स्रोतः - द्वैतप्रतिष्ठाने हृषीकेशः
(नात्रास्मत्प्रतिपत्तिः)
ಸಂಕರಾತ್ ಸಂಕರೋದಯಃ…
ವೇದಾಂತದೇಶಿಕರ ನುಡಿ
ವಿಶಿಷ್ಟಾದ್ವೈತಮತದ ಪ್ರಸಿದ್ಧಗ್ರಂಥಕಾರರು, ರಾಮಾನುಜಾಚಾರ್ಯರ ನಂತರ ಅವರಂತೆ ವಿಶಿಷ್ಟಸ್ಥಾನ ಪಡೆದವರು ವೇದಾಂತದೇಶಿಕರು. ಇವರನ್ನು ನಿಗಮಾಂತದೇಶಿಕರು ಎಂದೂ ಕರೆಯಲಾಗುತ್ತದೆ. ಅನೇಕ ವ್ಯಾಖ್ಯಾನಗಳನ್ನು, ಸ್ವತಂತ್ರಗ್ರಂಥಗಳನ್ನೂ ರಚಿಸಿದ್ದಾರೆ. ಅವರು ರಚಿಸಿದ ‘ನ್ಯಾಯಸಿದ್ಧಾಂಜನಮ್’ ಎಂಬ ಗ್ರಂಥದಲ್ಲಿ, ಗದ್ಯ ರೂಪದಲ್ಲಿ ವಿಷಯಗಳನ್ನು ನಿರೂಪಣೆ ಮಾಡುವಾಗ, ಮಧ್ಯ ಮಧ್ಯದಲ್ಲಿ ಶ್ಲೋಕ ರೂಪದಲ್ಲಿಯೂ ವಿಷಯವನ್ನು ತಿಳಿಸಿದ್ದಾರೆ.
ಅದರಲ್ಲಿ ಅದ್ವೈತಮತದ ವಿಷಯ ನಿರಾಕರಣೆ ಮಾಡುವಾಗ ಬರುವ ಒಂದು ಶ್ಲೋಕ, ಹಾಗೂ ಅದರ ಅವತಾರಿಕೆ ಹೀಗಿದೆ -
अत्रान्तिमयुगवेदान्तिनामभिजन्मरहस्यं प्रकाशयामः । साङ्ख्यसौगतचार्वाक- सङ्करात् सङ्करोदयः । दूषणान्यपि तान्यत्र पुनस्तदधिकानि च ।।
(ईश्वरपरिच्छेदे, “ब्रह्मणि प्रपञ्चाध्यासनिरासे” ऽन्ते)
ಅತ್ರಾಂತಿಮಯುಗವೇದಾಂತಿನಾಮಭಿಜನ್ಮರಹಸ್ಯಂ ಪ್ರಕಾಶಯಾಮಃ । ಸಾಂಖ್ಯಸೌಗತಚಾರ್ವಾಕ- ಸಂಕರಾತ್ ಸಂಕರೋದಯಃ । ದೂಷಣಾನ್ಯಪಿ ತಾನ್ಯತ್ರ ಪುನಸ್ತದಧಿಕಾನಿ ಚ ।।
ಇಲ್ಲಿ ಅಂತಿಮಯುಗವೇದಾಂತ ಎಂದರೆ ಕಲಿಯುಗದಲ್ಲಿ ಬಂದ ಅದ್ವೈತ ವೇದಾಂತ. ಆ ವೇದಾಂತಿಗಳ ಜನ್ಮರಹಸ್ಯವನ್ನು ಪ್ರಕಾಶಪಡಿಸುತ್ತೇವೆ ಎಂದು ಹೇಳಿ ಈ ಶ್ಲೋಕವನ್ನು ಬರೆದಿದ್ದಾರೆ.
ನೋಡಿ, ಸ್ಪಷ್ಟವಾಗಿ ಶಂಕರಮತೋದಯವನ್ನು ಸಂಕರೋದಯ ಎಂದು ಹೇಳಿದ್ದಾರೆ. ಜೊತೆಗೆ ಸಾಂಖ್ಯ, ಬೌದ್ಧ, ಚಾರ್ವಾಕ ಮತಗಳ ಸಾಂಕರ್ಯದಿಂದ ಸಂಕರ ಉದಯ ಎಂದು ಹೇಳಲಾಗಿದೆ.
ಸಾಂಕರ್ಯಮಾಡಿದ್ದರಿಂದ ಸಂಕರ ಎಂದು ವೇದಾಂತ ದೇಶಿಕರು ಹೇಳಿದ್ದಾರೆ. ಪಂಡಿತಾಚಾರ್ಯರು ಕೂಡ ಸಾಂಕರ್ಯ ಮಾಡಿದ್ದರಿಂದ ಸಂಕರ ಎಂದು ತಿಳಿಸಿದ್ದಾರೆ. ‘ಸಂಕರತಾಕರಃ ಸ ಕಿಲ ಸಂಕರಃ’ ಎಂದು.
1268 ರ ಆಸುಪಾಸಿನಲ್ಲಿ ಬಂದವರು ವೇದಾಂತ ದೇಶಿಕರು. ಪಂಡಿತಾಚಾರ್ಯರ ಕಾಲವೂ ಹೆಚ್ಚು ಕಡಿಮೆ ಇದರ ಆಸುಪಾಸಿನಲ್ಲಿ ಬರುವುದರಿಂದ, ತತ್ಕಾಲದಲ್ಲಿ ಸಂಕರ ಎಂದು ಎಲ್ಲರೂ ಕರೆಯುತ್ತಿದ್ದರು ಎಂದು ಸ್ಪಷ್ಟವಾಗಿ ತಿಳಿಯುತ್ತದೆ.
