ಜಿ.ಆರ್ ಪಾಟೀಲ ವಾಕ್ಯಾರ್ಥ ವಿಚಾರ

[[1]]

“ಅಕ್ಷೋಭ್ಯ‐ವಿದ್ಯಾರಣ್ಯರ ವಾಕ್ಯಾರ್ಥ”

ಒಂದು ವಿಚಾರ ಸಂಕಿರಣ

‐‐‐ ಜಿ.ಆರ್. ಪಾಟೀಲ, ಧಾರವಾಡ.

ಶ್ರೀ ಸೋಸಲೆ‐ವ್ಯಾಸರಾಯ ಮಠದ ಇಂದಿನ ಪೀಠಾಧಿಪತಿಗಳಾದ ಶ್ರೀ ವಿದ್ಯಾಶ್ರೀಶ ತೀರ್ಥರು **“ಅಕ್ಷೋಭ್ಯ‐ವಿದ್ಯಾರಣ್ಯರ ವಾದ”**ವನ್ನು ಕುರಿತು ಒಂದು ವಿಚಾರ‐ಸಂಕಿರಣವನ್ನು ಏರ್ಪಡಿಸಿ, ಅದರಲ್ಲಿ ಮೂವರು ವಿದ್ವಾಂಸರಿಗೆ ಈ ವಿಷಯವನ್ನು ಕುರಿತು ತಮ್ಮ ತಮ್ಮ ವಿಚಾರಗಳನ್ನು ಮಂಡಿಸಲು ವ್ಯವಸ್ಥೆ ಮಾಡಿದ್ದರು. ಒಬ್ಬರು ಶ್ರೀ ರಘೂತ್ತಮಾಚಾರ್ಯರು, ಇನ್ನೊಬ್ಬರು ಶ್ರೀ ಪ್ರದೀಪ ಸಿಂಹಾಚಾರ್ಯರು. ಮೂರನೆಯವರು ಹೊಳವನಹಳ್ಳಿ ಶ್ರೀನಿವಾಸಾಚಾರ್ಯರು. ಲೇಖನ ಸೌಲಭ್ಯಕ್ಕಾಗಿ, ಇವರನ್ನು ಹೊ. ಶ್ರೀ ಎಂದು ಸಂಬೋಧಿಸಿದ್ದೇನೆ.

          • ಈ ವಿಚಾರಸಂಕಿರಣಕ್ಕೆ ಸಂಬಂಧಿಸಿದ ವಿಡಿಯೋವನ್ನು ನನಗೆ ಯಾರೋಕಳಿಸಿ, ಇದಕ್ಕೆ ನೀವೇನು ಹೇಳುತ್ತೀರಿ? ಎಂದು ಕೇಳಿದ್ದರಿಂದ, ಉಕ್ತ ವಿಚಾರಸಂಕಿರಣದಲ್ಲಿ “ಹೊ. ಶ್ರೀ” ಇತ್ಯಾದಿ ಉಪನ್ಯಾಸಕರು ಎತ್ತಿದ ಪಶ್ನೆಗಳಿಗೆ ಉತ್ತರಗಳೇ ಇಲ್ಲ ಎಂಬಧ್ವನಿಯಲ್ಲಿ ಬರೆದದ್ದರಿಂದ, ಈ ಸಂಬಂಧದಲ್ಲಿ, ಈ ಮೂವರೂ ವಿದ್ವಾಂಸರು ಪ್ರತಿಪಾದಿಸಿದ್ದನ್ನು ಈ ಲೇಖನದಲ್ಲಿ ವಿಮರ್ಶೆಗೊಳಪಡಿಸುವ ಮೂಲಕ, ನನ್ನ ಅಭಿಪ್ರಾಯ ಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಈ ಅಭಿಪ್ರಾಯಗಳು ಹೊಸವೇನಲ್ಲ. ಈ ಎಲ್ಲ ಅಂಶಗಳೂ ಈಗಾಗಲೇ **“ಅಕ್ಷೋಭ್ಯ ವಿಜಯವಿಭ್ರಮ ಹಾಗೂ ವಿದ್ಯಾರಣ್ಯ ವಿಜಯದುಂದುಭಿ”**ಯಲ್ಲಿ ಪರಾಮೃಷ್ಟ್ಟವಾಗಿ ಉತ್ತರಿಸಲ್ಪಟ್ಟ ವುಗಳೇ! ಅವುಗಳನ್ನೇ ಸಂದರ್ಭಕ್ಕೆ ತಕ್ಕಂತೆ ಈ ಲೇಖನದಲ್ಲಿ ಪೋಣಿಸಿದ್ದೇನೆ. * * * * * * ಮೊದಲನೆಯದಾಗಿ, ಶ್ರೀ ರಘೂತ್ತಮಾಚಾರ್ಯರ ಅಭಿಪ್ರಾಯಗಳು:‐ ಅ] ಅಕ್ಷೋಭ್ಯ ತೀರ್ಥರು ಮುಳಬಾಗಿಲಿಗೆ ಬಂದಿದ್ದರು, ಆ] ವಾದ ಮಾಡಲೆಂದೇ ಮುಳಬಾಗಿಲಿಗೆ ಬಂದಿದ್ದರು. ಇ] ವಾದ ಮಾಡಿ ಗೆದ್ದರು. ಈ ವಿಷಯದಲ್ಲಿ ನನ್ನ ಅಭಿಪ್ರಾಯಗಳು‐ ಈ ಹೇಳಿಕೆಗಳನ್ನು ಕುರಿತಂತೆ, ಮಾಧ್ವರಲ್ಲಿಯೇ ಭಿನ್ನಾಭಿಪ್ರಾಯಗಳುಂಟು. ಅವುಗಳಿಗೆ ಉತ್ತರ ಕೊಡುವ ಉತ್ತರ‐ದಾಯಿತ್ವವು ಶ್ರೀ ರಘೂತ್ತಮಾಚಾರ್ಯರದ್ದೇ ಆಗಿರುವದರಿಂದ, ಈ ಹೇಳಿಕೆಗಳ ಬಗ್ಗೆ ನಾನೇನೂ ಹೇಳಲಾರೆ. ಅದನ್ನವರು ನೋಡಿಕೊಳ್ಳುತ್ತಾರೆ. ಶ್ರೀ ರಘೂತ್ತಮಾಚಾರ್ಯರು, ಕೂಡ, ಈ ವಿಚಾರಸಂಕಿರಣದಲ್ಲಿ “ಶ್ರೀ ಅಕ್ಷೋಭ್ಯರ ವಾದವು ಶೃಂಗೇರಿಯ ಜಗದ್ಗುರು ಶ್ರೀ ವಿದ್ಯಾರಣ್ಯರೊಡನೆ ನಡೆಯಲಿಲ್ಲ, ಕಿಂತು, ಅವೈದಿಕರಾದ ಮಾಧವ ಮಂತ್ರಿಯೊಡನೆ **ನಡೆಯಿತು”**ಎಂಬ ಪಕ್ಷವನ್ನು ಪ್ರತಿಪಾದಿಸಿದ್ದಾರೆ. ಆದ್ದರಿಂದ, ಒಂದುವೇಳೆ, ಶ್ರೀ ಅಕ್ಷೋಭ್ಯ‐ಮಾಧವ ಮಂತ್ರಿಗಳ ನಡುವೆ ವಾದನಡೆದು, ಆ ವಾದದಲ್ಲಿ ಅಕ್ಷೋಭ್ಯರೇ ಜಯಶಾಲಿಗಳಾಗಿದ್ದರೆ, ಅದರಿಂದ “ನಮಗೆ **ಯಾವ ತೊಂದರೆಯೂ ಇಲ್ಲ” **ಎಂಬ ಮಾತನ್ನು ಸ್ಪಷ್ಟಪಡಿಸಬಯಸುತ್ತೇನೆ.
          • ಇನ್ನೊಂದು ಮಾತು. ಶ್ರೀ ರಘೂತ್ತಮಾಚಾರ್ಯರು ಪ್ರತಿಪಾದಿಸಿದ “ಕಲ್ಲುಮಠ”ಎಂಬ ಶಬ್ದಪ್ರಯೋಗದಿಂದ, ಆ ಮಠವು ಒಂದುಕಾಲದಲ್ಲಿ ಶೈವಮಠವಾಗಿತ್ತೆಂಬುದರ ಗಮಕವಾಗಿದೆ” ಎಂಬ “ಉಪಸಿದ್ಧಾಂತವು” [Hypothesis] ಎಷ್ಟುಮಟ್ಟಿಗೆ ಕಾರ್ಯಸಾಧುವಾಗಿದೆಯೆಂಬುದನ್ನು ಅವರೇ ನಿರ್ಣಯಿಸಬೇಕು. ಈ ಉಪಸಿದ್ಧಾಂತವು ಕಾರ್ಯಸಾಧುವೇ ಆಗಿದೆಯೆಂಬುದು, ವಿಮರ್ಶೆಯ ನಂತರ, ಸ್ಥಾಪಿತವಾದರೆ, ಅದನ್ನು ಉಪೋದ್ಬಲಿಸುವ, ಪ್ರಮಾಣವೊಂದನ್ನು, [ನಾನು ಗಮನಿಸಿದ್ದು] ರಘೂತ್ತಮಾಚಾರ್ಯರ ಗಮನಕ್ಕೆ ತರಬಯಸುತ್ತೇನೆ. ಈ ಮಠವನ್ನು [ಕೂಡಲಿ ಆರ್ಯಅಕ್ಷೋಭ್ಯಮಠವನ್ನು] EC VII ಶಿವಮೊಗ್ಗಾ 84 [ಪುಟ 91] ಎಂಬ ಶಾಸನದಲ್ಲಿ ಕೂಡ್ಲಿಆರ್ಯಮಠ [ಕಲ್ಲುಮಠ]ಎಂದು ಕರೆದಿದ್ದಾರೆ. ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಪ್ರಕಾಶಿಸಲ್ಪಟ್ಟ “ಮಾಧ್ವ ಮಠಗಳ ಶಾಸನಗಳು ಸಂಪುಟ‐1” ಎಂಬ ಪುಸ್ತಕದಲ್ಲಿ ಈ ಶಾಸನವನ್ನು ಪುಟ 45‐49 ರಲ್ಲಿ ಸಂಗ್ರಹಿಸಲಾಗಿದೆ. ಅದರಲ್ಲಿ ಇದು ಶಾಸನಸಂಖ್ಯೆ 15 ಆಗಿದೆ. ಅದರಲ್ಲಿ [[2]] ಕೂಡ ಈ ಶಾಸನವನ್ನು “ EC VII ಶಿವಮೊಗ್ಗಾ 84 ಕೂಡ್ಲಿಆರ್ಯಮಠ [ಕಲ್ಲುಮಠ] ಪುಟ 91” ಎಂದೇ ಹೆಸರಿಸಲಾಗಿದೆ. ಈ ಅಂಶವು ಶ್ರೀರಘೂತ್ತಮಾಚಾರ್ಯರಿಗೆ ಸಹಾಯಕವಾದೀತೇ ಎಂಬುದನ್ನು ಅವರೇ ನಿರ್ಣಯಿಸಲಿ. ಅವಶ್ಯವಿದ್ದರೆ, ಈ ಮಾಹಿತಿಯನ್ನು ಅವರು ಧಾರಾಳವಾಗಿ ಬಳಸಿಕೊಳ್ಳಬಹುದು. ಅಂತೂ, “ಶೃಂಗೇರಿ ಜಗದ್ಗುರು ಶ್ರೀವಿದ್ಯಾರಣ್ಯರು ಹಾಗೂ ಶ್ರೀ ಅಕ್ಷೋಭ್ಯತೀರ್ಥರ ಮಧ್ಯೆ ವಾದವೇ ನಡೆಯಲಿಲ್ಲ, ಹಾಗೂ ಅದರಲ್ಲಿ ಶ್ರೀ ವಿದ್ಯಾರಣ್ಯರು ಸೋಲುವ ಪ್ರಶ್ನೆಯೇ ಉದ್ಭವಿಸುವದಿಲ್ಲ” ಎಂಬ ನಮ್ಮ ಪಕ್ಷವನ್ನೇ ಬಲಗೊಳಿಸಿದ ಶ್ರೀ ರಘೂತ್ತಮಾಚಾರ್ಯರಿಗೆ ಕೃತಜ್ಞತೆಗಳು.
          • ಇನ್ನು ಎರಡನೆಯದಾಗಿ, ನಾವು ಶ್ರೀ ಪ್ರದೀಪ ಸಿಂಹಾಚಾರ್ಯರ ಹೇಳಿಕೆಗಳನ್ನು ವಿಮರ್ಶಿಸೋಣ. “ವಾದವೇ ನಡೆಯಲಿಲ್ಲ ಎಂಬ ಪಾಟೀಲರ ಅಭಿಪ್ರಾಯವು ಸರಿಯಾದುದಲ್ಲ, ವಾದ ನಡೆಯಿತು, ಅದರಲ್ಲಿ ಅಕ್ಷೋಭ್ಯ ತೀರ್ಥರು ಜಯಶಾಲಿಗಳಾದರೆಂಬುದೇ ಸತ್ಯ” ಎಂದು ಶ್ರೀಪ್ರದೀಪ ಸಿಂಹಾಚಾರ್ಯರು ಹೇಳಿದ್ದಾರೆ. ತಮಗೆ, ಮೊದಲು ಈ ವಿಷಯದ ಬಗ್ಗೆ ಇದ್ದ ಸ್ಪಷ್ಟತೆ ಬೇರೆ, ಈಗ ಬಂದ ಸ್ಪಷ್ಟತೆಯೇ ಬೇರೆ ಎಂದು ಶ್ರೀ ಪ್ರದೀಪ ಸಿಂಹಾಚಾರ್ಯರು ಹೇಳಿದ್ದಾರೆ. ನಾನು ವಾದವೇ ನಡೆಯಲಿಲ್ಲ ಎಂದು ಹೇಳಿದ್ದೇನೆ ಎಂಬುದು ಅವರ ಆರೋಪ. ಈ ಬಗ್ಗೆ ಅವರಿಗೆ ಇನ್ನೊಂದು ಸ್ಪಷ್ಟತೆಯನ್ನು ಕೊಡಬಯಸುತ್ತೇನೆ. “ವಾದವೇ ನಡೆಯಲಿಲ್ಲ” ಎಂದು ನಾನುಹೇಳಿದ್ದು “ಶೃಂಗೇರಿಯ ಶ್ರೀ ವಿದ್ಯಾರಣ್ಯ ಸ್ವಾಮಿಗಳೊಡನೆ [ಸಾಯಣಸಹೋದರರಾದ, ಮಾಧವ‐ವಿದ್ಯಾರಣ್ಯರೊಡನೆ] ವಾದವೇ ನಡೆಯಲಿಲ್ಲ” ಎಂದೇ ಹೊರತು ವಾದವೇ ನಡೆಯಲಿಲ್ಲ ಎಂಬುದು ಖಂಡಿತವಾಗಿಯೂ ನನ್ನ ವಿವಕ್ಷೆಯಲ್ಲ. ಇದನ್ನು ನಾನು “ಅಕ್ಷೋಭ್ಯ‐ ವಿಜಯ‐ವಿಭ್ರಮ”ಗ್ರಂಥದಲ್ಲಿ [ಪುಟ 52] ಸ್ಪಷ್ಟಪಡಿಸಿದ್ದೇನೆ. ಯಾರು ಬೇಕಾದರೂ ನೋಡಿಕೊಳ್ಳಬಹುದು. ಅದು ಈ ಮುಂದಿನಂತಿದೆ. “ಇನ್ನು, ಅವೈದಿಕೋತ್ತಮಾರಣ್ಯಂ ಎಂಬ ಶಬ್ದಪ್ರಯೋಗದಿಂದ, ವಿದ್ಯಾರಣ್ಯರು ವಿವಕ್ಷಿತರಾಗಿಲ್ಲ, ಅಕ್ಷೋಭ್ಯರು ಬೇರೆಯಾರನ್ನೋ ವಾದದಲ್ಲಿ ಸೋಲಿಸಿರಬಹುದು, ಎಂಬುದು ಈ ಶಬ್ದದ ವಿವರಣೆಯಾದರೆ, ನಮಗೆ ಅಭ್ಯಂತರವೇ ಇಲ್ಲ. ಅಷ್ಟೇ ಅಲ್ಲ, ಶ್ರೀಅಕ್ಷೋಭ್ಯರು ಅನೇಕ ದುರ್ವಾದಿಗಳನ್ನು ಸೋಲಿಸಿದರೆಂದು ಜಯತೀರ್ಥರು ತತ್ತ್ವಪ್ರಕಾಶಿಕಾ ಟೀಕೆಯಲ್ಲಿ [ದುರ್ವಾದಿವಾರಣವಿದಾರಣದಕ್ಷದೀಕ್ಷಮಕ್ಷೋಭ್ಯತೀರ್ಥಮೃಗರಾಜ ಮಹಂ ನಮಾಮಿ] ಎಂದು ಹೇಳಿಯೂ ಇದ್ದಾರೆ.”
