೦೦೦ ಸೂ ಧರಣಿಪತಿ ...{Loading}...
ಸೂ. ಧರಣಿಪತಿ ನಿಜಸುತೆಯ ರೂಪೋ
ತ್ಕರದ ಸೌಭಾಗ್ಯದ ನಿರಂತರ
ಪರಮ ಶೋಭಾ ರಚನೆಯಲಿ ರಚಿಸಿದರು ಪಟ್ಟಣವ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ದ್ರುಪದ ಭೂಪತಿಯು ತನ್ನ ಶ್ರೇಷ್ಠ ರೂಪುಳ್ಳ ಮಗಳು ದ್ರೌಪದಿಯ ನಿರಂತರ ಸೌಮಂಗಲ್ಯಕ್ಕಾಗಿ ಅತ್ಯುತ್ತಮವಾಗಿ ಅಲಂಕೃತವಾದ ಪಟ್ಟಣವನ್ನು ನಿರ್ಮಿಸಿದರು.
ಪದಾರ್ಥ (ಕ.ಗ.ಪ)
ಉತ್ಕರ-ಶ್ರೇಷ್ಠ, ಸೌಭಾಗ್ಯ-ಸೌಮಂಗಲ್ಯ ಶೋಭಾ-ಅಲಂಕಾರ, ರಚನೆ-ಮಾಡುವಿಕೆ, ರಚಿಸು-ನಿರ್ಮಿಸು
ಮೂಲ ...{Loading}...
ಸೂ. ಧರಣಿಪತಿ ನಿಜಸುತೆಯ ರೂಪೋ
ತ್ಕರದ ಸೌಭಾಗ್ಯದ ನಿರಂತರ
ಪರಮ ಶೋಭಾ ರಚನೆಯಲಿ ರಚಿಸಿದರು ಪಟ್ಟಣವ
೦೦೧ ಭೂಮಿಪತಿ ಕೇಳ್ ...{Loading}...
ಭೂಮಿಪತಿ ಕೇಳ್ ನಿಮ್ಮ ಪಿತನ ಪಿ
ತಾಮಹರು ಧೌಮ್ಯಾಶ್ರಮಕೆ ಬಂ
ದಾ ಮುನೀಂದ್ರನ ಕೂಡಿಕೊಂಡರು ಖಚರ ವಚನದಲಿ
ರಾಮಣೀಯಕವಹ ಸುಶಕುನ
ಸ್ತೋಮವನು ವಿವರಿಸುತ ಹೊಕ್ಕರು
ಭೂಮಿಲಂಬದ ನೃಪರ ನೆರವಿಯ ದ್ರುಪದ ಪಟ್ಟಣವ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯನೇ ಕೇಳು, ನಿಮ್ಮ ತಂದೆ ಪರೀಕ್ಷಿತನ ತಾತಂದಿರಾದ ಪಾಂಡವರು ಧೌಮ್ಯರ ಆಶ್ರಮಕ್ಕೆ ಬಂದು ಆ ಮುನಿ ಶ್ರೇಷ್ಠನನ್ನು ಗಂಧರ್ವನ ಮಾತಿನಂತೆ ಕೂಡಿಕೊಂಡರು. ಚೆಲುವಾದ ಒಳ್ಳೆಯ ಶಕುನಗಳನ್ನು ವಿವರಿಸುತ್ತ, ಭೂಮಿಯ ಅಗಲವನ್ನು ವ್ಯಾಪಿಸಿಕೊಂಡಿರುವಷ್ಟು ನೆರೆದಿದ್ದ ರಾಜರ ಸಮೂಹದ ದ್ರುಪದನ ಪಟ್ಟಣವನ್ನು ಪ್ರವೇಶಿಸಿದರು.
ಪದಾರ್ಥ (ಕ.ಗ.ಪ)
ರಾಮಣೀಯಕ-ಚೆಲುವು, ಭೂಮಿಲಂಬ-ಭೂಮಿಯ ಅಗಲವನ್ನು ವ್ಯಾಪಿಸಿ ಕೊಂಡಿರುವುದು
ಮೂಲ ...{Loading}...
ಭೂಮಿಪತಿ ಕೇಳ್ ನಿಮ್ಮ ಪಿತನ ಪಿ
ತಾಮಹರು ಧೌಮ್ಯಾಶ್ರಮಕೆ ಬಂ
ದಾ ಮುನೀಂದ್ರನ ಕೂಡಿಕೊಂಡರು ಖಚರ ವಚನದಲಿ
ರಾಮಣೀಯಕವಹ ಸುಶಕುನ
ಸ್ತೋಮವನು ವಿವರಿಸುತ ಹೊಕ್ಕರು
ಭೂಮಿಲಂಬದ ನೃಪರ ನೆರವಿಯ ದ್ರುಪದ ಪಟ್ಟಣವ ॥1॥
೦೦೨ ಭರದಿನೈತನ್ದಖಿಳ ಭೂಮೀ ...{Loading}...
ಭರದಿನೈತಂದಖಿಳ ಭೂಮೀ
ಶ್ವರರ ಘನ ಚತುರಂಗ ಪದಹತ
ಧರಣಿ ನಿರ್ಗತ ರೇಣು ಪಟಲ ಪರಾಗ ಸಂಗದಲಿ
ಅರುಣಮಯವಾಯ್ತಖಿಳ ಜಗದಲಿ
ಸರಸಿಜಾಕ್ಷಿಯ ನೆನೆದು ಸಚರಾ
ಚರದ ಮುಖದಲಿ ರಾಗರಸವುಬ್ಬರಿಸಿದಂದದಲಿ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಭಸದಿಂದ ಅಲ್ಲಿಗೆ ಬಂದ ಎಲ್ಲ ಭೂಮೀಶ್ವರರ ಚತುರಂಗ ಸೈನ್ಯದ ಕಾಲ್ದುಳಿತಕ್ಕೆ ಭೂಮಿಯಿಂದ ಹೊರಟ ಧೂಳಿನ ರಾಶಿಯ ನಸುಕೆಂಪಿನ ಸೇರಿಕೆಯಿಂದ ಜಗವೆಲ್ಲವೂ ಕೆಂಪಾಯಿತು. ಅದು ಪರಮಸುಂದರಿಯೆನಿಸಿದ ಕಮಲದಂತೆ ಕಣ್ಣುಳ್ಳ ದ್ರೌಪದಿಯನ್ನು ಸ್ಮರಿಸಿಕೊಂಡು ಜಂಗಮಸ್ಥಾವರದ ಮುಖದಲ್ಲಿ ಪ್ರೀತಿಯಿಂದ ಕೆಂಪಾದಂತೆ ಕಾಣಿಸಿತೋ ಎನ್ನುವಂತಿತ್ತು.
ಪದಾರ್ಥ (ಕ.ಗ.ಪ)
ಭರ-ರಭಸ, ಚತುರಂಗ-ಆನೆ, ಕುದುರೆ, ರಥ, ಕಾಲಾಳುಗಳಿಂದ ಕೂಡಿದ ಸೇನೆ, ಪದಹತ-ಕಾಲ್ದುಳಿತ, ನಿರ್ಗತ-ಹೊರಟ, ರೇಣು-ಧೂಳು, ಪರಾಗ-ನಸುಕೆಂಪು, ಸಂಗ-ಸೇರಿಕೆ, ಸರಸಿಜಾಕ್ಷಿ-ಕಮಲದಂತೆ ಕಣ್ಣುಳ್ಳವಳು, ಸಚರಾಚರ-ಜಂಗಮಸ್ಥಾವರ, ರಾಗ-ಪ್ರೀತಿ, ಉಬ್ಬರ-ಅಧಿಕ
ಪಾಠಾನ್ತರ (ಕ.ಗ.ಪ)
ಭೂಮೀಶ್ವರರ ಚತುರಂಗ- ಭೂಮೀಶ್ವರರ ಘನ ಚತುರಂಗ : ಆದಿಪರ್ವ, ಮೈ.ವಿ.ವಿ.- ಡಾ.ಕೆ.ಆರ್.ಶೇಷಗಿರಿ
ಮೂಲ ...{Loading}...
ಭರದಿನೈತಂದಖಿಳ ಭೂಮೀ
ಶ್ವರರ ಘನ ಚತುರಂಗ ಪದಹತ
ಧರಣಿ ನಿರ್ಗತ ರೇಣು ಪಟಲ ಪರಾಗ ಸಂಗದಲಿ
ಅರುಣಮಯವಾಯ್ತಖಿಳ ಜಗದಲಿ
ಸರಸಿಜಾಕ್ಷಿಯ ನೆನೆದು ಸಚರಾ
ಚರದ ಮುಖದಲಿ ರಾಗರಸವುಬ್ಬರಿಸಿದಂದದಲಿ ॥2॥
೦೦೩ ತರಣಿಗುಣ್ಟೇ ಸಮಯವನಿಲಗೆ ...{Loading}...
ತರಣಿಗುಂಟೇ ಸಮಯವನಿಲಗೆ
ತೆರಹುಗೊಡುವವರಾರು ಗಗನೇ
ಚರರ ಗಮನಸ್ತಂಭವೆತ್ತಣ ಮಾತು ಖಗಕುಲಕೆ
ನೆರೆದ ಪಲ್ಲವ ಸತ್ತಿಗೆಯ ಝ
ಲ್ಲರಿಯ ಸಿಂಧದ ಸೆಳೆಯ ಘನ ಸೀ
ಗುರಿಯ ಸಬಳದ ಸಾಲ ಚಮರಂಗಳ ವಿಡಾಯಿಯಲಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಸಂಖ್ಯ ಛತ್ರಿಗಳು, ಮಕರ ತೋರಣಗಳು, ಪತಾಕೆಗಳು, ಆಕರ್ಷಕವಾದ ದೊಡ್ಡ ಚಾಮರಗಳು, ಈಟಿಗಳ ಸಾಲುಗಳು, - ಇವುಗಳ ಗುಂಪಿನಡಿಯಲ್ಲಿ ಸೂರ್ಯನಿಗೆ ಅವಕಾಶವುಂಟೇ ? ಗಾಳಿಗೆ ಅವಕಾಶ ಮಾಡಿಕೊಡುವವರು ಯಾರು ? ಆಕಾಶದಲ್ಲಿ ಸಂಚರಿಸುವವರಿಗೆ ಚಲಿಸದೆ ಸ್ಥಿರವಾಗಿರುವಂತಾಯ್ತೆಂದರೆ ಪಕ್ಷಿಕುಲಕ್ಕೆ ಅವಕಾಶವೆಂಬುದು ಎಲ್ಲಿಯ ಮಾತು ?
