದ್ದೇವಲ್ಲವೆ?
ದ್ರುಪದನಂದನೆ, ದುರ್ಯೋಧನನ ವಿಳಾಸಿನಿಯಾಗು ಹೋಗು. ಕುರುರಾಜನೇನೂ ಕೃಪಣನಲ್ಲ. ನಿನಗಿದ್ದ ಅಪಕೀರ್ತಿ ದೂರವಾಯ್ತು. ಕುರುರಾಜನ ವಿಪುಲ ವೈಭವವನ್ನು ಅನುಭವಿಸು ನಡೆ” ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಚಪಳೆ ಫಡ ಹೋಗಿವಳು ಹಲಬರ
ನುಪಚರಿಸುವುದನರಿಯಲಾದುದು
ದ್ರುಪದನಂದನೆ ನಡೆ ವಿಳಾಸಿನಿಯರ ವಿಧಾನದಲಿ
ಕೃಪಣನೇ ಕುರುರಾಯ ನಿನಗಿ
ನ್ನಪದೆಸೆಯ ಹೊಲೆ ಹೋಯ್ತು ರಾಯನ
ವಿಪುಳ ವಿಭವವನನುಭವಿಸು ನಡೆಯೆಂದನಾ ಕರ್ಣ ॥82॥
೦೮೩ ಅಹುದೆಲೇ ಬಳಿಕೇನು ...{Loading}...
ಅಹುದೆಲೇ ಬಳಿಕೇನು ದಾಸ್ಯಕೆ
ವಿಹಿತವಾಯಿತು ನಿನ್ನ ತನುವಿನ
ಲಹ ಮನೋವ್ಯಥೆಯೇಕೆ ರಾಣೀವಾಸವೀಧಿಯಲಿ
ಮಹಿಳೆಯರ ಸಖ್ಯದಲಿ ಸೌಖ್ಯದ
ರಹಣಿಗೊಡಬಡು ವಾರಕದಲತಿ
ಬಹಳ ಭೂಷಣ ಭಾರದಲಿ ಮೆರೆಯೆಂದನಾ ಶಕುನಿ ॥83॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಕುನಿಯೂ ಬಾಯಿ ಹಾಕಿದ. “ಅಹುದಲ್ಲವೇ ? ಬಳಿಕ ಏನು? ನಿನ್ನ ದೇಹದ ವಿಷಯದಲ್ಲಿ ಇನ್ನು ಮನೋವ್ಯಥೆಯೇಕೆ ? ದಾಸ್ಯಕ್ಕೆ ವಿಹಿತವಾಯಿತು ! ರಾಣೀವಾಸದ ಬೀದಿಯಲ್ಲಿ ಮಹಿಳೆಯರ ಒಡನಾಟದಲ್ಲಿ ಸುಖವಾಗಿ ಬಾಳುವುದನ್ನು ಒಪ್ಪಿಕೊ. ಕುರುರಾಜ ನೀಡುವ ಯಥೇಷ್ಟ ಆಭರಣಗಳ ಭಾರದಿಂದ ಮೆರೆ” ಎಂದ.
ಪದಾರ್ಥ (ಕ.ಗ.ಪ)
ಅಹ-ಆಗುವ, ವೀಧಿ-ಬೀದಿ, ರಹಣಿ-ಕ್ರಮ, ವಾರಕ-ಉಡುಗೊರೆ, ಭೂಷಣ-ಆಭರಣ
ಮೂಲ ...{Loading}...
ಅಹುದೆಲೇ ಬಳಿಕೇನು ದಾಸ್ಯಕೆ
ವಿಹಿತವಾಯಿತು ನಿನ್ನ ತನುವಿನ
ಲಹ ಮನೋವ್ಯಥೆಯೇಕೆ ರಾಣೀವಾಸವೀಧಿಯಲಿ
ಮಹಿಳೆಯರ ಸಖ್ಯದಲಿ ಸೌಖ್ಯದ
ರಹಣಿಗೊಡಬಡು ವಾರಕದಲತಿ
ಬಹಳ ಭೂಷಣ ಭಾರದಲಿ ಮೆರೆಯೆಂದನಾ ಶಕುನಿ ॥83॥
೦೮೪ ವಾರಕದ ವಿವಿಧಾಭರಣ ...{Loading}...
ವಾರಕದ ವಿವಿಧಾಭರಣ ಶೃಂ
ಗಾರವಂತಿರಲೀಕೆಯಾಡಿದ
ಸಾರ ಭಾಷೆಗೆ ನೆನೆಯರೇ ನಿರ್ವಾಹ ಸಂಗತಿಯ
ಓರೆಪೋರೆಯೊಳಾಡಿ ಧರ್ಮದ
ಧಾರಣೆಯ ಧಟ್ಟಿಸುವದಿದು ಗಂ
ಭೀರರಿಗೆ ಗರುವವಾಯಿಯೇ ಸುಡಲೆಂದನಾ ಭಿಷ್ಮ ॥84॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಷ್ಟು ಕಾಲ ಮೌನವಾಗಿಯೇ ಕುಳಿತಿದ್ದ ಭೀಷ್ಮ ಈಗ ಒಂದು ಯಥೋಚಿತ ಮಾತನ್ನು ಆಡುತ್ತಾನೆ. “ಉಡುಗೊರೆಯ ವಿವಿಧ ಆಭರಣ ಶೃಂಗಾರದ ಮಾತು ಹಾಗಿರಲಿ. ಆಕೆ ಆಡಿದ ಸಾರವತ್ತಾದ ಮಾತಿಗೆ ನಿರ್ವಾಹವೇನೆಂಬ ವಿಷಯವನ್ನು ಕುರಿತು ಚಿಂತಿಸಿರಿ. ಅಡ್ಡಾದಿಡ್ಡಿಯ ಮಾತುಗಳನ್ನಾಡಿ ಧರ್ಮಪಾಲನೆಯನ್ನು ಧಟ್ಟಿಸುವುದು ಗಂಭೀರರಾದವರಿಗೆ ಗೌರವವೆನಿಸಿತೇ ?
ಪದಾರ್ಥ (ಕ.ಗ.ಪ)
ಗರುವಾಯಿಯೇ-ಗೌರವವೇ ?
ಮೂಲ ...{Loading}...
ವಾರಕದ ವಿವಿಧಾಭರಣ ಶೃಂ
ಗಾರವಂತಿರಲೀಕೆಯಾಡಿದ
ಸಾರ ಭಾಷೆಗೆ ನೆನೆಯರೇ ನಿರ್ವಾಹ ಸಂಗತಿಯ
ಓರೆಪೋರೆಯೊಳಾಡಿ ಧರ್ಮದ
ಧಾರಣೆಯ ಧಟ್ಟಿಸುವದಿದು ಗಂ
ಭೀರರಿಗೆ ಗರುವವಾಯಿಯೇ ಸುಡಲೆಂದನಾ ಭಿಷ್ಮ ॥84॥
೦೮೫ ತುಟ್ಟಿಸಲಿ ಧನ ...{Loading}...
ತುಟ್ಟಿಸಲಿ ಧನ ಮಾನಗರ್ವದ
ಬೆಟ್ಟ ಮುರಿಯಲಿ ಜೀವವೊಡಲನು
ಬಿಟ್ಟು ಹಿಂಗಲಿ ಬಿಡೆನು ಸತ್ಯವನೆಂದು ಯಮಸೂನು
ನೆಟ್ಟನೇ ನಿಶ್ಚೈಸಿದುದನೊಡ
ಹುಟ್ಟಿದರು ಮನ್ನಿಸಿದರಲ್ಲದೆ
ಹುಟ್ಟಿ ಹೊಂದಲು ಗತಿಯಹುದೆ ನಿನಗೆಂದನಾ ಭೀಷ್ಮ ॥85॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧನ ಮಾನ ಹೋದರೂ ಚಿಂತೆಯಿಲ್ಲ. ಗರ್ವದ ಬೆಟ್ಟ ಬೇಕಾದರೆ ಮುರಿದುಬೀಳಲಿ. ಜೀವ ಬೇಕಾದರೆ ದೇಹವನ್ನು ಬಿಟ್ಟು ಹೋಗಲಿ. ನಾನೆಂದೂ ಸತ್ಯವನ್ನು ಬಿಡೆನು ಎಂದು ಯಮಸೂನು ನಿಶ್ಚೈಸಿದ. ಅವನ ಒಡಹುಟ್ಟಿದವರೂ ಆ ಸತ್ಯನಿಷ್ಠೆಯನ್ನು
ಮನ್ನಿಸಿದರು. ಹಾಗಲ್ಲದಿದ್ದಲ್ಲಿ ನಿನಗೆ ಜೀವದಿಂದಿರಲು ಸಾಧ್ಯವಾಗುತ್ತಿತ್ತೇ ? ಜೀವಿಸಲು ಅವಕಾಶವಾಗುತ್ತಿತ್ತೇ ?
ಪದಾರ್ಥ (ಕ.ಗ.ಪ)
ತುಟ್ಟಿಸು-ನಾಶವಾಗು
ಮೂಲ ...{Loading}...
ತುಟ್ಟಿಸಲಿ ಧನ ಮಾನಗರ್ವದ
ಬೆಟ್ಟ ಮುರಿಯಲಿ ಜೀವವೊಡಲನು
ಬಿಟ್ಟು ಹಿಂಗಲಿ ಬಿಡೆನು ಸತ್ಯವನೆಂದು ಯಮಸೂನು
ನೆಟ್ಟನೇ ನಿಶ್ಚೈಸಿದುದನೊಡ
ಹುಟ್ಟಿದರು ಮನ್ನಿಸಿದರಲ್ಲದೆ
ಹುಟ್ಟಿ ಹೊಂದಲು ಗತಿಯಹುದೆ ನಿನಗೆಂದನಾ ಭೀಷ್ಮ ॥85॥
೦೮೬ ಅಳಿಯದನ್ತಿರೆ ಸತ್ಯಧರ್ಮದ ...{Loading}...
ಅಳಿಯದಂತಿರೆ ಸತ್ಯಧರ್ಮದ
ನೆಳಲು ನೆಗ್ಗದೆ ಕೀರ್ತಿವಧುವಿನ
ಸುಳಿವು ನೋಯದೆ ತಳಿರು ಬಾಡದೆ ಧೈರ್ಯ ಸುರಕುಜದ
ಹಳಿವಿಗಳುಕದೆ ವೈರಿವರ್ಗದ
ಕಳಕಳಕೆ ಮೈಗೊಡದೆ ನೃಪ ನಿ
ರ್ಮಳದಲಿದ್ದರೆ ನಿನಗೆ ಸದರವೆಯೆಂದನಾ ಭೀಷ್ಮ ॥86॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸತ್ಯವು ಅಳಿಯದಂತೆ, ಧರ್ಮದ ನೆಳಲು ನೆಗ್ಗದಂತೆ. ಕೀರ್ತಿವಧುವಿನ ಸುಳಿವು ನೋಯದಂತೆ ಧೈರ್ಯವೆಂಬ ಕಲ್ಪವೃಕ್ಷದ ಚಿಗುರು ಬಾಡದಂತೆ, ಅಪಕೀರ್ತಿಗೆ ಅಂಜದೆ, ಶತ್ರುಗಳ ಕಳಕಳಕ್ಕೆ ಗಮನಕೊಡದೆ ಯುಧಿಷ್ಠಿರನು ನಿರ್ಮಲನಾಗಿದ್ದಾನೆ. ಇದನ್ನು ನೋಡಿ ನಿನಗೆ ಸದರವಾಯಿತೇ ?” ಎಂದ.
ಪದಾರ್ಥ (ಕ.ಗ.ಪ)
ಸುರಕುಜ-ಕಲ್ಪವೃಕ್ಷ
ಮೂಲ ...{Loading}...
ಅಳಿಯದಂತಿರೆ ಸತ್ಯಧರ್ಮದ
ನೆಳಲು ನೆಗ್ಗದೆ ಕೀರ್ತಿವಧುವಿನ
ಸುಳಿವು ನೋಯದೆ ತಳಿರು ಬಾಡದೆ ಧೈರ್ಯ ಸುರಕುಜದ
ಹಳಿವಿಗಳುಕದೆ ವೈರಿವರ್ಗದ
ಕಳಕಳಕೆ ಮೈಗೊಡದೆ ನೃಪ ನಿ
ರ್ಮಳದಲಿದ್ದರೆ ನಿನಗೆ ಸದರವೆಯೆಂದನಾ ಭೀಷ್ಮ ॥86॥
೦೮೭ ಸೋತಬಳಿಕಿವರೆಮ್ಮ ವಶವ ...{Loading}...
ಸೋತಬಳಿಕಿವರೆಮ್ಮ ವಶವ
ಖ್ಯಾತಿಯಲಿ ನಾವ್ ನಡೆವರಲ್ಲ ವೃ
ಥಾತಿರೇಕದಿ ನೀವು ಘೂರ್ಮಿಸಲಂಜುವೆನೆ ನಿಮಗೆ
ಈ ತಳೋದರಿ ತೊತ್ತಿರಲಿ ಸಂ
ಘಾತವಾಗಲಿ ಸಾಕು ನಿಮ್ಮಯ
ಮಾತೆನುತ ಕುರುರಾಯ ಜರೆದನು ಭೀಷ್ಮ ಗುರು ಕೃಪರ ॥87॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನ ಉತ್ತರ ಕೊಡುತ್ತಾನೆ “ಸೋತ ಬಳಿಕ ಇವರು ನಮ್ಮ ವಶ. ನಾವೇನೂ ಅಖ್ಯಾತಿಯಿಂದ ನಡೆಯುವವರಲ್ಲ.
ನೀವು ವ್ಯರ್ಥವಾಗಿ ಅತಿರೇಕದಿಂದ ಘರ್ಜಿಸಿದರೆ ನಾವೇನೂ ನಿಮಗೆ ಅಂಜುವುದಿಲ್ಲ. ಈ ತಳೋದರಿ ದಾಸಿಯರ ತಂಡವನ್ನು
ಸೇರಿಕೊಳ್ಳಲಿ, ಸಾಕು ನಿಮ್ಮ ಮಾತು” ಎಂದು ಭೀಷ್ಮ ದ್ರೋಣ ಕೃಪರ ಕಡೆಗೆ ತಿರುಗಿ ಹೇಳಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಸೋತಬಳಿಕಿವರೆಮ್ಮ ವಶವ
ಖ್ಯಾತಿಯಲಿ ನಾವ್ ನಡೆವರಲ್ಲ ವೃ
ಥಾತಿರೇಕದಿ ನೀವು ಘೂರ್ಮಿಸಲಂಜುವೆನೆ ನಿಮಗೆ
ಈ ತಳೋದರಿ ತೊತ್ತಿರಲಿ ಸಂ
ಘಾತವಾಗಲಿ ಸಾಕು ನಿಮ್ಮಯ
ಮಾತೆನುತ ಕುರುರಾಯ ಜರೆದನು ಭೀಷ್ಮ ಗುರು ಕೃಪರ ॥87॥
೦೮೮ ನೊನ್ದನೀ ಮಾತಿನಲಿ ...{Loading}...
ನೊಂದನೀ ಮಾತಿನಲಿ ಮಾರುತ
ನಂದನನು ಸಹದೇವನನು ಕರೆ
ದೆಂದನಗ್ನಿಯ ತಾ ಯುದಿಷ್ಠಿರ ನೃಪನ ತೋಳುಗಳ
ಮಂದಿ ನೋಡಲು ಸುಡುವೆನೇಳೇ
ಳೆಂದು ಜರೆದರೆ ಹಿಡಿದು ಮಾದ್ರೀ
ನಂದನನ ನಿಲಿಸಿದನು ಫಲಗುಣ ನುಡಿದನನಿಲಜನ ॥88॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಮಾತನ್ನು ಕೇಳಿದಾಗ ಭೀಮನಿಗೆ ತುಂಬ ನೋವಾಯಿತು. ಇಷ್ಟಕ್ಕೆಲ್ಲ ಮೂಲ ಕಾರಣ ಯುಧಿಷ್ಠಿರನಾಡಿದ ಜೂಜು ! ಆದ್ದರಿಂದ ಅವನು ಸಹದೇವನನ್ನು ಕರೆದು “ಬೆಂಕಿಯನ್ನು ತೆಗೆದುಕೊಂಡು ಬಾ, ಸಹದೇವ, ಇವರೆಲ್ಲ ನೋಡುತ್ತಿರುವಂತೆಯೇ
ಯುಧಿಷ್ಠಿರನ ತೋಳುಗಳನ್ನು ಸುಟ್ಟು ಬಿಡುತ್ತೇನೆ” ಎಂದ. ಆಗ ಅರ್ಜುನ ಸಹದೇವನನ್ನು ತಡೆದು ಭೀಮನಿಗೆ ಸಮಾಧಾನ ಮಾಡಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ನೊಂದನೀ ಮಾತಿನಲಿ ಮಾರುತ
ನಂದನನು ಸಹದೇವನನು ಕರೆ
ದೆಂದನಗ್ನಿಯ ತಾ ಯುದಿಷ್ಠಿರ ನೃಪನ ತೋಳುಗಳ
ಮಂದಿ ನೋಡಲು ಸುಡುವೆನೇಳೇ
ಳೆಂದು ಜರೆದರೆ ಹಿಡಿದು ಮಾದ್ರೀ
ನಂದನನ ನಿಲಿಸಿದನು ಫಲಗುಣ ನುಡಿದನನಿಲಜನ ॥88॥
೦೮೯ ಏನಿದೇನೈ ಭೀಮ ...{Loading}...