            • ಹನಸೋಗೆ ಮಠದ ಶ್ರೀ ವಿಶ್ವನಂದನತೀರ್ಥರ ಉಲ್ಲೇಖವನ್ನು ಶ್ರೀ ಪ್ರದೀಪ ಸಿಂಹಾಚಾರ್ಯರು ಮಾಡಿದ್ದರಿಂದ ಅವರ ಹಾಗೂ ನನ್ನ ನಡುವೆ ನಡೆದ ಕೆಲವು ಚರ್ಚಾಂಶಗಳನ್ನು ಓದುಗರ ಮುಂದೆ ಇಡಬಯಸುತ್ತೇನೆ. ಹನಸೋಗೆ ಶ್ರೀಗಳು, “ಆಯಾ ಮಠಗಳ ಪೀಠಾಧಿಪತಿಗಳ ಕಾಲವನ್ನು ನಿರ್ಧರಿಸುವಾಗ, ಆಯಾ ಮಠಗಳ ಪರಂಪರೆಯೇ ಮುಖ್ಯವೇ ಹೊರತಾಗಿ, ಯಾವದೋ ಹೇಳಿಕೆಗಳಲ್ಲ” ಎಂದು ಖಚಿತವಾಗಿ ಹೇಳುತ್ತ, ವಿದ್ಯಾರಣ್ಯರ ವಿಷಯದಲ್ಲಿ ಶೃಂಗೇರೀ ಮಠದ ಅಂತರ್ಜಾಲವನ್ನು ಅಧಿಕೃತವೆಂದು ಪರಿಗಣಿಸಿ ಅದನ್ನು ಅವಲಂಬಿಸುತ್ತ, ಶ್ರೀ ಅಕ್ಷೋಭ್ಯತೀರ್ಥರ ವಿಷಯ ಬಂದಾಗ ಮಾತ್ರ ಇತ್ತೀಚಿನ “ವಿಕಿಪೀಡಿಯಾ” ಎಂಬುದರ ಆಧಾರವನ್ನು ಬಳಸಿದ್ದಾರೆ. ವಿಕಿಪೀಡಿಯಾದಲ್ಲಿ ಕೊಟ್ಟಿರುವ ದಿನಾಂಕಗಳು, ಅಧಿಕೃತ ಮಾಧ್ವ ಮಠಗಳು ಹೇಳುವ ದಿನಾಂಕಗಳಲ್ಲ, ಕಿಂತು ಸರಸ್ವತೀ ಪರಿಣಯ ಎಂಬ ಕಾವ್ಯದಲ್ಲಿ ಕೊಟ್ಟ ದಿನಾಂಕಗಳು. ಸರಸ್ವತೀ ಪರಿಣಯವು ತೃಣಪುರದ [ಹುಲ್ಲೂರು] ರಾಘವೇಂದ್ರ ಕವಿಯು ಬರೆದದ್ದು. ಹಾಗಾದರೆ, ಮಾಧ್ವಮಠಗಳು ಅಕ್ಷೋಭ್ಯತೀರ್ಥರಿಗೆ ಹೇಳುವ ಕಾಲ ಯಾವುದು? ಬನ್ನಿ, ನೋಡೋಣ. ಮಾಧ್ವ ಮಠಗಳಲ್ಲಿ ಪ್ರಸಿದ್ಧವಾದವುಗಳು ಘಟ್ಟದಮೇಲಿನ [1] ಶ್ರೀ ಉತ್ತರಾದಿ ಮಠ, [2] ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, [3] ಶ್ರೀ ಸೋಸಲೆ ವ್ಯಾಸರಾಯರ ಮಠ, [[3]] [4] ಉಡುಪಿಯ ಅಷ್ಟಮಠಗಳು. 1. ಶ್ರೀ ದೈವಜ್ಞ ಭೀಮಾಚಾರ್ಯ ಎಂಬವರು **“ಪೂರ್ಣಬೋಧಗುರುವಂಶ ಕಥಾಕಲ್ಪತರು” **ಎಂಬ ಗ್ರಂಥವನ್ನು ಬರೆದಿದ್ದಾರೆ. ಇದು ಶ್ರೀ ಉತ್ತರಾದಿಮಠದ ಅಧಿಕೃತ ಇತಿಹಾಸವನ್ನು ದಾಖಲಿಸುತ್ತದೆ ಎಂದು ಇಂದಿಗೂ ಪ್ರತಿಪಾದಿಸಲಾಗುತ್ತಿದೆ. ಈ ಪುಸ್ತಕದಲ್ಲಿ ಆಚಾರ್ಯ ಶ್ರೀ ಮಧ್ವರಿಗೆ ಕ್ರಿ.ಶ. 1118‐1197 ರ ಕಾಲಮಾನವನ್ನು ಹೇಳಲಾಗಿದೆ. ಶ್ರೀ ಅಕ್ಷೋಭ್ಯತೀರ್ಥರು, ಆಚಾರ್ಯ ಮಧ್ವರ ನಂತರ 33 ವರ್ಷಗಳಿಗೆ ಪೀಠಕ್ಕೆಬಂದರೆಂದು ಮಾಧ್ವಪರಂಪರೆಯು ಉದ್ಘೋಷಿಸುತ್ತದೆ. ಅಂದಮೇಲೆ ಶ್ರೀಮದುತ್ತರಾದಿ ಮಠದ **ದಾಖಲೆಗಳ **ಪ್ರಕಾರ, ಶ್ರೀ ಅಕ್ಷೋಭ್ಯತೀರ್ಥರು ಕ್ರಿ.ಶ. 1230 ರಿಂದ ಕ್ರಿ.ಶ. 1245 ರ ವರೆಗೆ ಮಾಧ್ವಪೀಠಾಧಿ ಪತಿಗಳಾಗಿದ್ದರು ಎಂದು ನಿಶ್ಚಿತವಾಗಿಯೂ ನಿಷ್ಪನ್ನವಾಗುತ್ತದೆ. ಈಗ ಹೇಳಿ‐ಕ್ರಿ.ಶ. 1230‐1245 ರ ಹೊತ್ತಿಗೆ ಶ್ರೀ ಮಾಧವಾಚಾರ್ಯರು [ಶ್ರೀ ವಿದ್ಯಾರಣ್ಯರು] ಇನ್ನೂ ಹುಟ್ಟಿಯೇ ಇರಲಿಲ್ಲ. ಅಂದ ಮೇಲೆ ಅವರಿಬ್ಬರ ನಡುವೆ ವಾದ ನಡೆದದ್ದು ಹೇಗೆ? 2. ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪರಂಪರೆಯ ಪ್ರಕಾರ, ಆ ಮಠದ ‘ಶಾಮಲ್’ ಎಂಬ ಕೋರೀ ಕಾಗದದ ಮೇಲೆ ಬರೆಯಲ್ಪಟ್ಟ ಹಳೆಯ ಹೊತ್ತಿಗೆಯಲ್ಲಿ ಮಧ್ವಾಚಾರ್ಯರು ಶಕ 1095 [ಕ್ರಿ.ಶ. 1173] ಆನಂದ ಸಂವತ್ಸರದಲ್ಲಿ ಅವತರಿಸಿ, ರೌದ್ರಿಯಲ್ಲಿ ಉಪನಯನ ಮಾಡಿಕೊಂಡು, ಪ್ರಭವದಲ್ಲಿ ಸನ್ಯಾಸ ತೆಗೆದುಕೊಂಡು, 40 ವರ್ಷಗಳ ನಂತರ ಪ್ಲವಂಗದಲ್ಲಿ ಮೊದಲು ಬದರಿಕಾಶ್ರಮಕ್ಕೆ ಹೋದರೆಂದು ಬರೆದಿದೆ. [ಶ್ರೀ ರಾ.ಶ್ರೀ.ಪಂಚಮುಖಿಯವರ “ಹರಿದಾಸ ಸಾಹಿತ್ಯ”ಎಂಬ ಗ್ರಂಥದ ಪರಿಶಿಷ್ಟ 2‐ಪುಟ 332 ನೋಡಿ.] ಮಧ್ವರು ಒಟ್ಟು 79 ವರ್ಷ ದೃಶ್ಯರಾಗಿದ್ದರು. ನಂತರ ಅದೃಶ್ಯರಾಗಿ ಬದರಿಗೆ ಹೊರಟುಹೋದರು ಎಂದು ಮಾಧ್ವ ಪರಂಪರೆ ಹೇಳುತ್ತದೆ. ಆ ಪ್ರಕಾರ, ಮಧ್ವರು ಅದೃಶ್ಯರಾದದ್ದು ಕ್ರಿ.ಶ. 1252 ರಲ್ಲಿ ಎಂಬುದು ನಿಶ್ಚಿತ. ಮಧ್ವರ ನಿರ್ಯಾಣದ ನಂತರ 33 ವರ್ಷಗಳಿಗೆ ಶ್ರೀ ಅಕ್ಷೋಭ್ಯತೀರ್ಥರು ಪಟ್ಟಕ್ಕೆ ಬಂದಿದ್ದಾರೆ. ಅಂದರೆ, ಶ್ರೀ ರಾಘವೇಂದ್ರ ಸ್ವಾಮಿಗಳ **ಮಠದ ದಾಖಲೆಗಳ **ಪ್ರಕಾರವೇ, ಶ್ರೀ ಅಕ್ಷೋಭ್ಯತೀರ್ಥರು ಪೀಠಕ್ಕೆ ಬಂದದ್ದು ಕ್ರಿ.ಶ. 1285 ರಲ್ಲಿ ಎಂಬುದು ಖಚಿತ. ಈ ದಾಖಲೆಯ ಪ್ರಕಾರ ಅವರು ಪೀಠದ ಮೇಲಿದ್ದದ್ದು ಕ್ರಿ.ಶ. 1285 ರಿಂದ ಕ್ರಿ.ಶ. 1300 ರ ವರೆಗೆ. ಈ ಕಾಲಖಂಡದಲ್ಲಿ, ಶ್ರೀ ಮಾಧವಾಚಾರ್ಯರು ಇನ್ನೂ ಬಾಲಕರಾಗಿದ್ದರು, ಇನ್ನು ಕೆಲವರ ಪ್ರಕಾರ ಅದೇ ಆಗ ಹುಟ್ಟಿದ್ದರು. ಸಮಕಾಲೀನತ್ವ ಹೇಗೆ ಸಾಧಿಸೀತು? ವಾದ ಹೇಗೆ ನಡೆದೀತು? ಪ್ರಾಜ್ಞರೇ ವಿಚಾರಿಸಲಿ. 3. ಶ್ರೀ ಸೋಸಲೆ ವ್ಯಾಸರಾಯರ ಮಠದ ಗುರುಪರಂಪರೆಯ ಪ್ರಕಾರ, ಶ್ರೀ ಮಧ್ವಾಚಾರ್ಯರ ಬದರಿಕಾಶ್ರಮ ಪ್ರವೇಶ ಕಾಲವು ಕ್ರಿ.ಶ. 1278 ಮಾಘಶುದ್ಧ ನವಮೀ ಎಂದು ದಾಖಲಾಗಿದೆ. ಅಂದರೆ ಆ ಮಠವು ಮಧ್ವರ ಜನನವನ್ನು ಕ್ರಿ.ಶ. 1199 ಎಂದೇ ಪರಿಗಣಿಸಿದೆ ಎಂದೇ ಅರ್ಥ. ಮುಂದುವರಿದು “ಪದ್ಮನಾಭ ತೀರ್ಥರಿಗೆ ಕ್ರಿ.ಶ. 1285 ನ್ನು, ನರಹರಿತೀರ್ಥರಿಗೆ ಕ್ರಿ.ಶ.1294 ನ್ನೂ, ಮಾಧವತೀರ್ಥರಿಗೆ ಕ್ರಿ.ಶ. 1310 ನ್ನೂ, ಅಕ್ಷೋಭ್ಯ ತೀರ್ಥರಿಗೆ ಕ್ರಿ.ಶ. 1320 ನ್ನೂ ವೃಂದಾವನಪ್ರವೇಶದ ದಿನಗಳೆಂದು ನಿಶ್ಚಿತಗೊಳಿಸಿದೆ. ಇಲ್ಲಿ ಮಾಧವ ತೀರ್ಥರಿಗೆ ಸೋಸಲೇ ಮಠದ ಪರಂಪರೆಯು 17 ವರ್ಷಗಳ ಬದಲಾಗಿ 16 ವರ್ಷಗಳನ್ನು ನಿಶ್ಚಯಿಸಿದೆ. ಶ್ರೀ ಅಕ್ಷೋಭ್ಯತೀರ್ಥರಿಗೆ ಕೇವಲ 10 ವರ್ಷಗಳನ್ನು ಕೊಟ್ಟಿದೆ. ಜಯತೀರ್ಥರ ವೃಂದಾವನ ಪ್ರವೇಶಕಾಲವು ಕ್ರಿ.ಶ. 1342 ಎಂದು ಹೇಳಲ್ಪಟ್ಟಿದೆ. [ಶ್ರೀವಿಕೃತಿನಾಮ ಸಂವತ್ಸರ” ದ [ಕ್ರಿ.ಶ. 2010‐2011] ಸೊಸಲೇ ವ್ಯಾಸರಾಯಮಠದ ಪಂಚಾಂಗದ ಪುಟ 4 ನೋಡಿ.] ಈ ಪ್ರಕಾರ ನೋಡಿದರೆ, ಶ್ರೀ ಅಕ್ಷೋಭ್ಯ ತೀರ್ಥರು ಕ್ರಿ.ಶ. 1320 ರಲ್ಲಿಯೇ ವೃಂದಾವನಸ್ಥರಾದರು. ಆಗ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯೇ ಆಗಿರಲಿಲ್ಲ. ಮಾಧವಾಚಾರ್ಯರು ಇನ್ನೂ ವಿದ್ಯಾರಣ್ಯರೂ ಆಗಿರಲಿಲ್ಲ. ಆದ್ದರಿಂದ, ಸಮಕಾಲೀನತ್ವವೂ ಇಲ್ಲ, ವಾದವೂ ಇಲ್ಲ. 4. ಇನ್ನು **ಉಡುಪಿಯ ಅಷ್ಟಮಠಗಳ ದಾಖಲೆಗಳ ಪ್ರಕಾರ, **ಎಲ್ಲ ಎಂಟೂ ಮಠಗಳ ಕೈಫಿಯತ್ತು ಗಳಲ್ಲಿ ಆಚಾರ್ಯ ಶ್ರೀ ಮಧ್ವರ ಜನನವನ್ನು ಕ್ರಿ.ಶ. 1199 ಎಂದೇ ಏಕಮತದಿಂದ ಒಪ್ಪಲಾಗಿದೆ. ಈ ಪ್ರಕಾರ ಶ್ರೀ ಅಕ್ಷೋಭ್ಯತೀರ್ಥರು ಕ್ರಿ.ಶ. 1311 ರಲ್ಲಿ ಪಟ್ಟಕ್ಕೆ ಬಂದು, ಕ್ರಿ.ಶ.1326 ರ ವರೆಗೆ ಪೀಠದಲ್ಲಿರುತ್ತಾರೆ. ಆದರೆ ಕ್ರಿ.ಶ. 1326 ರಲ್ಲಿ ಇನ್ನೂ ವಿಜಯನಗರ ಸಾಮ್ರಾಜ್ಯವೇ ಸ್ಥಾಪಿತವಾಗಿರಲಿಲ್ಲ ಅಲ್ಲದೆ, ಮಾಧವಾಚಾರ್ಯರು [[4]] ಇನ್ನೂ ಸನ್ಯಾಸ ಸ್ವೀಕರಿಸಿ, “ಶ್ರೀ ವಿದ್ಯಾರಣ್ಯ ಶ್ರೀಪಾದಂಗಳೂ” ಆಗಿರಲಿಲ್ಲ. ಅಂದ ಮೇಲೆ “ಅಕ್ಷೋಭ್ಯ‐ ವಿದ್ಯಾರಣ್ಯರ” ನಡುವೆ ವಾದ ಹೇಗೆ ನಡೆದಿದ್ದೀತು?
