೦೦೦ ಸೂ ಭೀಮ ...{Loading}...
ಸೂ : ಭೀಮ ದುರ್ಯೋಧನರ ಸೆಣಸಿನ
ತಾಮಸಿಕೆ ಹೆಚ್ಚಿದುದು ಕದನೋ
ದ್ದಾಮರಸ್ತ್ರಾಭ್ಯಾಸವನು ಮಾಡಿದರು ದ್ರೋಣನಲಿ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಭೀಮ ದುರ್ಯೋಧನರ ಪೈಪೋಟಿಯ ತೀವ್ರತೆ ಹೆಚ್ಚಾಯಿತು. ಕಾಳಗದಲ್ಲಿ ಶ್ರೇಷ್ಠರಾದವರು ದ್ರೋಣಾಚಾರ್ಯರಲ್ಲಿ ಶಸ್ತ್ರಾಭ್ಯಾಸಕ್ಕೆ ತೊಡಗಿದರು.
ಪದಾರ್ಥ (ಕ.ಗ.ಪ)
ಸೆಣಸು-ಪೈಪೋಟಿ, ತಾಮಸಿಕೆ-ತೀವ್ರತೆ, ಕದನ-ಕಾಳಗ, ಅಸ್ತ್ರ-ಬಾಣ, ಅಭ್ಯಾಸ-ಕಲಿಯುವಿಕೆ
ಟಿಪ್ಪನೀ (ಕ.ಗ.ಪ)
ದ್ರೋಣ-ಭರದ್ವಾಜ ಮಹರ್ಷಿ ತಪಸ್ಸು ಮಾಡುತ್ತಿದ್ದಾಗ ಘೃತಾಚಿ ಎಂಬ ಅಪ್ಸರಸಿಯನ್ನು ಕಂಡು ವೀರ್ಯಸ್ಖಲನವಾಗಿ, ಅದನ್ನು ಒಂದು ದ್ರೋಣದಲ್ಲಿ (ದೊನ್ನೆಯಲ್ಲಿ) ಇರಿಸಲಾಗಿ, ಅಲ್ಲಿಯೇ ಒಂದು ಗಂಡು ಮಗು ಜನಿಸಿತು. ಇವನೇ ದ್ರೋಣಾಚಾರ್ಯ. ದ್ರೋಣದಿಂದಲೇ ಜನಿಸಿದವನಾದುದರಿಂದ ದ್ರೋಣನೆಂದು ಹೆಸರು.
ಮೂಲ ...{Loading}...
ಸೂ : ಭೀಮ ದುರ್ಯೋಧನರ ಸೆಣಸಿನ
ತಾಮಸಿಕೆ ಹೆಚ್ಚಿದುದು ಕದನೋ
ದ್ದಾಮರಸ್ತ್ರಾಭ್ಯಾಸವನು ಮಾಡಿದರು ದ್ರೋಣನಲಿ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಮಹೀಪತಿ
ಬಾಲಕರು ನೂರಾರು ಮೆರೆದರು
ಬಾಲಕೇಳೀವ್ಯಸನಿಗಳು ಹೊರವಳಯದಲಿ ಪುರದ
ಆಳಿನೇರಿಕೆ ಹಿಡಿಗವಡೆ ಗುರಿ
ಯಾಳು ಚೆಂಡಿನ ಹೊಣಕೆ ಚಿಣಿ ಕೋ
ಲಾಳು ಗೊತ್ತಿನ ದಂಡೆಯನೆ ನಾನಾ ವಿನೋದದಲಿ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ಮಹಾರಾಜನೇ, ಕೇಳು, ನೂರಾರು ಬಾಲಕರು ಹಸ್ತಿನಾಪುರದ ಹೊರ ಪ್ರದೇಶದಲ್ಲಿ ಮಕ್ಕಳಾಟಗಳಲ್ಲಿ ಅತ್ಯಾಸಕ್ತಿಯುಳ್ಳವರಾಗಿ ಶೋಭಿಸಿದರು. ಒಬ್ಬರ ಮೇಲೊಬ್ಬರು ಹತ್ತಿ ಆಡುವ ಮಕ್ಕಳ ಆಟ, ಒಂದು ಬಗೆಯ ಕವಡೆಯಾಟ, ಚಂಡಿನಿಂದ ಗುರಿಯಿಟ್ಟು ಹೊಡೆಯುವ ಆಟ, ಚಿಣ್ಣಿ ಮತ್ತು ದಾಂಡುಗಳಿಂದ ಆಡುವ ಆಟ, ಒಬ್ಬ ಇರುವ ಸ್ಥಳ ಪತ್ತೆ ಮಾಡಿದಾಗ ಅವನು ಮೊಣಕಾಲೂರ ಬೇಕಾದ ಆಟ, ಇವೇ ಮೊದಲಾದುವನ್ನು ಉತ್ಸಾಹದಿಂದ ಆಡಿದರು.
ಪದಾರ್ಥ (ಕ.ಗ.ಪ)
ಬಾಲಕೇಳೀ-ಮಕ್ಕಳಾಟ,
ವ್ಯಸನಿ-ಅತ್ಯಾಸಕ್ತಿ,
ಹೊರವಳಯ-ಹೊರಪ್ರದೇಶ,
ಆಳಿನೇರಿಕೆ-ಒಬ್ಬರಮೇಲೊಬ್ಬರು ಹತ್ತಿ ಆಡುವ ಆಟ;
ಹಿಡಿಗವಡೆ-ಕವಡೆಯನ್ನು ಮೇಲಕ್ಕೆ ಎಸೆದು ಹಿಡಿಯುವ ಆಟ;
ಗುರಿಯಾಳು ಚೆಂಡಿನ ಹೊಣಕೆ-ಚೆಂಡಿನಿಂದ ಗುರಿಯಿಟ್ಟು ಹೊಡೆಯುವ ಆಟ;
ಚಿಣಿ-ಮರದ ಚಿಕ್ಕ ತುಂಡು (ಚಿಣ್ಣಿ) ಚಿಣಿಕೋಲು-ಚಿಣ್ಣಿ ಮತ್ತು ದಾಂಡನ್ನು ಹಿಡಿದು ಆಡುವ ಆಟ,
ಆಳುಗೊತ್ತಿನ ದಂಡೆ-ಒಬ್ಬ ಇರುವ ಸ್ಥಳ ಪತ್ತೆ ಮಾಡಿದಾಗ ಅವನು ಮೊಣಕಾಲೂರ ಬೇಕಾದ ಆಟ.
ಮೂಲ ...{Loading}...
ಕೇಳು ಜನಮೇಜಯ ಮಹೀಪತಿ
ಬಾಲಕರು ನೂರಾರು ಮೆರೆದರು
ಬಾಲಕೇಳೀವ್ಯಸನಿಗಳು ಹೊರವಳಯದಲಿ ಪುರದ
ಆಳಿನೇರಿಕೆ ಹಿಡಿಗವಡೆ ಗುರಿ
ಯಾಳು ಚೆಂಡಿನ ಹೊಣಕೆ ಚಿಣಿ ಕೋ
ಲಾಳು ಗೊತ್ತಿನ ದಂಡೆಯನೆ ನಾನಾ ವಿನೋದದಲಿ ॥1॥
೦೦೨ ಗುಡುಗು ಗುತ್ತಿನಚೆಣ್ಡು ...{Loading}...
ಗುಡುಗು ಗುತ್ತಿನಚೆಂಡು ಗುಮ್ಮನ
ಬಡಿವ ಕತ್ತಲೆ ಗುದ್ದುಗಂಬದ
ಗಡಣೆ ಕಣ್ಮುಚ್ಚಸಗವರಿ ಹರಿಹಲಗೆ ನಿಡುಗವಣೆ
ಕೆಡಹು ಕುಟ್ಟಿಗನಾದಿಯಾದವ
ಗಡ ವಿನೋದದಲಾಡಿದರು ಪಂ
ಗಡದಲೈವರು ನೂರ್ವರಿವರಿತ್ತಂಡವೊಂದಾಗಿ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಐವರು ಪಾಂಡವರು ಒಂದು ಗುಂಪು, ಕೌರವರು ನೂರ್ವರು ಒಂದು ಗುಂಪು, ಒಂದೇ ತಂಡವಾಗಿ, ಗುಡುಗುಡು ಎಂದು ಒಂದೇ ಉಸುರಿಗೆ ಗುಡುಗುತ್ತ ಓಡಾಡುವ ಆಟ (ಕಬಡ್ಡಿ), ಚೆಂಡಿನಿಂದ ಹೊಡೆಯುವ ಆಟ, ಕತ್ತಲೆಯಲ್ಲಿ ಇರುವ ಕಂಬಗಳ ಸಮೂಹವನ್ನು ಹುಡುಕಿ ಹೊಡೆಯುವ ಆಟ, ಕಣ್ಮುಚ್ಚಾಟ, ಅಸಗವರಿ ಎಂಬ ಒಂದು ಬಗೆಯ ಆಟ, ಮರದ ಹಲಗೆಯ ಒಂದು ತುದಿಗೆ ಹುಡುಗನನ್ನು ಕೂರಿಸಿ ಇನ್ನೊಂದು ತುದಿಗೆ ಹಗ್ಗವನ್ನು ಕಟ್ಟಿ ಎಳೆದುಕೊಂಡು ಹೋಗುವ ಒಂದು ಬಗೆಯ ಆಟ (?) ಉದ್ದವಾದ ತಿರುಪಿನ ಹಗ್ಗದಿಂದ ಕಲ್ಲು ಹೊಡೆಯುವುದಕ್ಕೆ ಮಾಡಿದ ಸಾಧನದಿಂದ ಆಡುವ ಆಟ, ಕೆಳಕ್ಕೆ ಬೀಳಿಸುವ ಆಟ. ಲಾಗ ಹಾಕುವ ಆಟ ಮೊದಲಾದುವನ್ನು ಸಾಹಸದ ಉತ್ಸಾಹದಲ್ಲಿ ಆಡಿದರು
ಪದಾರ್ಥ (ಕ.ಗ.ಪ)
ಗುಡುಗು-ಗುಡುಗುಡು ಎಂದು ಒಂದೇ ಉಸುರಿಗೆ ಗುಡುಗುತ್ತ ಓಡಾಡುವ ಆಟ;
ಗುತ್ತಿನ ಚೆಂಡು-ಚೆಂಡಿನಿಂದ ಹೊಡೆಯುವ ಆಟ,
ಗುಮ್ಮನ ಬಡಿನ ಕತ್ತಲೆ ಗುದ್ದು ಗಂಬದ ಗಡಣೆ-ಕತ್ತಲೆಯಲ್ಲಿ ಇರುವ ಕಂಬಗಳ ಸಮೂಹವನ್ನು ಹುಡುಕಿ ಹೊಡೆಯುವ ಆಟ;
ಕಣ್ಮುಚ್ಚು-ಕಣ್ಮುಚ್ಚಾಟ;
ಅಸಗವರಿ-ಒಂದು ಬಗೆಯ ಆಟ,
ಹರಿಹಲಗೆ-ಮರದ ಹಲಗೆಯ ಒಂದು ತುದಿಗೆ ಹುಡುಗನನ್ನು ಕೂರಿಸಿ ಇನ್ನೊಂದು ತುದಿಗೆ ಹಗ್ಗವನ್ನು ಕಟ್ಟ್ಟಿ ಎಳೆದುಕೊಂಡು ಹೋಗುವ ಒಂದು ಬಗೆಯ ಆಟ,
ನಿಡುಗವಣೆ-ಉದ್ದವಾದ ತಿರುಪಿನ ಹಗ್ಗದಿಂದ ಕಲ್ಲು ಹೊಡೆಯುವುದಕ್ಕೆ ಮಾಡಿದ ಸಾಧನದಿಂದ ಆಡುವ ಆಟ;
ಕೆಡಹು-ಕೆಳಕ್ಕೆ ಬೀಳಿಸುವ ಆಟ,
ಕುಟ್ಟಿಗ-ಲಾಗಹಾಕುವ ಆಟ
ಮೂಲ ...{Loading}...
ಗುಡುಗು ಗುತ್ತಿನಚೆಂಡು ಗುಮ್ಮನ
ಬಡಿವ ಕತ್ತಲೆ ಗುದ್ದುಗಂಬದ
ಗಡಣೆ ಕಣ್ಮುಚ್ಚಸಗವರಿ ಹರಿಹಲಗೆ ನಿಡುಗವಣೆ
ಕೆಡಹು ಕುಟ್ಟಿಗನಾದಿಯಾದವ
ಗಡ ವಿನೋದದಲಾಡಿದರು ಪಂ
ಗಡದಲೈವರು ನೂರ್ವರಿವರಿತ್ತಂಡವೊಂದಾಗಿ ॥2॥
೦೦೩ ಅದರೊಳೊಬ್ಬನೆ ಭೀಮನನಿಬರ ...{Loading}...
ಅದರೊಳೊಬ್ಬನೆ ಭೀಮನನಿಬರ
ಸದೆವ ತಾ ಸೋತರೆ ವಿಭಾಡಿಸಿ
ಕೆದರುವನು ಗೆದ್ದೋಡಿದರೆ ಬೆಂಬತ್ತಿ ಹಿಡಿದೆಳೆದು
ಸದೆದು ಬಿಡುವನು ಮುನ್ನ ಭೀಷ್ಮಂ
ಗೊದರಿ ದೂರುವನನಿಬರನು ಮೇ
ಳದಲಿ ಮಗುಳೊಂದಾಗಿ ಸಂಗಡವಹರು ಸೂರುಳಿದು ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದರಲ್ಲಿ ಭೀಮ ತಾನೊಬ್ಬನೇ ಅಷ್ಟು ಜನರನ್ನೂ ಹೊಡೆಯುವನು. ತಾನು ಸೋತರೆ ಅವರನ್ನು ಬಡಿದು ಹಾಕಿ ಚದುರಿಸುವನು. ತಾನು ಗೆದ್ದು ಅವರು ಓಡಿದರೆ ಅವರನ್ನು ಹಿಂಬಾಲಿಸಿ ಹಿಡಿದೆಳೆದು ಚಚ್ಚಿ ಬಿಡುವನು. ಹೀಗಾದರೂ, ಮೊದಲು ಭೀಷ್ಮರ ಬಳಿಗೆಹೋಗಿ ಅಷ್ಟೂ ಜನರನ್ನು ದೂಷಿಸಿ ಗಟ್ಟಿಯಾಗಿ ದೂರುವನು. ಎಲ್ಲರೂ ಪುನಃ ಗುಂಪಿನಲ್ಲಿ ಒಂದಾಗಿ ಶಪಥ ಮಾಡಿ ಜೊತೆಗೂಡುವರು.
ಪದಾರ್ಥ (ಕ.ಗ.ಪ)
ಸದೆ-ಹೊಡೆ,
ವಿಭಾಡಿಸು-ಬಡಿದುಹಾಕು,
ಕೆದರು-ಚದುರಿಸು,
ಸೂರುಳ್-ಶಪಥ
ಮೂಲ ...{Loading}...
ಅದರೊಳೊಬ್ಬನೆ ಭೀಮನನಿಬರ
ಸದೆವ ತಾ ಸೋತರೆ ವಿಭಾಡಿಸಿ
ಕೆದರುವನು ಗೆದ್ದೋಡಿದರೆ ಬೆಂಬತ್ತಿ ಹಿಡಿದೆಳೆದು
ಸದೆದು ಬಿಡುವನು ಮುನ್ನ ಭೀಷ್ಮಂ
ಗೊದರಿ ದೂರುವನನಿಬರನು ಮೇ
ಳದಲಿ ಮಗುಳೊಂದಾಗಿ ಸಂಗಡವಹರು ಸೂರುಳಿದು ॥3॥
೦೦೪ ಕೆಣಕಿ ದುರ್ಯೋಧನನ ...{Loading}...
ಕೆಣಕಿ ದುರ್ಯೋಧನನ ನೆತ್ತಿಯ
ನಣೆದು ಹಾಯ್ವನು ನಿಮ್ಮ ನೂರ್ವರ
ಬಣಗುಗಳಿಗೆಡಗಾಲ ತೊಡರಿದೆ ಬನ್ನಿ ನೀವೆನುತ
ಗುಣವ ನುಡಿದೊಂದಾಗಿ ಕೆಳೆಗೊಂ
ಡಣಕಿಸದೆ ಮೈಮರೆಸಿ ಮರೆಯಲಿ
ಹಣಿದು ಬಿಡುವರು ಭೀಮನನು ದುರ್ಯೋಧನಾದಿಗಳು ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮಸೇನನು ದುರ್ಯೋಧನನನ್ನು ಸಿಟ್ಟಿಗೆಬ್ಬಿಸಿ ಅವನ ತಲೆಯ ಮೇಲ್ಭಾಗದ ಮೇಲೆ ಅಪ್ಪಳಿಸಿ “ನಿಮ್ಮ ನೂರ್ವರು ದುರ್ಬಲರಿಗೆ ನನ್ನ ಎಡಗಾಲ ತೊಡರಿದೆ, ಬನ್ನಿ ನೀವು” ಎನ್ನುತ್ತ ಮೇಲೆ ಬೀಳುವನು. ದುರ್ಯೋಧನಾದಿಗಳು ಒಳ್ಳೆಯ ರೀತಿಯಲ್ಲಿ ಮಾತಾಡಿಸಿ, ಗೆಳೆತನದಿಂದ, ಅಣಕವಾಡದೆ ಮೈಮರಸಿ ಮರೆಯಲ್ಲಿ ಸಿಕ್ಕಿದಾಗ ಭೀಮನನ್ನು ಥಳಿಸಿ ಬಿಡುವರು.
ಪದಾರ್ಥ (ಕ.ಗ.ಪ)
ಕೆಣಕು-ಸಿಟ್ಟಿಗೆಬ್ಬಿಸು,
ಬಣಗುಗಳು-ದುರ್ಬಲರು,
ತೊಡರು-ತೊಡರುಗಾಲು
ಕೆಳೆ-ಗೆಳೆತನ,
ಹಣಿ-ಥಳಿಸು
ಪಾಠಾನ್ತರ (ಕ.ಗ.ಪ)
[ಹಣಿದು ಬಿಡುವರು ಭೀಮನನು ದುರ್ಯೋzರ್sನಾದಿಗಳು]
-> [ಹಣಿದು ಬಿಡುವನು ಭೀಮನಾ ದುರ್ಯೋಧನಾದಿಗಳ (ಇ)]
ಈ ಪಾಠಾಂತರದ ಪ್ರಕಾರ ಭೀಮನೇ ದುರ್ಯೋಧನಾದಿಗಳನ್ನು ಒಳ್ಳೆಯ ರೀತಿಯಲ್ಲಿ ಮಾತಾಡಿಸಿ ಗೆಳೆತನದಿಂದ ಅಣಕವಾಡದೆ ಮೈಮರೆಸಿ ಮರೆಯಲ್ಲಿ ಸಿಕ್ಕಿದಾಗ ಥಳಿಸಿ ಬಿಡುವನು ಎಂದಾಗುತ್ತದೆ. ಈ ಪಾಠಾಂತರ ಸಮಂಜಸವೆನಿಸುತ್ತದೆ.
ಮೂಲ ...{Loading}...
ಕೆಣಕಿ ದುರ್ಯೋಧನನ ನೆತ್ತಿಯ
ನಣೆದು ಹಾಯ್ವನು ನಿಮ್ಮ ನೂರ್ವರ
ಬಣಗುಗಳಿಗೆಡಗಾಲ ತೊಡರಿದೆ ಬನ್ನಿ ನೀವೆನುತ
ಗುಣವ ನುಡಿದೊಂದಾಗಿ ಕೆಳೆಗೊಂ
ಡಣಕಿಸದೆ ಮೈಮರೆಸಿ ಮರೆಯಲಿ
ಹಣಿದು ಬಿಡುವರು ಭೀಮನನು ದುರ್ಯೋಧನಾದಿಗಳು ॥4॥
೦೦೫ ಹೇಳುವರು ಯಮಜಙ್ಗೆ ...{Loading}...
