೦೦೦ ಸೂಚನೆ ದೇವ ...{Loading}...
ಸೂಚನೆ: ದೇವ ದೇವನನುಪನಿಷತ್ಕಾಂ
ತಾವಳಿಯ ಕಮನೀಯನನು ರಾ
ಜೀವಪೀಠನ ಪಿತನನಭಿವರ್ಣಿಸಿದನಾ ಭೀಷ್ಮ॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂ : ದೇವದೇವನಾದ, ಉಪನಿಷತ್ಕಾಂತಾವಳಿಗೆ ಅತ್ಯಂತ ಪ್ರಿಯನೆನಿಸಿದ. ರಾಜೀವಪೀಠನಾದ ಬ್ರಹ್ಮನ ಪಿತನಾದ ಶ್ರೀಕೃಷ್ಣನನ್ನು ಭೀಷ್ಮನು ವರ್ಣಿಸಿದ.
ಪದಾರ್ಥ (ಕ.ಗ.ಪ)
ಉಪನಿಷತ್ಕಾಂತಾವಳಿ - ಉಪನಿಷತ್ತುಗಳೆಂಬ ವನಿತಾ ಸಮೂಹ
ಮೂಲ ...{Loading}...
ಸೂಚನೆ: ದೇವ ದೇವನನುಪನಿಷತ್ಕಾಂ
ತಾವಳಿಯ ಕಮನೀಯನನು ರಾ
ಜೀವಪೀಠನ ಪಿತನನಭಿವರ್ಣಿಸಿದನಾ ಭೀಷ್ಮ॥
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ವಿರಚಿತ ಪದಯುಗ ಪ್ರ
ಕ್ಷಾಳನಾಚಮನೀಯ ತತ್ಪರಿಶುದ್ಧಭಾವದಲಿ
ಆಲಲಿತ ತಲ್ಪದ ಯಶೋದಾ
ಬಾಲಕಂಗಭಿನಮಿಸಿ ನಿಮಿಷ ನಿ
ಮೀಲಿತಾಕ್ಷನು ಕಂದೆರೆದು ಮುನಿಜನಕೆ ಕೈಮುಗಿದು ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮನು ತನ್ನ ಕಾಲುಗಳನ್ನು ತೊಳೆದುಕೊಂಡು ಆಚಮನ ಮಾಡಿ, ಅದರಿಂದುಂಟಾದ ಪರಿಶುದ್ಧ ಭಾವನೆಯಿಂದ, ಆ ಮೃದುವಾದ ಹಾಸಿನ ಮೇಲೆ ಕುಳಿತಿದ್ದ ಯಶೋದಾಬಾಲಕನಾದ ಶ್ರೀಕೃಷ್ಣನಿಗೆ ಅಭಿವಂದನೆ ಮಾಡಿ, ನಿಮಿಷ ಕಾಲ ಕಣ್ಣುಗಳನ್ನು
ಮುಚ್ಚಿ ಧ್ಯಾನಿಸಿ, ಕಣ್ಣು ತೆರೆದು ಮುನಿಜನಕ್ಕೆಲ್ಲ ಕೈಮುಗಿದು..
ಪದಾರ್ಥ (ಕ.ಗ.ಪ)
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ವಿರಚಿತ ಪದಯುಗ ಪ್ರ
ಕ್ಷಾಳನಾಚಮನೀಯ ತತ್ಪರಿಶುದ್ಧಭಾವದಲಿ
ಆಲಲಿತ ತಲ್ಪದ ಯಶೋದಾ
ಬಾಲಕಂಗಭಿನಮಿಸಿ ನಿಮಿಷ ನಿ
ಮೀಲಿತಾಕ್ಷನು ಕಂದೆರೆದು ಮುನಿಜನಕೆ ಕೈಮುಗಿದು ॥1॥
೦೦೨ ವರ ಋಷಿಗಳಾಜ್ಞೆಯಲಿ ...{Loading}...
ವರ ಋಷಿಗಳಾಜ್ಞೆಯಲಿ ವಿಶ್ವಂ
ಭರನ ವಿಷಯೀಕರಿಸಿ ರಾಜಾ
ಧ್ವರಸಮರ್ಥನ ಭವವಿನಾಶನ ಸುಪ್ರಯೋಜಕನ
ಅರಿವ ತೆರದಿಂದೆನ್ನ ಮತಿ ಗೋ
ಚರಿಸಿದುದ ಹೇಳುವೆನು ಕೃಷ್ಣನ
ಪರಮ ಲೀಲಾ ಲಲಿತ ಚರಿತವನೆಂದನಾ ಭೀಷ್ಮ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಶ್ರೇಷ್ಠ ಋಷಿಗಳ ಅಪ್ಪಣೆ ಪಡೆದು, ವಿಶ್ವವನ್ನೇ ಪೋಷಿಸುತ್ತಿರುವ, ರಾಜಸೂಯ ಯಾಗದ ಸಮರ್ಥಕನಾದ, ಜನ್ಮಾಂತರಗಳನ್ನು ನಾಶಪಡಿಸುವನಾದ , ನಮಗೆಲ್ಲ ಪ್ರಯೋಜಕನಾದ ಶ್ರೀಕೃಷ್ಣನ ಪರಮಲೀಲೆಯ ಮನೋಹರವಾದ ಚರಿತ್ರೆಯನ್ನು ಕುರಿತು ನನಗೆ ತಿಳಿದ ಮಟ್ಟಿಗೆ ನನ್ನ ಬುದ್ಧಿಗೆ ಹೊಳೆದಂತೆ ಹೇಳುವೆ ಎಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ವರ ಋಷಿಗಳಾಜ್ಞೆಯಲಿ ವಿಶ್ವಂ
ಭರನ ವಿಷಯೀಕರಿಸಿ ರಾಜಾ
ಧ್ವರಸಮರ್ಥನ ಭವವಿನಾಶನ ಸುಪ್ರಯೋಜಕನ
ಅರಿವ ತೆರದಿಂದೆನ್ನ ಮತಿ ಗೋ
ಚರಿಸಿದುದ ಹೇಳುವೆನು ಕೃಷ್ಣನ
ಪರಮ ಲೀಲಾ ಲಲಿತ ಚರಿತವನೆಂದನಾ ಭೀಷ್ಮ ॥2॥
೦೦೩ ಘನ ರಜೋಗುಣದಲ್ಲಿ ...{Loading}...
ಘನ ರಜೋಗುಣದಲ್ಲಿ ಚತುರಾ
ನನ ತಮೋಗುಣದಲ್ಲಿ ಶಂಕರ
ನೆನಿಸಿ ಸತ್ವಗುಣಾನುಗತಿಯಲಿ ವಿಷ್ಣುವೆಂದೆನಿಸಿ
ಘನಜಗನ್ಮಯನಾಗಿ ಸರ್ವಾ
ತ್ಮನು ಮಹೇಶ್ವರನೆನಿಪನೀತನ
ನೆನಹನೀತನ ನಿಜವನರಿವ ಮಹಾತ್ಮರಾರೆಂದ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಘನ ರಜೋಗುಣದಲ್ಲಿ ಚತುರ್ಮುಖನಾದ ಬ್ರಹ್ಮನೆನಿಸಿ ತಮೋಗುಣದಲ್ಲಿ ಶಂಕರನೆನಿಸಿ ಸತ್ವಗುಣದಲ್ಲಿ ವಿಷ್ಣುವೆನಿಸಿ, ವಿಶ್ವವನ್ನೆಲ್ಲ ವ್ಯಾಪಿಸಿದ ಮಹಿಮನೆನಿಸಿ ಸರ್ವಾತ್ಮಕನಾದ ಮಹೇಶ್ವರನೆನಿಸಿದವನು ಈ ಶ್ರೀಕೃಷ್ಣ. ಇವನ ನಿಜಸ್ವರೂಪವನ್ನು ಅರಿತವರಾರು ?
ಪದಾರ್ಥ (ಕ.ಗ.ಪ)
ಮೂಲ ...{Loading}...
ಘನ ರಜೋಗುಣದಲ್ಲಿ ಚತುರಾ
ನನ ತಮೋಗುಣದಲ್ಲಿ ಶಂಕರ
ನೆನಿಸಿ ಸತ್ವಗುಣಾನುಗತಿಯಲಿ ವಿಷ್ಣುವೆಂದೆನಿಸಿ
ಘನಜಗನ್ಮಯನಾಗಿ ಸರ್ವಾ
ತ್ಮನು ಮಹೇಶ್ವರನೆನಿಪನೀತನ
ನೆನಹನೀತನ ನಿಜವನರಿವ ಮಹಾತ್ಮರಾರೆಂದ ॥3॥
೦೦೪ ಈತನವ್ಯಕ್ತನು ವಿಚಾರಿಸ ...{Loading}...
ಈತನವ್ಯಕ್ತನು ವಿಚಾರಿಸ
ಲೀತನಮಲವ್ಯಕ್ತಲಿಂಗನ
ಜಾತನವ್ಯಯನಪ್ರಮೇಯನಗಮ್ಯನದ್ವಿತಯ
ಈತ ಚೈತನ್ಯಾತ್ಮ ನಿರ್ಗುಣ
ನೀತ ಗುಣಸಂಯೋಗಿ ಸರ್ವದ
ನೀತ ಚಿನ್ಮಯನೀತನ ಹರಿಯೆಂದನಾ ಭೀಷ್ಮ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈತ ಅವ್ಯಕ್ತ, ವಿಚಾರಿಸಿ ನೋಡಿದರೆ ಈತ ಸುವ್ಯಕ್ತನೂ ಹೌದು. ಈತ ಲಿಂಗಿ, ಅಜಾತ, ಅವ್ಯಯ, ಅಪ್ರಮೇಯ, ಅಗಮ್ಯ, ಅದ್ವಿತೀಯ, ಚೈತನ್ಯಾತ್ಮ , ನಿರ್ಗುಣ, ಗುಣಯುತನೂ ಹೌದು, ಸರ್ವತ್ರ ಗಮನವುಳ್ಳವನು, ಇವನೇ ಶ್ರೀಕೃಷ್ಣ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಈತನವ್ಯಕ್ತನು ವಿಚಾರಿಸ
ಲೀತನಮಲವ್ಯಕ್ತಲಿಂಗನ
ಜಾತನವ್ಯಯನಪ್ರಮೇಯನಗಮ್ಯನದ್ವಿತಯ
ಈತ ಚೈತನ್ಯಾತ್ಮ ನಿರ್ಗುಣ
ನೀತ ಗುಣಸಂಯೋಗಿ ಸರ್ವದ
ನೀತ ಚಿನ್ಮಯನೀತನ ಹರಿಯೆಂದನಾ ಭೀಷ್ಮ ॥4॥
೦೦೫ ಜಲನಿಧಿಯ ಬುದ್ಬುದ ...{Loading}...
ಜಲನಿಧಿಯ ಬುದ್ಬುದ ತರಂಗಾ
ವಳಿಗಳಾ ಜಲಧಿಯಲಿ ತೋರುವ
ವಳಿವವಿ ವೈಕುಂಠ ವಿಮಲಜ್ಞಾನ ಜಲಧಿಯಲಿ
ಹೊಳೆವುದಳಿವುದು ವಿಶ್ವವೀತನ
ಸುಳಿವು ತೋರುವದಿಲ್ಲ ಮಾಯಾ
ಲಲನೆಯಿಕ್ಕಿದ ಮದ್ದು ಜೀವರಿಗೆಂದನಾ ಭೀಷ್ಮ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾಗರದಲ್ಲಿ ನೀರ್ಗುಳ್ಳೆಗಳು ಅಲೆಗಳು ಅಸಂಖ್ಯಾತವಾಗಿ ಏಳುತ್ತಿರುತ್ತವೆ ಅಳಿಯುತ್ತಿರುತ್ತವೆ. ಈ ವೈಕುಂಠನೆಂಬ ವಿಮಲಜ್ಞಾನ ಜಲಧಿಯಲ್ಲಿ ಈ ವಿಶ್ವ ಕಾಣಿಸಿಕೊಳ್ಳುತ್ತದೆ ಮತ್ತು ನಾಶವಾಗುತ್ತದೆ. ಆದರೆ ಈತ ಅದರಲ್ಲಿ ಸುಳಿಯುವುದು ಮಾತ್ರ ಗೋಚರಿಸುವುದಿಲ್ಲ. ಇದು ನಮ್ಮಂತಹ ಜೀವರಿಗೆ ಮಾಯಾಲಲನೆ ಇಟ್ಟ ಮದ್ದು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಜಲನಿಧಿಯ ಬುದ್ಬುದ ತರಂಗಾ
ವಳಿಗಳಾ ಜಲಧಿಯಲಿ ತೋರುವ
ವಳಿವವಿ ವೈಕುಂಠ ವಿಮಲಜ್ಞಾನ ಜಲಧಿಯಲಿ
ಹೊಳೆವುದಳಿವುದು ವಿಶ್ವವೀತನ
ಸುಳಿವು ತೋರುವದಿಲ್ಲ ಮಾಯಾ
ಲಲನೆಯಿಕ್ಕಿದ ಮದ್ದು ಜೀವರಿಗೆಂದನಾ ಭೀಷ್ಮ ॥5॥
೦೦೬ ಭೂತ ಜನನಸ್ಥಿತಿಗೆ ...{Loading}...
ಭೂತ ಜನನಸ್ಥಿತಿಗೆ ಕಾರಣ
ನೀತನೀತಂಗಿಲ್ಲ ಕಾರಣ
ನೀತಜಾಗ್ರತ್ಸ್ವಪ್ನಸುಪ್ತಿಗಳೆಂಬವಸ್ಥೆಗಳ
ಆ ತುರಿಯ ನಾತುರಿಯ ತುರಿಯಾ
ತೀತ ಲಕ್ಷಣ ನಿತ್ಯನಿರ್ಮಳ
ನೀತನಮಳವ್ಯಕ್ತಿ ಚಿನ್ಮಯನೆಂದನಾ ಭೀಷ್ಮ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈತನೇ ಜೀವಿಗಳ ಜನನಸ್ಥಿತಿಗೆ ಕಾರಣ. ಆದರೆ ಈತನ ಅಸ್ತಿತ್ವಕ್ಕೆ ಕಾರಣವಿಲ್ಲ. ಈತ ಜಾಗೃತ್ ಸ್ವಪ್ನ ಸುಷುಪ್ತಿ ತುರೀಯ
ಈ ಎಲ್ಲ ಸ್ಥಿತಿಗಳಲ್ಲಿ ಇರುವವನು, ತುರಿಯಾತೀತನೂ ಹೌದು. ನಿತ್ಯನಿರ್ಮಳ, ಅಮಲವ್ಯಕ್ತಿ, ಚಿನ್ಮಯ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಭೂತ ಜನನಸ್ಥಿತಿಗೆ ಕಾರಣ
ನೀತನೀತಂಗಿಲ್ಲ ಕಾರಣ
ನೀತಜಾಗ್ರತ್ಸ್ವಪ್ನಸುಪ್ತಿಗಳೆಂಬವಸ್ಥೆಗಳ
ಆ ತುರಿಯ ನಾತುರಿಯ ತುರಿಯಾ
ತೀತ ಲಕ್ಷಣ ನಿತ್ಯನಿರ್ಮಳ
ನೀತನಮಳವ್ಯಕ್ತಿ ಚಿನ್ಮಯನೆಂದನಾ ಭೀಷ್ಮ ॥6॥
೦೦೭ ಭ್ರಾಮಕದೊಳೀ ವಿಷಯಸೌಖ್ಯದ ...{Loading}...
ಭ್ರಾಮಕದೊಳೀ ವಿಷಯಸೌಖ್ಯದ
ರಾಮಣೀಯಕದೊಳಗೆ ಮುಳುಗಿ ನಿ
ರಾಮಯನು ಪರತತ್ವಮಯನಚ್ಯುತನು ತಾನಾದ
ಈ ಮುಕುಂದನ ಮರೆದು ಕರ್ಮ ವಿ
ರಾಮದಲಿ ಕುದಿದವರು ಮಾಯಾ
ಕಾಮಿನಿಯ ಕೈ ಮಸಕದಲಿ ಮರುಳಾಗದಿರರೆಂದ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭ್ರಮೆಯಿಂದ ಈ ವಿಷಯಸುಖದ ರಮಣೀಯತೆಯಲ್ಲಿ ಮುಳುಗಿ ಜನರು ನಿರಾಮಯನೂ ಪರತತ್ವಮಯನೂ ಅಚ್ಯುತನೂ ಆದ ಈ ಮುಕುಂದನನ್ನು ಮರೆಯುತ್ತಾರೆ. ಮಾಯಾ ಕಾಮಿನಿಯ ಕೈಮಾಟಕ್ಕೆ ಸಿಕ್ಕ ಅವರು ಮರುಳಾಗದಿರರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಭ್ರಾಮಕದೊಳೀ ವಿಷಯಸೌಖ್ಯದ
ರಾಮಣೀಯಕದೊಳಗೆ ಮುಳುಗಿ ನಿ
ರಾಮಯನು ಪರತತ್ವಮಯನಚ್ಯುತನು ತಾನಾದ
ಈ ಮುಕುಂದನ ಮರೆದು ಕರ್ಮ ವಿ
ರಾಮದಲಿ ಕುದಿದವರು ಮಾಯಾ
ಕಾಮಿನಿಯ ಕೈ ಮಸಕದಲಿ ಮರುಳಾಗದಿರರೆಂದ ॥7॥
೦೦೮ ಇರದೆ ತಿಲದಲಿ ...{Loading}...
ಇರದೆ ತಿಲದಲಿ ತೈಲ ಕಾಷ್ಠದೊ
ಳೆರವ ತಹರೇ ಹುತವಹನನೇ
ನರಿಯಬಾರದೆ ವಿಷ್ಣು ಚೈತನ್ಯಾತ್ಮನೆಂಬುದನು
ಹೊರಗೊಳಗೆ ಸಂಸ್ಥೂಲ ಸೂಕ್ಷೋ
ತ್ಕರದೊಳಗೆ ಹರಿಯುಳಿಯೆ ವಿಶ್ವವ
ಹೊರೆವ ಹೊಂದಿಪರುಂಟೆ ಹೊರಬಿಗರೆಂದನಾ ಭೀಷ್ಮ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಳ್ಳಿನಲ್ಲಿ ಎಣ್ಣೆಯಿಲ್ಲವೆ ? ಕಟ್ಟಿಗೆಯಲ್ಲಿ ಬೆಂಕಿಯನ್ನು ಹೊರಗಿನಿಂದ ಯಾರಾದರೂ ಬೇಡಿತರುತ್ತಾರೆಯೇ ? ಇದರಿಂದ ವಿಷ್ಣುವೇ
ಚೈತನ್ಯಾತ್ಮಕನಾಗಿರುವವನು ಎಂದು ತಿಳಿಯಬಾರದೆ ? ಸ್ಥೂಲ ಸೂಕ್ಷ್ಮವಾದ ಸಮಸ್ತ ವಸ್ತುಗಳ ಒಳಗೆ ಮತ್ತು ಹೊರಗೆ ಹರಿಯನ್ನು ಬಿಟ್ಟರೆ ವಿಶ್ವವನ್ನು ಕಾಪಾಡುವ ಅಥವಾ ನಾಶಮಾಡುವ ಹೊರಗಿನವರು ಯಾರಾದರೂ ಇದ್ದಾರೆಯೇ ?
ಪದಾರ್ಥ (ಕ.ಗ.ಪ)
ಮೂಲ ...{Loading}...
ಇರದೆ ತಿಲದಲಿ ತೈಲ ಕಾಷ್ಠದೊ
ಳೆರವ ತಹರೇ ಹುತವಹನನೇ
ನರಿಯಬಾರದೆ ವಿಷ್ಣು ಚೈತನ್ಯಾತ್ಮನೆಂಬುದನು
ಹೊರಗೊಳಗೆ ಸಂಸ್ಥೂಲ ಸೂಕ್ಷೋ
ತ್ಕರದೊಳಗೆ ಹರಿಯುಳಿಯೆ ವಿಶ್ವವ
ಹೊರೆವ ಹೊಂದಿಪರುಂಟೆ ಹೊರಬಿಗರೆಂದನಾ ಭೀಷ್ಮ ॥8॥
೦೦೯ ಹೂಹೆಗಳು ಹೊಯ್ದಾಡವೇ ...{Loading}...
ಹೂಹೆಗಳು ಹೊಯ್ದಾಡವೇ ನಿ
ರ್ವಾಹ ಸೂತ್ರದ ಕುಣಿಕೆಗಾರನ
ಗಾಹಿನಲಿ ತಜ್ಜಗದ ಜೀವದ ಸುಕೃತ ದುಷ್ಕ್ರತವ
ಓಹರಿಕೆಯಲಿ ತಂದು ಭವದಲಿ
ಸೋಹಿಸುಳಿಸುವನೀ ಚರಾಚರ
ಜೋಹವಿದು ನಿಜಲೀಲೆಯೀ ಹರಿಗೆಂದನಾ ಭೀಷ್ಮ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೈಯಲ್ಲಿ ಸೂತ್ರದ ಕುಣಿಕೆಗಳನ್ನು ಹಿಡಿದು ಆಟಗಾರನು ಆಡಿಸಿದಂತೆ ಗೊಂಬೆಗಳು ಹೊಯ್ದಾಡುವುದಿಲ್ಲವೇ ? ಜಗತ್ತಿನ ಜೀವಿಗಳ
ಪುಣ್ಯಪಾಪಗಳನ್ನು ಓಹರಿಕೆಯಲಿ ಹಿಡಿದು ಈ ಲೋಕದಲ್ಲಿ ಜನಿಸುವಂತೆ ಮಾಡುವನು. ಈ ಚರಾಚರ ಜಗತ್ತಿನಲ್ಲಿ ನಡೆವ ಕಪಟವೇಷ
ಹರಿಗೆ ನಿಜಲೀಲೆ.
ಪದಾರ್ಥ (ಕ.ಗ.ಪ)
ಹೂಹೆ-ಗೊಂಬೆ, ಓಹರಿಕೆ-ಕನ್ನಡ-ಕನ್ನಡ ನಿಘಂಟಿನಲ್ಲಿಯೂ ಪ್ರಶ್ನಾರ್ಥಕ ಚಿಹ್ನೆ ಇದೆ, ಪ್ರಯೋಗಕ್ಕೆ ಇದೇ ಪದ್ಯವನ್ನು ಉಲ್ಲೇಖಿಸಿದ್ದಾರೆ, ಹೋಹರಿಕೆ ಎಂಬ ಪಾಠಾಂತರವನ್ನು ಸೂಚಿಸಿದ್ದಾರೆ. ಹೋಹರಿಕೆ-? ನಿಘಂಟಿನಲ್ಲಿ ಪದವಿಲ್ಲ.
ಹೋಹ + ಅರಿಕೆ - ಹೋಗುವ ದಾರಿಯಲ್ಲಿ ಬುದ್ಧಿಪೂರ್ವಕವಾಗಿ ?
ಸೋಹಿಸಿ - ?
ಮೂಲ ...{Loading}...
ಹೂಹೆಗಳು ಹೊಯ್ದಾಡವೇ ನಿ
ರ್ವಾಹ ಸೂತ್ರದ ಕುಣಿಕೆಗಾರನ
ಗಾಹಿನಲಿ ತಜ್ಜಗದ ಜೀವದ ಸುಕೃತ ದುಷ್ಕ್ರತವ
ಓಹರಿಕೆಯಲಿ ತಂದು ಭವದಲಿ
ಸೋಹಿಸುಳಿಸುವನೀ ಚರಾಚರ
ಜೋಹವಿದು ನಿಜಲೀಲೆಯೀ ಹರಿಗೆಂದನಾ ಭೀಷ್ಮ ॥9॥
೦೧೦ ಈತನಚ್ಯುತನಲ್ಲೆನಿಸಿ ವಿಪ ...{Loading}...
ಈತನಚ್ಯುತನಲ್ಲೆನಿಸಿ ವಿಪ
ರೀತ ಮಿಥ್ಯಾಜ್ಞಾನ ತೋರಿದ
ಡೀತನಲಿ ತಪ್ಪೇನು ನಿಜ ಪರಮಾತ್ಮನೆನಿಸಿದರೆ
ಭೀತನೊಬ್ಬನು ಕನಸಿನಲಿ ತ
ನ್ನಾ ತಲೆಯ ತಾನರಿದು ಪಿಡಿದುದ
ನೇತರಿಂದಲಿ ಕಂಡನೈ ಶಿಶುಪಾಲ ಕೇಳ್ ಎಂದ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರಮಾತ್ಮನಾದ ಈತನನ್ನು ತದ್ವಿರುದ್ಧವಾದ ಮಿಥ್ಯಾಜ್ಞಾನವು ಅಚ್ಯುತನಲ್ಲ ಎಂದು ತೋರಿಸಿದರೆ ನಿಜದಲ್ಲಿ ಈತನದೇನು ತಪ್ಪು? ಭಯಗೊಂಡವನೊಬ್ಬನು ಕನಸಿನಲ್ಲಿ ತನ್ನ ತಲೆಯನ್ನು ತಾನೇ ಕಡಿದು ಕೈಯಲ್ಲಿ ಹಿಡಿದುಕೊಂಡನೆನ್ನಿ, ಆ ತಲೆಯನ್ನು ಅವನು ಹೇಗೆ ಕಾಣುತ್ತಾನೆ, ಶಿಶುಪಾಲ ?
