೧೪

೦೦೦ ಸೂ ತಮತಮಗೆ ...{Loading}...

ಸೂ. ತಮತಮಗೆ ತವಕದಲಿ ಭೂಪೋ
ತ್ತಮರು ಹೋರಿದು ಬಳಲಿ ಜಾತ
ಶ್ರಮರು ಹಿಮ್ಮೆಟ್ಟಿದರು ಗೆಲಿದುದು ಧನು ಮಹಾರಥರ

೦೦೧ ಕೇಳು ಜನಮೇಜಯನೃಪತಿ ...{Loading}...

ಕೇಳು ಜನಮೇಜಯನೃಪತಿ ಪಾಂ
ಚಾಲೆ ಪೊಕ್ಕಳು ಭದ್ರಮಂಟಪ
ಶಾಲೆಯನು ಮರಳಿದುದು ಮನ್ಮಥನೊಡ್ಡು ಸತಿಯೊಡನೆ
ಬಾಲೆಯನು ನಿಜರೂಪ ದರ್ಪದೊ
ಳಾಳಲರಿದಿರೆ ಬಾಹುಬಲದಲಿ
ಸೋಲಿಸುವಡನುವಾಗಿಯೆಂದರು ಹೊಯ್ದು ಡಂಗುರವ ॥1॥

೦೦೨ ಇದೆ ಮಹಾಧನು ...{Loading}...

ಇದೆ ಮಹಾಧನು ಬಾಣಪಂಚಕ
ವಿದೆ ನಭೋಗ್ರದಯಂತ್ರ ಹೊಳವು
ತ್ತಿದೆ ವಿಭಾಡಿಸಿ ಮೆರೆವನಾವನು ಬಾಹು ವಿಕ್ರಮವ
ಇದುವೆ ಕಬ್ಬಿನ ಬಿಲು ಶರಾವಳಿ
ಯಿದು ಕುಸುಮಮಯ ಯಂತ್ರವಬಲೆಯ
ಹೃದಯವಾತನೆ ರಮಣನಾತನೆ ಕುಸುಮ ಶರನೆಂದ ॥2॥

೦೦೩ ಎನ್ದು ಸಾರಿದು ...{Loading}...

ಎಂದು ಸಾರಿದು ಭಾರಿ ಧನುವನು
ತಂದು ಧರೆಗಿಳುಹಿದರು ಯಂತ್ರವ
ನಂದವಿಟ್ಟರು ಗಗನದಲಿ ಗವಸಣಿಗೆಗಳನುಗಿದು
ಮುಂದೆ ಕೂರಂಬುಗಳ ಥರಥರ
ದಿಂದ ನಿಲಿಸಿ ಸುಗಂಧದಕ್ಷತೆ
ಯಿಂದ ಪೂಜೆಯ ರಚಿಸಿದರು ವೈದಿಕ ವಿಧಾನದಲಿ ॥3॥

೦೦೪ ಮಸಗಿದುದು ಬಹು ...{Loading}...

ಮಸಗಿದುದು ಬಹು ವಾದ್ಯರವ ನಿ
ಪ್ಪಸರದಲಿ ನಿಸ್ಸಾಳತತಿ ಗ
ರ್ಜಿಸಿದವಾವರ್ಜಿಸುವವೋಲ್ ಘನಯಂತ್ರಭೇದಿಗಳ
ಒಸಗೆಯಾಟವೊ ಬಿಲ್ಲ ಹೊಯ್ಲಿನ
ಹಸುಗೆಯಾಟವೊ ಗರುವರಿಗೆ ಗಂ
ಗಸೆಯ ಮಾಡಿತು ಚಾಪವಿತ್ತಲು ಭೂಪ ಕೇಳ್ ಎಂದ ॥4॥

೦೦೫ ನೆರವಿಯಲಿ ನಾನಾ ...{Loading}...

