೦೦೦ ಸೂ ವಾಯುಸುತನುರಿಮನೆಯ ...{Loading}...
ಸೂ: ವಾಯುಸುತನುರಿಮನೆಯ ಕೌರವ
ರಾಯ ಕೃತಕವ ಕಳೆದು ಹೊಕ್ಕನು
ತಾಯಿ ವೊಡಹುಟ್ಟಿದರು ಸಹಿತ ಮಹಾವನಾಂತರವ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ವಾಯುಪುತ್ರನಾದ ಭೀಮನು ಕೌರವರಾಯನು ಕಪಟದಿಂದ ರಚಿಸಿದ ಸುಡುವ ಅರಗಿನ ಮನೆಯನ್ನು ನಿವಾರಿಸಿಕೊಂಡು ತಾಯಿ ಹಾಗೂ ಒಡಹುಟ್ಟಿದವರೊಂದಿಗೆ ದೊಡ್ಡ ಅರಣ್ಯದ ನಡುವಿನ ಭಾಗವನ್ನು ಪ್ರವೇಶಿಸಿದನು.
ಪದಾರ್ಥ (ಕ.ಗ.ಪ)
ಕೃತಕ-ಕಪಟ, ವನಾಂತರ-ಅರಣ್ಯದ ನಡುವಿನ ಭಾಗ
ಮೂಲ ...{Loading}...
ಸೂ: ವಾಯುಸುತನುರಿಮನೆಯ ಕೌರವ
ರಾಯ ಕೃತಕವ ಕಳೆದು ಹೊಕ್ಕನು
ತಾಯಿ ವೊಡಹುಟ್ಟಿದರು ಸಹಿತ ಮಹಾವನಾಂತರವ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಗಜನಗರಿಯಲಿ ಕೌರವ
ರಾಳ ಪಾಂಡವರಾಳ ಸೆಣಸಿನ ಕಾಲು ಮೆಟ್ಟುಗಳ
ಸೂಳು ಮತ್ಸರ ಬಿರುದು ಪಾಡಿನ
ಚೂಳಿಗಲಹದ ಕದಡು ಜೂಜಿನ
ತೋಳುವಲರೊಳತೋಟಿ ಮಸಗಿತು ದಿವಸ ದಿವಸದಲಿ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಸ್ತಿನಾಪುರದಲ್ಲಿ ಕೌರವ ಪಾಂಡವರ ಸ್ಪರ್ಧೆ ಮುಂದುವರಿದು ಅಸೂಯೆಯ ಸುಳಿವು ಕಾಣಿಸಿತು. ದಿನದಿನಕ್ಕೆ ತಮ್ಮನ್ನೇ ಹೊಗಳಿಸಿಕೊಳ್ಳುವುದು, ಮೇಲೆ ಬಿದ್ದು ಹೊಡೆದಾಡುವುದು, ಹೊಂದಿಕೆ ಇಲ್ಲದ್ದರಿಂದ ಉಂಟಾದ ಸ್ಪರ್ಧೆಯ ಕ್ಷೋಭೆ, ಬಾಹುಬಲರ ಒಳಕಲಹ ಹೆಚ್ಚಾದವು ಕೇಳು ಎಂದು ವೈಶಂಪಾಯನನು ಜನಮೇಜಯಮಹಾರಾಜನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಸೆಣಸು-ಸ್ಪರ್ಧೆ, ಸೂಳು-ಸುಳಿವು, ಬಿರುದುಪಾಡು-ಗುಣಗಾನ, ಚೂಳಿಗಲಹ-ಮುಂಚೂಣಿ ಯುದ್ಧ
ಕದಡು-ಕ್ಷೋಭೆ, ತೋಳುವಲರು-ಬಾಹುಬಲರು, ಒಳತೋಟಿ-ಒಳಕಲಹ
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಗಜನಗರಿಯಲಿ ಕೌರವ
ರಾಳ ಪಾಂಡವರಾಳ ಸೆಣಸಿನ ಕಾಲು ಮೆಟ್ಟುಗಳ
ಸೂಳು ಮತ್ಸರ ಬಿರುದು ಪಾಡಿನ
ಚೂಳಿಗಲಹದ ಕದಡು ಜೂಜಿನ
ತೋಳುವಲರೊಳತೋಟಿ ಮಸಗಿತು ದಿವಸ ದಿವಸದಲಿ ॥1॥
೦೦೨ ಬೀದಿಗಲಹದ ಕದಡು ...{Loading}...
ಬೀದಿಗಲಹದ ಕದಡು ಬೀಡಿನ
ಲೈದೆ ಹಬ್ಬಿತು ಬೀಡುಗಲಹದ
ಕೈದೊಳಸು ಕೊಂಡೆಸಗಿ ನಟಿಸಿತು ನಾಡು ನಾಡಿನಲಿ
ಆದುದೆರಡರಸಿಭಪುರಿಗೆ ಕಾ
ಳಾದುದಿನ್ನೇನೆಂದು ಪುರಜನ
ವೈದೆ ಹೆದರಿತು ಭೀಮ ದುರ್ಯೋಧನರ ಹೋರಟೆಗೆ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೀದಿ ಕಲಹದ ಕ್ಷೋಭೆ ಮನೆಯೊಳಗೂ ವ್ಯಾಪಿಸಿತು. ಹೊಡೆದಾಟದ ವಿಷಯ ದೇಶ ದೇಶದಲ್ಲೆಲ್ಲಾ ವ್ಯಾಪಿಸಿತು. ಭೀಮ ದುರ್ಯೋಧನರ ಕಾದಾಟಕ್ಕೆ, ಪ್ರಜೆಗಳು “ಹಸ್ತಿನಾಪುರಕ್ಕೆ ಇಬ್ಬರ ದೊರೆತನವಾಯ್ತು, ಹಾಳಾಯ್ತು ಇನ್ನೇನು ಗತಿ"ಯೆಂದು ಬಹಳವಾಗಿ ಹೆದರಿದರು.
ಪದಾರ್ಥ (ಕ.ಗ.ಪ)
ಕದಡು-ಕ್ಷೋಭೆ, ಬೀಡು-ಮನೆ, ಹಬ್ಬು-ವ್ಯಾಪಿಸು, ಕೈದೊಳಸು-ಜಗಳ , ಕಾಳು-ಹಾಳು, ಅರಸು-ದೊರೆತನ, ಹೋರಟೆ-ಕಾದಾಟ
ಮೂಲ ...{Loading}...
ಬೀದಿಗಲಹದ ಕದಡು ಬೀಡಿನ
ಲೈದೆ ಹಬ್ಬಿತು ಬೀಡುಗಲಹದ
ಕೈದೊಳಸು ಕೊಂಡೆಸಗಿ ನಟಿಸಿತು ನಾಡು ನಾಡಿನಲಿ
ಆದುದೆರಡರಸಿಭಪುರಿಗೆ ಕಾ
ಳಾದುದಿನ್ನೇನೆಂದು ಪುರಜನ
ವೈದೆ ಹೆದರಿತು ಭೀಮ ದುರ್ಯೋಧನರ ಹೋರಟೆಗೆ ॥2॥
೦೦೩ ಬೇರೆ ಪಾಣ್ಡವರಿರಲಿ ...{Loading}...
ಬೇರೆ ಪಾಂಡವರಿರಲಿ ರಾಯನ
ನೂರು ಮಕ್ಕಳು ಪುರವನಾಳಲಿ
ಬೇರೆ ಕೌರವರಿರಲಿ ಪಾಂಡವರಾಳಲಿಭ ಪುರಿಯ
ನೂರರೊಡನೈವರನು ಧರಿಸಿರ
ಲಾರದೀ ಪುರಿಯೆನುತ ದುಗುಡವ
ಹೇರಿ ಹೊದಕುಳಿಗೊಳುತಲಿರ್ದುದು ಹಸ್ತಿನಾನಗರ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಪಾಂಡವರು ಬೇರೆ ಇರಲಿ, ರಾಜನ ನೂರು ಮಕ್ಕಳು ಈ ಪುರವನ್ನಾಳಲಿ. ಇಲ್ಲವೆ, ಕೌರವರು ಬೇರೆ ಇರಲಿ, ಪಾಂಡವರು ಹಸ್ತಿನಾಪುರವನ್ನಾಳಲಿ ಈ ಪಟ್ಟಣ ಈ ನೂರ್ವರನ್ನೂ ಐವರನ್ನೂ ಒಟ್ಟಿಗೆ ಹೊರಲಾರದು” ಎಂದು ಹಸ್ತಿನಾಪುರವು ದುಃಖವನ್ನು ತಾಳಿ ಬೇಗುದಿಗೊಳ್ಳುತ್ತಲಿತ್ತು.
ಪದಾರ್ಥ (ಕ.ಗ.ಪ)
ಇಭಪುರಿ-ಹಸ್ತಿನಾಪುರಿ, ಧರಿಸು-ಹೊರು, ದುಗುಡ-ದುಃಖ, ಹೊದಕುಳಿ-ಬೇಗುದಿ
ಮೂಲ ...{Loading}...
ಬೇರೆ ಪಾಂಡವರಿರಲಿ ರಾಯನ
ನೂರು ಮಕ್ಕಳು ಪುರವನಾಳಲಿ
ಬೇರೆ ಕೌರವರಿರಲಿ ಪಾಂಡವರಾಳಲಿಭ ಪುರಿಯ
ನೂರರೊಡನೈವರನು ಧರಿಸಿರ
ಲಾರದೀ ಪುರಿಯೆನುತ ದುಗುಡವ
ಹೇರಿ ಹೊದಕುಳಿಗೊಳುತಲಿರ್ದುದು ಹಸ್ತಿನಾನಗರ ॥3॥
೦೦೪ ಒನ್ದು ದಿವಸ ...{Loading}...
ಒಂದು ದಿವಸ ಸುಯೋಧನನು ನಿಜ
ಮಂದಿರದೊಳೇಕಾಂತದಲಿ ಮನ
ನೊಂದು ನುಡಿದನು ಶಕುನಿ ಕರ್ಣಜಯದ್ರಥಾದ್ಯರಿಗೆ
ಅಂದು ಭೀಮಾರ್ಜುನರು ದ್ರುಪದನ
ತಂದು ದಕ್ಷಿಣೆಯಿತ್ತು ಗುರುವಿಗೆ
ಸಂದರೈ ಸಮರದಲಿ ಪರಿಭವವಾಯ್ತು ತಮಗೆಂದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದು ದಿವಸ ಸುಯೋಧನನು ತನ್ನ ಅರಮನೆಯಲ್ಲಿ ಶಕುನಿ ಕರ್ಣ ಜಯದ್ರಥ ಮೊದಲಾದವರಿಗೆ ಏಕಾಂತದಲ್ಲಿ ಮನನೊಂದು ಹೀಗೆ ನುಡಿದನು- “ಅಂದು ಭೀಮಾರ್ಜುನರು ದ್ರುಪದನನ್ನು ಸೆರೆಹಿಡಿದು ತಂದು ಗುರುವಿಗೆ ದಕ್ಷಿಣೆಯಾಗಿ ಕೊಟ್ಟು ಪ್ರಸಿದ್ಧರಾದರು. ನಮಗೆ ಯುದ್ಧದಲ್ಲಿ ಅವಮಾನವಾಯ್ತು”.
ಪದಾರ್ಥ (ಕ.ಗ.ಪ)
ಸಂದರು-ಪ್ರಸಿದ್ಧರಾದರು, ಪರಿಭವ-ಅವಮಾನ, ಸಮರ-ಯುದ್ಧ
ಮೂಲ ...{Loading}...
ಒಂದು ದಿವಸ ಸುಯೋಧನನು ನಿಜ
ಮಂದಿರದೊಳೇಕಾಂತದಲಿ ಮನ
ನೊಂದು ನುಡಿದನು ಶಕುನಿ ಕರ್ಣಜಯದ್ರಥಾದ್ಯರಿಗೆ
ಅಂದು ಭೀಮಾರ್ಜುನರು ದ್ರುಪದನ
ತಂದು ದಕ್ಷಿಣೆಯಿತ್ತು ಗುರುವಿಗೆ
ಸಂದರೈ ಸಮರದಲಿ ಪರಿಭವವಾಯ್ತು ತಮಗೆಂದ ॥4॥
೦೦೫ ವನಜ ವನದಲಿ ...{Loading}...
ವನಜ ವನದಲಿ ತುರುಚೆ ಕಬ್ಬಿನ
ಬನದಿ ಕಡಸಿಗೆ ಚೂತಮಯ ಕಾ
ನನದಿ ಬೊಬ್ಬುಲಿ ಭೀಮಸೇನನಯಿರವು ತಮ್ಮೊಳಗೆ
ಇನಿತು ಪಾರ್ಥನ ಮೇಲೆ ಯಮಳರ
ಜಿನುಗಿನಲಿ ಜಾರೆನು ಯುಧಿಷ್ಠಿರ
ಜನಪನಾಗಲಿ ಮೇಣು ಮಾಣಲಿ ಭೀತಿಯಿಲ್ಲೆಂದ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಮಲವನದಲ್ಲಿ ತುರಿಕೆ ಗಿಡವೂ, ಕಬ್ಬಿನ ತೋಟದಲ್ಲಿ ಕಹಿ ಔಷಧಿ ಗಿಡವೂ, ಮಾವು ತುಂಬಿದ ಅರಣ್ಯದಲ್ಲಿ ಜಾಲಿ ಗಿಡವೂ ಇರುವಂತೆ ನಮ್ಮ ನಡುವೆ ಭೀಮನ ಇರವು. ಅರ್ಜುನ, ಯಮಳರಾದ ನಕುಲ ಸಹದೇವರ ಬಗ್ಗೆ ಇಷ್ಟೊಂದು ವ್ಯರ್ಥವಾಗಿ ಹಲುಬಿ ಹಿಮ್ಮೆಟ್ಟುವುದಿಲ್ಲ. ಯುಧಿಷ್ಠಿರನೇ ರಾಜನಾಗಲೀ ಆಗದಿರಲಿ ನನಗೆ ಹೆದರಿಕೆ ಇಲ್ಲವೆಂದನು ದುರ್ಯೋಧನನು.
ಪದಾರ್ಥ (ಕ.ಗ.ಪ)
ತುರುಚೆ-ತುರಿಕೆ ಗಿಡ, ಕಡಸಿಗೆ-ಒಂದು ಕಹಿ ಔಷಧಿ ಗಿಡ(?), ಬೊಬ್ಬುಲಿ-ಜಾಲಿಗಿಡ, ಜಿನುಗು-ವ್ಯರ್ಥವಾಗಿ ಹಲುಬು,
ಜಾರು-ಹಿಮ್ಮೆಟ್ಟು, ಭೀತಿ-ಹೆದರಿಕೆ
ಮೂಲ ...{Loading}...
ವನಜ ವನದಲಿ ತುರುಚೆ ಕಬ್ಬಿನ
ಬನದಿ ಕಡಸಿಗೆ ಚೂತಮಯ ಕಾ
ನನದಿ ಬೊಬ್ಬುಲಿ ಭೀಮಸೇನನಯಿರವು ತಮ್ಮೊಳಗೆ
ಇನಿತು ಪಾರ್ಥನ ಮೇಲೆ ಯಮಳರ
ಜಿನುಗಿನಲಿ ಜಾರೆನು ಯುಧಿಷ್ಠಿರ
ಜನಪನಾಗಲಿ ಮೇಣು ಮಾಣಲಿ ಭೀತಿಯಿಲ್ಲೆಂದ ॥5॥
೦೦೬ ಹುದು ನಡೆಯದಿವರೊಡನೆ ...{Loading}...
ಹುದು ನಡೆಯದಿವರೊಡನೆ ನಮ್ಮಲಿ
ಕದನವೇ ಕೈಗಟ್ಟುವುದು ಕಾ
ದಿದೊಡೆ ಹೆಬ್ಬಲವಹುದು ದುರ್ಬಲ ದೈವಗತಿ ಬೇರೆ
ನದಿಗಳರಳೆಯ ಹಾಸು ನವ ವಿಷ
ವುದರ ದೀಪನ ಚೂರ್ಣವಾವಂ
ಗದಲಿ ಸಾಪತ್ನರಲಿ ಸದರವ ಕಾಣೆ ತಾನೆಂದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇವರೊಡನೆ ಹೊಂದಿಕೆ ಆಗುವುದಿಲ್ಲ. ನಮ್ಮಲ್ಲಿ ಕಾಳಗವೇ ಸಂಭವಿಸುವುದು. ಕಾದಿದರೆ ದೊಡ್ಡ ಬಲ, ಬಲಹೀನವಾಗುವುದು. ದೈವಗತಿ ಹೇಗೆಂದು ಹೇಳಲಾಗುವುದಿಲ್ಲ. ಇವರಿಗೋ ನದಿಗಳು ಹತ್ತಿಯ ಹಾಸಿಗೆ. ನವ ವಿಷಗಳು ಹೊಟ್ಟೆಯಲ್ಲಿ ಜೀರ್ಣಕ ಶಕ್ತಿಯನ್ನು ವೃದ್ಧಿ ಮಾಡುವ ಚೂರ್ಣ, ಯಾವ ರೀತಿಯಲ್ಲೂ ಈ ದಾಯಾದಿಗಳಲ್ಲಿ ಸುಲಭವನ್ನು ಕಾಣೆ” ಎಂದು ತನ್ನ ಅಳಲನ್ನು ತೋಡಿಕೊಂಡನು.
ಪದಾರ್ಥ (ಕ.ಗ.ಪ)
ಹುದು-ಹೊಂದಿಕೆ, ಕೈಗಟ್ಟು-ಸಂಭವಿಸು, ಹೆಬ್ಬಲ-ದೊಡ್ಡ ಬಲ,
ದುರ್ಬಲ-ಬಲಹೀನ, ಉದರ-ಹೊಟ್ಟೆ, ದೀಪನ-ಜೀರ್ಣ ಶಕ್ತಿಯನ್ನು ವೃದ್ಧಿಮಾಡುವ,
ಸದರ-ಸುಲಭ
ಮೂಲ ...{Loading}...
ಹುದು ನಡೆಯದಿವರೊಡನೆ ನಮ್ಮಲಿ
ಕದನವೇ ಕೈಗಟ್ಟುವುದು ಕಾ
ದಿದೊಡೆ ಹೆಬ್ಬಲವಹುದು ದುರ್ಬಲ ದೈವಗತಿ ಬೇರೆ
ನದಿಗಳರಳೆಯ ಹಾಸು ನವ ವಿಷ
ವುದರ ದೀಪನ ಚೂರ್ಣವಾವಂ
ಗದಲಿ ಸಾಪತ್ನರಲಿ ಸದರವ ಕಾಣೆ ತಾನೆಂದ ॥6॥
೦೦೭ ದುಗುಡವೇತಕೆ ಜೀಯ ...{Loading}...
ದುಗುಡವೇತಕೆ ಜೀಯ ಡೊಂಬಿನ
ಜಗಳವನು ತೆಗೆದರಿನೃಪರ ಸುಂ
ಟಗೆಯನಾಯ್ಸುವೆನವರ ತನುವನು ಯದ್ಧ ರಂಗದಲಿ
ದಿಗು ಬಲಿಯ ಕೊಡಿಸುವೆನು ಸಾಕಿ
ನ್ನೊಗುಮಿಗೆಯ ಚಿಂತಾಂಗನೆಯನೋ
ಲಗಿಸದಿರು ಕುರುರಾಯ ಚಿತ್ತೈಸೆಂದನಾ ಕರ್ಣ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುರುರಾಯನ ನುಡಿಗಳನ್ನಾಲಿಸಿದ ಕರ್ಣನು, “ದುಃಖವೇತಕ್ಕೆ ಜೀಯಾ ? ಮೋಸದ ಜಗಳವನ್ನು ತೆಗೆದು ಶತ್ರುರಾಜರ ಹೃದಯಮಾಂಸವನ್ನು ಕಿತ್ತಿಡುವೆನು. ಯುದ್ಧ ಭೂಮಿಯಲ್ಲಿ ಅವರ ದೇಹವನ್ನು ದಿಗ್ಬಲಿ ಕೊಡಿಸುವೆನು. ಸಾಕಿನ್ನು, ಹೆಚ್ಚಾಗಿ ಚಿಂತಾಂಗನೆಯನ್ನು ಓಲಗಿಸಬೇಡ ಗಮನವಿಟ್ಟು ಕೇಳು” ಎಂದು ನುಡಿದನು.
ಪದಾರ್ಥ (ಕ.ಗ.ಪ)
ಡೊಂಬಿನ-ಮೋಸದ
ಸುಂಟಿಗೆ-ಹೃದಯದ ಮಾಂಸ,
ಒಗುಮಿಗೆ-ಹೆಚ್ಚಿಗೆ
ಮೂಲ ...{Loading}...
ದುಗುಡವೇತಕೆ ಜೀಯ ಡೊಂಬಿನ
ಜಗಳವನು ತೆಗೆದರಿನೃಪರ ಸುಂ
ಟಗೆಯನಾಯ್ಸುವೆನವರ ತನುವನು ಯದ್ಧ ರಂಗದಲಿ
ದಿಗು ಬಲಿಯ ಕೊಡಿಸುವೆನು ಸಾಕಿ
ನ್ನೊಗುಮಿಗೆಯ ಚಿಂತಾಂಗನೆಯನೋ
ಲಗಿಸದಿರು ಕುರುರಾಯ ಚಿತ್ತೈಸೆಂದನಾ ಕರ್ಣ ॥7॥
೦೦೮ ಹೊಡೆದು ಹೊಡೆ ...{Loading}...
ಹೊಡೆದು ಹೊಡೆ ಚೆಂಡಾಡಿ ರಿಪುಗಳ
ಗಡಣವನು ಯಮರಾಜಧಾನಿಗೆ
ನಡೆಸುವೆನು ನೀ ನೋಡುತಿರು ಸಾಕೊಂದು ನಿಮಿಷದಲಿ
ಕೊಡು ತನಗೆ ನೇಮವನು ದುಗುಡವ
ಬಿಡು ಮನಸ್ಸಿನ ಕಂದು ಕುಂದನು
ಹಿಡಿಯದಿರು ಕುರುರಾಯ ಚಿತ್ತೈಸೆಂದನಾ ಕರ್ಣ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಒಂದು ನಿಮಿಷದಲ್ಲಿ ಹೊಡೆದು ಹೊಡೆಚೆಂಡಾಡಿ ಶತ್ರುಗಳ ಸಮೂಹವನ್ನು ಯಮನ ರಾಜಧಾನಿ ಸಂಯಮನೀಪುರಕ್ಕೆ ಕಳುಹಿಸಿಕೊಡುವೆನು. ನೀನು ನೋಡುತ್ತಿರು. ನನಗೆ ನೇಮವನ್ನು ಕೊಡು. ದುಮ್ಮಾನವನ್ನು ಬಿಡು. ಮನಸ್ಸಿನ ದುಃಖವನ್ನು ಹಿಡಿಯಬೇಡ. ಕುರುರಾಯ ಗಮನವಿಟ್ಟು ಕೇಳು” ಎಂದು ಕರ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ದುಗುಡ-ದುಮ್ಮಾನ, ಕಂದುಕುಂದು-ದುಃಖ, ವ್ಯಸನ
ಟಿಪ್ಪನೀ (ಕ.ಗ.ಪ)
ಸಂಯಮನೀಪುರೀ-ಯಮನ ರಾಜಧಾನಿ ಅಥವಾ ಪಟ್ಟಣ, ಇದರ ಇನ್ನೊಂದು ಹೆಸರು ‘ಸಂಯಮನ’ ಎಂದೂ ಇದೆ. ಇಲ್ಲಿ ಯಾರೂ ಸುಳ್ಳಾಡುವುದಿಲ್ಲ. ಸತ್ಯವನ್ನೇ ಯಾವಾಗಲೂ ಮಾತನಾಡುತ್ತಾರೆ. ಇಲ್ಲಿ ನಿರ್ಬಲ ಮನುಷ್ಯನೂ ಕೂಡ ಬಲವಂತನೊಡನೆ ತನಗೆ ಮಾಡಿದ ಅನ್ಯಾಯಕ್ಕಾಗಿ ಪ್ರತೀಕಾರ ಮಾಡುತ್ತಾನೆ.
ಮೂಲ ...{Loading}...
ಹೊಡೆದು ಹೊಡೆ ಚೆಂಡಾಡಿ ರಿಪುಗಳ
ಗಡಣವನು ಯಮರಾಜಧಾನಿಗೆ
ನಡೆಸುವೆನು ನೀ ನೋಡುತಿರು ಸಾಕೊಂದು ನಿಮಿಷದಲಿ
ಕೊಡು ತನಗೆ ನೇಮವನು ದುಗುಡವ
ಬಿಡು ಮನಸ್ಸಿನ ಕಂದು ಕುಂದನು
ಹಿಡಿಯದಿರು ಕುರುರಾಯ ಚಿತ್ತೈಸೆಂದನಾ ಕರ್ಣ ॥8॥
೦೦೯ ಹಬ್ಬುಗೆಯ ಹದಿನಾಲ್ಕು ...{Loading}...
ಹಬ್ಬುಗೆಯ ಹದಿನಾಲ್ಕು ಲೋಕದ
ಮೊಬ್ಬುಗಳನೀಡಾಡಿ ನಭದೊಳ
ಗೊಬ್ಬನೇ ರವಿ ತೊಳಗಿ ಬೆಳಗುವವೋಲು ಪಾಂಡವರ
ಕೊಬ್ಬುಗಳ ನಿಲಿಸುವೆನು ಧರೆಯೊಳ
ಗೊಬ್ಬನೇ ದುರ್ಯೋಧನನು ಮ
ತ್ತೊಬ್ಬರಿಲ್ಲೆಂದೆನಿಸಿ ತೋರುವೆನೆಂದನಾ ಕರ್ಣ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹರಡಿರುವ ಹದಿನಾಲ್ಕು ಲೋಕದ ಕತ್ತಲೆಯನ್ನು ಚೆದುರಿಸಿ ಆಕಾಶದೊಳಗೆ ಒಬ್ಬನೇ ಸೂರ್ಯ ಹೊಳೆದು ಪ್ರಕಾಶಿಸುವಂತೆ, ಪಾಂಡವರ ಗರ್ವವನ್ನು ನಿಲ್ಲಿಸಿ ಭೂಮಂಡಲದೊಳಗೆ ಒಬ್ಬನೇ ದುರ್ಯೋಧನ, ಮತ್ತೊಬ್ಬರಿಲ್ಲ ಎಂದೆನಿಸಿ ತೋರುವಂತೆ ಮಾಡುತ್ತೇನೆ ಎಂದನು ಆ ಕರ್ಣ.
ಪದಾರ್ಥ (ಕ.ಗ.ಪ)
ಹಬ್ಬು-ಹರಡು, ಈಡಾಡು-ಚೆದುರಿಸು, ತೊಳಗಿ-ಹೊಳೆ, ಬೆಳಗು-ಪ್ರಕಾಶಿಸು, ಕೊಬ್ಬು-ಗರ್ವ
ಟಿಪ್ಪನೀ (ಕ.ಗ.ಪ)
ಗಯ - ಈ ಹೆಸರಿನವರು ಅನೇಕರಿದ್ದಾರೆ. ಮಹಾಭಾರತದಲ್ಲಿ ವಿಶೇಷವಾಗಿ ಪ್ರಸ್ತಾವಿತನಾಗಿರುವ ಗಯನು ಷೋಡಶ ಚಕ್ರವರ್ತಿಗಳಲ್ಲಿ ಒಬ್ಬನೆಂದು ಪ್ರಕೀರ್ತಿತನಾಗಿರುವ ರಾಜರ್ಷಿ. ‘ಯಜ್ಞ ವಿಭೂತಿಶ್ಚ ಗಯಸ್ಯ’ ಎಂದು ವರ್ಣಿತನಾಗಿರುವ ಗಯ ಚಕ್ರವರ್ತಿ ಅಮೂರ್ತ ರಯನ ಮಗ. ಈತ ತಪಸ್ವಿ, ಕೃಷ್ಣೋಪಾಸಕ, ಅಖಂಡ ಭಾರತದ ತೀರ್ಥಕ್ಷೇತ್ರಗಳನ್ನೂ ಮಹಾಪುರುಷರನ್ನೂ ಸಂದರ್ಶಿಸಿದವನು. ಗಯೆಯಲ್ಲಿ, ಪಯೋಷ್ಣೀ ಸರಸ್ವತೀ ನದಿಗಳ ತೀರಗಳಲ್ಲಿ ನೂರಾರು ಯಜ್ಞಗಳನ್ನು ಮಾಡಿದವನು. ಇವನು ಮಾಡಿದ ಒಂದು ಅಶ್ವಮೇಧ ಯಾಗದ ವರ್ಣನೆ ಅರಣ್ಯಪರ್ವದಲ್ಲಿ ಬರುತ್ತದೆ. ಆಹಾರ ಪದಾರ್ಥಗಳ ನೂರಾರು ಬೆಟ್ಟಗಳು, ತುಪ್ಪದ ಸಾವಿರಾರು ಕಾಲುವೆಗಳು, ನೂರಾರು ಮೊಸರಿನ ನದಿಗಳು, ಹೇರಳವಾಗಿ ದಾನ ಮಾಡುತ್ತಿದ್ದ ಸಂದರ್ಭದಲ್ಲಿ ಮೊಳಗವು ವೇದಘೋಷದಲ್ಲಿ ಉಳಿದೆಲ್ಲ ಸದ್ದುಗಳು ಅಡಗಿಹೋಗಿದ್ದವಂತೆ! ಸರಸ್ವತೀ ನದಿ ಈಯಾಗವನ್ನು ನೋಡಲು ‘ವಿಶಾಲಾ’ ಎಂಬ ಹೆಸರಿನಿಂದ ಆಗಮಿಸಿದ್ದಳಂತೆ! ಈತನ ಯಜ್ಞ ಶಾಲೆ ಇಪ್ಪತ್ತಾರು ಯೋಜನ ಅಗಲ! ಮೂವತ್ತು ಯೋಜನ ಉದ್ದ! ಇಪ್ಪತ್ತನಾಲ್ಕು ಯೋಜನ ಎತ್ತ! ಮಂಟಪಗಳೆಲ್ಲ ಚಿನ್ನದವು! ಇವನ ಯಾಗ ಸಿದ್ಧಿಯಿಂದಾಗಿ ಗಯ ಎಂಬ ಕ್ಷೇತ್ರಕ್ಕೆ ಗಯನ ಹೆಸರೇ ನಿಂತಿತು. ಈ ಗಯನಿಂದಾಗಿ ಅಕ್ಷಯ ವಟವೃಕ್ಷ ಮತ್ತು ಬ್ರಹ್ಮ ಸರೋವರಗಳು ವಿಖ್ಯಾತವಾಗಿವೆ. ಇವನು ಯಮನ ಆಸ್ಥಾನ ಸದಸ್ಯನಾಗಿದ್ದನಂತೆ. ಈತ ಯಾಗ ಮಾಡಿದ ಗಯಾ ಕ್ಷೇತ್ರದಲ್ಲಿ ಒಮ್ಮೆ ಶ್ರಾದ್ಧ ಮಾಡಿದರೆ ವಂಶದ ಇಪ್ಪತ್ತು ತಲೆಗಳು ಉದ್ಧಾರವಾಗುತ್ತವಂತೆ! ನೂರು ವರ್ಷ ಅವಿರತವಾಗಿ ಯಜ್ಞ ಮಾಡಿದರೆ ಅಗ್ನಿದೇವ ಪ್ರಸನ್ನನಾಗದೆ ಇರುತ್ತಾನೆಯೆ! ಅಗ್ನಿ ಸುಪ್ರೀತನಾಗಿ ‘ವರವನ್ನು ಕೇಳು’ ಎಂದರೆ ಈ ರಾಜರ್ಷಿ ಕೇಳಿದ್ದಾದರೂ ಏನು?
ಮೂಲ ...{Loading}...
ಹಬ್ಬುಗೆಯ ಹದಿನಾಲ್ಕು ಲೋಕದ
ಮೊಬ್ಬುಗಳನೀಡಾಡಿ ನಭದೊಳ
ಗೊಬ್ಬನೇ ರವಿ ತೊಳಗಿ ಬೆಳಗುವವೋಲು ಪಾಂಡವರ
ಕೊಬ್ಬುಗಳ ನಿಲಿಸುವೆನು ಧರೆಯೊಳ
ಗೊಬ್ಬನೇ ದುರ್ಯೋಧನನು ಮ
ತ್ತೊಬ್ಬರಿಲ್ಲೆಂದೆನಿಸಿ ತೋರುವೆನೆಂದನಾ ಕರ್ಣ ॥9॥
೦೧೦ ವಿದುರ ಭೀಷ್ಮಾದಿಗಳು ...{Loading}...
ವಿದುರ ಭೀಷ್ಮಾದಿಗಳು ನಿನ್ನಯ
ಸದನದೊಳಗುಂಡುಟ್ಟು ಪರರ
ಭ್ಯುದಯವನೆ ಬಯಸುವರು ದೂರುವರೆಮ್ಮನವರುಗಳ
ಹದನ ನೀನೇ ಬಲ್ಲೆ ಸಾಕಿ
ನ್ನದರ ಮಾತೇಕರಸ ತನ್ನಯ
ಕದನವನು ಚಿತ್ತೈಸು ಸಾಕಿನ್ನೆಂದನಾ ಕರ್ಣ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ವಿದುರ ಭೀಷ್ಮ ಮೊದಲಾದವರು ನಿನ್ನ ಮನೆಯಲ್ಲಿ ಉಂಡುಟ್ಟು ಇತರರ ಏಳಿಗೆಯನ್ನು ಆಶಿಸುವರು. ನಮ್ಮನ್ನು ದೂಷಿಸುವರು. ಅವರುಗಳ ರೀತಿಯನ್ನು ನೀನೇ ಬಲ್ಲೆ. ಸಾಕಿನ್ನು ಅದರ ಮಾತೇಕೆ ? ರಾಜನ್ ನನ್ನ ಕದನವನ್ನು ಆಲೋಚಿಸು. ಸಾಕಿನ್ನು” ಎಂದನು ಆ ಕರ್ಣ.
ಪದಾರ್ಥ (ಕ.ಗ.ಪ)
ಅಭ್ಯುದಯ-ಏಳಿಗೆ, ಬಯಸು-ಆಶಿಸು, ದೂರು-ದೂಷಿಸು, ಹದನ-ರೀತಿ, ಚಿತ್ತೈಸು-ಆಲೋಚಿಸು
ಮೂಲ ...{Loading}...
ವಿದುರ ಭೀಷ್ಮಾದಿಗಳು ನಿನ್ನಯ
ಸದನದೊಳಗುಂಡುಟ್ಟು ಪರರ
ಭ್ಯುದಯವನೆ ಬಯಸುವರು ದೂರುವರೆಮ್ಮನವರುಗಳ
ಹದನ ನೀನೇ ಬಲ್ಲೆ ಸಾಕಿ
ನ್ನದರ ಮಾತೇಕರಸ ತನ್ನಯ
ಕದನವನು ಚಿತ್ತೈಸು ಸಾಕಿನ್ನೆಂದನಾ ಕರ್ಣ ॥10॥
೦೧೧ ಸಹಜವೀ ನುಡಿ ...{Loading}...
ಸಹಜವೀ ನುಡಿ ಕರ್ಣನಾಡಿದ
ನಹುದು ಪಾಂಡವರೆಂಬವರು ಕಡು
ಸಹಸಿಗಳು ಗೆಲಲರಿದು ಕುಹಕೋಪಾಯ ಮಾರ್ಗದಲಿ
ಅಹಿತರನು ಗೆಲಬಹುದು ಪರಿಕರ
ಸಹಿತವರುಗಳ ನಿಮ್ಮ ಚಿತ್ತಕೆ
ಬಹರೆ ತನ್ನಭಿಮತವನವಧರಿಸೆಂದನಾ ಶಕುನಿ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ಆಡಿದ ಈ ಮಾತು ಯೋಗ್ಯವಾಗಿದೆ. ಆದರೆ, ಪಾಂಡವರೆಂಬವರು ಅತಿ ಸಾಹಸಿಗರು. ಅವರನ್ನು ಗೆಲ್ಲುವುದು ಅಸಾಧ್ಯ. ಕಪಟದ ಉಪಾಯ ಮಾರ್ಗದಲ್ಲಿ ಹಿತರಲ್ಲದ ಅವರನ್ನು ಪರಿವಾರ ಸಮೇತ ಗೆಲ್ಲಬಹುದು. ನಿಮ್ಮ ಮನಸ್ಸಿಗೆ ಬಂದರೆ ನನ್ನ ಅಭಿಪ್ರಾಯವನ್ನು ಮನಸ್ಸು ಕೊಟ್ಟು ಕೇಳೆಂದು ಶಕುನಿ ಹೇಳಿದನು.
ಪದಾರ್ಥ (ಕ.ಗ.ಪ)
ಕಡು-ಅತಿ, ಕುಹಕ-ಕಪಟ, ಪರಿಕರ-ಪರಿವಾರ, ಅಭಿಮತ-ಅಭಿಪ್ರಾಯ
ಟಿಪ್ಪನೀ (ಕ.ಗ.ಪ)
ಶಕುನಿ-ಗಾಂಧಾರ ದೇಶದ ಸುಬಲರಾಜನ ಗಂಡು ಮಕ್ಕಳಲ್ಲಿ ಹಿರಿಯವನು. ಗಾಂಧಾರಿಯ ಒಡಹುಟ್ಟಿದವನು. ದುರ್ಯೋಧನನ ಸೋದರ ಮಾವ. ಇವನು ಯಾವಾಗಲೂ ದುರ್ಯೋಧನನ ಜೊತೆಯಲ್ಲಿಯೇ ಇರುತ್ತಾ ಅವನನ್ನು ಕೆಟ್ಟ ಹಾದಿ ಹಿಡಿಯುವಂತೆ ಪ್ರೋತ್ಸಾಹಿಸಿದನು.
ಮೂಲ ...{Loading}...
ಸಹಜವೀ ನುಡಿ ಕರ್ಣನಾಡಿದ
ನಹುದು ಪಾಂಡವರೆಂಬವರು ಕಡು
ಸಹಸಿಗಳು ಗೆಲಲರಿದು ಕುಹಕೋಪಾಯ ಮಾರ್ಗದಲಿ
ಅಹಿತರನು ಗೆಲಬಹುದು ಪರಿಕರ
ಸಹಿತವರುಗಳ ನಿಮ್ಮ ಚಿತ್ತಕೆ
ಬಹರೆ ತನ್ನಭಿಮತವನವಧರಿಸೆಂದನಾ ಶಕುನಿ ॥11॥
೦೧೨ ಐದು ಮುಖವೀರೈದು ...{Loading}...
ಐದು ಮುಖವೀರೈದು ಭುಜ ಹದಿ
ನೈದು ಕಂಗಳ ವಿಗಡ ರುದ್ರನು
ಮೇದಿನಿಯ ಮೇಲೊಂದು ಶಿರ ಭುಜವೆರಡನಳವಡಿಸಿ
ಆದಿಪುರುಷನು ಭೀಮ ಪೆಸರಿನ
ಲೈದೆ ಜನಿಸಿದನಾತನಿದಿರಲಿ
ಕೈದುಕಾರನದಾವನೈ ಹೇಳೆಂದನಾ ಶಕುನಿ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಐದು ಮುಖಗಳು, ಹತ್ತು ಭುಜಗಳು, ಹದಿನೈದು ಕಣ್ಣುಗಳ ಭಯಂಕರ ರುದ್ರನೇ ಭೂಮಿಯಲ್ಲಿ ಒಂದು ತಲೆ, ಎರಡು ಭುಜಗಳನ್ನಳವಡಿಸಿಕೊಂಡು ಆದಿಪುರುಷನೇ ಭೀಮನೆಂಬ ಹೆಸರಿನಿಂದ ಹುಟ್ಟಿ ಬಂದಿದ್ದಾನೆ. ಆತನ ಎದುರಾಗಿ ನಿಲ್ಲುವ ವೀರನು ಅದಾರಿದ್ದಾನೆ ? ಹೇಳೆಂದು ಶಕುನಿ ಕೇಳಿದನು.