ಪದಾರ್ಥ (ಕ.ಗ.ಪ)
ಮೂಲ ...{Loading}...
ಈತನಚ್ಯುತನಲ್ಲೆನಿಸಿ ವಿಪ
ರೀತ ಮಿಥ್ಯಾಜ್ಞಾನ ತೋರಿದ
ಡೀತನಲಿ ತಪ್ಪೇನು ನಿಜ ಪರಮಾತ್ಮನೆನಿಸಿದರೆ
ಭೀತನೊಬ್ಬನು ಕನಸಿನಲಿ ತ
ನ್ನಾ ತಲೆಯ ತಾನರಿದು ಪಿಡಿದುದ
ನೇತರಿಂದಲಿ ಕಂಡನೈ ಶಿಶುಪಾಲ ಕೇಳೆಂದ ॥10॥
೦೧೧ ಭ್ರಮೆಯ ಭುಜಗನೆ ...{Loading}...
ಭ್ರಮೆಯ ಭುಜಗನೆ ರಜ್ಜುವೊ ಜಂ
ಗಮವೊ ಕಲ್ಪಿತ ಪುರುಷನಾತ್ಮನೊ
ವಿಮಲ ಸಂವಿದ್ರೂಪನಾತ್ಮನೊ ಜೀವ ಪರಮನಲಿ
ಕಮಲನಾಭನೆ ನಿಜವೊ ವಿಶ್ವ
ಕ್ರಮವೆ ನಿಜವೊ ಚೈದ್ಯ ಭೂಪತಿ
ಕುಮತಿ ಕಪಿಗೇಕಮಲ ಮಾಣಿಕವೆಂದನಾ ಭೀಷ್ಮ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಗ್ಗವನ್ನು ನೋಡಿ ಹಾವೆಂದು ಭ್ರಮಿಸಿದಾಗ ಆ ಭ್ರಮೆಯ ಹಾವು ಹಗ್ಗವೋ ಚಲಿಸುವ ಹಾವೋ ? ಜೀವಪರಮಾತ್ಮರಲ್ಲಿ ಕಲ್ಪಿತ
ಪುರುಷನ ಆತ್ಮವೋ ಶ್ರೇಷ್ಠ ಜ್ಞಾನ ಸ್ವರೂಪನಾತ್ಮವೋ ಕಮಲನಾಭನೆ ನಿಜವೋ ವಿಶ್ವಕ್ರಮವೇ ನಿಜವೋ ? ಚೈದ್ಯರಾಜನೇ ಕುಮತಿಯಾದ ಕಪಿಗೆ ಏಕಯ್ಯ ನಿರ್ಮಲವಾದ ಮಾಣಿಕ್ಯ ?
ಪದಾರ್ಥ (ಕ.ಗ.ಪ)
ಮೂಲ ...{Loading}...
ಭ್ರಮೆಯ ಭುಜಗನೆ ರಜ್ಜುವೊ ಜಂ
ಗಮವೊ ಕಲ್ಪಿತ ಪುರುಷನಾತ್ಮನೊ
ವಿಮಲ ಸಂವಿದ್ರೂಪನಾತ್ಮನೊ ಜೀವ ಪರಮನಲಿ
ಕಮಲನಾಭನೆ ನಿಜವೊ ವಿಶ್ವ
ಕ್ರಮವೆ ನಿಜವೊ ಚೈದ್ಯ ಭೂಪತಿ
ಕುಮತಿ ಕಪಿಗೇಕಮಲ ಮಾಣಿಕವೆಂದನಾ ಭೀಷ್ಮ ॥11॥
೦೧೨ ತೋರುವೀ ಮಹದಾದಿ ...{Loading}...
ತೋರುವೀ ಮಹದಾದಿ ಭೂತದೊ
ಳೋರು ಗುಡಿಸದೆ ನಿಂದ ಮುವ್ವ
ತ್ತಾರು ತತ್ವದೊಳೀತನೇ ಮಣಿಗಣದ ಗುಣದಂತೆ
ತೋರುವೀ ತೋರಿಕೆಯ ತುಷವನು
ತೂರಿದರೆ ಮೇಣ್ ವಿಶ್ವಮುಖದಲಿ
ತೋರಿ ತೋರದೆ ಮೆರೆವನೀ ಹರಿಯೆಂದನಾ ಭೀಷ್ಮ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಮಗೆ ಗೋಚರವಾಗುವ ಮೂಲಭೂತ ತತ್ವಗಳಲ್ಲಿ ಕುಸಿಯದೆ ನಿಂತ ಮೂವತ್ತಾರು ತತ್ವಗಳಲ್ಲಿ ಈತನೇ ಮಣಿಮಾಲೆಯ
ಮಣಿಗಳೊಳಗೆ, ಹೌದು, ಎಲ್ಲ ಮಣಿಗಳನ್ನು ಹಿಡಿದಿಟ್ಟಿರುವ ದಾರದಂತೆ ಇದ್ದಾನೆ ಇವನು. ಮೇಲುತೋರಿಕೆಯ ಹೊಟ್ಟನ್ನು ತೂರಿಬಿಟ್ಟರೆ ವಿಶ್ವದೆದುರು ಕಂಡೂಕಾಣದಂತೆ ಶೋಭಿಸುವವನು ಈ ಹರಿ.
ಪದಾರ್ಥ (ಕ.ಗ.ಪ)
ಮುವ್ವತ್ತಾರು ತತ್ವ-? ಭೂತ ಪಂಚಕ, ಜ್ಞ್ನಾನೇಂದ್ರಿಯ ಪಂಚಕ, ಕರ್ಮೇಂದ್ರಿಯ ಪಂಚಕ, ಪ್ರಾಣಾದಿ ಪಂಚಕ, ಅಂತಃಕರಣ ಚತುಷ್ಟಯ, ಪಂಚ ತನ್ಮಾತ್ರ ವಿಷಯ ಪಂಚಕ, ಪ್ರಕೃತಿ, ಅವ್ಯಕ್ತ.
ತುಷ -ಹೊಟ್ಟು
ಮೂಲ ...{Loading}...
ತೋರುವೀ ಮಹದಾದಿ ಭೂತದೊ
ಳೋರು ಗುಡಿಸದೆ ನಿಂದ ಮುವ್ವ
ತ್ತಾರು ತತ್ವದೊಳೀತನೇ ಮಣಿಗಣದ ಗುಣದಂತೆ
ತೋರುವೀ ತೋರಿಕೆಯ ತುಷವನು
ತೂರಿದರೆ ಮೇಣ್ ವಿಶ್ವಮುಖದಲಿ
ತೋರಿ ತೋರದೆ ಮೆರೆವನೀ ಹರಿಯೆಂದನಾ ಭೀಷ್ಮ ॥12॥
೦೧೩ ಸ್ವೇದಜಾಣ್ಡೋದ್ಭಿಜ ಜರಾಯುಜ ...{Loading}...
ಸ್ವೇದಜಾಂಡೋದ್ಭಿಜ ಜರಾಯುಜ
ಭೇದವಾದ ಚತುರ್ವಿಧದ ಭೂ
ತೋದರನ ತದ್ಭೂತಮಯ ತದ್ಭೂತ ಭಾವನನ
ವಾದಗೊಳ್ಳದ ಬಹಳ ವಸ್ತುವ
ನೀ ದುರಾತ್ಮಕನೆತ್ತ ಬಲ್ಲನು
ಬೀದಿಯಲಿ ಬಿದ್ದವನು ಬೊಮ್ಮವಿದೆಂದನಾ ಭೀಷ್ಮ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸ್ವೇದಜ ಅಂಡಜ ಉದ್ಭಿಜ್ಜ ಮತ್ತು ಜರಾಯುಜ ಈ ನಾಲ್ಕು ಬಗೆಯ ಜೀವ ರಾಶಿಯನ್ನು ತನ್ನ ಉದರದಲ್ಲಿ ಇಟ್ಟುಕೊಂಡಿರುವ
ತದ್ಭೂತಮಯನೂ ಭೂತಭಾವನನೂ ಆಗಿದ್ದು ವಾದಕ್ಕೆ ಸಿಲುಕದಂತಹ ಈ ಮಹದ್ವಸ್ತುವನ್ನು ಈ ದುರಾತ್ಮನು, ಬೀದಿಯಲ್ಲಿ ಬಿದ್ದಿರುವ ಈ ದುರಾತ್ಮನು ಹೇಗೆ ಬಲ್ಲನು? ಇದು (ಎಂದರೆ ಕೃಷ್ಣನು) ಸಾಕ್ಷಾತ್ ಪರಬ್ರಹ್ಮನು ಎಂದು ಭೀಷ್ಮನು ಹೇಳಿದನು.
ಪದಾರ್ಥ (ಕ.ಗ.ಪ)
ಸ್ವೇದಜ- ಬೆವರಿನಿಂದ ಹುಟ್ಟಿದ ಜೀವರಾಶಿ (ಕ್ರಿಮಿಗಳು), ಅಂಡಜ-ಮೊಟ್ಟೆಯಿಂದ ಹುಟ್ಟಿರುವ ಜೀವರಾಶಿ,
ಉದ್ಭಿಜ-ಧರೆಯೊಳಗಿರುವ ಭೀಜದಿಂದ ಭೂಮಿಯನ್ನು ಭೇದಿಸಿಕೊಂಡು ಬರುವ ಸಸ್ಯರಾಶಿ,
ಜರಾಯುಜ- ಗರ್ಭಕೋಶದಿಂದ ಜನಿಸುವ ಜೀವರಾಶಿ
ಮೂಲ ...{Loading}...
ಸ್ವೇದಜಾಂಡೋದ್ಭಿಜ ಜರಾಯುಜ
ಭೇದವಾದ ಚತುರ್ವಿಧದ ಭೂ
ತೋದರನ ತದ್ಭೂತಮಯ ತದ್ಭೂತ ಭಾವನನ
ವಾದಗೊಳ್ಳದ ಬಹಳ ವಸ್ತುವ
ನೀ ದುರಾತ್ಮಕನೆತ್ತ ಬಲ್ಲನು
ಬೀದಿಯಲಿ ಬಿದ್ದವನು ಬೊಮ್ಮವಿದೆಂದನಾ ಭೀಷ್ಮ ॥13॥
೦೧೪ ನೆಳಲು ಜಲದಲಿ ...{Loading}...
ನೆಳಲು ಜಲದಲಿ ನಡುಗಲಿನ ಮಂ
ಡಲಕೆ ಕಂಪವೆ ಧೂಮಶಿಖಿ ಕು
ಪ್ಪಳಿಸಿದರೆ ಕಂದುವದೆ ನಭ ಕೆಂಧೂಳಿಯೊಡೆಮುರಿದು
ಸುಳಿದರನಿಲನ ತೊಳೆವರೇ ನರ
ರೊಳಗೆ ನರ ರೂಪದಲಿ ಜನಿಸಿದ
ರೊಳಗು ಡಿಳ್ಳವೆ ಪರಮ ಸುಖನಿಧಿಗೆಂದನಾ ಭೀಷ್ಮ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀರಿನಲ್ಲಿ ಸೂರ್ಯನ ಪ್ರತಿಬಿಂಬ ನಡುಗಿದ ಮಾತ್ರಕ್ಕೇ ಸೂರ್ಯಮಂಡಲಕ್ಕೆ ನಡುಕವುಂಟಾದೀತೇ ? ಹೊಗೆಯ ಬೆಂಕಿ ಆಕಾಶಕ್ಕೆ ನೆಗೆದ ಮಾತ್ರಕ್ಕೆ ಆಕಾಶ ಕಳೆಗುಂದುತ್ತದೆಯೇ ? ಕೆಂಧೂಳು ತನ್ನೊಳಗೆಲ್ಲ ಸುತ್ತಿ ಸುತ್ತಿ ಸುಳಿದ ಮಾತ್ರಕ್ಕೇ ಮಲಿನವಾಯಿತೆಂದು ಯಾರಾದರೂ ಗಾಳಿಯನ್ನು ತೊಳೆಯುತ್ತಾರೆಯೇ ? ಮಾನವರ ನಡುವೆ ಮಾನವರೂಪಿನಿಂದಲೇ ಹುಟ್ಟಿದ ಮಾತ್ರಕ್ಕೇ ಈ ಪರಮಸುಖನಿಧಿಗೆ ಅಂತಸ್ಸತ್ವ ಶೂನ್ಯವಾಯಿತೇ ?
ಪದಾರ್ಥ (ಕ.ಗ.ಪ)
ಡಿಳ್ಳ-ಶೂನ್ಯ
ಮೂಲ ...{Loading}...
ನೆಳಲು ಜಲದಲಿ ನಡುಗಲಿನ ಮಂ
ಡಲಕೆ ಕಂಪವೆ ಧೂಮಶಿಖಿ ಕು
ಪ್ಪಳಿಸಿದರೆ ಕಂದುವದೆ ನಭ ಕೆಂಧೂಳಿಯೊಡೆಮುರಿದು
ಸುಳಿದರನಿಲನ ತೊಳೆವರೇ ನರ
ರೊಳಗೆ ನರ ರೂಪದಲಿ ಜನಿಸಿದ
ರೊಳಗು ಡಿಳ್ಳವೆ ಪರಮ ಸುಖನಿಧಿಗೆಂದನಾ ಭೀಷ್ಮ ॥14॥
೦೧೫ ಗುಣಮಯದ ಗರುವಾಯಿಯಲಿ ...{Loading}...
ಗುಣಮಯದ ಗರುವಾಯಿಯಲಿ ಝೇ
ವಣಿಗೆಗೊಂಬನು ಭೂತದಿಂದ್ರಿಯ
ಗಣದೊಡನೆ ನಿಜ ಪೌರುಷದಲೊದಗಿದ ಪವಾಡಿಗಳ
ಗುಣವ ಝಾಡಿಸಿದರೆ ಸಮಷ್ಟಿಯ
ಹಣಿತದಲಿ ಮುರಿದಿದಿರನಗಲಕೆ
ಕುಣಿವ ಚೌಪಟ ಬೊಮ್ಮಗಜವಿದನರಿವರಾರೆಂದ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೌತಿಕಶಕ್ತಿಯೊಡನೆ, ತನ್ನನ್ನು ವಿರೋಧಿಸುವವರನ್ನು ತನ್ನ ಸಗುಣಾತ್ಮಕವಾದ ರೂಪದಿಂದಲೇ ನುಂಗಿ ನಾಶ ಮಾಡುತ್ತಾನೆ. ಅವಹೇಳನ ಮಾಡಿದರೆ ಅವರೆಲ್ಲರನ್ನೂ ಸೋಲಿಸಿ ಜಗದಗಲಕ್ಕೂ ಕುಣಿಯುವಂತಹ ಚೌಪಟ ಬೊಮ್ಮಗಜ ಇವನು. ಇದನ್ನು ಅರ್ಥಮಾಡಿಕೊಳ್ಳುವರಾರು ?
ಪದಾರ್ಥ (ಕ.ಗ.ಪ)
ಝೇವಣಿಗೆಗೊಳ್É- ನುಂಗಿ ನಾಶ ಮಾಡು, (ಗ್ರಾಸ, ಊಟ)
ಪವಾಡಿ -?
ಮೂಲ ...{Loading}...
ಗುಣಮಯದ ಗರುವಾಯಿಯಲಿ ಝೇ
ವಣಿಗೆಗೊಂಬನು ಭೂತದಿಂದ್ರಿಯ
ಗಣದೊಡನೆ ನಿಜ ಪೌರುಷದಲೊದಗಿದ ಪವಾಡಿಗಳ
ಗುಣವ ಝಾಡಿಸಿದರೆ ಸಮಷ್ಟಿಯ
ಹಣಿತದಲಿ ಮುರಿದಿದಿರನಗಲಕೆ
ಕುಣಿವ ಚೌಪಟ ಬೊಮ್ಮಗಜವಿದನರಿವರಾರೆಂದ ॥15॥
೦೧೬ ಕೊಲೆಯ ಕವತೆಯ ...{Loading}...
ಕೊಲೆಯ ಕವತೆಯ ಕನಸಿನಲಿ ಕಳ
ವಳಿಸಿದರೆ ದಿಟವೇ ಮನೋರಥ
ಫಲವನನುಭವಿಸಿದರೆಯನುಭವ ಸಿದ್ಧವೇ ತನಗೆ
ಹೊಳೆವ ಜಗದಲಿ ಹೊಳೆದು ತನ್ನೊಳ
ಗಳಿದು ತಾನಾಗುಳಿದ ಬೊಮ್ಮಕೆ
ಹಳಿವು ಹೊರುವುದೆ ನಿತ್ಯಶುದ್ಧನೊಳೆಂದನಾ ಭೀಷ್ಮ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕನಸಿನಲ್ಲಿ ಕೊಲೆ ಸುಲಿಗೆಗಳಿಗೆ ಒಳಗಾಗಿ ಕಳವಳಗೊಂಡರೆ ಅದು ಸತ್ಯವೇ ? ತಾನು ಅಪೇಕ್ಷಿಸಿದ ಫಲವನ್ನು ಕನಸಿನಲ್ಲಿ
ಅನುಭವಿಸಿದರೆ ಅದು ನಿಜವಾದ ಅನುಭವವಾದೀತೇ ? ಪ್ರಕಟವಾದ ಜಗತ್ತಿನಲ್ಲಿ ತಾನೂ ಪ್ರಕಟಗೊಂಡು, ಎಲ್ಲವನ್ನೂ ನಾಶಮಾಡಿ ತಾನೇ ತಾನಾಗಿ ಉಳಿದುಕೊಳ್ಳುವ ಈ ಬ್ರಹ್ಮನಿಗೆ ಅಳಿವು, ಅಪಖ್ಯಾತಿ ಉಂಟಾಗುವುದೇ?
ಪದಾರ್ಥ (ಕ.ಗ.ಪ)
ಕವತೆ-ಸುಲಿಗೆ
ಮೂಲ ...{Loading}...
ಕೊಲೆಯ ಕವತೆಯ ಕನಸಿನಲಿ ಕಳ
ವಳಿಸಿದರೆ ದಿಟವೇ ಮನೋರಥ
ಫಲವನನುಭವಿಸಿದರೆಯನುಭವ ಸಿದ್ಧವೇ ತನಗೆ
ಹೊಳೆವ ಜಗದಲಿ ಹೊಳೆದು ತನ್ನೊಳ
ಗಳಿದು ತಾನಾಗುಳಿದ ಬೊಮ್ಮಕೆ
ಹಳಿವು ಹೊರುವುದೆ ನಿತ್ಯಶುದ್ಧನೊಳೆಂದನಾ ಭೀಷ್ಮ ॥16॥
೦೧೭ ನೋಟ ಸುತ್ತಲು ...{Loading}...
ನೋಟ ಸುತ್ತಲು ಬೇಹುದೇ ಹರಿ
ದಾಟವಗಲಕೆ ಬಳಕೆಯಲಿ ಮಾ
ತಾಟ ಸುಳಿವಿನೊಳಗ್ಗಳದ ಹಿಡಿಬಂಧಿ ಹರಹಿನಲಿ
ಬೇಟದಲಿ ಮೂವಣ್ಣದಾಬೆಯ
ಕೂಟದಲಿ ಕುರುಹಾಗಿ ಮಿಗೆ ನಿ
ರ್ಲೋಟಿಸುವ ನಿಜ ದಿಟ್ಟ ಬೊಮ್ಮವಿದೆಂದನಾ ಭೀಷ್ಮ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
17.ಎಷ್ಟು ಸುತ್ತಿದರೂ ಇವನನ್ನು ನೋಡಲು ಸಾಧ್ಯವಿಲ್ಲದಷ್ಟು ವಿಸ್ತಾರವಾಗಿದ್ದಾಎ. ಇವನು ಜಗತ್ತಿನ ಎಲ್ಲೆಡೆಯೂ ಇದ್ದಾನೆ. ಮಾತಿನ ಸುಳಿವಿನಿಂದ ಇವನನ್ನು ಹಿಡಿಯಹೋದರೆ ಯಾವ ಹಿಡಿತಕ್ಕೂ ಸಿಕ್ಕದ ವಿಸ್ತಾರ ಈತನದು. ಬ್ರಹ್ಮ,ವಿಷ್ಣು,ಈಶ್ವರ ಮೂರೂ ಸ್ವರೂಪಗಳಲ್ಲಿ ಇದ್ದು ಎಲ್ಲವನ್ನೂ ಸೃಷ್ಟಿಸಿ, ಕಾಯ್ದು, ನಾಶಗೈಯಬಲ್ಲ ಇವನು ತಾನೇ ಸತ್ಯನಾದ ಬ್ರಹ್ಮನು .
ಪದಾರ್ಥ (ಕ.ಗ.ಪ)
ಮೂವಣ್ಣ -ಬ್ರಹ್ಮ,ವಿಷ್ಣು,ಈಶ್ವರ ಎಂಬ ಮೂರು ಸ್ವರೂಪಗಳು
ಟಿಪ್ಪನೀ (ಕ.ಗ.ಪ)
ಭೀಷ್ಮನು ಕೃಷ್ಣನನ್ನು ಸ್ತುತಿಸುವ ಈ ಹಲವು ಪದ್ಯಗಳಲ್ಲಿ ಅನೇಕ ವೇದಾಂತದ, ಆಧ್ಯಾತ್ಮಿಕ ಶಬ್ದಗಳು ಪ್ರಯೋಗವಾಗಿವೆ. ಇವಕ್ಕೆ ನಿರ್ದುಷ್ಟವಾದ ಅರ್ಥಗಳನ್ನು ನಿರ್ಣಯಿಸಬೇಕಾಗಿದೆ.
ಮೂಲ ...{Loading}...
ನೋಟ ಸುತ್ತಲು ಬೇಹುದೇ ಹರಿ
ದಾಟವಗಲಕೆ ಬಳಕೆಯಲಿ ಮಾ
ತಾಟ ಸುಳಿವಿನೊಳಗ್ಗಳದ ಹಿಡಿಬಂಧಿ ಹರಹಿನಲಿ
ಬೇಟದಲಿ ಮೂವಣ್ಣದಾಬೆಯ
ಕೂಟದಲಿ ಕುರುಹಾಗಿ ಮಿಗೆ ನಿ
ರ್ಲೋಟಿಸುವ ನಿಜ ದಿಟ್ಟ ಬೊಮ್ಮವಿದೆಂದನಾ ಭೀಷ್ಮ ॥17॥
೦೧೮ ಭೂತ ಭವ್ಯ ...{Loading}...
ಭೂತ ಭವ್ಯ ಭವತ್ಪ್ರಧಾನ
ಖ್ಯಾತ ತತ್ವಪ್ರಕೃತಿ ಪೂರುಷ
ನೀತ ಸಚ್ಚಿನ್ಮಾತ್ರನೀತನು ಪರಶಿವಾತ್ಮಕನು
ಸೋತ ನುಡಿ ಮನದೊಡನೆ ಮರಳಿದ
ಡಾತ ಸತ್ಯಜ್ಞಾನಮಯ ನಿ
ರ್ಧೂತ ಮಾಯಾತೀತನೀ ಹರಿಯೆಂದನಾ ಭೀಷ್ಮ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂತ ಭವಿಷ್ಯತ್ ವರ್ತಮಾನಗಳಲ್ಲಿ ಪ್ರಧಾನವಾದ ತತ್ವಗಳೂ ಪ್ರಕೃತಿಯೂ ಪುರುಷನೂ ಈತನೇ, ಪರಶಿವಾತ್ಮಕನೂ
ಇವನೇ. ಇವನನ್ನು ಕಾಣಲು ಹೊರಟ ನುಡಿ, ಕಾಣಲಾಗದೆ ಸೋತು ಮನಸ್ಸಿನೊಡನೆ ಹಿಂತಿರುಗಿತು. ಈ ಹರಿ ಸತ್ಯಜ್ಞಾನಮಯ.
ಈತ ಅತ್ಯಂತ ನಿಷ್ಕಳಂಕನು. ಮಾಯೆಗೆ ಅತೀತನಾದವನು.
ಪದಾರ್ಥ (ಕ.ಗ.ಪ)
ನಿರ್ಧೂತ - ಶುಭ್ರ, ಸ್ವಚ್ಛ, ನಿಷ್ಕಳಂಕ
ಮೂಲ ...{Loading}...
