೦೦೦ ಸೂಚನೆ ಸಕಲ ...{Loading}...
ಸೂಚನೆ: ಸಕಲ ಋಷಿ ಮುಖ್ಯರು ಮಹೀ ಪಾ
ಲಕರು ನೆರೆದರು ವಿಶ್ವಭೂತ
ಪ್ರಕರ ದಣಿದುದು ಧರ್ಮಪುತ್ರನ ರಾಜಸೂಯದಲಿ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂ : ಎಲ್ಲ ಮುಖ್ಯ ಋಷಿಗಳೂ, ರಾಜರುಗಳೂ, ಧರ್ಮಪುತ್ರನ ರಾಜಸೂಯ ಯಾಗಕ್ಕೆ ಬಂದು ಸೇರಿದರು. ಪ್ರಪಂಚದ ಎಲ್ಲ ಜೀವಿಗಳೂ ಯಾಗದ ಸಮಯದಲ್ಲಿ ತೃಪ್ತಿಪಟ್ಟರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಸೂಚನೆ: ಸಕಲ ಋಷಿ ಮುಖ್ಯರು ಮಹೀ ಪಾ
ಲಕರು ನೆರೆದರು ವಿಶ್ವಭೂತ
ಪ್ರಕರ ದಣಿದುದು ಧರ್ಮಪುತ್ರನ ರಾಜಸೂಯದಲಿ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ದೂತರು ಹರಿದರವನೀ
ಪಾಲರಿಗೆ ಋಷಿಗಳಿಗೆ ಭೂಸುರ ವೈಶ್ಯ ಶೂದ್ರರಿಗೆ
ಹೇಳಲೇನದುಬುತವನಂಬುಧಿ
ವೇಲೆಯಲಿ ಮಧ್ಯದ ಸಮಸ್ತ ಜ
ನಾಳಿ ನೆರೆದುದು ವಿಲಸದಿಂದ್ರಪ್ರಸ್ಥ ನಗರಿಯಲಿ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಜನಟ್ಟಿದ ದೂತರು ಎಲ್ಲ ರಾಜರುಗಳನ್ನು ಋಷಿಗಳನ್ನು ಬ್ರಾಹ್ಮಣ ವೈಶ್ಯ ಶೂದ್ರರುಗಳನ್ನು ಯಾಗಕ್ಕೆ ಆಹ್ವಾನಿಸಿದರು. ಆ ಅದ್ಭುತವನ್ನು ಏನೆಂದು ಹೇಳೋಣ. ಚತುಸ್ಸಾಗರ ಪರ್ಯಂತ ಭೂಮಿಯ ಮೇಲಿದ್ದ ಸಮಸ್ತ ಜನರೂ ಇಂದ್ರಪ್ರಸ್ಥ ನಗರಿಗೆ ಬಂದು ಸೇರಿದರು.
ಪದಾರ್ಥ (ಕ.ಗ.ಪ)
ವೇಲೆ- ಪರಿಧಿ, ವಿಸ್ತಾರ
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ದೂತರು ಹರಿದರವನೀ
ಪಾಲರಿಗೆ ಋಷಿಗಳಿಗೆ ಭೂಸುರ ವೈಶ್ಯ ಶೂದ್ರರಿಗೆ
ಹೇಳಲೇನದುಬುತವನಂಬುಧಿ
ವೇಲೆಯಲಿ ಮಧ್ಯದ ಸಮಸ್ತ ಜ
ನಾಳಿ ನೆರೆದುದು ವಿಲಸದಿಂದ್ರಪ್ರಸ್ಥ ನಗರಿಯಲಿ ॥1॥
೦೦೨ ಚೋಳ ಸಿಂಹಳ ...{Loading}...
ಚೋಳ ಸಿಂಹಳ ಪಾಂಡ್ಯ ಕೇರಳ
ಮಾಳವಾಂಧ್ರ ಕರೂಷ ಬರ್ಬರ
ಗೌಳ ಕೋಸಲ ಮಂಗಧ ಕೇಕಯ ಹೂಣ ಸೌವೀರ
ಲಾಳ ಜೋನೆಗೆ ಜೀನ ಕುರು ನೇ
ಪಾಳ ಶಿಖಿ ಕಾಶ್ಮೀರ ಬೋಟ ವ
ರಾಳ ವರ ದೇಶಾಧಿಪತಿಗಳು ಬಂದರೊಗ್ಗಿನಲಿ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚೋಳ, ಸಿಂಹಳ, ಪಾಂಡ್ಯ, ಕೇರಳ, ಮಾಳವ, ಆಂಧ್ರ ಕರೂಷ, ಬರ್ಬರ, ಗೌಳ, ಕೋಸಲ, ಮಗಧ, ಕೇಕಯ, ಹೂಣ, ಸೌವೀರ, ಲಾಳ, ಜೋನೆಗ, ಜೀನ, ಕುರು, ನೇಪಾಳ, ಶಿಖಿ, ಕಾಶ್ಮೀರ, ಬೋಟ, ವರಾಳ ಈ ದೇಶಾಧಿಪತಿಗಳೆಲ್ಲ ಗುಂಪುಗುಂಪಾಗಿ ಬಂದು ಸೇರಿದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಚೋಳ ಸಿಂಹಳ ಪಾಂಡ್ಯ ಕೇರಳ
ಮಾಳವಾಂಧ್ರ ಕರೂಷ ಬರ್ಬರ
ಗೌಳ ಕೋಸಲ ಮಂಗಧ ಕೇಕಯ ಹೂಣ ಸೌವೀರ
ಲಾಳ ಜೋನೆಗೆ ಜೀನ ಕುರು ನೇ
ಪಾಳ ಶಿಖಿ ಕಾಶ್ಮೀರ ಬೋಟ ವ
ರಾಳ ವರ ದೇಶಾಧಿಪತಿಗಳು ಬಂದರೊಗ್ಗಿನಲಿ ॥2॥
೦೦೩ ಭೂರಿ ಭೂರಿಶ್ರವನು ...{Loading}...
ಭೂರಿ ಭೂರಿಶ್ರವನು ಬಾಹ್ಲಿಕ
ಶೂರಸೇನೆ ಕಳಿಂಗ ಸಲೆ ಗಾಂ
ಧಾರ ಸೌಬಲ ಸೋಮದತ್ತ ಸುಷೇಣ ಭಗದತ್ತ
ವೀರ ಪೌಂಡ್ರಕನೇಕಲವ್ಯ ಸು
ರಾರಿಗಳು ಶಿಶುಪಾಲ ಯವನ ಕು
ಮಾರ ಪೌರವ ದಂತವಕ್ರರು ಬಂದರೊಗ್ಗಿನಲಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೇಷ್ಠನಾದ ಭೂರಿಶ್ರವ, ಬಾಹ್ಲಿಕ, ಶೂರಸೇನ, ಕಳಿಂಗ, ಗಾಂಧಾರ, ಸೌಬಲ, ಸೋಮದತ್ತ, ಸುಕ್ಷೇಣ, ಭಗದತ್ತ, ವೀರಪೌಂಡ್ರಕ, ಏಕಲವ್ಯ, ಅಸುರರಾದ ಶಿಶುಪಾಲ, ಯವನ ಕುಮಾರ, ಪೌರವ, ದಂತವಕ್ರರು ಗುಂಪಾಗಿ ಬಂದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಭೂರಿ ಭೂರಿಶ್ರವನು ಬಾಹ್ಲಿಕ
ಶೂರಸೇನೆ ಕಳಿಂಗ ಸಲೆ ಗಾಂ
ಧಾರ ಸೌಬಲ ಸೋಮದತ್ತ ಸುಷೇಣ ಭಗದತ್ತ
ವೀರ ಪೌಂಡ್ರಕನೇಕಲವ್ಯ ಸು
ರಾರಿಗಳು ಶಿಶುಪಾಲ ಯವನ ಕು
ಮಾರ ಪೌರವ ದಂತವಕ್ರರು ಬಂದರೊಗ್ಗಿನಲಿ ॥3॥
೦೦೪ ಸಕಳ ದಳ ...{Loading}...
ಸಕಳ ದಳ ಮೇಳಾಪದಲಿ ಭೀ
ಷ್ಮಕನು ರುಕ್ಮನು ಚಿತ್ರರಥ ಸಾ
ಲ್ವಕನು ರೋಹಿತ ರೋಚಮಾನ ಸಮುದ್ರಸೇನಕರು
ಪ್ರಕಟ ಬಲರುತ್ತರ ದಿಶಾ ಪಾ
ಲಕರು ಕುರು ಪರಿಯಂತ ರಾಜ
ಪ್ರಕರ ನೆರದುದು ವಿಲಸದಿಂದ್ರಪ್ರಸ್ಥ ನಗರಿಯಲಿ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮಕ, ರುಕ್ಮ, ಚಿತ್ರರಥ, ಸಾಲ್ವ, ರೋಹಿತ, ರೋಚಮಾನ, ಸಮುದ್ರಸೇನ ಇವರೇ ಮೊದಲಾದವರು, ಉತ್ತರಕುರುವಿನ
ರಾಜರೆಲ್ಲರೂ ತಮ್ಮ ಸಕಲ ಸೇನಾ ಪರಿವಾರದೊಡನೆ ಇಂದ್ರಪ್ರಸ್ಥ ನಗರಿಗೆ ಬಂದು ಸೇರಿದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಸಕಳ ದಳ ಮೇಳಾಪದಲಿ ಭೀ
ಷ್ಮಕನು ರುಕ್ಮನು ಚಿತ್ರರಥ ಸಾ
ಲ್ವಕನು ರೋಹಿತ ರೋಚಮಾನ ಸಮುದ್ರಸೇನಕರು
ಪ್ರಕಟ ಬಲರುತ್ತರ ದಿಶಾ ಪಾ
ಲಕರು ಕುರು ಪರಿಯಂತ ರಾಜ
ಪ್ರಕರ ನೆರದುದು ವಿಲಸದಿಂದ್ರಪ್ರಸ್ಥ ನಗರಿಯಲಿ ॥4॥
೦೦೫ ದ್ರುಪದ ಧೃಷ್ಟದ್ಯುಮ್ನ ...{Loading}...
ದ್ರುಪದ ಧೃಷ್ಟದ್ಯುಮ್ನ ರಣಲೋ
ಲುಪ ಯುಧಾಮನ್ಯೂತ್ತಮೌಂಜಸ
ರುಪಚಿತರು ಬಂದರು ಸಗಾಢದಲಿವರ ಬಾಂಧವರು
ಕೃಪ ಜಯದ್ರಥ ಭೀಷ್ಮ ಮಾದ್ರಾ
ಧಿಪತಿ ಕರ್ಣ ದ್ರೋಣ ಮೊದಲಾ
ದಪರಿಮಿತ ಬಲ ಸಹಿತ ಕೌರವರಾಯ ನಡೆತಂದ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರುಪದ, ಧೃಷ್ಟದ್ಯುಮ್ನ, ರಣಲೋಲುಪನಾದ ಯುಧಾಮನ್ಯು ಉತ್ತಮೌಂಜಸ ಈ ಬಂಧುಗಳೆಲ್ಲ ಸಡಗರಿಸಿ ಬಂದರು. ಕೃಪ, ಜಯದ್ರಥ, ಭೀಷ್ಮ, ಶಲ್ಯ, ಕರ್ಣ, ದ್ರೋಣ, ಮೊದಲಾದ ಅಪರಿಮಿತ ಸೇನೆಯೊಡನೆ ಕೌರವ ರಾಜ ಬಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ದ್ರುಪದ ಧೃಷ್ಟದ್ಯುಮ್ನ ರಣಲೋ
ಲುಪ ಯುಧಾಮನ್ಯೂತ್ತಮೌಂಜಸ
ರುಪಚಿತರು ಬಂದರು ಸಗಾಢದಲಿವರ ಬಾಂಧವರು
ಕೃಪ ಜಯದ್ರಥ ಭೀಷ್ಮ ಮಾದ್ರಾ
ಧಿಪತಿ ಕರ್ಣ ದ್ರೋಣ ಮೊದಲಾ
ದಪರಿಮಿತ ಬಲ ಸಹಿತ ಕೌರವರಾಯ ನಡೆತಂದ ॥5॥
೦೦೬ ಗುರುತನೂಜ ಸುಶರ್ಮ ...{Loading}...
ಗುರುತನೂಜ ಸುಶರ್ಮ ವಂಗೇ
ಶ್ವರ ಬೃಹದ್ರಥ ಭೀಮರಥ ದು
ರ್ಮರುಷಣರು ವರ ಭಾನುದತ್ತ ವಿಕರ್ಣ ದುಸ್ಸಹರು
ವರ ವಿವಿಂಶತಿ ದೀರ್ಘಭುಜ ದು
ರ್ದರುಶ ದುರ್ಜಯ ಶಂಕು ಕರ್ಣಾ
ದ್ಯರು ಸಹಿತ ದುಶ್ಶಾಸನನು ಹೊರವಂಟನರಮನೆಯ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮ, ಸುಶರ್ಮ, ವಂಗೇಶ್ವರ, ಬೃಹದ್ರಥ, ದುರ್ಮರ್ಷಣ, ಭಾನುದತ್ತ, ವಿಕರ್ಣ, ದುಸ್ಸಹ, ವಿವಿಂಶತಿ, ದೀರ್ಘಭುಜ, ದುರ್ದರ್ಶ, ದುರ್ಜಯ, ಶಂಕುಕರ್ಣ ಇವರೇ ಮೊದಲಾದವರೊಡನೆ ದುಶ್ಶಾಸನ ಅರಮನೆಯಿಂದ ಹೊರಬಿದ್ದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಗುರುತನೂಜ ಸುಶರ್ಮ ವಂಗೇ
ಶ್ವರ ಬೃಹದ್ರಥ ಭೀಮರಥ ದು
ರ್ಮರುಷಣರು ವರ ಭಾನುದತ್ತ ವಿಕರ್ಣ ದುಸ್ಸಹರು
ವರ ವಿವಿಂಶತಿ ದೀರ್ಘಭುಜ ದು
ರ್ದರುಶ ದುರ್ಜಯ ಶಂಕು ಕರ್ಣಾ
ದ್ಯರು ಸಹಿತ ದುಶ್ಶಾಸನನು ಹೊರವಂಟನರಮನೆಯ ॥6॥
೦೦೭ ಬನ್ದರೈ ಚತುರಙ್ಗದವನಿಪ ...{Loading}...
ಬಂದರೈ ಚತುರಂಗದವನಿಪ
ವೃಂದವವರುಚಿತ ಮಿಗಿಲಿದಿ
ರ್ವಂದು ಭೀಷ್ಮ ದ್ರೋಣ ಕೃಪ ಧೃತರಾಷ್ಟ್ರರಿಗೆ ನಮಿಸಿ
ವಂದನೀಯರಿಗೆರಗಿ ಸಮರಿಗೆ
ನಿಂದು ಕುಶಲಕ್ಷೇಮ ಸಂಗತಿ
ಯಿಂದ ಸತ್ಕರಿಸಿದನು ನೃಪ ವಿದುರಾದಿ ಬಾಂಧವರ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚತುರಂಗ ಬಲದೊಡನೆ ಬಂದ ಈ ರಾಜರನ್ನೆಲ್ಲ ಎದುರುಗೊಂಡು ಅವರವರಿಗೆ ಉಚಿತವಾದ ರೀತಿಯಲ್ಲಿ ಮನ್ನಿಸಿ ಯುಧಿಷ್ಠಿರ ರಾಜ ಸತ್ಕರಿಸಿದ. ಭೀಷ್ಮ ದ್ರೋಣ ಕೃಪ ಧೃತರಾಷ್ಟ್ರರಿಗೆ ನಮಿಸಿದ. ಇದೇ ರೀತಿಯಲ್ಲಿ ವಂದನೀಯರಿಗೆ ವಂದಿಸಿ, ಸಮಸಮರಾದವರಿಗೆ ಎದುರು ನಿಂತು ಕುಶಲ ಕ್ಷೇಮ ಸಮಾಚಾರವನ್ನು ಕೇಳಿ ವಿದುರನೇ ಮೊದಲಾದ ಬಾಂಧವರನ್ನೂ ಉಳಿದ ಸಮಸ್ತ ರಾಜರನ್ನೂ ಆದರಿಸಿ ಸತ್ಕರಿಸಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಬಂದರೈ ಚತುರಂಗದವನಿಪ
ವೃಂದವವರುಚಿತ ಮಿಗಿಲಿದಿ
ರ್ವಂದು ಭೀಷ್ಮ ದ್ರೋಣ ಕೃಪ ಧೃತರಾಷ್ಟ್ರರಿಗೆ ನಮಿಸಿ
ವಂದನೀಯರಿಗೆರಗಿ ಸಮರಿಗೆ
ನಿಂದು ಕುಶಲಕ್ಷೇಮ ಸಂಗತಿ
ಯಿಂದ ಸತ್ಕರಿಸಿದನು ನೃಪ ವಿದುರಾದಿ ಬಾಂಧವರ ॥7॥
೦೦೮ ಜನಪ ಕೇಳೀಚೆಯಲಿ ...{Loading}...
