೧೨

೦೦೦ ಸೂಚನೆ ಕಾಲ ...{Loading}...

ಸೂಚನೆ: ಕಾಲ ಪಾಶಾಕರುಷದಲಿ ಭೂ
ಪಾಲನಿಂದ್ರಪ್ರಸ್ಥ ನಗರಿಯ
ಬೀಳುಕೊಂಡನು ಬಂದು ಹೊಕ್ಕನು ಹಸ್ತಿನಾಪುರವ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಕೌರವ ರಾಯನಿತ್ತಲು
ಮೇಲು ಮುಸುಕಿನ ಹೊತ್ತ ದುಗುಡದ ಹೊಗರ ಹೊಗೆ ಮೊಗದ
ತಾಳಿಗೆಯ ನಿದ್ರ್ರವದ ಮತ್ಸರ
ದೇಳಿಗೆಯಲಿಕ್ಕಡಿಯ ಮನದ ನೃ
ಪಾಲ ಹೊಕ್ಕನು ನಡುವಿರುಳು ನಿಜ ರಾಜಮಂದಿರವ ॥1॥

೦೦೨ ಆರತಿಯ ಗಣಿಕೆಯರ ...{Loading}...

ಆರತಿಯ ಗಣಿಕೆಯರ ಸುಳಿವು
ಪ್ಪಾರತಿಯ ದಾದಿಯರ ಪಾಯವ
ಧಾರು ಸೂಳಾಯತರ ಮಂಗಳ ವಚನದೈದೆಯರ
ದೂರದಲಿ ನಿಲಿಸಿದನು ಭಂಗದ
ಭಾರಣೆಯ ಬಿಸುಸುಯ್ಲ ಸೂರೆಯ
ಸೈರಣೆಯ ಸೀವಟದ ಸಿರಿಮಂಚದಲಿ ಪವಡಿಸಿದ ॥2॥

೦೦೩ ಭಾನುಮತಿ ಬರೆ ...{Loading}...

ಭಾನುಮತಿ ಬರೆ ಮುರಿದ ಮುಸುಕಿನ
ಮೌನಿ ನೂಕಿದನಿರುಳನುದಯದ
ನೂನ ಮಂಗಳ ಪಟಹ ಶಂಖಧ್ವನಿಯ ಮಾಣಿಸಿದ
ಭಾನುವಿಂಗಘ್ರ್ಯಾದಿ ಕೃತ್ಯವ
ನೇನುವನು ಮನ್ನಿಸದೆ ಚಿತ್ತದೊ
ಳೇನ ನೆನೆದನೊ ಭೂಪನಿದ್ದನು ಖತಿಯ ಭಾರದಲಿ ॥3॥

೦೦೪ ಬೇಟೆ ನಿನ್ದುದು ...{Loading}...

ಬೇಟೆ ನಿಂದುದು ಗಜ ತುರಗದೇ
ರಾಟ ಮಾದುದು ಕೇಳಿ ಮೇಳದ
ತೋಟಿಯಲ್ಲಿಯದಲ್ಲಿ ಕವಡಿಕೆ ನೆತ್ತ ಮೊದಲಾದ
ನಾಟಕದ ಮೊಗರಂಬವೆನಿಪ ಕ
ವಾಟ ತೆರೆಯದು ಹೊಕ್ಕಸೂಯದ
ಕೋಟಲೆಯ ಕಡುಹೂಟ ಕವರಿತು ನೃಪನ ತನುಮನವ ॥4॥

೦೦೫ ದ್ರೋಣ ಭೀಷ್ಮಾದಿಗಳು ...{Loading}...

ದ್ರೋಣ ಭೀಷ್ಮಾದಿಗಳು ಸಮಯವ
ಕಾಣರುಳಿದ ಪಸಾಯ್ತ ಸಚಿವ
ಶ್ರೇಣಿ ಬಾಗಿಲ ಹೊರಗೆ ನಿಂದುದು ಮತ್ತೆ ಮನೆಗಳಲಿ
ಕಾಣೆನೊಳಪೈಕದ ಸುವೇಣಿಯ
ರಾಣಿಯರ ದುರ್ಮನದ ಬೆಳೆಸಿನ
ಕೇಣಿಯನು ಕೈಕೊಂಡನೊಬ್ಬನೆ ಕೌರವರರಾಯ ॥5॥

೦೦೬ ಸಮಯವಿಲ್ಲೋರನ್ತೆ ಮೌನ ...{Loading}...

ಸಮಯವಿಲ್ಲೋರಂತೆ ಮೌನ
ಭ್ರಮೆಯ ಬಿಗುಹಿನ ಕೇರಿಕೇರಿಯ
ಕುಮತಿಗಳ ಗುಜು ಗುಜಿನ ಗುಪ್ತದ ಮುಸುಕುಗೈದುಗಳ
ತಮ ತಮಗೆ ಬಿರುದುಗಳ ಗಣಿಕಾ
ರಮಣ ವೈರದ ಹೆಚ್ಚು ಕುಂದಿನ
ಸಮರ ಭಟರಿರಿದಾಡಿದರು ನಿರ್ನಾಮ ಭಾವದಲಿ ॥6॥

೦೦೭ ಸ್ತ್ರೈಣ ಚೇಷ್ಟಿತನೆನ್ದು ...{Loading}...

ಸ್ತ್ರೈಣ ಚೇಷ್ಟಿತನೆಂದು ಕೆಲಬರು
ಕಾಣೆವರಸನನೆಂದು ಕೆಲರ
ಕ್ಷೀಣ ರೋಗಿತನೆಂದು ಕೆಲರು ವಿಷ ಪ್ರಯೋಗದಲಿ
ಪ್ರಾಣ ಶೋಷಿತನೆಂದು ಕೆಲಬರು
ಜಾಣಿನೂಹೆಯ ಜನದ ನೆನಹಿನ
ಸಾಣೆಯಲಿ ಸವೆಯಿತ್ತು ಕೌರವ ನೃಪನ ನಿರ್ದೇಶ ॥7॥

೦೦೮ ಅಕಟ ಕೌರವರಾಯ ...{Loading}...

ಅಕಟ ಕೌರವರಾಯ ರಾಜ
ನ್ಯಕ ಶಿರೋಮಣಿಯಿರಲು ಧರೆ ರಾ
ಜಕ ವಿಹೀನ ವಿಡಂಬವಾಯ್ತೇ ಶಿವ ಶಿವಾಯೆನುತ
ಸಕಲ ದಳ ನಾಯಕರು ಮಂತ್ರಿ
ಪ್ರಕರ ಚಿಂತಾಂಬುಧಿಯೊಳದ್ದಿರೆ
ಶಕುನಿ ಬಂದನು ಕೌರವೇಂದ್ರನ ರಾಜಮಂದಿರಕೆ ॥8॥

೦೦೯ ಕರೆದು ಬಾಗಿಲವರಿಗೆ ...{Loading}...

ಕರೆದು ಬಾಗಿಲವರಿಗೆ ತನ್ನಯ
ಬರವನರುಹಿಸಲವರು ರಾಯನ
ಹೊರೆಗೆ ಬಂದರು ನುಡಿದರಂಗೈ ತಳದ ಬಾಯ್ಗಳಲಿ
ಅರಸ ಬಿನ್ನಹ ಮಾವದೇವರು
ದರುಶನಾರ್ಥಿಗಳೆನಲು ಮನದಲಿ
ಕುರು ನೃಪತಿ ಚಿಂತಿಸುತ ಬರಹೇಳೆಂದು ನೇಮಿಸಿದ ॥9॥

೦೧೦ ಹೊಕ್ಕನೀತನು ಕೌರವೇನ್ದ್ರನ ...{Loading}...

ಹೊಕ್ಕನೀತನು ಕೌರವೇಂದ್ರನ
ನೆಕ್ಕಟಿಯೊಳಿರೆ ಕಂಡು ನುಡಿಸಿದ
ನಕ್ಕಜದ ರುಜೆಯೇನು ಮಾನಸವೋ ಶರೀರಜವೊ
ಮುಕ್ಕುಳಿಸಿಕೊಂಡಿರದಿರಾರಿಗೆ
ಸಿಕ್ಕಿದಿಯೊ ಸೀಮಂತಿನಿಯರಿಗೆ
ಮಕ್ಕಳಾಟಿಕೆ ಬೇಡ ನುಡಿ ಧೃತರಾಷ್ಟನಾಣೆಂದ ॥10॥

೦೧೧ ಮಾವ ನೀವ್ ...{Loading}...

ಮಾವ ನೀವ್ ಮರುಳಾದಿರೇ ನನ
ಗಾವ ರುಜೆಯಿಲ್ಲಂಗನೆಯರುಪ
ಜೀವಿಯೇ ನೀವರಯಿರೇ ಹಿಂದೀಸು ಕಾಲದಲಿ
ನೋವು ಬೇರಿಲ್ಲೆನಗೆ ನಿಳಯಕೆ
ನೀವು ಬಿಜಯಂಗೈವುದಂತ
ರ್ಭಾವ ವಹ್ನಿಯನೇಕೆ ಬೆದಕುವಿರೆಂದನಾ ಭೂಪ ॥11॥

೦೧೨ ಏನು ನಿನ್ನನ್ತಸ್ಥ ...{Loading}...

ಏನು ನಿನ್ನಂತಸ್ಥ ಹೃದಯ ಕೃ
ಶಾನು ಸಂಭವವೇಕೆ ನುಡಿ ದು
ಮ್ಮಾನ ಬೇಡೆನ್ನಾಣೆನುತ ಸಂತೈಸಿದನು ನೃಪನ
ಏನು ಭಯ ಬೇಡೆಂದೆನಲು ಯಮ
ಸೂನು ವೈಭವ ವಹ್ನಿದಗ್ಧ ಮ
ನೋನುಭಾವವನೇಕೆ ನುಡಿಸುವಿರೆಂದನಾ ಭೂಪ ॥12॥

೦೧೩ ಹೇಳು ಹೇಳೇನೇನು ...{Loading}...