          • ಶ್ರೀ ಪ್ರದೀಪ ಸಿಂಹಾಚಾರ್ಯರು ಮಾತಾಡುತ್ತ, ಶ್ರೀ ರಾಮಾನುಜ ಮತೀಯ ವಿದ್ವಾಂಸರೊಬ್ಬರನ್ನು ಭೆಟ್ಟಿ ಮಾಡಿ, ಈ ವಾದದ ಬಗ್ಗೆ ಅವರ ಅಭಿಪ್ರಾಯಗಳನ್ನು ಕೇಳಿದರೆಂದೂ, ಸುಮಾರು ಮೂರು ನಾಲ್ಕು ತಾಸು ಅವರೊಡನೆ ಚರ್ಚೆ ನಡೆಸಿದರೆಂದೂ ಹೇಳಿದ್ದಾರೆ. ಆಗ, ಪರಕಾಲ ಮಠದ “ತೃತೀಯ ಬ್ರಹ್ಮತಂತ್ರ ಸ್ವತಂತ್ರ ಜೀಯರ್” ಅವರು ಬರೆದ “ಮುವ್ವಾಯಿರಪ್ಪಡಿ ಗುರುಪರಂಪರಾ ಪ್ರಭಾವ” ಎಂಬ ಗ್ರಂಥದಲ್ಲಿ ಅಕ್ಷೋಭ್ಯ ವಿದ್ಯಾರಣ್ಯರ ವಾದದ ಬಗ್ಗೆ ದಾಖಲೆ ದೊಕುವದೆಂದು, ಈ ವಿದ್ವಾಂಸರು ತಿಳಿಸಿರುವದಾಗಿಯೂ ಶ್ರೀ ಪ್ರದೀಪ ಸಿಂಹಾಚಾರ್ಯರು ಹೇಳಿದರು. ಶ್ರೀ ಎನ್. ದೇಶಿಕಾಚಾರ್ಯ ಎಂಬ ವಿದ್ವಾಂಸರು ಕ್ರಿ.ಶ. 1949 ರಲ್ಲಿ ಬರೆದ Origin and growth of Shri Brahmatantra Parakala Matha ಎಂಬ ಗ್ರಂಥದಲ್ಲಿಯ Parakala Matha Guruparmpara [as authenticated by inscription No. 574 of 1919] ಎಂಬ ಲೇಖನದ ಆಧಾರದಿಂದ ತೃತೀಯ ಬ್ರಹ್ಮತಂತ್ರ ಸ್ವತಂತ್ರಜೀಯರ್ ಅವರ ಪೀಠಾಧಿಪತ್ಯ ಕಾಲವು ಕ್ರಿ.ಶ. 1394 ‐ 1406 ಎಂದು ನಿಶ್ಚಿತವಾಗಿದೆ. ಈ ಕಾಲದಲ್ಲಿಯೇ ಬರೆಯಲ್ಪಟ್ಟ “ಮುವ್ವಾಯಿರಪ್ಪಡಿ ಗುರುಪರಂಪರಾ ಪ್ರಭಾವ”ದಲ್ಲಿ ಅಕ್ಷೋಭ್ಯ‐ವಿದ್ಯಾರಣ್ಯರ ವಾದದ ಉಲ್ಲೇಖವಿರುವದರಿಂದಲೂ, ಆ ವಾದದಲ್ಲಿ ಅಕ್ಷೋಭ್ಯರು ಜಯಶಾಲಿ ಗಳಾದರೆಂದು ದಾಖಲೆ ಇರುವದರಿಂದಲೂ, ಮತ್ತು ಈ ಕಾಲವು ಅಕ್ಷೋಭ್ಯತೀರ್ಥರ ಕಾಲಕ್ಕೆ ತೀರಸಮೀಪ ವರ್ತಿಯಾಗಿರುವದರಿಂದಲೂ, ಅಕ್ಷೋಭ್ಯವಿದ್ಯಾರಣ್ಯರ ವಾದ‐ಘಟನೆಗೆ ವಿಶ್ವಾಸಾರ್ಹ ಪುರಾವೆಯಾಗುತ್ತದೆ” ಎಂಬುದು ಶ್ರೀ ಪ್ರದೀಪ ಸಿಂಹಾಚಾರ್ಯರ ಅಭಿಪ್ರಾಯ. ಆದರೆ, ಈ ವಿಷಯದಲ್ಲಿ ನನ್ನ ಪ್ರತಿಕ್ರಿಯೆಗಳೇನು ಎಂಬುದನ್ನು ಶ್ರೀ ಪ್ರದೀಪ ಸಿಂಹಾಚಾರ್ಯರು ಮುಚ್ಚಿಡುತ್ತಿದ್ದಾರೆ. **ಅಕ್ಷೋಭ್ಯ ವಿಜಯ ವಿಭ್ರಮ **ಗ್ರಂಥದ ಪುಟ 60 ರಿಂದ 72 ರ ವರೆಗಿನ 13 ಪುಟಗಳಲ್ಲಿ ನಾನು ಈ ಗ್ರಂಥವನ್ನು ಕುರಿತು ವಿಮರ್ಶೆ ಮಾಡಿದ್ದೇನೆ. ಅವರು ಭೆಟ್ಟಿಯಾಗಿ ಚರ್ಚಿಸಿದ ರಾಮಾನುಜೀಯ ಪಂಡಿತರ ಹತ್ತರ, ನನ್ನ ಪ್ರತಿಕ್ರಿಯೆಗಳನ್ನು ಕುರಿತು ಶ್ರೀ ಪ್ರದೀಪಸಿಂಹಾಚಾರ್ಯರು ಚರ್ಚಿಸಿದಂತೆ ಕಾಣಲಿಲ್ಲ. ಚರ್ಚಿಸಿದ್ದರೆ, ಆ ವಿದ್ವಾಂಸರ ಅಭಿಪ್ರಾಯಗಳೇನು ಎಂಬುದು ತಿಳಿಯುತ್ತಿತ್ತು. ಈ ಶ್ರಮವನ್ನು ಶ್ರೀ ಪ್ರದೀಪ ಸಿಂಹಾಚಾರ್ಯರು ತೆಗೆದುಕೊಂಡಂತೆ ಕಾಣಲಿಲ್ಲ. ಇರಲಿ. ಈ ವಿಷಯವನ್ನು ಕುರಿತು ನನ್ನ ಪ್ರತಿಕ್ರಿಯೆಗಳನ್ನು ಈ ಮುಂದಿನಂತೆ ಸಂಕ್ಷೇಪವಾಗಿ ದಾಖಲಿಸುತ್ತಿದ್ದೇನೆ. 1. “ಅಪ್ಪಾದು ವಿಜಯನಗರತ್ತಿಲ್” ಎಂದು ಪ್ರಾರಂಭವಾಗುವ ಈ ಗ್ರಂಥಭಾಗದಲ್ಲಿ, ವಾದವು ವಿಜಯನಗರದಲ್ಲಿ ನಡೆಯಿತೆಂದು ಹೇಳಲ್ಪಟ್ಟಿದೆ. ಆದರೆ ಈಗಿನ ವಿದ್ವಾಂಸರು ವಾದವನ್ನು ಮುಳಬಾಗಿಲಿಗೆ ಸ್ಥಳಾಂತರಿಸಿದ್ದಾರೆ. ಯಾಕೆ ? ಕಾರಣ ತಿಳಿಯಲಿಲ್ಲ. ಈಗ ತಿಳಿಸಬಹುದೇ? 2. “ಮುವ್ವಾಯಿರಪ್ಪಡಿ ಗುರುಪರಂಪರಾ ಪ್ರಭಾವ”ದಲ್ಲಿ, ಶ್ರೀ ವೇದಾಂತ ದೇಶಿಕರು, ಅದ್ವೈತ ಕವಿಯಾದ ಕೃಷ್ಣಮಿಶ್ರನನ್ನು ಸೋಲಿಸಿದರೆನ್ನಲಾಗಿದೆ. ದೇಶಿಕರ ಕಾಲ ಕ್ರಿ.ಶ. 1269‐1370 ಎಂಬುದು ಎಲ್ಲರೂ ಒಪ್ಪಿಕೊಂಡ ಸಂಗತಿಯಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ, ಸ್ವತಃ ಶ್ರೀ ರಾಮಾನುಜ ಮತಾನುಯಾಯಿಗಳೇ ಆದ, ಶ್ರೀ ಎಮ್.ಎನ್. ಶ್ರೀನಿವಾಸ ಐಯ್ಯಂಗಾರರು ತಮ್ಮ “ಸಂಸ್ಕೃತ ಕವಿಚರಿತ್ರೆ” ಎಂಬ ಗ್ರಂಥದಲ್ಲಿ‐ “ಕೃಷ್ಣಮಿಶ್ರನು ತನ್ನ **ಪ್ರಬೋಧಚಂದ್ರೋದಯ **ಎಂಬ ನಾಟಕದಲ್ಲಿ, ಕೀರ್ತಿವರ್ಮನೆಂಬ ರಾಜನನ್ನು ಹೊಗಳಿದ್ದಾನೆ. ಕೃಷ್ಣಮಿಶ್ರ‐ಕೀರ್ತಿವರ್ಮರು ಸಮಕಾಲೀನರು. ಕೀರ್ತವರ್ಮನು 11 ನೆಯ ಶತಮಾನಾಂತ್ಯ ದವನು. ಆದ್ದರಿಂದ, ಕೃಷ್ಣಮಿಶ್ರನೂ 11 ನೆಯ ಶತಮಾನದ ಕೊನೆಯಲ್ಲಿ ಜೀವಿಸಿದ್ದನೆಂದು ಸಿದ್ಧವಾಗುತ್ತದೆ.” ಎಂದು ದಾಖಲಿಸಿದ್ದಾರೆ. ಈಗ ಹೇಳಿ. 13‐14 ನೆಯ ಶತಮಾನದಲ್ಲಿ ಜೀವಿಸಿದ್ದ ಶ್ರೀ ವೇದಾಂತ ದೇಶಿಕರು, 11 ನೆಯ ಶತಮಾನದ ಅದ್ವೈತ ಕವಿಯಾದ ಕೃಷ್ಣಮಿಶ್ರನ ಜೊತೆವಾದಿಸಿ, ತಮಗಿಂತ 300 ವರ್ಷ ಮೊದಲೇ ಜೀವಿಸಿದ್ದ ಅವನನ್ನು ಗೆದ್ದದ್ದು ಹೇಗೆ? ಹೇಗಾದರೂ ಗೆದ್ದಿದ್ದಾರೆಂದುಕೊಳ್ಳೋಣ. ಇದಕ್ಕಿಂತ ಹೆಚ್ಚಿನ ಅಪದ್ಧವೊಂದು “ಮುವ್ವಾಯಿರಪ್ಪಡಿ ಗುರುಪರಂಪರಾ ಪ್ರಭಾವ”ದಲ್ಲಿ, ದಾಖಲಾಗಿದೆ. “ಡಿಂಡಿಮ” ಕವಿಯು ತಾನು ಬರೆದ “ರಾಮಾಭ್ಯುದಯ” [[5]] ಎಂಬ ಕಾವ್ಯವನ್ನು ಇದೇ ಶ್ರೀ ವೇದಾಂತ ದೇಶಿಕರಿಗೆ ತೋರಿಸಿದನಂತೆ. ಶ್ರೀ ದೇಶಿಕರು, ಡಿಂಡಿಮ ಕವಿಯ ಕಾವ್ಯದಲ್ಲಿಯ ಅನೇಕ ತಪ್ಪುಗಳನ್ನು ತೋರಿಸಿ, ತಾವು ಒಂದೇ ರಾತ್ರಿಯಲ್ಲಿ, ಯಾದವಾಭ್ಯುದಯ ಎಂಬ ಗ್ರಂಥ ಬರೆದರಂತೆ. ದೇಶಿಕರು ಯಾದವಾಭ್ಯುದಯವನ್ನು ಬರೆದದ್ದು ಹೌದು. ಅದನ್ನವರು ಒಂದೇ ರಾತ್ರಿ ಯಲ್ಲಿಯೇ ಬರೆದು ಮುಗಿಸಿರಲೂಬಹುದು ಎಂದುಕೊಳ್ಳೋಣ. ಆದರೆ, ಡಿಂಡಿಮ ಕವಿಯು ಕ್ರಿ.ಶ. 15 ನೆಯ ಶತಮಾನದಲ್ಲಿ ಜೀವಿಸಿದ್ದನು. ಅವನು ರಾಮಾಭ್ಯುದಯ ಎಂಬ ಕಾವ್ಯವನ್ನು ಸುಮಾರು ಕ್ರಿ.ಶ. 1450 ರ ನಂತರವೇ ಬರೆದನೆಂದು ಸಿದ್ಧವಾಗುತ್ತದೆ. ವಿವರಗಳಿಗೆ ಅಕ್ಷೋಭ್ಯ ವಿಜಯ ವಿಭ್ರಮ ಪುಟ 67‐70 ನೋಡಿ. ಕ್ರಿ.ಶ.1406 ರಲ್ಲಿ ಜೀವನ ಮುಗಿಸಿದ ಈ ಮೂರನೆಯ ಬ್ರಹ್ಮತಂತ್ರ ಸ್ವತಂತ್ರಜೀಯರ್ ಅವರಿಗೆ, ತಾವು ತೀರಿಕೊಂಡ ನಂತರ 40‐50 ವರ್ಷಗಳ ತರುವಾಯ ಬಂದ ಡಿಂಡಿಮ ಕವಿಯ ಹೆಸರು ಹೇಗೆ ತಿಳಿದಿದ್ದೀತು? ಕ್ರಿ.ಶ. 1370 ರಲ್ಲಿಯೇ ತೀರಿಹೋದ ವೇದಾಂತ ದೇಶಿಕರಿಗಂತೂ ಇವನ ಕನಸು ಕೂಡ ಬಿದ್ದಿರಲಾರದು. ಇನ್ನು ಅವನ ಕಾವ್ಯವನ್ನು ಓದಿ, ಅದರಲ್ಲಿಯ ತಪ್ಪುಗಳನ್ನು ಕಂಡುಹಿಡಿದದ್ದು ಹೇಗೆ? “ಮುವ್ವಾಯಿರಪ್ಪಡಿ ಗುರುಪರಂಪರಾಪ್ರಭಾವ”ದಲ್ಲಿ, ಇಂಥ ಕಾಲಿಕ‐ವಿಸಂಗತಿಗಳು [anachronisms] ನೂರಾರು ವರ್ಷಗಳ ನಂತರದ ಕಾಲದಲ್ಲಿ ಆಸಕ್ತರಿಂದ ಪ್ರಕ್ಷಿಪ್ತವಾಗಿವೆ [ತುರುಕಲ್ಪಟ್ಟಿವೆ] ಎಂಬ ಅಂಶವು ಈ ಎಲ್ಲ ಉದಾಹರಣೆಗಳಿಂದ ನಿಷ್ಪನ್ನವಾಗುತ್ತದೆ. ಇನ್ನೂ ಒಂದು ಮಹತ್ತ್ವದ ಸಂಗತಿಯನ್ನು ನೋಡಿ. ಪ್ರಸಿದ್ಧ ಇತಿಹಾಸಕಾರರಾದ, ನಿಷ್ಠಾವಂತ ಮಾಧ್ವರೇ ಆದ, ಶ್ರೀ ನಾ. ಶ್ರೀ ರಾಜಪುರೋಹಿತರು, ತಾವು ನೋಡಿದ ಮುವ್ವಾಯಿರಪ್ಪಡಿ ಗುರುಪರಂಪರಾ ಪ್ರಭಾವ ಎಂಬ ಗ್ರಂಥದಲ್ಲಿ, ಅಕ್ಷೋಭ್ಯ‐ವಿದ್ಯಾರಣ್ಯರ ವಾದದ ಉಲ್ಲೇಖವೇ ಇಲ್ಲ ಎಂದು ದಾಖಲಿಸಿದ್ದಾರೆ. ಅಂದ ಮೇಲೆ ಈ ವಾದದ ಕಥೆಯು ತದನಂತರ ಯಾರಿಂದಲೋ ಈ ಗ್ರಂಥದಲ್ಲಿ ಸೇರಿಸಲ್ಪಟ್ಟಿತು ಎಂದು ತಾನೇ ಅರ್ಥ? ಉಭಯ ವೇದಾಂತ ಪ್ರವೀಣ, ಪ್ರತಿವಾದಿ ಭಯಂಕರ ಅಣ್ಣಂಗರಾಚಾರ್ಯರು, ಶ್ಯಾಮ ತಿರುಮಲೆ ತಾತಾಚಾರ್ಯರು, ತಿರುಪುಟ್ಟಿಕುಳ್ ಅಪ್ಪಾಸ್ವಾಮಿಗಳು, ರಾಮಾನುಜ ಸಂಪ್ರದಾಯಕ್ಕೇ ಸೇರಿದವರು. ಈ ಮೂವರು ವಿದ್ವಾಂಸರೂ, “ಮುವ್ವಾಯಿರಪ್ಪಡಿ ಗುರುಪರಂಪರಾಪ್ರಭಾವ” ಎಂಬ ಗ್ರಂಥದ ಬಗ್ಗೆ ಬರೆಯುತ್ತ, “ಈ ಗ್ರಂಥವು ನವೀನವಾದುದು. ಅದನ್ನು 20 ನೆಯ ಶತಮಾನದಲ್ಲಿ ಬರೆದು, ತೃತೀಯ ಬ್ರಹ್ಮತಂತ್ರ ಸ್ವಾಮಿಗಳು ಬರೆದರೆಂದು ಪರಕಾಲ ಮಠದಿಂದ ಮುದ್ರಿಸಿದ್ದಾರೆ” ಎಂದು ಅಭಿಪ್ರಾಯಪಟ್ಟಿದ್ದಾರೆ. ಡಾ. ವೆಂಕಟಸುಬ್ಬಯ್ಯನವರು, ತಮ್ಮ ಕ್ರಿಯಾಶಕ್ತಿ ರಾಜಗುರು” ಎಂಬ ಲೇಖನದಲ್ಲಿ, [Quarterly Journal of Mythic Society Volume VIII page 121 ನೋಡಿ]. ಈ ಅಕ್ಷೋಭ್ಯ‐ ವಿದ್ಯಾರಣ್ಯರ ವಾದದ ಘಟನೆಯು ಕೇವಲ ಉತ್ಪ್ರೇಕ್ಷೆಯಾಗಿದೆ. ಎಂದಿದ್ದಾರೆ. ಈ ಬಗ್ಗೆ ಅವರೇ ಬರೆದದ್ದನ್ನು ನೋಡಿ. The facts, therefore, gleaned from these copper plates and presented to us by Mr. Narasimhacharya are not to be relied upon and must wholly be put out of consideration. The same, too, must be done with regard to the other incident related by Mr. Narasimhacharya concerning Vidyaranya -Akshobhya Tirtha and Vedanta Deshika. This incident is found related in the Guruparampara of the Vadagalai section of Vishishtadvaitins, a book whose reliability is repudiated even by the Tengalai Vishishtadvaitins, not to speak of Dvaitins and Advaitins. For the numerous anchronisms involved in this incident, as well as in other incidents of Vedanta Deshika’s life see pp 287, 290 293 etc of the Bombay Branch of the Royal Asiatic Society vol. xxiv [1916] [ಈ ತಾಮ್ರಪತ್ರಗಳಿಂದ ಹೆಕ್ಕಲ್ಪಟ್ಟು, ನಮ್ಮ ಮುಂದೆ ಶ್ರೀ ನರಸಿಂಹಾಚಾರ್ಯರಿಂದ ಸಾದರ ಪಡಿಸಲ್ಪಟ್ಟ ವಸ್ತುಸ್ಥಿತಿಗಳು ನಂಬಲು ಅನರ್ಹವಾಗಿವೆ, ಸಂಪೂರ್ಣವಾಗಿ ನಿರಾಕರಣೆಗೆ ಯೋಗ್ಯವಾಗಿವೆ. ನರಸಿಂಹಾಚಾರ್ಯ ರಿಂದ ನಿರೂಪಿಸಲ್ಪಟ್ಟ ವಿದ್ಯಾರಣ್ಯ‐ಅಕ್ಷೋಭ್ಯತೀರ್ಥ‐ವೇದಾಂತದೇಶಿಕರ ಘಟನೆಯು ಕೂಡ ಇದೇ ರೀತಿಯಲ್ಲಿ ನಿರಾಕರಿಸಲ್ಪಡಬೇಕು. ವಡಗಲೈ‐ವಿಶಿಷ್ಟಾದ್ವೈತಿಗಳ ಪರಂಪರೆಯಲ್ಲಿ ಕಾಣುವ ಈ ಘಟನೆಯ ವಿಶ್ವಾಸಾರ್ಹತೆಯು, ದ್ವೈತಿ, ಅದ್ವೈತಿಗಳು ಒತ್ತಟ್ಟಿಗಿರಲಿ, ತೆಂಗಲೈ ವಿಶಿಷ್ಟಾದ್ವೈತಿಗಳಿಂದಲೇ ನಿರಾಕರಿಸಲ್ಪಟ್ಟಿದೆ. ವೇದಾಂತದೇಶಿಕರ ಜೀವನದಲ್ಲಿ ಬರುವ ಈ ಘಟನೆ [ಅಕ್ಷೋಭ್ಯವಿದ್ಯಾರಣ್ಯರ ವಾದದ ಘಟನೆ] ಮತ್ತು ಇನ್ನೂ ಅನೇಕ ಘಟನೆಗಳ [[6]] ಕಾಲನಿರ್ದೇಶ ಪ್ರಮಾದಕ್ಕೋಸ್ಕರವಾಗಿ ಜರ್ನಲ್ ಆಫ್ ದಿ ಬೊಂಬೆ ಬ್ರ್ಯಾಂಚ್ ಆಫ್ ದಿ ರಾಯಲ್ ಏಶಿಯಾಟಿಕ್ ಸೊಸೈಟಿಯ XXIV [1916] ಸಂಪುಟದ 287, 290, 293, 295 ನೇ ಪುಟಗಳನ್ನು ನೋಡಿರಿ.]”
          • ಇನ್ನು ದೊಡ್ಡಯ್ಯಾಚಾರ್ಯರ ಬಗ್ಗೆ ನೋಡೋಣ. ದೊಡ್ಡಯ್ಯಾಚಾರ್ಯರು [ಇವರ ನಿಜವಾದ ಹೆಸರು ಶ್ರೀನಿವಾಸ ಮಹಾಸೂರಿಗಳು] ಇವರ ಕಾಲ 17 ನೆಯ ಶತಮಾನದ ಉತ್ತರಾರ್ಧ. ಇವರು ಬರೆದ **“ವೇದಾಂತ ದೇಶಿಕ ವೈಭವಪ್ರಕಾಶಿಕಾ ಸ್ತೋತ್ರ”**ದಲ್ಲಿ ಕೂಡ, ಮೇಲ್ಕಾಣಿಸಿದ ಕೃಷ್ಣಮಿಶ್ರ, ಡಿಂಡಿಮಕವಿಗಳ ಉಲ್ಲೇಖವು ದೊರಕುವದರಿಂದ, ಈ ಗ್ರಂಥವೂ ಕೂಡ ಅನೈತಿಹಾಸಿಕ ಸಂಗತಿಗಳಿಂದಲೇ ತುಂಬಿದೆ ಎಂದು ಸುಲಭವಾಗಿ ಹೇಳಬಹುದು.