ಪದಾರ್ಥ (ಕ.ಗ.ಪ)
ವಿಗಡ-ಭಯಂಕರ, ಕೈದುಕಾರ-ವೀರ
ಟಿಪ್ಪನೀ (ಕ.ಗ.ಪ)
ಈಶ್ವರ - ಮಹಾಭಾರತವು ಶಿವಪ್ರಧಾನವೋ, ವಿಷ್ಣುಪ್ರಧಾನ ಕಾವ್ಯವೋ ಎಂಬ ಬಗ್ಗೆ ಹಲವಾರು ವಿದ್ವಾಂಸರು ಚರ್ಚೆ ನಡೆಸುವಷ್ಟರ ಮಟ್ಟಿಗೆ ಶಿವ-ಕೃಷ್ಣ ಇಬ್ಬರ ವಿಚಾರವೂ ಚರ್ಚಿತವಾಗಿದೆ. ಸ್ವಯಂ ಶ್ರೀಕೃಷ್ಣನೇ ಶತರುದ್ರೀಯವನ್ನು ಹೇಳಿಕೊಂಡು ಶಿವನ ಕೃಪೆಗೆ ಪಾತ್ರನಾಗುತ್ತಾನೆ. ‘ಸರ್ವದೇವೈರಭಿಷುಟತಂ’ ಎಂಬ ಹೆಗ್ಗಳಿಕೆಗೆ ಶಿವ ಪಾತ್ರನಾಗಿದ್ದಾನೆ. ಶಿವನು ಬರೆದ 10000 ಶ್ಲೋಕಗಳ ವೈಶಾಲಾಕ್ಷ ಎಂಬ ಗ್ರಂಥದ ಬಗೆಗೂ ಮಹಾಭಾರತದಲ್ಲಿ ಉಲ್ಲೇಖವಿದೆ. ಈ ಗ್ರಂಥದಲ್ಲಿ ಶಿವನ ಸಹಸ್ರನಾಮಾವಳಿ ಇರುವುದರ ಜೊತೆಗೆ ಅವುಗಳ ಬಗೆಗೆ ಸಾಂಸ್ಕೃತಿಕ ವಿವರಗಳೂ ಸಾಕಷ್ಟಿವೆ. ‘ರುದ್ರಾಣಾಂ ಶಂಕರಶ್ಚಾಸ್ಮಿ’ ಎಂದು ಕೃಷ್ಣನೇ ಹೇಳಿಲ್ಲವೇ?
ಈಶ್ವರನು ಗಾಂಧಾರಿಗೆ ನೂರು ಮಕ್ಕಳಾಗುವಂತೆ ವರವನ್ನಿತ್ತವನು. ಅಶ್ವತ್ಥಾಮ ಸೈಂಧವರಿಗೆ ಸಹಾಯಹಸ್ತ ಚಾಚಿದವನು. ಕರ್ಣಾರ್ಜುನರ ಘೋರ ಸಂಗ್ರಾಮವನ್ನು ನೋಡಲು ಖುದ್ದಾಗಿ ಬಂದವನು. ಅಶ್ವತ್ತಾಮನಿಗೆ ಶಕ್ತಿ ಇತ್ತವನೂ ಶಿವನೇ! ಬ್ರಹ್ಮಚಾರಿಯಾದ ವ್ಯಾಸರಿಗೆ ಒಂದು ಮಗುವನ್ನು ವರವಾಗಿ ನೀಡಿದ್ದೂ ಮಹಾಭಾರತದಲ್ಲಿ ಉಕ್ತವಾಗಿದೆ. ಇಡೀ ಮಹಾಭಾರತದಲ್ಲಿ ಎಲ್ಲ ಪರ್ವಗಳಲ್ಲೂ ಈಶ್ವರನ ಪ್ರಸಕ್ತಿಯಿದೆ. ಶಿವನು ಗಂಗೆಯನ್ನು ಜಟೆಯಲ್ಲಿ ಧರಿಸಿದ ಪ್ರಸಂಗವು ವಿಸ್ತಾರವಾಗಿ ವರ್ಣಿತವಾಗಿದೆ. ಅನಂಗಾಂಗಹ, ಅನಂತ, ಅಥರ್ವ, ಬಭ್ರು, ಬಹುರೂಪ, ಸ್ಥಾಣು, ಅಂಧಕಘಾತಿ, ಭಗಘ್ನ, ಭಾರ್ಗವ, ಭೀಮ, ಭೂತಪತಿ, ಚಕ್ರ, ಚರ್ಮವಾಸ, ಚೇಕಿತಾನ, ಶಿರವಾಸ, ಶಂಭು ಮೊದಲಾದ ಹೆಸರುಗಳೆಲ್ಲ ಭಾರತ ಗ್ರಂಥದಲ್ಲಿ ಪ್ರಸ್ತಾವಿತವಾಗಿವೆ. ಹದಿಮೂರನೆಯ ಪರ್ವದಲ್ಲಂತೂ ‘ಶಂಕರಾದ್ ಊಧ್ರ್ವಂ ನಾನ್ಯಂ ಪಶ್ಯಾಮಿ ದೈವತಂ’ ಎಂಬ ಹೇಳಿಕೆಯಿದ್ದು ಶಿವನ ಮಹತಿಯನ್ನು ಸ್ರಚಿಸುತ್ತದೆ. ಶಿವನಿಗೆ ಎರಡು ರೂಪಗಳಿವೆ ಎಂದು ಶ್ರೀ ಕೃಷ್ಣನೇ ಹೇಳಿದ್ದಾನೆ. ಭಯಂಕರ ಅಗ್ನಿರೂಪ. ಅಗ್ನಿ, ಸಿಡಿಲು ಮತ್ತು ಸೂರ್ಯರುಗಳ ತೇಜಸ್ಸು ಅವನಲ್ಲಿದೆ. ಅವನ ಬಾಯಿಂದ ಅಗ್ನಿದೇವನು ಪ್ರತ್ಯಕ್ಷವಾದುದನ್ನು ಈ ಸಮಯದಲ್ಲಿ ನೆನಪು ಮಾಡಿಕೊಳ್ಳಬಹುದು. ಇನ್ನೊಂದು ಶಿವರೂಪ, ಶಾಂತರೂಪ, ನೀರು ಮತ್ತು ಚಂದ್ರರು ಇವನ ದೇಹಭಾಗಗಳೇ ಅಲ್ಲವೆ? ಶಿವನ ಶಕ್ತಿಯು ಜ್ವರದ ರೂಪದಲ್ಲಿ ವೃತ್ರಾಸುರನ ದೇಹಕ್ಕೆ ನುಗ್ಗಿದ ಪ್ರಸಂಗ, ವೃತ್ರನ ಮೇಲೆ ದಂಡೆತ್ತಿಹೋಗುವ ಇಂದ್ರನಿಗೆ ಒಂದು ಭಲ್ಲೆಯನ್ನು ಕರುಣಿಸಿದ ಪ್ರಸಂಗ ಇವೆಲ್ಲ್ಲ ಮಹಾಭಾರತದಲ್ಲಿ ಸೊಗಸಾಗಿ ವರ್ಣಿತವಾಗಿವೆ. ಶಿವಪುರಾಣದಲ್ಲಿ ಬರುವ ಅನೇಕ ಶಿವ ಸಂಬಂಧಿಯಾದ ಕಥೆಗಳು ಮಹಾಭಾರತದಲ್ಲಿವೆ. ಸಮುದ್ರದ ಘೋಷವನ್ನು ಶಿವನ ಅಟ್ಟಹಾಸಕ್ಕೆ ಸಮೀಕರಿಸಿರುವುದು ಎಂತಹ ಸುಂದರ ಪ್ರತಿಮೆ! ಕಿರಾತಾರ್ಜುನೀಯ ಪ್ರಸಂಗವಂತೂ ಅರ್ಜುನ ಶಿವರನನು ಎದುರು ಬದುರು ನಿಲ್ಲಿಸಿ ಮಹಾಭಾರತವನ್ನು ದೇವ-ಮಾನವ ಕಾವ್ಯವಾಗಿಸಿದೆ. ಹರಿಹರರ ಅಭೇದವನ್ನು ಸಾರುವುದೂ ವ್ಯಾಸರ ಉದ್ದೇಶವಾಗಿರುವಂತಿದೆ.
ರುದ್ರ-ಕಲ್ಪಾದಿಯಲ್ಲಿ ಬ್ರಹ್ಮನ ಭ್ರೂಮಧ್ಯದಿಂದ ಜನಿಸಿದವನು. ಇವನು ಹುಟ್ಟುತ್ತಲೇ ಅಳುತ್ತಿದ್ದನಾಗಿ ರುದ್ರನೆಂದು ಹೆಸರು. ಈ ರುದ್ರರು ಹನ್ನೊಂದು ಮಂದಿ.
ಅಜೈಕ ಪಾತ್, ಅಹಿರ್ಬುಧ್ನ್ಯ, ಪಿನಾಕಿ, ಅಪರಾಜಿತ, ಋತ, ಪಿತೃರೂಪ, ತ್ರ್ಯಂಬಕ, ವೃಷಾಕಪಿ, ಶಂಭು, ಹವನ, ಈಶ್ವರ-ಏಕಾದಶರುದ್ರರು.
ಮೂಲ ...{Loading}...
ಐದು ಮುಖವೀರೈದು ಭುಜ ಹದಿ
ನೈದು ಕಂಗಳ ವಿಗಡ ರುದ್ರನು
ಮೇದಿನಿಯ ಮೇಲೊಂದು ಶಿರ ಭುಜವೆರಡನಳವಡಿಸಿ
ಆದಿಪುರುಷನು ಭೀಮ ಪೆಸರಿನ
ಲೈದೆ ಜನಿಸಿದನಾತನಿದಿರಲಿ
ಕೈದುಕಾರನದಾವನೈ ಹೇಳೆಂದನಾ ಶಕುನಿ
೦೧೩ ಅರಸ ಕೇಳ್ಬಿಲು ...{Loading}...
ಅರಸ ಕೇಳ್ಬಿಲು ವಿದ್ಯದಲಿ ಮೂ
ವರು ಕಣಾ ಸಾಮಥ್ರ್ಯ ಪುರುಷರು
ಧರೆಯೊಳೊಬ್ಬರಿಗೊಂದು ಗುಣ ಪಾರ್ಥಂಗೆ ಮೂರು ಗುಣ
ಭರಿತವಾಗಿಹುದಾತನೊಬ್ಬನ
ಸರಿಸದಲಿ ಮಾರಾಂತು ಜೀವಿಸಿ
ಮರಳಬಲ್ಲವನಾವನೈ ಹೇಳೆಂದನಾ ಶಕುನಿ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸ, ಕೇಳು, ಭೂಮಿಯಲ್ಲಿ ಬಿಲ್ಲು ವಿದ್ಯೆಯಲ್ಲಿ ಯೋಗ್ಯತೆ ಇರುವವರು ಮೂವರು ಪುರುಷರು. ಅವರಲ್ಲಿ ಒಬ್ಬೊಬ್ಬರಿಗೂ ಒಂದು ಗುಣವಾದರೆ ಪಾರ್ಥನಿಗೆ ಮೂರು ಗುಣಗಳು ತುಂಬಿವೆ. ಆತನೊಬ್ಬನ ಸಮೀಪದಲ್ಲಿ ಪ್ರತಿಭಟಿಸಿ ಜೀವಿಸಿ ಹಿಂತಿರುಗಿ ಬರಬಲ್ಲವನು ಯಾರಿದ್ದಾನೆ ಹೇಳು ಎಂದು ಶಕುನಿ ಕೇಳಿದನು.
ಪದಾರ್ಥ (ಕ.ಗ.ಪ)
ಭರಿತ-ತುಂಬಿದ, ಸಾಮಥ್ರ್ಯ-ಯೋಗ್ಯತೆ, ಸರಿಸ-ಸಮೀಪ, ಮಾರಾಂತು-ಪ್ರತಿಭಟಿಸಿ
ಮೂಲ ...{Loading}...
ಅರಸ ಕೇಳ್ಬಿಲು ವಿದ್ಯದಲಿ ಮೂ
ವರು ಕಣಾ ಸಾಮಥ್ರ್ಯ ಪುರುಷರು
ಧರೆಯೊಳೊಬ್ಬರಿಗೊಂದು ಗುಣ ಪಾರ್ಥಂಗೆ ಮೂರು ಗುಣ
ಭರಿತವಾಗಿಹುದಾತನೊಬ್ಬನ
ಸರಿಸದಲಿ ಮಾರಾಂತು ಜೀವಿಸಿ
ಮರಳಬಲ್ಲವನಾವನೈ ಹೇಳೆಂದನಾ ಶಕುನಿ ॥13॥
೦೧೪ ರಾಮಚನ್ದ್ರನ ಚರಣಯುಗ ...{Loading}...
ರಾಮಚಂದ್ರನ ಚರಣಯುಗ ನಿ
ಸ್ಸೀಮ ಭೀಷ್ಮಾಚಾರಿಯರ ಶಿರ
ವಾ ಮಹಾರಥ ದ್ರೋಣನೆದೆ ನಡುಗುವುದು ಸಮರದಲಿ
ಸೌಮನಸ್ಯನು ನಿಷ್ಪ್ರಕಂಪ ಸ
ನಾಮನರ್ಜುನ ದೇವನಿದಿರಲಿ
ಭೂಮಿಯಲಿ ಬಿಲ್ಲಾಳದಾವವನೆಂದನಾ ಶಕುನಿ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದಲ್ಲಿ ಶ್ರೀರಾಮಚಂದ್ರನ ಎರಡು ಪಾದಗಳು, ಅತಿಶಯದ ಭೀಷ್ಮಾಚಾರ್ಯರ ತಲೆ, ಆ ಮಹಾರಥನಾದ ದ್ರೋಣನ ಎದೆ - ಮೂರೂ ನಡುಗುವುದು. ಒಳ್ಳೆಯ ಮನಸ್ಸಿನಿಂದ ಕೂಡಿರುವ, ನಡುಗದ, ಹೆಸರುಳ್ಳವನಾದ ಅರ್ಜುನ ದೇವನ ಎದುರಿನಲ್ಲಿ ಭೂಮಿಯಲ್ಲಿ ನಿಲ್ಲುವ ಧನುರ್ಧಾರಿ ಅದಾರಿದ್ದಾನೆ ? ಎಂದನು ಆ ಶಕುನಿ.
ಪದಾರ್ಥ (ಕ.ಗ.ಪ)
ನಿಸ್ಸೀಮ-ಅತಿಶಯ, ಸೌಮನಸ್ಯ-ಒಳ್ಳೆಯ ಮನಸ್ಸಿನಿಂದ ಕೂಡಿರುವ, ನಿಷ್ಪ್ರಕಂಪನ-ನಡುಗದ, ಸನಾಮ-ಹೆಸರುಳ್ಳವನು
ಮೂಲ ...{Loading}...
ರಾಮಚಂದ್ರನ ಚರಣಯುಗ ನಿ
ಸ್ಸೀಮ ಭೀಷ್ಮಾಚಾರಿಯರ ಶಿರ
ವಾ ಮಹಾರಥ ದ್ರೋಣನೆದೆ ನಡುಗುವುದು ಸಮರದಲಿ
ಸೌಮನಸ್ಯನು ನಿಷ್ಪ್ರಕಂಪ ಸ
ನಾಮನರ್ಜುನ ದೇವನಿದಿರಲಿ
ಭೂಮಿಯಲಿ ಬಿಲ್ಲಾಳದಾವವನೆಂದನಾ ಶಕುನಿ ॥14॥
೦೧೫ ಶತ್ರುಗಳ ಸಂಹರಿಸಿ ...{Loading}...
ಶತ್ರುಗಳ ಸಂಹರಿಸಿ ರಾಜ್ಯವ
ನೊತ್ತಿಯಾಳುವೆನೆಂಬ ಸಾಹಸ
ಸತ್ವಗುಣ ನಿನಗಿಲ್ಲ ಪಾಂಡವರತುಲ ಭುಜಬಲರು
ಕೃತ್ರಿಮದ ಮುಖದಿಂದ ರಿಪುಗಳ
ಕಿತ್ತು ಹಾಯಿಕಿ ನೆಲನನೇಕ
ಚ್ಛತ್ರದಲಿ ಸಲಹುವುದು ಮತ ಕೇಳ್ ಎಂದನಾ ಶಕುನಿ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುಗಳನ್ನು ಸಂಹಾರ ಮಾಡಿ ರಾಜ್ಯವನ್ನು ಆಕ್ರಮಿಸಿ ಆಳುವೆನೆಂಬ ಸಾಹಸ ಸತ್ತ್ವಗುಣ ನಿನಗಿಲ್ಲ. ಪಾಂಡವರು ಬಹಳ ಪರಾಕ್ರಮಿಗಳು. ಕಪಟದ ಮೂಲಕ ಶತ್ರುಗಳನ್ನು ಕಿತ್ತುಹಾಕಿ ರಾಜ್ಯವನ್ನು ಏಕಚ್ಛತ್ರದಲ್ಲಿ ಕಾಪಾಡುವುದು ತನ್ನ ಅಭಿಪ್ರಾಯವೆಂದು ಶಕುನಿ ಹೇಳಿದನು.
ಪದಾರ್ಥ (ಕ.ಗ.ಪ)
ಒತ್ತಿ-ಆಕ್ರಮಿಸಿ, ಕೃತ್ರಿಮ-ಕಪಟ, ಮುಖ-ಮೂಲಕ ಏಕಚ್ಛತ್ರ-ಒಬ್ಬ ಅರಸನ ಕೆಳಗಿರುವ ವಿಶಾಲ ರಾಜ್ಯ, ಮತ-ಅಭಿಪ್ರಾಯ
ಮೂಲ ...{Loading}...
ಶತ್ರುಗಳ ಸಂಹರಿಸಿ ರಾಜ್ಯವ
ನೊತ್ತಿಯಾಳುವೆನೆಂಬ ಸಾಹಸ
ಸತ್ವಗುಣ ನಿನಗಿಲ್ಲ ಪಾಂಡವರತುಲ ಭುಜಬಲರು
ಕೃತ್ರಿಮದ ಮುಖದಿಂದ ರಿಪುಗಳ
ಕಿತ್ತು ಹಾಯಿಕಿ ನೆಲನನೇಕ
ಚ್ಛತ್ರದಲಿ ಸಲಹುವುದು ಮತ ಕೇಳೆಂದನಾ ಶಕುನಿ ॥15॥
೦೧೬ ಸೋದರರುಗಳು ನೀವು ...{Loading}...
ಸೋದರರುಗಳು ನೀವು ನಿಮ್ಮೊಳು
ಭೇದ ಮಂತ್ರವ ಮಾಡುವುದು ಮ
ರ್ಯಾದೆಯೇ ನಾವ್ ನಿಮ್ಮಡಿಯಲರಮನೆಯ ಸೇವಕರು
ವಾದಿಸುವರಿತ್ತಂಡ ಸರಿ ನಮ
ಗಾದರೆಯು ಕಂಡುದ ನುಡಿಯ ಬೇ
ಕಾದರಿಸು ಮೇಣ್ ಮಾಣು ಬಿನ್ನಹವೆಂದನಾ ಶಕುನಿ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀವುಗಳು ಸೋದರರು. ನಿಮ್ಮಲ್ಲಿ ಒಡೆಯುವ ಆಲೋಚನೆ ಮಾಡುವುದು ಸಭ್ಯತನವೇ ? ನಾವಾದರೋ ನಿಮ್ಮಧೀನರಾದ ಅರಮನೆಯ ಸೇವಕರು. ವಾದಿಸುವುದಾದರೆ ನಮಗೆ ಎರಡು ಪಕ್ಷವೂ ಸಮಾನವೆ. ಆದರೂ ಕಂಡದ್ದನ್ನು ಹೇಳಬೇಕು. ಬೇಕಾದರೆ ಮನ್ನಿಸು ಇಲ್ಲವೆ ಬಿಡು ಇದು ನನ್ನ ವಿಜ್ಞಾಪನೆ ಎಂದು ಶಕುನಿ ಹೇಳಿದನು.
ಪದಾರ್ಥ (ಕ.ಗ.ಪ)
ಮಂತ್ರ-ಅಲೋಚನೆ, ಮರ್ಯಾದೆ-ಸಭ್ಯತನ, ಇತ್ತಂಡ-ಎರಡು ಪಕ್ಷ, ಆದರಿಸು-ಮನ್ನಿಸು, ಬಿನ್ನಹ-ವಿಜ್ಞಾಪನೆ
ಮೂಲ ...{Loading}...
ಸೋದರರುಗಳು ನೀವು ನಿಮ್ಮೊಳು
ಭೇದ ಮಂತ್ರವ ಮಾಡುವುದು ಮ
ರ್ಯಾದೆಯೇ ನಾವ್ ನಿಮ್ಮಡಿಯಲರಮನೆಯ ಸೇವಕರು
ವಾದಿಸುವರಿತ್ತಂಡ ಸರಿ ನಮ
ಗಾದರೆಯು ಕಂಡುದ ನುಡಿಯ ಬೇ
ಕಾದರಿಸು ಮೇಣ್ ಮಾಣು ಬಿನ್ನಹವೆಂದನಾ ಶಕುನಿ ॥16॥
೦೧೭ ಪಕ್ಷವೆರಡೇ ಲೋಕದೊಳ್ ...{Loading}...
ಪಕ್ಷವೆರಡೇ ಲೋಕದೊಳ್ ಪಿತೃ
ಪಕ್ಷ ಮೇಣಾ ಮಾತೃಪಕ್ಷ ವಿ
ಪಕ್ಷ ತಂದೆಯ ದೆಸೆ ಸಪಕ್ಷವು ತಾಯ ದೆಸೆಯವರು
ತಕ್ಷಕನ ತೆರನಂತೆ ನಿಮ್ಮನು
ಭಕ್ಷಿಸುವರಾವಂಗದಲಿ ನೀ
ನೀಕ್ಷಿಸುವುದೈ ಪಾಂಡು ಪುತ್ರರನೆಂದನಾ ಶಕುನಿ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಲೋಕದಲ್ಲಿ ಇರುವುದು ಎರಡೇ ಪಕ್ಷ. ಒಂದು ಪಿತೃಪಕ್ಷ ಇನ್ನೊಂದು ಮಾತೃಪಕ್ಷ. ತಂದೆಯ ಕಡೆಯವರು ಶತ್ರುಪಕ್ಷ ತಾಯಿಯ ಕಡೆಯವರು ಸಹಾಯಕರು. ತಕ್ಷಕನ ರೀತಿಯಲ್ಲಿ ನಿಮ್ಮನ್ನು ಯಾವ ರೀತಿಯಲ್ಲಾದರೂ ಅವರು ಭಕ್ಷಿಸುವವರೇ. ಪಾಂಡುಪುತ್ರರ ಮೇಲೆ ಕಣ್ಣಿಟ್ಟು ನೋಡುತ್ತಿರಬೇಕು.
ಪದಾರ್ಥ (ಕ.ಗ.ಪ)
ಅಂಗ-ರೀತಿ, ತೆರ-ರೀತಿ
ಟಿಪ್ಪನೀ (ಕ.ಗ.ಪ)
ತಕ್ಷಕ - ತಕ್ಷಕನು ಕದ್ರು ಮತ್ತು ಕಶ್ಯಪ ಇವರ ಪುತ್ರನಾಗಿ ಖಾಂಡವ ವನದಲ್ಲಿ ವಾಸವಾಗಿದ್ದ ಒಬ್ಬ ನಾಗ. ಒಬ್ಬ ಭಿಕ್ಷುಕನ ರೂಪದಲ್ಲಿ ಬಂದು ಉದಂಕನು (ಉತ್ತಂಕ) ಗುರುವಿಗೆ ಕೊಡಲು ತೆಗೆದುಕೊಂಡು ಹೋಗುತ್ತಿದ್ದ ಕುಂಡಲಗಳನ್ನು ಅಪಹರಿಸಿ ಅನಂತರ ಹಿಂದಿರುಗಿಸಿದವನೂ ಈತನೇ. ಶೃಂಗಿ ಋಷಿಯ ಶಾಪವನ್ನು ಪೂರೈಸಲು ಪರೀಕ್ಷಿತ್ ರಾಜನನ್ನು ಕಚ್ಚಿ ಸಾಯಿಸಿದವ. ಈತನು ತನ್ನ ಆಭರಣವನ್ನು ಕದ್ದು ನಾಗಾಲೋಕಕ್ಕೆ ಓಡಿದ್ದು ಉತ್ತಂಕನ ಕೋಪವನ್ನು ಹೆಚ್ಚಿಸಿತ್ತು. ಆದುದರಿಂದ ಅವನ ಮೇಲೆ ಸೇಡು ತೀರಿಸಿಕೊಳ್ಳಲು ಉತ್ತಂಕನು ಜನಮೇಜಯನ ಬಳಿ ಹೋಗಿ ತಂದೆ ಪರೀಕ್ಷಿತನ ಸಾವಿಗೆ ಕಾರಣನಾದ ತಕ್ಷಕನನ್ನು ಸರ್ಪಯಜ್ಞದಲ್ಲಿ ಆಹುತಿಕೊಡುವಂತೆ ಪ್ರೇರಿಸಿದ. ತಕ್ಷಕನು ಪರೀಕ್ಷಿತನನ್ನು ಕೊಂದ ಸಂದರ್ಭ ವಿಶಿಷ್ಟವಾಗಿದೆ. ಭದ್ರವಾದ ಕಾವಲಿದ್ದುದನ್ನು ತಿಳಿದು ಬ್ರಾಹ್ಮಣ ವೇಷ ಧರಿಸಿ ಹಲವು ನಾಗಬಾಲರನ್ನು ಬ್ರಾಹ್ಮಣರ ವೇಷದಲ್ಲಿ ಕರೆದುಕೊಂಡು ಬರುತ್ತಿದ್ದ ದಾರಿಯಲ್ಲಿ ಇನ್ನೊಬ್ಬ ಬ್ರಾಹ್ಮಣ ಎದುರಾಗಬೇಕೆ? ಅವನು ಹಾವು ಕಚ್ಚಿದ ನಂತರ ಪರೀಕ್ಷಿತನನ್ನು ತನ್ನ ಮಂತ್ರಶಕ್ತಿಯಿಂದ ಬದುಕಿಸಿ ದ್ರವ್ಯಸಂಪಾದನೆ ಮಾಡುವ ಉದ್ದೇಶದಿಂದ ಬರುತ್ತಿದ್ದ. ಇಬ್ಬರಿಗೂ ವಾಗ್ವಾದವಾಯಿತು. ಪರೀಕ್ಷಾರ್ಥವಾಗಿ ತಕ್ಷಕನು ಒಂದು ಮರವನ್ನು ಸುಟ್ಟು ಭಸ್ಮ ಮಾಡಿದರೆ ಆ ಬ್ರಾಹ್ಮಣ ಕೂಡಲೇ ಮಂತ್ರಶಕ್ತಿಯಿಂದ ಮರಕ್ಕೆ ಜೀವದಾನ ಮಾಡಿ ತೋರಿಸಿದ. ತಕ್ಷಕನು ಅ ಬ್ರಾಹ್ಮಣನಿಗೆ ಅಪಾರ ಧನವನ್ನಿತ್ತು ತನ್ನ ಜೊತೆ ಪರೀಕ್ಷಿತನ ಬಳಿಗೆ ಬಾರದಂತೆ ಒಪ್ಪಿಸಿ ಹಿಂದಕ್ಕೆ ಕಳಿಸಿದ. ಅನಂತರ ಒಂದು ನಿಂಬೆಯ ಹಣ್ಣಿನೊಳಗೆ ಪ್ರವೇಶಿಸಿದ. ಬ್ರಾಹ್ಮಣರನ್ನು ಸ್ವಾಗತಿಸಿದ ಪರೀಕ್ಷಿತ್ ರಾಜ ಅವರು ಕೊಟ್ಟ ನಿಂಬೆಹಣ್ಣನ್ನು ಕೈಯಲ್ಲಿ ಹಿಡಿದು ಮೂಸಿ ನೋಡುವಾಗ ತಕ್ಷಕನು ಈಚೆ ಬಂದು ಪರೀಕ್ಷಿತನನ್ನು ಕಚ್ಚಿಕೊಂದ.
ಮೂಲ ...{Loading}...
ಪಕ್ಷವೆರಡೇ ಲೋಕದೊಳ್ ಪಿತೃ
ಪಕ್ಷ ಮೇಣಾ ಮಾತೃಪಕ್ಷ ವಿ
ಪಕ್ಷ ತಂದೆಯ ದೆಸೆ ಸಪಕ್ಷವು ತಾಯ ದೆಸೆಯವರು
ತಕ್ಷಕನ ತೆರನಂತೆ ನಿಮ್ಮನು
ಭಕ್ಷಿಸುವರಾವಂಗದಲಿ ನೀ
ನೀಕ್ಷಿಸುವುದೈ ಪಾಂಡು ಪುತ್ರರನೆಂದನಾ ಶಕುನಿ ॥17॥
೦೧೮ ಮೊಳೆಯಲೇ ಮುರುಡಿಸಲು ...{Loading}...
ಮೊಳೆಯಲೇ ಮುರುಡಿಸಲು ಬೇಹುದು
ಬಲಿದ ಬಳಿಕದು ನಿನ್ನ ಹವಣೇ
ಇಳೆಯೊಳರ್ಧವನಿತ್ತು ರಿಪುಗಳ ಹೆಚ್ಚಿಸಿದ ಬಳಿಕ
ಗೆಲುವನಾವನು ದೇವ ದಾನವ
ರೊಳಗೆ ಭೀಮಾರ್ಜುನರ ಕೈ ಮನ
ದಳವನರಿಯಾ ಭಾರವೈ ಮೇಲೆಂದನಾ ಶಕುನಿ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೊಳಕೆಯಲ್ಲೇ ಮುರುಟಿಸಬೇಕು. ಬಲಿತ ಬಳಿಕ ಅದು ನಿನ್ನ ಆಲೋಚನೆಗೆ ಸಿಕ್ಕುವುದೇ ? ರಾಜ್ಯದಲ್ಲಿ ಅರ್ಧವನ್ನು ಕೊಟ್ಟು ಶತ್ರುಗಳನ್ನು ಹೆಚ್ಚಿಸಿದ ಬಳಿಕ ಅವರನ್ನು ಗೆಲ್ಲುವವನು ದೇವದಾನವರೊಳಗೆ ಯಾವನಿದ್ದಾನೆ ? ಭೀಮಾರ್ಜುನರ ಕೈಮನದ ಶಕ್ತಿಯನ್ನು ನೀನು ತಿಳಿದಿಲ್ಲವೇ ? ಆ ಮೇಲೆ ಬಹಳ ಕಷ್ಟವಾಗುತ್ತದೆ ಎಂದು ಶಕುನಿ ಹೇಳಿದನು.
ಪದಾರ್ಥ (ಕ.ಗ.ಪ)
ಮುರುಡಿಸು-ಮುರುಟಿಸು, ಭಾರ-ಕಷ್ಟ, ಹವಣು-ಆಲೋಚನೆ
ಮೂಲ ...{Loading}...
ಮೊಳೆಯಲೇ ಮುರುಡಿಸಲು ಬೇಹುದು
ಬಲಿದ ಬಳಿಕದು ನಿನ್ನ ಹವಣೇ
ಇಳೆಯೊಳರ್ಧವನಿತ್ತು ರಿಪುಗಳ ಹೆಚ್ಚಿಸಿದ ಬಳಿಕ
ಗೆಲುವನಾವನು ದೇವ ದಾನವ
ರೊಳಗೆ ಭೀಮಾರ್ಜುನರ ಕೈ ಮನ
ದಳವನರಿಯಾ ಭಾರವೈ ಮೇಲೆಂದನಾ ಶಕುನಿ ॥18॥
೦೧೯ ಧಾರುಣಿಯೊಳು ಪಿಪೀಲಿಕೆಯು ...{Loading}...
ಧಾರುಣಿಯೊಳು ಪಿಪೀಲಿಕೆಯು ವಿ
ಸ್ತಾರದಲಿ ಮಾಡಿದ ಮನೆಯ ಕಾ
ಳೋರಗನು ಹೊಗುವಂತೆ ರಿಪು ಕುಂತೀಕುಮಾರಕರು
ವೈರದಲಿ ಸಪ್ತಾಂಗವನು ಕೈ
ಸೂರೆಗೊಂಬರು ತಪ್ಪದಿದಕೆ ವಿ
ಚಾರವನು ಕಾಲದಲಿ ಮಾಡುವುದೆಂದನಾ ಶಕುನಿ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಮಿಯಲ್ಲಿ ಇರುವೆಯು ದೊಡ್ಡದಾಗಿ ಕಟ್ಟಿದ ಮನೆಯನ್ನು ಕೃಷ್ಣಸರ್ಪ ಪ್ರವೇಶಿಸುವಂತೆ ಶತ್ರುಗಳಾದ ಕುಂತೀ ಮಕ್ಕಳು ಹಗೆತನದಿಂದ ಸಪ್ತಾಂಗಗಳನ್ನು ಕೊಳ್ಳೆ ಹೊಡೆದು ಬಿಡುವರು. ಇದು ತಪ್ಪುವುದಿಲ್ಲ. ಇದಕ್ಕೆ ಸಕಾಲದಲ್ಲಿ ವಿಚಾರ ಮಾಡುವುದು.
ಪದಾರ್ಥ (ಕ.ಗ.ಪ)
ಪಿಪೀಲಿಕೆ-ಇರುವೆ, ಕಾಳೋರಗ-ಕೃಷ್ಣಸರ್ಪ, ವೈರ-ಹಗೆತನ, ಕೈಸೂರೆಗೊಳ್-ಕೊಳ್ಳೆ ಹೊಡೆಯುವುದು
ಟಿಪ್ಪನೀ (ಕ.ಗ.ಪ)
ಸಪ್ತಾಂಗಗಳು-ಸ್ವಾಮಿ, ಅಮಾತ್ಯ, ಜನಪದ, ದುರ್ಗ, ಕೋಶ, ಸೈನ್ಯ, ಮಿತ್ರ
ಮೂಲ ...{Loading}...
ಧಾರುಣಿಯೊಳು ಪಿಪೀಲಿಕೆಯು ವಿ
ಸ್ತಾರದಲಿ ಮಾಡಿದ ಮನೆಯ ಕಾ
ಳೋರಗನು ಹೊಗುವಂತೆ ರಿಪು ಕುಂತೀಕುಮಾರಕರು
ವೈರದಲಿ ಸಪ್ತಾಂಗವನು ಕೈ
ಸೂರೆಗೊಂಬರು ತಪ್ಪದಿದಕೆ ವಿ
ಚಾರವನು ಕಾಲದಲಿ ಮಾಡುವುದೆಂದನಾ ಶಕುನಿ ॥19॥
೦೨೦ ಹಿನ್ದೆ ನೀನವರುಗಳ ...{Loading}...
ಹಿಂದೆ ನೀನವರುಗಳ ನಾನಾ
ಚಂದದಲಿ ನೋಯಿಸಿದೆ ಮನದಲಿ
ಕಂದು ಕುಂದದು ಕಷ್ಟ ವೃತ್ತಿಯನಾಚರಿಸುತಿಹರು
ಇಂದು ನೀನಾ ಪಾಂಡುಪುತ್ರರ
ನಂದಗೆಡಿಸದೆ ಬಿಟ್ಟೆಯಾದೊಡೆ
ಮುಂದೆ ಬೆಟ್ಟಿತು ರಾಜಕಾರಿಯವೆಂದನಾ ಶಕುನಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಂದೆ ನೀನು ಅವರುಗಳನ್ನು ನಾನಾ ಬಗೆಯಲ್ಲಿ ನೋಯಿಸಿದೆ. ಅದರಿಂದ ಅವರ ಮನಸ್ಸಿನಲ್ಲುಂಟಾದ ವ್ಯಸನ ಎಂದಿಗೂ ಕುಗ್ಗುವುದಿಲ್ಲ. ಕಠಿನ ವೃತ್ತಿಯನ್ನು ಆಚರಿಸುತ್ತಿಹರು. ಈಗ ಆ ಪಾಂಡು ಪುತ್ರರನ್ನು ವಿರೂಪಗೊಳಿಸದೆ ಬಿಟ್ಟೆಯಾದರೆ ಮುಂದೆ ರಾಜ್ಯಕಾರ್ಯವು ಕಠಿಣವಾಗುತ್ತದೆ.
ಪದಾರ್ಥ (ಕ.ಗ.ಪ)
ಕಷ್ಟ-ಕಠಿನ, ಅಂದಗೆಡಿಸದೆ-ವಿರೂಪಗೊಳಿಸದೆ, ಬೆಟ್ಟಿತು-ಉಗ್ರ
ಮೂಲ ...{Loading}...
ಹಿಂದೆ ನೀನವರುಗಳ ನಾನಾ
ಚಂದದಲಿ ನೋಯಿಸಿದೆ ಮನದಲಿ
ಕಂದು ಕುಂದದು ಕಷ್ಟ ವೃತ್ತಿಯನಾಚರಿಸುತಿಹರು
ಇಂದು ನೀನಾ ಪಾಂಡುಪುತ್ರರ
ನಂದಗೆಡಿಸದೆ ಬಿಟ್ಟೆಯಾದೊಡೆ
ಮುಂದೆ ಬೆಟ್ಟಿತು ರಾಜಕಾರಿಯವೆಂದನಾ ಶಕುನಿ ॥20॥
೦೨೧ ಇರುಬಿನಲಿ ಸಿಕ್ಕಿರ್ದ ...{Loading}...
ಇರುಬಿನಲಿ ಸಿಕ್ಕಿರ್ದ ಹುಲಿಯನು
ಮುರಿದು ಕಳೆಯುದೆ ತಳಪಟಕೆ ಬಿ
ಟ್ಟಿರಿಯ ಬಹುದೇ ಕೊಂದು ಕೂಗದೆ ಬಿಡುವುದೇ ಬಳಿಕ
ಕರುಬರಹ ಪಾಂಡವರಿಗೀಗಲೆ
ಹರುವ ನೆನೆ ಹೊರಬಿದ್ದರಾದೊಡೆ
ತರಿದು ಬಿಸುಡದೆ ಮಾಣ್ವರೇ ಹೇಳೆಂದನಾ ಶಕುನಿ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಕ್ಕಟ್ಟಿನಲ್ಲಿ ಸಿಕ್ಕಿಬಿದ್ದ ಹುಲಿಯನ್ನು ಕೊಂದು ಹಾಕದೆ ಬಯಲಿಗೆ ಬಿಟ್ಟು ಕೊಲ್ಲಬಹುದೆ ? ಹಾಗೆ ಬಿಟ್ಟರೆ ಆ ಬಳಿಕ ಅದು ಕೊಂದು ಕೂಗದೆ ಬಿಡುವುದೆ ? ಮತ್ಸರದ ಪಾಂಡವರಿಗೆ ಈಗಲೇ ಉಪಾಯವನ್ನು ಯೋಚಿಸು. ಇಲ್ಲಿಂದ ಅವರು ಪಾರಾದರೆ ನಿಮ್ಮನ್ನೆಲ್ಲಾ ಕತ್ತರಿಸಿ ಬಿಸಾಡದೆ ಬಿಡುವರೆ ಹೇಳು ಎಂದು ಶಕುನಿ ಕೇಳಿದನು.
ಪದಾರ್ಥ (ಕ.ಗ.ಪ)
ಇರುಬು-ಇಕ್ಕಟ್ಟು, ಮುರಿದು-ಕೊಲ್ಲು, ತಳಪಟ-ಬಯಲು, ಇರಿ-ಕೊಲ್ಲು, ಕರುಬು-ಮತ್ಸರ, ನೆನೆ-ಯೋಚಿಸು, ಹೊರಬೀಳು-ಪಾರಾಗು, ತರಿ-ಕತ್ತರಿಸು
ಮೂಲ ...{Loading}...
ಇರುಬಿನಲಿ ಸಿಕ್ಕಿರ್ದ ಹುಲಿಯನು
ಮುರಿದು ಕಳೆಯುದೆ ತಳಪಟಕೆ ಬಿ
ಟ್ಟಿರಿಯ ಬಹುದೇ ಕೊಂದು ಕೂಗದೆ ಬಿಡುವುದೇ ಬಳಿಕ
ಕರುಬರಹ ಪಾಂಡವರಿಗೀಗಲೆ
ಹರುವ ನೆನೆ ಹೊರಬಿದ್ದರಾದೊಡೆ
ತರಿದು ಬಿಸುಡದೆ ಮಾಣ್ವರೇ ಹೇಳೆಂದನಾ ಶಕುನಿ ॥21॥
೦೨೨ ಹರಿಹಯನು ವೃತ್ರಾಸುರನ ...{Loading}...