ಹೇಳು ಹೇಳೇನೇನು ಪಾಂಡು ನೃ
ಪಾಲ ಪುತ್ರರ ವಿಭವ ವಹ್ನಿ
ಜ್ವಾಲೆಯಲಿ ಮನ ಬೆಂದುದೇ ಹರಹರ ವಿಚಿತ್ರವಲ
ಪಾಲಕನು ಧರ್ಮಜನು ಸಲೆ ಕ
ಟ್ಟಾಳುಗಳು ಭೀಮಾರ್ಜನರು ಬೆ
ಳ್ಳಾಳ ಹಬ್ಬುಗೆಯೈಸಲೇ ಪಾಂಡವರ ಸಿರಿಯೆಂದ ॥13॥

೦೧೪ ಅವರು ಪಿತ್ರಾರ್ಜಿತದ ...{Loading}...

ಅವರು ಪಿತ್ರಾರ್ಜಿತದ ರಾಜ್ಯ
ಪ್ರವರ ಪಾತ್ರರು ನಿನ್ನಸೂಯೆಯ
ಕವಲು ಮನದ ಕುಠಾರ ಬುದ್ಧಿಯ ಕಲುಷ ಭಾವನೆಯ
ವಿವರಣೆಯನವರೆತ್ತ ಬಲ್ಲರು
ಶಿವಶಿವಾ ಭುವನೈಕ ಮಾನ್ಯರ
ನವಗಡಿಸಲಂಗೈಸಿದೈ ಮಾಣೆಂದನಾ ಶಕುನಿ ॥14॥

೦೧೫ ಲೇಸು ಬಿಜಯಙ್ಗೈಯಿ ...{Loading}...

ಲೇಸು ಬಿಜಯಂಗೈಯಿ ನೀವೆ
ನ್ನಾಸರಾಗ್ನಿಯನೇಕೆ ಕೆಣಕುವಿ
ರಾಸುರವಿದೇಕೆನ್ನೊಡನೆ ಸೈರಿಸುವುದುಪಹತಿಯ
ಈಸು ನುಡಿವರೆ ಮಾವಯೆನುತ ಮ
ಹೀಶ ಕಂಬನಿದುಂಬಿ ನೆನಹಿನ
ಬೇಸರಕೆ ಬಿಸುಸುಯ್ದು ಧೊಪ್ಪನೆ ಕೆಡದನವನಿಯಲಿ ॥15॥

೦೧೬ ಎತ್ತಿದನು ಕಣ್ಣೆವೆಯ ...{Loading}...

ಎತ್ತಿದನು ಕಣ್ಣೆವೆಯ ಕಿರುವನಿ
ಮುತ್ತುಗಳ ಕೇವಣಿಯ ಶಕುನಿ ನೃ
ಪೋತ್ತಮನೆ ಬಾ ಕಂದ ಬಾಯೆಂದಪ್ಪಿ ಕೌರವನ
ಕಿತ್ತು ಬಿಸುಡುವೆನಹಿತರನು ನಿನ
ಗಿತ್ತೆನಿಂದ್ರಪ್ರಸ್ಥಪುರವನು
ಹೆತ್ತ ತಾಯ್ ಗಾಂಧಾರಿ ಸಂತೋಷಿಸಲಿ ಬಳಿಕೆಂದ ॥16॥

೦೧೭ ಮಾವ ಕೇಳತಿಬಲರು ...{Loading}...

ಮಾವ ಕೇಳತಿಬಲರು ಫಲಗುಣ
ಪಾವಮಾನಿಗಳೈವರಿಗೆ ತಾ
ಜೀವಸಖ ಗೋವಿಂದನನಿಬರ ಗೆಲವು ಗೋಚರವೆ
ಸಾವುದಲ್ಲದೆ ತನಗೆ ಬೇರಿ
ನ್ನಾವ ಪರಿಯಲಿ ಸಮತೆ ಸೇರದು
ಜೀವಿತವ್ಯವನಮರ ನಿಕರದೊಳರಸಿಕೊಳ್ಳೆಂದ ॥17॥

೦೧೮ ಗೆಲುವೆ ನಾನಞ್ಜದಿರು ...{Loading}...

ಗೆಲುವೆ ನಾನಂಜದಿರು ಪಾಂಡವ
ರಳವಳವ ನಾನರಿವೆ ನೃಪನ
ಗ್ಗಳದ ಧರ್ಮಜ್ಞನು ವಿಶೇಷ ದ್ಯೂತಲೋಲುಪನು
ಗೆಲುವ ಮೋಡಿಯನರಿಯನಾತನ
ನೆಲೆಯ ಬಲ್ಲೆನು ಜೂಜುಗಾರರ
ಕುಲಶಿರೋಮಣಿ ತಾನೆಯೆಂದನು ಶಕುನಿ ಕೌರವಗೆ ॥18॥

೦೧೯ ಕಪಟವನು ನೆರೆ ...{Loading}...

ಕಪಟವನು ನೆರೆ ಮಾಡಿ ಜೂಜಿನೊ
ಳುಪರಿಕಾರ್ಯವ ಜೈಸಿ ಕೊಡುವೆನು
ನಿಪುಣರೆನ್ನಂದದಲಿ ಲೋಕದೊಳಿಲ್ಲ ಕೈತವದ
ಅಪದೆಸೆಗೆ ಭಯಗೊಳ್ಳದಿರು ನಿ
ಷ್ಕೃಪೆಯಲಿರು ಗುರು ಭೀಷ್ಮ ವಿದುರಾ
ದ್ಯಪಸರರ ಕೈಕೊಳ್ಳದಿರು ನೀನೆಂದನಾ ಶಕುನಿ ॥19॥

೦೨೦ ಎನ್ನ ಬಹುಮಾನಾವಮಾನವು ...{Loading}...

ಎನ್ನ ಬಹುಮಾನಾವಮಾನವು
ನಿನ್ನದೈಸಲೆ ಮಾವ ನೀ ಸಂ
ಪನ್ನಕೃತ್ರಿಮವಿದ್ಯನಾದರೆ ತೊಡಚು ಸಾಕದನು
ಅನ್ನಿಗರಿಗರುಹದಿರು ನಮ್ಮವ
ರೆನ್ನದಿರು ವಿದುರಾದಿಗಳನುಪ
ಪನ್ನ ಮಂತ್ರವನರುಹು ಬೊಪ್ಪಂಗೆಂದನವನೀಶ ॥20॥

೦೨೧ ನೀನರುಹು ನಿಮ್ಮಯ್ಯ ...{Loading}...

ನೀನರುಹು ನಿಮ್ಮಯ್ಯ ಮನಗೊ
ಟ್ಟಾ ನರೇಂದ್ರರ ಕರೆಸಿ ಕೊಟ್ಟರೆ
ಮಾನನಿಧಿಯೇ ಸಕಲ ಧರೆಯನು ಸೇರಿಸುವೆ ನಿನಗೆ
ನೀನೆ ಹೋಗಿಯೆ ಎನ್ನ ಕಡು ದು
ಮ್ಮಾನವನು ಬೊಪ್ಪಂಗೆ ನುಡಿದರೆ
ತಾನೆ ಕರೆಸುವನರುಹುವೆನು ಜನಕಂಗೆ ನಿಜಮತವ ॥21॥

೦೨೨ ಅಹುದು ಬಳಿಕೇನೆನುತ ...{Loading}...

ಅಹುದು ಬಳಿಕೇನೆನುತ ಬಂದನು
ಕುಹಕಮತಿ ಧೃತರಾಷ್ಟ್ರನರಮನೆ
ಗಿಹ ಸಮಯದಲಿ ಹೊಕ್ಕನಂದೇಕಾಂತ ಮಂದಿರವ
ಬಹಳ ಖೇದ ವ್ಯಸನದಲಿ ದು
ಸ್ಸಹ ಮನೋವ್ಯಥೆಯಲಿ ಕುಮಾರಕ
ನಿಹುದನರಿಯಿರೆ ನೀವೆನುತ ಬಿಸುಸುಯ್ದನಾ ಶಕುನಿ ॥22॥

೦೨೩ ಏನು ಶಕುನಿ ...{Loading}...

ಏನು ಶಕುನಿ ಮಗಂಗೆ ದುಗುಡವ
ದೇನು ಕಾರಣವಾರ ದೆಸೆಯಿಂ
ದೇನಸಾಧ್ಯವದೇನು ಭಯ ಮೇಣಾವುದಭಿಲಾಷೆ
ಏನುವನು ವಂಚಿಸದೆ ಹೇಳೆ
ನ್ನಾನೆಗೇಕೈ ಮರುಕವೆನೆ ನಿಜ
ಸೂನುವನು ನೀ ಕರೆಸಿ ಬೆಸಗೊಳ್ಳೆಂದನಾ ಶಕುನಿ ॥23॥

೦೨೪ ಕರೆಸಿದನು ದುರಿಯೋಧನನನಾ ...{Loading}...

ಕರೆಸಿದನು ದುರಿಯೋಧನನನಾ
ದರಿಸಿ ಕಟ್ಟೇಕಾಂತದಲಿ ಮು
ವ್ವರು ವಿಚಾರಿಸಿದರು ನಿಜಾನ್ವಯ ಮೂಲ ನಾಶನವ
ಭರತಕುಲ ನಿರ್ವಾಹಕನೆ ಬಾ
ಕುರುಕುಲಾನ್ವಯದೀಪ ಬಾ ಎ
ನ್ನರಸ ಬಾ ಎನ್ನಾನೆ ಬಾಯೆಂದಪ್ಪಿದನು ಮಗನ ॥24॥

೦೨೫ ದುಗುಡವೇಕೈ ಮಗನೆ ...{Loading}...

ದುಗುಡವೇಕೈ ಮಗನೆ ಹಿರಿಯೋ
ಲಗವನೀಯೆ ಗಡೇಕೆ ವೈಹಾ
ಳಿಗಳ ಬೇಟೆಗಳವನಿಪಾಲ ವಿನೋದ ಕೇಳಿಗಳ
ಬಗೆಯೆ ಗಡ ಬಾಂಧವರ ಸಚಿವರ
ಹೊಗಿಸೆ ಗಡ ನಿನ್ನರಮನೆಯನೀ
ಹಗಲು ನಿನಗೇಕಾಯ್ತು ಕತ್ತಲೆಯೆಂದನಂಧನೃಪ ॥25॥

೦೨೬ ಹೇಳಲಮ್ಮೆನು ನೀವು ...{Loading}...