ಪದಾರ್ಥ (ಕ.ಗ.ಪ)
ತರಣಿ-ಸೂರ್ಯ, ಸಮಯ-ಅವಕಾಶ, ಅನಿಲ-ಗಾಳಿ, ತೆರಹು-ಅವಕಾಶ, ಗಗನೇಚರರು-ಆಕಾಶದಲ್ಲಿ ಸಂಚರಿಸುವವರು, ಸ್ತಂಭ-ಸ್ಥಿರ, ಖಗ-ಪಕ್ಷಿ, ಪಲ್ಲವ-ಹರಡಿದ, ಸತ್ತಿಗೆ-ಛತ್ರಿ, ಝಲ್ಲರಿ-ಮಕರ ತೋರಣ, ಸಿಂಧ-ಬಾವುಟ, ಸೀಗುರಿ-ಚಾಮರ, ಸಬಳ-ಈಟಿ, ವಿಡಾಯಿ-ಸೊಗಸು
ಪಾಠಾನ್ತರ (ಕ.ಗ.ಪ)
ನೆರದ - ನೆರೆದ
ಆದಿ ಪರ್ವ : ಮೈಸೂರು ವಿ.ವಿ
ಮೂಲ ...{Loading}...
ತರಣಿಗುಂಟೇ ಸಮಯವನಿಲಗೆ
ತೆರಹುಗೊಡುವವರಾರು ಗಗನೇ
ಚರರ ಗಮನಸ್ತಂಭವೆತ್ತಣ ಮಾತು ಖಗಕುಲಕೆ
ನೆರೆದ ಪಲ್ಲವ ಸತ್ತಿಗೆಯ ಝ
ಲ್ಲರಿಯ ಸಿಂಧದ ಸೆಳೆಯ ಘನ ಸೀ
ಗುರಿಯ ಸಬಳದ ಸಾಲ ಚಮರಂಗಳ ವಿಡಾಯಿಯಲಿ ॥3॥
೦೦೪ ಚತುರ ಉದಧೀ ...{Loading}...
ಚತುರ ಉದಧೀ ವಲಯದವನೀ
ಪತಿಗಳೇ ಕಾಮಿಸಿ ವಿರೋಧ
ಸ್ಥಿತಿಯ ನೋಡದೆ ನೂಕಿ ನಡೆದರು ದ್ರುಪದ ಪುರಿಗಾಗಿ
ಅತಿಬಲರು ಬಹು ರಾಜಬಲ ಪ
ದ್ಧತಿಗಳನು ನೋಡುತ್ತ ಬಂದರು
ಕೃತಕ ವಿಪ್ರೋತ್ತಮರು ಭಿಕ್ಷಾವಿಹಿತ ವೃತ್ತಿಯಲಿ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾಲ್ಕು ಸಮುದ್ರಗಳಿಂದ ಆವರಿಸಲ್ಪಟ್ಟಿರುವ ಪ್ರದೇಶದ ಭೂಪತಿಗಳೆಲ್ಲರೂ ಬಯಸಿ, ಹಗೆತನದ ಅವಸ್ಥೆಯನ್ನು ನೋಡದೆ ದ್ರುಪದ ಪಟ್ಟಣಕ್ಕಾಗಿ ಸಾಗಿ ನಡೆದರು. ಅತಿಶಕ್ತರು, ಕಪಟ ವೇಷದಲ್ಲಿದ್ದ ಬ್ರಾಹ್ಮಣೋತ್ತಮರು (ಪಾಂಡವರು) ಹೆಚ್ಚಿನ ರಾಜಬಲ ಪದ್ಧತಿಗಳನ್ನು ನೋಡುತ್ತ ಭಿಕ್ಷಾ ವೃತ್ತಿಗೆ ಯೋಗ್ಯವಾದ ರೀತಿಯಲ್ಲಿ ಬಂದರು.
ಪದಾರ್ಥ (ಕ.ಗ.ಪ)
ವಲಯ-ಅವರಣ, ಕಾಮಿಸಿ-ಬಯಸಿ, ವಿರೋಧ-ಹಗೆತನ, ಕೃತಕ-ಸಹಜವಲ್ಲದ, ವಿಹಿತ-ಯೋಗ್ಯ
ಮೂಲ ...{Loading}...
ಚತುರ ಉದಧೀ ವಲಯದವನೀ
ಪತಿಗಳೇ ಕಾಮಿಸಿ ವಿರೋಧ
ಸ್ಥಿತಿಯ ನೋಡದೆ ನೂಕಿ ನಡೆದರು ದ್ರುಪದ ಪುರಿಗಾಗಿ
ಅತಿಬಲರು ಬಹು ರಾಜಬಲ ಪ
ದ್ಧತಿಗಳನು ನೋಡುತ್ತ ಬಂದರು
ಕೃತಕ ವಿಪ್ರೋತ್ತಮರು ಭಿಕ್ಷಾವಿಹಿತ ವೃತ್ತಿಯಲಿ ॥4॥
೦೦೫ ತಿರುಗಿತಿದು ಪಾಞ್ಚಾಲ ...{Loading}...
ತಿರುಗಿತಿದು ಪಾಂಚಾಲ ನಗರಿಯ
ಹೊರವಳಯದಲಿ ಜಲಧಿ ಮಧ್ಯದ
ಕುರುವವೋ ಪಟ್ಟಣವೊ ಮೇಣಿದು ದೈವಗತಿಗಳಲಿ
ಉರುಬಿದೊಡೆ ಪಾಂಚಾಲಭೂಪತಿ
ತರುಬಲಾಪನೆ ಮಾವತನವಿದು
ಬರಿದೆ ಹೋಗದೆನುತ್ತ ಬಂದನು ಧರ್ಮಸುತ ನಗುತ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಪಾಂಚಾಲ ನಗರದ ಹೊರಪ್ರದೇಶದಲ್ಲಿ ನೆರೆದಿರುವ ಇಷ್ಟೊಂದು ಬಲವನ್ನು ನೋಡಿದರೆ ಇದು ಸಮುದ್ರ ಮಧ್ಯದಲ್ಲಿನ ದ್ವೀಪವೋ ಅಥವಾ ಪಟ್ಟಣವೊ ಎನಿಸುತ್ತಿದೆ. ದೈವ ಗತಿಯಿಂದ ಈ ಬಲ ಮೇಲೆ ಬಿದ್ದು ಬಂದರೆ ಪಾಂಚಾಲ ಭೂಪತಿ ಇದನ್ನು ಅಡ್ಡಗಟ್ಟಲು ಸಮರ್ಥನಾದಾನೆಯೆ ? ಈ ಮಾವತನ ಸುಮ್ಮನೆ ಮುಗಿಯುವುದಿಲ್ಲ” ಎಂದು ಧರ್ಮಸುತ ನಗುತ್ತ ಬಂದನು.
ಪದಾರ್ಥ (ಕ.ಗ.ಪ)
ವಳಯ-ಪ್ರದೇಶ, ಕುರುವ-ದ್ವೀಪ, ಜಲಧಿ-ಸಮುದ್ರ, ಉರುಬು-ಮೇಲೆ ಬೀಳು, ತರುಬು-ಅಡ್ಡಗಟ್ಟು
ಮೂಲ ...{Loading}...
ತಿರುಗಿತಿದು ಪಾಂಚಾಲ ನಗರಿಯ
ಹೊರವಳಯದಲಿ ಜಲಧಿ ಮಧ್ಯದ
ಕುರುವವೋ ಪಟ್ಟಣವೊ ಮೇಣಿದು ದೈವಗತಿಗಳಲಿ
ಉರುಬಿದೊಡೆ ಪಾಂಚಾಲಭೂಪತಿ
ತರುಬಲಾಪನೆ ಮಾವತನವಿದು
ಬರಿದೆ ಹೋಗದೆನುತ್ತ ಬಂದನು ಧರ್ಮಸುತ ನಗುತ ॥5॥
೦೦೬ ಪುರದೊಳಗೆ ಹೇರಾಳ ...{Loading}...
ಪುರದೊಳಗೆ ಹೇರಾಳ ಹಬ್ಬದ
ಹರಹಿನಲಿ ಬೀಡಾರ ಭಿಕ್ಷಾ
ಚರಿತರಿಗೆ ದೊರಕುವುದೆ ಗುಡಿ ಗೂಡಾರ ಸಂತತಿಗೆ
ಅರಸುಗಳು ನಾವಲ್ಲ ಭವನಾಂ
ತರವದೇಕೆಮಗೆಂದು ಘಟ ಬಂ
ಧುರದ ಶಾಲೆಯ ಹೊಕ್ಕರಿವರು ಕುಲಾಲಭವನದಲಿ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಟ್ಟಣದೊಳಗೆ ವಿಪುಲವಾಗಿ ಹಬ್ಬದ ಸಡಗರ ಹಬ್ಬಿದೆ. ಇಲ್ಲಿ ಭಿಕ್ಷಾಚರಣೆಯವರಿಗೆ ಬಿಡಾರ ದೊರೆಯುತ್ತದೆಯೇ ? ಈ ನಮ್ಮ ಸಮೂಹಕ್ಕೆ ಗುಡಿ ಗುಂಡಾರಗಳಲ್ಲಿಯೂ ಅವಕಾಶವಿಲ್ಲ. ನಾವು ಅರಸುಗಳಲ್ಲ. ನಮಗೆ ಸೌಧಗಳ ಚಿಂತೆ ಏಕೆ ? ಎಂದುಕೊಂಡು ಒಬ್ಬ ಕುಂಬಾರನ ಮನೆಯಲ್ಲಿದ್ದ ಓರಣವಾಗಿ ಮಡಕೆಗಳಿಟ್ಟಿದ್ದ ಶಾಲೆಗೆ ಇವರು ಪ್ರವೇಶಿಸಿದರು.
ಪದಾರ್ಥ (ಕ.ಗ.ಪ)
ಹೇರಳ-ವಿಪುಲ, ಹರಹು-ಹಬ್ಬು, ಗುಡಿಗೂಡಾರ-ಗುಡಿ ಗುಂಡಾರ, ಬಂಧುರ-ಓರಣ , ಶಾಲೆ-ಕಟ್ಟಡ, ಕುಲಾಲ-ಕುಂಬಾರ
ಮೂಲ ...{Loading}...
ಪುರದೊಳಗೆ ಹೇರಾಳ ಹಬ್ಬದ
ಹರಹಿನಲಿ ಬೀಡಾರ ಭಿಕ್ಷಾ
ಚರಿತರಿಗೆ ದೊರಕುವುದೆ ಗುಡಿ ಗೂಡಾರ ಸಂತತಿಗೆ
ಅರಸುಗಳು ನಾವಲ್ಲ ಭವನಾಂ
ತರವದೇಕೆಮಗೆಂದು ಘಟ ಬಂ
ಧುರದ ಶಾಲೆಯ ಹೊಕ್ಕರಿವರು ಕುಲಾಲಭವನದಲಿ ॥6॥
೦೦೭ ಕೂಡೆ ಹೊಸ ...{Loading}...
