೦೦೦ ಸೂ ರಾಯ ...{Loading}...
ಸೂ.
ರಾಯ- ಜನಮೇಜಯಗೆ ವೈಶಂ-
ಪಾಯನನು ಹೇಳಿದನು, ಮುನಿ ದ್ವೈ-
ಪಾಯನ್ ಅಭಿವರ್ಣಿಸಿದ ಭಾರತ ವರ-ಕಥಾಮೃತವ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ವ್ಯಾಸಮುನಿಗಳು ವಿವರವಾಗಿ ವರ್ಣಿಸಿದ ಮಹಾಭಾರತದ ಶ್ರೇಷ್ಠ ಕಥಾಮೃತವನ್ನು ಜನಮೇಜಯ ಮಹಾರಾಜನಿಗೆ ವೈಶಂಪಾಯನನು ಹೇಳಿದನು.
ಪದಾರ್ಥ (ಕ.ಗ.ಪ)
ದ್ವೈಪಾಯನ-ವ್ಯಾಸ (ಯಮುನಾನದಿಯ ಒಂದು ದ್ವೀಪದಲ್ಲಿ ಜನಿಸಿದವನಾದುದರಿಂದ)
ಟಿಪ್ಪನೀ (ಕ.ಗ.ಪ)
ಸಂಧಿಯಲ್ಲಿ ಹೇಳಿರುವ ಕಥೆಯ ಭಾಗವನ್ನು ಬಹುಸಂಗ್ರಹವಾಗಿ(ಅರೆಷಟ್ಪದಿಯಲ್ಲಿ) ತಿಳಿಸುವುದು. ಪ್ರತಿಸಂಧಿಯ ಪ್ರಾರಂಭದಲ್ಲಿ
ಸೂಚನಾ ಪದ್ಯ ಕಂಡುಬರುತ್ತದೆ.
ಮೂಲ ...{Loading}...
ಸೂ. ರಾಯ ಜನಮೇಜಯಗೆ ವೈಶಂ
ಪಾಯನನು ಹೇಳಿದನು ಮುನಿ ದ್ವೈ
ಪಾಯನಭಿವರ್ಣಿಸಿದ ಭಾರತ ವರಕಥಾಮೃತವ
೦೦೧ ಸೂತನೈತನ್ದನು ಜಗದ್ವಿ ...{Loading}...
ಸೂತನ್ ಐತಂದನು ಜಗದ್-ವಿ-
ಖ್ಯಾತ–ಶೌನಕ-ಮುಖ್ಯ-ಮುನಿ-ಸಂ-
ಘಾತ-ಪಾವನ–ನೈಮಿಶಾರಣ್ಯಕ–ವರಾಶ್ರಮಕೆ
ಆತನನು ಕಂಡುದು+++(=ಕಣ್ಡಿತು)+++. ತಪಸ್ವಿ-
ವ್ರಾತ-ಕುಶಲ-ಕ್ಷೇಮ-ಮಧುರ-
ಪ್ರೀತಿ-ವಚನಾಮೃತದಿ ಸಂಭಾವನೆಯ ಮಾಡಿದರು ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಗದ್ವಿಖ್ಯಾತರಾದ ಶೌನಕರೇ ಮೊದಲಾದ ಮುನಿಗಳ ಸಮೂಹ ಇರುವ ಪವಿತ್ರವಾದ ನೈಮಿಶಾರಣ್ಯದ ಶ್ರೇಷ್ಠವಾದ ಆಶ್ರಮಕ್ಕೆ ಸೂತಪುರಾಣಿಕನು ಆಗಮಿಸಿದನು. ಆತನನ್ನು ತಪಸ್ವಿ ಸಮೂಹ ಕಂಡು, ಮಧುರಪ್ರೀತಿ ವಚನಾಮೃತದಿಂದ ಕುಶಲ ಕ್ಷೇಮ ವಿಚಾರಿಸಿ ಮರ್ಯಾದೆ ಮಾಡಿದರು.
ಪದಾರ್ಥ (ಕ.ಗ.ಪ)
ಸಂಘಾತ-ಸಮೂಹ, ಸಂಭಾವನೆ-ಸನ್ಮಾನ, ಮರ್ಯಾದೆ.
ಟಿಪ್ಪನೀ (ಕ.ಗ.ಪ)
“ಶೌನಕ - ಅಚಾರ್ಯ ಶೌನಕರು ನೈಮಿಷಾರಣ್ಯ (ಉತ್ತರದ ಸೀತಾಪುರ ಜಿಲ್ಲೆಯ ನಿಮ್ಸಾರ್) ದಲ್ಲಿ ದೊಡ್ಡ ಗುರುಕುಲದ ಕುಲಪತಿಗಳಾಗಿದ್ದರು. ಅಲ್ಲಿ ಹನ್ನೆರಡು ವರ್ಷ ಮಹಸತ್ರ ಎಂಬ ಯಾಗ ಮಾಡಿದಾಗ ಎಲ್ಲ ದೇಶಗಳ ಮಹರ್ಷಿಗಳೂ ಬಂದಿದ್ದರಂತೆ. ಇವರಿದ್ದ ನೈಮಿಷಾರಣ್ಯ ಒಂದು ಪುಣ್ಯಕ್ಷೇತ್ರ. ರಥದ ನೇಮಿಯು ಬಿದ್ದ ಪವಿತ್ರ ಸ್ಥಳವಾದ್ದರಿಂದ ಋಷಿಗಳು ಇಲ್ಲೇ ತಪಸ್ಸಿಗೆ ನಿಂತುದರಿಂದ ನೈಮಿಷಾರಣ್ಯ ಎಂಬ ಹೆಸರು ಬಂದಿದೆ. ಯಾಗ ಸಮಾಪ್ತಿಯ ನಂತರ ಶೌನಕರು ಉಗ್ರಶ್ರವರನ್ನು ಕರೆಸಿ ಅವರಿಂದ ಮಹಾಭಾರತ ವಾಚನ-ವ್ಯಾಖ್ಯಾನ ಮಾಡಿಸಿದ್ದು ಒಂದು ವಿಶೇóಷ. ಸಿದ್ಧ ಸೇವಿತವಾದ ಈ ಪುಣ್ಯಕ್ಷೇಥ್ರದ ಮಹಿಮೆ ಎಷ್ಟೆಂದರೆ ಸರಸ್ವತೀ ನದಿಯ ತೀರದಲ್ಲಿ ಅಶ್ರಮ ಕಟ್ಟಿಕೊಳ್ಳಲು ಜಾಗವಿಲ್ಲದೆ ಋಷಿಗಳು ಪೂರ್ವ ದಿಕ್ಕಿಗೆ ಚಲಿಸಿ ಅಲ್ಲಿಂದ ಯಾಗಕ್ಷೇತ್ರಕ್ಕೆ ಬರುತ್ತಿದ್ದರಂತೆ. ಹೀಗೆ ಅವರು ವಾಸಿಸಬೇಕಾಗಿ ಬಂದಾಗ ಋಷಿಗಳ ಮೇಲಣ ಮಮತೆಯಿಂದ ಸರಸ್ವತೀ ನದಿ ತನ್ನ ಪಾತ್ರವನ್ನು ಬದಲಾಯಿಸಿ ಪಶ್ಚಿಮದಿಂದ ಪೂರ್ವಕ್ಕೆ ಹರಿದ ಬಂದಿತಂತೆ.
ಸಾವಿರಾರು ಶಿಷ್ಯರಿಗೆ ಬೋಧಿಸಿದ ಶೌನಕರು ಶನುಕ ಎಂಬಾತನ ಪುತ್ರ. ಇವರು ಮಹಾ ಆಚಾರ್ಯರಲ್ಲಿ ಒಬ್ಬರಾಗಿದ್ದು ಪತಂಜಲಿ ಮತ್ತು ವ್ಯಾಸರೊಂದಿಗೆ ಪ್ರಕೀರ್ತಿತರಾಗಿದ್ದಾರೆ. ಇವನು ಅರಣ್ಯಕ, ಋಕ್ ಪ್ರಾತಿಶಾಖ್ಯ ಮೊದಲಾದ ಹತ್ತಾರು ಗ್ರಂಥಗಳನ್ನು ಬರೆದಿದ್ದಾರೆ. ಗೃಹ್ಯಸೂತ್ರವನ್ನು ಬರೆದ ಅಶ್ವಲಾಯನಾಚಾರ್ಯನು ಇವರ ಶಿಷ್ಯನಾಗಿದ್ದ. ಶೌನಕರು ಶಿಲ್ಪಶಾಸ್ತ್ರದ ಬಗೆಗೂ ಒಂದು ಗ್ರಂಥವನ್ನು ಬರೆದಿದ್ದಾನೆಂದು ಮತ್ಸ್ಯಪುರಾಣ ಹೇಳುತ್ತದೆ. ಇವರ ವಸ್ತುನಿಷ್ಠ ವಿಮರ್ಶೆ ಎಷ್ಟು ಪಕ್ವವಾಗಿತ್ತೆನ್ನುವುದಕ್ಕೆ ಒಂದು ನಿದರ್ಶನ ಕೊಡಬಹುದು. ಇವರ ಶಿಷ್ಯ ಅಶ್ವಲಾಯನಾಚಾಯ ‘ಶ್ರೌತ ಸೂತ್ರಗಳು’ ಎಂಬ ಗ್ರಂಥವನ್ನು ಬರೆದು ಪ್ರಸಿದ್ಧನಾದ. ವಾಸ್ತವವಾಗಿ ಅವನಿಗಿಂತ ಮೊದಲೇ ಶ್ರೌತಶಾಸ್ತ್ರವನ್ನು ಕುರಿತು ಗುರು ಶೌನಕರೇ ‘ಶ್ರೌತ್ರಶಾಸ್ತ್ರ’ ಎಂಬ ಗ್ರಂಥವನ್ನು ಬರೆದಿದ್ದರು. ಶಿಷ್ಯನ ಕೃತಿಯನ್ನು ಮುಕ್ತಕಂಠದಲ್ಲಿ ಹೊಗಳಿದ್ಧೇ ಅಲ್ಲದೆ ತಾವು ಬರೆದ ಕೃತಿ ಶಿಷ್ಯನ ಕೃತಿಗೆ ಸಮನಲ್ಲ ಎನ್ನಿಸಿದಾಗ ತಮ್ಮ ಕೃತಿಯನ್ನೇ ಸುಟ್ಟುಹಾಕಿದರಂತೆ. ಇಷ್ಟು ನಿರ್ಮತಸ್ರದ ಮನಸ್ಸು ಶ್ರೀಶೌನಕರದು. ಇವರು ವಾಸವಾಗಿದ್ದ ನೈಮಿಷಾರಣ್ಯವು ಒಂದು ಪ್ರಸಿದ್ಧ ತೀರ್ಥಕ್ಷೇತ್ರವೂ ಆಗಿದೆ. ಗೋಮತಿ ನದಿಯ ಎಡದಂಡೆಯ ಮೇಲಿರುವ ಕಾಡು ಎಂದೂ ಇದನ್ನು ಕೆಲವರು ಗುರುತಿಸುತ್ತಾರೆ. (‘‘ನೈಮಿಷೇ ಗೋಮತೀ ತೀರೇ ತತ್ರ ನಾಗಾಹ್ವಯಂ ಪುರಂ.’’)
ಪ್ರಪ್ರಥಮವಾಗಿ ಅಖಿಲ ಭಾರತದ ಮಹರ್ಷಿಗಳ ಎದುರಿಗೇ ದೀರ್ಘವಾಗಿ ವ್ಯಾಸ ವಿರಚಿತ ‘ಮಹಾಭಾರತ’ ಗ್ರಂಥದ ಪಠನ ಮತ್ತು ವ್ಯಾಖ್ಯಾನಗಳನ್ನು ರೋಮಹರ್ಷಣಿಯ ಮಗ ಉಗ್ರಶ್ರವ ಶ್ರೌತಿಗಳು ಹೇಳಿದ್ದು ಶೌನಕರ ಘನ ಅಧ್ಯಕ್ಷತೆಯ ಸಮಾರಂಭದಲ್ಲಿ!
ಸೂತ - ನೈಮಿಶಾರಣ್ಯವಾಸಿಗಳಾದ ಮುನಿಸಮೂಹಕ್ಕೆ ಅನೇಕ ಪುರಾಣಗಳನ್ನೂ, ಇತಿಹಾಸಗಳನ್ನೂ ತಿಳಿಸುತ್ತಿದ್ದ ಮಹರ್ಷಿ. ರೋಮ ಹರ್ಷಣನೆಂಬುದು ನಾಮಾಂತರ.
ನೈಮಿಶ - ಗೋಮತೀ ನದೀ ತೀರದಲ್ಲಿರುವ ಮಹಾ ಪವಿತ್ರವಾದ ಒಂದು ವನ. ಇದನ್ನು ಈಗ ನಿಮ್ಸಾರ ಎಂದು ಕರೆಯುತ್ತಾರೆ.
ಶೌನಕ - ಭೃಗುವಂಶದ ಮಹರ್ಷಿ. ನೈಮಿಶಾರಣ್ಯದಲ್ಲಿ ವಾಸವಾಗಿದ್ದ.”
ಮೂಲ ...{Loading}...
ಸೂತನೈತಂದನು ಜಗದ್ವಿ
ಖ್ಯಾತ ಶೌನಕಮುಖ್ಯ ಮುನಿ ಸಂ
ಘಾತ ಪಾವನ ನೈಮಿಶಾರಣ್ಯಕ ವರಾಶ್ರಮಕೆ
ಆತನನು ಕಂಡುದು ತಪಸ್ವಿ
ವ್ರಾತ ಕುಶಲಕ್ಷೇಮ ಮಧುರ
ಪ್ರೀತಿ ವಚನಾಮೃತದಿ ಸಂಭಾವನೆಯ ಮಾಡಿದರು ॥1॥
೦೦೨ ಪರಮ ಪೌರಾಣಿಕ ...{Loading}...
ಪರಮ-ಪೌರಾಣಿಕ-ಶಿರೋಮಣಿ
ಬರವ್ ಇದ್ ಎತ್ತಣಿನ್ ಆಯ್ತು? ಕೌತುಕ-
ವರ-ಕಥಾ-ಪೀಯೂಷ-ಸಾರ-ವಿಶೇಷವ್ ಏನ್ ಉಂಟು?
ಚರಿತ-ಚತುರಾಶ್ರಮ–ತಪೋ-ನಿ-
ಷ್ಠರಿಗೆ ವಿಶ್ರಮವ್ ಐ+++(=ವೈ)+++ ಭವಾದೃಶ
ದರುಶನವು ನಮಗ್ ಎಂದು ನುಡಿದರು ರೋಮ-ಹರ್ಷಣಿಯ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಪುರಾಣಿಕ ಶಿರೋಭೂಷಣರೆನಿಸಿದ ಶ್ರೇಷ್ಠರೇ, ನಿಮ್ಮ ಬರವು ಎಲ್ಲಿಂದಾಯ್ತು ? ಶ್ರೇಷ್ಠ ಕಥಾಮೃತಸಾರ ವಿಶೇಷ ಏನುಂಟು ? ನಿಮ್ಮಂಥವರ ದರುಶನವು ನಾಲ್ಕು ಆಶ್ರಮಗಳನ್ನು ನಡೆಸಿ ತಪೋನಿಷ್ಠರಾಗಿರುವ ನಮಗೆ ವಿಶ್ರಾಂತಿದಾಯಕವಾಗಿದೆ” ಎಂದು ರೋಮ ಹರ್ಷಣರನ್ನು ಕುರಿತು ಶೌನಕಾದಿ ಮುನಿಗಳು ನುಡಿದರು.
ಪದಾರ್ಥ (ಕ.ಗ.ಪ)
ಪೀಯೂಷ-ಅಮೃತ,
ಚರಿತ-ಚರಿತ್ರೆ, ನಡವಳಿಕೆ,
ವಿಶ್ರಮ-ವಿಶ್ರಾಂತಿ,
ಪಾಠಾನ್ತರ (ಕ.ಗ.ಪ)
ಬರವಿದೆತ್ತಣವಾಯ್ತು -> ಬರವಿದೆತ್ತಣಿನಾಯ್ತು
ಆದಿ ಪರ್ವ, ಮೈ.ವಿ.ವಿ. ಡಾ. ಕೆ. ಆರ್. ಶೇಷಗಿರಿ
ಟಿಪ್ಪನೀ (ಕ.ಗ.ಪ)
ಚತುರಾಶ್ರಮ-ಬ್ರಹ್ಮಚರ್ಯ, ಗಾರ್ಹಸ್ಥ, ವಾನಪ್ರಸ್ಥ, ಸಂನ್ಯಾಸ
ಮೂಲ ...{Loading}...
ಪರಮ ಪೌರಾಣಿಕ ಶಿರೋಮಣಿ
ಬರವಿದೆತ್ತಣಿನಾಯ್ತು ಕೌತುಕ
ವರಕಥಾ ಪೀಯೂಷಸಾರ ವಿಶೇಷವೇನುಂಟು
ಚರಿತ ಚತುರಾಶ್ರಮ ತಪೋ ನಿ
ಷ್ಠರಿಗೆ ವಿಶ್ರಮವೈ ಭವಾದೃಶ
ದರುಶನವು ನಮಗೆಂದು ನುಡಿದರು ರೋಮಹರ್ಷಣಿಯ ॥2॥
೦೦೩ ವನ್ದಿಸಿದನೈ ವರತಪೋಧನ ...{Loading}...
ವಂದಿಸಿದನ್ ಐ+++(=ವೈ)+++ - “ವರ-ತಪೋಧನ-
ವೃಂದ ಚಿತ್ತೈಸುವುದು. ತಾನ್ ಏನ್
ಎಂದು ನುಡಿವೆನು ಕೌತುಕಾಮೃತ-ರಸದ-ಕಡು+++(=ಮಹಾ)+++-ಗಡಲ?
ಹಿಂದೆ ಕೇಳಿದುದ್ ಅಲ್ಲ ಹೇಳ್ವುದು
ಮುಂದೆ. ಹೊಸತ್ ಇದು ನಿಗಮ-ಶತವ್ ಇದರ್
ಒಂದ್ ಒರೆಗೆ+++(=ಸಮಾನಕ್ಕೆ)+++ ನೆರೆ+++(=ಪಕ್ಕಕ್ಕೆ)+++ ಬಾರದ್ ಎಂದನು ಸೂತ ಕೈಮುಗಿದು ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಸೂತಪುರಾಣಿಕರು ಕೈಮುಗಿದು, ನಮಸ್ಕರಿಸಿ “ಋಷಿ ಸಮೂಹ ಗಮನವಿಟ್ಟು ಕೇಳುವುದು. ಕುತೂಹಲದ ಅಮೃತರಸದ ಮಹಾಸಾಗರದ ಬಗ್ಗೆ ಏನೆಂದು ಹೇಳಲಿ ? ಮುಂದೆ ಹೇಳುತ್ತಿರುವುದು ಹಿಂದೆ ಕೇಳಿದ್ದಲ್ಲ. ಹೊಸತಿದು. ನೂರು ವೇದಗಳು ಇದರ ಸಮಕ್ಕೆ ಬಾರವು” ಎಂದು ಹೇಳಿದರು.
ಪದಾರ್ಥ (ಕ.ಗ.ಪ)
ನಿಗಮ-ವೇದ,
ಒರೆ-ಸಮಾನ, ಒರೆ ಹಚ್ಚು
ತಪೋಧನ-ಋಷಿ (ತಪಸ್ಸನ್ನೇ ಐಶ್ವರ್ಯವಾಗಿ ಉಳ್ಳವ)
ಮೂಲ ...{Loading}...
ವಂದಿಸಿದನೈ ವರತಪೋಧನ
ವೃಂದ ಚಿತ್ತೈಸುವುದು ತಾನೇ
ನೆಂದು ನುಡಿವೆನು ಕೌತುಕಾಮೃತರಸದ ಕಡುಗಡಲ
ಹಿಂದೆ ಕೇಳಿದುದಲ್ಲ ಹೇಳ್ವುದು
ಮುಂದೆ ಹೊಸತಿದು ನಿಗಮಶತವಿದ
ರೊಂದೊರೆಗೆ ನೆರೆ ಬಾರದೆಂದನು ಸೂತ ಕೈಮುಗಿದು ॥3॥
೦೦೪ ಕೇಳಿದನು ಜನಮೇಜಯ ...{Loading}...
ಕೇಳಿದನು ಜನಮೇಜಯ ಕ್ಷಿತಿ-
ಪಾಲಕನು ವರ-ಸರ್ಪ-ಯಜ್ಞ–
ಸ್ಥೂಲ-ಪಾಪ–ವಿಘಾತಿಗ್ ಓಸುಗವ್+++(=ಒಲಿಯುವ್)+++ ಈ ಮಹಾಕಥೆಯ.
ಕೇಳಿದೆನು ತಾನ್ ಅಲ್ಲಿ ಮುನಿ-ಜನ–
ಮೌಳಿ–ಮಂಡಿತ–ಚರಣ-ಕಮಲ–ವಿ-
ಶಾಲ-ವೇದ–ವ್ಯಾಸ–ಕೃತ–ಭಾರತ–ಕಥಾಮೃತವ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ಮಹಾರಾಜನು ಅಭೀಷ್ಟದಿಂದ ಸರ್ಪಯಾಗ ಮಾಡಿದುದರಿಂದ ಉಂಟಾದ ದೊಡ್ಡ ಪಾಪ ಪರಿಹಾರಕ್ಕಾಗಿ ಈ ಮಹಾಕಥೆಯನ್ನು ಕೇಳಿದನು. ಋಷಿಗಳಿಂದ ನಮಸ್ಕರಿಸಲ್ಪಟ್ಟ ಪಾದಕಮಲಗಳನ್ನು ಹೊಂದಿರುವ ವೇದವ್ಯಾಸರು ರಚಿಸಿದ ವಿಸ್ತಾರವಾದ ಈ ಮಹಾಭಾರತ ಕಥಾಮೃತವನ್ನು ತಾನು ಅಲ್ಲಿ ಕೇಳಿದುದಾಗಿ ಸೂತನು ಹೇಳಿದನು.
ಪದಾರ್ಥ (ಕ.ಗ.ಪ)
ವಿಘಾತಿ-ನಾಶ, ವರ-ಅಭೀಷ್ಟ, ಬಯಕೆ, ಅಪೇಕ್ಷೆ,
ಪಾಠಾನ್ತರ (ಕ.ಗ.ಪ)
[ವರ] - [ಗತ (ಆ)] ಸರ್ಪಯಾಗ ಮುಗಿದ ನಂತರ ಕೇಳಿದ ಕಥೆಯಾದ್ದರಿಂದ [ಗತ] ಪಾಠಾಂತರವೂ ಇದೆ.
ಟಿಪ್ಪನೀ (ಕ.ಗ.ಪ)
ಜನಮೇಜಯ - ಸುಭದ್ರಾರ್ಜುನರ ಪುತ್ರ ಅಭಿಮನ್ಯುವಿನಿಂದ ಜನಿಸಿದ ಪರೀಕ್ಷಿದ್ರಾಜನಿಂದ ಭದ್ರವತಿಯೆಂಬ ಪಟ್ಟ ಮಹಿಷಿಯಲ್ಲಿ ಜನಿಸಿದವ (ಅರ್ಜುನನ ಮರಿ ಮಗ), ತಂದೆ ಪರೀಕ್ಷಿತನು ಸರ್ಪ ಕಚ್ಚಿ ಮೃತನಾದುದರಿಂದ ಸರ್ಪ ಕುಲವನ್ನೇ ನಾಶ ಮಾಡಲು ಸಂಕಲ್ಪಿಸಿ ಸರ್ಪ ಯಾಗವನ್ನು ಮಾಡಿದನು.
ಸರ್ಪಯಜ್ಞ - ಜನಮೇಜಯ ಸರ್ಪನಾಶಕ್ಕಾಗಿ ಮಾಡಿದ ಯಜ್ಞ
ಸರ್ಪಯಾಗಕ್ಕೆ
ಹೋತೃ - ಚಂಡಭಾರ್ಗವ ಮುನಿ (ಋಗ್ವೇದ ಮಂತ್ರ ಹೇಳತಕ್ಕವ)
ಅಧ್ವರ್ಯು - ಪಿಂಗಳ ಋಷಿ (ಯಜುರ್ವೇದ ಮಂತ್ರ ಹೇಳತಕ್ಕವ)
ಉದ್ಗಾತೃ - ಜೈಮಿನಿ ಮಹರ್ಷಿ (ಸಾಮವೇದ ಮಂತ್ರ ಹೇಳತಕ್ಕವ)
ಬ್ರಹ್ಮ - ಅಂಗಿರಸಮುನಿ
ಸದಸ್ಯರು - ಅಸಿತ, ದೇವಲ, ವ್ಯಾಸ, ಶ್ವೇತಕೇತು ಮುಂತಾದವರು
ಮೂಲ ...{Loading}...
ಕೇಳಿದನು ಜನಮೇಜಯ ಕ್ಷಿತಿ
ಪಾಲಕನು ವರ ಸರ್ಪಯಜ್ಞ
ಸ್ಥೂಲ ಪಾಪವಿಘಾತಿಗೋಸುಗವೀ ಮಹಾಕಥೆಯ
ಕೇಳಿದೆನು ತಾನಲ್ಲಿ ಮುನಿಜನ
ಮೌಳಿಮಂಡಿತ ಚರಣಕಮಲ ವಿ
ಶಾಲ ವೇದವ್ಯಾಸಕೃತ ಭಾರತ ಕಥಾಮೃತವ ॥4॥
೦೦೫ ಹಾ ಮಹಾದೇವಾಯಿದೆನ್ತೈ ...{Loading}...
ಹಾ ಮಹಾ-ದೇವಾಯ್! ಇದ್ ಎಂತ್ ಐ+++(=ಅಯ್ಯ)+++
ರೋಮ-ಹರ್ಷಣಿ ನಾವು ಮಾಡಿದ
ಸೋಮ-ಪಾನಾದಿಗಳ ಪುಣ್ಯ-ಸ್ತೋಮ-ತರುಗಳಿಗೆ
ಈ ಮಹಾ-ಭಾರತ ಕಥಾಮೃತ
ರಾಮಣೀಯಕ-ಫಲವ್ ಅಲಾ+++(=ಅಲ್ಲವೇ)+++! ನಿಸ್-
ಸೀಮ-ಪುಣ್ಯರು ಧನ್ಯರ್ ಆವ್+++(=ನಾವ್)+++ ಎಂದುದು ಮುನಿ-ಸ್ತೋಮ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ, ಮುನಿಸಮೂಹ, “ಹಾ ಮಹಾದೇವ ! ರೋಮಹರ್ಷಣೀ, ನಾವು ಮಾಡಿದ ಸೋಮಪಾನಾದಿಗಳ ಪುಣ್ಯಸ್ತೋಮ ರೂಪವಾದ ತರುಗಳಿಗೆ ಈ ಮಹಾಭಾರತ ಕಥಾಮೃತ ಸುಂದರವಾದ ಫಲವಲ್ಲವೇ ! ಅತಿಶಯದ ಪುಣ್ಯರು, ಕೃತಾರ್ಥರು ನಾವು” ಎಂದು ಹೇಳಿತು.
ಪದಾರ್ಥ (ಕ.ಗ.ಪ)
ನಿಸ್ಸೀಮ-ಅತಿಶಯದ, ಧನ್ಯ-ಕೃತಾರ್ಥ
ಮೂಲ ...{Loading}...
ಹಾ ಮಹಾದೇವಾಯಿದೆಂತೈ
ರೋಮ ಹರ್ಷಣಿ ನಾವು ಮಾಡಿದ
ಸೋಮ ಪಾನಾದಿಗಳ ಪುಣ್ಯಸ್ತೋಮ ತರುಗಳಿಗೆ
ಈ ಮಹಾಭಾರತ ಕಥಾಮೃತ
ರಾಮಣೀಯಕ ಫಲವಲಾ ನಿ
ಸ್ಸೀಮ ಪುಣ್ಯರು ಧನ್ಯರಾವೆಂದುದು ಮುನಿಸ್ತೋಮ ॥5॥
೦೦೬ ಹೇಳು ಸಾಕೆಲೆ ...{Loading}...
