೦೦೦ ಸೂಚನೆ ನಕುಲ ...{Loading}...
ಸೂಚನೆ: ನಕುಲ ಪಶ್ಚಿಮ ದೆಸೆಯ ಭೂಪಾ
ಲಕರ ಗೆಲಿದನು ನೆರೆದ ರತ್ನ
ಪ್ರಕರದಿಂದಳಕಾಪುರಿಗೆ ಮಿಗಿಲಾಯ್ತು ನೃಪನಗರ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂ : ನಕುಲನು ಪಶ್ಚಿಮ ದಿಕ್ಕಿನ ರಾಜರನ್ನೆಲ್ಲ ಗೆದ್ದ. ಗೆದ್ದು ತಂದ ರತ್ನ ಪ್ರಕಾರದಿಂದ ಇಂದ್ರಪ್ರಸ್ಥ ಕುಬೇರನ ರಾಜಧಾನಿಯಾದ ಅಲಕಾಪುರಿಗಿಂತ ಮಿಗಿಲಾಯಿತು.
ಮೂಲ ...{Loading}...
ಸೂಚನೆ: ನಕುಲ ಪಶ್ಚಿಮ ದೆಸೆಯ ಭೂಪಾ
ಲಕರ ಗೆಲಿದನು ನೆರೆದ ರತ್ನ
ಪ್ರಕರದಿಂದಳಕಾಪುರಿಗೆ ಮಿಗಿಲಾಯ್ತು ನೃಪನಗರ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಪಶ್ಚಿಮ ದೆಸೆಯ ಭೂಮೀ
ಪಾಲಕರ ಮೇಲೆತ್ತಿ ನಡೆದನು ನಕುಲನೊಲವಿನಲಿ
ಧಾಳಿ ಹರಿದುದು ಮರು ಯವನ ನೇ
ಪಾಳ ರೋಹಿತರೆಂದೆನಿಪ ಭೂ
ಪಾಲಕರ ಮುರಿದವರ ಸಪ್ತಾಂಗವ ವಿಭಾಡಿಸಿದ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಕುಲ ಪಶ್ಚಿಮ ದಿಕ್ಕಿನ ರಾಜರ ಮೇಲೆ ಉತ್ಸಾಹದಿಂದ ದಂಡೆತ್ತಿ ಹೋದ. ಮೊದಲು ಮರು, ಯವನ, ನೇಪಾಳ ರೋಹಿತರೆಂಬ
ರಾಜರನ್ನು ಸೋಲಿಸಿ ಅವರ ಸಪ್ತಾಂಗವನ್ನು ನಾಶಪಡಿಸಿದ.
ಪದಾರ್ಥ (ಕ.ಗ.ಪ)
ಟಿಪ್ಪನೀ (ಕ.ಗ.ಪ)
ಸಪ್ತಾಂಗ - ಸ್ವಾಮಿ, ಅಮಾತ್ಯ, ಜನಪದ, ದುರ್ಗ, ಕೋಶ, ಸೈನ್ಯ, ಮಿತ್ರ
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಪಶ್ಚಿಮ ದೆಸೆಯ ಭೂಮೀ
ಪಾಲಕರ ಮೇಲೆತ್ತಿ ನಡೆದನು ನಕುಲನೊಲವಿನಲಿ
ಧಾಳಿ ಹರಿದುದು ಮರು ಯವನ ನೇ
ಪಾಳ ರೋಹಿತರೆಂದೆನಿಪ ಭೂ
ಪಾಲಕರ ಮುರಿದವರ ಸಪ್ತಾಂಗವ ವಿಭಾಡಿಸಿದ ॥1॥
೦೦೨ ಹೇಮಕನ ಸೈರಿಭಕನೆಮ್ಬ ...{Loading}...
ಹೇಮಕನ ಸೈರಿಭಕನೆಂಬ ಸ
ನಾಮರನು ಮುರಿದನು ಕಳಿಂಗದ
ಭೂಮಿಪರ ಸದೆದನು ತ್ರಿಗರ್ತರ ಶಿಬಿಯ ಸಂತತಿಯ
ಹೇಮ ಮಾತ್ರವನುಳುಹದವದಿರ
ಭೂಮಿಗಳನವರ್ಗಿತ್ತು ವಸ್ತು
ಸ್ತೋಮವನು ನೆರೆಹಿದನು ನಡೆದನು ಮುಂದೆ ಪಶ್ಚಿಮಕೆ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರಸಿದ್ಧರಾದ ಹೇಮಕ ಸೈರಿಭಕರನ್ನು ಸೋಲಿಸಿ ಕಳಿಂಗರಾಜರನ್ನು ಸದೆದ. ತ್ರಿಗರ್ತರ, ಶಿಬಿಯ ಸಂತತಿಯನ್ನು ಬಡಿದು ಅವರೆಲ್ಲರ ಭೂಮಿಯನ್ನು ಅವರಿಗೇ ಕೊಟ್ಟು ಚಿನ್ನ ಮತ್ತಿತರ ವಸ್ತುಗಳನ್ನು ಮಾತ್ರ ಸಂಗ್ರಹಿಸಿಕೊಂಡು ಪಶ್ಚಿಮಕ್ಕೆ ಮುಂದುವರಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಹೇಮಕನ ಸೈರಿಭಕನೆಂಬ ಸ
ನಾಮರನು ಮುರಿದನು ಕಳಿಂಗದ
ಭೂಮಿಪರ ಸದೆದನು ತ್ರಿಗರ್ತರ ಶಿಬಿಯ ಸಂತತಿಯ
ಹೇಮ ಮಾತ್ರವನುಳುಹದವದಿರ
ಭೂಮಿಗಳನವರ್ಗಿತ್ತು ವಸ್ತು
ಸ್ತೋಮವನು ನೆರೆಹಿದನು ನಡೆದನು ಮುಂದೆ ಪಶ್ಚಿಮಕೆ ॥2॥
೦೦೩ ಮುರಿದನಗ್ಗದ ಚೇಕಿತಾನರ ...{Loading}...
ಮುರಿದನಗ್ಗದ ಚೇಕಿತಾನರ
ನೆರಗಿದನು ಬರ್ಬರ ತುರುಷ್ಕರ
ನೊರಗಿಸಿದನಾಹವದೊಳಾಭೀರಕರ ಬಾಹ್ಲಿಕರ
ಸೆರೆಯ ಹಿಡಿದನು ಪಾರ್ವತೇಯರ
ನುರುಕುಗೊಳಿಸಿದ ಜೀನರಂಬ
ಷ್ಠರನು ಸಿಂಧು ಸರಸ್ವತೀ ತೀರದ ಮಹೀಶ್ವರರ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೇಷ್ಠರೆನಿಸಿದ ಚೇಕಿತಾನರನ್ನು ಸೋಲಿಸಿದ. ಬರ್ಬರ ತುರುಷ್ಕರನ್ನು ಆಕ್ರಮಣ ಮಾಡಿದ. ಆಭೀರಕರನ್ನೂ ಬಾಹ್ಲಿಕರನ್ನೂ ಸೋಲಿಸಿದ. ಪಾರ್ವತೇಯರನ್ನು ಸೆರೆ ಹಿಡಿದ. ಜೀನರನ್ನೂ ಅಂಬಿಷ್ಠರನ್ನೂ ಸಿಂಧು ಸರಸ್ವತೀ ತೀರದ ರಾಜರುಗಳನ್ನೂ ಅತ್ತಿತ್ತ ಸರಿಯದಂತೆ ತಡೆಗಟ್ಟಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಮುರಿದನಗ್ಗದ ಚೇಕಿತಾನರ
ನೆರಗಿದನು ಬರ್ಬರ ತುರುಷ್ಕರ
ನೊರಗಿಸಿದನಾಹವದೊಳಾಭೀರಕರ ಬಾಹ್ಲಿಕರ
ಸೆರೆಯ ಹಿಡಿದನು ಪಾರ್ವತೇಯರ
ನುರುಕುಗೊಳಿಸಿದ ಜೀನರಂಬ
ಷ್ಠರನು ಸಿಂಧು ಸರಸ್ವತೀ ತೀರದ ಮಹೀಶ್ವರರ॥3॥
೦೦೪ ರಣದ ಸಙ್ಕೇತಗಳೊಳುತ್ಸವ ...{Loading}...
