೦೦೦ ಸೂಚನೆ ...{Loading}...
ಸೂಚನೆ : ಅಗ್ರಪೂಜಾವ್ಯಾಜಮುಖದಲಿ
ವಿಗ್ರಹದ ಶಿಶುಪಾಲಶಿರ ಗಗ
ನಾಗ್ರದಲಿ ಕುಣಿದಾಡಲೆಸೆದನು ವೀರ ನಾರಯಣ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂ : ಅಗ್ರಪೂಜೆಯ ನೆಪದಲ್ಲಿ ನಡೆದ ಯುದ್ಧದಲ್ಲಿ ವೀರನಾರಾಯಣನು ಶಿಶುಪಾಲನ ತಲೆಯನ್ನು ಕತ್ತರಿಸಿ ಆಕಾಶದಲ್ಲಿ ಹಾರಾಡುವಂತೆ ಎಸೆದನು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಸೂಚನೆ : ಅಗ್ರಪೂಜಾವ್ಯಾಜಮುಖದಲಿ
ವಿಗ್ರಹದ ಶಿಶುಪಾಲಶಿರ ಗಗ
ನಾಗ್ರದಲಿ ಕುಣಿದಾಡಲೆಸೆದನು ವೀರ ನಾರಯಣ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಸಹದೇವನ ವಚೋಗ್ರ
ವ್ಯಾಳ ವಿಷವೇಡೆಯಲಿ ಸಿಲುಕಿತು ಮನ ಮಹೀಶ್ವರರ
ಸೂಳು ನೆನಹಿನ ಸುಳಿಮನದ ಸಮ
ಪಾಳಿ ಕೋಪದಲಳಿದ ಮೌನದ
ಮೇಲು ಬುದ್ಧಿಯ ಜೋಡಿ ಬೇರೊಂದಾಯ್ತು ಭಾವದಲಿ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಹದೇವನ ಮಾತೆಂಬ ಉಗ್ರಸರ್ಪದ ವಿಷದ ವ್ಯಾಪ್ತಿಯೊಳಗೆ ರಾಜರುಗಳ ಮನಸ್ಸು ಸಿಕ್ಕಿಹಾಕಿಕೊಂಡಿತು. ಮತ್ತೆ ಮತ್ತೆ ಅದನ್ನೇ ನೆನೆಯುತ್ತಿದ್ದರು. ಅದೇ ಸುಳಿಸುಳಿಯಾಗಿ ಅವರ ಮನಸ್ಸಿನಲ್ಲಿ ಸುತ್ತುತ್ತಿತ್ತು. ಮನಸ್ಸಿನ ಸಮತೆಗೆಟ್ಟಿತು. ಕೋಪವುಕ್ಕಿತು. ಮೌನವಳಿಯಿತು.
ಬಗೆಬಗೆಯ ಭಾವದಿಂದ ಮೇಲು ಬುದ್ಧಿ ಬೇರೆ ರೀತಿಯಾಯಿತು.
ಪದಾರ್ಥ (ಕ.ಗ.ಪ)
ವ್ಯಾಜ-ನೆಪ, ವ್ಯಾಳ-ಸರ್ಪ, ವೇಡೆ- ಪರಿಧಿ,ವ್ಯಾಪ್ತಿ
ಪಾಠಾನ್ತರ (ಕ.ಗ.ಪ)
ವಿಷವೆಡೆಯಲ್ಲಿ –> ವಿಷವೇಡೆಯಲಿ
ಸಭಾಪರ್ವ, ಮೈ.ವಿ.ವಿ.
ಶ್ರೀ ಸಿ.ಬಸಪ್ಪ
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಸಹದೇವನ ವಚೋಗ್ರ
ವ್ಯಾಳ ವಿಷವೇಡೆಯಲಿ ಸಿಲುಕಿತು ಮನ ಮಹೀಶ್ವರರ
ಸೂಳು ನೆನಹಿನ ಸುಳಿಮನದ ಸಮ
ಪಾಳಿ ಕೋಪದಲಳಿದ ಮೌನದ
ಮೇಲು ಬುದ್ಧಿಯ ಜೋಡಿ ಬೇರೊಂದಾಯ್ತು ಭಾವದಲಿ ॥1॥
೦೦೨ ಕಿವಿವಳೆಯ ಮೋರೆಗಳ ...{Loading}...
ಕಿವಿವಳೆಯ ಮೋರೆಗಳ ಮುಷ್ಟಿಯ
ಬವರಿಗಳ ಕಡೆಗಣ್ಣ ಸನ್ನೆಯ
ಸವಡಿಗೈಗಳ ನಂಬುಗೆಯ ಮನಮನದ ಬೆಸುಗೆಗಳ
ಅವಸರದ ಮೈತ್ರಿಗಳ ಮಂತ್ರಿ
ಪ್ರವರ ವಚನೋಪೇಕ್ಷೆಗಳ ರಣ
ದವಕದಲಿ ಕಳವಳಿಸುತಿರ್ದುದು ಕೂಡೆ ನೃಪಕಟಕ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಖಗಳು ಇತರರ ಕಿವಿಗಳತ್ತ ಇದ್ದವು. ಕೈಮುಷ್ಟಿ ತಿರುಗುತ್ತಿತ್ತು. ಕಡೆಗಣ್ಣಿನಿಂದ ಪರಸ್ಪರ ಸನ್ನೆಮಾಡಿಕೊಳ್ಳುತ್ತಿದ್ದರು. ಒಬ್ಬರಿಗೊಬ್ಬರು ಕೈಗಳನ್ನು ಬಿಗಿದು ಬೆಂಬಲ ಕೊಡುತ್ತಿದ್ದರು. ಒಬ್ಬರೊಬ್ಬರ ಮನಸ್ಸು ಒಂದಾಗುತ್ತಿತ್ತು. ಸಾಂದರ್ಭಿಕವಾಗಿ ಸ್ನೇಹ ಬೆಳೆಸಿಕೊಳ್ಳುತ್ತಿದ್ದರು. ಮಂತ್ರಿಶ್ರೇಷ್ಠರ ಮಾತುಗಳನ್ನು ಉಪೇಕ್ಷಿಸುತ್ತಿದ್ದರು. ರಾಜರ ಸೈನ್ಯವೆಲ್ಲ ಯುದ್ಧಕ್ಕಾಗಿ ತವಕಿಸುತ್ತಾ ಕಳವಳಗೊಂಡಿತ್ತು.
ಪದಾರ್ಥ (ಕ.ಗ.ಪ)
ಬವರಿ-ಭ್ರಮಣ, ತಿರುಗಿಸುವುದು, ಸವಡಿ-ಜೋಡಿ
ಮೂಲ ...{Loading}...
ಕಿವಿವಳೆಯ ಮೋರೆಗಳ ಮುಷ್ಟಿಯ
ಬವರಿಗಳ ಕಡೆಗಣ್ಣ ಸನ್ನೆಯ
ಸವಡಿಗೈಗಳ ನಂಬುಗೆಯ ಮನಮನದ ಬೆಸುಗೆಗಳ
ಅವಸರದ ಮೈತ್ರಿಗಳ ಮಂತ್ರಿ
ಪ್ರವರ ವಚನೋಪೇಕ್ಷೆಗಳ ರಣ
ದವಕದಲಿ ಕಳವಳಿಸುತಿರ್ದುದು ಕೂಡೆ ನೃಪಕಟಕ ॥2॥
೦೦೩ ಪರಿಣತರ ನುಡಿಗಳನು ...{Loading}...
ಪರಿಣತರ ನುಡಿಗಳನು ಕಿವಿಯೋ
ಕರಿಸಿದವು ದುರುದುಂಬಿಗಳ ಬಾ
ಹಿರರ ನುಡಿಗಳನಡಿಗಡಿಗೆ ಕುಡಿಕುಡಿದು ತೇಗಿದವು
ಕರೆಸಿದರು ಖೂಳರನು ನೀತಿಯ
ಗರುವರನು ನೂಕಿದರು ರಾಯನ
ಪರಮ ಯಾಗವವನಳಿಯಲನುವಾಯಿತ್ತು ನೃಪಕಟಕ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರಿಣತರ ಮಾತುಗಳನ್ನು ಕಿವಿ ಓಕರಿಸಿತು. ದುಷ್ಟರ, ಹೊರಗಿನವರ ಮಾತುಗಳನ್ನು ಅವರ ಕಿವಿಗಳು ಕುಡಿದು ತೇಗಿದವು. ನೀಚರನ್ನು ಹತ್ತಿರಕ್ಕೆ ಬರಮಾಡಿಕೊಂಡರು. ನೀತಿಯ ಹಿರಿಯರನ್ನು ದೂರತಳ್ಳಿದರು. ಆ ಶ್ರೇಷ್ಠವಾದ ರಾಜಸೂಯಯಾಗವನ್ನು ಹಾಳುಗೆಡವಲು ರಾಜರುಗಳೆಲ್ಲ ಅಣಿಯಾದರು.
ಪದಾರ್ಥ (ಕ.ಗ.ಪ)
ದುರುದುಂಬಿ-ದುಷ್ಟ, ಬಾಹಿರ-ಹೊರಹಾಕಲ್ಪಟ್ಟವನು, ನೀಚ, ಕಟಕ-ಸೈನ್ಯ
ಮೂಲ ...{Loading}...
ಪರಿಣತರ ನುಡಿಗಳನು ಕಿವಿಯೋ
ಕರಿಸಿದವು ದುರುದುಂಬಿಗಳ ಬಾ
ಹಿರರ ನುಡಿಗಳನಡಿಗಡಿಗೆ ಕುಡಿಕುಡಿದು ತೇಗಿದವು
ಕರೆಸಿದರು ಖೂಳರನು ನೀತಿಯ
ಗರುವರನು ನೂಕಿದರು ರಾಯನ
ಪರಮ ಯಾಗವವನಳಿಯಲನುವಾಯಿತ್ತು ನೃಪಕಟಕ ॥3॥
೦೦೪ ನೀವು ಪರಿಯನ್ತೇಕೆ ...{Loading}...
ನೀವು ಪರಿಯಂತೇಕೆ ನಿಮ್ಮವ
ರಾವಲೇ ನಿಮ್ಮಾಳು ಕುದುರೆಗೆ
ನಾವಲೇ ದಳಪತಿಗಳಿವದಿರ ಯಜ್ಞಮಂಟಪವ
ಆವ ಬೇಗದಲುರುಹುವೆನು ಚಿ
ತ್ತಾವಧಾನವ ಮಾಡಿಯೆಂದು ನೃ
ಪಾವಳಿಯ ಶಿಶುಪಾಲ ಸಂತೈಸಿದನು ಸಾಮದಲಿ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ರಾಜರ ಸಡಗರವನ್ನು ನೋಡಿದ ಶಿಶುಪಾಲ “ನಿಮ್ಮ ತನಕ ಏಕೆ, ನಿಮ್ಮ ಪರವಾಗಿ ನಾನೇ ಇದ್ದೇನಲ್ಲ. ನಿಮ್ಮ ಆಳು-ಕುದುರೆಗಳಿಗೆ ನಾವೇ ದಳಪತಿಗಳಲ್ಲವೆ? ಇವರ ಯಜ್ಞಮಂಟಪವನ್ನು ಎಷ್ಟು ಬೇಗ ಉರಿಸುತ್ತೇನೆ. ಮನಸ್ಸಿಟ್ಟು ನೋಡಿ." ಎಂದು ರಾಜರುಗಳನ್ನು ಸಂತೈಸಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ನೀವು ಪರಿಯಂತೇಕೆ ನಿಮ್ಮವ
ರಾವಲೇ ನಿಮ್ಮಾಳು ಕುದುರೆಗೆ
ನಾವಲೇ ದಳಪತಿಗಳಿವದಿರ ಯಜ್ಞಮಂಟಪವ
ಆವ ಬೇಗದಲುರುಹುವೆನು ಚಿ
ತ್ತಾವಧಾನವ ಮಾಡಿಯೆಂದು ನೃ
ಪಾವಳಿಯ ಶಿಶುಪಾಲ ಸಂತೈಸಿದನು ಸಾಮದಲಿ ॥4॥
೦೦೫ ಧರಣಿಪರ ಸನ್ನೆಯಲಿ ...{Loading}...
ಧರಣಿಪರ ಸನ್ನೆಯಲಿ ಬಲ ಸಂ
ವರಿಸಿತಾಚೆಯಲಿತ್ತ ಸಾತ್ಯಕಿ
ನರ ವೃಕೋದರ ನಕುಲ ಧೃಷ್ಟದ್ಯುಮ್ನ
ಮೊದಲಾದ ಕರಿತುರಗ ರಥಪತ್ತಿಗಳ ಸಂ
ವರಣೆ ತಳಿತುದ ಕಂಡು ಮೂಗಿನ
ಬೆರಳ ಬೆರಗಿನಲೊಲೆದು ಭೀಷ್ಮಂಗೆಂದನಾ ಭೂಪ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜರುಗಳ ಸಂಕೇತದಂತೆ ಹೊರಗೆ ಸೈನ್ಯವೆಲ್ಲ ಸಜ್ಜಾಯಿತು. ಈ ಕಡೆ ಸಾತ್ಯಕಿ, ಅರ್ಜುನ, ಭೀಮ ನಕುಲ ಧೃಷ್ಟದ್ಯುಮ್ನ ಮೊದಲಾದವರೂ ತಮ್ಮ ಆನೆ ಕುದುರೆ ರಥ ಕಾಲಾಳು ಸೈನ್ಯವನ್ನು ಸಿದ್ಧಪಡಿಸಿಕೊಂಡರು. ಅದನ್ನೆಲ್ಲ ನೋಡಿ ಬೆರಗಾದ ಯುಧಿಷ್ಠಿರ ಮೂಗಿನ ಮೇಲೆ ಬೆರಳಿಟ್ಟು ತಲೆದೂಗುತ್ತಾ ಭೀಷ್ಮನೊಡನೆ ಹೀಗೆಂದ.
ಪದಾರ್ಥ (ಕ.ಗ.ಪ)
ಪತ್ತಿ-ಪದಾತಿ, ಕಾಲಾಳು ಸೈನ್ಯ
ಮೂಲ ...{Loading}...
ಧರಣಿಪರ ಸನ್ನೆಯಲಿ ಬಲ ಸಂ
ವರಿಸಿತಾಚೆಯಲಿತ್ತ ಸಾತ್ಯಕಿ
ನರ ವೃಕೋದರ ನಕುಲ ಧೃಷ್ಟದ್ಯುಮ್ನ
ಮೊದಲಾದ ಕರಿತುರಗ ರಥಪತ್ತಿಗಳ ಸಂ
ವರಣೆ ತಳಿತುದ ಕಂಡು ಮೂಗಿನ
ಬೆರಳ ಬೆರಗಿನಲೊಲೆದು ಭೀಷ್ಮಂಗೆಂದನಾ ಭೂಪ ॥5॥
೦೦೬ ಈಸು ಪೌರುಷ ...{Loading}...
ಈಸು ಪೌರುಷ ದೈವ ಘಟನೆಯೊ
ಳೀಸು ಪರಿಯಂತಾಯ್ತು ಯಜ್ಞದ
ಮೀಸಲಳಿಯದೆ ನಡೆದುದಿನ್ನೆಗ ನಿಮ್ಮ ಕರುಣದಲಿ
ಈ ಸಮಸ್ತ ನೃಪಾಲಜನ ವಾ
ರಾಶಿ ಮೇರೆಯನೊದೆವುತಿದೆ ನಿಮ
ಗೇಸು ಭಾರವಿದೆಂದು ಬಿನ್ನವಿಸಿದನು ಭೀಷ್ಮಂಗೆ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಲ್ಲಿಯವರೆಗೂ ನಿಮ್ಮ ಕರುಣೆಯಿಂದ ಇಷ್ಟು ಪೌರುಷ ಮತ್ತು ದೈವ ಘಟನೆಯ ಬೆಂಬಲದಿಂದ ಯಜ್ಞದ ಮೀಸಲು ಅಳಿಯದಂತೆ ಎಲ್ಲವೂ ಸಮರ್ಪಕವಾಗಿ ನೆರವೇರಿತು. ಈಗ ಈ ಸಮಸ್ತ ರಾಜಸಮುದ್ರ ಮೇರೆಯನ್ನೂ ಮೀರಿ ಹರಿಯುತ್ತಿದೆ. ಇದು ನಿಮಗೆ ಎಷ್ಟು ಭಾರವಾದಿತೋ ಎಂದು ಯುಧಿಷ್ಠಿರ ಭೀಷ್ಮನಿಗೆ ಬಿನ್ನವಿಸಿಕೊಂಡ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಈಸು ಪೌರುಷ ದೈವ ಘಟನೆಯೊ
ಳೀಸು ಪರಿಯಂತಾಯ್ತು ಯಜ್ಞದ
ಮೀಸಲಳಿಯದೆ ನಡೆದುದಿನ್ನೆಗ ನಿಮ್ಮ ಕರುಣದಲಿ
ಈ ಸಮಸ್ತ ನೃಪಾಲಜನ ವಾ
ರಾಶಿ ಮೇರೆಯನೊದೆವುತಿದೆ ನಿಮ
ಗೇಸು ಭಾರವಿದೆಂದು ಬಿನ್ನವಿಸಿದನು ಭೀಷ್ಮಂಗೆ ॥6॥
೦೦೭ ಕಾದುವರೆ ನಮ್ಮುತ್ಸವಕೆ ...{Loading}...
ಕಾದುವರೆ ನಮ್ಮುತ್ಸವಕೆ ನೆರ
ವಾದವರು ಸೈರಿಸುವರಗ್ಗದ
ಯಾದವೇಂದ್ರನ ನಿಂದೆ ಮೇಲಧ್ವರ ವಿಸಂಘಟನ
ಈ ದುರಂತದ ಚಿಂತೆಯಲಿ ಬೇ
ಳಾದುದೆನ್ನಯ ಚಿತ್ತವದ್ದೆನು
ಖೇದ ಪಂಕದೊಳೆನ್ನನುದ್ಧರಿಸೆಂದನಾ ಭೂಪ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮತ್ತೆ, ಯುದ್ಧ ಮಾಡೋಣವೆಂದರೆ ಈ ರಾಜರೆಲ್ಲ ನಮ್ಮ ಈ ಉತ್ಸವಕ್ಕೆ ನೆರವಾದವರು. ಸಹಿಸಿಕೊಳ್ಳೋಣವೆಂದರೆ ಶ್ರೀಕೃಷ್ಣನ
ನಿಂದೆಯಾಗುತ್ತದೆ. ಅಲ್ಲದೆ ಯಜ್ಞದ ವಿನಾಶವಾಗುತ್ತದೆ. ಈ ದುರಂತವನ್ನು ಚಿಂತಿಸುತ್ತಾ ನನ್ನ ಮನಸ್ಸು ಕಳವಳಗೊಂಡಿದೆ. ಈ ವ್ಯಥೆಯ ಕೆಸರಿನಲ್ಲಿ ಮುಳುಗಿಬಿಟ್ಟಿದ್ದೇನೆ. ನೀವೇ ನನ್ನನ್ನು ಮೇಲೆತ್ತಬೇಕು ಎಂದ.
ಪದಾರ್ಥ (ಕ.ಗ.ಪ)
ಬೇಳಾಗು-ಮಂಕಾಗು, ಖೇದ-ದುಃಖ
ಮೂಲ ...{Loading}...
ಕಾದುವರೆ ನಮ್ಮುತ್ಸವಕೆ ನೆರ
ವಾದವರು ಸೈರಿಸುವರಗ್ಗದ
ಯಾದವೇಂದ್ರನ ನಿಂದೆ ಮೇಲಧ್ವರ ವಿಸಂಘಟನ
ಈ ದುರಂತದ ಚಿಂತೆಯಲಿ ಬೇ
ಳಾದುದೆನ್ನಯ ಚಿತ್ತವದ್ದೆನು
ಖೇದ ಪಂಕದೊಳೆನ್ನನುದ್ಧರಿಸೆಂದನಾ ಭೂಪ ॥7॥
೦೦೮ ಅಞ್ಜದಿರು ಭಯ ...{Loading}...
ಅಂಜದಿರು ಭಯ ಬೇಡ ನರರಿಗೆ
ನಂಜು ಪಥ್ಯವೆ ಗಿಳಿಯ ಮರಿಗಳು
ಮಂಜರನ ಮೇಲ್ವಾಯ್ದು ಬದುಕುವವೇ ಮಹೀಪತಿಯೆ
ಮಂಜು ಮಧ್ಯಾಹ್ನದ ದಿನೇಶನ
ನೆಂಜಲಿಸುವುದೆ ಕುಪಿತ ಸಿಂಹವ
ನಂಜಿಸುವವೇ ನಾಯ್ಗಳೆಂದನು ಭೂಪತಿಗೆ ಭೀಷ್ಮ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ಭೀಷ್ಮ ಅವನನ್ನು ಸಂತೈಸುತ್ತಾ “ಅಂಜದಿರು, ಭಯಪಡಬೇಡ. ನರರಿಗೆ ವಿಷ ಪಥ್ಯವಾಗುತ್ತದೆಯೇ? ಗಿಳಿಯಮರಿಗಳು
ಬೆಕ್ಕಿನ ಮೇಲೆ ಆಕ್ರಮಣ ಮಾಡಿದರೆ ಬದುಕುತ್ತವೆಯೇ? ಮಂಜು ನಡುಹಗಲಿನ ಸೂರ್ಯನನ್ನು ಎಂಜಲಿಸೀತೇ? ಕೋಪಗೊಂಡ
ಸಿಂಹವನ್ನು ನಾಯಿಗಳು ಅಂಜಿಸುವವೇ, ಯುಧಿಷ್ಠಿರ ರಾಜ?ಎಂದು ಹೇಳಿದ.
ಪದಾರ್ಥ (ಕ.ಗ.ಪ)
ಮಂಜರ-ಬೆಕ್ಕು
ಮೂಲ ...{Loading}...
ಅಂಜದಿರು ಭಯ ಬೇಡ ನರರಿಗೆ
ನಂಜು ಪಥ್ಯವೆ ಗಿಳಿಯ ಮರಿಗಳು
ಮಂಜರನ ಮೇಲ್ವಾಯ್ದು ಬದುಕುವವೇ ಮಹೀಪತಿಯೆ
ಮಂಜು ಮಧ್ಯಾಹ್ನದ ದಿನೇಶನ
ನೆಂಜಲಿಸುವುದೆ ಕುಪಿತ ಸಿಂಹವ
ನಂಜಿಸುವವೇ ನಾಯ್ಗಳೆಂದನು ಭೂಪತಿಗೆ ಭೀಷ್ಮ ॥8॥
೦೦೯ ಬಗುಳುವಿವದಿರು ಹರಿಯ ...{Loading}...
ಬಗುಳುವಿವದಿರು ಹರಿಯ ಬಡಿ ಹೋ
ರಿಗಳಲಾ ಜಗವರಿಯದೇ ಜ
ಳ್ಳುಗಳ ಜೋಡಿಯ ಜಂಜಡಕೆ ನೀ ಜರುಗುವೈ ಭೂಪ
ಉಗಿವನಿನಿಬರ ಜೀವವನು ಜೊ
ತ್ತಗೆಯಲೀ ಶಿಶುಪಾಲ ನಾಯನು
ತೆಗೆದು ಕಟ್ಟುವನಸುರಮರ್ದನನೆಂದನಾ ಭೀಷ್ಮ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಬಗುಳುವವರೆಲ್ಲ ಹರಿಯಿಂದ ಬಡಿತ ತಿನ್ನುವ ಹೋರಿಗಳಷ್ಟೆ. ಜಗತ್ತಿಗೆ ಗೊತ್ತಿಲ್ಲವೇ ಅವರ ಯೋಗ್ಯತೆಯೇನೆಂದು. ಈ ಜಳ್ಳುಗಳೆಲ್ಲ ಒಟ್ಟು ಸೇರಿದರೆಂದು ಅವರ ಕಾಟಕ್ಕೆ ಹೆದರಿ ಹಿಂಜರಿಯುವೆಯಾ ರಾಜ? ಇಷ್ಟೂ ಜನರ ಜೀವನವನ್ನು ಹರಿ ಕಿತ್ತೊಗೆಯುತ್ತಾನೆ. ಶಿಶುಪಾಲನನ್ನು ಅಸುರಮರ್ದನನು ಹಗ್ಗದಲ್ಲಿ ಕಟ್ಟಿಹಾಕುತ್ತಾನೆ.
ಪದಾರ್ಥ (ಕ.ಗ.ಪ)
ಬಡಿಹೋರಿ-ಬಡಿತ ತಿನ್ನು ಹೋರಿ,
ಉಗಿ-ತೆಗೆದು ಎಸೆ,
ಜೊತ್ತಗೆ- ಹಗ್ಗ
ಅಸುರಮರ್ದನ-ಕೃಷ್ಣ
ಮೂಲ ...{Loading}...
ಬಗುಳುವಿವದಿರು ಹರಿಯ ಬಡಿ ಹೋ
ರಿಗಳಲಾ ಜಗವರಿಯದೇ ಜ
ಳ್ಳುಗಳ ಜೋಡಿಯ ಜಂಜಡಕೆ ನೀ ಜರುಗುವೈ ಭೂಪ
ಉಗಿವನಿನಿಬರ ಜೀವವನು ಜೊ
ತ್ತಗೆಯಲೀ ಶಿಶುಪಾಲ ನಾಯನು
ತೆಗೆದು ಕಟ್ಟುವನಸುರಮರ್ದನನೆಂದನಾ ಭೀಷ್ಮ ॥9॥
೦೧೦ ಜಗವ ಹೂಡುವ ...{Loading}...
ಜಗವ ಹೂಡುವ ಹೊರೆವ ಬಲುಗೈ
ಯಗಧರಂಗೀ ನೃಪರ ಕುರಿವಿಂ
ಡುಗಳ ಕುಮ್ಮರಿಗಡಿತಕಾವುದು ಬೇಕು ಭುಜಸತ್ವ
ಬಗೆವುದೇ ಬಲುಗಡಲು ಮಂಜಿನ
ಮುಗಿಲವಳೆಯನು ಚೈದ್ಯ ಭೂಪನ
ಜಗದ ಭಂಡನನೀ ಜನಾರ್ದನ ಗಣಿಸುವನೆಯೆಂದ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಗತ್ತನ್ನು ಸೃಷ್ಟಿಸುವ ಮತ್ತು ಪಾಲಿಸುವ ಸಾಮಥ್ರ್ಯವುಳ್ಳ ಈ ಅಗಧರನಿಗೆ ಈ ರಾಜರೆಂಬ ಕುರಿಯ ಹಿಂಡನ್ನು ಚೂರುಚೂರಾಗಿ ಕತ್ತರಿಸಿ ಎಸೆಯಲು ಏನು ಮಹಾ ಭುಜಬಲ ಬೇಕು? ಮಹಾಸಾಗರ ಮಂಜಿನ ಮುಗಿಲ ಮಳೆಯನ್ನು ಲಕ್ಷಿಸುತ್ತದೆಯೇ? ಈ ಜಗತ್ತಿನಲ್ಲೇ ಭಂಡನೆನಿಸಿದ ಈ ಚೈದ್ಯರಾಜನನ್ನು ಜನಾರ್ದನ ಲೆಕ್ಕಿಸುವನೆ ?
ಪದಾರ್ಥ (ಕ.ಗ.ಪ)
ಅಗಧರ-ಕೃಷ್ಣ, ಕುಮ್ಮರಿಗಡಿ-ಚೂರು ಚೂರು ಕತ್ತರಿಸು
ಮೂಲ ...{Loading}...
ಜಗವ ಹೂಡುವ ಹೊರೆವ ಬಲುಗೈ
ಯಗಧರಂಗೀ ನೃಪರ ಕುರಿವಿಂ
ಡುಗಳ ಕುಮ್ಮರಿಗಡಿತಕಾವುದು ಬೇಕು ಭುಜಸತ್ವ
ಬಗೆವುದೇ ಬಲುಗಡಲು ಮಂಜಿನ
ಮುಗಿಲವಳೆಯನು ಚೈದ್ಯ ಭೂಪನ
ಜಗದ ಭಂಡನನೀ ಜನಾರ್ದನ ಗಣಿಸುವನೆಯೆಂದ ॥10॥
೦೧೧ ಎಲೆ ನಪುಂಸಕ ...{Loading}...
