೦೦೦ ಸೂ ಚಣ್ಡಮುನಿ ...{Loading}...
ಸೂ. ಚಂಡಮುನಿ ಮಂತ್ರಾಹ್ವಯದಿ ಬರೆ
ಚಂಡಕರ ತತ್ತೇಜನಾಹವ
ಚಂಡವಿಕ್ರಮನವನಿಯಲಿ ಜನಿಸಿದನು ಕಲಿಕರ್ಣ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಉಗ್ರಮುನಿ ದೂರ್ವಾಸರು ಉಪದೇಶಿಸಿದ ಸೂರ್ಯಮಂತ್ರದಿಂದ ಕುಂತಿಯು ಪ್ರಾರ್ಥಿಸಲು, ಸೂರ್ಯ ಸದೃಶ ತೇಜಸ್ಸಿನ, ಯುದ್ಧದಲ್ಲಿ ಪರಾಕ್ರಮಿಯಾದ ವೀರ ಕರ್ಣನು ಜನಿಸಿದನು.
ಪದಾರ್ಥ (ಕ.ಗ.ಪ)
ಚಂಡ-ಉಗ್ರ, ಚಂಡಕರ-ತೀಕ್ಷ್ಣ ಕಿರಣವುಳ್ಳವ, ಸೂರ್ಯ
ಮೂಲ ...{Loading}...
ಸೂ. ಚಂಡಮುನಿ ಮಂತ್ರಾಹ್ವಯದಿ ಬರೆ
ಚಂಡಕರ ತತ್ತೇಜನಾಹವ
ಚಂಡವಿಕ್ರಮನವನಿಯಲಿ ಜನಿಸಿದನು ಕಲಿಕರ್ಣ
೦೦೧ ಅರಸ ಕೇಳೈ ...{Loading}...
ಅರಸ ಕೇಳೈ ಕೆಲವು ಕಾಲಾಂ
ತರಕೆ ನಿಮ್ಮ ವಿಚಿತ್ರವೀರ್ಯನು
ನೆರೆದನಮರಸ್ತ್ರೀಯರಲಿ ಬಳಿಕೀ ನದೀಸುತನ
ಕರೆದು ನುಡಿದಳು ಮಗನೆ ರಾಜ್ಯವ
ಧರಿಸು ನೀನಿನ್ನುತ್ತರದ ಹಿಮ
ಕರಕುಲವ ಬೆಳಗೆಂದು ಯೋಜನಗಂಧಿ ಬೆಸಸಿದಳು ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಾಜ ಕೇಳು, ಕೆಲವು ಕಾಲಾಂತರದಲ್ಲಿ ನಿಮ್ಮ ವಿಚಿತ್ರವೀರ್ಯನು ದೇವತಾಸ್ತ್ರೀಯರಲ್ಲಿ ಸೇರಿದನು. ಬಳಿಕ, ಈ ಗಂಗಾಸುತ ಭೀಷ್ಮನನ್ನು ಕರೆದು ಯೋಜನಗಂಧಿಯು, “ಮಗನೇ, ನೀನು ರಾಜ್ಯ ಭಾರವನ್ನು ವಹಿಸಿಕೊ, ಮುಂದಿನ ಚಂದ್ರವಂಶವನ್ನು ಬೆಳಗು” ಎಂದು ಅಪ್ಪಣೆ ಮಾಡಿದಳು.
ಪದಾರ್ಥ (ಕ.ಗ.ಪ)
ನೆರೆ-ಸೇರು,
ಹಿಮಕರಕುಲ-ಚಂದ್ರವಂಶ
ಮೂಲ ...{Loading}...
ಅರಸ ಕೇಳೈ ಕೆಲವು ಕಾಲಾಂ
ತರಕೆ ನಿಮ್ಮ ವಿಚಿತ್ರವೀರ್ಯನು
ನೆರೆದನಮರಸ್ತ್ರೀಯರಲಿ ಬಳಿಕೀ ನದೀಸುತನ
ಕರೆದು ನುಡಿದಳು ಮಗನೆ ರಾಜ್ಯವ
ಧರಿಸು ನೀನಿನ್ನುತ್ತರದ ಹಿಮ
ಕರಕುಲವ ಬೆಳಗೆಂದು ಯೋಜನಗಂಧಿ ಬೆಸಸಿದಳು ॥1॥
೦೦೨ ತಾಯೆ ನಿಮ್ಮೋಪಾದಿ ...{Loading}...
ತಾಯೆ ನಿಮ್ಮೋಪಾದಿ ರಾಜ್ಯ
ಸ್ತ್ರೀಯಳೆಂದಾ ನುಡಿಯೊಳಗೆ ಗಾಂ
ಗೇಯ ಮುಳುಗನು ಭೀಷ್ಮವಚನಕೆ ಬೇರೆಮೊಳೆಯುಂಟೆ
ಕಾಯದಲ್ಪ ಸುಖಕ್ಕೆ ಘನ ನಿ
ಶ್ರೇಯಸವ ಕೆಡಿಸುವೆನೆ ಯೆಲವದ
ಕಾಯಿಗೋಸುಗ ಕಲ್ಪವೃಕ್ಷವ ಕಡಿವನಲ್ಲೆಂದ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ಭೀಷ್ಮನು, “ತಾಯೆ, ನೀವು ಹೇಳುವ ರಾಜ್ಯಸ್ತ್ರೀ ಎಂಬ ಮಾತಿಗೆ ಗಂಗಾಪುತ್ರ ಮರುಳಾಗಲಾರನು. ಭೀಷ್ಮನ ಮಾತಿಗೆ ಬೇರೆ ಹುಟ್ಟುಂಟೆ ? ಶರೀರದ ಅಲ್ಪ ಸುಖಕ್ಕಾಗಿ ಮಹತ್ತಾದ ಮೋಕ್ಷವನ್ನು ಕೆಡಿಸಿಕೊಳ್ಳುವೆನೆ ? ಬೂರುಗದ ಕಾಯಿಗೋಸುಗ ಕಲ್ಪವೃಕ್ಷವನ್ನು ಕಡಿಯುವವನು ನಾನಲ್ಲ” ಎಂದು ಹೇಳಿದನು.
ಪದಾರ್ಥ (ಕ.ಗ.ಪ)
ಮೊಳೆ-ಹುಟ್ಟು,
ಕಾಯ-ದೇಹ,
ನಿಶ್ರೇಯಸ-ಮೋಕ್ಷ,
ಯಲವ-ಎಲವ, ಬೂರುಗ
ಮೂಲ ...{Loading}...
ತಾಯೆ ನಿಮ್ಮೋಪಾದಿ ರಾಜ್ಯ
ಸ್ತ್ರೀಯಳೆಂದಾ ನುಡಿಯೊಳಗೆ ಗಾಂ
ಗೇಯ ಮುಳುಗನು ಭೀಷ್ಮವಚನಕೆ ಬೇರೆಮೊಳೆಯುಂಟೆ
ಕಾಯದಲ್ಪ ಸುಖಕ್ಕೆ ಘನ ನಿ
ಶ್ರೇಯಸವ ಕೆಡಿಸುವೆನೆ ಯೆಲವದ
ಕಾಯಿಗೋಸುಗ ಕಲ್ಪವೃಕ್ಷವ ಕಡಿವನಲ್ಲೆಂದ ॥2॥
೦೦೩ ಮರುಗಿ ಯೋಜನಗನ್ಧಿ ...{Loading}...
ಮರುಗಿ ಯೋಜನಗಂಧಿ ಚಿಂತೆಯ
ಸೆರೆಗೆ ಸಿಲುಕಿದಳೊಂದು ರಾತ್ರಿಯೊ
ಳರಿದು ನೆನೆದಳು ಪೂರ್ವಸೂಚಿತ ಪುತ್ರಭಾಷಿತವ
ಮುರಿದ ಭರತಾನ್ವಯದ ಬೆಸುಗೆಯ
ತೆರನು ತೋರಿತೆ ಪುಣ್ಯವೆನುತೆ
ಚ್ಚರಿತು ನುಡಿದಳು ಮಗನೆ ವೇದವ್ಯಾಸ ಬಹುದೆಂದು ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮನ ನಿರ್ಧಾರವನ್ನರಿತು ಯೋಜನಗಂಧಿ ವ್ಯಥೆಪಟ್ಟು, ಚಿಂತೆಯ ಸೆರೆಗೆ ಸಿಲುಕಿದಳು. ಒಂದು ರಾತ್ರಿ ವಿಚಾರ ಮಾಡಿ ಹಿಂದೆ ಸೂಚಿಸಿದ ವೇದವ್ಯಾಸನ ಭಾಷೆಯನ್ನು ಸ್ಮರಿಸಿಕೊಂಡಳು. ನಿಂತುಹೋದ ಭರತವಂಶವನ್ನು ಬೆಸೆಯುವ ರೀತಿ ತೋರಿತಲ್ಲಾ, ತನ್ನ ಪುಣ್ಯವೆನುತ ‘ಮಗನೆ, ವೇದವ್ಯಾಸ ಬರುವುದು’ ಎಂದು ಎಚ್ಚತ್ತು ನುಡಿದಳು.
ಪದಾರ್ಥ (ಕ.ಗ.ಪ)
ಅನ್ವಯ-ವಂಶ,
ಬೆಸುಗೆ-ಹೊಂದಿಕೆ,
ತೆರನು-ರೀತಿ
ಮೂಲ ...{Loading}...
ಮರುಗಿ ಯೋಜನಗಂಧಿ ಚಿಂತೆಯ
ಸೆರೆಗೆ ಸಿಲುಕಿದಳೊಂದು ರಾತ್ರಿಯೊ
ಳರಿದು ನೆನೆದಳು ಪೂರ್ವಸೂಚಿತ ಪುತ್ರಭಾಷಿತವ
ಮುರಿದ ಭರತಾನ್ವಯದ ಬೆಸುಗೆಯ
ತೆರನು ತೋರಿತೆ ಪುಣ್ಯವೆನುತೆ
ಚ್ಚರಿತು ನುಡಿದಳು ಮಗನೆ ವೇದವ್ಯಾಸ ಬಹುದೆಂದು ॥3॥
೦೦೪ ಕೆಞ್ಜೆಡೆಯ ಕೃಷ್ಣಾಜಿನದ ...{Loading}...
ಕೆಂಜೆಡೆಯ ಕೃಷ್ಣಾಜಿನದ ಮೊನೆ
ಮುಂಜೆರಗಿನುಡಿಗೆಯ ಬಲಾಹಕ
ಪುಂಜಕಾಂತಿಯ ಪಿಂಗತರಮುಖ ಕೇಶದುನ್ನತಿಯ
ಕಂಜನಾಭನ ಮೂರ್ತಿ ಶೋಭಾ
ರಂಜಿತನು ಜನದುರಿತ ದಶಮದ
ಭಂಜಕನು ತಾಯ್ಗೆರಗಿ ನುಡಿದನು ವ್ಯಾಸಮುನಿರಾಯ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೂಡಲೇ, ಕೆಂಪಾದ ಜಟೆಯ, ಕೃಷ್ಣಾಜಿನ ಹಾಗೂ ಸೆರಗಿನ ಮುಂಭಾಗದ ಉಡುಗೆಯ, ಮೋಡ ಸಮೂಹದ ಮೈ ಕಾಂತಿಯ (ಮೇಘಶ್ಯಾಮನ), ಕಂದು ಬಣ್ಣದ ನೀಳವಾದ ಗಡ್ಡದ ಕಮಲ ನಾಭ (ವಿಷ್ಣು)ನ ಮೂರ್ತಿ, ಮಂಗಳಕರನು, ಜನರ ಪಾಪ ಹಾಗೂ ದಶಮದಗಳನ್ನು ನಾಶ ಮಾಡುವ ವ್ಯಾಸ ಮುನಿಶ್ರೇಷ್ಠನು ತಾಯಿಗೆ ನಮಸ್ಕರಿಸಿ ಮಾತನಾಡಿದನು.