ಹೇಳಲಮ್ಮೆನು ನೀವು ಧರ್ಮದ
ಕೂಳಿಯಲಿ ಸಿಲುಕಿದವರೆನ್ನನು
ಖೂಳನೆಂಬಿರಿ ಕಷ್ಟನೆಂಬಿರಸೂಯನೆಂಬಿರಲೆ
ಸಾಲ ಭಂಜಿಕೆಯಾಯ್ತು ತನ್ನಯ
ಬಾಳಿಕೆಯ ಬೇಳಂಬವೇತಕೆ
ಕೇಳುವಿರಿ ನೀವೆಂದು ಸುಯ್ದನು ತುಂಬಿ ಕಂಬನಿಯ ॥26॥

೦೨೭ ಮುನಿಚರಿತ್ರರು ನೀವು ...{Loading}...

ಮುನಿಚರಿತ್ರರು ನೀವು ರಾಜಸ
ತನದ ಮದದಲಿ ಲೋಕಯಾತ್ರೆಯ
ನನುಸರಿಸುವವರಾವು ನೀವೇ ಭೋಗ ನಿಸ್ಪೃಹರು
ಅನುದಿವಸ ರಾಗಿಗಳು ನಾವೆ
ಮ್ಮನುಮತವ ಪಾಲಿಸುವರಾರೆಂ
ದೆನುತ ಸುಯ್ದನು ಮರುಗಿ ಬೈದನು ತನ್ನ ದುಷ್ಕೃತವ ॥27॥

೦೨೮ ಈಸು ಕಳವಳವೇನು ...{Loading}...

ಈಸು ಕಳವಳವೇನು ಚಿತ್ತದ
ಬೈಸಿಕೆಗೆ ಡೊಳ್ಳಾಸವೇಕೆ ವಿ
ಳಾಸಕೂಣೆಯವೇನು ಹೇಳಾ ನೆನಹಿನಭಿರುಚಿಯ
ವಾಸಿಗಳ ಪೈಸರವನೆನ್ನಲಿ
ಸೂಸಬಾರದೆ ನಿನ್ನ ಹರುಷಕೆ
ಪೈಸರವದೇನೆಂದು ಬೆಸಗೊಂಡನು ಸುಯೋಧನನ ॥28॥

೦೨೯ ಏನನೆಮ್ಬೆನು ಬೊಪ್ಪ ...{Loading}...

ಏನನೆಂಬೆನು ಬೊಪ್ಪ ಕುಂತೀ
ಸೂನುಗಳ ಸಾಮಥ್ರ್ಯಪಣವನು
ದಾನವಾರಿಯ ಹಾಸುಹೊಕ್ಕಿನ ಸೌಖ್ಯ ಸಂಗತಿಯ
ತಾ ನಪುಂಸಕನಾದ ಪರಿಯನ
ದೇನ ವಿಸ್ತರಿಸುವೆನು ಲಜ್ಜಾ
ಮಾನಿನಿಗೆ ತನ್ನೊಕ್ಕತನವಿಂದಿಳಿದು ಹೋಯ್ತೆಂದ ॥29॥

೦೩೦ ನೆಗೆದ ಬುಗುಟಿದೆ ...{Loading}...

ನೆಗೆದ ಬುಗುಟಿದೆ ಹಣೆಯಲವರೋ
ಲಗದ ಸಭೆಯಲಿ ನನೆದ ಸೀರೆಯ
ತೆಗೆಸಿ ಕೊಟ್ಟರು ತಮ್ಮ ಮಡಿವರ್ಗದ ನವಾಂಬರವ
ಬೆಗಡುಗೊಳಿಸಿದರೆನ್ನನವರೋ
ಲಗದ ಸೂಳೆಯರವರ ಸೂಳಿನ
ನಗೆಯ ನೆನೆ ನೆನೆದೆನ್ನ ಮನ ಜರ್ಝರಿತವಾಯ್ತೆಂದ ॥30॥

೦೩೧ ಇದಕೆ ಕಾರಣವೇನು ...{Loading}...

ಇದಕೆ ಕಾರಣವೇನು ಹಣೆ ನೊಂ
ದುದಕದೇನು ನಿಮಿತ್ತವೆನಲಾ
ಸದನದಲಿ ಮಯನಿತ್ತ ಸಭೆಯನು ದೇವರರಿಯಿರಲೆ
ಮುದದಿನಾ ಧರ್ಮಜನು ಘನ ಸಂ
ಪದದಲೋಲಗವಿತ್ತನಾ ದ್ರೌ
ಪದಿ ನಿಜಾನುಜ ಮಂತ್ರಿ ಸಚಿವ ಪಸಾಯಿತರು ಸಹಿತ ॥31॥

೦೩೨ ಆ ಮಹಾಸಭೆ ...{Loading}...

ಆ ಮಹಾಸಭೆ ದೇವ ನಿರ್ಮಿತ
ರಾಮಣೀಯಕ ವಿವಿಧ ರತ್ನ
ಸ್ತೋಮ ತೇಜಃಪುಂಜ ಭಂಜಿತ ನಯನ ವೀಧಿಯಲಿ
ಸಾಮದಲಿ ನಮ್ಮನು ಯುಧಿಷ್ಠಿರ
ಭೂಮಿಪತಿ ಕರೆಸಿದನು ತನ್ನು
ದ್ದಾಮ ವಿಭವವನೆನಗೆ ತೋರಲು ತತ್ಸಭಾಸ್ಥಳಕೆ ॥32॥

೦೩೩ ಹರಹಿನಲಿ ಹಿರಿದಾಯ್ತು ...{Loading}...

ಹರಹಿನಲಿ ಹಿರಿದಾಯ್ತು ಕೆಂದಾ
ವರೆಯ ವನ ಬೇರೊಂದು ತಾಣದೊ
ಳುರವಣಿಯ ಬೆಳದಿಂಗಳೌಕಿದುದೊಂದು ತಾಣದಲಿ
ಹರಿವ ಯಮುನಾ ನದಿಯನಲ್ಲಿಗೆ
ತರಿಸಿದವರಾರೆನಲು ಮಣಿ ಬಂ
ಧುರದ ಬೆಳಗಿನ ಲಹರಿ ಮುರಿದುದು ತನ್ನ ಜಾಣುಮೆಯ ॥33॥

೦೩೪ ಹೊಕ್ಕ ಸಾಲಲಿ ...{Loading}...

ಹೊಕ್ಕ ಸಾಲಲಿ ಹೊಳೆವ ಮಣಿರುಚಿ
ಮುಕ್ಕಳಿಸಿದವು ಕಂಗಳನು ನಡೆ
ದಿಕ್ಕೆಲನ ನೋಡಿದರೆ ಮುರಿದೊಳಸರಿದವಾಲಿಗಳು
ಉಕ್ಕುವಮಲಚ್ಛವಿಗಳಲಿ ಮನ
ಸಿಕ್ಕಿ ಹೊಲಬಳಿದುದು ವಿವೇಕವ
ಡೊಕ್ಕರಸಿ ಕೆಡಹಿದವು ಬಹುವಿಧ ರತ್ನಕಾಂತಿಗಳು ॥34॥

೦೩೫ ಹಿಡಿದವೆನ್ನೂಹೆಯನು ಮಣಿ ...{Loading}...

ಹಿಡಿದವೆನ್ನೂಹೆಯನು ಮಣಿ ರುಚಿ
ಯೆಡತರದೊಳಿಕ್ಕಿದವು ಭಿತ್ತಿಯ
ಬಿಡೆಯದಲಿ ಝಳುಪಿಸುವ ನೀಲದ ಲಳಿಯ ಲಹರಿಯಲಿ
ತಡಿಯ ಕಾಣೆನು ತಳಿತ ಕಾಂತಿಯ
ಕಡಲ ವಿಮಲ ಸ್ಪಟಿಕ ಜಲದಲಿ
ಮಿಡುಕಲಂಜಿದವಂಘ್ರಿಗಳು ನರನಾಥ ಕೇಳ್ ಎಂದ ॥35॥

೦೩೬ ಸ್ಥಳವೆ ಜಲರೂಪದಲಿ ...{Loading}...

ಸ್ಥಳವೆ ಜಲರೂಪದಲಿ ಜಲವೇ
ಸ್ಥಳದ ಪಾಡಿನಲಿದ್ದುದದು ಕೆಲ
ಬಲನ ಭಿತ್ತಿಯ ಕಂಬ ಕಂಬದ ನಡುವೆ ಭಿತ್ತಿಗಳು
ಹೊಳಹನೇ ಕಂಡೆನು ವಿವೇಕದ
ಕಳಿವು ಚಿತ್ತದ ಸೆರೆ ದುಹಾರದೊ
ಳಿಳಿದವಕ್ಷಿಗಳಿಂತು ಸೋತೆನು ತಂದೆ ಕೇಳ್ ಎಂದ ॥36॥

೦೩೭ ಮುನ್ದೆ ವಿಮಲ ...{Loading}...

ಮುಂದೆ ವಿಮಲ ಸ್ಫಟಿಕ ಭೂಮಿಯ
ದೊಂದು ಠಾವಿನೊಳೀಕ್ಷಿಸುತೆ ಕೊಳ
ನೆಂದು ಬಗೆದೆನು ನಿಂದು ಸಂವರಿಸಿದೆನು ಮುಂಜೆರಗ
ಅಂದು ದ್ರೌಪದಿ ಸಹಿತ ನಾರೀ
ವೃಂದ ಕೈಗಳ ಹೊಯ್ದು ಮಿಗೆ ಗೊ
ಳ್ಳೆಂದು ನಕ್ಕುದು ನೊಂದು ತಲೆವಾಗಿದೆನು ಲಜ್ಜೆಯಲಿ ॥37॥

೦೩೮ ಊಹೆಯಲಿ ತಡವರಿಸಿ ...{Loading}...

ಊಹೆಯಲಿ ತಡವರಿಸಿ ಹೆಜ್ಜೆಯ
ಗಾಹುಗತಕದೊಳಿಡುತ ಕಾಂತಿಯ
ಸೋಹೆಯರಿಯದೆ ಬೀದಿಯಲಿ ಕಂಡೆನು ಸರೋವರವ
ಆ ಹರಿಬವನು ಮುರಿವೆನೆಂದಿದ
ನೂಹಿಸದೆ ನಾ ಸ್ಫಟಿಕವೆಂದು
ತ್ಸಾಹಿಸಲು ನೀರಾಯ್ತು ನನೆದೆನು ನಾಭಿದಘ್ನದಲಿ ॥38॥

೦೩೯ ಮತ್ತೆ ಗೊಳ್ಳೆನ್ದುದು ...{Loading}...