ಜೊತೆಗೆ ‘ಅಂತಿಮಯುಗವೇದಾಂತಿನಾಮ್ ಅಭಿಜನ್ಮರಹಸ್ಯಂ’ ಎಂದು ಹೇಳುವ ಮೂಲಕ ಶಂಕರರ ಜನನದ ಹಿಂದಿನ ರಹಸ್ಯವನ್ನು ಸೂಚನೆ ಮಾಡಿದಂತೆ ಇದೆ.
ಗಮನಿಸಿ - ರಾಮಾನುಜರು ‘ಅನಾದಿಪಾಪವಾಸನಾದೂಷಿತಾಶೇಷಶೇಮುಷೀಕ’ ಎಂದರು. ವೇದಾಂತ ದೇಶಿಕರು ಜನ್ಮರಹಸ್ಯ ‘ಸಂಕರ’ ಎಂದು ಹೇಳಿದರು.
ವೇದಾಂತದೇಶಿಕರು ಇತಿಹಾಸ ತಿಳಿಸುವಾಗಲೋ, ಕಾವ್ಯದಲ್ಲಿಯೋ ಈ ವಿಷಯ ಹೇಳಿದ್ದಲ್ಲ, ಶಾಸ್ತ್ರೀಯ ಗ್ರಂಥದಲ್ಲಿ ನಿರೂಪಣೆ ಮಾಡಿದ್ದಾರೆ.
ಈ ಗ್ರಂಥವು ವಿಶಿಷ್ಟಾದ್ವೈತಮತದಲ್ಲಿ ಇವತ್ತಿಗೂ ಪಾಠ ಪ್ರವಚನದಲ್ಲಿ ಇದೆ.
ಇದರ ಬಗ್ಗೆ ಕಿಂಕರರು ಬಾಯಿಂದ ಒಂದಕ್ಷರ ಮಾತನಾಡುವುದಿಲ್ಲ. ಸಂಕರ ಎಂದು ಹೇಳಿದರೆ ಅದೇನೋ ಪ್ರತಿಭಟನೆ ಮಾಡುತ್ತೇವೆ ಅಂತ ಯಾರೋ ಬರೆದಿದ್ದರು. ಪಾವಗಡ ಪ್ರಕಾಶ್ ಅವರು ಮಾಧ್ವರು ಶಂಕರರನ್ನು ನಿಂದನೆ ಮಾಡುತ್ತಾರೆ ಎಂದು, ಅಸಂಬದ್ಧವಾಗಿ ಅಪ್ರಬುದ್ಧವಾಗಿ ಅಪ್ರಾಮಾಣಿಕವಾಗಿ ಅಸಂಗತವಾಗಿ ಅಷ್ಟುದ್ದ ವಿಡಿಯೋದಲ್ಲಿ ಮಾತನಾಡಿದ್ದರಲ್ಲವೇ? ಇದರ ಬಗ್ಗೆಯೂ ಮಾತನಾಡಲಿ. ವೇದಾಂತ ದೇಶಿಕರನ್ನು ಕುರಿತು ಕಿಂಕರರು ಅಶ್ಲೀಲವಾಗಿ ಕಮೆಂಟ್ ಯಾಕೆ ಹಾಕುವುದಿಲ್ಲ…?
ಇದರಿಂದ ತಿಳಿಯುವುದು ಈ ಮಾಯಾವಾದಿಕಿಂಕರರು ಕೇವಲ ಮಾಧ್ವರ ದ್ವೇಷ ಮಾಡುವವರು ಎಂದು.
ವಿವೇಕಿಗಳ ಗಮನಕ್ಕೆ. ವೇದಾಂತ ದೇಶಿಕರ ಕಾಲದಲ್ಲಿ ಸಂಕರ ಎಂದು ಹೇಳುತ್ತಿದ್ದರು ಎಂದ ಮೇಲೆ, ಇದು ಕೇವಲ ಮಾಧ್ವರ ಪಂಡಿತಾಚಾರ್ಯರ ಕಪೋಲಕಲ್ಪನೆ ಅಲ್ಲ. ವಸ್ತುಸ್ಥಿತಿಯನ್ನೇ ಮಾಧ್ವರು ಹೇಳುತ್ತಿರುವುದು ಎಂದು ಸ್ಪಷ್ಟವಾಗುತ್ತದೆ.
ವೇದಾಂತದೇಶಿಕರ ಮಾತನ್ನು ನೋಡುವಾಗ, ತತ್ಕಾಲದಲ್ಲಿ ಸತ್ಯವಾದ ವಿಷಯಗಳನ್ನು ಮುಚ್ಚಿ ಹಾಕುವ ಕುತಂತ್ರ ನಡೆದಿರಬಹುದು. ಅದಕ್ಕಾಗಿ ರಹಸ್ಯವನ್ನು ಪ್ರಕಾಶಪಡಿಸುವುದಾಗಿ ತಿಳಿಸಿದ್ದಾರೆ.
ಅಬ್ಬಾ, ಪಂಡಿತಾಚಾರ್ಯರದ್ದು ಅದೆಂತಹ ನಿರ್ದುಷ್ಟ ವಿಮರ್ಶೆ, ಸಜ್ಜನರಿಗೆ ಸತ್ಯ ತಿಳಿಸಬೇಕು, ಅವರು ದಾರಿ ತಪ್ಪಬಾರದು ಎಂದು ಅದೆಷ್ಟು ಕಾಳಜಿ, ಅದೆಂತಹ ಇತಿಹಾಸ ಪ್ರಜ್ಞೆ… ಆಶ್ಚರ್ಯವಾಗುತ್ತದೆ.