          • ಇನ್ನು ಕೌಶಿಕ ಕವಿತಾರ್ಕಿಕಸಿಂಹ ಪ್ರಣೀತ “ವೇದಾಂತಾಚಾರ್ಯ ವಿಜಯ ಚಂಪೂ” ಕಾವ್ಯವನ್ನೂ ಸ್ವಲ್ಪ ನೋಡೋಣ. ಇದನ್ನು ಕುರಿತು ನಾನು ಹೊಸದಾಗಿಹೇಳುವದೇನೂ ಇಲ್ಲ. ಇದೆಷ್ಟು [ಅ]ಪ್ರಾಮಾಣಿಕವಾಗಿದೆ ಎಂಬುದನ್ನು ಈ ಗ್ರಂಥಕ್ಕೆ Foreword ಬರೆದ ಮದರಾಸಿನ [ಚೆನ್ನೈನ] ನ್ಯಾಯವಾದಿ, ಡಿ. ರಾಮಸ್ವಾಮಿ ಐಯ್ಯಂಗಾರ್ ಅವರೇ ವಿಮರ್ಶಿಸಿದ್ದಾರೆ ನೋಡಿ. It has been rightly observed by the learned Editor - in this work, there are deviations from the traditional versions of Deshika’s life………To me it appears that the poet was more intent upon enjoying the greatness of the Acharya to his heart’s content in melodious verse and prose than to follow the accepted versions. [“ವೇದಾಂತಾಚಾರ್ಯವಿಜಯಚಂಪೂ” ಎಂಬ ಕೃತಿಯಿಂದ, ಈ ಕಾವ್ಯದಲ್ಲಿ, ಕವಿತಾರ್ಕಿಕಸಿಂಹ ಕೌಶಿಕ ವೇದಾಂತಾಚಾರ್ಯರು, ಸಂಪ್ರದಾಯವು ಸತ್ಯವೆಂದು ಸ್ವೀಕರಿಸಿದ ಮಾರ್ಗವನ್ನು ದೂರಬಿಟ್ಟು ಬೇರೆದಾರಿ ತುಳಿದಿದ್ದಾರೆ. ಅವರಿಗೆ, ಅಧಿಕೃತ ಇತಿಹಾಸಕ್ಕಿಂತ, ಹೃದ್ಯವಾದ ಮಧುರವಾದ ಗದ್ಯಪದ್ಯಗಳ ಮೂಲಕ, ತಮ್ಮ ಗುರುಗಳ ಮಹಿಮಾತಿಶಯಗಳನ್ನು ವರ್ಣಿಸುವದೇ ಇಷ್ಟತಮವಾಗಿದೆ”] ಈ ಕಾವ್ಯದ ಸಂಪಾದಕರು ಸಹ ಇದೇ ಅಭಿಪ್ರಾಯವುಳ್ಳವರಾಗಿದ್ದರೆಂಬುದು, It has been rightly observed by the learned Editor”ಎಂಬ ಮೇಲಿನ ವಾಕ್ಯಪ್ರಯೋಗದಿಂದ ವಿದಿತವಾಗುತ್ತದೆ. “ಕೌಶಿಕ ಕವಿತಾರ್ಕಿಕ ಕೇಸರಿಯವರು, ಅಕ್ಷೋಭ್ಯ‐ವಿದ್ಯಾರಣ್ಯರ ವಾದಪ್ರಸಂಗ, ಕೃಷ್ಣಮಿಶ್ರ‐ಪ್ರಸಂಗ ಹಾಗೂ ಡಿಂಡಿಮಕವಿ‐ಪ್ರಸಂಗಾದಿಗಳು, ನಿಜವಾದ ಅರ್ಥದಲ್ಲಿ ನಡೆದ ಐತಿತಹಾಸಿಕ ಘಟನೆಗಳಲ್ಲದಿದ್ದರೂ, ಅವು, ತಮ್ಮಗುರುಗಳಾದ ವೇದಾಂತ ದೇಶಿಕರ ಮಹಿಮಾತಿಶಯಗಳನ್ನು ವರ್ಣಿಸುತ್ತವೆಂಬ ಕಾರಣಕ್ಕಾಗಿ, ಅವುಗಳನ್ನು ತಮ್ಮ ಕಾವ್ಯದಲ್ಲಿ ಬಳಸಿಕೊಂಡಿದ್ದಾರೆಂಬುದು ಈ ಮೇಲಿನ ವಿಮರ್ಶೆಯಿಂದ ನಿಷ್ಪನ್ನವಾಗುತ್ತದೆ. ಆದ್ದರಿಂದ, ಇದು ಅಕ್ಷೋಭ್ಯ‐ವಿದ್ಯಾರಣ್ಯರ ವಾದವನ್ನು ಕುರಿತು ಏನೇಹೇಳಿದರೂ, ಅದು ಕೇವಲ ಉತ್ಪ್ರೇಕ್ಷೆ ಮಾತ್ರವಾಗುತ್ತದೆಯೇ ಹೊತರು, ಸತ್ಯವಾಗಲಾರದು. ಶ್ರೀ ಪ್ರದೀಪ ಸಿಂಹಾಚಾರ್ಯರಿಗೆ ಇಷ್ಟು ವಿವರಗಳು ಸಾಕು ಎನ್ನಿಸುತ್ತದೆ. ಇವುಗಳ ಹಿನ್ನೆಯಲ್ಲಿ ಶ್ರೀ ಪ್ರದೀಪ ಸಿಂಹಾಚಾರ್ಯರು ತಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಳ್ಳಲಿ ಎಂದು ಸೂಚಿಸಬಯಸುತ್ತೇನೆ.
          • ಇನ್ನು ನಾವು, ಈವಿಚಾರಸಂಕಿರಣದಲ್ಲಿ ಮೂರನೆಯವರಾಗಿ ಮಾತನಾಡಿದ ಹೊ.ಶ್ರೀ ಯವರ ವಿಚಾರಗಳನ್ನು ಒರೆಗೆ ಹಚ್ಚೋಣ. ಹೊ.ಶ್ರೀಯವರು ವಿಷಯವನ್ನೆತ್ತಿಕೊಳ್ಳುತ್ತ, ಜಯಸ್ತಂಭದ ಬಗ್ಗೆ ಹೇಳುತ್ತ, “ಇದರ ಬಗ್ಗೆ ನಮಗೂ ತಿಳಿದಿಲ್ಲ, ಆಧಾರಗಳು ಸಿಕ್ಕಿಲ್ಲ. ಯಾವ ದಾಸವರೇಣ್ಯರೂ ಜಯಸ್ತಂಭವನ್ನೇ ಕೇಂದ್ರವಾಗಿಟ್ಟುಕೊಂಡು ಪದಗಳನ್ನು ಬರೆದದ್ದು ಇಲ್ಲ. ಅದ್ದರಿಂದ ಅದರ ಬಗ್ಗೆ ನಮಗೆ ಏನೂ ತಿಳಿದಿಲ್ಲ ಎಂದು ಪ್ರಾಜಲ ಮನಸ್ಸಿ ನಿಂದ ಒಪ್ಪಿಕೊಂಡದ್ದಕ್ಕೆ ಅಭಿನಂದನೆಗಳು. ಇದರಿಂದ “ ಕೆಲವು ಆಸಕ್ತ ಮಾಧ್ವರು, ಈ ರೀತಿಯ ಖೊಟ್ಟಿ **ಇತಿಹಾಸ ಸೃಷ್ಟಿಯಲ್ಲಿ ಮೊದಲಿನಿಂದಲೂ ತೊಡಗಿಕೊಂಡಿದ್ದಾರೆ” **ಎಂಬುದು ಸ್ಪಷ್ಟವಾಯಿತು.
          • [[7]] ಮುಂದೆ ಹೊ.ಶ್ರೀ ಯವರು, “ಶ್ರೀಅಕ್ಷೋಭ್ಯತೀರ್ಥರು ಮುಳಬಾಗಿಲಿಗೆ ಬಂದಿದ್ದರು, ವಾದಕ್ಕಾಗಿ ಯೇ ಬಂದಿದ್ದರು, ವಾದನಡೆದು ಅಕ್ಷೋಭ್ಯರು ಜಯಶಾಲಿಗಳಾದರು;” ಎಂಬ ಶ್ರೀ ರಘೂತ್ತಮಾಚಾರ್ಯರ ಅಭಿಪ್ರಾಯಗಳನ್ನು ಒಪ್ಪಿದ್ದಾರೆ. ಆದರೆ, “ಸೋತ ಪ್ರತಿವಾದಿಯು ಶೃಂಗೇರಿ ಮಠದ ವಿದ್ಯಾರಣ್ಯರಲ್ಲ ಕಿಂತು ಅವರು ಕಾಳಾಮುಖ‐ಶೈವ ಸಂಪ್ರದಾಯದ ಶ್ರೀ ಮಾಧವಮಂತ್ರಿಗಳು” ಎಂಬುದನ್ನು ತಿರಸ್ಕರಿದ್ದಾರೆ. ಮತ್ತು ಸೋತವರು ಶೃಂಗೇರಿ ಮಠದ ವಿದ್ಯಾರಣ್ಯರೇ ಹೌದು ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ. ತಮ್ಮ ಈ ನಿಲುವಿಗೆ ಹೊ.ಶ್ರೀಯವರು ಕೊಡುವ ಕಾರಣ / ಪ್ರಮಾಣಗಳು ಮುಂದಿನಂತಿವೆ. “**“ಅದ್ವೈತಿಗಳೇ ಈ ಮಾತನ್ನು ಒಪ್ಪಿದ್ದಾರೆ ನೋಡಿ” **ಎನ್ನುತ್ತ, ಶ್ರೀ ರಘುನಾಥ ಸೂರಿಗಳ ಮಾಣಿಕ್ಯ **ಮಂಜರಿ **ಗ್ರಂಥವನ್ನು ಪ್ರಮಾಣವಾಗಿ ಉದಾಹರಿಸಿದರು. ಈ ವಿಷಯವನ್ನು ವಿಮರ್ಶೆಗೆತ್ತಿಕೊಳ್ಳುವ ಮೊದಲು ಈ ರಘುನಾಥ ಸೂರಿಗಳು ಯಾರು ಎಂಬ ಕುತೂಹಲಜನಕ ವಿಷಯವನ್ನು ತಿಳಿದುಕೊಳ್ಳುವದು ಒಳ್ಳೆಯದು. ಅದ್ವೈತ ಸಾಂಪ್ರದಾಯಿಕ ವಲಯಗಳಲ್ಲಿ ಈ ಮುಂದಿನಂತೆ ಹೇಳಲಾಗುತ್ತಿದೆ. ಇವರು ಜನ್ಮತಃ ಮಾಧ್ವರು. ಪರ್ವತೆ ರಘುನಾಥಾಚಾರ್ಯ ಎಂಬುದು ಇವರ ಹೆಸರು. ಇವರು ಆಂಧ್ರದೇಶದವರು ಎಂದು ಕೆಲವರು, ಮಹಾರಾಷ್ಟ್ರದವರೆಂದು ಕೆಲವರು ಹೇಳುತ್ತಾರೆ. ಇವರ ಕಾಲ‐ ಕ್ರಿ.ಶ. 1821‐1859. ಇವರು, ಡಾ. ಬಿ.ಎನ್.ಕೆ ಶರ್ಮರ ಮಾತೃಪ್ರಪಿತಾಮಹರಾದ ಕೊಚ್ಚಿ ರಂಗಪ್ಪಾಚಾರ್ಯರ ಸಮಕಾಲೀನರೆಂದು ಡಾ. ಶರ್ಮಾ ಬರೆದಿದ್ದಾರೆ. [ಮಾಧ್ವ ಇತಿಹಾಸ ಪುಟ 548.] ಆದರೆ, ಇವರಿಗೆ ಅದ್ವೈತ ಸಿದ್ಧಾಂತದಲ್ಲಿ ಅಪ್ರತಿಮ ವಿದ್ವತ್ತು, ಶ್ರದ್ಧೆ ಇದ್ದವು. ಅವರು ಮಾಧ್ವವಿದ್ವಾಂಸರನ್ನು ಕೆಣಕಿ, ವಾದಕ್ಕೆ ಆಹ್ವಾನಿಸಿ, ಅವರನ್ನು “ತ್ರಾಹಿ‐ ತ್ರಾಹಿ”ಎನ್ನಿಸುತ್ತಿದ್ದರು. ಇದಕ್ಕೆ ತುಂಬಬೇಸತ್ತ, ಉತ್ತರಾದಿಮಠದ ಅಂದಿನ ಸ್ವಾಮಿಗಳು, [ಶ್ರೀ ಸತ್ಯಪರಾಯಣ ತೀರ್ಥರು‐1848‐1863] ಇವರನ್ನು ಕರೆಯಿಸಿ “ಹಾಗೆ ಮಾಡಬಾರದು; ಅದು ಶ್ರೇಯಸ್ಕರವಲ್ಲ” ಎಂದು ಬುದ್ಧಿಹೇಳಿದರು. ಇವರು ಕೇಳಲಿಲ್ಲ. ಸ್ವಾಮಿಗಳು ರಘುನಾಥಾಚಾರ್ಯರಿಗೆ ಬಹಿಷ್ಕಾರ ಹಾಕಿದರು. ಈ ಘಟನೆಯಿಂದ ಇನ್ನಷ್ಟು ಉತ್ತೇಜಿತರಾದ ಇವರು ಮತಾಂತರ ಹೊಂದಿ, ಪರ್ವತೆ ರಘುನಾಥ ಶಾಸ್ತ್ರಿ ಎಂಬ ಹೆಸರಿಟ್ಟುಕೊಂಡು, **ಶಂಕರ ಪಾದಭೂಷಣ **ಎಂಬ ಖಂಡನ ಗ್ರಂಥವನ್ನು ಬರೆದರು. ಇದಿಷ್ಟು ಅವರ ಚರಿತ್ರೆಯ ಭಾಗ. ಇದು, ಕರ್ಣಾಕರ್ಣಿಯಾಗಿ ಪರಂಪರೆಯಲ್ಲಿ ತೇಲಿಬಂದ ವಿಷಯವಾಗಿರುವದರಿಂದ, ಅದಕ್ಕೆ ಎಷ್ಟು ಮಹತ್ತ್ವಕೊಡಬೇಕೆಂಬುದನ್ನು ಓದುಗರೇ ನಿರ್ಧರಿಸಬೇಕು. ಇದು ಸತ್ಯವಾಗಿದ್ದರೂ, ಆಗದಿದ್ದರೂ, ಅವರ ಹೇಳಿಕೆಗಳಿಗೇನೂ ಬಾಧಕವಿಲ್ಲ. ಶ್ರೀ ರಘುನಾಥ ಸೂರಿಗಳು ತಮ್ಮ, ಮಾಣಿಕ್ಯ ಮಂಜರಿಯಲ್ಲಿ ದಾಖಲಿಸಿದ “ ಚಾರಿತ್ರಿಕಾಂಶಗಳು” ತುಂಬ ಗೋಜಲಾಗಿವೆ. ಅವರು ಸ್ವತಃಕ್ಕೆ ತುಂಬ ಗೊಂದಲದಲ್ಲಿದ್ದಾರೆ. ವಿದ್ಯಾರಣ್ಯರು ಕ್ರಿ.ಶ. 1228 ರಲ್ಲಿ ಜನಿಸಿದರೆಂದು ಇವರು ದಾಖಲಿಸಿದ್ದಾರೆ. ಅದು ಐತಿಹಾಸಿಕ ವಾಸ್ತವವಲ್ಲ. “ಜನಿಸಿದರು” ಎಂಬ ಪದಪ್ರಯೋಗದಿಂದ, “ಸನ್ಯಾಸ ಸ್ವೀಕರಿಸಿದರು” ಎಂದರ್ಥ ಮಾಡಿದರೆ, [ಹಾಗೆ ಅರ್ಥಮಾಡುವದು ಅಸ್ವಾಭಾವಿಕವೇನಲ್ಲ. ಯಾಕೆಂದರೆ ಸನ್ಯಾಸವು ಮರುಜನ್ಮ ಎಂದೇ ನಂಬುತ್ತಾರೆ.] ಈ ದಿನಾಂಕವು ಶ್ರೀ ವಿದ್ಯಾತೀರ್ಥರ ಸನ್ಯಾಸಗ್ರಹಣದ ದಿನಾಂಕವಾಗಿದೆ. ಶೃಂಗೇರಿಯ ಗುರುಪರಂಪರಾ ಪಟ್ಟಿಯ ಪ್ರಕಾರ ಶ್ರೀ ವಿದ್ಯಾತೀರ್ಥರು ಕ್ರಿ. ಶ. 1228 ರಿಂದ 1333 ರ ವರೆಗೆ ಶೃಂಗೇರಿ ಪೀಠದಲ್ಲಿದ್ದಾರೆ. ಇನ್ನು, ಶ್ರೀ ವಿದ್ಯಾರಣ್ಯರು ಸನ್ಯಾಸ ಸ್ವೀಕರಿಸಿದ ದಿನ ಎಂದು ರಘುನಾಥ ಸೂರಿಗಳು ಹೇಳಿದ ಕ್ರಿ.ಶ. 1328 ಎಂಬುದು, ಅವರ ಗುರುಗಳಾದ, ಶ್ರೀ ಭಾರತೀತೀರ್ಥರು ಸನ್ಯಾಸ ಸ್ವೀಕರಿಸಿದ ದಿನ. [[8]] ಹೀಗೆ ಅವರು ಬೇರೆಬೇರೆ ದಿನಾಂಕಗಳನ್ನು ಬೇರೆಬೇರೆಯವರಿಗೆ ಕೊಟ್ಟು ಗೊಂದಲವನ್ನುಂಟು ಮಾಡಿಕೊಂಡಿದ್ದಾರೆ.