ಎಲೆ ನಪುಂಸಕ ಭೀಷ್ಮ ಸುಡು ಬೈ
ಗುಳಿನ ಭಂಡನು ನೀನಲಾ ಗೋ
ಕುಲದ ಗರ್ವನ ಗುಣವ ಕಂಡಿತುಗೊಂಡೆ ಬೇಸರದೆ
ಹಳಿವಿನಲಿ ಹೆಮ್ಮೆಯನು ಕುಂದಿನ
ಕುಲದೊಳಗ್ಗಳಿಕೆಯನು ತಮದಲಿ
ಬೆಳಗ ಬಣ್ಣಿಸುತಿಹೆ ನಿರಂತರವೆಂದನಾ ಚೈದ್ಯ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲೆ ನಪುಂಸಕ ಭೀಷ್ಮ, ಸುಡು, ಬೈಗುಳಿನ ಭಂಡನು ನೀನಲ್ಲವೇ ? ಗೋಕುಲದವನಾದ ಈ ಗರ್ವಿಷ್ಠನ ಗುಣವನ್ನು ನೀನು ಬೇಸರಗೊಳ್ಳದೆ ವಿವರಿಸಿದೆ. ಹಳಿಯಬೇಕಾದುದರಲ್ಲಿ
ಹೆಮ್ಮೆಯನ್ನೂ ಕುಂದು ಇರುವ ಎದೆಯಲ್ಲಿ ಕುಲದ ಅತಿಶಯತೆಯನ್ನೂ ಕತ್ತಲೆಯಲ್ಲಿ ಬೆಳಕನ್ನೂ ನಿರಂತರವಾಗಿ ವರ್ಣಿಸುತ್ತಿರುವೆ." ಎಂದು ಶಿಶುಪಾಲ ಹೇಳಿದ.
ಪದಾರ್ಥ (ಕ.ಗ.ಪ)
ಕಂಡಿತುಗೊಂಡೆ-ವಿವರಿಸಿದೆ. ಅಗ್ಗಳಿಕೆ-ಅತಿಶಯ
ಮೂಲ ...{Loading}...
ಎಲೆ ನಪುಂಸಕ ಭೀಷ್ಮ ಸುಡು ಬೈ
ಗುಳಿನ ಭಂಡನು ನೀನಲಾ ಗೋ
ಕುಲದ ಗರ್ವನ ಗುಣವ ಕಂಡಿತುಗೊಂಡೆ ಬೇಸರದೆ
ಹಳಿವಿನಲಿ ಹೆಮ್ಮೆಯನು ಕುಂದಿನ
ಕುಲದೊಳಗ್ಗಳಿಕೆಯನು ತಮದಲಿ
ಬೆಳಗ ಬಣ್ಣಿಸುತಿಹೆ ನಿರಂತರವೆಂದನಾ ಚೈದ್ಯ ॥11॥
೦೧೨ ಅವಗುಣದಲುದ್ಭಾವಿಸುವೆ ಗುಣ ...{Loading}...
ಅವಗುಣದಲುದ್ಭಾವಿಸುವೆ ಗುಣ
ನಿವಹವನು ರಾಜಾಧಮರು ಯಾ
ದವರು ಪೂಜಾರುಹರೆ ಸುಡು ಸುಡು ನಿನ್ನ ನಾಲಗೆಯ
ಸವಿನುಡಿಯ ದುವ್ರ್ಯಸನಿ ತೊಂಡಿನ
ತವರುಮನೆ ಬಾಹಿರರಿಗಾಶ್ರಯ
ಭವನ ಖಳರಧಿದೈವ ಭೀಷ್ಮನ ಕೊಲುವರಿಲ್ಲೆಂದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವಗುಣ ಇರುವ ಎಡೆಯಲ್ಲಿ ಗುಣಸಮೂಹವನ್ನೇ ಉಂಟುಮಾಡುತ್ತಿರುವೆ. ಈ ಯಾದವರು ರಾಜಾಧಮರು, ಪೂಜೆಗೆ ಅರ್ಹರಾದರೇ ? ಸುಡು ಸುಡು ನಿನ್ನ ನಾಲಗೆಯನ್ನು ಸವಿನುಡಿಯನ್ನಾಡುವ ದುವ್ರ್ಯಸನವುಳ್ಳವನು ಇವನು. ವ್ಯರ್ಥಾಲಾಪದ ತವರು ಮನೆ, ನೀಚರಿಗೆ ಆಶ್ರಯನಾದವನು ದುಷ್ಟರಿಗೆ ಅಧಿದೈವ. ಈ ಭೀಷ್ಮನನ್ನು ಕೊಲ್ಲುವವರಿಲ್ಲವಲ್ಲಾ!
ಪದಾರ್ಥ (ಕ.ಗ.ಪ)
ಮೂಲ ...{Loading}...
ಅವಗುಣದಲುದ್ಭಾವಿಸುವೆ ಗುಣ
ನಿವಹವನು ರಾಜಾಧಮರು ಯಾ
ದವರು ಪೂಜಾರುಹರೆ ಸುಡು ಸುಡು ನಿನ್ನ ನಾಲಗೆಯ
ಸವಿನುಡಿಯ ದುವ್ರ್ಯಸನಿ ತೊಂಡಿನ
ತವರುಮನೆ ಬಾಹಿರರಿಗಾಶ್ರಯ
ಭವನ ಖಳರಧಿದೈವ ಭೀಷ್ಮನ ಕೊಲುವರಿಲ್ಲೆಂದ ॥12॥
೦೧೩ ಇವನು ಗಡ ...{Loading}...
ಇವನು ಗಡ ಚಿಕ್ಕಂದು ಮೊಲೆಗೊ
ಟ್ಟವಳ ಹಿಂಡಿದ ಗಂಡ ಬಂಡಿಯ
ಜವಳಿಗಾಲಲಿ ಮುರಿದನೈ ಮಾಯಾ ಸಮರ್ಥನಲೆ
ಸವಡಿ ಮರ ನೆಗ್ಗಿದವು ಗಡ ಮೈ
ಯವುಚಿದರೆ ಬಲುಗತ್ತೆ ಗೂಳಿಯ
ನಿವ ವಿಭಾಡಿಸಿದನೆ ಮಹಾದ್ಭುತವೆಂದನಾ ಚೈದ್ಯ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವನು ಚಿಕ್ಕಂದಿನಲ್ಲಿ ಮೊಲೆಯೂಡಿಸಿದವಳನ್ನೇ ಕೊಂದ. ಮಹಾಶೂರ! ಬಂಡಿಯನ್ನು ಎರಡು ಕಾಲಗಳಿಂದಲೂ ಮುರಿದುಬಿಟ್ಟನಲ್ಲವೆ? ಮಹಾಸಮರ್ಥನಪ್ಪಾ ಅವನು! ಮೈ ಅವುಚಿಕೊಂಡಾಗ ಜೋಡಿಮರಗಳು ನುಗ್ಗಿ ಹೋದುವಂತೆ ! ದೊಡ್ಡ ಕತ್ತೆಯನ್ನೂ ಗೂಳಿಯನ್ನೂ ಕೊಂದುಬಿಟ್ಟನಂತೆ ಮಹಾ ಅದ್ಭುತ !
ಪದಾರ್ಥ (ಕ.ಗ.ಪ)
ಸವಡಿ-ಜೋಡಿ, ವಿಭಾಡಿಸು-ಕೊಲ್ಲು, ನಾಶಮಾಡು
ಮೂಲ ...{Loading}...
ಇವನು ಗಡ ಚಿಕ್ಕಂದು ಮೊಲೆಗೊ
ಟ್ಟವಳ ಹಿಂಡಿದ ಗಂಡ ಬಂಡಿಯ
ಜವಳಿಗಾಲಲಿ ಮುರಿದನೈ ಮಾಯಾ ಸಮರ್ಥನಲೆ
ಸವಡಿ ಮರ ನೆಗ್ಗಿದವು ಗಡ ಮೈ
ಯವುಚಿದರೆ ಬಲುಗತ್ತೆ ಗೂಳಿಯ
ನಿವ ವಿಭಾಡಿಸಿದನೆ ಮಹಾದ್ಭುತವೆಂದನಾ ಚೈದ್ಯ ॥13॥
೦೧೪ ಹಕ್ಕಿ ಹರಿಣಿಯ ...{Loading}...
ಹಕ್ಕಿ ಹರಿಣಿಯ ತರಿದ ಗಡ ಕೈ
ಯಿಕ್ಕಿದರೆ ಕಡುಗುದುರೆಯನು ನೆಲ
ಕಿಕ್ಕಿದನೆ ನೆರೆ ಹೇಳು ಹೇಳಾ ಕೃಷ್ಣನಾಳ್ತನವ
ಹೊಕ್ಕು ಹೆಬ್ಬಾವಿನ ಬಸುರ ಸೀ
ಳಿಕ್ಕಿದನೆ ಯಾದವನ ಪೌರುಷ
ವಕ್ಕಜವಲಾ ಭೀಷ್ಮ ತೂಪಿರಿಯೆಂದನಾ ಚೈದ್ಯ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಕ್ಕಿಯನ್ನು ಜಿಂಕೆಯನ್ನು ತರಿದನಂತೆ! ಕೈಯಿಟ್ಟು ಹೊಡೆದು ದುಷ್ಟ ಕುದುರೆಯನ್ನು ನೆಲಕ್ಕೆ ಬೀಳಿಸಿದನೇ ? ಹೇಳಪ್ಪಾ ಹೇಳು ಕೃಷ್ಣನ ಶೌರ್ಯವನ್ನು! ಹೆಬ್ಬಾವಿನ ಹೊಟ್ಟೆಯನ್ನು ಹೊಕ್ಕು ಸೀಳಿಹಾಕಿದನೆ ? ಈ ಯಾದವನ ಪೌರುಷ ಆಶ್ಚರ್ಯಕರವಾದದ್ದಯ್ಯ, ಅವನಿಗೆ ತೂಪಿರಿದು ನಿವಾಳಿ ತೆಗೆ.
ಪದಾರ್ಥ (ಕ.ಗ.ಪ)
ಅಕ್ಕಜ-ಆಶ್ಚರ್ಯ, ತೂಪಿರಿ-ನಿವಾಳಿಸಿ ದೃಷ್ಟಿತೆಗಿ
ಮೂಲ ...{Loading}...
ಹಕ್ಕಿ ಹರಿಣಿಯ ತರಿದ ಗಡ ಕೈ
ಯಿಕ್ಕಿದರೆ ಕಡುಗುದುರೆಯನು ನೆಲ
ಕಿಕ್ಕಿದನೆ ನೆರೆ ಹೇಳು ಹೇಳಾ ಕೃಷ್ಣನಾಳ್ತನವ
ಹೊಕ್ಕು ಹೆಬ್ಬಾವಿನ ಬಸುರ ಸೀ
ಳಿಕ್ಕಿದನೆ ಯಾದವನ ಪೌರುಷ
ವಕ್ಕಜವಲಾ ಭೀಷ್ಮ ತೂಪಿರಿಯೆಂದನಾ ಚೈದ್ಯ ॥14॥
೦೧೫ ಗಾಳಿಯನು ಘಲ್ಲಿಸಿದ ...{Loading}...
ಗಾಳಿಯನು ಘಲ್ಲಿಸಿದ ಕರುವಿನ
ಕಾಲ ಹಿಡಿದೊಗೆದನು ಗಡುರಗನ
ಮೇಲೆ ಕುಣಿದಾಡಿದನು ಗಡ ಹಾವಡಿಗ ವಿದ್ಯೆಯಲಿ
ಖೂಳ ಗೋವರ ಹಳ್ಳಿಯಲಿ ಕ
ಟ್ಟಾಳಲಾ ಬಳಿಕೇನು ಪೃಥ್ವೀ
ಪಾಲರೀತಗೆ ಸರಿಯೆ ದಿಟ ದಿಟವೆಂದನಾ ಚೈದ್ಯ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಾಳಿಯನ್ನೇ ಅಲ್ಲಾಡಿಸಿ ಬಿಟ್ಟನಂತೆ ! ಕರುವಿನ ಕಾಲು ಹಿಡಿದು ಎತ್ತಿ ಒಗೆದನಂತೆ! ಹಾವಿನ ಮೇಲೆ ಹತ್ತಿ ಕುಣಿದಾಡಿದನಂತೆ ! ಹಾವಾಡಿಗ ವಿದ್ಯೆಯಲ್ಲಿ ಒಳ್ಳೆ ನಿಪುಣ! ಖೂಳ ಗೋವಳರ ಹಳ್ಳಿಯಲ್ಲಿ ಇವನು ಮಹಾಶೂರನಲ್ಲಾ ! ಮತ್ತಿನ್ನೇನು, ಪೃಥ್ವೀಪಾಲರು ಈತನಿಗೆ ಸರಿಸಾಟಿಯೇ ? ದಿಟ, ದಿಟ !
ಪದಾರ್ಥ (ಕ.ಗ.ಪ)
ಘಲ್ಲಿಸು-ಅಲ್ಲಾಡಿಸು, ಉರಗ-ಹಾವು
ಮೂಲ ...{Loading}...
ಗಾಳಿಯನು ಘಲ್ಲಿಸಿದ ಕರುವಿನ
ಕಾಲ ಹಿಡಿದೊಗೆದನು ಗಡುರಗನ
ಮೇಲೆ ಕುಣಿದಾಡಿದನು ಗಡ ಹಾವಡಿಗ ವಿದ್ಯೆಯಲಿ
ಖೂಳ ಗೋವರ ಹಳ್ಳಿಯಲಿ ಕ
ಟ್ಟಾಳಲಾ ಬಳಿಕೇನು ಪೃಥ್ವೀ
ಪಾಲರೀತಗೆ ಸರಿಯೆ ದಿಟ ದಿಟವೆಂದನಾ ಚೈದ್ಯ ॥15॥
೦೧೬ ಏಳು ದಿನ ...{Loading}...
ಏಳು ದಿನ ಪರಿಯಂತ ಮೊರಡಿಯ
ಮೇಲುಗೊಡೆಯನು ಹಿಡಿದು ಬಲು ಮಳೆ
ಗಾಲವನು ಮಾಣಿಸಿದ ಗಡ ಹರಹರ ವಿಶೇಷವಲ
ಹೇಳು ಹೇಳಿಂದ್ರಂಗೆ ಮಾಡಿದ
ಕೂಳ ರಾಶಿಯನೊಬ್ಬನೇ ಕೈ
ಮೇಳವಿಸಿದನೇ ಕಂದನಾಣೆ ವಿಚಿತ್ರವಾಯ್ತೆಂದ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏಳುದಿನಗಳವರೆಗೆ ಒಂದು ಗುಡ್ಡವನ್ನು ಹಿಡಿದೆತ್ತಿ ಕೊಡೆಯಾಗಿ ಹಿಡಿದು ಜೋರು ಮಳೆಯಿಂದ ರಕ್ಷಿಸಿದನಂತೆ ! ಶಿವ ಶಿವಾ ! ಇದು ಮಹಾ ವಿಶೇಷವಲ್ಲವೇ ? ಹೇಳು, ಹೇಳು, ಇಂದ್ರನಿಗಾಗಿ ಮಾಡಿದ ಅನ್ನದ ರಾಶಿಯನ್ನು ಒಬ್ಬನೇ ತಿಂದುಮುಗಿಸಿಬಿಟ್ಟನೇ ? ಕಂದನಾಣೆ, ಇದು ಮಹಾ ವಿಚಿತ್ರವಾದುದು !
ಪದಾರ್ಥ (ಕ.ಗ.ಪ)
ಕೂಳು-ಅನ್ನ
ಮೂಲ ...{Loading}...
ಏಳು ದಿನ ಪರಿಯಂತ ಮೊರಡಿಯ
ಮೇಲುಗೊಡೆಯನು ಹಿಡಿದು ಬಲು ಮಳೆ
ಗಾಲವನು ಮಾಣಿಸಿದ ಗಡ ಹರಹರ ವಿಶೇಷವಲ
ಹೇಳು ಹೇಳಿಂದ್ರಂಗೆ ಮಾಡಿದ
ಕೂಳ ರಾಶಿಯನೊಬ್ಬನೇ ಕೈ
ಮೇಳವಿಸಿದನೇ ಕಂದನಾಣೆ ವಿಚಿತ್ರವಾಯ್ತೆಂದ ॥16॥
೦೧೭ ಅಸಗನನು ಕೆಡೆ ...{Loading}...
ಅಸಗನನು ಕೆಡೆ ತಿವಿದು ಕಂಸನ
ವಸನವೆಲ್ಲವ ಸೆಳೆದ ಗಡ ಮಾ
ಣಿಸಿದನೈ ದಿಟ ಘಟ್ಟಿವಳ್ತಿಯ ಮೈಯ ಮೂಹೊರಡ
ಮಸಗಿ ಬೀಸುವ ಕಂಸನಾನೆಯ
ನಸು ಬಡಿದ ಗಡ ಮಲ್ಲರನು ಮ
ರ್ದಿಸಿದನೇ ಡೊಳ್ಳಾಸದಲಿ ಡಾವರಿಗನಹನೆಂದ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಗಸನನ್ನು ತಿವಿದು ಬೀಳಿಸಿ ಕಂಸನ ವಸ್ತ್ರಗಳನ್ನೆಲ್ಲ ಸೆಳೆದುಕೊಂಡನಲ್ಲವೆ ! ಗಂಧತೇಯುವವಳ ದೇಹದ ಮೂರು ಡೊಂಕುಗಳನ್ನು ತಿದ್ದಿ ಸರಿಪಡಿಸಿದನು ಇವನು ! ಕೋಪಾವೇಶದಿಂದ ಬೀಸಿ ಬಂದ ಕಂಸನ ಆನೆಯನ್ನು ಸಾಯ ಹೊಡೆದನಲ್ಲವೆ ! ಮಲ್ಲರನ್ನು ಮರ್ದನ ಮಾಡಿದನೇ ? ಮೋಸಗಾರರಲ್ಲಿ ಮೋಸಗಾರನಿವ.
ಪದಾರ್ಥ (ಕ.ಗ.ಪ)
ವಸನ-ಬಟ್ಟೆ, ಘಟ್ಟಿವಾಳ್ತಿ-ಗಂಧತೇಯುವವಳು, ಮೂಹೊರಡ-ಮೂರು ಡೊಂಕುಗಳ, ಮಸಗಿ-ಕೆರಳಿ, ಡೊಳ್ಳಾಸ-ಮೋಸ, ವಂಚನೆ
ಡಾವರಿಗ-ಮೋಸಗಾರ, ಅಸಗ-ಅಗಸ
ಅಸುಬಡಿ - ಸಾಯಹೊಡೆ
ಮೂಲ ...{Loading}...
ಅಸಗನನು ಕೆಡೆ ತಿವಿದು ಕಂಸನ
ವಸನವೆಲ್ಲವ ಸೆಳೆದ ಗಡ ಮಾ
ಣಿಸಿದನೈ ದಿಟ ಘಟ್ಟಿವಳ್ತಿಯ ಮೈಯ ಮೂಹೊರಡ
ಮಸಗಿ ಬೀಸುವ ಕಂಸನಾನೆಯ
ನಸು ಬಡಿದ ಗಡ ಮಲ್ಲರನು ಮ
ರ್ದಿಸಿದನೇ ಡೊಳ್ಳಾಸದಲಿ ಡಾವರಿಗನಹನೆಂದ ॥17॥
೦೧೮ ಆದರಿವನನು ತುತಿಸುವೊಡೆ ...{Loading}...
ಆದರಿವನನು ತುತಿಸುವೊಡೆ ಮೇ
ಲಾದ ಕಷ್ಟವನೇನ ಹೇಳುವೆ
ನೀ ದುರಾತ್ಮಕ ಸಾಕಿದೊಡೆಯನನಿರಿದ ಸಬಳವಲೆ
ಸೋದರಿಯಲಾ ಕೃಷ್ಣನವ್ವೆ ವಿ
ವಾದವೇ ಸಾಕಿದನಲಾ ಕೈ
ಗಾದನೇ ಕಂಸಂಗೆ ಮುನಿವುದಿದಾವ ಘನವೆಂದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆದರೆ ಇವನನ್ನು ಸ್ತುತಿಸೋಣವೆಂದರೆ ಅನಂತರದ ಕಷ್ಟವನ್ನು ಏನೆಂದು ಹೇಳಲಿ? ಈ ದುಷ್ಟ ಸಾಕಿದ ಒಡೆಯನನ್ನೇ ಇರಿದಂತಹ ಈಟಿಯಾದನಲ್ಲಾ ! ಇವನ ತಾಯಿ ದೇವಕಿ ಕಂಸನಿಗೆ ಸೋದರಿಯಲ್ಲವೇ ? ಅವನೇ ಸಾಕಿದನಲ್ಲವೇ ? ಅವನಿಗೆ
ನೆರವಾದನೇನು ? ಅವನ ಮೇಲೆ ದ್ವೇಷವಿಡುವುದು ಎಂತಹ ದೊಡ್ಡ ವಿಷಯ !
ಪದಾರ್ಥ (ಕ.ಗ.ಪ)
ತುತಿಸು-ಸ್ತೋತ್ರಮಾಡು, ಸಬಳ-ಈಟಿ
ಮೂಲ ...{Loading}...
ಆದರಿವನನು ತುತಿಸುವೊಡೆ ಮೇ
ಲಾದ ಕಷ್ಟವನೇನ ಹೇಳುವೆ
ನೀ ದುರಾತ್ಮಕ ಸಾಕಿದೊಡೆಯನನಿರಿದ ಸಬಳವಲೆ
ಸೋದರಿಯಲಾ ಕೃಷ್ಣನವ್ವೆ ವಿ
ವಾದವೇ ಸಾಕಿದನಲಾ ಕೈ
ಗಾದನೇ ಕಂಸಂಗೆ ಮುನಿವುದಿದಾವ ಘನವೆಂದ ॥18॥
೦೧೯ ಆದರಿಸಿ ಬಣ್ಣಿಸಿದೆ ...{Loading}...
ಆದರಿಸಿ ಬಣ್ಣಿಸಿದೆ ನಾಚದೆ
ಯಾದವನ ಕೌಳಿಕ ಪರಾಕ್ರಮ
ವಾದಿಯಾದ ಸಮಸ್ತ ಗುಣ ವಿಸ್ತಾರ ವೈಭವವ
ಆದರಾ ಗೋವಳರ ಹೆಂಡಿರ
ಹಾದರದ ಹೆಕ್ಕಳವ ಬಣ್ಣಿಸ
ದಾದೆ ನಿನಗೇಕಕಟ ನಾಚಿಕೆಯೆಂದನಾ ಚೈದ್ಯ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಯಾದವನ ಮೋಸ ಪರಾಕ್ರಮ ಇತ್ಯಾದಿಯಾದ ಸಮಸ್ತ ಗುಣ ವಿಸ್ತಾರ ವೈಭವವನ್ನು ನಾಚಿಕೆಯಿಲ್ಲದೆ ಆದರಣೆಯಿಂದ ವರ್ಣಿಸಿದೆ. ಆದರೆ ಆ ಗೋವಳರ ಹೆಂಡಿರ ಹಾದರದ ಅತಿಶಯ ವಿಷಯವನ್ನು ವರ್ಣಿಸದೆ ಹೋದೆ, ನಿನಗೆ ನಾಚಿಕೆಯಾಗಿದ್ದಿರಬೇಕು. ನಿನಗೇಕೆ ನಾಚಿಕೆ ?
ಪದಾರ್ಥ (ಕ.ಗ.ಪ)
ಕೌಳಿಕ-ಮೋಸ, ಹೆಕ್ಕಳ-ಅತಿಶಯ
ಮೂಲ ...{Loading}...
ಆದರಿಸಿ ಬಣ್ಣಿಸಿದೆ ನಾಚದೆ
ಯಾದವನ ಕೌಳಿಕ ಪರಾಕ್ರಮ
ವಾದಿಯಾದ ಸಮಸ್ತ ಗುಣ ವಿಸ್ತಾರ ವೈಭವವ
ಆದರಾ ಗೋವಳರ ಹೆಂಡಿರ
ಹಾದರದ ಹೆಕ್ಕಳವ ಬಣ್ಣಿಸ
ದಾದೆ ನಿನಗೇಕಕಟ ನಾಚಿಕೆಯೆಂದನಾ ಚೈದ್ಯ ॥19॥
೦೨೦ ಓಡಿ ಕೊಲಿಸಿದ ...{Loading}...
ಓಡಿ ಕೊಲಿಸಿದ ಕಾಲಯವನನು
ಮೂಡಿದವೆ ಹುಲು ಕಲುಗಳಕಟಾ
ವೋಡುಕುಳಿ ಹೋದಲ್ಲಿ ಮಗಧನ ರಾಜಕಾರ್ಯದಲಿ
ಆಡಲರಿಯೆ ವಿಜಾತಿರತ್ನದ
ಖೋಡಿಗಳ ಹಳಿವಾತನೇ ಹರಿ
ತೋಡಿ ಬಡಿಸುವೆ ಕಿವಿಗರೋಚಕವಾಯ್ತು ತೆಗೆಯೆಂದ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಲಯವನನನ್ನು ಓಡಿ ಕೊಲ್ಲಿಸಿದ. ಆ ಮಗಧರಾಜ ತನ್ನ ರಾಜಕಾರ್ಯಕ್ಕಾಗಿ ದಂಡೆತ್ತಿಬಂದನಲ್ಲ, ಆಗ, ಈ ಓಡುಕುಳಿ ಓಡಿದ ಎಡೆಯಲ್ಲಿ ಹುಲ್ಲು ಮೂಡಿತೇ, ಕಲ್ಲು ಎದ್ದಿತೇ ? ವಿಜಾತಿ ರತ್ನದ ದುರ್ಗುಣಗಳನ್ನು ಆಡುವುದಕ್ಕೆ ನಿನಗೆ ತಿಳಿಯದು, ಪಾಪ, ಕೃಷ್ಣನು
ದುಷ್ಟರನ್ನು ಸಂಹರಿಸುವನೇ ? ನೀನು ಸುಮ್ಮನೆ ತೋಡಿ ತೋಡಿ ಬಡಿಸುತ್ತಿದ್ದೀಯೆ, ನನ್ನ ಕಿವಿಗೆ ಅರೋಚಕವಾಗಿದೆ, ತೆಗೆ.
ಪದಾರ್ಥ (ಕ.ಗ.ಪ)
ಖೋಡಿ-ನೀಚ, ದುಷ್ಟ
ಮೂಲ ...{Loading}...
ಓಡಿ ಕೊಲಿಸಿದ ಕಾಲಯವನನು
ಮೂಡಿದವೆ ಹುಲು ಕಲುಗಳಕಟಾ
ವೋಡುಕುಳಿ ಹೋದಲ್ಲಿ ಮಗಧನ ರಾಜಕಾರ್ಯದಲಿ
ಆಡಲರಿಯೆ ವಿಜಾತಿರತ್ನದ
ಖೋಡಿಗಳ ಹಳಿವಾತನೇ ಹರಿ
ತೋಡಿ ಬಡಿಸುವೆ ಕಿವಿಗರೋಚಕವಾಯ್ತು ತೆಗೆಯೆಂದ ॥20॥
೦೨೧ ಕಪಟದಲಿ ಭೀಮಾರ್ಜುನರು ...{Loading}...
ಕಪಟದಲಿ ಭೀಮಾರ್ಜುನರು ಸಹಿ
ತುಪಚಿತ ದ್ವಿಜವೇಷದಲಿ ನಿ
ಷ್ಕಪಟ ಮಗಧನ ಮನೆಯನದ್ವಾರದಲಿ ಹೊಕ್ಕರಲ
ಕೃಪಣರಿವದಿರು ವಿಪ್ರವೇಷದ
ಲಪಸದರು ಕಾದಿದರು ಭೀಷ್ಮಗೆ
ಜಪವಲಾ ಕಂಸಾರಿ ಮಾಡಿದ ಕಷ್ಟ ಕೃತಿಯೆಂದ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮಾರ್ಜುನರೊಡನೆ ಒಟ್ಟಾಗಿ ವಿಪ್ರವೇಷದಲ್ಲಿ ಮೋಸದಿಂದ ಹಿಂಬಾಗಿಲ ಮೂಲಕ ಮಗಧರಾಜನ ಮನೆಯೊಳಕ್ಕೆ ಪ್ರವೇಶಿಸಿದರಲ್ಲ! ನೀಚರಿವರು. ಅಪಕೀರ್ತಿಗೆ ಪಾತ್ರರು. ವಿಪ್ರವೇಷದಿಂದಲೇ ಯುದ್ಧಮಾಡಿದರು. ಈ ಕಂಸಾರಿ ಮಾಡಿದ ಹೀನಕಾರ್ಯ ಭೀಷ್ಮನಿಗೆ ಜಪಿಸಲು ಯೋಗ್ಯವಾದದ್ದಾಯಿತಲ್ಲವೇ ?