ಭೂತ ಭವ್ಯ ಭವತ್ಪ್ರಧಾನ
ಖ್ಯಾತ ತತ್ವಪ್ರಕೃತಿ ಪೂರುಷ
ನೀತ ಸಚ್ಚಿನ್ಮಾತ್ರನೀತನು ಪರಶಿವಾತ್ಮಕನು
ಸೋತ ನುಡಿ ಮನದೊಡನೆ ಮರಳಿದ
ಡಾತ ಸತ್ಯಜ್ಞಾನಮಯ ನಿ
ರ್ಧೂತ ಮಾಯಾತೀತನೀ ಹರಿಯೆಂದನಾ ಭೀಷ್ಮ ॥18॥
೦೧೯ ಯಜ್ಞದಧಿಪತಿಯೀತನೀತನು ...{Loading}...
ಯಜ್ಞದಧಿಪತಿಯೀತನೀತನು
ಯಜ್ಞಪುರುಷನು ಸ್ರುಕ್ ಸ್ರುವಾದೀ
ಯಜ್ಞ ಸಾಧನನೀತನೀತನು ಮಂತ್ರ ಕಾಲಾತ್ಮ
ಯಜ್ಞವೀತನು ಕರ್ಮವೀತನು
ಯಜ್ಞದಲಿ ಯಜಮಾನನೀತನು
ಯಜ್ಞಫಲವೀ ದೇವಕೀ ಸುತನೆಂದನಾ ಭೀಷ್ಮ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈತನೇ ಯಜ್ಞದ ಅಧಿಪತಿ. ಯಜ್ಞಪುರುಷನೂ ಇವನೇ. ಸ್ರುಕ್ ಸುವಾದಿ ಯಜ್ಞದ ಸಾಧನಗಳೂ ಇವನೇ. ಮಂತ್ರ ಕಾಲಾತ್ಮಕ ಈತ. ಯಜ್ಞ, ಯಜ್ಞಕರ್ಮ ಇವನೇ. ಯಜ್ಞ ಮಾಡುವ ಯಜಮಾನನೂ ಇವನೇ, ಯಜ್ಞದ ಫಲರೂಪದಲ್ಲಿರುವವನೂ ಈ ದೇವಕೀಸುತನೇ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಯಜ್ಞದಧಿಪತಿಯೀತನೀತನು
ಯಜ್ಞಪುರುಷನು ಸ್ರುಕ್ ಸ್ರುವಾದೀ
ಯಜ್ಞ ಸಾಧನನೀತನೀತನು ಮಂತ್ರ ಕಾಲಾತ್ಮ
ಯಜ್ಞವೀತನು ಕರ್ಮವೀತನು
ಯಜ್ಞದಲಿ ಯಜಮಾನನೀತನು
ಯಜ್ಞಫಲವೀ ದೇವಕೀ ಸುತನೆಂದನಾ ಭೀಷ್ಮ ॥19॥
೦೨೦ ದೆಸೆ ಪರಿಚ್ಛೇದಿಸದ ...{Loading}...
ದೆಸೆ ಪರಿಚ್ಛೇದಿಸದ ನುಡಿ ಹವ
ಣಿಸದ ಕಲ್ಪ ಸಹಸ್ರ ಕೋಟಿಯೊ
ಳಸಮಸೆಯ ಮಾಡದ ಮಹತ್ವದೊಳುರು ಮಹತ್ವದಲಿ
ಎಸೆವನಣುವಿಂಗಣುವೆನಿಸಿ ನಿ
ರ್ಮಿಸಿ ವಿಭಾಡಿಸಿ ಬರವಳಿದು ಹೆ
ಚ್ಚಿಸಿ ಮುರಿದನೀ ಜಗವನೀ ಹರಿಯೆಂದನಾ ಭೀಷ್ಮ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇಶವನ್ನು ಮೀರಿದವನು, ಮಾತು, ಇವನ ಪ್ರಮಾಣವೆಷ್ಟು ಎಂದು ಅಳೆದು ಹೇಳಲಾರದು. ಕಲ್ಪ ಸಹಸ್ರ ಕೋಟಿಗಳಲ್ಲಿ ಇವನು ವ್ಯತ್ಯಾಸವನ್ನೇ ಕಾಣದೆ, ಮಹತ್ವದಲ್ಲಿ ಮಹತ್ವವುಳ್ಳವನು, ಅಣುವಿಗಿಂತ ಅಣುವೆನಿಸಿದವನು. ಲೋಕಗಳನ್ನು ಸೃಷ್ಟಿಸುವವನು, ನಾಶಮಾಡುವವನು, ಬರವನ್ನು ನೀಗುವನು, ಈ ಜಗತ್ತನ್ನು ಹೆಚ್ಚಿಸುವವನು ಹಾಗೂ ಮುರಿಯುವವನು.
ಪದಾರ್ಥ (ಕ.ಗ.ಪ)
ಪರಿಚ್ಛೇದಿಸು-ತುಂಡುಮಾಡು
ಮೂಲ ...{Loading}...
ದೆಸೆ ಪರಿಚ್ಛೇದಿಸದ ನುಡಿ ಹವ
ಣಿಸದ ಕಲ್ಪ ಸಹಸ್ರ ಕೋಟಿಯೊ
ಳಸಮಸೆಯ ಮಾಡದ ಮಹತ್ವದೊಳುರು ಮಹತ್ವದಲಿ
ಎಸೆವನಣುವಿಂಗಣುವೆನಿಸಿ ನಿ
ರ್ಮಿಸಿ ವಿಭಾಡಿಸಿ ಬರವಳಿದು ಹೆ
ಚ್ಚಿಸಿ ಮುರಿದನೀ ಜಗವನೀ ಹರಿಯೆಂದನಾ ಭೀಷ್ಮ ॥20॥
೦೨೧ ಒನ್ದೆನಿಸಿ ತೋರುವನು ...{Loading}...
ಒಂದೆನಿಸಿ ತೋರುವನು ಎರಡರೊ
ಳೊಂದಿ ಮೆರೆವನು ಮೂರು ನೆಲೆಯಲಿ
ನಿಂದು ನಾಲ್ಕನು ಬಳಸಿ ವಿಭುವಾಗೈದು ಠಾಣದಲಿ
ಹಿಂದೆ ಮುಂದೆಡಬಲದ ಬಹು ವಿಧ
ದಿಂದ ಮಾಯಾ ಗುಪ್ತನಾಗಿ ಮು
ಕುಂದ ತೋರುವನೀತನಂತೆಯನರಿವರಾರೆಂದ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದೆನ್ನಿಸಿ ತೋರುವನು.( ಅಖಂಡತ್ವ) ಎರಡರಲ್ಲಿ ಸೇರಿ ಮೆರೆಯುವವನು.( ಕಾರ್ಯ, ಕಾರಣಗಳೆರಡೂ ಒಬ್ಬನೇ ಆಗಿರುವುದು) ಮೂರರ ನೆಲೆಯಲ್ಲಿ ನಿಲ್ಲುವನು, (ಮೂರೂ ಗುಣಗಳನ್ನು ಹೊಂದಿರುವುದು) ಈ ನಾಲ್ಕನ್ನು ಬಳಸಿ, (ಚತುರ್ವಿಧ ಪುರುಷಾರ್ಥಗಳು) ಐದು ಠಾಣಗಳಲ್ಲಿ (ಪಂಚೇಂದ್ರಿಯಗಳು) ವಿಭುವಾಗುವವನು. ಹಿಂದೆ ಮುಂದೆ, ಎಡ ಬಲ ಎಲ್ಲ ಕಡೆಯಲ್ಲೂ (ಎಲ್ಲ ದಿಕ್ಕುಗಳಲ್ಲೂ) ಬಹು ರೀತಿಯಲ್ಲಿ ಮಾಯಾಗುಪ್ತನಾಗಿ ತೋರುವನು. ಈ ಮುಕುಂದನ ಕೊನೆಯನ್ನು ತಿಳಿದವರಾರು ?
ಪದಾರ್ಥ (ಕ.ಗ.ಪ)
ಟಿಪ್ಪನೀ (ಕ.ಗ.ಪ)
ಒಂದು- ಎರಡನೆಯದಿಲ್ಲದ ಒಂದು
ಎರಡು -ಕಾರ್ಯ, ಕಾರಣ
ಮೂರು - ಸತ್ವ, ರಜಸ್ಸು, ತಮಸ್ಸು
ನಾಲ್ಕು -ಪುರುಷಾರ್ಥಗಳು
ಐದು- ಪಂಚೇಂದ್ರಿಯಗಳು
ಹಿಂದೆ, ಮುಂದೆ, ಎಡ, ಬಲ- ನಾಲ್ಕೂ ದಿಕ್ಕುಗಳು
ಒಂದು -ಸರ್ವೋತ್ತಮತ್ವ
ಎರಡು - ಜೀವಾತ್ಮ, ಪರಮಾತ್ಮ
ಮೂರು - ಶ್ವೇತದ್ವೀಪ, ಅನಂತಾಸನ, ವೈಕುಂಠ
ನಾಲ್ಕು - ಕೃತ, ತ್ರೇತಾ, ದ್ವಾಪರ, ಕಲಿಯುಗಗಳು
ಐದು- ಪಂಚವಿಧ ಜೀವರು
(ಪಂಚಪ್ರಾಣಗಳು)
-ಸಂ.ಗೋ.ಬಿಂದೂರಾಯರು
ಈ ಪದ್ಯಕ್ಕೆ ವಿವಿಧ ವಿದ್ವಾಂಸರು ವಿವಿಧ ಬಗೆಯಲ್ಲಿ ಅರ್ಥೈಸಬಲ್ಲರು ಎನಿಸುತ್ತದೆ.
ಒದು ಎರಡು, ಮೂರು, ನಾಲ್ಕು ಮತ್ತು ಐದು ಎನ್ನುವ ಸಂಕೇತಗಳಿಗೆ ಪದ್ಯದ ಭಾವಕ್ಕೆ ಸರಿಹೊಂದುವ ವಿವಿಧ ವಿವರಣೆಗಳು ಸಾಧ್ಯ.
ಮೂಲ ...{Loading}...
ಒಂದೆನಿಸಿ ತೋರುವನು ಎರಡರೊ
ಳೊಂದಿ ಮೆರೆವನು ಮೂರು ನೆಲೆಯಲಿ
ನಿಂದು ನಾಲ್ಕನು ಬಳಸಿ ವಿಭುವಾಗೈದು ಠಾಣದಲಿ
ಹಿಂದೆ ಮುಂದೆಡಬಲದ ಬಹು ವಿಧ
ದಿಂದ ಮಾಯಾ ಗುಪ್ತನಾಗಿ ಮು
ಕುಂದ ತೋರುವನೀತನಂತೆಯನರಿವರಾರೆಂದ ॥21॥
೦೨೨ ದ್ವಿಜರು ಮುಖದಲಿ ...{Loading}...
ದ್ವಿಜರು ಮುಖದಲಿ ಭೂಪರೀತನ
ಭುಜದಲಾದರು ನಿಖಿಳ ವೈಶ್ಯ
ವ್ರಜ ಘನೋರುಗಳಿಂದ ಶೂದ್ರರು ಪಾದಪದ್ಮದಲಿ
ದ್ವಿಜಪತಿಸ್ಸ್ವಾಂತದಲಿ ವರವಾ
ರಿಜಸಖನು ಕಣ್ಣಿನಲಿ ವದನಾಂ
ಬುಜದಲಿಂದ್ರಾದಿಗಳು ಜನಿಸಿದರೆಂದನಾ ಭೀಷ್ಮ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈತನ ಮುಖದಲ್ಲಿ ವಿಪ್ರರು ಜನಿಸಿದರು. ಭುಜದಲ್ಲಿ ಕ್ಷತ್ರಿಯರು ಜನಿಸಿದರು. ತೊಡೆಗಳಲ್ಲಿ ವೈಶ್ಯರು, ಪಾದಪದ್ಮಗಳಲ್ಲಿ ಶೂದ್ರರು ಜನಿಸಿದರು. ಮನಸ್ಸಿನಲ್ಲಿ ಚಂದ್ರ, ಕಣ್ಣಿನಲ್ಲಿ ಸೂರ್ಯ, ಮುಖ ಕಮಲದಲ್ಲಿ ಇಂದ್ರಾದಿಗಳು ಜನಿಸಿದರು.
ಪದಾರ್ಥ (ಕ.ಗ.ಪ)
ದ್ವಿಜಪತಿ -ನಕ್ಷತ್ರಗಳ ಒಡೆಯ, ಚಂದ್ರ
ಸ್ವಾಂತ- ಮನಸ್ಸು
ಮೂಲ ...{Loading}...
ದ್ವಿಜರು ಮುಖದಲಿ ಭೂಪರೀತನ
ಭುಜದಲಾದರು ನಿಖಿಳ ವೈಶ್ಯ
ವ್ರಜ ಘನೋರುಗಳಿಂದ ಶೂದ್ರರು ಪಾದಪದ್ಮದಲಿ
ದ್ವಿಜಪತಿಸ್ಸ್ವಾಂತದಲಿ ವರವಾ
ರಿಜಸಖನು ಕಣ್ಣಿನಲಿ ವದನಾಂ
ಬುಜದಲಿಂದ್ರಾದಿಗಳು ಜನಿಸಿದರೆಂದನಾ ಭೀಷ್ಮ ॥22॥
೦೨೩ ಗಗನವೀತನ ನಾಭಿ ...{Loading}...
ಗಗನವೀತನ ನಾಭಿ ದಶದಿ
ಕ್ಕುಗಳು ಕಿವಿ ಫಣಿಲೋಕ ವಿಮಳಾಂ
ಘ್ರಿಗಳು ಧ್ರುವನಿಂ ಮೇಲು ಭಾಗ ಮುರಾಂತಕನ ಮುಕುಟ
ಗಗನ ಮಣಿ ಶಂಕರ ವಿರಿಂಚಾ
ದಿಗಳು ದೇವನ ರೋಮ ಕೂಪದೊ
ಳಗಣಿತಾಮರ ನಿಕರವಿಹುದಿದನರಿವರಾರೆಂದ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಗನ ಈತನ ಹೊಕ್ಕಳು, ದಶದಿಕ್ಕುಗಳು ಇವನ ಕಿವಿ, ನಾಗಲೋಕವೇ ಇವನ ಪಾದಗಳು, ಈ ಮುರಹರನ ಕಿರೀಟ ಧ್ರುವನಿಗಿಂತ ಮೇಲು ಭಾಗದಲ್ಲಿದೆ. ಸೂರ್ಯ ಶಂಕರ, ಬ್ರಹ್ಮ ಮೊದಲಾದವರೂ ಅಗಣಿತ ದೇವಸಮೂಹವೂ ಇವನ ರೋಮಕೂಪಗಳಲ್ಲಿ ನೆಲಸಿದ್ದಾರೆ. ಇವನ ನಿಜಸ್ವರೂಪವನ್ನು ಅರಿಯಬಲ್ಲವರಾರು ?
ಪದಾರ್ಥ (ಕ.ಗ.ಪ)
ಮೂಲ ...{Loading}...
ಗಗನವೀತನ ನಾಭಿ ದಶದಿ
ಕ್ಕುಗಳು ಕಿವಿ ಫಣಿಲೋಕ ವಿಮಳಾಂ
ಘ್ರಿಗಳು ಧ್ರುವನಿಂ ಮೇಲು ಭಾಗ ಮುರಾಂತಕನ ಮುಕುಟ
ಗಗನ ಮಣಿ ಶಂಕರ ವಿರಿಂಚಾ
ದಿಗಳು ದೇವನ ರೋಮ ಕೂಪದೊ
ಳಗಣಿತಾಮರ ನಿಕರವಿಹುದಿದನರಿವರಾರೆಂದ ॥23॥
೦೨೪ ಪ್ರಳಯದಲಿ ಧರೆ ...{Loading}...
ಪ್ರಳಯದಲಿ ಧರೆ ಕರಗುವುದು ಜಲ
ದೊಳಗೆ ತಜ್ಜಲವಡಗುವುದು ಶಿಖಿ
ಯೊಳಗೆ ತತ್ಪಾವಕನು ಪವನನೊಳಾತನಭ್ರದಲಿ
ಬಳಿಕ ಹಂಸತ್ವದಲಿ ಗಗನವೆ
ನಿಲುಗು ಹಮ್ಮು ಮಹತ್ವದಲಿ ಮಹ
ದಳಿವು ಮಾಯೆಯೊಳಾಕೆಯಡಗುವಳೀತನಂಘ್ರಿಯಲಿ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರಳಯ ಉಂಟಾದಾಗ ಭೂಮಿ ನೀರಿನಲ್ಲಿ ಕರಗಿಬಿಡುವುವುದು. ಜಲ ಬೆಂಕಿಯಲ್ಲಿ ಆವಿಯಾಗಿಬಿಡುವುದು. ಆ ಬೆಂಕಿ ಗಾಳಿಯಲ್ಲಿ
ಲೀನವಾಗಿ ಬಿಡುವುದು, ಗಾಳಿ ಆಕಾಶದಲ್ಲಿ ಲಯವಾಗುವುದು. ಆಕಾಶ ಹಂಸತ್ವದಲ್ಲಿ ನಿಲ್ಲುತ್ತದೆ. ಹಮ್ಮು ಮಹತ್ತಿನಲ್ಲಿ ಸೇರುತ್ತದೆ, ಮಹತ್ತು ಮಾಯೆಯಲ್ಲಿ ಸೇರುತ್ತದೆ. ಆ ಮಾಯೆ ಈತನ ಪಾದಗಳಲ್ಲಿ ಲಯವಾಗುತ್ತಾಳೆ.
ಪದಾರ್ಥ (ಕ.ಗ.ಪ)
ಶಿಖಿ-ಬೆಂಕಿ, ಹಂಸತ್ವ-ಮೋಕ್ಷ, ಬ್ರಹ್ಮಪದವಿ
ಮೂಲ ...{Loading}...
ಪ್ರಳಯದಲಿ ಧರೆ ಕರಗುವುದು ಜಲ
ದೊಳಗೆ ತಜ್ಜಲವಡಗುವುದು ಶಿಖಿ
ಯೊಳಗೆ ತತ್ಪಾವಕನು ಪವನನೊಳಾತನಭ್ರದಲಿ
ಬಳಿಕ ಹಂಸತ್ವದಲಿ ಗಗನವೆ
ನಿಲುಗು ಹಮ್ಮು ಮಹತ್ವದಲಿ ಮಹ
ದಳಿವು ಮಾಯೆಯೊಳಾಕೆಯಡಗುವಳೀತನಂಘ್ರಿಯಲಿ ॥24॥
೦೨೫ ಧರಣಿ ತಾನೈವತ್ತು ...{Loading}...
ಧರಣಿ ತಾನೈವತ್ತು ಕೋಟಿಯ
ಹರಹು ಭೂಮಿಗೆ ಹತ್ತು ಮಡಿ ಖ
ರ್ಪರ ಕಟಾಹವದಕ್ಕೆ ದಶಗುಣ ದಶ ಗುಣೋತ್ತರದ
ಪರಿವಿಡಿಯಲುದಕಾಗ್ನಿ ರವಿ ಪು
ಷ್ಕರದ ಹಮ್ಮು ಮಹತ್ವ ಸಪ್ತಾ
ವರಣವೀ ಬ್ರಹ್ಮಾಂಡವೀತನ ರೋಮ ರೋಮದಲಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಮಂಡಲ ಐವತ್ತು ಕೋಟಿ (ಯೋಜನ) ವಿಸ್ತಾರವುಳ್ಳದ್ದು. ಖರ್ಪರಕಟಾಹ ಭೂಮಿಗಿಂತ ಹತ್ತುಪಟ್ಟು ವಿಸ್ತಾರವಾದುದು. ಉದಕ, ಅಗ್ನಿ, ಸೂರ್ಯ, ಪುಷ್ಕರ, ಹಮ್ಮು, ಮಹತ್ತು - ಆ ಖರ್ಪರ ಕಟಾಹಕ್ಕೆ ಕ್ರಮವಾಗಿ ಒಂದಕ್ಕಿಂತ ಹತ್ತು ಪಟ್ಟಿನಂತೆ ಹೆಚ್ಚು ವಿಸ್ತಾರವಾಗುತ್ತಾ ಹೋಗುವುದು. ಈ ಸಪ್ತಾವರಣಗಳಿಂದ ಕೂಡಿದ ಬ್ರಹ್ಮಾಂಡಗಳು ಈತನ ಒಂದೊಂದು ರೋಮ ಕೂಪದಲ್ಲೂ ಶೋಭಿಸುವುವು.
ಪದಾರ್ಥ (ಕ.ಗ.ಪ)
ಖರ್ಪರ ಕಟಾಹ-ಕೊಪ್ಪರಿಗೆಯಂತಿರುವ ಬ್ರಹ್ಮಾಂಡದ ಮೇಲಿನ ಚಿಪ್ಪು.
ಮೂಲ ...{Loading}...
ಧರಣಿ ತಾನೈವತ್ತು ಕೋಟಿಯ
ಹರಹು ಭೂಮಿಗೆ ಹತ್ತು ಮಡಿ ಖ
ರ್ಪರ ಕಟಾಹವದಕ್ಕೆ ದಶಗುಣ ದಶ ಗುಣೋತ್ತರದ
ಪರಿವಿಡಿಯಲುದಕಾಗ್ನಿ ರವಿ ಪು
ಷ್ಕರದ ಹಮ್ಮು ಮಹತ್ವ ಸಪ್ತಾ
ವರಣವೀ ಬ್ರಹ್ಮಾಂಡವೀತನ ರೋಮ ರೋಮದಲಿ ॥25॥
೦೨೬ ದೇವರಙ್ಗೋಪಾಙ್ಗದಲಿ ವೇ ...{Loading}...
ದೇವರಂಗೋಪಾಂಗದಲಿ ವೇ
ದಾವಳಿಗಳುಚ್ಛ್ವ್ವಾಸದಲಿ ತೀ
ರ್ಥಾವಳಿಗಳಂಘ್ರಿ ದ್ವಯಾಂಬುಜ ಮಾಕರಂದದಲಿ
ಪಾವನಕೆ ಪಾವನನು ಜೀವರ
ಜೀವನನು ಮೃತ್ಯುವಿಗೆ ಮೃತ್ಯುವಿ
ದಾವ ಲೆಕ್ಕದೊಳೀತನಹನೆಂದರಿವರಾರೆಂದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈತನ ಅಂಗೋಪಾಂಗಗಳಲ್ಲಿ ದೇವತೆಗಳು, ಉಚ್ಛ್ವಾಸದಲ್ಲಿ ವೇದಾವಳಿಗಳು, ಎರಡು ಪಾದಾಂಬುಜಗಳ ಮಕರಂದದಲ್ಲಿ
ತೀರ್ಥಾವಳಿಗಳು ನೆಲಸಿವೆ. ಇವನು ಪಾವನಕ್ಕೆ ಪಾವನನು, ಜೀವರಿಗೆಲ್ಲ ಜೀವನನು, ಮೃತ್ಯವಿಗೆ ಮೃತ್ಯುವು. ಯಾವ ಲೆಕ್ಕದಲ್ಲಿ ಈತನಾಗುತ್ತಾನೆ, ಎಂದು ತಿಳಿದವರಾರು?
ಪದಾರ್ಥ (ಕ.ಗ.ಪ)
ಮೂಲ ...{Loading}...
ದೇವರಂಗೋಪಾಂಗದಲಿ ವೇ
ದಾವಳಿಗಳುಚ್ಛ್ವ್ವಾಸದಲಿ ತೀ
ರ್ಥಾವಳಿಗಳಂಘ್ರಿ ದ್ವಯಾಂಬುಜ ಮಾಕರಂದದಲಿ
ಪಾವನಕೆ ಪಾವನನು ಜೀವರ
ಜೀವನನು ಮೃತ್ಯುವಿಗೆ ಮೃತ್ಯುವಿ
ದಾವ ಲೆಕ್ಕದೊಳೀತನಹನೆಂದರಿವರಾರೆಂದ ॥26॥
೦೨೭ ವಿಶ್ವಶಿಲ್ಪದ ಕುಶಲ ...{Loading}...
