೦೦೧ ಶ್ರೀವನಿತೆಯರಸನೆ ವಿಮಲ ...{Loading}...
ಶ್ರೀ-ವನಿತೆಯ್ ಅರಸನೆ ವಿಮಲ ರಾ-
ಜೀವ ಪೀಠನ ಪಿತನೆ ಜಗಕ್-ಅತಿ-
ಪಾವನನೆ ಸನಕಾದಿ-ಸಜ್ಜನನಿಕರ ದಾತಾರ!
ರಾವಣಾಸುರ-ಮಥನ ಶ್ರವಣ-ಸು-
ಧಾ-ವಿನೂತನ-ಕಥನ-ಕಾರಣ
ಕಾವುದ್ ಆನತ-ಜನವ ಗದುಗಿನ ವೀರ-ನಾರಯಣ ॥1॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಲಕ್ಷ್ಮೀಪತಿಯೇ, ಪವಿತ್ರವಾದ ಕಮಲಾಸನನಾದ ಬ್ರಹ್ಮನ ತಂದೆಯೇ, ಲೋಕಕ್ಕೆ ಅತಿಶ್ರೇಷ್ಠನಾದವನೇ, ಸನಕನೇ ಮೊದಲಾದ ಸಜ್ಜನರ ಸಮೂಹದ ಇಷ್ಟಾರ್ಥವನ್ನು ಕೊಡುವವನೇ, ರಕ್ಕಸರಾವಣನನ್ನು ಸಂಹಾರ ಮಾಡಿದ, ಕೇಳಲು ಅಮೃತಪ್ರಾಯವಾದ, ಹೊಸದಾದ, ಕಥೆಗೆ ಕಾರಣನಾದವನೇ, ಗದುಗಿನ ವೀರನಾರಾಯಣನೆ ನಮಸ್ಕರಿಸಿದ (ಶರಣಾಗತರಾದ) ಜನರನ್ನು ಕಾಪಾಡುವುದು.
ಪದಾರ್ಥ (ಕ.ಗ.ಪ)
ದಾತಾರ (ದ್ಭ) ದಾತೃ (ಸಂ) - ಕೊಡುವವ, ಒಡೆಯ
ಆನತ : ಬಾಗಿದ, ನಮಸ್ಕರಿಸಿದ
ಟಿಪ್ಪನೀ (ಕ.ಗ.ಪ)
ಸನಕಾದಿ - ಸನಕ, ಸನತ್ಕುಮಾರ, ಸನತ್ಸುಜಾತ, ಸನನ್ದನ - ಬ್ರಹ್ಮ ಮಾನಸಪುತ್ರರು
ಮೂಲ ...{Loading}...
ಶ್ರೀವನಿತೆಯರಸನೆ ವಿಮಲ ರಾ
ಜೀವ ಪೀಠನ ಪಿತನೆ ಜಗಕತಿ
ಪಾವನನೆ ಸನಕಾದಿ ಸಜ್ಜನನಿಕರ ದಾತಾರ
ರಾವಣಾಸುರ ಮಥನ ಶ್ರವಣ ಸು
ಧಾ ವಿನೂತನ ಕಥನ ಕಾರಣ
ಕಾವುದಾನತ ಜನವ ಗದುಗಿನ ವೀರನಾರಯಣ ॥1॥
೦೦೨ ಶರಣಸಙ್ಗವ್ಯಸನ ಭುಜಗಾ ...{Loading}...
ಶರಣ-ಸಂಗ-ವ್ಯಸನ ಭುಜಗಾ-
ಭರಣನ್ ಅಮರ-ಕಿರೀಟ-ಮಂಡಿತ
ಚರಣ ಚಾರು-ಚರಿತ್ರ ನಿರುಪಮ ಭಾಳ-ಶಿಖಿ-ನೇತ್ರ
ಕರಣ-ನಿರ್ಮಲ ಭಜಕರ್ ಅಘ-ಸಂ-
ಹರಣ ದಂತಿ-ಚಮೂರು+++(ಮೃಗ)+++-ಚರ್ಮಾಽಂ-
ಬರನೆ ಸಲಹುಗೆ ಭಕುತ-ಜನರನು ಪಾರ್ವತೀ-ರಮಣ ॥2॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಕ್ತರ ಸ್ನೇಹಕ್ಕಾಗಿ ಅತ್ಯಾಸಕ್ತಿಯುಳ್ಳವನು, ಸರ್ಪವನ್ನೇ ಆಭರಣವನ್ನಾಗಿ ಉಳ್ಳವನು, ದೇವತೆಗಳ ಕಿರೀಟಗಳಿಂದ ಅಲಂಕೃತವಾದ ಪಾದಗಳುಳ್ಳವನು, ಸುಂದರ ಚರಿತ್ರೆಯುಳ್ಳವನು, ಹೋಲಿಸಲು ಮತ್ತೊಂದಿಲ್ಲದವನು. ಹಣೆಯಲ್ಲಿ ಅಗ್ನಿಯನ್ನೇ ಕಣ್ಣಾಗಿ ಉಳ್ಳವನು, ಪರಿಶುದ್ಧ ಮನಸ್ಸಿನಿಂದ ಪೂಜಿಸುವವರ ಪಾಪಗಳನ್ನು ನಿವಾರಿಸುವವನು, ಆನೆ, ಜಿಂಕೆಗಳ ಚರ್ಮಗಳನ್ನೇ ಬಟ್ಟೆಯಾಗುಳ್ಳ ಪಾರ್ವತೀಪತಿಯು ಭಕ್ತಜನರನ್ನು ಕಾಪಾಡಲಿ.
ಪದಾರ್ಥ (ಕ.ಗ.ಪ)
ಭಾಳ-ಹಣೆ, ದಂತಿ-ಆನೆ, ಚಮೂರು-ಒಂದು ವಿಧದ ಜಿಂಕೆ, ಅಘ-ಪಾಪ
ಮೂಲ ...{Loading}...
ಶರಣಸಂಗವ್ಯಸನ ಭುಜಗಾ
ಭರಣನಮರ ಕಿರೀಟಮಂಡಿತ
ಚರಣ ಚಾರುಚರಿತ್ರ ನಿರುಪಮ ಭಾಳಶಿಖಿನೇತ್ರ
ಕರಣನಿರ್ಮಲ ಭಜಕರಘ ಸಂ
ಹರಣ ದಂತಿ ಚಮೂರು ಚರ್ಮಾಂ
ಬರನೆ ಸಲಹುಗೆ ಭಕುತ ಜನರನು ಪಾರ್ವತೀರಮಣ ॥2॥
೦೦೩ ವರಮಣಿಗಳಿನ್ದೆಸೆವ ಮೌಳಿಯ ...{Loading}...
ವರ-ಮಣಿಗಳಿಂದ್ ಎಸೆವ ಮೌಳಿಯ
ಸರಸಿಜಾರಿಯ ಕಿರಣದ್ ಓಳಿಯ+++(=ಗುಂಪನು)+++
ವಿರಚಿಸಿದ ಸಿಂದೂರ-ಭಾಳದಿ ಕುಣಿವ ಕುಂತಳದ,
ಕರಿ-ನಿಭಾಕೃತಿಯ್ ಎನಿಪ ವದನದ,
ಕರದ ಪಾಶದ, ಮೋದಕದ, ವಿ-
ಸ್ತರದ ಗಣಪತಿ ಮಾಡ್ ಎಮಗೆ ನಿರ್ವಿಘ್ನ-ದಾಯಕವ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೇಷ್ಠವಾದ ರತ್ನಗಳಿಂದ ಮೆರೆಯುತ್ತಿರುವ ಕಿರೀಟ, ಚಂದ್ರನ ಕಿರಣಗಳ ಸಮೂಹದಿಂದ ವಿಶೇಷವಾಗಿ ರಚಿಸಿದ ಸಿಂಧೂರದಿಂದ ಶೋಭಿಸುವ ಹಣೆಯಲ್ಲಿ ಕುಣಿದಾಡುವ ತಲೆಗೂದಲು, ಆನೆಯನ್ನು ಹೋಲುವ ಆಕಾರದ ಮುಖ, ಕೈಗಳಲ್ಲಿ ಪಾಶ, ಕಡುಬುಗಳಿಂದ ಅಲಂಕೃತನಾದ ಗಣಪತಿ ನಮಗೆ ನಿರ್ವಿಘ್ನವನ್ನು ಉಂಟು ಮಾಡಲಿ.
ಪದಾರ್ಥ (ಕ.ಗ.ಪ)
ಮೌಳಿ-ಕಿರೀಟ, ಓಳಿ-ಸಾಲು, ಸಿಂಧೂರ-ಹಣೆಗೆ ಹಚ್ಚಿಕೊಳ್ಳುವ ಕೆಂಪು ವಸ್ತು, ಕುಂತಳ-ತಲೆಗೂದಲು, ಕರಿ-ಆನೆ
ನಿಭ-ಸಮಾನ, ಹೋಲುವೆ, ಎಣೆ,
ವಿಸ್ತರದ- ಅಲಂಕೃತ
ಮೂಲ ...{Loading}...
ವರಮಣಿಗಳಿಂದೆಸೆವ ಮೌಳಿಯ
ಸರಸಿಜಾರಿಯ ಕಿರಣದೋಳಿಯ
ವಿರಚಿಸಿದ ಸಿಂದೂರಭಾಳದಿ ಕುಣಿವ ಕುಂತಳದ
ಕರಿ ನಿಭಾಕೃತಿಯೆನಿಪ ವದನದ
ಕರದ ಪಾಶದ ಮೋದಕದ ವಿ
ಸ್ತರದ ಗಣಪತಿ ಮಾಡೆಮಗೆ ನಿರ್ವಿಘ್ನದಾಯಕವ ॥3॥
೦೦೪ ಗಜಮುಖನೆ ಮೆರೆವೇಕದನ್ತನೆ ...{Loading}...
ಗಜಮುಖನೆ ಮೆರೆವ್ ಏಕ-ದಂತನೆ,
ನಿಜ-ಗುಣಾನ್ವಿತ ಪರಶು-ಧಾರನೆ,
ರಜತ-ಗಿರಿಗ್ ಒಡೆಯನ ಕುಮಾರನೆ, ವಿದ್ಯೆ-ವಾರಿಧಿಯೆ,
ಅಜನು ಹರಿ ರುದ್ರಾದಿಗಳು ನೆರೆ
ಭಜಿಸುತಿಹರ್ ಅನವರತ ನಿನ್ನನು,
ತ್ರಿಜಗ-ವಂದಿತ ಗಣಪ ಮಾಳ್ಪುದು ಮತಿಗೆ ಮಂಗಳವ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆನೆ ಮೊಗದವನೆ, ಶೋಭಿಸುವ ಏಕದಂತನೆ, ಸ್ವಾಭಾವಿಕ ಗುಣಗಳಿಂದ ಒಡಗೂಡಿದವನೆ, ಪರಶುವನ್ನು ಧರಿಸಿದವನೇ, ಕೈಲಾಸಪರ್ವತಕ್ಕೆ ಒಡೆಯನಾದ ಪರಶಿವನ ಕುಮಾರನೆ, ವಿದ್ಯಾಸಾಗರನೆ, ಬ್ರಹ್ಮ, ವಿಷ್ಣು, ರುದ್ರ ಮೊದಲಾದವರು ಯಾವಾಗಲೂ ನಿನ್ನನ್ನು ಪೂಜಿಸುತ್ತಿರುವರು. ಮೂರು ಲೋಕಗಳಿಂದಲೂ ವಂದಿಸಲ್ಪಡುವ ಗಣಪತಿ, ನನ್ನ ಬುದ್ಧಿಗೆ ಮಂಗಳವನ್ನುಂಟುಮಾಡುವುದು.
ಪದಾರ್ಥ (ಕ.ಗ.ಪ)
ಅನ್ವಿತ-ಒಡಗೂಡಿದ, ಸೇರಿದ, ಅಜ-ಬ್ರಹ್ಮ
ಟಿಪ್ಪನೀ (ಕ.ಗ.ಪ)
ತ್ರಿಜಗ-ಮೂರುಲೋಕ-ಸ್ವರ್ಗ, ಮತ್ರ್ಯ, ಪಾತಾಳ
ಮೂಲ ...{Loading}...