ಪಾಪ, ಕಿಂಕರರು ಬೇಸರ ಮಾಡುವುದು ಬೇಡ ಎಂದು ಸಾಮಾಜಿಕವಾಗಿ ಶಂಕರ ಎಂದು ನಾವು ಹೇಳಿದರೂ ಮೂರು ಬಿಟ್ಟು ಅನಾವಶ್ಯಕವಾಗಿ ಮಾಧ್ವರ ನಿಂದನೆ ಮಾಡುತ್ತಿರುವುದರಿಂದ, ಸತ್ಯ ತಿಳಿಸುವುದಕ್ಕೆ ವಿವೇಕಿಗಳು ಯಾವತ್ತೂ ಹಿಂಜರಿಯಬಾರದು.
ಹಾಗಾಗಿ ಸಂಕರ ಎಂದು ಮಾಧ್ವರು ಮಾತ್ರ ಕರೆದದ್ದಲ್ಲ. ರಾಮಾನುಜಮತದವರೂ ಕರೆದಿದ್ದಾರೆ. ಆದ್ದರಿಂದ ಎಷ್ಟು ಜನ್ಮ ಎತ್ತಿದರೂ ಸತ್ಯವನ್ನು ಯಾರಿಂದಲೂ ಅಳಿಸಲಾಗಿದು.. ಪಂಡಿತಾಚಾರ್ಯರ ಗ್ರಂಥಗಳ ಪ್ರಾಮಾಣ್ಯವನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ.
ಹೃಷೀಕೇಶ ಮಠದ
॥ श्रीश्रीशभक्तो जयति मध्वो विध्वस्तसाध्वसः ॥
आकरलाभात् पूर्वं कृतः पाठपरिवर्तनशाठ्योपन्यासः (द्रष्टुं नोद्यम्)
ಅಬ್ಬಬ್ಬಾ ಎಂತಹ ಮೋಸಗಳು.. ಮೊದಲು ಬರೆಯುವುದು, ಆಮೇಲೆ ಅಳಿಸುವುದು, ಬದಲಾಯಿಸುವುದು ಎಂತಹ ದುರಂತ ಇದೆಲ್ಲಾ.. ಅದೇರೀತಿ ವಿಶಿಷ್ಟಾದ್ವೈತ ಮತದವರು ಸಂಕರೋದಯ ಎಂಬುದರ ಜಾಗದಲ್ಲಿ ಶಂಕರೋದಯ ಎಂಬ ಪಾಠವನ್ನು ಕಲ್ಪನೆ ಮಾಡಿ, ಸಂಭಾವಿತರಾಗುವ ಪ್ರಯತ್ನ ಮಾಡಿದಂತಿದೆ. …ವಸ್ತುತಃ ಈ ಬದಲಾವಣೆಗೆ ಹೀಗೊಂದು ಕಾರಣ ಇರಬಹುದು… ಹಾಗಾಗಿ ಆನಂತರ ಬದಲಾವಣೆ ಮಾಡಿ ಪ್ರಿಂಟ್ ಮಾಡಿರಬೇಕು. … ಕಾಲಕ್ರಮೇಣ ಯಾರೋ ಮಹಾಜ್ಞಾನಿಗಳು ತಿರುಚುವ ಪ್ರಯತ್ನ ಮಾಡಿದ್ದಾರೆ. … ಆ ರೀತಿಯಲ್ಲಿ ಮಾಧ್ವರು ಯಾವತ್ತೂ ತಿರುಚುವ ಕೆಲಸ ಮಾಡಿಲ್ಲ.
ಸಂಕರಾತ್ ಸಂಕರೋದಯಃ…
ಇದು ವೇದಾಂತದೇಶಿಕರ ಮಾತು ಎಂಬುದು ಅದ್ವೈತ ವಿದ್ವಾಂಸರಿಗೂ ಸಮ್ಮತ.
ಹೃಷೀಕೇಶ ಮಠದ ಅವರ ಈ ಮಾತಿಗೆ ಆಧಾರವಿಲ್ಲ ಎಂದು ಕಿಂಕರರ ಆಕ್ಷೇಪ.
ಆದರೆ ನನ್ನ ನಿರೂಪಣೆಗೆ ಅದ್ವೈತ ಮತದ ವಿದ್ವಾಂಸರದ್ದೇ ಸಮ್ಮತಿ ಇದೆ.
ಮಹಾಮಹೋಪಾಧ್ಯಾಯ ಬಿರುದಾಂಕಿತರಾದ, ಅದ್ವೈತ ಮತದ ಅನೇಕ ಗ್ರಂಥಗಳನ್ನು ರಚನೆ ಮಾಡಿದ, ವಿಶೇಷವಾಗಿ ವೇದಾಂತದೇಶಿಕರ ಶತದೂಷಣಿಯನ್ನು ವಿಮರ್ಶೆ ಮಾಡಿದ ಅನಂತಕೃಷ್ಣ ಶಾಸ್ತ್ರಿಗಳು ಅದ್ವೈತತತ್ತ್ವಸುಧಾ ಎಂಬ ಗ್ರಂಥವನ್ನು ಬರೆದಿದ್ದಾರೆ. ಅದರ ಎರಡನೇ ಭಾಗದಲ್ಲಿ ವಿಶಿಷ್ಟಾದ್ವೈತ ಮತದ ವಿಮರ್ಶೆ ಮಾಡಿದ್ದಾರೆ. ಅಲ್ಲಿ ಪರಕಾಲಮಠದವರು ಬರೆದ ತತ್ತ್ವಸುಧಾ ಗ್ರಂಥವನ್ನು ವಿಮರ್ಶೆ ಮಾಡುವಾಗ, ವೇದಾಂತದೇಶಿಕರ ಈ ವಚನದ ಬಗ್ಗೆ ಬರೆದಿದ್ದಾರೆ.