ನೆರವಿಯಲಿ ನಾನಾ ದಿಗಂತದ
ಧರಣಿಪತಿಗಳ ಹಮ್ಮಿಕೆಯಲು
ಬ್ಬರಿಸಿ ಹೊಕ್ಕರು ಬೇರೆ ಬೇರೊಬ್ಬೊಬ್ಬರುರವಣಿಸಿ
ಹರಗಿರಿಗೆ ಹುಲುರಕ್ಕಸರು ಮ
ತ್ಸರಿಸುವಂತಾಯ್ತೇನನೆಂಬೆನು
ಧರೆಯ ಬಿಡದೀ ಧನು ವಿಭಾಡಿಸಿ ಕೆಡಹಿತವನಿಪರ ॥5॥

೦೦೬ ಹಾರ ಹರಿದುದು ...{Loading}...

ಹಾರ ಹರಿದುದು ಕರ್ಣಪೂರದ
ಚಾರು ಮಣಿಗಳು ಸಡಲಿದುವು ಪದ
ವೀರ ನೇವುರ ನೆಗ್ಗಿದವು ಕುಗ್ಗಿದವು ನೆನಹುಗಳು
ನಾರಿಯರ ಕೈ ಹೊಯ್ಲ ನಗೆಯ ನಿ
ಹಾರ ಜಡಿದುದು ಮುಸುಕುದಲೆಯ ಮ
ಹೀ ರಮಣರೋಸರಿಸಿ ಸಿಂಹಾಸನವ ಸಾರಿದರು ॥6॥

೦೦೭ ಮಿಡುಕದೀ ಧನು ...{Loading}...

ಮಿಡುಕದೀ ಧನು ನಮ್ಮ ಝಾಡಿಸಿ
ಕೆಡಹಿತದನಿನ್ನಾರು ಕೊರಳಲಿ
ತೊಡಿಸಿ ತಿರುವನು ಸೆಳೆದು ಬಿಡುವರೊ ಯಂತ್ರದಲಿ ಶರವ
ಕಡುಹಿನಣ್ಣನ ಕಾಂಬೆವೈಸಲೆ
ನುಡಿದು ಮಾಡುವುದೇನೆನುತ ಸಿರಿ
ಮುಡಿಯ ಮುಸುಕಿನ ರಾಯರಿದ್ದರು ಬಯಲ ಬಿಂಕದಲಿ ॥7॥

೦೦೮ ಐಸಲೇ ಸೌಭಾಗ್ಯವೆಮಗೆ ...{Loading}...

ಐಸಲೇ ಸೌಭಾಗ್ಯವೆಮಗೆ ಶ
ರಾಸನಾಕರುಷಣದೊಳತಿ ಡೊ
ಳ್ಳಾಸದಲಿ ಡಾವರಿಸಿ ಗೆಲಿದಳು ದ್ರುಪದಸುತೆ ನೃಪರ
ಲೇಸು ತಪ್ಪೇನಿದಕೆನುತ ಭ
ದ್ರಾಸನವನಿಳಿದುಲಿವ ತೊಡರಿನ
ಘೋಷಣೆಯ ಘಳಿಲುಗಳ ಮಗಧ ನೃಪಾಲನೈತಂದ ॥8॥

೦೦೯ ಬಿಲ್ಲ ಹೊರೆಗೈದಿದನು ...{Loading}...

ಬಿಲ್ಲ ಹೊರೆಗೈದಿದನು ಚೌಪಟ
ಮಲ್ಲ ನೋಡಿದನೈಸಲೇ ತ
ಪ್ಪಲ್ಲೆನುತ ಮೇಲ್ದಿರುಹಿದನು ಮುಂಗೈಯ ಸರಪಣಿಯ
ಬಿಲ್ಲನೆತ್ತಿದರಿವನನಂಗನೆ
ಯೊಲ್ಲಳೋ ಮೇಣೊಲಿವಳೋ ಮಿಗೆ
ಬಲ್ಲಿದನು ತಾನೀತನೆನುತಿರ್ದುದು ಸಖೀನಿವಹ ॥9॥

೦೧೦ ಈತ ಕುಸಿದೆತ್ತಿದಡೆ ...{Loading}...