ಗಜಮುಖನೆ ಮೆರೆವೇಕದಂತನೆ
ನಿಜಗುಣಾನ್ವಿತ ಪರಶುಧಾರನೆ
ರಜತಗಿರಿಗೊಡೆಯನ ಕುಮಾರನೆ ವಿದ್ಯೆವಾರಿಧಿಯೆ
ಅಜನು ಹರಿ ರುದ್ರಾದಿಗಳು ನೆರೆ
ಭಜಿಸುತಿಹರನವರತ ನಿನ್ನನು
ತ್ರಿಜಗವಂದಿತ ಗಣಪ ಮಾಳ್ಪುದು ಮತಿಗೆ ಮಂಗಳವ ॥4॥
೦೦೫ ವಾರಿಜಾಸನೆ ಸಕಲಶಾಸ್ತ್ರ ...{Loading}...
ವಾರಿಜಾಸನೆ, ಸಕಲಶಾಸ್ತ್ರ ವಿ-
ಚಾರದ್ ಉದ್ಭವೆ, ವಚನ-ರಚನೋ
ದ್ಧಾರೆ, ಶ್ರುತಿ ಪೌರಾಣದ್ ಆಗಮ ಸಿದ್ಧಿದಾಯಕಿಯೆ,
ಶೌರಿ ಸುರ-ಪತಿ ಸಕಲ-ಮುನಿಜನ
ಸೂರಿಗಳಿಗ್ ಅನುಪಮದ ಯುಕುತಿಯೆ,
ಶಾರದೆಯೆ ನರ್ತಿಸುಗೆ ನಲಿದ್ ಒಲಿದ್ ಎನ್ನ ಜಿಹ್ವೆಯಲಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಮಲವನ್ನು ಆಸನವನ್ನಾಗಿಸಿಕೊಂಡವಳೆ ಎಲ್ಲಾ ಶಾಸ್ತ್ರ ವಿಚಾರಗಳ ಹುಟ್ಟಿಗೆ ಕಾರಣಳಾದವಳೆ ವಚನರಚನೆಯನ್ನು ಉದ್ಧರಿಸುವವಳೆ, ವೇದ, ಪುರಾಣ ಆಗಮಗಳ ಸಿದ್ಧಿಯನ್ನು ದಯಪಾಲಿಸುವವಳೆ, ವಿಷ್ಣು, ಇಂದ್ರ, ಎಲ್ಲ ಮುನಿಜನರು, ವಿದ್ವಾಂಸರಿಗೆ ಅಸಮಾನವಾದ ಯುಕ್ತಿಯಾಗಿರುವವಳೆ, ಶಾರದೆಯೆ ಸಂತೋಷದಿಂದ, ಪ್ರೀತಿಯಿಂದ ನನ್ನ ನಾಲಗೆಯಲ್ಲಿ ನರ್ತಿಸು.
ಪದಾರ್ಥ (ಕ.ಗ.ಪ)
ಶೌರಿ-ವಿಷ್ಣು, ಕೃಷ್ಣ (ಶೂರನೆಂಬ ಯಾದವ ಕುಲದವ), ಸೂರಿ-ವಿದ್ವಾಂಸ, ಜಿಹ್ವೆ-ನಾಲಗೆ
ಪಾಠಾನ್ತರ (ಕ.ಗ.ಪ)
(ಜಾಸನೆ) - (ಜಾನನೆ (ಇ)) ಕಮಲಾಸನೆ ಲಕ್ಷ್ಮಿ ಆಗುವುದರಿಂದ ಕಮಲದಂತೆ ಮುಖವುಳ್ಳವಳು ಎಂಬ ಅರ್ಥದಲ್ಲಿ ‘ಜಾನನೆ’ ಪಾಠಾಂತರವೂ ಇದೆ. ಹಿತಬೋಧಿನಿ ಪತ್ರಿಕೆಯ 1891ರ ಅಕ್ಟೋಬರ್ ತಿಂಗಳ ಸಂಚಿಕೆ ( ಸಂಪುಟ 7, ಸಂಚಿಕೆ 12)ರಲ್ಲಿ ಪ್ರಕಟಿಸಿರುವ ಕನ್ನಡದ ಮಹಾಭಾರತವು(ಕುಮಾರವ್ಯಾಸ ಭಾರತದ) ಎಂಬುದರಲ್ಲಿಯೂ ವಾರಿಜಾನನೆ ಎಂಬ ಪಾಠ ಇದೆ.
ಮೂಲ ...{Loading}...
ವಾರಿಜಾಸನೆ ಸಕಲಶಾಸ್ತ್ರ ವಿ
ಚಾರದುದ್ಭವೆ ವಚನರಚನೋ
ದ್ಧಾರೆ ಶ್ರುತಿ ಪೌರಾಣದಾಗಮ ಸಿದ್ಧಿದಾಯಕಿಯೆ
ಶೌರಿ ಸುರಪತಿ ಸಕಲಮುನಿಜನ
ಸೂರಿಗಳಿಗನುಪಮದ ಯುಕುತಿಯೆ
ಶಾರದೆಯೆ ನರ್ತಿಸುಗೆ ನಲಿದೊಲಿದೆನ್ನ ಜಿಹ್ವೆಯಲಿ ॥5॥
೦೦೬ ಆದಿ ನಾರಾಯಣಿ ...{Loading}...
ಆದಿ-ನಾರಾಯಣಿ, ಪರಾಯಣಿ,
ನಾದ-ಮಯೆ, ಗಜ-ಲಕ್ಷ್ಮಿ, ಸತ್ವ-ಗು-
ಣಾಧಿ-ದೇವತೆ, ಅಮರ-ವಂದಿತ, ಪಾದ-ಪಂಕ-ರುಹೆ,
ವೇದ-ಮಾತೆಯೆ, ವಿಶ್ವತೋ-ಮುಖೆಯ್,
ಐದು-ಭೂತಾಧಾರಿಯ್ ಎನಿಪ್, ಈ
ದ್ವಾದಶಾತ್ಮ+++(=ಆದಿತ್ಯ)+++-ಜ್ಯೋತಿ-ರೂಪಿಯೆ, ನಾದೆ, ಶಾರದೆಯೆ+++(←ಶರತ್ + ಅಣ್)+++ ॥6॥
+++(शरदि पद्मानां सविशेषविकसनात्, निरभ्रे नभसि चन्द्रस्य निर्निरोधं द्योतमानत्वात्, लक्ष्म्याश्च पद्मे चन्द्रे च निवासात् - अनुकूलैव शरल् लक्ष्म्याः। )+++
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೂಲನಾರಾಯಣನ ಪತ್ನಿ ಲಕ್ಷ್ಮಿಯೇ, ಪರಮಗುರಿಯಾದವಳೇ, ನಾದದಿಂದ ತುಂಬಿರುವಳೆ, ಗಜಲಕ್ಷ್ಮಿ, ಸಾತ್ವಿಕಗುಣದ ಅಧಿದೇವತೆಯೇ, ದೇವತೆಗಳಿಂದ ನಮಸ್ಕರಿಸಲ್ಪಡುವ ಪಾದಕಮಲಗಳನ್ನುಳ್ಳವಳೇ, ವೇದಗಳಿಗೆ ತಾಯಿಯಾದವಳೆ, ಜಗತ್ತನ್ನೇ ಮುಖವನ್ನಾಗಿ ಉಳ್ಳವಳೆ, ಪಂಚಭೂತಗಳಿಗೆ ಆಧಾರಳೆನಿಸುವ, ದ್ವಾದಶಾತ್ಮಗಳ ಜ್ಯೋತಿಸ್ವರೂಪಳೆ, ಶಾರದೆಯೆ, ನಾದದ ಅಧಿದೇವತೆಯೆ.
ಟಿಪ್ಪನೀ (ಕ.ಗ.ಪ)
ಐದುಭೂತಗಳು-ಪೃಥ್ವಿ, ಅಪ್ಪು, ತೇಜಸ್ಸು, ವಾಯು, ಆಕಾಶ.
ದ್ವಾದಶಾತ್ಮ (ದ್ವಾದಶಾದಿತ್ಯರು) (ಅಮರ 1-3-114) - ಕಶ್ಯಪನಿಂದ ಅದಿತಿಯಲ್ಲಿ ಜನಿಸಿದವರು-ಧಾತಾ, ಮಿತ್ರ, ಆರ್ಯಮಾ, ಶಕ್ರ (ಇಂದ್ರ), ವರುಣ, ಅಂಶ, ಭಗ, ವಿವಸ್ವಾನ್, ಪೂಷ, ಸವಿತೃ, ತ್ವಷ್ಟೃ , ವಿಷ್ಣು.
ಮೂಲ ...{Loading}...
ಆದಿ ನಾರಾಯಣಿ ಪರಾಯಣಿ
ನಾದಮಯೆ ಗಜಲಕ್ಷಿ ಸತ್ವಗು
ಣಾಧಿದೇವತೆ ಅಮರವಂದಿತ ಪಾದಪಂಕರುಹೆ
ವೇದಮಾತೆಯೆ ವಿಶ್ವತೋಮುಖೆ
ಯೈದು ಭೂತಾಧಾರಿಯೆನಿಪೀ
ದ್ವಾದಶಾತ್ಮ ಜ್ಯೋತಿರೂಪಿಯೆ ನಾದೆ ಶಾರದೆಯೆ ॥6॥
೦೦೭ ವೀರನಾರಾಯಣನೆ ಕವಿ ...{Loading}...
ವೀರ-ನಾರಾಯಣನೆ ಕವಿ, ಲಿಪಿ-
ಕಾರ ಕುವರ-ವ್ಯಾಸ, ಕೇಳುವ
ಸೂರಿಗಳು ಸನಕಾದಿಗಳು ಜಂಗಮ-ಜನಾರ್ದನರು
ಚಾರು-ಕವಿತೆಯ +++(ಲಕ್ಷಣಗಳ)+++ ಬಳಕೆಯ್ ಅಲ್ಲ, +++(ಸರಲ)+++ವಿ-
ಚಾರಿಸುವೊಡ್ ಅಳವ್+++(=ಸಾಧ್ಯವ್)+++ ಅಲ್ಲ, ಚಿತ್ತಽವ
ಧಾರು+++(←ಅವ+ಧಾ)+++ ಹೋ ಸರ್ವಜ್ಞ್ಞರ್ ಆದರು - ಸಲುಗೆ+++(=ಸಲ್ಲಲಿ)+++ ಬಿನ್ನಪವ ॥7॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೀರನಾರಾಯಣನೆ ಕವಿ, ಕುಮಾರವ್ಯಾಸ ಲಿಪಿಕಾರ. ಕಾವ್ಯವನ್ನು ಕೇಳುವವರು ವಿದ್ವಾಂಸರು, ಸನಕಾದಿಋಷಿಗಳು, ನಡೆದಾಡುವ ನಾರಾಯಣರು. ಇದು ಮನೋರಂಜನೆಯ ಕವಿತೆಯ ರಚನೆಯಷ್ಟೇ ಅಲ್ಲ, ವಿಚಾರ ಮಾಡುವ ಸಾಮಥ್ರ್ಯಕ್ಕೆ ಮೀರಿದ್ದು. ಎಲ್ಲವನ್ನೂ ಬಲ್ಲವರು ನನ್ನ ವಿಜ್ಞಾಪನೆಯನ್ನು ಮನಸ್ಸಿಗೆ ತಂದುಕೊಳ್ಳಿ.
ಪದಾರ್ಥ (ಕ.ಗ.ಪ)
ಚಾರು-ಸುಂದರ, ಮನೋಹರ
ಜಂಗಮ-ವಿರಕ್ತ
ಅಳವು-ಸಾಮಥ್ರ್ಯ
ಪಾಠಾನ್ತರ (ಕ.ಗ.ಪ)
[ಚಾರುಕವಿತೆ] - [ಜಾರುಗವಿತೆ -(ಆ)] [ಜಾರಕವಿತೆ (ಇ)]
ಜಾರು-ಸುಳ್ಳು, ಜಾರ-ವ್ಯಭಿಚಾರಿ-ಈ ಅರ್ಥಗಳಿಂದಲೂ ಮೇಲಿನ ಪಾಠಾಂತರಗಳನ್ನು ಪರಿಗಣಿಸಬಹುದಾಗಿದೆ.
ಮೂಲ ...{Loading}...
ವೀರನಾರಾಯಣನೆ ಕವಿ ಲಿಪಿ
ಕಾರ ಕುವರವ್ಯಾಸ ಕೇಳುವ
ಸೂರಿಗಳು ಸನಕಾದಿಗಳು ಜಂಗಮ ಜನಾರ್ದನರು
ಚಾರುಕವಿತೆಯ ಬಳಕೆಯಲ್ಲ ವಿ
ಚಾರಿಸುವಡಳವಲ್ಲ ಚಿತ್ತವ
ಧಾರು ಹೋ ಸರ್ವಜ್ಞ್ಞರಾದರು ಸಲುಗೆ ಬಿನ್ನಪವ ॥7॥
೦೦೮ ಶ್ರೀಮದಮರಾಧೀಶ ನತಪದ ...{Loading}...