          • ಮಾಣಿಕ್ಯ ಮಂಜರಿಯಲ್ಲಿ ಏನು ಹೇಳಿದೆ ಎನ್ನುವದನ್ನು ನೋಡುವ ಮೊದಲು ನಾವು ಇಲ್ಲಿ ಒಂದು ತಿದ್ದುಪಡಿಯನ್ನು ಮಾಡಬೇಕಾಗಿದೆ. ಪ್ರತಿವಾದಿಯು ಕಾಪಾಲಿಕ ಮತೀಯನು ಎಂಬುದು ಈ ವಿದ್ವಾಂಸರ ಹೇಳಿಕೆ. ಆದರೆ, ಅದು ಸರಿಯಾದುದಲ್ಲ. ಮಾಧಮಂತ್ರಿಗಳನ್ನು ಪ್ರತಿವಾದಿಯಾಗಿ ಭಾವಿಸಿದರೆ, ಅವರು ಕಪಾಲಿಕರಲ್ಲ. ಕಿಂತು “ಕಾಳಾಮುಖ ಶೈವರು”; ಕಾಶೀವಿಲಾಸ ಕ್ರಿಯಾಶಕ್ತಿ ಎಂಬ ಆಚಾರ್ಯರ ಶಿಷ್ಯರು. ಅದನ್ನು ಅವರೇ ತಮ್ಮ ಸೂತಸಂಹಿತಾ ವ್ಯಾಖ್ಯಾನದಲ್ಲಿ ಸ್ವಕಂಠೋಕ್ತವಾಗಿ ಹೇಳಿಕೊಂಡಿದ್ದಾರೆ. ನಾನು ಯಾಕೆ ಈ ತಿದ್ದುಪಡಿಯನ್ನು ಸೂಚಿಸುತ್ತಿದ್ದೇನೆಂದರೆ, ಕಾಪಾಲಿಕರು, ಮಾಹೇಶ್ವರರು, ಶೈವರು, ಕಾಳಾಮುಖರು ಪಾಶುಪತರು ಮುಂತಾ ದವರೆಲ್ಲ ಶೈವರೇ ಆಗಿದ್ದರೂ, ಅವರಲ್ಲಿ, ವಿಭಿನ್ನ ಪ್ರಮೇಯಗಳನ್ನು ಕುರಿತು, ಅವಾಂತರ ಭೇದಗಳಿವೆ, ಮಾಧ್ವರು, ಶ್ರೀವೈಷ್ಣವರು, ನಿಂಬಾರ್ಕ ಸಂಪ್ರದಾಯದವರು, ವಲ್ಲಭ ಸಂಪ್ರದಾಯದವರು ಚೈತನ್ಯಾನು ಯಾಯಿಗಳು ಎಲ್ಲರೂ ವೈಷ್ಣವರೇ ಆದರೂ, ಅವರಲ್ಲಿ, ವಿಭಿನ್ನ ಪ್ರಮೇಯಗಳನ್ನು ಕುರಿತು, ಪರಸ್ಪರ ಅವಾಂತರ ಭೇದಗಳಿರುವ ಹಾಗೆ. ಆದ್ದರಿಂದ, ವಿಷಯವಿವೇಚನೆಯ ಸ್ಪಷ್ಟತೆಗಾಗಿ, ಮಾಧವ ಮಂತ್ರಿಗಳನ್ನು, ಅವರು ಕಾಳಾಮುಖ ಶೈವರು ಎಂಬ ಅಭಿಧಾನದಿಂದ, ಸರಿಯಾಗಿ ಗುರುತಿಸುವದು ಅವಶ್ಯವಾಗಿದೆ. ಇರಲಿ.
          • ಈಗ ನಾವು ಮಾಣಿಕ್ಯ ಮಂಜರಿಯು ಈ ವಾದವಿಷಯ ಕುರಿತು ಏನು ಹೇಳುತ್ತದೆ ನೋಡೋಣ. ಮಣಿಮಂಜರಿಯ ನಾಲ್ಕನೆಯ ಸರ್ಗದ 7 ನೆಯ ಶ್ಲೋಕದಿಂದ ಮುಂದೆ, ಈ ವಾದದ ಪ್ರಸ್ತಾಪ ಬಂದಿದೆ. ಸ ಚೈಕದಾ ದಿಗ್ವಿಜಯಾಯ ಗಚ್ಛನ್ ಅಕ್ಷೋಭ್ಯ ಭಿಕ್ಷುಂ ಕಿಲ ಮಧ್ವಶಿಷ್ಯಮ್ । ವಿಲೋಕ್ಯ ತಂ ಜೇತುಮನಾ ನಿತಾಂತಂ ವಾದೇ ತತಾನಾದರಮಾರ್ವವರ್ಯಃ ॥ 4‐7 ॥ ಅಕ್ಷೋಭ್ಯನಾಮಾ ಖಲ ದಾನವೋsಯಂ ಶಿವೋತ್ತಮತ್ವಾಸಹನೋsಖಿಲಾನಾಮ್ । ಸ್ಕಾಂದಾದಿಕಾನಾಂ ನಿಗಮಾನುಗಾನಾಂ ಇತ್ಥಂ ಬಭಾಷೇ ಖಲು ತಾಮಸತ್ವಮ್ ॥ 4‐8 ॥ ಕಲ್ಪೇಷ್ವಯಂ ಕೇಷುಚಿದಬ್ಜಯೋನಿಃ ತಮಃ ಪ್ರಧಾನಃ ಕಿಲ ತಾಮಸಾನಿ । ಚಕ್ರೇ ಪುರಾಣಾನಿ ಶಿವೋತ್ತಮತ್ವಬೋಧೀನಿ ಚ ಸ್ಕಾಂದಮುಖಾನಿ ದೇವಃ ॥ 4‐9 ॥ ಬುಧೇಂದ್ರಸಂಲಾಲಿತಪಾದಪದ್ಮಃ ಶ್ರೀಮಾಧವಾಚಾರ್ಯವರೋsಖಿಲಜ್ಞಃ । ಪುರಾಣನಿಂದಾಂ ರಚಿತಾಮಮೃಷ್ಯನ್ ಅಕ್ಷೋಭ್ಯಭಿಕ್ಷುಂ ನಿಜಗಾದ ಚೈವಮ್ ॥ 4‐10 ॥ ಸ್ಕಾಂದಾದಿಕಾನಾಂ ಕಿಲ ತಾಮಸತ್ವಂ ಯತ್ಪ್ರೋಕ್ಷಮಕ್ಷೋಭ್ಯ ಯತೇ ತ್ವಯಾಸೀತ್ । ಸ್ಥಾನೇ ನ ತತ್ ಸ್ವೋಕ್ತಿವಿರೋಧಸತ್ತ್ವಾತ್ ಮಧ್ವೇನ ತೇಷಾಂ ಗ್ರಹಣಾತ್ ಪ್ರಬಂಧೇ ॥ 4‐11 ॥ ಅಕ್ಷೋಭ್ಯಭಿಕ್ಷುಶ್ಚರಣಂ ಪವಿತ್ರಮಿತ್ಯಾದಿ ತಪ್ತಾರಿಧೃತೌ ಪ್ರಮಾಣಮ್ । ಕೃತ್ವಾ ಪವಿತ್ರಂ ಚರಣಂ ನಿಘಂಟುಂ ಮತ್ವಾರಿಮುದ್ರಾವಿಧೃತಿಂ ಜಗಾದ ॥ 4‐12 ॥ ಸ ಸೂತ್ರಕಾರೈರ್ವಿನಿಯೋಜಿತಾಪಾಘೇಷ್ಟೌ ನಿಘಂಟೂರಚಿತಸ್ತ್ದದೀಯೈಃ । ದೇಯಂ ನ ತತ್ರೈತದಹೋ ಪ್ರಮಾಣಂ ಇತೀರಯಂಸ್ತಾಪಸಮಚ್ಛಿನತ್ ಸಃ ॥ 4‐13 ॥ ಪ್ರಶ್ಲಿಷ್ಯ ಚೈಕಂ ನಞಮೇಷ ಮಾಧ್ವಸ್ತುಲ್ಯಾರ್ಥಕಂ ತತ್ತ್ವಮಸೀತಿ ವಾಕ್ಯೇ । ಅಭೇದವಾಚಾಂ ಶ್ರುತಿಮೂರ್ಧಗಾನಾಂ ಜಗಾದ ಸಾದೃಶ್ಯಪರತ್ವಮಾಸಮ್ ॥ 4‐14 ॥ ಕಿಂ ಚೇತನತ್ವೇನ ಪರಾತ್ಮತೌಲ್ಯಂ ಕಿಂ ವಾಸ್ಯ ಸಾರ್ವಜ್ಞ್ಯಮುಖೈರ್ಗುಣೌಘೈಃ । ನಾದ್ಯಃ ಪ್ರಸಿದ್ಧಾನುಪದೇಶ್ಯತಾಯಾಃ ನಾಪಿ ದ್ವಿತೀಯಃ ಸ್ವಮತಾರ್ಥಹಾನೇಃ ॥ 4‐15 ॥ ನಞೋ ನಿಷೇಧಾರ್ಥಕತಾಂ ವಿದಿತ್ವಾ ಸಾರ್ವಜ್ಞ್ಯಹಾನೇರಸಿ ತನ್ನ ಚ ತ್ವಮ್ । ಇತ್ಯರ್ಥಮಕ್ಷೋಭ್ಯಯತೇರಭೇತ್ಸೀತ್ ನೇಹೇತಿ ವಾಚಾ ಗುರುಮಾಧವಾರ್ಯಃ ॥ 4‐16 ॥ ಇತ್ಥಂ ತದಾ ತತ್ತ್ವಮಸೀತಿ ವಜ್ರೇಣಾತ್ಮಪ್ರಭೇದಾಸಹನೇನ ಧೀಮಾನ್ । ಅಕ್ಷೋಭ್ಯಭೂಮೀಧರಭೇಧಪಕ್ಷಂ ಸ ಮಾಧವೇಂದ್ರೋsಚ್ಛಿನದಾಶು ದುಷ್ಟಮ್ ॥ 4‐17 ॥ [[9]] ಶ್ರೀಮಾಧವಃ ಕ್ರೋಧಿನಿ ಷೋಡಶೇಬ್ದೇ ತ್ವಕ್ಷೋಭ್ಯಭಿಕ್ಷ್ವಾದಿಮದಾನವಾಂಸ್ತಾನ್ । ವಿಜಿತ್ಯ ಮಧ್ವೀಯಮತಂ ಕುಪೂಯಂ ನಾಮಾವಶೇಷಂ ವ್ಯತನೋನ್ಮಹಾತ್ಮಾ ॥ 4‐18 ॥ ಹೃದ್ರೋಗತೋ ವತ್ಸರಮೇಷ ಜೀವನ್ ಅಕ್ಷೋಭ್ಯಕಃ ಸಪ್ತಷಡಿಂದು ಚಂದ್ರೇ । ಶಕೇ ಚ ವಿಶ್ವಾವಸುಮಾರ್ಗಶೀರ್ಷಶುಕ್ಲೇಷು ತಿಥ್ಯಾಂ ತನುಮತ್ಯಜತ್ ಸ್ವಾಮ್ ॥ ಲೇಖನವು ದೀರ್ಘವಾಗುವದೆಂಬ ಕಾರಣಕ್ಕಾಗಿ, ನಾನು ಮೇಲಿನ ಶ್ಲೋಕಗಳ ಅನುವಾದವನ್ನು ಕೊಡಲು ಹೋಗಲಾರೆ, ಅದು ಗ್ರಂಥದಲ್ಲಯೇ ಲಭ್ಯವಿದೆ. ಅಲ್ಲಿ ನೋಡಿಕೊಳ್ಳಬಹುದು. ಮೇಲಿನ, ಮಾಧವಾಚಾರ್ಯ–ಅಕ್ಷೋಭ್ಯತೀರ್ಥರ ಚರ್ಚೆಯಲ್ಲಿ, ವಿಷಯಗಳನ್ನಾಧರಿಸಿ, ಮೂರು ವಿಭಾಗಗಳನ್ನು ಮಾಡಬಹುದು. 1. ಸ್ಕಾಂದಾದಿ ಪುರಾಣಗಳಲ್ಲಿ ಉಕ್ತವಾದ ಶಿವಸರ್ವೋತ್ತಮತ್ವ ವಿಚಾರ. 2. ಮಾಧ್ವರ ತಪ್ತಮುದ್ರಾಧಾರಣ ವಿಚಾರ. 3. “ತತ್ತ್ವಮಸಿ” ಎಂಬ ಶ್ರುತಿವಾಕ್ಯಕ್ಕೆ ಅಕಾರ ಪ್ರಶ್ಲೇಷಮಾಡಿ ಅದನ್ನು “ಅತತ್ತ್ವಮಸಿ” ಎಂದು ಪಠಿಸುವ ವಿಚಾರ. ಈ ಮೂರೂ ವಿಚಾರಗಳಲ್ಲಿ ಮಾಧವಾಚಾರ್ಯರೇ ಗೆದ್ದರೆಂದು ಶ್ರೀ ರಘುನಾಥ ಸೂರಿಗಳು ಹೇಳುತ್ತಾರೆ. ನನ್ನ ಸದ್ಯದ ವಿವೇಚನೆಗೆ ಯಾರು ಗೆದ್ದರೆಂಬುದು ಮುಖ್ಯವಾಗುವದಿಲ್ಲ. ಆದರೆ, ಈ ಚರ್ಚೆಯಲ್ಲಿ, ಶಿವಸರ್ವೋತ್ತಮತ್ವದ ಚರ್ಚೆ ನಡೆದದ್ದು, ಹಾಗೂ ತಪ್ತಮುದ್ರಾಧಾರಣದ ಚರ್ಚೆ ನಡೆದದ್ದು, ನನಗೆ ಅತೀವ ಮುಖ್ಯವಾಗಿದೆ. ಯಾಕೆಂದರೆ, ಅದರಿಂದ, ರಘುನಾಥ ಸೂರಿಗಳ ಪ್ರಕಾರ, ಮಾಧವಾಚಾರ್ಯ/ಅಕ್ಷೋಭ್ಯ ತೀರ್ಥರ ಮತ‐ಸಂಪ ್ರದಾಯವು ಯಾವದಾಗಿತ್ತೆಂಬುದು, ಮತ್ತು ಅಕ್ಷೋಭ್ಯರ ಜೊತೆಗೆ ವಾದಿಸಿದವರು ಅವೈದಿಕ ಮಾಧವಾಚಾರ್ಯರೇ ಅಥವಾ ಶೃಂಗೇರಿಯ ವೈದಿಕ ಮಾಧವಾಚಾರ್ಯರೇ ಎಂಬುದು ಕೂಡ ನಿರ್ಣ ೀತವಾಗುತ್ತದೆ.
          • ಸರಿಯಾಗಿ ಇದೇ ಸಂದರ್ಭದಲ್ಲಿ, ಹೊ.ಶ್ರೀಯವರು, ಶ್ರೀ ರಘೂತ್ತಮಾಚಾರ್ಯರಿಗೆ ಬಹಳ ಜಾಗರೂಕತೆಯಿಂದ, ತಮ್ಮ ಪಕ್ಷವನ್ನು ಮಂಡಿಸಲು ಮುಂದಿನಂತೆ ಸಲಹೆ ನೀಡಿದ್ದಾರೆ. “ಒಂದು ವೇಳೆ, ಅಕ್ಷೋಭ್ಯರ ಜೊತೆಗೆ ವಾದ ಮಾಡಿದವರು ಶೃಂಗೇರಿ ಜಗದ್ಗುರು ವಿದ್ಯಾರಣ್ಯರಲ್ಲ, ಕಿಂತು, ಅವೈದಿಕರೆಂದು ಕರೆಯಲ್ಪಡುವ ಮಾಧವ ಮಂತ್ರಿಗಳು ಎಂದು ನೀವು ಹೇಳಿದಂತೆ, ನಾವು ಒಪ್ಪಿಕೊಂಡರೆ, ಆಗ, ಪ್ರಮಾಣ ವಿರೋಧ ಬರುತ್ತದೆ. ಅದ್ವೈತಿಗಳೇ ಆದ, ಶ್ರೀ ರಘುನಾಥ ಸೂರಿಗಳು, ವಾದದಲ್ಲಿ ಭಾಗಿಗಳಾದವರು ತಮ್ಮ ವಿದ್ಯಾರಣ್ಯರೇ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಅವರೇನೂ ತೀರ ಅರ್ವಾಚೀನರಲ್ಲ, ಇನ್ನೂರು ವರ್ಷಗಳಿಗೂ ಮಿಕ್ಕಿ ಹಳಬರು. ಆದ್ದರಿಂದ, ಅವೈದಿಕ ಶಬ್ದವನ್ನಿಟ್ಟುಕೊಂಡು, ನಾವು ಅತಿ‐ಅವಸರದಿಂದ, ವಾದದಲ್ಲಿ ಪರಾಜಿತರಾದವರು ಅವೈದಿಕ ವಿದ್ಯಾರಣ್ಯರೇ ಅರ್ಥಾತ್ ಮಾಧವಮಂತ್ರಿಗಳೇ ಎಂದು ನಿರ್ಣಯಿ ಸುವದು ನಮಗೆ ತೊಂದರೆಯನ್ನು ತರುತ್ತದೆ.” **ಆದ್ದರಿಂದ, ಸೋತವರು ಶೃಂಗೇರಿ ವಿದ್ಯಾರಣ್ಯರೇ ಎಂದು ನಿರ್ಣಯಿಸುವದು ಉಚಿತ “ **ಎಂಬುದು ಹೊ.ಶ್ರೀಯವರ ಖಚಿತ ಅಭಿಮತ.
