೦೦೦ ಸೂಚನೆ ಸಭೆಯೊಳೋಲಗದೊಳು ...{Loading}...
ಸೂಚನೆ : ಸಭೆಯೊಳೋಲಗದೊಳು ವಿರಿಂಚಿ
ಪ್ರಭವನನುಮತದಿಂದ ಧರಣೀ
ವಿಭು ಮಹಾಕ್ರತು ರಾಜಸೂಯವನೊಲಿದು ಕೈಕೊಂಡ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂ : ಆಸ್ಥಾನದಲ್ಲಿ ಓಲಗವನ್ನು ಕೊಟ್ಟಿದ್ದ ಧರ್ಮರಾಜ ನಾರದನ ಅಭಿಪ್ರಾಯದಂತೆ ಮಹಾಯಾಗವೆನಿಸಿದ ರಾಜಸೂಯಯಾಗವನ್ನು ಕೈಕೊಳ್ಳುವುದಾಗಿ ಸಂತೋಷದಿಂದ ಒಪ್ಪಿದ.
ಪದಾರ್ಥ (ಕ.ಗ.ಪ)
ಓಲಗ ರಾಜನ ಸಭೆ, ದರ್ಬಾರು,
ವಿರಿಂಚಿ-ಬ್ರಹ್ಮ,
ವಿರಿಂಚಿಪ್ರಭವ-ಬ್ರಹ್ಮನ ಮಾನಸಪುತ್ರ, ನಾರದ,
ಅನುಮತ-ಅಭಿಪ್ರಾಯ, ಅಪೇಕ್ಷೆ, ಸಮ್ಮತಿ,
ಧರಣೀ-ಭೂಮಿ, ರಾಜ್ಯ,
ಧರಣೀವಿಭು-ರಾಜ, ಯುಧಿಷ್ಠಿರ,
ವಿಭು-ಒಡೆಯ, ಕ್ರತು-ಯಾಗ,
ಮಹಾಕ್ರತು-ಭಾರೀಯಾಗ,
ಕೈಕೊಂಡ-ಸ್ವೀಕರಿಸಿದ
ಮೂಲ ...{Loading}...
ಸೂಚನೆ : ಸಭೆಯೊಳೋಲಗದೊಳು ವಿರಿಂಚಿ
ಪ್ರಭವನನುಮತದಿಂದ ಧರಣೀ
ವಿಭು ಮಹಾಕ್ರತು ರಾಜಸೂಯವನೊಲಿದು ಕೈಕೊಂಡ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಖಾಂಡವವನದ ವಹ್ನಿ
ಜ್ವಾಲೆ ತೆಗೆದುದು ಕೂಡೆ ಹೊಗೆದುದು ಹೊದರ ಹೊಸಮೆಳೆಯ
ಮೇಲುಗಾಳಗದುಬ್ಬಿನಲಿ ಸಿರಿ
ಲೋಲ ಸಹಿತ¯ರ್ಜುನನು ವಿಕ್ರಮ
ದೇಳಿಗೆಯ ಪರಿತೋಷದಲಿ ತಿರುಗಿದನು ಪಟ್ಟಣಕೆ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ರಾಜನೇ ಕೇಳು, ಖಾಂಡವನದ ಬೆಂಕಿಯ ಜ್ವಾಲೆ ಪೊದೆಮೆಳೆಗಳನ್ನೆಲ್ಲ ಸುಟ್ಟು ಹೊಗೆಯಾಡಿ ಅಡಗಿತು. ಕಾಳಗದಲ್ಲಿ ಜಯಗಳಿಸಿ ಸಂತೋಷದಿಂದ ಉಬ್ಬಿದವನಾಗಿ ಅರ್ಜುನನು ಪರಾಕ್ರಮದ ಅತಿಶಯತೆಯಿಂದ ಹರ್ಷಗೊಂಡವನಾಗಿ ಶ್ರೀಕೃಷ್ಣನೊಡನೆ ನಗರಕ್ಕೆ ಹಿಂತಿರುಗಿದ.
ಪದಾರ್ಥ (ಕ.ಗ.ಪ)
ವಹ್ನಿ-ಬೆಂಕಿ, ಹೊದರು-ಪೊದೆ, ಪರಿತೋಷ-ಸಂತೋಷ, ಧರಿತ್ರೀ-ಭೂಮಿ, ತೆಗೆದುದು-ವ್ಯಾಪಿಸಿತು, ಕೂಡೆ-ಕೂಡಲೇ, ಒಮ್ಮೆಲೆ,
ಹೊಗೆದುದು-ಹೊಗೆ ತುಂಬಿತು, ಮೇಲುಗಾಳಗದ-ಯುದ್ಧದಲ್ಲಿ ಗೆದ್ದ ಸಂತೋಷದಲ್ಲಿ, ಸಿರಿಲೋಲ-ಲಕ್ಷ್ಮಿಗೆ ಪ್ರಿಯ, ವಿಷ್ಣು, ಕೃಷ್ಣ, ವಿಕ್ರಮದ ಏಳಿಗೆಯ-ಪರಾಕ್ರಮದ ಅತಿಶಯತೆಯ, ಪರಿತೋಷ-ಸಂತೋಷ
ಟಿಪ್ಪನೀ (ಕ.ಗ.ಪ)
ಖಾಂಡವವನ-ಕುರುಕ್ಷೇತ್ರದಲ್ಲಿದ್ದ ಒಂದು ಕಾಡು. ಅರ್ಜುನ ಮತ್ತು ಕೃಷ್ಣರ ಸಹಾಯದಿಂದ ಅಗ್ನಿ ಅದನ್ನು ಸುಟ್ಟು ಹಾಕಿದ.
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಖಾಂಡವವನದ ವಹ್ನಿ
ಜ್ವಾಲೆ ತೆಗೆದುದು ಕೂಡೆ ಹೊಗೆದುದು ಹೊದರ ಹೊಸಮೆಳೆಯ
ಮೇಲುಗಾಳಗದುಬ್ಬಿನಲಿ ಸಿರಿ
ಲೋಲ ಸಹಿತ¯ರ್ಜುನನು ವಿಕ್ರಮ
ದೇಳಿಗೆಯ ಪರಿತೋಷದಲಿ ತಿರುಗಿದನು ಪಟ್ಟಣಕೆ ॥1॥
೦೦೨ ದೂತರೈದಿದರಿವರ ಸೂರೆಯ ...{Loading}...
ದೂತರೈದಿದರಿವರ ಸೂರೆಯ
ಕೈತವಕಿಗರು ಕೃತಕ ವಾರ್ತಾ
ಭೀತಪುರಜನ ಮುಖದ ದುಗುಡದ ದಡ್ಡಿಗಳನುಗಿದು
ಬೀತುದಿಂದ್ರನ ಬಲುಹು ವಿಗಡನ
ವೀತಿಹೋತ್ರನ ವಿಲಗ ತಿದ್ದಿ ವಿ
ಧೂತರಿಪುಬಲ ಬಂದನಿದೆಯೆಂದರು ಮಹೀಪತಿಗೆ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಜನಿಗೆ ಅರ್ಜುನನ ಆಗಮನದ ಸುದ್ದಿಯನ್ನು ಮುಟ್ಟಿಸಲು ದೂತರು ಸಡಗರದಿಂದ ಹೊರಟರು. ವದಂತಿಗಳನ್ನು ಕೇಳಿ ಭೀತಿಗೊಂಡು ಮುಖದಲ್ಲಿ ದುಃಖವನ್ನು ಹೊರಸೂಸುತ್ತಿದ್ದ ಪುರಜನರ ದುಃಖದ ಪರದೆಯನ್ನು ಕಿತ್ತು ಹಾಕಿದರು. ಧರ್ಮರಾಜನ ಬಳಿಗೆ ಬಂದು ಇಂದ್ರನ ಶಕ್ತಿ ಅಡಗಿತು, ಪ್ರಚಂಡವಾದ ಅಗ್ನಿಗೆ ಒದಗಿದ್ದ ತೊಂದರೆ ಪರಿಹಾರವಾಯಿತು. ಶತ್ರು ಬಲವನ್ನು ಕೊಡವಿಹಾಕುವಂತಹ ಅರ್ಜುನನು ಇಗೋ ಬರುತ್ತಿದ್ದಾನೆ ಎಂದು ವರದಿ ಮಾಡಿದರು.
ಪದಾರ್ಥ (ಕ.ಗ.ಪ)
ದುಗುಡ-ದುಃಖ, ದಡ್ಡಿ-ಪರದೆ, ಬೀತುದು-ಕಳೆಯಿತು, ವಿಗಡ-ಶೂರ, ವೀತಿಹೋತ್ರ-ಅಗ್ನಿ, ವಿಲಗ-ತೊಂದರೆ, ಕಷ್ಟ, ದೂತರು-ಸೇವಕರು, ಎಯ್ದಿದರು-ಬಂದರು, ಸೂರೆಯ ಕೈತವಕಿಗಳು-?, ಕೃತಕವಾರ್ತಾಭೀತಪುರಜನ-ಸುಳ್ಳುವದಂತಿ ಕೇಳಿ, ಭಯದಿಂದ ಕೂಡಿದ ಪುರದ ಜನರ, ಬಲುಹ-ಶಕ್ತಿ, ತಿದ್ದಿ-ಪರಿಹಾರವಾಗಿ, ವಿಧೂತರಿಪುಬಲ-ಶತ್ರು ಸೈನ್ಯವನ್ನು ಒದರಿಹಾಕಿದವನು, ಅರ್ಜುನ
ಮೂಲ ...{Loading}...
ದೂತರೈದಿದರಿವರ ಸೂರೆಯ
ಕೈತವಕಿಗರು ಕೃತಕ ವಾರ್ತಾ
ಭೀತಪುರಜನ ಮುಖದ ದುಗುಡದ ದಡ್ಡಿಗಳನುಗಿದು
ಬೀತುದಿಂದ್ರನ ಬಲುಹು ವಿಗಡನ
ವೀತಿಹೋತ್ರನ ವಿಲಗ ತಿದ್ದಿ ವಿ
ಧೂತರಿಪುಬಲ ಬಂದನಿದೆಯೆಂದರು ಮಹೀಪತಿಗೆ ॥2॥
೦೦೩ ಹೂತುದರಸನ ಹರುಷಲತೆ ...{Loading}...
ಹೂತುದರಸನ ಹರುಷಲತೆ ಪುರು
ಹೂತ ವಿಜಯದ ವಿಜಯ ವಾರ್ತಾ
ಶ್ರೋತ್ರ ಸುಖಸಂಪ್ರೀತಿ ನಯನ ಜಲಾಭಿಷೇಕದಲಿ
ಮಾತು ಹಿಂಚಿತು ಮುಂಚಿದುದು ನಯ
ನಾತಿಥಿವ್ರಜ ಮುಸುಕಿತಸುರ ವಿ
ಘಾತಿ ಪಾರ್ಥನನನಿಲಸುತ ನಕುಲಾದಿ ಬಾಂಧವರ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಇಂದ್ರನನ್ನು ಜಯಿಸಿದ ವಿಜಯ ವಾರ್ತೆ ಕಿವಿಗೆ ಬಿದ್ದು ಸಂತೋಷದಿಂದ ಉಕ್ಕಿದ ಕಣ್ಣೀರಿನಿಂದ ತಣಿದ ಧರ್ಮರಾಜನ ಹರ್ಷದ ಬಳ್ಳಿ ಹೂ ಬಿಟ್ಟಿತು. ಕೃಷ್ಣಾರ್ಜುನರ ಆಗಮನ ವಾರ್ತೆಯನ್ನು ಕೇಳಿದ ಕೂಡಲೇ ಭೀಮ, ನಕುಲ, ಸಹದೇವಾದಿ ಬಾಂಧವರ ಮಾತು ಹಿಂದಾಗಿ ಅವರ ಕಣ್ಣುಗಳು ಈ ಅತಿಥಿಗಳನ್ನು ಮುಸುಕಿದವು.
ಪದಾರ್ಥ (ಕ.ಗ.ಪ)
ಪುರುಹೂತ-ಇಂದ್ರ, ಹೂತುದು-ಹೂಬಿಟ್ಟಿತು, ಹರುಷಲತೆ-ಹರ್ಷವೆಂಬ ಬಳ್ಳಿ, ಹಿಂಚು-ಹಿಂದೆ ಬೀಳು, ಮುಂಚು-ಮುಂದಾಗು, ನಯನಜಲ-ಕಣ್ಣೀರು, ವ್ರಜ-ಸಮೂಹ, ಅಸುರ-ರಾಕ್ಷಸ, ಅಸುರವಿಘಾತಿ-ರಾಕ್ಷಸರನ್ನು ನಾಶಮಾಡಿದವನು, ಕೃಷ್ಣ, ಅನಿಲಸುತ-ವಾಯುಪುತ್ರ, ಭೀಮ
ಮೂಲ ...{Loading}...
ಹೂತುದರಸನ ಹರುಷಲತೆ ಪುರು
ಹೂತ ವಿಜಯದ ವಿಜಯ ವಾರ್ತಾ
ಶ್ರೋತ್ರ ಸುಖಸಂಪ್ರೀತಿ ನಯನ ಜಲಾಭಿಷೇಕದಲಿ
ಮಾತು ಹಿಂಚಿತು ಮುಂಚಿದುದು ನಯ
ನಾತಿಥಿವ್ರಜ ಮುಸುಕಿತಸುರ ವಿ
ಘಾತಿ ಪಾರ್ಥನನನಿಲಸುತ ನಕುಲಾದಿ ಬಾಂಧವರ ॥3॥
೦೦೪ ತಳಿತ ಗುಡಿಗಳು ...{Loading}...
ತಳಿತ ಗುಡಿಗಳು ಸಾಲ ಕಲಶದ
ನಿಳಯ ನಿಳಯದ ಬೀದಿ ಬೀದಿಯ
ತಳಿರದೋರಣದೋರಣವ ನವ ಮಕರತೋರಣದ
ತಳಿಗೆ ತಂಬುಲದಾರತಿಯ ಮಂ
ಗಳಿತ ರಭಸದೊಳಖಿಳ ರಾಜಾ
ವಳಿಗಳೊಸಗೆಯೊಳಿವರು ಹೊಕ್ಕರು ರಾಜಮಂದಿರವ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮನೆಗಳ ಮುಂದೆ ಧ್ವಜ್ವಗಳು ಅರಳಿವೆ. ಮನೆಮನೆಗಳ ಮುಂದೆ ಕರಕಲಶಗಳನ್ನಿಟ್ಟುಕೊಂಡಿದ್ದಾರೆ. ಬೀದಿ ಬೀದಿಗಳಲ್ಲಿ ಒಪ್ಪವಾಗಿ ತಳಿರು ತೋರಣವನ್ನು ಕಟ್ಟಿದ್ದಾರೆ. ತಳಿಗೆಗಳಲ್ಲಿ ಮಂಗಳದ ಆರತಿಯನ್ನು ಸಿದ್ಧಪಡಿಸಿಟ್ಟುಕೊಂಡಿದ್ದಾರೆ. ಹೀಗೆ ತಮ್ಮನ್ನು ಸಮಸ್ತ ರಾಜರು ಸ್ವಾಗತಿಸುತ್ತಿರಲು ಸಂಭ್ರಮದಿಂದ ಕೃಷ್ಣಾರ್ಜುನರು ಅರಮನೆಯನ್ನು ಪ್ರವೇಶಿಸಿದರು.
ಪದಾರ್ಥ (ಕ.ಗ.ಪ)
ಗುಡಿ-ಧ್ವಜ, ತಳಿತ-ಹರಡಿದ
ತಳಿರುದೋರಣ-ಚಿಗುರುಗಳ ತೋರಣ, ಮಕರತೋರಣ-ಮೀನು ಮೊಸಳೆಯ ಆಕಾರದ ತೋರಣ.
ಓರಣ-ಸಾಲು, ಪಂಕ್ತಿ,
ತಳಿಗೆ-ತಟ್ಟೆ, ತಳಿಗೆ
ತಂಬುಲದಾರತಿಯ-ಅಡಕೆ ಸಹಿತವಾದ ಆರತಿ , ಅಖಿಳ ರಾಜಾವಳಿಗಳ-ಸಮಸ್ತರಾಜರ, ಒಸಗೆ-ಸಂತೋಷ
ಮೂಲ ...{Loading}...
ತಳಿತ ಗುಡಿಗಳು ಸಾಲ ಕಲಶದ
ನಿಳಯ ನಿಳಯದ ಬೀದಿ ಬೀದಿಯ
ತಳಿರದೋರಣದೋರಣವ ನವ ಮಕರತೋರಣದ
ತಳಿಗೆ ತಂಬುಲದಾರತಿಯ ಮಂ
ಗಳಿತ ರಭಸದೊಳಖಿಳ ರಾಜಾ
ವಳಿಗಳೊಸಗೆಯೊಳಿವರು ಹೊಕ್ಕರು ರಾಜಮಂದಿರವ ॥4॥
೦೦೫ ಹಿರಿಯರಙ್ಘ್ರಿದ್ವಯಕೆ ...{Loading}...
ಹಿರಿಯರಂಘ್ರಿದ್ವಯಕೆ ಮಣಿದರು
ಕಿರಿಯರುಚಿತ ಕ್ಷೇಮ ಕುಶಲದಿ
ಪರಿರಚಿತ ಪರಿರಂಭ ಮಧುರವಚೋವಿಳಾಸದಲಿ
ಅರಸನಿವರನು ಮನ್ನಿಸಿದನಾ
ದರಿಸಿತನ್ಯೋನ್ಯಾನುರಾಗ
ಸ್ಫುರಿತ ತೇಜೋಭಾವ ವಿಭ್ರಮ ಭೂಪತಿವ್ರಾತ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣಾರ್ಜುನರು ಹಿರಿಯರ ಪದಗಳಿಗೆ ನಮಸ್ಕರಿಸಿದರು. ಕಿರಿಯರನ್ನು ಅಪ್ಪಿಕೊಂಡು ಕ್ಷೇಮಸಮಾಚಾರವನ್ನು ಕೇಳಿದರು. ಸಂತೋಷದ ನುಡಿಗಳಿಂದ ಧರ್ಮರಾಜ ಅವರನ್ನು ಗೌರವಿಸಿದ. ಅಲ್ಲಿ ನೆರೆದಿದ್ದ ರಾಜರುಗಳ ಸಮೂಹ ಸಂತೋಷ ಸಂಭ್ರಮಗಳಿಂದ ಅವರನ್ನು ಆದರಿಸಿದರು.
ಪದಾರ್ಥ (ಕ.ಗ.ಪ)
ಅಂಘ್ರಿ-ಪಾದ, ಅಂಘ್ರಿದ್ವಯಕೆ-ಎರಡೂ ಕಾಲುಗಳಗೆ, ಮಣಿ-ತಲೆಬಾಗು, ನಮಸ್ಕರಿಸು, ಪರಿರಚಿತ-ರಚಿಸಿದ, ಮಾಡಿದ, ಪರಿರಂಭ-ಅಪ್ಪುಗೆ, ಆಲಿಂಗನ, ಸ್ಫುರಿತ-ಹೊಮ್ಮಿದ, ವಿಭ್ರಮ-ಬೆಡಗು, ವ್ರಾತ-ಸಮೂಹ, ಭೂಪತಿವ್ರಾತ-ರಾಜರ ಸಮೂಹ
ಮೂಲ ...{Loading}...
ಹಿರಿಯರಂಘ್ರಿದ್ವಯಕೆ ಮಣಿದರು
ಕಿರಿಯರುಚಿತ ಕ್ಷೇಮ ಕುಶಲದಿ
ಪರಿರಚಿತ ಪರಿರಂಭ ಮಧುರವಚೋವಿಳಾಸದಲಿ
ಅರಸನಿವರನು ಮನ್ನಿಸಿದನಾ
ದರಿಸಿತನ್ಯೋನ್ಯಾನುರಾಗ
ಸ್ಫುರಿತ ತೇಜೋಭಾವ ವಿಭ್ರಮ ಭೂಪತಿವ್ರಾತ ॥5॥
೦೦೬ ಅರಸ ಕೇಳೈ ...{Loading}...
ಅರಸ ಕೇಳೈ ಬಳಿಕ ಹರಿ ನಿಜ
ಪುರಕೆ ಬಿಜಯಂಗೆಯ್ವ ವಾರ್ತೆಯ
ನೊರೆದನವನೀಪತಿಗೆ ಭೀಮ ಧನಂಜಯಾದ್ಯರಿಗೆ
ಅರಸಿಯರಿಗಭಿಮನ್ಯು ಧರ್ಮಜ
ನರ ವೃಕೋದರಸೂನು ಮೊದಲಾ
ಗಿರೆ ಸಮಸ್ತಜನಂಗಳನು ಮನ್ನಿಸಿದನುಚಿತದಲಿ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀ ಕೃಷ್ಣನು ತಾನು ತನ್ನ ಊರಿಗೆ ಹಿಂತಿರುಗಬೇಕೆಂಬ ವಾರ್ತೆಯನ್ನು ಧರ್ಮರಾಯ, ಭೀಮ, ಅರ್ಜುನ ಮೊದಲಾದವರಿಗೆ ತಿಳಿಸಿದ. ಎಲ್ಲ ರಾಣಿಯರು, ಅಭಿಮನ್ಯು, ಧರ್ಮಜ, ಅರ್ಜುನ, ಭೀಮನ ಮಕ್ಕಳು ಮೊದಲಾಗಿ ಸಮಸ್ತರನ್ನೂ ಕಂಡು ಯಥೋಚಿತವಾಗಿ ಗೌರವಿಸಿದ.
ಪದಾರ್ಥ (ಕ.ಗ.ಪ)
ಹರಿ-ಕೃಷ್ಣ, ಬಿಜಯಂಗೆಯ್-ದಯಮಾಡಿಸು, ಒರೆದನು-ಹೇಳಿದನು, ಅವನಿ-ಭೂಮಿ, ಅವನೀಪತಿ-ರಾಜ, ಧರ್ಮರಾಯ, ಧನಂಜಯ-ಅರ್ಜುನ, ನರ-ಅರ್ಜುನ, ವೃಕೋದರ-ಭೀಮ, ವೃಕೋದರಸೂನು-ಭೀಮನ ಮಗ, ಘಟೋತ್ಕಚ, ಮನ್ನಿಸು-ಗೌರವಿಸು
ಟಿಪ್ಪನೀ (ಕ.ಗ.ಪ)
“ಭೀಮ - ಗಾತ್ರಕ್ಕೆ ತೂಕಕ್ಕೆ ಮಹತ್ಕಾರ್ಯಕ್ಕೆ ಈಗಲೂ ನಾವು ಬಳಸುವ ಮತ್ತೊಂದು ಹೆಸರೆಂದರೆ ‘ಭೀಮ’. ತೀವ್ರಗಾಮಿತನ, ಬಲಿಷ್ಠತೆ, ಮುನ್ನುಗ್ಗುವಿಕೆ, ಬಾಹುಬಲ ಪ್ರದರ್ಶನಗಳಲ್ಲಿ ಅವನನ್ನು ಮೀರಿಸಿದವರಿಲ್ಲ. ವಿರಾಟಪರ್ವದಲ್ಲಿ ಭೀಮನು ರಾಜರ ವಿನೋದಕ್ಕಾಗಿ ಕುಸ್ತಿಯನ್ನೂ ಸಿಂಹ, ಹುಲಿ ಆನೆಗಳೊಂದಿಗೆ ಯುದ್ಧವನ್ನೂ ಮಾಡುತ್ತಿದ್ದನೆಂದು ಹೇಳಲಾಗಿದೆ. ಹತ್ತುಸಾವಿರ ಆನೆಗಳ ಬಲ ಈಗನಿಗಿತ್ತೆಂದು ವ್ಯಾಸರು ಹೇಳುತ್ತಾರೆ. ಕೌರವರು ಇವನಿಗೆ ವಿಷಯ ಲಡ್ಡುಗೆಗಳನ್ನು ತಿನ್ನಿಸಿದರು. ಆದರೆ ಇವನಿಗೆ ಏನೂ ಆಗಲಿಲ್ಲ. ವಿಷಯ ಹಾವುಗಳಿಂದ ಕಚ್ಚಿಸಿದರು. ಏನೂ ಆಗಲಿಲ್ಲ. ಮೈ ಕಟ್ಟಿಹಾಕಿ ಬಂಡೆ ಹೇರಿ ನೀರಲ್ಲಿ ಮುಳುಗಿಸಿದರು. ನೀರನ ತಳದಲ್ಲಿ ವಿಷದ ಹಾವುಗಳು ಕಚ್ಚಿ ಮುಂದೆ ಇವನಿಗೆ ವಿಷದಿಂದ ಏನೂ ಆಪಾಯವಾಗದಂತೆ ಮಾಡಿದುವಂತೆ. ಅರಗಿನ ಮನೆಯಿಂದ ಹೊರಟಾಗ ಕುಂತೀಸಮೇ ಅಣ್ಣತಮ್ಮಂದಿರೆಲ್ಲ ಹೊತ್ತುಕೊಂಡೇ ಕಾಡಿನಲ್ಲಿ ನಡೆದವನು ಈತ. ವಾಯುಪುತ್ರನಾದ ಹನುಮಂತ, ಸರ್ಪರೂಪದ ನಹುಷ ಮತ್ತು ಯಕ್ಷರೂಪದ ಯಮಧರ್ಮರಾಯ ಇವರನ್ನು ಬಿಟ್ಟರೆ ಬೇರೆಯವರಿಂದ ಸೋಲು ಕಂಡವನಲ್ಲ. ಜರಾಸಂಧನನ್ನೇ ಮಲ್ಲಯುದ್ಧದಲ್ಲಿ ಮುಗಿಸಿದ ವೀರ ಇವನು. ಅಕ್ಷರಶಃ ಸಿಂಹಬಲ ಎನ್ನಿಸಿಕೊಂಡಿದ್ದ ಕೀಚಕನನ್ನು ಗುರುತೇ ಸಿಗದಂತೆ ಹೊಸಕಿ ಹಾಕಿದ್ದ. ಹಿಡಿಂಬ, ಮಣಿಮಂತ, ಕಿಮೀರ, ಬಕಾದಿಗಳನ್ನು ಲೀಲಾಜಾಲವಾಗಿ ಕೊಂದವನು.
ಹಾಗೆಂದು ಹೃದಯಭಾಗ ಅವನಿU್ಪರಿವಿರಲಿಲ್ಲವೆಂದಲ್ಲ. ಕುಂತಿಯು ಹಿಡಿಂಬವನದಲ್ಲಿ ನಿದ್ದೆ ಮಾಡುತ್ತಿದ್ದಾಗ ಅವಳ ಇಂದಿನ ಸ್ಥಿತಿ ನೆನೆದು ಭೀಮನು ಕಣ್ಣೀರು ಹಾಕಿದಾಗಿನ ಅವನ ಹೆಂಗರುಳನ್ನು ನೋಡಬೇಕು. ದ್ರೌಪದಿ ಬಯಸಿದರೆ ಸಾಕು ಸೌಗಂಧಿಕ ಪುಷ್ಪವನ್ನೂ ತಂದುಬಿಟ್ಟ. ಇನ್ನೊಮ್ಮೆ ಅವಳ ಬಯಕೆಯಂತೆ ಯಕ್ಷಲೋಕದ ಒಂದು ಸುಗಂಧ ಪುಷ್ಪತರುವ ಮೊದಲು ಅವನು ಮಣಿಮಂತನೆಂಬ ಕುಬೇರ ಸಖನಾದ ರಾಕ್ಷಸನನ್ನು ಕೊಲ್ಲಬೇಕಾಯಿತು. ಕೀಚಕನಿಂದ ಭಂಗಿತಳಾದ ದ್ರೌಪದಿಯ ಕಥನವನ್ನು ಕೇಳಿ ಅವನು ಎಂಥ ಆವೇಶ ಪರವಶನಾದನೆಂಬುದನ್ನು ನೋಡಬೇಕು.
ಹಾರ್ದಿಕವಾದ ಇನ್ನೊಂದು ಸಂಗತಿಯಿದೆ. ಅವನಿಗಿದ್ದ ಕೃಷ್ಣಭಕ್ತಿ. ಅದಕ್ಕೆ ತನ್ನದೇ ಆದ ವಿಶಿಷ್ಟ ಧಾಟಿಯಿದೆ. ಅವನ ನೋಟ ಮತ್ತು ಮಾತಕಥೆ ಸ್ವಲ್ಪ ವಿಚಿತ್ರವೆನ್ನಿಸಿದರೂ ಮನಸ್ಸು ನಿಷ್ಕಲ್ಮಷದ್ದು. ಕರ್ಣನಿಂದ ಯುದ್ಧಭೂಮಿಯಲ್ಲಿ ಅಣ್ಣ ಧರ್ಮರಾಯನಿಗೆ ಪೆಟ್ಟುಬಿದ್ದಿತೆಂಬ ಸುದ್ದಿ ಕೇಳಿದಾಗ ಭೀಮನ ಸಂಕಟ ಹೇಳತೀರದು.
ಭೀಮನದು ನಿರ್ಭಯದ ಚಿತ್ತ. ಅಶ್ವತ್ಥಾಮ ಪ್ರಯೋಗಿಸಿದ ನಾರಾಯಣಾಸ್ತ್ರವನ್ನು ಕಂಡು ಭೀಮನು ಸ್ವಲ್ಪವೂ ಹೆದರದೆ ಎದುರಿಸಲು ಹೊರಟಿದ್ದ. ಅರ್ಜುನ, ಧರ್ಮರಾಯ ಮೊದಲುಗೊಂಡು ಸಮಸ್ತ ಸೈನಿಕರೂ ಕೃಷ್ಣನ ಸಲಹೆಯಂತೆ ಆ ನಾರಾಯಣಾಸ್ತ್ರಕ್ಕೆ ನಮಸ್ಕರಿಸಿ ಪಾರಾಗಿದ್ದರು. ಆದರೆ ಭೀಮ ಹೆದರದೆ ನಿಂತಿದ್ದ. ಅವನು ಕಾಡಿನಲ್ಲಿ ಹೋಗುತ್ತಿದ್ದರೆ ಮರಗಿಡಗಳಿರಲಿ, ಬೆಟ್ಟಗುಡ್ಡಗಳೂ ನಡುಗುತ್ತಿದ್ದುವಂತೆ. ಮಹಾಭಾರತ ಯುದ್ಧದಲ್ಲಿ ಅವನು ಕೊಂದು ಆಕಾಶಕ್ಕೆ ಎಸೆದ ಆನೆಗಳು ಇಂದಿಗೂ ಆಕಾಶದಿಂದ ಕೆಳಕ್ಕೆ ಬೀಳುತ್ತಿವೆ ಎಂದು ಪಂಪ ಹೇಳುತ್ತಾನೆ. ಅವನಿಗೆ ಬಿಲ್ಲುಬಾಣ ಮುದ್ಗರ ಕತ್ತಿ ಮೊದಲಾದ ಎಲ್ಲ ಶಸ್ತ್ರಾಸ್ತ್ರಗಳು ತಿಳಿದಿದ್ದುವು. ಆದರೆ ಗಧಾಯುದ್ದ ಮಲ್ಲಯುದ್ಧಗಳೆಂದರೆ ಅವನಿಗೆ ತುಂಬ ಇಷ್ಟ. ರಾಕ್ಷಸರುಗಳೊಡನೆ ಜರಾಸಂಧನೊಡನೆ ಮಣಿಮಂತ ಹಿಡಿಂಬರೊಡನೆ ಮರದಕೊಂಬೆ, ಮುಷ್ಟಿಗಳಿಂದ ಹೋರಾಡಿ ಜಯಗಳಿಸುತ್ತಾನೆ.
ಇಂಥ ಅದ್ಭುತ ದೇಹಶಕ್ತಿ ಸಂಕಲ್ಪಶಕ್ತಿಗಳಿದ್ದೂ ಅಣ್ಣ ಧರ್ಮರಾಯನು ಹಾಕಿದ ನೀತಿಯ ಗೆರೆಯನ್ನು ದಾಟಲಾರೆನೆಂದು ಹೇಳುವ ಭೀಮನ ವ್ಯಕ್ತಿತ್ವವು ಮಹಾಭಾರತದಲ್ಲೇ ವಿಶಿಷ್ಟವಾದದ್ದು.
ಮೂಲ ...{Loading}...
ಅರಸ ಕೇಳೈ ಬಳಿಕ ಹರಿ ನಿಜ
ಪುರಕೆ ಬಿಜಯಂಗೆಯ್ವ ವಾರ್ತೆಯ
ನೊರೆದನವನೀಪತಿಗೆ ಭೀಮ ಧನಂಜಯಾದ್ಯರಿಗೆ
ಅರಸಿಯರಿಗಭಿಮನ್ಯು ಧರ್ಮಜ
ನರ ವೃಕೋದರಸೂನು ಮೊದಲಾ
ಗಿರೆ ಸಮಸ್ತಜನಂಗಳನು ಮನ್ನಿಸಿದನುಚಿತದಲಿ ॥6॥
೦೦೭ ವರಮುಹೂರ್ತದೊಳಮೃತ ಯೋಗೋ ...{Loading}...
ವರಮುಹೂರ್ತದೊಳಮೃತ ಯೋಗೋ
ತ್ಕರ ಶುಭಗ್ರಹ ದೃಷ್ಟಿಯಲಿ ಹಿಮ
ಕರ ಶುಭಾವಸ್ಥೆಯಲಿ ಕೇಂದ್ರಸ್ಥಾನ ಗುರುವಿನಲಿ
ಭರದ ಧರಣಿಸುರರಾಶೀರ್ವಚನ ವಿ
ಸ್ತರಣ ದಧಿ ದೂರ್ವಾಕ್ಷತೆಗಳು
ಬ್ಬರದ ವಾದ್ಯ ಗಡಾವಣೆಯಲಸುರಾರಿ ಹೊರವಂಟ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಳ್ಳೆಯ ಮಹೂರ್ತದಲ್ಲಿ, ಅಮೃತಯೋಗ ಪ್ರಾಪ್ತವಾದಾಗ, ಶುಭಗ್ರಹ ದೃಷ್ಟಿಯುಂಟಾದಾಗ, ಚಂದ್ರ ಶುಭಸ್ಥಿತಿಯಲ್ಲಿದ್ದಾಗ, ಗುರುವು ಕೇಂದ್ರಸ್ಥಾನದಲ್ಲಿದ್ದಾಗ, ಬ್ರಾಹ್ಮಣರು ದಧಿ ದೂರ್ವ ಅಕ್ಷತೆ ಮೊದಲಾದವುಗಳೊಡನೆ ಆಶೀರ್ವಚನಗಳನ್ನು ನುಡಿಯುತ್ತಿರಲು ಮಂಗಳವಾದ್ಯಗಳು ಭೋರ್ಗರೆಯುತ್ತಿರಲು ಶ್ರೀಕೃಷ್ಣ ಹೊರಟ.
ಪದಾರ್ಥ (ಕ.ಗ.ಪ)
ಹಿಮಕರ-ಚಂದ್ರ, ಧರಣಿಸುರ-ಬ್ರಾಹ್ಮಣ, ದೂರ್ವಾ-ಗರಿಕೆ, ಗಡಾವಣೆ-ಭೋರ್ಗರೆತ, ಘೋಷ,
ವರ-ಶ್ರೇಷ್ಠವಾದ, ಮುಹೂರ್ತ-ಲಗ್ನ, ಸಮಯ, ಹಿಮಕರ-ಚಂದ್ರ, ಭರದ-ಸಡಗರದಿಂದ ಕೂಡಿದ, ದಧಿ-ಮೊಸರು, ಉಬ್ಬರದ-ಅತಿಶಯವಾದ, ಅಸುರಾರಿ-ಕೃಷ್ಣ
ಮೂಲ ...{Loading}...
ವರಮುಹೂರ್ತದೊಳಮೃತ ಯೋಗೋ
ತ್ಕರ ಶುಭಗ್ರಹ ದೃಷ್ಟಿಯಲಿ ಹಿಮ
ಕರ ಶುಭಾವಸ್ಥೆಯಲಿ ಕೇಂದ್ರಸ್ಥಾನ ಗುರುವಿನಲಿ
ಭರದ ಧರಣಿಸುರರಾಶೀರ್ವಚನ ವಿ
ಸ್ತರಣ ದಧಿ ದೂರ್ವಾಕ್ಷತೆಗಳು
ಬ್ಬರದ ವಾದ್ಯ ಗಡಾವಣೆಯಲಸುರಾರಿ ಹೊರವಂಟ ॥7॥
೦೦೮ ಕರಯುಗದ ಚಮ್ಮಟಿಕೆ ...{Loading}...
ಕರಯುಗದ ಚಮ್ಮಟಿಕೆ ವಾಘೆಯ
ಲರಸ ರಥವೇರಿದನು ಮುಕ್ತಾ
ಭರದ ಭಾರದ ಸತ್ತಿಗೆಯ ಪಲ್ಲವಿಸಿದನು ಭೀಮ
ಹರಿಯುಭಯ ಪಾಶ್ರ್ವದಲಿ ಸಿತ ಚಾ
ಮರವ ಚಿಮ್ಮಿದನರ್ಜುನನು ಬಂ
ಧುರದ ಹಡಪದ ಹೆಗಲಲೈದಿದರರ್ಜುನಾನುಜರು ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಜನು ರಥವನ್ನು ಏರಿ ಒಂದು ಕೈಯಲ್ಲಿ ಚಾವಟಿಯನ್ನೂ ಇನ್ನೊಂದು ಕೈಯಲ್ಲಿ ಕುದುರೆಯ ಲಗಾಮನ್ನೂ ಹಿಡಿದು ರಥವನ್ನು ನಡೆಸಲು ಸಿದ್ಧನಾದ. ಭೀಮನು ಮುತ್ತಿನಮಾಲೆಗಳಿಂದ ಸಜ್ಜುಗೊಂಡು ಭಾರವಾಗಿದ್ದ ಛತ್ರಿಯನ್ನು ಅರಳಿಸಿ ಹಿಡಿದ. ಕೃಷ್ಣನ ಎರಡೂ ಬದಿಗಳಿಗೆ ಅರ್ಜುನ ಬಿಳಿಯ ಚಾಮರವನ್ನು ಬೀಸುತ್ತಿದ್ದ. ಅವನ ತಮ್ಮಂದಿರಾದ ನಕುಲ ಸಹದೇವರು ಸುಂದರವಾದ ಚೀಲಗಳನ್ನು ಹೆಗಲಲ್ಲಿ ಹೊತ್ತು ಜೊತೆಯಲ್ಲಿ ನಡೆಯತೊಡಗಿದರು.
ಪದಾರ್ಥ (ಕ.ಗ.ಪ)
ಚಮ್ಮಟಿಕೆ-ಚಾವಟಿ,
ವಾಘೆ-ಲಗಾಮು,
ಸತ್ತಿಗೆ-ಛತ್ರಿ,
ಸಿತ-ಬಿಳಿಯ,
ಹಡಪ-ಚವರ್iದ ಚೀಲ,
ಬಂಧುರ-ಮನೋಹರ,
ಕರಯುಗ-ಎರಡು ಕೈ,
ಮುಕ್ತಾ-ಮುತ್ತು,
ಮುಕ್ತಾಭರದ ಭಾರದ-ಮುತ್ತಿನಿಂದ ತುಂಬಿ ಭಾರವಾಗಿದ್ದ,
ಸತ್ತಿಗೆ- ಛತ್ರಿ, ಕೊಡೆ,
ಪಲ್ಲವಿಸಿದನು-ಹರಡಿದನು,
ಉಭಯಪಾಶ್ರ್ವದಲಿ-ಎರಡು ಪಕ್ಕಗಳಲ್ಲಿ,
ಸಿತ-ಬೆಳ್ಳಗಿರುವ
ಬಂಧುರದ-ಮನೋಹರವಾದ, ಹಡಪ-ಕೈಚೀಲ,
ಮೂಲ ...{Loading}...
ಕರಯುಗದ ಚಮ್ಮಟಿಕೆ ವಾಘೆಯ
ಲರಸ ರಥವೇರಿದನು ಮುಕ್ತಾ
ಭರದ ಭಾರದ ಸತ್ತಿಗೆಯ ಪಲ್ಲವಿಸಿದನು ಭೀಮ
ಹರಿಯುಭಯ ಪಾಶ್ರ್ವದಲಿ ಸಿತ ಚಾ
ಮರವ ಚಿಮ್ಮಿದನರ್ಜುನನು ಬಂ
ಧುರದ ಹಡಪದ ಹೆಗಲಲೈದಿದರರ್ಜುನಾನುಜರು ॥8॥
೦೦೯ ಪೌರಜನ ಪುರಜನ ...{Loading}...
ಪೌರಜನ ಪುರಜನ ನೃಪಾಲಕು
ಮಾರ ಸಚಿವ ಪಸಾಯ್ತ ಭಟ ಪರಿ
ವಾರ ಧೌಮ್ಯಪ್ರಮುಖ ಸೂರಿ ಸಮಾಜರೊಗ್ಗಿನಲಿ
ತೇರ ಬಳಿವಿಡಿದೈದಿದರು ಮುರ
ವೈರಿ ವಿರಹ ವಿಧೂತ ವದನಾಂ
ಭೋರುಹರ ಸಂತೈಸಿ ಬೀಳ್ಕೊಟ್ಟನು ಕೃಪಾಜಲಧಿ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪೌರಜನ, ಪುರಜನ, ರಾಜಕುಮಾರರು, ಸಚಿವರು, ಸಾಮಂತ ರಾಜರು, ಸೇವಕರು, ಪರಿವಾರದವರು, ಧೌಮ್ಯರೇ ಮೊದಲಾದ ವಿದ್ವಾಂಸರ ಸಮೂಹ ರಥದ ಜೊತೆಯಲ್ಲೇ ನಡೆದು ಹೋಗುತ್ತಿದ್ದರು. ತನ್ನನ್ನು ಅಗಲಬೇಕಲ್ಲಾ ಎಂಬ ದುಃಖದಿಂದ ತಲ್ಲಣಗೊಂಡ ಅವರ ಮುಖವನ್ನು ಕಂಡ ಕರುಣಾಸಾಗರನಾದ ಕೃಷ್ಣನು ಅವರನ್ನೆಲ್ಲ ಸಮಾಧಾನಪಡಿಸಿ ಬೀಳ್ಕೊಂಡ.
ಪದಾರ್ಥ (ಕ.ಗ.ಪ)
ಪಸಾಯ್ತ-ಸಾಮಂತ, ಸೂರಿ-ವಿದ್ವಾಂಸ,
ನೃಪಾಲಕುಮಾರ-ರಾಜಕುಮಾರ, ಬಳಿವಿಡಿದು-ಸಮೀಪದಲ್ಲಿಯೇ, ಮುರವೈರಿ-ಕೃಷ್ಣ
ವಿರಹ-ಅಗಲಿಕೆ, ವಿಧೂತ-ನಡುಗಿಸಲ್ಪಟ್ಟ, ಅಂಭೊರುಹ-ಕಮಲ, ಮುರವೈರಿ ವಿರಹ ವಿಧೂತ ವದನಾಂಭೋರುಹರ-ಕೃಷ್ಣನ, ಅಗಲಿಕೆಯ ದುಃಖದಿಂದ ನಡುಗಿಸಲ್ಪಟ್ಟ, ಮುಖ ಕಮಲವುಳ್ಳವರನ್ನು, ಸಂತೈಸಿ-ಸಮಾಧಾನಪಡಿಸಿ, ಬೀಳ್ಕೊಟ್ಟನು-ಕಳುಹಿಸಿದನು,
ಕೃಪಾಜಲಧಿ-ಕರುಣಾಸಾಗರ
ಮೂಲ ...{Loading}...
ಪೌರಜನ ಪುರಜನ ನೃಪಾಲಕು
ಮಾರ ಸಚಿವ ಪಸಾಯ್ತ ಭಟ ಪರಿ
ವಾರ ಧೌಮ್ಯಪ್ರಮುಖ ಸೂರಿ ಸಮಾಜರೊಗ್ಗಿನಲಿ
ತೇರ ಬಳಿವಿಡಿದೈದಿದರು ಮುರ
ವೈರಿ ವಿರಹ ವಿಧೂತ ವದನಾಂ
ಭೋರುಹರ ಸಂತೈಸಿ ಬೀಳ್ಕೊಟ್ಟನು ಕೃಪಾಜಲಧಿ ॥9॥
೦೧೦ ಅರಿನೃಪರು ಕುಹುಕಿಗಳು ...{Loading}...
ಅರಿನೃಪರು ಕುಹುಕಿಗಳು ನೀವೇ
ಸರಸ ಹೃದಯರಧರ್ಮಶೀಲರು
ಪರರು ನೀವತಿ ಧರ್ಮನಿಷ್ಠರು ಹಾನಿಯುಂಟದಕೆ
ಅರಸನಾರೋಗಣೆ ವಿಹಾರದೊ
ಳಿರುಳು ಹಗಲು ಮೃಗವ್ಯಸನದೆ
ಚ್ಚರಿನೊಳಿಹುದೆಂದನಿಬರನು ಬೀಳ್ಕೊಟ್ಟನಸುರಾರಿ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ಕೃಷ್ಣನು ಧರ್ಮಾರಾಜಾದಿಗಳನ್ನು ಕುರಿತು ಶತ್ರುರಾಜರು ಮೋಸಗಾರರು. ನೀವಾದರೋ ಸರಸಹೃದಯದಿಂದ ಕೂಡಿರುವವರು. ಶತ್ರುಗಳು ಅಧರ್ಮನಿರತರಾದವರು. ನೀವಾದರೋ ಅತಿಧರ್ಮನಿಷ್ಠರು. ಆದ್ದರಿಂದ ಹಾನಿ ಸಂಭವಿಸೀತು. ಆದ್ದರಿಂದ ರಾತ್ರಿಯಾಗಲೀ, ಹಗಲಾಗಲೀ, ಭೊಜನ ವಿಹಾರಗಳಲ್ಲಿ, ಬೇಟೆಯಲ್ಲಿ, ಎಚ್ಚರಿಕೆಯಿಂದ ಇರಿ ಎಂದು ಬುದ್ಧಿವಾದವನ್ನು ಹೇಳಿ ಅವರನ್ನು ಬೀಳ್ಕೊಂಡನು.
ಪದಾರ್ಥ (ಕ.ಗ.ಪ)
ಕುಹಕಿ-ಕಪಟಿ, ಆರೋಗಣೆ-ಭೋಜನ, ಮೃಗವ್ಯಸನ(ಮೃಗಯಾವ್ಯಸನ)-ಬೇಟೆ
ಅರಿನೃಪರು-ಶತ್ರುರಾಜರು, ಕುಹಕಿ-ಕಪಟಿ, ಸರಸಹೃದಯ-ಸಂತೋಷದ ಮನಸ್ಸುಳ್ಳವ, ಧರ್ಮಶೀಲ-ಧರ್ಮದ ನಡತೆಯುಳ್ಳವ,
ಧರ್ಮನಿಷ್ಠ-ಧರ್ಮದಲ್ಲಿ ನಿರತ, ಹಾನಿ-ಕೇಡು, ಆರೋಗಣೆ-ಭೋಜನ, ಮೃಗವ್ಯಸನ-ಮೃಗಯಾವ್ಯಸನ, ಬೇಟೆ, ಎಚ್ಚರಿನೊಳಿಹದು-ಎಚ್ಚರದಿಂದ ಇರುವುದು, ಅನಿಬರನು-ಅಷ್ಟು ಜನರನ್ನೂ, ಬೀಳ್ಕೊಟ್ಟನು-ಕಳಿಸಿಕೊಟ್ಟ.
ಮೂಲ ...{Loading}...
ಅರಿನೃಪರು ಕುಹುಕಿಗಳು ನೀವೇ
ಸರಸ ಹೃದಯರಧರ್ಮಶೀಲರು
ಪರರು ನೀವತಿ ಧರ್ಮನಿಷ್ಠರು ಹಾನಿಯುಂಟದಕೆ
ಅರಸನಾರೋಗಣೆ ವಿಹಾರದೊ
ಳಿರುಳು ಹಗಲು ಮೃಗವ್ಯಸನದೆ
ಚ್ಚರಿನೊಳಿಹುದೆಂದನಿಬರನು ಬೀಳ್ಕೊಟ್ಟನಸುರಾರಿ ॥10॥
೦೧೧ ನಾಲಗೆಗಳಸುರಾರಿ ಗುಣ ...{Loading}...
ನಾಲಗೆಗಳಸುರಾರಿ ಗುಣ ನಾ
ಮಾಳಿಯಲಿ ತುರುಗಿದವು ಕಂಗಳು
ನೀಲಮೇಘಶ್ಯಾಮನಲಿ ಬೆಚ್ಚವು ವಿಹಾರದಲಿ
ಬಾಲಕೇಳೀಕಥನ ಸುಧೆಯೊಳ
ಗಾಳಿ ಮುಳುಗುತ ಕಳುಹುತನಿಬರು
ಸಾಲಭಂಜಿಕೆಯಂದವಾದರು ಕೃಷ್ಣವಿರಹದಲಿ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲ್ಲರ ನಾಲಗೆಗಳೂ ಅಸುರಾರಿಯಾದ ಕೃಷ್ಣನ ನಾಮಾವಳಿಯಲ್ಲೇ ತೊಡಗಿದ್ದವು. ಅವರ ಕಣ್ಣುಗಳು ಆ ನೀಲಮೇಘಶ್ಯಾಮನಲ್ಲೇ ನೆಟ್ಟಿದ್ದವು. ಅಮೃತ ಸರೋವರದ ಶ್ರೀಕೃಷ್ಣನ ಬಾಲಲೀಲೆಯ ಕಥೆಗಳಲ್ಲಿಯೇ ಅದ್ದಿ ಮುಳುಗಿ, ಅವನನ್ನು ಬೀಳ್ಕೊಂಡು ಅವನ ವಿಯೋಗವನ್ನು ಸಹಿಸಲಾರದೆ ಮರದ ಗೊಂಬೆಗಳಂತೆ ಸ್ತಬ್ಧರಾಗಿದ್ದರು.
