೦೦೦ ಸೂ ವರಮುನಿಯ ...{Loading}...
ಸೂ. ವರಮುನಿಯ ಶಾಪದಲಿ ಸರಿದನು
ಸುರರ ನಗರಿಗೆ ಪಾಂಡು ಹಸ್ತಿನ
ಪುರಕೆ ತಂದರು ಪರಮಮುನಿಗಳು ಪಾಂಡುನಂದನರ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಶ್ರೇಷ್ಠ ಋಷಿಯ ಶಾಪದಿಂದ ಪಾಂಡುವು ದೇವತೆಗಳ ನಗರಕ್ಕೆ ಹೋದನು. ಪ್ರಮುಖ ಋಷಿಗಳು ಪಾಂಡುವಿನ ಮಕ್ಕಳನ್ನು ಹಸ್ತಿನಾಪುರಕ್ಕೆ ಕರೆದುಕೊಂಡು ಬಂದರು.
ಮೂಲ ...{Loading}...
ಸೂ. ವರಮುನಿಯ ಶಾಪದಲಿ ಸರಿದನು
ಸುರರ ನಗರಿಗೆ ಪಾಂಡು ಹಸ್ತಿನ
ಪುರಕೆ ತಂದರು ಪರಮಮುನಿಗಳು ಪಾಂಡುನಂದನರ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಶತಶೃಂಗಾದ್ರಿಯಲಿ ಭೂ
ಪಾಲನಿರ್ದನು ತನ್ನ ವೀರಕುಮಾರಕರು ಸಹಿತ
ವ್ಯಾಳ ವನಗಜ ಸಿಂಹ ವೃಕ ಶಾ
ರ್ದೂಲ ಭಯವನು ಪರಿಹರಿಸಿ ಮುನಿ
ಪಾಳಿಗಾಶ್ರಯವೆನಿಸಿದನು ಪಾವನ ತಪೋವನವ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ಮಹಾರಾಜನೇ ಕೇಳು, ಶತಶೃಂಗಾದ್ರಿಯಲ್ಲಿ ಪಾಂಡುರಾಜನು ತನ್ನ ವೀರರಾದ ಮಕ್ಕಳೊಡನೆ ಇದ್ದನು. ಸರ್ಪ, ಕಾಡಾನೆ, ಸಿಂಹ, ತೋಳ, ಹುಲಿ ಮೊದಲಾದುವುಗಳ ಕುರಿತಾದ ಭಯವನ್ನು ನಿವಾರಣೆ ಮಾಡಿ ಪವಿತ್ರವಾದ ತಪೋವನವನ್ನು ಮುನಿಗಳ ಸಮೂಹಕ್ಕೆ ಆಶ್ರಯವೆನಿಸಿದನು.
ಪದಾರ್ಥ (ಕ.ಗ.ಪ)
ವ್ಯಾಳ-ಸರ್ಪ,
ವೃಕ-ತೋಳ,
ಶಾರ್ದೂಲ-ಹುಲಿ
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಶತಶೃಂಗಾದ್ರಿಯಲಿ ಭೂ
ಪಾಲನಿರ್ದನು ತನ್ನ ವೀರಕುಮಾರಕರು ಸಹಿತ
ವ್ಯಾಳ ವನಗಜ ಸಿಂಹ ವೃಕ ಶಾ
ರ್ದೂಲ ಭಯವನು ಪರಿಹರಿಸಿ ಮುನಿ
ಪಾಳಿಗಾಶ್ರಯವೆನಿಸಿದನು ಪಾವನ ತಪೋವನವ ॥1॥
೦೦೨ ಆ ಸಮಸ್ತ ...{Loading}...
ಆ ಸಮಸ್ತ ಮುನೀಂದ್ರರೊಡನ
ಭ್ಯಾಸವಾ ದಿವ್ಯಾಶ್ರಮದ ಸಹ
ವಾಸವಾ ತಪವಾ ಕುಮಾರ ಪರಾಕ್ರಮಾಲೋಕ
ಆ ಸಮಂಜಸ ಸತಿಯರಿಬ್ಬರು
ಪಾಸನೆಗಳಾ ವಿಭವಕಿಭಪುರಿ
ಯಾ ಸಮಸ್ತೈಶ್ವರ್ಯವದು ತೃಣವಾಯ್ತು ಭೂಪತಿಗೆ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಎಲ್ಲ ಮುನಿಶ್ರೇಷ್ಠರೊಡನೆ ವ್ಯಾಸಂಗ, ಆ ಸುಂದರವಾದ ಆಶ್ರಮದ ಜನರ ಒಡನಾಟ, ಆ ತಪಸ್ಸು, ಆ ಮಕ್ಕಳ ಕಲಿತನದ ನೋಟ, ಪರಸ್ಪರ ಹೊಂದಿಕೊಂಡು ಹೋಗುವ ಪತ್ನಿಯರಿಬ್ಬರ ಸೇವೆ, - ಇವೆಲ್ಲ ಕೂಡಿದ ಆ ವೈಭವಕ್ಕೆ ಹಸ್ತಿನಾಪುರಿಯ ಸಮಸ್ತ ಐಶ್ವರ್ಯವು ಪಾಂಡುಭೂಪತಿಗೆ ತೃಣದ ಸಮಾನವಾಯ್ತು.
ಪದಾರ್ಥ (ಕ.ಗ.ಪ)
ಅಭ್ಯಾಸ-ವ್ಯಾಸಂಗ,
ಸಹವಾಸ-ಒಡನಾಟ,
ಆಲೋಕ-ನೋಟ,
ಸಮಂಜಸ- ಹೊಂದಿಕೊಳ್ಳುವ ,
ಉಪಾಸನೆ-ಸೇವೆ
ಇಭಪುರಿ-ಹಸ್ತಿನಾಪುರಿ
ಮೂಲ ...{Loading}...
ಆ ಸಮಸ್ತ ಮುನೀಂದ್ರರೊಡನ
ಭ್ಯಾಸವಾ ದಿವ್ಯಾಶ್ರಮದ ಸಹ
ವಾಸವಾ ತಪವಾ ಕುಮಾರ ಪರಾಕ್ರಮಾಲೋಕ
ಆ ಸಮಂಜಸ ಸತಿಯರಿಬ್ಬರು
ಪಾಸನೆಗಳಾ ವಿಭವಕಿಭಪುರಿ
ಯಾ ಸಮಸ್ತೈಶ್ವರ್ಯವದು ತೃಣವಾಯ್ತು ಭೂಪತಿಗೆ ॥2॥
೦೦೩ ಸುತ ವಿನೋದದ ...{Loading}...
ಸುತ ವಿನೋದದ ಸಿರಿಗೆ ಅಮರಾ
ವತಿಯಸಿರಿ ತೊತ್ತೆಂದು ವಿಮಲ
ವ್ರತ ತಪೋಲಕ್ಷ್ಮಿಗೆ ವಿಲಾಸಿನಿ ಮುಕ್ತಿವಧುವೆಂದು
ಯತಿ ಪದಾಂಬುಜ ನಿತ್ಯ ಸೇವಾ
ಸತಿಗೆ ದಾಸಿ ಜಗತ್ರಯಾದಿ
ಸ್ಥಿತಿ ಪದವಿಯೆಂದುಬ್ಬಿದನು ಕಲಿಪಾಂಡು ವಿಪಿನದಲಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಡವಿಯಲ್ಲಿ ವೀರನಾದ ಪಾಂಡುವು, ಮಕ್ಕಳ ಉತ್ಸಾಹದ ಸಂಪತ್ತಿಗೆ ಅಮರಾವತಿಯ ಸಂಪತ್ತು ತೊತ್ತಿನ ಸಮಾನವೆಂದೂ ನಿಷ್ಕಳಂಕ ವ್ರತಗಳಿಂದ ಕೂಡಿದ ತಪೋಲಕ್ಷ್ಮಿಗೆ ಮೋಕ್ಷವಧು ವಿಲಾಸಿನಿಯೆಂದೂ ಸಂನ್ಯಾಸಿಯ ಪಾದ ಕಮಲಗಳನ್ನು ನಿತ್ಯ ಸೇವೆ ಮಾಡುವ ಸತಿಗೆ ಮೂರು ಲೋಕಗಳ ಉತ್ತಮ ಸ್ಥಿತಿಯ ಪದವಿಯು ಸೇವಕಿಯೆಂದು ಹಿಗ್ಗಿದನು.
ಪದಾರ್ಥ (ಕ.ಗ.ಪ)
ವಿನೋದ-ಉತ್ಸಾಹ,
ವಿಮಲ-ನಿಷ್ಕಳಂಕ,
ಸ್ಥಿತಿ-ಸಂಪತ್ತು,
ಪದವಿ-ಸ್ಥಿತಿ,
ಉಬ್ಬು-ಹಿಗ್ಗು
ವಿಲಾಸಿನಿ -ವೇಶ್ಯೆ
ಮೂಲ ...{Loading}...
ಸುತ ವಿನೋದದ ಸಿರಿಗೆ ಅಮರಾ
ವತಿಯಸಿರಿ ತೊತ್ತೆಂದು ವಿಮಲ
ವ್ರತ ತಪೋಲಕ್ಷ್ಮಿಗೆ ವಿಲಾಸಿನಿ ಮುಕ್ತಿವಧುವೆಂದು
ಯತಿ ಪದಾಂಬುಜ ನಿತ್ಯ ಸೇವಾ
ಸತಿಗೆ ದಾಸಿ ಜಗತ್ರಯಾದಿ
ಸ್ಥಿತಿ ಪದವಿಯೆಂದುಬ್ಬಿದನು ಕಲಿಪಾಂಡು ವಿಪಿನದಲಿ ॥3॥
೦೦೪ ವರುಷ ಹದಿನಾರಾಯ್ತು ...{Loading}...
ವರುಷ ಹದಿನಾರಾಯ್ತು ಧರಣೀ
ಶ್ವರನ ಹಿರಿಯ ಮಗಂಗೆ ಭೀಮಗೆ
ವರುಷ ಹದಿನೈದರ್ಜುನಗೆ ಹದಿನಾಲ್ಕು ಹದಿಮೂರು
ಕಿರಿಯರಿಬ್ಬರಿಗನಿಬರಾ ಮುನಿ
ವರರಿನಧ್ಯಯನಾದಿ ವಿದ್ಯಾ
ನಿರತರಾದರು ಬಂದುದೊಂದು ವಸಂತಮಯ ಸಮಯ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಮಿಗೊಡೆಯನಾದ ಪಾಂಡುವಿನ ಹಿರಿಯ ಮಗನಾದ ಯುಧಿಷ್ಠಿರನಿಗೆ ಹದಿನಾರು ವರ್ಷವಾಯ್ತು. ಭೀಮನಿಗೆ ಹದಿನೈದಾಯ್ತು. ಅರ್ಜುನನಿಗೆ ಹದಿನಾಲ್ಕು, ಕಿರಿಯರಾದ ನಕುಲ ಸಹದೇವರಿಗೆ ಹದಿಮೂರು ವರ್ಷಗಳಾದುವು. ಅಷ್ಟು ಜನರೂ ಮುನಿಶ್ರೇಷ್ಠರಲ್ಲಿ ಅಧ್ಯಯನವೇ ಮೊದಲಾದ ವಿದ್ಯೆಗಳನ್ನು ಕಲಿಯುವುದರಲ್ಲಿ ಆಸಕ್ತರಾಗಿದ್ದರು. ಹೀಗಿರುವಲ್ಲಿ ಒಂದು ವಸಂತ ಕಾಲ ಬಂತು.
ಮೂಲ ...{Loading}...
ವರುಷ ಹದಿನಾರಾಯ್ತು ಧರಣೀ
ಶ್ವರನ ಹಿರಿಯ ಮಗಂಗೆ ಭೀಮಗೆ
ವರುಷ ಹದಿನೈದರ್ಜುನಗೆ ಹದಿನಾಲ್ಕು ಹದಿಮೂರು
ಕಿರಿಯರಿಬ್ಬರಿಗನಿಬರಾ ಮುನಿ
ವರರಿನಧ್ಯಯನಾದಿ ವಿದ್ಯಾ
ನಿರತರಾದರು ಬಂದುದೊಂದು ವಸಂತಮಯ ಸಮಯ ॥4॥
೦೦೫ ತೆಗೆದುದಗ್ಗದ ತಮ್ಪು ...{Loading}...