ವಿಶ್ವಶಿಲ್ಪದ ಕುಶಲ ಹಸ್ತನು
ವಿಶ್ವರಕ್ಷೆಯು ಮಂತ್ರವಾದಿಯು
ವಿಶ್ವ ಸಮಿಧೆಗಳಗ್ನಿ ಕಾರ್ಯದ ಬೊಮ್ಮಚಾರಿ ವಟು
ವಿಶ್ವನಾಟಕ ಸೂತ್ರಧಾರನು
ವಿಶ್ವ ವಿಸ್ಮಯದೈಂದ್ರ ಜಾಲಕ
ವಿಶ್ವದಂತಸ್ಸ್ಯೂತ ಚೇತನನೀತ ನೋಡೆಂದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈತ ವಿಶ್ವಶಿಲ್ಪದಲ್ಲಿ ಕುಶಲ ಹಸ್ತನಾದವನು. ವಿಶ್ವರಕ್ಷಣೆ ಮಾಡುವ ಮಂತ್ರವಾದಿ. ವಿಶ್ವಗಳನ್ನೇ ಸಮಿತ್ತುಗಳನ್ನಾಗಿ ಮಾಡಿಕೊಂಡು
ಅಗ್ನಿಕಾರ್ಯವನ್ನು ಮಾಡುವ ಬ್ರಹ್ಮಚಾರಿ ವಟು. ಈತ ವಿಶ್ವನಾಟಕಕ್ಕೆ ಸೂತ್ರಧಾರಿಯಾದವನು. ವಿಶ್ವ ವಿಸ್ಮಯದ ಐಂದ್ರಜಾಲಿಕ ವಿಶ್ವದೊಳಗೆಲ್ಲ ವ್ಯಾಪಿಸಿಕೊಂಡಿರುವ ಚೇತನ ಸ್ವರೂಪನಾದವನೇ ಈತ.
ಪದಾರ್ಥ (ಕ.ಗ.ಪ)
ಮೂಲ ...{Loading}...
ವಿಶ್ವಶಿಲ್ಪದ ಕುಶಲ ಹಸ್ತನು
ವಿಶ್ವರಕ್ಷೆಯು ಮಂತ್ರವಾದಿಯು
ವಿಶ್ವ ಸಮಿಧೆಗಳಗ್ನಿ ಕಾರ್ಯದ ಬೊಮ್ಮಚಾರಿ ವಟು
ವಿಶ್ವನಾಟಕ ಸೂತ್ರಧಾರನು
ವಿಶ್ವ ವಿಸ್ಮಯದೈಂದ್ರ ಜಾಲಕ
ವಿಶ್ವದಂತಸ್ಸ್ಯೂತ ಚೇತನನೀತ ನೋಡೆಂದ ॥27॥
೦೨೮ ಇರಲಿರಲು ಕಲ್ಪಾವಸಾನಕೆ ...{Loading}...
ಇರಲಿರಲು ಕಲ್ಪಾವಸಾನಕೆ
ಬಿರಿದುದೀ ಬ್ರಹ್ಮಾಂಡ ಬಹಿರಾ
ವರಣ ಜಲವೀ ಜಲದೊಳೊಂದಾಯ್ತೇಕ ರೂಪಾಗಿ
ಹರಿ ವಿನೋದದಲೊಬ್ಬನೇ ಸಂ
ಚರಿಸುತ್ತಿದ್ದನು ಬಳಿಕ ಕಾಲಾಂ
ತರದೊಳಗೆ ಮಧು ಕೈಟಭರು ಜನಿಸಿದರು ಕರ್ಣದಲಿ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೇಯೇ ಇರುತ್ತಿರಲಾಗಿ ಕಲ್ಪಾಂತವಾದಾಗ ಬ್ರಹ್ಮಾಂಡದ ಬಹಿರಾವರಣ ಬಿರಿಯಿತು. ಹೊರಗಿನ ಜಲವು ಒಳಗಿನ ಜ¯ದೊಡನೆ ಬೆರೆತು ಒಂದೇ ಆಯಿತು. ಹರಿಯೊಬ್ಬನೇ ವಿನೋದದಲ್ಲಿ ಸಂಚರಿಸುತ್ತಿದ್ದ. ಬಳಿಕ ಕಾಲಾಂತರದಲ್ಲಿ ಅವನ ಕಿವಿಗಳಿಂದ ಮಧು ಕೈಟಭರು ಜನಿಸಿದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಇರಲಿರಲು ಕಲ್ಪಾವಸಾನಕೆ
ಬಿರಿದುದೀ ಬ್ರಹ್ಮಾಂಡ ಬಹಿರಾ
ವರಣ ಜಲವೀ ಜಲದೊಳೊಂದಾಯ್ತೇಕ ರೂಪಾಗಿ
ಹರಿ ವಿನೋದದಲೊಬ್ಬನೇ ಸಂ
ಚರಿಸುತ್ತಿದ್ದನು ಬಳಿಕ ಕಾಲಾಂ
ತರದೊಳಗೆ ಮಧು ಕೈಟಭರು ಜನಿಸಿದರು ಕರ್ಣದಲಿ ॥28॥
೦೨೯ ಲೀಲೆಯಲಿ ಬಳಿಕವದಿರೊಡನೆ ...{Loading}...
ಲೀಲೆಯಲಿ ಬಳಿಕವದಿರೊಡನೆ ವಿ
ತಾಳಿಸಿತು ಮನ ಕಾದಿದರು ಬಲು
ಕಾಳಗವನವರಿತ್ತ ವರದಲಿ ಹಿಡಿದು ದಾನವರ
ಸೀಳಿ ಬಿಸುಟನು ಖಳರ ಮೇದ
ಸ್ಸಾಳಿ ಮುಳುಗಿತು ಜಲದೊಳದರಿಂ
ಮೇಲುವೆಸರಾಯ್ತಿಳೆಗೆ ಮೇದಿನಿಯೆಂಬ ನಾಮದಲಿ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಲೀಲೆಯಲ್ಲಿ ಬಳಿಕ ಮನಸ್ಸಿನ ತಾಳತಪ್ಪಿತು. ಮಧುಕೈಟಭರೊಡನೆ ಭಾರೀ ಕಾಳಗವೇ ನಡೆಯಿತು. ಹರಿ ಅವರಿಗೆ ಕೊಟ್ಟಿದ್ದ ವರದಲ್ಲೇ ಆ ದಾನವರನ್ನು ಹಿಡಿದು ಸೀಳಿಬಿಸುಟನು. ಅವರ ಮೇದಸ್ಸು ನೀರಿನಲ್ಲಿ ಮುಳುಗಿತು. ಅದೇ ಭೂಮಿಯಾಯಿತು. ಅದರಿಂದಲೇ ಈ ಭೂಮಿಗೆ ಮೇದಿನಿ ಎಂಬ ಹೆಸರಾಯಿತು.
ಪದಾರ್ಥ (ಕ.ಗ.ಪ)
ಟಿಪ್ಪನೀ (ಕ.ಗ.ಪ)
ಮಧು ಕೈಟಭರು :
ಸೋದರರಾದ ಮಧು ಕೈಟಭರು ವಿಷ್ಣು ದ್ವೇಷಿಗಳಾದ ರಾಕ್ಷಸರು. ಇವರ ಜನನ ವೃತ್ತಾಂತವೂ ತುಂಬ ರೋಚಕವಾಗಿದೆ. ವಿಷ್ಣು ಕ್ಷೀರಸಾಗರದಲ್ಲಿ ಮಲಗಿದ್ದಾಗ ಅವನ ನಾಭಿಯಿಂದ ಬ್ರಹ್ಮನೂ ಕಿವಿಯಿಂದ ಮಧು ಮತ್ತು ಕೈಟಭರೂ ಹುಟ್ಟಿದರಂತೆ. ಹುಟ್ಟಿದ ಕೂಡಲೇ ದೊಡ್ಡವರಾದವರಿಗೆ ತಾವು ಎಲ್ಲಿ ಹುಟ್ಟಿದೆವೆಂಬ ಸಂಗತಿ ತಿಳಿದಿರಲಿಲ್ಲ. ತಾವು ಶಕ್ತಿ ಪ್ರಸಾದದಿಂದ ಹುಟ್ಟಿರುವುದಾಗಿ ಭಾವಿಸಿ ಗರ್ವದಿಂದ ಬ್ರಹ್ಮನಬಳಿ ಹೋಗಿ ಅವನನ್ನು ಯುದ್ಧಕ್ಕೆ ಆಹ್ವಾನಿಸಿದರು. ಇವರ ಉಪಟಳಕ್ಕೆ ಹೆದರಿ ಬ್ರಹ್ಮ, ವಿಷ್ಣುವಿನ ಬಳಿಗೆ ಓಡಿ ಬಂದ. ವಿಷ್ಣುವು ಬ್ರಹ್ಮನಿಗೆ ಅಭಯನೀಡಿ ಮಧು ಕೈಟಭರಿಗೆ ಪ್ರಸನ್ನನಾಗಿ ‘ನಿಮಗೆ ಏನು ವರಬೇಕು?’ ಎಂದು ಕೇಳಿದ. ದುರಹಂಕಾರದಿಂದ ಸೊಕ್ಕಿದ್ದ ಮಧು ಕೈಟಭರು ‘ನೀನೇ ವರ ಕೋರಿಕೋ’ ಎಂದು ಉತ್ತರ ಕೊಟ್ಟರು. ಆಗ ವಿಷ್ಣು ಮಾರ್ಮಿಕವಾಗಿ ‘ನನ್ನ ಕೈಯಿಂದಲೇ ನೀವು ಸಾಯುವಂತೆ ವರ ಕೊಡಿ’ ಎಂದು ಕೇಳಿದ. ನಿರ್ವಾಹವಿಲ್ಲದೆ ಮಧು ಕೈಟಭರು ಒಪ್ಪಿಕೊಂಡರು. ಅಲ್ಲದೆ ಅವರು ವಿಷ್ಣುವಿಗೆ ‘ನಿನ್ನ ಕೈಯಿಂದ ಮಾತ್ರ ನಮಗೆ ನೀರಿಲ್ಲದ ಸ್ಥಳದಲ್ಲಿ ಮರಣ ಬರಬೇಕು!’ ಎಂದು ಕೇಳಿದರು. ಮುಂದೆ ವಿಷ್ಣುವು ಮಧು ಕೈಟಭರನ್ನು ಕೊಂದನು. ಮಧುವನ್ನು ಕೊಂದಿದ್ದರಿಂದ ವಿಷ್ಣುವಿಗೆ ‘ಮಧುಸೂದನ’ ಎಂಬ ಹೆಸರಿದೆ. ವಿಷ್ಣುವು ತನ್ನ ಬಲಿಷ್ಠ ದೇಹಶಕ್ತಿಯಿಂದ ಅವರಿಬ್ಬರನ್ನೂ ತೊಡೆಯ ಮಧ್ಯದಲ್ಲಿ ಇರುಕಿಸಿಕೊಂದನು. ಅವನು ರಾಕ್ಷಸರನ್ನು ಹಿಸುಕಿದಾಗ ದೈತ್ಯ ಬಾಯಿಂದ ಮೇದಸ್ಸು ಹೊರ ಬಂದು ಸಮುದ್ರವನ್ನು ವ್ಯಾಪಿಸಿತು. ಅದಕ್ಕೇ ಭೂಮಿಗೆ ‘ಮೇದಿನಿ’ ಎಂಬ ಹೆಸರು ಬಂದಿದೆ. ಹಾಗಯೇ ಮಧು ಬಾಲಕನಾಗಿದ್ದಾಗ ತುಂಬ ಮೆತ್ತಗಾಗಿದ್ದನಂತೆ! ಅದಕ್ಕೆ ಅವನಿಗೆ ಮದು ಎಂಬ ಹೆಸರು ಬಂದಿದೆ. ಇನ್ನೊಬ್ಬ ರಾಕ್ಷ ಕೈಟಭಾರಿ. ಬೆರಳುಗಳಿಗೆ ತುಂಬ ಕಠಿಣವಾಗಿ ತೋರಿ ಅವನಿಗೆ ಕೈಟಭ ಎಂಬ ಹೆಸರು! ರಜಸ್ತಮೋವಿಷ್ಟ ತನುಗಳಾಗಿದ್ದ ಇವರು ಬ್ರಹ್ಮನಿಂದ ವೇದವನ್ನು ಕದ್ದರೆಂದೂ ಉಲ್ಲೇಖವಿದೆ. ಮಹಾಭಾರತದ ವನಪರ್ವದಲ್ಲಿ ಮಾತ್ರವಲ್ಲದೆ ಶಿವಪುರಾಣ, ದೇವಿ ಭಾಗವತ, ಮಾರ್ಕಂಡೇಯ ಪುರಾಣ ಮತ್ತು ಕಾಳಿಕಾ ಪುರಾಣಗಳಲ್ಲಿಯೂ ಇವರ ವಿಷಯ ಬರುತ್ತದೆ. ಅವುಗಳಲ್ಲಿ ಮಧುಕೈಟಭರು ವಿಷ್ಣುವಿನ ಕಿವಿಯ ಕೆಸರಿನಿಂದ (ಕುಗ್ಗೆ) ಹುಟ್ಟಿದವರೆಂದು ಹೇಳಲಾಗಿದೆ. ಹಾಗೆಯೇ ಇವರ ಉಪಟಳವನ್ನು ಸಹಿಸಲಾರದೆ ಬ್ರಹ್ಮನು ಶ್ರೀಹರಿಯ ನಾಭಿಯ ಕಮಲ ಕೋಶದಲ್ಲಿ ಅವಿತಿಟ್ಟು ಕೊಂಡನೆಂದೂ ಹೇಳಲಾಗಿದೆ.
ಮೂಲ ...{Loading}...
ಲೀಲೆಯಲಿ ಬಳಿಕವದಿರೊಡನೆ ವಿ
ತಾಳಿಸಿತು ಮನ ಕಾದಿದರು ಬಲು
ಕಾಳಗವನವರಿತ್ತ ವರದಲಿ ಹಿಡಿದು ದಾನವರ
ಸೀಳಿ ಬಿಸುಟನು ಖಳರ ಮೇದ
ಸ್ಸಾಳಿ ಮುಳುಗಿತು ಜಲದೊಳದರಿಂ
ಮೇಲುವೆಸರಾಯ್ತಿಳೆಗೆ ಮೇದಿನಿಯೆಂಬ ನಾಮದಲಿ ॥29॥
೦೩೦ ಆ ಮಧುವನಾ ...{Loading}...
ಆ ಮಧುವನಾ ಕೈಟಭನ ಮುರಿ
ದೀ ಮಹಾತ್ಮಕನೊಡನೆ ವಾದಿಸು
ವೀ ಮರುಳನೇನೆಂಬೆನೈ ಶಿಶುಪಾಲ ಬಾಲಕನ
ಕಾಮರಿಪು ಕಲ್ಪಾಂತ ವಹ್ನಿ
ವ್ಯೋಮರೂಪನುದಾರ ಸಗುಣ ಸ
ನಾಮ ಚಿನ್ಮಯನೀತನೀತನನರಿವರಾರೆಂದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಮಧುವನ್ನು ಆ ಕೈಟಭನನ್ನು ಕೊಂದ ಈ ಮಹಾತ್ಮನೊಡನೆ ವಾದಿಸುವಂತಹ ಬಾಲಕನಾದ ಈ ಶಿಶುಪಾಲನ ಮರುಳುತನವನ್ನು ಏನೆಂದು ಹೇಳಲಿ ? ಅವನು ಕಾಮರಿಪು, ಕಲ್ಪಾಂತದ ಬೆಂಕಿ, ವ್ಯೋಮಸ್ವರೂಪನಾದವನು. ಸಗುಣನೂ ಸನಾಮನೂ ಆಗಿ ಕಾಣಿಸುತ್ತಿದ್ದಾನೆ. ಚಿನ್ಮಯನೂ ಆಗಿದ್ದಾನೆ. ಅವನನ್ನು ತಿಳಿಯಬಲ್ಲವರಾರು ?
ಪದಾರ್ಥ (ಕ.ಗ.ಪ)
ಮೂಲ ...{Loading}...
ಆ ಮಧುವನಾ ಕೈಟಭನ ಮುರಿ
ದೀ ಮಹಾತ್ಮಕನೊಡನೆ ವಾದಿಸು
ವೀ ಮರುಳನೇನೆಂಬೆನೈ ಶಿಶುಪಾಲ ಬಾಲಕನ
ಕಾಮರಿಪು ಕಲ್ಪಾಂತ ವಹ್ನಿ
ವ್ಯೋಮರೂಪನುದಾರ ಸಗುಣ ಸ
ನಾಮ ಚಿನ್ಮಯನೀತನೀತನನರಿವರಾರೆಂದ ॥30॥
೦೩೧ ಶ್ರುತಿ ಪುರಾಣ ...{Loading}...
ಶ್ರುತಿ ಪುರಾಣ ಸಮಸ್ತ ಶಾಸ್ತ್ರ
ಸ್ಮೃತಿ ವಿಭಾಗಾರ್ಥಕೆ ವಸಿಷ್ಠನ
ಸುತ ಸುತನಲೀ ವಿಮಲ ವೇದವ್ಯಾಸ ನಾಮದಲಿ
ವ್ರತಿಜನೋತ್ತಮನುದಿಸಿದನು ಯದು
ಪತಿ ಕಣಾ ತಾನೀತನೀ ದು
ರ್ಮತಿಗೆ ಗಮ್ಯವೆ ಗರುವ ದೈವದ ಗಾಢಗತಿಯೆಂದ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೇದ ಪುರಾಣ ಸಮಸ್ತ ಶಾಸ್ತ್ರ ಸ್ಮೃತಿಗಳು ಇವುಗಳನ್ನು ವಿಭಾಗಿಸುವುದಕ್ಕಾಗಿ ವಸಿಷ್ಠನ ಮಗನ ಮಗನಾಗಿ ಜನಿಸಿ ವೇದವ್ಯಾಸನೆಂಬ ಹೆಸರಿನಿಂದ ವ್ರತಿಗಳಲ್ಲೆಲ್ಲಾ ಶ್ರೇಷ್ಠನಾದವನೂ ಈ ಯದೂತ್ತುಮನೇ. ಆ ಶ್ರೇಷ್ಠ ದೈವದ ಗಹನವಾದ ರೀತಿ ಈ ದುರ್ಮತಿಗೆ ಹೇಗೆ ತಿಳಿದೀತು ?
ಪದಾರ್ಥ (ಕ.ಗ.ಪ)
ಮೂಲ ...{Loading}...
ಶ್ರುತಿ ಪುರಾಣ ಸಮಸ್ತ ಶಾಸ್ತ್ರ
ಸ್ಮೃತಿ ವಿಭಾಗಾರ್ಥಕೆ ವಸಿಷ್ಠನ
ಸುತ ಸುತನಲೀ ವಿಮಲ ವೇದವ್ಯಾಸ ನಾಮದಲಿ
ವ್ರತಿಜನೋತ್ತಮನುದಿಸಿದನು ಯದು
ಪತಿ ಕಣಾ ತಾನೀತನೀ ದು
ರ್ಮತಿಗೆ ಗಮ್ಯವೆ ಗರುವ ದೈವದ ಗಾಢಗತಿಯೆಂದ ॥31॥
೦೩೨ ಮನುವರಿವನಜ ಬಲ್ಲನೀಶ್ವರ ...{Loading}...
ಮನುವರಿವನಜ ಬಲ್ಲನೀಶ್ವರ
ನೆನೆವ ನಾರದ ಮುನಿಪ ವರ್ಣಿಪ
ಮನದಿ ಸನಕ ಸನತ್ಸುಜಾತಾದ್ಯರಿಗಿದೇ ವ್ಯಸನ
ಮುನಿಗಳಿಗೆ ಮುಕ್ತರಿಗೆ ಕರ್ಮದ
ಕಣಿಗಳಿಗೆ ಕೋವಿದರಿಗಿದೆ ಜೀ
ವನವಿದೇ ಗತಿ ಪರಮ ವೈಷ್ಣವ ತತ್ವವಿದೆಯೆಂದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈತನ ಸ್ವರೂಪವನ್ನು ಮನು ಅರಿತಿರುವನು, ಬ್ರಹ್ಮ ಬಲ್ಲನು, ಈಶ್ವರನು ನೆನೆಯುವನು. ನಾರದ ಮುನಿ ವರ್ಣಿಸುವವನು. ಸನಕ
ಸನತ್ಸುಜಾತಾದಿಗಳು, ಸದಾ ಮನಸ್ಸಿನಲ್ಲಿ ಧ್ಯಾನಿಸುತ್ತಿರುವವರು. ಮುನಿಗಳಿಗೆ, ಮುಕ್ತರಿಗೆ, ಕರ್ಮದ ಕಣಿಗಳಿಗೆ, ವಿದ್ವಾಂಸರಿಗೆಲ್ಲ ಇದೇ
ಜೀವನ, ಇದೇ ಗತಿ, ಇದೇ ಪರಮ ವೈಷ್ಣವ ತತ್ತ್ವ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಮನುವರಿವನಜ ಬಲ್ಲನೀಶ್ವರ
ನೆನೆವ ನಾರದ ಮುನಿಪ ವರ್ಣಿಪ
ಮನದಿ ಸನಕ ಸನತ್ಸುಜಾತಾದ್ಯರಿಗಿದೇ ವ್ಯಸನ
ಮುನಿಗಳಿಗೆ ಮುಕ್ತರಿಗೆ ಕರ್ಮದ
ಕಣಿಗಳಿಗೆ ಕೋವಿದರಿಗಿದೆ ಜೀ
ವನವಿದೇ ಗತಿ ಪರಮ ವೈಷ್ಣವ ತತ್ವವಿದೆಯೆಂದ ॥32॥
೦೩೩ ವೇದಕೀಸುಬ್ಬಸ ವಿರಿಞ್ಚ ...{Loading}...
ವೇದಕೀಸುಬ್ಬಸ ವಿರಿಂಚ ಸು
ರಾದಿಗಳು ಕಿಗ್ಗಡಲಲಿರೆ ಸನ
ಕಾದಿ ಮುನಿಗಳು ತಡಿಯಲಿದ್ದರು ತೆರೆಯ ಹೊಯ್ಲಿನಲಿ
ವಾದಿಗಳ ದುಸ್ತರ್ಕ ನಸಿದುದು
ನಾದದಲಿ ದುಸ್ತರ ಮುರಾರಿ ಮ
ಹೋದಧಿಯನೀ ಬಣಗು ದಾನವ ಭಂಗಿಸುವನೆಂದ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಮುರಾರಿಯು ದಾಟಲು ದುಸ್ತರವಾದಂತಹ ಮಹಾಸಾಗರ. ಇದರಲ್ಲಿ ಪ್ರವೇಶಿಸಲು ವೇದಗಳಿಗೂ ಸ್ವಲ್ಪ ಉಬ್ಬಸವೇ. ಬ್ರಹ್ಮ
ಮೊದಲಾದವರು ಕಿಗ್ಗಡಲಲ್ಲಿದ್ದಾರೆ. ಸನಕಾದಿ ಮುನಿಗಳು ಅಲೆಗಳ ಹೊಯ್ಲಿಗೆ ಸಿಕ್ಕಿ ತೀರದಲ್ಲೇ ಉಳಿದಿದ್ದಾರೆ. ವಾದಿಗಳ
ಕುತರ್ಕ ಕ್ಷೀಣಿಸಿತು. ಮುರಾರಿಯೆಂಬ ಮಹೋದಧಿಯನ್ನು ಈ ದಾನವ ಭಂಗಿಸುತ್ತಾನೆಯೇ ?
ಪದಾರ್ಥ (ಕ.ಗ.ಪ)
ಮೂಲ ...{Loading}...
ವೇದಕೀಸುಬ್ಬಸ ವಿರಿಂಚ ಸು
ರಾದಿಗಳು ಕಿಗ್ಗಡಲಲಿರೆ ಸನ
ಕಾದಿ ಮುನಿಗಳು ತಡಿಯಲಿದ್ದರು ತೆರೆಯ ಹೊಯ್ಲಿನಲಿ
ವಾದಿಗಳ ದುಸ್ತರ್ಕ ನಸಿದುದು
ನಾದದಲಿ ದುಸ್ತರ ಮುರಾರಿ ಮ
ಹೋದಧಿಯನೀ ಬಣಗು ದಾನವ ಭಂಗಿಸುವನೆಂದ ॥33॥
೦೩೪ ಅಕಟ ನಿರ್ಗುಣ ...{Loading}...
