೧೫

೦೦೦ ಸೂ ರಾಯಸಭೆ ...{Loading}...

ಸೂ. ರಾಯಸಭೆ ನಗಲೈದಿ ಯಂತ್ರದ
ದಾಯವನು ನೆರೆ ಗೆಲಿದು ನಿರ್ಜರ
ರಾಯನಂದನ ಕಾದಿ ಗೆಲಿದನು ಸಕಲ ರಿಪುನೃಪರ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಚಾಲಿಯ ಮನೋರಥ
ಶಾಲೆಯಲಿ ಸಾರಿದರಲೈ ಸಭೆಯಲಿ ಮಹೀಸುರರ
ಏಳಿ ಭುಜಬಲವುಳ್ಳವರು ವಿ
ಪ್ರಾಳಿಯಲಿ ಬಿಲುವಿಡಿದು ಯಂತ್ರದ
ಕೋಲುಗಳ ಕೇವಣಿಪುದೆಂದರು ಹೊಯ್ದು ಡಂಗುರವ ॥1॥

೦೦೨ ಬೆರಸುವರು ಪಾರ್ಥಿವರು ...{Loading}...

ಬೆರಸುವರು ಪಾರ್ಥಿವರು ಪಾರ್ಥಿವ
ವರರೊಡನೆ ತದಲಾಭ ಪಕ್ಷಾಂ
ತರಕೆ ಪಾರ್ಥಿವ ಸುತೆಯನೀವುದು ವಿಪ್ರಜಾತಿಯಲಿ
ಪುರುಷರನುಲೋಮದಲಿ ಕನ್ಯಾ
ವರಣವಹುದು ವಿಲೋಮದಲಿ ವಿ
ಸ್ತರಿಸಲೇಕಿದ ನೀವು ಬಲ್ಲಿರಿ ಶಾಸ್ತ್ರನಿರ್ಣಯವ ॥2॥

೦೦೩ ಎನ್ದು ಸಾರಿದ ...{Loading}...

ಎಂದು ಸಾರಿದ ದನಿಯನಾ ದ್ವಿಜ
ವೃಂದವಾಲಿಸಿ ನಮಗಿದೇಕರ
ವಿಂದವದನೆಯ ತೊಡಕು ತೆಗೆ ನಾವಾರು ಧನುವಾರು
ಬಂದ ದಕ್ಷಿಣೆ ಮೃಷ್ಟಭೋಜನ
ದಿಂದ ತುಷ್ಟರು ನಾವು ನಮಗಿದ
ರಿಂದ ಬಹ ದುಷ್ಕೀರ್ತಿ ಬರಲೆಂದುದು ಬುಧವ್ರಾತ ॥3॥

೦೦೪ ವಚನಶೂರರು ನಾವು ...{Loading}...

ವಚನಶೂರರು ನಾವು ಪಾರ್ಥಿವ
ನಿಚಯವೇ ಭುಜ ಶೂರರನಿಬರ
ನಚಲ ಧನು ಭಂಗಿಸಿತು ನಮಗೀ ವಿದ್ಯೆ ವೈದಿಕವೆ
ಉಚಿತವಲ್ಲಿದು ನಮ್ಮ ಸಾಹಸ
ರಚನೆಯನು ನೋಡುವರೆ ಪಂಡಿತ
ನಿಚಯವಿದಿರಲಿ ನಿಲಲಿ ತೋರುವೆವಲ್ಲಿ ವಿಸ್ಮಯವ ॥4॥

೦೦೫ ಸಾಙ್ಗ ವೇದ ...{Loading}...

ಸಾಂಗ ವೇದ ಪದಕ್ರಮದ ಸ
ರ್ವಾಂಗ ವಿಷಯದಲಖಿಳ ಪೌರಾ
ಣಂಗಳಲಿ ಮೀಮಾಂಸೆಯೊಳ್ ಸ್ಮೃತಿ ತರ್ಕ ಶಾಸ್ತ್ರದಲಿ
ಭಂಗಿಸುವೆವೀ ದ್ರೌಪದಿಯನಾ
ವಂಗದಲಿ ವಾತ್ಸ್ಯಾಯನಾದಿಯು
ಪಾಂಗ ವಿದ್ಯದಲೆಮ್ಮ ನೋಡೆಂದುದು ಬುಧಸ್ತೋಮ ॥5॥

೦೦೬ ಭರತದಲಿ ವೈದ್ಯದಲಿ ...{Loading}...

ಭರತದಲಿ ವೈದ್ಯದಲಿ ಕಾವ್ಯ ಸು
ವಿರಚಿತಾಲಂಕಾರದಲಿ ಗಜ
ತುರಗ ಲಕ್ಷಣದಲಿ ಸಮಾಹಿತ ಮಂತ್ರ ತಂತ್ರದಲಿ
ಸರಸ ಕವಿತಾರಚನೆಯಲಿ ವಿ
ಸ್ತರದುಪನ್ಯಾಸದಲಿ ಭೂಪತಿ
ಕರೆಸಿ ನೋಡಲಿ ನಮ್ಮನೆಂದರು ದ್ವಿಜರು ತಮತಮಗೆ ॥6॥

೦೦೭ ಅಲ್ಲದಿರ್ದರೆ ಶೋಧಿಸಿದ ...{Loading}...