ತೆಗೆದುದಗ್ಗದ ತಂಪು ನದಿ ಸರ
ಸಿಗಳ ತಡಿಯಲಿ ಹಜ್ಜೆಯಾದುದು
ಹಗಲು ಹಾವಸೆ ಹರಿದು ಹೊಕ್ಕರಿಸಿದುದು ಹಿಮಜಲವ
ಸೊಗಸಿದವು ನೆಳಲುಗಳು ದೂರಕೆ
ಸೆಗಳಿಕೆಗಳೇರಿದವು ತಂಗಾ
ಳಿಗೆ ವಿಹಾರಿಸಿ ಮೈಯ ತೆತ್ತುದು ಕೂಡೆ ಜನನಿಕರ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದುವರೆಗೆ ಅತಿಯಾಗಿ ಹೆಚ್ಚಿದ ತಂಪು ತಗ್ಗಿತು. ನದಿಗಳ ಮತ್ತು ಸರೋವರಗಳ ದಡದಲ್ಲಿ ಜನಗಳ ಓಡಾಟದಿಂದ ಹೆಜ್ಜೆಗಳು ಮೂಡಿದವು. ಪಾಚಿ ನಾಶವಾಯಿತು. ಹಿಮ ನೀರಾಗಿ ಹರಿಯಿತು. ದಾರಿಗರಿಗೆ ದೂರದ ನೆರಳು ಸೊಗಸಾಗಿ ಕಂಡವು. ಸೆಕೆಯೇರಿತು. ಜನಸಮೂಹ ಮೆಲ್ಲಮೆಲ್ಲನೆ ಬೀಸುತ್ತಿದ್ದ ತಂಗಾಳಿಗೆ ಮೈಯೊಡ್ಡಿ ಹಾಯಾಗಿ ವಿಹರಿಸುತ್ತಿದ್ದಿತು.
ಪದಾರ್ಥ (ಕ.ಗ.ಪ)
ತಡಿ-ದಡ,
ಹಾವಸೆ-ಪಾಚಿ,
ಸೆಗಳಿಕೆ-ಸೆಕೆ
ಮೂಲ ...{Loading}...
ತೆಗೆದುದಗ್ಗದ ತಂಪು ನದಿ ಸರ
ಸಿಗಳ ತಡಿಯಲಿ ಹಜ್ಜೆಯಾದುದು
ಹಗಲು ಹಾವಸೆ ಹರಿದು ಹೊಕ್ಕರಿಸಿದುದು ಹಿಮಜಲವ
ಸೊಗಸಿದವು ನೆಳಲುಗಳು ದೂರಕೆ
ಸೆಗಳಿಕೆಗಳೇರಿದವು ತಂಗಾ
ಳಿಗೆ ವಿಹಾರಿಸಿ ಮೈಯ ತೆತ್ತುದು ಕೂಡೆ ಜನನಿಕರ ॥5॥
೦೦೬ ಯೋಗಿಗೆತ್ತಿದ ಖಡುಗಧಾರೆ ...{Loading}...
ಯೋಗಿಗೆತ್ತಿದ ಖಡುಗಧಾರೆ ವಿ
ಯೋಗಿಗೆತ್ತಿದ ಸಬಳವಖಿಳ ವಿ
ರಾಗಿಗಳ ಹೆಡತಲೆಯ ದಡಿ ನೈಷ್ಠಿಕರಿಗಲಗಣಸು
ಆಗಮಿಕರೆದೆ ಶೂಲ ಗರ್ವಿತ
ರಾಗಿಗಳ ಗಳ ಗಾಳವೆಗ್ಗಳ
ಭೋಗಿಗಳ ಕುಲದೈವವೆಸೆದುದು ಕುಸುಮಮಯ ಸಮಯ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ವಸಂತ ಋತುವು, ತಪಸ್ವಿಯ ಮೇಲೆ ಎತ್ತಿದ ಕತ್ತಿಯ ಅಲಗಿನಂತೆಯೂ, ವಿರಹಿಗಳ ಮೇಲೆ ಎತ್ತಿದ ಈಟಿಯಂತೆಯೂ, ಎಲ್ಲ ವಿರಕ್ತರ ಕತ್ತಿನ ಹಿಂಭಾಗದ ಮೇಲೆ ಹಿಡಿದಿರುವ ದಂಡದಂತೆಯೂ, ನಿಷ್ಠಾವಂತರಿಗೆ ಖಡ್ಗದ ಹೊಡೆತದಂತೆಯೂ ವೇದಶಾಸ್ತ್ರ ಬಲ್ಲವರ ಎದೆಗೆ ಹಿಡಿದೆತ್ತಿದ ಶೂಲದಂತೆಯೂ, ಗರ್ವದಿಂದ ಕೂಡಿದ ಅತಿಯಾಗಿ ಮೋಹಗೊಂಡವರ ಕೊರಳಿಗೆ ಹಾಕುವ ಕೊಕ್ಕೆಯಂತೆಯೂ ಹಾಗೂ ಅತಿಯಾದ ಸುಖಾಪೇಕ್ಷಿಗಳಿಗೆ ಕುಲದೈವವಿದ್ದಂತೆಯೂ ಶೋಭಿಸಿತು.
ಪದಾರ್ಥ (ಕ.ಗ.ಪ)
ಗಳಗಾಳ - ಗಂಟಲಗಾಣ
ಧಾರೆ-ಅಲಗು, ಕತ್ತಿಯ ಬಾಯಿ,
ಸಬಳ-ಈಟಿ,
ಹೆಡತಲೆ-ತಲೆಯ ಹಿಂಭಾಗ,
ದಡಿ-ದಂಡ, ಕೋಲು,
ನೈಷ್ಠಿಕ-ನಿಷ್ಠೆಯುಳ್ಳವನು.
ಅಲಗಣಸು-ಖಡ್ಗದ ಹೊಡೆತ,
ಕುಸುಮಮಯ ಸಮಯ-ವಸಂತಋತು,
ಪಾಠಾನ್ತರ (ಕ.ಗ.ಪ)
[ಗೂಗೆಗಳ ನಖಸಾಳವಗ್ಗದ] - [ರಾಗಿಗಳ ಗಳನಾಳವಗ್ಗದ (ಅ)] - [ರಾಗಿಗಳ ಗಳಗಾಣ ವೆಗ್ಗಳ (ಆ) (ಇ)]
(ಅ), (ಆ), (ಇ) ಪಾಠಾಂತರಗಳ ಅರ್ಥವು ಒಂದೇ ಆಗಿದೆ. ನಖಸಾಳ ಎಂಬ ಪದಕ್ಕೆ ಅರ್ಥವಿಲ್ಲದಿರುವುದರಿಂದ ಗಳಗಾಳ/ಗಳಗಾಣ=ಗಂಟಲಗಾಣ ಎಂದಾಗುವುದರಿಂದ, ಬಹುಶಃ ಈ ಪಾಠಾಂತರ ಸರಿಯೆನಿಸುತ್ತದೆ. ಗದ್ಯಾನುವಾದದಲ್ಲಿ ಈ ಪಾಠಾಂತರವನ್ನೇ ಅನುಸರಿಸಿದೆ. ನಖಸಾಳ ಎಂಬ ಪದಕ್ಕೆ ಪ್ರಣಯಿಗಳ ಕತ್ತನ್ನು ಹಿಡಿಯುವ ಕೊಕ್ಕೆಯಂತೆ ಎಂಬ ಅರ್ಥವನ್ನು (ಕುಭಾನಿ-ತಸುಶಾ) ಅದರಲ್ಲಿ ಕೊಟ್ಟಿದೆ. (ನೋ. ಕ.ಗ್ರಂ.ಸಂ. ಪು 130)
ಮೂಲ ...{Loading}...
ಯೋಗಿಗೆತ್ತಿದ ಖಡುಗಧಾರೆ ವಿ
ಯೋಗಿಗೆತ್ತಿದ ಸಬಳವಖಿಳ ವಿ
ರಾಗಿಗಳ ಹೆಡತಲೆಯ ದಡಿ ನೈಷ್ಠಿಕರಿಗಲಗಣಸು
ಆಗಮಿಕರೆದೆ ಶೂಲ ಗರ್ವಿತ
ರಾಗಿಗಳ ಗಳ ಗಾಳವೆಗ್ಗಳ
ಭೋಗಿಗಳ ಕುಲದೈವವೆಸೆದುದು ಕುಸುಮಮಯ ಸಮಯ ॥6॥
೦೦೭ ಮೊರೆವ ತುಮ್ಬಿಯ ...{Loading}...
ಮೊರೆವ ತುಂಬಿಯ ಗಾಯಕರ ನಯ
ಸರದ ಕೋಕಿಲ ಪಾಠಕರ ಬಂ
ಧುರದ ಗಿಳಿಗಳ ಪಂಡಿತರ ಮಾಮರದ ಕರಿಘಟೆಯ
ಅರಳಿದಂಬುಜ ಸತ್ತಿಗೆಯ ಮಂ
ಜರಿಯ ಕುಸುಮದ ಚಾಮರದ ಚಾ
ತುರ ವಸಂತನೃಪಾಲ ನಡೆದನು ಪಾಂಡುವಿನ ಮೇಲೆ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಝೇಂಕರಿಸುವ ದುಂಬಿಗಳೇ ಗಾಯಕರು, ಇಂಪಾದ ದನಿಯಿಂದ ಕುಕಿಲುವ ಕೋಗಿಲೆಗಳೇ ಹೊಗಳುಭಟ್ಟರು, ಚೆಂದದ ಗಿಣಿಗಳೇ ಪಂಡಿತರು, ಮಾವಿನಮರಗಳೇ ಆನೆಗಳ ಹಿಂಡು, ಅರಳಿದ ಕಮಲ ಪುಷ್ಪಗಳೇ ಛತ್ರಿಗಳು, ಗೊಂಚಲು ಹೂವುಗಳೇ ಚಾಮರಗಳು - ಈ ಬಗೆಯ ಬಹು ಮನೋಹರವಾದ ರಾಜವೈಭವದಿಂದ ಚತುರನಾದ ವಸಂತ ನೃಪಾಲನು ಪಾಂಡು ರಾಜನ ಮೇಲೆ ದಂಡೆತ್ತಿ ನಡೆದನು.
ಪದಾರ್ಥ (ಕ.ಗ.ಪ)
ನಯಸರ-ಇಂಪಾದ ದನಿ,
ಪಾಠಕರು-ಹೊಗಳು ಭಟ್ಟರು,
ಕರಿಘಟೆ-ಆನೆಗಳ ಹಿಂಡು,
ಚಾತುರ-ಚತುರ
ಮೂಲ ...{Loading}...
ಮೊರೆವ ತುಂಬಿಯ ಗಾಯಕರ ನಯ
ಸರದ ಕೋಕಿಲ ಪಾಠಕರ ಬಂ
ಧುರದ ಗಿಳಿಗಳ ಪಂಡಿತರ ಮಾಮರದ ಕರಿಘಟೆಯ
ಅರಳಿದಂಬುಜ ಸತ್ತಿಗೆಯ ಮಂ
ಜರಿಯ ಕುಸುಮದ ಚಾಮರದ ಚಾ
ತುರ ವಸಂತನೃಪಾಲ ನಡೆದನು ಪಾಂಡುವಿನ ಮೇಲೆ ॥7॥
೦೦೮ ಫಲಿತಚೂತದ ಬಿಣ್ಪುಗಳ ...{Loading}...
ಫಲಿತಚೂತದ ಬಿಣ್ಪುಗಳ ನೆರೆ
ತಳಿತಶೋಕೆಯ ಕೆಂಪುಗಳ ಪರಿ
ದಳಿತ ಕಮಲದ ಕಂಪುಗಳ ಬನಬನದ ಗುಂಪುಗಳ
ಎಳಲತೆಯ ನುಣ್ಪುಗಳ ನವ ಪರಿ
ಮಳದ ಪವನನ ಸೊಂಪುಗಳ ವೆ
ಗ್ಗಳಿಕೆ ಝಳಪಿಸಿ ಹೊಯ್ದು ಸೆಳೆದುದು ಜನದ ಕಣ್ಮನವ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಣ್ಣುಗಳುಳ್ಳ ಮಾವಿನ ಮರಗಳ ಹೆಚ್ಚಳ, ಅಧಿಕವಾಗಿ ಚಿಗುರಿದ ಅಶೋಕದ ಬಳ್ಳಿಯ ಕೆಂಪು, ಚೆನ್ನಾಗಿ ಅರಳಿದ ಕಮಲದ ಸೌರಭ, ತೋಟಗಳ ಗುಂಪುಗಳು, ಎಳೆಯ ಬಳ್ಳಿಗಳ ಸೌಂದರ್ಯ, ಹೊಸ ಪರಿಮಳವನ್ನು ಹೊತ್ತ ಗಾಳಿಯ ಸೊಂಪು - ಇವುಗಳ ಆಧಿಕ್ಯ ಜನರ ಕಣ್ಮನಗಳನ್ನು ಸೆಳೆಯುತ್ತಿತ್ತು.