ಜನಪ ಕೇಳೀಚೆಯಲಿ ಬಂದುದು
ಮುನಿಗಳಾಂಗಿರ ಕಣ್ವ ಭೃಗು ಜೈ
ಮಿನಿ ಸುಮಂತ ವಸಿಷ್ಠ ಶೌನಕ ಗಾಗ್ರ್ಯ ಬೃಹದಶ್ವ
ಸನಕ ಶುಕ ಜಾಬಾಲಿ ತಿತ್ತಿರಿ
ವಿನುತ ಮಾರ್ಕಾಂಡೇಯ ಮುದ್ಗಲ
ತನಯ ರೋಮಶ ಕುತ್ಸವತ್ಸರು ಶೈಬ್ಯ ನಾರದರು ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇತ್ತ ಕಡೆ ಮುನಿಜನರೆಲ್ಲ ಬಂದು ಸೇರಿದರು. ಆಂಗಿರ, ಕಣ್ವ, ಭೃಗು, ಜೈಮಿನಿ, ಸುಮಂತ, ವಶಿಷ್ಠ, ಶೌನಕ, ಗಾಗ್ರ್ಯ, ಬೃಹದಶ್ವ, ಸನಕ, ಶುಕ, ಜಾಬಾಲಿ, ತಿತ್ತಿರಿ, ಮಾರ್ಕಂಡೇಯ, ಮೌದ್ಗಲ, ರೋಮಶ, ಕುತ್ಸ, ವತ್ಸ, ಶೈಬ್ಯ, ನಾರದ, ಇವರೆಲ್ಲ ಸಂದಣಿಸಿ ಬಂದರು.
ಪದಾರ್ಥ (ಕ.ಗ.ಪ)
ಟಿಪ್ಪನೀ (ಕ.ಗ.ಪ)
ಶೈಬ್ಯ - ಶೈಬ್ಯ ಎಂಬ ಹೆಸರಿನವರು ಮಹಾಭಾರತದಲ್ಲಿ ಏಳೆಂಟು ಮಂದಿ ಇದ್ದಾರೆ. ಶೈಭ್ಯ ಎಂಬ ಹೆಸರಿನ ಸ್ತ್ರೀಯರೂ ಹಲವರಿದ್ದಾರೆ. ಅವರಲ್ಲಿ ಒಬ್ಬಳು ಶ್ರೀಕೃಷ್ಣನ ಅಷ್ಟಮಹಿಷಿಯರಲ್ಲಿ ಒಬ್ಬಳಾದ ಅನುವಿಂದೆ. ಅಲ್ಲದೆ ಶೈಬ್ಯ ಎನ್ನುವುದು ಅರ್ಜುನನ ರಥಾಶ್ವಗಳಲ್ಲಿ ಒಂದು ಕುದುರೆಯ ಹೆಸರೂ ಆಗಿದೆ. ಬಹುಶಃ ಶಿಬಿಯ ಸಾಮ್ರಾಜ್ಯದಿಂದ ಬಂದ ಕಾರಣಕ್ಕೆ ಶೈಬ್ಯ ಎಂದು ಹೆಸರು ಅಂಟಿಕೊಂಡಿರಬಹುದು. ಷೋಡಶ ಚಕ್ರವರ್ತಿಗಳಲ್ಲಿ ಪ್ರಸಿದ್ಧ ದೊರೆಯಾಗಿದ್ದ ಶಿಬಿಯ ವಂಶದ ಉಶೀನರನ ಮೊಮ್ಮಗನಾದ ಶೈಬ್ಯನ ಬಗೆಗೆ ಇಲ್ಲಿ ಹೇಳಲಾಗಿದೆ. ಧರ್ಮರಾಯನ ಮಾವನೆಂದು ಆದಿಪರ್ವದಲ್ಲಿ ಹೇಳಲಾಗಿದೆ. ಶೈಬ್ಯನಿಗೆ ಗೋವಾಸನ ಎಂಬ ಹೆಸರೂ ಇದ್ದಂತೆ ಕಾಣುತ್ತದೆ. ಇವನ ಮಗಳಾದ ದೇವಿಕೆಯನ್ನು ವರಿಸಿ ಧರ್ಮರಾಯನು ಯೌಧೇಯ ಎಂಬ ಮಗನನ್ನು ಪಡೆದಿದ್ದ. ಭೀಷ್ಮಪರ್ವದ 23ನೆಯ ಅಧ್ಯಾಯದಲ್ಲಿ ಕೌರವನು ಭೀಷ್ಮರಿಗೆ ತನ್ನ ಕಡೆಯ ವೀರರ ವಿಷಯ ಹೇಳಿ ಪಾಂಡವರ ಕಡೆಯವರನ್ನೂ ಪರಿಚಯಿಸುವಾಗ ‘‘ಅತ್ರಶೂರಾ ಮಹೇಷ್ವಾಸಾ ಭೀಮಾರ್ಜುನ ಸಮೋಯುಧಿಃ’’ ಎನ್ನುತ್ತಾನೆ. ಮನುಷ್ಯರಲ್ಲಿ ಶ್ರೇಷ್ಠನಾದ ಧನುರ್ಧರ, ಯುದ್ಧ ಭಯಂಕರ, ಭೀಮಾರ್ಜುನರಿಗೆ ಸಮಾನನಾದವನು, ಮಹಾರಥಿ ಎಂದೆಲ್ಲ ಕೀರ್ತಿಸುತ್ತಾನೆ. ನೀಲಕಮಲ ವರ್ಣದ, ಸುವರ್ಣ ಭೂಷಣಗಳಿಂದ ಶೋಭಿತನಾದ, ವಿಚಿತ್ರವಾದ ಮಾಲೆಯನ್ನು ಧರಿಸಿ ಯುದ್ದಕ್ಕೆ ನಿಂತಿದ್ದ ಈ ವೀರನ ಬಗೆಗೆ ವ್ಯಾಸರು ಅನೇಕ ಬಾರಿ ಪ್ರಶಂಸೆ ಮಾಡಿದ್ದಾರೆ.
ಶೈಬ್ಯರಾಜನು ಧರ್ಮರಾಯನು ನಡೆಸುತ್ತಿದ್ದ ರಾಜಸಭೆಗಳಲ್ಲಿ ಭಾಗವಹಿಸುತ್ತದೆಂದು ಸಭಾಪರ್ವದಲ್ಲಿ ಹೇಳಲಾಗಿದೆ. ಉದ್ದಕ್ಕೂ ಈತನು ಪಾಂಡವರ ಮೇಲೆ ಅಪಾರ ಅಭಿಮಾನವನ್ನು ಇರಿಸಿಕೊಂಡು ಬಂದಿದ್ದಾನೆ. ಪಾಂಡವರ ಅಜ್ಞಾತವಾಸವು ಮುಗಿದು ವಿರಾಟರಾಜನ ಮಗಳಾದ ಉತ್ತರೆಯೊಂದಿಗೆ ಅಬಿಮನ್ಯುವಿನ ಮದುವೆ ನಿಶ್ಚಯವಾದಾಗ ಆಹ್ವಾನಿತನಾಗಿ ಶೈಬ್ಯರಾಜನು ಉಪಪ್ಲಾವ್ಯ ನಗರಕ್ಕೆ ಬಂದ. ಮದುವೆಗೆ ಹಾಜರಿ ಹಾಕುವುದ ಒಂದು ನೆಪ. ಯುದ್ದ ಘಟಿಸಿದರೆ ಸಹಾಯ ಮಾಡುವುದೇ ಅವನ ಗುರಿ. ಆದುದರಿಂದ ಶೈಬ್ಯನು ಒಂದು ಅಕ್ಷೋಹಿಣಿ ಸೇನೆಯನ್ನು ಕೂಡಿಸಿಕೊಂಡೇ ಧರ್ಮರಾಯನ ಬಳಿಗೆ ಬಂದಿದ್ದ. ಧರ್ಮರಾಯನ ಇನ್ನೊಬ್ಬ ಅಭಿಮಾನಿ ಕಾಶಿರಾಜನನ್ನೂ ಜೊತೆಗೆ ಕರೆ ತಂದಿದ್ದ. ಯುದ್ಧ ಆರಂಭವಾದಾಗ ಧರ್ಮರಾಯನು ನಿರ್ಮಿಸಿದ ಕ್ರೌಂಚವ್ಯೂಹದ ರಕ್ಷಣೆಗೆಂದು ಕಾಶಿರಾಜನೊಂದಿಗೆ ಮೂವತ್ತು ಸಾವಿರ ಸೇನೆಯೊಂದಿಗೆ ಸಿದ್ಧನಾಗಿ ನಿಂತಿದ್ದ. ಕೌರವರ ಕಡೆಯ ಕೃತವರ್ಮನ ಎದುರಿಗೆ ಯುದ್ದಕ್ಕೆ ನಿಲ್ಲಬೇಕೆಂಬ ಸೂಚನೆಯನ್ನು ಶಿರಸಾವಹಿಸಿ ಯುದ್ಧ ಮಾಡಿದ. ದ್ರೋಣಪರ್ವದಲ್ಲಿ ಶೈಬ್ಯನ ಸಾಹಸಪೂರ್ಣ ಹೋರಾಟದ ವಿವರಗಳಿವೆ. ಸ್ವತಃ ದ್ರೋಣರ ಎದುರಿಗೇ ನಿಂತು ಹೋರಾಡಿದ ಕೀರ್ತಿಯೂ ಈತನಿಗೆ ಸಲ್ಲುತ್ತದೆ.
ಮಹಾಭಾರತ ಗ್ರಂಥದಲ್ಲಿಯೇ ಹಲವಾರು ಶೈಬ್ಯರ ಉಲ್ಲೇಖವಿರುವುದರಿಂದ ಸ್ವಲ್ಪ ಗೊಂದಲಕ್ಕೆ ಅವಕಾಶವಾಗಿದೆ. ಉದಾಹರಣೆಗೆ ಯುದ್ಧದಲ್ಲಿ ಕೌರವ ಪಕ್ಷದಲ್ಲಿದ್ದು ಭೀಷ್ಮರಿಗೆ ಸಹಾಯಕನಾಗಿ ನಿಂತು ಅವರು ರಚಿಸಿದ ‘ಸರ್ವತೋಭದ್ರ’ ಎಂಬ ವ್ಯೂಹದ ಮುಂಚೂಣಿಯಲ್ಲಿ ನಿಂತು ಪಾಂಡವರ ಎದುರು ನಿಂತು ಯುದ್ಧ ಮಾಡಿದ ಶೈಬ್ಯನೇ ಬೇರೆ ಎಂದು ಗುರುತಿಸಿದರೆ ಈ ಬಗೆಯ ಗೊಂದಲಕ್ಕೆ ಅವಕಾಶವಿರುವುದಿಲ್ಲ.ಯುಯುತ್ಸುವು ಧೃತರಾಷ್ಟ್ರನಿಗೆ ವೇಶ್ಯಾಂಗನೆಯಲ್ಲಿ ಹುಟ್ಟಿದವನು. ಯುದ್ಧದ ಪ್ರಾರಂಭದ ದಿನ ಕೌರವ ಪಕ್ಷವನ್ನು ತೊರೆದು ಪಾಂಡವ ಪಕ್ಷಕ್ಕೆ ಸೇರಿಕೊಂಡ. ಭೀಷ್ಮಪರ್ವದ ಎರಡನೆಯ ಸಂಧಿಯಲ್ಲಿ ಯುಯುತ್ಸುವು ಪಾಂಡವರ ಕಡೆಗೆ ಪಕ್ಷಾಂತರ ಮಾಡಿದ ಪ್ರಸ್ತಾಪ ಬರುತ್ತದೆ.
ಸೃಂಜಯ-ಸೃಂಜಯ ಒಬ್ಬ ಅರಸು. ಶೈಬ್ಯ ರಾಜನ ಮಗ. ಈತ ಕೇಕಯ ರಾಜ ಪುತ್ರಿಯನ್ನು ಮದುವೆಯಾಗಿ ಸುವರ್ಣಷ್ಟೀವಿಯೆಂಬ ಪುತ್ರನನ್ನೂ ದಮಯಂತಿ ಅಥವಾ ಸುಕುಮಾರಿಯೆಂಬ ಹೆಸರಿನ ಮಗಳನ್ನೂ ಪಡೆದ (ಭಾರ. ಸಭಾ.-. ಸುವರ್ಣಷ್ಟೀವಿಯ ದೇಹದಿಂದ ಬೇಕಾದಷ್ಟು ಚಿನ್ನ ದಿನದಿನವೂ ಹೊರಡುತ್ತಿದ್ದ ಕಾರಣ ಇವನ ದೇಹವೆಲ್ಲ ಚಿನ್ನವಾಗಿರಬಹುದೆಂಬ ಭಾವನೆಯಿಂದ ಕಳ್ಳರು ಇವನನ್ನು ಕೊಂದರು. ಸೃಂಜಯ ಪುತ್ರಶೋಕದಿಂದ ಮರುಗುತ್ತಿರುವಾಗ ನಾರದ ಅವನಿಗೆ ಷೋಡಷಶಮಹಾರಾಜರ ಚರಿತ್ರೆಯನ್ನು ವಿವರಿಸಿದ (ಭಾರ. ದ್ರೋ. 55-70). ಈತನ ಮಗಳಾದ ಸುಕುಮಾರಿಯನ್ನು ನಾರದ ಮದುವೆಯಾಗಿದ್ದ. ನೋಡು-ದಮಯಂತಿ, ನಾರದ, ಸುಕುಮಾರಿ (ಭಾರ. ಶಾಚಿತಿ 29. ದೇ.ಭಾಗ. 6-2 (ಪುರಾಣನಾಮ ಚೂಡಾಮಣಿ)
ಆದರೆ ಮೇಲ್ಕಂಡ ವಿವರಗಳಿಂದ ಈತನು ಈ ಸಂದರ್ಭದಲ್ಲಿ ಉಲ್ಲೇಖಗೊಂಡಿರುವ ಸೃಂಜಯರಿಗೆ ಸಂಬಂಧಿಸಿದವನಲ್ಲವೆಂದು ತೋರುತ್ತದೆ.
ಮೂಲ ...{Loading}...
ಜನಪ ಕೇಳೀಚೆಯಲಿ ಬಂದುದು
ಮುನಿಗಳಾಂಗಿರ ಕಣ್ವ ಭೃಗು ಜೈ
ಮಿನಿ ಸುಮಂತ ವಸಿಷ್ಠ ಶೌನಕ ಗಾಗ್ರ್ಯ ಬೃಹದಶ್ವ
ಸನಕ ಶುಕ ಜಾಬಾಲಿ ತಿತ್ತಿರಿ
ವಿನುತ ಮಾರ್ಕಾಂಡೇಯ ಮುದ್ಗಲ
ತನಯ ರೋಮಶ ಕುತ್ಸವತ್ಸರು ಶೈಬ್ಯ ನಾರದರು ॥8॥
೦೦೯ ಚ್ಯವನ ಗೌತಮ ...{Loading}...
ಚ್ಯವನ ಗೌತಮ ವೇಣುಜಂಘ
ಪ್ರವರ ಕೌಶಿಕ ಸತ್ಯತಪ ಭಾ
ರ್ಗವ ಸುಮಾಲಿ ಸುಮಿತ್ರ ಕಾಶ್ಯಪ ಯಾಜ್ಞವಲ್ಕ್ಯ ಋಷಿ
ಪವನಭಕ್ಷಕ ದೀರ್ಘತಪ ಗಾ
ಲವನು ಶಿತ ಶಾಂಡಿಲ್ಯ ಮಾಂಡ
ವ್ಯ ವರರೆಂಬ ಮಹಾ ಮುನೀಂದ್ರರು ಬಂದರೊಗ್ಗಿನಲಿ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚ್ಯವನ, ಗೌತಮ, ವೇಣುಜಂಘ, ಶ್ರೇಷ್ಠನಾದ ಕೌಶಿಕ, ಸತ್ಯತಪ, ಭಾರ್ಗವ, ಸುಮಾಲಿ, ಸುಮಿತ್ರ, ಕಾಶ್ಯಪ, ಯಾಜ್ಞವಲ್ಕ್ಯ, ಪವನಭಕ್ಷಕ, ದೀರ್ಘತಪ, ಗಾಲವ, ಶಿತ, ಶಾಂಡುಲ್ಯ, ಮಾಂಡವ್ಯ ಇವರೆಲ್ಲ ಸಂದಣಿಸಿ ಬಂದರು.
ಪದಾರ್ಥ (ಕ.ಗ.ಪ)
ಟಿಪ್ಪನೀ (ಕ.ಗ.ಪ)
ಮಾಂಡವ್ಯ - ಮಾಂಡವ್ಯೋಪಾಖ್ಯಾನವು ಮಹಾಭಾರತದಲ್ಲಿ ಒಂದು ವಿಸ್ತೃತ ಕಥನವಾಗಿದೆ. ನಿರಪರಾಧಿಗಳಿಗೆ ಶಿಕ್ಷೆ ಕೊಡುವವರು ಎಂದಿಗೂ ಉದ್ಧಾರವಾಗುವುದಿಲ್ಲ ಎಂಬ ಸಂಗತಿಯನ್ನು ಪ್ರತಿಪಾದಿಸಲು ಈ ಕಥವನ್ನು ಹೇಳಲಾಗಿದೆ. ಯಮನಂಥವನು ಕೂಡ ತಪ್ಪಿಗಾಗಿ ಶಾಪ ಪಡೆಯಬೇಕಾಯಿತು. ಅಲ್ಲದೆ ವಿದುರನಂಥ ಮಹಾನುಭಾವನ ಜನನಕ್ಕೆ ಈ ಶಾಪ ಪ್ರಸಂಗ ಕಾರಣವಾಯಿತೆಂಬ ದೃಷ್ಟಿಯಿಂದಲೂ ಈ ಕಥೆ ಮಹತ್ವದ್ದಾಗಿದೆ. (ಧರ್ಮೋ ವಿದುರರೂಪೇಣ ಶಾಪಾತ್ತಸ್ಯ ಮಹಾತ್ಮನಃ!)