ಪದಾರ್ಥ (ಕ.ಗ.ಪ)
ಅದ್ವಾರ-ಪ್ರವೇಶಿಸಬಾರದ ಬಾಗಿಲು,
ಅಪಸದ-ದುಷ್ಟ
ಮೂಲ ...{Loading}...
ಕಪಟದಲಿ ಭೀಮಾರ್ಜುನರು ಸಹಿ
ತುಪಚಿತ ದ್ವಿಜವೇಷದಲಿ ನಿ
ಷ್ಕಪಟ ಮಗಧನ ಮನೆಯನದ್ವಾರದಲಿ ಹೊಕ್ಕರಲ
ಕೃಪಣರಿವದಿರು ವಿಪ್ರವೇಷದ
ಲಪಸದರು ಕಾದಿದರು ಭೀಷ್ಮಗೆ
ಜಪವಲಾ ಕಂಸಾರಿ ಮಾಡಿದ ಕಷ್ಟ ಕೃತಿಯೆಂದ ॥21॥
೦೨೨ ಬೆರವನಗ್ಗದ ಮಾಗಧೇನ್ದ್ರನ ...{Loading}...
ಬೆರವನಗ್ಗದ ಮಾಗಧೇಂದ್ರನ
ಮುರಿದ ಮುರುಕಕೆ ಭೀಮನಾತನ
ಸೆರೆಯ ಮನೆಯಲಿ ಸಿಕ್ಕಿದವನೀಪಾಲ ಪಂತಿಗಳ
ಸೆರೆಯನಿವ ಬಿಡಿಸಿದನು ಗಡ ಬೊ
ಬ್ಬಿರಿವ ಪೌರುಷವೇಕೆ ಕಡೆಯಲಿ
ಕರುಬುವವರಾವೈಸಲೇ ನಿಮಗೆಂದನಾ ಚೈದ್ಯ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅತಿಶಯವಾದ ಮಾಗಧೇಂದ್ರನನ್ನು ಸೋಲಿಸಿದ ಸಂಭ್ರಮದಲ್ಲಿ ಇರುವವನು ಭೀಮ. ಜರಾಸಂಧನ ಸೆರೆಮನೆಯಲ್ಲಿ ಸಿಕ್ಕಿಬಿದ್ದಿದ್ದ ರಾಜರುಗಳನ್ನು ಸಾಲಾಗಿ ಬಿಡಿಸಿ ಕಳಿಸಿ ಕೀರ್ತಿಯನ್ನು ಪಡೆದವನು ಕೃಷ್ಣ. ಭೀಷ್ಮ , ಅನಾವಶ್ಯಕವಾಗಿ ಅವನ ಪೌರುಷವನ್ನೇಕೆ ಹೊಗಳುತ್ತೀಯೆ? ಇದ್ದದ್ದನ್ನು ಹೇಳಿದರೆ, ಅವನನ್ನು ಕಂಡರೆ ನನಗೆ ಮತ್ಸರವೆಂದು ಕಾಣುತ್ತದಲ್ಲವೆ ನಿಮಗೆ ?
ಪದಾರ್ಥ (ಕ.ಗ.ಪ)
ಬೆರ-ಸೊಕ್ಕು, ಗರ್ವಿಸು
ಮೂಲ ...{Loading}...
ಬೆರವನಗ್ಗದ ಮಾಗಧೇಂದ್ರನ
ಮುರಿದ ಮುರುಕಕೆ ಭೀಮನಾತನ
ಸೆರೆಯ ಮನೆಯಲಿ ಸಿಕ್ಕಿದವನೀಪಾಲ ಪಂತಿಗಳ
ಸೆರೆಯನಿವ ಬಿಡಿಸಿದನು ಗಡ ಬೊ
ಬ್ಬಿರಿವ ಪೌರುಷವೇಕೆ ಕಡೆಯಲಿ
ಕರುಬುವವರಾವೈಸಲೇ ನಿಮಗೆಂದನಾ ಚೈದ್ಯ ॥22॥
೦೨೩ ಕೇಳಿ ಕಿಡಿಕಿಡಿಗೆದರಿ ...{Loading}...
ಕೇಳಿ ಕಿಡಿಕಿಡಿಗೆದರಿ ತನು ರೋ
ಮಾಳಿ ತಳಿದುದು ರೋಷವಹ್ನಿ
ಜ್ವಾಲೆ ಝಳಪಿಸೆ ಜಡಿದವರುಣಚ್ಛವಿಯಲಕ್ಷಿಗಳು
ಸೂಳುರಿಯ ನಿಡುಸುಯ್ಲು ಕಬ್ಬೊಗೆ
ಜಾಳಿಗೆಯಲೇಕಾವಳಿಯ ಮು
ಕ್ತಾಳಿ ಕಂದಿತು ಖತಿಯ ಮೊನೆಯಲಿ ಮಸಗಿದನು ಭೀಮ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಿಶುಪಾಲನ ಈ ಮಾತನ್ನು ಕೇಳಿದೊಡನೆ ಭೀಮನಿಗೆ ರೋಷಾವೇಶ ಬಂದಿತು. ಕಿಡಿಗೆದರಿ ಮೈ ರೋಮಾಂಚಗೊಂಡಿತು. ರೋಷಾಗ್ನಿಯ ಜ್ವಾಲೆ ಧಗಧಗಿಸಲು ಕಣ್ಗಳು ಕೆಂಪೇರಿದವು. ಮೇಲಿಂದ ಮೇಲೆ ಉರಿಯೊಡನೆ ಹೊರಹೊಮ್ಮುತ್ತಿದ್ದ ನಿಟ್ಟುಸಿರು ಮತ್ತು ಅದರ ಜೊತೆಜೊತೆಗೇ ಹೊಮ್ಮುತ್ತಿದ್ದ ಕಪ್ಪು ಹೊಗೆಯ ರಾಶಿಯಿಂದ ಅವನ ಕೊರಳಲ್ಲಿದ್ದ ಒಂದೆಳೆ ಮುತ್ತಿನ ಸರದ ಮುತ್ತುಗಳು ಮಸುಕಾದವು. ಕೆರಳಿದ ಭೀಮ ರೋಷದ ತುತ್ತತುದಿಯನ್ನು ಮುಟ್ಟಿದನು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಕೇಳಿ ಕಿಡಿಕಿಡಿಗೆದರಿ ತನು ರೋ
ಮಾಳಿ ತಳಿದುದು ರೋಷವಹ್ನಿ
ಜ್ವಾಲೆ ಝಳಪಿಸೆ ಜಡಿದವರುಣಚ್ಛವಿಯಲಕ್ಷಿಗಳು
ಸೂಳುರಿಯ ನಿಡುಸುಯ್ಲು ಕಬ್ಬೊಗೆ
ಜಾಳಿಗೆಯಲೇಕಾವಳಿಯ ಮು
ಕ್ತಾಳಿ ಕಂದಿತು ಖತಿಯ ಮೊನೆಯಲಿ ಮಸಗಿದನು ಭೀಮ ॥23॥
೦೨೪ ಸೆರಗ ಸಂವರಿಸಿದನು ...{Loading}...
ಸೆರಗ ಸಂವರಿಸಿದನು ಮಕುಟವ
ನುರುಗದಂತಿರೆ ಮುರುಹಿ ಸಚಿವಂ
ಗರುಹಿದನು ಸನ್ನೆಯಲಿ ಸಮರಕೆ ಚಾಪ ಮಾರ್ಗಣವ
ಹೊರಗೆ ಸಂವರಿಸಿರಲಿ ದಳ ಕೈ
ಮರೆಯ ಬೇಡ ಸುನೀತನನು ನಾ
ವ್ತರುಬಿ ನಿಂದಾಕ್ಷಣದಲೊದಗುವುದೆಂದು ಸೂಚಿಸಿದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೆರಗೆತ್ತಿ ಕಟ್ಟಿದ. ಕಿರೀಟವನ್ನು ಜರುಗದಂತೆ ಭದ್ರಪಡಿಸಿಕೊಂಡ. ತನ್ನ ಸಚಿವನಿಗೆ ಸಂಜ್ಞೆಮಾಡಿ ಯುದ್ಧಕ್ಕೆ ಬಿಲ್ಲು ಬಾಣಗಳೊಡನೆ ಹೊರಗೆ ಸೈನ್ಯ ಸಜ್ಜಾಗಿರಲಿ. ಕೈಮರೆಯುವುದು ಬೇಡ. ಶಿಶುಪಾಲನನ್ನು ನಾವು ಮುತ್ತಿದ ಕೂಡಲೆ. ಜೊತೆಗೆ ಸೈನ್ಯ ಒದಗಬೇಕು ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಸೆರಗ ಸಂವರಿಸಿದನು ಮಕುಟವ
ನುರುಗದಂತಿರೆ ಮುರುಹಿ ಸಚಿವಂ
ಗರುಹಿದನು ಸನ್ನೆಯಲಿ ಸಮರಕೆ ಚಾಪ ಮಾರ್ಗಣವ
ಹೊರಗೆ ಸಂವರಿಸಿರಲಿ ದಳ ಕೈ
ಮರೆಯ ಬೇಡ ಸುನೀತನನು ನಾ
ವ್ತರುಬಿ ನಿಂದಾಕ್ಷಣದಲೊದಗುವುದೆಂದು ಸೂಚಿಸಿದ ॥24॥
೦೨೫ ಪವನ ತನಯನ ...{Loading}...
ಪವನ ತನಯನ ಖತಿಯ ಝಾಡಿಯ
ಹವಣ ಕಂಡರು ಮಸಗಿದರು ಯಾ
ದವರ ಪಡೆಯಲಿ ಸಾಂಬ ಸಾತ್ಯಕಿ ಕಾಮ ಕೃತವರ್ಮ
ತವ ತವಗೆ ಪಾಂಚಾಲ ಕೇಕಯ
ನಿವಹ ಪಾಂಡವ ಸುತರು ಮೊದಲಾ
ದವಗಡೆಯರನುವಾಗೆ ಗಜಬಜವಾಯ್ತು ನಿಮಿಷದಲಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನ ರೋಷ ಪ್ರಮಾಣದ ಅತಿಶಯತೆಯನ್ನು ನೋಡಿ ಯಾದವರ ಸೈನ್ಯದಲ್ಲಿ ಸಾಂಬ ಸಾತ್ಯಕಿ ಕಾಮ ಕೃತವರ್ಮರು ಕೆರಳಿದರು. ಪಾಂಚಾಲರು ಕೇಕಯರು ಪಾಂಡವಸುತರು ಮೊದಲಾದ ಶೂರರು ತಾವುತಾವಾಗಿಯೇ ಯುದ್ಧಕ್ಕೆ ಅಣಿಯಾದರು. ನಿಮಿಷ ಮಾತ್ರದಲ್ಲಿ ಅಲ್ಲಿ ಗಜಬಜವುಂಟಾಯಿತು.
ಪದಾರ್ಥ (ಕ.ಗ.ಪ)
ಅವಗಡೆಯ-ಶೂರ
ಕಾಮ- ಪ್ರದ್ಯುಮ್ನ
ಮೂಲ ...{Loading}...
ಪವನ ತನಯನ ಖತಿಯ ಝಾಡಿಯ
ಹವಣ ಕಂಡರು ಮಸಗಿದರು ಯಾ
ದವರ ಪಡೆಯಲಿ ಸಾಂಬ ಸಾತ್ಯಕಿ ಕಾಮ ಕೃತವರ್ಮ
ತವ ತವಗೆ ಪಾಂಚಾಲ ಕೇಕಯ
ನಿವಹ ಪಾಂಡವ ಸುತರು ಮೊದಲಾ
ದವಗಡೆಯರನುವಾಗೆ ಗಜಬಜವಾಯ್ತು ನಿಮಿಷದಲಿ ॥25॥
೦೨೬ ಸೆಳೆದಡಾಯುಧವುತ್ತರೀಯವ ...{Loading}...
ಸೆಳೆದಡಾಯುಧವುತ್ತರೀಯವ
ನಿಳುಹಿ ಮುಂಗೈಯಲಿ ವೃಕೋದರ
ಮೊಳಗುವನುವನು ಕಂಡು ಧಿಮ್ಮನೆ ಭೀಷ್ಮನಡಹಾಯ್ದು
ಸೆಳೆದು ಕೊಂಡನು ಖಡುಗವನು ಭುಜ
ವಳಯದಿಂದವುಚಿದನು ತೋಟಿಯ
ತೊಳಸುಗರ ಹೊಯ್ ಹೊಯ್ಯೆನುತ ಗರ್ಜಿಸಿದನಾ ಭೀಷ್ಮ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮಸೇನನು ಉತ್ತರೀಯವನ್ನು ಇಳಿಸಿ ಅಡಾಯುಧವನ್ನು ಸೆಳೆದು ಮುಂಗೈಯನ್ನು ಮುಂದಕ್ಕೆ ನೀಡಿ ಅರ್ಭಟಿಸಿದ್ದನ್ನು ಕಂಡು
ಭೀಷ್ಮ ಥಟ್ಟನೆ ಅಡ್ಡ ನುಗ್ಗಿ ಅವನ ಕೈಯಲ್ಲಿದ್ದ ಖಡ್ಗವನ್ನು ಕಿತ್ತುಕೊಂಡನು. ತನ್ನ ಬಾಹುಗಳಿಂದ ಅವನನ್ನು ಹಿಡಿದು ಅವುಚಿಕೊಂಡು,
ಜಗಳವಿಚ್ಛಿಸುವವರನ್ನು ಹೊಯ್ ಹೊಯ್ ಎಂದು ಗರ್ಜಿಸಿದನು.
ಪದಾರ್ಥ (ಕ.ಗ.ಪ)
ಅಡಾಯುಧ- ಕತ್ತಿ
ಮೂಲ ...{Loading}...
ಸೆಳೆದಡಾಯುಧವುತ್ತರೀಯವ
ನಿಳುಹಿ ಮುಂಗೈಯಲಿ ವೃಕೋದರ
ಮೊಳಗುವನುವನು ಕಂಡು ಧಿಮ್ಮನೆ ಭೀಷ್ಮನಡಹಾಯ್ದು
ಸೆಳೆದು ಕೊಂಡನು ಖಡುಗವನು ಭುಜ
ವಳಯದಿಂದವುಚಿದನು ತೋಟಿಯ
ತೊಳಸುಗರ ಹೊಯ್ ಹೊಯ್ಯೆನುತ ಗರ್ಜಿಸಿದನಾ ಭೀಷ್ಮ ॥26॥
೦೨೭ ನೆರಹಿದಿರಿ ಚತುರಾಬ್ಧಿ ...{Loading}...
ನೆರಹಿದಿರಿ ಚತುರಾಬ್ಧಿ ವಳೆಯದ
ಧರಣಿಪಾಲ ಸಮುದ್ರವನು ಕಾ
ಹುರುವ ಮಾಡಿದರಕಟ ಕೆಡದೇ ರಾಜಸೂಯ ಮಖ
ಧರಧುರದ ದುವ್ರ್ಯಸನಿಗಳನಿ
ಟ್ಟೊರಸಿ ತೆಗೆ ನಿನ್ನವರನೆನುತು
ಬ್ಬರವ ಮಾಣಿಸಿ ಹೂಣೆಗರ ಹೊಯ್ಸಿದನು ಕಲಿ ಭೀಷ್ಮ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ಅವರಿಗೆ ಬುದ್ಧಿವಾದ ಹೇಳಿದ, “ಚತುಸ್ಸಾಗರ ಪರ್ಯಂತವಾದ ಭೂಮಿಯಲ್ಲಿದ್ದ ರಾಜರನ್ನೆಲ್ಲ ಇಲ್ಲಿ ಸೇರಿದ್ದೀರಿ. ದುಡುಕಿದರೆ ರಾಜಸೂಯ ಯಾUವು ಕೆಡುವುದಿಲ್ಲವೇ ? ಯುದ್ಧಕ್ಕೆ ಸಡಗರಗೊಳ್ಳುವ ದುವ್ರ್ಯಸನವುಳ್ಳವರನ್ನು ಬಡಿದು ತಳ್ಳು” ಎಂದು ಅಬ್ಬರಿಸಿ ಅವರ ಉತ್ಸಾಹವನ್ನು ತಗ್ಗಿಸಿ ಆ ವೀರರನ್ನೆಲ್ಲ ಹಿಮ್ಮಟ್ಟುವಂತೆ ಮಾಡಿದ.
ಪದಾರ್ಥ (ಕ.ಗ.ಪ)
ಧರಧುರ-ಯುದ್ಧಕ್ಕೆ ಸಡಗರ, ಹೂಣೆಗ-ವೀರ
ಕಾಹುರ- ದುಡುಕು
ಮೂಲ ...{Loading}...
ನೆರಹಿದಿರಿ ಚತುರಾಬ್ಧಿ ವಳೆಯದ
ಧರಣಿಪಾಲ ಸಮುದ್ರವನು ಕಾ
ಹುರುವ ಮಾಡಿದರಕಟ ಕೆಡದೇ ರಾಜಸೂಯ ಮಖ
ಧರಧುರದ ದುವ್ರ್ಯಸನಿಗಳನಿ
ಟ್ಟೊರಸಿ ತೆಗೆ ನಿನ್ನವರನೆನುತು
ಬ್ಬರವ ಮಾಣಿಸಿ ಹೂಣೆಗರ ಹೊಯ್ಸಿದನು ಕಲಿ ಭೀಷ್ಮ ॥27॥
೦೨೮ ಬಿಡುಬಿಡೆಲೆ ಗಾಙ್ಗೇಯ ...{Loading}...
ಬಿಡುಬಿಡೆಲೆ ಗಾಂಗೇಯ ಭೀಮನ
ಕಡಿದು ಪೂರ್ಣಾಹುತಿಯನಗ್ನಿಗೆ
ಬಡಿಸಿ ಕೊಡುವೆನು ಸ್ವಾಮಿದ್ರೋಹಿಯ ಕರುಳ ದಂಡೆಗಳ
ಮುಡಿಸುವೆನು ಜಯಸಿರಿಗೆ ನೋಡೆ
ನ್ನೊಡನೆ ಮೇಳವೆ ದಕ್ಷಯಜ್ಞದ
ಮೃಡನ ಮರೆಸುವೆನೆನುತ ಮಿಗೆ ಬೊಬ್ಬಿರಿದನಾ ಚೈದ್ಯ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಚೈದ್ಯ ಭೀಷ್ಮನಿಗೆ “ಬಿಡಿಬಿಡು ಎಲೆ ಗಾಂಗೇಯ, ಆ ಭೀಮನನ್ನು ಕಡಿದು ಯಾಗದ ಅಗ್ನಿಗೆ ಅವನನ್ನು ಪೂರ್ಣಾಹುತಿಯನ್ನಾಗಿ ಕೊಡುತ್ತೇನೆ. ಆ ಸ್ವಾಮಿದ್ರೋಹಿಯ ಕರುಳದಂಡೆಗಳನ್ನು ಜಯಸಿರಿಗೆ ಮುಡಿಸುತ್ತೇನೆ ನೋಡು. ಅವನು ನನಗೆ ಸಾಟಿಯೇ ? ದಕ್ಷಯಜ್ಞದ ಮೃಡನನ್ನು ಮರೆಯುವಂತೆ ಮಾಡುತ್ತೇನೆ. ಎಂದು ಆರ್ಭಟಿಸಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಬಿಡುಬಿಡೆಲೆ ಗಾಂಗೇಯ ಭೀಮನ
ಕಡಿದು ಪೂರ್ಣಾಹುತಿಯನಗ್ನಿಗೆ
ಬಡಿಸಿ ಕೊಡುವೆನು ಸ್ವಾಮಿದ್ರೋಹಿಯ ಕರುಳ ದಂಡೆಗಳ
ಮುಡಿಸುವೆನು ಜಯಸಿರಿಗೆ ನೋಡೆ
ನ್ನೊಡನೆ ಮೇಳವೆ ದಕ್ಷಯಜ್ಞದ
ಮೃಡನ ಮರೆಸುವೆನೆನುತ ಮಿಗೆ ಬೊಬ್ಬಿರಿದನಾ ಚೈದ್ಯ ॥28॥
೦೨೯ ಬಿಡು ಬಿಡಕಟಾ ...{Loading}...
ಬಿಡು ಬಿಡಕಟಾ ಭೀಷ್ಮ ದರ್ಪದಿ
ಕಡುಜರೆದ ಕಳವಳದ ಕುನ್ನಿಗೆ
ಕುಡಿಸುವೆನು ದಿವ್ಯಾಸ್ತ್ರವಿಶಿಖ ವಿಶೇಷದೌಷಧಿಯ
ತಡೆದು ತನ್ನನು ರಾಜಕಾರ್ಯವ
ಕೆಡೆಸಿದೆಯಲಾ ದಕ್ಷಯಜ್ಞದ
ಮೃಡನ ಮುರುಕವ ಕಾಬೆನೆನುತೊಡೆಮುರುಚಿದನು ಭೀಮ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚೈದ್ಯನ ಮಾತು ಕೇಳಿ ಕೆರಳಿದ ಭೀಮ “ಬಿಡುಬಿಡು, ಅಕಟಾ, ಭೀಷ್ಮ, ಗರ್ವದಿಂದ ಅತಿಯಾಗಿ ಜರೆಯುತ್ತಾ ವ್ಯಾಕುಲಗೊಂಡಿರುವ ಈ ಕುನ್ನಿಗೆ ದಿವ್ಯಾಸ್ತ್ರ ಬಾಣದ ವಿಶೇಷ ರೀತಿಯ ಔಷಧವನ್ನು ಕುಡಿಸುತ್ತೇನೆ. ಹೀಗೆ ನನ್ನನ್ನು ತಡೆದು ಆಗಬೇಕಾದ ರಾಜಕಾರ್ಯವನ್ನು ಕೆಡಿಸಿದೆಯಲ್ಲಾ. ಆ ದಕ್ಷಯಜ್ಞದ ಮೃಡನ ಶೌರ್ಯವನ್ನು ನೋಡಿಯೇಬಿಡುತ್ತೇನೆ” ಎಂದು ಭೀಷ್ಮನ
ಕೈಯಿಂದ ನುಸುಳಿ ತಪ್ಪಿಸಿಕೊಂಡ.
ಪದಾರ್ಥ (ಕ.ಗ.ಪ)
ವಿಶಿಖ-ಬಾಣ
ಮೂಲ ...{Loading}...
ಬಿಡು ಬಿಡಕಟಾ ಭೀಷ್ಮ ದರ್ಪದಿ
ಕಡುಜರೆದ ಕಳವಳದ ಕುನ್ನಿಗೆ
ಕುಡಿಸುವೆನು ದಿವ್ಯಾಸ್ತ್ರವಿಶಿಖ ವಿಶೇಷದೌಷಧಿಯ
ತಡೆದು ತನ್ನನು ರಾಜಕಾರ್ಯವ
ಕೆಡೆಸಿದೆಯಲಾ ದಕ್ಷಯಜ್ಞದ
ಮೃಡನ ಮುರುಕವ ಕಾಬೆನೆನುತೊಡೆಮುರುಚಿದನು ಭೀಮ ॥29॥
೦೩೦ ಮತ್ತೆ ಹಿಡಿದನು ...{Loading}...
ಮತ್ತೆ ಹಿಡಿದನು ಪವನಜನ ಬಾ
ಗೊತ್ತಿದನು ಮರುಳೇ ಸುರೌಘದ
ತುತ್ತು ಗಂಟಲಲಿಳಿವುದೇ ಗಜಬಜವ ಮಾಡಿದರೆ
ತೆತ್ತಿಗನು ಹರಿ ಯಜ್ಞರಿಪುಗಳ
ಮೃತ್ಯುವರಿಯಾ ನೀನು ಮೀರುವ
ದುತ್ತಮಿಕೆಯಲ್ಲೆನುತ ಮಿಗೆ ತಿಳುಹಿದನು ಗಾಂಗೇಯ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮ ಮತ್ತೆ ಭೀಮನನ್ನು ಹಿಡಿದು ತನ್ನತ್ತ ಬಾಗುವಂತೆ ಒತ್ತಿದ. ಮತ್ತೆ ಹೇಳಿದ. “ಅಯ್ಯೋ ಮರುಳೇ, ನೀನು ಹೀಗೆ ಗಜಬಜ ಮಾಡಿದರೆ, ದೇವತೆಗಳಿಗಿತ್ತ ಹವಿಸ್ಸಿನ ತುತ್ತು ಅವರ ಗಂಟಲಲ್ಲಿ ಇಳಿಯುತ್ತದೆಯೋ? ಯಜ್ಞಕ್ಕೆ ಯಾರು ಶತ್ರುಗಳೋ ಅವರಿಗೆ ಮೃತ್ಯುಸ್ವರೂಪನಾಗಿ ಹೊಣೆಗಾರನಾಗಿರುವವನು ಈ ಹರಿ ತಿಳಿದುಕೋ. ನೀನು ಮೀರಿ ನಡೆಯುವುದು ಯೋಗ್ಯವಲ್ಲ ಎಂದು ಬುದ್ಧಿವಾದ ಹೇಳಿದ.
ಪದಾರ್ಥ (ಕ.ಗ.ಪ)
ತೆತ್ತಿಗ-ಹೊಣೆಗಾರ
ಮೂಲ ...{Loading}...
ಮತ್ತೆ ಹಿಡಿದನು ಪವನಜನ ಬಾ
ಗೊತ್ತಿದನು ಮರುಳೇ ಸುರೌಘದ
ತುತ್ತು ಗಂಟಲಲಿಳಿವುದೇ ಗಜಬಜವ ಮಾಡಿದರೆ
ತೆತ್ತಿಗನು ಹರಿ ಯಜ್ಞರಿಪುಗಳ
ಮೃತ್ಯುವರಿಯಾ ನೀನು ಮೀರುವ
ದುತ್ತಮಿಕೆಯಲ್ಲೆನುತ ಮಿಗೆ ತಿಳುಹಿದನು ಗಾಂಗೇಯ ॥30॥
೦೩೧ ಇವನ ಕೊಲುವೆನು ...{Loading}...
ಇವನ ಕೊಲುವೆನು ಮಿಕ್ಕ ಭೂಪರ
ನಿವಹವನು ಮನ್ನಿಸುವೆನೆನೆ ನೀ
ನಿವನ ಕೊಲುವುದಸಾಧ್ಯವೀತನ ನಿಜವನರಿಯೆಯಲ
ಇವ ಹಿರಣ್ಯಾಕ್ಷಕ ಕಣಾ ಮರು
ಭವದೊಳಗೆ ದಶವದನನಿವ ಸಂ
ಭವಿಸಿದನು ಶಿಶುಪಾಲವೆಸರಲಿ ಭೀಮ ಕೇಳ್ ಎಂದ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆದರೂ ಭೀಮ “ಇವನೊಬ್ಬನನ್ನು ಕೊಲ್ಲುತ್ತೇನೆ! ಮಿಕ್ಕ ರಾಜರ ಸಮೂಹವನ್ನು ಮನ್ನಿಸುತ್ತೇನೆ” ಎಂದ. ಅದಕ್ಕೆ ಭೀಷ್ಮ “ನೀನು ಇವನನ್ನು ಕೊಲ್ಲುವುದು ಅಸಾಧ್ಯ. ಈತನ ನಿಜಸಂಗತಿಯೇನೆಂದು ತಿಳಿಯೆ. ಇವನು ಹಿಂದೆ ಹಿರಣ್ಯಾಕ್ಷನಾಗಿದ್ದವನು. ಮರುಜನ್ಮದಲ್ಲಿ ರಾವಣನಾದ. ಮತ್ತೆ ಅವನೇ ಈಗ ಶಿಶುಪಾಲನಾಗಿ ಜನಿಸಿದ್ದಾನೆ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಇವನ ಕೊಲುವೆನು ಮಿಕ್ಕ ಭೂಪರ
ನಿವಹವನು ಮನ್ನಿಸುವೆನೆನೆ ನೀ
ನಿವನ ಕೊಲುವುದಸಾಧ್ಯವೀತನ ನಿಜವನರಿಯೆಯಲ
ಇವ ಹಿರಣ್ಯಾಕ್ಷಕ ಕಣಾ ಮರು
ಭವದೊಳಗೆ ದಶವದನನಿವ ಸಂ
ಭವಿಸಿದನು ಶಿಶುಪಾಲವೆಸರಲಿ ಭೀಮ ಕೇಳೆಂದ ॥31॥
೦೩೨ ಜನಿಸಿದಾಗಳೆ ಭಾಳದಲಿ ...{Loading}...
