೦೦೦ ಸೂ ಭರತ ...{Loading}...
ಸೂ. ಭರತ ವಂಶದೊಳೈದು ಮಿಗೆ ನೂ
ರ್ವರು ಕುಮಾರರು ಪಾಂಡು ಧೃತರಾ
ಷ್ಟ್ರರಿಗೆ ಜನಿಸಿದರಮಲ ಮುನಿ ಮಂತ್ರೋಪದೇಶದಲಿ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಭರತ ವಂಶದಲ್ಲಿ, ಪವಿತ್ರ ಮುನಿಗಳ ಮಂತ್ರೋಪದೇಶದಿಂದ ಪಾಂಡುವಿಗೆ ಐವರು ಮತ್ತು ಧೃತರಾಷ್ಟ್ರನಿಗೆ ನೂರ್ವರು ಕುಮಾರರು ಜನಿಸಿದರು.
ಪದಾರ್ಥ (ಕ.ಗ.ಪ)
ಮಿಗೆ-ಅಧಿಕವಾಗಲು, ಹೆಚ್ಚಾಗಲು, ಅಮಲ-ಪವಿತ್ರ
ಮೂಲ ...{Loading}...
ಸೂ. ಭರತ ವಂಶದೊಳೈದು ಮಿಗೆ ನೂ
ರ್ವರು ಕುಮಾರರು ಪಾಂಡು ಧೃತರಾ
ಷ್ಟ್ರರಿಗೆ ಜನಿಸಿದರಮಲ ಮುನಿ ಮಂತ್ರೋಪದೇಶದಲಿ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಕುಂತೀಭೋಜ ಭೂಪತಿ
ಯಾಲಯದೊಳೀ ಕುಂತಿ ಮೆರೆದಳು ವಿವಿಧ ವಿಭವದಲಿ
ಕೇಳಿದನು ಗಾಂಗೇಯನಾ ನೀ
ಲಾಳಕಿಯ ಕುಲರೂಪು ಲಕ್ಷಣ
ಶೀಲವನು ಪಾಂಡುವಿಗೆ ಪಾಸಟಿಯೆಂದು ರಾಗದಲಿ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ಭೂಪಾಲನೇ ಕೇಳು, ಕುಂತೀಭೋಜ ರಾಜನ ಮನೆಯಲ್ಲಿ ವಿವಿಧ ವೈಭವದಿಂದ ಕುಂತಿಯು ಶೋಭಿಸಿದಳು. ಭೀಷ್ಮನು ಸುಂದರಿ ಕುಂತಿಯ ಕುಲ, ರೂಪು, ಲಕ್ಷಣ, ಶೀಲವನ್ನು ಕೇಳಿ ಪಾಂಡುವಿಗೆ ಸಮಳೆಂದು ಸಂತೋಷದಿಂದ ನಿರ್ಧರಿಸಿದನು.
ಪದಾರ್ಥ (ಕ.ಗ.ಪ)
ನೀಲಾಳಕಿ-ಕಪ್ಪಾದ ಮುಂಗುರುಳುಳ್ಳವಳು, ಸುಂದರಿ,
ಪಾಸಟಿ-ಸಮನ, ಎಣೆ, ಸರಿ,
ರಾಗ-ಪ್ರೀತಿ
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಕುಂತೀಭೋಜ ಭೂಪತಿ
ಯಾಲಯದೊಳೀ ಕುಂತಿ ಮೆರೆದಳು ವಿವಿಧ ವಿಭವದಲಿ
ಕೇಳಿದನು ಗಾಂಗೇಯನಾ ನೀ
ಲಾಳಕಿಯ ಕುಲರೂಪು ಲಕ್ಷಣ
ಶೀಲವನು ಪಾಂಡುವಿಗೆ ಪಾಸಟಿಯೆಂದು ರಾಗದಲಿ ॥1॥
೦೦೨ ಕರೆಸಿ ಕುನ್ತೀಭೋಜನನು ...{Loading}...
ಕರೆಸಿ ಕುಂತೀಭೋಜನನು ಸ
ತ್ಕರಿಸಿ ಕುಂತಿಯ ಪಾಂಡುವಿಗೆ ಭೂ
ಸುರರ ಮತದಿಂದಗ್ನಿ ಸಾಕ್ಷಿಕ ವರವಿವಾಹವನು
ಪರಮ ವಿಭವದಲೆಸಗಿ ಮದ್ರೇ
ಶ್ವರನನುಜೆ ಮಾದ್ರಿಯನು ಪಾಂಡುವಿ
ಗರಸಿಯನು ಮಾಡಿದನು ವೈವಾಹಿಕಮುಹೂರ್ತದಲಿ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮನು, ಕುಂತೀಭೋಜನನ್ನು ಕರೆಸಿ, ಉಪಚಾರ ಮಾಡಿ, ಭೂಸುರರ ಅಭಿಪ್ರಾಯದಿಂದ ಕುಂತಿಯನ್ನು ಪಾಂಡುವಿಗೆ ಅಗ್ನಿ ಸಾಕ್ಷಿಯಾಗಿ ವಿವಾಹವನ್ನು ಬಹಳ ವೈಭವದಿಂದ ಮಾಡಿ, ಮದ್ರೇಶ್ವರನ ತಂಗಿ ಮಾದ್ರಿಯನ್ನು ಪಾಂಡುವಿಗೆ ಶುಭ ವಿವಾಹ ಮುಹೂರ್ತದಲ್ಲಿ ಅರಸಿಯನ್ನಾಗಿ ಮಾಡಿದನು.
ಪದಾರ್ಥ (ಕ.ಗ.ಪ)
ಮತ-ಅಭಿಪ್ರಾಯ
ಟಿಪ್ಪನೀ (ಕ.ಗ.ಪ)
ಮಾದ್ರೀ - ಮದ್ರದೇಶದ ಋತಾಯನನೆಂಬ ಅರಸನ ಮಗಳು. ಶಲ್ಯನ ಒಡಹುಟ್ಟಿದವಳು. ಧೈರ್ಯಾಭಿಮಾನಿ ದೇವತೆ ಧೃತಿಯ ಅಂಶದಿಂದ ಜನಿಸಿದವಳು.
ಮೂಲ ...{Loading}...
ಕರೆಸಿ ಕುಂತೀಭೋಜನನು ಸ
ತ್ಕರಿಸಿ ಕುಂತಿಯ ಪಾಂಡುವಿಗೆ ಭೂ
ಸುರರ ಮತದಿಂದಗ್ನಿ ಸಾಕ್ಷಿಕ ವರವಿವಾಹವನು
ಪರಮ ವಿಭವದಲೆಸಗಿ ಮದ್ರೇ
ಶ್ವರನನುಜೆ ಮಾದ್ರಿಯನು ಪಾಂಡುವಿ
ಗರಸಿಯನು ಮಾಡಿದನು ವೈವಾಹಿಕಮುಹೂರ್ತದಲಿ ॥2॥
೦೦೩ ವರ ವಿವಾಹ ...{Loading}...
ವರ ವಿವಾಹ ಮುಹೂರ್ತ ಸಮನಂ
ತರ ಸುಲಗ್ನದೊಳಖಿಳ ರಾಜ್ಯದ
ಧುರದ ನಿರ್ವಾಹಕ ಮಹಾಪಟ್ಟಾಭಿಷೇಚನವ
ಸುರನದೀಸುತ ಪಾಂಡುವಿಗೆ ವಿ
ಸ್ತರಿಸಿದನು ಧೃತರಾಷ್ಟ್ರ ವಿದುರರ
ಪರಮ ಪರಿತೋಷಾನುಮತದಲಿ ಮೆರೆದುದಾ ವಿಭವ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶುಭ ವಿವಾಹ ಮುಹೂರ್ತದ ನಂತರ ಸುಲಗ್ನದಲ್ಲಿ ಭೀಷ್ಮನು ರಾಜ್ಯ ಭಾರದ ಮಹಾಪಟ್ಟಾಭಿಷೇಕವನ್ನು ಪಾಂಡುವಿಗೆ ಮಾಡಿದನು. ಧೃತರಾಷ್ಟ್ರ, ವಿದುರರ ಪೂರ್ಣವಾದ ಸಂತೋಷದ ಸಮ್ಮತಿಯಿಂದ ಆ ವೈಭವದ ಮಹೋತ್ಸವ ರಂಜಿಸಿತು.
ಪದಾರ್ಥ (ಕ.ಗ.ಪ)
ಧುರ-ಭಾರ, ಹೊಣೆ
ಪರಿತೋಷ-ಸಂತೋಷ,
ಅನುಮತ-ಸಮ್ಮತಿ
ಮೂಲ ...{Loading}...
ವರ ವಿವಾಹ ಮುಹೂರ್ತ ಸಮನಂ
ತರ ಸುಲಗ್ನದೊಳಖಿಳ ರಾಜ್ಯದ
ಧುರದ ನಿರ್ವಾಹಕ ಮಹಾಪಟ್ಟಾಭಿಷೇಚನವ
ಸುರನದೀಸುತ ಪಾಂಡುವಿಗೆ ವಿ
ಸ್ತರಿಸಿದನು ಧೃತರಾಷ್ಟ್ರ ವಿದುರರ
ಪರಮ ಪರಿತೋಷಾನುಮತದಲಿ ಮೆರೆದುದಾ ವಿಭವ ॥3॥
೦೦೪ ಸೋಮಕುಲದವರಲಿ ಭವತ್ ...{Loading}...
ಸೋಮಕುಲದವರಲಿ ಭವತ್ ಪ್ರಪಿ
ತಾಮಹನವೋಲ್ ಧರ್ಮದಲಿ ಸಂ
ಗ್ರಾಮದಲಿ ಸತ್ಯದಲಿ ಸಾಹಿತ್ಯದಲಿ ವಿನಯದಲಿ
ಸಾಮದಲಿ ಶೌರ್ಯದಲಿ ಸುಜನ
ಪ್ರೇಮದಲಿ ನೀತಿಯಲಿ ಧೃಡದಲಿ
ಭೂಮಿಯಲಿ ನಾ ಕಾಣೆನವನೀಪಾಲ ಕೇಳ್ ಎಂದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚಂದ್ರ ವಂಶದವರಲ್ಲಿ, ನಿನ್ನ ಮುತ್ತಾತ ಪಾಂಡುವಿನಂತೆ ಧರ್ಮದಲ್ಲಿ, ಯುದ್ಧದಲ್ಲಿ, ಸತ್ಯದಲ್ಲಿ, ವಾಙ್ಮಯದಲ್ಲಿ, ವಿನಯದಲ್ಲಿ, ಸಾಮದಲ್ಲಿ ಪರಾಕ್ರಮದಲ್ಲಿ ಒಳ್ಳೆಯ ಮನುಷ್ಯರ ಪ್ರೇಮದಲ್ಲಿ, ದೃಢತೆಯಲ್ಲಿ, ಭೂಮಿಯಲ್ಲಿ ಇನ್ನೊಬ್ಬರನ್ನು ಕಾಣೆನು, ಮಹಾರಾಜ ಕೇಳು ಎಂದು ವೈಶಂಪಾಯನರು ಹೇಳಿದರು.
ಪದಾರ್ಥ (ಕ.ಗ.ಪ)
ಭವತ್-ನಿನ್ನ,
ಪ್ರಪಿತಾಮಹ-ಮುತ್ತಾತ,
ಸಾಹಿತ್ಯ-ವಾಙ್ಮಯ,
ಸಾಮ-ಚತುರೋಪಾಯಗಳಲ್ಲಿ ಒಂದು,
ಟಿಪ್ಪನೀ (ಕ.ಗ.ಪ)
ಚತುರುಪಾಯ- ಸಾಮ, ದಾನ, ಭೇದ, ದಂಡ
ಮೂಲ ...{Loading}...
ಸೋಮಕುಲದವರಲಿ ಭವತ್ ಪ್ರಪಿ
ತಾಮಹನವೋಲ್ ಧರ್ಮದಲಿ ಸಂ
ಗ್ರಾಮದಲಿ ಸತ್ಯದಲಿ ಸಾಹಿತ್ಯದಲಿ ವಿನಯದಲಿ
ಸಾಮದಲಿ ಶೌರ್ಯದಲಿ ಸುಜನ
ಪ್ರೇಮದಲಿ ನೀತಿಯಲಿ ಧೃಡದಲಿ
ಭೂಮಿಯಲಿ ನಾ ಕಾಣೆನವನೀಪಾಲ ಕೇಳೆಂದ ॥4॥
೦೦೫ ಪಸರಿಸಿದ ಪರಿಧೌತಕೀರ್ತಿ ...{Loading}...
ಪಸರಿಸಿದ ಪರಿಧೌತಕೀರ್ತಿ
ಪ್ರಸರದಲಿ ಬೆಳುಪಾಯ್ತು ಜಗ ನಿ
ಪ್ಪಸರದಲಿ ಝಳಪಿಸುವ ಖಂಡೆಯ ಸಿರಿಯ ಸೊಂಪಿನಲಿ
ಮಸಗಿತಗ್ಗದ ಕೆಂಪು ಪರಬಲ
ವಿಸರ ದಳನ ಕ್ರೋಧಮಯ ತಾ
ಮಸದಿನಸಿತಾಭಾಸಮಾದುದು ಭುವನವಿಸ್ತಾರ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲ್ಲ ಕಡೆಯೂ ಹರಡಿದ ಪಾಂಡುವಿನ ಶುಭ್ರವಾದ ಕೀರ್ತಿ ವಿಸ್ತಾರದಿಂದ ಜಗತ್ತು ಕಾಂತಿಯುಕ್ತವಾಯಿತು. ನಿಷ್ಠುರವಾಗಿ ಝಳಪಿಸುವ ಖಡ್ಗದ ಸಿರಿಯ ಚೆಂದದಲ್ಲಿ ಕೆಂಪು ದಟ್ಟವಾಗಿ ವಿಜೃಂಭಿಸಿ ಹರಡಿತು. ಪರಸೈನ್ಯ ಸಮೂಹದ ಕ್ರೋಧಮಯ ತಾಮಸದಿಂದ ಲೋಕವೆಲ್ಲಾ ಕಪ್ಪಾಗಿ ಭಾಸವಾಯ್ತು.
ಪದಾರ್ಥ (ಕ.ಗ.ಪ)
ಪರಿಧೌತ-ಶುಭ್ರವಾದ,
ಪ್ರಸರ-ಸಮೂಹ,
ನಿಪ್ಪಸರ-ನಿಷ್ಠುರತೆ,
ಖಂಡೆಯ-ಕತ್ತಿ,
ಮಸಗು-ವಿಜೃಂಭಿಸು,
ಅಸಿತ-ಕಪ್ಪಾದ (ಬಿಳುಪಲ್ಲದ),
ಆಭಾಸ-ಭಾಸ,
ಭುವನ-ಲೋಕ
ಮೂಲ ...{Loading}...
ಪಸರಿಸಿದ ಪರಿಧೌತಕೀರ್ತಿ
ಪ್ರಸರದಲಿ ಬೆಳುಪಾಯ್ತು ಜಗ ನಿ
ಪ್ಪಸರದಲಿ ಝಳಪಿಸುವ ಖಂಡೆಯ ಸಿರಿಯ ಸೊಂಪಿನಲಿ
ಮಸಗಿತಗ್ಗದ ಕೆಂಪು ಪರಬಲ
ವಿಸರ ದಳನ ಕ್ರೋಧಮಯ ತಾ
ಮಸದಿನಸಿತಾಭಾಸಮಾದುದು ಭುವನವಿಸ್ತಾರ ॥5॥
೦೦೬ ಓಲಗಿಸುವುದು ಮಿತ್ರ ...{Loading}...
ಓಲಗಿಸುವುದು ಮಿತ್ರ ರಾಯರ
ಮೌಳಿಮಣಿ ಪಾಂಡುವಿನ ಚರಣ ನ
ಖಾಳಿಯನು ಸೆಣಸುವ ಮಹೀಶ್ವರ ಮೌಳಿಮಣಿ ಕಿರಣ
ಓಲಗಿಸಿತು ಪ್ರಣಯದಮರೀ
ಬಾಲೆಯರ ಪದನಖವನದನೇ
ವೇಳುವೆನು ಪಾಂಡುವಿನ ಖಂಡೆಯ ಸಿರಿಯ ಸಡಗರವ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಿತ್ರರಾಜರ ಕಿರೀಟದ ಮಣಿಗಳು ಪಾಂಡುವಿನ ಪಾದ ನಖಗಳ ಸಾಲನ್ನು ಓಲಗಿಸುವುದು. ಪಾಂಡುವನ್ನು ಪ್ರತಿಭಟಿಸುವ ರಾಜರ ಕಿರೀಟದ ಮಣಿ ಕಿರಣಗಳು ಪ್ರೇಮದಿಂದ ದೇವತಾಸ್ತ್ರೀಯರ ಪಾದ ನಖವನ್ನು ಓಲಗಿಸಿತು( ಆ ರಾಜರುಗಳು ಸತ್ತು ಸ್ವರ್ಗವನ್ನು ಸೇರಿದರು). ಪಾಂಡುವಿನ ಖಡ್ಗದ ಸಂಪತ್ತಿನ ಸಂಭ್ರಮವನ್ನು ಏನೆಂದು ಹೇಳಲಿ ?
ಪದಾರ್ಥ (ಕ.ಗ.ಪ)
ನಖಾಳಿ-ಉಗುರುಗಳ ಗುಂಪು
ಸೆಣಸು-ಪ್ರತಿಭಟಿಸು,
ಪ್ರಣಯ-ಪ್ರೇಮ,
ಅಮರೀಬಾಲೆಯರು-ದೇವತಾಸ್ತ್ರೀಯರು
ಮೂಲ ...{Loading}...
ಓಲಗಿಸುವುದು ಮಿತ್ರ ರಾಯರ
ಮೌಳಿಮಣಿ ಪಾಂಡುವಿನ ಚರಣ ನ
ಖಾಳಿಯನು ಸೆಣಸುವ ಮಹೀಶ್ವರ ಮೌಳಿಮಣಿ ಕಿರಣ
ಓಲಗಿಸಿತು ಪ್ರಣಯದಮರೀ
ಬಾಲೆಯರ ಪದನಖವನದನೇ
ವೇಳುವೆನು ಪಾಂಡುವಿನ ಖಂಡೆಯ ಸಿರಿಯ ಸಡಗರವ ॥6॥
೦೦೭ ಓಲಗಿಸಿ ಕೊಮ್ಬಾತನನ್ಧ ...{Loading}...
ಓಲಗಿಸಿ ಕೊಂಬಾತನಂಧ ನೃ
ಪಾಲನುಳಿದಂತಖಿಳ ಧರಣೀ
ಪಾಲಕತ್ವವೆ ಪಾಂಡುಭೂಪತಿಗೀ ಕುಮಾರಕರ
ಲಾಲಿಸುವ ಕುಲನೀತಿ ವಿಧದಲಿ
ಪಾಲಿಸುವ ಭರ ಭೀಷ್ಮನದು ಸಂ
ಬಾಳಿಸಿತು ನಳ ನಹುಷಚರಿತವನಿವರ ಪರಿಪಾಟಿ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಂಧ ನೃಪಾಲನಾದ ಧೃತರಾಷ್ಟ್ರನು ಓಲಗಿಸಿಕೊಳ್ಳುತ್ತಿದ್ದನು. ಉಳಿದಂತೆ ಎಲ್ಲ ಭೂಮಂಡಲದ ಪಾಲನೆಯ ಜವಾಬ್ದಾರಿ ಪಾಂಡುರಾಜನಿಗೆ. ಈ ಕುಮಾರಕರನ್ನು ಪೋಷಿಸುವ, ಕುಲನೀತಿಯ ವಿಧದಿಂದ ರಕ್ಷಿಸುವ ಭಾರ ಭೀಷ್ಮನದು. ಇವರ ನಡವಳಿಕೆ ನಳ,ನಹುಷರ ಚರಿತ್ರೆಗೆ ಸಮಾನವಾಗಿ ಪರಂಪರೆಯ ರಕ್ಷಣೆಯಾಯ್ತು.
ಪದಾರ್ಥ (ಕ.ಗ.ಪ)
ಭರ-ಭಾರ,
ಸಂಬಾಳಿಸು-ಪರಂಪರೆಯ ರಕ್ಷಣೆ,
ಪರಿಪಾಟಿ-ಸಮಾನ
ಪಾಠಾನ್ತರ (ಕ.ಗ.ಪ)
ಪಾಲಕತ್ವವ –> ಪಾಲಕತ್ವವೆ
ಟಿಪ್ಪನೀ (ಕ.ಗ.ಪ)
ನಳ-ನಿಷಧ ದೇಶಾಧಿಪತಿಯಾದ ವೀರಸೇನ ರಾಜನ ಮಗ, ವಿದರ್ಭ ದೇಶಾಧಿಪತಿಯಾದ ಭೀಮರಾಜನ ಮಗಳಾದ ದಮಯಂತಿಯನ್ನು ಮದುವೆಯಾದ.
ನಹುಷ-ಚಂದ್ರವಂಶದ ಅರಸು, ಊರ್ವಶೀ ಪುರೂರವರ ಮಗನಾದ ಆಯುರಾಜನಿಂದ ಸ್ವರ್ಭಾನವಿಯಲ್ಲಿ ಜನಿಸಿದವ. ಈತ ಪಿತೃ ದೇವತೆಗಳ ಕನ್ಯೆಯಾದ ವಿರಜೆಯೆಂಬವಳನ್ನು ಮದುವೆಯಾಗಿದ್ದ ಇವನಿಗ ಯಯಾತಿಯೇ ಮೊದಲಾದ ಆರು ಮಂದಿ ಮಕ್ಕಳು.
ಮೂಲ ...{Loading}...
ಓಲಗಿಸಿ ಕೊಂಬಾತನಂಧ ನೃ
ಪಾಲನುಳಿದಂತಖಿಳ ಧರಣೀ
ಪಾಲಕತ್ವವೆ ಪಾಂಡುಭೂಪತಿಗೀ ಕುಮಾರಕರ
ಲಾಲಿಸುವ ಕುಲನೀತಿ ವಿಧದಲಿ
ಪಾಲಿಸುವ ಭರ ಭೀಷ್ಮನದು ಸಂ
ಬಾಳಿಸಿತು ನಳ ನಹುಷಚರಿತವನಿವರ ಪರಿಪಾಟಿ ॥7॥
೦೦೮ ನೃಪ ಪರಮ್ಪರೆಯಿನ್ದ ...{Loading}...
ನೃಪ ಪರಂಪರೆಯಿಂದ ಬಂದೀ
ವಿಪುಳ ವಂಶಸ್ಥಿತಿ ವಿಸರ್ಗವ
ನಪಹರಿಸಿದನು ಹಿಂದೆ ವೇದವ್ಯಾಸಮುನಿ ಬಂದು
ಕೃಪೆಯ ಮಾಡನೆ ತನ್ನ ಸಂತತಿ
ಕೃಪಣವಾಯ್ತೆಂದನವರತ ಕುರು
ನೃಪತಿ ಚಿಂತಾಭಾರದಲಿ ಬಳಲುವನು ಧೃತರಾಷ್ಟ್ರ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ರಾಜರ ಪರಂಪರೆಯಿಂದ ಬಂದ ಈ ವಿಶೇಷವಾದ ವಂಶಸ್ಥಿತಿಯು ನಾಶವಾಗುವುದನ್ನು ಹಿಂದೆ ವೇದವ್ಯಾಸ ಮುನಿ ಬಂದು ತಪ್ಪಿಸಿದನು. ತನ್ನ ಸಂತತಿ ನಿಲ್ಲುವುದೆಂದು ಕೃಪೆಯನ್ನು ಮಾಡದೇ ಇರುತ್ತಾನೆಯೇ ?” ಎಂದು ಯಾವಾಗಲೂ ಧೃತರಾಷ್ಟ್ರ ಚಿಂತಾಭಾರದಿಂದ ಆಯಾಸ ಹೊಂದುವನು.
ಪದಾರ್ಥ (ಕ.ಗ.ಪ)
ವಿಪುಳ-ವಿಶೇಷವಾದ,
ಬಳಲು-ಆಯಾಸಗೊಳ್ಳು
ಮೂಲ ...{Loading}...
ನೃಪ ಪರಂಪರೆಯಿಂದ ಬಂದೀ
ವಿಪುಳ ವಂಶಸ್ಥಿತಿ ವಿಸರ್ಗವ
ನಪಹರಿಸಿದನು ಹಿಂದೆ ವೇದವ್ಯಾಸಮುನಿ ಬಂದು
ಕೃಪೆಯ ಮಾಡನೆ ತನ್ನ ಸಂತತಿ
ಕೃಪಣವಾಯ್ತೆಂದನವರತ ಕುರು
ನೃಪತಿ ಚಿಂತಾಭಾರದಲಿ ಬಳಲುವನು ಧೃತರಾಷ್ಟ್ರ ॥8॥
೦೦೯ ಅರಸ ಚಿತ್ತೈಸೊನ್ದು ...{Loading}...
ಅರಸ ಚಿತ್ತೈಸೊಂದು ದಿನ ಮುನಿ
ವರನು ಬಿಜಯಂಗೈದು ಹಸ್ತಿನ
ಪುರವ ಹೊಕ್ಕನು ರಾಜಭವನಕೆ ಬಂದು ಹರ್ಷದಲಿ
ಸುರನದೀತನುಜಾದಿಗಳ ಸ
ತ್ಕರಣೆಯನು ಕೈಕೊಂಡು ಮಕ್ಕಳ
ಮುರಿದ ವಿಭವಕೆ ಮೈಯನಾಂತು ಮುನೀಂದ್ರನಿಂತೆಂದ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಾಜಾ ಕೇಳು, ಒಂದು ದಿನ ಮುನಿಶ್ರೇಷ್ಠನಾದ ವೇದವ್ಯಾಸನು ದಯಮಾಡಿಸಿ ಹಸ್ತಿನಪುರವನ್ನು ಪ್ರವೇಶಿಸಿ ಸಂತೋಷದಿಂದ ರಾಜಭವನಕ್ಕೆ ಬಂದನು. ಗಂಗಾಪುತ್ರರಾದ ಭೀಷ್ಮರೇ ಮೊದಲಾದವರ ಉಪಚಾರವನ್ನು ಸ್ವೀಕರಿಸಿ, ಮಕ್ಕಳಿಲ್ಲದ ಕಾರಣ ವೈಭವದಲ್ಲಿ ಕೊರತೆಯಾದುದಕ್ಕೆ ಸಹಾನುಭೂತಿಯನ್ನು ಹೊಂದಿ ಮುನೀಂದ್ರ ಈ ರೀತಿ ನುಡಿದನು.
ಮೂಲ ...{Loading}...
ಅರಸ ಚಿತ್ತೈಸೊಂದು ದಿನ ಮುನಿ
ವರನು ಬಿಜಯಂಗೈದು ಹಸ್ತಿನ
ಪುರವ ಹೊಕ್ಕನು ರಾಜಭವನಕೆ ಬಂದು ಹರ್ಷದಲಿ
ಸುರನದೀತನುಜಾದಿಗಳ ಸ
ತ್ಕರಣೆಯನು ಕೈಕೊಂಡು ಮಕ್ಕಳ
ಮುರಿದ ವಿಭವಕೆ ಮೈಯನಾಂತು ಮುನೀಂದ್ರನಿಂತೆಂದ ॥9॥
೦೧೦ ಭರತಕುಲದಲಿ ಮಕ್ಕಳಿಲ್ಲದ ...{Loading}...
ಭರತಕುಲದಲಿ ಮಕ್ಕಳಿಲ್ಲದ
ಕೊರತೆ ಕೋಮಲ ಸೌಖ್ಯಲತೆಗಿದು
ಕರಗಸವಲಾ ತಂದೆ ಬಾ ಧೃತರಾಷ್ಟ್ರ ಬಾಯೆನುತ
ಕರೆದು ಕಟ್ಟೇಕಾಂತದಲಿ ನಿ
ನ್ನರಸಿಗನುಪಮ ಪುತ್ರ ಶತವವ
ತರಿಸುವುದು ಕೊಳ್ಳೆಂದು ಕೊಟ್ಟನು ಮಂತ್ರ ಪಿಂಡಕವ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭರತ ವಂಶದಲ್ಲಿ ಮಕ್ಕಳಿಲ್ಲದ ಕೊರತೆ ಕೋಮಲವಾದ ಸೌಖ್ಯವೆಂಬ ಬಳ್ಳಿಗೆ ಗರಗಸವಿದ್ದಂತೆ. ತಂದೆ ಬಾ, ಧೃತರಾಷ್ಟ್ರ ಬಾ ಎಂದು ವ್ಯಾಸರು ಧೃತರಾಷ್ಟ್ರನನ್ನು ಅತಿ ರಹಸ್ಯದಲ್ಲಿ ಕರೆದು, ನಿನ್ನ ಅರಸಿಗೆ ಎಣೆ ಇಲ್ಲದ ನೂರು ಮಕ್ಕಳು ಹುಟ್ಟುವರೆಂದು ಹೇಳಿ, ಮಂತ್ರಿಸಿದ ಪಿಂಡಕವನ್ನು ತೆಗೆದುಕೋ ಎಂದು ಧೃತರಾಷ್ಟ್ರನಿಗೆ ಕೊಟ್ಟನು.
ಪದಾರ್ಥ (ಕ.ಗ.ಪ)
ಕರಗಸ-ಗರಗಸ,
ಪಿಂಡಕ-ಉಂಡೆ
ಮೂಲ ...{Loading}...
ಭರತಕುಲದಲಿ ಮಕ್ಕಳಿಲ್ಲದ
ಕೊರತೆ ಕೋಮಲ ಸೌಖ್ಯಲತೆಗಿದು
ಕರಗಸವಲಾ ತಂದೆ ಬಾ ಧೃತರಾಷ್ಟ್ರ ಬಾಯೆನುತ
ಕರೆದು ಕಟ್ಟೇಕಾಂತದಲಿ ನಿ
ನ್ನರಸಿಗನುಪಮ ಪುತ್ರ ಶತವವ
ತರಿಸುವುದು ಕೊಳ್ಳೆಂದು ಕೊಟ್ಟನು ಮಂತ್ರ ಪಿಂಡಕವ ॥10॥
೦೧೧ ಧರಿಸಿದಳು ಗಾನ್ಧಾರಿ ...{Loading}...
ಧರಿಸಿದಳು ಗಾಂಧಾರಿ ಗರ್ಭೋ
ತ್ಕರವನಿತ್ತ ನಿಜಾಶ್ರಮಕೆ ಮುನಿ
ತಿರುಗಿದನು ದಿನದಿನದೊಳುಬ್ಬಿತು ರಾಯನಭ್ಯುದಯ
ಅರಸ ಕೇಳೈ ಬೇಂಟೆಗಾರರು
ಕರೆಯಬಂದರು ಮೃಗನಿಕಾಯದ
ನೆರವಿಗಳ ನೆಲೆಗೊಳಿಸಿ ಪಾಂಡು ನೃಪಾಲನೋಲಗಕೆ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಾಂಧಾರಿ ಗರ್ಭೋತ್ಕರವನ್ನು ಧರಿಸಿದಳು. ಈ ಕಡೆ ವ್ಯಾಸಮುನಿ ತನ್ನ ಆಶ್ರಮಕ್ಕೆ ಹಿಂತಿರುಗಿದನು. ದಿನದಿನಕ್ಕೆ ರಾಜನ ಏಳ್ಗೆ ಮೇಲಕ್ಕೇರಿತು. ಮಹಾರಾಜ ಕೇಳು, ಒಮ್ಮೆ ಪಾಂಡು ಮಹಾರಾಜನ ಒಡ್ಡೋಲಗಕ್ಕೆ ಮೃಗ ಸಮೂಹವನ್ನು ಸಿದ್ಧಪಡಿಸಿದ, ಬೇಂಟೆಗಾರರು ಸಕಾಲದಲ್ಲಿ ಬಂದು ಅರಸನಿಗೆ ಬಿನ್ನವಿಸಿದರು.
ಪದಾರ್ಥ (ಕ.ಗ.ಪ)
ಉತ್ಕರ-ಸಮೂಹ, ರಾಶಿ,
ನಿಕಾಯ-ಸಮೂಹ,
ಅಭ್ಯುದಯ-ಏಳ್ಗೆ,
ಉಬ್ಬು-ಮೇಲಕ್ಕೇರು
ಮೂಲ ...{Loading}...
ಧರಿಸಿದಳು ಗಾಂಧಾರಿ ಗರ್ಭೋ
ತ್ಕರವನಿತ್ತ ನಿಜಾಶ್ರಮಕೆ ಮುನಿ
ತಿರುಗಿದನು ದಿನದಿನದೊಳುಬ್ಬಿತು ರಾಯನಭ್ಯುದಯ
ಅರಸ ಕೇಳೈ ಬೇಂಟೆಗಾರರು
ಕರೆಯಬಂದರು ಮೃಗನಿಕಾಯದ
ನೆರವಿಗಳ ನೆಲೆಗೊಳಿಸಿ ಪಾಂಡು ನೃಪಾಲನೋಲಗಕೆ ॥11॥
೦೧೨ ಕೇಳಿದನು ಮೃಗದಿಕ್ಕೆ ...{Loading}...
ಕೇಳಿದನು ಮೃಗದಿಕ್ಕೆ ಹಕ್ಕೆಯ
ಗಾಳಿಯನು ಕೊಂಬುಗಳನಾಗಳೆ
ಬೀಳು ಕೊಟ್ಟನು ರಾಜಸಭೆಯನು ರಾಯನುಚಿತದಲಿ
ಬೋಳೆ ಕವಲಂಬುಗಳ ಹದವಿಲು
ತಾಳಿಕೆಯ ಕುಪ್ಪಸದ ಬೇಂಟೆಯ
ಮೇಳದಲಿ ಭೂಪಾಲ ಹೊರವಂಟನು ನಿಜಾಲಯವ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೃಗದ ವಾಸಸ್ಥಳ, ವಿಶ್ರಾಂತಿ ಸ್ಥಳ ಸಂಕೇತಸ್ಥಳ9ಕೊಂಬು)ಗಳ ಬಗ್ಗೆ ಕೇಳಿ ತಿಳಿದ ಪಾಂಡು ರಾಜಸಭೆಯನ್ನು ಬೀಳುಕೊಟ್ಟನು. ಬೇಟೆಯ ಪರಿಕರಗಳೊಂದಿಗೆ, ಕಂಚುಕ ಧರಿಸಿ, ಹದವಾದ ಬಿಲ್ಲು ಹಾಗೂ ವಿಧವಿಧದ ಬಾಣಗಳೊಂದಿಗೆ ಅರಮನೆಯಿಂದ ಹೊರಟನು.
