ಮಿಂಚಿನಬಳ್ಳಿಯ ೧೯ನೆಯ ವರ್ಷದ ೨, ೩ ಹಾಗೂ ೪ನೇ ಕುಡಿ
ಲೋಕಮಾನ್ಯ ಬಾಳ ಗಂಗಾಧರ ಟಿಳಕ
ಲೇಖಕರು :
ಸ್ವಾತಂತ್ರ್ಯಪ್ರಿಯ
ಮಿಂಚಿನಬಳ್ಳಿಯ ಕಾರ್ಯಾಲಯ
ಧಾರವಾಡ
ಮಕರ ಸಂಕ್ರಮಣ
೧೪-೧-೧೯೫೭
ಉತ್ತಮ ಪ್ರತಿ
ಸಾದಾ ಪ್ರತಿ V-6-0
ಕರ್ನಾಟಕ ಸಾಹಿತ್ಯ ಮಂದಿರ,
ಧಾರವಾಡ.
ಶ್ರೀ ಶ್ರೀ ೧೦೮ ಶ್ರೀ ಸತ್ಯಧ್ಯಾನ ಶ್ರೀಪಾದಂಗಳವರೂ
ಲೋಕಮಾನ್ಯರೂ*
ಲೋಕಮಾನ್ಯರು ಇದೊ೦ದು
ಲೋಕಮಾನ್ಯರು ಸ್ವಾವಲಂಬನ ತತ್ವವನ್ನು ರಾಜಕಾರಣದಲ್ಲಿ ತಂದು ಕ್ರಾಂತಿಯನ್ನು ಉಂಟುಮಾಡಿದಂತೆಯೇ, ಗೀತಾರಹಸ್ಯವನ್ನು ಬರೆದು ವೇದಾಂತದಲ್ಲಿ ಬಿರುಗಾಳಿಯನ್ನೆಬ್ಬಿಸಿದರು. ಅದರಲ್ಲಿ ಆಚಾರತ್ರಯರ ಮೇಲೆಯೂ ಗದೆ ಇದ್ದಿತು, ವೈದಿಕರಲ್ಲಿ ಅಲ್ಲೋಲ ಕಲ್ಲೋಲವಾಯಿತು. ಶ್ರೀ ಮಾಧ್ವಭಾಷ್ಯದ ಮೇಲಿರುವ ಆಕ್ಷೇಪಗಳ ಬಗ್ಗೆ, ಆ ಕಾಲದ ಉತ್ತರಾದಿ ಮಠಾಧೀಶರಾದ ಶ್ರೀ ಶ್ರೀ ೧೦೮ ಶ್ರೀ ಸತ್ಯಧ್ಯಾನ ಶ್ರೀಪಾದಂಗಳವರು ಲೋಕಮಾನ್ಯರೊಡನೆ ಚರ್ಚಿಸಲು ಅಪೇಕ್ಷಿಸಿದರು. ಚಿಕ್ಕೋಡಿಗೆ ಬಂದಾಗ ಈ ಸಂದರ್ಭವು ಒದಗಿ ಬಂದಿತು, ಅಪೂರ್ವವಾದ ಯೋಗವು. ಇಬ್ಬರೂ ಲೋಕೋತ್ತರ ಪುರುಷರು. ಒಬ್ಬರು ರಾಜಕಾರಣದ ಮುಕುಟಮಣಿಗಳಾಗಿದ್ದರೆ, ಇನ್ನೊಬ್ಬರು ವೇದಾಂತ ಸಾಮ್ರಾಜ್ಯದ ಅಧಿಪತಿಗಳೂ ಶ್ರೇಷ್ಠ ಆಧ್ಯಾತ್ಮ ಜೀವಿಗಳೂ ಆಗಿದ್ದರು. ಇಬ್ಬರೂ ಅಪ್ರತಿಮ ಮೇಧಾವಿಗಳು. ಸಜ್ಜನರ ಸಂಗವದು ಹೆಚ್ಚೇನು ಸವಿದಂತೆ? ఎంబ ನಾಡನುಡಿಯು ಸತ್ಯವಾದುದು.
ಈ ಇಬ್ಬರ ಚರ್ಚೆಯು ಉದ್ಯೋಧಕವಾಗಿದ್ದಿತು. ೨ ದಿನ ಅತ್ಯಂತ ಸೌಹಾರ್ದದಿಂದ ಚರ್ಚೆ ನಡೆಯಿತು. ಪರಸ್ಪರರಲ್ಲಿ ಪ್ರೇಮಾದರಗಳು ಉಂಟಾದವು. ಟಿಳಕರು ಅತ್ಯಂತ ಶೃದ್ಧಾಭಕ್ತಿಗಳಿಂದ ಶ್ರೀ ಶ್ರೀಗಳವರಿಗೆ ಪುಣೆಗೆ ಬರಲು ಆಮಂತ್ರಣ ವಿತ್ತರು. ಈ ಸುಯೋಗದ ವರ್ಣನೆಯನ್ನು ಕೆಳಗೆ ಕೊಡಲಾಗಿದೆ.
ಪೂಜ್ಯ ಗಲಗಲಿ ರಾಮಾಚಾರರು ಬರೆದ ಪ್ರಕಟನೆಗಳಿಂದ ಈ ಸಂಗತಿಗಳನ್ನು ಸಂಗ್ರಹಿಸಲಾಗಿದೆ. ಚರ್ಚೆಯ ಕಾಲಕ್ಕೆ ಉಪಸ್ಥಿತರಿದ್ದ ಪಂಡಿತ ಗಲಗಲಿ ಯವರು ತೆಗೆದುಕೊಂಡ ಟಿಪ್ಪಣೆಗಳಿಂದ ಈ ಪ್ರಕಟನೆಗಳನ್ನು ಪ್ರಕಟಿಸ ಲಾಗಿದೆ. ಅವುಗಳು ಟಿಳಕರಿಗೆ ಕಳಿಸಲ್ಪಟ್ಟಿದ್ದವು.