ಪದಾರ್ಥ (ಕ.ಗ.ಪ)
ಬಿಣ್ಪು-ಹೆಚ್ಚಳ,
ತಳಿತ-ಚಿಗುರುಗಳಿಂದ ಕೂಡಿದ,
ನೆರೆ-ಅಧಿಕ,
ಕಂಪು-ಸೌರಭ, ಸುವಾಸನೆ,
ಪವನ-ಗಾಳಿ,
ಝಳಪಿಸಿ-ಮಿರುಗಿ,
ವೆಗ್ಗಳಿಕೆ-ಆಧಿಕ್ಯ
ಮೂಲ ...{Loading}...
ಫಲಿತಚೂತದ ಬಿಣ್ಪುಗಳ ನೆರೆ
ತಳಿತಶೋಕೆಯ ಕೆಂಪುಗಳ ಪರಿ
ದಳಿತ ಕಮಲದ ಕಂಪುಗಳ ಬನಬನದ ಗುಂಪುಗಳ
ಎಳಲತೆಯ ನುಣ್ಪುಗಳ ನವ ಪರಿ
ಮಳದ ಪವನನ ಸೊಂಪುಗಳ ವೆ
ಗ್ಗಳಿಕೆ ಝಳಪಿಸಿ ಹೊಯ್ದು ಸೆಳೆದುದು ಜನದ ಕಣ್ಮನವ ॥8॥
೦೦೯ ಪಸರಿಸಿತು ಮಧುಮಾಸ ...{Loading}...
ಪಸರಿಸಿತು ಮಧುಮಾಸ ತಾವರೆ
ಯೆಸಳ ದೋಣಿಯ ಮೇಲೆ ಹಾಯ್ದವು
ಕುಸುಮ ರಸದುಬ್ಬರದ ತೊರೆಯನು ಕೂಡೆ ತುಂಬಿಗಳು
ಒಸರ್ವ ಮಕರಂದದ ತುಷಾರದ
ಕೆಸರೊಳದ್ದವು ಕೊಂಚೆಗಳು ಹಗ
ಲೆಸೆವ ದಂಪತಿವಕ್ಕಿ ಸಾರಸ ರಾಜಹಂಸಗಳು ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಸಂತಕಾಲ ಹರಡಿತು. ಕೂಡಲೆ ತುಂಬಿಗಳು ಹೂವಿನ ರಸದಾಧಿಕ್ಯದ ನದಿ ಪ್ರವಾಹವನ್ನು ತಾವರೆಯ ದಳದ ದೋಣಿಯ ಮೇಲೇರಿ ದಾಟಿದವು. ಕ್ರೌಂಚಪಕ್ಷಿಗಳು, ಹಗಲು ಸಮಯದಲ್ಲಿ ಶೋಭಿಸುವ ಚಕ್ರವಾಕ ಪಕ್ಷಿ, ಹಂಸೆಗಳು, ಅರಸಂಚೆಗಳು ಸ್ರವಿಸುವ ಮಧುವಿನ ಶೀತಳದ ಕೆಸರಿನಲ್ಲಿ ಮುಳುಗಿದವು.
ಪದಾರ್ಥ (ಕ.ಗ.ಪ)
ಮಧುಮಾಸ-ವಸಂತಕಾಲ, ಚೈತ್ರಮಾಸ, ಪಸರಿಸು-ಹರಡು, ಮಕರಂದ-ಮಧು, ತುಷಾರ-ಮಂಜಿನ ಹನಿ, ಕೊಂಚೆ-ಕ್ರೌಂಚ, ದಂಪತಿವಕ್ಕಿ-ಚಕ್ರವಾಕ ಪಕ್ಷಿ,
ಸಾರಸ-ಹಂಸ, ರಾಜಹಂಸ-ಅರಸಂಚೆ.
ಪಾಠಾನ್ತರ (ಕ.ಗ.ಪ)
[ಮಕರಂದದ ತುಷಾರದ] - [ಕರದಂಡದ ಪರಾಗದ (ಅ)]
[ಮಕರಂದದ ಪರಾಗದ (ಆ)]
ಕರದಂಡ - ತಾವರೆ ಪರಾಗ-ಕೇಸರದ ಪುಡಿ- ಈ ಅರ್ಥಗಳಿಂದ ಈ ಪಾಠಾಂತರಗಳೂ ಸಮಂಜಸವೆನಿಸುತ್ತವೆ.
ಮೂಲ ...{Loading}...
ಪಸರಿಸಿತು ಮಧುಮಾಸ ತಾವರೆ
ಯೆಸಳ ದೋಣಿಯ ಮೇಲೆ ಹಾಯ್ದವು
ಕುಸುಮ ರಸದುಬ್ಬರದ ತೊರೆಯನು ಕೂಡೆ ತುಂಬಿಗಳು
ಒಸರ್ವ ಮಕರಂದದ ತುಷಾರದ
ಕೆಸರೊಳದ್ದವು ಕೊಂಚೆಗಳು ಹಗ
ಲೆಸೆವ ದಂಪತಿವಕ್ಕಿ ಸಾರಸ ರಾಜಹಂಸಗಳು ॥9॥
೦೧೦ ಜಗವ ಹೊರೆದುದು ...{Loading}...
ಜಗವ ಹೊರೆದುದು ಬಹಳ ಪರಿಮಳ
ದೊಗುಮಿಗೆಯ ತಂಗಾಳಿ ವನ ವೀ
ಧಿಗಳ ವಳಯವ ಹೊಕ್ಕು ಮರಳಿದುದಿಲ್ಲ ವಿರಹಿಗಳು
ಹೊಗುವ ಕಾಮನ ದಳದ ಚೂಣಿಯ
ಸೊಗಸು ಹೊಯ್ದರೆ ಕೈದುವಿಕ್ಕಿತು
ವಿಗಡ ಮುನಿಜನವೇನನೆಂಬೆನು ನೃಪತಿ ಕೇಳ್ ಎಂದ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಹಳ ಸುವಾಸನೆಯ ಅತಿಶಯವಾದ ತಂಪಾದ ಗಾಳಿ ಜಗತ್ತನ್ನು ವ್ಯಾಪಿಸಿತು. ಈ ಗಾಳಿ ಸುಳಿದ ಉದ್ಯಾನಗಳನ್ನು ಹೊಕ್ಕ ವಿರಹಿಗಳು ಹಿಂದಿರುಗಲಿಲ್ಲ. ಒಳ ನುಗ್ಗುವ ಕಾಮನ ದಳದ ಮುಂಭಾಗದ ಸೊಗಸು ಮೇಲೆರಗಲು ಉಗ್ರ ಮುನಿಜನ ತಮ್ಮ ಆಯುಧಗಳನ್ನು ಕೆಳಗೆ ಹಾಕಿದರು. ಏನೆಂದು ಹೇಳಲಿ ಕೇಳೆಂದು ಜನಮೇಜಯನಿಗೆ ವೈಶಂಪಾಯನರು ಹೇಳಿದರು.
ಪದಾರ್ಥ (ಕ.ಗ.ಪ)
ಹೊರೆ-ವ್ಯಾಪಿಸು,
ಒಗುಮಿಗೆ-ಆಧಿಕ್ಯ,
ಚೂಣಿ-ಮುಂಭಾಗ,
ಕೈದು-ಆಯುಧ,
ವಿಗಡ-ಉಗ್ರ
ಮೂಲ ...{Loading}...
ಜಗವ ಹೊರೆದುದು ಬಹಳ ಪರಿಮಳ
ದೊಗುಮಿಗೆಯ ತಂಗಾಳಿ ವನ ವೀ
ಧಿಗಳ ವಳಯವ ಹೊಕ್ಕು ಮರಳಿದುದಿಲ್ಲ ವಿರಹಿಗಳು
ಹೊಗುವ ಕಾಮನ ದಳದ ಚೂಣಿಯ
ಸೊಗಸು ಹೊಯ್ದರೆ ಕೈದುವಿಕ್ಕಿತು
ವಿಗಡ ಮುನಿಜನವೇನನೆಂಬೆನು ನೃಪತಿ ಕೇಳೆಂದ ॥10॥
೦೧೧ ಆ ವಸನ್ತೊದೊಳೊಮ್ಮೆ ...{Loading}...
ಆ ವಸಂತದೊಳ್ ಒಮ್ಮೆ ಮಾದ್ರೀ
ದೇವಿ ವನದೊಳಗ್ ಆಡುತಿರ್ದಳು
ಹೂವಿನಲಿ ಸರ್ವಾಂಗ ಶೃಂಗಾರದ ವಿಲಾಸದಲಿ
ಆವಳಿವಳೂರ್ವಶಿಯೊ ರಂಭೆಯೊ
ದೇವವಧುಗಳ ಸುಳಿವೊ ತಾನೆನ
ಲಾವ ಚೆಲುವಿಕೆ ಶಿವಶಿವಾಯೆಂದರಸ ಬೆರಗಾದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ವಸಂತದಲ್ಲಿ ಒಮ್ಮೆ ಮಾದ್ರೀ ದೇವಿ ವನದಲ್ಲಿ ಹೂವಿನಲ್ಲಿ ಸರ್ವಾಂಗ ಶೃಂಗಾರ ಮಾಡಿಕೊಂಡು ಒಯ್ಯಾರದಿಂದ ಕುಣಿದಾಡುತ್ತಿದ್ದಳು. ಅವಳನ್ನು ನೋಡಿದ ಅರಸ ಪಾಂಡುವು, “ಯಾರಿವಳು ? ಊರ್ವಶಿಯೋ ? ರಂಭೆಯೋ ? ದೇವವಧುಗಳು ಇಲ್ಲಿ ಬಂದು ಸುಳಿಯುತ್ತಿದ್ದಾರೆಯೋ ಏನೋ ! ಎನ್ನುವಷ್ಟು ಸೌಂದರ್ಯ, ಶಿವಶಿವಾ !” ಎಂದು ಆಶ್ಚರ್ಯಪಟ್ಟನು.
ಪದಾರ್ಥ (ಕ.ಗ.ಪ)
ವಿಲಾಸ-ಒಯ್ಯಾರ,
ಚೆಲುವಿಕೆ-ಸೌಂದರ್ಯ
ಮೂಲ ...{Loading}...
ಆ ವಸಂತದೊಳೊಮ್ಮೆ ಮಾದ್ರೀ
ದೇವಿ ವನದೊಳಗಾಡುತಿರ್ದಳು
ಹೂವಿನಲಿ ಸರ್ವಾಂಗ ಶೃಂಗಾರದ ವಿಲಾಸದಲಿ
ಆವಳಿವಳೂರ್ವಶಿಯೊ ರಂಭೆಯೊ
ದೇವವಧುಗಳ ಸುಳಿವೊ ತಾನೆನ
ಲಾವ ಚೆಲುವಿಕೆ ಶಿವಶಿವಾಯೆಂದರಸ ಬೆರಗಾದ ॥11॥
೦೧೨ ತಾಗಿದವು ಶರನಿಕರ ...{Loading}...