ಅಲ್ಲದಿರ್ದರೆ ಶೋಧಿಸಿದ ತನಿ
ಬೆಲ್ಲವಿಕ್ಕಿದ ಹೂರಿಗೆಯ ಮೆದೆ
ಯಲ್ಲಿ ಪರಡಿಯ ಶಾವಿಗೆಯ ಪರಿಪರಿಯ ಪಾಯಸದ
ಪುಲ್ಲಿಗೆಯ ತತ್ಸವಿಯ ಮಂಡಿಗೆ
ಯಲ್ಲಿ ನವಘೃತ ಸೂಪದಂಶಕ
ದಲ್ಲಿ ನೋಡಲಿ ನಮ್ಮನೆಂದುದು ಧೂರ್ತ ವಟುನಿಕರ ॥7॥

೦೦೮ ರಸದ ಹೊರಲೇಪದಲಿ ...{Loading}...

ರಸದ ಹೊರಲೇಪದಲಿ ಹುದುಗಿದ
ಮಿಸುನಿಯಂತಿರೆ ಜೀವಭಾವ
ಪ್ರಸರದೊಳಗವಲಂಬಿಸಿದ ಪರಮಾತ್ಮನಂದದಲಿ
ಎಸೆವ ವಿಪ್ರಾಕಾರದಲಿ ರಂ
ಜಿಸುವ ಭೂಪತಿ ತತ್ಸಭಾಸ
ದ್ವಿಸರಮಧ್ಯದೊಳಿರ್ದು ಕೇಳಿದನೀ ಮಹಾಧ್ವನಿಯ ॥8॥

೦೦೯ ನೋಡಿದನು ತಮ್ಮನನು ...{Loading}...

ನೋಡಿದನು ತಮ್ಮನನು ಸನ್ನೆಯ
ಮಾಡಿದಡೆ ಕೈಕೊಂಡನವನಿಪ
ಗೂಡಿ ಕುಂತಿಗೆ ಭೀಮಸೇನಂಗೆರಗಿ ಮನದೊಳಗೆ
ಕೂಡೆ ಕುಳ್ಳಿರ್ದಖಿಳ ವಿಪ್ರರ
ನೋಡಿ ಮೆಲ್ಲನೆ ಧೋತ್ರ ದರ್ಭೆಯ
ಗೂಡ ಸಂವರಿಸುತ್ತ ಸಭೆಯಿಂದೆದ್ದನಾ ಪಾರ್ಥ ॥9॥

೦೧೦ ಏನು ...{Loading}...

ಏನು ಸಿದ್ಧಿಯುಪಾಧ್ಯರೆದ್ದಿರಿ
ದೇನು ಧನುವಿಂಗಲ್ಲಲೇ ತಾ
ನೇನು ಮನದಂಘವಣೆ ಬಯಸಿದಿರೇ ನಿತಂಬಿನಿಯ
ವೈನತೇಯನ ವಿಗಡಿಸಿದ ವಿಷ
ವೇನು ಸದರವೊ ಹಾವಡಿಗರಿಗಿ
ದೇನು ನಿಮ್ಮುತ್ಸಾಹವೆಂದುದು ಧೂರ್ತವಟುನಿಕರ ॥10॥

೦೧೧ ಮದುವೆ ಬೇಕೇ ...{Loading}...

ಮದುವೆ ಬೇಕೇ ಶ್ರೋತ್ರಿಯ ಸ್ತೋ
ಮದಲಿ ಕನ್ಯಾರ್ಥಿಗಳು ನಾವೆಂ
ಬುದು ನಿಜಾನ್ವಯ ವಿದ್ಯೆಯಲಿ ಕೊಡುವುದು ಪರೀಕ್ಷೆಗಳ
ಮದುವೆಯಹುದಿದು ಸೌಖ್ಯಪುಣ್ಯ
ಪ್ರದವು ಭೂದೇವರಿಗೆ ನೀವ್ ನೆನೆ
ದುದು ಭಗೀರಥಯತ್ನವೆಂದುದು ಭೂಸುರವ್ರಾತ ॥11॥

೦೧೨ ನೀವು ಸೈರಿಸಿ ...{Loading}...

ನೀವು ಸೈರಿಸಿ ನಿಮ್ಮ ಕಾರು
ಣ್ಯಾವಲೋಕನವುಂಟಲೇ ಸ
ದ್ಭಾವದಲಿ ನೀವ್ ರಚಿಸಿದಾಶೀರ್ವಾದ ಶಕ್ತಿಯಲಿ
ನಾವು ವಿಜಯರು ಚಾಪಯಂತ್ರವಿ
ದಾವ ಘನವೆಂದರ್ಜುನನ ಸಂ
ಭಾವನೋಕ್ತಿಗೆ ನಿಲ್ಲದವರೊದರಿದರು ತಮತಮಗೆ ॥12॥

೦೧೩ ಕ್ರಮಿತರವಧರಿಸಿದರೆ ಶುದ್ಧ ...{Loading}...

ಕ್ರಮಿತರವಧರಿಸಿದರೆ ಶುದ್ಧ
ಭ್ರಮಿತ ಮೂಲನ ಹಿರಿಯ ವಿಷ್ಣು
ಕ್ರಮಿತರೇ ದೀಕ್ಷಿತರೆ ಧನುವಿಗೆ ಯತ್ನ ಮಾಡಿದಿರೆ
ಕ್ರಮವೆ ತಾನಿದು ಕ್ಷತ್ರಿಯರನಾ
ಕ್ರಮಿಸುವುದು ಸದ್ಧರ್ಮವೇ ಉ
ದ್ಭ್ರಮಿತನಿವ ನೆರೆ ಹಳಿವ ತಹನೀ ಶ್ರೋತ್ರಿಯರ ಸಭೆಗೆ ॥13॥

೦೧೪ ಕೆಲರು ಹೋಗದಿರೆನ್ದು ...{Loading}...