ಪದಾರ್ಥ (ಕ.ಗ.ಪ)
ಬೆಚ್ಚವು-ಬೆಸೆದವು, ಸುಧೆ-ಅಮೃತ, ಆಳಿಮುಳುಗುತ-ಅದ್ದಿಮುಳುಗಿ, ಸಾಲಭಂಜಿಕೆ-ಮರದಗೊಂಬೆ
ಅಸುರಾರಿ ಗುಣ ನಾಮಾಳಿಯಲಿ-ಕೃಷ್ಣನ, ಗುಣಗಳನ್ನು ಮತ್ತು ನಾವುಗಾಗಳನ್ನು, ಜಪಿಸುವುದರಲ್ಲಿ, ತುರುಗಿದವು-ತುಂಬಿದವು, ನೀಲಮೇಘಶ್ಯಾಮ-ಕರಿಮೋಡದಂತೆ, ದೇಹಕಾಂತಿಯಳ್ಳ ಕೃಷ್ಣ, ಕಂಗಳು-ಕಣ್ಣುಗಳು, ಬೆಚ್ಚವು-ಬೆಸುಗೆಗೊಂಡವು, ಬಾಲಕೇಳಿ-ಬಾಲಲೀಲೆ, ಕಥನಸುಧೆ-ಹೇಳುವುದರ ಸವಿ, ಸುಧೆ-ಅಮೃತ, ಸವಿ, ಆಳು-ಮುಳುಗು, ಆಳುಮುಳುಗು-ಪೂರ್ಣವಾಗಿ ಮಗ್ನವಾಗು,
ಸಾಲಭಂಜಿಕೆ-ಗೊಂಬೆ, ಕೃಷ್ಣವಿರಹ-ಕೃಷ್ಣನ ಅಗಲಿಕೆ
ಮೂಲ ...{Loading}...
ನಾಲಗೆಗಳಸುರಾರಿ ಗುಣ ನಾ
ಮಾಳಿಯಲಿ ತುರುಗಿದವು ಕಂಗಳು
ನೀಲಮೇಘಶ್ಯಾಮನಲಿ ಬೆಚ್ಚವು ವಿಹಾರದಲಿ
ಬಾಲಕೇಳೀಕಥನ ಸುಧೆಯೊಳ
ಗಾಳಿ ಮುಳುಗುತ ಕಳುಹುತನಿಬರು
ಸಾಲಭಂಜಿಕೆಯಂದವಾದರು ಕೃಷ್ಣವಿರಹದಲಿ ॥11॥
೦೧೨ ಕಳುಹಿ ಕಙ್ಗಳು ...{Loading}...
ಕಳುಹಿ ಕಂಗಳು ಮರಳಿದವು ಮನ
ಕಳುಹದಾ ದ್ವಾರಾವತಿಗೆ ಮಂ
ಗಳ ಮಹೋತ್ಸವದೊಸಗೆ ನುಡಿಯಲಿ ಹೊಕ್ಕನಸುರಾರಿ
ಬಳಿಕಿವರು ನಿಜ ರಾಜಭವನ
ಸ್ಥಳಕೆ ಬಂದರು ಸೌಮನಸ್ಯದ
ಲಿಳೆಯ ಪಾಲಿಸುತಿರ್ದರವನೀಪಾಲ ಕೇಳ್ ಎಂದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನನ್ನು ಬೀಳ್ಕೊಂಡು ಕಣ್ಗಳೇನೋ ಹಿಂದಕ್ಕೆ ಬಂದವು. ಮನಸ್ಸು ಮಾತ್ರ ಅವನಲ್ಲಿಯೇ ನೆಟ್ಟಿದ್ದವು. ಆ ಕಡೆ ಕೃಷ್ಣ, ಮಂಗಳಮಹೋತ್ಸವದಿಂದ ಮಂಗಳಕರವಾದ ನುಡಿಗಳು ಅವನನ್ನು ಸ್ವಾಗತಿಸುತ್ತಿರಲು ದ್ವಾರಾವತಿಯನ್ನು ಪ್ರವೇಶಿಸಿದ. ಈ ಕಡೆ ಪಾಂಡವರು ಅರಮನೆಗೆ ಹಿಂತಿರುಗಿದರು. ಸಂತೋಷದಿಂದ ರಾಜ್ಯವನ್ನು ಪಾಲಿಸುತ್ತಿದ್ದರು.
ಪದಾರ್ಥ (ಕ.ಗ.ಪ)
ಸೌಮನಸ್ಯ-ಸಂತೋಷ
ಒಸಗೆ ನುಡಿಯಲಿ-ಸಂತೋಷದ ಮಾತುಗಳಿಂದ, ಸೌಮನಸ್ಯದಲಿ-ಒಳ್ಳೆಯ ಮನಸ್ಸಿನಿಂದ, ಪ್ರೀತಿಯಿಂದ, ಇಳೆ-ಭೂಮಿ, ರಾಜ್ಯ,
ಅವನೀಪಾಲ-ರಾಜ(ಜನಮೇಜಯ)
ಮೂಲ ...{Loading}...
ಕಳುಹಿ ಕಂಗಳು ಮರಳಿದವು ಮನ
ಕಳುಹದಾ ದ್ವಾರಾವತಿಗೆ ಮಂ
ಗಳ ಮಹೋತ್ಸವದೊಸಗೆ ನುಡಿಯಲಿ ಹೊಕ್ಕನಸುರಾರಿ
ಬಳಿಕಿವರು ನಿಜ ರಾಜಭವನ
ಸ್ಥಳಕೆ ಬಂದರು ಸೌಮನಸ್ಯದ
ಲಿಳೆಯ ಪಾಲಿಸುತಿರ್ದರವನೀಪಾಲ ಕೇಳೆಂದ ॥12॥
೦೧೩ ಮುರಹರನ ನೇಮದಲಿ ...{Loading}...
ಮುರಹರನ ನೇಮದಲಿ ಮಯ ವಿ
ಸ್ತರಿಸಿದನು ಪದಿನಾಲ್ಕು ತಿಂಗಳು
ವರ ಸಭಾಮಂಟಪವನನಿಬರಿಗಿವ ಕೃತಜ್ಞನಲೆ
ಕಿರಣ ಲಹರಿಯ ವಿವಿಧ ರತ್ನೋ
ತ್ಕರದ ರಚನಾಶಿಲ್ಪವಿದು ದೇ
ವರಿಗಸಾಧ್ಯವು ಶಿವಶಿವಾಯೆನೆ ಮೆರೆದುದಾಸ್ಥಾನ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನ ಅಪ್ಪಣೆಯಂತೆ ಮಯನು ಹದಿನಾಲ್ಕು ತಿಂಗಳುಗಳಲ್ಲಿ ಬಲು ಶ್ರೇಷ್ಠವಾದ ಸಭಾಮಂಟಪವನ್ನು ನಿರ್ಮಿಸಿಕೊಟ್ಟ. ಅವರಿಗೆ ಇವನು ಕೃತಜ್ಞನಲ್ಲವೇ ? ಅಲೆಅಲೆಯಾಗಿ ಕಿರಣಗಳನ್ನು ಹೊರಚೆಲ್ಲುವ ನಾನಾ ರತ್ನರಾಶಿಯಿಂದ ರಚಿಸಿದ ಶಿಲ್ಪ ಅದು. ‘ದೇವತೆಗಳಿಗೂ ಅಂತಹ ಶಿಲ್ಪದ ರಚನೆ ಅಸಾಧ್ಯ ಶಿವ ಶಿವ !’ ಎಂಬಂತಿತ್ತು ಆ ಸಭಾಭವನ.
ಪದಾರ್ಥ (ಕ.ಗ.ಪ)
ಮಯ-ರಾಕ್ಷಸರ ಶಿಲ್ಪಿ, ನೇಮ-ಅಪ್ಪಣೆ, ಲಹರಿ-ಅಲೆ, ಉತ್ಕರ-ರಾಶಿ
ಮುರಹರ-ಕೃಷ್ಣ, ನೇಮದಲಿ-ಆಜ್ಞೆಯಂತೆ, ವಿಸ್ತರಿಸಿದನು-ವಿಸ್ತಾರವಾಗಿ ರಚಿಸಿದನು, ಅನಿಬರೆಗೆ-ಅಷ್ಟು ಜನರಿಗೆ, ಕೃತಜ್ಞ-ತನಗೆ, ಮೂಡಿದ ಉಪಕಾರವನ್ನು, ಸ್ಮರಿಸಿ ಕೊಳ್ಳುವವನು, ಲಹರಿ-ಅಲೆ, ರತ್ನೋತ್ಕರ-ರತ್ನಗಳ ರಾಶಿ, ದೇವರಿಗಸಾಧ್ಯವು-ದೇವತೆಗಳಿಂದಲೂ
ಮಾಡಲು ಸಾಧ್ಯವಿಲ್ಲ.
ಮೂಲ ...{Loading}...
ಮುರಹರನ ನೇಮದಲಿ ಮಯ ವಿ
ಸ್ತರಿಸಿದನು ಪದಿನಾಲ್ಕು ತಿಂಗಳು
ವರ ಸಭಾಮಂಟಪವನನಿಬರಿಗಿವ ಕೃತಜ್ಞನಲೆ
ಕಿರಣ ಲಹರಿಯ ವಿವಿಧ ರತ್ನೋ
ತ್ಕರದ ರಚನಾಶಿಲ್ಪವಿದು ದೇ
ವರಿಗಸಾಧ್ಯವು ಶಿವಶಿವಾಯೆನೆ ಮೆರೆದುದಾಸ್ಥಾನ ॥13॥
೦೧೪ ಹತ್ತು ಸಾವಿರ ...{Loading}...
ಹತ್ತು ಸಾವಿರ ಕೈ ಪ್ರಮಾಣದ
ಸುತ್ತುವಳಯದ ಮಣಿಯ ಶಿಲೆಗಳ
ತತ್ತವಣೆಗಳ ತೆಕ್ಕೆವೆಳಗಿನ ಲಳಿಯ ಲಹರಿಗಳ
ಸುತ್ತುವಳಯದ ಪದ್ಮರಾಗದ
ಭಿತ್ತಿಗಳ ವೈಡೂರ್ಯ ಶಿಲೆಗಳ
ಮತ್ತವಾರಣ ವರ ವಿಧಾನದಲೆಸೆದುದಾಸ್ಥಾನ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಭವನದ ಸುತ್ತಳತೆ ಹತ್ತು ಸಾವಿರ ಕೈ ಪ್ರಮಾಣ. ಅದರ ಸುತ್ತುವಲಯದಲ್ಲಿ ಮಣಿಯ ಶಿಲೆಗಳನ್ನು ಜೋಡಿಸಿದ್ದುದರಿಂದ ರಾಶಿಬೆಳಕಿನ ಕೌಶಲ್ಯದ ಅಲೆಗಳೇಳುತ್ತಿದ್ದವು. ಸುತ್ತಲಿನ ಗೋಡೆಗಳು ಪದ್ಮರಾಗದಿಂದ ನಿರ್ಮಿತವಾದುವು. ಮುಂದಿನ ಕೈಸಾಲೆಯಲ್ಲಿ ಆನೆಯಾಕರದ ಒರಗು ದಿಂಡುಗಳು ವೈಡೂರ್ಯಖಚಿತವಾದ ಶಿಲೆಗಳಿಂದ ನಿರ್ಮಿಸಲ್ಪಟ್ಟಿರುವುದು. ಹೀಗೆ ಆ ಸಭಾಭವನ ಸೊಗಸಾಗಿ ಕಂಗೊಳಿಸುತ್ತಿತ್ತು.
ಪದಾರ್ಥ (ಕ.ಗ.ಪ)
ತೆಕ್ಕೆ-ಸಮೂಹ, ರಾಶಿ, ಮತ್ತವಾರಣ-ಕೈಸಾಲೆಯಲ್ಲಿನ ಆನೆಯಾಕಾರದ ಒರಗು ದಿಂಡುಗಳು,ವೇದಿಕೆಗಳು. ಭಿತ್ತಿ-ಗೋಡೆ, ತತ್ತವಣೆ-ಅಲಂಕಾರ
ಮಣಿ-ರತ್ನ, ತತ್ತವಣೆಗಳ-ಅಲಂಕಾರಗಳ, ತೆಕ್ಕೆವೆಳಗಿನ-ರಾಶಿ ಬೆಳಕಿನ, ಲಳಿಯ-ಕೌಶಲ್ಯದ, ಲಹರಿ-ಅಲೆ, ಪದ್ಮರಾಗ-ಕೆಂಪುರತ್ನ, ಭಿತ್ತಿ-ಗೋಡೆ, ವೈಡೂರ್ಯ-ನವರತ್ನಗಳಲ್ಲಿ ಒಂದು,
ಟಿಪ್ಪನೀ (ಕ.ಗ.ಪ)
ಮತ್ತವಾರಣ- ಆನೆಯಾಕಾರದ ಒರಗುದಿಂಡುಗಳು, ವೇದಿಕೆಗಳು - ಕನ್ನಡ ಮಹಾಭಾರತಗಳಲ್ಲಿ ಶಿಲ್ಪ ಮತ್ತು ಶಿಲ್ಪಿ. ಡಾ. ಜಿ.ಜ್ಞಾನಾನಂದ ಪು.148 (ಮೊದಲ ಮುದ್ರಣ 2005), ಪುನರ್ಮುದ್ರಣ 2007
ಕೈ ಪ್ರಮಾಣ
ಮಯ ನಿರ್ಮಿಸಿದ ಸಭಾಭವನದ ಭೂಮಿಯ ಅಳತೆಯನ್ನು ಸ್ಪಷ್ಟವಾಗಿ ಹತ್ತುಸಾವಿರ ಕಿಷ್ಕು ಎಂದು ಹೇಳಲಾಗಿದೆ. ಕಿಷ್ಕು ಶಿಲ್ಪ ಶಾಸ್ತ್ರದಲ್ಲಿ ಬಳಕೆಯಲ್ಲಿರುವ ಅಳತೆಯೇ. ಇದನ್ನು ಹಸ್ತ ಎಂದೂ ಹೇಳುತ್ತಾರೆ. ರೂಢಿಯಲ್ಲಿ ಇದನ್ನು ಮೊಳ ಎಂದು ಕರೆಯುತ್ತಾರೆ. ಆದರೆ ಪಂಪ ಇದನ್ನು ಮೂಱು ಯೋಜನದಳವು ಎಂದರೆ ಕುಮಾರವ್ಯಾಸ ಹತ್ತುಸಾವಿರ ಕೈ ಪ್ರಮಾಣದ ಸುತ್ತವಳಯದ ಎಂದು ಹೇಳಿದ್ದಾನೆ. ಹಸ್ತವನ್ನು ಕನ್ನಡ ಮತ್ತು ತಮಿಳುಗಳಲ್ಲಿ ಕೈ ಎಂದು ಕರೆಯುವುದೂ ಉಂಟು. ಹಸ್ತವನ್ನೇ ಕಿಷ್ಕು ಎಂದೂ ಕರೆಯುತ್ತಾರೆ. ಇದಕ್ಕೆ 24 ಅಂಗುಳಗಳು. ಯಜ್ಞವೇದಿಕೆ, ಯಾನ, ವಾಹನಗಳನ್ನು ಹಸ್ತಮಾನದಲ್ಲಿಯೇ ಲೆಕ್ಕಿಸಬೇಕು ಎಂಬುದು ಶಿಲ್ಪ ಶಾಸ್ತ್ರದ ಪದ್ಧತಿ. ಅದರ ಅನ್ವಯ ವ್ಯಾಸ ಮಹಾಭಾರತದಲ್ಲಿ ಹೇಳಿದೆ. ಕುಮಾರವ್ಯಾಸ, ನನ್ನಯ ಮೂಲವನ್ನು ಅನುಸರಿಸಿದ್ದಾರೆ. ಉಳಿದವರಿಗೆ ಈ ಶಬ್ದದ ಮಹತ್ವ ತಿಳಿದಿರುವಂತೆ ತೋರುವುದಿಲ್ಲ.
-ಡಾ.ಜಿ.ಜ್ಞಾನಾನಂದ,
ಕನ್ನಡ ಮಹಾಭಾರತಗಳಲ್ಲಿ ಶಿಲ್ಪ ಮತ್ತು ಶಿಲ್ಪಿ ಪುಟ : 212
ಸಂಕೃತಿ ಸಾಹಿತ್ಯ ಪ್ರತಿಷ್ಠಾನ, ಬೆಂಗಳೂರು, 2007
ಮೂಲ ...{Loading}...
ಹತ್ತು ಸಾವಿರ ಕೈ ಪ್ರಮಾಣದ
ಸುತ್ತುವಳಯದ ಮಣಿಯ ಶಿಲೆಗಳ
ತತ್ತವಣೆಗಳ ತೆಕ್ಕೆವೆಳಗಿನ ಲಳಿಯ ಲಹರಿಗಳ
ಸುತ್ತುವಳಯದ ಪದ್ಮರಾಗದ
ಭಿತ್ತಿಗಳ ವೈಡೂರ್ಯ ಶಿಲೆಗಳ
ಮತ್ತವಾರಣ ವರ ವಿಧಾನದಲೆಸೆದುದಾಸ್ಥಾನ ॥14॥
೦೧೫ ಕರೆಸಿದನು ಮಯನೆಣ್ಟು ...{Loading}...
ಕರೆಸಿದನು ಮಯನೆಂಟು ಸಾವಿರ
ಸರಿಗ ರಕ್ಕಸ ಕಿಂಕರರ ನಿಜ
ಶಿರದೊಳಾಂತರು ತಂದರಿಂದ್ರಪ್ರಸ್ಥಪುರವರಕೆ
ಅರಸ ಕಾಣಿಸಿಕೊಂಡನದನಾ
ದರಿಸಿದನು ಭೀಮಂಗೆ ಭಾರಿಯ
ವರ ಗದಾದಂಡವನು ಕಾಣಿಕೆಯಿತ್ತು ಪೊಡವಂಟ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಂತಹ ಬಲು ರಮಣೀಯವಾದ ಸಭಾಭವನವನ್ನು ನಿರ್ಮಿಸಿದ ಮೇಲೆ ಮಯ ತನಗೆ ಸರಿಸಮಾನರಾದ ಎಂಟು ಸಾವಿರ ರಾಕ್ಷಸ ಕಿಂಕರರನ್ನು ಕರೆಸಿದ. ಅವರು ಬಂದು ತಮ್ಮ ತಲೆಗಳ ಮೇಲೆ ಆ ಸಭಾಭವನವನ್ನು ಹೊತ್ತು ಇಂದ್ರಪ್ರಸ್ಥ ನಗರಿಗೆ ತಂದಿಟ್ಟರು. ಧರ್ಮರಾಯ ಎದುರುಗೊಂಡು ಅದನ್ನು ಸ್ವೀಕರಿಸಿದ. ಮಯ ಭೀಮನಿಗೆ ಒಂದು ಭಾರೀ ಗದಾದಂಡವನ್ನು ಕಾಣಿಕೆಯಾಗಿ ಕೊಟ್ಟು ನಮಸ್ಕರಿಸಿದ.
ಪದಾರ್ಥ (ಕ.ಗ.ಪ)
ಸರಿಗ-ತನಗೆ ಸರಿಸಮನಾದ, ರಕ್ಕಸ ಕಿಂಕರರು-ರಾಕ್ಷಸ ಸೇವಕರು, ಶಿರದೊಳು-ತಲೆಯ ಮೇಲೆ, ಪುರವರ-ಶ್ರೇಷ್ಠಪಟ್ಟಣ, ಆದರಿಸಿದ-ಗೌರವಿಸಿದ, ವರ-ಶ್ರೇಷ್ಠವಾದ, ಪೊಡವಂಟ-ನಮಸ್ಕರಿಸಿದ
ಮೂಲ ...{Loading}...
ಕರೆಸಿದನು ಮಯನೆಂಟು ಸಾವಿರ
ಸರಿಗ ರಕ್ಕಸ ಕಿಂಕರರ ನಿಜ
ಶಿರದೊಳಾಂತರು ತಂದರಿಂದ್ರಪ್ರಸ್ಥಪುರವರಕೆ
ಅರಸ ಕಾಣಿಸಿಕೊಂಡನದನಾ
ದರಿಸಿದನು ಭೀಮಂಗೆ ಭಾರಿಯ
ವರ ಗದಾದಂಡವನು ಕಾಣಿಕೆಯಿತ್ತು ಪೊಡವಂಟ ॥15॥
೦೧೬ ಇದು ಪುರಾತನ ...{Loading}...
ಇದು ಪುರಾತನ ಸಗರ ವಂಶಾ
ಭ್ಯುದಯ ದುರ್ಜಯ ಯೌವನಾಶ್ವನ
ಗದೆ ಕೃತಾಂತನ ಕರದ ದಂಡವನಂಡಲೆವ ಬಲದ
ಮದದಲೊಪ್ಪುವುದೆನುತ ಮಯನತಿ
ಮುದದಿ ಬಳಿಕಾ ದೇವದತ್ತಾ
ಖ್ಯದ ಮಹಾ ಶಂಖವನು ಪಾರ್ಥಗೆ ಕೊಟ್ಟು ಕೈಮುಗಿದ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಗದೆ ಪುರಾತನವಾದುದು, ಸಗರವಂಶಾಭ್ಯುದಯನೆನ್ನಿಸಿ ದುರ್ಜಯನಾಗಿದ್ದ ಯೌವನಾಶ್ವನು ಹೊಂದಿದ್ದ ಗದೆ. ಯಮನ ಕೈಯಲ್ಲಿರುವ ಗದಾದಂಡವನ್ನು ಸಹ ತಿರಸ್ಕರಿಸುವ ಸಾಮಥ್ರ್ಯವುಳ್ಳದ್ದು ಎಂದು ಮಯ ಅತಿ ಸಂತೋಷದಿಂದ ವಿವರಿಸಿ, ಅನಂತರ ಅರ್ಜುನನಿಗೆ ದೇವದತ್ತವೆಂಬ ಹೆಸರಿನ ಶಂಖವನ್ನು ಕೊಟ್ಟು ಕೈಮುಗಿದ.
ಪದಾರ್ಥ (ಕ.ಗ.ಪ)
ಅಂಡಲೆ-ಪೀಡಿಸು, ತಿರಸ್ಕರಿಸು, ಕೃತಾಂತ-ಯಮ
ದುರ್ಜಯ-ಇತರರಿಂದ ಜಯಿಸಲಾಗದ, ಕೃತಾಂತ-ಯಮ, ಅಂಡಲೆ-ಕಾಡು, ತಿರಸ್ಕರಿಸು, ಅಂಡಲೆವ ಬಲದದ ಮದದಲಿ-ತಿರಸ್ಕರಿಸುವ ಸಾಮಥ್ರ್ಯದ ದರ್ಪದಿಂದ, ಒಪ್ಪುವುದು-ಶೋಭಿಸುವುದು, ದೇವದತ್ತಾಖ್ಯದ-ದೇವದತ್ತ ಎಂಬ ಹೆಸರಿನ, ಪಾರ್ಥಗೆ-ಅರ್ಜುನನಿಗೆ
ಮೂಲ ...{Loading}...
ಇದು ಪುರಾತನ ಸಗರ ವಂಶಾ
ಭ್ಯುದಯ ದುರ್ಜಯ ಯೌವನಾಶ್ವನ
ಗದೆ ಕೃತಾಂತನ ಕರದ ದಂಡವನಂಡಲೆವ ಬಲದ
ಮದದಲೊಪ್ಪುವುದೆನುತ ಮಯನತಿ
ಮುದದಿ ಬಳಿಕಾ ದೇವದತ್ತಾ
ಖ್ಯದ ಮಹಾ ಶಂಖವನು ಪಾರ್ಥಗೆ ಕೊಟ್ಟು ಕೈಮುಗಿದ ॥16॥
೦೧೭ ಒಸಗೆ ಮೆರೆದುದು ...{Loading}...
ಒಸಗೆ ಮೆರೆದುದು ಮಯನ ಮಿಗೆ ಮ
ನ್ನಿಸಿದನವನಿಪನಂಗಚಿತ್ತದೊ
ಳಸುರ ಕಿಂಕರರನಿಬರನು ಸನ್ಮಾನ ದಾನದಲಿ
ಒಸೆದು ಕಳುಹಿದನಾತನನು ದೆಸೆ
ದೆಸೆಯ ಯಾಚಕ ನಿಕರ ನೂಕಿತು
ಮುಸುಕಿತೈ ಧರ್ಮಜನ ಕೀರ್ತಿಯ ಝಾಡಿ ಮೂಜಗವ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಪಟ್ಟಣದಲ್ಲೆಲ್ಲಾ ಮಹಾ ಉತ್ಸವವಾಯಿತು. ಧರ್ಮರಾಯ ಮಯನಿಗೆ ಉಡುಗೊರೆಯನ್ನಿತ್ತು ಅತಿಶಯವಾಗಿ ಗೌರವಿಸಿದ. ಅವನ ಸೇವಕರೆಲ್ಲರಿಗೂ ದಾನಗಳನ್ನು ಕೊಟ್ಟು ಸಂತೋಷಪಡಿಸಿದ. ಮಯನನ್ನು ಪ್ರೀತಿಯಿಂದ ಬೀಳ್ಕೊಟ್ಟ. ಅನಂತರ ಎಲ್ಲ ದಿಕ್ಕುಗಳಿಂದಲೂ ಇಂದ್ರಪ್ರಸ್ಥಕ್ಕೆ ಯಾಚಕ ಸಮೂಹ ಬರತೊಡಗಿತು. ಧರ್ಮಜನ ಕೀರ್ತಿಯ ಪ್ರಕಾಶ ಮೂರುಲೋಕಗಳಿಗೂ ಹರಡಿತು.
ಪದಾರ್ಥ (ಕ.ಗ.ಪ)
ಒಸಗೆ-ಸಂತೋಷ, ಅಂಗಚಿತ್ತ-ತನ್ನ ಮೈಮೇಲಿನ ವಸ್ತ್ರಗಳನ್ನು ಉಡುಗೊರೆಯಾಗಿ ಕೊಡುವುದು. ಝಾಡಿ-ಪ್ರಕಾಶ
ಒಸಗೆ ಮೆರೆದುದು-ಸಂತೋಷದ ಉತ್ಸವ ವೈಭವದಿಂದ ನಡೆಯಿತು, ಮಿಗೆ-ಅತಿಶಯವಾಗಿ, ಮನ್ನಿಸಿದನು-ಗೌರವಿಸಿದನು, ಅವನಿಪ-ಧರ್ಮರಾಜ, ಅಸುರ ಕಿಂಕರರು ಅನಿಬರನು-ರಾಕ್ಷಸ ಸೇವಕರು ಅಷ್ಟುಮಂದಿಯನ್ನು, ಸನ್ಮಾನದಲಿ-ಗೌರವದಿಂದಲೂ, ಒಸೆದು-ಸಂತೋಷಪಡಿಸಿ, ದೆಸೆದೆಸೆಯ-ನಾನಾ ದಿಕ್ಕುಗಳಿಂದ ಬಂದ, ಯಾಚಕ ನಿಕರ-ಭಿಕ್ಷುಕರ ಸಮೂಹ, ನೂಕಿತು-ಬೇಡಿದ್ದನ್ನು ಪಡೆದು ಸಂತೋಷದಿಂದ ನುಗ್ಗಿಹೋಯಿತು, ಧರ್ಮಜನ ಕೀರ್ತಿಯ ಝಾಡಿ-ಯುಧಿಷ್ಠಿರನ ಕೀರ್ತಿಯ ಪ್ರಕಾಶ, ಮುಸುಕಿತೈ-ಕವಿಯಿತಯ್ಯಾ !
ಟಿಪ್ಪನೀ (ಕ.ಗ.ಪ)
ಮಯ - ಮಯನು ದೇವ ದಾನವ ಶಿಲ್ಪಾಚಾರ್ಯ. ರಾಕ್ಷಸಶಿಲ್ಪಿ. ಕಶ್ಯಪನಿಗೆ ದನುವಿನಲ್ಲಿ ಹುಟ್ಟಿದ ಮಗ. ನಮುಚಿಯ ಸೋದರ. ಇವನು ಪರ್ಷಿಯಾ ದೇಶದವನಿರಬಹುದೆಂಬ ವಾದವೂ ಇದೆ. ಮಯನಿಗೆ ಮಾಯಾವಿ, ಮಂಡೋದರಿ ಎಂಬ ಮಕ್ಕಳಿದ್ದರು. (ಇವಳು ರಾವಣನ ಪತ್ನಿಯಾದಳು) ಖಾಂಡವ ವನದ ದಹನದ ಸಂದರ್ಭದಲ್ಲಿ ಬೆಂಕಿಗೆ ಸಿಕ್ಕಿಕೊಳ್ಳಲಿದ್ದ ಈತನನ್ನು ಅರ್ಜುನನು ಕಾಪಾಡಿದ ಕಾರಣ ಮಯನು ಉಳಿದುಕೊಂಡ.
ತಸ್ಯ ಭೀತಸ್ವನಂ ಶ್ರುತ್ವಾ ಮಾಭೈರಿತಿ ಧನಂಜಯಃ
ಪ್ರತ್ಯುವಾಚ ಮಯಂ ಪಾರ್ಥೋ ಜೀವಯನ್ನಿವ ಭಾರತ
ಭಯಗ್ರಸ್ಥನಾದ ಮಯನ ಕೂಗನ್ನು ಕೇಳಿದ ಅರ್ಜುನನು ಅವನಿಗೆ ‘ಹೆದರಬೇಡ’ ಎಂದು ಧೈರ್ಯ ಹೇಳಿ ಅವನನ್ನು ಬದುಕಿಸಿದ. ಈ ಉಪಕಾರದ ಸ್ಮರಣೆಗಾಗಿ ಮಯನು ಧರ್ಮರಾಯನಿಗೆ ಒಂದು ಅದ್ಭುತ ಅರಮನೆಯನ್ನೂ ವಾಸಗೃಹಗಳನ್ನೂ ಸಭಾಮಂದಿರವನ್ನೂ ಮಯಸಭೆಯನ್ನೂ ಕಟ್ಟಿಸಿಕೊಟ್ಟನಂತೆ. ರಾಜಸೂಯಯಾಗಕ್ಕಾಗಿ ಕಟ್ಟಿಕೊಟ್ಟ ಸಭಾಗೃಹ ಅದು. ಮುಂದೆ ಮಯನು ಶಿವನ ಅಜ್ಞೆಯಂತೆ ಕೃಷ್ಣಶತ್ರುವಾದ ಸಾಲ್ವನಿಗೆ ಸೌಭನಗರವನ್ನು ನಿರ್ಮಿಸಿಕೊಟ್ಟ. ಅಸುರರಿಗಾಗಿ ಕಾಮಗಮನ ಶಕ್ತಿಯುಳ್ಳ ತ್ರಿಪುರವನ್ನು ನಿರ್ಮಿಸಿಕೊಟ್ಟು ಉಪಕಾರ ಮಾಡಿದ.
ಮಯಶಿಲ್ಪಿಯ ಸಾಧನೆಯನ್ನು ಮೆಚ್ಚಿದ ದೇವತೆಗಳು ಅವನಿಗೆ ಹೇಮ ಎಂಬ ಕನ್ಯೆಯನ್ನು ಕೊಟ್ಟು ಮದುವೆ ಮಾಡಿದರು. ಮಯನು ಆಕೆಯ ಹೆಸರಿನಲ್ಲಿ ಒಂದು ಸುಂದರ ನಗರಿಯನ್ನು ನಿರ್ಮಿಸಿ ಅಲ್ಲಿ ಅವಳೊಂದಿಗೆ ಸಂಸಾರ ಮಾಡುತ್ತಿದ್ದ. ಇಂಥ ಉನ್ನತಮಟ್ಟದ ವಿಶ್ವಕಲಾವಿದನನ್ನು ಅವನ ಹೆಂಡತಿ ಕೈಬಿಟ್ಟುಹೋದದ್ದು ಮಯನ ಮುಂದಿನ ಬದುಕಿನ ಒಂದು ದುರಂತಘಟ್ಟ ಎಂದು ಹೇಳಬಹುದು.
ಮಯನ ಶಿಲ್ಪಸಾಧನೆಗಳಲ್ಲಿ ಅಪೂರ್ವವಾದ ಮಯಸಭೆಯು ಒಂದೆಂದು ಹೇಳಬಹುದು. ಖಾಂಡವ ವನದಲ್ಲಿ ಮಯನು ಸಿಕ್ಕಿ ಹಾಕಿಕೊಂಡಾಗ ಅರ್ಜುನ ಬಿಡಿಸಿದನಷ್ಟೆ ಆದ್ದರಿಂದ ಕೃತಜ್ಞತಾಪೂರ್ವಕವಾಗಿ ಮಯನು ಪಾಂಡವರಿಗೆ ಸ್ಮರಣೀಯ ಕಾಣಿಕೆಯೊಂದನ್ನು ನೀಡಲು ಬಯಸಿ ಈ ವಿಚಾರವನ್ನು ಶ್ರೀಕೃಷ್ಣನಲ್ಲಿ ಪ್ರಸ್ತಾವಿಸಿದ. ಕೃಷ್ಣ ಸಲಹೆ ಇದು:
‘‘ಮಯ! ಮಣಿಮಯ ದೂಲಗಳ ಕಂಬಗಳಿರುವ ಗೋಡೆ, ಪ್ರಕಾರಗಳಿರುವ ನಿರ್ಮಲ ಸ್ವರ್ಣಮಯ ತಾವರೆಗಳಿರುವ ವಜ್ರಮೀನುಗಳು, ಮುತ್ತಿನ ಕಂಬಳು ಇರುವ, ನೀರೋ ನೆಲವೋ ಕಟ್ಟಡವೋ ಬಯಲೋ ಎಂಬ ದೃಶ್ಯಭ್ರಾಂತಿಯನ್ನುಂಟುಮಾಡುವ, ಪುಷ್ಪೋದ್ಯಾನ ಜಲಸಮೃದ್ಧಿಗಳಿಂದ ಮೆರೆಯುವ ಅಭೂತಪೂರ್ವ ಕಟ್ಟಡವೊಂದನ್ನು ನೀನು ಕಟ್ಟಿಸಿಕೊಡು’’. ಮಯನು ಅವನ ಆಸೆಯಂತೆಯೇ ಯಂತ್ರಮಯವಾದ, ಸಾರ್ವರ್ತುಕೋದ್ಯಾನದಿಂದ ಕಂಗೊಳಿಸುವ ನಯನಮನೋಹರವಾದ ಅರಮನೆಯನ್ನು ಹದಿನಾಲ್ಕು ತಿಂಗಳ ಅವಧಿಯಲ್ಲಿ ನಿರ್ಮಿಸಿಕೊಟ್ಟ. ಎಂಟು ಸಆವಿರ ಜನ ದೈತ್ಯ ಕರ್ಮಚಾರಿಗಳು ಎಲ್ಲೋ ಸಿದ್ಧಪಡಿಸಿ ಆ ವಸ್ತುಗಳನ್ನು ಅಂತರಿಕ್ಷ ಮಾರ್ಗದಲ್ಲಿ ಹೊತ್ತು ತಂದು ಜೋಡಿಸಿಕೊಟ್ಟರು. ಅವನು ಕಟ್ಟಿದ ಕೊಳ, ಮನೆ, ಬಯಲು, ಕಟ್ಟಡ ಪ್ರವೇಶದ್ವಾರಗಳು ದುರ್ಯೋಧನನಿಗೆ ಕಸಿವಿಸಿಯಾಗುವಷ್ಟು ಧೃಷ್ಟಿಭ್ರಮೆಯನ್ನು ಉಂಟುಮಾಡುವಷ್ಟು ವೈಶಿಷ್ಟ್ಯಮಯವಾಗಿದ್ದುವು. ಇಂದು ಭಾರತೀಯ ಶಿಲ್ಪಲೋಕದಲ್ಲಿ ನಯಗಾರಿಕೆ, ಅಂದ, ವೈಭವಗಳಿಗೆ ಮಯ ಹೆಸರುವಾಸಿಯಾಗಿದ್ದಾನೆ. ಮೂಜಗವ - ಮೂರು ಲೋಕಗಳನ್ನು ಪ್ಲಥ್ವಿ, ಆಕಾಶ, ಪಾತಾಳ
ಮೂಲ ...{Loading}...
ಒಸಗೆ ಮೆರೆದುದು ಮಯನ ಮಿಗೆ ಮ
ನ್ನಿಸಿದನವನಿಪನಂಗಚಿತ್ತದೊ
ಳಸುರ ಕಿಂಕರರನಿಬರನು ಸನ್ಮಾನ ದಾನದಲಿ
ಒಸೆದು ಕಳುಹಿದನಾತನನು ದೆಸೆ
ದೆಸೆಯ ಯಾಚಕ ನಿಕರ ನೂಕಿತು
ಮುಸುಕಿತೈ ಧರ್ಮಜನ ಕೀರ್ತಿಯ ಝಾಡಿ ಮೂಜಗವ ॥17॥
೦೧೮ ದಿವಸ ದಿವಸದೊಳುಣ್ಡುದವನೀ ...{Loading}...
ದಿವಸ ದಿವಸದೊಳುಂಡುದವನೀ
ದಿವಿಜ ಸಂತತಿ ಹತ್ತು ಸಾವಿರ
ವವರನೇನೆಂದೆಣಿಸುವೆನು ಮಾರ್ಗಣ ಮಹೋದಧಿಯ
ವಿವಿಧ ರತ್ನಾಭರಣ ಕಾಂಚನ
ನವ ದುಕೂಲದ ದಿಂಡಿನಲಿ ಬುಧ
ನಿವಹ ದಣಿದುದನಂತ ಕೃಪಣಾನಾಥ ಜನಸಹಿತ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಿನದಿನವೂ ಹತ್ತು ಸಾವಿರ ಬ್ರಾಹ್ಮಣರ ತಂಡ ಬಂದು ಊಟಮಾಡುತ್ತಿದ್ದರು. ಇನ್ನು ಯಾಚಕರ ಮಹಾಸಾಗರವನ್ನು ಏನೆಂದು ಎಣಿಸಲಿ? ನಾನಾ ರತ್ನಾಭರಣ, ಚಿನ್ನ, ರೇಷ್ಮೆವಸ್ತ್ರಗಳ ದಾನದಿಂದ ಪಂಡಿತರು, ದರಿದ್ರರು, ಅನಾಥರು, ತೃಪ್ತಿ ಹೊಂದಿದರು.
ಪದಾರ್ಥ (ಕ.ಗ.ಪ)
ಮಾರ್ಗಣ-ಯಾಚಕ, ಮಹೋದಧಿ-ಮಹಾಸಾಗರ, ಕಾಂಚನ-ಚಿನ್ನ, ದುಕೂಲ-ರೇಷ್ಮೆವಸ್ತ್ರ, ಬುಧ-ಪಂಡಿತ
ದಿವಸ ದಿವಸದೊಳು-ಪ್ರತಿನಿತ್ಯವೂ, ದಿವಿಜ-ದೇವತೆ,
ಅವನೀ ದಿವಿಜ-ಭೂಸುರ, ಬ್ರಾಹ್ಮಣ,
ಮಾರ್ಗಣ ಮಹೋದಧಿಯ-ಯಾಚಕರ ಮಾಹಾಸಾಗರವನ್ನು,
ಕಾಂಚನ-ಚಿನ್ನ,
ದುಕೂಲ-ರೇಷ್ಮೆವಸ್ತ್ರ,
ದಿಂಡು-ಸಮೂಹ,
ಬುಧನಿವಹ-ಪಂಡಿತರ ಸಮೂಹ,
ಅನಂತ-ಕೊನೆಯಿಲ್ಲದಷ್ಟು,
ಕೃಪಣ-ಬಡವರು,
ಅನಾಥರ-ದಿಕ್ಕಿಲ್ಲದವರ
ಮೂಲ ...{Loading}...
ದಿವಸ ದಿವಸದೊಳುಂಡುದವನೀ
ದಿವಿಜ ಸಂತತಿ ಹತ್ತು ಸಾವಿರ
ವವರನೇನೆಂದೆಣಿಸುವೆನು ಮಾರ್ಗಣ ಮಹೋದಧಿಯ
ವಿವಿಧ ರತ್ನಾಭರಣ ಕಾಂಚನ
ನವ ದುಕೂಲದ ದಿಂಡಿನಲಿ ಬುಧ
ನಿವಹ ದಣಿದುದನಂತ ಕೃಪಣಾನಾಥ ಜನಸಹಿತ ॥18॥
೦೧೯ ಆ ಮಹೋತ್ಸವವೇಳು ...{Loading}...
ಆ ಮಹೋತ್ಸವವೇಳು ದಿನವಭಿ
ರಾಮರಂಜಿತವಾಯ್ತು ಶುಭದಿನ
ರಾಮಣೀಯಕ ಲಗ್ನದಲಿ ಹೊಕ್ಕನು ಮಹಾಸಭೆಯ
ಭೂಮಿಪಾಲರನಂತ ಸುಜನ
ಸ್ತೋಮವನುಜರಮರ್ತ್ಯರೆನಿಪ ಸ
ನಾಮರಿದ್ದರು ರಾಯನೆಡಬಲವಂಕದಿದಿರಿನಲಿ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಏಳು ದಿನಗಳವರೆಗೆ ಮಹೋತ್ಸವ ಬಲು ಮನೋಹರವಾಗಿ ನಡೆಯಿತು. ಧರ್ಮರಾಜನು ಶುಭದಿನ ಶುಭಲಗ್ನದಲ್ಲಿ ಆ ಮಹಾಸಭೆಯನ್ನು ಪ್ರವೇಶಿಸಿದ. ಅಸಂಖ್ಯಾತ ಮಂದಿ ರಾಜರುಗಳೂ, ಸುಜನರ ಸಮೂಹವೂ, ದೇವಸಮಾನರಾದ ತನ್ನ ಅನುಜರೂ, ಪ್ರಸಿದ್ಧ ಪುರುಷರೂ, ರಾಜನ ಎಡಬಲ ಮತ್ತು ಎದುರಿನಲ್ಲಿ ಕುಳಿತಿದ್ದರು.
ಪದಾರ್ಥ (ಕ.ಗ.ಪ)
ಸ್ತೋಮ-ಸಮೂಹ, ಅಮರ್ತ್ಯ-ದೇವತೆ, ರಾಮಣೀಯಕ-ಸುಂದರ
ಮಹೋತ್ಸವ-ದೊಡ್ಡ ಸಮಾರಂಭ, ಅಭಿರಾಮರಂಜಿತವಾಯ್ತು-ಮನೋಹರವಾಗಿ ಕಂಡಿತು, ರಾಮಣೀಯಕ-ಸುಂದರವಾದ, ಭೂಮಿಪಾಲರು-ರಾಜರುಗಳು, ಅನಂತ-ಕೊನೆಯಿಲ್ಲದಷ್ಟು, ಸುಜನ ಸ್ತೋಮ-ಸಜ್ಜನರ ಸಮೂಹ, ಅನುಜರು-ತಮ್ಮಂದಿರು,
ಅಮರ್ತ್ಯರು-ದೇವತೆಗಳು, ಸನಾಮರು-ಪ್ರಸಿದ್ಧರಾದವರು, ರಾಯ-ಯುಧಿಷ್ಠಿರ ರಾಜನ, ಎಡಬಲವಂಕದಲಿ-ಎಡಬಲಪಕ್ಕಗಳಲ್ಲಿ
ಮೂಲ ...{Loading}...
ಆ ಮಹೋತ್ಸವವೇಳು ದಿನವಭಿ
ರಾಮರಂಜಿತವಾಯ್ತು ಶುಭದಿನ
ರಾಮಣೀಯಕ ಲಗ್ನದಲಿ ಹೊಕ್ಕನು ಮಹಾಸಭೆಯ
ಭೂಮಿಪಾಲರನಂತ ಸುಜನ
ಸ್ತೋಮವನುಜರಮರ್ತ್ಯರೆನಿಪ ಸ
ನಾಮರಿದ್ದರು ರಾಯನೆಡಬಲವಂಕದಿದಿರಿನಲಿ ॥19॥
೦೨೦ ಹೊಳೆ ಹೊಳೆದುದಾಸ್ಥಾನ ...{Loading}...
ಹೊಳೆ ಹೊಳೆದುದಾಸ್ಥಾನ ಕಾಂತಾ
ವಳಿಯ ಕಂಗಳ ಬೆಳಕಿನಲಿ ತನಿ
ಮುಳುಗಿತೋಲಗ ಲಲಿತರಸ ಲಾವಣ್ಯಲಹರಿಯಲಿ
ವಿಲಸದಖಿಳಾಭರಣ ರತ್ನಾ
ವಳಿಯ ರಶ್ಮಿಯಲಡಿಗಡಿಗೆ ಪ್ರ
ಜ್ವಲಿಸಿತಾ ಸಭೆ ದೀಪ್ತಿಮಯ ವಿವಿಧಾನುಭಾವದಲಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಂತೆಯರ ಸಮೂಹದ ಕಣ್ಣುಗಳ ಬೆಳಕಿನಿಂದ ಆಸ್ಥಾನ ಪ್ರಕಾಶಮಾನವಾಗಿ ಬೆಳಗತೊಡಗಿತು. ಅವರ ಕೋಮಲವಾದ
ಸೌಂದರ್ಯದ ಅಲೆಗಳಿಂದ ಆಸ್ಥಾನ ಮುಳುಗಿ ಹೋಯಿತು. ಪ್ರಕಾಶಮಾನವಾದ ನಾನಾ ಆಭರಣಗಳ ರತ್ನಾವಳಿಯ ಕಿರಣಗಳಿಂದ ಸಭೆ ವಿಧವಿಧವಾಗಿ ದೀಪ್ತಿಮಯವಾಗಿ ಪ್ರಜ್ವಲಿಸಿತು.
ಪದಾರ್ಥ (ಕ.ಗ.ಪ)
ಕಾಂತಾವಳಿಯ-ಸ್ತ್ರೀಯರ, ಕಂಗಳ ಬೆಳಕಿನಲಿ-ಕಣ್ಣುಗಳ ಬೆಳಕಿನಿಂದಲೇ, ಓಲಗ-ಸಭೆ, ತನಿಮುಳುಗಿತು-ಪೂರ್ಣವಾಗಿ, ಮುಳುಗಿಹೋಯಿತು, ಲಲಿತರಸ ಲಾವಣ್ಯಲಹರಿಯಲಿ-ಮನೋಹರವಾದ ಸೌಂದರ್ಯಸ ಅಲೆಗಳಿಂದ, ವಿಲಸತ್-ಹೊಳೆಯುತ್ತಿದ್ದ
ಅಖಿಳಾಭರಣ ರತ್ನಾವಳಿಯ-ಆ ಎಲ್ಲರ ಆಭರಣಗಳ, ರತ್ನಾವಳಿಯ ರಶ್ಮಿಯಲಿ-ರತ್ನಸಮೂಹದಿಂದ ಹೊಮ್ಮುತ್ತಿದ್ದ ಕಿರಣಗಳಿಂದ, ಅಡಿಗಡಿಗೆ-ಮತ್ತೆ ಮತ್ತೆ, ದೀಪ್ತಿಮಯ-ಪ್ರಕಾಶಮಾನವಾಗಿ, ವಿವಿಧಾನುಭಾವದಲಿ-ಬಗೆಬಗೆಯ ಅನುಭವಗಳನ್ನುಂಟುಮಾಡುತ್ತಾ,
ಪ್ರಜ್ವಲಿಸಿತು-ಚೆನ್ನಾಗಿ ಬೆಳಗಿತು
ಮೂಲ ...{Loading}...
ಹೊಳೆ ಹೊಳೆದುದಾಸ್ಥಾನ ಕಾಂತಾ
ವಳಿಯ ಕಂಗಳ ಬೆಳಕಿನಲಿ ತನಿ
ಮುಳುಗಿತೋಲಗ ಲಲಿತರಸ ಲಾವಣ್ಯಲಹರಿಯಲಿ
ವಿಲಸದಖಿಳಾಭರಣ ರತ್ನಾ
ವಳಿಯ ರಶ್ಮಿಯಲಡಿಗಡಿಗೆ ಪ್ರ
ಜ್ವಲಿಸಿತಾ ಸಭೆ ದೀಪ್ತಿಮಯ ವಿವಿಧಾನುಭಾವದಲಿ ॥20॥
೦೨೧ ಮೇಳದಲಿ ಗನ್ಧರ್ವರಿಪ್ಪ ...{Loading}...
ಮೇಳದಲಿ ಗಂಧರ್ವರಿಪ್ಪ
ತ್ತೇಳು ತುಂಬುರ ಸಹಿತ ಶುದ್ದದ
ಸಾಳಗದ ಸಂಕೀರ್ಣ ದೇಶಿಯ ವಿವಿಧ ರಚನೆಗಳ
ಬಾಳೆಯರ ಸುರಗಣಿಕೆಯರ ಮುಖ
ಚಾಳೆಯರ ಸಂಗೀತ ತಾಳದ
ತೂಳುವರೆ ತುಂಬಿದುದು ಕುಸುಮಾಯುಧನ ಕಳಕಳವ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತುಂಬುರರಾದಿಯಾಗಿ ಇಪ್ಪತ್ತೇಳು ಗಂಧರ್ವರು ಸಂಗೀತ ಮೇಳದಲ್ಲಿ ಸಂಕೀರ್ಣ ದೇಶಿಯಲ್ಲಿ ಸಾಳಗರಾಗದ ವಿವಿಧ ರಚನೆಗಳನ್ನು ಹಾಡಿದರು. ಬಾಲೆಯರ, ಸುರಗಣಿಕೆಯರ, ಮುಖ ಚಾಳೆಯರ ಸಂಗೀತ ಹಾಗೂ ಲಯಬದ್ಧವಾದ ತೂಳುವರೆಯ ನಾದ ಮನ್ಮಥನ ಅಖಾಡದಂತಿದ್ದ ಆ ಸಭೆಯನ್ನೆಲ್ಲ ಆವರಿಸಿತು.
ಪದಾರ್ಥ (ಕ.ಗ.ಪ)
ಸಾಳಗ-ರಾಗದ ಹೆಸರು, ಸಾರಂಗ, ಚಾಳೆಯರ-ನೃತ್ಯಗಾರ್ತಿಯರ, ತೂಳುವರೆ-ಚರ್ಮವಾದ್ಯ, ಕಳವಳ- , ಚಾಳೆ-ನೃತ್ಯದಲ್ಲಿ ಹೆಜ್ಜೆ ಹಾಕುವ ಕ್ರಮ
ಮೇಳದಲಿ-ಸಂಗೀತಗಾರರ ಜೊತೆಯಲ್ಲಿ, ಬಾಳೆಯರ-ತರುಣಿಯರ, ಸುರಗಣಿಕೆಯರ-ದೇವಸ್ತ್ರೀಯರ, ತೂಳುವರೆ-?