ಏನಿದೇನೈ ಭೀಮ ನಿಲು ಯಮ
ಸೂನು ಶಿವ ಶಿವ ಗುರುವಲಾ ನಮ
ಗೀ ನಿತಂಬಿನಿಯಾದಿಯಾದ ಸಮಸ್ತ ವಸ್ತುಗಳು
ಈ ನರೇಂದ್ರಗೆ ಸರಿಯೆ ಕುಂತೀ
ಸೂನುವೇ ಪ್ರಾಣಾರ್ಥದಿಂದ ಸ
ಘಾನನೈ ನಮಗೀತನೇ ಗತಿಯೆಂದನಾ ಪಾರ್ಥ ॥89॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಏನಯ್ಯ ಇದು ಭೀಮ ! ನಿಲ್ಲು, ಯಮಸೂನು, ಶಿವಶಿವಾ, ನಮಗೆ ಗುರುವಲ್ಲವೇ ? ದ್ರೌಪದಿಯಾದಿಯಾಗಿ ಈ ಸಮಸ್ತ ವಸ್ತುಗಳೂ ಈ ನರೇಂದ್ರನಿಗೆ ಸಮಾನವಾದಿತೇ ? ಯಮಸೂನುವೇ ನಮಗೆ ಪ್ರಾಣ ಅರ್ಥಕ್ಕಿಂತ ಮಿಗಿಲಾದವನಯ್ಯ ! ನಮಗೆ ಅವನೇ ಗತಿ !” ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಏನಿದೇನೈ ಭೀಮ ನಿಲು ಯಮ
ಸೂನು ಶಿವ ಶಿವ ಗುರುವಲಾ ನಮ
ಗೀ ನಿತಂಬಿನಿಯಾದಿಯಾದ ಸಮಸ್ತ ವಸ್ತುಗಳು
ಈ ನರೇಂದ್ರಗೆ ಸರಿಯೆ ಕುಂತೀ
ಸೂನುವೇ ಪ್ರಾಣಾರ್ಥದಿಂದ ಸ
ಘಾನನೈ ನಮಗೀತನೇ ಗತಿಯೆಂದನಾ ಪಾರ್ಥ ॥89॥
೦೯೦ ಹಿಙ್ಗಿ ಹೋಗಲಿ ...{Loading}...
ಹಿಂಗಿ ಹೋಗಲಿ ತನುವನಸು ಸ
ಪ್ತಾಂಗ ಬೇಯಲಿ ಖೋಡಿ ಮನದಲಿ
ಹಿಂಗುವದೆ ಹರಹರ ಧನಂಜಯ ಕಾಕ ಬಳಸಿದೆಲ
ಅಂಗನೆಯ ಮೇಲೊಡ್ಡವೇ ಲಲಿ
ತಾಂಗಿಗೀ ವಿಧಿಯೇಕೆ ನಮಗೀ
ಭಂಗ ಸಾಲದೆ ಸುಡುವೆನಾದೊಡೆ ತನ್ನ ತೋಳುಗಳ ॥90॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ಮಾತಿನಿಂದ ಭೀಮನಿಗೆ ಸಮಾಧಾನವಾಗಲಿಲ್ಲ. “ಪ್ರಾಣ ನನ್ನ ಶರೀರವನ್ನು ಬಿಟ್ಟು ಹೋಗಲಿ, ರಾಜ್ಯದ
ಸಪ್ತಾಂಗಗಳೂ ಬೆಂದು ಹೋಗಲಿ. ಮನಸ್ಸಿನ ಸಂಕಟ ಹೋಗುವುದೇ ? ಹರ ಹರ, ಧನಂಜಯ ! ಕಾಕ ಬಳಸಿದೆಯಲ್ಲಾ ! ಅಂಗನೆಯನ್ನು ಪಣವಾಗಿ ಒಡ್ಡುವುದೇ ? ಆ ಲಲಿತಾಂಗಿಗೆ ಇಂತಹ ಸ್ಥಿತಿ ಬರಬೇಕೇ ? ನಮಗೆ ಈಗಾಗಲೇ ಆಗಿರುವ ಭಂಗ ಸಾಲದೇ ? ನನ್ನ ತೋಳುಗಳನ್ನೇ ಸುಟ್ಟುಕೊಂಡುಬಿಡುತ್ತೇನೆ.
ಪದಾರ್ಥ (ಕ.ಗ.ಪ)
ಅಸು-ಪ್ರಾಣ, ಖೋಡಿ-ಸಂಕಟ, ಕಾಕಬಳಸು-ಕೆಟ್ಟದ್ದನ್ನು ಯೋಚಿಸು
ಮೂಲ ...{Loading}...
ಹಿಂಗಿ ಹೋಗಲಿ ತನುವನಸು ಸ
ಪ್ತಾಂಗ ಬೇಯಲಿ ಖೋಡಿ ಮನದಲಿ
ಹಿಂಗುವದೆ ಹರಹರ ಧನಂಜಯ ಕಾಕ ಬಳಸಿದೆಲ
ಅಂಗನೆಯ ಮೇಲೊಡ್ಡವೇ ಲಲಿ
ತಾಂಗಿಗೀ ವಿಧಿಯೇಕೆ ನಮಗೀ
ಭಂಗ ಸಾಲದೆ ಸುಡುವೆನಾದೊಡೆ ತನ್ನ ತೋಳುಗಳ ॥90॥
೦೯೧ ಈಯವಸ್ಥೆಗೆ ತನ್ದ ...{Loading}...
ಈಯವಸ್ಥೆಗೆ ತಂದ ಕೌರವ
ನಾಯಿಗಳ ನಿಟ್ಟೆಲುವ ಮುರಿದು ನ
ವಾಯಿಯಲಿ ಘಟ್ಟಿಸದೆ ಕೊಬ್ಬಿದ ತನ್ನ ತೋಳುಗಳ
ವಾಯುಸಖನಲಿ ಸುಡುವೆನೀಗಳೆ
ಬೀಯವಾಗಲಿ ದೇಹವಾಚಂ
ದ್ರಾಯತವೆ ಎಂದೊಡನೊಡನೆ ಮಿಡುಕಿದನು ಕಲಿಭೀಮ ॥91॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಮ್ಮನ್ನು ಈ ಅವಸ್ಥೆಗೆ ತಂದ ಕೌರವ ನಾಯಿಗಳ ಬೆನ್ನೆಲುಬನ್ನು ಮುರಿದು ಅವರನ್ನು ಚೆನ್ನಾಗಿ ಬಡಿದು ಹಾಕಲಾಗದಂತೆ ಕೊಬ್ಬಿರುವ ಈ ತೋಳುಗಳನ್ನು ಬೆಂಕಿಯಲ್ಲಿ ಸುಟ್ಟುಬಿಡುತ್ತೇನೆ. ನನ್ನ ದೇಹ ನಾಶವಾಗಲಿ. ಇದೇನು ಆಚಂದ್ರಾರ್ಕವಾಗಿ ಇರುವಂತಹುದೇ ?” ಎಂದು ದುಃಖದಿಂದ ಸಂಕಟಪಟ್ಟ.
ಪದಾರ್ಥ (ಕ.ಗ.ಪ)
ನಿಟ್ಟೆಲು-ಬೆನ್ನುಮೂಳೆ, ವಾಯುಸಖ-ಅಗ್ನಿ, ಬೀಯವಾಗಲಿ-ಹೊರಟುಹೋಗಲಿ, ಆಚಂದ್ರಾಯತ-ಚಂದ್ರನಿರುವವರೆಗೆ
ಮೂಲ ...{Loading}...
ಈಯವಸ್ಥೆಗೆ ತಂದ ಕೌರವ
ನಾಯಿಗಳ ನಿಟ್ಟೆಲುವ ಮುರಿದು ನ
ವಾಯಿಯಲಿ ಘಟ್ಟಿಸದೆ ಕೊಬ್ಬಿದ ತನ್ನ ತೋಳುಗಳ
ವಾಯುಸಖನಲಿ ಸುಡುವೆನೀಗಳೆ
ಬೀಯವಾಗಲಿ ದೇಹವಾಚಂ
ದ್ರಾಯತವೆ ಎಂದೊಡನೊಡನೆ ಮಿಡುಕಿದನು ಕಲಿಭೀಮ ॥91॥
೦೯೨ ಅಕಟ ಧರ್ಮಜ ...{Loading}...
ಅಕಟ ಧರ್ಮಜ ಭೀಮ ಫಲುಗುಣ
ನಕುಲ ಸಹದೇವಾದ್ಯರಿರ ಬಾ
ಲಕಿಯನೊಪ್ಪಿಸಿ ಕೊಟ್ಟಿರೇ ಮೃತ್ಯುವಿನ ತಾಳಿಗೆಗೆ
ವಿಕಳರಾದಿರೆ ನಿಲ್ಲಿ ನೀವೀ
ಗಕುಟಿಲರಲಾ ಭೀಷ್ಮ ಗುರು ಬಾ
ಹ್ಲಿಕ ಕೃಪಾದಿಗಳುತ್ತರವ ಕೊಡಿಯೆಂದಳಬುಜಾಕ್ಷಿ ॥92॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿಗೆ ಇತ್ತ ತಡೆಯಲಾಗದಷ್ಟು ಪರಿತಾಪವುಂಟಾಯಿತು. ತನ್ನ ನೆರವಿಗೆ ಬರುವವರಾರೂ ಇಲ್ಲ. “ಅಕಟಾ ! ಧರ್ಮಜ, ಭೀಮ ಫಲುಗುಣ ನಕುಲಸಹದೇವಾದಿಗಳೇ, ಈ ಬಾಲಕಿಯನ್ನು ಮೃತ್ಯುವಿನ ಗಂಟಲಿಗೆ ಒಪ್ಪಿಸಿಬಿಟ್ಟಿರಾ ? ನಿಮಗೆ ಬುದ್ಧಿ ಭ್ರಮಣೆಯಾಯಿತೇ? ನಿಲ್ಲಿ, ನೀವು ಮೋಸವರಿಯದವರಲ್ಲವೇ ? ಭೀಷ್ಮ, ಗುರು ದ್ರೋಣ, ಬಾಹ್ಲಿಕ, ಕೃಪಾದಿಗಳೆ ! ನನ್ನ ಪ್ರಶ್ನೆಗೆ ನೀವು ಉತ್ತರ ಕೊಡಿ.” ಎಂದಳು.
ಪದಾರ್ಥ (ಕ.ಗ.ಪ)
ಅಕುಟಿಲರು-ಮೋಸ ಅರಿಯದವರು
ಮೂಲ ...{Loading}...
ಅಕಟ ಧರ್ಮಜ ಭೀಮ ಫಲುಗುಣ
ನಕುಲ ಸಹದೇವಾದ್ಯರಿರ ಬಾ
ಲಕಿಯನೊಪ್ಪಿಸಿ ಕೊಟ್ಟಿರೇ ಮೃತ್ಯುವಿನ ತಾಳಿಗೆಗೆ
ವಿಕಳರಾದಿರೆ ನಿಲ್ಲಿ ನೀವೀ
ಗಕುಟಿಲರಲಾ ಭೀಷ್ಮ ಗುರು ಬಾ
ಹ್ಲಿಕ ಕೃಪಾದಿಗಳುತ್ತರವ ಕೊಡಿಯೆಂದಳಬುಜಾಕ್ಷಿ ॥92॥
೦೯೩ ಕಙ್ಗಳಿನ್ದನುಯೋಗ ನಿಜ ...{Loading}...
ಕಂಗಳಿಂದನುಯೋಗ ನಿಜ ಹ
ಸ್ತಾಂಗುಲಿಯೊಳುತ್ತರ ಲಸದ್ಭ್ರೂ
ಭಂಗದಲಿ ಸಂದೇಹ ಮುಖ ವಿಕೃತಿಯಲಿ ದುರ್ನೀತಿ
ಇಂಗಿತದಲಾಂಗಿಕದ ಭಾವಾ
ಭಂಗ ಪರಿಯನು ಯೋಗಯುಕ್ತ ನ
ಯಂಗಳಲಿ ತಿಳಿದುಸುರದಿರ್ದುದು ಸಭೆ ಸುಭೀತಿಯಲಿ ॥93॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಭೆಯಲ್ಲಿ ನಡೆದ ಸಂಗತಿಗಳನ್ನು ತಿಳಿಯದವರಾರೂ ಇಲ್ಲ. ಅವರ ಕಣ್ಣುಗಳಲ್ಲಿ ಪ್ರಶ್ನೆ ಕಾಣುತ್ತಿತ್ತು. ತಮ್ಮ ಕೈಬೆರಳುಗಳ ತುದಿಯಲ್ಲೇ ಉತ್ತರವಿತ್ತು. ಹುಬ್ಬು ಗಂಟಿನಲ್ಲಿ ಸಂದೇಹ ಕಾಣುತ್ತಿತ್ತು. ಮುಖವಿಕಾರದಲ್ಲಿ ದುರ್ನೀತಿ ಹೊಮ್ಮುತ್ತಿತ್ತು. ಇಂಗಿತದಲ್ಲಿ, ಅಂಗಚೇಷ್ಟೆಗಳಲ್ಲಿ, ಭಾವಭಂಗಿಗಳಲ್ಲಿ ಯೋಗಯುಕ್ತ ನಯಗಳಲ್ಲಿ ವಿಷಯವನ್ನು ಗ್ರಹಿಸಿದರೂ, ಕೌರವರ ಭೀತಿಯ ಕಾರಣದಿಂದ, ಸಭೆಯಲ್ಲಿದ್ದವರಾರೂ ಉಸಿರದೆ ಇದ್ದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಕಂಗಳಿಂದನುಯೋಗ ನಿಜ ಹ
ಸ್ತಾಂಗುಲಿಯೊಳುತ್ತರ ಲಸದ್ಭ್ರೂ
ಭಂಗದಲಿ ಸಂದೇಹ ಮುಖ ವಿಕೃತಿಯಲಿ ದುರ್ನೀತಿ
ಇಂಗಿತದಲಾಂಗಿಕದ ಭಾವಾ
ಭಂಗ ಪರಿಯನು ಯೋಗಯುಕ್ತ ನ
ಯಂಗಳಲಿ ತಿಳಿದುಸುರದಿರ್ದುದು ಸಭೆ ಸುಭೀತಿಯಲಿ ॥93॥
೦೯೪ ಅರಿದು ಮೌನವೊ ...{Loading}...
ಅರಿದು ಮೌನವೊ ಮೇಣು ಮಾನಿನಿ
ಯೊರಲುತಿರಲೆಂದಾದುಪೇಕ್ಷೆಯೊ
ಮುರಿದು ನುಡಿವುದಸಾಧ್ಯವೋ ಮೇಣಾವುದಿದರೊಳಗೆ
ಅರಿಯಿರೇ ಸಮವರ್ತಿದೂತನ
ಮುರುಕವನು ನೀವೇಕೆ ನಿಮ್ಮನು
ಮರೆದಿರೆಂದು ವಿಕರ್ಣ ಜರೆದನು ತತ್ಸಭಾಸದರ ॥94॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನ ಒಡಹುಟ್ಟಿನವನಾದರೂ ಸಭ್ಯನಾದ ವಿಕರ್ಣನಿಗೆ ಸಭೆಯ ಮೌನ ಅಸಹನೀಯವಾಯಿತು. ಅವನು ಸಭೆಯಲ್ಲಿದ್ದವರನ್ನು ಉದ್ದೇಶಿಸಿ “ಅರಿತಿದ್ದೂ ಮೌನವೋ, ಅಥವಾ ಮಾನಿನಿ ಒರಲುತ್ತಿರಲಿ ಎಂಬ ಉಪೇಕ್ಷೆಯೋ ? ಖಂಡಿಸಿ ಮಾತನಾಡುವುದಕ್ಕೆ ಅಸಾಧ್ಯವೋ ? ಇದರಲ್ಲಿ ಯಾವುದು ಸರಿ ? ಎಲ್ಲರನ್ನೂ ಸಮಾನವಾಗಿ ಕಾಣುವ ಯಮದೂತನ ನಿರ್ದಯೆಯನ್ನು ನೀವರಿಯರಾ ? ನೀವೇಕೆ ಮೈಮರೆತು ಕುಳಿತಿದ್ದೀರಿ ?” ಎಂದು ಜರೆದ.
ಪದಾರ್ಥ (ಕ.ಗ.ಪ)
ಮುರುಕವನು-ನಿರ್ದಯತೆ
ಸಮವರ್ತಿ - ಯಮ
ಮೂಲ ...{Loading}...
ಅರಿದು ಮೌನವೊ ಮೇಣು ಮಾನಿನಿ
ಯೊರಲುತಿರಲೆಂದಾದುಪೇಕ್ಷೆಯೊ
ಮುರಿದು ನುಡಿವುದಸಾಧ್ಯವೋ ಮೇಣಾವುದಿದರೊಳಗೆ
ಅರಿಯಿರೇ ಸಮವರ್ತಿದೂತನ
ಮುರುಕವನು ನೀವೇಕೆ ನಿಮ್ಮನು
ಮರೆದಿರೆಂದು ವಿಕರ್ಣ ಜರೆದನು ತತ್ಸಭಾಸದರ ॥94॥
೦೯೫ ಹುಸಿವಚನ ಪೌರುಷ್ಯ ...{Loading}...
ಹುಸಿವಚನ ಪೌರುಷ್ಯ ಲಲನಾ
ವಿಷಯ ಮೃಗತೃಷ್ಣಾ ಪಿಪಾಸಾ
ವ್ಯಸನಿ ಬಲ್ಲನೆ ಧರ್ಮತತ್ವರಹಸ್ಯನಿಶ್ಚಯವ
ಉಸುರಲಮ್ಮಿರೆ ವೈದಿಕದ ತನಿ
ರಸದ ಸವಿ ನಿಮಗಲ್ಲದಾರಿಗೆ
ಬಸಿದು ಬೀಳ್ತುದು ಭೀಷ್ಮಯೆಂದು ವಿಕರ್ಣ ಗರ್ಜಿಸಿದ ॥95॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಬರಿಯ ಮಾತಿನ ಪೌರಷವನ್ನು ಹೊಂದಿರುವವನು, ವಿಷಯಲಂಪಟನಾಗಿರುವವನಿಗೆ ಧರ್ಮ ತತ್ವದ ರಹಸ್ಯದ
ನಿರ್ಧಾರ ತಿಳಿಯುತ್ತದೆಯೇ ? ವೈದಿಕ ತತ್ತ್ವಗಳ ತನಿರಸದ ಸವಿ ನಿಮಗಲ್ಲದೆ ಯಾರಿಗೆ ಬಸಿದು ಬೀಳುತ್ತದೆ, ನೀವೂ ಮಾತನಾಡಲಾರಿರಾ ? ಎಂದು ಭೀಷ್ಮನನ್ನು ಕುರಿತು ವಿಕರ್ಣ ಗರ್ಜಿಸಿದ.
ಪದಾರ್ಥ (ಕ.ಗ.ಪ)
ಮೃಗತೃಷ್ಣಾ-ಬಿಸಿಲ್ಗುದುರೆಯನ್ನು ನೀರೆಂದು ಭ್ರಮಿಸಿ ಧಾವಿಸುವ ಜಿಂಕೆಯ ದಾಹ
ಪಿಪಾಸಾ-ದಾಹ
ಮೂಲ ...{Loading}...