ಕೆಲರು ಹೋಗದಿರೆಂದು ಜರೆದರು
ಕೆಲರು ತಾನೇ ಬಲ್ಲನೆಂದರು
ಕೆಲರು ನುಡಿದರು ವಿಪ್ರಸಭೆಗಪಹಾಸ್ಯವಹುದೆಂದು
ಕೆಲರು ತಪ್ಪೇನೆಂದು ಕಳೆದರು
ಕೆಲರು ಭದ್ರಕಾರನೀತಂ
ಗಳುಕುವುದು ಧನು ಭಾಗ್ಯಮುಖನೆಂದುದು ಬುಧಸ್ತೋಮ ॥14॥

೦೧೫ ತೊಟ್ಟ ಹೊಸ ...{Loading}...

ತೊಟ್ಟ ಹೊಸ ಯಜ್ಞೋಪವೀತದ
ಮಟ್ಟಿ ನೊಸಲಲಿ ಕುಶೆಯ ಕರಡಿಗೆ
ಕಟ್ಟಿಯಿರುಕಿದ ಕಕ್ಷೆ ಬೆರಳಲಿ ಮುರಿದ ದರ್ಭೆಗಳ
ಉಟ್ಟ ಬಾಸರ ಬಳಲುಗಚ್ಚೆಯ
ನಟ್ಟಹಾಸದ ಜನದ ನಗೆಗಳ
ನಟ್ಟವಿಗನೋಸರಿಸಿ ಸಭೆಯಲಿ ಮೆಲ್ಲನೈತಂದ ॥15॥

೦೧೬ ತಿರುಗಿ ಕಣ್ಡರು ...{Loading}...

ತಿರುಗಿ ಕಂಡರು ಸಕಲ ಪೃಥ್ವೀ
ಶ್ವರರು ಗಹಗಹಿಸಿದರಿದೇನರೆ
ಮರುಳೊ ಜಡನೋ ವಿಪ್ರವೇಷಚ್ಛನ್ನ ಸುರಪತಿಯೊ
ಮರುಳುಗಳು ತಾವಕಟ ಮದನನ
ಸರಳ ಮರುಮೊನೆಗಾವನಂತಃ
ಕರಣ ನೆರೆ ಕಳವಳಿಸದೆಂದರು ನೆರೆದ ಸಭೆಯೊಳಗೆ ॥16॥

೦೧೭ ಧನು ತನಗೆ ...{Loading}...

ಧನು ತನಗೆ ನೆಗಹಲ್ಕೆ ಕೃಷ್ಣಾ
ಜಿನವೊ ಸಾಲಗ್ರಾಮದೇವರೊ
ವಿನುತ ತುಳಸಿಯೊ ಕುಶವೊ ದರ್ಭೆಯೊ ಸಮಿಧೆಗಳ ಹೊರೆಯೊ
ನೆನೆದ ತಿಲವೋ ಮೇಣಿದೌಪಾ
ಸನದ ಕೊಳವಿಯೊ ಬಣಗು ವಿಪ್ರನ
ನೆನಹ ನೋಡಿರೆ ಘನವಲಾ ದ್ರೌಪದಿಯ ಸೌಭಾಗ್ಯ ॥17॥

೦೧೮ ಅಙ್ಗವಿದು ಗಜ ...{Loading}...

ಅಂಗವಿದು ಗಜ ತುರಗ ಶಸ್ತ್ರಾ
ಸ್ತ್ರಂಗಳರಿತವು ನಮಗೆ ವಿಪ್ರಂ
ಗಂಗ ವೇದಪುರಾಣ ತರ್ಕಸ್ಮೃತಿ ಸುವಿದ್ಯೆಗಳು
ಅಂಗವಂಗಿಗಸಾಧ್ಯವಾದುದ
ನಂಗಿಗೊಡಬಡುವುದೆ ದ್ವಿಜಾತಿಗೆ
ಸಂಗತಾನುಷ್ಠಾನಪರವೆಂದುದು ನೃಪಸ್ತೋಮ ॥18॥

೦೧೯ ಲಹರಿ ಮಸಗಿದುದತ್ತ ...{Loading}...

ಲಹರಿ ಮಸಗಿದುದತ್ತ ಕಾಂತಾ
ಬಹಳಪಾರಾವಾರ ಹುಬ್ಬಿನ
ವಿಹೃತಿಗಳ ತೆರೆಮಾಲೆಗಳ ಬೆಳುನಗೆಯ ಬುದುಬುದದ
ಗಹಗಹಿಕೆ ಮಿಗೆ ಅಟ್ಟಹಾಸದ
ರಹಣಿಗಳ ರಭಸದ ವಿಡಂಬದ
ವಿಹರಣದಚಲ ದೃಷ್ಟಿಗಳ ಮರಿಮೀನ ಹೊಳಹುಗಳ ॥19॥

೦೨೦ ಇತ್ತ ನೋಡೌ ...{Loading}...