ಹೇಳುವರು ಯಮಜಂಗೆ ನಿನ್ನವ
ನೂಳಿಗವ ನಿಲಿಸೆಂದು ಪಾರ್ಥಗೆ
ಹೇಳುವರು ಬಳಿಕವರು ಭೀಮನ ಕರೆದು ಗಾರುಡಿಸೆ
ಕೇಳುವನು ಹೈಯೆಂದು ತನ್ನಯ
ಸೋಲದಲಿ ಮೈಯೊಡ್ಡುವನು ಮೇ
ಲಾಳನೇರಿಸಿ ಹರಿದು ಸದೆವನು ಗುತ್ತಿನಲಿ ಕೆಡಹಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನಾದಿಗಳು ಧರ್ಮರಾಜ, ಅರ್ಜುನರ ಬಳಿ ಬಂದು ಭೀಮನ ತುಂಟತನವನ್ನು ನಿಲ್ಲಿಸುವಂತೆ ಹೇಳುವರು. ಅವರು ಭೀಮನನ್ನು ಕರೆದು ಗುಟ್ಟಿನಲ್ಲಿ ಬುದ್ಧಿ ಹೇಳಿದರೆ ಆಗಲೆಂದು ಕೇಳುವನು. ಆದರೆ ಆಟದಲ್ಲಿ ಸೋತಾಗ ತನ್ನ ಮೈಯನ್ನು ಒಡ್ಡಿಕೊಂಡು ಎದುರು ಪಕ್ಷದವನನ್ನು ತನ್ನ ಮೈಮೇಲೆ ಏರಿಸಿಕೊಂಡು ಹೋಗಿ ಪೊದೆಯಲ್ಲಿ ಕೆಡುಹಿ ಹೊಡೆಯುವನು.
ಪದಾರ್ಥ (ಕ.ಗ.ಪ)
ಗಾರುಡಿಸು-ಗುಟ್ಟಿನಲ್ಲಿ ಬುದ್ಧಿ ಹೇಳು,
ಮೈಯೊಡ್ಡು-ಶರೀರವನ್ನು ಅರ್ಪಿಸು,
ಸೋಲ-ಸೋಲು
ಗುತ್ತ್ತಿ-ಪೊದೆ
ಟಿಪ್ಪನೀ (ಕ.ಗ.ಪ)
ಪಾರ್ಥ-ಪೃಥೆಯ ಮಗನಾದ ಅರ್ಜುನನಿಗೆ ಪಾರ್ಥ ಎಂಬ ಹೆಸರು.ಬಿಲ್ವಿದ್ಯೆ, ವೇದವಿದ್ಯೆ ಎರಡನ್ನೂ ರೂಢಿಸಿಕೊಂಡ ಜ್ಞಾನಿ ದ್ರೋಣರು ಋಷಿ ಭರದ್ವಾಜರ ಪುತ್ರರು. ಕೃಪನ ತಂಗಿಯ ಕೃಪೆಯ ಸತಿ. ಅಶ್ವತ್ಥಾಮನ ತಂದೆ. ಭರದ್ವಾಜರೂ ಪಾಂಚಾಲರಾಜ ಪೃಷತನೂ ಗೆಳೆಯರು. ಆದುದರಿಂದ ಪೃಷತನು ತನ್ನ ಮಗ ದ್ರುಪದನನ್ನು ಭರದ್ವಾಜಾಶ್ರಮದಲ್ಲಿ ವಿದಾ
ಮೂಲ ...{Loading}...
ಹೇಳುವರು ಯಮಜಂಗೆ ನಿನ್ನವ
ನೂಳಿಗವ ನಿಲಿಸೆಂದು ಪಾರ್ಥಗೆ
ಹೇಳುವರು ಬಳಿಕವರು ಭೀಮನ ಕರೆದು ಗಾರುಡಿಸೆ
ಕೇಳುವನು ಹೈಯೆಂದು ತನ್ನಯ
ಸೋಲದಲಿ ಮೈಯೊಡ್ಡುವನು ಮೇ
ಲಾಳನೇರಿಸಿ ಹರಿದು ಸದೆವನು ಗುತ್ತಿನಲಿ ಕೆಡಹಿ ॥5॥
೦೦೬ ಅಳುತ ಧೃತರಾಷ್ಟ್ರಙ್ಗೆ ...{Loading}...
ಅಳುತ ಧೃತರಾಷ್ಟ್ರಂಗೆ ಭೀಮನು
ಕಳೆದ ಹಲುಗಳನೊಡೆದ ಮೊಳಕಾ
ಲ್ಗಳನು ತೋರಿಸಿ ದೂರುವರು ದುರ್ಯೋಧನಾದಿಗಳು
ಮುಳು ಮೊನೆಗಳಲಿ ಬೆದಕಿ ನೆತ್ತರ
ಗಳೆದು ಹುಡಿಯಲಿ ಹೊರಳಿ ತಾ ಬಂ
ದಳುತ ಧೃತರಾಷ್ಟ್ರಂಗೆ ಭೀಷ್ಮಗೆ ದೂರುವನು ಭೀಮ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನಾದಿಗಳು ಭೀಮನು ಕಿತ್ತ ಹಲ್ಲುಗಳನ್ನು, ಮುರಿದ ಮೊಣಕಾಲುಗಳನ್ನು ಧೃತರಾಷ್ಟ್ರನಿಗೆ ಅಳುತ್ತ ತೋರಿಸಿ ಚಾಡಿ ಹೇಳುವರು. ಭೀಮನು ತಾನೇ ಮುಳ್ಳಿನ ತುದಿಯಿಂದ ರಕ್ತ ಬರುವಂತೆ ಗೀರಿಕೊಂಡು. ಮಣ್ಣಿನಲ್ಲಿ ಹೊರಳಾಡಿ ಅಳುತ್ತ ಬಂದು ಧೃತರಾಷ್ಟ್ರನಿಗೆ, ಭೀಷ್ಮರಿಗೆ ದುರ್ಯೋಧನಾದಿಗಳ ಮೆಲೆ ದೂರು ಹೇಳುವನು.
ಪದಾರ್ಥ (ಕ.ಗ.ಪ)
ನೆತ್ತರು-ರಕ್ತ,
ಹುಡಿ-ಮಣ್ಣು,
ದೂರು-ದೂಷಿಸು, ಚಾಡಿಹೇಳು
ಪಾಠಾನ್ತರ (ಕ.ಗ.ಪ)
ಮುಳು ಮೊನೆಯಲಿ ಗೀರಿ ನೆತ್ತರು –>
ಮುಳು ಮೊನೆಗಳಲಿ ಬೆದಕಿ ನೆತ್ತರು
ಆದಿಪರ್ವ, ಮೈ.ವಿ.ವಿ.
ಡ. ಕೆ.ಆರ್ . ಶೇಷಗಿರಿ
ಮೂಲ ...{Loading}...
ಅಳುತ ಧೃತರಾಷ್ಟ್ರಂಗೆ ಭೀಮನು
ಕಳೆದ ಹಲುಗಳನೊಡೆದ ಮೊಳಕಾ
ಲ್ಗಳನು ತೋರಿಸಿ ದೂರುವರು ದುರ್ಯೋಧನಾದಿಗಳು
ಮುಳು ಮೊನೆಗಳಲಿ ಬೆದಕಿ ನೆತ್ತರ
ಗಳೆದು ಹುಡಿಯಲಿ ಹೊರಳಿ ತಾ ಬಂ
ದಳುತ ಧೃತರಾಷ್ಟ್ರಂಗೆ ಭೀಷ್ಮಗೆ ದೂರುವನು ಭೀಮ ॥6॥
೦೦೭ ಆಕೆವಾಳರು ಭೀಷ್ಮ ...{Loading}...
ಆಕೆವಾಳರು ಭೀಷ್ಮ ವಿದುರರು
ಸಾಕು ನಿಮ್ಮೊಳು ನೂರು ನಾಲ್ವರು
ಆ ಕುಮಾರರು ಬೇರೆ ನೀನಿಹುದೊಬ್ಬ ಬೇರೆಂದು
ನೂಕಿ ಸೂರುಳು ಮಾಡಿ ಬಿಟ್ಟರೆ
ನಾಕು ಜಾವದೊಳಿಹರು ಮರುದಿನ
ವಾ ಕುಮಾರರು ತಮ್ಮೊಳೊಂದಾಗಿಹರು ಗೆಳೆಯಾಗಿ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶೂರರಾದ ಭೀಷ್ಮ ವಿದುರರು, ಇವರ ದೂರುಗಳನ್ನೆಲ್ಲಾ ಕೇಳಿ ವಿಚಾರ ಮಾಡಿ “ಸಾಕು ಈ ಜಗಳ, ನಿಮ್ಮಲ್ಲಿ ನೂರು ನಾಲ್ವರು ಬೇರೆ ಇರಿ. ಭೀಮಾ ನೀನೊಬ್ಬನೇ ಬೇರೆ ಇರಬೇಕು” ಎಂದು ಶಪಥ ಮಾಡಿಸಿ ಬಿಟ್ಟರೆ, ನಾಲ್ಕು ಜಾವಗಳ ಕಾಲ ಆ ರೀತಿ ಇರುವರು. ಮಾರನೆಯ ದಿನ ಆ ಕುಮಾರರೆಲ್ಲ ತಮ್ಮಲ್ಲಿ ಒಂದಾಗಿ ಸ್ನೇಹಿತರಾಗಿ ಇರುವರು.
ಪದಾರ್ಥ (ಕ.ಗ.ಪ)
ಆಕೆವಾಳರು-ಶೂರರು,
ಸೂರುಳು-ಶಪಥ,
ಗೆಳೆ-ಸ್ನೇಹ,
ಜಾವ-ದಿವಸದ ಎಂಟನೆಯ ಒಂದು ಭಾಗದಷ್ಟು ಕಾಲ (ಏಳೂವರೆಗಳಿಗೆ)
ಮೂಲ ...{Loading}...
ಆಕೆವಾಳರು ಭೀಷ್ಮ ವಿದುರರು
ಸಾಕು ನಿಮ್ಮೊಳು ನೂರು ನಾಲ್ವರು
ಆ ಕುಮಾರರು ಬೇರೆ ನೀನಿಹುದೊಬ್ಬ ಬೇರೆಂದು
ನೂಕಿ ಸೂರುಳು ಮಾಡಿ ಬಿಟ್ಟರೆ
ನಾಕು ಜಾವದೊಳಿಹರು ಮರುದಿನ
ವಾ ಕುಮಾರರು ತಮ್ಮೊಳೊಂದಾಗಿಹರು ಗೆಳೆಯಾಗಿ ॥7॥
೦೦೮ ಒನ್ದು ದಿನ ...{Loading}...
ಒಂದು ದಿನ ನೂರಾರು ಮಾನಿಸ
ರೊಂದು ಗೆಳೆಯಲಿ ಪುರದ ಹೊರಗಿಹು
ದೊಂದು ಠಾವು ಪ್ರಮಾಣ ವೃಕ್ಷವ ಕಂಡು ನಡೆತರಲು
ಬಂದು ನಿಂದರು ಕೋಲ ಬಿಸುಟೀ
ವೃಂದ ಹತ್ತಿತು ಮರವನಿವನೈ
ತಂದು ತಂದೆಡೆಯಾಡಿ ಬಳಲಿದು ನೋಡಿದನು ಭೀಮ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದು ದಿವಸ ಈ ನೂರಾರು ಹುಡುಗರು ಸ್ನೇಹದಲ್ಲಿ ಹಸ್ತಿನಾಪುರದ ಹೊರಗಿರುವ ಒಂದು ಸ್ಥಳದಲ್ಲಿನ ಪುರಾತನವಾದ ವಿಶಾಲ ವಟವೃಕ್ಷವನ್ನು ನೋಡಿ, ಅದರ ಬಳಿಗೆ ಬಂದರು. ನಂತರ ಅವರು ಕೋಲನ್ನು ಬಿಸುಡಿ ಮರವನ್ನು ಹತ್ತಿದರು. ಭೀಮನು ಆ ಕೋಲನ್ನು ತಂದು ಅಲೆದಾಡಿ ಆಯಾಸ ಹೊಂದಿ ಆ ಮರವನ್ನು ನೋಡಿದನು.
ಪದಾರ್ಥ (ಕ.ಗ.ಪ)
ಮಾನಿಸ-ಮನುಷ್ಯ,
ಠಾವು-ಸ್ಥಳ,
ಎಡೆಯಾಡಿ-ಅಲೆದಾಡಿ,
ಬಳಲು-ಆಯಾಸ
ಪಾಠಾನ್ತರ (ಕ.ಗ.ಪ)
[ಪ್ರಮಾಣ ವೃಕ್ಷವ ಕಂಡು ನಡೆತರಲು]->[ಪ್ರಮಾಣ ಕೋಟಿಯೆನಿಪ್ಪುದದ ರೊಳಗೆ (ಆ) (ಇ)]
ಪ್ರಮಾಣ ಕೋಟಿ : ಗಂಗೆಯ ದಡದಲ್ಲಿರುವ ಒಂದು ತೀರ್ಥ ಇಲ್ಲಿ ‘ಪ್ರಮಾಣ ಕೋಟಿ’ ಎಂಬ ಹೆಸರಿನಿಂದ ಪ್ರಸಿದ್ಧವಾದ ಒಂದು ವಿಶಾಲ ವಟವೃಕ್ಷವಿತ್ತು. ಇಲ್ಲಿಯೇ ದುರ್ಯೋಧನನು ಭೀಮಸೇನನಿಗೆ ವಿಷವನ್ನು ತಿನ್ನಿಸಿ ಗಂಗೆಯ ನೀರಿನಲ್ಲಿ ಹಾಕಿಸಿದ್ದು.
ಮೂಲ ...{Loading}...
ಒಂದು ದಿನ ನೂರಾರು ಮಾನಿಸ
ರೊಂದು ಗೆಳೆಯಲಿ ಪುರದ ಹೊರಗಿಹು
ದೊಂದು ಠಾವು ಪ್ರಮಾಣ ವೃಕ್ಷವ ಕಂಡು ನಡೆತರಲು
ಬಂದು ನಿಂದರು ಕೋಲ ಬಿಸುಟೀ
ವೃಂದ ಹತ್ತಿತು ಮರವನಿವನೈ
ತಂದು ತಂದೆಡೆಯಾಡಿ ಬಳಲಿದು ನೋಡಿದನು ಭೀಮ ॥8॥
೦೦೯ ಮರನ ಹಿಡಿದಲುಗಿದರೆ ...{Loading}...
ಮರನ ಹಿಡಿದಲುಗಿದರೆ ಬಿದ್ದರು
ಭರತಕುಲ ಪಾಲಕರು ನೂರೈ
ವರು ಮಹಾವಾತದಲಿ ತರುಫಲನಿಕರ ಬೀಳ್ವಂತೆ
ಶಿರವೊಡೆದು ಬೆನ್ನೊಡೆದು ಮೊಳಕಾ
ಲ್ಜರಿದು ಕೈಗಳು ಮುರಿದು ನೆತ್ತರು
ಸುರಿದು ಧೃತರಾಷ್ಟ್ರಂಗೆ ದೂರಿದರನಿಬರೀ ಹದನ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಆ ಮರವನ್ನು ಹಿಡಿದು ಅಲುಗಿಸಿದರೆ, ಬಿರುಗಾಳಿಯಲ್ಲಿ ಮರದ ಹಣ್ಣುಗಳೆಲ್ಲಾ ಬಿದ್ದು ಹೋಗುವಂತೆ ಭರತಕುಲರಕ್ಷಕರಾದ ನೂರೈವರೂ ಬಿದ್ದರು. ತಲೆ ಒಡೆದು, ಬೆನ್ನು ಮುರಿದು, ಮೊಣಕಾಲು ಕಳಚಿ, ಕೈಗಳು ಮುರಿದು, ರಕ್ತ ಸುರಿದು ಅಷ್ಟು ಜನರು ತಮ್ಮ ಸ್ಥಿತಿಯನ್ನು ಧೃತರಾಷ್ಟ್ರನಿಗೆ ದೂರಿದರು.
ಪದಾರ್ಥ (ಕ.ಗ.ಪ)
ಮಹಾವಾತ-ಬಿರುಗಾಳಿ,
ನೆತ್ತರು-ರಕ್ತ,
ತರು-ಮರ
ಮೂಲ ...{Loading}...
ಮರನ ಹಿಡಿದಲುಗಿದರೆ ಬಿದ್ದರು
ಭರತಕುಲ ಪಾಲಕರು ನೂರೈ
ವರು ಮಹಾವಾತದಲಿ ತರುಫಲನಿಕರ ಬೀಳ್ವಂತೆ
ಶಿರವೊಡೆದು ಬೆನ್ನೊಡೆದು ಮೊಳಕಾ
ಲ್ಜರಿದು ಕೈಗಳು ಮುರಿದು ನೆತ್ತರು
ಸುರಿದು ಧೃತರಾಷ್ಟ್ರಂಗೆ ದೂರಿದರನಿಬರೀ ಹದನ ॥9॥
೦೧೦ ದುರುಳನವನೊಡನಾಡ ಬೇಡೆಂ ...{Loading}...
ದುರುಳನವನೊಡನಾಡ ಬೇಡೆಂ
ದರಸನನಿಬರ ಸಂತವಿಟ್ಟನು
ಹಿರಿದು ಹೆಚ್ಚಿತು ಭೀಮ ದುರ್ಯೋಧನರಿಗತಿವೈರ
ಮರಳಿ ತಾವೊಂದಾಗುತಾತನ
ಕರೆಸಿ ವಿವಿಧ ಕ್ರೀಡೆಯಲಿ ಮೈ
ಮರೆಸಿ ಭೀಮನ ಕಟ್ಟಿ ಹಾಯ್ಕಿದರೊಂದು ಮಡುವಿನಲಿ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಧೃತರಾಷ್ಟ್ರ, ಅವನು ಕೆಟ್ಟವನು, ಅವನೊಡನೆ ಆಡಬೇಡಿರೆಂದು ಅವರನ್ನೆಲ್ಲ ಸಮಾಧಾನ ಮಾಡಿದನು. ಭೀಮ ದುರ್ಯೋಧನರಿಗೆ ಅತಿಶಯವಾದ ವೈರ ಹೆಚ್ಚಾಯಿತು. ಪುನಃ ದುರ್ಯೋಧನಾದಿಗಳು ತಾವು ಒಂದಾಗುತ್ತ ಭೀಮನನ್ನು ಕರೆಸಿ ವಿವಿಧ ಆಟಗಳಲ್ಲಿ ಮೈಮರೆಯುವಂತೆ ಮಾಡಿ ಭೀಮನನ್ನು ಕಟ್ಟಿ ಆಳವಾದ ನೀರಿರುವ ಪ್ರದೇಶದಲ್ಲಿ ಹಾಕಿದರು.
ಪದಾರ್ಥ (ಕ.ಗ.ಪ)
ದುರುಳ-ಕೆಟ್ಟವ,
ಸಂತವಿಡು-ಸಮಾಧಾನ ಮಾಡು,
ಮಡು-ಆಳವಾದ ನೀರಿರುವ ಪ್ರದೇಶ
ಮೂಲ ...{Loading}...
ದುರುಳನವನೊಡನಾಡ ಬೇಡೆಂ
ದರಸನನಿಬರ ಸಂತವಿಟ್ಟನು
ಹಿರಿದು ಹೆಚ್ಚಿತು ಭೀಮ ದುರ್ಯೋಧನರಿಗತಿವೈರ
ಮರಳಿ ತಾವೊಂದಾಗುತಾತನ
ಕರೆಸಿ ವಿವಿಧ ಕ್ರೀಡೆಯಲಿ ಮೈ
ಮರೆಸಿ ಭೀಮನ ಕಟ್ಟಿ ಹಾಯ್ಕಿದರೊಂದು ಮಡುವಿನಲಿ ॥10॥
೦೧೧ ಪಾಶವನು ಹರಿದೆದ್ದು ...{Loading}...