ಈತ ಕುಸಿದೆತ್ತಿದಡೆ ಧನು ಮಾ
ರಾತುದಿವನೌಕಿದಡೆ ಕಾರ್ಮುಕ
ವೀತನಾರೆಂದರಿಯದಿವನೌಡೊತ್ತಿ ಮೈ ಬಲಿದ
ಘಾತಿಯಲಿ ಘಲ್ಲಿಸಿದಡಾ ಧನು
ಸೋತುದೆವೆಯಂತರಕೆ ತೊಲಗದು
ಧಾತುಗುಂದಿದನಳ್ಳಿರಿದವಳ್ಳೆಗಳು ಮಾಗಧನ ॥10॥

೦೧೧ ಬೆಮರನಾರಿಸಿಕೊಣ್ಡು ವಿಗತ ...{Loading}...

ಬೆಮರನಾರಿಸಿಕೊಂಡು ವಿಗತ
ಶ್ರಮನು ಮೊಳಕಾಲಿಕ್ಕಿ ದಂಡೆಯೊ
ಳಮರಿ ದೇಹವ ಬಲಿದು ವಕ್ಷದೊಳೌಂಕಿ ಗಾಢದಲಿ
ಕುಮತಿಯಲ್ಲಾಡಿದರೆ ಬಿಟ್ಟುದು
ಅಮಮ ಜವೆಮಾತ್ರಕ್ಕೆ ಘನ ವಿ
ಕ್ರಮವನೊಡೆದುದು ಸದೆದುದಾತನ ಗರ್ವವಿಭ್ರಮವ ॥11॥

೦೧೨ ಕೇಳಿದನು ಕಾನ್ತಾಕದಮ್ಬದ ...{Loading}...

ಕೇಳಿದನು ಕಾಂತಾಕದಂಬದ
ಘೋಳುಗಳ ಘೋಳೆಂಬ ನಗೆಗಳ
ಕಾಳು ಮಾಡಿದನೇಕೆ ಧನು ತಾನೇಕೆ ಸುಡುಯೆನುತ
ಬೇಳುವೆಯಲುಡಿದಂಕದವೊಲು
ಬ್ಬಾಳುತನ ಪೈಸರಿಸೆ ಮುಸುಕಿನ
ಮೌಳಿ ಹಿಮ್ಮೆಟ್ಟಿದನು ಕಡೆಯವ ತಿರುಗಿ ಕಿರುದೊಡೆಗೆ ॥12॥

೦೧೩ ಕೆರಳಿದನು ದಮಘೋಷನನ್ದನ ...{Loading}...

ಕೆರಳಿದನು ದಮಘೋಷನಂದನ
ನರರೆ ದಿಟ್ಟನ ಧನು ವಿಭಾಡಿಸಿ
ತೆರಳಿಚಿತಲಾ ವಿಗಡ ಚಕ್ರಾಯುಧನ ಮಾಗಧನ
ಹರಿಬವೆನ್ನದು ಹೊಳ್ಳುಗಳೆವೆನು
ದುರುಳ ಧನುವನು ನಗುವ ಕನ್ನೆಯ
ತುರುಬ ಕೊಯ್ಸುವೆನೆನುತ ಕಲಿ ಶಿಶುಪಾಲನೈತಂದ ॥13॥

೦೧೪ ಇವನಲೇ ರಾವಣನು ...{Loading}...

ಇವನಲೇ ರಾವಣನು ಮುನ್ನಿನ
ಭವದೊಳಗೆ ತಪ್ಪಿಲ್ಲೆನುತ ಜನ
ನಿವಹ ನಡುಗಿತು ಕೋಮಲಾಂಗಿಯ ಪುಣ್ಯವೆಂತೆನುತ
ಅವನಿಪತಿ ಕೇಳಣೆದನಿವ ಚಾ
ಪವನು ಬೋಳೈಸಿದನು ಬಲುಹೋ
ಶಿವಯೆನುತ ಸೀವರಿಸಿದನು ಡಾವರಿಸಿದನು ಧನುವ ॥14॥

೦೧೫ ಏನನೆಮ್ಬೆನು ಧನು ...{Loading}...