ಇತ್ತ ನೋಡೌ ತಾಯೆ ಹಾರುವ
ರತ್ತ ಗಡ್ಡದುಪಾಧ್ಯರನು ತಾ
ವೆತ್ತುವರು ಗಡ ಧನುವನೆಸುವರು ಗಡ ತಿಮಿಂಗಿಲನ
ಹೊತ್ತುಗಳೆವರೆ ಲೇಸು ಬಳಿಕಿ
ನ್ನುತ್ತಮರಲಾ ವಿಪ್ರರೆನೆ ತಲೆ
ಗುತ್ತಿ ನಾಚಿದಳುಂಗುಟದೊಳೌಕುತ ಮಹೀತಳವ ॥20॥

೦೨೧ ಎಲವೊ ಮಟ್ಟಿಯ ...{Loading}...

ಎಲವೊ ಮಟ್ಟಿಯ ಮದನ ದರ್ಭೆಯ
ತಿಲದ ಮನ್ಮಥ ವಿಮಲ ಧೋತ್ರದ
ತಳಿರುಗಾಸೆಯ ಕಾಮ ಕೃಷ್ಣಾಜಿನದ ಕಂದರ್ಪ
ನಳಿನಮುಖಿಯನು ವರಿಸು ಬಾ ನಿನ
ಗಳವಡುವನೆಲೆಯಕ್ಕ ಕೇಳೌ
ತಲೆವಿಡಿವೆವಾವ್ನೋಡುಯೆಂದರು ನಗುತ ಚಪಲೆಯರು ॥21॥

೦೨೨ ಅದೆ ಹಲಾಯುಧ ...{Loading}...

ಅದೆ ಹಲಾಯುಧ ನೋಡು ವಿಪ್ರೌ
ಘದಲಿ ಪಾರ್ಥನ ಬರವು ಮೇಘದ
ಹೊದರುಗಳ ಹರಿದಶ್ವನಂತಿರೆ ವಿಪ್ರವೇಷದಲಿ
ವಿದಿತವೇ ವಸುದೇವನಾಣೆಂ
ದುದಕೆ ತಪ್ಪದಲೈ ಸಭಾ ಮ
ಧ್ಯದಲಿ ಬರುತಿರ್ಪಾತನರ್ಜುನನೆಂದನಸುರಾರಿ ॥22॥

೦೨೩ ಜನಪನೋ ಭೀಮಾದಿಗಳೊ ...{Loading}...

ಜನಪನೋ ಭೀಮಾದಿಗಳೊ ತ
ಜ್ಜನನಿಯೋ ತಾವೆಲ್ಲ ಭೂಸುರ
ಜನದ ಸಾಮೀಪ್ಯದಲಿ ಸಭೆಯೊಳಗಿರ್ದರೆನೆ ಕೇಳ್ದು
ನಿನಗಿದೆಂತವರರಿತವರಗಿನ
ಮನೆಗೆ ತಪ್ಪಿದರೆಂತು ಶಿವ ನೀ
ನೆನಿತು ಮಾಯಾಸಿದ್ಧನೆಂದನು ನಗುತ ಬಲರಾಮ ॥23॥

೦೨೪ ಅವನಿಪತಿ ಕೇಳಿತ್ತಲೀ ...{Loading}...

ಅವನಿಪತಿ ಕೇಳಿತ್ತಲೀ ಪಾ
ರ್ಥಿವರ ಪರಿಹಾಸವನು ಕಾಂತಾ
ನಿವಹದಲಿ ನಿಬ್ಬರದ ನುಡಿಗಳನಾ ಮಹೀಸುರರ
ವಿವಿಧ ಕಟು ಮಧುರೋಕ್ತಿ ವಿನ್ಯಾ
ಸವನು ಕೇಳುತ ಮುಗುಳು ನಗೆಯಲಿ
ನವಮದದ್ವಿಪಗತಿಯ ಗರುವಾಯಿಯಲಿ ನಡೆತಂದ ॥24॥

೦೨೫ ಇವನ ಗತಿ ...{Loading}...

ಇವನ ಗತಿ ಮುಖಚೇಷ್ಟೆ ಭಾವೋ
ತ್ಸವ ವಿಲಾಸವುಪೇಕ್ಷೆ ಭರವಂ
ಘವಣೆ ಗರುವಿಕೆ ಗಮಕಭಾವವಭೀತಿ ಭುಲ್ಲವಣೆ
ಇವನ ವಿಮಲಕ್ಷತ್ರ ವಿಕ್ರಮ
ವಿವನ ಕೊಂಡಯತನವಿವೇ ಸಾ
ಕಿವನಘಾಟದ ವೀರನೆಂದರು ವೀರರರ್ಜುನನ ॥25॥

೦೨೬ ಬರುತ ಭೀಷ್ಮ ...{Loading}...

ಬರುತ ಭೀಷ್ಮ ದ್ರೋಣ ಕೃಪರಿಂ
ಗೆರಗಿದನು ಮನದೊಳಗೆ ಯಾದವ
ರರಸ ಹಂತಿಯ ಹರಿಯನಭಿವಂದಿಸಿದನಕ್ಷಿಯಲಿ
ಸುರಪತಿಗೆ ಗುಹ ಗಣಪ ದಿಕ್ಪಾ
ಲರಿಗೆ ರುದ್ರಾದಿತ್ಯ ವಸುಮು
ಖ್ಯರಿಗೆ ಮಣಿದನು ಬಂದನಗ್ಗದ ಚಾಪವಿದ್ದೆಡೆಗೆ ॥26॥

೦೨೭ ಮೊದಲಲಮ್ಬುಜಭವನನಾ ಮ ...{Loading}...