ಪದಾರ್ಥ (ಕ.ಗ.ಪ)
ಇಕ್ಕೆ-ವಾಸಸ್ಥಳ, ನೆಲಸುವಿಕೆ,
ಹಕ್ಕೆ-ವಿಶ್ರಾಂತಿಸ್ಥಳ, ಆಶ್ರಯ,
ಕೊಂಬು-ಸಂಕೇತಸ್ಥಳ,
ಬೋಳೆ-ಒಂದು ಬಗೆಯ ಬಾಣ,
ಕವಲಂಬು-ಅರ್ಧಚಂದ್ರಾಕೃತಿಯ ತುದಿಯುಳ್ಳ ಬಾಣ,
ಹದವಿಲು-ಯೋಗ್ಯವಾದ ಬಿಲ್ಲು,
ಕುಪ್ಪಸ-ಕಂಚುಕ,
ತಾಳಿಕೆ-ಧರಿಸುವಿಕೆ
ಮೂಲ ...{Loading}...
ಕೇಳಿದನು ಮೃಗದಿಕ್ಕೆ ಹಕ್ಕೆಯ
ಗಾಳಿಯನು ಕೊಂಬುಗಳನಾಗಳೆ
ಬೀಳು ಕೊಟ್ಟನು ರಾಜಸಭೆಯನು ರಾಯನುಚಿತದಲಿ
ಬೋಳೆ ಕವಲಂಬುಗಳ ಹದವಿಲು
ತಾಳಿಕೆಯ ಕುಪ್ಪಸದ ಬೇಂಟೆಯ
ಮೇಳದಲಿ ಭೂಪಾಲ ಹೊರವಂಟನು ನಿಜಾಲಯವ ॥12॥
೦೧೩ ಏನನೆಮ್ಬೆನು ನಿಮ್ಮನು ...{Loading}...
ಏನನೆಂಬೆನು ನಿಮ್ಮನು ಪಿಶಾ
ಚೋನ್ನೃಪಾಲಕರೆಂಬವೋಲ್ ವ್ಯಸ
ನಾನುಬಂಧದ ಬೇಗೆ ಕೊಂಡೊಯ್ದುದು ಮಹೀಪತಿಯ
ಕಾನನದೊಳಾಯತದ ಶರ ಸಂ
ಧಾನ ಕಲಿತ ಶರಾಸನನು ಮೃಗ
ಹಾನಿಗಳ ಹೆಕ್ಕಳದೊಳೋಲಾಡಿದನು ಬೇಂಟೆಯಲಿ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೈಶಂಪಾಯನರು ಜನಮೇಜಯನನ್ನು ಕುರಿತು “ನಿಮ್ಮನ್ನು (ಕ್ಷತ್ರಿಯರನ್ನು) ಏನೆಂದು ಹೇಳಲಿ ! “ಪಿಶಾಚೋ ನೃಪಾಲಕ:” (ದೊರೆ ಪಿಶಾಚಿ) ಎಂಬ ನುಡಿ ನಿಜವೇನೋ ಎನ್ನುವಂತಾಯ್ತು. ಮೃಗಯಾ ವ್ಯಸನ ಸಂಬಂಧದ ತಾಪ ಪಾಂಡು ಮಹೀಪತಿಯನ್ನು ಕಾಡಿಗೆ ಕೊಂಡೊಯ್ದಿತು. ಅಡವಿಯಲ್ಲಿ ಅತಿಶಯವಾದ ಬೇಟೆಯಲ್ಲಿ, ಬಾಣಗಳನ್ನು ಬಿಲ್ಲಿನಲ್ಲಿ ಹೂಡುವುದರಲ್ಲಿ ಪರಿಣತನಾದ ಪಾಂಡು ಮೃಗಗಳ ನಾಶದ ಸಂತೋಷದಲ್ಲಿ ನಲಿದಾಡಿದನು.
ಪದಾರ್ಥ (ಕ.ಗ.ಪ)
ವ್ಯಸನ-ಚಟ ,
ಶರಾಸನ-ಬಿಲ್ಲು,
ಶರಸಂಧಾನ-ಬಾಣವನ್ನು ಬಿಲ್ಲಿನಲ್ಲಿ ಹೂಡುವುದು,
ಹೆಕ್ಕಳ-ಸಂತೋಷ,
ಓಲಾಡು-ನಲಿದಾಡು
ಟಿಪ್ಪನೀ (ಕ.ಗ.ಪ)
ಸಪ್ತವ್ಯಸನಗಳು-ವಾಕ್ಪಾರುಷ್ಯ, ಅರ್ಥದೂಷಣ, ದಂಡಪಾರುಷ್ಯ, ಮೃಗಯೆ, ದ್ಯೂತ, ಸ್ತ್ರೀ, ಮದ್ಯಪಾನ
ಮೂಲ ...{Loading}...
ಏನನೆಂಬೆನು ನಿಮ್ಮನು ಪಿಶಾ
ಚೋನ್ನೃಪಾಲಕರೆಂಬವೋಲ್ ವ್ಯಸ
ನಾನುಬಂಧದ ಬೇಗೆ ಕೊಂಡೊಯ್ದುದು ಮಹೀಪತಿಯ
ಕಾನನದೊಳಾಯತದ ಶರ ಸಂ
ಧಾನ ಕಲಿತ ಶರಾಸನನು ಮೃಗ
ಹಾನಿಗಳ ಹೆಕ್ಕಳದೊಳೋಲಾಡಿದನು ಬೇಂಟೆಯಲಿ ॥13॥
೦೧೪ ಬನ್ದುದಾ ಪಾಣ್ಡುವಿಗೆ ...{Loading}...
ಬಂದುದಾ ಪಾಂಡುವಿಗೆ ನಿನ್ನಯ
ತಂದೆಗಾದ ವಿಪತ್ತಿನಂದದ
ಲೊಂದು ಠಾವಿನಲೊಬ್ಬ ಮುನಿ ಮೃಗ ಮಿಥುನ ರೂಪಿನಲಿ
ನಿಂದು ರಮಿಸುತ್ತಿರೆ ಮೃಗದ್ವಯ
ವೆಂದು ಹೂಡಿದನಂಬನಿಬ್ಬರಿ
ಗೊಂದು ಶರದಲಿ ಕೀಲಿಸಿದಡೊರಲಿದರು ನರರಾಗಿ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನ್ನ ತಂದೆ ಪರೀಕ್ಷಿತನಿಗೆ ಆದ ರೀತಿಯಲ್ಲಿ ಪಾಂಡುವಿಗೆ ಆಪತ್ತು ಉಂಟಾಯಿತು. ಒಂದು ಸ್ಥಳದಲ್ಲಿ ಒಬ್ಬ ಮುನಿ ಸತಿಯೊಂದಿಗೆ ಜಿಂಕೆಯ ರೂಪಿನಲ್ಲಿ ಜೊತೆಗೂಡಿ ರಮಿಸುತ್ತಿರುವಾಗ ಎರಡು ಜಿಂಕೆಗಳೆಂದು ತಿಳಿದು ಇಬ್ಬರಿಗೆ ಒಂದು ಬಾಣವನ್ನು ಬಿಲ್ಲಿನಲ್ಲಿ ಹೂಡಿ ಬಿಟ್ಟಾಗ ಅವರಿಗೆ ನಾಟಿ ಅವರು ಮನುಷ್ಯರಾಗಿ ಗಟ್ಟಿಯಾಗಿ ಕೂಗಿದರು.
ಪದಾರ್ಥ (ಕ.ಗ.ಪ)
ವಿಪತ್ತು-ಆಪತ್ತು, ಕೇಡು,
ಠಾವು-ಸ್ಥಳ,
ಮಿಥುನ-ಜೋಡಿ,
ಮೃಗ-ಜಿಂಕೆ,
ಒರಲು-ಗಟ್ಟಿಯಾಗಿ ಕೂಗು
ಟಿಪ್ಪನೀ (ಕ.ಗ.ಪ)
ಕಿಂದಮ-ಒಬ್ಬ ಋಷಿ, ಜಿಂಕೆಯ ರೂಪ ತಳೆದು ತನ್ನ ಪ್ರಿಯೆಯೊಂದಿಗೆ ಕ್ರೀಡಿಸುತ್ತಿರುವಾಗ ಪಾಂಡುವಿನ ಬಾಣಕ್ಕೆ ತುತ್ತಾದ.
ಮೂಲ ...{Loading}...
ಬಂದುದಾ ಪಾಂಡುವಿಗೆ ನಿನ್ನಯ
ತಂದೆಗಾದ ವಿಪತ್ತಿನಂದದ
ಲೊಂದು ಠಾವಿನಲೊಬ್ಬ ಮುನಿ ಮೃಗ ಮಿಥುನ ರೂಪಿನಲಿ
ನಿಂದು ರಮಿಸುತ್ತಿರೆ ಮೃಗದ್ವಯ
ವೆಂದು ಹೂಡಿದನಂಬನಿಬ್ಬರಿ
ಗೊಂದು ಶರದಲಿ ಕೀಲಿಸಿದಡೊರಲಿದರು ನರರಾಗಿ ॥14॥
೦೧೫ ಹಾ ಮಹಾದೇವಯೆನುತ್ತೆ ...{Loading}...
ಹಾ ಮಹಾದೇವಯೆನುತ್ತೆ ಸ
ನಾಮಮುನಿ ತೆತ್ತಿಸಿದ ಬೆನ್ನಿನ
ತೋಮರದ ಮರುಮೊನೆಯ ಕಿಬ್ಬಸುರಿನ ನಿಜಾಂಗನೆಯ
ಕಾಮಿನಿಯೆ ಕಡುನೊಂದೆಲಾ ಮುಖ
ತಾಮರಸವನು ತೋರು ತೋರೆನು
ತಾ ಮುನೀಶ್ವರನಪ್ಪಿ ಮುಂಡಾಡಿದನು ನಿಜಸತಿಯ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಹಾ, ಮಹಾದೇವ’ ಎನ್ನುತ್ತ ಪ್ರಸಿದ್ಧ ಮುನಿ ತನ್ನ ಬೆನ್ನಿಗೆ ನಾಟಿ ಆಚೆಯ ಕಡೆ ತನ್ನ ಪತ್ನಿಯ ಕೆಳಹೊಟ್ಟೆಯಿಂದ ಹೊರಬಂದಿದ್ದ ಬಾಣದ ತುದಿಯನ್ನು ಕಂಡು, “ಹೆಣ್ಣೇ ಹೆಚ್ಚಾಗಿ ನೊಂದೆಯಲ್ಲ, ಮುಖಕಮಲವನ್ನು ತೋರು, ತೋರು” ಎನುತ ಆ ಮುನೀಶ್ವರನು ತನ್ನ ಪತ್ನಿಯನ್ನು ಅಪ್ಪಿ ಮುದ್ದಾಡಿದನು.
ಪದಾರ್ಥ (ಕ.ಗ.ಪ)
ಸನಾಮ-ಪ್ರಸಿದ್ಧನಾದ,
ತೆತ್ತಿಸು-ನಾಟಿಸು,
ಮರುಮೊನೆ-ಆಚೆಯ ಕಡೆ ಮೊನೆ ಕಾಣಿಸಿ ಕೊಳ್ಳುವಂತೆ ನಾಟುವುದು,
ಕಿಬ್ಬಸುರು-ಕೆಳಹೊಟ್ಟೆ,
ಕಾಮಿನಿ-ಹೆಣ್ಣು,
ತಾಮರಸ-ಮುಖಕಮಲ,
ಮುಂಡಾಡು-ಮುದ್ದಾಡು
ಮೂಲ ...{Loading}...
ಹಾ ಮಹಾದೇವಯೆನುತ್ತೆ ಸ
ನಾಮಮುನಿ ತೆತ್ತಿಸಿದ ಬೆನ್ನಿನ
ತೋಮರದ ಮರುಮೊನೆಯ ಕಿಬ್ಬಸುರಿನ ನಿಜಾಂಗನೆಯ
ಕಾಮಿನಿಯೆ ಕಡುನೊಂದೆಲಾ ಮುಖ
ತಾಮರಸವನು ತೋರು ತೋರೆನು
ತಾ ಮುನೀಶ್ವರನಪ್ಪಿ ಮುಂಡಾಡಿದನು ನಿಜಸತಿಯ ॥15॥
೦೧೬ ಕಾತರಿಪ ಮುನಿಮಿಥುನವನು ...{Loading}...
ಕಾತರಿಪ ಮುನಿಮಿಥುನವನು ನಿ
ನ್ನಾತ ಕಂಡನು ಬಿಲ್ಲಕೊಪ್ಪಿನ
ಲಾತ ಕದಪಿನ ಮಕುಟದೊಲವಿನ ಬೆರಳ ಬಿರುದನಿಯ
ಬೀತಸೊಂಪಿನ ತಳಿತ ಬೆರಗಿನ
ಪಾತಕದ ಪರುಠವದ ಮುಖದ ಮ
ಹೀತಳಾಧಿಪ ಸುಯ್ದು ನೊಂದನು ಶಿವ ಶಿವಾಯೆನುತ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಳವಳಿಸುತ್ತಿದ್ದ ಮುನಿದಂಪತಿಗಳನ್ನು ನಿನ್ನಾತ ಪಾಂಡು ನೋಡಿದನು. ಬಿಲ್ಲಿನ ಕೊನೆಯ ಮೇಲೆ ತನ್ನ ಕೆನ್ನೆಯನೂರಿ ಬೆರಳಿನಿಂದ ಮಕುಟವನ್ನಲುಗಿಸುತ್ತ, ಕಣ್ಣೀರು ಕರೆಯುತ್ತ, ಸೊಂಪಡಗಿದ ಆಶ್ಚರ್ಯದ ಪಾಪಪ್ರಜ್ಞೆಯ ಪಾಂಡು ಮಹಾರಾಜ ನಿಟ್ಟುಸಿರು ಬಿಟ್ಟು ಶಿವಶಿವಾ ಎಂದು ನೊಂದನು.
ಪದಾರ್ಥ (ಕ.ಗ.ಪ)
ಕಾತರ-ಕಳವಳ,
ಕೊಪ್ಪು-ಬಿಲ್ಲಿನ ಕೊನೆ,
ಕದಪು-ಕೆನ್ನೆ,
ಬಿರುದನಿ-ಬಿರುಸಾದ ದನಿ,
ಬೆರಗು-ಆಶ್ಚರ್ಯ,
ಸುಯ್ದು-ನಿಟ್ಟುಸಿರು ಬಿಟ್ಟು
ಆತ - ಆತುಕೊಂಡ
ಮೂಲ ...{Loading}...
ಕಾತರಿಪ ಮುನಿಮಿಥುನವನು ನಿ
ನ್ನಾತ ಕಂಡನು ಬಿಲ್ಲಕೊಪ್ಪಿನ
ಲಾತ ಕದಪಿನ ಮಕುಟದೊಲವಿನ ಬೆರಳ ಬಿರುದನಿಯ
ಬೀತಸೊಂಪಿನ ತಳಿತ ಬೆರಗಿನ
ಪಾತಕದ ಪರುಠವದ ಮುಖದ ಮ
ಹೀತಳಾಧಿಪ ಸುಯ್ದು ನೊಂದನು ಶಿವ ಶಿವಾಯೆನುತ ॥16॥
೦೧೭ ಅರಿಯೆ ನಾನಿವರೆನ್ದು ...{Loading}...
ಅರಿಯೆ ನಾನಿವರೆಂದು ಮೃಗವೆಂ
ದಿರಿದೊಡಿದು ಮತ್ತೊಂದು ಪರಿಯಾ
ಯ್ತುರುವ ಮಾಣಿಕವೆಂದು ಕೊಂಡಡೆ ಕೆಂಡವಾದುದಲ
ಸರವಿಯೇ ಹಾವಾದುದೇನೆಂ
ದರಿಯೆನೀ ಕೌತುಕವನುರೆ ಮೈ
ಮರೆಸಿ ಕೊಂದುದೆ ವಿಧಿಯೆನುತ ಹರಿತಂದನಾ ಸ್ಥಳಕೆ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾನು ಮುನಿದಂಪತಿಗಳೆಂದು ತಿಳಿಯಲಿಲ್ಲ. ಮೃಗವೆಂದು ಹೊಡೆದರೆ ಮತ್ತೊಂದು ರೀತಿಯಾಯ್ತು. ಶ್ರೇಷ್ಠ ಮಾಣಿಕ್ಯವೆಂದು ಹಿಡಿದರೆ ಕೆಂಡವಾಯ್ತಲ್ಲ. ಹಗ್ಗವೇ ಹಾವಾಯಿತು. ಈ ವಿಚಿತ್ರವನ್ನು ಏನೆಂದು ತಿಳಿಯಲಿ? ವಿಧಿ ಮೈ ಮರೆಸಿ ಕೊಂದುದೇ ಎಂದು ಆ ಸ್ಥಳಕ್ಕೆ ಓಡಿ ಬಂದನು.
ಪದಾರ್ಥ (ಕ.ಗ.ಪ)
ಉರುವ-ಶ್ರೇಷ್ಠವಾದ,
ಮಾಣಿÂÂಕ-ಮಾಣಿಕ್ಯ (ನವರತ್ನಗಳಲ್ಲಿ ಒಂದು),
ಸರವಿ-ಹಗ್ಗ,
ಕೌತುಕ-ವಿಚಿತ್ರ
ಟಿಪ್ಪನೀ (ಕ.ಗ.ಪ)
ನವರತ್ನ : ವಜ್ರ/ರತ್ನ, ಪಚ್ಚೆ, ಪುಷ್ಯರಾಗ, ಮಾಣಿಕ್ಯ, ಇಂದ್ರನೀಲ,ಗೋಮೇಧಿಕ, ವೈಡೂರ್ಯ, ಮುತ್ತು, ಹವಳ.
ಮೂಲ ...{Loading}...
ಅರಿಯೆ ನಾನಿವರೆಂದು ಮೃಗವೆಂ
ದಿರಿದೊಡಿದು ಮತ್ತೊಂದು ಪರಿಯಾ
ಯ್ತುರುವ ಮಾಣಿಕವೆಂದು ಕೊಂಡಡೆ ಕೆಂಡವಾದುದಲ
ಸರವಿಯೇ ಹಾವಾದುದೇನೆಂ
ದರಿಯೆನೀ ಕೌತುಕವನುರೆ ಮೈ
ಮರೆಸಿ ಕೊಂದುದೆ ವಿಧಿಯೆನುತ ಹರಿತಂದನಾ ಸ್ಥಳಕೆ ॥17॥
೦೧೮ ಉಗಿದು ಬಿಸುಟನು ...{Loading}...
ಉಗಿದು ಬಿಸುಟನು ಸರಳ ಮಗ್ಗುಲ
ಮಗುಚಿ ನೆತ್ತರ ಹೊನಲಿನೀಚೆಗೆ
ತೆಗೆದು ತೊಳೆತೊಳೆದೊರಸಿದನು ಸಗ್ಗಳೆಯ ನೀರಿನಲಿ
ಮೃಗವಹರೆ ಮಾನಿಸರಕಟ ಪಾ
ಪಿಗಳಿಗೆತ್ತಣ ತಪವಿದೆತ್ತಣ
ಮೃಗ ವಿನೋದಕ್ರೀಡೆ ಕೊಂದಿರೆನುತ್ತ ಬಿಸುಸುಯ್ದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಾಣವನ್ನು ಕಿತ್ತು ಹೊರಕ್ಕೆ ತೆಗೆದನು. ಅವರನ್ನು ಪಕ್ಕಕ್ಕೆ ತಿರುವಿ ಹಾಕಿ ರಕ್ತ ಪ್ರವಾಹದಿಂದ ಹೊರಗೆ ತೆಗೆದು, ಚರ್ಮದ ಚೀಲದ ನೀರಿನಿಂದ ತೊಳೆ ತೊಳೆದು ಒರಸಿದನು. “ಮನುಷ್ಯರು ಮೃಗವಾಗುತ್ತಾರೆಯೇ ? ಅಯ್ಯೋ ಪಾಪಿಗಳಿಗೆ ಇದೆಲ್ಲಿಯ ತಪಸ್ಸು ? ಇದೆಂತ ಮೃಗ ವಿನೋದ ಕ್ರೀಡೆ ? ಕೊಂದಿರಿ " ಎನುತ್ತ ನಿಟ್ಟುಸಿರು ಬಿಟ್ಟನು.
ಪದಾರ್ಥ (ಕ.ಗ.ಪ)
ಉಗಿದು-ಹೊರತೆಗೆದು,
ಮಗ್ಗುಲು-ಪಕ್ಕ,
ಮಗುಚಿ-ತಿರುವಿ ಹಾಕಿ,
ನೆತ್ತರು-ರಕ್ತ,
ಹೊನಲು-ಪ್ರವಾಹ,
ಸಗ್ಗಳೆ-ನೀರು ತುಂಬುವ ಚರ್ಮದ ಚೀಲ,
ಮಾನಿಸರು-ಮನುಷ್ಯರು,
ಬಿಸುಸುಯ್-ನಿಟ್ಟುಸಿರು ಬಿಡು
ಮೂಲ ...{Loading}...
ಉಗಿದು ಬಿಸುಟನು ಸರಳ ಮಗ್ಗುಲ
ಮಗುಚಿ ನೆತ್ತರ ಹೊನಲಿನೀಚೆಗೆ
ತೆಗೆದು ತೊಳೆತೊಳೆದೊರಸಿದನು ಸಗ್ಗಳೆಯ ನೀರಿನಲಿ
ಮೃಗವಹರೆ ಮಾನಿಸರಕಟ ಪಾ
ಪಿಗಳಿಗೆತ್ತಣ ತಪವಿದೆತ್ತಣ
ಮೃಗ ವಿನೋದಕ್ರೀಡೆ ಕೊಂದಿರೆನುತ್ತ ಬಿಸುಸುಯ್ದ ॥18॥
೦೧೯ ಮತ್ತೆ ನಾವೇ ...{Loading}...
ಮತ್ತೆ ನಾವೇ ಪಾಪಿಗಳೆ ನೀ
ನುತ್ತಮನಲಾ ಸಾಕಿದೇತಕೆ
ನುತ್ತ ಮರಳುವ ಕಂಗಳಡಿಗಡಿಗುಗಿವ ಮೇಲುಸುರ
ಎತ್ತಿ ಹಾಯ್ಕುವ ಕೊರಳ ಬಿಕ್ಕುಳ
ತೆತ್ತುವಧರದ ರೋಷದಲಿ ಹೊಗೆ
ಸುತ್ತಿದುರಿವಾತುಗಳ ಸೂಸಿದರವನಿಪನ ಮೇಲೆ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಮಾತು ಕೇಳಿದ ಮುನಿ ದಂಪತಿಗಳು “ಮತ್ತೆ ನಾವೇ ಪಾಪಿಗಳೇ, ನೀನು ಉತ್ತಮನಲ್ಲಾ ! ಸಾಕು, ಇದೇತಕ್ಕೆ” ಎನುತ್ತ ಮುಚ್ಚಿಕೊಳ್ಳುವ ಕಂಗಳ, ಮೇಲಿಂದ ಮೇಲೆ ಹೊರತೆಗೆವ ಏದುಸಿರಿನಿಂದ ಎತ್ತಿ ಹಾಕುವ ಕೊರಳ, ಬಿಕ್ಕುಳಿಸುವ, ನಡುಗುವ ತುಟಿಗಳಿಂದ ರೋಷದಲ್ಲಿ ಪಾಂಡುರಾಜನ ಮೇಲೆ ಕಠೋರವಾದ ಮಾತುಗಳನ್ನಾಡಿದರು.
ಪದಾರ್ಥ (ಕ.ಗ.ಪ)
ಮರಳು-ಮುಚ್ಚಿಕೊಳ್ಳುವ
ಉಗಿವ-ಹೊರತೆಗೆವ,
ಉರಿವಾತು-ಕಠೋರವಾದ ಮಾತು.
ಪಾಠಾನ್ತರ (ಕ.ಗ.ಪ)
[ತೆತ್ತುವ] - [ಕೆತ್ತುವ (ಆ)]
ತೆತ್ತುವಧರದ - ತಿರಿಚುವ ತುಟಿಯ, ಕೆತ್ತುವಧಾರದ-ನಡುಗುವ ತುಟಿಯ ಈ ಅರ್ಥಗಳನ್ನು ಪರಿಶೀಲಿಸಿದರೆ, [ಕೆತ್ತುವ] ಪಾಠಾಂತರವೂ ಸೂಕ್ತವೆನಿಸುತ್ತದೆ.
ಮೂಲ ...{Loading}...
ಮತ್ತೆ ನಾವೇ ಪಾಪಿಗಳೆ ನೀ
ನುತ್ತಮನಲಾ ಸಾಕಿದೇತಕೆ
ನುತ್ತ ಮರಳುವ ಕಂಗಳಡಿಗಡಿಗುಗಿವ ಮೇಲುಸುರ
ಎತ್ತಿ ಹಾಯ್ಕುವ ಕೊರಳ ಬಿಕ್ಕುಳ
ತೆತ್ತುವಧರದ ರೋಷದಲಿ ಹೊಗೆ
ಸುತ್ತಿದುರಿವಾತುಗಳ ಸೂಸಿದರವನಿಪನ ಮೇಲೆ ॥19॥
೦೨೦ ಎಲವೊ ರಾಜಬ್ರುವನೆ ...{Loading}...
ಎಲವೊ ರಾಜಬ್ರುವನೆ ತನ್ನಯ
ಲಲನೆಯೊಡನಿರೆ ಕೊಂದೆ ನಿನ್ನಯ
ಲಲನೆಯನು ನೀ ಕೂಡಿದಾಗಲೆ ಮರಣ ನಿನಗಹುದು
ಹಲವು ಮಾತೇಕೆನುತ ಹರಣವ
ಕಳೆದುದಾ ಮುನಿ ಮಿಥುನವವನಿಪ
ತಿಲಕ ದುಮ್ಮಾನದಲಿ ಬಂದನು ಹಸ್ತಿನಾಪುರಕೆ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲವೊ ಅರಸನೆಂದು ಹೇಳಿಕೊಳ್ಳುವವನೇ, ನನ್ನ ಪತ್ನಿಯೊಡನೆ ಇರುವಾಗ ನಮ್ಮನ್ನು ಕೊಂದೆ. ನಿನ್ನ ಪತ್ನಿಯನ್ನು ನೀನು ಕೂಡಿದಾಗ ನಿನಗೆ ಮರಣವಾಗುವುದು, ಹಲವು ಮಾತೇಕೆ ?” ಎನುತ್ತಿರುವಾಗ ಮುನಿದಂಪತಿಗಳ ಪ್ರಾಣ ಹೋಯಿತು. ರಾಜ ಶ್ರೇಷ್ಠನಾದ ಪಾಂಡು ದುಃಖದಲ್ಲಿ ಹಸ್ತಿನಾಪುರಕ್ಕೆ ಬಂದನು.
ಪದಾರ್ಥ (ಕ.ಗ.ಪ)
ರಾಜಬ್ರುವ-ಅರಸನೆಂದು ಹೇಳಿಕೊಳ್ಳುವವನು,
ಹರಣ-ಪ್ರಾಣ,
ದುಮ್ಮಾನ-ದುಃಖ
ಮೂಲ ...{Loading}...
ಎಲವೊ ರಾಜಬ್ರುವನೆ ತನ್ನಯ
ಲಲನೆಯೊಡನಿರೆ ಕೊಂದೆ ನಿನ್ನಯ
ಲಲನೆಯನು ನೀ ಕೂಡಿದಾಗಲೆ ಮರಣ ನಿನಗಹುದು
ಹಲವು ಮಾತೇಕೆನುತ ಹರಣವ
ಕಳೆದುದಾ ಮುನಿ ಮಿಥುನವವನಿಪ
ತಿಲಕ ದುಮ್ಮಾನದಲಿ ಬಂದನು ಹಸ್ತಿನಾಪುರಕೆ ॥20॥
೦೨೧ ಆದ ಹದನನು ...{Loading}...
ಆದ ಹದನನು ಭೀಷ್ಮ ಧೃತರಾ
ಷ್ಟ್ರಾದಿಗಳಿಗರುಹಿದರೆ ಹಯ ಮೇ
ಧಾದಿ ಯಜ್ಞದಲೀ ಮಹಾ ಪಾತಕ ವಿಘಾತಕವ
ವೈದಿಕೋಕ್ತಿಯ ಮಂತ್ರದಲಿ ಸಂ
ಪಾದಿಸುವೆವೆನೆ ಶಿರವ ಬಿದುರಿ ಮ
ಹಾದುರಾಗ್ರಹ ಬುದ್ಧಿಯಲಿ ಹೊರವಂಟನರಮನೆಯ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡುವು ನಡೆದ ವಿಷಯವನ್ನು ಭೀಷ್ಮ ಧೃತರಾಷ್ಟ್ರರಿಗೆ ತಿಳಿಸಿದರೆ, ಅವರು, “ಅಶ್ವಮೇಧ ಮೊದಲಾದ ಯಜ್ಞಗಳಿಂದಲೂ, ವೈದಿಕ ಮಂತ್ರಗಳಿಂದಲೂ ಈ ಮಹಾ ಪಾಪದ ಪರಿಹಾರವನ್ನು ದೊರಕಿಸುವೆವು” ಎನಲು, ಪಾಂಡುವು ತನಗೊಪ್ಪಿಗೆಯಿಲ್ಲವೆಂದು ತಲೆಕೊಡಹಿ ತಿಳಿಸಿ ಕೆಟ್ಟ ಹಟದಿಂದ ಅರಮನೆಯನ್ನು ಬಿಟ್ಟು ಹೊರಟನು.
ಪದಾರ್ಥ (ಕ.ಗ.ಪ)
ಬಿದುರಿ-ಕೊಡಹಿ,
ದುರಾಗ್ರಹ-ಕೆಟ್ಟ ಹಟ
ಮೂಲ ...{Loading}...
ಆದ ಹದನನು ಭೀಷ್ಮ ಧೃತರಾ
ಷ್ಟ್ರಾದಿಗಳಿಗರುಹಿದರೆ ಹಯ ಮೇ
ಧಾದಿ ಯಜ್ಞದಲೀ ಮಹಾ ಪಾತಕ ವಿಘಾತಕವ
ವೈದಿಕೋಕ್ತಿಯ ಮಂತ್ರದಲಿ ಸಂ
ಪಾದಿಸುವೆವೆನೆ ಶಿರವ ಬಿದುರಿ ಮ
ಹಾದುರಾಗ್ರಹ ಬುದ್ಧಿಯಲಿ ಹೊರವಂಟನರಮನೆಯ ॥21॥
೦೨೨ ಸಕಲ ಭಣ್ಡಾರವನು ...{Loading}...
ಸಕಲ ಭಂಡಾರವನು ಭೂಸುರ
ನಿಕರದಲಿ ಚೆಲ್ಲಿದನು ಸುಜನ
ಪ್ರಕರವನು ಗಾಂಗೇಯ ಧೃತರಾಷ್ಟ್ರರಿಗೆ ಕೈಗೊಳಿಸಿ
ಚಕಿತ ಚಿತ್ತನು ಮುನಿಹತಿಯ ಪಾ
ತಕದ ನೆತ್ತಿಯ ಸಬಳವಾವುದೊ
ಸಕಲ ಯೋಗಾವಳಿಯೊಳೆನುತೈದಿದನು ಕಾನನವ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಕಲ ಭಂಡಾರವನ್ನು ಭೂಸುರ ಸಮೂಹಕ್ಕೆ ಹರಡಿದನು. ಸಜ್ಜನರ ಸಮೂಹವನ್ನು ಭೀಷ್ಮ ಧೃತರಾಷ್ಟ್ರರಿಗೆ ಒಪ್ಪಿಸಿ, ಭಯ ಚಿತ್ತದವನಾದ ಪಾಂಡು, ಮುನಿಯ ಸಂಹಾರದ ಪಾಪ, ನೆತ್ತಿಯ ಮೇಲಿನ ಈಟಿಯಂತಿದ್ದು ಅದರ ಪರಿಹಾರಕ್ಕೆ ಸಕಲ ಯೋಗ ಸಮೂಹದಲ್ಲಿ ಯಾವುದೋ ಎನ್ನುತ ಅತ್ತ ಕಾಡನ್ನು ಸೇರಿದನು.
ಪದಾರ್ಥ (ಕ.ಗ.ಪ)
ಚೆಲ್ಲು-ಹರಡು,
ಚಕಿತ-ಭಯಗೊಂಡ,
ಸಬಳ-ಈಟಿ, ಭರ್ಜಿ,
ಆವಳಿ-ಸಮೂಹ,
ಐದು-ಸೇರು
ಮೂಲ ...{Loading}...
ಸಕಲ ಭಂಡಾರವನು ಭೂಸುರ
ನಿಕರದಲಿ ಚೆಲ್ಲಿದನು ಸುಜನ
ಪ್ರಕರವನು ಗಾಂಗೇಯ ಧೃತರಾಷ್ಟ್ರರಿಗೆ ಕೈಗೊಳಿಸಿ
ಚಕಿತ ಚಿತ್ತನು ಮುನಿಹತಿಯ ಪಾ
ತಕದ ನೆತ್ತಿಯ ಸಬಳವಾವುದೊ
ಸಕಲ ಯೋಗಾವಳಿಯೊಳೆನುತೈದಿದನು ಕಾನನವ ॥22॥
೦೨೩ ಅರಸ ಕೇಳ್ ...{Loading}...