ಪದಾರ್ಥ (ಕ.ಗ.ಪ)
ಮೊನೆ ಮುಂಜೆರಗು-ಮುಂದಿನ ಸೆರಗಿನ ತುದಿ, ಬಲಾಹಕ-ಮೋಡ, ಪುಂಜ-ಸಮೂಹ, ಪಿಂಗ-ಕಂದುಬಣ್ಣ, ಶೋಭಾ-ಅಲಂಕಾರ, ದುರಿತ-ಪಾಪ
ಪಾಠಾನ್ತರ (ಕ.ಗ.ಪ)
[ಜನದುರಿತದಶ] - [ಭವದುರಿತ ಶತ (ಅ)], [ಘನದುರಿತಶತ (ಆ)]
ಸಾಮಾನ್ಯವಾಗಿ ಮದಗಳನ್ನು ಅಷ್ಟಮದಗಳೆಂದು ಗುರುತಿಸುವುದುಂಟು ಇಲ್ಲಿ ‘ದಶ’ ಇತರ ಪಾಠಾಂತರಗಳಲ್ಲಿನ ‘ಶತ’ ಎಂದು ಪ್ರಯೋಗವಾಗಿರುವುದರಿಂದ ದಶ ವಿಧ ಪಾಪಗಳೆಂದು ಪರಿಗಣಿಸಬಹುದಾಗಿದೆ. ಅವು ಯಾವುವೆಂದರೆ : ಅ) ಶಾರೀರಿಕ : ಪ್ರಾಣ ಹಿಂಸೆ, ಪರದಾರಾಸಕ್ತಿ, ಕಳ್ಳತನ, ಆ) ವಾಙ್ಮಯ : ಆತ್ಮಸ್ತುತಿ, ಸ್ವಶಕ್ತಿ ಪ್ರಶಂಸೆ, ವೈಮನಸ್ಯ, ಅಸತ್ಯವಚನ, ಇ) ಮಾನಸಿಕ: ಪರಧನಾಸಕ್ತಿ, ಅಸೂಯೆ, ನಾಸ್ತಿಕ್ಯ, ಪ್ರಯೋಗಗಳು ‘ಅನೇಕ’ ಎಂಬುದನ್ನು ಸೂಚಿಸಬಹುದು. ಈ ಸಂದರ್ಭದಲ್ಲಿ ಈ ಮೂರೂ ಪಾಠಾಂತರಗಳನ್ನು ಪರಿಗಣಿಸಬಹುದಾಗಿದೆ.
ಮೂಲ ...{Loading}...
ಕೆಂಜೆಡೆಯ ಕೃಷ್ಣಾಜಿನದ ಮೊನೆ
ಮುಂಜೆರಗಿನುಡಿಗೆಯ ಬಲಾಹಕ
ಪುಂಜಕಾಂತಿಯ ಪಿಂಗತರಮುಖ ಕೇಶದುನ್ನತಿಯ
ಕಂಜನಾಭನ ಮೂರ್ತಿ ಶೋಭಾ
ರಂಜಿತನು ಜನದುರಿತ ದಶಮದ
ಭಂಜಕನು ತಾಯ್ಗೆರಗಿ ನುಡಿದನು ವ್ಯಾಸಮುನಿರಾಯ ॥4॥
೦೦೫ ನೆನೆದಿರೇನೌ ತಾಯೆ ...{Loading}...
ನೆನೆದಿರೇನೌ ತಾಯೆ ಕೃತ್ಯವ
ನೆನಗೆ ಬೆಸಸೆನೆ ಮಗನೆ ಭಾರತ
ವಿನುತಕುಲ ಜಲರಾಶಿಯೆಡೆವರಿತುದು ವಿಚಿತ್ರನಲಿ
ತನುಜ ನೀನೇ ಬಲ್ಲೆಯೆನೆ ಕೇಳ್
ಜನನಿ ನಿಮ್ಮಡಿಯಾಜ್ಞೆಯಲಿ ಸಂ
ಜನಿಪುವೆನು ವೈಚಿತ್ರವೀರ್ಯ ಕ್ಷೇತ್ರದಲಿ ಸುತರ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ತಾಯೆ, ಏಕೆ ಜ್ಞಾಪಿಸಿಕೊಂಡಿರಿ ನನ್ನನ್ನು ?, ಕಾರ್ಯವನ್ನು ಅಪ್ಪಣೆ ಮಾಡಿ” ಎನಲು, ಸತ್ಯವತಿಯು “ಮಗನೆ, ಪವಿತ್ರ ಭಾರತವಂಶವೆಂಬ ಜಲರಾಶಿ ವಿಚಿತ್ರವೀರ್ಯನಲ್ಲಿ ಬತ್ತಿತು, ಇದಕ್ಕೆ ಪರಿಹಾರ ನೀನೇ ಬಲ್ಲೆ” ಎಂದು ಹೇಳಲು “ಅಮ್ಮಾ ನಿಮ್ಮಾಜ್ಞೆಯ ಪ್ರಕಾರ ವಿಚಿತ್ರವೀರ್ಯ ಕ್ಷೇತ್ರದಲ್ಲಿ ಸುತರು ಜನಿಸುವಂತೆ ಮಾಡುವೆನು” ಎಂದು ವೇದವ್ಯಾಸ ತಾಯಿಗೆ ಸಮಾಧಾನ ಹೇಳಿದನು.
ಪದಾರ್ಥ (ಕ.ಗ.ಪ)
ಎಡೆವರಿ-ನಡುವೆ ಕತ್ತರಿಸು
ಮೂಲ ...{Loading}...
ನೆನೆದಿರೇನೌ ತಾಯೆ ಕೃತ್ಯವ
ನೆನಗೆ ಬೆಸಸೆನೆ ಮಗನೆ ಭಾರತ
ವಿನುತಕುಲ ಜಲರಾಶಿಯೆಡೆವರಿತುದು ವಿಚಿತ್ರನಲಿ
ತನುಜ ನೀನೇ ಬಲ್ಲೆಯೆನೆ ಕೇಳ್
ಜನನಿ ನಿಮ್ಮಡಿಯಾಜ್ಞೆಯಲಿ ಸಂ
ಜನಿಪುವೆನು ವೈಚಿತ್ರವೀರ್ಯ ಕ್ಷೇತ್ರದಲಿ ಸುತರ ॥5॥
೦೦೬ ಎನ್ದು ಬಳಿಕೇಕಾನ್ತ ...{Loading}...
ಎಂದು ಬಳಿಕೇಕಾಂತ ಭವನದೊ
ಳಂದು ಮುನಿಯಿರಲಂಬಿಕೆಯನರ
ವಿಂದಮುಖಿಯಟ್ಟಿದಳು ಸೊಸೆಯನು ಮುನಿಯ ಪೊರೆಗಾಗಿ
ಬಂದು ಮುನಿಪನ ದಿವ್ಯರೂಪವ
ನಿಂದುಮುಖಿ ಕಂಡಕ್ಷಿಗಳ ಭಯ
ದಿಂದ ಮುಚ್ಚಿದಳಾಕೆ ತಿರುಗಿದಳರಸ ಕೇಳ್ ಎಂದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಳಿಕ ಏಕಾಂತ ಭವನದಲ್ಲಿ ಅಂದು ವ್ಯಾಸಮುನಿಯಿರಲು, ಸೊಸೆ ಅಂಬಿಕೆಯನ್ನು ಯೋಜನಗಂಧಿ ಮುನಿಯ ಸಮೀಪಕ್ಕೆ ಕಳುಹಿಸಿದಳು. ಆಕೆ ಬಂದು ಮುನಿಯ ದಿವ್ಯರೂಪವನ್ನು ಕಂಡು ಭಯದಿಂದ ಕಣ್ಣುಗಳನ್ನು ಮುಚ್ಚಿದಳು. ಆಕೆ ಹಿಂತಿರುಗಿದಳು.
ಪದಾರ್ಥ (ಕ.ಗ.ಪ)
ಪೊರೆ-ಸಮೀಪ
ಟಿಪ್ಪನೀ (ಕ.ಗ.ಪ)
ಕುಂತಿ - ಇವಳ ಹೆಸರು ಫೃಥೆ. ಇವಳು ವಸುದೇವನ ತಂಗಿ. ಕೃಷ್ಣನ ಸೋದರತ್ತೆ. ಕುಂತಿಭೋಜನಿಗೆ ಮಕ್ಕಳಿರಲಿಲ್ಲವಾದ್ದರಿಮದ ಕುಂತಿಯ ತಂದೆ ಶೂರಸೇನನು ಪೃಥೆಯನ್ನು ದತ್ತುಮಗಳಾಗಿ ಕೊಟ್ಟಿದ್ದರಿಂದ ಕುಂತಿ ಎಂಬ ಹೆಸರು ಬಂದಿದೆ. ‘‘ಅಂತೂ ಇಂತೂ ಕುಂತಿಯ ಮಕ್ಕಳಿಗೆ ರಾಜ್ಯವಿಲ್ಲ’’ ಎಂಬ ಈ
ಮೂಲ ...{Loading}...
ಎಂದು ಬಳಿಕೇಕಾಂತ ಭವನದೊ
ಳಂದು ಮುನಿಯಿರಲಂಬಿಕೆಯನರ
ವಿಂದಮುಖಿಯಟ್ಟಿದಳು ಸೊಸೆಯನು ಮುನಿಯ ಪೊರೆಗಾಗಿ
ಬಂದು ಮುನಿಪನ ದಿವ್ಯರೂಪವ
ನಿಂದುಮುಖಿ ಕಂಡಕ್ಷಿಗಳ ಭಯ
ದಿಂದ ಮುಚ್ಚಿದಳಾಕೆ ತಿರುಗಿದಳರಸ ಕೇಳೆಂದ ॥6॥
೦೦೭ ಬಳಿಕಲಮ್ಬಾಲಿಕೆಯನಲ್ಲಿಗೆ ...{Loading}...
ಬಳಿಕಲಂಬಾಲಿಕೆಯನಲ್ಲಿಗೆ
ಕಳುಹಲಾಕೆಗೆ ಭಯದಿ ಮುಖದಲಿ
ಬಿಳುಪು ಮಸಗಿತು ಮುನಿಯ ರೌದ್ರಾಕಾರದರ್ಶನದಿ
ಲಲನೆ ಮರಳಿದಳೊಬ್ಬ ಸತಿಯನು
ಕಳುಹಲಾ ವಧು ಚಪಲದೃಷ್ಟಿಯೊ
ಳಳುಕದೀಕ್ಷಿಸಲಾಯ್ತು ಗರ್ಭಾದಾನವನಿಬರಿಗೆ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಳಿಕ ಅಂಬಾಲಿಕೆಯನ್ನು ಅಲ್ಲಿಗೆ ಕಳುಹಲು, ಮುನಿಯ ರೌದ್ರಾಕಾರ ದರ್ಶನದಿಂದ ಭಯಹುಟ್ಟಿ ಆಕೆಯ ಮುಖ ಬಿಳುಪೇರಿತು. ಅಂಬಾಲಿಕೆ ಮರಳಿದ ಮೇಲೆ ಒಬ್ಬ ಸತಿಯನ್ನು ಕಳುಹಿಸಿದಾಗ ಆ ವಧು ಹೆದರದೆ ತೀವ್ರವಾದ ಆಸೆಯಿಂದ ಮುನಿಯನ್ನು ನೋಡಿದಳು. ಆ ಮೂವರಿಗೂ ಗರ್ಭಾದಾನವಾಯ್ತು.
ಪದಾರ್ಥ (ಕ.ಗ.ಪ)
ಚಪಲ-ತೀವ್ರವಾದ ಆಸೆ, ಬಯಕೆ
ಮೂಲ ...{Loading}...
ಬಳಿಕಲಂಬಾಲಿಕೆಯನಲ್ಲಿಗೆ
ಕಳುಹಲಾಕೆಗೆ ಭಯದಿ ಮುಖದಲಿ
ಬಿಳುಪು ಮಸಗಿತು ಮುನಿಯ ರೌದ್ರಾಕಾರದರ್ಶನದಿ
ಲಲನೆ ಮರಳಿದಳೊಬ್ಬ ಸತಿಯನು
ಕಳುಹಲಾ ವಧು ಚಪಲದೃಷ್ಟಿಯೊ
ಳಳುಕದೀಕ್ಷಿಸಲಾಯ್ತು ಗರ್ಭಾದಾನವನಿಬರಿಗೆ ॥7॥
೦೦೮ ಬನ್ದು ಮುನಿಪತಿ ...{Loading}...
ಬಂದು ಮುನಿಪತಿ ತಾಯ್ಗೆ ಕೈಮುಗಿ
ದೆಂದನಂಬಿಕೆಯಲ್ಲಿ ಜನಿಸುವ
ನಂದನನು ಜಾತ್ಯಂಧನಂಬಾಲಿಕೆಗೆ ಪಾಂಡುಮಯ
ಬಂದ ಬಳಿಕಿನ ಚಪಲೆಗತಿಬಲ
ನೆಂದು ಹೇಳಿದು ತನಗೆ ನೇಮವೆ
ಯೆಂದು ತನ್ನಾಶ್ರಮಕೆ ಸರಿದನು ಬಾದರಾಯಣನು ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುನಿಪತಿ ಬಂದು ತಾಯಿಗೆ ಕೈ ಮುಗಿದು ಹೇಳಿದನು. “ಅಂಬಿಕೆಯಲ್ಲಿ ಹುಟ್ಟುವ ಮಗನು ಹುಟ್ಟು ಕುರುಡನಾಗುತ್ತಾನೆ. ಅಂಬಾಲಿಕೆಗೆ ಹುಟ್ಟುವವನು ಪಾಂಡುಮಯನಾಗುತ್ತಾನೆ. ನಂತರ ಬಂದ ಚಪಲೆಯಲ್ಲಿ ಹುಟ್ಟುವವನು ಅತಿಬಲನಾಗುತ್ತಾನೆ. ಇನ್ನು ನನಗೆ ಅಪ್ಪಣೆಯೇ ?” ಎಂದು ತನ್ನ ಆಶ್ರಮಕ್ಕೆ ಬಾದರಾಯಣನು ಹೊರಟು ಹೋದನು.