ಕೂಡೆ ಹೊಸ ಭಾಂಡದಲಿ ಭಿಕ್ಷವ
ಬೇಡಿ ತೊಳಲಿದರಿವರು ರಾಯರ
ಬೀಡು ಬಿಡುತಿರ್ದುದು ಬಹಳ ನಿಸ್ಸಾಳ ರಭಸದಲಿ
ಬೀಡಿವರಿಗಿದು ನೆಲನಿವರಿಗಿದು
ಮಾಡಿದರಮನೆಯಿವರಿಗಿದು ಕರು
ಮಾಡವಿವರಿಗಿದೆಂದು ಪರುಠವಿಸಿದನು ಪಾಂಚಾಲ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೂಡಲೆ, ಹೊಸ ಪಾತ್ರೆಗಳಲ್ಲಿ ಇವರು ಭಿಕ್ಷವನ್ನು ಬೇಡಲು ಅಲೆದಾಡಿದರು. ರಾಜರು ಭೇರೀವಾದ್ಯದ ಉತ್ಸಾಹದಲ್ಲಿ ಪಾಳೆಯ ಬಿಡುತ್ತಿದ್ದರು. ಈ ಪಾಳೆಯ ಇವರಿಗೆ, ಈ ನೆಲ ಇವರಿಗೆ, ಈ ಕಟ್ಟಿಸಿದ ಅರಮನೆ ಇವರಿಗೆ, ಈ ಉಪ್ಪರಿಗೆ ಇವರಿಗೆ ಎಂದು ಪಾಂಚಾಲಮಹಾರಾಜನು ಸಿದ್ಧತೆ ಮಾಡಿದನು.
ಪದಾರ್ಥ (ಕ.ಗ.ಪ)
ಭಾಂಡ-ಪಾತ್ರೆ, ತೊಳಲು-ಅಲೆದಾಡು, ನಿಸ್ಸಾಳ-ಭೇರಿ, ಬೀಡು-ಪಾಳೆಯ, ಕರುಮಾಡ-ಉಪ್ಪರಿಗೆ, ಪರುಠವಿಸು-ಸಿದ್ಧತೆಮಾಡು
ಮೂಲ ...{Loading}...
ಕೂಡೆ ಹೊಸ ಭಾಂಡದಲಿ ಭಿಕ್ಷವ
ಬೇಡಿ ತೊಳಲಿದರಿವರು ರಾಯರ
ಬೀಡು ಬಿಡುತಿರ್ದುದು ಬಹಳ ನಿಸ್ಸಾಳ ರಭಸದಲಿ
ಬೀಡಿವರಿಗಿದು ನೆಲನಿವರಿಗಿದು
ಮಾಡಿದರಮನೆಯಿವರಿಗಿದು ಕರು
ಮಾಡವಿವರಿಗಿದೆಂದು ಪರುಠವಿಸಿದನು ಪಾಂಚಾಲ ॥7॥
೦೦೮ ಕೇರಿ ಕೇರಿಯ ...{Loading}...
ಕೇರಿ ಕೇರಿಯ ಬೀದಿಗಳ ಪ
ನ್ನೀರ ಚಳೆಯದ ಕಳಸ ಕನ್ನಡಿ
ತೋರಣದ ಸೂಸಕದ ಮುತ್ತಿನ ಮಕರ ತೋರಣದ
ಓರಣದ ಹೊಂಗೆಲಸದಖಿಳಾ
ಗಾರ ಪಂಕ್ತಿಯ ಸೋಮವೀಧಿಯ
ಸೂರವೀಧಿಯ ರಚನೆಯಲಿ ರಚಿಸಿದರು ಪಟ್ಟಣವ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೇರಿ ಕೇರಿಗಳಲ್ಲಿ, ಬೀದಿ ಬೀದಿಗಳಲ್ಲಿ ಪನ್ನೀರನ್ನು ಚಿಮುಕಿಸಿದರು. ಕಳಶ ಕನ್ನಡಿಗಳನ್ನಿಟ್ಟು. ಮುತ್ತಿನ ಕುಚ್ಚುಗಳನ್ನು ಇಳಿಯಬಿಟ್ಟು, ಮಕರ ತೋರಣಗಳನ್ನು ಕಟ್ಟಿದರು. ಸುಂದರವಾದ ಚಿನ್ನದ ಹೊದಿಕೆಯಿದ್ದ ಮನೆಗಳ ಸಾಲುಗಳು ಕ್ರಮವಾಗಿರುವ ಸೋಮ ಬೀದಿ, ಸೂರ್ಯ ಬೀದಿಗಳ (ಪೂರ್ವ ಪಶ್ಚಿಮ ಮತ್ತು ಉತ್ತರ ದಕ್ಷಿಣ ಬೀದಿಗಳು) ನಿರ್ಮಾಣದಿಂದ ಪಟ್ಟಣವನ್ನು ಸಿದ್ಧಪಡಿಸಿದರು.
ಪದಾರ್ಥ (ಕ.ಗ.ಪ)
ಚಳೆಯ-ಚಿಮುಕಿಸು, ಸೂಸಕ-ಕುಚ್ಚು, ಹೊಂಗೆಲಸ-ಚಿನ್ನದ ಕೆಲಸ, ಆಗಾರ-ಮನೆ, ಪಂಕ್ತಿ-ಸಾಲು, ವೀಧಿ-ಬೀದಿ
ಮೂಲ ...{Loading}...
ಕೇರಿ ಕೇರಿಯ ಬೀದಿಗಳ ಪ
ನ್ನೀರ ಚಳೆಯದ ಕಳಸ ಕನ್ನಡಿ
ತೋರಣದ ಸೂಸಕದ ಮುತ್ತಿನ ಮಕರ ತೋರಣದ
ಓರಣದ ಹೊಂಗೆಲಸದಖಿಳಾ
ಗಾರ ಪಂಕ್ತಿಯ ಸೋಮವೀಧಿಯ
ಸೂರವೀಧಿಯ ರಚನೆಯಲಿ ರಚಿಸಿದರು ಪಟ್ಟಣವ ॥8॥
೦೦೯ ತೀವಿದವು ಹೊಙ್ಗೆಲಸ ...{Loading}...
ತೀವಿದವು ಹೊಂಗೆಲಸ ಗತಿಯಲಿ
ಲೋವೆಗಳು ಚೈತನ್ಯಮಯ ಚಿ
ತ್ರಾವಳಿಯ ಬೆಸುಗೆಗಳಲೆಸೆದವು ಭವನಭಿತ್ತಿಗಳು
ಹೂವಿನರಳಿನ ಹರಹಿನಲಿ ರ
ತ್ನಾವಳಿಗಳೊಪ್ಪಿದವಗರು ಧೂ
ಮಾವಳಿಯ ಗುಂಪಿನಲಿ ಮಘಮಘಿಸಿದವು ಮೇಘಚಯ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೌಧದ ಗೋಡೆಗಳು, ಚಿನ್ನದ ಕೆಲಸದ ಅಲಂಕೃತಿಯ ಇಳಿಜಾರಾದ ಮಾಡುಗಳೊಂದಿಗೆ, ಪ್ರಜ್ಞೆ, ಜ್ಞಾನ ಮೊದಲಾದುವುಗಳಿಂದ ತುಂಬಿದ ಚಿತ್ರಗಳ ಸಮೂಹದೊಡನೆ ಶೋಭಿಸಿದುವು. ಅರಳಿದ ಹೂವುಗಳು ಹರಡಬೇಕಾದ ಕಡೆ ರತ್ನಗಳ ಸಾಲು ಹೊಳೆಯುತ್ತಿದ್ದುವು. ಸುಗಂಧ ದ್ರವ್ಯದ ಪರಿಮಳದ ಧೂಮಗಳಿಂದ ಮೋಡದ ಸಮೂಹ ಕಂಪನ್ನು ಬೀರಿದವು.
ಪದಾರ್ಥ (ಕ.ಗ.ಪ)
ಲೋವೆ-ಇಳಿಜಾರಾದ ಮಾಡು, ಚೈತನ್ಯ-ಪ್ರಜ್ಞೆ, ಜ್ಞಾನ ಮೊದಲಾದುವುಗಳಿಂದ ತುಂಬಿದ, ಬೆಸುಗೆ-ಸೇರಿಕೆ, ಭವನ-ಸೌಧ, ಭಿತ್ತಿ-ಗೋಡೆ, ಎಸೆ-ಶೋಭಿಸು, ಹರಹು-ಹರಡು, ಅಗರು-ಸುಗಂಧದ್ರವ್ಯ, ಮೇಘ-ಮೋಡ, ಮಘಮಘಿಸು-ಕಂಪನ್ನು ಬೀರು
ಮೂಲ ...{Loading}...
ತೀವಿದವು ಹೊಂಗೆಲಸ ಗತಿಯಲಿ
ಲೋವೆಗಳು ಚೈತನ್ಯಮಯ ಚಿ
ತ್ರಾವಳಿಯ ಬೆಸುಗೆಗಳಲೆಸೆದವು ಭವನಭಿತ್ತಿಗಳು
ಹೂವಿನರಳಿನ ಹರಹಿನಲಿ ರ
ತ್ನಾವಳಿಗಳೊಪ್ಪಿದವಗರು ಧೂ
ಮಾವಳಿಯ ಗುಂಪಿನಲಿ ಮಘಮಘಿಸಿದವು ಮೇಘಚಯ ॥9॥
೦೧೦ ಕಾರಣೆಯ ಕುಙ್ಕುಮದ ...{Loading}...
ಕಾರಣೆಯ ಕುಂಕುಮದ ಸಾದಿನ
ಸಾರಣೆಯ ನೆಲೆಕಟ್ಟುಗಳ ಕ
ರ್ಪೂರಧೂಳಿಯ ಹೊಳಹುಗಳ ಪನ್ನೀರ ಪಕ್ಕಲೆಯ
ಚಾರು ಚಳೆಯದ ಕೆಸರಿಡುವ ಕ
ಸ್ತೂರಿಗಳ ಪೂರಾಯ ಪರಿಮಳ
ಭಾರದಲಿ ಬಿರುಗಾಳಿ ಕುಸಿದುದು ಹೇಳಲೇನೆಂದ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗೋಡೆಯ ಕೆಳಗಿನ ಭಾಗದಲ್ಲಿ ಎಳೆದ ಗೆರೆಯ ಕೇಸರಿ ಬಣ್ಣ, ಸಮಮಾಡಿದ ನೆಲವನ್ನು ಸಾರಿಸಿದ ಪರಿಮಳದ್ರವ್ಯ, ರಂಗವಲ್ಲಿಯ, ಹೊಳೆ ಹೊಳೆಯುವ ಕರ್ಪುರದ ಹುಡಿಗಳ, ಸುಂದರವಾಗಿ ಚಿಮುಕಿಸಿದ ಪಾತ್ರೆಗಳ ಪನ್ನೀರು, ಅದರಿಂದ ಕೆಸರಿಡುತ್ತಿರುವ ಕಸ್ತೂರಿ - ಪರಿಪೂರ್ಣವಾದ ಈ ಪರಿಮಳದ ಭಾರದಲ್ಲಿ ಬಿರುಗಾಳಿ ತಗ್ಗಿದುದನ್ನು ಏನೆಂದು ಹೇಳಲಿ ಎಂದನು.