ಹರಿಹಯನು ವೃತ್ರಾಸುರನ ಸಂ
ಹರಿಸಲರಿಯದೆ ಗರುವದಿಂದಿರು
ತಿರಲವನು ದಿನದಿನದೊಳಣುವಣು ಮಾತ್ರವನು ಬೆಳೆದು
ಧರೆಯ ತುಂಬಲು ತನ್ನ ಸತ್ವದ
ನೆರವಣಿಗೆಗೈದಿಸದೆ ನಾನಾ
ತೆರದೊಳಾಯಸಗೊಳ್ಳನೇ ಹೇಳೆಂದನಾ ಶಕುನಿ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಂದ್ರನು ವೃತ್ರಾಸುರನನ್ನು ಸಂಹರಿಸಲು ಸಾಧ್ಯವಾಗದೆ ಗರ್ವದಿಂದ ಸುಮ್ಮನಿದ್ದಾಗ, ಅವನು ದಿನ ದಿನವೂ ಅಣು ಅಣು ಮಾತ್ರವಾಗಿ ಬೆಳೆಯುತ್ತಾ ಭೂಮಿಯನ್ನೆಲ್ಲಾ ವ್ಯಾಪಿಸಿಕೊಂಡು ಬಿಟ್ಟನು. ಆಗ ಇಂದ್ರನು ತನ್ನ ಸತ್ತ್ವವನ್ನೆಲ್ಲಾ ಪೂರ್ತಿಯಾಗಿ ಪ್ರಯೋಗಿಸಿದರೂ ಉದ್ದೇಶವನ್ನು ಈಡೇರಿಸಿಕೊಳ್ಳದೆ ನಾನಾ ರೀತಿಯಲ್ಲಿ ಆಯಾಸಗೊಳ್ಳಬೇಕಾಗಿ ಬರಲಿಲ್ಲವೆ?
ಪದಾರ್ಥ (ಕ.ಗ.ಪ)
ಹರಿಹಯ-ಇಂದ್ರ, ನೆರವಣಿಗೆ-ಪೂರ್ತಿ, ತುಂಬಲು-ವ್ಯಾಪಿಸಲು
ಮೂಲ ...{Loading}...
ಹರಿಹಯನು ವೃತ್ರಾಸುರನ ಸಂ
ಹರಿಸಲರಿಯದೆ ಗರುವದಿಂದಿರು
ತಿರಲವನು ದಿನದಿನದೊಳಣುವಣು ಮಾತ್ರವನು ಬೆಳೆದು
ಧರೆಯ ತುಂಬಲು ತನ್ನ ಸತ್ವದ
ನೆರವಣಿಗೆಗೈದಿಸದೆ ನಾನಾ
ತೆರದೊಳಾಯಸಗೊಳ್ಳನೇ ಹೇಳೆಂದನಾ ಶಕುನಿ ॥22॥
೦೨೩ ಅಡವಿಯಲಿ ಜನಿಸಿದರು ...{Loading}...
ಅಡವಿಯಲಿ ಜನಿಸಿದರು ಬೆಳವಿಗೆ
ಯಡವಿಯೊಳಗಿನ್ನವರ ಬಾಳಿಕೆ
ಗಡವಿಯೇ ನೆಲೆಮನೆಯದಲ್ಲದೆ ಪಾಂಡುಪುತ್ರರಿಗೆ
ಪೊಡವಿಯೊಡೆತನ ಸಲ್ಲದವರನು
ನಡೆಸುವುದು ಕಾಲದಲಿ ರಾಜ್ಯವ
ಕೊಡುವುದಾವಂಗದಲಿ ಮತವಲ್ಲೆಂದನಾ ಶಕುನಿ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಡಿನಲ್ಲಿ ಹುಟ್ಟಿದರು. ಕಾಡಿನಲ್ಲೇ ಬೆಳವಣಿಗೆಯಾಯ್ತು. ಇನ್ನು ಅವರ ಬಾಳುವೆಗೆ ಕಾಡೇ ವಾಸಸ್ಥಾನವಲ್ಲದೆ ಧರೆಯ ಒಡೆತನ ಸಲ್ಲದು. ಅವರನ್ನು ಕಾಪಾಡಿ ಸಕಾಲದಲ್ಲಿ ರಾಜ್ಯವನ್ನು ಕೊಡುವುದು ಯಾವ ರೀತಿಯಲ್ಲೂ ಸರಿಯಲ್ಲ.
ಪದಾರ್ಥ (ಕ.ಗ.ಪ)
ಬೆಳವಿಗೆ-ಬೆಳವಣಿಗೆ, ನೆಲೆಮನೆ-ವಾಸಸ್ತಾನ, ಅಂಗ-ರೀತಿ, ನಡೆಸು-ಕಾಪಾಡು
ಮೂಲ ...{Loading}...
ಅಡವಿಯಲಿ ಜನಿಸಿದರು ಬೆಳವಿಗೆ
ಯಡವಿಯೊಳಗಿನ್ನವರ ಬಾಳಿಕೆ
ಗಡವಿಯೇ ನೆಲೆಮನೆಯದಲ್ಲದೆ ಪಾಂಡುಪುತ್ರರಿಗೆ
ಪೊಡವಿಯೊಡೆತನ ಸಲ್ಲದವರನು
ನಡೆಸುವುದು ಕಾಲದಲಿ ರಾಜ್ಯವ
ಕೊಡುವುದಾವಂಗದಲಿ ಮತವಲ್ಲೆಂದನಾ ಶಕುನಿ ॥23॥
೦೨೪ ತಿಮಿರವಡಗಿದ ಲೋಕ ...{Loading}...
ತಿಮಿರವಡಗಿದ ಲೋಕ ಶಿಕ್ಷಾ
ಕ್ರಮಣವಡಗಿದ ದಂತಿ ಕರ್ಮ
ಭ್ರಮೆಗಳಡಗಿದ ಯೋಗಿ ರುಜೆಯಡಗಿದ ನರೋತ್ತಮನು
ಹಿಮವಡಗಿದ ಸರೋಜದಂತಿಹು
ದಮಲ ಮತ ಕೇಳ್ಪಗೆಗಳಡಗಿದ
ಡಮರ ಪದವೆನಿಸುವುದು ಚಿತ್ತೈಸೆಂದನಾ ಶಕುನಿ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕತ್ತಲೆ ಮರೆಯಾದ ಲೋಕ, ತರಬೇತಿಯ ಹತೋಟಿಗೆ ವಶವಾದ ಆನೆ, ಕರ್ಮಭ್ರಾಂತಿಗಳಿಂದ ಹಿಂದಕ್ಕೆ ಸರಿದ ಯೋಗಿ, ರೋಗ ಶಮನವಾದ ನರೋತ್ತಮ, ಇಬ್ಬನಿ ಅದೃಶ್ಯವಾದ ಕಮಲ - ಹೀಗಿರಬೇಕಾದ್ದು ಸ್ವಚ್ಛವಾದ ಅಭಿಪ್ರಾಯ. ಶತ್ರುಗಳು ವಿನಾಶವಾದರೆ ಅದೇ ದೇವಪದವಿಯೆನಿಸುವುದು. ಗಮನವಿಟ್ಟು ಕೇಳೆಂದು ಶಕುನಿ ಹೇಳಿದನು.
ಪದಾರ್ಥ (ಕ.ಗ.ಪ)
ಅಡಗು-ಮರೆಯಾಗು, ವಶವಾಗು, ಹಿಂದಕ್ಕೆ ಸರಿ, ಶಮನವಾಗು, ಅದೃಶ್ಯವಾಗು, ವಿನಾಶವಾಗು,
ಶಿಕ್ಷಾ ಕ್ರಮಣ-ತರಬೇತಿಯ ಹತೋಟಿ, ಭ್ರಮೆ-ಭ್ರಾಂತಿ, ರುಜೆ-ರೋಗಿ, ಸರೋಜ-ಕಮಲ, ಹಿಮ-ಇಬ್ಬನಿ
ಮೂಲ ...{Loading}...
ತಿಮಿರವಡಗಿದ ಲೋಕ ಶಿಕ್ಷಾ
ಕ್ರಮಣವಡಗಿದ ದಂತಿ ಕರ್ಮ
ಭ್ರಮೆಗಳಡಗಿದ ಯೋಗಿ ರುಜೆಯಡಗಿದ ನರೋತ್ತಮನು
ಹಿಮವಡಗಿದ ಸರೋಜದಂತಿಹು
ದಮಲ ಮತ ಕೇಳ್ಪಗೆಗಳಡಗಿದ
ಡಮರ ಪದವೆನಿಸುವುದು ಚಿತ್ತೈಸೆಂದನಾ ಶಕುನಿ ॥24॥
೦೨೫ ಬಿಡದೆ ಸುಖದುಃಖಗಳೊಳೊನ್ದನು ...{Loading}...
ಬಿಡದೆ ಸುಖದುಃಖಗಳೊಳೊಂದನು
ಹಿಡಿದು ಸದ್ವ್ಯವಹಾರ ಮುಖದಲಿ
ನಡೆಯಲೊಂದರ ತುಷ್ಟಿಯೊಂದರ ನಷ್ಟ ತನಗಹುದು
ಹಿಡಿವುದಿಹಪರವೆರಡರೊಳಗಳ
ವಡಿಕೆ ತನಗಹುದೊಂದನೊಂದನು
ಬಿಡುವುದಲ್ಲದೆ ಬೇರೆ ಮತವಿಲ್ಲೆಂದನಾ ಶಕುನಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಖ ದುಃಖಗಳಲ್ಲಿ ಬಿಡದೆ ಒಂದನ್ನು ಹಿಡಿದು ಒಳ್ಳೆಯ ವ್ಯವಹಾರ ಮುಖದಲ್ಲಿ ನಡೆದರೆ ಒಂದರಲ್ಲಿ ತೃಪ್ತಿ ಮತ್ತು ಇನ್ನೊಂದರಲ್ಲಿ ನಷ್ಟವುಂಟಾಗುತ್ತದೆ. ಇಹಪರಗಳೆರಡರಲ್ಲಿ ತನಗೆ ಹೊಂದುವಂಥದ್ದು ಯಾವುದೋ ಅದೊಂದನ್ನು ಹಿಡಿಯಬೇಕು. ಇನ್ನೊಂದನ್ನು ಬಿಡಬೇಕು. ಬೇರೆ ಆಲೋಚನೆಯೇ ಇಲ್ಲ.
ಪದಾರ್ಥ (ಕ.ಗ.ಪ)
ತುಷ್ಟಿ-ತೃಪ್ತಿ, ಅಳವಡಿಕೆ-ಹೊಂದುವಂಥದ್ದು, ಮತ-ಆಲೋಚನೆ
ಮೂಲ ...{Loading}...
ಬಿಡದೆ ಸುಖದುಃಖಗಳೊಳೊಂದನು
ಹಿಡಿದು ಸದ್ವ್ಯವಹಾರ ಮುಖದಲಿ
ನಡೆಯಲೊಂದರ ತುಷ್ಟಿಯೊಂದರ ನಷ್ಟ ತನಗಹುದು
ಹಿಡಿವುದಿಹಪರವೆರಡರೊಳಗಳ
ವಡಿಕೆ ತನಗಹುದೊಂದನೊಂದನು
ಬಿಡುವುದಲ್ಲದೆ ಬೇರೆ ಮತವಿಲ್ಲೆಂದನಾ ಶಕುನಿ ॥25॥
೦೨೬ ಭಾವ ಮೈದುನನಣ್ಣ ...{Loading}...
ಭಾವ ಮೈದುನನಣ್ಣ ತಮ್ಮನು
ಮಾವನಳಿಯನು ಪುತ್ರಮಿತ್ರರು
ಸೇವಕರು ಸಜ್ಜನರು ಸುಜನರು ಸತ್ಯಯುತರೆಂದು
ಭಾವಿಸದಿರಾರುವನು ನಿನ್ನಯ
ಜೀವವುಳ್ಳನ್ನೆಬರ ನಿನ್ನಯ
ದೈವವೇಗತಿಯೆಂದು ನಂಬಿಹುದೆಂದನಾ ಶಕುನಿ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನ್ನ ಜೀವವಿರುವವರೆಗೂ ಭಾವ ಮೈದುನ, ಅಣ್ಣ, ತಮ್ಮ, ಮಾವ, ಅಳಿಯ, ಮಗ, ಸ್ನೇಹಿತರು, ಸೇವಕರು, ಸಂಭಾವಿತರು, ಒಳ್ಳೆಯ ಮನುಷ್ಯರು ಸತ್ಯವಂತರು - ಎಂದು ಯಾರನ್ನೂ ಆದರಿಸಬೇಡ. ಇದಕ್ಕೆ ಬದಲಾಗಿ ದೈವವೇ ಗತಿಯೆಂದು ನಂಬಿಕೊಂಡಿರು.
ಪದಾರ್ಥ (ಕ.ಗ.ಪ)
ಸಜ್ಜನರು-ಸಂಭಾವಿತರು, ಸುಜನರು-ಒಳ್ಳೆಯ ಮನುಷ್ಯರು, ಭಾವಿಸು-ಆದರಿಸು
ಪಾಠಾನ್ತರ (ಕ.ಗ.ಪ)
ದೈವಗತಿಯೆಂದು- ದೈವವೇ ಗತಿಯೆಂದು - ಮೈ.ವಿ.ವಿ. ಆದಿಪರ್ವ- ಡಾ.ಕೆ.ಆರ್. ಶೇಷಗಿರಿ
ಮೂಲ ...{Loading}...
ಭಾವ ಮೈದುನನಣ್ಣ ತಮ್ಮನು
ಮಾವನಳಿಯನು ಪುತ್ರಮಿತ್ರರು
ಸೇವಕರು ಸಜ್ಜನರು ಸುಜನರು ಸತ್ಯಯುತರೆಂದು
ಭಾವಿಸದಿರಾರುವನು ನಿನ್ನಯ
ಜೀವವುಳ್ಳನ್ನೆಬರ ನಿನ್ನಯ
ದೈವವೇಗತಿಯೆಂದು ನಂಬಿಹುದೆಂದನಾ ಶಕುನಿ ॥26॥
೦೨೭ ಶತ್ರು ಶೇಷವಿದಲ್ಪವೆನ್ದುಳು ...{Loading}...
ಶತ್ರು ಶೇಷವಿದಲ್ಪವೆಂದುಳು
ಹುತ್ತ ಬರಲಾಗದು ಕಣಾ ಭೂ
ಪೋತ್ತಮರುಗಳು ವೈರಿ ರಾಯರ ವಂಶ ಬೀಜವನು
ಬಿತ್ತುವರೆ ನೇತ್ರಾವಳಿಯ ಮೀ
ಟೆತ್ತಿ ಕಾರಾಗಾರದೊಳಗೆ ಕ
ಳತ್ರ ಸಹಿತನಶದಲಧಿಕ ವ್ರತವ ಮಾಡೆಂದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉಳಿದ ಶತ್ರುವನ್ನು ಇದು ಕ್ಷುದ್ರವೆಂದು ಉಳಿಸಬರಲಾಗದು ಅಲ್ಲವೆ ! ಉತ್ತಮ ಅರಸರು ಶತ್ರು ರಾಜರ ವಂಶ ಬೀಜವನ್ನು ಬಿತ್ತುತ್ತಾರೆಯೆ ? ಶತ್ರುಗಳ ಕಣ್ಣುಗಳನ್ನು ಕೀಲಿಸಿ ಹೆಂಡತಿಯರ ಸಹಿತ ಅವರನ್ನು ಆಹಾರವಿಲ್ಲದ ಉಪವಾಸ ವ್ರತದಲ್ಲಿರುವಂತೆ ಮಾಡು.
ಪದಾರ್ಥ (ಕ.ಗ.ಪ)
ಶೇಷ-ಉಳಿದ, ಅಲ್ಪ-ಕ್ಷುದ್ರ, ನೇತ್ರಾವಳಿ-ಕಣ್ಣುಗಳು, ಕಳತ್ರ-ಹೆಂಡತಿ, ಅನಶನ-ಆಹಾರವಿಲ್ಲದ, ಅಧಿಕ-ಶ್ರೇಷ್ಠ
ಮೂಲ ...{Loading}...
ಶತ್ರು ಶೇಷವಿದಲ್ಪವೆಂದುಳು
ಹುತ್ತ ಬರಲಾಗದು ಕಣಾ ಭೂ
ಪೋತ್ತಮರುಗಳು ವೈರಿ ರಾಯರ ವಂಶ ಬೀಜವನು
ಬಿತ್ತುವರೆ ನೇತ್ರಾವಳಿಯ ಮೀ
ಟೆತ್ತಿ ಕಾರಾಗಾರದೊಳಗೆ ಕ
ಳತ್ರ ಸಹಿತನಶದಲಧಿಕ ವ್ರತವ ಮಾಡೆಂದ ॥27॥
೦೨೮ ವಿಷವನಣುವೆನ್ದಳುಕದುಪಭೋ ...{Loading}...
ವಿಷವನಣುವೆಂದಳುಕದುಪಭೋ
ಗಿಸಲು ಕೊಲ್ಲದೆ ಬಿಡುವುದೇ ಕರ
ಗಸದ ನಡು ಬಡವಾದರೆಯು ಕುಯ್ದಿಕ್ಕದೇ ತರುವ
ಶಿಶುವಿವನು ಸಾಮಥ್ರ್ಯ ಪುರುಷನೆ
ಪುಸಿಕಣಾಯೆಂದುಳುಹಿದೊಡೆ ರ
ಕ್ಕಸನಹನು ಮುಂದಕ್ಕೆ ತನಗವನೆಂದನಾ ಶಕುನಿ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತೀರ ಸಣ್ಣ ಕಣವೆಂದು ವಿಷವನ್ನು ಹೆದರದೆ ಉಪಯೋಗಿಸಿದರೆ ಅದು ಕೊಲ್ಲದೆ ಬಿಡುತ್ತದೆಯೇ ? ಗರಗಸದ ಅಲಗು ತೆಳುವಾಗಿದ್ದರೂ ಮರವನ್ನು ಕತ್ತರಿಸಿ ಹಾಕುವುದಿಲ್ಲವೇ ? ಇವನು ಮಗು, ಶಕ್ತಿವಂತನೆ ? ನಿರರ್ಥಕವಲ್ಲವೇ ? ಎಂದು ಉಳುಹಿದರೆ ಅವನೇ ಮುಂದೆ ತನಗೆ ರಕ್ಕಸನಾಗುತ್ತಾನೆ.
ಪದಾರ್ಥ (ಕ.ಗ.ಪ)
ಅಣು-ತೀರ ಸಣ್ಣ ಕಣ, ಉಪಭೋಗಿಸು-ಉಪಯೋಗಿಸು, ಕರಗಸ-ಗರಗಸ, ನಡು-ಅಲಗು, ಬಡವ-ತೆಳು, ತರು-ಮರ, ಪುಸಿ-ನಿರರ್ಥಕ
ಮೂಲ ...{Loading}...
ವಿಷವನಣುವೆಂದಳುಕದುಪಭೋ
ಗಿಸಲು ಕೊಲ್ಲದೆ ಬಿಡುವುದೇ ಕರ
ಗಸದ ನಡು ಬಡವಾದರೆಯು ಕುಯ್ದಿಕ್ಕದೇ ತರುವ
ಶಿಶುವಿವನು ಸಾಮಥ್ರ್ಯ ಪುರುಷನೆ
ಪುಸಿಕಣಾಯೆಂದುಳುಹಿದೊಡೆ ರ
ಕ್ಕಸನಹನು ಮುಂದಕ್ಕೆ ತನಗವನೆಂದನಾ ಶಕುನಿ ॥28॥
೦೨೯ ಕಾಲವನು ಗೂಗೆಗಳು ...{Loading}...
ಕಾಲವನು ಗೂಗೆಗಳು ನಿರ್ಜರ
ರೇಳಿಗೆಯನಾ ದೈತ್ಯರುಗಳು ತ
ಮಾಳಿ ರವಿರಶ್ಮಿಗಳನಾ ಬಲು ನಿದ್ರೆಯನು ಚೋರ
ಕಾಲ ಭುಜಗನು ಗರುಡನುಳಿವನು
ತಾಳದಂದದಿ ಪಾಂಡವರು ನಿ
ನ್ನೇಳಿಗೆಯ ಸೈರಿಸರು ಚಿತ್ತೈಸೆಂದನಾ ಶಕುನಿ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಗಲು ಹೊತ್ತನ್ನು ಗೂಗೆಗಳು, ದೇವತೆಗಳ ಅಭಿವೃದ್ಧಿಯನ್ನು ರಕ್ಕಸರು, ಕತ್ತಲೆ ಸೂರ್ಯನ ರಶ್ಮಿಗಳನ್ನು, ಕಳ್ಳನು ಹೆಚ್ಚಾದ ನಿದ್ರೆಯನ್ನು, ಕಾಲಸರ್ಪ ಗರುಡನ ಉಳಿವನ್ನು ಸಹಿಸದಿರುವಂತೆ ಪಾಂಡವರು ನಿನ್ನ ಉನ್ನತಿಯನ್ನು ಸಹಿಸರು. ಲಕ್ಷ್ಯವಿಟ್ಟು ಕೇಳು ಎಂದನು ಆ ಶಕುನಿ.
ಪದಾರ್ಥ (ಕ.ಗ.ಪ)
ಕಾಲ-ಹಗಲು, ಏಳಿಗೆ-ಅಭಿವೃದ್ಧಿ, ಉನ್ನತಿ, ನಿರ್ಜರರು-ದೇವತೆಗಳು, ತಾಳು-ಸಹಿಸು
ಮೂಲ ...{Loading}...
ಕಾಲವನು ಗೂಗೆಗಳು ನಿರ್ಜರ
ರೇಳಿಗೆಯನಾ ದೈತ್ಯರುಗಳು ತ
ಮಾಳಿ ರವಿರಶ್ಮಿಗಳನಾ ಬಲು ನಿದ್ರೆಯನು ಚೋರ
ಕಾಲ ಭುಜಗನು ಗರುಡನುಳಿವನು
ತಾಳದಂದದಿ ಪಾಂಡವರು ನಿ
ನ್ನೇಳಿಗೆಯ ಸೈರಿಸರು ಚಿತ್ತೈಸೆಂದನಾ ಶಕುನಿ ॥29॥
೦೩೦ ವಿಗಡ ರುದ್ರನು ...{Loading}...
ವಿಗಡ ರುದ್ರನು ಲೋಚನಾಗ್ನಿಯೊ
ಳೊಗುಮಿಗೆಯ ಕೋಪದಲಿ ಕಾಮನ
ಮಿಗೆ ದಹಿಸಿದಂದದಲಿ ರಿಪು ಕುಂತೀಕುಮಾರಕರ
ಹೊಗೆದು ಕಳೆ ಲಾಕ್ಷಾಭವನದಲಿ
ಹಗೆಗೆ ಹರಿವಹುದಿಲ್ಲದಿರ್ದೊಡೆ
ವಿಗಡಿಸುವುದೈ ರಾಜಕಾರ್ಯವಿದೆಂದನಾ ಶಕುನಿ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಯಂಕರ ರುದ್ರನು ತನ್ನ ಕಣ್ಣಿನ ಬೆಂಕಿಯಿಂದ ಅಧಿಕ ಕೋಪದಲ್ಲಿ ಕಾಮನನ್ನು ಸುಟ್ಟಂತೆ, ಶತ್ರುಗಳಾದ ಕುಂತೀ ಕುಮಾರಕರನ್ನು ಅರಗಿನ ಮನೆಯಲ್ಲಿ ಸುಟ್ಟುರಿಸಿ ನಿವಾರಿಸಿಕೊ. ಆಗ ಶತ್ರುಗಳನ್ನು ಕೊನೆಗಾಣಿಸುವ ದಾರಿಯಾಗುತ್ತದೆ. ಇಲ್ಲದಿದ್ದರೆ ರಾಜ ಕಾರ್ಯವಿದು ಕಠಿಣವಾಗುತ್ತದೆ.
ಪದಾರ್ಥ (ಕ.ಗ.ಪ)
ವಿಗಡ-ಭಯಂಕರ, ಕ್ರೂರ
ಲೋಚನ-ಕಣ್ಣು,
ಲಾಕ್ಷಾಭವನ-ಅರಗಿನ ಮನೆ,
ಹರಿವು-ದಾರಿ,
ಕಳೆ-ನಿವಾರಿಸು
ಟಿಪ್ಪನೀ (ಕ.ಗ.ಪ)
ಕಣಿಕ ನೀತಿ - ಮಹಾಭಾರತದ ಆದಿಪರ್ವದ 130-140ನೇ ಅಧ್ಯಾಯಗಳಲ್ಲಿ ಕಣಿಕನ ಮತತು ಕಣಿಕ ನೀತಿಯ ವಿಚಾರಗಳು ಬರುತ್ತವೆ. ಕಣಿಕ ಧೃತರಾಷ್ಟ್ರನ ಒಬ್ಬ ಮಂತ್ರಿ. ಕೂಟ ನೀತಿ ತಂತ್ರಜÐ. ದುಷ್ಟ ಪದ್ಧತಿಯ ವಿಚಾರಧಾರೆ ಇವನದು. ಇವನಿಂದಾಗಿ ‘ಕಣಿಕ ವಾಕ್ಯ’ ಎಂಬ ಹೇಳಿಕೆ ಹುಟ್ಟಿಕೊಂಡಿದೆ. ಇದೇರೀತಿ ಸಾವಿರ ದೊರೆ ಶತ್ರುಂಜಯನು ಧನ ಸಂಪಾದನೆಯ ವಿಷಯದಲ್ಲಿ ಕಣಿಕನೊಬ್ಬನ ಸಲಹೆ ಕೇಳಿದಾಗ ಆ ಕಣಿಕನು ಹೀಗೆ ಹೇಳಿದನಂತೆ. ‘‘ರಾಜನಾದವನು ಸರ್ವಥಾ ಬಡಿಗೋಲನ್ನು ಎತ್ತಿ ಹಿಡಿದುಕೊಂಡಿರಬೇಕು.’’ ಇವನ ನೀತಿಯನ್ನನುಸರಿಸಿ ರಾಜನು ಹೇರಳ ದ್ರವ್ಯ ಸಂಪಾದನೆ ಮಾಡಿದನೆಂದು ಅನುಶಾಸನಿಕ ಪರ್ವವು ಹೇಳುತ್ತದೆ. ನೈತಿಕ ನೆಲೆಗಟ್ಟೇ ಇಲ್ಲದೆ, ಧೂರ್ತರಿಗೆ ಮಾತ್ರ ಸಹಾಯಕವಾದ ದುರುಪದೇಶವೇ ಕಣಿಕ ನೀತಿ.
ಕಣಿಕನು ಧೃತರಾಷ್ಟ್ರನಿಗೆ ರಾಜನೀತಿಯನ್ನು ಬೋಧಿಸುವ ನೆವದಲ್ಲಿ ‘ಪಾಂಡವರನ್ನು ಸಂಪೂರ್ಣವಾಗಿ ನಾಶ ಮಾಡಬೇಕು’ ಎಂದು ಬೋಧಿಸುತ್ತಾನೆ. ಅರಗಿನ ಮನೆಯಲ್ಲಿ ಅವರನ್ನೆಲ್ಲ ಉಪಾಯವಾಗಿ ಗುಟ್ಟಾಗಿ ಸುಡುವ ಸಂಚು ನಡೆದದ್ದು ಈ ಕಣಿಕ ವಾಕ್ಯದಿಂದಲೇ.
ನಮ್ಮ ಕಾರ್ಯ ಸಾಧನೆ ಮುಖ್ಯ. ಅದಕ್ಕೆ ಯಾವ ದಾರಿ ಹಿಡಿದರೂ ತಪ್ಪಲ್ಲ ಎಂಬುದು ಕಣಿಕ ನೀತಿ. ‘ದುರ್ಬಲರನ್ನು ಹೆದರಿಸು, ಧೀರರಿದ್ದರೆ ಗೌರವ ತೋರಿದಂತೆ ಮಾಡಿ ಸಮಯ ಸಿಕ್ಕಾಗ ಅವರನ್ನು ಮುಗಿಸಿಬಿಡು. ಕೆಲವರನ್ನು ಲಂಚ ಕೊಟ್ಟು ಒಲಿಸಿಕೊ. ಶತ್ರು ಎಂದು ನೀನು ಯಾರನನು ಭಾವಿಸುತ್ತೀಯೋ ಅವರು ತಂದೆಯಾಗಿರಲಿ, ಅಣ್ಣನಾಗಿರಲಿ, ಬಂಧುವಾಗಿರಲಿ ಯೋಚನೆ ಮಾಡದೆ ಕೊಂದು ಹಾಕು. ಯಾರೆದುರಿಗೂ ನಿನ್ನ ಕೋಪ ಪ್ರದರ್ಶನ ಮಾಡಬೇಡ. ನಂಬಿಕಸ್ಥರನ್ನು ಕೂಡ ನಂಬಬೇಡ,’
ಈ ನೀತಿಯನ್ನು ವಿಶದಪಡಿಸಲು ಕಣಿಕನು ಕಟ್ಟಿದ ಪ್ರಸಿದ್ದ ಕಥೆಯೊಂದಿದೆ. ಅದನ್ನ ತಿಳಿದರೆ ಕಣಿಕ ನೀತಿ ಏನೆಂಬುದು ಸ್ಪಷ್ಟವಾದೀತು.
ಕಾಡಿನಲ್ಲಿ ಒಂದು ನರಿ ಇತ್ತು. ಅದಕ್ಕೆ ಸಿಂಹದ ಮಾಂಸ ತಿನ್ನಬೇಕೆಂಬ ಮಲಗಿದ್ದಾಗ ಸಿಂಹದ ಪಂಜಗಳನ್ನು ಕಡಿದು ತಿನ್ನುವಂತೆ ಇಲಿಗೆ ಹೇಳಿತು. ಪಂಜಕ್ಕೆ ಏಟು ಬಿದ್ದು ಸಿಂಹ ಕುಂಟಲಾರಂಬಿಸಿದಾಗ ಅದನ್ನು ಕೊಲ್ಲುವಂತೆ ಹುಲಿಗೆ ಹೇಳಿತು. ಹಾಗೆ ಹುಲಿ ಕೊಂದ ಮೇಲೆ ಮೂವರೂ ತಿನ್ನಲು ಸಿದ್ಧರಾದು. ಆಗ ನರಿಗೆ ನೀವೆಲ್ಲ ಸ್ನಾನ ಮಾಡಿ ಬನ್ನಿ. ನಾನು ಕಾವಲಿರುತ್ತೇನೆ ಎಂದಿತು. ಸ್ನಾನ ಮಾಡಿ ಮೊದಲು ಬಂದದ್ದು ಹುಲಿ. ಅದಕ್ಕೆ ನರಿ ‘ನೋಡು ನನಗೆ ಈ ಮಾಂಸ ಬೇಡ. ತಾನೇ ಸಿಂಹದ ಸಾವಿಗೆ ಆರಣ ಎಂದು ಆ ದರಿದ್ರ ಇಲಿ ಕೊಚ್ಚಿಕೊಳ್ಳುತ್ತಿದೆ’’ ಈ ಮಾತು ಕೇಳಿ ಆತ್ಮಗೌರವವುಳ್ಳ ಹುಲಿ ತಾನೇ ಸ್ವತಂತ್ರವಾಗಿ ಬೇಟೆ ಮಾಡುತ್ತೇನೆಂದು ಹೇಳುತ್ತ ಹೊರಟುಹೋಯಿತು. ಅನಂತರ ಇಲಿ ಬಂದಿತು. ಅದಕ್ಕೆ ನರಿ ಹೇಳಿತು. ‘‘ನೋಡು ಮುಂಗುಸಿ ಹೇಳಿತು. ಈ ಸಿಂಹದ ಮಾಂಸ ವಿಷಪೂರಿತವಾದುದಂತೆ ನಾವಿಬ್ಬರೂ ಮುಟ್ಟುವುದು ಬೇಡ. ಆ ಇಲಿ ತಿಂದು ಸಾಯಲಿ’’. ಈ ಮಾತು ಕೇಳಿ ಇಲಿ ಹೆದರಿ ತನಗೂ ಅದು ಬೇಡ ಎಂದು ಓಡಿ ಹೋಯಿತು. ಅನಂತರ ಮುಂಗುಸಿ ಬಂದಾಗ ನರಿ ಅದನ್ನು ಬೆದರಿಸಿ ಓಡಿಸಿತು. ಮುಂದೆ ತಾನೇ ಆನಂದವಾಗಿ ಮಾಂಸವನ್ನೆಲ್ಲ ಭಕ್ಷಿಸಿತು. ಇಂಥ ಆಕರ್ಷಕ ಕತೆಗಳನ್ನು ಹೇಳಿ ಕೌರವ ಮನಸ್ಸಿಗೆ ಪಾಪ ಕಾರ್ಯದ ವೇದನೆ ತಟ್ಟದಂತೆ ಮಾಡುವ ಉದ್ದೇಶ ಕಣಿಕನದು. ದುಷ್ಟ ಮನಸ್ಸುಗಳು ಬಲು ಬೇಗ ಇವರುಗಳ ಬಲೆಗೆ ಬೀಳುವುದರಲ್ಲಿ ಆಶ್ಚರ್ಯವೇನಿಲ್ಲ. ಕುಮಾರವ್ಯಾಸನಲ್ಲಿ ಶಕುನಿಯೇ ಕಣಿಕನಾಗಿರುವುದು ಗಮನಿಸಬೇಕಾದ ಸಂಗತಿ.
ಮೂಲ ...{Loading}...
ವಿಗಡ ರುದ್ರನು ಲೋಚನಾಗ್ನಿಯೊ
ಳೊಗುಮಿಗೆಯ ಕೋಪದಲಿ ಕಾಮನ
ಮಿಗೆ ದಹಿಸಿದಂದದಲಿ ರಿಪು ಕುಂತೀಕುಮಾರಕರ
ಹೊಗೆದು ಕಳೆ ಲಾಕ್ಷಾಭವನದಲಿ
ಹಗೆಗೆ ಹರಿವಹುದಿಲ್ಲದಿರ್ದೊಡೆ
ವಿಗಡಿಸುವುದೈ ರಾಜಕಾರ್ಯವಿದೆಂದನಾ ಶಕುನಿ ॥30॥
೦೩೧ ಹಿಡಿವ ಫಣಿಯನು ...{Loading}...
ಹಿಡಿವ ಫಣಿಯನು ಹೊಡೆವ ಸಿಡಿಲನು
ಜಡಿವ ಮಾರಿಯ ನಲಿವ ರುಜೆಯನು
ಮಡಿವ ದಿನವನು ಹಾನಿವೃದ್ಧಿಯ ಹೆಚ್ಚು ಕುಂದುಗಳ
ಕಡಿವ ಹಗೆಯನು ಕಾಲಕರ್ಮದ
ಗಡಣವನು ಸುಖದುಃಖದುದಯದ
ಕಡೆ ಮೊದಲ ಕಾಣಿಸುವನಾವವನೆಂದನಾ ಶಕುನಿ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸರ್ಪವು ಕಚ್ಚುವ ಹೊತ್ತನ್ನು, ಸಿಡಿಲು ಬಡಿಯುವ ಕಾಲವನ್ನು ಹರಡುವ ಸಾಂಕ್ರಾಮಿಕ ರೋಗದ ಸಮಯವನ್ನು, ನಲಿಯುವ ರೋಗದ. ವೇಳೆಯನ್ನು, ಸಾಯುವ ದಿನವನ್ನು, ಕೆಡಕು ಮತ್ತು ಏಳಿಗೆಗಳ ಹಾಗೂ ಆಧಿಕ್ಯ ಮತ್ತು ಕೊರತೆಗಳ ಕಾಲವನ್ನು, ಕರ್ಮಾನುಸಾರದ ಕಾಲಗಳನ್ನು ಸುಖ, ದುಃಖಗಳ ಪ್ರಾರಂಭ ಮತ್ತು ಅಂತ್ಯವನ್ನು ಕಾಣುವಂತೆ ಮಾಡುವವನು ಯಾರಿದ್ದಾನೆ ?
ಪದಾರ್ಥ (ಕ.ಗ.ಪ)
ಹೊಡೆ-ಬಡಿ, ಕಾಲಕರ್ಮ-ಕಾಲ ಮತ್ತು ಕರ್ಮ, ಹಾನಿ-ಕೆಡಕು, ವೃದ್ಧಿ-ಏಳಿಗೆ, ಕುಂದು-ಕೊರತೆ
ಮೂಲ ...{Loading}...
ಹಿಡಿವ ಫಣಿಯನು ಹೊಡೆವ ಸಿಡಿಲನು
ಜಡಿವ ಮಾರಿಯ ನಲಿವ ರುಜೆಯನು
ಮಡಿವ ದಿನವನು ಹಾನಿವೃದ್ಧಿಯ ಹೆಚ್ಚು ಕುಂದುಗಳ
ಕಡಿವ ಹಗೆಯನು ಕಾಲಕರ್ಮದ
ಗಡಣವನು ಸುಖದುಃಖದುದಯದ
ಕಡೆ ಮೊದಲ ಕಾಣಿಸುವನಾವವನೆಂದನಾ ಶಕುನಿ ॥31॥
೦೩೨ ಇನಿತು ಚಿನ್ತಿಸಲೇಕೆ ...{Loading}...
ಇನಿತು ಚಿಂತಿಸಲೇಕೆ ಕೌರವ
ಜನಪ ನಿಮ್ಮಡಿಗಳಿಗೆ ತಾನೊಂ
ದನುವ ಬಿನ್ನಹ ಮಾಡುವೆನು ಪಾಂಡವರ ನೆಳಲಿರಲು
ನಿನಗೆ ರಾಜ್ಯವನಾಳ್ವ ಫಲ ಸಂ
ಜನಿಸಲರಿಯದು ಕಾಲದಲಿ ನೀ
ನೆನೆ ಉಪಾಯವನೊಂದನೆಂದು ಕಳಿಂಗ ಕೈಮುಗಿದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಷ್ಟೊಂದು ಯೋಚಿಸುವುದೇಕೆ ? ಕೌರವರಾಯಾ, ನಿಮಗೆ ನಾನು ಒಂದು ಉಪಾಯವನ್ನು ಅರಿಕೆ ಮಾಡುತ್ತೇನೆ. ಪಾಂಡವರ ನೆರಳಿದ್ದರೆ ನಿನಗೆ ರಾಜ್ಯವನ್ನು ಆಳುವ ಫಲ ಪ್ರಕಟಗೊಳ್ಳಲಾರದು. ಸರಿಯಾದ ಸಮಯದಲ್ಲಿ ಒಂದು ಉಪಾಯವನ್ನು ಆಲೋಚಿಸು ಎಂದು ಕಳಿಂಗ ಕೈಮುಗಿದನು.
ಪದಾರ್ಥ (ಕ.ಗ.ಪ)
ಬಿನ್ನಹ-ಅರಿಕೆ, ಅನುವು-ಉಪಾಯ, ಸಂಜನಿಸು-ಪ್ರಕಟಗೊಳ್ಳು
ಕಳಿಂಗ- ಕಳಿಂಗ ದೇಶದ ಶಕುನಿ
ಮೂಲ ...{Loading}...
ಇನಿತು ಚಿಂತಿಸಲೇಕೆ ಕೌರವ
ಜನಪ ನಿಮ್ಮಡಿಗಳಿಗೆ ತಾನೊಂ
ದನುವ ಬಿನ್ನಹ ಮಾಡುವೆನು ಪಾಂಡವರ ನೆಳಲಿರಲು
ನಿನಗೆ ರಾಜ್ಯವನಾಳ್ವ ಫಲ ಸಂ
ಜನಿಸಲರಿಯದು ಕಾಲದಲಿ ನೀ
ನೆನೆ ಉಪಾಯವನೊಂದನೆಂದು ಕಳಿಂಗ ಕೈಮುಗಿದ ॥32॥
೦೩೩ ದೇವ ದಾನವರನ್ತೆ ...{Loading}...
ದೇವ ದಾನವರಂತೆ ಹದ್ದಿನ
ಹಾವಿನೋಲತಿ ವೈರ ಬಂಧದ
ಠಾವು ಠವಣೆಯಲಿರುತ ಭೇದಿಸುವಂತೆ ಭೇದಿಸುತ
ಕಾವವರ ಕಾವುತ್ತ ಕಂಟಕ
ಜೀವಿಗಳನಪಹರಿಸುತಂತ
ರ್ಭಾವಶುದ್ಧಿಯೊಳಿಳೆಯನಾಳುವುದೆಂದನಾ ಶಕುನಿ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅತಿಹಗೆಯ ದೇವದಾನವರ ಹಾಗೆ, ಹದ್ದು ಹಾವಿನ ರೀತಿಯಲ್ಲಿ, ಸ್ಥಾನ, ಗತಿಗಳನ್ನು ನಿರೀಕ್ಷಿಸಿ ಭೇದಿಸುವಂತೆ ಭೇದಿಸುತ್ತ, ಕಾಯುವವರನ್ನು ಕಾಪಾಡುತ್ತ, ಅಡ್ಡಿ ಬರುವ ಜೀವಿಗಳನ್ನು ನಿವಾರಿಸುತ್ತ, ಒಳಮನಸ್ಸಿನ ಭಾವದ ಶುದ್ಧಿಯಿಂದ ಭೂಮಿಯನ್ನು ಆಳುವುದು.