ಮುಖ-? ಚಾಳೆಯರ-? ಕುಸುಮಾಯುಧ-ಪುಷ್ಪಬಾಣ ಎನ್ನಿಸಿದ ಮನ್ಮಥ
ಮೂಲ ...{Loading}...
ಮೇಳದಲಿ ಗಂಧರ್ವರಿಪ್ಪ
ತ್ತೇಳು ತುಂಬುರ ಸಹಿತ ಶುದ್ದದ
ಸಾಳಗದ ಸಂಕೀರ್ಣ ದೇಶಿಯ ವಿವಿಧ ರಚನೆಗಳ
ಬಾಳೆಯರ ಸುರಗಣಿಕೆಯರ ಮುಖ
ಚಾಳೆಯರ ಸಂಗೀತ ತಾಳದ
ತೂಳುವರೆ ತುಂಬಿದುದು ಕುಸುಮಾಯುಧನ ಕಳಕಳವ ॥21॥
೦೨೨ ಆ ಮಹಾಸಭೆಯಲಿ ...{Loading}...
ಆ ಮಹಾಸಭೆಯಲಿ ಯುಧಿóóಷ್ಠಿರ
ಭೂಮಿಪತಿ ದೂರದಲಿ ಕಂಡನು
ತಾಮರಸದಳ ನಯನ ಸಂನಿಭ ಭಾವ ಭಾವಿತನ
ಹಾ ಮಹಾದೇವೆತ್ತಣದುಭುತ
ಧಾಮವಿದು ದಿನಮಣಿಯ ತೇಜ
ಸ್ತೋಮವೆರಡರ ಧಾತುಯೆನುತೀಕ್ಷಿಸಿದರಾ ದೆಸೆಯ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮಜನ ಒಡ್ಡೋಲಗ ಹೀಗೆ ನಡೆದಿರಲಾಗಿ ಯುಧಿಷ್ಠಿರ ಆಗಸದಲ್ಲಿ ಕಮಲನಯನನಾದ ಶ್ರೀಕೃಷ್ಣನ ತೇಜಸ್ಸಿಗೆ ಸಮಾನವೆನಿಸುವ ದಿವ್ಯ ತೇಜಸ್ಸನ್ನು ನೋಡಿದ. ಆ ಸಭೆಯಲ್ಲಿದ್ದವರೆಲ್ಲರೂ ಹಾ ಮಹದೇವ ! ಎಲ್ಲಿಯದು ಈ ಅದ್ಭುತವಾದ ತೇಜೋರಾಶಿ, ಸೂರ್ಯದ್ವಯರ ತೇಜಸ್ಸಿನಂತೆ ಇದೆಯಲ್ಲ ! ಎಂದು ಆ ಬೆಳಕು ಬರುತ್ತಿದ್ದ ದಿಕ್ಕನ್ನೇ ನೋಡತೊಡಗಿದರು.
ಪದಾರ್ಥ (ಕ.ಗ.ಪ)
ತಾಮರಸದಳ -ಕಮಲದ ದಳ
ಸಂನಿಭ-ಸದೃಶ, ಧಾಮ-ಬೆಳಕು,ತೇಜಸ್ಸು, ಹೊಳಪು
ಕಿರಣ, ದಿನಮಣಿ -ಸೂರ್ಯ
ಭೂಮಿಪತಿ-ರಾಜ, ತಾಮರಸದಳ ನಯನ ಸಂನಿಭ-ತಾವರೆಯ ಹೂವಿನಂತೆ ಕಣ್ಣುಳ್ಳ ಕೃಷ್ಣನಿಗೆ ಸಮಾನನೆನಿಸಿದ, ಎತ್ತಣ-ಎಲ್ಲಿಯ, ಅದುಭುತ ಧಾಮ-ಆಶ್ಚರ್ಯಕರ ಪ್ರಕಾಶ, ದಿನಮಣಿಯ-ಸೂರ್ಯನಂತಹ, ತೇಜಸ್ತೋಮವೆರಡರ-ಎರಡು ಬೆಳಕಿನ ರಾಶಿಗಳ ಸತ್ತ್ವವುಳ್ಳದ್ದು,
ಈಕ್ಷಿಸಿದ-ನೋಡಿದ, ಆ ದೆಸೆಯ-ಆ ದಿಕ್ಕನ್ನು
ಮೂಲ ...{Loading}...
ಆ ಮಹಾಸಭೆಯಲಿ ಯುಧಿóóಷ್ಠಿರ
ಭೂಮಿಪತಿ ದೂರದಲಿ ಕಂಡನು
ತಾಮರಸದಳ ನಯನ ಸಂನಿಭ ಭಾವ ಭಾವಿತನ
ಹಾ ಮಹಾದೇವೆತ್ತಣದುಭುತ
ಧಾಮವಿದು ದಿನಮಣಿಯ ತೇಜ
ಸ್ತೋಮವೆರಡರ ಧಾತುಯೆನುತೀಕ್ಷಿಸಿದರಾ ದೆಸೆಯ ॥22॥
೦೨೩ ಲಲಿತತೇಜಃಪುಞ್ಜ ಮಿಗೆ ...{Loading}...
ಲಲಿತತೇಜಃಪುಂಜ ಮಿಗೆ ಥಳ
ಥಳಿಸಿತತಿ ದೂರದಲಿ ಬೆಳಗಿನ
ಗೊಳಸನುಡಿದಂತಾದುದಾಗಳೆ ತೋರಿತಾಕಾರ
ತಳಿತುದವಯವ ಶುದ್ಧವರ್ಣ
ಸ್ಥಳವು ನಿಮಿಷಕೆ ಮುನಿವರಾಕೃತಿ
ಹೊಳೆದುದಾಕ್ಷಣವೀತ ನಾರದನೆಂದುದಖಿಳಜನ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅತಿ ದೂರದಲ್ಲಿ ಕೋಮಲವಾದ ತೇಜೋರಾಶಿ ಥಳಥಳಿಸಿತು. ನೋಡುನೋಡುತ್ತಿದ್ದಂತೆ ಬೆಳಕಿನ ಕೊಂಡಿ ಕಳಚಿಕೊಂಡಂತೆ ಒಂದು ಆಕಾರ ಕಾಣಿಸಿತು. ಮತ್ತೆ ಅದಕ್ಕೆ ಅವಯವಗಳುಂಟಾದುವು. ಶುದ್ಧವರ್ಣವಾಗಿ ಕಾಣಿಸುತ್ತಿದ್ದ ಆ ಬೆಳಕು ನಿಮಿಷದಲ್ಲಿ ಮುನಿವರನ ಆಕಾರವನ್ನು ತಳೆಯಿತು. ಆ ಕೂಡಲೇ ಓ ಈತ ನಾರದ ಎಂದು ಎಲ್ಲರೂ ಉದ್ಗರಿಸಿದರು.
ಪದಾರ್ಥ (ಕ.ಗ.ಪ)
ಗೊಳಸು-ಕೊಂಡಿ, ಉಡಿ-ಮುರಿ
ಲಲಿತತೇಜಃಪುಂಜ-ಕೋಮಲವಾದ ಬೆಳಕಿನ ರಾಶಿ, ಮಿಗೆ-ವಿಶೇಷವಾಗಿ, ಥಳಥಳಿಸಿತು-ಥಳಥಳನೆ ಹೊಳೆಯಿತು, ಆಗಳೆ-ಆ ಕೂಡಲೆ,
ಬೆಳಗಿನಗೊಳಸನು-ಬೆಳಕಿನ ಕೊಂಡಿಯನ್ನು, ಉಡಿದಂತಾದುದು-ಮುರಿದು ಹಾಕಿದಂತಾಯಿತು, ಆಕಾಶದಿಂದ ಪ್ರತ್ಯೇಕಗೊಂಡಿತು, ತೋರಿತು-ಕಾಣಿಸಿತು, ತಳಿತುದು-ಕಾಣಿಸಿಕೊಂಡಿತು, ತತುಕ್ಷಣ-ತತ್ಕ್ಷಣ, ಆ ಕೂಡಲೇ
ಮೂಲ ...{Loading}...
ಲಲಿತತೇಜಃಪುಂಜ ಮಿಗೆ ಥಳ
ಥಳಿಸಿತತಿ ದೂರದಲಿ ಬೆಳಗಿನ
ಗೊಳಸನುಡಿದಂತಾದುದಾಗಳೆ ತೋರಿತಾಕಾರ
ತಳಿತುದವಯವ ಶುದ್ಧವರ್ಣ
ಸ್ಥಳವು ನಿಮಿಷಕೆ ಮುನಿವರಾಕೃತಿ
ಹೊಳೆದುದಾಕ್ಷಣವೀತ ನಾರದನೆಂದುದಖಿಳಜನ ॥23॥
೦೨೪ ದಣಿಯದಾತನ ಬೆರಳು ...{Loading}...
ದಣಿಯದಾತನ ಬೆರಳು ನಾರಾ
ಯಣ ರವದ ವೀಣೆಯಲಿ ಹೃದಯಾಂ
ಗಣದ ಸೀಮೆಗೆ ಬಿಡಯವಾಗದು ಕೃಷ್ಣಪದ ಕೇಳಿ
ಪ್ರಣವರೂಪದ ಭಾವಶುದ್ಧಿಯ
ಕಣಿ ಮುರಾರಿಯ ತನ್ಮಯದ ನಿ
ರ್ಗುಣ ಮುನೀಶ್ವರನಿಳಿದನಿಂದ್ರಪ್ರಸ್ಥಪುರವರಕೆ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾರಾಯಣ ಎಂಬ ನಾದವನ್ನು ಸದಾ ಹೊರಸೂಸುವ ಆ ವೀಣೆಯನ್ನು ಎಷ್ಟು ನುಡಿಸಿದರೂ ಆತನ ಬೆರಳಿಗೆ ದಣಿವಾಗದು. ಅವನ ಹೃದಯದ ಅಂಗಣದಲ್ಲಿ ಕೃಷ್ಣ ಪದಗಳ ನರ್ತನಕ್ಕೆ ಬಿಡುವು ದೊರೆಯದು. ಪ್ರಣವರೂಪದ ಭಾವಶುದ್ಧಿಯ ಗಣಿಯಾದ ಮುರಾರಿಯಲ್ಲೇ ತನ್ಮಯನಾದ ಆ ನಿರ್ಗುಣ ಮುನೀಶ್ವರನು ಇಂದ್ರಪ್ರಸ್ಥ ಪಟ್ಟಣಕ್ಕೆ ಇಳಿದು ಬಂದ.
ಪದಾರ್ಥ (ಕ.ಗ.ಪ)
ಬಿಡಯ-ಅವಕಾಶ
ನಾರಾಯಣರವದ-ನಾರಾಯಣ ಎಂಬ ನಾದವನ್ನು ಹೊರಡಿಸುವ, ಹೃದಯಾಂಗಣದ-ಅಂತರಂಗವೆಂಬ ಅಂಗಳಕ್ಕೆ, ಕೃಷ್ಣಪದ ಕೇಳಿ-ಕೃಷ್ಣ ಪದಗಳ ನರ್ತನಕ್ಕೆ, ಬಿಡಯವಾಗದು-ಬಿಡುವು ದೊರೆಯದು, ಪ್ರಣವ-ಓಂಕಾರ, ಕಣಿ-ಗಣಿ, ತನ್ಮಯದ-ತಲ್ಲೀನತೆಯನ್ನು ಹೊಂದಿದ, ನಿರ್ಗುಣ-ಗುಣಗಳಿಗೆ ಅತೀತನಾದ, ಮುನೀಶ್ವರನ-ಋಷಿ ಶ್ರೇಷ್ಠನಾದ, ನಾರದನು
ಮೂಲ ...{Loading}...
ದಣಿಯದಾತನ ಬೆರಳು ನಾರಾ
ಯಣ ರವದ ವೀಣೆಯಲಿ ಹೃದಯಾಂ
ಗಣದ ಸೀಮೆಗೆ ಬಿಡಯವಾಗದು ಕೃಷ್ಣಪದ ಕೇಳಿ
ಪ್ರಣವರೂಪದ ಭಾವಶುದ್ಧಿಯ
ಕಣಿ ಮುರಾರಿಯ ತನ್ಮಯದ ನಿ
ರ್ಗುಣ ಮುನೀಶ್ವರನಿಳಿದನಿಂದ್ರಪ್ರಸ್ಥಪುರವರಕೆ ॥24॥
೦೨೫ ಬನ್ದನರಮನೆಗಾ ಮುನಿಯನಭಿ ...{Loading}...
ಬಂದನರಮನೆಗಾ ಮುನಿಯನಭಿ
ವಂದಿಸಿದುದಾಸ್ಥಾನವಿದಿರಲಿ
ನಿಂದು ಬಿಜಯಂಗೈಸಿ ತಂದರು ಸಿಂಹವಿಷ್ಟರಕೆ
ಸಂದ ಮಧುಪರ್ಕಾದಿ ಸತ್ಕೃತಿ
ಯಿಂದ ಪೂಜಿಸಿ ವಿನಯ ಮಿಗೆ ನಗು
ತೆಂದನವನೀಪಾಲನುಚಿತೋಕ್ತಿಯಲಿ ನಾರದನ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾರದ ನೇರವಾಗಿ ಅರಮನೆಗೆ ಬಂದ. ಆಸ್ಥಾನದಲ್ಲಿದ್ದವರೆಲ್ಲ ಅವನಿಗೆ ವಂದಿಸಿದರು. ಅವನನ್ನು ಸ್ವಾಗತಿಸಿ ಒಳಕ್ಕೆ ಕರೆತಂದು ಸಿಂಹಾಸನದಲ್ಲಿ ಕುಳ್ಳಿರಿಸಿದರು. ಮಧುಪರ್ಕವೇ ಮೊದಲಾದ ಸತ್ಕಾರ್ಯಗಳಿಂದ ಉಪಚರಿಸಿದರು. ಅನಂತರ ಧರ್ಮರಾಯ ಅತಿಶಯ ವಿನಯದಿಂದ ಹಸನ್ಮುಖಿಯಾಗಿ ಉಚಿತವಾದ ಮಾತುಗಳಿಂದ ನಾರದನನ್ನು ಮಾತನಾಡಿಸಿದ.
ಪದಾರ್ಥ (ಕ.ಗ.ಪ)
ಸಿಂಹವಿಷ್ಟರ-ಸಿಂಹಾಸನ, ಮಧುಪರ್ಕ-ಮೊಸರು, ತುಪ್ಪ, ನೀರು, ಜೇನು, ಸಕ್ಕರೆ, ಇವುಗಳ ಮಿಶ್ರಣ ಅತಿಥಿಗಳಿಗೆ ಅರ್ಪಿಸುವುದು.
ಅಭಿವಂದಿಸಿದುದು-ಸಭೆ ನಮಸ್ಕರಿಸಿತು, ಬಿಜಯಂಗೈಸಿ-ಗೌರವದಿಂದ ಕರೆತಂದು, ಸಿಂಹವಿಷ್ಟರ-ಸಿಂಹಾಸನ, ಸತ್ಕೃತಿ-ಸತ್ಕಾರ, ವಿನಯ ಮಿಗೆ-ಅತಿಶಯ ವಿನಯದಿಂದ, ಅವನೀಪಾಲನು-ರಾಜ ಯುಧಿಷ್ಠರನು, ಉಚಿತೋಕ್ತಿಯಲಿ-ಯೋಗ್ಯವಾದ ಮಾತುಗಳಿಂದ
ಟಿಪ್ಪನೀ (ಕ.ಗ.ಪ)
ನಾರದ
ಮೂಲ ...{Loading}...
ಬಂದನರಮನೆಗಾ ಮುನಿಯನಭಿ
ವಂದಿಸಿದುದಾಸ್ಥಾನವಿದಿರಲಿ
ನಿಂದು ಬಿಜಯಂಗೈಸಿ ತಂದರು ಸಿಂಹವಿಷ್ಟರಕೆ
ಸಂದ ಮಧುಪರ್ಕಾದಿ ಸತ್ಕೃತಿ
ಯಿಂದ ಪೂಜಿಸಿ ವಿನಯ ಮಿಗೆ ನಗು
ತೆಂದನವನೀಪಾಲನುಚಿತೋಕ್ತಿಯಲಿ ನಾರದನ ॥25॥
೦೨೬ ಕುಶಲವೇ ನಿಮ್ಮಙ್ಘ್ರಿಗಳಿಗಿಂ ...{Loading}...
ಕುಶಲವೇ ನಿಮ್ಮಂಘ್ರಿಗಳಿಗಿಂ
ದೊಸಗೆಯಾಯಿತು ನಮಗೆ ದರುಶನ
ವಸಮಸಂಸೃತಿವಹ್ನಿದಗ್ಧರಿಗಮೃತವರ್ಷವಲೆ
ಪಶುಪತಿಯ ಪರಮೇಷ್ಠಿಯಾ ಮುರ
ದ್ವಿಷನ ಸಾಮಥ್ರ್ಯದ ಸಗಾಢದ
ಎಸಕ ನಿಮಗುಂಟೆಂದು ಕೊಂಡಾಡಿದನು ನಾರದನ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಮ್ಮ ಪಾದಗಳಿಗೆ ಕ್ಷೇಮವೇ ? ತಮ್ಮ ದರ್ಶನದಿಂದ ನಮಗೆ ಸಂತೋಷವಾಯಿತು. ಈ ವಿಷಮವಾದ ಸಂಸಾರವೆಂಬ ಬೆಂಕಿಯಿಂದ ದಹಿಸಲ್ಪಟ್ಟವರಿಗೆ ನಿಮ್ಮ ದರ್ಶನ ಅಮೃತದ ಮಳೆ ಸುರಿದಂತಲ್ಲವೇ ! ಶಿವನ ಬ್ರಹ್ಮನ ವಿಷ್ಣುವಿನ ಮೂವರ ಸಾಮಥ್ರ್ಯವೂ ನಿಮ್ಮಲ್ಲ್ಲುಂಟು ! ಎಂದು ಧರ್ಮಜ ನಾರದನನ್ನು ಹೊಗಳಿದನು.
ಪದಾರ್ಥ (ಕ.ಗ.ಪ)
ಸಂಸೃತಿ-ಪ್ರಪಂಚ-ಸಂಸಾರ,
ವಹ್ನಿ-ಬೆಂಕಿ, ದಗ್ಧ-ಸುಡಲ್ಪಟ್ಟ,
ವರ್ಷ-ಮಳೆ, ಪಶುಪತಿ-ಶಿವ,
ಪರಮೇಷ್ಠಿ-ಬ್ರಹ್ಮ,
ಮುರದ್ವಿಷ-ಮುರಾರಿ
ಎಸಕ-ಸಾಮಥ್ರ್ಯ
ಅಂಘ್ರಿ-ಪಾದ, ಒಸಗೆಯಾಯಿತು-ಹರ್ಷವಾಯಿತು, ಅಸಮ-ಏರುಪೇರಾದ, ಸಂಸೃತಿವಹ್ನಿ-ಸಂಸಾರ(ಪ್ರಪಂಚ)ವೆಂಬ ಬೆಂಕಿಯಿಂದ,
ದಗ್ಧರಿಗೆ-ದಹಿಸಲ್ಪಡುತ್ತಿರುವವರಿಗೆ (ತಮ್ಮ ಆಗಮನ), ಅಮೃತವರ್ಷವಲೆ-ಅಮೃತದ ಮಳೆ ಸುರಿದಂತಾಯಿತಲ್ಲವೇ ?! ಪಶುಪತಿಯ-ಪರಮೇಶ್ವರನ, ಪರಮೇಷ್ಠಿಯ-ಬ್ರಹ್ಮನ, ಮುರದ್ವಿಷನ-ಮುರಾರಿಯ, ಕೃಷ್ಣ (ಈ ಮೂವರ) ಸಾಮಥ್ರ್ಯದ, ಸಗಾಢದ-ದಟ್ಟವಾದ, ಎಸಕ-ಪ್ರಭಾವ, ಕೊಂಡಾಡಿದನು-ಹೊಗಳಿದನು
ಮೂಲ ...{Loading}...
ಕುಶಲವೇ ನಿಮ್ಮಂಘ್ರಿಗಳಿಗಿಂ
ದೊಸಗೆಯಾಯಿತು ನಮಗೆ ದರುಶನ
ವಸಮಸಂಸೃತಿವಹ್ನಿದಗ್ಧರಿಗಮೃತವರ್ಷವಲೆ
ಪಶುಪತಿಯ ಪರಮೇಷ್ಠಿಯಾ ಮುರ
ದ್ವಿಷನ ಸಾಮಥ್ರ್ಯದ ಸಗಾಢದ
ಎಸಕ ನಿಮಗುಂಟೆಂದು ಕೊಂಡಾಡಿದನು ನಾರದನ ॥26॥
೦೨೭ ಕುಶಲವೆಮಗಿನ್ದೈದೆ ನೀನೀ ...{Loading}...
ಕುಶಲವೆಮಗಿಂದೈದೆ ನೀನೀ
ವಸುಮತೀವಧುಗೊಳ್ಳಿದನೆ ಶೋ
ಭಿಸುವುದೇ ಭವದಾಜ್ಞೆಯಲಿ ವರ್ಣಾಶ್ರಮಾಚಾರ
ದೆಸೆ ದೆಸೆಗಳಮಳಾಗ್ನಿ ಹೋತ್ರ
ಪ್ರಸರಧೂಮಧ್ವಜಗಳೇ ನಿಂ
ದಿಸರಲೇ ದುರ್ಜನರು ಸುಜನರನೆಂದನಾ ಮುನಿಪ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾನಿಂದು ಕುಶಲವಾಗಿದ್ದೇನೆ ಎಂದು ಹೇಳಿ, ನಾರದ ಧರ್ಮರಾಜನನ್ನು ರಾಜಕಾರಣದ ಹಲವು ಪ್ರಶ್ನೆನ್ನು ಕೇಳುತ್ತಾನೆ. ನೀನು ಈ ಭೂವಧುವಿಗೆ ಒಳ್ಳೆಯ ಪತಿಯಾಗಿದ್ದೀಯಾ ? ನಿನ್ನ ಆಜ್ಞೆಗೆ ಅಧೀನವಾಗಿ ವರ್ಣಾಶ್ರಮ ಧರ್ಮ ಶೋಭಿಸುತ್ತಿದೆಯೇ ? ಎಲ್ಲ ದಿಕ್ಕುಗಳಲ್ಲೂ ಶ್ರೇಷ್ಠವಾದ ಅಗ್ನಿಹೋತ್ರದ ಹೊಗೆ ಧ್ವಜಗಳಂತೆ ಹರಡುತ್ತಿವೆಯೇ? ಸಜ್ಜನರನ್ನು ದುರ್ಜನರು ನಿಂದಿಸುತ್ತಿಲ್ಲ ಅಲ್ಲವೇ ?
ಪದಾರ್ಥ (ಕ.ಗ.ಪ)
ಕುಶಲ-ಕ್ಷೇಮ, ಎಮಗೆ-ನಮಗೆ, ಐದೆ-ಚೆನ್ನಾಗಿ, ವಸುಮತೀವಧುಗೆ-ಭೂಮಿಯೆಂಬ (ರಾಜ್ಯವೆಂಬ) ಕನ್ಯೆಗೆ, (ನೀನು) ಒಳ್ಳಿದನೆ-ಯೋಗ್ಯವರನಾಗಿದ್ದೀಯಾ?, ಭವತ್-ನಿನ್ನ, ಆಜ್ಞೆ-ಅಪ್ಪಣೆ, ನಿಂದಿಸರಲೇ-ದೂಷಿಸುವುದಿಲ್ಲವಷ್ಟೆ ?, ದುರ್ಜನರು-ಕೆಟ್ಟಜನರು, ಸುಜನರನು-ಒಳ್ಳೆಯವರನ್ನು
ಮೂಲ ...{Loading}...
ಕುಶಲವೆಮಗಿಂದೈದೆ ನೀನೀ
ವಸುಮತೀವಧುಗೊಳ್ಳಿದನೆ ಶೋ
ಭಿಸುವುದೇ ಭವದಾಜ್ಞೆಯಲಿ ವರ್ಣಾಶ್ರಮಾಚಾರ
ದೆಸೆ ದೆಸೆಗಳಮಳಾಗ್ನಿ ಹೋತ್ರ
ಪ್ರಸರಧೂಮಧ್ವಜಗಳೇ ನಿಂ
ದಿಸರಲೇ ದುರ್ಜನರು ಸುಜನರನೆಂದನಾ ಮುನಿಪ ॥27॥
೦೨೮ ಅರ್ಥದಿನ್ ಧರ್ಮವನು ...{Loading}...
ಅರ್ಥದಿಂ ಧರ್ಮವನು ಧರ್ಮದಿ
ನರ್ಥವನು ಧರ್ಮಾರ್ಥವೆರಡನು
ವ್ಯರ್ಥಕಾಮದಲಳಿಯಲೇ ರಾಜ್ಯಾಭಿಲಾಷೆಯಲಿ
ಅರ್ಥಸಾಧನ ಧರ್ಮಸಾಧನ
ವರ್ಥ ಧರ್ಮದಲುಭಯ ಲೋಕಕ
ನರ್ಥಸಾಧನ ಕಾಮವೆಂದನು ಮುನಿ ನೃಪಾಲಂಗೆ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜ್ಯದ ಅಭಿಲಾಷೆಯಿಂದ ಕೂಡಿದ ನೀನು ಅರ್ಥದಿಂದ ಧರ್ಮವನ್ನು ಧರ್ಮದಿಂದ ಅರ್ಥವನ್ನೂ, ವ್ಯರ್ಥವಾದ ಕಾಮದಿಂದ ಧರ್ಮಾರ್ಥಗಳೆರಡನ್ನೂ ಹಾಳುಮಾಡಿಕೊಳ್ಳುತ್ತಿಲ್ಲವಲ್ಲವೇ ? ಅರ್ಥಕ್ಕೆ ಸಾಧನವಾದದ್ದು ಧರ್ಮ, ಧರ್ಮಸಾಧನವಾದದ್ದು ಅರ್ಥ. ಉಭಯಲೋಕಕ್ಕೂ ಅನರ್ಥಸಾಧನವಾದದ್ದು ಕಾಮ ಎಂಬುದನ್ನು ಬಲ್ಲೆಯಲ್ಲವೇ ?
ಪದಾರ್ಥ (ಕ.ಗ.ಪ)
ವ್ಯರ್ಥಕಾಮದಲಿ-ನಿಷ್ಪ್ರಯೋಜಕವಾದ ಕಾಮದಲ್ಲಿ, ಅಳಿಯಲೇ-ಹಾಳುಮಾಡುವುದಿಲ್ಲ ಅಲ್ಲವೇ ?, ರಾಜ್ಯಾಭಿಲಾಷೆಯಲಿ-ರಾಜ್ಯದ ಮೇಲಿನ ಆಸೆಯಿಂದ
ಟಿಪ್ಪನೀ (ಕ.ಗ.ಪ)
ಪುರುಷಾರ್ಥಗಳು - ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ
ಮೂಲ ...{Loading}...
ಅರ್ಥದಿಂ ಧರ್ಮವನು ಧರ್ಮದಿ
ನರ್ಥವನು ಧರ್ಮಾರ್ಥವೆರಡನು
ವ್ಯರ್ಥಕಾಮದಲಳಿಯಲೇ ರಾಜ್ಯಾಭಿಲಾಷೆಯಲಿ
ಅರ್ಥಸಾಧನ ಧರ್ಮಸಾಧನ
ವರ್ಥ ಧರ್ಮದಲುಭಯ ಲೋಕಕ
ನರ್ಥಸಾಧನ ಕಾಮವೆಂದನು ಮುನಿ ನೃಪಾಲಂಗೆ ॥28॥
೦೨೯ ಮಾನ್ಯರನು ಧಿಕ್ಕರಿಸೆಯೆಲೆಯವ ...{Loading}...
ಮಾನ್ಯರನು ಧಿಕ್ಕರಿಸೆಯೆಲೆಯವ
ಮಾನ್ಯರನು ಮನ್ನಿಸೆಯಲೇ ಸಂ
ಮಾನ್ಯರನು ಸತ್ಕರಿಸುವಾ ಹಳಿವಾ ವಿಕಾರಿಗಳ
ಅನ್ಯರನು ನಿನ್ನವರ ಮಾಡಿಯ
ನನ್ಯರನು ಬಾಹಿರರ ಮಾಡಿವ
ದಾನ್ಯರನು ನಿಗ್ರಹಿಸೆಯೆಲೆ ಭೂಪಾಲ ಕೇಳ್ ಎಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಾನ್ಯರನ್ನು ನೀನು ಧಿಕ್ಕರಿಸುವುದಿಲ್ಲವಲ್ಲವೇ ? ಅವಮಾನ್ಯರನ್ನು ಸಂಮಾನಿಸುವುದಿಲ್ಲವಲ್ಲವೇ ? ಸಂಮಾನ್ಯರನ್ನು ಸತ್ಕರಿಸುತ್ತಿರುವೆಯೋ ? ವಿಕಾರಿಗಳನ್ನು ಹಳಿಯುತ್ತಿರುವೆಯೇ ? ರಾಜಾ, ಅನ್ಯರನ್ನು ನಿನ್ನವರನ್ನಾಗಿ ಮಾಡಿಕೊಂಡು, ನಿನ್ನವರನ್ನಲ್ಲದೆ ಬೇರೆಯವರನ್ನು ಕಾಣದ ಅನನ್ಯರನ್ನು ಬಾಹಿರರನ್ನಾಗಿ ಮಾಡಿ, ದಾನಶೀಲರನ್ನು ನಿಗ್ರಹಿಸುವುದಿಲ್ಲವಲ್ಲವೇ ?
ಪದಾರ್ಥ (ಕ.ಗ.ಪ)
ವದಾನ್ಯ-ದಾನಶೀಲ
ಮಾನ್ಯರನು-ಗೌರವಕ್ಕೆ ಪಾತ್ರರಾದವರನ್ನು, ಧಿಕ್ಕರಿಸೆಯೆಲೆ-ತಿರಸ್ಕಾರದಿಂದ ಕಾಣುವುದಿಲ್ಲವಷ್ಟೆ?, ಅನಮಾನ್ಯರನು-ಅಯೋಗ್ಯರನ್ನು
ಮನ್ನಿಸೆಯಲೇ-ಗೌರವಿಸುವುದಿಲ್ಲ ತಾನೇ ?, ಸತ್ಕರಿಸು-ಗೌರವಿಸು, ಹಳಿ-ನಿಂದಿಸು, ವಿಕಾರಿಗಳು-ದುರ್ಮತಿಗಳು, ಅನ್ಯರನು-ಇತರರನ್ನು, ಬಾಹಿರರು-ಹೊರಗಿನವರು, ವದಾನ್ಯರು-ಹಿತವಂತರೂ, ದಾನಶೀಲರೂ, ಅನನ್ಯರನು-ನಮ್ಮವರನ್ನೇ, ನಿಗ್ರಹಿಸು-ನಾಶಮಾಡು
ಮೂಲ ...{Loading}...
ಮಾನ್ಯರನು ಧಿಕ್ಕರಿಸೆಯೆಲೆಯವ
ಮಾನ್ಯರನು ಮನ್ನಿಸೆಯಲೇ ಸಂ
ಮಾನ್ಯರನು ಸತ್ಕರಿಸುವಾ ಹಳಿವಾ ವಿಕಾರಿಗಳ
ಅನ್ಯರನು ನಿನ್ನವರ ಮಾಡಿಯ
ನನ್ಯರನು ಬಾಹಿರರ ಮಾಡಿವ
ದಾನ್ಯರನು ನಿಗ್ರಹಿಸೆಯೆಲೆ ಭೂಪಾಲ ಕೇಳೆಂದ ॥29॥
೦೩೦ ಖಳರ ಖಣ್ಡಿಸುವಾ ...{Loading}...
ಖಳರ ಖಂಡಿಸುವಾ ಮದ ವ್ಯಾ
ಕುಲರ ದಂಡಿಸುವಾ ದರಿದ್ರರ
ನೊಲಿದು ರಕ್ಷಿಸುವಾ ಸುಮಾಯಾವಿಗಳ ಶಿಕ್ಷಿಸುವ
ಕುಲಯುತರ ಕೊಂಡಾಡುವಾ ರಿಪು
ಬಲದ ತಲೆ ಚೆಂಡಾಡುವಾ ದು
ರ್ಬಲರನತಿ ಬಾಧಿಸೆಯಲೇ ಭೂಪಾಲ ಕೇಳ್ ಎಂದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುಷ್ಟರನ್ನು ಖಂಡಿಸುವೆಯಾ ? ಮದದಿಂದ ವ್ಯಾಕುಲಗೊಂಡವರನ್ನು ದಂಡಿಸುವೆಯಾ ? ದರಿದ್ರರಾದವರನ್ನು ಪ್ರೀತಿಯಿಂದ ರಕ್ಷಿಸುವೆಯಾ ? ಮಹಾಮಯಾವಿಗಳಾದವರನ್ನು ಶಿಕ್ಷಿಸುವೆಯಾ ? ಸತ್ಕುಲದವರನ್ನು ಕೊಂಡಾಡುವೆಯಾ ? ಶತ್ರು ಸೈನ್ಯದ ತಲೆಗಳನ್ನು ಚೆಂಡಾಡುವೆಯಾ ? ದುರ್ಬಲರನ್ನು ಅತಿಯಾಗಿ ಬಾಧಿಸುವುದಿಲ್ಲ ಅಲ್ಲವೇ ರಾಜಾ ?
ಪದಾರ್ಥ (ಕ.ಗ.ಪ)
ಖಳ-ನೀಚ, ದುಷ್ಟ,
ಮದವ್ಯಾಕುಲ-ಗರ್ವದಿಂದ ಪೀಡಿತರು,
ದಂಡಿಸು-ಶಿಕ್ಷಿಸು,
ದರಿದ್ರರನು-ಬಡವರನ್ನು,
ಮಾಯಾವಿ-ಇಂದ್ರಜಾಲ ಮಾಡುವವನು,
ಕುಲಯುತರು-ಸತ್ಕುಲಕ್ಕೆ ಸೇರಿದವರು,
ಕೊಂಡಾಡು-ಹೊಗಳು,
ಬಾಧಿಸು-ನೋಯಿಸು
ಮೂಲ ...{Loading}...
ಖಳರ ಖಂಡಿಸುವಾ ಮದ ವ್ಯಾ
ಕುಲರ ದಂಡಿಸುವಾ ದರಿದ್ರರ
ನೊಲಿದು ರಕ್ಷಿಸುವಾ ಸುಮಾಯಾವಿಗಳ ಶಿಕ್ಷಿಸುವ
ಕುಲಯುತರ ಕೊಂಡಾಡುವಾ ರಿಪು
ಬಲದ ತಲೆ ಚೆಂಡಾಡುವಾ ದು
ರ್ಬಲರನತಿ ಬಾಧಿಸೆಯಲೇ ಭೂಪಾಲ ಕೇಳೆಂದ ॥30॥
೦೩೧ ಜಾತಿ ಸಙ್ಕರವಿಲ್ಲಲೇ ...{Loading}...
ಜಾತಿ ಸಂಕರವಿಲ್ಲಲೇ ಜನ
ಜಾತದಲಿ ಹೀನೋತ್ತಮರು ನಿ
ರ್ಣೀತರೇ ನಿಜಮಾರ್ಗದಲಿ ಕುಲವಿಹಿತ ಧರ್ಮದಲಿ
ಖ್ಯಾತರೇ ಸತ್ಪುರುಷರಧಿಕ
ದ್ಯೂತ ಕೇಳಿಗಳಿಲ್ಲಲೇ ಮೃಗ
ಯಾತಿರೇಕವ್ಯಸನ ಕಿರಿದೇ ರಾಯ ನಿನಗೆಂದ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನ್ನ ರಾಜ್ಯದಲ್ಲಿ ಜಾತಿಸಂಕರವಿಲ್ಲ ತಾನೇ ? ಜನಸಮೂಹದಲ್ಲಿ ಹೀನರನ್ನು ಉತ್ತಮರನ್ನೂ ನಿರ್ಣಯಿಸಿದ್ದೀಯಾ ? ಕುಲಕ್ಕೆ
ವಿಹಿತವಾದ ಧರ್ಮದಲ್ಲಿ ಜನ ನಡೆದುಕೊಳ್ಳುತ್ತಿರುವವರಲ್ಲವೇ ? ಸತ್ಪುರುಷರು ಕೀರ್ತಿವಂತರಾಗಿರುವರಲ್ಲವೇ ? ಜೂಜಾಟ ಅತಿಯಾಗಿ ಇಲ್ಲ ತಾನೇ ? ನಿನಗೆ ಬೇಟೆಯಾಡುವ ಚಟ ಮಿತವಾಗಿ ಇದೆಯಷ್ಟೆ, ರಾಜಾ ?
ಪದಾರ್ಥ (ಕ.ಗ.ಪ)
ಜಾತಿಸಂಕರ-ಬೇರೆಬೇರೆ, ಜಾತಿಗಳ ಮಿಶ್ರಣ.
ದ್ಯೂತಕೇಳಿ-ಜೂಜಾಟ,
ಮೃಗಯಾವ್ಯಸನ-ಬೇಟೆಯಾಡುವ ಚಟ,
ಜಾತಿ ಸಂಕರ-ಬೇರೆ ಬೇರೆ ಜಾತಿಗಳ ಮಿಶ್ರಣ, ಜನಜಾತ-ಜನಗಳ ಸಮೂಹ, ಹೀನ-ಕೀಳು, ನಿರ್ಣೀತರೇ-ತೀರ್ಮಾನಗೊಂಡಿದ್ದಾರೆಯೇ ?, ಕುಲವಿಹಿತ-ಕುಲಕ್ಕೆ ಹೊಂದುವಂತಹ, ದ್ಯೂತಕೇಳಿ-ಜೂಜಾಟ, ಮೃಗಯಾ-ಬೇಟೆ, ಅತಿರೇಕವ್ಯಸನ-ಅತಿಯಾದ ಗೀಳು
ಮೂಲ ...{Loading}...
ಜಾತಿ ಸಂಕರವಿಲ್ಲಲೇ ಜನ
ಜಾತದಲಿ ಹೀನೋತ್ತಮರು ನಿ
ರ್ಣೀತರೇ ನಿಜಮಾರ್ಗದಲಿ ಕುಲವಿಹಿತ ಧರ್ಮದಲಿ
ಖ್ಯಾತರೇ ಸತ್ಪುರುಷರಧಿಕ
ದ್ಯೂತ ಕೇಳಿಗಳಿಲ್ಲಲೇ ಮೃಗ
ಯಾತಿರೇಕವ್ಯಸನ ಕಿರಿದೇ ರಾಯ ನಿನಗೆಂದ ॥31॥
೦೩೨ ಗಸಣಿಯಿಲ್ಲಲೆ ನಿನಗೆ ...{Loading}...
ಗಸಣಿಯಿಲ್ಲಲೆ ನಿನಗೆ ಸಪ್ತ
ವ್ಯಸನದಲಿ ನಿನ್ನನುಜ ತನುಜರ
ಮುಸುಡಧರ್ಮದಲಿರದಲೇ ವೈದಿಕ ವಿಧಾನದಲಿ
ಸಸಿನವೇ ನಿನ್ನರಿತ ಖಳರಿಗೆ
ಹುಸಿಕರಿಗೆ ಡಂಬಕರಿಗಜ್ಞರಿ
ಗುಸುರುವಾ ನಿನ್ನಂತರಂಗವನೆಂದನಾ ಮುನಿಪ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಪ್ತವ್ಯಸನದ ವಿಷಯದಲ್ಲಿ ನಿನಗೆ ಘರ್ಷಣೆಯಿಲ್ಲ ತಾನೇ ? ನಿನ್ನ ಅನುಜರ ಮತ್ತು ತನುಜರ ಮುಖ ಅಧರ್ಮದ ಕಡೆ ಇಲ್ಲ ತಾನೇ ? ವೈದಿಕ ವಿಧಾನದಲ್ಲಿ ನಿನ್ನ ತಿಳಿವಳಿಕೆ ಸಮರ್ಪಕವಾಗಿದೆಯೇ ? ನೀಚರಿಗೆ, ಅಸತ್ಯನುಡಿವವರಿಗೆ, ವಂಚಕರಿಗೆ, ತಿಳಿವಳಿಕೆಯಿಲ್ಲದವರಿಗೆ ನಿನ್ನ ಮನಸ್ಸಿನಲ್ಲಿರುವುದನ್ನು ಹೇಳುವುದಿಲ್ಲವಲ್ಲವೇ ?
ಪದಾರ್ಥ (ಕ.ಗ.ಪ)
ಗಸಣಿ-ಘರ್ಷಣೆ, ತನುಜ-ಮಗ, ಮುಸುಡು-ಮುಖ, ಹುಸಿಕ-ಸುಳ್ಳುಗಾರ, ಡಂಬಕ-ವಂಚಕ, ಸಸಿನ-ನೇರ, ಸಪ್ತವ್ಯಸನ-ಸ್ತ್ರೀ, ಅಕ್ಷ, ಮೃಗಯಾ, ಪಾನ, ವಾಕ್ಪೌರುಷ್ಯ, ದಂಡಪೌರುಷ್ಯ, ಅರ್ಥದೂಷಣ,
ಗಸಣಿ-ಘರ್ಷಣೆ, ತಿಕ್ಕಾಟ, ಇಲ್ಲಲೆ-ಇಲ್ಲ ಅಲ್ಲವೇ ?, ಅನುಜ-ತಮ್ಮ, ತನುಜ-ಮಗ, ಮುಸುಡು-ಮುಖ, ಸಸಿನವೇ-ನೇರವಾಗಿದೆಯೇ?
ನಿನ್ನರಿತ-ನಿನ್ನ ತಿಳಿವು, ಖಳರು-ದುಷ್ಟರು, ಹುಸಿಕರು-ಸುಳ್ಳುಗಾರರು, ಡಂಬಕರು-ವಂಚಕರು, ಅಜ್ಞರು-ತಿಳುವಳಿಕೆಯಿಲ್ಲದವರು, ಉಸುರುವಾ-ಹೇಳುವೆಯಾ ?, ನಿನ್ನ ಅಂತರಂಗವನು-ಮನಸ್ಸಿನಲ್ಲಿರುವುದನ್ನು
ಪಾಠಾನ್ತರ (ಕ.ಗ.ಪ)
ಡಂಬಕರಿಗಜ್ಞರಿ
ಗುಸುರುವಾ - ಡಂಬಕರಿಗಜ್ಞರಿ
ಗುಸುರೆಯಲೇ
ಟಿಪ್ಪನೀ (ಕ.ಗ.ಪ)
ಸಪ್ತವ್ಯಸನ-ಸ್ತ್ರೀ, ಅಕ್ಷ, ಮೃಗಯಾ, ಪಾನ, ವಾಕ್ಪೌರುಷ್ಯ, ದಂಡಪೌರುಷ್ಯ, ಅರ್ಥದೂಷಣ,
ಮೂಲ ...{Loading}...
ಗಸಣಿಯಿಲ್ಲಲೆ ನಿನಗೆ ಸಪ್ತ
ವ್ಯಸನದಲಿ ನಿನ್ನನುಜ ತನುಜರ
ಮುಸುಡಧರ್ಮದಲಿರದಲೇ ವೈದಿಕ ವಿಧಾನದಲಿ
ಸಸಿನವೇ ನಿನ್ನರಿತ ಖಳರಿಗೆ
ಹುಸಿಕರಿಗೆ ಡಂಬಕರಿಗಜ್ಞರಿ
ಗುಸುರುವಾ ನಿನ್ನಂತರಂಗವನೆಂದನಾ ಮುನಿಪ ॥32॥
೦೩೩ ಹುರುಡಿಗರನೇಕಾನ್ತದೊಳಗಾ ...{Loading}...
ಹುರುಡಿಗರನೇಕಾಂತದೊಳಗಾ
ದರಿಸುವರು ಭೇದಕರ ಬುದ್ಧಿಗೆ
ತೆರಹುಗೊಡುವರು ಕುಟಿಲರಿಗೆ ವಿಶ್ವಾಸ ಹೀನರಿಗೆ
ಮರುಳುಗೊಂಬರು ಖೂಳರಿಗೆ ಭಂ
ಡರಿಗೆ ತೆರುವರು ಧನವನೀ ಧರೆ
ಯರಸುಗಳಿಗಿದು ಸಹಜ ನಿನ್ನಂತಸ್ಥವೇನೆಂದ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆಲವು ರಾಜರು ಹೊಟ್ಟೆಕಿಚ್ಚುಪಡುವವರನ್ನು ಏಕಾಂತದಲ್ಲಿ ಆದರಿಸುತ್ತಾರೆ. ಭೇದಬುದ್ಧಿಯಿರುವವರಿಗೆ ಅವಕಾಶ ಮಾಡಿಕೊಡುತ್ತಾರೆ. ವಂಚಕರಿಗೂ ವಿಶ್ವಾಸವಿಲ್ಲದವರಿಗೂ ಮರುಳಾಗುತ್ತಾರೆ. ದುಷ್ಟರಿಗೂ ಭಂಡರಿಗೂ ಹಣವನ್ನು ತೆರುತ್ತಾರೆ. ಇದು ಸಹಜವಾಗಿ ನಡೆಯುತ್ತದೆ. ಇದರ ಬಗ್ಗೆ ನಿನ್ನ ಮನಸ್ಸು ಏನೆನ್ನುತ್ತದೆ ?
ಪದಾರ್ಥ (ಕ.ಗ.ಪ)
ಹುರುಡಿಗ-ಹೊಟ್ಟೆಕಿಚ್ಚುಪಡುವವನು,
ಕುಟಿಲ-ವಂಚಕ,
ವಿಶ್ವಾಸ-ನಂಬಿಕೆ
ಹುರುಡಿಗರು-ಹೊಟ್ಟೆಕಿಚ್ಚಿನವರು, ಏಕಾಂತದೊಳಗೆ-ಯಾರೂ ಇಲ್ಲದಾಗ, ಆದರಿಸು-ಗೌರವದಿಂದ ಕಾಣು, ಭೇದಕರು-ವ್ಯತ್ಯಾಸವನ್ನು ಎಣಿಸುವವರು, ತೆರಹುಗೊಡು-ಅವಕಾಶಕೊಡು, ಕುಟಿಲರು-ವಂಚಕರು, ವಿಶ್ವಾಸಹೀನ-ನಂಬಿಕೆಗೆ ಪಾತ್ರನಲ್ಲದವನು, ಖೂಳರು-ನೀಚರು, ಭಂಡರು-ಲಜ್ಜೆಯಿಲ್ಲದವರು, ಅಂತಸ್ಥ-ಮನಸ್ಸಿನಲ್ಲಿರುವುದು
ಮೂಲ ...{Loading}...
ಹುರುಡಿಗರನೇಕಾಂತದೊಳಗಾ
ದರಿಸುವರು ಭೇದಕರ ಬುದ್ಧಿಗೆ
ತೆರಹುಗೊಡುವರು ಕುಟಿಲರಿಗೆ ವಿಶ್ವಾಸ ಹೀನರಿಗೆ
ಮರುಳುಗೊಂಬರು ಖೂಳರಿಗೆ ಭಂ
ಡರಿಗೆ ತೆರುವರು ಧನವನೀ ಧರೆ
ಯರಸುಗಳಿಗಿದು ಸಹಜ ನಿನ್ನಂತಸ್ಥವೇನೆಂದ ॥33॥
೦೩೪ ಒಳಗೆ ಕುಜನರು ...{Loading}...
ಒಳಗೆ ಕುಜನರು ಹೊರಗೆ ಧರಣೀ
ವಳೆಯ ಮಾನ್ಯರು ಛತ್ರ ಚಮರದ
ನೆಳಲು ಖೂಳರಿಗಾತಪದ ಬಲುಬೇಗೆ ಬುಧಜನಕೆ
ಒಳಗೆ ರಾಜದ್ರೋಹಿಗಳು ಹೊರ
ವಳಯದಲಿ ಪತಿಕಾರ್ಯನಿಷ್ಠರು
ಬಳಸಿಹುದು ನೃಪಚರಿತ ನಿನ್ನಂತಸ್ಥವೇನೆಂದ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಳಗೆ ಕೆಟ್ಟವರಾದವರು ಪ್ರಪಂಚದಲ್ಲಿ ಮಾನ್ಯರಂತೆ ವರ್ತಿಸುತ್ತಾರೆ. ಛತ್ರ ಚಾಮರದ ನೆಳಲು ದುಷ್ಟರಿಗೆ ದೊರೆಯುತ್ತದೆ. ವಿದ್ವಾಂಸರಿಗೆ ಬಿಸಿಲಬೇಗೆಯಾಗುತ್ತದೆ. ಒಳಗೆ ರಾಜದ್ರೋಹಿಗಳಾಗಿದ್ದು ಹೊರಗೆ ಸ್ವಾಮಿಕಾರ್ಯನಿಷ್ಠರಂತೆ ವರ್ತಿಸುತ್ತಾರೆ. ಇಂಥವರು ರಾಜರನ್ನು ಬಳಸಿರುತ್ತಾರೆ. ಇದು ನಿನ್ನ ಮನಸ್ಸಿಗೆ ಏನೆನ್ನಿಸುತ್ತದೆ ?
ಪದಾರ್ಥ (ಕ.ಗ.ಪ)
ಬುಧಜನ-ವಿದ್ವಾಂಸರು
ಕುಜನರು-ದುಷ್ಟರು, ಧರಣೀವಳೆಯ-ಭೂಮಂಡಲದಲ್ಲೆಲ್ಲ, ಮಾನ್ಯರು-ಗೌರವಾನ್ವಿತರು, ಚಮರ-ಚಾಮರ, ಖೂಳರಿಗೆ-ನೀಚರಿಗೆ,
ಆತಪದ-ಬಿಸಿಲಿನ, ಬಲುಬೇಗೆ-ಅತಿಯಾದ ಸೆಕೆ, ಬುಧಜನ-ವಿದ್ವಾಂಸರು, ರಾಜದ್ರೋಹಿ-ರಾಜನಿಗೆ ಕೆಟ್ಟದ್ದನ್ನು ಮಾಡುವವನು, ಹೊರವಳಯದಲಿ-ಹೊರಗಿನ ಆವರಣದಲ್ಲಿ, ಪತಿಕಾರ್ಯನಿಷ್ಠರು-ಸ್ವಾಮಿಯ ಕೆಲಸವನ್ನು ಶ್ರದ್ಧೆಯಿಂದ ಮಾಡುವವರು, ಬಳಸಿಹುದು-ಸುತ್ತುಗಟ್ಟಿರುವುದು, ನೃಪಚರಿತ-ರಾಜನ ನಡತೆ, ನಿನ್ನ ಅಂತಸ್ಥ-ನಿನ್ನ ಮನಸ್ಸಿನ ಅಭಿಪ್ರಾಯ
ಮೂಲ ...{Loading}...