ಮೊದಲಲಂಬುಜಭವನನಾ ಮ
ಧ್ಯದಲಿ ಮಧುಸೂದನನನಾ ಬಿಲು
ದುದಿಯಲಾಹ್ವಾನಿಸಿದನಗ್ಗದ ನೀಲಲೋಹಿತನ
ಇದು ಮಹಾಭೂಮಿಪರ ಬಿಂಕವ
ನೊದೆದ ಧನುವೇ ಪೂತುರೆನುತೆ
ತ್ತಿದನು ಬಾಗೊತ್ತಿದನು ಕೊರಳಿಗೆ ತೊಡಿಸಿದನು ತಿರುವ ॥27॥

೦೨೮ ಹೊಯ್ದ ತಿರುವನು ...{Loading}...

ಹೊಯ್ದ ತಿರುವನು ಸೆಳೆದು ಕಿವಿವರೆ
ಗೊಯ್ದನಿದು ಹದವಿಲ್ಲಲಾ ಬಿಲು
ಹೊಯ್ದುದಕಟಾ ಬರಿದೆ ಹೆದರಿತು ಮಾಗಧಾದಿಗಳು
ಕೈದೆಗೆದರಿದರೊಳಗೆ ಹೆಸರೆನ
ಗೈದಬೇಕೆಂದೈಸಲೇಯೆನು
ತೈದು ಬಾಣವ ಕೊಂಡು ಯಂತ್ರದ ಹೊಳಹನೀಕ್ಷಿಸಿದ ॥28॥

೦೨೯ ತೂಗಿ ಕಿವಿವರೆಗುಗಿದು ...{Loading}...

ತೂಗಿ ಕಿವಿವರೆಗುಗಿದು ಯಂತ್ರವ
ತಾಗಿಸಿದನಂಬಿನಲಿ ಪಾರ್ಥನ
ಲಾಗು ವೇಗವನಾರು ಬಲ್ಲರು ಯಂತ್ರಭೇದದಲಿ
ಜಾಗು ಧಣು ಧಣು ಪೂತು ಕಾರ್ಮುಕ
ಯೋಗಸಿದ್ಧನೆ ಮಝರೆ ಕೋದಂ
ಡಾಗಮ ತ್ರಿಪುರಾರಿಯೆಂದುದು ವಂದಿ ಸಂದೋಹ ॥29॥

೦೩೦ ಆಯೆನುತ ಬೊಬ್ಬಿರಿದು ...{Loading}...

ಆಯೆನುತ ಬೊಬ್ಬಿರಿದು ವಿಪ್ರ ನಿ
ಕಾಯ ಕುಣಿದುದು ಕಮಲಮುಖಿ ನಿ
ರ್ದಾಯದಲಿ ಸೇರಿದಳು ಹಾರುವಗೆನುತ ಹರುಷದಲಿ
ಆ ಯುವತಿಜನ ಜಲಧಿ ಮಸಗಿತು
ಬಾಯ ಮೌನದ ಬೆರಳ ಮೂಗಿನ
ರಾಯರಿದ್ದರು ಬಿಗಿದ ಬೆರಗಿನ ಹೊತ್ತ ದುಗುಡದಲಿ ॥30॥

೦೩೧ ಮೊಳಗಿದವು ನಿಸ್ಸಾಳ ...{Loading}...

ಮೊಳಗಿದವು ನಿಸ್ಸಾಳ ತತಿ ಹೆ
ಕ್ಕಳದ ಪೆರ್ಚಿನೊಳಲ್ಲಿ ದಿವಿಜಾ
ವಳಿಯ ದುಂದುಭಿ ರವದಲುಬ್ಬಿದ ಸಾಧುವಾದಗಳ
ಕಳಕಳದ ಕೊಲ್ಲಣಿಗೆಯಲಿ ಪೂ
ವಳೆಯ ಪೂರದ ಹರಹಿನಲಿ ಜನ
ಮುಳುಗಿತದ್ಭುತ ರಭಸವಳ್ಳಿರಿದುದು ಜಗತ್ರಯವ ॥31॥

೦೩೨ ಕಿತ್ತ ಸುರಗಿಯ ...{Loading}...

ಕಿತ್ತ ಸುರಗಿಯ ವೀರ ಭಟರರು
ವತ್ತು ಸಾವಿರವೈದಿ ಪಾರ್ಥನ
ಸುತ್ತು ಮುತ್ತಿದರಂಗ ರಕ್ಷಣೆಗರಸನಾಜ್ಞೆಯಲಿ
ಇತ್ತ ಮಹಿಳಾಜನದ ಮೌಳಿಯ
ಮುತ್ತು ಕುಸುಮಾಯುಧನ ಥಟ್ಟಿನ
ಮತ್ತ ಗಜವೈತಂದಳಲ್ಲಿಗೆ ದ್ರೌಪದಾದೇವಿ ॥32॥

೦೩೩ ತೊಲತೊಲಗು ಮನ್ಮಥನ ...{Loading}...