ರಣದ ಸಂಕೇತಗಳೊಳುತ್ಸವ
ರಣಸಮರ್ಥರ ಹಿಂಡಿದನು ಚಾ
ರಣರ ಖುರಸಾಣರನು ಪುಷ್ಕರ ವರ ನಿವಾಸಿಗಳ
ಹಣಿದನಲ್ಲಿಂದಿತ್ತ ಮಿಗೆ ಪಡು
ವಣ ದಿಗಂತದಲದಟರಸ ಪ
ಟ್ಟಣದವರ ಪಂಚನದ ಭೂಮಿಯ ಭೂಮಿಪರ ಗೆಲಿದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಣದ ಸಂಕೇತಗಳಿಂದ ರಣಸಮರ್ಥರನ್ನು ಹಿಂಡಿದ. ಚಾರಣರು, ಖುರಸಾಣರು ಪುಷ್ಕರ ವರನಿವಾಸಿಗಳನ್ನೂ ಬಡಿದ. ಅಲ್ಲಿಂದೀಚೆ ಪಶ್ಚಿಮ ದಿಗಂತದಲ್ಲಿ ಅದಟರಾದ ಅರಸರನ್ನು ಪಟ್ಟಣದವರ ಪಂಚನದಿಯ ಭೂಮಿಯ ರಾಜರನ್ನೂ ಗೆದ್ದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ರಣದ ಸಂಕೇತಗಳೊಳುತ್ಸವ
ರಣಸಮರ್ಥರ ಹಿಂಡಿದನು ಚಾ
ರಣರ ಖುರಸಾಣರನು ಪುಷ್ಕರ ವರ ನಿವಾಸಿಗಳ
ಹಣಿದನಲ್ಲಿಂದಿತ್ತ ಮಿಗೆ ಪಡು
ವಣ ದಿಗಂತದಲದಟರಸ ಪ
ಟ್ಟಣದವರ ಪಂಚನದ ಭೂಮಿಯ ಭೂಮಿಪರ ಗೆಲಿದ ॥4॥
೦೦೫ ಜ್ಯೋತಿಕರ ವಣ್ಣಕಟಕರ ...{Loading}...
ಜ್ಯೋತಿಕರ ವಣ್ಣಕಟಕರ ಕೃತ
ಯಾತಿಕರ ಯೌಧೇಯ ಸಂವೀ
ರಾತಿಶಯ ಬಡಹಾರರಮಳ ದ್ವಾರಪಾಲಕರ
ಘಾತಿಸಿದನವರುಗಳ ವಿತ್ತ
ವ್ರಾತವನು ಹೇರಿಸಿದನೆಡ ಬಲ
ದಾತಗಳನಪ್ಪಳಿಸಿ ತೆಗೆದನು ಸಕಲ ವಸ್ತುಗಳ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜ್ಯೋತಿಕರನ್ನು ವಣ್ಣಕಟಕರನ್ನೂ ಕೃತಯಾತಿಕರನ್ನು ಸಂವೀರರನ್ನು ಬಡಹಾರರನ್ನು ಅಮಲರಾದ ದ್ವಾರಪಾಲಕರನ್ನು ಘಾತಿಸಿ ಅವರ ಧನರಾಶಿಯನ್ನು ಅಡಕಿಸಿದ. ಅಕ್ಕಪಕ್ಕದವರನ್ನೂ ಗೆದ್ದು ಅವರಿಂದಲೂ ವಸ್ತುಗಳನ್ನು ಸಂಗ್ರಹಿಸಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಜ್ಯೋತಿಕರ ವಣ್ಣಕಟಕರ ಕೃತ
ಯಾತಿಕರ ಯೌಧೇಯ ಸಂವೀ
ರಾತಿಶಯ ಬಡಹಾರರಮಳ ದ್ವಾರಪಾಲಕರ
ಘಾತಿಸಿದನವರುಗಳ ವಿತ್ತ
ವ್ರಾತವನು ಹೇರಿಸಿದನೆಡ ಬಲ
ದಾತಗಳನಪ್ಪಳಿಸಿ ತೆಗೆದನು ಸಕಲ ವಸ್ತುಗಳ ॥5॥
೦೦೬ ಮಾವನಲ್ಲಿಗೆ ಬನ್ದಡಾ ...{Loading}...
ಮಾವನಲ್ಲಿಗೆ ಬಂದಡಾ ಮಾ
ದ್ರಾವನೀಪತಿ ಶಲ್ಯ ಮಿಗೆ ಸಂ
ಭಾವಿಸಿದನೊಲಿದಿತ್ತನೀತಂಗಖಿಳ ವಸ್ತುಗಳ
ತೀವಿದರು ಭಂಡಿಯಲಿ ಮುಂದಣ
ಜಾವಟೆಯ ಚಪಳರಿಗೆ ಹರಿಯೆ ನೃ
ಪಾವಳಿಗಳಲ್ಲಲ್ಲಿ ತೆತ್ತರು ಕಂಡ ವಸ್ತುಗಳ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೋದರಮಾವನಾದ ಮದ್ರಾಧಿಪತಿ ಶಲ್ಯನ ಬಳಿಗೆ ಬರಲು ಅವನು ಗೌರವಿಸಿ ಅಖಿಲವಸ್ತುಗಳನ್ನು ಇತ್ತ. ಎಲ್ಲವನ್ನೂ ನಕುಲ ಬಂಡಿಯಲ್ಲಿ ತುಂಬಿದ . ಮುಂದೆ ಚಪಲರಾದ ಉದ್ಧಟರ ಮೇಲೆ ಆಕ್ರಮಣ ಮಾಡಿದ. ಅವರುಗಳೂ ಸೋತು ಕಂಡ ವಸ್ತುಗಳನ್ನು ಕೊಟ್ಟರು.
ಪದಾರ್ಥ (ಕ.ಗ.ಪ)
ತೀವಿದರು - ತುಂಬಿದರು
ಮೂಲ ...{Loading}...
ಮಾವನಲ್ಲಿಗೆ ಬಂದಡಾ ಮಾ
ದ್ರಾವನೀಪತಿ ಶಲ್ಯ ಮಿಗೆ ಸಂ
ಭಾವಿಸಿದನೊಲಿದಿತ್ತನೀತಂಗಖಿಳ ವಸ್ತುಗಳ
ತೀವಿದರು ಭಂಡಿಯಲಿ ಮುಂದಣ
ಜಾವಟೆಯ ಚಪಳರಿಗೆ ಹರಿಯೆ ನೃ
ಪಾವಳಿಗಳಲ್ಲಲ್ಲಿ ತೆತ್ತರು ಕಂಡ ವಸ್ತುಗಳ ॥6॥
೦೦೭ ತಳಿತು ಬಿಟ್ಟುದು ...{Loading}...
ತಳಿತು ಬಿಟ್ಟುದು ಸೇನೆ ಪಡುವಣ
ಜಲಧಿಯ ಕರಾವಳಿಗಳಲಿ ಕೇ
ವಳಿಸಿದರು ಕೊಲ್ಲಣಿಗೆಯಲಿ ಕೊಂಡರು ಸುವಸ್ತುಗಳ
ಕಳಿವರಿದು ಹಿಮಗಿರಿಯ ಮೂಲೆಗೆ
ನಿಲುಕಿ ಸಕಲ ಮ್ಲೇಚ್ಛ ಭೂಪಾ
ವಳಿಯ ಭಂಗಿಸಿ ಹೇರಿಸಿದನೊಂಟೆಗಳಲಾ ಧನವ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೇನೆ ಪಶ್ಚಿಮ ಕರಾವಳಿಯಲ್ಲಿ ಬೀಡು ಬಿಟ್ಟಿತು. ಅಲ್ಲೆಲ್ಲ ಕೇವಲ ವಿನೋದವಾಗಿ ಸುವಸ್ತುಗಳನ್ನು ಸಂಗ್ರಹಿಸಿದರು. ಅಲ್ಲಿಂದ ಹಿಮಗಿರಿಯ ಮೂಲೆಯವರೆಗೆ ಹೋಗಿ ಸಕಲ ಮ್ಲೇಚ್ಛ ರಾಜರುಗಳನ್ನೂ ಸೋಲಿಸಿ ಸಂಗ್ರಹಿಸಿದ ಧನವನ್ನು ಒಂಟೆಗಳ ಮೇಲೆ ಹೇರಿಸಿದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ತಳಿತು ಬಿಟ್ಟುದು ಸೇನೆ ಪಡುವಣ
ಜಲಧಿಯ ಕರಾವಳಿಗಳಲಿ ಕೇ
ವಳಿಸಿದರು ಕೊಲ್ಲಣಿಗೆಯಲಿ ಕೊಂಡರು ಸುವಸ್ತುಗಳ
ಕಳಿವರಿದು ಹಿಮಗಿರಿಯ ಮೂಲೆಗೆ
ನಿಲುಕಿ ಸಕಲ ಮ್ಲೇಚ್ಛ ಭೂಪಾ
ವಳಿಯ ಭಂಗಿಸಿ ಹೇರಿಸಿದನೊಂಟೆಗಳಲಾ ಧನವ ॥7॥
೦೦೮ ಹೇರಿದವು ಬಹು ...{Loading}...