ವಸ್ತುತಃ ತತ್ತ್ವಸುಧಾ ಗ್ರಂಥವನ್ನು ಬರೆದವರು ವಿಶಿಷ್ಟಾದ್ವೈತಮತದವರು. ಬೌದ್ಧ ಅದ್ವೈತ ಸಾಮ್ಯ ಹೇಳುವಾಗ ಈ ಶ್ಲೋಕ ಉಲ್ಲೇಖ ಮಾಡಿದ್ದಾರೆ. ಆದರೆ ಅವರೂ ವ್ಯಾಖ್ಯಾನದ ಪುಸ್ತಕ ದಲ್ಲಿರುವಂತೆ, ಸಂಕರಾತ್ ಶಂಕರೋದಯಃ ಎಂದು ಬರೆದಿದ್ದಾರೆ.
ಈಗ ಕಿಂಕರರಿಗೆ ಆನಂದವಾಗಬಹುದು. ಆದರೆ ಇದನ್ನು ವಿಮರ್ಶೆ ಮಾಡುವಾಗ ಅನಂತಕೃಷ್ಣ ಶಾಸ್ತ್ರಿಗಳು ಹೇಳುತ್ತಾರೆ -
इदमेवात्र प्रमोदस्थानम् । तत्त्वसुधेयं निगमान्तदेशिकमपि, तदीयसङ्करोदय इति पाठस्थाने शङ्करोदय इति पाठकल्पनया दण्डयति ।
ಇದಮೇವಾತ್ರ ಪ್ರಮೋದಸ್ಥಾನಮ್ । ತತ್ತ್ವಸುಧೇಯಂ ನಿಗಮಾಂತದೇಶಿಕಮಪಿ, ತದೀಯಸಂಕರೋದಯ ಇತಿ ಪಾಠಸ್ಥಾನೇ ಶಂಕರೋದಯ ಇತಿ ಪಾಠಕಲ್ಪನಯಾ ದಂಡಯತಿ ।
ಇದರ ತಾತ್ಪರ್ಯ - ಇದೇ ನಮಗೆ ಸಂತೋಷದ ವಿಷಯ. ತತ್ತ್ವಸುಧಾ ಎಂಬೀ ಗ್ರಂಥವು ವೇದಾಂತದೇಶಿಕರನ್ನು ಕೂಡ ದಂಡನೆ ಮಾಡುತ್ತದೆ., ಅವರ ಸಂಕರೋದಯ ಎಂಬ ಪಾಠದ ಜಾಗದಲ್ಲಿ ಶಂಕರೋದಯ ಎಂಬ ಪಾಠವನ್ನು ಕಲ್ಪನೆ ಮಾಡುವ ಮೂಲಕ ತತ್ತ್ವಸುಧಾ ಗ್ರಂಥವು ವೇದಾಂತದೇಶಿಕರನ್ನು ದಂಡಿಸುತ್ತದೆ ಎಂದು ಹಾಸ್ಯ ಮಾಡಿದ್ದಾರೆ.
ಅಂದರೆ ಅನಂತಕೃಷ್ಣ ಶಾಸ್ತ್ರಿಗಳ ಪ್ರಕಾರ ಸಂಕರೋದಯ ಎಂದೇ ವೇದಾಂತ ದೇಶಿಕರ ಪಾಠ, ಇವರು ಬೇರೆ ಪಾಠ ಕಲ್ಪನೆ ಮಾಡಿ, ವೇದಾಂತ ದೇಶಿಕರನ್ನೇ ದಂಡಿಸುತ್ತಾರೆ ಎಂದು. ಮೂಲಗ್ರಂಥದ ಪಾಠವನ್ನು ಬದಲಾಯಿಸುವವರು ವ್ಯಾಖ್ಯಾನ ಪಾಠವನ್ನೂ ಬದಲಾಯಿಸುವುದರಲ್ಲಿ ಆಶ್ಚರ್ಯ ಇಲ್ಲ.
ಈ ಹಿಂದೆ ಮಾಯಾವಾದಿಗಳು ಗೋಚರಂ ಅಪೋದಿತುಂ ಇತ್ಯಾದಿ ಶಬ್ದಗಳ ವಿಷಯದಲ್ಲಿ, ಮೊದಲು ಅವನ್ನು ತಪ್ಪು ಎಂದು, ಆ ನಂತರ ತಮ್ಮ ಗ್ರಂಥದಲ್ಲಿಯೇ ಪ್ರಯೋಗ ಇರುವಾಗ, ಅದನ್ನು ತಿರುಚುವ ಸಾಹಸ ಮಾಡಿದ್ದನ್ನು ನೋಡಿದ್ದೇವೆ.
ಅದೇರೀತಿ ವಿಶಿಷ್ಟಾದ್ವೈತ ಮತದವರು ಸಂಕರೋದಯ ಎಂಬುದರ ಜಾಗದಲ್ಲಿ ಶಂಕರೋದಯ ಎಂಬ ಪಾಠವನ್ನು ಕಲ್ಪನೆ ಮಾಡಿ, ಸಂಭಾವಿತರಾಗುವ ಪ್ರಯತ್ನ ಮಾಡಿದಂತಿದೆ.
ವಸ್ತುತಃ ಈ ಬದಲಾವಣೆಗೆ ಹೀಗೊಂದು ಕಾರಣ ಇರಬಹುದು -
ವೇದಾಂತದೇಶಿಕರ ಈ ಶ್ಲೋಕದ ಖಂಡನೆಗೆ ಅದ್ವೈತಿಗಳ ಒಂದು ಶ್ಲೋಕ ಇದೆ -
साङ्ख्य-सौगत-चार्वाक-सङ्कराद् अन्त्यजोदयः । दूषणान्य् अपि तान्य् अत्र पुनस् तद्-अधिकानि च ।।
ಇಲ್ಲಿ ರಾಮಾನುಜ ಮತವನ್ನು ಅಂತ್ಯಜೋದಯ ಎಂದು ಕರೆದಿದ್ದಾರೆ.