ತೊಲತೊಲಗು ಮನ್ಮಥನ ಹೊಗರಿ
ಟ್ಟಲಗು ಬರುತಿದೆ ಸಾರು ಸಾರೆಂ
ದುಲಿದು ಕಂಚುಕಿ ನಿಕರ ಹೊಯ್ದುದು ಮುಂದೆ ಸಂದಣಿಯ
ನಳಿನಮುಖಿ ದಂಡಿಗೆಯೊಳೈತಂ
ದಿಳಿದಳೀತನ ಹೊರೆಯೊಳಾಗಳೆ
ಕಳಕಳದಲೊಳತೋಟಿ ಮಸಗಿತು ಹರುಷ ಲಜ್ಜೆಯಲಿ ॥33॥

೦೩೪ ಲಲಿತ ಮಧುರಾಪಾಙ್ಗದಲಿ ...{Loading}...

ಲಲಿತ ಮಧುರಾಪಾಂಗದಲಿ ಮು
ಕ್ಕುಳಿಸಿ ತಣಿಯವು ಕಂಗಳುಬ್ಬಿದ
ಪುಳಕ ಜಲದಲಿ ಮುಳುಗಿ ಮೂಡಿತು ಮೈ ನಿತಂಬಿನಿಯ
ತಳಿತ ಲಜ್ಜಾಭರಕೆ ಕುಸಿದ
ವ್ವಳಿಸಿತಂತಃಕರಣವಾಂಗಿಕ
ಲುಳಿತಸಾತ್ವಿಕ ಭಾವವವಗಡಿಸಿತ್ತು ಮಾನಿನಿಯ ॥34॥

೦೩೫ ಧರಣಿಪತಿ ಕೇಳ್ ...{Loading}...

ಧರಣಿಪತಿ ಕೇಳ್ ಬಹಳ ಲಜ್ಜಾ
ಭರದ ಭಯದಲಿ ಬೆಮರಿಡುತ ಕುಚ
ಭರದಿ ಮೇಲುದು ಜಾರೆ ಜೋಡಿಸಿ ನಿಮಿರಿ ನಡನಡುಗಿ
ತರುಣಿ ನಿಜತನು ಪರಿಮಳದಲುರೆ
ಹೊರೆದ ಹೂವಿನ ದಂಡೆಯನು ನಿಜ
ವರನ ಕೊರಳಲಿ ಹಾಯ್ಕಿದಳು ಜಯವೆನೆ ಸುರಸ್ತೋಮ ॥35॥

೦೩೬ ಕೊರಳ ಹೂವಿನ ...{Loading}...

ಕೊರಳ ಹೂವಿನ ದಂಡೆಯಲಿ ನಿಜ
ಕರದ ಭಾರಿಯ ಧನುವಿನಲಿ ತನು
ಪರಿಮಳದ ನಿಟ್ಟೆಸಳುಗಂಗಳ ಕೆಲದ ಯುವತಿಯಲಿ
ವರನ ಪರಿ ಹೊಸತಾಯ್ತು ಹೊತ್ತನು
ಹರನ ಹಗೆ ಹಾರುವಿಕೆಯನು ನ
ಮ್ಮರಸಿ ನೆರೆ ಹಾರುವತಿಯೆಂದರು ನಗುತ ಚಪಲೆಯರು ॥36॥

೦೩೭ ಜನಪ ಕೇಳೈ ...{Loading}...

ಜನಪ ಕೇಳೈ ಯುವತಿಯೊಡನ
ರ್ಜುನನ ತಂದರು ರಾಜಮಂದಿರ
ಕನಿಮಿಷಾವಳಿ ಹರಿದುದಭ್ರದೊಳಮರಪತಿ ಸಹಿತ
ಮನದಸೂಯದ ಮುಖದ ದುಗುಡದ
ವಿನತ ಮಕುಟದ ಕೈಯ ಗಲ್ಲದ
ಕನಲಿಕೆಯ ಕೊನರುಗಳ ಕೌರವರಾಯ ಖತಿಗೊಂಡ ॥37॥

೦೩೮ ಏನು ಹದ ...{Loading}...

ಏನು ಹದ ಪಾಂಚಾಲ ಮಾಡಿದ
ಮಾನಭಂಗವ ಕಂಡಿರೇ ಕಾ
ನೀನ ಶಕುನಿ ಜಯದ್ರಥಾಶ್ವತ್ಥಾಮ ಮೊದಲಾದ
ಮಾನನಿಧಿಗಳು ಕಂಡಿರೇ ಮದ
ದಾನೆಗಳು ನೀವ್ಕಂಡಿರೇ ಹದ
ನೇನೆನುತ ಕುರುರಾಯ ಮೂದಲಿಸಿದನು ತನ್ನವರ ॥38॥

೦೩೯ ಹಳೆಯ ಹುಲು ...{Loading}...

ಹಳೆಯ ಹುಲು ಧನುವಿದನು ಹಾರುವ
ಸೆಳೆದ ಗಡ ಕೌಳಿಕದ ಯಂತ್ರವ
ಗೆಲಿದ ಗಡ ಗರುವಾಯಿಗೆಡಿಸಿದ ಗಡ ಮಹೀಶ್ವರರ
ನಳಿನಮುಖಿ ಹಾಯ್ಕಿದಳು ಗಡ ತಿರು
ಕುಳಿಯ ಕೊರಳಲಿ ದಂಡೆಯನು ನೀ
ವೊಲಿದು ಮದುವೆಯ ಮಾಡಿಯೆಂದನು ಬೈದು ಭೂಮಿಪರ ॥39॥

೦೪೦ ಭಣ್ಡರೋ ನೀವ್ ...{Loading}...