ಶ್ರೀಮದ್-ಅಮರಾಧೀಶ-ನತ-ಪದ,
ತಾಮರಸ-ಘನ, ವಿಪುಳ, ನಿರ್ಮಲ,
ರಾಮನ್ +++(ಆದ)+++, ಅನುಪಮ-ಮಹಿಮ, ಸನ್ಮುನಿ-ವಿನುತ, ಜಗ-ಭರಿತ
ಶ್ರೀಮದ್-ಊರ್ಜಿತ-ಧಾಮ, ಸುದಯಾ-
ನಾಮನ್ +++(ಆದ)+++, ಆಹವ-ಭೀಮ, ರಘುಕುಲ-
+++(ರೂಪೇಣ)+++ ರಾಮ ರಕ್ಷಿಸುವ್ ಒಲಿದು ಗದುಗಿನ ವೀರ-ನಾರಯಣ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವತೆಗಳಿಗೊಡೆಯನಾದ ದೇವೇಂದ್ರನಿಂದ ನಮಸ್ಕರಿಸಲ್ಪಡುವ ಪಾದಕಮಲಗಳನ್ನು ಹೊಂದಿರುವ, ಗಂಭೀರನಾದ, ಘನನಾದ, ಪವಿತ್ರನಾದ, ಮನೋಹರನಾದ, ಎಣೆಯಿಲ್ಲದ ಮಹಿಮೆಯುಳ್ಳ, ಶ್ರೇಷ್ಠ ಮುನಿಗಳಿಂದ ವಂದಿಸಲ್ಪಡುವ, ಜಗತ್ತನ್ನೆಲ್ಲಾ ವ್ಯಾಪಿಸಿರುವ, ಹೆಚ್ಚಿನ ಸಂಪತ್ತಿಗೆ ಆಶ್ರಯನಾದ, ಕರುಣೆಗೆ ಹೆಸರಾದ, ಯುದ್ಧದಲ್ಲಿ ಭಯಂಕರನಾದ ರಘುಕುಲದ ಶ್ರೀರಾಮನಾದ ಗದುಗಿನ ವೀರನಾರಾಯಣನೇ ಒಲಿದು ಕಾಪಾಡು.
ಪದಾರ್ಥ (ಕ.ಗ.ಪ)
ಊರ್ಜಿತ-ಹೆಚ್ಚಿನ, ಶ್ರೇಷ್ಠ
ಭೀಮ-ಭಯಂಕರ
ಶ್ರೀಮತ್-ಸಂಪತ್ತುಳ್ಳ
ಧಾಮ-ಆಶ್ರಯಸ್ಥಾನ
ಪಾಠಾನ್ತರ (ಕ.ಗ.ಪ)
[ರಾ] - [ಧಾ (ಆ)] ಧಾಮ-ವಾಸಸ್ಥಳ-ಪವಿತ್ರವಾದ ವಾಸಸ್ಥಳದಲ್ಲಿರುವವನು ಅನ್ನುವ ಅರ್ಥದಲ್ಲಿ ಈ ಪಾಠಾಂತರ ಹಾಗೂ
[ಜಗಭರಿತ] - [ನಿಜಚರಿತ (ಆ)] ಸತ್ಯಚರಿತನು ಎಂಬ ಅರ್ಥದಲ್ಲಿ ಈ ಪಾಠಂತರವೂ ಇವೆ.
ಮೂಲ ...{Loading}...
ಶ್ರೀಮದಮರಾಧೀಶ ನತಪದ
ತಾಮರಸ ಘನವಿಪುಳ ನಿರ್ಮಲ
ರಾಮನನುಪಮ ಮಹಿಮ ಸನ್ಮುನಿ ವಿನುತ ಜಗಭರಿತ
ಶ್ರೀಮದೂರ್ಜಿತ ಧಾಮ ಸುದಯಾ
ನಾಮನಾಹವ ಭೀಮ ರಘುಕುಲ
ರಾಮ ರಕ್ಷಿಸುವೊಲಿದು ಗದುಗಿನ ವೀರನಾರಯಣ ॥8॥
೦೦೯ ಶರಧಿಸುತೆ ಸನಕಾದಿ ...{Loading}...
ಶರಧಿ-ಸುತೆ, ಸನಕಾದಿ-ವಂದಿತೆ,
ಸುರ-ನರೋರಗ-ಮಾತೆ, ಸುಜನರ
ಪೊರೆವ ದಾತೆ, ಸುರಾಗ್ರಗಣ್ಯ-ಸುಮೌನಿ+++(=ಸುಮುನಿ)+++-ವರ-ಸ್ತುತ್ಯೆ
ಪರಮ-ಕರುಣಾ-ಸಿಂಧು, ಪಾವನ-
ಚರಿತೆ, ಪದ್ಮಜ-ಮುಖ್ಯ-ಸಕಲಾ-
ಮರ-ಸುಪೂಜಿತೆ, ಲಕ್ಷ್ಮಿ ಕೊಡುಗ್ ಎಮಗ್ ಅಧಿಕ ಸಂಪದವ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮುದ್ರರಾಜನ ಮಗಳೇ, ಸನಕರೇ ಮೊದಲಾದವರಿಂದ ವಂದಿಸಲ್ಪಡುವವಳೇ, ದೇವ, ಮಾನವ, ಸರ್ಪಗಳಿಗೆಲ್ಲಾ ತಾಯಿಯೇ, ಒಳ್ಳೆಯವರನ್ನು ಕಾಪಾಡಿ ಕೃಪೆ ಮಾಡುವವಳೆ, ದೇವತೆಗಳು, ಶ್ರೇಷ್ಠ ಋಷಿಗಳಿಂದ ಸ್ತುತಿಸಲ್ಪಡುವ ಶ್ರೇಷ್ಠಳೇ, ಪರಮ ಕರುಣಾ ಸಾಗರಳೇ, ಪವಿತ್ರ ಚರಿತ್ರೆಯುಳ್ಳವಳೆ, ಬ್ರಹ್ಮನೇ ಮೊದಲಾದ ಮುಖ್ಯರಾದ ಸಕಲ ದೇವತೆಗಳಿಂದ ಚೆನ್ನಾಗಿ ಪೂಜಿಸಲ್ಪಡುವವಳೇ ಲಕ್ಷ್ಮಿಯೇ ನಮಗೆ ಹೆಚ್ಚಾದ ಸಂಪತ್ತನ್ನು ಕೊಡಲಿ.
ಪದಾರ್ಥ (ಕ.ಗ.ಪ)
ಸಿಂಧು-ಸಾಗರ, ಪದ್ಮಜ-ಬ್ರಹ್ಮ
ಮೂಲ ...{Loading}...
ಶರಧಿಸುತೆ ಸನಕಾದಿ ವಂದಿತೆ
ಸುರನರೋರಗ ಮಾತೆ ಸುಜನರ
ಪೊರೆವ ದಾತೆ ಸುರಾಗ್ರಗಣ್ಯಸುಮೌನಿ ವರಸ್ತುತ್ಯೆ
ಪರಮ ಕರುಣಾಸಿಂಧು ಪಾವನ
ಚರಿತೆ ಪದ್ಮಜಮುಖ್ಯ ಸಕಲಾ
ಮರಸುಪೂಜಿತೆ ಲಕ್ಷ್ಮಿ ಕೊಡುಗೆಮಗಧಿಕ ಸಂಪದವ ॥9॥
೦೧೦ ಗಜಮುಖನ ವರಮಾತೆ ...{Loading}...
ಗಜ-ಮುಖನ ವರಮಾತೆ, ಗೌರಿಯೆ,
ತ್ರಿಜಗದ್-ಅರ್ಚಿತ-ಚಾರು-ಚರಣಾಂ-
ಬುಜೆಯೆ, ಪಾವನ-ಮೂರ್ತಿ, ಪದ್ಮಜ-ಮುಖ್ಯ-ಸುರ-ಪೂಜ್ಯೆ,
ಭಜಕರ್ ಅಘಸಂಹರಣೆ, ಸುಜನ-
ವ್ರಜ-ಸುಸೇವಿತೆ, ಮಹಿಷ-ಮರ್ದಿನಿ,
ಭುಜಗ-ಭೂಷಣನ್ ಅರಸಿ, ಕೊಡು ಕಾರುಣ್ಯದಲಿ ಮತಿಯ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಣಪತಿಯ ತಾಯಿ ಗೌರಿಯೇ, ಮೂರು ಲೋಕಗಳಿಂದ ಪೂಜಿಸಲ್ಪಡುವ ಸುಂದರ ಪಾದಕಮಲಗಳನ್ನು ಹೊಂದಿರುವವಳೇ, ಪವಿತ್ರಮೂರ್ತಿಯೇ, ಬ್ರಹ್ಮನೇ ಮೊದಲಾದ ದೇವತೆಗಳಿಂದ ಪೂಜಿಸಲ್ಪಡುವವಳೇ, ಪೂಜಿಸುವವರ ಪಾಪವನ್ನು ನಾಶಮಾಡುವವಳೇ, ಯೋಗ್ಯರ ಸಮೂಹದಿಂದ ಸೇವಿಸಲ್ಪಡುವವಳೇ, ಮಹಿಷಾಸುರನನ್ನು ಸಂಹರಿಸಿದವಳೇ, ಸರ್ಪಭೂಷಣ ಪರಮಶಿವನ ಪತ್ನಿಯೇ ಕಾರುಣ್ಯದಿಂದ ಬುದ್ಧಿಯನ್ನು ಕೊಡು.
ಪದಾರ್ಥ (ಕ.ಗ.ಪ)
ವ್ರಜ-ಸಮೂಹ, ಭುಜಗ-ಸರ್ಪ
ಮೂಲ ...{Loading}...
ಗಜಮುಖನ ವರಮಾತೆ ಗೌರಿಯೆ
ತ್ರಿಜಗದರ್ಚಿತ ಚಾರು ಚರಣಾಂ
ಬುಜೆಯೆ ಪಾವನಮೂರ್ತಿ ಪದ್ಮಜಮುಖ್ಯ ಸುರಪೂಜ್ಯೆ
ಭಜಕರಘಸಂಹರಣೆ ಸುಜನ
ವ್ರಜ ಸುಸೇವಿತೆ ಮಹಿಷಮರ್ದಿನಿ
ಭುಜಗಭೂಷಣನರಸಿ ಕೊಡು ಕಾರುಣ್ಯದಲಿ ಮತಿಯ ॥10॥
೦೧೧ ದುರಿತಕುಲಗಿರಿ ವಜ್ರದಣ್ಡನು ...{Loading}...
ದುರಿತ-ಕುಲಗಿರಿ–ವಜ್ರ-ದಂಡನು,
ಧರೆಯ ಜಂಗಮ-ಮೂರ್ತಿ, ಕವಿ-ವಾ-
ರಿ-ರುಹ-ದಿನಮಣಿ, ನಿಖಿಲ-ಯತಿ-ಪತಿ, ದಿವಿಜ-ವಂದಿತನು
ತರಳನನು ತನ್ನವನ್ ಎನುತ, ಪತಿ-
ಕರಿಸಿ+++(=ದಯೆತೊರಿ)+++, ಮಗನೆಂದ್ ಒಲಿದು, ಕರುಣದಿ
ವರವನ್ ಇತ್ತನು ದೇವ, ವೇದ-ವ್ಯಾಸ, ಗುರುರಾಯ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಪವೆಂಬ ಕುಲಗಿರಿಗೆ ವಜ್ರಾಯುಧದಂತಿರುವವನು, ಭೂಮಿಯಲ್ಲಿ ಓಡಾಡುವ ಪರಮಾತ್ಮನ ಮೂರ್ತಿ, ಕವಿಗಳೆಂಬ ಕಮಲಗಳಿಗೆ ಸೂರ್ಯನು, ಎಲ್ಲಾ ಯತಿ ಶ್ರೇಷ್ಠರಿಂದಲೂ ದೇವತೆಗಳಿಂದಲೂ ವಂದಿಸಲ್ಪಡುವವನು, ಈ ಬಾಲಕನನ್ನು ತನ್ನವನೆಂದು ದಯೆತೋರಿ ಮಗನೆಂದು ಪ್ರೀತಿಸಿ, ಕರುಣದಿಂದ ಗುರುಶ್ರೇಷ್ಠನಾದ ದೇವ ವೇದವ್ಯಾಸನು ವರವನ್ನು ಕೊಟ್ಟನು.