ಮತ್ತೆ ಗೊಳ್ಳೆಂದುದು ನೃಪಾಲನ
ಮತ್ತ ಕಾಶಿನಿಯರು ಯುಧಿಷ್ಠಿರ
ನಿತ್ತ ದಿವ್ಯ ದುಕೂಲವನು ತಡಿಗಡರಿ ತೊಡಚಿದೆನು
ಬತ್ತಿತೆನ್ನಭಿಮಾನ ಜಲನಿಧಿ
ಮತ್ತೆ ಮಾರಿಯ ಮಸಕವನು ನೀ
ವ್ಚಿತ್ತವಿಸಿರೇ ಬೊಪ್ಪಯೆಂದನು ಕೌರವರ ರಾಯ ॥39॥

೦೪೦ ನಮ್ಬಿಸಿದುದೊನ್ದೆಡೆಯ ...{Loading}...

ನಂಬಿಸಿದುದೊಂದೆಡೆಯ ಬಾಗಿಲು
ಬಿಂಬಿಸಿತು ಭಿತ್ತಿಯಲಿ ತತ್ಪ್ರತಿ
ಬಿಂಬವೆಂದಾನರಿಯದೊಡಹಾಯಿದೆನು ಚೌಕಿಗೆಯ
ಎಂಬೆನೇನನು ಹೊರಳಿ ನಗುವ ನಿ
ತಂಬಿನಿಯರನು ಭೀಮ ಪಾರ್ಥರ
ಡಂಬರವ ಕಂಡಸುವ ಹಿಡಿದೆನು ನೋಡಿಕೊಳ್ಳೆಂದ ॥40॥

೦೪೧ ನೊನ್ದುದೇ ಹಣೆ ...{Loading}...

ನೊಂದುದೇ ಹಣೆ ಮನದೊಳಗೆ ಕಡು
ನೊಂದೆನವದಿರ ನಗೆಗೆ ನಡೆದೆನು
ಮುಂದಣೋವರಿ ಬಾಗಿಲನು ಕಂಡೆನ್ನ ಮನದೊಳಗೆ
ಹಿಂದೆ ಹೇರಿದ ಭಂಗವೇ ಸಾ
ಕೆಂದು ಸುಪ್ರೌಢಿಯಲಿ ಬಾಗಿಲ
ನೊಂದು ಠಾವಿನೊಳರಸಿ ತಡವರಿಸಿದೆನು ಭಿತ್ತಿಗಳ ॥41॥

೦೪೨ ನಗೆಗೆ ನಗೆ ...{Loading}...

ನಗೆಗೆ ನಗೆ ಕುಂಟಣಿ ವಿವೇಕದ
ಹೊಗೆಗೆ ಹೊಗೆ ಸಖಿಯಾದುದಲ್ಲಿಯ
ಹಗರಣುಗ ನಾನಾದೆನದು ನೋಟಕದ ಜನವಾಯ್ತು
ನಗುವವರ ಜರೆದನೆ ಯುಧಿಷ್ಠಿರ
ನಗೆಯ ಮರೆದನೆ ಬೊಪ್ಪ ನಿಮ್ಮಯ
ಮಗನವಸ್ಥಾರೂಪವಿದು ಚಿತ್ತವಿಸಿ ನೀವೆಂದ ॥42॥

೦೪೩ ಒಡ್ಡವಿಸಿತೆನ್ನಾಟ ನಗೆಯೊಳ ...{Loading}...

ಒಡ್ಡವಿಸಿತೆನ್ನಾಟ ನಗೆಯೊಳ
ಗಡ್ಡ ಬಿದ್ದಳು ಪಾಂಡುಪುತ್ರರ
ಬೊಡ್ಡಿ ಬಿಂಕದಲವರು ಬಿರಿದರು ಭೀಮ ಫಲಗುಣರು
ಖಡ್ಡಿ ಗರುವೆನ್ನಿಂದ ರೋಷದ
ಗೊಡ್ಡು ನಾನಾದೆನು ವಿಘಾತಿಯ
ಬಡ್ಡಿಗಿನ್ನಕ ಬದುಕಿದೆನು ಧೃತರಾಷ್ಟ್ರ ಕೇಳ್ ಎಂದ ॥43॥

೦೪೪ ಸಿಙ್ಗಿಯನು ಬಿತ್ತಿದೆನು ...{Loading}...

ಸಿಂಗಿಯನು ಬಿತ್ತಿದೆನು ಪಾಂಡವ
ರಂಗದಲಿ ತತ್ಫಲದ ಬೆಳಸಿನ
ಸಿಂಗಿಯಲಿ ತಾ ಸಾವೆನಲ್ಲದೊಡಗ್ನಿ ಕುಂಡದಲಿ
ಭಂಗಿಸುವೆನಾ ಫಲದೊಳೆನ್ನನು
ನುಂಗಬೇಹುದು ವಹ್ನಿ ಮೇಣೀ
ಗಂಗೆಯಲಿ ಬಿದ್ದೊಡಲ ನೀಗುವೆನೆನುತ ಬಿಸುಸುಯ್ದ ॥44॥

೦೪೫ ಆ ಯುಧಿಷ್ಠಿರ ...{Loading}...

ಆ ಯುಧಿಷ್ಠಿರ ಸಹಿತ ನೀನೇ
ರಾಯನಾಗಿರು ಮೇಣು ನಮ್ಮೀ
ತಾಯಿ ಸಂತಸಬಡಲಿ ದುಶ್ಶಾಸನನ ಪಟ್ಟದಲಿ
ರಾಯತನವೆಮಗಿಂದ್ರ ಲೋಕದ
ಲಾಯದಲಿ ದಿಟವೆಂದು ನುಡಿವರು
ಜೋಯಿಸರು ಸಾಕವರ ವಚನ ನಿರರ್ಥವಲ್ಲೆಂದ ॥45॥

೦೪೬ ಪುರದಲೆಮ್ಬತ್ತೆಣ್ಟು ಸಾವಿರ ...{Loading}...

ಪುರದಲೆಂಬತ್ತೆಂಟು ಸಾವಿರ
ಧರಣಿಯಮರರು ನಿತ್ಯ ಪಡೆಯವ
ರರಸ ಕೇಳೈ ಹತ್ತು ಸಾವಿರ ಹೊನ್ನತಳಿಗೆಯಲಿ
ವರ ಯತೀಶರು ಹತ್ತು ಸಾವಿರ
ವರಮನೆಯಲುಂಬುದು ನೃಪಾಲಾ
ಧ್ವರದ ಸಿರಿಯನು ನೀವೆ ಕಂಡಿರೆಯೆಂದನಾ ಭೂಪ ॥46॥

೦೪೭ ಕೇಳಿದನು ಬಿಸುಸುಯ್ದನಕಟ ...{Loading}...

ಕೇಳಿದನು ಬಿಸುಸುಯ್ದನಕಟ ವಿ
ಕಾಳಿಸಿತೆ ಕೌರವನ ಬುದ್ಧಿ ವಿ
ಟಾಳ ಸಂಗತಿಯಾಯ್ತಲಾ ಪಿಸುಣಾರ ಕೆರಳಿಚದು
ಕೇಳು ಮಗನೇ ಧರ್ಮಪುತ್ರನ
ಮೇಲೆ ಮುನಿವರೆ ರಾಜಋಷಿ ನರ
ಪಾಲ ಮಾತ್ರವೆ ಶಿವ ಮಹಾದೇವೆಂದನಾ ಭೂಪ ॥47॥

೦೪೮ ಸತಿಯರಲಿ ನಿಮ್ಮವ್ವೆ ...{Loading}...

ಸತಿಯರಲಿ ನಿಮ್ಮವ್ವೆ ಸುಪತಿ
ವ್ರತೆ ಮಹಾಖಳ ನೀನು ಬೀಜ
ಸ್ಥಿತಿಯಲೂಣಯವಿಲ್ಲ ನಿನ್ನಯ ಬುದ್ಧಿ ದೋಷವಿದು
ಕೃತಕವೋ ಸಹಜವೋ ನವೀನ
ಸ್ಥಿತಿಯ ಕಂಡೆನು ಶಿವ ಶಿವಾ ದು
ರ್ಮತಿಗಳಾವುದ ನೆನೆಯರೆಂದನು ಸುಯ್ದು ಧೃತರಾಷ್ಟ್ರ ॥48॥

೦೪೯ ಪಾಣ್ಡುವಿನ ಮಕ್ಕಳುಗಳಾರಾ ...{Loading}...

ಪಾಂಡುವಿನ ಮಕ್ಕಳುಗಳಾರಾ
ಪಾಂಡುವಿನಲೆನ್ನಲಿ ಭೇದವ
ಕಂಡೆಲಾ ನೀನವರಿಗೇನಪ್ರಾಪ್ತವೇ ಧರಣಿ
ಉಂಡು ಬದುಕುವ ಬಹಳ ಭಾಗ್ಯರ
ಕಂಡಸೂಯಂಬಡುವ ಖಡ್ಡರ
ಭಂಡರೆನ್ನದೆ ಲೋಕ ನಿನಗಿದು ಸಾಮ್ಯವಲ್ಲೆಂದ ॥49॥

೦೫೦ ಅಹುದು ಬೊಪ್ಪ ...{Loading}...

ಅಹುದು ಬೊಪ್ಪ ವೃತಾಭಿಮಾನದ
ಕುಹಕಿ ಹೋಗಲಿ ನಿಮ್ಮ ಚಿತ್ತಕೆ
ಬಹ ಕುಮಾರರ ಕೂಡಿ ನಡೆವುದು ಪಾಂಡುನಂದನರ
ಮಹಿಯ ಹಂಗಿಂಗೋಸುಗವೆ ಬಿ
ನ್ನಹವ ಮಾಡಿದೆನೆನಗೆ ಭಂಡಿನ
ರಹಣಿ ಬಂದುದು ಸಾಕಲೇ ಸೊಗಸಾಯ್ತು ಲೇಸೆಂದ ॥50॥

೦೫೧ ತಾಯೆ ನೇಮವಗೊಣ್ಡೆನಯ್ಯಂ ...{Loading}...