ತಾಗಿದವು ಶರನಿಕರ ಕಾಮನ
ಲಾಗು ವೇಗವದೆಂತುಟೋ ತೆಗೆ
ಹೂಗಣೆಗಳೈದಲ್ಲ ರೋಮಗಳೆಂಟುಕೋಟಿಯಲಿ
ತೂಗಿ ನೆಟ್ಟವು ಕಣೆಗಳೆಂಬವೊ
ಲಾ ಗರುವನಳುಕಿದನು ಪ್ರಜ್ಞಾ
ಸಾಗರಂಗಳು ಮಧ್ಯಕಟಿ ಜಾನ್ವಂಘ್ರಿ ಮಿತವಾಯ್ತು ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಮನ ಬಾಣ ಸಮೂಹದ ವೇಗದ ಕೌಶಲವು ಅದೆಷ್ಟೋ ! ಪಾಂಡುವನ್ನು ತಾಗಿದವು. ಐದು ಹೂಬಾಣಗಳಲ್ಲ. ಎಂಟು ಕೋಟಿ ರೋಮ ಕೂಪಗಳಲ್ಲಿ ಬಾಣಗಳು ನಾಟಿದವೋ ಅನ್ನುವಂತೆ, ಆ ಯೋಗ್ಯನು ಅಂಜಿದನು. ಅವನ ಪ್ರಜ್ಞಾ ಸಾಗರಗಳು ನಡುಮಟ್ಟಕ್ಕೆ, ಮೊಳಕಾಲಿನವರೆಗೆ ಕಡೆಗೆ ಹೆಜ್ಜೆ ಮುಳುಗವಷ್ಟಕ್ಕೆ ಸೀಮಿತವಾಯ್ತು.
ಪದಾರ್ಥ (ಕ.ಗ.ಪ)
ಲಾಗು-ಕೌಶಲ, ಚಳಕ,
ಗರುವ-ಯೋಗ್ಯ,
ಕಟಿ-ನಡು,
ಜಾನು-ಮೊಳಕಾಲು,
ಅಂಘ್ರಿ-ಹೆಜ್ಜೆ
ಮೂಲ ...{Loading}...
ತಾಗಿದವು ಶರನಿಕರ ಕಾಮನ
ಲಾಗು ವೇಗವದೆಂತುಟೋ ತೆಗೆ
ಹೂಗಣೆಗಳೈದಲ್ಲ ರೋಮಗಳೆಂಟುಕೋಟಿಯಲಿ
ತೂಗಿ ನೆಟ್ಟವು ಕಣೆಗಳೆಂಬವೊ
ಲಾ ಗರುವನಳುಕಿದನು ಪ್ರಜ್ಞಾ
ಸಾಗರಂಗಳು ಮಧ್ಯಕಟಿ ಜಾನ್ವಂಘ್ರಿ ಮಿತವಾಯ್ತು ॥12॥
೦೧೩ ಮರೆದು ಹಿನ್ದೆಲ್ಲವನು ...{Loading}...
ಮರೆದು ಹಿಂದೆಲ್ಲವನು ಕುಂತಿಯ
ನರಿಯಲೀಯದೆ ಮೆಲ್ಲಮೆಲ್ಲನೆ
ತುರುಗಿದೆಳಲತೆ ವನದೊಳಾಡುವ ವಧುವ ಸಾರಿದನು
ಸೆರಗ ಹಿಡಿದರೆ ಬೇಡ ಬೇಡೆಂ
ದೆರಗಿದಳು ಚರಣದಲಿ ತರುಣಿಯ
ತುರುಬ ಹಿಡಿದೆತ್ತಿದನು ಹೆಣಗಿದರೊಡನೆ ಝೋಂಪಿಸಿದ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡುವು, ಹಿಂದಿನದೆಲ್ಲವನ್ನು ಮರೆತು, ಕುಂತಿಯು ತಿಳಿಯುವುದಕ್ಕೆ ಅವಕಾಶ ಕೊಡದೆ, ಎಳೆಯ ಬಳ್ಳಿಗಳು ತುಂಬಿರುವ ವನದಲ್ಲಿ ಆಡುತ್ತಿರುವ ಮಾದ್ರಿಯನ್ನು ಸಮೀಪಿಸಿದನು. ಸೆರಗ ಹಿಡಿದರೆ, ‘ಬೇಡ ಬೇಡ’ ಎಂದು ಮಾದ್ರಿ ಪಾಂಡುವಿನ ಪಾದಗಳಿಗೆ ಬಿದ್ದಳು. ಆ ತರುಣಿಯ ತಲೆಯ ಮುಡಿಯನ್ನು ಹಿಡಿದು ಎತ್ತಿದನು. ಆಕೆ ಹಿಡಿತದಿಂದ ತಪ್ಪಿಸಿಕೊಳ್ಳಲು ಪ್ರಯಾಸಪಟ್ಟರೆ ಕೂಡಲೇ ಮೈಮರೆತನು.
ಪದಾರ್ಥ (ಕ.ಗ.ಪ)
ಹೆಣಗು-ಹಿಡಿತದಿಂದ ತಪ್ಪಿಸಿ ಕೊಳ್ಳಲು ಪ್ರಯಾಸಪಡು, ಝೋಂಪಿಸು-ಮೈಮರೆ
ಮೂಲ ...{Loading}...
ಮರೆದು ಹಿಂದೆಲ್ಲವನು ಕುಂತಿಯ
ನರಿಯಲೀಯದೆ ಮೆಲ್ಲಮೆಲ್ಲನೆ
ತುರುಗಿದೆಳಲತೆ ವನದೊಳಾಡುವ ವಧುವ ಸಾರಿದನು
ಸೆರಗ ಹಿಡಿದರೆ ಬೇಡ ಬೇಡೆಂ
ದೆರಗಿದಳು ಚರಣದಲಿ ತರುಣಿಯ
ತುರುಬ ಹಿಡಿದೆತ್ತಿದನು ಹೆಣಗಿದರೊಡನೆ ಝೋಂಪಿಸಿದ ॥13॥
೦೧೪ ಕೊನ್ದೆಲಾ ಕಡುಪಾಪಿ ...{Loading}...
ಕೊಂದೆಲಾ ಕಡುಪಾಪಿ ಮರೆದಾ
ಹಿಂದೆ ಮಾಡಿದ ಕೃತ್ಯವನು ಮುನಿ
ಯೆಂದ ನುಡಿ ಹೊಳ್ಳಹುದೆ ಸುಡು ದುರ್ವಿಷಯಕೆಳಸಿದಲಾ
ಬೆಂದುದೇ ನಿನ್ನರಿವು ಧೈರ್ಯವ
ನಿಂದು ನೀಗಿದೆಯಕಟ ನಿನ್ನಯ
ನಂದನರಿಗಾರುಂಟೆನುತ ಹೆಣಗಿದಳು ಲಲಿತಾಂಗಿ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕೊಂದೆಯಲ್ಲೋ ಕಡುಪಾಪೀ ! ಹಿಂದೆ ಮಾಡಿದ ಕೃತ್ಯವನ್ನು ಮರೆತೆಯಾ ? ಮುನಿಯಾಡಿದ ನುಡಿ ವ್ಯರ್ಥವಾಗುತ್ತದೆಯೆ ? ದುಷ್ಟ ವಿಷಯಕ್ಕೆ ಬಯಸಿದೆಯಲ್ಲ ! ಸುಡು ! ನಿನ್ನ ತಿಳುವಳಿಕೆ ಬೆಂದು ಹೋಯಿತೇ? ಧೈರ್ಯವನ್ನು ಇಂದು ಕಳೆದುಕೊಂಡೆಯಲ್ಲಾ ! ಅಯ್ಯೋ, ನಿನ್ನಯ ಮಕ್ಕಳಿಗೆ ಯಾರಿದ್ದಾರೆ” ಎಂದು ನುಡಿಯತ್ತಲೆ (ಬಿಡಿಸಿಕೊಳ್ಳಲು) ಸುಂದರಳಾದ ಮಾದ್ರಿ ಪ್ರಯತ್ನಿಸುತ್ತಿದ್ದಳು.
ಪದಾರ್ಥ (ಕ.ಗ.ಪ)
ಹೊಳ್ಳು-ವ್ಯರ್ಥ,
ಎಳಸಿದೆ-ಬಯಸಿದೆ,
ಅರಿವು-ತಿಳಿವಳಿಕೆ
ಮೂಲ ...{Loading}...
ಕೊಂದೆಲಾ ಕಡುಪಾಪಿ ಮರೆದಾ
ಹಿಂದೆ ಮಾಡಿದ ಕೃತ್ಯವನು ಮುನಿ
ಯೆಂದ ನುಡಿ ಹೊಳ್ಳಹುದೆ ಸುಡು ದುರ್ವಿಷಯಕೆಳಸಿದಲಾ
ಬೆಂದುದೇ ನಿನ್ನರಿವು ಧೈರ್ಯವ
ನಿಂದು ನೀಗಿದೆಯಕಟ ನಿನ್ನಯ
ನಂದನರಿಗಾರುಂಟೆನುತ ಹೆಣಗಿದಳು ಲಲಿತಾಂಗಿ ॥14॥
೦೧೫ ಕೊಮ್ಬುದೇ ಬಯಲರಿತಗಿರಿತದ ...{Loading}...
ಕೊಂಬುದೇ ಬಯಲರಿತಗಿರಿತದ
ಡೊಂಬಿನಾಗಮ ನೀತಿಗೀತಿಯ
ಶಂಬರಾರಿಯ ಸಬಳವಲ್ಲಾ ಬೇಗೆ ಮೂಡಿದುದು
ಬೆಂಬಿಡದೆ ಮರಳಿದೊಡೆ ಮರುಮೊನೆ
ಗೊಂಬುದೆಂಬವೊಲವನಿಪತಿಯೊ
ತ್ತಂಬರದಿ ಹಿಡಿದಬಲೆಯನು ಕೂಡಿದನು ಕಳವಳಿಸಿ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಮಾಂಧನಾಗಿ ಮನಸ್ಸು ಶೂನ್ಯವಾಗಿರುವಾಗ ವಿವೇಕ ಅವಿವೇಕವನ್ನು ತಂದುಕೊಳ್ಳುತ್ತದೆಯೇ? ತೋರಿಕೆಯ ಆಗಮವು ನೀತಿಗೀತಿಯನ್ನು ಲೆಕ್ಕಿಸುತ್ತದೆಯೆ ? ಶಂಬರನ ಶತ್ರುವಾದ ಮನ್ಮಥನ ಈಟಿಯಲ್ಲವೇ ಅದು. ಪಾಂಡುವಿನ ಮೈಯಲ್ಲಿ ತಾಪ ಮೂಡಿರುವುದು. ಹಿಂಬಾಲಿಸಿ ತಿರುಗಿದೊಡೆ ಇನ್ನೊಂದು ತುದಿಯಿಂದ ಕೊಳ್ಳುವಂತೆ, ಪಾಂಡು ರಾಜನು ಬಲಾತ್ಕಾರದಿಂದ ಮಾದ್ರಿಯನ್ನು ಹಿಡಿದು ತಳಮಳಿಸಿ ಅವಳೊಂದಿಗೆ ಒಂದಾದನು.
ಪದಾರ್ಥ (ಕ.ಗ.ಪ)
ಬಯಲು-ಶೂನ್ಯ
ಡೊಂಬು-ತೋರಿಕೆ,
ಶಂಬರಾರಿ-ಮನ್ಮಥ,
ಮರುಮೊನೆ-ಇನ್ನೊಂದು ತುದಿ,
ಒತ್ತಂಬರ-ಬಲಾತ್ಕಾರ
ಟಿಪ್ಪನೀ (ಕ.ಗ.ಪ)
ಶಂಬರಾರಿ - ಶ್ರೀಕೃಷ್ಣನಿಂದ ರುಕ್ಮಣಿಯಲ್ಲಿ ಜನಿಸಿದವ ಪ್ರದ್ಯುಮ್ನ. ಮನ್ಮಥನ ಅವತಾರ. ಸನತ್ಕುಮಾರಾಂಶ ಸಂಭೂತ. ಈತ ಜನಿಸಿದ ಕೂಡಲೇ ಶಂಬರಾಸುರ ಮಾಯಾರೂಪದಿಂದ ಬಂದು ಮಗುವನ್ನು ಎತ್ತಿಕೊಂಡು ಹೋಗಿ ಸಮುದ್ರದಲ್ಲಿ ಹಾಕಿದ. ಆ ಮಗುವನ್ನು ನುಂಗಿದ ಮೀನನ್ನು ಬೆಸ್ತರು ಹಿಡಿದು ಶಂಬರಾಸುರನ ಅರಮನೆಗೆ ಒಪ್ಪಿಸಿದಾಗ, ಅಡುಗೆಯವರು ಕೊಯ್ಯಲಾಗಿ ಅದರಲ್ಲಿ ಕಂಡು ಬಂದ ಮಗುವನ್ನು ರಾಣಿ ಮಾಯಾವತಿಗೆ ಕೊಟ್ಟರು. ಅಲ್ಲಿಗೆ ಬಂದ ನಾರದರು ಈ ಮಗುವೇ ಶಂಬರನನ್ನು ಕೊಲ್ಲುವುದೆಂದು ಹೇಳಿದರು. ಮಾಯಾವತಿ ಆ ಮಗುವನ್ನು ಬೆಳೆಸಿ, ಮಹಾಮಾಯಾ ವಿದ್ಯೆಯನ್ನು ಉಪದೇಶಿಸಿ, ಆತನ ಮೂಲಕ ಶಂಬರನನ್ನು ಕೊಲ್ಲಿಸಿ ಅವನನ್ನು ರುಕ್ಮಿಣಿಗೆ ಒಪ್ಪಿಸಿದಳು. ಆದ್ದರಿಂದ ಮನ್ಮಥನಿಗೆ ಶಂಬರಾರಿ ಎಂಬ ಹೆಸರು.