ಪದಾರ್ಥ (ಕ.ಗ.ಪ)
ದುರಿತ-ಪಾಪ,
ವಜ್ರದಂಡ-ವಜ್ರಾಯುಧ,
ವಾರಿರುಹ-ಕಮಲ,
ದಿನಮಣಿ-ಸೂರ್ಯ,
ಪತಿಕರಿಸು-ದಯೆದೋರು
ಟಿಪ್ಪನೀ (ಕ.ಗ.ಪ)
ವೇದವ್ಯಾಸ - ಇವರಿಗೆ ಕೃಷ್ಣದ್ವೈಪಾಯನ, ಅಂಬಿಕೇಯ, ಪಾರಾಶರ್ಯ, ಸತ್ಯವತೇಯ ಎಂಬ ಹೆಸರುಗಳೂ ಇವೆ. ಯಮುನಾ ನದಿಯ ದ್ವೀಪಗಳಲ್ಲಿ ಹುಟ್ಟಿದವನಾದ್ದರಿಮದ ಮತ್ತು ಕಪ್ಪಗಿದ್ದುದರಿಂದ ಕೃಷ್ಣದ್ವೈಪಾಯನ, ಪರಾಶರನ ಮಗನಾದ್ದರಿಂದ ಪಾರಾಶರ್ಯ. ಸತ್ಯವತಿ-ಪರಾಶರರಿಗೆ ಮಗನಾಗಿ ಜನಿಸಿದ ಸದ್ಯೋಜಾತರಾದ ವ್ಯಾಸರು ತಂದೆಯ ಜತೆಗೇ ಹೊರಟುಬಿಟ್ಟರು. ಅಲ್ಲದೆ ತಾಯಿಗೆ ‘ನೀನು ಕರೆದಾಗ ಬಂದು ಸಹಾಯ ಮಾಡುತ್ತೇನೆ’ ಎಂಬ ವಚನವನ್ನು ಕೊಟ್ಟಿದ್ದರು. ತಾವು ಕೊಟ್ಟ ಮಾತಿನಂತೆ, ಸತ್ಯವತಿ ಆಹ್ವಾನಿಸಿದಾಗ ವಂಶಕ್ಷಯವನ್ನು ತಪ್ಪಿಸಿ ಧೃತರಾಷ್ಟ್ರ ಪಾಂಡುಗಳನ್ನು ಒದಗಿಸಿದರು. ವಿದುರನೂ ಇವರ ಮಗನೇ. ಒಂದು ರೀತಿಯಲ್ಲಿ ಮಹಾಭಾರತದ ಪಾತ್ರಧಾರಿಯೂ ಆಗಿರುವ ವ್ಯಾಸರು ಮಹತ್ವದ ಸಂದರ್ಭಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಪಾಂಡವರು ಅರಗಿನ ಮನೆಯಿಂದ ಹೊರಟಾಗ, ದ್ರುಪದ ನಗರಿಯಲ್ಲಿ, ರಾಜಸೂಯಯಾಗದ ಸಂದರ್ಭದಲ್ಲಿ ವನವಾಸದ ಸಂದರ್ಭದಲ್ಲಿ ಉದ್ದಕ್ಕೂ ಹಲವಾರು ಬಾರಿ ಕಾಣಿಸಿಕೊಳ್ಳುತ್ತಾರೆ. ಗಾಂಧಾರಿಗೆ ಪುತ್ರಲಾಭವನ್ನು ಹರಸಿದವರು ಇವರೇ. ಅರ್ಜುನನಿಗೆ ಪ್ರತಿಸ್ಮೃತಿ ಮಂತ್ರವನ್ನು ಬೋಧಿಸುವಂತೆ ಧರ್ಮರಾಯನಿಗೆ ಸಲಹೆಯಿತ್ತು ಇಂದ್ರಕೀಲಕ್ಕೆ ಅರ್ಜುನನ್ನು ಕಳಿಸಿದವರೂ ಇವರೇ. ಮಹಾಭಾರತ ಯುದ್ಧದಲ್ಲಂತೂ ಧೃತರಾಷ್ಟ್ರನಿಗೆ ಯುದ್ಧ ಸಂಗತಿಗಳನ್ನು ನಿರೂಪಿಸುವಂತೆ ಸಂಜಯನನ್ನು ನಿಯಮಿಸಿ ಅವನಿಗೆ ಎಲ್ಲವೂ ದೃಗ್ಗೋಚರವಾಗುವಂತೆ ಮಾಡಿದ ಶಕ್ತಿವಂತರು ಇವರು. ಪಾಂಡವರು ಕಾಡಿನಲ್ಲಿದ್ದಾಗ ಅವರನ್ನು ಕೊಂದು ಬರೋಣ ಎಂದು ಕೌರವಕರ್ಣಾದಿಗಳು ಹೊರಟಾಗ ತಪ್ಪಿಸಿದ ಕೀರ್ತಿ ವ್ಯಾಸರದು. ಗಾಂಧಾರಿಯು ಧರ್ಮರಾಯನನ್ನು ಶಪಿಸಿಸುವುದನ್ನು ತಪ್ಪಿಸಿದವರು ವ್ಯಾಸ. ಅಭಿಮನ್ಯು ಸತ್ತಾಗ ಧರ್ಮರಾಯನ ಶೋಕವನ್ನು ತಗ್ಗಿಸುವ ಉಪದೇಶವಿತ್ತವರು. ಅಶ್ವತ್ತಾಮನ ದುಃಖಶಮನದ ಜವಾಬ್ದಾರಿಯೂ ಇವರದೇ. ಹಾಗೆಯೇ ಯುದ್ಧದಲ್ಲಿ ಸತ್ತ ವೀರರನ್ನೆಲ್ಲ ತಮ್ಮ ಮಹಿಮೆಯಿಂದ ಒಂದು ದಿನದ ಮಟ್ಟಿಗೆ ಕೊಳದಿಂದ ಎದ್ದು ಬರುವಂತೆ ಮಾಡಿದವರು. ಒಂದೇ ಕಡೆ ಕಲಿಸಿಕೊಂಡಂತಿದ್ದ ವೇದಗಳನ್ನು ಶಿಷ್ಯರ ಸಹಾಯದಿಂದ ವಿಭಜಿಸಿ ಒಂದು ರೂಪವನ್ನು ಕೊಟ್ಟವರು. ಶುಕಮಹರ್ಷಿಯ ತಂದೆಯಾಗಿ ಅವನನ್ನು ಜ್ಞಾನನಿಧಿಯಾಗಿ ಮಾಡಿ ಪರಮವೈರಾಗ್ಯ ಮೂರ್ತಿಯಾಗುವಂತೆ ಸಹಕಾರಿಯಾದರೂ ಶುಕನ ಅಗಲಿಕೆಯನ್ನು ಸಹಿಸದೆ ಕೊರಗುವ ಮಾನವೀಯತೆಯೂ ಅವರಲ್ಲಿದೆ.
ದ್ರೌಪದಿಯು ಪಂಚಪಾಂಡವರ ಪತ್ನಿಯಾಗುವುದು ಸರಿಯೇ ಎಂದು ತರ್ಕಿಸುತ್ತಿದ್ದ ಪಾಂಚಾಲರಾಜನಿಗೆ ಏಕಾಂತದಲ್ಲಿ ಸಮಾಧಾನ ಹೇಳಿದವರು. ಮೊಮ್ಮಕ್ಕಳನ್ನು ಕಳೆದುಕೊಂಡು ರೋಧಿಸುತ್ತಿದ್ದ ಕುಂತಿಯನ್ನು ಸಮಾಧಾನಪಡಿಸಿದವರು. ತಮಗಿಂತ ವಯಸ್ಸಿನಲ್ಲಿ ಚಿಕ್ಕವನಾಧ ಶ್ರೀಕೃಷ್ಣನ ವ್ಯಕ್ತಿತ್ವವನ್ನು ಅರ್ಥಮಾಡಿಕೊಂಡು ಆರಾಧನಾಭಾವದಿಂದ ಕಂಡು ಪ್ರಚಾರ ಮಾಡಿದವರು. ಶ್ರೀಕೃಷ್ಣನ ರಾಯಭಾರಕ್ಕೆ ಒಂದು ಸೂಕ್ತವೇದಿಕೆಯನ್ನು ಸಿದ್ಧಮಾಡಿದವರೇ ವ್ಯಾಸರು ಎಂಬುದು ಉದ್ಯೋಗಪರ್ವದ ಎರಡನೆಯ ಅದ್ಯಾಯದಿಂದ ವಿದಿತವಾಗುತ್ತದೆ. ತತ್ವಸ್ವರೂಪದ ದೃಷ್ಟಿಯಿಂದ ಹೇಳುವುದಾದರೆ ಶಿವ-ವಿಷ್ಣು ಬೇರೆಯಲ್ಲ ಎಂದು ‘ಹರಿಹರಾದ್ವೈತ’ವನ್ನು ಸಾರಿದವರು. ಒಂದು ಕಡೆ ಕುರುವಂಶವನ್ನು ಬೆಳಗಿಸುವ ಕುಲಪ್ರದೀಪಕರಾಗಿ ಮಹಾಭಾರತದ ಒಬ್ಬ ಸಾಂಧರ್ಭಿಕವಾಗಿ ಪ್ರಕಾಶಗೊಳ್ಳುವ ಪಾತ್ರಧಾರಿಯಾಗಿ ಇನ್ನೊಂದು ಕಡೆ ಮಹಾಭಾರತವನ್ನು ಬರೆಯುವ ಕೃತಿಕಾರನಾಗಿ ಎರಡು ಜವಾಬ್ದಾರಿಗಳನ್ನೂ ಯಶಸ್ವಿಯಾಗಿ ಮುಗಿಸಿ ಕೃತಕೃತ್ಯರಾಗಿದ್ದಾರೆ.
ವಯಸ್ಸಾದವರು ಗೌರವವಾಗಿ ಕಾಡಿನಲ್ಲಿ ಶಾಂತವಾಗಿ ಕಾಲಕಳೆಯಬೇಕು ಎಂಬ ಸಂದೇಶವನ್ನು ಸತ್ಯವತಿ ಅಂಬಿಕೆ ಅಂಬಾಲಿಕೆಯರನ್ನು ಕಾಡಿಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ತುಂಬ ಸೂಕ್ಷ್ಮವಾಗಿ ಹೇಳಿದ್ದಾರೆ. ವಯಸ್ಸಾದವರಿಗೆಲ್ಲ ಹೀಗೆ ಅನ್ನಿಸುತ್ತದೆಂಬುದು ಈಗಲೂ ನಿಜ. ವಯಸ್ಕರಿಗೆ ಸುಖದ ಕಾಲ ಹೋಯಿತು. ಬರಲಿರುವ ದಿನಗಳು ದಾರುಣವಾಗಿರುತ್ತವೆ. ಪಾಪಿಷ್ಠ ದಿನಗಳನ್ನು ಎದುರು ನೋಡಬೇಕಾಗುತ್ತದೆ. ಭೂಮಿ ತನ್ನ ಯೌವನವನ್ನು ಕಳೆದುಕೊಂಡಿದ್ಧಾಳೆ ಎಂಬುದು ಅವರ ಮಾತು.
ಅತಿಕ್ರಾಂತ ಸುಖಾಃ ಕಾಲಾಃ ಪರ್ಯುಪಸ್ಥಿತ ದಾರುಣಾ
ಶ್ವಃಶ್ವಃ ಪಾಪಿಷ್ಠ ದಿವಸಾಃ ಪ್ಲಥಿವೀ ಗತಯೌವನಾ.
ಯುವಕಯುವತಿಯರಿಗೇ ಈ ಲೋಕವನ್ನು ಬಿಟ್ಟುಕೊಟ್ಟು ವಯಸ್ಸಾದವರು ಮೆಲ್ಲಗೆ ಜಾರಿಕೊಳ್ಳಬೇಕೆಂಬುದನ್ನು ಇದಕ್ಕಿಂತ ಚೆನ್ನಾಗಿ ಹೇಳಲು ಸಾಧ್ಯವಿಲ್ಲ.
ಮೂಲ ...{Loading}...
ದುರಿತಕುಲಗಿರಿ ವಜ್ರದಂಡನು
ಧರೆಯ ಜಂಗಮಮೂರ್ತಿ ಕವಿ ವಾ
ರಿರುಹ ದಿನಮಣಿ ನಿಖಿಲ ಯತಿಪತಿ ದಿವಿಜವಂದಿತನು
ತರಳನನು ತನ್ನವನೆನುತ ಪತಿ
ಕರಿಸಿ ಮಗನೆಂದೊಲಿದು ಕರುಣದಿ
ವರವನಿತ್ತನು ದೇವ ವೇದವ್ಯಾಸ ಗುರುರಾಯ ॥11॥
೦೧೨ ವನ್ದಿತಾಮಳ ಚರಿತನಮರಾ ...{Loading}...