ಒಳಗೆ ಕುಜನರು ಹೊರಗೆ ಧರಣೀ
ವಳೆಯ ಮಾನ್ಯರು ಛತ್ರ ಚಮರದ
ನೆಳಲು ಖೂಳರಿಗಾತಪದ ಬಲುಬೇಗೆ ಬುಧಜನಕೆ
ಒಳಗೆ ರಾಜದ್ರೋಹಿಗಳು ಹೊರ
ವಳಯದಲಿ ಪತಿಕಾರ್ಯನಿಷ್ಠರು
ಬಳಸಿಹುದು ನೃಪಚರಿತ ನಿನ್ನಂತಸ್ಥವೇನೆಂದ ॥34॥
೦೩೫ ಖೂಳರೊಡನೆ ವಿನೋದ ...{Loading}...
ಖೂಳರೊಡನೆ ವಿನೋದ ಭಂಡರೊ
ಳಾಳಿ ಸ್ವಾಮಿದ್ರೋಹರೊಡನೆ ಸ
ಮೇಳ ನಂಬುಗೆ ಡಂಭರೊಡನೆ ವಿಕಾರಿಯೊಡನಾಟ
ಸೂಳೆಯರುಸಮಜೀವಿಗಳು ಕುಲ
ಬಾಲಕಿಯರೂಗಡಿಕೆಯವರು ನೃ
ಪಾಲ ಜನಕಿದು ಸಹಜ ನಿನ್ನಂತಸ್ಥವೇನೆಂದ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುಷ್ಟರೊಡನೆ ವಿನೋದ. ಭಂಡರೊಡನೆ ಸ್ನೇಹ, ಸ್ವಾಮಿದ್ರೋಹಮಾಡುವವರೊಡನೆ ಸಹವಾಸ, ವಂಚಕರಲ್ಲಿ ನಂಬಿಕೆ, ವಿಕಾರಿಗಳೊಡನೆ ಸಹವಾಸ. ಸೂಳೆಯರು, ಅವರಿಗೆ ಸರಿಸಮವಾಗಿ ಜೀವಿಸುವವರು ! ಕುಲವನಿತೆಯರನ್ನು ಕಂಡರೆ ಅವರಿಗೆ ಓಕರಿಕೆ ! ರಾಜರಾದವರಿಗೆ ಇದು ಸಹಜ. ನಿನ್ನ ಮನಸ್ಸಿಗೆ ಈ ವಿಷಯ ಏನೆನ್ನಿಸುತ್ತದೆ ?
ಪದಾರ್ಥ (ಕ.ಗ.ಪ)
ಖೂಳರು-ನೀಚರು, ಭಂಡರು-ಲಜ್ಜೆಗೇಡಿಗಳು, ಆಳು-ಮುಳುಗು, ಸ್ವಾಮಿದ್ರೋಹರು-ಯಜಮಾನನಿಗೆ ಕೆಟ್ಟದ್ದನ್ನು ಬಗೆಯುವವರು,
ಸಮೇಳ-ಜೊತೆಗೂಡುವಿಕೆ, ನಂಬುಗೆ-ನಂಬಿಕೆ, ಡಂಭರು-ವಂಚಕರು, ವಿಕಾರಿ-ಕೆಟ್ಟಮನಸ್ಸುಳ್ಳವನು, ಒಗಡಿಕೆಯವರು-ತಿರಸ್ಕರಿಸಲ್ಪಡುವವರು, ನೃಪಾಲಜನಕೆ-ರಾಜರುಗಳಿಗೆ, ನಿನ್ನಂತಸ್ಥ-ನಿನ್ನ ಅಭಿಪ್ರಾಯ
ಮೂಲ ...{Loading}...
ಖೂಳರೊಡನೆ ವಿನೋದ ಭಂಡರೊ
ಳಾಳಿ ಸ್ವಾಮಿದ್ರೋಹರೊಡನೆ ಸ
ಮೇಳ ನಂಬುಗೆ ಡಂಭರೊಡನೆ ವಿಕಾರಿಯೊಡನಾಟ
ಸೂಳೆಯರುಸಮಜೀವಿಗಳು ಕುಲ
ಬಾಲಕಿಯರೂಗಡಿಕೆಯವರು ನೃ
ಪಾಲ ಜನಕಿದು ಸಹಜ ನಿನ್ನಂತಸ್ಥವೇನೆಂದ ॥35॥
೦೩೬ ಆರು ಗುಣದೊಳುಪಾಯ ...{Loading}...
ಆರು ಗುಣದೊಳುಪಾಯ ನಾಲ್ಕರೊ
ಳೇರಿಹುದೆ ಮನ ರಾಜಧರ್ಮದ
ಮೂರು ವರ್ಗದೊಳೆಚ್ಚರುಂಟೇ ನಯವಿಧಾನದಲಿ
ಮೂರು ಶಕ್ತಿಗಳೊಳಗೆ ಮನ ಬೇ
ರೂರಿಹುದೆ ಸಪ್ತಾಂಗದಲಿ ಮೈ
ದೋರಿಹೈ ಬೇಸರೆಯೆಲೇ ಭೂಪಾಲ ನೀನೆಂದ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಷಡ್ಗುಣಗಳಲ್ಲಿ, ಚತುರುಪಾಯಗಳಲ್ಲಿ ನಿನ್ನ ಮನಸ್ಸು ಏರಿದೆಯೇ ? ರಾಜಧರ್ಮದ ಮೂರು ಮಾರ್ಗಗಳಲ್ಲಿ ಎಚ್ಚರವಿದೆಯೇ? ರಾಜನೀತಿಯ ಮೂರು ಶಕ್ತಿಗಳಲ್ಲಿ ನಿನ್ನ ಮನಸ್ಸು ಬೇರೂರಿದೆಯೇ ? ಸಪ್ತಾಂಗಗಳಲ್ಲಿ ಬೇಸರಿಸದೆ ಕಾಣಿಸಿಕೊಳ್ಳುವೆಯಲ್ಲವೇ, ರಾಜ?
ಪದಾರ್ಥ (ಕ.ಗ.ಪ)
ನಯವಿಧಾನದಲಿ-ರಾಜನೀತಿಯಂತೆ, ಮನಬೇರೂರಿಹುದೆ-ಬೇರು ಬಿಟ್ಟಂತೆ ಮನಸ್ಸು ದೃಢವಾಗಿ ಇರುವುದೇ ? ಮೈದೋರು-ಕಾಣಿಸಿಕೊ, ಬೇಸರೆಯೆಲೇ-ಬೇಸರಪಟ್ಟುಕೊಳ್ಳುವುದಿಲ್ಲ ಅಲ್ಲವೇ?
ಟಿಪ್ಪನೀ (ಕ.ಗ.ಪ)
ಮೂರುಶಕ್ತಿ-ಪ್ರಭುಶಕ್ತಿ, ತಂತ್ರಶಕ್ತಿ, ಉತ್ಸಾಹಶಕ್ತಿ,
ತ್ರಿವರ್ಗ-ಧರ್ಮ, ಅರ್ಥ, ಕಾಮ,
ಷಡ್ಗುಣ-ಉದ್ಯಮ, ಸಾಹಸ, ಧೈರ್ಯ, ಬುದ್ಧಿ, ಶಕ್ತಿ, ಪರಾಕ್ರಮ.
ಚತುರುಪಾಯ-ಸಾಮ, ದಾನ, ಭೇದ, ದಂಡ.
ಸಪ್ತಾಂಗ-ಸ್ವಾಮಿ, ಅಮಾತ್ಯ, ಸುಹೃತ್, ಕೋಶ, ರಾಷ್ಟ್ರ, ದುರ್ಗ, ಬಲ.
ಮೂಲ ...{Loading}...
ಆರು ಗುಣದೊಳುಪಾಯ ನಾಲ್ಕರೊ
ಳೇರಿಹುದೆ ಮನ ರಾಜಧರ್ಮದ
ಮೂರು ವರ್ಗದೊಳೆಚ್ಚರುಂಟೇ ನಯವಿಧಾನದಲಿ
ಮೂರು ಶಕ್ತಿಗಳೊಳಗೆ ಮನ ಬೇ
ರೂರಿಹುದೆ ಸಪ್ತಾಂಗದಲಿ ಮೈ
ದೋರಿಹೈ ಬೇಸರೆಯೆಲೇ ಭೂಪಾಲ ನೀನೆಂದ ॥36॥
೦೩೭ ಪ್ರಜೆಗಳನುರಾಗಿಗಳೆ ಸುಭಟ ...{Loading}...
ಪ್ರಜೆಗಳನುರಾಗಿಗಳೆ ಸುಭಟ
ವ್ರಜಕೆ ಜೀವಿತ ಸಂದಿಹುದೆ ವರ
ಸುಜನರಿಗೆ ಸಂತೋಷವೇ ಮಧುರೋಕ್ತಿ ರಚನೆಯಲಿ
ವಿಜಯ ಭೀಮರು ಯಮಳರಿವರ
ಗ್ರಜರೊಳನುಜರಭಿನ್ನರೇ ಗಜ
ಬಜಿಕೆಯಂತಃಪುರದೊಳಿಲ್ಲಲೆ ರಾಯ ಕೇಳ್ ಎಂದ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರಜೆಗಳು ನಿನ್ನಲ್ಲಿ ಅನುರಾಗವುಳ್ಳವರಾಗಿದ್ದಾರೆಯೇ ? ನಿನ್ನ ಸೈನಿಕರಿಗೆಲ್ಲ ವೇತನ ಸಲ್ಲುತ್ತಿದೆಯೇ ? ರಾಜ್ಯದಲ್ಲಿ ಸಜ್ಜನರು ಪ್ರಿಯವಾದ ಮಾತುಗಳನ್ನಾಡಿಕೊಂಡು ಸಂತೋಷದಿಂದಿದ್ದಾರೆಯೇ ? ಅರ್ಜುನ, ಭೀಮ, ನಕುಲ ಸಹದೇವರು ಪರಸ್ಪರ ಅಣ್ಣತಮ್ಮಂದಿರಲ್ಲಿ ಭೇದವೆಣಿಸದೆ ನಡೆದುಕೊಳ್ಳುತ್ತಿದ್ದಾರೆಯೇ ? ಅಂತಃಪುರದಲ್ಲಿ ಸ್ತ್ರೀಯರ ಗಜಬಜ ನಡೆಯುತ್ತಿಲ್ಲವಷ್ಟೆ ?
ಪದಾರ್ಥ (ಕ.ಗ.ಪ)
ಅನುರಾಗಿಗಳು-ಪ್ರೀತಿಯುಳ್ಳವರು, ಸುಭಟ ವ್ರಜ-ವೀರರ ಸಮೂಹ, ಜೀವಿತ-ವೇತನ, ಸಂದಿಹುದೆ-ಸಂದಾಯವಾಗಿದೆಯೆ ?, ವರಸುಜನರಿಗೆ-ಸಜ್ಜನರಿಗೆ, ಮಧುರೋಕ್ತಿ-ಪ್ರಿಯವಾದ ಮಾತು, ವಿಜಯ-ಅರ್ಜುನ, ಯಮಳರು-ಅವಳಿಗಳಾದ ನಕುಲ ಸಹದೇವರು,
ಅಗ್ರಜ-ಅಣ್ಣ, ಅನುಜ-ತಮ್ಮ, ಅಭಿನ್ನರು-ವ್ಯತ್ಯಾಸವನ್ನು ಕಾಣದವರು, ಗಜಬಜಿಕೆ-ಗದ್ದಲ
ಮೂಲ ...{Loading}...
ಪ್ರಜೆಗಳನುರಾಗಿಗಳೆ ಸುಭಟ
ವ್ರಜಕೆ ಜೀವಿತ ಸಂದಿಹುದೆ ವರ
ಸುಜನರಿಗೆ ಸಂತೋಷವೇ ಮಧುರೋಕ್ತಿ ರಚನೆಯಲಿ
ವಿಜಯ ಭೀಮರು ಯಮಳರಿವರ
ಗ್ರಜರೊಳನುಜರಭಿನ್ನರೇ ಗಜ
ಬಜಿಕೆಯಂತಃಪುರದೊಳಿಲ್ಲಲೆ ರಾಯ ಕೇಳೆಂದ ॥37॥
೦೩೮ ವಿಹಿತ ಕಾಲದ ...{Loading}...
ವಿಹಿತ ಕಾಲದ ಮೇಲೆ ಸಂಧಿಯ
ನಹಿತರೊಳು ವಿರಚಿಸುವ ಮೇಣ್ವಿ
ಗ್ರಹದ ಕಾಲಕೆ ವಿಗಡಿಸುವುದೆಂಬರಸು ನೀತಿಯಲಿ
ವಿಹಿತವೇ ಮತಿ ವೈರಿ ರಾಯರ
ವಿಹರಣವನವರಾಳು ಕುದುರೆಯ
ಬಹಳತೆಯನಲ್ಪತೆಯನರಿವೈ ರಾಯ ನೀನೆಂದ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯೋಗ್ಯವಾದ ಕಾಲದಲ್ಲಿ ಶತ್ರುಗಳೊಡನೆ ಸಂಧಿಯನ್ನು ಮಾಡಿಕೊಳ್ಳಬೇಕು. ಯುದ್ಧಕ್ಕೆ ತೊಡಗಬೇಕಾದ ಕಾಲದಲ್ಲಿ ಸಂಧಿಯನ್ನು ಮುರಿದು ಯುದ್ಧದಲ್ಲಿ ಪರಾಕ್ರಮ ತೋರಿಸಬೇಕೆಂಬುದು ರಾಜನೀತಿ. ಆ ನೀತಿ ನಿನಗೆ ಒಪ್ಪಿತವಾಗಿದೆಯೇ ? ಶತ್ರುರಾಜರ ಚಲನವಲನಗಳನ್ನು ಅವರ ಆಳು ಕುದುರೆಗಳು ಅಧಿಕವಾಗಿದೆಯೇ ಅಲ್ಪವಾಗಿದೆಯೇ ಎಂಬುದನ್ನು ತಿಳಿದಿರುವೆಯಾ ರಾಜಾ ?
ಪದಾರ್ಥ (ಕ.ಗ.ಪ)
ಅಹಿತ-ಶತ್ರು, ವಿಗ್ರಹ-ಯುದ್ಧ, ವಿಹರಣ-ಚಲನವಲನ
ವಿಹಿತ-ಉಚಿತ, ಸಂಧಿಯನು-ಸ್ನೇಹವನು, ಅಹಿತರೊಳು-ಶತ್ರುಗಳಲ್ಲಿ, ವಿರಚಿಸು-ಮಾಡು, ಮೇಣ್-ಅಥವಾ, ಮತ್ತು ವಿಗ್ರಹ-ಯುದ್ಧ, ವಿಗಡಿಸು-ಕೆಡಿಸಿಬಿಡು, ಅರಸುನೀತಿ-ರಾಜನೀತಿ, ವೈರಿರಾಯ-ಶತ್ರುರಾಜ, ವಿಹರಣ-ಸಂಚಾರ, ಆಳು-ಕಾಲಾಳು ಸೈನ್ಯ, ಬಹಳತೆ-ಆಧಿಕ್ಯ
ಮೂಲ ...{Loading}...
ವಿಹಿತ ಕಾಲದ ಮೇಲೆ ಸಂಧಿಯ
ನಹಿತರೊಳು ವಿರಚಿಸುವ ಮೇಣ್ವಿ
ಗ್ರಹದ ಕಾಲಕೆ ವಿಗಡಿಸುವುದೆಂಬರಸು ನೀತಿಯಲಿ
ವಿಹಿತವೇ ಮತಿ ವೈರಿ ರಾಯರ
ವಿಹರಣವನವರಾಳು ಕುದುರೆಯ
ಬಹಳತೆಯನಲ್ಪತೆಯನರಿವೈ ರಾಯ ನೀನೆಂದ ॥38॥
೦೩೯ ಒನ್ದರಾಯಕೆ ಬೀಯ ...{Loading}...
ಒಂದರಾಯಕೆ ಬೀಯ ಸರಿ ಮ
ತ್ತೊಂದು ಕಡೆಯಲಿ ಹೀನ ಫಲವಿ
ನ್ನೊಂದು ಕಾರ್ಯದುಪೇಕ್ಷತೆಗೆ ಮೊದಲಿಲ್ಲ ಕಡೆಯಿಲ್ಲ
ಒಂದು ದುರ್ಘಟ ದೈವ ಸಾಧಿತ
ವೊಂದು ಶಂಕಿತ ಫಲವೆನಿಪ್ಪವ
ಹಿಂದುಗಳೆವೈ ಮಂತ್ರದಲಿ ಭೂಪಾಲ ಕೇಳ್ ಎಂದ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದು ಕಾರ್ಯದಲ್ಲಿ ಆದಾಯಕ್ಕೆ ವ್ಯಯ ಸರಿಹೋಗುತ್ತದೆ. ಇನ್ನೊಂದರಲ್ಲಿ ಫಲ ಕಡಿಮೆ ಅಥವಾ ಇಲ್ಲವಾಗುತ್ತದೆ, ಮತ್ತೊಂದು ಕಾರ್ಯದಲ್ಲಿ ಉಪೇಕ್ಷೆಗೆ ಮೊದಲಿಲ್ಲ ಕೊನೆಯಿಲ್ಲ. ಒಂದು ಕಾರ್ಯ ನಡೆಯುವುದೇ ಕಷ್ಟ. ಇನ್ನೊಂದು ದೈವದಿಂದಲೇ ಆಗುವುದು. ಒಂದರಲ್ಲಿ ಫಲ ದೊರೆಯುವುದು ಸಂದೇಹ. ಇಂತಹ ಕಾರ್ಯಗಳೆಲ್ಲವನ್ನೂ ಆಪ್ತರೊಡನೆ ಮಂತ್ರಾಲೋಚನೆ ನಡೆಸಿ ಪರಿಹಾರ ಮಾಡಿಕೊಳ್ಳುತ್ತೀಯಾ ರಾಜಾ ?
ಪದಾರ್ಥ (ಕ.ಗ.ಪ)
ಆಯ-ಆದಾಯ, ಬೀಯ-ವ್ಯಯ,
ಹೀನಫಲ-ಕೆಟ್ಟ ಪರಿಣಾಮ, ಉಪೇಕ್ಷತೆ-ಅಲಕ್ಷ್ಯ, ದುರ್ಘಟ-ಕೆಟ್ಟ ಘಟನೆ, ದೈವಸಾಧಿತ-ದೇವರೇ ಮಾಡಿದುದು, ಶಂಕಿತ-ಸಂದೇಹಾಸ್ಪದ, ಮಂತ್ರದಲಿ-ಮಂತ್ರಾಲೋಚನೆಯಿಂದ, ಹಿಂದುಗಳೆವೈ-ಹಿಂದಕ್ಕೆ ದೂಡಿಬಿಡುವೆಯಾ ? ಭೂಪಾಲ-ರಾಜ
ಮೂಲ ...{Loading}...
ಒಂದರಾಯಕೆ ಬೀಯ ಸರಿ ಮ
ತ್ತೊಂದು ಕಡೆಯಲಿ ಹೀನ ಫಲವಿ
ನ್ನೊಂದು ಕಾರ್ಯದುಪೇಕ್ಷತೆಗೆ ಮೊದಲಿಲ್ಲ ಕಡೆಯಿಲ್ಲ
ಒಂದು ದುರ್ಘಟ ದೈವ ಸಾಧಿತ
ವೊಂದು ಶಂಕಿತ ಫಲವೆನಿಪ್ಪವ
ಹಿಂದುಗಳೆವೈ ಮಂತ್ರದಲಿ ಭೂಪಾಲ ಕೇಳೆಂದ ॥39॥
೦೪೦ ನೆನೆದ ಮನ್ತ್ರವ ...{Loading}...
ನೆನೆದ ಮಂತ್ರವ ನಿನ್ನೊಳಾಲೋ
ಚನೆಯ ನಿಶ್ಚಯವಿಲ್ಲದಿರಲೊ
ಬ್ಬನಲಿ ಮೇಣ್ ಹಲಬರಲಿ ಜಡರಲಿ ಮತಿ ವಿಹೀನರಲಿ
ಮನ ಬರಡರಲಿ ಸಲೆ ವಿಧಾವಂ
ತನಲಿ ಮಂತ್ರಾಲೋಚನೆಯ ಸಂ
ಜನಿಸಿ ಹರಹಿನೊಳಳಿಯೆಲೇ ಭೂಪಾಲ ಕೇಳ್ ಎಂದ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಾಡಬೇಕಾದ ಕಾರ್ಯದ ಬಗ್ಗೆ ನಿನ್ನಲ್ಲಿ ಇನ್ನೂ ನಿರ್ಧಾರವಿಲ್ಲದಾಗ ಒಬ್ಬನಲ್ಲೋ ಹಲವರಲ್ಲೋ ಮಂದಬುದ್ಧಿಯವನಲ್ಲೋ, ಮೂರ್ಖನಲ್ಲೋ, ಮನಸ್ಸು ಬರಡಾಗಿರುವವನಲ್ಲೋ ಮಹಾ ಆತುರಗಾರನಲ್ಲೋ, ಮಂತ್ರಾಲೋಚನೆಯನ್ನೂ ಮಾಡಿ ವಿಷಯವನ್ನು ಹಲವರಲ್ಲಿ ಹರಡಿ ಆ ಮೂಲಕ ಅದನ್ನು ಕೆಡಿಸಿಬಿಡುವುದಿಲ್ಲ ತಾನೇ ?
ಪದಾರ್ಥ (ಕ.ಗ.ಪ)
ನೆನೆದ-ಯೋಚಿಸಿದ, ಮಂತ್ರವ-ಮಂತ್ರಾಲೋಚನೆಯನ್ನು, ಮೇಣ್-ಅಥವಾ, ಮತ್ತು ಹಲಬರಲಿ-ಅನೇಕರೊಡನೆ, ಜಡರಲಿ-ಮೂರ್ಖರಲ್ಲಿ, ವಿಹೀನರಲಿ-ಬುದ್ಧಿಯಿಲ್ಲದವರಲ್ಲಿ, ಮನಬರಡರು-ಶುಷ್ಕಮನಸ್ಸುಳ್ಳವನು, ಸಲೆ-ವಿಶೇಷ, ವಿಧಾವಂತನಲಿ-ಆತುರಗಾರನಲ್ಲಿ, ಸಂಜನಿಸಿ-ಉಂಟುಮಾಡಿ, ಹರಹಿನೊಳು-ಎಲ್ಲ ಕಡೆ ಹರಡಿ, ಅಳಿಯೆಲೇ-ನೀನು ನಾಶವಾಗುವುದಿಲ್ಲವಷ್ಟೇ ?
ಮೂಲ ...{Loading}...
ನೆನೆದ ಮಂತ್ರವ ನಿನ್ನೊಳಾಲೋ
ಚನೆಯ ನಿಶ್ಚಯವಿಲ್ಲದಿರಲೊ
ಬ್ಬನಲಿ ಮೇಣ್ ಹಲಬರಲಿ ಜಡರಲಿ ಮತಿ ವಿಹೀನರಲಿ
ಮನ ಬರಡರಲಿ ಸಲೆ ವಿಧಾವಂ
ತನಲಿ ಮಂತ್ರಾಲೋಚನೆಯ ಸಂ
ಜನಿಸಿ ಹರಹಿನೊಳಳಿಯೆಲೇ ಭೂಪಾಲ ಕೇಳೆಂದ ॥40॥
೦೪೧ ಕಿರಿದುಪೇಕ್ಷೆಯ ಬಹಳ ...{Loading}...
ಕಿರಿದುಪೇಕ್ಷೆಯ ಬಹಳ ಫಲವನು
ಹೊರೆವುದಿದು ಮೇಣಲ್ಪ ಭೇದಕೆ
ಮುರಿವುದಿದು ವಿಕ್ರಮಕೆ ವಶವಿದು ನೀತಿಸಾಧ್ಯವಿದು
ಹರಿವುದಿದು ನಯ ಶಕ್ತಿಗೆಂಬುದ
ನರಿದು ನಡೆವೈ ರಾಜಧರ್ಮದ
ಹೊರಿಗೆಯನು ಮರೆದಿರೆಯೆಲೇ ಭೂಪಾಲ ಕೇಳ್ ಎಂದ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸ್ವಲ್ಪ ಅಲಕ್ಷ್ಯ ಮಾಡಿದರೆ ಈ ಕೆಲಸ ಹೆಚ್ಚು ಫಲ ಕೊಡುತ್ತದೆ. ಸ್ವಲ್ಪ ಭೇದೋಪಾಯ ಮಾಡಿದರೆ ಈ ಕೆಲಸ ಹಾಳಾಗುತ್ತದೆ. ಪರಾಕ್ರಮ ತೋರಿದರೆ ಇದು ವಶವಾಗುತ್ತದೆ. ಇದು ರಾಜನೀತಿಯಿಂದ ಸಾಧ್ಯ. ಈ ನೀತಿಯ ಸಾಮಥ್ರ್ಯದಿಂದ ಪರಿಹಾರವಾಗುವುದು ಎಂಬುದನ್ನೆಲ್ಲ ವಿಚಾರ ಮಾಡಿ ನಡೆಯುವೆಯಲ್ಲವೆ ? ರಾಜನೀತಿಯ ಹೊಣೆಗಾರಿಕೆಯನ್ನು ನೀನು ಮರೆಯುವುದಿಲ್ಲ ಅಲ್ಲವೇ ರಾಜಾ?
ಪದಾರ್ಥ (ಕ.ಗ.ಪ)
ಹೊರಿಗೆ-ಹೊಣೆ, ಜವಾಬ್ದಾರಿ
ಕಿರಿದುಪೇಕ್ಷೆಯ-ಅಲ್ಪ ಅಲಕ್ಷ್ಯದ, ಹೊರೆವುದು-ರಕ್ಷಿಸುವುದು, ಭೇದಕೆ-ಭೇದೋಪಾಯಕ್ಕೆ, ಮುರಿವುದು-ಹಾಳಾಗುವುದು, ವಿಕ್ರಮಕೆ-ಪರಾಕ್ರಮಕ್ಕೆ, ನೀತಿಸಾಧ್ಯ-ನೀತಿಯಿಂದ ಸಾಧಿತವಾಗುವುದು, ಹರಿವುದು-ಪರಿಹಾರವಾಗುವುದು, ನಯಶಕ್ತಿ-ರಾಜನೀತಿ, ಹೊರಿಗೆ-ರಕ್ಷಣೆ,
ಮರೆದಿರೆಯೆಲೇ-ನೀನು ಮರೆತಿರುವುದಿಲ್ಲವಲ್ಲವೇ ?
ಮೂಲ ...{Loading}...
ಕಿರಿದುಪೇಕ್ಷೆಯ ಬಹಳ ಫಲವನು
ಹೊರೆವುದಿದು ಮೇಣಲ್ಪ ಭೇದಕೆ
ಮುರಿವುದಿದು ವಿಕ್ರಮಕೆ ವಶವಿದು ನೀತಿಸಾಧ್ಯವಿದು
ಹರಿವುದಿದು ನಯ ಶಕ್ತಿಗೆಂಬುದ
ನರಿದು ನಡೆವೈ ರಾಜಧರ್ಮದ
ಹೊರಿಗೆಯನು ಮರೆದಿರೆಯೆಲೇ ಭೂಪಾಲ ಕೇಳೆಂದ ॥41॥
೦೪೨ ಪರರು ಮಾಡಿದ ...{Loading}...
ಪರರು ಮಾಡಿದ ಸದ್ಗುಣಂಗಳ
ಮರೆಯೆಯಲೆ ಪರರವಗುಣಂಗಳ
ಮರೆದು ಕಳೆವಾ ಮಾನ್ಯರಿಗೆ ನೀ ಮಾಡಿದವಗುಣವ
ಮೆರೆಯೆಯಲೆ ನೀ ಮಾಡಿದುಚಿತವ
ಮರೆದು ಕಳೆವಾಚಾರವಿದು ಸ
ತ್ಪುರುಷರಭಿಮತವಿದು ಕಣಾ ಭೂಪಾಲ ಕೇಳ್ ಎಂದ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರರು ಮಾಡಿದ ಸದ್ಗುಣಗಳನ್ನು ಮರೆಯುವುದಿಲ್ಲ ತಾನೆ? ಪರರು ಮಾಡಿದ ಅವಗುಣಗಳನ್ನು ಮರೆತು ಕೈಬಿಡುವೆಯಷ್ಟೆ ? ಮನುಷ್ಯರಿಗೆ ನೀನು ಮಾಡಿದ ಕೆಟ್ಟ ಕೆಲಸವನ್ನು ಮರೆಯುವುದಿಲ್ಲವಲ್ಲವೆ ? ನೀನು ಮಾಡಿದ ಒಳ್ಳೆಯ ಕೆಲಸವನ್ನು ಮರೆತು ಬಿಡುವೆಯಷ್ಟೆ? ಇದು ಸತ್ಪುರುಷರ ಧರ್ಮ ಕಣಯ್ಯ, ರಾಜಾ !
ಪದಾರ್ಥ (ಕ.ಗ.ಪ)
ಪರರು-ಇತರರು, ಮರೆಯೆಯಲೆ-ಮರೆಯುವುದಿಲ್ಲವಲ್ಲವೇ ? ಅವಗುಣ-ದುರ್ಗುಣ, ಮರೆದು ಕಳೆವಾ-ಮರೆತು ಬಿಟ್ಟುಬಿಡುವೆಯಾ?
ಮಾನ್ಯರಿಗೆ-ಗೌರವಕ್ಕೆ ಪಾತ್ರರಾದವರಿಗೆ, ಉಚಿತವ-ಯೋಗ್ಯವಾದುದನ್ನು, ಆಚಾರವಿದು-ಇದು ಒಳ್ಳೆಯ ನಡತೆ, ಸತ್ಪುರುಷ-ಸಜ್ಜನರ,
ಅಭಿಮತ-ಅಭಿಪ್ರಾಯ
ಮೂಲ ...{Loading}...
ಪರರು ಮಾಡಿದ ಸದ್ಗುಣಂಗಳ
ಮರೆಯೆಯಲೆ ಪರರವಗುಣಂಗಳ
ಮರೆದು ಕಳೆವಾ ಮಾನ್ಯರಿಗೆ ನೀ ಮಾಡಿದವಗುಣವ
ಮೆರೆಯೆಯಲೆ ನೀ ಮಾಡಿದುಚಿತವ
ಮರೆದು ಕಳೆವಾಚಾರವಿದು ಸ
ತ್ಪುರುಷರಭಿಮತವಿದು ಕಣಾ ಭೂಪಾಲ ಕೇಳೆಂದ ॥42॥
೦೪೩ ಭಜಿಸುವಾ ಭಕ್ತಿಯಲಿ ...{Loading}...
ಭಜಿಸುವಾ ಭಕ್ತಿಯಲಿ ದೈವ
ದ್ವಿಜ ಗುರುಸ್ಥಾನವನು ದೇಶ
ಪ್ರಜೆಯನರ್ಥಾಗಮದ ಗಡಣೆಗೆ ಘಾಸಿ ಮಾಡೆಯೆಲೆ
ಕುಜನರಭಿಮತದುಗ್ರ ದಂಡ
ವ್ಯಜನದಲಿ ಜನ ಜಠರವಹ್ನಿಯ
ಸೃಜಿಸೆಯೆಲೆ ಭವದೀಯ ರಾಜ್ಯಸ್ಥಿತಿಯ ಹೇಳೆಂದ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಕ್ತಿಯಿಂದ ದೈವ ದ್ವಿಜ ಗುರು ಸ್ಥಾನದಲ್ಲಿರುವವರನ್ನು ಭಜಿಸುವೆಯಲ್ಲವೆ ? ಹಣವನ್ನು ಅರ್ಜಿಸಬೇಕೆಂಬ ಚಿಂತೆಯಿಂದ ದೇಶದ ಪ್ರಜೆಗೆ ಕಷ್ಟ ಕೊಡುವುದಿಲ್ಲವಲ್ಲವೇ ? ದುರ್ಜನರ ಮಾತಿನಂತೆ ನಡೆದು ಉಗ್ರಶಿಕ್ಷೆಯೆಂಬ ಬೀಸಣಿಗೆಯಿಂದ ಬೀಸಿ ಜನರ ಜಠರಾಗ್ನಿಯನ್ನು ಹೊತ್ತಿಸುವುದಿಲ್ಲವಲ್ಲವೆ ? ನಿನ್ನ ರಾಜ್ಯದ ಸ್ಥಿತಿಯನ್ನು ಹೇಳು.
ಪದಾರ್ಥ (ಕ.ಗ.ಪ)
ಗಡಣೆ-ಚಿಂತೆ, ಯೋಚನೆ,
ಘಾಸಿ-ತೊಂದರೆ,
ಕುಜನ-ದುಷ್ಟಜನ,
ಜಠರವಹ್ನಿ-ಹಸಿವಿನ ಬಾಧೆ
ಭವದೀಯ-ನಿಮ್ಮ
ಭಜಿಸುವಾ-ಸ್ತುತಿಸುವೆಯಾ? ದ್ವಿಜ-ಬ್ರಾಹ್ಮಣ, ಅರ್ಥಾಗಮದ-ಹಣ ಬರುವಂತಹ, ಗಡಣೆಗೆ-ಮೇಳಕ್ಕೆ, ಘಾಸಿ ಮಾಡೆಯೆಲೆ-ಅಡ್ಡಿಯುಂಟುಮಾಡುವುದಿಲ್ಲ ಅಲ್ಲವೇ ? ಕುಜನರು-ಕೆಟ್ಟ ಜನರು, ದಂಡವ್ಯಜನದಲಿ-ಶಿಕ್ಷೆಯೆಂಬ ಬೀಸಣಿಗೆಯಿಂದ, ಜಠರವಹ್ನಿಯ-ಹೊಟ್ಟೆಯ ಕಿಚ್ಚನ್ನು, ಸೃಜಿಸೆಯೆಲೆ-ಕೆರಳಿಸುವುದಿಲ್ಲವಲ್ಲವೆ ? ಭವದೀಯ-ನನ್ನ,
ಮೂಲ ...{Loading}...
ಭಜಿಸುವಾ ಭಕ್ತಿಯಲಿ ದೈವ
ದ್ವಿಜ ಗುರುಸ್ಥಾನವನು ದೇಶ
ಪ್ರಜೆಯನರ್ಥಾಗಮದ ಗಡಣೆಗೆ ಘಾಸಿ ಮಾಡೆಯೆಲೆ
ಕುಜನರಭಿಮತದುಗ್ರ ದಂಡ
ವ್ಯಜನದಲಿ ಜನ ಜಠರವಹ್ನಿಯ
ಸೃಜಿಸೆಯೆಲೆ ಭವದೀಯ ರಾಜ್ಯಸ್ಥಿತಿಯ ಹೇಳೆಂದ ॥43॥
೦೪೪ ಆಣೆಗಪಜಯವಿಲ್ಲಲೇ ಕೀ ...{Loading}...
ಆಣೆಗಪಜಯವಿಲ್ಲಲೇ ಕೀ
ಳಾಣಿ ಟಂಕದೊಳಿಲ್ಲಲೇ ನಿ
ತ್ರಾಣದಲಿ ಸಂಗರವ ಹೊಗೆಯಲೆ ಶೌರ್ಯ ಗರ್ವದಲಿ
ವಾಣಿಯವನುಚಿತದಲಿ ಧರ್ಮದ
ಲೂಣೆಯವನಹಿತರಲುಪೇಕ್ಷೆಯ
ಕೇಣವನು ದಾನದಲಿ ಮಾಡೆಲೆ ರಾಯ ಕೇಳ್ ಎಂದ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನ್ನ ಆಣೆ(ಆಜ್ಞೆ) ವ್ಯರ್ಥವಾಗುವುದಿಲ್ಲವಷ್ಟೆ ? ನಿನ್ನ ಟಂಕಸಾಲೆಯಲ್ಲಿ ಸಲ್ಲದ ಆಣೆ(ನಾಣ್ಯ) ಇಲ್ಲ ತಾನೇ ? ನೀನು ದುರ್ಬಲನಾಗಿರುವಾಗ ಶೌರ್ಯದ ಗರ್ವದಿಂದ ಯುದ್ಧಕ್ಕೆ ನುಗ್ಗುವುದಿಲ್ಲ ತಾನೇ ? ವಾಣಿಜ್ಯವನ್ನು ಉಚಿತವಾಗಿ ಮಾಡುವುದಿಲ್ಲ ತಾನೆ? ಧರ್ಮಕಾರ್ಯದಲ್ಲಿ ಕೊರತೆಯೆನಿಸುವುದಿಲ್ಲವಲ್ಲವೇ ? ಶತ್ರುಗಳನ್ನು ಅಲಕ್ಷ್ಯ ಮಾಡುವುದಿಲ್ಲ ತಾನೇ ? ದಾನ ಮಾಡುವಾಗ ಲೋಭ ತೋರಿಸುವುದಿಲ್ಲ ತಾನೇ ?
ಪದಾರ್ಥ (ಕ.ಗ.ಪ)
ಆಣೆ-ಆಜ್ಞೆ,
ಕೀಳಾಣಿ-ಸಲ್ಲದ ನಾಣ್ಯ,
ಟಂಕ-ನಾಣ್ಯ, ಮುದ್ರಣ ಶಾಲೆ,
ಸಂಗರ-ಯುದ್ಧ,
ವಾಣಿಯ-ವ್ಯಾಪಾರ,
ಊಣೆಯ-ಕೊರತೆ,
ಕೇಣ-ಲೋಭ,
ಹೊಗು-ಪ್ರವೇಶಿಸು
ಆಣೆ-ಆಜ್ಞೆ, ಅಪಜಯವಿಲ್ಲಲೇ-ವ್ಯರ್ಥ ಎಂಬುದು ಇಲ್ಲವಲ್ಲವೇ? ಕೀಳಾಣಿ-ಖೋಟಾನಾಣ್ಯ, ಟಂಕ-ನಾಣ್ಯವನ್ನು ಮುದ್ರಿಸುವ ಶಾಲೆ,
ನಿತ್ರಾಣದಲಿ-ದುರ್ಬಲನಾಗಿದ್ದುಕೊಂಡು, ಸಂಗರವ-ಯುದ್ಧವನ್ನು, ಹೊಗೆಯಲೆ-ಪ್ರವೇಶಿಸುವುದಿಲ್ಲವೆ ? ಶೌರ್ಯಗರ್ವದಲಿ-ಶಕ್ತಿಯಿದೆಯೆಂಬ ಹೆಮ್ಮೆಯಿಂದ, ವಾಣಿಯವ-ವಾಣಿಜ್ಯ, ವ್ಯಾಪಾರ, ಅನುಚಿತದಲಿ-ಉಚಿತವಲ್ಲದ ರೀತಿಯಲ್ಲಿ, ಉಣೆಯ-ಕೊರತೆ,
ಅಹಿತರಲಿ-ಶತ್ರುಗಳಲ್ಲಿ, ಉಪೇಕ್ಷೆಯ-ಅಲಕ್ಷ್ಯವನ್ನು, ಕೇಣ-ಲೋಭ, ಸಂಕೋಚ, ಮಾಡೆಲೆ-ಮಾಡುವುದಿಲ್ಲ ಅಲ್ಲವೆ ?
ಪಾಠಾನ್ತರ (ಕ.ಗ.ಪ)
ಮಾಡೆಲೆ ರಾಯ –>
ಮಾಡದಿರರಸ
ಎನ್ನುವ ಪಾಠಾಂತರ ಸೂಚಿತವಾಗಿದೆ.
ಸಭಪರ್ವ, ಮೈ.ವಿ.ವಿ.
ಮೂಲ ...{Loading}...
ಆಣೆಗಪಜಯವಿಲ್ಲಲೇ ಕೀ
ಳಾಣಿ ಟಂಕದೊಳಿಲ್ಲಲೇ ನಿ
ತ್ರಾಣದಲಿ ಸಂಗರವ ಹೊಗೆಯಲೆ ಶೌರ್ಯ ಗರ್ವದಲಿ
ವಾಣಿಯವನುಚಿತದಲಿ ಧರ್ಮದ
ಲೂಣೆಯವನಹಿತರಲುಪೇಕ್ಷೆಯ
ಕೇಣವನು ದಾನದಲಿ ಮಾಡೆಲೆ ರಾಯ ಕೇಳೆಂದ ॥44॥
೦೪೫ ಕಳವು ಪುಸಿ ...{Loading}...
ಕಳವು ಪುಸಿ ಹಾದರ ವಿರೋಧ
ಸ್ಖಲಿತವಾರಡಿಬಂದಿ ದಳವುಳ
ಬೆಳುಗವಿತೆಯನ್ಯಾಯ ಪರಿಭವ ಠಕ್ಕು ಡೊಳ್ಳಾಸ
ಪಳಿವು ವಂಚನೆ ಜಾತಿಸಂಕರ
ಕೊಲೆ ವಿರೋಧವು ವಿಕೃತ ಮಾಯಾ
ವಳಿಗಳೆಂಬಿವು ನಿನ್ನೊಳಿಲ್ಲಲೆ ರಾಯ ಕೇಳ್ ಎಂದ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಳವು, ಸುಳ್ಳು, ಹಾದರ, ವಿರೋಧ, ಜಾರಿಕೊಳ್ಳುವುದು, ಹಿಂಸೆ, ಬಂಧನ, ಕೊಳ್ಳೆಹೊಡೆಯುವುದು, ದಡ್ಡತನದ ಕವಿತೆ, ಅನ್ಯಾಯ, ಅನಾದರ, ಮೋಸ, ವಂಚನೆ, ಹಳಿವು, ತಟವಟ, ಜಾತಿಸಂಕರ, ಕೊಲೆ, ವಿಕಾರ, ಮಾಯೆ ಎಂಬ ಇವೆಲ್ಲ ನಿನ್ನಲ್ಲಿ ಇಲ್ಲವಲ್ಲವೆ ರಾಜ ?
ಪದಾರ್ಥ (ಕ.ಗ.ಪ)
ಪುಸಿ-ಸುಳ್ಳು, ಆರಡಿ-ಹಿಂಸೆ, ಸ್ಖಲಿತ-ಜಾರಿಕೊಳ್ಳವುದು, ಬಂದಿ-ಬಂಧನ, ದಳವುಳ-ಕೊಳ್ಳೆ ಹೊಡೆಯುವುದು, ಬೆಳುಗವಿತೆ-ದಡ್ಡತನದ, ಕವಿತೆ, ಪರಿಭವ-ಅನಾದರ, ಠಕ್ಕು-ಮೋಸ, ಡೊಳ್ಳಾಸ-ವಂಚನೆ, ಪಳಿವು-ಹಳಿವುನಿಂದೆ, ಜಾತಿಸಂಕರ-ಬೇರೆ ಬೇರೆ ಜಾತಿಗಳ ಸಂಮಿಶ್ರ,
ವಿಕೃತ-ವಿಕಾರವಾದ
ಮೂಲ ...{Loading}...
ಕಳವು ಪುಸಿ ಹಾದರ ವಿರೋಧ
ಸ್ಖಲಿತವಾರಡಿಬಂದಿ ದಳವುಳ
ಬೆಳುಗವಿತೆಯನ್ಯಾಯ ಪರಿಭವ ಠಕ್ಕು ಡೊಳ್ಳಾಸ
ಪಳಿವು ವಂಚನೆ ಜಾತಿಸಂಕರ
ಕೊಲೆ ವಿರೋಧವು ವಿಕೃತ ಮಾಯಾ
ವಳಿಗಳೆಂಬಿವು ನಿನ್ನೊಳಿಲ್ಲಲೆ ರಾಯ ಕೇಳೆಂದ ॥45॥
೦೪೬ ರಣಮುಖದೊಳಙ್ಗನೆಯಲಾರೋ ...{Loading}...
ರಣಮುಖದೊಳಂಗನೆಯಲಾರೋ
ಗಣೆಯಲರಿಗಳ ಕೂಟದಲಿ ವಾ
ರಣ ತುರಗದೇರಾಟದಲಿ ವಿವಿಧಾಯುಧಂಗಳಲಿ
ಎಣೆ ನೃಪರ ಸೋಂಕಿನಲಿ ಸೆಜ್ಜೆಯ
ಲಣಿಯ ಮಜ್ಜನದಲಿ ಮಹಾಮೃಗ
ಗಣನೆಯೊಳಗೆಚ್ಚರಿಕೆಯುಂಟೇ ರಾಯ ನಿನಗೆಂದ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧವನ್ನು ಎದುರಿಸುವಾಗೆ, ಅಂಗನೆಯೊಡನಿರುವಾಗ, ಊಟಮಾಡುವಾಗ, ಶತ್ರುಗಳೊಡನಿರುವಾಗ, ಆನೆ ಕುದುರೆಗಳನ್ನು ಏರಿ ಹೋಗುವಾಗ, ವಿವಿಧ ಆಯುಧಗಳ ವಿಷಯದಲ್ಲಿ, ಸಮಾನರಾದ ರಾಜರನ್ನು ಸ್ಪರ್ಶಿಸುವಾಗ, ಶಯ್ಯೆಯಲ್ಲಿ, ಮಜ್ಜನ ಮಾಡುವಲ್ಲಿ, ಮಹಾಮೃಗಗಳನ್ನು ಪರಿಗಣಿಸುವಾಗ ನೀನು ಎಚ್ಚರಿಕೆಯಿಂದ ಇರುವೆಯಲ್ಲವೇ ರಾಜಾ?
ಪದಾರ್ಥ (ಕ.ಗ.ಪ)
ಆರೋಗಣೆ-ಊಟ, ಸೆಜ್ಜೆ-ಶಯ್ಯ
ಅಣಿÂ - ಸಜ್ಜು
ರಣಮುಖದೊಳು-ಯುದ್ಧದ ಮುಂಭಾಗದಲ್ಲಿ, ಆಂಗನೆಯ-ಸ್ತ್ರೀಯ ವಿಷಯದಲ್ಲಿ, ಆರೋಗಣೆಯಲಿ-ಊಟದಲ್ಲಿ, ಅರಿಗಳ ಕೂಟದಲಿ-ಶತ್ರುಗಳ ಭೇಟಿಯಲ್ಲಿ, ವಾರಣ-ಆನೆ, ತುರಗ-ಕುದುರೆ, ಏರಾಟ-ಸವಾರಿ, ಎಣೆನೃಪರ-ಸಾಮಾನ್ಯ ಸ್ಕಂದರಾದ ರಾಜರ
ಸೋಂಕಿನಲಿ-ಸ್ಪರ್ಶದಲಿ, ಸೆಜ್ಜೆ-ಶಯ್ಯ, ಹಾಸುಗೆ, ಆಣಿಯ ಮಜ್ಜನದಲಿ-ಕ್ರಮಬದ್ಧವಾಗಿ ಎಣ್ಣೆಯ ಸ್ನಾನ ಮಾಡುವಾಗ,
ಮಹಾಮೃಗ ಗಣನೆಯೊಳ-ಮಹಾಮೃಗಗಳನ್ನು ಎಣಿಸುವಾಗ
ಮೂಲ ...{Loading}...
ರಣಮುಖದೊಳಂಗನೆಯಲಾರೋ
ಗಣೆಯಲರಿಗಳ ಕೂಟದಲಿ ವಾ
ರಣ ತುರಗದೇರಾಟದಲಿ ವಿವಿಧಾಯುಧಂಗಳಲಿ
ಎಣೆ ನೃಪರ ಸೋಂಕಿನಲಿ ಸೆಜ್ಜೆಯ
ಲಣಿಯ ಮಜ್ಜನದಲಿ ಮಹಾಮೃಗ
ಗಣನೆಯೊಳಗೆಚ್ಚರಿಕೆಯುಂಟೇ ರಾಯ ನಿನಗೆಂದ ॥46॥
೦೪೭ ನುಡಿಗೆರಡನಾಡದಿರು ಕಾರ್ಯವ ...{Loading}...
ನುಡಿಗೆರಡನಾಡದಿರು ಕಾರ್ಯವ
ಬಿಡದಿರಾವನೊಳಾದರೆಯು ನಗೆ
ನುಡಿಯ ಕುಂದದಿರೊಡೆಯದಿರು ಹೃದಯವನು ಕಪಟದಲಿ
ಬಡ ಮನವ ಮಾಡದಿರು ಮಾರ್ಗದೊ
ಳಡಿಯಿಡದಿರನುಜಾತ್ಮಜರೊಳೊ
ಗ್ಗೊಡೆಯದಿರು ನೃಪನೀತಿಯಿದು ಭೂಪಾಲ ಕೇಳ್ ಎಂದ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎರಡು ಮಾತನಾಡಬೇಡ, ಹಿಡಿದ ಕಾರ್ಯವನ್ನು ಬಿಡಬೇಡ. ಯಾರಲ್ಲೇ ಆಗಲಿ ನಗೆಯ ಮಾತನ್ನು ಕುಗ್ಗಿಸಬೇಡ. ಮೋಸದಿಂದ ಅನ್ಯರ ಹೃದಯವನ್ನು ಒಡೆಯಬೇಡ. ಮನಸ್ಸನ್ನು ಸಂಕೋಚಿಸಬೇಡ, ಆ ಮಾರ್ಗದಲ್ಲಿ ಹೆಜ್ಜೆಯಿಡಬೇಡ. ತಮ್ಮಂದಿರು ಮಕ್ಕಳಲ್ಲಿ ಒಗ್ಗಟ್ಟನ್ನು ಒಡೆಯಬೇಡ. ಇದು ರಾಜನೀತಿ. ರಾಜಾ ! ಕೇಳು.