          • ಮುಂದುವರಿದು ಹೊ.ಶ್ರೀ ಯವರು “ವಿದ್ಯಾರಣ್ಯರ ಸನ್ಯಾಸವಾದದ್ದು 1390 [thirteen ninety] ಎಂದು ಹೇಳಿದ್ದಾರೆ. ಅದಕ್ಕೆ ಅವರಿಗೆ ಎಲ್ಲಿ ಆಧಾರ ದೊರಕಿತೋ ತಿಳಿಯದು. ಶೃಂಗೇರಿ ವೆಬ್ಸೈಟಿನಲ್ಲಿಯಂತೂ ಅವರಿಗೆ ಆಶ್ರಮವಾದ್ದು ಕ್ರಿ.ಶ. 1331 ಎಂದೂ, ಪೀಠಕ್ಕೆ ಬಂದದ್ದು ಕ್ರಿ.ಶ. 1380 ರಲ್ಲಿ ಎಂಬುದೂ ಸ್ಪಷ್ಟವಾಗಿ ದಾಖಲಾಗಿದೆ. ಇನ್ನು ರಘೂನಾಥ ಸೂರಿಗಳ ಪ್ರಕಾರ‐ಶ್ರೀ ಮಾಧವಾಚಾರ್ಯರು ಜನಿಸಿದ್ದು ಕ್ರಿ.ಶ. 1228 ರಲ್ಲಿ. ತಮ್ಮ ವಯಸ್ಸಿನ ನೂರನೆಯ ವರ್ಷದಲ್ಲಿ ಅಂದರೆ, ಕ್ರಿ.ಶ. 1328 ರಲ್ಲಿ [ಆತುರ] ಸನ್ಯಾಸ ಸ್ವೀಕರಿಸಿ, ಕ್ರಿ.ಶ. 1335 ರಲ್ಲಿ, ಶೃಂಗೇರಿ ಜಗದ್ಗುರು ಶ್ರೀ ಭಾರತೀತೀರ್ಥರಿಂದ, ಕ್ರಮ‐ಸನ್ಯಾಸ ಪಡೆದರು. ಅಂದಮೇಲೆ ವಿದ್ಯಾರಣ್ಯರು ಕ್ರಿ.ಶ. 1390 ರಲ್ಲಿ ಯತ್ಯಾಶ್ರಮ ಸ್ವೀಕರಿಸಿದರು ಎಂಬ ಮಾತಿಗೆ ಯಾವ ಬೆಲೆ? ಅಲ್ಲದೆ, ಹೊ.ಶ್ರೀ ಯವರು ಸ್ವತಃ ತಾವೇ ಶೃಂಗೇರಿ ವೆಬ್ಸೈಟನ್ನು ಉಲ್ಲೇಖಿಸಿ, ಕ್ರಿ.ಶ. 1331 ರಲ್ಲಿ ಮಾಧವಾಚಾರ್ಯರು ಆಶ್ರಮ ಸ್ವೀಕರಿಸಿ ವಿದ್ಯಾರಣ್ಯರಾದರು. ಅದೇ ಕಾಲಕ್ಕೇನೇ ಅವರಿಗೆ ವಿದ್ಯಾರಣ್ಯ ಎಂಬ ಸನ್ಯಾಸನಾಮವೂ ಪ್ರಾಪ್ತವಾಯಿತು; ಕ್ರಿ.ಶ. 1380 ರಲ್ಲಿ ಶ್ರೀ ಭಾರತೀ ತೀರ್ಥರು ವಿದೇಹಮುಕ್ತಿ ಪಡೆದರು. [[10]] ಆಗ ಶ್ರೀವಿದ್ಯಾರಣ್ಯರು ಶೃಂಗೇರಿ ದಕ್ಷಿಣಾಮ್ನಾಯ ವ್ಯಾಖ್ಯಾನ ಸಿಂಹಾಸನವನ್ನೇರಿ, ಕ್ರಿ.ಶ. 1386 ರಲ್ಲಿ ವಿದೇಹಮುಕ್ತಿ ಪಡೆದರು ಎಂಬ ವಿವರಗಳನ್ನು ತಾವೇ ಒಪ್ಪಿಕೊಂಡಿದ್ದಾರೆ. ಅಂದ ಮೇಲೆ ಕ್ರಿ.ಶ. 1386 ರಲ್ಲಿಯೇ ಮುಕ್ತರಾದ ಶ್ರೀ ವಿದ್ಯಾರಣ್ಯರು ಕ್ರಿ.ಶ. 1390 ರಲ್ಲಿ ಸನ್ಯಾಸ ಸ್ವೀಕಾರಮಾಡಿದ್ದು ಹೇಗೆ ಸಂಗತ ವಾಗುತ್ತದೆ? ತಾವು ಮುಕ್ತರಾದ ನಂತರ ನಾಲ್ಕು ವರ್ಷಗಳ ಮೇಲೆ ಯಾರಾದರೂ ಸನ್ಯಾಸ ಸ್ವೀಕಾರ ಮಾಡುತ್ತಾರೆಯೇ? ಇದು ಲೋಕದಲ್ಲಿ ಎಲ್ಲಿಯೂ ಕಂಡರಿಯದ ಕೇಳರಿಯದ ಸಂಗತಿ. ಇಂಥ ಸಂದರ್ಭದಲ್ಲಿ, ಹೊ.ಶ್ರೀ ಯವರು “ ‐‐‐ಇಲ್ಲ ಇಲ್ಲ—1390 ರಲ್ಲಿ ಸನ್ಯಾಸ ಸ್ವೀಕಾರ ಮಾಡಿದ ಮಾಧವ‐ವಿದ್ಯಾರಣ್ಯರು ಬೇರೆಯೇ ವ್ಯಕ್ತಿ ಎಂಬ ರಾಗ ತೆಗೆಯಬಹುದು. ಅದನ್ನು ಚರ್ಚೆಗಾಗಿ ಒಪ್ಪೋಣ. ಆಗಲೂ ಕೂಡ, “ಹಾಗಿದ್ದರೆ, ಅರ್ಥಾತ್ ನೀವು ಹೇಳುವ ಆ ಮಾಧವಾಚಾರ್ಯರು ಕ್ರಿ.ಶ. 1390 ರಲ್ಲಿ ಸನ್ಯಾಸ ಸ್ವೀಕರಿಸಿ ‘ವಿದ್ಯಾರಣ್ಯ’ ರಾಗಿದ್ದರೆ, ಕ್ರಿ.ಶ. 1365 ರಲ್ಲಿಯೇ ಹರಿಪದ ಸೇರಿದ ಶ್ರೀ ಅಕ್ಷೋಭ್ಯ ತೀರ್ಥರು, ಕ್ರಿ.ಶ. 1390 ರ ನಂತರ ಸೋಲಿಸಿದ್ದು ಹೇಗೆ? ಎಂಬ ವಿಸಂಗತಿಗೆ ಸುಸಂಗತ ಉತ್ತರ ಕೊಡಬೇಕಾಗುತ್ತದೆ. ಇದು ಕೂಡ ಅಶ್ರುತ ಕಲ್ಪನೆಯೇ ಸರಿ. ಇಂಥದೇ ಇನ್ನೊಂದು ವಿಸಂಗತಿಯನ್ನು ಹೊ.ಶ್ರೀಯವರು ಎಸಗಿದ್ದಾರೆ. ಶೃಂಗೇರಿ ವೆಬ್ಸೈಟನ್ನು ಉಲ್ಲೇಖಿಸಿ, [ಅದರಲ್ಲಿ ಕ್ರಿ.ಶ. 1386 ಎಂದು ಅತ್ಯಂತ ಸ್ಪಷ್ಟವಾಗಿ ಉಲ್ಲೇಖಿಸಿದ್ದರೂ], ಅದರ ಪ್ರಕಾರ, ಶ್ರೀ ವಿದ್ಯಾರಣ್ಯರು ಮುಕ್ತರಾದದ್ದು ಕ್ರಿ.ಶ. 1387 ಎನ್ನುತ್ತಾರೆ. ತಾವೇ ಒಪ್ಪಿಕೊಂಡ ವೆಬ್ಸೈಟಿನ ವಿರುದ್ಧವಾಗಿ ಯಾಕೆ ಹೇಳುತ್ತಾರೋ! ಯಾಕಿಂಥ ಎಡವಟ್ಟು ಮಾಡಿಕೊಳ್ಳುತ್ತಾರೋ ತಿಳಿಯದು.
          • ಇಲ್ಲಿ ಇನ್ನೂ ಒಂದು ಮಾತನ್ನು ಹೇಳಬೇಕಾಗಿದೆ. ಹೊ.ಶ್ರೀ ಯವರ ಮನಸ್ಸು ಈ ವಿಷಯದಲ್ಲಿ ಗೊಂಲದ ಗೂಡಾಗಿದೆ. ಅದಕ್ಕೆ ಮೂಲ ಕಾರಣ ವೆಂದರೆ, ಅವರು ಶೃಂಗೇರಿಯ ದಾಖಲೆಗಳನ್ನು ಪೂರ್ಣವಾಗಿ ಓದದಿರುವದು. ಕೇವಲ ವೆಬ್ಸೈಟಿನಲ್ಲಿ ಕೊಟ್ಟಷ್ಟನ್ನು ಮಾತ್ರ ಓದಿಕೊಂಡು, ಅದೇ ಶೃಂಗೇರಿಯ ಪೂರ್ಣ ದಾಖಲೆ ಎಂದುಕೊಂಡದ್ದೇ ಇಷ್ಟೆಲ್ಲ ಗೊಂದಲಗಳಿಗೆ ಕಾರಣ. ಶೃಂಗೇರಿಯ ವೆಬ್ ಸೈಟಿನಲ್ಲಿ ಕೊಟ್ಟ ಪೂರ್ಣ ದಾಖಲೆಯು ಮುಂದಿನಂತಿದೆ. Tradition has it that Madhava [ the generally accepted pre-ascetic name of Shri Vidyarnya] was the elder of two Brahmachari brothers belonging to a poor but learned Brahmin family of Ekshila Nagari [present day Warrangal]. The younger of the two wandering South in search of true knowledge reached Sringeri where the great Vidyashankara Tirtha was the reigning pontiff. On seeing the innate greatness of the young Brahmachari, Sri Vidyatirtha readily gave him sanyasa Diksha with the ascetic name Bharati Krshna Tirtha in 1328 A.D. In the meanwhile, Madhava left home in search of his younger brother. After much wandering, he finally reached Shringeri, where he found his brother as the junior pontiff Bharti Krishna Tirtha. At the junior pontiff’s request, Shri Vidyatirtha, readily gave Madhava sanyasa diksha in 1331 A.D. under the ascetic name of Shri Vidyaranya, in other words, verily a great forest of knowledge. Shri BharatiKrishna Tirtha, though younger than Vidyaranya, became his senior, by virtue of his earlier ordainment in Sanyasa Ashrama and came to be known as senior Shipada andVidyaranya the junior…………… Returning south, he [Shri Vidyaranya] retired to Matanga hill, near Hampi, where he immersed himself in intense meditation. It was at this time that the two brothers, Madhava and Sayana, the sons of Mayana of Bharadwaja Gotra approached Shri Vidyaranya and sought his blessings…….Later, both the brothers served as ministers in the Vijayanagara empire under Bukkaraya and Harihar I and II…..” [[11]] [ಪರಂಪರೆಯಲ್ಲಿ ಮುಂದಿನಂತೆ ಹೇಳಲಾಗುತ್ತಿದೆ. ಮಾಧವನು [ಶ್ರೀ ವಿದ್ಯಾರಣ್ಯರ ಪೂರ್ವಾಶ್ರಮ ನಾಮ] ಏಕಶಿಲಾನಗರದ [ಇಂದಿನ ವಾರಂಗಲ್] ಬಡ ಆದರೆ ವಿದ್ಯಾಸಂಪನ್ನ ಕುಟುಂಬದ ಇಬ್ಬರು ಬ್ರಹ್ಮಚಾರಿ‐ಸೋದರರಲ್ಲಿ ಹಿರಿಯನು. ಅವರಲ್ಲಿ ಚಿಕ್ಕವನು, ನಿಜವಾದ ಜ್ಞಾನಸಂಪಾದನೆಗಾಗಿ ಗುರುವನ್ನು ಹುಡುಕುತ್ತ, ದಕ್ಷಿಣ ಭಾರತದಲ್ಲಿ ಸಂಚರಿಸುತ್ತ, ಶೃಂಗೇರಿಯನ್ನು ತಲುಪಿದನು. ಆಗ, ಶೃಂಗೇರಿಯಲ್ಲಿ, ಶ್ರೀ ವಿದ್ಯಾಶಂಕರತೀರ್ಥ ಸ್ವಾಮಿಗಳು ಪೀಠಾಧಿಪತಿಗಳಾಗಿದ್ದರು. ಈ ಚಿಕ್ಕ ಬ್ರಹ್ಮಚಾರಿಯ ಆಂತರಿಕ ತೇಜಸ್ಸನ್ನು ಗುರುತಿಸಿ, ಶ್ರೀ ವಿದ್ಯಾಶಂಕರತೀರ್ಥ ಸ್ವಾಮಿಗಳು, ಅವನಿಗೆ ಕೂಡಲೇ ಸನ್ಯಾಸದೀಕ್ಷೆಯನ್ನು ಕೊಟ್ಟು “ಭಾರತೀ ಕೃಷ್ಣತೀರ್ಥ” ಎಂಬ ಯತಿ‐ನಾಮವನ್ನು ಅನುಗ್ರಹಿಸಿದರು. [ಕ್ರಿಶ. 1328 ರಲ್ಲಿ]. ಈ ಮಧ್ಯದಲ್ಲಿ, ಮಾಧವನು ತನ್ನ ತಮ್ಮನನ್ನು ಹುಡುಕಿಕೊಂಡು ಮನೆಬಿಟ್ಟು ಹೊರಟನು. ಬಹಳ ಕಡೆಗೆ ತಿರುಗಾಡಿ, ಕೊನೆಗೆ ಅವನೂ ಶೃಂಗೇರಿಯನ್ನು ತಲುಪಿದನು. ಅಲ್ಲಿ, ಅವನು ತನ್ನ ತಮ್ಮನನ್ನು ಭಾರತೀಕೃಷ್ಣತೀರ್ಥ ಎಂಬ ಹೆಸರಿನ, ಚಿಕ್ಕ ಸನ್ಯಾಸಿಯ ರೂಪದಲ್ಲಿ ಕಂಡನು. ಶ್ರೀ ಭಾರತೀಕೃಷ್ಣ ತೀರ್ಥರ ಪ್ರಾರ್ಥನೆಯಂತೆ, ಶ್ರೀ ವಿದ್ಯಾತೀರ್ಥ ಸ್ವಾಮಿಗಳು, ಕ್ರಿ.ಶ. 1331 ರಲ್ಲಿ, ಮಾಧವನಿಗೆ ಸನ್ಯಾಸ ದೀಕ್ಷೆ ನೀಡಿ, ವಿದ್ಯಾರಣ್ಯ [ವಿದ್ಯೆಗಳ ಅಭೇದ್ಯ‐ಅರಣ್ಯ] ಎಂಬ [ಯಥಾರ್ಥ] ಯತಿನಾಮವನ್ನು ಅನುಗ್ರಹಿಸಿದರು. ಶ್ರೀ ಭಾರತೀಕೃಷ್ಣ ತೀರ್ಥರು, ವಯಸ್ಸಿನಿಂದ ಚಿಕ್ಕವರಾದರೂ ಕೂಡ, ಅವರು ಮೊದಲು ಸನ್ಯಾಸ ಸ್ವೀಕರಿಸಿದ್ದ ಕಾರಣ, ಹಿರಿಯ ಸ್ವಾಮಿಗಳಾದರು. ಹಾಗೂ ಶ್ರೀ ವಿದ್ಯಾರಣ್ಯರು ಕಿರಿಯ ಸ್ವಾಮಿಗಳಾದರು. ಶ್ರೀ ವಿದ್ಯಾರಣ್ಯರು ದಕ್ಷಿಣಕ್ಕೆ ತಿರುಗಿಬಂದು, ಹಂಪಿಯಸಮೀಪದ ಮತಂಗ ಪರ್ವತ ವನ್ನಾಶ್ರಯಿಸಿ, ಅಲ್ಲಿ ತೀವ್ರತರ ಧ್ಯಾನದಲ್ಲಿ ತೊಡಗಿದರು. ಇದೇ ಕಾಲಕ್ಕೆ, ಭಾರದ್ವಾಜ ಗೋತ್ರದ ಮಾಯಣನ ಮಕ್ಕಳಾದ ಮಾಧವ ಸಾಯಣರೆಂಬ ಸೋದರರು ಶ್ರೀ ವಿದ್ಯಾರಣ್ಯರ ಬಳಿಗೆ ಬಂದು ನಮಸ್ಕರಿಸಿ ಅವರ ಆಶೀರ್ವಾದ ಗಳನ್ನು ಬಯಸಿದರು….ಅನಂತರ, ಈ ಇಬ್ಬರೂ ಸೋದರರು [ಮಾಧವ‐ಸಾಯಣರು] ವಿಜಯನಗರ ಸಾಮ್ರಾಜ್ಯದ ಪ್ರಥಮ ಹರಿಹರ, ಬುಕ್ಕ, ಇಮ್ಮಡಿ ಹರಿಹರ ಇವರೆಲ್ಲರಿಗೂ ಮಂತ್ರಿಗಳಾಗಿ ಕೆಲಸಮಾಡಿದರು.]”