ಹೇರಿದವು ಬಹು ಧನವನೊಂಟೆಗ
ಳಾರು ಸಾವಿರ ಮಿಕ್ಕ ವಸ್ತುವ
ಹೇರಿದವುಯೆತ್ತುಗಳು ಹೂಡಿದ ಭಂಡಿ ಸಾವಿರವು
ಆರು ಲಕ್ಷ ತುರಂಗ ಉಷ್ಟ್ರಗ
ಳಾರು ಕೋಟಿಗಳಾನೆ ಗಣನೆಯ
ಮೀರಿದವು ಮೃಗ ಪಕ್ಷಿ ಕೋಣನ ಕುರಿಯ ಹಿಂಡುಗಳ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆರು ಸಾವಿರ ಒಂಟೆಗಳ ಮೇಲೆ ಧನವನ್ನು ಹೊರಿಸಲಾಯಿತು. ಮಿಕ್ಕ ವಸ್ತುಗಳನ್ನು ಸಾವಿರ ಎತ್ತುಗಳ ಬಂಡಿಯಲ್ಲಿ ತುಂಬಿದರು. ಆರು ಲಕ್ಷ ಕುದುರೆಗಳು ಆರು ಕೋಟಿ ಒಂಟೆಗಳು, ಆನೆಗಳು ಮೃಗ ಪಕ್ಷಿ ಕೋಣ ಕುರಿಯ ಹಿಂಡುಗಳು ಗಣನೆಗೆ ಮೀರಿದವು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಹೇರಿದವು ಬಹು ಧನವನೊಂಟೆಗ
ಳಾರು ಸಾವಿರ ಮಿಕ್ಕ ವಸ್ತುವ
ಹೇರಿದವುಯೆತ್ತುಗಳು ಹೂಡಿದ ಭಂಡಿ ಸಾವಿರವು
ಆರು ಲಕ್ಷ ತುರಂಗ ಉಷ್ಟ್ರಗ
ಳಾರು ಕೋಟಿಗಳಾನೆ ಗಣನೆಯ
ಮೀರಿದವು ಮೃಗ ಪಕ್ಷಿ ಕೋಣನ ಕುರಿಯ ಹಿಂಡುಗಳ ॥8॥
೦೦೯ ಮರಳಿತೀತನ ಸೇನೆ ...{Loading}...
ಮರಳಿತೀತನ ಸೇನೆ ಬಂದನು
ಪುರಕೆ ಕಂಡನು ಧರ್ಮಪುತ್ರನ
ಚರಣಕೆರಗಿದನಖಿಳ ವಸ್ತುವ ಬೇರೆ ತೋರಿಸಿದ
ಅರಸನುತ್ಸವವನು ವೃಕೋದರ
ನರ ನಕುಲ ಸಹದೇವನಂತಃ
ಪುರದ ಹರುಷದ ಸಿರಿಯನದನೇವಣ್ಣಿಸುವೆನೆಂದ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನ್ಯ ಹಿಂತಿರುಗಿತು. ನಕುಲ ಇಂದ್ರಪ್ರಸ್ಥಕ್ಕೆ ಬಂದ. ಯುಧಿಷ್ಠಿರನನ್ನು ಕಂಡು ಕಾಲಿಗೆರಗಿದ. ತಾನು ತಂದ ಅಖಿಲ ವಸ್ತುಗಳನ್ನು ತೋರಿಸಿದ. ಆಗ ಯುಧಿಷ್ಠಿರ ರಾಜನಿಗಾದ ಸಂತೋಷವನ್ನೂ ಭೀಮಾರ್ಜುನ ನಕುಲ ಸಹದೇವರಿಗೂ ಅಂತಃಪುರದವರಿಗೂ ಆದ ಸಂತೋಷದ ವೈಭವವನ್ನೂ ಏನೆಂದು ವರ್ಣಿಸೋಣ !
ಪದಾರ್ಥ (ಕ.ಗ.ಪ)
ಮೂಲ ...{Loading}...
ಮರಳಿತೀತನ ಸೇನೆ ಬಂದನು
ಪುರಕೆ ಕಂಡನು ಧರ್ಮಪುತ್ರನ
ಚರಣಕೆರಗಿದನಖಿಳ ವಸ್ತುವ ಬೇರೆ ತೋರಿಸಿದ
ಅರಸನುತ್ಸವವನು ವೃಕೋದರ
ನರ ನಕುಲ ಸಹದೇವನಂತಃ
ಪುರದ ಹರುಷದ ಸಿರಿಯನದನೇವಣ್ಣಿಸುವೆನೆಂದ ॥9॥
೦೧೦ ಕಳವು ಹುಸಿ ...{Loading}...
ಕಳವು ಹುಸಿ ಹಾದರ ವಿರೋಧ
ಸ್ಖಲಿತವಾರಡಿ ಬಂದಿ ದಳದುಳ
ಬೆಳಗವತೆಯನ್ಯಾಯ ಪರಿಭವ ಠಕ್ಕು ಡೊಳ್ಳಾಸ
ಹಳಿವು ವಂಚನೆ ಜಾತಿ ಸಂಕರ
ಕೊಲೆಯ ಡಾವರ ವಿಕೃತಿ ಮಾಯಾ
ವಳಿಗಳಡಗಿದವೀ ಯುಧಿಷ್ಠಿರ ನೃಪನ ರಾಜ್ಯದಲಿ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಳವು, ಸುಳ್ಳು, ಹಾದರ, ವಿರೋಧ, ಜಾರಿಕೊಳ್ಳುವುದು, ಹಿಂಸೆ, ಬಂಧನ, ಕೊಳ್ಳೆಹೊಡೆಯುವುದು, ದಡ್ಡತನದ ಕವಿತೆ, ಅನ್ಯಾಯ, ಅನಾದರ, ಮೋಸ, ವಂಚನೆ, ಹಳಿವು, ತಟವಟ, ಜಾತಿಸಂಕರ, ಕೊಲೆ, ವಿಕಾರ, ಮಾಯೆ ಎಂಬ ಇವೆಲ್ಲ ನಿನ್ನಲ್ಲಿ ಇಲ್ಲವಲ್ಲವೆ ರಾಜ ?
ಪದಾರ್ಥ (ಕ.ಗ.ಪ)
ನೋಡಿ ಸಭಾಪರ್ವ, 1-45
ಟಿಪ್ಪನೀ (ಕ.ಗ.ಪ)
ಈ ಪದ್ಯ ಆಗಲೇ ಮೊದಲನೆಯ ಸಂಧಿಯಲ್ಲಿ 45ನೆಯ ಪದ್ಯವಾಗಿ ಬಂದಿದೆ. ಹಾಗಾಗಿ ಈ ಪದ್ಯ ಪುನರುಕ್ತವಾಗಿದೆ.
ಮೂಲ ...{Loading}...
ಕಳವು ಹುಸಿ ಹಾದರ ವಿರೋಧ
ಸ್ಖಲಿತವಾರಡಿ ಬಂದಿ ದಳದುಳ
ಬೆಳಗವತೆಯನ್ಯಾಯ ಪರಿಭವ ಠಕ್ಕು ಡೊಳ್ಳಾಸ
ಹಳಿವು ವಂಚನೆ ಜಾತಿ ಸಂಕರ
ಕೊಲೆಯ ಡಾವರ ವಿಕೃತಿ ಮಾಯಾ
ವಳಿಗಳಡಗಿದವೀ ಯುಧಿಷ್ಠಿರ ನೃಪನ ರಾಜ್ಯದಲಿ ॥10॥
೦೧೧ ನೃಗನ ಭರತನ ...{Loading}...