“ಹೇಳು, ಸಾಕ್ ಎಲೆ ಸೂತ! ದುರಿತ-
ವ್ಯಾಳ-ವಿಷ-ಜಾಂಗುಳಿಕವನು ನೀ
ಕೇಳಿದ್ ಅಂದದೊಳ್ ಅಂದು ಜನಮೇಜಯನ ಯಾಗದಲಿ
ಮೌಳಿಗಳಲ್ ಆನುವೆವು+++(=ಸಹಿಸುವೆವು)+++ ನಿನ್ನಯ
ಹೇಳಿಕೆಯನ್” ಎನೆ, “ನಿಖಿಳ ಮುನಿಗಳನ್
ಓಲಗಿಸುವೆನು+++(=ಒಲಿಸುವೆನು)+++ ನಿಮ್ಮ್ ಅನುಜ್ಞೆಯಲ್” ಎಂದು ಕೈಮುಗಿದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲೆ ಸೂತ, ಪಾಪವೆಂಬ ಹಾವಿನ ವಿಷಕ್ಕೆ ಮಂತ್ರೋಪಾದಿಯಲ್ಲಿರುವ ಕಥೆಯನ್ನು ಜನಮೇಜಯನ ಯಾಗದಲ್ಲಿ ನೀ ಕೇಳಿದ ರೀತಿಯಲ್ಲಿ ಹೇಳು. ನೀನು ಹೇಳಿದ್ದನ್ನು ಶಿರಸಾವಹಿಸಿ ಕೇಳುವೆವು” ಎಂದು ಮುನಿಗಳೆಲ್ಲರು ಕೋರಿಕೊಂಡಾಗ, ನಿಮ್ಮ ಅಪ್ಪಣೆಯಂತೆ ಓಲಯಿಸುವೆನು ಎಂದು ಸೂತ ಕೈ ಮುಗಿದನು.
ಪದಾರ್ಥ (ಕ.ಗ.ಪ)
ವ್ಯಾಳ-ಹಾವು, ಕ್ರೂರಮೃಗ,
ಜಾಂಗುಳಿಕ-ವಿಷವೈದ್ಯ, ಗಾರುಡಿಗ
ಮೂಲ ...{Loading}...
ಹೇಳು ಸಾಕೆಲೆ ಸೂತ ದುರಿತ
ವ್ಯಾಳ ವಿಷಜಾಂಗುಳಿಕವನು ನೀ
ಕೇಳಿದಂದದೊಳಂದು ಜನಮೇಜಯನ ಯಾಗದಲಿ
ಮೌಳಿಗಳಲಾನುವೆವು ನಿನ್ನಯ
ಹೇಳಿಕೆಯನೆನೆ ನಿಖಿಳ ಮುನಿಗಳ
ನೋಲಗಿಸುವೆನು ನಿಮ್ಮನುಜ್ಞೆಯಲೆಂದು ಕೈಮುಗಿದ ॥6॥
೦೦೭ ಸರ್ಪಯಜ್ಞದಲಾದ ದುರಿತದ ...{Loading}...
ಸರ್ಪ-ಯಜ್ಞದಲ್ ಆದ ದುರಿತದ
ದರ್ಪವನು ಕೆಡೆ-ಬೀಳಲ್ ಒದೆಯಲು,
ತರ್ಪಣಾದಿ-ಕ್ರಿಯೆಗಳಲಿ ಸಾಮಥ್ರ್ಯವ್ ಇಲ್ಲೆಂದು
ದರ್ಪಕಾಹಿತ-ಮೂರ್ತಿ ಮುನಿ-ಮುಖ-
ದರ್ಪಣನು ಶಿಷ್ಯನನು +++(ವೈಶಂಪಾಯನನನ್ನು)+++ ಕರೆದು ಸ-
ಮರ್ಪಿಸಿದನ್ ಅರಸಂಗೆ ವೇದವ್ಯಾಸ ಮುನಿರಾಯ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸರ್ಪಯಜ್ಞದಲ್ಲಾದ ಪಾಪದ ಅಬ್ಬರವನ್ನು ಪೂರ್ತಿಯಾಗಿ ಪರಿಹರಿಸಲು, ತರ್ಪಣ ಮೊದಲಾದ ಕ್ರಿಯೆಗಳಿಗೆ ಸಾಮಥ್ರ್ಯವಿಲ್ಲೆಂದು ಮುನಿಮುಖಕ್ಕೆ ಕನ್ನಡಿಯೋಪಾದಿಯಲ್ಲಿರುವ, ಕಾಮನ ವೈರಿ ಪರಮಶಿವಮೂರ್ತಿಯೆನಿಸಿದ ವೇದವ್ಯಾಸ ಮುನಿರಾಯ ತನ್ನ ಶಿಷ್ಯ ವೈಶಂಪಾಯನನನ್ನು ಜನಮೇಜಯನಿಗೆ ಒಪ್ಪಿಸಿದನು.
ಪದಾರ್ಥ (ಕ.ಗ.ಪ)
ದರ್ಪಕಾಹಿತ-ಮನ್ಮಥನ ಶತ್ರು, ಶಿವ,
ದರ್ಪಣ-ಕನ್ನಡಿ
ಮೂಲ ...{Loading}...
ಸರ್ಪಯಜ್ಞದಲಾದ ದುರಿತದ
ದರ್ಪವನು ಕೆಡೆಬೀಳಲೊದೆಯಲು
ತರ್ಪಣಾದಿ ಕ್ರಿಯೆಗಳಲಿ ಸಾಮಥ್ರ್ಯವಿಲ್ಲೆಂದು
ದರ್ಪಕಾಹಿತಮೂರ್ತಿ ಮುನಿಮುಖ
ದರ್ಪಣನು ಶಿಷ್ಯನನು ಕರೆದು ಸ
ಮರ್ಪಿಸಿದನರಸಂಗೆ ವೇದವ್ಯಾಸ ಮುನಿರಾಯ ॥7॥
೦೦೮ ರಾಯ ಕೇಳೈ ...{Loading}...
“ರಾಯ ಕೇಳ್ ಐ ನಿಮ್ಮ ಪಾಂಡವ
ರಾಯ-ಚರಿತವನ್” ಎಂದು ವೈಶಂ-
ಪಾಯನಿಗೆ ಬೆಸಸಿದನು+++(=ಆಜ್ಞಾಪಿಸಿದನು)+++, ಕೊಟ್ಟನು ಬಳಿಕ ಪುಸ್ತಕವ
ರಾಯನ್ ಅತಿ ಭಕ್ತಿಯಲಿ ವೈಶಂ-
ಪಾಯನಗೆ ವಂದಿಸಿ, ನಿಜಾಭಿ
ಪ್ರಾಯವನು ಕೇಳಿದನು - ಚಿತ್ತೈಸುವುದು ಮುನಿನಿಕರ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ರಾಜ, ಕೇಳು ನಿಮ್ಮ ಪಾಂಡವರ ಚರಿತವನ್ನು” ಎಂದು ಜನಮೇಜಯನಿಗೆ ಹೇಳಿದ ವ್ಯಾಸಮುನಿ ವೈಶಂಪಾಯನಿಗೆ ಅಪ್ಪಣೆ ಮಾಡಿ ಪುಸ್ತಕವನ್ನು ಕೊಟ್ಟನು. ಆಗ ಜನಮೇಜಯನು ವೈಶಂಪಾಯನನಿಗೆ ನಮಸ್ಕರಿಸಿ ತನ್ನ ಆಶಯವಾದ ಪಾಂಡವರ ಚರಿತೆಯನ್ನು ಕೇಳಿದನು. ಅದನ್ನು ಮುನಿಸಮೂಹ ಕೇಳಬೇಕೆಂದು ಸೂತನು ಶೌನಕಾದಿ ಮುನಿ ಸಮೂಹಕ್ಕೆ ಹೇಳಿದನು.
ಪದಾರ್ಥ (ಕ.ಗ.ಪ)
ಅಭಿಪ್ರಾಯ-ಆಶಯ, ಉದ್ದೇಶ
ಮೂಲ ...{Loading}...
ರಾಯ ಕೇಳೈ ನಿಮ್ಮ ಪಾಂಡವ
ರಾಯಚರಿತವನೆಂದು ವೈಶಂ
ಪಾಯನಿಗೆ ಬೆಸಸಿದನು ಕೊಟ್ಟನು ಬಳಿಕ ಪುಸ್ತಕವ
ರಾಯನತಿ ಭಕ್ತಿಯಲಿ ವೈಶಂ
ಪಾಯನಗೆ ವಂದಿಸಿ ನಿಜಾಭಿ
ಪ್ರಾಯವನು ಕೇಳಿದನು ಚಿತ್ತೈಸುವುದು ಮುನಿನಿಕರ ॥8॥
೦೦೯ ವಿತತ ಪುಸ್ತಕವನು ...{Loading}...
ವಿತತ-ಪುಸ್ತಕವನು ಸುಗಂಧಾ-
ಕ್ಷತೆಯೊಳ್ ಅರ್ಚಿಸಿ, ಸೋಮ-ಸೂರ್ಯ-
ಕ್ಷಿತಿ-ಜಲಾನಲ-ವಾಯು-ಗಗನಾದಿಗಳಿಗ್ ಅಭಿನಮಿಸಿ
ಶತಮಖಾದಿ-ಸಮಸ್ತ-ದೇವ-
ಪ್ರತತಿಗ್ ಎರಗಿ+++(=ನಮಿಸಿ)+++ ಸರೋಜ-ಭವ–ಪಶು-
ಪತಿಗಳಿಗೆ ಕೈಮುಗಿದು ವಿಮಲ-ಜ್ಞಾನ-ಮುದ್ರೆಯಲಿ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೈಶಂಪಾಯನ ಮುನಿಯು ಶ್ರೇಷ್ಠವಾದ ಪುಸ್ತಕವನ್ನು ಗಂಧಾಕ್ಷತೆಗಳಿಂದ ಪೂಜಿಸಿದನು. ಚಂದ್ರ, ಸೂರ್ಯ, ಭೂಮಿ, ಅನಲ, ವಾಯು, ಆಕಾಶಗಳಿಗೆ ನಮಿಸಿದನು ಇಂದ್ರನೇ ಮೊದಲಾದ ಸಮಸ್ತ ದೇವ ಸಮೂಹಕ್ಕೆ ನಮಸ್ಕರಿಸಿ, ಬ್ರಹ್ಮ, ಪಶುಪತಿಗಳಿಗೆ ಕೈಮುಗಿದು ಶ್ರೇಷ್ಠವಾದ ಜ್ಞಾನಮುದ್ರೆಯನ್ನು ಧರಿಸಿದನು.
ಪದಾರ್ಥ (ಕ.ಗ.ಪ)
ವಿತತ-ಶ್ರೇಷ್ಠವಾದ, ವಿಸ್ತಾರವಾದ,
ಶತಮಖ-ನೂರುಯಜ್ಞ ಮಾಡಿದವ, ದೇವೇಂದ್ರ,
ಪ್ರತತಿ-ಸಮೂಹ,
ಸರೋಜಭವ-ಬ್ರಹ್ಮ,
ಪಶುಪತಿ-ಶಿವ
ಮೂಲ ...{Loading}...
ವಿತತ ಪುಸ್ತಕವನು ಸುಗಂಧಾ
ಕ್ಷತೆಯೊಳರ್ಚಿಸಿ ಸೋಮ ಸೂರ್ಯ
ಕ್ಷಿತಿ ಜಲಾನಲ ವಾಯು ಗಗನಾದಿಗಳಿಗಭಿನಮಿಸಿ
ಶತಮಖಾದಿ ಸಮಸ್ತ ದೇವ
ಪ್ರತತಿಗೆರಗಿ ಸರೋಜಭವ ಪಶು
ಪತಿಗಳಿಗೆ ಕೈಮುಗಿದು ವಿಮಲಜ್ಞಾನ ಮುದ್ರೆಯಲಿ ॥9॥
೦೧೦ ಮನದೊಳಾದ್ಯಮ್ಪುರುಷಮೀಶಾ ...{Loading}...
ಮನದೊಳ್ ಆದ್ಯಂ ಪುರುಷಮ್ ಈಶಾ-
ನನನು, ಪುರುಹೂತನ ಪುರಸ್ಕೃತನ್
ಅನಘನ್ ಏಕಾಕ್ಷರ-ಪರ-ಬ್ರಹ್ಮನ ಸನಾತನನ
ದನುಜರಿಪು ಸುವ್ಯಕ್ತನ್, ಅವ್ಯ-
ಕ್ತನನು ಸದ್-ಅಸದ್-ರೂಪನ್ ಅವ್ಯಯನ್
ಎನಿಪ ವಿಷ್ಣುವ ನೆನೆದು ಮುನಿ ವಿಸ್ತರಿಸಿದನು ಕಥೆಯ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮನಸ್ಸಿನಲ್ಲಿ ಆದಿಪುರುಷನಾದ ಪರಮೇಶ್ವರನನ್ನು, ಇಂದ್ರನಿಂದ ಗೌರವಿಸಲ್ಪಟ್ಟ, ದೋಷರಹಿತನಾದ, ಪುರಾತನನಾದ, ಓಂಕಾರ ಸ್ವರೂಪನಾದ ಪರಬ್ರಹ್ಮನನ್ನು, ದಾನವವೈರಿಯಾದವನೂ, ಪ್ರತ್ಯಕ್ಷವಾಗಿ ಗೋಚರಿಸುವವನೂ, ವ್ಯಕ್ತವಾಗದವನೂ, ಸದಸದ್ರೂಪನೂ, ವಿಕಾರವಾಗದವನೂ ಎನಿಸಿದ ವಿಷ್ಣುವನ್ನು ಸ್ಮರಿಸಿ ವೈಶಂಪಾಯನನು ಕಥೆಯನ್ನು ವಿಸ್ತರಿಸಿದನು.
ಪದಾರ್ಥ (ಕ.ಗ.ಪ)
ಆದ್ಯಂ ಪುರುಷ-ಆದಿಪುರುಷ,
ಈಶಾನ-ಪರಶಿವನ ಐದು ಮುಖಗಳಲ್ಲಿ ಒಂದು
ಪುರುಹೂತ-ಇಂದ್ರ,
ಪುರಸ್ಕೃತ-ಗೌರವಿಸಲ್ಪಟ್ಟ,
ಸನಾತನ-ಪುರಾತನ, ಶಾಶ್ವತ,
ಅವ್ಯಯ-ವಿಕಾರವಾಗದ
ಪಾಠಾನ್ತರ (ಕ.ಗ.ಪ)
ಪುರುಹೂತ- ಪುರುಹೂತನ - ಆದಿಪರ್ವ, ಮೈ.ವಿ.ವಿ.- ಡಾ.ಕೆ.ಆರ್. ಶೇಷಗಿರಿ.
ಟಿಪ್ಪನೀ (ಕ.ಗ.ಪ)
ಪರಶಿವನ ಐದು ಮುಖಗಳು - ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ
ಮೂಲ ...{Loading}...
ಮನದೊಳಾದ್ಯಂಪುರುಷಮೀಶಾ
ನನನು ಪುರುಹೂತನ ಪುರಸ್ಕೃತ
ನನಘನೇಕಾಕ್ಷರ ಪರಬ್ರಹ್ಮನ ಸನಾತನನ
ದನುಜರಿಪು ಸುವ್ಯಕ್ತನವ್ಯ
ಕ್ತನನು ಸದಸದ್ರೂಪನವ್ಯಯ
ನೆನಿಪ ವಿಷ್ಣುವ ನೆನೆದು ಮುನಿ ವಿಸ್ತರಿಸಿದನು ಕಥೆಯ ॥10॥
೦೧೧ ವೇದ ನಾಲ್ಕದರಙ್ಗವಾರ ...{Loading}...
ವೇದ ನಾಲ್ಕ್, ಅದರ್ ಅಂಗವ್ ಆರ್, ಅ-
ಷ್ಟಾದಶಾದಿ-ಪುರಾಣ-ಸ್ಮೃತಿಗಳ್, ಒ-
ಳ್ ಆದ ಪೂರ್ವೋತ್ತರದ ಮೀಮಾಂಸದ ಪರಿಕ್ರಮದ
ವಾದ-ವಿಲಸನ್-ನ್ಯಾಯವನು, ಶ-
ಬ್ದೋದಧಿಯನ್ ಅಳವಡಿಸಿ ರಚಿಸಿದ
ಬಾದರಾಯಣನ್ ಅಂಘ್ರಿಯನು ಭಜಿಸಿದನು ಮನದೊಳಗೆ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾಲ್ಕು ವೇದಗಳು, ಆರುವೇದಾಂಗಗಳು, ಹದಿನೆಂಟು ಪುರಾಣಗಳು, ಸ್ಮೃತಿಗಳು, ಪೂರ್ವ, ಉತ್ತರ ಮೀಮಾಂಸಗಳು ಬಳಸುವ. ವಿವಿಧ ನ್ಯಾಯದ ವಾದವನ್ನು ಶಬ್ದ ಸಾಗರವನ್ನಳವಡಿಸಿ ರಚಿಸಿದ ಬಾದರಾಯಣನ ಪಾದಗಳನ್ನು ಮನಸ್ಸಿನಲ್ಲಿ ಧ್ಯಾನಿಸಿದನು.
ಪದಾರ್ಥ (ಕ.ಗ.ಪ)
ಪರಿಕ್ರಮ-ಬಳಸುವಿಕೆ,
ಬಾದರಾಯಣ-ವ್ಯಾಸ
ಪಾಠಾನ್ತರ (ಕ.ಗ.ಪ)
[ವಿಲಸ] - [ವಿವಿಧ (ಅ)] - ವಿಲಸ ಅಂದರೆ ವಿಲಾಸ, ಕಾಂತಿ, ಲಾವಣ್ಯ ಮೊದಲಾದ ಅರ್ಥಗಳಿರುವುದರಿಂದ ಈ ಸಂದರ್ಭದಲ್ಲಿ ನಾನಾತೆರದ, ಬಗೆ ಬಗೆಯ ಅರ್ಥಗಳಿರುವ [ವಿವಿಧ] ಪಾಠಾಂತರ ಇದೆ.
ಟಿಪ್ಪನೀ (ಕ.ಗ.ಪ)
ವೇದನಾಲ್ಕು-ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ.
ಆರು ವೇದಾಂಗಗಳು-ಶಿಕ್ಷೆ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ, ಕಲ್ಪ
ಅಷ್ಟಾದಶ ಪುರಾಣಗಳು-ಬ್ರಹ್ಮ, ಪದ್ಮ, ವಿಷ್ಣು, ಶಿವ, ಭಾಗವತ, ನಾರದೀಯ, ಮಾರ್ಕಂಡೇಯ, ಅಜ್ಞಿ, ಭವಿಷ್ಯ, ಬ್ರಹ್ಮ ವೈವರ್ತ, ಲಿಂಗ, ವರಾಹ, ಸ್ಕಂದ, ವಾಮನ, ಕೂರ್ಮ, ಮತ್ಸ್ಯ, ಗರುಡ ಮತ್ತು ಬ್ರಹ್ಮಾಂಡ.
ಸ್ಮೃತಿಗಳು-ಮನುಷ್ಯನು ಹೇಗೆ ಬಾಳಬೇಕು, ಪುರುಷಾರ್ಥಗಳನ್ನು ಹೇಗೆ ಸಾಧಿಸಬೇಕು, ಯಾವ ಯಾವ ವಿಧಿ ಸಂಸ್ಕಾರಗಳನ್ನು ಆಚರಿಸಬೇಕು ಎನ್ನುವುದರ ವಿವರವಾದ ನಿರ್ದೇಶನಗಳು ಸ್ಮೃತಿಗಳಲ್ಲಿ ದೊರೆಯುತ್ತವೆ. ಸ್ಮೃತಿಗಳಲ್ಲಿ ಆಚಾರ, ವ್ಯವಹಾರ, ಪ್ರಾಯಶ್ಚಿತ್ತ ಎಂಬ ಮೂರು ಭಾಗಗಳಿರುತ್ತವೆ. ನೂರಾರು ಸ್ಮೃತಿ ಗ್ರಂಥಗಳಿವೆ. ಅದರಲ್ಲಿ ಮನುಸ್ಮೃತಿ, ಯಾಜ್ಞವಲ್ಕ್ಯ ಹಾಗೂ ಪರಾಶರ ಸ್ಮೃತಿಗಳು ಅತ್ಯಂತ ಪ್ರಸಿದ್ಧ.
ಪೂರ್ವ ಮೀಮಾಂಸೆ-ಷಡ್ದರ್ಶನಗಳಲ್ಲೊಂದು ಧರ್ಮಕ್ಕೆ ಸಂಬಂಧಿಸಿದುದು, ಇಹಪರದೃಷ್ಟಿಯಿಂದ ವೇದವು ಏನು ಹೇಳಿದೆ ಎಂದು ವಿಚಾರಪೂರ್ವಕವಾಗಿ ನಿರ್ಣಯಿಸುವುದೇ ಮೀಮಾಂಸ ಶಾಸ್ತ್ರ.
ಉತ್ತರಮೀಮಾಂಸೆ- ಉತ್ತರ ಮೀಮಾಂಸೆಯು ವೇದಗಳ ಜ್ಞಾನಕಾಂಡವನ್ನು ಪ್ರತಿಪಾದಿಸುತ್ತದೆ.
ಬಾದರಾಯಣ-ಬದರೀವನದ ಆಶ್ರಮದಲ್ಲಿ ತಪಸ್ಸು ಮಾಡುತ್ತಿದ್ದವನಾದ್ದರಿಂದ ಬಾದರಾಯಣ ಎಂಬ ಹೆಸರು
ಮೂಲ ...{Loading}...
ವೇದ ನಾಲ್ಕದರಂಗವಾರ
ಷ್ಟಾದಶಾದಿ ಪುರಾಣ ಸ್ಮೃತಿಗಳೊ
ಳಾದ ಪೂರ್ವೋತ್ತರದ ಮೀಮಾಂಸದ ಪರಿಕ್ರಮದ
ವಾದ ವಿಲಸನ್ನ್ಯಾಯವನು ಶ
ಬ್ದೋದಧಿಯನಳವಡಿಸಿ ರಚಿಸಿದ
ಬಾದರಾಯಣನಂಘ್ರಿಯನು ಭಜಿಸಿದನು ಮನದೊಳಗೆ ॥11॥
೦೧೨ ಅರಸ ಕೇಳೈ ...{Loading}...
+++(ವೈಶಮ್ಪಾಯನನು ಜನಮೇಜಯನಿಗೆ)+++
ಅರಸ ಕೇಳ್ ಐ ನಾರದಾದ್ಯರು
ಸರಸಿ-ರುಹ-ಸಂಭವನ +++(ಬ್ರಹ್ಮನ)+++ ಸಭೆಯೊಳು
ವರ ಮಹಾ-ಭಾರತವ ಕೊಂಡ್ ಆಡಿದರು ಭಕ್ತಿಯಲಿ
ವರ ಮಹತ್ವದಿ, ಭಾರವತ್ವದಿ
ವರ, ಮಹಾ-ಭಾರತವ್ ಇದ್ ಒಂದೇ
ದುರಿತ-ದುರ್ಗ-ವಿಭೇದಕವ್ ಈರ್+++(=೨x)+++ ಏಳು ಲೋಕದಲಿ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾರದರೆ ಮೊದಲಾದವರು ಶ್ರೇಷ್ಠವಾದ ಮಹಾಭಾರತವನ್ನು ಬ್ರಹ್ಮನ ಸಭೆಯಲ್ಲಿ ಭಕ್ತಿಯಿಂದ ಕೊಂಡಾಡಿದರು. ಮಹತ್ತ್ವದಿಂದಲೂ ಭಾರವತ್ವದಿಂದಲೂ ಶ್ರೇಷ್ಠವಾದದ್ದು ಈ ಮಹಾಭಾರತ. ಹದಿನಾಲ್ಕು ಲೋಕಗಳಲ್ಲಿ ಪಾಪದುರ್ಗವನ್ನು ಭೇದಿಸುವಂತದ್ದು ಮಹಾಭಾರತವಿದೊಂದೇ ಎಂದು ಜನಮೇಜಯನಿಗೆ ವೈಶಂಪಾಯನು ಹೇಳಿದನು.
ಪದಾರ್ಥ (ಕ.ಗ.ಪ)
ವಿಭೇದ-ಒಡೆಯುವಿಕೆ, ಈರೇಳು ಲೋಕಗಳು-ಹದಿನಾಲ್ಕು ಲೋಕಗಳು
ಟಿಪ್ಪನೀ (ಕ.ಗ.ಪ)
ಹದಿನಾಲ್ಕು ಲೋಕಗಳು-ಭೂಲೋಕ, ಭುವರ್ಲೋಕ, ಸ್ವರ್ಲೋಕ, ಮಹರ್ಲೋಕ, ಜನಲೋಕ, ತಪೋಲೋಕ, ಸತ್ಯಲೋಕ (ಮೇಲಿನ ಏಳು ಲೋಕಗಳು) ಅತಲ, ವಿತಲ, ಸುತಲ, ರಸಾತಲ, ತಲಾತಲ, ಮಹಾತಲ, ಪಾತಾಲ (ಸಪ್ತ ಪಾತಾಲಗಳು)
ಮೂಲ ...{Loading}...
ಅರಸ ಕೇಳೈ ನಾರದಾದ್ಯರು
ಸರಸಿರುಹ ಸಂಭವನ ಸಭೆಯೊಳು
ವರ ಮಹಾಭಾರತವ ಕೊಂಡಾಡಿದರು ಭಕ್ತಿಯಲಿ
ವರ ಮಹತ್ವದಿ ಭಾರವತ್ವದಿ
ವರ ಮಹಾಭಾರತವಿದೊಂದೇ
ದುರಿತ ದುರ್ಗ ವಿಭೇದಕವೀರೇಳು ಲೋಕದಲಿ ॥12॥
೦೧೩ ಹೇಳಿದನು ಪೌಲೋಮ ...{Loading}...
ಹೇಳಿದನು ಪೌಲೋಮ-ಚರಿತೋ-
ದ್ದಾಲಕಾಖ್ಯರ-ಚರಿತವನು ಮುನಿ,
ಹೇಳಿದನು ಫಣಿ-ನಿಕರ-ಗರುಡಾಸ್ತಿಕರ-ಸಂಭವವ
ಮೇಲೆ ಬಳಿಕ ಪರೀಕ್ಷಿದ್ ಅವನೀ-
ಪಾಲ-ಶಾಪದ ಮರಣವನು ನೆರೆ
ಹೇಳಿದನು ಮುನಿಗಳಿಗೆ ಸರ್ಪಾಧ್ವರದ ಸಂಗತಿಯ
॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪೌಲೋಮ ಉದ್ದಾಲಕರ ಚರಿತ್ರೆಯನ್ನು ಸರ್ಪಸಮೂಹದ, ಗರುಡ, ಆಸ್ತಿಕರ ಹುಟ್ಟನ್ನು, ಪರೀಕ್ಷಿತ ರಾಜನಿಗೆ ಬಂದ ಮರಣದ ಶಾಪವನ್ನು, ಸರ್ಪಯಾಗದ ವಿಷಯವನ್ನು ಮುನಿಗಳಿಗೆ ಸೂತನು ಹೇಳಿದನು.
ಪದಾರ್ಥ (ಕ.ಗ.ಪ)
ಸಂಭವ-ಹುಟ್ಟು, ಅಧ್ವರ-ಯಜ್ಞ
ಟಿಪ್ಪನೀ (ಕ.ಗ.ಪ)
ಸರ್ಪರಕ್ಷಕ ಆಸ್ತಿಕ - ತಪಸ್ವಿ ಜರತ್ಕಾರು ಮತ್ತು ವಾಸುಕಿಯ ತಂಗಿಯಾದ ಜರತ್ಕರು ಇವರ ಮಗನೇ ಮಹಾಧರ್ಮಿಷ್ಠನಾದ ಆಸ್ತಿಕ. ಆನಮೇಜಯನು ಮಾಡುತ್ತಿದ್ದ ಸರ್ಪಯಜ್ಞಕ್ಕೆ ಹೋಗಿ ಹಾವುಗಳ ಸಂಪೂರ್ಣ ವಿನಾಶವನ್ನು ತಡೆದ ಮಹಾನುಭಾವ ಎಂದು ಈತ ಪ್ರಸಿದ್ಧನಾಗಿದ್ದಾನೆ.
ಜರತ್ಕಾರು ಋಷಿ ಪತ್ನಿಯಿಂದ ದೂರವಾದದ್ದೇ ಒಂದು ಕಥೆ. ಜರತ್ಕಾರು ತನ್ನ ಹೆಂಡತಿಯ ಜೊತೆ ಪುಷ್ಯಕರ ತೀರ್ಥದಲ್ಲಿ ವಾಸ ಮಾಡುತ್ತಿದ್ದ. ಒಂದು ಸಂಜೆ ತನ್ನ ಹೆಂಡತಿಯ ತೊಡೆಯ ಮೇಲೆ ಮಲಗಿದವನು ಸಂಜೆ ಮುಗಿಯುತ್ತ ಬಂದರೂ ಆಹ್ನಿಕಕ್ಕೆ ಏಳಲಿಲ್ಲ. ಹೆಂಡತಿ ಎಬ್ಬಿಸಿದಾಗ ಭಯಂಕರವಾಗಿ ಕೋಪಿಸಿಕೊಂಡು ಆ ಕ್ಷಣದಲ್ಲೇ ಅವಳನ್ನು ತ್ಯಜಿಸಿ ಹೊರಡು ಸಿದ್ಧನಾದ. ಆಗ ವಿನಮ್ರಳಾಗಿ ‘ನನ್ನ ಗರ್ಭದ U್ಪತಿ’; ಎಂದು ಜರತ್ಕಾರು ರಮಣಿ ಕೇಳಿದಳಂತೆ. ಆಗ ಜರತ್ಕಾರು ‘ಆಸ್ತಿ’ ಎಂದು ಹೇಳಿ ಸಂತನ ಪ್ರಾಪ್ತಿಯನ್ನು ಸ್ರಚಿಸಿದ. ಈ ಆಸ್ತಿ ಎಂಬ ಶಬ್ದಾಶ್ವಾಸನೆಯ ಕಾರಣದಿಂದ ಮಗುವಿಗೆ ಆಸ್ತಿಕನೆಂದೇ ಹೆಸರಾಯಿತು.