ಹುಸಿವಚನ ಪೌರುಷ್ಯ ಲಲನಾ
ವಿಷಯ ಮೃಗತೃಷ್ಣಾ ಪಿಪಾಸಾ
ವ್ಯಸನಿ ಬಲ್ಲನೆ ಧರ್ಮತತ್ವರಹಸ್ಯನಿಶ್ಚಯವ
ಉಸುರಲಮ್ಮಿರೆ ವೈದಿಕದ ತನಿ
ರಸದ ಸವಿ ನಿಮಗಲ್ಲದಾರಿಗೆ
ಬಸಿದು ಬೀಳ್ತುದು ಭೀಷ್ಮಯೆಂದು ವಿಕರ್ಣ ಗರ್ಜಿಸಿದ ॥95॥
೦೯೬ ತನ್ನ ಸೋತಾಗಲೆ ...{Loading}...
ತನ್ನ ಸೋತಾಗಲೆ ಮಹೀಪತಿ
ಯನ್ಯನಾದನು ಸತಿಗೆ ತನ್ನಿಂ
ಮುನ್ನ ಸೋತರೆ ತನ್ನ ಧನವೈಸಲೆ ವಿಚಾರಿಸಲು
ಅನ್ಯನನ್ಯಳ ಸೋತ ಗಡ ತಾ
ತನ್ನ ಧನವೆಂದರಸ ಶಕುನಿಯ
ಬಿನ್ನಣಕೆ ಬೆಳ್ಳಾದನೆಂದು ವಿಕರ್ಣ ಖತಿಗೊಂಡ ॥96॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಯುಧಿಷ್ಠಿರ ತನ್ನನ್ನು ಸೋತುಕೊಂಡಾಗಲೇ ತಾನೆಂಬುದನ್ನು ಕಳೆದುಕೊಂಡು ಅನ್ಯನಾಗಿ ಬಿಟ್ಟ ಸತಿಗೆ. ಅವಳ ಮೇಲೆ ಇವನಿಗೆ
ಅಧಿಕಾರವೆಲ್ಲಿ ಬಂತು ? ತನ್ನನ್ನು ಸೋತುಕೊಳ್ಳುವುದಕ್ಕೆ ಮೊದಲೇ ಆಗಿದ್ದರೆ ಅವಳು ತನ್ನ ಧನವಾಗಿರುತ್ತಿದ್ದಳು. ಈಗ ಅನ್ಯನು ಅನ್ಯಳನ್ನು ತನ್ನವಳೆಂದು ಸೋತಂತಾಯಿಲ್ಲವೇ ? ಶಕುನಿಯ ಬಿನ್ನಾಣಕ್ಕೆ ಯುಧಿಷ್ಠಿರ ಪೆಚ್ಚಾಗಿಬಿಟ್ಟ” ಎಂದು ಕೋಪಗೊಂಡ.
ಪದಾರ್ಥ (ಕ.ಗ.ಪ)
ಬಿನ್ನಣ-ಒಯ್ಯಾರ, ಬೆಳ್ಳಾಗು-ಪೆಚ್ಚಾಗು
ಮೂಲ ...{Loading}...
ತನ್ನ ಸೋತಾಗಲೆ ಮಹೀಪತಿ
ಯನ್ಯನಾದನು ಸತಿಗೆ ತನ್ನಿಂ
ಮುನ್ನ ಸೋತರೆ ತನ್ನ ಧನವೈಸಲೆ ವಿಚಾರಿಸಲು
ಅನ್ಯನನ್ಯಳ ಸೋತ ಗಡ ತಾ
ತನ್ನ ಧನವೆಂದರಸ ಶಕುನಿಯ
ಬಿನ್ನಣಕೆ ಬೆಳ್ಳಾದನೆಂದು ವಿಕರ್ಣ ಖತಿಗೊಂಡ ॥96॥
೦೯೭ ಫಡ ವಿಕಾರವೆ ...{Loading}...
ಫಡ ವಿಕಾರವೆ ನಮ್ಮೊಡನೆ ಬಾ
ಯ್ಬಡಿಕತನವೇ ಕುರು ಮಹೀಪತಿ
ಯೊಡನೆ ಹುಟ್ಟಿದೆಯಾದ ಕಾರಣ ಬಿಟ್ಟೆವೀಸರಲಿ
ನುಡಿದರೇ ಭೀಷ್ಮಾದಿಗಳು ನೀ
ನೊಡಬಡಿಸಲೆಂತರಿವೆ ಧರ್ಮದ
ಕಡೆ ಮೊದಲ ಕೈವಾರ ನಿನಗೇಕೆಂದನಾ ಕರ್ಣ ॥97॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಫಡ ವಿಕಾರವೇ ! ನಮ್ಮೊಡನೆಯೇ ಬಾಯಿ ಬಡಿಯುವುದೇ ? ಕುರುಮಹೀಪತಿಯ ಒಡಹುಟ್ಟಿದವನಾದ ಕಾರಣ ಇಷ್ಟಕ್ಕೇ ಬಿಟ್ಟಿದ್ದೇವೆ. ಭೀಷ್ಮಾದಿಗಳೇ ಮಾತನಾಡಲಿಲ್ಲ. ನೀನು ಹೇಗೆ ಒಡಂಬಡಿಸುವೆ ? ಧರ್ಮದ ವಿಸ್ತಾರದ ವಿಷಯ ನಿನಗೇಕೆ” ಎಂದ ಕರ್ಣ
ಪದಾರ್ಥ (ಕ.ಗ.ಪ)
ಕೈವಾರ-ಕೊಂಡಾಟ
ಮೂಲ ...{Loading}...
ಫಡ ವಿಕಾರವೆ ನಮ್ಮೊಡನೆ ಬಾ
ಯ್ಬಡಿಕತನವೇ ಕುರು ಮಹೀಪತಿ
ಯೊಡನೆ ಹುಟ್ಟಿದೆಯಾದ ಕಾರಣ ಬಿಟ್ಟೆವೀಸರಲಿ
ನುಡಿದರೇ ಭೀಷ್ಮಾದಿಗಳು ನೀ
ನೊಡಬಡಿಸಲೆಂತರಿವೆ ಧರ್ಮದ
ಕಡೆ ಮೊದಲ ಕೈವಾರ ನಿನಗೇಕೆಂದನಾ ಕರ್ಣ ॥97॥
೦೯೮ ಏಕಪತಿ ಬಹುಸತಿಯರೆಮ್ಬುದು ...{Loading}...
ಏಕಪತಿ ಬಹುಸತಿಯರೆಂಬುದು
ಲೋಕ ಪದ್ಧತಿಯಾದುದದು ತಾ
ನೇಕಸತಿ ಬಹುಪತಿಗಳಿದು ವೈದಿಕ ವಿರುದ್ಧವಲೆ
ಲೌಕಿಕವ್ಯವಹಿತದ ಕರ್ಮವ
ನೀ ಕುಮಾರ್ಗಿಗಳಲ್ಲಿ ಕಂಡೆವು
ನೀ ಕುರುವ್ರಜದೊಳಗೆ ಜನಿಸೆ ವಿಕರ್ಣ ಹೋಗೆಂದ ॥98॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣ ಮತ್ತೆ ಮುಂದುವರಿಸಿದ. “ಏಕಪತಿ ಬಹುಸತಿಯರೆಂಬುದು ಲೋಕದ ಪದ್ಧತಿ ಏಕ ಸತಿ ಬಹುಪತಿಗಳೆಂಬುದು ವೈದಿಕ ವಿರುದ್ಧವಾದುದು. ಲೌಕಿಕವಾಗಿ ವ್ಯವಹಾರದಲ್ಲಿಲ್ಲದ ಕರ್ಮವನ್ನು ಈ ಕುಮಾರ್ಗಿಗಳಲ್ಲಿ ಕಂಡೆವು” ನೀನು ಕೌರವರ ನಡುವೆ ಹುಟ್ಟಿದವನೇ ಅಲ್ಲ ವಿಕರ್ಣ ಹೋಗು” ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಏಕಪತಿ ಬಹುಸತಿಯರೆಂಬುದು
ಲೋಕ ಪದ್ಧತಿಯಾದುದದು ತಾ
ನೇಕಸತಿ ಬಹುಪತಿಗಳಿದು ವೈದಿಕ ವಿರುದ್ಧವಲೆ
ಲೌಕಿಕವ್ಯವಹಿತದ ಕರ್ಮವ
ನೀ ಕುಮಾರ್ಗಿಗಳಲ್ಲಿ ಕಂಡೆವು
ನೀ ಕುರುವ್ರಜದೊಳಗೆ ಜನಿಸೆ ವಿಕರ್ಣ ಹೋಗೆಂದ ॥98॥
೦೯೯ ಅಹುದು ಕರ್ಣನ ...{Loading}...
ಅಹುದು ಕರ್ಣನ ನುಡಿ ವಿಕರ್ಣನು
ಬಹುವಚನ ಪಂಡಿತನು ಬಾಹಿರ
ನಹುದಲೇ ಕುರುರಾಜ ವಂಶದೊಳುದಿಸಿ ಫಲವೇನು
ಅಹಿತಹಿತ ವಿಜ್ಞಾನಿಯಲ್ಲದ
ಬೃಹದುದರ ಕಿಂಕರನ ನುಡಿ ಕಿಂ
ಗಹನವೇ ಕಲಿಕರ್ಣಯೆಂದನು ನಗುತ ಕುರುರಾಯ ॥99॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕರ್ಣ ಹೇಳಿದ ಮಾತು ನಿಜ. ಈ ವಿಕರ್ಣ ಬಹುವಚನ ಪಂಡಿತ ! ಅತಿಯಾಗಿ ಮಾತನಾಡುತ್ತಿದ್ದಾನೆ ! ಇವನು ಹೊರಗಿನವನೇ! ಕುರು ರಾಜ ವಂಶದಲ್ಲಿ ಹುಟ್ಟಿ ಪ್ರಯೋಜನವೇನು ? ಯಾವುದು ಅಹಿತ ಯಾವುದು ಹಿತ ಎಂಬುದನ್ನು
ಸರಿಯಾಗಿ ತಿಳಿದವನೇ ಅಲ್ಲ. ತನ್ನ ದೊಡ್ಡ ಹೊಟ್ಟೆಯನ್ನು ಬೆಳೆಸಿಕೊಳ್ಳುವುದರಲ್ಲಿ ಒಳ್ಳೆಯ ಸೇವಕ. ಅವನ ಮಾತು, ಗಹನವೇ, ಕಲಿ ಕರ್ಣ?” ಎಂದು ನಗುತ್ತಾ ಕುರುರಾಜ ಕರ್ಣನನ್ನು ಬೆಂಬಲಿಸಿದ.
ಪದಾರ್ಥ (ಕ.ಗ.ಪ)
ಕಿಂಗಹನವೇ-ಏನು ಗಹನವೇ?
ಮೂಲ ...{Loading}...
ಅಹುದು ಕರ್ಣನ ನುಡಿ ವಿಕರ್ಣನು
ಬಹುವಚನ ಪಂಡಿತನು ಬಾಹಿರ
ನಹುದಲೇ ಕುರುರಾಜ ವಂಶದೊಳುದಿಸಿ ಫಲವೇನು
ಅಹಿತಹಿತ ವಿಜ್ಞಾನಿಯಲ್ಲದ
ಬೃಹದುದರ ಕಿಂಕರನ ನುಡಿ ಕಿಂ
ಗಹನವೇ ಕಲಿಕರ್ಣಯೆಂದನು ನಗುತ ಕುರುರಾಯ ॥99॥
೧೦೦ ಹಾರ ಪದಕ ...{Loading}...
ಹಾರ ಪದಕ ಕಿರೀಟ ಮಣಿ ಕೇ
ಯೂರ ಕರ್ಣಾಭರಣವೆಂಬಿವು
ಭಾರವಲ್ಲಾ ತೆಗೆಯ ಹೇಳ್ ದಾಕ್ಷಿಣ್ಯವೇನಿದಕೆ
ನಾರಿಗೀ ವಸ್ತ್ರಾಭರಣ ಶೃಂ
ಗಾರವೇಕಿನ್ನಿವನು ತೆಗೆ ಕೈ
ವಾರವಿದಕೇಕೆಂದು ದುಶ್ಶಾಸನಗೆ ನೇಮಿಸಿದ ॥100॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವರಿಗೆ ಹಾರ ಕಿರೀಟ ಮಣಿ ಕೇಯೂರ ಕರ್ಣಾಭರಣ ಇವೇ ಮೊದಲಾದ ಒಡವೆಗಳು ಭಾರವಲ್ಲವೇ ? ತೆಗೆದು
ಹಾಕುವುದಕ್ಕೆ ಹೇಳು. ಇದರಲ್ಲಿ ದಾಕ್ಷಿಣ್ಯವೇನು ? ಈ ಹೆಂಗಸಿಗೆ ಇನ್ನು ಈ ವಸ್ತ್ರಾಭರಣ ಶೃಂಗಾರವೇಕೆ ? ತೆಗೆ, ಇದಕ್ಕೇಕೆ ಹೆಚ್ಚಿಗೆ ವಿಚಾರದ್ದೇನಿದೆ ?” ಎಂದು ಕುರುರಾಜ ದುಶ್ಶಾಸನನಿಗೆ ನೇಮಿಸಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಹಾರ ಪದಕ ಕಿರೀಟ ಮಣಿ ಕೇ
ಯೂರ ಕರ್ಣಾಭರಣವೆಂಬಿವು
ಭಾರವಲ್ಲಾ ತೆಗೆಯ ಹೇಳ್ ದಾಕ್ಷಿಣ್ಯವೇನಿದಕೆ
ನಾರಿಗೀ ವಸ್ತ್ರಾಭರಣ ಶೃಂ
ಗಾರವೇಕಿನ್ನಿವನು ತೆಗೆ ಕೈ
ವಾರವಿದಕೇಕೆಂದು ದುಶ್ಶಾಸನಗೆ ನೇಮಿಸಿದ ॥100॥
೧೦೧ ತೆಗೆದು ಬಿಸುಟರು ...{Loading}...
ತೆಗೆದು ಬಿಸುಟರು ಹಾರ ಪದಕಾ
ದಿಗಳನಿವರೈವರು ದುಕೂಲವ
ನುಗಿದು ಹಾಯ್ಕಿದರಿದ್ದರಿವರೊಂದೊಂದು ವಸ್ತ್ರದಲಿ
ಹೊಗೆಮೊಗದ ಕಿಡಿಗಣ್ಣ ಕೆಮ್ಮೀ
ಸೆಗಳ ಗುಜುರಿನ ಜುಂಜು ಗೇಶದ
ವಿಗಡನೆದ್ದನು ಬಂದು ಹಿಡಿದನು ದ್ರೌಪದಿಯ ಸೆರಗ ॥101॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೂಡಲೇ ಪಾಂಡವರೈವರೂ ತಮ್ಮ ಪದಕಾದಿಗಳನ್ನೆಲ್ಲ ತೆಗೆದು ಎಸೆದರು. ರೇಶ್ಮೆಯ ವಸ್ತ್ರಗಳೆನ್ನೆಲ್ಲ ಕಿತ್ತು ಹಾಕಿ. ಎಲ್ಲರೂ ಒಂದೊಂದೇ ವಸ್ತ್ರದಲ್ಲಿ ಉಳಿದರು. ಹೊಗೆಯೇಳುತ್ತಿದ್ದ ಮುಖ, ಕಿಡಿ ಜಾರುತ್ತಿದ್ದ ಕಣ್ಣು, ಕೆಂಪು ಮೀಸೆ, ಜುಂಜು ಕೂದಲು ಇದ್ದ ಆ ದುಷ್ಟ ದುಶ್ಶಾಸನ ಎದ್ದು ಬಂದು ದ್ರೌಪದಿಯ ಸೆರಗನ್ನು ಹಿಡಿದ.
ಪದಾರ್ಥ (ಕ.ಗ.ಪ)
ಕೇಯೂರ-ತೋಳಿನ ಆಭರಣ, ದುಕೂಲ-ರೇಶ್ಮೆವಸ್ತ್ರ
ಮೂಲ ...{Loading}...
ತೆಗೆದು ಬಿಸುಟರು ಹಾರ ಪದಕಾ
ದಿಗಳನಿವರೈವರು ದುಕೂಲವ
ನುಗಿದು ಹಾಯ್ಕಿದರಿದ್ದರಿವರೊಂದೊಂದು ವಸ್ತ್ರದಲಿ
ಹೊಗೆಮೊಗದ ಕಿಡಿಗಣ್ಣ ಕೆಮ್ಮೀ
ಸೆಗಳ ಗುಜುರಿನ ಜುಂಜು ಗೇಶದ
ವಿಗಡನೆದ್ದನು ಬಂದು ಹಿಡಿದನು ದ್ರೌಪದಿಯ ಸೆರಗ ॥101॥
೧೦೨ ಮುರುಹಿದರು ಮುಸುಡಗಳ ...{Loading}...
ಮುರುಹಿದರು ಮುಸುಡಗಳ ಮಿಗೆ ನೀ
ರೊರೆವ ಕಂಗಳಲಕಟಕಟ ನಿ
ಷ್ಠುರವಿದೇಕಪಕೀರ್ತಿಯೇಕನುಚಿತವಿದೇಕೆನುತ
ಕರಗಿದರು ಕಂದಿದರು ಮಮ್ಮಲ
ಮರುಗಿದರು ಭೀಷ್ಮಾದಿಗಳು ಜ
ರ್ಝರಿತರಾದರು ತಡೆಯಲಾರದೆ ಖಳನ ದುಷ್ಕೃತವ ॥102॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ದುಷ್ಟನ ದುಷ್ಕೃತ್ಯವನ್ನು ತಡೆಯಲಾರದೆ ಭೀಷ್ಮನೇ ಮೊದಲಾದವರು ಮುಖವನ್ನು ತಿರುಗಿಸಿಕೊಂಡರು, ಕಣ್ಣಲ್ಲಿ ಗಳಗಳ ನೀರು ಸುರಿಯುತ್ತಿತ್ತು, ಅಕಟಕಟಾ, ಈ ನಿಷ್ಠುರವಾದ, ಅಪಕೀರ್ತಿಯ, ಅನುಚಿತವಾದ ಕೆಲಸವೇಕೆ ಎಂದು ಕರಗಿದರು, ಕಂದಿದರು. ಮಮ್ಮಲ ಮರುಗಿದರು, ಜರ್ಝರಿತರಾದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಮುರುಹಿದರು ಮುಸುಡಗಳ ಮಿಗೆ ನೀ
ರೊರೆವ ಕಂಗಳಲಕಟಕಟ ನಿ
ಷ್ಠುರವಿದೇಕಪಕೀರ್ತಿಯೇಕನುಚಿತವಿದೇಕೆನುತ
ಕರಗಿದರು ಕಂದಿದರು ಮಮ್ಮಲ
ಮರುಗಿದರು ಭೀಷ್ಮಾದಿಗಳು ಜ
ರ್ಝರಿತರಾದರು ತಡೆಯಲಾರದೆ ಖಳನ ದುಷ್ಕೃತವ ॥102॥
೧೦೩ ಅಳುಕಿದನೆ ಸುಡಲವನ ...{Loading}...