ಜನಿಸಿದಾಗಳೆ ಭಾಳದಲಿ ಲೋ
ಚನ ಚತುರ್ಭುಜನಾದನದ್ಭುತ
ನಿನದದಲಿ ನೆಲ ಬಿರಿಯಲೊದರಿದನಂದು ಬಾಲ್ಯದಲಿ
ತನತನಗೆ ಜನ ಬೆದರಿತೀತನ
ಮನೆಗೆ ನಾರದ ಬಂದನೀತನ
ಜನನಿ ಬಿನ್ನಹ ಮಾಡಿದಳು ಶಿಶುಪಾಲ ಸಂಗತಿಯ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವನು ಜನಿಸಿದಾಗ ಇವನ ಹಣೆಯಲ್ಲಿ ಕಣ್ಣಿತ್ತು ಅಲ್ಲದೆ ನಾಲ್ಕು ಭುಜಗಳೂ ಇದ್ದುವು. ಭಯಂಕರವಾಗಿ ನೆಲ ಬಿರಿಯುವಂತೆ ಅಳತೊಡಗಿದ. ಅವನ ಈ ಬಾಲ್ಯವನ್ನು ನೋಡಿ ಜನ ಬೆದರಿದರು. ಆಗ ಇವರ ಮನೆಗೆ ನಾರದ ಬಂದ. ಆಗ ಶಿಶುಪಾಲನ ತಾಯಿ ಆತನಿಗೆ ಮಗುವಿನ ಸಂಗತಿಯನ್ನು ಹೇಳಿಕೊಂಡಳು.
ಪದಾರ್ಥ (ಕ.ಗ.ಪ)
ಭಾಳ-ಹಣೆ
ಮೂಲ ...{Loading}...
ಜನಿಸಿದಾಗಳೆ ಭಾಳದಲಿ ಲೋ
ಚನ ಚತುರ್ಭುಜನಾದನದ್ಭುತ
ನಿನದದಲಿ ನೆಲ ಬಿರಿಯಲೊದರಿದನಂದು ಬಾಲ್ಯದಲಿ
ತನತನಗೆ ಜನ ಬೆದರಿತೀತನ
ಮನೆಗೆ ನಾರದ ಬಂದನೀತನ
ಜನನಿ ಬಿನ್ನಹ ಮಾಡಿದಳು ಶಿಶುಪಾಲ ಸಂಗತಿಯ ॥32॥
೦೩೩ ಆತನೆನ್ದನು ತಾಯೆ ...{Loading}...
ಆತನೆಂದನು ತಾಯೆ ಶಿಶು ವಿ
ಖ್ಯಾತನಹ ನೀನಾರ ಹಸ್ತದೊ
ಳೀತನನು ಕೊಟ್ಟಾಗಲಡಗುವವಕ್ಷಿ ಭುಜಯುಗಳ
ಆತನೀತನ ಮೃತ್ಯುವಿದು ಸಂ
ಭೂತ ನಿಶ್ಚಯವೆಂದು ಶಿಶುವಿನ
ಮಾತೆಯನು ಸಂತೈಸಿ ನಾರದನಡರಿದನು ನಭವ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ನಾರದ ಅವಳನ್ನು ಕುರಿತು “ತಾಯಿ, ಈ ಶಿಶು ಪ್ರಸಿದ್ಧನಾಗುತ್ತಾನೆ. ಈ ಮಗುವನ್ನು ನೀನು ಯಾರ ಕೈಯಲ್ಲಿ ಕೊಟ್ಟಾಗ ಅವನ ಹಣೆಗಣ್ಣು ಮತ್ತು ಹೆಚ್ಚಿನ ಎರಡು ಭುಜಗಳು ಅದೃಶ್ಯವಾಗುವವೋ ಆತನೇ ಇವರ ಪಾಲಿಗೆ ಮೃತ್ಯುವಾಗುತ್ತಾನೆ ಇದು ಪ್ರಾಪ್ತವಾಗಿರುವ ನಿಶ್ಚಯ ಎಂದು ಹೇಳಿ ಅವಳನ್ನು ಸಂತೈಸಿ ಆಕಾಶಕ್ಕೇರಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಆತನೆಂದನು ತಾಯೆ ಶಿಶು ವಿ
ಖ್ಯಾತನಹ ನೀನಾರ ಹಸ್ತದೊ
ಳೀತನನು ಕೊಟ್ಟಾಗಲಡಗುವವಕ್ಷಿ ಭುಜಯುಗಳ
ಆತನೀತನ ಮೃತ್ಯುವಿದು ಸಂ
ಭೂತ ನಿಶ್ಚಯವೆಂದು ಶಿಶುವಿನ
ಮಾತೆಯನು ಸಂತೈಸಿ ನಾರದನಡರಿದನು ನಭವ ॥33॥
೦೩೪ ಇವನ ಕಾಣಲು ...{Loading}...
ಇವನ ಕಾಣಲು ಬಂದರವನಿಪ
ರವರವರ ಕೈಗಳಲಿ ತಾಯ್ತಂ
ದಿವನನಿತ್ತಳು ಮಾಣವಿವನಧಿಕಾಕ್ಷಿ ಬಾಹುಗಳು
ಇವನ ತಾಯ್ ತಮ್ಮತ್ತೆಯೆಂದು
ತ್ಸವದೊಳೀ ಮುರವೈರಿ ಬರಲಂ
ದಿವನ ತಂದಿವನವ್ವೆ ಕೊಟ್ಟಳು ಹರಿಯ ಹಸ್ತದಲಿ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಷ್ಟೋ ಜನ ರಾಜರು ಇವನನ್ನು ನೋಡಲೆಂದು ಬರುತ್ತಿದ್ದರು. ಪ್ರತಿಯೊಬ್ಬರ ಕೈಯಲ್ಲಿ ತಾಯಿ ಆ ಮಗುವನ್ನು ಇಡುತ್ತಿದ್ದಳು. ಇವನ ಅಧಿಕವಾದ ಕಣ್ಣು ಮತ್ತು ಬಾಹುಗಳು ಮಾಯವಾಗಲಿಲ್ಲ. ಇವನ ತಾಯಿ ತನಗೆ ಅತ್ತೆ ಎಂಬ ಸಂತೋಷದಿಂದ ಕೃಷ್ಣ ಬರಲು ಮಗುವನ್ನು ಅವನ ಕೈಗೂ ತಂದಿತ್ತಳು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಇವನ ಕಾಣಲು ಬಂದರವನಿಪ
ರವರವರ ಕೈಗಳಲಿ ತಾಯ್ತಂ
ದಿವನನಿತ್ತಳು ಮಾಣವಿವನಧಿಕಾಕ್ಷಿ ಬಾಹುಗಳು
ಇವನ ತಾಯ್ ತಮ್ಮತ್ತೆಯೆಂದು
ತ್ಸವದೊಳೀ ಮುರವೈರಿ ಬರಲಂ
ದಿವನ ತಂದಿವನವ್ವೆ ಕೊಟ್ಟಳು ಹರಿಯ ಹಸ್ತದಲಿ ॥34॥
೦೩೫ ಆಗಳಿವನಧಿಕಾಕ್ಷಿ ಬಾಹುವು ...{Loading}...
ಆಗಳಿವನಧಿಕಾಕ್ಷಿ ಬಾಹುವು
ನೀಗಿದೊಡನಿವನವ್ವೆ ಕಂಡು
ಬ್ಬೇಗದಲಿ ಕಮಲಾಕ್ಷನಂಘ್ರಿಯಲೆರಗಿ ಕೈ ಮುಗಿದು
ಮೇಗರೆಯ ಮಾತಲ್ಲ ಬಾಲಕ
ನಾಗುಹೋಗಿನ ಕೊರತೆ ನಿನ್ನನು
ತಾಗುವುದು ನೀ ಸೈರಿಸೆಂದಭಯವನು ಬೇಡಿದಳು ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಮಗುವಿನ ಹೆಚ್ಚಿನ ಕಣ್ಣು ಮತ್ತು ಬಾಹುಗಳು ಅದೃಶ್ಯವಾದುವು. ಅದನ್ನು ಕಂಡ ತಾಯಿ ಉದ್ವೇಗಗೊಂಡು, ಕಮಲಾಕ್ಷನ ಪಾದಗಳಿಗೆ ಎರಗಿ ಕೈಮುಗಿದು “ಇದು ಕೇವಲ ಮೇಲುಮೇಲಿನ ಮಾತಲ್ಲ. ಈ ಮಗುವಿನ ಆಗುಹೋಗಿನ ಕೊರತೆ ಏನಿದ್ದರೂ ನಿನಗೇ ಸೇರಿದುವು. ನೀನು ಸಹಿಸಿಕೊಳ್ಳಬೇಕು.” ಎಂದು ಬೇಡಿದಳು.
ಪದಾರ್ಥ (ಕ.ಗ.ಪ)
ಉಬ್ಬೇಗ-ಉದ್ವೇಗ
ಮೂಲ ...{Loading}...
ಆಗಳಿವನಧಿಕಾಕ್ಷಿ ಬಾಹುವು
ನೀಗಿದೊಡನಿವನವ್ವೆ ಕಂಡು
ಬ್ಬೇಗದಲಿ ಕಮಲಾಕ್ಷನಂಘ್ರಿಯಲೆರಗಿ ಕೈ ಮುಗಿದು
ಮೇಗರೆಯ ಮಾತಲ್ಲ ಬಾಲಕ
ನಾಗುಹೋಗಿನ ಕೊರತೆ ನಿನ್ನನು
ತಾಗುವುದು ನೀ ಸೈರಿಸೆಂದಭಯವನು ಬೇಡಿದಳು ॥35॥
೦೩೬ ಸೈರಿಸುವೆನಪರಾಧ ಶತವ ...{Loading}...
ಸೈರಿಸುವೆನಪರಾಧ ಶತವ ಕು
ಮಾರಕನ ತಾ ಕೊಲ್ಲೆನೆಂದೀ
ಶೌರಿ ಭಾಷೆಯ ಮಾಡಿ ಹಿಂಗಿದನಿವನ ತಾಯೊಡನೆ
ಆರಿವನ ಮರಣಕ್ಕೆ ಮೊದಲು ಮು
ರಾರಿಯೋ ನೀನೋ ವಿಚಾರಿಸು
ವೀರ ಮಾರುತಿಯೆನಲು ಕೇಳಿದನಂದು ಶಿಶುಪಾಲ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಈ ಹರಿ “ಇವನ ನೂರು ಅಪರಾಧಗಳನ್ನು ಸಹಿಸಿಕೊಳ್ಳುತ್ತೇನೆ. ಇವನನ್ನು ಕೊಲ್ಲುವುದಿಲ್ಲ." ಎಂದು ಅವನ ತಾಯಿಗೆ ಭಾಷೆ ಕೊಟ್ಟು ಅಲ್ಲಿಂದ ಹಿಂತಿರುಗಿದ. ಆದ್ದರಿಂದ ವೀರ ಮಾರುತಿಯೇ, ನೀನೆ ವಿಚಾರ ಮಾಡು. ಇವನ ಮರಣಕ್ಕೆ ಮೂಲನಾದವನು.
ನೀನೋ ಮುರಹರನೋ ? ಎಂದ ಭೀಷ್ಮ
ಪದಾರ್ಥ (ಕ.ಗ.ಪ)
ಮೂಲ ...{Loading}...
ಸೈರಿಸುವೆನಪರಾಧ ಶತವ ಕು
ಮಾರಕನ ತಾ ಕೊಲ್ಲೆನೆಂದೀ
ಶೌರಿ ಭಾಷೆಯ ಮಾಡಿ ಹಿಂಗಿದನಿವನ ತಾಯೊಡನೆ
ಆರಿವನ ಮರಣಕ್ಕೆ ಮೊದಲು ಮು
ರಾರಿಯೋ ನೀನೋ ವಿಚಾರಿಸು
ವೀರ ಮಾರುತಿಯೆನಲು ಕೇಳಿದನಂದು ಶಿಶುಪಾಲ ॥36॥
೦೩೭ ಎಲವೊ ಗೋಪಕುಮಾರನೆನ್ನನು ...{Loading}...
ಎಲವೊ ಗೋಪಕುಮಾರನೆನ್ನನು
ಕೊಲುವನೇ ತಾನಿವನ ಕೈಯ್ಯಿಂ
ದಳಿವವನೆ ಶಿವ ಶಿವ ವಿಕಾರಿಯನೇನ ಮಾಡುವೆನು
ಗಳಹ ಭೀಷ್ಮ ವೃಕೋದರನ ಮೈ
ವಳಿಯ ಭಟನೋ ಮೇಣು ನೀ ಗೋ
ವಳರ ಹಳ್ಳಿಯ ಭಟ್ಟನೋ ಹೇಳೆಂದನಾ ಚೈದ್ಯ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮನಾಡಿದ ಮಾತನ್ನು ಕೇಳಿಸಿಕೊಂಡ ಶಿಶುಪಾಲ “ಎಲವೋ ಈ ಗೋಪಕುಮಾರ ನನ್ನನ್ನು ಕೊಲ್ಲುವನೇ ? ನಾನು ಇವನ
ಕೈಯಿಂದ ಸಾಯುವೆನೇ ? ಶಿವಶಿವಾ ! ಈ ವಿಕಾರಿಯನ್ನು ಏನು ಮಾಡಲಿ ? ಹೀಗೆ ಹರಟುತ್ತಿರುವನು ಭೀಷ್ಮ ! ನೀನೇನು ಭೀಮನಷ್ಟು ಸಾಮಥ್ರ್ಯದ ಭಟನೋ ಅಥವಾ ಗೋವಳರ ಹಳ್ಳಿಯ ಭಟ್ಟನೋ, ಹೇಳು” ಎಂದ.
ಪದಾರ್ಥ (ಕ.ಗ.ಪ)
ಮೈವಳಿ - ಸಾಮಥ್ರ್ಯ
ಮೂಲ ...{Loading}...
ಎಲವೊ ಗೋಪಕುಮಾರನೆನ್ನನು
ಕೊಲುವನೇ ತಾನಿವನ ಕೈಯ್ಯಿಂ
ದಳಿವವನೆ ಶಿವ ಶಿವ ವಿಕಾರಿಯನೇನ ಮಾಡುವೆನು
ಗಳಹ ಭೀಷ್ಮ ವೃಕೋದರನ ಮೈ
ವಳಿಯ ಭಟನೋ ಮೇಣು ನೀ ಗೋ
ವಳರ ಹಳ್ಳಿಯ ಭಟ್ಟನೋ ಹೇಳೆಂದನಾ ಚೈದ್ಯ ॥37॥
೦೩೮ ಈ ಕುರುಕ್ಷಿತಿಪಾಲರಲಿ ...{Loading}...
ಈ ಕುರುಕ್ಷಿತಿಪಾಲರಲಿ ನೀ
ನಾಕೆವಾಳನು ಗಡ ವಯಃಪರಿ
ಪಾಕವುಳ್ಳವನೀಸು ಕಾಲದಲೋದಿದರಿತವಿದೆ
ಕಾಕನುರೆ ಕೊಂಡಾಡಿ ಗೊಲ್ಲರ
ಗೋಕುಲದ ಗೋಪಪ್ರಸಂಗ
ವ್ಯಾಕರಣ ಪಾಂಡಿತ್ಯ ಮೆರೆದುದು ಭೀಷ್ಮ ನಿನಗೆಂದ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕುರುರಾಜರುಗಳಲ್ಲಿ ನೀನು ಪರಾಕ್ರಮಿಯಲ್ಲವೆ ? ಪರಿಪಾಕವಾದ ವಯಸ್ಸುಳ್ಳವನು. ಇಷ್ಟು ಕಾಲ ಓದಿದ ತಿಳಿವಳಿಕೆ ಇದೆ ನಿನಗೆ. ನೀಚನನ್ನು ಕೊಂಡಾಡಿದೆ. ಗೊಲ್ಲರ ಗೋಕುಲದ ಗೋಪಪ್ರಸಂಗದ ನಿನ್ನ ವ್ಯಾಕರಣಪಾಂಡಿತ್ಯ ಚೆನ್ನಾಗಿ ಬೆಳಗಿತು. ಎಂದ
ಪದಾರ್ಥ (ಕ.ಗ.ಪ)
ಆಕೆವಾಳ-ಪರಾಕ್ರಮಿ, ಕಾಕನು-ನೀಚನನ್ನು
ಮೂಲ ...{Loading}...
ಈ ಕುರುಕ್ಷಿತಿಪಾಲರಲಿ ನೀ
ನಾಕೆವಾಳನು ಗಡ ವಯಃಪರಿ
ಪಾಕವುಳ್ಳವನೀಸು ಕಾಲದಲೋದಿದರಿತವಿದೆ
ಕಾಕನುರೆ ಕೊಂಡಾಡಿ ಗೊಲ್ಲರ
ಗೋಕುಲದ ಗೋಪಪ್ರಸಂಗ
ವ್ಯಾಕರಣ ಪಾಂಡಿತ್ಯ ಮೆರೆದುದು ಭೀಷ್ಮ ನಿನಗೆಂದ ॥38॥
೦೩೯ ಇದು ಮಹಾ ...{Loading}...
ಇದು ಮಹಾ ಮಖವಿಲ್ಲಿ ಪೂಜ್ಯನು
ಯದುಗಳರಸನು ಭಟ್ಟನಿಲ್ಲಿಗೆ
ನದಿಯ ಮಗನಿಲ್ಲಿಗೆ ಸದಸ್ಯರು ನಾರದಾದಿಗಳು
ಹುದಿದ ಮರುಭೂಮಿಯಲಿ ಮಾನ್ಯನು
ಖದಿರನಿಲ್ಲಿಗೆ ಗೂಗೆ ಕೋಗಿಲೆ
ಮುದಿನರಿಗಳಿಲ್ಲಿಗೆ ಸಭಾಸದರೆಂದನಾ ಚೈದ್ಯ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚೈದ್ಯ ಮುಂದುವರೆಸಿ “ಇದು ಮಹಾಯಜ್ಞ. ಇಲ್ಲಿ ಪೂಜ್ಯನು ಯದುಗಳ ಅರಸ. ಇಲ್ಲಿ ಹೊಗಳುಭಟ್ಟ ನದಿಯಮಗನಾದ ಭೀಷ್ಮ. ಸದಸ್ಯರು ನಾರದಾದಿಗಳು. ವ್ಯಾಪಿಸಿದ ಈ ಮರುಭೂಮಿಯಲ್ಲಿ ಮಾನ್ಯವಾದುದು ಕಗ್ಗಲಿಮರ ! ಇಲ್ಲಿಗೆ ಗೂಗೆಯೇ ಕೋಗಿಲೆ!
ಮುದಿನರಿಗಳೇ ಇಲ್ಲಿನ ಸಭಾಸದರು” ಎಂದ.
ಪದಾರ್ಥ (ಕ.ಗ.ಪ)
ಖದಿರ-ಕಗ್ಗಲಿಮರ
ಮೂಲ ...{Loading}...
ಇದು ಮಹಾ ಮಖವಿಲ್ಲಿ ಪೂಜ್ಯನು
ಯದುಗಳರಸನು ಭಟ್ಟನಿಲ್ಲಿಗೆ
ನದಿಯ ಮಗನಿಲ್ಲಿಗೆ ಸದಸ್ಯರು ನಾರದಾದಿಗಳು
ಹುದಿದ ಮರುಭೂಮಿಯಲಿ ಮಾನ್ಯನು
ಖದಿರನಿಲ್ಲಿಗೆ ಗೂಗೆ ಕೋಗಿಲೆ
ಮುದಿನರಿಗಳಿಲ್ಲಿಗೆ ಸಭಾಸದರೆಂದನಾ ಚೈದ್ಯ ॥39॥
೦೪೦ ನೀನಲಾ ಧರ್ಮಜ್ಞನನ್ದಾ ...{Loading}...
ನೀನಲಾ ಧರ್ಮಜ್ಞನಂದಾ
ಮಾನಿನಿಯರ ವಿವಾಹದಲಿ ನೀ
ನೇನ ಮಾಡಿದೆ ಬೇಸರಿಸಿ ಬಳಲಿಸಿದೆ ಬಾಲಕಿಯ
ಏನ ಹೇಳುವೆನೊಂದು ಹಂಸನು
ಮಾನಸದ ತೀರದಲಿ ಪಕ್ಷಿವಿ
ತಾನದಲಿ ಧರ್ಮಜ್ಞನಾಯ್ತಾ ಹಂಸ ನೀನೆಂದ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನೀನಲ್ಲವೇ ಧರ್ಮಜ್ಞ ? ಅಂದು (ಸ್ವಯಂವರಮಂಟಪದಿಂದ) ಆ ಮಾನಿನಿಯರನ್ನು (ಅಂಬೆ, ಅಂಬಿಕೆ, ಅಂಬಾಲಿಕೆಯರನ್ನು)
ಕರೆತಂದು ಏನು ಮಾಡಿದೆ ? ಆ ಬಾಲಕಿಯರನ್ನು ಬೇಸರಗೊಳಿಸಿ ಬಳಲಿಸಿದೆ. ಏನು ಹೇಳಲಿ ! ಒಂದು ಹಂಸವು ಮಾನಸಸರೋವರದ ಪಕ್ಕದಲ್ಲಿ ಧರ್ಮಜ್ಞನೆನಿಸಿಕೊಂಡಿದ್ದು, ಆ ಹಂಸಪಕ್ಷಿಯಂತೆಯೇ ಆಯಿತು ನಿನ್ನ ಸ್ಥಿತಿ.
ಪದಾರ್ಥ (ಕ.ಗ.ಪ)
ಮೂಲ ...{Loading}...
ನೀನಲಾ ಧರ್ಮಜ್ಞನಂದಾ
ಮಾನಿನಿಯರ ವಿವಾಹದಲಿ ನೀ
ನೇನ ಮಾಡಿದೆ ಬೇಸರಿಸಿ ಬಳಲಿಸಿದೆ ಬಾಲಕಿಯ
ಏನ ಹೇಳುವೆನೊಂದು ಹಂಸನು
ಮಾನಸದ ತೀರದಲಿ ಪಕ್ಷಿವಿ
ತಾನದಲಿ ಧರ್ಮಜ್ಞನಾಯ್ತಾ ಹಂಸ ನೀನೆಂದ ॥40॥
೦೪೧ ನುಡಿಗಳಲಿ ಸದ್ಧರ್ಮ ...{Loading}...
ನುಡಿಗಳಲಿ ಸದ್ಧರ್ಮ ಸಂಗತಿ
ನಡವಳಿಯಲನ್ಯಾಯವೆಂದೇ
ಕೆಡಹಿದವು ಹಂಸೆಯನು ನಾನಾ ವಿಹಗ ಸಂದೋಹ
ನುಡಿವುದಿಲ್ಲದೆ ಮೇಣು ನಯದಲಿ
ನಡೆದುದಿಲ್ಲೆಲೆ ಭೀಷ್ಮ ನಿನ್ನನು
ಕಡಿದು ಭೂತಕೆ ಬಡಿಸಿದರೆ ಕೃತಕೃತ್ಯನಹೆನೆಂದ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಹಂಸಪಕ್ಷಿಯದು ನುಡಿಗಳಲ್ಲಿ ಸದ್ಧರ್ಮಸಂಗತಿ, ನಡವಳಿಕೆಯಲ್ಲಿ ಅನ್ಯಾಯವೇ ಆಗಿತ್ತು. ಆದ್ದರಿಂದ ಉಳಿದ ಪಕ್ಷಿಗಳ ಗುಂಪು ಆ ಹಂಸವನ್ನು ಕುಕ್ಕಿ ಸಾಯಿಸಿದುವು. ಭೀಷ್ಮ, ನೀನು ನುಡಿಯುವುದಲ್ಲದೆ ನಡತೆಯಲ್ಲಿ ನಯದಿಂದಿಲ್ಲ. ಆದ್ದರಿಂದ ನಾನು ನಿನ್ನನ್ನು ತುಂಡರಿಸಿ ಭೂತಗಣಕ್ಕೆ ಬಡಿಸಿದರೆ ಕೃತಕೃತ್ಯನಾಗುವೆ !
ಪದಾರ್ಥ (ಕ.ಗ.ಪ)
ಮೂಲ ...{Loading}...
ನುಡಿಗಳಲಿ ಸದ್ಧರ್ಮ ಸಂಗತಿ
ನಡವಳಿಯಲನ್ಯಾಯವೆಂದೇ
ಕೆಡಹಿದವು ಹಂಸೆಯನು ನಾನಾ ವಿಹಗ ಸಂದೋಹ
ನುಡಿವುದಿಲ್ಲದೆ ಮೇಣು ನಯದಲಿ
ನಡೆದುದಿಲ್ಲೆಲೆ ಭೀಷ್ಮ ನಿನ್ನನು
ಕಡಿದು ಭೂತಕೆ ಬಡಿಸಿದರೆ ಕೃತಕೃತ್ಯನಹೆನೆಂದ ॥41॥
೦೪೨ ಕಳೆದ ಕಾಲದ ...{Loading}...
ಕಳೆದ ಕಾಲದ ವೃದ್ಧ ಮೇಲ
ಗ್ಗಳದ ನಿಯಮವ್ರತ ಶ್ರುತಿ ಸ್ಮೃತಿ
ಗಳಲಿ ಪರಿಣತನೆಂಬೆ ಕಡೆಯಲಿ ಗೋಪನಂದನನ
ಬೆಳವಿಗೆಯ ಮಾಡಿದೆ ಮಹೀ ಮಂ
ಡಲದ ರಾಯರನಕಟ ಲಜ್ಜಾ
ಕುಳರ ಮಾಡಿದೆ ಭಂಡ ಫಡ ಹೋಗೆಂದನಾ ಚೈದ್ಯ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಳೆಯಕಾಲದ ವೃದ್ಧ, ಅತಿಶಯವಾದ ನಿಯಮ ವ್ರತ ಶ್ರುತಿ ಸ್ಮೃತಿಗಳಲ್ಲಿ ಪರಿಣತ ಎಂದೆ, ಎಲ್ಲ ಸರಿ. ಆದರೆ ಕೊನೆಯಲ್ಲಿ ಗೋಪನಂದನನ್ನು ದೊಡ್ಡವನ್ನಾಗಿ ಮಾಡಿದೆ. ಈ ಮಹಿಮಂಡಲದ ರಾಜರನ್ನೆಲ್ಲ ಲಜ್ಜಾಕುಲರನ್ನಾಗಿ ಮಾಡಿದೆ, ಭಂಡ ಫಡ ! ಹೋಗು ಎಂದನು ಚೈದ್ಯ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಕಳೆದ ಕಾಲದ ವೃದ್ಧ ಮೇಲ
ಗ್ಗಳದ ನಿಯಮವ್ರತ ಶ್ರುತಿ ಸ್ಮೃತಿ
ಗಳಲಿ ಪರಿಣತನೆಂಬೆ ಕಡೆಯಲಿ ಗೋಪನಂದನನ
ಬೆಳವಿಗೆಯ ಮಾಡಿದೆ ಮಹೀ ಮಂ
ಡಲದ ರಾಯರನಕಟ ಲಜ್ಜಾ
ಕುಳರ ಮಾಡಿದೆ ಭಂಡ ಫಡ ಹೋಗೆಂದನಾ ಚೈದ್ಯ ॥42॥
೦೪೩ ಪರಗುಣ ಸ್ತುತಿ ...{Loading}...