ಅಕಟ ನಿರ್ಗುಣ ತತ್ವವಿದೆ ನಾ
ಟಕದ ಬಹುರೂಪಿನಲಿ ವಿಶ್ವಾ
ತ್ಮಕ ಪರಾನಂದೈಕರಸವಿದೆ ಮನೆಯ ಕೇರಿಯಲಿ
ಪ್ರಕಟ ಮಾಯಾ ಗುಪ್ತ ಪರಮಾ
ತ್ಮಕ ಮಹಾನಿಧಿ ಸಭೆಯೊಳಿರುತಿರೆ
ವಿಕಳ ಮತಿಗಳು ವೀಚುಗೆಡುವರು ಶಿವ ಶಿವಾಯೆಂದ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಕಟಾ ! ನಿರ್ಗುಣವಾದ ತತ್ತ್ವವು ನಾಟಕದ ಬಹುರೂಪದಲ್ಲಿ ಕಾಣಿಸುತ್ತಿದೆ. ವಿಶ್ವಾತ್ಮಕವಾದ ಪರಾನಂದೈಕರಸ ಮನೆಯ ಬೀದಿಯಲ್ಲಿಯೇ ಬಂದು ನೆಲಸಿದೆ. ಪ್ರಕಟವಾದ ಮಾಯೆಯಿಂದ ಅಡಗಿಸಲ್ಪಟ್ಟಿರುವ ಪರಮಾತ್ಮ ಸ್ವರೂಪದ ಮಹಾನಿಧಿ ಈ ಸಭೆಯಲ್ಲೇ ಇರಲಾಗಿ ಕುಮತಿಗಳು ಅವನನ್ನು ಅರ್ಥ ಮಾಡಿಕೊಳ್ಳದೆ ನಾಶವಾಗುತ್ತಾರೆ. ಶಿವ ಶಿವಾ !
ಪದಾರ್ಥ (ಕ.ಗ.ಪ)
ವೀಚುಗೆಡುವರು-ನಾಶವಾಗು
ಮೂಲ ...{Loading}...
ಅಕಟ ನಿರ್ಗುಣ ತತ್ವವಿದೆ ನಾ
ಟಕದ ಬಹುರೂಪಿನಲಿ ವಿಶ್ವಾ
ತ್ಮಕ ಪರಾನಂದೈಕರಸವಿದೆ ಮನೆಯ ಕೇರಿಯಲಿ
ಪ್ರಕಟ ಮಾಯಾ ಗುಪ್ತ ಪರಮಾ
ತ್ಮಕ ಮಹಾನಿಧಿ ಸಭೆಯೊಳಿರುತಿರೆ
ವಿಕಳ ಮತಿಗಳು ವೀಚುಗೆಡುವರು ಶಿವ ಶಿವಾಯೆಂದ ॥34॥
೦೩೫ ನಿರವಯವ ತತ್ವೈಕ ...{Loading}...
ನಿರವಯವ ತತ್ವೈಕ ರಸವಿದೆ
ನರ ಮನೋಹರ ರೂಪಿನಲಿ ವ್ಯವ
ಹರಣ ಸಂಜ್ಞಾರಹಿತವಿದೆ ಕೃಷ್ಣಾಭಿಧಾನದಲಿ
ಭರಿತ ಬಹಳ ಬ್ರಹ್ಮವಿಲ್ಲಿಯೆ
ಧರಣಿಯಲಿ ಸಂಚರಿಸುತಿದೆ ಮುರ
ಹರನ ತತ್ವರಹಸ್ಯ ಮುದ್ರೆಯನರಿವರಾರೆಂದ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವಯವವಿಲ್ಲದ ತತ್ತ್ವೈಕರಸವಿದೆ ಮನೋಹರವಾದ ಮಾನವರೂಪಿನಲ್ಲಿ. ವ್ಯವಹಾರ ಮಾಡುವುದಕ್ಕೆ ಒಂದು ಹೆಸರೇ
ಇಲ್ಲದ ಆ ಪರತತ್ತ್ವ ಕೃಷ್ಣ ಎಂಬ ಹೆಸರಿನಿಂದ ಶೋಭಿಸುತ್ತಿದೆ. ಸಮಸ್ತವನ್ನು ವ್ಯಾಪಿಸಿಕೊಂಡು ಹರಡಿರುವ ಪರಬ್ರಹ್ಮವಸ್ತು ಈ ಪ್ರಪಂಚದಲ್ಲಿ ಸಂಚರಿಸುತ್ತಿದೆ. ಈ ಮುರಹರನ ತತ್ತ್ವರಹಸ್ಯ ಮುದ್ರೆಯನ್ನು ತಿಳಿಯಬಲ್ಲವರಾರು ?
ಪದಾರ್ಥ (ಕ.ಗ.ಪ)
ಅಭಿದಾನ-ಹೆಸರು
ಮೂಲ ...{Loading}...
ನಿರವಯವ ತತ್ವೈಕ ರಸವಿದೆ
ನರ ಮನೋಹರ ರೂಪಿನಲಿ ವ್ಯವ
ಹರಣ ಸಂಜ್ಞಾರಹಿತವಿದೆ ಕೃಷ್ಣಾಭಿಧಾನದಲಿ
ಭರಿತ ಬಹಳ ಬ್ರಹ್ಮವಿಲ್ಲಿಯೆ
ಧರಣಿಯಲಿ ಸಂಚರಿಸುತಿದೆ ಮುರ
ಹರನ ತತ್ವರಹಸ್ಯ ಮುದ್ರೆಯನರಿವರಾರೆಂದ ॥35॥
೦೩೬ ಏಕೆ ಕನ್ನಡಿ ...{Loading}...
ಏಕೆ ಕನ್ನಡಿ ಕುರುಡರಿಗೆ ತಾ
ನೇಕೆ ಸಾಳಗ ಶುದ್ಧ ಬಧಿರರಿ
ಗೇಕೆ ಮೂರ್ಖ ಸಮಾಜದಲಿ ಸಾಹಿತ್ಯ ಸನ್ನಾಹ
ಏಕೆ ಖಳರಿಗೆ ನಯ ವಿಧಾನ
ವ್ಯಾಕರಣ ಪಾಂಡಿತ್ಯ ಘಡ ಲೋ
ಕೈಕ ಪಾತಕನೆಂದು ನುಡಿದನು ಜರೆದು ದಾನವನ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುರುಡರಿಗೆ ಕನ್ನಡಿ ಏಕೆ, ಶುದ್ಧ ಕಿವುಡರಾದವರಿಗೆ ಸಂಗೀತವೇಕೆ ? ಮೂರ್ಖರ ಸಮಾಜದಲ್ಲಿ ಸಾಹಿತ್ಯದ
ಸಿದ್ಧತೆಯೇಕೆ ? ದುಷ್ಟರಾದವರಿಗೆ ನಯಗಾರಿಕೆಯ ವ್ಯಾಕರಣಪಾಂಡಿತ್ಯವೇಕೆ ? ಛೇ ! ಈ ಚೈದ್ಯನು ಲೋಕೈಕ ಪಾತಕ - ಎಂದು ಭೀಷ್ಮ ಆ ದಾನವನನ್ನು ನಿಂದಿಸಿದ.
ಪದಾರ್ಥ (ಕ.ಗ.ಪ)
ಸಾಳಗ - ಒಂದು ರಾಗದ ಹೆಸರು
ಮೂಲ ...{Loading}...
ಏಕೆ ಕನ್ನಡಿ ಕುರುಡರಿಗೆ ತಾ
ನೇಕೆ ಸಾಳಗ ಶುದ್ಧ ಬಧಿರರಿ
ಗೇಕೆ ಮೂರ್ಖ ಸಮಾಜದಲಿ ಸಾಹಿತ್ಯ ಸನ್ನಾಹ
ಏಕೆ ಖಳರಿಗೆ ನಯ ವಿಧಾನ
ವ್ಯಾಕರಣ ಪಾಂಡಿತ್ಯ ಘಡ ಲೋ
ಕೈಕ ಪಾತಕನೆಂದು ನುಡಿದನು ಜರೆದು ದಾನವನ ॥36॥
೦೩೭ ಹೊಗಳಿ ದಣಿಯವು ...{Loading}...
ಹೊಗಳಿ ದಣಿಯವು ವೇದತತಿ ಕೈ
ಮುಗಿದು ದಣಿಯರು ಕಮಲಭವ ಭವ
ರೊಗುಮಿಗೆಯ ಮಾನಸ ಸಮಾಧಿಯ ಸಾರ ಸತ್ವದಲಿ
ಬಗೆದು ದಣಿಯರು ಯೋಗಿಗಳು ಕೈ
ಮುಗುಚಿ ದಣಿಯರು ಕರ್ಮಿಗಳು ಮೂ
ಜಗದ ದೈವದ ದೈವ ಕೃಷ್ಣನ ಬೈವನಿವನೆಂದ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೂರು ಲೋಕದ ದೈವಕ್ಕೆ ದೈವವೆನಿಸಿದ ಕೃಷ್ಣನನ್ನು ಎಷ್ಟು ಹೊಗಳಿದರೂ ವೇದಗಳಿಗೆ ದಣಿವೆನಿಸುವುದಿಲ್ಲ. ಬ್ರಹ್ಮನೂ ಶಿವನೂ ಕೃಷ್ಣನಿಗೆ ಕೈಮುಗಿದು ದಣಿಯರು. ಯೋಗಿಗಳು ಸಾರಸತ್ವಯುತವಾದ ತಮ್ಮ ಮಾನಸ ಸಮಾಧಿಯಲ್ಲಿ ಭಾವಿಸಿ ನೋಡಿ ದಣಿಯರು.
ಕರ್ಮಿಗಳಿಗೆ ಎಷ್ಟು ಬಾರಿ ಕೈಮುಗಿದರೂ ತೃಪ್ತಿಯಿಲ್ಲ ಅಂತಹ ದೈವವನ್ನು ಇವನು ಬೈಯುತ್ತಿದ್ದಾನೆ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಹೊಗಳಿ ದಣಿಯವು ವೇದತತಿ ಕೈ
ಮುಗಿದು ದಣಿಯರು ಕಮಲಭವ ಭವ
ರೊಗುಮಿಗೆಯ ಮಾನಸ ಸಮಾಧಿಯ ಸಾರ ಸತ್ವದಲಿ
ಬಗೆದು ದಣಿಯರು ಯೋಗಿಗಳು ಕೈ
ಮುಗುಚಿ ದಣಿಯರು ಕರ್ಮಿಗಳು ಮೂ
ಜಗದ ದೈವದ ದೈವ ಕೃಷ್ಣನ ಬೈವನಿವನೆಂದ ॥37॥
೦೩೮ ಈತ ಕಾಣಿರೆ ...{Loading}...
ಈತ ಕಾಣಿರೆ ಘನ ಚರಾಚರ
ಚೇತನತ್ವದಿ ವಿಹಿತ ಬೀಜ
ವ್ರಾತವನು ತುಂಬಿದನು ಪಡಗಿನೊಳೌಕಿ ಬಾಲ್ಯದಲಿ
ಆತ ತಮನೆಂಬಸುರನನು ಕರ
ಘಾತಿಯಿಂದವೆ ಕೆಡಹಿ ವೇದವ
ನೀತ ತಂದನು ಮತ್ಸ್ಯರೂಪಿನೊಳೆಂದನಾ ಭೀಷ್ಮ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈತನನ್ನು ನೋಡಿ. ಸೃಷ್ಟಿಯ ಆದಿಯಲ್ಲಿ ಘನ ಚರಾಚರ ಚೇತನತ್ವದಿಂದ ಕೂಡಿದ ಬೀಜರಾಶಿಯನ್ನು ಹಡಗಿನಲ್ಲಿ ಅವುಕಿ
ತುಂಬಿಟ್ಟಿದ್ದ. ಆಗ ತಮನೆಂಬ ಅಸುರನು ಅದನ್ನು ಅಪಹರಿಸಲು ಬಂದಾಗ, ಇನ್ನೂ ಬಾಲ್ಯದಲ್ಲೇ ಕೇವಲ ತನ್ನ ಕೈಹೊಡೆತದಿಂದಲೇ ಕೊಂದು ಮತ್ಸ್ಯರೂಪಿನಿಂದ ವೇದವನ್ನು ಉದ್ಧರಿಸಿ ತಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಈತ ಕಾಣಿರೆ ಘನ ಚರಾಚರ
ಚೇತನತ್ವದಿ ವಿಹಿತ ಬೀಜ
ವ್ರಾತವನು ತುಂಬಿದನು ಪಡಗಿನೊಳೌಕಿ ಬಾಲ್ಯದಲಿ
ಆತ ತಮನೆಂಬಸುರನನು ಕರ
ಘಾತಿಯಿಂದವೆ ಕೆಡಹಿ ವೇದವ
ನೀತ ತಂದನು ಮತ್ಸ್ಯರೂಪಿನೊಳೆಂದನಾ ಭೀಷ್ಮ ॥38॥
೦೩೯ ಖೂಳ ನಾಯ್ಗಳು ...{Loading}...
ಖೂಳ ನಾಯ್ಗಳು ಬಲ್ಲರೇ ಶಿಶು
ಪಾಲಕಾದಿ ದೊಠಾರರೀ ಗೋ
ಪಾಲ ಕಾಣಿರೆ ಕೂರ್ಮವೇಷವ ಧರಿಸಿ ಮೇದಿನಿಯ
ಸಾಲ ಹೆಡೆಯಲಿ ಹೊತ್ತ ಪನ್ನಗ
ಪಾಲಕನನಾ ಮಂದರದ ಕಡ
ಗೋಲನಾಂತ ಮಹಾತ್ಮನೀತನನರಿವರಾರೆಂದ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಿಶುಪಾಲನೇ ಮೊದಲಾದ ಖೂಳನಾಯಿಗಳು, ದೊಠಾರರು ಗೋಪಾಲನನ್ನು ಬಲ್ಲರೇ ? ಕ್ಷೀರಸಾಗರದ ಮಥನ ಮಾಡಿದ ಸಂದರ್ಭದಲ್ಲಿ, ತನ್ನ ಸಾಲಾಗಿದ್ದ ಹೆಡೆಗಳ ಮೇಲೆ ಭೂಮಿಯನ್ನು ಹೊತ್ತಿದ್ದ ಸರ್ಪರಾಜ ಆದಿಶೇಷನನ್ನು, ಕಡೆಗೋಲಾಗಿದ್ದ ಮಂದರ ಪರ್ವತವನ್ನು ಕೂರ್ಮ ವೇಷದಿಂದ ತನ್ನ ಬೆನ್ನಿನ ಮೇಲೆ ಹೊತ್ತಿದ್ದ ಮಹಾತ್ಮ ಈತನೇ ನೋಡಿ. ಈತನನ್ನು ಅರಿಯಬಲ್ಲವರಾರು ?
ಪದಾರ್ಥ (ಕ.ಗ.ಪ)
ದೊಠಾರ-ನಿಂದಕ
ಮೂಲ ...{Loading}...
ಖೂಳ ನಾಯ್ಗಳು ಬಲ್ಲರೇ ಶಿಶು
ಪಾಲಕಾದಿ ದೊಠಾರರೀ ಗೋ
ಪಾಲ ಕಾಣಿರೆ ಕೂರ್ಮವೇಷವ ಧರಿಸಿ ಮೇದಿನಿಯ
ಸಾಲ ಹೆಡೆಯಲಿ ಹೊತ್ತ ಪನ್ನಗ
ಪಾಲಕನನಾ ಮಂದರದ ಕಡ
ಗೋಲನಾಂತ ಮಹಾತ್ಮನೀತನನರಿವರಾರೆಂದ ॥39॥
೦೪೦ ಇವನ ಪಾಡೇ ...{Loading}...
ಇವನ ಪಾಡೇ ಮುನ್ನ ಕೃತಯುಗ
ದವರೊಳಧಿಕ ಹಿರಣ್ಯಲೋಚನ
ನವನಿಯನು ಕೊಂಡೋಡಿ ಹೊಕ್ಕನು ಘನ ರಸಾತಳವ
ಅವನ ಬೆಂಬತ್ತಿದನು ಯಜ್ಞ
ಪ್ರವರ ದೇಹನು ವೇದಮಯ ನಿ
ರ್ಭವ ವಿಮೋಹನ ಘನ ವರಾಹನೆ ಕೃಷ್ಣ ತಾನೆಂದ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವನಿಂದ ಸಾಧ್ಯವೇ ? ಹಿಂದೆ ಕೃತಯುಗದಲ್ಲಿ, ವೀರರಲ್ಲೆಲ್ಲ ಬಹು ಬಲಶಾಲಿಯಾದ ಹಿರಣ್ಯಾಕ್ಷ ಭೂಮಿಯನ್ನು ಹೊತ್ತುಕೊಂಡು ಹೋಗಿ ರಸಾತಳವನ್ನು ಹೊಕ್ಕನು. ಶ್ರೇಷ್ಠ ಯಜ್ಞದೇಹಿಯೂ ವೇದಮಯನೂ ನಿರ್ಭವನೂ ವಿಮೋಹನನೂ ಘನನೂ ಆದ ವರಾಹನು ಬೆಂಬತ್ತಿದ. ಆ ವರಾಹನೇ ಕೃಷ್ಣನು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಇವನ ಪಾಡೇ ಮುನ್ನ ಕೃತಯುಗ
ದವರೊಳಧಿಕ ಹಿರಣ್ಯಲೋಚನ
ನವನಿಯನು ಕೊಂಡೋಡಿ ಹೊಕ್ಕನು ಘನ ರಸಾತಳವ
ಅವನ ಬೆಂಬತ್ತಿದನು ಯಜ್ಞ
ಪ್ರವರ ದೇಹನು ವೇದಮಯ ನಿ
ರ್ಭವ ವಿಮೋಹನ ಘನ ವರಾಹನೆ ಕೃಷ್ಣ ತಾನೆಂದ ॥40॥
೦೪೧ ತೂಳಿದನು ದಣ್ಡೆಯಲಿ ...{Loading}...
ತೂಳಿದನು ದಂಡೆಯಲಿ ದೈತ್ಯನ
ಸೀಳಿದನು ದಿಕ್ಕರಿ ಫಣೀಂದ್ರರ
ಮೇಲೆ ಧರಣಿಯ ನಿಲಿಸಿದನು ಸಂತವಿಸಿದನು ಜಗವ
ಹೇಳಲಜ ರುದ್ರಾಮರೇಂದ್ರರ
ತಾಳಿಗೆಗಳೊಣಗಿದವು ಭಂಗಿ ಛ
ಡಾಳಿಸಿತಲಾ ಚೈದ್ಯ ಭೂಪತಿಗೆಂದನಾ ಭೀಷ್ಮ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮುದ್ರದಂಡೆಯಲ್ಲಿ ಆ ದೈತ್ಯ ಹಿರಣ್ಯಾಕ್ಷನನ್ನು ಹಿಡಿದು ಸೀಳಿದ. ದಿಗ್ಗಜಗಳು ಮತ್ತು ಫಣೀಂದ್ರರ ಮೇಲೆ ಭೂಮಿಯನ್ನು ಹೊರಿಸಿ ಜಗತ್ತನ್ನು ಸಾಂತ್ವನಗೊಳಿಸಿದ. ಶ್ರೀಕೃಷ್ಣನ ಮಹಿಮೆಯನ್ನು ಹೇಳಿ ಹೇಳಿ ಬ್ರಹ್ಮ ಶಿವ ದೇವೇಂದ್ರರ ಗಂಟಲು ಒಣಗಿದವು. ಈ ರಾಜ ಚೈದ್ಯನಿಗೆ ಭಂಗಿಯ ಪ್ರಭಾವ ನೆತ್ತಿಗೇರಿದೆ ಎಂದ ಭೀಷ್ಮ.
ಪದಾರ್ಥ (ಕ.ಗ.ಪ)
ತೂಳ್-ಆಕ್ರಮಣ ಮಾಡು.
ಮೂಲ ...{Loading}...
ತೂಳಿದನು ದಂಡೆಯಲಿ ದೈತ್ಯನ
ಸೀಳಿದನು ದಿಕ್ಕರಿ ಫಣೀಂದ್ರರ
ಮೇಲೆ ಧರಣಿಯ ನಿಲಿಸಿದನು ಸಂತವಿಸಿದನು ಜಗವ
ಹೇಳಲಜ ರುದ್ರಾಮರೇಂದ್ರರ
ತಾಳಿಗೆಗಳೊಣಗಿದವು ಭಂಗಿ ಛ
ಡಾಳಿಸಿತಲಾ ಚೈದ್ಯ ಭೂಪತಿಗೆಂದನಾ ಭೀಷ್ಮ ॥41॥
೦೪೨ ಆ ಹಿರಣ್ಯಾಕ್ಷನ ...{Loading}...
ಆ ಹಿರಣ್ಯಾಕ್ಷನ ಸಹೋದರ
ನೀ ಹರಿಯನವಗಡಿಸಿ ದೈವ
ದ್ರೋಹಿ ಬಹುವಿಧ ವ್ಯಥೆಗಳಲಿ ಬೇಸರಿಸಿದನು ಮಗನ
ಆಹವದಲಚ್ಯುತ ಮುಕುಂದ ಮ
ಹಾಹಿತಲ್ಪ ಮಹೇಂದ್ರವಂದ್ಯ
ತ್ರಾಹಿಯೆಂದನವರತ ತುತಿಸಿದನಂದು ಪ್ರಹ್ಲಾದ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಹಿರಣ್ಯಾಕ್ಷನ ಸಹೋದರ ಹಿರಣ್ಯಕಶಿಪು ಆ ಹರಿಯನ್ನು ವಿರೋಧಿಸಿ ದೈವದ್ರೋಹಿಯಾದ. ಅನೇಕ ಬಗೆಯ ಕಷ್ಟಗಳನ್ನುಂಟುಮಾಡಿ ತನ್ನ ಮಗ ಪ್ರಹ್ಲಾದನಿಗೆ ಬೇಸರವನ್ನುಂಟುಮಾಡಿದ. ಆ ಸಂದರ್ಭದಲ್ಲಿ ಪ್ರಹ್ಲಾದ ಹರಿಯನ್ನು ಅಚ್ಯುತ,
ಮುಕುಂದ, ಮಹಾಹಿತಲ್ಪ, ಮಹೇಂದ್ರವಂದ್ಯ ಕಾಪಾಡು ಎಂದು ನಿರಂತರವಾಗಿ ಸ್ತುತಿಸಿದ.
ಪದಾರ್ಥ (ಕ.ಗ.ಪ)
ತುತಿಸು- ಸ್ತುತಿಸು
ಮೂಲ ...{Loading}...
ಆ ಹಿರಣ್ಯಾಕ್ಷನ ಸಹೋದರ
ನೀ ಹರಿಯನವಗಡಿಸಿ ದೈವ
ದ್ರೋಹಿ ಬಹುವಿಧ ವ್ಯಥೆಗಳಲಿ ಬೇಸರಿಸಿದನು ಮಗನ
ಆಹವದಲಚ್ಯುತ ಮುಕುಂದ ಮ
ಹಾಹಿತಲ್ಪ ಮಹೇಂದ್ರವಂದ್ಯ
ತ್ರಾಹಿಯೆಂದನವರತ ತುತಿಸಿದನಂದು ಪ್ರಹ್ಲಾದ ॥42॥
೦೪೩ ಕಾದುದೀತನ ನಾಮವಾ ...{Loading}...
ಕಾದುದೀತನ ನಾಮವಾ ಪ್ರ
ಹ್ಲಾದನಾಸರು ಬೇಸರನು ಬಳಿ
ಕೀ ದಯಾಂಬುಧಿ ದನುಜಪತಿ ದಿಟ್ಟಿಸಿದ ಕಂಬದಲಿ
ಆದುದಾವಿರ್ಭಾವ ಸಿಡಿಲಿನ
ಸೋದರದ ಕಣ್ಣುಗಳ ಭಾಳದ
ಬೀದಿಗಿಚ್ಚಿನ ರೌದ್ರದಲಿ ನರಸಿಂಹ ರೂಪಾಗಿ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹರಿಯ ನಾಮ ಸ್ಮರಣೆಯೇ ಪ್ರಹ್ಲಾದನ ಕಷ್ಟಗಳನ್ನೆಲ್ಲ ಪರಿಹಾರ ಮಾಡಿಬಿಟ್ಟಿತು. ಆ ದಯಾಂಬುಧಿ ಹರಿ ನರಸಿಂಹನ
ರೂಪತಳೆದು ಆ ದನುಜಪತಿಯಾದ ಹಿರಣ್ಯಕಶಿಪು ದಿಟ್ಟಿಸಿದ ಕಂಬದಲ್ಲಿಯೇ ಆವಿರ್ಭಾವವಾದ. ಸಿಡಿಲಿನ ಸಹೋದರನೆಂಬಂತಹ ಕಣ್ಣುಗಳಿಂದ ಹಣೆಯಲ್ಲಿ ಸ್ಚೇಚ್ಛೆಯಾಗಿ ಹರಡುತ್ತಿರುವ ಬೆಂಕಿಯ ಜ್ವಾಲೆಯೇ ಎಂಬಂತಹ ರೌದ್ರದಿಂದ ಆ ದನುಜನನ್ನು ಎದುರಿಸಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಕಾದುದೀತನ ನಾಮವಾ ಪ್ರ
ಹ್ಲಾದನಾಸರು ಬೇಸರನು ಬಳಿ
ಕೀ ದಯಾಂಬುಧಿ ದನುಜಪತಿ ದಿಟ್ಟಿಸಿದ ಕಂಬದಲಿ
ಆದುದಾವಿರ್ಭಾವ ಸಿಡಿಲಿನ
ಸೋದರದ ಕಣ್ಣುಗಳ ಭಾಳದ
ಬೀದಿಗಿಚ್ಚಿನ ರೌದ್ರದಲಿ ನರಸಿಂಹ ರೂಪಾಗಿ ॥43॥
೦೪೪ ಉಗುರೊಳಸುರನ ಕರುಳ ...{Loading}...