ಪದಾರ್ಥ (ಕ.ಗ.ಪ)
ಜಾತ್ಯಂಧ-ಹುಟ್ಟು ಕುರುಡ, ಪಾಂಡು-ಬಿಳಿಯ ಬಣ್ಣ
ಪಾಠಾನ್ತರ (ಕ.ಗ.ಪ)
ಬಂದು -ಬಂದ
ಆದಿಪರ್ವ, ಮೈ.ವಿ.ವಿ. ಡಾ.ಕೆ.ಆರ್.ಶೇಷಗಿರಿ
ಮೂಲ ...{Loading}...
ಬಂದು ಮುನಿಪತಿ ತಾಯ್ಗೆ ಕೈಮುಗಿ
ದೆಂದನಂಬಿಕೆಯಲ್ಲಿ ಜನಿಸುವ
ನಂದನನು ಜಾತ್ಯಂಧನಂಬಾಲಿಕೆಗೆ ಪಾಂಡುಮಯ
ಬಂದ ಬಳಿಕಿನ ಚಪಲೆಗತಿಬಲ
ನೆಂದು ಹೇಳಿದು ತನಗೆ ನೇಮವೆ
ಯೆಂದು ತನ್ನಾಶ್ರಮಕೆ ಸರಿದನು ಬಾದರಾಯಣನು ॥8॥
೦೦೯ ತುಮ್ಬಿದುದು ನವಮಾಸ ...{Loading}...
ತುಂಬಿದುದು ನವಮಾಸ ಜನಿಸಿದ
ನಂಬಿಕೆಯ ಬಸುರಿನಲಿ ಸೂನು ಗ
ತಾಂಬಕನು ಮಗನಾದನಂಬಾಲಿಕೆಗೆ ಪಾಂಡುಮಯ
ಚುಂಬಿಸಿತು ಪರಿತೋಷ ನವ ಪುಳ
ಕಾಂಬುಗಳು ಜನಜನಿತವದನೇ
ನೆಂಬೆನುತ್ಸವವನು ಕುಮಾರೋದ್ಭವದ ವಿಭವದಲಿ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವ್ಯಾಸರಿಂದ ಗರ್ಭಾದಾನ ಪಡೆದ ಮೂವರಿಗೂ ನವಮಾಸ ತುಂಬಿತು. ಅಂಬಿಕೆಯ ಬಸುರಿನಲ್ಲಿ ಕುರುಡ ಮಗ ಹುಟ್ಟಿದನು. ಅಂಬಾಲಿಕೆಗೆ ಪಾಂಡುಮಯದ ಮಗನಾದನು. ಮಕ್ಕಳ ಹುಟ್ಟುವಿಕೆಯ ವೈಭವದಲ್ಲಿ ಸಂತೋಷ ಹೆಚ್ಚಾಯಿತು. ಎಲ್ಲರಲ್ಲಿ ರೋಮಾಂಚವಾಗಿ ಉತ್ಸವವನ್ನು ಮಾಡಿದರು. ಅದನ್ನು ಏನೆಂದು ಹೇಳುವುದು?
ಪದಾರ್ಥ (ಕ.ಗ.ಪ)
ಗತಾಂಬಕ-ಕಣ್ಣುಹೋದವ, ಕುರುಡ,
ಪುಳಕಾಂಬು-ರೋಮಾಂಚದ ನೀರು,
ಜನಜನಿತ-ಜನರಲ್ಲಿ ಹಬ್ಬಿದ ವಿಷಯ,
ಉದ್ಭವ-ಹುಟ್ಟುವಿಕೆ
ಮೂಲ ...{Loading}...
ತುಂಬಿದುದು ನವಮಾಸ ಜನಿಸಿದ
ನಂಬಿಕೆಯ ಬಸುರಿನಲಿ ಸೂನು ಗ
ತಾಂಬಕನು ಮಗನಾದನಂಬಾಲಿಕೆಗೆ ಪಾಂಡುಮಯ
ಚುಂಬಿಸಿತು ಪರಿತೋಷ ನವ ಪುಳ
ಕಾಂಬುಗಳು ಜನಜನಿತವದನೇ
ನೆಂಬೆನುತ್ಸವವನು ಕುಮಾರೋದ್ಭವದ ವಿಭವದಲಿ ॥9॥
೦೧೦ ಜಾತಕರ್ಮಾದಿಯನು ಪಾರ್ಥಿವ ...{Loading}...
ಜಾತಕರ್ಮಾದಿಯನು ಪಾರ್ಥಿವ
ಜಾತಿ ವಿಧಿವಿಹಿತದಲಿ ಗಂಗಾ
ಜಾತ ಮಾಡಿಸಿ ತುಷ್ಟಿಪಡಿಸಿದ ನಿಖಿಳ ಯಾಚಕರ
ಈತನೇ ಧೃತರಾಷ್ಟ್ರನೆರಡನೆ
ಯಾತ ಪಾಂಡು ವಿಲಾಸಿನೀಸಂ
ಭೂತನೀತನು ವಿದುರನೆಂದಾಯ್ತವರಿಗಭಿಧಾನ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಂಗಾಜಾತ ಭೀಷ್ಮ ಈ ಮಕ್ಕಳಿಗೆ ಕ್ಷತ್ರಿಯ ಜಾತಿಯ ವಿಧಿವಿಹಿತವಾಗಿ ಜಾತ ಕರ್ಮಾದಿ ಸಂಸ್ಕಾರಗಳನ್ನು ಮಾಡಿಸಿ ಬೇಡುವವರೆಲ್ಲರನ್ನೂ ತೃಪ್ತಿಪಡಿಸಿದನು. ಹಿರಿಯಾತನಿಗೆ ಧೃತರಾಷ್ಟ್ರನೆಂದು, ಎರಡನೆಯವನಿಗೆ ಪಾಂಡುವೆಂದು, ದಾಸಿಯಲ್ಲಿ ಹುಟ್ಟಿದವನಿಗೆ ವಿದುರ ಎಂದು ಅವರಿಗೆ ಹೆಸರುಗಳಾಯ್ತು.
ಪದಾರ್ಥ (ಕ.ಗ.ಪ)
ಪಾರ್ಥಿವ-ಕ್ಷತ್ರಿಯ,
ತುಷ್ಟಿ-ತೃಪ್ತಿ,
ಯಾಚಕ-ಬೇಡುವವ,
ವಿಲಾಸಿನಿ-ದಾಸಿ,
ಸಂಭೂತ-ಹುಟ್ಟಿದ
ಟಿಪ್ಪನೀ (ಕ.ಗ.ಪ)
ವಿದುರ - ವೇದವ್ಯಾಸರ ಮಗನಾದರೂ ದಾಸಿಯ ಮಗನಾಗಿ ಹುಟ್ಟಿದುದರಿಂದ ಸೂತ, ಕ್ಷತ್ತ ಎಂಬ ಸಂಬೋಧನೆಗೆ ಒಳಗಾಗುವ ವಿದುರನು ಧೃತರಾಷ್ಟ್ರನ ಆಪ್ತಸಚಿವನಾಗಿದ್ದ. ಮಹಾಭಾರತ ಕಾಲದ ಮಹಾಜ್ಞಾನಿಗಳಲ್ಲಿ ಒಬ್ಬನಾಗಿದ್ದ ಪಾಂಡವ ಹಿತೈಷಿಯೂ ಸತ್ಯಪಕ್ಷಪಾತಿಯೂ ಆಗಿದ್ದ. ಅನ್ಯಾಯವನ್ನು ನೇರವಾಗಿ ಪ್ರತಿಭಟಿಸಬಲ್ಲ ಎದೆಗಾರಿಕೆ ಅವನಿಗಿತ್ತು. ಪಾಂಡವ-ಕೌರವ ಮಕ್ಕಳಲ್ಲಿ ಪರಸ್ಪರ ವಿದ್ವೇಷದ ಬೀಜಗಳನ್ನು ಗುರುತಿಸಿ ಅವುಗಳ ಮೂಲೋತ್ಪಾಟನೆ ಮಾಡಲು ಬಹಳವಾಗಿ ಪ್ರಯತ್ನಿಸಿ ಸೋತ. ಈ ಮಧ್ಯೆ ಧೃತರಾಷ್ಟ್ರನ ಕೂಡ ಕೌರವನ ಕೃತ್ಯವನ್ನೇ ಸಮರ್ಥಿಸುವ ಬುದ್ಧಿ ಬೆಳೆಸಿಕೊಂಡುದನ್ನು ಕಂಡು ವಿದುರನಿಗೆ ಬೇಸರವಾಗಿತ್ತು. ಉದಾಹರಣೆಗೆ ಅರಗಿನ ಮನೆಯಲ್ಲಿ ಪಾಂಡವರನ್ನು ಸುಡುವ ಸಂಚು ನಡೆದಿದೆ ಎಂದು ತಿಳಿದುಬಂದಾಗ ಸುಮ್ಮನಿರಬಾರದೆಂದು ಗುಟ್ಟಾಗಿ ಮ್ಲೇಚ್ಛಭಾಷೆಯಲ್ಲಿ ಧರ್ಮರಾಯನಿಗೆ ಆಪತ್ತಿನ ವಿಷಯವನ್ನು ತಿಳಿಸಿದ.
ಕಕ್ಷಘ್ನಃ ಶಿಶಿರಘ್ನಶ್ಚ ಮಹಾಕಕ್ಷೇ ಬಿಲೌಕಸಃ
ನ ದಹೇತಿತಿಚಾತ್ಮಾನಂ ಯೋ ರಕ್ಷತಿ ಸ ಜೀವತಿ
(ಪೊದೆಗಳನ್ನು ಸುಡುವ ಬೆಂಕಿ ಮಹಾರಣ್ಯದಲ್ಲಿದ್ದರೂ ಬಿಲಗಳಲ್ಲಿ ವಾಸ ಮಾಡುವ ಇಲಿಗಳನ್ನು ಏನೂ ಮಾಡಲಾರದು)- ಈ ಮಾತಿನಲ್ಲಿ ಇರುವ ಗೂಡಾರ್ಥವನ್ನು U್ಪಮನಿಸಿ.
ಅಷ್ಟೇ ಅಲ್ಲದೆ ಖನಕ ಎಂಬ ಗಣಿಕಾರನನ್ನು ಸುರಂಗ ತೋಡುವ ಕೆಲಸಕ್ಕೆ ಗುಟ್ಟಾಗಿ ಕಳಿಸಿ ಪಾಂಡವರು ತಪ್ಪಿಸಿಕೊಳ್ಳುವ ವ್ಯವಸ್ಥೆಯನ್ನೂ ಮಾಡಿದ. ಜೂಜಾಡುವ ವಿಷಯದಲ್ಲಿ ಧೃತರಾಷ್ಟ್ರನಿಗೆ ಎಚ್ಚರಿಕೆಕೊಟ್ಟು ಅದು ಸರಿಯಲ್ಲವೆಂದು ಬಗೆಬಗೆಯಲ್ಲಿ ವಾದಿಸಿದರೂ ಕೊನೆಗೆ ತಾನೇ ಹೋಗಿ ಪಾಂಡವರನ್ನು ಕರೆತರಬೇಕಾದ ದೌರ್ಭಾಗ್ಯಕ್ಕೆ ಗುರಿಯಾದ. ಜೂಜಿನುದ್ದಕ್ಕೂ ಭಿನ್ನಧ್ವನಿಯನ್ನೆತ್ತಿ ಅಪ್ರಿಯನಾದ. ದ್ರೌಪದಿಯನ್ನು ರಾಜಸಭೆಗೆ ಕರೆದು ತಾ ಎಂದು ದುರ್ಯೋದನನು ಆಜ್ಞೆ ಮಾಡಿದಾಗ ಪ್ರತಿಭಟಿಸಿ ನಿರಾಕರಿಸಿದ. ದ್ರೌಪದಿಯ ತೇಜೋಭಂಗವಾಗುತ್ತಿದ್ದಾಗ ತಪ್ಪಿಸಲು ಪ್ರಯತ್ನಪಟ್ಟ. ಆದರೆ ಅ ದುಷ್ಟಕೂಟದಲ್ಲಿ ಅವನ ಮಾತಿಗೆ ಬೆಲೆಯೆಲ್ಲಿ?