ನೃಗನ ಭರತನ ದುಂದುಮಾರನ
ಸಗರನ ಪುರೂರವನನಾತನ
ಮಗನ ನಹುಷನ ಕಾರ್ತವೀರ್ಯನ ನಳನ ದಶರಥನ
ಹಗಲಿರುಳು ವಲ್ಲಭರ ವಂಶದ
ವಿಗಡರಲಿ ಯಮಸೂನು ಸರಿಯೋ
ಮಿಗಿಲೊ ಬಲ್ಲವನಾರೆನಲು ಸಲಹಿದನು ಭೂತಳವ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪುನರುಕ್ತಿ ಸಭಾ (1-82)
ಪದಾರ್ಥ (ಕ.ಗ.ಪ)
ಮೂಲ ...{Loading}...
ನೃಗನ ಭರತನ ದುಂದುಮಾರನ
ಸಗರನ ಪುರೂರವನನಾತನ
ಮಗನ ನಹುಷನ ಕಾರ್ತವೀರ್ಯನ ನಳನ ದಶರಥನ
ಹಗಲಿರುಳು ವಲ್ಲಭರ ವಂಶದ
ವಿಗಡರಲಿ ಯಮಸೂನು ಸರಿಯೋ
ಮಿಗಿಲೊ ಬಲ್ಲವನಾರೆನಲು ಸಲಹಿದನು ಭೂತಳವ ॥11॥
೦೧೨ ದ್ವಾಪರದ ಮರೆ ...{Loading}...
ದ್ವಾಪರದ ಮರೆ ಜವನಿಕೆಯಲೀ
ದ್ವಾಪರವೊ ಕೃತಯುಗವೊ ಧರ್ಮದ
ರೂಪು ನಾನಾ ಮುಖದಲವತರಿಸಿತೊ ದಿಗಂತದಲಿ
ಸ್ಥಾಪಿಸಿತು ವರ್ಣಾಶ್ರಮದ ಧ
ರ್ಮೋಪಚಯವೆರಡಂಘ್ರಿ ಮುರಿದು ವಿ
ರೂಪವಾದುದಧರ್ಮವೀ ಧರ್ಮಜನ ರಾಜ್ಯದಲಿ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
12.ಧರ್ಮರಾಯನು ರಾಜ್ಯವಾಳುತ್ತಿದ್ದಾಗ ಇದು ದ್ವಾಪರ ಯುಗದ ತೆರೆಯನ್ನು ಹೊದೆದುಕೊಂಡ ಕೃತಯುಗವೋ ಎನ್ನುವಂತೆ ಎಲ್ಲ ಕಡೆಯಲ್ಲಿಯೂ ಧರ್ಮವು ಸಂಪೂರ್ಣವಾಗಿ ನೆಲೆಗೊಂಡಿತು. ಮತ್ತು ವರ್ಣಾಶ್ರಮ ಧರ್ಮವು ನೆಲೆಗೊಂಡಿತ್ತು. ಅಧರ್ಮವು ತನ್ನ ಎರಡೂ ಪಾದಗಳನ್ನು ಮುರಿದುಕೊಂಡು ತನ್ನ ಶಕ್ತಿಯನ್ನು ಕಳೆದುಕೊಂಡಿತ್ತು.
ಪದಾರ್ಥ (ಕ.ಗ.ಪ)
ಮೂಲ ...{Loading}...
ದ್ವಾಪರದ ಮರೆ ಜವನಿಕೆಯಲೀ
ದ್ವಾಪರವೊ ಕೃತಯುಗವೊ ಧರ್ಮದ
ರೂಪು ನಾನಾ ಮುಖದಲವತರಿಸಿತೊ ದಿಗಂತದಲಿ
ಸ್ಥಾಪಿಸಿತು ವರ್ಣಾಶ್ರಮದ ಧ
ರ್ಮೋಪಚಯವೆರಡಂಘ್ರಿ ಮುರಿದು ವಿ
ರೂಪವಾದುದಧರ್ಮವೀ ಧರ್ಮಜನ ರಾಜ್ಯದಲಿ ॥12॥
೦೧೩ ಬಡಗಲುತ್ತರಕುರುಗಳಿತ್ತಲು ...{Loading}...
ಬಡಗಲುತ್ತರಕುರುಗಳಿತ್ತಲು
ಪಡುವಲುದಧಿ ವಿಭೀಷಣನ ಪುರ
ಗಡಿ ಕೃತಾಂತನ ದೆಸೆಗೆ ಮೂಡಲು ದಿನಪನುದಯಾದ್ರಿ
ಪೊಡವಿಯದರಲಿ ಯಮಜನಾಣೆಗೆ
ನಡುಗುವುದು ರಾಯಂಗೆ ತೆತ್ತುದು
ಗಡ ಸುವಸ್ತುವನೇನಸಾಧ್ಯವು ಕೃಷ್ಣನೊಲಿದರಿಗೆ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತರದಲ್ಲಿ ಉತ್ತರಕುರುಗಳು ಪಶ್ಚಿಮದಲ್ಲಿ ಪಶ್ಚಿಮ ಸಮುದ್ರ .ದಕ್ಷಿಣದಲ್ಲಿ ವಿಭೀಷಣನ ಪಟ್ಟಣ. ಪೂರ್ವದಲ್ಲಿ ಉದಯಾದ್ರಿ
ಈ ನಡುವೆ ಇರುವ ಭೂಮಂಡಲದಲ್ಲಿ ಧರ್ಮಜನ ಆಜ್ಞೆಗೆ ಚ್ಯುತಿಯಿಲ್ಲ. ಸಮಸ್ತ ರಾಜರೂ ಅವನ ಆಜ್ಞೆಗೆ ತಲೆಬಾಗಿ
ಶೇಷ್ಠವಾದ ವಸ್ತುಗಳನ್ನು ಒಪ್ಪಿಸಿದರಲ್ಲವೆ ? ಕೃಷ್ಣನು ಒಲಿದವರಿಗೆ ಏನು ತಾನೇ ಅಸಾಧ್ಯವಾದೀತು ?
ಪದಾರ್ಥ (ಕ.ಗ.ಪ)
ಮೂಲ ...{Loading}...
ಬಡಗಲುತ್ತರಕುರುಗಳಿತ್ತಲು
ಪಡುವಲುದಧಿ ವಿಭೀಷಣನ ಪುರ
ಗಡಿ ಕೃತಾಂತನ ದೆಸೆಗೆ ಮೂಡಲು ದಿನಪನುದಯಾದ್ರಿ
ಪೊಡವಿಯದರಲಿ ಯಮಜನಾಣೆಗೆ
ನಡುಗುವುದು ರಾಯಂಗೆ ತೆತ್ತುದು
ಗಡ ಸುವಸ್ತುವನೇನಸಾಧ್ಯವು ಕೃಷ್ಣನೊಲಿದರಿಗೆ ॥13॥
೦೧೪ ಕಳನ ಸವೆದರು ...{Loading}...
ಕಳನ ಸವೆದರು ಮೂರು ಯೋಜನ
ವಳಯದಲಿ ಪಡಿಯಗಳು ಕೋಟಾ
ವಳಯ ಸುಯ್ಧಾನದಲಿ ಹೊಯ್ದರು ರತ್ನ ಕಾಂಚನವ
ಕೆಲದೊಳೈಗಾವುದದೊಳಿಕ್ಕಿದ
ತಳಿಯ ಮಧ್ಯದೊಳಖಿಳ ವಸ್ತ್ರಾ
ವಳಿಯನೊಟ್ಟಿದರದರ ಕೆಲದಲಿ ರಾಯ ಕೇಳ್ ಎಂದ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೂರು ಯೋಜನದಗಲ ಸುತ್ತಳತೆಯುಳ್ಳ ಕಣವನ್ನು ಸಿದ್ಧಪಡಿಸಿದರು. ಕೋಟೆ ಕಟ್ಟಿ ಅಗಳು ತೋಡಿ ಭದ್ರಪಡಿಸಿ ಅಲ್ಲಿ
ರತ್ನ ಕಾಂಚನಗಳನ್ನು ಸುರಕ್ಷಿತವಾಗಿಟ್ಟರು. ಅದರ ಪಕ್ಕ ಐದು ಗಾವುದದ ಅಳತೆಯಲ್ಲಿ ಮರದ ತುಂಡುಗಳಿಂದ ಕಟ್ಟಿದ ಬೇಲಿಯ ನಡುವೆ ವಸ್ತ್ರಾವಳಿಯನ್ನೆಲ್ಲ ಒಟ್ಟಿದರು.