ಏನನೆಂಬೆನು ಧನು ಸಘಾಡದ
ಮಾನಭಂಗದ ಮೊದಲ ಮನೆಯೆನೆ
ಮಾನಿನಿಯರಪಹಾಸ್ಯವೀ ಜನರೀ ನೃಪಾಲಕರ
ಹೀನ ನುಡಿಗಳ ಕಂಡು ದೈತ್ಯ ಸ
ಮಾನ ಮನದಲಿ ನೊಂದು ತಿರುಗಿದ
ನೇನನೆಂಬೆನು ಸದೆದುದಾತನ ಗರ್ವವಿಭ್ರಮವ ॥15॥

೦೧೬ ಕಣ್ಡು ಮಾಗಧ ...{Loading}...

ಕಂಡು ಮಾಗಧ ಕರೆದನೀ ಧನು
ಚಂಡಿಯಿದು ನಮಗಲ್ಲ ನಾವ್ ಮುಂ
ಕೊಂಡು ತಪ್ಪಿತು ನೊಪ್ಪಿತಾದುದು ಭಾರಿಯಗ್ಗಳಿಕೆ
ಭಂಡರೀ ಭೂಮಿಪರು ದ್ರುಪದನ
ಗುಂಡುದೊತ್ತಿರು ನಗೆಯನಾನಲಿ
ಮಂಡೆಗಳಲಿವರೆನುತ ಹಾಯ್ದರು ತಮ್ಮಪಟ್ಟಣಕೆ ॥16॥

೦೧೭ ಗರುವರಲ್ಲಾ ಚೈದ್ಯ ...{Loading}...

ಗರುವರಲ್ಲಾ ಚೈದ್ಯ ಮಾಗಧ
ರಿರದೆ ತಮ್ಮಯ ಪುರಕೆ ಗಮಿಸಿದ
ರರಸುಗಳೆ ಮಿಕ್ಕವರ ವಿಧಿಯನು ಕೇಳು ನರನಾಥ
ಧರಧುರದೊಳಭಿಮಾನಹಾನಿಯ
ಹುರುಳಹುದು ಬಿಲು ಹೋರಟೆಗೆ ನಿಲ
ಲರಿದೆನುತ್ತಂಗವಣೆಗುಂದಿತು ನೆರೆದ ನೃಪನಿಕರ ॥17॥

೦೧೮ ದುರುಳ ಪಾಞ್ಚಾಲನ ...{Loading}...

ದುರುಳ ಪಾಂಚಾಲನ ಕುಮಾರಿಯ
ವರ ಕಟಾಕ್ಷದ ಬೀಸುವಲೆಯಲಿ
ಶರ ಮಹಾಧನುವೆಂಬ ಬಲುದಡಿವಲೆಯನಳವಡಿಸಿ
ಧರಣಿಪಾಲ ಮೃಗಂಗಳನು ಸಲೆ
ಬರಿಸಿ ಸದೆದನು ಹೊಲ್ಲೆಹೇನಂ
ತಿರಲಿ ನೋಡುವೆನೆನುತ ಶಲ್ಯನೃಪಾಲನೈತಂದ ॥18॥

೦೧೯ ಅಗ್ಗಳೆಯನಾ ಮಗಧ ...{Loading}...

ಅಗ್ಗಳೆಯನಾ ಮಗಧ ಮಾತಿನ
ಲಗ್ಗಿಗನು ಶಿಶುಪಾಲ ಸೋಲದ
ಸುಗ್ಗಿಯಿಬ್ಬರಿಗಾಯ್ತು ಹಲಬರಿಗಾಯ್ತು ರಣಧೂಳಿ
ತಗ್ಗುವುದೊ ಧನು ಧನುವಿಘಾತಿಗೆ
ಮುಗ್ಗುವನೊ ಮಾದ್ರೇಶನಿವರೊಳ
ಗಗ್ಗಳೆಯನಹನೆಂದು ನೋಡಿದರಂದು ನಾರಿಯರು ॥19॥

೦೨೦ ಬನ್ದನೀತನು ಧನುವ ...{Loading}...