        • ಮೇಲ್ಕಾಣಿಸಿದ ಶೃಂಗೇರಿ ದಾಖಲೆಗಳ ಪ್ರಕಾರ, ಮಾಧವರು, ಸಾಯಣರು ಕೊನೆವರೆಗೂ ಸನ್ಯಾಸ ಸ್ವೀಕರಿಸಲಿಲ್ಲ, ಗೃಹಸ್ಥರಾಗಿಯೇ ಉಳಿದರು. ಆದರೆ, ಹೊ.ಶ್ರೀ ಯವರ ಪ್ರಕಾರ, ಸಾಯಣರು ಮೊದಲು ಸನ್ಯಾಸಸ್ವೀಕರಿಸಿದರು; ಆಮೇಲೆ ಮೂರು ವರ್ಷಗಳ ನಂತರ ಮಾಧವರು ಸನ್ಯಾಸ ಸ್ವೀಕರಿಸಿದರು. ಇದನ್ನು ಹೊ.ಶ್ರೀಯವರು ಅತ್ಯಂತ ಸ್ಪಷ್ಟವಾಗಿ, ಘಂಟಾಘೋಷವಾಗಿ ಹೇಳಿದ್ದಾರೆ. ಆದ್ದರಿಂದ, ಹೊ.ಶ್ರೀಯವರ ಈ ಮೇಲಿನ ಹೇಳಿಕೆ, ತಾವೇ ಒಪ್ಪಿಕೊಂಡ, ಶೃಂಗೇರಿಯ ವೆಬ್ ಸೈಟಿನ ವಿವರಗಳಿಗೂ, ಎಲ್ಲ ಇತಿಹಾಸಕಾರರೂ ಒಕ್ಕೊರಲಿನಿಂದ ಒಪ್ಪಿಕೊಂಡ ಅಧಿಕೃತ ಇತಿಹಾಸಕ್ಕೂ ವಿರುದ್ಧವಾಗಿದೆಯೆಂದು ಖೇದದಿಂದ ಹೇಳಬೇಕಾಗಿದೆ. ವೇದಭಾಷ್ಯಗಳ ಹದಿನೆಂಟೂ ಗ್ರಂಥಗಳ ಉಪೋದ್ಘಾತಗಳಲ್ಲಿ, [ಅಂದರೆ. ಕ್ರಿ.ಶ. 1380 ರ ವರೆಗೂ, ಅಂದರೆ ಭಾರತೀತೀರ್ಥ ಮಹಾಸ್ವಾಮಿಗಳು ವಿದೇಹ‐ಕೈವಲ್ಯ ಪಡೆಯುವವರೆಗೂ,] ಬುಕ್ಕ ಮಹಾರಾಜನು ಅಥವಾ ಇಮ್ಮಡಿಹರಿಹರ ಮಹಾರಾಜನು, “ಆದಿಶತ್ ಸಾಯಣಾಚಾರ್ಯಂ ವೇದಾರ್ಥಸ್ಯ ಪ್ರಕಾಶನೇ ಎಂದು **ಹೇಳಲಾಗಿದೆ. ಹಾಗೂ ಕೃಪಾಲುಃ ಸಾಯಣಾಚಾರ್ಯೋ ವೇದಾರ್ಥಂ ವಕ್ತುಮುದ್ಯತಃ” **ಎಂದೂ ಸ್ಪಷ್ಟವಾಗಿ **“ಸಾಯಣಾಚಾರ್ಯ” **ಎಂಬ ಗೃಹಸ್ಥ ನಾಮನಿರ್ದೇಶನವೇ ಇದೆ. ಆಚಾರ್ಯ ಸಾಯಣರು ಕೊನೆವರೆಗೂ ಗೃಹಸ್ಥರಾಗಿಯೇ ಉಳಿದಿದ್ದರೆಂಬುದಕ್ಕೆ ಇದು ಹೆಗ್ಗುರುತಾಗಿದೆ. ಹಳೆಯ ತಲೆಮಾರಿನ ಕೆಲವರು, ಮಾಧವಾಚಾರ್ಯರ ಮತ್ತೊಬ್ಬ ತಮ್ಮನಾದ ಭೋಗನಾಥನು, ಮಾಧವಾಚಾರ್ಯರಿಗಿಂತಲೂ ಮೊದಲೇ ಸನ್ಯಾಸ ಸ್ವೀಕರಿಸಿ ಭಾರತೀತೀರ್ಥರೆಂದು ಪ್ರಸಿದ್ಧನಾದನೆಂದು ಹೇಳುತ್ತಾರೆ. ಅದೂ ತಪ್ಪು. ಭೋಗನಾಥನು ಕೂಡ ಯತ್ಯಾಶ್ರಮವನ್ನು ಸ್ವೀಕರಿಸಲೇ ಇಲ್ಲ. ಯಾಕೆಂದರೆ, ಕ್ರಿ. ಶ. 1356 ನೆ ಇಸವಿಯ ಹೊತ್ತಿಗೂ ಅವನು ಭೋಗನಾಥ ಎಂಬ ಗೃಹಸ್ಥನಾಮದಿಂದಲೇ ಪ್ರಸಿದ್ಧನಾಗಿದ್ದನು. ಕ್ರಿ.ಶ. 1356 ರ ಬಿತ್ರಗುಂಟಾ‐ಶಾಸನ‐ಪದ್ಯಗಳನ್ನು ತಾನೇ ಬರೆದದ್ದೆಂದು ಇದೇ ಭೋಗನಾಥನೇ ದಾಖಲಿ ಸಿದ್ದಾನೆ. ಈ ಸಂಗತಿಯು ಅದೇ ಶಾಸನದ ಸಮಾಪ್ತಿಪದ್ಯದಿಂದ ಸ್ಪಷ್ಟಪಡುತ್ತದೆ. ಅದರಲ್ಲಿ ಅವನು ತನ್ನನ್ನು **“ಭೋಗನಾಥಸುಧೀ” **ಎಂದೇ ಕರೆದುಕೊಂಡಿದ್ದಾನೆ. ಆ ಪದ್ಯ ಮುಂದಿನಂತಿದೆ. ಇತಿ ಭೋಗನಾಥ ಸುಧಿಯಾ ಸಂಗಮಭೂಪಾಲ ನರ್ಮ ಸಚಿವೇನ । ಶ್ರೀಕಂಠಪುರಸಮೃದ್ಧ್ಯೈ ಶಾಸನಪತ್ರೇಷು ವಿಲಿಖಿತಾಃ ಶ್ಲೋಕಾಃ ॥ ]]] ಅಂದಮೇಲೆ ಅವನು ಕ್ರಿ.ಶ. 1328 ರಲ್ಲಿ ಸನ್ಯಾಸ ಸ್ವೀಕರಿಸಿ “ಭಾರತೀತೀರ್ಥ” ರಾದದ್ದು ಹೇಗೆ? [[12]] ಆದ್ದರಿಂದ, ಶೃಂಗೇರಿಯ ವೆಬ್ಸೈಟಿನಲ್ಲಿ ಹೇಳಿದ ಕ್ರಿ.ಶ. 1331 ಎಂಬ ಇಸ್ವಿಯು ಸಾಯಣ ಸೋದರರಿಗಿಂತ ಭಿನ್ನರಾದ ಮಾಧವರು ಸನ್ಯಾಸ ಸ್ವೀಕರಿಸಿದ ಕಾಲ. ಈ ಮಾಧವರನ್ನು, ಹೊ.ಶ್ರೀಯವರು ವಿದ್ಯಾರಣ್ಯರೆಂದು ಒಪ್ಪಿಕೊಂಡಿಲ್ಲ. ಸಾಯಣರ ಸನ್ಯಾಸದ ನಂತರ ಮೂರು ವರ್ಷಗಳಿಗೆ, ಸಾಯಣರ ವಿನಂತಿಯ recommendation ಪ್ರಕಾರವೇ ಮಧವರಿಗೆ ಸನ್ಯಾಸ ದೀಕ್ಷೆ ದೊರಕಿತು ಎಂದು ಹೇಳುವ ಮೂಲಕ, ಸಾಯಣಸೋದರ ಮಾಧವರ ಸನ್ಯಾಸವನ್ನು ಹೊ.ಶ್ರೀಯವರು ಪ್ರಕಟವಾಗಿಯೇ ಹೇಳಿದ್ದಾರೆ. ಆದರೂ, ತಾವು ಒಪ್ಪಿದ ಸಾಯಣಸೋದರ‐ಮಾಧವರಿಗೆ ಕ್ರಿ.ಶ. 1331 ರಲ್ಲಿ ಸನ್ಯಾಸವಾಯಿತೆಂದು, ಹೊ.ಶ್ರೀ ಯವರು ತಪಪುತಪ್ಪಾಗಿ, ಪ್ರತಿಪಾದಿಸುತ್ತಿದ್ದಾರೆ. ಅದನ್ನುಬಿಟ್ಟು, ತಾವು ಒಪ್ಪಿದ ಸಾಯಣಸೋದರ ಮಾಧವರಿಗೆ ಯಾವಾಗ ಸನ್ಯಾಸವಾಯಿತೆಂಬುದಷ್ಟನ್ನು ಮಾತ್ರ ಹೊ.ಶ್ರೀಯವರು ಹೇಳಬೇಕು, ಸಾಯಣ ಸೋದರರಿಂದ ಭಿನ್ನರಾದ ಮಾಧವರು ಯಾವಾಗ ಸನ್ಯಾಸ ಸ್ವೀಕರಿಸಿದರೆ, ಹೊ.ಶ್ರೀಯವರಿಗೇನು ಸಂಬಂಧ? ತಾವು ಹೇಳುವ ಮಾಧವರು ಯಾವಾಗ ಸನ್ಯಾಸ ತೆಗೆದುಕೊಂಡರು? ಹಾಗೂ ಆವಾಗ, ಶ್ರೀ ಅಕ್ಷೋಭ್ಯ ತೀರ್ಥರು ಬದುಕಿದ್ದರೇ? ಇಲ್ಲವೇ? ಅಷ್ಟನ್ನು ತಿಳಿಯುವದು ಮಾತ್ರ ಹೊ.ಶ್ರೀ ಯವರ ಕರ್ತವ್ಯ. ಇದನ್ನು ತಿಳಿದರೆ, ಸಾಯಣಸೋದರ ಮಾಧವರು ಕ್ರಿ.ಶ. 1376‐77 ರಲ್ಲಿ ಸನ್ಯಾಸ ಸ್ವೀಕರಿಸಿದರೆಂಬ ಮಾತನ್ನು ಅವರು ಒಪ್ಪಲೇಬೇಕಾಗುತ್ತದೆ. ಇದೇವಿಷಯವನ್ನೇ ಕುರಿತು, ಹದಿನೆಂಟೂ ವೇದಭಾಷ್ಯ ಗ್ರಂಥಗಳ ಉಪೋದ್ಘಾತಗಳನ್ನೂ, ಸಮಾಪ್ತಿಪುಷ್ಪಿಕೆಗಳನ್ನೂ ಉದ್ಧರಿಸಿ, ಸರ್ವಸಂಶಯಾತೀತವಾಗಿ, ಸಾಯಣಸೋದರ ಮಾಧವರು ಸನ್ಯಾಸ ಸ್ವೀಕರಿಸಿದ್ದು ಕ್ರಿ.ಶ. 1376‐77 ಎಂದು ನಾನು ಸಿದ್ಧಮಾಡಿದ್ದೇನೆ. ಇದರ ವಿವರಗಳ ಬಗೆಗೆ ಹೆಚ್ಚಿನ ಆಸಕ್ತಿ ಇದ್ದವರು ವಿದ್ಯಾರಣ್ಯ ವಿಜಯ ದುಂದುಭಿಯ 8 ನೆಯ ಅಧ್ಯಾಯ ಪುಟ 58‐68 [ವೇದ ಭಾಷ್ಯಗಳ ಸಾಕ್ಷ್ಯ] ನೋಡಿ.
          • ಶ್ರೀಮಾಧವ ವಿದ್ಯಾರಣ್ಯರ ಜೀವಿತ ಕಾಲವನ್ನು ಕುರಿತು ಒಂದು ಸ್ಪಷ್ಟೀಕರಣ ಕೊಡಬಯಸುತ್ತೇನೆ. ಶೃಂಗೇರಿ ಮಠದ ದಾಖಲೆಗಳ ಪ್ರಕಾರ ಮಾಧವಾಚಾರ್ಯರು ಜನಿಸಿದ್ದು ಕ್ರಿ.ಶ. 1267‐68 ರಲ್ಲಿ. ತಮ್ಮ ವಯಸ್ಸಿನ ಸುಮಾರು 64 ನೆಯ ವರ್ಷದಲ್ಲಿ, ಅಂದರೆ ಕ್ರಿ. 1331 ರಲ್ಲಿ ಅವರು ಸನ್ಯಾಸ ಸ್ವೀಕರಿಸಿದರು. ಅವರ ಒಟ್ಟು ಆಯುಷ್ಯ ಸುಮಾರು 120 ವರ್ಷಗಳು. ಶ್ರೀ ವಿದ್ಯಾರಣ್ಯರು ಬರೆದದ್ದೆಂದು ನಂಬಲಾದ ಶ್ರೀ ದೇವಿ ಅಪರಾಧಕ್ಷಮಾಪನ ಸ್ತೋತ್ರದಲ್ಲಿಯ ಪರಿತ್ಯಕ್ತ್ವಾ ದೇವಾನ್ ವಿವಿಧವಿಧ ಸೇವಾಕುಲತಯಾ । ಮಯಾ ಪಂಚಾಶೀತೇರಧಿಕಮಪನೀತೇ ತು ವಯಸಿ ॥ ಎಂಬ ಹೇಳಿಕೆಯನ್ನಾಧರಿಸಿ, ಕೃಷ್ಣಸ್ವಾಮಿ ಐಯ್ಯಂಗಾರ ಮುಂತಾದ ಕಳೆದಶತಮಾನದ ಕೆಲವು ವಿದ್ವಾಂಸರು ಅವರ ಜೀವಿತಾವಧಿಯನ್ನು ನಿರ್ಧರಿಸುವ ಪ್ರಯತ್ನ ಮಾಡಿದ್ದಾರೆ. ಶ್ರೀ ವಿದ್ಯಾರಣ್ಯರು ಕ್ರಿ.ಶ. 1387 ರಲ್ಲಿ ವಿದೇಹಮುಕ್ತಿಪಡೆದರು ಎಂಬುದನ್ನು ಮೊದಲು ನಿರ್ಧರಿಸಿ, ನಂತರ ಮೇಲ್ಕಾಣಿಸಿದ ದೇವಿ ಅಪರಾಧ ಕ್ಷಮಾಪನ ಸ್ತೋತ್ರದಲ್ಲಿಯ 85 ವರ್ಷ ಎಂಬ ಉಲ್ಲೇಖವನ್ನು ಆಧರಿಸಿ, 1387 ರಲ್ಲಿ 85 ನ್ನು ಕಳೆದು ಅವರು ಜನಿಸಿದ್ದು ಕ್ರಿ.ಶ. 1302 ರಲ್ಲಿ ಎಂದು ಗೊತ್ತುಪಡಿಸಿದ್ದಾರೆ. ಅಲ್ಲಿಯೂ ಕೂಡ, 85 ವರ್ಷಕ್ಕೂ ಮಿಕ್ಕಿ ಎಂಬ ಪದಪ್ರಯೋಗವಿರುವದನ್ನು [**ಪಂಚಾಶೀತೇರಧಿಕಮಪನೀತೇ ತು ವಯಸಿ] **ಅವರು ಗಮನಿಸದೆ ಬಿಟ್ಟಿದ್ದಾರೆ. ಇತ್ತೀಚೆಗೆ, ಪ್ರೊಫೆಸರ್ ಸಿ.ಎನ್.ಶಾಸ್ತ್ರಿ ಮತ್ತು ಗುಂಟೂರಿನ ಅಭಿನವ ವಿರೂಪಾಕ್ಷ ಪೀಠಾಧೀಶ್ವರ ಶ್ರೀ ಕಲ್ಯಾಣಾನಂದಭಾರತೀ ಸ್ವಾಮಿಗಳವರು ಅನೇಕ ಸಂಶೋಧನೆ ನಡೆಯಿಸಿ, ಶ್ರಿ ವಿದ್ಯಾರಣ್ಯರ ಸಾಕ್ಷಾತ್ ಶಿಷ್ಯರಾದ, ಮಲಯಾಳ ಮಾಧವ ಯೋಗೀಂದ್ರ, ಅಥವಾ ಮಲಯಯೋಗೀಂದ್ರರು ಬರೆದ ರೇಣುಕಾತಂತ್ರಮು ಎಂಬ ಗ್ರಂಥದ ಆಧಾರದಿಂದ, ಸರಿಯಾದ ಕಾಲವನ್ನುನಿರ್ಣಯಿಸಿ, ಶ್ರೀ ಮಾಧವಾಚಾರ್ಯರ ಜಾತಕವನ್ನು [ಜನ್ಮಕುಂಡಲಿ] ತಯಾರಿಸಿದ್ದಾರೆ. ಶ್ರೀ ವಿದ್ಯಾರಣ್ಯರ ಸಾಕ್ಷಾತ್ಶಿಷ್ಯ ಮಲಯಾಳದ ಮಾಧವರೆಂಬವರು ರಚಿಸಿ **ದ್ದಾರೆಂದರೆ, “ರೇಣುಕಾ ತಂತ್ರಮು” ಎಂಬುದು ಅತ್ಯಂತ ಪ್ರಾಮಾಣಿಕ ಗ್ರಂಥವೆಂದೇ ಲೆಕ್ಕ. **ಪ್ರಸಿದ್ಧ ಜ್ಯೋತಿಷಿ ಗಳಾಗಿದ್ದ, ಶ್ರೀ. ಬಿ.ವಿ.ರಾಮನ್ರವರು, ಶ್ರಿ ವಿದ್ಯಾರಣ್ಯರ ಜನನವನ್ನು ಕ್ರಿ.ಶ.1296 ಎಂದು ಒಪ್ಪಿಕೊಂಡು, ಅನೇಕ ದೃಷ್ಟಿಕೋನಗಳಿಂದ ಅವರ ಜಾತಕವನ್ನು ಪರಿಶೀಲಿಸಿ, ಅದರಲ್ಲಿಯ ಗ್ರಹಗತಿಗಳನ್ನು, ಅವರ ಜೀವನ ಚರಿತ್ರೆಯೊಂದಿಗೆ ಹೋಲಿಸಿನೋಡಿ, ಅದೇ ಸರಿಯಾದದ್ದೆಂದು ದೃಢೀಕರಿಸಿದ್ದಾರೆ. ಚತುರಬ್ದ ಸಹಸ್ರೇಷು ಚತುರಬ್ದ ಶತೇಷು ಚ । [[13]] ತ್ರಿಭಿರೂನೇಷು ವರ್ಷೇಷು ಗತೇಚಾಸ್ಮಿನ್ ಕಲೌ ಯುಗೇ ॥ ದುರ್ಮುಖ್ಯಬ್ದೇ ರಾಧಮಾಸೇ ಸಪ್ತಮ್ಯಾಂ ಸೌಮ್ಯವಾಸರೇ । ರವಿ ಭಾಗೇ……….. ಸಂಸ್ಥಿತೇ ವೇಷಗೇತ್ವಗೌ ॥ ಪುಷ್ಯಕೇ ಚಂದ್ರ ಸಂಯುಕ್ತೇ ಸೌಮ್ಯೇ ಜಾತಸ್ತು ಮಾಧವಃ । [ಮಾಧವನು ಗತಕಲಿ ಶಕೇ 4397 ದುರ್ಮುಖಿ ಸಂವತ್ಸರ ವೈಶಾಖ ಶುದ್ಧ ಸಪ್ತಮಿ ಬುಧವಾರ ಪುಷ್ಯ ಧನುರ್ಲಗ್ನದಲ್ಲಿ ಜನಿಸಿದನು]. ಈ ತಿಥಿಯನ್ನು ಆಂಗ್ಲ ದಿನಾಂಕಗಳಿಗೆ ಪರಿವರ್ತಿಸಿದರೆ, ಕ್ರಿ.ಶ. 1296 ನೇ ಇಸ್ವಿ, ಎಪ್ರಿಲ್ 11 ನೆಯ ತಾರೀಖು ಬುಧವಾರ ರಾತ್ರಿ 10‐56 ಕ್ಕೆ ಮಾಧವಾಚಾರ್ಯರ ಜನನ. ಈ ದಿನಾಂಕವನ್ನೇ ಈಗ ಎಲ್ಲರೂ ಒಪ್ಪಿದ್ದಾರೆ.