ಪರಗುಣ ಸ್ತುತಿ ನಿಂದೆಗಳು ಹಿರಿ
ಯರಿಗೆ ಸಾಮ್ಯವೆ ನಿನ್ನ ಜಿಹ್ವೆಗೆ
ವರ ಗುಣಸ್ತವದಿಂದ ಮೇಣ್ಕಂಡೂತಿ ಹರಿವಹರೆ
ಹಿರಿಯರಿದೆಲಾ ಕಣ್ವ ಪೌಲಾಂ
ಗಿರಸ ಜೈಮಿನಿ ಯಾಜ್ಞವಲ್ಕ್ಯರು
ವರ ಸುಪೈಕದೊಳಧಿಕರಿದೆಲಾ ಭೀಷ್ಮ ಕೇಳ್ ಎಂದ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರರಗುಣವನ್ನು ಸ್ತುತಿಸುವುದಾಗಲೀ ನಿಂದಿಸುವುದಾಗಲೀ ಹಿರಿಯರಿಗೆ ಯೋಗ್ಯವಾದುದೇ ? ಪರರ ಗುಣವನ್ನು ಹೊಗಳುವುದರಿಂದ ನಿನ್ನ ನಾಲಿಗೆಯ ನವೆ ತೀರುತ್ತದೆ ಎನ್ನುವುದಾದರೆ ಇಲ್ಲಿ ಕಣ್ವ, ಪೌಲ, ಅಂಗೀರಸ, ಜೈಮಿನಿ ಯಾಜ್ಞವಲ್ಕ್ಯರು ಇದ್ದಾರಲ್ಲ. ಇವರೆಲ್ಲ ಆ ವರ್ಗದಲ್ಲೇ ಅಧಿಕರೆನಿಸಿದವರು. ಅವರನ್ನು ಸ್ತುತಿಸು.
ಪದಾರ್ಥ (ಕ.ಗ.ಪ)
ಕಂಡೂತಿ-ನವೆ, ಸುಪೈಕದೊಳು-ಅವರ ಪೈಕಿಯೇ
ಮೂಲ ...{Loading}...
ಪರಗುಣ ಸ್ತುತಿ ನಿಂದೆಗಳು ಹಿರಿ
ಯರಿಗೆ ಸಾಮ್ಯವೆ ನಿನ್ನ ಜಿಹ್ವೆಗೆ
ವರ ಗುಣಸ್ತವದಿಂದ ಮೇಣ್ಕಂಡೂತಿ ಹರಿವಹರೆ
ಹಿರಿಯರಿದೆಲಾ ಕಣ್ವ ಪೌಲಾಂ
ಗಿರಸ ಜೈಮಿನಿ ಯಾಜ್ಞವಲ್ಕ್ಯರು
ವರ ಸುಪೈಕದೊಳಧಿಕರಿದೆಲಾ ಭೀಷ್ಮ ಕೇಳೆಂದ ॥43॥
೦೪೪ ನಾವು ಮೊದಲಲಿ ...{Loading}...
ನಾವು ಮೊದಲಲಿ ನಮ್ಮೊಳಗೆ ಕುಂ
ದಾವುದೇತಕೆ ಹೊಗಳೆಯಿವರಲ
ದಾವಕೊರತೆ ಯುಧಿಷ್ಠಿರನ ನೀನೇಕುಪೇಕ್ಷಿಸಿದೆ
ಈ ವೃಕೋದರ ಪಾಥರ್ರನು ಸಹ
ದೇವ ನಕುಲರನೇಕೆ ಹೊಗಳೆಯ
ದಾವ ಗುಣನಿಧಿಯೆಂದು ಕೃಷ್ಣನ ಬಣ್ಣಿಸಿದೆಯೆಂದ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೊದಲು ನಮ್ಮ ವಿಚಾರವನ್ನೇ ತೆಗೆದುಕೊಳ್ಳೋಣ, ನಮ್ಮಲ್ಲಿ ಏನು ಕೊರತೆಯಿದೆ ? ನಮ್ಮನ್ನೇಕೆ ಹೊಗಳುವುದಿಲ್ಲ. ನೀನು ? ಇವರುಗಳಲ್ಲಿ ಯಾವ ಕೊರತೆಯಿದೆ ? ಯುಧಿಷ್ಠಿರನನ್ನೇಕೆ ನೀನು ಅಲಕ್ಷ್ಯಮಾಡಿದೆ ? ಈ ಭೀಮ, ಅರ್ಜುನ, ಸಹದೇವ, ನಕುಲರನ್ನೇಕೆ ಹೊಗಳೆ ? ಕೃಷ್ಣನು ಯಾವ ಗುಣನಿಧಿ ಎಂದು ಅವನನ್ನು ವರ್ಣಿಸಿದೆ.
ಪದಾರ್ಥ (ಕ.ಗ.ಪ)
ಮೂಲ ...{Loading}...
ನಾವು ಮೊದಲಲಿ ನಮ್ಮೊಳಗೆ ಕುಂ
ದಾವುದೇತಕೆ ಹೊಗಳೆಯಿವರಲ
ದಾವಕೊರತೆ ಯುಧಿಷ್ಠಿರನ ನೀನೇಕುಪೇಕ್ಷಿಸಿದೆ
ಈ ವೃಕೋದರ ಪಾಥರ್ರನು ಸಹ
ದೇವ ನಕುಲರನೇಕೆ ಹೊಗಳೆಯ
ದಾವ ಗುಣನಿಧಿಯೆಂದು ಕೃಷ್ಣನ ಬಣ್ಣಿಸಿದೆಯೆಂದ ॥44॥
೦೪೫ ಗರುವನಲ್ಲಾ ಕೌರವೇಶ್ವರ ...{Loading}...
ಗರುವನಲ್ಲಾ ಕೌರವೇಶ್ವರ
ನರಸಲಾ ಬಾಹ್ಲಿಕನು ರಾಯರ
ಗುರುವಲಾ ಕೊಂಡಾಡಲಾಗದೆ ಚಾಪ ಧೂರ್ಜಟಿಯ
ಗುರುಸುತನು ಸಾಮಾನ್ಯನೇ ಸಂ
ಗರಭಯಂಕರನಲ್ಲವೇ ವಿ
ಸ್ತರಿಸಲಾಗದೆ ನಿನ್ನ ಕೃಷ್ಣನ ಹವಣೆಯಿವರೆಂದ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೊಡ್ಡಸ್ತಿಕೆಯರುವವನಲ್ಲವೇ ಕೌರವೇಶ್ವರ ? ಅರಸನಲ್ಲವೇ ಬಾಹ್ಲಿಕನು ? ರಾಜರಿಗೆಲ್ಲ ಗುರುವಾಗಿದ್ದನಲ್ಲವೆ ದ್ರೋಣಾಚಾರ್ಯ,
ಅವನು ಚಾಪಧೂರ್ಜಟಿ ಅಂದರೆ ಬಿಲ್ಗಾರಿಕೆಯಲ್ಲಿ ಪಿನಾಕ ಪಾಣಿಯಾದ ಈಶ್ವರನಂತಿರುವವನು, ಅವನನ್ನು ಹೊಗಳಬಾರದೆ ?
ಆ ಗುರುಸುತ ಅಶ್ವತ್ಥಾಮನೇನು ಸಾಮಾನ್ಯನೇ ? ಅವನು ಯುದ್ಧ ಭಯಂಕರನೆನಿಸಿದವನಲ್ಲವೆ ? ಇವರುಗಳನ್ನು ವರ್ಣಿಸಬಾರದೆ ?
ನಿನ್ನ ಕೃಷ್ಣನು ಇವರಿಗೆ ಸಾಟಿಯಾದಾನೆ ?
ಪದಾರ್ಥ (ಕ.ಗ.ಪ)
ಗರುವ-ದೊಡ್ಡಸ್ತಿಕೆಯವನು
ಮೂಲ ...{Loading}...
ಗರುವನಲ್ಲಾ ಕೌರವೇಶ್ವರ
ನರಸಲಾ ಬಾಹ್ಲಿಕನು ರಾಯರ
ಗುರುವಲಾ ಕೊಂಡಾಡಲಾಗದೆ ಚಾಪ ಧೂರ್ಜಟಿಯ
ಗುರುಸುತನು ಸಾಮಾನ್ಯನೇ ಸಂ
ಗರಭಯಂಕರನಲ್ಲವೇ ವಿ
ಸ್ತರಿಸಲಾಗದೆ ನಿನ್ನ ಕೃಷ್ಣನ ಹವಣೆಯಿವರೆಂದ ॥45॥
೦೪೬ ಕವಚ ಕುಣ್ಡಲ ...{Loading}...
ಕವಚ ಕುಂಡಲ ಸಹಿತ ತಾನುದು
ಭವಿಸನೇ ಶೌರ್ಯಾದಿ ಗುಣದಲಿ
ಭುವನದಲಿ ಭಾರಾಂಕ ವೀರರು ಪಡಿಯೆ ಕರ್ಣಂಗೆ
ಇವನನೇಕಗ್ಗಳಿಸೆ ಭೂರಿ
ಶ್ರವನ ಹೊಗಳೆ ಜಯದ್ರಥನು ನಿ
ನ್ನವನ ಹವಣೇ ಶಲ್ಯ ಮುನಿಯನೆ ನಿನಗೆ ಹೇಳೆಂದ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕವಚಕುಂಡಲಗಳ ಸಹಿತ ಹುಟ್ಟಿದವನಲ್ಲವೆ ಈ ಕರ್ಣ ? ಶೌರ್ಯ ಮತ್ತು ಗುಣದಲ್ಲಿ ಪ್ರಪಂಚದಲ್ಲೇ ಅಧಿಕರೆನಿಸಿದ ವೀರರೇ
ಆದರೂ ಇವನಿಗೆ ಸರಿದೂಗಿಯಾರೇ ? ಇವನನ್ನೇಕೆ ಹೊಗಳುವುದಿಲ್ಲ. ಭೂರಿಶ್ರವನನ್ನು ನೀನು ಹೊಗಳುವುದಿಲ್ಲ. ನಿನ್ನ ಕೃಷ್ಣನು ಜಯದ್ರಥನಿಗೆ ಸಮಾನನೇ ? ನೀನು ಹೀಗೆ ಮಾಡಿದುದರಿಂದ ಶಲ್ಯನಿಗೆ ನಿನ್ನ ಮೇಲೆ ಕೋಪಬರುವುದಿಲ್ಲವೇ ?
ಪದಾರ್ಥ (ಕ.ಗ.ಪ)
ಮೂಲ ...{Loading}...
ಕವಚ ಕುಂಡಲ ಸಹಿತ ತಾನುದು
ಭವಿಸನೇ ಶೌರ್ಯಾದಿ ಗುಣದಲಿ
ಭುವನದಲಿ ಭಾರಾಂಕ ವೀರರು ಪಡಿಯೆ ಕರ್ಣಂಗೆ
ಇವನನೇಕಗ್ಗಳಿಸೆ ಭೂರಿ
ಶ್ರವನ ಹೊಗಳೆ ಜಯದ್ರಥನು ನಿ
ನ್ನವನ ಹವಣೇ ಶಲ್ಯ ಮುನಿಯನೆ ನಿನಗೆ ಹೇಳೆಂದ ॥46॥
೦೪೭ ಕುಲದಲಧಿಕರು ಶೌರ್ಯದಲಿ ...{Loading}...
ಕುಲದಲಧಿಕರು ಶೌರ್ಯದಲಿ ವೆ
ಗ್ಗಳರು ಶೀಲದಲುನ್ನತರು ನಿ
ರ್ಮಲಿನರಾಚಾರದಲಿ ಕೋವಿದರಖಿಳ ಕಳೆಗಳಲಿ
ಇಳೆಯ ವಲ್ಲಭರನಿಬರನು ನೀ
ಕಳೆದು ನೊಣ ನೆರೆ ಹೂತ ವನವನು
ಹಳಿದು ಹಗಿನಿಂಗೆರಗುವವೊಲಾಯ್ತೆಂದನಾ ಚೈದ್ಯ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ರಾಜರುಗಳೆಲ್ಲ ಕುಲದಲ್ಲಿ ಅಧಿಕರಾದವರು. ಶೌರ್ಯದಲ್ಲಿ ಅತಿಶಯರಾದವರು, ಶೀಲದಲ್ಲಿ ಉನ್ನತರು, ಆಚಾರದಲ್ಲಿ ನಿರ್ಮಲರಾದವರು, ಎಲ್ಲ ಕಲೆಗಳಲ್ಲಿಯೂ ಪರಿಣತರು. ಇವರುಗಳನ್ನೆಲ್ಲ ಬಿಟ್ಟು ನೀನು, ಹೂಗಳಿಂದ ಸಮೃದ್ಧವಾದ ಉದ್ಯಾನವನ್ನು
ಬಿಟ್ಟು, ನೊಣವು ಮರದಲ್ಲಿ ಜಿನುಗುವ ಅಂಟಿಗೆ ಮುತ್ತುವಂತೆ ಕೃಷ್ಣನನ್ನು ಆಯ್ದುಕೊಂಡೆಯಲ್ಲಾ !
ಪದಾರ್ಥ (ಕ.ಗ.ಪ)
ಹೂತ-ಹೂ ಬಿಟ್ಟ, ಹಗಿನ-ಮರದಲ್ಲಿ ಜಿನುಗುವ ಅಂಟು
ಮೂಲ ...{Loading}...
ಕುಲದಲಧಿಕರು ಶೌರ್ಯದಲಿ ವೆ
ಗ್ಗಳರು ಶೀಲದಲುನ್ನತರು ನಿ
ರ್ಮಲಿನರಾಚಾರದಲಿ ಕೋವಿದರಖಿಳ ಕಳೆಗಳಲಿ
ಇಳೆಯ ವಲ್ಲಭರನಿಬರನು ನೀ
ಕಳೆದು ನೊಣ ನೆರೆ ಹೂತ ವನವನು
ಹಳಿದು ಹಗಿನಿಂಗೆರಗುವವೊಲಾಯ್ತೆಂದನಾ ಚೈದ್ಯ ॥47॥
೦೪೮ ಘನನಲಾ ಭಗದತ್ತ ...{Loading}...
ಘನನಲಾ ಭಗದತ್ತ ಕಾಂಭೋ
ಜನು ಪದಸ್ಥನಲಾ ವಿರಾಟನ
ತನುಜನೀ ಪಾಂಚಾಲ ಕೇಕಯರೀ ಮಹೀಭುಜರು
ವಿನುತರಲ್ಲಾ ದಂತವಕ್ರನು
ನಿನಗೆ ಕಿರುಕುಳನೇ ಜರಾಸಂ
ಧನ ಸುತನ ನೀನೇಕೆ ಬಣ್ಣಿಸೆ ಭೀಷ್ಮ ಹೇಳೆಂದ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಗದತ್ತನು ಮಹಾಘನವಂತನಲ್ಲವೇ, ಕಾಂಭೋಜನೂ ಪದವಿಯುಳ್ಳವನು ವಿರಾಟನ ಮಗ, ಈ ಪಾಂಚಾಲರಾಜ, ಕೇಕಯ ಇವರು ಪ್ರಸಿದ್ಧರಲ್ಲವೇ ? ದಂತವಕ್ರನು ನಿನಗೆ ಕ್ಷುದ್ರನೇ ? ಜರಾಸಂಧನ ಮಗನನ್ನೇಕೆ ನೀನು ಹೊಗಳುವುದಿಲ್ಲ ? ಹೇಳು
ಪದಾರ್ಥ (ಕ.ಗ.ಪ)
ಮೂಲ ...{Loading}...
ಘನನಲಾ ಭಗದತ್ತ ಕಾಂಭೋ
ಜನು ಪದಸ್ಥನಲಾ ವಿರಾಟನ
ತನುಜನೀ ಪಾಂಚಾಲ ಕೇಕಯರೀ ಮಹೀಭುಜರು
ವಿನುತರಲ್ಲಾ ದಂತವಕ್ರನು
ನಿನಗೆ ಕಿರುಕುಳನೇ ಜರಾಸಂ
ಧನ ಸುತನ ನೀನೇಕೆ ಬಣ್ಣಿಸೆ ಭೀಷ್ಮ ಹೇಳೆಂದ ॥48॥
೦೪೯ ದ್ರುಮನ ಕಿಮ್ಪುರುಷಾಧಿಪನ ...{Loading}...
ದ್ರುಮನ ಕಿಂಪುರುಷಾಧಿಪನ ವಿ
ಕ್ರಮವ ಬಣ್ಣಿಸಲಾಗದೇ ಭೂ
ರಮಣರಿದೆಲಾ ಮಾಳವಂಗ ಕಳಿಂಗ ಕೌಸಲರು
ವಿಮಳರಿನಿಬರನುಳಿದು ಕೃಷ್ಣ
ಭ್ರಮೆ ಹಿಡಿದುದೈ ನಿನಗೆ ನಿನ್ನ
ಕ್ರಮದ ಭಣಿತೆಯ ಕರ್ಮಬೀಜವನರಿಯೆ ನಾನೆಂದ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರುಮ ಕಿಂಪುರುಷರ ಪರಾಕ್ರಮವನ್ನು ವರ್ಣಿಸಲಾಗದೇ ? ಮಾಳವ, ಅಂಗ, ಕಳಿಂಗ, ಕೋಸಲರು ಶ್ರೇಷ್ಠರಾದವರು. ಅಷ್ಟು ಜನರನ್ನೂ ಬಿಟ್ಟ ನಿನಗೆ ಕೃಷ್ಣಭ್ರಮೆ ಹಿಡಿಯಿತಯ್ಯ ! ನಿನ್ನ ಮಾತಿನ ಕರ್ಮಬೀಜವನ್ನು ನಾನರಿಯೆ.
ಪದಾರ್ಥ (ಕ.ಗ.ಪ)
ಭಣಿತೆ-ಮಾತು
ಮೂಲ ...{Loading}...
ದ್ರುಮನ ಕಿಂಪುರುಷಾಧಿಪನ ವಿ
ಕ್ರಮವ ಬಣ್ಣಿಸಲಾಗದೇ ಭೂ
ರಮಣರಿದೆಲಾ ಮಾಳವಂಗ ಕಳಿಂಗ ಕೌಸಲರು
ವಿಮಳರಿನಿಬರನುಳಿದು ಕೃಷ್ಣ
ಭ್ರಮೆ ಹಿಡಿದುದೈ ನಿನಗೆ ನಿನ್ನ
ಕ್ರಮದ ಭಣಿತೆಯ ಕರ್ಮಬೀಜವನರಿಯೆ ನಾನೆಂದ ॥49॥
೦೫೦ ಕುಮತಿ ಕೇಳ್ ...{Loading}...
ಕುಮತಿ ಕೇಳ್ ಬೊಬ್ಬುಲಿಯ ಬನದಲಿ
ರಮಿಸುವುದೆ ಕಳಹಂಸ ಮಾಯಾ
ಭ್ರಮಿತರಲಿ ಯಾಚಿಸುವನೇ ವರಯೋಗಿ ನಿಜಪದವ
ಸಮರ ಪಟುಭಟ ದರ್ಪಪಿತ್ತ
ಭ್ರಮ ವಿಸಂಸ್ಥುಲ ಚಪಳಚಿತ್ತ
ಸ್ಥಿಮಿತ ಭೂಪರ ಬಗೆವನೇ ತಾನೆಂದನಾ ಭೀಷ್ಮ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಿಶುಪಾಲನ ನುಡಿಗಳಿಗೆ ಉತ್ತರವಾಗಿ ಭೀಷ್ಮ, ಓ ಕೆಟ್ಟಬುದ್ಧಿಯವನೇ ಕೇಳು, ಕಲಹಂಸ ಜಾಲಿಮರಗಳ ವನದಲ್ಲಿ ವಿಹರಿಸುವುದೇ? ವರಯೋಗಿಯಾದವನು ಮಾಯಾಭ್ರಮೆಯಿಂದ ಕೂಡಿದವರ ಬಳಿ ಹೋಗಿ ಪರಮಪದವನ್ನು ಯಾಚಿಸುವನೇ ? ತಾವೇ ಮಹಾಯೋಧರೆಂಬ ಗರ್ವದ ಭ್ರಮೆ ತಲೆಗೇರಿ ತಲೆ ತಿರುಗಿ ಚಪಲ ಚಿತ್ತರಾಗಿರುವ ರಾಜರನ್ನು ನಾನು ಲಕ್ಷಿಸುತ್ತೇನೆಯೇ?” ಎಂದ.
ಪದಾರ್ಥ (ಕ.ಗ.ಪ)
ಕುಮತಿ-ಕೆಟ್ಟಬುದ್ಧಿ, ಬೊಬ್ಬುಲಿ-ಗೊಬ್ಬಳಿ, ಜಾಲಿ, ವಿಸಂಸ್ಥುಲ-ಸ್ಥಿರತೆಗೆಟ್ಟ
ಮೂಲ ...{Loading}...
ಕುಮತಿ ಕೇಳ್ ಬೊಬ್ಬುಲಿಯ ಬನದಲಿ
ರಮಿಸುವುದೆ ಕಳಹಂಸ ಮಾಯಾ
ಭ್ರಮಿತರಲಿ ಯಾಚಿಸುವನೇ ವರಯೋಗಿ ನಿಜಪದವ
ಸಮರ ಪಟುಭಟ ದರ್ಪಪಿತ್ತ
ಭ್ರಮ ವಿಸಂಸ್ಥುಲ ಚಪಳಚಿತ್ತ
ಸ್ಥಿಮಿತ ಭೂಪರ ಬಗೆವನೇ ತಾನೆಂದನಾ ಭೀಷ್ಮ ॥50॥
೦೫೧ ಖತಿಯ ಹಿಡಿದುದು ...{Loading}...
ಖತಿಯ ಹಿಡಿದುದು ಸಕಲ ರಾಜ
ಪ್ರತತಿಗಳು ದುರ್ಮಾರ್ಗಮಾನ
ವ್ಯತಿಕರದೊಳುಬ್ಬೆದ್ದರನಿಬರು ಜಲಧಿ ಘೋಷದಲಿ
ಕ್ರತುವ ಜಲದಲಿ ಕದಡು ಗಂಗಾ
ಸುತನ ಹೊಯ್ ಕಟವಾಯ ಕೊಯ್ ನಿ
ಶ್ಚಿತ ಘಟಾಗ್ನಿಯಲಿವನ ಸುಡಿಯೆಂದುದು ನೃಪವ್ರಾತ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮಸ್ತರಾಜರ ಸಮೂಹ ಕೋಪಾವಿಷ್ಟರಾದರು. ದುರ್ಮಾರ್ಗಕ್ಕೊಯ್ಯವ ಆ ಪ್ರಸಂಗದಲ್ಲಿ ಅಷ್ಟುಮಂದಿಯೂ ಸಮುದ್ರಘೋಷದಂತೆ ಅಬ್ಬರಿಸಿ ಕೋಲಾಹಲ ಮಾಡಿದರು. “ಈ ಯಜ್ಞವನ್ನು ನೀರಿನಲ್ಲಿ ಕದಡಿ, ಗಂಗಾಸುತನನ್ನು ಹೊಯ್ಯಿರಿ, ಅವನ
ಕಟವಾಯನ್ನು ಕೊಯ್ಯಿರಿ, ನಿಶ್ಚಿತ ಘಟಾಗ್ನಿಯಲ್ಲಿ ಅವನನ್ನು ಸುಡಿರಿ” ಎಂದೆಲ್ಲಾ ಕೂಗಿದರು.
ಪದಾರ್ಥ (ಕ.ಗ.ಪ)
ಪ್ರತತಿ-ಸಮೂಹ,
ವ್ಯಥಿಕರ-ಸಂದರ್ಭ
ನಿಶ್ಚಿತ ಘಟಾಗ್ನಿ - ?
ಮೂಲ ...{Loading}...
ಖತಿಯ ಹಿಡಿದುದು ಸಕಲ ರಾಜ
ಪ್ರತತಿಗಳು ದುರ್ಮಾರ್ಗಮಾನ
ವ್ಯತಿಕರದೊಳುಬ್ಬೆದ್ದರನಿಬರು ಜಲಧಿ ಘೋಷದಲಿ
ಕ್ರತುವ ಜಲದಲಿ ಕದಡು ಗಂಗಾ
ಸುತನ ಹೊಯ್ ಕಟವಾಯ ಕೊಯ್ ನಿ
ಶ್ಚಿತ ಘಟಾಗ್ನಿಯಲಿವನ ಸುಡಿಯೆಂದುದು ನೃಪವ್ರಾತ ॥51॥
೦೫೨ ಬರಿಯ ಮಾತನೆ ...{Loading}...
ಬರಿಯ ಮಾತನೆ ಮೆರೆದು ಕಾರ್ಯದ
ಕೊರತೆಯಾದರೆ ನಾಯ್ಗಳೊರಲಿದ
ತೆರನಹುದಲೇ ತೋರಿರೈ ನೀವ್ನಿಮ್ಮ ಪೌರುಷವ
ಇರಿದು ನೀವ್ಕೊಲಲಾರದಿದ್ದರೆ
ನೆರೆಘಟಾಗ್ನಿಯೊಳುರುಹದಿದ್ದಿರೆ
ಕೆರಹು ನಿಮ್ಮಯ ಬಾಯಲೆಂದನು ಭೂಪರಿಗೆ ಭೀಷ್ಮ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮ, ಅವರಿಗೆ ಹೀಗೆ ಉತ್ತರ ಕೊಟ್ಟ.. ಬರಿಯ ಮಾತುಗಳನ್ನಾಡಿ ಅದರಂತೆ ಕಾರ್ಯತಃ ಮಾಡದೇ ಹೋದರೆ ಸುಮ್ಮನೆ ನಾಯಿಗಳು ಬೊಗಳಿದಂತಾಗುತ್ತದೆಯಲ್ಲವೇ ? ನೀವು ನಿಮ್ಮ ಪೌರುಷವನ್ನು ತೋರಿಸಿರಯ್ಯ ! ನೀವು ನನ್ನನ್ನು ಖಡ್ಗದಿಂದ ಇರಿದು
ಕೊಲ್ಲಲಾಗದಿದ್ದರೆ, ಘಟಾಗ್ನಿಯಲ್ಲಿ ಸುಡಲಾಗದಿದ್ದರೆ ನಿಮ್ಮ ಬಾಯಿಗೆ ನನ್ನ ಕೆರವನ್ನಿಡುವೆ.
ಪದಾರ್ಥ (ಕ.ಗ.ಪ)
ಕೆರಹು-ಎಕ್ಕಡ
ಮೂಲ ...{Loading}...
ಬರಿಯ ಮಾತನೆ ಮೆರೆದು ಕಾರ್ಯದ
ಕೊರತೆಯಾದರೆ ನಾಯ್ಗಳೊರಲಿದ
ತೆರನಹುದಲೇ ತೋರಿರೈ ನೀವ್ನಿಮ್ಮ ಪೌರುಷವ
ಇರಿದು ನೀವ್ಕೊಲಲಾರದಿದ್ದರೆ
ನೆರೆಘಟಾಗ್ನಿಯೊಳುರುಹದಿದ್ದಿರೆ
ಕೆರಹು ನಿಮ್ಮಯ ಬಾಯಲೆಂದನು ಭೂಪರಿಗೆ ಭೀಷ್ಮ ॥52॥
೦೫೩ ನೆರೆದ ನರಿಗಳ ...{Loading}...
ನೆರೆದ ನರಿಗಳ ಮಧ್ಯದಲಿ ಕೇ
ಸರಿಯ ಮನ್ನಿಸುವಂತೆ ಕೃಷ್ಣನ
ಚರಣವನು ಪೂಜಿಸಿದೆವಘ್ರ್ಯಾರುಹನು ಮುರವೈರಿ
ಜರಡುಗಳು ನೀವೀ ಜನಾರ್ದನ
ನೊರೆಗೆ ಬಹರೇ ಪ್ರೀತಿಯೇನೀ
ಪರಿ ವಿಷಾದವೆ ಹೋಗಿಯೆಂದನು ಭೂಪರಿಗೆ ಭೀಷ್ಮ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನರಿಗಳ ಹಿಂಡಿನ ಮಧ್ಯೆ ಸಿಂಹವನ್ನು ಗೌರವಿಸುವಂತೆ ಕೃಷ್ಣನ ಪಾದಗಳನ್ನು ಪೂಜಿಸಿದೆವು. ಮುರವೈರಿ ಅಘ್ರ್ಯಕ್ಕೆ ಪಾತ್ರನಾದವನು. ಜೊಳ್ಳುಗಳಾದ ನೀವು ಈ ಜನಾರ್ದನನ ಮಟ್ಟಕ್ಕೆ ಬಂದೀರಾ ? ನಾವು ಪ್ರೀತಿಯನ್ನು ತೋರಿಸಿದರೆ ನಿಮಗೆ ಈ ರೀತಿ ವಿಷಾದವೇ ? ಹೋಗಿ.
ಪದಾರ್ಥ (ಕ.ಗ.ಪ)
ಜರಡು-ಜಳ್ಳು
ಮೂಲ ...{Loading}...