ಮಹಾಭಾರತವನ್ನು ಕೆಲವರು ಆಸ್ತಿಕನ ಕಥೆಯಿಂದ ಆರಂಭಿಸುತ್ತಾರೆ. ತಪೋವೀರ್ಯನೂ ಬಲೋತ್ಪೇತನೂ ಆದ ಈತ ವೇದವೇದಾಂಗ ಪಾರಂಗತನೂ ಆಗಿದ್ದ. ವಾಸುಕಿಯ ಮನೆಯಲ್ಲಿ ಬೆಳೆದ. ಪರಮೇಶ್ವರನೇ ಈತನಿಗೆ ವೇದವೇದಾಂಗಗಳನ್ನು ಕಲಿಸಿದಿವನೆಂಬ ಪ್ರತೀತಿಯಿದೆ. ಮುಂದೆ ಪುಷ್ಕರ ತೀರ್ಥದಲ್ಲಿ ಬಹುಕಾಲ ವಿಷ್ಣುವನ್ನು ಕುರಿತು ತಪಸ್ಸು ಮಾಡಿ ವರ ಪಡೆದು ಕೈಲಾಸದಲ್ಲಿ ತಾಯಿಯೊಂದಿಗೆ ಸ್ವಲ್ಪ ಸಮಯ ಇದ್ದ.
ಮುಂದೆ ಜನಮೇಜಯರಾಜನು ತನ್ನ ತಂದೆಯನ್ನು ಕಚ್ಚಿ ಸಾಯಿಸಿದ ಸರ್ಪಗಳ ಮೇಲೆ ದ್ವೇಷ ಸಾಧಿಸಿ ‘ಸರ್ಪಸತ್ರ’ ಎಂಬ ಯಾಗ ಮಾಡಿ ಸರ್ಪಕುಲವನ್ನೆಲ್ಲ ಕೊಲ್ಲುವ ಭೀಕರ ಕೃತ್ಯದಲ್ಲಿ ತೊಡಗಿದ ಸಂಗತಿ ಆಸ್ತಿಕನಿಗೆ ತಿಳಿಯಿತು. ಅಲ್ಲದೆ ತಕ್ಷಕನನ್ನು ಕೊಲ್ಲಲು ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ ಎಂದೂ ಆಸ್ತಿಕನಿಗೆ ಗೊತ್ತಾಯಿತು. ತಕ್ಷಕನು ಭಯದಿಂದ ಇಂದ್ರನ ಮಂಚಕ್ಕೆ ಸುತ್ತಿಕೊಂಡಿದ್ದ. ಋಷಿಗಳ ಮಂತ್ರಶಕ್ತಿಯಿಂದ ಇಂದ್ರಸಹಿತವಾಗಿ ಅವನ ಮಂಚವು ಯಜ್ಞಕುಂಡದ ಬಳಿಗೆ ಬಂದಿತು. ಇಂದ್ರ ಹೆದರಿ ಕೈ ಬಿಟ್ಟು ತಾನು ಉಳಿದುಕೊಂಡ. ತಕ್ಷಕ ಇನ್ನೇನು ಯಜ್ಞಕುಂಡಕ್ಕೆ ಬೀಳಬೇಕು. ಆಗ ಆಸ್ತಿ ಬಂದು ತನ್ನ ತಪಶ್ಯಕ್ತಿಯಿಂದ ಅದು ಬೀಳದಂತೆ ತಡೆದ. ಆನಮೇಜಯ ವ್ಯಕ್ತಿತ್ವಕ್ಕೆ ಮಾರುಹೋಗಿ ಅವನ ಉಪದೇಶದಂತೆ ಯಜ್ಞವನ್ನು ನಿಲ್ಲಿಸಿದ. ಹೀಗೆ ಆಸ್ತಿ ಮಾಡಿದ ಮಹತ್ಕಾರ್ಯ ಎಂದರೆ ಸರ್ಪಕುಲದ ಕೊಲೆಯನ್ನು ತಪ್ಪಿಸಿದ್ದು.
ಆಸ್ತಿಕನ ಹೆಸರು ಹೇಳಿದರೆ ಹಾವಿನ ಭಯ ಇರುವುದಿಲ್ಲ ಎಂದು ಮಹಾಭಾರತದಲ್ಲಿ ಹೇಳಲಾಗಿದೆ. ಆಸ್ತಿಕ, ಅಸಿತ, ಆರ್ತಿಯತ್ ಮತ್ತು ಸುನೀತ-ಈ ಹೆಸರುಗಳನ್ನು ಸ್ಮರಿಸುವವರಿಗೆ ಸರ್ಪಬಾಧೆ ಇರುವುದಿಲ್ಲ ಎಂದು ಹಾವುಗಳೇ ಆಸ್ತಿಕನಿಗೆ ಆಶ್ವಾಸನೆ ಕೊಟ್ಟವಂತೆ. ಕೊಟ್ಟವಂತೆ. ಪೌಲೋಮ :
ನಿವಾತಕವಚರನ್ನು ಕೊಂದ ನಂತರ ಅರ್ಜುನನು ಇಂದ್ರನಗರಕ್ಕೆ ಹೋಗುವ ದಾರಿಯಲ್ಲಿ ಆಕಾಶದಲ್ಲಿಯೇ ಸುಂದರವಾಗಿ ಕಟ್ಟಲಾಗಿದ್ದ ಒಂದು ನಗರವನ್ನು ನೋಡಿದ. ಅಲ್ಲಿ ವಿಸ್ತಾರವಾದ ಒಂದು ಗೃಹ. ವಯಂಪ್ರಕಾಶಿತವಾಗಿದ್ದು ಸಮಸ್ತ ರತ್ನಗಳಿಂದ ಕೂಡಿತ್ತು. ಇದು ಬ್ರಹ್ಮನು ಕಟ್ಟಿಕೊಟ್ಟ ಹಿರಣ್ಯಪುರ ಎಂಬ ನಗರ.
ಇದರ ಕಥೆಯನ್ನು ಅರಣ್ಯಪರ್ವದಲ್ಲಿ ದೇವೇಂದ್ರ ಸಾರಥಿಯು ಅರ್ಜುನನಿಗೆ ಹೇಳುತ್ತಾನೆ.
ಪ್ರಲೋಮೆಯ ಮಗ ಪೌಲೋಮ. ಪ್ರಲೋಮೆ ಮತ್ತು ಕಾಲಕಾ ಎಂಬ ಸೋದರಿಯರು ಒಬ್ಬ ಪ್ರಬಲ ರಾಕ್ಷಸನ ಪುತ್ರಿಯು. ಈ ಇಬ್ಬರು ಪುತ್ರಿಯರೂ ದೀರ್ಘಕಾಲ ಘೋರ ತಪಸ್ಸನ್ನು ಮಾಡಿದರು. ಬ್ರಹ್ಮನು ಪ್ರತ್ಯಕ್ಷನಾದಾಗ ಎರಡು ವರಗಳನ್ನು ಬೇಡಿದರು. ಮೊದಲನೆಯದು; ‘ನಮ್ಮ ಮಕ್ಕಳು ಲೋಕದಲ್ಲಿ ಆನಂದವಾಗಿರಬೇಕು, ದುಃಖವನ್ನೇ ಕಾಣಬಾರದು. ಅಲ್ಲದೆ ಅವರಿಗೆ ದೇವತೆಗಳಿಂದಾಗಲೀ, ರಾಕ್ಷಸ ಪನ್ನಗರಿಂದಾಗಲಿ ಸಾವು ಬರಬಾರದು. ಎರಡನೆಯದು ‘ನಮ್ಮ ಮೊಮ್ಮಕ್ಕಳು ಮತ್ತು ಮರಿಮಕ್ಕಳು ವಾಸ ಮಾಡುವುದಕ್ಕೆ ಒಂದು ವಿಶಾಲವಾದ ಆಕಾಶ ನಗರವನ್ನು ಕಟ್ಟಿಕೊಡಬೇಕು. ಅದು ಕಾಂತಿಯುಕ್ತವಾಗಿರಬೇಕು ಮತ್ತು ದೇವ ಯಕ್ಷ ಗಂಧರ್ವರಿಂದಾಗಲೀ ಋಷಿಗಳಿಂದಾಗಲೀ ಭೇದಿಸುವಂತಿರಬಾರದು. ಆ ನಮ್ಮ ಕಡೆಯವರ ಎಲ್ಲ ಅಭೀಷ್ಟಗಳನ್ನು ನೆರವೇರಿಸುವಂತಿರಬೇಕು ಮತ್ತು ದುಃಖ ಕಾಯಿಲೆಗಳು ಅಲ್ಲಿರುವವರನ್ನು ಬಾಧಿಸಬಾರದು. ಈ ಕಥೆಯನ್ನೂ ಮತ್ತು ಹೇಗೆ ಈ ಪೌಲೋಮ-ಕಾಲಂಜರರು ಜನಪೀಡಿತರಾಗಿದ್ದಾರೆಂಬುದನ್ನೂ ದೈವದ್ವೇಷಿಗಳಾಗಿರುವುದನ್ನೂ ಅರ್ಜುನನು ತಿಳಿದು ಆ ನಗರದ ಮೇಲೆ ದಂಡೆತ್ತಿ ಹೋದ. ಮುಂದೆ ಪೌಲೋಮ ಕಾಲಂಜರರು ಅರ್ಜುನನ ಮೇಲೆ ಯುದ್ಧಕ್ಕೆ ನಿಂತರು. ಎಲ್ಲರನ್ನೂ ಅರ್ಜುನನು ಕೊಂದು ದೇವತೆಗಳಿಗೆ ಅವರ ಕಾಟವನ್ನು ತಪ್ಪಿಸಿ ಇಂದ್ರನ ರಾಜಧಾನಿಗೆ ತೆರಳಿದನು.
ಮೂಲ ...{Loading}...
ಹೇಳಿದನು ಪೌಲೋಮ ಚರಿತೋ
ದ್ದಾಲಕಾಖ್ಯರ ಚರಿತವನು ಮುನಿ
ಹೇಳಿದನು ಫಣಿನಿಕರ ಗರುಡಾಸ್ತಿಕರ ಸಂಭವವ
ಮೇಲೆ ಬಳಿಕ ಪರೀಕ್ಷಿದವನೀ
ಪಾಲ ಶಾಪದ ಮರಣವನು ನೆರೆ
ಹೇಳಿದನು ಮುನಿಗಳಿಗೆ ಸರ್ಪಾಧ್ವರದ ಸಂಗತಿಯ ॥13॥
೦೧೪ ಕೇಳಿದನು ಜನಮೇಜಯ ...{Loading}...
ಕೇಳಿದನು ಜನಮೇಜಯ ಕ್ಷಿತಿ-
ಪಾಲ ವ್ಯೆಶಂಪಾಯನನು ತಾ+++(ನ್??)+++
ಕೀಳು-ದುರಿತಂಗಳಿಗೆ ಪ್ರಾಯಶ್ಚಿತ್ತ ರೂಪದಲಿ
ಕೇಳಿರ್ ಐ ಮುನಿ-ನಿಕರವ್ ಈ ಕಲಿ-
ಕಾಲದಲಿ ಫಲಿಸುವುದು ಲಕ್ಷ್ಮೀ-
ಲೋಲ-ನಾಮ-ಸ್ತುತಿ ಮಹಾ-ಭಾರತ–ಕಥಾ-ಶ್ರವಣ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೈಶಂಪಾಯನನು ಹೇಳಿದ್ದನ್ನು ಜನಮೇಜಯ ಮಹಾರಾಜ ಕೇಳಿದನು. ಕೀಳಾದ ಪಾಪಗಳಿಗೆ ಪ್ರಾಯಶ್ಚಿತ್ತ ರೂಪವಾಗಿ ಮುನಿಗಳೇ ಕೇಳಿರಿ, ಕಲಿಯುಗದಲ್ಲಿ ಮಹಾಭಾರತ ಕಥಾಶ್ರವಣದಿಂದ ಲಕ್ಷ್ಮೀಲೋಲನಾದ ಹರಿಯ ನಾಮಸ್ತುತಿ ಫಲಿಸುವುದೆಂದು ಸೂತಪುರಾಣಿಕರು ತಿಳಿಸಿದರು.
ಟಿಪ್ಪನೀ (ಕ.ಗ.ಪ)
ವೈಶಂಪಾಯನ - ಪೈಲ, ಸುಮಂತ, ಶಕ, ಜನಮೇಜಯರುಗಳಂತೆ ವೈಶಂಪಾಯನನೂ ವ್ಯಾಸರ ಪಂಚ ಪ್ರಮುಖ ಶಿಷ್ಯರಲ್ಲಿ ಒಬ್ಬ. ವಿಶಂಪು ಎಂಬ ಋಷಿಯ ಮಗ. ಯಜುರ್ವೇದ ವ್ಯಾಸಂಗಿಯಾಗಿದ್ದ. ಈತ ವ್ಯಾಸರ ಭಾರತವನ್ನು ಜನಮೇಜಯನಿಗೆ ಯಥಾವತ್ತಾಗಿ ಹೇಳಲು ನಿಯುಕ್ತನಾದ ಭಾಗ್ಯಶಾಲಿ. ಆದರೆ ಕಥೆಯನ್ನು ಕೇಳುತ್ತಿದ್ದ ಜನಮೇಜಯನು ನೂರಾರು ಸಂದರ್ಭಗಳಲ್ಲಿ ಇನ್ನಷ್ಟು ವಿವರಗಳನ್ನು ಬಯಸಿ ‘‘ಯಥಾ ವೃತ್ತಂ ವಿಸ್ತರೇಣ ತಪೋಧನ’’ ಎಂದು ಕೇಳಿದ್ದರಿಂದ ಮೂಲಕಥೆಯ ಸುತ್ತಣ ಸಂದರ್ಭಗಳನ್ನು ವಿವರಿಸುವ ಕೆಲಸವನ್ನೂ ವೈಶಂಪಾಯನ ಕೈಗೊಳ್ಳಬೇಕಾಯಿತು.
ವೇದವ್ಯಾಸರು ಮಹಾಭಾರತವನ್ನು ರಚಿಸಿ ಅದನ್ನು ವ್ಯಾಖ್ಯಾನಿಸಲು ದೇವಲೋಕದಲ್ಲಿ ನಾರದನನ್ನೂ, ಪಿತೃಲೋಕದಲ್ಲಿ ದೇವಲನನ್ನೂ, ಗರುಡಗಂಧರ್ವ ಲೋಕದಲ್ಲಿ ಶುಕಮುನಿಯನ್ನೂ ಮಾನವ ಲೋಕದಲ್ಲಿ ವೈಶಂಪಾಯನನನ್ನೂ ನೇಮಿಸಿದ ಕಥೆ ಜನಜನಿತವಾಗಿದೆ. (‘ಮಾನುಷೇ ಲೋಕೇ ವೈಶಂಪಾಯನ ಉಕ್ತವಾನ್’)
ವ್ಯಾಸರ ಮಹಾಭಾರತ ಕಥೆಯನ್ನು ನಿರೂಪಿಸುವ ಕಲೆ ವೈಶಂಪಾಯನನಿಗೆ ಅವಗತವಾಗಿತ್ತು. ಅಲ್ಲದೆ ಅವನ ಸ್ಮೃತಿಶಕ್ತಿ ಅಗಾಧವಾಗಿತ್ತು. ಗುರುಗಳೊಂದಿಗೆ ವೇದ ಸಾಹಿತ್ಯವನ್ನೆಲ್ಲ ಶೋಧಿಸಿ ನಾಲ್ಕು ವೇದಗಳಾಗಿ ವ್ಯವಸ್ಥೆಗೊಳಿಸುವ ಕಾರ್ಯವನ್ನೂ ಆತ ಮಾಡಿದ್ದರಿಂದ ಅವನ ಶಾಸ್ತ್ರಜ್ಞಾನ ನಿಶಿತವಾಗಿತ್ತು. ಉಗ್ರಶ್ರವನಿಗೆ ವಿವಿಧ ಪುರಾಣ ಕಥೆಗಳನ್ನು ಒಕ್ಕಣಿಸಿದ ಹಿನ್ನೆಲೆಯೂ ಈತನಿಗಿದೆ. ಈಗ ಜನಮೇಜಯನಿಗೆ ಸರ್ಪಯಾಗದ ಪರಿಣಾಮವಾಗಿ ಬಂದ ರೋಗವನ್ನು ಹೋಗಲಾಡಿಸುವುದು ವೈಶಂಪಾಯನನ ಉದದೇಶವಾಗಿತ್ತು. ಆದುದರಿಂದ ಗ್ರಂಥವನ್ನು ಎದುರಿಗೆ ಇರಿಸಿಕೊಂಡು ವೈಶಂಪಾಯನನು ಹೇಳುತ್ತ ಹೋದ. ಜನಮೇಜಯನು ಪಾಂಡವರ ವಂಶದವನೇ ಆಗಿದ್ದರೂ ಅವನಿಗೆ ವೈಶಂಪಾಯನರಿಗಿದ್ದ ತಲಸ್ಪರ್ಶಿಯಾದ ಐತಿಹಾಸಿಕ ತಿಳಿವಳಿಕೆ ಇರಲಿಲ್ಲ. ಆದರೆ ಎಲ್ಲವನ್ನೂ ಕೇಳಿ ತಿಳಿಯಬೇಕೆಂಬ ಹಂಬಲ ಮಾತ್ರ ಉಗ್ರವಾಗಿತ್ತು. ಇವನ ಈ ಜ್ಞಾನದ ಹಸಿವಿನಿಂದಾಗಿ ನಮಗೂ ಎಲ್ಲವನ್ನೂ ವಿವರವಾಗಿ ತಿಳಿಯುವ ಅವಕಾಶ ಒದಗಿದೆ. ವ್ಯಾಸರೇ ಮಹಾಭಾರತತಂಥ ವಿಸ್ತಾರಗ್ರಂಥ ಬರೆದಿದ್ದಾರೆ. ಆದರೆ ಅದು ಇತಿಹಾಸ ಕಾವ್ಯ-ಪುರಾಣ ಎರಡೂ ಆಗಿರುವುದರಿಂದ ಎಷ್ಟೋ ಪ್ರಸಂಗಗಳನ್ನು ಉಲ್ಲೇಖಿಸಿ ವ್ಯಾಸರು ಮುಂದುವರಿಯುತ್ತಾರೆ. ಜನಮೇಜಯನು ಬಯಸಿದ ಸಾಂದರ್ಭಿಕ ವಿವರಗಳನ್ನೆಲ್ಲ ವೈಶಂಪಾಯನರು ವಿಸ್ತಾರವಾಗಿ ವರ್ಣಿಸಿರುವುದರಿಂದ ಆತ ಬರಿಯ ‘ಪಾಠಕ’ನಾಗದೆ ಕಥಕನೂ ನಿರೂಪಕನೂ ವ್ಯಾಖ್ಯಾನಕಾರನೂ ಆಗಿ ಬೆಳೆದಿರುವುದು ಎಲ್ಲರೂ ಗಮನಿಸಬೇಕಾದ ಅಂಶ. ಈ ಕಾರಣದಿಂದ ವ್ಯಾಸಭಾರತವು ವೈಶಂಪಾಯನನ ಕೈಯಲ್ಲಿ ಮರುಹುಟ್ಟು ಪಡೆದಂತಾಗಿದೆ. ಕಥಾನಕವನ್ನು ಸರ್ವಾಂಗ ಪರಿಪೂರ್ಣವಾಗಿ ಮಾರ್ಪಡಿಸಲು ವೈಶಂಪಾಯನನು ಈ ಕಥೆಯ ಗರ್ಭದಲ್ಲಿ ಇತಿಹಾಸ, ಸ್ಥಳ ಪುರಾಣ, ಭೌಗೋಳಿಕ ವಿವರ, ಸಾಂಸ್ಕೃತಿಕ ಹಿರಿಮೆ, ಆಡಳಿತ ವ್ಯವಸ್ಥೆ, ಜ್ಯೋತಿಷ, ರಾಜಸಂಪ್ರದಾಯಗಳು, ವರ್ಣಾಶ್ರಮ ವ್ಯವಸ್ಥೆ ಇವುಗಳನ್ನೆಲ್ಲ ಸೇರಿಸಿ ಹಿಗ್ಗಿಸಿದ್ದಾನೆ. ಹೀಗಾಗಿ ಮಹಾಭಾರತವನ್ನು ಕುರಿತು ಚಿಂತಿಸುವವರು ಈ ಭಾರತಕ್ಕೆ ಒಂದು ವಿಶ್ವಕೋಶದ ನೆಲೆಯನ್ನು ಕಾಣಿಸಿದ ವೈಶಂಪಾಯನನನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ.
ಮೂಲ ...{Loading}...
ಕೇಳಿದನು ಜನಮೇಜಯ ಕ್ಷಿತಿ
ಪಾಲ ವ್ಯೆಶಂಪಾಯನನು ತಾ
ಕೀಳು ದುರಿತಂಗಳಿಗೆ ಪ್ರಾಯಶ್ಚಿತ್ತ ರೂಪದಲಿ
ಕೇಳಿರೈ ಮುನಿನಿಕರವೀ ಕಲಿ
ಕಾಲದಲಿ ಫಲಿಸುವುದು ಲಕ್ಷ್ಮೀ
ಲೋಲ ನಾಮಸ್ತುತಿ ಮಹಾಭಾರತ ಕಥಾಶ್ರವಣ ॥14॥
೦೧೫ ರಾಯ ಚಿತ್ತೈಸೆನ್ದು ...{Loading}...
“ರಾಯ ಚಿತ್ತೈಸ್” ಎಂದು ವೈಶಂ-
ಪಾಯ-ಮುನಿ ಹೇಳಿದನು ಕಮಲ-ದ-
ಳಾಯತಾಕ್ಷನ ಬಾಲ-ಕೇಳಿ+++(ಲೀ)+++ ವಿಧೂತ-ಕಿಲ್ಬಿಷವ
ಕಾಯ-ಕಲ್ಮಷ-ಹರವ್ ಅಖಿಳ-ನಿ-
ಶ್ರೇಯಸದ ಸದ್-ರೂಪುವಿನ ಸಂ-
ದಾಯಕದ ನಿರ್ಮಲ-ಮಹಾ-ಭಾರತ–ಕಥಾಮೃತವ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಪವನ್ನು ನಿವಾರಿಸುವ ಕೃಷ್ಣನ ಬಾಲಲೀಲೆಯನ್ನು, ದೇಹ ಕಲ್ಮಷವನ್ನು ಹೋಗಲಾಡಿಸುವ, ಮೋಕ್ಷದ ಸದ್ರೂಪವನ್ನು ಕೊಡುವ ಪರಿಶುದ್ಧವಾದ ಮಹಾಭಾರತ ಕಥಾಮೃತವನ್ನು ಗಮನವಿಟ್ಟು ಕೇಳೆಂದು ಜನಮೇಜಯನಿಗೆ ವೈಶಂಪಾಯನನು ಹೇಳಿದನು.
ಪದಾರ್ಥ (ಕ.ಗ.ಪ)
ವಿಧೂತ-ನಿವಾರಿಸಲ್ಪಟ್ಟ,
ಕಿಲ್ಬಿಷ-ಪಾಪ,
ನಿಶ್ರೇಯಸ-ಮೋಕ್ಷ,
ಸಂದಾಯಕ-ಸಲ್ಲಿಸುವವನು, ಕೊಡುವವನು
ಮೂಲ ...{Loading}...
ರಾಯ ಚಿತ್ತೈಸೆಂದು ವೈಶಂ
ಪಾಯಮುನಿ ಹೇಳಿದನು ಕಮಲದ
ಳಾಯತಾಕ್ಷನ ಬಾಲಕೇಳಿ ವಿಧೂತಕಿಲ್ಬಿಷವ
ಕಾಯ ಕಲ್ಮಷಹರವಖಿಳ ನಿ
ಶ್ರೇಯಸದ ಸದ್ರೂಪುವಿನ ಸಂ
ದಾಯಕದ ನಿರ್ಮಲ ಮಹಾಭಾರತ ಕಥಾಮೃತವ ॥15॥
೦೧೬ ಆದಿ ಸೃಷ್ಟಿಯೊಳುದಿಸಿದರು ...{Loading}...
ಆದಿ-ಸೃಷ್ಟಿಯೊಳ್ ಉದಿಸಿದರು ದ-
ಕ್ಷಾದಿ-ವಿಮಲ-ನವ-ಪ್ರಜೇಶ್ವರರ್,
ಆದರ್ ಅಂಬುಜ-ಭವನ-ಲೀಲಾ-ಮಾತ್ರ-ಸೂತ್ರದಲಿ
ಆದನ್ ಅವರ್ ಒಳಗ್ ಅತ್ರಿಮುನಿ, ಬಳಿಕ್
ಆದನ್ ಆ ಮುನಿ-ಪತಿಗೆ ಜಗದ್-ಆ-
ಹ್ಲಾದ-ಕರ ಹಿಮ-ಕಿರಣನ್, ಆತನಲ್ ಆಯ್ತು ಶಶಿ-ವಂಶ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೃಷ್ಟಿಯ ಆದಿಯಲ್ಲಿ ಬ್ರಹ್ಮನ ಸಂಕಲ್ಪದಿಂದ ದಕ್ಷನೇ ಮೊದಲಾದ ಪ್ರಸಿದ್ಧ ನವ ಪ್ರಜೇಶ್ವರರು ಉದಿಸಿದರು. ಅವರಲ್ಲಿ ಅತ್ರಿಮುನಿಯೊಬ್ಬನು. ಆ ಮುನಿಪತಿಗೆ, ಜಗತ್ತಿಗೆ ಸಂತೋಷವನ್ನುಂಟು ಮಾಡುವ ಚಂದ್ರನು ಉಂಟಾದನು. ಅವನಿಂದ ಚಂದ್ರವಂಶ ಮೊದಲಾಯ್ತು.
ಪದಾರ್ಥ (ಕ.ಗ.ಪ)
ಆಹ್ಲಾದ-ಸಂತೋಷ,
ಹಿಮಕಿರಣ-ತಂಪಾದ ಕಿರಣಗಳುಳ್ಳವನು; ಚಂದ್ರ
ಟಿಪ್ಪನೀ (ಕ.ಗ.ಪ)
ನವಪ್ರಜೇಶ್ವರರು-ಬ್ರಹ್ಮಮಾನಸಪುತ್ರರು-ಭೃಗು, ಪುಲಸ್ತ್ಯ, ಪುಲಹ, ಕ್ರತು, ಅಂಗಿರಸ್ಸು , ಮರೀಚಿ, ದಕ್ಷ, ಅತ್ರಿ, ವಸಿಷ್ಠ
ಮೂಲ ...{Loading}...
ಆದಿ ಸೃಷ್ಟಿಯೊಳುದಿಸಿದರು ದ
ಕ್ಷಾದಿ ವಿಮಲ ನವಪ್ರಜೇಶ್ವರ
ರಾದರಂಬುಜಭವನ ಲೀಲಾಮಾತ್ರ ಸೂತ್ರದಲಿ
ಆದನವರೊಳಗತ್ರಿಮುನಿ ಬಳಿ
ಕಾದನಾ ಮುನಿಪತಿಗೆ ಜಗದಾ
ಹ್ಲಾದಕರ ಹಿಮಕಿರಣನಾತನಲಾಯ್ತು ಶಶಿವಂಶ ॥16॥
೦೧೭ ಸೋಮನಿಮ್ ಬುಧನಾ ...{Loading}...