ಪಾಶವನು ಹರಿದೆದ್ದು ಬಂದತಿ
ರೋಷಿ ಸದೆದನು ಮತ್ತೆ ತಮ್ಮೊಳು
ಭಾಷೆಗಳಲೊಂದಾಗಿ ಕೂಡಿದರೊಂದು ದಿವಸದಲಿ
ಆ ಸಿತಗ ಮೈಮರೆದ ಹೊತ್ತು ಮ
ಹಾಸುರದ ಫಣಿಗಳಲಿ ಕಚ್ಚಿಸಿ
ಘಾಸಿ ಮಾಡಲು ಬದುಕಿ ಬೇಸರನಡಿಗಡಿಗೆ ಭೀಮ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮ ಕಟ್ಟುಗಳನ್ನು ತುಂಡುಮಾಡಿ ಎದ್ದು ಬಂದು ಬಹಳ ಸಿಟ್ಟಿನಿಂದ ಇವರನ್ನು ಬಡಿದನು. ಮತ್ತೆ ತಮ್ಮೊಳಗೆ ಆಣೆಯಿಟ್ಟುಕೊಂಡು ಒಂದಾಗಿ ಸೇರಿದರು. ಮತ್ತೆ ಒಂದು ದಿವಸ, ಆ ವೀರ ಮೈ ಮರೆತ ಸಮಯದಲ್ಲಿ ಕ್ರೂರ ಸರ್ಪಗಳಿಂದ ಕಚ್ಚಿಸಿ ನೋವುಂಟು ಮಾಡಿದರೂ ಬದುಕಿ ಭೀಮ ಮತ್ತೆ ಮತ್ತೆ ದಣಿವಿಲ್ಲದಾದನು.
ಪದಾರ್ಥ (ಕ.ಗ.ಪ)
ಪಾಶ-ಕಟ್ಟು,
ಸಿತಗ-ವೀರ,
ಮಹಾಸುರ-ಕ್ರೂರ,
ಅಡಿಗಡಿಗೆ-ಮತ್ತೆ ಮತ್ತೆ,
ಬೇಸರ-ದಣಿವು
ಮೂಲ ...{Loading}...
ಪಾಶವನು ಹರಿದೆದ್ದು ಬಂದತಿ
ರೋಷಿ ಸದೆದನು ಮತ್ತೆ ತಮ್ಮೊಳು
ಭಾಷೆಗಳಲೊಂದಾಗಿ ಕೂಡಿದರೊಂದು ದಿವಸದಲಿ
ಆ ಸಿತಗ ಮೈಮರೆದ ಹೊತ್ತು ಮ
ಹಾಸುರದ ಫಣಿಗಳಲಿ ಕಚ್ಚಿಸಿ
ಘಾಸಿ ಮಾಡಲು ಬದುಕಿ ಬೇಸರನಡಿಗಡಿಗೆ ಭೀಮ ॥11॥
೦೧೨ ಅರಸ ಕೇಳ್ ...{Loading}...
ಅರಸ ಕೇಳ್ ಆಯುಷ್ಯವುಳ್ಳರೆ
ಹರಿಹರ ಬ್ರಹ್ಮಾದಿಗಳು ಸಂ
ಹರಿಸಲರಿಯರು ಬರಿದೆ ದೈನ್ಯಂಬಡುವುದೀ ಲೋಕ
ಭರತ ವಂಶದ ಬಾಹಿರರು ನಿ
ಮ್ಮರಸುಗಳು ಭೀಮಂಗೆ ಮಾಡಿದ
ಹುರಿಯನಾ ಹುರಿ ಹರಿದ ಪರಿಯನು ಮತ್ತೆ ಕೇಳ್ ಎಂದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸ, ಕೇಳು, ಆಯುಷ್ಯವಿದ್ದರೆ ಹರಿಹರ ಬ್ರಹ್ಮಾದಿಗಳು ಸಂಹರಿಸಲರಿಯರು. ಸುಮ್ಮನೆ ಈ ಲೋಕ ದೀನತನವನ್ನು ಅನುಭವಿಸುತ್ತದೆ. ಭರತವಂಶದ ಹೀನ ಮನುಷ್ಯರಾದ ನಿಮ್ಮ ಕೌರಾವಾದಿಗಳು ಭೀಮನಿಗೆ ಕೊಟ್ಟ ಹಿಂಸೆಗಳನ್ನು, ಆ ಹಿಂಸೆಗಳನ್ನು ನಿವಾರಿಸಿಕೊಂಡ ರೀತಿಯನ್ನು ಮತ್ತೆ ಕೇಳು ಎಂದು ವೈಶಂಪಾಯನನು ಜನಮೇಜಯನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ದೈನ್ಯಂಬಡವುದು-ದೀನತನವನ್ನು ಅನುಭವಿಸುವುದು,
ಬಾಹಿರ-ಹೀನ,
ಹುರಿ-ಹಿಂಸೆ,
ಪರಿ-ರೀತಿ
ಮೂಲ ...{Loading}...
ಅರಸ ಕೇಳ್ ಆಯುಷ್ಯವುಳ್ಳರೆ
ಹರಿಹರ ಬ್ರಹ್ಮಾದಿಗಳು ಸಂ
ಹರಿಸಲರಿಯರು ಬರಿದೆ ದೈನ್ಯಂಬಡುವುದೀ ಲೋಕ
ಭರತ ವಂಶದ ಬಾಹಿರರು ನಿ
ಮ್ಮರಸುಗಳು ಭೀಮಂಗೆ ಮಾಡಿದ
ಹುರಿಯನಾ ಹುರಿ ಹರಿದ ಪರಿಯನು ಮತ್ತೆ ಕೇಳೆಂದ ॥12॥
೦೧೩ ಕಾಳಕೂಟ ಹಲಾಹಲವ ...{Loading}...
ಕಾಳಕೂಟ ಹಲಾಹಲವ ಕಾ
ರ್ಕೋಲ ದಾರದ ವತ್ಸನಾಭಿ ಕ
ರಾಳ ಸೌರಾಷ್ಟ್ರಿಕವ ಶೌಕ್ಲಿಕ ಸುಪ್ರದೀಪಕವ
ಹೇಳಲರಿದೆನಿಪೆಂಟು ವಿಷವನು
ಮೇಳವಿಸಿ ಬಳಿಕುಳಿದ ಮಧುರ ವಿ
ಶಾಲವಸ್ತುಗಳಿಂದ ಕಜ್ಜಾಯಗಳ ಮಾಡಿಸಿದ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಳಕೂಟ, ಹಲಾಹಲ, ಕಾರ್ಕೊಲ, ದಾರದ, ವತ್ಸನಾಭಿ, ಭಯಂಕರದ ಸೌರಾಷ್ಟ್ರಿಕ, ಶೌಕ್ಲಿಕ, ಸುಪ್ರದೀಪಕ-ಎಂಬ ಹೇಳಲು ಅಸಾಧ್ಯವೆನಿಸುವ ಎಂಟು ಬಗೆಯ ವಿಷಗಳನ್ನು ಕೂಡಿಸಿ ಉಳಿದ ಬಗೆ ಬಗೆಯ ಪದಾರ್ಥಗಳಿಂದ ಕೌರವನು ಸಿಹಿಯಾದ ಭಕ್ಷ್ಯಗಳನ್ನು ಮಾಡಿಸಿದನು.
ಪದಾರ್ಥ (ಕ.ಗ.ಪ)
ಕಜ್ಜಾಯ-ಸಿಹಿಯಾದ ಭಕ್ಷ್ಯ
ಮೂಲ ...{Loading}...
ಕಾಳಕೂಟ ಹಲಾಹಲವ ಕಾ
ರ್ಕೋಲ ದಾರದ ವತ್ಸನಾಭಿ ಕ
ರಾಳ ಸೌರಾಷ್ಟ್ರಿಕವ ಶೌಕ್ಲಿಕ ಸುಪ್ರದೀಪಕವ
ಹೇಳಲರಿದೆನಿಪೆಂಟು ವಿಷವನು
ಮೇಳವಿಸಿ ಬಳಿಕುಳಿದ ಮಧುರ ವಿ
ಶಾಲವಸ್ತುಗಳಿಂದ ಕಜ್ಜಾಯಗಳ ಮಾಡಿಸಿದ ॥13॥
೦೧೪ ದಿಟ್ಟಿಸಿದರೆವೆ ಸೀವುದಙ್ಗೈ ...{Loading}...
ದಿಟ್ಟಿಸಿದರೆವೆ ಸೀವುದಂಗೈ
ಮುಟ್ಟಿದರೆ ಹುಗುಳಹುದು ಬಳಿಕವ
ನಟ್ಟ ಕೈ ಕರಣದ ಸುವಾರದ ವಿದ್ಯವೇನರಿದೊ
ಕೊಟ್ಟರೀತಂಗೆಲ್ಲವನು ಜಗ
ಜಟ್ಟಿ ಹಾಯಿಕಿ ಕೊಂಡು ನುಣ್ಣನೆ
ಚಿಟ್ಟು ಮುರಿಯಾಟದಲಿ ಸದೆದನು ಮತ್ತೆ ಕೌರವರ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಭಕ್ಷ್ಯಗಳನ್ನು ನೋಡಿದರೆ ಕಣ್ಣಿನರೆಪ್ಪೆ ಸೀದು ಹೋಗುವುದು. ಮುಟ್ಟಿದರೆ ಅಂಗೈಗೆ ಬೊಕ್ಕೆಯುಂಟಾಗುವುದು. ಅಂಥ ವಸ್ತುಗಳನ್ನು ಅಡುಗೆ ಮಾಡಿದ ಕೈ ಚಳಕದ ಬಾಣಸಿಗನ ವಿದ್ಯೆಯನ್ನು ಏನೆಂದು ಹೇಳುವುದೋ ? ಭೀಮನಿಗೆ ಎಲ್ಲವನ್ನು ಕೊಟ್ಟರು. ಈ ಹೆಸರಾದ ಮಲ್ಲ, ಅವನ್ನೆಲ್ಲಾ ತಿಂದು ಅರಗಿಸಿಕೊಂಡು ಜೂಟಾಟದಲ್ಲಿ ಮತ್ತೆ ಕೌರವರನ್ನು ಜಜ್ಜಿದನು.
ಪದಾರ್ಥ (ಕ.ಗ.ಪ)
ಎವೆ-ರೆಪ್ಪೆ,
ಸೀವು-ಸೀಯುವುದು
ಹುಗುಳು-ಬೊಕ್ಕೆ,
ಅಟ್ಟು-ಅಡುಗೆ ಮಾಡು,
ಕೈಕರಣ-ಕೈಚಳಕ,
ಸುವಾರ-ಬಾಣಸಿಗ,
ಜಗಜಟ್ಟಿ-ಹೆಸರಾದ ಮಲ್ಲ,
ಚಿಟ್ಟು ಮುರಿಯಾಟ-ಜೂಟಾಟ,
ಸದೆ-ಜಜ್ಜು
ಮೂಲ ...{Loading}...
ದಿಟ್ಟಿಸಿದರೆವೆ ಸೀವುದಂಗೈ
ಮುಟ್ಟಿದರೆ ಹುಗುಳಹುದು ಬಳಿಕವ
ನಟ್ಟ ಕೈ ಕರಣದ ಸುವಾರದ ವಿದ್ಯವೇನರಿದೊ
ಕೊಟ್ಟರೀತಂಗೆಲ್ಲವನು ಜಗ
ಜಟ್ಟಿ ಹಾಯಿಕಿ ಕೊಂಡು ನುಣ್ಣನೆ
ಚಿಟ್ಟು ಮುರಿಯಾಟದಲಿ ಸದೆದನು ಮತ್ತೆ ಕೌರವರ ॥14॥
೦೧೫ ಮಡುವಿನಲಿ ಹಾಯ್ಕಿದಿರಿ ...{Loading}...
ಮಡುವಿನಲಿ ಹಾಯ್ಕಿದಿರಿ ಹಾವಿನ
ಹೆಡೆಯ ಕೊಂಡೂರಿದಿರಿ ಬಲು ವಿಷ
ದಡಿಗೆಗಳ ಮೆಲಿಸಿದಿರಿ ಬಲ್ಲಂದದ ವಿಕಾರದಲಿ
ಕೆಡಹಲನು ಮಾಡಿದಿರಿ ನೂರ್ವರ
ಕಡಿದು ಶಾಕಿನಿಯರಿಗೆ ರಕುತವ
ಕುಡಿಸಿದಲ್ಲದೆ ಮುನ್ನ ಸಾವೆನೆ ಕೇಳಿ ನೀವೆಂದ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಡುವಿನಲ್ಲಿ ಹಾಕಿದಿರಿ, ಹಾವಿನ ಹೆಡೆಯನ್ನು ನಾಟಿಸಿದಿರಿ, ಬಹಳ ವಿಷದಡುಗೆಗಳನ್ನು ತಿನ್ನಿಸಿದಿರಿ, ನಿಮಗೆ ತಿಳಿದ ರೀತಿಗಳಲ್ಲಿ ನನ್ನನ್ನು ಕೊಲ್ಲಲು ಸಜ್ಜಾದಿರಿ. ನಿಮ್ಮ ನೂರ್ವರನ್ನು ಕಡಿದು ಶಾಕಿನಿಯರಿಗೆ ರಕ್ತವನ್ನು ಕುಡಿಸಿದಲ್ಲದೆ ಮೊದಲು ನಾನು ಸಾಯುತ್ತೇನೆಯೇ? ಕೇಳಿ ನೀವೆಂದು ಭೀಮನು ಹೇಳಿದನು.
ಪದಾರ್ಥ (ಕ.ಗ.ಪ)
ಊರು-ಚುಚ್ಚು, ನಾಟಿಸು
ಮೆಲು-ತಿನ್ನು, ಅನುಮಾಡಿದಿರಿ-ಸಜ್ಜಾದಿರಿ, ಶಾಕಿನಿ-ಒಂದು ಕ್ಷುದ್ರದೇವತೆ; ದುರ್ಗಿಯ ಪರಿಚಾರಿಕೆ
ಮೂಲ ...{Loading}...
ಮಡುವಿನಲಿ ಹಾಯ್ಕಿದಿರಿ ಹಾವಿನ
ಹೆಡೆಯ ಕೊಂಡೂರಿದಿರಿ ಬಲು ವಿಷ
ದಡಿಗೆಗಳ ಮೆಲಿಸಿದಿರಿ ಬಲ್ಲಂದದ ವಿಕಾರದಲಿ
ಕೆಡಹಲನು ಮಾಡಿದಿರಿ ನೂರ್ವರ
ಕಡಿದು ಶಾಕಿನಿಯರಿಗೆ ರಕುತವ
ಕುಡಿಸಿದಲ್ಲದೆ ಮುನ್ನ ಸಾವೆನೆ ಕೇಳಿ ನೀವೆಂದ ॥15॥
೦೧೬ ಒಳಗೆ ಬೆಳೆದುದು ...{Loading}...
ಒಳಗೆ ಬೆಳೆದುದು ವೈರಶಿಖಿ ಕಡೆ
ಗಳಕೆ ಹಾಯ್ದುದು ಜನನಿ ಜನಕರ
ಬಲು ನುಡಿಗಳಲಿ ನೂರ್ವರಿರ್ದರು ಶಕುನಿ ಮತವಿಡಿದು
ಬಲಹುಗುಂದದೆ ಭೀಷ್ಮ ವಿದುರರ
ಬಳಕೆಯಲಿ ತಾವಡಗಿ ಗುಣದಲಿ
ಕೆಲನ ಮೆಚ್ಚಿಸಿ ನಡೆದರಿವರು ಯುಧಿಷ್ಠಿರಾದಿಗಳು ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಒಳಗೊಳಗೆ ದ್ವೇಷಾಗ್ನಿ ಬೆಳೆದು ಕುತ್ತಿಗೆಯವರೆಗೂ ಹಬ್ಬಿತು. ನೂರ್ವರು ಕೌರವರು ಧೃತರಾಷ್ಟ್ರ ಗಾಂಧಾರಿಯರ ಅತಿಶಯವಾದ ಮಾತುಗಳನ್ನು ಕೇಳಿಕೊಂಡು ಶಕುನಿಯ ಅಭಿಪ್ರಾಯದಂತೆ ವರ್ತಿಸುತ್ತಿದ್ದರು. ಯುಧಿಷ್ಠಿರಾದಿಗಳು ಸಾಮಥ್ರ್ಯ ಕುಗ್ಗದೆ ಭೀಷ್ಮ ವಿದುರರ ಪದ್ಧತಿಯಲ್ಲಿ ಅಡಕವಾಗಿ ನಡೆಯುತ್ತ ತಮ್ಮ ಗುಣಗಳಿಂದ ಸಮೀಪದವರನ್ನು ಸಂತೋಷಪಡಿಸಿದರು.
ಪದಾರ್ಥ (ಕ.ಗ.ಪ)
ವೈರ-ದ್ವೇಷ, ಶಿಖಿ-ಅಗ್ನಿ, ಗಳ-ಕುತ್ತಿಗೆ, ಬಲುಹು-ಸಾಮಥ್ರ್ಯ, ಬಳಕೆ-ಪದ್ಧತಿ, ಅಡಗಿ-ಅಡಕವಾಗಿ, ಕೆಲನ-ಸಮೀಪದವರನ್ನು, ಮೆಚ್ಚಿಸು-ಸಂತೋಷಪಡಿಸು
ಮೂಲ ...{Loading}...
ಒಳಗೆ ಬೆಳೆದುದು ವೈರಶಿಖಿ ಕಡೆ
ಗಳಕೆ ಹಾಯ್ದುದು ಜನನಿ ಜನಕರ
ಬಲು ನುಡಿಗಳಲಿ ನೂರ್ವರಿರ್ದರು ಶಕುನಿ ಮತವಿಡಿದು
ಬಲಹುಗುಂದದೆ ಭೀಷ್ಮ ವಿದುರರ
ಬಳಕೆಯಲಿ ತಾವಡಗಿ ಗುಣದಲಿ
ಕೆಲನ ಮೆಚ್ಚಿಸಿ ನಡೆದರಿವರು ಯುಧಿಷ್ಠಿರಾದಿಗಳು ॥16॥
೦೧೭ ಆಟದಲಿ ತೊಡಗಿದರು ...{Loading}...
ಆಟದಲಿ ತೊಡಗಿದರು ಮೊದಲಲಿ
ತೋಟಿಯನು ಸಾಕೀತಗಳ ಕಾ
ಲಾಟವನು ನಿಲಿಸುವೆನು ಶಸ್ತ್ರಾಸ್ತ್ರ ಪ್ರಸಂಗದಲಿ
ಆಟವಿಕರಿವದಿರಲಿ ಬಲಿದೊಳ
ತೋಟಿ ಬರಿದೇ ಬಿಡದು ಮೃತ್ಯುವಿ
ನೂಟ ಮುಂದಿಹುದೆಂದು ಕರೆಕರೆಗುಂದಿದನು ಭೀಷ್ಮ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆಟದಲ್ಲಿಯೇ ಇವರು ಜಗಳಕ್ಕೆ ಪ್ರಾರಂಭಿಸಿದರು. ಸಾಕು, ಇವರುಗಳ ಒಳಜಗಳವನ್ನು ಶಸ್ತ್ರಾಸ್ತ್ರಗಳ ಭ್ಯಸದಲ್ಲಿ ನಿರತರನ್ನಗಿಸುವ ಮೂಲಕ ನಿಲ್ಲಿಸುವೆನು. ಆಟಗಾರರಾದ ಇವರೊಳಗೆ ಶಕ್ತಿಯ ಒಳಜಗಳ ಸುಮ್ಮನೆ ಬಿಡುವುದಿಲ್ಲ ಮೃತ್ಯುವಿನೂಟ ಮುಂದೆ ಕಾದಿದೆ” ಎಂದು ಭೀಷ್ಮ ಚಿಂತಿಸಿ ಕುಗ್ಗಿ ಹೋದನು.
ಪದಾರ್ಥ (ಕ.ಗ.ಪ)
ತೋಟಿ-ಜಗಳ,
ಕಾಲಾಟ-ಒಳಜಗಳ
ಪ್ರಸಂಗ-ಸಮಯ,
ಆಟವಿಕರು-ಆಟಗಾರರು,
ಒಳತೋಟಿ-ಒಳಜಗಳ,
ಕರೆಕರೆ-ಚಿಂತೆ
ಮೂಲ ...{Loading}...