ಅರಸ ಕೇಳ್ ಶತಶೃಂಗ ಶೈಲದ
ವರತಪೋಧನರಾಶ್ರಮಕೆ ನಿ
ಮ್ಮರಸ ಬಂದನು ವಂದಿಸಿದನಾ ಪರಮಮುನಿವರರ
ಹರುಷದಲಿ ಜಾಬಾಲಿ ಗಾಗ್ರ್ಯಾಂ
ಗಿರಸ ಗಾಲವ ಗೌತಮಾದ್ಯರು
ಧರಣಿಪನ ಸಂಭಾವಿಸಿದರಘ್ರ್ಯಾಸನಾದಿಯಲಿ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಾಜಾ ಕೇಳು, ಶತಶೃಂಗ ಪರ್ವತದ ಶ್ರೇಷ್ಠ ಋಷಿಗಳ ಆಶ್ರಮಕ್ಕೆ ನಿಮ್ಮ ಅರಸ ಪಾಂಡು ಬಂದನು. ಆ ಪರಮ ಮುನಿಶ್ರೇಷ್ಠರನ್ನು ವಂದಿಸಿದನು. ಜಾಬಾಲಿ, ಗಾಗ್ರ್ಯ, ಅಂಗಿರಸ, ಗಾಲವ, ಗೌತಮ ಮೊದಲಾದವರು ಸಂತೋಷದಲ್ಲಿ ಧರಣಿಪತಿಯನ್ನು ಅಘ್ರ್ಯ, ಆಸನ ಮೊದಲಾದುವುಗಳಿಂದ ಗೌರವಿಸಿದರು.
ಪದಾರ್ಥ (ಕ.ಗ.ಪ)
ತಪೋಧನರು-ತಪಸ್ಸನ್ನೇ ಐಶ್ವರ್ಯವಾಗಿ ಉಳ್ಳವರು, ಋಷಿ,
ಸಂಭಾವಿಸು-ಗೌರವಿಸು
ಟಿಪ್ಪನೀ (ಕ.ಗ.ಪ)
ಶತಶೃಂಗ - ಒಂದು ಪರ್ವತ, ಪಾಂಡು ತನ್ನ ಪತ್ನಿಯರೊಂದಿಗೆ ಅರಣ್ಯದಲ್ಲಿದ್ದಾಗ ಕುಂತಿಯ ಮಡಿಲಿನಿಂದ ಜಾರಿದ ಭೀಮ ಇದರ ಮೇಲೆ ಬಿದ್ದು ಇದು ನೂರು ತುಂಡಾದ ಕಾರಣ ಶತಶೃಂಗವೆಂಬ ಹೆಸರಾಯ್ತು.
ಜಾಬಾಲಿ - ವಿಶ್ವಾಮಿತ್ರನ ಬ್ರಹ್ಮಜ್ಞಾನಿ ಮಕ್ಕಳಲ್ಲಿ ಒಬ್ಬ.
ಗಾಗ್ರ್ಯ - ಯಾದವರ ಪುರೋಹಿತ.
ಅಂಗಿರಸ - ಬ್ರಹ್ಮ ಮಾನಸ ಪುತ್ರ. ಈತನ ಪುತ್ರ ಬೃಹಸ್ಪತಿಯನ್ನು ದೇವತೆಗಳು ತಮ್ಮ ಪೌರೋಹಿತ್ಯಕ್ಕೆ ಆಯ್ಕೆ ಮಾಡಿದ್ದರು. ಬೃಹಸ್ಪತಿ, ಉತಥ್ಯ ಮತ್ತು ಸಂವರ್ತರೆಂಬುವರು ಮೂವರು ಪುತ್ರರು.
ಗಾಲವ - ವಿಶ್ವಾಮಿತ್ರನ ಮಕ್ಕಳಲ್ಲಿ ಒಬ್ಬ. ಹನ್ನೆರಡು ವರ್ಷಗಳವರೆಗೆ ಕ್ಷಾಮ ಬಂದಾಗ ವಿಶ್ವಾಮಿತ್ರ ತನ್ನ ಹೆಂಡತಿ ಮಕ್ಕಳನ್ನು ಬಿಟ್ಟು ಎಲ್ಲಿಯೋ ಹೋದನು. ಆಗ ಅವನ ಹೆಂಡತಿ ತನ್ನ ಮಕ್ಕಳಲ್ಲಿ ಒಬ್ಬನ ಕುತ್ತಿಗೆಗೆ ದರ್ಭೆಯ ಹುರಿಯನ್ನು ಬಿಗಿದು ಯಾರಿಗಾದರೂ ಮಾರಿ ಬಂದ ಹಣದಿಂದ ಜೀವನ ನಡೆಸಬೇಕೆಂದಿರುವಾಗ ಸತ್ಯವ್ರತ ಅರಸು ಕುಟುಂಬದ ಗೃಹಕೃತ್ಯವನ್ನು ನಿರ್ವಹಿಸುವುದಾಗಿ ಅಭಯ ನೀಡಿ ಆ ಹುಡುಗನನ್ನು ಬಿಡಿಸಿದ. ಕುತ್ತಿಗೆಗೆ ಗಾಳ ಹಾಕಿದವನಾದುದರಿಂದ ಗಾಲವನೆಂದು ಹೆಸರು.
ಗೌತಮ - ಸಪ್ತರ್ಷಿಗಳಲ್ಲಿ ಒಬ್ಬ. ಉಚಥ್ಯನ ಮಗನಾದ ದೀರ್ಘತಮ ಮುನಿಯ ಮಗ. ಗೋತ್ರ ಪ್ರವರ್ತಕಗಾಲವನ ಕಥೆಯಲ್ಲಿ ವಿಚಿತ್ರವೂ ಲೋಕ ವಿರೋಧಿಯೂ ನೀತಿ ವಿಮುಖವೂ ಆದ ಘಟನೆಗಳಿವೆ. ಹೆಚ್ಚಿನ ವಿವರ ಬಯಸುವವರು ಅನುಪಮಾ ನಿರಂಜನರ ‘ಮಾಧವಿ’ ಕಾದಂಬರಿಯನ್ನು ಓದಿ ಮತ್ತು ‘ಮಾಧವಿ’ ಶೀರ್ಷಿಕೆ ನೋಡಿ. ಇವನ ಕಥೆ ಉದ್ಯೋಗ ಪರ್ವದ 15ನೇ ಅಧ್ಯಾಯದಲ್ಲಿದೆ.
ಗಾಲವ ಒಬ್ಬ ಪ್ರಸಿದ್ಧ ಋಷಿ. ಧರ್ಮರಾಯನ ಸಭೆಯಲ್ಲಿ ಇಂದ್ರನ ಸಭೆಯಲ್ಲಿ ಇರುತ್ತಿದ್ದ ಜ್ಞಾನಿ. ಈತ ವಿಶ್ವಾಮಿತ್ರನಂಥ ಬ್ರಹ್ಮರ್ಷಿಯ ಬಳಿ ಶಿಷ್ಯನಾಗಿದ್ದ ವಿದ್ಯಾಭ್ಯಾಸ ಮುಗಿದ ಮೇಲೆ ಗುರುವಿಗೆ ಏನು ದಕ್ಷಿಣೆ ಕೊಡಬೇಕು ಎಂದು ಕೇಳಿದ. ಅಲ್ಲದೆ ಗುರುದಕ್ಷಿಣೆಯನ್ನು ತೆಗೆದುಕೊಳ್ಳಲೇ ಬೇಕೆಂದು ಪಟ್ಟುಹಿಡಿದ. ಗುರು ಕೇಳಿದ್ದು ಎಂಟುನೂರು ಕುದುರೆಗಳು. ಅವೂ ಅಂಥಿಂಥವಲ್ಲ. ಅವು ಬಿಳಿಯ ಬಣ್ಣದವಾಗಿರಬೇಕು. ಒಂದು ಕಿವಿ ನೀಲಿ ಇರುವ ಉತ್ತಮಾಶ್ವಗಳಾಗಿರಬೇಕು. ಗುರು ಕೇಳಿದ ಮೇಲೆ ತರುವುದು ಶಿಷ್ಯನ ಕೆಲಸವಲ್ಲವೆ? ತನ್ನ ಆಪ್ತ ಸ್ನೇಇತ ಗರುಡನನ್ನು ನೆನೆದ. ‘ಅಶ್ವಸಹಾಯ’ ಮಾಡಲೆಂದು ಗರುಡ ಗಾಲವನನ್ನು ಮೊದಲು ಕರೆದುಕೊಂಡು ಹೋದದ್ದು ಪ್ರಸಿದ್ಧನಾದ ಯಯಾಥಿಯ ಬಳಿಗೆ. ಆದರೆ ಯಯಾತಿಯ ಬಳಿಗೆ ಅಂಥ ಕುದುರೆಗಳಿರಲಿಲ್ಲ. ಗಾಲವನ ಬೇಡಿಕೆಯನ್ನು ನಿರಾಕರಿಸುವುದಕ್ಕೂ ಯಯಾತಿಗೆ ಮನಸ್ಸಿಲ್ಲ. ಆದುದರಿಂದ ಕುದುರೆಗಳಿಗೆ ಬದಲಾಗಿ ತನ್ನ ಮಗಳು ಮಾಧವಿಯನ್ನು ಗಾಲವನಿಗೆ ಕೊಟ್ಟು ಆಕೆಯನ್ನು ಒಂದು ಅವಧಿಯವರೆಗೆ ಒತ್ತೆಯಿರಿಸಿ 200 ಕುದುರೆಗಳಂತೆ ನಾಲ್ಕು ಜನರ ಬಳಿ ಸಂಪಾದಿಸಿಕೋ ಎಂದು ಹೇಳಿದ. ಅವಳಿಗೆ ಒಂದು ಮಗುವಾಗುವ ತನಕ ಆಕೆ ಆಯಾ ರಾಜನ ಬಳಿ ಇರಬಹುದೆಂಬ ನಿಬಂಧನೆಯನ್ನು ಹೇಳಿದ. ಗಾಲವ ದಾನಿಗಳನ್ನು ಹುಡುಕಿಕೊಂಡು ಒರಟ. ಆದರೆ ಸಿಕ್ಕವರು ಮೂವರೇ. ಮೊದಲು ಸಿಕ್ಕವನು ಹರ್ಯಶ್ವ.. (ಈ ಮೂರು ಹೆಸರುಗಳಲ್ಲಿ ಭಿನ್ನನಾಮಗಳೂ ಕೆಲವು ಪ್ರತಿUಳಲ್ಲುಂಟು) ಅವನು 200 ಕುದುರೆಗಳನ್ನಿತ್ತು ಮಾಧವಿಯನ್ನು ಇರಿಸಿಕೊಂಡ. ಅವಳಿಗೆ ಒಂದು ಮಗುವಾದ ನಂತರ ಬಿಟ್ಟುಕೊಟ್ಟ. ಮುಂದೆ ದಿವೋದಾಸನ ಸರದಿ. ಅಲ್ಲೂ ಇದೇ ಪ್ರಯೋಗ. ಅನಂತರ ಉಶೀನರನ ಸರದಿ. ಮೂವರಿಗೂ ಒಂದೊಂದು ಗಂಡನ್ನು ಹೆತ್ತುಕೊಟ್ಟು ಮುಕ್ತಳಾದ ಮಾಧವಿಯನ್ನು ಗಾಲವ ವಿಶ್ವಾಮಿತ್ರನ ಬಳಿಗೆ ಕರೆದುಕೊಂಡು ಹೋಗುತ್ತಾನೆ. ಗರುಡನ ಸಹಾಯದಿಂದ, ರಾಜರುಗಳ ಸಹಾಯದಿಂದ ಪಡೆದದ್ದು 600 ಕುದುರೆಗಳು ಮಾತ್ರ. ಇನ್ನು ಇನ್ನೂರು ಕುದುರೆಗಳನ್ನು ಹೊಂದಿಸಬೇಕಲ್ಲ. ಅದಕ್ಕೆ ಬದಲಾಗಿ ಮಾಧವಿಯನ್ನೇ ಗುರುವಿಗೆ ಒಪ್ಪಿಸಿ ಋಣಭಾರದಿಂದ ಮುಕ್ತನಾಗುವುದು ಗಾಲವನ ಹಂಚಿಕೆಯಾಗಿತ್ತು. ವಿಶ್ವಾಮಿತ್ರನು 600 ಕುದುರೆಗಳನ್ನು ಸ್ವೀಕರಿಸಿ 200 ಕುದುರೆಗಳ ಬದಲಿಗೆ ಮಾಧವಿಯನ್ನು ಸ್ವೀಕರಿಸಿದ. ಅವಳೊಡನೆ ಸಂಸಾರ ಮಾಡಿದ ಅಷ್ಟಕ ಎಂಬ ಪುತ್ರನನ್ನೂ ಪಡೆದ. ಅನಂತರ ಗಾಲವನ್ನು ಕರೆದು ಗುರುದಕ್ಷಿಣೆ ಬಂದಿತೆಂದು ಹೇಳಿ ಮಾಧವಿಯನ್ನು ಗಾಲವನಿಗೆ ಒಪ್ಪಿಸಿದ. ತನ್ನ ಕೆಲಸ ಮುಗಿದದ್ದರಿಂದ ಪ್ರಸನ್ನಚಿತ್ತದಿಂದ ಗಾಲವನು ಆಪ್ತಸ್ನೇಹಿತನಾದ ಗರುಡನನ್ನು ಕರೆದು ತನ್ನನ್ನು ಮತ್ತೆಮತ್ತೆ ಮಾಧವಿಯ ತಂದೆ ಯಯಾತಿಯ ಬಳಿಯಲ್ಲಿ ಬಿಡುವಂತೆ ಕೋರಿದ. ಯಯಾತಿಯ ಆಶ್ರಮಕ್ಕೆ ಬಂದು ಮಗಳಾದ ಮಾಧವೀರಾಣಿಯನ್ನು ಅಪ್ಪನ ಬಳಿ ಬಿಟ್ಟು ಮುಕ್ತನಾಗಿ ತಪಸ್ಸು ಆಡಲು ವನಪ್ರದೇಶಕ್ಕೆ ಪ್ರಯಾಣ ಮಾಡಿದ.
ಈ ಕಥೆಯಲ್ಲಿ ಬರುವ ಹೆಣ್ಣಿನ ಮಾರಾಟದ ಸಂಗತಿಯು ಬೌದ್ಧಿಕ ಜಿಜ್ಞಾಸೆಗೆ ಒಳಗಾಗಿದೆ. ಹೆಣ್ಣನ್ನು ಮಾರಾಟದ ವಸ್ತುವಾಗಿ ಕಂಡಿರುವ ಬಗೆಯನ್ನು ಹಲವಾರು ವಿದ್ವಾಂಸರು ಟೀಕಿಸಿದ್ದಾರೆ. ಇನ್ನೂರು ಕುದುರೆಗಳ ಬೆಲೆಯನ್ನು ಹೆಣ್ಣಿಗೆ ಕಟ್ಟಿರುವುದಂತೂ ತೀರ ನಾಚಿಕೆಗೇಡಿನ ವಿನಿಮಯ ಎಂದು ಸ್ತ್ರೀವಾದಿಗಳು ಆಕ್ಷೇಪಿಸಿರುವುದನ್ನು ಅಲ್ಲಗಳೆಯುವಂತಿಲ್ಲ. ಯಯಾತಿಯಂಥವನ ಕಾಲದಲ್ಲೂ ಇಂಥ ಬರ್ಬರ ಸ್ಥಿತಿಯಿತ್ತು ಎಂದರೆ ಆಶ್ಚರ್ಯವಲ್ಲವೆ?
ಬ್ರಹ್ಮನ ಮಾನಸಪುತ್ರರಲ್ಲಿ ಒಬ್ಬ. ತುಂಬ ವಿಚಾರವಂತನಾದ ಈತನನ್ನು ‘ಪ್ರಜ್ಞಾನಾಂಪತಿ’ ಎನ್ನುತ್ತಾರೆ. ಅರಣ್ಯಪರ್ವದ 218ನೇ ಪರ್ವದಲ್ಲಿ ಈತನ ಬಗೆಗೆ ವಿವರಗಳಿವೆ. ಅಂಗೀರಸನ ಹೆಂಡತಿ ಸುಭಾ. ಈ ದಂಪತಿಗಳಿಗೆ ಬೃಹಸ್ಪತಿ, ಉತಥ್ಯ, ಸಮವರ್ತ ಎಂಬ ಮೂವರು ಪ್ರಸಿದ್ಧ ಮಕ್ಕಳಿದ್ದರು. ಬೃಹಸ್ಪತಿ ಮುಂದೆ ದೇವಗುರುವಾಗಿ ಬೆಳೆದ ಹೆಣ್ಣು ಮಕ್ಕಳು ಭಾನುಮತಿ, ರಾಘಾ, ಸಿನೀವಾಲಿ (ಅಮಾವಾಸ್ಯೆಯಂತೆ ಕಣ್ಣಿಗೆ ಕಾಣುವ ಕಾಣದ ಎರಡೂ ಗುಣ ಈಕೆಗಿತ್ತು) ಅರ್ಚಿಷ್ಮತಿ ಹವಿಷ್ಮತಿ ಮಹಿಷ್ಮತಿ ಮಹಾಮತಿ ಮತ್ತು ಕುಹೂ ಎಂಬುವರು.
ಅಂಗಿರಸನಿಗೆ ಎರಡನೆಯ ಅಗ್ನಿ ಎಂದೂ ಹೆಸರಿದೆ. ಬ್ರಹ್ಮನಿಂದ ಅಗ್ನಿ ಸೃಷ್ಟಿಯಾಗಿದ್ದು ಸರಿಯಷ್ಟೆ. ದೇವಗಣದಲ್ಲಿ ಅಗ್ನಿ ತುಂಬ ಮಹತ್ವದ ದೇವ. ಅಗ್ನಿಯು ಒಮ್ಮ ಜಲದಲ್ಲಿ ಮುಳುಗಿ ತಪೋನಿರತನಾಗಿದ್ದ. ಆಗ ಮಹಾತೇಜಸ್ವಿಯಾದ ಅಂಗಿರಸನು ಘೋರ ತಪಶ್ಚರ್ಯೆಯಿಂದ ಅಗ್ನಿಯಂತೆ ಪ್ರಕಾಶಿಸಿದ. ಲೋಕಕ್ಕೆ ಕಾಂತಿಯನ್ನೂ ಉಷ್ಣತೆಯನ್ನೂ ನೀಡಿದ.
ಅಗ್ನಿ ನೀರಿನಿಂದ ಎದ್ದು ಬಂದ ಮೇಲೆ ತನ್ನ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿರುವ ಅಂಗಿರಸನನ್ನು ನೋಡಿದ. ಬಹುಶಃ ಬ್ರಹ್ಮನೇ ಇವನನ್ನು ಸೃಷ್ಟಿಸಿ ತನ್ನ ಬದಲಿಗೆ ನೇಮಿಸಿದ್ದಾನೆಂದು ಭಾವಿಸಿದ. ಅಂಗರಿಸನ ಆಶ್ರಮಕ್ಕೆ ಬಂದು ನಿಂತ. ಅಂಗಿರಸನು ಅಗ್ನಿಯನ್ನು ಕಂಡು ಅಗ್ನಿಯ ಕೆಲಸದಿಂದ ತಮಗೆ ಬಿಡುಗಡೆ ಬೇಕು ಎಂದು ಕೋರಿದರು. ಈತನ ವಿನಯ, ಶಕ್ತಿ ಎರಡೂ ಅಗ್ನಿಗೆ ಮೆಚ್ಚಿಕೆಯಾಯಿತು. ಇವರಿಬ್ಬರ ನಡುವೆ ನಡೆದ ಸಂವಾದ ಅರ್ಥಪೂರ್ಣವಾಗಿದೆ. ಮೊದಲು ಅಗ್ನಿ ಹುಟ್ಟಿದುದರಿಂದ ಅವನಿಗೇ ಈ ಸ್ಥಾನ ಸಲ್ಲತಕ್ಕದ್ದು ಎಂಬುದು ಅಂಗೀರಸನ ವಾದ. ಆದರೆ ಅಗ್ನಿಯ ತರ್ಕವೇ ಬೇರೆ. ತಾನು ಜಲದಲ್ಲಿ ಬಹುಕಾಲ ತಪಸ್ಸನ್ನು ಆಚರಿಸಿದ್ದರಿಂದ ಮೊದಲಿನ ಕಾಂತಿ ಉಷ್ಣತೆಗಳಿಲ್ಲವೆಂದೂ ಅಗ್ನಿತ್ವವಿರುವ ಹೊಸ ನಾಯಕ ಅಂಗೀರಸನಿಗೆ ಆ ಸ್ಥಾನ ಬಿಟ್ಟುಕೊಡುವುದಾಗಿಯೂ ಅಗ್ನಿ ವಾದಿಸಿದ. ಈ ಸಂದರ್ಭದಲ್ಲಿ ಇಬ್ಬರೂ ದೊಡ್ಡದಾಗಿಯೇ ನಡೆದುಕೊಳ್ಳುತ್ತಾರೆ. ಕೊನೆಗೆ ಅಂಗೀರಸನೇ ಒಂದು ದಾರಿ ಸೂಚಿಸುತ್ತಾನೆ. ಜನ ನಿರ್ಲಕ್ಷಿಸಿರುವುದರಿಂದ ಅಗ್ನಿಯು ತಾನೇ ಅಂಗಿರಸನಲ್ಲಿ ಹೊಕ್ಕು ಎರಡನೇ ಸ್ಥನ ಪಡೆಯುವುದಾಗಿಯೂ ಪ್ರಜಾಪತ್ಯಕ ಎಂಬ ವಿರಾಟ್ ಪುರುಷನಾಗುವುದಾಗಿಯೂ ಹೇಳಿದಾಗ ಅಂಗಿರಸನಿಗೆ ಹೊಳೆದ ದಾರಿ ಇದು. ಅಗ್ನಿಗೇ ಪ್ರಥಮ ಪ್ರಾಶಸ್ತ್ಯ ಕೊಟ್ಟು ಅಂಗಿರಸನು ಅಗ್ನಿದೇವನು ತನ್ನನ್ನು ಮಗನೆಂಬ ಪ್ರೀತಿಯಿಂದ ಸ್ವೀಕರಿಸಬೇಕು ಎಂದು ಮನವೊಲಿಸಿದ.
‘‘ಕುರುಪುಣ್ಯ ಪ್ರಜಾಸ್ವರ್ಗಂ ಭವಾಗ್ನಿಸ್ತಿಮಿರಾಪಹಃ
‘‘ಮಾಂಚದೇವ ಕುರುಷ್ಯಾಗ್ನೇ ಪ್ರಥಮಂ ಪುತ್ರಮಂಜಸಾ’’
ಅಂಗೀರಸ - ಅಗ್ನಿಗೇ ಮೊದಲಿನ ಸ್ಥಾನವನ್ನು ನೀಡಿದ. ‘‘ನಷ್ಟಕೀರ್ತಿರಹಂ ಲೋಕೇ’’ ಎಂದು ಭಾವಿಸಿಕೊಂಡಿದ್ದ ಅಗ್ನಿಯನ್ನು ಪುನರ್ ಪ್ರತಿಷ್ಠಾಪಿಸಿದ ಅಂಗಿರಸ ಉಳಿದವರಿಗೆ ಮಾದರಿಯಾಗಿದ್ದಾನೆ.
ಮೂಲ ...{Loading}...
ಅರಸ ಕೇಳ್ ಶತಶೃಂಗ ಶೈಲದ
ವರತಪೋಧನರಾಶ್ರಮಕೆ ನಿ
ಮ್ಮರಸ ಬಂದನು ವಂದಿಸಿದನಾ ಪರಮಮುನಿವರರ
ಹರುಷದಲಿ ಜಾಬಾಲಿ ಗಾಗ್ರ್ಯಾಂ
ಗಿರಸ ಗಾಲವ ಗೌತಮಾದ್ಯರು
ಧರಣಿಪನ ಸಂಭಾವಿಸಿದರಘ್ರ್ಯಾಸನಾದಿಯಲಿ ॥23॥
೦೨೪ ಈತನಮಲಾಷ್ಟಾಙ್ಗಯೋಗವಿ ಧೂತ ...{Loading}...
ಈತನಮಲಾಷ್ಟಾಂಗಯೋಗವಿ
ಧೂತ ಕಿಲ್ಬಿಷನಾಗಿ ಬಳಿಕ ಮ
ಹಾ ತಪಸ್ವಿಗಳೊಳಗೆ ಸಂದನು ತೀವ್ರ ತೇಜದಲಿ
ಆ ತಪೋನಿಷ್ಠಂಗೆ ತಾವತಿ
ಭೀತಿ ಭಕ್ತಿಯೊಳಧಿಕ ಶುಶ್ರೂ
ಷಾತಿಶಯದಲಿ ಮನವಹಿಡಿದರು ಕುಂತಿ ಮಾದ್ರಿಯರು ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡುವು ಅಷ್ಟಾಂಗ ಯೋಗಾಭ್ಯಾಸದಿಂದ ಪಾಪಗಳನ್ನು ಹೋಗಲಾಡಿಸಿಕೊಂಡು ತಪಸ್ವಿಗಳಲ್ಲಿ ತೀವ್ರ ತೇಜಸ್ಸಿನಿಂದ ಪ್ರಖ್ಯಾತನಾದನು. ಆ ತಪೋನಿಷ್ಠನಾದ ಪಾಂಡುವಿಗೆ ಕುಂತಿ ಮಾದ್ರಿಯರು ಅತಿಭಯಭಕ್ತಿಯಿಂದ ಅತಿಶಯ ಶುಶ್ರೂಷೆ ಮಾಡಿ ಮನ ಮೆಚ್ಚಿಸಿದರು.
ಪದಾರ್ಥ (ಕ.ಗ.ಪ)
ವಿಧೂತ-ಹೋಗಲಾಡಿಸಲ್ಪಟ್ಟ,
ಕಿಲ್ಬಿಷ-ಪಾಪ,
ಸಂದ-ಪ್ರಖ್ಯಾತ
ಟಿಪ್ಪನೀ (ಕ.ಗ.ಪ)
ಅಷ್ಟಾಂಗ ಯೋಗ-ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ-ಯೋಗದ ಎಂಟು ಅಂಗಗಳು.
ಮೂಲ ...{Loading}...
ಈತನಮಲಾಷ್ಟಾಂಗಯೋಗವಿ
ಧೂತ ಕಿಲ್ಬಿಷನಾಗಿ ಬಳಿಕ ಮ
ಹಾ ತಪಸ್ವಿಗಳೊಳಗೆ ಸಂದನು ತೀವ್ರ ತೇಜದಲಿ
ಆ ತಪೋನಿಷ್ಠಂಗೆ ತಾವತಿ
ಭೀತಿ ಭಕ್ತಿಯೊಳಧಿಕ ಶುಶ್ರೂ
ಷಾತಿಶಯದಲಿ ಮನವಹಿಡಿದರು ಕುಂತಿ ಮಾದ್ರಿಯರು ॥24॥
೦೨೫ ಪರಮ ವೈರಾಗ್ಯದಿ ...{Loading}...
ಪರಮ ವೈರಾಗ್ಯದಿ ನಿರಂತಃ
ಕರಣ ನಿರುಪಮ ಭಾವ ಶುದ್ಧಿಯ
ಮುರಹರ ಧ್ಯಾನೈಕ ಪೀಯೂಷಾಭಿಷೇಕದಲಿ
ಹೊರೆದು ಹೊಂಗಿದ ನಿಷ್ಪ್ರಪಂಚೋ
ತ್ಕರದ ಸುಖದುನ್ನತಿಯಲಿದ್ದನು
ಧರಣಿಪತಿ ಮುನಿಪನ ಮಹಾಪಾತಕವ ಕೆಡೆಯೊದೆದು ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುನಿಶ್ರೇಷ್ಠನಿಂದುಂಟಾದ ಮಹಾಪಾಪವನ್ನು ಹೋಗಲಾಡಿಸಿಕೊಂಡು ಪಾಂಡುವು ಪರಮ ವೈರಾಗ್ಯ ಶಾಲಿಯಾಗಿ, ಸಾಟಿಯಿಲ್ಲದ ಭಾವಶುದ್ಧಿಯಿಂದ ಮುರಹರನ ಧ್ಯಾನದಲ್ಲಿ ನಿರತನಾಗಿ ಅತಿಶಯದ ಸಂಸಾರದ ಹೊರಗಿನ ಸುಖದ ಉನ್ನತಿಯಲ್ಲಿದ್ದನು.
ಪದಾರ್ಥ (ಕ.ಗ.ಪ)
ನಿರುಪಮ-ಸಾಟಿಯಿಲ್ಲದ, ನಿಷ್ಪ್ರಪಂಚ-ಅತಿಶಯದ ಸಂಸಾರದ ಹೊರಗಿನ
ಮೂಲ ...{Loading}...
ಪರಮ ವೈರಾಗ್ಯದಿ ನಿರಂತಃ
ಕರಣ ನಿರುಪಮ ಭಾವ ಶುದ್ಧಿಯ
ಮುರಹರ ಧ್ಯಾನೈಕ ಪೀಯೂಷಾಭಿಷೇಕದಲಿ
ಹೊರೆದು ಹೊಂಗಿದ ನಿಷ್ಪ್ರಪಂಚೋ
ತ್ಕರದ ಸುಖದುನ್ನತಿಯಲಿದ್ದನು
ಧರಣಿಪತಿ ಮುನಿಪನ ಮಹಾಪಾತಕವ ಕೆಡೆಯೊದೆದು ॥25॥
೦೨೬ ನಾರಿಯರು ಮರುಗಿದರಕಟ ...{Loading}...
ನಾರಿಯರು ಮರುಗಿದರಕಟ ಮುದಿ
ಹಾರುವನ ತನಿಬೇಂಟ ನಮ್ಮಯ
ಬೇರುಗೊಲೆಯಾಗಿರ್ದುದೇ ಹಾಯೆನುತ ಬಿಸುಸುಯ್ದ
ವಾರಿಜಾನನೆ ಕುಂತಿ ಮೆಲ್ಲನೆ
ಸಾರಿದಳು ನಯದಲಿ ರಹಸ್ಯದ
ಲಾರುವರಿಯದವೋಲು ಬಿನ್ನಹ ಮಾಡಿದಳು ಪತಿಗೆ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮುದಿ ಬ್ರಾಹ್ಮಣನ ಏಕಾಂತ ಪ್ರಣಯದಿಂದ ನಮ್ಮ ವಂಶದ ಮೂಲವು ಕಿತ್ತು ನಾಶವಾಯಿತೇ” ಎಂದು ನಿಟ್ಟುಸಿರು ಬಿಟ್ಟು ನಾರಿಯರು ಮರುಗಿದರು. ಕಮಲಮುಖಿ ಕುಂತಿ ಮೆಲ್ಲನೆ ಪಾಂಡುವಿನ ಬಳಿ ಬಂದು ಯಾರಿಗೂ ತಿಳಿಯದಂತೆ ರಹಸ್ಯದಲ್ಲಿ ಪತಿಗೆ ಮನವಿ ಮಾಡಿದಳು.
ಪದಾರ್ಥ (ಕ.ಗ.ಪ)
ಹಾರುವ-ಬ್ರಾಹ್ಮಣ,
ತನಿ-ಏಕಾಂತ
ಬೇರುಗೊಲೆ-ಮೂಲವನ್ನು ಕಿತ್ತು ನಾಶಮಾಡುವುದು
ಮೂಲ ...{Loading}...
ನಾರಿಯರು ಮರುಗಿದರಕಟ ಮುದಿ
ಹಾರುವನ ತನಿಬೇಂಟ ನಮ್ಮಯ
ಬೇರುಗೊಲೆಯಾಗಿರ್ದುದೇ ಹಾಯೆನುತ ಬಿಸುಸುಯ್ದ
ವಾರಿಜಾನನೆ ಕುಂತಿ ಮೆಲ್ಲನೆ
ಸಾರಿದಳು ನಯದಲಿ ರಹಸ್ಯದ
ಲಾರುವರಿಯದವೋಲು ಬಿನ್ನಹ ಮಾಡಿದಳು ಪತಿಗೆ ॥26॥
೦೨೭ ಭರತ ವಂಶಕೆ ...{Loading}...
ಭರತ ವಂಶಕೆ ಪುತ್ರಶತವವ
ತರಿಸುವುದು ಗಾಂಧಾರಿ ದೇವಿಗೆ
ವರಮುನೀಶ್ವರನಿತ್ತ ವರವದು ನಿಮ್ಮಡಿಗಳರಿಯೆ
ದುರುಳ ಮುನಿಪನ ಶಾಪವೇ ಸ್ತ್ರೀ
ಪುರುಷ ಸಂಗವಿರೊಧ ನಮಗಿ
ನ್ನರಸ ನಾಪುತ್ರಸ್ಯಗತಿಯೆಂದಿರದೆ ಶ್ರುತಿವಚನ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭರತ ವಂಶದಲ್ಲಿ ಗಾಂಧಾರಿ ದೇವಿಗೆ ವರ ಮುನೀಶ್ವರ ವ್ಯಾಸರು ಕೊಟ್ಟ ವರದಿಂದ ನೂರು ಮಕ್ಕಳಾಗುತ್ತಾರೆ ಎಂಬುದು ನಮಗೆ ತಿಳಿದಿದೆ. ಕೆಟ್ಟ ಮುನಿಪನ ಶಾಪದಿಂದ ಸ್ತ್ರೀಪುರುಷ ಸಂಗ ನಮಗೆ ವಿರೋಧವಾಗಿದೆ. ಅಪುತ್ರರಿಗೆ ಗತಿಯಿಲ್ಲವೆಂದು ಶ್ರುತಿವಚನವಿಲ್ಲವೇ ?
ಮೂಲ ...{Loading}...