ಮಿಂಚಿನಬಳ್ಳಿ
ಈ ಸಭೆ ಸೇರುವ ಮೊದಲು ಟಿಳಕರು ಶ್ರೀ ಆಲೂರ ವೆಂಕಟರಾಯ ರನ್ನು ಶ್ರೀಗಳವರ ಕಡೆಗೆ ಕಳಿಸಿದರು. “ಜಯಪತ್ರ ಮೊದಲಾದವುಗಳ ಗೊಂದಲವಿದೆಯೇ ?’ ಎಂದು ವೆಂಕಟರಾಯರು ಶ್ರೀಗಳವರನ್ನು ವಿಚಾರಿಸಿ ದರು. ಅದಕ್ಕೆ ಶ್ರೀಗಳವರು “ಅದೇನೂ ಇಲ್ಲ ಟಿಳಕರಂಥ ದೊಡ್ಡ ಮನುಷ್ಯ ರೊಡನೆ ವೇದಾಂತ ವಿಷಯದ ಮೇಲೆ ಮಾತಾಡುವದಕ್ಕೆ ಇದೊಂದು ಸುಸಂಧಿ ಮಾತ್ರ” ಎಂದು ಹೇಳಿದರು. ದೊಡ್ಡವರ ಮನಸ್ಸು ದೊಡ್ಡದೇ ಅಲ್ಲವೇ ! ಲೋಕಮಾನ್ಯ ಟಿಳಕರೊಡನೆ ಈ ಚರ್ಚೆ ನಡೆದಾಗ ಶ್ರೀ ನ. ಚಿ. ಕೇಳಕರ, ಶಿ. ಮ, ಪರಾಂಜಪೆ, ದತ್ತೋಪಂತ ಬೆಳವಿ, ಆಲೂರ ವೆಂಕಟ ರಾವ ಮೊದಲಾದ ರಾಜಕಾರಣಿಗಳ ತಂಡವೂ ಪೂಜ್ಯ ಪಾಂಡುರಂಗಿ ಕೃಷ್ಣಾ ಚಾರರೂ ವೇ. ವರಖೇಡಿ ಬಂಧುಗಳೂ ಡಂಬಳ ಶಯನಾಚಾರರೂ ಗಲಗಲಿ ರಾಮಾಚಾರ್ಯಾರೂ ಕೂರ್ಮಾಚಾರರೂ ವಿದ್ವಾಂಸರು ಉಪಸ್ಥಿತರಿದ್ದರು.
ಮೊದಲಾದ
ಶ್ರೀ ಜಗದ್ಗುರು ಮಧ್ವಾಚಾರ ಸಂಸ್ಥಾನದ ಶ್ರೀ ಉತ್ತರಾದಿ ಮಠಾಧೀಶರಾದ ಶ್ರೀ ಶ್ರೀ ೧೦೮ ಶ್ರೀ ಸತ್ಯಧ್ಯಾನ ತೀರ್ಥ ಶ್ರೀಪಾದಂಗಳ ವರು ಗೋಕಾಕಕ್ಕೆ ಬಂದಾಗ, ಅಲ್ಲಿಯ ಪ್ರತಿಷ್ಠಿತ ಶಿಷ್ಯರು ಗೀತಾರಹಸ್ಯ ದಲ್ಲಿ ಮಧ್ವಮತದ ಮೇಲೆ ಆಪಾದಿಸಲ್ಪಟ್ಟ ದೋಷಗಳ ಕಡೆಗೆ ಶ್ರೀಗಳವರ ಲಕ್ಷವನ್ನು ಸೆಳೆದರು. ಶ್ರೀಗಳವರು ತಾವು ಅದನ್ನು ನೋಡಿದ್ದು, ಆ ಆಪಾದನೆಯಲ್ಲಿ ಹುರುಳಿಲ್ಲವೆಂದೂ ಗೀತೆಯು ಮಧ್ವಸಿದ್ಧಾಂತವನ್ನೆ ಸಾರುವದೆಂದೂ ತಿಳಿಸಿ, ಇದನ್ನು ಸಿದ್ಧ ಮಾಡಿ ತೋರಿಸುವದಾಗಿ ತಾವು ಲೋಕಮಾನ್ಯ ಟಿಳಕರಿಗೆ ಬಾಗಿಲುಕೋಟೆ ಮುಕ್ಕಾಮಿನಿಂದ ತಿಳಿಸಿರುವ ದಾಗಿಯೂ ಉತ್ತರಿಸಿದರು. ಇಷ್ಟರಲ್ಲಿಯೇ ಚಿಕ್ಕೋಡಿಯಲ್ಲಿ ಬೆಳಗಾವಿ ಜಿಲ್ಲಾ ಪರಿಷತ್ತು ನೆರೆಯಲಿದ್ದು, ಅದಕ್ಕೆ ಲೋಕಮಾನ್ಯ ಟಿಳಕರು ಬರ ಲಿರುವದರಿಂದ ಆ ಕಾಲಕ್ಕೆ ಚಿಕ್ಕೋಡಿಯಲ್ಲಾಗಲೀ ಸಮೀಪದ ಊರಿನಲ್ಲಾ ಗಲೀ ಸಭೆ ಸೇರಿಸಿ, ಈ ವಿಷಯದ ಮೇಲೆ ಚರ್ಚಿಸಬೇಕೆಂಬ ಇಚ್ಛೆಯನ್ನು ಶ್ರೀ ಅಣ್ಣಾರಾವ ದೇವಳೇ ಪ್ರಕೃತಿಗಳು ತಿಳುಹಿ, ಈ ಬಗ್ಗೆ ಲೋಕಮಾನ್ಯ ಟಿಳಕರಿಗೆ ಪತ್ರ ಬರೆದರು. ಅದಕ್ಕೆ ಲೋಕಮಾನ್ಯ ಟಿಳಕರಿಂದ ಕೆಳಗಿನಂತೆ ಉತ್ತರ ಬಂದಿತು.