ಅಳುಕಿದನೆ ಸುಡಲವನ ಮೇಲುದ
ಸೆಳೆದನುನ್ನತ ಕುಚವ ನಳಿತೋ
ಳ್ಗಳಲಿ ಮುಚ್ಚಿದಳಬಲೆ ಬೆಚ್ಚಿದಳವನ ನಿಷ್ಠುರಕೆ
ಕಳವಳಿಸಿದಳು ಬೆರಲಿನಲಿ ದೃಗು
ಜಲವ ಬಿದುರುತ ನೋಡಿದಳು ನೃಪ
ತಿಲಕನನು ಭೀಮಾರ್ಜುನರ ಮಾದ್ರೀಕುಮಾರಕರ ॥103॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಳುಕಿದನೇ ಆ ದುಷ್ಟ ? ಸೆರಗನ್ನು ಹಿಡಿದು ಎಳೆದೇ ಬಿಟ್ಟ. ಪಾಪ ಆ ಅಬಲೆ ತನ್ನ ನಳಿತೋಳಿಗಳಿಂದ ಉನ್ನತ ಸ್ತನಗಳನ್ನು
ಮುಚ್ಚಿಕೊಂಡಳು. ಅವನ ನಿಷ್ಠುರನಾದ ಈ ಕಾರ್ಯಕ್ಕೆ ಬೆಚ್ಚಿದಳು. ಕಳವಳಗೊಂಡಳು, ಬೆರಳುಗಳಿಂದ ಕಣ್ಣೀರನ್ನು ಮಿಡಿಯುತ್ತ ಧರ್ಮರಾಜ, ಭೀಮಾರ್ಜುನ ನಕುಲ ಸಹದೇವರನ್ನು ನೋಡಿದಳು.
ಪದಾರ್ಥ (ಕ.ಗ.ಪ)
ಬಿದುರುತ-ಮಿಡಿಯುತ್ತ
ಮೂಲ ...{Loading}...
ಅಳುಕಿದನೆ ಸುಡಲವನ ಮೇಲುದ
ಸೆಳೆದನುನ್ನತ ಕುಚವ ನಳಿತೋ
ಳ್ಗಳಲಿ ಮುಚ್ಚಿದಳಬಲೆ ಬೆಚ್ಚಿದಳವನ ನಿಷ್ಠುರಕೆ
ಕಳವಳಿಸಿದಳು ಬೆರಲಿನಲಿ ದೃಗು
ಜಲವ ಬಿದುರುತ ನೋಡಿದಳು ನೃಪ
ತಿಲಕನನು ಭೀಮಾರ್ಜುನರ ಮಾದ್ರೀಕುಮಾರಕರ ॥103॥
೧೦೪ ಮುರಿದವನಿಬರ ಮೋರೆ ...{Loading}...
ಮುರಿದವನಿಬರ ಮೋರೆ ಮಹಿಪನ
ಕೊರಲ ಕೊಂಕಿನಲಿದ್ದರಾ ಸೋ
ದರರು ಸಾರವನಲ್ಲಿ ಕಾಣದೆ ಭೀಷ್ಮ ಗುರು ಕೃಪರ
ಮರಳಿ ನೋಡಿದಳಕಟ ಗಂಗಾ
ವರಕುಮಾರ ದ್ರೋಣ ಕೃಪರೀ
ಸೆರಗ ಬಿಡಿಸಿರೆ ತಂದೆಗಳಿರೆಂದೊರಲಿದಳು ತರಳೆ ॥104॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲ್ಲರೂ ನೋಡಲಾರದೆ ಮುಖ ತಿರುಗಿಸಿಬಿಟ್ಟರು ಧರ್ಮರಾಜನ ಕೊರಳಕೊಂಕಿನಲ್ಲೇ ತಮ್ಮಂದಿರೂ ಸೇರಿಬಿಟ್ಟರು. ಇನ್ನು ಅವರಿಂದ ಯಾವ ಸಾರವನ್ನೂ ಕಾಣಲಾಗದೆ ದ್ರೌಪದಿ ಭೀಷ್ಮ ದ್ರೋಣ ಕೃಪರ ಕಡೆಗೆ ತಿರುಗಿದಳು. “ಅಕಟ ! ಗಂಗಾಕುಮಾರ,
ದ್ರೋಣ ಕೃಪರಿರಾ ದುಷ್ಟನ ಕೈಯಿಂದ ಈ ಸೆರಗನ್ನು ಬಿಡಿಸಿರಿ ತಂದೆಗಳಿರಾ !” ಎಂದು ಒರಲಿದಳು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಮುರಿದವನಿಬರ ಮೋರೆ ಮಹಿಪನ
ಕೊರಲ ಕೊಂಕಿನಲಿದ್ದರಾ ಸೋ
ದರರು ಸಾರವನಲ್ಲಿ ಕಾಣದೆ ಭೀಷ್ಮ ಗುರು ಕೃಪರ
ಮರಳಿ ನೋಡಿದಳಕಟ ಗಂಗಾ
ವರಕುಮಾರ ದ್ರೋಣ ಕೃಪರೀ
ಸೆರಗ ಬಿಡಿಸಿರೆ ತಂದೆಗಳಿರೆಂದೊರಲಿದಳು ತರಳೆ ॥104॥
೧೦೫ ಕ್ರೂರನಿವ ದುಶ್ಶಾಸನನು ...{Loading}...
ಕ್ರೂರನಿವ ದುಶ್ಶಾಸನನು ಗಾಂ
ಧಾರಿ ಬಿಡಿಸೌ ಸೆರಗ ಸೊಸೆಯ
ಲ್ಲಾರು ಕೇಳೌ ತಂಗಿಯಲ್ಲಾ ನಿಮಗೆ ಭಾನುಮತಿ
ವೀರ ಸೈಂಧವನರಸಿ ರಾಜ ಕು
ಮಾರಿ ನೀ ನಾದಿನಿಯಲಾ ಖಳ
ರೌರವದದೊಳದ್ದುವನು ಬಿಡಿಸೆಂದೊರಲಿದಳು ತರಳೆ ॥105॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರಿಂದ ಪರಿಹಾರವನ್ನು ಕಾಣದೆ ಸಹಾಯಕ್ಕಾಗಿ ಸ್ತ್ರೀಯರತ್ತ ತಿರುಗಿದಳು. “ಈ ದುಶ್ಶಾಸನನು ಕ್ರೂರಿ, ಗಾಂಧಾರಿ, ಸೆರಗನ್ನು ಬಿಡಿಸಮ್ಮಾ, ನಾನು ನಿಮಗೆ ಸೊಸೆಯಲ್ಲವೇ ? ಭಾನುಮತಿ, ಕೇಳು, ನಾನು ನಿನಗೆ ತಂಗಿಯಲ್ಲವೇ ? ವೀರ ಸೈಂಧವನ ಅರಸಿ, ರಾಜಕುಮಾರಿ, ನೀನು ನನಗೆ ನಾದಿನಿಯಲ್ಲವೇ ? ಈ ದುಷ್ಟ ನನ್ನನ್ನು ರೌರವ ನರಕದಲ್ಲಿ ಮುಳುಗಿಸುತ್ತಿದ್ದಾನೆ, ಅಯ್ಯೋ ಬಿಡಿಸಿರಿ ಎಂದು ಒರಲಿದಳು ತರಳೆ.
ಪದಾರ್ಥ (ಕ.ಗ.ಪ)
ರೌರವ-ಒಂದು ನರಕ
ಮೂಲ ...{Loading}...
ಕ್ರೂರನಿವ ದುಶ್ಶಾಸನನು ಗಾಂ
ಧಾರಿ ಬಿಡಿಸೌ ಸೆರಗ ಸೊಸೆಯ
ಲ್ಲಾರು ಕೇಳೌ ತಂಗಿಯಲ್ಲಾ ನಿಮಗೆ ಭಾನುಮತಿ
ವೀರ ಸೈಂಧವನರಸಿ ರಾಜ ಕು
ಮಾರಿ ನೀ ನಾದಿನಿಯಲಾ ಖಳ
ರೌರವದದೊಳದ್ದುವನು ಬಿಡಿಸೆಂದೊರಲಿದಳು ತರಳೆ ॥105॥
೧೦೬ ಎಲೆ ವಿಲಾಸಿನಿಯರಿರ ...{Loading}...
ಎಲೆ ವಿಲಾಸಿನಿಯರಿರ ಭೂಪನ
ತಿಳಿಹಿರೌ ತಾಯ್ಗಳಿರ ನೀವಿಂ
ದೆಲೆ ಪಸಾಯ್ತೆಯರಿರ ಸಹೋದರಿಯೆಂದು ಕೌರವನ
ತಿಳುಹಿರೌ ಶರಣಾಗತರ ತಾ
ನುಳುಹಿ ಕೊಂಬುದು ಧರ್ಮವಕಟಾ
ಕಲುಹೃದಯರೌ ನೀವೆನುತ ಹಲುಬಿದಳು ತರಳಾಕ್ಷಿ ॥106॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲೆ ವಿಲಾಸಿನಿಯರಾ, ನೀವು ಹೇಳಿರಿ, ತಾಯಿಗಳಿರಾ, ಪಸಾಯ್ತೆಯರಿರಾ, ನೀವಿಂದು ನನ್ನನ್ನು ನಿಮ್ಮ ಸಹೋದರಿ ಎಂದು ಭಾವಿಸಿ ಕೌರವನಿಗೆ ತಿಳಿಯ ಹೇಳಿರಿ. ಶರಣಾಗತರಾದವರನ್ನು ರಕ್ಷಿಸಿಕೊಳ್ಳುವುದು ಧರ್ಮ, ಅಕಟಾ, ನೀವೂ ಕಲ್ಲು
ಹೃದಯರಾಗಿಬಿಟ್ಟಿರಲ್ಲಾ ! ಎಂದು ಹಲುಬಿದಳು ತರಳಾಕ್ಷಿ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಎಲೆ ವಿಲಾಸಿನಿಯರಿರ ಭೂಪನ
ತಿಳಿಹಿರೌ ತಾಯ್ಗಳಿರ ನೀವಿಂ
ದೆಲೆ ಪಸಾಯ್ತೆಯರಿರ ಸಹೋದರಿಯೆಂದು ಕೌರವನ
ತಿಳುಹಿರೌ ಶರಣಾಗತರ ತಾ
ನುಳುಹಿ ಕೊಂಬುದು ಧರ್ಮವಕಟಾ
ಕಲುಹೃದಯರೌ ನೀವೆನುತ ಹಲುಬಿದಳು ತರಳಾಕ್ಷಿ ॥106॥
೧೦೭ ಧಾರುಣೀಪತಿಗಳಿರ ರಾಜ ...{Loading}...
ಧಾರುಣೀಪತಿಗಳಿರ ರಾಜ ಕು
ಮಾರರಿರ ಮಂತ್ರಿಗಳಿರಾ ಪರಿ
ವಾರಕಿದು ಪಂಥವೆ ವಿಚಾರಿಸಿ ನಿರಪರಾಧಿಯನು
ನಾರಿಯೊಬ್ಬಳನಕಟ ಸಭೆಯಲಿ
ಸೀರೆಯುಡೆಯುರ್ಚುವರು ಕೆಟ್ಟೆನು
ಕಾರಣಿಕರಿಲ್ಲಾ ಶಿವಾಯೆಂದೊರಲಿದಳು ತರಳೆ ॥107॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರಿಂದ ಯಾವ ಪ್ರಯೋಜನವನ್ನೂ ಕಾಣದೆ ರಾಜರುಗಳ ಕಡೆಗೆ ತಿರುಗಿ ರಾಜಕುಮಾರಿರಾ, ಮಂತ್ರಿಗಳಿರಾ, ರಾಜಪರಿವಾರದವರಿಗೆ ಇದು ಸರಿದಾರಿಯೇ ? ಯೋಚಿಸಿ ನೋಡಿ. ನಿರಪರಾಧಿಯಾದ ನಾರಿಯೊಬ್ಬಳ ಸೀರೆಯ ಉಡಿಯನ್ನು ತುಂಬಿದ ಸಭೆಯಲ್ಲಿ ಕೀಳುತ್ತಿದ್ದಾರೆ. ಅಯ್ಯೋ ಕೆಟ್ಟೆ. ವಿಮರ್ಶೆ ಮಾಡುವವರು ಯಾರೂ ನೆರವಿಗೆ ಬರುವವರು ಇಲ್ಲವಲ್ಲಾ.
ಶಿವಾ, ಎಂದು ಒರಲಿದಳು ತರಳೆ
ಪದಾರ್ಥ (ಕ.ಗ.ಪ)
ಕಾರಣಿಕ-ವಿಮರ್ಶಕ
ಪಾಠಾನ್ತರ (ಕ.ಗ.ಪ)
ಸೀರೆಯುಡಿಯುರ್ಚುವರು - ಸೀರೆಯುಡೆಯುರ್ಚುವರು
ಮೂಲ ...{Loading}...
ಧಾರುಣೀಪತಿಗಳಿರ ರಾಜ ಕು
ಮಾರರಿರ ಮಂತ್ರಿಗಳಿರಾ ಪರಿ
ವಾರಕಿದು ಪಂಥವೆ ವಿಚಾರಿಸಿ ನಿರಪರಾಧಿಯನು
ನಾರಿಯೊಬ್ಬಳನಕಟ ಸಭೆಯಲಿ
ಸೀರೆಯುಡೆಯುರ್ಚುವರು ಕೆಟ್ಟೆನು
ಕಾರಣಿಕರಿಲ್ಲಾ ಶಿವಾಯೆಂದೊರಲಿದಳು ತರಳೆ ॥107॥
೧೦೮ ಪತಿಗಳೆನ್ನನು ಮಾರಿ ...{Loading}...
ಪತಿಗಳೆನ್ನನು ಮಾರಿ ಧರ್ಮ
ಸ್ಥಿತಿಯ ಕೊಂಡರು ಭೀಷ್ಮ ಮೊದಲಾ
ದತಿರಥರು ಪರಹಿತವ ಬಿಸುಟರು ವ್ಯರ್ಥಭೀತಿಯಲಿ
ಸುತನ ಸಿರಿ ಕಡುಸೊಗಸಲಾ ಭೂ
ಪತಿಗೆ ಗಾಂಧಾರಿಗೆ ಅನಾಥೆಗೆ
ಗತಿಯ ಕಾಣೆನು ಶಿವ ಶಿವಾಯೆಂದೊರಲಿದಳು ತರಳೆ ॥108॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನನ್ನ ಪತಿಗಳು ನನ್ನನ್ನು ಮಾರಿ ಧರ್ಮಸ್ಥಿತಿಯನ್ನು ಕೊಂಡರು. ಭೀಷ್ಮ ಮೊದಲಾದ ಅತಿರಥರು ವ್ಯರ್ಥವಾದ ಭಯದಿಂದ ಪರಹಿತವನ್ನು ತ್ಯಜಿಸಿದರು. ಧೃತರಾಷ್ಟ್ರ ಮಹಾರಾಜನಿಗೆ, ಗಾಂಧಾರಿಗೆ ತಮ್ಮ ಮಗ ಮಾಡುತ್ತಿರುವುದು ಸೊಗಸುತ್ತಿದೆಯಲ್ಲವೇ ? ಈ ಅನಾಥೆಗೆ ದಿಕ್ಕಿಲ್ಲದೆ ಹೋಯಿತು. ಶಿವ ಶಿವಾ ಎಂದೊರಲಿದಳು ತರಳೆ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಪತಿಗಳೆನ್ನನು ಮಾರಿ ಧರ್ಮ
ಸ್ಥಿತಿಯ ಕೊಂಡರು ಭೀಷ್ಮ ಮೊದಲಾ
ದತಿರಥರು ಪರಹಿತವ ಬಿಸುಟರು ವ್ಯರ್ಥಭೀತಿಯಲಿ
ಸುತನ ಸಿರಿ ಕಡುಸೊಗಸಲಾ ಭೂ
ಪತಿಗೆ ಗಾಂಧಾರಿಗೆ ಅನಾಥೆಗೆ
ಗತಿಯ ಕಾಣೆನು ಶಿವ ಶಿವಾಯೆಂದೊರಲಿದಳು ತರಳೆ ॥108॥
೧೦೯ ಮೈದೆಗೆದವೀ ಪ್ರಾಣವಾಯುಗ ...{Loading}...
ಮೈದೆಗೆದವೀ ಪ್ರಾಣವಾಯುಗ
ಳೈದು ಬಳಿಕೆನಗಾರು ಮರುಗುವ
ರೈದೆತನವೊಂದುಳಿಯಲುಳಿವುದು ಮಿಕ್ಕ ಮಹಿಮೆಗಳು
ಬೈದು ಫಲವಿನ್ನೇನು ನಿನ್ನಯ
ಮೈದುನರ ಮರುಳಾಟಕೆನ್ನನು
ಕಾಯ್ದುಕೊಳ್ಳೈ ಕೃಷ್ಣಯೊಂದೊರಲಿದಳು ಲಲಿತಾಂಗಿ ॥109॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನನ್ನ ಪಂಚಪ್ರಾಣಗಳೂ ಹೊರಟುಹೋಗುತ್ತಿವೆ. ಅನಂತರ ನನಗಾಗಿ ಮರುಗುವವರು ಯಾರಿದ್ದಾರೆ ? ಮುತ್ತೈದೆತನವೊಂದು ಉಳಿದರೆ ಗರತಿಗೆ ಉಳಿದೆಲ್ಲ ಮಹಿಮೆಗಳೂ ಉಳಿಯುತ್ತವೆ. ಇನ್ನು ಇವರನ್ನೆಲ್ಲ ಬೈದು ಫಲವೇನು ? ಅನ್ಯರ ಶರಣನ್ನು ಕಾಣದಾಗ ಕಡೆಗೆ ಕೃಷ್ಣನನ್ನು ಶರಣು ಹೊಕ್ಕಳು. ನಿನ್ನ ಮೈದುನರು ಮಾಡಿದ ಮೂರ್ಖತನಕ್ಕೆ ನೀನಾದರೂ ನನ್ನನ್ನು ಕಾಪಾಡು ಕೃಷ್ಣಾ ಎಂದು ಒರಲಿದಳು ಲಲಿತಾಂಗಿ.