ಗಮನಿಸಬೇಕಾದ ಅಂಶ
ಸಂಕರಾತ್ ಅಂತ್ಯಜೋದಯ ಎನ್ನುವಲ್ಲಿ ಸಾಂಕರ್ಯಕ್ಕೆ ಅನುಗುಣವಾಗಿ ಅಂತ್ಯಜಶಬ್ದ ಬಳಸಬೇಕಾದರೆ,
ವೇದಾಂತದೇಶಿಕರ ನುಡಿಯಲ್ಲಿಯೂ ಸಾಂಕರ್ಯಶಬ್ದಕ್ಕೆ ಅನುಗುಣವಾಗಿ ಸಂಕರ ಎಂದು ಬಳಸಿರುವುದು ಕಾರಣವಾಗಿರಬೇಕಲ್ಲವೇ?
ಇದರಿಂದ ಬೇಸರ ಮಾಡಿಕೊಂಡು, ಇದನ್ನು ತಪ್ಪಿಸಲು ಸಂಕರಾತ್ ಶಂಕರೋದಯಃ ಎಂದು ಬದಲಾಯಿಸಿರಬೇಕು.
ಆದರೆ ಅನಂತಕೃಷ್ಣಶಾಸ್ತ್ರಿಗಳು ಮಾತ್ರ ತಮ್ಮ ಗ್ರಂಥದಲ್ಲಿ, ಮೊದಲಿನ ವೇದಾಂತದೇಶಿಕರ ಪಾಠವನ್ನೇ ದಾಖಲೆ ಮಾಡುವ ಮೂಲಕ ಅದನ್ನು ಮುಚ್ಚಿಡದಂತಾಗಿದೆ.
ವಸ್ತುತಃ ಅನಂತಕೃಷ್ಣಶಾಸ್ತ್ರಿಗಳೇ ಕೆಲವು ಕಡೆ ಈ ಶ್ಲೋಕ ಉಲ್ಲೇಖ ಮಾಡುವಾಗ, ಸಂಕರಾತ್ ಶಂಕರೋದಯಃ ಎಂದು ಬರೆದಿದ್ದಾರೆ. ಆದರೆ ಅದ್ವೈತ ತತ್ತ್ವಸುಧಾಗ್ರಂಥದಲ್ಲಿ ಸ್ಪಷ್ಟವಾಗಿ ಸಂಕರಾತ್ ಸಂಕರೋದಯಃ ಎಂಬುದು ವೇದಾಂತದೇಶಿಕರ ಪಾಠ, ಶಂಕರೋದಯ ಎಂಬುದು ಕಲ್ಪಿತ ಪಾಠ ಎಂದು ಬರೆದಿದ್ದಾರೆ.
ಅಂದರೆ ಬದಲಾವಣೆ ಆಗುವ ಪ್ರಸಂಗಕ್ಕೆ ಅನುಗುಣವಾಗಿ ಎರಡು ರೀತಿಯಲ್ಲಿ ಬರೆಯಬೇಕಾಯಿತೋ ಏನೋ.
1976 ರಲ್ಲಿ “ನ್ಯಾಯಸಿದ್ಧಾಂಜನ” ಗ್ರಂಥದ ವ್ಯಾಖ್ಯಾನ ಸಹಿತವಾದ ಪುಸ್ತಕ ಪ್ರಕಟವಾಗಿದೆ. “ಅದ್ವೈತ ತತ್ತ್ವಸುಧಾ” ಪ್ರಕಟವಾದದ್ದು 1962 ರಲ್ಲಿ. ಹಾಗಾಗಿ ಆನಂತರ ಬದಲಾವಣೆ ಮಾಡಿ ಪ್ರಿಂಟ್ ಮಾಡಿರಬೇಕು.
विस्तारः (द्रष्टुं नोद्यम्)
“ಅನಂತಕೃಷ್ಣ ಶಾಸ್ತ್ರಿಗಳು ಸ್ಪಷ್ಟವಾಗಿ ಸಂಕರೋದಯ ಎಂಬುದು ವೇದಾಂತ ದೇಶಿಕರ ಪಾಠವೆಂದು ಬರೆದಿದ್ದಾರೆ. ಶಂಕರೋದಯ ಎಂದು ಕಲ್ಪಿತ ಪಾಠ ಎಂದು ಬರೆದಿದ್ದಾರೆ. ಹಾಗಾಗಿ ಇಲ್ಲಿ ಯಾವುದು ಶಾಠ್ಯೋಪನ್ಯಾಸ ?” ಇತ್ಯತ್ರ ತು ತಸ್ಯಾನನ್ತಕೃಷ್ಣಶಾಸ್ತ್ರಿಣೋ ಭವತೋಽಪ್ಯ್ ಅಧಿಕೋತ್ಸಾಹ ಏವ. ಗ್ರನ್ಥರಕ್ಷಾವೇಲಾಯಾಮ್ ಅನುಲೇಖನೇ ಽಕ್ಷರಸ್ಖಾಲಿತ್ಯಂ ಸಹಜಂ ಸಾರ್ವತ್ರಿಕಮ್. ತತ್ರ ವ್ಯಾಖ್ಯಾತಾ ಕೃಷ್ಣತಾತದೇಶಿಕಶ್ ಚ ೨೦೦ವರ್ಷೇಭ್ಯಃ ಪೂರ್ವಮ್ ಏವಾವರ್ತತ.
ಏವಂಚ ೧೯೦೧ ಇತಿ ವರ್ಷ ಏವ ಪ್ರಕಾಶಿತಸ್ಯ ಗ್ರನ್ಥಸ್ಯ “1976 ರಲ್ಲಿ “ನ್ಯಾಯಸಿದ್ಧಾಂಜನ” ಗ್ರಂಥದ ವ್ಯಾಖ್ಯಾನ ಸಹಿತವಾದ ಪುಸ್ತಕ ಪ್ರಕಟವಾಗಿದೆ. …ಹಾಗಾಗಿ ಆನಂತರ ಬದಲಾವಣೆ ಮಾಡಿ ಪ್ರಿಂಟ್ ಮಾಡಿರಬೇಕು.” ಇತ್ಯಾದಿ ವಚನಮ್ ಭ್ರಮಾಸ್ಪದಮ್ ಏವ.