ಲೋಕಮಾನ್ಯ ಟಿಳಕರ ಚರಿತ್ರ
“ಪ್ರಿಯ ಮಹಾರಾಜ,
૭
ಪುಣೆ
೩-೪-೧೯೧೭
66
ತಮ್ಮ ಹಾಗೂ ಇತರ ವಕೀಲರ ಪತ್ರಗಳು ಕೈಸೇರಿದವು. ಚಿಕ್ಕೋಡಿಯಲ್ಲಿ ಶ್ರೀಗಳವರ ಭೆಟ್ಟಿಯಾಗಲು ನನ್ನದೇನೂ ಅಡ್ಡಿ ಯಿಲ್ಲ. ಆದರೆ ದೈತಾತ ವಿವಾದವು ಬೇರುಬಿಟ್ಟ ಹಳೇ ವಾದ ವಾಗಿದ್ದು, ಈ ವಿಷಯದಲ್ಲಿ ಯಾರಿಗೂ ಮನವರಿಕೆ ಮಾಡಿಕೊಡುವ ಆಶೆ ನಮಗಿಲ್ಲ. ಆದರೂ ಯಾವುದೇ ಇತರ ಪಂಥಕ್ಕಿಂತ ನನ್ನ ಅಭಿಪ್ರಾಯವು ಸಯುಕ್ತಿಕವೂ ಗೀತೆಗೆ ಸಮ್ಮತವೂ ಆಗಿದೆಯೆಂದು ನಾನು ತೋರಿಸಿ ಕೊಡುವೆ. ಇದಕ್ಕೂ ಹೆಚ್ಚು ನನ್ನಿಂದೇನು ಸಾಧ್ಯ ? ಅಲ್ಲದೆ, ನನ್ನ ಗೀತಾರಹಸ್ಯದಲ್ಲಿ ಮಧ್ವಮತದ ಬಗ್ಗೆ ಯಾವುದೇ ತಪ್ಪು ತಿಳುವಳಿಕೆ ಮಾಡಿಕೊಟ್ಟಿಲ್ಲವೆಂದೂ ನಾನು ತೋರಿಸಬಲ್ಲೆ. ಇದರಿಂದ ಶ್ರೀಗಳವರಿಗೆ ಹಾಗೂ ನಿಮ್ಮ ಮಿತ್ರರಿಗೆ ಸಮಾಧಾನವಾಗು ವದಾದರೆ ಚಿಕ್ಕೋಡಿಯಲ್ಲಿ ಶ್ರೀಗಳವರ ಭೆಟ್ಟಿಯಾಗಲು ಅಡ್ಡಿಯಿಲ್ಲ.”
ಕ್ಕೆ
ತಮ್ಮ ಬಾ, ಗಂ ಬಳಕ
ಶ್ರೀಗಳವರು ೧೨-೪-೧೯೧೭ ಕ್ಕೆ ಚಿಕ್ಕೋಡಿಗೆ ದಯಮಾಡಿಸಿದರು. ಮರುದಿನ ಶ್ರೀ ಟಿಳಕರ ಆಗಮನವಾಯಿತು. ಶ್ರೀಗಳವರು ಇಳಿದ ಸ್ಥಳ ದಲ್ಲಿಯೇ ಸಭೆಸೇರಿತು. ಶ್ರೀಗಳವರು ಅನೇಕ ಪ್ರಶ್ನೆಗಳು ವಿಚಾರಾರ್ಹ ವಿದ್ದರೂ ಪ್ರಕೃತ ಕೆಲವೇ ವಿಷಯಗಳನ್ನಷ್ಟೇ ವಿಚಾರಿಸುವಾ
ಆರಂಭಿಸಿದರು:-
ಎಂದು
ಗೀತಾರಹಸ್ಯದ ಆಧ್ಯಾತ್ಮ ಪ್ರಕರಣದ ೨೩೨-೩೩ನೇ ಪುಟದಲ್ಲಿ * ಉಪನಿಷತ್ತುಗಳಲ್ಲಿ ದೈತ ಹಾಗೂ ಅದೈತಪರ ವರ್ಣನೆಗಳಿರುತ್ತವೆ ಈ ಎರಡಕ್ಕೂ ಒಂದೇ ಬಗೆಯ ಗತಿ ಕಲ್ಪಿಸುವದು ಅಗತ್ಯ. ಅದೈತವು ಮುಖ್ಯವೆಂದು ಗ್ರಹಿಸಿ, ಬ್ರಹ್ಮನು ನಿರ್ಗುಣನಿದ್ದರೂ ಸಗುಣನಾದಾಗ ಮಾತ್ರ ಮಾಯಿಕವಾಗಿ ದೈತಸ್ಥಿತಿ ಉಂಟಾಗುತ್ತದೆಂದು ನಿರೂಪಿಸಿದರೆ
424
ಮಿಂಚಿನಬಳ್ಳಿ