ಪದಾರ್ಥ (ಕ.ಗ.ಪ)
ಅಗಳು - ಕಂದಕ, ಸುಯ್ದಾನದಲಿ-ಎಚ್ಚರಿಕೆಯಿಂದ
ತಳಿ - ಕಂದಕದ ಬಳಿ ನೆಟ್ಟಿರುವ ದೊಡ್ಡ ಮರದ ತುಂಡುಗಳಿಂದ ನಿರ್ಮಿಸಿದ ಬೇಲಿ.
ಮೂಲ ...{Loading}...
ಕಳನ ಸವೆದರು ಮೂರು ಯೋಜನ
ವಳಯದಲಿ ಪಡಿಯಗಳು ಕೋಟಾ
ವಳಯ ಸುಯ್ಧಾನದಲಿ ಹೊಯ್ದರು ರತ್ನ ಕಾಂಚನವ
ಕೆಲದೊಳೈಗಾವುದದೊಳಿಕ್ಕಿದ
ತಳಿಯ ಮಧ್ಯದೊಳಖಿಳ ವಸ್ತ್ರಾ
ವಳಿಯನೊಟ್ಟಿದರದರ ಕೆಲದಲಿ ರಾಯ ಕೇಳೆಂದ ॥14॥
೦೧೫ ಹತ್ತು ಯೋಜನ ...{Loading}...
ಹತ್ತು ಯೋಜನ ವಳಯದಲಿ ಮಿಗೆ
ಸುತ್ತು ಬೇಲಿಯ ಮಧ್ಯದಲಿ ಹಯ
ಮತ್ತಗಜ ರಥ ಗೋ ಮಹಿಷಿ ವರ ಸೈರಿಭದ ಚಯಕೆ
ಉತ್ತಮಾಂಗನೆಯರಿಗೆ ಭವನಗ
ಳಿತ್ತ ಬೇರಿರವಾಯ್ತು ನೃಪ ಯಾ
ಗೋತ್ತಮಕೆ ಪರುಠವಿಸಿದರು ಭೂಪಾಲ ಕೇಳ್ ಎಂದ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದರ ಪಕ್ಕದಲ್ಲಿ ಹತ್ತು ಯೋಜನ ಸುತ್ತುವಳಯದಲ್ಲಿ ಬೇಲಿ ಹಾಕಿ ನಡುವೆ ಆನೆ ಕುದುರೆ ರಥ ಗೋ,ಮಹಿಷ ಮೊದಲಾದುವುಗಳಿಗೆ ಸ್ಥಳ ಮಾಡಿದರು. ಇನ್ನೊಂದು ಕಡೆ ಉತ್ತಮಾಂಗನೆಯರ ವಾಸಕ್ಕಾಗಿ ಭವನಗಳನ್ನು ನಿರ್ಮಿಸಿದರು. ಅನಂತರ ಆ ಮಹಾಯಾಗಕ್ಕೆ ಬೇಕಾದ ಪರಿಕರಗಳನ್ನೆಲ್ಲ ಸಜ್ಜುಗೊಳಿಸಿದರು.
ಪದಾರ್ಥ (ಕ.ಗ.ಪ)
ಸೈರಿಭ-ಕೋಣ
ಮೂಲ ...{Loading}...
ಹತ್ತು ಯೋಜನ ವಳಯದಲಿ ಮಿಗೆ
ಸುತ್ತು ಬೇಲಿಯ ಮಧ್ಯದಲಿ ಹಯ
ಮತ್ತಗಜ ರಥ ಗೋ ಮಹಿಷಿ ವರ ಸೈರಿಭದ ಚಯಕೆ
ಉತ್ತಮಾಂಗನೆಯರಿಗೆ ಭವನಗ
ಳಿತ್ತ ಬೇರಿರವಾಯ್ತು ನೃಪ ಯಾ
ಗೋತ್ತಮಕೆ ಪರುಠವಿಸಿದರು ಭೂಪಾಲ ಕೇಳೆಂದ ॥15॥
೦೧೬ ಬಳಿದ ಸೊದೆಗಳ ...{Loading}...
ಬಳಿದ ಸೊದೆಗಳ ಬಾವಿ ನೂರರ
ವಳಯ ತುಂಬಿತು ತೈಲ ಘೃತ ಮಧು
ಗಳಲಿ ವರ ಗುಡ ಶರ್ಕರಾದಿಯ ಕಣಜ ಕೋಟಿಗಳು
ಕಳವೆಯಕ್ಕಿಯ ಗೋಧಿ ಕಡಲೆಯ
ವಿಳಸ ರಾಶಿಯದೇಸು ಯೋಜನ
ದಳತೆಯಂದಾರರಿವರೆಂದನು ಮುನಿ ನೃಪಾಲಂಗೆ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಣ್ಣ ಬಳಿದು ಸಿದ್ಧಗೊಳಿಸಿದ ನೂರಾರು ಬಾವಿಗಳಲ್ಲಿ ಎಣ್ಣೆ ತುಪ್ಪ ಜೇನುಗಳನ್ನು ತುಂಬಿದರು. ಬೆಲ್ಲ ಸಕ್ಕರೆ ಮೊದಲಾದ
ವಸ್ತುಗಳಿಗಾಗಿ ಅನೇಕ ಕೋಟಿ ಕಣಜಗಳನ್ನು ನಿರ್ಮಿಸಿದರು. ಇನ್ನು ಕಳವೆಯಕ್ಕಿ ಗೋಧಿ ಕಡಲೆ ಮೊದಲಾದವನ್ನು ಎಷ್ಟು ಯೋಜನಗಳ ವಿಸ್ತಾರದಲ್ಲಿ ರಾಶಿ ಹಾಕಿದ್ದರೆಂಬುದನ್ನು ಯಾರು ತಿಳಿದಾರು ?
ಪದಾರ್ಥ (ಕ.ಗ.ಪ)
ಗುಡ-ಬೆಲ್ಲ
ಮೂಲ ...{Loading}...
ಬಳಿದ ಸೊದೆಗಳ ಬಾವಿ ನೂರರ
ವಳಯ ತುಂಬಿತು ತೈಲ ಘೃತ ಮಧು
ಗಳಲಿ ವರ ಗುಡ ಶರ್ಕರಾದಿಯ ಕಣಜ ಕೋಟಿಗಳು
ಕಳವೆಯಕ್ಕಿಯ ಗೋಧಿ ಕಡಲೆಯ
ವಿಳಸ ರಾಶಿಯದೇಸು ಯೋಜನ
ದಳತೆಯಂದಾರರಿವರೆಂದನು ಮುನಿ ನೃಪಾಲಂಗೆ ॥16॥
೦೧೭ ನೆರೆದುದರ್ಥವನನ್ತವವನೀ ...{Loading}...