ವಂದಿತಾಮಳ-ಚರಿತನ್, ಅಮರಾ-
ನಂದ, +++(ಅತ್ರಿಮುನಿಗೆ ವರವ ಕೊಟಿದ್ದರಿಂದ)+++ ಯದು-ಕುಲ-ಚಕ್ರವರ್ತಿಯ
ಕಂದ, +++(ಮೋಕ್ಷಪ್ರದಾನದಿಂ)+++ ನತ-ಸಂಸಾರ-ಕಾನನ-ಘನ-ದವಾನಳನು
ನಂದ-ನಂದನ-ಸನ್ನಿಭನು, ಸಾ-
ನಂದದಿಂದಲೆ ನಮ್ಮುವನು ಕೃಪೆ-
ಯಿಂದ ಸಲಹುಗೆ ದೇವ ಜಗದಾರಾಧ್ಯ ಗುರುರಾಯ +++(ದತ್ತಾತ್ರೇಯ)+++ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಂದಿಸಲ್ಪಡುವ ಪವಿತ್ರ ಚರಿತ್ರನು, ದೇವತೆಗಳಿಗೆ ಆನಂದ ಉಂಟು ಮಾಡುವವನು, ಯದುವಂಶದ ಚಕ್ರವರ್ತಿಯ ಮಗನು, ಕುಗ್ಗಿದ ಸಂಸಾರವೆಂಬ ಕಾಡಿಗೆ ದಟ್ಟವಾದ ಬಡಬಾಗ್ನಿಯಂತಿರುವ, ನಂದನ ಮಗನ ಸದೃಶನು, ಜಗತ್ತಿನಿಂದ ಆರಾಧಿಸಲ್ಪಡುವ ಗುರುಶ್ರೇಷ್ಠನೆನಿಸಿದ ವೇದವ್ಯಾಸನು ಆನಂದದಿಂದ ನಮ್ಮನ್ನು ಕೃಪೆಯಿಂದ ಕಾಪಾಡಲಿ.
ಪದಾರ್ಥ (ಕ.ಗ.ಪ)
ದವಾನಳ-ಬಡಬಾಗ್ನಿ, ಸನ್ನಿಭ-ಸದೃಶನಾಗಿರುವವನು
ಮೂಲ ...{Loading}...
ವಂದಿತಾಮಳ ಚರಿತನಮರಾ
ನಂದ ಯದುಕುಲ ಚಕ್ರವರ್ತಿಯ
ಕಂದ ನತಸಂಸಾರ ಕಾನನ ಘನ ದವಾನಳನು
ನಂದನಂದನ ಸನ್ನಿಭನು ಸಾ
ನಂದದಿಂದಲೆ ನಮ್ಮುವನು ಕೃಪೆ
ಯಿಂದ ಸಲಹುಗೆ ದೇವ ಜಗದಾರಾಧ್ಯ ಗುರುರಾಯ ॥12॥
೦೧೩ ತಿಳಿಯ ಹೇಳುವೆ ...{Loading}...
ತಿಳಿಯ ಹೇಳುವೆ ಕೃಷ್ಣ-ಕಥೆಯನು,
ಇಳೆಯ ಜಾಣರು ಮೆಚ್ಚುವಂತ್ ಇರೆ,
ನೆಲೆಗೆ ಪಂಚಮ-ಶ್ರುತಿಯನ್ ಒರೆವೆನು, ಕೃಷ್ಣ-ಮೆಚ್ಚಲಿಕೆ
ಹಲವು ಜನ್ಮದ ಪಾಪ-ರಾಶಿಯ
ತೊಳೆವ ಜಲವ್ ಇದು, ಶ್ರೀಮದ್-ಆಗಮ-
ಕುಲಕೆ-ನಾಯಕ, ಭಾರತಾಽಽಕೃತಿ-ಪಂಚಮ-ಶ್ರುತಿಯ +++(ಒರೆವೆನು)+++ ॥13॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಮಿಯಲ್ಲಿನ ಜಾಣರು ಮೆಚ್ಚುವ ರೀತಿಯಲ್ಲಿ, ತಿಳಿಯುವಂತೆ ಕೃಷ್ಣಕಥೆಯನ್ನು ಹೇಳುವೆನು. ಕೃಷ್ಣನು ಮೆಚ್ಚುವಂತೆ ಈ ಐದನೆಯ ವೇದವೆನಿಸಿದ ಮಹಾಭಾರತವನ್ನು ಹೇಳುವೆನು. ಇದು ಅನೇಕ ಜನ್ಮಗಳ ಪಾಪರಾಶಿಯನ್ನು ತೊಳೆಯುವ ಜಲವು. ಐದನೆಯ ವೇದವೆನಿಸಿದ ಭಾರತವು ಪವಿತ್ರವಾದ ವೇದ ಗ್ರಂಥಗಳಿಗೆ ರತ್ನವಾದದ್ದು.
ಮೂಲ ...{Loading}...
ತಿಳಿಯ ಹೇಳುವೆ ಕೃಷ್ಣಕಥೆಯನು
ಇಳೆಯ ಜಾಣರು ಮೆಚ್ಚುವಂತಿರೆ
ನೆಲೆಗೆ ಪಂಚಮ ಶ್ರುತಿಯನೊರೆವೆನು ಕೃಷ್ಣ ಮೆಚ್ಚಲಿಕೆ
ಹಲವು ಜನ್ಮದ ಪಾಪರಾಶಿಯ
ತೊಳೆವ ಜಲವಿದು ಶ್ರೀಮದಾಗಮ
ಕುಲಕೆ ನಾಯಕ ಭಾರತಾಕೃತಿ ಪಂಚಮ ಶ್ರುತಿಯ ॥13॥
೦೧೪ ಪದದ ಪ್ರೌಢಿಯ ...{Loading}...
ಪದದ ಪ್ರೌಢಿಯ, ನವ-ರಸಂಗಳವ್
ಉದಿತವ್ ಎನುವ್ ಅಭಿಧಾನ-ಭಾವವ
ಬೆದಕಲ್+++(=ಹುಡುಕಲ್)+++ ಆಗದು, ಬಲ್ಲ-ಪ್ರೌಢರುಮ್ ಈ ಕಥಾಂತರಕೆ
ಇದ ವಿಚಾರಿಸೆ, ಬಱಿಯ ತೊಳಸಿಯವ್+++(=ತುಳಸಿಯ)+++
ಉದಕ-ದಂತ್ ಇರೆಯ್ ಇಲ್ಲಿ ನೋಳ್ಪುದು
ಪದುಮ-ನಾಭನ ಮಹಿಮೆ, ಧರ್ಮವಿಚಾರ-ಮಾತ್ರವನು ॥14॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಮಹಾಭಾರತ ಕಥಾವಿಸ್ತಾರದಲ್ಲಿ ತಿಳಿದ ಪಂಡಿತರು ಪದಗಳ ಚತುರತೆಯಾಗಲೀ, ನವರಸಗಳಿಂದುಂಟಾಗುವ ಭಾವಗಳ ನಿರೂಪಣೆಯನ್ನಾಗಲೀ ಹುಡುಕಬಾರದು. ಇದನ್ನು ವಿಚಾರಿಸಿದರೆ, ತುಳಸಿಯ ಉದಕದಂತೆ, ಪದುಮನಾಭನಾದ ಕೃಷ್ಣನ ಮಹಿಮೆಯನ್ನು ಧರ್ಮದ ವಿಚಾರವನ್ನು ಮಾತ್ರ ಇದರಲ್ಲಿ ನೋಡುವುದು.
ಪದಾರ್ಥ (ಕ.ಗ.ಪ)
ಪ್ರೌಢ-ಚತುರ, ನಿಪುಣ,
ಅಭಿಧಾನ-ಹೆಸರು
ಟಿಪ್ಪನೀ (ಕ.ಗ.ಪ)
ನವರಸಗಳು-ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ, ಶಾಂತ.
ತುಳಸಿಯ ಉದಕ :
ತುಳಸಿಯ ನೀರಿಗೆ ಎರಡು ವಿಧವಾದ ಶಕ್ತಿ ಇದೆ. ಭಕ್ತಿಯಿಂದ ಸೇವಿಸಿದರೆ ತೀರ್ಥ, ಬೇರೊಂದು ಅರ್ಥದಲ್ಲಿ ಔಷಧ. ತನ್ನ ಣರತದಲ್ಲಿ ಸಹ ಪದುಮನಾಭನ ಮಹಿಮೆ, ಮತ್ತು ಧರ್ಮ ಎಂಬ ಎರಡು ಪ್ರಧಾನ ಅಂಶಗಳಿವೆ ಎಂಬುದು ಕವಿಯ ಅಭಿಪ್ರಾಯ.
ಮೂಲ ...{Loading}...
ಪದದ ಪ್ರೌಢಿಯ ನವರಸಂಗಳ
ವುದಿತವೆನುವಭಿಧಾನ ಭಾವವ
ಬೆದಕಲಾಗದು ಬಲ್ಲ ಪ್ರೌಢರುಮೀ ಕಥಾಂತರಕೆ
ಇದ ವಿಚಾರಿಸೆ ಬಱಿಯ ತೊಳಸಿಯ
ವುದಕದಂತಿರೆಯಿಲ್ಲಿ ನೋಳ್ಪುದು
ಪದುಮನಾಭನ ಮಹಿಮೆ ಧರ್ಮವಿಚಾರ ಮಾತ್ರವನು ॥14॥
೦೧೫ ಹಲಗೆ ಬಳಪವ ...{Loading}...
ಹಲಗೆ+++(=ಫಲಕ)+++-ಬಳಪವ ಪಿಡಿಯದ್ ಒಂದ್ ಅ-
ಗ್ಗಳಿಕೆ, ಪದವಿಟ್ಟ್ ಅಳುಪದ್ ಒಂದ್ ಅ
ಗ್ಗಳಿಕೆ, ಪರರ್ ಒಡ್ಡವದ+++(=ವ್ಯೂಢದ)+++ ರೀತಿಯ ಕೊಳ್ಳದ್ ಅಗ್ಗಳಿಕೆ,
ಬಳಸಿ ಬರೆಯಲು ಕಂಠ-ಪತ್ರದವ್
ಉಲುಹು+++(=ಸದ್ದು)+++ ಗೆಡದ್ ಅಗ್ಗಳಿಕೆಯ್ ಎಂಬೀ
ಬಲುಹು+++(=ಬಲುಮೆ)+++ ಗದುಗಿನ ವೀರ-ನಾರಾಯಣನ ಕಿಂಕರಗೆ ॥15॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಲಗೆ ಬಳಪವ ಹಿಡಿಯದ ಹೆಚ್ಚುಗಾರಿಕೆ, ಒಮ್ಮೆ ಬಳಸಿದ ಪದವನ್ನು ಅಳಿಸದ ಹೆಚ್ಚುಗಾರಿಕೆ, ಇತರರ ಬರಹದ ರೀತಿಯನ್ನು ಕೊಳ್ಳದ ಶ್ರೇಷ್ಠತೆ, ಬರೆಯತೊಡಗಿದಾಗ ಕಂಠಪತ್ರದ ಧ್ವನಿ ಕೆಡದಂತೆ ಬರೆಯುವ ಅತಿಶಯತೆ ಈ ಎಲ್ಲ ಸಾಮಥ್ರ್ಯಗಳು ಗದುಗಿನ ವೀರನಾರಾಯಣನ ಸೇವಕನದಾಗಿದೆ.
ಪದಾರ್ಥ (ಕ.ಗ.ಪ)
ಅಗ್ಗಳಿಕೆ-ಅತಿಶಯ, ಹೆಚ್ಚುಗಾರಿಕೆ, ಶ್ರೇಷ್ಠತೆ,
ಉಲುಹು-ಧ್ವನಿ,
ಕಂಠ-ತಾಳೆಗರಿಯ ಮೇಲೆ ಬರೆಯುವ ಲೋಹದ ಕಡ್ಡಿ,
ಕಿಂಕರ-ಸೇವಕ
[ಸಲುವುದು ಬಿ] ಸಲು-ಸೇರು, ಸಂದಾಯವಾಗು,
ಮೂಲ ...{Loading}...
ಹಲಗೆ ಬಳಪವ ಪಿಡಿಯದೊಂದ
ಗ್ಗಳಿಕೆ ಪದವಿಟ್ಟಳುಪದೊಂದ
ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ
ಬಳಸಿ ಬರೆಯಲು ಕಂಠಪತ್ರದ
ವುಲುಹುಗೆಡದಗ್ಗಳಿಕೆಯೆಂಬೀ
ಬಲುಹು ಗದುಗಿನ ವೀರನಾರಾಯಣನ ಕಿಂಕರಗೆ ॥15॥
೦೧೬ ಕೃತಿಯನವಧರಿಸುವುದು ಸುಕವಿಯ ...{Loading}...