ರಜ್ಜುಸ್ ಸರ್ಪ ಇತಿ ಭ್ರಮೇ ಜಾತೇ, ಪಶ್ಚಾಚ್ಚ ನಿವಾರಿತೇ, ತದಂಗೀಕಾರ ಏವ ವರಃ, ತಸ್ಯ ಸ್ಥಾನೇ “ನ ಕಶ್ಚನ ಮೇ ದೋಷ” ಇತಿ ಖ್ಯಾಪನಮ್ ಅವರಮ್ ಇತಿ ಚ ಸ್ವಾಭಿಪ್ರಾಯಃ.
ಗಮನಿಸಿ.
ವಿಶಿಷ್ಟಾದ್ವೈತ ಮತದವರು ಸಂಕರೋದಯ ಎನ್ನುವುದು, ಅದ್ವೈತಮತದವರು ಅಂತ್ಯಜೋದಯ ಎನ್ನುವುದು. ಇಬ್ಬರೂ ಸಾಂಕರ್ಯ ಹೇಳುವುದು.
ಮತ್ತೆ ಮಾಧ್ವರು ನಿಂದಕರು ಎಂದು ಅರಚುವುದು.
ಇನ್ನು ವೇದಾಂತದೇಶಿಕರು ಕೆಲವು ಕಡೆ ಶಂಕರ ಎಂದು ಬರೆದಿದ್ದಾರೆ ಹಾಗಾಗಿ ಇಲ್ಲಿಯೂ ಶಂಕರೋದಯ ಎಂದೇ ಇರಬೇಕು, ಎಂದು ಆಕ್ಷೇಪ ಮಾಡುವುದಿದೆ. ಆದರೆ ಇದು ಸರಿಯಲ್ಲ. ಯಾಕೆಂದರೆ ಕಿಂಕರರೇ ಹೇಳುವಂತೆ, ವೇದಾಂತದೇಶಿಕರು ಒಂದು ಕಡೆ ಶಂಕರರನ್ನು ಪ್ರಚ್ಛನ್ನಬೌದ್ಧ ಎಂದು ನಿಂದಿಸುತ್ತಾರೆ. ಒಂದೆಡೆ ವಿಷ್ಣು ಭಕ್ತ ಎಂದು ಕರೆಯುತ್ತಾರೆ ಎಂದ ಮೇಲೆ,+++(5)+++ ಒಂದು ಕಡೆ ಸಂಕರ, ಇನ್ನೊಂದು ಕಡೆ ಶಂಕರ ಎಂದು ಬರೆದಿದ್ದಾರೆ ಎಂದು ತಿಳಿಯುವುದು.
विस्तारः (द्रष्टुं नोद्यम्)
ಗೀತಾಭಾಷ್ಯೇ ದೇಶಿಕಃ -
पिशाचरन्तिदेवगुप्त-शङ्कर-यादवप्रकाशभास्करनारायणार्ययज्ञस्वामिप्रभृतिभिः स्वं स्वं मतमास्थितैः परश्शतैर्भाष्यकृद्भिः अस्मत्सिद्धान्ततीर्थकरैश्च भगवद्यामुनाचार्यभाष्यकारादिभिरविगीतपरिगृहीतोऽयमत्र सारार्थः – भगवानेव परं तत्त्वम् । अनन्यशरणैर्यथाधिकारं तदेकाश्रयणं परमधर्मः इति।
ಅತ್ರ ತು ಶಂಕರಾಭಿಪ್ರಾಯೇ “भगवानेव परं तत्त्वम्” ಇತ್ಯತ್ರ ಕೋ ಭಗವಾನ್, ವಿಷ್ಣುರ್ ಏವ ವೇತಿ ಸ್ಪಷ್ಟಂ ನಾಸ್ತಿ. ಏತಾವನ್ಮಾತ್ರೇಣ ವೇಂಕಟನಾಥಾರ್ಯೇಣ ಶಂಕರೋ ವಿಷ್ಣುಭಕ್ತ ಇತಿ ವಚನಮ್ ಅನುಕ್ತಾಂಶಪೂರಣಸಾಹಾಸವದ್ ಭಾತಿ.
ಜೊತೆಗೆ ಇದೇ ವೇದಾಂತದೇಶಿಕರು ಇದೇ ನ್ಯಾಯಸಿದ್ಧಾಂಜನದಲ್ಲಿ ‘ನಿರ್ಲಜ್ಜೈರನಿರ್ವಾಚ್ಯತ್ವಮುಚ್ಯತೇ’ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲ, ಇದೇ ವೇದಾಂತದೇಶಿಕರು ತಮ್ಮ ತತ್ವಮುಕ್ತಾಕಲಾಪದಲ್ಲಿ ಒಂದು ಶ್ಲೋಕದಲ್ಲಿ ಮಾಯಾವಾದಿಗಳ ಅಸುರತ್ವದ ಬಗ್ಗೆ ಹೇಳಿದ್ದಾರೆ –
ಆತಸ್ತ್ರೈವಿದ್ಯಡಿಂಭಾನ್ ಗ್ರಸಿತುಮ್ ಉಪನಿಷದ್-ವಾರವಾಣೋಪಗೂಢೈಃ
ಪ್ರಾಯಃ ಪ್ರಚ್ಛಾದಿತಾ ಸ್ವಾ ಪಟುಭಿರ್ ಅಸುರತಾ ಪೌಂಡ್ರಕಾದ್ವೈತನಿಷ್ಠೈಃ ||
ಪೌಂಡ್ರಕನಿಂದ ನಾನೇ ವಾಸುದೇವ, ಬೇರೆಯವನಲ್ಲ ಎಂದು ಜೀವೇಶ್ವರೈಕ್ಯ ಹೇಳಲ್ಪಟ್ಟಿತು. ತನ್ನ ಜೀವತ್ವವನ್ನು, ನಿಜವಾಗಿಯೂ ಈಶ್ವರನಾದ ಪರಮಾತ್ಮನ ಈಶ್ವರತ್ವವನ್ನು ಪೌಂಡ್ರಕನು ತಿರಸ್ಕರಿಸಿದ್ದನು. ಇವರು ಹಾಗೆಯೇ. ಹಾಗಾಗಿ ಉಪನಿಷತ್ ಎಂಬ ಕವಚದಿಂದ ಅಸುರತ್ವವೆಂಬ ತಮ್ಮ ಸ್ವರೂಪವನ್ನು ಆಚ್ಛಾದನೆ ಮಾಡಿಕೊಂಡಿರುವರು. ಇದು ಈ ಶ್ಲೋಕದ ಸಾರ.