ಆಟದಲಿ ತೊಡಗಿದರು ಮೊದಲಲಿ
ತೋಟಿಯನು ಸಾಕೀತಗಳ ಕಾ
ಲಾಟವನು ನಿಲಿಸುವೆನು ಶಸ್ತ್ರಾಸ್ತ್ರ ಪ್ರಸಂಗದಲಿ
ಆಟವಿಕರಿವದಿರಲಿ ಬಲಿದೊಳ
ತೋಟಿ ಬರಿದೇ ಬಿಡದು ಮೃತ್ಯುವಿ
ನೂಟ ಮುಂದಿಹುದೆಂದು ಕರೆಕರೆಗುಂದಿದನು ಭೀಷ್ಮ ॥17॥
೦೧೮ ಧರಣಿಪತಿ ಚಿತ್ತೈಸು ...{Loading}...
ಧರಣಿಪತಿ ಚಿತ್ತೈಸು ಗೌತಮ
ವರಮುನಿಗೆ ಜನಿಸಿದ ಶರದ್ವನು
ಪರಮಋಷಿಯಾತನು ತಪೋಯುತನಾಗಿ ಧನು ಸಹಿತ
ಇರುತ ಕಂಡನು ದೈವ ಗತಿಯಲಿ
ಸುರವಧುವನಾ ಕ್ಷಣಕೆ ಕಾಮ
ಜ್ವರಿತನಾದನು ಚಲಿಸಿತಾತನ ವೀರ್ಯವವನಿಯಲಿ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಮಿಗೆ ಒಡೆಯನಾದ ಜನಮೇಜಯ ಮಹಾರಾಜನೇ, ಮನಸ್ಸಿಟ್ಟು ಕೇಳು, ಗೌತಮ ಶ್ರೇಷ್ಠ ಮುನಿಯ ವಂಶದಲ್ಲಿ ಜನಿಸಿದ ಶರದ್ವನ್ತನು ಪರಮಋಷಿ. ಒಮ್ಮೆ ಅವನು ಧನುಸ್ಸು ಸಹಿತ ತಪೋಯುತನಾಗಿದ್ದನು. ದೇವಮಾರ್ಗದಲ್ಲಿ ಅಪ್ಸರಸಿಯನ್ನು ನೋಡಿ ಕ್ಷಣ ಮಾತ್ರದಲ್ಲಿ ಕಾಮಜ್ವರಿತನಾದನು. ಅವನ ವೀರ್ಯವು ಭೂಮಿಯಲ್ಲಿ ಚಲಿಸಿತು.
ಪದಾರ್ಥ (ಕ.ಗ.ಪ)
ಚಿತ್ತೈಸು-ಮನಸ್ಸಿಟ್ಟು ಕೇಳು
ಟಿಪ್ಪನೀ (ಕ.ಗ.ಪ)
ಶರದ್ವಂತ : ಗೌತಮ ಗೋತ್ರದ ಒಬ್ಬ ಮಹರ್ಷಿ. ಇವನು ಮಹರ್ಷಿ ಗೌತಮರ ಪುತ್ರನಾಗಿದ್ದನು ಮತ್ತು ಧನುರ್ಬಾಣಗಳ ಸಮೇತನಾಗಿ ಹುಟ್ಟಿದ್ದನು. ಇವನು ಸ್ವತಃ ಗೌತಮನೆಂದು ಕರೆಯಲ್ಪಡುತ್ತಿದ್ದನು. ಇವನ ತಪಸ್ಸನ್ನು ಭಗ್ನಗೊಳಿಸಲು ದೇವೇಂದ್ರನು ಜಾನಪದಿ ಎಂಬ ಅಪ್ಸರಸಿಯನ್ನು ಕಳುಹಿಸಿದನು. ಅವಳ ಕಡೆಗೆ ಈ ಋಷಿ ನೋಡಿದುದರಿಂದ ಇವನ ಮನಸ್ಸಿನಲ್ಲಿ ಒಮ್ಮಿಂದೊಮ್ಮೆಗೆ ಬಂದ ವಿಕಾರದಿಂದಾಗಿ ಇವನ ವೀರ್ಯಸ್ಖಲಿಸಿತು. ಅವನ ವೀರ್ಯ ಧನುರ್ಬಾಣಗಳ ಸಮುದಾಯದ ಮೆಲೆ ಬಿದ್ದು ಎರಡು ಭಾಗಗಳಾಗಿ ವಿಭಕ್ತವಾಯಿತು. ಅದರಿಂದ ಒಬ್ಬ ಪುತ್ರ ಮತ್ತು ಒಬ್ಬ ಕನ್ಯೆಯ ಜನನ ವಾಯ್ತು. ಇವರನ್ನು ರಾಜಾಶಂತನು ಕೃಪೆಯಿಂದ ಸಾಕಿದನು. ಅವರಿಗೆ ಕೃಪ ಮತ್ತು ಕೃಪಿಯೆಂದು ಹೆಸರಿಟ್ಟನು.
ಮೂಲ ...{Loading}...
ಧರಣಿಪತಿ ಚಿತ್ತೈಸು ಗೌತಮ
ವರಮುನಿಗೆ ಜನಿಸಿದ ಶರದ್ವನು
ಪರಮಋಷಿಯಾತನು ತಪೋಯುತನಾಗಿ ಧನು ಸಹಿತ
ಇರುತ ಕಂಡನು ದೈವ ಗತಿಯಲಿ
ಸುರವಧುವನಾ ಕ್ಷಣಕೆ ಕಾಮ
ಜ್ವರಿತನಾದನು ಚಲಿಸಿತಾತನ ವೀರ್ಯವವನಿಯಲಿ ॥18॥
೦೧೯ ಅದು ಶರಸ್ತಮ್ಭದಲಿ ...{Loading}...
ಅದು ಶರಸ್ತಂಭದಲಿ ನೆಲೆಯಾ
ದುದು ಮುನಿಚ್ಯುತ ವೀರ್ಯ ಮುನಿಸುತ
ರುದಿಸಿದರು ಶಂತನು ಮಹೀಪತಿ ಕಂಡು ಕೃಪೆಯಿಂದ
ಸದನದಲಿ ತನ್ಮಿಥುನವನು ಸಲ
ಹಿದನು ಕೃಪ ಕೃಪೆಯೆಂಬ ಹೆಸರಾ
ದುದು ಮಹಾ ಬಲನಾದನಾತನ ಕರೆಸಿದನು ಭೀಷ್ಮ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶರದ್ವಂತ ಮುನಿಯಿಂದ ಸ್ಖಲಿತವಾದ ವೀರ್ಯಕ್ಕೆ ಜೊಂಡು ಹುಲ್ಲಿನ ಪೊದೆ ಆಶ್ರಯವಾಯ್ತು. ಅದರಿಂದ ಮಕ್ಕಳು ಜನಿಸಿದರು. ಶಂತನು ಮಹಾರಾಜ ನೋಡಿ ಕೃಪೆಯಿಂದ ಆ ಜೋಡಿ ಮಕ್ಕಳನ್ನು ಅರಮನೆಯಲ್ಲಿ ಕಾಪಾಡಿದನು. ಆ ಮಕ್ಕಳಿಗೆ ಕೃಪ, ಕೃಪೆಯೆಂಬ ಹೆಸರಾಯ್ತು. ಕೃಪನು ಮಹಾಶಕ್ತಿವಂತನಾದನು. ಅವನನ್ನು ಭೀಷ್ಮ ಕರೆಸಿದನು.
ಪದಾರ್ಥ (ಕ.ಗ.ಪ)
ಶರಸ್ತಂಭ-ಜೊಂಡು ಹುಲ್ಲಿನ ಪೊದೆ.
ಮಿಥುನ-ಜೋಡಿ,
ಸದನ-ಮನೆ,
ಮೂಲ ...{Loading}...
ಅದು ಶರಸ್ತಂಭದಲಿ ನೆಲೆಯಾ
ದುದು ಮುನಿಚ್ಯುತ ವೀರ್ಯ ಮುನಿಸುತ
ರುದಿಸಿದರು ಶಂತನು ಮಹೀಪತಿ ಕಂಡು ಕೃಪೆಯಿಂದ
ಸದನದಲಿ ತನ್ಮಿಥುನವನು ಸಲ
ಹಿದನು ಕೃಪ ಕೃಪೆಯೆಂಬ ಹೆಸರಾ
ದುದು ಮಹಾ ಬಲನಾದನಾತನ ಕರೆಸಿದನು ಭೀಷ್ಮ ॥19॥
೦೨೦ ಆ ಕೃಪಾಚಾರಿಯನ ...{Loading}...
ಆ ಕೃಪಾಚಾರಿಯನ ದೆಸೆಯಿಂ
ದೀ ಕುಮಾರರು ನಿಖಿಳ ತರ್ಕ
ವ್ಯಾಕರಣ ಮೊದಲೆನೆ ಚತುರ್ದಶ ವಿದ್ಯಗಳನರಿದು
ಲೋಕ ವೈದಿಕ ಮುಖ್ಯ ಸಕಲ ಕ
ಲಾ ಕುಶಲರಾದರು ಧನುಃಪ್ರವಿ
ವೇಕ ನಿಪುಣರನರಸುತಿದ್ದನು ಮತ್ತೆ ಗಾಂಗೇಯ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮನು ಆ ಕೃಪಾಚಾರ್ಯನನ್ನು ಕರೆಸಿ ಈ ಕುಮಾರರಿಗೆ ವಿದ್ಯೆ ಕಲಿಸಲು ಆಚಾರ್ಯನಾಗಿ ನೇಮಿಸಿದನು. ಆ ಕೃಪಾಚಾರಿಯನ ಕಾರಣದಿಂದ ಈ ಕುಮಾರರು ತರ್ಕ, ವ್ಯಾಕರಣ ಮೊದಲಾಗಿ ಎಲ್ಲಾ ಹದಿನಾಲ್ಕು ವಿದ್ಯೆಗಳನ್ನು ಕಲಿತರು. ಲೌಕಿಕ ವೈದಿಕ ಮುಖ್ಯ ಸಕಲ ಕಲೆಗಳಲ್ಲಿ ಕುಶಲರಾದರು. ಮತ್ತೆ ಭೀಷ್ಮರು ಧನುರ್ವಿದ್ಯಾ ನಿಪುಣರನ್ನು ಹುಡುಕುತ್ತಿದ್ದರು.
ಪದಾರ್ಥ (ಕ.ಗ.ಪ)
ಚತುರ್ದಶ ವಿದ್ಯೆ : 4 ವೇದಗಳು (ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ) 6 ವೇದಾಂಗಗಳು (ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ್ಯ, ಕಲ್ಪ) ಮೀಮಾಂಸೆ, ನ್ಯಾಯ, ಪುರಾಣ, ಧರ್ಮಶಾಸ್ತ್ರ
ಮೂಲ ...{Loading}...
ಆ ಕೃಪಾಚಾರಿಯನ ದೆಸೆಯಿಂ
ದೀ ಕುಮಾರರು ನಿಖಿಳ ತರ್ಕ
ವ್ಯಾಕರಣ ಮೊದಲೆನೆ ಚತುರ್ದಶ ವಿದ್ಯಗಳನರಿದು
ಲೋಕ ವೈದಿಕ ಮುಖ್ಯ ಸಕಲ ಕ
ಲಾ ಕುಶಲರಾದರು ಧನುಃಪ್ರವಿ
ವೇಕ ನಿಪುಣರನರಸುತಿದ್ದನು ಮತ್ತೆ ಗಾಂಗೇಯ ॥20॥
೦೨೧ ಮುನಿ ಭರದ್ವಾಜಾಖ್ಯನಿರ್ದನು ...{Loading}...
ಮುನಿ ಭರದ್ವಾಜಾಖ್ಯನಿರ್ದನು
ಘನ ತಪೋನಿಷ್ಠೆಯಲಿ ದಿವಿಜಾಂ
ಗನೆಯ ಕಂಡನು ಗಾಯವಡೆದನು ಮದನನೆಸುಗೆಯಲಿ
ತನು ಪರಿಚ್ಯುತ ವೀರ್ಯವನು ಸ
ತ್ಕನಕ ಕಲಶದೊಳಿರಿಸಲಲ್ಲಿಯೆ
ಜನಿಸಿದನು ದ್ರೋಣಾಭಿಧಾನನು ಮುನಿಯ ದೆಸೆಯಿಂದ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭರದ್ವಾಜನೆಂಬ ಹೆಸರಿನ ಮುನಿಯು ನಿಷ್ಠೆಯಿಂದ ತೀವ್ರವಾದ ತಪಸ್ಸಿನಲ್ಲಿದ್ದನು. ಆಗ ದೇವತಾಸ್ತ್ರಿಯನ್ನು ಕಂಡು ಮನ್ಮಥನ ಬಾಣಪ್ರಯೋಗದಿಂದ ಗಾಯಗೊಂಡನು. ಶರೀರದಿಂದ ಕೆಳಕ್ಕೆ ಬಿದ್ದ ವೀರ್ಯವನ್ನು ಶ್ರೇಷ್ಠವಾದ ಚಿನ್ನದ ಕಲಶದಲ್ಲಿ ಇರಿಸಲು, ಅದರಲ್ಲಿಯೇ ದ್ರೋಣ ಎಂಬ ಹೆಸರಿನವನು ಭರದ್ವಾಜ ಮುನಿಯ ಕಾರಣದಿಂದ ಜನಿಸಿದನು.
ಪದಾರ್ಥ (ಕ.ಗ.ಪ)
ಆಖ್ಯೆ-ಹೆಸರು,
ಮದನ-ಮನ್ಮಥ,
ಎಸುಗೆ-ಬಾಣಪ್ರಯೋಗ,
ಪರಿಚ್ಯುತ-ಕೆಳಕ್ಕೆ ಬಿದ್ದ,
ಕನಕ-ಚಿನ್ನ,
ಅಭಿದಾನ-ಹೆಸರು
ಟಿಪ್ಪನೀ (ಕ.ಗ.ಪ)
ಭರದ್ವಾಜ - ಉಚಥ್ರ್ಯ ಮುನಿ ಪತ್ನಿಯಾದ ಮಮತೆಯೆಂಬುವಳಲ್ಲಿ ಬೃಹಸ್ಪತ್ಯಾಚಾರ್ಯರಿಂದ ಜನಿಸಿದವನು.
(ಭರದ್ವಾಜ ಶಬ್ದ ನಿರ್ವಚನ ; ದ್ವಿಜ- ಇಬ್ಬರಿಂದ ಹುಟ್ಟಿದವ, ಭರ ; ಪೋಷಿಸಲ್ಪಟ್ಟವ = ಭಾರದ್ವಾಜ )
ಉಚಥ್ಯನ ಪತ್ನಿ ಮಮತೆ ಬೃಹಸ್ಪತಿಯಿಂದ ಗರ್ಭಧಾರಣೆ ಮಾಡಿ ಆ ತರುವಾಯ ತನ್ನ ಪತಿ ತನ್ನನ್ನು ತ್ಯಾಗ ಮಾಡಬಹುದೆಂಬ ಭಯದಿಂದ ಶಿಶುವನ್ನು ತ್ಯಾಗ ಮಾಡಿದಳು. ಬೃಹಸ್ಪತಿಯೂ ಶಿಶುವನ್ನು ಬಿಟ್ಟು ಹೋದ. ಆಗ ಮರುತ್ತರೆಂಬ ದೇವತೆಗಳು ಈ ಶಿಶುವನ್ನು ಪೋಷಿಸಲಾಗಿ ಭರದ್ವಾಜನೆಂಬ ಹೆಸರು ಬಂತು.
ದ್ರೋಣ-ಗಂಗಾ ತೀರದಲ್ಲಿ ತಪಸ್ಸು ಮಾಡುತ್ತಿದ್ದ ಭರದ್ವಾಜನ ನಿಯಮವನ್ನು ಕೆಡಿಸಲು ಬಂದ ಘೃತಾಚಿಯೆಂಬ ಅಪ್ಸರಸಿಯನ್ನು ಕಂಡು ಪರಿಚ್ಯುತವಾದ ಮುನಿಯ ವೀರ್ಯವನ್ನು ದ್ರೋಣ (ದೊನ್ನೆ) ದಲ್ಲಿರಿಸಲಾಗಿ ದ್ರೋಣಾಚಾರ್ಯ ಜನಿಸಿದ. ಈತ ತನ್ನ ಚಿಕ್ಕಪ್ಪ ಅಗ್ನಿವೇಷ ಮಹರ್ಷಿಯಲ್ಲಿಯೇ ಧನುರ್ವಿದ್ಯೆಯನ್ನು ಕಲಿತ. ದ್ರುಪದ ಈತನ ಸಹಪಾಠಿ. ಶರದ್ವಂತನ ಮಗಳಾದ ಕೃಪಿಯೆಂಬಾಕೆಯನ್ನು ಮದುವೆಯಾಗಿ ಅಶ್ವತ್ಥಾಮನೆಂಬ ಪುತ್ರನನ್ನು ಪಡೆದನು.
ಮೂಲ ...{Loading}...
ಮುನಿ ಭರದ್ವಾಜಾಖ್ಯನಿರ್ದನು
ಘನ ತಪೋನಿಷ್ಠೆಯಲಿ ದಿವಿಜಾಂ
ಗನೆಯ ಕಂಡನು ಗಾಯವಡೆದನು ಮದನನೆಸುಗೆಯಲಿ
ತನು ಪರಿಚ್ಯುತ ವೀರ್ಯವನು ಸ
ತ್ಕನಕ ಕಲಶದೊಳಿರಿಸಲಲ್ಲಿಯೆ
ಜನಿಸಿದನು ದ್ರೋಣಾಭಿಧಾನನು ಮುನಿಯ ದೆಸೆಯಿಂದ ॥21॥
೦೨೨ ದ್ರೋಣಕಲಶದೊಳಾದ ದೆಸೆಯಿಂ ...{Loading}...
ದ್ರೋಣಕಲಶದೊಳಾದ ದೆಸೆಯಿಂ
ದ್ರೋಣನಾದನು ಬಳಿಕ ಮುನಿಯಾ
ದ್ರೋಣಗುಪನಯನಾದಿ ವಿಪ್ರಕ್ರಿಯೆಗಳನು ರಚಿಸಿ
ದ್ರೋಣನೊಡನೋದಿಸಿ ನೃಪಾಲ
ಶ್ರೇಣಿಯನು ಶಸ್ತ್ರಾಸ್ತ್ರ ಕಳೆಯಲಿ
ಜಾಣರನು ಮಾಡಿದನು ಭಾರದ್ವಾಜ ಮುನಿಯಂದು ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೊನ್ನೆಯ ಕಲಶದಲ್ಲಿ ಉಂಟಾದ ಕಾರಣ ದ್ರೋಣ ಎಂಬ ಹೆಸರನ್ನು ಪಡೆದನು. ಬಳಿಕ ಭರದ್ವಾಜ ಮುನಿ ಆ ದ್ರೋಣನಿಗೆ ಉಪನಯನ ಮೊದಲಾದ ಬ್ರಾಹ್ಮಣ ಸಂಸ್ಕಾರಗಳನ್ನು ನೆರವೇರಿಸಿ, ಅವನೊಡನೆ ರಾಜರ ಗುಂಪನ್ನು ಶಸ್ತ್ರಾಸ್ತ್ರ ವಿದ್ಯೆಯಲ್ಲಿ ಜಾಣರನ್ನಾಗಿ ಮಾಡಿದನು.
ಪದಾರ್ಥ (ಕ.ಗ.ಪ)
ದ್ರೋಣ-ದೊನ್ನೆ,
ಶ್ರೇಣಿ-ಗುಂಪು,
ಕಳೆ-ವಿದ್ಯೆ
ಮೂಲ ...{Loading}...
ದ್ರೋಣಕಲಶದೊಳಾದ ದೆಸೆಯಿಂ
ದ್ರೋಣನಾದನು ಬಳಿಕ ಮುನಿಯಾ
ದ್ರೋಣಗುಪನಯನಾದಿ ವಿಪ್ರಕ್ರಿಯೆಗಳನು ರಚಿಸಿ
ದ್ರೋಣನೊಡನೋದಿಸಿ ನೃಪಾಲ
ಶ್ರೇಣಿಯನು ಶಸ್ತ್ರಾಸ್ತ್ರ ಕಳೆಯಲಿ
ಜಾಣರನು ಮಾಡಿದನು ಭಾರದ್ವಾಜ ಮುನಿಯಂದು ॥22॥
೦೨೩ ಕೃಪನನುಜೆಯನು ತನ್ದು ...{Loading}...