ಸೋಮನಿಂ ಬುಧನ್, ಆ ಬುಧಂಗೆಯ್ ಉ
ಭೂಮಿಯಲ್ಲಿ ಪುರೂರವನು, ಬಳಿಕ್
ಆ ಮಹೀ-ಪತಿಗ್ ಊರ್ವಶಿಯೊಳ್ ಆಯುಃ-ಕುಮಾರಕನು
ಆ ಮಹೀಶಗೆ ನಹುಷ, ನಹುಷಂಗ್
ಆ ಮಹಾತ್ಮ ಯಯಾತಿ, ಬಳಿಕ್ ಈ
ಸೋಮ-ಕುಲವ್ ಎರಡ್ ಆಯ್ತು - ಯದು ಪೂರುಗಳ ದೆಸೆಯಿಂದ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚಂದ್ರನಿಂದ ಬುಧನು, ಆ ಬುಧನಿಗೆ ಇಳೆಯಲ್ಲಿ ಪುರೂರವನು, ನಂತರ ಆ ಭೂಪತಿಗೆ ಊರ್ವಶಿಯಲ್ಲಿ ಆಯುಃಕುಮಾರಕನು, ಆ ರಾಜನಿಗೆ ನಹುಷ, ನಹುಷನಿಗೆ ಆ ಮಹಾತ್ಮ ಯಯಾತಿ, ಬಳಿಕ ಈ ಚಂದ್ರವಂಶವು ಯಯಾತಿಯ ಮಕ್ಕಳು ಯದು ಮತ್ತು ಪೂರುವಿನ ದೆಸೆಯಿಂದ ಎರಡಾಯ್ತು.
ಮೂಲ ...{Loading}...
ಸೋಮನಿಂ ಬುಧನಾ ಬುಧಂಗೆಯು
ಭೂಮಿಯಲ್ಲಿ ಪೂರೂರವನು ಬಳಿ
ಕಾ ಮಹೀಪತಿಗೂರ್ವಶಿಯೊಳಾಯುಃಕುಮಾರಕನು
ಆ ಮಹೀಶಗೆ ನಹುಷ ನಹುಷಂ
ಗಾ ಮಹಾತ್ಮ ಯಯಾತಿ ಬಳಿಕೀ
ಸೋಮಕುಲವೆರಡಾಯ್ತು ಯದು ಪೂರುಗಳ ದೆಸೆಯಿಂದ ॥17॥
೦೧೮ ಯದುಪರಮ್ಪರೆಯಿನ್ದ ಯಾದವ ...{Loading}...
ಯದು-ಪರಂಪರೆಯಿಂದ ಯಾದವರ್
ಉದಿಸಿದರು, ಪೂರುವಿನ ದೆಸೆಯಿಂದ್
ಇದುವೆ ಪೌರವ-ವಂಶವ್ ಆಯ್ತು ಯಯಾತಿ-ಪೌತ್ರರಲಿ
ವಿದಿತ-ಪುರ್ವೋತ್ತರದ ಯದು-ವಂ-
ಶದ ಕಥಾ-ವಿಸ್ತಾರವನು ಹೇ-
ಳಿದನು ದುಷ್ಯಂತನಲಿ ಶಾಕುಂತಲೆಯ ಕಥೆ ಸಹಿತ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯದು ಪರಂಪರೆಯಿಂದ ಯಾದವರು ಉದಿಸಿದರು. ಪೂರುವಿನ ದೆಸೆಯಿಂದ ಯಯಾತಿ ಮೊಮ್ಮಕ್ಕಳಲ್ಲಿ ಪೌರವ ವಂಶವಾಯ್ತು. ಹಿಂದು ಮುಂದಿನ ಯದುವಂಶದ ಕಥಾವಿಸ್ತಾರವನ್ನು ದುಷ್ಯಂತ ಶಕುಂತಲೆಯರ ಕಥೆಯೊಂದಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ವಿದಿತ-ಪ್ರಸಿದ್ಧವಾದ, ಪುರ್ವೋತ್ತರದ-ಹಿಂದು ಮುಂದಿನ
ಟಿಪ್ಪನೀ (ಕ.ಗ.ಪ)
ಶಕುಂತಲಾ - ಈಕೆಯ ಕಥೆ ಮಹಾಭಾರತದಲ್ಲಿ ತುಂಬ ಪ್ರಸಿದ್ಧವಾಗಿದೆ. ಮುಂದೆ ಪದ್ಮಪುರಾಣದಲ್ಲಿ ಮತ್ತು ಕಾಳಿದಾಸನ ‘ಅಭಿಜ್ಞಾನ ಶಾಕುಂತಲಂ’’ ನಾಟಕದಲ್ಲಿ ಅನೇಕ ತಿರುವುಗಳನ್ನು ಪಡೆದು ಬೆಳೆದು ಜನಪ್ರಿಯವಾಯಿತು. ಶಕುಂತಳೆ, ವಿಶ್ವಾಮಿತ್ರ ಮೇನಕೆಯರ ಮಗಳು. ಶಕುಂತ ಪಕ್ಷಿಗಳು ತಾಯಿ ಬಿಟ್ಟು ಹೋದ ಈ ಅನಾಥ ಮಗುವನ್ನು ನೋಡಿಕೊಂಡಿದ್ದರಿಂದ ಇವಳಿಗೆ ಶಕುಂತಳೆ ಎಂಬ ಹೆಸರು ಬಂದಿದೆ. ಮಹರ್ಷಿ ಕಣ್ವರು ಈ ಮಗುವನ್ನು ಕಂಡು ಪ್ರೀತಿಯಿಂದ ಆಶ್ರಮಕ್ಕೆ ತಂದು ಸಾಕಿದರು. ಹಿಮಾಲಯದ ಶಿಖರ ಪ್ರಾಂತ್ಯದಲ್ಲಿ ಮಾಲಿನೀ ನದಿಯ ದಡದಲ್ಲಿರುವ ಕಣ್ವಾಶ್ರಮದಲ್ಲಿ ಬೆಳೆದ ಶಕುಂತಲೆ ಅನುಪಮ ಸುಂದರಿ. ಅವಳು ಬೆಳೆದು ದೊಡ್ಡವಳಾz ಮೇಲೆ ಒಂದು ದಿನ ದುಷ್ಯಂತ ಮಹಾರಾಜ ಅಲ್ಲಿಗೆ ಬರುತ್ತಾನೆ. ಅಂದು ಕಣ್ವರು ಆಶ್ರಮದಲ್ಲಿ ಇರಲಿಲ್ಲ. ಶಕುಂತಲೆ-ದುಷ್ಯಂತ ಪರಸ್ಪರ ಪ್ರೀತಿಸುತ್ತಾರೆ. ಆದರೆ ಮದುವೆಯಾಗಲು ಶಕುಂತಲೆ ತನಗೆ ಗಂಡುಮಗುವಾದರೆ ಅವನಿಗೇ ಯುವರಾಜಪಟ್ಟವನ್ನು ಕಟ್ಟಬೇಕು ಎಂಬ ಶರತ್ತಿನೊಂದಿಗೆ ದುಷ್ಯಂತನ್ನು ಮದುವೆಯಾಗುತ್ತಾಳೆ. ಗಾಂಧರ್ವ ವಿವಾಹ ಮಾಡಿಕೊಂಡ ದುಷ್ಯಂತನು ಅವಳಿಗೆ ಆಶ್ವಾಸನೆ ಕೊಟ್ಟು ಊರಿಗೆ ಹಿಂದಿರುಗುವಾಗ ‘‘ಸೈನಿಕರನ್ನು ಕಳಿಸಿ ನಿನ್ನನ್ನು ಕರೆಸಿಕೊಳ್ಳುತ್ತೇನೆ’’ ಎಂದು ಆಶ್ವಾಸನೆ ಕೊಡುತ್ತಾನೆ. ಆದರೆ ಅವನು ಹಾಗೆ ಕರೆಸಿಕೊಳ್ಳುವುದೇ ಇಲ್ಲ. ಕಣ್ವರು ತೀರ್ಥಯಾತ್ರೆ ಮುಗಿಸಿಕೊಂಡು ಬಂದು ನಡೆದ ಸಂಗತಿಯನ್ನು ತಿಳಿದು ಶಕುಂತಲೆಯನ್ನು ಹರಸುತ್ತಾರೆ. ಇಕ್ಷ್ವಾಕು ವಂಶದ ದುಷ್ಯಂತನಿಗೂ ಒಳ್ಳೆಯದಾಗಲಿ ಎಂದು ಶುಭಾಶೀರ್ವಾದ ಮಾಡುತ್ತಾರೆ. ಗರ್ಭಿಣಿಯಾಗಿದ್ದ ಶಕುಂತಲೆ ಒಬ್ಬ ಮಗನನ್ನು ಹಡೆಯುತ್ತಾಳೆ. ಶಕುಂತಲೆ ಆರು ವರ್ಷ ಆನಂದವಾಗಿ ಆಶ್ರಮದಲ್ಲೇ ಇರುತ್ತಾಳೆ. ಆರನೇ ವರ್ಷದೊಳಗೆ ಹುಡುಗನು ಬಲಿಷ್ಠನಾಗಿ ಬೆಳೆದು ಸಿಂಹಗಳನ್ನು ಎಳೆದು ತಂದು ಮರಕ್ಕೆ ಕಟ್ಟುತ್ತಿದ್ದುದರಿಂದ ಅವನಿಗೆ ಸರ್ವದಮನ ಎಂಬ ಹೆಸರು ಬರುತ್ತದೆ. ಆರು ವರ್ಷಗಳಾದ ಮೇಲೆ ಕಣ್ವರು ಶಕುಂತಲೆಯನ್ನು ಪತಿಗೃಹಕ್ಕೆ ಕಳಿಸುತ್ತಾರೆ. ಆದರೆ ತನಗೆ ಅವಳ ಪರಿಚಯವೇ ಇಲ್ಲವೆಂದು ದುಷ್ಯಂತ ಅವಳನ್ನು ನಿರಾಕರಿಸುತ್ತಾನೆ. ಮಗನಿಗೆ ಯುವರಾಜ್ಯಾಭಿಷೇಕವಾಗಲಿ, ಮಗನೆಂದೇ ಅಪ್ಪ ಒಪ್ಪುವುದಿಲ್ಲ. ಶಕುಂತಲೆ ರೋಷ ಅವಮಾನಗಳಿಂದ ಕುದಿಯುತ್ತಾಳೆ. ಇಂಥ ಜಾಗದಲ್ಲಿ ಇರುವುದೇ ಬೇಡವೆಂದು ಅರಮನೆಯನ್ನು ಬಿಟ್ಟು ಹೊರಡುತ್ತಾಳೆ. ಅಷ್ಟರಲ್ಲ್ಲಿ ಆಕಾಶವಾಣಿಯಾಗುತ್ತದೆ:
ಯಯಾತಿ-ಅನೇಕ ಏರುಪೇರುಗಳಿಂದ ಕೂಡಿದ ಈತನ ವಿಚಾರವಾಗಿ ಭಾರತೀಯ ಸಾಹಿತ್ಯದಲ್ಲಿ ಅನೇಕ ಕಥೆ, ಕಾದಂಬರಿ, ನಾಟಕಗಳು ಚರ್ಚೆ ನಡೆಸಿವೆ. ನಹುಷನ ಎರಡನೆಯ ಮಗನಾದ ಈತ ಮೊದಲ ಮಗ ತಿರಸ್ಕರಿಸಿದ ರಾಜ್ಯಕ್ಕೆ ಒಡೆಯನಾದ. ಶುಕ್ರಾಚಾರ್ಯರ ಮಗಳು ದೇವಯಾನಿಯನ್ನೂ ವೃಷಪರ್ವನ ಮಗಳಾದ ಶರ್ಮಿಷ್ಠೆಯನ್ನೂ ಮದುವೆಯಾಗಿ ಯದು, ಪೂರು, ತುರ್ವಸು, ದ್ರುಹ್ಯ, ಅನುದ್ರುಹ್ಯ ಎಂಬ ಐವರು ಗಂಡು ಮಕ್ಕಳನ್ನು ಪಡೆದ. ಮಾಧವಿ ಇವನ ಒಬ್ಬಳೇ ಮಗಳು.
ಶರ್ಮಿಷ್ಠೆಯನ್ನು ಹೆಚ್ಚು ಪ್ರೀತಿಸುತ್ತಿದ್ದಾನೆಂಬ ಕಾರಣಕ್ಕೆ ಶುಕ್ರಾಚಾರ್ಯರು ಇವನಿಗೆ ಅಕಾಲವೃದ್ಧಾಪ್ಯ ಬರಲೆಂದು ಶಾಪವಿತ್ತರು. ಆದರೆ ಭೋಗ ಜೀವನದ ತೃಷ್ಣೆ ನಂದಿರಲಿಲ್ಲವಾದ್ದರಿಂದ ಯಯಾತಿ ಪೂರುವಿನೀದ ಯೌವನ ವಿನಿಮಯ ಮಾಡಿಕೋಂಡು ಅವನಿಗೆ ಪಟ್ಟಕಟ್ಟಿ ತಪಸ್ಸಿಗೆ ಹೋದ ಗುರುದಕ್ಷಿಣೆಯಾಗಿ ಬಂದ ಗಾಲವನಿಗೆ ಮಾಧವಿಯನ್ನು ಕೊಟ್ಟು ಅವಳು ಗುರುದಕ್ಷಿಣೆ ತೀರುವವರೆಗೆ ಇಕ್ಷ್ವಾಕು, ಉಫೀನರ, ದವೋದಾಸ ಮತ್ತು ವಿಶ್ವಾಮಿತ್ರರ ಸಹವಾಸ ಮಡಿ ಅಷ್ಟಕ, ಪ್ರತರ್ದನ, ಶಿಬಿ, ಔಶೀನರ ಎಂಬ ಮಕ್ಕಳನ್ನು ಪಡೆಯಬೇಕಾಯಿತು. ಪತ್ನಿಯರೊಂದಿಗೆ ಮತ್ತು ವಿಶ್ವಾಚಿ ಎಂಬ ಅಪ್ಸರೆಯೊಂದಿಗೆ ನಡೆಸಿದ ಭೋಗ ಜೀವನದಲ್ಲಿ ಆಸೆಗೆ ಅಂತ್ಯವಿಲ್ಲ ಎಂಬ ಸತ್ಯವನ್ನರಿತು ಭೃಂಗ ತುಂಬ ಎಂಬಲ್ಲಿ ಘೋರ ತಪಸ್ಸು ಮಾಡಿ ದಿವ್ಯಲೋಕದ ಸದಸ್ಯನಾದ. ಆದರೆ ಅಲ್ಲೂ ತಾನು ಶ್ರೇಷ್ಠ ಸಾಧಕನೆಂಬ ಅಹಂಕಾರದಿಂದಾಗಿ ಉಳಿದವರನ್ನೆಲ್ಲ ಹೀಯಾಳಿಸಿ ಇಂದ್ರನ ಶಾಪಕ್ಕೆ ಗುರಿಯಾಗಿ ತನ್ನ ಮಹಿಮೆ ಕಳೆದುಕೊಂಡು ಭೂಮಿಗೆ ಇಳಿದ. ಮೊದಲು ಮಗ ಪೂರು ಸಹಾಯ ಮಾಡಿದ್ದಂತೆ ಈಗ ಯಾಗ ಮಾಡುತ್ತಿದ್ದ ನಾಲ್ವರು ಮೊಮ್ಮಕ್ಕಳು ತಾವು ಮಾಡಿದ ಯಾಗದಿಂದಾಗಿ ಅರ್ಜಿಸಿದ್ದ ಪುಣ್ಯಫಲವನ್ನು ಯಯಾತಿಗೆ ಎರವಲಾಗಿ ಕೊಟ್ಟು ಅವನನ್ನು ಸ್ವರ್ಗಕ್ಕೆ ಏರಿಸಿ ತಾವೂ ಸ್ವರ್ಗವನ್ನು ಪಡೆದರು. ಮಾಧವಿಯೂ ತಂದೆಗೆ ತನ್ನ ಪುಣ್ಯದ ಎಂಟನೇ ಒಂದು ಭಾಗವನ್ನು ಸಮರ್ಪಿಸಿ ಸ್ವರ್ಗಯಾನಕ್ಕೆ ನೆರವಾದಳು.
ಮಹಾ ಪರಾಕ್ರಮಿಯಾಗಿದ್ದರೂ ಯಯಾತಿ ತನ್ನ ಸ್ವರ್ಥ ಲೋಲುಪತೆ, ಪಕ್ಷಪಾತ ಬುದ್ಧ ಮತ್ತು ಗರ್ವಭಾವಗಳಿಂದಾಗಿ ತನ್ನ ಪತನವನ್ನು ತಾನೇ ತಂದುಕೊಂಡ. ತರುಣನಾದ ಮಗ ತನ್ನ ತಾರುಣ್ಯವನ್ನು ಯಯಾತಿಗೆ ಬಿಟ್ಟುಕೊಟ್ಟು ಮುಪ್ಪು ತೆಗೆದುಕೊಂಡರೂ ಯಯಾತಿಗೆ ಆತ್ಮದ್ರೋಹದ ಚಿಂತೆ ಕಾಡಲಿಲ್ಲ. ಹೆರಿಗೆಯಾದ ಮೇಲೆ ಮತ್ತೆ ಕನ್ಯೆಯಾಗುವ ವರ ಪಡೆದಿದ್ದ ಮಗಳು ಮಾಧವಿಗೆ ಒಂದು ಸರಿಯಾದ ಗತಿಯನ್ನು ಕಾಣಿಸದೆ ಹೋದದ್ದು ಇವನ ಸಂಸಾರ ಚಿಂತನೆಯ ಕೊರತೆಯನ್ನು ಎತ್ತಿ ತೋರುವಂತಹದಾಗಿದೆ. ಇಷ್ಟಾದರೂ ಮಹಾಸಾಧಕನಾದ ಈತನ ನೆರವಿಗೆ ಮಗ ಪೂರು, ಮಗಳು ಮಾಧವಿ, ಮೊಮ್ಮಕ್ಕಳು ಎಲ್ಲರೂ ಟೊಂಕ ಕಟ್ಟಿ ನಿಂತದ್ದು ಮೆಚ್ಚಬೇಕಾದ ಅಂಶವಾಗಿದೆ.
ಲೋಕ ಸಂಪ್ರದಾಯವನ್ನು ಮೀರುವ ಆಯುರ್ವಿನಿಮಯ ಮತ್ತು ಪುಣ್ಯ ವಿನಿಮಯ ಈ ಸಂಗತಿಗಳು ನಚಿಕೇತನ ಕಥೆಯಂತೆ ಆಯಾಮವನ್ನು ವಿಸ್ತರಿಸುತ್ತವೆ. ಮಹಾಭಾರತದ ಆದಿಪರ್ವದಲ್ಲಿ 78ನೇ ಅಧ್ಯಾಯದಿಂದ 83ನೇ ಅಧ್ಯಾಯದವರೆಗೆ ಈತನ ಕಥೆ ಹಬ್ಬಿದೆ.
ಮೂಲ ...{Loading}...
ಯದುಪರಂಪರೆಯಿಂದ ಯಾದವ
ರುದಿಸಿದರು ಪೂರುವಿನ ದೆಸೆಯಿಂ
ದಿದುವೆ ಪೌರವ ವಂಶವಾಯ್ತು ಯಯಾತಿ ಪೌತ್ರರಲಿ
ವಿದಿತ ಪುರ್ವೋತ್ತರದ ಯದುವಂ
ಶದ ಕಥಾವಿಸ್ತಾರವನು ಹೇ
ಳಿದನು ದುಷ್ಯಂತನಲಿ ಶಾಕುಂತಲೆಯ ಕಥೆ ಸಹಿತ ॥18॥
೦೧೯ ಭರತನಾ ದುಷ್ಯನ್ತನಿನ್ದವ ...{Loading}...
ಭರತನ್ ಆ ದುಷ್ಯಂತನಿಂದ್ ಅವ-
ತರಿಸಿದನು ತತ್-ಪೂರ್ವ-ನೃಪರಿಂ
ಹಿರಿದು ಸಂದನು+++(=ಕೂಡಿದನು)+++, ಬಳಿಕ ಭಾರತ-ವಂಶವ್ ಆಯ್ತ್ ಅಲ್ಲಿ
ಭರತ-ಸೂನು ಸುಹೋತ್ರನ್, ಆತನ
ವರ-ಕುಮಾರಕ ಹಸ್ತಿ, ಹಸ್ತಿನ-
ಪುರಿಗೆ ಹೆಸರ್ ಆಯ್ತ್ ಆತನಿಂದವೆ ನೃಪತಿ ಕೇಳ್ ಎಂದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ದುಷ್ಯಂತನಿಂದ ಭರತನು ಅವತರಿಸಿದನು. ಅವನು ತನ್ನ ಹಿಂದಿನ ರಾಜರಿಗಿಂತಲೂ ಶ್ರೇಷ್ಠನಾಗಿ ತನ್ನ ವಂಶಕ್ಕೆ ಭಾರತವಂಶವೆಂಬ ಹೆಸರಿಗೆ ಕಾರಣನಾದನು. ಭರತನ ಮಗ ಸುಹೋತ್ರನು. ಆತನ ಶ್ರೇಷ್ಠ ಮಗ ಹಸ್ತಿ. ಅವನಿಂದಲೇ ಹಸ್ತಿನಪುರಿಗೆ ಆ ಹೆಸರು ಬಂತು.
ಪದಾರ್ಥ (ಕ.ಗ.ಪ)
ಹಿರಿದು-ಪಿರಿದು, ಶ್ರೇಷ್ಠವಾದ, ಸಂದನು-ಪ್ರಸಿದ್ಧನಾದನು
ಪಾಠಾನ್ತರ (ಕ.ಗ.ಪ)
[ವಂಶ] - [ವರುಷ (ಆ)] ವರುಷ=ಭೂಖಂಡ ಎಂಬ ಅರ್ಥದಲ್ಲಿ ಈ ಪಾಠಾಂತರವನ್ನು ಪರಿಗಣಿಸಬಹುದಾಗಿದೆ.
ಟಿಪ್ಪನೀ (ಕ.ಗ.ಪ)
ಭರತ ಸಾಮ್ರಾಟ - ನಮ್ಮ ದೇಶಕ್ಕೆ ಭರತ ಖಂಡ ಎಂಬ ಹೆಸರು ಬರಲು ಕಾರಣನಾದ ಮಹಾತ್ಮನೀತ ಎಂದು ಹೇಳುತ್ತಾರೆ. ಶಕುಂತಲೆ-ದುಷ್ಯಂತರ ಮಗ ಇವನು. ಗುಣಪರಾಕ್ರಮಗಳಿಂದ ದಕ್ಷ ಆಡಳಿತದಿಂದ ಕೀರ್ತಿ ಪಡೆದವನು. ಸುಹೋತ್ರ :
ಮಹಾಭಾರತದ ಅನುಕ್ರಮಣಿಕಾ ಪರ್ವ, ದ್ರೋಣ ಪರ್ವ, ಶಾಂತಿ ಪರ್ವಗಳಲ್ಲಿ ಸುಹೋತ್ರನ ಬಗೆಗೆ ವಿವರಗಳಿವೆ. ಈತ ದಾನಶೀಲ, ಅತಿಥಿಸತ್ಕಾರಪ್ರಿಯ, ದೇವಪ್ರಿಯ ಎಂದು ವರ್ಣಿಸಲಾಗಿದೆ. ಚಂದ್ರವಂಶದ ಭರತ ಚಕ್ರವರ್ತಿಯ ಮೊಮ್ಮಗನಾದ ಸುಹೋತ್ರನು ಭಮನ್ಯು ಮತ್ತು ಪುಷ್ಕರಿಣಿಯರ ಮಗ. ಇವನು ಪರಾಕ್ರಮದಿಂದ ತನ್ನ ರಾಜ್ಯವನ್ನು ವಿಸ್ತರಿಸಿದುದೇ ಅಲ್ಲದೆ ರಾಜ್ಯವನ್ನು ಮ್ಲೇಚ್ಛಾಟವಿಕ ವರ್ಜಿತ (ಅಂದರೆ ಸಂಸ್ಕಾರಹೀನರ ಮತ್ತು ಕಳ್ಳರ ಕಾಟವಿಲ್ಲದ) ರಾಜ್ಯವನ್ನಾಗಿ ಮಾಡಿದ. ಇವನ ಪರಾಕ್ರಮ ಮತ್ತು ದೈವಶ್ರದ್ಧೆಗಳಿಂದ ಪ್ರೀತರಾದ ದೇವತೆಗಳು ಇವನನ್ನು ನೋಡಲು ಹಾ ತೊರೆಯುತ್ತಿದ್ದರಂತೆ! ಪ್ರಜಾಪಾಲನೆ ದಾನ, ಧರ್ಮ, ಯಜ್ಞ ಮತ್ತು ಶತ್ರುವಿಜಯ ಇವನ ಪಂಚಗುಣಗಳು.
ಸುಹೋತ್ರನ ಹಿರಿಮೆಗೆ ಮೆಚ್ಚಿದ ಮೇಘಗಳು ಬಂಗಾರದ ಮಳೆಯನ್ನು ಕರೆಯುತ್ತಿದ್ದುದು ಪರ್ಜನ್ಯನ ಕೃಪೆ ಎನ್ನಬೇಕು. ಇವನ ರಾಜ್ಯದಲ್ಲಿ ಜಲಾಶಯಗಳು ಒಂದು ಕ್ರೋಶ ಉದ್ದ ಮತ್ತು ಒಂದ್ರು ಕ್ರೋಶ (ಅಂದರೆ 2 ಮೈಲಿ) ಆಳ ಇದ್ದುವಂತೆ. ಕುರುಜಾಂಗಲದಲ್ಲಿ ಇವನು ಮಾಡಿದ ಯಜ್ಞಗಳಿಗೆ ಕೊನೆ ಮೊದಲಿಲ್ಲ. ಒಂದು ನೂರು ರಾಜಸೂಯಗಳನ್ನೂ ಒಂದು ಸಾವಿರ ಅಶ್ವಮೇಧಗಳನ್ನೂ ಮಾಡಿದ ಕೀರ್ತಿ ಈತನದು. ನಿತ್ಯ, ನೈಮಿತ್ತಿಕ ಕಾಮ್ಯ ಕ್ರಿಯೆಗಳಲ್ಲೂ ಸುಹೋತ್ರನು ಪ್ರಸಿದ್ಧನಾಗಿದ್ದಾನೆ. (ನಿತ್ಯ=ಅಮಾವಾಸ್ಯೆ, ಪೌರ್ಣಿಮೆಗಳಲ್ಲಿ ಮಾಡುವ ಇಷ್ಟಿ; ನೈಮಿತ್ತಿಕ=ಸೂರ್ಯಗ್ರಹಣ, ಚಂದ್ರಗ್ರಹಣಗಳಲ್ಲಿ ಮಾಡುವ ಪ್ರಾಯಶ್ಚಿತ್ತ ಕರ್ಮ; ಕಾಮ್ಯ= ಸ್ವರ್ಗಪ್ರಾಪ್ತಿಗಾಗಿ ಮಾಡುವ ಜ್ಯೋತಿಷ್ಟೋಮ ಮೊದಲಾದ ಯಾಗಗಳು). ಸುಹೋತ್ರನ ಗುಣ ಮತ್ತು ಆಡಳಿತ ಶಕ್ತಿಗಳನ್ನು ದ್ರೋಣಪರ್ವದ 56ನೆಯ ಪರ್ವದಲ್ಲಿ ಕೊಂಡಾಡಲಾಗಿದೆ.
ಸುಹೋತ್ರನ ಪತ್ನಿ ಸುವರ್ಣ. ಇವಳು ಇಕ್ಷ್ವಾಕುವಿನ ಮಗಳಾದ್ದರಿಂದ ಐಕ್ಷ್ವಾಕಿ ಎಂಬ ಹೆಸರೂ ಇದೆ. ಈ ದಂಪತಿಗಳಿಗೆ ಅಜಮೀಢ, ಸುಮೀಢ ಮತ್ತು ಪುರಮೀಢೆರೆಂಬ ಮಕ್ಕಳಿದ್ದರು. ಸುಹೋತ್ರನ ಸೋದರರೆಂದರೆ ಸುಹವಿಸ್, ಸುಜಯಸ್ ಮತ್ತು ಋಷೀಕರು.
ದ್ರೋಣಪರ್ವದಲ್ಲಿ ಮಗನನ್ನು ಕಳೆದುಕೊಂಡು ಕೊರಗುತ್ತಿದ್ದ ಸೃಂಜಯನ ಬಳಿಗೆ ಬಂದ ನಾರದರು ಮರುತ್ತರಾಯನ ಮತ್ತು ಸುಹೋತ್ರನ ಸಾವಿನ ವಿಷಯವನ್ನು ಹೇಳಿ ಸಮಾಧಾನಪಡಿಸುತ್ತಾರೆ.
ಷೋಡಶ ರಾಜರುಗಳಲ್ಲಿ ಒಬ್ಬನೆಂದು ಪ್ರಕೀರ್ತಿನಾದ ಸುಹೋತ್ರನು ಒಬ್ಬ ಆದರ್ಶ ರಾಜನಾಗಿದ್ದು ಎಲ್ಲ ಪ್ರಜೆಗಳ ಮತ್ತು ದೇವತೆಗಳ ಪ್ರೀತಿಗೆ ಪಾತ್ರನಾಗಿದ್ದುದು ಒಂದು ವಿಶೇಷ.
ಮೂಲ ...{Loading}...