ಪದಾರ್ಥ (ಕ.ಗ.ಪ)
ಕಾರಣೆ-ಗೋಡೆಯ ಕೆಳಗಿನ ಭಾಗದಲ್ಲಿ ಎಳೆದ ಗೆರೆ, ಕುಂಕುಮ-ಕೇಸರಿ ಬಣ್ಣ, ಸಾದು-ಪರಿಮಳದ್ರವ್ಯ, ಸಾರಣೆ-ಸಾರಿಸು, ನೆಲೆಕಟ್ಟು-ಸಮಮಾಡಿದ ನೆಲ, ಚಾರು-ಸುಂದರ, ಚಳೆಯದು-ಚಿಮುಕಿಸಿದ, ಹೊಳಹು-ಕಾಂತಿ, ಪಕ್ಕಲೆ-ಪಾತ್ರೆ, ಪೂರಾಯ-ಪರಿಪೂರ್ಣವಾದ, ಕುಸಿ-ತಗ್ಗು
ಮೂಲ ...{Loading}...
ಕಾರಣೆಯ ಕುಂಕುಮದ ಸಾದಿನ
ಸಾರಣೆಯ ನೆಲೆಕಟ್ಟುಗಳ ಕ
ರ್ಪೂರಧೂಳಿಯ ಹೊಳಹುಗಳ ಪನ್ನೀರ ಪಕ್ಕಲೆಯ
ಚಾರು ಚಳೆಯದ ಕೆಸರಿಡುವ ಕ
ಸ್ತೂರಿಗಳ ಪೂರಾಯ ಪರಿಮಳ
ಭಾರದಲಿ ಬಿರುಗಾಳಿ ಕುಸಿದುದು ಹೇಳಲೇನೆಂದ ॥10॥
೦೧೧ ಮೇಲುಕಟ್ಟಿನ ದಿವ್ಯಚಿತ್ರ ...{Loading}...
ಮೇಲುಕಟ್ಟಿನ ದಿವ್ಯಚಿತ್ರ ದು
ಕೂಲನಿಚಯದ ಲಾಮಚದ ಬ
ಲ್ಲಾಳದಡ್ಡಿಗಳೆಡೆಗೆಡೆಗೆ ರಂಜಿಸುವ ಪಟ್ಟೆಗಳ
ಮೇಲುವೊದಕೆಯ ಕರ್ಪುರದ ಹೊಂ
ಬಾಳೆಗಳ ಮಲಯಜದ ಕಂಬದ
ಸಾಲುಗಳಲೊಪ್ಪಿದುದು ಚಪ್ಪರವೆರಡು ಯೋಜನದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಮಣೀಯವಾದ ಚಿತ್ರಗಳಿಂದ ಕೂಡಿದ, ರೇಷ್ಮೆ ಬಟ್ಟೆಗಳ, ಲಾಮಂಚದ ಚಾಪೆಗಳ, ಅಲ್ಲಲ್ಲೇ ರಂಜಿಸುವ ಪಟ್ಟಿಗಳನ್ನುಳ್ಳ ಮೇಲುಹೊದಿಕೆಗಳೂ ಮುಂತಾದುವುಗಳಿಂದ ಅಲಂಕೃತವಾದ ಕರ್ಪೂರದ, ಹೊಂಬಾಳೆಗಳ ಮತ್ತು ಶ್ರೀಗಂಧದ ಕಂಬಗಳ ಸಾಲುಗಳಲ್ಲಿ ಎರಡು ಯೋಜನ ವಿಸ್ತಾರದ ಚಪ್ಪರವು ಮೆರೆಯಿತು.
ಪದಾರ್ಥ (ಕ.ಗ.ಪ)
ಮೇಲುಕಟ್ಟು-ಮಂಟಪದ ಮೇಲ್ಭಾಗದಲ್ಲಿ ಆಲಂಕಾರಿಕವಾಗಿ ಕಟ್ಟುವ ಬಟ್ಟೆ, ದುಕೂಲ-ರೇಷ್ಮೆ ವಸ್ತ್ರ, ಲಾಮಚ-(ಲಾಮಂಚ)ಒಂದು ಬಗೆಯ ಸುವಾಸನೆಯ ಬೇರುಳ್ಳ ಹುಲ್ಲು, ಬಲ್ಲಾಳದಡ್ಡಿ-ತೆರೆ (ತಡಿಕೆ), ಪಟ್ಟೆ-ರೇಷ್ಮೆ ಬಟ್ಟೆ, ಹೊಂಬಾಳೆ-ಅಡಕೆ ಅಥವಾ ತೆಂಗಿನ ಹೂವಿನ ಗೊಂಚಲು, ಮಲಯಜ-ಶ್ರೀಗಂಧ, ಒಪ್ಪು-ಮೆರೆ
ಮೂಲ ...{Loading}...
ಮೇಲುಕಟ್ಟಿನ ದಿವ್ಯಚಿತ್ರ ದು
ಕೂಲನಿಚಯದ ಲಾಮಚದ ಬ
ಲ್ಲಾಳದಡ್ಡಿಗಳೆಡೆಗೆಡೆಗೆ ರಂಜಿಸುವ ಪಟ್ಟೆಗಳ
ಮೇಲುವೊದಕೆಯ ಕರ್ಪುರದ ಹೊಂ
ಬಾಳೆಗಳ ಮಲಯಜದ ಕಂಬದ
ಸಾಲುಗಳಲೊಪ್ಪಿದುದು ಚಪ್ಪರವೆರಡು ಯೋಜನದ ॥11॥
೦೧೨ ಬಿಗಿದವೆಡೆ ಮಣ್ಟಪದ ...{Loading}...
ಬಿಗಿದವೆಡೆ ಮಂಟಪದ ಬಿಂಗಾ
ರಿಗಳ ಬಿಡೆಯದ ಚಮರ ಹೊಂಗೆ
ಜ್ಜೆಗಳ ಮುಕುರದ ಘಂಟೆಗಳ ಬಂಧುರದ ಬಾಸಿಗದ
ಸುಗಮ ಬಂಧದ ಬಣ್ಣಸರದೋ
ಳಿಗಳ ಕಂಬದ ವಜ್ರಮಯ ಧಾ
ರೆಗಳಲೆಸೆದುದು ಭದ್ರಮಂಟಪವಮಲ ಮಣಿಮಯದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಲ್ಲಲ್ಲೇ ಒತ್ತೊತ್ತಾಗಿ ತೂಗು ಬಿಟ್ಟಿರುವ ಚಿನ್ನದ ಅಲಂಕಾರ ವಸ್ತುಗಳಿಂದ( ಭೋಜನಶಾಲೆ)ನೈವೇದ್ಯ ಮಂಟಪಗಳನ್ನು ಕಟ್ಟಿದರು. ಶ್ರೇಷ್ಠ ಮಣಿಗಳೊಡನೆ ನಿರ್ಮಿತವಾದ ಚಾಮರ, ಚಿನ್ನದ ಗೆಜ್ಜೆಗಳು, ಕನ್ನಡಿ, ಗಂಟೆಗಳು, ಮನೋಹರವಾದ ಬಾಸಿಂಗ - ಇವುಗಳಿಂದ ಅಲಂಕೃತವಾದ ಮಂಗಳ ಮಂಟಪವು ಓರಣವಾಗಿ ಕಟ್ಟಿರುವ ಬಣ್ಣದ ಸರಗಳ ಸಾಲಿನಿಂದ, ವಜ್ರಖಚಿತವಾದ ಕಂಬಗಳಿಂದ ಶೋಭಿಸಿದುವು.
ಪದಾರ್ಥ (ಕ.ಗ.ಪ)
ಎಡೆಮಂಟಪ-ನೈವೇದ್ಯ ಮಂಟಪ(ಭೋಜನಶಾಲೆ) ಬಿಂಗಾರಿ-ತೂಗು ಬಿಟ್ಟಿರುವ ಚಿನ್ನದ ಅಲಂಕಾರ ವಸ್ತು (ಗುಳೋಪು, ರಸಗುಂಡು), ಬಿಡೆಯ-ದಟ್ಟಣೆ (ಒತ್ತೊತ್ತು) ಮುಕುರ-ಕನ್ನಡಿ, ಬಂಧುರ-ಮನೋಹರ, ಬಾಸಿಂಗ-ಹಣೆಗೆ ಕಟ್ಟುವುದಕ್ಕೆ ರಚಿಸಿದ ಎಡಬಲಕ್ಕೆ ಗೊಂಚಲುಗಳುಳ್ಳ ಒಂದು ಬಗೆಯ ಅಲಂಕಾರ ಸಾಧನ, ಬಂಧ-ಕಟ್ಟು, ಓಳಿ-ಸಾಲು, ಭದ್ರಮಂಟಪ-ಮಂಗಳ ಮಂಟಪ
ಮೂಲ ...{Loading}...
ಬಿಗಿದವೆಡೆ ಮಂಟಪದ ಬಿಂಗಾ
ರಿಗಳ ಬಿಡೆಯದ ಚಮರ ಹೊಂಗೆ
ಜ್ಜೆಗಳ ಮುಕುರದ ಘಂಟೆಗಳ ಬಂಧುರದ ಬಾಸಿಗದ
ಸುಗಮ ಬಂಧದ ಬಣ್ಣಸರದೋ
ಳಿಗಳ ಕಂಬದ ವಜ್ರಮಯ ಧಾ
ರೆಗಳಲೆಸೆದುದು ಭದ್ರಮಂಟಪವಮಲ ಮಣಿಮಯದ ॥12॥
೦೧೩ ಕೀಲಿಸಿದ ಪಟ್ಟೆಗಳ ...{Loading}...
ಕೀಲಿಸಿದ ಪಟ್ಟೆಗಳ ದಿವ್ಯ ದು
ಕೂಲದಲಿ ಹೊಂಬರಹದೆಲೆಗಳ
ಚೂಳಿಕೆಯ ಕನ್ನಡಿಯ ತೋರಣವೆರಡು ಪಕ್ಕದಲಿ
ಮೇಲು ಮುತ್ತಿನ ಸೂಸಕದ ನೇ
ಪಾಳ ಚಮರಿಯ ದಾಳಿಗಳ ಸಂ
ಮೇಳದಲಿ ಸಮತಳಿಸಿದರು ವೈವಾಹ ಮಂಟಪವ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಂದರವಾದ ರೇಷ್ಮೆ ಬಟ್ಟೆಯಲ್ಲಿ ಚಿನ್ನದ ಬರಹದ ಎಲೆಗಳನ್ನು ಸೇರಿಸಿ, ಎರಡು ಪಕ್ಕದಲ್ಲಿ ಕನ್ನಡಿಗಳನ್ನೊಳಗೊಂಡಿರುವ ಮುತ್ತಿನ ಗೊಂಚಲುಗಳನ್ನು ತೂಗು ಬಿಟ್ಟಿರುವ ತೋರಣವನ್ನು ಕಟ್ಟಿದರು. ಮೇಲೆ ಶ್ರೇಷ್ಠವಾದ ಮುತ್ತುಗಳು, ಹಾಗೂ ನೇಪಾಳದ ಚೌರಿಗಳ ಬೀಸಾಟವು ಎಲ್ಲ ಸ್ಥಳವನ್ನೂ ಆಕ್ರಮಿಸಿಬಿಟ್ಟಿವೆಯೋ ಎಂಬಂತೆ ವಿವಾಹ ಮಂಟಪವನ್ನು ನಿರ್ಮಿಸಿದರು.