ಮೂಲ ...{Loading}...
ಕೊಂಬುದೇ ಬಯಲರಿತಗಿರಿತದ
ಡೊಂಬಿನಾಗಮ ನೀತಿಗೀತಿಯ
ಶಂಬರಾರಿಯ ಸಬಳವಲ್ಲಾ ಬೇಗೆ ಮೂಡಿದುದು
ಬೆಂಬಿಡದೆ ಮರಳಿದೊಡೆ ಮರುಮೊನೆ
ಗೊಂಬುದೆಂಬವೊಲವನಿಪತಿಯೊ
ತ್ತಂಬರದಿ ಹಿಡಿದಬಲೆಯನು ಕೂಡಿದನು ಕಳವಳಿಸಿ ॥15॥
೦೧೬ ಆ ಸುಖದ ...{Loading}...
ಆ ಸುಖದ ಝೋಂಪಿನಲಿ ಮೈಮರೆ
ದೋಸರಿಸಿದುದು ವದನ ಕಂಗಳು
ಪೈಸರಿಸಿದವು ತೆಕ್ಕೆ ಸಡಲಿತು ದೇಹ ಬಾರಿಸಿತು
ಸೂಸಿದುದು ನಿಟ್ಟುಸುರು ರಾಣೀ
ವಾಸದುರದಲಿ ಕದಪನಿಟ್ಟು ಮ
ಹೀಶನೊರಗಿದ ಹದನ ಕಂಡಳು ಕಾಂತೆ ಭೀತಿಯಲಿ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಸುಖದ ಆವರಿಸುವಿಕೆಯಲ್ಲಿ ಮೈ ಮರೆತನು, ಮುಖವಾಲಿತು. ಕಣ್ಣುಗಳು ಮುಚ್ಚಿಕೊಂಡವು. ಮಾದ್ರಿಯ ಆಲಿಂಗನ ಸಡಿಲಿಸಿತು. ದೇಹ ಬಹಳ ಭಾರವಾಯ್ತು ನಿಟ್ಟುಸಿರು ಸೂಸಿತು. ಮಹೀಶನು ಮಡದಿಯ ಎದೆಯ ಮೇಲೆ ಕೆನ್ನೆಯನ್ನಿಟ್ಟು ಹಾಗೆಯೇ ಮಲಗಿದನು. ಅರಸನ ರೀತಿಯನ್ನು ಪ್ರಿಯೆಯಾದ ಮಾದ್ರಿಯು ಭಯದಿಂದ ನೋಡಿದಳು.
ಪದಾರ್ಥ (ಕ.ಗ.ಪ)
ಝೋಂಪು-ಆವರಿಸುವಿಕೆ,
ಓಸರಿಸು-ಓಲು,
ತೆಕ್ಕೆ-ಆಲಿಂಗನ,
ಉರ-ಎದೆ,
ಕದಪು-ಕೆನ್ನೆ
ಮೂಲ ...{Loading}...
ಆ ಸುಖದ ಝೋಂಪಿನಲಿ ಮೈಮರೆ
ದೋಸರಿಸಿದುದು ವದನ ಕಂಗಳು
ಪೈಸರಿಸಿದವು ತೆಕ್ಕೆ ಸಡಲಿತು ದೇಹ ಬಾರಿಸಿತು
ಸೂಸಿದುದು ನಿಟ್ಟುಸುರು ರಾಣೀ
ವಾಸದುರದಲಿ ಕದಪನಿಟ್ಟು ಮ
ಹೀಶನೊರಗಿದ ಹದನ ಕಂಡಳು ಕಾಂತೆ ಭೀತಿಯಲಿ ॥16॥
೦೧೭ ಅಕಟ ಪಾಣ್ಡು ...{Loading}...
ಅಕಟ ಪಾಂಡು ಮಹೀಶ ವಿಷ ಕ
ನ್ನಿಕೆಯನೆನ್ನನು ಮುಟ್ಟಿದೈ ಬೇ
ಡಕಟ ಕೆಡಿಸದಿರೆನ್ನೆನೇ ತಾನರಿಯನೇ ಹದನ
ಪ್ರಕಟ ಕುರುಕುಲ ತಿಲಕರೀ ಬಾ
ಲಕರನಾರಿಗೆ ಕೊಟ್ಟೆ ತನ್ನೊಡ
ನಕಟ ಮುನಿದೈ ಮಾತನಾಡೆಂದೊರಲಿದಳು ಮಾದ್ರಿ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಯ್ಯೋ, ಪಾಂಡು ಮಹೀಶಾ, ವಿಷ ಕನ್ನಿಕೆಯಾದ ನನ್ನನ್ನು ಮುಟ್ಟಿದೆಯಲ್ಲಾ ? ಬೇಡ, ಅಯ್ಯೋ ! ಕೆಡಿಸಬೇಡ ! ಎಂದು ತಡೆಯಲಿಲ್ಲವೆ ನಾನು ! ಪರಿಣಾಮ ಏನೆಂದು ತಿಳಿಯದವಳೇ ನಾನು ! ಕುರುಕಲ ತಿಲಕರಾದ ಈ ಬಾಲಕರನ್ನು ಯಾರಿಗೆ ಕೊಟ್ಟೆ ? ನನ್ನೊಡನೆ ಕೋಪಿಸಿಕೊಂಡೆಯಾ ? ಮಾತಾಡು” ಎಂದು ಮಾದ್ರಿ ಗೋಳಾಡಿದಳು.
ಪದಾರ್ಥ (ಕ.ಗ.ಪ)
ವಿಷಕನ್ನಿಕೆ-ತನ್ನ ಸ್ಪರ್ಶದಿಂದ ಇತರರಿಗೆ ಸಾವುಂಟುಮಾಡುವ ಹೆಂಗಸು,
ಮುನಿ-ಕೋಪಿಸಿಕೊ,
ಒರಲು-ಗೋಳಾಡು
ಮೂಲ ...{Loading}...
ಅಕಟ ಪಾಂಡು ಮಹೀಶ ವಿಷ ಕ
ನ್ನಿಕೆಯನೆನ್ನನು ಮುಟ್ಟಿದೈ ಬೇ
ಡಕಟ ಕೆಡಿಸದಿರೆನ್ನೆನೇ ತಾನರಿಯನೇ ಹದನ
ಪ್ರಕಟ ಕುರುಕುಲ ತಿಲಕರೀ ಬಾ
ಲಕರನಾರಿಗೆ ಕೊಟ್ಟೆ ತನ್ನೊಡ
ನಕಟ ಮುನಿದೈ ಮಾತನಾಡೆಂದೊರಲಿದಳು ಮಾದ್ರಿ ॥17॥
೦೧೮ ಏನಿದೆತ್ತಣ ರಭಸ ...{Loading}...
ಏನಿದೆತ್ತಣ ರಭಸ ಮಾದ್ರೀ
ಮಾನಿನಿಯೊ ಹಾ ರಾಯನಾವೆಡೆ
ಹಾನಿ ಹಿರಿದುಂಟರಿವೆನಂಗಸ್ಫುರಿತ ಶಕುನದಲಿ
ಏನು ಮಾರಿಯೊ ಶಿವಶಿವಾಯೆನು
ತಾ ನಿತಂಬಿನಿ ಗಾಢ ಗತಿಯಲಿ
ಕಾನನದೊಳೈತಂದಳಕ್ಕೆಯ ಸರದ ಬಳಿವಿಡಿದು ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಳುವಿನ ದನಿಯನ್ನು ಅನುಸರಿಸಿ ಸುಂದರಿ ಕುಂತಿ “ಏನಿದು ? ಎಲ್ಲಿಯ ಕೂಗು ? ಮಾದ್ರಿಯದೋ ? ಹಾ ! ಪಾಂಡು ಯಾವ ಕಡೆಯಲ್ಲಿದ್ದಾನೆ ? ದೇಹ ಅದುರುತ್ತಿದೆ. ಈ ಶಕುನದಿಂದ ದೊಡ್ಡ ಕೆಡಕು ಉಂಟಾಗುವಂತೆ ತಿಳಿಯುತ್ತಿದ್ದೇನೆ. ಏನು ಮಾರಿಯೋ ? ಶಿವಶಿವಾ” ಎನುತ್ತಾ ಅತಿವೇಗದಲ್ಲಿ ಕಾಡಿನಲ್ಲಿ ಬಂದಳು.
ಪದಾರ್ಥ (ಕ.ಗ.ಪ)
ನಿತಂಬಿನಿ-ಸುಂದರಿ,
ಅಕ್ಕೆಯ ಸರ-ಅಳುವಿನ ದನಿ,
ಬಳಿವಿಡಿ-ಅನುಸರಿಸು
ಮೂಲ ...{Loading}...
ಏನಿದೆತ್ತಣ ರಭಸ ಮಾದ್ರೀ
ಮಾನಿನಿಯೊ ಹಾ ರಾಯನಾವೆಡೆ
ಹಾನಿ ಹಿರಿದುಂಟರಿವೆನಂಗಸ್ಫುರಿತ ಶಕುನದಲಿ
ಏನು ಮಾರಿಯೊ ಶಿವಶಿವಾಯೆನು
ತಾ ನಿತಂಬಿನಿ ಗಾಢ ಗತಿಯಲಿ
ಕಾನನದೊಳೈತಂದಳಕ್ಕೆಯ ಸರದ ಬಳಿವಿಡಿದು ॥18॥
೦೧೯ ಕಣ್ಡಳವರಿಬ್ಬರನು ಧೊಪ್ಪನೆ ...{Loading}...
ಕಂಡಳವರಿಬ್ಬರನು ಧೊಪ್ಪನೆ
ದಿಂಡುಗೆಡೆದಳು ಮೂರ್ಛೆಯಲಿ ಮರೆ
ಗೊಂಡುದೆಚ್ಚರು ಮಾದ್ರಿ ಮಿಗೆ ಹಲುಬಿದಳು ಗೋಳಿಡುತ
ಚಂಡಿಕೆಗಳಲ್ಲಾಡೆ ಹರಿದರು
ಪಾಂಡುನಂದನರೈವರೀತನ
ಕಂಡು ಹಾಯೆಂದೊರಲಿ ಹೊರಳಿದರವನಿಪನ ಮೇಲೆ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುಂತಿ ಪಾಂಡು ಮಾದ್ರಿಯರಿಬ್ಬರನ್ನೂ ನೋಡಿದಳು. ಧೊಪ್ಪೆಂದು ಕೆಳಗೆ ಉರುಳಿದಳು. ಎಚ್ಚರ ತಪ್ಪಿ ಮೂರ್ಛೆ ಹೋದಳು. ಮಾದ್ರಿಯು ಮತ್ತೂ ಹೆಚ್ಚಾಗಿ ಪ್ರಲಾಪಿಸಿ ಗೋಳಾಡಿದಳು. ಪಾಂಡು ನಂದನರೈವರೂ ತಲೆಯ ಜುಟ್ಟು ಅಲ್ಲಾಡುತ್ತಿರಲು ಓಡೋಡಿ ಬಂದರು. ಈತನನ್ನು ನೋಡಿ ಹಾ ! ಎಂದು ಒರಲಿ ಮಹಾರಾಜನ ಮೇಲೆ ಬಿದ್ದು ಹೊರಳಾಡಿದರು.