ಮಾಂಡವ್ಯನನ್ನು ಅಣಿಮಾಂಡವ್ಯ ಎಂದೂ ಕರೆಯುತ್ತಾರೆ. ಈಗ ಒಬ್ಬ ಋಷಿ ಈತ ಮೌನವ್ರತವನ್ನು ಆಚರಿಸುತ್ತ ತನ್ನ ಕೈಗಳನ್ನು ಮೇಲಕ್ಕೆ ಎತ್ತಿಕೊಂಡು ತಪಸ್ಸು ಮಾಡುತ್ತಿದ್ದವನು. ಇಂಥ ನಿಷ್ಠಾವಂತನ ಬಗೆಗೆ ಒಬ್ಬ ರಾಜನಿಗೆ ಸಂಶಯ ಬರುವ ರೀತಿಯಲ್ಲಿ ಒಂದು ಘಟನೆ ನಡೆದದ್ದು ಒಂದು ದುರಂತ. ಕೆಲವರು ಕಳ್ಳರು ಒಡವೆಗಳನ್ನು ಕದ್ದು ಓಡುತ್ತಿದ್ದವರು ರಾಜಭಟರಿಂದ ತಪ್ಪಿಸಿಕೊಳ್ಳಲು ಕದ್ದ ಸಾಮಗ್ರಿಯನ್ನೆಲ್ಲ ಮಾಂಡವ್ಯನ ಕುಟೀರದಲ್ಲಿ ಬಚ್ಚಿಟ್ಟರು. ಪತ್ತೆ ಹಚ್ಚಿದ ರಾಜಭಟರು ಈ ಬಗೆಗೆ ಪ್ರಶ್ನಿಸಿದಾಗ ಮೌನಿಯಾಗಿದ್ದ ಮಾಂಡವ್ಯ ಬಾಯಿ ಬಿಡದಿದ್ದುದರಿಂದ ತಪ್ಪಿತಸ್ಥನೆಂದು ತೀರ್ಮಾನಿಸಿ ದೊರೆ ಅವನನ್ನು ಶೂಲಕ್ಕೆ ಏರಿಸುವಂತೆ ಅಪ್ಪಣೆ ಮಾಡಿದ. ಆದರೆ ಮಾಂಡವ್ಯನು ನಿರಪರಾಧಿಯೂ, ಸತ್ಯವಂತನೂ ಆಗಿದ್ದುದರಿಂದ ಶೂಲಕ್ಕೆ ಏರಿಸಿದರೂ ಏನೂ ಆಗದೆ ಬದುಕಿಕೊಂಡ. ಇತರ ಅನೇಕ ಋಷಿಗಳು ರಾತ್ರಿಯ ವೇಳೆ ಹಕ್ಕಿಗಳ ರೂಪದಲ್ಲಿ ಬಂದು ಮಾಂಡವ್ಯನ ದರ್ಶನ ಪಡೆಯುತ್ತಿದ್ದರು. ಮಹಾರಾಜನು ಪಶ್ಚಾತ್ತಾಪ ಪಟ್ಟು ಶೂಲವನ್ನು ತೆಗೆಸಿದ. ಆದರೆ ಶೂಲವು ಇವನ ಅಂಗದಲ್ಲಿಯೇ ಸಿಕ್ಕಿಕೊಂಡಿದ್ದರಿಂದ ಮತ್ತು ಹಾಗೆಯೇ ಇವನು ಜೀವ ಸಹಿತವಾಗಿ ಹೋಗಲಾಗದ ಲೋಕಗಳಿಗೆಲ್ಲ ಹೋಗುತ್ತಿದ್ದುದರಿಂದ ಈಗನಿತೆ ‘ಅಣಿ ಮೊಂಡವ್ಯ’ ಎಂಬ ಹೆಸರು ಬಂದಿತ್ತು. ತನಗಾದ ಅನ್ಯಾಯಕ್ಕೆ ಪ್ರತಿಭಟಿಸಿ ಮೊಂಡವ್ಯನು ನೇರವಾಗಿ ಯಮನ ಬಳಿಗೇ ಹೋಗಿ ಆಕ್ಷೇಪಿಸಿದ. ಆದರೆ ಮಾಂಡವ್ಯನು ಚಿಕ್ಕಂದಿನಲ್ಲಿ ಒಂದು ಚಿಟ್ಟೆಯನ್ನು (ನೊಣ ಎಂಬ ಹೇಳಿಕೆಯೂ ಇದೆ) ಕೊಂದಿದ್ದರಿಂದ ಈ ಶಿಷ್ಯೆ ಎಂದು ಯಮ ಹೇಳಿದ. ಹದಿನಾಲ್ಕು ವರ್ಷಗಳ ಒಳಗಿನ ಬಾಲಕರು ಮಾಡುವ ತಪ್ಪು ಶಿಕ್ಷಾರ್ಹವಲ್ಲ ಎಂದು ವಾದಿಸಿದ ಮಾಂಡವ್ಯ ತಮಗೆ ಇಂಥ ಶಿಕ್ಷೆ ನೀಡಿದ ಯಮನನ್ನು ಬಿಡದೆ, ‘‘ನೀನು ಭೂಮಿಯಲ್ಲಿ ವಿದುರನಾಗಿ ಹುಟ್ಟು’’ ಎಂದು ಶಪಿಸಿದ. ಹೀಗಾಗಿ ಯಮನು ಒಂದು ಕಡೆ ಧರ್ಮರಾಯನಾಗಿ ಹುಟ್ಟಿ ಲೋಕಕ್ಕೆ ಧರ್ಮದ ಸ್ವರೂಪ ತಿಳಿಸುವುದರಲ್ಲಿ ನೆರವಾಗಿದ್ದರೆ ಇನ್ನೊಂದು ಕಡೆ ಸೂತಪುತ್ರನಾಗಿ ಹುಟ್ಟಿ ‘ವಿದುರ ನೀತಿ’ಯಂಥ ಶ್ರೇಷ್ಠ ನೀತಿ ಸಂಹಿತೆಯನ್ನು ರೂಪಿಸುವುದರಲ್ಲಿ ನೆರವಾಗಿದ್ದಾನೆ.
ಮೂಲ ...{Loading}...
ಚ್ಯವನ ಗೌತಮ ವೇಣುಜಂಘ
ಪ್ರವರ ಕೌಶಿಕ ಸತ್ಯತಪ ಭಾ
ರ್ಗವ ಸುಮಾಲಿ ಸುಮಿತ್ರ ಕಾಶ್ಯಪ ಯಾಜ್ಞವಲ್ಕ್ಯ ಋಷಿ
ಪವನಭಕ್ಷಕ ದೀರ್ಘತಪ ಗಾ
ಲವನು ಶಿತ ಶಾಂಡಿಲ್ಯ ಮಾಂಡ
ವ್ಯ ವರರೆಂಬ ಮಹಾ ಮುನೀಂದ್ರರು ಬಂದರೊಗ್ಗಿನಲಿ ॥9॥
೦೧೦ ದೇಶ ದೇಶಾನ್ತರದ ...{Loading}...
ದೇಶ ದೇಶಾಂತರದ ವಿದ್ಯಾ
ಭ್ಯಾಸಿಗಳು ಮೊದಲಾಗಿ ವರ್ಣ ನಿ
ವಾಸಿಗಳು ಫಲಮೂಲ ದಧಿ ಘೃತ ದುಗ್ಧ ಭಾರದಲಿ
ಆ ಸಮಸ್ತ ಮಹೀತಳದ ಧನ
ರಾಶಿ ಜನ ಸಂತತಿಯನೇಕ ನಿ
ವಾಸದಲಿ ನೆರೆ ಕಾಣಲಾಯಿತು ನೃಪತಿ ಕೇಳ್ ಎಂದ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇಶದೇಶಾಂತರದ ವಿದ್ಯಾಭ್ಯಾಸಿಗಳು ಮೊದಲಾಗಿ ನಾನಾ ವರ್ಣಗಳ ಪ್ರಜೆಗಳು ಫಲ ಮೂಲ ದಧೀ, ಘೃತ ದುಗ್ಧಗಳ
ಭಾರವನ್ನು ಸಹಿಸಿಕೊಂಡು ಇಂದ್ರಪ್ರಸ್ಥ ಪಟ್ಟಣಕ್ಕೆ ಬಂದು ಸೇರಿದರು. ಸಮಸ್ತ ಭೂಮಂಡಲದ ಧನರಾಶಿಯನ್ನು ಜನರಾಶಿಯನ್ನು ಒಂದೇ ಎಡೆಯಲ್ಲಿ ಕಾಣಲಾಯಿತು.
ಪದಾರ್ಥ (ಕ.ಗ.ಪ)
ಮೂಲ ...{Loading}...
ದೇಶ ದೇಶಾಂತರದ ವಿದ್ಯಾ
ಭ್ಯಾಸಿಗಳು ಮೊದಲಾಗಿ ವರ್ಣ ನಿ
ವಾಸಿಗಳು ಫಲಮೂಲ ದಧಿ ಘೃತ ದುಗ್ಧ ಭಾರದಲಿ
ಆ ಸಮಸ್ತ ಮಹೀತಳದ ಧನ
ರಾಶಿ ಜನ ಸಂತತಿಯನೇಕ ನಿ
ವಾಸದಲಿ ನೆರೆ ಕಾಣಲಾಯಿತು ನೃಪತಿ ಕೇಳೆಂದ ॥10॥
೦೧೧ ವಿಕಳ ವಾಮನ ...{Loading}...
ವಿಕಳ ವಾಮನ ಮೂಕ ಬಧಿರಾಂ
ಧಕರು ಮಾಗಧ ಸೂತ ವಂದಿ
ಪ್ರಕರ ಮಲ್ಲ ಮಹೇಂದ್ರಜಾಲಿ ಮಹಾಹಿತುಂಡಿತರು
ಸುಕವಿ ತಾರ್ಕಿಕ ವಾಗ್ಮಿ ವೈತಾ
ಳಿಕ ಸುಗಾರಕ ಕಥಕ ಮಾರ್ದಂ
ಗಿಕರು ನೆರೆದುದು ನಿಖಿಳ ಯಾಚರ ನಿಕರ ಸಂದಣಿಸಿ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿಕಲರು, ವಾಮನರು, ಮೂಕರು, ಕಿವುಡರು, ಕುರುಡರು, ಮಾಗಧ, ವಂದಿ, ಸೂತಸಮೂಹ, ಮಲ್ಲರು, ಮಹೇಂದ್ರಜಾಲಕರು, ಗಟ್ಟಿಗರಾದ ಹಾವಾಡಿಗರು, ಸುಕವಿಗಳು, ತಾರ್ಕಿಕರು, ವಾಗ್ಮಿಗಳು, ವೈತಾಳಿಕರು, ಶ್ರೇಷ್ಠ ಗಾಯಕರು, ಮೃದಂಗ ವಾದಕರು, ಮೊದಲಾದ ವಿದ್ಯಾವಿನೋದಿಗಳು ನಿಖಿಳಯಾಚಕರೂ ಸಂದಣಿಸಿ ಬಂದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ವಿಕಳ ವಾಮನ ಮೂಕ ಬಧಿರಾಂ
ಧಕರು ಮಾಗಧ ಸೂತ ವಂದಿ
ಪ್ರಕರ ಮಲ್ಲ ಮಹೇಂದ್ರಜಾಲಿ ಮಹಾಹಿತುಂಡಿತರು
ಸುಕವಿ ತಾರ್ಕಿಕ ವಾಗ್ಮಿ ವೈತಾ
ಳಿಕ ಸುಗಾರಕ ಕಥಕ ಮಾರ್ದಂ
ಗಿಕರು ನೆರೆದುದು ನಿಖಿಳ ಯಾಚರ ನಿಕರ ಸಂದಣಿಸಿ ॥11॥
೦೧೨ ಕರೆಸಿ ಭೀಷ್ಮಙ್ಗೆರಗಿ ...{Loading}...
ಕರೆಸಿ ಭೀಷ್ಮಂಗೆರಗಿ ನುಡಿದನು
ಧರಣಿಪತಿ ಬಾಲಕರು ನಾವ
ಧ್ವರವಿದಗ್ಗದ ರಾಜಸೂಯ ಮಹಾ ಮಹೀಶ್ವರರು
ನೆರೆದುದಖಿಳ ದ್ವೀಪ ಜನವಾ
ದರಿಸಲರಿಯೆನು ಹೆಚ್ಚು ಕುಂದಿನ
ಕುರುಡನೀಕ್ಷಿಸಲಾಗದೆಂದನು ಮುಗಿದು ಕರಯುಗವ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುಧಿಷ್ಠಿರ ಭೀಷ್ಮನನ್ನು ಕರೆಸಿಕೊಂಡು ಅವನ ಪಾದಗಳಿಗೆ ಎರಗಿ “ನಾವು ಬಾಲಕರು, ಈ ಯಜ್ಞವೋ ಬಲು ಶ್ರೇಷ್ಠವಾದ ರಾಜಸೂಯ. ಮಹಾಮಹಾರಾಜರುಗಳೆಲ್ಲ ಬಂದು ಸೇರಿದ್ದಾರೆ. ಸಮಸ್ತ ದ್ವೀಪಗಳ ಜನರೂ ಇಲ್ಲಿ ಬಂದು ನೆರೆದಿದ್ದಾರೆ. ಎಲ್ಲರನ್ನೂ ಅವರವರಿಗೆ ತಕ್ಕಂತೆ ಹೇಗೆ ಆದರಿಸಬೇಕೆಂದು ನನಗೆ ನೋಡಲಾಗದು. ನಮ್ಮ ಆಚರಣೆಯಲ್ಲಿ ಹೆಚ್ಚು ಲೋಪದೋಷಗಳನ್ನು ನೀವು ಲಕ್ಷ್ಯಕ್ಕೆ ತೆಗೆದುಕೊಳ್ಳಬಾರದು ಎಂದು ಕೈಮುಗಿದ.
ಪದಾರ್ಥ (ಕ.ಗ.ಪ)
ಕುರುಡು -ಅಜ್ಞಾನ
ಮೂಲ ...{Loading}...
ಕರೆಸಿ ಭೀಷ್ಮಂಗೆರಗಿ ನುಡಿದನು
ಧರಣಿಪತಿ ಬಾಲಕರು ನಾವ
ಧ್ವರವಿದಗ್ಗದ ರಾಜಸೂಯ ಮಹಾ ಮಹೀಶ್ವರರು
ನೆರೆದುದಖಿಳ ದ್ವೀಪ ಜನವಾ
ದರಿಸಲರಿಯೆನು ಹೆಚ್ಚು ಕುಂದಿನ
ಕುರುಡನೀಕ್ಷಿಸಲಾಗದೆಂದನು ಮುಗಿದು ಕರಯುಗವ ॥12॥
೦೧೩ ಚಿನ್ತೆಯೇಕೈ ಕೃಷ್ಣನಾರೆಂ ...{Loading}...
ಚಿಂತೆಯೇಕೈ ಕೃಷ್ಣನಾರೆಂ
ದೆಂತು ಕಂಡೆ ಚತುರ್ದಶಾಂಶದ
ತಂತು ರೂಪನು ತಾನೆಯೆನ್ನದೆ ನಿನಗೆ ಶ್ರುತಿವಚನ
ತಂತುವಿನ ಪಟ ಮೃತ್ತಿಕೆಯ ಘಟ
ದಂತೆ ಜಗವೀತನಲಿ ತೋರ್ಕು ಮು
ರಾಂತಕನ ಸುಯ್ಧಾನ ನಿನಗಿರಲಂಜಲೇಕೆಂದ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ಭೀಷ್ಮ, " ನಿನಗೆ ಚಿಂತೆ ಏತಕ್ಕೆ, ಕೃಷ್ಣನು ಯಾರೆಂದು ತಿಳಿಯದೇ ? ‘ಚತುರ್ದಶಾಂಶದ ತಂತುರೂಪ’ ಇವನು.
ಎನ್ನುತ್ತದೆ ವೇದದ ಮಾತು. ತಂತುವಿನ ವಸ್ತ್ರದಂತೆ ಮೃತ್ತಿಕೆಯ ಘಟದಂತೆ ಜಗತ್ತು ಈತನಲ್ಲಿ ಕಾಣುತ್ತದೆ. ಶ್ರೀಕೃಷ್ಣನ ರಕ್ಷಣೆ ನಿನಗಿರುವಾಗ ಅಂಜಿಕೆಯೇಕೆ?
ಪದಾರ್ಥ (ಕ.ಗ.ಪ)
ಚತುರ್ದಶಾಂಶದ ತಂತುರೂಪ - ಹದಿನಾಲ್ಕು ಲೋಕಗಳ ಸೂತ್ರಧಾರ ಅಥವಾ ಹದಿನಾಲ್ಕು ಲೋಕಗಳನ್ನೂ ತನ್ನಲ್ಲಿ ಇರಿಸಿಕೊಂಡವನು.