ಪದಾರ್ಥ (ಕ.ಗ.ಪ)
ಠಾವು-ಸ್ಥಾನ, ಠವಣೆ-ಗತಿ, ಕಂಟಕ-ಅಡ್ಡಿ, ಅಪಹರಿಸು-ನಿವಾರಿಸು, ಅಂತರ್ಭಾವ-ಒಳಮನಸ್ಸು
ಪಾಠಾನ್ತರ (ಕ.ಗ.ಪ)
ಠಾವು ಠವಣೆಯ ನೀರು –>
ಠಾವು ಠವಣೆಯಲಿರುತ
ಆದಿಪರ್ವ, ಮೈ.ವಿ.ವಿ., ಡಾ. ಶೇಷಗಿರಿ
ಮೂಲ ...{Loading}...
ದೇವ ದಾನವರಂತೆ ಹದ್ದಿನ
ಹಾವಿನೋಲತಿ ವೈರ ಬಂಧದ
ಠಾವು ಠವಣೆಯಲಿರುತ ಭೇದಿಸುವಂತೆ ಭೇದಿಸುತ
ಕಾವವರ ಕಾವುತ್ತ ಕಂಟಕ
ಜೀವಿಗಳನಪಹರಿಸುತಂತ
ರ್ಭಾವಶುದ್ಧಿಯೊಳಿಳೆಯನಾಳುವುದೆಂದನಾ ಶಕುನಿ ॥33॥
೦೩೪ ಮೃತ್ಯುವಿನ ತಾಳಿಗೆಯೊಳಗ್ಗದ ...{Loading}...
ಮೃತ್ಯುವಿನ ತಾಳಿಗೆಯೊಳಗ್ಗದ
ಶತ್ರುಗಳ ಸಾಮೀಪ್ಯದಲಿ ದು
ರ್ವೃತ್ತರೋಲಗದೊಳಗೆ ಸಿಂಹದ ಗುಹೆಯೊಳಹಿಪತಿಯ
ಹುತ್ತಿನೊಳಗಿಹವೋಲು ಸಲೆ ಬಾ
ಳುತ್ತಲಂತಃಪುರದೊಳರಸಿರ
ಲತ್ಯಧಿಕದೆಚ್ಚರಿಕೆಯಿರ ಬೇಕೆಂದನಾ ಶಕುನಿ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೃತ್ಯುವಿನ ನಾಲಿಗೆಯಲ್ಲಿ, ಅಧಿಕ ಸಾಮಥ್ರ್ಯವಿರುವ ಶತ್ರುವಿನ ಸಮೀಪದಲ್ಲಿ, ದುರಾಚಾರರ ಓಲಗದೊಳಗೆ, ಸಿಂಹದ ಗುಹೆಯಲ್ಲಿ, ಮಹಾಶೇಷನ ಹುತ್ತಿನಲ್ಲಿ ಇರುವಂತೆ, ಚೆನ್ನಾಗಿ ಬಾಳಬೇಕಾದರೆ ಅಂತಃಪುರದಲ್ಲಿ ರಾಜನು ಅತ್ಯಧಿಕ ಎಚ್ಚರಿಕೆಯಿಂದ ಇರಬೇಕು.
ಪದಾರ್ಥ (ಕ.ಗ.ಪ)
ತಾಳಿಗೆ-ನಾಲಿಗೆ, ಅಗ್ಗ-ಅಧಿಕ ಸಾಮಥ್ರ್ಯ, ದುರ್ವೃತ್ತರು-ದುರಾಚಾರರು, ಅಹಿಪತಿ-ಮಹಾಶೇಷ, ಸಲೆ-ಚೆನ್ನಾಗಿ
ಮೂಲ ...{Loading}...
ಮೃತ್ಯುವಿನ ತಾಳಿಗೆಯೊಳಗ್ಗದ
ಶತ್ರುಗಳ ಸಾಮೀಪ್ಯದಲಿ ದು
ರ್ವೃತ್ತರೋಲಗದೊಳಗೆ ಸಿಂಹದ ಗುಹೆಯೊಳಹಿಪತಿಯ
ಹುತ್ತಿನೊಳಗಿಹವೋಲು ಸಲೆ ಬಾ
ಳುತ್ತಲಂತಃಪುರದೊಳರಸಿರ
ಲತ್ಯಧಿಕದೆಚ್ಚರಿಕೆಯಿರ ಬೇಕೆಂದನಾ ಶಕುನಿ ॥34॥
೦೩೫ ಹಗೆಯ ಹೆಙ್ಗಳನರಮನೆಗಳೊಳು ...{Loading}...
ಹಗೆಯ ಹೆಂಗಳನರಮನೆಗಳೊಳು
ಪೊಗಿಸಲಾಗದು ತನಗವರು ಹೇ
ಳಿಗೆಯ ಹಾವಿನವೋಲು ಸುಖತರವಲ್ಲವರಿ ನೃಪರ
ಮಗಳ ಮಕ್ಕಳ ದೆಸೆಯವರನೋ
ಲಗಿಸುವರ ಬಾಹತ್ತರ ನಿಯೋ
ಗಿಗಳ ನಂಬುವುದುಚಿತವೇ ಹೇಳೆಂದನಾ ಶಕುನಿ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುಗಳ ಹೆಂಗಸರನ್ನು ಅರಮನೆಯೊಳಗೆ ಸೇರಿಸಬಾರದು. ತನಗೆ ಅವರು ಬುಟ್ಟಿಯೊಳಗಿನ ಹಾವಿನ ಹಾಗೆ, ಸುಖಕರವಲ್ಲ. ಶತ್ರು ರಾಜರ ಮಗಳ ಮತ್ತು ಮಕ್ಕಳ ಕಡೆಯವರನ್ನು ಓಲಗಿಸುವವರ ಬಾಹತ್ತರ ನಿಯೋಗಿಗಳನ್ನು ನಂಬುವುದು ಯೋಗ್ಯವೇ ? ಹೇಳು ಎಂದು ಶಕುನಿ ಹೇಳಿದನು.
ಪದಾರ್ಥ (ಕ.ಗ.ಪ)
ಹೇಳಿಗೆ-ಹಾವಿನಬುಟ್ಟಿ, ದೆಸೆಯವರ -ಕಡೆಯವರ
ಟಿಪ್ಪನೀ (ಕ.ಗ.ಪ)
ಬಾಹತ್ತರ ನಿಯೋಗಿ : ರಾಜರಾಣಿಯರ ಎಪ್ಪತ್ತೆರಡು ಬಗೆಯ ಸೇವಾಕಾರ್ಯಗಳಿಗೆ ನಿಯಮಿತರಾದ ಗುಂಪಿನ ಪ್ರತಿಯೊಬ್ಬ ವ್ಯಕ್ತಿ.
ಮೂಲ ...{Loading}...
ಹಗೆಯ ಹೆಂಗಳನರಮನೆಗಳೊಳು
ಪೊಗಿಸಲಾಗದು ತನಗವರು ಹೇ
ಳಿಗೆಯ ಹಾವಿನವೋಲು ಸುಖತರವಲ್ಲವರಿ ನೃಪರ
ಮಗಳ ಮಕ್ಕಳ ದೆಸೆಯವರನೋ
ಲಗಿಸುವರ ಬಾಹತ್ತರ ನಿಯೋ
ಗಿಗಳ ನಂಬುವುದುಚಿತವೇ ಹೇಳೆಂದನಾ ಶಕುನಿ ॥35॥
೦೩೬ ದೈವ ಹೊಡೆದನ್ದದಲಿ ...{Loading}...
ದೈವ ಹೊಡೆದಂದದಲಿ ಬೆರತು ಸ
ಭಾ ವಲಯದಲಿ ಗರ್ವ ವಿಭ್ರಮ
ಭಾವ ಭೂಷಿತನಾಗಿ ವೈಹಾಯಸವನೀಕ್ಷಿಸುತ
ಹಾವಿನಂದದೊಳಿರದೆ ಹಾಸ್ಯ ರ
ಸಾವಲಂಬನನಾಗದೆಯು ಸುಖ
ಜೀವಿಯಾಗಿಹುದುತ್ತಮವು ಕೇಳ್ ಎಂದನಾ ಶಕುನಿ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೆವ್ವ ಬಡಿದ ರೀತಿಗೆ ಕಂಗೆಟ್ಟು, ಕಾಲ ಕಳೆಯದೆ, ಸಭೆ ಪ್ರದೇಶದಲ್ಲಿ ಗರ್ವದಿಂದ ತಬ್ಬಿಬ್ಬಾದ ಮನಸ್ಸಿನಿಂದ ಕೂಡಿದವನಾಗಿ ಆಕಾಶವನ್ನು ನೋಡುತ್ತ ಕಾಲ ಕಳೆಯದೆ, ಹೆಬ್ಬಾವಿನಂತೆ ನಿಷ್ಕ್ರಿಯನಾಗಿರದೆ, ಅಪಹಾಸ್ಯಕ್ಕೆ ಆಶ್ರಯನಾಗದೆ, ಸುಖಜೀವಿಯಾಗುವುದು ಉತ್ತಮವು.
ಪದಾರ್ಥ (ಕ.ಗ.ಪ)
ದೈವ ಹೊಡೆ-ದೆವ್ವ ಬಡಿ, ಬೆರತು-ಕಂಗೆಡು, ವಿಭ್ರಮ-ಭ್ರಮೆ, ವೈಹಾಯಸ-ಆಕಾಶ, ಅವಲಂಬನ-ಆಶ್ರಯ
ಮೂಲ ...{Loading}...
ದೈವ ಹೊಡೆದಂದದಲಿ ಬೆರತು ಸ
ಭಾ ವಲಯದಲಿ ಗರ್ವ ವಿಭ್ರಮ
ಭಾವ ಭೂಷಿತನಾಗಿ ವೈಹಾಯಸವನೀಕ್ಷಿಸುತ
ಹಾವಿನಂದದೊಳಿರದೆ ಹಾಸ್ಯ ರ
ಸಾವಲಂಬನನಾಗದೆಯು ಸುಖ
ಜೀವಿಯಾಗಿಹುದುತ್ತಮವು ಕೇಳೆಂದನಾ ಶಕುನಿ ॥36॥
೦೩೭ ಹೀನಮುಖ ಬಹುಮುಖ ...{Loading}...
ಹೀನಮುಖ ಬಹುಮುಖ ಪರಾಙ್ಮುಖ
ದೀನಮುಖ ವಾಚಾಲಮುಖವ
ಜ್ಞಾನಮುಖವಂತರ್ಮುಖ ಬಹಿರ್ಮುಖದ ಕಾರ್ಯದಲಿ
ಆ ನರೇಂದ್ರನ ವರ್ತನಕೆ ದು
ಸ್ಥಾನವಾಗದೆ ಬಿಡದು ಸಂಶಯ
ವೇನಿದಕೆ ಕುರುರಾಯ ಚಿತ್ತೈಸೆಂದನಾ ಶಕುನಿ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ರಾಜನ ನಡತೆಗೆ, ಕೆಟ್ಟ, ಚಂಚಲ, ಹಿಮ್ಮೆಟ್ಟುವ, ದೀನ, ಅತಿಮಾತಾಡುವ, ಅಜ್ಞಾನದ, ಒಳಮನಸ್ಸಿನ ಹಾಗೂ ವಿಮುಖವಾದ ಕಾರ್ಯಗಳಲ್ಲಿ ರಾಜಾಸ್ಥಾನ ಕೆಟ್ಟ ಸ್ಥಾನವಾಗದೇ ಬಿಡದು. ಇದರಲ್ಲಿ ಸಂಶಯ ಯಾವುದು ? ಕುರುರಾಯ, ಗಮನವಿಟ್ಟು ಕೇಳು.
ಪದಾರ್ಥ (ಕ.ಗ.ಪ)
ಹೀನ-ಕೆಟ್ಟ, ಬಹುಮುಖ-ಚಂಚಲವಾಗಿರುವುದು, ಪರಾಙ್ಮುಖ-ಹಿಮ್ಮೆಟ್ಟು, ಅಂತರ್ಮುಖ-ಒಳಮನಸ್ಸು, ಬರ್ಹಿಮುಖ-ವಿಮುಖ
ಮೂಲ ...{Loading}...
ಹೀನಮುಖ ಬಹುಮುಖ ಪರಾಙ್ಮುಖ
ದೀನಮುಖ ವಾಚಾಲಮುಖವ
ಜ್ಞಾನಮುಖವಂತರ್ಮುಖ ಬಹಿರ್ಮುಖದ ಕಾರ್ಯದಲಿ
ಆ ನರೇಂದ್ರನ ವರ್ತನಕೆ ದು
ಸ್ಥಾನವಾಗದೆ ಬಿಡದು ಸಂಶಯ
ವೇನಿದಕೆ ಕುರುರಾಯ ಚಿತ್ತೈಸೆಂದನಾ ಶಕುನಿ ॥37॥
೦೩೮ ಶಯನದಲಿ ವಹ್ನಿಯಲಿ ...{Loading}...
ಶಯನದಲಿ ವಹ್ನಿಯಲಿ ವೈಹಾ
ಳಿಯಲಿ ಬೇಟೆಯಲೂಟದಲಿ ಕೇ
ಳಿಯಲಿ ಸುರತ ಕ್ರೀಡೆಯಲಿ ಮಜ್ಜನದ ಸಮಯದಲಿ
ಜಯದ ಜೋಕೆಯಲೋಲಗದ ಮರ
ವೆಯಲಿ ವಾರಸ್ತ್ರೀಯರುಗಳಲಿ
ಲಯವನೈದಿಸಬಹುದು ಚಿತ್ತೈಸೆಂದನಾ ಶಕುನಿ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಲಗುವ ಸ್ಥಳದಲ್ಲಿ, ಅಗ್ನಿಯಲ್ಲಿ, ಕುದುರೆ ಸವಾರಿಯಲ್ಲಿ, ಬೇಟೆಯಲ್ಲಿ, ಊಟದಲ್ಲಿ, ಆಟದಲ್ಲಿ, ರತಿ ಕೇಳಿ ವಿಲಾಸದಲ್ಲಿ, ಸ್ನಾನದ ಸಮಯದಲ್ಲಿ, ಜಯದ ಉತ್ಸಾಹದಲ್ಲಿ, ಸಭೆಯಲ್ಲಿ ಮೈಮರೆತಿರುವಾಗ, ವೇಶ್ಯೆಯರ ಸಂಗದಲ್ಲಿ - ಈ ಒಂದೊಂದರಲ್ಲೂ ಶತ್ರುಗಳನ್ನು ನಾಶಗೊಳಿಸಬಹುದು.
ಪದಾರ್ಥ (ಕ.ಗ.ಪ)
ವೈಹಾಳಿ-ಕುದುರೆ ಸವಾರಿ, ವಹ್ನಿ-ಅಗ್ನಿ, ಕೇಳಿ-ಆಟ, ಸುರತಕ್ರೀಡೆ-ರತಿ ಕೇಳಿ ವಿಲಾಸ, ವಾರಸ್ತ್ರೀ-ವೇಶ್ಯೆ, ಲಯ-ನಾಶ
ಮೂಲ ...{Loading}...
ಶಯನದಲಿ ವಹ್ನಿಯಲಿ ವೈಹಾ
ಳಿಯಲಿ ಬೇಟೆಯಲೂಟದಲಿ ಕೇ
ಳಿಯಲಿ ಸುರತ ಕ್ರೀಡೆಯಲಿ ಮಜ್ಜನದ ಸಮಯದಲಿ
ಜಯದ ಜೋಕೆಯಲೋಲಗದ ಮರ
ವೆಯಲಿ ವಾರಸ್ತ್ರೀಯರುಗಳಲಿ
ಲಯವನೈದಿಸಬಹುದು ಚಿತ್ತೈಸೆಂದನಾ ಶಕುನಿ ॥38॥
೦೩೯ ರುಜೆಯನಲುಗುವ ರದನವ ...{Loading}...
ರುಜೆಯನಲುಗುವ ರದನವ ದ್ರುಗು
ರಜವನನುಚಿತಜಾತ ಧೂಮ
ಧ್ವಜವ ರುಣವನವಿದ್ಯೆಯನು ಗೃಹವಾಸ ಕುಂಡಲಿಯ
ವೃಜಿನವನು ಕಂಪಿತವ ವೈರಿ
ವ್ರಜವನುಳುಹುವನೆಗ್ಗನೆಂಬಿದು
ಸುಜನರಭಿಮತ ನಿನ್ನಮತವೇನೆಂದನಾ ಶಕುನಿ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಂದಿರುವ ರೋಗ, ಅಲ್ಲಾಡುವ ಹಲ್ಲು, ಕಣ್ಣಿಗೆ ಬಿದ್ದ ಧೂಲು, ಅನುಚಿತವಾಗಿ ತಲೆದೋರಿದ ಬೆಂಕಿ, ಸಾಲ, ಅವಿದ್ಯೆ, ಮನೆಯನ್ನು ಸೇರಿಕೊಂಡಿರುವ ಹಾವು ಪಾಪ, ನಡುಕ, ಶತ್ರುಗಳ ಸಮೂಹ ಇವನ್ನು ನಾಶಮಾಡದೆ ಉಳಿಸುವವನು ಮೂರ್ಖ ಎನ್ನುವುದು ಒಳ್ಳೆಯ ಮನುಷ್ಯರ ಅಭಿಪ್ರಾಯ. ನಿನ್ನ ಅಭಿಪ್ರಾಯವೇನು ? ಎಂದು ದುರ್ಯೋಧನನ್ನು ಶಕುನಿ ಕೇಳಿದನು.
ಪದಾರ್ಥ (ಕ.ಗ.ಪ)
ರದನ-ಹಲ್ಲು, ದೃಗು-ಕಣ್ಣು, ರಜ-ಧೂಲು, ಧೂಮಧ್ವಜ-ಅಗ್ನಿ, ರುಣ-ಸಾಲ, ಕುಂಡಲಿ-ಹಾವು, ವೃಜಿನ-ಪಾಪ, ಕಂಪಿತ-ನಡುಕ,
ವ್ರಜ-ಸಮೂಹ, ಎಗ್ಗ-ಮೂರ್ಖ
ಮೂಲ ...{Loading}...
ರುಜೆಯನಲುಗುವ ರದನವ ದ್ರುಗು
ರಜವನನುಚಿತಜಾತ ಧೂಮ
ಧ್ವಜವ ರುಣವನವಿದ್ಯೆಯನು ಗೃಹವಾಸ ಕುಂಡಲಿಯ
ವೃಜಿನವನು ಕಂಪಿತವ ವೈರಿ
ವ್ರಜವನುಳುಹುವನೆಗ್ಗನೆಂಬಿದು
ಸುಜನರಭಿಮತ ನಿನ್ನಮತವೇನೆಂದನಾ ಶಕುನಿ ॥39॥
೦೪೦ ಮಣಿದು ಕೂಪದ ...{Loading}...
ಮಣಿದು ಕೂಪದ ಜೀವನವ ಕಡೆ
ಗಣಿಸದೇ ಘಟಯಂತ್ರ ಮೃಗರಿಪು
ಹಣಿಗಿದರೆ ಹರಿಣಂಗೆ ಗೆಲವೇ ಕಾರ್ಯಗತಿಯರಿದು
ಮಣಿವುದಳುಕುವುದಾವ ಪರಿಯಿಂ
ದೆಣಿಸಿ ಮನದಲಿ ವೈರಿ ರಾಯರ
ಹಣಿದವಾಡುವುಪಾಯವಿದು ಕೇಳ್ ಎಂದನಾ ಶಕುನಿ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀರೆತ್ತುವ ರಾಟೆ ತಾನು ಬಗ್ಗಿ ಬಾವಿಯಲ್ಲಿರುವ ನೀರನ್ನು ಕೀಳಾಗಿ ಎಣಿಸದೆ ಮೇಲಕ್ಕೆತ್ತುವುದಿಲ್ಲವೆ ? ಸಿಂಹ ಹೊಂಚುಹಾಕಿದರೆ ಜಿಂಕೆಗೆ ಗೆಲವೇ ? ಕೆಲಸದ ರೀತಿಯನ್ನು ತಿಳಿದು ತಗ್ಗುವುದು, ಅಳುಕುವುದು. ಯಾವ ಪರಿಯಿಂದ ಯಾವ ಕೆಲಸವನ್ನು ನೆರವೇರಿಸಬೇಕೆಂಬುದನ್ನು ಮನಸ್ಸಿನಲ್ಲಿ ಚೆನ್ನಾಗಿ ಆಲೋಚಿಸಿ ತಗ್ಗಿ ಬಗ್ಗಿಯಾದರೂ ಗುರಿಯನ್ನು ಸಾಧಿಸಬೇಕು. ವೈರಿರಾಜರನ್ನು ಧ್ವಂಸ ಮಾಡುವುದಕ್ಕೆ ಇದು ಉಪಾಯ.
ಪದಾರ್ಥ (ಕ.ಗ.ಪ)
ಘಟಯಂತ್ರ-ನೀರೆತ್ತುವ ರಾಟೆ, ಮಣಿದು-ಬಾಗಿ, ಕೂಪ-ಬಾವಿ, ಜೀವನ-ನೀರು, ಹಣಿಗು-ಹೊಂಚುಹಾಕು, ಹರಿಣ-ಜಿಂಕೆ, ಎಣಿಸಿ-ಆಲೋಚಿಸಿ, ಹಣಿ-ಧ್ವಂಸಮಾಡು
ಮೂಲ ...{Loading}...
ಮಣಿದು ಕೂಪದ ಜೀವನವ ಕಡೆ
ಗಣಿಸದೇ ಘಟಯಂತ್ರ ಮೃಗರಿಪು
ಹಣಿಗಿದರೆ ಹರಿಣಂಗೆ ಗೆಲವೇ ಕಾರ್ಯಗತಿಯರಿದು
ಮಣಿವುದಳುಕುವುದಾವ ಪರಿಯಿಂ
ದೆಣಿಸಿ ಮನದಲಿ ವೈರಿ ರಾಯರ
ಹಣಿದವಾಡುವುಪಾಯವಿದು ಕೇಳೆಂದನಾ ಶಕುನಿ ॥40॥
೦೪೧ ಅಹಿಯ ಬಾಧೆಯ ...{Loading}...
ಅಹಿಯ ಬಾಧೆಯ ಬಲೆಗೆ ಸಿಲುಕಿದ
ಮಿಹಿರ ಬಿಂಬದವೋಲು ಮಾಯಾ
ವಿಹರಣದ ವೀಥಿಯಲಿ ಸಿಕ್ಕಿದ ಜೀವರುಗಳಂತೆ
ಅಹಿತರುಪಟಳದೊಳಗೆ ಸಿಲುಕದೆ
ಕುಹಕರವದಿರ ಹರಿವ ನೆನೆ ಲೇ
ಸಹುದು ಕಾಲಕ್ಷೇಪವಿದಕೇನೆಂದನಾ ಶಕುನಿ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸರ್ಪದ ಬಾಧೆಯ ಬಲೆಗೆ ಸಿಲುಕಿದ ಸೂರ್ಯ ಬಿಂಬದ ಹಾಗೆ, ಮಾಯಾ ವಿಹಾರದ ಮಾರ್ಗದಲ್ಲಿ ಸಿಕ್ಕಿದ ಜೀವರುಗಳ ಹಾಗೆ, ಹಿತವಲ್ಲದವರ ತೊಂದರೆಗೆ ಸಿಲುಕದೆ, ಆ ಮೋಸಗಾರರ ನಾಶಕ್ಕೆ ಏನು ಮಾಡಬೇಕೆಂಬುದನ್ನು ಯೋಚಿಸ. ನಿನಗೆ ಒಳ್ಳೆಯದಾಗುತ್ತದೆ. ಈ ವಿಷಯದಲ್ಲಿ ಕಾಲಹರಣ ಒಳ್ಳೆಯದೇ. ಏನು ಹೇಳುತ್ತೀಯೆ ?
ಪದಾರ್ಥ (ಕ.ಗ.ಪ)
ಅಹಿ-ಸರ್ಪ, ಮಿಹಿರ-ಸೂರ್ಯ, ವಿಹರಣ-ವಿಹಾರ, ವೀಧಿ-ಮಾರ್ಗ, ಉಪಟಳ-ತೊಂದರೆ, ಕುಹಕರು-ಮೋಸಗಾರರು, ಹರಿವ-ನಾ±ವನ್ನು, ನೆನೆ-ಯೋಚಿಸು, ಕಾಲಕ್ಷೇಪ-ಕಾಲಹರಣ
ಮೂಲ ...{Loading}...
ಅಹಿಯ ಬಾಧೆಯ ಬಲೆಗೆ ಸಿಲುಕಿದ
ಮಿಹಿರ ಬಿಂಬದವೋಲು ಮಾಯಾ
ವಿಹರಣದ ವೀಥಿಯಲಿ ಸಿಕ್ಕಿದ ಜೀವರುಗಳಂತೆ
ಅಹಿತರುಪಟಳದೊಳಗೆ ಸಿಲುಕದೆ
ಕುಹಕರವದಿರ ಹರಿವ ನೆನೆ ಲೇ
ಸಹುದು ಕಾಲಕ್ಷೇಪವಿದಕೇನೆಂದನಾ ಶಕುನಿ ॥41॥
೦೪೨ ನಮ್ಬುವರ ನೆರೆ ...{Loading}...
ನಂಬುವರ ನೆರೆ ನಂಬು ನಂಬದ
ಡಂಬಕರ ನಂಬದಿರು ಸಂಗರ
ವೆಂಬ ಮಾತಿಗೆ ಹಂಬಲಿಸಿ ಬೆಂಬೀಳ್ವ ಬಾಹಿರರ
ನಂಬಿರದಿರರಿರಾಯ ಹನನ ವಿ
ಳಂಬನವ ಮಾಡದಿರು ರೋಷಾ
ಡಂಬರವ ರಚಿಸದಿರು ಬಹಿರಂಗದಲಿ ನೀನೆಂದ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಂಬುವವರನ್ನು ಚೆನ್ನಾಗಿ ನಂಬು. ನಂಬದ ವಂಚಕರ ನಂಬದಿರು. ‘ಯುದ್ಧ’ ವೆಂಬ ಮಾತಿಗೆ ಉತ್ಕಟವಾಗಿ ಆಶಿಸಿ ಹಿಂದೆ ಬೀಳುವ ಅನರ್ಹರನ್ನು ನಂಬದಿರು. ಶತ್ರು ರಾಜರ ನಾಶದಲ್ಲಿ ಹೊಯ್ದಾಟ ಮಾಡದಿರು. ಹೊರಗೆ ನೀನು ರೋಷಾಡಂಬರವನ್ನು ತೋರಿಸಿಕೊಳ್ಳಬೇಡ.
ಪದಾರ್ಥ (ಕ.ಗ.ಪ)
ಡಂಬಕ-ವಂಚಕ, ಹಂಬಲಿಸು-ಉತ್ಕಟವಾಗಿ ಆಶಿಸು,
ಬೆಂಬೀಳ್ವ-ಹಿಂದೆ ಬೀಳ್ವ, ಬಾಹಿರರು-ಅನರ್ಹರು,
ಹನನ-ನಾಶ, ವಿಳಂಬನ-ನಿಧಾನ
ಮೂಲ ...{Loading}...
ನಂಬುವರ ನೆರೆ ನಂಬು ನಂಬದ
ಡಂಬಕರ ನಂಬದಿರು ಸಂಗರ
ವೆಂಬ ಮಾತಿಗೆ ಹಂಬಲಿಸಿ ಬೆಂಬೀಳ್ವ ಬಾಹಿರರ
ನಂಬಿರದಿರರಿರಾಯ ಹನನ ವಿ
ಳಂಬನವ ಮಾಡದಿರು ರೋಷಾ
ಡಂಬರವ ರಚಿಸದಿರು ಬಹಿರಂಗದಲಿ ನೀನೆಂದ ॥42॥
೦೪೩ ಖೂಳನಹ ದಾತಾರನನು ...{Loading}...
ಖೂಳನಹ ದಾತಾರನನು ದು
ರ್ಮೇಳನಹ ಮಿತ್ರನನು ತನಗನು
ಕೂಲೆಯಲ್ಲದ ಸತಿಯನಂತರ್ದಾಯಿಯಹ ನರನ
ವ್ಯಾಳಯುತವಹ ನಿಳಯವಿನಿತುವ
ಕಾಲದಲಿ ವರ್ಜಿಸುವುದಲ್ಲದೊ
ಡೂಳಿಗವು ಹಿರಿದಹುದು ಚಿತ್ತೈಸೆಂದನಾ ಶಕುನಿ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀಚನಾದ ಒಡೆಯನನ್ನು ಕೆಟ್ಟ ಕೂಟದಲ್ಲಿರುವ ಸ್ನೇಹಿತನನ್ನು ತನಗೆ ಅನುಕೂಲೆಯಲ್ಲದ ಹೆಂಡತಿಯನ್ನು ಒಳಗೊಳಗೇ ಬೆಂಕಿ ಹಚ್ಚುವ ಮನುಷ್ಯನನ್ನು, ಹಾವು ಸೇರಿರುವ ಮನೆಗಳನ್ನು ಕಾಲವಲ್ಲದ ಕಾಲದಲ್ಲಿ ತ್ಯಜಿಸುವುದು. ಇಲ್ಲದಿದ್ದರೆ ಕೆಲಸವು ಹೆಚ್ಚಾಗುವುದು. ಲಕ್ಷ್ಯವಿಟ್ಟು ಕೇಳು ಎಂದನು ಆ ಶಕುನಿ.
ಪದಾರ್ಥ (ಕ.ಗ.ಪ)
ಖೂಳ-ನೀಚ, ದಾತಾರ-ಒಡೆಯ, ದುರ್ಮೇಳ-ಕೆಟ್ಟ ಕೂಟ, ಅಂತರ್ದಾಯಿ-ಒಳಗೊಳಗೇ ಬೆಂಕಿ ಹಚ್ಚುವ, ವ್ಯಾಳ-ಹಾವು, ಅಕಾಲ-ಕಾಲವಲ್ಲದ ಕಾಲ, ವರ್ಜಿಸು-ತ್ಯಜಿಸು
ಮೂಲ ...{Loading}...
ಖೂಳನಹ ದಾತಾರನನು ದು
ರ್ಮೇಳನಹ ಮಿತ್ರನನು ತನಗನು
ಕೂಲೆಯಲ್ಲದ ಸತಿಯನಂತರ್ದಾಯಿಯಹ ನರನ
ವ್ಯಾಳಯುತವಹ ನಿಳಯವಿನಿತುವ
ಕಾಲದಲಿ ವರ್ಜಿಸುವುದಲ್ಲದೊ
ಡೂಳಿಗವು ಹಿರಿದಹುದು ಚಿತ್ತೈಸೆಂದನಾ ಶಕುನಿ ॥43॥
೦೪೪ ಎಲ್ಲರಿಮ್ ಬಹುಧನವ ...{Loading}...
ಎಲ್ಲರಿಂ ಬಹುಧನವ ಕೊಳು ನಿ
ನ್ನಲ್ಲಿ ಕಾಣಿಯ ಬರಿದೆ ಸೋಲದಿ
ರಿಲ್ಲವೆನ್ನದೆ ನುಡಿದು ಕಾಲಕ್ಷೇಪವನು ಮಾಡು
ಒಳ್ಳಿದನು ನಮಗೆಂಬ ನಯ ನುಡಿ
ಯೆಲ್ಲರಲಿ ಬೆಚ್ಚಂತೆ ರಿಪುಗಳ
ಗೆಲ್ಲಗೆಡಹುವ ಮಂತ್ರವಿದು ಕೇಳ್ ಎಂದನಾ ಶಕುನಿ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲ್ಲರಿಂದಲೂ ಬಹಳ ಹಣವನ್ನು ತೆಗೆದುಕೊ. ನೀನು ಮಾತ್ರ ಒಂದು ಕಾಣಿಯನ್ನೂ ವ್ಯರ್ಥವಾಗಿ ಸೋಲಬೇಡ. ‘ಇಲ್ಲ’ ಎನ್ನದೆ ಮಾತಾಡಿ ವಿಳಂಬ ಮಾಡು. “ಇವನು ನಮ್ಮ ವಿಷಯದಲ್ಲಿ ಬಹಳ ಒಳ್ಳೆಯವನು” ಎಂಬ ಯೋಗ್ಯಮಾತು ಎಲ್ಲರಲ್ಲಿಯೂ ಉಂಟಾಗುವಂತೆ ಮಾಡು. ಶತ್ರುಗಳನ್ನು ಗೆದ್ದು ಕೆಡಹುವ ಉಪಾಯವಿದು.
ಪದಾರ್ಥ (ಕ.ಗ.ಪ)
ಕಾಣಿ-ನಾಣ್ಯದ 1/64 ನೇ ಅಂಶ, ಬರಿದೆ-ವ್ಯರ್ಥ, ಕಾಲಕ್ಷೇಪ-ವಿಳಂಬ, ನಯನುಡಿ-ಯೋಗ್ಯ ಮಾತು, ಬೆಚ್ಚಂತೆ-ಉಂಟಾಗುವಂತೆ, ಮಂತ್ರ-ಉಪಾಯ
ಮೂಲ ...{Loading}...
ಎಲ್ಲರಿಂ ಬಹುಧನವ ಕೊಳು ನಿ
ನ್ನಲ್ಲಿ ಕಾಣಿಯ ಬರಿದೆ ಸೋಲದಿ
ರಿಲ್ಲವೆನ್ನದೆ ನುಡಿದು ಕಾಲಕ್ಷೇಪವನು ಮಾಡು
ಒಳ್ಳಿದನು ನಮಗೆಂಬ ನಯ ನುಡಿ
ಯೆಲ್ಲರಲಿ ಬೆಚ್ಚಂತೆ ರಿಪುಗಳ
ಗೆಲ್ಲಗೆಡಹುವ ಮಂತ್ರವಿದು ಕೇಳೆಂದನಾ ಶಕುನಿ ॥44॥
೦೪೫ ಧನವನಿತ್ತಾದೊಡೆಯು ಸಹ ...{Loading}...
ಧನವನಿತ್ತಾದೊಡೆಯು ಸಹ ಭೋ
ಜನವನುಂಡಾದೊಡೆಯು ಮೇಣ್ ನಿಜ
ತನುಜೆಯರನಿತ್ತಾದೊಡೆಯು ಬಳಿಸಂದು ಬೇಸರದೆ
ತನುವ ಬೆರೆಸಿದ್ದಾದೊಡೆಯು ನೂ
ತನಗುಣವ ನುಡಿದಾದೊಡೆಯು ರಿಪು
ಜನಪತಿಯ ವಶ ಮಾಳ್ಪುದುಚಿತವಿದೆಂದನಾ ಶಕುನಿ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಣವನ್ನು ಕೊಟ್ಟಾದೊಡೆಯು, ಸಹಭೋಜನ ಮಾಡಿಯಾದರೂ, ಇಲ್ಲವೆ ತನ್ನ ಮಗಳನ್ನು ಕೊಟ್ಟು ಸಂಬಂಧ ಬೆಳಸಿಯಾದರೂ, ಅನುಸರಿಸಿ ಬೇಸರಿಸದ ಒಡನಾಟದಿಂದಲಾದರೂ, ಹೊಸ ಗುಣಗಳನ್ನು ನುಡಿದಾದರೂ, ಶತ್ರು ಜನಪರನ್ನು ವಶಪಡಿಸಿಕೊಳ್ಳುವುದು ಉಚಿತ.
ಪದಾರ್ಥ (ಕ.ಗ.ಪ)
ಬಳಿಸಂದು-ಅನುಸರಿಸಿ
ಮೂಲ ...{Loading}...
ಧನವನಿತ್ತಾದೊಡೆಯು ಸಹ ಭೋ
ಜನವನುಂಡಾದೊಡೆಯು ಮೇಣ್ ನಿಜ
ತನುಜೆಯರನಿತ್ತಾದೊಡೆಯು ಬಳಿಸಂದು ಬೇಸರದೆ
ತನುವ ಬೆರೆಸಿದ್ದಾದೊಡೆಯು ನೂ
ತನಗುಣವ ನುಡಿದಾದೊಡೆಯು ರಿಪು
ಜನಪತಿಯ ವಶ ಮಾಳ್ಪುದುಚಿತವಿದೆಂದನಾ ಶಕುನಿ ॥45॥
೦೪೬ ಕೋಶ ಪಾನಾದಿಗಳ ...{Loading}...
ಕೋಶ ಪಾನಾದಿಗಳ ಮಾಡಿ ಮ
ಹೀಸುರರ ಮೇಲಾಯುಧಂಗಳ
ಸೂಸಿ ದೈವವ ಮುಟ್ಟಿ ದಿವ್ಯಾಜ್ಞೆಗಳಲೊಡಬಡಿಸಿ
ಹೇಸದರಿ ಭೂಪಾಲರನು ನಿ
ಶ್ಯೇಷವೆನಿಸುವುದಲ್ಲದಿರ್ದೊಡೆ
ಪೈಸರಿಸುವುದು ರಾಜಕಾರ್ಯವಿದೆಂದನಾ ಶಕುನಿ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೋಶ ಪಾನಾದಿಗಳನ್ನಾದರೂ ಮಾಡಿ, ಬ್ರಾಹ್ಮಣರ ಮೇಲೆ ಆಯುಧಗಳನ್ನು ತೋರಿಯಾದರೂ, ದೈವವನ್ನು ಮುಟ್ಟಿ ದಿವ್ಯಾಜ್ಞೆಗಳಲ್ಲಿ ಒಪ್ಪಿಸಿಯಾದರೂ ಅಳುಕದೆ ಶತ್ರು ರಾಜರನ್ನು ನಿಶ್ಯೇಷ ಮಾಡಬೇಕು. ಇಲ್ಲದಿದ್ದರೆ ರಾಜಕಾರ್ಯವಿದು ವ್ಯರ್ಥವಾಗುವುದು.
ಪದಾರ್ಥ (ಕ.ಗ.ಪ)
ಒಡಬಡಿಸು : ಒಪ್ಪಿಸು, ಪೈಸರಿಸು ; ವ್ಯರ್ಥವಾಗು
ಟಿಪ್ಪನೀ (ಕ.ಗ.ಪ)
ಕೋಶಪಾನ : ‘ಕೋಶ’ವೆಂಬ ದಿವ್ಯ ಪರೀಕ್ಷೆಯಲ್ಲಿ ವಾದಿ ಪ್ರತಿವಾದಿಗಳು ತಮ್ಮ ಹೇಳಿಕೆಯನ್ನು ಸ್ಥಾಪಿಸಲು ದೇವತಾ ವಿಗ್ರಹಕ್ಕೆ ಅಭಿಷೇಕ ಮಾಡಿದ ನೀರಿನಲ್ಲಿ ಎರಡು ಅಥವಾ ಮೂರು ಬೊಗಸೆ ನೀರನ್ನು ಕುಡಿಯುವ ವಿಧಾನ.
ದಿವ್ಯ : ಬೆಂಕಿ ಮೊದಲಾದುವುಗಳನ್ನು ಮುಟ್ಟಿ ಮಾಡುವ ಪ್ರಮಾಣ.
ಮೂಲ ...{Loading}...
ಕೋಶ ಪಾನಾದಿಗಳ ಮಾಡಿ ಮ
ಹೀಸುರರ ಮೇಲಾಯುಧಂಗಳ
ಸೂಸಿ ದೈವವ ಮುಟ್ಟಿ ದಿವ್ಯಾಜ್ಞೆಗಳಲೊಡಬಡಿಸಿ
ಹೇಸದರಿ ಭೂಪಾಲರನು ನಿ
ಶ್ಯೇಷವೆನಿಸುವುದಲ್ಲದಿರ್ದೊಡೆ
ಪೈಸರಿಸುವುದು ರಾಜಕಾರ್ಯವಿದೆಂದನಾ ಶಕುನಿ ॥46॥
೦೪೭ ನರಕವಿಲ್ಲದ ನರರು ...{Loading}...