ಭರತನಾ ದುಷ್ಯಂತನಿಂದವ
ತರಿಸಿದನು ತತ್ಪೂರ್ವ ನೃಪರಿಂ
ಹಿರಿದು ಸಂದನು ಬಳಿಕ ಭಾರತವಂಶವಾಯ್ತಲ್ಲಿ
ಭರತಸೂನು ಸುಹೋತ್ರನಾತನ
ವರ ಕುಮಾರಕ ಹಸ್ತಿ ಹಸ್ತಿನ
ಪುರಿಗೆ ಹೆಸರಾಯ್ತಾತನಿಂದವೆ ನೃಪತಿ ಕೇಳೆಂದ ॥19॥
೦೨೦ ವರಕುಮಾರರ ಪಙ್ಕ್ತಿಯಲಿ ...{Loading}...
ವರ-ಕುಮಾರರ ಪಂಕ್ತಿಯಲಿ ಸಂ
ವರಣನ್, ಆತಗೆ ಸೂರ್ಯ-ಪುತ್ರಿಗೆ
ಕುರು-ಮಹೀಪತಿ ಜನಿಸಿದನು ಬಳಿಕ್ ಆಯ್ತು ಕುರುವಂಶ
ವರ ಪರಂಪರೆಯೊಳ್ ಪ್ರತೀಪನು
ಧರಣಿ-ಪತಿಯ್, ಆತನಲಿ ಶಂತನು
ಧರೆಗ್ ಅಧೀಶ್ವರನ್ ಆಗಿ ಬೆಳಗಿದನ್ ಅರಸ ಕೇಳ್ ಎಂದ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರ ಸಂತಾನ ಪರಂಪರೆಯಲ್ಲಿ ಸಂವರಣನು, ಸಂವರಣನಿಗೆ ಸೂರ್ಯನ ಮಗಳು ತಪತಿಯಲ್ಲಿ ಕುರುಮಹಾರಾಜ ಹುಟ್ಟಿದನು. ಅವನಿಂದೀಚೆಗೆ ಕುರುವಂಶವಾಯ್ತು. ಆ ಶ್ರೇಷ್ಠ ಪರಂಪರೆಯಲ್ಲಿ ಪ್ರತೀಪನು ಧರಣಿಪತಿಯಾದನು. ಅವನಲ್ಲಿ ಶಂತನು ಹುಟ್ಟಿ ಭೂಮಿಗೆ ಒಡೆಯನಾಗಿ ಬೆಳಗಿದನು, ಎಂದು ವೈಶಂಪಾಯನನು ಜನಮೇಜಯನಿಗೆ ಹೇಳಿದನು.
ಟಿಪ್ಪನೀ (ಕ.ಗ.ಪ)
ಕುರು-ಕುರುವಂಶ : ಕುರು ಎಂಬ ಹೆಸರು ಇಡೀ ಕುರುಕುಲದವರಿಗೆಲ್ಲ ಅನ್ವಯಿಸಬಹುದಾದಷ್ಟು ವ್ಯಾಪ್ತವಾಗಿ ಬಳಕೆಗೊಂಡಿದೆ. ಆದರೆ ಚಂದ್ರವಂಶದ ರಾಜಮನೆತನಕ್ಕೆ ಈ ಹೆಸರು ಬರಲು ಕಾರಣನಾದ ‘ಕುರು’ ಎಂಬ ದೊರೆಗೆ ಈ ಹೆಸರಿದೆ. ಇವನು ‘ಸಚಿವರಣ’ನ ಮಗ. ಸಂಜಯನು ಪ್ರಾಚೀನ ರಾಜಪರಂಪರೆಯನ್ನು ವಿವರಿಸುವಾಗ ‘ಭರತಸ್ಯಕುರೋಃ ಪುರೋರಾಜ ಮೀಢಸ್ಯಚಾನಘ’ ಎಂದು ಹೇಳಿ ಕುರುವು ಸಚಿವರಣ-ತಪತಿ ಎಂಬ ದಂಪತಿಗಳ ಮಗನೆಂದು ಹೇಳುತ್ತಾನೆ. ಈ ಕುರುವಿನ ಪತ್ನಿ ವಾಹಿನೀ, ಈ ದಂಪತಿಗಳ ಮಕ್ಕಳು ಅಶ್ವವನ್, ಅಭಿಷ್ಯಂತ, ಚೈತ್ರರಥ, ಮುನಿ ಮತ್ತು ಜನಮೇಜಯ. ಇವರಿಗೆ ಮತ್ತು ಮುಂಚಿನ ಎಲ್ಲ ರಾಜರಿಗೆ ‘ಕುರು’ ಎಂಬ ಹೆಸರೇ ನಿಂತಿತು. ‘ಕುರುಜಾಂಗಲ’ದೇಶವೂ ಈತನಿಂದಲೇ ಪ್ರಸಿದ್ಧಿಗೆ ಬಂದಿದೆ. ‘ಕುರೋ ವೈ ಯಜ್ಞ ಶೀಲಸ್ಯ ಕ್ಷೇತ್ರ ಮೇತನ್ ಮಹಾತ್ಮನಃ;’ ಎಂದು ಈತನ ಹೆಸರಿನಿಂದ ‘ಕುರುಕ್ಷೇತ್ರ’ವನ್ನು ಗುರುತಿಸುತ್ತಾರೆ. ಈತ ಯಜ್ಞ ಮಾಡುತ್ತಿದ್ದ ಸಂದರ್ಭದಲ್ಲಿ ಮುಂದೆ ಉತ್ತರಕುರು ದಕ್ಷಿಣಕುರು ಎಂಬ ವಿಭಾಗಗಳನ್ನೂ ಹೊಂದಿತ್ತು. ‘ಶ್ರೇಷ್ಠ ಕುರುಷು ಸರ್ವೇಷು’ ಎಂದು ಧರ್ಮರಾಯನನ್ನು ಹೊಗಳಿರುವ ಸಂದರ್ಭವಿದ್ದರೂ ಪಾಂಡುವಿನ ಮಕ್ಕಳು ಪಾಂಡವರೆಂದು ಪ್ರಸಿದ್ಧಿ ಪಡೆದ ನಂತರ ದುರ್ಯೋಧನ, ಧೃತರಾಷ್ಟ್ರ ಮೊದಲಾದವರನ್ನು ಮತ್ರ ಕೌರವರೆಂದು ಕರೆಯುವುದು ರೂಢಿಯಲ್ಲಿದೆ.
ಮೂಲ ...{Loading}...
ವರಕುಮಾರರ ಪಂಕ್ತಿಯಲಿ ಸಂ
ವರಣನಾತಗೆ ಸೂರ್ಯಪುತ್ರಿಗೆ
ಕುರು ಮಹೀಪತಿ ಜನಿಸಿದನು ಬಳಿಕಾಯ್ತು ಕುರುವಂಶ
ವರ ಪರಂಪರೆಯೊಳ್ ಪ್ರತೀಪನು
ಧರಣಿಪತಿಯಾತನಲಿ ಶಂತನು
ಧರೆಗಧೀಶ್ವರನಾಗಿ ಬೆಳಗಿದನರಸ ಕೇಳೆಂದ ॥20॥
೦೨೧ ಸರಸಿಜಾಸನ ಕೊಟ್ಟ ...{Loading}...
ಸರಸಿಜಾಸನ ಕೊಟ್ಟ ಶಾಪದಿಯ್
ಅರಸಿಯ್ ಆದಳು ಗಂಗೆ, ಬಳಿಕ್ ಇ-
ಬ್ಬರಿಗೆ ಮಕ್ಕಳು ವಸುಗಳ್ ಎಂಟು ವಸಿಷ್ಠ ಶಾಪದಲಿ
ನಿರ್-ಅಪರಾಧಿಗಳ್ ಏಳು ಜನನಾಂ-
ತರಕೆ ಮರಣವ ಕಂಡ್, ಅರುಳಿದಂಗ್
ಇರವು ಭೂ-ಲೋಕದಲಿ ಬಲಿದುದು+++(=ಬಲ-ಪಡೆದದು)+++ ಭೀಷ್ಮ-ನಾಮದಲಿ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬ್ರಹ್ಮನು ಕೊಟ್ಟ ಶಾಪದಿಂದ ಗಂಗೆ ಶಂತನುವಿಗೆ ಅರಸಿಯಾದಳು. ಅವರಿಬ್ಬರಿಗೆ ವಸಿಷ್ಠ ಶಾಪಕ್ಕೆ ಸಿಲುಕಿದ ಅಷ್ಟ ವಸುಗಳು ಮಕ್ಕಳಾದರು. ಅವರಲ್ಲಿ ನಿರಪರಾಧಿಗಳಾದ ಏಳು ಮಂದಿ ಹುಟ್ಟಿದ ಕೂಡಲೇ ಮರಣವನ್ನು ಕಂಡರು. ಉಳಿದೊಬ್ಬನಿಗೆ ಭೂಲೋಕದಲ್ಲಿ ಭೀಷ್ಮನಾಮದಿಂದ ನೆಲೆಯಾಯ್ತು.
ಪದಾರ್ಥ (ಕ.ಗ.ಪ)
ಸರಸಿಜಾಸನ-ಬ್ರಹ್ಮ
ಟಿಪ್ಪನೀ (ಕ.ಗ.ಪ)
ಅಷ್ಟವಸುಗಳು - ಆಪ, ಧರ, ಧ್ರುವ, ಸೋಮ, ಅನಿಲ, ಅನಲ, ಪ್ರತ್ಯೂಷ, ಪ್ರಭಾಸ,
ಭೀಷ್ಮ - ಇವನು ಶಾಂತನುವಿನ ಮೂಲಕ ಗಂಗೆಯ ಗರ್ಭದಿಂದ ಎಂಟನೇ ವಸುವಿನ ಅಂಶದಿಂದ ಹುಟ್ಟಿದನು. ಇವನ ಹೆಸರು ದೇವವ್ರತ ಎಂದಾಗಿತ್ತು.
ಮೂಲ ...{Loading}...
ಸರಸಿಜಾಸನ ಕೊಟ್ಟ ಶಾಪದಿ
ಯರಸಿಯಾದಳು ಗಂಗೆ ಬಳಿಕಿ
ಬ್ಬರಿಗೆ ಮಕ್ಕಳು ವಸುಗಳೆಂಟು ವಸಿಷ್ಠ ಶಾಪದಲಿ
ನಿರಪರಾಧಿಗಳೇಳು ಜನನಾಂ
ತರಕೆ ಮರಣವ ಕಂಡರುಳಿದಂ
ಗಿರವು ಭೂಲೋಕದಲಿ ಬಲಿದುದು ಭೀಷ್ಮನಾಮದಲಿ ॥21॥
೦೨೨ ಶಾಪ ಹಿಙ್ಗಿತು ...{Loading}...
ಶಾಪ ಹಿಂಗಿತು+++(=ಹಿಮ್-ಮೆಟ್ಟಿತು)+++ ಸುರ-ನದಿಗೆ, ಬಳಿಕ್
ಆ ಪರಾಕ್ರಮಿ ಭೀಷ್ಮ ಶಂತನು-
ಭೂಪತಿಗೆ ಮಗನ್ ಆಗಿ ಬೆಳಗಿದನ್ ಅಖಿಳ ದಿಕ್-ತಟವ
ಭೂಪ ಕೇಳ್ ಐ ಉಪರಿ-ಚರ-ವಸು-
ರೂಪ-ಗರ್ಭವು ಮೀನ-ಬಸುರಲಿ+++(=ಗರ್ಭದಲಿ)+++
ವ್ಯಾಪಿಸಿತು, ಜನಿಸಿದುದು ಮಿಥುನವು ಮತ್ಸ್ಯ-ಜಠರದಲಿ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಂಗೆಗೆ ಶಾಪ ವಿಮೋಚನೆಯಾಯ್ತು. ಬಳಿಕ ಆ ಪರಾಕ್ರಮಿ ಭೀಷ್ಮ ಶಂತನು ಚಕ್ರವರ್ತಿಗೆ ಮಗನಾಗಿ ಎಲ್ಲಾ ದಿಕ್ಕುಗಳಲ್ಲೂ ಕೀರ್ತಿವಂತನಾದನು. ಮಹಾರಾಜಾ ಕೇಳು, ಆಕಾಶದಲ್ಲಿ ಸಂಚರಿಸುವ ವಸುವಿನ ಗರ್ಭವು ಮೀನಿನ ಬಸುರಲ್ಲಿ ವ್ಯಾಪಿಸಿ ಜೋಡಿ ಮಕ್ಕಳು ಜನಿಸಿದುವು.
ಪದಾರ್ಥ (ಕ.ಗ.ಪ)
ಹಿಂಗಿತು - ಕಳೆಯಿತು, ಉಪರಿಚರ-ಆಕಾಶ ಸಂಚಾರಿ, ಮಿಥುನ-ಜೋಡಿ,
ಉಪರಿಚರ-ಚೇದಿ ದೇಶದ ಅರಸು, ಇವನು ಇಂದ್ರನೊಂದಿಗೆ ಸ್ನೇಹವನ್ನು ಬೆಳೆಸಿ ವಿಮಾನ ಸಂಪಾದಿಸಿ ಸದಾ ಅದರಲ್ಲಿಯೇ ಸಂಚರಿಸುತ್ತಿದ್ದ ಕಾರಣ ಇವನಿಗೆ ಉಪರಿಚರ ಎಂದು ಹೆಸರು. ಒಮ್ಮೆ ಈತನ ವೀರ್ಯವು ಸ್ಖಲಿತವಾಗಲು ಅದನ್ನು ಒಂದು ಮೀನು ನುಂಗಿ ಆ ಮೀನಿನಿಂದ ಮತ್ಸ್ಯರಾಜನೆಂಬ ಪುತ್ರನೂ, ಮತ್ಸ್ಯಗಂಧಿಯೆಂಬ ಮಗಳೂ ಜನಿಸಿದರು.
ಮೂಲ ...{Loading}...
ಶಾಪ ಹಿಂಗಿತು ಸುರನದಿಗೆ ಬಳಿ
ಕಾ ಪರಾಕ್ರಮಿ ಭೀಷ್ಮ ಶಂತನು
ಭೂಪತಿಗೆ ಮಗನಾಗಿ ಬೆಳಗಿದನಖಿಳ ದಿಕ್ತಟವ
ಭೂಪ ಕೇಳೈ ಉಪರಿಚರ ವಸು
ರೂಪಗರ್ಭವು ಮೀನ ಬಸುರಲಿ
ವ್ಯಾಪಿಸಿತು ಜನಿಸಿದುದು ಮಿಥುನವು ಮತ್ಸ್ಯ ಜಠರದಲಿ ॥22॥
೦೨೩ ಬಳಿಕ ಮತ್ಸ್ಯದ ...{Loading}...
ಬಳಿಕ ಮತ್ಸ್ಯದ ಬಸುರಲ್ ಉದಿಸಿದ
ನಳಿನ-ಲೋಚನೆ ಮತ್ಸ್ಯ-ಗಂಧಿನಿ
ಬೆಳೆವುತಿರ್ದಳು, ಸಂಗವಾಯ್ತು ಪರಾಶರ-ವ್ರತಿಯ
ಬಳಿಕ ಯೋಜನ-ಗಂಧಿಯಲ್ಲಿಂದ್
ಇಳಿದನ್ ಅಭ್ರ-ಶ್ಯಾಮನ್ ಉರು-ಪಿಂ-
ಗಳ ಜಟಾ-ಪರಿ-ಬದ್ಧ ವೇದ-ವ್ಯಾಸ ಮುನಿರಾಯ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಂತರ, ಮೀನಿನ ಹೊಟ್ಟೆಯಲ್ಲಿ ಹುಟ್ಟಿದ ಕಮಲದಂತೆ ಕಣ್ಣುಳ್ಳ ಹೆಣ್ಣು ಮತ್ಸ್ಯಗಂಧಿನಿಯಾಗಿ ಬೆಳೆಯುತ್ತಿರಲು, ಪರಾಶರ ಋಷಿಯ ಸಂಗವಾಗಿ ಯೋಜನಗಂಧಿಯಾದಳು. ಆ ಯೋಜನಗಂಧಿಯಲ್ಲಿ ಮೋಡದಂತೆ ಕಪ್ಪು ಬಣ್ಣದ, ಚೆನ್ನಾಗಿ ಕಟ್ಟಿದ ಕಂದು ಬಣ್ಣದ ಜಟೆಯ ವೇದವ್ಯಾಸ ಮುನಿಶ್ರೇಷ್ಠ ಅವತರಿಸಿದನು.
ಪದಾರ್ಥ (ಕ.ಗ.ಪ)
ಅಭ್ರಶ್ಯಾಮ-ಮೋಡದಂತೆ ಕಪ್ಪಾದವ, ಪಿಂಗಳ-ನಸುಗೆಂಪು, ಪರಿಬದ್ಧ-ಚೆನ್ನಾಗಿ ಕಟ್ಟಲ್ಪಟ್ಟ, ವ್ರತಿ-ಯತಿ, ವ್ರತವನ್ನು ಕೈಗೊಂಡವನು.
ಟಿಪ್ಪನೀ (ಕ.ಗ.ಪ)
ಪರಾಶರ - ವಸಿಷ್ಠ ಪುತ್ರನಾದ ಶಕ್ತಿ ಮಹರ್ಷಿಯಿಂದ ಅದೃಶ್ಯನ್ತಿಯೆಂಬಾಕೆಯಲ್ಲಿ ಜನಿಸಿದವ. ಕಲ್ಮಾಷಪಾದ ಎಂಬ ರಾಕ್ಷಸ, ಶಕ್ತಿ ಮಹರ್ಷಿಯನ್ನು ಕೊಂದಾಗ ಅದೃಶ್ಯಂತಿ ಗರ್ಭಿಣಿಯಾಗಿದ್ದಳು. ಈ ವಿಷಯ ತಿಳಿಯದೆ ಸಂತತಿ ವಿಚ್ಛೇದದಿಂದ ಖತಿಗೊಂಡು ದೇಹ ತ್ಯಾಗ ಮಾಡಲು ಹೊರಟ ವಸಿಷ್ಠ ವಿಫಲನಾಗಿ ಆಶ್ರಮಕ್ಕೆ ಹಿಂತಿರುಗಿದ. ನಡೆದಾಡುತ್ತಿದ್ದ ಅದೃಶ್ಯನ್ತಿಯ ಗರ್ಭದಿಂದ ವೇದಾಧ್ಯಯನ ಧ್ವನಿ ಕೇಳಿ, ಸೊಸೆ ಗರ್ಭಿಣಿಯೆಂದು ತಿಳಿದು ವಸಿಷ್ಠನ ಮನಸ್ಸಿಗೆ ಶಾಂತಿಯುಂಟಾಯಿತು. ಕೆಲಕಾಲದಲ್ಲಿಯೇ ಅದೃಶ್ಯನ್ತಿ ಗಂಡು ಮಗುವನ್ನು ಪ್ರಸವಿಸಿದಳು. ಸಂತತಿ ವಿಚ್ಛೇದನದಿಂದ ಪರಾಶನಾಗಿದ್ದ (ಜೀವಿತಾಶೆಯನ್ನು ತೊರೆದವ) ವಸಿಷ್ಠ ಮರಳಿ ಗೃಹಸ್ಥಾಶ್ರಮದಲ್ಲಿ ನೆಲೆಗೊಂಡ ಕಾರಣ ಆ ಮಗುವಿಗೆ ಪರಾಶರನೆಂದು ನಾಮಕರಣ ಮಾಡಿದ.
ವೇದವ್ಯಾಸ - ಕೃಷ್ಣವರ್ಣದ ಯಮುನಾ ನದಿಯ ಒಂದು ದ್ವೀಪದಲ್ಲಿ ಜನಿಸಿದವನಾದುದರಿಂದ ಕೃಷ್ಣದ್ವೈಪಾಯನನೆಂತಲೂ, ಬದರೀವನದಲ್ಲಿ ಆಶ್ರಮವನ್ನು ಕಲ್ಪಿಸಿಕೊಂಡು ತಪಸ್ಸು ಮಾಡುತ್ತಿದ್ದವನಾದ್ದರಿಂದ ಬಾದರಾಯಣನೆಂತಲೂ, ಪರಾಶರ ಮುನಿಯ ಪುತ್ರನಾದುದರಿಂದ ಪಾರಾಶರ್ಯನೆಂತಲೂ, ವೇದಗಳನ್ನು ವಿಭಾಗ ಮಾಡಿದ ಕಾರಣ ವೇದವ್ಯಾಸನೆಂತಲೂ, ಕೃಷ್ಣವರ್ಣದ ಮೈ ಬಣ್ಣವುಳ್ಳವನಾದ್ದರಿಂದ ಕೃಷ್ಣನೆಂತಲೂ ಹೆಸರು. ಈತ ಪರಾಶರ ಮುನಿಯಿಂದ ಸತ್ಯವತಿ (ಮತ್ಸ್ಯಗಂಧಿÉ)ಯಲ್ಲಿ ಜನಿಸಿದವ.
ಮತ್ಸ್ಯಗಂಧಿ - ಸತ್ಯವತಿಯ ನಾಮಾಂತರ. ಉಪರಿಚರವಸುವಿನ ಮಗಳು. ಮತ್ಸ್ಯದಿಂದ ಜನಿಸಿದವಳಾಗಿ ಮತ್ಸ್ಯಗಂಧಿ ಎಂಬ ಹೆಸರು. ದಾಸರಾಜನಿಂದ ಪೋಷಿತಳು. ಪರಾಶರ ಮುನಿಯಿಂದ ಕೃಷ್ಣದ್ವೈಪಾಯನನನ್ನು ಪಡೆದಳು. ತನ್ನ ಕನ್ಯಾಧರ್ಮ ಲುಪ್ತವಾಗದಂತೆ ಪರಾಶರನನ್ನು ಬೇಡಿ ವರವನ್ನು ಪಡೆದಳು. ಪೂರ್ವಜನ್ಮದಲ್ಲಿ ಈಕೆ ಬರ್ಹಿಷದರೆಂಬ ಪಿತೃ ದೇವತೆಗಳ ಮಗಳು. ಆಗ ಆಕೆಗೆ ಅಚ್ಛೋದೆಯೆಂದು ಹೆಸರು. ಶಾಪದಿಂದ ಭೂಮಿಯಲ್ಲಿ ಜನಿಸಿದವಳು.
ಮತ್ಸ್ಯಗಂಧಿ - ಗಿರಿಕಾ ಮತ್ತು ಉಪರಿಚರವಸು ಇವರ ಮಕ್ಕಳು ಮತ್ಸ್ಯಗಂಧಿ ಮತ್ತು ಮತ್ಸ್ಯ. ವಸುಚೇದಿ ರಾಜ್ಯದ ಅರಸು. ಇವನಿಗೆ ಇಂದ್ರನ ಬೆಂಬಲವೂ ಇತ್ತು. ಇಂದ್ರ ಇವನಿಗೆ ಒಂದು ವಿಮಾನ ರಥವನ್ನು, ವೈಜಯಂತೀ ಹಾರವನ್ನೂ ಕೊಟ್ಟಿದ್ದ. ಪಿತೃಗಳ ಅಪ್ಪಣೆಯಂತೆ ವಸು ಒಮ್ಮೆ ಬೇಟೆಗೆ ಹೋದ. ದಾರಿಯಲ್ಲಿ ಒಬ್ಬ ಕನ್ಯೆಯನ್ನು ನೋಡು ಕಾಮವುಂಟಾಗಿ ವೀರ್ಯಪತನವಾಯಿತು. ಅವನು ಅದನ್ನು ಬಾಳೆಎಲೆಯಲ್ಲಿ ಮುಚ್ಚಿಟ್ಟು ಒಂದು ಹದ್ದಿನ ಮೂಲಕ ತನ್ನ ಹೆಂಡತಿ ಗಿರಿಕೆಗೆ ಕಳುಹಿಸಿದನು. ಹದ್ದು ಅದನ್ನು ಹೊತ್ತು ಹಾರುತ್ತಿರುವಾಗ ಆ ಪೊಟ್ಟಣ ನೀರಿಗೆ ಬಿದ್ದಿತು. ಅದನ್ನು ಅದ್ರಿಕೆ ಎಂಬ ಮೀನು ನುಂಗಿತು. ಈ ಮೀನಿನ ಗರ್ಭದಿಂದ ಒಂದು ಗಂಡು ಮಗು ಮತ್ತು ಒಂದು ಹೆಣ್ಣುಮಗು ಹುಟ್ಟಿದವು. ಮತ್ಸ್ಯಗಂಧಿ ಒಬ್ಬ ಮೀನುಗಾರನ ಸಾಕುಮಗಳಾಗಿ ಬೆಳೆದಳು. ಇವಳಿಗೆ ಕಾಳಿ, ಗಂಧವತಿ, ಯೋಜನಗಂಧಿ ಎಂಬ ಹೆಸರುಗಳೂ ಇವೆ. ಇವಳ ತಮ್ಮ ಮತ್ಸ್ಯನು ಮತ್ಸ್ಯದೇಶದಲ್ಲಿ ಬೆಳೆದು ವಿರಾಟ ರಾಜನೆನ್ನಿಸಿಕೊಂಡ. ಪರಾಶರ - ವಸಿಷ್ಠ ಪುತ್ರನಾದ ಶಕ್ತಿ ಮಹರ್ಷಿಯಿಂದ ಅದೃಶ್ಯನ್ತಿಯೆಂಬಾಕೆಯಲ್ಲಿ ಜನಿಸಿದವ. ಕಲ್ಮಾಷಪಾದ ಎಂಬ ರಾಕ್ಷಸ, ಶಕ್ತಿ ಮಹರ್ಷಿಯನ್ನು ಕೊಂದಾಗ ಅದೃಶ್ಯಂತಿ ಗರ್ಭಿಣಿಯಾಗಿದ್ದಳು. ಈ ವಿಷಯ ತಿಳಿಯದೆ ಸಂತತಿ ವಿಚ್ಛೇದದಿಂದ ಖತಿಗೊಂಡು ದೇಹ ತ್ಯಾಗ ಮಾಡಲು ಹೊರಟ ವಸಿಷ್ಠ ವಿಫಲನಾಗಿ ಆಶ್ರಮಕ್ಕೆ ಹಿಂತಿರುಗಿದ. ನಡೆದಾಡುತ್ತಿದ್ದ ಅದೃಶ್ಯನ್ತಿಯ ಗರ್ಭದಿಂದ ವೇದಾಧ್ಯಯನ ಧ್ವನಿ ಕೇಳಿ, ಸೊಸೆ ಗರ್ಭಿಣಿಯೆಂದು ತಿಳಿದು ವಸಿಷ್ಠನ ಮನಸ್ಸಿಗೆ ಶಾಂತಿಯುಂಟಾಯಿತು. ಕೆಲಕಾಲದಲ್ಲಿಯೇ ಅದೃಶ್ಯನ್ತಿ ಗಂಡು ಮಗುವನ್ನು ಪ್ರಸವಿಸಿದಳು. ಸಂತತಿ ವಿಚ್ಛೇದನದಿಂದ ಪರಾಶನಾಗಿದ್ದ (ಜೀವಿತಾಶೆಯನ್ನು ತೊರೆದವ) ವಸಿಷ್ಠ ಮರಳಿ ಗೃಹಸ್ಥಾಶ್ರಮದಲ್ಲಿ ನೆಲೆಗೊಂಡ ಕಾರಣ ಆ ಮಗುವಿಗೆ ಪರಾಶರನೆಂದು ನಾಮಕರಣ ಮಾಡಿದ.
ವೇದವ್ಯಾಸ - ಕೃಷ್ಣವರ್ಣದ ಯಮುನಾ ನದಿಯ ಒಂದು ದ್ವೀಪದಲ್ಲಿ ಜನಿಸಿದವನಾದುದರಿಂದ ಕೃಷ್ಣದ್ವೈಪಾಯನನೆಂತಲೂ, ಬದರೀವನದಲ್ಲಿ ಆಶ್ರಮವನ್ನು ಕಲ್ಪಿಸಿಕೊಂಡು ತಪಸ್ಸು ಮಾಡುತ್ತಿದ್ದವನಾದ್ದರಿಂದ ಬಾದರಾಯಣನೆಂತಲೂ, ಪರಾಶರ ಮುನಿಯ ಪುತ್ರನಾದುದರಿಂದ ಪಾರಾಶರ್ಯನೆಂತಲೂ, ವೇದಗಳನ್ನು ವಿಭಾಗ ಮಾಡಿದ ಕಾರಣ ವೇದವ್ಯಾಸನೆಂತಲೂ, ಕೃಷ್ಣವರ್ಣದ ಮೈ ಬಣ್ಣವುಳ್ಳವನಾದ್ದರಿಂದ ಕೃಷ್ಣನೆಂತಲೂ ಹೆಸರು. ಈತ ಪರಾಶರ ಮುನಿಯಿಂದ ಸತ್ಯವತಿ (ಮತ್ಸ್ಯಗಂಧಿÉ)ಯಲ್ಲಿ ಜನಿಸಿದವ.