ನೆರೆದುದರ್ಥವನಂತವವನೀ
ಶ್ವರರು ವಶವಾದರು ಚತುಸ್ಸಾ
ಗರದ ಮಧ್ಯದಲಾಣೆ ಸಂದುದು ಧರ್ಮನಂದನನ
ಕರೆಸು ಬೇಹವರನು ಮಹೀಶಾ
ಧ್ವರಕೆ ಸಮಯವಿದೆಂದು ಪಾರಾ
ಶರಿಯು ಧೌಮ್ಯರು ಮಂತ್ರಶಾಲೆಯೊಳೆಂದರವನಿಪಗೆ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಎಲ್ಲ ಪೂರ್ವಸಿದ್ಧತೆಗಳೂ ಆದಮೇಲೆ ಮಂತ್ರಶಾಲೆಯಲ್ಲಿ ವ್ಯಾಸರೂ ಧೌಮ್ಯರೂ ಯುಧಿಷ್ಠಿರ ಮಹಾರಾಜನಿಗೆ “ಅನಂತವಾಗಿ ದ್ರವ್ಯ ಸಂಗ್ರಹವಾಯಿತು. ಚತುಸ್ಸಾಗರ ಪರ್ಯಂತವಿದ್ದ ರಾಜರುಗಳೆಲ್ಲ ನಿನ್ನ ಆಜ್ಞಾಧೀನರಾದರು. ಈ ರಾಜಸೂಯ
ಯಾಗಕ್ಕೆ ಯೋಗ್ಯಸಮಯವಾಯಿತು. ಬೇಕಾದವರನ್ನೆಲ್ಲ ಕರೆಸು” ಎಂದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ನೆರೆದುದರ್ಥವನಂತವವನೀ
ಶ್ವರರು ವಶವಾದರು ಚತುಸ್ಸಾ
ಗರದ ಮಧ್ಯದಲಾಣೆ ಸಂದುದು ಧರ್ಮನಂದನನ
ಕರೆಸು ಬೇಹವರನು ಮಹೀಶಾ
ಧ್ವರಕೆ ಸಮಯವಿದೆಂದು ಪಾರಾ
ಶರಿಯು ಧೌಮ್ಯರು ಮಂತ್ರಶಾಲೆಯೊಳೆಂದರವನಿಪಗೆ ॥17॥
೦೧೮ ಹೋಗು ಫಲುಗುಣ ...{Loading}...
ಹೋಗು ಫಲುಗುಣ ಕಂಸ ಮಥನನ
ಬೇಗ ಬಿಜಯಂಗೈಸಿ ತಾ ನೃಪ
ಯಾಗವಾತನ ಹೊರೆ ಮದೀಯ ಜಯಾಭಿವೃದ್ಧಿಗಳು
ಆಗುಹೋಗಾತನದು ತಟ್ಟೆಯ
ವಾಗದೀ ಕ್ಷಣವೆನಲು ಮನದನು
ರಾಗದಲಿ ಕಲಿ ಪಾರ್ಥ ಬಂದನು ಕಂಡನಚ್ಯುತನ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರ್ಜುನ ಹೋಗು, ಕಂಸಮಥನನನ್ನು ಬೇಗ ಕರೆದು ತಾ. ಈ ಯಾಗದ ಹೊಣೆಗಾರಿಕೆಯೆಲ್ಲ ಅವನಿಗೆ ಸೇರಿದುದು.
ನನ್ನ ಜಯಾಭಿವೃದ್ಧಿಗಳೂ ಆಗುಹೋಗುಗಳೂ ಅವನಿಗೆ ಸೇರಿದುದು. ತಡವಾಗಬಾರದು. ಈ ಕ್ಷಣ ಹೊರಡು ಎಂದ ಧರ್ಮರಾಜ.
ಅರ್ಜುನ ಸಂತೋಷದಿಂದ ಕೂಡಲೇ ಹೊರಟು ಬಂದು ಕೃಷ್ಣನನ್ನು ಕಂಡ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಹೋಗು ಫಲುಗುಣ ಕಂಸ ಮಥನನ
ಬೇಗ ಬಿಜಯಂಗೈಸಿ ತಾ ನೃಪ
ಯಾಗವಾತನ ಹೊರೆ ಮದೀಯ ಜಯಾಭಿವೃದ್ಧಿಗಳು
ಆಗುಹೋಗಾತನದು ತಟ್ಟೆಯ
ವಾಗದೀ ಕ್ಷಣವೆನಲು ಮನದನು
ರಾಗದಲಿ ಕಲಿ ಪಾರ್ಥ ಬಂದನು ಕಂಡನಚ್ಯುತನ ॥18॥
೦೧೯ ಬಿನ್ನವಿಸಿದನು ದಿಗ್ವಿಜಯ ...{Loading}...
ಬಿನ್ನವಿಸಿದನು ದಿಗ್ವಿಜಯ ಸಂ
ಪನ್ನ ವಸ್ತು ವಿಧಾನವನು ಮೇ
ಲಿನ್ನು ದೇವರು ಬಲ್ಲಿರುತ್ತರ ಕಾರ್ಯಸಂಗತಿಯ
ನಿನ್ನ ಕೃಪೆಯಲಿ ರಾಜಮಖ ನಿ
ಷ್ಪನ್ನವಾದರೆ ಬೊಪ್ಪನಿಂದ್ರನ
ಮನ್ನಣೆಯ ಮೈ ಸೋಂಕಿನೋಲಗ ಸುಲಭವಹುದೆಂದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನ ಕೃಷ್ಣನಿಗೆ ದಿಗ್ವಿಜಯವನ್ನು ಸಾಧಿಸಿ ಸಮಸ್ತ ವಸ್ತುಗಳನ್ನು ಸಂಗ್ರಹಿಸಿ ತಂದ ವಿಧಾನವನ್ನೆಲ್ಲ ವಿವರಿಸಿ “ಇನ್ನು ಮುಂದೆ
ಮಾಡಬೇಕಾದ ಕಾರ್ಯಗಳನ್ನೆಲ್ಲ ನೀನೇ ಬಲ್ಲೆ. ನಿನ್ನ ಕೃಪೆಯಿಂದ ಈ ರಾಜಸೂಯ ಯಾಗ ನೆರವೇರಿದರೆ ನಮ್ಮ ತಂದೆಗೆ ಇಂದ್ರನ ಓಲಗದಲ್ಲಿ ಅವನ ಪಕ್ಕದಲ್ಲಿ ಕುಳಿತು ಕೊಳ್ಳುವುದು ಸುಲಭವಾಗುತ್ತದೆ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಬಿನ್ನವಿಸಿದನು ದಿಗ್ವಿಜಯ ಸಂ
ಪನ್ನ ವಸ್ತು ವಿಧಾನವನು ಮೇ
ಲಿನ್ನು ದೇವರು ಬಲ್ಲಿರುತ್ತರ ಕಾರ್ಯಸಂಗತಿಯ
ನಿನ್ನ ಕೃಪೆಯಲಿ ರಾಜಮಖ ನಿ
ಷ್ಪನ್ನವಾದರೆ ಬೊಪ್ಪನಿಂದ್ರನ
ಮನ್ನಣೆಯ ಮೈ ಸೋಂಕಿನೋಲಗ ಸುಲಭವಹುದೆಂದ ॥19॥
೦೨೦ ಕರೆಸಿ ಯಾದವ ...{Loading}...
ಕರೆಸಿ ಯಾದವ ನಾಯಕರ ಸಂ
ಹರಣೆಯನು ನಿಜಪುರದ ಕಾಹಿಂ
ಗಿರಿಸಿ ಬಲದೇವಂಗೆ ನೇಮಿಸಿ ಸಕಲ ರಕ್ಷಣವ
ತರಿಸಿ ಭಂಡಾರದಲಿ ವಿವಿಧಾ
ಭರಣ ವಸನಾದಿಗಳ ಹೇರಿಸಿ
ಹರಿ ಧನಂಜಯನೊಡನೆ ಬಂದನು ಬಂಧುಜನ ಸಹಿತ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀ ಕೃಷ್ಣ ಯಾದವ ನಾಯಕರನ್ನು ಕರೆಸಿ ಅವರನ್ನು ದ್ವಾರಕೆಯ ಕಾವಲಿಗಿರಿಸಿ. ಸಕಲ ರಕ್ಷಣೆಯ ಭಾರವನ್ನೂ ಬಲದೇವನಿಗೆ
ವಹಿಸಿದ. ಭಂಡಾರದಿಂದ ಬಗೆ ಬಗೆಯ ಆಭರಣ ವಸ್ತ್ರಾದಿಗಳನ್ನು ತೆಗೆಸಿ ಬಂಡಿಗಳಲ್ಲಿ ಹೇರಿಸಿದ. ಅನಂತರ ಬಂಧುಗಳೊಡಗೊಡಿ ಅರ್ಜುನನೊಡನೆ ಬಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಕರೆಸಿ ಯಾದವ ನಾಯಕರ ಸಂ
ಹರಣೆಯನು ನಿಜಪುರದ ಕಾಹಿಂ
ಗಿರಿಸಿ ಬಲದೇವಂಗೆ ನೇಮಿಸಿ ಸಕಲ ರಕ್ಷಣವ
ತರಿಸಿ ಭಂಡಾರದಲಿ ವಿವಿಧಾ
ಭರಣ ವಸನಾದಿಗಳ ಹೇರಿಸಿ
ಹರಿ ಧನಂಜಯನೊಡನೆ ಬಂದನು ಬಂಧುಜನ ಸಹಿತ ॥20॥
೦೨೧ ಇದಿರುವನ್ದನು ಧರ್ಮಸುತ ...{Loading}...