ತಾಯೆ ನೇಮವಗೊಂಡೆನಯ್ಯಂ
ಗಾ ಯುಧಿಷ್ಠಿರನಾತ್ಮಜನಲೇ
ವಾಯುಸುತ ನರ ನಕುಲ ಸಹದೇವರು ಕುಮಾರರಲೆ
ಈ ಯುಗದಲಿನ್ನವರ ಸಂತತಿ
ದಾಯ ಭಾಗಿಗಳಾಗಿ ಬದುಕಲಿ
ರಾಯರಿಲ್ಲಾ ಮತ್ತೆ ನಮ್ಮನು ರಕ್ಷಿಸುವರೆಂದ ॥51॥

೦೫೨ ಅರಸ ಧರ್ಮಿಷ್ಠನು ...{Loading}...

ಅರಸ ಧರ್ಮಿಷ್ಠನು ಯುಧಿಷ್ಠಿರ
ಧರಣಿಪತಿಯುತ್ತಮನು ಪವನಜ
ನರರು ವಿನಯಾನ್ವಿತರು ನೀವೇ ಪುತ್ರವತ್ಸಲರು
ಧರಣಿಗಾವಿನ್ನೈಸಲೇ ನೂ
ರ್ವರು ಕುಮಾರರು ಹೊರಗೆ ನಿಮ್ಮಯ
ಕರುಣವೇ ಸಾಮ್ರಾಜ್ಯ ನಮ್ಮನು ಬೀಳುಗೊಡಿರೆಂದ ॥52॥

೦೫೩ ಆಯ ಛಲವಭಿಮಾನ ...{Loading}...

ಆಯ ಛಲವಭಿಮಾನ ಹೋಗಲಿ
ಕಾಯಬೇಕೆಂಬರೆ ನೃಪಾಲರ
ಬಾಯ ತಂಬುಲ ತಿಂದು ಹೊರೆವೆವು ಬೆಂದ ಬಸುರುಗಳ
ಆಯ ಛಲವಾಚಂದ್ರತಾರಕ
ಕಾಯವಧ್ರುವವೆಂಬಡಿದಕೆ ಸ
ಹಾಯವಿದೆಲಾ ಕಾಲಕೂಟ ಕಠೋರ ನದಿಯೆಂದ ॥53॥

೦೫೪ ಅರಸನಭ್ಯುದಯವನು ಭೀಮನ ...{Loading}...

ಅರಸನಭ್ಯುದಯವನು ಭೀಮನ
ಧರಧುರವನರ್ಜುನನ ಬಿಂಕವ
ನರಸಿಯಾಟೋಪವನು ಮಾದ್ರೀಸುತರ ಸಂಭ್ರಮವ
ಹೊರೆಯ ಧೃಷ್ಟದ್ಯುಮ್ನ ದ್ರುಪದಾ
ದ್ಯರ ವೃಥಾಡಂಬರವ ಕಂಡೆದೆ
ಬಿರಿದುದಳುಕಿದೆನಳುಕಿದೆನು ಸಂತವಿಸಲರಿದೆಂದ ॥54॥

೦೫೫ ಕರಗಿದಳು ಗಾನ್ಧಾರಿ ...{Loading}...

ಕರಗಿದಳು ಗಾಂಧಾರಿ ಕಂಬನಿ
ದುರುಗಲಲಿ ಧೃತರಾಷ್ಟ್ರನೆದೆ ಜ
ರ್ಝರಿತವಾದುದು ಮಗನ ಮಾತಿನ ಮುಸಲ ಹತಿಗಳಲಿ
ಸುರಿವ ನಯನಾಂಬುಗಳ ಮೂಗಿನ
ಬೆರಳ ತೂಗುವ ಮಕುಟದವನೀ
ಶ್ವರನು ಮೌನದೊಳಿದ್ದನೊಂದು ವಿಗಳಿಗೆ ಮಾತ್ರದಲಿ ॥55॥

೦೫೬ ಮಾತು ಸೊಗಸದಲಾ ...{Loading}...

ಮಾತು ಸೊಗಸದಲಾ ವೃಥಾ ನೀ
ವೇತಕೆನ್ನನು ಕರೆಸಿದಿರಿ ನಿ
ಮ್ಮಾತಗಳು ಭೀಮಾರ್ಜುನರು ಸಹಿತೀ ಮಹೀತಳವ
ತಾತ ನೀವಾಳುವುದು ತಾಯೆ ಸು
ನೀತನಾ ಧರ್ಮಜನು ಧರ್ಮ ವಿ
ಘಾತಕರು ನಾವೆಮ್ಮ ಕಳುಹುವುದೆನುತ ಹೊರವಂಟ ॥56॥

೦೫೭ ಎಲೆಗೆ ಕರೆಯಾ ...{Loading}...

ಎಲೆಗೆ ಕರೆಯಾ ಪಾಪಿ ಕೌರವ
ಕುಲ ಕುಠಾರನ ನಿನ್ನ ಮಗನೊಡ
ನಳಿವೆನೈಸಲೆ ಪಾಂಡುಪುತ್ರರ ವೈರ ಬಂಧದಲಿ
ತಿಳುಹಿ ತಾಯೆನಲಾಕೆ ಶಕುನಿಯ
ಕಳುಹಿ ಕರೆಸಿದಡಾತ ಮರಳಿದ
ನಳಲುದೊರೆಯಲಿ ಮೂಡಿ ಮುಳುಗಿದನಂದು ಧೃತರಾಷ್ಟ್ರ ॥57॥

೦೫೮ ಏನ ನೆನೆದೈ ...{Loading}...

ಏನ ನೆನೆದೈ ಮಗನೆ ಕುಂತೀ
ಸೂನುಗಳ ರಾಜ್ಯಾಪಹಾರದೊ
ಳೇನು ಬುದ್ಧಿ ವಿಳಾಸವಾವುದು ಕಾರ್ಯಗತಿ ನಿನಗೆ
ದಾನದಲಿ ಮೇಣ್ ಸಾಮದಲಿ ಭೇ
ದಾನುಮತದಲಿ ದಂಡದಲಿ ನೀ
ವೇನ ನಿಶ್ಚೈಸಿದಿರಿ ಹೇಳಿನ್ನಂಜಬೇಡೆಂದ ॥58॥

೦೫೯ ತಿನ್ದ ವಿಷವಳ್ಕಿದವು ...{Loading}...

ತಿಂದ ವಿಷವಳ್ಕಿದವು ಮಡುವಿನೊ
ಳಂದು ಬಿಸುಟರೆ ಮುಳುಗಿ ಸುಖದಲಿ
ಮಿಂದು ಹೊರವಂಟರು ಮಹಾಗ್ನಿಯ ಭವನ ಭಂಗದಲಿ
ಒಂದು ಕೂದಲು ಸೀಯದನಿಬರು
ಬಂದರಿವು ಮೊದಲಾದ ಕೃತ್ರಿಮ
ದಿಂದ ಪಾಂಡವರಳಿದುದಿಲ್ಲಿದಕೇನು ಹದನೆಂದ ॥59॥

೦೬೦ ನೀವು ಚಿತ್ತವಿಸಿದೊಡೆ ...{Loading}...

ನೀವು ಚಿತ್ತವಿಸಿದೊಡೆ ನೆತ್ತದೊ
ಳಾವು ಸೋಲಿಸಿ ಕೊಡುವೆವವರನು
ನೀವು ಕರೆಸುವುದಿಲ್ಲಿಗುಚಿತ ಪ್ರೀತಿವಚನದಲಿ
ನಾವು ಜಾಣರು ಜೀಯ ಜೂಜಿನ
ಜೀವ ಕಲೆಯಲಿ ಧರ್ಮ ಸುತನಿದ
ನಾವ ಹವಣೆಂದರಿಯನಾತನ ಜಯಿಸಬಹುದೆಂದ ॥60॥

೦೬೧ ಅಹುದು ತಪ್ಪೇನಿದುವೆ ...{Loading}...

ಅಹುದು ತಪ್ಪೇನಿದುವೆ ಸಾಧನ
ವಹುದು ವಿದುರನ ಬುದ್ಧಿಗಭಿಮತ
ವಹಡೆ ಕರೆಸುವೆವೈಸಲೇ ಬೆಸಸುವೆನು ವಿದುರಂಗೆ
ಕುಹಕವಾತನಲಿಲ್ಲ ನೋಡುವ
ನಿಹಪರತ್ರದ ಹಿತವನಿದ ನಿ
ರ್ವಹಿಸಿ ಕೊಡುವರೆ ಮಂತ್ರವೆಂದನು ಮಗಗೆ ಧೃತರಾಷ್ಟ್ರ ॥61॥

೦೬೨ ಖೂಳರಲಿ ಸತ್ಕಳೆಗಳನು ...{Loading}...

ಖೂಳರಲಿ ಸತ್ಕಳೆಗಳನು ನೆರೆ
ಕೇಳದವರಲಿ ಮಂತ್ರ ಬೀಜವ
ನಾಲಿಯಿಲ್ಲದವಂಗೆ ರೂಪು ವಿಲಾಸ ವಿಭ್ರಮವ
ಹೇಳುವಂತಿರೆ ನಿಮ್ಮ ವಿದುರನ
ಕೇಳಿಸಿದರಾ ಕಾರ್ಯಗತಿಗೆ ವಿ
ತಾಳವಾಗದೆ ಬೊಪ್ಪಯೆಂದನು ನಗುತ ಕುರುರಾಯ ॥62॥

೦೬೩ ಅರುಹಿದರೆ ವಿದುರಙ್ಗೆ ...{Loading}...

ಅರುಹಿದರೆ ವಿದುರಂಗೆ ಕಾರ್ಯವ
ಮುರಿವನಾತನು ಬಳಿಕ ನಿಮ್ಮಯ
ಕಿರಿಯ ತಮ್ಮನ ಮಕ್ಕಳಿಗೆ ಕೊಡಿ ಹಸ್ತಿನಾಪುರವ
ಹರಕುಗಳು ನಾವ್ ನೂರು ಮಕ್ಕಳು
ಹೊರಗೆ ಬದುಕುವೆವೈಸಲೇ ನಿ
ಮ್ಮುರುವ ಮಕ್ಕಳುಗೂಡಿ ಸುಖದಲಿ ರಾಜ್ಯವಾಳೆಂದ ॥63॥

೦೬೪ ಪಾರಲೌಕಿಕದುಳಿವನೈಹಿಕ ದೋರೆ ...{Loading}...