ಪದಾರ್ಥ (ಕ.ಗ.ಪ)
ಕೀಲಿಸು-ಸೇರಿಸು, ಪಟ್ಟೆ-ರೇಷ್ಮೆ, ದುಕೂಲ-ಬಟ್ಟೆ, ಚೂಳಿಕೆ-ಮುತ್ತಿನ ಗೊಂಚಲು, ಸೂಸಕ-ಬೈತಲೆಯ ಆಭರಣ, ಸಮತಳಿಸು-ನಿರ್ಮಿಸು
ಮೂಲ ...{Loading}...
ಕೀಲಿಸಿದ ಪಟ್ಟೆಗಳ ದಿವ್ಯ ದು
ಕೂಲದಲಿ ಹೊಂಬರಹದೆಲೆಗಳ
ಚೂಳಿಕೆಯ ಕನ್ನಡಿಯ ತೋರಣವೆರಡು ಪಕ್ಕದಲಿ
ಮೇಲು ಮುತ್ತಿನ ಸೂಸಕದ ನೇ
ಪಾಳ ಚಮರಿಯ ದಾಳಿಗಳ ಸಂ
ಮೇಳದಲಿ ಸಮತಳಿಸಿದರು ವೈವಾಹ ಮಂಟಪವ ॥13॥
೦೧೪ ಹೊಳೆವ ಭಿತ್ತಿಯ ...{Loading}...
ಹೊಳೆವ ಭಿತ್ತಿಯ ಸಾಲಭಂಜಿಕೆ
ಗಳಲಿ ಮೌಕ್ತಿಕ ವಜ್ರಮಣಿ ಮಂ
ಗಳದ ಮಹಾರಶ್ಮಿಯಲಿ ರಚನೆಯ ಚಿತ್ರ ಪತ್ರದಲಿ
ಇಳೆಗಿಳಿದ ಪುಷ್ಪಕವೊ ನೂತನ
ನಳಿನಮಿತ್ರನ ರಥವೊ ಮೇಣಿದು
ಜಲಧಿಶಯನನ ಸೆಜ್ಜೆಯೋ ನಾವರಿಯೆವಿದನೆಂದಾ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೊಳೆಯುವ ಗೋಡೆಗಳಿಂದಲೂ, ಸಾಲಾಗಿರುವ ಮೂರ್ತಿಗಳಿಂದಲೂ, ಮುತ್ತು, ವಜ್ರಮಣಿಗಳ ಮಂಗಳಮಯವಾದ ದೊಡ್ಡಕಿರಣಗಳಿಂದಲೂ, ಕೃತಕವಾಗಿ ಮಾಡಿಟ್ಟ ಚಿತ್ರ ಪತ್ರಗಳ ರಚನೆಯಿಂದಲೂ ಶೋಭಿಸುತ್ತಾ “ಇದೇನು ಭೂಮಿಗೆ ಇಳಿದು ಬಂದಿರುವ ಪುಷ್ಪಕವಿಮಾನವೋ, ಹೊಸದಾದ ಸೂರ್ಯನ ರಥವೋ ಅಥವಾ ಕ್ಷೀರ ಸಾಗರಶಯನನಾದ ನಾರಾಯಣನ ಮಲಗುವ ಮನೆಯೋ” ಎಂದು ಭ್ರಮಿಸುವಂತೆ ಬಹು ಸೊಗಸಾಗಿ ಆ ಮಂಟಪ ಕಂಗೊಳಿಸುತ್ತಿತ್ತು. ಅಲ್ಲಿನ ಏರ್ಪಾಡುಗಳನ್ನು ಏನೆಂದು ವರ್ಣಿಸುವುದು ?
ಪದಾರ್ಥ (ಕ.ಗ.ಪ)
ಭಿತ್ತಿ-ಗೋಡೆ, ಭಂಜಿಕೆ-ಮೂರ್ತಿ, ಮೌಕ್ತಿಕ-ಮುತ್ತು, ನಳಿನಮಿತ್ರ-ಸೂರ್ಯ, ಸೆಜ್ಜೆ-ಮಲಗುವ ಮನೆ
ಮೂಲ ...{Loading}...
ಹೊಳೆವ ಭಿತ್ತಿಯ ಸಾಲಭಂಜಿಕೆ
ಗಳಲಿ ಮೌಕ್ತಿಕ ವಜ್ರಮಣಿ ಮಂ
ಗಳದ ಮಹಾರಶ್ಮಿಯಲಿ ರಚನೆಯ ಚಿತ್ರ ಪತ್ರದಲಿ
ಇಳೆಗಿಳಿದ ಪುಷ್ಪಕವೊ ನೂತನ
ನಳಿನಮಿತ್ರನ ರಥವೊ ಮೇಣಿದು
ಜಲಧಿಶಯನನ ಸೆಜ್ಜೆಯೋ ನಾವರಿಯೆವಿದನೆಂದಾ ॥14॥
೦೧೫ ಝಳವ ಝೋಮ್ಪಿಸಿ ...{Loading}...
ಝಳವ ಝೋಂಪಿಸಿ ಬೀಸಿದವು ತಂ
ಬೆಲರ ಬೀಸಣಿಗೆಗಳು ಪರಿಮಳ
ಕಲಿತ ಮಕರಂದದ ತುಷಾರದ ತುಹಿನ ರೇಣುಗಳ
ಸುಳಿವ ಸುತ್ತಣ ಸಾಲಭಂಜಿಕೆ
ಗಳಲಿ ಸೂತ್ರಿಸಿ ರಚಿಸಿದರು ಮಂ
ಗಳದ ರಿಂಗಣ ಝಾಡಿಸಿತು ವೈವಾಹಮಂಟಪವ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೀಸಣಿಗೆಗಳು ಸುವಾಸನೆಯಿಂದ ಕೂಡಿದ ಹೂವಿನ ರಸದ ಶೀತಲವಾದ ತುಂತುರು ಹನಿಯ ಪರಾಗಗಳನ್ನು ಹೊರಡಿಸಿ ಸೆಕೆಯ ತಾಪವನ್ನು ನಿವಾರಿಸುವಂತೆ ಬೀಸಿದವು. ಸುತ್ತಲೂ ಪೋಣಿಸಿ ನಿಲ್ಲಿಸಿದ ಪಂಕ್ತಿಗಳಲ್ಲಿನ ಮೂರ್ತಿಗಳು ಸುಳಿದಾಡುವಂತೆ ನಿರ್ಮಿಸಿದರು. ವಿವಾಹ ಮಂಟಪವು ಶುಭಕರವಾದ ನರ್ತನಗಳಿಂದ ಶೋಭಿಸಿತು.
ಪದಾರ್ಥ (ಕ.ಗ.ಪ)
ಝಳ-ಸೆಕೆ, ಝೋಂಪಿಸು-ನಿವಾರಿಸು, ಮಕರಂದ-ಹೂವಿನರಸ, ತುಷಾರ-ತುಂತುರು ಹನಿ, ತುಹಿನ-ಶೀತಲ, ರೇಣು-ಪರಾಗ, ಸೂತ್ರಿಸಿ-ಪೋಣಿಸಿ, ರಿಂಗಣ-ನರ್ತನ, ಝೂಡಿಸು-ಶೋಭಿಸು
ಮೂಲ ...{Loading}...
ಝಳವ ಝೋಂಪಿಸಿ ಬೀಸಿದವು ತಂ
ಬೆಲರ ಬೀಸಣಿಗೆಗಳು ಪರಿಮಳ
ಕಲಿತ ಮಕರಂದದ ತುಷಾರದ ತುಹಿನ ರೇಣುಗಳ
ಸುಳಿವ ಸುತ್ತಣ ಸಾಲಭಂಜಿಕೆ
ಗಳಲಿ ಸೂತ್ರಿಸಿ ರಚಿಸಿದರು ಮಂ
ಗಳದ ರಿಂಗಣ ಝಾಡಿಸಿತು ವೈವಾಹಮಂಟಪವ ॥15॥
೦೧೬ ವರ ಜವಾಜಿಯ ...{Loading}...
ವರ ಜವಾಜಿಯ ಶೃಂಗಗಳ ಕ
ರ್ಪೂರದ ತವಲಾಯಿಗಳ ಸಾದಿನ
ಭರಣಿಗಳ ಮೃಗನಾಭಿಗಳನಡಕಿದರು ಬಂಡಿಯಲಿ
ಸುರಿಸುರಿದು ಹಂತಿಗಳ ಹೊಂಗೊ
ಪ್ಪರಿಗೆಗಳ ತುಂಬಿದರು ಗಂಧದ
ಹಿರಿಯ ರಂಜಣಿಗೆಗಳ ಹಿಡಿದರು ಸುತ್ತುವಳಯದಲಿ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೇಷ್ಠವಾದ ಪುನುಗಿನ ಜೀರ್ಕೊಳವೆಗಳು, ಕರ್ಪೂರದ ಬಿಲ್ಲೆಗಳು, ಪರಿಮಳ ದ್ರವ್ಯ ಹಾಗೂ ಕಸ್ತೂರಿಯ ಕರಂಡಗಳನ್ನು ಬಂಡಿಯಲ್ಲಿ ತುಂಬಿ ತಂದರು. ಸಾಲು ಸಾಲಾಗಿ ಚಿನ್ನದ ಕೊಪ್ಪರಿಗೆಗಳನ್ನಿಟ್ಟು ಪರಿಮಳ ದ್ರವ್ಯಗಳನ್ನು ಸುರಿಸುರಿದು ತುಂಬಿದರು. ಅವುಗಳ ಸುತ್ತಲಿನ ಪ್ರದೇಶದಲ್ಲಿ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಪನ್ನೀರು, ಗಂಧಗಳನ್ನು ತುಂಬಿಟ್ಟರು.
ಪದಾರ್ಥ (ಕ.ಗ.ಪ)
ಜವಾಜಿ-ಪುನುಗು, ಶೃಂಗ-ಜೀರ್ಕೊಳವೆ, ತವಲಾಯಿ-ಕರ್ಪೂರದ ಬಿಲ್ಲೆ, ಸಾದು-ಪರಿಮಳ ದ್ರವ್ಯ, ಮೃಗನಾಭಿ-ಕಸ್ತೂರಿ, ಭರಣಿ-ಕರಂಡ, ರಂಜಣಿಗೆ-ಪನ್ನೀರು, ಗಂಧ ಮೊದಲಾದುವನ್ನು ತುಂಬಿಡುವ ದೊಡ್ಡ ಪಾತ್ರೆ
ಮೂಲ ...{Loading}...