ಇದಿರುವಂದನು ಧರ್ಮಸುತ
ಪದ ಪಯೋಜದಲೆರಗಿದನು ನಿನ
ಗಿದು ವಿನೋದವಲೇ ವಿಮುಕ್ತಗೆ ಭಕ್ತ ಸಂಸ್ಕರಣ
ಕುದಿದು ಮರುಗಿದುವರಸಿ ನಿನ್ನಯ
ಪದವ ಕಾಣದೆ ಶ್ರುತಿಗಳೆಮ್ಮಯ
ಸದನವಖಿಳಾಮ್ನಾಯ ನಿಕರವನೇಡಿಸುವುದೆಂದ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯ ಕೃಷ್ಣನನ್ನು ಎದುರುಗೊಂಡ. ಅವನ ಕಾಲಿಗೆರಗಿದ. “ಭಕ್ತರನ್ನು ಭವಸಾಗರದಿಂದ ಪಾರುಗಾಣಿಸುವುದು ವಿಮುಕ್ತನಾದ ನಿನಗೆ ವಿನೋದವಲ್ಲವೇ ? ಶ್ರುತಿಗಳು ನಿನ್ನ ಪಾದಗಳನ್ನು ಕಾಣಬೇಕೆಂದು ಹುಡುಕಿ ಕಾಣಲಾರದೆ ಮರುಗಿದುವು. ಈಗ ನಿನ್ನ ದರ್ಶನದಿಂದ ನಮ್ಮ ಮನೆ ಸಮಸ್ತ ವೇದ ಸಮುದಾಯವನ್ನು ಅಣಕಿಸುತ್ತವೆ.
ಪದಾರ್ಥ (ಕ.ಗ.ಪ)
ಅಖಿಳಾಮ್ನಾಯ- ಸಮಸ್ತ ವೇದಗಳು
ಮೂಲ ...{Loading}...
ಇದಿರುವಂದನು ಧರ್ಮಸುತ
ಪದ ಪಯೋಜದಲೆರಗಿದನು ನಿನ
ಗಿದು ವಿನೋದವಲೇ ವಿಮುಕ್ತಗೆ ಭಕ್ತ ಸಂಸ್ಕರಣ
ಕುದಿದು ಮರುಗಿದುವರಸಿ ನಿನ್ನಯ
ಪದವ ಕಾಣದೆ ಶ್ರುತಿಗಳೆಮ್ಮಯ
ಸದನವಖಿಳಾಮ್ನಾಯ ನಿಕರವನೇಡಿಸುವುದೆಂದ ॥21॥
೦೨೨ ನಗುತ ಸಾಕೇಳೆನ್ದು ...{Loading}...
ನಗುತ ಸಾಕೇಳ್ ಎಂದು ರಾಯನ
ತೆಗೆದು ತಳ್ಕಿಸಿ ಕೈಯ ತಳುಕಿನೊ
ಳಗಧರನು ನೃಪಸಭೆಗೆ ಬಿಜಯಂಗೈದನೊಲವಿನಲಿ
ಮುಗಿದ ಕರದಲಿ ವ್ಯಾಸ ಧೌಮ್ಯಾ
ದಿಗಳು ಮೈಯಿಕ್ಕಿದರಖಿಳ ಮಂ
ತ್ರಿಗಳು ಸಚಿವರು ನೆರುದುದಾಳೋಚನೆಯ ಭವನದಲಿ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನು ನಸುನಗುತ್ತ “ಸಾಕು ಏಳು” ಎಂದು ರಾಜನನ್ನು ಹಿಡಿದೆತ್ತಿ ಅವನನ್ನು ಅಪ್ಪಿಕೊಂಡು ಅವನ ಕೈ ಹಿಡಿದುಕೊಂಡೇ ರಾಜಸಭೆಗೆ ಬಿಜಯ ಮಾಡಿಸಿದ. ವ್ಯಾಸ ಧೌಮ್ಯಾಧಿಗಳೂ ಅವನಿಗೆ ಕೈಮುಗಿದು ನಮಸ್ಕರಿಸಿದರು. ಎಲ್ಲ ಮಂತ್ರಿಗಳೂ ಸಚಿವರುಗಳೂ
ಆಲೋಚನೆಯ ಸಭೆಯಲ್ಲಿ ಸೇರಿದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ನಗುತ ಸಾಕೇಳೆಂದು ರಾಯನ
ತೆಗೆದು ತಳ್ಕಿಸಿ ಕೈಯ ತಳುಕಿನೊ
ಳಗಧರನು ನೃಪಸಭೆಗೆ ಬಿಜಯಂಗೈದನೊಲವಿನಲಿ
ಮುಗಿದ ಕರದಲಿ ವ್ಯಾಸ ಧೌಮ್ಯಾ
ದಿಗಳು ಮೈಯಿಕ್ಕಿದರಖಿಳ ಮಂ
ತ್ರಿಗಳು ಸಚಿವರು ನೆರುದುದಾಳೋಚನೆಯ ಭವನದಲಿ ॥22॥
೦೨೩ ಕಳುಹಿದನು ನಾನಾ ...{Loading}...
ಕಳುಹಿದನು ನಾನಾ ನೃಪರ ಮಂ
ಡಲಕೆ ದೂತರನಖಿಳ ಋಷಿ ಸಂ
ಕುಳಕೆ ಶಿಷ್ಟರ ಪರುಠವಿಸಿದನು ಹಸ್ತಿನಾಪುರಿಗೆ
ಕಳುಹಿದನು ನಕುಲನನು ಬಳಿಕಿ
ತ್ತಲು ನೃಪಾಧ್ವರಶಾಲೆಗಲ್ಲಿಯ
ನೆಲನ ಶೋಧಿಸೆ ಕರೆಸಿದರು ಬಹುವಿಧದ ಶಿಲ್ಪಿಗರ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಂತ್ರಾಲೋಚನ ಸಭೆಯಲ್ಲಿ ತೀರ್ಮಾನಿಸಿದಂತೆ ನಾನಾ ರಾಜರನ್ನು ಆಹ್ವಾನಿಸಲು ದೂತರನ್ನು ಕಳಿಸಿದ. ಎಲ್ಲ ಋಷಿಗಳ ಬಳಿಗೆ ಶಿಷ್ಟರನ್ನು ನಿಯಮಿಸಿದ. ಹಸ್ತಿನಾಪುರಿಗೆ ದುರ್ಯೋಧನಾದಿಗಳನ್ನು ಆಹ್ವಾನಿಸಲು ನಕುಲನನ್ನು ಕಳಿಸಿದ. ಅನಂತರ ಯಜ್ಞ ಶಾಲೆಯ
ನಿರ್ಮಾಣಕ್ಕಾಗಿ ನೆಲದ ಶೋಧನೆಯನ್ನು ಮಾಡಲು ಅನೇಕ ಬಗೆಯ ಶಿಲ್ಪಿಗಳನ್ನು ಕರೆಸಿದರು.
ಪದಾರ್ಥ (ಕ.ಗ.ಪ)
ಮೂಲ ...{Loading}...
ಕಳುಹಿದನು ನಾನಾ ನೃಪರ ಮಂ
ಡಲಕೆ ದೂತರನಖಿಳ ಋಷಿ ಸಂ
ಕುಳಕೆ ಶಿಷ್ಟರ ಪರುಠವಿಸಿದನು ಹಸ್ತಿನಾಪುರಿಗೆ
ಕಳುಹಿದನು ನಕುಲನನು ಬಳಿಕಿ
ತ್ತಲು ನೃಪಾಧ್ವರಶಾಲೆಗಲ್ಲಿಯ
ನೆಲನ ಶೋಧಿಸೆ ಕರೆಸಿದರು ಬಹುವಿಧದ ಶಿಲ್ಪಿಗರ ॥23॥
೦೨೪ ಮಯನ ಮತದಲಿ ...{Loading}...