ಪದಾರ್ಥ (ಕ.ಗ.ಪ)
ದಿಂಡುಗೆಡೆದಳು-ಉರುಳಿದಳು,
ಚಂಡಿಕೆ-ತಲೆಯ ಜುಟ್ಟು
ಮೂಲ ...{Loading}...
ಕಂಡಳವರಿಬ್ಬರನು ಧೊಪ್ಪನೆ
ದಿಂಡುಗೆಡೆದಳು ಮೂರ್ಛೆಯಲಿ ಮರೆ
ಗೊಂಡುದೆಚ್ಚರು ಮಾದ್ರಿ ಮಿಗೆ ಹಲುಬಿದಳು ಗೋಳಿಡುತ
ಚಂಡಿಕೆಗಳಲ್ಲಾಡೆ ಹರಿದರು
ಪಾಂಡುನಂದನರೈವರೀತನ
ಕಂಡು ಹಾಯೆಂದೊರಲಿ ಹೊರಳಿದರವನಿಪನ ಮೇಲೆ ॥19॥
೦೨೦ ಬೊಪ್ಪ ದೇಶಿಗರಾದೆವೈ ...{Loading}...
ಬೊಪ್ಪ ದೇಶಿಗರಾದೆವೈ ವಿಧಿ
ತಪ್ಪಿಸಿತಲಾ ನಮ್ಮ ಭಾಗ್ಯವ
ನೊಪ್ಪಿಸಿದೆ ನೀನಾರಿಗೆಮ್ಮನು ಪೂರ್ವಕಾಲದಲಿ
ಮುಪ್ಪಿನಲಿ ನಿನಗೀಯವಸ್ಥೆಯಿ
ದೊಪ್ಪುದೇ ಹೇರಡವಿಯಲಿ ಮಲ
ಗಿಪ್ಪುದೇಕೆಂದೊರಲಿ ಮರುಗಿದರಾ ಕುಮಾರಕರು ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಪ್ಪಾ ! ನಾವು ಪರದೇಶಿಗಳಾದೆವಲ್ಲವೇ ! ವಿಧಿ ನಮ್ಮ ಭಾಗ್ಯವನ್ನು ತಪ್ಪಿಸಿತಲ್ಲಾ ! ನಮ್ಮನ್ನು ನೀನು ಯಾರಿಗೆ ಮೊದಲು ಒಪ್ಪಿಸಿದೆ ? ಮುದಿತನದಲ್ಲಿ ನಿನಗೆ ಈ ಅವಸ್ಥೆ ಒಪ್ಪುತ್ತದೆಯೇ ? ಈ ದೊಡ್ಡ ಕಾಡಿನಲ್ಲಿ ಏತಕ್ಕೆ ಮಲಗಿದ್ದೀಯೇ ?” ಎಂದು ಆ ಮಕ್ಕಳು ಗೋಳಾಡಿ ದುಃಖಪಟ್ಟರು.
ಪದಾರ್ಥ (ಕ.ಗ.ಪ)
ದೇಶಿಗರು-ಪರದೇಶಿಗಳು,
ಹೇರಡವಿ-ದೊಡ್ಡಕಾಡು
ಮೂಲ ...{Loading}...
ಬೊಪ್ಪ ದೇಶಿಗರಾದೆವೈ ವಿಧಿ
ತಪ್ಪಿಸಿತಲಾ ನಮ್ಮ ಭಾಗ್ಯವ
ನೊಪ್ಪಿಸಿದೆ ನೀನಾರಿಗೆಮ್ಮನು ಪೂರ್ವಕಾಲದಲಿ
ಮುಪ್ಪಿನಲಿ ನಿನಗೀಯವಸ್ಥೆಯಿ
ದೊಪ್ಪುದೇ ಹೇರಡವಿಯಲಿ ಮಲ
ಗಿಪ್ಪುದೇಕೆಂದೊರಲಿ ಮರುಗಿದರಾ ಕುಮಾರಕರು ॥20॥
೦೨೧ ಕೇಳಿ ಹರಿತನ್ದುದು ...{Loading}...
ಕೇಳಿ ಹರಿತಂದುದು ಮುನಿವ್ರಜ
ವೇಳಿಗೆಯ ಕಡು ಶೋಕರಸದ ಛ
ಡಾಳವನು ನಿಲಿಸಿದರು ಸಂತೈಸಿಯೆ ಕುಮಾರಕರ
ಆಲಿಸಿದಳಾ ಕುಂತಿ ಮೂರ್ಛಾ
ವ್ಯಾಳವಿಷ ಪರಿಹರಿಸಿ ಧರಣೀ
ಪಾಲಕನ ನೋಡಿದಳು ಬಿಸುಟೈ ತನ್ನನಿಂದೆನುತ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಗೋಳಿನ ದನಿಯನ್ನು ಕೇಳಿ ಮುನಿ ಸಮೂಹ ಬಂದಿತು. ಕುಮಾರಕರನ್ನು ಸಮಾಧಾನ ಮಾಡಿ, ಅವರ ಶೋಕರಸದ ಹೆಚ್ಚಳವನ್ನು ತಡೆದು ನಿಲ್ಲಿಸಿದರು. ಅಷ್ಟರಲ್ಲಿ ಮೂರ್ಛೆಯೆಂಬ ಹಾವಿನ ವಿಷವನ್ನು ಪರಿಹರಿಸಿಕೊಂಡು ಎಚ್ಚೆತ್ತ ಕುಂತಿ ಅದೆಲ್ಲವನ್ನೂ ಕೇಳಿ “ನನ್ನನ್ನು ಬಿಸುಡಿ ಬಿಟ್ಟೆಯಾ ?” ಎಂದು ಪಾಂಡುವನ್ನು ನೋಡಿದಳು.
ಪದಾರ್ಥ (ಕ.ಗ.ಪ)
ವ್ಯಾಳವಿಷ-ಹಾವಿನವಿಷ,
ಛಡಾಳ-ಆಧಿಕ್ಯ, ಹೆಚ್ಚಳ
ಮೂಲ ...{Loading}...
ಕೇಳಿ ಹರಿತಂದುದು ಮುನಿವ್ರಜ
ವೇಳಿಗೆಯ ಕಡು ಶೋಕರಸದ ಛ
ಡಾಳವನು ನಿಲಿಸಿದರು ಸಂತೈಸಿಯೆ ಕುಮಾರಕರ
ಆಲಿಸಿದಳಾ ಕುಂತಿ ಮೂರ್ಛಾ
ವ್ಯಾಳವಿಷ ಪರಿಹರಿಸಿ ಧರಣೀ
ಪಾಲಕನ ನೋಡಿದಳು ಬಿಸುಟೈ ತನ್ನನಿಂದೆನುತ ॥21॥
೦೨೨ ಅರಸ ತನಗರುಹದೆ ...{Loading}...
ಅರಸ ತನಗರುಹದೆ ಸುರಸ್ತ್ರೀ
ಯರಿಗೆ ಹರಿದೈ ನಿನ್ನ ವಧುಗಳ
ತುರುಬ ಕೊಯ್ಸುವೆನವರ ತೊತ್ತಿರ ಮಾಡುವೆನು ತನಗೆ
ಅರಸಿ ನೀನೀ ಮಕ್ಕಳನು ಸಂ
ವರಿಸಿ ಕೊಂಡಿಹುದೆಂದು ಮಾದ್ರಿಯ
ಕರವ ಹಿಡಿದರೆ ಕುಂತಿಗೆಂದಳು ಕಾಂತೆ ವಿನಯದಲಿ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರಸಾ ನನಗೆ ತಿಳಿಸದೆಯೇ ದೇವತಾಸ್ತ್ರೀಯರ ಬಳಿಗೆ ಓಡಿದೆಯಾ ? ಆ ಸುರ ವಧುಗಳ ಮುಡಿಯನ್ನು ಕತ್ತರಿಸುವೆನು. ಅವರನ್ನು ನನಗೆ ದಾಸಿಯರಾಗುವಂತೆ ಮಾಡುವೆನು”, ಎಂದು ಕುಂತಿ ನಿಶ್ಚಯಿಸಿ, “ಅರಸೀ, ನೀನು ಈ ಮಕ್ಕಳನ್ನು ರಕ್ಷಿಸಿಕೊಂಡಿರುವುದು” ಎಂದು ಮಾದ್ರಿಯ ಕೈಹಿಡಿದುಕೊಂಡರೆ, ಮಾದ್ರಿ ವಿನಯದಿಂದ ಕುಂತಿಗೆ ಹೀಗೆ ಹೇಳಿದಳು.
ಪದಾರ್ಥ (ಕ.ಗ.ಪ)
ತುರುಬು-ಮುಡಿ,
ತೊತ್ತಿರು-ದಾಸಿ,
ಸಂವರಿಸು-ರಕ್ಷಿಸು.
ಮೂಲ ...{Loading}...
ಅರಸ ತನಗರುಹದೆ ಸುರಸ್ತ್ರೀ
ಯರಿಗೆ ಹರಿದೈ ನಿನ್ನ ವಧುಗಳ
ತುರುಬ ಕೊಯ್ಸುವೆನವರ ತೊತ್ತಿರ ಮಾಡುವೆನು ತನಗೆ
ಅರಸಿ ನೀನೀ ಮಕ್ಕಳನು ಸಂ
ವರಿಸಿ ಕೊಂಡಿಹುದೆಂದು ಮಾದ್ರಿಯ
ಕರವ ಹಿಡಿದರೆ ಕುಂತಿಗೆಂದಳು ಕಾಂತೆ ವಿನಯದಲಿ ॥22॥
೦೨೩ ಮರುಳೆಲೌ ನೀವಕ್ಕ ...{Loading}...
ಮರುಳೆಲೌ ನೀವಕ್ಕ ನಿಮ್ಮೈ
ವರು ಕುಮಾರರು ನಿಮ್ಮ ಕೈಯೆಡೆ
ಧರಣಿಪತಿ ನಿಡು ನಿದ್ರೆಗೈದನು ನನ್ನ ತೋಳಿನಲಿ
ಸುರವಧುಗಳೊಡನಿರಲಿ ನಿನ್ನಯ
ಹರಿಬವೆನ್ನದು ನೋಡು ತನ್ನಯ
ಪರಿಯನೀತನ ನಿನಗೆ ಕೊಡೆನೆಂದಂಘ್ರಿಗೆರಗಿದಳು ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಕ್ಕಾ ! ನೀವು ಮರುಳಲ್ಲವೇ ! ನಿಮ್ಮ ಈ ಐವರು ಕುಮಾರರು ನಿಮ್ಮ ಕೈಗೊಪ್ಪಿಸಿದುದು. ಮಹಾರಾಜನು ನನ್ನ ತೋಳಿನಲ್ಲಿ ಮರಣ ಹೊಂದಿದನು. ಅವನು ಸುರವಧುಗಳೊಡನೆ ಇರಲಿ. ನಿನ್ನ ಕಾರ್ಯ ನನ್ನದು. ನನ್ನ ರೀತಿಯನ್ನು ನೋಡು. ಈತನನ್ನು ನಿನಗೆ ಕೊಡುವುದಿಲ್ಲ” ಎಂದು ಕುಂತಿಯ ಪಾದಕ್ಕೆ ಎರಗಿದಳು.
ಪದಾರ್ಥ (ಕ.ಗ.ಪ)
ಕೈಯೆಡೆ-ಕೈಗೊಪ್ಪಿಸಿದುದು, ನ್ಯಾಸ,
ನಿಡುನಿದ್ರೆ-ಮರಣ, ಸಾವು,
ಹರಿಬ-ಕಾರ್ಯ, ಕರ್ತವ್ಯ,
ಅಂಘ್ರಿ-ಚರಣ, ಪಾದ,
ಮೂಲ ...{Loading}...
ಮರುಳೆಲೌ ನೀವಕ್ಕ ನಿಮ್ಮೈ
ವರು ಕುಮಾರರು ನಿಮ್ಮ ಕೈಯೆಡೆ
ಧರಣಿಪತಿ ನಿಡು ನಿದ್ರೆಗೈದನು ನನ್ನ ತೋಳಿನಲಿ
ಸುರವಧುಗಳೊಡನಿರಲಿ ನಿನ್ನಯ
ಹರಿಬವೆನ್ನದು ನೋಡು ತನ್ನಯ
ಪರಿಯನೀತನ ನಿನಗೆ ಕೊಡೆನೆಂದಂಘ್ರಿಗೆರಗಿದಳು ॥23॥
೦೨೪ ಮುನಿಗಳೀಕೆಯ ತಿಳುಹಿ ...{Loading}...