ಕೃಪನನುಜೆಯನು ತಂದು ದ್ರೋಣಂ
ಗುಪಯಮವ ಮಾಡಿದನು ಹರ್ಷದಿ
ದ್ರುಪದ ಬಂದೀ ದ್ರೋಣನೊಡನರಿದನು ಧನುಶ್ರುತಿಯ
ಕೃಪೆಯಲೀ ದ್ರೋಣಂಗೆ ಜನಿಸಿದ
ನಪರ ಶಂಕರ ರೂಪನಾಹವ
ನಿಪುಣನಶ್ವತ್ಥಾಮ ಭಾರದ್ವಾಜ ಗೋತ್ರದಲಿ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಪನ ತಂಗಿ ಕೃಪೆಯನ್ನು ತಂದು ದ್ರೋಣನಿಗೆ ಮದುವೆಯನ್ನು ಮಾಡಿದನು. ದ್ರುಪದ ಬಂದು ದ್ರೋಣನೊಂದಿಗೆ ಧನುರ್ವೇದವನ್ನು ಕಲಿತನು. ಕೃಪೆಯಲ್ಲಿ ಈ ದ್ರೋಣನಿಗೆ ಶಂಕರನ ಅಪರಾವತಾರವೆನ್ನಿಸಿದ, ಯುದ್ಧದಲ್ಲಿ ನಿಪುಣನಾದ ಅಶ್ವತ್ಥಾಮನು ಭಾರದ್ವಾಜ ಗೋತ್ರದಲ್ಲಿ ಜನಿಸಿದನು.
ಪದಾರ್ಥ (ಕ.ಗ.ಪ)
ಧನುಶ್ರುತಿ-ಧನುರ್ವೇದ, ಉಪಯಮ-ಮದುವೆ
ಟಿಪ್ಪನೀ (ಕ.ಗ.ಪ)
ಕೃಪ-ಕೃಪೆ : ಪಾಂಡವ, ಕೌರವರಿಗೆ ಶಸ್ತ್ರಗುರುವಾಗಿದ್ದ ಕೃಪ ಮುಂದೆ ಅರ್ಜುನನ ಮಗ ಪರೀಕ್ಷಿತ್ ರಾಜನಿಗೂ ಗುರುವಾಗಿದ್ದ. ಈಗನ ತಂಗಿ ಕೃಪೆ. ದ್ರೋಣನ ಕೈ ಹಿಡಿದವಳು. ಕೃಪ-ಕೃಪೆ ಇಬ್ಬರೂ ಗೌತಮನ ಮೊಮ್ಮಕ್ಕಳು. ಮಹರ್ಷಿ ಗೌತಮರ ಮಗ ಶರದ್ವತ. ಈತ ಹುಟ್ಟುವಾಗಲೇ ಬಿಲ್ಲುಬಾಣಗಳ ಸಮೇತ ಹುಟ್ಟಿದ್ದರಿಂದ ಶರದ್ವತನೆಂಬ ಹೆಸರಾಯಿತು. ಈ ಶರದ್ವತನ ಶಸ್ತ್ರ ಪ್ರಾವೀಣ್ಯವನ್ನು ನೋಡಿ ಹೆದರಿದ ದೇವೇಂದ್ರನು ಇವನ ಮನಸ್ಸನ್ನು ಕೆಡಿಸಲು ಜಾನಪದಿ ಎಂಬ ಅಪ್ಸರ ಸ್ತ್ರೀಯನ್ನು ಕಳಿಸಿದ. ಅವಳ ಮೋಹಕ್ಕೆ ಸಿಕ್ಕಬಾರದೆಂದು ಶರದ್ವತ ಅಲ್ಲಿಂದ ಓಡಿದ ನಿಜ. ಆದರೆ ಆ ಸಂದರ್ಭದಲ್ಲಿ ಉದ್ರೇಕಿತನಾಗಿದ್ದರಿಂದ ಅವನ ವೀರ್ಯವು ಬದಿಯಲ್ಲಿದ್ದ ಶರಸ್ತಂಬದ (ಲಾಳದ ಬಾಣದ) ಮೇಲೆ ಬಿದ್ದಿತು. ಇಲ್ಲಿ ಹುಟ್ಟಿದ ಜೋಡಿ ಮಕ್ಕಳನ್ನು ಒಬ್ಬ ಸೈನಿಕನು ಎತ್ತಿಕೊಂಡು ಬಂದು ಶಂತನು ಚಕ್ರವರ್ತಿಗೆ ಒಪ್ಪಿಸಿದ. ಕೃಪೆಯಿಟ್ಟು ಶಂತನು ಈ ಮಕ್ಕಳನ್ನು ಪಾಲಿಸಿದ್ದರಿಂದ ಇವರಿಗೆ ಕೃಪ, ಕೃಪೆ ಎಂಬ ಹೆಸರಾಯಿತು. ತನ್ನ ತಪಶ್ಯಕ್ತಿಯಿಂದ ಇದನ್ನೆಲ್ಲ ತಿಳಿದ ಶರದ್ವತ ಮಕ್ಕಳ ಬಳಿಗೆ ಬಂದ. ರಾಜನಿಗೆ ನಡೆದ ಸಂಗತಿಯನ್ನು ತಿಳಿಸಿದ. ಅನಂತರ ಕೃಪನಿಗೆ ಧನುರ್ವೇದದ ಚತುರಂಗಗಳನ್ನೂ ಇತರ ಶಾಸ್ತ್ರಗಳನ್ನೂ ವಿದ್ಯುಕ್ತವಾಗಿ ಕಲಿಸಿದ. ಹೀಗಾಗಿ ಕೃಪನು ಸ್ವಲ್ಪವೇ ಸಮಯದಲ್ಲಿ ಉತ್ತಮ ಗುರುವಾಗಿ ಮುಂದೆ ಪಾಂಡವರಿಗೆ, ಕೌರವರಿಗೆ, ಯಾದವರಿಗೆ ವೃಷ್ಣಿಗಳಿಗೆ ಶಸ್ತ್ರವಿದ್ಯಾ ಗುರುವಾದ. ಕೃಪನು ಶರದ್ವತನ ಮಗನಾದುದರಿಂದ ಶಾರದ್ವತ ಎಂಬ ಹೆಸರೂ ಆತನಿಗುಂಟು. ಈ ವೀರನ ರಥದ ಧ್ವಜ ಎತ್ತು. ಚಿರಂಜೀವಿಯಾದ ಈತ ಮಹಾಭಾರತ ಯುದ್ಧಾನಂತರವೂ ಬದುಕಿದ್ದು ಅರ್ಜುನನ ಮಗ ಪರೀಕ್ಷಿತ ರಾಜನಿಗೆ ಕೂಡ ಶಸ್ತ್ರಗುರುವಾಗಿದ್ದನು. ಕೊನೆಗೆ ಜೀವನದಲ್ಲಿ ವೈರಾಗ್ಯ ಹೊಂದಿ ಕಾಡಿನಲ್ಲಿ ತಪಸ್ವಿಯಾಗಿ ಕಾಲ ಕಳೆದು ತೀರಿಕೊಂಡ. ಮಹಾಭಾರತ ಯುದ್ಧದಲ್ಲಿ ಹಲವಾರು ಬಾರಿ ಕಾದಾಡಿದ ಈಗ ಅಶ್ವತ್ಥಾಮನ ಜೊತೆ ಸೇರಿ ಯುದ್ಧದ ಹದಿನೆಚಿಟನೆಯ ರಾತ್ರಿ ಪಾಂಡವ ಸೇನೆಯನ್ನು ಕೊಲ್ಲುವ ಭೀಕರ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದ ಮಹಾವೀರನಾಗಿದ್ದರೂ ಕೌರವನಂಥ ದುಷ್ಟನ ಪಕ್ಷದಲ್ಲಿದ್ದುದರಿಂದ ಕೃಪನ ಸತ್ವ ಹಾಳಾಯಿತು.
ಮೂಲ ...{Loading}...
ಕೃಪನನುಜೆಯನು ತಂದು ದ್ರೋಣಂ
ಗುಪಯಮವ ಮಾಡಿದನು ಹರ್ಷದಿ
ದ್ರುಪದ ಬಂದೀ ದ್ರೋಣನೊಡನರಿದನು ಧನುಶ್ರುತಿಯ
ಕೃಪೆಯಲೀ ದ್ರೋಣಂಗೆ ಜನಿಸಿದ
ನಪರ ಶಂಕರ ರೂಪನಾಹವ
ನಿಪುಣನಶ್ವತ್ಥಾಮ ಭಾರದ್ವಾಜ ಗೋತ್ರದಲಿ ॥23॥
೦೨೪ ತನ್ದೆಯೊಳ್ ಶ್ರಮ ...{Loading}...
ತಂದೆಯೊಳ್ ಶ್ರಮ ಮಾಡಿದರು ನೃಪ
ವೃಂದಸಹಿತೀ ದ್ರೋಣ ದ್ರುಪದರು
ನಿಂದನಾ ದೃಪದಾಖ್ಯನಯ್ಯನು ದಿವಿಜ ನಗರಿಯಲಿ
ಅಂದು ಸಖ್ಯಪ್ರೀತಿಯನು ಸಾ
ನಂದದಲಿ ದ್ರೋಣಂಗೆ ವಿರಚಿಸಿ
ಬಂದು ನಿಜ ರಾಜ್ಯಾಭಿಷೇಕವ ಧರಿಸಿದನು ದ್ರುಪದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಂದೆ ಭರದ್ವಾಜರಲ್ಲಿ ರಾಜಪುತ್ರರ ಸಮೂಹದೊಂದಿಗೆ ಈ ದ್ರೋಣ ದ್ರುಪದರು ಶಸ್ತ್ರಾಭ್ಯಾಸ ಮಾಡಿದರು. ಕಾಲಕ್ರಮದಲ್ಲಿ ದ್ರುಪದನ ತಂದೆ ಸ್ವರ್ಗವಾಸಿಯಾದನು. ಆಗ ದ್ರುಪದನು ದ್ರೋಣನಿಗೆ ಸ್ನೇಹ ಪ್ರೀತಿಯನ್ನು ಸಂತೋಷದಿಂದ ವ್ಯಕ್ತಪಡಿಸಿ ತನ್ನ ನಾಡಿಗೆ ಬಂದು ಪಟ್ಟಾಭಿಷೇಕಮಾಡಿಕೊಂಡು ರಾಜ್ಯಭಾರವನ್ನು ಹೊತ್ತನು.
ಪದಾರ್ಥ (ಕ.ಗ.ಪ)
ಶ್ರಮ-ಶಸ್ತ್ರಾಭ್ಯಾಸ,
ದಿವಿಜನಗರಿ-ಸ್ವರ್ಗ,
ಸಾನಂದ-ಸಂತೋಷ,
ಧರಿಸು-ಹೊರು
ಪಾಠಾನ್ತರ (ಕ.ಗ.ಪ)
ರಾಜ್ಯಾಭಿಷೇಕವನು - ರಾಜ್ಯಾಭಿಷೇಕವ - ಆದಿಪರ್ವ, ಮೈ.ವಿ.ವಿ. - ಡಾ.ಕೆ.ಆರ್. ಶೇಷಗಿರಿ
ಟಿಪ್ಪನೀ (ಕ.ಗ.ಪ)
ದ್ರುಪದ-ಪಾಂಚಾಲ ದೇಶದ ಅರಸು, ಯಜ್ಞಸೇನನೆಂಬುದು ಈತನ ನಾಮಾಂತರ. ಸೋಮಕ ವಂಶದ ಪೃಷದನೆಂಬ ಅರಸು ತಪೋನಿರತನಾಗಿದ್ದಾಗ ಆತನ ನಿಯಮವನ್ನು ಭಂಗಗೊಳಿಸಲು ಅಲ್ಲಿಗೆ ಬಂದ ಮೇನಕೆಯನ್ನು ಕಂಡು ಪೃಷದ ಎದೆಗುಂದಿದ. ಆಗ ಗಂಡು ಶಿಶು ಜನಿಸಿತು. ಪೃಷದ ಆ ಶಿಶುವನ್ನು ಒಂದು ಮರದ ಬುಡದಲ್ಲಿರಿಸಿ ಅರಸು ತಪಸ್ಸಿಗೆ ಬೇರೊಂದು ಕಡೆಗೆ ಹೋದ. ಅಷ್ಟರಲ್ಲಿ ಭರದ್ವಾಜ ಮುನಿಯ ತಮ್ಮನಾದ ಅಗ್ನಿವೇಶ್ಯ ಮಹರ್ಷಿ ಈ ಶಿಶುವನ್ನು ಕಂಡು ಕನಿಕರದಿಂದ ತನ್ನ ಆಶ್ರಮಕ್ಕೆ ತಂದು ಮರದ ಬುಡದಲ್ಲಿ ದೊರೆತವನಾದುದರಿಂದ ದ್ರುಪದನೆಂದು ಹೆಸರಿಟ್ಟು ಕಾಪಾಡಿದನು. ತನ್ನ ಅಣ್ಣನ ಮಗನಾದ ದ್ರೋಣಾಚಾರ್ಯನ ಸಂಗಡ ಈತನಿಗೂ ಧರ್ನುವಿದ್ಯೆಯನ್ನು ಕಲಿಸಿದ. ಪೃಷದನ ತರುವಾಯ ರಾಜ್ಯಾಭಿಷಿಕ್ತನಾದ.
ಮೂಲ ...{Loading}...
ತಂದೆಯೊಳ್ ಶ್ರಮ ಮಾಡಿದರು ನೃಪ
ವೃಂದಸಹಿತೀ ದ್ರೋಣ ದ್ರುಪದರು
ನಿಂದನಾ ದೃಪದಾಖ್ಯನಯ್ಯನು ದಿವಿಜ ನಗರಿಯಲಿ
ಅಂದು ಸಖ್ಯಪ್ರೀತಿಯನು ಸಾ
ನಂದದಲಿ ದ್ರೋಣಂಗೆ ವಿರಚಿಸಿ
ಬಂದು ನಿಜ ರಾಜ್ಯಾಭಿಷೇಕವ ಧರಿಸಿದನು ದ್ರುಪದ ॥24॥
೦೨೫ ಇತ್ತಲೀ ದ್ರೋಣನ ...{Loading}...
ಇತ್ತಲೀ ದ್ರೋಣನ ಪಿತನು ಸುರ
ರತ್ತ ಸರಿದನು ಕೆಲವು ದಿವಸಕೆ
ತತ್ತಪೋವನದಲ್ಲಿ ವಿಪ್ರ ಕ್ರಿಯೆಗಳನು ಮಾಡಿ
ಹೊತ್ತ ದಾರಿದ್ರ್ಯದಲಿ ಮನಮರು
ಗುತ್ತ ದೇಶಾಂತರದೊಳಗೆ ತೊಳ
ಲುತ್ತ ಬಂದನು ತನ್ನ ಮಗ ಸಹಿತಡವಿಯಲಿ ದ್ರೋಣ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇತ್ತ ಕಡೆ ಕೆಲವು ದಿವಸಕ್ಕೆ ದ್ರೋಣನ ತಂದೆಯೂ ದೇವತೆಗಳತ್ತ ಸರಿದನು. ಆ ತಪೋವನದಲ್ಲಿ ಬ್ರಾಹ್ಮಣೋಚಿತವಾದ ಕರ್ಮಗಳನ್ನು ಮಾಡಿ ಬಡತನವನ್ನು ಹೊತ್ತು ಮನಸ್ಸಿನಲ್ಲಿ ಮರುಗುತ್ತ, ಪರದೇಶಗಳಲ್ಲಿ ಅಲೆದಾಡುತ್ತ ತನ್ನ ಮಗನೊಂದಿಗೆ ದ್ರೋಣನು ಕಾಡಿನಲ್ಲಿ ಬಂದನು.
ಪದಾರ್ಥ (ಕ.ಗ.ಪ)
ದಾರಿದ್ರ್ಯ-ಬಡತನ,
ದೇಶಾಂತರ-ಪರದೇಶ,
ತೊಳಲು-ಅಲೆದಾಡು,
ಅಡವಿ-ಕಾಡು
ಮೂಲ ...{Loading}...
ಇತ್ತಲೀ ದ್ರೋಣನ ಪಿತನು ಸುರ
ರತ್ತ ಸರಿದನು ಕೆಲವು ದಿವಸಕೆ
ತತ್ತಪೋವನದಲ್ಲಿ ವಿಪ್ರ ಕ್ರಿಯೆಗಳನು ಮಾಡಿ
ಹೊತ್ತ ದಾರಿದ್ರ್ಯದಲಿ ಮನಮರು
ಗುತ್ತ ದೇಶಾಂತರದೊಳಗೆ ತೊಳ
ಲುತ್ತ ಬಂದನು ತನ್ನ ಮಗ ಸಹಿತಡವಿಯಲಿ ದ್ರೋಣ ॥25॥
೦೨೬ ಪರಶುರಾಮಾಶ್ರಮಕೆ ಮುನಿಯೈ ...{Loading}...
ಪರಶುರಾಮಾಶ್ರಮಕೆ ಮುನಿಯೈ
ತರಲು ಭಾರದ್ವಾಜನನು ಸ
ತ್ಕರಿಸಿ ನುಡಿದನು ಜಾಮದಗ್ನ್ಯನು ಮಧುರ ವಚನದಲಿ
ಧರೆಯನಿತ್ತೆನು ದ್ವಿಜರಿಗೀಯವ
ಸರದೊಳಾ ನಿರ್ಧನನು ನೀನೇ
ಪರಮ ಋಷಿಯಾತಿಥ್ಯ ಪೂಜೆಗಭಾಗ್ಯ ನಾನೆಂದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಡಿನಲ್ಲಿ ಬರುತ್ತ, ಹಾಗೆಯೇ ಪರಶುರಾಮರ ಆಶ್ರಮಕ್ಕೆ ಮುನಿಯು ಬರಲು ಭರದ್ವಾಜಪುತ್ರನಾದ ದ್ರೋಣನನ್ನು ಜಮದಗ್ನಿಪುತ್ರನಾದ ಪರಶುರಾಮನು ಗೌರವಿಸಿ ಇನಿದಾದ ಮಾತುಗಳಿಂದ ಹೇಳಿದನು - “ಭೂಮಿಯನ್ನು ಬ್ರಾಹ್ಮಣರಿಗೆ ಕೊಟ್ಟೆನು. ಈ ಸಂದರ್ಭದಲ್ಲಿ ಧನವಿಲ್ಲದವನಾಗಿದ್ದೇನೆ. ನೀನು ಪರಮಋಷಿ. ಆತಿಥ್ಯ ಪೂಜೆಗೆ ನಾನು ಅಭಾಗ್ಯನಾಗಿದ್ದೇನೆ”
ಪದಾರ್ಥ (ಕ.ಗ.ಪ)
ಸತ್ಕರಿಸು-ಗೌರವಿಸು, ಮಧುರ-ಇನಿದು
ಟಿಪ್ಪನೀ (ಕ.ಗ.ಪ)
ಜಮದಗ್ನಿ - ಋಷಿಕುಮಾರರಾಗಿದ್ದರೂ ಕ್ಷಾತ್ರ ತಾಮಸದಿಂದ ಮೆರೆಯುವ ಜನರಿದ್ದಾರೆ. ಅಂಥವರಲ್ಲಿ ಜಮದಗ್ನಿ ಒಬ. ಎಲ್ಲ ಪುರಾಣಗಳಲ್ಲೂ ಈತನ ವಿಚಾರ ಬರುತ್ತದಾದರೂ ಮಹಾಭಾರತದ ಶಾಚಿತಿಪರ್ವದ ನಲವತ್ತೊಂಬತ್ತನೆಯ ಅಧ್ಯಾಯದಲ್ಲಿ ಈತನ ಬಗೆಗ ಇರುವ ವಿಷಯಗಳನ್ನು U್ಪಮನಿಸಿದರೆ ಸಾಕು.
ಮೂಲ ...{Loading}...