ಮಯನ ಮತದಲಿ ವಿಶ್ವಕರ್ಮನ
ನಯ ವಿವೇಕದಲಮಲ ಮಖ ಶಾ
ಲೆಯನು ನಿರ್ಮಿಸಿದರು ಸುಲಕ್ಷಣ ಶಾಸ್ತ್ರಸೂತ್ರದಲಿ
ನಿಯತ ಪತ್ನೀ ಶಾಲೆ ಜನವೇ
ದಿಯ ವರಾಂತರ್ವೇದಿ ಮಖವೇ
ದಿಯ ಬಹಿರ್ವೇದಿಗಳನಳವಡಿಸಿದರು ವಹಿಲದಲಿ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಯನ ಅಭಿಪ್ರಾಯವನ್ನು ಪಡೆದು ವಿಶ್ವಕರ್ಮನ ನಯವಿವೇಕವನ್ನೂ ಅನುಸರಿಸಿ, ಶಾಸ್ತ್ರ ಸೂತ್ರಗಳಿಗೆ ಅನುಗುಣವಾಗಿ
ಯಾಗಶಾಲೆಯನ್ನು ನಿರ್ಮಿಸಿದರು. ಪತ್ನೀಶಾಲೆ, ಜನವೇದಿ, ಅಂತರ್ವೇದಿ, ಮಖವೇದಿ ಮತ್ತು ಬಹಿರ್ವೇದಿಗಳನ್ನು ಶೀಘ್ರವಾಗಿ ಶಾಸ್ತ್ರ ಸಮ್ಮತವಾಗಿ ನಿರ್ಮಿಸಿದರು.
ಪದಾರ್ಥ (ಕ.ಗ.ಪ)
ಟಿಪ್ಪನೀ (ಕ.ಗ.ಪ)
ಅಂತರ್ವೇದಿ
ಬಹಿರ್ವೇದಿ
ಜನವೇದಿ
ಮಖವೇದಿ
ಮೂಲ ...{Loading}...
ಮಯನ ಮತದಲಿ ವಿಶ್ವಕರ್ಮನ
ನಯ ವಿವೇಕದಲಮಲ ಮಖ ಶಾ
ಲೆಯನು ನಿರ್ಮಿಸಿದರು ಸುಲಕ್ಷಣ ಶಾಸ್ತ್ರಸೂತ್ರದಲಿ
ನಿಯತ ಪತ್ನೀ ಶಾಲೆ ಜನವೇ
ದಿಯ ವರಾಂತರ್ವೇದಿ ಮಖವೇ
ದಿಯ ಬಹಿರ್ವೇದಿಗಳನಳವಡಿಸಿದರು ವಹಿಲದಲಿ ॥24॥
೦೨೫ ಬಿಗಿದ ಬಿಙ್ಗಾರಿಗಳ ...{Loading}...
ಬಿಗಿದ ಬಿಂಗಾರಿಗಳ ಮೇಲ್ಕ
ಟ್ಟುಗಳ ಮಣಿಮಯ ಸೂಸಕದ ಲೋ
ವೆಗಳ ಮುಖಮಂಟಪದ ಚೌರಿಯ ನವ ಫಲಾವಳಿಯ
ಹೊಗರ ನೀಲದ ಸರಿಯ ನೆಲಗ
ಟ್ಟುಗಳ ಚಪ್ಪರದೆಡೆಯೆಡೆಯ ಚೌ
ಕಿಗೆಯ ಚತುರಂಗದ ವಿಚಿತ್ರದ ರಚನೆ ಚೆಲುವಾಯ್ತು ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಂಗಾರದ ಮೇಲ್ಕಟ್ಟುಗಳನ್ನು ಕಟ್ಟಿದರು. ಲೋವೆಗಳಿಗೆಲ್ಲ ಮಣಿಮಯ ಕುಚ್ಚುಗಳನ್ನು ಕಟ್ಟಿದರು. ಮುಖಮಂಟಪಕ್ಕೆ ಚೌರಿಗಳನ್ನು
ನವಫಲಾವಳಿಯನ್ನು ತೂಗುಬಿಟ್ಟರು. ನೀಲದ ಕಾಂತಿಯನ್ನು ಹೊರ ಚೆಲ್ಲುತ್ತಿದ್ದ ನೆಲಗಟ್ಟುಗಳನ್ನು ಅಳವಡಿಸಿದರು. ಚಪ್ಪರದಲ್ಲಿ
ಅಲ್ಲಲ್ಲಿ ಚೌತಿಗೆಯನ್ನು ರಚಿಸಿದರು. ಚಿತ್ರವಿಚಿತ್ರದ ರಚನೆಗಳಿಂದ ಯಜ್ಞಶಾಲೆ ತುಂಬ ಸುಂದರವಾಯಿತು.
ಪದಾರ್ಥ (ಕ.ಗ.ಪ)
ಸೂಸಕ-ಕುಚ್ಚು, ಬಿಂಗಾರಿ-ಚಿನ್ನ
ಚೌತಿಗೆ -ಚೌಕಟ್ಟು
ಲೋವೆ - ಛಾವಣಿಯ ಚೌಕಟ್ಟು
ಮೂಲ ...{Loading}...
ಬಿಗಿದ ಬಿಂಗಾರಿಗಳ ಮೇಲ್ಕ
ಟ್ಟುಗಳ ಮಣಿಮಯ ಸೂಸಕದ ಲೋ
ವೆಗಳ ಮುಖಮಂಟಪದ ಚೌರಿಯ ನವ ಫಲಾವಳಿಯ
ಹೊಗರ ನೀಲದ ಸರಿಯ ನೆಲಗ
ಟ್ಟುಗಳ ಚಪ್ಪರದೆಡೆಯೆಡೆಯ ಚೌ
ಕಿಗೆಯ ಚತುರಂಗದ ವಿಚಿತ್ರದ ರಚನೆ ಚೆಲುವಾಯ್ತು ॥25॥
೦೨೬ ಪುರದ ಹೊರವಳಯದಲಿ ...{Loading}...
ಪುರದ ಹೊರವಳಯದಲಿ ಯಮುನಾ
ವರನದಿಯ ತೀರದಲಿ ಧರಣೀ
ಶ್ವರರಿಗರಮನೆ ಮಾಡಿದರು ನವ ರತುನಮಯವಾಗಿ
ಸುರಪುರದ ಮಾರಾಂಕ ಭುಜಗೇ
ಶ್ವರನ ಭೋಗಾವತಿಯ ಶಿಲ್ಪದ
ಗುರುವೆನಿಸಿತೀ ನಗರ ನಾರಾಯಣನ ಕರುಣದಲಿ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಟ್ಟಣದ ಹೊರಭಾಗದಲ್ಲಿ, ಯಮುನಾ ನದಿಯ ತೀರದಲ್ಲಿ ರಾಜರುಗಳಿಗೆಲ್ಲ ನವರತ್ನಮಯವಾದ ಅರಮನೆಗಳನ್ನು ನಿರ್ಮಿಸಿದರು. ಈ ಹೊಸನಗರ ದೇವೆಂದ್ರನ ನಗರಿಯ ಪ್ರತಿರೂಪದಂತೆ ಭುಜಗೇಶ್ವರನ ಭೋಗಾವತಿಯ ಶಿಲ್ಪಕ್ಕೆ ಇದು ಮಾದರಿಯಾಯಿತು. ಇಷ್ಟೆಲ್ಲ ಆದದ್ದು ಶ್ರೀಕೃಷ್ಣ ಕರುಣೆಯಿಂದ.
ಪದಾರ್ಥ (ಕ.ಗ.ಪ)
ಮೂಲ ...{Loading}...
ಪುರದ ಹೊರವಳಯದಲಿ ಯಮುನಾ
ವರನದಿಯ ತೀರದಲಿ ಧರಣೀ
ಶ್ವರರಿಗರಮನೆ ಮಾಡಿದರು ನವ ರತುನಮಯವಾಗಿ
ಸುರಪುರದ ಮಾರಾಂಕ ಭುಜಗೇ
ಶ್ವರನ ಭೋಗಾವತಿಯ ಶಿಲ್ಪದ
ಗುರುವೆನಿಸಿತೀ ನಗರ ನಾರಾಯಣನ ಕರುಣದಲಿ ॥26॥