ಉಗುರೊಳಸುರನ ಕರುಳ ದಂಡೆಯ
ನುಗಿದು ಕೊರಳಲಿ ಹಾಯ್ಕಿ ದೈತ್ಯನ
ಮಗನ ಪತಿಕರಿಸಿದನು ತತ್ಕ್ರೋಧಾಗ್ನಿ ಪಲ್ಲವಿಸಿ
ಭುಗಿ ಭುಗಿಲ್ ಭುಗಿಲೆಂದು ಕಬ್ಬೊಗೆ
ನೆಗೆಯಲುರಿ ಹೊಡೆದಬುಜಜಾಂಡದ
ಬಗರಗೆಯ ಭೇದಿಸಿತು ಈತನ ಕೆಣಕಬೇಡೆಂದ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನ ಉಗುರುಗಳಿಂದ ಆ ಅಸುರನ ಹೊಟ್ಟೆಯನ್ನು ಬಗೆದು ಕರುಳು ತೆಗೆದು ತನ್ನ ಕುತ್ತಿಗೆಗೆ ಮಾಲೆ ಹಾಕಿಕೊಂಡ. ಅವನ ಮಗನನ್ನು ಕಾಪಾಡಿದ. ಅವನ ಕ್ರೋಧಾಗ್ನಿ ಹರಡಿ ಭುಗಿ ಭುಗಿಲ್ ಭುಗಿಲ್ ಎಂದು ಕರಿಯ ಹೊಗೆ ಮೇಲೆದ್ದು ಉರಿ ಬ್ರಹ್ಮಾಂಡದ ಬಹಿರಾವರಣದ ಚಿಪ್ಪನ್ನು, ಭೇದಿಸಿತು. ಚೈದ್ಯನಿಗೆ ಇದನ್ನು ಹೇಳಿ, ಈ ಕೃಷ್ಣನನ್ನು ಕೆಣಕಬೇಡ ಎಂದು ಸೂಚಿಸಿದ.
ಪದಾರ್ಥ (ಕ.ಗ.ಪ)
ಪತಿಕರಿಸು-ರಕ್ಷಿಸು, ಬಗರಗೆ-ಚಿಪ್ಪು
ಮೂಲ ...{Loading}...
ಉಗುರೊಳಸುರನ ಕರುಳ ದಂಡೆಯ
ನುಗಿದು ಕೊರಳಲಿ ಹಾಯ್ಕಿ ದೈತ್ಯನ
ಮಗನ ಪತಿಕರಿಸಿದನು ತತ್ಕ್ರೋಧಾಗ್ನಿ ಪಲ್ಲವಿಸಿ
ಭುಗಿ ಭುಗಿಲ್ ಭುಗಿಲೆಂದು ಕಬ್ಬೊಗೆ
ನೆಗೆಯಲುರಿ ಹೊಡೆದಬುಜಜಾಂಡದ
ಬಗರಗೆಯ ಭೇದಿಸಿತು ಈತನ ಕೆಣಕಬೇಡೆಂದ ॥44॥
೦೪೫ ತ್ರೇತೆಯಲಿ ಬಲಿರಾಜ್ಯ ...{Loading}...
ತ್ರೇತೆಯಲಿ ಬಲಿರಾಜ್ಯ ಭುವನ
ಖ್ಯಾತವಾಯ್ತು ತದಶ್ವಮೇಧದೊ
ಳೀತ ವಾಮನನಾಗಿ ಯಾಚಿಸಿದನು ಪದತ್ರಯವ
ಭೂತಳವನಲ್ಲಿಂದ ಬಳಿಕ
ಪ್ರೀತಿಯಲಿ ಕಮಲಜ ಕಟಾಹೋ
ದ್ಭೂತ ಚರಣದೊಳಳೆಯಲಾದುದು ಧರಣಿ ಪದಯುಗಕೆ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತ್ರೇತಾಯುಗದಲ್ಲಿ ಬಲಿಯ ರಾಜ್ಯಭಾರ ಲೋಕವಿಖ್ಯಾತವಾಗಿತ್ತು. ಅವನು ಕೈಕೊಂಡ ಅಶ್ವಮೇಧಯಾಗದಲ್ಲಿ ಈ ಹರಿ ಹೋಗಿ
ವಾಮನನಾಗಿ ಮೂರು ಹೆಜ್ಜೆ ಭೂಮಿಯನ್ನು ಯಾಚಿಸಿದ. ದಾನ ಪಡೆದ ಮೇಲೆ ಒಂದು ಹೆಜ್ಜೆಗೆ ಭೂಮಿಯನ್ನೆಲ್ಲ ಅಳೆದ. ಅನಂತರ
ಎರಡನೆಯ ಹೆಜ್ಜೆಗೆ ಬ್ರಹ್ಮಾಂಡದ ಮೇಲಿನ ಅರ್ಧಗೋಳವನ್ನು ಅಳೆದುಕೊಂಡ.
ಪದಾರ್ಥ (ಕ.ಗ.ಪ)
ಕಮಲಜ ಕಟಾಹೋದ್ಭೂತ - ಬ್ರಹ್ಮನಿಂದ ಸೃಷ್ಟಿಯಾದದ್ದೆಲ್ಲವನ್ನೂ (ಇಡೀ ಬ್ರಹ್ಮಾಂಡವನ್ನು)
ಕಟಾಹ - ಗೋಳ
ಟಿಪ್ಪನೀ (ಕ.ಗ.ಪ)
ಬಲಿ : -
ಬಲಿಪಾಡ್ಯಮಿ ಎಂಬ ಹಬ್ಬ ಇಂದಿಗೂ ಆಚರಣೆಯಲ್ಲಿದೆ. ಬಲಿ ಎಂಬ ರಾಕ್ಷಸನು ಪ್ರಹ್ಲಾದನ ಮೊಮ್ಮಗ, ವಿರೋಚನನ ಮಗ, ಬಾಣಾಸುರನ ತಂದೆ, ವಿಷ್ಣುವು ವಾಮನ ರೂಪದಲ್ಲಿ ಬಂದು ಇವನನ್ನು ಭೂಗತಗೊಳಿಸಬೇಕಾಯಿತು. ಇವನು ಐಶ್ವರ್ಯ ಬಲ ಸಮ್ಮೂಢನಾಗಿದ್ದನೆಂದು ಭಾರತ ಹೇಳುತ್ತದೆ. ಏಕೆಂದರೆ ಉಳಿದ ದೇವತೆಗಳಿಗೂ ಇವನನ್ನು ಗೆಲ್ಲಲಾಗಲಿಲ್ಲ. (ಅವಧ್ಯೈಃಸರ್ವದೇವತೈಃ)
ಬಲಿ ಮಹಾಬಲಿಷ್ಠನಾದ ರಾಕ್ಷಸ ಚಕ್ರವರ್ತಿಯಾಗಿದ್ದ. ಇಂದ್ರಾದಿ ಸಮಸ್ತ ದೇವತೆಗಳ ಮೇಲೆ ಯುದ್ದ ಮಾಡಿ ಅವರನ್ನೆಲ್ಲ ಗೆದ್ದಿದ್ದ. ಮಹಾಸಮರ್ಥನಾದ ಆತನ ಆಡಳಿತದಲ್ಲಿ ದೇವತೆಗಳು ಮತ್ತು ಬ್ರಾಹ್ಮಣರನ್ನು ಹೊರತುಪಡಿಸಿ ಉಳಿದವರೆಲ್ಲ ಪರಮಸುಖಿಗಳಾಗಿದ್ದರು. ಈ ವಿಜಯದ ಗಾಥೆಯನ್ನು ಆದಿಪರ್ವದ ಅರವತ್ತೈದನೆಯ ಪರ್ವ ವಿವರಿಸುತ್ತದೆ. ವಿಶ್ವಜಿದ್ಯಾಗವನ್ನು ಮಾಡಿ ಅಗ್ನಿಯನ್ನು ಮೆಚ್ಚಿಸಿ ರಥಾದಿಗಳನ್ನು ಪಡೆದಿದ್ದ. ಇವನ ಆಸ್ಥಾನದಲ್ಲಿ ನಲವತ್ತೆರಡು ಸಾವಿರ ಗಂಧರ್ವರು ಇವನೆದುರಿಗೆ ಹಾಡಿ ನರ್ತಿಸುತ್ತಿದ್ದರು. ಸ್ವಯಂ ಬ್ರಹ್ಮನೇ ಬಲಿಚಕ್ರವರ್ತಿಗೆ ತನ್ನ ಕೊರಳ ಹಾರವನ್ನು ಕೊಟ್ಟಿದ್ದ. ದಿಗ್ವಿಜಯದಿಂದಾಗಿ ಅಜೇಯನಾಗಿ ಉಳಿದು ತನ್ನ ಪ್ರತಾಪವನ್ನು ಹೆಚ್ಚಿಸಿಕೊಂಡ
ಬಲಿಯ ಪ್ರತಾಪದೊಂದಿಗೆ ಅವನ ಗರ್ವವೂ ಏರುತ್ತ ಹೋಯಿತು. ದೇವೇಂದ್ರನು ದೇವತೆಗಳನ್ನು ಬ್ರಹ್ಮನ ಬಳಿಗೆ ಕರೆದುಕೊಡು ಹೋಗಿ ಬಲಿಯ ವಿಷಯವನ್ನು ಚರ್ಚಿಸಿದ. ಎಲ್ಲ ವಿಷ್ಣುವಿನ ಬಳಿಗೆ ಬಂದರು. ವಿಷ್ಣವೇ ಅವತಾರವೆತ್ತಿ ಬಂದು ಬಲಿಯ ಮದವನ್ನು ಅಡಗಿಸಬೇಕೆಂದು ದೇವತೆಗಳು ಕೋರಿದರು. ಅಲ್ಲಿ ಅದಿತಿಯು ವಿಷ್ಣುವು ತನ್ನ ಮಗುವಾಗಿ ಹುಟ್ಟಿ ಬಲಿಯನ್ನು ಕೊಲ್ಲಬೇಕೆಂದು ಪ್ರಾರ್ಥನೆ ಸಲ್ಲಿಸಿದಳು.
ಈ ಮಧ್ಯೆ ತನ್ನ ಬಲ ಏಕೋ ತಗ್ಗಿದೆ ಎನ್ನಿಸಿ ಬಲಿಚಕ್ರವರ್ತಿಯು ಅದಕ್ಕೆ ಏನು ಮಾಡಬೇಕೆಂದು ಅಜ್ಜ ಪ್ರಹ್ಲಾದನ ಸಲಹೆ ಕೇಳಿದ. ಪ್ರಹ್ಲಾದನು ಹಿತವಚನ ನೀಡಲು ಹೋದರೆ ‘‘ನಿಮ್ಮ ವಿಷ್ಣುವಿಗಿಂತ ನಮ್ಮ ರಾಕ್ಷಸರೇ ಮಹಾಬಲಶಾಲಿಗಳು’’ ಎಂದು ಗರ್ವದಿಂದ ಹೇಳಿದ. ವಿಷ್ಣುನಿಂದೆಯನ್ನು ಎಂದೂ ಸಹಿಸದ ಪ್ರಹ್ಲಾದನು ಸಿಟ್ಟಿನಿಂದ ‘‘ನಿನ್ನ ಸಾಮ್ರಾಜ್ಯವು ಹಾಳಾಗಲಿ’’ ಎಂದು ಉಗ್ರವಾದ ಶಾಪವನ್ನು ಕೊಟ್ಟ. ಕೂಡಲೇ ಬಲಿ ಪ್ರಹ್ಲಾದನ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ.
ಪರಿಹಾರಾರ್ಥವಾಗಿ ಬಲಿಚಕ್ರವರ್ತಿಯು ನರ್ಮದಾನದಿಯ ತೀgದಲ್ಲಿ ಭಾರಿಯಜ್ಞ ಮಂಟಪವನ್ನು ನಿರ್ಮಿಸಿ ಯಜ್ಞವನ್ನು ಆರಂಭಿಸಿದ. ಈ ವೇಳೆಗೆ ಅದಿತಿಯ ಹೊಟ್ಟೆಯಲ್ಲಿ ವಾಮನನಾಗಿ ಹುಟ್ಟಿದ್ದ ವಿಷ್ಣು ವಾಮನ ರೂಪದಲ್ಲಿ ಯಜ್ಞಶಾಲೆಗೆ ಬಂದ. ಅವನ ರೂಪ-ಗುಣಗಳಿಗೆ ಮರುಳಾದ ಬಲಿ ಏನು ಬೇಕು? ಎಂದಾಗ ಮೂರು ಹೆಜ್ಜೆ ಭೂಮಿಯನ್ನು ವಾಮನನನ್ನು ಬೇಡಿದ. ಕೂಡಲೇ ಧಾರಾ ಪುರಸ್ಸರವಾಗಿ ದಾನ ಮಾಡಲು ಬಲಿ ಒಪ್ಪಿದ. ಕಮಂಡಲುವಿನಿಂದ ನೀರು ಹರಿಯದಂತೆ ಅಡ್ಡಿ ಬಂದ ಶುಕ್ರಾಚಾರ್ಯರ ಕಣ್ಣು ಹಾಳಾಯಿತು. ಮೂರನೆಯ ಹೆಜ್ಜೆಯಲ್ಲಿ ವಾಮನನು ಬಲಿಯನ್ನು ನಾಶಮಾಡಲು ಸಿದ್ಧನಾದ.ಆದರೆ ಬಲಿಯ ಹೆಂಡತಿ ವಿಂಧ್ಯತಾವಳಿಯು ಪತಿಭಿಕ್ಷೆ ಬೇಡಿದಾಗ ವಿಷ್ಣುವು ಕರುಣಿಸಿ ಬಲಿಯನ್ನು ಪಾತಾಳಕ್ಕೆ ತಳ್ಳಿದರೂ ಅಲ್ಲಿ ಅವನು ಸಂಸಾರ ಸಮೇತ ವಾಸಮಾಡಲು ಅವಕಾಶ ಮಾಡಿಕೊಟ್ಟು ‘‘ನಾನೇ ಗದಾಧರನಾಗಿ ದ್ವಾರಪಾಲಕನಾಗಿ ನಿಲ್ಲುತ್ತೇನೆ’’ ಎಂದು ಆಶ್ವಾಸನೆಯನ್ನು ಕೊಟ್ಟ. ರಾಕ್ಷಸನಾದರೂ ಬಲಿಚಕ್ರವರ್ತಿಯು ‘ಪರಶುರಾಮಕ್ಷೇತ್ರ’ (ಈಗಿನ ಕೇರಳ ಮತ್ತು ಕರಾವಳಿ)ದಲ್ಲಿ ಒಬ್ಬ ಆರಾಧ್ಯದೈವವಾಗಿದ್ದಾನೆ.
ಮೂಲ ...{Loading}...
ತ್ರೇತೆಯಲಿ ಬಲಿರಾಜ್ಯ ಭುವನ
ಖ್ಯಾತವಾಯ್ತು ತದಶ್ವಮೇಧದೊ
ಳೀತ ವಾಮನನಾಗಿ ಯಾಚಿಸಿದನು ಪದತ್ರಯವ
ಭೂತಳವನಲ್ಲಿಂದ ಬಳಿಕ
ಪ್ರೀತಿಯಲಿ ಕಮಲಜ ಕಟಾಹೋ
ದ್ಭೂತ ಚರಣದೊಳಳೆಯಲಾದುದು ಧರಣಿ ಪದಯುಗಕೆ ॥45॥
೦೪೬ ನೆರೆಯದೀ ನೆಲ ...{Loading}...
ನೆರೆಯದೀ ನೆಲ ನೆಗಹಿದಂಘ್ರಿಗೆ
ಮುರಿದುದಬುಜ ಭವಾಂಡ ಖರ್ಪರ
ದೊರತೆ ಬಹಿರಾವರಣ ಜಲ ಗಂಗಾಭಿಧಾನದಲಿ
ಎರಗಿತೀ ಗೋವಿಂದನಾರೆಂ
ದರಿಯೆಲಾ ಹರಿಯೊಡನೆ ಜಂಬುಕ
ನೊರಲಿದರೆ ನಾನೇನ ಹೇಳುವೆನೆಂದನಾ ಭೀಷ್ಮ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎತ್ತಿದ ಎರಡನೆಯ ಹೆಜ್ಜೆಗೆ ನೆಲ ಸಾಕಾಗಲಿಲ್ಲ. ಹೆಜ್ಜೆ ತಗುಲಿ ಬ್ರಹ್ಮಾಂಡದ ಮೇಲಿನ ಚಿಪ್ಪು ಮುರಿಯಿತು. ಬಹಿರಾವರಣದಲ್ಲಿದ್ದ ಜಲ ಆ ಸಂದಿನ ಮೂಲಕ ಒಳಕ್ಕೆ ಹರಿಯತೊಡಗಿತು. ಅದೇ ಗಂಗೆ. ಗೋವಿಂದನು ಯಾರೆಂಬುದನ್ನು ಈಗಲಾದರೂ ತಿಳಿದುಕೊಳ್ಳಯ್ಯ. ಸಿಂಹವನ್ನೆದುರಿಸಿ ನರಿ ಊಳಿಡತೊಡಗಿದರೆ ನಾನೇನು ಹೇಳಲಿ ?
ಪದಾರ್ಥ (ಕ.ಗ.ಪ)
ಮೂಲ ...{Loading}...
ನೆರೆಯದೀ ನೆಲ ನೆಗಹಿದಂಘ್ರಿಗೆ
ಮುರಿದುದಬುಜ ಭವಾಂಡ ಖರ್ಪರ
ದೊರತೆ ಬಹಿರಾವರಣ ಜಲ ಗಂಗಾಭಿಧಾನದಲಿ
ಎರಗಿತೀ ಗೋವಿಂದನಾರೆಂ
ದರಿಯೆಲಾ ಹರಿಯೊಡನೆ ಜಂಬುಕ
ನೊರಲಿದರೆ ನಾನೇನ ಹೇಳುವೆನೆಂದನಾ ಭೀಷ್ಮ ॥46॥
೦೪೭ ರಾಯ ಕೇಳೈ ...{Loading}...
ರಾಯ ಕೇಳೈ ವಿಮಲ ದತ್ತಾ
ತ್ರೇಯವೆಸರಲಿ ಧರ್ಮವನು ಪೂ
ರಾಯದಲಿ ಪಲ್ಲವಿಸಿದನು ಹೈಹಯನ ರಾಜ್ಯದಲಿ
ಬಾಯಿಬಡಿಕರು ಬಗುಳಿದರೆ ಹರಿ
ಯಾಯತಿಕೆ ಪಾಸಟಿಯೆ ನಿಗಮದ
ಬಾಯ ಬೀಯಗವೀ ಮುಕುಂದನನರಿವರಾರೆಂದ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೈಹಯ ರಾಜ್ಯದಲ್ಲಿ ದತ್ತಾತ್ರೇಯನೆಂಬ ಹೆಸರಿನಿಂದ ಉದಿಸಿ ಪೂರ್ಣಸ್ವರೂಪದಲ್ಲಿ ಧರ್ಮವನ್ನು ನೆಲೆಗೊಳಿಸಿದವನು.
ಬಾಯಿಬಡುಕರು ಬಗುಳಿದರೆ ಈ ಹರಿಯ ಮಹಿಮೆಗೆ ಸರಿದೂಗುತ್ತದೆಯೇ ? ಈ ಮುಕುಂದ ನಿಗಮದ ಬಾಯಿಗೆ ಬೀಗ ಇದ್ದ ಹಾಗೆ !
ಪದಾರ್ಥ (ಕ.ಗ.ಪ)
ಆಯತಿಕೆ- ಮಹಿಮೆ
ಪಾಸಟಿ-ಸಮ, ಸರಿದೂಗು
ಮೂಲ ...{Loading}...
ರಾಯ ಕೇಳೈ ವಿಮಲ ದತ್ತಾ
ತ್ರೇಯವೆಸರಲಿ ಧರ್ಮವನು ಪೂ
ರಾಯದಲಿ ಪಲ್ಲವಿಸಿದನು ಹೈಹಯನ ರಾಜ್ಯದಲಿ
ಬಾಯಿಬಡಿಕರು ಬಗುಳಿದರೆ ಹರಿ
ಯಾಯತಿಕೆ ಪಾಸಟಿಯೆ ನಿಗಮದ
ಬಾಯ ಬೀಯಗವೀ ಮುಕುಂದನನರಿವರಾರೆಂದ ॥47॥
೦೪೮ ಮಿಡುಕಿದರೆ ರಾವಣನ ...{Loading}...
ಮಿಡುಕಿದರೆ ರಾವಣನ ಸೆರೆಯಲಿ
ಕೆಡೆಹಿದನಲಾ ಕಾರ್ತವೀರ್ಯನ
ಕಡುಹನಾನುವ ದಿಟ್ಟರುಂಟೇ ದೇವ ದೈತ್ಯರಲಿ
ತೊಡಕಿದರೆ ಬಳಿಕಾ ನೃಪನ ತೋ
ಳಡವಿಗಡಿದು ಮಹೀಶ ವಂಶವ
ತಡೆಗಡಿದನೀ ಕೊಡಲಿಕಾರನ ತೋಟಿ ಬೇಡೆಂದ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನ ಮೇಲೆ ಬೀಳಲು ಬಂದ ರಾವಣನನ್ನು ಕಾರ್ತವೀರ್ಯನು ಹಿಡಿದು ಸೆರೆಯಲ್ಲಿ ಹಾಕಿದ. ಆ ಕಾರ್ತವೀರ್ಯನನ್ನು ಎದುರಿಸುವಂತಹ ದಿಟ್ಟತನ ದೇವತೆಗಳಲ್ಲಾಗಲಿ ದೈತ್ಯರಲ್ಲಾಗಲಿ ಯಾರಿಗಿದೆ ? ಆ ಕಾರ್ತವೀರ್ಯಾರ್ಜುನನ, ಬೆಳೆದ ಕಾಡಿನಂತಿದ್ದ ತೋಳುಗಳನ್ನು ತನ್ನ ಕೊಡಲಿಯಿಂದ ಕಡಿದುಹಾಕಿ ಆ ಕ್ಷತ್ರಿಯ ವಂಶವನ್ನೇ ನಾಶಮಾಡಿದ. ಈ ಕೊಡಲಿಕಾರನಾಗಿದ್ದ ಪರಶುರಾಮನೊಡನೆ ಕಲಹ ಬೇಡ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಮಿಡುಕಿದರೆ ರಾವಣನ ಸೆರೆಯಲಿ
ಕೆಡೆಹಿದನಲಾ ಕಾರ್ತವೀರ್ಯನ
ಕಡುಹನಾನುವ ದಿಟ್ಟರುಂಟೇ ದೇವ ದೈತ್ಯರಲಿ
ತೊಡಕಿದರೆ ಬಳಿಕಾ ನೃಪನ ತೋ
ಳಡವಿಗಡಿದು ಮಹೀಶ ವಂಶವ
ತಡೆಗಡಿದನೀ ಕೊಡಲಿಕಾರನ ತೋಟಿ ಬೇಡೆಂದ ॥48॥
೦೪೯ ಖರನ ತ್ರಿಶಿರನ ...{Loading}...
ಖರನ ತ್ರಿಶಿರನ ದೂಷಣಾದ್ಯರ
ಶಿರವ ಚೆಂಡಾಡಿದನು ಘನ ಸಾ
ಗರವ ಕಟ್ಟಿದ ಕಟ್ಟಡಯಿದಲಾ ಕಾಣದೇ ಲೋಕ
ಹರಿಬವೋ ಮೇಣ್ ಪೌರುಷವೊ ಮ
ತ್ಸರವೊ ಮೇಣ್ ಮಾರಾಂಕವೋ ಹುಲು
ಮೊರಡಿ ಸೆಣಸುವುದೇ ಸುರಾದ್ರಿಯೊಳೆಂದನಾ ಭೀಷ್ಮ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಮುಕುಂದನೇ ರಾಮನಾಗಿ ಬಂದಿದ್ದವನು. ಆಗ ಖರ ತ್ರಿಶಿರ ದೂಷಣ ಮೊದಲಾದ ದೈತ್ಯರ ಶಿರವನ್ನು ಚೆಂಡಾಡಿದ. ಮಹಾಸಾಗರಕ್ಕೆ ಕಟ್ಟೆ ಕಟ್ಟಿದವನು ಇವನೇ ಎಂಬುದನ್ನು ಲೋಕ ತಿಳಿಯದೇ ? ಆ ಕಟ್ಟೆ ಇಂದೂ ಇದೆಯಲ್ಲವೇ ? ಕರ್ತವ್ಯವೋ ಪೌರುಷವೋ, ಮತ್ಸರವೋ ಪ್ರತಿಯುದ್ಧವೋ ಯಾವುದರಲ್ಲೂ ಇವನಿಗೆ ಸಮಾನರಿಲ್ಲ. ಈ ಸಣ್ಣಗುಡ್ಡವು ಆ ಸುರಾದ್ರಿಯೊಡನೆ ಸೆಣಸಲು ಸಾಧ್ಯವೆ?