ಭರತ ವಂಶಕೆ ಪುತ್ರಶತವವ
ತರಿಸುವುದು ಗಾಂಧಾರಿ ದೇವಿಗೆ
ವರಮುನೀಶ್ವರನಿತ್ತ ವರವದು ನಿಮ್ಮಡಿಗಳರಿಯೆ
ದುರುಳ ಮುನಿಪನ ಶಾಪವೇ ಸ್ತ್ರೀ
ಪುರುಷ ಸಂಗವಿರೊಧ ನಮಗಿ
ನ್ನರಸ ನಾಪುತ್ರಸ್ಯಗತಿಯೆಂದಿರದೆ ಶ್ರುತಿವಚನ ॥27॥
೦೨೮ ಧರೆಯ ರಾಜ್ಯಸ್ಥಿತಿಗೆ ...{Loading}...
ಧರೆಯ ರಾಜ್ಯಸ್ಥಿತಿಗೆ ಸುತರವ
ತರಿಸುವರು ಗಾಂಧಾರಿಗಾ ಪು
ತ್ರರಿಗೆ ಸುತರಾ ಸುತರ ಸುತರಾ ಸುತರ ಸೂನುಗಳು
ಧರೆ ಪರಂಪರೆಯಿಂದಲತ್ತಲೆ
ಸರಿವುದೀ ನಿಮ್ಮಡಿಗೆ ದರ್ಭಾ
ಸ್ತರಣ ಸಮಿಧಾಧಾನವೇ ಕಡೆಗೆಂದಳಾ ಕುಂತಿ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂ ಮಂಡಲದ ರಾಜ್ಯಭಾರಕ್ಕೆ ಗಾಂಧಾರಿಗೆ ಮಕ್ಕಳಾಗುವರು. ಆ ಮಕ್ಕಳಿಗೆ ಮಕ್ಕಳು, ಆ ಮಕ್ಕಳ ಮಕ್ಕಳು ಹೀಗೆ ಪರಂಪರೆಯಿಂದ ಭೂಮಿ ಅವರತ್ತಲೇ ಸೇರಿಬಿಡುತ್ತದೆ. ಕಡೆಗೆ ನಿಮಗೆ ದರ್ಭೆಯ ಹಾಸು, ಹೋಮಕ್ಕೆ ಸಮಿತ್ತನ್ನು ಮಾಡುವುದೇ ಗತಿ ಎಂದು ಕುಂತಿ ಹೇಳಿದಳು.
ಪದಾರ್ಥ (ಕ.ಗ.ಪ)
ದರ್ಭಾಸ್ತರಣ-ದರ್ಭೆಯ ಹಾಸು,
ಸಮಿಧಾಧಾನ-ಸಮಿತ್ತನ್ನು ಮಾಡುವುದು
ಟಿಪ್ಪನೀ (ಕ.ಗ.ಪ)
ಗಾಂಧಾರಿ - ಗಾಂಧಾರಿ, ಧೃತರಾಷ್ಟ್ರ ಇವರಿಬ್ಬರೂ ಪುತ್ರವಾತ್ಸಲ್ಯದ ಮಳೆಯಲ್ಲಿ ಸಿಕ್ಕಿಕೊಂಡು ಬಗೆಬಗೆಯ ಹುಚ್ಚಾಟಗಳನ್ನಾಡಿದವರು. ವಿಷವೃಕ್ಷ ಎಂದು ಇವರನ್ನು ಮಹಾಭಾರತದಲ್ಲಿ ವರ್ಣಿಸಲಾಗಿದೆ. ಸ್ವಂತ ವಿಚಾರವೆಂಬುದನ್ನು ಬಲಿಗೊಟ್ಟು ಮಗ ಕೌರವನ ಪ್ರಭಾವಕ್ಕೆ ಒಳಗಾದವರು ಇವರು.
ಮೂಲ ...{Loading}...
ಧರೆಯ ರಾಜ್ಯಸ್ಥಿತಿಗೆ ಸುತರವ
ತರಿಸುವರು ಗಾಂಧಾರಿಗಾ ಪು
ತ್ರರಿಗೆ ಸುತರಾ ಸುತರ ಸುತರಾ ಸುತರ ಸೂನುಗಳು
ಧರೆ ಪರಂಪರೆಯಿಂದಲತ್ತಲೆ
ಸರಿವುದೀ ನಿಮ್ಮಡಿಗೆ ದರ್ಭಾ
ಸ್ತರಣ ಸಮಿಧಾಧಾನವೇ ಕಡೆಗೆಂದಳಾ ಕುಂತಿ ॥28॥
೦೨೯ ವನಜಮುಖಿ ಕೇಳ್ ...{Loading}...
ವನಜಮುಖಿ ಕೇಳ್ ಪುತ್ರಮುಖ ದ
ರ್ಶನವು ಸುಲಭವೆ ಪುಣ್ಯಹೀನರಿ
ಗೆನಿತು ಹಲುಬಿದರೇನು ಹಂಗಿಗರಾವು ದುಷ್ಕೃತಿಗೆ
ಮುನಿಯ ಬೇಟದ ಬೇಳುವೆಯ ಮಾ
ತಿನ ಹವಣ ನೀ ಬಲ್ಲೆ ಹೇಳಿ
ನ್ನೆನಗೆ ಕರ್ತವ್ಯವನು ಮಾನಿನಿ ಭೀತಿ ಬೇಡೆಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುಂತಿಯ ಮಾತಿಗೆ ಪಾಂಡುವು, “ಕಮಲಮುಖಿ ಕೇಳು, ಪುಣ್ಯಹೀನರಿಗೆ ಪುತ್ರ ಮುಖದರ್ಶನ ಸುಲಭವೇ ? ಎಷ್ಟು ಹಲುಬಿದರೆ ತಾನೆ ಫಲವೇನು ? ನಾವು ಪಾಪದ ಹಂಗಿಗೆ ಒಳಗಾಗಿದ್ದೇವೆ. ಮುನಿಯ ಪ್ರಣಯದಿಂದಾದ ಕೋಪದ ಮಾತಿನ ರೀತಿಯನ್ನು ನೀನು ಬಲ್ಲೆ. ನಾನೇನು ಮಾಡಲಿ ಹೇಳು, ಹೆದರ ಬೇಡ, ಕರ್ತವ್ಯವನ್ನು ತಿಳಿಸು” ಎಂದು ನುಡಿದನು.
ಪದಾರ್ಥ (ಕ.ಗ.ಪ)
ಬೇಳುವೆ-ಕಳವಳ, ಚಿಂತೆ,
ಹವಣ-ರೀತಿ
ಮೂಲ ...{Loading}...
ವನಜಮುಖಿ ಕೇಳ್ ಪುತ್ರಮುಖ ದ
ರ್ಶನವು ಸುಲಭವೆ ಪುಣ್ಯಹೀನರಿ
ಗೆನಿತು ಹಲುಬಿದರೇನು ಹಂಗಿಗರಾವು ದುಷ್ಕೃತಿಗೆ
ಮುನಿಯ ಬೇಟದ ಬೇಳುವೆಯ ಮಾ
ತಿನ ಹವಣ ನೀ ಬಲ್ಲೆ ಹೇಳಿ
ನ್ನೆನಗೆ ಕರ್ತವ್ಯವನು ಮಾನಿನಿ ಭೀತಿ ಬೇಡೆಂದ ॥29॥
೦೩೦ ನಾರಿಯರು ಮತ್ತಲ್ಲಿ ...{Loading}...
ನಾರಿಯರು ಮತ್ತಲ್ಲಿ ರಾಜ ಕು
ಮಾರಿಯರು ಛಲವಾದಿಗಳು ಗಾಂ
ಧಾರಿಗಾದುದು ಪುತ್ರ ಸಂತತಿಯೆಂಬ ಭೇದದಲಿ
ಧೀರ ಬಿನ್ನವಿಸಿದೆನು ಕಾರ್ಯದ
ಭಾರವನು ನೀ ಬಲ್ಲೆಯಿವಳು ವಿ
ಕಾರಿಯೆನ್ನದಿರೆಂದು ರಾಯನ ಚರಣಕೆರಗಿದಳು ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ಸ್ತ್ರೀಯರು, ಅದರಲ್ಲೂ ರಾಜಕುಮಾರಿಯರು ಹಟವಾದಿಗಳು. ಗಾಂಧಾರಿಗೆ ಪುತ್ರ ಸಂತತಿಯಾಗುವುದೆಂಬ ಭೇದದಿಂದ ಮನವಿ ಮಾಡಿದೆನು. ಮುಂದಿನ ಕಾರ್ಯಭಾರವನ್ನು ನೀನೇ ಬಲ್ಲೆ. ನನ್ನನ್ನು ದುಷ್ಟಳೆನ್ನಬೇಡ” ಎಂದು ಕುಂತಿ ಪಾಂಡುವಿನ ಪಾದಗಳಿಗೆ ನಮಸ್ಕರಿಸಿದಳು.
ಪದಾರ್ಥ (ಕ.ಗ.ಪ)
ಛಲ-ಹಟ,
ವಿಕಾರಿ-ದುಷ್ಟೆ
ಮೂಲ ...{Loading}...
ನಾರಿಯರು ಮತ್ತಲ್ಲಿ ರಾಜ ಕು
ಮಾರಿಯರು ಛಲವಾದಿಗಳು ಗಾಂ
ಧಾರಿಗಾದುದು ಪುತ್ರ ಸಂತತಿಯೆಂಬ ಭೇದದಲಿ
ಧೀರ ಬಿನ್ನವಿಸಿದೆನು ಕಾರ್ಯದ
ಭಾರವನು ನೀ ಬಲ್ಲೆಯಿವಳು ವಿ
ಕಾರಿಯೆನ್ನದಿರೆಂದು ರಾಯನ ಚರಣಕೆರಗಿದಳು ॥30॥
೦೩೧ ಲೋಲಲೋಚನೆ ದೃಢ ...{Loading}...
ಲೋಲಲೋಚನೆ ದೃಢ ಪತಿವ್ರತೆ
ಯೇಳು ದುಃಖಿಸಬೇಡ ಭೃಗು ಜಾ
ಬಾಲಿ ಜಮದಗ್ನ್ಯಾದಿ ದಿವ್ಯ ಮುನೀಂದ್ರ ಗಣವಿದೆಲ
ಓಲಗಿಸುವುದು ದುಷ್ಕೃತಿಗೆ ನಿ
ಷ್ಪಾಳೆಯವು ಬಳಿಕಹುದು ಮಂತ್ರವಿ
ಶಾಲ ಬೀಜದಿಯಹುದು ಸಂತತಿ ಕಾಂತೆ ಕೇಳ್ ಎಂದ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಚಂಚಲಕಣ್ಣುಳ್ಳವಳೆ, ದೃಢಪತಿವ್ರತೆ ಏಳು ದುಃಖಿಸಬೇಡ ಭೃಗು, ಜಾಬಾಲಿ, ಜಮದಗ್ನಿ ಮೊದಲಾದ ಮುನಿಶ್ರೇಷ್ಠ ಸಮೂಹವಿದೆಯಲ್ಲ. ಅವರಲ್ಲಿ ಯಾರನ್ನಾದರೂ ಓಲೈಸಿದರೆ ನಮ್ಮ ಪಾತಕ ಕೊನೆಗಾಣುತ್ತದೆ. ಬಳಿಕ ಮಂತ್ರ ಬೀಜದ ಅನುಗ್ರಹದಿಂದ ಸಂತತಿಯಾಗುತ್ತದೆ” ಎಂದು ಪಾಂಡು ಹೇಳಿದನು.
ಪದಾರ್ಥ (ಕ.ಗ.ಪ)
ದುಷ್ಕೃತಿ-ಪಾತಕ
ನಿಷ್ಪಾಳೆಯವು- -ಠಾವಿಲ್ಲದಂತಾಗುವುದು- ಇಲ್ಲಿ ಇಲ್ಲದಂತಾಗುತ್ತದೆ ಎಂದು ಭಾವಿಸಬಹುದು.
ಟಿಪ್ಪನೀ (ಕ.ಗ.ಪ)
ಭೃಗು - ಒಬ್ಬ ಬ್ರಹ್ಮರ್ಷಿ. ಈತ ಸ್ವಾಯಂಭುವ ಮನ್ವಂತರದವ. ಕವಿ, ಚ್ಯವನರು ಈತನ ಮಕ್ಕಳು, ಖ್ಯಾತಿಯೆಂಬುವಳು ಹೆಂಡತಿ. ಈಕೆಯಲ್ಲಿ ಲಕ್ಷ್ಮಿ ಅವತರಿಸಿದ ಕಾರಣ ಈಕೆಗೆ ಭಾರ್ಗವಿ ಎಂದು ಹೆಸರು. ವೈವಸ್ವತ ಮನ್ವಂತರದಲ್ಲಿ ವರುಣನ ಯಜ್ಞ ಕುಂಡಲದಲ್ಲಿ ಜನಿಸಿದ ಕಾರಣ ಭೃಗುವಿಗೆ ವಾರುಣಿಯೆಂದು ಹೆಸರು.
ಜಮದಗ್ನಿ - ಭೃಗು ವಂಶೋತ್ಪನ್ನನಾದ ಋಚೀಕ ಮುನಿಯಿಂದ ಗಾಧಿರಾಜನ ಮಗಳು ಸತ್ಯವತಿಯಲ್ಲಿ ಜನಿಸಿದವ. ವಿಶ್ವಾಮಿತ್ರನ ಸೋದರಳಿಯ.
ಜಾಬಾಲಿ - ನೋಡಿ ಟಿಪ್ಪಣಿ - ಇದೇ ಸಂಧಿ ಪದ್ಯ 23.
ಮೂಲ ...{Loading}...
ಲೋಲಲೋಚನೆ ದೃಢ ಪತಿವ್ರತೆ
ಯೇಳು ದುಃಖಿಸಬೇಡ ಭೃಗು ಜಾ
ಬಾಲಿ ಜಮದಗ್ನ್ಯಾದಿ ದಿವ್ಯ ಮುನೀಂದ್ರ ಗಣವಿದೆಲ
ಓಲಗಿಸುವುದು ದುಷ್ಕೃತಿಗೆ ನಿ
ಷ್ಪಾಳೆಯವು ಬಳಿಕಹುದು ಮಂತ್ರವಿ
ಶಾಲ ಬೀಜದಿಯಹುದು ಸಂತತಿ ಕಾಂತೆ ಕೇಳೆಂದ ॥31॥
೦೩೨ ಭವದನುಗ್ರಹದಿನ್ದ ಸುತರು ...{Loading}...
ಭವದನುಗ್ರಹದಿಂದ ಸುತರು
ದ್ಭವಿಸಿದರೆ ಲೇಸನ್ಯಥಾ ಸಂ
ಭವಿಸಿದರೆ ದುಷ್ಕೀರ್ತಿವಧುವೆಂಜಲಿಸಳೇ ಕುಲವ
ಅವನಿಪತಿ ಕೇಳ್ ನಹುಷ ನಳ ಪೌ
ರವ ಸುಹೋತ್ರಾದ್ಯರ ನಿಜಾತ್ಮೋ
ದ್ಭವರ ಪಾರಂಪರೆಗೆ ಗತಿಯೇನಂದಳಾ ಕುಂತಿ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ಕುಂತಿ, “ನಿನ್ನ ಅನುಗ್ರಹದಿಂದ ಮಕ್ಕಳು ಹುಟ್ಟಿದರೆ ಒಳ್ಳೆಯದು. ಬೇರೆ ರೀತಿಯಲ್ಲಿ ಹುಟ್ಟಿದರೆ ಕುಲವನ್ನು ಪಾಪಸ್ತ್ರೀ ಅಪವಿತ್ರಗೋಲಿಸುವುದಿಲ್ಲವೇ ? ಮಹಾರಾಜಾ ಕೇಳು, ನಹುಷ, ನಳ, ಪೌರವ, ಸುಹೋತ್ರ ಮೊದಲಾದವರ ವಂಶ ಪರಂಪರೆಯ ಗತಿ ಏನಾಗುತ್ತದೆ?” ಎಂದು ಕೇಳಿದಳು.
ಪದಾರ್ಥ (ಕ.ಗ.ಪ)
ಭವತ್-ನಿನ್ನ,
ಎಂಜಲಿಸು-ಅಪವಿತ್ರಗೊಳಿಸು
ಟಿಪ್ಪನೀ (ಕ.ಗ.ಪ)
ಅಜಮೀಢ - ಮಹಾಭಾರತದ ಆದಿಪರ್ವದ 90ನೇ ಅಧ್ಯಾಯದ 30-31ನೇ ಶ್ಲೋಕಗಳಲ್ಲಿ ಅಜಮೀಢನ ವಂಶದ ವಿಷಯ ಪ್ರಸ್ತಾವಿತವಾಗಿದೆ. ‘ತ್ವಯ್ಯಾಧೀನಂ ಕುರುಕುಲ ಮಾಜಮೀಢ’ ಎಂದಾಗಲೀ, ‘‘ಭರತಸ್ಯಾನ್ವಯೇ ಚೈವ ಅಜಮೀಢೋ ನಾಮ ಪಾರ್ಥಿವಃ ಬಳೂವ ಭರತಶ್ರೇಷ್ಠ ಯಜ್ವಾ ಧರ್ಮಭೃತಾಂ ವರಃ’’ ಎಂದು ಮುಂತಾಗಿ ಕಥೆ ಹೇಳುವ ಸಂದರ್ಭಗಳಲ್ಲೆಲ್ಲ ವೈಶಂಪಾಯನು ಜನಮೇಜಯನಿಗೆ ‘ನೀ ಅಜಮೀಢ ವಂಶದವನಾಗು’ ಎಂದು ಹಲವಾರು ಬಾರಿ ಹೇಳುತ್ತಾನೆ. ಪುರುವಂಶದ ರಾಜಶ್ರೇಷ್ಠನೆಂದು ಪ್ರಕೀರ್ತಿತನಾಗಿರುವ ಈತನ ವಂಶ ವಿವರಗಳು ಮಹಾಭಾರತದ ಅಧ್ಯಯನಕ್ಕೆ ಹಿನ್ನೆಲೆಯನ್ನು ಒದಗಿಸುತ್ತವಾದ್ದರಿಂದ ಆ ಬಗೆಗೆ ತಿಳಿದುಕೊಳ್ಳುವುದ ಅಗತ್ಯ. ಭಾರತದ ಉದ್ದಕ್ಕೂ, ಭೀಮ, ವಿದುರ, ಕೌರವ, ಸಚಿವರಣ ಇವರುಗಳ ಬಗೆಗೆ ವಿವರ ಕೊಡುವಾಗ ವೈಶಂಪಾಯನ ಈ ಹೆಸರನ್ನು ಧಾರಾಳವಾಗಿ ಪ್ರಸ್ತಾಪಿಸಿದ್ದಾನೆ. ಈ ಅಜಮೀಢನಿಂದ ಬಾರ್ಹದಿಷ, ಪಾಂಚಾಲ ಮತ್ತು ಕೌರವ ವಂಶಗಳು ಬೆಳಗಿದವೆಂದು ಕವಿ ಹೇಳುತ್ತಾನೆ.
ಮೂಲ ...{Loading}...
ಭವದನುಗ್ರಹದಿಂದ ಸುತರು
ದ್ಭವಿಸಿದರೆ ಲೇಸನ್ಯಥಾ ಸಂ
ಭವಿಸಿದರೆ ದುಷ್ಕೀರ್ತಿವಧುವೆಂಜಲಿಸಳೇ ಕುಲವ
ಅವನಿಪತಿ ಕೇಳ್ ನಹುಷ ನಳ ಪೌ
ರವ ಸುಹೋತ್ರಾದ್ಯರ ನಿಜಾತ್ಮೋ
ದ್ಭವರ ಪಾರಂಪರೆಗೆ ಗತಿಯೇನಂದಳಾ ಕುಂತಿ ॥32॥
೦೩೩ ಅರಸಿ ಕೇಳ್ ...{Loading}...
ಅರಸಿ ಕೇಳ್ ತದ್ಬೀಜ ಪಾರಂ
ಪರೆ ಮುರಿಯೆ ತತ್ ಕ್ಷೇತ್ರದಲಿ ಮುನಿ
ವರರ ಕಾರುಣ್ಯದಲಿ ಪುತ್ರೋದ್ಭವವದೇ ವಿಹಿತ
ಪರಮ ವೈದಿಕ ಸಿದ್ಧವಿದು ಸರ
ಸಿರುಹಮುಖಿ ನಿಶ್ಯಂಕೆಯಲಿ ನೀ
ಧರಿಸು ಮುನಿಮಂತ್ರೋಪದೇಶವನಿದುವೆ ನಿರ್ದೋಷ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ, ಪಾಂಡುವು ಕುಂತಿಯನ್ನು ಕುರಿತು, “ಅರಸೀ ಕೇಳು, ಆ ಮೂಲ ಪರಂಪರೆ ನಡುವೆ ನಿಲ್ಲುವ ಪಕ್ಷದಲ್ಲಿ, ಆ ಕ್ಷೇತ್ರದಲ್ಲಿ ಮುನಿಶ್ರೇಷ್ಠರ ಕಾರುಣ್ಯದಿಂದ ಮಕ್ಕಳಾಗುವುದೇ ಯೋಗ್ಯವಾದದ್ದು. ಇದು ಪರಮ ವೈದಿಕ ವಿಧಿ. ಆದ್ದರಿಂದ ಕಮಲಮುಖಿ, ಅನುಮಾನವಿಲ್ಲದೆ ಮುನಿ ಮಂತ್ರೋಪದೇಶವನ್ನು ಧರಿಸು. ಇದು ನಿರ್ದೋಷವಾದದ್ದು” ಎಂದು ಹೇಳಿದನು.
ಪದಾರ್ಥ (ಕ.ಗ.ಪ)
ನಿಶ್ಯಂಕೆ-ಅನುಮಾನವಿಲ್ಲದಿರುವುದು
ಪಾಠಾನ್ತರ (ಕ.ಗ.ಪ)
[ತ] - [ಸ (ಅ) (ಆ)]
ಸದ್ಬೀಜ ಅಂದರೆ, ಉತ್ಕೃಷ್ಟ ವಂಶ ಪರಂಪರೆ ಅನ್ನುವ ಅಭಿಪ್ರಾಯದಲ್ಲಿ ಈ ಪಾಠಾಂತರವನ್ನೂ ಪರಿಗಣಿಸಬಹುದಾಗಿದೆ.
ಮೂಲ ...{Loading}...
ಅರಸಿ ಕೇಳ್ ತದ್ಬೀಜ ಪಾರಂ
ಪರೆ ಮುರಿಯೆ ತತ್ ಕ್ಷೇತ್ರದಲಿ ಮುನಿ
ವರರ ಕಾರುಣ್ಯದಲಿ ಪುತ್ರೋದ್ಭವವದೇ ವಿಹಿತ
ಪರಮ ವೈದಿಕ ಸಿದ್ಧವಿದು ಸರ
ಸಿರುಹಮುಖಿ ನಿಶ್ಯಂಕೆಯಲಿ ನೀ
ಧರಿಸು ಮುನಿಮಂತ್ರೋಪದೇಶವನಿದುವೆ ನಿರ್ದೋಷ ॥33॥
೦೩೪ ಆದಡವನಿಪ ಬಿನ್ನಹವು ...{Loading}...
ಆದಡವನಿಪ ಬಿನ್ನಹವು ತನ
ಗಾದಿಯಲಿ ದೂರ್ವಾಸಮುನಿ ಕರು
ಣೋದಯಲಿತ್ತೈದು ಮಂತ್ರಾಕ್ಷರದ ವರವುಂಟು
ನೀ ದಯಾಂಬುಧಿ ನಿನ್ನನುಗ್ರಹ
ವಾದುದಾದರೆ ತದ್ವಿಧಾನದ
ಲಾದರಿಸುವೆನು ಪುತ್ರಕಾಮ್ಯವನೆಂದಳಾ ಕುಂತಿ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾಗಾದರೆ, ಮಹಾರಾಜ ನನ್ನದೊಂದು ವಿಜ್ಞಾಪನೆ. ಹಿಂದೆ, ಬಾಲ್ಯದಲ್ಲಿ ದೂರ್ವಾಸಮುನಿ ಕರುಣದಿಂದ ಕೊಟ್ಟಿರುವ ಐದು ಮಂತ್ರಾಕ್ಷರಗಳ ವರವುಂಟು. ನೀನು ದಯಾಸಾಗರನಿದ್ದೀಯೆ, ನಿನ್ನ ಅನುಗ್ರಹ ಇರುವುದಾದರೆ ಆ ಮಂತ್ರಗಳ ಬಲದಿಂದ ಪುತ್ರರನ್ನು ಪಡೆಯುವ ಯಜ್ಞವನ್ನು ಆಚರಿಸುತ್ತೇನೆ ಎಂದು ಕುಂತಿ ಹೇಳಿದಳು.
ಪದಾರ್ಥ (ಕ.ಗ.ಪ)
ಪುತ್ರಕಾಮ್ಯ-ಮಗನಾಗಬೇಕೆಂದು ಮಾಡುವ ಯಜ್ಞ,
ಆದರಿಸು-ಬಯಸು
ಮೂಲ ...{Loading}...
ಆದಡವನಿಪ ಬಿನ್ನಹವು ತನ
ಗಾದಿಯಲಿ ದೂರ್ವಾಸಮುನಿ ಕರು
ಣೋದಯಲಿತ್ತೈದು ಮಂತ್ರಾಕ್ಷರದ ವರವುಂಟು
ನೀ ದಯಾಂಬುಧಿ ನಿನ್ನನುಗ್ರಹ
ವಾದುದಾದರೆ ತದ್ವಿಧಾನದ
ಲಾದರಿಸುವೆನು ಪುತ್ರಕಾಮ್ಯವನೆಂದಳಾ ಕುಂತಿ ॥34॥
೦೩೫ ಲೇಸನಾಡಿದೆ ಕುನ್ತಿ ...{Loading}...
ಲೇಸನಾಡಿದೆ ಕುಂತಿ ಮುನಿಯುಪ
ದೇಶಿಸಿದನೇ ನಮ್ಮ ಭಾಗ್ಯವಿ
ದೈಸಲೇ ನೀ ಧೃಡಪತಿವ್ರತೆಯೆನ್ನನುಜ್ಞೆಯಲಿ
ಭಾಸುರರ ನೀ ಭರತವಂಶ ವಿ
ಲಾಸರನು ಕೃತಶತ್ರು ಪಕ್ಷವಿ
ನಾಶರನು ಬೆಸಲಾಗು ಹೋಗೆನ್ನಾಣೆ ಹೋಗೆಂದ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕುಂತೀ, ಒಳ್ಳೆಯದನ್ನು ಹೇಳಿದೆ; ಮುನಿ ಉಪದೇಶಿಸಿದನೆ ! ನಮ್ಮ ಭಾಗ್ಯವಿದಲ್ಲವೇ. ನೀನು ದೃಢ ಪತಿವ್ರತೆ. ನನ್ನ ಸಮ್ಮತಿಯಿಂದ ಕಾಂತಿಯುಕ್ತರಾದ, ಭರತವಂಶವಿಲಾಸರೂ, ಶತ್ರುಪಕ್ಷ ವಿನಾಶಕರೂ ಆದ ಪುತ್ರರನ್ನು ಹೆರು, ಹೋಗು, ನನ್ನಾಜ್ಞೆ” ಎಂದು ಪಾಂಡು ಹೇಳಿದನು.
ಪದಾರ್ಥ (ಕ.ಗ.ಪ)
ಐಸಲೇ-ಅಲ್ಲವೇ,
ಭಾಸುರರು-ಕಾಂತಿಯುಕ್ತರಾದವರು,
ಬೆಸಲಾಗು-ಹೆರು, ಹಡೆ
ಮೂಲ ...{Loading}...
ಲೇಸನಾಡಿದೆ ಕುಂತಿ ಮುನಿಯುಪ
ದೇಶಿಸಿದನೇ ನಮ್ಮ ಭಾಗ್ಯವಿ
ದೈಸಲೇ ನೀ ಧೃಡಪತಿವ್ರತೆಯೆನ್ನನುಜ್ಞೆಯಲಿ
ಭಾಸುರರ ನೀ ಭರತವಂಶ ವಿ
ಲಾಸರನು ಕೃತಶತ್ರು ಪಕ್ಷವಿ
ನಾಶರನು ಬೆಸಲಾಗು ಹೋಗೆನ್ನಾಣೆ ಹೋಗೆಂದ ॥35॥
೦೩೬ ತರುಣಿ ಪಾಣ್ಡುವಿನಾಜ್ಞೆಯನು ...{Loading}...
ತರುಣಿ ಪಾಂಡುವಿನಾಜ್ಞೆಯನು ನಿಜ
ಶಿರದೊಳಾಂತು ಸಮಸ್ತಮುನಿ ಮು
ಖ್ಯರಿಗೆ ವಂದಿಸಿ ಹರಿಹರಬ್ರಹ್ಮಾದಿಗಳಿಗೆರಗಿ
ಸರಸಿಯಲಿ ಮಿಂದಳು ಮುನೀಂದ್ರನ
ಪರಮ ಮಂತ್ರಾಕ್ಷರವ ತಾನು
ಚ್ಚರಿಸಿ ನೆನೆದಳು ಯಮನನಾಕ್ಷಣವಾತನೈತಂದ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುಂತಿಯು ಪಾಂಡುವಿನ ಆಜ್ಞೆಯನ್ನು ಶಿರದಲ್ಲಿ ಧರಿಸಿ, ಸಕಲ ಮುನಿ ಮುಖ್ಯರಿಗೆ ವಂದಿಸಿ, ಹರಿಹರ ಬ್ರಹ್ಮಾದಿಗಳಿಗೆ ನಮಸ್ಕರಿಸಿ, ಸರೋವರದಲ್ಲಿ ಮಿಂದಳು. ಮುನಿಶ್ರೇಷ್ಠನ ಉತ್ಕೃಷ್ಟ ಮಂತ್ರಾಕ್ಷರವನ್ನು ಉಚ್ಚರಿಸಿ ಯಮನನ್ನು ಸ್ಮರಿಸಿದಳು. ಆ ಕ್ಷಣದಲ್ಲಿ ಆತನು ಅಲ್ಲಿಗೆ ಬಂದನು.
ಮೂಲ ...{Loading}...
ತರುಣಿ ಪಾಂಡುವಿನಾಜ್ಞೆಯನು ನಿಜ
ಶಿರದೊಳಾಂತು ಸಮಸ್ತಮುನಿ ಮು
ಖ್ಯರಿಗೆ ವಂದಿಸಿ ಹರಿಹರಬ್ರಹ್ಮಾದಿಗಳಿಗೆರಗಿ
ಸರಸಿಯಲಿ ಮಿಂದಳು ಮುನೀಂದ್ರನ
ಪರಮ ಮಂತ್ರಾಕ್ಷರವ ತಾನು
ಚ್ಚರಿಸಿ ನೆನೆದಳು ಯಮನನಾಕ್ಷಣವಾತನೈತಂದ ॥36॥
೦೩೭ ಸತಿಯ ಸಮ್ಮುಖನಾಗಿ ...{Loading}...
ಸತಿಯ ಸಮ್ಮುಖನಾಗಿ ವೈವ
ಸ್ವತನು ನುಡಿದನಿದೇಕೆ ನಮ್ಮ
ಕ್ಷಿತಿಗೆ ಬರಿಸಿದೆಯೆನಲು ಲಜ್ಜಾವನತಮುಖಿಯಾಗಿ
ಸುತನ ಕರುಣಿಪುದೆನಲು ಭಯಪರಿ
ವಿತತ ವಿಮಲ ಸ್ವೇದಜಲ ಕಂ
ಪಿತೆಯ ಮುಟ್ಟಿ ತಥಾಸ್ತುವೆನುತ ಕೃತಾಂತ ಬೀಳ್ಕೊಂಡ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುಂತಿಯ ಎದುರಾಗಿ ವೈವಸ್ವತನು ಬಂದು, “ಇದೇಕೆ ನಮ್ಮನ್ನು ಭೂಮಿಗೆ ಬರಿಸಿದೆ ?” ಎಂದು ಕೇಳಲು, ನಾಚಿಕೆಯಿಂದ ತಲೆಬಾಗಿದ ಕುಂತಿ, “ಸುತನನ್ನು ಕರುಣಿಸಬೇಕು” ಎಂದು ಕೇಳಲು, ಭಯದಿಂದ ಬೆವರಿಡಿದು ನಡುಗುತ್ತಿದ್ದ ಕುಂತಿಯನ್ನು ಮುಟ್ಟಿ ‘ತಥಾಸ್ತು’ ಎಂದು ನುಡಿದು ಯಮನು ಬೀಳ್ಕೊಂಡನು.
ಪದಾರ್ಥ (ಕ.ಗ.ಪ)
ಅವನತ-ಬಾಗಿದ ,
ಸ್ವೇದ-ಬೆವರು,
ಕಂಪಿತೆ-ನಡುಗುವವಳು,
ಕೃತಾಂತ-ಯಮ
ಟಿಪ್ಪನೀ (ಕ.ಗ.ಪ)
ವೈವಸ್ವತ-ವಿವಸ್ವಂತನೆಂಬ ಆದಿತ್ಯನಿಂದ ತ್ವಷ್ಟೃವಿನ ಮಗಳಾದ ಸಂಜ್ಞಾ ದೇವಿಯಲ್ಲಿ ಜನಿಸಿದವ. ಇವನಿಗೆ ಶ್ರಾದ್ಧದೇವ, ಮನುವೆಂಬುದು ಮೊದಲಿನ ಹೆಸರು. ವೈವಸ್ವತಮನುವೆಂಬುದು ರೂಢಿಯಲ್ಲಿದೆ.
ಮೂಲ ...{Loading}...