ಮೂಲ ...{Loading}...
ಬಳಿಕ ಮತ್ಸ್ಯದ ಬಸುರಲುದಿಸಿದ
ನಳಿನಲೋಚನೆ ಮತ್ಸ್ಯಗಂಧಿನಿ
ಬೆಳೆವುತಿರ್ದಳು ಸಂಗವಾಯ್ತು ಪರಾಶರವ್ರತಿಯ
ಬಳಿಕ ಯೋಜನಗಂಧಿಯಲ್ಲಿಂ
ದಿಳಿದನಭ್ರಶ್ಯಾಮನುರು ಪಿಂ
ಗಳ ಜಟಾಪರಿಬದ್ಧ ವೇದವ್ಯಾಸ ಮುನಿರಾಯ ॥23॥
೦೨೪ ನೆನೆ ವಿಪತ್ತಿನೊಳೆನ್ದು ...{Loading}...
“ನೆನೆ ವಿಪತ್ತಿನೊಳ್” ಎಂದು ತಾಯನು
ತನುಜ ಬೀಳ್ಕೊಂಡನು, ಪರಾಶರ-
ಮುನಿ ಪುನಃ ಕನ್ಯತ್ವವನು ಕರುಣಿಸಿದನ್ ಆ ಸತಿಗೆ
ವಿನುತ-ಯಮುನಾ-ತೀರದಲಿ ಮಾ-
ನಿನಿಯ ಕಂಡನು ಬೇಂಟೆಯ್ ಆಡುತ
ಜನಪ ಶಂತನು ಮರುಳು-ಗೊಂಡನು ಮದನನ್ ಎಸುಗೆಯಲಿ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆಪತ್ತಿನಲ್ಲಿ ಜ್ಞಾಪಿಸಿಕೊ” ಎಂದು ಹೇಳಿ ತಾಯನ್ನು ಮಗ ವೇದವ್ಯಾಸ ಬೀಳ್ಕೊಂಡನು. ಪರಾಶರಮುನಿ ಅವಳಿಗೆ ಪುನಃ ಕನ್ಯತ್ವವನ್ನು ಕರುಣಿಸಿದನು. ಶಂತನು ಮಹಾರಾಜ ಬೇಟೆಯಾಡುತ್ತ, ಸ್ತುತಿಸಲ್ಪಡುವ ಯಮುನಾನದಿಯ ತೀರದಲ್ಲಿ ಈ ಯೋಜನಗಂಧಿಯನ್ನು ಕಂಡನು. ಮನ್ಮಥನ ಪ್ರಭಾವದಿಂದ ಅವಳಲ್ಲಿ ಮೋಹಗೊಂಡನು.
ಪದಾರ್ಥ (ಕ.ಗ.ಪ)
ವಿಪತ್ತು-ಆಪತ್ತು, ಕೇಡು,
ಮದನ-ಮನ್ಮಥ,
ಎಸುಗೆ-ಬಾಣದ ಹೊಡೆತ
ಟಿಪ್ಪನೀ (ಕ.ಗ.ಪ)
ಶಂತನು - ಇಕ್ಷ್ವಾಕು ವಂಶದ ಪ್ರಸಿದ್ಧ ದೊರೆ ಮಹಾಭಿಷನೇ ಬ್ರಹ್ಮನ ಶಾಪಕ್ಕೆ ಗುರಿಯಾಗಿ ಚಂದ್ರವಂಶದ ಕುರುವಂಶದ ಪ್ರತೀಪನ ಮಗ ಶಂತನುವಾಗಿ ಹುಟ್ಟಿಪ್ರಸಿದ್ಧನಾದ ವ್ಯಕ್ತಿ. ಇವನಿಗೆ ಶಂತನು (ಶಾಂತನು) ಎಂಬುದು ಅನ್ವರ್ಥನಾಮವೂ ಹೌದು. ಏಕೆಂದರೆ ಇವನು ತನ್ನ ಎರಡೂ ಕೈಗಳಿಂದ ಏನನ್ನಾದರೂ ಸ್ಪರ್ಶಿಸಿದರೆ ಅದು ಹೊಸದಾಗಿ ಬಿಡುತ್ತಿದ್ದಿತಂತೆ. ಮಹಾ ಸತ್ಯನಿಷ್ಠನಾಗಿದ್ದ ಶಂತನು ಎಂಬ ಬಲಶಾಲಿಯೂ ಆಗಿದ್ದ. ದಿನವೂ ಬೆಳಗ್ಗೆ ಮತ್ತು ಸಂಜೆ ಶಂತನುವನ್ನು ಸ್ಮರಿಸಿದರೆ ಶುಭವಾಗುತ್ತದೆಂದು ಮಹಾಭಾರತದ ಅನುಶಾಸನ ಪರ್ವ ಹೇಳುತ್ತದೆ. ಈತನನ್ನು ಕುರುಸತ್ತ, ಭಾರತ ಗೋಪ್ತ ವಂಶಶ್ಲೋಕ ಎಂದು ಮಹಾಭಾರತದಲ್ಲಿ ಬಣ್ಣಿಸಲಾಗಿದೆ.
ಮಧ್ಯದ ಮಗನಾಗಿ ಹುಟ್ಟಿದರೂ ಶಂತನು ತನ್ನ ಅಣ್ಣ ದೇವಾಪಿಯ ವೈರಾಗ್ಯ ಪರತೆಯಿಂದಾಗಿ ತಾನೇ ರಾಜನಾಗಬೇಕಾಯಿತು. ಇವನ ಕೊನೆಯ ತಮ್ಮ ಬಾಹ್ಲಿಕ.
ಗಂಗೆ ಶಂತನುವಿನ ಪತ್ನಿ. ಇವಳನ್ನು ಮೋಹಿಸಿದ ಶಂತನು ಆಕೆ ಏನು ಮಾಡಿದರೂ ಎದುರಾಡುವುದಿಲ್ಲ ಎಂದು ಮಾತು ಕೊಡಬೇಕಾಯಿತು. ಹುಟ್ಟಿದ ಮಕ್ಕಳನ್ನೆಲ್ಲ ಇವಳು ಕೂಡಲೇ ನೀರಿಗೆ ಎಸೆಯುತ್ತ ಬಂದಾಗಲು ಶಂತನು ಸುಮ್ಮನಿದ್ದ. (‘‘ಹೆತ್ತ ಮಕ್ಕಳನ್ನೆಲ್ಲ ಹೂಳಿ ತಣ್ಣಗೆ ನಗವು ತಾಯ ಅಚ್ಚರಿ ಬದುಕನೋಡಬೇಕು’’ ಕೆ.ಎಸ್.ನ) ಆದರೆ ಎಚಿಟನೆಯ ಮಗುವನ್ನು ಎಸೆಯಲು ಹೋದಾಗ ತಡೆದ, ಗಂಗೆ ಕೂಡಲೇ ಇವನನ್ನು ತ್ಯಜಿಸಿದಳು.
ಮಗ ದೇವವ್ರತ. ಇವನೇ ಭೀಷ್ಮನೆಂದು ಪ್ರಸಿದ್ಧನಾದವನು. ಒಂದುದಿನ ಶಂತನು ಯೋಜನಗಂಧಿ(ಸತ್ಯವತಿ)ಯನ್ನು ಕಂಡು ಮೋಹಗೊಂಡ. ಅವಳ ತಂದೆ ದಾಶರಾಜನು ಹಾಕಿದ ಷರತ್ತು ವಿಚಿತ್ರವಾಗಿತ್ತು ಮೊದಲ ಮಗನಾದ ದೇವವ್ರತನು ಪಟ್ಟಕ್ಕೆ ಬರುವ ವಯಸ್ಸಿನವನಾಗಿರುವುದರಿಂದ ಈಕೆಯ ಕ್ಕಳ ಭವಿಷ್ಯವೇನು? ಒಂದು ಪಕ್ಷ ಆಕೆಯ ಮಗನಿಗೆ ಪಟ್ಟಕಟ್ಟುವುದಕ್ಕೆ ಒಪ್ಪಿದರೆ ಮಾತ್ರ ಈ ಮದುವೆ ನಡೆಯಬಹುದು ಎಂದು ಹೇಳಿದ. ಶಂತನು ಈ ಷರತ್ತಿಗೆ ಒಪ್ಪದಿದ್ದಾಗ ಮಗ ಭೀಷ್ಮನು ತನ್ನ ಬ್ರಹ್ಮಚರ್ಯ ವ್ರತವನ್ನು ಘೋಷಿಸಿಕೊಂಡು ಮದುವೆ ಮಾಡಿಸಿ ಅಪ್ಪನಿಂದ ಇಚ್ಛಾಮರಣದ ವರ ಪಡೆದ.
ಶಂತನು ಸತ್ಯವತಿಯರಿಗೆ ಚಿತ್ರಾಂಗದ, ವಿಚಿತ್ರವೀರ್ಯರೆಂಬ ಇಬ್ಬರು ಮಕ್ಕಳು ಹುಟ್ಟಿ ಕುರುವಂಶ ಮುಂದುವರಿಯಿತು.
ಶಂತನು ಯಮನ ಪೂಜೆ ಮಾಡಿ ಅನುಗ್ರಹ ಪಡೆದುಕೊಂಡವನು. ಒಂದು ಸಾವಿರ ಅಶ್ವಮೇಧಗಳನ್ನೂ, ನೂರು ರಾಜಸೂಯ ಯಾಗಗಳನ್ನೂ ಮಾಡಿದ ಕೀರ್ತಿವಂತ. ಆರ್ಚೀಕ ಪರ್ವತದಲ್ಲಿ ತಪಸ್ಸು ಮಾಡಿ ಸ್ವರ್ಗವನ್ನು ಪಡೆದನೆಂದು ವನಪರ್ವದಲ್ಲಿ ಹೇಳಲಾಗಿದೆ. ಭೀಷ್ಮನಂತಹ ಲೋಕವಿಖ್ಯಾತನಿಗೆ ಜನ್ಮ ಕೊಟ್ಟವನೆಂಬ ಕೀರ್ತಿಗೆ ಶಂತನು ಪಾತ್ರನಾಗಿದ್ದಾನೆ. ಮಗನೇ ಮುಂದೆ ನಿಂತು ತಂದೆಗೆ ಮದುವೆ ಮಾಡಿಸುವ ದೃಶ್ಯಕ್ಕೆ ಈತ ಕಾರಣನಾಗಿದ್ದಾನೆ.
ಮೂಲ ...{Loading}...
ನೆನೆ ವಿಪತ್ತಿನೊಳೆಂದು ತಾಯನು
ತನುಜ ಬೀಳ್ಕೊಂಡನು ಪರಾಶರ
ಮುನಿ ಪುನಃ ಕನ್ಯತ್ವವನು ಕರುಣಿಸಿದನಾ ಸತಿಗೆ
ವಿನುತ ಯಮುನಾ ತೀರದಲಿ ಮಾ
ನಿನಿಯ ಕಂಡನು ಬೇಂಟೆಯಾಡುತ
ಜನಪ ಶಂತನು ಮರುಳುಗೊಂಡನು ಮದನನೆಸುಗೆಯಲಿ ॥24॥
೦೨೫ ಪರಿಮಳದ ಬಳಿವಿಡಿದು ...{Loading}...
ಪರಿಮಳದ ಬಳಿವ್-ಇಡಿದು+++(=ಹಿಡಿದು)+++ ಬಂದ್ ಈ
ತರುಣಿಯನು ಕಂಡ್ “ಆರು ನೀನ್” ಎಂದ್
ಅರಸ ಬೆಸ-ಗೊಳುತ್+++(=ಕೇಳುತ್ತ್)+++, ಎಸೆವ ಕಾಮನ ಶರಕೆ ಮೈಯ್ ಒಢ್ಡಿ
“ಅರಮನೆಗೆ ನಡೆಯ್” ಎನಲು “ತಂದೆಯ
ಪರಮ-ವಚನವ್ ಅಲಂಘ್ಯವ್” ಎನೆ ಕಾ-
ತರಿಸಿ ಭಗ್ನ-ಮನೋರಥನು ಮರಳಿದನು ಮಂದಿರಕೆ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಂತನು ಪರಿಮಳವನ್ನನುಸರಿಸಿ ಬಂದು ಈ ಯೋಜನಗಂಧಿಯನ್ನು ನೋಡಿ “ಯಾರು ನೀನು?” ಎಂದು ವಿಚಾರಿಸುತ್ತ, ಕಾಮನ ಬಾಣಕ್ಕೆ ಮೈಯೊಡ್ಡಿದವನಾಗಿ “ಅರಮನೆಗೆ ನಡೆ” ಎಂದೆನಲು, ತಂದೆಯ ಪರಮವಾಕ್ಯವನ್ನು ದಾಟಲಸಾಧ್ಯವೆಂದು
ಯೋಜನಗಂಧಿ ಹೇಳಲು, ತನ್ನ ಬಯಕೆ ಈಡೇರದೆ ನಿರಾಸೆ ಹೊಂದಿದವನಾಗಿ ಅರಮನೆಗೆ ಹಿಂತಿರುಗಿದನು.
ಪದಾರ್ಥ (ಕ.ಗ.ಪ)
ಬಳಿವಿಡಿ-ಅನುಸರಿಸು,
ಅಲಂಘ್ಯ-ದಾಟಲಸಾಧ್ಯ,
ಭಗ್ನಮನೋರಥ-ನಿರಾಶೆ ಹೊಂದಿದವನು.
ಮೂಲ ...{Loading}...
ಪರಿಮಳದ ಬಳಿವಿಡಿದು ಬಂದೀ
ತರುಣಿಯನು ಕಂಡಾರು ನೀನೆಂ
ದರಸ ಬೆಸಗೊಳುತೆಸೆವ ಕಾಮನ ಶರಕೆ ಮೈಯೊಢ್ಡಿ
ಅರಮನೆಗೆ ನಡೆಯೆನಲು ತಂದೆಯ
ಪರಮ ವಚನವಲಂಘ್ಯವೆನೆ ಕಾ
ತರಿಸಿ ಭಗ್ನ ಮನೋರಥನು ಮರಳಿದನು ಮಂದಿರಕೆ ॥25॥
೦೨೬ ವಿರಹದಾವುಗೆ ಕಿಚ್ಚು ...{Loading}...
ವಿರಹದ್ ಆವುಗೆ+++(=ಒಲೆ)+++-ಕಿಚ್ಚು ಭೂಮೀ-
ಶ್ವರನ ಮುಸುಕಿತು - ಬಲಿದ್+++(=ಗಟ್ಟಿಸಿದ್)+++ ಅವಸ್ಥೆಯ-
ನ್ ಅರಸ ಬಣ್ಣಿಸಲ್ ಅರಿಯೆನ್, ಏಳ್ ಎಂಟ್ ಒಂಬತರ ಬಳಿಯ
“ಮರಣವ್ ಈತಂಗ್” ಎಂಬ ಜನದ್ ಉ-
ಬ್ಬರದ ಗುಜು-ಗುಜುವ್ ಅರಿದು ಯಮುನಾ-
ವರ-ನದಿಯ ತೀರಕ್ಕೆ ಬಂದನು ಭೀಷ್ಮ ವಹಿಲದಲಿ +++(=ವೇಗದಲಿ)+++ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿರಹವೆಂಬ ಒಲೆಯ ಬೆಂಕಿ ಭೂಮಿಗೊಡೆಯನಾದ ಶಂತನುವನ್ನು ಮುಸುಕಿತು. ಅಧಿಕವಾದ ಅವನ ಅವಸ್ಥೆಯನ್ನು ವರ್ಣಿಸಲಾಗದು. ವಿರಹ ವ್ಯಥೆ ದಿನದಿನಕ್ಕೆ ಹೆಚ್ಚಿ ಏಳೆಂಟೊಂಬತ್ತರ ನಂತರದ ಹತ್ತನೆಯ ಮರಣಾವಸ್ಥೆಯವರೆಗೂ ಮುಟ್ಟಿತು. ದೊರೆ ಬದುಕಲಾರನೆಂಬ ಜನಗಳ ಹೆಚ್ಚಿನ ಪಿಸುಮಾತುಗಳನ್ನು ತಿಳಿದು ಭೀಷ್ಮನು ಯಮುನಾನದಿಯ ತೀರಕ್ಕೆ ವೇಗದಲ್ಲಿ ಬಂದನು.
ಪದಾರ್ಥ (ಕ.ಗ.ಪ)
ಆವುಗೆ-ಆವಗೆ, ಒಲೆ, ಕುಲುಮೆ,
ಉಬ್ಬರ-ಹೆಚ್ಚಿಗೆ,
ಗುಜುಗುಜು-ಪಿಸುಮಾತು,
ವಹಿಲ-ವೇಗ
ಟಿಪ್ಪನೀ (ಕ.ಗ.ಪ)
ಏಳೆಂಟೊಂಬತರ ಬಳಿಯ-ಹತ್ತನೇ ಅವಸ್ಥೆ, ಮರಣದ
ಹತ್ತು ಅವಸ್ಥೆಗಳು-ಅಭಿಲಾಷಾ, ಚಿಂತಾ, ಅನುಸ್ಮೃತಿ, ಗುಣಕೀರ್ತನ, ಉದ್ವೇಗ, ವಿಲಾಪ, ಉನ್ಮಾದ, ವ್ಯಾಧಿ, ಜಡತಾ, ಮರಣ (ನಾಟ್ಯ ಶಾ : 24-199-171)
ಮೂಲ ...{Loading}...
ವಿರಹದಾವುಗೆ ಕಿಚ್ಚು ಭೂಮೀ
ಶ್ವರನ ಮುಸುಕಿತು ಬಲಿದವಸ್ಥೆಯ
ನರಸ ಬಣ್ಣಿಸಲರಿಯೆನೇಳೆಂಟೊಂಬತರ ಬಳಿಯ
ಮರಣವೀತಂಗೆಂಬ ಜನದು
ಬ್ಬರದ ಗುಜುಗುಜುವರಿದು ಯಮುನಾ
ವರನದಿಯ ತೀರಕ್ಕೆ ಬಂದನು ಭೀಷ್ಮ ವಹಿಲದಲಿ ॥26॥
೦೨೭ ಕರೆಸಿದನು ಧೀವರನನಯ್ಯಂ ...{Loading}...
ಕರೆಸಿದನು ಧೀವರನನ್ - “ಅಯ್ಯಂಗ್
ಅರಸಿಯ್ ಆಗಲಿ ನಿನ್ನ ಮಗಳ್” ಎನಲ್
“ಅರಸಿಯ್ ಆದರೆ, ಮಗಳ ಮಕ್ಕಳು ರಾಜ್ಯವ್ ಆಳುವರೆ?”
ಅರಿದು ಸಲಿಸುವಡ್+++(=ಸಲಿಸುವೊಡೆ =ಸಲಿಸುವುದಕ್ಕಾಗಿ)+++ ಇದನು ನೀ, ಬರಿಯ್
ಅರಸುತನ ನಮಗ್ ಏಕ್” ಎನಲು ಧೀ-
ವರನ ಮಾತಿಂಗ್ ಈತನ್ ಎಂದನು - ರಾಯ ಕೇಳ್ ಎಂದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೆಸ್ತ ದಾಶರಾಜನನ್ನು ಕರೆಸಿದನು. “ನಿನ್ನ ಮಗಳು ನನ್ನ ತಂದೆಗೆ ಅರಸಿಯಾಗಲಿ” ಎಂದು ಭೀಷ್ಮ ಹೇಳಲು, ಅದಕ್ಕೆ ಅವನು “ನನ್ನ ಮಗಳು ಅರಸಿಯಾದರೆ ಅವಳ ಮಕ್ಕಳು ರಾಜ್ಯವಾಳುತ್ತಾರೆಯೆ? ಇದನ್ನು ತಿಳಿದು ಸಲಿಸುವುದಾದರೆ ಆಗಬಹುದು, ಹಾಗಲ್ಲದೆ ಬರಿಯರಸುತನ ತಮಗೇಕೆ?” ಎಂದು ಧೀವರನು ಹೇಳಲು, ಅವನ ಮಾತಿಗೆ ಭೀಷ್ಮನು ಹೀಗೆಂದು ಹೇಳಿದನು.
ಪದಾರ್ಥ (ಕ.ಗ.ಪ)
ಧೀವರ-ಬೆಸ್ತ
ಪಾಠಾನ್ತರ (ಕ.ಗ.ಪ)
[ವಡಿದನು ನೀ] - [ವುದೀವಚನ (ಆ)] ಈ ಮಾತನ್ನು ಸಲಿಸುವುದು ಎಂಬ ಪಾಠಾಂತರ ಇದೆ.
ಟಿಪ್ಪನೀ (ಕ.ಗ.ಪ)
ದಾಶರಾಜ - ಇವನಿಗೆ ಉಚ್ಚೈಶ್ವರಸ್ ಎಂಬ ಹೆಸರೂ ಇದೆ. ನಿಷಾದರಾಜ ಎಂದೂ ಹೇಳುತ್ತಾರೆ. ಯಮುನಾ ತೀರದಲ್ಲಿ ದೋಣಿಗಳಲ್ಲಿ ಜನರನ್ನು ಸಾಗಿಸು ಈತನದು. ಇವನಿಗೆ ನದಿಯ ತೀರದಲ್ಲಿ ಇಬ್ಬರು ಮಕ್ಕಳು ಸಿಕ್ಕಿದರು. ವಸು ಮತ್ತು ಅದ್ರಿಕಾ ಇವರ ಮಕ್ಕಳು ಮತ್ತು ಮತ್ಸ್ಯ ಮತ್ತು ಸತ್ಯವತಿ ಎಂಬ ಹೆಸರಿಟ್ಟು ಅವರನ್ನು ಸಾಕಿದ. ಮತ್ಸ್ಯನನ್ನು ಬೇರೊಬ್ಬರಿಗೆ ದತ್ತು ಕೊಟ್ಟ ಮೀನಿನ ಹೊಟ್ಟೆಯಲ್ಲಿ ಹುಟ್ಟಿದ ಇವಳು ಮತ್ಸ್ಯಗಂಧಿಯಾಗಿದ್ದಳು. ಸತ್ಯವತಿಯು ಸಾಹಸಿಯೂ ಸ್ವತಂತ್ರ ಮನೋಧರ್ಮದವಳೂ ಆದ ಮಗಳನ್ನು ಧರ್ಮಾರ್ಥವಾಗಿ ನಾವೆಯನ್ನು ನಡೆಸುವಂತೆ ದಾಶರಾಜನು ನೇಮಿಸಿದ. ಪರಾಶರನನ್ನು ಮೆಚ್ಚು ಕೂಡಿ ವೇದವ್ಯಾಸನನ್ನು ಹೆತ್ತು ಪರಾಶರನಿಗೆ ಒಪ್ಪಿಸಿದ ಕನ್ಯೆಯಾಗಿ ಹಿಂದಿರುಗಿ ಬಂದ ಸತ್ಯವತಿಯ ರೂಪವನ್ನು ನೋಡಿದ ಶಂತನು ಮಹಾರಾಜನು ಮೆಚ್ಚು ಮದುವೆಯಾಗ ಬಯಸಿದಾಗ ದಾಶರಾಜನು ಈ ಆಹ್ವಾನವನ್ನು ನಯಾವಾಗಿಯೇ ತಿರಸ್ಕರಿಸುವ ಧೈರ್ಯ ತೋರಿದ್ದಾನೆ. ಈಗ ಮಹಾರಾಣಿಯಾಗುವ ಭಾಗ್ಯ ಬಂದಿದ್ದರೂ ತುಂಬ ವಯಸ್ಸಾಗಿರುವ ಮಹಾರಾಜನು ಕಾಲವಾದ ಮೆಲೆ ಮಗಳ ಗತಿಯೇನು ಅವಳ ಮಕ್ಕಳ ಗತಿಯೇನು ಎಂಬ ದೀರ್ಘಾಲೋಚನೆ ಅವನದು. ಇದನ್ನು ಮಾಡಲಾಗದೆ ಕೊರಗುತ್ತಿದ್ದ ತಂದೆಗೋಸ್ಕರ ದೇವವ್ರತ (ಭೀಷ್ಮ) ನೇ ದಾಶರಾಜನ ಬಳಿಗೆ ಬಂದ. ‘‘ದಾಶರಾಜ ನಿನ್ನ ಮಗಳನ್ನು ನಮ್ಮ ತಂದೆಗೆ ಮದುವೆ ಮಾಡಿಕೊಡು ರಾಜ್ಯದ ಮೇಲೆ ನನಗಿರುವ ಅಧಿಕಾರವನ್ನು ಬಿಟ್ಟುಕೊಟ್ಟಿದ್ದೇನೆ.’’ ಇದು ನನ್ನ ಪ್ರತಿಜ್ಞೆ ದಾಶರಾಜನಿಗೆ ಅಲ್ಲಿಗೂ ಸಮಾಧಾನವಿಲ್ಲ.
ಮೂಲ ...{Loading}...
ಕರೆಸಿದನು ಧೀವರನನಯ್ಯಂ
ಗರಸಿಯಾಗಲಿ ನಿನ್ನ ಮಗಳೆನ
ಲರಸಿಯಾದರೆ ಮಗಳ ಮಕ್ಕಳು ರಾಜ್ಯವಾಳುವರೆ
ಅರಿದು ಸಲಿಸುವಡಿದನು ನೀ ಬರಿ
ಯರಸುತನ ನಮಗೇಕೆನಲು ಧೀ
ವರನ ಮಾತಿಂಗೀತನೆಂದನು ರಾಯ ಕೇಳೆಂದ ॥27॥
೦೨೮ ಆದರಿಲ್ಲಿಮ್ ಮೇಲೆ ...{Loading}...
“ಆದರ್ ಇಲ್ಲಿಂ ಮೇಲೆ ನಾರಿಯರ್
ಆದವರು +++(ತಾಯಿ)+++ ಭಾಗೀರಥಿಗೆ ಸರಿ+++(→ಸಮಾನ)+++,
ಮೇದಿನಿಯ ಸಲಿಸುವೆನು ನಿನ್ನಯ ಮಗಳ ಮಕ್ಕಳಿಗೆ.
ಈ ದಿವಿಜರ್, ಈ ಹರಿ-ಹರ-ಬ್ರ-
ಹ್ಮಾದಿ ದೇವರು ಸಾಕ್ಷಿ; ಹೋಗ್” ಎಂ-
ದ್ ಆ ದಯಾಂಬುಧಿ ನಗುತ ನಿನ್ನಯ ಮಗಳ ಕರೆಸೆಂದ ॥28॥+++(5)+++
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹಾಗಾದರೆ, ಇಲ್ಲಿಂದ ಮುಂದೆ ಸ್ತ್ರೀಯರಾದವರೆಲ್ಲಾ ತಾಯಿಯಾದ ಭಾಗೀರಥಿಗೆ ಸಮಾನರು. ನಿನ್ನ ಮಗಳ ಮಕ್ಕಳಿಗೆ ಭೂಮಿಯನ್ನು ಸಲ್ಲಿಸುತ್ತೇನೆ. ಇದಕ್ಕೆ ಹರಿಹರ ಬ್ರಹ್ಮಾದಿಗಳು ಸಾಕ್ಷಿ; ಹೋಗು” ಎಂದು ಆ ದಯಾಸಾಗರನಾದ ಭೀಷ್ಮನು ನಗುತ್ತ “ನಿನ್ನ ಮಗಳನ್ನು ಕರೆಸು” ಎಂದನು.
ಪಾಠಾನ್ತರ (ಕ.ಗ.ಪ)
.
ಮೂಲ ...{Loading}...
ಆದರಿಲ್ಲಿಂ ಮೇಲೆ ನಾರಿಯ
ರಾದವರು ಭಾಗೀರಥಿಗೆ ಸರಿ
ಮೇದಿನಿಯ ಸಲಿಸುವೆನು ನಿನ್ನಯ ಮಗಳ ಮಕ್ಕಳಿಗೆ
ಈ ದಿವಿಜರೀ ಹರಿಹರ ಬ್ರ
ಹ್ಮಾದಿ ದೇವರು ಸಾಕ್ಷಿ ಹೋಗೆಂ
ದಾ ದಯಾಂಬುಧಿ ನಗುತ ನಿನ್ನಯ ಮಗಳ ಕರೆಸೆಂದ ॥28॥
೦೨೯ ತರಿಸಿದನು ದಣ್ಡಿಗೆಯ ...{Loading}...
ತರಿಸಿದನು ದಂಡಿಗೆಯ+++(=ಪಲ್ಲಕ್ಕಿಯ)+++. ದಂಡಿಯ+++(=ದಂಡಧಾರಿಯರ್ ಆದ)+++
ಚರರ ನೆಲನ್ ಉಗ್ಗಡಣೆಯಲಿ+++(=ಉದ್ಘೋಷಣೆಯಲಿ)+++ ಸರ-
ಸಿ-ರುಹ-ಮುಖಿಯನು ತಂದು ಮದುವೆಯ ಮಾಡಿದನು ಪಿತಗೆ.