ಪದಾರ್ಥ (ಕ.ಗ.ಪ)
ಒಗ್ಗು-ಒಗ್ಗಟ್ಟು
ನುಡಿದೆರಡನಾಡದಿರು-ಒಮ್ಮೆ ಮಾತನಾಡಿದ ಮೇಲೆ ಅದರಂತೆ ನಡೆದುಕೊಳ್ಳಬೇಕು, ಮಾತಿಗೆ ತಪ್ಪಬಾರದು, ಮತ್ತೆ ಬೇರೆಯ ಮಾತನಾಡಬಾರದು, ಕಾರ್ಯವಬಿಡದಿರು-ಹಿಡಿದ ಕಾರ್ಯವನ್ನು ನಡುವೆ ಬಿಡಬೇಡ, ಪೂರ್ಣಗೊಳಿಸು, ಆವನೊಳಾದರೆಯು-ಯಾರೊಡನೆಯೇ ಆದರೂ, ನಗೆನುಡಿಯ ಕುಂದದಿರು-ನಗುತ್ತ ಮಾತನಾಡುವುದನ್ನು ನಿಲ್ಲಿಸಬೇಡ, ಒಡೆಯದಿರು ಹೃದಯವನು ಕಪಟದಲಿ-ಮೋಸದಿಂದ ಮನಸ್ಸನ್ನು ಒಡೆಯಬೇಡ, ಬಡ ಮನವ ಮಾಡದಿರು-ಮನಸ್ಸನ್ನು ಬಡವಾಗಿಸಬೇಡ, ಅಡಿಯಿಡದಿರು-ಹೆಜ್ಜೆಯಿಡಬೇಡ, ಅನುಜ-ತಮ್ಮ, ಆತ್ಮಜ-ಮಗ, ಒಗ್ಗೊಡೆಯದಿರು-ಒಗ್ಗಟ್ಟನ್ನು ಹಾಳುಮಾಡಬೇಡ
ಮೂಲ ...{Loading}...
ನುಡಿಗೆರಡನಾಡದಿರು ಕಾರ್ಯವ
ಬಿಡದಿರಾವನೊಳಾದರೆಯು ನಗೆ
ನುಡಿಯ ಕುಂದದಿರೊಡೆಯದಿರು ಹೃದಯವನು ಕಪಟದಲಿ
ಬಡ ಮನವ ಮಾಡದಿರು ಮಾರ್ಗದೊ
ಳಡಿಯಿಡದಿರನುಜಾತ್ಮಜರೊಳೊ
ಗ್ಗೊಡೆಯದಿರು ನೃಪನೀತಿಯಿದು ಭೂಪಾಲ ಕೇಳೆಂದ ॥47॥
೦೪೮ ನೀತಿವಿಡಿದರಸಙ್ಗೆ ಬಹಳ ...{Loading}...
ನೀತಿವಿಡಿದರಸಂಗೆ ಬಹಳ
ಖ್ಯಾತವದು ಜನರಾಗ ರಾಗ
ವ್ರಾತದಿಂ ಧನ ಧನದಿ ಪರಿಕರ ಪರಿಕರದಿ ಜಯವು
ಆತ ಜಯದಿಂ ಧರ್ಮ ಧರ್ಮ ಸ
ಮೇತದಿಂ ಸುರತುಷ್ಟಿ ತುಷ್ಟಿಯ
ನೀತಿಯಿಂದಿಹಪರವ ಗೆಲುವೈ ರಾಯ ನೀನೆಂದ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀತಿಯನ್ನು ಬಿಡದ ರಾಜನಿಗೆ ಬಹಳ ಪ್ರಸಿದ್ಧವಾದುದು ಜನಾನುರಾಗ. ಜನಾನುರಾಗದ ಅತಿಶಯತೆಯಿಂದ ಧನ ಬರುತ್ತದೆ. ಧನದಿಂದ ಉಪಕರಣಗಳು. ಉಪಕರಣಗಳಿಂದ ಜಯ ದೊರೆಯುತ್ತದೆ. ಪ್ರಾಪ್ತವಾದ ಜಯದಿಂದ ಧರ್ಮ, ಧರ್ಮದಿಂದ ದೇವತೆಗಳಿಗೆ ಸಂತೋಷ. ಸಂತೋಷದ ನೀತಿಯಿಂದ ನೀನು ಇಹಪರಗಳನ್ನು ಗೆಲ್ಲುವೆ. ರಾಜ !
ಪದಾರ್ಥ (ಕ.ಗ.ಪ)
ನೀತಿವಿಡಿದ-ನೀತಿವಂತನಾದ, ಖ್ಯಾತವಾದುದು-ಕೀರ್ತಿತರುವಂತಹದು, ಜನರಾಗ-ಪ್ರಜೆಗಳ ಪ್ರೀತಿ, ರಾಗವ್ರಾತದಿಂ-ಪ್ರೀತಿಯ ಅತಿಶಯತೆಯಿಂದ, ಪರಿಕರ-ಬೇಕಾದ ಸಲಕರಣೆಗಳು, ಧರ್ಮ ಸಮೇತದಿಂ-ಧರ್ಮದಿಂದ ಕೂಡಿದರೆ, ಸುರತುಷ್ಟಿ-ದೇವತೆಗಳಿಗೆ ಸಂತೋಷ, ತುಷ್ಟಿಯನೀತಿಯಿಂ-ಹೋಗೆ ಸಂತೋಷಪಡಿಸುವ ನಡತೆಯಿಂದ, ಇಹಪರವ-ಈ ಲೋಕದಲ್ಲಿಯೂ ಪರಲೋಕದಲ್ಲಿಯೂ, ಗೆಲುವೈ-ಜಯಗಳಿಸುವೆ
ಮೂಲ ...{Loading}...
ನೀತಿವಿಡಿದರಸಂಗೆ ಬಹಳ
ಖ್ಯಾತವದು ಜನರಾಗ ರಾಗ
ವ್ರಾತದಿಂ ಧನ ಧನದಿ ಪರಿಕರ ಪರಿಕರದಿ ಜಯವು
ಆತ ಜಯದಿಂ ಧರ್ಮ ಧರ್ಮ ಸ
ಮೇತದಿಂ ಸುರತುಷ್ಟಿ ತುಷ್ಟಿಯ
ನೀತಿಯಿಂದಿಹಪರವ ಗೆಲುವೈ ರಾಯ ನೀನೆಂದ ॥48॥
೦೪೯ ಮನ್ತ್ರವುಳ್ಳವನವನೆ ಹಿರಿಯನು ...{Loading}...
ಮಂತ್ರವುಳ್ಳವನವನೆ ಹಿರಿಯನು
ಮಂತ್ರವುಳ್ಳವನವನೆ ರಾಯನು
ಮಂತ್ರವುಳ್ಳವನವನೆ ಸಚಿವ ನಿಯೋಗಿಯೆನಿಸುವನು
ಮಂತ್ರವಿಲ್ಲದ ಬರಿಯ ಬಲು ತಳ
ತಂತ್ರದಲಿ ಫಲವಿಲ್ಲವೈ ಸ್ವಾ
ತಂತ್ರ್ಯವೆನಿಸಲ್ಕರಿವುದೇ ಭೂಪಾಲ ಕೇಳ್ ಎಂದ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಂತ್ರವುಳ್ಳವನು ಯಾವನೋ ಅವನೇ ಹಿರಿಯ. ಆ ಮಂತ್ರವುಳ್ಳವನೇ ರಾಜ. ಆ ಮಂತ್ರವುಳ್ಳವನೆ ಸಚಿವ, ನಿಯೋಗಿ ಎನಿಸಿಕೊಳ್ಳುವನು. ಸರಿಯಾದ ಮಂತ್ರವಿಲ್ಲದ ಕಾರಣ, ಎಷ್ಟೇ ಸೈನ್ಯವಿದ್ದರೂ ಪ್ರಯೋಜನವಿಲ್ಲ. ಅಂತಹ ಸ್ಥಿತಿ ಸ್ವಾತಂತ್ರ್ಯವೆನಿಸುತ್ತದೆಯೇ ರಾಜ ?
ಪದಾರ್ಥ (ಕ.ಗ.ಪ)
ತಳತಂತ್ರ-ಪದಾತಿ, ಮಂತ್ರವುಳ್ಳವನು-ಮಂತ್ರಾಲೋಚನೆಯಿಂದ ನಡೆವವನು, ರಾಯ-ರಾಜ, ಮಂತ್ರವಿಲ್ಲದ-ಮಂತ್ರಾಲೋಚನೆಯಿಲ್ಲದ,
ಬಲು ತಳತಂತ್ರದಲಿ-ಎಷ್ಟು ದೊಡ್ಡ ಸೈನ್ಯವಿದ್ದರೂ, ಫಲವಿಲ್ಲವೈ-ಪ್ರಯೋಜನವಿಲ್ಲಯ್ಯ, ಸ್ವಾತಂತ್ರ್ಯವೆನಿಸಲ್ಕೆ ಅರಿವುದೇ-ಸ್ವಾತಂತ್ರ್ಯ ಎನಿಸಿಕೊಳ್ಳಲು ಸಾಧ್ಯವೇ?
ಮೂಲ ...{Loading}...
ಮಂತ್ರವುಳ್ಳವನವನೆ ಹಿರಿಯನು
ಮಂತ್ರವುಳ್ಳವನವನೆ ರಾಯನು
ಮಂತ್ರವುಳ್ಳವನವನೆ ಸಚಿವ ನಿಯೋಗಿಯೆನಿಸುವನು
ಮಂತ್ರವಿಲ್ಲದ ಬರಿಯ ಬಲು ತಳ
ತಂತ್ರದಲಿ ಫಲವಿಲ್ಲವೈ ಸ್ವಾ
ತಂತ್ರ್ಯವೆನಿಸಲ್ಕರಿವುದೇ ಭೂಪಾಲ ಕೇಳೆಂದ ॥49॥
೦೫೦ ಸತ್ಯವುಳ್ಳರೆ ಧರಣಿ ...{Loading}...
ಸತ್ಯವುಳ್ಳರೆ ಧರಣಿ ಸಾರುಗು
ಸತ್ಯವುಳ್ಳರೆ ಪದವಿ ಸಾರುಗು
ಸತ್ಯವುಳ್ಳರೆ ಸಕಲರಾಜ್ಯದ ವೀರಸಿರಿ ಸಾರ್ಗು
ಸತ್ಯವೇ ಬೇಹುದು ನೃಪರಿಗಾ
ಸತ್ಯ ಭುಜಬಲಗೂಡಿ ಮಂತ್ರದ
ಸತ್ಯವೇ ಸತ್ವಾಧಿಕವು ಭೂಪಾಲ ಕೇಳ್ ಎಂದ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸತ್ಯದಿಂದಿದ್ದರೆ ರಾಜ್ಯ ಕೈಸೇರುತ್ತದೆ. ಸತ್ಯದಿಂದಿದ್ದರೆ ಪದವಿ ದೊರೆಯುತ್ತದೆ. ಸತ್ಯವಿದ್ದರೆ ಸಕಲ ರಾಜ್ಯದ ವೀರಶ್ರೀ ಪ್ರಾಪ್ತವಾಗುತ್ತದೆ. ರಾಜರಿಗೆ ಸತ್ಯವೇ ಅಗತ್ಯ. ಆ ಸತ್ಯವು ಭುಜಬಲದೊಡನೆ ಕೂಡಿ ಮಂತ್ರಶಕ್ತಿಯನ್ನು ಪಡೆದರೆ ಅದು ಸತ್ವಾಧಿಕವಾಗುತ್ತದೆ, ರಾಜ.
ಪದಾರ್ಥ (ಕ.ಗ.ಪ)
ಸತ್ಯವುಳ್ಳರೆ-ಸತ್ಯವಿದ್ದರೆ, ಸತ್ಯದಿಂದ ನಡೆದರೆ, ಧರಣಿ-ರಾಜ್ಯ, ಸಾರುಗು-ಬರುತ್ತದೆ, ವೀರಸಿರಿ-ಶೌರ್ಯದ ಸಂಪತ್ತು, ಸಾರ್ಗು-ಪ್ರಾಪ್ತವಾಗುತ್ತದೆ, ಬೇಹುದು-ಬೇಕು, ಸತ್ಯ ಭುಜಬಲಗೂಡಿ-ಸತ್ಯದ ಬಾಹುಬಲದೊಡನೆ ಸೇರಿದ, ಮಂತ್ರದ ಸತ್ಯವೇ-ಮಂತ್ರಾಲೋಚನೆಯಿಂದ ಏರ್ಪಟ್ಟ ಸತ್ಯವೇ, ಸತ್ವಾಧಿಕವು-ಅತಿಶಯವಾದ ಸತ್ವವಾಗುತ್ತದೆ
ಮೂಲ ...{Loading}...
ಸತ್ಯವುಳ್ಳರೆ ಧರಣಿ ಸಾರುಗು
ಸತ್ಯವುಳ್ಳರೆ ಪದವಿ ಸಾರುಗು
ಸತ್ಯವುಳ್ಳರೆ ಸಕಲರಾಜ್ಯದ ವೀರಸಿರಿ ಸಾರ್ಗು
ಸತ್ಯವೇ ಬೇಹುದು ನೃಪರಿಗಾ
ಸತ್ಯ ಭುಜಬಲಗೂಡಿ ಮಂತ್ರದ
ಸತ್ಯವೇ ಸತ್ವಾಧಿಕವು ಭೂಪಾಲ ಕೇಳೆಂದ ॥50॥
೦೫೧ ಮೇಲನರಿಯದ ನೃಪನ ...{Loading}...
ಮೇಲನರಿಯದ ನೃಪನ ಬಾಳಿಕೆ
ಗಾಳಿಗೊಡ್ಡಿದ ಸೊಡರು ನೀರದ
ಜಾಲದೊಡ್ಡಣೆ ಸುರಧನುವಿನಾಕಾರ ಶವದುಡಿಗೆ
ಬಾಳಿಗೌಕಿದ ಕೊರಳು ಭುಜಗನ
ಹೇಳಿಗೆಯಲಿಕ್ಕಿದ ಕರವು ಬೆ
ಳ್ಳಾರ ಹಬ್ಬುಗೆಯವನ ಸಿರಿ ಭೂಪಾಲ ಕೇಳ್ ಎಂದ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜ ಕೇಳು, ಮೇಲನ್ನು ತಿಳಿಯದ ರಾಜನ ಬಾಳು ಗಾಳಿಗೆ ಒಡ್ಡಿದ ಸೊಡರು, ಆಗಸದಲ್ಲಿ ಹರಡಿದ ಮೋಡದ ರಾಶಿ, ಕಾಮನ ಬಿಲ್ಲಿನ ಆಕೃತಿ, ಶವಕ್ಕೆ ಉಡಿಸಿರುವ ವಸ್ತ್ರ, ಕತ್ತಿಯ ಅಲಗಿಗೆ ಒತ್ತಿದ ಕತ್ತು. ಹಾವಿನ ಬುಟ್ಟಿಯೊಳಕ್ಕೆ ಇಟ್ಟ ಕೈ. ಈ ಒಂದೊಂದೂ ಕ್ಷಣಿಕ, ನಶ್ವರ, ವ್ಯರ್ಥ, ವಿನಾಶಕರ. ಹಾಗೆಯೇ ಅವನ ಸಂಪತ್ತು ಹುರುಳಿಲ್ಲದ ಉಬ್ಬಟೆ.
ಪದಾರ್ಥ (ಕ.ಗ.ಪ)
ನೀರದ-ಮೋಡ, ಸುರಧನು-ಕಾಮನಬಿಲ್ಲು,
ಬಾಳ್-ಕತ್ತಿ,
ಭುಜಗ-ಹಾವು,
ಹೇಳಿಗೆ-ಬುಟ್ಟಿ,
ಬೆಳ್ಳಾರ ಹಬ್ಬುಗೆ - ಹುರುಳಿಲ್ಲದ ಉಬ್ಬಟೆ.
ಮೇಲನರಿಯದ-ಅನಂತರ ಏನಾದೀತು ಎಂಬುದನ್ನು ತಿಳಿಯದ, ಒಳ್ಳೆಯುದು ಯಾವುದು ಎಂದು ತಿಳಿಯದ, ನೃಪನ-ರಾಜನ, ಬಾಳಿಕೆ-ಬಾಳು, ಜೀವನ, ಸೊಡರು-ಹಣತೆಯ ದೀಪ, ನೀರದಜಾಲದ-ಮೋಡದ ರಾಶಿಯ, ಒಡ್ಡಣೆ-ಸೇರುವಿಕೆ, ಸುರಧನುವಿನಾಕಾರ-ಕಾಮನಬಿಲ್ಲಿನ ದರ್ಶನ, ಶವದುಡಿಗೆ-ಹೆಣಕ್ಕೆ ಅಲಂಕರಿಸುವ ಬಟ್ಟೆ, ಬಾಳಿಗೆ-ಕತ್ತಿಗೆ, ಔಕಿದ-ಊರಿದ, ಕೊರಳು-ಕತ್ತು, ಭುಜಗನ ಹೇಳಿಗೆಯಲಿ-ಹಾವಿ ಬುಟ್ಟಿಯಲ್ಲಿ, ಇಕ್ಕಿದ-ಇಟ್ಟ, ಕರವು-ಕೈ, ಹೀಗೆ ಪ್ರತಿಯೊಂದರಂತೆ ಅವನ ಜೀವನ ನಶ್ವರ ಎಂಬ ಭಾವ,
ಅವನ ಸಿರಿ-ಆ ರಾಜನ ಸಂಪತ್ತು, ಬೆಳ್ಳಾರ ಹಬ್ಬುಗೆ-ಬೆಳ್ಳಾರ ಬಲೆಯನ್ನು ಹರಡಿದಂತೆ
ಮೂಲ ...{Loading}...
ಮೇಲನರಿಯದ ನೃಪನ ಬಾಳಿಕೆ
ಗಾಳಿಗೊಡ್ಡಿದ ಸೊಡರು ನೀರದ
ಜಾಲದೊಡ್ಡಣೆ ಸುರಧನುವಿನಾಕಾರ ಶವದುಡಿಗೆ
ಬಾಳಿಗೌಕಿದ ಕೊರಳು ಭುಜಗನ
ಹೇಳಿಗೆಯಲಿಕ್ಕಿದ ಕರವು ಬೆ
ಳ್ಳಾರ ಹಬ್ಬುಗೆಯವನ ಸಿರಿ ಭೂಪಾಲ ಕೇಳೆಂದ ॥51॥
೦೫೨ ಆಯವಿಲ್ಲದ ಬೀಯವನು ...{Loading}...
ಆಯವಿಲ್ಲದ ಬೀಯವನು ಪೂ
ರಾಯವಿಲ್ಲದ ಗಾಯವನು ನಿ
ರ್ದಾಯವಿಲ್ಲದ ಮಂತ್ರವನು ಲೇಸಾಗಿ ಮಿಗೆ ರಚಿಸಿ
ನ್ಯಾಯವಿಲ್ಲದ ನಡವಳಿಯನ
ನ್ಯಾಯ ಹೊದ್ದುವ ಪಾತಕವ ನಿಜ
ಕಾಯದಲಿ ನೀ ಧರಿಸೆಯೆಲೆ ಭೂಪಾಲ ಕೇಳ್ ಎಂದ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆದಾಯವಿಲ್ಲದ ವ್ಯಯವನ್ನು, ಪೂರ್ಣವಾಗಿ ಮಾಗದ ಗಾಯವನ್ನು, ಪರಿಪೂರ್ಣವಲ್ಲದ ಮಂತ್ರಾಲೋಚನೆಯನ್ನು ಮಾಡಿಕೊಂಡು, ನ್ಯಾಯವಿಲ್ಲದ ನಡವಳಿಕೆಯನ್ನು, ಅನ್ಯಾಯವುಂಟಾಗುವ ಪಾಪವನ್ನು ನಿನ್ನ ದೇಹದಲ್ಲಿ ಧರಿಸುವುದಿಲ್ಲವಲ್ಲವೇ ರಾಜಾ ?
ಪದಾರ್ಥ (ಕ.ಗ.ಪ)
ಆಯ-ಆದಾಯ, ಬೀಯ-ವ್ಯಯ, ಪೂರಾಯ-ಪೂರ್ಣ, ನಿರ್ದಾಯ-ನಿರ್ಧಾರ
ಆಯವಿಲ್ಲದ ಬೀಯ-ಆದಯವಿಲ್ಲದ ವ್ಯಯ, ಪೂರಾಯವಿಲ್ಲದ-ಪೂರ್ಣವಾಗಿ ಮಾಗದ, ನಿರ್ದಾಯ-ಪರಿಪೂರ್ಣ, ಲೇಸಾಗಿ-ಚೆನ್ನಾಗಿ, ಅಚ್ಚುಕಟ್ಟಾಗಿ, ನಡವಳಿ-ಆಚರಣೆ, ಹೊದ್ದುವ-ಬಂದು ಸೇರುವ, ಪಾತಕವ-ಪಾಪವನ್ನು, ನಿಜಕಾಯದ-ನಿನ್ನ ದೇಹದಲ್ಲಿ, ಧರಿಸೆಯೆಲೆ-ಧರಿಸುವುದಿಲ್ಲ ಅಲ್ಲವೇ ?
ಮೂಲ ...{Loading}...
ಆಯವಿಲ್ಲದ ಬೀಯವನು ಪೂ
ರಾಯವಿಲ್ಲದ ಗಾಯವನು ನಿ
ರ್ದಾಯವಿಲ್ಲದ ಮಂತ್ರವನು ಲೇಸಾಗಿ ಮಿಗೆ ರಚಿಸಿ
ನ್ಯಾಯವಿಲ್ಲದ ನಡವಳಿಯನ
ನ್ಯಾಯ ಹೊದ್ದುವ ಪಾತಕವ ನಿಜ
ಕಾಯದಲಿ ನೀ ಧರಿಸೆಯೆಲೆ ಭೂಪಾಲ ಕೇಳೆಂದ ॥52॥
೦೫೩ ಫಲವಹುದ ಕೆಡಲೀಯದಳಿ ...{Loading}...
ಫಲವಹುದ ಕೆಡಲೀಯದಳಿ ಪರಿ
ಮಳವ ಕೊಂಬಂದದಲೆ ನೀನಾ
ಳ್ವಿಳೆಯ ಕರದರ್ಧವನ ತೆಗೆವೈ ಪ್ರಜೆಯ ನೋಯಿಸದೆ
ಹಲವು ಸನ್ಮಾನದಲಿ ನಯದಲಿ
ಚಲಿಸದಿಪ್ಪಂದದಲಿ ರಾಜ್ಯವ
ನಿಲಿಸುವಭಿಮತ ಮಂತ್ರಿಯುಂಟೇ ರಾಯ ನಿನಗೆಂದ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಫಲವಾಗುವುದನ್ನು ಕೆಡಿಸದಂತೆ ದುಂಬಿ ಹೇಗೆ ಹೂವಿನ ಪರಿಮಳದ ಮಕರಂದವನ್ನು ಸ್ವೀಕರಿಸುವುದೋ ಹಾಗೆ ನೀನು ನಿನ್ನ ಪ್ರಜೆಗಳನ್ನು ನೋಯಿಸದೆ ಆಳ್ವಿಕೆಗೆ ಬೇಕಾದ (ಅರ್ಥಕರವನ್ನು) ತೆರಿಗೆಯ ಹಣವನ್ನು ಸ್ವೀಕರಿಸುವೆಯಲ್ಲವೇ ? ಹಲವು ಬಗೆಯ ಸನ್ಮಾನಗಳನ್ನು ಮಾಡಿಯೂ ರಾಜನೀತಿಯನ್ನು ಪ್ರಯೋಗಿಸಿಯೂ ಪ್ರಜೆಗಳನ್ನು ಒಲಿಸಿಕೊಂಡು ರಾಜ್ಯವನ್ನು ಸ್ಥಿರವಾಗಿ ನೆಲೆಗೊಳಿಸಬಲ್ಲ ಮಂತ್ರಿ ನಿನಗಿದ್ದಾನೆಯೇ ರಾಜ ?
ಪದಾರ್ಥ (ಕ.ಗ.ಪ)
ಫಲವಹುದ ಕೆಡಲೀಯದ-ಹಣ್ಣಾಗುವುದನ್ನು ಕೆಡುವುದಕ್ಕೆ ಬಿಡದ, ಅಳಿ-ದುಂಬಿ, ಪರಿಮಳವ ಕೊಂಬಂದದಲೆ-ಸುಗಂಧಯುಕ್ತವಾದ ಮಕರಂದವನ್ನು, ಸ್ವೀಕರಿಸುವ ಹಾಗೆ, ನೀನಾಳ್ವ-ನೀನು ರಾಜ್ಯಭಾರ ಮಾಡುವ, ಇಳೆಯ-ಭೂಮಿಯ, ಕರದರ್ಧವನ-ಅರ್ಧತೆರಿಗೆಯನ್ನು, ತೆಗೆವೈ-ತೆಗದುಕೊಳ್ಳುವೆಯಾ ?
ಕರದರ್ಥ-ತೆರಿಗೆ ಹಣವನ್ನು, (ಕರದರ್ಥವನು) ಪಠ್ಯದಲ್ಲಿ ಕರದರ್ಧವನು ಎಂದಿದೆ, ಷಡ್ಭಾಗ ರಾಜನಿಗೆ ಸಲುವುದರಿಂದ ಕರದರ್ಧವನು, ಸರಿ ಆಗದು ಆದ್ದರಿಂದ ಕರದರ್ಥವನು, ಪಾಠವನ್ನು ಸ್ವೀಕರಿಸಿದೆ.
ಪಾಠಾನ್ತರ (ಕ.ಗ.ಪ)
ಕರದರ್ಧವನ –> ಕರದರ್ಥವನ
ಸಭಾಪರ್ವ, ಮೈ.ವಿ.ವಿ.
ಎಸ್ ಬಸಪ್ಪ
ಮೂಲ ...{Loading}...
ಫಲವಹುದ ಕೆಡಲೀಯದಳಿ ಪರಿ
ಮಳವ ಕೊಂಬಂದದಲೆ ನೀನಾ
ಳ್ವಿಳೆಯ ಕರದರ್ಧವನ ತೆಗೆವೈ ಪ್ರಜೆಯ ನೋಯಿಸದೆ
ಹಲವು ಸನ್ಮಾನದಲಿ ನಯದಲಿ
ಚಲಿಸದಿಪ್ಪಂದದಲಿ ರಾಜ್ಯವ
ನಿಲಿಸುವಭಿಮತ ಮಂತ್ರಿಯುಂಟೇ ರಾಯ ನಿನಗೆಂದ ॥53॥
೦೫೪ ಸೂಕರನ ತುಮ್ಬಿಯ ...{Loading}...
ಸೂಕರನ ತುಂಬಿಯ ಮರಾಳನ
ಭೇಕವೈರಿಯ ಕಾರುಕನ ಕಪಿ
ಕೋಕಿಲನ ಬರ್ಹಿಯ ಸುಧಾಕಿರಣನ ದಿನಾಧಿಪನ
ಆಕಸದ ದರ್ಪಣದ ಬಕ ರ
ತ್ನಾಕರನದೊಂದೊಂದು ಗುಣವಿರ
ಬೇಕು ನೃಪರಿಗೆ ನಿನ್ನೊಳುಂಟೇ ರಾಯ ಹೇಳೆಂದ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಂದಿ, ದುಂಬಿ, ಹಂಸ, ಕಪ್ಪೆಯವೈರಿಯಾದ ಕಾಳಸರ್ಪ, ಶಿಲ್ಪಿ, ಕಪಿ, ಕೋಗಿಲೆ, ನವಿಲು, ಚಂದ್ರ, ಸೂರ್ಯ, ಆಕಾಶ, ಕನ್ನಡಿ, ಕೊಕ್ಕರೆ, ಸಾಗರ - ಈ ಎಲ್ಲದರಿಂದಲೂ ಒಂದೊಂದು ಗುಣವನ್ನು ರಾಜರು ಕಲಿಯಬೇಕು. ನಿನ್ನಲ್ಲಿ ಆ ಗುಣಗಳುಂಟೇ ರಾಜ ?
ಪದಾರ್ಥ (ಕ.ಗ.ಪ)
ಮರಾಳ-ಹಂಸ, ಭೇಕ-ಕಪ್ಪೆ, ಭೇಕವೈರಿ-ಸರ್ಪ, ಕಾರುಕ - ಶಿಲ್ಪಿ ಬರ್ಹಿ-ನವಿಲು, ಸುಧಾಕಿರಣ-ಚಂದ್ರ, ದಿನಾಧಿಪ-ಸೂರ್ಯ, ದರ್ಪಣ-ಕನ್ನಡಿ, ರತ್ನಾಕರ-ಸಾಗರ
ಸೂಕರನ-ಹಂದಿಯ, ತುಂಬಿ-ದುಂಬಿ, ಮರಾಳ-ಹಂಸ, ಭೇಕ-ಕಪ್ಪೆ, ಭೇಕ ವೈರಿ-ಸರ್ಪ, ಕಾರುರಗ-ಕಾಳಸರ್ಪ, ಕೋಕಿಲ-ಕೋಗಿಲೆ,
ಬರ್ಹಿ-ನವಿಲು, ಸುಧಾಕಿರಣ-ಚಂದ್ರ, ದಿನಾಧಿಪ-ಸೂರ್ಯ, ಆಕಸ-ಆಕಾಶ, ದರ್ಪಣ-ಕನ್ನಡಿ, ಬಕ-ಹೊಕ್ಕರೆ, ರತ್ನಾಕರ-ಸಮುದ್ರ,
ಇವುಗಳ ಒಂದೊಂದು ಆಯ್ದಗುಣ ಯಾವುದು ?
ಪಾಠಾನ್ತರ (ಕ.ಗ.ಪ)
ಕಾರುರಗ -> ಕಾರುಕನ
ಮೂಲ ...{Loading}...
ಸೂಕರನ ತುಂಬಿಯ ಮರಾಳನ
ಭೇಕವೈರಿಯ ಕಾರುಕನ ಕಪಿ
ಕೋಕಿಲನ ಬರ್ಹಿಯ ಸುಧಾಕಿರಣನ ದಿನಾಧಿಪನ
ಆಕಸದ ದರ್ಪಣದ ಬಕ ರ
ತ್ನಾಕರನದೊಂದೊಂದು ಗುಣವಿರ
ಬೇಕು ನೃಪರಿಗೆ ನಿನ್ನೊಳುಂಟೇ ರಾಯ ಹೇಳೆಂದ ॥54॥
೦೫೫ ನೆಚ್ಚದಿರು ಸಿರಿಯನು ...{Loading}...
ನೆಚ್ಚದಿರು ಸಿರಿಯನು ವೃಥಾ ಮದ
ಗಿಚ್ಚಿನುರಿಯಲಿ ಬೇಯದಿರು ಮಿಗೆ
ಬೆಚ್ಚಿ ಬೆದರದಿರೆಡರಿನಲಿ ಸತ್ಯವನು ಚಲಿಸದಿರು
ಮೆಚ್ಚದಿರಸತ್ಯವನು ಗುಣವನು
ಮುಚ್ಚದಿರು ಅಪಕೀರ್ತಿನಾರಿಯ
ಮೆಚ್ಚದಿರು ಮರುಳಾಗದಿರು ಭೂಪಾಲ ಕೇಳ್ ಎಂದ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಐಶ್ವರ್ಯವನ್ನು ನೆಚ್ಚಿಕೊಳ್ಳಬೇಡ, ಮದವೆಂಬ ಬೆಂಕಿಯಲ್ಲಿ ವ್ಯರ್ಥವಾಗಿ ಬೇಯಬೇಡ. ಕಷ್ಟ ಬಂದಾಗ ಅತಿಯಾಗಿ ಬೆಚ್ಚಿ ಬೆದರಬೇಡ. ಸತ್ಯವನ್ನು ಬಿಟ್ಟು ಎಂದೂ ನಡೆಯಬೇಡ. ಅಸತ್ಯವನ್ನು ಮೆಚ್ಚಬೇಡ. ಗುಣವನ್ನು ಅಡಗಿಸಬೇಡ. ಅಪಕೀರ್ತಿಯೆಂಬ ನಾರಿಯನ್ನು ಮೆಚ್ಚಿಕೊಳ್ಳಬೇಡ. ಅವಳಿಗೆ ಮರುಳಾಗಬೇಡ ರಾಜ.
ಪದಾರ್ಥ (ಕ.ಗ.ಪ)
ನೆಚ್ಚದಿರು-ನಂಬಿಕೊಳ್ಳಬೇಡ, ಸಿರಿಯನು-ಸಂಪತ್ತನು, ಮದಗಿಚ್ಚಿನುರಿಯಲಿ-ಗರ್ವವೆಂಬ ಬೆಂಕಿಯ ಉರಿಯಲ್ಲಿ, ಮಿಗೆ-ವಿಶೇಷವಾಗಿ
ಎಡರಿನಲಿ-ಕಷ್ಟಬಂದಾಗ, ಸತ್ಯವನು ಚಲಿಸದಿರು-ಸತ್ಯವವನು ಬಿಟ್ಟುಹೋಗಬೇಡ, ಮೆಚ್ಚದಿರಸತ್ಯವನು-ಸುಳ್ಳನ್ನು ಮೆಚ್ಚಿಕೊಳ್ಳಬೇಡ,
ಮುಚ್ಚದಿರು-ಮುಚ್ಚಿಬಿಡಬೇಡ, ಅಪಕೀರ್ತಿನಾರಿಯ-ಅಪಖ್ಯಾತಿ ಎಂಬ ಸ್ತ್ರೀಯನ್ನು, ಮರುಳಾಗದಿರು-ಮೋಹಗೊಳ್ಳಬೇಡ
ಮೂಲ ...{Loading}...
ನೆಚ್ಚದಿರು ಸಿರಿಯನು ವೃಥಾ ಮದ
ಗಿಚ್ಚಿನುರಿಯಲಿ ಬೇಯದಿರು ಮಿಗೆ
ಬೆಚ್ಚಿ ಬೆದರದಿರೆಡರಿನಲಿ ಸತ್ಯವನು ಚಲಿಸದಿರು
ಮೆಚ್ಚದಿರಸತ್ಯವನು ಗುಣವನು
ಮುಚ್ಚದಿರು ಅಪಕೀರ್ತಿನಾರಿಯ
ಮೆಚ್ಚದಿರು ಮರುಳಾಗದಿರು ಭೂಪಾಲ ಕೇಳೆಂದ ॥55॥
೦೫೬ ಹಲವು ವಿನಿಯೋಗದಲಿ ...{Loading}...
ಹಲವು ವಿನಿಯೋಗದಲಿ ಸುದತಿಯ
ರೊಲುಮೆಯಲಿ ಸಕಲಾಂಗದಲಿ ನಿ
ಸ್ಖಲಿತ ನಿಜವನೆ ಧರಿಸುವಾಶ್ರಮ ವರ್ಣಭೇದದಲಿ
ಹಳಿವು ನಿನಗಾವಂಗದಲಿ ಬಳಿ
ಸಲಿಸದಲೆ ಪರತತ್ವದಲಿ ವೆ
ಗ್ಗಳಿಸದಲೆ ವೈರಾಗ್ಯಮತ ಭೂಪಾಲ ನಿನಗೆಂದ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿವಿಧ ವ್ಯವಹಾರಗಳಲ್ಲಿಯೂ ನಾರಿಯರ ಒಲುಮೆಯಲ್ಲಿಯೂ ಎಲ್ಲ ರೀತಿಯಿಂದ ಅಚಲವಾದ ಸತ್ಯವನ್ನೇ ಎತ್ತಿ ಹಿಡಿಯುವಂತೆ ನಡೆಯುವೆಯಲ್ಲವೆ? ವರ್ಣಾಶ್ರಮದ ಭೇದದಿಂದ ನಿನಗೆ ಯಾವ ರೀತಿಯಿಂದಲೂ ಅಪಕೀರ್ತಿ ಬರುವುದಿಲ್ಲವಲ್ಲವೆ ? ವೈರಾಗ್ಯವನ್ನು ಅತಿಶಯವಾಗಿಸಿಕೊಳ್ಳದೆಯೇ ಪರತತ್ತ್ವವನ್ನು ಹೊಂದಿರುವೆಯಲ್ಲವೇ ರಾಜ ?
ಪದಾರ್ಥ (ಕ.ಗ.ಪ)
ವೆಗ್ಗಳ-ಅತಿಶಯ, ನಿಸ್ಖಲಿತ-ಅಚಲ
ವಿನಿಯೋಗದಲಿ-ಕೆಲಸ ಕಾರ್ಯಗಳಲಿ, ಸುದತಿ-ಸ್ತ್ರೀ, ಒಲುಮೆ-ಪ್ರೀತಿ, ಸಕಲಾಂಗದಲಿ-ಎಲ್ಲ ವಿಷಯಗಳಲ್ಲೂ, ಅಸ್ಖಲಿತ-ದೃಢವಾದ,
ಹಳಿವು-ಕೆಟ್ಟ ಹೆಸರು, ಆವಂಗದಲಿ-ಯಾವ ಭಾಗದಲ್ಲೂ, ಬಳಿಸಲಿಸದಲೆ-ಹತ್ತರಿ ಬರಗೊಡದೆ, ಪರತತ್ವದಲಿ-ಆಧ್ಯಾತ್ಮಿಕ ವಿಷಯದಲಿ,
ವೆಗ್ಗಳಿಸದಲೆ-ಅತಿಶಯವಾಗಿಸಿಕೊಳ್ಳದೆ
ಮೂಲ ...{Loading}...
ಹಲವು ವಿನಿಯೋಗದಲಿ ಸುದತಿಯ
ರೊಲುಮೆಯಲಿ ಸಕಲಾಂಗದಲಿ ನಿ
ಸ್ಖಲಿತ ನಿಜವನೆ ಧರಿಸುವಾಶ್ರಮ ವರ್ಣಭೇದದಲಿ
ಹಳಿವು ನಿನಗಾವಂಗದಲಿ ಬಳಿ
ಸಲಿಸದಲೆ ಪರತತ್ವದಲಿ ವೆ
ಗ್ಗಳಿಸದಲೆ ವೈರಾಗ್ಯಮತ ಭೂಪಾಲ ನಿನಗೆಂದ ॥56॥
೦೫೭ ಪರಿಜನಕೆ ದಯೆಯನು ...{Loading}...
ಪರಿಜನಕೆ ದಯೆಯನು ಪರಸ್ತ್ರೀ
ಯರಲಿ ಭೀತಿಯ ಹಗೆಗಳಲಿ ನಿ
ಷ್ಕರುಣತೆಯ ಬಡವರಲಿ ದಾನವ ದೈವ ಗುರು ದ್ವಿಜರ
ಚರಣ ಸೇವೆಯಲಾರ್ತತೆಯ ಪಿಸು
ಣರ ನುಡಿಗಳಲಿ ಮೂರ್ಖತೆಯ ನೀ
ವಿರಚಿಪೆಯೊ ಬೇಸರುವೆಯೋ ಭೂಪಾಲ ಕೇಳ್ ಎಂದ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರಿಜನಕ್ಕೆ ದಯೆತೋರಬೇಕು. ಪರಸ್ತ್ರೀಯರ ವಿಷಯದಲ್ಲಿ ಭಯವಿರಬೇಕು. ಶತ್ರುಗಳಲ್ಲಿ ನಿಷ್ಕರುಣೆಯಿರಬೇಕು. ಬಡವರಿಗೆ
ದಾನ ಮಾಡಬೇಕು. ದೈವ ಗುರು ದ್ವಿಜರ ಚರಣ ಸೇವೆಯಲ್ಲಿ ಆರ್ತತೆಯಿರಬೇಕು. ಚಾಡಿಕೋರರ ಮಾತಿಗೆ ಮೂರ್ಖನಂತೆ ಪ್ರತಿಕ್ರಿಯಿಸಬೇಕು. ನೀನು ಹಾಗೆ ನಡೆಯುತ್ತಿರುವೆಯೋ ಅಥವಾ ಹಾಗೆ ನಡೆಯಲು ಬೇಸರಿಸುವೆಯೋ ?
ಪದಾರ್ಥ (ಕ.ಗ.ಪ)
ಪರಿಜನ-ಸೇವಕವರ್ಗ, ಭೀತಿ-ಭಯ, ಹಗೆಗಳಲಿ-ಶತ್ರುಗಳಲಿ, ನಿಷ್ಕರುಣೆ-ನಿರ್ದಯತೆ, ದ್ವಿಜ-ಬ್ರಾಹ್ಮಣ, ಚರಣಸೇವೆ-ಪಾದಸೇವೆ, ಆರ್ತತೆ-ಆತಂಕ, ಪಿಸುಣರ-ಚಾಡಿಕೋರರ, ವಿರಚಿಪೆಯೊ-ಪ್ರಕಟಿಸುವೆಯೋ, ಬೇಸರುವೆಯೋ-ಬೇಸರಪಟ್ಟುಕೊಳ್ಳುವೆಯೋ ?
ಮೂಲ ...{Loading}...
ಪರಿಜನಕೆ ದಯೆಯನು ಪರಸ್ತ್ರೀ
ಯರಲಿ ಭೀತಿಯ ಹಗೆಗಳಲಿ ನಿ
ಷ್ಕರುಣತೆಯ ಬಡವರಲಿ ದಾನವ ದೈವ ಗುರು ದ್ವಿಜರ
ಚರಣ ಸೇವೆಯಲಾರ್ತತೆಯ ಪಿಸು
ಣರ ನುಡಿಗಳಲಿ ಮೂರ್ಖತೆಯ ನೀ
ವಿರಚಿಪೆಯೊ ಬೇಸರುವೆಯೋ ಭೂಪಾಲ ಕೇಳೆಂದ ॥57॥
೦೫೮ ಮೋಹದವಳಲಿ ವೈದ್ಯರಲಿ ...{Loading}...
ಮೋಹದವಳಲಿ ವೈದ್ಯರಲಿ ಮೈ
ಗಾಹಿನವರಲಿ ಬಾಣಸಿಗರಲಿ
ಬೇಹ ಮಂತ್ರಿಗಳಲಿ ವಿಧಾವಂತರಲಿ ಹಿರಿಯರಲಿ
ದೇಹರಕ್ಷಕರಲಿ ಸದೋದಕ
ವಾಹಿಯಲಿ ಹಡಪಾಳಿಯಲಿ ಪ್ರ
ತ್ಯೂಹವನು ವಿರಚಿಸೆಯಲೇ ಭೂಪಾಲ ಕೇಳ್ ಎಂದ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೋಹದವಳ, ವೈದ್ಯರ, ಮೈಗಾವಲಿನವರ, ಅಡಿಗೆಯವರ, ಗುಪ್ತಚರ ಮಂತ್ರಿಗಳ, ನೌಕರರ, ಹಿರಿಯರ, ದೇಹರಕ್ಷಕರ ಹಡಪವಳರ ಕೆಲಸಗಳಿಗೆ ಹಾಗೂ ಸದಾ ನೀರನ್ನು ಹರಿಸುವವರಿಗೆ ಅಡ್ಡಿಯುಂಟು ಮಾಡುವುದಿಲ್ಲವಲ್ಲವೇ ?
ಪದಾರ್ಥ (ಕ.ಗ.ಪ)
ಮೈಗಾಹು-ಮೈಗಾವಲು,
ಪ್ರತ್ಯೂಹ-ಅಡ್ಡಿ,
ಬಾಣಸಿಗ-ಅಡಿಗೆಯವ,
ಹಡಪವಳ-ಸಂಚಿ ಜನ
ವಿಧಾವಂತರಲಿ- ವೇತನಕ್ಕಿರುವ ನೌಕರ
ಮೋಹದವಳಲಿ-ಯಾರಲ್ಲಿ ಪ್ರೀತಿಯಿದೆಯೋ ಅವಳಲ್ಲಿ, ಮೈಗಾಹಿನವರಲಿ-ಅಂಗರಕ್ಷಕರಲ್ಲಿ, ಬಾಣಸಿಗರಲಿ-ಅಡಿಗೆಯವರಲ್ಲಿ,
ಬೇಹ ಮಂತ್ರಿಗಳಲಿ-ಗುಪ್ತಚರ ಮಂತ್ರಿಗಳಲಿ,
ಸದೋದಕವಾಹಿಯಲಿ-ಸದಾ ನೀರನ್ನು ಹರಿಸುವವರಲ್ಲಿ,
ಹಡಪವಳರಲಿ(ಅವರ ಕೆಲಸಗಳಿಗೆ) ಪ್ರತ್ಯೂಹವನು-ಅಡ್ಡಿಯನ್ನು, ವಿರಚಿಸೆಯಲೇ-ಉಂಟುಮಾಡುವುದಿಲ್ಲ ಅಲ್ಲವೇ?
ಮೂಲ ...{Loading}...
ಮೋಹದವಳಲಿ ವೈದ್ಯರಲಿ ಮೈ
ಗಾಹಿನವರಲಿ ಬಾಣಸಿಗರಲಿ
ಬೇಹ ಮಂತ್ರಿಗಳಲಿ ವಿಧಾವಂತರಲಿ ಹಿರಿಯರಲಿ
ದೇಹರಕ್ಷಕರಲಿ ಸದೋದಕ
ವಾಹಿಯಲಿ ಹಡಪಾಳಿಯಲಿ ಪ್ರ
ತ್ಯೂಹವನು ವಿರಚಿಸೆಯಲೇ ಭೂಪಾಲ ಕೇಳೆಂದ ॥58॥
೦೫೯ ತರುಣಿಯಲಿ ಹಗೆಗಳಲಿ ...{Loading}...
ತರುಣಿಯಲಿ ಹಗೆಗಳಲಿ ಬಹಳೈ
ಶ್ವರಿಯದಲಿ ಶಸ್ತ್ರಾಂಗಿಯಲಿ ಸಂ
ಸ್ತರಣದಲಿ ಮದ್ಯಪನಲಬಲಾರ್ಥಿಯಲಿ ಶೃಂಗಿಯಲಿ
ಉರಗನಲಿ ನದಿಯಲಿ ನಖಿಯಲು
ಬ್ಬರದಲಿ ಶಿಖಿ ದುರ್ಮಂತ್ರಿಯಲಿ ದು
ಶ್ಚರಿತನಲಿ ವಿಶ್ವಾಸಿಸೆಯಲೇ ಭೂಪ ಕೇಳ್ ಎಂದ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತರುಣಿಯಲ್ಲಿ, ಶತ್ರುಗಳಲ್ಲಿ, ಬಹಳ ಐಶ್ವರ್ಯದಲ್ಲಿ, ಶಸ್ತ್ರ ಧರಿಸಿದವರಲ್ಲಿ, ಹಾಸಿಗೆಯಲ್ಲಿ, ಮದ್ಯಪಾನ ಮಾಡಿದವನಲ್ಲಿ, ಕೊಂಬಿರುವ ಪ್ರಾಣಿಗಳಲ್ಲಿ, ಹಾವಿನಲ್ಲಿ, ನದಿಯಲ್ಲಿ, ನಖಿ ಎಂಬ ಸುಗಂಧದ್ರವ್ಯದಲ್ಲಿ, ತೀವ್ರವಾಗಿರುವ ಬೆಂಕಿಯಲ್ಲಿ , ದುರ್ಮಂತ್ರಿಯಲ್ಲಿ, ದುರ್ನಡತೆಯವನಲ್ಲಿ, ನೀನು ವಿಶ್ವಾಸವನ್ನು ಇಡುವುದಿಲ್ಲ ಅಲ್ಲವೇ ರಾಜಾ ?
ಪದಾರ್ಥ (ಕ.ಗ.ಪ)
ಸಂಸ್ತರಣ-ಹಾಸಿಗೆ,
ಮದ್ಯಪ-ಹೆಂಡಕುಡುಕ,
ಶೃಂಗಿ-ಕೊಂಬಿರುವ ಪ್ರಾಣಿ,
ಉರಗ ಹಾವು,
ನಖಿ - ಒಂದು ಬಗೆಯ ಸುಗಂಧದ್ರವ್ಯ
ಹಗೆಗಳಲಿ-ಶತ್ರುಗಳಲ್ಲಿ, ಬಹಳೈಶ್ವರಿಯದಲಿ-ತುಂಬ ಐಶ್ವರ್ಯ ಇರುವಲ್ಲಿ, ಶಸ್ತ್ರಾಂಗಿಯಲಿ-ಶಸ್ತ್ರಧರಿಸುವವರಲ್ಲಿ,
ಸಂಸ್ತರಣದಲಿ-ಹಾಸಿಗೆಯಲ್ಲಿ, ಮದ್ಯಪನಲಿ-ಮದ್ಯಪಾನ ಮಾಡುವವನಲ್ಲಿ, ಅಬಲಾರ್ಥಿಯಲಿ-ಸ್ತ್ರೀಕಾಮುಕನಲ್ಲಿ, ಶೃಂಗಿಯಲಿ-ಕೊಂಬಿರುವ ಪ್ರಾಣಿಯಲ್ಲಿ, ಉರಗನಲಿ-ಹಾವಿನಲ್ಲಿ, ದುರ್ಮಂತ್ರಿಯಲಿ-ದುಷ್ಟನಾದ ಮಂತ್ರಿಯಲಿ, ವಿಶ್ವಾಸಿಸೆಯಲೇ-ನಂಬಿಕೆಯಿಡುವುದಿಲ್ಲ ಅಲ್ಲವೇ ?
ಪಾಠಾನ್ತರ (ಕ.ಗ.ಪ)
ಸಖಿಯರಾತುರಿಯದಲಿ –> ನಖಿಯಲುಬ್ಬರದಲಿ
ಮೂಲ ...{Loading}...
ತರುಣಿಯಲಿ ಹಗೆಗಳಲಿ ಬಹಳೈ
ಶ್ವರಿಯದಲಿ ಶಸ್ತ್ರಾಂಗಿಯಲಿ ಸಂ
ಸ್ತರಣದಲಿ ಮದ್ಯಪನಲಬಲಾರ್ಥಿಯಲಿ ಶೃಂಗಿಯಲಿ
ಉರಗನಲಿ ನದಿಯಲಿ ನಖಿಯಲು
ಬ್ಬರದಲಿ ಶಿಖಿ ದುರ್ಮಂತ್ರಿಯಲಿ ದು
ಶ್ಚರಿತನಲಿ ವಿಶ್ವಾಸಿಸೆಯಲೇ ಭೂಪ ಕೇಳೆಂದ ॥59॥
೦೬೦ ಢಾಳರನು ಢವಳರನು ...{Loading}...