ಎಲ್ಲ ಸರಿಹೋಗುವದು. ದೈತವನ್ನು ಮುಖ್ಯವಾಗಿಟ್ಟು ಕೊಂಡರೆ ಸರಿ ಯಾಗುವದಿಲ್ಲ. ಇದಕ್ಕೆ ತತ್ವಮಸಿ’ ವಾಕ್ಯವೇ ಉದಾಹರಣೆ, ಇಲ್ಲಿ ಅದೈತ ಪರವಾದ ಅನ್ವಯವು ಸರಾಗವಾಗುವದು. ದೈತಿಗಳಿಗೆ ಇದರ ಅರಿವಾಗದೇ ಇಲ್ಲ. ಆದರೆ ಅವರು ಇಲ್ಲಿ ತತ್ವಂ ಎಂದರೆ ತಸ್ಯ ತ್ವಂ ಮುಂತಾಗಿ ಅರ್ಥ ಮಾಡಿಕೊಂಡು ಸಮಾಧಾನ ಹಚ್ಚಿಕೊಳ್ಳುವರು. ಆದರೆ ಸ್ವಲ್ಪ ಸಂಸ್ಕೃತ ಬಲ್ಲ ಯಾರೇ ಆಗಲೀ ಈ ಅರ್ಥವನ್ನು ಬಲಾತ್ಕಾರದಿಂದ ಎಳೆದಾಡಿ (ಓಢಾ ತಾಣೀಚೆ ಅರ್ಥ) ಹಚ್ಚಲಾಗಿದೆಯೆಂದು ಹೇಳಬಲ್ಲರು” ಎಂದು ಬರೆದಿದ್ದೀರಿ. ಆದರೆ ವಸ್ತುಸ್ಥಿತಿ ಹಾಗಿಲ್ಲ. ಈ ವಾಕ್ಯವು ದೈತಕ್ಕೆ ಹೊಂದಿಕೆಯಾಗುತ್ತದೆ. ಅದೈತಿಗಳೇ ಬಲಾತ್ಕಾರದ ಅರ್ಥ ಮಾಡಿರುವರು. ಯಾಕಂದರೆ ಈ ವಾಕ್ಯದ ಹಿಂದೆಲ್ಲ ಸೃಷ್ಟಿ, ಸ್ಥಿತಿ ಮುಂತಾದವುಗಳ ಕಾರಣನೆಂದು ಬ್ರಹ್ಮನ ವರ್ಣನೆ ಬಂದಿದೆ. ಅಲ್ಲಿ ಅನೇಕ ವಿಧವಾಗಿ ದೈತವೇ ನಿರೂಪಿತವಾಗಿದೆ ಈ ಮುಂದಿನ ‘ತತ್ವಮಸಿ’ ವಾಕ್ಯವೂ ಹಿಂದಿನದಕ್ಕೆ ಅನುಸರಿಸಿ ದೈತ ಪರವೇ ಇರುವದು, ಇಲ್ಲಿ ‘ಸ ಆತ್ಮಾ ಅತತ್ ತ್ವಮಸಿ’ ಎಂದಾಗಲೀ ಶತ್ ಎಂಬುದು ವಿಭಕ್ತಿ ಲೋಪದಿಂದ ಎಲ್ಲ ವಿಭಕ್ತಿಗಳ ಅರ್ಥವನ್ನೂ ಹೇಳಿ, ಆ ಬ್ರಹ್ಮನಿಗೂ ಜೀವನಿಗೂ ಇರುವ ಬಗೆಬಗೆಯ ಸಂಬಂಧ ತಿಳಿಸು ವದು ಎಂದು ಆಗಲೀ ದೈತವನ್ನೇ ಕಾಣಬಹುದು. ಅದೈತಿಗಳು ಮಾತ್ರ ಈ ವಾಕ್ಯದ ಅರ್ಥ ಮಾಡುವಾಗ “ಜಹದಜ ಹಲ್ಲ ಕ್ಷಣೆಗೆ ಶರಣು ಹೋಗಿ ಅತಿ ಕ್ಲಿಷ್ಟ ಕಲ್ಪನೆ ಮಾಡಿರುವರು, ಇದರಿಂದ ಯಾರದು ಸರಳ ಅರ್ಥ, ಯಾರದು ಬಲಾತ್ಕಾರದ ಅರ್ಥ ಎಂಬುದು ತಾನೇ ಗೊತ್ತಾಗುವದು. ಎಂದು ಮುಂತಾಗಿ ಪ್ರತಿಪಾದಿಸಿದರು. ಇದರ ಬಗ್ಗೆ ವಿಶೇಷ ಚರ್ಚೆಯಾಗಿ, ಲೋಕಮಾನ್ಯ ಟಿಳಕರು “ಏನೇ ಆದರೂ ಮಧ್ವಮತದಲ್ಲಿ ವಿಭಕ್ತಿಯ ಮಟ್ಟಿಗಾದರೂ ಎಳೆದೆಳೆದು ಅರ್ಥ ಹಚ್ಚಬೇಕಾಗಿ ಬರುವದು” ಎಂದರು, ಆಗ ಶ್ರೀಗಳು “ ಹೇಗೆ ಆಗಲಿ, ಅದೈತಿಗಳಂತೆ ತತ್ ಮತ್ತು ತ್ವಂ ಎರಡೂ ಪದಗಳನ್ನು ಎಳೆದು ಅರ್ಥ ಮಾಡುವದಕ್ಕಿಂತ ಒಂದಷ್ಟು ವಿಭಕ್ತಿ ಎಳೆದರೆ ಹೆಚ್ಚಲ್ಲ; ಮೇಲಾಗಿ ವ್ಯಾಕರಣ ನಿಯಮದಂತೆ ವಿಭಕ್ತಿಲೋಪದ ಅನುಸಂಧಾನ ಮಾಡುವದರಿಂದ ನಮ್ಮ ಮತದಲ್ಲಿ ವಿಭಕ್ತಿ ಎಳೆಯಬೇಕಾದ ಪ್ರಸಂಗವೂ ಇಲ್ಲ” ಎಂದು ಉಪಸಂಹಾರ ಮಾಡಿದರು.