ಬಂದನೀತನು ಧನುವ ಸಾರಿದು
ನಿಂದು ಸಂವರಿಸಿದನು ಕಾಂತಾ
ವೃಂದವನು ನೋಡಿದನು ಮನದಲಿ ಧಿಕ್ಕು ಧಿಗಿಲೆನುತ
ಸಂದಣಿಯ ನಭಕೊತ್ತಿ ಫಣಿಯಲಿ
ಮಂದರವ ಬಿಗಿವಂತೆ ಭುಜದಲಿ
ಮುಂದುವರಿದವುಚಿದನು ದಂಡೆಯನಿಕ್ಕಿ ಕೋಪದಲಿ ॥20॥

೦೨೧ ಕೊಳ್ಳದೀ ಧನುವೀತನುಬ್ಬಿನೊ ...{Loading}...

ಕೊಳ್ಳದೀ ಧನುವೀತನುಬ್ಬಿನೊ
ಳಳ್ಳೆಗೊಬ್ಬಿನೊಳೌಕಿ ತೊಡರಿನ
ಘಲ್ಲಣೆಯ ಘನಕುಲಿಯೆ ಪಂಟಿಸಿ ನಿಮಿಷ ಮಾತ್ರದಲಿ
ಬಿಲ್ಲು ಬಿಡದವನಿಯಲಿ ಬಿದ್ದನು
ಡೊಳ್ಳು ಮೇಲಾಗಿತ್ತ ಸತಿಯರು
ಘೊಳ್ಳೆನಲು ಸುಡು ಘೋರ ಧನುವನೆನುತ್ತ ಹೊರದೆಗೆದ ॥21॥

೦೨೨ ಹಿಙ್ಗಿದನು ಮಾದ್ರೇಶನೀ ...{Loading}...

ಹಿಂಗಿದನು ಮಾದ್ರೇಶನೀ ಧನು
ಭಂಗಿಸಿತು ಮಾನ್ಯರನು ಜಡವಿದು
ಜಂಗಮತ್ವದಲೇನಹುದೊ ಝೋಂಪಿಸಿತಲೈ ಜಗವ
ಅಂಗನಾ ಪಾಣಿಗ್ರಹಣ ರಾ
ಯಂಗೆ ತಾನೀ ದುಷ್ಟಧನುವನು
ಭಂಗಬಡಿಸದೆ ಬಿಡೆನೆನುತ ಕಲಿ ಕರ್ಣನೈತಂದ ॥22॥

೦೨೩ ಈತನರ್ಜುನನಲ್ಲಲೇ ರೂ ...{Loading}...

ಈತನರ್ಜುನನಲ್ಲಲೇ ರೂ
ಪಾತಿಶಯವುಳ್ಳಾತ ಯಂತ್ರವ
ನೀತ ಗೆಲಿದರೆ ಪುಣ್ಯವೈಸಲೆ ತಂಗಿಗನುಸಾರಿ
ಈತ ವರನಹುದೆನುತ ಲಲನಾ
ಜಾತವಾತನನೀಕ್ಷಿಸುತ ಸಂ
ಪ್ರೀತಿಯಲಿ ಕೊಂಡಾಡುತಿರ್ದುದು ರಾಯ ಕೇಳ್ ಎಂದ ॥23॥

೦೨೪ ತುಡುಕಿದನು ಚಾಪವನು ...{Loading}...

ತುಡುಕಿದನು ಚಾಪವನು ಮಹಿಯಿಂ
ಮಿಡುಕದಿರೆ ಮಂಡಳಿಸಿ ಝಾಡಿಸಿ
ಜಡಿದು ಜರೆದೌಂಕಿದನು ದಂಡೆಯನಿಕ್ಕಿ ಕೋಪದಲಿ
ಹೊಡಕರಿಸಿ ಸತ್ವಾತಿಶಯವಿ
ಮ್ಮಡಿಸೆ ಸರ್ಷಪಮಾತ್ರ ತಿರುವನು
ತೊಡಿಸಲರಿಯದೆ ಹಿಂಗಿ ಮೌನದೊಳಿರ್ದನಾ ಕರ್ಣ ॥24॥

೦೨೫ ಇವರು ನಾಲ್ವರಿಗೊನ್ದೆ ...{Loading}...