ಸತಿಯ ಸಮ್ಮುಖನಾಗಿ ವೈವ
ಸ್ವತನು ನುಡಿದನಿದೇಕೆ ನಮ್ಮ
ಕ್ಷಿತಿಗೆ ಬರಿಸಿದೆಯೆನಲು ಲಜ್ಜಾವನತಮುಖಿಯಾಗಿ
ಸುತನ ಕರುಣಿಪುದೆನಲು ಭಯಪರಿ
ವಿತತ ವಿಮಲ ಸ್ವೇದಜಲ ಕಂ
ಪಿತೆಯ ಮುಟ್ಟಿ ತಥಾಸ್ತುವೆನುತ ಕೃತಾಂತ ಬೀಳ್ಕೊಂಡ ॥37॥
೦೩೮ ಧಾರುಣೀಪತಿ ಕೇಳು ...{Loading}...
ಧಾರುಣೀಪತಿ ಕೇಳು ಕುಂತೀ
ನಾರಿಗಾದುದು ಗರ್ಭ ಹರುಷದ
ಭಾರದಲಿ ಸತಿ ತಗ್ಗಿದಳು ನವ ಪೂರ್ಣಮಾಸದಲಿ
ಚಾರುತರ ನಕ್ಷತ್ರ ಶುಭದಿನ
ವಾರ ಲಗ್ನದೊಳಿಂದುಕುಲ ವಿ
ಸ್ತಾರಕನು ಸುಕುಮಾರನವತರಿಸಿದನು ಧರಣಿಯಲಿ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ಕೇಳು, ಕುಂತೀನಾರಿ ಗರ್ಭವನ್ನು ಧರಿಸಿ ಹರ್ಷದ ಭಾರದಲ್ಲಿ ತಗ್ಗಿದಳು. ಒಂಬತ್ತು ತಿಂಗಳು ತುಂಬಿ ಶುಭದಿನ, ಶುಭವಾರ, ಶುಭನಕ್ಷತ್ರ, ಶುಭಲಗ್ನದಲ್ಲಿ ಚಂದ್ರ ವಂಶವನ್ನು ಬೆಳಸುವ ಸುಕುಮಾರನು ಭೂಮಿಯಲ್ಲಿ ಅವತರಿಸಿದನು.
ಪದಾರ್ಥ (ಕ.ಗ.ಪ)
ಇಂದುಕುಲ-ಚಂದ್ರ ವಂಶ,
ವಿಸ್ತಾರಕ-ಬೆಳಸುವವನು
ಟಿಪ್ಪನೀ (ಕ.ಗ.ಪ)
ಧರ್ಮರಾಜ- ಆಶ್ವಯುಜ ಶುದ್ಧ ಪಂಚಮಿ, ಸೂರ್ಯನು ತುಲಾರಾಶಿಯಲ್ಲಿದ್ದಾಗ ಮಧ್ಯಾಹ್ನ ಕಾಲದ ಅಭಿಜಿನ್ಮುಹೂರ್ತದಲ್ಲಿ ಜ್ಯೇಷ್ಠಾ ನಕ್ಷತ್ರದಲ್ಲಿ ಜನಿಸಿದನು. ಯುಧಿಷ್ಠಿರ, ಅಜಾತ ಶತ್ರು, ಧರ್ಮಪುತ್ರ ಎಂಬ ಹೆಸರುಗಳು ರೂಢಿಯಲ್ಲಿವೆ.
ಮೂಲ ...{Loading}...
ಧಾರುಣೀಪತಿ ಕೇಳು ಕುಂತೀ
ನಾರಿಗಾದುದು ಗರ್ಭ ಹರುಷದ
ಭಾರದಲಿ ಸತಿ ತಗ್ಗಿದಳು ನವ ಪೂರ್ಣಮಾಸದಲಿ
ಚಾರುತರ ನಕ್ಷತ್ರ ಶುಭದಿನ
ವಾರ ಲಗ್ನದೊಳಿಂದುಕುಲ ವಿ
ಸ್ತಾರಕನು ಸುಕುಮಾರನವತರಿಸಿದನು ಧರಣಿಯಲಿ ॥38॥
೦೩೯ ನಿರ್ಮಲಿನವಾಯ್ತಖಿಲ ದೆಸೆ ...{Loading}...
ನಿರ್ಮಲಿನವಾಯ್ತಖಿಲ ದೆಸೆ ದು
ಷ್ಕರ್ಮತತಿ ಬೆಚ್ಚಿದುದು ಸಾಕ್ಷಾತ್
ಧರ್ಮವೇ ಧರಣಿಯಲಿ ನೃಪ ರೂಪಾಗಿ ಜನಿಸಿತಲ
ದುರ್ಮಹೀಶರ ಹೊತ್ತಭಾರದ
ಕರ್ಮ ವೇದನೆ ಧಾತ್ರಿಗಿಳಿದುದು
ಧರ್ಮವಿನ್ನೆಮಗಹುದೆನುತ ಹೆಚ್ಚಿದುದು ಮುನಿನಿಕರ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲ್ಲ ದಿಕ್ಕುಗಳೂ ನಿರ್ಮಲವಾದವು. ಕೆಟ್ಟ ಕೆಲಸದಲ್ಲಿ ನಿರತವಾದ ಸಮೂಹ ಬೆಚ್ಚಿತು. ಸಾಕ್ಷಾತ್ ಧರ್ಮವೇ ಭೂಮಿಯಲ್ಲಿ ನೃಪರೂಪವಾಗಿ ಹುಟ್ಟಿತಲ್ಲವೇ ! ದುಷ್ಟರಾಜರನ್ನು ಹೊತ್ತ ಭಾರದ ಕರ್ಮವೇದನೆ ಭೂಮಿಗೆ ತಗ್ಗಿತು. ಇನ್ನು ಧರ್ಮ ನಮಗಾಗುವುದು ಎಂದು ಮುನಿ ಸಮೂಹದ ಹರ್ಷ ಹೆಚ್ಚಾಯಿತು.
ಪದಾರ್ಥ (ಕ.ಗ.ಪ)
ದೆಸೆ-ದಿಕ್ಕು,
ತತಿ-ಸಮೂಹ,
ದುರ್ಮಹೀಶರು-ದುಷ್ಟರಾಜರು
ಮೂಲ ...{Loading}...
ನಿರ್ಮಲಿನವಾಯ್ತಖಿಲ ದೆಸೆ ದು
ಷ್ಕರ್ಮತತಿ ಬೆಚ್ಚಿದುದು ಸಾಕ್ಷಾತ್
ಧರ್ಮವೇ ಧರಣಿಯಲಿ ನೃಪ ರೂಪಾಗಿ ಜನಿಸಿತಲ
ದುರ್ಮಹೀಶರ ಹೊತ್ತಭಾರದ
ಕರ್ಮ ವೇದನೆ ಧಾತ್ರಿಗಿಳಿದುದು
ಧರ್ಮವಿನ್ನೆಮಗಹುದೆನುತ ಹೆಚ್ಚಿದುದು ಮುನಿನಿಕರ ॥39॥
೦೪೦ ಧರಣಿಪತಿ ಧರ್ಮಜನ ...{Loading}...
ಧರಣಿಪತಿ ಧರ್ಮಜನ ಮುಖ ಸಂ
ದರುಶನವ ಮಾಡಿದನು ಹೆಚ್ಚಿದ
ಹರುಷ ಭಾರಕೆ ಚಿತ್ತ ತಗ್ಗಿತು ಮುಗ್ಗಿತಡಿಗಡಿಗೆ
ಹರಿದು ಪುತ್ರೋತ್ಸವದ ನುಡಿ ಗಜ
ಪುರದೊಳಬ್ಬರವಾಯ್ತು ಪಾಂಡುವಿ
ನರಸಿಯಲಿ ಸಂತಾನ ಜನಿಸಿದುದೆಂದು ಜನಜನಿತ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡು ಮಹಾರಾಜನು, ಧರ್ಮರಾಜನ ಮುಖ ಸಂದರ್ಶನ ಮಾಡಿದನು. ಅದರಿಂದ ಹೆಚ್ಚಿದ ಸಂತೋಷದ ಭಾರಕ್ಕೆ ಮನಸ್ಸು ತಗ್ಗಿತು, ಮೇಲಿಂದ ಮೇಲೆ ಕುಣಿಯಿತು. ಈ ಪುತ್ರೋತ್ಸವದ ಮಾತು ಊರಿಂದೂರಿಗೆ ಹಬ್ಬಿ ಹಸ್ತಿನಪುರದಲ್ಲಿ ಹರಡಿ ಅತಿಶಯವಾಯ್ತು. ಪಾಂಡುವಿನ ರಾಣಿ ಕುಂತಿಯಲ್ಲಿ ಸಂತಾನವಾಗಿದ್ದು ಜನರಲ್ಲಿ ಹಬ್ಬಿರುವ ವಿಷಯವಾಯ್ತು.
ಪದಾರ್ಥ (ಕ.ಗ.ಪ)
ಗಜಪುರ-ಹಸ್ತಿನಾಪುರ,
ಜನಜನಿತ-ಜನರಲ್ಲಿ ಹಬ್ಬಿರುವ ವಿಷಯ
ಮೂಲ ...{Loading}...
ಧರಣಿಪತಿ ಧರ್ಮಜನ ಮುಖ ಸಂ
ದರುಶನವ ಮಾಡಿದನು ಹೆಚ್ಚಿದ
ಹರುಷ ಭಾರಕೆ ಚಿತ್ತ ತಗ್ಗಿತು ಮುಗ್ಗಿತಡಿಗಡಿಗೆ
ಹರಿದು ಪುತ್ರೋತ್ಸವದ ನುಡಿ ಗಜ
ಪುರದೊಳಬ್ಬರವಾಯ್ತು ಪಾಂಡುವಿ
ನರಸಿಯಲಿ ಸಂತಾನ ಜನಿಸಿದುದೆಂದು ಜನಜನಿತ ॥40॥
೦೪೧ ಕೇಳಿದಳು ಗಾನ್ಧಾರಿ ...{Loading}...
ಕೇಳಿದಳು ಗಾಂಧಾರಿ ಕುಂತಿಗೆ
ಬಾಲ ಕೇಳಿ ವಿನೋದವೇ ಕೈ
ಮೇಳವಿಸಿತೇ ಮುನ್ನ ಹಾ ತಪ್ಪೇನು ತಪ್ಪೇನು
ಕಾಳು ಮಾಡಿದನೆನಗೆ ಮುನಿಪತಿ
ಠೌಳಿಕಾರನಲಾ ಸುಡೀ ಗ
ರ್ಭಾಳಿಗಳನೆಂದಬಲೆ ಹೊಸೆದಳು ಬಸುರನೊಡೆ ಮುರಿದು ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುಂತಿಯಲ್ಲಾದ ಸಂತಾನದ ಸುದ್ದಿಯನ್ನು ಗಾಂಧಾರಿ ಕೇಳಿದಳು. ಕುಂತಿಗೆ ಬಾಲ ಕೇಳೀ ವಿನೋದ ಮೊದಲುಂಟಾಯಿತೇ ! ಆ ಮೋಸಗಾರ ಮುನಿ ನನಗೆ ಸುಮ್ಮನೇ ಕಷ್ಟ ಕೊಟ್ಟನಲ್ಲ. “ಸುಡು ಈ ಗರ್ಭಾಳಿಗಳನ್ನು” ಎಂದು ಗಾಂಧಾರಿ ಬಸುರನ್ನು ಹೊಸೆದುಕೊಂಡಳು.
ಪದಾರ್ಥ (ಕ.ಗ.ಪ)
ಠೌಳಿಕಾರ-ಮೋಸಗಾರ
ಮೂಲ ...{Loading}...
ಕೇಳಿದಳು ಗಾಂಧಾರಿ ಕುಂತಿಗೆ
ಬಾಲ ಕೇಳಿ ವಿನೋದವೇ ಕೈ
ಮೇಳವಿಸಿತೇ ಮುನ್ನ ಹಾ ತಪ್ಪೇನು ತಪ್ಪೇನು
ಕಾಳು ಮಾಡಿದನೆನಗೆ ಮುನಿಪತಿ
ಠೌಳಿಕಾರನಲಾ ಸುಡೀ ಗ
ರ್ಭಾಳಿಗಳನೆಂದಬಲೆ ಹೊಸೆದಳು ಬಸುರನೊಡೆ ಮುರಿದು ॥41॥
೦೪೨ ಉದುರಿದವು ಧರಣಿಯಲಿ ...{Loading}...
ಉದುರಿದವು ಧರಣಿಯಲಿ ಬಲು ಮಾಂ
ಸದ ಸುರಕ್ತದ ಘಟ್ಟಿಗಳು ಖಂ
ಡದ ಸುಢಾಳದ ಜಿಗಿಯ ಪೇಸಿಕೆ ನಿಕರ ನೂರೊಂದು
ಕೆದರಿದಳು ವಾಮಾಂಘ್ರಿಯಲಿ ನೂ
ಕಿದಳು ಹಾಯ್ಕಿವ ಹೊರಗೆನುತ ನೋ
ಡಿದಳು ಕರೆ ಕೈನೆಯರನೆನುತ ಕಠೋರ ಕೋಪದಲಿ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ, ಅಸಹ್ಯದ ಬಹಳ ಹೊಳೆಯುವ ಮಾಂಸದ ರಕ್ತದೊಂದಿಗಿನ ಗಡುಸಾದ ನೂರೊಂದು ತುಂಡುಗಳು ಕೆಳಗೆ ಉದುರಿದವು. ಎಡಗಾಲಿನಲ್ಲಿ ಅವುಗಳನ್ನು ಒದೆದು ನೂಕಿದಳು. ಉಗ್ರವಾದ ಕೋಪದಿಂದ “ಇವುಗಳನ್ನು ಹೊರಗೆ ಎಸೆಯಿರಿ, ದಾಸಿಯರನ್ನು ಕರೆಯಿರಿ” ಎಂದು ನೋಡಿದಳು.
ಪದಾರ್ಥ (ಕ.ಗ.ಪ)
ಖಂಡ-ತುಂಡು,
ಪೇಸಿಕೆ-ಅಸಹ್ಯ,
ವಾಮಾಂಘ್ರಿ-ಎಡಗಾಲು, ಕೈನೆ-ದಾಸಿ,
ಸುಢಾಳ-ಬಹಳ ಕಾಂತಿ, ಹೊಳಪು,
ಘಟ್ಟಿ-ಗಡುಸಾದ
ಮೂಲ ...{Loading}...
ಉದುರಿದವು ಧರಣಿಯಲಿ ಬಲು ಮಾಂ
ಸದ ಸುರಕ್ತದ ಘಟ್ಟಿಗಳು ಖಂ
ಡದ ಸುಢಾಳದ ಜಿಗಿಯ ಪೇಸಿಕೆ ನಿಕರ ನೂರೊಂದು
ಕೆದರಿದಳು ವಾಮಾಂಘ್ರಿಯಲಿ ನೂ
ಕಿದಳು ಹಾಯ್ಕಿವ ಹೊರಗೆನುತ ನೋ
ಡಿದಳು ಕರೆ ಕೈನೆಯರನೆನುತ ಕಠೋರ ಕೋಪದಲಿ ॥42॥
೦೪೩ ತನ ತನಗೆ ...{Loading}...
ತನ ತನಗೆ ನಡು ನಡುಗಿ ಕಾಂತಾ
ಜನವು ಬಂದುದು ತಾಯೆ ಬೆಸನೇ
ನೆನಲು ಬಿಸುಡಿವ ನೂರ ಹೊರಗೆಂಬಾ ಮುಹೂರ್ತದಲಿ
ಮುನಿಪವೇದವ್ಯಾಸನಾಕೆಯ
ಮನೆಗೆ ಬಂದನು ಕಂಡನೀ ಕಾ
ಮಿನಿಯ ಕೋಲಾಹಲವಿದೇನೇನೆಂದು ಬೆಸೆಗೊಂಡ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನತನಗೆ ನಡು ನಡುಗಿ ಸೇವಕಿಯರು ಬಂದು “ತಾಯೇ ಏನಪ್ಪಣೆ ?” ಎಂದು ಕೇಳಿದಾಗ ಗಾಂಧಾರಿಯು, “ಇವನ್ನು ಊರ ಹೊರಗೆ ಬಿಸುಡಿರಿ” ಎನ್ನುವ ಸಮಯದಲ್ಲಿ ಮುನಿ ವೇದವ್ಯಾಸನು ಗಾಂಧಾರಿಯ ಮನೆಗೆ ಬಂದನು. ಆ ಸ್ತ್ರೀಯ ಗದ್ದಲವನ್ನು ಕಂಡು ಇದೇನೆಂದು ವಿಚಾರಿಸಿದನು.
ಪದಾರ್ಥ (ಕ.ಗ.ಪ)
ಕಾಂತಾಜನ-ಹೆಂಗಸರು,
ಬೆಸನು-ಅಪ್ಪಣೆ,
ಕಾಮಿನಿ-ಹೆಣ್ಣು,
ಕೋಲಾಹಲ-ಗದ್ದಲ
ಮೂಲ ...{Loading}...
ತನ ತನಗೆ ನಡು ನಡುಗಿ ಕಾಂತಾ
ಜನವು ಬಂದುದು ತಾಯೆ ಬೆಸನೇ
ನೆನಲು ಬಿಸುಡಿವ ನೂರ ಹೊರಗೆಂಬಾ ಮುಹೂರ್ತದಲಿ
ಮುನಿಪವೇದವ್ಯಾಸನಾಕೆಯ
ಮನೆಗೆ ಬಂದನು ಕಂಡನೀ ಕಾ
ಮಿನಿಯ ಕೋಲಾಹಲವಿದೇನೇನೆಂದು ಬೆಸೆಗೊಂಡ ॥43॥
೦೪೪ ಭರತ ಸನ್ತಾನಕೆ ...{Loading}...
ಭರತ ಸಂತಾನಕೆ ಕುಮಾರರ
ಹೆರುವೆ ನಾ ಮುನ್ನೆಂದು ಗರ್ಭವ
ಧರಿಸಿದೆನು ನಿಮ್ಮಡಿಯ ಕೃಪೆಯಲಿ ಮಂತ್ರ ಭಾವಿತವ
ವರುಷವೆರಡಾಯ್ತಿದರ ಭಾರವ
ಧರಿಸಿದೆನು ದಾಯಾದ್ಯರೊಳಗವ
ತರಿಸಿದನು ಮಗನೆನುತ ಮುಖದಿರುಹಿದಳು ಗಾಂಧಾರಿ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭರತ ವಂಶಕ್ಕೆ ನಾನು ಮೊದಲು ಮಕ್ಕಳನ್ನು ಹೆರುತ್ತೇನೆಂದು ನೀವು ಅನುಗ್ರಹಿಸಿದ ಮಂತ್ರ ಪಿಂಡಕದ ಮಹಿಮೆಯಿಂದ ಗರ್ಭ ಧರಿಸಿದೆನು. ಅದರ ಭಾರವನ್ನು ಹೊತ್ತು ಎರಡು ವರ್ಷವಾಯಿತು. ದಾಯಾದ್ಯರಲ್ಲಿ ಮಗ ಹುಟ್ಟಿದನು ಎನುತ್ತ ಗಾಂಧಾರಿ ಮುಖ ತಿರುಗಿಸಿದಳು.
ಮೂಲ ...{Loading}...
ಭರತ ಸಂತಾನಕೆ ಕುಮಾರರ
ಹೆರುವೆ ನಾ ಮುನ್ನೆಂದು ಗರ್ಭವ
ಧರಿಸಿದೆನು ನಿಮ್ಮಡಿಯ ಕೃಪೆಯಲಿ ಮಂತ್ರ ಭಾವಿತವ
ವರುಷವೆರಡಾಯ್ತಿದರ ಭಾರವ
ಧರಿಸಿದೆನು ದಾಯಾದ್ಯರೊಳಗವ
ತರಿಸಿದನು ಮಗನೆನುತ ಮುಖದಿರುಹಿದಳು ಗಾಂಧಾರಿ ॥44॥
೦೪೫ ಮರುಳು ಹೆಙ್ಗುಸಲಾ ...{Loading}...
ಮರುಳು ಹೆಂಗುಸಲಾ ಮಹಾತ್ಮರ
ಪರಿಯ ನೀನೆಂತರಿವೆ ಗರ್ಭೋ
ತ್ಕರವ ಕೆಡಿಸಿದೆ ಪಾಪಿ ನೀ ಸಾರೆನುತ ಮುನಿ ಮುಳಿದು
ತರಿಸಿದನು ಘೃತಪೂರಿತದ ಕೊ
ಪ್ಪರಿಗೆಗಳನೊಂದೊಂದನೊಂದರೊ
ಳಿರಿಸಿ ಮಂತ್ರಿಸಿ ನೀರ ತಳಿದನು ರಕ್ಷೆಗಳ ರಚಿಸಿ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ವ್ಯಾಸನು, ಕೋಪಿಸಿಕೊಂಡು “ಮರುಳು ಹೆಂಗುಸೇ, ಮಹಾತ್ಮರ ರೀತಿಯನ್ನು ನೀನು ಹೇಗೆ ತಿಳಿಯುತ್ತೀಯ ? ಗರ್ಭಗಳನ್ನು ಕೆಡಿಸಿದೆ ಪಾಪಿ, ನೀನಾಚೆ ನಡೆ” ಎಂದು ನುಡಿದು, ತುಪ್ಪ ತುಂಬಿದ ಕಡಾಯಿಗಳನ್ನು ತರಿಸಿದನು. ಒಂದೊಂದು ತುಂಡನ್ನು ಒಂದೊಂದು ಕಡಾಯಿಯಲ್ಲಿರಿಸಿ ಮಂತ್ರಜಲದಿಂದ ಪ್ರೋಕ್ಷಿಸಿ ರಕ್ಷೆಗಳನ್ನು ರಚಿಸಿದನು.
ಪದಾರ್ಥ (ಕ.ಗ.ಪ)
ಮರುಳು-ಹುಚ್ಚು,
ಪರಿ-ರೀತಿ,
ಮುಳಿ-ಕೋಪಿಸಿಕೊ,
ಘೃತಪೂರಿತ-ತುಪ್ಪದಿಂದ ತುಂಬಿದ,
ಕೊಪ್ಪರಿಗೆ-ಕಡಾಯಿ (ಅಗಲವಾದ ಬಾಯುಳ್ಳ ಪಾತ್ರೆ)
ಮೂಲ ...{Loading}...
ಮರುಳು ಹೆಂಗುಸಲಾ ಮಹಾತ್ಮರ
ಪರಿಯ ನೀನೆಂತರಿವೆ ಗರ್ಭೋ
ತ್ಕರವ ಕೆಡಿಸಿದೆ ಪಾಪಿ ನೀ ಸಾರೆನುತ ಮುನಿ ಮುಳಿದು
ತರಿಸಿದನು ಘೃತಪೂರಿತದ ಕೊ
ಪ್ಪರಿಗೆಗಳನೊಂದೊಂದನೊಂದರೊ
ಳಿರಿಸಿ ಮಂತ್ರಿಸಿ ನೀರ ತಳಿದನು ರಕ್ಷೆಗಳ ರಚಿಸಿ ॥45॥
೦೪೬ ಚಿನ್ತೆಯಿಲ್ಲದೆ ನೂರುದಿನ ...{Loading}...
ಚಿಂತೆಯಿಲ್ಲದೆ ನೂರುದಿನ ಪರಿ
ಯಂತ ರಕ್ಷಿಸು ಬಳಿಕ ನಿನ್ನಯ
ಸಂತತಿಯ ಸಾಮಥ್ರ್ಯವನು ಗಾಂಧಾರಿ ನೋಡೆಂದು
ಕಂತುಪಿತ ಸನ್ನಿಭನು ಸತಿಯನು
ಸಂತವಿಸಿ ಮರಳಿದನು ಧರಣೀ
ಕಾಂತ ಕೇಳೈ ಬನದೊಳಿತ್ತಲು ಭೀಮನುದ್ಭವವ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಗಾಂಧಾರಿ, ಚಿಂತಿಸದೆ, ನೂರು ದಿನದವರೆಗೆ ಇವನ್ನು ರಕ್ಷಿಸು, ನಂತರ ನಿನ್ನ ಸಂತತಿಯ ಸಾಮಥ್ರ್ಯವನ್ನು ನೋಡು” ಎಂದು ಹರಿಸದೃಶನಾದ ವ್ಯಾಸನು ಗಾಂಧಾರಿಯನ್ನು ಸಮಾಧಾನ ಮಾಡಿ ಹಿಂತಿರುಗಿದನು. ಮಹಾರಾಜಾ, ಇತ್ತ ಕಡೆ ವನದಲ್ಲಿ ಭೀಮನ ಜನನದ ಬಗ್ಗೆ ಕೇಳು ಎಂದು ವೈಶಂಪಾಯನರು ಹೇಳಿದರು.
ಪದಾರ್ಥ (ಕ.ಗ.ಪ)
ಕಂತುಪಿತ-ಮನ್ಮಥನ ತಂದೆ, ಹರಿ,
ಸನ್ನಿಭ-ಸದೃಶ,
ಉದ್ಭವ-ಜನನ
ಮೂಲ ...{Loading}...
ಚಿಂತೆಯಿಲ್ಲದೆ ನೂರುದಿನ ಪರಿ
ಯಂತ ರಕ್ಷಿಸು ಬಳಿಕ ನಿನ್ನಯ
ಸಂತತಿಯ ಸಾಮಥ್ರ್ಯವನು ಗಾಂಧಾರಿ ನೋಡೆಂದು
ಕಂತುಪಿತ ಸನ್ನಿಭನು ಸತಿಯನು
ಸಂತವಿಸಿ ಮರಳಿದನು ಧರಣೀ
ಕಾಂತ ಕೇಳೈ ಬನದೊಳಿತ್ತಲು ಭೀಮನುದ್ಭವವ ॥46॥
೦೪೭ ನಿಯಮದಲಿ ಕಾಮಿನಿ ...{Loading}...
ನಿಯಮದಲಿ ಕಾಮಿನಿ ಸರೋವಾ
ರಿಯಲಿ ಮಿಂದಳು ಬೀಜಮಂತ್ರ
ವ್ಯಯವ ಮಾಡಿದಳಮರ ನಿಕರವ ನೋಡಿ ಕೈಮುಗಿದು
ಬಯಸಿದಳು ವಾಯುವನು ನಿಜ ಮೂ
ರ್ತಿಯಲಿ ಬಂದು ಸಮೀರನಾ ಕುಂ
ತಿಯನು ನುಡಿಸಿದನೆಮ್ಮ ಬರಿಸಿದ ಹದನದೇನೆಂದು ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇತ್ತ ಕುಂತಿ ನಿಯಮದಿಂದ ಸರೋವರದಲ್ಲಿ ಮಿಂದಳು. ಮತ್ತೊಂದು ಬೀಜ ಮಂತ್ರವನ್ನು ಸ್ಮರಿಸಿ ದೇವತೆಗಳ ಸಮೂಹಕ್ಕೆ ಕೈಮುಗಿದು ವಾಯುದೇವನನ್ನು ಬಯಸಿದಳು. ನಿಜ ಸ್ವರೂಪದಿಂದ ಪ್ರತ್ಯಕ್ಷನಾಗಿ ಬಂದ ವಾಯುದೇವನು ಕುಂತಿಯನ್ನು ಮಾತನಾಡಿಸಿ ತನ್ನನ್ನು ಬರಿಸಿದ ವಿಷಯವೇನೆಂದು ಕೇಳಿದನು.
ಪದಾರ್ಥ (ಕ.ಗ.ಪ)
ಸರೋವಾರಿ-ಸರೋವರದ ನೀರು,
ಸಮೀರ-ವಾಯು, ಗಾಳಿ.
ಮೂಲ ...{Loading}...
ನಿಯಮದಲಿ ಕಾಮಿನಿ ಸರೋವಾ
ರಿಯಲಿ ಮಿಂದಳು ಬೀಜಮಂತ್ರ
ವ್ಯಯವ ಮಾಡಿದಳಮರ ನಿಕರವ ನೋಡಿ ಕೈಮುಗಿದು
ಬಯಸಿದಳು ವಾಯುವನು ನಿಜ ಮೂ
ರ್ತಿಯಲಿ ಬಂದು ಸಮೀರನಾ ಕುಂ
ತಿಯನು ನುಡಿಸಿದನೆಮ್ಮ ಬರಿಸಿದ ಹದನದೇನೆಂದು ॥47॥
೦೪೮ ಬರಿಸಿದುದು ಬೇರೇನು ...{Loading}...
ಬರಿಸಿದುದು ಬೇರೇನು ಸುತನನು
ಕರುಣಿಸುವುದೈಸಲೆಯೆನಲು ಸಂ
ಸ್ಪರುಶನದಿ ಭವದಿಷ್ಟಮಸ್ತುಯೆನುತ್ತಲಂಬರಕೆ
ಮರಳಿದನು ಪವಮಾನನೀ ಪಂ
ಕರುಹಮುಖಿ ಬೆಸಲಾದಳೊಂದೇ
ವರುಷ ಗರ್ಭವ ಧರಿಸಿ ಪರಬಲ ಕಾಲ ಭೈರವನ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬರಿಸಿದುದು ಮತ್ತೇನು ? ಮಗನನ್ನು ಕರುಣಿಸುವುದಷ್ಟೆ” ಎಂದು ಕುಂತಿಯು ಹೇಳಲು, ಅವಳನ್ನು ಮುಟ್ಟಿ “ನಿನ್ನ ಇಷ್ಟ ನೆರವೇರಲಿ” ಎಂದು ಹೇಳಿ ಪವಮಾನನು ಆಕಾಶಕ್ಕೆ ಮರಳಿದನು. ಕಮಲಮುಖಿಯಾದ ಕುಂತಿ ಒಂದೇ ವರ್ಷ ಗರ್ಭಧರಿಸಿ ಶತ್ರುಸೈನಕ್ಕೆ ಪ್ರಳಯ ಕಾಲದ ರುದ್ರನೋ ಎನಿಸುವ ಭೀಮನನ್ನು ಗರ್ಭದಲ್ಲಿ ಧರಿಸಿದಳು.
ಪದಾರ್ಥ (ಕ.ಗ.ಪ)
ಸಂಸ್ಪರುಶನ-ಮುಟ್ಟುವಿಕೆ,
ಅಂಬರ-ಆಕಾಶ,
ಪರಬಲ-ಶತ್ರುಸೈನ್ಯ,
ಕಾಲಭೈರವ-ಪ್ರಳಯಕಾಲದ ರುದ್ರ,
ಭವದಿಷ್ಟ-ನಿನ್ನ ಇಷ್ಟ.
ಮೂಲ ...{Loading}...
ಬರಿಸಿದುದು ಬೇರೇನು ಸುತನನು
ಕರುಣಿಸುವುದೈಸಲೆಯೆನಲು ಸಂ
ಸ್ಪರುಶನದಿ ಭವದಿಷ್ಟಮಸ್ತುಯೆನುತ್ತಲಂಬರಕೆ
ಮರಳಿದನು ಪವಮಾನನೀ ಪಂ
ಕರುಹಮುಖಿ ಬೆಸಲಾದಳೊಂದೇ
ವರುಷ ಗರ್ಭವ ಧರಿಸಿ ಪರಬಲ ಕಾಲ ಭೈರವನ ॥48॥
೦೪೯ ಅವನಿಸುತವಾರ ತ್ರಯೋದಶಿ ...{Loading}...
ಅವನಿಸುತವಾರ ತ್ರಯೋದಶಿ
ದಿವದ ಮಧ್ಯದೊಳರ್ಕನಿರೆ ಸಂ
ಭವಿಸಿದನು ಮಘೆಯಲಿ ಶುಭಗ್ರಹ ಲಗ್ನದುದಯದಲಿ
ಭವದ ಮಾತ್ರದೊಳಹಿತ ಪಾರ್ಥಿವ
ನಿವಹ ನಡುಗಿತು ಭೂಮಿಪತಿ ಹೇ
ಳುವೆನದೇನನು ಭೀಮಸೇನನ ಜನನದದ್ಭುತವ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಮಂಗಳವಾರ ತ್ರಯೋದಶಿಯಂದು ಮಧ್ಯಾಹ್ನದಲ್ಲಿ ಸೂರ್ಯನಿರಲು ಮಘಾ ನಕ್ಷತ್ರದಲ್ಲಿ ಶುಭಗ್ರಹ ಲಗ್ನದುದಯದಲ್ಲಿ ಜನಿಸಿದನು. ಅವನು ಹುಟ್ಟಿದ ಮಾತ್ರಕ್ಕೇ ಶತ್ರು ರಾಜರ ಸಮೂಹ ನಡುಗಿತು. ಮಹಾರಾಜಾ, ಭೀಮಸೇನನು ಹುಟ್ಟಿದುದರಿಂದ ಆದ ಅತ್ಯಾಶ್ಚರ್ಯವನ್ನು ಏನೆಂದು ಹೇಳಲಿ !
ಪದಾರ್ಥ (ಕ.ಗ.ಪ)
ಅವನಿಸುತವಾರ-ಮಂಗಳವಾರ,
ಅರ್ಕ-ಸೂರ್ಯ,
ಭವ-ಹುಟ್ಟು,
ಪಾರ್ಥಿವ ನಿವಹ-ಕ್ಷತ್ರಿಯ ಸಮೂಹ,
ಅದ್ಭುತ-ಅತ್ಯಾಶ್ಚರ್ಯ.
ಪಾಠಾನ್ತರ (ಕ.ಗ.ಪ)
[ದದ್ಭುತವ] - [ದುತ್ಸವವ (ಆ)] ಅದ್ಭುತ - ಅತ್ಯಾಶ್ಚರ್ಯ, ಉತ್ಸವ - ಸಂಭ್ರಮ, ಈ ಎರಡೂ ಪಾಠಾಂತರಗಳು ಸಮಂಜಸವೆನಿಸುತ್ತವೆ.
ಮೂಲ ...{Loading}...