(C
ಲೋಕಮಾನ್ಯ ಟಿಳಕರ ಚರಿತ್ರೆ
*ಯಜ್ಞಾರ್ಥಾತ್ಕರ್ಮಣೋsನ್ಯತ್ರ ಲೋಕೋsಯಂ ಕರ್ಮಬಂಧನಃ”
(ne. 2-5)
ಯಜ್ಞ
ಇಲ್ಲಿ ಶ್ರೀ ಮಧ್ವಾಚಾರ್ಯರು ಯಜ್ಞಾರ್ಥಾತ್ = ವಿಷ್ಣು ಪ್ರೀತ್ಯರ್ಥ ಎಂದು ಎಳೆದು ಅರ್ಥ (ಗೌಣಾರ್ಥ) ಹಚ್ಚಿರುವರು ಎಂದು ಗೀತಾರಹಸ್ಯ ದಲ್ಲಿ ಬರೆದಿರುವದು ಸರಿಯಲ್ಲ. ಈ ಅರ್ಥವು ಗೌಣ ಹೇಗೆ ? ಯಜ್ಞವೆಂದರೆ ವಿಷ್ಣು ಅಲ್ಲವೇ ? “ಯ ಯಜ್ಞಪತಿಃ ಯಜ್ಞಾ ಯಜ್ಞಾಂಗೋ ಯಜ್ಞವಾಹನಃ |” ಎಂದು ವಿಷ್ಣು ಸಹಸ್ರ ನಾಮದಲ್ಲಿದೆಯಷ್ಟೇ ? ಎಂದು ಶ್ರೀಗಳವರು ನಿರೂಪಿಸಿದರು. ಈ ವಿಷಯದ ಮೇಲೆ ಚರ್ಚೆಯಾಗಿ ವಿಷ್ಣು ಪ್ರೀತ್ಯರ್ಥ ಕರ್ಮವೇ ತಾರಕ; ಬೇರೆಯದೆಲ್ಲ ಬಂಧಕ ಎಂದು ಶ್ರೀಗಳವ ರಿಂದ ಮುಗಿಸಲ್ಪಟ್ಟಿತು.
ಇದೇ ರೀತಿಯ ಚರ್ಚೆಯು “ನಾಸತೋ ಭಾವೋ ವಿದ್ಯತೇ ಸತಃ” ಹಾಗೂ ಬುದ್ದಿ ಯು
ದುಷ್ಯತೇ ఎంబ
ಸುಕೃತ
»
ವ್ಯಾಖ್ಯಾನದ ಮೇಲೆ ನಡೆಯಿತು.
ವಿದ್ಯತೇ ಭಾವೋ ನಾ
ಜಹಾತೀಹ ಉಭೇ
ಶ್ಲೋಕಗಳ
ಶ್ರೀ ಮಧ್ವಾಚಾರರ
ಜ್ಞಾನೋತ್ತರ ಕರ್ಮಾಚರಣೆಯ ವಿಷಯದ ಮೇಲೆ ಚರ್ಚೆ ನಡೆದಾಗ ಗೀತಾರಹಸ್ಯದ ೩೦೭ನೇ ಪುಟದಲ್ಲಿ ಶ್ರೀ ಮಧ್ವಾಚಾರರ ಮೇಲೆ ಆಪಾದಿ ಸಿದ ದೂಷಣೆಗಳನ್ನು ಶ್ರೀಗಳವರು ನಿರಾಕರಿಸಿದರು. ಶ್ರೀ ಮಧ್ವಾಚಾರರು ಜ್ಞಾನೋತ್ತರ ಕರ್ಮತ್ಯಾಗ ಹೇಳಿಯೇ ಇಲ್ಲ; ಪ್ರತಿಯಾಗಿ ಜ್ಞಾನವಾದರೂ ಕರ್ಮ ಮಾಡಬೇಕೆಂದೇ ಶ್ರೀ ಮಧ್ವಾಚಾರರ ಮತ. ಶ್ರೀ ಮಧ್ವಾಚಾರರು ಗೀತೆಯ ಮೇಲೆ ಎರಡು ಗ್ರಂಥಗಳನ್ನು (ಗೀತಾಭಾಷ್ಯ ಹಾಗು ಗೀತಾ ತಾತ್ಪರ್ಯ) ಬರೆದಿದ್ದು, ಅವರು ಗೀತಾತಾತ್ಪರ್ಯದಲ್ಲಿ ೩-೩೧ನೇ ಶ್ಲೋಕದ ವ್ಯಾಖ್ಯಾನದಲ್ಲಿ ಇದೇ ವಿಷಯವನ್ನು ಸುಂದರವಾಗಿ ವರ್ಣಿಸಿರುವರು. ಇದರಂತೆಯೇ, ಸ್ವಕೀಯ ಜನರೊಡನೆ ಯುದ್ಧ ಮಾಡುವದು ತಪ್ಪು
C ಎಂದು ವಿಷಣ್ಣನಾದ ಅರ್ಜುನನನ್ನು ಯುದ್ಧದಲ್ಲಿ ಪ್ರವರ್ತಿಸಲು ಹೊರಟ ಗೀತೆಯಲ್ಲಿ ಮೋಕ್ಷ ಮಾರ್ಗದ ವಿವೇಚನೆ ಏಕೆ ? ಎಂಬುದಕ್ಕೆ ಯಾರೂ
ಮಿಂಚಿನಬಳ್ಳಿ
ಉತ್ತರ ಕೊಟ್ಟಿಲ್ಲ” ಎಂದು ಗೀತಾರಹಸ್ಯದಲ್ಲಿ ತಾವು ಎತ್ತಿದ ಪ್ರಶ್ನೆಗೆ ಶ್ರೀ ಮಧ್ವಾಚಾರರು ಗೀತಾ ತಾತ್ಪರ್ಯ ಗ್ರಂಥದಲ್ಲಿ