ನರಕವಿಲ್ಲದ ನರರು ನಾರಿಯ
ರುರುಬೆಯಿಲ್ಲದ ಯತಿಗಳಸುರರ
ವಿರಸವಿಲ್ಲದ ಸುರರು ಮಾಯಾಪಾಶವನು ಹರಿದ
ಪರಮ ತತ್ವಜ್ಞಾನಿಯವೋಲೀ
ಧರೆಯ ನರಪಾಲಕರುಗಳು ಹಗೆ
ಹರಿದು ಹೋಗಲಸಾಧ್ಯವಹುದೇನೆಂದನಾ ಶಕುನಿ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನರಕವಿಲ್ಲದ ಮನುಷ್ಯರು, ಹೆಂಗಸರ ಕಾಟವಿಲ್ಲದ ಯತಿಗಳು, ರಾಕ್ಷಸರ ಪೀಡೆಯಿಲ್ಲದ ದೇವತೆಗಳು, ಮಾಯಾಪಾಶವನ್ನು ಕತ್ತರಿಸಿಕೊಂಡ ಪರಮ ತತ್ತ್ವಜ್ಞಾನಿ -ಇವರುಗಳಂತೆ ಈ ಭೂಮಿಯ ಅರಸರಿಗೆ ಶತ್ರುಗಳು ಓಡಿಹೋಗಲು ಅವರಿಗೆ ಅಸಾಧ್ಯವಾದದ್ದು ಏನು ತಾನೆ ಇದ್ದೀತು ?
ಪದಾರ್ಥ (ಕ.ಗ.ಪ)
ಉರುಬೆ-ಆಕ್ರಮಣ, ವಿರಸ-ಪೀಡೆ, ಹರಿ-ಕತ್ತರಿಸು, ಓಡಿಹೋಗು
ಮೂಲ ...{Loading}...
ನರಕವಿಲ್ಲದ ನರರು ನಾರಿಯ
ರುರುಬೆಯಿಲ್ಲದ ಯತಿಗಳಸುರರ
ವಿರಸವಿಲ್ಲದ ಸುರರು ಮಾಯಾಪಾಶವನು ಹರಿದ
ಪರಮ ತತ್ವಜ್ಞಾನಿಯವೋಲೀ
ಧರೆಯ ನರಪಾಲಕರುಗಳು ಹಗೆ
ಹರಿದು ಹೋಗಲಸಾಧ್ಯವಹುದೇನೆಂದನಾ ಶಕುನಿ ॥47॥
೦೪೮ ಮಸಗೆ ಮೂಡಿದ ...{Loading}...
ಮಸಗೆ ಮೂಡಿದ ಹೊಲನು ದುಷ್ಟ
ಪ್ರಸರದೇಳಿಗೆ ಪಾಪಿಯೋಲಗ
ಹುಸಿಯ ಬಾಳುವೆ ಹುದುವಿನಾರಂಭದ ಫಲೋದಯವು
ನಸಿದು ಹೋಗದೆ ಲೋಕದೊಳಗವು
ಹೆಸರುವಡೆವವೆ ಹಗೆಯ ಹೆಚ್ಚುಗೆ
ಹಸನ ಕೊಡುವುದೆ ರಾಯ ಚಿತ್ತೈಸೆಂದನಾ ಶಕುನಿ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಡಿಗೆ ರೋಗ ಕಾಣಿಸಿಕೊಂಡ ಹೊಲವು, ದುಷ್ಟರ ಸಮೂಹದ ಬೆಳವಣಿಗೆ, ಪಾಪಿಯ ಸಭೆಯಲ್ಲಿರುವುದು, ವ್ಯರ್ಥಜೀವನ ನಡೆಸುವುದು, ಸಾಮೂಹಿಕ ಸ್ವಾಮಿತ್ವದ ಬೇಸಾಯದಲ್ಲಿನ ಫಲದ ಉತ್ಪತ್ತಿ ಹಾಳಾಗಿ ಹೋಗದೆ ಅವು ಹೆಸರು ಪಡೆಯುತ್ತವೆಯೇ ? ಹಾಗೆಯೇ ಶತ್ರುಗಳ ಆಧಿಕ್ಯ ಒಳ್ಳಿತನ್ನು ಉಂಟು ಮಾಡುವುದೇ ? ಲಕ್ಷ್ಯಕೊಟ್ಟು ಕೇಳೆಂದು ಕೌರವರಾಯನಿಗೆ ಶಕುನಿ ಹೇಳಿದನು.
ಪದಾರ್ಥ (ಕ.ಗ.ಪ)
ಮಸಗೆ-ಕಾಡಿಗೆ ರೋಗ (ಗೋಧಿ, ಜೋಳ ಮೊದಲಾದ ಪೈರಿಗೆ ಬರುವ ರೋಗ), ಮೂಡು-ಕಾಣಿಸಿಕೊಳ್ಳು, ಪ್ರಸರ-ಸಮೂಹ, ಏಳಿಗೆ-ಹೆಚ್ಚಾಗುವಿಕೆ, ಹುಸಿ-ವ್ಯರ್ಥ, ಬಾಳುವೆ-ಜೀವನ, ಹುದು=ಪುದುವು-ಸಾಮೂಹಿಕ ಸ್ವಾಮಿತ್ವ, ನಸಿದು-ಹಾಳಾಗಿ ಹೋಗು, ಹಸನ-ಒಳ್ಳಿತು
ಮೂಲ ...{Loading}...
ಮಸಗೆ ಮೂಡಿದ ಹೊಲನು ದುಷ್ಟ
ಪ್ರಸರದೇಳಿಗೆ ಪಾಪಿಯೋಲಗ
ಹುಸಿಯ ಬಾಳುವೆ ಹುದುವಿನಾರಂಭದ ಫಲೋದಯವು
ನಸಿದು ಹೋಗದೆ ಲೋಕದೊಳಗವು
ಹೆಸರುವಡೆವವೆ ಹಗೆಯ ಹೆಚ್ಚುಗೆ
ಹಸನ ಕೊಡುವುದೆ ರಾಯ ಚಿತ್ತೈಸೆಂದನಾ ಶಕುನಿ ॥48॥
೦೪೯ ಜಾತಿ ಬಾವನ್ನದಲಿ ...{Loading}...
ಜಾತಿ ಬಾವನ್ನದಲಿ ಸರ್ಪದ
ಭೀತಿ ಸತ್ಪುರುಷರಿಗೆ ದುರ್ಜನ
ಭೀತಿ ದೇವಾದ್ಯರಿಗೆ ದನುಜಾದಿಗಳ ಬಲು ಭೀತಿ
ಜಾತ ಮಾತ್ರಕೆ ಜನನ ಮರಣದ
ಭೀತಿ ಬೆಂಬಿಡದಂತೆ ಗೋತ್ರಜ
ಭೀತಿ ಭೂಪಾಲರಿಗೆ ಹಿರಿದಹುದೆಂದನಾ ಶಕುನಿ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೇಷ್ಠವಾದ ಶ್ರೀಗಂಧದ ಮರದಲ್ಲಿ ಸರ್ಪದ ಹೆದರಿಕೆ, ಸಜ್ಜನರಿಗೆ ದುರ್ಜನರ ಭಯ, ದೇವಾದಿಗಳಿಗೆ ದೈತ್ಯಾದಿಗಳ ಹೆಚ್ಚಿನ ಹೆದರಿಕೆ, ಹುಟ್ಟಿದ ಮಾತ್ರಕ್ಕೆ ಜನನ ಮರಣದ ಭೀತಿ ಹಿಂಬಾಲಿಸುವಂತೆ, (ಕುಲದಲ್ಲಿ ಹುಟ್ಟಿದವರ) ದಾಯದಿಗಳ ಭೀತಿ ರಾಜರಿಗೆ ದೊಡ್ಡದಹುದು ಎಂದನು ಆ ಶಕುನಿ.
ಪದಾರ್ಥ (ಕ.ಗ.ಪ)
ಜಾತಿ-ಶ್ರೇಷ್ಠ, ಬಾವನ್ನ-ಶ್ರೀಗಂಧ, ಗೋತ್ರಜ-ಕುಲದಲ್ಲಿ ಹುಟ್ಟಿದವರು, ದಾಯದಿಗಳು
ಮೂಲ ...{Loading}...
ಜಾತಿ ಬಾವನ್ನದಲಿ ಸರ್ಪದ
ಭೀತಿ ಸತ್ಪುರುಷರಿಗೆ ದುರ್ಜನ
ಭೀತಿ ದೇವಾದ್ಯರಿಗೆ ದನುಜಾದಿಗಳ ಬಲು ಭೀತಿ
ಜಾತ ಮಾತ್ರಕೆ ಜನನ ಮರಣದ
ಭೀತಿ ಬೆಂಬಿಡದಂತೆ ಗೋತ್ರಜ
ಭೀತಿ ಭೂಪಾಲರಿಗೆ ಹಿರಿದಹುದೆಂದನಾ ಶಕುನಿ ॥49॥
೦೫೦ ಕರಣಿಕರು ಕರಣಿಕರೊಡನೆ ...{Loading}...
ಕರಣಿಕರು ಕರಣಿಕರೊಡನೆ ಸಹ
ಚರರು ಸಹಚರರೊಡನೆ ಸಾವಂ
ತರಲಿ ಸಾವಂತರುಗಳಾ ಮಂತ್ರಿಯಲಿ ಮಂತ್ರಿಗಳು
ತರುಣಿಯರು ತರುಣಿಯರೊಡನೆ ಪರಿ
ಕರರು ಪರಿಕರರೊಡನೆಯಿರಲೊರ
ಸೊರಸು ಮಿಗೆ ಮಸೆವುದು ಕಣಾ ಭೂಭುಜನೆ ಕೇಳ್ ಎಂದ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಾನುಭೋಗರು ಶಾನುಭೋಗರೊಂದಿಗೆ, ಗೆಳೆಯರು ಗೆಳೆಯರೊಂದಿಗೆ, ಸಾಮಂತರು ಸಾಮಂತರೊಂದಿಗೆ, ಮಂತ್ರಿಗಳು ಮಂತ್ರಿಗಳೊಡನೆ, ಸ್ತ್ರೀಯರು ಸ್ತ್ರೀಯರೊಡನೆ, ಸೇವಕರು ಸೇವಕರೊಡನೆ ಇರಲು ಪರಸ್ಪರ ಘರ್ಷಣೆ ಉಂಟಾಗಿ ತಿಕ್ಕಾಟ ಆಗುವುದು ರಾಜನೇ ಕೇಳು ಎಂದನು ಶಕುನಿ.
ಪದಾರ್ಥ (ಕ.ಗ.ಪ)
ಒರಸೊರಸು-ಘರ್ಷಣೆ, ಮಸೆ-ತಿಕ್ಕು
ಮೂಲ ...{Loading}...
ಕರಣಿಕರು ಕರಣಿಕರೊಡನೆ ಸಹ
ಚರರು ಸಹಚರರೊಡನೆ ಸಾವಂ
ತರಲಿ ಸಾವಂತರುಗಳಾ ಮಂತ್ರಿಯಲಿ ಮಂತ್ರಿಗಳು
ತರುಣಿಯರು ತರುಣಿಯರೊಡನೆ ಪರಿ
ಕರರು ಪರಿಕರರೊಡನೆಯಿರಲೊರ
ಸೊರಸು ಮಿಗೆ ಮಸೆವುದು ಕಣಾ ಭೂಭುಜನೆ ಕೇಳೆಂದ ॥50॥
೦೫೧ ವ್ಯಾಕುಲಿತ ವಿಪ್ರರ ...{Loading}...
ವ್ಯಾಕುಲಿತ ವಿಪ್ರರ ವಿಸತಿಯ ದಿ
ವಾಕರನ ಲೋಕಾಯತರ ರ
ತ್ನಾಕರನ ಲಾವಕರ ಹಿಸುಳರ ದಾಯಭಾಗಿಗಳ
ಶೋಕಿಗರ ಮಾಯಾವಿಗಳ ದ
ರ್ವೀಕರನ ವಿನಿಯೋಗಿಗಳ ಸ
ರ್ವೈಕ ಮತ್ಸರದೊಳಗೆ ಬದುಕುವನಾವ ಪೇಳೆಂದ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಳವಳಗೊಂಡ ದ್ವಿಜರ, ಹೀನಳಾದ ಸತಿಯ, ಸೂರ್ಯನ, ನಾಸ್ತಿಕರ, ಸಮುದ್ರದ, ಚಾಡಿ ಹೇಳುವವರ, ದುಷ್ಟರ, ಆಸ್ತಿಯನ್ನು ಭಾಗ ಮಾಡಿಕೊಳ್ಳುವವರ, ದುಃಖಪಡುವವರ, ಇಂದ್ರಜಾಲಿಕರ, ಅಡಿಗೆಯವರ ಹಾಗೂ ಅಧಿಕಾರಿಗಳ ಮತ್ಸರದಲ್ಲಿ ಬದುಕುವವನು ಯಾರು?
ಪದಾರ್ಥ (ಕ.ಗ.ಪ)
ವ್ಯಾಕುಲ-ವ್ಯಥೆ, ದಿವಾಕರ-ಸೂರ್ಯ,
ಲೋಕಾಯತ-ನಾಸ್ತಿಕ,
ರತ್ನಾಕರ-ಸಮುದ್ರ,
ಲಾವಕರು-ಚಾಡಿಹೇಳುವವರು,
ಹಿಸುಣ-ಚಾಡಿಕೋರ,
ದಾಯಭಾಗಿಗಳು-ಆಸ್ತಿಹಂಚಿಕೊಳ್ಳುವವರು,
ದರ್ವೀಕರ-ಅಡಿಗೆಯವನು, ( ಸೌಟು ಹಿಡಿದವನು)
ವಿನಿಯೋಗಿ-ಅಧಿಕಾರಿ
ಮೂಲ ...{Loading}...
ವ್ಯಾಕುಲಿತ ವಿಪ್ರರ ವಿಸತಿಯ ದಿ
ವಾಕರನ ಲೋಕಾಯತರ ರ
ತ್ನಾಕರನ ಲಾವಕರ ಹಿಸುಳರ ದಾಯಭಾಗಿಗಳ
ಶೋಕಿಗರ ಮಾಯಾವಿಗಳ ದ
ರ್ವೀಕರನ ವಿನಿಯೋಗಿಗಳ ಸ
ರ್ವೈಕ ಮತ್ಸರದೊಳಗೆ ಬದುಕುವನಾವ ಪೇಳೆಂದ ॥51॥
೦೫೨ ಮಞ್ಜು ಮಹಿಯನು ...{Loading}...
ಮಂಜು ಮಹಿಯನು ಮುಸುಕುವಂತೆ ಧ
ನಂಜಯನು ಕಾನನವ ಸುಡುವಂ
ತಂಜಿಕೆಗಳುಮ್ಮಾಹವನಂ ಹೊಯ್ದೊರಸುವಂದದಲಿ
ರಂಜಕರು ಪಾಂಡವರು ನಿನ್ನನು
ಭಂಜಿಸುವರಾವಂಗದಲಿ ನವ
ಕುಂಜರನ ಕಾಲಾಟ ಸಿಂಹಕೆ ಸೇರುವುದೆಯೆಂದ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಮ ಭೂಮಿಯನ್ನು ಆವರಿಸುವಂತೆ, ಅಗ್ನಿಯು ಕಾಡನ್ನು ಸುಡುವಂತೆ, ಭಯ ಹೆಚ್ಚಿನ ಉತ್ಸಾಹವನ್ನು ಹೊಡೆದು ನಿವಾರಿಸುವಂತೆ, ಮನವೊಲಿಸುವಂತೆ ಮಾತನಾಡುವ ಪಾಂಡವರು ನಿನ್ನನ್ನು ಯಾವ ರೀತಿಯಲ್ಲಾದರೂ ನಾಶಮಾಡುವರು. ಹೊಸದಾದ ಆನೆಯು ಕಾಡಿನಲ್ಲಿ ಕಾಲಿಟ್ಟರೆ ಅದರ ನಡಗೆ ಸಿಂಹಕ್ಕೆ ಸೇರುತ್ತದೆಯೇ ?
ಪದಾರ್ಥ (ಕ.ಗ.ಪ)
ಮುಸುಕು-ಆವರಿಸು, ಧನಂಜಯ-ಅಗ್ನಿ, ಉಮ್ಮಾಹ-ಹೆಚ್ಚಿನ ಉತ್ಸಾಹ, ಒರಸು-ನಿವಾರಿಸು, ರಂಜಕರು-ಮನವೊಲಿಸುವಂತೆ ಮಾತನಾಡುವವರು, ಕುಂಜರ-ಆನೆ, ಕಾಲಾಟ-ನಡಗೆ, ಭಂಜಿಸು-ನಾಶಮಾಡು
ಪಾಠಾನ್ತರ (ಕ.ಗ.ಪ)
ತಂಜಿಕೆಗಳುಮ್ಮಾಹವನಂ –>
ತಂಜಿಕೆಯು ಉನ್ಮಾದವನು
ಈ ಪಾಠಾಂತರವೂ ಇದೆ
ಮೂಲ ...{Loading}...
ಮಂಜು ಮಹಿಯನು ಮುಸುಕುವಂತೆ ಧ
ನಂಜಯನು ಕಾನನವ ಸುಡುವಂ
ತಂಜಿಕೆಗಳುಮ್ಮಾಹವನಂ ಹೊಯ್ದೊರಸುವಂದದಲಿ
ರಂಜಕರು ಪಾಂಡವರು ನಿನ್ನನು
ಭಂಜಿಸುವರಾವಂಗದಲಿ ನವ
ಕುಂಜರನ ಕಾಲಾಟ ಸಿಂಹಕೆ ಸೇರುವುದೆಯೆಂದ ॥52॥
೦೫೩ ದನಿಗೆ ನಡೆದೊಳ ...{Loading}...
ದನಿಗೆ ನಡೆದೊಳ ಪೊಕ್ಕು ಮರ ಗೂ
ಡಿನಲಿ ಸಿಲುಕಿದ ಹುಲಿಯವೋಲ್ ಕಾ
ನನದಿ ಬೀಸಿದ ಬಲೆಯೊಳಗೆ ಗಾನಕ್ಕೆ ಮನ ಸೋಲ್ದು
ಹನನವರಿಯದ ಮೃಗದವೋಲಿರು
ಬಿನಲಿ ಕೆಡಹಿದ ಕರಿಯವೋಲ್ ರಿಪು
ಜನಪರಭ್ಯುದಯದ ವಿನಾಶವನೆಸಗ ಬೇಕೆಂದ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೀಹದ ಪ್ರಾಣಿಯ ದನಿಯನ್ನು ಕೇಳಿ ಒಳಪ್ರವೇಶಿಸಿ ಮರದ ಗೂಡಿನಲ್ಲಿ ಸಿಕ್ಕಿಕೊಂಡ ಹುಲಿಯಹಾಗೆ, ಕಾಡಿನಲ್ಲಿ ಗಾನಕ್ಕೆ ಮನಸೋತು ಮುಂದೆ ಕಾದಿರುವ ವಧೆಯನ್ನು ತಿಳಿಯದೆ ಬೀಸಿದ ಬಲೆಯೊಳಗೆ ಸಿಕ್ಕಿಕೊಂಡ ಜಿಂಕೆಯಂತೆ, ಇಕ್ಕಟ್ಟಿನಲ್ಲಿ ಕೆಡವಿದ ಆನೆಯ ಹಾಗೆ ಶತ್ರುರಾಜರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿ ಅವರ ಅಭಿವೃದ್ಧಿಯನ್ನು ನಾಶಗೊಳಿಸಬೇಕು.
ಪದಾರ್ಥ (ಕ.ಗ.ಪ)
ದೀಹ-ಬೇಟೆಯ ಲಕ್ಷ್ಯವಾಗಿರಿಸಿದ ಮೃಗ, ಹನನ-ವಧೆ, ಮೃಗ-ಜಿಂಕೆ, ಇರುಬು-ಇಕ್ಕಟ್ಟು, ಕರಿ-ಆನೆ, ಅಭ್ಯುದಯ-ಅಭಿವೃದ್ಧಿ
ಮೂಲ ...{Loading}...
ದನಿಗೆ ನಡೆದೊಳ ಪೊಕ್ಕು ಮರ ಗೂ
ಡಿನಲಿ ಸಿಲುಕಿದ ಹುಲಿಯವೋಲ್ ಕಾ
ನನದಿ ಬೀಸಿದ ಬಲೆಯೊಳಗೆ ಗಾನಕ್ಕೆ ಮನ ಸೋಲ್ದು
ಹನನವರಿಯದ ಮೃಗದವೋಲಿರು
ಬಿನಲಿ ಕೆಡಹಿದ ಕರಿಯವೋಲ್ ರಿಪು
ಜನಪರಭ್ಯುದಯದ ವಿನಾಶವನೆಸಗ ಬೇಕೆಂದ ॥53॥
೦೫೪ ಎನ್ದು ದುರ್ಬೋಧೆಗಳ ...{Loading}...
ಎಂದು ದುರ್ಬೋಧೆಗಳ ನಾನಾ
ಚಂದದಲಿ ಬೋಧಿಸಿ ಸುನೀತಿಯ
ನಂದಗೆಡಿಸಿ ತದೀಯ ವಂಶಚ್ಛೇದ ಮಾರ್ಗವನು
ಒಂದುಗೂಡಿ ಸುಯೋಧನಂಗಾ
ನಂದವೆನಿಸಿ ಕಳಿಂಗ ಲೋಕವ
ಕೊಂದನೈ ಜನಮೇಜಯ ಕ್ಷಿತಿಪಾಲ ಕೇಳ್ ಎಂದ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ರೀತಿಯಲ್ಲಿ ಶಕುನಿಯು ನಾನಾ ರೀತಿಯಲ್ಲಿ ಕೆಟ್ಟ ಉಪದೇಶಗಳನ್ನು ಬೋಧಿಸಿ, ಒಳ್ಳೆಯ ನೀತಿಯನ್ನು ವಿರೂಪಗೊಳಿಸಿದನು. ಕುರುವಂಶಚ್ಛೇದಕ್ಕೆ ದಾರಿಯನ್ನು ಕಾಣಿಸಿ ಸುಯೋಧನನಿಗೆ ಆನಂದವೆನಿಸಿದನು. ಹೀಗೆ ಮಾಡಿ ಕಳಿಂಗನು ಲೋಕವನ್ನು ಕೊಂದನು ಕೇಳು, ಜನಮೇಜಯ ಮಹೀಪಾಲ ಎಂದು ವೈಶಂಪಾಯನನು ಹೇಳಿದನು.
ಪದಾರ್ಥ (ಕ.ಗ.ಪ)
ದುರ್ಬೋಧೆ-ಕೆಟ್ಟ ಉಪದೇಶ, ಬೋಧಿಸಿ-ಕಲಿಸಿ, ಅಂದಗೆಡಿಸು-ವಿರೂಪಗೊಳಿಸು, ತದೀಯ-ಅವನ (ಕುರುವಂಶದ), ಕಳಿಂಗ-ಶಕುನಿಯ ಇನ್ನೊಂದು ಹೆಸರು
ಮೂಲ ...{Loading}...
ಎಂದು ದುರ್ಬೋಧೆಗಳ ನಾನಾ
ಚಂದದಲಿ ಬೋಧಿಸಿ ಸುನೀತಿಯ
ನಂದಗೆಡಿಸಿ ತದೀಯ ವಂಶಚ್ಛೇದ ಮಾರ್ಗವನು
ಒಂದುಗೂಡಿ ಸುಯೋಧನಂಗಾ
ನಂದವೆನಿಸಿ ಕಳಿಂಗ ಲೋಕವ
ಕೊಂದನೈ ಜನಮೇಜಯ ಕ್ಷಿತಿಪಾಲ ಕೇಳೆಂದ ॥54॥
೦೫೫ ಎಮ್ಮ ಬಹುಮಾನಾವಮಾನವು ...{Loading}...
ಎಮ್ಮ ಬಹುಮಾನಾವಮಾನವು
ನಿಮ್ಮದಲ್ಲದೆ ಬೇರೆ ನಮ್ಮಯ
ಸೊಮ್ಮು ಸಂಬಂಧದಲಿ ಹಿತವರ ಕಾಣೆ ನಾನಿನ್ನು
ಸಮ್ಮತದಿ ಪಾಂಡವರಿಗಗ್ನಿಯ
ಲೊಮ್ಮೆ ಹರಿವನು ನೆನೆವೆನೊದವಿದ
ಡೆಮ್ಮ ಸುಕೃತೋದಯದ ಫಲವೆಂದನು ಸುಯೋಧನನು ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಯೋಧನನು “ನಮ್ಮ ಮಾನ, ಅಪಮಾನಗಳು ನಿಮ್ಮದಲ್ಲದೆ ಬೇರೆಯೆ ? ನಮ್ಮ ಆತ್ಮೀಯ ಸಂಬಂಧದಲ್ಲಿ ನಿಮಗಿಂತ ಹಿತವರನ್ನು ನಾನು ಕಾಣೆನು. ನೀವು ಒಪ್ಪಿದರೆ ಪಾಂಡವರಿಗೆ ಅಗ್ನಿಯಲ್ಲಿ ಒಮ್ಮೆಗೇ ನಾಶವನ್ನು ಯೋಚಿಸುವೆನು. ಈ ಎಣಿಕೆ ನೆರವೇರಿದರೆ ನಮ್ಮ ಪುಣ್ಯೋದಯದ ಫಲ” ಎಂದು ತನ್ನ ನಿಶ್ಚಯವನ್ನು ತಿಳಿಸಿದನು.
ಪದಾರ್ಥ (ಕ.ಗ.ಪ)
ಸೊಮ್ಮು-ಆತ್ಮೀಯ, ಸಮ್ಮತ-ಒಪ್ಪಿಗೆ, ಹರಿವು-ನಾಶ, ಸುಕೃತ-ಪುಣ್ಯ
ಮೂಲ ...{Loading}...
ಎಮ್ಮ ಬಹುಮಾನಾವಮಾನವು
ನಿಮ್ಮದಲ್ಲದೆ ಬೇರೆ ನಮ್ಮಯ
ಸೊಮ್ಮು ಸಂಬಂಧದಲಿ ಹಿತವರ ಕಾಣೆ ನಾನಿನ್ನು
ಸಮ್ಮತದಿ ಪಾಂಡವರಿಗಗ್ನಿಯ
ಲೊಮ್ಮೆ ಹರಿವನು ನೆನೆವೆನೊದವಿದ
ಡೆಮ್ಮ ಸುಕೃತೋದಯದ ಫಲವೆಂದನು ಸುಯೋಧನನು ॥55॥
೦೫೬ ಎನೆ ಕಳಿಙ್ಗಾದಿಗಳು ...{Loading}...
ಎನೆ ಕಳಿಂಗಾದಿಗಳು ತಂತ
ಮ್ಮನುಮತವ ಹೇಳಿದರು ಕೌರವ
ಜನಪನವರಿಗೆ ಕೇಡ ನಿಶ್ಚೈಸಿದನು ಮನದೊಳಗೆ
ಜನಕನಲ್ಲಿಗೆ ನಡುವಿರುಳು ಬಂ
ದನುನಯದೊಳೀ ಮಾತ ತೆಗೆದೆಂ
ದನು ವೃಕೋದರನೂಳಿಗವನರ್ಜುನನ ಸಾಹಸವ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುರುರಾಜನ ಮಾತಿಗೆ ಕಳಿಂಗಾದಿಗಳು ತಮ್ಮ ತಮ್ಮ ಒಪ್ಪಿಗೆಯನ್ನು ತಿಳಿಸಿದರು. ಕೌರವನು ತನ್ನ ಮನಸ್ಸಿನಲ್ಲಿ ಪಾಂಡವರಿಗೆ ಕೆಡುಕನ್ನು ನಿಶ್ಚೈಸಿದನು. ಆ ದಿನ ನಡುರಾತ್ರಿ ತಂದೆಯಲ್ಲಿಗೆ ಬಂದು ಪ್ರೀತಿಯಿಂದ ಈ ಮಾತನ್ನು ತೆಗೆದನು. ವೃಕೋದರನ ಕಾರ್ಯವನ್ನು, ಅರ್ಜುನನ ಸಾಹಸವನ್ನು ಹೇಳಿದನು.
ಪದಾರ್ಥ (ಕ.ಗ.ಪ)
ಕೇಡು-ಕೆಡುಕು, ಜನಕ-ತಂದೆ, ಅನುನಯ-ಪ್ರೀತಿ, ಊಳಿಗ-ಕಾರ್ಯ, ವೃಕೋದರ-ಭೀಮನ ನಾಮಾಂತರ
ಮೂಲ ...{Loading}...
ಎನೆ ಕಳಿಂಗಾದಿಗಳು ತಂತ
ಮ್ಮನುಮತವ ಹೇಳಿದರು ಕೌರವ
ಜನಪನವರಿಗೆ ಕೇಡ ನಿಶ್ಚೈಸಿದನು ಮನದೊಳಗೆ
ಜನಕನಲ್ಲಿಗೆ ನಡುವಿರುಳು ಬಂ
ದನುನಯದೊಳೀ ಮಾತ ತೆಗೆದೆಂ
ದನು ವೃಕೋದರನೂಳಿಗವನರ್ಜುನನ ಸಾಹಸವ ॥56॥
೦೫೭ ಅರಿಗಳುದ್ಭವವಿನ್ನು ಗಣ್ಟಲ ...{Loading}...
ಅರಿಗಳುದ್ಭವವಿನ್ನು ಗಂಟಲ
ನರಿವುದೆಮ್ಮನು ನೂರು ಮಕ್ಕಳ
ನರಸ ಬರಿದೇ ಹಡೆದು ಕೆಡಿಸಿದೆ ತಾಯ ಜವ್ವನವ
ಇರಲಿ ಭೀಮಾರ್ಜುನರು ಹಸ್ತಿನ
ಪುರದೊಳೆಮ್ಮಿನಿಬರನು ದೇಶಾಂ
ತರಕೆ ನೇಮಿಸು ಜೀಯ ನೂಕದು ಭೀಮನೊಡನೆಂದ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಶತ್ರುಗಳು ಹುಟ್ಟಿಕೊಂಡರು. ಇನ್ನು ನಮ್ಮ ಗಂಟಲನ್ನು ಕತ್ತರಿಸುವರು. ಮಹಾರಾಜಾ, ನಮ್ಮನ್ನು, ನೂರು ಮಕ್ಕಳನ್ನು ವ್ಯರ್ಥವಾಗಿ ಪಡೆದು ತಾಯಿಯ ಯೌವನವನ್ನು ಕೆಡಿಸಿದೆ. ಭೀಮಾರ್ಜುನರು ಹಸ್ತಿನಪುರದಲ್ಲಿರಲಿ. ನಮ್ಮೆಲ್ಲರನ್ನು ಬೇರೆ ದೇಶಕ್ಕೆ ಹೋಗುವುದಕ್ಕೆ ಗೊತ್ತು ಮಾಡು. ನಮಗೆ ಭೀಮನೊಡನೆ ಸಾಗದು” ಎಂದನು.
ಪದಾರ್ಥ (ಕ.ಗ.ಪ)
ಉದ್ಭವ-ಹುಟ್ಟು, ಅರಿ-ಶತ್ರು, ಕತ್ತರಿಸು, ಬರಿದೇ-ವ್ಯರ್ಥವಾಗಿ, ಜವ್ವನ-ಯೌವನ, ದೇಶಾಂತರ-ಅನ್ಯದೇಶ, ನೇಮಿಸು-ಗೊತ್ತುಮಾಡು, ನೂಕದು-ಸಾಗದು
ಮೂಲ ...{Loading}...
ಅರಿಗಳುದ್ಭವವಿನ್ನು ಗಂಟಲ
ನರಿವುದೆಮ್ಮನು ನೂರು ಮಕ್ಕಳ
ನರಸ ಬರಿದೇ ಹಡೆದು ಕೆಡಿಸಿದೆ ತಾಯ ಜವ್ವನವ
ಇರಲಿ ಭೀಮಾರ್ಜುನರು ಹಸ್ತಿನ
ಪುರದೊಳೆಮ್ಮಿನಿಬರನು ದೇಶಾಂ
ತರಕೆ ನೇಮಿಸು ಜೀಯ ನೂಕದು ಭೀಮನೊಡನೆಂದ ॥57॥
೦೫೮ ಅಕಟ ಮಗನೇ ...{Loading}...
ಅಕಟ ಮಗನೇ ಧರ್ಮಸುತ ಬಾ
ಧಕನೆ ಭೀಮಾರ್ಜುನರ ಮತಿ ಕಂ
ಟಕದೊಳೆರಗದು ಮೀರಿ ನಡೆಯರು ಧರ್ಮನಂದನನ
ಸಕಲ ರಾಜ್ಯಕೆ ಪಾಂಡುವೇ ಪಾ
ಲಕನು ತನ್ನೊಳು ತಪ್ಪಿದನೆ ಬಿಡು
ವಿಕಳ ಮತಿಗಳ ಮಾತನೆಂದನು ಮಗಗೆ ಧೃತರಾಷ್ಟ್ರ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಯ್ಯೋ, ಮಗನೇ ! ಧರ್ಮಸುತನು ತೊಂದರೆ ಕೊಡುವವನೆ ? ಭೀಮಾರ್ಜುನರ ಬುದ್ಧಿ ತೊಂದರೆಗೆ ಸೇರದು. ಧರ್ಮನಂದನನ ಮಾತನ್ನು ಮೀರಿ ನಡೆಯರು. ಸಕಲ ರಾಜ್ಯಕ್ಕೂ ಪಾಂಡುವೇ ರಕ್ಷಕನಾಗಿದ್ದನು. ನನ್ನಲ್ಲಿ ತಪ್ಪಿ ನಡೆದನೆ ? ಅಲ್ಪಮತಿಗಳ ಮಾತನ್ನು ಬಿಟ್ಟು ಬಿಡು” ಎಂದು ಧೃತರಾಷ್ಟ್ರನು ಮಗನಿಗೆ ಸಮಾಧಾನ ಹೇಳಿದನು.
ಪದಾರ್ಥ (ಕ.ಗ.ಪ)
ಬಾಧಕ-ತೊಂದರೆ ಕೊಡುವವ, ಎರಗದು-ಸೇರದು, ಪಾಲಕ-ರಕ್ಷಕ, ವಿಕಳ-ಅಲ್ಪ
ಮೂಲ ...{Loading}...
ಅಕಟ ಮಗನೇ ಧರ್ಮಸುತ ಬಾ
ಧಕನೆ ಭೀಮಾರ್ಜುನರ ಮತಿ ಕಂ
ಟಕದೊಳೆರಗದು ಮೀರಿ ನಡೆಯರು ಧರ್ಮನಂದನನ
ಸಕಲ ರಾಜ್ಯಕೆ ಪಾಂಡುವೇ ಪಾ
ಲಕನು ತನ್ನೊಳು ತಪ್ಪಿದನೆ ಬಿಡು
ವಿಕಳ ಮತಿಗಳ ಮಾತನೆಂದನು ಮಗಗೆ ಧೃತರಾಷ್ಟ್ರ ॥58॥
೦೫೯ ಬೊಪ್ಪ ಬಿನ್ನಹವವರ ...{Loading}...
ಬೊಪ್ಪ ಬಿನ್ನಹವವರ ಜನಕನು
ತಪ್ಪಿ ನಡೆಯನು ನಿಮಗೆ ನೀವಿ
ನ್ನೊಪ್ಪಿಸುವುದಾ ಪಾಂಡುಸುತರಿಗೆ ರಾಜ್ಯ ವೈಭವವ
ಅಪ್ಪುದಿಳೆ ಧರ್ಮಜನ ತರುವಾ
ಯಪ್ಪುದಾ ವಿಧಿಯಲಿ ಸಂತತಿ
ತಪ್ಪದವರಿಗೆ ಸಲಲಿ ನೆಲವಿದು ಹೊಲ್ಲೆಹೇನೆಂದ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಪ್ಪಾ, ನಿನ್ನಲ್ಲಿ ವಿಜ್ಞಾಪನೆ, ಅವರ ತಂದೆ ನಿಮಗೆ ತಪ್ಪಿ ನಡೆಯಲಿಲ್ಲ. ನೀವು ಇನ್ನು ಈ ಪಾಂಡುಸುತರಿಗೆ ರಾಜ್ಯವೈಭವವನ್ನು ಒಪ್ಪಿಸಿಕೊಡಿ. ಈ ನೆಲ ಧರ್ಮಜನ ಅನಂತರ ಅವನ ಮಗನಿಗೆ ಆ ವಿಧಿಯಲ್ಲಿ ಸಂತತಿ ಕ್ರಮದಲ್ಲಿ ಅವರಿಗೆ ತಪ್ಪದೆ ನಡೆಯುತ್ತದೆ. ಈ ನೆಲ ಅವರಿಗೆ ಸಲ್ಲಲಿ ತಪ್ಪೇನು ಅದರಲ್ಲಿ ?”
ಪದಾರ್ಥ (ಕ.ಗ.ಪ)
ಬಿನ್ನಹ-ವಿಜ್ಞಾಪನೆ, ಹೊಲ್ಲೆಹ-ತಪ್ಪು
ಮೂಲ ...{Loading}...
ಬೊಪ್ಪ ಬಿನ್ನಹವವರ ಜನಕನು
ತಪ್ಪಿ ನಡೆಯನು ನಿಮಗೆ ನೀವಿ
ನ್ನೊಪ್ಪಿಸುವುದಾ ಪಾಂಡುಸುತರಿಗೆ ರಾಜ್ಯ ವೈಭವವ
ಅಪ್ಪುದಿಳೆ ಧರ್ಮಜನ ತರುವಾ
ಯಪ್ಪುದಾ ವಿಧಿಯಲಿ ಸಂತತಿ
ತಪ್ಪದವರಿಗೆ ಸಲಲಿ ನೆಲವಿದು ಹೊಲ್ಲೆಹೇನೆಂದ ॥59॥
೦೬೦ ಜನಪ ಸುಖದಲಿ ...{Loading}...
ಜನಪ ಸುಖದಲಿ ನಿಮ್ಮ ತಮ್ಮನ
ತನುಜರೊಡನೆಯು ರಾಜ್ಯ ಮಾಡುವು
ದನುನಯವಲಾ ಬೀಳುಕೊಡುವುದು ನಮ್ಮ ನೂರ್ವರನು
ಜನಪರುಂಟೋಲೈಸಿ ಕೊಂಬರೆ
ತನಗಿರದೆ ಖಂಡೆಯದ ಸಿರಿ ಕರೆ
ಜನನಿಯನು ಬೀಳ್ಕೊಂಬೆವಿನ್ನೇನೆಂದು ನಿಂದಿರ್ದ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮಹಾರಾಜಾ, ನಿಮ್ಮ ತಮ್ಮನ ಮಕ್ಕಳೊಡನೆ ನೀವು ಸುಖವಾಗಿ ರಾಜ್ಯ ಭಾರ ಮಾಡುವುದು ರೀತಿಯಲ್ಲವೆ ? ನಮ್ಮ ನೂರ್ವರನ್ನು ಬೀಳು ಕೊಡಿ. ಓಲೈಸಿಕೊಳ್ಳುವುದಕ್ಕೆ ಸಮರ್ಥರಾದ ಜನಪರಿದ್ದಾರೆ. ನಮಗೆ ಖಡ್ಗದ ಸಂಪತ್ತಿಲ್ಲವೆ ? ಅದೇ ಸಾಕು. ತಾಯಿಯನ್ನು ಕರೆಸಿ. ಹೊರಡಲು ನಿರೂಪವನ್ನು ತೆಗೆದುಕೊಳ್ಳುವೆವು ಇನ್ನೇನು ?” ಎಂದು ನುಡಿದು ದುರ್ಯೋಧನನು ನಿಂತಿದ್ದನು.
ಪದಾರ್ಥ (ಕ.ಗ.ಪ)
ಅನುನಯ-ರೀತಿ, ಖಂಡೆಯ-ಖಡ್ಗ
ಮೂಲ ...{Loading}...
ಜನಪ ಸುಖದಲಿ ನಿಮ್ಮ ತಮ್ಮನ
ತನುಜರೊಡನೆಯು ರಾಜ್ಯ ಮಾಡುವು
ದನುನಯವಲಾ ಬೀಳುಕೊಡುವುದು ನಮ್ಮ ನೂರ್ವರನು
ಜನಪರುಂಟೋಲೈಸಿ ಕೊಂಬರೆ
ತನಗಿರದೆ ಖಂಡೆಯದ ಸಿರಿ ಕರೆ
ಜನನಿಯನು ಬೀಳ್ಕೊಂಬೆವಿನ್ನೇನೆಂದು ನಿಂದಿರ್ದ ॥60॥
೦೬೧ ಎಲೆ ಮಗನೆ ...{Loading}...