ಪದಾರ್ಥ (ಕ.ಗ.ಪ)
ಮೂಲ ...{Loading}...
ಖರನ ತ್ರಿಶಿರನ ದೂಷಣಾದ್ಯರ
ಶಿರವ ಚೆಂಡಾಡಿದನು ಘನ ಸಾ
ಗರವ ಕಟ್ಟಿದ ಕಟ್ಟಡಯಿದಲಾ ಕಾಣದೇ ಲೋಕ
ಹರಿಬವೋ ಮೇಣ್ ಪೌರುಷವೊ ಮ
ತ್ಸರವೊ ಮೇಣ್ ಮಾರಾಂಕವೋ ಹುಲು
ಮೊರಡಿ ಸೆಣಸುವುದೇ ಸುರಾದ್ರಿಯೊಳೆಂದನಾ ಭೀಷ್ಮ ॥49॥
೦೫೦ ಆವುದನ್ತರವಿವಗೆ ಹಿನ್ದಣ ...{Loading}...
ಆವುದಂತರವಿವಗೆ ಹಿಂದಣ
ರಾವಣನೊಳವಗಡಿಸಿಯಾತನ
ಮಾವನನು ಮುರಿದವನ ತಂಗಿಯ ಮೂಗ ಭಂಗಿಸಿದ
ದೇವ ದಲ್ಲಣನಿಂದ್ರವಿಜಯ ಸು
ರಾವಳಿಯ ದೆಸೆಪಟರೆನಿಪ ದೈ
ತ್ಯಾವಳಿಯ ಕಡಿ ಖಂಡದೊಟ್ಟಿಲ ರಾಮ ನೋಡೆಂದ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಾವುದೂ ಹೆಚ್ಚಿನದಲ್ಲ. ಈ ರಾಮನಿಗೆ ? ಆ ರಾವಣನನ್ನು ಭಂಗಿಸಿ, ಅವನ ಮಾವನನ್ನು ಕೊಂದು, ಅವನ ತಂಗಿ ಶೂರ್ಪಣಖಿಯ ಮೂಗು ಕೊಯ್ದು ಅವಮಾನ ಮಾಡಿ, ದೇವತೆಗಳನ್ನು ತಲ್ಲಣಗೊಳಿಸಿದ್ದ ಇಂದ್ರಜಿತು ಮೊದಲಾದ ದೈತ್ಯರನ್ನೆಲ್ಲ ಕಡಿದು ತುಂಡುತುಂಡು ಮಾಡಿ ಹಾಕಿದ !
ಪದಾರ್ಥ (ಕ.ಗ.ಪ)
ಮೂಲ ...{Loading}...
ಆವುದಂತರವಿವಗೆ ಹಿಂದಣ
ರಾವಣನೊಳವಗಡಿಸಿಯಾತನ
ಮಾವನನು ಮುರಿದವನ ತಂಗಿಯ ಮೂಗ ಭಂಗಿಸಿದ
ದೇವ ದಲ್ಲಣನಿಂದ್ರವಿಜಯ ಸು
ರಾವಳಿಯ ದೆಸೆಪಟರೆನಿಪ ದೈ
ತ್ಯಾವಳಿಯ ಕಡಿ ಖಂಡದೊಟ್ಟಿಲ ರಾಮ ನೋಡೆಂದ ॥50॥
೦೫೧ ಹರ ಗಿರಿಯನೊಡಯೆತ್ತಿದುಬ್ಬಟೆ ...{Loading}...
ಹರ ಗಿರಿಯನೊಡಯೆತ್ತಿದುಬ್ಬಟೆ
ಯರಸಲಾ ದಶವದನನಾತನ
ಶಿರದುಪಾರವನಿಟ್ಟು ದಣಿಸನೆ ದೆಸೆಯ ದೇವಿಯರ
ಬರಡನಿವನೀ ದೈವದೊಡನು
ಬ್ಬರಿಸಿದೊಡೆಯೀ ಇಬ್ಬರಭ್ಯಂ
ತರವನಿವರರಿಯರೆ ಮುನೀಂದ್ರರು ಶಿವ ಶಿವಾಯೆಂದ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಮ್ಮೆಗೇ ಕೈಲಾಸ ಪರ್ವತವನ್ನೇ ಎತ್ತಿಬಿಟ್ಟ ಆಟೋಪಲ್ಲವೇ ರಾವಣನದು ? ಅವನ ದಶ ಶಿರಗಳನ್ನು ತಂದು ದಶ
ದಿಗ್ದೇವತೆಯರಿಗೆ ನೈವೇದ್ಯವಾಗಿ ಅರ್ಪಿಸಿಬಿಟ್ಟನಲ್ಲವೇ ರಾಮನು ? ನಿಸ್ಸತ್ವನಾದ ಇವನು ಆ ದೈವದೆದುರು ಉಬ್ಬಿಹೋದರೆ ಇಬ್ಬರ
ನಡುವಿನ ಅಂತರವನ್ನು ಇಲ್ಲಿ ನೆರೆದಿರುವ ಮುನೀಂದ್ರರು ಅರಿಯರೇ ? ಶಿವ ಶಿವಾ !
ಪದಾರ್ಥ (ಕ.ಗ.ಪ)
ಉಪಾರ - ನೈವೇದ್ಯ
ಮೂಲ ...{Loading}...
ಹರ ಗಿರಿಯನೊಡಯೆತ್ತಿದುಬ್ಬಟೆ
ಯರಸಲಾ ದಶವದನನಾತನ
ಶಿರದುಪಾರವನಿಟ್ಟು ದಣಿಸನೆ ದೆಸೆಯ ದೇವಿಯರ
ಬರಡನಿವನೀ ದೈವದೊಡನು
ಬ್ಬರಿಸಿದೊಡೆಯೀ ಇಬ್ಬರಭ್ಯಂ
ತರವನಿವರರಿಯರೆ ಮುನೀಂದ್ರರು ಶಿವ ಶಿವಾಯೆಂದ ॥51॥
೦೫೨ ಹಿನ್ದೆ ಕೃತಯುಗ ...{Loading}...
ಹಿಂದೆ ಕೃತಯುಗ ಸಮಯದಲಿ ಸುರ
ವೃಂದದೊಡನಸುರರಿಗೆ ಕೊಂಡೆಯ
ದಿಂದ ಮಸೆಮಸೆದಂಕವಾಯಿತು ಖಳನ ಕಾಳಗಕೆ
ಬಂದುದಾ ತೆತ್ತೀಸ ಕೋಟಿಗ
ಳೊಂದು ದೆಸೆ ಜಂಭಾದಿ ದಾನವ
ರೊಂದು ದೆಸೆ ಹೊಯ್ದಾಡಿತೇನೆಂಬೆನು ಮಹಾದ್ಭುತವ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಂದೆ ಕೃತಯುಗದಲ್ಲಿ ದೇವತೆಗಳಿಗೂ ದಾನವರಿಗೂ ಚಾಡಿಯ ಕಾರಣದಿಂದ ಪರಸ್ಪರ ಕಾಳಗವಾಯಿತು. ಆ ದುಷ್ಟರೊಡನೆ ನಡೆದ ಕಾಳಗಕ್ಕೆ ಮೂವತ್ತ ಮೂರು ಕೋಟಿ ದೇವತೆಗಳೂ ಒಂದು ಕಡೆ ಸೇರಿದರು. ಜಂಭಾಸುರನೇ ಮೊದಲಾದವರು ಪ್ರತಿಪಕ್ಷದಲ್ಲಿ
ಸೇರಿದರು. ಕಾಳಗ ಅದ್ಭುತವಾಗಿ ನಡೆಯಿತು. ಅದನ್ನೇನೆಂದು ಹೇಳಲಿ ?
ಪದಾರ್ಥ (ಕ.ಗ.ಪ)
ಮೂಲ ...{Loading}...
ಹಿಂದೆ ಕೃತಯುಗ ಸಮಯದಲಿ ಸುರ
ವೃಂದದೊಡನಸುರರಿಗೆ ಕೊಂಡೆಯ
ದಿಂದ ಮಸೆಮಸೆದಂಕವಾಯಿತು ಖಳನ ಕಾಳಗಕೆ
ಬಂದುದಾ ತೆತ್ತೀಸ ಕೋಟಿಗ
ಳೊಂದು ದೆಸೆ ಜಂಭಾದಿ ದಾನವ
ರೊಂದು ದೆಸೆ ಹೊಯ್ದಾಡಿತೇನೆಂಬೆನು ಮಹಾದ್ಭುತವ ॥52॥
೦೫೩ ಆವರೊಳಗ್ಗದ ಕಾಲನೇಮಿ ...{Loading}...
ಆವರೊಳಗ್ಗದ ಕಾಲನೇಮಿ
ಪ್ರವರನಮರವಿಭಾಡ ವರ ದಾ
ನವಶಿರೋಮಣಿ ದಿವಿಜನಾಯಕ ಶರಭಭೇರುಂಡ
ಬವರದಲಿ ಶಕ್ರಾಗ್ನಿ ಯಮ ಶಶಿ
ರವಿ ಕುಬೇರ ಸಮೀರಣಾದ್ಯರ
ಸವರಿ ಸಪ್ತಾಂಗವನು ಕೊಂಡನು ಮೇಘವಾಹನನ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಾನವರಲ್ಲಿ ಅತಿಶಯನಾದ ಕಾಲನೇಮಿ ಎಂಬುವನು ಅಮರವಿಭಾಡ, ರಾಕ್ಷಸರಲ್ಲೆಲ್ಲ ಶ್ರೇಷ್ಠ್ಠನಾದ ಅವನು ದಿವಿಜನಾಯಕ ಶರಭಭೇರುಂಡ ಎಂದು ಪ್ರಖ್ಯಾತನಾಗಿದ್ದವನು. ಯುದ್ಧದಲ್ಲಿ ಇಂದ್ರ, ಅಗ್ನಿ, ಯಮ ಚಂದ್ರ ಸೂರ್ಯ ಕುಬೇರ ವಾಯು ಮೊದಲಾದವರನ್ನೆಲ್ಲ ಸೋಲಿಸಿ ಮೇಘವಾಹನನೆನಿಸಿದ್ದ ಇಂದ್ರನ ಸಪ್ತಾಂಗವನ್ನು ವಶಪಡಿಸಿಕೊಂಡ.
ಪದಾರ್ಥ (ಕ.ಗ.ಪ)
ಶಕ್ರ-ಇಂದ್ರ
ಮೂಲ ...{Loading}...
ಆವರೊಳಗ್ಗದ ಕಾಲನೇಮಿ
ಪ್ರವರನಮರವಿಭಾಡ ವರ ದಾ
ನವಶಿರೋಮಣಿ ದಿವಿಜನಾಯಕ ಶರಭಭೇರುಂಡ
ಬವರದಲಿ ಶಕ್ರಾಗ್ನಿ ಯಮ ಶಶಿ
ರವಿ ಕುಬೇರ ಸಮೀರಣಾದ್ಯರ
ಸವರಿ ಸಪ್ತಾಂಗವನು ಕೊಂಡನು ಮೇಘವಾಹನನ ॥53॥
೦೫೪ ರಣದೊಳೋಡಿದ ಸುರನಿಕರ ...{Loading}...
ರಣದೊಳೋಡಿದ ಸುರನಿಕರ ಘ
ಲ್ಲಣೆಯನಿಕ್ಕಿತು ಹರಿಗೆ ಕರೆ ಹ
ಲ್ಲಣಿಸು ಗರುಡನನೆಂದು ಹೊರವಂಟನು ಮುರಧ್ವಂಸಿ
ಕೆಣಕಿದನು ದಾನವನನಾಗಳೆ
ಹಣಿದವನ ಹೊಯ್ದಮಳ ಚಕ್ರದ
ಗೊಣೆಯದಲಿ ಮೆರೆಸಿದನು ತಲೆಯನು ದಿವಿಜ ನಗರಿಯಲಿ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದಲ್ಲಿ ಸೋತು ಓಡಿದ ದೇವತೆಗಳೆಲ್ಲ ಹರಿಯ ಬಳಿಗೆ ಹೋಗಿ ಮೊರೆಯಿಟ್ಟರು. ಆಗ ಈ ಮುರಧ್ವಂಸಿ ಕೂಡಲೆ “ಕರೆ
ಹಲ್ಲಣವನ್ನು ಹಾಕಿ ಗರುಡನನ್ನು ಸಜ್ಜುಗೊಳಿಸು” ಎಂದು ಯುದ್ಧಕ್ಕೆ ಹೊರಟು, ತನ್ನ ಚಕ್ರದ ಧಾರೆಯಿಂದ ಅವನ ತಲೆಯನ್ನು
ಕತ್ತರಿಸಿ, ಆ ಚಕ್ರದ ಮೇಲೆ ಅವನ ತಲೆಯನ್ನು ದಿವಿಜನಗರಿಯಲ್ಲಿ ಪ್ರದರ್ಶಿಸಿದ.
ಪದಾರ್ಥ (ಕ.ಗ.ಪ)
ಗೊಣೆ-ಚಕ್ರದ ಧಾರೆ
ಘಲ್ಲಣೆ - ಮೊರೆ
ಮೂಲ ...{Loading}...
ರಣದೊಳೋಡಿದ ಸುರನಿಕರ ಘ
ಲ್ಲಣೆಯನಿಕ್ಕಿತು ಹರಿಗೆ ಕರೆ ಹ
ಲ್ಲಣಿಸು ಗರುಡನನೆಂದು ಹೊರವಂಟನು ಮುರಧ್ವಂಸಿ
ಕೆಣಕಿದನು ದಾನವನನಾಗಳೆ
ಹಣಿದವನ ಹೊಯ್ದಮಳ ಚಕ್ರದ
ಗೊಣೆಯದಲಿ ಮೆರೆಸಿದನು ತಲೆಯನು ದಿವಿಜ ನಗರಿಯಲಿ ॥54॥
೦೫೫ ಆ ಮಹಾಸುರ ...{Loading}...
ಆ ಮಹಾಸುರ ಕಾಲನೇಮಿ ಸ
ನಾಮನೀ ಕಾಲದಲಿ ಯಾದವ
ಭೂಮಿಯಲಿ ಜನಿಸಿದನಲೇ ಕಂಸಾಭಿಧಾನದಲಿ
ಈ ಮರುಳು ಹವಣೇ ತದೀಯ
ಸ್ತೋಮ ಧೇನುಕ ಕೇಶಿ ವತ್ಸ ತೃ
ಣಾಮಯರು ಹಲರಿಹರು ದುಷ್ಪರಿವಾರ ಕಂಸನಲಿ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಪ್ರಸಿದ್ಧನಾದ ಮಹಾಸುರ ಕಾಲನೇಮಿಯೇ ಈ ಕಾಲದಲ್ಲಿ ಯಾದವ ಭೂಮಿಯಲ್ಲಿ ಕಂಸ ಎಂಬ ಹೆಸರಿನಿಂದ ಹುಟ್ಟಿದ. ಈ ಮರಳು ಯಾವ ಲೆಕ್ಕ ಮುರಹರನಿಗೆ ? ಕಂಸನ ದುಷ್ಟ ಪರಿವಾರದಲ್ಲಿ ಸ್ತೋಮ, ಧೇನುಕ, ಕೇಶಿ, ವತ್ಸ, ತೃಣಾಮಯ ಮೊದಲಾಗಿ
ಹಲವಾರು ಮಂದಿಯಿದ್ದಾರೆ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಆ ಮಹಾಸುರ ಕಾಲನೇಮಿ ಸ
ನಾಮನೀ ಕಾಲದಲಿ ಯಾದವ
ಭೂಮಿಯಲಿ ಜನಿಸಿದನಲೇ ಕಂಸಾಭಿಧಾನದಲಿ
ಈ ಮರುಳು ಹವಣೇ ತದೀಯ
ಸ್ತೋಮ ಧೇನುಕ ಕೇಶಿ ವತ್ಸ ತೃ
ಣಾಮಯರು ಹಲರಿಹರು ದುಷ್ಪರಿವಾರ ಕಂಸನಲಿ ॥55॥
೦೫೬ ಸೇದಿದನು ಪೂತನಿಯಸುವನವ ...{Loading}...
ಸೇದಿದನು ಪೂತನಿಯಸುವನವ
ಳಾದರಿಸಿ ಮೊಲೆವಾಲನೂಡಿಸೆ
ಪಾದತಳ ಸೋಕಿನಲಿ ತೊಟ್ಟಿಲ ಬಂಡಿ ನುಗ್ಗಾಯ್ತು
ಸೇದಿ ಕಟ್ಟಿದ್ದೊರಳನೆಳೆದರೆ
ಬೀದಿಯಲಿ ಮರ ಮುರಿದುದೀ ಕರು
ಗಾದವನ ಕೈಯಿಂದ ಮಡಿದುದು ಕಂಸ ಪರಿವಾರ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪೂತನಿ ಮೊಲೆವಾಲನ್ನು ಊಡಿಸಲು ಬಂದಾಗ ಮುರಹರ ಪೂತನಿಯ ಜೀವವನ್ನು ಸೇದಿಬಿಟ್ಟ. ತನ್ನ ಅಂಗಾಲಿನ ಸ್ಪರ್ಶ ಮಾತ್ರದಿಂದಲೇ ತೊಟ್ಟಿಲು ಕಟ್ಟಿದ್ದ ಬಂಡಿಯನ್ನು (ಶಕಟಾಸುರನನ್ನು) ನುಚ್ಚುನೂರು ಮಾಡಿದ. ಹಗ್ಗದಿಂದ ತನಗೂ ಸೇರಿಸಿ ಬಿಗಿದಿದ್ದ ಒರಳನ್ನು ಎಳೆಯಲು ಬೀದಿಯಲ್ಲಿದ್ದ ಜೋಡಿ ಮರಗಳು ಮುರಿದು ಬಿದ್ದವು. ಹೀಗೆ ಕಂಸನ ಪರಿವಾರದವರು ಈ ಕರುಕಾದವನ ಕೈಯಿಂದ ನಾಶವಾದರು.
ಪದಾರ್ಥ (ಕ.ಗ.ಪ)
ಕರುಗಾದವನ= ಗೋಪಾಲಕನ
ಮೂಲ ...{Loading}...
ಸೇದಿದನು ಪೂತನಿಯಸುವನವ
ಳಾದರಿಸಿ ಮೊಲೆವಾಲನೂಡಿಸೆ
ಪಾದತಳ ಸೋಕಿನಲಿ ತೊಟ್ಟಿಲ ಬಂಡಿ ನುಗ್ಗಾಯ್ತು
ಸೇದಿ ಕಟ್ಟಿದ್ದೊರಳನೆಳೆದರೆ
ಬೀದಿಯಲಿ ಮರ ಮುರಿದುದೀ ಕರು
ಗಾದವನ ಕೈಯಿಂದ ಮಡಿದುದು ಕಂಸ ಪರಿವಾರ ॥56॥
೦೫೭ ಕೇಶಿ ಧೇನುಕ ...{Loading}...
ಕೇಶಿ ಧೇನುಕ ವತ್ಸ ಲಂಬ ಬ
ಕಾಸುರನು ತೃಣವರ್ತನಘನೆಂ
ಬಾ ಸಮರ್ಥರ ಸೀಳಿ ಬಿಸುಟನು ಬಾಲಕೇಳಿಯಲಿ
ಗಾಸಿಯಾದುದು ದಂತಿ ಮಲ್ಲರ
ದೇಸು ಘನ ಮಾವನನು ಮರ್ದಿಸಿ
ಮೀಸಲಳಿಯದ ದಿವಿಜ ಕನ್ನೆಯರೊಡನೆ ಜೋಡಿಸಿದ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೇವಲ ಬಾಲ ಲೀಲೆಯಿಂದಲೇ ಕೇಶಿ, ಧೇನುಕ, ವತ್ಸ, ಲಂಬ, ಬಕಾಸುರ, ತೃಣಾವರ್ತ, ಅಘ ಎಂಬ ಸಮರ್ಥರಾದವರನ್ನೇ
ಸೀಳಿ ಬಿಸಾಡಿದ. ಅವನ ಕೈಯಿಂದ ಗಜಾಸುರನೇ ಘಾಸಿಗೊಂಡನೆನ್ನಲಾಗಿ ಉಳಿದ ಮಲ್ಲರು ಯಾವ ಲೆಕ್ಕ. ಸೋದರ ಮಾವನಾದ ಕಂಸನನ್ನೇ ಮರ್ದನಮಾಡಿ ಮೀಸಲಳಿಯದ ದೇವಕನ್ಯೆಯರೊಡನೆ ಸೇರಿಸಿಬಿಟ್ಟ. !
ಪದಾರ್ಥ (ಕ.ಗ.ಪ)
ಟಿಪ್ಪನೀ (ಕ.ಗ.ಪ)
ಈ ಪದ್ಯದಲ್ಲಿ ಉಲ್ಲೇಖವಾಗಿರುವ ಬಕಾಸುರ ಭಾಗವತದಲ್ಲಿ ಬರುವ ಕೊಕ್ಕೆರೆ ರೂಪದ ರಾಕ್ಷಸ.
ಮೂಲ ...{Loading}...
ಕೇಶಿ ಧೇನುಕ ವತ್ಸ ಲಂಬ ಬ
ಕಾಸುರನು ತೃಣವರ್ತನಘನೆಂ
ಬಾ ಸಮರ್ಥರ ಸೀಳಿ ಬಿಸುಟನು ಬಾಲಕೇಳಿಯಲಿ
ಗಾಸಿಯಾದುದು ದಂತಿ ಮಲ್ಲರ
ದೇಸು ಘನ ಮಾವನನು ಮರ್ದಿಸಿ
ಮೀಸಲಳಿಯದ ದಿವಿಜ ಕನ್ನೆಯರೊಡನೆ ಜೋಡಿಸಿದ ॥57॥
೦೫೮ ಇವನ ಹವಣೇ ...{Loading}...
ಇವನ ಹವಣೇ ತ್ರಿಪುರಹತ ದಾ
ನವರು ಶುಂಭ ನಿಶುಂಭವೆಸರಿಂ
ದವನಿಯಲಿ ಜನಿಸಿದರು ನಭದಲಿ ರಚಿಸಿದರು ಪುರವ
ಅವದಿರುರೆಯಾಳಿದರು ನಿರ್ಜರ
ನಿವಹವನು ಬಳಿಕವರನೊಂದೇ
ಬವರದಲಿ ಕೆಡಹಿದನು ಕೃಷ್ಣನನರಿವರಾರೆಂದ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತ್ರಿಪುರದಲ್ಲಿ ಹತರಾದ ದಾನವರು, ಶುಂಭ, ನಿಶುಂಭ, ಎಂಬವರು ಮತ್ತೆ ಭೂಮಿಯಲ್ಲಿ ಜನಿಸಿದ್ದವರು ಆಕಾಶದಲ್ಲೇ ಪುರವನ್ನು ರಚಿಸಿಕೊಂಡರು. ಅವರು ದಿವಿಜರನ್ನೆಲ್ಲ ಅಳುತ್ತಿದ್ದರು. ದುಷ್ಟರಾದ ಅವರಿಬ್ಬರನ್ನೂ ಕೃಷ್ಣನು ಒಂದೇ ಯುದ್ಧದಲ್ಲಿ ಕೊಂದು ಹಾಕಿದ. ಕೃಷ್ಣನ ಸಾಮಥ್ರ್ಯವನ್ನು ಬಲ್ಲವರಾರು ?
ಪದಾರ್ಥ (ಕ.ಗ.ಪ)
ನಿರ್ಜರ-ದೇವತೆ
ಮೂಲ ...{Loading}...
ಇವನ ಹವಣೇ ತ್ರಿಪುರಹತ ದಾ
ನವರು ಶುಂಭ ನಿಶುಂಭವೆಸರಿಂ
ದವನಿಯಲಿ ಜನಿಸಿದರು ನಭದಲಿ ರಚಿಸಿದರು ಪುರವ
ಅವದಿರುರೆಯಾಳಿದರು ನಿರ್ಜರ
ನಿವಹವನು ಬಳಿಕವರನೊಂದೇ
ಬವರದಲಿ ಕೆಡಹಿದನು ಕೃಷ್ಣನನರಿವರಾರೆಂದ ॥58॥
೦೫೯ ಮುರನ ನರಕನ ...{Loading}...