ವರ ಜವಾಜಿಯ ಶೃಂಗಗಳ ಕ
ರ್ಪೂರದ ತವಲಾಯಿಗಳ ಸಾದಿನ
ಭರಣಿಗಳ ಮೃಗನಾಭಿಗಳನಡಕಿದರು ಬಂಡಿಯಲಿ
ಸುರಿಸುರಿದು ಹಂತಿಗಳ ಹೊಂಗೊ
ಪ್ಪರಿಗೆಗಳ ತುಂಬಿದರು ಗಂಧದ
ಹಿರಿಯ ರಂಜಣಿಗೆಗಳ ಹಿಡಿದರು ಸುತ್ತುವಳಯದಲಿ ॥16॥
೦೧೭ ಬಳಿಕ ಸೊದೆಗಳ ...{Loading}...
ಬಳಿಕ ಸೊದೆಗಳ ಬಾವಿಗಳ ಪ
ಕ್ಕಲೆಯ ಪನ್ನೀರುಗಳು ಹಿಡಿದವು
ಹೊಳೆವ ಕೈರಾಟಣದ ಕಾಂಚನಮಯದ ದೋಣಿಗಳ
ತುಳುಕಿ ಬಿಗಿದರು ಕೊಪ್ಪರಿಗೆಗಳ
ವಳಯದಲಿ ನವ ಯಂತ್ರಮಯ ಪು
ತ್ಥಳಿಗಳೇ ನೀಡುವವು ಬೇಡಿದರಿಗೆ ಸುವಸ್ತುಗಳ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಂತರ, ಹಾಲಿನ ಬಾವಿಗಳನ್ನು ನಿರ್ಮಿಸಿದರು. ಕೊಪ್ಪರಿಗೆಗಳಲ್ಲಿ ಪನ್ನೀರನ್ನು ಹಿಡಿದಿಟ್ಟರು. ಅವುಗಳಿಗೆ ಹೊಳೆಯುವ ಸಣ್ಣ ರಾಟೆಗಳನ್ನು ಅಳವಡಿಸಿ, ಚಿನ್ನದ ದೋಣಿಗಳನ್ನು ಅದಕ್ಕೆ ಕಟ್ಟ್ಟಿ ಅವುಗಳನ್ನು ಹಾಲು, ಪನ್ನೀರುಗಳಿಂದ ತುಂಬಿ ಬೇಕಾದಲ್ಲಿಗೆ ಸಾಗಿಸುತ್ತಿದ್ದರು. ಕೊಪ್ಪರಿಗೆಗಳ ವರ್ತುಲಾಕಾರದಲ್ಲಿ ಹೊಸದಾದ ಯಂತ್ರ ಪ್ರತಿಮೆಗಳೇ ಬಯಸಿದವರಿಗೆ ಒಳ್ಳೆಯ ವಸ್ತುಗಳನ್ನು ನೀಡುತ್ತಿದ್ದವು.
ಪದಾರ್ಥ (ಕ.ಗ.ಪ)
ಸೊದೆ-ಹಾಲು, ಪಕ್ಕಲೆ-ಪಾತ್ರೆ, ಕೈರಾಟಣ-ಸಣ್ಣರಾಟೆ, ಕಾಂಚನ-ಚಿನ್ನ, ತುಳುಕು-ತುಂಬು, ವಳಯ-ವರ್ತುಲಾಕಾರ, ಪುತ್ಥಳಿ-ಪ್ರತಿಮೆ
ಮೂಲ ...{Loading}...
ಬಳಿಕ ಸೊದೆಗಳ ಬಾವಿಗಳ ಪ
ಕ್ಕಲೆಯ ಪನ್ನೀರುಗಳು ಹಿಡಿದವು
ಹೊಳೆವ ಕೈರಾಟಣದ ಕಾಂಚನಮಯದ ದೋಣಿಗಳ
ತುಳುಕಿ ಬಿಗಿದರು ಕೊಪ್ಪರಿಗೆಗಳ
ವಳಯದಲಿ ನವ ಯಂತ್ರಮಯ ಪು
ತ್ಥಳಿಗಳೇ ನೀಡುವವು ಬೇಡಿದರಿಗೆ ಸುವಸ್ತುಗಳ ॥17॥
೦೧೮ ಏಕ ವಿಧದ ...{Loading}...
ಏಕ ವಿಧದ ನವಾಯಿಯೇ ಮೂ
ಲೋಕದತಿಶಯ ವಸ್ತು ರಚನಾ
ಸೌಕುಮಾರಿಯ ಸೇವೆಗಿದು ಸಾಕಾರವಾದುದ¯
ಏಕಮಯಮತ ವಿಶ್ವಕರ್ಮ
ವ್ಯಾಕರಣ ಲಕ್ಷಣದ ಲಕ್ಷ್ಯಾ
ನೀಕವಿದರೊಂದೊರೆಗೆ ಬಹುದೇ ಭದ್ರಮಂಟಪದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಲ್ಲಿ ಕಂಡು ಬಂದ ನಾವೀನ್ಯತೆ ಒಂದೇ ಬಗೆಯದೇ ? ಮೂರು ಲೋಕದ ಅತಿಶಯವಾದ ವಸ್ತುಗಳಿಂದ ನಿರ್ಮಿತವಾದದ್ದು ಸುಕುಮಾರಿಯ ಸೇವೆಗೆ ಸುಂದರವಾಗಿ ಕಾಣಿಸಿಕೊಂಡವು. ಮಯನ ವಿಚಾರದ ಒಂದು ವಾಸ್ತು ರಚನೆಯಾಗಲೀ, ವಿಶ್ವಕರ್ಮನ ವಿಶಿಷ್ಟ ಗುಣಗಳ ವಿಶೇಷಣೆಯಿಂದ ಕೂಡಿದ ಹಲವಾರು ವಾಸ್ತು ರಚನೆಗಳಾಗಲೀ ಈ ಮಂಗಳ ಮಂಟಪದ ರಚನೆಯ ಸಮಕ್ಕೆ ಬರುವುದೇ ಅನ್ನುವಂತೆ ಈ ಮಂಟಪ ಕಂಗೊಳಿಸುತ್ತಿತ್ತು.
ಪದಾರ್ಥ (ಕ.ಗ.ಪ)
ನವಾಯಿ-ನಾವೀನ್ಯತೆ, ಸಾಕಾರ-ಸುಂದರ, ಲಕ್ಷಣ-ವಿಶಿಷ್ಟ ಗುಣ, ವ್ಯಾಕರಣ-ವಿಶ್ಲೇಷಣೆ
ಮೂಲ ...{Loading}...
ಏಕ ವಿಧದ ನವಾಯಿಯೇ ಮೂ
ಲೋಕದತಿಶಯ ವಸ್ತು ರಚನಾ
ಸೌಕುಮಾರಿಯ ಸೇವೆಗಿದು ಸಾಕಾರವಾದುದ¯
ಏಕಮಯಮತ ವಿಶ್ವಕರ್ಮ
ವ್ಯಾಕರಣ ಲಕ್ಷಣದ ಲಕ್ಷ್ಯಾ
ನೀಕವಿದರೊಂದೊರೆಗೆ ಬಹುದೇ ಭದ್ರಮಂಟಪದ ॥18॥
೦೧೯ ವಿವಿಧ ವೀಣಾ ...{Loading}...
ವಿವಿಧ ವೀಣಾ ವಾದ್ಯ ಕೋಮಲ
ರವದ ಮಧುರ ಮೃದಂಗ ತತಿಗಳ
ರವಣೆಗಳ ನಟ್ಟವಿಗರುಗ್ಗಡಣೆಯ ಗಡಾವಣೆಯ
ನವ ವಿಧದ ವೈತಾಳಿಕರ ವರ
ಯುವತಿಯರ ಭಾರಣೆಯ ಭೂಷಣ
ರವದ ಮೇಳವು ಮುತ್ತಿ ಮುಸುಕಿತು ಚಾರು ಚಪ್ಪರವ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿವಿಧ ವೀಣಾ ವಾದ್ಯಗಳ ಮೃದುಧ್ವನಿ, ಮೃದಂಗಗಳ ಹಿತಕರವಾದ ಶಬ್ದ, ನರ್ತಕರ ಬಿರುದಾವಳಿಯ ಉದ್ಘೋಷದ ಸಡಗರ, ಹೊಸರೀತಿಯ ಮಂಗಳ ಪಾಠಕರ ಉದ್ಘೋಷ, ಸುಂದರ ಯುವತಿಯರು ತೊಟ್ಟ ಅತಿಶಯವಾದ ಆಭರಣಗಳ ಝಣತ್ಕಾರ - ಈ ಬಗೆ ಬಗೆಯ ದನಿಗಳ ಗೋಷ್ಠಿ ಸುಂದರವಾದ ಚಪ್ಪರವನ್ನೆಲ್ಲ ಆವರಿಸಿತು.
ಪದಾರ್ಥ (ಕ.ಗ.ಪ)
ಕೋಮಲ-ಮೃದು, ಮಧುರ-ಹಿತಕರ, ರವಣೆ-ಶಬ್ದ, ನಟ್ಟವಿಗ-ನರ್ತಕ, ಉಗ್ಗಡಣೆ-ಬಿರುದಾವಳಿಯ್ಟುದ್ಘೋಷ , ಗಡಾವಣೆ-ಸಡಗರ, ಭಾರಣೆ-ಅತಿಶಯ, ಭೂಷಣ-ಆಭರಣ, ಮುತ್ತು-ಆವರಿಸು, ಮುಸುಕು-ಕವಿ
ಮೂಲ ...{Loading}...
ವಿವಿಧ ವೀಣಾ ವಾದ್ಯ ಕೋಮಲ
ರವದ ಮಧುರ ಮೃದಂಗ ತತಿಗಳ
ರವಣೆಗಳ ನಟ್ಟವಿಗರುಗ್ಗಡಣೆಯ ಗಡಾವಣೆಯ
ನವ ವಿಧದ ವೈತಾಳಿಕರ ವರ
ಯುವತಿಯರ ಭಾರಣೆಯ ಭೂಷಣ
ರವದ ಮೇಳವು ಮುತ್ತಿ ಮುಸುಕಿತು ಚಾರು ಚಪ್ಪರವ ॥19॥
೦೨೦ ಸಾಳಗದ ಸನ್ಮೋಹನದ ...{Loading}...