ಪಾಂಡವರು ಕಾಡಿಗೆ ಹೋದ ಮೇಲೂ ವಿದುರನಿಗೆ ಅವರದೇ ಚಿಂತೆ. ಆಗ ಒಮ್ಮೆ ಕೆರಳಿದ ಧೃತರಾಷ್ಟ್ರನು ‘ಹಾಗಾದರೆ ನೀನು ಪಾಂಡವರ ಬಳಿಗೆ ಹೋಗು’ ಎಂದ ಬೈದಾಗ ವಿದುರ ಪಾಂಡವರ ಪಾಳಯಕ್ಕೇ ಹೊರಟುಹೋದ. ಧೃತರಾಷ್ಟ್ರನು ತನ್ನ ಜೀವಮಾನದಲ್ಲಿ ಎಂದೂ ವಿದುರನನ್ನು ಬಿಟ್ಟಿರದವನು ತಡೆಯದೆ ಮತ್ತೆ ಕರೆಸಿಕೊಂಡ. ವಿದುರ-ಧೃತರಾಷ್ಟ್ರರ ಸ್ನೇಹ ಈ ಬಗೆಯದು. ಪ್ರತಿಯೊಂದು ವಿಷಯಕ್ಕೂ ಧೃತರಾಷ್ಟ್ರನ ವಿದುರನನ್ನೇ ಅವಲಂಬಿಸಿದ್ದ. ಆದುದರಿಂದ ಅಜ್ಞಾತವಾಸ ಮುಗಿದ ಮೇಲೆ ಸಂಧಿ ಮಾಡಿಕೊಳ್ಳುವುದು ಒಳ್ಳೆಯದೆಂದು ವಿದುರನು ಧೃತರಾಷ್ಟ್ರ ಕೌರವರಿಗೆ ಮತ್ತೆ ಮತ್ತೆ ಹೇಳುತ್ತಿದ್ದ.
ಸಂಧಿ ಮುರಿದು ಬೀಳುವ ಸ್ಥಿತಿ ಬರತೊಡಗಿದೆಯೆಂದು ಅನ್ನಿಸಿ ಕೃಷ್ಣರಾಯಭಾರದ ಹಿಂದಿನ ರಾತ್ರಿ ಧೃತರಾಷ್ಟ್ರನು ನಿದ್ದೆ ಬಾರದೆ ಚಡಪಡಿಸಿ ರಾತ್ರಿಯಲ್ಲೇ ವಿದುರನನ್ನು ಕರೆಸಿಕೊಂಡು ಮಾತುಕತೆಯಾಡಿದ. ಧೃತರಾಷ್ಟ್ರನೇ ವಿದುರನನ್ನು ಕುರಿತು ‘‘ಅಸ್ಮಿನ್ ರಾಜರ್ಷಿ ವಂಶೇ ಹಿ ತ್ವಮೇಕಃ ಪ್ರಾಜ್ಞಸಚಿಮತ’’ ಎಂದು ಹೇಳಿ ಅವನ ವಿವೇಕವನ್ನು ಹೊಗಳಿದ್ದಾನೆ. ವಿದುರನು ನಿದ್ರಾಹೀನತೆಗೆ ಕೊಡುವ ಕಾರಣಗಳು ಇಂದಿಗೂ ಸಂಗತವಾಗುತ್ತವೆ.
‘‘ಧೃತರಾಷ್ಟ್ರ ದೊರೆ! ಯಾರಿಗೆ ನಿದ್ದೆ ಬರುವುದಿಲ್ಲ ಗೊತ್ತೆ?
- ಬಲಿಷ್ಠರೊಂದಿಗೆ ವಿರೋಧ ಬೆಳೆಸಿಕೊಂಡವರಿಗೆ
- ಇತರರ ಸ್ವತ್ತನ್ನು ನುಂಗಲ ನೋಡಿದವರಿಗೆ
- ಮಿತಿಮೀರಿದ ಕಾಮವಾಂಛೆ ಇದ್ದವರಿಗೆ
- ಕಳ್ಳರಿಗೆ.’’
ಇವುಗಳಲ್ಲಿ ಮೊದಲ ಎರಡು ಧೃತರಾಷ್ಟ್ರ-ಕೌರವರಿಗೆ ಅನ್ವಯಿಸುತ್ತವೆ. ಈ ಅಧ್ಯಾಯದಲ್ಲಿ ವಿದುರನು ವಿಸ್ತಾರವಾಗಿ ನೀತಿಸಂಹಿತೆಯನ್ನು ಹೇಳಿ ವ್ಯಾವಹಾರಿಕ ಜಾಣ್ಮೆಯನ್ನು ಮೆರೆದಿದ್ದಾನೆ. ಧೃತರಾಷ್ಟ್ರನನ್ನು ಸಂಧಿಯ ದಾರಿಗೆ ತರುವ ಏಕೈಕ ಆಶಯದಿಂದ ವಿದುರ ಇಷ್ಟು ದೀರ್ಘವಾದ ಹಿತವನಚ ಹೇಳಿ ಅದು ಮಹಾಭಾರತದಲ್ಲೇ ಪ್ರಸಿದ್ಧವಾದ ‘ವಿದುರನೀತಿ’ಯಾಗಿ ಉಳಿದಿದೆ.
ಕೊನೆಗೆ ವಿದುರನೇ ಧೃತರಾಷ್ಟ್ರ ಗಾಂಧಾರಿಯನ್ನು ಕಾಡಿಗೆ ಕರೆದೊಯ್ಯುವ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಕುರುವಂಶದೊಂದಿಗೆ ತನಗಿದ್ದ ಸಂಬಂಧವನ್ನು ಕೊನೆಯತನಕ ಉಳಿಸಿಕೊಂಡು ಬರುತ್ತಾನೆ.
ಮೂಲ ...{Loading}...
ಜಾತಕರ್ಮಾದಿಯನು ಪಾರ್ಥಿವ
ಜಾತಿ ವಿಧಿವಿಹಿತದಲಿ ಗಂಗಾ
ಜಾತ ಮಾಡಿಸಿ ತುಷ್ಟಿಪಡಿಸಿದ ನಿಖಿಳ ಯಾಚಕರ
ಈತನೇ ಧೃತರಾಷ್ಟ್ರನೆರಡನೆ
ಯಾತ ಪಾಂಡು ವಿಲಾಸಿನೀಸಂ
ಭೂತನೀತನು ವಿದುರನೆಂದಾಯ್ತವರಿಗಭಿಧಾನ ॥10॥
೦೧೧ ಬೆಳೆವುತಿರ್ದರು ಹರಿಣಪಕ್ಷದ ...{Loading}...
ಬೆಳೆವುತಿರ್ದರು ಹರಿಣಪಕ್ಷದ
ನಳಿನರಿಪುವಿನವೊಲ್ ಕುಮಾರರು
ಕುಲವಿಹಿತ ಚೌಲೋಪನಯನವನಿಬ್ಬರಿಗೆ ರಚಿಸಿ
ಕಲಿತ ವಿದ್ಯರ ಮಾಡಿ ತಾಯು
ಮ್ಮಳಿಸದಂತಿರೆ ಸೋಮವಂಶದ
ಬೆಳವಿಗೆಯನೇ ಮಾಡಿ ಕೊಂಡಾಡಿದನು ಕಲಿಭೀಷ್ಮ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶುಕ್ಲ ಪಕ್ಷದ ಚಂದ್ರನಂತೆ ಕುಮಾರರು ಬೆಳೆಯುತ್ತಿದ್ದರು. ಕುಲವಿಹಿತವಾದ ಚೌಲೋಪನಯನಗಳನ್ನು ಇಬ್ಬರು ರಾಜಕುಮಾರರಿಗೆ ಮಾಡಿ, ವಿದ್ಯಾವಂತರನ್ನಾಗಿ ಮಾಡಿ, ತಾಯಿ ವ್ಯಥೆಗೊಳ್ಳದಂತೆ ಮಕ್ಕಳನ್ನು ಚಂದ್ರವಂಶದ ಏಳಿಗೆಯನ್ನಾಗಿ ಮಾಡಿ ಕಲಿಭೀಷ್ಮ ಕೊಂಡಾಡಿದನು.
ಪದಾರ್ಥ (ಕ.ಗ.ಪ)
ಹರಿಣಪಕ್ಷ-ಶುಕ್ಲಪಕ್ಷ,
ನಳಿನರಿಪು-ಕಮಲದ ಶತ್ರು, ಚಂದ್ರ,
ಉಮ್ಮಳಿಸು-ವ್ಯಥೆಗೊಳ್ಳು
ಬೆಳವಿಗೆ -ಏಳಿಗೆ
ಮೂಲ ...{Loading}...
ಬೆಳೆವುತಿರ್ದರು ಹರಿಣಪಕ್ಷದ
ನಳಿನರಿಪುವಿನವೊಲ್ ಕುಮಾರರು
ಕುಲವಿಹಿತ ಚೌಲೋಪನಯನವನಿಬ್ಬರಿಗೆ ರಚಿಸಿ
ಕಲಿತ ವಿದ್ಯರ ಮಾಡಿ ತಾಯು
ಮ್ಮಳಿಸದಂತಿರೆ ಸೋಮವಂಶದ
ಬೆಳವಿಗೆಯನೇ ಮಾಡಿ ಕೊಂಡಾಡಿದನು ಕಲಿಭೀಷ್ಮ ॥11॥
೦೧೨ ಧಾರುಣೀಪತಿ ಚಿತ್ತವಿಸು ...{Loading}...
ಧಾರುಣೀಪತಿ ಚಿತ್ತವಿಸು ಗಾಂ
ಧಾರ ದೇಶದ ಸುಬಲರಾಜ ಕು
ಮಾರಿ ಕುಲವಧುವಾದಳಾ ಧೃತರಾಷ್ಟ್ರ ಭೂಪತಿಗೆ
ನಾರಿಯರೊಳುತ್ತಮೆಯಲಾ ಗಾಂ
ಧಾರಿಯೆನಿಸಿ ಪತಿವ್ರತಾ ವಿ
ಸ್ತಾರಗುಣದಲಿ ಮೆರೆದಳಬಲೆ ಸಮಸ್ತಜನ ಹೊಗಳೆ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಧೃತರಾಷ್ಟ್ರ ಭೂಪತಿಗೆ ಗಾಂಧಾರ ದೇಶದ ಸುಬಲರಾಜನ ಕುಮಾರಿ ಕುಲವಧುವಾದಳು. ನಾರಿಯರಲ್ಲಿ ಉತ್ತಮಳು. ಪತಿವ್ರತಾ ಗುಣದಲ್ಲಿ ಮೇಲೆನ್ನಿಸಿಕೊಂಡು ಗಾಂಧಾರಿಯೆಂದು ಪ್ರಸಿದ್ಧಳಾಗಿ ಸಮಸ್ತ ಜನರ ಹೊಗಳಿಕೆಗೆ ಪಾತ್ರಳಾದಳು.
ಟಿಪ್ಪನೀ (ಕ.ಗ.ಪ)
ಗಾಂಧಾರಿ : ಗಾಂಧಾರ ದೇಶದ ಅರಸನಾದ ಸುಬಲನ ಮಗಳು. ಈಕೆಗೆ ಶಕುನಿ ಮೊದಲಾದ ಹದಿಮೂರು ಮಂದಿ ಸಹೋದರರು, ಹತ್ತು ಮಂದಿ ಸೋದರಿಯರು ಇದ್ದರು. ಈಕೆ ಧೃತರಾಷ್ಟ್ರನ ವಿಕ್ರಮಾದಿ ಗುಣ ಸಂಪತ್ತಿಗೆ ಮರುಳಾಗಿ ಕುರುಡನಾಗಿದ್ದರೂ ಈತನನ್ನು ಮದುವೆಯಾದಳು. ಈಕೆ ಪತಿವ್ರತ ಪರಾಯಣಳಾಗಿದ್ದಳು. ಪತಿ ಅಂಧನೆಂದು, ಬಟ್ಟೆಯಿಂದ ತನ್ನ ಕಣ್ಣುಗಳನ್ನು ಮುಚ್ಚಿಕೊಂಡು, ಸದಾ ಪತಿಯನ್ನು ಅನುಸರಿಸುವೆನೆಂದು ನಿರ್ಧಾರ ಮಾಡಿಕೊಂಡಿದ್ದಳು.
ಗಾಂಧಾರ ದೇಶ - ಒಂದು ಪ್ರಾಚೀನ ದೇಶ, ಇದು ಕಾಬೂಲ (ಕಾಪಿಲ) ನದೀ ತೀರದಲ್ಲಿ ಸಿಂಧು ಮತ್ತು ಕುನಾರ್ ನದಿಗಳ ನಡುವೆ ಇದೆ. ಪುರುಷಪುರ (ಪೇಷಾವರ್) ಇದರ ರಾಜಧಾನಿ. ಇಂದಿನ ಆಘ್ಫಾನಿಸ್ತಾನದಲ್ಲಿದೆ.