ಭಂಡರೋ ನೀವ್ ನೆರೆದ ಧರಣೀ
ಮಂಡಲೇಶ್ವರರಕಟ ನಿಮ್ಮಯ
ಹೆಂಡಿರನು ಬಳುವಳಿಯ ಕೊಡಿ ಹಾರುವನ ಹೆಂಡತಿಗೆ
ಗಂಡುಗಲಿಗಳ ನಿಮ್ಮನನಿಬರ
ಕಂಡುಪೇಕ್ಷಿಸಿ ಯಾಚಕನ ಕೈ
ಕೊಂಡಳಿದಕೇನುಂಟು ಮನದಲಿ ವಾಸಿ ನಿಮಗೆಂದ ॥40॥

೦೪೧ ವಾಸಿಗಳನರಸುವಡೆ ದ್ರುಪದನ ...{Loading}...

ವಾಸಿಗಳನರಸುವಡೆ ದ್ರುಪದನ
ಮೀಸಲಡಗನು ಹದ್ದು ಕಾಗೆಗೆ
ಸೂಸಿ ವಿಪ್ರನ ಬಡಿದು ಬಿಡುವುದು ಮತ್ತೆ ತಿರಿದುಣಲಿ
ಆ ಸರೋಜಾನನೆಯ ನಮ್ಮ ವಿ
ಲಾಸಿನಿಯ ವೀಧಿಯಲಿ ಕೂಡುವ
ದೈಸಲೇಯೆನುತೊಡನೊಡನೆ ಗರ್ಜಿಸಿತು ನೃಪನಿಕರ ॥41॥

೦೪೨ ಏಳಿ ಹತ್ತಲಿ ...{Loading}...

ಏಳಿ ಹತ್ತಲಿ ಲಗ್ಗೆ ಪದಹತ
ಧೂಳಿಯಲಿ ಹಿರಿಯಗಳಿನಗಲವ
ಹೂಳಿ ಕಳೆಯಲಿ ಹರಿದು ಹತ್ತಲಿ ತೆನೆಯ ಸರಿಸದಲಿ
ಕೋಲು ಗುಂಡಿನ ಹತಿಗೆ ಹುರಿಯೊಡೆ
ದಾಳ ಹೊಯ್ ಹೊಯ್ಯೆನುತ ಸಕಲ ನೃ
ಪಾಳಿ ಗರ್ಜಿಸಿ ಮುತ್ತಿದುದು ಪಾಂಚಲಪಟ್ಟಣವ ॥42॥

೦೪೩ ಕೂಡೆ ಗಜಬಜವಾಯ್ತು ...{Loading}...

ಕೂಡೆ ಗಜಬಜವಾಯ್ತು ಹರಿದುದು
ನಾಡಿಗಾವಳಿ ವಿಪ್ರಸಭೆ ತೆಗೆ
ದೋಡಿತೀ ಪಾಂಡವರು ಬಂದು ಕುಲಾಲಭವನದಲಿ
ನೋಡುತಿರ್ದರು ಲಗ್ಗೆಯಬ್ಬರ
ವೀಡಿರಿದುದು ದಿಗಂತವನು ಕೈ
ಮಾಡಿ ಕೋಟೆಯನಿಳಿದು ಬೆರಸಿದರಾಳುವೇರಿಯಲಿ ॥43॥

೦೪೪ ಹಲ್ಲಣಿಸಿದರು ಹೊಗುವ ...{Loading}...

ಹಲ್ಲಣಿಸಿದರು ಹೊಗುವ ಚೂಣಿಯ
ಚೆಲ್ಲ ಬಡಿದರು ಸರಿಸಕಡರುವ
ಬಿಲ್ಲ ಬಿರುದರ ಮೆಟ್ಟಿ ತಿವಿದರು ಸಾಲ ಸಬಳಿಗರು
ಝಲ್ಲರಿಯ ಝೂಡಿಗಳ ವಾದ್ಯದ
ಘಲ್ಲಣೆಯ ದಳ ನೆರೆದುದಲ್ಲಿಯ
ದಲ್ಲಿ ಮುತ್ತಿಗೆ ತೆಗೆಸಿದರು ಪಾಂಚಾಲನಾಯಕರು ॥44॥

೦೪೫ ಚೂಣಿ ಮುರಿದೈತರಲು ...{Loading}...

ಚೂಣಿ ಮುರಿದೈತರಲು ಬಹಳ
ಕ್ಷೋಣಿಯಲಿ ಕುರುಪತಿಯ ಥಟ್ಟಿನ
ಹೂಣಿಗರು ಹುರಿಗೊಂಡು ಕವಿದರು ಕರ್ಣ ಮೊದಲಾಗಿ
ಸಾಣೆಯಲಗಿನ ಸರಿಗೆ ಪರಬಲ
ವಾಣೆಯಿಟ್ಟವೊಲಡಿ ಮಿಡುಕದ
ಕ್ಷೀಣ ಬಲವೋಸರಿಸಿ ತೆಗೆದುದು ದ್ರುಪದಪರಿವಾರ ॥45॥

೦೪೬ ಮೊದಲ ಲಗ್ಗೆಯ ...{Loading}...