ಪದಾರ್ಥ (ಕ.ಗ.ಪ)
ಐದೆತನ-ಮುತ್ತೈದೆತನ, ಸೌಮಂಗಲ್ಯ
ಮೂಲ ...{Loading}...
ಮೈದೆಗೆದವೀ ಪ್ರಾಣವಾಯುಗ
ಳೈದು ಬಳಿಕೆನಗಾರು ಮರುಗುವ
ರೈದೆತನವೊಂದುಳಿಯಲುಳಿವುದು ಮಿಕ್ಕ ಮಹಿಮೆಗಳು
ಬೈದು ಫಲವಿನ್ನೇನು ನಿನ್ನಯ
ಮೈದುನರ ಮರುಳಾಟಕೆನ್ನನು
ಕಾಯ್ದುಕೊಳ್ಳೈ ಕೃಷ್ಣಯೊಂದೊರಲಿದಳು ಲಲಿತಾಂಗಿ ॥109॥
೧೧೦ ಸುಲಿವರೂರೊಳಗುಟ್ಟ ಸೀರೆಯ ...{Loading}...
ಸುಲಿವರೂರೊಳಗುಟ್ಟ ಸೀರೆಯ
ನೆಲೆ ಮುರಾಂತಕ ರಕ್ಷಿಸೈ ಶಶಿ
ಕಳೆಗೆ ಸದರವೆ ರಾಹು ರಚಿಸಿದ ತುಟಿಯ ತೋಟಿಯದು
ಸೆಳೆವರಸುವನು ಖಳರು ಸೀರೆಯ
ಸುಲಿದರುಳಿಯೆನು ಕೃಷ್ಣ ಕರುಣಾ
ಜಲಧಿಯೇ ಕೈಗಾಯಬೇಕೆಂದೊರಲಿದಳು ತರಳೆ ॥110॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉಟ್ಟ ಸೀರೆಯನ್ನು ಎಲ್ಲರ ಎದುರಿನಲ್ಲಿಯೇ ಸುಲಿಯುತ್ತಿದ್ದಾರೆ. ಎಲೆ ಮುರಾಂತಕ, ರಕ್ಷಿಸಯ್ಯಾ. ರಾಹು ನುಂಗಲೆಂದು ಬಂದು
ಆಕ್ರಮಣ ಮಾಡಿದರೆ ಚಂದ್ರ ಕಳೆಗೆ ರಕ್ಷಿಸಿಕೊಳ್ಳಲು ಸುಲಭವೇ ? ಈ ದುಷ್ಟರು ನನ್ನ ಸೀರೆ ಸೆಳೆಯುತ್ತಿದ್ದಾರೆ, ನನ್ನ ಪ್ರಾಣವನ್ನೇ ಸೆಳೆಯುತ್ತಿದ್ದಾರೆ. ಕರುಣಾಸಾಗರ ಕೃಷ್ಣ, ನೀನೇ ಕಾಪಾಡಬೇಕು, ಎಂದು ಒರಲಿದಳು ತರಳೆ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಸುಲಿವರೂರೊಳಗುಟ್ಟ ಸೀರೆಯ
ನೆಲೆ ಮುರಾಂತಕ ರಕ್ಷಿಸೈ ಶಶಿ
ಕಳೆಗೆ ಸದರವೆ ರಾಹು ರಚಿಸಿದ ತುಟಿಯ ತೋಟಿಯದು
ಸೆಳೆವರಸುವನು ಖಳರು ಸೀರೆಯ
ಸುಲಿದರುಳಿಯೆನು ಕೃಷ್ಣ ಕರುಣಾ
ಜಲಧಿಯೇ ಕೈಗಾಯಬೇಕೆಂದೊರಲಿದಳು ತರಳೆ ॥110॥
೧೧೧ ಗತಿವಿಹೀನರಿಗಕಟ ನೀನೇ ...{Loading}...
ಗತಿವಿಹೀನರಿಗಕಟ ನೀನೇ
ಗತಿಯಲೈ ಗೋವಿಂದ ರಿಪು ಬಾ
ಧಿತರಿಗಬಲರಿಗಾರ್ತರಿಗೆ ನೀ ಪರಮ ಬಂಧುವಲ
ಸತಿ ಪಶು ದ್ವಿಜ ಬಾಧೆಯಲಿ ಜೀ
ವಿತವ ತೊರೆವರು ಗರುವರದು ಹಿಂ
ಗಿತೆ ಸುಯೋಧನ ಸಭೆಯೊಳೆಂದೊರಲಿದಳು ಲಲಿತಾಂಗಿ ॥111॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಗತಿಯಿಲ್ಲದವರಿಗೆ ಅಕಟಾ, ನೀನೇ ಗತಿಯಲ್ಲವೇ ಗೋವಿಂದ ! ಶತ್ರುವಿನ ಬಾಧೆಗೆ ಒಳಗಾದವರಿಗೆ, ಅಖಿಲರಿಗೆ ಆರ್ತರಿಗೆ ನೀನೇ ಪರಮ ಬಂಧುವಲ್ಲವೇ ? ಸತಿ ಪಶು ದ್ವಿಜರು ಬಾಧೆಗೆ ಒಳಗಾದಾಗ ಅವರ ರಕ್ಷಣೆಗಾಗಿ ತಮ್ಮ ಜೀವಿತವನ್ನಾದರೂ ತೊರೆಯುತ್ತಾರೆ ಉತ್ತಮರಾದವರು, ಈ ಸುಯೋಧನನ ಸಭೆಯಲ್ಲಿ ಅದೂ ಇಲ್ಲವಾಯಿತೆ ? ಎಂದು ಒರಲಿದಳು ಲಲಿತಾಂಗಿ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಗತಿವಿಹೀನರಿಗಕಟ ನೀನೇ
ಗತಿಯಲೈ ಗೋವಿಂದ ರಿಪು ಬಾ
ಧಿತರಿಗಬಲರಿಗಾರ್ತರಿಗೆ ನೀ ಪರಮ ಬಂಧುವಲ
ಸತಿ ಪಶು ದ್ವಿಜ ಬಾಧೆಯಲಿ ಜೀ
ವಿತವ ತೊರೆವರು ಗರುವರದು ಹಿಂ
ಗಿತೆ ಸುಯೋಧನ ಸಭೆಯೊಳೆಂದೊರಲಿದಳು ಲಲಿತಾಂಗಿ ॥111॥
೧೧೨ ಕಾಯಿದೈ ಕರುಣದಲಿ ...{Loading}...
ಕಾಯಿದೈ ಕರುಣದಲಿ ದಿವಿಜರ
ತಾಯ ಪರಿಭವವನು ಪಯೋಧಿಯ
ಹಾಯಿದಮರಾರಿಗಳ ಖಂಡಿಸಿ ತಲೆಯ ಚೆಂಡಾಡಿ
ಕಾಯಿದೈ ಜಾನಕಿಯನೆನ್ನನು
ಕಾಯಬೇಹುದು ಹೆಣ್ಣ ಹರಿಬಕೆ
ನೋಯಬಲ್ಲರೆ ಕೆಲಬರೆಂದೊರಲಿದಳು ತರಳಾಕ್ಷಿ ॥112॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹಿಂದೆ ನೀನು ದೇವತೆಗಳ ತಾಯಿ ಅದಿತಿಯನ್ನು ಕಾಪಾಡಿದೆ. ಸಮುದ್ರವನ್ನು ದಾಟಿ ರಾವಣನೇ ಮೊದಲಾದ ರಾಕ್ಷಸರನ್ನು
ಕೊಂದು ಅವರ ತಲೆಗಳನ್ನು ಚೆಂಡಾಡಿ ಜಾನಕಿಯನ್ನು ರಕ್ಷಿಸಿದೆ. ಈಗ ನೀನು ನನ್ನನ್ನು ಕಾಪಾಡಬೇಕು. ಹೆಣ್ಣಿನ ಕಷ್ಟಕ್ಕೆ ನೋಯಬೇಕಾದರೆ ಬೇರೆಯವರಿಂದ ಸಾಧ್ಯವೇ ? - ಎಂದೊರಲಿದಳು ತರಳಾಕ್ಷಿ.
ಪದಾರ್ಥ (ಕ.ಗ.ಪ)
ಪರಿಭವ-ಅಪಮಾನ, ಪಯೋಧಿ-ಸಮುದ್ರ, ಹರಿಬ-ಸಂಕಷ್ಟ
ಮೂಲ ...{Loading}...
ಕಾಯಿದೈ ಕರುಣದಲಿ ದಿವಿಜರ
ತಾಯ ಪರಿಭವವನು ಪಯೋಧಿಯ
ಹಾಯಿದಮರಾರಿಗಳ ಖಂಡಿಸಿ ತಲೆಯ ಚೆಂಡಾಡಿ
ಕಾಯಿದೈ ಜಾನಕಿಯನೆನ್ನನು
ಕಾಯಬೇಹುದು ಹೆಣ್ಣ ಹರಿಬಕೆ
ನೋಯಬಲ್ಲರೆ ಕೆಲಬರೆಂದೊರಲಿದಳು ತರಳಾಕ್ಷಿ ॥112॥
೧೧೩ ವೇದವಧುಗಳ ಕಾಯ್ದೆಲಾ ...{Loading}...
ವೇದವಧುಗಳ ಕಾಯ್ದೆಲಾ ತಮ
ಬಾಧೆಯಲಿ ಖಳನಿಂದ ಧರಣಿ ಮ
ಹೋದಧಿಯಲಕ್ಕಾಡಿದರೆ ದಾಡೆಯಲಿ ದಾನವನ
ಕೋದು ಹಾಕೀ ಭೂತ ಧಾತ್ರಿಯ
ಕಾದೆಲಾ ಕಾರುಣ್ಯಸಿಂಧುವೆ
ಮೇದಿನೀಪತಿ ಮನ್ನಿಸೆಂದೊರಲಿದಳು ತರಳಾಕ್ಷಿ ॥113॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ವೇದವಧುಗಳನ್ನು ಮತ್ಸ್ಯಾವತಾರ ಮಾಡಿ ಕಾಪಾಡಿದೆಯಲ್ಲವೇ ? ದುಷ್ಟನಾದ ಹಿರಣ್ಯಾಕ್ಷನಿಂದ ಧರಣಿ ಮಹಾಸಾಗರದಲ್ಲಿ
ಎಸೆಯಲ್ಪಟ್ಟು ಮುಳುಗಿದಾಗ ವರಾಹನಾಗಿ ಹೋಗಿ ಕೋರೆದಾಡೆಯಿಂದ ಆ ದಾನವನನ್ನು ತಿವಿದು ಕೊಂದು ಭೂತದಾತ್ರಿಯನ್ನು ರಕ್ಷಿಸಿ ತಂದೆಯಲ್ಲವೇ ? ಕಾರುಣ್ಯಸಿಂಧುವೆ, ಮೇದಿನಿಗೆ ಒಡೆಯನೆ, ನನ್ನನ್ನು ರಕ್ಷಿಸು ಎಂದು ಒರಲಿದಳು ತರಳಾಕ್ಷಿ.
ಪದಾರ್ಥ (ಕ.ಗ.ಪ)
ಮೂಲ ...{Loading}...
ವೇದವಧುಗಳ ಕಾಯ್ದೆಲಾ ತಮ
ಬಾಧೆಯಲಿ ಖಳನಿಂದ ಧರಣಿ ಮ
ಹೋದಧಿಯಲಕ್ಕಾಡಿದರೆ ದಾಡೆಯಲಿ ದಾನವನ
ಕೋದು ಹಾಕೀ ಭೂತ ಧಾತ್ರಿಯ
ಕಾದೆಲಾ ಕಾರುಣ್ಯಸಿಂಧುವೆ
ಮೇದಿನೀಪತಿ ಮನ್ನಿಸೆಂದೊರಲಿದಳು ತರಳಾಕ್ಷಿ ॥113॥
೧೧೪ ರಕ್ಷಿಸಿದೆ ಯೋಗಿಣಿಯ ...{Loading}...
ರಕ್ಷಿಸಿದೆ ಯೋಗಿಣಿಯ ಬೆದರುವ
ದಕ್ಷಸುತೆಯನು ಕೋಪಶಿಖಿ ತಿಮಿ
ರಾಕ್ಷನಾ ಜಮದಗ್ನಿ ಮುನಿಪನ ನುಡಿಯನನುಕರಿಸಿ
ರಕ್ಷಿಸಿದೆ ರೇಣುಕೆಯನೆನ್ನನು
ಪೇಕ್ಷಿಸದಿರೈ ಕರುಣದಲಿ ಕಮ
ಲಾಕ್ಷ ಬಿಡಿಸಾ ಸೆರಗನೆಂದೊರಲಿದಳು ಹರಿಣಾಕ್ಷಿ ॥114॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯೋಗಿಣಿಯನ್ನು ರಕ್ಷಿಸಿದೆ. ಬೆದರುವ ದಕ್ಷಸುತೆಯನ್ನು ರಕ್ಷಿಸಿದೆ. ಕೋಪಶಿಖಿ ತಿಮಿರಾಕ್ಷನಾದ ಆ ಜಮದಗ್ನಿ ಋಷಿಯ ಮಾತಿನಂತೆ ನಡೆದು ರೇಣುಕೆಯನ್ನು ಕಾಪಾಡಿದೆ. ನನ್ನನ್ನು ಉಪೇಕ್ಷೆ ಮಾಡಬೇಡಪ್ಪಾ. ಕರುಣೆಯಿಂದ ನನ್ನ ಸೆರಗನ್ನು ಈ ದುಷ್ಟನ ಕೈಯಿಂದ ಬಿಡಿಸು. ಎಂದು ಒರಲಿದಳು ಹರಿಣಾಕ್ಷಿ.
ಪದಾರ್ಥ (ಕ.ಗ.ಪ)
ಮೂಲ ...{Loading}...
ರಕ್ಷಿಸಿದೆ ಯೋಗಿಣಿಯ ಬೆದರುವ
ದಕ್ಷಸುತೆಯನು ಕೋಪಶಿಖಿ ತಿಮಿ
ರಾಕ್ಷನಾ ಜಮದಗ್ನಿ ಮುನಿಪನ ನುಡಿಯನನುಕರಿಸಿ
ರಕ್ಷಿಸಿದೆ ರೇಣುಕೆಯನೆನ್ನನು
ಪೇಕ್ಷಿಸದಿರೈ ಕರುಣದಲಿ ಕಮ
ಲಾಕ್ಷ ಬಿಡಿಸಾ ಸೆರಗನೆಂದೊರಲಿದಳು ಹರಿಣಾಕ್ಷಿ ॥114॥
೧೧೫ ದೇವಕೀದೇವಿಯರ ಸೆರೆಯನು ...{Loading}...
ದೇವಕೀದೇವಿಯರ ಸೆರೆಯನು
ದೇವ ಕೃಪೆಯಲಿ ಬಿಡಿಸಿದೈ ಕರು
ಣಾವಲಂಬದಿ ಕಳಚಿದೈ ಹದಿನಾರು ಸಾವಿರದ
ದೇವಕನ್ಯಾ ಬಂಧನವನಭಿ
ಭಾವಕರ ಕೌರವರ ಭಂಗಿಸಿ
ದೇವ ಬಿಡಿಸೈ ಸೆರಗನೆಂದೊರಲಿದಳು ಪಾಂಚಾಲೆ ॥115॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀನೇ ಕೃಪೆಯಿಂದ ದೇವಕಿದೇವಿಯ ಸೆರೆಯನ್ನು ಬಿಡಿಸಿದೆ. ಕರುಣಾವಲಂಬಿಯಾಗಿ ಹದಿನಾರು ಸಾವಿರ ದೇವಕನ್ಯೆಯರ ಬಂಧನವನ್ನು ಕಳಚಿದೆ. ನನ್ನನ್ನು ಅಪಮಾನಗೊಳಿಸುತ್ತಿರುವ ಈ ಕೌರವರನ್ನು ಭಂಗಿಸಿ, ದೇವ, ನನ್ನ ಸೆರಗನ್ನು ಬಿಡಿಸಯ್ಯ - ಎಂದು ಒರಲಿದಳು ಪಾಂಚಾಲೆ.
ಪದಾರ್ಥ (ಕ.ಗ.ಪ)
ಅಭಿಭಾವಕರು-ಅಪಮಾನಗೊಳಿಸಿದವರು
ಮೂಲ ...{Loading}...
ದೇವಕೀದೇವಿಯರ ಸೆರೆಯನು
ದೇವ ಕೃಪೆಯಲಿ ಬಿಡಿಸಿದೈ ಕರು
ಣಾವಲಂಬದಿ ಕಳಚಿದೈ ಹದಿನಾರು ಸಾವಿರದ
ದೇವಕನ್ಯಾ ಬಂಧನವನಭಿ
ಭಾವಕರ ಕೌರವರ ಭಂಗಿಸಿ
ದೇವ ಬಿಡಿಸೈ ಸೆರಗನೆಂದೊರಲಿದಳು ಪಾಂಚಾಲೆ ॥115॥
೧೧೬ ಶಿಶುವಧೆಗೆ ಸೀವರಿಸದಸುರನ ...{Loading}...
ಶಿಶುವಧೆಗೆ ಸೀವರಿಸದಸುರನ
ಬಸುರ ಹೂಮಾಲೆಯನು ನೀ ತುರು
ಬಿಸಿದೆಲಾ ನಖರಾಜಿಗಬಲನ ಕಾಯ್ದು ಕರುಣದಲಿ
ಶಿಶುವನಯ್ಯಂಗಿತ್ತು ಜಲಧಿಯ
ಮುಸುಕನುಗಿದತಿ ಕರುಣಿಯೇ ಹೆಂ
ಗುಸಿನ ಹರಿಬಕೆ ಕೃಪೆಯ ಮಾಡೆಂದೊರಲಿದಳು ತರಳೆ ॥116॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಶಿಶುವಧೆಗೆ ಅಂಜದಿದ್ದ ಆ ಅಸುರನ ಬಸಿರನ್ನು ಬಗೆದು ಅವನ ಕರುಳನ್ನು ಉಗುರುಗಳ ಸಾಲಿಗೆ ಮುಡಿಸಿದೆಯಲ್ಲವೇ ?