ಎಲೆ ಮಗನೆ ಎನ್ನಾಣೆ ಬಾ ಕುರು
ಕುಲತಿಲಕ ನೀ ಹೋಗಲೆನ್ನೊಡ
ಲುಳಿವುದೇ ಮರಿಯಾನೆ ಬಾರೈ ಕಂದ ಬಾಯೆಂದು
ಸೆಳೆದು ಬಿಗಿಯಪ್ಪಿದನು ಕಂಬನಿ
ದುಳುಕಿದನು ಹೇಳಿನ್ನು ಮೇಲಣ
ಬಳಕೆಯನು ರಿಪುರಾಜ ಕಾರ್ಯಕೆ ಬುದ್ಧಿಯೇನೆಂದ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಡನೆಯೇ ಧೃತರಾಷ್ಟ್ರನು, “ಎಲೆ ಮಗನೇ ನನ್ನಾಣೆ ! ಬಾ ಕುರುಕುಲ ಶ್ರೇಷ್ಠ ! ನೀನು ಹೋದರೆ ನನ್ನ ದೇಹ ಉಳಿಯುತ್ತದೆಯೆ? ಬಾರೋ ಮರಿಯಾನೆ ! ಬಾ ಕಂದ” ಎಂದು ಮಗನನ್ನು ಎಳೆದು ಬಿಗಿದಪ್ಪಿದನು. ಕಂಬನಿ ತುಂಬಿದನು. “ಹೇಳು, ಇನ್ನು ಮುಂದಿನ ದಾರಿಯನ್ನು; ಶತ್ರು ರಾಜಕಾರ್ಯಕ್ಕೆ ಉಪಾಯವೇನು ?” ಎಂದು ಕೇಳಿದನು.
ಪದಾರ್ಥ (ಕ.ಗ.ಪ)
ಒಡಲು-ದೇಹ,
ಮರಿಯಾನೆ-ಮಕ್ಕಳನ್ನು ಮುದ್ದಿನಿಂದ ಕರೆಯುವಾಗ ಬಳಸುವ ಮಾತು.
ಸೆಳೆದು-ಎಳೆದುಕೊಂಡು
ತುಳುಕು-ತುಂಬು,
ಮೇಲಣ-ಮುಂದಿನ,
ಬಳಕೆ-ದಾರಿ
ಮೂಲ ...{Loading}...
ಎಲೆ ಮಗನೆ ಎನ್ನಾಣೆ ಬಾ ಕುರು
ಕುಲತಿಲಕ ನೀ ಹೋಗಲೆನ್ನೊಡ
ಲುಳಿವುದೇ ಮರಿಯಾನೆ ಬಾರೈ ಕಂದ ಬಾಯೆಂದು
ಸೆಳೆದು ಬಿಗಿಯಪ್ಪಿದನು ಕಂಬನಿ
ದುಳುಕಿದನು ಹೇಳಿನ್ನು ಮೇಲಣ
ಬಳಕೆಯನು ರಿಪುರಾಜ ಕಾರ್ಯಕೆ ಬುದ್ಧಿಯೇನೆಂದ ॥61॥
೦೬೨ ನೀರ ವಿಷವಿಕ್ಕಿದೆವು ...{Loading}...
ನೀರ ವಿಷವಿಕ್ಕಿದೆವು ಕಿಚ್ಚಿನ
ಭಾರವಣೆಯೇನಹುದೊ ಪುಣ್ಯವ
ಹೋರಿಸುವ ಒದಗಿದರೆ ಹೋಗಲಿ ನಮ್ಮ ಹಗೆ ಹರಿದು
ಓರಣಿಸಿತೈ ವೈರಿಗಳ ವಿ
ಸ್ತಾರ ಮೆರೆಯಲಿ ಜೀಯ ಜೂಜಿನ
ಬಾರುಗುತ್ತಿದು ನಿಮ್ಮ ಚಿತ್ತಕೆ ಬಹಡೆ ಮಾಡುವೆವು ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀರಿನಲ್ಲಿ ಮುಳುಗಿಸಿದೆವು, ವಿಷ ಹಾಕಿದೆವು. ಬೆಂಕಿಯಿಟ್ಟು ನೋಡಬೇಕು. ಅದರ ಅತಿಶಯವೇನಾಗುತ್ತದೊ ? ಹೆಣಗಿಸಿ ನೋಡೋಣ. ನಮ್ಮ ಶತ್ರುಗಳ ನಾಶ ಉಂಟಾದರೆ ಆಗಲಿ. ಕ್ರಮಬದ್ಧವಾಗಿ ವೈರಿಗಳ ಹರಡುವಿಕೆ ಕಾಣಿಸಿಕೊಳ್ಳುತ್ತಿದೆ. ಇದು ಜೂಜಿನ ಪಣವೊಡ್ಡುವ ಆಟ. ನಿಮ್ಮ ಮನಸ್ಸಿಗೆ ಬಂದರೆ ಮಾಡುವೆವು ಎಂದು ದುರ್ಯೋಧನನು ತನ್ನ ಮನಸ್ಸಿನ ಆಲೋಚನೆಯನ್ನು ತಂದೆಯ ಮುಂದೆ ಹೊರಪಡಿಸಿದನು.
ಪದಾರ್ಥ (ಕ.ಗ.ಪ)
ಕಿಚ್ಚು-ಬೆಂಕಿ, ಭಾರವಣೆ-ಅತಿಶಯ, ಹೋರಿಸು-ಹೆಣಗಿಸು, ಓರಣಿಸು-ಕ್ರಮ, ಮೆರೆ-ಕಾಣಿಸಿಕೊಳು, ಬಾರುಗುತ್ತು-ಪಣವೊಡ್ಡಿ ಆಡುವ ಒಂದು ಬಗೆಯ ಆಟ
ಮೂಲ ...{Loading}...
ನೀರ ವಿಷವಿಕ್ಕಿದೆವು ಕಿಚ್ಚಿನ
ಭಾರವಣೆಯೇನಹುದೊ ಪುಣ್ಯವ
ಹೋರಿಸುವ ಒದಗಿದರೆ ಹೋಗಲಿ ನಮ್ಮ ಹಗೆ ಹರಿದು
ಓರಣಿಸಿತೈ ವೈರಿಗಳ ವಿ
ಸ್ತಾರ ಮೆರೆಯಲಿ ಜೀಯ ಜೂಜಿನ
ಬಾರುಗುತ್ತಿದು ನಿಮ್ಮ ಚಿತ್ತಕೆ ಬಹಡೆ ಮಾಡುವೆವು ॥62॥
೦೬೩ ಆವ ತೆರದಲಿ ...{Loading}...
ಆವ ತೆರದಲಿ ವೈರಿ ಭಟಕುಲ
ದಾವಿಗೆಯನಿಡಿಸುವಿರಿ ನಿಮ್ಮೊಳ
ಗಾವು ಹೊರಗೇ ಮಗನೆ ಸೊಗಸೆನೆ ನಿಮ್ಮ ವೈಭವಕೆ
ಸಾವರಾವಂದದಲಿ ಮಿಗೆ ಸಂ
ಭಾವಿಸುವುದಾ ತೆರನ ನೀ ಹೇ
ಳಾವು ಸೊಗಸುವೆವೆಂದು ನುಡಿದನು ಮಗಗೆ ಧೃತರಾಷ್ಟ್ರ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನೀವು ಯಾವ ರೀತಿಯಲ್ಲಿ ಶತ್ರುವೀರರ ಕುಲಕ್ಕೆ ಆವಿಗೆಯನ್ನಿಡಿಸುವಿರಿ ? ನಿಮ್ಮೊಳಗೆ ನಾವು ಹೊರಗೇ ? ನಿಮ್ಮ ವೈಭವಕ್ಕೆ ನಾನೇನು ಸಂತೋಷ ಪಡುವುದಿಲ್ಲವೇ ? ಯಾವ ರೀತಿ ಮಾಡಿದರೆ ಸಾವು ಉಂಟಾಗುವುದು ಆ ರೀತಿಯನ್ನು ಯೋಚಿಸಿ ನೀನು ಹೇಳು. ನಾವು ಸಂತೋಷ ಗೊಳ್ಳುವೆವು” ಎಂದು ಧೃತರಾಷ್ಟ್ರನು ಮಗನಿಗೆ ತಿಳಿಯ ಹೇಳಿದನು.
ಪದಾರ್ಥ (ಕ.ಗ.ಪ)
ಆವಿಗೆ-ಹೆಂಚು, ಮಡಕೆ ಮುಂತಾದುವುಗಳನ್ನು ಸುಡುವ ಕುಂಬಾರನ ಒಲೆ,
ಸೊಗಸು-ಸಂತೋಷ ಪಡು,
ಸಂಭವಿಸು-ಉಂಟಾಗು,
ತೆರ-ರೀತಿ,
ಮೂಲ ...{Loading}...
ಆವ ತೆರದಲಿ ವೈರಿ ಭಟಕುಲ
ದಾವಿಗೆಯನಿಡಿಸುವಿರಿ ನಿಮ್ಮೊಳ
ಗಾವು ಹೊರಗೇ ಮಗನೆ ಸೊಗಸೆನೆ ನಿಮ್ಮ ವೈಭವಕೆ
ಸಾವರಾವಂದದಲಿ ಮಿಗೆ ಸಂ
ಭಾವಿಸುವುದಾ ತೆರನ ನೀ ಹೇ
ಳಾವು ಸೊಗಸುವೆವೆಂದು ನುಡಿದನು ಮಗಗೆ ಧೃತರಾಷ್ಟ್ರ ॥63॥
೦೬೪ ಕರೆಸಿ ಪಾಣ್ಡುಕುಮಾರಕರ ...{Loading}...
ಕರೆಸಿ ಪಾಂಡುಕುಮಾರಕರ ನೀ
ಧರೆಯ ಹಸುಗೆಯ ಮಾಡಿಕೊಡು ಕರಿ
ತುರಗ ಭಂಡಾರವನು ಸಹ ದಾಯಾದ ವಿಷಯದಲಿ
ಇರವನವರಿಗೆ ವಾರಣಾವತಿ
ಪುರದೊಳಗೆ ಪರುಠವಿಸಿ ಕೊಡು ತಾ
ನುರುಹಿ ಸುಡುವೆನು ಬಳಿಕ ಲಾಕ್ಷಾಭವನ ರಚನೆಯಲಿ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಪಾಂಡುಕುಮಾರಕರನ್ನು ನೀನು ಕರೆಸಿ ಈ ರಾಜ್ಯವನ್ನು ಪಾಲುಮಾಡಿಕೊಡು ಆನೆ, ಕುದುರೆ, ಭಂಡಾರಗಳನ್ನು ಪಿತ್ರಾರ್ಜಿತವಾದ ಆಸ್ತಿಯ ವಿಷಯದಲ್ಲಿ ಹಂಚಿಕೊಂಡು. ವಾರಣಾವತಿ ಪುರದಲ್ಲಿ ಅವರಿಗೆ ಇರುವಂತೆ ಸಿದ್ಧತೆ ಮಾಡಿಕೊಡು. ನಾನು ಅನಂತರ ಅರಗಿನ ಮನೆಯನ್ನು ನಿರ್ಮಿಸಿ ಅದರಲ್ಲಿ ಅವರನ್ನು ಉರಿಸಿ ಸುಡುತ್ತೇನೆ” ಎಂದು ದುರ್ಯೋಧನನು ತಿಳಿಸಿದನು.
ಪದಾರ್ಥ (ಕ.ಗ.ಪ)
ಹಸುಗೆ-ಪಾಲು, ದಾಯಾದಿ ವಿಷಯ-ಪಿತ್ರಾರ್ಜಿತವಾದ ಆಸ್ತಿಯ ವಿಷಯ,
ಪರುಠವ-ಸಿದ್ಧತೆ,
ಲಾಕ್ಷಾಭವನ-ಅರಗಿನ ಮನೆ,
ರಚನೆ-ನಿರ್ಮಿಸು,
ಉರುಹು-ಉರಿಸಿ
ಮೂಲ ...{Loading}...
ಕರೆಸಿ ಪಾಂಡುಕುಮಾರಕರ ನೀ
ಧರೆಯ ಹಸುಗೆಯ ಮಾಡಿಕೊಡು ಕರಿ
ತುರಗ ಭಂಡಾರವನು ಸಹ ದಾಯಾದ ವಿಷಯದಲಿ
ಇರವನವರಿಗೆ ವಾರಣಾವತಿ
ಪುರದೊಳಗೆ ಪರುಠವಿಸಿ ಕೊಡು ತಾ
ನುರುಹಿ ಸುಡುವೆನು ಬಳಿಕ ಲಾಕ್ಷಾಭವನ ರಚನೆಯಲಿ ॥64॥
೦೬೫ ಅಹುದು ಮಗನೇ ...{Loading}...
ಅಹುದು ಮಗನೇ ಮಂತ್ರವಿದು ಮತ
ವಹುದು ನಮಗೀ ಭೀಷ್ಮ ವಿದುರರು
ಕುಹಕಿಗಳು ಕೃತಭಿನ್ನವಾದರೆ ಭಾರವದು ಮೇಲೆ
ಗಹನ ಗತಿಯಲಿ ಗೂಢತರ ಸ
ನ್ನಿಹಿತ ಕರ್ಮಕಲಾಪದಲಿ ರಿಪು
ದಹನ ಸಿದ್ಧಿಯ ನೆನೆವುದೆಂದನು ಮಗಗೆ ಧೃತರಾಷ್ಟ್ರ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹೌದು, ಮಗನೇ ಈ ರಹಸ್ಯವಾದ ಆಲೋಚನೆ ನಮಗೆ ಒಪ್ಪಿಗೆಯಿದೆ. ಈ ಭೀಷ್ಮ ವಿದುರರು ಕಪಟಿಗಳು. ನಾವು ಆಲೋಚನೆ ಮಾಡಿದ ಕೆಲಸದಲ್ಲಿ ವ್ಯತ್ಯಾಸವಾದರೆ, ಆ ಮೇಲೆ ಬಹು ಕಷ್ಟವಾಗುತ್ತದೆ. ರಹಸ್ಯ ಮಾರ್ಗದಲ್ಲಿ, ಗುಪ್ತ ರೀತಿಯ ಸಿದ್ಧತೆಯಲ್ಲಿ ಕಾರ್ಯ ಕೌಶಲ್ಯದಿಂದ ಶತ್ರುಗಳ ಸುಡುವಿಕೆಯಲ್ಲಿ ಫಲ ಪಡೆಯಲು ಯೋಚಿಸುವುದು” ಎಂದು ಮಗನಿಗೆ ಧೃತರಾಷ್ಟ್ರ ಹೇಳಿದನು.
ಪದಾರ್ಥ (ಕ.ಗ.ಪ)
ಮಂತ್ರ-ರಹಸ್ಯವಾದ ಆಲೋಚನೆ, ಮತ-ಒಪ್ಪಿಗೆ, ಕುಹಕಿ-ಕಪಟಿ, ಕೃತಭಿನ್ನ-ಕೆಲಸದಲ್ಲಿ ವ್ಯತ್ಯಾಸ, ಭಾರ-ಕಷ್ಟ, ಗಹನಗತಿ-ರಹಸ್ಯಮಾರ್ಗ, ಗೂಢತರ-ಗುಪ್ತ ರೀತಿ, ಸನ್ನಿಹಿತ-ಸಿದ್ಧತೆ, ಕರ್ಮಕಲಾಪ-ಕಾರ್ಯಕೌಶಲ್ಯ
ಮೂಲ ...{Loading}...
ಅಹುದು ಮಗನೇ ಮಂತ್ರವಿದು ಮತ
ವಹುದು ನಮಗೀ ಭೀಷ್ಮ ವಿದುರರು
ಕುಹಕಿಗಳು ಕೃತಭಿನ್ನವಾದರೆ ಭಾರವದು ಮೇಲೆ
ಗಹನ ಗತಿಯಲಿ ಗೂಢತರ ಸ
ನ್ನಿಹಿತ ಕರ್ಮಕಲಾಪದಲಿ ರಿಪು
ದಹನ ಸಿದ್ಧಿಯ ನೆನೆವುದೆಂದನು ಮಗಗೆ ಧೃತರಾಷ್ಟ್ರ ॥65॥
೦೬೬ ಜನಕನನು ಬೀಳ್ಕೊಣ್ಡು ...{Loading}...
ಜನಕನನು ಬೀಳ್ಕೊಂಡು ಕೌರವ
ಜನಪ ತನ್ನರಮನೆಯ ಸಚಿವರೊ
ಳನುಪಮಿತ ವಿಶ್ವಾಸ ಸೂಚಕನನು ಪುರೋಚನನ
ನೆನೆದ ರೌರವ ರಾಜಕಾರ್ಯದ
ಘನವನರುಹಿ ಸಮಗ್ರ ಧನ ಸಾ
ಧನವ ಜೋಡಿಸಿ ಕೊಟ್ಟು ಕಳುಹಿದನವನ ಗುಪ್ತದಲಿ ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಂದೆಯನ್ನು ಬೀಳ್ಕೊಂಡು ಕೌರವ ರಾಯನು ತನ್ನ ಅರಮನೆಯ ಮಂತ್ರಿಗಳಲ್ಲಿ ಎಣೆಯಿಲ್ಲದ ವಿಶ್ವಾಸವನ್ನು ತೋರಿಸುವ ಪುರೋಚನ ಎಂಬುವನನ್ನು ಕರೆಸಿದನು. ತಾನು ಅಲೋಚಿಸಿರುವ ಮೋಸದ ರಾಜಕಾರ್ಯದ ಗಂಭೀgತೆಯನ್ನು ತಿಳಿಸಿ ಅವಶ್ಯವಾದ ಎಲ್ಲ ಧನ ಸಾಧನಗಳನ್ನು ಹೊಂದಿಸಿ ಅವನನ್ನು ಗುಟ್ಟಾಗಿ ಕಳುಹಿಸಿಕೊಟ್ಟನು.
ಪದಾರ್ಥ (ಕ.ಗ.ಪ)
ಸಚಿವ-ಮಂತ್ರಿ,
ಅನುಪಮಿತ-ಎಣೆಯಿಲ್ಲ, ಸೂಚಕ-ತೋರಿಸು, ರೌರವ-ಮೋಸ, ಜೋಡಿಸಿ-ಹೊಂದಿಸಿ, ಗುಪ್ತ-ಗುಟ್ಟು
ಟಿಪ್ಪನೀ (ಕ.ಗ.ಪ)
ಪುರೋಚನ - ಇವನು ಕೌರವರ ಮಂತ್ರಿಯಾಗಿದ್ದ ಒಬ್ಬ ದುಷ್ಟ ಮ್ಲೇಚ್ಛ. ಕೌರವನ ಕೋರಿಕೆಯಂತೆ ವಾರಣಾವರಣದಲ್ಲಿ ಅರಗಿನ ಮನೆಯನ್ನು ಕಟ್ಟಿಸಿ ಪಾಂಡವರನ್ನೆಲ್ಲ ಸಜೀವವಾಗಿ ದಹಿಸಲು ಏರ್ಪಾಡು ಮಾಡಿದವನು ಇವನೇ. ಆದುದರಿಂದ ಕುಮಾರವ್ಯಾಸನು ಪುರೋಚನನ್ನು ‘ಬಲು ಪಾಪಕರ್ಮನು… ಕಾಪುರುಷ’ ಎಂದಿದ್ದಾನೆ.
ತಮ್ಮ ಪಾಲಿನ ಅರ್ಧ ರಾಜ್ಯದ ಆಸ್ತಿ ಪಡೆದು ಧೃತರಾಷ್ಟ್ರನ ಅಪ್ಪಣೆಯಂತೆ ಪಾಂಡವರು ವಾರಣಾವತಕ್ಕೆ ಬರುತ್ತಾರೆ. ಮೊದಲೇ ಅಲ್ಲಿಗೆ ಹೋಗಿದ್ದ ಪುರೋಚನ ಇವರನ್ನೆಲ್ಲ ಸ್ವಾಗತಿಸಿ ಅರಗಿನ ಅರಮನೆಯಲ್ಲಿ ಇವರ ವಾಸಕ್ಕೆ ಏರ್ಪಾಡು ಮಾಡಿದ. ಪಾಂಡವರು ಅಲ್ಲಿ ಒಂದು ವರ್ಷ ಕಾಲ ಇದ್ದರು. ಅನಂತರ ಕೃಷ್ಣ ಪಕ್ಷದ ಚತುರ್ದಶಿಯ ದಿವಸ ರಾತ್ರಿ ಪಾಂಡವರೆಲ್ಲ ಒಳಗಿದ್ದಾಗ ಅರಗಿನ ಮನೆಗೆ ಬೆಂಕಿಯಿಡುವುದು ಪುರೋಚನನ ಉದ್ದೇಶವಾಗಿತ್ತು. ಅದಕ್ಕಾಗಿಯೇ ಬೆಂಕಿ ತಾಗಿ ಕೂಡಲೇ ಹೊತ್ತಿ ಉರಿಯುವ ಸಾಮಗ್ರಿಗಳಿಂದ ಅರಗಿನ ಮನೆ ಸಿದ್ಧವಾಗಿತ್ತು. ಆದರೆ ವಿದುರ ಈ ಬಗೆಗೆ ಮೊದಲೇ ಗೂಢವಾಗಿ ಸೂಚನೆ ಕೊಟ್ಟಿದ್ದ. ಅಲ್ಲದೆ ಮನೆಯ ರಚನೆ, ವಾಸನೆಗಳನ್ನು ನೋಡಿ ಭೀಮ ಧರ್ಮರಾಯರಿಗೆ ಅನುಮಾನವೂ ಬಂದಿತ್ತು. ಅನಂತರ ವಿದುರ ಕಳಿಸಿದ ಒಬ್ಬ ಕಾರ್ಮಿಕ ‘ಖನಕ’ನು ಅರಗಿನ ಮನೆಯಲ್ಲಿ ಒಂದು ಸುರಂಗ ಮಾರ್ಗವನ್ನು ನಿರ್ಮಿಸಿದ್ದ. ಈ ಎಲ್ಲ ಏರ್ಪಾಡುಗಳಾದ ಮೇಲೆ ಭೀಮನು ಒಂದುರಾತ್ರಿ ತಾನೇ ಅರಗಿನ ಮನೆಗೆ ಬೆಂಕಿ ಹೊತ್ತಿಸಿ ಗುಪ್ತಮಾರ್ಗದಿಂದ ಪಾಂಡವರನ್ನೆಲ್ಲ ಹೊರಸಾಗಿಸಿದ. ತಾನು ಮಾಡಿದ ತಪ್ಪಿಗಾಗಿ ಪುರೋಚನನೇ ಆ ಅರಗಿನ ಮನೆಯಲ್ಲಿ ಸುಟ್ಟು ಭಸ್ಮವಾದ. ಆದಿಪರ್ವದ 144ರಿಂದ 148ನೇ ಅಧ್ಯಾಯಗಳಲ್ಲಿ ಈ ಕೌರವರ ಸಚಿಚಿನ ವಿವರಗಳಿವೆ. ಈ ದುಷ್ಟ ಯತ್ನಕ್ಕೆ ಧೃತರಾಷ್ಟ್ರನ ಬೆಂಬಲವೂ ಇದ್ದಿತೆಂಬ ಸಂಗತಿಯೂ ಇಲ್ಲಿ ವರ್ಣಿತವಾಗಿದೆ. ಎಲ್ಲರೆದುರಿಗೆ ಈ ಸಂಗತಿಯನ್ನು ತಿಳಿಸುವಾಗ ಉಳಿದವರಿಗೆ ಅರ್ಥವಾಗದ ಜಾನಪದ ಭಾಷೆಯಲ್ಲಿ ಮ್ಲೇಚ್ಛ ಭಾಷೆಯಲ್ಲಿ ವಿದುರನು ಮಾತಾಡಿದನೆಂಬ ವಿವರವು ಆ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಮ್ಲೇಚ್ಛ ಭಾಷೆಯ ಸಂಗತಿಯನ್ನು ತಿಳಿಸುತ್ತದೆ. ಧರ್ಮರಾಯನಿಗೂ ಈ ಭಾಷೆ ಬರುತ್ತಿತ್ತು. ಪಾಂಡವರನ್ನು ಸಾಮೂಹಿಕವಾಗಿ ಕೊಲ್ಲುವ ದುಷ್ಟ ಕಾರ್ಯದಲ್ಲಿ ತೊಡಗಿದ ಪುರೋಚನ ತನ್ನ ತಂತ್ರಕ್ಕೆ ತಾನೇ ಬಲಿಯಾದದ್ದು ಒಂದು ರೀತಿಯಲ್ಲಿ ‘ಕಾವ್ಯ ನ್ಯಾಯ’ವನ್ನು ಪುರಸ್ಕರಿಸುವ ಅಂಶವಾಗಿದೆ. ಈ ಜತುಗೃಹ ಯೋಜನೆ ಮುಂದೆ ಕೌರವನ ವಿನಾಶಕ್ಕೆ ಕಾರಣವಾದ ಘಟನೆಗಳಲ್ಲಿ ಒಂದಾಗಿದೆ.
ಪುರೋಚನ-ದುರ್ಯೋಧನನ ಮಂತ್ರಿಗಳಲ್ಲಿ ಒಬ್ಬ ಪಾಂಡವರನ್ನು ನಿರ್ನಾಮಗೊಳಿಸುವ ದುರ್ಯೋಧನನ ಉದ್ದೇಶಕ್ಕೆ ಅವನ ಸೂಚನೆಯ ಮೇರೆಗೆ ವಾರಣಾವತದಲ್ಲಿ ಅರಗಿನ ಮನೆಯನ್ನು ಕಟ್ಟಿಸಿ ಅದರಲ್ಲಿಯೇ ವಾಸವಾಗಿದ್ದ.
ಮೂಲ ...{Loading}...
ಜನಕನನು ಬೀಳ್ಕೊಂಡು ಕೌರವ
ಜನಪ ತನ್ನರಮನೆಯ ಸಚಿವರೊ
ಳನುಪಮಿತ ವಿಶ್ವಾಸ ಸೂಚಕನನು ಪುರೋಚನನ
ನೆನೆದ ರೌರವ ರಾಜಕಾರ್ಯದ
ಘನವನರುಹಿ ಸಮಗ್ರ ಧನ ಸಾ
ಧನವ ಜೋಡಿಸಿ ಕೊಟ್ಟು ಕಳುಹಿದನವನ ಗುಪ್ತದಲಿ ॥66॥
೦೬೭ ಆ ಪುರೋಚನನೆಮ್ಬವನು ...{Loading}...
ಆ ಪುರೋಚನನೆಂಬವನು ಬಲು
ಪಾಪಕರ್ಮನು ಕುರುಪತಿಗೆ ಬಳಿ
ಕಾ ಪುರಾಂತರದಿಂದ ಬಂದನು ವಾರಣಾವತಿಗೆ
ಆ ಪುರದ ಜನವರಿಯದಂತಿರೆ
ಕಾಪುರುಷನಳವಡಿಸಿದನು ನಸು
ದೀಪ ತಾಗಿದೊಡೇಕರೂಪಹ ರಾಜಭವನವನು ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಪುರೋಚನನು ಬಹಳ ಪಾಪಕರ್ಮಿ, ಕುರುಪತಿಯ ಆದೇಶದ ಪ್ರಕಾರ ಹಸ್ತಿನಾಪುರದಿಂದ ದೂರದಲ್ಲಿನ ವಾರಣಾವತಿಗೆ ಬಂದನು. ಆ ಪಟ್ಟಣದ ಜನ ತಿಳಿಯದಂತೆ, ಆ ನೀಚ ಪುರುಷ ಪುರೋಚನನು ಸ್ವಲ್ಪ ದೀಪ ತಾಕಿದರೂ ಸುಟ್ಟು ಬೂದಿಯಂತೆ ಏಕರೂಪವಾಗುವ ರಾಜಭವನವನ್ನು ಸಿದ್ಧಪಡಿಸಿದನು.
ಪದಾರ್ಥ (ಕ.ಗ.ಪ)
ಕಾಪುರುಷ-ನೀಚಪುರುಷ, ನಸು-ಸ್ವಲ್ಪ, ಅಳವಡಿಸು-ಸಿದ್ಧಪಡಿಸು
ಮೂಲ ...{Loading}...
ಆ ಪುರೋಚನನೆಂಬವನು ಬಲು
ಪಾಪಕರ್ಮನು ಕುರುಪತಿಗೆ ಬಳಿ
ಕಾ ಪುರಾಂತರದಿಂದ ಬಂದನು ವಾರಣಾವತಿಗೆ
ಆ ಪುರದ ಜನವರಿಯದಂತಿರೆ
ಕಾಪುರುಷನಳವಡಿಸಿದನು ನಸು
ದೀಪ ತಾಗಿದೊಡೇಕರೂಪಹ ರಾಜಭವನವನು ॥67॥
೦೬೮ ನಿಗಮ ಸಂಸ್ಥಿತ ...{Loading}...
ನಿಗಮ ಸಂಸ್ಥಿತ ವಾಸ್ತು ರಚನಾ
ದಿಗಳನಾಯ ವ್ಯಯದ ತಾರಾ
ದಿಗಳ ರಾಶಿಗ್ರಹ ಬಲದ ವಿಪರೀತ ಯೋಗದಲಿ
ಹಗಲು ತೀರಲು ತಳಿತ ಕೈ ದೀ
ವಿಗೆಯ ಹಂತಿಯ ಬೆಡಗಿನಲಿ ಕೇ
ಡಿಗನು ಕೃತ್ರಿಮ ರಚನೆಯಲಿ ಮಾಡಿಸಿದನರಮನೆಯ ॥68॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಾಸ್ತ್ರಾನುಸಾರವಾದ ವಾಸ್ತು ರಚನಾದಿಗಳನ್ನೂ, ತಾರಾಬಲ ರಾಶಿ ಗ್ರಹ ಬಲಾದಿಗಳನ್ನು ನೋಡಿ ಕೆಟ್ಟ ಮುಹೂರ್ತದ ಯೋಗದಲ್ಲಿ ಕಟ್ಟಡವನ್ನು ಪ್ರಾರಂಭಿಸಿದನು. ಹಗಲು ಮುಗಿದ ಮೇಲೆ ರಾತ್ರಿಯ ಕತ್ತಲೆಯಲ್ಲಿ ಸೇರಿಸಿದ ಕೈದೀಪಗಳ ಸಾಲಿನ ಬೆಳಕಿನಲ್ಲಿ ಕೇಡುಮಾಡುವವನಾದ ಪುರೋಚನನು ಮೋಸದ ರಚನೆಯಲ್ಲಿ ಅರಮನೆಯನ್ನು ನಿರ್ಮಾಣ ಮಾಡಿಸಿದನು.
ಪದಾರ್ಥ (ಕ.ಗ.ಪ)
ವಿಪರೀತ-ಅತಿಶಯ, ತಳಿತ-ಸೇರಿಸಿದ, ಹಂತಿ-ಸಾಲು, ಬೆಡಗು-ಸೊಬಗು, ಕೇಡಿಗ-ಕೇಡುಮಾಡುವವನು, ಕೃತ್ರಿಮ-ಮೋಸ
ಮೂಲ ...{Loading}...
ನಿಗಮ ಸಂಸ್ಥಿತ ವಾಸ್ತು ರಚನಾ
ದಿಗಳನಾಯ ವ್ಯಯದ ತಾರಾ
ದಿಗಳ ರಾಶಿಗ್ರಹ ಬಲದ ವಿಪರೀತ ಯೋಗದಲಿ
ಹಗಲು ತೀರಲು ತಳಿತ ಕೈ ದೀ
ವಿಗೆಯ ಹಂತಿಯ ಬೆಡಗಿನಲಿ ಕೇ
ಡಿಗನು ಕೃತ್ರಿಮ ರಚನೆಯಲಿ ಮಾಡಿಸಿದನರಮನೆಯ ॥68॥
೦೬೯ ಅರಗಿನಲಿ ಭಿತ್ತಿಗಳ ...{Loading}...
ಅರಗಿನಲಿ ಭಿತ್ತಿಗಳ ನವ ಸ
ಜ್ಜರಸ ಗುಡ ಮಿಶ್ರದಲಿ ನೆಲೆಯು
ಪ್ಪರಿಗೆಗಳನವರಲಿ ಕವಾಟ ಸ್ತಂಭ ವೇದಿಗಳ
ವಿರಚಿಸಿದ ನವಸೌಧ ಭದ್ರಾ
ಸ್ತರಣ ನಂದ್ಯಾವರ್ತದಲಿ ಪರಿ
ಪರಿಯ ಬಿನ್ನಾಣದೊಳಗರಗಿನ ಮನೆಯ ಮಾಡಿಸಿದ ॥69॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗೋಡೆಗಳನ್ನು ಅರಗಿನಲ್ಲಿ, ಹೊಸದಾದ ರಾಳ ಮತ್ತು ಬೆಲ್ಲದ ಮಿಶ್ರಣದಲ್ಲಿ ಮೇಲುಮಾಳಿಗೆಯ ಮನೆಯನ್ನು, ಆ ವಸ್ತುಗಳಿಂದಲೇ ಬಾಗಿಲು, ಕಂಬ, ಕಟ್ಟೆಗಳನ್ನು ನಿರ್ಮಿಸಿದನು. ಹೊಸ ಅರಮನೆಯ ಮಂಗಳಕರವಾದ ಪೀಠವನ್ನು, ವರ್ತುಲಾಕಾರದ ವಿಶಿಷ್ಟಾಕೃತಿಯ ಕಟ್ಟಡದಲ್ಲಿ ಬಗೆ ಬಗೆಯ ಚಮತ್ಕೃತಿಯಿಂದ ಅರಗಿನ ಮನೆಯನ್ನು ಮಾಡಿಸಿದನು.
ಪದಾರ್ಥ (ಕ.ಗ.ಪ)
ಭಿತ್ತಿ-ಗೋಡೆ, ಸಜ್ಜರಸ-ರಾಳ, ಗುಡ-ಬೆಲ್ಲ, ನೆಲೆಯುಪ್ಪರಿಗೆ-ಮೇಲು ಮಾಳಿಗೆಯ ಮನೆ, ಕವಾಟ-ಬಾಗಿಲು, ಸ್ತಂಭ-ಕಂಬ, ವೇದಿ-ಕಟ್ಟೆ, ವಿರಚಿಸು-ನಿರ್ಮಿಸು, ಸೌಧ-ಅರಮನೆ, ಭದ್ರಾಸ್ತರಣ-ಅಧಿಷ್ಠಾನ
ನಂದ್ಯಾವರ್ತ-ಆರು ಕಟ್ಟಡಗಳ ಒಂದು ಸೌಧ.
ಬಿನ್ನಾಣ-ಚಮತ್ಕೃತಿ
ಟಿಪ್ಪನೀ (ಕ.ಗ.ಪ)
ಭದ್ರಾಸ್ತರಣ-ಕುಮಾರವ್ಯಾಸನು ಭದ್ರಾಸ್ತರಣ ನಂದ್ಯಾವರ್ತ ಎಂದು ಹೇಳಿರುವುದನ್ನು ವಿಶ್ಲೇಷಿಸಿದರೆ ಭದ್ರಾಸ್ತರಣ ಎನ್ನುವುದು ಅಧಿಷ್ಠಾನದ ವಿಧ ಎಂಬುದು ಸ್ಪಷ್ಟವಾಗುತ್ತದೆ, ಕಟ್ಟಡ ನಿರ್ಮಾಣಕ್ಕೆ ಮೊದಲು ನಿರ್ಮಿತವಾಗುವ ಅಧಿಷ್ಠಾನ ಅಥವಾ ಜಗುಲಿ. ಇದು ಯಾವುದೇ ಕಟ್ಟಡದ ಅಡಿಯಲ್ಲಿರುವ ಭಾಗ. ಶಿಲ್ಪಶಾಸ್ತ್ರಗಳಲ್ಲಿ ಅಧಿಷ್ಠಾನದ ಬಗೆಗಳು ಬಹುವಾಗಿ ಹೇಳಲಾಗಿದೆ. ಮಾನಸಾರವೇ ಅತ್ಯಂತ ಹೆಚ್ಚಿನ ಬಗೆಯ ಅದಿಷ್ಠಾನಗಳನ್ನು ವರ್ಣಿಸಿದೆ. ಅಧಿಷ್ಠಾನವು ಯಜಮಾನನ ವರ್ಣಕ್ಕೆ ಅನುಗುಣವಾಗಿರಬೇಕು. ಸ್ತರಣ ಎಂದರೆ ಹಾಸು ಎಂದು ಅರ್ಥ. ಆದ್ದರಿಂದ ಇಲ್ಲಿ ಭದ್ರಾಸ್ತರಣ ಎನ್ನುವುದನ್ನು ಭದ್ರಪೀಠ ಎಂದು ಅರ್ಥೈಸಬಹುದು. ಭದ್ರಪೀಠದಲ್ಲಿ ಅಷ್ಟಾಂಗಯುತ ಭದ್ರಪೀಠ, ವೇದೀ ಭದ್ರಪೀಠ ಮತ್ತು ಪಂಚಾಂಗಯುತ ಭದ್ರಪೀಠ ಎಂದು ಮೂರು ಬಗೆಗಳು.
ಇಂತಹ ಅಧಿಷ್ಠಾನದ ಮೇಲೆ ನಂದ್ಯಾವರ್ತ ಬಗೆಯ ಕಟ್ಟಡ ನಿರ್ಮಾಣವಾಯಿತು ಎಂಬುದು ಕುಮಾರವ್ಯಾಸನ ಹೇಳಿಕೆ.
ನಂದ್ಯಾವರ್ತ -ಮಾನಸಾರದಲ್ಲಿ ಆರು ಅಂತಸ್ತುಗಳ ಕಟ್ಟಡಗಳಲ್ಲಿ 13 ಬಗೆಗಳನ್ನು ವಿವರಿಸಲಾಗಿದೆ. ಅವುಗಳಲ್ಲಿ ನಂದ್ಯಾವರ್ತವು 12ನೆಯದು. ಆರು ಅಂತಸ್ತು ಕಟ್ಟಡದ ವಿವರಣೆಗಳನ್ನು ಹತ್ತು ಶ್ಲೋಕಗಳಲ್ಲಿ ಬಹುವಿವರವಾಗಿ ವರ್ಣಿಸಲಾಗಿದೆ. ಆ ವರ್ಣನೆಯ ಹೆಚ್ಚು ತಾಂತ್ರಿಕವಾದುದರಿಂದ ಅದನ್ನು ಇಲ್ಲಿ ಹೇಳುತ್ತಿಲ್ಲ
ಡಾ.ಜಿ.ಜ್ಞಾನಾನಂದ, ಕನ್ನಡ ಮಹಾಭಾರತಗಳಲ್ಲಿ ಶಿಲ್ಪ ಮತ್ತು ಶಿಲ್ಪಿ , ಸಂಕೃತಿ ಸಾಹಿತ್ಯ ಪ್ರತಿಷ್ಠಾನ, ಬೆಂಗಳೂರು, 2007
ನಂದ್ಯಾವರ್ತ
ಈ ಪದಕ್ಕೆ ಮಾನಸಾರ ಕೃತಿಯಲ್ಲಿರುವ ವಿವರಣೆ ಹೀಗಿದೆ: ನಂದ್ಯಾವರ್ತವೆಂದರೆ ಆರು ಮಹಡಿಗಳುಳ್ಳ ಒಂದು ಕಟ್ಟಡ, ಒಂದು ರೀತಿಯ ಶಾಲ ( ಸುಪ್ರಭೇದಾಗಮ) ಹಿಂದೂ ಅರ್ಕಿಟೆಕ್ಚರ್ ಇಂಡಿಯಾ ಅಂಡ್ ಅಬ್ರಾಡ್ (ಪು.115 )ನ ಪ್ರಕಾರ, ಆರು ಮಹಡಿಯ ಸೌಧಗಳಲ್ಲಿ 13 ಪ್ರಭೇದಗಳನ್ನು ತಿಳಿಸಿದ್ದು ಅದರಲ್ಲಿ ನಂದ್ಯಾವರ್ತವೂ ಒಂದು.
ಡಾ. ಹರಿಹರ ಶ್ರೀನಿವಾಸರಾವ್, ಇತಿಹಾಸದರ್ಶನ, ಸಂಪುಟ 13/1998
ಮೂಲ ...{Loading}...
ಅರಗಿನಲಿ ಭಿತ್ತಿಗಳ ನವ ಸ
ಜ್ಜರಸ ಗುಡ ಮಿಶ್ರದಲಿ ನೆಲೆಯು
ಪ್ಪರಿಗೆಗಳನವರಲಿ ಕವಾಟ ಸ್ತಂಭ ವೇದಿಗಳ
ವಿರಚಿಸಿದ ನವಸೌಧ ಭದ್ರಾ
ಸ್ತರಣ ನಂದ್ಯಾವರ್ತದಲಿ ಪರಿ
ಪರಿಯ ಬಿನ್ನಾಣದೊಳಗರಗಿನ ಮನೆಯ ಮಾಡಿಸಿದ ॥69॥
೦೭೦ ಹಿರಿಯ ಭವನದ ...{Loading}...