ಕೃತಿಯನ್ ಅವಧರಿಸುವುದು, ಸುಕವಿಯ
ಮತಿಗೆ ಮಂಗಳವ್ ಈವುದ್, ಅಧಿಕರು
ಮಥಿಸುವುದು, ತಿದ್ದುವುದು, ಮೆರೆವುದು, ಲೇಸ ಸಂಚಿಪುದು
ನುತ-ಗುಣರು, ಭಾವುಕರು, ವರ-ಪಂ-
ಡಿತರು, ಸುಜನರು, ಸೂಕ್ತಿಕಾರರು,
ಮತಿಯನ್ ಈವುದು ವೀರ-ನಾರಾಯಣನ ಕಿಂಕರಗೆ ॥16॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕಾವ್ಯವನ್ನು ಮನಸ್ಸು ಕೊಟ್ಟು ಕೇಳುವುದು, ಒಳ್ಳೆಯ ಕವಿಯ ಬುದ್ಧಿಗಾಗಿ ಮಂಗಳ ಕೋರುವುದು. ಶ್ರೇಷ್ಠರಾದವರು ಮಥನ ಮಾಡಿ, ತಿದ್ದಿ, ಮೆರೆಸುವುದು. ಒಳ್ಳೆಯದನ್ನು ಗ್ರಹಿಸುವುದು. ಸ್ತುತಿಸಲ್ಪಡುವ ಗುಣವುಳ್ಳವರು, ಭಾವ ಜೀವಿಗಳು, ಶ್ರೇಷ್ಠ ಪಂಡಿತರು, ಒಳ್ಳೆಯವರು ಹಿತವಚನವನ್ನಾಡುವವರು ವೀರನಾರಾಯಣನ ಸೇವಕನಿಗೆ ಬುದ್ಧಿಯನ್ನು ದಯಪಾಲಿಸುವುದು.
ಪದಾರ್ಥ (ಕ.ಗ.ಪ)
ನುತ-ಸ್ತುತಿಸಲ್ಪಟ್ಟ,
ಸೂಕ್ತಿಕಾರರು-ಹಿತವಚನವನ್ನು ಹೇಳುವವರು
ಪಾಠಾನ್ತರ (ಕ.ಗ.ಪ)
|ಸುಕವಿಯ| - |ಸುಗತಿಯ (ಆ)| - ಸದ್ಗತಿಯ
ಮೂಲ ...{Loading}...
ಕೃತಿಯನವಧರಿಸುವುದು ಸುಕವಿಯ
ಮತಿಗೆ ಮಂಗಳವೀವುದಧಿಕರು
ಮಥಿಸುವುದು ತಿದ್ದುವುದು ಮೆರೆವುದು ಲೇಸ ಸಂಚಿಪುದು
ನುತಗುಣರು ಭಾವುಕರು ವರಪಂ
ಡಿತರು ಸುಜನರು ಸೂಕ್ತಿಕಾರರು
ಮತಿಯನೀವುದು ವೀರನಾರಾಯಣನ ಕಿಂಕರಗೆ ॥16॥
೦೧೭ ತಿಣಿಕಿದನು ಫಣಿರಾಯ ...{Loading}...
ತಿಣಿಕಿದನು+++(=ಶ್ರಮಿಸಿದನು)+++ ಫಣಿರಾಯ +++(ಆದಿಶೇಷ ಭೂಧರ)+++ ರಾಮಾ
ಯಣದ ಕವಿಗಳ ಭಾರದಲಿ, ತಿಂ-
ತಿಣಿಯ+++(=ಸಮೂಹದ)+++ ರಘುವರ-ಚರಿತೆಯಲಿ ಕಾಲಿಡಲು ತೆರಪ್ ಇಲ್ಲ.
ಬಣಗು+++(=ಕ್ಷುದ್ರ)+++-ಕವಿಗಳ ಲೆಕ್ಕಿಪನೆ? ಸಾಕ್
ಎಣಿಸದ್+++(=ಏಣಿಸದ್)+++ ಇರು. +++(ವ್ಯಾಸ-ಪುತ್ರ)+++ಶುಕ-ರೂಪನ್ ಅಲ್ಲವೆ?
ಕುಣಿಸಿ ನಗನೇ ಕವಿ ಕುಮಾರ-ವ್ಯಾಸನ್ ಉಳಿದ್ ಅವರ ॥17॥+++(5)+++
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಮಾಯಣವನ್ನು ಬರೆದ ಕವಿಗಳ ಭಾರದಿಂದ ಭೂಮಿಯನ್ನು ಹೊರಲಾರದೆ ಆದಿಶೇಷ ಆಯಾಸಪಟ್ಟನು. ರಘುವಂಶ ಶ್ರೇಷ್ಠನ ಚರಿತ್ರೆಯ ಸಮೂಹದಲ್ಲಿ ಹೆಜ್ಜೆಯಿಕ್ಕಲು ಅವಕಾಶವಿಲ್ಲ. ಅಸಮರ್ಥರಾದ ಕವಿಗಳನ್ನು ಲಕ್ಷ್ಯಕ್ಕಿಡುವನೇ? ಯೋಚಿಸುವುದು ಬೇಡ. ವ್ಯಾಸಪುತ್ರ ಶುಕ ಮುನಿಯ ಸ್ವರೂಪನಲ್ಲವೇ ಕವಿ ಕುಮಾರವ್ಯಾಸನು. ಇತರರನ್ನು ಆಟವಾಡಿಸಿ ಪರಿಹಾಸ ಮಾಡದಿರುವವನೇ! (ಇವನ ಮುಂದೆ ಉಳಿದವರಾರು ಗಣನೆಗೆ ಬರುವುದಿಲ್ಲ).
ಪದಾರ್ಥ (ಕ.ಗ.ಪ)
ತಿಂತಿಣಿ-ಸಮೂಹ,
ತೆರಪು-ಅವಕಾಶ,
ಬಣಗು-ಅಸಮರ್ಥ,
ತಿಣುಕು-ಆಯಾಸಪಡು
ಪಾಠಾನ್ತರ (ಕ.ಗ.ಪ)
[ಶುಕರೂಪನಲ್ಲವೆ - [ಶುಕರೂಪನಲ್ಲದೆ (ಅ) (ಇ)]
ಶುಕರೂಪನಾದ್ದರಿಂದ ಉಳಿದವರನ್ನು ಕುಣಿಸಿ ನಗುತ್ತಾನೆ ಅನ್ನುವ ಅಭಿಪ್ರಾಯ [ದೆ] ಪಾಠಾಂತರದಿಂದ ಸಮಂಜಸವೆನಿಸುತ್ತದೆ.
ಟಿಪ್ಪನೀ (ಕ.ಗ.ಪ)
ಶುಕ: ವ್ಯಾಸನ ಪುತ್ರ ಮತ್ತು ಶಿಷ್ಯ. ವ್ಯಾಸರಿಂದ ಶುಕೀರೂಪದಿಂದ ಬಂದ ಘೃತಾಚಿ ಎಂಬ ಅಪ್ಸರಸಿಯಲ್ಲಿ ಜನಿಸಿದವ. ತಂದೆಯ ಬಳಿ ವಿದ್ಯಾಭ್ಯಾಸ ಮಾಡಿ, ಧರ್ಮರಹಸ್ಯಗಳನ್ನು, ಭಾಗವತವನ್ನು ಕೇಳಿ ತಿಳಿದುಕೊಂಡು ಪರೀಕ್ಷಿದ್ರಾಜನಿಗೆ ಹೇಳಿದ
ಮೂಲ ...{Loading}...
ತಿಣಿಕಿದನು ಫಣಿರಾಯ ರಾಮಾ
ಯಣದ ಕವಿಗಳ ಭಾರದಲಿ ತಿಂ
ತಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ
ಬಣಗು ಕವಿಗಳ ಲೆಕ್ಕಿಪನೆ ಸಾ
ಕೆಣಿಸದಿರು ಶುಕರೂಪನಲ್ಲವೆ
ಕುಣಿಸಿ ನಗನೇ ಕವಿ ಕುಮಾರವ್ಯಾಸನುಳಿದವರ ॥17॥
೦೧೮ ಹರಿಯ ಬಸುರೊಳಗಖಿಳ ...{Loading}...
ಹರಿಯ ಬಸುರ್+++(=ಹೊಟ್ಟೆಯ್)+++ ಒಳಗ್ ಅಖಿಳ ಲೋಕದ
ವಿರಡವ್+++(=ವಿರಾಟವ್)+++ ಅಡಗಿಹ ವೋಲು+++(=ಪೋಲೆ=ಹಾಗೆ)+++ ಭಾರತ
ಶರಧಿಯ್ ಒಳಗ್ ಅಡಗಿಹವ್ ಅನೇಕ ಪುರಾಣ ಶಾಸ್ತ್ರಗಳು.
ಪರಮ-ಭಕ್ತಿಯಲ್ ಈ ಕೃತಿಯನ್ ಅವ-
ಧರಿಸಿ ಕೇಳ್ದ್ ಆ ನರರ ದುರಿತಾಂ-
ಕುರದ ಬೇರಿನ ಬೇಗೆಯ್+++(=ಉರಿಯ್)+++ ಎಂದ್ ಅರುಹಿದನು ಮುನಿ-ನಾಥ +++(ವೈಶಮ್ಪಾಯನ)+++ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಹರಿಯ ಹೊಟ್ಟೆಯೊಳಗೆ ಎಲ್ಲ ಲೋಕಗಳ ವಿರಾಡ್ರೂಪ ಅಡಗಿರುವ ಹಾಗೆ, ಭಾರತವೆಂಬ ಸಮುದ್ರದಲ್ಲಿ ಅನೇಕ ಪುರಾಣ ಶಾಸ್ತ್ರಗಳು ಅಡಗಿವೆ. ಇದು ಹೆಚ್ಚು ಭಕ್ತಿಯಿಂದ ಈ ಕೃತಿಯನ್ನು ಮನಸ್ಸಿಟ್ಟು ಕೇಳುವವರ ಪಾಪದ ಚಿಗುರಿಗೆ ಮತ್ತು ಬೇರಿಗೆ ಬೆಂಕಿ ಇದ್ದಂತೆ ಎಂದು ವೈಶಂಪಾಯನನು ತಿಳಿಸಿದನು.
ಪದಾರ್ಥ (ಕ.ಗ.ಪ)
ವಿರಡ-ವಿರಾಟ,
ಅಂಕುರ-ಮೊಳಕೆ
ಮೂಲ ...{Loading}...
ಹರಿಯ ಬಸುರೊಳಗಖಿಳ ಲೋಕದ
ವಿರಡವಡಗಿಹವೋಲು ಭಾರತ
ಶರಧಿಯೊಳಗಡಗಿಹವನೇಕ ಪುರಾಣ ಶಾಸ್ತ್ರಗಳು
ಪರಮ ಭಕ್ತಿಯಲೀ ಕೃತಿಯನವ
ಧರಿಸಿ ಕೇಳ್ದಾ ನರರ ದುರಿತಾಂ
ಕುರದ ಬೇರಿನ ಬೇಗೆಯೆಂದರುಹಿದನು ಮುನಿನಾಥ ॥18॥
೦೧೯ ಅರಸುಗಳಿಗಿದು ವೀರ ...{Loading}...
ಅರಸುಗಳಿಗ್ ಇದು ವೀರ, ದ್ವಿಜರಿಗೆ
ಪರಮ-ವೇದದ ಸಾರ, ಯೋಗೀ-
ಶ್ವರರ ತತ್ವ-ವಿಚಾರ, ಮಂತ್ರಿ-ಜನಕ್ಕೆ ಬುದ್ಧಿ-ಗುಣ,
ವಿರಹಿಗಳ ಶೃಂಗಾರ, ವಿದ್ಯಾ-
ಪರಿಣತರ್ ಅಲಂಕಾರ, ಕಾವ್ಯಕೆ
ಗುರುವ್ ಎನಲು ರಚಿಸಿದ ಕುಮಾರವ್ಯಾಸ ಭಾರತವ ॥19॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದು ಅರಸುಗಳಿಗೆ ವೀರರಸವನ್ನು ಉಕ್ಕಿಸುವುದು. ದ್ವಿಜರಿಗೆ ಶ್ರೇಷ್ಠ ವೇದಗಳ ಸಾರವನ್ನು ತಿಳಿಸುವುದು. ಯೋಗೀಶ್ವರರಿಗೆ ತತ್ವ ವಿಚಾರಗಳನ್ನು ಬೋಧಿಸುವುದು. ಮಂತ್ರಿಗಳು ಬುದ್ಧಿ ಕಂಡುಕೊಳ್ಳುವ ಗುಣ ಇದರಲ್ಲಿದೆ. ವಿರಹಿಗಳಿಗೆ ಶೃಂಗಾರರಸ ಇದರಲ್ಲಿದೆ. ವಿದ್ಯಾಪರಿಣತರಿಗೆ ಅಲಂಕಾರ ಶಾಸ್ತ್ರವಿದು. ಎಲ್ಲ ಕಾವ್ಯಗಳಿಗೆ ‘ಗುರು’ ಎನಿಸಿಕೊಳ್ಳುವಂತೆ ಕುಮಾರವ್ಯಾಸ ಈ ಭಾರತವನ್ನು ರಚಿಸಿದ್ದಾನೆ.