ಧೃತರಾಷ್ಟ್ರ -ವಿಚಿತ್ರವೀರ್ಯನ ಮರಣಾನಂತರ ವ್ಯಾಸಕೃಪೆಯಿಂದ ಅಂಬಿಕೆಯ ಮಗನಾಗಿ ಪಾಂಡುವಿನ ಅನ್ನನಾಗಿ ಹುಟ್ಟಿದ ಧೃತರಾಷ್ಟ್ರನು ಕಣ್ಣು ಕುರುಡಿನ ಜೊತೆಗೆ ಮನಸ್ಸಿನ ಕುರುಡನ್ನೂ ಬೆಳೆಸಿಕೊಂಡು ಬಂದವನು. ಗಾಂಧಾರಿ ಇವನ ಹೆಂಡತಿ. ಈ ದಂಪತಿಗಳಿಗೆ ನೂರು ಜನ ಕೌರವರು ದುಶ್ಯಲೆ ಎಂಬ ಮಗಳ
ಮೂಲ ...{Loading}...
ಧಾರುಣೀಪತಿ ಚಿತ್ತವಿಸು ಗಾಂ
ಧಾರ ದೇಶದ ಸುಬಲರಾಜ ಕು
ಮಾರಿ ಕುಲವಧುವಾದಳಾ ಧೃತರಾಷ್ಟ್ರ ಭೂಪತಿಗೆ
ನಾರಿಯರೊಳುತ್ತಮೆಯಲಾ ಗಾಂ
ಧಾರಿಯೆನಿಸಿ ಪತಿವ್ರತಾ ವಿ
ಸ್ತಾರಗುಣದಲಿ ಮೆರೆದಳಬಲೆ ಸಮಸ್ತಜನ ಹೊಗಳೆ ॥12॥
೦೧೩ ಇತ್ತ ಕುನ್ತೀಭೋಜನೆಮ್ಬ ...{Loading}...
ಇತ್ತ ಕುಂತೀಭೋಜನೆಂಬ ನೃ
ಪೋತ್ತಮನ ಭವನದಲಿ ಮುರಹರ
ನತ್ತೆ ಬೆಳೆವುತ್ತಿರ್ದಳಾ ವಸುದೇವನೃಪನನುಜೆ
ಹೆತ್ತವರಿಗೋಲೈಸುವರಿಗೆ ಮ
ಹೋತ್ತಮರಿಗುಳಿದಖಿಳ ಲೋಕದ
ಚಿತ್ತಕಹುದೆನೆ ನಡೆವ ಗುಣದಲಿ ಮೆರೆದಳಾ ಕುಂತಿ ॥13॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇನ್ನೊಂದೆಡೆ ಕುಂತೀಭೋಜನೆಂಬ ಶ್ರೇಷ್ಠನಾದ ರಾಜನ ಮನೆಯಲ್ಲಿ ಕೃಷ್ಣನ ಸೋದರತ್ತೆ, ವಸುದೇವ ಮಹಾರಾಜನ ತಂಗಿ ಬೆಳೆಯುತ್ತಿದ್ದಳು. ಹೆತ್ತವರಿಗೆ, ಸೇವೆ ಮಾಡುವವರಿಗೆ, ಅತ್ಯಂತ ಶ್ರೇಷ್ಠರಾದವರಿಗೆ, ಉಳಿದ ಅಖಿಳ ಲೋಕದವರಿಗೆಲ್ಲಾ ಮನ ಮೆಚ್ಚುವ ಗುಣದಲ್ಲಿ ಕುಂತಿ ಎದ್ದು ಕಾಣುತ್ತಿದ್ದಳು.
ಪದಾರ್ಥ (ಕ.ಗ.ಪ)
ಅನುಜೆ-ತಂಗಿ, ಓಲೈಸು-ಸೇವೆ ಮಾಡು
ಟಿಪ್ಪನೀ (ಕ.ಗ.ಪ)
ಕುಂತೀಭೋಜ - ಕುಂತಿ ದೇಶದ ಅರಸು. ವಸುದೇವನ ತಂದೆಯಾದ ಶೂರರಾಜನ ಸೋದರತ್ತೆಯ ಮಗ. ತನಗೆ ಮಕ್ಕಳಿಲ್ಲದುದರಿಂದ ಶೂರರಾಜನ ಮಗಳಾದ ಪೃಥೆಯನ್ನು ಸಾಕಿದ.
ಮೂಲ ...{Loading}...
ಇತ್ತ ಕುಂತೀಭೋಜನೆಂಬ ನೃ
ಪೋತ್ತಮನ ಭವನದಲಿ ಮುರಹರ
ನತ್ತೆ ಬೆಳೆವುತ್ತಿರ್ದಳಾ ವಸುದೇವನೃಪನನುಜೆ
ಹೆತ್ತವರಿಗೋಲೈಸುವರಿಗೆ ಮ
ಹೋತ್ತಮರಿಗುಳಿದಖಿಳ ಲೋಕದ
ಚಿತ್ತಕಹುದೆನೆ ನಡೆವ ಗುಣದಲಿ ಮೆರೆದಳಾ ಕುಂತಿ ॥13॥
೦೧೪ ಒನ್ದು ದಿನ ...{Loading}...
ಒಂದು ದಿನ ದೂರ್ವಾಸಮುನಿ ನೃಪ
ಮಂದಿರಕೆ ಬರಲಾ ಮಹೀಪತಿ
ಬಂದ ಬರವಿನಲವರ ಮರೆದನು ರಾಜಕಾರ್ಯದಲಿ
ಇಂದು ಕುಂತೀ ಭೋಜನೊಡೆತನ
ಬೆಂದು ಹೋಗಲಿಯೆಂಬ ಶಾಪವ
ನಿಂದುಮುಖಿ ನಿಲಿಸಿದಳು ಹೊರಳಿದಳವರ ಚರಣದಲಿ ॥14॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದು ದಿನ ದೂರ್ವಾಸ ಮುನಿ ರಾಜನ ಅರಮನೆಗೆ ಬರಲು, ಆ ಮಹಾರಾಜ, ರಾಜಕಾರ್ಯದ ಕಾರಣ, ದೂರ್ವಾಸರ ಆಗಮನವನ್ನು ಮರೆತನು. ಆಗ " ಇಂದು ಕುಂತೀಭೋಜನೊಡೆತನ ಬೆಂದು ಹೋಗಲಿ" ಎಂಬ ಶಾಪವನ್ನು ಕೊಡುವುದರಲ್ಲಿದ್ದ ದೂರ್ವಾಸನ ಪಾದಗಳಲ್ಲಿ ಹೊರಳಾಡಿ ಕುಂತಿ ಶಾಪವನ್ನು ನಿಲ್ಲಿಸಿದಳು.
ಟಿಪ್ಪನೀ (ಕ.ಗ.ಪ)
ದೂರ್ವಾಸ-ಅತ್ರಿ ಮಹರ್ಷಿಯಿಂದ ಅನಸೂಯೆಯಲ್ಲಿ ಶಂಕರನ ಅಂಶದಿಂದ ಜನಿಸಿದವ.
ಮೂಲ ...{Loading}...
ಒಂದು ದಿನ ದೂರ್ವಾಸಮುನಿ ನೃಪ
ಮಂದಿರಕೆ ಬರಲಾ ಮಹೀಪತಿ
ಬಂದ ಬರವಿನಲವರ ಮರೆದನು ರಾಜಕಾರ್ಯದಲಿ
ಇಂದು ಕುಂತೀ ಭೋಜನೊಡೆತನ
ಬೆಂದು ಹೋಗಲಿಯೆಂಬ ಶಾಪವ
ನಿಂದುಮುಖಿ ನಿಲಿಸಿದಳು ಹೊರಳಿದಳವರ ಚರಣದಲಿ ॥14॥
೦೧೫ ತರುಣಿಯೊಡಗೊಣ್ಡೊಯ್ದು ಕನ್ಯಾ ...{Loading}...
ತರುಣಿಯೊಡಗೊಂಡೊಯ್ದು ಕನ್ಯಾ
ಪರಮ ಭವನದಲಾ ಮುನಿಯನುಪ
ಚರಿಸಿದಳು ವಿವಿಧಾನ್ನ ಪಾನ ರಸಾಯನಂಗಳಲಿ
ಹರ ಮಹಾದೇವೀ ಮಗುವಿನಾ
ದರಣೆÂಗೀ ವಿನಯೋಪಚಾರಕೆ
ಹಿರಿದು ಮೆಚ್ಚಿದೆನೆಂದು ತಲೆದೂಗಿದನು ದೂರ್ವಾಸ ॥15॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುನಿ ದೂರ್ವಾಸರನ್ನು ಯುವತಿ ಕುಂತಿ ತನ್ನೊಡನೆ ಅಂತಃಪುರಕ್ಕೆ ಕರೆದುಕೊಂಡು ಹೋಗಿ ಅವರಿಗೆ ವಿಧವಿಧವಾದ ಅನ್ನ, ಪಾನ, ರಸಾಯನಗಳನ್ನು ನೀಡಿ ಉಪಚರಿಸಿದಳು. “ಹರಮಹಾದೇವ, ಈ ಮಗುವಿನ ಮನ್ನಣೆಗೆ, ವಿನಯದ ಉಪಚಾರಕ್ಕೆ ಹೆಚ್ಚಾಗಿ ಮೆಚ್ಚಿದೆನು” ಎಂದು ದೂರ್ವಾಸ ತಲೆದೂಗಿದನು.
ಪದಾರ್ಥ (ಕ.ಗ.ಪ)
ಆದರಣೆ-ಮನ್ನಣೆ, ಮರ್ಯಾದೆ
ಮೂಲ ...{Loading}...
ತರುಣಿಯೊಡಗೊಂಡೊಯ್ದು ಕನ್ಯಾ
ಪರಮ ಭವನದಲಾ ಮುನಿಯನುಪ
ಚರಿಸಿದಳು ವಿವಿಧಾನ್ನ ಪಾನ ರಸಾಯನಂಗಳಲಿ
ಹರ ಮಹಾದೇವೀ ಮಗುವಿನಾ
ದರಣೆÂಗೀ ವಿನಯೋಪಚಾರಕೆ
ಹಿರಿದು ಮೆಚ್ಚಿದೆನೆಂದು ತಲೆದೂಗಿದನು ದೂರ್ವಾಸ ॥15॥
೦೧೬ ಮಗಳೆ ಬಾ ...{Loading}...
ಮಗಳೆ ಬಾ ಕೊಳ್ ಐದು ಮಂತ್ರಾ
ಳಿಗಳನಿವು ಸಿದ್ಧ ಪ್ರಯೋಗವು
ಸೊಗಸು ದಿವಿಜರೊಳಾರ ಮೇಲುಂಟವರ ನೆನೆ ಸಾಕು
ಮಗನು ಜನಿಸುವನೆಂದು ಮುನಿ ಕುಂ
ತಿಗೆ ರಹಸ್ಯದೊಳರುಹಿ ಮುನಿ ಮೌ
ಳಿಗಳ ಮಣಿ ಪರಿತೋಷದಲಿ ಸರಿದನು ನಿಜಾಶ್ರಮಕೆ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮಗಳೆ, ಬಾ” ಎಂದು ಕುಂತಿಯನ್ನು ಹತ್ತಿರಕ್ಕೆ ಕರೆದು “ಐದು ಮಂತ್ರಗಳನ್ನು ತೆಗೆದುಕೊ, ಇವು ಸಿದ್ಧಿ ಪಡೆಯಲು ಪ್ರಯೋಗಿಸುವಂತಹವು, ದೇವತೆಗಳಲ್ಲಿ ನಿನಗೆ ಯಾರ ಮೇಲೆ ಮೆಚ್ಚಿಕೆಯುಂಟೋ ಅವರನ್ನು ನೆನೆದರೆ ಸಾಕು, ಮಗನು ಹುಟ್ಟುವ” ಎಂದು ಮುನಿಶ್ರೇಷ್ಠನು ರಹಸ್ಯದಲ್ಲಿ ತಿಳಿಸಿ ತನ್ನ ಆಶ್ರಮಕ್ಕೆ ಹೊರಟನು.
ಪದಾರ್ಥ (ಕ.ಗ.ಪ)
ದಿವಿಜರು-ದೇವತೆಗಳು,
ಮೌಳಿ-ಶ್ರೇಷ್ಠ
ಮೂಲ ...{Loading}...
ಮಗಳೆ ಬಾ ಕೊಳ್ ಐದು ಮಂತ್ರಾ
ಳಿಗಳನಿವು ಸಿದ್ಧ ಪ್ರಯೋಗವು
ಸೊಗಸು ದಿವಿಜರೊಳಾರ ಮೇಲುಂಟವರ ನೆನೆ ಸಾಕು
ಮಗನು ಜನಿಸುವನೆಂದು ಮುನಿ ಕುಂ
ತಿಗೆ ರಹಸ್ಯದೊಳರುಹಿ ಮುನಿ ಮೌ
ಳಿಗಳ ಮಣಿ ಪರಿತೋಷದಲಿ ಸರಿದನು ನಿಜಾಶ್ರಮಕೆ ॥16॥
೦೧೭ ಮಗುವುತನದಲಿ ಬೊಮ್ಬೆಯಾಟಕೆ ...{Loading}...