ಹಿರಿಯ ಭವನದ ಸುತ್ತುವಳಯದ
ಮುರುಹಿನಲಿ ಮನೆ ಮನೆಗಳಾ ಮಂ
ದಿರ ನಿಕಾಯಕೆ ಬಾಗಿಲೊಂದಾ ದ್ವಾರ ದೇಶದಲಿ
ಇರವು ತನ್ನದು ಬಾಗಿಲಿಕ್ಕಿದು
ಹೊರಗೆ ಮುದ್ರಿಸಿ ಕಿಚ್ಚ ಚುಚ್ಚುವ
ಪರುಠವಣೆಯಲಿ ಖಳ ಪುರೋಚನನಂದು ನಿರ್ಮಿಸಿದ ॥70॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ದೊಡ್ಡ ಭವನದ ಸುತ್ತಮುತ್ತಲೂ ವಕ್ರತೆಯಲ್ಲಿ ಹಲವು ಮನೆಗಳನ್ನು, ಆ ಮನೆಗಳ ಸಮೂಹಕ್ಕೆ ಒಂದೇ ಬಾಗಿಲು, ಹೊರಗಿನ ಆ ಮಹಾದ್ವಾರದ ಪ್ರದೇಶದಲ್ಲಿ ತನ್ನ ವಾಸ. ಬಾಗಿಲು ಹಾಕಿ ಹೊರಗೆ ಮುದ್ರೆ ಮಾಡಿ ಬೆಂಕಿಯಿಂದ ಸುಡುವ ಸಿದ್ಧತೆಯಲ್ಲಿ ನೀಚನಾದ ಪುರೋಚನನು ಎಲ್ಲ ಏರ್ಪಾಡು ಮಾಡಿದನು.
ಪದಾರ್ಥ (ಕ.ಗ.ಪ)
ಮುರುಹು-ವಕ್ರತೆ, ನಿಕಾಯ-ಸಮೂಹ, ಚುಚ್ಚು-ಸುಡು, ಪರುಠವಣಿ-ಸಿದ್ಧತೆ
ಮೂಲ ...{Loading}...
ಹಿರಿಯ ಭವನದ ಸುತ್ತುವಳಯದ
ಮುರುಹಿನಲಿ ಮನೆ ಮನೆಗಳಾ ಮಂ
ದಿರ ನಿಕಾಯಕೆ ಬಾಗಿಲೊಂದಾ ದ್ವಾರ ದೇಶದಲಿ
ಇರವು ತನ್ನದು ಬಾಗಿಲಿಕ್ಕಿದು
ಹೊರಗೆ ಮುದ್ರಿಸಿ ಕಿಚ್ಚ ಚುಚ್ಚುವ
ಪರುಠವಣೆಯಲಿ ಖಳ ಪುರೋಚನನಂದು ನಿರ್ಮಿಸಿದ ॥70॥
೦೭೧ ಧರಣಿಪತಿ ಕೇಳಿತ್ತ ...{Loading}...
ಧರಣಿಪತಿ ಕೇಳಿತ್ತ ಹಸ್ತಿನ
ಪುರದೊಳಗೆ ಕುಂತೀ ಕುಮಾರರ
ಕರೆಸಿ ಕಟ್ಟೇಕಾಂತದಲಿ ಧೃತರಾಷ್ಟ್ರ ಭೂಪಾಲ
ಬೆರಗು ಬಿನ್ನಾಣದಲಿ ಮಕ್ಕಳ
ಮರುಳು ಮಾಡಿದನೇನ ಹೇಳುವೆ
ನುರಿವನೆಯ ಬೀಡಾರದಲಿ ಬಿಡಿಸಲ್ಕೆ ಮನದಂದ ॥71॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇತ್ತ ಕಡೆ ಹಸ್ತಿನಾಪುರದೊಳಗೆ ಧೃತರಾಷ್ಟ್ರ ಭೂಪಾಲನು ಕುಂತೀಕುಮಾರರನ್ನು ಕರೆಸಿ ಬಹಳ ಗುಪ್ತವಾಗಿ ಅವಸರದಲ್ಲಿ ಜಾಣ್ಮೆಯಿಂದ ಮಕ್ಕಳನ್ನು ಮರುಳು ಮಾಡಿದನು. ಏನೆಂದು ಹೇಳಲಿ ? ಉರಿಮನೆಯ ಬೀಡಾರದಲ್ಲಿ ಬಿಡಿಸುವುದಕ್ಕೆ ಮನಸ್ಸು ಮಾಡಿದನು. ಜನಮೇಜಯ ಮಹಾರಾಜನೇ ಕೇಳೆಂದು ವೈಶಂಪಾಯನನು ಹೇಳಿದನು.
ಪದಾರ್ಥ (ಕ.ಗ.ಪ)
ಕಟ್ಟೇಕಾಂತದಲಿ-ಬಹಳ ಗುಪ್ತವಾಗಿ, ಬೆರಗು-ಚಾತುರ್ಯ, ಬಿನ್ನಾಣ-ಜಾಣ್ಮೆ,
ಮೂಲ ...{Loading}...
ಧರಣಿಪತಿ ಕೇಳಿತ್ತ ಹಸ್ತಿನ
ಪುರದೊಳಗೆ ಕುಂತೀ ಕುಮಾರರ
ಕರೆಸಿ ಕಟ್ಟೇಕಾಂತದಲಿ ಧೃತರಾಷ್ಟ್ರ ಭೂಪಾಲ
ಬೆರಗು ಬಿನ್ನಾಣದಲಿ ಮಕ್ಕಳ
ಮರುಳು ಮಾಡಿದನೇನ ಹೇಳುವೆ
ನುರಿವನೆಯ ಬೀಡಾರದಲಿ ಬಿಡಿಸಲ್ಕೆ ಮನದಂದ ॥71॥
೦೭೨ ದುರುಳರೀ ಕೌರವರು ...{Loading}...
ದುರುಳರೀ ಕೌರವರು ನೀವತಿ
ಗರುವರವದಿರು ಪಾಪಕರ್ಮರು
ಪರಮ ಪುಣ್ಯರು ನೀವು ತನ್ನವದಿರು ಕುಮಂತ್ರಿಗಳು
ಎರಳೆ ತೋಳನ ಸಾದು ಸುಣ್ಣದ
ನೆರವಿಗದುವಾವಗೆಯ ಸೇರುವೆ
ಯರಸ ನಿನ್ನೊಡನೆನ್ನ ಕುನ್ನಿಗಳೆನುತ ಬಿಸುಸುಯ್ದ ॥72॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈ ಕೌರವರು ದುಷ್ಟರು, ನೀವು ಬಹಳ ಗೌರವಸ್ಥರು. ಅವರುಗಳು ಪಾಪ ಕರ್ಮಿಗಳು ನೀವು ಪರಮ ಪುಣ್ಯರು. ನನ್ನವರು ಕುತಂತ್ರಿಗಳು. ಅರಸಾ, ನಿನ್ನೊಡನೆ ನನ್ನ ಕುನ್ನಿಗಳು, ಜಿಂಕೆ ತೋಳನೊಂದಿಗೆ ಹಾಗೂ ಸಾದು(ಲೇಪನದ್ರವ್ಯ, ಸುಣ್ಣಗಳ ಬೆರಕೆಗೆ ಯಾವ ರೀತಿಯ ಸೇರುವೆಯಾಗುತ್ತದೆ ?” ಎಂದು ಧೃತರಾಷ್ಟ್ರ ನುಡಿದು ನಿಟ್ಟುಸಿರು ಬಿಟ್ಟನು.
ಪದಾರ್ಥ (ಕ.ಗ.ಪ)
ಗರುವ-ಗೌರವ, ಕುಮಂತ್ರಿ-ಕುತಂತ್ರಿ, ಕುನ್ನಿ-ನಾಯಿಮರಿ, ಎರಳೆ-ಜಿಂಕೆ, ನೆರವು-ಬೆಂಬಲ
ಮೂಲ ...{Loading}...
ದುರುಳರೀ ಕೌರವರು ನೀವತಿ
ಗರುವರವದಿರು ಪಾಪಕರ್ಮರು
ಪರಮ ಪುಣ್ಯರು ನೀವು ತನ್ನವದಿರು ಕುಮಂತ್ರಿಗಳು
ಎರಳೆ ತೋಳನ ಸಾದು ಸುಣ್ಣದ
ನೆರವಿಗದುವಾವಗೆಯ ಸೇರುವೆ
ಯರಸ ನಿನ್ನೊಡನೆನ್ನ ಕುನ್ನಿಗಳೆನುತ ಬಿಸುಸುಯ್ದ ॥72॥
೦೭೩ ತನ್ದೆಯಿಲ್ಲದ ನಿಮಗೆ ...{Loading}...
ತಂದೆಯಿಲ್ಲದ ನಿಮಗೆ ಹಿತರಾ
ರೆಂದು ಮರುಗುವೆನೆನ್ನ ಮಕ್ಕಳು
ಕೊಂದು ಹಿಂಡೆಯ ಕೂಳನುಂಬರೆ ಹೇಸುವವರಲ್ಲ
ಇಂದು ನಿಮಗವರಿಂದಲುಪಹತಿ
ಬಂದುದಾದರೆ ತನ್ನ ತಲೆಯಲಿ
ನಿಂದು ಹೊರೆವುದಕೀರ್ತಿ ಕಿಲ್ಬಿಷ ಮಗನೆ ಕೇಳ್ ಎಂದ ॥73॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ತಂದೆಯಿಲ್ಲದ ನಿಮಗೆ ಹಿತವರು ಯಾರು ಎಂದು ಮರುಗುತ್ತೇನೆ. ನನ್ನ ಮಕ್ಕಳು ನಿಮ್ಮನ್ನು ಕೊಂದು ಪಿಂಡದ ಅನ್ನವನ್ನು ತಿನ್ನುವುದಕ್ಕೂ ಅಸಹ್ಯ ಪಡುವವರಲ್ಲ. ಈಗ ಅವರಿಂದ ನಿಮಗೆ ತೊಂದರೆ ಬಂದದ್ದಾದರೆ ಮಗನೇ, ಅಪಕೀರ್ತಿಯ ಪಾಪ ನನ್ನ ತಲೆಗೆ ಅಂಟಿಕೊಳ್ಳುತ್ತದೆ”. ಎಂದು ಧೃತರಾಷ್ಟ್ರ ಧರ್ಮರಾಜಾದಿಗಳನ್ನು ಕುರಿತು ನುಡಿದನು.
ಪದಾರ್ಥ (ಕ.ಗ.ಪ)
ಹಿಂಡೆಯ-ಪಿಂಡದ,
ಕೂಳು-ಅನ್ನ, ಹೇಸು-ಅಸಹ್ಯ ಪಡು,
ಉಪಹತಿ-ತೊಂದರೆ, ಅಕೀರ್ತಿ-ಅಪಕೀರ್ತಿ, ಕಿಲ್ಬಿಷ-ಪಾಪ
ಮೂಲ ...{Loading}...
ತಂದೆಯಿಲ್ಲದ ನಿಮಗೆ ಹಿತರಾ
ರೆಂದು ಮರುಗುವೆನೆನ್ನ ಮಕ್ಕಳು
ಕೊಂದು ಹಿಂಡೆಯ ಕೂಳನುಂಬರೆ ಹೇಸುವವರಲ್ಲ
ಇಂದು ನಿಮಗವರಿಂದಲುಪಹತಿ
ಬಂದುದಾದರೆ ತನ್ನ ತಲೆಯಲಿ
ನಿಂದು ಹೊರೆವುದಕೀರ್ತಿ ಕಿಲ್ಬಿಷ ಮಗನೆ ಕೇಳೆಂದ ॥73॥
೦೭೪ ತಾತ ಕೆಡುವಿರಿ ...{Loading}...
ತಾತ ಕೆಡುವಿರಿ ನೀವು ತನಗ
ಖ್ಯಾತಿ ಕೌರವರೆಂಬುವರು ದು
ರ್ನೀತಿಕಾರರು ಭೀಷ್ಮ ವಿದುರರು ಭೀತರವದಿರಿಗೆ
ನೀತಿ ಸಮ್ಮತವಾಗಿ ಚಿತ್ತದೊ
ಳಾತ ಮತವನು ಹೇಳಿ ನಮ್ಮೊಳು
ಭೀತಿ ಬೇಡೆಂದರಸ ಹಿಡಿದನು ಧರ್ಮಜನ ಕರವ ॥74॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಪ್ಪಾ ! ನೀವು ಹಾಳಾಗುವಿರಿ ! ನನಗೆ ಅಪಖ್ಯಾತಿ ಬರುತ್ತದೆ. ಕೌರವರೆಂಬವರು ಕೆಟ್ಟ ನಡತೆಯವರು. ಭೀಷ್ಮ ವಿದುರರು ಅವರಿಗೆ ಹೆದರುತ್ತಾರೆ. ನೀತಿಗೆ ಒಪ್ಪುವಂತಹ ನಿಮ್ಮ ಮನಸ್ಸಿನಲ್ಲಿರುವ ಅಭಿಪ್ರಾಯವನ್ನು ಹೇಳಿ. ನಮ್ಮಲ್ಲಿ ಹೆದರಿಕೆ ಬೇಡ” ಎಂದು ನುಡಿದು ಧೃತರಾಷ್ಟ್ರ ಧರ್ಮರಾಜನ ಕೈ ಹಿಡಿದುಕೊಂಡನು.
ಪದಾರ್ಥ (ಕ.ಗ.ಪ)
ಕೆಡು-ಹಾಳಾಗು, ಅಖ್ಯಾತಿ-ಅಪಖ್ಯಾತಿ, ದುರ್ನೀತಿಕಾರರು-ಕೆಟ್ಟನಡತೆಯವರು, ಸಮ್ಮತ-ಒಪ್ಪು
ಮೂಲ ...{Loading}...
ತಾತ ಕೆಡುವಿರಿ ನೀವು ತನಗ
ಖ್ಯಾತಿ ಕೌರವರೆಂಬುವರು ದು
ರ್ನೀತಿಕಾರರು ಭೀಷ್ಮ ವಿದುರರು ಭೀತರವದಿರಿಗೆ
ನೀತಿ ಸಮ್ಮತವಾಗಿ ಚಿತ್ತದೊ
ಳಾತ ಮತವನು ಹೇಳಿ ನಮ್ಮೊಳು
ಭೀತಿ ಬೇಡೆಂದರಸ ಹಿಡಿದನು ಧರ್ಮಜನ ಕರವ ॥74॥
೦೭೫ ಬೇರೆ ಮತವೆಮಗೇನು ...{Loading}...
ಬೇರೆ ಮತವೆಮಗೇನು ಬೊಪ್ಪನ
ಚಾರಿ ನಿಮ್ಮದು ನೀವು ಬೊಪ್ಪನ
ನೂರು ಮಡಿಯೆಮಗೊಳ್ಳಿದರು ಬೇರಿನ್ನು ಹಿತರುಂಟೆ
ಬೇರಿರಿಸಿ ಕೂಡಿರಿಸಿ ನಿಮಗೆಯು
ತೋರಿದುದೆ ಮತ ನಿಮ್ಮ ನೇಮವ
ಮೀರ ಬಲ್ಲೆನೆಯೆಂದು ಧರ್ಮಜ ನುಡಿದನರಸಂಗೆ ॥75॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಬೇರೆಯ ಅಭಿಪ್ರಾಯ ನಮಗೇನಿದೆ ? ನಮ್ಮ ತಂದೆಯ ನಡವಳಿಕೆ ನಿಮ್ಮದು, ನೀವು ತಂದೆಯ ನೂರುಪಟ್ಟು ನಮಗೆ ಒಳ್ಳೆಯವರು. ನಿಮಗಿಂತ ಹಿತವರು ಇನ್ನು ಬೇರೆ ಯಾರಿದ್ದಾರೆ ? ಬೇರೆ ಇರಿಸಿ, ಕೂಡಿಸಿ. ನಿಮಗೆ ತೋರಿದ್ದೇ ನಮ್ಮ ಮತ. ನಿಮ್ಮ ಅಪ್ಪಣೆಯನ್ನು ಮೀರಬಲ್ಲೆನೇ ?” ಎಂದು ಧೃತರಾಷ್ಟ್ರನಿಗೆ ಧರ್ಮರಾಜ ನುಡಿದನು.
ಪದಾರ್ಥ (ಕ.ಗ.ಪ)
ಬೊಪ್ಪ-ಅಪ್ಪ, ಚಾರಿ-ನಡವಳಿಕೆ, ನೇಮ-ಅಪ್ಪಣೆ
ಪಾಠಾನ್ತರ (ಕ.ಗ.ಪ)
ಕೊಡಿಸಿರಿ - ಕೂಡಿರಿಸಿ- ಆದಿಪರ್ವ, ಮೈ.ವಿ.ವಿ.- ಡಾ.ಕೆ.ಆರ್.ಶೇಷಗಿರಿ
ಮೂಲ ...{Loading}...
ಬೇರೆ ಮತವೆಮಗೇನು ಬೊಪ್ಪನ
ಚಾರಿ ನಿಮ್ಮದು ನೀವು ಬೊಪ್ಪನ
ನೂರು ಮಡಿಯೆಮಗೊಳ್ಳಿದರು ಬೇರಿನ್ನು ಹಿತರುಂಟೆ
ಬೇರಿರಿಸಿ ಕೂಡಿರಿಸಿ ನಿಮಗೆಯು
ತೋರಿದುದೆ ಮತ ನಿಮ್ಮ ನೇಮವ
ಮೀರ ಬಲ್ಲೆನೆಯೆಂದು ಧರ್ಮಜ ನುಡಿದನರಸಂಗೆ ॥75॥
೦೭೬ ಎರೆಯ ವಙ್ಕಿಯೊ ...{Loading}...
ಎರೆಯ ವಂಕಿಯೊ ಕಳಿತ ಮೆಕ್ಕೆಯೊ
ಹುರಿಯ ಬಲೆಯೋ ರಾಗ ಸನ್ನೆಯೊ
ಸರಿಯ ಗೊರೆಯೋ ಠಕ್ಕಿನುಂಡೆಯೊ ಸವಿಯ ಚಿತ್ರಕವೊ
ಅರಸನಂಕೆಯ ಮನದ ಬಯಕೆಯ
ಹೊರೆಯ ಬಳಕೆಯನೀ ಸಮಂಜಸ
ತರದ ಸಾತ್ವಿಕರೆತ್ತ ಬಲ್ಲರು ಭೂಪ ಕೇಳ್ ಎಂದ ॥76॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಂಧಭೂಪನ ಮನಸ್ಸು, ಎರೆಹುಳು ಸಿಗಿಸಿದ ಮೀನು ಹಿಡಿಯುವ ಗಾಳವೋ, ಮಾಗಿದ ವಿಷ ಫಲ ಬಿಡುವ ಬಳ್ಳಿಯೋ, ಹಗ್ಗದಿಂದ ಮಾಡಿದ ಬಲೆಯೋ, ಬೇಟೆಯ ಮೃಗವನ್ನು ಆಕರ್ಷಿಸುವ ಗೋರಿ ಸಂಗೀತವೋ? , ಜಾರುವ ಕೆಸರೋ, ಮೋಸದ ಲಡ್ಡುಗೆಯೋ, ಪ್ರಿಯನಾದ ಚಿತ್ರಕಾರನೋ ! ಇನ್ನೊಬ್ಬರ ಅಧೀನವಾಗಿರುವ ಅರಸನ, ಮನಸ್ಸಿನ ಅಪೇಕ್ಷೆಯನ್ನು ಈಡೇರಿಸಿಕೊಳ್ಳುವ ರೀತಿಯನ್ನು ಈ ಪ್ರಾಮಾಣಿಕವಾದ ರೀತಿಯ ಸತ್ತ್ವಗುಣಯುತರು ಹೇಗೆ ಬಲ್ಲರು ?
ಪದಾರ್ಥ (ಕ.ಗ.ಪ)
ಎರೆಯ-ಎರೆಹುಳು, ವಂಕಿ-ಮೀನು ಹಿಡಿಯುವ ಗಾಳ, ಕಳಿತ-ಮಾಗಿದ, ಮೆಕ್ಕೆ-ವಿಷಫಲ ಬಿಡುವ ಒಂದು ಬಳ್ಳಿ, ಹುರಿ-ಹಗ್ಗ, ರಾಗ-ಮೃಗವನ್ನು ಆಕರ್ಷಿಸುವ ಹಾಡು, ಸನ್ನೆ-ಸಂಕೇತ, ಸರಿ-ಜಾರು, ಗೊರೆ-ಕೆಸರು, ಠಕ್ಕು-ಮೋಸ, ಉಂಡೆ-ಲಡ್ಡುಗೆ, ಅಂಕೆ-ಇನ್ನೊಬ್ಬರ ಅಧೀನದಲ್ಲಿರುವ ಮನಸ್ಸು, ಬಯಕೆ-ಆಸೆ, ಬಳಕೆ-ರೀತಿ, ಸಮಂಜಸ-ಪ್ರಾಮಾಣಿಕ, ಸಾತ್ವಿಕ-ಸತ್ವಗುಣಯುತರು.
ಮೂಲ ...{Loading}...
ಎರೆಯ ವಂಕಿಯೊ ಕಳಿತ ಮೆಕ್ಕೆಯೊ
ಹುರಿಯ ಬಲೆಯೋ ರಾಗ ಸನ್ನೆಯೊ
ಸರಿಯ ಗೊರೆಯೋ ಠಕ್ಕಿನುಂಡೆಯೊ ಸವಿಯ ಚಿತ್ರಕವೊ
ಅರಸನಂಕೆಯ ಮನದ ಬಯಕೆಯ
ಹೊರೆಯ ಬಳಕೆಯನೀ ಸಮಂಜಸ
ತರದ ಸಾತ್ವಿಕರೆತ್ತ ಬಲ್ಲರು ಭೂಪ ಕೇಳೆಂದ ॥76॥
೦೭೭ ಕನ್ದ ಮನ ...{Loading}...
ಕಂದ ಮನ ಮುನಿಸಿಲ್ಲಲೇ ನಾ
ವೆಂದ ನುಡಿಗೊಡಬಡುವಿರಾದೊಡೆ
ಮುಂದೆ ಪುರವಿದೆ ವಾರಣಾವತವಿಲ್ಲಿಗರುವತ್ತು
ಸಂದ ನಾಡು ಸಮಸ್ತ ವಸ್ತುಗ
ಳಿಂದ ಪೂರಿತ ಹಸ್ತಿನಾಪುರ
ದಿಂದ ಮಿಗಿಲದು ರಾಜಧಾನಿ ಸ್ಥಾನ ನಿಮಗೆಂದ ॥77॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕಂದಾ, ಮನಸ್ಸಿನಲ್ಲಿ ಕೋಪವಿಲ್ಲವಷ್ಟೆ ? ನಾವು ಹೇಳಿದ ಮಾತಿಗೆ ಒಪ್ಪುವಿರಾದರೆ, ಮುಂದೆ ವಾರಣಾವತ ಪುರವಿದೆ. ಇಲ್ಲಿಗೆ ಅರವತ್ತು ಹರಿದಾರಿ ದೂರದಲ್ಲಿ ಹೆಸರಾದ ನಾಡು. ಸಮಸ್ತ ವಸ್ತುಗಳಿಂದ ತುಂಬಿದೆ. ಹಸ್ತಿನಾಪುರಕ್ಕಿಂತ ಅದು ಮಿಗಿಲಾಗಿದೆ. ಅದು ನಿಮಗೆ ರಾಜಧಾನಿ ಸ್ಥಳವಾಗಿರಲಿ” ಎಂದನು.
ಪದಾರ್ಥ (ಕ.ಗ.ಪ)
ಮುನಿಸು-ಕೋಪ,
ಒಡಬಡು-ಒಪ್ಪು,
ಹರಿದಾರಿ-ಮೂರು ಮೈಲಿ,
ಸಂದ-ಹೆಸರಾದ,
ಸ್ಥಾನ-ಸ್ಥಳ
ಮೂಲ ...{Loading}...
ಕಂದ ಮನ ಮುನಿಸಿಲ್ಲಲೇ ನಾ
ವೆಂದ ನುಡಿಗೊಡಬಡುವಿರಾದೊಡೆ
ಮುಂದೆ ಪುರವಿದೆ ವಾರಣಾವತವಿಲ್ಲಿಗರುವತ್ತು
ಸಂದ ನಾಡು ಸಮಸ್ತ ವಸ್ತುಗ
ಳಿಂದ ಪೂರಿತ ಹಸ್ತಿನಾಪುರ
ದಿಂದ ಮಿಗಿಲದು ರಾಜಧಾನಿ ಸ್ಥಾನ ನಿಮಗೆಂದ ॥77॥
೦೭೮ ಹೈ ಹಸಾದ ...{Loading}...
ಹೈ ಹಸಾದ ಭವತ್ ಕೃಪಾ ಸ
ನ್ನಾಹವೇ ಸಾಮ್ರಾಜ್ಯವಾವುದ
ನೂಹಿಸಿದೊಡಾ ಸ್ಥಿತಿಯೊಳಡಗಿಹವೆಂದು ವಿನಯದಲಿ
ಗಾಹುಗತಕವನರಿಯದಿವರು
ತ್ಸಾಹದಲಿ ಕೈಕೊಂಡು ಭೀಷ್ಮಗೆ
ಬೇಹ ವಿದುರ ದ್ರೋಣಮುಖ್ಯರಿಗರುಹಿದರು ಹದನ ॥78॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹೊ ! ಮಹಾಪ್ರಸಾದ ನಿಮ್ಮ ಕೃಪೆಯ ಕವಚವೇ ನಮಗೆ ಸಾಮ್ರಾಜ್ಯ ಪದವಿ. ನೀವು ಯಾವುದನ್ನು ಯೋಚಿಸಿ ತಿಳಿಸುವಿರೋ ಆ ಸ್ಥಿತಿಯಲ್ಲಿ ಹೊಂದಿಸಿಕೊಳ್ಳುವೆವು” ಎಂದು ವಿನಯದಲ್ಲಿನ ಮೋಸಗಾರಿಕೆಯನ್ನು ತಿಳಿಯದ ಪಾಂಡವರು ಧೃತರಾಷ್ಟ್ರನ ಸಲಹೆಯನ್ನು ಉತ್ಸಾಹದಿಂದ ಸ್ವೀಕರಿಸಿದರು. ತಮಗೆ ಬೇಕಾದವರಾದ ಭೀಷ್ಮ ದ್ರೋಣ ವಿದುರರಿಗೆ ತಿಳಿಸಿದರು.
ಪದಾರ್ಥ (ಕ.ಗ.ಪ)
ಹೈ-ಹೊ, ಹಸಾದ-ಪ್ರಸಾದ, ಭವತ್-ನಿಮ್ಮ, ಸನ್ನಾಹ-ಕವಚ, ಊಹಿಸು-ಯೋಚಿಸು, ಅಡಗು-ಹೊಂದಿಸಿಕೊಳ್ಳು, ಗಾಹುಗತಕ-ಮೋಸಗಾರಿಕೆ, ಬೇಹ-ಬೇಕಾದವರು, ಅರುಹು-ತಿಳಿಸು
ಮೂಲ ...{Loading}...
ಹೈ ಹಸಾದ ಭವತ್ ಕೃಪಾ ಸ
ನ್ನಾಹವೇ ಸಾಮ್ರಾಜ್ಯವಾವುದ
ನೂಹಿಸಿದೊಡಾ ಸ್ಥಿತಿಯೊಳಡಗಿಹವೆಂದು ವಿನಯದಲಿ
ಗಾಹುಗತಕವನರಿಯದಿವರು
ತ್ಸಾಹದಲಿ ಕೈಕೊಂಡು ಭೀಷ್ಮಗೆ
ಬೇಹ ವಿದುರ ದ್ರೋಣಮುಖ್ಯರಿಗರುಹಿದರು ಹದನ ॥78॥
೦೭೯ ಧಾರುಣೀಪತಿ ರತ್ನಮಯ ...{Loading}...
ಧಾರುಣೀಪತಿ ರತ್ನಮಯ ಭಂ
ಡಾರ ಸಹಿತ ಗಜಾಶ್ವ ರಥ ಪರಿ
ವಾರವನು ಮಾಡಿದನು ಹಸಿಗೆಯನೆರಡು ಭಾಗವನು
ಕೌರವರಿಗೊಂದಿವರಿಗೊಂದೆನ
ಲೋರಣದಲಳವಡಿಸಿ ಬಹು ವಿ
ಸ್ತಾರದಲಿ ಭೀಷ್ಮಾದ್ಯರಹುದೆನಲಿವರ ಮನ್ನಿಸಿದ ॥79॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ ಮಹಾರಾಜನು ರತ್ನದಿಂದ ತುಂಬಿರುವ ಬೊಕ್ಕಸದ ಸಹಿತವಾಗಿ ಆನೆ, ಕುದುರೆ, ರಥ, ಸೇನೆ ಎಲ್ಲವನ್ನು ಪಾಲಾಗಿ ಎರಡು ಭಾಗವನ್ನು ಮಾಡಿದನು. ಕೌರವರಿಗೆ ಒಂದು ಪಾಲು. ಇವರಿಗೆ ಒಂದು ಪಾಲು ಎನ್ನುವಂತೆ ಕ್ರಮವಾಗಿ ಚೆನ್ನಾಗಿ ಹೊಂದಿಸಿ ಭೀಷ್ಮ ದ್ರೋಣರು ಅಹುದು ಎನ್ನುವಂತೆ ಬಹುವಿಸ್ತಾರದಲ್ಲಿ ಇವರನ್ನು ಗೌರವಿಸಿದನು.
ಪದಾರ್ಥ (ಕ.ಗ.ಪ)
ಪರಿವಾರ-ಸೇನೆ, ಹಸಿಗೆ-ಪಾಲು, ಓರಣ-ಕ್ರಮ, ಅಳವಡಿಸಿ-ಹೊಂದಿಸಿ, ಮನ್ನಿಸು-ಗೌರವಿಸು
ಮೂಲ ...{Loading}...
ಧಾರುಣೀಪತಿ ರತ್ನಮಯ ಭಂ
ಡಾರ ಸಹಿತ ಗಜಾಶ್ವ ರಥ ಪರಿ
ವಾರವನು ಮಾಡಿದನು ಹಸಿಗೆಯನೆರಡು ಭಾಗವನು
ಕೌರವರಿಗೊಂದಿವರಿಗೊಂದೆನ
ಲೋರಣದಲಳವಡಿಸಿ ಬಹು ವಿ
ಸ್ತಾರದಲಿ ಭೀಷ್ಮಾದ್ಯರಹುದೆನಲಿವರ ಮನ್ನಿಸಿದ ॥79॥
೦೮೦ ಇವರು ಶುಭದಿನ ...{Loading}...
ಇವರು ಶುಭದಿನ ಶುಭಮುಹೂರ್ತ
ಪ್ರವರದಲಿ ಹೊರವಂಟರಾ ಜನ
ನಿವಹ ಮರುಗಿತರಣ್ಯವೇ ಗತಿಯರಸ ನಮಗೆಂದು
ಅವರ ಕಳುಹುತ ಬಂದರಾ ಕೌ
ರವರು ನಿಂದರು ಭೀಷ್ಮ ಕಲಶೋ
ದ್ಭವರು ಸುತರಿಗೆ ಬುದ್ಧಿ ಹೇಳಿದು ಮರಳಿದರು ಪುರಕೆ ॥80॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರು ಶುಭದಿನದಲ್ಲಿ ಉತ್ತಮವಾದ ಶುಭ ಮುಹೂರ್ತದಲ್ಲಿ ಹಸ್ತಿನಾಪುರವನ್ನು ಬಿಟ್ಟು ಹೊರಟರು. ಆ ಜನ ಸಮೂಹ, “ಅರಸಾ, ನಮಗಿನ್ನು ಅರಣ್ಯವೇ ಗತಿ” ಎಂದು ದುಃಖಪಟ್ಟಿತು. ಕೌರವರು ಅವರನ್ನು ಕಳುಹಿಸಿ ಕೊಡುತ್ತಾ ಜೊತೆಯಲ್ಲಿ ಬಂದರು. ಸ್ವಲ್ಪದೂರ ಬಂದು ನಿಂತರು. ಭೀಷ್ಮ ದ್ರೋಣರು ಮಕ್ಕಳಿಗೆ ಬುದ್ಧಿ ಹೇಳಿ ಹಸ್ತಿನಾಪುರಕ್ಕೆ ಹಿಂದಿರುಗಿದರು.
ಪದಾರ್ಥ (ಕ.ಗ.ಪ)
ಪ್ರವರ-ಉತ್ತಮ, ಕಲಶೋದ್ಭವ-ದ್ರೋಣ
ಮೂಲ ...{Loading}...
ಇವರು ಶುಭದಿನ ಶುಭಮುಹೂರ್ತ
ಪ್ರವರದಲಿ ಹೊರವಂಟರಾ ಜನ
ನಿವಹ ಮರುಗಿತರಣ್ಯವೇ ಗತಿಯರಸ ನಮಗೆಂದು
ಅವರ ಕಳುಹುತ ಬಂದರಾ ಕೌ
ರವರು ನಿಂದರು ಭೀಷ್ಮ ಕಲಶೋ
ದ್ಭವರು ಸುತರಿಗೆ ಬುದ್ಧಿ ಹೇಳಿದು ಮರಳಿದರು ಪುರಕೆ ॥80॥
೦೮೧ ವಿದುರನೊಡನೈತರುತ ಸಙ್ಕೇ ...{Loading}...
ವಿದುರನೊಡನೈತರುತ ಸಂಕೇ
ತದಲಿ ಸೂಚಿಸಿ ಮರಳಿದನು ನೃಪ
ಸುದತಿ ವರ ಗಾಂಧಾರಿ ಮೊದಲಾದಖಿಳ ರಾಣಿಯರು
ಮುದದ ಮುರುವಿನಲಿವರ ತೆಗೆದ
ಪ್ಪಿದರು ಭೂಪತಿ ಸಹಿತ ಕಡು ಶೋ
ಕದಲಿ ಕಳುಹಿಸಿ ಕೊಂಡು ಬಂದರು ಹಸ್ತಿನಾಪುರಕೆ ॥81॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿದುರನು ಪಾಂಡವರ ಸಂಗಡದಲ್ಲಿ ಬರುತ್ತಾ, ಸಂಜ್ಞೆಯಲ್ಲಿ ಕೆಲವು ಸಂಗತಿಗಳನ್ನು ಪಾಂಡವರ ಗಮನಕ್ಕೆ ತಂದು ಹಿಂತಿರುಗಿದನು. ಸೌಂದರ್ಯವತಿಯೂ, ಶ್ರೇಷ್ಠಳೂ ಆದ ಗಾಂಧಾರಿ ಮೊದಲಾದ ಎಲ್ಲಾ ರಾಣಿಯರು ಕುಗ್ಗಿದ ಸಂತೋಷದಲ್ಲಿ ಇವರನ್ನು ತೆಗೆದಪ್ಪಿದರು. ಹೆಚ್ಚು ಶೋಕದಿಂದ ಮಹಾರಾಜನೊಡನೆ ಅವರಿಂದ ಬೀಳ್ಕೊಂಡು ಹಸ್ತಿನಾಪುರಕ್ಕೆ ಹಿಂತಿರುಗಿದರು.
ಪದಾರ್ಥ (ಕ.ಗ.ಪ)
ಒಡನೆ-ಸಂಗಡ, ಐತರು-ಬರು, ಸಂಕೇತ-ಸಂಜ್ಞೆ, ಸೂಚಿಸು-ಗಮನಕ್ಕೆ ತರು, ಸುದತಿ-ಸುಂದರಿ, ಮುದ-ಸಂತೋಷ, ಮುರುವು-ಹಿಂಜರಿತ, ಕಡು-ಹೆಚ್ಚು
ಮೂಲ ...{Loading}...
ವಿದುರನೊಡನೈತರುತ ಸಂಕೇ
ತದಲಿ ಸೂಚಿಸಿ ಮರಳಿದನು ನೃಪ
ಸುದತಿ ವರ ಗಾಂಧಾರಿ ಮೊದಲಾದಖಿಳ ರಾಣಿಯರು
ಮುದದ ಮುರುವಿನಲಿವರ ತೆಗೆದ
ಪ್ಪಿದರು ಭೂಪತಿ ಸಹಿತ ಕಡು ಶೋ
ಕದಲಿ ಕಳುಹಿಸಿ ಕೊಂಡು ಬಂದರು ಹಸ್ತಿನಾಪುರಕೆ ॥81॥
೦೮೨ ಅರಸ ಕೇಳೈ ...{Loading}...
ಅರಸ ಕೇಳೈ ಹಸ್ತಿನಾಪುರ
ವರವ ಹೊರವಡುವಾ ಮುಹೂರ್ತಕೆ
ವರುಷವಿಪ್ಪತ್ತೊಂಬತಾದುದು ಧರ್ಮನಂದನಗೆ
ವರುಷ ಹದಿಮೂರರಲಿ ಹಸ್ತಿನ
ಪುರದೊಳಿದ್ದರು ಹಿಂದೆ ಷೋಡಶ
ವರುಷ ವನದೊಳಗಿಂತು ಲೆಕ್ಕವ ನೋಡಿಕೋಯೆಂದ ॥82॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ಮಹಾರಾಜನೇ ಕೇಳು, ಶ್ರೇಷ್ಠವಾದ ಹಸ್ತಿನಾಪುರವನ್ನು ಬಿಟ್ಟು ಹೊರಡುವ ಮುಹೂರ್ತಕ್ಕೆ ಧರ್ಮಸುತನಿಗೆ ಇಪ್ಪತ್ತೊಂಬತ್ತು ವರುಷ ಆಯಿತು. ಹದಿಮೂರು ವರ್ಷ ಹಸ್ತಿನಪುರದೊಳಗೆ ಪಾಂಡು ಕುಮಾರರು ಇದ್ದರು. ಹಿಂದೆ ಹದಿನಾರು ವರುಷ ಹುಟ್ಟಿದಂದಿನಿಂದ ಅರಣ್ಯದೊಳಗಿದ್ದರು. ಹೀಗೆ ಧರ್ಮರಾಜನ ವಯಸ್ಸಿನ ಲೆಕ್ಕವನ್ನು ಪರಿಶೀಲಿಸಿಕೋ ಎಂದು ವೈಶಂಪಾಯನರು ಹೇಳಿದರು.
ಪದಾರ್ಥ (ಕ.ಗ.ಪ)
ವರ-ಶ್ರೇಷ್ಠ, ಹೊರವಡು-ಹೊರಡು, ಷೋಡಶ-ಹದಿನಾರು, ನೋಡಿಕೋ-ಪರಿಶೀಲಿಸಿಕೋ
ಮೂಲ ...{Loading}...
ಅರಸ ಕೇಳೈ ಹಸ್ತಿನಾಪುರ
ವರವ ಹೊರವಡುವಾ ಮುಹೂರ್ತಕೆ
ವರುಷವಿಪ್ಪತ್ತೊಂಬತಾದುದು ಧರ್ಮನಂದನಗೆ
ವರುಷ ಹದಿಮೂರರಲಿ ಹಸ್ತಿನ
ಪುರದೊಳಿದ್ದರು ಹಿಂದೆ ಷೋಡಶ
ವರುಷ ವನದೊಳಗಿಂತು ಲೆಕ್ಕವ ನೋಡಿಕೋಯೆಂದ ॥82॥
೦೮೩ ಬನ್ದರೈವರು ಕುನ್ತಿ ...{Loading}...
ಬಂದರೈವರು ಕುಂತಿ ಸಹಿತಾ
ನಂದದಲಿ ವರ ವಾರಣಾವತ
ಕಂದು ಪುರಜನ ಕೂಡಿ ಕನ್ನಡಿ ಕಲಶ ವಿಭವದಲಿ
ಬಂದು ತಾವಿದಿರಾಗಿ ಕುಂತೀ
ನಂದನರ ಹೊಗಿಸಿದರು ಪಟ್ಟಣ
ವಂದು ಮೆರೆದುದು ಕೂಡೆ ಗುಡಿತೋರಣದ ರಚನೆಯಲಿ ॥83॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಐವರು ಪಾಂಡವರು ತಾಯಿ ಕುಂತಿ ಸಹಿತ ಸಂತೋಷದಿಂದ ವಾರಣಾವತಕ್ಕೆ ಬಂದರು. ಆ ಪುರ ಜನರೆಲ್ಲ ಸೇರಿ ಕನ್ನಡಿ ಕಲಶಗಳ ವೈಭವದಿಂದ ಬಂದು ಅವರನ್ನು ಎದುರುಗೊಂಡು ಕುಂತೀ ಮಕ್ಕಳನ್ನು ಪಟ್ಟಣಕ್ಕೆ ಪ್ರವೇಶ ಮಾಡಿಸಿದರು. ಆಗ ಆ ಪಟ್ಟಣ ಬಾವುಟ ತೋರಣಗಳ ವ್ಯವಸ್ಥೆಯಲ್ಲಿ ಶೋಭಿಸಿತು.