ನೆರೆದ ನರಿಗಳ ಮಧ್ಯದಲಿ ಕೇ
ಸರಿಯ ಮನ್ನಿಸುವಂತೆ ಕೃಷ್ಣನ
ಚರಣವನು ಪೂಜಿಸಿದೆವಘ್ರ್ಯಾರುಹನು ಮುರವೈರಿ
ಜರಡುಗಳು ನೀವೀ ಜನಾರ್ದನ
ನೊರೆಗೆ ಬಹರೇ ಪ್ರೀತಿಯೇನೀ
ಪರಿ ವಿಷಾದವೆ ಹೋಗಿಯೆಂದನು ಭೂಪರಿಗೆ ಭೀಷ್ಮ ॥53॥
೦೫೪ ಅಣಕಿಸುವರೆನ್ನೊಡನೆ ಹಿರಿಯು ...{Loading}...
ಅಣಕಿಸುವರೆನ್ನೊಡನೆ ಹಿರಿಯು
ಬ್ಬಣವ ತೆಗೆಯಿರಿ ಈ ಮುರಾರಿಯ
ಕೆಣಕಲಾಪರೆ ಕರೆದು ನೋಡಿ ವೃಥಾಭಿಮಾನದಲಿ
ಹಣುಕಿ ಬಾಯ್ಬಡಿದೇನಹುದು ಕೈ
ಗುಣವ ತೋರಿರೆ ಸಾವಿರೊಳ್ಳೆಗೆ
ಮಣಿವನೇ ವಿಹಗೇಂದ್ರನೆಂದನು ಭೂಪರಿಗೆ ಭೀಷ್ಮ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಣುಕಿಸುವವರು ನನ್ನೊಡನೆ ಹಿರಿಯುಬ್ಬಣವನ್ನು ಹಿಡಿದು ಯುದ್ಧಕ್ಕೆ ಬನ್ನಿರಿ. ಈ ಮುರಾರಿಯನ್ನು ಕೆಣಕುವ ಸಾಮಥ್ರ್ಯವಿದ್ದರೆ ಅವನನ್ನು ಕರೆದು ನೋಡಿ. ವೃಥಾ ಗರ್ವದಿಂದ ಹಣಿಕಿ ಬಾಯಿಬಡಿಯುವದರಿಂದ ಏನು ಪ್ರಯೋಜನ ? ನಿಮ್ಮ ಕೈಗುಣವನ್ನು ತೋರಿಸಿ. ನೀರಹಾವುಗಳು ಸಾವಿರವಿದ್ದರೇನು ಪಕ್ಷಿಗಳ ರಾಜನಾದ ಗರುಡನಿಗೆ ಲಕ್ಷ್ಯವೇ ?
ಪದಾರ್ಥ (ಕ.ಗ.ಪ)
ಒಳ್ಳೆ- ನೀರಹಾವು, ವಿಹಗೇಂದ್ರ-ಗರುಡ,
ಉಬ್ಬಣ-ಕೋಟೆಬಾಗಿಲ ಅಗುಳಿಯಂತಹ ಆಯುಧ
ಮೂಲ ...{Loading}...
ಅಣಕಿಸುವರೆನ್ನೊಡನೆ ಹಿರಿಯು
ಬ್ಬಣವ ತೆಗೆಯಿರಿ ಈ ಮುರಾರಿಯ
ಕೆಣಕಲಾಪರೆ ಕರೆದು ನೋಡಿ ವೃಥಾಭಿಮಾನದಲಿ
ಹಣುಕಿ ಬಾಯ್ಬಡಿದೇನಹುದು ಕೈ
ಗುಣವ ತೋರಿರೆ ಸಾವಿರೊಳ್ಳೆಗೆ
ಮಣಿವನೇ ವಿಹಗೇಂದ್ರನೆಂದನು ಭೂಪರಿಗೆ ಭೀಷ್ಮ ॥54॥
೦೫೫ ಶಿವಶಿವಾ ಮುದುಗೂಗೆ ...{Loading}...
ಶಿವಶಿವಾ ಮುದುಗೂಗೆ ಮೆಚ್ಚುದು
ರವಿಯನೆಲವೋ ಭೀಷ್ಮ ನಿಲು ಮಾ
ಧವನ ಮರ್ದಿಸಿ ನಿನಗೆ ಜೋಡಿಸುವೆನು ಮಹಾನಳನ
ಯುವತಿಯರು ಹಾರುವರು ಹುಲು ಪಾಂ
ಡವರು ಪತಿಕರಿಸಿದರೆ ನೀನಿಂ
ದೆವಗೆ ಮಾನ್ಯನೆ ಕೃಷ್ಣ ಸಿಂಹಾಸನವನಿಳಿಯೆಂದ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮನ ಮಾತಿಗೆ ಕೆರಳಿದ ಚೈದ್ಯ “ಶಿವ ಶಿವಾ ! ಮುದಿಗೂಗೆ ಮೆಚ್ಚದು ರವಿಯನ್ನು ! ಭೀಷ್ಮ, ತಡೆ. ಈ ಮಾಧವನನ್ನು ಮರ್ದನ ಮಾಡಿ, ಅನಂತರ ನಿನಗೆ ಘಟಾಗ್ನಿಯನ್ನು ಜೋಡಿಸುತ್ತೇನೆ. “ಎಂದು ಕೃಷ್ಣನತ್ತ ತಿರುಗಿ ಯುವತಿಯರು ಹಾರುವರು
ಅಲ್ಪರಾದ ಪಾಂಡವರು ಮೆಚ್ಚಿಕೊಂಡರೆಂಬ ಕಾರಣಕ್ಕೇ ನೀನು ಮಾನ್ಯನಾಗಿ ಬಿಡುವೆಯಾ ? ಕೃಷ್ಣ, ಸಿಂಹಾಸನದಿಂದ ಇಳಿ” ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಶಿವಶಿವಾ ಮುದುಗೂಗೆ ಮೆಚ್ಚುದು
ರವಿಯನೆಲವೋ ಭೀಷ್ಮ ನಿಲು ಮಾ
ಧವನ ಮರ್ದಿಸಿ ನಿನಗೆ ಜೋಡಿಸುವೆನು ಮಹಾನಳನ
ಯುವತಿಯರು ಹಾರುವರು ಹುಲು ಪಾಂ
ಡವರು ಪತಿಕರಿಸಿದರೆ ನೀನಿಂ
ದೆವಗೆ ಮಾನ್ಯನೆ ಕೃಷ್ಣ ಸಿಂಹಾಸನವನಿಳಿಯೆಂದ ॥55॥
೦೫೬ ನಿನಗೆ ಮೊದಲೊಳು ...{Loading}...
ನಿನಗೆ ಮೊದಲೊಳು ನಿಶಿತ ವಿಶಿಖದ
ಮೊನೆಯೊಳರ್ಚಿಸಿ ಬಳಿಕ ಭೀಷ್ಮನ
ಘನ ಘಟಾನಳಕುಂಡದೊಳ್ಸ್ವಾಹಾಸ್ವಧಾಹುತಿಯ
ಅನುಕರಿಸಿ ಬಳಿಕಿನಲಿ ಕುಂತೀ
ತನಯರೈವರ ರಕುತ ಘೃತದಲಿ
ವಿನುತ ರೋಷಾಧ್ವರವ ರಚಿಸುವೆನೆಂದನಾ ಚೈದ್ಯ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಿನಗೆ ಮೊದಲು ತೀಕ್ಷ್ಣವಾದ ಬಾಣಗಳ ತುದಿಯಿಂದ ಪೂಜೆಮಾಡಿ, ಅನಂತರ ಭೀಷ್ಮನಿಗೆ ಘನವಾದ ಕುಂಡವನ್ನೇರ್ಪಡಿಸಿ ಅದರಲ್ಲಿ ಅವನನ್ನು ಸ್ವಾಹಾಸ್ವಧಾಹುತಿಯನ್ನು ಕೊಟ್ಟು, ಆಮೇಲೆ ಐವರು ಕುಂತಿಯಮಕ್ಕಳ ರಕ್ತವೆಂಬ ತುಪ್ಪದಿಂದ ರೋಷಾಧ್ವರವನ್ನು
ನಡೆಸುತ್ತೇನೆ” ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ನಿನಗೆ ಮೊದಲೊಳು ನಿಶಿತ ವಿಶಿಖದ
ಮೊನೆಯೊಳರ್ಚಿಸಿ ಬಳಿಕ ಭೀಷ್ಮನ
ಘನ ಘಟಾನಳಕುಂಡದೊಳ್ಸ್ವಾಹಾಸ್ವಧಾಹುತಿಯ
ಅನುಕರಿಸಿ ಬಳಿಕಿನಲಿ ಕುಂತೀ
ತನಯರೈವರ ರಕುತ ಘೃತದಲಿ
ವಿನುತ ರೋಷಾಧ್ವರವ ರಚಿಸುವೆನೆಂದನಾ ಚೈದ್ಯ ॥56॥
೦೫೭ ಎನ್ದು ಚಾಪವ ...{Loading}...
ಎಂದು ಚಾಪವ ತರಿಸಿ ಚಪ್ಪರ
ದಿಂದ ಹೊರವಡುತವನಿಪಾಲಕ
ವೃಂದವನು ಕೈವೀಸಿದನು ಕರೆ ಗೋಕುಲೇಶ್ವರನ
ಇಂದಲೇ ರಿಪುರುಧಿರ ಪಾನಾ
ನಂದಕೃತಮದಶಾಕಿನೀಸ್ವ
ಚ್ಛಂದ ಲೀಲಾ ನೃತ್ಯದರ್ಶನವೆಂದನಾ ಚೈದ್ಯ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಹೇಳಿ ಬಿಲ್ಲನ್ನು ತರಿಸಿ ಯಾಗದ ಚಪ್ಪರವನ್ನು ಬಿಟ್ಟು ಹೊರಬರುತ್ತಾ ರಾಜರುಗಳಿಗೆಲ್ಲಾ ಬನ್ನಿರಿ ಎಂದು ಕೈಬೀಸಿದ.
“ಕರೆಯಿರಿ ಗೋಕುಲೇಶ್ವರನನ್ನು, ಇಂದಲ್ಲವೇ ಶತ್ರುವಿನ ರಕ್ತಪಾನದ ಆನಂದದಿಂದುಂಟಾದ ಶಾಕಿನಿಯರ ಸ್ವಚ್ಛಂದವಾದ ಲೀಲಾ ನೃತ್ಯದ
ದರ್ಶನವನ್ನು ನೋಡುವುದು!” ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಎಂದು ಚಾಪವ ತರಿಸಿ ಚಪ್ಪರ
ದಿಂದ ಹೊರವಡುತವನಿಪಾಲಕ
ವೃಂದವನು ಕೈವೀಸಿದನು ಕರೆ ಗೋಕುಲೇಶ್ವರನ
ಇಂದಲೇ ರಿಪುರುಧಿರ ಪಾನಾ
ನಂದಕೃತಮದಶಾಕಿನೀಸ್ವ
ಚ್ಛಂದ ಲೀಲಾ ನೃತ್ಯದರ್ಶನವೆಂದನಾ ಚೈದ್ಯ ॥57॥
೦೫೮ ಡಾವರಿಸಿದುದು ವಿವಿಧ ...{Loading}...
ಡಾವರಿಸಿದುದು ವಿವಿಧ ವಾದ್ಯವಿ
ರಾವವಬುಜೋದ್ಭವನ ಭವನವ
ನಾ ವಿಗಡ ಭಟಕಟಕವಿದ್ದುದು ಬಲಿದ ಬೊಬ್ಬೆಯಲಿ
ಗೋವಳನ ಬರಹೇಳು ಧರೆಯಲಿ
ದೇವ ಗಡ ಬರಹೇಳು ತೋರಾ
ಕಾವವರ ತಾ ಕೊಲುವೆನೆಂದೊದರಿದನು ಕಲಿ ಚೈದ್ಯ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿವಿಧ ರಣವಾದ್ಯಗಳ ಭಯಂಕರ ಶಬ್ದ ಬ್ರಹ್ಮನ ಭವನದವರೆಗೂ ವ್ಯಾಪಿಸಿತು. ಪರಾಕ್ರಮಿಗಳಾದ ಭಟರ ಸೈನ್ಯ ಬೊಬ್ಬೆಯನ್ನು ಮಾಡುತ್ತಿತ್ತು. ಆಗ ಆ ಚೈದ್ಯ “ಗೋವಳನನ್ನು ಬರಹೇಳು. ಭೂಮಿಯ ಮೇಲೆ ಅವನು ದೇವರಲ್ಲವೇ ? ಅವನನ್ನು ಕಾಪಾಡುವರನ್ನು ತೋರಿಸು. ಆ ಕಾಪಾಡುವವನನ್ನೇ ನಾನು ಕೊಲ್ಲುತ್ತೇನೆಂಬುದನ್ನು ಎಲ್ಲರಿಗೂ ತೋರಿಸು.” ಎಂದು ಕೂಗಿದ.
ಪದಾರ್ಥ (ಕ.ಗ.ಪ)
ಡಾವರಿಸು-ವ್ಯಾಪಿಸು
ಮೂಲ ...{Loading}...
ಡಾವರಿಸಿದುದು ವಿವಿಧ ವಾದ್ಯವಿ
ರಾವವಬುಜೋದ್ಭವನ ಭವನವ
ನಾ ವಿಗಡ ಭಟಕಟಕವಿದ್ದುದು ಬಲಿದ ಬೊಬ್ಬೆಯಲಿ
ಗೋವಳನ ಬರಹೇಳು ಧರೆಯಲಿ
ದೇವ ಗಡ ಬರಹೇಳು ತೋರಾ
ಕಾವವರ ತಾ ಕೊಲುವೆನೆಂದೊದರಿದನು ಕಲಿ ಚೈದ್ಯ ॥58॥
೦೫೯ ಮಿನಗುದುಟಿಗಳ ವಿಕಲ ...{Loading}...
ಮಿನಗುದುಟಿಗಳ ವಿಕಲ ಮಂತ್ರದ
ಬಿನುಗುಗಳ ಕೈಯಾಹುತಿಗೆ ಕರೆ
ದನಿಮಿಷರ ಪಲ್ಲಟದ ವಿಚಲಿತ ಸೂಕ್ತಿಮಯ ನಿನದ
ತನಿ ಭಯದ ತರಳಾಕ್ಷಿಗಳ ದು
ರ್ಮನದ ಮೋಡಿಯ ಮೊಗದ ಬರಿದೇ
ತೊನೆವ ಗಡ್ಡದ ಮುನಿಗಳಿದ್ದರು ಬಲಿದ ಬೆರಗಿನಲಿ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕೋಲಾಹಲದಿಂದ ಯಜ್ಞ ಕಾರ್ಯದಲ್ಲಿ ತೊಡಗಿದ್ದ ಮುನಿಗಳು ಬೆಚ್ಚಿ ಬೆರಗಾದರು. ತುಟಿ ನಡುಗಿ ಮಂತ್ರಗಳು ಅಸ್ತವ್ಯಸ್ತವಾದುವು. ಕೈಯಲ್ಲಿ ಹಿಡಿದ ಆಹುತಿಯನ್ನು ಸ್ವೀಕರಿಸುವುದಕ್ಕಾಗಿ ಕರೆವ ದೇವತೆಗಳ ಹೆಸರು ಅದಲುಬದಲಾದುವು. ಹೊಸಬಗೆಯ ಭಯ ಆವರಿಸಿತು. ಕಣ್ಣು ಚಂಚಲಗೊಂಡಿತು. ಮನಸ್ಸು ಕೆಟ್ಟು ಕಂದಿದ ಮುಖವಾಗಿ ತೊನೆದಾಡುತ್ತಿದ್ದ ಗಡ್ಡವುಳ್ಳವರಾಗಿ ಮುನಿಗಳು ಮಹಾಬೆರಗಿನಿಂದ ಕೂಡಿದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಮಿನಗುದುಟಿಗಳ ವಿಕಲ ಮಂತ್ರದ
ಬಿನುಗುಗಳ ಕೈಯಾಹುತಿಗೆ ಕರೆ
ದನಿಮಿಷರ ಪಲ್ಲಟದ ವಿಚಲಿತ ಸೂಕ್ತಿಮಯ ನಿನದ
ತನಿ ಭಯದ ತರಳಾಕ್ಷಿಗಳ ದು
ರ್ಮನದ ಮೋಡಿಯ ಮೊಗದ ಬರಿದೇ
ತೊನೆವ ಗಡ್ಡದ ಮುನಿಗಳಿದ್ದರು ಬಲಿದ ಬೆರಗಿನಲಿ ॥59॥
೦೬೦ ಹಲ್ಲಣಿಸಿದುದು ಯಾದವರ ...{Loading}...
ಹಲ್ಲಣಿಸಿದುದು ಯಾದವರ ಪಡೆ
ಘಲ್ಲಣೆಯ ಘರ್ಘರದ ಘೋಷದ
ಭುಲ್ಲಣೆಯ ಗಂಭೀರ ಭೇರಿಯ ಬಹಳ ರಭಸದಲಿ
ನಿಲ್ಲದಿಳೆ ಪದಹತಿಗೆನಲು ಬಲ
ವೆಲ್ಲ ಭೀಮನ ಸನ್ನೆಯಲಿ ರಣ
ಮಲ್ಲರೊಡ್ಡಿತು ಹೊರಗೆ ನೃಪ ಮೋಹರದ ಬಾಹೆಯಲಿ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನ್ಯದ ಗದ್ದಲ ಘರ್ಘರ ಶಬ್ದ, ಘೋಷಣೆಗಳ ಅಬ್ಬರ, ಗಂಭೀರವಾದ ರಣಭೇರಿಗಳ ರಭಸಗಳೊಡಗೂಡಿ ಯಾದವರ ಸೈನ್ಯವೂ ಸಜ್ಜಾಯಿತು. ಈ ಸೈನಿಕರ ಕಾಲತುಳಿತದಿಂದ ಈ ಭೂಮಿ ನಿಲ್ಲಲಾರದು ಎನ್ನುವಂತಾಯಿತು, ಭೀಮನ ಸಂಕೇತದಂತೆ ರಣಮಲ್ಲರೆಲ್ಲರೂ ರಾಜರ ಸೈನ್ಯದ ಹೊರಭಾಗದಲ್ಲಿ ಸಿದ್ಧರಾದರು.
ಪದಾರ್ಥ (ಕ.ಗ.ಪ)
ಹಲ್ಲಣಿಸು-ಸಜ್ಜಾಗು, ಭುಲ್ಲಣೆಯ-ಅತಿಶಯವಾಗುತ್ತಿದ್ದ
ಮೂಲ ...{Loading}...
ಹಲ್ಲಣಿಸಿದುದು ಯಾದವರ ಪಡೆ
ಘಲ್ಲಣೆಯ ಘರ್ಘರದ ಘೋಷದ
ಭುಲ್ಲಣೆಯ ಗಂಭೀರ ಭೇರಿಯ ಬಹಳ ರಭಸದಲಿ
ನಿಲ್ಲದಿಳೆ ಪದಹತಿಗೆನಲು ಬಲ
ವೆಲ್ಲ ಭೀಮನ ಸನ್ನೆಯಲಿ ರಣ
ಮಲ್ಲರೊಡ್ಡಿತು ಹೊರಗೆ ನೃಪ ಮೋಹರದ ಬಾಹೆಯಲಿ ॥60॥
೦೬೧ ಮುನಿಗಳಞ್ಜದಿರಞ್ಜದಿರಿ ಪರಿ ...{Loading}...
ಮುನಿಗಳಂಜದಿರಂಜದಿರಿ ಪರಿ
ಜನಕೆ ಗಜಬಜ ಬೇಡ ಯಾದವ
ಜನಪರುಬ್ಬಟೆ ನಿಲಲಿ ಸೈರಿಸಿ ಪಾಂಡುಸುತರೆನುತ
ಮೊನೆ ನಗೆಯ ಸಿರಿಮೊಗದ ನೆಗಹಿದ
ಜನದಭಯ ಹಸ್ತಾಂಬುಜದ ಹರಿ
ವಿನುತ ಸಿಂಹಾಸನವನಿಳಿದಾ ಧುರಕೆ ಹೊರವಂಟ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುನಿಜನರೇ ಅಂಜಬೇಡಿ, ಪರಿಜನರು ಗಜಬಜಿಸುವುದು ಬೇಡ ಯಾದವರಾಜರ ಸಾಹಸ ನಿಲ್ಲಲಿ. ಪಾಂಡುಸುತರೇ ಸಹಿಸಿಕೊಳ್ಳಿ ಸಹಿಸಿಕೊಳ್ಳಿ ಎನ್ನುತ್ತಾ ನಸುನಗೆಯಿಂದ ಸಂಪದ್ಯುಕ್ತ ಮುಖದಿಂದ ಅಭಯಹಸ್ತವನ್ನು ತೋರಿಸುತ್ತಾ ಕೃಷ್ಣ ಸಿಂಹಾಸನದಿಂದ ಇಳಿದು ಯುದ್ಧಕ್ಕೆ ಹೊರಟ.
ಪದಾರ್ಥ (ಕ.ಗ.ಪ)
ಉಬ್ಬಟೆ-ಸಾಹಸ, ಧುರ-ಯುದ್ಧ
ನೆಗಹಿದ -ಎತ್ತಿದ
ಮೂಲ ...{Loading}...
ಮುನಿಗಳಂಜದಿರಂಜದಿರಿ ಪರಿ
ಜನಕೆ ಗಜಬಜ ಬೇಡ ಯಾದವ
ಜನಪರುಬ್ಬಟೆ ನಿಲಲಿ ಸೈರಿಸಿ ಪಾಂಡುಸುತರೆನುತ
ಮೊನೆ ನಗೆಯ ಸಿರಿಮೊಗದ ನೆಗಹಿದ
ಜನದಭಯ ಹಸ್ತಾಂಬುಜದ ಹರಿ
ವಿನುತ ಸಿಂಹಾಸನವನಿಳಿದಾ ಧುರಕೆ ಹೊರವಂಟ ॥61॥
೦೬೨ ಅನ್ದಿನಲಿ ಶಿಶುಪಾಲಕನ ...{Loading}...
ಅಂದಿನಲಿ ಶಿಶುಪಾಲಕನ ತಾ
ಯ್ಬಂದು ಮಗನಪರಾಧ ಶತದಲಿ
ಕಂದಲಾಗದು ಚಿತ್ತವೆಂದಳು ನಮ್ಮನನುಸರಿಸಿ
ಇಂದು ಖತಿಯಿಲ್ಲೆಮಗೆ ಸೈರಿಸ
ಬಂದುದಿಲ್ಲವಗೆರಡು ತಪ್ಪಿನೊ
ಳೆಂದು ಮುರಹರ ನಗುತ ನುಡಿದನು ನಾರದಾದ್ಯರಿಗೆ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ದಿನ ಶಿಶುಪಾಲನ ತಾಯಿ ಬಂದು ಮಗ ಶತಾಪರಾಧ ಮಾಡಿದರೂ ನಿನ್ನ ಮನಸ್ಸು ಅದಕ್ಕಾಗಿ ಕಂದಬಾರದು ಎಂದು ನನ್ನನ್ನು ಅನುಸರಿಸಿ ಬರುತ್ತಾ ಕೇಳಿಕೊಂಡಳು. ಇಂದು ಇವನು ನಿಂದಿಸಿದರೂ ಅದರಿಂದ ನನಗೆ ಕೋಪವಿಲ್ಲ. ಆದರೆ ಇವನ ಎರಡು
ತಪ್ಪುಗಳನ್ನು ಮಾತ್ರ ಸಹಿಸಿಕೊಳ್ಳಲಾರೆ ಎಂದು ನಗುತ್ತಾ ಹೇಳಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಅಂದಿನಲಿ ಶಿಶುಪಾಲಕನ ತಾ
ಯ್ಬಂದು ಮಗನಪರಾಧ ಶತದಲಿ
ಕಂದಲಾಗದು ಚಿತ್ತವೆಂದಳು ನಮ್ಮನನುಸರಿಸಿ
ಇಂದು ಖತಿಯಿಲ್ಲೆಮಗೆ ಸೈರಿಸ
ಬಂದುದಿಲ್ಲವಗೆರಡು ತಪ್ಪಿನೊ
ಳೆಂದು ಮುರಹರ ನಗುತ ನುಡಿದನು ನಾರದಾದ್ಯರಿಗೆ ॥62॥
೦೬೩ ಈ ಮಹಾ ...{Loading}...
ಈ ಮಹಾ ಯಜ್ಞವನು ಕೆಡಿಸುವೆ
ನೀ ಮಹೀಶನ ಮುರಿವೆನೆಂದೇ
ವೈಮನಸ್ಯದಿ ಬಗೆದು ಮೊನೆ ಮಾಡಿದನು ನುಡಿಯೆರಡ
ತಾಮಸನ ತರಿದಖಿಳ ಭೂತ
ಸ್ತೋಮ ತುಷ್ಟಿಯ ಕೀರ್ತಿ ಫಲಿಸಲಿ
ಯೀ ಮಹಾಶರಕೆನುತ ಕೊಂಡನು ದಿವ್ಯಕಾರ್ಮುಕವ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಿಶುಪಾಲನು ‘ಈ ಮಹಾಯಜ್ಞವನ್ನು ಕೆಡಿಸುವೆನು. ಈ ಮಹೀಶನನ್ನು ಮುರಿಯುವೆನು ಎಂದು ದ್ವೇಷದಿಂದ ಚಿಂತಿಸಿ ಈ ಎರಡು ಮಾತುಗಳನ್ನು ದೃಢಪಡಿಸಿ’ ಹೇಳಿದನು. ಇದನ್ನು ಸಹಿಸಲಾರೆ. ಈ ದುಷ್ಟನನ್ನು ತರಿದು ಸಮಸ್ತ ಭೂತಗಳಿಗೂ ತೃಪ್ತಿಯನ್ನುಂಟು ಮಾಡುತ್ತೇನೆ. ಈ ಮಹಾಶರಕ್ಕೆ ಆ ಕೀರ್ತಿ ಫಲಿಸಲಿ ಎನ್ನುತ್ತಾ ಕೃಷ್ಣ ತನ್ನ ಬಿಲ್ಲನ್ನು ತೆಗೆದುಕೊಂಡ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಈ ಮಹಾ ಯಜ್ಞವನು ಕೆಡಿಸುವೆ
ನೀ ಮಹೀಶನ ಮುರಿವೆನೆಂದೇ
ವೈಮನಸ್ಯದಿ ಬಗೆದು ಮೊನೆ ಮಾಡಿದನು ನುಡಿಯೆರಡ
ತಾಮಸನ ತರಿದಖಿಳ ಭೂತ
ಸ್ತೋಮ ತುಷ್ಟಿಯ ಕೀರ್ತಿ ಫಲಿಸಲಿ
ಯೀ ಮಹಾಶರಕೆನುತ ಕೊಂಡನು ದಿವ್ಯಕಾರ್ಮುಕವ ॥63॥
೦೬೪ ಝಙ್ಕೆ ಮಿಗೆ ...{Loading}...
ಝಂಕೆ ಮಿಗೆ ಹೊರವಂಟುದೆಡ ಬಲ
ವಂಕದಲಿ ಯದುಸೇನೆ ಪಾಂಡವ
ರಂಕೆಯಲಿ ದಳ ಜೋಡಿಸಿತು ಝಳಪಿಸುವ ಕೈದುಗಳ
ಮುಂಕುಡಿಯ ಮೋಹರದ ದಳ ನಿ
ಶ್ಯಂಕೆಯಲಿ ಜೋಡಿಸಿತು ಭೂಪರ
ಬಿಂಕ ಬೀತುದು ಭೀತಿ ಹೂತುದು ಹುದುಗಿತಾಟೋಪ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಾದವರ ಸೈನ್ಯ ಅಬ್ಬರಿಸುತ್ತಾ ಕೃಷ್ಣನ ಎಡಬಲಗಳಲ್ಲಿ ಹೊರಟಿತು. ಪಾಂಡವರ ಅಂಕೆಯಲ್ಲಿ ಅವರ ಸೈನ್ಯವೂ ಜೊತೆಗೂಡಿತು.
ಮುಂಭಾಗದ ಸೈನ್ಯ ಆಯುಧಗಳನ್ನು ಝಳಪಿಸುತ್ತಾ ನಿಶ್ಶಂಕೆಯಿಂದ ಸಿದ್ಧವಾಯಿತು. ಶತ್ರು ರಾಜರ ಗರ್ವ ಅಡಗಿತು. ಭಯ ಹುಟ್ಟಿತು. ಅಬ್ಬರವೆಲ್ಲ ಅಡಗಿತು.