ಮೂಲ ...{Loading}...
ಚಿಂತೆಯೇಕೈ ಕೃಷ್ಣನಾರೆಂ
ದೆಂತು ಕಂಡೆ ಚತುರ್ದಶಾಂಶದ
ತಂತು ರೂಪನು ತಾನೆಯೆನ್ನದೆ ನಿನಗೆ ಶ್ರುತಿವಚನ
ತಂತುವಿನ ಪಟ ಮೃತ್ತಿಕೆಯ ಘಟ
ದಂತೆ ಜಗವೀತನಲಿ ತೋರ್ಕು ಮು
ರಾಂತಕನ ಸುಯ್ಧಾನ ನಿನಗಿರಲಂಜಲೇಕೆಂದ ॥13॥
೦೧೪ ಕರೆಸು ಧೌಮ್ಯಾದಿಗಳನಿಲ್ಲಿಯ ...{Loading}...
ಕರೆಸು ಧೌಮ್ಯಾದಿಗಳನಿಲ್ಲಿಯ
ಪರುಠವವ ಮಾಡೆಂದು ಭೀಷ್ಮನು
ಗುರುಸಹಿತ ಕೈಕೊಂಡನೆಲ್ಲರ ಮೇಲುನೋಟವನು
ಅರಸ ಕೇಳ್ ಧೃತರಾಷ್ಟ್ರ ಬಾಹ್ಲಿಕ
ವರ ಬೃಹದ್ರಥ ಸೋಮದತ್ತರು
ಪರಮ ಪೂಜ್ಯರು ಮಾನನೀಯರು ಯಜ್ಞವಾಟದಲಿ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೌಮ್ಯಾದಿಗಳನ್ನು ಕರೆದು, ಇಲ್ಲಿನ ಕಾರ್ಯಗಳಿಗೆಲ್ಲ ತಕ್ಕ ವ್ಯವಸ್ಥೆ ಮಾಡು.” ಎಂದು ಸಲಹೆಯಿತ್ತು ದ್ರೋಣನೊಡನೆ ಎಲ್ಲರ ಮೇಲ್ವಿಚಾರಣೆಯನ್ನು ವಹಿಸಿಕೊಂಡ. ಧೃತರಾಷ್ಟ್ರ, ಬಾಹ್ಲಿಕ, ಬೃಹದ್ರಥ, ಸೋಮದತ್ತ ಮುಂತಾದವರು ಯಜ್ಞವಾಟದಲ್ಲಿ ಪೂಜ್ಯರೂ ಮಾನನೀಯರೂ ಆಗಿ ಬೆಳಗಿದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಕರೆಸು ಧೌಮ್ಯಾದಿಗಳನಿಲ್ಲಿಯ
ಪರುಠವವ ಮಾಡೆಂದು ಭೀಷ್ಮನು
ಗುರುಸಹಿತ ಕೈಕೊಂಡನೆಲ್ಲರ ಮೇಲುನೋಟವನು
ಅರಸ ಕೇಳ್ ಧೃತರಾಷ್ಟ್ರ ಬಾಹ್ಲಿಕ
ವರ ಬೃಹದ್ರಥ ಸೋಮದತ್ತರು
ಪರಮ ಪೂಜ್ಯರು ಮಾನನೀಯರು ಯಜ್ಞವಾಟದಲಿ ॥14॥
೦೧೫ ಸವನ ಸಾಧನ ...{Loading}...
ಸವನ ಸಾಧನ ಸರ್ವ ಸಂಭಾ
ರವನು ಧೌಮ್ಯನು ತರಿಸಿ ಕೊಡಿಸುವ
ನವನಿಪತಿಗಳ ಪಾರುಪತ್ಯದ ನೋಟ ಸಂಜಯಗೆ
ವಿವಿಧ ಋಷಿ ಯಾಜ್ಞಿಕರು ಮಾಂತ್ರಿಕ
ನಿವಹ ಸಹದೇವಂಗೆ ಭೋಜ್ಯ
ಪ್ರವರದಧಿಕಾರದ ನಿಯೋಗ ಯುಯುತ್ಸುವಿನ ಮೇಲೆ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಜ್ಞಕ್ಕೆ ಬೇಕಾದ ಎಲ್ಲ ಸಾಧನಗಳನ್ನೂ ಸಂಭಾರಗಳನ್ನೂ ಧೌಮ್ಯನು ತರಿಸಿಕೊಡುವನು. ರಾಜರುಗಳ ಮೇಲ್ವಿಚಾರಣೆಯೆಲ್ಲ ಸಂಜಯನದು. ನಾನಾ ಋಷಿಗಳು, ಯಾಜ್ಞಿಕರು, ಮಂತ್ರಜ್ಞ್ಞರ ಮೇಲ್ವಿಚಾರಣೆ ಸಹದೇವನಿಗೆ. ಭೋಜ್ಯವಸ್ತುಗಳಿಗೆ ಸಂಬಂಧಿಸಿದ ಮೇಲ್ವಿಚಾರಣೆ ಯುಯುತ್ಸುವಿಗೆ ಸೇರಿದುದು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಸವನ ಸಾಧನ ಸರ್ವ ಸಂಭಾ
ರವನು ಧೌಮ್ಯನು ತರಿಸಿ ಕೊಡಿಸುವ
ನವನಿಪತಿಗಳ ಪಾರುಪತ್ಯದ ನೋಟ ಸಂಜಯಗೆ
ವಿವಿಧ ಋಷಿ ಯಾಜ್ಞಿಕರು ಮಾಂತ್ರಿಕ
ನಿವಹ ಸಹದೇವಂಗೆ ಭೋಜ್ಯ
ಪ್ರವರದಧಿಕಾರದ ನಿಯೋಗ ಯುಯುತ್ಸುವಿನ ಮೇಲೆ ॥15॥
೦೧೬ ನೆರೆದ ಭೂಸುರ ...{Loading}...
ನೆರೆದ ಭೂಸುರ ತತಿಯನೂಟಕೆ
ಕರೆಸಿ ಕುಳ್ಳಿರಿಸುವನು ಸಾತ್ಯಕಿ
ಭರದಿನೆಂಜಲ ತೆಗೆಸಿ ಸಾರಿಸುವುದು ವಿಕರ್ಣಂಗೆ
ಅರಸ ಕೇಳ್ ಭೋಜನದ ಸಮನಂ
ತರದ ವೀಳೆಯ ಗಂಧ ಮಾಲ್ಯಾಂ
ಬರವನೀವಧಿಕಾರ ದುಶ್ಶಾಸನನ ವಶವಾಯ್ತು ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೆರೆದ ವಿಪ್ರ ಸಮೂಹವನ್ನು ಆದರಿಸಿ ಊಟಕ್ಕೆ ಕುಳ್ಳಿರಿಸುವವನು ಸಾತ್ಯಕಿ, ಊಟದ ನಂತರ ಎಂಜಲನ್ನು ತೆಗೆಸಿ
ಸಾರಿಸುವ ಕೆಲಸ ಮಾಡುವವನು ವಿಕರ್ಣ. ಭೋಜನಾನಂತರ ವೀಳೆಯ ಗಂಧ ಮಾಲೆ ವಸ್ತ್ರಗಳ ದಾನದ ಜವಾಬ್ದಾರಿ ದುಶ್ಶಾಸನನದು.
ಪದಾರ್ಥ (ಕ.ಗ.ಪ)
ಮೂಲ ...{Loading}...
ನೆರೆದ ಭೂಸುರ ತತಿಯನೂಟಕೆ
ಕರೆಸಿ ಕುಳ್ಳಿರಿಸುವನು ಸಾತ್ಯಕಿ
ಭರದಿನೆಂಜಲ ತೆಗೆಸಿ ಸಾರಿಸುವುದು ವಿಕರ್ಣಂಗೆ
ಅರಸ ಕೇಳ್ ಭೋಜನದ ಸಮನಂ
ತರದ ವೀಳೆಯ ಗಂಧ ಮಾಲ್ಯಾಂ
ಬರವನೀವಧಿಕಾರ ದುಶ್ಶಾಸನನ ವಶವಾಯ್ತು ॥16॥
೦೧೭ ವಿತತ ಭೂಸುರ ...{Loading}...
ವಿತತ ಭೂಸುರ ದಕ್ಷಿಣೆಗೆ ಗುರು
ಸುತ ನಿಯೋಗ ಸಮಸ್ತ ರತ್ನ
ಪ್ರತತಿಗಳನಾರೈದು ತರಿಸುನವನಾ ಕೃಪಾಚಾರ್ಯ
ಘೃತವು ದಧಿ ಮಧು ತೈಲ ಕತ್ತುರಿ
ಸಿತಲವಣ ಸಂಭಾರ ಶಾಕೋ
ಚಿತ ಸುವಸ್ತುವ ಕೊಡುವ ಕೊಂಬಾರೈಕೆ ವಿದುರಂಗೆ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿಪ್ರರಿಗೆ ದಕ್ಷಿಣೆ ಕೊಡಿಸುವವನು ಅಶ್ವತ್ಥಾಮ, ಶ್ರೇಷ್ಠರತ್ನಗಳನ್ನು ಹುಡುಕಿಸಿ, ತರಿಸಿ ಕೊಡಿಸುವ ಜವಾಬ್ದಾರಿ ಕೃಪನದು. ತುಪ್ಪ, ಮೊಸರು, ಜೇನು, ಎಣ್ಣೆ ಕಸ್ತೂರಿ, ಬಿಳಿಉಪ್ಪು, ಸಂಬಾರ ಪದಾರ್ಥಗಳು ತರಕಾರಿ ತರಿಸುವ, ಕೊಡುವ ಕೆಲಸ ವಿದುರನದು.
ಪದಾರ್ಥ (ಕ.ಗ.ಪ)
ಮೂಲ ...{Loading}...
ವಿತತ ಭೂಸುರ ದಕ್ಷಿಣೆಗೆ ಗುರು
ಸುತ ನಿಯೋಗ ಸಮಸ್ತ ರತ್ನ
ಪ್ರತತಿಗಳನಾರೈದು ತರಿಸುನವನಾ ಕೃಪಾಚಾರ್ಯ
ಘೃತವು ದಧಿ ಮಧು ತೈಲ ಕತ್ತುರಿ
ಸಿತಲವಣ ಸಂಭಾರ ಶಾಕೋ
ಚಿತ ಸುವಸ್ತುವ ಕೊಡುವ ಕೊಂಬಾರೈಕೆ ವಿದುರಂಗೆ ॥17॥
೦೧೮ ಅರಸ ಕೇಳೈ ...{Loading}...
ಅರಸ ಕೇಳೈ ಪಾಕಶಾಲೆಯ
ಹಿರಿಯ ಹಂತಿಗಳಲಿ ಚತುರ್ದಶ
ಕರಿ ಘಟೆಗಳೆಡೆಯಾಡುವುವು ಸಂಭಾರವನು ಹೇರಿ
ಹರಿವ ರಜತ ದ್ರೋಣಿಯಲಿ ಸುರಿ
ಸುರಿದು ಸೇದುವ ರಾಟಳಂಗಳೊ
ಳೆರೆವ ಘೃತ ಮಧು ತೈಲ ಧಾರಾ ರಚನೆ ಚೆಲುವಾಯ್ತು ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಕಶಾಲೆಯ ಹಿರಿಯ ಪಂಕ್ತಿಗಳಲ್ಲಿ ಸಮಸ್ತ ಸಂಭಾರವಸ್ತುಗಳನ್ನೂ ಹದಿನಾಲ್ಕು ಆನೆಗಳು ಹೊತ್ತು ಇತ್ತಿಂದತ್ತ ಓಡಿಯಾಡುತ್ತಿರುವುವು. ತುಪ್ಪದ ಜೇನಿನ ಎಣ್ಣೆಯ ಬಾವಿಗಳಿಂದ ಸೇದಿ ಸೇದಿ ಬೆಳ್ಳಿಯ ಪಾತ್ರೆÂಗಳಲ್ಲಿ ಧಾರಾಕಾರವಾಗಿ ಸುರಿವ ದೃಶ್ಯ
ಮನೋಹರವಾಗಿತ್ತು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಅರಸ ಕೇಳೈ ಪಾಕಶಾಲೆಯ
ಹಿರಿಯ ಹಂತಿಗಳಲಿ ಚತುರ್ದಶ
ಕರಿ ಘಟೆಗಳೆಡೆಯಾಡುವುವು ಸಂಭಾರವನು ಹೇರಿ
ಹರಿವ ರಜತ ದ್ರೋಣಿಯಲಿ ಸುರಿ
ಸುರಿದು ಸೇದುವ ರಾಟಳಂಗಳೊ
ಳೆರೆವ ಘೃತ ಮಧು ತೈಲ ಧಾರಾ ರಚನೆ ಚೆಲುವಾಯ್ತು ॥18॥
೦೧೯ ಧರಣಿಪತಿ ಕೇಳ್ ...{Loading}...
ಧರಣಿಪತಿ ಕೇಳ್ ಶೂದ್ರ ಮೊದಲಾ
ಗಿರೆಸಮಸ್ತ ಪ್ರಜೆ ವಿಧಾವಂ
ತರಿಗೆ ಭೋಜನ ಗಂಧ ಮಾಲ್ಯಾಂಬರ ವಿಲೇಪನದ
ಉರು ನಿಯೋಗಿಗಳಿಂದ್ರಸೇನನು
ವರ ವಿಶೋಕನು ರುಗ್ಮನತಿ ಬಂ
ಧುರ ಸಮೀರ ಪತಾಕಸೇನನು ಸೂತರೈವರಿಗೆ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶೂದ್ರರು ಮೊದಲಾಗಿ ಸಮಸ್ತ ಪ್ರಜೆಗಳಿಗೂ ಕೆಲಸಗಾರರಿಗೂ ಭೋಜನ ಮಾಡಿಸಿ ಗಂಧ, ಮಾಲ್ಯಾಂಬರ, ವಿಲೇಪಗಳನ್ನು
ಕೊಡಿಸುವ ಕಾರ್ಯಕ್ಕೆ ನಿಯುಕ್ತರಾದವರು ಇಂದ್ರಸೇನ. ವಿಶೋಕ, ರುಗ್ಮ, ಸಮೀರ, ಪತಾಕಸೇನ - ಈ ಐವರು ಸೂತರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಧರಣಿಪತಿ ಕೇಳ್ ಶೂದ್ರ ಮೊದಲಾ
ಗಿರೆಸಮಸ್ತ ಪ್ರಜೆ ವಿಧಾವಂ
ತರಿಗೆ ಭೋಜನ ಗಂಧ ಮಾಲ್ಯಾಂಬರ ವಿಲೇಪನದ
ಉರು ನಿಯೋಗಿಗಳಿಂದ್ರಸೇನನು
ವರ ವಿಶೋಕನು ರುಗ್ಮನತಿ ಬಂ
ಧುರ ಸಮೀರ ಪತಾಕಸೇನನು ಸೂತರೈವರಿಗೆ ॥19॥
೦೨೦ ಅರಸ ಕೇಳೈ ...{Loading}...
ಅರಸ ಕೇಳೈ ಬಳಿಕ ಪೃಥ್ವೀ
ಶ್ವರರಿಗಭಿನವ ಗಜ ರಥಾವಳಿ
ತುರಗ ಶಸ್ತ್ರಾಸ್ತ್ರಗಳನೀವ ನಿಯೋಗ ಕರ್ಣನದು
ಕರೆಕರೆದು ಯೋಗ್ಯಾತಿಶಯವರಿ
ವರಿದು ಯೋಷಿಜ್ಜನಕೆ ಮಾದ್ರೇ
ಶ್ವರನು ಕೊಡುವವನಾದನಧಿಕೋತ್ಸವದ ಸಿರಿಮಿಗಿಲು ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜರುಗಳಿಗೆ ಹೊಸ ಆನೆ, ರಥ, ಕುದುರೆ ಶಸ್ತ್ರಾಸ್ತ್ರಗಳನ್ನು ಕೊಡುವ ಕೆಲಸ ಕರ್ಣನದು. ಸ್ತ್ರೀಯರನ್ನು ಕರೆಕರೆದು ಅವರಿಗೆ
ಯೋಗ್ಯಾತಿಶಯವಾದದ್ದೇನೆಂದು ತಿಳಿದುಕೊಂಡು ಕೊಡುವ ಕಾರ್ಯ ಮಾದ್ರೇಶ್ವರನದು.
ಪದಾರ್ಥ (ಕ.ಗ.ಪ)
ಯೋಷಿಜ್ಜನ-ಸ್ತ್ರೀಯರು
ಮೂಲ ...{Loading}...
ಅರಸ ಕೇಳೈ ಬಳಿಕ ಪೃಥ್ವೀ
ಶ್ವರರಿಗಭಿನವ ಗಜ ರಥಾವಳಿ
ತುರಗ ಶಸ್ತ್ರಾಸ್ತ್ರಗಳನೀವ ನಿಯೋಗ ಕರ್ಣನದು
ಕರೆಕರೆದು ಯೋಗ್ಯಾತಿಶಯವರಿ
ವರಿದು ಯೋಷಿಜ್ಜನಕೆ ಮಾದ್ರೇ
ಶ್ವರನು ಕೊಡುವವನಾದನಧಿಕೋತ್ಸವದ ಸಿರಿಮಿಗಿಲು ॥20॥
೦೨೧ ಸಕಲ ಮಣಿ ...{Loading}...