ಉರವ್ ಅಣಿಸಿ+++(=ನುಗ್ಗಿಸಿ)+++ ಮಗ ನುಡಿದ ಭಾಷೆಯನ್
ಅರಸ ಕೇಳಿದನು, ಬಳಿಕ ಭೀಷ್ಮಗೆ
ವರವನ್ ಇತ್ತನು - “ಮರಣವದು ನಿನ್ನ್ ಇಚ್ಛೆ - ಹೋಗ್” ಎಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮನು ಪಲ್ಲಕ್ಕಿಯನ್ನು ತರಿಸಿದನು. ದಂಡಧಾರಿ ಸೇವಕರು ನಡೆಯುವಾಗಿನ ಉದ್ಘೋಷದೊಡನೆ ಕಮಲಮುಖಿಯಾದ ಯೋಜನಗಂಧಿಯನ್ನು ತಂದು ತಂದೆಗೆ ಮದುವೆ ಮಾಡಿದನು. ಸಂಭ್ರಮಿಸಿ ಮಗ ನುಡಿದ ಪ್ರತಿಜ್ಞೆಯನ್ನು ಕೇಳಿದ ಶಂತನು “ಮರಣವು ನಿನ್ನ ಅಪೇಕ್ಷೆಯಂತಾಗಲಿ” ಎಂದು ಭೀಷ್ಮನಿಗೆ ವರವನ್ನು ಕೊಟ್ಟನು.
ಪದಾರ್ಥ (ಕ.ಗ.ಪ)
ದಂಡಿಗೆ-ಪಲ್ಲಕ್ಕಿ, ದಂಡಿಯಚರರು-ದಂಡಧಾರಿ ಸೇವಕರು, ಉಗ್ಗಡಣೆ-ಉದ್ಘೋಷಣೆ, ಉರವಣಿಸು-ಸಂಭ್ರಮಿಸು.
ಟಿಪ್ಪನೀ (ಕ.ಗ.ಪ)
ಭೀಷ್ಮ - ಶಂತನು ಚಕ್ರವರ್ತಿಯಿಂದ ಗಂಗೆಯಲ್ಲಿ ಜನಿಸಿದ ಎಂಟು ಮಕ್ಕಳಲ್ಲಿ ಕೊನೆಯವನು. ದೇವವ್ರvನೆಂಬ ಈತ ವಸುವಿನ ಅವತಾರ. ವಸಿಷ್ಠ ಮುನಿಯ ಶಾಪದಿಂದ ಭೂಮಿಯಲ್ಲಿ ಅವತರಿಸಿದ. ತಾನು ಮದುವೆಯೇ ಆಗುವುದಿಲ್ಲವೆಂದು ಭಯಂಕರ ಪ್ರತಿಜ್ಞೆ ಮಾಡಿ ಸತ್ಯವತಿಯನ್ನು ತಂದು ತನ್ನ ತಂದೆ ಶಂತನುನಿಗೆ ಮದುವೆ ಮಾಡಿ, ಸಂತುಷ್ಟನಾದ ತಂದೆಯಿಂದ ಸ್ವೇಚ್ಛಾ ಮರಣ ರೂಪವಾದ ವರವನ್ನು ಪಡೆದು ಸತ್ಯವ್ರತ, ಭೀಷ್ಮ ಮುಂತಾದ ಹೆಸರುಗಳನ್ನು ಪಡೆದ.
ಮೂಲ ...{Loading}...
ತರಿಸಿದನು ದಂಡಿಗೆಯ ದಂಡಿಯ
ಚರರ ನೆಲನುಗ್ಗಡಣೆಯಲಿ ಸರ
ಸಿರುಹಮುಖಿಯನು ತಂದು ಮದುವೆಯ ಮಾಡಿದನು ಪಿತಗೆ
ಉರವಣಿಸಿ ಮಗ ನುಡಿದ ಭಾಷೆಯ
ನರಸ ಕೇಳಿದನು ಬಳಿಕ ಭೀಷ್ಮಗೆ
ವರವನಿತ್ತನು ಮರಣವದು ನಿನ್ನಿಚ್ಛೆ ಹೋಗೆಂದ ॥29॥
೦೩೦ ಬಳಿಕ ಯೋಜನಗನ್ಧಿಯಲಿ ...{Loading}...
ಬಳಿಕ ಯೋಜನ-ಗಂಧಿಯಲಿ ಮ-
ಕ್ಕಳುಗಳ್ ಅವತರಿಸಿದರು ದೀಪ್ತ-
ಜ್ವಲನ-ತೇಜರು ಕಲ್ಪ-ಭೂ-ಜರು ಹಿಮಕರಾನ್ವಯಕೆ.
ಲಲಿತ-ಮಂಗಳ-ಜಾತಕರ್ಮಾ-
ವಳಿಯ+++(ಲಿ)+++ ಚಿತ್ರಾಂಗದನನ್ ಆ ನೃಪ-
ತಿಲಕ ನೆಗಳೆ+++(=ಮಾಡೆ)+++ ವಿಚಿತ್ರವೀರ್ಯನ ನಾಮಕರಣದಲಿ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ, ಯೋಜನಗಂಧಿಯಲ್ಲಿ ಸೂರ್ಯನಂತೆ ಹೊಳೆಯುವ ಕಾಂತಿಯುಕ್ತರಾದ, ಚಂದ್ರವಂಶಕ್ಕೆ ಕಲ್ಪವೃಕ್ಷದಂತಿರುವ ಮಕ್ಕಳು ಹುಟ್ಟಿದರು. ಶುಭವಾದ ನಾಮಕರಣ ಸಂಸ್ಕಾರವನ್ನು ನಡೆಸಿ ಚಿತ್ರಾಂಗದ ಮತ್ತು ವಿಚಿತ್ರವೀರ್ಯ ಎಂದು ಹೆಸರಿಟ್ಟರು.
ಪದಾರ್ಥ (ಕ.ಗ.ಪ)
ದೀಪ್ತಜ್ವಲನ-ಹೊಳೆಯುವ ಸೂರ್ಯ, ಕಲ್ಪಭೂಜ-ಕಲ್ಪವೃಕ್ಷ, ಹಿಮಕರಾನ್ವಯ-ಚಂದ್ರವಂಶ, ನೆಗಳು-ಮಾಡು
ಟಿಪ್ಪನೀ (ಕ.ಗ.ಪ)
ವಿಚಿತ್ರವೀರ್ಯ - ಪಾಂಡ ಧೃತರಾಷ್ಟ್ರ ಇವರು ವಿಚಿತ್ರವೀರ್ಯನ ಕ್ಷೇತ್ರಜ್ಞ ಪುತ್ರರು. ವಿಚಿತ್ರವೀರ್ಯನು ಚಿತ್ರಾಂಗದನ ತಮ್ಮ. ಶಂತನು-ಸತ್ಯವತಿಯರ ಮಗ. ಭೀಷ್ಮರಿಗೂ ಈತ ಮಲತಮ್ಮನಾಗಬೇಕು. ಎಳೆಯನಾದ ರೋಗಗ್ರಸ್ಥನಾದ ಈತ ತೀರ ಸಾಧಾರಣ ವ್ಯಕ್ತಿಯಾಗಿದ್ದ. ಅಥವಾ ಭೀಷ್ಮರಂಥ ಉಜ್ವಲ ಕ್ಷಾತ್ರ ಪ್ರಭೆಯ ಎದುರಿಗೆ ಇವನು ಮಂಕಾಗಿ ಕಂಡಿದ್ದರೂ ಆಶ್ಚರ್ಯವಿಲ್ಲ. ಇವನ ಅಣ್ಣ ಚಿತ್ರಾಂಗದ ಮಹಾರಾಜ. ಇವನು ತನ್ನದೇ ಹೆಸರಿನ ಗಂಧರ್ವನೊಬ್ಬನೊಂದಿಗೆ ಹಿರಣ್ವತೀ ನದೀತೀರದಲ್ಲಿ ಹೋರಾಡಿ ಸತ್ತ. (ತನ್ನ ಹೆಸರನ್ನೇ ಇವನೂ ಇಟ್ಟುಕೊಂಡಿದ್ದನೆಂಬುದೇ ಗಂಧರ್ವನ ಅಸಮಾಧಾನಕ್ಕೆ ಕಾರಣವಂತೆ!) ಆಗ ಪಟ್ಟಕ್ಕೆ ಬಂದ ವಿಚಿತ್ರವೀರ್ಯ ಇನ್ನೂ ಬಾಲಕ. ಪಟ್ಟ ಕಟ್ಟಿಸಿಕೊಂಡಿದ್ದರೂ ಆಡಳಿತವನ್ನೆಲ್ಲ ಅಣ್ಣ ಭೀಷ್ಮರಿಗೆ ಒಪ್ಪಿಸಿ ಆನಂದವಾಗಿ ವಿನೋದ ಕ್ರೀಡೆಗಳಲ್ಲಿ ಕಾಲಕಳೆಯುತ್ತಿದ್ದ. ಇವನು ಯುವಕನಾದ. ಕಾಶಿರಾಜನು ತನ್ನ ಮೂವರು ಹೆಣ್ಣುಮಕ್ಕಳಿಗಾಗಿ ಒಂದು ಸ್ವಯಂವರವನ್ನು ಏರ್ಪಡಿಸಿದ್ದ. ಮದುವೆಯ ಸಂದರ್ಭದಲ್ಲಿ ಕಾಶಿರಾಜನು ತನ್ನ ಹೆಣ್ಣು ಮಗಳನ್ನು ಕುರುವಂಶದವರಿಗೆ ಕೊಡುವ ರೂಢಿಯನ್ನು ಪಾಲಿಸುತ್ತಿಲ್ಲ ಏಂಬ ಲೋಪವನ್ನು ನೆವವಾಗಿಟ್ಟುಕೊಂಡು ಭೀಷ್ಮನು ವಿಚಿತ್ರವೀರ್ಯನ ಬದಲಿಗೆ ತಾನೇ ಹೋಗಿ ರಾಜರನ್ನೆಲ್ಲ ಸದೆ ಬಡಿದು ಮೂವರು ಹೆಣ್ಣುಮಕ್ಕಳಾದ ಅಂಬೆ, ಅಂಬಿಕೆ, ಅಂಬಾಲಿಕೆಯರನ್ನು ಹಸ್ತಿನಾವತಿಗೆ ಕರೆತಂದ. ಕಾಶಿರಾಜನು ಹಳೆಯ ಸಂಪ್ರದಾಯಗಳನ್ನು ಗೌರವಿಸದೆ ಈ ಬಾರಿ ಭೀಷ್ಮ ವಿಚಿತ್ರವೀರ್ಯರಿಗೆ ಆಹ್ವಾನವನ್ನು ಕೂಡ ಕಳಿಸದೆ ಅವಮಾನ ಮಾಡಿದ್ದನಲ್ಲವೆ. ಅದರ ಪರಿಣಾಮ ಭೀಷ್ಮರ ಈ ದಾಳಿ. ಅಂಬೆ ಒಪ್ಪಲಿಲ್ಲವಾದ್ದರಿಂದ ಅವಳನ್ನು ಹಿಂದಕ್ಕೆ ಕಳುಹಿಸಿ ಉಳಿದಿಬ್ಬರನ್ನು ವಿಚಿತ್ರವೀರ್ಯನಿಗೆ ಮದುವೆ ಮಾಡಿದ. ಮದುವೆಯಾದ ಮೇಲೆ, ತರುಣ ವೀರನಾದ ವಿಚಿತ್ರವೀರ್ಯನು ರಾಜ್ಯಾಡಳಿತದ ಚುಕ್ಕಾಣಿ ಹಿಡಿಯಬೇಡವೆ? ಭೀಷ್ಮರೇ ಆಡಳಿತವನ್ನು ಮುಂದುವರಿಸುತ್ತಿದ್ದುದರಿಂದ ಈತ ಸಂಪೂರ್ಣ ನಿರಾಸಕ್ತನಾದ. ಒಂದೇ ಸಮನೆ ಏಳು ವರ್ಷ ಭೋಗಾಸಕ್ತನಾಗಿಯೇ ವಿಲಾಸ ಜೀವನ ನಡೆಸಿದ. ಅಸಂಯಮ ಪೂರ್ಣ ಜೀವನ ವಿಧಾನದಿಂದಾಗಿ ಇವನು ರಾಜಯಕ್ಷ್ಯ ಎಂಬ ಕ್ಷಯರೋಗದಿಂದ ನರಳಿ ಎಳೆ ವಯಸ್ಸಿನಲ್ಲೇ ಅಕಾಲ ಮರಣವನ್ನಪ್ಪಬೇಕಾಯಿತು ಎಂದು ಅದಿಪರ್ವದ 102ನೆಯ ಅಧ್ಯಾಯದಲ್ಲಿ ವಿವರಿಸಲಾಗಿದೆ.
ಇವನ ಬದುಕಿನ ಉದ್ದಕ್ಕೂ ಎಡವಟ್ಟುಗಳೇ ತುಂಬಿವೆ. ಆವಾಬ್ದಾರಿಯೇ ಇಲ್ಲದ ವಯಸ್ಸಿನಲ್ಲೇ ಪಟ್ಟ ಬಂದದ್ದು, ಅಣ್ಣ ತೀರಿಕೊಂಡದ್ದರಿಂದ ಸರಿಯಾದ ಹಿತೈಷಿ ಇಲ್ಲದಂತಾದದ್ದು, ಮದುವೆ ಮನೆಗೆ ಹೋಗಿ ನಿನ್ನ ಪರಾಕ್ರಮವನ್ನು ಪ್ರದರ್ಶಿಸಿ ಕನ್ಯೆಯನ್ನು ಪಡೆದ ಎಂದು ಹೇಳದೆ ಭೀಮನು ತಾನೇ ಆ ಕೆಲಸಕ್ಕೆ ಮುಂದಾದದ್ದು ಎಲ್ಲ ಎಡವಟ್ಟಿನ ಸಂಗತಿಗಳೇ ಆಗಿವೆ. ತಾನು ಇಕ್ಕಟ್ಟುಗಳ ಸರಪಳಿಯಲ್ಲಿ ಸಿಕ್ಕಿ ನಲುಗಿದ ವಿಚಿತ್ರವೀರ್ಯ ತನ್ನ ಜವಾಬ್ದಾರಿಗಳನ್ನೇ ಅರಿಯದಿದ್ದುದೇ ಈ ದುರಂತಕ್ಕೆ ಕಾರಣ ನದೀ ತೀರಗಳು ಉದ್ಯಾನಗಳು ವಿಲಾಸ ಸೌಧಗಳು ವಿಚಿತ್ರವೀರ್ಯನಿಗೆ ಮುಖ್ಯವೆನಿಸಿದುವೇ ಹೊರತು ಆ ರಾಜ್ಯದ ಆಡಳಿತವಲ್ಲ. ತನ್ನ ಭಾರ್ಯೆಯರಿಬ್ಬರನ್ನೂ ಅಪುತ್ರಕರಾಗುವಂತೆ ಮಾಡಿ ಇಡೀ ವಂಶಧಾರೆಯನ್ನು ಬತ್ತಿಸುವ ಕೆಲಸ ಮಾಡಿದ್ದು ಸಣ್ಣ ಸಂಗತಿಯೇನಲ್ಲ. ವೇದವ್ಯಾಸರೇ ತಾಯಿಯ ಮಾತಿನಂತೆ ಅಲ್ಲಿಗೆ ಬಂದು ಸಂತಾನವನ್ನು ಕರುಣಿಸಲು ಪ್ರಯತ್ನಿಸಿದರೂ ಅದೂ ರಾಣಿಯರಿಂದಾಗಿ ಒಂದು ಅವಿವೇಕದ ಸಂದರ್ಭವಾಗಿ ಪರಿಣಮಿಸಿದ್ದು ದುರದೃಷ್ಟ ಎನ್ನಬಹುದು. ಇಡೀ ಚಂದ್ರವಂಶದಲ್ಲೇ ಅತ್ಯಂತ ದುರ್ಬಲ ರಾಜನೆಂದು ಹೇಳಬಹುದಾದ ವಿಚಿತ್ರವೀರ್ಯನು ಪಾಂಡವ ವಂಶದ ಮೂಲಪುರುಷನಾಗಿರುವುದು ಉಲ್ಲೇಖಾರ್ಹ ಸಂಗತಿಯಾಗಿದೆ.ವಿಚಿತ್ರವೀರ್ಯನ ಮರಣಾನಂತರ ವ್ಯಾಸಕೃಪೆಯಿಂದ ಅಂಬಿಕೆಯ ಮಗನಾಗಿ ಪಾಂಡುವಿನ ಅನ್ನನಾಗಿ ಹುಟ್ಟಿದ ಧೃತರಾಷ್ಟ್ರನು ಕಣ್ಣು ಕುರುಡಿನ ಜೊತೆಗೆ ಮನಸ್ಸಿನ ಕುರುಡನ್ನೂ ಬೆಳೆಸಿಕೊಂಡು ಬಂದವನು. ಗಾಂಧಾರಿ ಇವನ ಹೆಂಡತಿ. ಈ ದಂಪತಿಗಳಿಗೆ ನೂರು ಜನ ಕೌರವರು ದುಶ್ಯಲೆ ಎಂಬ ಮಗಳ
ಮೂಲ ...{Loading}...
ಬಳಿಕ ಯೋಜನಗಂಧಿಯಲಿ ಮ
ಕ್ಕಳುಗಳವತರಿಸಿದರು ದೀಪ್ತ
ಜ್ವಲನತೇಜರು ಕಲ್ಪಭೂಜರು ಹಿಮಕರಾನ್ವಯಕೆ
ಲಲಿತ ಮಂಗಳ ಜಾತಕರ್ಮಾ
ವಳಿಯ ಚಿತ್ರಾಂಗದನನಾ ನೃಪ
ತಿಲಕ ನೆಗಳೆ ವಿಚಿತ್ರವೀರ್ಯನ ನಾಮಕರಣದಲಿ ॥30॥
೦೩೧ ಇರಲಿರಲು ಶನ್ತನು ...{Loading}...
+++(ಹೀಗೆ)+++ ಇರಲ್ ಇರಲು, ಶಂತನು ಮಹೀಪತಿ
ಸುರರ್ ಒಳಗೆ ಸೇರಿದನು, ಬಳಿಕ್ ಈ
ಧರಣಿಯ್ ಒಡೆತನವ್ ಆಯ್ತು ಚಿತ್ರಾಂಗದ-ಕುಮಾರಂಗೆ.
ಅರಸ ಕೇಳೈ - ಕೆಲವು ಕಾಲಾಂ-
ತರದಲ್ ಆತನು ಕಾದಿ+++(=ಕಾದಾಅಡಿ)+++ ಗಂಧ-
ರ್ವರಲಿ ಮಡಿದನು, ಪಟ್ಟವಾಯ್ತು ವಿಚಿತ್ರ-ವೀರ್ಯಂಗೆ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗಿರಲು, ಶಂತನುರಾಜ ದೈವಾಧೀನನಾದನು. ಬಳಿಕ ಚಿತ್ರಾಂಗದ ಕುಮಾರನಿಗೆ ಭೂಮಿಯ ಒಡೆತನವಾಯ್ತು. ಜನಮೇಜಯ ಮಹಾರಾಜನೇ ಕೇಳು, ಕೆಲವು ಕಾಲದ ನಂತರ ಗಂಧರ್ವರೊಂದಿಗೆ ಕಾದಾಡಿ ಚಿಂತ್ರಾಗದನು ಮಡಿದನು. ವಿಚಿತ್ರ ವೀರ್ಯನಿಗೆ ಪಟ್ಟವಾಯ್ತು.
ಮೂಲ ...{Loading}...
ಇರಲಿರಲು ಶಂತನು ಮಹೀಪತಿ
ಸುರರೊಳಗೆ ಸೇರಿದನು ಬಳಿಕೀ
ಧರಣಿಯೊಡೆತನವಾಯ್ತು ಚಿತ್ರಾಂಗದ ಕುಮಾರಂಗೆ
ಅರಸ ಕೇಳೈ ಕೆಲವು ಕಾಲಾಂ
ತರದಲಾತನು ಕಾದಿ ಗಂಧ
ರ್ವರಲಿ ಮಡಿದನು ಪಟ್ಟವಾಯ್ತು ವಿಚಿತ್ರವೀರ್ಯಂಗೆ ॥31॥
೦೩೨ ರಾಯ ಕೇಳೈ ...{Loading}...
ರಾಯ ಕೇಳೈ - ಸಕಲ-ರಾಜ್ಯ-
ಶ್ರೀಯನ್ ಆತಂಗ್ ಇತ್ತು ಭೀಷ್ಮನು,
ತಾಯ ಚಿತ್ತವ ಪಡೆದು, ಮೆಚ್ಚಿಸಿದನು ಜಗ-ತ್ರಯವ
ರಾಯ ಕುವರನ ಮದುವೆಗ್ ಅಬ್ಬ ದ-
ಳಾಯತಾಕ್ಷಿಯರನು ವಿಚಾರಿಸಿ
ಹಾಯಿದನು ದಳದುಳದೊಳ್+++(=ಸೂರೆಯೊಳ್ / loot)+++ ಒಂದು ವಿವಾಹ ಮಂಟಪಕೆ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಾಜಾ ಕೇಳು, ಭೀಷ್ಮನು ಸಕಲ ರಾಜ್ಯ ಸಂಪತ್ತನ್ನು ತಮ್ಮನಿಗೆ ಕೊಟ್ಟು ತಾಯ ಮನಸ್ಸಿನಂತೆ ನಡೆದು ಮೂರುಲೋಕವನ್ನೂ ಮೆಚ್ಚಿಸಿದನು. ರಾಜಕುಮಾರನ ಮದುವೆಗೆ ಕಮಲದಳಾಯತಾಕ್ಷಿಯರನ್ನು ವಿಚಾರಿಸಿಕೊಂಡು, ಮೇಲೆ ಬಿದ್ದು ಒಂದು ವಿವಾಹ ಮಂಟಪವನ್ನು ಸೂರೆ ಮಾಡಿದನು.
ಪದಾರ್ಥ (ಕ.ಗ.ಪ)
ದಳದುಳ-ಬಲವಾದ ಸೂರೆ, ಹಾಯಿದು-ಮೇಲುಬೀಳು
ಮೂಲ ...{Loading}...
ರಾಯ ಕೇಳೈ ಸಕಲ ರಾಜ್ಯ
ಶ್ರೀಯನಾತಂಗಿತ್ತು ಭೀಷ್ಮನು
ತಾಯ ಚಿತ್ತವ ಪಡೆದು ಮೆಚ್ಚಿಸಿದನು ಜಗತ್ರಯವ
ರಾಯ ಕುವರನ ಮದುವೆಗಬ್ಬ ದ
ಳಾಯತಾಕ್ಷಿಯರನು ವಿಚಾರಿಸಿ
ಹಾಯಿದನು ದಳದುಳದೊಳೊಂದು ವಿವಾಹ ಮಂಟಪಕೆ ॥32॥
೦೩೩ ಅಲ್ಲಿ ನೆರೆದಾ ...{Loading}...
ಅಲ್ಲಿ ನೆರೆದ್ ಆ ಕ್ಷತ್ರ-ವರ್ಗವ
ಚೆಲ್ಲ-ಬಡಿದು ವಿವಾಹ ಶಾಲೆಯ
ಚೆಲ್ಲೆ+++(=ವಿಶಾಲ)+++-ಗಂಗಳ ಕಮಲ-ಮುಖಿಯರ ಮೂವರನು ಪಿಡಿದು
ಘಲ್ಲಣೆಯ +++(ಶಬ್ದದ)+++ ಖಂಡೆಯದ+++(=ಕತ್ತಿಯ)+++ ಚೌ-ಪಟ+++(=ಕಡೆ)+++-
ಮಲ್ಲ ಭೀಷ್ಮನು ಪುರಕೆ ತಂದ್ ಅವರ್
ಎಲ್ಲರನು ತಮ್ಮಂಗೆ ಮದುವೆಯ ಮಾಡಲ್ ಅನುವ್ ಆದ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಮಂಟಪದಲ್ಲಿ ನೆರೆದಿದ್ದ ಕ್ಷತ್ರಿಯವರ್ಗವನ್ನು ಚೆಲ್ಲಾಪಿಲ್ಲಿಯಾಗುವಂತೆ ಬಡಿದು, ವಿವಾಹ ಶಾಲೆಯಲ್ಲಿದ್ದ ವಿಲಾಸದಿಂದ ಕೂಡಿದ ಕಣ್ಣುಗಳ ಮೂವರು ಕಮಲಮುಖಿಯರನ್ನು ಹಿಡಿದು, ಖಡ್ಗದ ಘಲ್ಘಲ್ ಶಬ್ದದೊಂದಿಗೆ ನಾಲ್ಕೂ ಕಡೆಗೂ ಕಾದಾಡಬಲ್ಲ ವೀರನಾದ ಭೀಷ್ಮನು ಹಸ್ತಿನಾಪುರಕ್ಕೆ ತಂದು ಅವರೆಲ್ಲರನ್ನು ತಮ್ಮನಿಗೆ ಮದುವೆ ಮಾಡಲು ಸಿದ್ಧನಾದನು.
ಪದಾರ್ಥ (ಕ.ಗ.ಪ)
ಚಲ್ಲಬಡಿ-ಚೆಲ್ಲಾಪಿಲ್ಲಿಯಾಗುವಂತೆ ಹೊಡೆ,
ಚೆಲ್ಲೆಗಂಗಳು-ವಿಲಾಸದಿಂದ ಕೂಡಿದ ಕಣ್ಣುಗಳು,
ಘಲ್ಲಣೆ-ಘಲ್ಘಲ್ ಎಂಬ ಶಬ್ದ,
ಖಂಡೆಯ-ಕತ್ತಿ,
ಚೌಪಟಮಲ್ಲ-ನಾಲ್ಕೂ ಕಡೆಗೂ ಕಾದಾಡುವ ವೀರ
ಮೂಲ ...{Loading}...
ಅಲ್ಲಿ ನೆರೆದಾ ಕ್ಷತ್ರವರ್ಗವ
ಚೆಲ್ಲಬಡಿದು ವಿವಾಹ ಶಾಲೆಯ
ಚೆಲ್ಲೆಗಂಗಳ ಕಮಲಮುಖಿಯರ ಮೂವರನು ಪಿಡಿದು
ಘಲ್ಲಣೆಯ ಖಂಡೆಯದ ಚೌಪಟ
ಮಲ್ಲ ಭೀಷ್ಮನು ಪುರಕೆ ತಂದವ
ರೆಲ್ಲರನು ತಮ್ಮಂಗೆ ಮದುವೆಯ ಮಾಡಲನುವಾದ ॥33॥
೦೩೪ ಆ ಕಮಲಲೋಚನೆಯರೊಳು ...{Loading}...
ಆ ಕಮಲ-ಲೋಚನೆಯರ್ ಒಳು ಮೊದಲ್
-ಆಕೆ ಭೀಷ್ಮನ ಗಂಡನ್ ಎಂದೇ
ನೂಕಿ, ಭಾಷೆಯ ಮಾಡಿ ನಿಂದಳು ಛಲದ ಬಿಗುಹಿನಲಿ
ಆಕೆ ಮಾಣಲಿ+++(=ಬಿಡಲಿ)+++, ಮಿಕ್ಕವರು ಬರಲ್
+ಈ ಕುಮಾರಂಗ್ ಎಂದು ವೈದಿಕ-
ಲೌಕಿಕೋತ್ಸವದಿಂದ ಮದುವೆಯ ಮಾಡಿದನು ಭೀಷ್ಮ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಕಮಲಲೋಚನೆಯರಲ್ಲಿ ಮೊದಲಿನವಳು, ಭೀಷ್ಮನೇ ತನಗೆ ಗಂಡನೆಂದು ಭಾಷೆ ಮಾಡಿ ಛಲದ ಬಿಗಿಯಲ್ಲಿ ನಿಂದಳು. “ಆಕೆ ಬಿಡಲಿ, ಉಳಿದವರು ಈ ಕುಮಾರನಿಗೆ ಬರಲಿ” ಎಂದು ವೇದ ವಿಹಿತವಾಗಿ ಹಾಗೂ ಲೌಕಿಕದ ಉತ್ಸವದಿಂದ ಭೀಷ್ಮನು ವಿಚಿತ್ರವೀರ್ಯನಿಗೆ ಮದುವೆ ಮಾಡಿದನು.
ಪದಾರ್ಥ (ಕ.ಗ.ಪ)
ಬಿಗುಹು-ಬಿಗಿ, ಮಾಣಲಿ-ಬಿಡಲಿ
ಮೂಲ ...{Loading}...