ಅವನಿಸುತವಾರ ತ್ರಯೋದಶಿ
ದಿವದ ಮಧ್ಯದೊಳರ್ಕನಿರೆ ಸಂ
ಭವಿಸಿದನು ಮಘೆಯಲಿ ಶುಭಗ್ರಹ ಲಗ್ನದುದಯದಲಿ
ಭವದ ಮಾತ್ರದೊಳಹಿತ ಪಾರ್ಥಿವ
ನಿವಹ ನಡುಗಿತು ಭೂಮಿಪತಿ ಹೇ
ಳುವೆನದೇನನು ಭೀಮಸೇನನ ಜನನದದ್ಭುತವ ॥49॥
೦೫೦ ಭೀಮನುದಯಿಸಿದಿರುಳು ಕೌರವ ...{Loading}...
ಭೀಮನುದಯಿಸಿದಿರುಳು ಕೌರವ
ಭೂಮಿಪತಿ ಜನಿಸಿದನೆಲೈ ನಿ
ಮ್ಮಾ ಮಹಾತ್ಮನ ಹುಟ್ಟು ಬೆದರಿಸಿತಖಿಳಜನಮನವ
ಭೂಮಿ ನಡುಗಿತು ದೆಸೆಗೆ ಹರಿದವು
ಧೂಮಕೇತುಗಳೊದರಿದವು ಬಳಿ
ಕಾ ಮಹಾನಗರದಲಿ ಭರದಲಿ ಭೂರಿ ಗೋಮಾಯು ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಹುಟ್ಟಿದ ರಾತ್ರಿ ಹಸ್ತಿನಾಪುರದಲ್ಲಿ ರಾಯ ಪಿತಾಮಹನಾದ ಕೌರವನು ಜನಿಸಿದನು. ನಿಮ್ಮ ಆ ಮಹಾತ್ಮನ ಹುಟ್ಟು ಎಲ್ಲ ಜನರ ಮನಸ್ಸನ್ನು ಬೆದರಿಸಿತು. ಭೂಮಿ ನಡುಗಿತು. ಧೂಮಕೇತುಗಳು ದಿಕ್ಕುಗಳಿಗೆ ಓಡಿದವು. ನಂತರ, ಆ ಮಹಾನಗರದಲ್ಲಿ ಅಧಿಕ ನರಿಗಳು ಜೋರಾಗಿ ಕೂಗಿದವು.
ಪದಾರ್ಥ (ಕ.ಗ.ಪ)
ಒದರು-ಗಟ್ಟಿಯಾಗಿ ಕೂಗು, ಭೂರಿ-ಹೆಚ್ಚು, ಅಧಿಕ, ಗೋಮಾಯು-ನರಿ
ಪಾಠಾನ್ತರ (ಕ.ಗ.ಪ)
[ರಾಯಪಿತಾಮಹನು] - [ಕೌರವಭೂಮಿಪತಿ (ಆ)]
ಕೌರವನು ಜನಮೇಜಯನಿಗೆ ಪ್ರಪಿತಾಮಹನಾದ್ದರಿಂದ [ಕೌರವ ಭೂಮಿಪತಿ] ಅನ್ನುವ ಪಾಠಾಂತರ ಸಮಂಜಸವೆನಿಸುತ್ತದೆ.
ಮೂಲ ...{Loading}...
ಭೀಮನುದಯಿಸಿದಿರುಳು ಕೌರವ
ಭೂಮಿಪತಿ ಜನಿಸಿದನೆಲೈ ನಿ
ಮ್ಮಾ ಮಹಾತ್ಮನ ಹುಟ್ಟು ಬೆದರಿಸಿತಖಿಳಜನಮನವ
ಭೂಮಿ ನಡುಗಿತು ದೆಸೆಗೆ ಹರಿದವು
ಧೂಮಕೇತುಗಳೊದರಿದವು ಬಳಿ
ಕಾ ಮಹಾನಗರದಲಿ ಭರದಲಿ ಭೂರಿ ಗೋಮಾಯು ॥50॥
೦೫೧ ಕರೆಸಿದನು ಧೃತರಾಷ್ಟ್ರನವನೀ ...{Loading}...
ಕರೆಸಿದನು ಧೃತರಾಷ್ಟ್ರನವನೀ
ಸುರರ ಬೆಸಗೊಂಡನು ಕುಮಾರನ
ದರುಶನದ ಸಮನಂತರದಲುತ್ಪಾತ ಫಲಗತಿಯ
ಭರತವಂಶವನುಳಿದ ಭೂಮೀ
ಶ್ವರರನಂತವನೀತನೇ ಸಂ
ಹರಿಸುವನು ಸಂದೇಹವಿದಕೇನೆಂದರಾ ದ್ವಿಜರು ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನು ವಿಪ್ರರನ್ನು ಕರೆಸಿದನು. ಕುಮಾರ ಹುಟ್ಟಿದ ಬಳಿಕ ಕಾಣಿಸಿದ ಅಪಶಕುನಗಳ ಫಲಗತಿಯನ್ನು ಕೇಳಿದನು. ಈತನೇ ಭರತವಂಶವನ್ನೂ ಹಾಗೂ ಅನೇಕ ಭೂಮೀಶ್ವರರನ್ನೂ ನಾಶಮಾಡುವನು. ಇದರಲ್ಲಿ ಸಂದೇಹವಿಲ್ಲ ಎಂದು ದ್ವಿಜರು ಹೇಳಿದರು.
ಪದಾರ್ಥ (ಕ.ಗ.ಪ)
ಉತ್ಪಾತ-ಅಪಶಕುನ,
ಅನಂತ-ಲೆಕ್ಕವಿಲ್ಲದ, ಅನೇಕ
ಮೂಲ ...{Loading}...
ಕರೆಸಿದನು ಧೃತರಾಷ್ಟ್ರನವನೀ
ಸುರರ ಬೆಸಗೊಂಡನು ಕುಮಾರನ
ದರುಶನದ ಸಮನಂತರದಲುತ್ಪಾತ ಫಲಗತಿಯ
ಭರತವಂಶವನುಳಿದ ಭೂಮೀ
ಶ್ವರರನಂತವನೀತನೇ ಸಂ
ಹರಿಸುವನು ಸಂದೇಹವಿದಕೇನೆಂದರಾ ದ್ವಿಜರು ॥51॥
೦೫೨ ಕುಲಕೆ ಕಣ್ಟಕನಾದಡೊಬ್ಬನ ...{Loading}...
ಕುಲಕೆ ಕಂಟಕನಾದಡೊಬ್ಬನ
ಕಳೆವುದೂರಳಿವಿನಲಿ ಕಳೆವುದು
ಕುಲವನೊಂದನು ದೇಶದಳಿವಿನಲೂರ ಕೆಡಿಸುವುದು
ಇಳೆಯನಖಿಳವ ಬಿಸುಡುವುದು ತ
ನ್ನುಳಿವ ಮಾಡುವುದೆಂಬ ವಚನವ
ತಿಳಿವುದೀತನ ಬಿಸುಟು ಕಳೆ ನೀನೆಂದನಾ ವಿದುರ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುಲಕ್ಕೆ ಒಬ್ಬನಿಂದ ಕೇಡಾಗುವುದಾದರೆ, ಆ ಒಬ್ಬನನ್ನು ತ್ಯಜಿಸುವುದು. ಒಂದು ಕುಲದಿಂದ ಊರಿಗೆ ನಾಶವೊದಗುವುದಾದರೆ, ಆ ಕುಲವನ್ನೇ ಬಿಡುವುದು. ದೇಶದ ನಾಶದ ಸಂದರ್ಭದಲ್ಲಿ ಒಂದು ಊರನ್ನು ಇಲ್ಲವಾಗಿಸುವುದು. ತಾನು ಶಾಶ್ವತವಾಗಿ ನೆಲಸಬೇಕಾದರೆ ಸಮಗ್ರ ಭೂಮಿಯನ್ನೇ ಒಗೆಯುವುದು ಎಂಬ ಈ ಮಾತನ್ನು ತಿಳಿದು ಈತನನ್ನು ನೀನು ಬಿಸಾಡಿ ಕಳೆದುಕೋ ಎಂದು ವಿದುರ ಹೇಳಿದನು.
ಪದಾರ್ಥ (ಕ.ಗ.ಪ)
ಕಂಟಕ-ಕೇಡು,
ಕಳೆ-ತ್ಯಜಿಸು,
ಅಳಿವು-ನಾಶ,
ಕೆಡಿಸು-ಇಲ್ಲವಾಗಿಸು,
ಉಳಿವು-ಶಾಶ್ವತವಾದ ನೆಲಸು
ಮೂಲ ...{Loading}...
ಕುಲಕೆ ಕಂಟಕನಾದಡೊಬ್ಬನ
ಕಳೆವುದೂರಳಿವಿನಲಿ ಕಳೆವುದು
ಕುಲವನೊಂದನು ದೇಶದಳಿವಿನಲೂರ ಕೆಡಿಸುವುದು
ಇಳೆಯನಖಿಳವ ಬಿಸುಡುವುದು ತ
ನ್ನುಳಿವ ಮಾಡುವುದೆಂಬ ವಚನವ
ತಿಳಿವುದೀತನ ಬಿಸುಟು ಕಳೆ ನೀನೆಂದನಾ ವಿದುರ ॥52॥
೦೫೩ ಸುತನ ಮೋಹದ ...{Loading}...
ಸುತನ ಮೋಹದ ತಿಮಿರವಾ ದು
ಸ್ಥಿತಿಯನೀಕ್ಷಿಸಲೀವುದೇ ದು
ರ್ಮತಿಯೊಳೀತನ ಬಿಸುಡಲೀಸಿದುದಿಲ್ಲ ಗಾಂಧಾರಿ
ಸುತನಿರೀಕ್ಷಣ ಜಾತಕರ್ಮೋ
ಚಿತದ ದಾನಂಗಳಲಿ ಭೂಸುರ
ತತಿಯ ದಣಿಸಿದನನಿಬರಿಗೆ ಗುಣನಾಮಕರಣದಲಿ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಗನ ಮೇಲಿನ ಮೋಹದ ಅಂಧಕಾರ ಆ ದುರವಸ್ಥೆಯನ್ನು ಕಾಣಗೊಡಿಸುವುದೇ ? ಗಾಂಧಾರಿಯು ಕೆಟ್ಟ ಬುದ್ಧಿಯಿಂದ ಈತನನ್ನು ಬಿಸುಡಗೊಡಲಿಲ್ಲ. ಧೃತರಾಷ್ಟ್ರನು ಪುತ್ರದರ್ಶನ ಇತ್ಯಾದಿ ಜಾತಕರ್ಮಗಳನ್ನು ಮಾಡಿ ಉಚಿತವಾದ ದಾನಗಳಿಂದ ವಿಪ್ರಸಮೂಹದ ಪ್ರತಿಯೊಬ್ಬರನ್ನೂ ತಣಿಸಿ ನಾಮಕರಣವನ್ನು ನಡೆಸಿದನು.
ಪದಾರ್ಥ (ಕ.ಗ.ಪ)
ತಿಮಿರ-ಅಂಧಕಾರ,
ದುರ್ಮತಿ-ಕೆಟ್ಟ ಬುದ್ಧಿ,
ನಿರೀಕ್ಷಣ-ಪ್ರತೀಕ್ಷೆ,
ಜಾತಕರ್ಮ-ಹುಟ್ಟಿದ ಮಗುವಿಗೆ ಮಾಡುವ ಸಂಸ್ಕಾರಗಳು.
ದಣಿಸು-ತಣಿಸು.
ಮೂಲ ...{Loading}...
ಸುತನ ಮೋಹದ ತಿಮಿರವಾ ದು
ಸ್ಥಿತಿಯನೀಕ್ಷಿಸಲೀವುದೇ ದು
ರ್ಮತಿಯೊಳೀತನ ಬಿಸುಡಲೀಸಿದುದಿಲ್ಲ ಗಾಂಧಾರಿ
ಸುತನಿರೀಕ್ಷಣ ಜಾತಕರ್ಮೋ
ಚಿತದ ದಾನಂಗಳಲಿ ಭೂಸುರ
ತತಿಯ ದಣಿಸಿದನನಿಬರಿಗೆ ಗುಣನಾಮಕರಣದಲಿ ॥53॥
೦೫೪ ಜನಪ ದುರ್ಯೋಧನನು ...{Loading}...
ಜನಪ ದುರ್ಯೋಧನನು ದುಶ್ಯಾ
ಸನ ವಿಕರ್ಣ ಸುಬಾಹು ದುಸ್ಸಹ
ಕನಕವರ್ಣ ಸುಷೇಣ ದೀರ್ಘೋದರ ಮಹೋದರನು
ಜನವಿಜಯ ಜಲಸಂದ ದೃಢವಾ
ಹನ ವಿವಿಂಶತಿ ಕುಂಡಧಾರಕ
ನೆನಲು ನೂರ್ವರ ನಾಮಕರಣವನರಸ ಮಾಡಿಸಿದ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹುಟ್ಟಿದ ನೂರು ಮಕ್ಕಳಿಗೂ ದುರ್ಯೋಧನ, ದುಶ್ಯಾಸನ, ವಿಕರ್ಣ, ಸುಬಾಹು, ದುಸ್ಸಹ, ಕನಕವರ್ಣ, ಸುಷೇಣ, ದೀಘೋದರ, ಮಹೋದರ, ಜನವಿಜಯ, ಜಲಸಂದ, ದೃಢವಾಹನ, ವಿವಿಂಶತಿ, ಕುಂಡಧಾರಕ ಮುಂತಾಗಿ ಗುಣ ನಾಮಗಳಿಟ್ಟು ನಾಮಕರಣವನ್ನು ಮಾಡಿಸಿದನು.
ಟಿಪ್ಪನೀ (ಕ.ಗ.ಪ)
ಧೃತರಾಷ್ಟ್ರನ ನೂರು ಮಕ್ಕಳ ನಾಮಾವಳಿ :
ಮೂಲ ...{Loading}...
ಜನಪ ದುರ್ಯೋಧನನು ದುಶ್ಯಾ
ಸನ ವಿಕರ್ಣ ಸುಬಾಹು ದುಸ್ಸಹ
ಕನಕವರ್ಣ ಸುಷೇಣ ದೀರ್ಘೋದರ ಮಹೋದರನು
ಜನವಿಜಯ ಜಲಸಂದ ದೃಢವಾ
ಹನ ವಿವಿಂಶತಿ ಕುಂಡಧಾರಕ
ನೆನಲು ನೂರ್ವರ ನಾಮಕರಣವನರಸ ಮಾಡಿಸಿದ ॥54॥
೦೫೫ ಜನಪತಿಗೆ ಬಳಿಕೊಬ್ಬ ...{Loading}...
ಜನಪತಿಗೆ ಬಳಿಕೊಬ್ಬ ವೇಶ್ಯಾಂ
ಗನೆಯ ಸುತನು ಯುಯುತ್ಸು ನೂರೊಂ
ದೆನಿಸಿತರಸು ಕುಮಾರಕರು ಗಾಂಧಾರಿಯುದರದಲಿ
ಜನಿಸಿದರು ನೂರೊಂದು ನೂರ್ವರಿ
ಗನುಜೆ ದುಸ್ಸಳೆಯಾದಳಾ ಮಾ
ನಿನಿ ಜಯದ್ರಥನರಸಿಯಾದಳು ರಾಯ ಕೇಳ್ ಎಂದ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಂತರ, ಧೃತರಾಷ್ಟ್ರನಿಗೆ ಬೇರೊಬ್ಬ ವಾರಾಂಗನೆಯಲ್ಲಿ ಮಗ ಯುಯುತ್ಸು ಜನಿಸಿ ನೂರೊಂದು ಕುಮಾರಕರು ಎನಿಸಿದರು. ನೂರ್ವರಿಗೆ ತಂಗಿ ದುಸ್ಸಳೆ ಗಾಂಧಾರಿಯಲ್ಲಿ ಜನಿಸಿದಳು. ಆ ದುಸ್ಸಳೆ ನಂತರ ಜಯದ್ರಥನಿಗೆ ರಾಣಿಯಾದಳು, ರಾಜ ಕೇಳೆಂದು ವೈಶಂಪಾಯನರು ಹೇಳಿದರು.
ಪದಾರ್ಥ (ಕ.ಗ.ಪ)
ವೇಶ್ಯೆ-ವಾರಾಂಗನೆ, ಗಣಿಕೆ, ಮೇಳದವಳು.
ಪಾಠಾನ್ತರ (ಕ.ಗ.ಪ)
ವರ ಮಾನಿನಿ- ಮಾನಿನಿ - ಮೈ.ವಿ.ವಿ. ಆದಿಪರ್ವ ಡಾ. ಕೆ. ಆರ್. ಶೇಷಗಿರಿ
ಟಿಪ್ಪನೀ (ಕ.ಗ.ಪ)
ಯುಯುತ್ಸು-ಧೃತರಾಷ್ಟ್ರನ ದಾಸೀಪುತ್ರ, ಭಾರತ ಯುದ್ಧಾರಂಭದಲ್ಲಿ ಪಾಂಡವರ ಪಕ್ಷವನ್ನು ಸೇರಿದ. ಭಾರತ ಯುದ್ಧಾನಂತರ ಧೃತರಾಷ್ಟ್ರನ ಸಂತತಿಯಲ್ಲಿ ಉಳಿದವ ಇವನೊಬ್ಬನೇ. ಯುಧಿಷ್ಠಿರ ಮಹಾ ಪ್ರಸ್ಥಾನಕ್ಕೆ ಹೊರಟಾಗ ಪರೀಕ್ಷಿತನಿಗೆ ಪಟ್ಟ ಕಟ್ಟಿ ರಾಜ್ಯಭಾರದ ಎಲ್ಲ ಆಡಳಿತಗಳನ್ನು ಈತನಿಗೆ ಒಪ್ಪಿಸಿದ. ಜಯದ್ರಥ - ಭಾರಿಯ ಆಕಾರವುಳ್ಳ ಶಕ್ತಿಶಾಲಿಯನ್ನು ಕುರಿತು ಹೇಳುವಾಗ ಸೈಂಧವ ಎಂಬ ಹೆಸರನ್ನು ಈಗಲೂ ಬಳಸುತ್ತಾರೆ ದೈತ್ಯಶಕ್ತಿಯುಳ್ಳ ಈ ಮಹಾವೀರನು ಸಿಂಧು ದೇಶದ ದೊರೆ. ಇವನಿಗೆ ಜಯದ್ರಥ ಎಂಬ ಹೆಸರೂ ಇದೆ. ಧೃತರಾಷ್ಟ್ರನ ಮಗಳಾದ ದುಶ್ಯಳೆಯನ್ನು ಮದುವೆಯಾಗಿ ಕೌರವನೊಂದಿಗೆ ನಚಿಟನನ್ನೂ, ದುಷ್ಟಬುದ್ಧಿಯನ್ನೂ ಹಂಚಿಕೊಂಡಿದ್ದವನು. ಕೌರವನ ಹಿತಚಿಂತಕ. ದುಷ್ಟಕೂಟಕ್ಕೆ ಇವನೂ ಒಬ್ಬ ಸದಸ್ಯನಾಗಿದ್ದ.
ಮೂಲ ...{Loading}...
ಜನಪತಿಗೆ ಬಳಿಕೊಬ್ಬ ವೇಶ್ಯಾಂ
ಗನೆಯ ಸುತನು ಯುಯುತ್ಸು ನೂರೊಂ
ದೆನಿಸಿತರಸು ಕುಮಾರಕರು ಗಾಂಧಾರಿಯುದರದಲಿ
ಜನಿಸಿದರು ನೂರೊಂದು ನೂರ್ವರಿ
ಗನುಜೆ ದುಸ್ಸಳೆಯಾದಳಾ ಮಾ
ನಿನಿ ಜಯದ್ರಥನರಸಿಯಾದಳು ರಾಯ ಕೇಳೆಂದ ॥55॥
೦೫೬ ಅತ್ತಲಾ ಹದನಾಯ್ತು ...{Loading}...
ಅತ್ತಲಾ ಹದನಾಯ್ತು ಬಳಿಕಿನ
ಲಿತ್ತ ಧರ್ಮಜ ಭೀಮಸೇನರ
ಹೆತ್ತ ಹರುಷದೊಳಿವರು ಮೆರೆದರು ಪಾಂಡು ಕುಂತಿಯರು
ಮತ್ತೆ ಕೇಳದ್ಭುತವನುರೆ ಮೊರೆ
ವುತ್ತ ಹೆಬ್ಬುಲಿ ವರತಪೋಧನ
ರತ್ತಲೈತರೆ ಪಾಂಡು ಕೆಡಹಿದನಾ ಮೃಗಾಂತಕನ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅತ್ತ ಆ ರೀತಿಯಾದರೆ, ನಂತರ ಅರಣ್ಯದಲ್ಲಿ ಧರ್ಮಜ, ಭೀಮಸೇನರನ್ನು ಹೆತ್ತ ಹರುಷದಲ್ಲಿ ಪಾಂಡು ಕುಂತಿಯರು ಶೋಭಿಸಿದರು. ಮತ್ತೆ ಆದ ಅದ್ಭುತವನ್ನು ರಾಜ, ಕೇಳು. ದೊಡ್ಡ ಹುಲಿಯೊಂದು ಗರ್ಜಿಸುತ್ತ ಋಷಿಗಳ ಬಳಿಗೆ ಬಂದಾಗ ಜಿಂಕೆಗೆ ಯಮ ಸ್ವರೂಪದ ಆ ಹುಲಿಯನ್ನು ಪಾಂಡುವು ಹೊಡೆದು ಬೀಳಿಸಿದನು.
ಪದಾರ್ಥ (ಕ.ಗ.ಪ)
ಹದನು-ರೀತಿ, ಮೊರೆ-ಗರ್ಜಿಸು,
ಹೆಬ್ಬುಲಿ-ದೊಡ್ಡ ಹುಲಿ,
ಮೃಗಾಂತಕ-ಜಿಂಕೆಗೆ ಯಮ ಸ್ವರೂಪ, ಹುಲಿ,
ಕೆಡಹು-ಬೀಳಿಸು
ಮೂಲ ...{Loading}...
ಅತ್ತಲಾ ಹದನಾಯ್ತು ಬಳಿಕಿನ
ಲಿತ್ತ ಧರ್ಮಜ ಭೀಮಸೇನರ
ಹೆತ್ತ ಹರುಷದೊಳಿವರು ಮೆರೆದರು ಪಾಂಡು ಕುಂತಿಯರು
ಮತ್ತೆ ಕೇಳದ್ಭುತವನುರೆ ಮೊರೆ
ವುತ್ತ ಹೆಬ್ಬುಲಿ ವರತಪೋಧನ
ರತ್ತಲೈತರೆ ಪಾಂಡು ಕೆಡಹಿದನಾ ಮೃಗಾಂತಕನ ॥56॥
೦೫೭ ಆ ಮಹಾ ...{Loading}...
ಆ ಮಹಾ ರಭಸಕ್ಕೆ ಮುನಿಪ
ಸ್ತೋಮವಂಜಿತು ಪರ್ವತಾಗ್ರದ
ಲಾ ಮಹೀಪತಿಯರಸಿ ನಡುಗಿದಳಹಹ ಶಿವಯೆನುತ
ಭೀಮ ಬಿದ್ದನು ತೊಡೆಯ ಮೇಲಿಂ
ದೀ ಮಹಿಗೆ ತಚ್ಚೈಲ ಶಿಲೆ ನಿ
ರ್ನಾಮವಾದುದು ಹಸುಳೆ ಹೊರಳಿದು ಬಿದ್ದ ಭಾರದಲಿ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಮಹಾರಭಸಕ್ಕೆ ತಪಸ್ವಿಗಳ ಸಮೂಹ ಹೆದರಿತು. ಪರ್ವತದ ತುದಿಯಲ್ಲಿದ್ದ ಪಾಂಡುವಿನ ಪತ್ನಿ ಕುಂತಿ “ಅಹಹ ಶಿವ” ಎನುತ ನಡುಗಿದಳು. ಆಗ ಅವಳ ತೊಡೆಯ ಮೇಲಿದ್ದ ಭೀಮ ಭೂಮಿಗೆ ಬಿದ್ದನು. ಮಗು ಬಿದ್ದ ಭಾರಕ್ಕೆ ಆ ಪರ್ವತದ ಬಂಡೆ ಒಡೆದು ಪುಡಿಯಾಗಿ ನಾಶವಾಯ್ತು.
ಪದಾರ್ಥ (ಕ.ಗ.ಪ)
ನಿರ್ನಾಮ-ನಾಶ
ಮೂಲ ...{Loading}...
ಆ ಮಹಾ ರಭಸಕ್ಕೆ ಮುನಿಪ
ಸ್ತೋಮವಂಜಿತು ಪರ್ವತಾಗ್ರದ
ಲಾ ಮಹೀಪತಿಯರಸಿ ನಡುಗಿದಳಹಹ ಶಿವಯೆನುತ
ಭೀಮ ಬಿದ್ದನು ತೊಡೆಯ ಮೇಲಿಂ
ದೀ ಮಹಿಗೆ ತಚ್ಚೈಲ ಶಿಲೆ ನಿ
ರ್ನಾಮವಾದುದು ಹಸುಳೆ ಹೊರಳಿದು ಬಿದ್ದ ಭಾರದಲಿ ॥57॥
೦೫೮ ಶಿಶುವ ತೂಪಿರಿದಳು ...{Loading}...
ಶಿಶುವ ತೂಪಿರಿದಳು ನಿವಾಳಿಸಿ
ಬಿಸುಟು ರಜವನು ಮಂತ್ರ ರಕ್ಷಾ
ಪ್ರಸರವನು ಮುನಿಗಳಲಿ ಮಾಡಿಸಿದಳು ಕುಮಾರಂಗೆ
ವಸುಧೆಗತಿ ಬಲನೊಬ್ಬ ಕಂದನ
ಬೆಸಲಹೆನುಯೆಂದೆನುತ ಸಾರಸ
ಲಸಿತ ಕಮಲಾಕರದ ತೀರಕೆ ಬಂದಳಾ ಕುಂತಿ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿದ್ದ ಮಗುವಿಗೆ ಧೂಳನ್ನೆತ್ತಿ ನಿವಾಳಿಸಿ ಬಿಸುಡಿ ದೃಷ್ಟಿ ದೋಷವನ್ನು ತೆಗೆದಳು. ಕುಮಾರನಿಗೆ ಮುನಿಗಳ ಮಂತ್ರಗಳಿಂದ ರಕ್ಷೆ ಹಾಕಿಸಿದಳು. ಭೂಮಿಗೆ ಅತಿ ಬಲನಾದ ಮಗನನ್ನು ಹೆರುವೆನೆಂದು ಸಾರಸ ಪಕ್ಷಿಗಳಿಂದ ಮನೋಹರವಾದ ಸರೋವರದ ತೀರಕ್ಕೆ ಕುಂತಿ ಬಂದಳು.
ಪದಾರ್ಥ (ಕ.ಗ.ಪ)
ತೂಪಿರಿ-ದೃಷ್ಟಿ ದೋಷ ತೆಗೆ,
ನಿವಾಳಿಸಿ-ದೃಷ್ಟಿ ತೆಗೆ,
ಸಾರಸಲಸಿತ-ಸಾರಸಪಕ್ಷಿಗಳಿಂದ ಮನೋಹರವಾದ,
ಕಮಲಾಕರ-ಸರೋವರ
ಟಿಪ್ಪನೀ (ಕ.ಗ.ಪ)
ವಿಕರ್ಣ - ರಾವಣನ ಕಡೆಯಲ್ಲಿ ವಿಭೀಷಣನಂತೆ ಕೌರವರ ಕಡೆಯಲ್ಲಿ ಇದ್ದುಕೊಂಡು ಅಪಸ್ವರ ಎತ್ತಿದ ವೀರ ವಿಕರ್ಣ. ಇವನು ಧೃತರಾಷ್ಟ್ರನ ನೂರು ಮಕ್ಕಳಲ್ಲಿ ಒಬ್ಬ ಇಪ್ಪತ್ತನಾಲ್ಕನೆಯವನು. ದ್ರೋಣರು ಶತ್ರುವಾದ ದ್ರುಪದ ಮೇಲೆ ಸೇಡು ತೀರಿಸಿಕೊಳ್ಳಲು ಅವನ ರಾಜ್ಯಕ್ಕೆ ಮುತ್ತಿಗೆ ಹಾಕಿದಾಗ ವಿಕರ್ಣ ದ್ರೋನರ ಜೊತೆಗೇ ಇದ್ದು ಹೋರಾಡಿದ. ನ್ಯಾಯಕ್ಕಾಗಿ ಕೊರಳೆತ್ತುವ ನಿಷ್ಠರವಾದಿ ಎಂದು ಪ್ರಸಿದ್ಧನಾಗಿದ್ದವನು. ಸಭಾಪರ್ವದಲ್ಲಿ ದುರ್ಯೋಧನನು ಕಪಟ ದ್ಯೂತದಲ್ಲಿ ಪಾಂಡವರನ್ನು ಗೆದ್ದು ದ್ರೌಪದಿಯನ್ನು ಸಭೆಗೆ ಕರೆಸಿ ಅವಮಾನ ಮಾಡಲು ಪ್ರಯತ್ನಿಸಿದಾಗ ಹಿರಿಯರಾದ ಭೀಷ್ಮ, ಕೃಪ, ದ್ರೋಣಾದಿಗಳು ಸುಮ್ಮನಿದ್ದರೂ ವಿಕರ್ಣ ಎದ್ದು ನಿಂತು ಪ್ರತಿಭಟಿಸುವ ಧೈರ್ಯ ತೋರಿದ. ದ್ರೌಪದಿಯನ್ನು ಪಣವಾಗಿ ಒಡ್ಡುವುದಕ್ಕೆ ಧರ್ಮರಾಯನಿಗೆ ಹಕ್ಕಿರಲಿಲ್ಲ. ಏಕೆಂದರೆ ಅವನು ಮೊದಲು ತನ್ನನ್ನೇ ಒಡ್ಡಿಕೊಂಡು ಸೋತುಹೋಗಿದ್ದ. ತನ್ನನ್ನೇ ಒಡ್ಡಿ ಸೋತುಕೊಂಡವನು ಪತ್ನಿಯನ್ನು ಪಣವಾಗಿ ಒಡ್ಡಲು ಅವಕಾಶವಿಲ್ಲ ಎಂದು ಧೈರ್ಯವಾಗಿ ವಾದಿಸಿ ಕೌರವನಿಗೇ ತಮ್ಮನ ಮೇಲೆ ಬೇಸರಬಂದರೂ ಲೆಕ್ಕಿಸದೆ ನ್ಯಾಯಕ್ಕಾಗಿ ಹೋರಾಡಿದ ಕೀರ್ತಿ ಈತನಿಗೆ ಸಲ್ಲುತ್ತದೆ. ಕೌರವನ ಸ್ವಭಾವ ತಿಳಿದಿದ್ದೂ ಹೀಗೆ ರಾಜಸಭೆಯಲ್ಲಿ ವಾದಿಸಬೇಕಾದರೆ ಎಂಟೆದೆ ಇರಬೇಕು. ಅಲ್ಲದೆ ದ್ರೌಪದಿಯನ್ನು ಪಣವಾಗಿ ಒಡ್ಡಿದ್ದು ಯುಕ್ತವಲ್ಲ. ಅದು ಸಿಂಧುವಾಗುವುದಿಲ್ಲ. ಆದುದರಿಂದ ದ್ರೌಪದಿಯನ್ನು ಕರೆತಂದದ್ದು ತಪ್ಪು ಎಂದು ಪ್ರಬಲವಾಗಿ ವಾದಿಸಿದ.
ಇದು ಕೇವಲ ತಾತ್ವಿಕ ಸಂಘರ್ಷವಾಗಿತ್ತೇ ಹೊರತು ವಿಕರ್ಣ ಕೊನೆಯ ತನಕ ಅಣ್ಣನಾದ ಕೌರವನ ಪಕ್ಕದಲ್ಲೇ ಉಳಿದು ಯುದ್ಧ ಮಾಡಿದ. ವೀರವಿಕರ್ಣ ಆ ಕಾಲದ ಹನ್ನೊಂದು ಜನ ಮಹಾರಥರಲ್ಲಿ ಒಬ್ಬನಾಗಿದ್ದ. ಶ್ರತಸೋಮ, ಸಹದೇವ, ಅರ್ಜುನ, ಅಭಿಮನ್ಯು ಘಟೋತ್ಕಚ, ನಕುಲ, ಶಿಖಂಡಿ ಮೊದಲಾದವರೊಂದಿಗೆ ಹೋರಾಡಿದ. ಕೊನೆಗೆ ಭೀಷ್ಮಪರ್ವದ ಐವತ್ತೊಂದನೆಯ ಸಂಧಿಯಲ್ಲಿ ಈತನು ಭೀಮನೊಂದಿಗೆ ಹೋರಾಡಿ ಸತ್ತ ಕಥೆ ವರ್ಣಿತವಾಗಿದೆ. ಸಭಾಪರ್ವದಲ್ಲಿ ದ್ರೌಪದಿಯ ಪಕ್ಷವನ್ನು ಹಿಡಿದು ವಿಕರ್ಣನ ಸಭೆಯಲ್ಲಿ ಎಲ್ಲ ಹಿರಿಯರನ್ನು ಆಕ್ಷೇಪಿಸಿ ಮಾಡಿದ ಉಪನ್ಯಾಸವು ತುಂಬ ಮಹತ್ವದ್ದಾಗಿದ್ದು ವಿಕರ್ಣನಿಗೆ ಕೀರ್ತಿಯನ್ನು ತಂದುಕೊಟ್ಟಿದೆ. ಅಲ್ಲಿ ಕರ್ಣನು ವಿಕರ್ಣನಿಗೆ ಛೀಮಾರಿ ಹಾಕಿದ್ದು ನಿಜವಾದರೂ ವಿಕರ್ಣನ ತರ್ಕವು ಸಿಂಧುವಾಗಿದ್ದು ಎಲ್ಲ ವಿಚಾರಶೀಲರಿಗೆ ಆದರ್ಶಪ್ರಾಯವಾಗಿದೆ. ಅಭಿಪ್ರಾಯ ಮಂಡನೆಯ ಸಂದರ್ಭದಲ್ಲಿ ಪಕ್ಷನಿಷ್ಠೆಗಿಂತ ಸತ್ಯನಿಷ್ಠೆ ಮುಖ್ಯ ಎಂಬುದನ್ನು ವಿಕರ್ಣನು ಸಮರ್ಥವಾಗಿ ತೋರಿಸಿಕೊಟ್ಟಿದ್ದಾನೆ.