ಪಾರಲೌಕಿಕದುಳಿವನೈಹಿಕ
ದೋರೆ ಪೋರೆಯನಿಂದು ಬಲ್ಲವ
ರಾರು ಹೇಳಾ ವಿದುರನಲ್ಲದೆ ನಮ್ಮ ಪೈಕದಲಿ
ಸಾರವಾತನ ಮಾತು ನಯ ವಿ
ಸ್ತಾರ ಸಹಿತಿಹುದಲ್ಲಿ ನಂಬುಗೆ
ದೂರವಿಲ್ಲೆನಗರಿಯೆ ನೀ ನಿಲ್ಲೆಂದನಂಧನೃಪ ॥64॥

೦೬೫ ತಿಳುಹಿ ವಿದುರನನವರ ...{Loading}...

ತಿಳುಹಿ ವಿದುರನನವರ ಕರೆಯಲು
ಕಳುಹುವೆನು ಯಮಸೂನು ನಿಮ್ಮಯ
ಬಲುಹಿನಲಿ ಬಳುಕುವನೆ ಭೀರ್ಮಾಜನರು ಕಿರುಕುಳರೆ
ತಿಳಿವೊಡೀತನ ಬುದ್ಧಿಯೇ ನಿ
ರ್ಮಲಿನವಹುದು ನಿಧಾನವಿದು ನೀ
ಕಳವಳಿಸದಿದ್ದರೆ ಮನೋರಥ ಸಿದ್ಧಿಯಹುದೆಂದ ॥65॥

೦೬೬ ನೀ ಕರುಣದಲಿ ...{Loading}...

ನೀ ಕರುಣದಲಿ ನಮ್ಮ ಸಲಹುವ
ಡಾ ಕುಮಾರರ ಕರೆಸಿಕೊಟ್ಟರೆ
ಸಾಕು ಮತ್ತೊಂದಿಹುದಲೇ ಪಾಂಚಾಲ ನಂದನೆಯ
ನೂಕಿ ಮುಂದಲೆವಿಡಿದು ತೊತ್ತಿರೊ
ಳಾಕೆಯನು ಕುಳ್ಳಿರಿಸಿದಂದು ವಿ
ಶೋಕನಹೆನಾ ದಿವಸದಲಿ ಕೃತಕೃತ್ಯ ತಾನೆಂದ ॥66॥

೦೬೭ ಪೋಗು ನೀನೆನ್ದವನ ...{Loading}...

ಪೋಗು ನೀನೆಂದವನ ಕಳುಹಿದ
ನಾಗ ಮನದೊಳಗಧಿಕ ಚಿಂತಾ
ಸಾಗರದೊಳೋರಂತೆ ಮುಳುಗಿದನಂದು ಧೃತರಾಷ್ಟ್ರ
ಈಗಳಿನ ಸವಿಗಳುಪಿ ಮೇಲಣ
ತಾಗನರಿಯನು ಕಂದನಿದಕಿ
ನ್ನೇಗುವೆನು ಗಾಂಧಾರಿ ನೀ ಹೇಳೆಂದನಾ ಭೂಪ ॥67॥

೦೬೮ ಅವರು ಕಪಟವನರಿಯರೀತನ ...{Loading}...

ಅವರು ಕಪಟವನರಿಯರೀತನ
ಹವಣ ನೀನೇ ಕಂಡೆ ಕರೆಸಿದ
ಡವರು ನಿಲ್ಲರು ಗೋರಿಯಲಿ ಬಳಿಸಂದ ಮೃಗದಂತೆ
ನವಗೆ ಬಹುದಪಕೀರ್ತಿಯೀಗಿ
ನ್ನವನ ಕುಹಕವ ಲೋಕವರಿಯದು
ಶಿವ ಶಿವಾಯೆಂದಳಲಿ ಮರುಗಿದನಂದು ಧೃತರಾಷ್ಟ್ರ ॥68॥

೦೬೯ ಮುರಿವೆನೇ ಮುನಿದಿವರು ...{Loading}...

ಮುರಿವೆನೇ ಮುನಿದಿವರು ನೂರ್ವರು
ತೊರೆವರೆನ್ನನು ತೊಡಕಿಸುವನೇ
ತರಿದು ಬಿಸುಡುವರವರು ಕೌರವ ಶತಕವನು ಬಳಿಕ
ಹೊರಗೊಳಗೆ ಹದನಿದು ನಿಧಾನಿಸ
ಲರಿಯೆನೆನ್ನಸುವಿನಲಿ ಹೃದಯದ
ಸೆರೆ ಬಿಡದು ಶಿವ ಶಿವಯೆನುತ ಮರುಗಿದನು ಧೃತರಾಷ್ಟ್ರ ॥69॥

೦೭೦ ಏಕೆ ನಿಮಗೀ ...{Loading}...

ಏಕೆ ನಿಮಗೀ ಚಿಂತೆಯಿಂದೆರ
ಡೌಕಿದವು ದುಷ್ಕಾರ್ಯ ಸಂಧಿ ವಿ
ವೇಕ ನಿಕರದಲೊರೆದು ಮೋಹರಿಸೊಂದು ಬಾಹೆಯಲಿ
ಈ ಕುರುವ್ರಜ ನೂರ ಹಿಡಿ ಕುಂ
ತೀ ಕುಮಾರರ ಬಿಡು ತನೂಜರ
ನೂಕು ಹಿಡಿ ಪಾಂಡವರನೆಂದಳು ಪತಿಗೆ ಗಾಂಧಾರಿ ॥70॥

೦೭೧ ಐಸಲೇ ತಾನಾದುದಾಗಲಿ ...{Loading}...

ಐಸಲೇ ತಾನಾದುದಾಗಲಿ
ಲೇಸ ಕಾಣೆನು ನಿನ್ನ ಮಕ್ಕಳ
ವಾಸಿಗಳ ವಿಸ್ತಾರ ಮೆರೆಯಲಿ ಹಲವು ಮಾತೇನು
ಆ ಸಭೆಯ ಸರಿಸದ ಸಭಾ ವಿ
ನ್ಯಾಸ ಶಿಲ್ಪಿಗರಾರೆನುತ ಧರ
ಣೀಶ ಕರೆಸಿದನುರು ಸಭಾ ನಿರ್ಮಾಣ ಕೋವಿದರ ॥71॥

೦೭೨ ತೆಗೆಸಿ ಭಣ್ಡಾರದಲಿ ...{Loading}...

ತೆಗೆಸಿ ಭಂಡಾರದಲಿ ಬಹು ವ
ಸ್ತುಗಳನಿತ್ತನು ತರು ಶಿಲಾ ಕೋ
ಟಿಗಳ ತರಿಸಿದನುರು ಸಹಸ್ರಸ್ತಂಭ ಡಂಬರವ
ಝಗ ಝಗಿಪ ಬಹು ಮೌಲ್ಯ ಮುಕ್ತಾ
ಳಿಗಳನುರುತರ ರಶ್ಮಿ ಲಹರಿ
ಸ್ಥಗಿತ ದಿಗು ಭಿತ್ತಿಗಳನನುಪಮ ರತ್ನರಾಶಿಗಳ ॥72॥

೦೭೩ ಮಾಡಿತಗ್ಗದ ಸಭೆ ...{Loading}...

ಮಾಡಿತಗ್ಗದ ಸಭೆ ಸುಧರ್ಮೆಯ
ನೇಡಿಸುವ ಚೆಲುವಿನಲಿ ಪುರದಲಿ
ರೂಢಿಸಿತು ಬಳಿಕಂಧನೃಪನೇಕಾಂತ ಭವನದಲಿ
ಕೂಡಿಕೊಂಡು ಕುಲಾಪಘಾತದ
ಕೇಡಿಗರ ಕಲ್ಪನೆಯ ಕಲುಷದ
ಜೋಡಿಯನೆ ನಿಶ್ಚೈಸಿ ವಿದುರಂಗರುಹಿದನು ಕರೆಸಿ ॥73॥

೦೭೪ ವಿದುರ ಕೇಳೈ ...{Loading}...

ವಿದುರ ಕೇಳೈ ಪಾಂಡವರ ಸಂ
ಪದಕೆ ಸರಿಯೊ ಮಿಗಿಲೋ ಸಭೆ ತಾ
ನಿದು ವಿಶೇಷವಲಾ ಸಮಸ್ತ ಕ್ಷತ್ರ ವಿಭವದಲಿ
ಇದರೊಳೋಲಗವಿತ್ತು ಹರ್ಷಾ
ಸ್ಪದರು ಕುರು ನೃಪರಲಿ ಸುಖ ದ್ಯೂ
ತದಲಿ ರಮಿಸಲಿ ಕರೆದು ತಾ ಕುಂತೀ ಕುಮಾರಕರ ॥74॥

೦೭೫ ಅವರ ವಿಭವವನವರ ...{Loading}...

ಅವರ ವಿಭವವನವರ ಯಾಗೋ
ತ್ಸವವನಿಂದ್ರಪ್ರಸ್ಥದಲಿ ಕಂ
ಡೆವು ಮನೋಹರವಾಯ್ತು ಬೆಳವಿಗೆ ಪಾಂಡುನಂದನರ
ಅವರು ಹಸ್ತಿನಪುರಿಗೆ ಬಂದು
ತ್ಸವದಲೀ ಸಭೆಯಲಿ ಸುಖದ್ಯೂ
ತವನು ರಮಿಸಲಿ ಸೇರಿ ಬದುಕಲಿ ಪಾಂಡುಸುತರೆಂದ ॥75॥

೦೭೬ ಮಾತು ಹೊಲಸಿನ ...{Loading}...

ಮಾತು ಹೊಲಸಿನ ಗಂಧವಾಗಿದೆ
ಭೀತಿ ರಸದಲಿ ಮನ ಮುಳುಗಿತೀ
ಪ್ರೀತಿ ಮಾರಿಯ ಮುಸುಕನುಗಿವುದನಾರು ಕಲಿಸಿದರು
ಕೈತವದ ಕಣಿ ನಿನ್ನ ಮಗ ನೀ
ಸೋತೆಲಾ ಶಿವಶಿವ ಸುಖಾಂಗ
ದ್ಯೂತವೇ ಹಾ ಹಾಯೆನುತ ತಲೆದೂಗಿದನು ವಿದುರ ॥76॥

೦೭೭ ಹಾ ಮರುಳೆ ...{Loading}...