ಪದಾರ್ಥ (ಕ.ಗ.ಪ)
ಪರಿಣತ-ಪ್ರೌಢ, ನುರಿತ
ಮೂಲ ...{Loading}...
ಅರಸುಗಳಿಗಿದು ವೀರ ದ್ವಿಜರಿಗೆ
ಪರಮ ವೇದದ ಸಾರ ಯೋಗೀ
ಶ್ವರರ ತತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ
ವಿರಹಿಗಳ ಶೃಂಗಾರ ವಿದ್ಯಾ
ಪರಿಣತರಲಂಕಾರ ಕಾವ್ಯಕೆ
ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ ॥19॥
೦೨೦ ವೇದ ಪಾರಾಯಣದ ...{Loading}...
ವೇದ ಪಾರಾಯಣದ ಫಲ, ಗಂ-
ಗಾದಿ ತೀರ್ಥ-ಸ್ನಾನ-ಫಲ, ಕೃ-
ಚ್ಛ್ರಾದಿ-ತಪಸಿನ ಫಲವು, ಜ್ಯೋತಿಷ್ಟೋಮ-ಯಾಗ-ಫಲ,
ಮೇದಿನಿಯನ್ ಒಲಿದ್ ಇತ್ತ+++(=ಇಟ್ಟ)+++ ಫಲ, ವ-
ಸ್ತ್ರಾದಿ-ಕನ್ಯಾ-ದಾನ-ಫಲವ್ ಅಹುದ್,
ಆದರಿಸಿ ಭಾರತದೊಳ್ ಒಂದ್ ಅಕ್ಷರವ ಕೇಳ್ದರಿಗೆ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಮಹಾಭಾರತದಲ್ಲಿ ಆಸಕ್ತಿಯಿಂದ ಒಂದಕ್ಷರವನ್ನು ಕೇಳಿದವರಿಗೆ ವೇದ ಪಾರಾಯಣದ ಫಲ, ಗಂಗೆಯೇ ಮೊದಲಾದ ತೀರ್ಥಗಳಲ್ಲಿ ಸ್ನಾನಮಾಡಿದ ಫಲ, ‘ಕೃಚ್ಛ’ ಮೊದಲಾದ ತಪಸ್ಸಿನ ಫಲ. ಜ್ಯೋತಿಷ್ಟೋಮಯಾಗ ಮಾಡಿದ ಫಲ, ಪ್ರೀತಿಯಿಂದ ಭೂದಾನ ಮಾಡಿದ ಫಲ, ವಸ್ತ್ರದಾನ, ಕನ್ಯಾದಾನ ಮೊದಲಾದ ದಾನಗಳನ್ನು ಮಾಡಿದ ಫಲ ಉಂಟಾಗುವುದು.
ಪದಾರ್ಥ (ಕ.ಗ.ಪ)
ಆದರಿಸಿ-ಆಸಕ್ತಿಯಿಂದ
ಟಿಪ್ಪನೀ (ಕ.ಗ.ಪ)
ಕೃಚ್ಛ್ರ-ಒಂದು ಪ್ರಾಯಶ್ಚಿತ್ತ ,ಕೃಚ್ಛ್ರಾದಿ ತಪಸಿನ ಫಲವು (ಕುಮಾರವ್ಯಾಸ)
ಪರಾಶರ ಸ್ಮೃತಿ ಪ್ರಾಯಶ್ಚಿತ್ತಕಾಂಡ - 12ನೆಯ ಅಧ್ಯಾಯ ಶ್ಲೋಕ 76
ಕೃಚ್ಛ್ರ, ಅತಿಕೃಚ್ಛ್ರ, ಕೃಚ್ಛ್ರಾತಿಕೃಚ್ಛ್ರ, ತಪ್ತಕೃಚ್ಛ್ರ
ಅಧ್ಯಾಯ 4, ಪು. 20, ಶ್ಲೋಕ 7
ತಪ್ತಕೃಚ್ಛ, 3 ದಿವಸ ಅಪಲ ಬಿಸಿನೀರನ್ನೂ, 3 ದಿವಸ 3 ಸಲ ಬಿಸಿಹಾಲನ್ನೂ, 3 ದಿವಸ 1 ಸಲ ಬಿಸಿ ತುಪ್ಪವನ್ನೂ, 3 ದಿನಗಳಲ್ಲಿ. . .(ಗಾಳಿಯನ್ನೂ ಕುಡಿದಿರಬೇಕು) ಉಪವಾಸ ಮಾಡಿರಬೇಕು. ಇದಕ್ಕೆ ತಪ್ತಕೃಚ್ಛ್ರವೆನ್ನುತ್ತಾರೆ. P - 21
ಪಲ ಎಂದರೆ ಅಳತೆ ಇದರ ಕೋಷ್ಟಕ ಹೀಗಿದೆ.
5 ಗುಂಜಿ ತೂಕ = 1 ಮಾಷ
8 ಮಾಷ = 1 ನಿಷ್ಕ
10 ನಿಷ್ಕ = 1 ಪಲ 4 ಸುವರ್ಣದ ತೂಕ 1 ಪಲ ಎಂದೂ ಹೇಳುವರು.
ಬಿಸಿನೀರಿಗೆ ಬದಲಾಗಿ ತಣ್ಣಿರು, ತಂಪುಹಾಲು, ತಂಪು ತುಪ್ಪ ಬಳಸಿದರೆ ಶೀತಕೃಚ್ಛವಾಗುತ್ತದೆ.
ಕೃಚ್ಛವೆಂದರೆ ಪ್ರಾಜಾಪತ್ಯಕೃಚ್ಛ್ರವೆಂದೇ ಅರ್ಥ :
3 ದಿನ ಪ್ರಾತಕಾಲದಲ್ಲಿಯೂ 3 ದಿನ ಸಾಯಂಕಾಲದಲ್ಲಿಯೂ 3 ದಿನ ಇತರರನ್ನು ಕೇಳದೆಯೊ ಕೇಳದೆಯೂ ಭುಜಿಸಬೇಕು. ಅನಂತರ 3 ದಿನ ಉಪವಾಸ ಮಾಡಬೇಕು. ಇದೇ ಪ್ರಾಜಾಪತ್ಯಕೃಚ್ಛ್ರವೆಂಬುದು. (ಮನು)
ಸಾಂತಪನಕೃಚ್ಛ್ರಲಕ್ಷಣ :
2 ದಿನದ್ದು, 7 ದಿನದ್ದು, 15 ದಿನದ್ದು, 21 ದಿನದ್ದು ಎಂದು 4 ಪ್ರಕಾರವಾಗಿದೆ. “ಹಸುವಿನ ಗಂಜಳ, ಹಸುವಿನ ಸಗಣಿ, ಹಸುವಿನ ಹಾಲು, ಹಸುವಿನ ಮೊಸರು, ಹಸುವಿನ ತುಪ್ಪ, ದರ್ಭೆ, ನೀರು ಇವುಗಳನ್ನು ಭುಜಿಸಿ 3 ದಿನಗಳು ಉಪವಾಸ ಮಾಡಬೇಕು. ಇದೇ ಸಾಂತಪನಕೃಚ್ಛ್ರ (ಯಾಜ್ಷವಲ್ಕ್ಯ)
ಅಧ್ಯಾಯ 4 ಪರಾಶರ ಬೋಧನೀಯ ಶ್ಲೋಕ 3
ಮಹಾ ಸಾಂತಪನ ಕೃಚ್ಛ್ರ
6 ದಿನಗಳಲ್ಲಿ ಗೋಮೂತ್ರ ಮೊದಲಾದುವನ್ನು ಭುಜಿಸಿ 7 ದಿನದಲ್ಲಿ ಉಪವಾಸ ಮಾಡುವುದು. ಮಹಾಸಾಂತಪನಕೃಚ್ಛ್ರ ಎನ್ನುತ್ತಾರೆ. (ಯಾಜ್ಞವಲ್ಕ್ಯ)
ಪರಾಕೃಚ್ಛ್ರ ಎಂದರೆ ಇಂದ್ರಿಯಗಳನ್ನು ನಿಗ್ರಹಿಸಿ ಮತ್ತನಾಗದೆ 12 ದಿನ ಉಪವಾಸ ಮಾಡುವುದೇ ಪರಾಕೃಚ್ಛ್ರವೆನಿಸುವುದು. ಇದರಿಂದ ಸೂಕ್ತವಾದ ಪರಿಹಾರ ಆಗುವುದು. ಪು. 26 ಪರಾಶರಮಾಧ್ವಿವೀಯ ಅ ಶ್ಲೋಕ.
ಅತಿಕೃಚ್ಛೃ ಲಕ್ಷಣ :
ಹಾಲಿನಿಂದಲೇ 21 ದಿವಸ ಕಳೆಯಬೇಕು ಇದು ಅತಿಕೃಚ್ಛೆಂದು ಹೇಳುತ್ತಾರೆ. (ಯಾಜ್ಞವಲ್ಕ್ಯ) ಪರಾಶರ ಪಾಯಶ್ಚಿತ್ತ ಕೂಟ. 12 ಆ ಶ್ಲೋಕ
ಕೃಚ್ಛ್ರಾತಿಕೃಚ್ಛ್ರ ಲಕ್ಷಣ :
ಏಕಭುಕ್ತಿ ನಕ್ತಾ ಆಯಾಚಿತ ದಿವಸಗಳಲ್ಲಿ ಭೋಜನ ಮಾಡತಕ್ಕ ಸಮಯಗಳಲ್ಲಿ ಮಾತ್ರ ಕೇವಲ ನೀರನ್ನು ಕಾಡಿದಿರುವುದು ಕೃಚ್ಛ್ರಾತಿಕೃಚ್ಛ್ರವೆಂದು ಹೇಳಲ್ಪಡುತ್ತದೆ. (ಗೌತಮ ಸ್ಮೃತಿ) ಪು. 453
ಪರ್ಣಕೃಚ್ಛ್ರ
ಮುತ್ತುಗ ಅತ್ತಿ ತಾವರೆ ಬಿಲ್ವ ಇವುಗಳ ಎಲೆ ಮತ್ತು ದರ್ಭೆ ಇವುಗಳ ಉದಕವನ್ನು ಪ್ರತ್ಯೇಕ ಪ್ರತ್ಯೇಕವಾಗಿ ಪ್ರತಿದಿವಸದಲ್ಲೂ ಕುಡಿದರೆ ಅದು ಪರ್ಣಕೃಚ್ಛ್ರ (ಯಾಜ್ಞವಲ್ಕ)
ಹೀಗೆ ಹತ್ತಾರು ಬಗೆಯ ಕೃಚ್ಛ್ರಗಳಿರುವುದರಿಂದ ಕುಮಾರವ್ಯಾಸನು ಕೃಚ್ಛ್ರಾದಿ ತಪಸಿನ ಫಲವೆಂದಿದ್ದಾನೆ.
ವಿಧಿನಿಷೇಧಗಳ ಅತಿಕ್ರಮಣೆಯಿಂದ, ಬರತಕ್ಕ ಪಪಗಳ ಪರಿಹಾರಕ್ಕೆ ಮಆಡುವ ವ್ರತನಿಯಮಾದಿಗಳೇ ಪ್ರಾಯಶ್ಚಿತ್ತ, ಪ್ರಾಯವೆಂದು ತಪಸ್ಸಿಗೆ ಹೆಸರು. ಚಿತ್ತವೆಂದರೆ ನಿಶ್ಚಯ ನಿಶ್ಚಯ ಸಹಿತವಾದ ತಪಸ್ಸೇ ಪ್ರಾಯಶ್ಚಿತ್ತ. ಪು. 7 ಪರಾಶರ ಮಾಧ್ವ ನಿಲಯ ಪ್ರಾಯಶ್ಚಿತ್ತ ಕಾಂಡ
ಜ್ಯೋತಿಷ್ಟೋಮ-ಸಾಮಾನ್ಯವಾಗಿ ಐದುದಿನಗಳ ಕಾಲ ನಡೆಯುವ ಒಂದು ಸೋಮಯಾಗ. ಸ್ವರ್ಗಕಾಮನು ಜ್ಯೋತಿಷ್ಟೋಮವನ್ನು ಮಾಡಬೇಕು ಎಂದು ವೇದದಲ್ಲಿ ಬರುವ ವಿಧಿ.