ಮಗುವುತನದಲಿ ಬೊಂಬೆಯಾಟಕೆ
ಮಗುವನೇ ತಹೆನೆಂದು ಬಂದಳು
ಗಗನನದಿಯಲಿ ಮಿಂದಳುಟ್ಟಳು ಲೋಹಿತಾಂಬರವ
ವಿಗಡಮುನಿಪನ ಮಂತ್ರವನು ನಾ
ಲಗೆಗೆ ತಂದಳು ರಾಗರಸದಲಿ
ಗಗನಮಣಿಯನು ನೋಡಿ ಕಣ್ಮುಚ್ಚಿದಳು ಯೋಗದಲಿ ॥17॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುಂತಿಯು ಬಾಲ್ಯದಲ್ಲಿ ಬೊಂಬೆಯ ಆಟಕ್ಕೆ ಮಗುವನ್ನೇ ತರುವೆನೆಂದು ಗಂಗಾನದಿಯ ಬಳಿಗೆ ಬಂದಳು. ನದಿಯಲ್ಲಿ ಸ್ನಾನಮಾಡಿ ಕೆಂಪು ಬಟ್ಟೆಯನ್ನು ಉಟ್ಟುಕೊಂಡಳು. ಘನ ಮುನಿಯ ಮಂತ್ರವನ್ನು ಸ್ಮರಿಸಿಕೊಂಡು, ಪ್ರೀತಿಯಿಂದ ಸೂರ್ಯನನ್ನು ನೋಡಿ ಯೋಗದಲ್ಲಿ ಕಣ್ಮುಚ್ಚಿದಳು.
ಪದಾರ್ಥ (ಕ.ಗ.ಪ)
ಮಿಂದು-ಸ್ನಾನಮಾಡಿ,
ಲೋಹಿತಾಂಬರ-ಕೆಂಪಾದ ಬಟ್ಟೆ,
ವಿಗಡ-ಘನ ,
ರಾಗ-ಸಂತೋಷ, ಪ್ರೀತಿ,
ಗಗನಮಣಿ-ಸೂರ್ಯ
ಮೂಲ ...{Loading}...
ಮಗುವುತನದಲಿ ಬೊಂಬೆಯಾಟಕೆ
ಮಗುವನೇ ತಹೆನೆಂದು ಬಂದಳು
ಗಗನನದಿಯಲಿ ಮಿಂದಳುಟ್ಟಳು ಲೋಹಿತಾಂಬರವ
ವಿಗಡಮುನಿಪನ ಮಂತ್ರವನು ನಾ
ಲಗೆಗೆ ತಂದಳು ರಾಗರಸದಲಿ
ಗಗನಮಣಿಯನು ನೋಡಿ ಕಣ್ಮುಚ್ಚಿದಳು ಯೋಗದಲಿ ॥17॥
೦೧೮ ಅರಸ ಕೇಳ್ ...{Loading}...
ಅರಸ ಕೇಳ್ ಮುನಿಯಿತ್ತ ಮಂತ್ರಾ
ಕ್ಷರದ ಕರಹಕೆ ತಳುವಿದರೆ ದಿನ
ಕರನ ತೇಜವ ಕೊಂಬನೇ ದೂರ್ವಾಸ ವಿಗಡನಲ
ಧರೆಗೆ ಬಂದನು ಸೂರ್ಯನಾತನ
ಕಿರಣ ಲಹರಿಯ ಹೊಯ್ಲಿನಲಿ ಸರ
ಸಿರುಹಮುಖಿ ಬೆಚ್ಚಿದಳು ಬಿಜಯಂಗೈಯಿ ನೀವೆನುತ ॥18॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಾಜಾ, ಕೇಳು, ಮುನಿ ಕೊಟ್ಟ ಮಂತ್ರಾಕ್ಷರದ ಕರೆಗೆ ತಡಮಾಡಿದರೆ ಸೂರ್ಯನ ತೇಜಸ್ಸನ್ನು ಕೊಳ್ಳದೇ ಇರುತ್ತಾನೆಯೆ ? ದೂರ್ವಾಸ ಸಾಹಸನಲ್ಲವೇ ? ಸೂರ್ಯನು ಭೂಮಿಗೆ ಬಂದನು. ಆತನ ಕಿರಣ ಸಮೂಹದ ಹೊಡೆತದಲ್ಲಿ ಕಮಲಮುಖಿ ಕುಂತಿ ಬೆಚ್ಚಿದಳು. ನೀವು ಹೊರಟು ಹೋಗಿ ಎಂದು ಬೇಡಿಕೊಂಡಳು.
ಪದಾರ್ಥ (ಕ.ಗ.ಪ)
ಕರಹ-ಆಹ್ವಾನ, ಕೂಗುವಿಕೆ,
ತಳುವು-ತಡ, ನಿಧಾನ, ವಿಳಂಬ,
ಬಿಜಯಂಗೈಯ್-ಹೊರಟು ಹೋಗು
ಲಹರಿ - ಅಲೆ
ಟಿಪ್ಪನೀ (ಕ.ಗ.ಪ)
ಸೂರ್ಯ - ಕಶ್ಯಪ ಮುನಿಯಿಂದ ಅದಿತಿಯಲ್ಲಿ ಜನಿಸಿದವ. ಆದಿತ್ಯನೆಂತಲೂ ಕರೆಯುತ್ತಾರೆ. ತ್ವಷ್ಟೃವಿನ ಮಗಳಾದ ಸಂಜ್ಞಾ ದೇವಿಯನ್ನು ಮದುವೆಯಾಗಿ ಯಮ, ಮನು, ಯಮುನೆಯರೆಂಬ ಮೂವರು ಮಕ್ಕಳನ್ನು ಪಡೆದ. ಸಂಜ್ಞಾ ದೇವಿಯ ಪ್ರತಿಬಿಂಬವಾದ ಛಾಯಾದೇವಿಯಲ್ಲಿ ಸಾವರ್ಣ, ಶನೈಶ್ಚರರೆಂಬ ಇಬ್ಬರು ಪುತ್ರರನ್ನು ಪಡೆದ. ಸಂಜ್ಞಾ ದೇವಿ ಕುದುರೆ ರೂಪದಿಂದ ಇದ್ದಾಗ ಈತನಿಂದ ಜನಿಸಿದವರು ಅಶ್ವಿನೀದೇವತೆಗಳು.
ಮೂಲ ...{Loading}...
ಅರಸ ಕೇಳ್ ಮುನಿಯಿತ್ತ ಮಂತ್ರಾ
ಕ್ಷರದ ಕರಹಕೆ ತಳುವಿದರೆ ದಿನ
ಕರನ ತೇಜವ ಕೊಂಬನೇ ದೂರ್ವಾಸ ವಿಗಡನಲ
ಧರೆಗೆ ಬಂದನು ಸೂರ್ಯನಾತನ
ಕಿರಣ ಲಹರಿಯ ಹೊಯ್ಲಿನಲಿ ಸರ
ಸಿರುಹಮುಖಿ ಬೆಚ್ಚಿದಳು ಬಿಜಯಂಗೈಯಿ ನೀವೆನುತ ॥18॥
೦೧೯ ಎನ್ನ ಬಾರದಲೇ ...{Loading}...
ಎನ್ನ ಬಾರದಲೇ ಋಷಿಪ್ರತಿ
ಪನ್ನ ಮಂತ್ರವಮೋಘವದರಿಂ
ದೆನ್ನ ತೂಕದ ಮಗನಹನು ನೀನಂಜಬೇಡೆನುತ
ಕನ್ನಿಕೆಯ ಮುಟ್ಟಿದನು ಮುನ್ನಿನ
ಕನ್ನೆತನ ಕೆಡದಿರಲಿಯೆನುತವೆ
ತನ್ನ ರಥವಿದ್ದೆಡೆಗೆ ರವಿ ತಿರುಗಿದನು ವಹಿಲದಲಿ ॥19॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಸೂರ್ಯ, “ಹೀಗೆನ್ನಬಾರದು, ಜ್ಞಾನಿಯಾದ ಋಷಿಯಿಂದ ಪಡೆದ ಮಂತ್ರವು ವ್ಯರ್ಥವಾಗದು. ಅದರಿಂದ ತನ್ನ ಘನತೆಯ ಮಗನು ಉಂಟಾಗುವನು. ನೀನು ಹೆದರಬೇಡ” ಎಂದು ಕನ್ನಿಕೆ ಕುಂತಿಯನ್ನು ಮುಟ್ಟಿ, “ಮುನ್ನಿನ ಕನ್ನೆತನ ಕೆಡದಿರಲಿ” ಎನುತ್ತ ತನ್ನ ರಥವಿದ್ದ ಸ್ಥಳಕ್ಕೆ ಬೇಗ ತಿರುಗಿದನು.
ಪದಾರ್ಥ (ಕ.ಗ.ಪ)
ಪ್ರತಿಪನ್ನ-ಜ್ಞಾನಿಯಾದ,
ಅಮೋಘ-ವ್ಯರ್ಥವಾಗದ,
ಕನ್ನಿಕೆ-ಕುಮಾರಿ, ಕನ್ಯೆ
ಮೂಲ ...{Loading}...
ಎನ್ನ ಬಾರದಲೇ ಋಷಿಪ್ರತಿ
ಪನ್ನ ಮಂತ್ರವಮೋಘವದರಿಂ
ದೆನ್ನ ತೂಕದ ಮಗನಹನು ನೀನಂಜಬೇಡೆನುತ
ಕನ್ನಿಕೆಯ ಮುಟ್ಟಿದನು ಮುನ್ನಿನ
ಕನ್ನೆತನ ಕೆಡದಿರಲಿಯೆನುತವೆ
ತನ್ನ ರಥವಿದ್ದೆಡೆಗೆ ರವಿ ತಿರುಗಿದನು ವಹಿಲದಲಿ ॥19॥
೦೨೦ ಅರಸ ಕೇಳ್ ...{Loading}...
ಅರಸ ಕೇಳ್ ಆಶ್ಚರ್ಯವನು ತಾ
ವರೆಯ ಮಿತ್ರನ ಕರಗಿ ಕರುವಿನೊ
ಳೆರೆದರೆಂದೆನೆ ಥಳಥಳಿಸಿ ತೊಳಗುವ ತನುಚ್ಛವಿಯ
ಕುರುಳುದಲೆ ನಿಟ್ಟೆಸಳುಗಂಗಳ
ಚರಣ ಕರಪಲ್ಲವದ ಕೆಂಪಿನ
ವರಕುಮಾರನ ಕಂಡು ಬೆರಗಿನೊಳಿರ್ದಳಾ ಕುಂತಿ ॥20॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸ ಮುಂದಿನ ಆಶ್ಚರ್ಯವನ್ನು ಕೇಳು. ಸೂರ್ಯನನ್ನು ಕರಗಿಸಿ ಎರಕದಲ್ಲಿ ಹೊಯ್ದರೋ ಎನ್ನುವಂತೆ ಥಳಥಳಿಸಿ ತೊಳಗುವ ಶರೀರ ಕಾಂತಿಯ, ತುಂಬುಗೂದಲಿನ ತಲೆಯ, ಹೂವಿನ ದಳದಂತೆ ವಿಶಾಲವಾದ ಕಣ್ಣುಗಳ, ಚಿಗುರಿನಂತೆ ಮೃದುವಾದ, ಕೆಂಪಾದ ಕೈ ಹಾಗೂ ಪಾದಗಳ ಶ್ರೇಷ್ಠ ಮಗುವನ್ನು ಕಂಡು ಕುಂತಿ ಆಶ್ಚರ್ಯದಿಂದಿದ್ದಳು.
ಪದಾರ್ಥ (ಕ.ಗ.ಪ)
ಕರು-ಎರಕ, ಅಚ್ಚು,
ಎರೆ-ಸುರಿ, ಹೊಯ್ಯು,
ಛವಿ-ಕಾಂತಿ,
ಕುರುಳು-ಕೂದಲು ,
ನಿಟ್ಟೆಸಳುಗಂಗಳು-ಹೂವಿನದಳದಂತೆ ವಿಶಾಲವಾದ ಕಣ್ಣುಗಳು
ಚರಣಕರಪಲ್ಲವದ-ಚಿಗುರಿನಂತೆ ಮೃದುವಾದ ಕೈ ಹಾಗೂ ಪಾದ.
ಮೂಲ ...{Loading}...
ಅರಸ ಕೇಳ್ ಆಶ್ಚರ್ಯವನು ತಾ
ವರೆಯ ಮಿತ್ರನ ಕರಗಿ ಕರುವಿನೊ
ಳೆರೆದರೆಂದೆನೆ ಥಳಥಳಿಸಿ ತೊಳಗುವ ತನುಚ್ಛವಿಯ
ಕುರುಳುದಲೆ ನಿಟ್ಟೆಸಳುಗಂಗಳ
ಚರಣ ಕರಪಲ್ಲವದ ಕೆಂಪಿನ
ವರಕುಮಾರನ ಕಂಡು ಬೆರಗಿನೊಳಿರ್ದಳಾ ಕುಂತಿ ॥20॥
೦೨೧ ಅಳುವ ಶಿಶುವನು ...{Loading}...