ಪರಶುರಾಮಾಶ್ರಮಕೆ ಮುನಿಯೈ
ತರಲು ಭಾರದ್ವಾಜನನು ಸ
ತ್ಕರಿಸಿ ನುಡಿದನು ಜಾಮದಗ್ನ್ಯನು ಮಧುರ ವಚನದಲಿ
ಧರೆಯನಿತ್ತೆನು ದ್ವಿಜರಿಗೀಯವ
ಸರದೊಳಾ ನಿರ್ಧನನು ನೀನೇ
ಪರಮ ಋಷಿಯಾತಿಥ್ಯ ಪೂಜೆಗಭಾಗ್ಯ ನಾನೆಂದ ॥26॥
೦೨೭ ಧನರಹಿತ ನಾ ...{Loading}...
ಧನರಹಿತ ನಾ ಹೊತ್ತ ಭಾರಿಯ
ಧನುವಿದೊಂದಿದೆ ದಿವ್ಯಶರವಿದೆ
ಮನಕೆ ಬಂದುದ ವರಿಸು ನೀನೆನೆ ದ್ರೋಣ ನಸುನಗುತ
ಎನಗೆ ನಿಮ್ಮಡಿಗಳ ಕೃಪಾಲೋ
ಕನವಲೇ ಪರಿಯಾಪ್ತಿ ಲೋಕದ
ಜನ ಮನೋರಂಜನವೆ ಬೇಹುದು ಶರವ ಕೊಡಿಯೆಂದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧನಹೀನನಾದ ನನ್ನಲ್ಲಿ ಇದೊಂದು ಮಹತ್ವದ ಧನುಸ್ಸಿದೆ. ದಿವ್ಯವಾದ ಅಸ್ತ್ರಗಳಿವೆ. ನಿನ್ನ ಮನಸ್ಸಿಗೆ ಬಂದುದನ್ನು ಸ್ವೀಕರಿಸು ಎಂದು ಪರಶುರಾಮರು ಹೇಳಲು, ದ್ರೋಣನು ನಸುನಗುತ್ತ ನನಗೆ ನಿಮ್ಮ ಪಾದಗಳ ಕೃಪೆಯ ನೋಟವೇ ಉದ್ದೇಶ. ಲೋಕದ ಜನ ಮನರಂಜನವೇ ಬೇಕು(ಲೌಕಿಕ ದೃಷ್ಟಿಯಿಂz); ಅಸ್ತ್ರವನ್ನು ಕೊಡಿ ಎಂದು ಕೇಳಿದ.
ಪದಾರ್ಥ (ಕ.ಗ.ಪ)
ಭಾರಿ-ಮಹತ್ತ್ವ,
ಶರ-ಅಸ್ತ್ರ,
ವರಿಸು-ಸ್ವೀಕರಿಸು,
ಪರಿಯಾಪ್ತಿ-ಉದ್ದೇಶ
ಮೂಲ ...{Loading}...
ಧನರಹಿತ ನಾ ಹೊತ್ತ ಭಾರಿಯ
ಧನುವಿದೊಂದಿದೆ ದಿವ್ಯಶರವಿದೆ
ಮನಕೆ ಬಂದುದ ವರಿಸು ನೀನೆನೆ ದ್ರೋಣ ನಸುನಗುತ
ಎನಗೆ ನಿಮ್ಮಡಿಗಳ ಕೃಪಾಲೋ
ಕನವಲೇ ಪರಿಯಾಪ್ತಿ ಲೋಕದ
ಜನ ಮನೋರಂಜನವೆ ಬೇಹುದು ಶರವ ಕೊಡಿಯೆಂದ ॥27॥
೦೨೮ ಇವು ಮಹಾ ...{Loading}...
ಇವು ಮಹಾ ನಿಸ್ಸೀಮತರ ವೈ
ಷ್ಣವವಲೇ ದಿವ್ಯಾಸ್ತ್ರ ನಿವಹವ
ನವರು ಕೊಟ್ಟರು ಕೊಂಡನುಚಿತ ವಿಧಾನದಲಿ ದ್ರೋಣ
ಇವು ಮಹಾರಣರಂಗದಲಿ ಶಾ
ತ್ರವ ನಿವಾರಣವೈಸಲೆಮ್ಮೀ
ವ್ಯವಹೃತಿಗೆ ತಾನೇನುಪಾಯವೆನುತ್ತ ಚಿಂತಿಸಿದ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇವು ಮಹತ್ವದ ಅಸಮಾನವಾದ ವೈಷ್ಣವಾಸ್ತ್ರಗಳಲ್ಲವೇ " ಎಂದು ಆ ದಿವ್ಯವಾದ ಅಸ್ತ್ರಗಳ ಸಮೂಹವನ್ನು ಪರಶುರಾಮರು ಕೊಟ್ಟರು. ದ್ರೋಣನು ಯೋಗ್ಯ ಕ್ರಮದಲ್ಲಿ ತೆಗೆದುಕೊಂಡನು. ಇವು ಮಹಾರಣರಂಗದಲ್ಲಿ ಶತ್ರು ಸಮೂಹವನ್ನು ತೊಲಗಿಸುವುದು. ತನ್ನ ಜೀವನಕ್ಕೆ ಮುಂದೇನು ಉಪಾಯವೆನುತ್ತ ದ್ರೋಣ ಚಿಂತಿಸಿದನು.
ಪದಾರ್ಥ (ಕ.ಗ.ಪ)
ನಿಸ್ಸೀಮ-ಅಸಮಾನ,
ಉಚಿತ-ಯೋಗ್ಯ,
ವಿಧಾನ-ಕ್ರಮ,
ಶಾತ್ರವ-ಶತ್ರುಸಮೂಹ,
ನಿವಾರಣ-ನಾಶ
ವ್ಯವಹೃತಿ-ಉದ್ಯೋಗ
ಮೂಲ ...{Loading}...
ಇವು ಮಹಾ ನಿಸ್ಸೀಮತರ ವೈ
ಷ್ಣವವಲೇ ದಿವ್ಯಾಸ್ತ್ರ ನಿವಹವ
ನವರು ಕೊಟ್ಟರು ಕೊಂಡನುಚಿತ ವಿಧಾನದಲಿ ದ್ರೋಣ
ಇವು ಮಹಾರಣರಂಗದಲಿ ಶಾ
ತ್ರವ ನಿವಾರಣವೈಸಲೆಮ್ಮೀ
ವ್ಯವಹೃತಿಗೆ ತಾನೇನುಪಾಯವೆನುತ್ತ ಚಿಂತಿಸಿದ ॥28॥
೦೨೯ ಮಗನೆ ಬಲ್ಲೈ ...{Loading}...
ಮಗನೆ ಬಲ್ಲೈ ದ್ರುಪದ ಭೂಪತಿ
ಮಗುವುತನದಿಂದೆಮ್ಮ ಸಖನೋ
ಲಗಿಸುವೆವು ನಾವಲ್ಲಿ ಸಲಹನೆ ಮಿತ್ರ ಭಾವದಲಿ
ಹೊಗುವ ನಡೆ ಪಾಂಚಾಲರಾಯನ
ನಗರಿಯನು ನಾವೆಂದು ಮುನಿ ಮೌ
ಳಿಗಳ ಮಣಿಯನು ಬೀಳು ಕೊಂಡನು ರೇಣುಕಾ ಸುತನ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮಗನೇ ಬಲ್ಲೆಯಾ ? ದ್ರುಪದ ಮಹಾರಾಜ ಬಾಲ್ಯದಿಂದಲೂ ನಮ್ಮ ಮಿತ್ರನು. ನಾವು ಅಲ್ಲಿ ಅವನನ್ನು ಸೇವೆ ಮಾಡುವೆವು. ಸ್ನೇಹ ಭಾವದಿಂದ ಕಾಪಾಡದಿರುತ್ತಾನೆಯೇ ? ನಾವು ಪಾಂಚಾಲರಾಜನ ನಗರವನ್ನು ಪ್ರವೇಶಿಸೋಣ, ನಡೆ” ಎಂದು ದ್ರೋಣನು ಅಶ್ವತ್ಥಾಮನಿಗೆ ಹೇಳಿ ಮುನಿಮೌಳಿಗಳ ಮಣಿಯಾದ, ರೇಣುಕೆಯ ಮಗನಾದ ಪರಶುರಾಮನನ್ನು ಬೀಳುಕೊಂಡನು.
ಪದಾರ್ಥ (ಕ.ಗ.ಪ)
ಮಗುವುತನ-ಬಾಲ್ಯ,
ಓಲಗಿಸು-ಸೇವೆ ಮಾಡು
ಮೂಲ ...{Loading}...
ಮಗನೆ ಬಲ್ಲೈ ದ್ರುಪದ ಭೂಪತಿ
ಮಗುವುತನದಿಂದೆಮ್ಮ ಸಖನೋ
ಲಗಿಸುವೆವು ನಾವಲ್ಲಿ ಸಲಹನೆ ಮಿತ್ರ ಭಾವದಲಿ
ಹೊಗುವ ನಡೆ ಪಾಂಚಾಲರಾಯನ
ನಗರಿಯನು ನಾವೆಂದು ಮುನಿ ಮೌ
ಳಿಗಳ ಮಣಿಯನು ಬೀಳು ಕೊಂಡನು ರೇಣುಕಾ ಸುತನ ॥29॥
೦೩೦ ಬನ್ದನೀತನು ದ್ರುಪದ ...{Loading}...
ಬಂದನೀತನು ದ್ರುಪದ ರಾಯನ
ಮಂದಿರಕೆಯಾ ಬಾಗಿಲವನೊಡ
ನೆಂದನೆಲವೋ ನಾವು ನಿಮ್ಮರಸಂಗೆ ಪೂರ್ವದಲಿ
ಸಂದ ಮಿತ್ರರು ದ್ರೋಣಮುನಿಪತಿ
ಯೆಂದು ನಮ್ಮಭಿಧಾನ ನೀ ಹೇ
ಳೆಂದು ಕಳುಹಲು ಬಂದು ಬಿನ್ನಹ ಮಾಡಿದನು ಹದನ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣನು ದ್ರುಪದ ಮಹಾರಾಜನ ಅರಮನೆಗೆ ಬಂದನು. ಬಾಗಿಲು ಕಾಯುವವನೊಡನೆ “ಎಲವೋ ನಾವು ನಿಮ್ಮ ಅರಸನಿಗೆ ಹಿಂದಿನ ಪ್ರಖ್ಯಾತ ಸ್ನೇಹಿತರು. ದ್ರೋಣ ಮುನಿಪತಿ ಎಂದು ನಮ್ಮ ಹೆಸರು. ನೀನು ನಿಮ್ಮ ರಾಜನಿಗೆ ಹೇಳು” ಎಂದು ಹೇಳಿ ಕಳುಹಲು ಅವನು ರಾಜನ ಬಳಿ ಬಂದು ದ್ರೋಣರು ಹೇಳಿದ ವೃತ್ತಾಂತವನ್ನು ಅರಿಕೆ ಮಾಡಿದನು.
ಪದಾರ್ಥ (ಕ.ಗ.ಪ)
ಸಂದ-ಪ್ರಖ್ಯಾತ,
ಬಿನ್ನಹ-ಅರಿಕೆ,
ಹದನು-ವೃತ್ತಾಂತ
ಮೂಲ ...{Loading}...
ಬಂದನೀತನು ದ್ರುಪದ ರಾಯನ
ಮಂದಿರಕೆಯಾ ಬಾಗಿಲವನೊಡ
ನೆಂದನೆಲವೋ ನಾವು ನಿಮ್ಮರಸಂಗೆ ಪೂರ್ವದಲಿ
ಸಂದ ಮಿತ್ರರು ದ್ರೋಣಮುನಿಪತಿ
ಯೆಂದು ನಮ್ಮಭಿಧಾನ ನೀ ಹೇ
ಳೆಂದು ಕಳುಹಲು ಬಂದು ಬಿನ್ನಹ ಮಾಡಿದನು ಹದನ ॥30॥
೦೩೧ ಸಿರಿಯ ಮದವಧಿಕ ...{Loading}...
ಸಿರಿಯ ಮದವಧಿಕ ಪ್ರತಾಪೋ
ತ್ಕರದ ಮದ ಮೊದಲಾದ ಮದ ಸಂ
ಚರಣ ರಜದಲಿ ಮಾಸಿತೀತನ ಮನದ ಮಡಿ ವರ್ಗ
ತಿರಿವ ಹಾರುವರೊಡನೆ ಭೂಮೀ
ಶ್ವರರಿಗೆತ್ತಣ ಮೈತ್ರಿ ಹೋಗಲಿ
ಕರೆಯ ಬೇಡೆನೆ ಬಂದು ಬಾಗಿಲಲವ ನಿವಾರಿಸಿದ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೆಚ್ಚಿನ ಸಿರಿಯ ಮದ, ಅಧಿಕ ಪ್ರತಾಪದ ಮದ ಮೊದಲಾದ ಮದಗಳ ದೋಷದಲ್ಲಿ ದ್ರುಪದನ ಮನಸ್ಸಿನ ಪವಿತ್ರತೆ ಮಲಿನಗೊಂಡಿತು. ಭಿಕ್ಷೆ ಬೇಡುವ ಬ್ರಾಹ್ಮಣರೊಡನೆ ಧರಣಿಪತಿಗಳಿಗೆ ಎಲ್ಲಿಯ ಸ್ನೇಹ, ಹೋಗಲಿ ಕರೆಯಬೇಡ ಎಂದು ದ್ರುಪದನು ಹೇಳಲು ಬಾಗಿಲು ಕಾಯುವವನು ಬಂದು ಬಾಗಿಲಲ್ಲಿದ್ದ ದ್ರೋಣ, ಅಶ್ವತ್ತಾಮರನ್ನು ತಡೆದನು.
ಪದಾರ್ಥ (ಕ.ಗ.ಪ)
ಉತ್ಕರ-ಅಧಿಕ,
ಸಂಚರಣೆ-ಅನುಷ್ಠಾನಮಾಡು,
ರಜ-ದೋಷ,
ಮಾಸು-ಮಲಿನ,
ಮಡಿ-ಪವಿತ್ರ,
ತಿರಿವ-ಭಿಕ್ಷೆ ಬೇಡುವ,
ಹಾರುವ-ಬ್ರಾಹ್ಮಣ,
ಮೈತ್ರಿ-ಸ್ನೇಹ,
ನಿವಾರಿಸು-ತಡೆ
ಮೂಲ ...{Loading}...
ಸಿರಿಯ ಮದವಧಿಕ ಪ್ರತಾಪೋ
ತ್ಕರದ ಮದ ಮೊದಲಾದ ಮದ ಸಂ
ಚರಣ ರಜದಲಿ ಮಾಸಿತೀತನ ಮನದ ಮಡಿ ವರ್ಗ
ತಿರಿವ ಹಾರುವರೊಡನೆ ಭೂಮೀ
ಶ್ವರರಿಗೆತ್ತಣ ಮೈತ್ರಿ ಹೋಗಲಿ
ಕರೆಯ ಬೇಡೆನೆ ಬಂದು ಬಾಗಿಲಲವ ನಿವಾರಿಸಿದ ॥31॥
೦೩೨ ಮರೆದನೇ ತಪ್ಪೇನು ...{Loading}...
ಮರೆದನೇ ತಪ್ಪೇನು ನಾ ಕಂ
ಡರುಹಿ ಮರಳುವೆವೈಸಲೇಯೆನು
ತುರುಬಿದರೆ ತರುಬಿದರು ಕಂಬಿಯನಿಕ್ಕಿ ಬಾಗಿಲಲಿ
ಒರೆಯನುಗುಳಿಚಿ ಖಡ್ಗದಲಿ ಬಿಡ
ದರಿದನಿಕ್ಕೆಲದವರನೋಲಗ
ಕುರವಣಿಸಿದನು ಮುಂದೆ ನಿಂದನು ದ್ರುಪದ ಭೂಪತಿಯ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮರೆತನೇ ? ತಪ್ಪೇನು ? ನಾನು ನೋಡಿ ತಿಳಿಸಿ ಹಿಂದಿರುಗುತ್ತೇನೆ” ಎಂದು ರಭಸದಿಂದ ಒಳನುಗ್ಗಿದರೆ, ಬಾಗಿಲಲಿ ಕೋಲನ್ನು ಅಡ್ಡ ಹಾಕಿ ತಡೆದರು. ಆಗ ದ್ರೋಣನು ಒರೆಯಿಂದ ಖಡ್ಗವನ್ನು ಸೆಳೆದು, ಎರಡೂ ಮಗ್ಗುಲಲ್ಲಿದ್ದವರನ್ನು ಬಿಡದೆ ಕಡಿದುಹಾಕಿ ದಾರಿ ಬಿಡಿಸಿಕೊಂಡು ರಾಜಸಭೆಗೆ ವೇಗದಿಂದ ಮುಂದುವರಿದು ಹೋಗಿ ದ್ರುಪದ ಭೂಪತಿಯ ಮುಂದೆ ನಿಂತುಕೊಂಡನು.
ಪದಾರ್ಥ (ಕ.ಗ.ಪ)
ಉರುಬು-ರಭಸದಿಂದ ನುಗ್ಗು,
ತರುಬು-ತಡೆ,
ಒಡ್ಡೋಲಗ-ರಾಜಸಭೆ,
ಉರವಣಿಸು-ವೇಗದಿಂದ ಮುಂದುವರಿದು ಹೋಗು
ಮೂಲ ...{Loading}...
ಮರೆದನೇ ತಪ್ಪೇನು ನಾ ಕಂ
ಡರುಹಿ ಮರಳುವೆವೈಸಲೇಯೆನು
ತುರುಬಿದರೆ ತರುಬಿದರು ಕಂಬಿಯನಿಕ್ಕಿ ಬಾಗಿಲಲಿ
ಒರೆಯನುಗುಳಿಚಿ ಖಡ್ಗದಲಿ ಬಿಡ
ದರಿದನಿಕ್ಕೆಲದವರನೋಲಗ
ಕುರವಣಿಸಿದನು ಮುಂದೆ ನಿಂದನು ದ್ರುಪದ ಭೂಪತಿಯ ॥32॥
೦೩೩ ಏನೆಲವೊ ಪಾಞ್ಚಾಲ ...{Loading}...
ಏನೆಲವೊ ಪಾಂಚಾಲ ಚಿಕ್ಕಂ
ದಾನು ನೀನೊಂದಾಗಿ ತಂದೆಯೊ
ಳೇನನರಿದೆವು ಮರೆದು ಕಳೆದಾ ಹಾ ಮಹಾದೇವ
ಏನು ಬಂದಿರಿಯೆಂಬ ಗುಣವಚ
ನಾನುರಾಗವು ಸಾಲದೇ ಧನ
ವೇನು ಫಲ ಕಕ್ಕುಲಿತೆಯೆಮಗಿಲ್ಲೆಂದನಾ ದ್ರೋಣ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಏನೆಲವೋ, ಪಾಂಚಾಲ ಬಾಲ್ಯದಲ್ಲಿ ನಾನೂ ನೀನೂ ಒಂದಾಗಿ ನಮ್ಮ ತಂದೆಯಲ್ಲಿ ಏನನ್ನು ತಿಳಿದೆವು ಎಂಬುದನ್ನು ಮರೆತುಬಿಟ್ಟೆಯಾ ? ಹಾ. ಮಹಾದೇವ ! ಏನು ಬಂದಿರಿ ? ಎಂದು ವಿಚಾರಿಸುವ ಪ್ರೀತಿಯ ಮಾತುಗಳ ಗುಣ ಸಾಲದಿತ್ತೇ ? ಧನದಿಂದೇನು ಫಲ ? ನಿನ್ನ ಮೇಲೆ ನಮಗೆ ಪ್ರೀತಿ ಇಲ್ಲ” ಎಂದು ದ್ರೋಣನು ಹೇಳಿದನು.
ಪದಾರ್ಥ (ಕ.ಗ.ಪ)
ವಚನಾನುರಾಗ-ಪ್ರೀತಿಯ ಮಾತುಗಳು,
ಕಕ್ಕುಲಿತೆ-ಪ್ರೀತಿ
ಟಿಪ್ಪನೀ (ಕ.ಗ.ಪ)
ಈ ಪದ್ಯದಲ್ಲಿ ಕುಮಾರವ್ಯಾಸನಿಗೆ ಬಸವಣ್ಣನವರ ವಚನಗಳ ಪರಿಚಯ ಇತ್ತೆಂಬುದು ವ್ಯಕ್ತವಾಗುತ್ತದೆ.