ಇವರು ನಾಲ್ವರಿಗೊಂದೆ ಪಥ ಹಲ
ರವಗಡಿಸಿ ಮುನ್ನಳುಕಿದರು ಬಹು
ಭುವನಪತಿಗಳು ಭಾರಿ ಧನುವಿದೆ ಭಾಮಿನಿಯ ಮುಂದೆ
ಎವಗೆ ತವಗಿದು ವಶವೆ ಬಾವ
ನ್ನವನು ವೇಷ್ಟಿಸಿ ಭುಜಗವಿದೆಯೆಂ
ದವನಿಪರು ಹೊರಗುಂದಿದರು ಭಯಮುಖದ ದುಗಡದಲಿ ॥25॥

೦೨೬ ಕ್ಷಿತಿಪ ಕೇಳೈ ...{Loading}...

ಕ್ಷಿತಿಪ ಕೇಳೈ ವಿಗಡ ಚಾಪ
ವ್ಯತಿಕರಕೆ ದುರ್ಯೋಧನಾದಿ
ಕ್ಷಿತಿಪತಿಗಳಂಜಿದುದ ಕಂಡನು ನಗುತ ಬಲರಾಮ
ಕೃತಕ ಧನುವನು ಮುರಿದು ದ್ರುಪದನ
ಸುತೆಯ ಮುಂದಲೆವಿಡಿದು ತಹೆನು
ದ್ಧತನಲಾ ಪಾಂಚಾಲನೆನುತಿಳಿದನು ವರಾಸನವ ॥26॥

೦೨೭ ಹಲಧರನ ಮಸಕವನು ...{Loading}...

ಹಲಧರನ ಮಸಕವನು ಕಂಡನು
ನಳಿನನಾಭನಿದೇನು ಪೀಠವ
ನಿಳಿದಿರೆಲ್ಲಿಗೆ ಗಮನವಾವುದು ಕಾರ್ಯಗತಿ ನಿಮಗೆ
ತಿಳುಹಿಯೆನೆ ಬೇರೇನು ಯಂತ್ರವ
ಕಳಚಿ ಬಿಸುಟು ಲತಾಂಗಿಯನು ಹಿಡಿ
ದೆಳದು ತಹೆನೆನಲೈಸಲೇ ಕೇಳ್ ಎಂದನಸುರಾರಿ ॥27॥

೦೨೮ ಏನಹರು ನಿಮಗಿನ್ದು ...{Loading}...

ಏನಹರು ನಿಮಗಿಂದು ಕುಂತೀ
ಮಾನಿನಿಯರತ್ತೆಯರಲೇ ತ
ತ್ಸೂನುಗಳು ಮೈದುನರು ತತ್ಪತ್ನಿಯರು ತಂಗಿಯರು
ಸಾನುರಾಗವೆ ಮನಕೆ ಸಂಶಯ
ವೇನಿದಕೆ ತಪ್ಪಿಲ್ಲ ಕುಂತೀ
ಸೂನುಗಳು ದ್ರೌಪದಿಗೆ ರಮಣರು ನೋಡಿ ನೀವೆಂದ ॥28॥

೦೨೯ ಮೂಗಿನಲಿ ಬೆರಳಿಟ್ಟು ...{Loading}...

ಮೂಗಿನಲಿ ಬೆರಳಿಟ್ಟು ಮಕುಟವ
ತೂಗಿದನು ಬಲರಾಮನವನಿಯ
ನೀಗಿ ಹೋದರ ಮಾತು ಪಾಂಡವರೆತ್ತಲಿವಳೆತ್ತ
ಬೇಗುದಿಯೊಳುರಿಯರಮನೆಯೊಳೊಂ
ದಾಗಿ ಬೆಂದರು ಲೋಕವರಿಯೆ ಶ
ಠಾಗಮಿಕ ನಿನಗಂಜುವೆನು ತಾನೆನುತ ಕೈಮುಗಿದ ॥29॥

೦೩೦ ಕ್ಷಿತಿಯೊಳವರಿಲ್ಲೆನ್ದು ...{Loading}...