ಅಳುವ ಶಿಶುವನು ತೆಗೆದು ತೆಕ್ಕೆಯ
ಪುಳಕಜಲದಲಿ ನಾದಿ ಹರುಷದ
ಬಳಿಯ ಲಜ್ಜೆಯ ಭಯದ ಹೋರಟೆಗಳುಕಿ ಹಳುವಾಗಿ
ಕುಲದಸಿರಿ ತಪ್ಪುವುದಲಾ ಸಾ
ಕಿಳುಹ ಬೇಕೆಂದೆನುತ ಗಂಗಾ
ಜಲದೊಳಗೆ ಹಾಯ್ಕಿದಳು ಜನದಪವಾದ ಭೀತಿಯಲಿ ॥21॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಳುತ್ತಿರುವ ಮಗುವನ್ನು ತೆಗೆದು ಆಲಂಗಿಸಿ, ರೋಮಾಂಚನದ ನೀರಿನಲ್ಲಿ ತೋಯಿಸಿ, ಸಂತೋಷ, ನಾಚಿಕೆ, ಭಯಗಳ ಹೋರಾಟದಲ್ಲಿ ಬಳಲಿದ ಕುಂತಿಯು “ಕುಲದ ಸಿರಿ ತಪ್ಪುವುದಲ್ಲಾ, ಇನ್ನು ಮಗುವಿನಿಂದ ಅಗಲಬೇಕೆ? " ಎನ್ನುತ್ತ ಜನರ ಅಪವಾದ ಭೀತಿಯಿಂದ ಗಂಗಾನದಿಯಲ್ಲಿ ಮಗುವನ್ನು ಹಾಕಿದಳು.
ಪದಾರ್ಥ (ಕ.ಗ.ಪ)
ತೆಕ್ಕೆ-ಆಲಿಂಗನ,
ನಾದು-ಒದ್ದೆ ಮಾಡು, ತೋಯಿಸು,
ಹೋರಟೆ-ಹೋರಾಟ
ಮೂಲ ...{Loading}...
ಅಳುವ ಶಿಶುವನು ತೆಗೆದು ತೆಕ್ಕೆಯ
ಪುಳಕಜಲದಲಿ ನಾದಿ ಹರುಷದ
ಬಳಿಯ ಲಜ್ಜೆಯ ಭಯದ ಹೋರಟೆಗಳುಕಿ ಹಳುವಾಗಿ
ಕುಲದಸಿರಿ ತಪ್ಪುವುದಲಾ ಸಾ
ಕಿಳುಹ ಬೇಕೆಂದೆನುತ ಗಂಗಾ
ಜಲದೊಳಗೆ ಹಾಯ್ಕಿದಳು ಜನದಪವಾದ ಭೀತಿಯಲಿ ॥21॥
೦೨೨ ತಾಯೆ ಬಲ್ಲನ್ದದಲಿ ...{Loading}...
ತಾಯೆ ಬಲ್ಲಂದದಲಿ ಕಂದನ
ಕಾಯಿ ಮೇಣ್ ಕೊಲ್ಲೆನುತ ಕಮಲದ
ಳಾಯತಾಕ್ಷಿ ಕುಮಾರಕನ ಹಾಯ್ಕಿದಳು ಮಡುವಿನಲಿ
ರಾಯ ಕೇಳೈ ಸಕಲ ಲೋಕದ
ತಾಯಲಾ ಜಾಹ್ನವಿ ತರಂಗದಿ
ನೋಯಲೀಯದೆ ಮುಳುಗಲೀಯದೆ ಚಾಚಿದಳು ತಡಿಗೆ ॥22॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ತಾಯೆ, ನಿನಗೆ ತಿಳಿದ ರೀತಿಯಲ್ಲಿ ಮಗುವನ್ನು ಕಾಪಾಡು ಅಥವಾ ಕೊಲ್ಲು” ಎನುತ್ತ ಕುಂತಿ ಕುಮಾರನನ್ನು ಮಡುವಿನಲ್ಲಿ ಹಾಕಿದಳು. ರಾಜ, ಕೇಳು. ಜಾಹ್ನವಿ ಲೋಕಕ್ಕೇ ತಾಯಲ್ಲವೇ ! ಅಲೆಗಳಲ್ಲಿ ನೋವಾಗದಂತೆ ಮುಳುಗದಂತೆ ಗಂಗೆಯು ಮಗನನ್ನು ದಡಕ್ಕೆ ಚಾಚಿದಳು.
ಪದಾರ್ಥ (ಕ.ಗ.ಪ)
ಬಲ್ಲಂದದಲಿ-ತಿಳಿದ ರೀತಿಯಲ್ಲಿ, ಜಾಹ್ನವಿ-ಗಂಗೆ, ತರಂಗ-ಅಲೆ, ತಡಿ-ದಡ
ಟಿಪ್ಪನೀ (ಕ.ಗ.ಪ)
ಜಾಹ್ನವಿ - ಗಂಗೆ ಶಿವನ ಮಸ್ತಕದ ಮೇಲೆ ಬಿದ್ದು, ಅಲ್ಲಿಂದ ಭಗೀರಥನ ಹಿಂದೆಯೇ ಬರುತ್ತಾ ದಾರಿಯಲ್ಲಿ ಜಹ್ನುವಿನ ಯಜ್ಞ ಶಾಲೆಯನ್ನು ಕೊಚ್ಚಿಕೊಂಡು ಹರಿಯ ತೊಡಗಿತು. ಜಹ್ನುಮುನಿ ಗಂಗೆಯನ್ನು ಶೋಷಿಸಿ ಬಿಟ್ಟ. ಭಗೀರಥನ ಕೋರಿಕೆಗೆ ಜಹ್ನು ಗಂಗೆ ಮರಳಿ ಪ್ರವಹಿಸುವಂತೆ ಮಾಡಿದ. ಈ ಕಾರಣದಿಂದಲೇ ಜಾಹ್ನವೀ ಎಂಬ ಹೆಸರು ಗಂಗೆಗೆ ಬಂತು.
ಮೂಲ ...{Loading}...
ತಾಯೆ ಬಲ್ಲಂದದಲಿ ಕಂದನ
ಕಾಯಿ ಮೇಣ್ ಕೊಲ್ಲೆನುತ ಕಮಲದ
ಳಾಯತಾಕ್ಷಿ ಕುಮಾರಕನ ಹಾಯ್ಕಿದಳು ಮಡುವಿನಲಿ
ರಾಯ ಕೇಳೈ ಸಕಲ ಲೋಕದ
ತಾಯಲಾ ಜಾಹ್ನವಿ ತರಂಗದಿ
ನೋಯಲೀಯದೆ ಮುಳುಗಲೀಯದೆ ಚಾಚಿದಳು ತಡಿಗೆ ॥22॥
೦೨೩ ಕೆದರಿ ಕಾಲಲಿ ...{Loading}...
ಕೆದರಿ ಕಾಲಲಿ ಮಳಲ ರಾಶಿಯ
ನೊದೆದು ಕೈಗಳ ಕೊಡಹಿ ಭೋಯೆಂ
ದೊದರುತಿರ್ದನು ಶಿಶುಗಳರಸನು ರವಿಯನೀಕ್ಷಿಸುತ
ಇದನು ಕಂಡನು ಸೂತನೊಬ್ಬನು
ಮುದದ ಮದದಲಿ ತನ್ನ ಮರೆದು
ಬ್ಬಿದನಿದೆತ್ತಣ ನಿಧಿಯೊ ಶಿವಶಿವಯೆಂದು ನಡೆತಂದ ॥23॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಡ ಮುಟ್ಟಿದ, ಶಿಶುಗಳಿಗೆ ಅರಸನೆನಿಸಿದ ಮಗು ಮರಳರಾಶಿಯನ್ನು ಕಾಲಲ್ಲಿ ಒದೆದು ಕೆದರಿ, ಕೈಗಳ ಕೊಡವುತ್ತ, ಸೂರ್ಯನನ್ನು ನೋಡುತ್ತಾ ‘ಭೊ’ ಎಂದು ಗಟ್ಟಿಯಾಗಿ ಕೂಗುತ್ತಿತ್ತು. ಇದನ್ನು ಸೂತನೊಬ್ಬನು (ಅಧಿರಥ) ನೋಡಿದನು. ಸಂತೋಷದಲ್ಲಿ ತನ್ನನ್ನು ಮರೆದು ಹಿಗ್ಗಿದನು. “ಇದೆತ್ತಣ ನಿಧಿಯೋ” ಎಂದು ಮಗುವಿನ ಬಳಿಗೆ ಬಂದನು.
ಪದಾರ್ಥ (ಕ.ಗ.ಪ)
ಮುದ-ಸಂತೋಷ,
ಉಬ್ಬು-ಹಿಗ್ಗು,
ನಿಧಿ-ಸಂಪತ್ತು
ಟಿಪ್ಪನೀ (ಕ.ಗ.ಪ)
ಅಧಿರಥ - ಕೌರವರ ಸಾರಥಿ. ಈತನ ಹೆಂಡತಿ ರಾಧೆ, ಕುಂತಿ ಗಂಗೆಯಲ್ಲಿ ತೇಲಿ ಬಿಟ್ಟ ಮಗು ಇವನಿಗೆ ಸಿಕ್ಕಿತು. ಇವನು ಮಗುವನ್ನು ಮಕ್ಕಳಿಲ್ಲದ ತನ್ನ ಮಡದಿಗೆ ಕೊಟ್ಟ. ರಾಧೆ ಅವನನ್ನು ಅಕ್ಕರೆಯಿಂದ ಸಾಕಿದಳು.
ಮೂಲ ...{Loading}...
ಕೆದರಿ ಕಾಲಲಿ ಮಳಲ ರಾಶಿಯ
ನೊದೆದು ಕೈಗಳ ಕೊಡಹಿ ಭೋಯೆಂ
ದೊದರುತಿರ್ದನು ಶಿಶುಗಳರಸನು ರವಿಯನೀಕ್ಷಿಸುತ
ಇದನು ಕಂಡನು ಸೂತನೊಬ್ಬನು
ಮುದದ ಮದದಲಿ ತನ್ನ ಮರೆದು
ಬ್ಬಿದನಿದೆತ್ತಣ ನಿಧಿಯೊ ಶಿವಶಿವಯೆಂದು ನಡೆತಂದ ॥23॥
೦೨೪ ತರಣಿಬಿಮ್ಬದ ಮರಿಯೊ ...{Loading}...
ತರಣಿಬಿಂಬದ ಮರಿಯೊ ಕೌಸ್ತುಭ
ವರಮಣಿಯ ಖಂಡದ ಕಣಿಯೊ ಮ
ತ್ರ್ಯರಿಗೆ ಮಗನಿವನಲ್ಲ ಮಾಯಾಬಾಲಕನೊ ಮೇಣು
ಇರಿಸಿ ಹೋದವಳಾವಳೋ ಶಿಶು
ವರನ ತಾಯ್ ನಿರ್ಮೋಹೆಯೈ ಹರ
ಹರಮಹಾದೇವೆನುತ ತೆಗೆದಪ್ಪಿದನು ಬಾಲಕನ ॥24॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಮಗುವಿನ ತೇಜಸ್ಸನ್ನು ಕಂಡು, “ಸೂರ್ಯಬಿಂಬದ ಮರಿಯೋ, ಶ್ರೇಷ್ಠ ಮಣಿ ಕೌಸ್ತುಭದ ತುಂಡೋ, ಮಾನವರಿಗೆ ಮಗನಿವನಲ್ಲ, ಮಾಯಾಲೋಕದ ಬಾಲಕನೋ, ಇವನನ್ನು ಇಲ್ಲಿ ಇರಿಸಿ ಹೋದವಳು ಯಾವಳೋ? ಈ ಶಿಶುಶ್ರೇಷ್ಠನ ತಾಯಿ ನಿರ್ಮೋಹಿಯೇ ಆಗಿರಬೇಕು, ಹರಹರ ಮಹಾದೇವ” ಎನ್ನುತ್ತ ಮಗುವನ್ನು ತೆಗೆದುಕೊಂಡು ಅಪ್ಪಿಕೊಂಡನು.
ಪದಾರ್ಥ (ಕ.ಗ.ಪ)
ತರಣಿ-ಸೂರ್ಯ,
ಕೌಸ್ತುಭ-ವಿಷ್ಣು ಎದೆಯಲ್ಲಿ ಧರಿಸಿರುವ ರತ್ನ,
ಖಂಡ-ತುಂಡು,
ಕಣಿ-ಶಿಲೆ,
ನಿರ್ಮೋಹ-ಮೋಹವಿಲ್ಲದಿರುವುದು
ಟಿಪ್ಪನೀ (ಕ.ಗ.ಪ)
ಕೌಸ್ತುಭ - ದೇವದಾನವರು ಕ್ಷೀರ ಸಮುದ್ರವನ್ನು ಮಥನ ಮಾಡಿದಾಗ ಹೊರಬಂದ ಒಂದು ರತ್ನ, ವಿಷ್ಣು ಇದನ್ನು ತನ್ನ ಎದೆಯಲ್ಲಿ ಧರಿಸಿದನು.