ಮೊದಲ ಲಗ್ಗೆಯ ಧೂಳಿಯೇ ದ್ರೌ
ಪದಿಯ ಬೈತಲೆಗಮಲ ಸಿಂಧೂ
ರದ ಸುವಿಸ್ತರವಾಗದಿರ್ದಡೆ ರಾಯನಾಣೆನುತ
ಮದಮುಖರು ಮುಂಕೊಂಡು ದುರ್ಗವ
ಬೆದರಿಸಿತು ಬೇರೇನು ದ್ರುಪದನ
ಸದನ ಸೀಮೆಯ ಬೆರಸಿ ಹೊಯ್ದರು ರಾಜಬೀದಿಯಲಿ ॥46॥

೦೪೭ ಏಳು ಮನ್ನೆಯ ...{Loading}...

ಏಳು ಮನ್ನೆಯ ಗಂಡನಾಗು ನೃ
ಪಾಲ ಮದುವೆಯ ಮನೆಗೆ ರಾಯರ
ಧಾಳಿ ಬಿದ್ದಿನವಾಯ್ತು ನಡೆ ಸಂತೈಸು ಬೀಯಗರ
ಏಳೆನಲು ಕಳಕಳವನರ್ಜುನ
ಕೇಳಿದನು ಹೊದೆಯಂಬುಗಳ ತರ
ಹೇಳೆನುತ ಕವಿದೆಚ್ಚು ಮುರಿದನು ಭಟರ ಮುಂಗುಡಿಯ ॥47॥

೦೪೮ ಅದು ಬಳಿಕ ...{Loading}...

ಅದು ಬಳಿಕ ಕಲ್ಪಾಂತ ಮೇಘದ
ಮೊದಲ ಮಳೆಯೆನೆ ಕವಿದುದಂಬಿನ
ಹೊದರು ಹುದುಗಿತು ರಾಯದಳರೌಕುಳದ ರಕ್ತದಲಿ
ಕೆದರಿದರು ಕರ್ಣಾದಿಗಳು ನೆರೆ
ಬೆದರಿದರು ಮತ್ತೊಂದು ದೆಸೆಯಲಿ
ಸದೆದು ಹೊಕ್ಕನು ಭೀಮ ಭಾರಿಯ ಮರನ ಕೊಂಬಿನಲಿ ॥48॥

೦೪೯ ತರುಬಿದನು ಮಾದ್ರೇಶ ...{Loading}...

ತರುಬಿದನು ಮಾದ್ರೇಶ ಪವನಜ
ನುರುಬೆಯನು ಫಲುಗುಣನ ಬಾಣವ
ಮುರಿಯೆನುತ ರಾಧೇಯನಿರಿದನು ಸಿಂಹ ನಾದದಲಿ
ಕರುಬರೋ ಘನ ಯಂತ್ರ ಭೇದಿಯ
ನರಿದು ಕಾಡುವ ಕುರುಡರೋ ನೀ
ವಿರಿತಕಂಘೈಸಿದಿರೆನುತ ಕೈಕೊಂಡನಾ ಭೀಮ ॥49॥

೦೫೦ ತುರಗ ರಥ ...{Loading}...

ತುರಗ ರಥ ಸಾರಥಿಗಳನು ಹೊ
ಯ್ದೊರಸಿದನು ಪವಮಾನಸುತನು
ಬ್ಬರದ ಭಯದಲಿ ಶಲ್ಯ ಹಿಮ್ಮೆಟ್ಟಿದನು ಹಿನ್ನೆಲೆಗೆ
ನರನ ಶರಹತಿಗಳುಕಿ ಮೋರೆಯ
ಮುರುಹಿದನು ಕಲಿ ಕರ್ಣನವರಿದು
ಸರಿಯೆ ವಿಪ್ರರು ನಮ್ಮ ವಿಗ್ರಹಕೆಂದು ಖಾತಿಯಲಿ ॥50॥

೦೫೧ ಅರಸ ನಡೆ ...{Loading}...

ಅರಸ ನಡೆ ದ್ರುಪದನ ಕಪಾಲದ
ಲಿರಲಿ ಮಾನಚ್ಯುತಿ ಮಹೀಸುರ
ವರರೊಡನೆ ಖತಿಯೇಕೆ ತೆಗೆವುದು ಹಸ್ತಿನಾಪುರಕೆ
ನೆರಹುವುದು ನೃಪವರ್ಗವನು ಬಂ
ದೊರಸುವುದು ದ್ರುಪದನ ಲಲಾಟದ
ಬರಹವನು ಕೇಳ್ ಎಂದು ನುಡಿದನು ಕರ್ಣ ಕುರುಪತಿಗೆ ॥51॥

೦೫೨ ಅಹುದು ಕರ್ಣನ ...{Loading}...

ಅಹುದು ಕರ್ಣನ ಮಾತು ತೆಗೆಯಲಿ
ಬಹಳ ಬಲವೀ ಹೊತ್ತಿನಲಿ ರಣ
ವಿಹಿತವಲ್ಲೌಕಿದಡೆ ತಪ್ಪದು ವಿಪ್ರವಧೆ ತಮಗೆ
ಮಹಿಮೆ ಮೀಸಲು ಹೋಗದೀಸರ
ಲಹಿತ ದರ್ಪವ ಮುಂದೆ ನೋಡಲು
ಬಹುದೆನುತ ತಿರುಗಿದನು ಕುರುಪತಿ ಹಸ್ತಿನಾಪುರಿಗೆ ॥52॥

+೧೫ ...{Loading}...