ಆ ಅಬಲನನ್ನು ಕರುಣೆಯಿಂದ ಕಾಪಾಡಿದೆ. ಶಿಶುವನ್ನು ತಂದೆಗೆ( ಸಾಂದೀಪನೀ ಮಹರ್ಷಿ) ಕೊಟ್ಟೆ. ಜಲಧಿಯ ಮುಸುಕನ್ನು ತೆಗೆದು ಹಾಕಿದೆ. ಹೀಗೆಲ್ಲ ಆರ್ತರನ್ನು ರಕ್ಷಿಸಿದ ಕರುಣೆಯೇ ಕಷ್ಟದಲ್ಲಿರುವ ಈ ಹೆಂಗಸಿಗೆ ಕೃಪೆತೋರು. ಎಂದೊರಲಿದಳು ತರಳೆ.
ಪದಾರ್ಥ (ಕ.ಗ.ಪ)
ಸೀವರಿಸದ-ಬೇಸರಗೊಳ್ಳದ
ಮೂಲ ...{Loading}...
ಶಿಶುವಧೆಗೆ ಸೀವರಿಸದಸುರನ
ಬಸುರ ಹೂಮಾಲೆಯನು ನೀ ತುರು
ಬಿಸಿದೆಲಾ ನಖರಾಜಿಗಬಲನ ಕಾಯ್ದು ಕರುಣದಲಿ
ಶಿಶುವನಯ್ಯಂಗಿತ್ತು ಜಲಧಿಯ
ಮುಸುಕನುಗಿದತಿ ಕರುಣಿಯೇ ಹೆಂ
ಗುಸಿನ ಹರಿಬಕೆ ಕೃಪೆಯ ಮಾಡೆಂದೊರಲಿದಳು ತರಳೆ ॥116॥
೧೧೭ ತುರುವ ನುಙ್ಗಿದ ...{Loading}...
ತುರುವ ನುಂಗಿದ ಫಣಿಯ ಗಂಟಲ
ಮುರಿದು ಕಾಯ್ದೈ ಗೋವುಗಳ ಗಿರಿ
ಮರೆಯಲಿಂದ್ರನ ಖಾತಿಗಳುಕದೆ ಕಾಯ್ದೆ ಗೋಕುಲವ
ಮೆರೆದೆಲಾ ಕೃಪೆಯಲಿ ಗಜೇಂದ್ರನ
ಮುರಿಯಲೀಯದೆ ಖಳನು ಸೋಕಿದ
ಸೆರಗ ಬಿಡಿಸೈ ಕೃಷ್ಣಯೆಂದಳು ಪಾಂಡವರ ರಾಣಿ ॥117॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದನಗಳನ್ನು ನುಂಗುತ್ತಿದ್ದ ಹಾವಿನ ಗಂಟಲನ್ನು ಮುರಿದು ಗೋವುಗಳನ್ನು ಕಾಯ್ದೆ. ಗಿರಿಯನ್ನು ಮರೆಯಾಗಿಟ್ಟುಕೊಂಡು ಇಂದ್ರನ ಕೋಪದಿಂದ ಗೋಕುಲವನ್ನು ರಕ್ಷಿಸಿದೆ. ಗಜೇಂದ್ರನು ನಾಶವಾಗದಂತೆ ಕೃಪೆಯಿಂದ ಅವನನ್ನು ಉಳಿಸಿದೆ. ಈ ದುಷ್ಟ
ಹಿಡಿದಿರುವ ಸೆರಗನ್ನು ಬಿಡಿಸಯ್ಯಾ ಕೃಷ್ಣ ಎಂದು ಬೇಡಿದಳು ಪಾಂಡವರ ರಾಣಿ.
ಪದಾರ್ಥ (ಕ.ಗ.ಪ)
ಮೂಲ ...{Loading}...
ತುರುವ ನುಂಗಿದ ಫಣಿಯ ಗಂಟಲ
ಮುರಿದು ಕಾಯ್ದೈ ಗೋವುಗಳ ಗಿರಿ
ಮರೆಯಲಿಂದ್ರನ ಖಾತಿಗಳುಕದೆ ಕಾಯ್ದೆ ಗೋಕುಲವ
ಮೆರೆದೆಲಾ ಕೃಪೆಯಲಿ ಗಜೇಂದ್ರನ
ಮುರಿಯಲೀಯದೆ ಖಳನು ಸೋಕಿದ
ಸೆರಗ ಬಿಡಿಸೈ ಕೃಷ್ಣಯೆಂದಳು ಪಾಂಡವರ ರಾಣಿ ॥117॥
೧೧೮ ಒದೆದೊಡೊಲಿದವರುಣ್ಟೆ ಬೈದೊಡೆ ...{Loading}...
ಒದೆದೊಡೊಲಿದವರುಂಟೆ ಬೈದೊಡೆ
ಪದವನಿತ್ತವರುಂಟೆ ಕರುಣಾ
ಸ್ಪದರ ನಾ ಕೇಳ್ದರಿಯೆನೇ ಕಮಲಾಸನಾದ್ಯರಲಿ
ಪದವ ಸೋಂಕಿದ ಮೂಹೊರಡು ತಿ
ದ್ದಿದುದು ಗಡ ಹೆಂಗುಸಿನ ಹೇರಾ
ಳದ ಕೃಪಾಳುವೆ ಕೃಷ್ಣ ಸಲಹೆಂದೊರಲಿದಳು ತರಳೆ ॥118॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಒದೆದರೆ ಒಲಿದವರಿದ್ದಾರೆಯೇ, ಬೈದರೆ ಪದವಿಯನ್ನಿತ್ತವರು ಇದ್ದಾರೆಯೇ ? ಬ್ರಹ್ಮನೇ ಮೊದಲಾದವರಲ್ಲಿ ಹಾಗೆ ಕರುಣಾಸ್ಪದರಾದವರನ್ನು ನಾ ಕಾಣೆ. ನಿನ್ನ ಪಾದಗಳನ್ನು ಸ್ಪರ್ಶಿಸಿದ ಹೆಂಗಸಿನ ಮೂರು ವಕ್ರತೆಗಳನ್ನೂ ತಿದ್ದಿ ನೇರವಾಗಿಸಿದೆಯಲ್ಲವೆ? ಹೆಂಗಸರನ್ನು ಕಂಡರೆ ಅತಿಶಯ ಕೃಪೆಯುಳ್ಳವನಾದ ಕೃಷ್ಣ, ನನ್ನನ್ನು ಸಲಹು ಎಂದೊರಲಿದಳು ತರಳೆ.
ಪದಾರ್ಥ (ಕ.ಗ.ಪ)
ಮೂಹೊರಡು-ಮೂರು ವಕ್ರತೆಗಳು
ಮೂಲ ...{Loading}...
ಒದೆದೊಡೊಲಿದವರುಂಟೆ ಬೈದೊಡೆ
ಪದವನಿತ್ತವರುಂಟೆ ಕರುಣಾ
ಸ್ಪದರ ನಾ ಕೇಳ್ದರಿಯೆನೇ ಕಮಲಾಸನಾದ್ಯರಲಿ
ಪದವ ಸೋಂಕಿದ ಮೂಹೊರಡು ತಿ
ದ್ದಿದುದು ಗಡ ಹೆಂಗುಸಿನ ಹೇರಾ
ಳದ ಕೃಪಾಳುವೆ ಕೃಷ್ಣ ಸಲಹೆಂದೊರಲಿದಳು ತರಳೆ ॥118॥
೧೧೯ ಸೊಕ್ಕಿದನ್ತಕದೂತರನು ಸದೆ ...{Loading}...
ಸೊಕ್ಕಿದಂತಕದೂತರನು ಸದೆ
ದೊಕ್ಕಲಿಕ್ಕಿಯಜಾಮಿಳನ ಹಿಂ
ದಿಕ್ಕಿ ಕೊಂಡೆಯಲೈ ದುರಾತ್ಮ ಕ್ಷತ್ರ ಬಂಧದಲಿ
ಸೊಕ್ಕಿದರು ಕೌರವರು ಖಳರಿಗೆ
ಸಿಕ್ಕಿದೆನು ನಿನಗಲ್ಲದಾರಿಗೆ
ಕಕ್ಕುಲಿತೆಬಡುವೆನು ಮುರಾಂತಕಯೆಂದಳಿಂದುಮುಖಿ ॥119॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸೊಕ್ಕಿದ ಯಮನ ದೂತರನ್ನು ಬಡಿದು ಹಾಕಿ ಅಜಾಮಿಳನನ್ನು ರಕ್ಷಿಸಿ ಬದುಕಿಸಿದೆಯಲ್ಲ್ಲವೇ ? ಈ ದುರಾತ್ಮರಾದ
ಕೌರವರು ಕ್ಷತ್ರಬಂಧದಲ್ಲಿ ಸೊಕ್ಕಿದ್ದಾರೆ. ಈ ದುಷ್ಟರ ಕೈಗೆ ಸಿಕ್ಕಿಹಾಕಿಕೊಂಡಿದ್ದೇನೆ. ನಿನಗಲ್ಲದೆ ಮತ್ತಾರಿಗೆ ಕಕ್ಕುಲಿತೆಯನ್ನು ತೋರಿಸಲಿ ? ಮುರಾಂತಕ, ಕಾಪಾಡು ಎಂದಳು ಇಂದುಮುಖಿ.
ಪದಾರ್ಥ (ಕ.ಗ.ಪ)
ಕಕ್ಕುಲಿತೆ-ವ್ಯಾಮೋಹ
ಮೂಲ ...{Loading}...
ಸೊಕ್ಕಿದಂತಕದೂತರನು ಸದೆ
ದೊಕ್ಕಲಿಕ್ಕಿಯಜಾಮಿಳನ ಹಿಂ
ದಿಕ್ಕಿ ಕೊಂಡೆಯಲೈ ದುರಾತ್ಮ ಕ್ಷತ್ರ ಬಂಧದಲಿ
ಸೊಕ್ಕಿದರು ಕೌರವರು ಖಳರಿಗೆ
ಸಿಕ್ಕಿದೆನು ನಿನಗಲ್ಲದಾರಿಗೆ
ಕಕ್ಕುಲಿತೆಬಡುವೆನು ಮುರಾಂತಕಯೆಂದಳಿಂದುಮುಖಿ ॥119॥
೧೨೦ ಚರಣ ಭಜಕರ ...{Loading}...
ಚರಣ ಭಜಕರ ಮಾನ ಹಾನಿಯ
ಹರಿಬವಾರದು ಕೃಷ್ಣ ನಾಮ
ಸ್ಮರಣಧನಿಕರಿಗುಂಟೆ ಘಲ್ಲಣೆ ಘೋರ ಪಾತಕದ
ಪರಮ ಭಕ್ತಕುಟುಂಬಕನು ನೀ
ಕರುಣಿಯಲ್ಲದೊಡೀ ಕುಟುಂಬಕೆ
ಶರಣದಾರೈ ಕೃಷ್ಣ ಸಲಹೆಂದೊರಲಿದಳು ತರಳೆ ॥120॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಿನ್ನ ಚರಣಗಳನ್ನು ಭಜಿಸುವವರ ಮಾನಹಾನಿಯ ಸಂದರ್ಭದಲ್ಲಿ ಅವರನ್ನು ರಕ್ಷಿಸುವ ಭಾರ ಯಾರದ್ದು ಕೃಷ್ಣ ? ನಿನ್ನ
ನಾಮಸ್ಮರಣೆಮಾಡುವಂತಹ ಸಂಪದ್ಯುಕ್ತರಿಗೆ ಘೋರಪಾಪದ ಕಷ್ಟಗಳು ಬಂದಾವೇ ? ನೀನು ಪರಮಭಕ್ತರ ಕುಟುಂಬಕ. ನೀನೇ
ಕರುಣೆ ತೋರಿಸದಿದ್ದರೆ ಕುಟುಂಬಕ್ಕೆ ಯಾರು ಗತಿ ? ಕೃಷ್ಣಾ, ಸಲಹು ಎಂದೊರಲಿದಳು ತರಳೆ.
ಪದಾರ್ಥ (ಕ.ಗ.ಪ)
ಘಲ್ಲಣೆ-ಕಷ್ಟ, ದುಃಖ
ಮೂಲ ...{Loading}...
ಚರಣ ಭಜಕರ ಮಾನ ಹಾನಿಯ
ಹರಿಬವಾರದು ಕೃಷ್ಣ ನಾಮ
ಸ್ಮರಣಧನಿಕರಿಗುಂಟೆ ಘಲ್ಲಣೆ ಘೋರ ಪಾತಕದ
ಪರಮ ಭಕ್ತಕುಟುಂಬಕನು ನೀ
ಕರುಣಿಯಲ್ಲದೊಡೀ ಕುಟುಂಬಕೆ
ಶರಣದಾರೈ ಕೃಷ್ಣ ಸಲಹೆಂದೊರಲಿದಳು ತರಳೆ ॥120॥
೧೨೧ ನಾಥರಿಲ್ಲದ ಶಿಶುಗಳಿಗೆ ...{Loading}...
ನಾಥರಿಲ್ಲದ ಶಿಶುಗಳಿಗೆ ನೀ
ನಾಥನೈ ಗೋವಿಂದ ಸಲಹೈ
ಯೂಥಪತಿಗಳು ಬಿಸುಟ ಕರಿಣಿಗೆ ಕೃಪೆಯ ನೀ ಮಾಡೈ
ನಾಥರಿಲ್ಲೆನಗಿಂದು ದೀನಾ
ನಾಥ ಬಾಂಧವ ನೀನಲೈ ವರ
ಮೈಥಿಲೀಪತಿ ಮನ್ನಿಸೆಂದೊರಲಿದಳು ಮೃಗನಯನೆ ॥121॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಾಥರಿಲ್ಲದ ಶಿಶುಗಳಿಗೆ ನೀನೇ ನಾಥನಯ್ಯಾ ಗೋವಿಂದ ಕಾಪಾಡಯ್ಯ. ಯೂಥಪತಿಗಳು ಬಿಸಾಡಿದ ಹೆಣ್ಣಾನೆ ನಾನು. ನನಗೆ ಕೃಪೆ ತೋರಿಸು. ಇಂದು ನನಗೆ ನಾಥರಿಲ್ಲ. ನೀನು ದೀನರಿಗೆ ಅನಾಥರಿಗೆ ಬಂಧುವಲ್ಲವೆ ? ನೀನು ವರಮೈಥಿಲೀಪತಿ, ರಕ್ಷಿಸು ನನ್ನನ್ನು ಎಂದು ಒರಲಿದಳು ಮೃಗನಯನೆ.
ಪದಾರ್ಥ (ಕ.ಗ.ಪ)
ಮೂಲ ...{Loading}...
ನಾಥರಿಲ್ಲದ ಶಿಶುಗಳಿಗೆ ನೀ
ನಾಥನೈ ಗೋವಿಂದ ಸಲಹೈ
ಯೂಥಪತಿಗಳು ಬಿಸುಟ ಕರಿಣಿಗೆ ಕೃಪೆಯ ನೀ ಮಾಡೈ
ನಾಥರಿಲ್ಲೆನಗಿಂದು ದೀನಾ
ನಾಥ ಬಾಂಧವ ನೀನಲೈ ವರ
ಮೈಥಿಲೀಪತಿ ಮನ್ನಿಸೆಂದೊರಲಿದಳು ಮೃಗನಯನೆ ॥121॥
೧೨೨ ಹೊಲಬುದಪ್ಪಿದ ಹುಲ್ಲೆ ...{Loading}...
ಹೊಲಬುದಪ್ಪಿದ ಹುಲ್ಲೆ ಬೇಡನ
ಬಲೆಗೆ ಬಿದ್ದಂತಾದೆನೈ ಬಲು
ಹಳುವದಲಿ ತಾಯ್ಬಿಸುಟ ಶಿಶು ತಾನಾದೆನೆಲೆ ಹರಿಯೆ
ಕೊಲುವವೈ ಕಾಗೆಗಳಕಟ ಕೋ
ಗಿಲೆಯ ಮರಿಯನು ಕೃಷ್ಣ ಕರುಣಾ
ಜಲಧಿಯೇ ಕೈಗಾಯಬೇಕೆಂದೊರಲಿದಳು ತರಳೆ ॥122॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದಾರಿತಪ್ಪಿದ ಹುಲ್ಲೆ ಬೇಡನ ಬಲೆಗೆ ಸಿಕ್ಕಿಹಾಕಿಕೊಂಡಂತೆ ಆಗಿದ್ದೇನೆ. ದಟ್ಟ ಅರಣ್ಯದಲ್ಲಿ ತಾಯಿ ಬಿಸಾಡಿದ ಶಿಶುವಿನಂತೆ
ಆಗಿದ್ದೇನೆ. ಎಲೆ ಹರಿಯೆ, ಕಾಗೆಗಳು, ಅಯ್ಯೋ, ಕೋಗಿಲೆಯ ಮರಿಯನ್ನು ಕೊಲ್ಲುತ್ತಿರುವುವು, ಕೃಷ್ಣ, ಕರುಣಾಜಲಧಿ, ಕಾಪಾಡಬೇಕು ಎಂದು ಒರಲಿದಳು ತರಳೆ.
ಪದಾರ್ಥ (ಕ.ಗ.ಪ)
ಹೊಲಬು-ದಾರಿ, ಹಳುವ-ಕಾಡು
ಮೂಲ ...{Loading}...
ಹೊಲಬುದಪ್ಪಿದ ಹುಲ್ಲೆ ಬೇಡನ
ಬಲೆಗೆ ಬಿದ್ದಂತಾದೆನೈ ಬಲು
ಹಳುವದಲಿ ತಾಯ್ಬಿಸುಟ ಶಿಶು ತಾನಾದೆನೆಲೆ ಹರಿಯೆ
ಕೊಲುವವೈ ಕಾಗೆಗಳಕಟ ಕೋ
ಗಿಲೆಯ ಮರಿಯನು ಕೃಷ್ಣ ಕರುಣಾ
ಜಲಧಿಯೇ ಕೈಗಾಯಬೇಕೆಂದೊರಲಿದಳು ತರಳೆ ॥122॥
೧೨೩ ಅಕಟ ಹಂಸೆಯ ...{Loading}...