ಮುರನ ನರಕನ ಹಂಸ ಡಿಬಿಕರ
ವರ ಸೃಗಾಲನ ದಂತವಕ್ರನ
ದುರುಳ ಪೌಂಡ್ರಕ ಪಂಚಜನ ಶುಂಭನ ನಿಶುಂಭಕನ
ಅರಿ ಹಯಗ್ರೀವಕನ ಸಾಲ್ವನ
ನೊರಸಿದನಲಾ ನಿನ್ನ ಪಾಡಿನ
ದುರುಳರೇ ದೈತ್ಯೇಂದ್ರರೀತನ ಕೆಣಕಿದವರೆಂದ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುರ, ನರಕ, ಹಂಸ, ಡಿಬಿಕ, ಸೃಗಾಲ, ದಂತವಕ್ರ, ಪೌಂಡ್ರಕ, ಪಂಚಜನ, ಶುಂಭ, ನಿಶುಂಭ, ಹಯಗ್ರೀವ, ಸಾಲ್ವ, ಇವರನ್ನೆಲ್ಲ ಕೃಷ್ಣ ಒರೆಸಿ ಹಾಕಿಬಿಟ್ಟನಲ್ಲ ! ಅವರೆಲ್ಲ ಏನು ನಿನ್ನ ಹಾಗೆ ಸಾಮಾನ್ಯರಾದವರೇ, ಕೃಷ್ಣನನ್ನು ಕೆಣಕಲು ಬಂದ ಅವರೆಲ್ಲ ದೈತ್ಯೇಂದ್ರರು !
ಪದಾರ್ಥ (ಕ.ಗ.ಪ)
ಟಿಪ್ಪನೀ (ಕ.ಗ.ಪ)
ಪಂಚಜನ - ಶ್ರೀಕೃಷ್ಣನ ಶಂಖದ ಹೆಸರು ‘ಪಾಂಚಜನ್ಯ’. ಪಂಚಜನ ಒಬ್ಬ ರಾಕ್ಷಸ. ಇವನು ಶಂಖದೊಳಗೆ ಅವಿತುಕೊಂಡಿರುತ್ತಿದ್ದನಾದುದರಿಂದ ಪಾಂಚಜನ್ಯ ಎಂಬ ಹೆಸರೂ ಬಂದಿದೆ. ಇವನು ಒಂದು ಶಂಖದಲ್ಲಿ ಅಡಗಿಕೊಂಡಿದ್ದನೆಂದೂ ಶ್ರೀಕೃಷ್ಣನು ನೀರಲ್ಲಿ ಮುಳುಗಿ ಎಳೆ ತಂದು ಈತನನ್ನು ಕೊಂದನೆಂದೂ ಕಥೆಗಳಿವೆ. ಪಂಚನನನ್ನು ಕೊಲ್ಲಲು ಕಾರಣವಿದೆ. ಶ್ರೀಕೃಷ್ಣ ಬಲರಾಮಾದಿಗಳು ಸಂದೀಪನೀ ಗುರುಗಳ ಬಳಿ ವಿದ್ಯಾಭ್ಯಾಸ ಮಾಡುತ್ತಿದ್ದರಷ್ಟೆ. ಸಮೀಪದಲ್ಲಿಯೇ ಪ್ರಭಾಸ ತೀರ್ಥವಿದೆ. ಕೃಷ್ಣ ಬಲರಾಮಾದಿಗಳ ಶಿಕ್ಷಣ ಮುಗಿಯುತ್ತ ಬಂದಿತ್ತು.
ಗುರುಗಳ ಮಗನನ್ನು ಪಂಚಜನ ಎಂಬ ರಾಕ್ಷಸನು ಅಪಹರಿಸಿ ನೀರಿನಲ್ಲಿ ಒಂದು ಶಂಖದೊಳಗೆ ಭದ್ರವಾಗಿ ಅವಿತಿಟ್ಟ. ಈ ಸುದ್ದಿ ತಿಳಿದು ಗುರುಗಳು ತಮ್ಮ ಮಗನನ್ನು ತಂದುಕೊಡಬೇಕು ಎಂಬ ಗುರುದಕ್ಷಿಣೆಯನ್ನು ಕೇಳಿದರು. ಅದರಂತೆ ಕೃಷ್ಣ, ಬಲರಾಮರು ನದೀ ತೀರಕ್ಕೆ ಹೋಗಿ ವರುಣದೇವನಿಗೆ ಪ್ರಾರ್ಥನೆ ಸಲ್ಲಿಸಿದರು. ವರುಣನು ಪ್ರತ್ಯಕ್ಷನಾದಾಗ ನಡೆದ ಘಟನೆಗಳನ್ನೆಲ್ಲ ತಿಳಿಸಿ ಕೃಷ್ಣ, ಬಲರಾಮರು ವರುಣನಿಂದ ಮಗನನ್ನು ಬದುಕಿಸಿಕೊಡುವ ವರನನ್ನು ಬೇಡಿದರು.
ಅನಂತರ ಸೋದರರು ರಾಕ್ಷಸನೊಂದಿಗೆ ಭಯಂಕರವಾಗಿ ಹೊಡೆದಾಡಿ ಗುರುಪುತ್ರನನ್ನು ಬಿಡಿಸಿಕೊಂಡು ಬಂದರು. ಪಂಚಜನ ಎಂಬ ಶಂಖದಲ್ಲಿ ಅಡಗಿ ಕುಳಿತಿದ್ದ ರಾಕ್ಷಸನನ್ನು ಬರುಣನ ಸಹಾಯದಿಂದ ಕೃಷ್ಣ ಕೊಂದು ಹಾಕಿದನಷ್ಟೆ. ಆ ರಾಕ್ಷಸನ ವಧೆಯ ಸ್ಮರಣಾರ್ಥವಾಗಿ ‘ಪಂಚಜನ’ಎಂಬ ಶಂಖವನ್ನು ತನ್ನ ಕೈಯಲ್ಲಿಯೇ ಇಟ್ಟುಕೊಂಡ.
ರಾಕ್ಷಸ ಶತ್ರುವಾದ ಶ್ರೀಕೃಷ್ಣನು ದುಷ್ಟರ ಮೂಲವನ್ನು ಪತ್ತೆ ಹಚ್ಚುವ ಕ್ರಮವೂ ಇಲ್ಲಿ ಸೊಗಸಾಗಿ ಪ್ರಸ್ತಾವಿತವಾಗಿದೆ. ರಾಕ್ಷಸ ರಾಜ ಹಿರಣ್ಯಕಶಿಪುವಿನ ಮಗನಾಗಿದ್ದ ಈ ಪಂಚಜನ ಎಂಬ ರಾಕ್ಷಸನನ್ನು ಮುತ್ತಿ ಅವನು ಅಲ್ಲಿರದೆ ತಪ್ಪಿಸಿಕೊಂಡು ಹೋಗಿರುವ ಜಾಗವನ್ನು ಪತ್ತೆ ಹಚ್ಚಲು ಎಲ್ಲ ಕಡೆ ಹುಡುಕುತ್ತಾರೆ. ಕೊನೆಗೆ ಯಮನ ರಾಜಧಾನಿಯಾದ ಶೈಮಿನೀ ನಗರದಲ್ಲಿ ಹುಡುಕಿ ಹಿಡಿದು ತಂದು ತಮ್ಮ ಗುರುವಿಗೆ ಗುರುದಕ್ಷಿಣೆಯಾಗಿ ಕೊಟ್ಟರಂತೆ! ಶ್ರೀಕೃಷ್ಣನ ಪಾಂಚಜನ್ಯ ಘೋಷದಿಂದ ಹೊರಡುವ ಶಬ್ದವು ಇಡೀ ಯುದ್ಧ ಪಂಚಕಗಳಲ್ಲಿ ಮೊಳಗಿರುವ ರೀತಿ ಅದ್ಭುತವಾಗಿದೆ. ಪಂಚಜನ ನರಕಾಸುರನ ಅನುಯಾಯಿ.
ಮೂಲ ...{Loading}...
ಮುರನ ನರಕನ ಹಂಸ ಡಿಬಿಕರ
ವರ ಸೃಗಾಲನ ದಂತವಕ್ರನ
ದುರುಳ ಪೌಂಡ್ರಕ ಪಂಚಜನ ಶುಂಭನ ನಿಶುಂಭಕನ
ಅರಿ ಹಯಗ್ರೀವಕನ ಸಾಲ್ವನ
ನೊರಸಿದನಲಾ ನಿನ್ನ ಪಾಡಿನ
ದುರುಳರೇ ದೈತ್ಯೇಂದ್ರರೀತನ ಕೆಣಕಿದವರೆಂದ ॥59॥
೦೬೦ ತೋಳು ಸಾವಿರವಮರಪತಿ ...{Loading}...
ತೋಳು ಸಾವಿರವಮರಪತಿ ತೆರು
ವಾಳಿನೊಕ್ಕಲು ಕಂತುಕದ ವೈ
ಹಾಳಿ ಪಾತಾಳದಲಿ ಸಪ್ತದ್ವೀಪ ಮನೆ ತನಗೆ
ಶೂಲಿ ಬಾಗಿಲ ಕಾಯ್ವನೀಸು ಚ
ಡಾಳಿಸಿದ ಸಿರಿಯಾರಿಗಾತನ
ತೋಳಡವಿಯನು ನಿನ್ನೆ ತರಿದನು ಕೃಷ್ಣ ನೋಡೆಂದ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನರಕಾಸುರ ಸಾವಿರ ತೋಳುಗಳಿದ್ದವನು, ದೇವೇಂದ್ರನೂ ಅವನಿಗೆ ಕಪ್ಪ ತೆರುವವನಾಗಿದ್ದ ಅವನ ಅಧೀನಕ್ಕೆ ಒಳಗಾಗಿದ್ದ ಪಾತಾಳಲೋಕದಲ್ಲಿ ಅವನ ಚೆಂಡಾಟ, ಕುದುರೆ ಸವಾರಿ ಎಲ್ಲಾ ನಡೆಯುತ್ತಿತ್ತು. ಸಪ್ತದ್ವೀಪದಲ್ಲಿ ಅವನ ಮನೆ. ತ್ರಿಶೂಲಿ ಅವನ ಮನೆ ಕಾಯುವ ಕಾವಲುಗಾರನಾಗಿದ್ದ. ಇಷ್ಟು ವೈಭವದಿಂದ ಕೂಡಿದ ಸಂಪತ್ತು ಅವನದು. ಅಡವಿಯಂತೆ ಬೆಳೆದಿದ್ದ ಅವನ ತೋಳುಗಳನ್ನು ನೆನ್ನೆ ತಾನೇ ಕಡಿದು ಹಾಕಿದ್ದಾನೆ ನೋಡಿ. !
ಪದಾರ್ಥ (ಕ.ಗ.ಪ)
ಚಡಾಳಿಸು-ಅತಿಶಯವಾದ
ಕಂತುಕ - ಚೆಂಡು
ಮೂಲ ...{Loading}...
ತೋಳು ಸಾವಿರವಮರಪತಿ ತೆರು
ವಾಳಿನೊಕ್ಕಲು ಕಂತುಕದ ವೈ
ಹಾಳಿ ಪಾತಾಳದಲಿ ಸಪ್ತದ್ವೀಪ ಮನೆ ತನಗೆ
ಶೂಲಿ ಬಾಗಿಲ ಕಾಯ್ವನೀಸು ಚ
ಡಾಳಿಸಿದ ಸಿರಿಯಾರಿಗಾತನ
ತೋಳಡವಿಯನು ನಿನ್ನೆ ತರಿದನು ಕೃಷ್ಣ ನೋಡೆಂದ ॥60॥
೦೬೧ ಆ ಯುಗದಲಾ ...{Loading}...
ಆ ಯುಗದಲಾ ಯುಗದಲನಿಬರು
ಬೀಯವಾದರು ದೈತ್ಯ ದಾನವ
ರೀ ಯುಗದಲೆನಿತಸುರರನಿಬರು ದುಷ್ಟ ದಾನವರು
ರಾಯರನಿಬರು ದಿವಿಜ ರಾಯನ
ಲಾಯದಲಿ ಲಂಬಿಸಿದರಾ ತರು
ವಾಯ ನಿನಗೀಗಳೆ ವಿಘಾತದೊಳೆಂದನಾ ಭೀಷ್ಮ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಯಾ ಯುಗದಲ್ಲಿ ಅಷ್ಟೊಂದು ಜನ ದೈತ್ಯರು ದಾನವರು ಹತರಾದರು. ಈ ಯುಗದಲ್ಲೂ ಅಸುರರೂ ದುಷ್ಟ ದಾನವರೂ ಎಷ್ಟು ಮಂದಿ ರಾಜರುಗಳಾಗಿದ್ದರೋ ಅಷ್ಟು ಮಂದಿಯೂ ಇವನೊಡನೆ ಸೆಣಸಿ ಸಾಲುಸಾಲಾಗಿ ದಿವಿಜನಗರಿಗೆ ಹೋಗಿ ಸೇರಿದರು. ಆ ತರುವಾಯ ನಿನಗೆ ಈಗ ವಿಘಾತಿಯ ಸರದಿ ಬಂದಿದೆ.
ಪದಾರ್ಥ (ಕ.ಗ.ಪ)
ವಿಘಾತಿ-ನಾಶ
ಮೂಲ ...{Loading}...
ಆ ಯುಗದಲಾ ಯುಗದಲನಿಬರು
ಬೀಯವಾದರು ದೈತ್ಯ ದಾನವ
ರೀ ಯುಗದಲೆನಿತಸುರರನಿಬರು ದುಷ್ಟ ದಾನವರು
ರಾಯರನಿಬರು ದಿವಿಜ ರಾಯನ
ಲಾಯದಲಿ ಲಂಬಿಸಿದರಾ ತರು
ವಾಯ ನಿನಗೀಗಳೆ ವಿಘಾತದೊಳೆಂದನಾ ಭೀಷ್ಮ ॥61॥
೦೬೨ ಇಙ್ಗಿತದಲರಿವುದು ಮಹಾತ್ಮರಿ ...{Loading}...
ಇಂಗಿತದಲರಿವುದು ಮಹಾತ್ಮರಿ
ಗಂಗವಿದು ಮಧ್ಯಮರು ಕರ್ಣ ಪ
ಥಂಗಳಲಿ ಗೋಚರಿಸಲರಿವುದು ಲೋಕ ವೃತ್ತಿಯಿದು
ಕಂಗಳಲಿ ಕಂಡರಿವರಧಮರು
ಕಂಗಳಲಿ ಕಿವಿಗಳಲಿ ಮೇಣ್ ಹರಿ
ಯಿಂಗಿತವನರಿಯದ ಜಡಾತ್ಮನು ಚೈದ್ಯ ನೃಪನೆಂದ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೇವಲ ಮನಸ್ಸಿನ ಭಾವದಿಂದಲೇ ಅರ್ಥಮಾಡಿಕೊಳ್ಳುವುದು ಮಹಾತ್ಮರ ನಡತೆ. ಮಧ್ಯಮರಾದವರು ಕಿವಿಯಿಂದ ಕೇಳಿದ ಮೇಲೆ
ಅರ್ಥಮಾಡಿಕೊಳ್ಳುತ್ತಾರೆ. ಅಧಮರಾದವರು ಕಣ್ಣಾರೆ ಕಂಡಮೇಲೆ ಒಪ್ಪಿಕೊಳ್ಳವುದು. ಇದು ಲೋಕದ ನಡವಳಿಕೆ. ಕಂಗಳಿಂದಲೂ
ಕಿವಿಗಳಿಂದಲೂ ಇಂಗಿತದಿಂದಲೂ ಹರಿಯನ್ನು ತಿಳಿದುಕೊಳ್ಳಲಾರದಂತಹ ಜಡಾತ್ಮ ಈ ಚೈದ್ಯ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಇಂಗಿತದಲರಿವುದು ಮಹಾತ್ಮರಿ
ಗಂಗವಿದು ಮಧ್ಯಮರು ಕರ್ಣ ಪ
ಥಂಗಳಲಿ ಗೋಚರಿಸಲರಿವುದು ಲೋಕ ವೃತ್ತಿಯಿದು
ಕಂಗಳಲಿ ಕಂಡರಿವರಧಮರು
ಕಂಗಳಲಿ ಕಿವಿಗಳಲಿ ಮೇಣ್ ಹರಿ
ಯಿಂಗಿತವನರಿಯದ ಜಡಾತ್ಮನು ಚೈದ್ಯ ನೃಪನೆಂದ ॥62॥
೦೬೩ ಎಲೆ ಪಿತಾಮಹ ...{Loading}...
ಎಲೆ ಪಿತಾಮಹ ನೀವು ನಿಗಮ
ಸ್ಥಳ ರಹಸ್ಯವನುಪನಿಷತ್ಸಂ
ಕುಳ ವಚೋಭಿಪ್ರಾಯ ಪೀಯೂಷವನು ಬೀರಿದರೆ
ಖಳರಿಗತಿ ದರ್ಪಜ್ವರ ಪ್ರ
ಜ್ವಲಿತರಿಗೆ ಸೊಗಸುವುದೆ ಬೆಳದಿಂ
ಗಳು ವಿಯೋಗಿಗೆ ವಿಷಮವೆಂದನು ನಗುತ ಸಹದೇವ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮನು ಇಷ್ಟೆಲ್ಲ ಹೇಳಿದ ಮೇಲೆ ಸಹದೇವ “ಎಲೆ ಪಿತಾಮಹ ! ನೀವು ವೇದಗಳಲ್ಲಿರುವ ರಹಸ್ಯಗಳನ್ನು ಉಪನಿಷತ್ತುಗಳಲ್ಲಿ ಬರುವ ಅಭಿಪ್ರಾಯಗಳ ಅಮೃತವನ್ನೂ ಬೀರಿದರೆ ಇಂತಹ ಖಳರಿಗೆ, ಯಾರಲ್ಲಿ ದರ್ಪವೆಂಬ ಜ್ವರ ಪ್ರಜ್ವಲಿಸುತ್ತದೆಯೋ ಅವರಿಗೆ
ಪ್ರಿಯವೆನಿಸುತ್ತದೆಯೇ ? ತನ್ನ ಪ್ರಿಯೆಯಿಂದ ಅಗಲಿರುವಂತಹ ವಿಯೋಗಿಗೆ ಬೆಳದಿಂಗಳು ಅಸಹನೀಯವಾಗುತ್ತದೆ” ಎಂದ ನಗುತ್ತಾ
ಪದಾರ್ಥ (ಕ.ಗ.ಪ)
ಮೂಲ ...{Loading}...
ಎಲೆ ಪಿತಾಮಹ ನೀವು ನಿಗಮ
ಸ್ಥಳ ರಹಸ್ಯವನುಪನಿಷತ್ಸಂ
ಕುಳ ವಚೋಭಿಪ್ರಾಯ ಪೀಯೂಷವನು ಬೀರಿದರೆ
ಖಳರಿಗತಿ ದರ್ಪಜ್ವರ ಪ್ರ
ಜ್ವಲಿತರಿಗೆ ಸೊಗಸುವುದೆ ಬೆಳದಿಂ
ಗಳು ವಿಯೋಗಿಗೆ ವಿಷಮವೆಂದನು ನಗುತ ಸಹದೇವ ॥63॥
೦೬೪ ಕೇಳಿರೈ ನೆರೆದಖಿಳ ...{Loading}...
ಕೇಳಿರೈ ನೆರೆದಖಿಳ ಧರಣೀ
ಪಾಲರಿಗೆ ಕೈ ಮುಗಿದೆವೀ ಗೋ
ಪಾಲನೆಮ್ಮಾಚಾರ್ಯ್ಸನೆಮ್ಮಯ ತಂದೆ ಗುರುವೆಮಗೆ
ಲಾಲಿಸಿದೆವರ್ಚಿಸಿದೆವೀತನ
ಮೇಲೆ ಮುಳಿಸುಂಟಾದೊಡೆನ್ನೊಡ
ನೇಳಲಾತನ ಗಂಡನೆಂದೊದೆದನು ಮಹೀತಳವ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ಸಹದೇವ ಸಭೆಯ ಕಡೆ ತಿರುಗಿ “ಎಲ್ಲ ಕೇಳಿರಿ, ಇಲ್ಲಿ ಸೇರಿರುವ ಎಲ್ಲ ರಾಜರುಗಳಿಗೂ ಇಗೋ ಕೈಮುಗಿದೆವು.
ಈ ಗೋಪಾಲನು ನಮ್ಮ ಆಚಾರ್ಯ, ನಮ್ಮ ತಂದೆ, ನಮಗೆ ಗುರು, ನಾವು ಈತನನ್ನು ಲಾಲಿಸಿದೆವು. ಅರ್ಚಿಸಿದೆವು. ಈತನ ಮೇಲೆ ಯಾರಿಗಾದರೂ ಮುಳಿಸಿದ್ದರೆ ಅಂಥವರು ಕಾಳಗಕ್ಕೆ ಬನ್ನಿ, ನಾನು ಅವರ ಪರಾಕ್ರಮವನ್ನು ನೋಡುತ್ತೇನೆ, ಎಂದು ನೆಲವನ್ನು ಒದೆದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಕೇಳಿರೈ ನೆರೆದಖಿಳ ಧರಣೀ
ಪಾಲರಿಗೆ ಕೈ ಮುಗಿದೆವೀ ಗೋ
ಪಾಲನೆಮ್ಮಾಚಾರ್ಯ್ಸನೆಮ್ಮಯ ತಂದೆ ಗುರುವೆಮಗೆ
ಲಾಲಿಸಿದೆವರ್ಚಿಸಿದೆವೀತನ
ಮೇಲೆ ಮುಳಿಸುಂಟಾದೊಡೆನ್ನೊಡ
ನೇಳಲಾತನ ಗಂಡನೆಂದೊದೆದನು ಮಹೀತಳವ ॥64॥
೦೬೫ ಚೆಲ್ಲಿದವು ಸಹದೇವ ...{Loading}...
ಚೆಲ್ಲಿದವು ಸಹದೇವ ಶಿರದಲಿ
ಮಲ್ಲಿಗೆಯ ಮೊಗ್ಗೆಗಳ ಮಳೆ ನಭ
ದಲ್ಲಿ ದನಿಯಾಯ್ತುಹುದಲೇ ಸಹದೇವ ಲೇಸೆನುತ
ಭುಲ್ಲವಿಸಿದರು ಋಷಿಗಳಪ್ರತಿ
ಮಲ್ಲದೈವದ ನೆಲೆಯನರಿಯದ
ಖುಲ್ಲ ಭೂಪರು ಮಸಗಿದರು ಗುಜುಗುಜಿನ ಗಾಢದಲಿ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಕೂಡಲೇ ಸಹದೇವನ ತಲೆಯ ಮೇಲೆ ಪುಷ್ಪವೃಷ್ಟಿಯಾಯಿತು. “ಅಹುದಲ್ಲವೇ ಸಹದೇವಾ ! ನೀನು ನುಡಿದದ್ದು ಸರಿ !”
ಎಂದು ಆಕಾಶವಾಣಿಯಾಯಿತು. ಋಷಿಗಳು ಸಂತೋಷದಿಂದ ಉಬ್ಬಿದರು. ಅಪ್ರತಿಮಲ್ಲನಾದ ಕೃಷ್ಣನ ನೆಲೆಯನ್ನು ಅರಿಯದ ದುಷ್ಟ ರಾಜರುಗಳು ಗುಜಗುಜ ಎಂದು ತೀವ್ರವಾಗಿ ಕೋಲಾಹಲ ಮಾಡತೊಡಗಿದರು.
ಪದಾರ್ಥ (ಕ.ಗ.ಪ)
ಭುಲ್ಲವಿಸು-ಸಂತೋಷದಿಂದ ಉಬ್ಬು
ಮೂಲ ...{Loading}...
ಚೆಲ್ಲಿದವು ಸಹದೇವ ಶಿರದಲಿ
ಮಲ್ಲಿಗೆಯ ಮೊಗ್ಗೆಗಳ ಮಳೆ ನಭ
ದಲ್ಲಿ ದನಿಯಾಯ್ತುಹುದಲೇ ಸಹದೇವ ಲೇಸೆನುತ
ಭುಲ್ಲವಿಸಿದರು ಋಷಿಗಳಪ್ರತಿ
ಮಲ್ಲದೈವದ ನೆಲೆಯನರಿಯದ
ಖುಲ್ಲ ಭೂಪರು ಮಸಗಿದರು ಗುಜುಗುಜಿನ ಗಾಢದಲಿ ॥65॥