ಸಾಳಗದ ಸನ್ಮೋಹನದ ಮಳೆ
ಗಾಲವೋ ಗೀತವೊ ರಸಾಳಿಯ
ಕಾಲುವೆಯೊ ನವಕಾವ್ಯಬಂಧದ ಸಾರಸಂಗತಿಯೊ
ಆಲಿಗಳಿಗಾಯುಷ್ಯ ಫಲ ಜೀ
ವಾಳವೋ ನರ್ತನವೊ ಸೊಗಸಿನ
ಮೇಳವಣೆಗಳ ಪೇಟಿಯಾದುದು ಜನದ ಕಣ್ಮನಕೆ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಾನ ಮೇಳವು ಆಕರ್ಷಣೆಯ ಮಳೆಗಾಲವೋ ಅಥವಾ ಗೀತವೋ ? ಕಾವ್ಯ ವಾಚನವು ರಸಸಮೂಹದ ಕಾಲುವೆಯೋ ಅಥವ ಹೊಸ ಕಾವ್ಯ ರಚನೆಯ ಸಾರವತ್ತಾದ ವಿಚಾರವೊ ? ನರ್ತನವೋ ಇವೆಲ್ಲ ಕಣ್ಣುಗಳಿಗೆ ಆಯುಷ್ಯ ಫಲದ ಜೀವಾಳವೋ ಎನ್ನುವಂತೆ ಜನರ ಕಣ್ಮನಗಳಿಗೆ ಸಂತೋಷ ನೀಡುವ ಗಾನವಾದ್ಯಗಳಿಂದ ಕೂಡಿದ ನರ್ತನಕ್ಕೆ ಸಮಾನವಾಯ್ತು.
ಪದಾರ್ಥ (ಕ.ಗ.ಪ)
ಸಾಳಗ-ಮೇಳ, ಸನ್ಮೋಹನ-ಆಕರ್ಷಣೆ, ಸಾರಸಂಗತಿ-ಸಾರವತ್ತಾದ ವಿಚಾರ, ಸೊಗಸು-ಸಂತೋಷ, ಮೇಳವಣಿಗೆ-ಗಾನ ವಾದ್ಯಗಳಿಂದ ಕೂಡಿದ ನರ್ತನ
ಪಾಠಾನ್ತರ (ಕ.ಗ.ಪ)
ಪಾಟಿಯಾದುದು - ಪೇಟೆಯಾದುದು
ಮೇಳವಣೆÂಗ¼ - ಖೇಳವಣೆ ಕ. ಗ್ರ. ಸಂ.
ಮೂಲ ...{Loading}...
ಸಾಳಗದ ಸನ್ಮೋಹನದ ಮಳೆ
ಗಾಲವೋ ಗೀತವೊ ರಸಾಳಿಯ
ಕಾಲುವೆಯೊ ನವಕಾವ್ಯಬಂಧದ ಸಾರಸಂಗತಿಯೊ
ಆಲಿಗಳಿಗಾಯುಷ್ಯ ಫಲ ಜೀ
ವಾಳವೋ ನರ್ತನವೊ ಸೊಗಸಿನ
ಮೇಳವಣೆಗಳ ಪೇಟಿಯಾದುದು ಜನದ ಕಣ್ಮನಕೆ ॥20॥
೦೨೧ ತೀವಿದರು ಹೊರ ...{Loading}...
ತೀವಿದರು ಹೊರ ವಳಯದಲಿ ನಾ
ನಾ ವಿಧದ ನಾಟಕದ ನರ್ತನ
ಭಾವಕ ದ್ರಾವಕ ಸುಗಾಯಕ ಮಲ್ಲ ಚಿತ್ರಕರು
ಕೋವಿದರು ಕರುಷಕರು ಪಣ್ಯಾ
ಜೀವಿ ವಾಮನ ಮೂಕಬಧಿರಾಂ
ಧಾವಳಿಗಳೊಪ್ಪಿದರು ಸಕಲ ದಿಶಾ ಸಮಾಗತರು ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಟ್ಟಣದ ಹೊರಪ್ರದೇಶದಲ್ಲಿ ಬಗೆಬಗೆಯ ನಾಟಕದವರು, ನರ್ತನಕಾರರು, ಭಾವರಸಗಳಿಂದ ಅಂತಃಕರಣವನ್ನು ಕರಗಿಸುವ ಒಳ್ಳೆಯ ಗಾಯಕರು, ಕುಸ್ತಿ ಮಾಡುವವರು, ಚಿತ್ರಗಾರರು, ವಿದ್ವಾಂಸರು, ರೈತರು, ವ್ಯಾಪಾರಿಗಳು, ಕುಬ್ಜರು, ಮೂಕರು, ಕಿವುಡರು, ಕುರುಡರು-ಇವರುಗಳು ಗುಂಪುಗುಂಪಾಗಿ ಎಲ್ಲ ದಿಕ್ಕುಗಳಿಂದಲೂ ಬಂದು ಸೇರಿದರು.
ಪದಾರ್ಥ (ಕ.ಗ.ಪ)
ದ್ರಾವಕ-ಕರಗಿಸುವ, ಮಲ್ಲ-ಜಟ್ಟಿ, ಕೋವಿದ-ವಿದ್ವಾಂಸ, ಕರುಷಕ-ರೈತ, ಪಣ್ಯಾಜೀವಿ-ವ್ಯಾಪಾರಿ, ವಾಮನ-ಕುಬ್ಜ, ಬಧಿರ-ಕಿವುಡ, ಸಮಾಗತರು-ಗುಂಪುಗೂಡಿದವರು,
ಒಪ್ಪು-ಶೋಭಿಸು
ಮೂಲ ...{Loading}...
ತೀವಿದರು ಹೊರ ವಳಯದಲಿ ನಾ
ನಾ ವಿಧದ ನಾಟಕದ ನರ್ತನ
ಭಾವಕ ದ್ರಾವಕ ಸುಗಾಯಕ ಮಲ್ಲ ಚಿತ್ರಕರು
ಕೋವಿದರು ಕರುಷಕರು ಪಣ್ಯಾ
ಜೀವಿ ವಾಮನ ಮೂಕಬಧಿರಾಂ
ಧಾವಳಿಗಳೊಪ್ಪಿದರು ಸಕಲ ದಿಶಾ ಸಮಾಗತರು ॥21॥
೦೨೨ ಕವಿಗಮಕಿ ವಾದಿಗಳು ...{Loading}...
ಕವಿಗಮಕಿ ವಾದಿಗಳು ವಾಗ್ಮಿ
ಪ್ರವರ ಯಾಜ್ಞಿಕ ಮಾಂತ್ರಿಕರು ವೈ
ಷ್ಣವ ಮಹೇಶ್ವರ ಜೈನ ಭೈರವ ಬುದ್ಧ ಲಿಂಗಿಗಳು
ವಿವಿಧ ವರ್ಣಾಶ್ರಮ ಸುಧರ್ಮ
ವ್ಯವಹರಣ ನಿಷ್ಠರು ವಿವಾಹೋ
ತ್ಸವ ವಿಲೋಕನ ಕೌತುಕಿಗಳೊದಗಿದರಸಂಖ್ಯಾತ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೇಷ್ಠರಾದ ಕವಿ, ಗಮಕಿ, ವಾದಿ, ವಾಗ್ಮಿಗಳು, ಯಜ್ಞವನ್ನು ಮಾಡುವವರು, ಮಾಟಗಾರರು, ವಿಷ್ಣುಭಕ್ತರು, ಶಿವನ ಉಪಾಸಕರು, ಜೈನರು, ಭೈರವರು, ಬೌದ್ಧರು, ಲಿಂಗಧಾರಿಗಳು, ಮೊದಲಾದವರು, ವಿವಿಧ ವರ್ಣಾಶ್ರಮ ಧರ್ಮಗಳ ಅನುಷ್ಠಾನದಲ್ಲಿ ನಿರತರಾದವರು, ವಿವಾಹ ಮಹೋತ್ಸವವನ್ನು ನೋಡುವ ಅತ್ಯಾಸಕ್ತಿಯುಳ್ಳವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದರು.
ಪದಾರ್ಥ (ಕ.ಗ.ಪ)
ಪ್ರವರ-ಶ್ರೇಷ್ಠ, ಯಾಜ್ಞಿಕ-ಯಜ್ಞ ಮಾಡುವವರು, ಮಾಂತ್ರಿಕ-ಮಾಟಗಾರ, ವಿಲೋಕನ-ನೋಡುವ, ಕೌತುಕಿಗಳು-ಅತ್ಯಾಸಕ್ತಿಯುಳ್ಳವರು, ಚಾತುರ್ವರ್ಣ-ಬ್ರಾಹ್ಮಣ ಕ್ಷತ್ರಿಯ, ವೈಶ್ಯ, ಶೂದ್ರ, ಚತುರಾಶ್ರಮ-ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ, ಸಂನ್ಯಾಸ
ಟಿಪ್ಪನೀ (ಕ.ಗ.ಪ)
ಚಾತುರ್ವರ್ಣ-ಬ್ರಾಹ್ಮಣ ಕ್ಷತ್ರಿಯ, ವೈಶ್ಯ, ಶೂದ್ರ,
ಚತುರಾಶ್ರಮ-ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ, ಸಂನ್ಯಾಸ
ಮೂಲ ...{Loading}...
ಕವಿಗಮಕಿ ವಾದಿಗಳು ವಾಗ್ಮಿ
ಪ್ರವರ ಯಾಜ್ಞಿಕ ಮಾಂತ್ರಿಕರು ವೈ
ಷ್ಣವ ಮಹೇಶ್ವರ ಜೈನ ಭೈರವ ಬುದ್ಧ ಲಿಂಗಿಗಳು
ವಿವಿಧ ವರ್ಣಾಶ್ರಮ ಸುಧರ್ಮ
ವ್ಯವಹರಣ ನಿಷ್ಠರು ವಿವಾಹೋ
ತ್ಸವ ವಿಲೋಕನ ಕೌತುಕಿಗಳೊದಗಿದರಸಂಖ್ಯಾತ ॥22॥
೦೨೩ ಗಣಿತವನ್ತರ ನೆರವಿ ...{Loading}...
ಗಣಿತವಂತರ ನೆರವಿ ಸುಬ್ರಾ
ಹ್ಮಣರು ಸುಶ್ರೋತ್ರಿಯರು ವೈದಿಕ
ಗುಣದ ವಾಚಾಲಕರು ವಿಮಲ ಬ್ರಹ್ಮಋಷಿ ಸಮರು
ಪ್ರಣತ ಋಷಿಗಳು ಮುನಿವರರು ಸಂ
ದಣಿಸಿತಖಿಳದಿಗಂತರದ ಧಾ
ರುಣಿಯ ದೇವವ್ರಾತ ನೆರೆದುದು ದ್ರುಪದ ನಗರಿಯಲಿ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಣಿತವನ್ನು ಬಲ್ಲವರ ಗುಂಪು, ಒಳ್ಳೆಯ ಬ್ರಾಹ್ಮಣರು, ಒಳ್ಳೆಯ ವೈದಿಕರು, ವೇದ ಗುಣಗಳನ್ನು ಬಲ್ಲ ಮಾತಾಳಿಗಳು, ಶ್ರೇಷ್ಠರಾದ ಬ್ರಹ್ಮರ್ಷಿಗಳಿಗೆ ಸಮಾನರು, ವಿನೀತ ಋಷಿಗಳು, ಮುನಿಶ್ರೇಷ್ಠರು ಒಟ್ಟುಗೂಡಿದರು. ಹೀಗೆ ಎಲ್ಲ ದಿಕ್ಕುಗಳಿಂದಲೂ ಭೂಸುರ ಸಮೂಹವೇ ದ್ರುಪದನ ನಗರದಲ್ಲಿ ಗುಂಪು ಸೇರಿತು.