( ತತ್ರ ಸಾಕ್ಷಾದಿಂದ್ರಾವತಾರಮುತ್ತಮಾಧಿಕಾರಿಣಮಾತ್ಮನಃ ಪ್ರಿಯತಮಮರ್ಜುನಂ ಕ್ಷತ್ರಿಯಾಣಾಂ ವಿಶೇಷತೋsಪಿ ಪರಮಧರ್ಮ೦ ನಾರಾಯಣದ್ವಿಟ್ ತದನುಬಂಧಿನಿಗ್ರಹಂ ಬಂಧುಸ್ನೇಹಾದಧರ್ಮ ನಾಶಂಕ್ಯ ತತೋ ನಿವೃತ್ತ ಪ್ರಾಯಂ ಸ್ವವಿಹಿತ ವೃತ್ಯಾ ಭಕ್ತಾ ಭಗವ ದಾರಾಧನಮೇವ ಪರಮೋಧರ್ಮಸ್ತದ್ವಿರುದ್ಧಃ ಸರ್ವೋsಪ್ಯಧರ್ಮೊ ಭಗವದಧೀನತ್ವಾತ್ ಸರ್ವತಿ ಬೋಧಯತಿ ಭಗವನ್ನಾರಾಯಣಃ’ ಎಂದು ಅತಿ ಸಮಂಜಸವಾಗಿ ಉತ್ತರ ಕೊಟ್ಟಿದ್ದಾರೆ ಎಂದು ಹೇಳಿ ಗೀತಾ ತಾತ್ಪರ್ಯ ಗ್ರಂಥದಲ್ಲಿದ್ದ ವರ್ಣನೆಗಳನ್ನು ತೋರಿಸಿದರು. ಅದನ್ನು ಓದಿ ಟಿಳಕರು ಅತ್ಯಂತ ಸಂತಸಬಟ್ಟು ತಾವು ಗೀತಾ ತಾತ್ಪರ್ಯವನ್ನು ನೋಡಿ ದಿಲ್ಲವೆಂದೂ ಮುಂದಿನ ಆವೃತ್ತಿಯಲ್ಲಿ ಈ ವಿಷಯವನ್ನು ಸರಿಪಡಿಸುವೆ ವೆಂದೂ ಹೇಳಿದರು. ಆಗ ಲೋಕಮಾನ್ಯರ ಮಹಾನ್ ವ್ಯಕ್ತಿತ್ವವನ್ನೂ ಉದಾರ ಹೃದಯವನ್ನೂ ಕಂಡು ಶ್ರೀಗಳವರು ಅತ್ಯಂತ ಹರ್ಷಗೊಂಡರು.
ಶ್ರೀಗಳವರು- ಗೀತಾರಹಸ್ಯದ ೨೦೧ನೇ ಪುಟದಲ್ಲಿ “ನಾರದನಿಗೆ ವಿಶ್ವ
ರೂಪವನ್ನು ತೋರಿಸಿದಾಗ ಶ್ರೀಹರಿಯು ಹೇಳುವ ರೀತಿಯಲ್ಲಿಯೇ (ಶಾಂತಿ ಪರ್ವ ೩೩೯-೪೪-೪೮) ಅರ್ಜುನನಿಗಾದರೂ ಶ್ರೀಕೃಷ್ಣನು ತೋರಿಸಿದ ವಿಶ್ವರೂಪವು ಮಾಯಿಕವಾಗಿದೆ” ಎಂದು ಹೇಳಲಾಗಿದೆ. ಆದರೆ ಆ ರೂಪವು ಮಾಯಿಕವಲ್ಲ. ಸತ್ಯವಾದುದು, ಶಾಂತಿ ಪರ್ವದ ೩೩೯ನೇ ಅಧ್ಯಾಯವನ್ನು ತಾವು ಪೂರ್ಣ ನೋಡಿದಂತಿಲ್ಲ. ಹಿಂದಿನ ಶ್ಲೋಕಗಳಲ್ಲಿ ಏವಂ ಸ್ತುತಃ ಸ ಭಗವಾನ್ ಗುಸ್ತ ಧ್ವನಾಮಭಿಃ | ದರ್ಶಯಾಮಾಸ ಮುನಯೇ ರೂಪಂ ತತ್ಪರಮಂ ಹರಿ” ಎಂದು ತಥ್ಯವಾದ ನಾಮರೂಪಗಳನ್ನು ಬಣ್ಣಿಸಿ ಅದನ್ನೇ ತೋರಿಸಿದ ಎಂದು ಉಕ್ತವಾಗಿದೆ ಎಂದು ಸಾಧಾರವಾಗಿ ವಿವರಿಸಿದರು.
ಲೋಕಮಾನ್ಯ ಟಿಳಕರ ಚರಿತ್ರೆ
ಶ್ರೀಗಳವರು ಸರ್ವಂ ಮಿಥ್ಯಾ ಎನ್ನುವ ಅದೈತಮತವನ್ನು ಒಪ್ಪಿದರೆ ಕರ್ಮಯೋಗವು ಅಸಂಗತವಾಗುವದು, ತಾವು ಗೀತಾರಹಸ್ಯದಲ್ಲಿ ಅದೈತವನ್ನು ಒಪ್ಪಿ, ಕರ್ಮಯೋಗವನ್ನು ಹೇಳಿದ್ದೀರಿ. ಇದು ಹೇಗೆ?
ಲೋ, ಟಳಕ- ನಾನು ಶಂಕರಾತಿಯಲ್ಲ. ಜಗತ್ತು ಮಿಥ್ಯಾ ಎಂದರೆ
ವಿನಾಶಿ ಎಂದು ನನ್ನ ಅರ್ಥ.