ಮುನಿಗಳೀಕೆಯ ತಿಳುಹಿ ಮಾದ್ರಿಗೆ
ಜನಪತಿಯ ಸಹಗಮನದಲಿ ಮತ
ವೆನಿಸಿ ಶವಸಂಸ್ಕಾರವನು ವೈದಿಕ ವಿಧಾನದಲಿ
ಮುನಿಗಳೇ ಮಾಡಿದರು ಮಾದ್ರೀ
ವನಿತೆ ತನ್ನ ಕುಮಾರರಿಬ್ಬರ
ತನುಜ ನೀ ಸಲಹೆಂದು ಕೊಟ್ಟಳು ಧರ್ಮಜನ ಕರೆದು ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುನಿಗಳು ಕುಂತಿಗೆ ತಿಳಿ ಹೇಳಿ , ಮಾದ್ರಿಗೆ ಪಾಂಡು ಮಹಾರಾಜನೊಂದಿಗೆ ಸಹಗಮನಕ್ಕೆ ತಮ್ಮ ಒಪ್ಪಿಗೆ ಇದೆ ಎನ್ನುವ ಹಾಗೆ ಮಾಡಿ ವೈದಿಕ ವಿಧಾನದಿಂದ ಮಹಾರಾಜನ ಶವಸಂಸ್ಕಾರವನ್ನು ಮುನಿಗಳೇ ಮಾಡಿದರು. ಮಾದ್ರೀ ಧರ್ಮರಾಜನನ್ನು ಹತ್ತಿರ ಕರೆದು. “ಮಗನೇ ನನ್ನ ಈ ಇಬ್ಬರು ಮಕ್ಕಳನ್ನು ಕಾಪಾಡು” ಎಂದು ಅವನಿಗೊಪ್ಪಿಸಿದಳು.
ಪದಾರ್ಥ (ಕ.ಗ.ಪ)
ತಿಳುಹು-ತಿಳಿವು
ಸಲಹು-ಕಾಪಾಡು
ಮೂಲ ...{Loading}...
ಮುನಿಗಳೀಕೆಯ ತಿಳುಹಿ ಮಾದ್ರಿಗೆ
ಜನಪತಿಯ ಸಹಗಮನದಲಿ ಮತ
ವೆನಿಸಿ ಶವಸಂಸ್ಕಾರವನು ವೈದಿಕ ವಿಧಾನದಲಿ
ಮುನಿಗಳೇ ಮಾಡಿದರು ಮಾದ್ರೀ
ವನಿತೆ ತನ್ನ ಕುಮಾರರಿಬ್ಬರ
ತನುಜ ನೀ ಸಲಹೆಂದು ಕೊಟ್ಟಳು ಧರ್ಮಜನ ಕರೆದು ॥24॥
೦೨೫ ಪತಿಯ ಸಹಗಮನದಲಿ ...{Loading}...
ಪತಿಯ ಸಹಗಮನದಲಿ ಮಾದ್ರೀ
ಸತಿ ಶರೀರವ ಬಿಟ್ಟಳೈವರು
ಸುತರು ಸಹಿತೀ ಕುಂತಿ ಮಿಂದು ಪರೇತ ಕೃತ್ಯವನು
ಶ್ರುತಿ ವಿಧಾನದೊಳಖಿಳ ಮುನಿ ಸಂ
ತತಿಗಳನು ಮುಂದಿಟ್ಟು ಮಾಡಿಸಿ
ಸುತರ ಪಾಲಿಸುತಿರ್ದಳಾ ಶತಶೃಂಗ ಶೈಲದಲಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಮೇಲೆ ಪತಿಯೊಡನೆ ಸಹಗಮನ ಮಾಡಿ ಮಾದ್ರೀಸತಿ ಶರೀರವನ್ನು ಬಿಟ್ಟಳು. ಸುತರೊಡನೆ ಕುಂತಿ ಮಿಂದು, ಮುನಿ ಸಮೂಹವನ್ನು ಮುಂದಿಟ್ಟುಕೊಂಡು, ವೇದದಲ್ಲಿನ ಕ್ರಮದಂತೆ ಪಾಂಡು ಮಹಾರಾಜನಿಗೆ ಉತ್ತರ ಕ್ರಿಯೆಗಳನ್ನು ಮಾಡಿಸಿ ಶತಶೃಂಗ ಪರ್ವತದಲ್ಲಿ ಮಕ್ಕಳನ್ನು ಪೋಷಿಸುತ್ತಿದ್ದಳು.
ಪದಾರ್ಥ (ಕ.ಗ.ಪ)
ಪರೇತ ಕೃತ್ಯ-ಉತ್ತರಕ್ರಿಯೆ,
ಪಾಲಿಸು-ಪೋಷಿಸು
ಮೂಲ ...{Loading}...
ಪತಿಯ ಸಹಗಮನದಲಿ ಮಾದ್ರೀ
ಸತಿ ಶರೀರವ ಬಿಟ್ಟಳೈವರು
ಸುತರು ಸಹಿತೀ ಕುಂತಿ ಮಿಂದು ಪರೇತ ಕೃತ್ಯವನು
ಶ್ರುತಿ ವಿಧಾನದೊಳಖಿಳ ಮುನಿ ಸಂ
ತತಿಗಳನು ಮುಂದಿಟ್ಟು ಮಾಡಿಸಿ
ಸುತರ ಪಾಲಿಸುತಿರ್ದಳಾ ಶತಶೃಂಗ ಶೈಲದಲಿ ॥25॥
೦೨೬ ಅರಸನಪಗತನಾದನಾ ನೃಪ ...{Loading}...
ಅರಸನಪಗತನಾದನಾ ನೃಪ
ನರಸಿ ಬಾಲಕಿ ಮಕ್ಕಳೈವರು
ಭರತ ಕುಲಜರು ನಾವು ತಪಸಿಗಳಿರ್ಪುದಾರಣ್ಯ
ಅರಿಗಳಾ ರಾಕ್ಷಸರು ನಾವಿ
ನ್ನಿರಿಸುವುದು ಮತವಲ್ಲ ಹಸ್ತಿನ
ಪುರದೊಳೊಪ್ಪಿಸಿ ಬಹುದು ಮತವೆಂದುದು ಮುನಿಸ್ತೋಮ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಶ್ರಮದ ಮುನಿಗಳು ಒಟ್ಟುಗೂಡಿ ಆಲೋಚಿಸಿದರು “ಅರಸನು ತೀರಿ ಹೋದನು. ಆತನ ಅರಸಿ ಚಿಕ್ಕವಳು. ಮಕ್ಕಳೈವರು ಭರತವಂಶಜರು. ನಾವು ತಪಸ್ವಿಗಳು ಇರುವ ಸ್ಥಳ ಅರಣ್ಯ. ರಾಕ್ಷಸರು ಶತ್ರುಗಳು. ನಾವು ಇವರನ್ನು ಇಲ್ಲಿ ಇರಿಸಿಕೊಳ್ಳುವುದು ಸರಿಯಲ್ಲ. ಹಸ್ತಿನಾಪುರಕ್ಕೆ ಕರೆದುಕೊಂಡು ಹೋಗಿ ಒಪ್ಪಿಸುವುದು ಸರಿ” ಎಂದು ಮುನಿಗಳ ಸಮೂಹ ನಿರ್ಧರಿಸಿತು.
ಪದಾರ್ಥ (ಕ.ಗ.ಪ)
ಅಪಗತ-ತೀರಿಹೋಗು,
ಸ್ತೋಮ-ಸಮೂಹ
ಮೂಲ ...{Loading}...
ಅರಸನಪಗತನಾದನಾ ನೃಪ
ನರಸಿ ಬಾಲಕಿ ಮಕ್ಕಳೈವರು
ಭರತ ಕುಲಜರು ನಾವು ತಪಸಿಗಳಿರ್ಪುದಾರಣ್ಯ
ಅರಿಗಳಾ ರಾಕ್ಷಸರು ನಾವಿ
ನ್ನಿರಿಸುವುದು ಮತವಲ್ಲ ಹಸ್ತಿನ
ಪುರದೊಳೊಪ್ಪಿಸಿ ಬಹುದು ಮತವೆಂದುದು ಮುನಿಸ್ತೋಮ ॥26॥
೦೨೭ ಎನ್ದು ಕುನ್ತೀದೇವಿ ...{Loading}...
ಎಂದು ಕುಂತೀದೇವಿ ಸಹಿತಾ
ನಂದನರನೈವರನು ಮುನಿಗಳು
ತಂದರಿಭಪುರಿಗಾಗಿ ಭೀಷ್ಮಾದಿಗಳಿಗೀ ಹದನ
ಮುಂದೆ ಸೂಚಿಸಲುತ್ಸವದಿದಿ
ರ್ವಂದನಿಬರು ಶುಭಮುಹೂರ್ತದೊ
ಳಂದು ನಗರಿಯ ಹೊಗಿಸಿದನು ಪರಿತೋಷದಲಿ ಭೀಷ್ಮ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ನಿಶ್ಚಯಮಾಡಿ, ಕುಂತೀದೇವಿ ಸಹಿತ ಆ ಮಕ್ಕಳೈವರನ್ನು ಹಸ್ತಿನಾಪುರಕ್ಕೆ ಕರೆದುಕೊಂಡು ಬಂದರು. ಭೀಷ್ಮರೇ ಮೊದಲಾದವರಿಗೆ ಮುಂಚಿತವಾಗಿ ಈ ಸುದ್ದಿಯ ಸೂಚನೆ ಕೊಡಲು, ಅವರೆಲ್ಲರೂ ಉತ್ಸವದಿಂದ ಎದುರುಗೊಳ್ಳಲು ಬಂದರು. ಬಂದು ಎದುರುಗೊಂಡ ಭೀಷ್ಮನು ಶುಭಮುಹೂರ್ತದಲ್ಲಿ ಅವರನ್ನು ಪರಮಸಂತೋಷದಿಂದ ಪಟ್ಟಣಕ್ಕೆ ಪ್ರವೇಶ ಮಾಡಿಸಿದನು.
ಪದಾರ್ಥ (ಕ.ಗ.ಪ)
ಇಭಪುರಿ-ಹಸ್ತಿನಾಪುರ.
ಮೂಲ ...{Loading}...
ಎಂದು ಕುಂತೀದೇವಿ ಸಹಿತಾ
ನಂದನರನೈವರನು ಮುನಿಗಳು
ತಂದರಿಭಪುರಿಗಾಗಿ ಭೀಷ್ಮಾದಿಗಳಿಗೀ ಹದನ
ಮುಂದೆ ಸೂಚಿಸಲುತ್ಸವದಿದಿ
ರ್ವಂದನಿಬರು ಶುಭಮುಹೂರ್ತದೊ
ಳಂದು ನಗರಿಯ ಹೊಗಿಸಿದನು ಪರಿತೋಷದಲಿ ಭೀಷ್ಮ ॥27॥
೦೨೮ ಇವರ ಜನನ ...{Loading}...
ಇವರ ಜನನ ಕ್ರಮವನಾ ಪಾಂ
ಡುವಿನ ವಿಕ್ರಮವನು ತಪೋಧನ
ನಿವಹ ಕೊಂಡಾಡಿದುದು ಬಳಿಕಿನ ಮರಣಸಂಗತಿಯ
ಅವನಿಪನ ಸಂಸ್ಕಾರ ಮಾದ್ರೀ
ಯುವತಿ ಸಹಗಮನೋಧ್ರ್ವ ದೇಹಿಕ
ವಿವಿಧ ಕೃತ್ಯವನೀ ಪ್ರಪಂಚವನವರಿಗರುಹಿದರು ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವರ ಜನನದ ರೀತಿಯನ್ನು, ಪಾಂಡುವಿನ ಪರಾಕ್ರಮವನ್ನು, ಋಷಿಗಳ ಸಮೂಹ ಹೊಗಳಿತು. ನಂತರದ ಮರಣದ ವಿಷಯವನ್ನು, ಪಾಂಡು ಮಹಾರಾಜನ ಸಂಸ್ಕಾರ, ಮಾದ್ರಿಯ ಸಹಗಮನ ವೃತ್ತಾಂತವನ್ನು, ಉತ್ತರ ಕ್ರಿಯೆಗಳನ್ನು ನಡೆಸಿದ ವಿಷಯವನ್ನು ವಿಸ್ತಾರವಾಗಿ ಅವರಿಗೆ ತಿಳಿಸಿದರು.