ಅಕಟ ಹಂಸೆಯ ಮರಿಯ ಮೋದುವ
ಬಕನ ತೆಗೆಸೈ ಗಿಡುಗನೆರಗುವ
ಶುಕನ ಶೋಕವ ಮಾಣಿಸೈ ವಾಣಿಯವೆ ಭಕುತರಲಿ
ಪ್ರಕಟಭೂತಗ್ರಹದ ಬಾಧೆಗೆ
ವಿಕಳೆ ನಿನ್ನಯ ಬಿರುದ ತಡೆದೆನು
ಭಕುತವತ್ಸಲನಹರೆ ಸಲಹೆಂದೊರಲಿದಳು ತರಳೆ ॥123॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಯ್ಯೋ, ಹಂಸದ ಮರಿಯನ್ನು ಬಕಪಕ್ಷಿ ತಿನ್ನಲು ಬಂದಿದೆ. ಅದನ್ನು ಬಿಡಿಸಯ್ಯ. ಗಿಳಿಮರಿಯನ್ನು ತಿನ್ನಲು ಗಿಡುಗ ಮೇಲೆ
ಬೀಳುತ್ತಿದೆ. ತಪ್ಪಿಸಯ್ಯಾ, ಭಕ್ತರ ವಿಷಯದಲ್ಲಿ ಚೌಕಾಶಿ ವ್ಯಾಪಾರವಲ್ಲವೇ ? ಪ್ರಕಟವಾಗಿ ಬಂದು ಕಾಡುತ್ತಿರುವ ಭೂತಗ್ರಹದ ಬಾಧೆಗೆ
ಸಿಕ್ಕಿ ವಿಕಳೆಯಾಗಿದ್ದೇನೆ. ನಾನು ನಿನ್ನ ಬಿರುದನ್ನೇ ನಿನಗೆ ತಡೆಯಾಗಿ ಒಡ್ಡಿದ್ದೇನೆ. ನೀನು ಭಕ್ತ ವತ್ಸಲನಾದರೆ ನನ್ನನ್ನು ಸಲಹು ಎಂದು
ಒರಲಿದಳು ತರಳೆ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಅಕಟ ಹಂಸೆಯ ಮರಿಯ ಮೋದುವ
ಬಕನ ತೆಗೆಸೈ ಗಿಡುಗನೆರಗುವ
ಶುಕನ ಶೋಕವ ಮಾಣಿಸೈ ವಾಣಿಯವೆ ಭಕುತರಲಿ
ಪ್ರಕಟಭೂತಗ್ರಹದ ಬಾಧೆಗೆ
ವಿಕಳೆ ನಿನ್ನಯ ಬಿರುದ ತಡೆದೆನು
ಭಕುತವತ್ಸಲನಹರೆ ಸಲಹೆಂದೊರಲಿದಳು ತರಳೆ ॥123॥
೧೨೪ ಆರಿಗೊರಲುವೆನೈ ಖಳಾಪ ...{Loading}...
ಆರಿಗೊರಲುವೆನೈ ಖಳಾಪ
ಸ್ಮಾರವಿದೆ ಸೆರೆವಿಡಿದು ತನ್ನಸು
ವಾರಿಗೆಯು ವೈರಾಗ್ಯ ಗಡ ಮತ್ಪ್ರಾಣ ವಿಭುಗಳಿಗೆ
ಘೋರತರ ಭವದುರಿತ ತರುವಿನ
ಬೇರ ಸುಡುವೀ ನಿನ್ನ ನಾಮಕೆ
ನಾರಿಯಕ್ಕೆಯ ನಿಲಿಸಲೇನರಿದೆಂದಳಿಂದುಮುಖಿ ॥124॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಯಾರಿಗೆ ಹೇಳಿಕೊಂಡು ಒರಲಲಿ ಹೇಳಯ್ಯಾ, ನನ್ನ ಪ್ರಾಣ ಯಾರಿಗೆ ಸೇರಬೇಕೋ ಅವರನ್ನು ಖಳಾಪಸ್ಮಾರ ಸೆರೆಹಿಡಿದುಬಿಟ್ಟದೆ. ನನ್ನ ಪ್ರಾಣದ ಒಡೆಯರಿಗೆ ವೈರಾಗ್ಯ ಬಂದುಬಿಟ್ಟಿದೆಯಯ್ಯಾ ! ಘೋರತರ ಜನ್ಮಾಂತರ ಪಾಪವೆಂಬ ವೃಕ್ಷದ ಬೇರನ್ನೇ ಸುಟ್ಟು ಹಾಕಿಬಿಡುವಂತಹ ನಿನ್ನ ನಾಮಕ್ಕೆ ಈ ನಾರಿಯ ದುಃಖವನ್ನು ಹೋಗಲಾಡಿಸಿವುದು ಏನು ಮಹಾ ಕಷ್ಟದ ಕೆಲಸ ? ಎಂದಳು ಆ ಇಂದುಮುಖಿ.
ಪದಾರ್ಥ (ಕ.ಗ.ಪ)
ಅಪಸ್ಮಾರ-ಮೂರ್ಛೆರೋಗ,
ಅಕ್ಕೆ-ಅಳು, ರೋದನ
ಮೂಲ ...{Loading}...
ಆರಿಗೊರಲುವೆನೈ ಖಳಾಪ
ಸ್ಮಾರವಿದೆ ಸೆರೆವಿಡಿದು ತನ್ನಸು
ವಾರಿಗೆಯು ವೈರಾಗ್ಯ ಗಡ ಮತ್ಪ್ರಾಣ ವಿಭುಗಳಿಗೆ
ಘೋರತರ ಭವದುರಿತ ತರುವಿನ
ಬೇರ ಸುಡುವೀ ನಿನ್ನ ನಾಮಕೆ
ನಾರಿಯಕ್ಕೆಯ ನಿಲಿಸಲೇನರಿದೆಂದಳಿಂದುಮುಖಿ ॥124॥
೧೨೫ ಕರುಣಿ ನೀ ...{Loading}...
ಕರುಣಿ ನೀ ಕಾರುಣ್ಯ ಪಾತ್ರದ
ತರಳೆ ತಾ ದೀನಾರ್ತಿದುಃಖೋ
ತ್ತರಣ ನೀ ದೀನಾರ್ತ ದುಃಖಿತೆಯಾನು ಜಗವರಿಯೆ
ಪರಮ ಪಾಲಕ ನೀನೆ ಗತ್ಯಂ
ತರದ ವಿಹ್ವಲೆ ತಾನಲಾ ನಿ
ಷ್ಠುರವಿದೇನೈ ಕೃಷ್ಣಯೆಂದೊರಲಿದಳು ತರಳಾಕ್ಷಿ ॥125॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕರುಣಿ ನೀನು, ನಿನ್ನ ಕರುಣೆಗೆ ಪಾತ್ರಳಾದ ಹೆಣ್ಣು ನಾನು. ದೀನರು ಮತ್ತು ಕಷ್ಟದಲ್ಲಿ ಸಿಕ್ಕಿ ಕೊಂಡಿರುವವರ ದುಃಖವನ್ನು
ಕಳೆಯುವವನು ನೀನು ದೀನಾರ್ತದುಃಖಿತೆಯಾಗಿರುವವಳು ನಾನು. ಇದು ಜಗತ್ತಿಗೇ ತಿಳಿದಿದೆ. ಪರಮ ಪಾಲಕ ನೀನು ಗತ್ಯಂತರವಿಲ್ಲದೆ ವಿಹ್ವಲಳಾಗಿರುವವಳು ನಾನು. ಏಕಯ್ಯ ಇಷ್ಟು ನಿಷ್ಠುರವಾಗಿದ್ದೀಯೆ ಕೃಷ್ಣ ಎಂದು ಒರಲಿದಳು ತರಳಾಕ್ಷಿ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಕರುಣಿ ನೀ ಕಾರುಣ್ಯ ಪಾತ್ರದ
ತರಳೆ ತಾ ದೀನಾರ್ತಿದುಃಖೋ
ತ್ತರಣ ನೀ ದೀನಾರ್ತ ದುಃಖಿತೆಯಾನು ಜಗವರಿಯೆ
ಪರಮ ಪಾಲಕ ನೀನೆ ಗತ್ಯಂ
ತರದ ವಿಹ್ವಲೆ ತಾನಲಾ ನಿ
ಷ್ಠುರವಿದೇನೈ ಕೃಷ್ಣಯೆಂದೊರಲಿದಳು ತರಳಾಕ್ಷಿ ॥125॥
೧೨೬ ಮರೆದೆನಭ್ಯುದಯದಲಿ ನೀನೆಂ ...{Loading}...
ಮರೆದೆನಭ್ಯುದಯದಲಿ ನೀನೆಂ
ದರಿವೆನಾಪತ್ತಿನಲಿ ಮದದಲಿ
ಮುರುಕಿಸುವೆನುಬ್ಬಿನಲಿ ಕಳವಳಿಸುವೆನು ಖೋಡಿಯಲಿ
ಅರಿಯದಜ್ಞರ ಗುಣವ ದೋಷವ
ನರಸುವರೆ ನಿನ್ನಡಿಯ ಕೃಪೆಯನು
ಮೆರೆಯಲಾಗದೆ ಕೃಷ್ಣಯೆಂದೊರಲಿದಳು ನಳಿನಾಕ್ಷಿ ॥126॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಭ್ಯುದಯದಲ್ಲಿದ್ದಾಗ ನಾನು ನಿನ್ನನ್ನು ಮರೆತೆ, ಆಪತ್ತು ಬಂದಾಗ ನೀನು ಎಂದು ಕರೆಯುತ್ತಿದ್ದೇನೆ. ಮದದಲ್ಲಿದ್ದಾಗ ಗರ್ವದಿಂದ ತಿರಸ್ಕಾರದಲ್ಲಿದ್ದೆ. ದುಃಖ ಬಂದಾಗ ಕಳವಳಿಸುತ್ತಿದ್ದೇನೆ. ಅರಿವಿಲ್ಲದ ಈ ಅಜ್ಞತೆಯ ಗುಣದೋಷಗಳನ್ನು ಹುಡುಕುವರೆ,
ನಿನ್ನ ಕೃಪೆಯನ್ನು ಮೆರೆ ಕೃಷ್ಣ ಎಂದೊರಲಿದಳು ನಳಿನಾಕ್ಷಿ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಮರೆದೆನಭ್ಯುದಯದಲಿ ನೀನೆಂ
ದರಿವೆನಾಪತ್ತಿನಲಿ ಮದದಲಿ
ಮುರುಕಿಸುವೆನುಬ್ಬಿನಲಿ ಕಳವಳಿಸುವೆನು ಖೋಡಿಯಲಿ
ಅರಿಯದಜ್ಞರ ಗುಣವ ದೋಷವ
ನರಸುವರೆ ನಿನ್ನಡಿಯ ಕೃಪೆಯನು
ಮೆರೆಯಲಾಗದೆ ಕೃಷ್ಣಯೆಂದೊರಲಿದಳು ನಳಿನಾಕ್ಷಿ ॥126॥
೧೨೭ ಋಷಿಗಳತಿ ತಾರ್ಕಿಕರು ...{Loading}...
ಋಷಿಗಳತಿ ತಾರ್ಕಿಕರು ಕರ್ಮ
ವ್ಯಸನಿಗಳು ಕೋವಿದರು ಮಿಕ್ಕಿನ
ವಿಷಯದೆರೆ ಮೀನುಗಳು ಮೂಢಮನುಷ್ಯರೆಂಬವರು
ಒಸೆದು ನಿನ್ನವರೆಂದು ಬಗೆವರೆ
ಬಸಿದು ಬೀಳುವ ಕೃಪೆಯ ನೀ ತೋ
ರಿಸೆಯಿದೇನೈ ಕೃಷ್ಣಯೆಂದೊರಲಿದಳು ನಳಿನಾಕ್ಷಿ ॥127॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಋಷಿಗಳು ಅತಿ ತರ್ಕಬುದ್ಧಿಯುಳ್ಳವರು. ಪಂಡಿತರು ಕರ್ಮವ್ಯಸನವುಳ್ಳವರು. ಉಳಿದ ಮೂಢಮನುಷ್ಯರು ವಿಷಯವಾಸನೆಯಿಂದ ತುಂಬಿದ ಎರೆ ಮೀನುಗಳು. ಪ್ರೀತಿಯಿಂದ ನಿನ್ನವರೆಂದು ಭಾವಿಸಿದರೆ ಅಂಥವರ ಮೇಲೆ ಬಸಿದು ಬೀಳಬೇಕಾದ ನಿನ್ನ ಕೃಪೆಯನ್ನು ನೀನೇಕೆ ತೋರಿಸುವುದಲ್ಲ ಎಂದೊರಲಿದಳು ನಳಿನಾಕ್ಷಿ.
ಪದಾರ್ಥ (ಕ.ಗ.ಪ)
ಬಸಿದು - ಧಾವಿಸಿಬಂದು
ಮೂಲ ...{Loading}...
ಋಷಿಗಳತಿ ತಾರ್ಕಿಕರು ಕರ್ಮ
ವ್ಯಸನಿಗಳು ಕೋವಿದರು ಮಿಕ್ಕಿನ
ವಿಷಯದೆರೆ ಮೀನುಗಳು ಮೂಢಮನುಷ್ಯರೆಂಬವರು
ಒಸೆದು ನಿನ್ನವರೆಂದು ಬಗೆವರೆ
ಬಸಿದು ಬೀಳುವ ಕೃಪೆಯ ನೀ ತೋ
ರಿಸೆಯಿದೇನೈ ಕೃಷ್ಣಯೆಂದೊರಲಿದಳು ನಳಿನಾಕ್ಷಿ ॥127॥
೧೨೮ ತುಸು ಮೊದಲು ...{Loading}...
ತುಸು ಮೊದಲು ಚತುರಾಸ್ಯ ಪರಿಯಂ
ತೆಸೆವುದೇ ಭುವನದಲಿ ಜೀವ
ಪ್ರಸರವಿದ್ದುದು ದುಃಖಸೌಖ್ಯದ ತಾರತಮತೆಯಲಿ
ಉಸುರು ಪಸರಣವಿಲ್ಲದೆನ್ನು
ಬ್ಬಸದ ಭೀತಿಯ ಬೇಗೆ ಮಿಗೆ ದಾ
ಹಿಸುವುದೈ ಕಾರುಣ್ಯನಿಧಿಯೆಂದೊರಲಿದಳು ತರಳೆ ॥128॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಣು ಮೊದಲುಗೊಂಡು ಚತುರ್ಮುಖ ಬ್ರಹ್ಮನವರೆಗೂ ಈ ಪ್ರಪಂಚದಲ್ಲಿ ಜೀವಪ್ರಸರ ಸುಖ ದುಃಖವೆಂಬ ತರತಮತೆಯಿಂದ ಕೂಡಿದೆ. ಅದಕ್ಕೂ ಕಾರಣ ನೀನೇ. ಉಸಿರಾಡುವುದಕ್ಕೆ ಸಾಧ್ಯವೇ ಇಲ್ಲ ಎನ್ನುವ ಮಟ್ಟಿಗೆ ಭೀತಿಯ ಬೇಗೆ ನನ್ನನ್ನು ದಹಿಸುತ್ತಿದೆ. ಕಾರುಣ್ಯ ನಿಧಿಯೆ, ರಕ್ಷಿಸು, ಎಂದು ಒರಲಿದಳು ತರಳೆ.
ಪದಾರ್ಥ (ಕ.ಗ.ಪ)
ಮೂಲ ...{Loading}...
ತುಸು ಮೊದಲು ಚತುರಾಸ್ಯ ಪರಿಯಂ
ತೆಸೆವುದೇ ಭುವನದಲಿ ಜೀವ
ಪ್ರಸರವಿದ್ದುದು ದುಃಖಸೌಖ್ಯದ ತಾರತಮತೆಯಲಿ
ಉಸುರು ಪಸರಣವಿಲ್ಲದೆನ್ನು
ಬ್ಬಸದ ಭೀತಿಯ ಬೇಗೆ ಮಿಗೆ ದಾ
ಹಿಸುವುದೈ ಕಾರುಣ್ಯನಿಧಿಯೆಂದೊರಲಿದಳು ತರಳೆ ॥128॥
೧೨೯ ನನ್ದಗೋಪ ಕುಮಾರ ...{Loading}...
ನಂದಗೋಪ ಕುಮಾರ ಗೋಪೀ
ವೃಂದ ವಲ್ಲಭ ದೈತ್ಯಮಥನ ಮು
ಕುಂದ ಮುರಹರ ಭಕ್ತವತ್ಸಲ ಘನ ಕೃಪಾಜಲಧೆ
ನೊಂದೆನೈ ನುಗ್ಗಾದೆನೈ ಗೋ
ವಿಂದ ಕೃಪೆ ಮಾಡಕಟೆನುತ ಪೂ
ರ್ಣೇಂದುಮುಖಿ ಹಲುಬಿದಳು ಬಲು ತೆರದಿಂದಲಚ್ಯುತನ ॥129॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಂದಗೋಪ ಕುಮಾರ, ಗೋಪಿವೃಂದವಲ್ಲಭ, ದೈತ್ಯಮಥನ, ಮುಕುಂದ, ಮುರಹರ, ಭಕ್ತವತ್ಸಲ, ಘನಕೃಪಾಜಲಧಿ, ನೊಂದೆನಯ್ಯ, ನುಗ್ಗಾದೆನಯ್ಯ, ಗೋವಿಂದ, ಕೃಪೆಮಾಡು, ಅಕಟ, ಎನ್ನುತ್ತಾ ಪೂರ್ಣೇಂದುಮುಖಿ ಬಗೆಬಗೆಯಾಗಿ ಕೃಷ್ಣನನ್ನು ಸ್ತುತಿಸಿದಳು.
ಪದಾರ್ಥ (ಕ.ಗ.ಪ)
ಮೂಲ ...{Loading}...
ನಂದಗೋಪ ಕುಮಾರ ಗೋಪೀ
ವೃಂದ ವಲ್ಲಭ ದೈತ್ಯಮಥನ ಮು
ಕುಂದ ಮುರಹರ ಭಕ್ತವತ್ಸಲ ಘನ ಕೃಪಾಜಲಧೆ
ನೊಂದೆನೈ ನುಗ್ಗಾದೆನೈ ಗೋ
ವಿಂದ ಕೃಪೆ ಮಾಡಕಟೆನುತ ಪೂ
ರ್ಣೇಂದುಮುಖಿ ಹಲುಬಿದಳು ಬಲು ತೆರದಿಂದಲಚ್ಯುತನ ॥129॥
೧೩೦ ಇತ್ತ ದ್ವಾರಾವತಿಯೊಳಗೆ ...{Loading}...