ಹಾಗಾಗಿ ವೇದಾಂತ ದೇಶಿಕರು ‘ಅದ್ವೈತಿಗಳು ಅಸುರತ್ವವನ್ನು ಮುಚ್ಚಿಟ್ಟಿದ್ದಾರೆ’ ಎಂದು ಹೇಳಿರುವಂತೆ ಸಂಕರಾತ್ ಸಂಕರೋದಯಃ ಎಂದು ಹೇಳಿದ್ದಾರೆ. ಕಾಲಕ್ರಮೇಣ ಯಾರೋ ಮಹಾಜ್ಞಾನಿಗಳು ತಿರುಚುವ ಪ್ರಯತ್ನ ಮಾಡಿದ್ದಾರೆ.
ಆದರೂ ದೇವರ ಅನುಗ್ರಹದಿಂದ ಅದು ಉಳಿದಿದೆ. ಇನ್ನು ಸ್ವಲ್ಪ ದಿನದಲ್ಲಿ ಅನಂತಕೃಷ್ಣಶಾಸ್ತ್ರಿಗಳ ಗ್ರಂಥವನ್ನು ತಿರುಚಿದರೂ ಆಶ್ಚರ್ಯ ಇಲ್ಲ.
ಹಾಗಾಗಿ ಪಂಡಿತಾಚಾರ್ಯರು ಹೇಳಿದಂತೆ, ವೇದಾಂತದೇಶಿಕರು ‘ಅದ್ವೈತಿಗಳು ವೇಷ ಹಾಕಿದ ದೈತ್ಯರು, ಸಾಂಕರ್ಯದಿಂದ ಸಂಕರೋದಯ, ನಿರ್ಲಜ್ಜರು, ಪ್ರಚ್ಛನ್ನಬೌದ್ಧರು’, ಇತ್ಯಾದಿಯಾಗಿ ಹಾಗೂ ಅವರ ಗ್ರಂಥಕ್ಕೆ ವ್ಯಾಖ್ಯಾನ ಬರೆದವರು ‘ಕಲಿಯುಗಕ್ಕೆ ಉಪಕಾರ ಆಗುವಂತೆ ವೇದಾಂತಗಳನ್ನು ಅಪಾರ್ಥ ಮಾಡಿದವರು’, ‘ಮೃಷಾವಾದಿಗಳು’ ಇತ್ಯಾದಿ ಬರೆದದ್ದು ಇವತ್ತಿಗೂ ಪರಮತದ ಗ್ರಂಥಗಳಲ್ಲಿ ಸ್ಪಷ್ಟವಾಗಿ ಕಾಣುತ್ತವೆ.
ಪಾಪ ಕೆಲವರು ವಿಶಿಷ್ಟಾದ್ವೈತಿಗಳು ನಿಮಗೆ ಸಮ್ಮತರೇ ಎಂದು ಕೇಳುವುದಿದೆ. ಹ ಹ
ನಮಗೆ ಸಮ್ಮತಿಯಾಗುವುದು ವಿಷಯ ಅಲ್ಲ,
ಮಾಧ್ವೇತರರು ಎಷ್ಟು ಚೆನ್ನಾಗಿ ಮಾಯಾವಾದಮತಕ್ಕೆ ಮರ್ಯಾದೆ ಮಾಡಿದ್ದಾರೆ ಎಂದು ತಿಳಿಸಿರುವುದು.
ಮಾತೆತ್ತಿದರೆ ಮಾಧ್ವರು ನಿಂದಕರು ಎಂದು ಅರಚುವವರು
ಈ ವಿಷಯದಲ್ಲಿ ಅದೆಂತಹ ದಿವ್ಯ ಮೌನ ವಹಿಸಿದ್ದಾರೆ ಎಂದು ತಿಳಿಸುತ್ತಿರುವುದು.
ಇನ್ನು ಕೆಲವರು ಈಗ ಬ್ರಾಹ್ಮಣರ ಒಗ್ಗಟ್ಟು ಅದು ಇದು ಎಂದು ಮಾತನಾಡುತ್ತಾರೆ. ನಾನು ಅವತ್ತೇ ಬೇಡ ನಿಲ್ಲಿಸಿ ಎಂದು ಹೇಳಿದ್ದೆ. ಕಿಂಕರರು ಕೇಳಿದರೇ? ಈಗ ಚಿಂತಿಸಿದರೆ ಯಾರು ಹೊಣೆ..?
ವಿವೇಕಿಗಳ ಗಮನಕ್ಕೆ..