ಸಕಲ ಮಣಿ ಕಾಂಚನ ದುಕೂಲ
ಪ್ರಕರವೀ ದುರಿಯೋಧನನ ವಶ
ನಕುಲನವರವರುಚಿತ ವೃತ್ತಿಯ ಮಧುರ ವಚನದಲಿ
ಪ್ರಕಟಿಸುವನವನಿವರ ಸೇನಾ
ನಿಕರದಾರೈಕೆಗಳು ಪಾಂಚಾ
ಲಕನಿಗಾದುದು ರಂಜಿಸಿತು ಪರಿಪಾಟಿಯೊಡ್ಡವಣೆ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮಸ್ತ ರತ್ನಗಳು ಚಿನ್ನ, ರೇಶ್ಮೆವಸ್ತ್ರಗಳು ಎಲ್ಲ ದುರ್ಯೊಧನನ ವಶದಲ್ಲಿ. ಅವರವರಿಗೆ ಉಚಿತವಾದ ರೀತಿಯಲ್ಲಿ ಮಧುರವಚನಗಳಿಂದ ಉಪಚಾರ ಹೇಳುವ ಹೊಣೆ ನಕುಲನದು. ಸೇನಾಸಮೂಹದ ಆರೈಕೆ ಪಾಂಚಾಲಕನದು. ಹೀಗೆ ಕಾರ್ಯ ಚಟುವಟಿಕೆಗಳೆಲ್ಲ ಸೊಗಸಾಗಿ ವ್ಯವಸ್ಥೆಗೊಂಡವು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಸಕಲ ಮಣಿ ಕಾಂಚನ ದುಕೂಲ
ಪ್ರಕರವೀ ದುರಿಯೋಧನನ ವಶ
ನಕುಲನವರವರುಚಿತ ವೃತ್ತಿಯ ಮಧುರ ವಚನದಲಿ
ಪ್ರಕಟಿಸುವನವನಿವರ ಸೇನಾ
ನಿಕರದಾರೈಕೆಗಳು ಪಾಂಚಾ
ಲಕನಿಗಾದುದು ರಂಜಿಸಿತು ಪರಿಪಾಟಿಯೊಡ್ಡವಣೆ ॥21॥
೦೨೨ ಆದುದನುಪಮ ಕುಣ್ಡವನ್ತ ...{Loading}...
ಆದುದನುಪಮ ಕುಂಡವಂತ
ರ್ವೇದಿಯ ಸಮೀಪದಲಿ ಹೊರೆಗಳ
ಶೋಧಿಸಿಧ್ಮ ಕುಶಂಗಳಾ ಸ್ಥಂಡಿಲದ ಸೀಮೆಯಲಿ
ಆದರಿಸಿ ಪರಿಚಾರಕರು ಸಂ
ಪಾದಿಸಿದ ಘೃತ ಚರು ಪುರೋಡಾ
ಶಾದಿ ಸಂಭಾರೌಘವನುವಾಯಿತ್ತು ನಿಮಿಷದಲಿ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನುಪಮವಾದ ಯಜ್ಞಕುಂಡ ಸಿದ್ಧವಾಯಿತು. ಅಂತರ್ವೇದಿಯ ಸಮೀಪದಲ್ಲಿ ಯಜ್ಞವೇದಿಕೆಯ ಬಳಿ ಶೋಧಿಸಿದ ಸಮಿತ್ತುಗಳ ದರ್ಭೆಗಳ ಹೊರೆಗಳನ್ನು ಘೃತ, ಚರು, ಪುರೋಡಾಶ ಮೊದಲಾದ ಎಲ್ಲ ಸಂಭಾರಗಳನ್ನೂ ಸೇವಕರು ತಂದು ಸಿದ್ಧಪಡಿಸಿಟ್ಟರು.
ಪದಾರ್ಥ (ಕ.ಗ.ಪ)
ಇಧ್ಮ -ಸಮಿತ್ತು
ಕುಶ - ದರ್ಭೆ
ಸ್ಥಂಡಿಲ-ಯಜ್ಞವೇದಿಕೆ
ಪುರೋಡಾಶ - ತುಪ್ಪದಲ್ಲಿ ನೆನೆಸಿದ ಹಿಟ್ಟು ; ಹವಿಸ್ಸು
ಮೂಲ ...{Loading}...
ಆದುದನುಪಮ ಕುಂಡವಂತ
ರ್ವೇದಿಯ ಸಮೀಪದಲಿ ಹೊರೆಗಳ
ಶೋಧಿಸಿಧ್ಮ ಕುಶಂಗಳಾ ಸ್ಥಂಡಿಲದ ಸೀಮೆಯಲಿ
ಆದರಿಸಿ ಪರಿಚಾರಕರು ಸಂ
ಪಾದಿಸಿದ ಘೃತ ಚರು ಪುರೋಡಾ
ಶಾದಿ ಸಂಭಾರೌಘವನುವಾಯಿತ್ತು ನಿಮಿಷದಲಿ ॥22॥
೦೨೩ ಕರೆಸಿದರು ಋತ್ವಿಕ್ಕುಗಳನ ...{Loading}...
ಕರೆಸಿದರು ಋತ್ವಿಕ್ಕುಗಳನ
ಧ್ವರಿಯನಾದನು ಯಾಜ್ಞವಲ್ಕ್ಯನು
ವರ ಸುಮಿತ್ರಾಂಗಿರಸರುಗಳುದ್ಗಾತೃ ಹೋತೃಗಳು
ಪರಮ ಜೈಮಿನಿ ಕಣ್ವ ಕಠ ತಿ
ತ್ತಿರಿಗಳಾಗ್ನೀಧ್ರಾದಿ ರಾಜಾ
ಧ್ವರ ನಿಯೋಗಿಗಳಾಯ್ತು ವೇದವ್ಯಾಸನಾಜ್ಞೆಯಲಿ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ಋತ್ವಿಕ್ಕುಗಳನ್ನು ಕರೆಸಿದರು. ವೇದವ್ಯಾಸನ ಆಜ್ಞೆಯಂತೆ ಯಾಜ್ಞವಲ್ಕ್ಯನು ಅಧ್ವರ್ಯುವಾದ. ಸುಮಿತ್ರ ಆಂಗಿರಸ
ಉದ್ಗಾತೃಗಳಾದರು. ಜೈಮಿನಿ ಕಣ್ವ, ಇವರು ಹೋತೃಗಳಾದರು. ಕಠ, ತಿತ್ತಿರಿಗಳು ಅಗ್ನೀಧ್ರ ಮೊದಲಾದವರು ರಾಜನಿಯೋಗಿಗಳಾದರು.
ಮೂಲ ...{Loading}...
ಕರೆಸಿದರು ಋತ್ವಿಕ್ಕುಗಳನ
ಧ್ವರಿಯನಾದನು ಯಾಜ್ಞವಲ್ಕ್ಯನು
ವರ ಸುಮಿತ್ರಾಂಗಿರಸರುಗಳುದ್ಗಾತೃ ಹೋತೃಗಳು
ಪರಮ ಜೈಮಿನಿ ಕಣ್ವ ಕಠ ತಿ
ತ್ತಿರಿಗಳಾಗ್ನೀಧ್ರಾದಿ ರಾಜಾ
ಧ್ವರ ನಿಯೋಗಿಗಳಾಯ್ತು ವೇದವ್ಯಾಸನಾಜ್ಞೆಯಲಿ ॥23॥
೦೨೪ ಆ ಸದಸ್ಯತ್ವವನು ...{Loading}...
ಆ ಸದಸ್ಯತ್ವವನು ವೇದ
ವ್ಯಾಸ ಕೈಕೊಂಡನು ಮುನೀಂದ್ರ ಮ
ಹಾ ಸಮಾಜದ ಬಯಕೆಗಾ ಶಾಂಡಿಲ್ಯ ನಾರದರು
ಭೂಸುರರು ಸಾಮಾಜಿಕರು ಧರ
ಣೀಶ ಯಜ್ಞೋಪಕ್ರಮದ ವಿ
ನ್ಯಾಸದಲಿ ಬಂದನು ಯುಧಿಷ್ಟಿರಷ್ಠಿರನಚ್ಚ್ಯುತನ ಹೊರೆಗೆ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುನೀಂದ್ರ ಮಹಾಸಮಾಜದ ಬಯಕೆಯಂತೆ ವೇದವ್ಯಾಸನೇ ಸದಸ್ಯತ್ವವನ್ನು ಕೈಕೊಂಡನು. ಶಾಂಡಿಲ್ಯ ನಾರದರೂ ಉಳಿದ ಭೂಸುರರೂ ಸಾಮಾಜಿಕರಾದರು. ಯಜ್ಞ ಪ್ರಾರಂಭಿಸಲು ಸಿದ್ಧನಾಗಿ ಯುಧಿಷ್ಠಿರ ಕೃಷ್ಣನ ಬಳಿಗೆ ಬಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಆ ಸದಸ್ಯತ್ವವನು ವೇದ
ವ್ಯಾಸ ಕೈಕೊಂಡನು ಮುನೀಂದ್ರ ಮ
ಹಾ ಸಮಾಜದ ಬಯಕೆಗಾ ಶಾಂಡಿಲ್ಯ ನಾರದರು
ಭೂಸುರರು ಸಾಮಾಜಿಕರು ಧರ
ಣೀಶ ಯಜ್ಞೋಪಕ್ರಮದ ವಿ
ನ್ಯಾಸದಲಿ ಬಂದನು ಯುಧಿಷ್ಟಿರಷ್ಠಿರನಚ್ಚ್ಯುತನ ಹೊರೆಗೆ ॥24॥
೦೨೫ ದೇವ ನಿನ್ನಯ ...{Loading}...
ದೇವ ನಿನ್ನಯ ಕರುಣದಲಿ ಸಕ
ಳಾವನೀಪತಿ ವಿಜಯ ಬಹಳಾ
ರ್ಥಾವಲಂಬನವೀ ಮಖ ಪ್ರಾರಂಭ ವಿಸ್ತಾರ
ಈ ವಿಜಯ ವೈಭವವೆಮಗೆ ಸಂ
ಭಾವಿತವೆ ವರ ರಾಜಸೂಯಕೆ
ದೇವ ದೀಕ್ಷಿತನಾಗು ನೀನೆಂದೆರಗಿದನು ಪದಕೆ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೇವ, ನಿನ್ನ ಕರುಣೆಯಿಂದ ಸಮಸ್ತ ರಾಜರ ಜಯವುಂಟಾಯಿತು. ಯಥೇಷ್ಟವಾದ ಐಶ್ವರ್ಯ ಕೈಸೇರಿತು. ಈ ಮಹಾಯಜ್ಞದ ಆರಂಭಕ್ಕೆ ಅಣಿಯಾಯಿತು. ಈ ಮಹಾವೈಭವ ನನಗೆ ಸರಿಹೊಂದಿತೇ ? ಆದ್ದರಿಂದ ಶ್ರೇಷ್ಠವಾದ ಈ ರಾಜಸೂಯ ಯಾಗಕ್ಕೆ ನೀನೇ ದೀಕ್ಷಿತನಾಗು ದೇವ” ಎಂದು ಅವನ ಪಾದಗಳಿಗೆ ಎರಗಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ದೇವ ನಿನ್ನಯ ಕರುಣದಲಿ ಸಕ
ಳಾವನೀಪತಿ ವಿಜಯ ಬಹಳಾ
ರ್ಥಾವಲಂಬನವೀ ಮಖ ಪ್ರಾರಂಭ ವಿಸ್ತಾರ
ಈ ವಿಜಯ ವೈಭವವೆಮಗೆ ಸಂ
ಭಾವಿತವೆ ವರ ರಾಜಸೂಯಕೆ
ದೇವ ದೀಕ್ಷಿತನಾಗು ನೀನೆಂದೆರಗಿದನು ಪದಕೆ ॥25॥
೦೨೬ ಮಣಿದು ಹಿಡಿದೆತ್ತಿದನು ...{Loading}...
ಮಣಿದು ಹಿಡಿದೆತ್ತಿದನು ರಾಯನ
ಹಣೆಯನನುಪಮ ಕರುಣ ನಿಧಿ ಕಡು
ಗುಣಿಯೆ ಬಾಯೆನ್ನಾನೆ ಬಾಯೆಂದಪ್ಪಿ ಮೈದಡವಿ
ಗುಣವಹುದು ನಿನಗಿಂದುಕುಲ ದಿನ
ಮಣಿಯೆ ದೀಕ್ಷಿತನಾಗು ಮದವಾ
ರಣನೆ ದೀಕ್ಷಿತನಾಗೆನುತ ಬೋಳೈಸಿದನು ಹರಸಿ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನುಪಮ ಕರುಣಾನಿಧಿಯಾದ ಶ್ರೀ ಕೃಷ್ಣನು ಬಾಗಿ ಯುಧಿಷ್ಠಿರನ ಹಣೆ ಹಿಡಿದೆತ್ತಿ “ಕಡುಗುಣಿಯೇ ಬಾ, ನನ್ನಾನೆಯೇ ಬಾ,”
ಎಂದು ಅಪ್ಪಿ ಮೈದಡವಿ “ಇಂದುಕುಲ ದಿನ ಮಣಿಯೇ, ನಿನಗೆ ಇದರಿಂದ ಒಳ್ಳೆಯದಾಗುತ್ತದೆ. ನೀನು ದೀಕ್ಷಿತನಾಗು, ಮದವಾರಣನೆ ದೀಕ್ಷಿತನಾಗು. ಎಂದು ಅನುನಯದಿಂದ ಸಾಂತ್ವನಗೊಳಿಸಿ ಆಶೀರ್ವದಿಸಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಮಣಿದು ಹಿಡಿದೆತ್ತಿದನು ರಾಯನ
ಹಣೆಯನನುಪಮ ಕರುಣ ನಿಧಿ ಕಡು
ಗುಣಿಯೆ ಬಾಯೆನ್ನಾನೆ ಬಾಯೆಂದಪ್ಪಿ ಮೈದಡವಿ
ಗುಣವಹುದು ನಿನಗಿಂದುಕುಲ ದಿನ
ಮಣಿಯೆ ದೀಕ್ಷಿತನಾಗು ಮದವಾ
ರಣನೆ ದೀಕ್ಷಿತನಾಗೆನುತ ಬೋಳೈಸಿದನು ಹರಸಿ ॥26॥
೦೨೭ ಎನೆ ಹಸಾದವೆನುತ್ತ ...{Loading}...
ಎನೆ ಹಸಾದವೆನುತ್ತ ಯಮನಂ
ದನನು ವೈಶಾಖದ ಚತುರ್ದಶಿ
ದಿನದಲುತ್ತರ ಪೂರ್ವವೇದಿ ವರಾಭ್ಯುದೈಕದಲಿ
ವಿನುತ ಪುಣ್ಯಾಹದ ಮಹಾವಾ
ಚನೆಯ ನಿಗಮ ಪವಿತ್ರ ಜಲ ಪಾ
ವನನು ಮರುದಿನ ಯಜ್ಞ ದೀಕ್ಷಿತನಾದನೊಲವಿನಲಿ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಯಮನಂದನನು ಮಹಾಪ್ರಸಾದವೆಂದು ಅಂಗೀಕರಿಸಿದ. ವೈಶಾಖಮಾಸದ ಚತುರ್ದಶಿಯ ದಿವಸ ಉತ್ತರ ಮತ್ತು ಪೂರ್ವವೇದಿಗಳ ಮಧ್ಯದಲ್ಲಿ (ಈಶಾನ್ಯದಿಕ್ಕಿನಲ್ಲಿ) ಅಭ್ಯುದಯಕ್ಕೆ ಸಂಬಂಧಪಟ್ಟ ಕರ್ಮಗಳನ್ನು ಮಾಡಿ ಪುಣ್ಯಾಹವಾಚನದ ಪವಿತ್ರ ಜಲದಿಂದ ಪಾವನವಾದ ಯುಧಿಷ್ಠಿರ ಮಾರನೆಯ ದಿನ ಸಂತೋಷದಿಂದ ಯಜ್ಞ ದೀಕ್ಷಿತನಾದ.
ಪದಾರ್ಥ (ಕ.ಗ.ಪ)
ಅಭ್ಯುದೈಕ - ಅಭ್ಯುದಯಕ್ಕೆ ಸಂಬಂಧಿಸಿದ ಕರ್ಮ
ಪಾಠಾನ್ತರ (ಕ.ಗ.ಪ)
ವರಾಭ್ಯುದೈಕ್ಯ -ವರಾಭ್ಯುದೈಕ
ಮೈವಿವಿ
ಮೂಲ ...{Loading}...
ಎನೆ ಹಸಾದವೆನುತ್ತ ಯಮನಂ
ದನನು ವೈಶಾಖದ ಚತುರ್ದಶಿ
ದಿನದಲುತ್ತರ ಪೂರ್ವವೇದಿ ವರಾಭ್ಯುದೈಕದಲಿ
ವಿನುತ ಪುಣ್ಯಾಹದ ಮಹಾವಾ
ಚನೆಯ ನಿಗಮ ಪವಿತ್ರ ಜಲ ಪಾ
ವನನು ಮರುದಿನ ಯಜ್ಞ ದೀಕ್ಷಿತನಾದನೊಲವಿನಲಿ ॥27॥
೦೨೮ ಹುದಿದ ನವನೀತಾನುಲೇಪದ ...{Loading}...