ಹಾ ಮರುಳೆ ಕೆಣಕುವರೆ ಫಲಗುಣ
ಭೀಮರನು ಮಿಗೆ ಹೆಚ್ಚಿ ಬೆಳೆದು
ದ್ದಾಮ ಸಿರಿಯಿದು ಹಸ್ತಿನಾಪುರವಕಟ ಕೆಡಿಸಿದೆಲ
ಕೈ ಮಗುಚದೇ ವಿಭವವಿದು ನಿ
ರ್ನಾಮರಾರೋ ಬಿತ್ತಿದರು ಕುರು
ಭೂಮಿಯಲಿ ವಿಷ ಬೀಜವನು ಹಾಯೆನುತ ಬಿಸುಸುಯ್ದ ॥77॥

೦೭೮ ವಿದುರ ಬೆಮ್ಬೀಳದಿರು ...{Loading}...

ವಿದುರ ಬೆಂಬೀಳದಿರು ಬಿಂಕದ
ಹದನ ಬಲ್ಲೆನು ಭೀಮ ಪಾರ್ಥರ
ಮುದವ ಬಯಸುವೆ ಮುನಿಯಲಾಪೆನೆ ಹೇಳು ತನಯರಿಗೆ
ಇದು ಮಹಾಸಭೆಯಲ್ಲಿ ಮೇಳಾ
ಪದಲಿ ಕುರು ಪಾಂಡವರು ಸದ್ಯೂ
ತದಲಿ ರಮಿಸುವರೇನು ಹೊಲ್ಲೆಹವೆಂದನಂಧ ನೃಪ ॥78॥

೦೭೯ ಮೊದಲಲಿದು ಸುದ್ಯೂತವವಸಾ ...{Loading}...

ಮೊದಲಲಿದು ಸುದ್ಯೂತವವಸಾ
ನದಲಿ ವಿಷಮ ದ್ಯೂತದಲಿ ನಿಲು
ವುದು ನಿವಾರಣವುಂಟೆ ಮರ್ಮವನಿರಿವ ಸಬಳದಲಿ
ತುದಿಗೆ ತಾನಿದಪಥ್ಯ ಕುರುವ
ರ್ಗದಲಿ ವಿನಾಶಕ ಬೀಜವದು ನಿಮ
ಗಿದರೊಳಗೆ ಸೊಗಸಾದುದೇ ಕೈಕೊಂಡೆ ನಾನೆಂದ ॥79॥

೦೮೦ ಕರೆದು ತಾ ...{Loading}...

ಕರೆದು ತಾ ನೀನವರ ನಾನುಪ
ಚರಿಸುವಂದವ ನೋಡು ನಿನ್ನಯ
ಕರಣವೃತ್ತಿಗೆ ಕಠಿಣವಹವೇ ನಮ್ಮ ಮಾತುಗಳು
ದುರುಳರವರಿವರೆಂಬರದನಾ
ದರಿಸದಿರು ನೀ ಹೋಗು ಪಾಂಡವ
ಧರಣಿಪರನೊಡಗೊಂಡು ಬಾಯೆಂದಟ್ಟಿದನು ನೃಪತಿ ॥80॥

೦೮೧ ಅರುಹಿದನು ಭೀಷ್ಮಙ್ಗೆ ...{Loading}...

ಅರುಹಿದನು ಭೀಷ್ಮಂಗೆ ಗುರು ಕೃಪ
ರರಿದರಿನ್ನಪಮೃತ್ಯುವೇನೆಂ
ದರಿಯದಿನ್ನುತ್ಸಾಹ ಶಕ್ತಿಗೆ ಮನವ ಮಾಡಿತಲ
ಹರಿದುದೇ ಕುರುವಂಶ ಲತೆ ಹೊ
ಕ್ಕಿರಿದನೇ ಧೃತರಾಷ್ಟ್ರ ನೀ ಬೇ
ಸರದಿರವರನು ಕರೆದು ತಾ ಹೋಗೆಂದರವರಂದು ॥81॥

೦೮೨ ಶುಭಮುಹೂರ್ತ ವಿಳಾಸಲಗ್ನದೊ ...{Loading}...

ಶುಭಮುಹೂರ್ತ ವಿಳಾಸಲಗ್ನದೊ
ಳಿಭ ಪುರಿಯ ಹೊರವಂಟು ಸುರಸ
ನ್ನಿಭನು ಬಂದನು ಹಲವು ಪಯಣದಲಿವರ ಪಟ್ಟಣಕೆ
ರಭಸ ಮಿಗಲಿದಿರ್ಗೊಂಡು ತಂದರು
ಸಭೆಗೆ ಮಾನ್ಯ ಯಥೋಪಚಾರ
ಪ್ರಭವ ಸತ್ಕಾರದಲಿ ಕೇಳ್ದರು ಕುಶಲ ಸಂಗತಿಯ ॥82॥

೦೮೩ ಧರಣಿಪತಿ ಗಾಙ್ಗೇಯ ...{Loading}...

ಧರಣಿಪತಿ ಗಾಂಗೇಯ ಗೌತಮ
ಗುರುತನುಜ ಗುರು ಕರ್ಣ ಸೌಬಲ
ಕುರುನೃಪತಿಯನುಜಾತ್ಮಜರು ಗಾಂಧಾರಿ ಭಾನುಮತಿ
ವರಸಚಿವ ಸಾಮಂತ ಪರಿಜನ
ಪುರಜನಂಗಳ ಕುಶಲವನು ವಿ
ಸ್ತರಿಸಿದನು ವಿದುರನು ಮಹೀಪತಿಗಾಪ್ತ ಬಾಂಧವರ ॥83॥

೦೮೪ ಪಾವುಡಙ್ಗಳನಿತ್ತು ಭೂಪನ ...{Loading}...

ಪಾವುಡಂಗಳನಿತ್ತು ಭೂಪನ
ನೋವಿದನು ನಾನಾ ಕಥಾ ಸಂ
ಭಾವನಾನಂತರದ ಮಜ್ಜನ ಭೋಜನಾದಿಗಳ
ಆ ವಿವಿಧ ಸತ್ಕಾರದಲಿ ದಿವ
ಸಾವಸಾನವ ಕಳೆದು ಬಳಿಕ ಸ
ಭಾ ವಳಯದಲಿ ಪಾಂಡುಸುತರಿಗೆ ನುಡಿದನಾ ವಿದುರ ॥84॥

೦೮೫ ಧರಣಿಪತಿ ಬೆಸಸಿದನು ...{Loading}...

ಧರಣಿಪತಿ ಬೆಸಸಿದನು ನೀವೈ
ವರು ಕುಮಾರರು ರಾಜಸೂಯಾ
ಧ್ವರ ಮಹಾವ್ರತದೇಕ ಭುಕ್ತಾದಿಯಲಿ ಬಳಲಿದಿರಿ
ವರ ಸಭೆಯ ರಚಿಸಿದರು ಹಸ್ತಿನ
ಪುರಿಗೆ ಬಿಜಯಂಗೈದು ವಿಭವೋ
ತ್ಕರದ ವಿಮಳ ದ್ಯೂತದಲಿ ರಮಿಸುವುದು ನೀವೆಂದ ॥85॥

೦೮೬ ನೋಡುವುದು ಬಾನ್ಧವರ ...{Loading}...

ನೋಡುವುದು ಬಾಂಧವರ ನಿಮ್ಮಡಿ
ಮಾಡುವುದು ಸೌಖ್ಯವನು ಭಯದಲಿ
ಬಾಡುವುದಲೇ ರಿಪುನೃಪಾಲರ ಸಮರ ಜಯಬೀಜ
ಜೋಡಿಸುವುದಗಲದಲಿ ಕೀರ್ತಿಯ
ಝಾಡಿಯನು ನಿಮ್ಮಭ್ಯುದಯ ಬಳಿ
ಕೇಡಿಸುವುದೈ ದುಂದುಮಾರ ದಿಲೀಪ ದಶರಥರ ॥86॥

೦೮೭ ನಮ್ಬಿಸುವ ನಿಮ್ಮಯ್ಯನಿದ ...{Loading}...

ನಂಬಿಸುವ ನಿಮ್ಮಯ್ಯನಿದ ಬೇ
ಡೆಂಬವರು ಗುರು ಭೀಷ್ಮರುಳಿದವ
ರಂಬಿನೋಪಾದಿಯಲಿ ನಿಲುವರು ಪಲವು ಮಾತೇನು
ಶಂಬರರು ನೃಪ ಕರ್ಣ ಶಕುನಿಗ
ಳೆಂಬವರು ನಿಮ್ಮೊಡನೆ ವಚನಾ
ಡಂಬರವೆ ಬಹುದುಂಟೆ ಬಿಜಯಂಗೈಯಿ ನೀವೆಂದ ॥87॥

೦೮೮ ಕರೆಸುವನು ಧೃತರಾಷ್ಟ್ರ ...{Loading}...

ಕರೆಸುವನು ಧೃತರಾಷ್ಟ್ರ ಗಡ ನ
ಮ್ಮರಸನಲಿ ಧೃತರಾಷ್ಟ್ರನಲಿ ನಮ
ಗೆರಡು ಮನವೇ ಭಾವಭೇದವೆ ಪಾಂಡು ಬೊಪ್ಪನಲಿ
ವರವೆ ದೊರಕಲಿ ಶಾಪವೇ ಮೇಣ್ಬ
ರಲಿ ಭಯವಿಲ್ಲೆಮಗೆ ಬೊಪ್ಪನ
ಕರಣ ಕೃತಿಗೆ ಹಸಾದವೆಂದನು ಧರ್ಮನಂದನನು ॥88॥

೦೮೯ ದ್ಯೂತ ಮೃಗಯಾವ್ಯಸನ ...{Loading}...