ಯಾವುದೋ ಆಮಿಷಕ್ಕೆ ಒಳಗಾಗಿ ರಾಜಕೀಯದವರು ಕಾಲಕ್ಕೆ ಬದಲಾಗುವಂತೆ, ಪರಮತದವರು ಗ್ರಂಥಗಳ ವಾಕ್ಯವನ್ನು ಬದಲಾಯಿಸುವುದು ಕಂಡಿದೆ. ಆ ರೀತಿಯಲ್ಲಿ ಮಾಧ್ವರು ಯಾವತ್ತೂ ತಿರುಚುವ ಕೆಲಸ ಮಾಡಿಲ್ಲ. ಸತ್ಯ ಸಿಹಿಯಾಗಲಿ ಕಹಿಯಾಗಲಿ ಅದನ್ನು ಹಾಗೆಯೇ ರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಅದನ್ನು ಉಳಿಸಿದ್ದಾರೆ. ಇದು ನಿಜವಾದ ಸತ್ಯನಿಷ್ಠೆ. ಸತ್ಯವಂತರಿರುವವರೆಗೂ ಪಂಡಿತಾಚಾರ್ಯರ ಗ್ರಂಥಗಳು ಅಜರಾಮರವಾಗಿ ಶೋಭಿಸುತ್ತವೆ.
ಅವರ ಸತ್ಯನಿಷ್ಠೆಗೆ, ಅದನ್ನು ಉಳಿಸುವ ನಿಟ್ಟಿನಲ್ಲಿರುವ ಪರಮಾತ್ಮನ ದಯಾದೃಷ್ಟಿಗೆ ನಮೋ ನಮೋ ನಮೋ ನಮಃ
ಹಾಗಾಗಿ ಎಷ್ಟು ಜನ್ಮ ಎತ್ತಿದರೂ ಸತ್ಯವನ್ನು ಯಾರಿಂದಲೂ ಅಳಿಸಲಾಗಿದು.. ಪಂಡಿತಾಚಾರ್ಯರ ಗ್ರಂಥಗಳ ಪ್ರಾಮಾಣ್ಯವನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ.
ಹೃಷೀಕೇಶ ಮಠದ
॥ श्रीश्रीशभक्तो जयति मध्वो विध्वस्तसाध्वसः ॥
विस्तारः (द्रष्टुं नोद्यम्)
“ಸಾಂಕರ-ಶಾಂಕರ-ಶಂಕರ”-ಪಾಠೇಷು ನಾಸ್ತ್ಯ್ ಅಧಿಕೋ ವ್ಯತ್ಯಾಸಃ - ಶಾಂಕರಮತಸ್ಯ ಸಾಂಕರಮೂಲತ್ವಂ ವಿವಕ್ಷಿತಮ್ ಇತಿ ವಿವಕ್ಷಾ ಸ್ಪಷ್ಟೈವ.
ಅದ್ವೈತಿನಾಮ್ ಪಾಠಭೇದಾಃ
ಆಚಾರ್ಯರೇ ತಮಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ.
ಈ ಹಿಂದೆ ಶ್ರೀಮಧ್ವಾಚಾರ್ಯರು ಮಾಡಿದ ಪ್ರಯೋಗಗಳು ತಪ್ಪು ಎಂಬ ಅಭಿಪ್ರಾಯದಲ್ಲಿ ಅಪೋದಿತುಂ ಗೋಚರಂ ಇತ್ಯಾದಿ ಆಚಾರ್ಯರು ಅಪಶಬ್ದ ಬಳಸಿದ್ದಾರೆ ಎಂದು ಆಕ್ಷೇಪ ಮಾಡಿದ್ದರು.
ಆಗ ಆ ಆಕ್ಷೇಪಕ್ಕೆ ಉತ್ತರವಾಗಿ ಶಂಕರರ ಭಾಷ್ಯದಲ್ಲಿ ಇರುವ ಪ್ರಯೋಗ ತಿಳಿಸಲಾಯಿತು. ಆದರೆ ಅವರ ಕೆಲವು ಪುಸ್ತಕಗಳಲ್ಲಿ ಅಪೋದಿತುಂ ಎಂಬುದನ್ನು ತೆಗೆದು ಅಪೋಹಿತುಂ ಇತ್ಯಾದಿ ಬೇರೇ ಶಬ್ದ ಹಾಕಿ ಪ್ರಿಂಟ್ ಮಾಡಿದ್ದಾರೆ.
ಇದೇ ರೀತಿ ಶೃಂಗೇರಿ ಮಠದ ವೆಬ್ಸೈಟ್ ನಲ್ಲಿ ಶ್ರೀವಿದ್ಯಾಮಾನ್ಯತೀರ್ಥರ ವಿಷಯದಲ್ಲಿಯೂ ಮೊದಲು ಬರೆದದ್ದನ್ನು, ನಂತರ ಅಳಿಸಿ ವ್ಯತ್ಯಾಸ ಮಾಡಿದ್ದಾರೆ. ಅವರ ಅದ್ವೈತಶಾರದಾ ದಲ್ಲಿಯೂ ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ. ಆ ಅಭಿಪ್ರಾಯ ದಲ್ಲಿ ಈ ಮಾತು ಬರೆದದ್ದು.
ಅನಂತಕೃಷ್ಣ ಶಾಸ್ತ್ರಿಗಳು ಸ್ಪಷ್ಟವಾಗಿ ಸಂಕರೋದಯ ಎಂಬುದು ವೇದಾಂತ ದೇಶಿಕರ ಪಾಠವೆಂದು ಬರೆದಿದ್ದಾರೆ. ಶಂಕರೋದಯ ಎಂದು ಕಲ್ಪಿತ ಪಾಠ ಎಂದು ಬರೆದಿದ್ದಾರೆ. ಹಾಗಾಗಿ ಇಲ್ಲಿ ಯಾವುದು ಶಾಠ್ಯೋಪನ್ಯಾಸ ?