ಢಾಳರನು ಢವಳರನು ಠಕ್ಕಿನ
ಠೌಳಿಕಾರರ ಕೃತಕ ಮಾಯಾ
ಜಾಲರನು ಕಾಹುರರನಂತರ್ದಾಹಕರ ಶಠರ
ಖೂಳರನು ಖಳರನು ವಿಕಾರಿಯ
ಜಾಳು ನುಡಿಗಳ ಜಡಮತಿಯನೀ
ನಾಳಿಗೊಂಬೆಯೊ ಲಾಲಿಸುವೆಯೋ ರಾಯ ಹೇಳೆಂದ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೋಸಗಾರರನ್ನು, ವಂಚಕರನ್ನು, ಉತ್ತಮರಂತೆ ತೋರಿಸಿಕೊಂಡು ವಂಚಿಸುವವರನ್ನು ಕೃತಕವಾಗಿ ಇಂದ್ರಜಾಲ ಮಾಡುವುವರನ್ನು, ಉದ್ರೇಕಗೊಂಡಿರುವವನ್ನು, ಒಳಗೇ ಸೇರಿಕೊಂಡು ಸುಡುವವರನ್ನು, ಉದ್ಧಟರನ್ನು, ನೀಚರನ್ನು, ದುಷ್ಟರನ್ನು, ವಕ್ರಬುದ್ಧಿಯವರನ್ನು ಹುರುಳಿಲ್ಲದೆ ಮಾತನಾಡುವ ಮೂರ್ಖರನ್ನು ನೀನು ವಶಪಡಿಸಿಕೊಳ್ಳುವೆಯೋ ಪೋಷಿಸುವೆಯೋ ರಾಜಾ ?
ಪದಾರ್ಥ (ಕ.ಗ.ಪ)
ಢಾಳ-ಮೋಸಗಾರ, ಢವಳ-ವಂಚಕ, ಕಾಹುರ-ಕ್ರುದ್ಧ, ಠಕ್ಕಿನ-ತೋರಿಕೆಯ, ಠೌಳಿಕಾರ-ವಂಚಕ, ಶಠ-ಕಪಟಿ, ಖೂಳ-ನೀಚ, ಖಳ-ದುಷ್ಟ, ಅಂತರ್ದಾಹಕ-ಒಳಗೆ ಸುಡುವವನು,
ಆಳಿಗೊಳ್-ವಶಪಡಿಸಿಕೊಳ್ಳು
ಢಾಳರನು-ಮೋಸಗಾರರನ್ನು, ಢವಳರನು-ವಂಚಕರನ್ನು, ಠಕ್ಕಿನ ಠೌಳಿಕಾರರ-ಉತ್ತಮರರಂತೆ ತೋರಿಸಿಕೊಂಡು, ಮೋಸಮಾಡುವವರನ್ನು, ಕೃತಕ ಮಾಯಾ ಜಾಲರನು-ಕೃತಕವಾಗಿ ಇಂದ್ರಜಾಲ ಮಾಡುವವರನ್ನು, ಕಾಹುರರನು-ಉದ್ರೇಕಗೊಂಡಿರುವವರನ್ನು, ಅಂತರ್ದಾಹಕರ-ಒಳಗೇ ಸೇರಿಕೊಂಡು ಸುಡುವವರನ್ನು, ಶಠರ-ಉದ್ಧಟರಾದವರನ್ನು,
ಖೂಳರನ-ನೀಚರನ್ನು, ಖಳರನು-ದುಷ್ಟರನ್ನು, ವಿಕಾರಿಯ-ವಕ್ರಬುದ್ಧಿಯವನನ್ನು, ಜಾಳು ನುಡಿಗಳ ಜಡಮತಿಯನು-ಹುರುಳಿಲ್ಲದೆ ಮಾತನಾಡುವ ಮೂರ್ಖರನ್ನು, ಆಳಿಗೊಂಬೆಯೊ-ವಶಪಡಿಸಿಕೊಳ್ಳುವೆಯೋ ? ಲಾಲಿಸುವೆಯೋ-ಪೋಷಿಸುವೆಯೋ
ಮೂಲ ...{Loading}...
ಢಾಳರನು ಢವಳರನು ಠಕ್ಕಿನ
ಠೌಳಿಕಾರರ ಕೃತಕ ಮಾಯಾ
ಜಾಲರನು ಕಾಹುರರನಂತರ್ದಾಹಕರ ಶಠರ
ಖೂಳರನು ಖಳರನು ವಿಕಾರಿಯ
ಜಾಳು ನುಡಿಗಳ ಜಡಮತಿಯನೀ
ನಾಳಿಗೊಂಬೆಯೊ ಲಾಲಿಸುವೆಯೋ ರಾಯ ಹೇಳೆಂದ ॥60॥
೦೬೧ ಆವ ಕಾಲದೊಳಾವ ...{Loading}...
ಆವ ಕಾಲದೊಳಾವ ಕಾರ್ಯವ
ದಾವನಿಂದಹುದವನ ಮನ್ನಿಪ
ಠಾವಿದೆಂಬುದನರಿದಿಹೈ ಮೃಗಜೀವಿಯಂದದಲಿ
ಲಾವಕರ ನುಡಿ ಕೇಳಿ ನಡೆದರೆ
ಭೂವಳಯದೇಕಾಧಿಪತ್ಯದ
ಠಾವು ಕೆಡುವುದನರಿದಿಹೈ ಭೂಪಾಲ ಕೇಳ್ ಎಂದ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಾವ ಕಾಲದಲ್ಲಿ ಯಾವ ಕಾರ್ಯ ಯಾವನಿಂದ ಆದೀತೆಂದು ತಿಳಿದು ಅಂಥವನನ್ನು ಆದರಿಸುವ ಸ್ಥಳವಿದು ಎಂದು ನೀನು ತಿಳಿದಿರುವೆಯಷ್ಟೆ ? ಮೃಗಜೀವಿಯಾದ ಸಿಂಹದಂತೆ ಚಾಡಿಕೋರರ ಮಾತು ಕೇಳಿಕೊಂಡು ಅದರಂತೆ ನಡೆದರೆ ಭೂಮಂಡಲದ ಏಕಾಧಿಪತ್ಯವೆಂಬುದು ಕೆಟ್ಟು ಹೋಗುತ್ತದೆಂಬುದನ್ನು ತಿಳಿದಿದ್ದೀಯಾ ರಾಜಾ ?
ಪದಾರ್ಥ (ಕ.ಗ.ಪ)
ಠಾವು-ಸ್ಥಾನ, ಲಾವಕ-ಚಾಡಿಕೋರ
ಮನ್ನಿಪ-ಕ್ಷಮಿಸುವಂತಹ, ಠಾವಿದು-ಸ್ಥಳವಿದು, ಅರಿದಿಹೈ-ತಿಳಿದಿರುವೆಯಾ?, ಮೃಗಜೀವಿಯಂದದಲಿ-ಮೃಗಜೀವಿಯಾದ ಸಿಂಹದಂತೆ,
ಲಾವಕರ-ಚಾಡಿಕೋರರ, ನುಡಿ ಕೇಳಿ ನಡೆದರೆ-ಮಾತು ಕೇಳಿಕೊಂಡು ಅದರಂತೆ ನಡೆದರೆ, ಭೂವಳಯದ-ಈ ಭೂಮಂಡಲದ, ಏಕಾಧಿಪತ್ಯದ ಠಾವು-ಒಬ್ಬನೇ ಯಜಮಾನನಿಗೆ ಸೇರಿದ ಸ್ಥಳವಿದು, (ಎಂಬುದು) ಕೆಡುವುದು-ಕೆಟ್ಟು ಹೋಗುತ್ತದೆ (ಎಂಬುದನ್ನು)
ಅರಿದಿಹೈ-ತಿಳಿದಿರುವೆಯಾ ?
ಟಿಪ್ಪನೀ (ಕ.ಗ.ಪ)
ಮೃಗಜೀವಿಯಂದದಲಿ - ಪಂಚತಂತ್ರದ ಒಂದು ಕಥೆಯನ್ನು ನೆನಪಿಸಿಕೊಳ್ಳಬಹುದು
ಮೂಲ ...{Loading}...
ಆವ ಕಾಲದೊಳಾವ ಕಾರ್ಯವ
ದಾವನಿಂದಹುದವನ ಮನ್ನಿಪ
ಠಾವಿದೆಂಬುದನರಿದಿಹೈ ಮೃಗಜೀವಿಯಂದದಲಿ
ಲಾವಕರ ನುಡಿ ಕೇಳಿ ನಡೆದರೆ
ಭೂವಳಯದೇಕಾಧಿಪತ್ಯದ
ಠಾವು ಕೆಡುವುದನರಿದಿಹೈ ಭೂಪಾಲ ಕೇಳೆಂದ ॥61॥
೦೬೨ ಅರಸು ರಾಕ್ಷಸ ...{Loading}...
ಅರಸು ರಾಕ್ಷಸ ಮಂತ್ರಿಯೆಂಬುವ
ಮೊರೆವ ಹುಲಿ ಪರಿವಾರ ಹದ್ದಿನ
ನೆರವಿ ಬಡವರ ಬಿನ್ನಪವನಿನ್ನಾರು ಕೇಳುವರು
ಉರಿವುರಿವುತಿದೆ ದೇಶ ನಾವಿ
ನ್ನಿರಲು ಬಾರದೆನುತ್ತ ಜನ ಬೇ
ಸರಿನ ಬೇಗೆಯಲಿರದಲೇ ಭೂಪಾಲ ಕೇಳ್ ಎಂದ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜನು ರಾಕ್ಷಸ, ಮಂತ್ರಿಯಾದವನು ಗರ್ಜಿಸುವ ಹುಲಿ, ಪರಿವಾರದವರೇ ಹದ್ದುಗಳ ಗುಂಪು. ಹಾಗಿರುವಾಗ ನಮ್ಮನ್ನು ಕೇಳುವವರಾರು ? ದೇಶ ಉರಿಯುತ್ತಿದೆ. ಇನ್ನು ನಾವು ಇಲ್ಲಿರಬಾರದು ಎಂದು ಪ್ರಜೆಗಳು ಬೇಗೆಯಿಂದ ಬೇಸರಗೊಂಡಿಲ್ಲ ತಾನೇ ರಾಜ ?
ಪದಾರ್ಥ (ಕ.ಗ.ಪ)
ಮೊರೆವ-ಅಬ್ಬರಿಸುವ, ಪರಿವಾರ-ಸೆವಕ ವರ್ಗದವರು, ನೆರವಿ-ಗುಂಪು, ಬಿನ್ನಪವನು-ವಿಜ್ಞಾಪನೆಯನ್ನು, ಬೇಸರಿನ ಬೇಗೆಯಲಿ-ಬೇಸರದ ದುಃಖದಿಂದ, ಇರದಲೇ-ಇಲ್ಲ ಅಲ್ಲವೇ ?
ಮೂಲ ...{Loading}...
ಅರಸು ರಾಕ್ಷಸ ಮಂತ್ರಿಯೆಂಬುವ
ಮೊರೆವ ಹುಲಿ ಪರಿವಾರ ಹದ್ದಿನ
ನೆರವಿ ಬಡವರ ಬಿನ್ನಪವನಿನ್ನಾರು ಕೇಳುವರು
ಉರಿವುರಿವುತಿದೆ ದೇಶ ನಾವಿ
ನ್ನಿರಲು ಬಾರದೆನುತ್ತ ಜನ ಬೇ
ಸರಿನ ಬೇಗೆಯಲಿರದಲೇ ಭೂಪಾಲ ಕೇಳೆಂದ ॥62॥
೦೬೩ ಧನದಲುರು ಧಾನ್ಯದಲಿ ...{Loading}...
ಧನದಲುರು ಧಾನ್ಯದಲಿ ನೆರೆದಿಂ
ಧನದಲುದಕದ ಹೆಚ್ಚುಗೆಯಲಂ
ಬಿನಲಿ ಶಸ್ತ್ರೌಘದಲಿ ಶಿಲ್ಪಿಗಳ ಶಿಲಾಳಿಯಲಿ
ವನವಳಯ ಕೋಟಾವಳಯ ಜೀ
ವನವಳಯ ಗಿರಿವಳಯ ದುರ್ಗಮ
ವೆನಿಪ ದುರ್ಗಾವಳಿ ಸಮಗ್ರವೆ ಭೂಪ ಕೇಳ್ ಎಂದ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವನವಲಯ, ಕೋಟೆಯವಲಯ, ಜೀವನ ವಲಯ, ಗಿರಿ ವಲಯ, ದುರ್ಗಮವಾದ ದುರ್ಗಗಳು ಎಲ್ಲವೂ ಧನದಿಂದ, ಧಾನ್ಯದಿಂದ ತುಂಬಿ, ಇಂಧನ ಹಾಗೂ ನೀರು ಸಮೃದ್ಧವಾಗಿದ್ದು ಬಾಣ ಮತ್ತು ಶಸ್ತ್ರ ಸಮೂಹದಿಂದ, ಶಿಲ್ಪಿಗಳಂದ ಕೆತ್ತಲ್ಪಟ್ಟ ಶಿಲೆಗಳಿಂದ ತುಂಬಿವೆಯಲ್ಲವೆ ರಾಜ ?
ಪದಾರ್ಥ (ಕ.ಗ.ಪ)
ನೆರೆದ ಇಂಧನದಲಿ-ತುಂಬಿದ ಉರುವಲಿನಿಂದ, ಉದಕದ ಹೆಚ್ಚುಗೆಯಲಿ-ನೀರಿನ ಸಮೃದ್ಧಿಯಿಂದ, ಅಂಬಿನಲಿ-ಬಾಣಗಳಿಂದ, ಶಸ್ತ್ರೌಘದಲಿ-ಆಯುಧಗಳ ರಾಶಿಯಿಂದ, ಶಿಲಾಳಿಯಲಿ-ಕೆತ್ತನೆಗೆ ಬೇಕಾದ ಕಲ್ಲಿನ ರಾಶಿಯಿಂದ, ವನವಳಯ-ಕಾಡಿನ ಪ್ರದೇಶ,
ಗಿರಿವಳಯ-ಬೆಟ್ಟದ ಪ್ರದೇಶ, ದುರ್ಗಮವೆನಿಪ ದುರ್ಗಾವಳಿ-ಪ್ರವೇಶಿಲಾಗದಂತಹ ಕೋಟೆಯ ಪ್ರವೇಶ, ಸಮಗ್ರವೆ-ಸಮೃದ್ಧವಾಗಿವೆಯೇ ?
ಮೂಲ ...{Loading}...
ಧನದಲುರು ಧಾನ್ಯದಲಿ ನೆರೆದಿಂ
ಧನದಲುದಕದ ಹೆಚ್ಚುಗೆಯಲಂ
ಬಿನಲಿ ಶಸ್ತ್ರೌಘದಲಿ ಶಿಲ್ಪಿಗಳ ಶಿಲಾಳಿಯಲಿ
ವನವಳಯ ಕೋಟಾವಳಯ ಜೀ
ವನವಳಯ ಗಿರಿವಳಯ ದುರ್ಗಮ
ವೆನಿಪ ದುರ್ಗಾವಳಿ ಸಮಗ್ರವೆ ಭೂಪ ಕೇಳೆಂದ ॥63॥
೦೬೪ ಕೃಷಿ ಮೊದಲು ...{Loading}...
ಕೃಷಿ ಮೊದಲು ಸರ್ವಕ್ಕೆ ಕೃಷಿಯಿಂ
ಪಸರಿಸುವುದಾ ಕೃಷಿಯನುದ್ಯೋ
ಗಿಸುವ ಜನವನು ಪಾಲಿಸುವುದಾ ಜನಪದದ ಜನದಿ
ವಸು ತೆರಳುವುದು ವಸುವಿನಿಂ ಸಾ
ಧಿಸುವಡಾವುದಸಾಧ್ಯವದರಿಂ
ಕೃಷಿವಿಹೀನನ ದೇಶವದು ದುರ್ದೇಶ ಕೇಳ್ ಎಂದ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷಿಯೇ ಎಲ್ಲಕ್ಕೂ ಮೂಲ. ಕೃಷಿಯಿಂದಲೇ ಎಲ್ಲವನ್ನು ವಿಸ್ತರಿಸುವುದು. ಕೃಷಿಯ ಉದ್ಯೋಗವನ್ನು ಕೈಕೊಂಡಿರುವ ಜನವನ್ನು ಪೋಷಿಸುವುದು ಅಗತ್ಯ. ರಾಜ್ಯದ ಆ ಜನರಿಂದಲೇ ಸಂಪತ್ತು ಬೆಳೆದು ಬರುವುದು. ಸಂಪತ್ತಿನಿಂದ ಸಾಧಿಸಲಾಗದಂತಹುದು ಯಾವುದಿದೆ? ಆದ್ದರಿಂದ ಕೃಷಿಯಿಲ್ಲದ ದೇಶವೇ ದುರ್ದೇಶ, ಕೇಳು.
ಪದಾರ್ಥ (ಕ.ಗ.ಪ)
ವಸು-ಸಂಪತ್ತು
ಕೃಷಿ-ವ್ಯವಸಾಯ, ಮೊದಲು ಸರ್ವಕ್ಕೆ-ಎಲ್ಲಕ್ಕೂ ಮೊದಲು ಬೇಕಾದುದು, ಕೃಷಿಯಿಂಪಸರಿಸುವುದು-ವ್ಯವಸಾಯದಿಂದಲೇ ಅಭಿವೃದ್ಧಿಗೆ ಬರುವುದು, ಕೃಷಿಯನುದ್ಯೋಗಿಸುವ ಜನವನು-ವ್ಯವಸಾಯವನ್ನೇ ಉದ್ಯೋಗವಾಗಿಸಿಕೊಂಡಿರುವ ಜನವನ್ನು, ಪಾಲಿಸುವುದು-ಕಾಪಾಡುವುದು, ಆ ಜನಪದದ-ಆ ರಾಜ್ಯದ, ಜನದಿ-ಜನರಿಂದಲೇ, ವಸು-ಐಶ್ವರ್ಯ, ತೆರಳುವುದು-ಹೊರಹೊಮ್ಮುವುದು, ವಸುವಿನಿಂ-ಸಂಪತ್ತಿನಿಂದ, ಸಾಧಿಸುವಡೆ-ಸಾಧಿಸುವುದಾದರೆ, ಆವುದ ಸಾಧ್ಯವು-ಏನು ತಾನೇ ಅಸಾಧ್ಯವೆನಿಸುತ್ತದೆ ? ಅದರಿಂ-ಆದ್ದರಿಂದ,
ಕೃಷಿವಿಹೀನನ ದೇಶವದು-ವ್ಯವಸಾಯವೇ ಇಲ್ಲದ ಆದೇಶ, ದುರ್ದೇಶ-ಕೆಟ್ಟದೇಶವೆನಿಸುತ್ತದೆ
ಮೂಲ ...{Loading}...
ಕೃಷಿ ಮೊದಲು ಸರ್ವಕ್ಕೆ ಕೃಷಿಯಿಂ
ಪಸರಿಸುವುದಾ ಕೃಷಿಯನುದ್ಯೋ
ಗಿಸುವ ಜನವನು ಪಾಲಿಸುವುದಾ ಜನಪದದ ಜನದಿ
ವಸು ತೆರಳುವುದು ವಸುವಿನಿಂ ಸಾ
ಧಿಸುವಡಾವುದಸಾಧ್ಯವದರಿಂ
ಕೃಷಿವಿಹೀನನ ದೇಶವದು ದುರ್ದೇಶ ಕೇಳೆಂದ ॥64॥
೦೬೫ ಸತಿಯರೊಲುಮೆಯ ವಿಟರುಗಳನಾ ...{Loading}...
ಸತಿಯರೊಲುಮೆಯ ವಿಟರುಗಳನಾ
ಸತಿಯರ ಸ್ಥಿತಿಗತಿಗೆ ತಾನೆಂ
ದತಿಶಯೋಕ್ತಿಯ ನುಡಿವವರನರಮನೆಯ ಕಾಹಿಂಗೆ
ಪತಿಕರಿಸಿದರೆ ಜಗವರಿಯಲಾ
ಕ್ಷಿತಿಪರಭಿಮಾನವು ಮುಹೂರ್ತಕೆ
ಗತವಹುದು ನೀನರಿದಿಹೈ ಭೂಪಾಲ ಕೇಳ್ ಎಂದ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜ ಪರಿವಾರದ ಸ್ತ್ರೀಯರ ಪ್ರೀತಿಯ ವಿಟರುಗಳನ್ನೂ, ಆ ಸ್ತ್ರೀಯರ ಸ್ಥಿತಿಗತಿಗಳಿಗೆ ತಾವೇ ಕಾರಣವೆಂದು ಅತಿಶಯೋಕ್ತಿಯ ಮಾತುಗಳನ್ನಾಡುವವರನ್ನೂ, ಅರಮನೆಯ ಕಾವಲಿಗೆ ನೇಮಿಸಿದರೆ ಅಂತಹ ರಾಜರ ಅಭಿಮಾನವು ಕ್ಷಣಮಾತ್ರಕ್ಕೆ ಹಾಳಾಗುತ್ತದೆ. ಇದು ಜಗತ್ತಿಗೇ ತಿಳಿದಿದೆ. ನೀನು ಹೀಗಿಲ್ಲ ತಾನೇ ರಾಜಾ ?
ಪದಾರ್ಥ (ಕ.ಗ.ಪ)
ಕಾಹು-ರಕ್ಷಣೆ, ಪತಿಕರಿಸು-ನೇಮಿಸು, ಕ್ಷಿತಿಪ-ರಾಜ
ಸತಿಯರ-ರಾಜಪರಿವಾರದ ಸ್ತ್ರೀಯರ, ಒಲುಮೆಯ-ಪ್ರೀತಿಯನ್ನು ಗಳಿಸಿದ, ವಿಟರುಗಳನು-ಜಾರರನ್ನು, ಆ ಸತಿಯರ-ಆಸ್ತ್ರೀಯ,
ಸ್ಥಿತಿಗತಿಗೆ ತಾನೆಂದು-ಅವರ ಸ್ಥಿತಿ ಹಾಗೂ ಗತಿಗಳಿಗೆ ತಾನೇ ಕಾರಣ ಎಂದು, ಅತಿಶಯೋಕ್ತಿಯ ನುಡಿವವರನು-ಅತಿಶಯವಾಗಿ ಮಾತನಾಡುವಂಥವರನ್ನು, ಅರಮನೆಯ ಕಾಹಿಂಗೆ-ಅರಮನೆಯ ರಕ್ಷಣೆಗೆ, ಪತಿಕರಿಸಿದರೆ-ನಿಯೋಜಿಸಿದರೆ, ಜಗವರಿಯಲು-ಲೋಕಕ್ಕೆ ತಿಳಿದಿರುವಂತೆ, ಆ ಕ್ಷಿತಿಪರ-ಆ ರಾಜರ, ಅಭಿಮಾನವು-ಗೌರವವು, ಮುಹೂರ್ತಕೆ ಗತವಹುದು-ಕ್ಷಣ ಮಾತ್ರದಲ್ಲಿ ಹೊರಟು ಹೋಗುವುದು, ಭೂಪಾಲ ಕೇಳು-ರಾಜ, ಕೇಳು
ಮೂಲ ...{Loading}...
ಸತಿಯರೊಲುಮೆಯ ವಿಟರುಗಳನಾ
ಸತಿಯರ ಸ್ಥಿತಿಗತಿಗೆ ತಾನೆಂ
ದತಿಶಯೋಕ್ತಿಯ ನುಡಿವವರನರಮನೆಯ ಕಾಹಿಂಗೆ
ಪತಿಕರಿಸಿದರೆ ಜಗವರಿಯಲಾ
ಕ್ಷಿತಿಪರಭಿಮಾನವು ಮುಹೂರ್ತಕೆ
ಗತವಹುದು ನೀನರಿದಿಹೈ ಭೂಪಾಲ ಕೇಳೆಂದ ॥65॥
೦೬೬ ಖಡುಗ ಧಾರೆಯ ...{Loading}...
ಖಡುಗ ಧಾರೆಯ ಮಧು ಮಹಾಹಿಯ
ಹೆಡೆಯ ಮಾಣಿಕ ವಜ್ರದಿಂ ಬಿಗಿ
ದೊಡಲಿಗೊಡ್ಡಿದ ಸುರಗಿ ಕಡುಗೆರಳಿದ ಮೃಗಾಧಿಪನ
ನಡು ಗುಹೆಯೊಳಿಹ ಸುಧೆಯ ಘಟವೀ
ಪೊಡವಿಯೊಡೆತನ ಸದರವೇ ಕಡು
ಬಡವರಿಗೆ ದೊರೆಕೊಂಬುದೇ ಭೂಪಾಲ ಕೇಳ್ ಎಂದ ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಪೃಥ್ವಿಯ ಒಡೆತನ ಸರಳವಾಗಿ ಪ್ರಾಪ್ತವಾಗುವಂತಹದೇ ? ಅದು ಕತ್ತಿಯ ಅಲಗಿಗೆ ಸವರಿದ ಜೇನು, ಘಟಸರ್ಪದ ಹೆಡೆಯಲ್ಲಿರುವ ಮಾಣಿಕ್ಯ; ವಜ್ರದಿಂದ ರಕ್ಷಿತವಾದ ದೇಹಕ್ಕೆ ಒಡ್ಡಿದ ಖಡ್ಗ ; ಅತಿಯಾಗಿ ಕೆರಳಿದ ಸಿಂಹದ ನಡುಗುಹೆಯಲ್ಲಿರುವ ಅಮೃತದ ಕೊಡದ ಹಗೆ ಈ ಅರಸುತನ. (ಬಹು ಕಷ್ಟ ಸಾಧ್ಯ) ಇವು ಕಡುಬಡವರಿಗೆ ದೊರೆತೀತೇ ರಾಜಾ ?
ಪದಾರ್ಥ (ಕ.ಗ.ಪ)
ಅಹಿ-ಸರ್ಪ, ಮೃಗಾಧಿಪ-ಸಿಂಹ, ಪೊಡವಿ-ಭೂಮಿ
ಈ ಪೊಡವಿಯೊಡೆತನ-ಈ ಪೃಥ್ವಿಯ (ರಾಜ್ಯದ) ಒಡೆತನ, ಸದರವೇ-ಸುಲಭವಾದದ್ದೇ ?, ಅದು ಖಡುಗ ಧಾರೆಯ ಮಧು-ಕತ್ತಿಯ ಅಲುಗಿಗೆ ಸವರಿದ, ಜೇನುತುಪ್ಪದಂತೆ ! ಜೇನುತುಪ್ಪಕ್ಕೆ ಆಸೆ ಪಟ್ಟು ನೆಕ್ಕಲು, ಹೋದರೆನಾಲಿಗೆ ಸೀಳಿಹೋಗುತ್ತದೆ. ಮಹಾಹಿಯ ಹೆಡೆಯ ಮಾಣಿಕ-ಮಹಾಸರ್ಪದ, ಹೆಡೆಯಲ್ಲಿರುವ ಕೆಂಪುರತ್ನ ಇದ್ದ ಹಾಗೆ, ರತ್ನಕ್ಕೆ ಕೈ, ಹಾಕಿದರೆ ಸರ್ಪದಿಂದ ಕಚ್ಚಿಸಿಕೊಂಡು ಸಾಯುವುದೇ, ಅಂತೆಯೇ ವಜ್ರದಿಂ ಬಿಗಿದೊಡಲಿಗೊಡ್ಡಿದ ಸುರಗಿ-ವಜ್ರದಿಂದ ಬಿಗಿದ ದೇಹಕ್ಕೆ ಒಡ್ಡಿದ ಕತ್ತಿಯಿಂದ ಇರುವ ಅಪಾಯದಂತೆ
ಕಡುಗೆರಳಿದ-ಮಹಾ ಆಕ್ರೋಶಗೊಂಡ, ಮೃಗಾಧಿಪನ-ಸಿಂಹದ, ನಡು-ಸೋಂಟ(ಸಿಂಹದ ನಡುವನ್ನು ಆದರ್ಶ, ಆಕರ್ಷಣೀಯ ಎಂದು ಪರಗಣಿಸುತ್ತಾರೆ), ಗುಹೆಯೊಳಿಹ-ಗುಹೆಯಲ್ಲಿರುವ, ಸುಧೆಯ ಘಟಿ-ಅಮೃತದ ಮಡಿಕೆ (ಅಮೃತದ ಆಸೆಗೆ ಹೋಗಿ ಅಪಾಯವನ್ನು ಎದುರಿಸಬೇಕಾದೀತು), ಕಡುಬಡವರಿಗೆ-ಅತಿ ದರಿದ್ರರಾದವರಿಗೆ,
ಆ ಪೃಥ್ವಿಯ ಒಡೆತನ ದೊರೆಕೊಂಬುದೇ-ಸುಲಭವಾಗಿ ದೊರತೀತೇ ?
ಟಿಪ್ಪನೀ (ಕ.ಗ.ಪ)
ವಜ್ರದಿಂ ಬಿಗಿದೊಡಲಿಗೊಡ್ಡಿದ ಸುರಗಿ ?
ಮೂಲ ...{Loading}...
ಖಡುಗ ಧಾರೆಯ ಮಧು ಮಹಾಹಿಯ
ಹೆಡೆಯ ಮಾಣಿಕ ವಜ್ರದಿಂ ಬಿಗಿ
ದೊಡಲಿಗೊಡ್ಡಿದ ಸುರಗಿ ಕಡುಗೆರಳಿದ ಮೃಗಾಧಿಪನ
ನಡು ಗುಹೆಯೊಳಿಹ ಸುಧೆಯ ಘಟವೀ
ಪೊಡವಿಯೊಡೆತನ ಸದರವೇ ಕಡು
ಬಡವರಿಗೆ ದೊರೆಕೊಂಬುದೇ ಭೂಪಾಲ ಕೇಳೆಂದ ॥66॥
೦೬೭ ಮಗಗೆ ಮುನಿವನು ...{Loading}...
ಮಗಗೆ ಮುನಿವನು ತಂದೆ ತಂದೆಗೆ
ಮಗ ಮುನಿವನೊಡಹುಟ್ಟಿದರು ಬಲು
ಪಗೆ ಕಣಾ ತಮ್ಮೊಳಗೆ ಭೂಪರ ಕುಲದ ವಿದ್ಯವಿದು
ಬಗೆಯೆ ನಿನ್ನೊಡಹುಟ್ಟಿದರು ಮಂ
ತ್ರಿಗಳೊಳಾಪ್ತರಖಿನ್ನರೇ ದಾ
ಯಿಗರೊಳಂತರ್ಬದ್ಧವುಂಟೇ ರಾಯ ನಿನಗೆಂದ ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಗನನ್ನು ಕಂಡರೆ ತಂದೆಗೆ ಕೋಪ, ಮಗನಿಗೆ ತಂದೆಯ ಮೇಲೆ ಕೋಪ, ಒಡಹುಟ್ಟಿದವರಿಗೆ ತಮ್ಮ ತಮ್ಮಲ್ಲೇ ದ್ವೇಷ. ರಾಜವಂಶದವರ ವಿದ್ಯೆಯೇ ಇದು. ಯೋಚಿಸಿ ನೋಡಿದರೆ ನಿನ್ನ ಒಡಹುಟ್ಟಿದವರು ಮಂತ್ರಿಗಳು ಆಪ್ತರು ವಿಷಾದವಿಲ್ಲದೆ ಸಮಾಧಾನದಿಂದ ಇದ್ದಾರೆಯೇ ? ಅವರ ನಡುವೆ ಅಂತಃಕಲಹಗಳೇನಾದರೂ ಇವೆಯೇ ರಾಜಾ ?
ಪದಾರ್ಥ (ಕ.ಗ.ಪ)
ಅಖಿನ್ನ-ದುಃಖರಹಿತ, ಅಂತರ್ಬದ್ಧ-ಅಂತಃಕಲಹ,
ಮುನಿವನು-ಕೋಪಗೊಳ್ಳುವನು, ಬಲುಪಗೆ ಕಣಾ-ಮಹಾ ಶತ್ರುತ್ವ ಕಣಯ್ಯಾ,
ಭೂಪರ ಕುಲದ ವಿದ್ಯವಿದು-ರಾಜವಂಶರ ವಿದ್ಯೆ ಇದು, ಬಗೆಯೆ-ಯೋಚಿಸಿದ್ದೇ ಆದರೆ, ಅಖಿನ್ನರೇ-ದುಃಖವಿಲ್ಲದವರೇ?, ದಾಯಿಗರೊಳು-ದಾಯಾದಿಗಳಲ್ಲಿ, ಅಣ್ಣ ತಮ್ಮಂದಿರಲ್ಲಿ, ಅಂತರ್ಬದ್ಧವುಂಟೇ-ಪರಸ್ಪರ ದ್ವೇಷವುಂಟೇ ?
ಮೂಲ ...{Loading}...
ಮಗಗೆ ಮುನಿವನು ತಂದೆ ತಂದೆಗೆ
ಮಗ ಮುನಿವನೊಡಹುಟ್ಟಿದರು ಬಲು
ಪಗೆ ಕಣಾ ತಮ್ಮೊಳಗೆ ಭೂಪರ ಕುಲದ ವಿದ್ಯವಿದು
ಬಗೆಯೆ ನಿನ್ನೊಡಹುಟ್ಟಿದರು ಮಂ
ತ್ರಿಗಳೊಳಾಪ್ತರಖಿನ್ನರೇ ದಾ
ಯಿಗರೊಳಂತರ್ಬದ್ಧವುಂಟೇ ರಾಯ ನಿನಗೆಂದ ॥67॥
೦೬೮ ಮಲೆವ ರಾಯರ ...{Loading}...
ಮಲೆವ ರಾಯರ ಬೆನ್ನ ಕಪ್ಪವ
ನಲಗಿನಲಿ ಕೊಂಡಾಂತ ಮನ್ನೆಯ
ಕುಲದ ತಲೆ ಚೆಂಡಾಡಿ ಗಡಿಗಳ ದುರ್ಗದಲಿ ತನ್ನ
ಬಲು ಸಚಿವರನು ನಿಲ್ಲಿಸಿ ತಾ ಪುರ
ದಲಿ ವಿನೋದದಲಿರುತ ಹರುಷದ
ಲಿಳೆಯ ಪಾಲಿಸುವವನರಸು ಭೂಪಾಲ ಕೇಳ್ ಎಂದ ॥68॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೊಬ್ಬಿ ಎದುರು ಬಿದ್ದ ರಾಜರನ್ನು ಖಡ್ಗದಿಂದ ಬೆನ್ನಿಗೆ ಇರಿದು ಕಪ್ಪವನ್ನು ತೆಗೆದುಕೊಂಡು, ತನ್ನನ್ನು ಆಕ್ರಮಿಸ ಬಂದ ರಾಜರ ತಲೆಗಳನ್ನು ಚೆಂಡಾಡಿ, ರಾಜ್ಯದ ಗಡಿಗಳ ದುರ್ಗದಲ್ಲಿ ತನ್ನ ಸಮರ್ಥರಾದ ಸಚಿವರನ್ನು ನೆಲೆಗೊಳಿಸಿ, ಯಾವ ರಾಜ ತನ್ನ ಪಟ್ಟಣದಲ್ಲಿ ವಿನೋದದಿಂದ, ಹರ್ಷದಿಂದ ರಾಜ್ಯವನ್ನು ಪಾಲಿಸುತ್ತಿರುವನೋ ಅವನೇ ನಿಜವಾದ ರಾಜ.
ಪದಾರ್ಥ (ಕ.ಗ.ಪ)
ಮಲೆವ ರಾಯರ-ಕೊಬ್ಬಿ ಪ್ರತಿಭಟಿಸುವ ರಾಜರ, ಬೆನ್ನ ಕಪ್ಪವನು ಅಲಗಿನಲಿ ಕೊಂಡು-ಬೆನ್ನನ್ನು ಕತ್ತಿಯಿಂದ, ಇರಿದು ವಶಪಡಿಸಿಕೊಂಡು ಅವರಿಂದ ಕಪ್ಪವನ್ನು ಪಡೆದು, ಅಂತ-ತನ್ನನ್ನು ಆಕ್ರಮಿಸಿದ, ಮನ್ನೆಯ ಕುಲದ-ರಾಜವಂಶದವರ,
ತಲೆ ಚೆಂಡಾಡಿ-ಚೆಂಡಾಡಿದಂತೆ ತಲೆಯನ್ನು ಕತ್ತರಿಸಿ ಎಸೆದು, ಗಡಿಗಳ ದುರ್ಗದಲಿ-ರಾಜ್ಯದ ಎಲ್ಲೆಗಳಲ್ಲಿರುವ ಕೋಟೆಗಳಲ್ಲಿ
ತನ್ನ ಬಲಶಾಲಿಗಳಾದ ಸಚಿವರನ್ನು ನೆಲೆಗೊಳಿಸಿ, ತಾ-ತಾನು, ಪುರದಲಿ-ತನ್ನ ರಾಜಧಾನಿಯಲ್ಲಿ, ವಿನೋದದಲಿರುತ-ಸಂತೋಷದಿಂದ ಇದ್ದು, ಹರುಷದಲಿ ಇಳೆಯ ಪಾಲಿಸುವವನು-ಹರ್ಷದಿಂದ, ರಾಜ್ಯವನ್ನು ಆಳಿಕೊಂಡಿರುವವನೇ, ಅರಸು-ನಿಜವಾದ ರಾಜ,
ಭೂಪಾಲ ಕೇಳು-ಕೇಳು ರಾಜ
ಮೂಲ ...{Loading}...
ಮಲೆವ ರಾಯರ ಬೆನ್ನ ಕಪ್ಪವ
ನಲಗಿನಲಿ ಕೊಂಡಾಂತ ಮನ್ನೆಯ
ಕುಲದ ತಲೆ ಚೆಂಡಾಡಿ ಗಡಿಗಳ ದುರ್ಗದಲಿ ತನ್ನ
ಬಲು ಸಚಿವರನು ನಿಲ್ಲಿಸಿ ತಾ ಪುರ
ದಲಿ ವಿನೋದದಲಿರುತ ಹರುಷದ
ಲಿಳೆಯ ಪಾಲಿಸುವವನರಸು ಭೂಪಾಲ ಕೇಳೆಂದ ॥68॥
೦೬೯ ಮನ್ನಣೆಯೊಳಲ್ಪತೆಯ ನುಡಿಯೊಳ ...{Loading}...
ಮನ್ನಣೆಯೊಳಲ್ಪತೆಯ ನುಡಿಯೊಳ
ಗುನ್ನತಿಯನೆಸಗುವುದು ಪರರಿಗೆ
ತನ್ನವರಿಗುಗ್ಗಡದ ಪರಿಕರಣೆಯನು ಮಾತಿನಲಿ
ಭಿನ್ನವನು ತೋರುವುದು ರಾಯರ
ಗನ್ನಗತಕ ಕಣಾ ವಿಪುಳ ಸಂ
ಪನ್ನಮತಿ ನಿನಗುಂಟೆ ಭೂಮಿಪಾಲ ಕೇಳ್ ಎಂದ ॥69॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇತರರಿಗೆ ಗೌರವಿಸುವಾಗ ಅಲ್ಪತೆಯನ್ನೂ ಮಾತಿನಲ್ಲಿ ಹಿರಿತನವನ್ನು ತೋರಿಸುವುದು. ಹಾಗೂ ತನ್ನ ಕಡೆಯವರಿಗೆ ಅತಿಶಯವಾಗಿ ಅನುಕೂಲಗಳನ್ನು ಮಾಡಿಕೊಟ್ಟು ಮಾತಿನಲ್ಲಿ ಭಿನ್ನತೆಯನ್ನು ತೋರುವುದು ರಾಜರು ಮಾಡುವ ವಂಚನೆಯ ನಡತೆ. ನಿನಗೆ ವಿಶಾಲವಾದ ಉತ್ತಮ ಮನಸ್ಸು ಉಂಟೇ ?
ಪದಾರ್ಥ (ಕ.ಗ.ಪ)
ಗನ್ನಗತಕ-ವಂಚನೆ, ಉಗ್ಗಡ-ಉತ್ಕಟ, ಅತಿಶಯ, ಪರಿಕರಣೆ-ವ್ಯವಸ್ಥೆ, ಸಜ್ಜು
ಪರರಿಗೆ-ತನ್ನವರಲ್ಲದವರಿಗೆ, ಮನ್ನಣೆಯೊಳು-ಗೌರವನೀಡುವಾಗ, ಅಲ್ಪತೆಯ-ಕಾರ್ಯತಃ ಅಲ್ಪತೆಯನ್ನು ತೋರಿಸಿ,
ನುಡಿಯೊಳಗೆ-ಮಾತಿನಲ್ಲಿ ಮಾತ್ರ ಉನ್ನತಿಯನ್ನು, ಎಸಗುವುದು-ತೋರಿಸುವುದು ಹಾಗೂ ತನ್ನವರಿಗೆ-ತನಗೆ ಬೇಕಾದವರಿಗೆ,
ಉಗ್ಗಡದ-ಉತ್ಕಟವಾದ, ಅತಿಶಯವಾದ, ಪರಿಕರಣೆಯನು-ಅನುಕೂಲಗಳನ್ನು ಮಾಡಿ, ಮಾತಿನಲಿ-ಮಾತಿನಲ್ಲಿ ಮಾತ್ರ, ಭಿನ್ನವನು ತೋರುವುದು-ಬೇರೆಯ ರೀತಿಯಲ್ಲಿ ನಡೆದುಕೊಳ್ಳುವುದು, ರಾಯರ ಗನ್ನಗತಕ ಕಣಾ-ರಾಜರು ಮಾಡುವ ವಂಚನೆ ಕಣಯ್ಯಾ, ವಿಪುಳ-ವಿಶಾಲವಾದ, ಸಂಪನ್ನಮತಿ-ಉತ್ಕೃಷ್ಟವಾದ ಬುದ್ಧಿ, ನಿನಗುಂಟೆ ಭೂಮಿಪಾಲ-ನಿನಗೆ ಇದೆಯೆ ರಾಜ?
ಮೂಲ ...{Loading}...
ಮನ್ನಣೆಯೊಳಲ್ಪತೆಯ ನುಡಿಯೊಳ
ಗುನ್ನತಿಯನೆಸಗುವುದು ಪರರಿಗೆ
ತನ್ನವರಿಗುಗ್ಗಡದ ಪರಿಕರಣೆಯನು ಮಾತಿನಲಿ
ಭಿನ್ನವನು ತೋರುವುದು ರಾಯರ
ಗನ್ನಗತಕ ಕಣಾ ವಿಪುಳ ಸಂ
ಪನ್ನಮತಿ ನಿನಗುಂಟೆ ಭೂಮಿಪಾಲ ಕೇಳೆಂದ ॥69॥
೦೭೦ ಧನದಿ ಪಣ್ಡಿತರಶ್ವತತಿಯಾ ...{Loading}...
ಧನದಿ ಪಂಡಿತರಶ್ವತತಿಯಾ
ಧನದಿ ಧಾರುಣಿ ಮಾನ ಮೇಣಾ
ಧನದಿ ಕಾಂತೆಯರಖಿಳ ವಸ್ತುಗಳೈದೆ ಸೇರುವುದು
ನೆನಹು ತೃಪ್ತಿಯೊಳೈದದದರಿಂ
ಧನವೆ ಸಾಧನವರಸಿಗಾ ಧನ
ವನಿತು ದೊರಕೊಳಲಿದಿರದಾರೈ ಧಾತ್ರಿಪತಿಗಳಲಿ ॥70॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧನದಿಂದಲೇ ಪಂಡಿತರು ವಶವಾಗುವುದು, ಅಶ್ವಗಳನ್ನು ಸಂಗ್ರಹಿಸಿಕೊಳ್ಳಲು ಸಾಧ್ಯವಾಗುವುದು. ಧನದಿಂದಲೇ ರಾಜ್ಯ, ಮಾನ. ಆ ಧನದಿಂದಲೇ ಕಾಂತೆಯರು, ವಸ್ತುಗಳು ಪ್ರಾಪ್ತವಾಗುವುದು. ಎಷ್ಟು ದೊರೆತರೂ ಮನಸ್ಸು ಕೇವಲ ನೆನಪಿನಿಂದ ತೃಪ್ತಿಯನ್ನು ಹೊಂದುವುದಿಲ್ಲ. ಆದ್ದರಿಂದ ರಾಜನಿಗೆ ಧನವೇ ಮುಖ್ಯ ಸಾಧನ. ಆ ಧನ ಸಾಕಷ್ಟು ಪ್ರಾಪ್ತವಾದರೆ ರಾಜರಲ್ಲಿ ಅಂಥವರನ್ನು ಎದುರಿಸುವವರಾರು ?
ಪದಾರ್ಥ (ಕ.ಗ.ಪ)
ಧಾತ್ರಿಪತಿ-ರಾಜ
ಧನದಿ-ಧನದಿಂದಲೇ, ಪಂಡಿತರು-ಪಂಡಿತರನ್ನು ಗಳಿಸುವುದು, ಆ ಧನದಿ-ಆ ಧನದಿಂದಲೇ, ಅಶ್ವತತಿ-ಕುದುರೆಗಳನ್ನು,
ಧಾರುಣಿ-ಭೂಮಿಯನ್ನು, ಮಾನ-ಗೌರವವನ್ನು ಪಡೆಯಲಾಗುವುದು, ಮೇಣ್-ಮತ್ತು, ಆ ಧನದಿ-ಆ ಧನದಿಂದಲೇ, ಕಾಂತೆಯರು-ಸ್ತ್ರೀಯರೂ, ಅಖಿಳ ವಸ್ತುಗಳು-ಅಪೇಕ್ಷಿತ ಎಲ್ಲ ವಸ್ತುಗಳೂ, ಐದೆ ಸೇರುವುದು-ನಮ್ಮಲ್ಲಿಗೆ ಬಂದು ಸೇರುವುದು, ನೆನಹು-ಮನಸ್ಸಿನ ಕಲ್ಪನೆ, ತೃಪ್ತಿಯೊಳೈದದು-ತೃಪ್ತಿಯನ್ನು ಉಂಟುಮಾಡುವುದು, ಅದರಿಂ-ಆದುದರಿಂದ, ಅರಸಿಗೆ-ರಾಜನಿಗೆ, ಧನವೆ ಸಾಧನ-ಹಣವೇ ಎಲ್ಲದಕ್ಕೂ ಮೂಲ ಸಾಧನ, ಧನವನಿತು ದೊರಕೊಳಲು-ಅಷ್ಟುಧನ ದೊರೆತುದೇ ಆದರೆ, ಧಾತ್ರಿಪತಿಗಳಲಿ-ರಾಜರಲ್ಲಿ, ಇದಿರದಾರೈ-ಎದುರು ನಿಲ್ಲುವವರಾರಯ್ಯ
ಮೂಲ ...{Loading}...
ಧನದಿ ಪಂಡಿತರಶ್ವತತಿಯಾ
ಧನದಿ ಧಾರುಣಿ ಮಾನ ಮೇಣಾ
ಧನದಿ ಕಾಂತೆಯರಖಿಳ ವಸ್ತುಗಳೈದೆ ಸೇರುವುದು
ನೆನಹು ತೃಪ್ತಿಯೊಳೈದದದರಿಂ
ಧನವೆ ಸಾಧನವರಸಿಗಾ ಧನ
ವನಿತು ದೊರಕೊಳಲಿದಿರದಾರೈ ಧಾತ್ರಿಪತಿಗಳಲಿ ॥70॥
೦೭೧ ಶೂರ ಧೀರನುದಾರ ...{Loading}...
ಶೂರ ಧೀರನುದಾರ ಧರ್ಮೋ
ದ್ಧಾರ ವಿವಿಧ ವಿಚಾರ ಸುಜನಾ
ಧಾರ ರಿಪುಸಂಹಾರ ಚತುರೋಪಾಯ ಸಾಕಾರ
ಸಾರಮಂತ್ರ ವಿಚಾರ ಭುವನಾ
ಧಾರ ಸುಜನಸ್ವಾಮಿ ಕಾರ್ಯಾ
ಗಾರನೆನಿಸುವ ಮಂತ್ರಿಯುಂಟೇ ರಾಯ ನಿನಗೆಂದ ॥71॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಂತ್ರಿಯಾದವನು ಹೇಗಿರಬೇಕೆಂದರೆ ಅವನು ಶೂರನೂ ಧೀರನೂ ಆಗಿರಬೇಕು. ಧರ್ಮವನ್ನು ಉದ್ಧಾರ ಮಾಡುವವನಾಗಿರಬೇಕು. ವಿವಿಧ ವಿಚಾರಗಳನ್ನು ಬಲ್ಲವನಾಗಿ ಸಜ್ಜನರಿಗೆ ಆಧಾರವಾಗಿರಬೇಕು. ಶತ್ರು ಸಂಹಾರ ಮಾಡುವವನಾಗಿರಬೇಕು. ಚತುರೋಪಾಯಗಳ ಸಾಕಾರನಾಗಿರಬೇಕು. ಸಾರಮಂತ್ರವಿಚಾರವನ್ನು ಬಲ್ಲವನಾಗಿ ಪ್ರಪಂಚಕ್ಕೆ ಆಧಾರನಾಗಿರಬೇಕು. ಸುಜನನಾಗಿರಬೇಕು. ಸ್ವಾಮಿಕಾರ್ಯವನ್ನು ನಿರ್ವಹಿಸುವವನಾಗಿರಬೇಕು. ಇಂತಹ ಮಂತ್ರಿ ನಿನಗಿದ್ದಾನೆಯೇ ?
ಪದಾರ್ಥ (ಕ.ಗ.ಪ)
ಚತುರೋಪಾಯ-ಸಾಮ, ದಾನ, ಭೇದ, ದಂಡ
ಶೂರ-ಬಲಶಾಲಿ, ಧೀರ-ಧೈರ್ಯಶಾಲಿ, ಧರ್ಮೋದ್ಧಾರ-ಧರ್ಮವನ್ನು ಉದ್ಧರಿಸುವವನು, ವಿವಿಧ ವಿಚಾರ-ನಾನಾ ವಿಚಾರಗಳನ್ನು ಬಲ್ಲವನು,
ಸುಜನಾಧಾರ-ಸಜ್ಜನರಿಗೆ ಆಧಾರವಾಗಿರುವವನು, ರಿಪುಸಂಹಾರ-ಶತ್ರುಗಳನ್ನು ಕೊಂದು ಹಾಕುವವನು, ಚತುರೋಪಾಯ ಸಾಕಾರ-ಸಾಮ ದಾನ ಭೇದ ದಂಡಗಳೇ ರೂಪುವೆತ್ತಂತೆ ಇರುವವನು, ಸಾರಮಂತ್ರ ವಿಚಾರ-ರಾಜಧರ್ಮದ ನಾಶವನ್ನು ತಿಳಿದವನು, ಭುವನಾಧಾನ-ಲೋಕಕ್ಕೆ ಆದಾರವಾಗಿರುವವನು, ಸುಜನ-ಸಜ್ಜನನು, ಸ್ವಾಮಿ ಕಾರ್ಯಾಗಾರ-ಪ್ರಭುವಿನ ರಾಜ್ಯವನ್ನು ನಿರ್ವಹಿಸುವವನು ಇಂತಹ ಮಂತ್ರಿಯುಂಟೇ ನಿನಗೇ ?