ಹುದಿದ ನವನೀತಾನುಲೇಪದ
ಹೊದೆದ ಕೃಷ್ಣಾಜಿನದ ಹಸ್ತಾ
ಗ್ರದಲೆಸೆವ ಸಾರಂಗ ಶೃಂಗದ ಯಾಜಮಾನ್ಯದಲಿ
ಉದಧಿಗೊರೆಗಟ್ಟುವ ಚತುರ್ವೇ
ದದ ಮಹಾ ಘೋಷದಲಿ ಮಖ ಕುಂ
ಡದ ತದಂತರ್ವೇದಿಗೈತಂದನು ಮಹೀಪಾಲ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುಧಿಷ್ಠಿರ ಹೊಸದಾಗಿ ಕಡೆದು ತೆಗೆದ ಬೆಣ್ಣೆಯನ್ನು ಲೇಪಿಸಿಕೊಂಡು, ಕೃಷ್ಣಾಜಿನವನ್ನು ಹೊದೆದುಕೊಂಡು ಕೈಯಲ್ಲಿ ಸಾರಂಗಶೃಂಗವನ್ನು ಹಿಡಿದುಕೊಂಡು ಯಾಗದ ಯಜಮಾನನ ಲಕ್ಷಣಗಳನ್ನು ಧರಿಸಿದ. ಸಾಗರದ ಘೋಷಕ್ಕೆ ಸರಿಗಟ್ಟುವ ಚತುರ್ವೇದದ ಮಹಾಘೋಷದಲ್ಲಿ ಯಜ್ಞಕುಂಡದ ಅಂತರ್ವೇದಿಗೆ ಆಗಮಿಸಿದ.
ಪದಾರ್ಥ (ಕ.ಗ.ಪ)
ಸಾರಂಗ ಶೃಂಗ- ಜಿಂಕೆಯ ಕೊಂಬು
ಮೂಲ ...{Loading}...
ಹುದಿದ ನವನೀತಾನುಲೇಪದ
ಹೊದೆದ ಕೃಷ್ಣಾಜಿನದ ಹಸ್ತಾ
ಗ್ರದಲೆಸೆವ ಸಾರಂಗ ಶೃಂಗದ ಯಾಜಮಾನ್ಯದಲಿ
ಉದಧಿಗೊರೆಗಟ್ಟುವ ಚತುರ್ವೇ
ದದ ಮಹಾ ಘೋಷದಲಿ ಮಖ ಕುಂ
ಡದ ತದಂತರ್ವೇದಿಗೈತಂದನು ಮಹೀಪಾಲ ॥28॥
೦೨೯ ನೆರೆದುದವನೀಪಾಲ ಜನ ...{Loading}...
ನೆರೆದುದವನೀಪಾಲ ಜನ ಸಾ
ಗರ ಬಹಿರ್ವೇದಿಯ ಮಹಾ ಚ
ಪ್ಪರದೊಳಗೆ ತಂತಮ್ಮ ಸಿಂಹಾಸನ ಸಗಾಢದಲಿ
ಪರಮ ಋಷಿಗಳ ವೇದಘೋಷೋ
ತ್ಕರ ನೃಪಾಧ್ವರ ವಿಷಯ ತರ್ಕ
ಸ್ಫುರಣ ಕೋಳಾಹಳದ ಕಳಕಳ ತುಂಬಿತಂಬರವ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಹಿರ್ವೇದಿಯ ದೊಡ್ಡ ಚಪ್ಪರದಲ್ಲಿ ಎಲ್ಲ ರಾಜರುಗಳೂ ಗಾಢವಾದ ಆಸಕ್ತಿಯಿಂದ ತಮ್ಮ ತಮ್ಮ ಸಿಂಹಾಸನಗಳಲ್ಲಿ ಮಂಡಿಸಿದರು. ಪರಮ ಋಷಿಗಳ ವೇದ ಘೋಷೋತ್ಕರ ಒಂದು ಕಡೆ ನಡೆಯುತ್ತಿದ್ದರೆ ಇನ್ನೊಂದು ಕಡೆ ರಾಜಸೂಯಯಾಗವನ್ನು ಕುರಿತ ತರ್ಕ ನಡೆಯುತ್ತಿತ್ತು. ಇವುಗಳ ದೆಸೆಯಿಂದ ಇಡೀ ವಾತಾವರಣದಲ್ಲಿ ಕೋಲಾಹಲ ಕಳಕಳ ತುಂಬಿತು.
ಪದಾರ್ಥ (ಕ.ಗ.ಪ)
ಮೂಲ ...{Loading}...
ನೆರೆದುದವನೀಪಾಲ ಜನ ಸಾ
ಗರ ಬಹಿರ್ವೇದಿಯ ಮಹಾ ಚ
ಪ್ಪರದೊಳಗೆ ತಂತಮ್ಮ ಸಿಂಹಾಸನ ಸಗಾಢದಲಿ
ಪರಮ ಋಷಿಗಳ ವೇದಘೋಷೋ
ತ್ಕರ ನೃಪಾಧ್ವರ ವಿಷಯ ತರ್ಕ
ಸ್ಫುರಣ ಕೋಳಾಹಳದ ಕಳಕಳ ತುಂಬಿತಂಬರವ ॥29॥
೦೩೦ ಚರು ತಿಲದ ...{Loading}...
ಚರು ತಿಲದ ರಾಶಿಗಳು ಸ್ರುಕ್ ಸ್ರುವ
ಬರುಹಿಗಳ ಬಲು ಹೊರೆಗಳಾಜ್ಯೋ
ತ್ಕರದ ಪತ್ರಾವಳಿಯ ನಿರ್ಮಳ ಸಾರ ಸಮಿಧೆಗಳ
ಪರಿವಳೆಯದಾಮೀಕ್ಷೆಗಳ ಪರಿ
ಕರದ ವಿವಿಧ ದ್ರವ್ಯಮಯ ಬಂ
ಧುರದಲೆಸೆದುದು ಯಜ್ಞವಾಟಿಕೆ ರಾಜಸೂಯದಲಿ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚರು ತಿಲದ ರಾಶಿಗಳು, ಸ್ರುಕ್ಸ್ರುವಗಳು, ಬರ್ಹಿಗಳ ಹೊರೆಗಳು, ಆಜ್ಯಪಾತ್ರೆಗಳು, ಪತ್ರಾವಳಿಗಳು, ಸಮಿಧೆಗಳು, ಪರಿವಳೆಯದ
ಆಮೀಕ್ಷೆಗಳು ಇವೇ ಮೊದಲಾದ ನಾನಾ ಪರಿಕರಗಳಿಂದ ವಿವಿಧ ದ್ರವ್ಯಗಳಿಂದ ಆ ರಾಜಸೂಯದ ಯಜ್ಞವಾಟಿಕೆ ಶೋಭಿಸುತ್ತಿತ್ತು.
ಪದಾರ್ಥ (ಕ.ಗ.ಪ)
ಆಮೀಕ್ಷೆ- ಹಾಲಿಗೆ ಹೆಪ್ಪು ಹಾಕಿದ ನಂತರ ಅದರಲ್ಲಿನ ಗಟ್ಟಿ ಭಾಗ ? ಸೃಕೊಂದು ಬಗೆಯ ಸೌಟಿನಂತಹ ಸಾಧನ
ಸ್ರುವ-ಒಂದು ಬಗೆಯ ಚಮಚದಂತಹ ಸಧನ
ಮೂಲ ...{Loading}...
ಚರು ತಿಲದ ರಾಶಿಗಳು ಸ್ರುಕ್ ಸ್ರುವ
ಬರುಹಿಗಳ ಬಲು ಹೊರೆಗಳಾಜ್ಯೋ
ತ್ಕರದ ಪತ್ರಾವಳಿಯ ನಿರ್ಮಳ ಸಾರ ಸಮಿಧೆಗಳ
ಪರಿವಳೆಯದಾಮೀಕ್ಷೆಗಳ ಪರಿ
ಕರದ ವಿವಿಧ ದ್ರವ್ಯಮಯ ಬಂ
ಧುರದಲೆಸೆದುದು ಯಜ್ಞವಾಟಿಕೆ ರಾಜಸೂಯದಲಿ ॥30॥
೦೩೧ ಬಳಸಿದರು ಪರಿಮಥ್ಯಮಾನಾ ...{Loading}...
ಬಳಸಿದರು ಪರಿಮಥ್ಯಮಾನಾ
ನಳನನಗ್ಗದ ಸುಪ್ರಣೀತಾ
ನಳನನಾಹವನೀಯ ಗಾರುಹಪತ್ಯ ದಕ್ಷಿಣದ
ಜ್ವಲಿತವೆನೆ ಮೃಗಚರ್ಮವೀಜನ
ವಳಯದೊಳು ಪ್ರಾಗ್ವಂಶದಲಿ ಪರಿ
ಮಿಳಿತವಾಯ್ತು ಸದಸ್ಯ ಋತ್ವಿಜ್ಞರ ವಿಧಾನದಲಿ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸದಸ್ಯ ಋತ್ವಿಜರು ವಿಧಾನಕ್ಕನುಗುಣವಾಗಿ ಅರಣಿಕಾಷ್ಠವನ್ನು ಮಥಿಸಿ ಉತ್ಪತ್ತಿಮಾಡಿದ ಅಗ್ನಿಯನ್ನು, ಸುಪ್ರಣೀತಾಗ್ನಿಯನ್ನೂ,
ಆಹವನೀಯ, ಗಾರ್ಹಪತ್ಯ, ದಕ್ಷಿಣಾಗ್ನಿಗಳನ್ನು ಕ್ರಮವರಿತು ಸಿದ್ಧಮಾಡಿ, ಮೃಗಚರ್ಮದ ಬೀಸಣಿಗೆಯಿಂದ ಬೀಸಿ ವೇದಿಕೆಯ ಮುಂಭಾಗದಲ್ಲಿ ಪರಿಮಿತಗೊಳಿಸಿದರು.
ಮೂಲ ...{Loading}...
ಬಳಸಿದರು ಪರಿಮಥ್ಯಮಾನಾ
ನಳನನಗ್ಗದ ಸುಪ್ರಣೀತಾ
ನಳನನಾಹವನೀಯ ಗಾರುಹಪತ್ಯ ದಕ್ಷಿಣದ
ಜ್ವಲಿತವೆನೆ ಮೃಗಚರ್ಮವೀಜನ
ವಳಯದೊಳು ಪ್ರಾಗ್ವಂಶದಲಿ ಪರಿ
ಮಿಳಿತವಾಯ್ತು ಸದಸ್ಯ ಋತ್ವಿಜ್ಞರ ವಿಧಾನದಲಿ ॥31॥
೦೩೨ ಏವಮೇವಾಸ್ಮಾತ್ತದಿತಿ ಸಂ ...{Loading}...
ಏವಮೇವಾಸ್ಮಾತ್ತದಿತಿ ಸಂ
ಭಾವನೀಯಮಿದಂ ಚ ನೈತ
ನ್ನೈವಮಿದಮೇವಂ ಚ ಶ್ರುತಿ ಸಂಸಿದ್ಧಮಿದಮೆನಲು
ಕೋವಿದರ ಕಳಕಳಿಕೆಯನ್ಯೋ
ನ್ಯಾವಮರ್ದದ ರಭಸವೀ ಭೂ
ಪಾವಳಿಗಳಪಹಾಸ್ಯ ಘೋಷಕೆ ಕವಚವಾಯ್ತೆಂದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಋಷಿಗಳ ವೇದಘೋಷ ಒಂದೆಡೆ ನಡೆಯುತ್ತಿದ್ದರೆ ಇನ್ನೊಂದೆಡೆ ರಾಜಸೂಯ ಯಜ್ಞಕ್ಕೆ ಸಂಬಂಧಿಸಿದ ವಿಷಯಗಳನ್ನು ಕುರಿತ ವಿದ್ವಾಂಸರ ವಾದ ವಿವಾದಗಳು “ಏವಮೇವ (ಇದು ಹೀಗೆಯೇ) ಆಸ್ಮಾತ್ ಸದಿತಿ ಸಂಭವನೀಯಂ (ಆದ್ದರಿಂದ ಅದು ಎಂದು ತಿಳಿಯಬೇಕು. ಇದಂಚ (ಇದೂ ಆಗಬಹುದು) ನೈತತ್ (ಇದಲ್ಲ) ನೈವಮಿದಂ (ಇದು ಅಲ್ಲವೇ ಅಲ್ಲ) ಏವಂ ಚ (ಹೀಗೂ ಆಗಬಹುದು), ಶ್ರುತಿಸಂಸಿದ್ಧಮಿದಂ (ವೇದಗಳಿಂದ ಸಿದ್ಧಪಡಿಸಲ್ಪಟ್ಟಿರುವುದು ಇದು) ಎಂಬ ಪರಸ್ಪರ ತರ್ಕದ ಕಳಕಳ ಶಬ್ದದ ಜೊತೆಗೆ ಈ ಕಳಕಳವನ್ನು ಕಂಡು ಅಪಹಾಸ್ಯ ಮಾಡುತ್ತಿದ್ದ ರಾಜರುಗಳ ಗದ್ದಲ ಚಪ್ಪರದಲ್ಲಿ ತುಂಬಿಕೊಂಡಿತ್ತು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಏವಮೇವಾಸ್ಮಾತ್ತದಿತಿ ಸಂ
ಭಾವನೀಯಮಿದಂ ಚ ನೈತ
ನ್ನೈವಮಿದಮೇವಂ ಚ ಶ್ರುತಿ ಸಂಸಿದ್ಧಮಿದಮೆನಲು
ಕೋವಿದರ ಕಳಕಳಿಕೆಯನ್ಯೋ
ನ್ಯಾವಮರ್ದದ ರಭಸವೀ ಭೂ
ಪಾವಳಿಗಳಪಹಾಸ್ಯ ಘೋಷಕೆ ಕವಚವಾಯ್ತೆಂದ ॥32॥
೦೩೩ ವ್ಯಾಹೃತಿಯ ಶಿಕ್ಷಾಕ್ಷತದ ...{Loading}...
ವ್ಯಾಹೃತಿಯ ಶಿಕ್ಷಾಕ್ಷತದ ವಿಮ
ಳಾಹುತಿ ಸ್ವಾಹಾವಷಟ್ಕೃತಿ
ಸೋಹಿ ತಂದುದು ಸುರರ ಸುಹವಿರ್ಭಾಗ ಭೋಗಿಗಳ
ಲೋಹಿತಾಶ್ವನ ರಚನೆಯೊಳು ಹರಿ
ಸಾಹರಿಯೊಳುಬ್ಬೆದ್ದವರ್ಚಿಗ
ಳಾಹ ಸಪ್ತಕವೋ ಸಹಸ್ರಕವೆನಿಸಿ ಪೊಸತಾಯ್ತು ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವ್ಯಾಹೃತಿ ಪೂರ್ವಕವಾಗಿ ಕೊಟ್ಟಂತಹ ಶ್ರೇಷ್ಠವಾದ ಆಹುತಿಗಳ ಸ್ವಾಹಾ ವಷಟ್ ಕೃತಿಗಳು ಸುಹವಿರ್ಭಾಗ ಭೋಗಿಗಳಾದ
ದೇವತೆಗಳನ್ನು ಅಟ್ಟಿಸಿಕೊಂಡು ಇಲ್ಲಿಗೆ ಕರೆತರುತ್ತಿದ್ದುವು. ಆಹುತಿಯನ್ನು ಕೈಕೊಂಡ ಅಗ್ನಿಜ್ವಾಲೆಗಳು ಉಬ್ಬಿ ನೆಗೆದೆದ್ದುವು. ಸಪ್ತಾಚರ್ಯವಾದ ಅಗ್ನಿ ಇಲ್ಲಿ ಸಹಸ್ರಾರ್ಚಿಯೆನ್ನಿಸಿ ಹೊಸತೆನ್ನಿಸಿತು. .
ಪದಾರ್ಥ (ಕ.ಗ.ಪ)
ವ್ಯಾಹೃತಿ-ಅಗ್ನಿಗೆ ಹವಿಸ್ಸನ್ನು ಕೊಡುವಾಗ, ಆ ಮಂತ್ರದ ಪ್ರಾರಂಭದಲ್ಲಿ ಓಂ ಭೂಃ ಓಂ ಭುವಃ ಓಂ ಸುವಃ ಇತ್ಯಾದಿಗಳನ್ನು ಹೇಳುತ್ತಾರೆ. ಅದಕ್ಕೆ ವ್ಯಾಹೃತಿಗಳೆನ್ನುತ್ತಾರೆ.
ಲೋಹಿತಾಶ್ವ- ಕೆಂಪು ಕುದುರೆಯನ್ನು ಉಳ್ಳವನು- ಅಗ್ನಿ
ಮೂಲ ...{Loading}...