“ಏನು ಬಂದಿರಿ ಹದುಳವಿದ್ದಿರಿ ಎಂದರೆ ನಿಮ್ಮ ಐಸಿರಿ ಹಾರಿ ಹೋಹುದೆ?” ಎಂಬ ವಚನವನ್ನು ನೆಪಿಸಿಕೊಳ್ಳಬಹುದು. ಇಲ್ಲಿ ಕುಮಾರವ್ಯಾಸ ವಚನಾನುರಾಗ ಎಂದಿರುವುದೂ, ಧನವೇನು ಫಲ ಎಂದಿರುವುದೂ ಗಮನರ್ಹ.
ಮೂಲ ...{Loading}...
ಏನೆಲವೊ ಪಾಂಚಾಲ ಚಿಕ್ಕಂ
ದಾನು ನೀನೊಂದಾಗಿ ತಂದೆಯೊ
ಳೇನನರಿದೆವು ಮರೆದು ಕಳೆದಾ ಹಾ ಮಹಾದೇವ
ಏನು ಬಂದಿರಿಯೆಂಬ ಗುಣವಚ
ನಾನುರಾಗವು ಸಾಲದೇ ಧನ
ವೇನು ಫಲ ಕಕ್ಕುಲಿತೆಯೆಮಗಿಲ್ಲೆಂದನಾ ದ್ರೋಣ ॥33॥
೦೩೪ ಸೂರಿಗಳಿಗತಿ ಮೂರ್ಖರಿಗೆ ...{Loading}...
ಸೂರಿಗಳಿಗತಿ ಮೂರ್ಖರಿಗೆ ಗಂ
ಭೀರರಿಗೆ ಭಂಡರಿಗೆ ವೇದಾ
ಚಾರ ಸಂಯುಕ್ತರಿಗನಾಚಾರ ಪ್ರಸಕ್ತರಿಗೆ
ಧೀರರಿಗೆ ಹಂದೆಗಳಿಗೆತ್ತ್ತಣ
ಸೇರುವೆಗಳೈ ಭೂಪರಿಗೆ ಬಡ
ಹಾರುವರಿಗೆತ್ತಣದು ಸಖತನವೆಂದನಾ ದ್ರುಪದ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ದ್ರುಪದನು, ಪಂಡಿತರಿಗೆ ಮತ್ತು ಅತಿಮೂರ್ಖರಿಗೆ, ಪ್ರೌಢರಿಗೆ ಮತ್ತು ನಾಚಿಕೆ ಇಲ್ಲದವರಿಗೆ, ವೇದಾಚಾರಗಳಿಂದ ಕೂಡಿದವರಿಗೆ ಮತ್ತು ಕೆಟ್ಟ ಆಚಾರವನ್ನು ಹೊಂದಿದವರಿಗೆ ಎಲ್ಲಿಯ ಒಡನಾಟವಯ್ಯಾ ! ಧೈರ್ಯಶಾಲಿಗಳಿಗೆ ಮತ್ತು ಹೇಡಿಗಳಿಗೆ ಅರಸರಿಗೆ ಬಡ ಬ್ರಾಹ್ಮಣರಿಗೆ ಎಲ್ಲಿಯ ಗೆಳೆತನವೆಂದು ದ್ರೋಣನನ್ನು ಮೂದಲಿಸಿದನು.
ಪದಾರ್ಥ (ಕ.ಗ.ಪ)
ಸೂರಿ-ಪಂಡಿತ,
ಗಂಭೀರ-ಪ್ರೌಢ,
ಭಂಡ-ನಾಚಿಕೆ ಇಲ್ಲದವ,
ಸಂಯುಕ್ತ-ಕೂಡಿದ,
ಪ್ರಸಕ್ತ-ಹೊಂದಿದ,
ಹಂದೆ-ಹೇಡಿ
ಮೂಲ ...{Loading}...
ಸೂರಿಗಳಿಗತಿ ಮೂರ್ಖರಿಗೆ ಗಂ
ಭೀರರಿಗೆ ಭಂಡರಿಗೆ ವೇದಾ
ಚಾರ ಸಂಯುಕ್ತರಿಗನಾಚಾರ ಪ್ರಸಕ್ತರಿಗೆ
ಧೀರರಿಗೆ ಹಂದೆಗಳಿಗೆತ್ತ್ತಣ
ಸೇರುವೆಗಳೈ ಭೂಪರಿಗೆ ಬಡ
ಹಾರುವರಿಗೆತ್ತಣದು ಸಖತನವೆಂದನಾ ದ್ರುಪದ ॥34॥
೦೩೫ ಎಲವೊ ನಿನ್ನಾಸ್ಥಾನ ...{Loading}...
ಎಲವೊ ನಿನ್ನಾಸ್ಥಾನ ಸಹಿತೀ
ಹೊಳಲ ಸುಡುವೆನು ನಿನ್ನ ಸೀಳಿದು
ಬಲಿಯ ಕೊಡುವೆನು ಭೂತಗಣಕಿದಿರಲ್ಲ ನೀನೆನಗೆ
ಕಲಿತ ವಿದ್ಯದ ಕೋಲ ಮಕ್ಕಳ
ಕಳುಹಿ ಕಟ್ಟಿಸಿ ವಾಮ ಪಾದದಿ
ತಲೆಯನೊದೆವೆನು ಮರೆಯದಿರು ನೀನೆಂದನಾ ದ್ರೋಣ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಮಾತನ್ನು ಕೇಳಿ ಕೆರಳಿದ ದ್ರೋಣ, “ಎಲವೋ, ನಿನ್ನ ಆಸ್ಥಾನ ಸಹಿತವಾಗಿ ಈ ಪಟ್ಟಣವನ್ನು ಸುಡುವೆನು. ನಿನ್ನನ್ನು ಸೀಳಿ ಭೂತಗಣಕ್ಕೆ ಬಲಿಯಕೊಡುವೆನು. ನೀನು ನನಗೆ ಇದಿರಲ್ಲ. ನನ್ನಿಂದ ಅಸ್ತ್ರ ವಿದ್ಯ ಕಲಿತ ಮಕ್ಕಳನ್ನು ಕಳುಹಿಸಿ ಅವರಿಂದ ಕಟ್ಟಿಸಿ ತಂದು ನಿನ್ನ ತಲೆಯನ್ನು ಎಡಗಾಲಿನಿಂದ ಒದೆಯುತ್ತೇನೆ ಮರೆಯಬೇಡ” ಎಂದು ಹೇಳಿದನು.
ಪದಾರ್ಥ (ಕ.ಗ.ಪ)
ಹೊಳಲು-ಪಟ್ಟಣ,
ವಾಮ-ಎಡ
ಮೂಲ ...{Loading}...
ಎಲವೊ ನಿನ್ನಾಸ್ಥಾನ ಸಹಿತೀ
ಹೊಳಲ ಸುಡುವೆನು ನಿನ್ನ ಸೀಳಿದು
ಬಲಿಯ ಕೊಡುವೆನು ಭೂತಗಣಕಿದಿರಲ್ಲ ನೀನೆನಗೆ
ಕಲಿತ ವಿದ್ಯದ ಕೋಲ ಮಕ್ಕಳ
ಕಳುಹಿ ಕಟ್ಟಿಸಿ ವಾಮ ಪಾದದಿ
ತಲೆಯನೊದೆವೆನು ಮರೆಯದಿರು ನೀನೆಂದನಾ ದ್ರೋಣ ॥35॥
೦೩೬ ಎನ್ದು ಭಾಷೆಯ ...{Loading}...
ಎಂದು ಭಾಷೆಯ ಮಾಡಿ ತನ್ನಯ
ನಂದನನೊಡಗೊಂಡು ಜನಪದ
ವೃಂದ ಹಲವನು ಕಳೆದು ಬಂದನು ಹಸ್ತಿನಾಪುರಿಗೆ
ಅಂದು ಸಕಲ ಕುಮಾರಕರು ನಲ
ವಿಂದ ನಗರಿಯ ಹೊರಗೆ ಗುರಿಗಳ
ಮುಂದುವರಿದೆಸುತಿರಲು ಮುದದಲಿ ಕಂಡನಾ ದ್ರೋಣ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಂದು ಪ್ರತಿಜ್ಞೆ ಮಾಡಿ ದ್ರೋಣ ತನ್ನ ಮಗನೊಡನೆ ತಿರುಗುತ್ತ ಹಲವು ದೇಶಗಳನ್ನು ದಾಟಿ ಹಸ್ತಿನಾಪುರಕ್ಕೆ ಬಂದನು. ಆ ದಿನ ಎಲ್ಲ ಕುಮಾರಕರು ಆಸ್ಥೆಯಿಂದ ನಗರದ ಹೊರಗೆ ಗುರಿಯಿಟ್ಟು ಬಾಣಗಳನ್ನು ಬಿಡುವುದನ್ನು ದ್ರೋಣನು ಆಸ್ಥಯಿಂದ ನೋಡಿದನು.
ಪದಾರ್ಥ (ಕ.ಗ.ಪ)
ಜನಪದ-ದೇಶ, ಮುದ- ಆಸ್ಥೆ
ಮೂಲ ...{Loading}...
ಎಂದು ಭಾಷೆಯ ಮಾಡಿ ತನ್ನಯ
ನಂದನನೊಡಗೊಂಡು ಜನಪದ
ವೃಂದ ಹಲವನು ಕಳೆದು ಬಂದನು ಹಸ್ತಿನಾಪುರಿಗೆ
ಅಂದು ಸಕಲ ಕುಮಾರಕರು ನಲ
ವಿಂದ ನಗರಿಯ ಹೊರಗೆ ಗುರಿಗಳ
ಮುಂದುವರಿದೆಸುತಿರಲು ಮುದದಲಿ ಕಂಡನಾ ದ್ರೋಣ ॥36॥
೦೩೭ ಬೆರಸಿದನು ನೆರವಿಯನು ...{Loading}...
ಬೆರಸಿದನು ನೆರವಿಯನು ನೋಡು
ತ್ತಿರೆ ಯುಧಿಷ್ಠಿರ ನೃಪನ ಹರಳುಂ
ಗುರ ವಿಘಾತಿಯೊಳುಗಿದು ಬಿದ್ದುದಗಾಧ ಕೂಪದಲಿ
ನೆರೆದು ತಡಿಯಲಿ ನಿಂದು ನೂರರು
ವರು ನಿರೀಕ್ಷಿಸಿ ಸಾಧ್ಯವಲ್ಲೆನು
ತಿರೆ ಮಗಂಗೆ ಮುನೀಂದ್ರನೆಂದನು ಬೇಗ ತೆಗೆಯೆಂದು ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಕುಮಾರಕರ ಗುಂಪನ್ನು ದ್ರೋಣನು ಕೂಡಿಕೊಂಡು ನೋಡುತ್ತಿರಲು, ಯುಧಿಷ್ಠಿರನ ಹರಳುಂಗುರ ಹೊಡೆತದಿಂದ ಬೆರಳಿನಿಂದ ಜಾರಿ ಆಳವಾದ ಬಾವಿಯಲ್ಲಿ ಬಿದ್ದುಬಿಟ್ಟಿತು. ನೂರಾರು ಹುಡುಗರೂ ಬಂದು ಬಾವಿಯ ಬದಿಯಲ್ಲಿ ನೆರೆದು ನಿಂತು ನೋಡುತ್ತಾ “ಸಾಧ್ಯವಿಲ್ಲ” ಎನ್ನುತ್ತಿದ್ದರು. ಆಗ ದ್ರೋಣನು ಮಗ ಅಶ್ವತ್ಥಾಮನಿಗೆ ಬಾವಿಯಿಂದ ಉಂಗುರವನ್ನು ಬೇಗ ಮೇಲಕ್ಕೆ ತೆಗೆಯೆಂದು ಹೇಳಿದನು.
ಪದಾರ್ಥ (ಕ.ಗ.ಪ)
ವಿಘಾತ-ಹೊಡೆತ, ಅಗಾಧ-ಅಳವಾದ, ಕೂಪ-ಬಾವಿ, ತಡಿ-ಬದಿ
ಮೂಲ ...{Loading}...
ಬೆರಸಿದನು ನೆರವಿಯನು ನೋಡು
ತ್ತಿರೆ ಯುಧಿಷ್ಠಿರ ನೃಪನ ಹರಳುಂ
ಗುರ ವಿಘಾತಿಯೊಳುಗಿದು ಬಿದ್ದುದಗಾಧ ಕೂಪದಲಿ
ನೆರೆದು ತಡಿಯಲಿ ನಿಂದು ನೂರರು
ವರು ನಿರೀಕ್ಷಿಸಿ ಸಾಧ್ಯವಲ್ಲೆನು
ತಿರೆ ಮಗಂಗೆ ಮುನೀಂದ್ರನೆಂದನು ಬೇಗ ತೆಗೆಯೆಂದು ॥37॥
೦೩೮ ಸರಳ ತೊಡಚಿ ...{Loading}...
ಸರಳ ತೊಡಚಿ ತದೀಯ ಮಣಿ ಬಂ
ಧುರದ ಮುದ್ರಿಕೆಗೆಚ್ಚು ಹಿಳುಕಿನ
ಶಿರಕೆ ಶರವಾ ಹಿಳುಕಿನಲಿ ಕಣೆಯೆಚ್ಚು ಬಂಧದಲಿ
ಸರಳ ಸಂದರ್ಭದಲಿ ನಿಮಿಷಾಂ
ತರಕೆ ಫಣಿಪನ ಹೆಡೆವಣಿಯನು
ದ್ಧರಿಸುವಂತಿರೆ ತೆಗೆದು ಬಿಸುಟನು ರತುನಮುದ್ರಿಕೆಯ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಅಶ್ವತ್ಥಾಮನು ಬಿಲ್ಲಿಗೆ ಬಾಣವನ್ನು ಹೂಡಿ ಆ ಮಣಿಗಳಿಂದ ಚೆಂದಾದ ಉಂಗುರಕ್ಕೆ ತಗುಲುವಂತೆ ಹಚ್ಚಿದನು. ಆ ಬಾಣದ ತುದಿಗೆ ಮತ್ತೊಂದು ಬಾಣವನ್ನು ತಗುಲುವಂತೆ ಬಿಟ್ಟನು. ಆ ಬಾಣಕ್ಕೆ ಮತ್ತೊಂದು ಬಾಣ, ಅದಕ್ಕೆ ಮತ್ತೊಂದು, ಅದಕ್ಕಿನ್ನೊಂದು - ಹೀಗೆ ಬಾಣಗಳ ಕೂಡಿಕೆಯಲ್ಲಿ ನಿಮಿಷ ಮಾತ್ರದಲ್ಲಿ ಆದಿಶೇಷನ ಹೆಡೆಯ ಮಣಿಯನ್ನು ಕಳಚಿ ತೆಗೆಯುವಂತೆ ಆ ರತ್ನದುಂಗುರವನ್ನು ಬಾವಿಯಿಂದ ಮೇಲಕ್ಕೆ ತೆಗೆದು ಬಿಸುಟನು.
ಪದಾರ್ಥ (ಕ.ಗ.ಪ)
ಬಂಧುರ-ಚೆಂದ,
ಹಿಳುಕು-ಬಾಣದ ತುದಿ,
ಬಂಧ-ಕೂಡಿಕೆ, ಮುದ್ರಿಕೆ-ಉಂಗುರ
ಮೂಲ ...{Loading}...
ಸರಳ ತೊಡಚಿ ತದೀಯ ಮಣಿ ಬಂ
ಧುರದ ಮುದ್ರಿಕೆಗೆಚ್ಚು ಹಿಳುಕಿನ
ಶಿರಕೆ ಶರವಾ ಹಿಳುಕಿನಲಿ ಕಣೆಯೆಚ್ಚು ಬಂಧದಲಿ
ಸರಳ ಸಂದರ್ಭದಲಿ ನಿಮಿಷಾಂ
ತರಕೆ ಫಣಿಪನ ಹೆಡೆವಣಿಯನು
ದ್ಧರಿಸುವಂತಿರೆ ತೆಗೆದು ಬಿಸುಟನು ರತುನಮುದ್ರಿಕೆಯ ॥38॥
೦೩೯ ಕಣ್ಡು ಬೆರಗಾದುದು ...{Loading}...
ಕಂಡು ಬೆರಗಾದುದು ಕುಮಾರರ
ತಂಡ ತನತನಗೈದಿ ಭೀಷ್ಮನ
ನಂಡಲೆದುದೀ ಮುನಿಯನೀಗಲೆ ಸಂತವಿಡಿಯೆಂದು
ಚಂಡ ಭುಜಬಲನವರ ಕಾಣಿಸಿ
ಕೊಂಡು ಕೊಟ್ಟನು ಭೀಷ್ಮನವರಿಗ
ಖಂಡ ವಿಭವವನತುಳ ಧನಪತಿಯಾದನಾ ದ್ರೋಣ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದನ್ನು ಕಂಡು ಕುಮಾರರ ಗುಂಪಿಗೆ ಸೋಜಿಗವಾಯ್ತು. ಆ ಕುಮಾರರು ಒಬ್ಬೊಬ್ಬರು ಭೀಷ್ಮನ ಬಳಿಗೆ ಹೋಗಿ ದ್ರೋಣ ಮುನಿಯನ್ನು ಈಗಲೇ ತಮಗೆ ಹುರುವಾಗಲು ಒಪ್ಪಿಸಿ ಎಂದು ಪೀಡಿಸಿದರು. ಭುಜಬಲ ಪರಾಕ್ರಮಿಯಾದ ಭೀಷ್ಮರು ದ್ರೋಣರನ್ನು ಕಾಣಿಸಿಕೊಂಡು ಅವರನ್ನು ಪೂರ್ಣ ವೈಭವದೊಂದಿಗೆ ಸತ್ಕರಿಸಿದನು. ಆ ದ್ರೋಣನು ಶ್ರೀಮಂತನಾದನು.
ಪದಾರ್ಥ (ಕ.ಗ.ಪ)
ಬೆರಗು-ಸೋಜಿಗ,
ಅಂಡಲೆ-ಪೀಡಿಸು,
ಸಂತವಿಡಿ-ಸಾಂತ್ವನಗೊಳಿಸು, ಇಲ್ಲಿ ಒಪ್ಪಿಸು
ಚಂಡಭುಜಬಲ-ಭುಜಬಲಪರಾಕ್ರಮಿ,
ಅಖಂಡ-ಪೂರ್ಣ,
ಧನಪತಿ-ಶ್ರೀಮಂತ
ಮೂಲ ...{Loading}...
ಕಂಡು ಬೆರಗಾದುದು ಕುಮಾರರ
ತಂಡ ತನತನಗೈದಿ ಭೀಷ್ಮನ
ನಂಡಲೆದುದೀ ಮುನಿಯನೀಗಲೆ ಸಂತವಿಡಿಯೆಂದು
ಚಂಡ ಭುಜಬಲನವರ ಕಾಣಿಸಿ
ಕೊಂಡು ಕೊಟ್ಟನು ಭೀಷ್ಮನವರಿಗ
ಖಂಡ ವಿಭವವನತುಳ ಧನಪತಿಯಾದನಾ ದ್ರೋಣ ॥39॥
೦೪೦ ವರ ಮುಹೂರ್ತದೊಳವರ ...{Loading}...
ವರ ಮುಹೂರ್ತದೊಳವರ ನೂರರು
ವರನು ಕೊಟ್ಟನು ಶಸ್ತ್ರವಿದ್ಯಾ
ಪರಿಣತರ ಮಾಡೆಂದು ದ್ರೋಣನ ಕೈಯಲಾ ಭೀಷ್ಮ
ಗರುಡಿ ಕಟ್ಟಿತು ನೂರು ಯೋಜನ
ವರೆಯ ವಿಸ್ತಾರದಲಿ ಸಾವಿರ
ಕುರಿಯ ಹೊಯ್ದರು ಪೂಜಿಸಿದರಾ ಚದುರಚಂಡಿಕೆಯ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶುಭ ಮುಹೂರ್ತದಲ್ಲಿ ಭೀಷ್ಮನು ಆ ನೂರಾರು ಹುಡುಗರನ್ನು ಶಸ್ತ್ರ ವಿದ್ಯಾ ನಿಪುಣರನ್ನಾಗಿ ಮಾಡಲು ದ್ರೋಣನಿಗೆ ಒಪ್ಪಿಸಿದನು. ನೂರು ಯೋಜನವರೆಗಿನ ವಿಸ್ತಾರದ ಗರುಡಿಯನ್ನು ಕಟ್ಟಿದರು. ಸಾವಿರ ಕುರಿಯನ್ನು ಕತ್ತರಿಸಿ ಚೆಲುವ ಚಂಡಿಕೆಯನ್ನು ಪೂಜಿಸಿದರು.