ಪದಾರ್ಥ (ಕ.ಗ.ಪ)
ತಪೋಧನ-ಋಷಿ,
ವಿಕ್ರಮ-ಪರಾಕ್ರಮ,
ನಿವಹ-ಸಮೂಹ,
ಕೊಂಡಾಡು-ಹೊಗಳು,
ಸಂಗತಿ-ವಿಷಯ,
ಊಧ್ರ್ವದೇಹಿಕ ಕ್ರಿಯೆ-ಉತ್ತರ ಕ್ರಿಯೆ
ಮೂಲ ...{Loading}...
ಇವರ ಜನನ ಕ್ರಮವನಾ ಪಾಂ
ಡುವಿನ ವಿಕ್ರಮವನು ತಪೋಧನ
ನಿವಹ ಕೊಂಡಾಡಿದುದು ಬಳಿಕಿನ ಮರಣಸಂಗತಿಯ
ಅವನಿಪನ ಸಂಸ್ಕಾರ ಮಾದ್ರೀ
ಯುವತಿ ಸಹಗಮನೋಧ್ರ್ವ ದೇಹಿಕ
ವಿವಿಧ ಕೃತ್ಯವನೀ ಪ್ರಪಂಚವನವರಿಗರುಹಿದರು ॥28॥
೦೨೯ ಮುನಿಗಳಾಕ್ಷಣ ಮರಳಿದರು ...{Loading}...
ಮುನಿಗಳಾಕ್ಷಣ ಮರಳಿದರು ತ
ಜ್ಜನಪ ವೃತ್ತಾಂತವನು ವಿವರಿಸೆ
ಜನಜನಿತ ಬಳಿಕುಬ್ಬಿ ಹರಿದುದು ಶೋಕರಸ ಜಲಧಿ
ಜನಪ ಧೃತರಾಷ್ಟ್ರಾದಿ ಬಾಂಧವ
ಜನ ಪುನಃ ಸಂಸ್ಕಾರದಲಿ ಭೂ
ಪನನು ದಹಿಸಿದರೂಧ್ರ್ವ ದೇಹಿಕವಾಯ್ತು ಮಗುಳಲ್ಲಿ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲ್ಲವನ್ನೂ ತಿಳಿಸಿ ಆ ಕ್ಷಣವೇ ಮುನಿಗಳು ಆಶ್ರಮಕ್ಕೆ ಮರಳಿದರು. ಪಾಂಡು ಮಹಾರಾಜನ ಮರಣದ ವೃತ್ತಾಂತವನ್ನು ವಿವರವಾಗಿ ತಿಳಿಸಲು, ಜನತೆಗೆಲ್ಲ ತಿಳಿದು ಶೋಕರಸ ಸಾಗರ ಮೀರಿ ಹರಿಯಿತು. ಧೃತರಾಷ್ಟ್ರ ಮಹಾರಾಜ ಮೊದಲಾದ ಬಾಂಧವ ಜನರು ಪುನಃ ಸಂಸ್ಕಾರದಲ್ಲಿ ಪಾಂಡುವನ್ನು ದಹಿಸಿದರು. ಮತ್ತೊಮ್ಮೆ ಅಲ್ಲಿ ಉತ್ತರ ಕ್ರಿಯೆಗಳಾಯಿತು.
ಪದಾರ್ಥ (ಕ.ಗ.ಪ)
ಊಧ್ರ್ವ ದೇಹಿಕ-ಉತ್ತರಕ್ರಿಯೆ,
ಉಬ್ಬು-ಮೀರು
ಮೂಲ ...{Loading}...
ಮುನಿಗಳಾಕ್ಷಣ ಮರಳಿದರು ತ
ಜ್ಜನಪ ವೃತ್ತಾಂತವನು ವಿವರಿಸೆ
ಜನಜನಿತ ಬಳಿಕುಬ್ಬಿ ಹರಿದುದು ಶೋಕರಸ ಜಲಧಿ
ಜನಪ ಧೃತರಾಷ್ಟ್ರಾದಿ ಬಾಂಧವ
ಜನ ಪುನಃ ಸಂಸ್ಕಾರದಲಿ ಭೂ
ಪನನು ದಹಿಸಿದರೂಧ್ರ್ವ ದೇಹಿಕವಾಯ್ತು ಮಗುಳಲ್ಲಿ ॥29॥
೦೩೦ ಅರಸ ಕೇಳೈ ...{Loading}...
ಅರಸ ಕೇಳೈ ಭೀಷ್ಮ ಧೃತರಾ
ಷ್ಟ್ರರನು ಬೋಧಿಸಿ ಬಹಳ ಶೋಕ
ಜ್ವರಕೆ ಬಿಡುಗಡೆ ಮಾಡಿದನು ಪಾರಾಶರಿವ್ರತಿಪ
ಕರೆದು ಯೋಜನಗಂಧಿಯನು ನೀ
ವಿರಲು ಬೇಡೌ ತಾಯೆ ನಿಮ್ಮೀ
ಭರತ ವಂಶದೊಳೊಗೆದ ಕಿಚ್ಚುರುಹುವುದು ನೃಪಕುಲವ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ಮಹಾರಾಜನೇ ಕೇಳು, ಶ್ರೇಷ್ಠರಾದ ವ್ಯಾಸಮುನಿ ಬಂದು ಭೀಷ್ಮ ಧೃತರಾಷ್ಟರಿಗೆ ಬೋಧಿಸಿ ಅವರ ಶೋಕ ಜ್ವರವನ್ನು ನಿವಾರಣೆ ಮಾಡಿದನು. ಬಳಿಕ ತಾಯಿ ಯೋಜನಗಂಧಿಯನ್ನು ಕರೆದು “ತಾಯೇ ನಿಮ್ಮ ಈ ಭರತವಂಶದಲ್ಲಿ ಹುಟ್ಟಿದ ಕಿಚ್ಚು ನೃಪಕುಲವನ್ನೇ ಉರಿಸುವುದು. ನೀವು ಇರುವುದು ಬೇಡ” ಎಂದು ಹೇಳಿದರು.
ಪದಾರ್ಥ (ಕ.ಗ.ಪ)
ಪಾರಾಶರವ್ರತಿಪ-ವ್ಯಾಸ ಶ್ರೇಷ್ಠರು,
ಉರುಹು-ಉರಿಸು
ಮೂಲ ...{Loading}...
ಅರಸ ಕೇಳೈ ಭೀಷ್ಮ ಧೃತರಾ
ಷ್ಟ್ರರನು ಬೋಧಿಸಿ ಬಹಳ ಶೋಕ
ಜ್ವರಕೆ ಬಿಡುಗಡೆ ಮಾಡಿದನು ಪಾರಾಶರಿವ್ರತಿಪ
ಕರೆದು ಯೋಜನಗಂಧಿಯನು ನೀ
ವಿರಲು ಬೇಡೌ ತಾಯೆ ನಿಮ್ಮೀ
ಭರತ ವಂಶದೊಳೊಗೆದ ಕಿಚ್ಚುರುಹುವುದು ನೃಪಕುಲವ ॥30॥
೦೩೧ ಹೇಳ ಬಾರದು ...{Loading}...
ಹೇಳ ಬಾರದು ಮುಂದಣದು ದು
ಷ್ಕಾಲವಿಂದಿಗೆ ನಾಳೆ ನಾಳೆಗೆ
ನಾಳೆ ಬೆಟ್ಟಿತು ವರ್ಣಧರ್ಮಾಶ್ರಮದ ನೆಲೆಹೋಯ್ತು
ಕಾಲ ವಿಷಮವು ಕೌರವಕ್ಷಿತಿ
ಪಾಲ ಪಾಂಡು ಕುಮಾರರಲಿ ಕೈ
ಮೇಳವಿಸುವುದು ತಾಯೆ ಬಿಜಯಂಗೈಯಿ ನೀವೆಂದ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವ್ಯಾಸರು ಮುಂದುವರೆದು, “ಮುಂದಿನದು ಹೇಳಬಾರದು, ಕೆಟ್ಟಕಾಲ. ಇಂದಿಗೆ ನಾಳೆ, ನಾಳೆಗೆ ನಾಳೆ ಕಠಿಣ. ವರ್ಣಧರ್ಮ ಆಶ್ರಮಧರ್ಮಗಳ ಮೂಲಸ್ಥಾನ ಹೋಯಿತು. ಕಾಲ ವಿಷಮವಾಗಿದೆ. ಕೌರವ ಪಾಂಡವರಲ್ಲಿ ಕೈ ಮೇಳವಿಸುತ್ತದೆ. ತಾಯೇ, ನೀವು ಹೊರಡಿ” ಎಂದನು.
ಪದಾರ್ಥ (ಕ.ಗ.ಪ)
ಬೆಟ್ಟಿತು-ಕಠಿಣ,
ನೆಲೆ-ಮೂಲಸ್ಥಾನ,
ಬಿಜಯಂಗೈಯಿ-ಹೊರಡಿ
ಮೂಲ ...{Loading}...
ಹೇಳ ಬಾರದು ಮುಂದಣದು ದು
ಷ್ಕಾಲವಿಂದಿಗೆ ನಾಳೆ ನಾಳೆಗೆ
ನಾಳೆ ಬೆಟ್ಟಿತು ವರ್ಣಧರ್ಮಾಶ್ರಮದ ನೆಲೆಹೋಯ್ತು
ಕಾಲ ವಿಷಮವು ಕೌರವಕ್ಷಿತಿ
ಪಾಲ ಪಾಂಡು ಕುಮಾರರಲಿ ಕೈ
ಮೇಳವಿಸುವುದು ತಾಯೆ ಬಿಜಯಂಗೈಯಿ ನೀವೆಂದ ॥31॥
೦೩೨ ಎನಲು ಯೋಜನಗನ್ಧಿ ...{Loading}...
ಎನಲು ಯೋಜನಗಂಧಿ ನಿಜ ನಂ
ದನನ ನುಡಿಯೇ ವೇದಸಿದ್ಧವಿ
ದೆನುತ ಸೊಸೆಯರು ಸಹಿತ ನಡೆದಳು ವರ ತಪೋವನಕೆ
ಮುನಿಪನತ್ತಲು ಬದರಿಕಾ ನಂ
ದನಕೆ ಮರಳಿದನಿತ್ತ ಗಂಗಾ
ತನುಜ ಸಲಹಿದನಖಿಳ ಪಾಂಡವ ಕೌರವ ವ್ರಜವ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಮಾತು ಕೇಳಿದ ಯೋಜನಗಂಧಿ ತನ್ನ ಮಗನ ನುಡಿಯೇ ವೇದಸಿದ್ಧವೆಂದು ನಂಬಿ, ಸೊಸೆಯರ ಸಹಿತ ತಪೋವನಕ್ಕೆ ನಡೆದಳು. ಅತ್ತ ವ್ಯಾಸಮುನಿ ಬದರಿಕಾವನಕ್ಕೆ ಹಿಂತಿರುಗಿದನು. ಇತ್ತ ಗಂಗಾಪುತ್ರನಾದ ಭೀಷ್ಮ ಸಮಸ್ತ ಪಾಂಡವ ಕೌರವ ಸಮೂಹವನ್ನು ಸಲಹುತ್ತಿದ್ದನು.
ಪದಾರ್ಥ (ಕ.ಗ.ಪ)
ವ್ರಜ-ಸಮೂಹ,
ನಂದನ-ವನ
ಮೂಲ ...{Loading}...
ಎನಲು ಯೋಜನಗಂಧಿ ನಿಜ ನಂ
ದನನ ನುಡಿಯೇ ವೇದಸಿದ್ಧವಿ
ದೆನುತ ಸೊಸೆಯರು ಸಹಿತ ನಡೆದಳು ವರ ತಪೋವನಕೆ
ಮುನಿಪನತ್ತಲು ಬದರಿಕಾ ನಂ
ದನಕೆ ಮರಳಿದನಿತ್ತ ಗಂಗಾ
ತನುಜ ಸಲಹಿದನಖಿಳ ಪಾಂಡವ ಕೌರವ ವ್ರಜವ ॥32॥