ವ್ಯಾಹೃತಿಯ ಶಿಕ್ಷಾಕ್ಷತದ ವಿಮ
ಳಾಹುತಿ ಸ್ವಾಹಾವಷಟ್ಕೃತಿ
ಸೋಹಿ ತಂದುದು ಸುರರ ಸುಹವಿರ್ಭಾಗ ಭೋಗಿಗಳ
ಲೋಹಿತಾಶ್ವನ ರಚನೆಯೊಳು ಹರಿ
ಸಾಹರಿಯೊಳುಬ್ಬೆದ್ದವರ್ಚಿಗ
ಳಾಹ ಸಪ್ತಕವೋ ಸಹಸ್ರಕವೆನಿಸಿ ಪೊಸತಾಯ್ತು ॥33॥
೦೩೪ ತ್ರಿದಿವವನು ತುಡುಕಿತು ...{Loading}...
ತ್ರಿದಿವವನು ತುಡುಕಿತು ಹವಿರ್ಗಂ
ಧದ ಗಢಾವಣೆ ಧೂತ ಧೂಮನ
ತುದಿ ತಪೋಲೋಕದಲಿ ತಳತುದು ಸತ್ಯ ಲೋಕದಲಿ
ತ್ರಿದಶರುರೆ ಬಾಯಾಡಿಸಿದರ
ಗ್ಗದ ಧ್ರುವಾದಿಗಳನು ಸುತೃಪ್ತಿಯ
ಹೊದರುದೇಗಿನ ಹೊಟ್ಟೆ ನೂಕಿತು ಹರಿಹಯಾದಿಗಳ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹವಿಸ್ಸಿನ ಸುವಾಸನೆ ಸ್ವರ್ಗಕ್ಕೆ ಮುಟ್ಟಿತು. ಯಜ್ಞದಿಂದ ಒಯ್ಯಲ್ಪಟ್ಟ ಹೊಗೆಯ ತುದಿ ಸತ್ಯಲೋಕಕ್ಕೆ ವ್ಯಾಪಿಸಿತು. ದೇವತೆಗಳು
ಧ್ರುವಾದಿಗಳನ್ನು ಸವಿದು ಬಾಯಿ ಚಪ್ಪರಿಸಿದರು. ಇಂದ್ರಾದಿಗಳು ತೃಪ್ತರಾಗಿ ತೇಗುತ್ತಿದ್ದರು. ಅವರ ಹೊಟ್ಟೆ ಉಬ್ಬರಿಸಿಕೊಂಡಿತು.
ಪದಾರ್ಥ (ಕ.ಗ.ಪ)
ತ್ರಿದಿವ-ಸ್ವರ್ಗ
ಹರಿಹಯ - ಇಂದ್ರ
ಮೂಲ ...{Loading}...
ತ್ರಿದಿವವನು ತುಡುಕಿತು ಹವಿರ್ಗಂ
ಧದ ಗಢಾವಣೆ ಧೂತ ಧೂಮನ
ತುದಿ ತಪೋಲೋಕದಲಿ ತಳತುದು ಸತ್ಯ ಲೋಕದಲಿ
ತ್ರಿದಶರುರೆ ಬಾಯಾಡಿಸಿದರ
ಗ್ಗದ ಧ್ರುವಾದಿಗಳನು ಸುತೃಪ್ತಿಯ
ಹೊದರುದೇಗಿನ ಹೊಟ್ಟೆ ನೂಕಿತು ಹರಿಹಯಾದಿಗಳ ॥34॥
೦೩೫ ದಣಿದುದಲ್ಲಿ ಸುರೌಘವೀ ...{Loading}...
ದಣಿದುದಲ್ಲಿ ಸುರೌಘವೀ ದ
ಕ್ಷಿಣೆಯಲೂಟದಲಾದರಣೆ ಮ
ನ್ನಣೆಯಲವನೀಸುರರು ಹಿಗ್ಗಿದರಿಲ್ಲಿ ಪಿರಿದಾಗಿ
ಎಣಿಸಬಹುದೇ ಭೋಜನದ ಸಂ
ದಣಿಯನೀಸೈಸೆಂದು ಭಾರಾಂ
ಕಣದ ಭೂರಿಯ ವಿವರವನು ಬಣ್ಣಿಸುವರಾರೆಂದ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸ್ವರ್ಗದಲ್ಲಿ ದೇವತೆಗಳ ಸಮೂಹ ಹವಿಭಾರ್ಗವನ್ನುಂಡು ಸಂತೃಪ್ತರಾದರು. ಇಲ್ಲಿ ವಿಪ್ರರೆಲ್ಲ ದಕ್ಷಿಣೆ ಊಟ ಆದರಣೆ ಮನ್ನಣೆಗಳಿಂದ ಸಂತುಷ್ಟರಾಗಿ ಹಿರಿದಾಗಿ ಹಿಗ್ಗಿದರು. ಭೋಜನ ಮಾಡಿದ ಜನರ ಗುಂಪನ್ನು ಇಷ್ಟು ಅಷ್ಟು ಎಂದು ಎಣಿಸಲಾದೀತೇ ? ಭಾರಾಂಕಣದ ಭೂರಿಯ ವಿವರವನ್ನು ಯಾರು ಬಣ್ಣಿಸಿಯಾರು ?
ಪದಾರ್ಥ (ಕ.ಗ.ಪ)
ಭಾರಾಂಕಣ-ವಿಸ್ತಾರವಾದ ಅಂಕಣ
ಮೂಲ ...{Loading}...
ದಣಿದುದಲ್ಲಿ ಸುರೌಘವೀ ದ
ಕ್ಷಿಣೆಯಲೂಟದಲಾದರಣೆ ಮ
ನ್ನಣೆಯಲವನೀಸುರರು ಹಿಗ್ಗಿದರಿಲ್ಲಿ ಪಿರಿದಾಗಿ
ಎಣಿಸಬಹುದೇ ಭೋಜನದ ಸಂ
ದಣಿಯನೀಸೈಸೆಂದು ಭಾರಾಂ
ಕಣದ ಭೂರಿಯ ವಿವರವನು ಬಣ್ಣಿಸುವರಾರೆಂದ ॥35॥
೦೩೬ ವೇದ ವೇದಾಙ್ಗದ ...{Loading}...
ವೇದ ವೇದಾಂಗದ ರಹಸ್ಯ ವಿ
ವಾದ ತರ್ಕಸ್ಮೃತಿಗಳಂತ
ರ್ವೇದಿಯಲಿ ಘನಲಹರಿ ಮಸಗಿತು ತಂತ್ರ ಸಂತತಿಯ
ಆದುದತ್ತಲು ಗದ್ಯ ಪದ್ಯ ವಿ
ನೋದ ನರ್ತನ ವಾದ್ಯ ಸಂಗೀ
ತಾದಿ ಸಕಲ ಕಲಾನುರಂಜನೆ ರಾಜವರ್ಗದಲಿ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕಡೆ ಅಂತರ್ವೇದಿಯಲ್ಲಿ ವೇದವೇದಾಂಗ ರಹಸ್ಯ ವಿವಾದ, ತರ್ಕ, ಸ್ಮೃತಿ, ನಾನಾ ತಂತ್ರಗಳ ವಿಷಯದಲ್ಲಿ ವಾಕ್ಯಾರ್ಥಗಳು ನಡೆಯುತ್ತಿದ್ದುವು. ಇನ್ನೊಂದು ಕಡೆ ರಾಜರ ಸಮೂಹವಿದ್ದ ಕಡೆ ಅವರ ರಂಜನೆಗಾಗಿ ಗದ್ಯ ಪದ್ಯ ವಿನೋದ ನರ್ತನ ವಾದ್ಯ ಸಂಗೀತವೇ ಮೊದಲಾದ ಕಲೆಗಳ ಕಾರ್ಯಕ್ರಮಗಳು ನಡೆಯತೊಡಗಿದವು.
ಮೂಲ ...{Loading}...
ವೇದ ವೇದಾಂಗದ ರಹಸ್ಯ ವಿ
ವಾದ ತರ್ಕಸ್ಮೃತಿಗಳಂತ
ರ್ವೇದಿಯಲಿ ಘನಲಹರಿ ಮಸಗಿತು ತಂತ್ರ ಸಂತತಿಯ
ಆದುದತ್ತಲು ಗದ್ಯ ಪದ್ಯ ವಿ
ನೋದ ನರ್ತನ ವಾದ್ಯ ಸಂಗೀ
ತಾದಿ ಸಕಲ ಕಲಾನುರಂಜನೆ ರಾಜವರ್ಗದಲಿ ॥36॥
೦೩೭ ಆ ಋಷಿಗಳಾ ...{Loading}...
ಆ ಋಷಿಗಳಾ ಕ್ಷತ್ರ ಜನದಾ
ಭೂರಿ ನಿಕರದ ವೇದಶಾಸ್ತ್ರ ವಿ
ಚಾರಣರ ಚಾರಣರ ಸಂಗೀತಾದಿ ಕಳಕಳದ
ಆರುಭಟೆ ಮಥಿತಾಂಬುನಿಧಿಯೊಡ
ನಾರುವವೊಲುಬ್ಬೆದ್ದ ಬಲು ಜ
ರ್ಝಾರವೆನೆ ಜಡಿದುದು ಯುಧಿಷ್ಠಿರ ರಾಜಸೂಯದಲಿ |37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುಧಿಷ್ಠಿರನ ಆ ರಾಜಸೂಯಯಾಗದಲ್ಲಿ ನಡೆಯುತ್ತಿದ್ದ ಋಷಿಗಳ ಮಾತುಕತೆ, ಕ್ಷತ್ರಿಯವರ್ಗದವರ ಸಂಭಾಷಣೆ, ಇತರ ಜನ ಸಮುದಾಯದ ಕಲಕಲಧ್ವನಿ, ವೇದ ಶಾಸ್ತ್ರಗಳ ಘೋಷ, ಚಾರಣರ ಸಂಗೀತಾದಿಗಳು ಇವೇ ಮೊದಲಾದ ಹಲವು ಬಗೆಯ ಧ್ವನಿಗಳು
ಮಥಿಸಿದ ಸಮುದ್ರದಿಂದ ಎದ್ದ ಮಹಾಘೋಷದಂತೆ ತೋರಿತು.
ಪದಾರ್ಥ (ಕ.ಗ.ಪ)
ಚಾರಣರು- ಕಥನಕಾರರು
ಮೂಲ ...{Loading}...
ಆ ಋಷಿಗಳಾ ಕ್ಷತ್ರ ಜನದಾ
ಭೂರಿ ನಿಕರದ ವೇದಶಾಸ್ತ್ರ ವಿ
ಚಾರಣರ ಚಾರಣರ ಸಂಗೀತಾದಿ ಕಳಕಳದ
ಆರುಭಟೆ ಮಥಿತಾಂಬುನಿಧಿಯೊಡ
ನಾರುವವೊಲುಬ್ಬೆದ್ದ ಬಲು ಜ
ರ್ಝಾರವೆನೆ ಜಡಿದುದು ಯುಧಿಷ್ಠಿರ ರಾಜಸೂಯದಲಿ |37॥
೦೩೮ ಏಳು ದಿನ ...{Loading}...
ಏಳು ದಿನ ಪರಿಯಂತ ಗಳಿಗೆಗೆ
ಮೇಲೆ ಮೇಲಧ್ವರದ ಲಕ್ಷ್ಮಿ ಛ
ಡಾಳಿಸಿತು ಚತುರ್ದಶ ಲೋಕ ಚೇತನವ
ಕೇಳಿದೈ ಜನಮೇಜಯ ಕ್ಷಿತಿ
ಪಾಲ ಸುರಲೋಕದಲಿ ಪಾಂಡುವಿ
ನೋಲಗಕೆ ಬಹ ಬಣಗು ಸುರರಿಗೆ ಸಮಯವಿಲ್ಲೆಂದ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏಳು ದಿನಗಳವರೆಗೆ ಯಜ್ಞ ನಡೆಯಿತು. ಗಳಿಗೆ ಗಳಿಗೆಗೂ ಯಜ್ಞದ ಸಿರಿ ಚತುರ್ದಶ ಲೋಕಗಳನ್ನು ವ್ಯಾಪಿಸಿತು. ಯಾಗದ ಫಲವಾಗಿ ಸುರಲೋಕಗಳಲ್ಲಿ ಪಾಂಡುವಿನ ಓಲಗಕ್ಕೆ ಬಂದು ಕಾಣಿಸಿಕೊಳ್ಳಲು ಬಯಸುತ್ತಿದ್ದ ಸಾಮಾನ್ಯ ದೇವತೆಗಳಿಗೆ ಬಿಡುವೇ ಇರುತ್ತಿರಲಿಲ್ಲ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಏಳು ದಿನ ಪರಿಯಂತ ಗಳಿಗೆಗೆ
ಮೇಲೆ ಮೇಲಧ್ವರದ ಲಕ್ಷ್ಮಿ ಛ
ಡಾಳಿಸಿತು ಚತುರ್ದಶ ಲೋಕ ಚೇತನವ
ಕೇಳಿದೈ ಜನಮೇಜಯ ಕ್ಷಿತಿ
ಪಾಲ ಸುರಲೋಕದಲಿ ಪಾಂಡುವಿ
ನೋಲಗಕೆ ಬಹ ಬಣಗು ಸುರರಿಗೆ ಸಮಯವಿಲ್ಲೆಂದ ॥38॥
೦೩೯ ಎವಗೆ ತವಗೆನ್ದೀ ...{Loading}...
ಎವಗೆ ತವಗೆಂದೀ ಹವಿರ್ಭಾ
ಗವನು ಮುತ್ತಿತು ದೇವತತಿ ಸುರ
ಯುವತಿಯರೊಳೂರ್ವಸಿ ತಿಲೋತ್ತಮೆ ರಂಭೆ ಮೇನಕೆಯು
ದಿವಿಜರೊಳ ಹಸುಗೆಗಳ ಲೆಕ್ಕದ
ಸವಬೆಸನ ಸವಿವಾಯ ತುತ್ತಿನ
ತವಕಿಗರು ಹೊಯ್ದಾಡಿದರು ಸಭೆಯಲಿ ಸುರೇಶ್ವರನ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ರಾಜಸೂಯಾಧ್ವರದಲ್ಲಿ ಕೊಟ್ಟ ಹವಿರ್ಭಾಗವನ್ನು ತೆಗೆದುಕೊಳ್ಳುವುದಕ್ಕಾಗಿ ಇಂದ್ರಸಭೆಯಲ್ಲಿ ದೇವತೆಗಳ ಗುಂಪು ಮುತ್ತಿಕೊಂಡಿತು. ಊರ್ವಶಿ ತಿಲೋತ್ತಮೆ ರಂಭೆ ಮೇನಕೆ ಮೊದಲಾದ ದೇವಸ್ತ್ರೀಯರೂ ಸಂದಣಿಸಿ ಬಂದರು. ನನಗೆ ತನಗೆ ಎಂದು
ದೇವತೆಗಳ ಸಮೂಹ ನುಗ್ಗಿ ಬರುವಾಗ, ಅವರಲ್ಲಿ ಯಾರು ಯಾರಿಗೆ ಎಷ್ಟೆಷ್ಟು ಸಲ್ಲಬೇಕೆಂಬ ಒಳಹಂಚಿಕೆಯ ಲೆಕ್ಕವನ್ನು ನೋಡಿ ಸರಿಬೆಸವನ್ನರಿತು ಹಂಚಲು ಅವಕಾಶ ಸಾಲದಾಯಿತು. ಸವಿಬಾಯಿನ ತುತ್ತಿಗಾಗಿ ಹಂಬಲಿಸುವ ಆ ಉತ್ಸುಕರು ದೇವೇಂದ್ರನ ಸಭೆಯಲ್ಲೇ ಹೊಡೆದಾಡತೊಡಗಿದರು.
ಪದಾರ್ಥ (ಕ.ಗ.ಪ)
ಅಧ್ವರ-ಯಾಗ
ಹಸುಗೆ- ಭಾಗ
ಮೂಲ ...{Loading}...
ಎವಗೆ ತವಗೆಂದೀ ಹವಿರ್ಭಾ
ಗವನು ಮುತ್ತಿತು ದೇವತತಿ ಸುರ
ಯುವತಿಯರೊಳೂರ್ವಸಿ ತಿಲೋತ್ತಮೆ ರಂಭೆ ಮೇನಕೆಯು
ದಿವಿಜರೊಳ ಹಸುಗೆಗಳ ಲೆಕ್ಕದ
ಸವಬೆಸನ ಸವಿವಾಯ ತುತ್ತಿನ
ತವಕಿಗರು ಹೊಯ್ದಾಡಿದರು ಸಭೆಯಲಿ ಸುರೇಶ್ವರನ ॥39॥
೦೪೦ ಈತನಾರೈ ಪಾಣ್ಡುನನ್ದನ ...{Loading}...