ಮೂಲ ...{Loading}...
ಶಿಶುವ ತೂಪಿರಿದಳು ನಿವಾಳಿಸಿ
ಬಿಸುಟು ರಜವನು ಮಂತ್ರ ರಕ್ಷಾ
ಪ್ರಸರವನು ಮುನಿಗಳಲಿ ಮಾಡಿಸಿದಳು ಕುಮಾರಂಗೆ
ವಸುಧೆಗತಿ ಬಲನೊಬ್ಬ ಕಂದನ
ಬೆಸಲಹೆನುಯೆಂದೆನುತ ಸಾರಸ
ಲಸಿತ ಕಮಲಾಕರದ ತೀರಕೆ ಬಂದಳಾ ಕುಂತಿ ॥58॥
೦೫೯ ಮಿನ್ದು ಕಡು ...{Loading}...
ಮಿಂದು ಕಡು ಶುಚಿಯಾಗಿ ಸುಮನೋ
ವೃಂದದೊಳಗಾರೈದು ನೋಡಿ ಪು
ರಂದರನ ನೆನೆದಳು ಮುನೀಂದ್ರನ ಮಂತ್ರ ಶಕ್ತಿಯಲಿ
ಬಂದನಲ್ಲಿಗೆ ಬಯಕೆಯೇನರ
ವಿಂದಲೋಚನೆ ಹೇಳೆನಲು ಪೂ
ರ್ಣೇಂದುಮುಖಿ ತಲೆವಾಗಿದಳು ಲಜ್ಜಾನುಭಾವದಲಿ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುಂತಿಯು ಮಿಂದು ಹೆಚ್ಚು ಶುಚಿಯಾಗಿ ದೇವತೆಗಳ ಸಮೂಹವನ್ನೆಲ್ಲ ಮನಸ್ಸಿನಲ್ಲಿ ವಿಚಾರಿಸಿ ನೋಡಿ ಮುನೀಂದ್ರನ ಮಂತ್ರ ಶಕ್ತಿಯಿಂದ ಇಂದ್ರನನ್ನು ಸ್ಮರಿಸಿದಳು. ಇಂದ್ರನು ಅಲ್ಲಿಗೆ ಬಂದನು. “ಅರವಿಂದ ಲೋಚನೆ, ನಿನ್ನ ಬಯಕೆ ಏನು ? ಹೇಳು” ಎಂದು ಇಂದ್ರನು ಕೇಳಲು, ಪೂರ್ಣಚಂದ್ರಮುಖಿ ಕುಂತಿಯು ನಾಚಿಕೆಯ ಭಾವದಿಂದ ತಲೆತಗ್ಗಿಸಿದಳು.
ಪದಾರ್ಥ (ಕ.ಗ.ಪ)
ಕಡು-ಹೆಚ್ಚು,
ಪುರಂದರ-ಇಂದ್ರ,
ಲಜ್ಜೆ-ನಾಚಿಕೆ, ಅನುಭಾವ-ಭಾವನೆಯನ್ನು ವ್ಯಕ್ತಪಡಿಸುವ ಭಾವ
ಮೂಲ ...{Loading}...
ಮಿಂದು ಕಡು ಶುಚಿಯಾಗಿ ಸುಮನೋ
ವೃಂದದೊಳಗಾರೈದು ನೋಡಿ ಪು
ರಂದರನ ನೆನೆದಳು ಮುನೀಂದ್ರನ ಮಂತ್ರ ಶಕ್ತಿಯಲಿ
ಬಂದನಲ್ಲಿಗೆ ಬಯಕೆಯೇನರ
ವಿಂದಲೋಚನೆ ಹೇಳೆನಲು ಪೂ
ರ್ಣೇಂದುಮುಖಿ ತಲೆವಾಗಿದಳು ಲಜ್ಜಾನುಭಾವದಲಿ ॥59॥
೦೬೦ ಸುತನನಿತ್ತೆನು ನಿನಗೆ ...{Loading}...
ಸುತನನಿತ್ತೆನು ನಿನಗೆ ಲೋಕ
ತ್ರಿತಯದಲಿ ಬಲುಗೈ ಕಣಾ ಪಶು
ಪತಿಗೆ ಪುರುಷೋತ್ತಮಗೆ ಸರಿಮಿಗಿಲೆಂಬ ಸಂದೇಹ
ಶತಭವಾಂತರ ಪುಣ್ಯತರು ಕಾ
ಮಿತವ ಫಲಿಸಿತು ಹೋಗೆನುತ ಸುರ
ಪತಿ ಲತಾಂಗಿಗೆ ವರವನಿತ್ತಡರಿದನು ಗಗನವನು ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಿನಗೆ ಮಗನನ್ನು ಕೊಟ್ಟೆನು. ಮೂರು ಲೋಕದಲ್ಲೂ ಪರಾಕ್ರಮಿ, ಶಿವ, ವಿಷ್ಣುಗಳಿಗೆ ಸಮವೋ, ಅಧಿಕವೋ ಎಂಬ ಸಂಶಯ. ನೂರು ಜನ್ಮಾಂತರದ ಪುಣ್ಯವೆಂಬ ಮರ ನಿನ್ನ ಇಷ್ಟಾರ್ಥವನ್ನು ನೀಡಿತು. ಹೋಗು, “ಎನ್ನುತ್ತ ದೇವೇಂದ್ರ ಕುಂತಿಗೆ ವರವನ್ನು ಕೊಟ್ಟು ಆಕಾಶದಲ್ಲಿ ಸೇರಿದನು.
ಪದಾರ್ಥ (ಕ.ಗ.ಪ)
ಲೋಕತ್ರಿತಯ-ಮೂರು ಲೋಕಗಳು, ಸ್ವರ್ಗ, ಮತ್ರ್ಯ ಪಾತಾಳ, ಬಲುಗೈ-ಪರಾಕ್ರಮಿ, ಭವಾಂತರ-ಜನ್ಮಾಂತರ, ಅಡರು-ಮೇಲಕ್ಕೆ ಏರು, ಕಾಮಿತ-ಇಷ್ಟಾರ್ಥ.
ಮೂಲ ...{Loading}...
ಸುತನನಿತ್ತೆನು ನಿನಗೆ ಲೋಕ
ತ್ರಿತಯದಲಿ ಬಲುಗೈ ಕಣಾ ಪಶು
ಪತಿಗೆ ಪುರುಷೋತ್ತಮಗೆ ಸರಿಮಿಗಿಲೆಂಬ ಸಂದೇಹ
ಶತಭವಾಂತರ ಪುಣ್ಯತರು ಕಾ
ಮಿತವ ಫಲಿಸಿತು ಹೋಗೆನುತ ಸುರ
ಪತಿ ಲತಾಂಗಿಗೆ ವರವನಿತ್ತಡರಿದನು ಗಗನವನು ॥60॥
೦೬೧ ತೀವಿದವು ನವಮಾಸ ...{Loading}...
ತೀವಿದವು ನವಮಾಸ ವಿಮಲ ವಿ
ಭಾವಸುವಿನುದಯದಲಿ ಶುಭ ಲ
ಗ್ನಾವಲಂಬನ ತಾರೆಯುತ್ತರೆ ಫಲುಗುಣಾಹ್ವಯದ
ಜೀವ ಕೇಂದ್ರ ಸ್ಥಿತಿ ದಶಾ ದಿ
ಗ್ಭಾವಿತ ಗ್ರಹರಾಶಿಯಿರೆ ಗಾಂ
ಡೀವಿ ಜನಿಸಿದನೊಡನೆ ಜನಿಸಿತು ಜನದ ಸುಮ್ಮಾನ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುಂತಿಯು ಗರ್ಭಿಣಿಯಾಗಿ ಒಂಬತ್ತು ತಿಂಗಳು ತುಂಬಿದುವು. ಸೂರ್ಯೋದಯದ ಸಮಯದಲ್ಲಿ ಉತ್ತರಾಫಲ್ಗುನೀ ನಕ್ಷತ್ರದಿಂದ ಕೂಡಿದ ಶುಭಲಗ್ನದಲ್ಲಿ ಗ್ರಹರಾಶಿಗಳು ಅವುಗಳ ಕೇಂದ್ರ ಸ್ಥಾನದಲ್ಲಿರುವಾಗ ಗಾಂಡೀವಿ ಜನಿಸಿದನು. ಕೂಡಲೇ ಜನರಲ್ಲಿ ಸಂತೋಷ ಉಂಟಾಯಿತು.
ಪದಾರ್ಥ (ಕ.ಗ.ಪ)
ತೀವು-ತುಂಬು,
ವಿಭಾವಸು-ಸೂರ್ಯ,
ಸುಮ್ಮಾನ-ಸಂತೋಷ
ಟಿಪ್ಪನೀ (ಕ.ಗ.ಪ)
ಅರ್ಜುನ, ಫಾಲ್ಗುಣ ಮಾಸದಲ್ಲಿ ಪೂರ್ವಫಲ್ಗುನೀ ನಕ್ಷತ್ರವು ಮುಗಿಯಲಿದ್ದಾಗ ಉತ್ತರ ಫಲ್ಗುನೀ ನಕ್ಷತ್ರವು ಪ್ರಾರಂಭದಲ್ಲಿದ್ದಾಗ (ಸಂಧಿಸಮಯದಲ್ಲಿ )ಜನಿಸಿದನು.
ಗಾಂಡೀವಿ-ಗಾಂಡೀವ ಒಂದು ದಿವ್ಯ ಧನುಸ್ಸು. ಮೊತ್ತ ಮೊದಲು ಅದು ಬ್ರಹ್ಮನಲ್ಲಿತ್ತು. ಅವನಿಂದ ಬಳಿಕ ಇಂದ್ರನಿಗೂ ತರುತಾಯ ವರುಣನಿಗೂ ಬಂದು ಸೇರಿತು. ಆಮೇಲೆ ಅಗ್ನಿ ಅದನ್ನು ವರುಣನಿಂದ ಪಡೆದುಕೊಂಡ. ಖಾಂಡವವನದಾಹ ಸಮಯದಲ್ಲಿ ಅರ್ಜುನನು ತನಗೆ ಮಾಡಿದ ಉಪಕಾರಕ್ಕೆ ಇದನ್ನು ಅಗ್ನಿಯು ಆತನಿಗೆ ಕೊಟ್ಟ. ಇದರ ಮಹಿಮೆಯಿಂದ ಎಲ್ಲ ದಿಕ್ಕುಗಳನ್ನು ಗೆದ್ದು ಇಂದ್ರನನ್ನು ಸೋಲಿಸಿದ. ಈ ಕಾರಣದಿಂದಲೇ ಅರ್ಜುನನಿಗೆ ಗಾಂಡೀವಿ ಎಂದೂ ಹೆಸರು.
ಮೂಲ ...{Loading}...
ತೀವಿದವು ನವಮಾಸ ವಿಮಲ ವಿ
ಭಾವಸುವಿನುದಯದಲಿ ಶುಭ ಲ
ಗ್ನಾವಲಂಬನ ತಾರೆಯುತ್ತರೆ ಫಲುಗುಣಾಹ್ವಯದ
ಜೀವ ಕೇಂದ್ರ ಸ್ಥಿತಿ ದಶಾ ದಿ
ಗ್ಭಾವಿತ ಗ್ರಹರಾಶಿಯಿರೆ ಗಾಂ
ಡೀವಿ ಜನಿಸಿದನೊಡನೆ ಜನಿಸಿತು ಜನದ ಸುಮ್ಮಾನ ॥61॥
೦೬೨ ದೇವ ದುನ್ದುಭಿ ...{Loading}...
ದೇವ ದುಂದುಭಿ ಮೊಳಗಿದುವು ಕುಸು
ಮಾವಳಿಯ ಮಳೆ ಸುರಿದುದಾಡುವ
ದೇವವಧುಗಳ ಹೊಳೆವ ಕಂಗಳ ಢಾಳ ಮಿಂಚಿದವು
ತೀವಿದುತ್ಸಹವುಬ್ಬರಿಸೆ ಭುವ
ನಾವಳಿಯೊಳಿಂದ್ರಾದಿ ನಿಖಿಳ ಸು
ರಾವಳಿಗಳುರೆ ಕೂಡೆ ಕೊಂಡಾಡಿತು ಧನಂಜಯನ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಜನಿಸಿದಾಗ, ದೇವಲೋಕದ ಭೇರಿಗಳು ಮೊಳಗಿದುವು. ಪುಷ್ಪಗಳ ಮಳೆ ಸುರಿದುವು. ನರ್ತಿಸುವ ಅಪ್ಸರಸ್ತ್ರೀಗಳ ಹೊಳೆಯುವ ಕಣ್ಣುಗಳ ಕಾಂತಿ ಮಿಂಚಿದುವು. ಲೋಕಗಳಲ್ಲಿ ಅತಿಶಯವಾಗಿ ಉತ್ಸವಗಳುಂಟಾಗಲು, ದೇವತೆಗಳ ಸಮೂಹ ಒಟ್ಟಾಗಿ ಧನಂಜಯನನ್ನು ಅತಿಶಯವಾಗಿ ಹೊಗಳಿತು.
ಪದಾರ್ಥ (ಕ.ಗ.ಪ)
ಢಾಳ-ಕಾಂತಿ, ಲಾವಣ್ಯ,
ಭುವನಾವಳಿಗಳು-ಲೋಕಗಳ ಸಮೂಹ,
ಉರೆ-ಅತಿಶಯವಾಗಿ,
ಕೂಡೆ-ಒಟ್ಟಾಗಿ
ಟಿಪ್ಪನೀ (ಕ.ಗ.ಪ)
ಧನಂಜಯ-ಯುಧಿಷ್ಠಿರನ ರಾಜಸೂಯ ಸಮಯದಲ್ಲಿ ವಿಪುಳ ಧನರಾಶಿಯನ್ನು ಅರ್ಜುನ ಸಂಪಾದಿಸಿ ತಂದನಾಗಿ ಈ ಹೆಸರು ಅರ್ಜುನನಿಗೆ ಸಲ್ಲುತ್ತದೆ.
ಮೂಲ ...{Loading}...
ದೇವ ದುಂದುಭಿ ಮೊಳಗಿದುವು ಕುಸು
ಮಾವಳಿಯ ಮಳೆ ಸುರಿದುದಾಡುವ
ದೇವವಧುಗಳ ಹೊಳೆವ ಕಂಗಳ ಢಾಳ ಮಿಂಚಿದವು
ತೀವಿದುತ್ಸಹವುಬ್ಬರಿಸೆ ಭುವ
ನಾವಳಿಯೊಳಿಂದ್ರಾದಿ ನಿಖಿಳ ಸು
ರಾವಳಿಗಳುರೆ ಕೂಡೆ ಕೊಂಡಾಡಿತು ಧನಂಜಯನ ॥62॥
೦೬೩ ರಣಭಯಙ್ಕರನರ್ಜುನನು ಧಾ ...{Loading}...
ರಣಭಯಂಕರನರ್ಜುನನು ಧಾ
ರುಣಿಯೊಳುದಿಸದ ಮುನ್ನ ತಿಂಗಳ
ನೆಣಿಸಿದರೆ ಆರಾಯ್ತು ಮಧುರೆಯ ರಾಜಭವನದಲಿ
ಗುಣರಹಿತನಚ್ಯುತನು ವರ ಶ್ರಾ
ವಣ ಬಹುಳದಷ್ಟಮಿಯಿರುಳು ರೋ
ಹಿಣಿಯಲವತರಿಸಿದನಲೈ ದೇವಕಿಯ ಜಠರದಲಿ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದಲ್ಲಿ ಭಯವನ್ನು ಹುಟ್ಟಿಸುವ ಅರ್ಜುನನು ಭೂಮಿಯಲ್ಲಿ ಹುಟ್ಟುವುದಕ್ಕೆ ಆರು ತಿಂಗಳುಗಳ ಮುಂಚೆ ಮಧುರೆಯ ರಾಜಭವನದಲ್ಲಿ ಶ್ರಾವಣ ಬಹುಳ ಪಕ್ಷದ ಅಷ್ಟಮಿಯ ರಾತ್ರಿಯಲ್ಲಿ ರೋಹಿಣೀ ನಕ್ಷತ್ರದಲ್ಲಿ ಗುಣರಹಿತನಾದ ಅಚ್ಯುತನು ದೇವಕಿಯ ಗರ್ಭದಿಂದ ಅವತರಿಸಿದನು.
ಪದಾರ್ಥ (ಕ.ಗ.ಪ)
ರಣಭಯಂಕರ-ಯುದ್ಧದಲ್ಲಿ ಭಯ ಹುಟ್ಟಿಸುವವನು,
ಅಚ್ಯುತ-ನಾಶವಿಲ್ಲದವ, ವಿಷ್ಣು
ಪಾಠಾನ್ತರ (ಕ.ಗ.ಪ)
ಮೂರಾಯ್ತು - ಆರಾಯ್ತು
ಕೃಷ್ಣನು ಹುಟ್ಟಿದ ಆರು ತಿಂಗಳಿನ ನಂತರ ಅಜುನ ಜನಿಸಿದ ಎಂದಾಗ ಈ ಪದ್ಯದಲ್ಲಿರುವ ಎಲ್ಲ ಸಂಗತಿಗಳೂ ತಾಳೆಯಾಗುತ್ತವೆ.
ಅಲ್ಲದೆ ದ ಪ್ರತಿಯಲ್ಲಿ ಈ ಪಾಠವಿದೆ ಎಂದು ಕೆ ಆರ್ ಶೇಷಗಿರಿಯವರು ಮೈ.ವಿ.ವಿ. ಆದಿಪರ್ವದಲ್ಲಿ ಉಲ್ಲೇಖಿಸಿದ್ದಾರೆ.
ಟಿಪ್ಪನೀ (ಕ.ಗ.ಪ)
ವಸುದೇವ - ನಾವಿಲ್ಲಿ ಮುಖ್ಯವಾಗಿ ವ್ಯಾಸಭಾರತದ ವಸುದೇವನ ವಿಷಯವನ್ನೇ ಹೇಳುತ್ತಿದ್ದೇವಾದರೂ ಈತನ ಕಥೆ ವಿಷ್ಣು ಪುರಾಣ ಭಾಗವತ ಪುರಾಣ ಹರಿವಂಶ ದೇವೀ ಭಾಗವತ ಪದ್ಮಪುರಾಣಗಳಲ್ಲೆಲ್ಲ ಹರಡಿಕೊಂಡಿದೆಯೆಂಬುದನ್ನು ಮರೆಯುವಂತಿಲ್ಲ.
ವಸುದೇವ-ದೇವಕಿಯರು ಶ್ರೀಕೃಷ್ಣನ ತಂದೆತಾಯಿಗಳು. ಇಂಥ ದೇವಪಿತೃವಾಗುತ್ತಾನೆಂಬ ಕಾರಣಕ್ಕೇ ವಸುದೇವನ ಜನನ ಕಾಲದಲ್ಲ್ಲಿ ದೇವತೆಗಳು ಅನಕ, ದುಂಧುಬಿ, ನಗಾರಿ, ಭೇರಿ ಮೊದಲಾದ ವಾದ್ಯಗಳನ್ನು ಮೊಳಗಿಸಿದುದರ ಕುರುಹಾಗಿ ಇವನಿಗೆ ಅನಕದುಂಧುಬಿ ಎಂಬ ಹೆಸರೂ ಇದೆ.
ದೇವಗರ್ಭ ಎಂಬುವನ ಮಗನಾದ ಶೂರ ಮತ್ತು ಅವನ ಪತ್ನಿ ಮಾರಿಷ ಇವರೇ ವಸುದೇವನ ತಂದೆತಾಯಿಗಳು. ಕಂಸನ ತಂಗಿ ದೇವಕಿಯನ್ನು ಮದುವೆಯಾಗಿದ್ದ ಮಂತ್ರಿ ವಸುದೇವನು ದೇವಕಿಯೊಂದಿಗೆ ಸೆರೆಮನೆಯಲ್ಲಿ ಇರಬೇಕಾಗಿ ಬಂದ ಸಂಗತಿ ಲೋಕವಿದಿತವಾಗಿದೆ. ಈ ದೇವಕಿ ಕಂಸನ ತಂಗಿಯಲ್ಲವೆಂದೂ ಉಗ್ರಸೇನನ ತಮ್ಮನಾದ ದೇವಕನ ಮಗಳೆಂದೂ ಕೆಲವು ಪಾಠಗಳು ಹೇಳುತ್ತವೆ. ವಸುದೇವನ ಪತ್ನಿ ದೇವಕಿಗೆ ಮಾಯಾ ಅಮಾವಸೀ ಎಂಬ ಹೆಸರುಗಳೂ ಇವೆ. ದೇವಕಿಯೇ ಅಲ್ಲದೆ ವಸುದೇವನಿಗೆ ರೋಹಿಣಿ (ಬಲರಾಮನ ತಾಯಿ) ಉಪದೇವಿ, ವೃಕದೇವ, ಸಪ್ತಮೀದೇವಿ ಮೊದಲಾದ ಹನ್ನೆರಡು ಮಂದಿ ಪತ್ನಿಯರಿದ್ದಂತೆ ತಿಳಿದು ಬರುತ್ತದೆ. ವಿವಿಧ ಪುರಾಣಗಳಲ್ಲಿ ಬೇರೆ ಕೆಲವು ಹೆಸರುಗಳೇ ಅಲ್ಲದೆ ಶ್ರುತಂಧರಾ, ಶ್ರದ್ಧಾದೇವಿ, ಜನಾದೇವಿ ಮೊದಲಾದ ಉಪಪತ್ನಿಯರ ಪ್ರಸ್ತಾವವೂ ಇದೆ. ಅಗಾವಹ, ಮಂದಗ, ಕೃಷ್ಣ, ಬಲರಾಮ, ಸುಭದ್ರೆ, ವಿಜಯ, ರೋಚಮಾನ ಮೊದಲಾದ ಮಕ್ಕಳ ವಿಷಯವೂ ವರ್ಣಿತವಾಗಿದೆ. ಶತಶೃಂಗ ಪರ್ವತ ಪ್ರಾಂತ್ಯದಲ್ಲಿ ಪಾಂಡವರು ಹುಟ್ಟಿದಾಗ ಚೂಡಾಕರ್ಮ ವಿಧಿಯ ಸಂದರ್ಭದಲ್ಲಿ ವಸುದೇವನು ಕಶ್ಯಪನೆಂಬ ಪುರೋಹಿತನನ್ನು ಕಳಿಸಿದ್ದನೆಂದು ವ್ಯಾಸಭಾರತದ ದಾಕ್ಷಿಣಾತ್ಯ ಪಾಠಗಳು ಹೇಳುತ್ತವೆ. ಅಶ್ವಮೇಧ ಪರ್ವದಲ್ಲಿ ಶ್ರೀಕೃಷ್ಣನೇ ವಸುದೇವನಿಗೆ ಮಹಾಭಾರತ ಯುದ್ಧದ ವಿವರಗಳನ್ನು ತಿಳಿಸಿದ ಸಂಗತಿಯಿದೆ. ಕೊನೆಯಲ್ಲಿ ಶ್ರೀಕೃಷ್ಣ-ಬಲರಾಮರು ಇವನ ಪಾದಗಳಿಗೆ ಮಣಿದು ತಪಸ್ಸಿಗೆ ಹೊರಟರೆಂಬ ಸಂಗತಿ ಮೌಸಲ ಪರ್ವತದಲ್ಲಿದೆ. ವೃಷ್ಣಿ ಯಾಆದವ, ಅಂದಕ, ಭೋಜ ಎಂಬ ಯಾದವ ಗಣಗಳೆಲ್ಲ ಪರಸ್ಪರ ಹೋರಾಡಿ ಸತ್ತ ವಿಷಯ ಹಾಗೂ ದ್ವಾರಕೆ ಮುಳುಗಿದ ವಿಷಯ ತಿಳಿದು ವಸುದೇವನು ತಪಸ್ಸು ಮಾಡಿ ಅವಸಾನ ಹೊಂದಿದ ವಿಷಯ ಹಾಗೂ ಅರ್ಜುನನು ಬಂದು ಅಗ್ನಿಸಂಸ್ಕಾರ ಮಾಡಿ, ವಸುದೇವನ ನಾಲ್ವರು ಪತ್ನಿಯರ ಸಹಗಮನಕ್ಕೆ ಏರ್ಪಾಡು ಮಾಡಿದ ಸಂಗತಿಯೂ ಮೌಸಲ ಪರ್ವದಲ್ಲಿ ಬರುತ್ತದೆ.
ಇತರರಿಗಿರಲಿ, ಶ್ರೀಕೃಷ್ಣನಿಗೆ ಕೂಡ ವಸುದೇವನ ಮೇಲೆ ತುಂಬ ಗೌರವ ಭಾವವಿತ್ತು ಎಂಬುದು ಸಾಲ್ವವಧಾ ಪ್ರಕರಣದಲ್ಲಿ ಸ್ಪಷ್ಟವಾಗುತ್ತದೆ. ಶ್ರೀಕೃಷ್ಣನು ಸಾಲ್ವನ ಮೇಲೆ ಯುದ್ಧಕ್ಕೆ ಹೋದನಷ್ಟೆ. ಮಾಯಾ ಸಮರ ನಿಪುಣನಾದ ಸಾಲ್ವನು ವಿಮಾನದಲ್ಲಿ ಕೃಷ್ಣನಿಗೆ ಕಾಣುವಂತೆಯೇ ವಸುದೇವನ ಮಾಯಾಶಿರವನ್ನು ರುಂಡಾಡಿದ. ಆ ಬಗೆಗೆ ಕೃಷ್ಣ ಏನು ಹೇಳುತ್ತಾನೆ ಗೊತ್ತೆ: ‘‘ತತಃ ಶಾರ್ಙಧನು ಶ್ರೇಷ್ಟಂ ಕರಾತ್ ಪ್ರಪತಿತಂ ಮಮ ಮೋಹೋಪಪನ್ನಶ್ಚ ರತೋಥಸ್ಥ ಉಪವಿಶಂ’’ (ಅರಣ್ಯ ಪರ್ವ 21).
(ಅಪ್ಪನ ತಲೆ ಉರುಳುವ ದೃಶ್ಯ ನೋಡ ನನ್ನ ಧನಸ್ಸು ಕೆಳಗೆ ಬಿತ್ತು. ನಾನು ಮೋಹಕ್ಕೆ ಸಿಕ್ಕವನಂತೆ ಅಲ್ಲಿಯೇ ಉರುಳಿ ಬಿದ್ದ).
ಅಚ್ಯುತ - ಪರಮಾತ್ಮನ ದಶಾವತಾರಗಳಲ್ಲಿ ಎಚಿಟನೆಯದು ಶ್ರೀಕೃಷ್ಣಾವತಾರ. ಚಂದ್ರವಂಶದ ಯದುಕುಲದಲ್ಲಿ ಜನಿಸಿದ ಸಾತ್ವತ ರಾಜನ ಸಂತತಿಯಲ್ಲಿ ಶೂರರಾಜನ ಮಗನಾದ ವಸುದೇವನ ಹೆಂಡತಿಯಾದ ದೇವಕಿಯಲ್ಲಿ ಜನಿಸಿದ ಎಂಟು ಮಕ್ಕಳಲ್ಲಿ ಕಡೆಯವ. ವೈಕುಂಠದ ದ್ವಾರಪಾಲಕರು ಜಯವಿಜಯರು ಸನಕಾದಿ ಮುನಿಗಳಿಂದ ಶಾಪವನ್ನು ಹೊಂದಿ ಭೂಲೋಕದಲ್ಲಿ ಮೂರನೆಯ ಬಾರಿ ಶಿಶುಪಾಲ, ದಂತವಕ್ತ್ರರೆಂಬ ಹೆಸರಿನಿಂದ ಜನಿಸಿರಲಾಗಿ ಅವರನ್ನು ಸಚಿಹರಿಸುವ ಸಲುವಾಗಿ ನಾರಾಯಣನು ತನ್ನ ಪೂರ್ಣಾಂಶದಿಂದ ಭೂಲೋಕದಲ್ಲಿ ಅವತರಿಸಿದ. ನಾಶವಿಲ್ಲದವನಾದ್ದರಿಂದ ‘ಅಚ್ಯುತ’ ಎಂಬುದು ಕೃಷ್ಣನ ಒಂದು ಹೆಸರು.
ಮೂಲ ...{Loading}...
ರಣಭಯಂಕರನರ್ಜುನನು ಧಾ
ರುಣಿಯೊಳುದಿಸದ ಮುನ್ನ ತಿಂಗಳ
ನೆಣಿಸಿದರೆ ಆರಾಯ್ತು ಮಧುರೆಯ ರಾಜಭವನದಲಿ
ಗುಣರಹಿತನಚ್ಯುತನು ವರ ಶ್ರಾ
ವಣ ಬಹುಳದಷ್ಟಮಿಯಿರುಳು ರೋ
ಹಿಣಿಯಲವತರಿಸಿದನಲೈ ದೇವಕಿಯ ಜಠರದಲಿ ॥63॥
೦೬೪ ಈತ ನರ ...{Loading}...
ಈತ ನರ ಋಷಿ ನಿಖಿಳ ಭುವನ
ಖ್ಯಾತ ನಾರಾಯಣನಲೈ ಬಳಿ
ಕಾತನುರ್ವೀಭಾರ ಸಂಹರಣದ ವಿನೋದದಲಿ
ಭೂತಪತಿ ಮೊದಲಾದ ದಿವಿಜ
ವ್ರಾತವೇ ನರರೂಪದಲಿ ಸಂ
ಭೂತವಾದುದು ಕೇಳು ನೃಪ ಕೃಷ್ಣಾವತಾರದಲಿ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನೇ ನರ ಋಷಿ, ಕೃಷ್ಣನೇ ಲೋಕ ಪ್ರಸಿದ್ಧನಾದ ನಾರಾಯಣ. ಭೂಭಾರ ಸಂಹರಣ ವಿನೋದದಲ್ಲಿ ಇವರು ಅವತರಿಸಿದರು. ಕೃಷ್ಣಾವತಾರದಲ್ಲಿ ಶಿವನೇ ಮೊದಲಾದ ದೇವತೆಗಳ ಸಮೂಹವು ಮನುಷ್ಯರೂಪವನ್ನು ಪಡೆದು ಹುಟ್ಟಿದರು.
ಪದಾರ್ಥ (ಕ.ಗ.ಪ)
ಉರ್ವಿ-ಭೂಮಿ,
ಭೂತಪತಿ-ಶಿವ,
ಭುವನಖ್ಯಾತ-ಲೋಕಪ್ರಸಿದ್ಧ,
ಸಂಭೂತ-ಹುಟ್ಟು,
ಸಂಹರಣ-ನಾಶ
ಟಿಪ್ಪನೀ (ಕ.ಗ.ಪ)
ನರನಾರಾಯಣ - ಸ್ವಾಯಂಭುವ ಮನ್ವಂತರದಲ್ಲಿ ಧರ್ಮಮುನಿಯ ಇಬ್ಬರು ಪುತ್ರರು. ಹುಟ್ಟಿದೊಡನೆಯೇ ತಾಯ್ತಂದೆಗಳು ತತ್ವೋಪದೇಶ ಮಾಡಿ ನರನಾರಾಯಣರನ್ನು ತಪಸ್ಸಿಗೆ ಕಳುಹಿಸಿದರು. ಬದರಿಕಾಶ್ರಮದಲ್ಲಿ ಮಾಡಿದ ಇವರ ತಪಸ್ಸು ತ್ರಿಲೋಕ ಕಂಪನಕಾರಿಯಾಗಿತ್ತು. ನರನಾರಾಯಣರಿಬ್ಬರು ಅರ್ಜುನ, ಕೃಷ್ಣರಾಗಿ ದ್ವಾಪರದಲ್ಲಿ ಜನಿಸಿದರು.
ಮೂಲ ...{Loading}...
ಈತ ನರ ಋಷಿ ನಿಖಿಳ ಭುವನ
ಖ್ಯಾತ ನಾರಾಯಣನಲೈ ಬಳಿ
ಕಾತನುರ್ವೀಭಾರ ಸಂಹರಣದ ವಿನೋದದಲಿ
ಭೂತಪತಿ ಮೊದಲಾದ ದಿವಿಜ
ವ್ರಾತವೇ ನರರೂಪದಲಿ ಸಂ
ಭೂತವಾದುದು ಕೇಳು ನೃಪ ಕೃಷ್ಣಾವತಾರದಲಿ ॥64॥
೦೬೫ ಸಾಕು ಮೂವರು ...{Loading}...
ಸಾಕು ಮೂವರು ಸುತರು ತನಗೆಂ
ದೀಕೆ ಮಾದ್ರೀದೇವಿಗಗ್ಗದ
ಶೋಕಿತೆಗೆ ಮಂತ್ರೋಪದೇಶ ವಿಧಾನವನು ಕಲಿಸಿ
ನಾಕ ನಿಲಯರ ವೊಲಿಸೆನಲು ಬಂ
ದಾಕೆ ಕೃತನಿಯಮದಲಿ ನೆನೆದಳು
ಲೋಕವಿಶ್ರುತರಶ್ವಿನೀ ದೇವರನು ಹರ್ಷದಲಿ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುಂತಿಯು, ತನಗೆ ಮೂವರು ಮಕ್ಕಳು ಸಾಕೆಂದು, ಹೆಚ್ಚು ದುಃಖಿತೆಯಾಗಿದ್ದ ಮಾದ್ರೀದೇವಿಗೆ ಮಂತ್ರೋಪದೇಶ ಮಾಡಿ ಸ್ವರ್ಗನಿವಾಸಿಗಳಾದ ದೇವತೆಗಳನ್ನು ಆಹ್ವಾನಿಸುವ ವಿಧಾನವನ್ನು ಕಲಿಸಿ ದೇವತೆಗಳನ್ನು ಒಲಿಸಿಕೊ ಎಂದು ಹೇಳಲು, ಮಾದ್ರಿಯು ವಿಧಿಪ್ರಕಾರವಾಗಿ ಲೋಕಪ್ರಸಿದ್ಧರಾದ ಅಶ್ವಿನೀ ದೇವತೆಗಳನ್ನು ಹರ್ಷದಿಂದ ಸ್ಮರಿಸಿದಳು.