ಪದಾರ್ಥ (ಕ.ಗ.ಪ)
ಮುಂಕುಡಿಯ-ಮುಂಭಾಗದ
ಮೂಲ ...{Loading}...
ಝಂಕೆ ಮಿಗೆ ಹೊರವಂಟುದೆಡ ಬಲ
ವಂಕದಲಿ ಯದುಸೇನೆ ಪಾಂಡವ
ರಂಕೆಯಲಿ ದಳ ಜೋಡಿಸಿತು ಝಳಪಿಸುವ ಕೈದುಗಳ
ಮುಂಕುಡಿಯ ಮೋಹರದ ದಳ ನಿ
ಶ್ಯಂಕೆಯಲಿ ಜೋಡಿಸಿತು ಭೂಪರ
ಬಿಂಕ ಬೀತುದು ಭೀತಿ ಹೂತುದು ಹುದುಗಿತಾಟೋಪ ॥64॥
೦೬೫ ತೊಲಗಿದನು ಕುರುರಾಯ ...{Loading}...
ತೊಲಗಿದನು ಕುರುರಾಯ ಪಾಂಡವ
ರೊಳಗೆ ತಪ್ಪಿಲ್ಲೆನುತ ಮಿಗೆ ಕುರು
ತಿಲಕನಾವಡೆಯೆನುತ ಬಳಿವಿಡಿದರು ನೃಪಾಲಕರು
ಕಲಿ ಜಯದ್ರಥ ಮಾದ್ರಪತಿ ಸೌ
ಬಲ ಕಳಿಂಗ ಕರೂಷ ನೃಪ ಕೌ
ಸಲರು ತಿರುಗಿತು ಬೇರೆ ಭಗದತ್ತಾದಿಗಳು ಸಹಿತ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ, ಪಾಂಡವರಲ್ಲಿ ಯಾವ ತಪ್ಪು ಇಲ್ಲ ಎನ್ನುತ್ತಾ ದುರ್ಯೋಧನ ಅಲ್ಲಿಂದ ಹೊರಟುಬಿಟ್ಟ ಅವನನ್ನು ಹುಡುಕಿಕೊಂಡು ಉಳಿದ
ರಾಜರುಗಳೂ ಅನುಸರಿಸಿ ಹೋದರು. ಅವರಲ್ಲಿ ಕಲಿ ಜಯದ್ರಥ, ಮದ್ರರಾಜ, ಸೌಬಲ, ಕಳಿಂಗ, ಕರೂಷ, ಕೌಸಲ, ಜೊತೆಗೆ ಭಗದತ್ತನೇ ಮೊದಲಾದವರಿದ್ದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ತೊಲಗಿದನು ಕುರುರಾಯ ಪಾಂಡವ
ರೊಳಗೆ ತಪ್ಪಿಲ್ಲೆನುತ ಮಿಗೆ ಕುರು
ತಿಲಕನಾವಡೆಯೆನುತ ಬಳಿವಿಡಿದರು ನೃಪಾಲಕರು
ಕಲಿ ಜಯದ್ರಥ ಮಾದ್ರಪತಿ ಸೌ
ಬಲ ಕಳಿಂಗ ಕರೂಷ ನೃಪ ಕೌ
ಸಲರು ತಿರುಗಿತು ಬೇರೆ ಭಗದತ್ತಾದಿಗಳು ಸಹಿತ ॥65॥
೦೬೬ ಚೆಲ್ಲಿತೀ ನೃಪಯೂಥ ...{Loading}...
ಚೆಲ್ಲಿತೀ ನೃಪಯೂಥ ಜಾರಲಿ
ಜಳ್ಳುಗಳು ಜಲಜಾಕ್ಷನ ಪ್ರತಿ
ಮಲ್ಲ ತಾನೇ ಸಾಲದೇ ಹಾರುವೆನೆ ಕೆಲಬಲನ
ಖುಲ್ಲರಾಯರು ನಿಲಲಿ ಗೊಲ್ಲರ
ಹಳ್ಳಿಗಾರನ ಕೂಡೆ ಬಿರುದಿನ
ಕಲ್ಲಿಗಳ ತಮ್ಮೆದೆಯಲೊತ್ತಲಿಯೆಂದನಾ ಚೈದ್ಯ ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ನೃಪರ ಸೈನ್ಯ ಚದುರಿತು. ಅದನ್ನು ಚೈದ್ಯ “ಈ ಜಳ್ಳುಗಳೆಲ್ಲ ಜಾರಿ ಹೋಗಲಿ. ಈ ಕೃಷ್ಣನನ್ನು ಎದುರಿಸಲು ಅವನಿಗೆ ಪ್ರತಿಮಲ್ಲನಾಗಿ ನಾನೊಬ್ಬನೇ ಸಾಲದೇ. ಅಕ್ಕಪಕ್ಕದವರ ನೆರವನ್ನು ನಾನು ನಿರೀಕ್ಷಿಸುತ್ತೇನೆಯೇ ? ಈ ಖೂಳ ರಾಜರು ನಿಲ್ಲಲಿ. ಗೊಲ್ಲರ ಹಳ್ಳಿಗಾರನಾದ ಕೃಷ್ಣನೊಡನೆ ಬಿರುದಿನ ಕಲ್ಲಿಗಳನ್ನು ತಮ್ಮ ಎದೆಯ ಮೇಲೆ ಒತ್ತಿಕೊಳ್ಳಲಿ” ಎಂದ.
ಪದಾರ್ಥ (ಕ.ಗ.ಪ)
ಖುಲ್ಲ್ಲ-ಖೂಳ, ಕಲ್ಲಿ-ರಾಜರು ಕಿರೀಟದ ಮೇಲೆ ಧರಿಸುವ ಒಂದು ಒಡವೆ
ಮೂಲ ...{Loading}...
ಚೆಲ್ಲಿತೀ ನೃಪಯೂಥ ಜಾರಲಿ
ಜಳ್ಳುಗಳು ಜಲಜಾಕ್ಷನ ಪ್ರತಿ
ಮಲ್ಲ ತಾನೇ ಸಾಲದೇ ಹಾರುವೆನೆ ಕೆಲಬಲನ
ಖುಲ್ಲರಾಯರು ನಿಲಲಿ ಗೊಲ್ಲರ
ಹಳ್ಳಿಗಾರನ ಕೂಡೆ ಬಿರುದಿನ
ಕಲ್ಲಿಗಳ ತಮ್ಮೆದೆಯಲೊತ್ತಲಿಯೆಂದನಾ ಚೈದ್ಯ ॥66॥
೦೬೭ ಎನುತ ಖಳನಿದಿರಾಗಿ ...{Loading}...
ಎನುತ ಖಳನಿದಿರಾಗಿ ಮಧುಮ
ರ್ದನನ ಹಳಚಿದನಸುರರಿಪುವಿನ
ಮೊನೆಗಣೆಯಲೇ ಮುಳುಗಿದನು ಬಳಿಕಾ ಮುಹೂರ್ತದಲಿ
ದನುಜ ವೈರಿಯ ಮುಸುಕಿದನು ತನ
ತನಗೆ ನೋಟಕವಾಯ್ತು ಭೂಪತಿ
ಜನ ಸುನೀತ ಮುರಾರಿಗಳ ಕೌತೂಹಲಾಹವಕೆ ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಹೇಳಿ ಶಿಶುಪಾಲ ಕೃಷ್ಣನನ್ನು ತಾಗಿದ. ಅವನ ಬಾಣಗಳಿಂದಲೇ ಮುಳುಗಿದ. ಇವನೂ ತನ್ನ ಬಾಣಗಳಿಂದಲೇ ಶತ್ರುವನ್ನು ಮುಸುಕಿದ. ಉಳಿದೆಲ್ಲ ರಾಜರೂ ಪ್ರೇಕ್ಷಕರಾಗಿ ಕುತೂಹಲದಿಂದ ಇವರಿಬ್ಬರ ಯುದ್ಧವನ್ನೇ ನೋಡುತ್ತ ನಿಂತರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಎನುತ ಖಳನಿದಿರಾಗಿ ಮಧುಮ
ರ್ದನನ ಹಳಚಿದನಸುರರಿಪುವಿನ
ಮೊನೆಗಣೆಯಲೇ ಮುಳುಗಿದನು ಬಳಿಕಾ ಮುಹೂರ್ತದಲಿ
ದನುಜ ವೈರಿಯ ಮುಸುಕಿದನು ತನ
ತನಗೆ ನೋಟಕವಾಯ್ತು ಭೂಪತಿ
ಜನ ಸುನೀತ ಮುರಾರಿಗಳ ಕೌತೂಹಲಾಹವಕೆ ॥67॥
೦೬೮ ಬಿಡುವ ತೊಡಚುವ ...{Loading}...
ಬಿಡುವ ತೊಡಚುವ ಸಂಧಿಸುವ ಜೇ
ವಡೆವ ಹೂಡುವ ತಾಗಿಸುವ ಹಿಳು
ಕಿಡುವ ಹರಿಕುವ ಬೆಸುವ ಭೇದಿಸುವ ಸಮ ಚಾಪಳವ
ನುಡಿವ ಕವಿ ಯಾರೈ ಬರಿಯ ಬಾ
ಯ್ಬಡಿಕನೆ ಶಿಶುಪಾಲನೀ ಪರಿ
ನಡೆವುದೇಕೈ ಹರಿಯೊಡನೆ ಸಮಬೆಸನ ಬಿಂಕದಲಿ ॥68॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣ ಶಿಶುಪಾಲರಿಬ್ಬರೂ ಬಾಣ ಬಿಡುವುದು, ಬಾಣವನ್ನು ಬಿಲ್ಲಿನಲ್ಲಿ ತೊಡುವುದು, ಸಂಧಿಸುವುದು, ಧನುಷ್ಠೇಂಕಾರ ಮಾಡುವುದು,
ಬಾಣ ಹೂಡುವುದು, ಗುರಿಯನ್ನು ತಾಗಿಸುವುದು, ಹಿಳುಕಿಡುವುದು, ಹರಿಕುವುದು, ಬೆಸುವುದು ಭೇದಿಸುವುದು, ಸಮಚಾಪಳ ಇವುಗಳ
ಚಾತುರ್ಯವನ್ನು ವರ್ಣಿಸಬಲ್ಲ ಕವಿ ಯಾರು? ಶಿಶುಪಾಲನೇನು ಬರಿಯ ಬಾಯ್ಬಡಿಕನೇ ? ಹರಿಯೊಡನೆ ಸಮಬೆಸದ ಬಿಂಕದಿಂದ ಹೋರಾಡುತ್ತಿದ್ದಾನೆ.
ಪದಾರ್ಥ (ಕ.ಗ.ಪ)
ಹಿಳುಕು-ಬಾಣದ ಗರಿ, ಈ ಪದ್ಯದಲ್ಲಿ ತೊಡು, ಹೂಡು, ಬಿಡು, ಗುರಿತಾಗಿಸು, ಹಿಳುಕಿಡು, ಬೆಸು ಹರಿಕು, ಭೇದಿಸು ಇತ್ಯಾದಿ ಪದಗಳು ಬಾಣಸಂಧಾನ ಮತ್ತು ಪ್ರಯೋಗಕ್ಕೆ ಸಂಬಂಧಿಸಿದ ಶಬ್ದಗಳು.
ಮೂಲ ...{Loading}...
ಬಿಡುವ ತೊಡಚುವ ಸಂಧಿಸುವ ಜೇ
ವಡೆವ ಹೂಡುವ ತಾಗಿಸುವ ಹಿಳು
ಕಿಡುವ ಹರಿಕುವ ಬೆಸುವ ಭೇದಿಸುವ ಸಮ ಚಾಪಳವ
ನುಡಿವ ಕವಿ ಯಾರೈ ಬರಿಯ ಬಾ
ಯ್ಬಡಿಕನೆ ಶಿಶುಪಾಲನೀ ಪರಿ
ನಡೆವುದೇಕೈ ಹರಿಯೊಡನೆ ಸಮಬೆಸನ ಬಿಂಕದಲಿ ॥68॥
೦೬೯ ಸೋತನೈ ಹರಿಯೆನ್ದು ...{Loading}...
ಸೋತನೈ ಹರಿಯೆಂದು ಚೈದ್ಯನ
ಬೂತುಗಳು ಬಣ್ಣಿಸಿದರೀ ನಿ
ರ್ಭೀತ ಯಾದವ ಸೈನ್ಯವಿದ್ದುದು ಹರುಷ ಕೇಳಿಯಲಿ
ಈತ ರಾವಣ ಮುನ್ನ ಭುವನ
ಖ್ಯಾತನೆಂದಮರರು ವಿಮಾನ
ವ್ರಾತದಲಿ ನೆರೆ ನೋಡುರ್ತಿರ್ದುದು ಸಮರ ಸಂಭ್ರಮವ ॥69॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹರಿ ಸೋತನು ಎಂದು ಚೈದ್ಯನ ಕಡೆಯ ಭಂಡರು ವರ್ಣಿಸಿದರು. ಆದರೆ ನಿರ್ಭೀತರಾದ ಯಾದವರ ಸೈನ್ಯ
ಹರ್ಷದಿಂದಲೆ ಇದ್ದರು. ಮೇಲೆ ದೇವತೆಗಳು ತಮ್ಮ ವಿಮಾನಗಳಲ್ಲಿ ಕುಳಿತು ‘ಇವನು ಹಿಂದಿನ ಜನ್ಮದಲ್ಲಿ ಲೋಕ
ವಿಖ್ಯಾತನಾದ ರಾವಣನಾಗಿದ್ದವನು’ ಎಂದು ಕುತೂಹಲದಿಂದ ಇವರ ಸಮರ ಸಂಭ್ರಮವನ್ನು ನೋಡುತ್ತಿದ್ದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಸೋತನೈ ಹರಿಯೆಂದು ಚೈದ್ಯನ
ಬೂತುಗಳು ಬಣ್ಣಿಸಿದರೀ ನಿ
ರ್ಭೀತ ಯಾದವ ಸೈನ್ಯವಿದ್ದುದು ಹರುಷ ಕೇಳಿಯಲಿ
ಈತ ರಾವಣ ಮುನ್ನ ಭುವನ
ಖ್ಯಾತನೆಂದಮರರು ವಿಮಾನ
ವ್ರಾತದಲಿ ನೆರೆ ನೋಡುರ್ತಿರ್ದುದು ಸಮರ ಸಂಭ್ರಮವ ॥69॥
೦೭೦ ಧರಣಿಪತಿ ಕೇಳ್ ...{Loading}...
ಧರಣಿಪತಿ ಕೇಳ್ ಕೃಷ್ಣ ಶಿಶುಪಾ
ಲರ ಮಹಾ ಸಂಗ್ರಾಮ ಮಧ್ಯದೊ
ಳುರಿದುದಿಳೆ ಹೊಗೆದುದು ದಿಶಾವಳಿ ಧೂಮಕೇತುಗಳು
ತರಣಿ ಮಂಡಲ ಮಾಲೆಗಳು ವಿ
ಸ್ತರಿಸಿತಾಕಾಶದಲಿ ಪರ್ವದ
ಲುರವಣಿಸಿದನು ರಾಹು ಚಂದ್ರಾದಿತ್ಯ ಮಂಡಲವ ॥70॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣ ಶಿಶುಪಾಲರ ಯುದ್ಧದ ನಡುವೆ ಭೂಮಿ ಉರಿಯಿತು, ದಿಕ್ಕುಗಳು ಹೊಗೆಯಾಡಿದವು. ಆಕಾಶದಲ್ಲಿ ಧೂಮಕೇತುಗಳು ಸೂರ್ಯಮಂಡಲ ಮಾಲೆಗಳು ಕಾಣಿಸಿದವು. ರಾಹು ಪರ್ವದಲ್ಲಿ ಚಂದ್ರಸೂರ್ಯರ ಮಂಡಲವನ್ನು ಆಕ್ರಮಿಸಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಧರಣಿಪತಿ ಕೇಳ್ ಕೃಷ್ಣ ಶಿಶುಪಾ
ಲರ ಮಹಾ ಸಂಗ್ರಾಮ ಮಧ್ಯದೊ
ಳುರಿದುದಿಳೆ ಹೊಗೆದುದು ದಿಶಾವಳಿ ಧೂಮಕೇತುಗಳು
ತರಣಿ ಮಂಡಲ ಮಾಲೆಗಳು ವಿ
ಸ್ತರಿಸಿತಾಕಾಶದಲಿ ಪರ್ವದ
ಲುರವಣಿಸಿದನು ರಾಹು ಚಂದ್ರಾದಿತ್ಯ ಮಂಡಲವ ॥70॥
೦೭೧ ನಡುಗಿತವನಿಯಕಾಲದಲಿ ಬರ ...{Loading}...
ನಡುಗಿತವನಿಯಕಾಲದಲಿ ಬರ
ಸಿಡಿಲು ಸುಳಿದುದು ಹಗಲು ತಾರೆಗ
ಳಿಡಿದವಭ್ರದಲಿಳೆಗೆ ಸುರಿದುದು ರುಧಿರಮಯ ವರ್ಷ
ಮಿಡುಕಿದವು ಪ್ರತಿಮೆಗಳು ಶಿಖರದಿ
ನುಡಿದು ಬಿದ್ದುದು ಕಳಶ ಹೆಮ್ಮರ
ವಡಿಗಡಿಗೆ ಕಾರಿದವು ರುಧಿರವನರಸ ಕೇಳ್ ಎಂದ ॥71॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಮಿ ನಡುಗಿತು. ಅಕಾಲದಲ್ಲಿ ಬರಸಿಡಿಲು ಬಡಿಯಿತು. ಹಗಲಲ್ಲೇ ನಕ್ಷತ್ರಗಳು ಆಗಸದಿಂದ ಭೂಮಿಯ ಮೇಲೆ ಬಿದ್ದವು. ರಕ್ತದ ಮಳೆ ಸುರಿಯಿತು. ಪ್ರತಿಮೆಗಳು ಚಲಿಸಿದುವು. ಶಿಖರದಿಂದ ಕಳಶ ಮುರಿದುಬಿದ್ದಿತು. ಹೆಮ್ಮರಗಳು ಮತ್ತೆ ಮತ್ತೆ ರಕ್ತವನ್ನು ಕಾರಿದುವು.
ಪದಾರ್ಥ (ಕ.ಗ.ಪ)
ಮೂಲ ...{Loading}...
ನಡುಗಿತವನಿಯಕಾಲದಲಿ ಬರ
ಸಿಡಿಲು ಸುಳಿದುದು ಹಗಲು ತಾರೆಗ
ಳಿಡಿದವಭ್ರದಲಿಳೆಗೆ ಸುರಿದುದು ರುಧಿರಮಯ ವರ್ಷ
ಮಿಡುಕಿದವು ಪ್ರತಿಮೆಗಳು ಶಿಖರದಿ
ನುಡಿದು ಬಿದ್ದುದು ಕಳಶ ಹೆಮ್ಮರ
ವಡಿಗಡಿಗೆ ಕಾರಿದವು ರುಧಿರವನರಸ ಕೇಳೆಂದ ॥71॥
೦೭೨ ನೆಳಲು ಸುತ್ತಲು ...{Loading}...
ನೆಳಲು ಸುತ್ತಲು ಸುಳಿದುದಿನಮಂ
ಡಳಕೆ ಕಾಳಿಕೆಯಾಯ್ತು ಫಲದಲಿ
ಫಲದ ಬೆಳವಿಗೆ ಹೂವಿನಲಿ ಹೂವಾಯ್ತು ತರುಗಳಲಿ
ತಳಿತ ಮರನೊಣಗಿದವು ಕಾಷ್ಠಾ
ವಳಿಗಳುರೆ ತಳಿತವು ತಟಾಕದ
ಸಲಿಲವುಕ್ಕಿತು ಪಾಂಡುಪುತ್ರರ ಪುರದ ವಳಯದಲಿ ॥72॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರ ಪಟ್ಟಣದ ವಲಯದಲ್ಲಿ ಸೂರ್ಯಮಂಡಲದ ಸುತ್ತಲೂ ನೆರಳು ಕಾಣಿಸಿಕೊಂಡು ಕಪ್ಪಿಟ್ಟಿತು. ಮರಗಳಲ್ಲಿ ಹೂವಿನಲ್ಲಿ ಹೂವಾಯಿತು. ಹಣ್ಣಿನಲ್ಲಿ ಹಣ್ಣಾಯಿತು, ಚಿಗುರಿದ ಮರ ಒಣಗಿತು. ಒಣಗಿದ ಕಾಷ್ಠಗಳು ಚಿಗುರಿದುವು. ಕೆರೆಗಳ ನೀರು ಉಕ್ಕಿತು.
ಪದಾರ್ಥ (ಕ.ಗ.ಪ)
ಮೂಲ ...{Loading}...
ನೆಳಲು ಸುತ್ತಲು ಸುಳಿದುದಿನಮಂ
ಡಳಕೆ ಕಾಳಿಕೆಯಾಯ್ತು ಫಲದಲಿ
ಫಲದ ಬೆಳವಿಗೆ ಹೂವಿನಲಿ ಹೂವಾಯ್ತು ತರುಗಳಲಿ
ತಳಿತ ಮರನೊಣಗಿದವು ಕಾಷ್ಠಾ
ವಳಿಗಳುರೆ ತಳಿತವು ತಟಾಕದ
ಸಲಿಲವುಕ್ಕಿತು ಪಾಂಡುಪುತ್ರರ ಪುರದ ವಳಯದಲಿ ॥72॥
೦೭೩ ಬೆದರಿದನು ಯಮಸೂನು ...{Loading}...
ಬೆದರಿದನು ಯಮಸೂನು ಭಯದಲಿ
ಗದಗದಿಸಿ ನಾರದನ ಕೇಳಿದ
ನಿದನಿದೇನೀ ಪ್ರಕೃತಿ ವಿಕೃತಿಯ ಸಕಳ ಚೇಷ್ಟೆಗಳು
ಇದು ಕಣಾ ಚೈದ್ಯಾದಿಗಳ ವಧೆ
ಗುದುಭವಿಸಿದುದಲೇ ಮುರಾರಿಯೊ
ಳುದಯಿಸುವವುತ್ಪಾತ ಚೇಷ್ಟೆಗಳೆಂದನಾ ಮುನಿಪ ॥73॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದನ್ನೆಲ್ಲ ನೋಡಿದ ಯುಧಿಷ್ಠಿರ ಬೆದರಿ, ಭಯದಿಂದ ಗದ್ಗದಿಸುತ್ತಾ ಪ್ರಕೃತಿಯಲ್ಲಿ ವಿಕೃತಿಯಿಂದ ಕೂಡಿದ ಈ ಸಕಲ ಚೇಷ್ಟೆಗಳು
ಏಕೆ ನಡೆಯುತ್ತಿವೆ. ಎಂದು ನಾರದನನ್ನು ಕೇಳಿದ. ಅದಕ್ಕೆ ನಾರದ “ನೋಡಯ್ಯ ಇದು ಚೈದ್ಯನೇ ಮೊದಲಾದವರ ವಧೆಗಾಗಿ
ಉದ್ಭವಿಸಿದವುಗಳು. ಈ ಉತ್ಪಾತ ಚೇಷ್ಟೆಗಳೆಲ್ಲ ಕೃಷ್ಣನಿಂದ ಉಂಟಾದವು” ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಬೆದರಿದನು ಯಮಸೂನು ಭಯದಲಿ
ಗದಗದಿಸಿ ನಾರದನ ಕೇಳಿದ
ನಿದನಿದೇನೀ ಪ್ರಕೃತಿ ವಿಕೃತಿಯ ಸಕಳ ಚೇಷ್ಟೆಗಳು
ಇದು ಕಣಾ ಚೈದ್ಯಾದಿಗಳ ವಧೆ
ಗುದುಭವಿಸಿದುದಲೇ ಮುರಾರಿಯೊ
ಳುದಯಿಸುವವುತ್ಪಾತ ಚೇಷ್ಟೆಗಳೆಂದನಾ ಮುನಿಪ ॥73॥
೦೭೪ ಈ ನೆಗಳಿದುತ್ಪಾತ ...{Loading}...
ಈ ನೆಗಳಿದುತ್ಪಾತ ಶಾಂತಿ ವಿ
ಧಾನವೇನೆನೆ ಕೃಷ್ಣ ಚೇಷ್ಟೆಯೆ
ಹಾನಿ ವೃದ್ಧಿ ವಿನಾಶವಭ್ಯುದಯ ಪ್ರಪಂಚದಲಿ
ಮಾನನಿಧಿಯೇ ವೇದಸೂಕ್ತ ವಿ
ಧಾನದಲಿ ಪರಿಹಾರ ವಿಶ್ವ
ಕ್ಸೇನಮಯವೀ ಲೋಕ ಯಾತ್ರೆಗಳೆಂದನಾ ಮುನಿಪ ॥74॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉಂಟಾಗುತ್ತಿರುವ ಈ ಉತ್ಪಾತಗಳಿಗೆ ಶಾಂತಿವಿಧಾನವೇನು ಎಂದು ಯುಧಿಷ್ಠಿರ ಕೇಳಲು ನಾರದ “ಹಾನಿ ವೃದ್ಧಿ ವಿನಾಶ
ಅಭ್ಯುದಯ ಎಲ್ಲವೂ ಕೃಷ್ಣನಿಂದಾದುದೇ. ಮಾನ ನಿಧಿಯೇ, ವೇದಸೂಕ್ತ ವಿಧಾನಗಳಿಂದ ಇದಕ್ಕೆ ಪರಿಹಾರ ಈ ಲೋಕದ ಸಮಸ್ತ
ನಡುವಳಿಕೆಗಳೂ ವಿಶ್ವಕ್ಸೇನ ಮಯವೇ” ಎಂದ.
ಪದಾರ್ಥ (ಕ.ಗ.ಪ)
ಟಿಪ್ಪನೀ (ಕ.ಗ.ಪ)
ವಿಶ್ವಕ್ಸೇನ ?
ಮೂಲ ...{Loading}...
ಈ ನೆಗಳಿದುತ್ಪಾತ ಶಾಂತಿ ವಿ
ಧಾನವೇನೆನೆ ಕೃಷ್ಣ ಚೇಷ್ಟೆಯೆ
ಹಾನಿ ವೃದ್ಧಿ ವಿನಾಶವಭ್ಯುದಯ ಪ್ರಪಂಚದಲಿ
ಮಾನನಿಧಿಯೇ ವೇದಸೂಕ್ತ ವಿ
ಧಾನದಲಿ ಪರಿಹಾರ ವಿಶ್ವ
ಕ್ಸೇನಮಯವೀ ಲೋಕ ಯಾತ್ರೆಗಳೆಂದನಾ ಮುನಿಪ ॥74॥
೦೭೫ ಆ ಹರಿಯೆ ...{Loading}...
ಆ ಹರಿಯೆ ನಿಮಗಿಂದು ಜೀವ
ಸ್ನೇಹಿತನು ನಿಮಗಾವ ಚಿಂತೆ ವಿ
ಮೋಹ ಚೇಷ್ಟೆಗಳಿವನ ವಧೆಗೋ ಬಲ್ಲರಾರಿದನು
ಊಹಿಸಲು ಬೇಡೆಂದು ಮುನಿಪತಿ
ಗಾಹಿನಲಿ ತಿಳುಹಿದನು ಘನ ಸ
ನ್ನಾಹರೆಚ್ಚಾಡಿದರು ಶಿಶುಪಾಲಕ ಮುರಾಂತಕರು ॥75॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮತ್ತೆ ಮುಂದುವರಿದು “ಆ ಹರಿಯೇ ನಿಮಗಿಂದು ಸ್ನೇಹಿತ. ನಿಮಗೆ ಯಾವ ಚಿಂತೆ ? ಏಕೆ ವಿಮೋಹ ? ಈ ಉತ್ಪಾತ ಚೇಷ್ಟೆಗಳು ಇವನ ವಧೆಗೋ ? ಯಾರು ಬಲ್ಲರು ? ವೃಥಾ ಊಹಿಸುತ್ತಾ ಕುಳಿತುಕೊಳ್ಳಬೇಡ” ಎಂದು ಮುಚ್ಚುಮರೆಯಿಂದ ತಿಳಿಸಿದ. ಅತ್ತ ಯುದ್ಧಸನ್ನಾಹ ಮಾಡಿಕೊಂಡಿದ್ದ ಶಿಶುಪಾಲ ಕೃಷ್ಣರಿಬ್ಬರೂ ಬಾಣಗಳಿಂದ ಹೋರಾಟ ನಡೆಸಿದ್ದರು.