ಈತನಾರೈ ಪಾಂಡುನಂದನ
ನೀತ ಕಾಣಿರೆ ಪಾಂಡುವಿನ ಸುತ
ನೀತನೆ ದಿಟ ಪಾಂಡುವಿನ ಮಗನೀತನೇಯೆನುತ
ಪೂತು ಧರ್ಮಜ ಪೂತು ಧರ್ಮಜ
ಪೂತು ಧರ್ಮಜಯೆನುತ ರಾಜ
ವ್ರಾತ ಹೊಗಳಿತು ನಹುಷ ನಳ ನೃಗ ದಶರಥಾದಿಗಳು ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈಗಾಗಲೇ ಸ್ವರ್ಗದಲ್ಲಿ ದಿವ್ಯಭೋಗಗಳನ್ನನುಭವಿಸುತ್ತದ್ದ ನಹುಷ, ನಳ, ನೃಗ, ದಶರಥ ಮೊದಲಾದ ರಾಜರು ಈ ಸಡಗರವನ್ನು ಕಂಡು “ಯಾರಯ್ಯ ಈತ? ಪಾಂಡುನಂದನ ! ಓ ಈತ ಪಾಂಡುವಿನ ಸುತ ! ಈತನೇ ದಿಟ, ಪಾಂಡುವಿನ ಮಗ ! ಪೂತು ಧರ್ಮಜ, ಪೂತು ಧರ್ಮಜ, ಪೂತು ಧರ್ಮಜ ಎಂದು ಅವರೆಲ್ಲ ಯುಧಿಷ್ಠಿರನನ್ನು ಹೊಗಳಿದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಈತನಾರೈ ಪಾಂಡುನಂದನ
ನೀತ ಕಾಣಿರೆ ಪಾಂಡುವಿನ ಸುತ
ನೀತನೆ ದಿಟ ಪಾಂಡುವಿನ ಮಗನೀತನೇಯೆನುತ
ಪೂತು ಧರ್ಮಜ ಪೂತು ಧರ್ಮಜ
ಪೂತು ಧರ್ಮಜಯೆನುತ ರಾಜ
ವ್ರಾತ ಹೊಗಳಿತು ನಹುಷ ನಳ ನೃಗ ದಶರಥಾದಿಗಳು ॥40॥
೦೪೧ ಏನ ಹೇಳುವುದರಸ ...{Loading}...
ಏನ ಹೇಳುವುದರಸ ಯಜ್ಞ ವಿ
ಧಾನದಭಿಷೇಕಾದಿ ಸಮಯೋ
ದ್ದಾನವಾಯ್ತರಸಂಗೆ ಸುರ ದುಂದುಭಿಯ ರಭಸದಲಿ
ಆ ನಿರಂತರ ತುಷ್ಟಿಗಳ ವೈ
ಮಾನಿಕರ ಸಂದಣಿ ನವೀನ ವಿ
ತಾನವಾಯಿತು ಭೂರಿ ಭಾರತ ವರುಷದಗಲದಲಿ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೆ, ದೇವತೆಗಳಿಗುಂಟಾದ ತೃಪ್ತಿಯನ್ನು ಏನೆಂದು ವರ್ಣಿಸಲಿ ? ಯಜ್ಞವಿಧಿಗನುಸಾರವಾಗಿ ಅರಸನಿಗೆ ಅಭಿಷೇಕಾದಿಗಳು ನಡೆವ
ಸಮಯದಲ್ಲಿ ಸುರದುಂದುಭಿಗಳು ಮೊಳಗುತ್ತಿದ್ದುವು. ಅರಸನಿಗೆ ಆ ಕ್ಷಣಗಳು ಸ್ಮರಣೀಯವಾದವು. ನಿರಂತರ ತುಷ್ಟರಾದ ಆ ವೈಮಾನಿಕರ ಗುಂಪಿನಿಂದ ಹೊಸ ಯಗದ ಶಾಲೆಯೇ ಆಯಿತು.
ಪದಾರ್ಥ (ಕ.ಗ.ಪ)
ವಿತಾನ -ಯಾಗಶಾಲೆ
ಸಮಯೋದ್ದಾನ- ಉತ್ಕೃಷ್ಟ ಸಮಯ
ಮೂಲ ...{Loading}...
ಏನ ಹೇಳುವುದರಸ ಯಜ್ಞ ವಿ
ಧಾನದಭಿಷೇಕಾದಿ ಸಮಯೋ
ದ್ದಾನವಾಯ್ತರಸಂಗೆ ಸುರ ದುಂದುಭಿಯ ರಭಸದಲಿ
ಆ ನಿರಂತರ ತುಷ್ಟಿಗಳ ವೈ
ಮಾನಿಕರ ಸಂದಣಿ ನವೀನ ವಿ
ತಾನವಾಯಿತು ಭೂರಿ ಭಾರತ ವರುಷದಗಲದಲಿ ॥41॥
೦೪೨ ವರ ಸದಸ್ಯಾದಿಗಳ ...{Loading}...
ವರ ಸದಸ್ಯಾದಿಗಳ ದಕ್ಷಿಣೆ
ಬರಹಕಿಮ್ಮಡಿ ನೂರುಮಡಿ ಸಾ
ವಿರದ ಮಡಿ ವರ ಹೇಮ ವಸ್ತ್ರಾಭರಣ ಗೋವ್ರಜವ
ಅರಸನಿತ್ತನು ಮಖ ನಿಯೋಗೋ
ತ್ಕರರಿಗನುಪಮ ಭೂರಿ ಜನಕಾ
ದರಿಸಿ ಕೊಟ್ಟನು ಹೊತ್ತು ನಡೆದುದು ಸಕಲ ಜನ ಧನವ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಜ್ಞದಲ್ಲಿ ಸಹಕರಿಸಿದ ಸದಸ್ಯಾದಿಗಳಿಗೆ ದಕ್ಷಿಣೆ ಕೊಡುವಾಗ ಯುಧಿಷ್ಠಿರ ಚಿನ್ನ ವಸ್ತ್ರ ಆಭರಣ ಗೋ ಸಮೂಹವೇ ಮೊದಲಾದುವನ್ನು ಕೊಡಬೇಕಾದುದಕ್ಕಿಂತ ಎರಡು ಪಟ್ಟು, ನೂರು ಪಟ್ಟು, ಸಾವಿರಪಟ್ಟು, ಅಧಿಕವಾಗಿ ಕೊಟ್ಟ. ಯಜ್ಞಕಾರ್ಯಗಳಲ್ಲಿ
ಭಾಗಿಗಳಾಗದೆ ಪ್ರೇಕ್ಷಕರಾಗಿ ಬಂದಿದ್ದ ಮಹಾಜನರಿಗೂ ಆದರಣೆಯಿಂದ ಉತ್ತಮ ವಸ್ತುಗಳನ್ನು ಕೊಟ್ಟು ಸಂತೋಷಪಡಿಸಿದ. ಎಲ್ಲ ಜನರೂ ತಮತಮಗೆ ಬಂದ ಧನವನ್ನು ಹೊತ್ತು ನಡೆದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ವರ ಸದಸ್ಯಾದಿಗಳ ದಕ್ಷಿಣೆ
ಬರಹಕಿಮ್ಮಡಿ ನೂರುಮಡಿ ಸಾ
ವಿರದ ಮಡಿ ವರ ಹೇಮ ವಸ್ತ್ರಾಭರಣ ಗೋವ್ರಜವ
ಅರಸನಿತ್ತನು ಮಖ ನಿಯೋಗೋ
ತ್ಕರರಿಗನುಪಮ ಭೂರಿ ಜನಕಾ
ದರಿಸಿ ಕೊಟ್ಟನು ಹೊತ್ತು ನಡೆದುದು ಸಕಲ ಜನ ಧನವ ॥42॥
೦೪೩ ತಲೆಹೊರೆಯಲಡಕಿದರು ಹೆಗಲಲಿ ...{Loading}...
ತಲೆಹೊರೆಯಲಡಕಿದರು ಹೆಗಲಲಿ
ಕೆಲರು ಶಿಷ್ಯರ ನೆತ್ತಿಯಲಿ ಕೆಲ
ಕೆಲರು ಹೊರಿಸಿತು ದೇಶ ದೇಶದ ಸಕಲ ಭೂಸುರರು
ಲಲಿತ ರತ್ನಾಭರಣ ಗೋ ಸಂ
ಕುಲದ ಸೂರೆಯನೇನನೆಂಬೆನು
ಸಲೆ ದಣಿದುದಾ ಸಕಲ ಜಾತಿ ಜನೇಶ ಯಜ್ಞದಲಿ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾನಾ ದೇಶಗಳಿಂದ ಬಂದ ಎಲ್ಲ ವಿಪ್ರರೂ ಕೆಲವರು ತಮ್ಮ ತಲೆಯಲ್ಲೇ ಹೊತ್ತರು, ಹೆಗಲಲ್ಲಿ ಹೊತ್ತರು, ಕೆಲವರು ತಮ್ಮ ಶಿಷ್ಯರ ನೆತ್ತಿಯ ಮೇಲೆ ಹೊರಿಸಿದರು. ಸುಂದರವಾದ ರತ್ನಾಭರಣಗಳು ಗೋ ಸಮೂಹ ಸೂರೆಯಾದುದನ್ನು ಏನೆಂದು ಹೇಳಲಿ ! ಸಕಲ ಜಾತಿಯವರೂ ಈ ಯಾಗದಿಂದ ತೃಪ್ತಿಪಟ್ಟರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ತಲೆಹೊರೆಯಲಡಕಿದರು ಹೆಗಲಲಿ
ಕೆಲರು ಶಿಷ್ಯರ ನೆತ್ತಿಯಲಿ ಕೆಲ
ಕೆಲರು ಹೊರಿಸಿತು ದೇಶ ದೇಶದ ಸಕಲ ಭೂಸುರರು
ಲಲಿತ ರತ್ನಾಭರಣ ಗೋ ಸಂ
ಕುಲದ ಸೂರೆಯನೇನನೆಂಬೆನು
ಸಲೆ ದಣಿದುದಾ ಸಕಲ ಜಾತಿ ಜನೇಶ ಯಜ್ಞದಲಿ ॥43॥
೦೪೪ ಕಳೆದವಗಣಿತ ಕಲ್ಪ ...{Loading}...
ಕಳೆದವಗಣಿತ ಕಲ್ಪ ವಿದರೊಳ
ಗಳಿವನರಿಯದರಿಬ್ಬರೇ ಮುನಿ
ತಿಲಕ ಮಾರ್ಕಂಡೇಯ ರೋಮಶರೀ ಮಹಾಧ್ವರದ
ಸುಳಿವನಾರಲಿ ಕಂಡರವನಿಪ
ರೊಳಗೆನುತ ಮನವುಕ್ಕಿ ನಾರದ
ನೊಲಿದು ನುಡಿದನು ತನ್ನ ಹೇಳಿಕೆ ಸಫಲವಾಯ್ತೆಂದು ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದುವರೆಗೆ ಅಗಣಿತ ಕಲ್ಪಗಳು ಕಳೆದುವು. ಈ ದೀರ್ಘಕಾಲದಲ್ಲಿ ಅಳಿಯದೆ ಉಳಿದಿರುವವರು ಇಬ್ಬರೇ, ಮಾರ್ಕಂಡೇಯ
ಮತ್ತು ರೋಮಶ. ಹಿಂದೆ ಇದ್ದ ಮಹಾರಾಜರುಗಳಲ್ಲಿ ಈ ಮಹಾಧ್ವರವನ್ನು ಇಷ್ಟು ಸಮರ್ಪಕವಾಗಿ ಮಾಡಿದವರು ಬೇರೆ ಯಾರಿದ್ದಾರೆ? ನನ್ನ ಹೇಳಿಕೆ ಸಫಲವಾಯಿತು ಎಂದು ನಾರದ ಹರ್ಷದಿಂದ ಹೇಳಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಕಳೆದವಗಣಿತ ಕಲ್ಪ ವಿದರೊಳ
ಗಳಿವನರಿಯದರಿಬ್ಬರೇ ಮುನಿ
ತಿಲಕ ಮಾರ್ಕಂಡೇಯ ರೋಮಶರೀ ಮಹಾಧ್ವರದ
ಸುಳಿವನಾರಲಿ ಕಂಡರವನಿಪ
ರೊಳಗೆನುತ ಮನವುಕ್ಕಿ ನಾರದ
ನೊಲಿದು ನುಡಿದನು ತನ್ನ ಹೇಳಿಕೆ ಸಫಲವಾಯ್ತೆಂದು ॥44॥
೦೪೫ ಸುರರಿಗಾದುದು ತುಷ್ಟಿ ...{Loading}...
ಸುರರಿಗಾದುದು ತುಷ್ಟಿ ಧರಣೀ
ಸುರ ಮುನೀಂದ್ರರಿಗಾಯ್ತು ಶೂದ್ರರ
ನೆರವಿಗಾ ಚಂಡಾಲ ಪರಿಯಂತಾಯ್ತು ಸತ್ಕಾರ
ಧರಣಿಪಾಲಕರಿದೆ ಚತುಸ್ಸಾ
ಗರದ ತಡಿ ಪರಿಯಂತ ವಿಶ್ವಂ
ಭರೆಯ ಮಾನ್ಯರ ಮನ್ನಿಸೆಂದನು ಭೂಪತಿಗೆ ಭೀಷ್ಮ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುರರಿಗೆ ತೃಪ್ತಿಯಾಯಿತು. ವಿಪ್ರರಿಗೆ ಮುನೀಂದ್ರರಿಗೆ ತೃಪ್ತಿಯಾಯಿತು. ಚಂಡಾಲರಾದಿಯಾಗಿ ಸಮಸ್ತ ಪ್ರಜೆಗಳಿಗೂ ತೃಪ್ತಿಕರವಾಗಿ ಸತ್ಕಾರವಾಯಿತು. ಚತುಸ್ಸಾಗರ ಪರಿಯಂತದ ರಾಜರುಗಳನ್ನು ಮಾನ್ಯರನ್ನು ಗೌರವಿಸು ಎಂದು ಭೀಷ್ಮ ಯುಧಿಷ್ಠಿರನಿಗೆ ನುಡಿದ.
ಪದಾರ್ಥ (ಕ.ಗ.ಪ)
ಧರಣೀಸುರ-ಬ್ರಾಹ್ಮಣ
ಮೂಲ ...{Loading}...
ಸುರರಿಗಾದುದು ತುಷ್ಟಿ ಧರಣೀ
ಸುರ ಮುನೀಂದ್ರರಿಗಾಯ್ತು ಶೂದ್ರರ
ನೆರವಿಗಾ ಚಂಡಾಲ ಪರಿಯಂತಾಯ್ತು ಸತ್ಕಾರ
ಧರಣಿಪಾಲಕರಿದೆ ಚತುಸ್ಸಾ
ಗರದ ತಡಿ ಪರಿಯಂತ ವಿಶ್ವಂ
ಭರೆಯ ಮಾನ್ಯರ ಮನ್ನಿಸೆಂದನು ಭೂಪತಿಗೆ ಭೀಷ್ಮ ॥45॥
೦೪೬ ಸ್ನಾತಕ ಪ್ರಿಯ ...{Loading}...
ಸ್ನಾತಕ ಪ್ರಿಯ ಋತ್ವಿಗಾಚಾ
ರ್ಯಾತಿಶಯ ಗುರು ನೃಪರು ಸಹಿತೀ
ಭೂತಳದೊಳಿಂತಾರು ಮಾನಿಸರಘ್ರ್ಯಯೋಗ್ಯರಲೆ
ಪ್ರೀತಿಯಲಿ ನೀನಘ್ರ್ಯವನು ವಿ
ಖ್ಯಾತರಿಗೆ ಮಾಡೆನಲು ಮನ್ನಣೆ
ಯಾತನಾರೆನೆ ವೀರನಾರಾಯಣನ ತೋರಿಸಿದ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸ್ನಾತಕ, ಪ್ರಿಯ, ಋತ್ವಿಕ್ಕು, ಆಚಾರ್ಯ, ಗುರು, ನೃಪ ಈ ಆರು ಮಂದಿ ಈ ಭೂಮಿಯ ಮೇಲೆ ಆಘ್ರ್ಯಕ್ಕೆ ಯೋಗ್ಯರಾದವರು ಇವರಲ್ಲಿ ವಿಖ್ಯಾತರಾದವರಿಗೆ ನೀನು ಪ್ರೀತಿಯಿಂದ ಆಘ್ರ್ಯ ಪ್ರದಾನ ಮಾಡು” ಎಂದ ಭೀಷ್ಮ, ಅದಕ್ಕೆ ಧರ್ಮರಾಜ “ಈ ಗೌರವಕ್ಕೆ ಅರ್ಹನಾದವನಾರು ?” ಎಂದು ಕೇಳಲಾಗಿ ಭೀಷ್ಮ ವೀರನಾರಾಯಣನನ್ನು ತೋರಿಸಿದ.
ಪದಾರ್ಥ (ಕ.ಗ.ಪ)
ಸ್ನಾತಕ-ವೇದಾಧ್ಯಯನ ಮುಗಿಸಿ ಗೃಹಸ್ಥಾಶ್ರಮ ಸೇರಲಿರುವವನು.
ಮೂಲ ...{Loading}...
ಸ್ನಾತಕ ಪ್ರಿಯ ಋತ್ವಿಗಾಚಾ
ರ್ಯಾತಿಶಯ ಗುರು ನೃಪರು ಸಹಿತೀ
ಭೂತಳದೊಳಿಂತಾರು ಮಾನಿಸರಘ್ರ್ಯಯೋಗ್ಯರಲೆ
ಪ್ರೀತಿಯಲಿ ನೀನಘ್ರ್ಯವನು ವಿ
ಖ್ಯಾತರಿಗೆ ಮಾಡೆನಲು ಮನ್ನಣೆ
ಯಾತನಾರೆನೆ ವೀರನಾರಾಯಣನ ತೋರಿಸಿದ ॥46॥