ಪದಾರ್ಥ (ಕ.ಗ.ಪ)
ಪರಿಣತರು-ನಿಪುಣರು, ಯೋಜನ-ಸುಮಾರು ಹನ್ನೆರಡು ಮೈಲಿ, ಹೊಯ್-ಕತ್ತರಿಸು
ಮೂಲ ...{Loading}...
ವರ ಮುಹೂರ್ತದೊಳವರ ನೂರರು
ವರನು ಕೊಟ್ಟನು ಶಸ್ತ್ರವಿದ್ಯಾ
ಪರಿಣತರ ಮಾಡೆಂದು ದ್ರೋಣನ ಕೈಯಲಾ ಭೀಷ್ಮ
ಗರುಡಿ ಕಟ್ಟಿತು ನೂರು ಯೋಜನ
ವರೆಯ ವಿಸ್ತಾರದಲಿ ಸಾವಿರ
ಕುರಿಯ ಹೊಯ್ದರು ಪೂಜಿಸಿದರಾ ಚದುರಚಂಡಿಕೆಯ ॥40॥
೦೪೧ ಗರುಡಿ ಪೂಜಾ ...{Loading}...
ಗರುಡಿ ಪೂಜಾ ವಿಭವ ಸಮನಂ
ತರದಲನಿಬರು ಸಮವ ತೊಡಗಿದ
ರರಸು ಮಕ್ಕಳು ಕೇಳಿದರು ನಾನಾ ದಿಗಂತದಲಿ
ಬರುತಿಲಿದ್ದರು ಕೂಡೆ ಹಸ್ತಿನ
ಪುರಿಗೆ ವಿದ್ಯಾರ್ಥಿಗಳು ಪಾರ್ಥಿವ
ವರ ಕುಮಾರರು ಬಂದು ಕಂಡರು ಶಸ್ತ್ರ ಪಂಡಿತನ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗರುಡಿಯ ವೈಭವದ ಪೂಜೆಯ ತರುವಾಯದಲ್ಲಿ ಅಷ್ಟು ಜನರು ಅಭ್ಯಾಸವನ್ನು ಪ್ರಾರಂಭಿಸಿದರು. ಎಲ್ಲ ದಿಕ್ತಟಗಳಿಂದಲೂ ಇದರ ಬಗ್ಗೆ ಕೇಳಿದ ರಾಜಕುಮಾರರು ಬರುತ್ತಲಿದ್ದರು. ಕೂಡಲೆ ಹಸ್ತಿನಪುರಿಗೆ ಕ್ಷತ್ರಿಯಕುಮಾರರು ವಿದ್ಯಾರ್ಥಿಗಳಾಗಿ ಬಂದು ಶಸ್ತ್ರ ಪಂಡಿತರಾದ ದ್ರೋಣರನ್ನು ಕಂಡರು.
ಪದಾರ್ಥ (ಕ.ಗ.ಪ)
ಸಮ-ಶ್ರಮ, ಅಭ್ಯಾಸ, ದಿಗಂತ-ದಿಕ್ತಟ, ಪಾರ್ಥಿವ-ಕ್ಷತ್ರಿಯ
ಮೂಲ ...{Loading}...
ಗರುಡಿ ಪೂಜಾ ವಿಭವ ಸಮನಂ
ತರದಲನಿಬರು ಸಮವ ತೊಡಗಿದ
ರರಸು ಮಕ್ಕಳು ಕೇಳಿದರು ನಾನಾ ದಿಗಂತದಲಿ
ಬರುತಿಲಿದ್ದರು ಕೂಡೆ ಹಸ್ತಿನ
ಪುರಿಗೆ ವಿದ್ಯಾರ್ಥಿಗಳು ಪಾರ್ಥಿವ
ವರ ಕುಮಾರರು ಬಂದು ಕಂಡರು ಶಸ್ತ್ರ ಪಂಡಿತನ ॥41॥
೦೪೨ ರಾಯ ಬಲ್ಲೈ ...{Loading}...
ರಾಯ ಬಲ್ಲೈ ಮುನ್ನ ಶಿಶುವನು
ತಾಯಿ ಬಿಸುಟಳು ಗಂಗೆಯಲಿ ರಾ
ಧೇಯನಾದನು ರಾಧೆಯೆಂಬವಳೊಲಿದು ಸಾಕಿದರೆ
ಆಯತಾಕ್ಷನು ಪರಶುರಾಮನೊ
ಳಾಯುಧದ ಶ್ರಮಗಲಿತು ಬಳಿಕದು
ವಾಯವಾದೊಡೆ ಬಂದನಾ ಗಜಪುರಿಗೆ ಕಲಿಕರ್ಣ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜ ತಿಳಿದಿದ್ದೀಯೆ, ಹಿಂದೆ ತಾಯಿ ಮಗುವನ್ನು ಗಂಗೆಯಲ್ಲಿ ಬಿಸುಟಳು. ಗಂಗೆಯ ದಡದಲ್ಲಿ ಸಿಕ್ಕಿದ ಮಗುವನು ರಾಧೆಯೆಂಬುವಳು ಪ್ರೀತಿಯಿಂದ ಸಾಕಿದರೆ ರಾಧೇಯನಾದನು. ವಿಶಾಲವಾದ ಕಣ್ಣುಳ್ಳ ರಾಧೇಯನು ಪರಶುರಾಮನಲ್ಲಿ ಆಯುಧದ ಅಭ್ಯಾಸ ಕಲಿತು. ಅದು ನಿಷ್ಪ್ರಯೋಜಕವಾಗಲು ಕಲಿಕರ್ಣನು ಹಸ್ತಿನಾಪುರಕ್ಕೆ ಬಂದನು.
ಪದಾರ್ಥ (ಕ.ಗ.ಪ)
ಆಯತಾಕ್ಷ-ವಿಶಾಲವಾದ ಕಣ್ಣು, ಶ್ರಮ-ಅಭ್ಯಾಸ, ವಾಯ-ನಿಷ್ಪ್ರಯೋಜನ
ಟಿಪ್ಪನೀ (ಕ.ಗ.ಪ)
“ಆಯತಾಕ್ಷನು ಪರಶುರಾಮನೊಳಾಯುಧದ ಶ್ರಮಗಲಿತು ಬಳಿಕದು
ವಾಯವಾದೊಡೆ ಬಂದನಾ ಗಜಪುರಿಗೆ ಕಲಿಕರ್ಣ”
ಕರ್ಣ ತಾನು ಬ್ರಾಹ್ಮಣನೆಂದು ಹೇಳಿ ಪರಶುರಾಮನಲ್ಲಿ ಅಸ್ತ್ರ ವಿದ್ಯಾಭ್ಯಾಸ ಮಾಡಿದನು. ಇವನ ಗುಟ್ಟು ಹೊರಬಿದ್ದಾಗ ಕುಪಿತನಾದ ಪರಶುರಾಮರು “ಯುದ್ಧ ಮಾಡುವಾಗ ನಿನ್ನ ಅಸ್ತ್ರಗಳೆಲ್ಲವೂ ವಿಫಲವಾಗಲಿ” ಎಂದು ಶಾಪಕೊಟ್ಟರು. ತಾನು ಕಲಿತ ವಿದ್ಯೆ ನಿಷ್ಪ್ರಯೋಜಕವಾಗಿದ್ದರಿಂದ ಕರ್ಣನು ನಂತರ ಹಸ್ತಿನಾಪುರಿಗೆ ಬಂದನು.
ಮೂಲ ...{Loading}...
ರಾಯ ಬಲ್ಲೈ ಮುನ್ನ ಶಿಶುವನು
ತಾಯಿ ಬಿಸುಟಳು ಗಂಗೆಯಲಿ ರಾ
ಧೇಯನಾದನು ರಾಧೆಯೆಂಬವಳೊಲಿದು ಸಾಕಿದರೆ
ಆಯತಾಕ್ಷನು ಪರಶುರಾಮನೊ
ಳಾಯುಧದ ಶ್ರಮಗಲಿತು ಬಳಿಕದು
ವಾಯವಾದೊಡೆ ಬಂದನಾ ಗಜಪುರಿಗೆ ಕಲಿಕರ್ಣ ॥42॥
೦೪೩ ಬನ್ದು ಹಸ್ತಿನಪುರಿಗೆ ...{Loading}...
ಬಂದು ಹಸ್ತಿನಪುರಿಗೆ ರಾಧಾ
ನಂದನನು ದುರ್ಯೋಧನನನೈ
ತಂದು ಕಂಡನು ಕೌರವೇಶ್ವರನಿವರ ಕಾಣಿಸಿದ
ಅಂದು ಮೊದಲಾಗವರ ಸಖ್ಯಕೆ
ಸಂದ ಕಾಣೆನು ಕರ್ಣ ಕುರುಪತಿ
ಗೊಂದೆ ಜೀವನವೊಂದೆ ಮನ ಮತವೊಂದೆ ಕೇಳ್ ಎಂದ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಧಾ ನಂದನನಾದ ಕರ್ಣನು ಹಸ್ತಿನಾಪುರಕೆ ಬಂದು ದುರ್ಯೋಧನನನ್ನು ಕಂಡನು. ಕೌರವೇಶ್ವರನು ಕರ್ಣನನ್ನು ದ್ರೋಣರಿಗೆ ಕಾಣಿಸಿದನು. ಅವತ್ತು ಮೊದಲಾಗಿ ಕರ್ಣ ದುರ್ಯೋಧನರ ಸ್ನೇಹಕ್ಕೆ ಬಿರುಕು ಕಾಣದಾಯಿತು. ಕರ್ಣ ಕುರುಪತಿಗಳಿಗೆ ಒಂದೇ ಜೀವ, ಒಂದೇ ಮನಸ್ಸು, ಒಂದೇ ಅಭಿಪ್ರಾಯ ಎನ್ನುವಂತಾಯಿತು.
ಪದಾರ್ಥ (ಕ.ಗ.ಪ)
ಸಂದ-ಬಿರುಕು, ಸಖ್ಯ-ಸ್ನೇಹ
ಮೂಲ ...{Loading}...
ಬಂದು ಹಸ್ತಿನಪುರಿಗೆ ರಾಧಾ
ನಂದನನು ದುರ್ಯೋಧನನನೈ
ತಂದು ಕಂಡನು ಕೌರವೇಶ್ವರನಿವರ ಕಾಣಿಸಿದ
ಅಂದು ಮೊದಲಾಗವರ ಸಖ್ಯಕೆ
ಸಂದ ಕಾಣೆನು ಕರ್ಣ ಕುರುಪತಿ
ಗೊಂದೆ ಜೀವನವೊಂದೆ ಮನ ಮತವೊಂದೆ ಕೇಳೆಂದ ॥43॥
೦೪೪ ಬೇಟೆ ಕರ್ಣನ ...{Loading}...
ಬೇಟೆ ಕರ್ಣನ ಕೂಡೆ ಹಗಲಿರು
ಳಾಟ ಕರ್ಣನ ಕೂಡೆ ಷಡು ರಸ
ದೂಟ ಕರ್ಣನ ಕೂಡೆ ಶಸ್ತ್ರಾಭ್ಯಾಸವವ ಕೂಡೆ
ತೋಟಿ ಮನದಲಿ ನಗೆಯ ಮಧುರದ
ನೋಟ ಕಣ್ಣಿನೊಳುಳಿದವರ ಕೂ
ಡಾಟಗಳು ತಾವಿಬ್ಬರೊಂದೆನಿಸಿದರು ಜಗವರಿಯೆ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನಿಗೆ ಬೇಟೆ ಕರ್ಣನ ಸಂಗಡ, ಹಗಲಿರುಳು ಆಟ ಕರ್ಣನ ಸಂಗಡ, ಷಡ್ರಸದೂಟ ಕರ್ಣನ ಜೊತೆಯಲ್ಲಿ, ಶಸ್ತ್ರಾಭ್ಯಾಸವು ಕರ್ಣನ ಒಡನೆಯೇ. ಜಗಳದ ಮನಸ್ಸಿನಲ್ಲೂ ಕಣ್ಣಿನಲ್ಲಿ ಪ್ರಿಯವಾದ ನಗೆಯ ನೋಟ, ಹೀಗೆ ಎಲ್ಲದರಲ್ಲಿಯೂ ತಾವು ಸಮಾನ ಅಭಿರುಚಿಯವರೆಂದು ಲೋಕವೇ ತಿಳಿಯುವಂತೆ ಅವರಿಬ್ಬರೂ ಒಂದೆನಿಸಿದರು.
ಪದಾರ್ಥ (ಕ.ಗ.ಪ)
ಮಧುರ-ಪ್ರಿಯ,
ತೋಟಿ-ಜಗಳ,
ಕೂಡೆ-ಸಂಗಡ, ಒಡನೆ, ಜೊತೆಯಲ್ಲಿ
ಮೂಲ ...{Loading}...
ಬೇಟೆ ಕರ್ಣನ ಕೂಡೆ ಹಗಲಿರು
ಳಾಟ ಕರ್ಣನ ಕೂಡೆ ಷಡು ರಸ
ದೂಟ ಕರ್ಣನ ಕೂಡೆ ಶಸ್ತ್ರಾಭ್ಯಾಸವವ ಕೂಡೆ
ತೋಟಿ ಮನದಲಿ ನಗೆಯ ಮಧುರದ
ನೋಟ ಕಣ್ಣಿನೊಳುಳಿದವರ ಕೂ
ಡಾಟಗಳು ತಾವಿಬ್ಬರೊಂದೆನಿಸಿದರು ಜಗವರಿಯೆ ॥44॥
೦೪೫ ಸುರಗಿ ಸಬಳ ...{Loading}...
ಸುರಗಿ ಸಬಳ ಕಠಾರಿಯುಬ್ಬಣ
ಹರಿಗೆ ಹಿರಿಯುಬ್ಬಣವಡಾಯುಧ
ಪರಿಘ ಚಕ್ರ ಮುಸುಂಡಿ ತೋಮರ ಭಿಂಡಿವಾಳಚಯ
ಪರಶು ಕಕ್ಕಡೆ ಮುಸಲ ಹಲ ಮು
ದ್ಗರ ಧನುರ್ದಂಡಾದಿ ಶಸ್ತ್ರೋ
ತ್ಕರದಲನಿಬರು ಕುಶಲರಾದರು ಮುನಿಯ ಗರುಡಿಯಲಿ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣಾಚಾರ್ಯರ ಗರುಡಿಯಲ್ಲಿ ಅಭ್ಯಾಸ ಮಾಡಿದ ಅಷ್ಟೂ ಜನರು, ಕತ್ತಿ, ಈಟಿ, ಬರ್ಜಿ, ಒಂದು ಬಗೆಯಾದ ಮೊನಚಾದ ಆಯುಧ, ಗುರಾಣಿ, ದೊಡ್ಡ ಉಬ್ಬಣ, ಒಂದು ಬಗೆಯ ಕತ್ತಿ, ಪರಿಘ, ಚಕ್ರ, ಮುಸುಂಡಿ, ತುದಿಯಲ್ಲಿ ಮೊನಚಾಗಿ ಇರುವಂತಹ ಈಟಿಯಂತಹ ಒಂದು ಬಗೆಯ ಆಯುಧ, ಕೈಯಿಂದ ಎಸೆಯುವ ಸಣ್ಣ ಭಲ್ಲೆಯಂತಹ ಆಯುಧ, ಕೊಡಲಿ, ಒಂದು ಬಗೆಯ ಕಠಾರಿ, ಗದೆ, ಹಲಾಯುಧ, ಒಂದು ಬಗೆಯ ಗದೆ, ಧನುಸ್ಸು ದಂಡ, ಬಾಣಗಳು ಮೊದಲಾದ ಆಯುಧಗಳಲ್ಲಿ ಕುಶಲರಾದರು.
ಪದಾರ್ಥ (ಕ.ಗ.ಪ)
ಸುರಗಿ-ಕತ್ತಿ, ಸಬಳ-ಈಟಿ, ಕಠಾರಿ-ಬರ್ಚಿ, ಉಬ್ಬಣ-ಒಂದು ಬಗೆಯಾದ ಮೊನಚಾದ ಆಯುಧ,
ಹರಿಗೆ-ಗುರಾಣಿ, ತೋಮರ-ಈಟಿಯಂತಹ ಒಂದು ಬಗೆಯ ಆಯುಧ,
ಭಿಂಡಿವಾಳ-ಕೈಯಿಂದ ಎಸೆಯುವ ಸಣ್ಣ ಭಲ್ಲೆಯಂತಹ ಅಯುಧ,
ಪರಶು-ಕೊಡಲಿ
ಮೂಲ ...{Loading}...
ಸುರಗಿ ಸಬಳ ಕಠಾರಿಯುಬ್ಬಣ
ಹರಿಗೆ ಹಿರಿಯುಬ್ಬಣವಡಾಯುಧ
ಪರಿಘ ಚಕ್ರ ಮುಸುಂಡಿ ತೋಮರ ಭಿಂಡಿವಾಳಚಯ
ಪರಶು ಕಕ್ಕಡೆ ಮುಸಲ ಹಲ ಮು
ದ್ಗರ ಧನುರ್ದಂಡಾದಿ ಶಸ್ತ್ರೋ
ತ್ಕರದಲನಿಬರು ಕುಶಲರಾದರು ಮುನಿಯ ಗರುಡಿಯಲಿ ॥45॥
೦೪೬ ಜನಪ ಕೇಳೈ ...{Loading}...
ಜನಪ ಕೇಳೈ ಭೀಮ ದುರ್ಯೋ
ಧನರು ಗದೆಯಲಿ ಮಿಗಿಲು ಕರ್ಣಾ
ರ್ಜುನರು ಧನುವಿನಲಧಿಕರಾದರು ನೃಪಕುಮಾರರಲಿ
ತನತನಗೆ ಸರ್ವಾಯುಧಂಗಳ
ಲನಿಬರರಿದರು ಕೂಡೆ ಗುರುವಿನ
ಮನಕೆ ಹತ್ತೆಯವಾದನರ್ಜುನನಸ್ತ್ರ ಶಿಕ್ಷೆಯಲಿ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ಮಹಾರಾಜನೇ ಕೇಳು, ಭೀಮ ದುರ್ಯೋಧನರು ಗದೆಯಲ್ಲಿ ಉಳಿದೆಲ್ಲರಿಗಿಂತ ಮೇಲಾದರು. ಕರ್ಣಾರ್ಜುನರು ಧನುರ್ವಿದ್ಯೆಯಲ್ಲಿ ಅಧಿಕರಾದರು. ಎಲ್ಲಾ ರಾಜ ಕುಮಾರರು ಸರ್ವಾಯುಧಗಳಲ್ಲಿಯೂ ಸಾಮಥ್ರ್ಯವನ್ನು ಸಂಪಾದಿಸಿದರು. ಅಸ್ತ್ರ ವಿದ್ಯೆಯಲ್ಲಿ ಅರ್ಜುನನು ಗುರುವಿನ ಮನಸ್ಸಿಗೆ ಹತ್ತಿರವಾದನು.
ಪದಾರ್ಥ (ಕ.ಗ.ಪ)
ಶಿಕ್ಷೆ-ವಿದ್ಯೆ
ಮೂಲ ...{Loading}...
ಜನಪ ಕೇಳೈ ಭೀಮ ದುರ್ಯೋ
ಧನರು ಗದೆಯಲಿ ಮಿಗಿಲು ಕರ್ಣಾ
ರ್ಜುನರು ಧನುವಿನಲಧಿಕರಾದರು ನೃಪಕುಮಾರರಲಿ
ತನತನಗೆ ಸರ್ವಾಯುಧಂಗಳ
ಲನಿಬರರಿದರು ಕೂಡೆ ಗುರುವಿನ
ಮನಕೆ ಹತ್ತೆಯವಾದನರ್ಜುನನಸ್ತ್ರ ಶಿಕ್ಷೆಯಲಿ ॥46॥