ಕ್ಷಿತಿಯೊಳವರಿಲ್ಲೆಂದು ದ್ರುಪದನ
ಸುತೆಗೆ ಪತಿ ಪರರೆಂದು ಯಂತ್ರ
ಚ್ಯುತಿಗೆ ನೀವುಂಟೆಂದು ತೋರಿತೆ ನಿಮ್ಮ ಚಿತ್ತದಲಿ
ಕ್ಷಿತಿಗೆ ಪಾಂಡವರಲ್ಲದಿಲ್ಲೀ
ಸತಿಗೆ ಪತಿ ಪೆರರಿಲ್ಲ ಕುಂತೀ
ಸುತರನೀಗಳೆ ತೋರುವೆನು ವಸುದೇವನಾಣೆಂದ ॥30॥

೦೩೧ ಇದು ವಿಚಿತ್ರವಲಾ ...{Loading}...

ಇದು ವಿಚಿತ್ರವಲಾ ಗತಾಸುಗ
ಳುದಿಸಿದರೆ ಲೇಸೈಸಲೇ ದ್ರೌ
ಪದಿಯನವರನುರಾಗಿಸಲಿ ಭೋಗಿಸಲಿ ಭೂತಳವ
ಇದುವೆ ನಿಶ್ಚಯವಾದರವರ
ಭ್ಯುದಯವೆಮ್ಮಭ್ಯುದಯವೆಂದಾ
ಪದುಮನಾಭನ ಹೊಗಳಿ ಕುಳ್ಳಿರ್ದನು ಸರಾಗದಲಿ ॥31॥

೦೩೨ ಈಕೆಯನು ಮೆಚ್ಚಿಸದು ...{Loading}...

ಈಕೆಯನು ಮೆಚ್ಚಿಸದು ರಾಜಾ
ನೀಕ ಸೌಂದರ್ಯದಲಿ ಚಾಪ
ವ್ಯಾಕರಣ ಪಾಂಡಿತ್ಯವೆಂಬಡೆ ಕಾಣೆ ನಾನೀಗ
ಈಕೆಗಿನ್ನಾರೊಡೆಯರೋ ಕುಂ
ತೀ ಕುಮಾರಕರಿಲ್ಲಲೇ ಸುಡ
ಲೇಕೆ ನೆರಹಿದೆನಿವರನೆನುತಾ ದ್ರುಪದ ಚಿಂತಿಸಿದ ॥32॥

೦೩೩ ಹರಹರಾ ಇನ್ನಾರೊ ...{Loading}...

ಹರಹರಾ ಇನ್ನಾರೊ ತಂಗಿಗೆ
ವರನು ವಾರಿಧಿವಲಯದವನೀ
ಶ್ವರರು ನೆರೆದಿದೆ ರೂಪು ವಿಕ್ರಮವೆರಡು ಹೊರತಾಗಿ
ನರಪತಿಗಳಿವರೈಸಲೇಯಿ
ನ್ನರಸಿಗಾವುದು ಹದನೆನುತ ವಿ
ಸ್ತರದ ಗುಜುಗುಜು ಮಸಗಿದುದು ಕಾಂತಾ ಕದಂಬದಲಿ ॥33॥

೦೩೪ ಅವನಿಪತಿಗಳು ಹೊಳ್ಳುವಾರಿದ ...{Loading}...

ಅವನಿಪತಿಗಳು ಹೊಳ್ಳುವಾರಿದ
ರಿವರೊಳಿಲ್ಲಲೆ ದಕ್ಷಿಣೆಯ ಹಾ
ರುವ ಮಹಾಜನವಿದೆ ಸಮುದ್ರಕೆ ಪಡಿ ಸಮುದ್ರವೆನೆ
ಇವರೊಳಗೆ ಮುಂಗೈಯ ಬಲುಹು
ಳ್ಳವರು ನೆಗಹಲಿ ಧನುವನೀ ಯಂ
ತ್ರವನು ಜಯಿಸಲಿಯೆಂದು ಧೃಷ್ಟದ್ಯುಮ್ನ ಸಾರಿಸಿದ ॥34॥

+೧೪ ...{Loading}...