ಮೂಲ ...{Loading}...
ತರಣಿಬಿಂಬದ ಮರಿಯೊ ಕೌಸ್ತುಭ
ವರಮಣಿಯ ಖಂಡದ ಕಣಿಯೊ ಮ
ತ್ರ್ಯರಿಗೆ ಮಗನಿವನಲ್ಲ ಮಾಯಾಬಾಲಕನೊ ಮೇಣು
ಇರಿಸಿ ಹೋದವಳಾವಳೋ ಶಿಶು
ವರನ ತಾಯ್ ನಿರ್ಮೋಹೆಯೈ ಹರ
ಹರಮಹಾದೇವೆನುತ ತೆಗೆದಪ್ಪಿದನು ಬಾಲಕನ ॥24॥
೦೨೫ ತೃಣವಲಾ ತ್ರೈಲೋಕ್ಯ ...{Loading}...
ತೃಣವಲಾ ತ್ರೈಲೋಕ್ಯ ರಾಜ್ಯವ
ಗಣಿಸುವೆನೆ ತಾನಿನ್ನು ತನ್ನಲಿ
ಋಣವಿಶೇಷವಿದೇನೊ ಮೇಣ್ ಈ ಬಾಲಕಂಗೆನುತ
ಕ್ಷಣದೊಳೊದಗುವ ಬಾಷ್ಪ ಲುಳಿತೇ
ಕ್ಷಣನು ಬಂದನು ಮನೆಗೆ ಪರುಷದ
ಕಣಿಯ ತಂದೆನು ರಮಣಿ ಕೊಳ್ಳೆಂದಿತ್ತನರ್ಭಕನ ॥25॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮೂರು ಲೋಕದ ರಾಜ್ಯವನ್ನಾದರೂ ಗಣಿಸುತ್ತೇನೆಯೇ? ಎಲ್ಲವೂ ತೃಣಕ್ಕೆ ಸಮಾನ. ಈ ಮಗುವಿಗೆ ನನ್ನಲ್ಲಿ ಏನು ಋಣ ವಿಶೇಷವೋ” ಎನುತ್ತ, ಕ್ಷಣದಲ್ಲಿ ಉಂಟಾದ ಆನಂದ ಬಾಷ್ಪದಿಂದ ತುಂಬಿದ ಕಣ್ಣುಗಳಿಂದ ಮನೆಗೆ ಬಂದನು. “ರಮಣೀ ಸ್ಪರ್ಶಮಣಿಯ ಶಿಲೆಯನ್ನು ತಂದೆನು, ತೆಗೆದುಕೋ” ಎಂದು ಸೂತನು ಮಡದಿಗೆ ಮಗುವನ್ನು ಕೊಟ್ಟನು.
ಪದಾರ್ಥ (ಕ.ಗ.ಪ)
ಗಣಿಸು-ಲಕ್ಷಿಸು,
ಬಾಷ್ಪ ಲುಳಿತೇಕ್ಷಣ-ನೀರಿನಿಂದ ತುಂಬಿದ ಕಣ್ಣುಗಳುಳ್ಳವನು,
ಪರುಷ-ಸ್ಪರ್ಶಮಣಿ,
ಅರ್ಭಕ-ಮಗು
ಮೂಲ ...{Loading}...
ತೃಣವಲಾ ತ್ರೈಲೋಕ್ಯ ರಾಜ್ಯವ
ಗಣಿಸುವೆನೆ ತಾನಿನ್ನು ತನ್ನಲಿ
ಋಣವಿಶೇಷವಿದೇನೊ ಮೇಣ್ ಈ ಬಾಲಕಂಗೆನುತ
ಕ್ಷಣದೊಳೊದಗುವ ಬಾಷ್ಪ ಲುಳಿತೇ
ಕ್ಷಣನು ಬಂದನು ಮನೆಗೆ ಪರುಷದ
ಕಣಿಯ ತಂದೆನು ರಮಣಿ ಕೊಳ್ಳೆಂದಿತ್ತನರ್ಭಕನ ॥25॥
೦೨೬ ಆದರಿಸಿದನು ರಾಧೆಯಲಿ ...{Loading}...
ಆದರಿಸಿದನು ರಾಧೆಯಲಿ ಮಗ
ನಾದನೆಂದುತ್ಸವವ ಮಾಡಿ ಮ
ಹೀ ದಿವಿಜರನು ದಾನ ಮಾನಂಗಳಲಿ ಸತ್ಕರಿಸಿ
ಈ ದಿನಂ ಮೊದಲಾಗಿ ಉದ್ಭವ
ವಾದುದವನೈಶ್ವರ್ಯ ಉನ್ನತ
ವಾದನಾ ರವಿನಂದನನು ರಾಧೇಯ ನಾಮದಲಿ ॥26॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಧೆಯಲ್ಲಿ ಮಗನಾದನೆಂದು ಉತ್ಸವವ ಮಾಡಿ ಭೂಸುರರನ್ನು ದಾನಮಾನಾದಿಗಳಿಂದ ಗೌರವಿಸಿ ಉಪಚಾರ ಮಾಡಿದನು. ಅಲ್ಲಿಂದ ಮುಂದೆ ಅವನ ಐಶ್ವರ್ಯ ಹೆಚ್ಚತೊಡಗಿತು. ಆ ಸೂರ್ಯಪುತ್ರನು ರಾಧೇಯ ಎಂಬ ಹೆಸರಿಂದ ಶ್ರೇಷ್ಠನಾದನು.
ಪದಾರ್ಥ (ಕ.ಗ.ಪ)
ಉನ್ನತ-ಶ್ರೇಷ್ಠ,
ಉದ್ಭವ-ಹುಟ್ಟು
ಟಿಪ್ಪನೀ (ಕ.ಗ.ಪ)
ರಾಧೇಯ - ಕುಂತಿಯು ಗಂಗೆಯಲ್ಲಿ ಬಿಟ್ಟ ಮಗುವು ಧೃತರಾಷ್ಟ್ರನ ಸಾರಥಿ ಅಧಿರಥನಿಗೆ ಸಿಕ್ಕಿ, ಅದನ್ನು ತನ್ನ ಹೆಂಡತಿ ರಾಧೆಗೆ ಕೊಟ್ಟನು. ಈ ಕಾರಣದಿಂದ ಕರ್ಣನಿಗೆ ಸೂತಪುತ್ರ, ರಾಧೇಯ, ಆಧಿರಥಿ ಮುಂತಾದ ಹೆಸರುಗಳು ಬಂದುವು.
ಮೂಲ ...{Loading}...
ಆದರಿಸಿದನು ರಾಧೆಯಲಿ ಮಗ
ನಾದನೆಂದುತ್ಸವವ ಮಾಡಿ ಮ
ಹೀ ದಿವಿಜರನು ದಾನ ಮಾನಂಗಳಲಿ ಸತ್ಕರಿಸಿ
ಈ ದಿನಂ ಮೊದಲಾಗಿ ಉದ್ಭವ
ವಾದುದವನೈಶ್ವರ್ಯ ಉನ್ನತ
ವಾದನಾ ರವಿನಂದನನು ರಾಧೇಯ ನಾಮದಲಿ ॥26॥
೦೨೭ ಹೊಳೆ ಹೊಳೆದು ...{Loading}...
ಹೊಳೆ ಹೊಳೆದು ಹೊಡಮರಳಿ ನಡು ಹೊ
ಸ್ತಿಲಲಿ ಮಂಡಿಸಿ ಬೀದಿ ಬೀದಿಗ
ಳೊಳಗೆ ಸುಳಿವರ ಸನ್ನೆಯಲಿ ಕರೆಕರೆದು ನಸುನಗುತ
ಲಲಿತರತ್ನದ ಬಾಲದೊಡಿಗೆಯ
ಕಳಚಿಹಾಯ್ಕುವ ಹೆಸರು ಜಗದಲಿ
ಬೆಳೆವುತಿರ್ದುದು ಹಬ್ಬಿದುದು ಜನಜನದ ಕರ್ಣದಲಿ ॥27॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಧೆಯಲ್ಲಿ ಬೆಳೆಯುತ್ತಿರುವ ಮಗು ಪ್ರಕಾಶಿಸುತ್ತ, ಮಗ್ಗುಲಾಗಿ ಮಗುಚಿಕೊಂಡು, ಅಂಬೆಗಾಲಿಟ್ಟು ನಡು ಹೊಸ್ತಿಲಲ್ಲಿ ಕುಳಿತು. ಬೀದಿ ಬೀದಿಯಲ್ಲಿ ಸುಳಿಯುವವರನ್ನು ಸನ್ನೆ ಮಾಡಿ ಕರೆಕರೆದು ನಸುನಗುತ್ತ, ಸುಂದರವಾದ ರತ್ನದ ಬಾಲದೊಡಿಗೆಯನ್ನು ಬಿಚ್ಚಿ ಕೊಡುವ ಇವನ ಹೆಸರು ಜನ ಜನದ ಕಿವಿಯಲ್ಲಿ ಹಬ್ಬಿ ಜಗತ್ತಿನಲ್ಲಿ ವ್ಯಾಪಿಸಿತು.
ಮೂಲ ...{Loading}...
ಹೊಳೆ ಹೊಳೆದು ಹೊಡಮರಳಿ ನಡು ಹೊ
ಸ್ತಿಲಲಿ ಮಂಡಿಸಿ ಬೀದಿ ಬೀದಿಗ
ಳೊಳಗೆ ಸುಳಿವರ ಸನ್ನೆಯಲಿ ಕರೆಕರೆದು ನಸುನಗುತ
ಲಲಿತರತ್ನದ ಬಾಲದೊಡಿಗೆಯ
ಕಳಚಿಹಾಯ್ಕುವ ಹೆಸರು ಜಗದಲಿ
ಬೆಳೆವುತಿರ್ದುದು ಹಬ್ಬಿದುದು ಜನಜನದ ಕರ್ಣದಲಿ ॥27॥
೦೨೮ ಅರಸ ಕೇಳೈ ...{Loading}...
ಅರಸ ಕೇಳೈ ಕರ್ಣಪಾರಂ
ಪರೆಯೊಳೀತನ ಹೆಸರು ಜಗದಲಿ
ಹರಿದುದಲ್ಲಿಂ ಬಳಿಕಲೀತನ ನಾಮಕರಣದಲಿ
ಸುರನರೋರಗ ನಿಕರವೇ ವಿ
ಸ್ತರಿಸಿದುದು ಕರ್ಣಾಭಿದಾನವ
ಗುರುಪರಾಕ್ರಮಿ ಬೆಳೆವುತಿರ್ದನು ಸೂತಭವನದಲಿ ॥28॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜ, ಕೇಳು, ಕ್ರಮಾನುಗತ ಕಿವಿಯಿಂದ ಕಿವಿಗೆ ಇವನ ಹೆಸರು ಜಗತ್ತಿನಲ್ಲಿ ವ್ಯಾಪಿಸಿತು. ಅಲ್ಲಿಂದ ಬಳಿಕ ಸುರನರೋರಗ ಸಮೂಹವೇ ಸೇರಿ ಈತನ ನಾಮಕರಣದಲ್ಲಿ ಕರ್ಣನೆಂದು ಹೆಸರಿಟ್ಟರು. ಶ್ರೇಷ್ಠ ಪರಾಕ್ರಮಿಯಾದ ಸೂರ್ಯಪುತ್ರನು ಸೂತ ಅಧಿರಥನ ಮನೆಯಲ್ಲಿ ಬೆಳೆಯುತ್ತಿದ್ದನು.
ಪದಾರ್ಥ (ಕ.ಗ.ಪ)
ಪಾರಂಪರೆ-ಕ್ರಮಾನುಗತ,
ಅಭಿಧಾನ-ಹೆಸರು,
ಸೂತ-ಬೆಸ್ತ, ರಥ ನಡೆಸುವನು
ಮೂಲ ...{Loading}...
ಅರಸ ಕೇಳೈ ಕರ್ಣಪಾರಂ
ಪರೆಯೊಳೀತನ ಹೆಸರು ಜಗದಲಿ
ಹರಿದುದಲ್ಲಿಂ ಬಳಿಕಲೀತನ ನಾಮಕರಣದಲಿ
ಸುರನರೋರಗ ನಿಕರವೇ ವಿ
ಸ್ತರಿಸಿದುದು ಕರ್ಣಾಭಿದಾನವ
ಗುರುಪರಾಕ್ರಮಿ ಬೆಳೆವುತಿರ್ದನು ಸೂತಭವನದಲಿ ॥28॥