ಪದಾರ್ಥ (ಕ.ಗ.ಪ)
ವಾಚಾಲಕ-ಮಾತಾಳಿ, ಪ್ರಣತ-ವಿನೀತ, ಧಾರುಣಿಯ ದೇವವ್ರಾತ-ಭೂಸುರ ಸಮೂಹ
ಮೂಲ ...{Loading}...
ಗಣಿತವಂತರ ನೆರವಿ ಸುಬ್ರಾ
ಹ್ಮಣರು ಸುಶ್ರೋತ್ರಿಯರು ವೈದಿಕ
ಗುಣದ ವಾಚಾಲಕರು ವಿಮಲ ಬ್ರಹ್ಮಋಷಿ ಸಮರು
ಪ್ರಣತ ಋಷಿಗಳು ಮುನಿವರರು ಸಂ
ದಣಿಸಿತಖಿಳದಿಗಂತರದ ಧಾ
ರುಣಿಯ ದೇವವ್ರಾತ ನೆರೆದುದು ದ್ರುಪದ ನಗರಿಯಲಿ ॥23॥
೦೨೪ ಅರಸ ಕೇಳೈ ...{Loading}...
ಅರಸ ಕೇಳೈ ಮೇಲೆ ವಿದ್ಯಾ
ಧರ ಮಹೋರಗ ಯಕ್ಷ ರಾಕ್ಷಸ
ಗರುಡಕಿನ್ನರ ಸಿದ್ಧ ವಸು ಗಂಧರ್ವ ಭೂತಗಣ
ವರ ಮರುದ್ಗಣ ರುದ್ರ ಮನು ಭಾ
ಸ್ಕರ ಸುಧಾಕರ ತಾರಕಾ ಗ್ರಹ
ಸುರಮುನಿಪ ದಿಕ್ಪಾಲತತಿ ನೆರೆದುದು ವಿಮಾನದಲಿ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ಮಹಾರಾಜನೇ ಕೇಳು, ನೆಲದ ಮೇಲೆ ಈ ಜನಸಂದಣಿ ಸೇರಿದಂತೆಯೇ, ಮೇಲೆ, ವಿದ್ಯಾಧರರು, ಮಹೋರಗರು, ಯಕ್ಷರು, ರಾಕ್ಷಸರು, ಗರುಡರು, ಕಿನ್ನರರು, ಸಿದ್ಧರು, ವಸುಗಳು, ಗಂಧರ್ವರು, ಭೂತಗಣಗಳು, ಮರುದ್ಗಣಗಳು, ರುದ್ರಗಣಗಳು, ಮನುಗಳು, ಸೂರ್ಯ ಚಂದ್ರ ನಕ್ಷತ್ರಗಳು, ಗ್ರಹಗಳು, ಸುರಮುನಿಶ್ರೇಷ್ಠರು, ದಿಕ್ಪಾಲಕರು-ಎಲ್ಲರೂ ವಿಮಾನಗಳಲ್ಲಿ ಬಂದು ಗಗನವನ್ನು ತುಂಬಿ ನಿಂದರು.
ಪದಾರ್ಥ (ಕ.ಗ.ಪ)
ಭಾಸ್ಕರ-ಸೂರ್ಯ, ಸುಧಾಕರ-ಚಂದ್ರ,
ಮೂಲ ...{Loading}...
ಅರಸ ಕೇಳೈ ಮೇಲೆ ವಿದ್ಯಾ
ಧರ ಮಹೋರಗ ಯಕ್ಷ ರಾಕ್ಷಸ
ಗರುಡಕಿನ್ನರ ಸಿದ್ಧ ವಸು ಗಂಧರ್ವ ಭೂತಗಣ
ವರ ಮರುದ್ಗಣ ರುದ್ರ ಮನು ಭಾ
ಸ್ಕರ ಸುಧಾಕರ ತಾರಕಾ ಗ್ರಹ
ಸುರಮುನಿಪ ದಿಕ್ಪಾಲತತಿ ನೆರೆದುದು ವಿಮಾನದಲಿ ॥24॥
೦೨೫ ಚಾರಣರ ಕೈವಾರ ...{Loading}...
ಚಾರಣರ ಕೈವಾರ ತುಂಬುರ
ನಾರದರ ಸಂಗೀತ ರಂಭೆಯ
ಚಾರು ನರ್ತನ ಚಿತ್ರರಥನ ಮೃದಂಗ ಮೃದು ಶಬ್ದ
ಆರುಭಟೆ ಮಿಗಿಲಳ್ಳಿರಿವ ಜಂ
ಭಾರಿಯೋಲಗದಲಿ ತದೀಯ ಮ
ಹಾ ರಭಸವಿತರೇತರ ಪ್ರತಿಬಿಂಬವಾಯ್ತೆಂದ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸ್ತುತಿಪಾಠಕರ ಹೊಗಳಿಕೆ, ತುಂಬುರ ನಾರದರ ಸಂಗೀತ, ರಂಭೆಯ ಸುಂದರ ನರ್ತನ, ಚಿತ್ರರಥನ ಮೃದಂಗದ ಮೃದು ಧ್ವನಿ-ಇವುಗಳ ಶಬ್ದದಿಂದ ಕೂಡಿದ ದೇವೇಂದ್ರನ ಸಭೆಯ ವೈಭವ ಮತ್ತು ಈ ವಿವಾಹ ಮಂಟಪದ ವೈಭವ ಒಂದಕ್ಕೊಂದು ಪ್ರತಿಬಿಂಬವಾದವು ಎಂದು ವೈಶಂಪಾಯನನು ಹೇಳಿದನು.
ಪದಾರ್ಥ (ಕ.ಗ.ಪ)
ಚಾರಣ-ಸ್ತುತಿಪಾಠಕ, ಕೈವಾರ-ಹೊಗಳಿಕೆ, ಆರುಭಟೆ-ಅಬ್ಬರ
ಮೂಲ ...{Loading}...
ಚಾರಣರ ಕೈವಾರ ತುಂಬುರ
ನಾರದರ ಸಂಗೀತ ರಂಭೆಯ
ಚಾರು ನರ್ತನ ಚಿತ್ರರಥನ ಮೃದಂಗ ಮೃದು ಶಬ್ದ
ಆರುಭಟೆ ಮಿಗಿಲಳ್ಳಿರಿವ ಜಂ
ಭಾರಿಯೋಲಗದಲಿ ತದೀಯ ಮ
ಹಾ ರಭಸವಿತರೇತರ ಪ್ರತಿಬಿಂಬವಾಯ್ತೆಂದ ॥25॥
೦೨೬ ರಚಿಸಿದರು ಮಣ್ಟಪವನವರವ ...{Loading}...
ರಚಿಸಿದರು ಮಂಟಪವನವರವ
ರುಚಿತ ವೃತ್ತಿಯೊಳವನಿಪಾಲ
ಪ್ರಚಯವನು ಮನ್ನಿಸಿದನಿವರನು ವಿಪ್ರಸಭೆಯೊಳಗೆ
ಪ್ರಚುರ ಮಣಿಯಿದೆ ಪದ್ಮರಾಗದ
ರುಚಿರ ರತ್ನವು ಜಾತರೂಪದಿ
ಖಚಿತವಾದೊಡೆ ಪುಣ್ಯವೆನುತಾ ದ್ರುಪದ ಚಿಂತಿಸಿದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಮಂಟಪವನ್ನು ಸಿದ್ಧ ಮಾಡಿದರು. ದ್ರುಪದರಾಜನು ಭೂಪಾಲರ ಸಮೂಹವನ್ನು ಅವರವರ ಅಂತಸ್ತಿಗೆ ಉಚಿತವಾದ ರೀತಿಯಲ್ಲಿ ಗೌರವಿಸಿದನು. ಇವರನ್ನು ವಿಪ್ರಸಭೆಯಲ್ಲಿ ಸತ್ಕರಿಸಿದನು. ಪ್ರಸಿದ್ಧವಾದ ಮಣಿಯಿದೆ. ಮಾಣಿಕ್ಯವೆಂಬ ಈ ಮನೋಹರವಾದ ರತ್ನವನ್ನು ಚಿನ್ನದಲ್ಲಿ ಕುಂದಣಿಸಿದರೆ ಪುಣ್ಯವೆನ್ನುತ್ತ ದ್ರುಪದ ಚಿಂತಿಸಿದನು.
ಪದಾರ್ಥ (ಕ.ಗ.ಪ)
ರಚಿಸು-ಸಿದ್ಧಮಾಡು, ವೃತ್ತಿ-ಸ್ಥಿತಿ, ಉಚಿತ-ಸರಿಯಾದ, ಪ್ರಚಯ-ಸಮೂಹ, ಪ್ರಚುರ-ಪ್ರಸಿದ್ಧ, ರುಚಿರ-ಮನೋಹರವಾದ, ಜಾತರೂಪ-ಚಿನ್ನ, ಖಚಿತ-ಕುಂದಣಿಸಿದ, ಪದ್ಮರಾಗ-ಮಾಣಿಕ್ಯ
ಟಿಪ್ಪನೀ (ಕ.ಗ.ಪ)
( ರತ್ನದಂತಹ ದ್ರೌಪದಿಯನ್ನು ಚಿನ್ನದಂತಹ ವರನಿಗೆ ವಿವಾಹ ಮಾಡಿಕೊಟ್ಟರೆ ಪುಣ್ಯ ಎಂಬುದು ಇಲ್ಲಿ ದ್ರುಪದನ ಅಂತರ್ಯದ ಭಾವ)
ನವರತ್ನಗಳು - ರತ್ನ (ಹೀರಾ ಅಥವಾ ವಜ್ರ), ಗಾರುತ್ಮತ (ಪಚ್ಚೆ), ಪುಷ್ಯರಾಗ, ಮಾಣಿಕ್ಯ (ಪದ್ಮರಾಗ), ಇಂದ್ರನೀಲ (ನೀಲ), ಗೋಮೇಧಿಕ, ವೈಡೂರ್ಯ, ಮೌಕ್ತಿಕ(ಮುತ್ತು), ವಿದ್ರುಮ( ಹವಳ)
ಮೂಲ ...{Loading}...
ರಚಿಸಿದರು ಮಂಟಪವನವರವ
ರುಚಿತ ವೃತ್ತಿಯೊಳವನಿಪಾಲ
ಪ್ರಚಯವನು ಮನ್ನಿಸಿದನಿವರನು ವಿಪ್ರಸಭೆಯೊಳಗೆ
ಪ್ರಚುರ ಮಣಿಯಿದೆ ಪದ್ಮರಾಗದ
ರುಚಿರ ರತ್ನವು ಜಾತರೂಪದಿ
ಖಚಿತವಾದೊಡೆ ಪುಣ್ಯವೆನುತಾ ದ್ರುಪದ ಚಿಂತಿಸಿದ ॥26॥