ಟಿಪ್ಪಣಿ - ಜಿ. ಅಶ್ವತ್ಥನಾರಾಯಣ
ಮೂಲ ...{Loading}...
ವೇದ ಪಾರಾಯಣದ ಫಲ ಗಂ
ಗಾದಿ ತೀರ್ಥಸ್ನಾನ ಫಲ ಕೃ
ಚ್ಛ್ರಾದಿ ತಪಸಿನ ಫಲವು ಜ್ಯೋತಿಷ್ಟೋಮಯಾಗ ಫಲ
ಮೇದಿನಿಯನೊಲಿದಿತ್ತ ಫಲ ವ
ಸ್ತ್ರಾದಿ ಕನ್ಯಾದಾನ ಫಲವಹು
ದಾದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ ॥20॥
೦೨೧ ಹೇಮ ಖುರ ...{Loading}...
ಹೇಮ-ಖುರ-ಶೃಂಗಾಭರಣದಲಿ
ಕಾಮಧೇನು-ಸಹಸ್ರ-ಕಪಿಲೆಯ
ಸೋಮ-ಸೂರ್ಯ-ಗ್ರಹಣದಲಿ ಸುರ-ನದಿಯ ತೀರದಲಿ
ಶ್ರೀಮುಕುಂದಾರ್ಪಣವ್ ಎನಿಸಿ ಶತ-
ಭೂಮಿ-ದೇವರಿಗ್ ಇತ್ತ ಫಲವ್ ಅಹುದ್
ಈ ಮಹಾ-ಭಾರತದೊಳ್ ಒಂದ್ ಅಕ್ಷರವ ಕೇಳ್ದರಿಗೆ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಮಹಾಭಾರತದಲ್ಲಿ ಒಂದಕ್ಷರವನ್ನು ಕೇಳಿದವರಿಗೆ, ಗೊರಸು, ಕೋಡುಗಳನ್ನು ಚಿನ್ನದ ಆಭರಣದಿಂದ ಅಲಂಕರಿಸಿದ ಸಾವಿರ ಕಂದು ಬಣ್ಣದ ಗೋವುಗಳನ್ನು ಸೂರ್ಯ, ಚಂದ್ರಗ್ರಹಣ ಕಾಲಗಳಲ್ಲಿ ಗಂಗಾನದಿಯ ತೀರದಲ್ಲಿ “ಶ್ರೀಮುಕುಂದನಿಗೆ ಅರ್ಪಣವಾಗಲಿ” ಎಂದು ನುಡಿದು ನೂರಾರು ಬ್ರಾಹ್ಮಣರಿಗೆ ದಾನಮಾಡಿದರೆ ಬರುವ ಫಲವು ಉಂಟಾಗುವುದು.
ಪದಾರ್ಥ (ಕ.ಗ.ಪ)
ಹೇಮ-ಚಿನ್ನ,
ಖುರ-ಗೊರಸು,
ಶೃಂಗ-ಕೋಡು,
ಭೂಮಿದೇವರು-ವಿಪ್ರರು
ಮೂಲ ...{Loading}...
ಹೇಮ ಖುರ ಶೃಂಗಾಭರಣದಲಿ
ಕಾಮಧೇನು ಸಹಸ್ರ ಕಪಿಲೆಯ
ಸೋಮ ಸೂರ್ಯ ಗ್ರಹಣದಲಿ ಸುರನದಿಯ ತೀರದಲಿ
ಶ್ರೀಮುಕುಂದಾರ್ಪಣವೆನಿಸಿ ಶತ
ಭೂಮಿದೇವರಿಗಿತ್ತ ಫಲವಹು
ದೀ ಮಹಾಭಾರತದೊಳೊಂದಕ್ಷರವ ಕೇಳ್ದರಿಗೆ ॥21॥
೦೨೨ ಚೋರ ನಿನ್ದಿಸಿ ...{Loading}...
ಚೋರ ನಿಂದಿಸಿ ಶಶಿಯ ಬೈದಡೆ,
ಕ್ಷೀರವನು ಕ್ಷಯ-ರೋಗಿ ಹಳಿದರೆ+++(=ತಿರಸ್ಕರಿಸಿದರೆ)+++,
ವಾರಣಾಸಿಯ ಹೆಳವ+++(=ಕುಣ್ಟ)+++ ನಿಂದಿಸಿ ನಕ್ಕರ್ ಏನ್ ಅಹುದು.
ಭಾರತ-ಕಥನ-ಪ್ರಸಂಗವ
ಕ್ರೂರ ಕರ್ಮಿಗಳ್ ಎತ್ತ ಬಲ್ಲರು?
ಘೋರ-ರೌರವವನ್ನು ಕೆಡಿಸುಗು+++(=ಕೆಡಿಸುವುದು??)+++ ಕೇಳ್ದ ಸಜ್ಜನರ ॥22॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಳ್ಳನು ಚಂದ್ರನನ್ನು ನಿಂದಿಸಿ ಬೈದರೆ, ಹಾಲನ್ನು ಕ್ಷಯರೋಗಿ ತಿರಸ್ಕರಿಸಿದರೆ, ಕಾಶಿಯನ್ನು ಹೆಳವನು ನಿಂದಿಸಿ ನಕ್ಕರೆ ಏನಾಗುತ್ತದೆ? ಭಾರತದ ಕಥನ ಪ್ರಸಂಗವನ್ನು ಕ್ರೂರಕರ್ಮಿಗಳು ಎಲ್ಲಿ ತಿಳಿಯುವರು? ಈ ಕಥೆಯನ್ನು ಕೇಳ್ದ ಸಜ್ಜನರಿಗೆ ಘೋರ ನರಕಗಳು ಇಲ್ಲವಾಗುತ್ತವೆ.
ಪದಾರ್ಥ (ಕ.ಗ.ಪ)
ರೌರವ-ಭಯಂಕರವಾದ ನರಕ
ಮೂಲ ...{Loading}...
ಚೋರ ನಿಂದಿಸಿ ಶಶಿಯ ಬೈದಡೆ
ಕ್ಷೀರವನು ಕ್ಷಯರೋಗಿ ಹಳಿದರೆ
ವಾರಣಾಸಿಯ ಹೆಳವ ನಿಂದಿಸಿ ನಕ್ಕರೇನಹುದು
ಭಾರತ ಕಥನ ಪ್ರಸಂಗವ
ಕ್ರೂರ ಕರ್ಮಿಗಳೆತ್ತ ಬಲ್ಲರು
ಘೋರರೌರವವನ್ನು ಕೆಡಿಸುಗು ಕೇಳ್ದ ಸಜ್ಜನರ ॥22॥
೦೨೩ ವೇದಪುರುಷನ ಸುತನ ...{Loading}...
ವೇದ-ಪುರುಷನ +++(ನಾರಾಯಣನ)+++ ಸುತನ +++(ಬ್ರಹ್ಮನ)+++ ಸುತನ +++(ನಾರದನ)+++ ಸ-
ಹೋದರನ +++(ಮರೀಚಿಯ)+++ ಹೆಮ್ಮಗನ+++(=ಮಮ್ಮಗನ)+++ +++(ಇಂದ್ರನ)+++ ಮಗನ +++(ಅರ್ಜುನನ)+++ ತ-
ಳೋದರಿಯ+++(=ಹೆಂಡತಿಯ [ಸುಭದ್ರೆಯ])+++ ಮಾತುಳನ +++(ಕಂಸನ)+++ ಮಾವನನ್ +++(ಜರಾಸಂಧನನ್ನು)+++ ಅತುಳ-ಭುಜ-ಬಲದಿ
ಕಾದಿ ಗೆಲಿದನನ್ +++(ಭೀಮಸೇನನ)+++ ಅಣ್ಣನ್ +++(ಧರ್ಮಜನ)+++ ಅವ್ವೆಯ +++(ಕುಂತಿಯ)+++
ನಾದಿನಿಯ+++(=ಪತಿ-ಸ್ವಸೆಯ)+++ +++(ದೇವಕಿಯ)+++ ಜಠರದಲಿ ಜನಿಸಿದ್
ಅನಾದಿ-ಮೂರುತಿ ಸಲಹೊ ಗದುಗಿನ ವೀರನಾರಯಣ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೇದಪುರುಷನಾದ ನಾರಾಯಣನ ಮಗನಾದ ಬ್ರಹ್ಮನ, ಅವನ ಮಗ ನಾರದನ, ಅವನ ಅಣ್ಣ ಮರೀಚಿಯ, ಅವನ ಮೊಮ್ಮಗ ಇಂದ್ರನ, ಅವನ ಮಗ ಅರ್ಜುನನ, ಅವನ ಹೆಂಡತಿ ಸುಭದ್ರೆಯ, ಅವಳ ಸೋದರ ಮಾವ ಕಂಸನ, ಅವನ ಮಾವನಾದ ಜರಾಸಂಧನನ್ನು ಅತ್ಯಂತ ಶೌರ್ಯದಿಂದ ಕಾದಾಡಿ ವಿಜಯಿಯಾದ ಭೀಮಸೇನನ, ಅವನ ಅಣ್ಣನಾದ ಧರ್ಮಜನ, ಅವನ ತಾಯಿ ಕುಂತಿಯ, ಅವಳ ನಾದಿನಿ ದೇವಕಿಯ ಗರ್ಭದಲ್ಲಿ ಹುಟ್ಟಿದ ಅನಾದಿ ಮೂರುತಿಯಾದ ಗದುಗಿನ ವೀರನಾರಾಯಣನೆ ಕಾಪಾಡು.
ಪಾಠಾನ್ತರ (ಕ.ಗ.ಪ)
*[ಹೆಮ್ಮಗನ] - [ಮೊಮ್ಮಗನ]
**[ರೂಪನನ] - [ಮಾವನನ (ಆ) (ಇ)]
- ಕನ್ನಡ ಸಾಹಿತ್ಯ ಪರಿಷತ್ತಿನ ಕೆ.17 ಸಂಖ್ಯೆಯ ಕುಮಾರವ್ಯಾಸ ಭಾರತದ ಓಲೆ ಪ್ರತಿಯಲ್ಲಿ, ಅದರ ಮೊದಲ ಗರಿಯಲ್ಲಿ ಎರಡನೆಯ ಪದ್ಯವಾಗಿರುವ ಈ ಪದ್ಯದಲ್ಲಿ ಈ ಪಾಠಾಂತರ ಇದೆ ‘ಮೊಮ್ಮಗನ’ ಎಂದಾಗಿರುವುದು ವಿಚಾರ ಯೋಗ್ಯವಾದ ಒಂದು ವ್ಯತ್ಯಾಸ. (ನೋಡಿ -ಶಾಸ್ತ್ರೀಯ-1 ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ ಪುಟ 171-172)
** ‘ರೂಪನನ’ ಅರ್ಥಕ್ಕೆ ಸರಿಕೂಡದು ಆದ್ದರಿಂದ ಇದು ಅಪಪಾಠ. ‘ಮಾವನನ’ ಎಂಬುದೇ ಅರ್ಥಕ್ಕೆ ಒಪ್ಪುವ ಸರಿಯಾದ ಪಾಠ (ನೋಡಿ ಶಾಸ್ತ್ರೀಯ-1 ಡಾ. ಟಿ.ವಿ.ವಿ. ಮೇಲಿನಂತೆ)
ಟಿಪ್ಪನೀ (ಕ.ಗ.ಪ)
ಮೊಮ್ಮಗ ಇಂದ್ರ- ಮರೀಚಿಯ ಮಗ ಕಶ್ಯಪ , ಅವನ ಮಗ ಇಂದ್ರ
ಮೂಲ ...{Loading}...
ವೇದಪುರುಷನ ಸುತನ ಸುತನ ಸ
ಹೋದರನ ಹೆಮ್ಮಗನ ಮಗನ ತ
ಳೋದರಿಯ ಮಾತುಳನ ಮಾವನನತುಳ ಭುಜಬಲದಿ
ಕಾದಿ ಗೆಲಿದನನಣ್ಣನವ್ವೆಯ
ನಾದಿನಿಯ ಜಠರದಲಿ ಜನಿಸಿದ
ನಾದಿ ಮೂರುತಿ ಸಲಹೊ ಗದುಗಿನ ವೀರನಾರಯಣ ॥23॥