ಇತ್ತ ದ್ವಾರಾವತಿಯೊಳಗೆ ದೇ
ವೋತ್ತಮನು ಭಕುತರಿಗೆ ತನ್ನನು
ತೆತ್ತು ಬದುಕುವನೆಂಬ ಪರಮ ವ್ರತದ ನಿಷ್ಠೆಯನು
ಚಿತ್ತದಲಿ ನೆಲೆಗೊಳಿಸಿ ರುಕ್ಮಿಣಿ
ಸತ್ಯಭಾಮೆಯರೊಳು ಸಮೇಳದ
ನೆತ್ತ ಸಾರಿಯ ಹರಹಿ ಹಾಸಂಗಿಯನು ದಾಳಿಸುತ ॥130॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕಡೆ ದ್ವಾರಾವತಿಯಲ್ಲಿ ಆ ದೇವೋತ್ತಮನು ‘ಭಕ್ತರಿಗೆ ತನ್ನನ್ನು ತೆತ್ತು ಬದುಕುವನು’ ಎಂಬ ಪರಮವ್ರತದ ನಿಷ್ಠೆಯನ್ನು ಮನದಲ್ಲಿಟ್ಟು ರುಕ್ಮಿಣಿ ಸತ್ಯಭಾಮೆಯರೊಡನೆ ನೆತ್ತಸಾರಿಗಳನ್ನು ಹರಡಿ ದಾಳಗಳನ್ನು ಹೊಸೆಯುತ್ತಿದ್ದ.
ಪದಾರ್ಥ (ಕ.ಗ.ಪ)
ಟಿಪ್ಪನೀ (ಕ.ಗ.ಪ)
ರುಕ್ಮಿಣಿ - ರುಕ್ಮಿಣಿ ಶ್ರೀದೇವಿಯ ಅಂಶಾವತಾರ ಎಂದು ಮಹಾಭಾರತ ಹೇಳುತ್ತದೆ. ಇವಳು ಭೀಷ್ಮಕರಾಜನ ಮಗಳು. ರುಕ್ಮಿ, ರುಕ್ಮಧರ ರುಕ್ಮಬಾಹು ಮೊದಲಾದ ಐವರು ಈಕೆಯ ಸೋದರರು. ವಾಸ್ತವವಾಗಿ ಯದುಕುಲದ ಶಿಶುಪಾಲನಿಗೆ ಇವಳನ್ನು ಕೊಟು ಮದುವೆ ಮಾಡಲು ನಿಶ್ಚಯಿಸಲಾಗಿತ್ತು. ಅದರಂತೆ ಏರ್ಪಾಡುಗಳು ನಡೆದಿದ್ದವು. ಆದರೆ ಸ್ವತಃ ರುಕ್ಮಿಣಿಗೇ ಈ ಮದುವೆ ಇಷ್ಟವಿರಲಿಲ್ಲ. ಶ್ರೀಕೃಷ್ಣನನ್ನು ವರಿಸುವ ಆಸೆ ಅವಳಿಗೆ. ಆದುದರಿಂದ ಕೃಷ್ಣನಿಗೆ ಗುಟ್ಟಾಗಿ ಸಂದೇಶ ಕಳಿಸಿ ತನ್ನನ್ನು ಅಪಹರಿಸಿಕೊಂಡು ಹೋಗುವಂತೆ ಬೇಡಿಕೊಂಡಳು. ಉತ್ಸವದ ದಿನ ಶ್ರೀಕೃಷ್ಣನು ಅತಿಕುಶಲತೆಯಿಂದ ಅವಳನ್ನು ಅಪಹರಿಸಿ ರಥದಲ್ಲಿ ಕೂಡಿಸಿಕೊಂಡು ಹೊರಟ. ತಡೆಯಲು ಬಂದವರನ್ನೆಲ್ಲ ಸೋಲಿಸಿ ಹಿಮ್ಮೆಟ್ಟಿಸಿದ.
ಸತ್ಯಭಾಮೆ - ಭಾರತ ಭಾಗವತ ಪುರಾಣಗಳಲ್ಲೆಲ್ಲ ಈಕೆ ಕೀರ್ತಿತಳಾಗಿದ್ದಾಳೆ. ಅಷ್ಟೇ ಅಲ್ಲ ಭರತ ಖಂಡದ ಎಲ್ಲ ಭಾಷೆಗಳ ಕಾವ್ಯ, ನಾಟಕ, ಶಿಲ್ಪ ಗೇಯರೂಪಕ ಹರಿಕಥೆ ತೊಗಲಗೊಂಬೆಯಾಟಗಳಲ್ಲೆಲ್ಲ ಈಕೆಯ ಕಥನವಿದೆ. ‘ಭಾಮಾಕಲಾಪಂ’ ಎಂಬ ನೃತ್ಯ-ಗೀತ ಸಂಪ್ರದಾಯವೇ ಇದೆ.
ಶ್ರೀ ಕೃಷ್ಣನ ಹೆಂಡತಿಯಾದ ಈಕೆ ಸತ್ರಜಿತನ ಮಗಳಾದ್ದರಿಂದ ಇವಳಿಗೆ ಸತ್ರಜಿತಿ ಎಂಬ ಹೆಸರೂ ಇದೆ. ಸ್ಯಮಂತಕಮಣಿಯನ್ನು ಹುಡುಕಿ ಅದನ್ನು ಸತ್ರಜಿತನಿಗೆ ತಲುಪಿಸಿ ಅಪವಾದದಿಂದ ಮುಕ್ತನಾದ ಕೃಷ್ಣನಿಗೆ ಸತ್ರಾಜಿತನು ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದ. ಕೃಷ್ಣನ ಅಷ್ಟಮಹಿಷಿಯರಲ್ಲಿ ಒಬ್ಬಳಾದ ಸತ್ಯಭಾಮೆಗೂ ರುಕ್ಮಿಣಿಗೂ ಇದ್ದ ಸ್ಪರ್ದಾ ಮನೋಭವವನ್ನು ಚಿತ್ರಿಸುವ ಅನೇಕ ಕಥೆಗಳೇ ಹುಟ್ಟಿಕೊಂಡಿವೆ.
ನರಕಾಸುರನನ್ನು ಕೊಂದ ಮೇಲೆ ಶ್ರೀಕೃಷ್ಣನು ಸತ್ಯಭಾಮೆಯೊಂದಿಗೆ ದೇವಲೋಕಕ್ಕೆ ಭೇಟಿ ಕೊಟ್ಟ. ಅಲ್ಲಿಂದಬಂದನಂತರ ನರಕಾಸುರ ಬಳಿ ಇದ್ದ ಓಲೆಗಳನ್ನು ಅವುಗಳ ನಿಜವಾದ ಮಾಲಕಿಯಾದ ಅದಿತಿಗೆ ಕೃಷ್ಣ ಸತ್ಯಭಾಮೆಯರು ಕೊಟ್ಟು ಬಂದರು. ಅದಿತಿಗೆ ಸತ್ಯಭಾಮೆಯ ಕಾರ್ಯವನ್ನು ಕಂಡು ಎಷ್ಟು ಸಂತೋಷವಾಯಿತೆಂದರೆ ಅವಳು
‘‘ಸತ್ಯಭಾಮೆ! ನಿನ್ನ ಪತಿ ಮಾನವ ರೂಪದಲ್ಲಿ ಇರುವವರೆಗೆ ನೀನು ನಿತ್ಯ ಕನ್ಯೆಯಾಗಿಯೇ ರೂಪವತಿಯಾಗಿಯೇ ಇರು. ದಿವ್ಯ ಪರಿಮಳಯುಕ್ತವಾದ ದೇಹ ನಿನ್ನದಾಗಿರಲಿ’’
ಎಂದು ಹರಸಿದಳಂತೆ. ಅನಂತರ ಸತ್ಯಭಾಮೆಯು ಇಂದ್ರಾಣಿಯೊಂದಿಗೂ ಸಲ್ಲಾಪ ನಡೆಸಿದಳಂತೆ. ಹಿಂದಿರುಗಿ ಬಂದ ಮೇಲೆ ಶ್ರೀಕೃಷ್ಣನು ಸತ್ಯಭಾಮೆಗಾಗಿ ಒಂದು ಶ್ವೇತವರ್ಣದ ಪ್ರಾಸಾದವನ್ನು ಕಟ್ಟಿಸಿಕೊಟ್ಟ.
ತುಂಬು ಸಂಸಾರದೊಂದಿಗೆ ಬಹುಕಾಲ ವೈಭವದಿಂದ ಬಾಳಿದ ಸತ್ಯಭಾಮೆ ತನ್ನ ಪತಿ ತೀರಿಕೊಂಡ ಮೇಲೆ ಕಾಡಿಗೆ ಹೋಗಿ ತಪಸ್ಸಿನಲ್ಲಿ ನಿರತಳಾಗಿ ಕೊನೆಯುಸಿರನ್ನು ಎಳೆದಳೆಂದು ಮಹಾಭಾರತದ ಮೌಸಲಪರ್ವ ಹೇಳುತ್ತದೆ.
ಮಹಾಭಾರತದಲ್ಲಿ ಹಲವಾರು ಸಂದರ್ಭಗಳಲ್ಲಿ ಸತ್ಯಭಾಮೆಯ ವಿಷಯ ಪ್ರಸ್ತಾವಗೊಂಡಿದೆ. ಒಂದು ಮುಖ್ಯವಾದ ಸಚಿವಾದದ ನೆಲೆಯಲ್ಲಿ ಆಕೆಯ ಪಾತ್ರವನ್ನು ಅರಣ್ಯಪರ್ವದಲ್ಲಿ ಕಾಣಬಹುದಾಗಿದೆ. (183ನೇ ಅಧ್ಯಾಯ) ಸ್ವತಃ ಗಂಡನ ಬಗೆಗೆ ಚೆನ್ನಾಗಿ ತಿಳಿದಿದ್ದ ಸತ್ಯಭಾಮೆ ದ್ರೌಪದಿಯ ಸಂಸಾರದ ಯಶಸ್ಸಿನ ಬಗೆಗೆ ಸ್ವಾರಸ್ಯಕರವಾದ ಚರ್ಚೆ ನಡೆಸುತ್ತಾಳೆ. ಅವಳು ದ್ರೌಪದಿಯನ್ನು ಕೇಳಿದ ಪ್ರಶ್ನೆಗಳು ಇವು:
‘‘ದ್ರೌಪದಿ! ನಿನ್ನ ಗಂಡಂದಿರೆಲ್ಲ ನಿನ್ನನ್ನು ಬಹಳ ಇಷ್ಟಪಡುತ್ತಾರಲ್ಲ. ಅವರಿಗೆ ಮದ್ದು ಅರೆದು ವಶಪಡಿಸಿಕೊಂಡಿದ್ದೇಯೇನು? ಅತೌಆ ಮಂತ್ರತಂತ್ರ ಪ್ಯರೋಗ ಮಾಡುತ್ತಿದ್ದೇಯೇನು? ವ್ರತ ತಪಸ್ಸು ಮಾಡುತ್ತಿದ್ದೀಯೇನು?’’
ಅದಕ್ಕೆ ದ್ರೌಪದಿ ಸತ್ಯಭಾಮೆಗೆ ಕೊಡುವ ಉತ್ತರವೂ ಸ್ವಾರಸ್ಯಕರವಾಗಿದೆ. ‘‘ಸತ್ಯಭಾಮೆ ನನಗೆ ಅಂಥ ಮಾಯಾ ಮೋಹಿನಿ ವಿದ್ಯೆ ಬರುವುದಿಲ್ಲ. ನಾನು ಸರಳ ಮನಸ್ಸಿನಿಂದ ಅವರ ಸೇವೆ ಮಾಡುತ್ತೇನೆ’’. ಇಷ್ಟೇ ಅಲ್ಲದೆ ಅತ್ತೆಯೊಂದಿಗೆ ಇತರ ಸವತಿಯರೊಂದಿಗೆ ಸಖಿಯರೊಂದಿಗೆ ತಾನು ಹೇಗೆ ನಡೆದುಕೊಳ್ಳುತ್ತಿದ್ದೇನೆಂಬ ಬಗೆಗೂ ಅವಳು ವಿವರವಾದ ಮಾಹಿತಿ ನೀಡುತ್ತಾಳೆ.
ಸತ್ಯವತಿ ದ್ರೌಪದಿಯರ ಸಚಿವಾದ ಕೌಟುಂಬಿಕ ಒಳಸೂಕ್ಷ್ಮಗಳನ್ನು ಕಾಣಿಸುವ ಒಂದು ಸೂಕ್ತ ಚರ್ಚಾವೇದಿಕೆಯಾಗಿದ್ದು ಎಲ್ಲರ ಆಸಕ್ತಿಯನ್ನು ಸೆಳೆಯುವಂತಿದೆ.ರಾಣಿ ರುಕುಮಿಣಿಯಾದಿಯಾದ… ಕೃಷ್ಣನ ಅಷ್ಟ ಮಹಿಷಿಯರೆಂದರೆ ರುಕ್ಮಿಣಿ, ಸತ್ಯಭಾಮೆ, ಜಾಂಬವತಿ, ಕಾಳಿಂದಿ, ಮಿತ್ರವಿಂದ, ಸತ್ಯಕೀರ್ತಿ, ಭದ್ರ ಮತ್ತು ಲಕ್ಷಣೆ ಕೆಲವು ಪಾಠಗಳಲ್ಲಿ ನಾಗ್ನಜಿತೆಯ ಹೆಸರಿದೆ.
ಮೂಲ ...{Loading}...
ಇತ್ತ ದ್ವಾರಾವತಿಯೊಳಗೆ ದೇ
ವೋತ್ತಮನು ಭಕುತರಿಗೆ ತನ್ನನು
ತೆತ್ತು ಬದುಕುವನೆಂಬ ಪರಮ ವ್ರತದ ನಿಷ್ಠೆಯನು
ಚಿತ್ತದಲಿ ನೆಲೆಗೊಳಿಸಿ ರುಕ್ಮಿಣಿ
ಸತ್ಯಭಾಮೆಯರೊಳು ಸಮೇಳದ
ನೆತ್ತ ಸಾರಿಯ ಹರಹಿ ಹಾಸಂಗಿಯನು ದಾಳಿಸುತ ॥130॥
೧೩೧ ಕೇಳಿದನು ಮುರವೈರಿ ...{Loading}...
ಕೇಳಿದನು ಮುರವೈರಿ ತನ್ನಯ
ಮೇಳದೈವರ ಸತಿಯ ಹುಯ್ಯಲ
ನಾಳಿನೊಂದಪಮಾನವಾಳ್ದಂಗೆಂಬ ನುಡಿಯಿಂದ
ಕೋಳುಹೋದುವೆ ಪಾಂಡುಪುತ್ರರ
ಬಾಳುವೆಗಳಕಟೆನುತ ಲಕ್ಷ್ಮೀ
ಲೋಲ ಚಿಂತಿಸಿ ನುಡಿದ ರುಕ್ಮಿಣಿದೇವಿಗೀ ಹದನ ॥131॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನ ಮೇಳದ ಆ ಐವರು ಪಾಂಡವರ ಸತಿ ಹುಯ್ಯಲಿಡುತ್ತಿದ್ದುದನ್ನು ಕೇಳಿದ. ಆಳಿಗಾದ ಅಪಮಾನ ಯಜಮಾನನಿಗೇ ಆದ ಅಪಮಾನ ಎಂಬ ನಾಣ್ನುಡಿಯಂತೆ ಪಾಂಡುಪುತ್ರರ ಬದುಕು ಹಾಳಾಯಿತೆ, ಅಕಟಾ, ಎಂದು ಚಿಂತಿಸಿ ಆ ಲಕ್ಷ್ಮೀಲೋಲ ರುಕ್ಮಿಣಿ ದೇವಿಗೆ ಈ ವಿಷಯವನ್ನು ತಿಳಿಸಿದ.
ಪದಾರ್ಥ (ಕ.ಗ.ಪ)
ಆಳ್ದ-ಒಡೆಯ, ಕೋಳುಹೋಗು-ನಾಶವಾಗು
ಮೂಲ ...{Loading}...
ಕೇಳಿದನು ಮುರವೈರಿ ತನ್ನಯ
ಮೇಳದೈವರ ಸತಿಯ ಹುಯ್ಯಲ
ನಾಳಿನೊಂದಪಮಾನವಾಳ್ದಂಗೆಂಬ ನುಡಿಯಿಂದ
ಕೋಳುಹೋದುವೆ ಪಾಂಡುಪುತ್ರರ
ಬಾಳುವೆಗಳಕಟೆನುತ ಲಕ್ಷ್ಮೀ
ಲೋಲ ಚಿಂತಿಸಿ ನುಡಿದ ರುಕ್ಮಿಣಿದೇವಿಗೀ ಹದನ ॥131॥
೧೩೨ ಕ್ರೂರ ದುರ್ಯೋಧನನು ...{Loading}...
ಕ್ರೂರ ದುರ್ಯೋಧನನು ದೃಪದ ಕು
ಮಾರಿ ಪಾಂಚಾಲೆಯನು ಸಭೆಯಲಿ
ಸೀರೆಯನು ಸುಲಿಯಲ್ಕೆ ಕಾಯೈ ಕೃಷ್ಣಯೆಂದೆನುತ
ನಾರಿಯೊರಲುತ್ತಿಹಳು ವುಟ್ಟಾ
ಸೀರೆ ಸೆಳೆಯಲು ಬಳಿಕಲಕ್ಷಯ
ಸೀರೆಯಾಗಲಿಯೆಂದ ಗದುಗಿನ ವೀರ ನಾರಯಣ ॥132॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಕ್ರೂರಿ ದುರ್ಯೋಧನ ದ್ರೌಪದಿಯನ್ನು ಸಭೆಗೆ ಎಳೆತರಿಸಿ ಸೀರೆ ಸುಲಿಸುತ್ತಿದ್ದಾನೆ. ಅವಳು ಕಾಯೈ ಕೃಷ್ಣ ಎಂದು ಒರಲುತ್ತಿದ್ದಾಳೆ ಎಂದು ಹೇಳಿ. “ಸೆಳೆಯಲಾಗುತ್ತಿರುವ ಅವಳ ಸೀರೆಯು ಅಕ್ಷಯವಾಗಲಿ” ಎಂದು ಅನುಗ್ರಹಿಸಿದ ಆ ಗದುಗಿನ ವೀರ ನಾರಾಯಣ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಕ್ರೂರ ದುರ್ಯೋಧನನು ದೃಪದ ಕು
ಮಾರಿ ಪಾಂಚಾಲೆಯನು ಸಭೆಯಲಿ
ಸೀರೆಯನು ಸುಲಿಯಲ್ಕೆ ಕಾಯೈ ಕೃಷ್ಣಯೆಂದೆನುತ
ನಾರಿಯೊರಲುತ್ತಿಹಳು ವುಟ್ಟಾ
ಸೀರೆ ಸೆಳೆಯಲು ಬಳಿಕಲಕ್ಷಯ
ಸೀರೆಯಾಗಲಿಯೆಂದ ಗದುಗಿನ ವೀರ ನಾರಯಣ ॥132॥