ಪದಾರ್ಥ (ಕ.ಗ.ಪ)
ಗಾಹು-ಮುಚ್ಚು ಮರೆ, ಪರ್ಯಾಯವಾಗಿ
ಮೂಲ ...{Loading}...
ಆ ಹರಿಯೆ ನಿಮಗಿಂದು ಜೀವ
ಸ್ನೇಹಿತನು ನಿಮಗಾವ ಚಿಂತೆ ವಿ
ಮೋಹ ಚೇಷ್ಟೆಗಳಿವನ ವಧೆಗೋ ಬಲ್ಲರಾರಿದನು
ಊಹಿಸಲು ಬೇಡೆಂದು ಮುನಿಪತಿ
ಗಾಹಿನಲಿ ತಿಳುಹಿದನು ಘನ ಸ
ನ್ನಾಹರೆಚ್ಚಾಡಿದರು ಶಿಶುಪಾಲಕ ಮುರಾಂತಕರು ॥75॥
೦೭೬ ಕಾದಿದರು ವಿವಿಧಾಸ್ತ್ರ ...{Loading}...
ಕಾದಿದರು ವಿವಿಧಾಸ್ತ್ರ ವಿದ್ಯಾ
ಭೇದದಲಿ ರಥಭಂಗ ಚಾಪ ವಿ
ಭೇದ ಶಸ್ತ್ರಾಸ್ತ್ರೌಘ ಸಂಹರಣ ಪ್ರಪಂಚದಲಿ
ಈ ದುರಾತ್ಮನ ನಿಲಿಸಿ ನಿಮಿಷದೊ
ಳಾ ದಯಾಂಬುಧಿ ತುಡುಕಿದನು ತ್ರೈ
ವೇದಮಯಮೂರ್ತಿತ್ರಯಾತ್ಮಕ ವರ ಸುದರ್ಶನವ ॥76॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಬ್ಬರೂ ರಥಭಂಗ, ಚಾಪವಿಭೇದ, ಶಸ್ತ್ರಾಸ್ತ್ರೌಘಸಂಹರಣ ಪ್ರಪಂಚದ ವಿವಿಧ ಅಸ್ತ್ರವಿದ್ಯಾ ರಹಸ್ಯವನ್ನು ಬಳಸಿ ಹೋರಾಡಿದರು.
ಕಡೆಗೆ ದಯಾಂಬುಧಿಯಾದ ಕೃಷ್ಣನು ಈ ದುರಾತ್ಮನನ್ನು ತಡೆಗಟ್ಟಿ ನಿಮಿಷ ಮಾತ್ರದಲ್ಲಿ ತ್ರೈವೇದಮಯವೂ ಮೂರ್ತಿತ್ರಯಾತ್ಮಕವೂ
ಆದ ವರ ಸುದರ್ಶನ ಚಕ್ರವನ್ನು ಹಿಡಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಕಾದಿದರು ವಿವಿಧಾಸ್ತ್ರ ವಿದ್ಯಾ
ಭೇದದಲಿ ರಥಭಂಗ ಚಾಪ ವಿ
ಭೇದ ಶಸ್ತ್ರಾಸ್ತ್ರೌಘ ಸಂಹರಣ ಪ್ರಪಂಚದಲಿ
ಈ ದುರಾತ್ಮನ ನಿಲಿಸಿ ನಿಮಿಷದೊ
ಳಾ ದಯಾಂಬುಧಿ ತುಡುಕಿದನು ತ್ರೈ
ವೇದಮಯಮೂರ್ತಿತ್ರಯಾತ್ಮಕ ವರ ಸುದರ್ಶನವ ॥76॥
೦೭೭ ಬೆಸಸಿದನು ಚಕ್ರವನು ...{Loading}...
ಬೆಸಸಿದನು ಚಕ್ರವನು ಧಾರಾ
ವಿಸರಧೂತ ಪರಿಸ್ಫುಲಿಂಗ
ಪ್ರಸರ ತೇಜಃಕಣ ಪರಿಷ್ಕೃತ ನವ್ಯ ಶತಭಾನು
ದೆಸೆ ದೆಸೆಗೆ ದುವ್ವಾಳಿಸುವ ಬೆಳ
ಗೆಸೆಯೆ ಬಂದು ಸುನೀತ ಕಂಠದ
ಬೆಸುಗೆ ಬಿಡಲೆರಗಿದುದು ಹಾಯ್ದುದು ತಲೆ ನಭಸ್ಥಳಕೆ ॥77॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚಕ್ರಕ್ಕೆ ಆಜ್ಞೆ ಮಾಡಿದ. ಚಕ್ರದ ವಿಸ್ತಾರವಾದ ಅಲಗಿನಿಂದ ಹೊರಹೊಮ್ಮಿ ಹರಡಿದ ಕಿಡಿಗಳ ತೇಜಸ್ಸಿನ ಕಣಗಳಿಂದ ಪರಿಷ್ಕಾರಗೊಂಡ ನೂರಾರು ನವ್ಯ ಸೂರ್ಯರು ದಿಕ್ಕು ದಿಕ್ಕಿಗೂ ಬೆಳಕನ್ನು ಚೆಲ್ಲುತ್ತಿದ್ದಂತೆ ಕಂಡಿತು. ಆ ಚಕ್ರವು ಬಂದು ಶಿಶುಪಾಲನ ಕಂಠದ ಬೆಸುಗೆಯನ್ನು ಬಿಡಿಸುವಂತೆ ಮೇಲೆರಗಿತು. ಅವನ ತಲೆ ನಭಸ್ಥಳಕ್ಕೆ ಹಾರಿತು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಬೆಸಸಿದನು ಚಕ್ರವನು ಧಾರಾ
ವಿಸರಧೂತ ಪರಿಸ್ಫುಲಿಂಗ
ಪ್ರಸರ ತೇಜಃಕಣ ಪರಿಷ್ಕೃತ ನವ್ಯ ಶತಭಾನು
ದೆಸೆ ದೆಸೆಗೆ ದುವ್ವಾಳಿಸುವ ಬೆಳ
ಗೆಸೆಯೆ ಬಂದು ಸುನೀತ ಕಂಠದ
ಬೆಸುಗೆ ಬಿಡಲೆರಗಿದುದು ಹಾಯ್ದುದು ತಲೆ ನಭಸ್ಥಳಕೆ ॥77॥
೦೭೮ ಹರಿಗೊರಳ ಚೌಧಾರೆಯಲಿ ...{Loading}...
ಹರಿಗೊರಳ ಚೌಧಾರೆಯಲಿ ಧುರು
ಧುರಿಸಿ ನೂಕಿತು ರಕುತವದರೊಳು
ಮಿರುಪ ತೇಜಃಪುಂಜವುಕ್ಕಿತು ಹೊದರ ಹೊಳಹಿನಲಿ
ತುರುಗುವೆಳಗಿನ ಜೋಕೆಯಲಿ ಜಗ
ವರಿಯೆ ಬಂದು ಮುರಾರಿಯುಂಘ್ರಿಯೊ
ಳೆರಗಿ ನಿಂದುದು ನಿಜನೆಲೆಗೆ ವಿಜಯಾಭಿಧಾನದಲಿ ॥78॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕತ್ತರಿಸಿದ ಕುತ್ತಿಗೆಯಿಂದ ನಾಲ್ಕು ಕಡೆಯೂ ರಕ್ತ ಧಾರಾಕಾರವಾಗಿ ಉಕ್ಕಿ ಸುರಿಯಿತು. ಅದರ ನಡುವಿನಿಂದ ಹೊಳೆಹೊಳೆವ ತೇಜಃಪುಂಜವೊಂದು ಹೊರಹೊಮ್ಮಿತು. ತುಂಬಿದ ಆ ಬೆಳಕು ಜೋಕೆಯಿಂದ ಜಗತ್ತೆಲ್ಲ ನೋಡುತ್ತಿದ್ದಂತೆಯೇ, ಬಂದು ಮುರಾರಿಯ ಪಾದಗಳಿಗೆ ಎರಗಿ ನಿಂತಿತು. ಅನಂತರ ವಿಜಯ ಎಂಬ ಹೆಸರಿನಿಂದ ತನ್ನ ನಿಜ ನೆಲೆಯಲ್ಲಿ ಲೀನವಾಗಿಬಿಟ್ಟಿತು.
ಪದಾರ್ಥ (ಕ.ಗ.ಪ)
ಅಭಿಧಾನ-ಹೆಸರು
ಟಿಪ್ಪನೀ (ಕ.ಗ.ಪ)
ಶಿಶುಪಾಲ :
ಸಭಾಪರ್ವದಲ್ಲಿ ಶ್ರೀಕೃಷ್ಣನಿಗೆ ರಾಜಸೂಯ ಯಾಗದ ಸಂದರ್ಭದಲ್ಲಿ ಅಗ್ರ ಪೂಜೆ ಸಲ್ಲಿಸುವುದರ ವಿರುದ್ಧ ಉಗ್ರವಾದ ಧ್ವನಿಯೆತ್ತಿದವನು ಶಿಶುಪಾಲ. ಇವನ ಕೃಷ್ಣದ್ವೇಷ ಯಾವ ಪ್ರಮಾಣದ್ದೆಂಬುದು ಇಲ್ಲಿ ತಿಳಿದುಬರುತ್ತದೆ. ಕೃಷ್ಣನನ್ನು ಕೆಣಕುವ ನೆಪದಲ್ಲಿ ಇಡೀ ಸಭೆಯ ಭೀಷ್ಮಾದಿ ಹಿರಿಯರನ್ನೆಲ್ಲಾ ಶಿಶುಪಾಲನು ಮೂರ್ಖರೆಂದು ಕರೆಯುತ್ತಾನೆ. ಕೊನೆಗೆ ಕೃಷ್ಣನ ಮೇಲೆ ಯುದ್ಧ ನಿಶ್ಚಯಿಸಿ ಯುದ್ಧದಲ್ಲಿ ಸಾಯುತ್ತಾನೆ
ಶಿಶುಪಾಲನು ದಮಘೋಷನೆಂಬ ಚೇದಿಯ ರಾಜ ಮತ್ತು ಶ್ರುತಶ್ರವೇ (ಪತ್ನಿ)ಯರ ಮಗ. ಇವನ ಹುಟ್ಟೇ ವಿಚಿತ್ರವೂ ಭಯಾನಕವೂ ಆಗಿತ್ತು. ಇವನಿಗೆ ಮೂರು ಕಣ್ಣು, ನಾಲ್ಕು ಭುಜ1 ಇವನು ಕತ್ತೆಯಂತೆ ಕಿರುಚುತ್ತಿದ್ದ. ಜೋರಾಗಿ ಗರ್ಜಿಸುತ್ತಿದ್ದ. ತಾಯಿ ತಂದೆ ಮಂತ್ರಿ ಪುರೋಹಿತರೆಲ್ಲ ಚಿಂತಿಸುತ್ತಿದ್ದಾಗ ಈತನಿಗೆ ಸದ್ಯಕ್ಕೆ ಸಾವಿಲ್ಲ ಇವನು ಲಕ್ಷ್ಮೀ ಸಂಪನನ್ನೂ, ಮಹಾಬಲಶಾಲಿ ಆಗುತ್ತಾನೆ. ಈತನನ್ನು ಯಾರ ತೊಡೆಯ ಮೇಲೆ ಕುಳ್ಳಿರಿಸಿದಾಗ ಹೆಚ್ಚಿನ ಅಂಗಾಂಗಗಳೆಲ್ಲ ಮಾಯವಾಗುತ್ತವೋ ಆತನಿಂದಲೇ ಈ ಹುಡುಗ ಸಾಯುತ್ತಾನೆ ಎಂದು ಆಕಾಶವಾಣಿಯಾಯಿತು. ಅದರಂತೆ ಬಂದವರ ತೊಡೆಯ ಮೇಲೆ ಶ್ರುತಶ್ರುವೆ ಕೂರಿಸುತ್ತಿದ್ದಳು. ಹತ್ತಿರದ ಬಂಧು ಕೃಷ್ಣನು ಮಗುವನ್ನು ನೋಡಲು ಬಂದಾಗ ಅವನ ತೊಡೆಯ ಮೇಲೂ ಕೂರಿಸಿದಳು. ಮಗ ತನ್ನ ವಿಕೃತಿಗಳನ್ನು ಕಳೆದುಕೊಂಡು ಸುಂದರ ಶಿಶುವಾಯಿತು. ಅವಳ ಸಂದೇಹವನ್ನು ಪರಿಹರಿಸುವ ರೀತಿಯಲ್ಲಿ ಕೃಷ್ಣನು ನನ್ನಿಂದ ಏನು ವರಬೇಕು ಕೇಳು ಎಂದ. ಆಗ ತಂದೆ-ತಾಯಿಗಳು ನನ್ನ ಮಗನ ಎಲ್ಲ ತಪ್ಪುಗಳನ್ನೂ ಕ್ಷಮಿಸಬೇಕು’’ ಎಂದು ವರವನ್ನು ಕೋರಿದರು. ಶ್ರೀಕೃಷ್ಣ ತುಂಬ
ಬುದ್ಧಿವಂತಿಕೆಯಿಂದ ನೂರು ತಪ್ಪುಗಳನ್ನು ಕ್ಷಮಿಸುವುದಾಗಿ ಹೇಳಿದ.
ಕೃಷ್ಣನ ವರದಿಂದಲೇ ಬೆಳೆದ ಶಿಶುಪಾಲನು ಉದ್ದಕ್ಕೂ ಕೃಷ್ಣ ದ್ವೇಷವನ್ನೇ ಸಾಧಿಸಿಕೊಂಡು ಬಂದು ಅನೇಕ ಅಪರಾಧಗಳನ್ನು ಮಡಿದ. ತಾನು ಮದುವೆಯಗಲು ಆಸೆ ಪಟ್ಟಿದ್ದ ರುಕ್ಮಿಣಿಯನ್ನು ಕೃಷ್ಣನು ಅಪಹರಿಸಿಕೊಂಡು ಹೋದದ್ದೂ ಅವನ ಸಿಟ್ಟಿಗೆ ಕಾರಣವಾಗಿತು. ಅಲ್ಲದೆ ಜರಾಸಂಧನ ಜೊತೆಗೆ ಸೇರಿ ಕೃಷ್ಣ ಸಂದರ್ಭ ಸಿಕ್ಕಾಗಲೆಲ್ಲ ಕೃಷ್ಣನ ತೇಜೋವಧೆ ಮಡಲು ಪ್ರಯತ್ನಿಸುತ್ತಿದ್ದ. ಶ್ರೀಕೃಷ್ಣನು ಮಧುವಾಗಿ ಅವನ ಅಪರಾಧಗಳನ್ನೆಲ್ಲ ಪಟ್ಟಿ ಮಾಡಿ ಎಣಿಸಿಕೊಂಡು ಕುಳಿತಿದ್ದ.
ಶ್ರೀಕೃಷ್ಣನಿಗೆ ರಾಜಸೂಯದಲ್ಲಿ ಅಗ್ರಪೂಜೆಯನ್ನು ಕಟ್ಟುವುದನ್ನು ವಿರೋಧಿಸಿ ಶಿಶುಪಾಲನಿಗೆ ತಾನು ನೂರು ತಪ್ಪುಗಳನ್ನು ಮೀರುತ್ತಿದ್ದನೆಂಬುದು ತಿಳಿಯಲೇ ಇಲ್ಲ. ಅವನ ಅಪರಾಧದ ಕೊಡ ತುಂಬುತ್ತ ಬಂತು. ಶಿಶುಪಾಲನ ಕೃಷ್ಣನಿಂದೆ ಉಗ್ರವಾಗಿತ್ತು. ಜ್ವರಪೀಡಿತನಾದವನು ಅಪಥ್ಯ ಸೇವಿಯಾಗುತ್ತಾನೆಂದು ಮಾಘ ಶಿಶುಪಾಲವಧೆಯಲ್ಲಿ ಹೇಳಿದ್ದಾನೆ. ಕೃಷ್ಣನನ್ನು ನೇರವಾಗಿ ಟೀಕಿಸುವ ಮಾತುಗಳಂತೂ ರಾಜಸಭಾ ಮರ್ಯಾಧೆಯನ್ನು ಮೀರಿದ್ದು:
‘‘ಕ್ಲೀಬೇ ದಾರಾಕ್ರಿಯಾಯಾ ದೃಗಂಧೇವಾರೂಪದರ್ಶನಂ
ಅರಾಜ್ಯೋರಾಜವತ್ ಪೂಜಾ ತಥಾತೇ ಮಧುಸೂದನ’’
ಅಯ್ಯಾ, ರಾಜನಲ್ಲದ ನಿನಗೆ ಪೂಜೆ ಮಾಡಿದ್ದು ನಪುಂಸಕನಿಗೆ ಮದುವೆ ಮಾಡಿದಂತೆ! ಕುರುಡನಿಗೆ ಕನ್ನಡಿಯಲ್ಲಿ ರೂಪ ತೋರಿದಂತೆ….
ಕೆರಳಿದ ಕೃಷ್ಣನ ಚಕ್ರಕ್ಕೆ ಸಿಲುಗಿ ಶಿಶುಪಾಲನು ಸತ್ತದ್ದು ವಾಚಾಳಿತನಕ್ಕೆ ದೊರಕಿದ ಶಿಕ್ಷೆ ಎನ್ನಬೇಕು.
ಜೊತೆಗೆ ಶಿಶುಪಾಲ ಪೂರ್ವದಲ್ಲಿ ನಾರಾಯಣನ ದ್ವಾರಪಾಲಕನಾದ ವಿಜಯ ಎನ್ನುವವನು.ಅವನೂ ಅವನ ಜೊತೆಯವನಾದ ಜಯ ಎಂಬ ದ್ವಾರಪಾಲಕರು ಮಾಡಿದ ಒಂದು ತಪ್ಪಿಗೆ ಶಿಕ್ಷಾ ರೂಪವಾಗಿ ಭೂಮಿಯಲ್ಲಿ ಅವತರಿಸಬೇಕಾಗುತ್ತದೆ. ಬೇಗ ವಿಷ್ಣುವಿನ ಜೊತೆ ಸೇರುವ ಉದ್ದೇಶದಿಂದ ವೈರಿಗಳಾಗಿ ಹುಟ್ಟಲು ಅವರು ತಾವಾಗಿ ವಿಷ್ಣುವನ್ನು ಕೋರುತ್ತಾರೆ. ಹಿರಣ್ಯ ಕಶಿಪು, ಹಿರಣ್ಯಾಕ್ಷರಾಗಿ ಕೃತಯುಗದಲ್ಲಿ, ರಾವಣ, ಕುಂಭಕರ್ಣರಾಗಿ ತ್ರೇತಾಯುಗದಲ್ಲಿ, ದ್ವಾಪರಯುಗದಲ್ಲಿ ಶಿಶುಪಾಲ , ದಂತವಕ್ತ್ರರಾಗಿ ಜನಿಸಿ ವಿವಿಧ ಅವತಾರ ರೂಪಗಳಲ್ಲಿದ್ದ ವಿಷ್ಣುವಿನಿಂದ ಹತರಾಗುತ್ತಾರೆ. ಅವನನ್ನು ದ್ವಾಪರ ಯುಗದಲ್ಲಿ ಸೇರುತ್ತಾರೆ. ಅದಕ್ಕೆಂದೇ ಇಲ್ಲಿ ಶಿಶುಪಾಲ ವಿಜಯ ಎಂಬ ಹೆಸರಿನ ಅಭಿದಾನದಲ್ಲಿ ತನ್ನ ನಿಜನೆಲೆಯಲ್ಲಿ ಲೀನವಾಯಿತು ಎಂದು ಕುಮಾರವ್ಯಸ ಹೇಳಿರುವುದು.
ಮೂಲ ...{Loading}...
ಹರಿಗೊರಳ ಚೌಧಾರೆಯಲಿ ಧುರು
ಧುರಿಸಿ ನೂಕಿತು ರಕುತವದರೊಳು
ಮಿರುಪ ತೇಜಃಪುಂಜವುಕ್ಕಿತು ಹೊದರ ಹೊಳಹಿನಲಿ
ತುರುಗುವೆಳಗಿನ ಜೋಕೆಯಲಿ ಜಗ
ವರಿಯೆ ಬಂದು ಮುರಾರಿಯುಂಘ್ರಿಯೊ
ಳೆರಗಿ ನಿಂದುದು ನಿಜನೆಲೆಗೆ ವಿಜಯಾಭಿಧಾನದಲಿ ॥78॥
೦೭೯ ತಗ್ಗಿತುರು ಕಳಕಳ ...{Loading}...
ತಗ್ಗಿತುರು ಕಳಕಳ ವಿಷಾದದ
ಸುಗ್ಗಿ ಬೀತುದು ರಾಯರೀಚೆಯ
ಮಗ್ಗುಲಲಿ ಮೇಳೈಸಿ ಮೆರೆದರು ಮತ್ತೆ ಬಾಂಧವರು
ನೆಗ್ಗಿದವು ನೆನಹವನ ಸಖಿಗಳು
ಮುಗ್ಗಿದರು ಹುರುಡಿನ ವಿಘಾತಿಯ
ಲಗ್ಗಿಗರು ಹಣುಗಿದರು ಶಿಶುಪಾಲಾವಸಾನದಲಿ ॥79॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೆಚ್ಚಿದ್ದ ಕಳಕಳವೆಲ್ಲ ತಗ್ಗಿತು. ಸುಗ್ಗಿಯಂತೆ ಹುಲುಸಾಗಿದ್ದ ವಿಷಾದವೆಲ್ಲ ಕಳೆದು ಹೋಯಿತು. ರಾಜರುಗಳೆಲ್ಲ ಆಚೆಯ ಬದಿಯಿಂದ ಈಚೆಯ ಕಡೆಗೆ ಬಂದು ಸೇರಿ ಮತ್ತೆ ಬಾಂಧವರಾದವರು. ಹಳೆಯ ನೆನಪುಗಳೆಲ್ಲ ಮಾಯವಾದವು. ಶಿಶುಪಾಲನ ಅವಸಾನವಾದ ಮೇಲೆ ಅವನ ಮಿತ್ರರಾಗಿದ್ದವರೆಲ್ಲ ತತ್ತರಿಸಿದರು. ಹುರುಪಿನಿಂದ ವಿಘಾತಿಯನ್ನುಂಟುಮಾಡಬೇಕೆಂದು ಕಾಯುತ್ತಿದ್ದವರೆಲ್ಲ ಅಲ್ಲಲ್ಲೇ ಅಡಗಿಕೊಂಡುಬಿಟ್ಟರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ತಗ್ಗಿತುರು ಕಳಕಳ ವಿಷಾದದ
ಸುಗ್ಗಿ ಬೀತುದು ರಾಯರೀಚೆಯ
ಮಗ್ಗುಲಲಿ ಮೇಳೈಸಿ ಮೆರೆದರು ಮತ್ತೆ ಬಾಂಧವರು
ನೆಗ್ಗಿದವು ನೆನಹವನ ಸಖಿಗಳು
ಮುಗ್ಗಿದರು ಹುರುಡಿನ ವಿಘಾತಿಯ
ಲಗ್ಗಿಗರು ಹಣುಗಿದರು ಶಿಶುಪಾಲಾವಸಾನದಲಿ ॥79॥
೦೮೦ ಈಸು ಹಿರಿದಿಲ್ಲೆನ್ದು ...{Loading}...
ಈಸು ಹಿರಿದಿಲ್ಲೆಂದು ಕೆಲಬರು
ಲೇಸ ಮಾಡಿದನಸುರರಿಪುವಿವ
ನೀಸು ಬಾಹಿರನೆಂದರಿಯೆವಾವೆಂದು ಕೆಲಕೆಲರು
ಐಸಲೇ ಕೃಷ್ಣಂಗೆ ಮುನಿದವ
ರೇಸುದಿನ ಬದುಕುವರು ಲೇಸಾ
ಯ್ತಾ ಸುನೀತಂಗೆಂದು ನಗುತಿರ್ದುದು ನೃಪಸ್ತೋಮ ॥80॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಷ್ಟು ದೊಡ್ಡದೇನಲ್ಲ ಎಂದು ಕೆಲವರು. ಅಸುರರಿಪು ಒಳ್ಳೆಯ ಕೆಲಸ ಮಾಡಿದ. ಶಿಶುಪಾಲನು ಇಷ್ಟೊಂದು ನೀಚ ಎಂದು ನಮಗೆ ಗೊತ್ತಿರಲಿಲ್ಲ ಎಂದು ಕೆಲವರು. ಅಷ್ಟಲ್ಲದೆ, ಕೃಷ್ಣನಿಗೆ ಮುನಿದವರು ಎಷ್ಟು ದಿನ ಬದುಕಿದ್ದಾರು ? ಸರಿಯಾಗಿ ಆಯಿತು. ಆ ಶಿಶುಪಾಲನಿಗೆ ಎನ್ನುತ್ತಾ ಆ ರಾಜರುಗಳೆಲ್ಲ ವಿನೋದಿಸುತ್ತಿದ್ದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಈಸು ಹಿರಿದಿಲ್ಲೆಂದು ಕೆಲಬರು
ಲೇಸ ಮಾಡಿದನಸುರರಿಪುವಿವ
ನೀಸು ಬಾಹಿರನೆಂದರಿಯೆವಾವೆಂದು ಕೆಲಕೆಲರು
ಐಸಲೇ ಕೃಷ್ಣಂಗೆ ಮುನಿದವ
ರೇಸುದಿನ ಬದುಕುವರು ಲೇಸಾ
ಯ್ತಾ ಸುನೀತಂಗೆಂದು ನಗುತಿರ್ದುದು ನೃಪಸ್ತೋಮ ॥80॥
೦೮೧ ಗೋಳಿಡುತ ಬನ್ದೆರಗಿದರು ...{Loading}...
ಗೋಳಿಡುತ ಬಂದೆರಗಿದರು ಶಿಶು
ಪಾಲ ತನುಜರು ಕೃಷ್ಣನಂಘ್ರಿಗೆ
ಲಾಲಿಸಿದನನಿಬರನು ಸಂತೈಸಿದನು ಕರುಣದಲಿ
ಮೇಲುಪೋಗಿನ ವಿಧಿ ವಿಹಿತ ಕ
ರ್ಮಾಳಿಗಳ ಮಾಳ್ದವನ ಮಗಗೆ ಕೃ
ಪಾಳು ಪಟ್ಟದ ಸೇಸೆದಳಿದನು ವೀರನಾರಯಣ ॥81॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಿಶುಪಾಲನ ತನುಜರು ಗೋಳಾಡುತ್ತಾ ಬಂದು ಕೃಷ್ಣನ ಪಾದಗಳಿಗೆ ಎರಗಿದರು. ಕೃಷ್ಣ ಅವರೆಲ್ಲರನ್ನೂ ಪ್ರೀತಿಯಿಂದ ಆದರಿಸಿ,
ಕರುಣೆಯಿಂದ ಸಮಾಧಾನ ಪಡಿಸಿದ. ಮರಣಾನಂತರ ಮಾಡಬೇಕಾದ ವಿಧಿವಿಹಿತ ಕರ್ಮಗಳನ್ನೆಲ್ಲ ಮಾಡಿ, ಕೃಪಾಳುವಾದ ವೀರನಾರಾಯಣ ಅವನ ಮಗನಿಗೆ ಪಟ್ಟಕಟ್ಟಿ ಆಶೀರ್ವದಿಸಿ ಅಕ್ಷತೆಯ ಕಾಳನ್ನು ಹಾಕಿದನು.
ಪದಾರ್ಥ (ಕ.ಗ.ಪ)
ಸೇಸೆದಳಿ-ಶುಭಾಶಂಸನೆಯಿಂದ ಅಕ್ಷತೆಗಳನ್ನು ಹಾಕು.
ಮೂಲ ...{Loading}...
ಗೋಳಿಡುತ ಬಂದೆರಗಿದರು ಶಿಶು
ಪಾಲ ತನುಜರು ಕೃಷ್ಣನಂಘ್ರಿಗೆ
ಲಾಲಿಸಿದನನಿಬರನು ಸಂತೈಸಿದನು ಕರುಣದಲಿ
ಮೇಲುಪೋಗಿನ ವಿಧಿ ವಿಹಿತ ಕ
ರ್ಮಾಳಿಗಳ ಮಾಳ್ದವನ ಮಗಗೆ ಕೃ
ಪಾಳು ಪಟ್ಟದ ಸೇಸೆದಳಿದನು ವೀರನಾರಯಣ ॥81॥