ಪದಾರ್ಥ (ಕ.ಗ.ಪ)
ಕೂಡಿ-ಸೇರಿ, ಹೊಗಿಸು-ಪ್ರವೇಶಿಸು, ಮೆರೆ-ಶೋಭಿಸು, ಗುಡಿ-ಬಾವುಟ
ಮೂಲ ...{Loading}...
ಬಂದರೈವರು ಕುಂತಿ ಸಹಿತಾ
ನಂದದಲಿ ವರ ವಾರಣಾವತ
ಕಂದು ಪುರಜನ ಕೂಡಿ ಕನ್ನಡಿ ಕಲಶ ವಿಭವದಲಿ
ಬಂದು ತಾವಿದಿರಾಗಿ ಕುಂತೀ
ನಂದನರ ಹೊಗಿಸಿದರು ಪಟ್ಟಣ
ವಂದು ಮೆರೆದುದು ಕೂಡೆ ಗುಡಿತೋರಣದ ರಚನೆಯಲಿ ॥83॥
೦೮೪ ಬೀಡು ಕಾಣಿಕೆಯಿತ್ತು ...{Loading}...
ಬೀಡು ಕಾಣಿಕೆಯಿತ್ತು ಕಂಡುದು
ನಾಡೆ ಕಾಣಿಸಿದನು ಪುರೋಚನ
ಕೂಡೆ ಸಂದನು ಹಾಸು ಹೊಕ್ಕಾಗವರ ಮನವರಿದು
ನೋಡಿದನು ಯಮನಂದನನು ಮನೆ
ಮಾಡಿದಂದವನರಗಿನರಮನೆ
ಗೂಡುರಿವ ಬೇಳುವೆಯ ನೆನೆದರೆ ಬೊಪ್ಪನವರೆಂದ ॥84॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರಜೆಗಳ ಗುಂಪು ಕಾಣಿಕೆಕೊಟ್ಟು ಪಾಂಡವರನ್ನು ಕಂಡಿತು. ಪುರೋಚನ ಅವರನ್ನು ವಿಶೇಷವಾಗಿ ಕಾಣಿಸಿಕೊಂಡನು. ಕೂಡಲೇ ಅವರ ಗಾಢ ಸಂಬಂಧ ಬೆಳಸಿ ಅವರ ಮನಸ್ಸನ್ನು ತಿಳಿದು ಅವರನ್ನು ಕೂಡಿಕೊಂಡನು. ಧರ್ಮರಾಜನು ಮನೆಯ ನಿರ್ಮಾಣದ ರೀತಿಯನ್ನು ನೋಡಿದನು. ಅರಗಿನ ಮನೆಗೆ ಬೆಂಕಿ ಹಚ್ಚುವ ದುರಾಲೋಚನೆಯನ್ನು ತಂದೆಯವರು ಯೋಚಿಸಿದರೇ ಎಂದು ನುಡಿದನು.
ಪದಾರ್ಥ (ಕ.ಗ.ಪ)
ಬೀಡು-ಗುಂಪು, ನಾಡೆ-ವಿಶೇಷವಾಗಿ, ಹಾಸುಹೊಕ್ಕು-ಗಾಢಸಂಬಂಧ, ಸಂದನು-ಕೂಡಿಕೊಂಡನು, ಊಡು-ಹಚ್ಚು, ಉರಿ-ಬೆಂಕಿ, ಬೇಳುವೆ-ದುರಾಲೋಚನೆ, ಬೊಪ್ಪ-ತಂದೆ, ನೆನೆ-ಯೋಚಿಸು
ಮೂಲ ...{Loading}...
ಬೀಡು ಕಾಣಿಕೆಯಿತ್ತು ಕಂಡುದು
ನಾಡೆ ಕಾಣಿಸಿದನು ಪುರೋಚನ
ಕೂಡೆ ಸಂದನು ಹಾಸು ಹೊಕ್ಕಾಗವರ ಮನವರಿದು
ನೋಡಿದನು ಯಮನಂದನನು ಮನೆ
ಮಾಡಿದಂದವನರಗಿನರಮನೆ
ಗೂಡುರಿವ ಬೇಳುವೆಯ ನೆನೆದರೆ ಬೊಪ್ಪನವರೆಂದ ॥84॥
೦೮೫ ಸಮಿಧೆಗಳು ನಾವ್ ...{Loading}...
ಸಮಿಧೆಗಳು ನಾವ್ ನಾಲ್ವರಯ್ಯನ
ರಮಣಿಯಾಹುತಿ ಭೀಮನೇ ಪಶು
ಕುಮತಿ ಕಟ್ಟಿಸಿದರಗಿನರಮನೆಯಗ್ನಿ ಕುಂಡವಿದು
ಎಮಗೆ ಸಂಶಯವಿಲ್ಲ ರಾಜೋ
ತ್ತಮನೊ ದುರ್ಯೋಧನನೊ ದೀಕ್ಷಾ
ಕ್ರಮವ ಧರಿಸಿದನಾವನೆಂದನು ನಗುತ ಯಮಸೂನು ॥85॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾವು ನಾಲ್ವರೂ ಸಮಿತ್ತುಗಳು. ತಂದೆಯ ಮಡದಿ ಕುಂತಿಯು ಆಹುತಿ, ಭೀಮನೇ ಪಶು. ದುಷ್ಟ ಬುದ್ಧಿಯವನು ಕಟ್ಟಿಸಿರುವ ಅರಗಿನ ಅರಮನೆಯಿದು ಯಜ್ಞಕುಂಡ. ಇದರಲ್ಲಿ ನಮಗೆ ಸಂಶಯವಿಲ್ಲ. ದೀಕ್ಷಾ ನಿಯಮವನ್ನು ಧರಿಸಿದವನು ರಾಜೋತ್ತಮನೋ, ದುರ್ಯೋಧನನೋ ? ಯಾರಿರಬಹುದು ? ಎಂದನು ನಸುನಗುತ್ತ ಯಮಸೂನು.
ಪದಾರ್ಥ (ಕ.ಗ.ಪ)
ಸಮಿಧೆ-ಸಮಿತ್ತು (ಹೋಮದ ಕಟ್ಟಿಗೆ) ಕುಮತಿ-ದುಷ್ಟ ಬುದ್ಧಿ, ಅಯ್ಯ-ತಂದೆ, ರಮಣಿ-ಮಡದಿ, ದೀಕ್ಷಾ ಕ್ರಮ-ದೀಕ್ಷಾ ನಿಯಮ, ಯಮಸೂನು-ಯಮನ ಮೂಲಕ ಕುಂತಿಯಲ್ಲಿ ಜನಿಸಿದವನಾದ್ದರಿಂದ ಯುಧಿಷ್ಠಿರನಿಗೆ ಯಮಸೂನು ಎಂದು ಹೆಸರು.
ಪಾಠಾನ್ತರ (ಕ.ಗ.ಪ)
ಕಟ್ಟಿಸಿದರಮನೆಯಗ್ನಿಕುಂಡವಿದು - ಕಟ್ಟಿಸಿದರಗಿನರಮನೆಯಜ್ಞಕುಂಡವಿದು - ಆದಿಪರ್ವ, ಮೈ.ವಿ.ವಿ.-ಡಾ.ಕೆ.ಆರ್. ಶೇಷಗಿರಿ
ಮೂಲ ...{Loading}...
ಸಮಿಧೆಗಳು ನಾವ್ ನಾಲ್ವರಯ್ಯನ
ರಮಣಿಯಾಹುತಿ ಭೀಮನೇ ಪಶು
ಕುಮತಿ ಕಟ್ಟಿಸಿದರಗಿನರಮನೆಯಗ್ನಿ ಕುಂಡವಿದು
ಎಮಗೆ ಸಂಶಯವಿಲ್ಲ ರಾಜೋ
ತ್ತಮನೊ ದುರ್ಯೋಧನನೊ ದೀಕ್ಷಾ
ಕ್ರಮವ ಧರಿಸಿದನಾವನೆಂದನು ನಗುತ ಯಮಸೂನು ॥85॥
೦೮೬ ಜನಪ ಕೇಳೈ ...{Loading}...
ಜನಪ ಕೇಳೈ ವಿದುರನಟ್ಟಿದ
ಖನಕ ಬಂದನುಯಿವರ ಸಜ್ಜೆಯ
ಮನೆಯಲತಿ ಗುಪ್ತದಲಿ ನೆಲದೊಳು ಸವೆಸಿದನು ಪಥವ
ಅನುದಿನದೊಳಾ ಬಾಹಿರನು ಕಿ
ಚ್ಚಿನಲಿ ಚುಚ್ಚುವ ಸಂದುಗಟ್ಟನು
ನೆನೆವುತಿರ್ದನು ಖಳ ಪುರೋಚನನೊಡೆಯನಾಜ್ಞೆಯಲಿ ॥86॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿದುರನು ಕಳುಹಿಸಿದ ಖನಕನು ವಾರಣಾವತಕ್ಕೆ ಬಂದನು. ಇವರ ಶಯ್ಯಾ ಮನೆಯಲ್ಲಿ ಅತಿ ರಹಸ್ಯದಲ್ಲಿ ಸುರಂಗವನ್ನು ಕೊರೆದು ಅಲ್ಲಿಂದ ತಪ್ಪಿಸಿಕೊಂಡು ಹೋಗಲು ದಾರಿಯನ್ನು ಸಿದ್ಧ ಮಾಡಿದನು. ಪ್ರತಿದಿನವೂ ಆ ನೀಚ ವ್ಯಕ್ತಿ ಪುರೋಚನನು ತನ್ನೊಡೆಯನ ಆಜ್ಞೆಯ ಪ್ರಕಾರ ಅರಗಿನ ಮನೆಯನ್ನು ಬೆಂಕಿಯಲ್ಲಿ ಸುಡುವ ಸರಿಯಾದ ಕಾಲಕ್ಕಾಗಿ ಹಂಬಲಿಸುತ್ತಿದ್ದನು.
ಪದಾರ್ಥ (ಕ.ಗ.ಪ)
ಅಟ್ಟು-ಕಳುಹಿಸು, ಸಜ್ಜೆ-ಶಯ್ಯಾ, ಸವೆಸು-ಸಿದ್ಧಮಾಡು, ಪಥ-ದಾರಿ, ಅನುದಿನವು-ಪ್ರತಿದಿನವೂ, ಬಾಹಿರ-ನೀಚವ್ಯಕ್ತಿ, ಕಿಚ್ಚು-ಬೆಂಕಿ, ಚುಚ್ಚು-ಸುಡು, ಸಂದುಗಟ್ಟು-ಸರಿಯಾದ ಕಾಲ, ನೆನೆ-ಹಂಬಲಿಸು
ಟಿಪ್ಪನೀ (ಕ.ಗ.ಪ)
ಖನಕ-ವಿದುರನ ಆಪ್ತ ಸ್ನೇಹಿತ. ದುರ್ಯೋಧನನು ಪಾಂಡವರ ನಿರ್ನಾಮಕ್ಕಾಗಿ ವಾರಣಾವತದಲ್ಲಿ ಅರಗಿನ ಮನೆಯಲ್ಲಿ ಬೀಡಾರ ಮಾಡಿಸಿದಾಗ, ಈತನು ಗುಪ್ತವಾಗಿ ಒಂದು ಸುರಂಗ ಕೊರೆದು ತಪ್ಪ್ಪಿಸಿಕೊಂಡು ಹೋಗಲು ದಾರಿ ಸಿದ್ಧಪಡಿಸಿದನು. ಪಾಂಡವರು ಹಸ್ತಿನಾವತಿಯಿಂದ ವಾರಣಾವತಕ್ಕೆ ಬರುವ ಸಮಯದಲ್ಲಿ ವಿದುರನು ಸಂಜ್ಞೆಯ ಮೂಲಕ ಇದರ ಬಗ್ಗೆ ಪಾಂಡವರ ಗಮನಕ್ಕೆ ತಂದಿದ್ದನು.
ಮೂಲ ...{Loading}...
ಜನಪ ಕೇಳೈ ವಿದುರನಟ್ಟಿದ
ಖನಕ ಬಂದನುಯಿವರ ಸಜ್ಜೆಯ
ಮನೆಯಲತಿ ಗುಪ್ತದಲಿ ನೆಲದೊಳು ಸವೆಸಿದನು ಪಥವ
ಅನುದಿನದೊಳಾ ಬಾಹಿರನು ಕಿ
ಚ್ಚಿನಲಿ ಚುಚ್ಚುವ ಸಂದುಗಟ್ಟನು
ನೆನೆವುತಿರ್ದನು ಖಳ ಪುರೋಚನನೊಡೆಯನಾಜ್ಞೆಯಲಿ ॥86॥
೦೮೭ ಒನ್ದು ದಿನ ...{Loading}...
ಒಂದು ದಿನ ಹಬ್ಬದಲಿ ಭೂಸುರ
ವೃಂದವುಂಡುದು ಪಂಚಪುತ್ರಿಕೆ
ಯೆಂದು ಬೇಡತಿಯೊಬ್ಬಳಿದ್ದಳು ಸುತರು ಸಹಿತಲ್ಲಿ
ಅಂದಿನಿರಳು ಪುರೋಚನನು ತಾ
ನೊಂದ ನೆನೆದರೆ ದೈವಗತಿ ಬೇ
ರೊಂದ ನೆನೆದುದು ಕೇಳು ಜನಮೇಜಯ ಮಹೀಪಾಲ ॥87॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದು ದಿನ ಹಬ್ಬದ ಸಂದರ್ಭದಲ್ಲಿ ಬ್ರಾಹ್ಮಣರ ಸಮೂಹ ಉಂಡು ತಣಿಯಿತು. ಪಂಚಪುತ್ರಿಕೆ ಎಂಬ ಬೇಡತಿಯೊಬ್ಬಳು ಮಕ್ಕಳು ಸಹಿತ ಅಲ್ಲಿ ಇದ್ದಳು. ಆ ರಾತ್ರಿ ಪುರೋಚನನು ತನ್ನ ಕೆಲಸವನ್ನು ನಿರ್ವಹಿಸಬೇಕೆಂದು ಯೋಚಿಸಿದನು. ಆದರೆ ಅವನೊಂದನ್ನು ನೆನೆದರೆ ದೈವಗತಿ ಬೇರೊಂದು ನೆನೆಯಿತು ಕೇಳೆಂದು ಜನಮೇಜಯ ಮಹಾರಾಜನಿಗೆ ವೈಶಂಪಾಯನನು ಹೇಳಿದನು.
ಪದಾರ್ಥ (ಕ.ಗ.ಪ)
ಭೂಸುರ-ಬ್ರಾಹ್ಮಣ, ವೃಂದ-ಸಮೂಹ, ಪಂಚಪುತ್ರಿಕೆ-ಐವರು ಮಕ್ಕಳ ತಾಯಿ ಎಂದು ಬೇಡತಿಯ ಹೆಸರು. ಸಂಕೇತವಿರಬೇಕು ?
ಮೂಲ ...{Loading}...
ಒಂದು ದಿನ ಹಬ್ಬದಲಿ ಭೂಸುರ
ವೃಂದವುಂಡುದು ಪಂಚಪುತ್ರಿಕೆ
ಯೆಂದು ಬೇಡತಿಯೊಬ್ಬಳಿದ್ದಳು ಸುತರು ಸಹಿತಲ್ಲಿ
ಅಂದಿನಿರಳು ಪುರೋಚನನು ತಾ
ನೊಂದ ನೆನೆದರೆ ದೈವಗತಿ ಬೇ
ರೊಂದ ನೆನೆದುದು ಕೇಳು ಜನಮೇಜಯ ಮಹೀಪಾಲ ॥87॥
೦೮೮ ಅವನು ನಿದ್ರೆಯೊಳರಿಯದಿರಲಾ ...{Loading}...
ಅವನು ನಿದ್ರೆಯೊಳರಿಯದಿರಲಾ
ಭವನ ಮುಖದಲಿ ಕಿಚ್ಚನೊಟ್ಟಿಸಿ
ಪವನಸುತ ಸಹಿತಿವರು ಹಾಯ್ದರು ಬಿಲದ ಮಾರ್ಗದಲಿ
ಅವರು ಬೆಂದರು ಮುನ್ನ ಬಳಿಕಾ
ಭವನಪಂಕ್ತಿಗಳುರಿದು ಕರಗಿದ
ವವನಿಯಲಿ ಹೊನಲಾಯ್ತು ಪುರಜನವೈದೆ ಬೆರಗಾಗೆ ॥88॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪುರೋಚನನು ನಿದ್ರೆಯಲ್ಲಿ ಮೈಮರೆತಿರಲು, ಆ ಮನೆಯ ಮುಂಭಾಗದಲ್ಲಿ ಬೆಂಕಿಯನ್ನು ಉರಿಸಿ ಭೀಮ ಸಹಿತವಾಗಿ ಪಾಂಡವರು ಸುರಂಗದ ದಾರಿಯಲ್ಲಿ ದಾಟಿ ತಪ್ಪಿಸಿಕೊಂಡರು. ಬಾಗಿಲಲ್ಲಿದ್ದ ಪುರೋಚನನೂ, ಬೇಡತಿ ಮತ್ತು ಅವಳ ಮಕ್ಕಳು ಬೆಂದು ಹೋದರು. ಮನೆಗಳ ಸಾಲುಗಳು ಉರಿದು ಕರಗಿದವು. ಭೂಮಿಯಲ್ಲಿ ಹೊಳೆಯಾಗಿ ಹರಿದವು. ಪುರಜನರೆಲ್ಲ ದಿಗ್ಭ್ರಮೆಗೊಂಡರು.
ಪದಾರ್ಥ (ಕ.ಗ.ಪ)
ಅರಿಯದಿರು-ಮೈಮರೆತಿರು, ಮುಖ-ಮುಂಭಾಗ, ಒಟ್ಟಿಸಿ-ಉರಿಸಿ, ಹಾಯು-ದಾಟು, ಪಂಕ್ತಿ-ಸಾಲು, ಹೊನಲು-ಹೊಳೆ, ಬೆರಗು-ದಿಗ್ಭ್ರಮೆ
ಮೂಲ ...{Loading}...
ಅವನು ನಿದ್ರೆಯೊಳರಿಯದಿರಲಾ
ಭವನ ಮುಖದಲಿ ಕಿಚ್ಚನೊಟ್ಟಿಸಿ
ಪವನಸುತ ಸಹಿತಿವರು ಹಾಯ್ದರು ಬಿಲದ ಮಾರ್ಗದಲಿ
ಅವರು ಬೆಂದರು ಮುನ್ನ ಬಳಿಕಾ
ಭವನಪಂಕ್ತಿಗಳುರಿದು ಕರಗಿದ
ವವನಿಯಲಿ ಹೊನಲಾಯ್ತು ಪುರಜನವೈದೆ ಬೆರಗಾಗೆ ॥88॥
೦೮೯ ಅಕಟ ಪಾಣ್ಡವರಳಿದರೇ ...{Loading}...
ಅಕಟ ಪಾಂಡವರಳಿದರೇ ಕೌ
ಳಿಕದಿ ಕೌರವರಿರಿದರೇ ಮತಿ
ವಿಕಳರವದಿರು ಬೆಂದು ಹೋದರು ಧರ್ಮದಲಿ ನಡೆದು
ಪ್ರಕಟ ಪಾಪರಿಗಹುದು ಸಾಮ್ರಾ
ಜ್ಯಕವು ಧರ್ಮಾತ್ಮರಿಗೆಯೀ ಪರಿ
ವಿಕಟತೆಯಸುರರಾಜ್ಯವೆಂದುದು ಪೌರಜನ ಮರುಗಿ ॥89॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಯ್ಯೋ ಪಾಂಡವರು ನಾಶವಾಗಿ ಹೋದರೇ ! ಕೌರವರು ಅವರನ್ನು ಮೋಸದಿಂದ ಕೊಂದರೇ ! ಅರಿವುಗೇಡಿಗಳಾದ ಪಾಂಡವರು ಧರ್ಮಮಾರ್ಗದಲ್ಲಿ ನಡೆದು ಬೆಂದು ಹೋದರು. ಸ್ಪಷ್ಟವಾಗಿ ಪಾಪ ಮಾಡಿದವರಿಗೆ ಚಕ್ರಾಧಿಪತ್ಯವು. ಧರ್ಮಾತ್ಮರಿಗೆ ಈ ರೀತಿಯ ವಿಪರ್ಯಾಸ. ನಾಗರಿಕರು ದುಃಖಿಸಿ ಇದು ರಾಕ್ಷಸರ ರಾಜ್ಯವೆಂದರು.
ಪದಾರ್ಥ (ಕ.ಗ.ಪ)
ಅಳಿ-ನಾಶ, ಕೌಳಿಕ-ಮೋಸ, ಇರಿ-ಕೊಲ್ಲು, ಮತಿವಿಕಳರು-ಅರಿವುಗೇಡಿಗಳು, ಪ್ರಕಟ-ಸ್ಪಷ್ಟ, ಸಾಮ್ರಾಜ್ಯಕವು-ಚಕ್ರಾಧಿಪತ್ಯವು, ವಿಕಟತೆ-ವಿಪರ್ಯಾಸ, ಅಸುರ-ರಾಕ್ಷಸ, ಪೌರಜನ-ನಾಗರಿಕರು
ಮೂಲ ...{Loading}...
ಅಕಟ ಪಾಂಡವರಳಿದರೇ ಕೌ
ಳಿಕದಿ ಕೌರವರಿರಿದರೇ ಮತಿ
ವಿಕಳರವದಿರು ಬೆಂದು ಹೋದರು ಧರ್ಮದಲಿ ನಡೆದು
ಪ್ರಕಟ ಪಾಪರಿಗಹುದು ಸಾಮ್ರಾ
ಜ್ಯಕವು ಧರ್ಮಾತ್ಮರಿಗೆಯೀ ಪರಿ
ವಿಕಟತೆಯಸುರರಾಜ್ಯವೆಂದುದು ಪೌರಜನ ಮರುಗಿ ॥89॥
೦೯೦ ಮುನ್ನ ಬೆನ್ದನಲಾ ...{Loading}...
ಮುನ್ನ ಬೆಂದನಲಾ ಪುರೋಚನ
ಕುನ್ನಿಯದು ಲೇಸಾಯ್ತು ಹದನಾ
ಪನ್ನರಾದರೆ ಅವ್ವೆಯರು ಸಹಿತಕಟ ಪಾಂಡವರು
ಇನ್ನು ಸುಡು ಸುಡು ಧರ್ಮ ಸಂಪ್ರತಿ
ಪನ್ನ ಗುಣದಾಚಾರಗಳ ಸಂ
ಪನ್ನತೆಯನೆಂದೊರಲಿ ಮರುಗಿತು ನಿಖಿಳ ಪರಿವಾರ ॥90॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪುರೋಚನ ಕುನ್ನಿ ಮೊದಲು ಬೆಂದನಲ್ಲ. ಅದು ಒಳ್ಳೆಯದಾಯಿತು ! ಅಯ್ಯೋ ಪಾಂಡವರು ತಾಯಿ ಸಹಿತವಾಗಿ ಕಷ್ಟಕ್ಕೆ ಗುರಿಯಾದ ಸಂಗತಿಯಾಯಿತೇ ! ಧರ್ಮದಿಂದ ಲಭಿಸಿದ ಗುಣ ಹಾಗು ಆಚಾರಗಳ ಸಾಮಥ್ರ್ಯವನ್ನು ಸುಡು ಸುಡು ಎಂದು ಸಕಲ ಪರಿವಾರ ಗೋಳಿಟ್ಟು ದುಃಖಿಸಿತು.
ಪದಾರ್ಥ (ಕ.ಗ.ಪ)
ಹದನು-ಸಂಗತಿ, ಆಪನ್ನ-ಕಷ್ಟಕ್ಕೆ ಗುರಿಯಾದ, ಸಂಪ್ರತಿಪನ್ನ-ಲಭಿಸಿದ, ಸಂಪನ್ನತೆ-ಸಾಮಥ್ರ್ಯ, ಒರಲಿ-ಗೋಳಿಟ್ಟು
ಮೂಲ ...{Loading}...
ಮುನ್ನ ಬೆಂದನಲಾ ಪುರೋಚನ
ಕುನ್ನಿಯದು ಲೇಸಾಯ್ತು ಹದನಾ
ಪನ್ನರಾದರೆ ಅವ್ವೆಯರು ಸಹಿತಕಟ ಪಾಂಡವರು
ಇನ್ನು ಸುಡು ಸುಡು ಧರ್ಮ ಸಂಪ್ರತಿ
ಪನ್ನ ಗುಣದಾಚಾರಗಳ ಸಂ
ಪನ್ನತೆಯನೆಂದೊರಲಿ ಮರುಗಿತು ನಿಖಿಳ ಪರಿವಾರ ॥90॥
೦೯೧ ಒಗೆದುದೀ ಬೇಳಮ್ಬ ...{Loading}...
ಒಗೆದುದೀ ಬೇಳಂಬ ಹಸ್ತಿನ
ನಗರಿಯಲಿ ತತ್ಪೌರಜನ ಮನ
ವುಗಿದು ಬಿದ್ದುದು ಶೋಕಮಯಸಾಗರದ ಮಧ್ಯದಲಿ
ಹೊಗೆದುದಾನನ ವಿದುರ ಭೀಷ್ಮಾ
ದಿಗಳಿಗಾ ಧೃತರಾಷ್ಟ್ರ ಸುತರಿಗೆ
ದುಗುಡ ದಡ್ಡಿಯ ಹರುಷಸಿರಿ ಹೊಕ್ಕಳು ಮುಖಾಂಬುಜವ ॥91॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕೇಡು ಹಸ್ತಿನಾಪುರದಲ್ಲಿ ಕಾಣಿಸಿಕೊಂಡಿತು. ಆ ಪಟ್ಟಣದ ಜನರು ಮನನೊಂದು ಶೋಕಮಯ ಸಾಗರದ ಮಧ್ಯದಲ್ಲಿ ಬಿದ್ದು ಮುಳುಗಿ ಹೋದರು. ವಿದುರ ಭೀಷ್ಮಾದಿಗಳ ಮುಖ ಕಾಂತಿಹೀನವಾಯ್ತು. ಆ ಧೃತರಾಷ್ಟ್ರನ ಮಕ್ಕಳಿಗೆ ಚಿಂತೆಯ ತೆರೆಯಿಂದ ಮುಖ ಮುಚ್ಚಿಕೊಂಡಿದ್ದ ಸಂತೋಷಲಕ್ಷ್ಮಿ ಅವರ ಮುಖ ಕಮಲವನ್ನು ಪ್ರವೇಶಿಸಿದಳು.
ಪದಾರ್ಥ (ಕ.ಗ.ಪ)
ಬೇಳಂಬ-ಕೇಡು, ಒಗೆ-ಕಾಣಿಸಿಕೊಳ್ಳು, ಆನನ-ಮುಖ, ಹೊಗೆದುದು-ಕಾಂತಿಹೀನವಾಯ್ತು, ದುಗುಡ-ಚಿಂತೆ, ದಡ್ಡಿ-ತೆರೆ
ಮೂಲ ...{Loading}...
ಒಗೆದುದೀ ಬೇಳಂಬ ಹಸ್ತಿನ
ನಗರಿಯಲಿ ತತ್ಪೌರಜನ ಮನ
ವುಗಿದು ಬಿದ್ದುದು ಶೋಕಮಯಸಾಗರದ ಮಧ್ಯದಲಿ
ಹೊಗೆದುದಾನನ ವಿದುರ ಭೀಷ್ಮಾ
ದಿಗಳಿಗಾ ಧೃತರಾಷ್ಟ್ರ ಸುತರಿಗೆ
ದುಗುಡ ದಡ್ಡಿಯ ಹರುಷಸಿರಿ ಹೊಕ್ಕಳು ಮುಖಾಂಬುಜವ ॥91॥
೦೯೨ ಬನ್ದುದಾ ಸುರನದಿಗೆ ...{Loading}...
ಬಂದುದಾ ಸುರನದಿಗೆ ಕೌರವ
ವೃಂದ ಪರಿಜನವೈದೆ ಶೋಕಿಸಿ
ಮಿಂದು ಗಂಗಾ ತೀರದಲಿ ಬಳಿಕೂಧ್ರ್ವ ದೇಹಿಕವ
ಸಂದ ವಿಧಿಯಲಿ ಮಾಡಿ ಪರಮಾ
ನಂದ ಮಿಗಲವರಿರ್ದರಿತ್ತಲು
ಇಂದುಕುಲ ಸಂಭವರ ವಿಧಿಯನು ಮತ್ತೆ ಕೇಳ್ ಎಂದ ॥92॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವರ ಸಮೂಹ ಗಂಗಾ ನದಿಯ ತೀರಕ್ಕೆ ಬಂದಿತು. ಪರಿವಾರ ಸಮೇತವಾಗಿ ದುಃಖಿಸಿ ಸ್ನಾನ ಮಾಡಿ ನಂತರ ಸಮ್ಮತವಾದ ನಿಯಮದಲ್ಲಿ ಉತ್ತರ ಕ್ರಿಯೆಯನ್ನು ಮಾಡಿ ಹೆಚ್ಚಿದ ಪರಮಾನಂದದಿಂದ ಅವರಿದ್ದರು. ಇತ್ತಕಡೆ ಚಂದ್ರ ವಂಶದಲ್ಲಿ ಹುಟ್ಟಿದವರ ಪಾಡನ್ನು ಮತ್ತೆ ಕೇಳು ಎಂದು ವೈಶಂಪಾಯನನು ಹೇಳಿದನು.
ಪದಾರ್ಥ (ಕ.ಗ.ಪ)
ಸುರನದಿ-ಗಂಗಾನದಿ, ಪರಿಜನ-ಪರಿವಾರ, ಮಿಂದು-ಸ್ನಾನಮಾಡಿ, ಊಧ್ರ್ವದೇಹಿಕ-ಉತ್ತರಕ್ರಿಯೆ, ಸಂದ-ಸಮ್ಮತವಾದ, ವಿಧಿ-ಪಾಡು , ಇಂದುಕುಲ-ಚಂದ್ರವಂಶ, ಸಂಭವ-ಹುಟ್ಟು
ಟಿಪ್ಪನೀ (ಕ.ಗ.ಪ)
ಗಂಗಾನದಿ - ದೇವನದಿ ಸಗರನ ಅರವತ್ತು ಸಾವಿರ ಮಂದಿ ಮಕ್ಕಳೂ ಕಪಿಲ ಮುನಿಯ ಕೋಪಾಗ್ನಿಯಿಂದ ಬೂದಿಯಾದರು. ಅವನ ಮರಿ ಮಗನಾದ ಭಗೀರಥನು ತನ್ನ ಮುತ್ತಜ್ಜಂದಿರಿಗೆ ಸದ್ಗತಿಯನ್ನು ದೊರಕಿಸುವುದಕ್ಕೆ ಗಂಗೆಯನ್ನು ಭೂಲೋಕಕ್ಕೆ ತರುವ ಉದ್ದೇಶದಿಂದ ಗಂಗೆಯನ್ನು ಕುರಿತು ತಪಸ್ಸು ಮಾಡಿದನು. ಗಂಗೆ ಪ್ರತ್ಯಕ್ಷವಾಗಿ “ನಾನು ನಿನ್ನ ಇಷ್ಟಾರ್ಥ ಕೈಗೂಡಿಸುವೆನು. ಆದರೆ ನನ್ನ ವೇಗವನ್ನು ತಡೆಯುವರಾರು?” ಎನಲು ಭಗೀರಥನು ಶಿವನನ್ನು ಮೆಚ್ಚಿಸಿ ಗಂಗೆಯ ವೇಗವನ್ನು ತಡೆಯುವಂತೆ ಮಾಡಿ, ಶಿವನ ಮಸ್ತಕದ ಮೇಲೆ ಬಿದ್ದು ಹರಿಯ ತೊಡಗಿತು. ಆಹ್ನುವಿನ ಯಜ್ಞ ಶಾಲೆಯನ್ನು ಕೊಚ್ಚಿಕೊಂಡು ಹರಿಯ ತೊಡಗಿದಾಗ, ಜಹ್ನು ಗಂಗೆಯನ್ನು ಶೋಷಿಸಿ ಬಿಟ್ಟ. ಭಗೀರಥ ಜಹ್ನುವನ್ನು ಬೇಡಿ ಮರಳಿ ಪ್ರವಹಿಸುವಂತೆ ಮಾಡಿದ. ಈ ಕಾರಣದಿಂದಲೇ ಗಂಗೆಗೆ ‘ಜಾಹ್ನವೀ’ ಎಂದು ಹೆಸರು. ಬಳಿಕ ಭಗೀರಥ ಗಂಗೆಯನ್ನು ತನ್ನ ಮುತ್ತಜ್ಜಂದಿರ ಬೂದಿಯ ರಾಶಿಯ ಮೇಲೆ ಪ್ರವಹಿಸುವಂತೆ ಮಾಡಿ, ಅವರಿಗೆ ಸದ್ಗತಿಯನ್ನೊದಗಿಸಿದ. ಈ ಕಾರಣದಿಂದ ಗಂಗೆಗೆ ‘ಭಾಗೀರಥಿ’ಯೆಂದು ಹೆಸರು.
ಮೂಲ ...{Loading}...
ಬಂದುದಾ ಸುರನದಿಗೆ ಕೌರವ
ವೃಂದ ಪರಿಜನವೈದೆ ಶೋಕಿಸಿ
ಮಿಂದು ಗಂಗಾ ತೀರದಲಿ ಬಳಿಕೂಧ್ರ್ವ ದೇಹಿಕವ
ಸಂದ ವಿಧಿಯಲಿ ಮಾಡಿ ಪರಮಾ
ನಂದ ಮಿಗಲವರಿರ್ದರಿತ್ತಲು
ಇಂದುಕುಲ ಸಂಭವರ ವಿಧಿಯನು ಮತ್ತೆ ಕೇಳೆಂದ ॥92॥
೦೯೩ ಬಿಲಮುಖದೊಳುತ್ತರಿಸಿ ಬಲುಗ ...{Loading}...
ಬಿಲಮುಖದೊಳುತ್ತರಿಸಿ ಬಲುಗ
ತ್ತಲೆಯೊಳಡವಿಯ ಮಾರ್ಗದಲಿ ಕಲು
ಮುಳುಗಳೊಳು ಕಾಪಥಕೆ ಕೋಮಲ ಚರಣಗಳ ಕೊಡುತ
ತೊಳಲಿದರು ಬೆಳಗಾಗೆ ಹಳ್ಳಿಯ
ಬಳಿಯ ಹೊದ್ದದೆ ಹಾಯ್ದು ಹೊಕ್ಕರು
ಹಳುವವನು ಬೆಳಗಡಗೆ ನಡೆದರು ಹಲವು ಯೋಜನವ ॥93॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರು ಬಿಲದ ಮೂಲಕ ಅರಗಿನ ಮನೆಯಿಂದ ತಪ್ಪಿಸಿಕೊಂಡು ಬಂದು ದಟ್ಟವಾದ ಕತ್ತಲೆಯಲ್ಲಿ ಅರಣ್ಯ ಮಾರ್ಗದಲ್ಲಿ ಕಲ್ಲು ಮುಳ್ಳುಗಳ ದುರ್ಮಾರ್ಗದಲ್ಲಿ ತಮ್ಮ ಕೋಮಲ ಪಾದಗಳನ್ನು ನೋಯಿಸಿಕೊಳ್ಳುತ್ತಾ ಅಲೆದಾಡಿದರು. ಬೆಳಗಾಗಲು ಹಳ್ಳಿಯ ಸಮೀಪ ಹೋಗದೆ ದಾಟಿ ನಡೆದು ಅಡವಿಯನ್ನು ಪ್ರವೇಶಿಸುವರು. ಬೆಳಗು ಅಡಗಿದ ಮೇಲೆ ಮುಂದುವರಿದು ಹಲವು ಯೋಜನಗಳ ದೂರ ನಡೆಯುವರು.
ಪದಾರ್ಥ (ಕ.ಗ.ಪ)
ಉತ್ತರಿಸಿ-ತಪ್ಪಿಸಿಕೊಂಡು, ಕಾಪಥ-ದುರ್ಮಾರ್ಗ, ಬಳಿ-ಸಮೀಪ, ತೊಳಲು-ಅಲೆದಾಡು, ಹೊದ್ದದೆ-ಹೋಗದೆ, ಹಳುವ-ಅಡವಿ, ಯೋಜನ-ನಾಲ್ಕು ಹರಿದಾರಿ (12 ಮೈಲಿ)
ಮೂಲ ...{Loading}...
ಬಿಲಮುಖದೊಳುತ್ತರಿಸಿ ಬಲುಗ
ತ್ತಲೆಯೊಳಡವಿಯ ಮಾರ್ಗದಲಿ ಕಲು
ಮುಳುಗಳೊಳು ಕಾಪಥಕೆ ಕೋಮಲ ಚರಣಗಳ ಕೊಡುತ
ತೊಳಲಿದರು ಬೆಳಗಾಗೆ ಹಳ್ಳಿಯ
ಬಳಿಯ ಹೊದ್ದದೆ ಹಾಯ್ದು ಹೊಕ್ಕರು
ಹಳುವವನು ಬೆಳಗಡಗೆ ನಡೆದರು ಹಲವು ಯೋಜನವ ॥93॥
೦೯೪ ದಾಟಿದರು ಗಙ್ಗೆಯನು ...{Loading}...
ದಾಟಿದರು ಗಂಗೆಯನು ರಾಯನ
ಮಾಟದಲಿ ಹಲು ಮುರಿದುದೇ ನ
ಮ್ಮಾಟಕಿದು ಹಿರಿದಲ್ಲಲಾಯೆನುತೈವರಡಿಗಡಿಗೆ
ಕೋಟಲೆಯ ಕೊಲ್ಲಣಿಗೆಯಲಿ ಮೈ
ನೋಟಕಲಸದೆ ಬಿಸಿಲಲಿವರು ಮ
ಹಾಟವಿಯ ಮಧ್ಯವನು ಹೊಕ್ಕರು ನೃಪತಿ ಕೇಳ್ ಎಂದ ॥94॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಮುಂದುವರೆಯುತ್ತ ಗಂಗೆಯನ್ನು ದಾಟಿದರು. “ರಾಜನ ಕಾರ್ಯದಲ್ಲಿ ಹಲ್ಲು ಮುರಿಯಿತೇ ? ನಮ್ಮಾಟಕ್ಕೆ ಇದು ಹಿರಿದಲ್ಲವೆ ?” ಎಂದು ಐವರು ಒಬ್ಬರೊಬ್ಬರಿಗೆ ಹೇಳಿಕೊಳ್ಳುತ್ತ ಮುಂದುವರಿದರು. ತೊಂದರೆಯ ವಿನೋದದಲ್ಲಿ, ದೇಹದ ಕಷ್ಟಕ್ಕೆ ಬೇಸರ ಪಡದೆ ಬಿಸಿಲಲ್ಲಿ ಇವರು ಮಹಾರಣ್ಯದ ಮಧ್ಯವನ್ನು ಪ್ರವೇಶಿಸಿದರು.
ಪದಾರ್ಥ (ಕ.ಗ.ಪ)
ಮಾಟ-ದುಷ್ಕಾರ್ಯ, ಕೋಟಲೆ-ತೊಂದರೆ, ಕೊಲ್ಲಣಿಗೆ-ವಿನೋದ, ಮೈನೋಟ-ದೇಹದ ಕಷ್ಟ, ಅಲಸದೆ-ಬೇಸರ ಪಡದೆ, ಅಟವಿ-ಅರಣ್ಯ
ಮೂಲ ...{Loading}...
ದಾಟಿದರು ಗಂಗೆಯನು ರಾಯನ
ಮಾಟದಲಿ ಹಲು ಮುರಿದುದೇ ನ
ಮ್ಮಾಟಕಿದು ಹಿರಿದಲ್ಲಲಾಯೆನುತೈವರಡಿಗಡಿಗೆ
ಕೋಟಲೆಯ ಕೊಲ್ಲಣಿಗೆಯಲಿ ಮೈ
ನೋಟಕಲಸದೆ ಬಿಸಿಲಲಿವರು ಮ
ಹಾಟವಿಯ ಮಧ್ಯವನು ಹೊಕ್ಕರು ನೃಪತಿ ಕೇಳೆಂದ ॥94॥