ಟಿಪ್ಪನೀ (ಕ.ಗ.ಪ)
ಚತುರೋಪಾಯ
ಮೂಲ ...{Loading}...
ಶೂರ ಧೀರನುದಾರ ಧರ್ಮೋ
ದ್ಧಾರ ವಿವಿಧ ವಿಚಾರ ಸುಜನಾ
ಧಾರ ರಿಪುಸಂಹಾರ ಚತುರೋಪಾಯ ಸಾಕಾರ
ಸಾರಮಂತ್ರ ವಿಚಾರ ಭುವನಾ
ಧಾರ ಸುಜನಸ್ವಾಮಿ ಕಾರ್ಯಾ
ಗಾರನೆನಿಸುವ ಮಂತ್ರಿಯುಂಟೇ ರಾಯ ನಿನಗೆಂದ ॥71॥
೦೭೨ ತಿಳಿದವನ ಮತಿವಿದನ ...{Loading}...
ತಿಳಿದವನ ಮತಿವಿದನ ಭಾಷಾ
ವಳಿ ಲಿಪಿಜ್ಞನ ಸಾಕ್ಷರಿಕ ಮಂ
ಡಲಿಕ ಸಾವಂತರನಶೇಷರನಿಂಗಿತವನರಿತು
ಸಲೆ ಕರೆವ ಕಳುಹಿಸುವ ನಿಲಿಸುವ
ಬಲುಹನುಳ್ಳನ ಸುಕೃತ ದುಷ್ಕೃತ
ಫಲಿತ ಕಾರ್ಯಕೆ ಮಂತ್ರಿಯುಂಟೇ ರಾಯ ನಿನಗೆಂದ ॥72॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಿಳಿದವರು ಬುದ್ಧಿವಂತರು, ಹಲವು ಭಾಷೆಗಳನ್ನು ಲಿಪಿಗಳನ್ನು ಚೆನ್ನಾಗಿ ಬಲ್ಲವರು, ವಿದ್ಯಾವಂತರು, ಮಂಡಲಿಕರು, ಸಾಮಂತರು, ಇವರೇ ಮೊದಲಾದವರನ್ನು ಅವರ ಮನಸ್ಸನ್ನು ಅರ್ಥಮಾಡಿಕೊಂಡು ಬೇಕಾದಾಗ ಕರೆಯುವ, ಕಳಿಸುವ ಅಥವಾ ನಿಲ್ಲಿಸುವ ಸಾಮಥ್ರ್ಯವುಳ್ಳವನಾಗಿ, ಸುಕೃತ ದುಷ್ಕೃತಗಳಿಗೆ ಸ್ಪಂದಿಸುವ ಕಾರ್ಯಕ್ಕೆ ಮಂತ್ರಿಯಿದ್ದಾನೆಯೇ ರಾಜ ನಿನಗೆ ?
ಪದಾರ್ಥ (ಕ.ಗ.ಪ)
ಇಂಗಿತ-ಆಶಯ, ಸುಕೃತ-ಪುಣ್ಯಕಾರ್ಯ, ದುಷ್ಕೃತ-ಪಾಪಕಾರ್ಯ
ಮತಿವಿದ-ಬುದ್ಧಿವಂತ, ಭಾಷಾವಳಿ-ನಾನಾ ಭಾಷೆಗಳನ್ನು, ಲಿಪಿಜ್ಞ-ಭಾಷೆಯ ಲಿಪಿಗಳನ್ನು ಬಲ್ಲವನು, ಸಾಕ್ಷರಿಕ-ಅಕ್ಷರ ಬರೆಯುವುದನ್ನು, ಓದುವುದನ್ನು ಬಲ್ಲವನು, ಅಶೇಷರನು-ಬಹುಮಂದಿಯನ್ನು, ಇಂಗಿತವನರಿತು-ಅವರ ಮನಸ್ಸಿನಲ್ಲಿರುವುದನ್ನು ಅರ್ಥಮಾಡಿಕೊಂಡು, ಅವರನ್ನು ಕರೆವ-ಬರಮಾಡಿಕೊಳ್ಳುವ, ಕಳುಹಿಸುವ-ಕಳುಹಿಸಿಬಿಡುವ, ನಿಲಿಸುವ-ತಡೆಗಟ್ಟುವ, ಬಲುಹನುಳ್ಳನ-ಸಾಮಥ್ರ್ಯವುಳ್ಳವನ, ಸುಕೃತ-ಪುಣ್ಯ, ದುಷ್ಕ್ರತ-ಪಾಪ, ಫಲಿತ-ಪರಿಣಾಮ, ಮಂತ್ರಿಯುಂಟೇ ರಾಯ-ನಿನಗೆ ಇಂತಹ ಮಂತ್ರಿ ನಿನಗೆ ಇದ್ದಾನೆಯೇ ರಾಜ?
ಮೂಲ ...{Loading}...
ತಿಳಿದವನ ಮತಿವಿದನ ಭಾಷಾ
ವಳಿ ಲಿಪಿಜ್ಞನ ಸಾಕ್ಷರಿಕ ಮಂ
ಡಲಿಕ ಸಾವಂತರನಶೇಷರನಿಂಗಿತವನರಿತು
ಸಲೆ ಕರೆವ ಕಳುಹಿಸುವ ನಿಲಿಸುವ
ಬಲುಹನುಳ್ಳನ ಸುಕೃತ ದುಷ್ಕೃತ
ಫಲಿತ ಕಾರ್ಯಕೆ ಮಂತ್ರಿಯುಂಟೇ ರಾಯ ನಿನಗೆಂದ ॥72॥
೦೭೩ ಜರೆ ನರೆಯ ...{Loading}...
ಜರೆ ನರೆಯ ಮೈಸಿರಿಯ ಕುಲವೃ
ದ್ಧರನು ಹೀನಾಂಗರನು ಹಿಂಸಾ
ಚರಿತರನು ಜಾತ್ಯಂಧರನು ಧನದಾಸೆಯಳಿದವರ
ಅರಮನೆಯ ಸಂರಕ್ಷಣಾರ್ಥದೊ
ಳಿರಿಸಿದರೆ ಮಾನೋನ್ನತಿಕೆ ವಿ
ಸ್ತರಣವಹುದಿದನರಿದಿಹೈ ಭೂಪಾಲ ಕೇಳ್ ಎಂದ ॥73॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಪ್ಪಿನಿಂದ ಉಂಟಾದ ನರೆಯ ಶರೀರ ಸಂಪತ್ತುಳ್ಳ ಕುಲವೃದ್ಧರನ್ನು ಅಂಗವಿಕಲರಾದವರನ್ನು ಹಿಂಸಾಚಾರಕ್ಕೆ ಗುರಿಯಾದವರನ್ನೂ ಹುಟ್ಟುಗುರುಡರನ್ನೂ ಧನದ ಆಸೆಯನ್ನೇ ಬಿಟ್ಟವರನ್ನೂ ಅರಮನೆಯ ರಕ್ಷಣೆಯಲ್ಲಿ ಇರಿಸಿದರೆ ರಾಜನ ಗೌರವ ವಿಸ್ತಾರವಾಗಿ ಹರಡುತ್ತದೆ. ಇದನ್ನು ತಿಳಿದಿರುವೆಯಾ ರಾಜಾ ?
ಪದಾರ್ಥ (ಕ.ಗ.ಪ)
ಜರೆ-ಮುಪ್ಪು, ಜಾತ್ಯಂಧ-ಹುಟ್ಟುಗುರುಡ, ನರೆ-ಬಿಳಿಕೂದಲು
ಜರೆ-ಮುಪ್ಪಿನಿಂದ ಕೂಡಿದ, ನರೆ-ನರೆತ ಕೂದಲಿನ, ಮೈಸಿರಿಯ-ದೇಹಸಂಪತ್ತಿನ, ಕುಲವೃದ್ಧರನು-ವಂಶದಲ್ಲಿ ಹಿರಿಯರಾದವರನ್ನು,
ಹೀನಾಂಗರನು-ಅಂಗಹೀನರಾದವರನ್ನು, ಜಾತ್ಯಂಧರನು-ಹುಟ್ಟುಗುರುಡರನ್ನು, ಧನದಾಸೆಯಳಿದವರ-ಹಣದ ಆಸೆ ಬಿಟ್ಟುವರನ್ನು,
ಅರಮನೆಯ ಸಂರಕ್ಷಣಾರ್ಥದೊಳಿರಿಸಿದರೆ-ಅರಮನೆಯ ರಕ್ಷಣೆಗಾಗಿ ನೇಮಿಸಿದರೆ, ಮಾನೋನ್ನತಿಕೆ-ಅತಿಶಯವಾದ ಗೌರವ,
ವಿಸ್ತರಣವಹುದು-ಹರಡುತ್ತದೆ, ಇದನು ಅರಿದಿಹೈ-ಇದನ್ನು ತಿಳಿದಿರುವೆಯಾ ?
ಮೂಲ ...{Loading}...
ಜರೆ ನರೆಯ ಮೈಸಿರಿಯ ಕುಲವೃ
ದ್ಧರನು ಹೀನಾಂಗರನು ಹಿಂಸಾ
ಚರಿತರನು ಜಾತ್ಯಂಧರನು ಧನದಾಸೆಯಳಿದವರ
ಅರಮನೆಯ ಸಂರಕ್ಷಣಾರ್ಥದೊ
ಳಿರಿಸಿದರೆ ಮಾನೋನ್ನತಿಕೆ ವಿ
ಸ್ತರಣವಹುದಿದನರಿದಿಹೈ ಭೂಪಾಲ ಕೇಳೆಂದ ॥73॥
೦೭೪ ಗುಳಿ ತೆವರನೀಕ್ಷಿಸುತ ...{Loading}...
ಗುಳಿ ತೆವರನೀಕ್ಷಿಸುತ ಬಟ್ಟೆಯ
ಮೆಳೆ ಮರಂಗಳ ಹೊಯ್ಲ ತಪ್ಪಿಸಿ
ನೆಳಲನರಸುತ ವೇಗಗತಿ ಸಾಮಾನ್ಯಗತಿಗಳಲಿ
ಬಳಿವಿಡಿದು ಭೂಭುಜರ ಯಾನಂ
ಗಳೊಳಗಳುಕದೆ ಢಗೆಯ ಸೈರಿಸಿ
ಬಳಸುವವನೇ ಛತ್ರಧಾರಕನರಸ ಕೇಳ್ ಎಂದ ॥74॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಳ್ಳ ತಿಟ್ಟುಗಳನ್ನು ನೋಡುತ್ತಾ, ದಾರಿಯಲ್ಲಿ ಪೊದೆಗಳು ಮರಗಳಿಗೆ ತಾಗುವುದನ್ನು ತಪ್ಪಿಸಿ, ನೆರಳನ್ನು ನೋಡುತ್ತಾ ರಥದ ವೇಗಗತಿ ಸಾಮಾನ್ಯಗತಿಗಳಿಗೆ ಅನುಗುಣವಾಗಿ ರಾಜರ ರಥಗಳಲ್ಲಿ ಹಿಂಜರಿಯದೆ ಬಿಸಲಬೇಗೆಯನ್ನು ಸಹಿಸಿಕೊಂಡು ಛತ್ರಿಯನ್ನು ಹಿಡಿಯುವವನೇ ಛತ್ರಧಾರಕ.
ಪದಾರ್ಥ (ಕ.ಗ.ಪ)
ಗುಳಿ ತೆವರು-ಹಳ್ಳತಿಟ್ಟು, ಬಟ್ಟೆ-ದಾರಿ, ಬಳಿವಿಡಿ-ಅನುಸರಿಸು, ಯಾನ-ವಾಹನ, ಢಗೆ-ಧಗೆ-ಸೆಕೆ, ಗುಳಿ ತೆವರನೀಕ್ಷಿಸುತ-ಹಕ್ಕಿ ತಿಟ್ಟುಗಳನ್ನು ಗಮನಿಸುತ್ತ, ಬಟ್ಟೆಯ-ದಾರಿಯ, ಮೆಳೆ ಮರಂಗಳ-ಪೊದೆಗಳ ಮತ್ತು ಮರಗಳ, ಹೊಯ್ಲ-ಹೊಯ್ಯುವಿಕೆಯನ್ನು, ತಡೆಯುವಿಕೆಯನ್ನು, ತಪ್ಪಿಸಿ-ನಿವಾರಣೆ, ನೆಳಲನರಸುತ-ನೆರಳನ್ನೇ ಹುಡುಕುತ್ತ, ವೇಗಗತಿ ಸಾಮಾನ್ಯಗತಿಗಳಲಿ-ಯಥೋಚಿತವಾಗಿ ಬೇಗಬೇಗನೆ ಅಥವಾ ನಿಧಾನವಾಗಿ, ಭೂಭುಜರ-ರಾಜರ, ಬಳಿವಿಡಿದು-ಸಮೀಪವನ್ನೇ ಹಿಡಿದು, ಯಾನಂಗಳೊಳಗೆ-ಅವರ ವಾಹನಗಳಲ್ಲಿ, ಅಳುಕದೆ-ಹಿಂಜರಿಯದೆ, ಢಗೆಯ ಸೈರಿಸಿ-ಸೆಕೆಯನ್ನು ಸಹಿಸಿಕೊಂಡು, ಬಳಸುವವನೇ-ಛತ್ರಿಯನು ಹಿಡಿಯುವವನೇ
ಟಿಪ್ಪನೀ (ಕ.ಗ.ಪ)
ವಿದುರ ನೀತಿಯಲ್ಲೂ ಈ ಪದ್ಯ ಬಂದಿದೆ
ಉದ್ಯೋಗ ಪರ್ವ, ಸಂಧಿ 3, ಪದ್ಯ 99
ಮೂಲ ...{Loading}...
ಗುಳಿ ತೆವರನೀಕ್ಷಿಸುತ ಬಟ್ಟೆಯ
ಮೆಳೆ ಮರಂಗಳ ಹೊಯ್ಲ ತಪ್ಪಿಸಿ
ನೆಳಲನರಸುತ ವೇಗಗತಿ ಸಾಮಾನ್ಯಗತಿಗಳಲಿ
ಬಳಿವಿಡಿದು ಭೂಭುಜರ ಯಾನಂ
ಗಳೊಳಗಳುಕದೆ ಢಗೆಯ ಸೈರಿಸಿ
ಬಳಸುವವನೇ ಛತ್ರಧಾರಕನರಸ ಕೇಳೆಂದ ॥74॥
೦೭೫ ಬೇಸರದೆ ಕಾಳೋರಗನನ ...{Loading}...
ಬೇಸರದೆ ಕಾಳೋರಗನನ
ಡ್ಡೈಸಿ ಕಟ್ಟಿರುವೆಗಳು ಮಿಗೆ ವೇ
ಡೈಸಿ ಕಡಿದರೆಯಟ್ಟುವಂದದಲಹಿತ ಬಲದೊಳಗೆ
ಓಸರಿಸದೊಳಹೊಕ್ಕು ಸಮರ ವಿ
ಳಾಸವನು ನೆರೆ ಮೆರೆದು ಕೇಶಾ
ಕೇಶಿಯಲಿ ಹಿಡಿದಿರಿವವನೆ ಕಾಲಾಳು ಕೇಳ್ ಎಂದ ॥75॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಟ್ಟಿರುವೆಗಳು ತಮ್ಮ ಮಾರ್ಗಕ್ಕೆ ಅಡ್ಡಬಂದ ಕಾಳಸರ್ಪವನ್ನು ಅಡ್ಡಗಟ್ಟಿ ಸುತ್ತ ಸುತ್ತಿಕೊಂಡು ಕಡಿದು ಆ ಸ್ಥಳದಿಂದ ಓಡಿಸಿಬಿಡುತ್ತವೆ. ಅದೇ ರೀತಿಯಲ್ಲಿ ಶತ್ರುಸೈನ್ಯದೊಳಕ್ಕೆ ಹಿಂಜರಿಯದೆ ಒಳಹೊಕ್ಕು ಯುದ್ಧಕೌಶಲವನ್ನು ಮೆರೆದು, ಕೇಶಾಕೇಶಿಯಿಂದ ಹೋರಾಡಿ ಶತ್ರುಸೈನ್ಯವನ್ನು ಕೊಲ್ಲುವವನೇ ಕಾಲಾಳು ಎನಿಸಿಕೊಳ್ಳುವನು.
ಪದಾರ್ಥ (ಕ.ಗ.ಪ)
ಅಡ್ಡೈಸಿ-ಅಡ್ಡಗಟ್ಟಿ, ವೇಡೈಸಿ-ಸುತ್ತಮುತ್ತ, ಅಹಿತಬಲ-ಶತ್ರು ಸೈನ್ಯ, ಓಸರಿದು-ಒಳಹೊಕ್ಕು, ಕಾಳೋರಗ-ಕಾಳಸರ್ಪ,
ಕಾಳೋರಗ-ಕೃಷ್ಣಸರ್ಪ (ತಮಗೆ ಅಡ್ಡಬಂದಿತಾದರೆ), ಬೇಸರದೆ-ಬೇಸರಪಟ್ಟುಕೊಳ್ಳದೆ, ಅಡ್ಡೈಸಿ-ಅದಕ್ಕೆ ಅಡ್ಡ ಬಂದು, ಕಟ್ಟಿರುವೆಗಳು ವಿಂಗೆ ವೇಡೈಸಿ-ಚೆನ್ನಾಗಿ ಸುತ್ತ ಮಿತ್ತ ಮುತ್ತಿಕೊಂಡು ಕಡಿದು, ಅರೆಯಟ್ಟುವಂದದಲಿ-ಓಡಿಸಿ ಬಿಡುವಂತೆ, ಅಹಿತ ಬಲದೊಳಗೆ-ಶತ್ರು ಸೈನ್ಯದಲ್ಲಿ, ಓಸರಿಸದೆ-ಹಿಂಜರಿಯದೆ, ಒಳಹೊಕ್ಕು-ಒಳಕ್ಕೆ ಪ್ರವೇಶಿಸಿ, ಸಮರ ವಿಳಾಸವನು ನೆರೆ ಮೆರೆದು-ಯುದ್ಧ ಕೌಶಲವನ್ನು ಚೆನ್ನಾಗಿ ಪ್ರಕಟಿಸಿ, ಕೇಶಾಕೇಶಿಯಲಿ-ಪರಸ್ಪರ ಜುಟ್ಟನ್ನು ಹಿಡಿದು ಎಳೆದಾಡುವ, ಯುದ್ಧದಲ್ಲಿ ಶತ್ರುವನ್ನು ಹಿಡಿದು, ಇರಿವವನೆ-ಕೊಲ್ಲುವವನು ಕಾಲಾಳು ಕೇಳು ಎಂದ
ಟಿಪ್ಪನೀ (ಕ.ಗ.ಪ)
ವಿದುರ ನೀತಿಯಲ್ಲೂ ಈ ಪದ್ಯ ಬಂದಿದೆ
ಉದ್ಯೋಗಪರ್ವ ಸಂಧಿ 3 ಪದ್ಯ 105
ಮೂಲ ...{Loading}...
ಬೇಸರದೆ ಕಾಳೋರಗನನ
ಡ್ಡೈಸಿ ಕಟ್ಟಿರುವೆಗಳು ಮಿಗೆ ವೇ
ಡೈಸಿ ಕಡಿದರೆಯಟ್ಟುವಂದದಲಹಿತ ಬಲದೊಳಗೆ
ಓಸರಿಸದೊಳಹೊಕ್ಕು ಸಮರ ವಿ
ಳಾಸವನು ನೆರೆ ಮೆರೆದು ಕೇಶಾ
ಕೇಶಿಯಲಿ ಹಿಡಿದಿರಿವವನೆ ಕಾಲಾಳು ಕೇಳೆಂದ ॥75॥
೦೭೬ ಬಿಟ್ಟ ಸೂಠಿಯಲರಿನೃಪರ ...{Loading}...
ಬಿಟ್ಟ ಸೂಠಿಯಲರಿನೃಪರ ನೆರೆ
ಯಟ್ಟಿ ಮೂದಲಿಸುತ್ತ ಮುಂದಣ
ಥಟ್ಟನೊಡೆಹಾಯ್ದಹಿತ ಬಲದೊಳಗಾನೆವರಿವರಿದು
ಹಿಟ್ಟುಗುಟ್ಟುತ ಹೆಣನ ಸಾಲುಗ
ಳೊಟ್ಟು ಮೆರೆಯಲು ಕಳನ ಚೌಕದ
ಲಟ್ಟಿಯಾಡಿಸಬಲ್ಲವನೆ ರಾವುತನು ಕೇಳ್ ಎಂದ ॥76॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಂದೆ ನುಗ್ಗಿದ ವೇಗದಲ್ಲಿ ಶತ್ರುರಾಜರನ್ನು ಅಟ್ಟಿಸಿಕೊಂಡು ಹೋಗಿ ಮುಂದಣ ಸಾಲನ್ನು ಒಡೆದು ಹಾಯ್ದು ಒಳಕ್ಕೆ ಪ್ರವೇಶಿಸಿ ಆನೆ ನುಗ್ಗಿದಂತೆ ಶತ್ರುಗಳ ಮೇಲೆ ಬಿದ್ದು ಸುತ್ತಾಡಿ ಹಿಟ್ಟುಗುಟ್ಟುತ್ತ ಹೆಣದ ಸಾಲುಗಳು ಒಟ್ಟೊಟ್ಟಿಗೆ ಬೀಳುತ್ತಿರಲು ರಣರಂಗದಲ್ಲಿ ಶತ್ರುಗಳನ್ನು ಅಟ್ಟಿ ಆಡಿಸಬಲ್ಲವನೇ ನಿಜವಾದ ರಾವುತ.
ಪದಾರ್ಥ (ಕ.ಗ.ಪ)
ಸೂಠಿ-ವೇಗ, ರಾವುತ-ಕುದುರೆ ಸವಾರ, ಅಶ್ವದಳದ ಸೈನಿಕ ?
ಬಿಟ್ಟ ಸೂಠಿಯಲಿ-ನುಗ್ಗಿದ ವೇಗದಲ್ಲೇ, ಅರಿನೃಪರ-ಶತ್ರು ರಾಜರನ್ನು, ನೆರೆಯಟ್ಟಿ-ಚೆನ್ನಾಗಿ ಅಟ್ಟಿಸಿಕೊಂಡು ಹೋಗಿ, ಮುಂದಣಥಟ್ಟನು-ಸೇನೆಯ ಮುಂಭಾಗವನ್ನು, ಒಡೆಹಾಯ್ದ-ಸೀಳಿಕೊಂಡು ನುಗ್ಗಿ, ಅಹಿತ ಬಲದೊಳಗೆ-ಶತ್ರುಸೈನ್ಯದಲಿ, ಆನೆವರಿವವರಿದು-ಆನೆಯಂತೆ ಹರಿದಾಡಿ, ಹಿಟ್ಟುಗುಟ್ಟುತ-ಹಿಟ್ಟನ್ನು ಕುಟ್ಟಿದಂತೆ ವೈರಿಗಳನ್ನು ಹಾಕಿ ತುಳಿಯತ್ತ, ಹೆಣನ ಸಾಲುಗಳ ಒಟ್ಟು ಮೆರೆಯಲು-ಸಾಲು ಸಾಲಾಗಿ ಹೆಣಗಳ ರಾಶಿ ಕಣ್ಣಿಗೆ ಬೀಳುತ್ತಿರಲು, ಕಳನ ಚೌಕದಲ್ಲಿ-ರಣರಂಗದಲ್ಲಿ (ಶತ್ರುಗಳನ್ನು), ಅಟ್ಟಿಯಾಡಿಸಬಲ್ಲವನೆ-ಬೆನ್ನಟ್ಟಿ ಓಡಾಡಿಸ ಬಲ್ಲವನೆ, ರಾವುತನು-ಕುದುರೆಯ ಯೋಧ
ಟಿಪ್ಪನೀ (ಕ.ಗ.ಪ)
ವಿದುರ ನೀತಿಯಲ್ಲೂ ಈ ಪದ್ಯ ಬಂದಿದೆ
ಉದ್ಯೋಗ ಪರ್ವ, ಸಂಧಿ 3, ಪದ್ಯ 104
ಮೂಲ ...{Loading}...
ಬಿಟ್ಟ ಸೂಠಿಯಲರಿನೃಪರ ನೆರೆ
ಯಟ್ಟಿ ಮೂದಲಿಸುತ್ತ ಮುಂದಣ
ಥಟ್ಟನೊಡೆಹಾಯ್ದಹಿತ ಬಲದೊಳಗಾನೆವರಿವರಿದು
ಹಿಟ್ಟುಗುಟ್ಟುತ ಹೆಣನ ಸಾಲುಗ
ಳೊಟ್ಟು ಮೆರೆಯಲು ಕಳನ ಚೌಕದ
ಲಟ್ಟಿಯಾಡಿಸಬಲ್ಲವನೆ ರಾವುತನು ಕೇಳೆಂದ ॥76॥
೦೭೭ ಹೆಬ್ಬಲವನೊಡ ತುಳಿದು ...{Loading}...
ಹೆಬ್ಬಲವನೊಡ ತುಳಿದು ಧರಣಿಯ
ನಿಬ್ಬಗಿಯ ಮಾಡಿಸುತ ಪಾಯ್ದಳ
ದೊಬ್ಬುಳಿಯ ಹರೆಗಡಿದು ಕಾದಿಸುತಾನೆಗಳ ಮೇಲೆ
ಬೊಬ್ಬಿರಿದು ಶರ ಮಳೆಯ ಕರೆವುತ
ಲಬ್ಬರಿಸಿ ಬವರದಲಿ ರಿಪುಗಳಿ
ಗುಬ್ಬಸವನೆಸಗುವನೆ ಜೋಧನು ರಾಯ ಕೇಳ್ ಎಂದ ॥77॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೊಡ್ಡ ಸೈನ್ಯವನ್ನು ಒಡನೊಡನೆ ತುಳಿದು ಭೂಮಿಯನ್ನೇ ಎರಡು ಭಾಗ ಮಾಡುತ್ತ ಕಾಲಾಳುಗಳನ್ನು ತುಳಿದು ತುಳಿದು
ಹಾಕುತ್ತ ಆನೆಗಳನ್ನು ಮೇಲೆ ಬಿಟ್ಟು ಕಾದಿಸುತ್ತ ಬಾಣಗಳ ಮಳೆಯನ್ನು ಸುರಿಸಿ ಯುದ್ಧಮಾಡುತ್ತ ಶತ್ರುಗಳಿಗೆ ಉಬ್ಬಸವನ್ನು ಉಂಟುಮಾಡುವವನೇ ಜೋಧ (ಆನೆಯ ಸೈನಿಕ) ಎನ್ನಿಸುವವನು.
ಪದಾರ್ಥ (ಕ.ಗ.ಪ)
ಹೆಬ್ಬಲ-ದೊಡ್ಡಸೈನ್ಯ,
ಪಾಯ್ದಳ-ಕಾಲುದಳ, ಒಬ್ಬುಳಿ-ರಾಶಿ, ಗುಂಪು,
ಹರೆಗಡಿ-ಕತ್ತರಿಸಿ ಹಾಕು,
ಬೊಬ್ಬಿರಿದು-ಅಬ್ಬರಿಸಿ,
ಬವರ-ಯುದ್ಧ,
ಜೋಧ-ಆನೆಯ ಸೈನಿಕ,
ಹೆಬ್ಬಲವನು-ದೊಡ್ಡ ಸೈನ್ಯವನು, ಒಡೆ ತುಳಿದು-ಜೊತೆ ಜೊತೆಯಲ್ಲೇ ತುಳಿದು ಹಾಕಿ, ಧರಣಿಯನು-ಭೂಮಿಯನ್ನೇ, ಇಬ್ಬಗಿಯ-ಎರಡು ಭಾಗವಾದಂತೆ, ಮಾಡಿಸುತ-ಮೂಡಿಸುತ್ತ, ಪಾಯ್ದಳದ ಒಬ್ಬುಳಿಯ-ಕಾಲಾಳು ಸೈನ್ಯದ, ಒಬ್ಬುಳಿ-ಒಂದು ದೊಡ್ಡ ಗುಂಪನ್ನೇ,
ಹರೆಗಡಿದು-ಬಡಿದೋಡಿಸುತ್ತ(ಆನೆಗಳನ್ನು ಶತ್ರುಗಳ ಮೇಲೆ ಬಿಟ್ಟು), ಕಾದಿಸುತ-ಹೋರಾಟ ಮಾಡಿಸುತ್ತ(ಆನೆಗಳ ಮೇಲೆ ಕುಳಿತಂತೆಯೇ), ಬೊಬ್ಬಿರಿ-ಅಬ್ಬರಿಸುತ್ತಾ, ಶರ ಮಳೆಯ ಕರೆವುತ-ಬಾಣಗಳ ಮಳೆಯನ್ನು ಸುರಿಸುತ್ತ, ಅಬ್ಬರಿಸಿ-ಆರ್ಭಟಮಾಡಿ,
ಬವರದಲಿ-ಯುದ್ಧದಲ್ಲಿ, ರಿಪುಗಳಿಗೆ-ಶತ್ರುಗಳಿಗೆ, ಉಬ್ಬಸವನೆಸಗುವನೆ-ಉಬ್ಬಸವನ್ನು ಉಂಟುಮಾಡುವವನೆ, ಜೋಧನು-ಆನೆಯ ಸೈನಿಕನೆನಿಸುವವನು
ಟಿಪ್ಪನೀ (ಕ.ಗ.ಪ)
ವಿದುರ ನೀತಿಯಲ್ಲೂ ಈ ಪದ್ಯ ಬಂದಿದೆ
ಉದ್ಯೋಗ ಪರ್ವ, ಸಂಧಿ 3, ಪದ್ಯ 102
ಮೂಲ ...{Loading}...
ಹೆಬ್ಬಲವನೊಡ ತುಳಿದು ಧರಣಿಯ
ನಿಬ್ಬಗಿಯ ಮಾಡಿಸುತ ಪಾಯ್ದಳ
ದೊಬ್ಬುಳಿಯ ಹರೆಗಡಿದು ಕಾದಿಸುತಾನೆಗಳ ಮೇಲೆ
ಬೊಬ್ಬಿರಿದು ಶರ ಮಳೆಯ ಕರೆವುತ
ಲಬ್ಬರಿಸಿ ಬವರದಲಿ ರಿಪುಗಳಿ
ಗುಬ್ಬಸವನೆಸಗುವನೆ ಜೋಧನು ರಾಯ ಕೇಳೆಂದ ॥77॥
೦೭೮ ಒನ್ದು ಕಡೆಯಲಿ ...{Loading}...
ಒಂದು ಕಡೆಯಲಿ ದಳ ಮುರಿದು ಮ
ತ್ತೊಂದು ದಿಕ್ಕಲಿ ಮನ್ನೆಯರು ಕವಿ
ದೊಂದು ದೆಸೆಯಲಿ ಬಲದೊಳೊಂದನೆಯಧಿಕಬಲವೆನಿಸಿ
ಬಂದು ಸಂತಾಪದಲಿ ಕಾಳಗ
ದಿಂದ ಪುರದಲಿ ನಿಂದು ಕರಿಕರಿ
ಗುಂದುವ ಕ್ಷಿತಿಪಾಲನೇ ಭೂಪಾಲ ಕೇಳ್ ಎಂದ ॥78॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದು ಕಡೆಯಲ್ಲಿ ಸೈನ್ಯ ಒಡೆದು ಹೋಗಿ, ಮತ್ತೊಂದು ದಿಕ್ಕಿನಲ್ಲಿ ನಾಯಕರು ಕವಿದು ಬಂದು, ಇನ್ನೊಂದು ದಿಕ್ಕಿನಲ್ಲಿ ಸೈನ್ಯದ ಒಂದು ಭಾಗವನ್ನೇ ಮಹಾಸೈನ್ಯವೆಂದು ನಂಬಿಕೊಂಡು ಕಾಳಗದಲ್ಲಿ ವಿಶೇಷವಾಗಿ ನೊಂದು ಪಟ್ಟಣಕ್ಕೆ ಬಂದು ನೆಲಸಿ ಕಳೆಗುಂದುವವನು ಭೂಪಾಲನೆನಿಸಿಕೊಳ್ಳುವನೇ ರಾಜಾ ?
ಪದಾರ್ಥ (ಕ.ಗ.ಪ)
ಕರಿಕರಿಗುಂದು-ಕಳೆಗೆಡು, ಮನ್ನೆಯರು-ಮಾನ್ಯರು
ದಳ ಮುರಿದು-ಸೈನ್ಯ ಒಡೆದು ಹೋಗಿ, ಮನ್ನೆಯರು-ಶತ್ರು ಸೇನೆಯ ನಾಯಕರು, ಕವಿದು-ಆಕ್ರಮಣ ಮಾಡಿ, ಬಲದೊಳೊಂದನೆ-ಸೇನೆಯ ಒಂದು ಭಾಗವನ್ನೇ, ಅಧಿಕಬಲವೆನಿಸಿ-ಮಹಾಸೈನ್ಯವೆಂದು ಭಾವಿಸಿ, ಬಂದು ಸಂತಾಪದಲಿ ಕಾಳಗದಿಂದ-ಯುದ್ಧದಲ್ಲಿ ನೊಂದು ವ್ಯಥೆಯಿಂದ ಹಿಂತಿರುಗಿ, ಪುರದಲಿ ನಿಂದು-ತನ್ನ ಪಟ್ಟಣದಲ್ಲಿ ನಿಂತು, ಕರಿಕರಿಗುಂದುವ-ಕಳೆಗೆಟ್ಟಿರುವವನು, ಕ್ಷಿತಿಪಾಲನೇ-ರಾಜನೆನ್ನಿಸಿಕೊಳ್ಳುವನೇ?
ಮೂಲ ...{Loading}...
ಒಂದು ಕಡೆಯಲಿ ದಳ ಮುರಿದು ಮ
ತ್ತೊಂದು ದಿಕ್ಕಲಿ ಮನ್ನೆಯರು ಕವಿ
ದೊಂದು ದೆಸೆಯಲಿ ಬಲದೊಳೊಂದನೆಯಧಿಕಬಲವೆನಿಸಿ
ಬಂದು ಸಂತಾಪದಲಿ ಕಾಳಗ
ದಿಂದ ಪುರದಲಿ ನಿಂದು ಕರಿಕರಿ
ಗುಂದುವ ಕ್ಷಿತಿಪಾಲನೇ ಭೂಪಾಲ ಕೇಳೆಂದ ॥78॥
೦೭೯ ಕುದುರೆಗಳನಾರೈದು ರಥವನು ...{Loading}...
ಕುದುರೆಗಳನಾರೈದು ರಥವನು
ಹದುಳಿಸುತ ಸಾರಥಿಯನೋವುತ
ಲಿದಿರ ಮುರಿವುತ ತನ್ನ ಕಾಯಿದುಕೊಳುತ ಕೆಲಬಲನ
ಸದೆದು ಮರಳುವ ಲಾಗು ವೇಗದ
ಕದನ ಕಾಲಾನಲನವನು ತಾ
ಮೊದಲಿಗನಲೈ ರಥಿಕರಿಗೆ ಭೂಪಾಲ ಕೇಳ್ ಎಂದ ॥79॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುದುರೆಗಳ ಯೋಗಕ್ಷೇಮವನ್ನು ನೋಡಿಕೊಂಡು ರಥಕ್ಕೆ ಅಪಾಯತಟ್ಟದಂತೆ ಸರಿದೂಗಿಸಿಕೊಳ್ಳುತ್ತ ಅಕ್ಕಪಕ್ಕದ ವೈರಿಗಳನ್ನು ಸದೆಬಡಿದು ಸಾರಥಿಯನ್ನು ರಕ್ಷಿಸುತ್ತ, ಎದುರಿಸಿದವರನ್ನು ಕೊಲ್ಲುತ್ತ, ತನ್ನನ್ನು ಕಾಪಾಡಿಕೊಳ್ಳುತ್ತ, ಅಕ್ಕಪಕ್ಕದ ವೈರಿಗಳನ್ನು ಸದೆಬಡಿದು ಹಿಂತಿರುಗಬಲ್ಲ ವೇಗಶಾಲಿಯಾದ ಕದನ ಕಾಳಾಗ್ನಿಯೇ ರಥಿಕರಲ್ಲಿ ಮೊದಲಿಗನೆನ್ನಿಸಿಕೊಳ್ಳುತ್ತಾನೆ.
ಪದಾರ್ಥ (ಕ.ಗ.ಪ)
ಆರೈ-ವಿಚಾರಿಸು, ಹದುಳಿಸು-ಸರಿಹೊಂದಿಸಿಕೋ, ಲಾಗುವೇಗದ- ವೇಗದ ಕೈಚಳಕದ ಕಾಲಾನಲ-ಪ್ರಳಯಕಾಲದ ಅಗ್ನಿ
ಕುದುರೆಗಳನು ಅರೈದು-ಕುದುರೆಗಳ ಯೋಗಕ್ಷೇಮವನ್ನು ನೋಡಿಕೊಂಡು, ರಥವನು ಹದುಳಿಸುತ-ರಥಕ್ಕೆ ಅಪಾಯ ತಟ್ಟದಂತೆ ನೋಡಿಕೊಳ್ಳುತ್ತಾ, ಸಾರಥಿಯನು ಓವುತಲಿ-ರಥ ನಡೆಸುವವನಿಗೆ ಯಾವ ಅಪಾಯವು ಆಗದಂತೆ ರಕ್ಷಿಸಿಕೊಳ್ಳುತ್ತ, ಇದಿರ ಮುರಿವುತ-ಎದುರಿಸಿ ಬಂದ ಶತ್ರುಗಳನ್ನು ಕೊಲ್ಲುತ್ತ, ತನ್ನ ಕಾಯಿದುಕೊಳುತ-ತನ್ನನ್ನು ರಕ್ಷಿಸಿಕೊಳ್ಳುತ್ತ, ಕೆಲಬಲನ ಸದೆದು-ಅಕ್ಕಪಕ್ಕಗಳಲ್ಲಿ ಬಂದ ಶತ್ರುಗಳನ್ನು ಬಡಿದು ಹಾಕಿ, ಮರಳುವ-ಹಿಂತಿರುಗಿ ಬರಬಲ್ಲ, ಲಾಗು ವೇಗದ-ವೇಗಶಾಲಿಯಾಗಿ, ಕದನ ಕಾಲಾನಲನು ಅವನು-ಯುದ್ಧದಲ್ಲಿ ಕಾಲಾಗ್ನಿಯಂತೆ ಇರುವ ಅವನೇ, ತಾ ಮೊದಲಿಗನಲೈ ರಥಿಕರಿಗೆ-ರಥಿಕರಲ್ಲಿ ಮೊದಲಿಗನೆನಿಸಿಕೊಳ್ಳುವನಲ್ಲವೇ
ಟಿಪ್ಪನೀ (ಕ.ಗ.ಪ)
ವಿದುರ ನೀತಿಯಲ್ಲೂ ಈ ಪದ್ಯ ಬಂದಿದೆ
ಉದ್ಯೋಗ ಪರ್ವ, ಸಂಧಿ 3, ಪದ್ಯ 103
ಮೂಲ ...{Loading}...
ಕುದುರೆಗಳನಾರೈದು ರಥವನು
ಹದುಳಿಸುತ ಸಾರಥಿಯನೋವುತ
ಲಿದಿರ ಮುರಿವುತ ತನ್ನ ಕಾಯಿದುಕೊಳುತ ಕೆಲಬಲನ
ಸದೆದು ಮರಳುವ ಲಾಗು ವೇಗದ
ಕದನ ಕಾಲಾನಲನವನು ತಾ
ಮೊದಲಿಗನಲೈ ರಥಿಕರಿಗೆ ಭೂಪಾಲ ಕೇಳೆಂದ ॥79॥
೦೮೦ ದೊರೆಯ ಕಾಣುತ ...{Loading}...
ದೊರೆಯ ಕಾಣುತ ವಂದಿಸುತ್ತಂ
ಕರಿಸುತಂತರಿಸುತ್ತ ಮಿಗೆ ಹ
ತ್ತಿರನೆನಿಸದತಿ ದೂರನೆನಿಸದೆ ಮಧ್ಯಗತನೆನಿಸಿ
ಪರಿವಿಡಿಯಲೋಲೈಸುತರಸನ
ಸಿರಿ ಮೊಗವನೀಕ್ಷಿಸುತ ಬೆಸಸಲು
ಕರಯುಗವನಾನುವನೆ ಸೇವಕನರಸ ಕೇಳ್ ಎಂದ ॥80॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೊರೆಯನ್ನು ಕಂಡೊಡನೆ ವಂದಿಸುತ್ತ, ಕಾಣುತ್ತ ಮರೆಯಾಗುತ್ತ ತೀರಾ ಹತ್ತಿರವೆನ್ನಿಸದೆ ಅತಿದೂರ ಎನ್ನಿಸದೆ ಮಧ್ಯದಲ್ಲಿ ಇರುವಂತೆ ಎನ್ನಿಸಿ, ಕ್ರಮವಾಗಿ ಓಲೈಸುತ್ತ, ಅರಸನ ಗೆಲುಮುಖವನ್ನೇ ನೋಡುತ್ತಿದ್ದು, ಆತ ಅಪ್ಪಣೆ ಮಾಡಿದ ಕೂಡಲೆ ಕೈ ನೀಡಿ ಆಜ್ಞೆಯನ್ನು ಸ್ವೀಕರಿಸಿ ನಡೆಸುವವನೇ ಸೇವಕ ಎನ್ನಿಸುವವನು.
ಪದಾರ್ಥ (ಕ.ಗ.ಪ)
ಅಂಕರಿಸಲು-ಕಾಣು, ಅಂತರಿಸು-ಮರೆಯಾಗು, ಪರಿವಿಡಿ-ಅನುಕ್ರಮ
ದೊರೆಯ ಕಾಣುತ-ರಾಜನನ್ನು ನೋಡುತ್ತಲೇ, ವಂದಿಸುತ್ತ-ನಮಸ್ಕರಿಸುತ್ತ, ಅಂಕರಿಸುತ ಅಂತರಿಸುತ್ತ-ಕಾಣಿಸಿಕೊಳ್ಳುತ್ತ ಮತ್ತೆ ಮರೆಯಾಗುತ್ತ, ಮಿಗೆ ಹತ್ತಿರನು ಎನಿಸದೆ ದೂರನು ಎನಿಸದೆ-ಹತ್ತಿರದಲ್ಲಿರುವವನೂ ಅಲ್ಲ, ದೂರದಲ್ಲಿರುವವನೂ ಅಲ್ಲ ಎನ್ನುವಂತೆ,
ಮಧ್ಯಗತನೆನಿಸಿ-ನಡುವೆ ಇರುವವನಂತೆ ಇದ್ದು, ಪರಿವಿಡಿಯಲಿ-ಕ್ರಮವಾಗಿ, ಓಲೈಸುತ-ಸೇವೆಸಲ್ಲಿಸುತ್ತ, ಅರಸನ-ರಾಜನ, ಸಿರಿ ಮೊಗವನು-ಕಳೆಯಿಂದ ಕೂಡಿದ ಮುಖವನ್ನು, ಈಕ್ಷಿಸುತ-ನೋಡುತ್ತ, ಬೆಸಸಲು-ಆಜ್ಞೆ ಮಾಡಲು, ಕರಯುಗವನು ಆನುವನೆ-ಎರಡು ಕೈಗಳನ್ನು ಮುಂದೆ ಚಾಚುವನೇ, ಸೇವಕನು-ಸೇವಕ ಎನ್ನಿಸಿ ಕೊಳ್ಳುವವನು
ಮೂಲ ...{Loading}...
ದೊರೆಯ ಕಾಣುತ ವಂದಿಸುತ್ತಂ
ಕರಿಸುತಂತರಿಸುತ್ತ ಮಿಗೆ ಹ
ತ್ತಿರನೆನಿಸದತಿ ದೂರನೆನಿಸದೆ ಮಧ್ಯಗತನೆನಿಸಿ
ಪರಿವಿಡಿಯಲೋಲೈಸುತರಸನ
ಸಿರಿ ಮೊಗವನೀಕ್ಷಿಸುತ ಬೆಸಸಲು
ಕರಯುಗವನಾನುವನೆ ಸೇವಕನರಸ ಕೇಳೆಂದ ॥80॥
೦೮೧ ನರಕ ಕರ್ಮವ ...{Loading}...
ನರಕ ಕರ್ಮವ ಮಾಡಿಯಿಹದೊಳು
ದುರಿತ ಭಾಜನರಾಗಿ ಕಡೆಯಲಿ
ಪರಕೆ ಬಾಹಿರರಾಗಿ ನಾನಾ ಯೋನಿಯಲಿ ಸುಳಿದು
ಹೊರಳುವರು ಕೆಲಕೆಲರು ಭೂಪರು
ಧರಿಸುವರಲೈ ರಾಜ ಧರ್ಮದ
ಹೊರಿಗೆಯನು ಮರೆದಿರೆಯಲಾ ಭೂಪಾಲ ಕೇಳ್ ಎಂದ ॥81॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆಲವು ರಾಜರು ಕ್ರೂರಕರ್ಮವನ್ನು ಮಾಡಿ, ಈ ಲೋಕದಲ್ಲಿ ಪಾಪಕ್ಕೆ ಭಾಗಿಗಳಾಗಿ, ಕಡೆಗೆ ಪರಲೋಕಕ್ಕೂ ಹೊರಗಿನವರಾಗಿ
ನಾನಾ ಜನ್ಮಗಳಲ್ಲಿ ಹುಟ್ಟಿ ಹೊರಳಾಡುತ್ತಿರುತ್ತಾರೆ. ಅಂಥವರೂ ರಾಜಧರ್ಮದ ಹೊಣೆಯನ್ನು ಹೊರುತ್ತಾರಲ್ಲ ! ಅಂತಹ ಹೊಣೆಯನ್ನು ನೀನು ಮರೆಯುವುದಿಲ್ಲವಲ್ಲವೆ ರಾಜಾ ?
ಪದಾರ್ಥ (ಕ.ಗ.ಪ)
ನರಕ ಕರ್ಮವ ಮಾಡಿ-ಕ್ರೂರ ಕರ್ಮಗಳನ್ನು ಮಾಡಿರಿ, ಇಹದೊಳು-ಈ ಪ್ರಪಂಚದಲ್ಲೂ, ದುರಿತ ಭಾಜನರಾಗಿ-ಪಾಪಕ್ಕೆ ಭಾಗಿಗಳಾಗಿ, ಕಡೆಯಲಿ-ಕೊನೆಗೆ, ಪರಕೆ ಬಾಹಿರರಾಗಿ-ಪರಲೋಕದಲ್ಲಿಯೂ ನೆಲೆಯಿಲ್ಲದೆ ಹೊರಬಿದ್ದು, ನಾನಾ ಯೋನಿಯಲಿ ಸುಳಿದು-ನಾನಾ ಜನ್ಮಗಳನ್ನೆತ್ತಿ ದುಃಖವನ್ನು ಅನುಭವಿಸಿಕೊಂಡು ಮುಂದುವರಿಯುತ್ತಾರೆ, ಕೆಲಕೆಲರು ಭೂಪರು-ಇಂತಹ ಕೆಲವು ರಾಜರುಗಳೂ ಇರುತ್ತಾರೆ, ರಾಜ ಧರ್ಮದ ಹೊರಿಗೆಯನು-ಇಂಥವರು ರಾಜಧರ್ಮದ, ಜವಾಬ್ದಾರಿಯನ್ನು ಹೊರುತ್ತಾರಲ್ಲ
ಮರೆದಿರೆಯಲಾ-ನೀನು ಈ ವಿಷಯವನ್ನು ಮರೆಯುವುದಿಲ್ಲ ಅಲ್ಲವೇ ?
ಮೂಲ ...{Loading}...
ನರಕ ಕರ್ಮವ ಮಾಡಿಯಿಹದೊಳು
ದುರಿತ ಭಾಜನರಾಗಿ ಕಡೆಯಲಿ
ಪರಕೆ ಬಾಹಿರರಾಗಿ ನಾನಾ ಯೋನಿಯಲಿ ಸುಳಿದು
ಹೊರಳುವರು ಕೆಲಕೆಲರು ಭೂಪರು
ಧರಿಸುವರಲೈ ರಾಜ ಧರ್ಮದ
ಹೊರಿಗೆಯನು ಮರೆದಿರೆಯಲಾ ಭೂಪಾಲ ಕೇಳೆಂದ ॥81॥
೦೮೨ ನೃಗನ ಭರತನ ...{Loading}...
ನೃಗನ ಭರತನ ದುಂದುಮಾರನ
ಸಗರನ ಪುರೂರನ ಯಯಾತಿಯ
ಮಗನ ನಹುಷನ ಕಾರ್ತವೀರ್ಯನ ನಳನ ದಶರಥನ
ಹಗಲಿರುಳು ವಲ್ಲಭರ ವಂಶದ
ವಿಗಡರಲಿ ಯಮಸೂನು ಸರಿಯೋ
ಮಿಗಿಲೊ ಎನಿಸುವ ನೀತಿಯುಂಟೇ ರಾಯ ನಿನಗೆಂದ ॥82॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೃಗ, ಭರತ, ದುಂದುಮಾರ, ಸಗರ, ಪುರೂರವ, ಪುರು, ನಹುಷ, ಕಾರ್ತವೀರ್ಯ, ನಳ, ದಶರಥ ಸೂರ್ಯಚಂದ್ರವಂಶದ ಈ ಪ್ರಸಿದ್ಧ ಪರಾಕ್ರಮಿಗಳಿಗೆ ಈ ಧರ್ಮರಾಜ ಸರಿದೂಗುವನೋ ಮಿಗಿಲಾಗಿರುವನೋ ಎಂದು ತಿಳಿಯಬೇಕೆಂಬ ನೀತಿಯಿದೆಯೇ ರಾಜ, ನಿನಗೆ ?