ದ್ಯೂತ ಮೃಗಯಾವ್ಯಸನ ಪೌರು
ಷ್ಯಾತಿಶಯ ಮಧುಪಾನ ಕಾಂತಾ
ಪ್ರೀತಿ ದಂಡ ವಿಘಾತಿ ದೂಷಣವರ್ಥ ಸಂಗತಿಯು
ಜಾತ ಸಪ್ತವ್ಯಸನವಿವು ಸಂ
ಪ್ರೀತಿಕರ ಮೊದಲಲಿ ವಿಪಾಕದೊ
ಳಾತು ಕೆಡಿಸುವ ಹದನನರಿದಿಹುದೆಂದನಾ ವಿದುರ ॥89॥

೦೯೦ ಖಳರು ಕೌರವರಕ್ಷಧೂರ್ತರ ...{Loading}...

ಖಳರು ಕೌರವರಕ್ಷಧೂರ್ತರ
ತಿಲಕ ಶಕುನಿ ವಿಕಾರಿಯಾ ದು
ಸ್ಸಳೆಯ ಪತಿ ದೌರ್ಜನ್ಯಮಖದೀಕ್ಷಿತನು ಕಲಿಕರ್ಣ
ಉಳಿದ ಭೀಷ್ಮ ದ್ರೋಣರೇ ನಿ
ಷ್ಫಲ ವಿಧಾನರು ನಿಮ್ಮ ಬೊಪ್ಪನ
ಬಳಕೆ ಕನ್ನಡಿ ನೋಡಿಕೊಳಿ ನೀವೆಂದನಾ ವಿದುರ ॥90॥

೦೯೧ ಪ್ರಕಟವದು ಸಲೆ ...{Loading}...

ಪ್ರಕಟವದು ಸಲೆ ಕರ್ಣ ಕೌರವ
ಶಕುನಿಗಳ ದುಶ್ಚೇಷ್ಟೆ ಭೀಷ್ಮಾ
ದ್ಯಕುಟಿಲರು ಸಲ್ಲರು ಸುಯೋಧನ ಮಂತ್ರ ಸಂಗತಿಗೆ
ಮುಕುರ ಪಥವೆಮ್ಮಯ್ಯನೆಂಬುದು
ವಿಕಳವಲ್ಲಲೆ ವಿದುರ ಪರಿ ಪಾ
ಲಕನಲೇ ಧೃತರಾಷ್ಟ್ರನಾತನ ನಂಬಿ ಬಹೆವೆಂದ ॥91॥

೦೯೨ ಕರೆಸಿ ನಿಮ್ಮಯ ...{Loading}...

ಕರೆಸಿ ನಿಮ್ಮಯ ಮಂತ್ರಿಜನ ಮು
ಖ್ಯರ ಪಸಾಯ್ತರ ಕೇಳುವುದು ಮನ
ದೊರೆಗೆ ತೂಕಕೆ ಬಹರೆ ಭೀಮಾದಿಗಳ ಮತವಿಡಿದು
ಅರಸ ನಿಶ್ಚೈಸುವುದೆನಲು ನೀ
ಮರುಳೆ ವಿದುರ ಭವದ್ವಚೋವಿ
ಸ್ತರಕೆ ಪಡಿಸಣವುಂಟೆ ಶಿವ ಶಿವಾಯೆಂದನಾ ಭೂಪ ॥92॥

೦೯೩ ಹೋಹುದೇನಭಿಮತವೆ ಧೂರ್ತ ...{Loading}...

ಹೋಹುದೇನಭಿಮತವೆ ಧೂರ್ತ
ವ್ಯೂಹವದು ಭೀಷ್ಮಾದಿ ಹಿರಿಯರು
ಸಾಹಸಿಗರಲ್ಲದೆ ರಹಸ್ಯಕೆ ಸಲ್ಲರವರುಗಳು
ಕಾಹುರರು ಕೌರವರು ಸಮರೋ
ತ್ಸಾಹಶಕ್ತಿಗೆ ಠಾವದಲ್ಲ
ವ್ಯಾಹತವೆ ಮತವೆಂದು ಭೀಮಾದಿಗಳ ಬೆಸಗೊಂಡ ॥93॥

೦೯೪ ಜೀಯ ಬಿನ್ನಹವಿನ್ದು ...{Loading}...

ಜೀಯ ಬಿನ್ನಹವಿಂದು ದೇಹ
ಚ್ಛಾಯೆಗುಂಟೇ ಬೇರೆ ಚೇಷ್ಟೆ ನ
ವಾಯಿಯೇ ನಮ್ಮಿನಿಬರಿಗೆ ರಾಜಾಭಿಮಾನದಲಿ
ನೋಯೆ ನೋವುದು ನಿಮ್ಮ ದೇಹದ
ಬೀಯದಲಿ ನಾವ್ ಬೀಯವಹುದೆ
ಮ್ಮಾಯತವು ಸ್ವಾತಂತ್ರ್ಯವೆಮಗಿಲ್ಲೆಂದನಾ ಭೀಮ ॥94॥

೦೯೫ ಕರೆಸುವನು ಧೃತರಾಷ್ಟ್ರ ...{Loading}...

ಕರೆಸುವನು ಧೃತರಾಷ್ಟ್ರ ನಿಮ್ಮದು
ಕರೆವ ಮಣಿಹ ಸುಯೋಧನಾದ್ಯರ
ಮರುಳುಗಳ ಮಾತೇನು ಹಿತವರು ನೀವಲಾ ನನಗೆ
ಧರಣಿಯಿದು ಶಾಶ್ವತವೆ ತಂದೆಗೆ
ಹಿರಿಯನಾ ಧೃತರಾಷ್ಟ್ರನಾಜ್ಞೆಯ
ಶಿರದೊಳಾಂತೆನು ಬಹನೆನುತ ನಿಶ್ಚೈಸಿದನು ನೃಪತಿ ॥95॥

೦೯೬ ಇರುಳ ನೂಕಿದರುದಯದಲಿ ...{Loading}...

ಇರುಳ ನೂಕಿದರುದಯದಲಿ ಭೂ
ಸುರರ ಕರೆಸಿದರಮಳ ಸಾಂವ
ತ್ಸರಿಕ ಸುಮುಹೂರ್ತದಲಿ ಹೊಯಿಸಿದರಂದು ಹೊರಗುಡಿಯ
ಪುರದ ಕಾಹನು ಸಚಿವ ಸಾವಂ
ತರಿಗೆ ನೇಮಿಸಿ ಸಕಲ ದಳ ಮೋ
ಹರದ ದೆಖ್ಖಾಳವನು ಕಂಡನು ಪುರವ ಹೊರವಂಟ ॥96॥

೦೯೭ ಬಿಗಿದ ರೆಞ್ಚೆಯ ...{Loading}...

ಬಿಗಿದ ರೆಂಚೆಯ ಹೊಮ್ಮಿಣಿಯ ಹೊರ
ಜೆಗಳ ಜೋಡಿಯ ಪಕ್ಕಘಂಟೆಯ
ಝಗೆಯ ಮೊಗರಂಬದ ನವಾಯಿಯ ಮಣಿಯ ಜಲವಟೆಯ
ಬಿಗಿದ ಕೂರಂಕುಶದ ಮಾವಂ
ತಿಗನ ಸನ್ನೆಗೆ ಕುಸಿದ ದಂತಿಯ
ಹೆಗಲ ಹೊಂಗದ್ದುಗೆಗೆ ಬಿಜಯಂಗೈದನಾ ಭೂಪ ॥97॥

೦೯೮ ತಳಿತವಿನನುದಯದಲಿ ತಾರಾ ...{Loading}...

ತಳಿತವಿನನುದಯದಲಿ ತಾರಾ
ವಳಿಗಳದ್ಭುತವೆನಲು ಮುಕ್ತಾ
ವಳಿಯ ಧವಳಚ್ಛತ್ರದೆಡಬಲಕೊಲೆವ ಚೌರಿಗಳ
ಕೆಲಬಲದ ಭೀಮಾರ್ಜುನರ ಗಜ
ದಳದ ಮುಂದೆ ಕುಮಾರ ವರ್ಗದ
ಸುಳಿವುಗಳ ಸೌರಂಭದಲಿ ಹೊರವಂಟನಾ ಭೂಪ ॥98॥

೦೯೯ ಮುನ್ದೆ ಮೋಹರ ...{Loading}...

ಮುಂದೆ ಮೋಹರ ತೆಗೆದು ನಡೆದುದು
ಸಂದಣಿಸಿ ನಕುಲಾದಿ ಭೂಪರು
ಹಿಂದೆ ಮಣಿ ಕೇವಣದ ದಡ್ಡಿಯ ಬಿಗಿದ ಬೀಯಗದ
ಗೊಂದಣದ ಹೆಮ್ಮಕ್ಕಳಿದ್ದೆಸೆ
ಯಂದಣದ ಸಂದಣಿಗಳಲಿ ನಡೆ
ತಂದವನಿಬರ ರಾಣಿವಾಸದ ದಂಡಿಗೆಗಳಂದು ॥99॥

೧೦೦ ಉಡಿಗೆಗಳ ದೇಸಿಯ ...{Loading}...

ಉಡಿಗೆಗಳ ದೇಸಿಯ ವಿಳಾಸದ
ತೊಡಿಗೆಗಳ ಮೌಳಿಯ ನವಾಯಿಯ
ಮುಡಿಗಳೆಡ ಬಲದೋರೆನೋಟದ ಬಳ್ಳಿ ಬೆಳಗುಗಳ
ಕಡು ಬೆಮರ ತನು ಪರಿಮಳದೊಳೆಡೆ
ವಿಡದ ಗಗನೋದರದ ಗರುವೆಯ
ರಡಸಿದರು ದ್ರುಪದಾತ್ಮಜೆಯ ದಂಡಿಗೆಯ ಬಳಸಿನಲಿ ॥100॥

೧೦೧ ಭೂರಿ ಭೇರೀ ...{Loading}...

ಭೂರಿ ಭೇರೀ ವಾದ್ಯರವ ಕೈ
ವಾರಿಗಳ ಕಳಕಳದೊಳಡಗಿತು
ನಾರಿಯರ ನೇವುರದ ಮೊಳಗಿನೊಳದ್ದುದಾ ರಭಸ
ಆರು ಹೊಗಳುವರಾ ವಿಭವ ವಿ
ಸ್ತಾರ ಪವಣನು ಪಯಣ ಗತಿಯಲಿ
ಭೂರಮಣನೈತಂದು ಹೊಕ್ಕನು ಹಸ್ತಿನಾಪುರವ ॥101॥

+೧೨ ...{Loading}...