ಆ ಕಮಲಲೋಚನೆಯರೊಳು ಮೊದ
ಲಾಕೆ ಭೀಷ್ಮನ ಗಂಡನೆಂದೇ
ನೂಕಿ ಭಾಷೆಯ ಮಾಡಿ ನಿಂದಳು ಛಲದ ಬಿಗುಹಿನಲಿ
ಆಕೆ ಮಾಣಲಿ ಮಿಕ್ಕವರು ಬರ
ಲೀ ಕುಮಾರಂಗೆಂದು ವೈದಿಕ
ಲೌಕಿಕೋತ್ಸವದಿಂದ ಮದುವೆಯ ಮಾಡಿದನು ಭೀಷ್ಮ ॥34॥
೦೩೫ ಅರಸ ಚಿತ್ತೈಸಮ್ಬೆಯೆಮ್ಬಳು ...{Loading}...
ಅರಸ ಚಿತ್ತೈಸ್ - ಅಂಬೆಯ್ ಎಂಬಳು
ದುರುಳೆ+++(=ಕೆಟ್ಟವಳು)+++, ಭೀಷ್ಮನ ಕೂಟವ್+++(=ಸಂಗವ್)+++-ಅಲ್ಲದೆ
ಮರಣದ್ ಎಡೆಯಲಿ ಬೆರಸಿದ್ ಅಲ್ಲದೆ ಪಂಥವ್ ಇಲ್ಲ್ ಎಂದು,
ಪರಶು-ರಾಮನ ಭಜಿಸಿ ಹಸ್ತಿನ-
ಪುರಕೆ ತಂದಳು, ಹೇಳಿಸಿದಳ್, “ಈ
ಸುರ-ನದೀ-ನಂದನನು ಮಾಡಿದ ಪರಿಯ ಕೇಳ್” ಎಂದ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜನೇ ಕೇಳು, ಅಂಬೆಯೆಂಬವಳು ಕೆಟ್ಟವಳು. ಭೀಷ್ಮನ ಸಂಗವಿಲ್ಲದಿದ್ದರೇ ಮರಣವಲ್ಲದೇ ಬೇರೆ ಮಾರ್ಗವಿಲ್ಲೆಂದು, ಪರಶುರಾಮನನ್ನು ಪ್ರಾರ್ಥಿಸಿ ಹಸ್ತಿನಪುರಕ್ಕೆ ಕರೆತಂದಳು. ಗಂಗಾಪುತ್ರನಾದ ಭೀಷ್ಮನಿಗೆ ಪರಶುರಾಮರ ಮೂಲಕ ಹೇಳಿಸಿದಾಗ ಅವನು ನಡೆದುಕೊಂಡ ರೀತಿಯನ್ನು ಕೇಳೆಂದ.
ಪದಾರ್ಥ (ಕ.ಗ.ಪ)
ಪಂಥ-ಮಾರ್ಗ
ಟಿಪ್ಪನೀ (ಕ.ಗ.ಪ)
ಅಂಬೆ - ಕಾಶೀರಾಜನ ಮಗಳು, ಅಂಬಿಕೆ, ಅಂಬಾಲಿಕೆಯರು ಇವಳ ಒಡಹುಟ್ಟಿದವರು. ಕಾಶೀರಾಜನು ಏರ್ಪಡಿಸಿದ ಸ್ವಯಂವರದಲ್ಲಿ ಭೀಷ್ಮನು ಈ ಮೂವರನ್ನೂ ಅಪಹರಿಸಿ ತಂದ. ಶಾಳ್ವ ರಾಜನನ್ನು ವರಿಸಬೇಕೆಂದಿದ್ದ ಅಂಬೆ, ಭೀಷ್ಮನು ಅಪಹರಿಸಿದುದರಿಂದ ಸಾಳ್ವ ರಾಜನಿಂದ ತಿರಸ್ಕೃತಳಾಗಿ, ಭೀಷ್ಮನನ್ನೇ ಮದುವೆಯಾಗುವಂತೆ ನಿರ್ಬಂಧಗೊಳಿಸಿ, ಆ ಪ್ರಯತ್ನ ಸಫಲವಾಗದಿರಲು, ಪರಶುರಾಮನನ್ನು ಮರೆ ಹೊಕ್ಕಳು. ಅದೂ ವ್ಯರ್ಥವಾದಾಗ, ಭೀಷ್ಮನನ್ನು ಕೊಲ್ಲುವ ಸಲುವಾಗಿ ಶಿವನನ್ನು ಕುರಿತು ತಪಸ್ಸು ಮಾಡಿ ಶಿಖಂಡಿಯೆಂಬ ಹೆಸರಿನಿಂದ ದ್ರುಪದರಾಜನಲ್ಲಿ ಜನಿಸಿದಳು.
ಮೂಲ ...{Loading}...
ಅರಸ ಚಿತ್ತೈಸಂಬೆಯೆಂಬಳು
ದುರುಳೆ ಭೀಷ್ಮನ ಕೂಟವಲ್ಲದೆ
ಮರಣದೆಡೆಯಲಿ ಬೆರಸಿದಲ್ಲದೆ ಪಂಥವಿಲ್ಲೆಂದು
ಪರಶುರಾಮನ ಭಜಿಸಿ ಹಸ್ತಿನ
ಪುರಕೆ ತಂದಳು ಹೇಳಿಸಿದಳೀ
ಸುರನದೀನಂದನನು ಮಾಡಿದ ಪರಿಯ ಕೇಳೆಂದ ॥35॥
೦೩೬ ಸತಿಯನೊಲ್ಲೆನು ಬ್ರಹ್ಮಚರ್ಯ ...{Loading}...
ಸತಿಯನ್ ಒಲ್ಲೆನು ಬ್ರಹ್ಮ-ಚರ್ಯ-
ಸ್ಥಿತಿಗೆ ತಪ್ಪುವನ್ ಅಲ್ಲ ನೀವ್ ಅನ್-ಉ-
ಚಿತವ ನೆನೆದರೆ - ನಡೆಯಿ ಕೊಟ್ಟೆನು ಕಾಳಗವ ನಿಮಗೆ
ವ್ರತದ-ನಿಧಿ ಕುರು-ಭೂಮಿಯಲಿ ಶರ-
ತತಿಯಲ್ ಇಪ್ಪತ್ತ್-ಒಂದು ದಿನ ಭೃಗು-
ಸುತನ್ ಒಡನೆ ಕಾದಿದನು ವಿರಥನ ಮಾಡಿದನು ಭೀಷ್ಮ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಾನು ಸತಿಯನ್ನು ಒಲ್ಲೆನು, ಬ್ರಹ್ಮಚರ್ಯ ಸ್ಥಿತಿಗೆ ತಪ್ಪುವನಲ್ಲ. ನೀವು ಅನುಚಿತವನ್ನು ನೆನೆದರೆ, ನಡೆಯಿರಿ ಕಾಳಗವನ್ನು ಕೊಡುತ್ತೇನೆ” ಎಂದು ಭೀಷ್ಮ ಕುರುಭೂಮಿಯಲ್ಲಿ ಭೃಗುಪುತ್ರರಾದ ಪರಶುರಾಮರೊಂದಿಗೆ ನಾನಾ ಶರ ಪ್ರಯೋಗಗಳನ್ನು ಮಾಡಿ ಇಪ್ಪತ್ತೊಂದು ದಿವಸಗಳು ಕಾದಾಡಿ ಅವರನ್ನು ರಥವಿಲ್ಲದವರಂತೆ ಮಾಡಿದನು.
ಪದಾರ್ಥ (ಕ.ಗ.ಪ)
ವಿರಥ-ರಥವಿಲ್ಲದವ, ಭೃಗುಸುತ-ಪರಶುರಾಮ
ಪಾಠಾನ್ತರ (ಕ.ಗ.ಪ)
[ಸ್ಥಿತಿಗೆ] - [ವ್ರತಕೆ (ಆ)] ಈ ಪಾಠಾಂತರವೂ ಪರಿಗಣಿಸಬಹುದಾಗಿದೆ.
ಟಿಪ್ಪನೀ (ಕ.ಗ.ಪ)
ಕುರುಭೂಮಿ - ಪರಶುರಾಮ 21 ಬಾರಿ ಕ್ಷತ್ರಿಯರನ್ನು ಸದೆಬಡಿದು ಅವರ ರಕ್ತದಿಂದ 21 ಮಡುಗಳನ್ನು ನಿರ್ಮಿಸಿದ ಸ್ಥಳವೇ ಕುರುಕ್ಷೇತ್ರ.
ಮೂಲ ...{Loading}...
ಸತಿಯನೊಲ್ಲೆನು ಬ್ರಹ್ಮಚರ್ಯ
ಸ್ಥಿತಿಗೆ ತಪ್ಪುವನಲ್ಲ ನೀವನು
ಚಿತವ ನೆನೆದರೆ ನಡೆಯಿ ಕೊಟ್ಟೆನು ಕಾಳಗವ ನಿಮಗೆ
ವ್ರತದನಿಧಿ ಕುರುಭೂಮಿಯಲಿ ಶರ
ತತಿಯಲಿಪ್ಪತ್ತೊಂದು ದಿನ ಭೃಗು
ಸುತನೊಡನೆ ಕಾದಿದನು ವಿರಥನ ಮಾಡಿದನು ಭೀಷ್ಮ ॥36॥
೦೩೭ ನುಡಿಯ ಭಙ್ಗಿಸಲೆನ್ದು ...{Loading}...
ನುಡಿಯ ಭಂಗಿಸಲ್ ಎಂದು ಗುರುವ್ ಅವ-
ಗಡಿಸಿ+++(=ಪ್ರತಿಭಟಿಸಿ)+++ ಹೊಕ್ಕರೆ, ಸರಳ-ಮೊನೆಯಲಿ+++(=ತುದಿ/ಯುದ್ಧದಲಿ)+++
ಕೊಡಹಿ ಬಿಸುಟನು, ಬಿಟ್ಟುದ್ ಇಲ್ಲ ಮಹಾ-ವ್ರತ-ಸ್ಥಿತಿಯ
ನುಡಿಯ ಮೀರದ ನಮ್ಮ ಶಿಷ್ಯನ
ನೊಡ-ಬಡಿಸಿಕೊಳ್ಳ್ ಎಂದು ನಾರಿಗೆ
ನುಡಿದು ತನ್ನ್ ಆಶ್ರಮಕೆ ಸರಿದನು ಪರಶು-ರಾಮ-ಮುನಿ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ತನ್ನ ಭಾಷೆಯನ್ನು ಮುರಿಯುವುದಕ್ಕೆ ಗುರುವು ಪ್ರತಿಭಟಿಸಿ ನಡುವೆ ಹೊಕ್ಕರೆ, ಬಾಣದ ಮೊನೆಯಿಂದ ಕೊಡಹಿ ಬಿಸುಟನು. ಮಹಾವ್ರತ ಸ್ಥಿತಿಯನ್ನು ಬಿಡಲಿಲ್ಲ. ಮಾತನ್ನು ಮೀರದ ತಮ್ಮ ಶಿಷ್ಯನನ್ನು ಒಪ್ಪಿಸಿಕೊಳ್ಳೆಂದು ಅಂಬೆಗೆ ನುಡಿದು ಪರಶುರಾಮ ಮುನಿ ತನ್ನಾಶ್ರಮಕ್ಕೆ ಹೊರಟನು.
ಪದಾರ್ಥ (ಕ.ಗ.ಪ)
ಭಂಗ-ಮುರಿಯುವಿಕೆ, ಅವಗಡಿಸು-ಪ್ರತಿಭಟಿಸು.
ಟಿಪ್ಪನೀ (ಕ.ಗ.ಪ)
ಪರಶುರಾಮ - ಎರಡು ಯುಗಗಳಲ್ಲಿ ಬದುಕಿದ್ದನೆಂದು ಹೇಳಲಾಗುವ ಪರಶುರಾಮನು ಒಬ್ಬ ಅವತಾರ ಪುರುಷನೆಂಬ ಕೀರ್ತಿಗೂ ಪಾತ್ರನಾಗಿದ್ಧಾನೆ. ರಾಮಾಯಣ, ಭಾಗವತ, ಪುರಾಣಗಳನ್ನೆಲ್ಲ ಈತನ ವ್ಯಕ್ತಿತ್ವ ಪಾತ್ರನಾಗಿದ್ದಾನೆ. ಮಹಾಭಾರತದ ಮಟ್ಟಿಗೆ ಹೇಳುವುದಾದರೆ ಇವನು ಜಮದಗ್ನಿ ಋಷಿ ರೇಣುಕೆಯರ ಐವರು ಮಕ್ಕಳಲ್ಲಿ ಕೊನೆಯವನು ಕರ್ಣ ಮತ್ತು ಭೀಷ್ಮರಿಬ್ಬರೂ ಈತನ ಶಿಷ್ಯರು. ತಂದೆಯ ಅಪ್ಪಣೆಯನ್ನು ಪಾಲಿಸಿ ತಾಯಿಯನ್ನೇ ಕೊಂದು ಮತ್ತೆ ಬದುಕಿಸಿಕೊಂಡ ಮಹಿಮಾವಂತ ಈತ. ಅಪ್ಪನನ್ನು ಕೊಂದನೆಂಬ ಸಿಟ್ಟಿಗೆ ಇಪ್ಪತ್ತೊದು ಸಲ ಭೂಮಂಡಲವನ್ನೆಲ್ಲ ಸುತ್ತಿ ಕ್ಷತ್ರಿಯ ಕುಲವನ್ನು ನಾಶಪಡಿಸಿದವನು ಈತ. ತಾಯಿಯನ್ನು ಕಡಿಯುವುದಿಲ್ಲ ಎಂದು ತಿರಸ್ಕರಿಸಿದ ಸೋದರರಾದ ರುಮಣ್ವಂತ ಸುಷೇಣ ವಸು ವಿಶ್ವಾವಸುಗಳು ತಂದೆಯ ಶಾಪಕ್ಕೆ ಗುರಿಯಾದಾಗ ತಂದೆಯನ್ನು ಪ್ರಾರ್ಥಿಸಿ ಶಾಪವನ್ನು ತಪ್ಪಿಸಿದ ಕೀರ್ತಿಶಾಲಿ.
ಮಹಾಭಾರತದಲ್ಲಿ ‘ಪರಶುರಾಮ’ ಎಂಬ ಹೆಸರಿಲ್ಲ. ಭಾರ್ಗವ, ಜಾಮದಗ್ನ್ಯ ಮೊದಲಾದ ಹೆಸರುಗಳಿವೆ ಅಷ್ಟೇ. ಈತ ತೋಡಿದ ಐದು ಸರೋವರಗಳ ಸಮಂತ ಪಂಚಕ ಒಂದು ಪವಿತ್ರ ತೀರ್ಥಕ್ಷೇತ್ರವಾಗಿದೆ. ಇವನು ಕೊಂದ ರಾಜರುಗಳ ರಕ್ತದಿಂದ ಕೆಂಪಾಗಿದ್ದ ಇಲ್ಲಿಯ ನೀರಿನಿಂದ ಪರಶುರಾಮನು ಪಿತೃಗಳಿಗೆ ತರ್ಪಣವನ್ನು ಕೊಟ್ಟನಂತೆ. ಆ ಕಾಲದ ಮಹಾಬಲಶಾಲಿ ಎನ್ನಿಸಿದ್ದ ಹೈಹಯ ವಂಶದ ಕಾರ್ತವೀರ್ಯಾರ್ಜುನನ್ನು ಕೊಂದದ್ದು ಈತನ ಸಾಧನೆ. ತಪಸ್ಸು ಮಾಡುತ್ತಿರುವಾಗಲೇ ಶಿವನ ಆಹ್ವಾನವನ್ನು ಮನ್ನಿಸಿ ರಾಕ್ಷಸರನ್ನು ಕೊಂದು ಬಂದು ಮತ್ತೆ ತಪಸ್ಸನ್ನು ಪೂರೈಸಿದವರೆಂದು ಮಹಾಭಾರತ ಹೇಳುತ್ತದೆ. ಇವನು ಇಪ್ಪತ್ತೊಂದು ಸಲ ಭೂಪ್ರದಕ್ಷಿಣೆ ಮಾಡಿ ಕೊಂದದ್ದು ಸಾಮಾನ್ಯ ರಾಜರನ್ನಲ್ಲ. ಕಾರ್ತವೀರ್ಯ, ಮತ್ಸ್ಯರಾಜ, ಮಗಧರಾಜ, ನಿಷಾದರಾಜ, ಕಾನ್ಯಕುಬ್ಜ, ಅವಂತಿ, ಸೌರಾಷ್ಟ್ರಗಳ ಅರಸರುಗಳನ್ನು-ಇವನ ಹೆಸರು ಕೇಳಿದರೆ ರಾಜರೆಲ್ಲ ನಡುಗುತ್ತಿದ್ದರಂತೆ. ಮದುವೆ ಮನೆಗೆ ಇವನು ನುಗ್ಗುವುದಿಲ್ಲ ಎಂಬುದನ್ನು ತಿಳಿದಿದ್ದ ರಾಜರುಗಳು ಇವನು ಬರುವ ಸುದ್ದಿ ತಿಳಿದ ಕೂಡಲೇ ಹಸೆಮಣೆಯ ಮೇಲೆ ಕುಳಿತು ಸಾವಿನಿಂದ ಪಾರಾಗುತಿದ್ದರಂತೆ.
ಮಹಾಭಾರತದ ಉದ್ಯೋಗಪರ್ವದಲ್ಲಿ ಶ್ರೀಕೃಷ್ಣನು ಸಂಧಿಗೆಂದು ಕೌರವನ ಆಸ್ಥಾನಕ್ಕೆ ಬಂದಾಗ ಅವನನ್ನು ನೋಡಲು ಬಂದಿದ್ದ ಮಹರ್ಷಿಗಳಲ್ಲಿ ಪರಶುರಾಮನೂ ಒಬ್ಬ. ಇನ್ನೆರಡು ಮುಖ್ಯ ಸಂದರ್ಭಗಳು ಪರಶುರಾಮನೊಂದಿಗೆ ನೇರ ಸಂಬಂದ ಹೊಂದಿವೆ. ಪರಶುರಾಮನಿಗೆ ಭೀಷ್ಮ ಶಿಷ್ಯ ತಾನೇ? ಆದರೆ ಅಂಬೆ ಬಂದು ಬೇಡಿಕೊಂಡಳೆಂಬ ಕಾರಣಕ್ಕೆ ಭೀಷ್ಮರನ್ನು ಬ್ರಹ್ಮಚರ್ಯದಿಂದ ತಪ್ಪಿಸಿ ವಿವಾಹ ಲೋಕಕ್ಕೆ ಕಾಲಿಡುವಂತೆ ಮಾಡಲು ಪ್ರಯತ್ನಿಸಿ ಕುರುಕ್ಷೇತ್ರದಲ್ಲಿ ಶಿಷ್ಯನೊಂದಿಗೆ ಹೋರಾಡಿ ಸೋತದ್ದು ಒಂದು ವಿಶಿಷ್ಟ ಘಟನೆ. ಕರ್ಣನು ಬ್ರಾಹ್ಮಣನೆಂದು ಸುಳ್ಳು ಹೇಳಿಕೊಂಡು ಬಂದಾಗ ಅವನಿಗೆ ಶಸ್ತ್ರಗುರುವಾಗಿ ಶಿಕ್ಷಣ ಕೊಟ್ಟ ಪರಶುರಾಮನು ಒಮ್ಮೆ ಅವನ ತೊಡೆಯ ಮೇಲೆ ಮಲಗಿ ನಿದ್ದೆ ಮಾಡಿದ. ಒಂದು ಕೀಟವು ಕರ್ಣನನ್ನು ಕಚ್ಚಿದರೂ ಅವನು ಗುರುವಿಗೆ ನಿದ್ರಾಘಾತವಾಗಬಾರದೆಂದು ಸುಮ್ಮನೆ ಆ ನೋವನ್ನು ಸಹಿಸಿಕೊಂಡದ್ದು, ರಕ್ತಸುರಿದು ಎಚ್ಚರಗೊಂಡ ಪರಶುರಾಮನು ‘‘ಕರ್ಣ ನೀನು ಸುಳ್ಳು ಹೇಳಿದ್ದೇಯೆ, ನಾನು ಹೇಳಿಕೊಟ್ಟ ಯಾವ ದಿವ್ಯಾಸ್ತ್ರವೂ ನಿನಗೆ ಮುಖ್ಯವಾದ ಸಮಯದಲ್ಲಿ ಸ್ಮರಣೆಗೆ ಬಾರದಿರಲಿ’’ ಎಂದು ಶಾಪಕೊಟ್ಟದ್ದು ಎರಡೂ ದುರ್ಘಟನೆಗಳೇ.
ಪರಶುರಾಮನ ಬಗೆಗೆ ಹೆಚ್ಚು ತಿಳಿಯಲು ಅಪೇಕ್ಷಿಸುವವರು ಜಿ.ಪಿ.ರಾಜರತ್ನಂ ಅವರ ‘ಗಂಡುಗೊಡಲಿ’ ನಾಟಕವನ್ನು ಓದಬೇಕು.
ಮೂಲ ...{Loading}...
ನುಡಿಯ ಭಂಗಿಸಲೆಂದು ಗುರುವವ
ಗಡಿಸಿ ಹೊಕ್ಕರೆ ಸರಳ ಮೊನೆಯಲಿ
ಕೊಡಹಿ ಬಿಸುಟನು ಬಿಟ್ಟುದಿಲ್ಲ ಮಹಾವ್ರತಸ್ಥಿತಿಯ
ನುಡಿಯ ಮೀರದ ನಮ್ಮ ಶಿಷ್ಯನ
ನೊಡಬಡಿಸಿಕೊಳ್ಳೆಂದು ನಾರಿಗೆ
ನುಡಿದು ತನ್ನಾಶ್ರಮಕೆ ಸರಿದನು ಪರಶುರಾಮಮುನಿ ॥37॥
೦೩೮ ಅಮ್ಬೆ ಭೀಷ್ಮನ ...{Loading}...
ಅಂಬೆ ಭೀಷ್ಮನ ಬೈದು, ಕಂಬನಿ-
ದುಂಬಿ ಹೋದಳು ತಪಕೆ, ಬಳಿಕ್ ಈ-
ಯ್ ಅಂಬಿಕೆಯನ್ ಅಂಬಾಲೆಯನು ರಮಿಸಿದನು ನೃಪ-ಸೂನು
ಬೆಂಬಲಕೆ ಕಲಿ-ಭೀಷ್ಮನ್ ಇರೆ ಚತುರ್-
ಅಂಬುಧಿಯ ಮಧ್ಯದ ನೃಪಾಲ-ಕ-
ದಂಬವ್ ಈತಂಗ್ ಇದ್-ಇರೆ? ಸಲಹಿದನ್ ಅಖಿಳ ಭೂ-ತಳವ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಂಬೆ ಭೀಷ್ಮನನ್ನು ಬೈದು ಕಂಬನಿ ದುಂಬಿ ತಪಸ್ಸಿಗೆ ಹೋದಳು. ಬಳಿಕ ರಾಜಕುಮಾರನು ಅಂಬಿಕೆ ಅಂಬಾಲಿಕೆಯರೊಡನೆ ಸಂತಸದಿಂದಿದ್ದನು. ಬೆಂಬಲಕ್ಕೆ ವೀರ ಭೀಷ್ಮನಿರುವಾಗ ನಾಲ್ಕು ಸಾಗರಗಳಿಂದಾವೃತವಾದ ಭೂಭಾಗದ ರಾಜರ ಸಮೂಹ ಈತನಿಗೆ ಇದಿರೇ ? ಭೂಮಂಡಲವೆಲ್ಲವನ್ನು ರಕ್ಷಿಸಿದನು.
ಪದಾರ್ಥ (ಕ.ಗ.ಪ)
ರಮಿಸು-ಸುಖಿಸು, ಕದಂಬ-ಸಮೂಹ
ಟಿಪ್ಪನೀ (ಕ.ಗ.ಪ)
ಅಂಬಿಕೆ-ಅಂಬಾಲಿಕೆ : ಅಂಬೆ ಅಂಬಿಕೆ ಅಂಬಾಲಿಕೆ ಈ ಮೂವರು ಸೋದರಿಯರು ಕಾಶಿರಾಜ-ಕೌಸಲ್ಯೆಯರ ಮಕ್ಕಳು. ಕಾಶಿರಾಜ ವಂಶದವರು ತಮ್ಮ ಹೆಣ್ಣುಮಕ್ಕಳನ್ನು ಕುರುವಂಶದವರಿಗೆ ಕೊಡುವ ಸಂಪ್ರದಾಯವನ್ನು ಧಿಕ್ಕರಿಸಿ ಕಾಶಿರಾಜನು ಭೀಷ್ಮರಿಗೆ ತಿಳಿಸದೆ, ಅವರಿಗೆ ಆಹ್ವಾನ ಕೂಡ ಕಳಿಸದೆ ತನ್ನ ಪುತ್ರಿಯರ ಸ್ವಯಂವರಕ್ಕೆ ಏರ್ಪಾಡು ಮಾಡಿದ್ದ. ಕೆರಳಿದ ಭೀಷ್ಮರು ಎದುರುಬಿದ್ದ ರಾಜರುಗಳನ್ನೆಲ್ಲ ಸೋಲಿಸಿ ಈ ಮೂವರನ್ನೂ ಸ್ವಯಂವರ ಮಂಟಪದಿಂದ ಹೊತ್ತು ತಂದರು. ಅಂಬೆ ಬೇರೊಬ್ಬನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿದ್ದರಿಂದ ಅವಳನ್ನು ಬಿಟ್ಟು ಅಂಬಿಕೆ ಅಂಬಾಲಿಕೆಯರನ್ನು ವಿಚಿತ್ರವೀರ್ಯನಿಗೆ ಕೊಟ್ಟು ಮದುವೆ ಮಾಡಿಸಿದರು. ಆದರೆ ಏಳು ವರ್ಷಗಳವರೆಗೆ ವಿಲಾಸ ಜೀವನ ನಡೆಸಿ ರೋಗಪೀಡಿತನಾಗಿ ವಿಚಿತ್ರವೀರ್ಯನು ಸತ್ತ. ಈಗ ಆ ಇಬ್ಬರು ಹೆಣ್ಣುಮಕ್ಕಳು ಸಂತಾನ ಪಡೆದು ವಂಶದ ಧಾರೆ ಕಡಿಯದಂತೆ ನೋಡಿಕೊಳ್ಳಲು ಸತ್ಯವತಿ ಸಿದ್ಧಳಾದಳು. ಮೊದಲು ಭೀಷ್ಮರನ್ನು ಕೇಳಿ ನೋಡಿದಳು. ಆದರೆ ತಮ್ಮ ಪ್ರತಿಜ್ಞೆಯನ್ನು ಜ್ಞಾಪಿಸಿ ಭೀಷ್ಮರು ನಿರಾಕರಿಸಿದರು. ಆಗ ಸತ್ಯವತಿಯು ‘ವಿಪತ್ತಿನಲ್ಲಿ ನೆನೆ’ ಎಂದು ಹೇಳಿದ್ದ ತನ್ನ ಮಗ ವ್ಯಾಸನನ್ನು ಆಹ್ವಾನಿಸಿದಳು. ವ್ಯಾಸರು ಎಲ್ಲವನ್ನೂ ಕೇಳಿ ತಿಳಿದು ಅಂಬಿಕೆ, ಅಂಬಾಲಿಕೆಯರಿಗೆ ಪುತ್ರದಾನ ಮಾಡಲು ನೆರವಾಗುವುದಾಗಿ ಭರವಸೆ ಕೊಟ್ಟರು. ಆದರೆ ಇದನ್ನೆಲ್ಲ ಯಥಾವಿಧಿಯಾಗಿ ಮಾಡಲು ಸಮಯಬೇಕಾಗುತ್ತದೆ ಎಂದರು. ತುಂಬ ತುರ್ತಿನಲ್ಲಿದ್ದ ಸತ್ಯವತಿ ಆ ಮಾತಿಗೆ ಒಪ್ಪದೆ ಕೂಡಲೇ ಸಂತಾನವಾಗಬೇಕೆಂದು ಒತ್ತಡ ತಂದಳು.
ಮೂಲ ...{Loading}...
ಅಂಬೆ ಭೀಷ್ಮನ ಬೈದು ಕಂಬನಿ
ದುಂಬಿ ಹೋದಳು ತಪಕೆ ಬಳಿಕೀ
ಯಂಬಿಕೆಯನಂಬಾಲೆಯನು ರಮಿಸಿದನು ನೃಪಸೂನು
ಬೆಂಬಲಕೆ ಕಲಿಭೀಷ್ಮನಿರೆ ಚತು
ರಂಬುಧಿಯ ಮಧ್ಯದ ನೃಪಾಲ ಕ
ದಂಬವೀತಂಗಿದಿರೆ ಸಲಹಿದನಖಿಳ ಭೂತಳವ ॥38॥