ಪದಾರ್ಥ (ಕ.ಗ.ಪ)
ವಿಗಡ-ಪರಾಕ್ರಮಿ
ಹಗಲಿರುಳು ವಲ್ಲಭರ-ಸೂರ್ಯ, ಚಂದ್ರವಂಶದ, ರಾಜರುಗಳಾದ ಈ ಪ್ರಸಿದ್ಧ ಪರಾಕ್ರಮಿಗಳಲ್ಲಿ, ಈ ಯಮಸೂನು-ಯುಧಿಷ್ಠಿರನು,
ಸರಿಯೋ ಮಿಗಿಲೊ-ಅವರಿಗೆ ಸಮಾನವೋ, ಅವರೆಲ್ಲರಿಗಿಂತ ಮೇಲೋ, ಎನಿಸುವ ನೀತಿಯುಂಟೇ-ಎಂಬ ನೀತಿ ಇದೆಯೇ ರಾಜ ನಿನಗೆ?
ಮೂಲ ...{Loading}...
ನೃಗನ ಭರತನ ದುಂದುಮಾರನ
ಸಗರನ ಪುರೂರನ ಯಯಾತಿಯ
ಮಗನ ನಹುಷನ ಕಾರ್ತವೀರ್ಯನ ನಳನ ದಶರಥನ
ಹಗಲಿರುಳು ವಲ್ಲಭರ ವಂಶದ
ವಿಗಡರಲಿ ಯಮಸೂನು ಸರಿಯೋ
ಮಿಗಿಲೊ ಎನಿಸುವ ನೀತಿಯುಂಟೇ ರಾಯ ನಿನಗೆಂದ ॥82॥
೦೮೩ ಆ ಮುನೀನ್ದ್ರನ ...{Loading}...
ಆ ಮುನೀಂದ್ರನ ವಚನ ರಚನಾ
ತಾಮರಸ ಮಕರಂದ ಕೇಳಿಯ
ಲೀ ಮಹೀಶಮನೋಮಧುವ್ರತವುಬ್ಬಿತೊಲವಿನಲಿ
ರೋಮ ಪುಳಕದ ರುಚಿರ ಭಾವ
ಪ್ರೇಮ ಪೂರಿತ ಹರುಷ ರಸದು
ದ್ದಾಮ ನದಿಯಲಿ ಮುಳುಗಿ ಮೂಡಿದನರಸ ಕೇಳ್ ಎಂದ ॥83॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಮುನೀಂದ್ರನಾದ ನಾರದನ ವಚನರಚನೆಯೆಂಬ ತಾವರೆಯ ಮಕರಂದದಲ್ಲಿ ಧರ್ಮರಾಜನ ಮನಸ್ಸೆಂಬ ದುಂಬಿ ವಿಹರಿಸಿ
ಸಂತೋಷದಿಂದ ಉಬ್ಬಿತು. ರೋಮಾಂಚಗೊಂಡು ಮನೋಹರವಾದ ಭಾವವನ್ನು ತಳೆದು ಪ್ರೇಮ ತುಂಬಿದ ಹರ್ಷರಸದ ಶ್ರೇಷ್ಠ ನದಿಯಲ್ಲಿ ಆ ರಾಜ ಮುಳುಗಿ ಏಳುತ್ತಿದ್ದ.
ಪದಾರ್ಥ (ಕ.ಗ.ಪ)
ಮಕರಂದ-ಹೂವಿನಲ್ಲಿರುವ ಜೇನು, ಮಧುವ್ರತ-ದುಂಬಿ, ರುಚಿರ- ಮನೋಹರ, ಉದ್ದಾಮ-ಶ್ರೇಷ್ಠ, ತಾಮರಸ-ತಾವರೆ ಹೂವು
ಆ ಮುನೀಂದ್ರನ-ಮುನೀಂದ್ರನಾದ ನಾರದನು, ವಚನ ರಚನಾ ತಾಮರಸ ಮಕರಂದ ಕೇಳಿಯಲೀ-ಮಾತಿನ, ರಚನೆಯೆಂಬ ತಾವರೆಯಲ್ಲಿನ ಜೇನಿನ ಸೇವನೆಯ ವಿಹಾರದಲ್ಲಿ, ಮಹೀಶಮನೋಮಧುವ್ರತವು-ಧರ್ಮರಾಜನ ಮನಸ್ಸೆಂಬ ದುಂಬಿಯ,
ಉಬ್ಬಿತೊಲವಿನಲಿ-ಸಂತೋಷದಿಂದ ಉಬ್ಬಿಹೋಯಿತು, ರೋಮ ಪುಳಕದ-ರೋಮಾಂಚಗೊಂಡ, ರುಚಿರ ಭಾವ ಪ್ರೇಮ ಪೂರಿತ-ಮನೋಹರವಾದ ಪ್ರೇಮಭಾವದಿಂದ ತುಂಬಿದ, ಹರುಷ ರಸದುದ್ದಾಮ ನದಿಯಲಿ-ಹರ್ಷರಸದ ಮಹಾನದಿಯಲ್ಲಿ, ಮುಳುಗಿ ಮೂಡಿದನರಸ-ಮುಳುಗಿ ಏಳುತ್ತಿದ್ದ ಯುಧಿಷ್ಠಿರ ರಾಜ
ಮೂಲ ...{Loading}...
ಆ ಮುನೀಂದ್ರನ ವಚನ ರಚನಾ
ತಾಮರಸ ಮಕರಂದ ಕೇಳಿಯ
ಲೀ ಮಹೀಶಮನೋಮಧುವ್ರತವುಬ್ಬಿತೊಲವಿನಲಿ
ರೋಮ ಪುಳಕದ ರುಚಿರ ಭಾವ
ಪ್ರೇಮ ಪೂರಿತ ಹರುಷ ರಸದು
ದ್ದಾಮ ನದಿಯಲಿ ಮುಳುಗಿ ಮೂಡಿದನರಸ ಕೇಳೆಂದ ॥83॥
೦೮೪ ಎಲೆ ಮುನಿಯೆ ...{Loading}...
ಎಲೆ ಮುನಿಯೆ ನೀವ್ ರಚಿಸಿದೀ ನಿ
ರ್ಮಳ ನೃಪಾಲ ನಯ ಪ್ರಪಂಚವ
ಬಳಸಿದೆನು ಕೆಲ ಕೆಲವನಿನ್ನುರೆ ಬಳಸುವೆನು ಕೆಲವ
ಇಳಿದು ಧರಣಿಗೆ ಸುಳಿದು ನೀತಿ
ಸ್ಖಲಿತ ಜಡರನು ತಿದ್ದಿ ತಿಳುಹುವ
ಸುಲಭತನದಲಿ ದೇವಮುನಿ ನಿನಗಾರು ಸರಿಯೆಂದ ॥84॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುಧಿಷ್ಠಿರ ನಾರದರನ್ನು “ಎಲೆ ಮುನಿಯೆ, ನೀವು ವಿವರಿಸಿದ ಈ ರಾಜನೀತಿಗಳಲ್ಲಿ ಕೆಲ ಕೆಲವನ್ನು ನಾನು ಬಳಸಿದ್ದೇನೆ.
ಇನ್ನುಳಿದವನ್ನೂ ಬಳಸುತ್ತೇನೆ. ನೀವು ಸ್ವರ್ಗದಿಂದ ಇಳಿದು ಬಂದು ನೀತಿಮಾರ್ಗದಿಂದ ಜಾರಿರುವ ಮೂರ್ಖರಿಗೆ ತಿಳಿವಳಿಕೆ ಹೇಳಿ ಇಷ್ಟು ಸುಲಭವಾಗಿ ತಿದ್ದುತ್ತಿರುವಿರಿ. ದೇವಮುನಿ, ನಿಮಗಾರು ಸರಿಸಮಾನರು?” ಎಂದ.
ಪದಾರ್ಥ (ಕ.ಗ.ಪ)
ನಯ-ರಾಜನೀತಿ, ನೀತಿಸ್ಖಲಿತ-ನೀತಿ ಬಿಟ್ಟು ಜಾರಿದ
ಎಲೆ ಮುನಿಯೆ-ಎಲೈ ಋಷಿಯೆ, ನಿರ್ಮಳ ನೃಪಾಲ ನಯ ಪ್ರಪಂಚವ-ನಿರ್ಮಲವಾದ, ರಾಜನೀತಿಗಳನ್ನು ಕೆಲಕೆಲವನು ಬಳಸಿದೆನು ಕೆಲಕೆಲವನ್ನು ಆಚರಿಸುತ್ತಿದ್ದೇನೆ, ಇನ್ನುರೆ ಬಳಸುವೆನು ಕೆಲವ-ಮತ್ತೆ ಕೆಲವನ್ನು ಮುಂದೆ ಅತಿಶಯವಾಗಿ ಬಳಸುವೆನು,
ಇಳಿದು ಧರಣಿಗೆ ಸುಳಿದು-ನೀವು ಈ ಭೂಮಿಗೆ ಇಳಿದು ಬಂದು, ನೀತಿಸ್ಖಲಿತ ಜಡರನು-ನೀತಿಯನ್ನು ಬಿಟ್ಟು ಜಾರಿದ ಮೂರ್ಖರನ್ನು, ತಿದ್ದಿ -ಸರಿಮಾಡಿ, ತಿಳುಹುವ ಸುಲಭತನದಲಿ-ಸುಲಭವಾಗಿ ತಿಳಿವಳಿಕೆಯನ್ನು ಮೂಡಿಸುವಂತಹ ನಿಮಗೆ,
ದೇವಮುನಿ-ದೇವರ್ಷಿಯೆ, ಆರುಸರಿ-ಯಾರು ಸರಿದೂಗುವರು?
ಮೂಲ ...{Loading}...
ಎಲೆ ಮುನಿಯೆ ನೀವ್ ರಚಿಸಿದೀ ನಿ
ರ್ಮಳ ನೃಪಾಲ ನಯ ಪ್ರಪಂಚವ
ಬಳಸಿದೆನು ಕೆಲ ಕೆಲವನಿನ್ನುರೆ ಬಳಸುವೆನು ಕೆಲವ
ಇಳಿದು ಧರಣಿಗೆ ಸುಳಿದು ನೀತಿ
ಸ್ಖಲಿತ ಜಡರನು ತಿದ್ದಿ ತಿಳುಹುವ
ಸುಲಭತನದಲಿ ದೇವಮುನಿ ನಿನಗಾರು ಸರಿಯೆಂದ ॥84॥
೦೮೫ ಮುನಿಯೆ ಬಿನ್ನಹವಿನ್ದು ...{Loading}...
ಮುನಿಯೆ ಬಿನ್ನಹವಿಂದು ನೀವಿಂ
ದ್ರನ ವಿರಿಂಚಿಯ ಯಮನ ವರುಣನ
ಧನಪತಿಯ ಶೇಷನ ಸಭಾಮಧ್ಯದಲಿ ಸುಳಿವಿರಲೆ
ಇನಿತು ರಚನೆಗೆ ಸರಿಯೊ ಮಿಗಿಲೋ
ಮನುಜ ಯೋಗ್ಯಸ್ಥಾನವೋ ಮೇ
ಣೆನಲು ನಗುತೆಂದನು ಮುನೀಶ್ವರನಾ ಯುಧಿಷ್ಠಿರಗೆ ॥85॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮತ್ತೆ, ಮುನಿಯೆ, ಬಿನ್ನವಿಸಿಕೊಳ್ಳುತ್ತೇನೆ. ನೀವು ಇಂದ್ರನ ಬ್ರಹ್ಮನ ಯಮನ ವರುಣನ ಕುಬೇರನ ಶೇಷನ ಸಭೆಗಳಲ್ಲೆಲ್ಲ ಸಂಚರಿಸುತ್ತಿರುವಿರಲ್ಲವೆ ? ಈ ಮಯನು ನಿರ್ಮಿಸಿದ ಸಭೆ ಹೇಗಿದೆ ? ರಚನೆಯಲ್ಲಿ ಇದು ಅವುಗಳಿಗೆ ಸರಿಯೋ ಮಿಗಿಲೋ ? ಮನುಷ್ಯರಿಗೆ ಇದು ಯೋಗ್ಯ ಸ್ಥಾನವೇ? ಎಂದು ಕೇಳಲು ಆ ಮುನೀಶ್ವರ ನಗುತ್ತ ಯುಧಿಷ್ಠರನಿಗೆ ಮುಂದೆ ಹೇಳುತ್ತಾನೆ.
ಪದಾರ್ಥ (ಕ.ಗ.ಪ)
ವಿರಿಂಚಿ-ಬ್ರಹ್ಮ, ಮೇಣ್-ಅಥವಾ
ಬಿನ್ನಹ-ವಿಜ್ಞಾಪನೆ, ವಿರಿಂಚಿಯ-ಬ್ರಹ್ಮನ, ಧನಪತಿಯ-ಕುಬೇರನ, ಸಭಾಮಧ್ಯದಲಿ-ಸಭೆಗಳ ನಡುವೆ, ಸುಳಿವಿರಲೆ-ಓಡಾಡುವಿರಲ್ಲವೇ?
ಇನಿತು ರಚನೆಗೆ ಸರಿಯೊ ಮಿಗಿಲೋ ಮೇಣ್-ಆ ಸಭೆಗಳು, ಮಯನು ನಿರ್ಮಿಸಿದ ಈ ಸಭೆಗೆ ಸಮಾನವೋ, ಅವಕ್ಕಿಂತ ಅತಿಶಯವಾದುದೋ ?
ಮೂಲ ...{Loading}...
ಮುನಿಯೆ ಬಿನ್ನಹವಿಂದು ನೀವಿಂ
ದ್ರನ ವಿರಿಂಚಿಯ ಯಮನ ವರುಣನ
ಧನಪತಿಯ ಶೇಷನ ಸಭಾಮಧ್ಯದಲಿ ಸುಳಿವಿರಲೆ
ಇನಿತು ರಚನೆಗೆ ಸರಿಯೊ ಮಿಗಿಲೋ
ಮನುಜ ಯೋಗ್ಯಸ್ಥಾನವೋ ಮೇ
ಣೆನಲು ನಗುತೆಂದನು ಮುನೀಶ್ವರನಾ ಯುಧಿಷ್ಠಿರಗೆ ॥85॥
೦೮೬ ಜನಪ ಕೇಳುತ್ಸೇದ ...{Loading}...
ಜನಪ ಕೇಳುತ್ಸೇದ ಶತ ಯೋ
ಜನ ತದರ್ಧದೊಳಗಲದಳತೆಯಿ
ದೆನಿಪುದಿಂದ್ರ ಸ್ಥಾನವಲ್ಲಿಹುದಖಿಳ ಸುರನಿಕರ
ಜನಪರಲ್ಲಿ ಯಯಾತಿಯಾತನ
ಜನಕ ನೃಗ ನಳ ಭರತ ಪೌರವ
ರೆನಿಪರಖಿಳ ಕ್ರತುಗಳಲಿ ಸಾಧಿಸಿದರಾ ಸಭೆಯ ॥86॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜ, ಕೇಳು. ಇಂದ್ರನ ಆಸ್ಥಾನ ನೂರು ಯೋಜನ ಉದ್ದ, ಐವತ್ತು ಯೋಜನ ಅಗಲ ಇರುವುದು. ಅಲ್ಲಿ ಸಮಸ್ತ ಸುರರ ಸಮೂಹವಿದೆ. ರಾಜರಪೈಕಿ ಯಯಾತಿ, ಆತನ ತಂದೆ, ನೃಗ, ನಳ, ಭರತ ಪೌರವರೆನಿಸಿದವರು ನಾನಾ ಯಜ್ಞಗಳನ್ನು ಮಾಡಿ ಇಂದ್ರನ ಆಸ್ಥಾನವನ್ನು ಸಾಧಿಸಿಕೊಂಡಿದ್ದಾರೆ.
ಪದಾರ್ಥ (ಕ.ಗ.ಪ)
ಉತ್ಸೇದ-ಎತ್ತರ
ಉತ್ಸೇದ-ಎತ್ತರ, ಶತ ಯೋಜನ-ನೂರು ಯೋಜನ, ತದರ್ಧದೊಳು-ಅದರ ಅರ್ಧದಷ್ಟು, ಅಗಲದಳತೆಯದೆನಿಪುದು-ಅಗಲದ ಅಳತೆಯುಳ್ಳದ್ದು, ಇಂದ್ರಸ್ಥಾನ-ಇಂದ್ರನ ಆಸ್ಥಾನ, ಅಲ್ಲಿಹುದು ಅಖಿಳ ಸುರನಿಕರ-ಅಲ್ಲಿ ದೇವ, ದೇವತೆಗಳ ಸಮೂಹವಲ್ಲಿ ಇದೆ, ಅಖಿಳ ಕ್ರತುಗಳಲಿ-ಸಮಸ್ತ ಯಜ್ಞಗಳನ್ನು ಆಚರಿಸುದುದರಿಂದ, ಸಾಧಿಸಿದರಾ ಸಭೆಯ-ಆ ಸಭೆಯನ್ನು ಗೆದ್ದುಕೊಂಡರು, ಆ ಸಭೆಯಲ್ಲಿ ಹೋಗಿ ಸೇರಿದರು
ಟಿಪ್ಪಣೆ :
ಯೋಜನ -?
ಮೂಲ ...{Loading}...
ಜನಪ ಕೇಳುತ್ಸೇದ ಶತ ಯೋ
ಜನ ತದರ್ಧದೊಳಗಲದಳತೆಯಿ
ದೆನಿಪುದಿಂದ್ರ ಸ್ಥಾನವಲ್ಲಿಹುದಖಿಳ ಸುರನಿಕರ
ಜನಪರಲ್ಲಿ ಯಯಾತಿಯಾತನ
ಜನಕ ನೃಗ ನಳ ಭರತ ಪೌರವ
ರೆನಿಪರಖಿಳ ಕ್ರತುಗಳಲಿ ಸಾಧಿಸಿದರಾ ಸಭೆಯ ॥86॥
೦೮೭ ವೈದಿಕೋಕ್ತಿಗಳಲಿ ಹರಿಶ್ಚಂ ...{Loading}...
ವೈದಿಕೋಕ್ತಿಗಳಲಿ ಹರಿಶ್ಚಂ
ದ್ರಾದಿರಾಯರು ರಾಜಸೂಯದೊ
ಳಾದರನಿಬರೊಳಗ್ಗಳೆಯರಿಂದ್ರಂಗೆ ಸರಿ ಮಿಗಿಲು
ಆದೊಡಾ ಪುರುಹೂತ ಸಭೆಯೋ
ಪಾದಿ ಯಮನಾಸ್ಥಾನವಲ್ಲಿ ವಿ
ಷಾದದಲಿ ನಿಮ್ಮಯ್ಯನಿಹನಾತನ ಸಮೀಪದಲಿ ॥87॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹರಿಶ್ಚಂದ್ರನೇ ಮೊದಲಾದ ರಾಜರು ವೇದಗಳಲ್ಲಿ ಉಕ್ತವಾಗಿರುವಂತೆ ರಾಜಸೂಯ ಯಾಗವನ್ನು ಮಾಡಿ ಎಲ್ಲರಿಗಿಂತ ಅತಿಶಯವಾಗಿ ಇಂದ್ರನಿಗೂ ಸರಿಮಿಗಿಲೆಂಬಂತೆ ಶೋಭಿಸುತ್ತಿದ್ದಾರೆ. ಆದರೆ ಇಂದ್ರ ಸಭೆಯಂತೆಯೇ ಇರುವ ಯಮನ ಸಭೆಯಲ್ಲಿ ಆತನ ಸಮೀಪದಲ್ಲಿ ನಿಮ್ಮ ತಂದೆ ಪಾಂಡು ವಿಷಾದದಿಂದ ಉಳಿದಿದ್ದಾನೆ.
ಪದಾರ್ಥ (ಕ.ಗ.ಪ)
ಪುರುಹೂತ-ಇಂದ್ರ
ವೈದಿಕೋಕ್ತಿಗಳಲಿ-ವೇದಗಳಲ್ಲಿ ಹೇಳಲ್ಪಟ್ಟಿರುವಂತೆ, ರಾಜಸೂಯದೊಳು-ರಾಜಸೂಯ ಯಾಗ ಮಾಡಿದುದರಿಂದ, (ಹರಿಶ್ಚಂದ್ರನೇ ಮೊದಲಾದ ರಾಜರು), ಅಗ್ಗಳೆಯರು-ಅತಿಶಯರಾಗಿ, ಇಂದ್ರಂಗೆ ಸರಿ ಮಿಗಿಲು-ಇಂದ್ರನಿಗೂ ಸಮ, ಅವನಿಗಿಂತಲೂ ಮಿಗಿಲು ಎಂಬಂತೆ ಇದ್ದಾರೆ, ಪುರುಹೂತ ಸಭೆಯೋ ಪಾದಿ-ಇಂದ್ರನ ಸಭೆಯಂತೆಯೇ ಇರುವ ಯಮನ ಆ ಸ್ಥಾನದಲಿ, ನಿಮ್ಮಯ್ಯನು-ನಿಮ್ಮ ತಂದೆಯಾದ ಪಾಂಡುವು, ವಿಷಾದದಲಿ-ದುಃಖದಿಂದ, ಇಹನ-ಇದ್ದಾನೆ, ಆತನ ಸಮೀಪದಲಿ-ಆ ಯಮನ ಬಳಿಯಲ್ಲಿ
ಮೂಲ ...{Loading}...
ವೈದಿಕೋಕ್ತಿಗಳಲಿ ಹರಿಶ್ಚಂ
ದ್ರಾದಿರಾಯರು ರಾಜಸೂಯದೊ
ಳಾದರನಿಬರೊಳಗ್ಗಳೆಯರಿಂದ್ರಂಗೆ ಸರಿ ಮಿಗಿಲು
ಆದೊಡಾ ಪುರುಹೂತ ಸಭೆಯೋ
ಪಾದಿ ಯಮನಾಸ್ಥಾನವಲ್ಲಿ ವಿ
ಷಾದದಲಿ ನಿಮ್ಮಯ್ಯನಿಹನಾತನ ಸಮೀಪದಲಿ ॥87॥
೦೮೮ ವರುಣ ಸಭೆಯೊಳಗಿಹವು ...{Loading}...
ವರುಣ ಸಭೆಯೊಳಗಿಹವು ಭುಜಗೇ
ಶ್ವರ ಸಮುದ್ರ ನದೀನದಾವಳಿ
ಗಿರಿ ತರು ವ್ರಜವೆನಿಪ ಸಂಖ್ಯಾರಹಿತ ವಸ್ತುಗಳು
ಅರಸ ಕೇಳು ಕುಬೇರ ಸಭೆಯಾ
ಪರಿಯಗಲವೆಂಭತ್ತು ಯೋಜನ
ಹರಸಖನ ಸಿರಿ ಸದರವೇ ಭೂಪಾಲ ಕೇಳ್ ಎಂದ |88॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವರುಣ ಸಭೆಯಲ್ಲಿ ಭುಜಗೇಶ್ವರರು ಸಮುದ್ರಗಳು, ನದಿಗಳು ನದಗಳು, ಗಿರಿ ತರು ಸಮೂಹ ಇತ್ಯಾದಿ ಅಸಂಖ್ಯಾತ ವಸ್ತುಗಳಿವೆ. ರಾಜ ಕೇಳು, ಕುಬೇರನ ಸಭೆ ಅದೇ ರೀತಿಯಲ್ಲಿ ಎಂಬತ್ತು ಯೋಜನ ವಿಸ್ತಾರವಾಗಿದೆ. ಶಿವನ ಗೆಳೆಯನಾದ ಕುಬೇರನ ಸಂಪತ್ತೇನು ಸಾಮಾನ್ಯವಾದದ್ದೇ ?
ಪದಾರ್ಥ (ಕ.ಗ.ಪ)
ಭುಜಗೇಶ್ವರ-ಸರ್ಪರಾಜ, ವ್ರಜ-ಸಮೂಹ, ಹರಸಖ-ಕುಬೇರ
ವರುಣನ ಸಭೆಯಲ್ಲಿ, ಭುಜಗೇಶ್ವರ-ಸರ್ಪರಾಜ, ಆದಿಶೇಷ, ಗಿರಿ-ಬೆಟ್ಟ, ತರು-ಮರ, ವ್ರಜ-ಸಮೂಹ, ಸಂಖ್ಯಾರಹಿತ-ಅಸಂಖ್ಯಾತ,
ಹರಸಖನ-ಕುಬೇರನ, ಸಿರಿ-ಸಂಪತ್ತು, ಸದರವೇ-ಸುಲಭವೇ ?
ಮೂಲ ...{Loading}...
ವರುಣ ಸಭೆಯೊಳಗಿಹವು ಭುಜಗೇ
ಶ್ವರ ಸಮುದ್ರ ನದೀನದಾವಳಿ
ಗಿರಿ ತರು ವ್ರಜವೆನಿಪ ಸಂಖ್ಯಾರಹಿತ ವಸ್ತುಗಳು
ಅರಸ ಕೇಳು ಕುಬೇರ ಸಭೆಯಾ
ಪರಿಯಗಲವೆಂಭತ್ತು ಯೋಜನ
ಹರಸಖನ ಸಿರಿ ಸದರವೇ ಭೂಪಾಲ ಕೇಳೆಂದ |88॥
೦೮೯ ಬಗೆಯೊಳಗೆ ಮೊಳೆವುದು ...{Loading}...
ಬಗೆಯೊಳಗೆ ಮೊಳೆವುದು ಚತುರ್ದಶ
ಜಗವೆನಲು ಜಾವಳವೆ ತಸ್ಯೋ
ಲಗದ ಸಿರಿ ಪರಮೇಷ್ಠಿಗೇನರಿದೈ ಮಹೀಪತಿಯೆ
ಸುಗಮಗಾನಿಯರುಪನಿಷದ ವಿ
ದ್ಯೆಗಳು ವೇದಕ್ರತು ಪುರಾಣಾ
ದಿಗಳು ಬಿದುದಾವಳಿಯ ಪಾಠಕರಾತನಿದಿರಿನಲಿ ॥89॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇನ್ನು ಬ್ರಹ್ಮನ ಸಭೆ. ಬ್ರಹ್ಮನು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡ ಮಾತ್ರಕ್ಕೇ ಹದಿನಾಲ್ಕು ಲೋಕಗಳೂ ಸೃಷ್ಟಿಯಾಗಿ ಬಿಡುತ್ತವೆ ಎನ್ನಲಾಗಿ ಅಂಥವನ ಸಭೆ ವೈಭವವೇನು ಸಾಮಾನ್ಯವೇ ? ಬ್ರಹ್ಮನಿಗೆ ಅಸಾಧ್ಯವಾದುದೇನಿದೆ ? ಉಪನಿಷದ್ ವಿದ್ಯೆಗಳೇ ಅವನ ಎದುರಿನಲ್ಲಿ ಸುಗಮವಾಗಿ ಗಾನ ಮಾಡುವವರು ! ವೇದಕ್ರತು ಪುರಾಣದಿಗಳೇ ಅವನ ಮುಂದೆ ಸ್ತುತಿಪಾಠಕರು !
ಪದಾರ್ಥ (ಕ.ಗ.ಪ)
ಜಾವಳವೆ-ಸಾಮಾನ್ಯವೇ, ಅರಿದು-ಅಸಾಧ್ಯ, ತಸ್ಯ-ಅವನ, ಸುಗಮಗಾನಿ-ಸರಳವಾಗಿ ಹಾಡುವವರು
ಬಗೆಯೊಳಗೆ-ಮನಸ್ಸಿನಲ್ಲಿ ಕಲ್ಪಿಸಿಕೊಂಡ ಮಾತ್ರಕ್ಕೇ, ಚತುರ್ದಶ ಜಗ-ಹದಿನಾಲ್ಕು ಲೋಕಗಳೂ, ಮೊಳೆವುದು-ಸೃಷ್ಟಿಯಾಗಿಬಿಡುತ್ತವೆ,
ತಸ್ಯ ಓಲಗದ ಸಿರಿ-ಅವನ ಸಭೆಯ ವೈಭೋಗ(ಅತಿಶಯವಾದುದು), ಪರಮೇಷ್ಠಿಗೆ-ಬ್ರಹ್ಮನಿಗೆ, ಏನರಿದೈ-ಏನಯ್ಯಾ ಅಸಾಧ್ಯ ?,
ಉಪನಿಷದ ವಿದ್ಯೆಗಳು-ಉಪನಿಷತ್ ವಿದ್ಯಾದೇವತೆಗಳೇ, ಸುಗಮಗಾನಿಯರು-ಅವನ ಆಸ್ಥಾನದಲ್ಲಿ ಸುಗಮವಾಗಿ ಗಾನ ಮಾಡುವವರು, ವೇದಕ್ರತು-ಯಜ್ಞ, ಬಿರುದಾವಳಿಯ ಪಾಠಕರು-ಸ್ತುತಿ ಪಾಠಕರು
ಮೂಲ ...{Loading}...
ಬಗೆಯೊಳಗೆ ಮೊಳೆವುದು ಚತುರ್ದಶ
ಜಗವೆನಲು ಜಾವಳವೆ ತಸ್ಯೋ
ಲಗದ ಸಿರಿ ಪರಮೇಷ್ಠಿಗೇನರಿದೈ ಮಹೀಪತಿಯೆ
ಸುಗಮಗಾನಿಯರುಪನಿಷದ ವಿ
ದ್ಯೆಗಳು ವೇದಕ್ರತು ಪುರಾಣಾ
ದಿಗಳು ಬಿದುದಾವಳಿಯ ಪಾಠಕರಾತನಿದಿರಿನಲಿ ॥89॥
೦೯೦ ಮುನಿಗಳೇ ಮಾಣಿಯರು ...{Loading}...
ಮುನಿಗಳೇ ಮಾಣಿಯರು ಮಂತ್ರಾಂ
ಗನೆಯರೋಲೆಯಕಾತಿಯರು ಸುರ
ಜನವೆ ಕಿಂಕರಜನವು ಸೂರ್ಯಾದಿಗಳೆ ಸಹಚರರು
ಘನ ಚತುರ್ದಶ ವಿದ್ಯೆ ಪಾಠಕ
ಜನವಲೈ ಪಾಡೇನು ಪದುಮಾ
ಸನನ ಪರುಠವವಾ ಸಭೆಗೆ ಸರಿ ಯಾವುದೈ ನೃಪತಿ ॥90॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಲ್ಲಿ ಮುನಿಗಳೇ ವಟುಗಳು. ಮಂತ್ರಾಂಗನೆಯರೇ ಅಲ್ಲಿ ಕಾಗದಪತ್ರಗಳನ್ನು ಒಯ್ಯುವ ಸೇವಕಿಯರು - ದೇವತೆಗಳೇ ಅಲ್ಲಿನ ಸೇವಕರು. ಸೂರ್ಯನೇ ಮೊದಲಾದವರು ಒಡನಾಡಿಗಳು. ಶ್ರೇಷ್ಠವಾದ ಚತುರ್ದಶ ವಿದ್ಯೆಗಳೇ ಸ್ತುತಿಪಾಠಕರು. ! ಬ್ರಹ್ಮನ ವೈಭವಕ್ಕೆ ಎಣೆಯಲ್ಲಿ ! ಆ ಸಭೆಗೆ ಸರಿಸಾಟಿಯಾದುದು ಬೇರಾವುದಿದೆ ರಾಜಾ !
ಪದಾರ್ಥ (ಕ.ಗ.ಪ)
ಮಾಣಿ-ವಟು, ಪದುಮಾಸನ-ಬ್ರಹ್ಮ, ಪರುಠವ-ವೈಭವ, ಚತುರ್ದಶ ವಿದ್ಯೆ-4 ವೇದಗಳು, 6 ವೇದಾಂಗಗಳು, ಮೀಮಾಂಸೆ, ನ್ಯಾಯ, ಪುರಾಣ, ಧರ್ಮಶಾಸ್ತ್ರ (ಒಟ್ಟು 14)
ಮುನಿಗಳೇ ಮಾಣಿಯರು-ಋಷಿಗಳೇ ವಟುಗಳು, ಮಂತ್ರಾಂಗನೆಯರು-ಮಂತ್ರದೇವತೆಗಳೇ, ಓಲೆಯಕಾತಿಯರು-ಪತ್ರಗಳನ್ನು ಒಯ್ಯುವ ಸೇವಕಿಯರು, ಸುರಜನವೆ-ದೇವತೆಗಳೇ, ಕಿಂಕರಜನವು-ಕೆಲಸಗಾರರು, ಸೂರ್ಯಾದಿಗಳೆ-ಸೂರ್ಯಮೊದಲಾದವರೇ,
ಸಹಚರರು-ಒಡನಾಡಿಗಳು, ಘನ ಚತುರ್ದಶ ವಿದ್ಯೆ-ಶ್ರೇಷ್ಠವಾದ ಹದಿನಾಲ್ಕು ವಿದ್ಯೆಗಳೇ, ಪಾಠಕಜನವಲೈ-ಸ್ತುತಿಪಾಠಕರು, ಪದುಮಾಸನನ-ಬ್ರಹ್ಮನ (ಸಭೆಗೆ), ಸರಿಯಾವುದೈ-ಸಮಾನವಾದುದು ಯಾವುದಯ್ಯ ?
ಟಿಪ್ಪನೀ (ಕ.ಗ.ಪ)
ಚತುರ್ದಶವಿದ್ಯೆ :-
4 ವೇದಗಳು, 6 ವೇದಾಂಗಗಳು, ಮೀಮಾಂಸೆ, ನ್ಯಾಯ, ಪುರಾಣ, ಧರ್ಮಶಾಸ್ತ್ರ (ಒಟ್ಟು 14)
ಮಾಣಿ - ವಟುಃ ಮಾಣವಕ ಎಂಬುದು ಸಂಸ್ಕೃತದ ಉಕ್ತಿ
ಮೂಲ ...{Loading}...
ಮುನಿಗಳೇ ಮಾಣಿಯರು ಮಂತ್ರಾಂ
ಗನೆಯರೋಲೆಯಕಾತಿಯರು ಸುರ
ಜನವೆ ಕಿಂಕರಜನವು ಸೂರ್ಯಾದಿಗಳೆ ಸಹಚರರು
ಘನ ಚತುರ್ದಶ ವಿದ್ಯೆ ಪಾಠಕ
ಜನವಲೈ ಪಾಡೇನು ಪದುಮಾ
ಸನನ ಪರುಠವವಾ ಸಭೆಗೆ ಸರಿ ಯಾವುದೈ ನೃಪತಿ ॥90॥
೦೯೧ ಇನಿಬರಾಸ್ಥಾನದಲಿ ಸುಕೃತಿಗ ...{Loading}...
ಇನಿಬರಾಸ್ಥಾನದಲಿ ಸುಕೃತಿಗ
ಳೆನಿಪ ತೇಜಸ್ವಿಗಳು ಗಡ ಸುರ
ಮುನಿ ಹರಿಶ್ಚಂದ್ರಂಗೆ ಸೇರಿದ ಸುಕೃತ ಫಲವೇನು
ಜನಪನಪದೆಸೆಗೇನು ದುಷ್ಕೃತ
ವೆನಲು ನಕ್ಕನು ರಾಜಸೂಯದ
ಘನವನರಿಯಾ ಧರ್ಮನಂದನಯೆಂದನಾ ಮುನಿಪ ॥91॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಷ್ಟು ಜನರ ಆಸ್ಥಾನದಲ್ಲಿಯೂ ಪುಣ್ಯವಂತ ತೇಜಸ್ವಿಗಳೇ ಇದ್ದಾರಲ್ಲವೇ ! ದೇವರ್ಷಿ, ಹರಿಶ್ಚಂದ್ರನು ಮಾಡಿದ ಪುಣ್ಯಫಲವಂತೆಹದು. ನನ್ನ ತಂದೆಯಾದ ಪಾಂಡುವು ಮಾಡಿದ ಪಾಪವೆಂತಹುದು ? ಹೀಗೆ ಕೇಳಲಾಗಿ ನಾರದನು ನಕ್ಕು, ರಾಜಸೂಯಯಾಗದ ಹಿರಿಮೆಯನ್ನು ಅರಿತುಕೊ, ಧರ್ಮನಂದನ, ಎಂದ.
ಪದಾರ್ಥ (ಕ.ಗ.ಪ)
ಇನಿಬರಾಸ್ಥಾನದಲಿ-ಇಷ್ಟು ಜನರ ಸಭೆಗಳಲ್ಲಿ, ಸುಕೃತಿಗಳು-ಪುಣ್ಯಶಾಲಿಗಳೂ, ತೇಜಸ್ವಿಗಳೂ (ಅಲ್ಲವೆ ಹರಿಶ್ಚಂದ್ರಾದಿಗಳು!),
ಸುರಮುನಿ-ದೇವರ್ಷಿ, ಹರಿಶ್ಚಂದ್ರಂಗೆ ಸೇರಿದ-ಹರಿಶ್ಚಂದ್ರನು ಗಳಿಸಿಕೊಂಡಿದ್ದ, ಸುಕೃತ ಫಲವೇನು-ಪುಣ್ಯಫಲವೆಂತಹದು?, ಜನಪನಪದೆಸೆಗೆ-ನಮ್ಮ ಪಾಂಡು ರಾಜನ ದುಃಸ್ಥಿತಿಗೆ ಕಾರಣವಾದ, ದುಷ್ಕೃತ ಏನು-ಪಾಪವೇನು?, ರಾಜಸೂಯದ ಘನವನು-ರಾಜಸೂಯ ಯಾಗದ ಶ್ರೇಷ್ಠತೆಯನ್ನು, ಅರಿಯಾ-ತಿಳಿಯಯ್ಯಾ
ಮೂಲ ...{Loading}...
ಇನಿಬರಾಸ್ಥಾನದಲಿ ಸುಕೃತಿಗ
ಳೆನಿಪ ತೇಜಸ್ವಿಗಳು ಗಡ ಸುರ
ಮುನಿ ಹರಿಶ್ಚಂದ್ರಂಗೆ ಸೇರಿದ ಸುಕೃತ ಫಲವೇನು
ಜನಪನಪದೆಸೆಗೇನು ದುಷ್ಕೃತ
ವೆನಲು ನಕ್ಕನು ರಾಜಸೂಯದ
ಘನವನರಿಯಾ ಧರ್ಮನಂದನಯೆಂದನಾ ಮುನಿಪ ॥91॥
೦೯೨ ಈ ಮಹಾಕ್ರತುವರವ ...{Loading}...
ಈ ಮಹಾಕ್ರತುವರವ ನೀ ಮಾ
ಡಾ ಮಹೀಶ್ವರ ಪಂಕ್ತಿಯಲ್ಲಿ ನಿ
ರಾಮಯನು ನಿಮ್ಮಯ್ಯನಿಹನು ಸತೇಜದಲಿ ಬಳಿಕ
ಸೋಮವಂಶದ ರಾಯರೊಳಗು
ದ್ದಾಮರಹ ಬಲುಗೈ ಕುಮಾರ
ಸ್ತೋಮ ನೀವಿರಲಯ್ಯಗೇನರಿದೆಂದನಾ ಮುನಿಪ ॥92॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಮಹಾಯಾಗವನ್ನು ನೀನು ಮಾಡು. ಆಗ ನಿನ್ನ ತಂದೆ ಎಲ್ಲ ರಾಜರುಗಳ ಪಂಕ್ತಿಯಲ್ಲಿ ತೇಜೋಮಯನಾಗಿ ಬೆಳಗುತ್ತಾನೆ.
ಚಂದ್ರವಂಶದ ರಾಜರಲ್ಲಿ ಶ್ರೇಷ್ಠರಾದ ಹಾಗೂ ಶಕ್ತಿಶಾಲಿಗಳಾದ ಮಕ್ಕಳು ನೀವಿರಲಾಗಿ ನಿಮ್ಮ ತಂದೆಗೆ ಏನು ಅಸಾಧ್ಯವಾದೀತು ? ಎಂದ.
ಪದಾರ್ಥ (ಕ.ಗ.ಪ)
ನಿರಾಮಯ-ನಿರಾತಂಕ
ಈ ಮಹಾಕ್ರತು-ಶ್ರೇಷ್ಠ ರಾಜಸೂಯ ಯಾಗವನ್ನು, ಮಾಡಾ-ಮಾಡಯ್ಯ, ಮಹೀಶ್ವರ ಪಂಕ್ತಿಯಲ್ಲಿ-ಆ ರಾಜರುಗಳ ಸಾಲಿನಲ್ಲಿ,
ನಿರಾಮಯನು-ನಿರಾತಂಕವಾಗಿ, ನಿಮ್ಮಯ್ಯನಿಹನು-ನಿಮ್ಮ ತಂದೆ ಇರುತ್ತಾನೆ, ಸತೇಜದಲಿ-ತೇಜೋವಂತನಾಗಿ, ಸೋಮವಂಶದ ರಾಯರೊಳಗೆ-ಚಂದ್ರವಂಶದ ರಾಜರಲ್ಲಿ, ಉದ್ದಾಮರಹ-ಶ್ರೇಷ್ಠನಾದ, ಬಲುಗೈ ಕುಮಾರಸ್ತೋಮ-ಬಲಶಾಲಿಗಳಾದ ಮಕ್ಕಳುಗಳು, ನೀವಿರಲು, ಅಯ್ಯಗೇನರಿದ-ನಿಮ್ಮ ತಂದೆಗೆ ಕೊರತೆಯೇನಾದೀತು ?
ಮೂಲ ...{Loading}...
ಈ ಮಹಾಕ್ರತುವರವ ನೀ ಮಾ
ಡಾ ಮಹೀಶ್ವರ ಪಂಕ್ತಿಯಲ್ಲಿ ನಿ
ರಾಮಯನು ನಿಮ್ಮಯ್ಯನಿಹನು ಸತೇಜದಲಿ ಬಳಿಕ
ಸೋಮವಂಶದ ರಾಯರೊಳಗು
ದ್ದಾಮರಹ ಬಲುಗೈ ಕುಮಾರ
ಸ್ತೋಮ ನೀವಿರಲಯ್ಯಗೇನರಿದೆಂದನಾ ಮುನಿಪ ॥92॥
೦೯೩ ಮುನಿಯ ಮಾತಿನ ...{Loading}...
ಮುನಿಯ ಮಾತಿನ ಬಲೆಗೆ ಸಿಲುಕಿತು
ಜನಪತಿಯ ಚೈತನ್ಯಮೃಗವೀ
ತನ ವಚೋ ವರುಷದಲಿ ನೆನೆದವು ಕರಣವೃತ್ತಿಗಳು
ಮನದಲಂಕುರವಾಯ್ತು ನಾಲಿಗೆ
ಗೊನೆಯಲೆರಡೆಲೆಯಾಯ್ತು ಯಜ್ಞದ
ನೆನವು ಭಾರವಣೆಯಲಿ ಬಿದ್ದುದು ಧರ್ಮನಂದನನ ॥93॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾರದ ಮುನಿ ಬೀಸಿದಂತಹ ಮಾತಿನ ಬಲೆಗೆ ಧರ್ಮರಾಜನ ಚೇತನವೆಂಬ ಜಿಂಕೆ ಸಿಕ್ಕಿ ಹಾಕಿಕೊಂಡು ಬಿಟ್ಟಿತು ! ಈ ಋಷಿಯ ಮಾತಿನ ಮಳೆಯಲ್ಲಿ ಇಂದ್ರಿಯ ಪ್ರವೃತ್ತಿಗಳು ನೆನೆದವು. ಯುಧಿಷ್ಠಿರನ ಮನದಲ್ಲಿ ರಾಜಸೂಯಯಾಗದ ಮೊಳಕೆ ಒಡೆಯಿತು. ನಾಲಿಗೆಯ ತುದಿಯಲ್ಲಿ ಅದು ಎರಡು ಎಲೆಗಳಾದವು. ಅದರ ನೆನಪೇ ಅವನ ಮನದಲ್ಲಿ ಭಾರವಾಗತೊಡಗಿತು.
ಪದಾರ್ಥ (ಕ.ಗ.ಪ)
ಮುನಿಯ ಮಾತಿನ ಬಲೆಗೆ-ನಾರದ ಋಷಿಯ ಮಾತಿನ ಬಲೆಗೆ, ಜನಪತಿಯ ಚೈತನ್ಯಮೃಗ-ಧರ್ಮರಾಯನ ಚೇತನವೆಂಬ ಜಿಂಕೆ,
ಸಿಲುಕಿತು-ಸಿಕ್ಕಿಹಾಕಿಕೊಂಡಿತು, ವಚೋ ವರುಷದಲಿ-ಮಾತಿನ ಮಳೆಯಲ್ಲಿ, ಕರಣವೃತ್ತಿಗಳು-ಇಂದ್ರಿಯಗಳು, ಮನದಲಂಕುರವಾಯ್ತು-ಮನಸ್ಸಿನಲ್ಲಿ ಮೊಳಕೆಯೊಡೆಯಿತು, ಯಜ್ಞದ ನೆನವು-ಯಜ್ಞದ ಸ್ಮರಣೆಯೇ, ಧರ್ಮನಂದನನ-ಯುಧಿಷ್ಠಿರನ, ಭಾರವಣೆಯಲಿ ಬಿದ್ದುದು-ಜವಾಬ್ದಾರಿಯಾಗಿ ಉಳಿಯಿತು
ಮೂಲ ...{Loading}...
ಮುನಿಯ ಮಾತಿನ ಬಲೆಗೆ ಸಿಲುಕಿತು
ಜನಪತಿಯ ಚೈತನ್ಯಮೃಗವೀ
ತನ ವಚೋ ವರುಷದಲಿ ನೆನೆದವು ಕರಣವೃತ್ತಿಗಳು
ಮನದಲಂಕುರವಾಯ್ತು ನಾಲಿಗೆ
ಗೊನೆಯಲೆರಡೆಲೆಯಾಯ್ತು ಯಜ್ಞದ
ನೆನವು ಭಾರವಣೆಯಲಿ ಬಿದ್ದುದು ಧರ್ಮನಂದನನ ॥93॥
೦೯೪ ಕಳುಹಿದನು ಸುರಮುನಿಯನುದರದೊ ...{Loading}...
ಕಳುಹಿದನು ಸುರಮುನಿಯನುದರದೊ
ಳಿಳಿದುದಂತಸ್ತಾಪ ಯಜ್ಞದ
ಬಲುಹ ನೆನೆದಡಿಗಡಿಗೆ ಕಂಪಿಸಿ ಕೈಯ ಗಲ್ಲದಲಿ
ಒಲೆದೊಲೆದು ಭಾವದಲಿ ಮಿಗೆ ಕಳ
ವಳಿಸಿ ಪದುಳಿಸಿಕೊಳುತ ಭೂಪತಿ
ತಿಲಕ ಚಿಂತಿಸಿ ನೆನೆವುತಿದ್ದನು ವೀರ ನರಯಣನ ॥94॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕಡೆ ದೇವರ್ಷಿ ನಾರದನನ್ನು ಬೀಳ್ಕೊಂಡ. ಯಾಗದ ಬಗೆಗಿನ ಅಂತಸ್ತಾಪ ಉದರಕ್ಕೆ ಇಳಿಯಿತು. ಯಜ್ಞ ಎಷ್ಟು ದುಷ್ಕರವಾದುದು ಎಂದು ಗಲ್ಲದ ಮೇಲೆ ಕೈಯಿಟ್ಟು ಮತ್ತೆ ಮತ್ತೆ ತಲೆದೂಗಿದ. ಚಿಂತೆ ಹೆಚ್ಚಿ ಕಳವಳವುಂಟಾಯಿತು. ತನ್ನನ್ನು ಸಂತೈಸಿಕೊಳ್ಳುತ್ತ ವೀರನಾರಾಯಣನನ್ನು ನೆನೆಯತೊಡಗಿದ.
ಪದಾರ್ಥ (ಕ.ಗ.ಪ)
ಪದುಳಿಸು-ಸಂತೈಸು
ಕಳುಹಿದನು-ಬೀಳ್ಕೊಟ್ಟ, ಸುರಮುನಿಯನು-ದೇವರ್ಷಿನಾರದನನ್ನು, ಉದರದೊಳಿಳಿದುದಂತಸ್ತಾಪ-ಅದರ ಬೇಗೆ ಹೊಟ್ಟೆಗಿಳಿಯಿತು,
ಯಜ್ಞದಬಲುಹ-ಯಜ್ಞದ ಅಗಾಧತೆಯನ್ನು, ನೆನೆದು ಅಡಿಗಡಿಗೆ-ಮತ್ತೆ ಮತ್ತೆ, ಕಂಪಿಸಿ-ನಡುಗಿ, ಕೈಯ ಗಲ್ಲದಲಿ-ಗಲ್ಲದ ಮೇಲೆ ಕೈಯಿಟ್ಟು ಚಿಂತಾಮಗ್ನನಾಗಿ, ಕಳವಳಿಸಿ-ಚಿಂತಿತನಾಗುತ್ತ, ಪದುಳಿಸಿಕೊಳುತ-ಸಮಾಧಾನ ಪಟ್ಟುಕೊಳ್ಳುತ್ತ, ಭೂಪತಿ ತಿಲಕ-ರಾಜ ಶ್ರೇಷ್ಠನಾದ ಯುಧಿಷ್ಠಿರ, ವೀರ ನಾರಾಯಣನನ್ನು, ನೆನೆವುತಿದ್ದನು-ಸ್ಮರಿಸಿಕೊಳ್ಳುತ್ತಿದ್ದ
ಮೂಲ ...{Loading}...
ಕಳುಹಿದನು ಸುರಮುನಿಯನುದರದೊ
ಳಿಳಿದುದಂತಸ್ತಾಪ ಯಜ್ಞದ
ಬಲುಹ ನೆನೆದಡಿಗಡಿಗೆ ಕಂಪಿಸಿ ಕೈಯ ಗಲ್ಲದಲಿ
ಒಲೆದೊಲೆದು ಭಾವದಲಿ ಮಿಗೆ ಕಳ
ವಳಿಸಿ ಪದುಳಿಸಿಕೊಳುತ ಭೂಪತಿ
ತಿಲಕ ಚಿಂತಿಸಿ ನೆನೆವುತಿದ್ದನು ವೀರ ನರಯಣನ ॥94॥