ಶ್ರೀಗಳವರು- ನೀವು ಹೀಗೆ ಹೇಳುತ್ತಿದ್ದರೂ ಗೀತಾರಹಸ್ಯದ ಆಧ್ಯಾತ್ಮ ಪ್ರಕರಣದಲ್ಲಿ ಬ್ರಹ್ಮ ಸತ್ಯಂ ಜಗನ್ಮಥಾ’ ಎಂಬುದನ್ನು ಪ್ರತಿಪಾದಿ ಸಿದ್ದೀರಿ. ತ್ರಿಕಾಲದಲ್ಲಿ ಇಲ್ಲ, ಮಿಥ್ಯಾ ಎಂದು ಹೇಳಿದ ಮೇಲೆ ಆ ಶಂಕರಾದೈತ ಹಾಗೂ ನಿಮ್ಮಮತದಲ್ಲಿ ಭೇದವೇನು ?
ಶ್ರೀಗಳವರು- ಅದೈತದಲ್ಲಿ ಪ್ರಮಾಣವೇನು ?
ಲೋ, ಟಿಳಕ- ಅಧಿಯ
ಹಮೇನಾತ್ರ ದೇಹೇ ದೇಹಧೃತಾಂವರ
ಎಂಬುದೇ ಪ್ರಮಾಣ (ಗೀ, ೮-೪)
ಶ್ರೀಗಳವರು- (ಅಧಿಯಜ್ಞ : ಕಥಂ ಕೋತ್ರ ದೇಹೇಸ್ಮಿನ್ ಮಧುಸೂದನ ಎಂಬ ಅರ್ಜುನನ ಪ್ರಶ್ನಕ್ಕೆ ಉತ್ತರ ರೂಪವಾಗಿ ಈ ಶ್ಲೋಕವು ಭಗವಂತನನ್ನು ವರ್ಣಿಸುವದು. ಇಲ್ಲಿ ಐಕ್ಯದ ಸಂಬಂಧವೇ ಇಲ್ಲ. ಲೋ. ಟಳಕ- “ಯದಾ ಭೂತ ಪೃಥಗ್ಯಾವಮೇಕಸ್ಥಮನುಪಶ್ಯತಿ’
( ಏಕಸ್ಥಮನುಪಶ್ಯತಿ ಏಕತ್ವದಿಂದ ನೋಡುವದು ) ಇಲ್ಲಿ ಅದೈತವು ಪ್ರತಿಪಾದಿಸಲ್ಪಟ್ಟಿದೆ.
ಶ್ರೀಗಳವರು ಏಕಸ್ಥಂ
=
ಎಂದರೆ ಒಂದೆಡೆಯಲ್ಲಿ ಇರುವದು. ಏಕನ
ಎಂಬ ಅರ್ಥ ಬಲಾತ್ಕಾರದ್ದೇ ಸರಿ.
ಲೋ, ಟಕ- ಈ ಶ್ಲೋಕದಲ್ಲಿ ಸ್ಪಷ್ಟ ಅದೈತದ ಪ್ರತಿಪಾದನೆ ಇಲ್ಲ
ದಿದ್ದರೂ “ ಅವಿಭಕ್ತಂ ವಿಭಕ್ರೇಷು ವಿಭಕ್ತಮಿವಚ ಸ್ಥಿತಮ್ , ಇಲ್ಲಿ (ವಿಭಕ್ತಮಿವ’ ಎ೦ದು ಹೇಳಿದ್ದರಿಂದ ಜಗತ್ತು ವಿಭಕ್ತವಲ್ಲ, ವಿಭಕ್ತ ದಂತೆ ಎಂದು ತಿಳಿಯಬೇಕು.
48
ಮಿಂಚಿನಬ
ಶ್ರೀಗಳವರು,ಏಕಸ್ಥ ಮನುಪಶ್ಯತಿ’ ಎಂಬುದು ೧೩ನೇ ಅಧ್ಯಾಯದ
೩೦ನೇ ಶ್ಲೋಕವು. ವಿಭಕ್ತ ಮಿವಚ ಸ್ಥಿತಮ್” ಎಂಬುದು ಅದೇ ಅಧ್ಯಾಯದ ೧೬ನೇ ಶ್ಲೋಕವು. ಬೇರೆ ಬೇರೆ ಪ್ರಕರಣಗಳಲ್ಲಿ ಬಂದವು. ಒಂದಕ್ಕೊಂದು ಸಂಬಂಧವೇ ಇಲ್ಲ. ಮೇಲಾಗಿ ಪರಮಾತ್ಮನ ವರ್ಣನೆಯೇ “ವಿಭಕ್ತ ವಿವ” ಎಂಬುದು, ಪರಮಾತ್ಮನು ಸರ್ವತ್ರ ಅವಿಭಕ್ತನಾಗಿದ್ದರೂ ಒಬ್ಬನೇ ಆಗಿದ್ದರೂ ವಿಭಕ್ತನಂತೇ ಕಾಣುತ್ತಾನೆ ಎಂದು ಅರ್ಥವು. ಹೀಗಿರಲು ಇಲ್ಲಿ ಅದೈತದ
ಪ್ರಶ್ನೆಯೇ ಇಲ್ಲವಲ್ಲ!