ಪದಾರ್ಥ (ಕ.ಗ.ಪ)
ನಾಕನಿಲಯ-ಸ್ವರ್ಗ ನಿವಾಸಿ,
ವಿಶ್ರುತ-ಪ್ರಸಿದ್ಧ
ಟಿಪ್ಪನೀ (ಕ.ಗ.ಪ)
ಅಶ್ವಿನೀ ದೇವತೆಗಳು - ದೇವ ವೈದ್ಯರು, ಸೂರ್ಯತಪಸ್ವಿಯಾದ ಸಂಜ್ಞಾದೇವಿ ಕುದುರೆಯ ರೂಪದಿಂದ ಇದ್ದಾಗ ಸೂರ್ಯನಿಂದ ಹುಟ್ಟಿದ ಅವಳಿ ಮಕ್ಕಳು.
ಮೂಲ ...{Loading}...
ಸಾಕು ಮೂವರು ಸುತರು ತನಗೆಂ
ದೀಕೆ ಮಾದ್ರೀದೇವಿಗಗ್ಗದ
ಶೋಕಿತೆಗೆ ಮಂತ್ರೋಪದೇಶ ವಿಧಾನವನು ಕಲಿಸಿ
ನಾಕ ನಿಲಯರ ವೊಲಿಸೆನಲು ಬಂ
ದಾಕೆ ಕೃತನಿಯಮದಲಿ ನೆನೆದಳು
ಲೋಕವಿಶ್ರುತರಶ್ವಿನೀ ದೇವರನು ಹರ್ಷದಲಿ ॥65॥
೦೬೬ ಬನ್ದರವರಿಬ್ಬರು ಮಹೀತಳ ...{Loading}...
ಬಂದರವರಿಬ್ಬರು ಮಹೀತಳ
ಕಿಂದುವದನೆಗೆ ಸುತರನಿತ್ತರು
ಮಂದಗಮನೆಯ ಕಳುಹಿ ಹಾಯ್ದರು ಗಗನ ಮಂಡಲಕೆ
ಒಂದು ವರುಷಕೆ ಕಿರಿಯರರ್ಜುನ
ಗಿಂದ ಬಳಿಕವತರಿಸಿದರು ಮುನಿ
ವೃಂದ ನೆರೆ ಪತಿಕರಿಸಿ ಕೊಂಡಾಡಿತು ಕುಮಾರಕರ ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವಿನೀ ದೇವತೆಗಳು ಭೂತಳಕ್ಕೆ ಬಂದರು. ಚಂದ್ರಮುಖಿ ಮಾದ್ರಿಗೆ ಮಕ್ಕಳನ್ನು ಕೊಟ್ಟು ಅವಳನ್ನು ಕಳುಹಿಸಿ ಗಗನ ಮಂಡಲಕ್ಕೆ ಹೊರಟರು. ಅರ್ಜುನಗಿಂತಲೂ ಒಂದು ವರುಷ ಕಿರಿಯರಾಗಿ ಆ ಮಕ್ಕಳು ಅವತರಿಸಿದರು. ಮುನಿ ಸಮೂಹ ಬಹಳವಾಗಿ ಮೆಚ್ಚಿ ಕುಮಾರರನ್ನು ಕೊಂಡಾಡಿತು.
ಪದಾರ್ಥ (ಕ.ಗ.ಪ)
ಪತಿಕರಿಸಿ-ಮೆಚ್ಚಿ,
ನೆರೆ-ಬಹಳ
ಮೂಲ ...{Loading}...
ಬಂದರವರಿಬ್ಬರು ಮಹೀತಳ
ಕಿಂದುವದನೆಗೆ ಸುತರನಿತ್ತರು
ಮಂದಗಮನೆಯ ಕಳುಹಿ ಹಾಯ್ದರು ಗಗನ ಮಂಡಲಕೆ
ಒಂದು ವರುಷಕೆ ಕಿರಿಯರರ್ಜುನ
ಗಿಂದ ಬಳಿಕವತರಿಸಿದರು ಮುನಿ
ವೃಂದ ನೆರೆ ಪತಿಕರಿಸಿ ಕೊಂಡಾಡಿತು ಕುಮಾರಕರ ॥66॥
೦೬೭ ಕರಿತುರಗ ನಿಕರವನು ...{Loading}...
ಕರಿತುರಗ ನಿಕರವನು ಕುಲ ಭೃ
ತ್ಯರ ವಿಲಾಸಿನಿಯರನು ರತ್ನಾ
ಭರಣ ವಸನ ಹಿರಣ್ಯ ಗೋ ಮಹಿಷಾದಿ ವಸ್ತುಗಳ
ತರಿಸಿದನು ಕಶ್ಯಪನು ಯದು ರಾ
ಯರ ಪುರೋಹಿತನಲ್ಲಿಗಾತನ
ಪರುಠವಿಸಿ ಕಳುಹಿದನು ಪಾಂಡುನೃಪಂಗೆ ವಸುದೇವ ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡುವಿಗೆ ಪುತ್ರ ಸಂತಾನವಾದ ವೃತ್ತಾಂತವನ್ನು ಕೇಳಿ ವಸುದೇವನು, ಆನೆ ಕುದುರೆಗಳ ಸಮೂಹವನ್ನು, ಸುಂದರಿಯರಾದ ಕುಲಸೇವಕಿಯರನ್ನು, ಬಟ್ಟೆ, ಚಿನ್ನ , ಗೋವು, ಮಹಿಷ ಮೊದಲಾದ ವಸ್ತುಗಳನ್ನು ತರಿಸಿದನು. ಯದು ವಂಶದ ರಾಜರುಗಳ ಪುರೋಹಿತರಾದ ಕಶ್ಯಪರನ್ನು ಕರೆಸಿ ಆ ವಸ್ತು ಸಮೂಹಗಳೊಡನೆ ಪಾಂಡುರಾಜನ ಬಳಿಗೆ ಕಳುಹಿಸಿದನು.
ಪದಾರ್ಥ (ಕ.ಗ.ಪ)
ವಿಲಾಸಿನಿ-ಸುಂದರಿ,
ಹಿರಣ್ಯ-ಚಿನ್ನ
ಟಿಪ್ಪನೀ (ಕ.ಗ.ಪ)
ವಸುದೇವ - ಯದುವಂಶದ ಶೂರರಾಜನ ಮಗ. ಕುಂತಿಯ ಒಡಹುಟ್ಟಿದವ. ಈತನ ಕಾಲದಲ್ಲಿ ದೇವತೆಗಳು ಆನಕ (ತಮಟೆ) ಗಳನ್ನು ದುಂದುಭಿ (ನಗಾರಿ)ಗಳನ್ನು ಬಾರಿಸಿದ ಕಾರಣ, ಈತನಿಗೆ ಆನಕ ದುಂದುಭಿಯೆಂದೂ ಹೆಸರು.ನಾವಿಲ್ಲಿ ಮುಖ್ಯವಾಗಿ ವ್ಯಾಸಭಾರತದ ವಸುದೇವನ ವಿಷಯವನ್ನೇ ಹೇಳುತ್ತಿದ್ದೇವಾದರೂ ಈತನ ಕಥೆ ವಿಷ್ಣು ಪುರಾಣ ಭಾಗವತ ಪುರಾಣ ಹರಿವಂಶ ದೇವೀ ಭಾಗವತ ಪದ್ಮಪುರಾಣಗಳಲ್ಲೆಲ್ಲ ಹರಡಿಕೊಂಡಿದೆಯೆಂಬುದನ್ನು ಮರೆಯುವಂತಿಲ್ಲ. ವಸುದೇವ-ದೇವಕಿಯರು ಶ್ರೀಕೃಷ್ಣನ ತಂದೆತಾಯಿಗಳು. ಇಂಥ ದೇವಪಿತೃವಾಗುತ್ತಾನೆಂಬ ಕಾರಣಕ್ಕೇ ವಸುದೇವನ ಜನನ ಕಾಲದಲ್ಲ್ಲಿ ದೇವತೆಗಳು ಅನಕ, ದುಂಧುಬಿ, ನಗಾರಿ, ಭೇರಿ ಮೊದಲಾದ ವಾದ್ಯಗಳನ್ನು ಮೊಳಗಿಸಿದುದರ ಕುರುಹಾಗಿ ಇವನಿಗೆ ಅನಕದುಂಧುಬಿ ಎಂಬ ಹೆಸರೂ ಇದೆ.
ದೇವಗರ್ಭ ಎಂಬುವನ ಮಗನಾದ ಶೂರ ಮತ್ತು ಅವನ ಪತ್ನಿ ಮಾರಿಷ ಇವರೇ ವಸುದೇವನ ತಂದೆತಾಯಿಗಳು. ಕಂಸನ ತಂಗಿ ದೇವಕಿಯನ್ನು ಮದುವೆಯಾಗಿದ್ದ ಮಂತ್ರಿ ವಸುದೇವನು ದೇವಕಿಯೊಂದಿಗೆ ಸೆರೆಮನೆಯಲ್ಲಿ ಇರಬೇಕಾಗಿ ಬಂದ ಸಂಗತಿ ಲೋಕವಿದಿತವಾಗಿದೆ. ಈ ದೇವಕಿ ಕಂಸನ ತಂಗಿಯಲ್ಲವೆಂದೂ ಉಗ್ರಸೇನನ ತಮ್ಮನಾದ ದೇವಕನ ಮಗಳೆಂದೂ ಕೆಲವು ಪಾಠಗಳು ಹೇಳುತ್ತವೆ. ವಸುದೇವನ ಪತ್ನಿ ದೇವಕಿಗೆ ಮಾಯಾ ಅಮಾವಸೀ ಎಂಬ ಹೆಸರುಗಳೂ ಇವೆ. ದೇವಕಿಯೇ ಅಲ್ಲದೆ ವಸುದೇವನಿಗೆ ರೋಹಿಣಿ (ಬಲರಾಮನ ತಾಯಿ) ಉಪದೇವಿ, ವೃಕದೇವ, ಸಪ್ತಮೀದೇವಿ ಮೊದಲಾದ ಹನ್ನೆರಡು ಮಂದಿ ಪತ್ನಿಯರಿದ್ದಂತೆ ತಿಳಿದು ಬರುತ್ತದೆ. ವಿವಿಧ ಪುರಾಣಗಳಲ್ಲಿ ಬೇರೆ ಕೆಲವು ಹೆಸರುಗಳೇ ಅಲ್ಲದೆ ಶ್ರುತಂಧರಾ, ಶ್ರದ್ಧಾದೇವಿ, ಜನಾದೇವಿ ಮೊದಲಾದ ಉಪಪತ್ನಿಯರ ಪ್ರಸ್ತಾವವೂ ಇದೆ. ಅಗಾವಹ, ಮಂದಗ, ಕೃಷ್ಣ, ಬಲರಾಮ, ಸುಭದ್ರೆ, ವಿಜಯ, ರೋಚಮಾನ ಮೊದಲಾದ ಮಕ್ಕಳ ವಿಷಯವೂ ವರ್ಣಿತವಾಗಿದೆ. ಶತಶೃಂಗ ಪರ್ವತ ಪ್ರಾಂತ್ಯದಲ್ಲಿ ಪಾಂಡವರು ಹುಟ್ಟಿದಾಗ ಚೂಡಾಕರ್ಮ ವಿಧಿಯ ಸಂದರ್ಭದಲ್ಲಿ ವಸುದೇವನು ಕಶ್ಯಪನೆಂಬ ಪುರೋಹಿತನನ್ನು ಕಳಿಸಿದ್ದನೆಂದು ವ್ಯಾಸಭಾರತದ ದಾಕ್ಷಿಣಾತ್ಯ ಪಾಠಗಳು ಹೇಳುತ್ತವೆ. ಅಶ್ವಮೇಧ ಪರ್ವದಲ್ಲಿ ಶ್ರೀಕೃಷ್ಣನೇ ವಸುದೇವನಿಗೆ ಮಹಾಭಾರತ ಯುದ್ಧದ ವಿವರಗಳನ್ನು ತಿಳಿಸಿದ ಸಂಗತಿಯಿದೆ. ಕೊನೆಯಲ್ಲಿ ಶ್ರೀಕೃಷ್ಣ-ಬಲರಾಮರು ಇವನ ಪಾದಗಳಿಗೆ ಮಣಿದು ತಪಸ್ಸಿಗೆ ಹೊರಟರೆಂಬ ಸಂಗತಿ ಮೌಸಲ ಪರ್ವತದಲ್ಲಿದೆ. ವೃಷ್ಣಿ ಯಾಆದವ, ಅಂದಕ, ಭೋಜ ಎಂಬ ಯಾದವ ಗಣಗಳೆಲ್ಲ ಪರಸ್ಪರ ಹೋರಾಡಿ ಸತ್ತ ವಿಷಯ ಹಾಗೂ ದ್ವಾರಕೆ ಮುಳುಗಿದ ವಿಷಯ ತಿಳಿದು ವಸುದೇವನು ತಪಸ್ಸು ಮಾಡಿ ಅವಸಾನ ಹೊಂದಿದ ವಿಷಯ ಹಾಗೂ ಅರ್ಜುನನು ಬಂದು ಅಗ್ನಿಸಂಸ್ಕಾರ ಮಾಡಿ, ವಸುದೇವನ ನಾಲ್ವರು ಪತ್ನಿಯರ ಸಹಗಮನಕ್ಕೆ ಏರ್ಪಾಡು ಮಾಡಿದ ಸಂಗತಿಯೂ ಮೌಸಲ ಪರ್ವದಲ್ಲಿ ಬರುತ್ತದೆ.
ಇತರರಿಗಿರಲಿ, ಶ್ರೀಕೃಷ್ಣನಿಗೆ ಕೂಡ ವಸುದೇವನ ಮೇಲೆ ತುಂಬ ಗೌರವ ಭಾವವಿತ್ತು ಎಂಬುದು ಸಾಲ್ವವಧಾ ಪ್ರಕರಣದಲ್ಲಿ ಸ್ಪಷ್ಟವಾಗುತ್ತದೆ. ಶ್ರೀಕೃಷ್ಣನು ಸಾಲ್ವನ ಮೇಲೆ ಯುದ್ಧಕ್ಕೆ ಹೋದನಷ್ಟೆ. ಮಾಯಾ ಸಮರ ನಿಪುಣನಾದ ಸಾಲ್ವನು ವಿಮಾನದಲ್ಲಿ ಕೃಷ್ಣನಿಗೆ ಕಾಣುವಂತೆಯೇ ವಸುದೇವನ ಮಾಯಾಶಿರವನ್ನು ರುಂಡಾಡಿದ. ಆ ಬಗೆಗೆ ಕೃಷ್ಣ ಏನು ಹೇಳುತ್ತಾನೆ ಗೊತ್ತೆ: ‘‘ತತಃ ಶಾರ್ಙಧನು ಶ್ರೇಷ್ಟಂ ಕರಾತ್ ಪ್ರಪತಿತಂ ಮಮ ಮೋಹೋಪಪನ್ನಶ್ಚ ರತೋಥಸ್ಥ ಉಪವಿಶಂ’’ (ಅರಣ್ಯ ಪರ್ವ 21).
(ಅಪ್ಪನ ತಲೆ ಉರುಳುವ ದೃಶ್ಯ ನೋಡ ನನ್ನ ಧನಸ್ಸು ಕೆಳಗೆ ಬಿತ್ತು. ನಾನು ಮೋಹಕ್ಕೆ ಸಿಕ್ಕವನಂತೆ ಅಲ್ಲಿಯೇ ಉರುಳಿ ಬಿದ್ದ).
ಮೂಲ ...{Loading}...
ಕರಿತುರಗ ನಿಕರವನು ಕುಲ ಭೃ
ತ್ಯರ ವಿಲಾಸಿನಿಯರನು ರತ್ನಾ
ಭರಣ ವಸನ ಹಿರಣ್ಯ ಗೋ ಮಹಿಷಾದಿ ವಸ್ತುಗಳ
ತರಿಸಿದನು ಕಶ್ಯಪನು ಯದು ರಾ
ಯರ ಪುರೋಹಿತನಲ್ಲಿಗಾತನ
ಪರುಠವಿಸಿ ಕಳುಹಿದನು ಪಾಂಡುನೃಪಂಗೆ ವಸುದೇವ ॥67॥
೦೬೮ ಬನ್ದನಾ ಕಶ್ಯಪನು ...{Loading}...
ಬಂದನಾ ಕಶ್ಯಪನು ಕುಂತೀ
ನಂದನರ ಕಂಡಖಿಳ ವಸ್ತುವ
ನಂದು ಕಾಣಿಕೆಯಿತ್ತು ಕಂಡನು ಪಾಂಡುಭೂಪತಿಯ
ಅಂದು ವಸುದೇವಾದಿ ಯಾದವ
ವೃಂದ ರೋಹಿಣಿ ದೇವಕಿಯರಾ
ನಂದ ಸುಕ್ಷೇಮವನು ಕುಶಲವನರಸ ಬೆಸಗೊಂಡ ॥68॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಶ್ಯಪನು ಬಂದು ಕುಂತೀ ಮಕ್ಕಳನ್ನು ಕಂಡು, ಪಾಂಡು ಮಹಾರಾಜನಿಗೆ ಎಲ್ಲಾ ವಸ್ತುಗಳನ್ನು ಕಾಣಿಕೆಯಾಗಿ ಕೊಟ್ಟನು. ಪಾಂಡುವು, ವಸುದೇವನೇ ಮೊದಲಾದ ಯಾದವರ ಸಮೂಹದ, ರೋಹಿಣೀ ದೇವಕಿಯರ ಸುಕ್ಷೇಮ ಕುಶಲವನ್ನು ಕೇಳಿ ತಿಳಿದುಕೊಂಡನು.
ಮೂಲ ...{Loading}...
ಬಂದನಾ ಕಶ್ಯಪನು ಕುಂತೀ
ನಂದನರ ಕಂಡಖಿಳ ವಸ್ತುವ
ನಂದು ಕಾಣಿಕೆಯಿತ್ತು ಕಂಡನು ಪಾಂಡುಭೂಪತಿಯ
ಅಂದು ವಸುದೇವಾದಿ ಯಾದವ
ವೃಂದ ರೋಹಿಣಿ ದೇವಕಿಯರಾ
ನಂದ ಸುಕ್ಷೇಮವನು ಕುಶಲವನರಸ ಬೆಸಗೊಂಡ ॥68॥
೦೬೯ ಯಾದವರ ಸುಕ್ಷೇಮ ...{Loading}...
ಯಾದವರ ಸುಕ್ಷೇಮ ಕುಶಲವ
ನಾದರಿಸಿ ಬಳಿಕಾದ ಪರಮಾ
ಹ್ಲಾದದಲಿ ಕಶ್ಯಪನೊಳಾಲೋಚಿಸಿ ಮಹೀಪಾಲ
ವೈದಿಕೋಕ್ತಿಯ ಚೌಲವುಪನಯ
ನಾದಿ ಸಕಲ ಕ್ರಿಯೆಗಳನು ಗಾ
ಗ್ರ್ಯಾದಿ ಋಷಿಗಳನುಜ್ಞೆಯಲಿ ಮಾಡಿಸಿದನನಿಬರಿಗೆ ॥69॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಾದವರ ಸುಕ್ಷೇಮ ಕುಶಲವನ್ನು ತಿಳಿದು ಸಂತೋಷದಿಂದ ಕಶ್ಯಪನೊಂದಿಗೆ ಸಮಾಲೋಚನೆ ಮಾಡಿ, ಪಾಂಡು ಮಹಾರಾಜ ಗಾಗ್ರ್ಯಾದಿ ಋಷಿಗಳ ಅಪ್ಪಣೆ ಪಡೆದು ಅಷ್ಟು ಮಕ್ಕಳಿಗೂ ವೇದ ವಿಹಿತವಾದ ಚೌಲ, ಉಪನಯನ ಮೊದಲಾದ ಸಕಲ ಕ್ರಿಯೆಗಳನ್ನು ಮಾಡಿಸಿದನು.
ಪದಾರ್ಥ (ಕ.ಗ.ಪ)
ಆಹ್ಲಾದ-ಸಂತೋಷ,
ಅನಿಬರು-ಎಲ್ಲರಿಗೆ
ಮೂಲ ...{Loading}...
ಯಾದವರ ಸುಕ್ಷೇಮ ಕುಶಲವ
ನಾದರಿಸಿ ಬಳಿಕಾದ ಪರಮಾ
ಹ್ಲಾದದಲಿ ಕಶ್ಯಪನೊಳಾಲೋಚಿಸಿ ಮಹೀಪಾಲ
ವೈದಿಕೋಕ್ತಿಯ ಚೌಲವುಪನಯ
ನಾದಿ ಸಕಲ ಕ್ರಿಯೆಗಳನು ಗಾ
ಗ್ರ್ಯಾದಿ ಋಷಿಗಳನುಜ್ಞೆಯಲಿ ಮಾಡಿಸಿದನನಿಬರಿಗೆ ॥69॥
೦೭೦ ಈತನೇ ಧರ್ಮಜನು ...{Loading}...
ಈತನೇ ಧರ್ಮಜನು ಯೆರಡನೆ
ಯಾತ ಭೀಮನು ಬಳಿಕ ಮೂರನೆ
ಯಾತನರ್ಜುನ ನಕುಲನೈದನೆಯಾತ ಸಹದೇವ
ಈತಗಳು ಕೌಂತೇಯ ಮಾದ್ರೇ
ಯಾತಿಶಯ ಪರಿಭೇದ ರಹಿತ
ಖ್ಯಾತರೆಂದರು ಪರಮಮುನಿಗಳು ಪಾಂಡುನಂದನರ ॥70॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೊದಲನೆಯವನು ಧರ್ಮಜ, ಎರಡನೆಯವನು ಭೀಮ, ಮೂರನೆಯವನು ಅರ್ಜುನ, ಆಮೇಲೆ ನಕುಲ, ಐದನೆಯವನು ಸಹದೇವ. ಇವರು ಕುಂತೀ ಮಕ್ಕಳು ಇವರು ಮಾದ್ರೀ ಮಕ್ಕಳು ಎಂಬ ವಿಶೇಷವಾದ ಅಂತರವಿಲ್ಲದೆ ಪ್ರಸಿದ್ಧರು- ಪರಮ ಮುನಿಗಳು ಪಾಂಡುವಿನ ಮಕ್ಕಳನ್ನು ಶ್ಲಾಘಿಸಿದರು.
ಟಿಪ್ಪನೀ (ಕ.ಗ.ಪ)
ನಕುಲ-ಸಹದೇವರು : ಅವಳಿಮಕ್ಕಳಾದ ಇವರುಗಳನ್ನು ಒಟ್ಟಾಗಿಯೇ ನೋಡಬೇಕಾಗುತ್ತದೆ. ಮಾದ್ರಿಯ ಮಕ್ಕಳಾದ ಇವರೂ ಅಶ್ವಿನೀದೇವತೆಗಳ ವರಪ್ರಸಾದದಿಂದ ಹುಟ್ಟಿದವರು. ಉಳಿದ ಮೂವರು ಯಮ, ಇಂದ್ರ ಮತ್ತ ವಯುದೇವತೆಗ ಹೆಸರು ಹೊತ್ತು ಬಂದವರಾದುದರಿಂದ ದೇವಲೋಕದಲ್ಲಿ ಅವರಿಗಿರುವ ಹಿರಯಸ್ಥಾನವೇ ಭೂಮಿಯಲ್ಲೂ ಇದೆ. ಆದರೆ ಅಶ್ವಿನೀ ದೇವತೆಗಳಿಗೆ ಅವರಿಗಿರುವ ಹಿರಿಯಸ್ಥಾನವೇ ಭೂಮಿಯಲ್ಲೂ ಇದೆ. ಆದರೆ ಅಶ್ವಿನೀ ದೇವತೆಗಳಿಗೆ ದೇವಲೋಕದಲ್ಲಿ ಅಂತಹ ಪ್ರತಿಷ್ಥಿತಸ್ಥಾನವಿರಲಿಲ್ಲ. ಮೊದಮೊದಲಂತೂ ಅವರಿgಗೆ ಹವಿರ್ಭಾಗ ಕೂಡ ದೊರೆಯುತ್ತಿರಲಿಲ್ಲ. ಧರ್ಮನಿಷ್ಣಾತನೂ ಸಮಚಿತ್ತನೂ ಆದ ಧರ್ಮರಾಯ ಲೋಕೈಕ ವೀರನಾದ ಅರ್ಜುನ, ಮಹಾಶಕ್ತಿವಂತನಾದ ಭೀಮ ಈ ಮೂವರ ಅಕ್ಕಪಕ್ಕದಲ್ಲಿ ಯಾರು ನಿಂತರೂ ಮಂಕಾಗಿ ಕಾಣುತ್ತಾರಲ್ಲವೆ? ಯಮಳರ ಸ್ಥಿತಿಯೂ ಅದೇ ಆಯಿತು. ಆಶ್ಚರ್ಯದ ಸಂಗತಿ ಎಂದರೆ ನಕಲು ಸಹದೇವರು ತಮ್ಮ ಮಿತಿಯನ್ನು ತಿಳಿದೇ ಹಿನ್ನೆಲೆಗೆ ಸರಿದರು. ಅಣ್ಣಂದಿರ ಕೃಪೆಗೆ ಪಾತ್ರರಾಗುವ ರೀತಿಯಲ್ಲಿ ಕೆಲಸ ಮಾಡಿದರು. ಧರ್ಮರಾಯನು ತಮ್ಮಂದಿರು ನಾಲ್ವರಲ್ಲಿ ಯಾರನ್ನೂ ಪಕ್ಷಪಾತದಿಂದ ಕಂಡವನಲ್ಲವಾದುದರಿಂದ ನಕುಲ-ಸಹದೇವರ ಮನಸ್ಸಿನಲ್ಲಿ ಕಹಿಭಾವನೆಗಳು ಹುಟ್ಟಲೇ ಇಲ್ಲ. ಉಳಿದ ಅಣ್ಣಂದಿರೊಂದಿಗೆ ತಮ್ಮನ್ನು ಹೋಲಿಸಿಕೊಂಡು ಕೊರಗುವಷ್ಟು ಮಾತ್ಸರ್ಯಗುಣವೂ ಅವರಿಗಿರಲಿಲ್ಲ. ಆದುದರಿಂದ ಪಂಚಪಾಂಡವರು ಸ್ವರೂಪದಲ್ಲಿ ಭಿನ್ನ ಬೆರಳುಗಳಾದರೂ ಕಾರ್ಯದಲ್ಲಿ ಒಂದು ಕೈಯಾದರು.
ಭೀಷ್ಮರು ಇವರನ್ನು ಸಮರಥಿಗಳ ಪಟ್ಟಿಗೆ ಸೇರಿಸಿದ್ದಾರೆ. ದ್ರೌಪದಿ ಸಹದೇವನಲ್ಲಿ ಮೆಚ್ಚುವ ಗುಣ ಎಂದರೆ ಪ್ರಾಜ್ಞತೆ ಮತ್ತು ವಾಗ್ಮಿತ್ವ. ರಾಜಸೂಯ ಯಾಗದಲ್ಲಿ ಕೃಷ್ಣನ ಅಗ್ರಪೂಜೆಯ ಸಂಬಂಧವಾಗಿ ಸಹದೇವನು ಉಗ್ರವಾಗಿ ಕೃಷ್ಣನ ಪ್ರತಿಪಾದಕನಾಗಿ ಉಳಿದ ರೀತಿ ಆಶ್ಚರ್ಯವನ್ನುಂಟು ಮಾಡುತ್ತದೆ. ಆಶ್ರಮವಾಸ ಪರ್ವದಲ್ಲಿ ಕುಂತಿ ಸಹದೇವರು ಪರಸ್ಪರ ತಬ್ಬಿಕೊಂಡು ಅಳುತ್ತಿದ್ದ ಸಂದರ್ಭವನ್ನು ವಿವರಿಸುವ ವ್ಯಾಸರು ಕುಂತಿಯು ಹೆತ್ತತಾಯಿಯಂತೆಯೇ ವರ್ತಿಸಿದುದನ್ನು ಉಲ್ಲೇಖಿಸಿದ್ದಾರೆ. ರಾಜಸೂಯಯಾಗಕ್ಕೆ ಕಪ್ಪಕಾಣಿಕೆ ತರಲು ದಕ್ಷಿಣ ದೇಶಗಳಿಗೆ ಹೋದ ಸಹದೇವನು ತೋರಿದ ಪರಾಕ್ರಮವನ್ನು ನೋಡಿದರೆ ಅವನು ಎಂಥ ವೀರನೆಂಬುದು ಸ್ಪಷ್ಟವಾಗುತ್ತದೆ. ಕನ್ನಡ ಕಾವ್ಯಗಳಂತೂ ದಿವ್ಯಜ್ಞಾನಿ ಸಹದೇವ ಎಂದೇ ಹೇಳಿ ಅವನಿಗೆ ಭವಿಷ್ಯದರ್ಶನ ಜ್ಞಾನವಿತ್ತೆಂದು ಹೇಳುತ್ತವೆ.ಇವನ ಕೃಷ್ಣಭಕ್ತಿಯೇನೂ ಕಡಿಮೆಯದಲ್ಲ. ಅವನಿಗೆ ಅಗ್ರಪೂಜೆ ಮಾಡಲು ಒಪ್ಪದವರ ತಲೆಯ ಮೇಲೆ ಎಡಗಾಲಿಡುವುದಾಗಿ ಹೇಳಿದ್ದೇ ಇದಕ್ಕೆ ಸಾಕ್ಷಿ.
ನಕಲುನದು ಅಸಮಾನ ಗಂಭೀರ ಶುಭಾಕೃತಿ ಎಂದು ದ್ರೌಪದಿ ಹೊಗಳಿದ್ದಾಳೆ. ಮಹಾಭಾರತ ಕಾಲದ ಮಹಾರೂಪವಂತರಲ್ಲಿ ಅವನೂ ಒಬ್ಬ. ತನ್ನ ರೂಫ ಹೊರಗಿನವರಿಗೆ ಕಾಣದಿರಲಿ ಎಂದು ಅವನು ಅರಣ್ಯವಾಸಕ್ಕೆ ಹೊರಡುವಾಗ ಮುಖಕ್ಕೆಲ್ಲ ಮಣ್ಣು ಹಚ್ಚಿಕೊಂಡನಂತೆ! ಆದ್ದರಿಂದ ತನ್ನ ರೂಪಗರ್ವದಿಂದಾಗಿ ಸ್ವರ್ಗದ ದಾರಿಯಲ್ಲಿ ಬಿದ್ದನೆಂದು ಧರ್ಮರಾಯನು ವ್ಯಾಖ್ಯಾನಿಸಿದ್ದಾನೆ. ನಕುಲನು ಬಹಳ ಆಢ್ಯನೆಂದೂ ಮಹಾಸಂಯಮಶೀಲನೆಂದೂ ವಿದುರನು ಹೇಳಿರುವುದು ಸೂಕ್ತವಾಗಿದೆ. ಇವರಿಬ್ಬರೂ ವಿರಾಟಪರ್ವದಲ್ಲಿ ತಮ್ಮ ತಮ್ಮ ಆಯ್ದ ಕ್ಷೇತ್ರದಲ್ಲಿ ಅದ್ಭುತ ಪ್ರತಿಭೆಯನ್ನು ಮೆರೆದು ವಿರಾಟನ ಮೆಚ್ಚಿಗೆ ಗಳಿಸಿದ್ದಾರೆ. (ವಿವರಗಳಿಗೆ ನೋಡಿ ದಾಮಗ್ರಂಥಿ, ತಂತಿಪಾಲ)… ಈ ಸೋದರರ ಸಾಧನೆಗಳನ್ನೆಲ್ಲ ಅಳೆದು ತೂಗಿ ಮೇಲೆ ಕೆಎಸ್ನ ಅವರ ಪರಿಭಾಷೆಯಲ್ಲಿ ಪ್ರತಿಭೆಯ ಶಾಲೆಯಲ್ಲಿ ಹಿಂದಿನ ಬೆಮಚಿನ ಹುಡುಗರು ಎಂದು ಹೇಳಬಹುದಲ್ಲವೆ?
ಇನ್ನೊಂದು ಸಂಗತಿ. ಒಂದೇ ಮನೆಯಲ್ಲಿ ನಾಲ್ಕೈದು ಸೋದರರಿದ್ದರೆ ಎಲ್ಲರಿಗೂ ಸಮಾನ ಪ್ರಾಮುಖ್ಯ ಸಿಕ್ಕುವುದಿಲ್ಲ. ರಾಮಾಯಣದ ಶತ್ರುಘ್ನನ ಪಾತ್ರ ಇದಕ್ಕೆ ಸಾಕ್ಷಿ.
ಮೂಲ ...{Loading}...
ಈತನೇ ಧರ್ಮಜನು ಯೆರಡನೆ
ಯಾತ ಭೀಮನು ಬಳಿಕ ಮೂರನೆ
ಯಾತನರ್ಜುನ ನಕುಲನೈದನೆಯಾತ ಸಹದೇವ
ಈತಗಳು ಕೌಂತೇಯ ಮಾದ್ರೇ
ಯಾತಿಶಯ ಪರಿಭೇದ ರಹಿತ
ಖ್ಯಾತರೆಂದರು ಪರಮಮುನಿಗಳು ಪಾಂಡುನಂದನರ ॥70॥