X
X
=
X
X
ಶ್ರೀಗಳು ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತೃನುಷ್ಠಿ ತಾತ್’
ಗೀತಾರಹಸ್ಯದ ೪೯೨ನೇ ಪುಟದಲ್ಲಿ ನೀವು ವರ್ಣಾಶ್ರಮ ಧರ್ಮವೇ ಆಗಲೀ ಅಥವಾ ತನ್ನ ಒಲವಿನಿಂದ ಸ್ವೀಕರಿಸಿದ ಯಾವುದೇ ವೃತ್ತಿ ಯಾಗಲೀ ಸ್ವಧರ್ಮ ಎಂದು ಮುಂತಾಗಿ ಬರೆದಿದ್ದೀರಿ. ತನಗೆ ಬೇಕಾದದ್ದೆಲ್ಲ ಸ್ವಧರ್ಮವೆನಿಸಲಾರದು,
ಸ್ವಧರ್ಮ ಎಂದರೆ ಶಾಸ್ರೋಕ್ತ ಧರ್ಮವೇ ಆಗುವದು,
ಲೋ, ಟಿಳಕರು- ಗೀತೆಯ ಅಭಿಪ್ರಾಯ ತಮ್ಮಂತೆಯೆ ! ಅದೇ ಅರ್ಥ ವನ್ನು ನಾನು ವ್ಯಾಖ್ಯಾನದಲ್ಲಿ ಬರೆದಿದ್ದೇನೆ. ಆದರೆ ಕಾಲಮಾನಾ
ನುಸಾರ ಬೇಕಾಗಿರುವದನ್ನು ಉಪಸಂಹಾರದಲ್ಲಿ ಅಭಿಪ್ರಾಯರೂಪ ವಾಗಿ ಬರೆದಿದ್ದೇನೆ.
ಶ್ರೀಗಳವರು ನಿಮಗೆ ಬೇಕಾದ ಅಭಿಪ್ರಾಯ ಬರೆಯಲು ಸ್ವಾತಂತ್ರ್ಯವಿದೆ.
ಆದರೆ ಗೀತೆಯ ಅಭಿಪ್ರಾಯವಿದು ಎಂದು ಬರೆಯಬಹುದೇ ? ಗೀತೆ ಯಲ್ಲಿ ಹೀಗೆ ಹೇಳಿದ್ದರೂ ಕಾಲಾನುಸಾರ ಹೀಗೆ ಮಾಡಬಹುದು ಎಂದು ನೀವು ಬರೆದಿದ್ದರೆ ಸರಿಯಾಗುತ್ತಿತ್ತಲ್ಲವೆ ?
ಚರ್ಚೆಯ ಕೊನೆಯಲ್ಲಿ ಶ್ರೀ ಬೆಳವಿಯವರು ತುಂಬ ಸಮಯ ವಾಯಿತು, ಶ್ರೀ ಟಿಳಕರಿಗೆ ಆಯಾಸವಾಗಿದೆ. ಆದ್ದರಿಂದ ಇನ್ನುಳಿದ ವಿಷಯಗಳ ಮೇಲೆ ಶ್ರೀಗಳವರು ಪತ್ರವ್ಯವಹಾರ ಮಾಡಬಹುದು” ಎಂದು
ಲೋಕಮಾನ್ಯ ಟಿಳಕರ ಚರಿತ್ರೆ
42F
ಸೂಚಿಸಿದರು. ಶ್ರೀಗಳವರು “ಗೀತಾರಹಸ್ಯ ಬರೆಯಲು ಶ್ರೀ ಟಿಳಕರು ೭-೮ ವರ್ಷ ಶ್ರಮವಹಿಸಿದ್ದಾರೆ. ಅದರಲ್ಲಿ ಪ್ರತಿಪಾದಿಸಿದ ವಿಷಯಗಳನ್ನು ಸಮರ್ಥಿಸಿಕೊಳ್ಳಲು ೭-೮ ದಿನಗಳಾದರೂ ಬೇಡವೇ ??” ಎಂದು ನಗೆಯಾಡಿ ದರು. ಸಮಕ್ಷಮದಲ್ಲಿ ಆಗುವ ಮಾತುಗಳಿಂದ ವಿಚಾರವಿನಿಮಯ ಎಷ್ಟು ಸುಲಭವೋ ಅಷ್ಟು ಲೇಖದಿಂದ ಆಗುವದಿಲ್ಲ ಎಂದರು.
ಇಲ್ಲಿಗೆ ಶ್ರೀ ಟಿಳಕ ಮೊದಲಾದ ಜನರು ಶ್ರೀಗಳವರ ಅಪ್ಪಣೆ ಪಡೆದು
ತೆರಳಿದರು.
ಶ್ರೀ ಶ್ರೀ ಸತ್ಯಧ್ಯಾನ ಶ್ರೀಪಾದಂಗಳವರು ಪುಣೆಗೆ ಹೋದಾಗ ಲೋಕ ಮಾನ್ಯರು ಅವರಿಗೆ ಅಪೂರ್ವವಾದ ಸ್ವಾಗತವನ್ನಿತ್ತರು. ಶ್ರೀಪಾದಂಗಳವರು ಲೋಕಮಾನ್ಯರನ್ನೂ ಅವರ ಅನುಯಾಯಿಗಳನ್ನೂ ಮಠಕ್ಕೆ ಕರೆಯಿಸಿ ಶ್ರೀ ರಾಮದೇವರ ದರ್ಶನ ಮಾಡಿಸಿ, ಶ್ರೀ ತೀರ್ಥ ಪ್ರಸಾದಗಳನ್ನು ಇತ್ತು, ಶೇಷ ವಸ್ತ್ರವನ್ನೂ, ಫಲಮಂತ್ರಾಕ್ಷತೆಗಳನ್ನೂ ಕೊಟ್ಟು ಆಶೀರ್ವದಿಸಿ ದರು. ಶ್ರೀ ನ. ಚಿ. ಕೇಳಕರರು ಅಂಗಾರಾಕ್ಷತೆಗಳನ್ನು ಹಚ್ಚಿಕೊಂಡು ಮಠದಿಂದ ಹೊರಬಿದ್ದರು. ಈ ವೇಷವನ್ನು ಕಂಡು “ಕೇಳಕರ ವೈಷವ ರಾಲೆ’ ಎಂದು ಊರೆಲ್ಲ ನಗೆಗಡಲಲ್ಲಿ ಮುಳುಗಿತು.
ವ