          • ಶ್ರೀ ವಿದ್ಯಾರಣ್ಯರ ವಿದೇಹಮುಕ್ತಿಯನ್ನು ಕುರಿತು ಭಿನ್ನಭಿಪ್ರಾಯಗಳಿಲ್ಲ. ಕ್ರಿ.ಶ. 1386 ನೆಯ ವರ್ಷಕ್ಕೆ ಸಂವಾದಿಯಾದ ಶಾಲಿ.ಶಕೇ 1309 ಕ್ಷಯ ಸಂವತ್ಸರ ಜ್ಯೇಷ್ಠ ಕೃಷ್ಣ ತ್ರಯೋದಶೀ ಶನಿವಾರ ಪಂಪಾ ಕೇತ್ರದಲ್ಲಿ ಶ್ರೀ ವಿದ್ಯಾರಣ್ಯರು ತಮ್ಮ ಅವತಾರ ಸಮಾಪ್ತಮಾಡಿದರು ಎಂದು ಶಾಸನಗಳಿಂದ ತಿಳಿದುಬರುತ್ತದೆ. ಹೀಗಾಗಿ ಶ್ರೀ ಮಾಧವ‐ವಿದ್ಯಾರಣ್ಯ ಸ್ವಾಮಿಗಳ ಒಟ್ಟು ಜೀವಿತಾವಧಿಯು 91 ವರ್ಷ, 1 ತಿಂಗಳು, 21 ದಿವಸ ಆಗಿತ್ತು. ಹಳೆಯತಲೆಮಾರಿನ ಕೃಷ್ಣಸ್ವಾಮಿ ಐಯ್ಯಂಗಾರ ಮೊದಲಾದವರು ಪ್ರತಿಪಾದಿಸಿದ, ಕ್ರಿ.ಶ. 1302‐ 1387 ಎಂಬ ಕಾಲಾವಧಿಗೂ, ಈಗ ಪ್ರತಿಪಾದಿಸಲಾಗುತ್ತಿರುವ ಕ್ರಿ.ಶ. 1296‐1386 ಎಂಬ ಕಾಲಾವಧಿಗೂ ಕೇವಲ ಆರು ವರ್ಷಗಳ ಅಂತರವಿರುವದರಿಂದ ಹಳಬರ ಪ್ರತಿಪಾದನೆಯು ಅಂಥ ಪ್ರಮಾದವೇನೂ ಅಲ್ಲ. ವಿವರಗಳಿಗೆ ಅಕ್ಷೋಭ್ಯ ವಿಜಯ ವಿಭ್ರಮ ರಕ್ಷಾಪುಟ 3 ನೋಡಿ. *** * * * *** ಈಗ, ಶ್ರೀ ರಘುನಾಥ ಸೂರಿಗಳು, ಈ ವಾದದ ಬಗ್ಗೆ ಏನು ಬರೆದಿದ್ದಾರೆ ಎಂಬುದನ್ನು, ಓದುಗರ ಸದ್ಯಃಪರಾಂಬರಿಕೆಗಾಗಿ ಈ ಮುಂದೆ ಪ್ರತಿಮಾಡಿದ್ದೇನೆ. ‘’ನನು, ಕೇನಚಿನ್ಮಾಧ್ಯಸ್ಥ್ಯಂ ತನ್ವತಾ ವಿದುಷಾ….ಅಸಿನಾ‐ಅಚ್ಛಿನತ್ । ಇತಿ ಪದ್ಯಂ ಪಠತಾ ಅಕ್ಷೋಭ್ಯಸ್ಯ ಜಯಃ ಪ್ರಾಕಾಶೀತಿ ಚೇತ್, ನ । ತಸ್ಯ ಮಧ್ಯಸ್ಥೋಕ್ತಿತ್ವ ಕಲ್ಪನಾಽನುಪಪತ್ತೇಃ। ಪಂಚಾಶದುತ್ತರೈಕಾದಶಶತೀ (1150) ಮಿತಗತ ಶಾಲಿವಾಹ ಸಮಯೇ ಪ್ರವೃತ್ತ ಸರ್ವಧಾರಿ ವತ್ಸರೇ [ಕ್ರಿ.ಶ.1228] ಸಂಭೂಯ, ಜನ್ಮತಃ ಷೋಡಶೇ ಕ್ರೋಧ್ಯಬ್ದೇ ಅಕ್ಷೋಭ್ಯಂ ಜಿತವತೋ ಮಾಧವಾಚಾರ್ಯಸ್ಯ ತದಾನೀಂ ವಿದ್ಯಾರಣ್ಯಾಭಿಧಾಯಾಃ ಅಭಾವಾತ್ । ಸಪ್ತಪಂಚಾಶದುತ್ತರ ದ್ವಾದಶಶತೀಮಿತ [1257]ಗತ ಶಾಲಿವಾಹ ಸಮಯೇ ಪ್ರವೃತ್ತ ಯುವಾಬ್ದೇ ಕ್ರಮಸನ್ಯಾಸಂ ಸ್ವೀಕೃತವತೋ ಮಾಧವಾಚಾರ್ಯಸ್ಯ ಭಾರತೀತೀರ್ಥ ಗುರ್ವನುಗ್ರಹತೋ ವಿದ್ಯಾರಣ್ಯಾಭಿಧಾನ ಲಾಭಸ್ಯ ಪ್ರಮಾಣಪ್ರಬಂಧೇಷು ಅಭಿಧಾನಾತ್ । ಇತ್ಥಂ ಚ ಮಾಧವಕರ್ತೃಕಾಕ್ಷೋಭ್ಯಜಯಕಾಲ‐ವಿದ್ಯಾರಣ್ಯಾ ಭಿಧಾನಲಾಭಕಾಲಯೋಃ ಏಕನವತಿವತ್ಸರವ್ಯವಧಾನಸ್ಯ ಸತ್ವಾತ್, ‘ಅಸಿನಾ ತತ್ತ್ವಮಸಿನಾ’ಇತ್ಯಸ್ಯ ಮಧ್ಯಸ್ಥೋಕ್ತಿತ್ವಂ ಕಥಂ ಸಂಘಟತಾಂ ಇತ್ಯಾಯುಷ್ಮತಾ ಭವತೈವ ವಿಚಾರಣೀಯಮ್ ।…….ತಸ್ಮಾತ್ “ಅಸಿನಾ ತತ್ತ್ವಮಸಿನಾ” ಇತಿ ವಚನಂ ಕೇನಚಿದಾಧುನಿಕೇನ ಕಲ್ಪಿತಮಿತಿ ಸ್ಪಷ್ಟಮವಭಾಸತೇ । ಪ್ರಾಚೀನ ವಿದ್ಯಾರಣ್ಯಾಕ್ಷೋಭ್ಯ‐ಚರಿತ್ರ‐ಪ್ರತಿ ಪಾದಕ ಗ್ರಂಥೇಷು ‘ಅಸಿನಾ’ ಇತಿ ಶ್ಲೋಕಸ್ಯ ಉಭಯೋರ್ವಾದ ವಿಷಯಸ್ಯಾಪಿ ಅದರ್ಶನಾತ್ । ಅಸ್ತು ವಾ ಮಧ್ಯಸ್ಥೋಕ್ತಿಃ । ತಥಾಪಿ ನೇದಂ ಪದ್ಯಂ ವಿದ್ಯಾರಣ್ಯಪರಾಭವಮಭಿಧತ್ತೇ, ಕಿಂತು ತತ್ಕರ್ತೃಕಾಕ್ಷೋಭ್ಯ ಕರ್ಮಕಜಯಂ ಯೇನ ಭವದೀಯಾಭಿಮತಂ ಸಿಧ್ಯೇತ್ । ತಥಾ ಹಿ‐ ಅಸಿನಾ ತತ್ತ್ವಮಸಿನಾಽಪರಜೀವಪ್ರಭೇದಿನಾ । ವಿದ್ಯಾರಣ್ಯಮಹಾರಣ್ಯಮಕ್ಷೋಭ್ಯಮುನಿರಚ್ಛಿನತ್ ॥ ಇತಿ ॥ ಅತ್ರ “ಅಕ್ಷೋಭ್ಯಮ್+ಉ+ನಿರಚ್ಛಿನತ್” ಇತಿ ಪದಚ್ಛೇದಃ ।‐‐ತತ್ತ್ವಮಸಿನಾ ಅಸಿನಾ ಕರಣೇನ ಹೇ ವಿದ್ಯಾರಣ್ಯ ಭವಾನ್, ಮಹಾರಣ್ಯಮಿವ ದುರಾಸದತ್ವಾತ್ ಮಹಾರಣ್ಯತ್ವೋಕ್ತಿಃ ಸಿಂಹೋ ಮಾಣವಕ ಇತಿವತ್, ಮಹಾ ರಣ್ಯಂ, ಉ ಅವಧಾರಣೇ । ಅಕ್ಷೋಭ್ಯಮೇವ ನಿರಚ್ಛಿನತ್ ನಿತರಾಂ ಚಿಚ್ಛೇದ । ಅಕ್ಷೋಭ್ಯೇ ದುರಾಸದತ್ವೋಕ್ತಿಃ ತಜ್ಜೇತರಿ ವಿದ್ಯಾರಣ್ಯೇ ಸಂಕ್ರಾಮತೀತಿ ಜ್ಞೇಯಮ್ । [[14]] ಇತ್ಥಂ ತದಾ ತತ್ತ್ವಮಸೀತಿವಜ್ರೇಣಾತ್ಮಪ್ರಭೇದಾಸಹನೇನ ಧೀಮಾನ್ । ಅಕ್ಷೋಭ್ಯಭೂಮೀಧರಭೇದಪಕ್ಷಂ ಸಮಾಧವೇಂದ್ರೋಽಚ್ಛಿನದಾಶುದುಷ್ಟಮ್ ॥ ಮೇಲಿನ ಕಂಡಿಕೆಯಲ್ಲಿ, ರಘುನಾಥ ಸೂರಿಗಳು ‘ಅಸಿನಾ’ದ ಅಪ್ರಾಮಾಣ್ಯವನ್ನು ಪ್ರತಿಪಾದಿಸಿದ್ದಾರೆ. ಕ್ರಿ.ಶ. 1228 ರಲ್ಲಿ ಜನಿಸಿ, ತಮ್ಮ ವಯಸ್ಸಿನ 16 ನೆಯ ವರ್ಷದಲ್ಲಿಯೇ [ಕ್ರಿ.ಶ. 1244 ರಲ್ಲಿಯೇ] ಅಕ್ಷೋಭ್ಯರನ್ನು ಗೆದ್ದ ಮಾಧವಾಚಾರ್ಯರಿಗೆ ಆ ಕಾಲದಲ್ಲಿ ಇನ್ನೂ ವಿದ್ಯಾರಣ್ಯ ಎಂಬ ಹೆಸರೇ ಪ್ರಾಪ್ತ ವಾಗಿರಲಿಲ್ಲ. ಕ್ರಿ.ಶ. 1335 ರಲ್ಲಿ ಭಾರತೀಕೃಷ್ಣತೀರ್ಥರಿಂದ ಸನ್ಯಾಸ ಸ್ವೀಕರಿಸಿದ ಕಾಲಕ್ಕೆ, ಅವರಿಗೆ ‘ವಿದ್ಯಾರಣ್ಯ’ ಎಂಬ ಹೆಸರು ಪ್ರಾಪ್ತವಾಯಿತು. ಈ ರೀತಿ ಅಕ್ಷೋಭ್ಯರನ್ನು ಜಯಿಸಿದ 1244 ಹಾಗೂ ‘ವಿದ್ಯಾರಣ್ಯ’ ನಾಮಪ್ರಾಪ್ತಿಯಾದ 1335 ಈ ಎರಡೂ ಘಟನೆಗಳ ಮಧ್ಯದಲ್ಲಿ 91 ವರ್ಷಗಳ ಅಂತರವಿರುವದರಿಂದ ಅಸಿನಾ ಶ್ಲೋಕದಲ್ಲಿ ವಿದ್ಯಾರಣ್ಯ ಶಬ್ದದ ಬಳಕೆಯಾದದ್ದು ಯಾರೋ ಒಬ್ಬ ಆಧುನಿಕನಿಂದ ಎಂದು ಸ್ವಾಭಾವಿಕವಾಗಿ ಏರ್ಪಡುತ್ತದೆ. ಅಲ್ಲದೆ, ವಿದ್ಯಾರಣ್ಯ ಹಾಗೂ ಅಕ್ಷೋಭ್ಯರಿಗೆ ಸಂಬಂಧಿಸಿದ ಪ್ರಾಚೀನತಮ‐ ಗ್ರಂಥಗಳಲ್ಲಿ, ಅಸಿನಾ ಶ್ಲೋಕದ ಹಾಗೂ ಇಬ್ಬರಲ್ಲಿಯೂ ನಡೆಯಿತೆನ್ನಲಾದ ವಾದದ ಬಗ್ಗೆ ಉಲ್ಲೇಖವೇ ಇಲ್ಲವೆಂಬ ಸಂಗತಿಯು ಕೂಡ ಈ ಶ್ಲೋಕವು ಆಧುನಿಕರಿಂದ ಪ್ರಕ್ಷೇಪ ಮಾಡಲ್ಪಟ್ಟಿದೆ ಎಂಬ ವಾಸ್ತವವನ್ನೇ ಸಿದ್ಧಪಡಿಸುತ್ತದೆ. ಅಕ್ಷೋಭ್ಯ ವಿದ್ಯಾರಣ್ಯರ ವಾದ ನಡೆಯಲೇ ಇಲ್ಲವೆಂದೂ “ಅಸಿನಾ” ಶ್ಲೋಕವು ಆಧುನಿಕರಿಂದ ಪ್ರಕ್ಷಿಪ್ತವಾದ್ಡದ್ದೆಂದೂ, ನಮ್ಮಪಕ್ಷವನ್ನು ಸಬಲಗೊಳಿಸುವ ಸತ್ಯವನ್ನು ಹೇಳಿದ್ದಕ್ಕೆ ರಘುನಾಥ ಸೂರಿಗಳನ್ನು ಅಭಿನಂದಿಸಲೇ ಬೇಕಾಗಿದೆ. “ಅಕ್ಷೋಭ್ಯಮುನಿರಚ್ಛಿನತ್” ಎಂಬುದನ್ನು, “ಅಕ್ಷೋಭ್ಯಮ್+ಉ+ನಿರಚ್ಛಿನತ್” ಎಂದು ಪದಚ್ಛೇದ ಮಾಡಿ, ಒಂದಕ್ಷರವನ್ನೂ ಬದಲಿಸದೆ, ಇಡೀಶ್ಲೋಕದ ಅರ್ಥವನ್ನೇ ತಲೆಕೆಳಗೆಮಾಡಿದ ರಘುನಾಥ ಸೂರಿಗಳ ಪ್ರತಿಭೆ ಅತ್ಯಂತ ಶ್ಲಾಘನೀಯವಾದದ್ದೇ. ಅದರಲ್ಲೇನೂ ಸಂಶಯವೇ ಇಲ್ಲ. ಆದರೆ, ಅವರೇ ಈ ಹಿಂದೆ ಬರೆದ “ಪ್ರಾಚೀನ ವಿದ್ಯಾರಣ್ಯಾಕ್ಷೋಭ್ಯ ಚರಿತ್ರಪ್ರತಿಪಾದಕ ಗ್ರಂಥೇಷು ಅಸಿನಾ ಇತಿ ಶ್ಲೋಕಸ್ಯ ಉಭಯೋಃ **ವಾದ ವಿಷಯಸ್ಯಾಪಿ ಅದರ್ಶನಾತ್” **ಎಂಬುದನ್ನು ನಾವು ಮರೆಯಬಾರದಲ್ಲ! ಇದಕ್ಕಾಗಿ ಹಾಗೂ ಇಂಥ ಅನೇಕ ಕಾಲಿಕ‐ವಿಸಂಗತಿಗಳ ಕಾರಣಕ್ಕಾಗಿ, ವಾದ ನಡೆಯಿತೆಂಬುದನ್ನೂ, ಶ್ರೀ ಅಕ್ಷೋಭ್ಯರು ಸೋತರೆಂಬ ಮಾತನ್ನೂ ನಾನು ಪುರಸ್ಕರಿಸಿಲ್ಲ.
          • ಈಗ ನಾವು ಮುಂದೆ ಹೋಗೋಣ. ದೇಶಿಕರು 87 ವರ್ಷದವರಿದ್ದಾಗ ಈ ವಾದ ನಡೆಯಿತು ಎಂದು ಹೊ.ಶ್ರೀಯವರು ಹೇಳಿದ್ದಾರೆ. ಅದಕ್ಕೆ ಆಧಾರ ಎಲ್ಲಿದೆ? ಹೊ.ಶ್ರೀಯವರು ಹೇಳಿದ ಮಾತ್ರಕ್ಕೆ ಅದು ಸಾಧುವಾಗುವದಿಲ್ಲ. ಎರಡೂ ಪಕ್ಷದವರು ಒಪ್ಪುವ ಪ್ರಮಾಣಗಳನ್ನು ಅವರು ತೋರಿಸಬೇಕು. ಹೊ.ಶ್ರೀಯವರೇ ಒಪ್ಪಿಕೊಂಡಂತೆ, ದೇಶಿಕರು ಜನಿಸಿದ್ದು, ಕ್ರಿ.ಶ. 1269 ರಲ್ಲಿ. ಅವರೇ ಹೇಳಿದ ಪ್ರಕಾರ, ದೇಶಿಕರು 87 ವರ್ಷದವರಿದ್ದಾಗ ವಾದ ನಡೆಯಿತೆಂದರೆ, ಆ ವಾದವು ಕ್ರಿ.ಶ. 1356 ರಲ್ಲಿ ನಡೆಯಿ ತೆಂದರ್ಥ. ಸಾಯಣ ಮಾಧವರ ಜೀವನದಲ್ಲಿ, ಅಷ್ಟೇ ಯಾಕೆ, ವಿಜಯನಗರದ ರಾಜಕಾರಣದಲ್ಲಿಯೂ ಈ ಕ್ರಿ.ಶ. 1356 ಎಂಬ ವರ್ಷವು ಸಂಕ್ರಮಣಕಾಲ. ಬಹು ಮಹತ್ತ್ವದ ಕಾಲಘಟ್ಟ. ಈ ಅವಧಿಯಲ್ಲಿ, ಮಾಧವಾಚಾರ್ಯರು, ಕಾಶಿಗೆ ಹೋಗಿದ್ದರೆಂದು ಶಾಸನೀಯ ಆಧಾರಗಳನ್ನುಲ್ಲೇಖಿಸಿ ಎಲ್ಲ ಇತಿಹಾಸ ಕಾರರೂ, ಏಕಕಂಠದಿಂದ ಒಪ್ಪಿದ್ದಾರೆ. 1356 ರ ಆಸುಪಾಸಿನಲ್ಲಿ ಈ ವಾದವು ಜರುಗಿರಲಿಕ್ಕೇ ಸಾಧ್ಯವಿರಲಿಲ್ಲ ಎಂಬ ಇನ್ನೊಂದು ತುಂಬ ಮಹತ್ವದ ಆಧಾರವು ಇತಿಹಾಸದಿಂದ ನಮಗೆ ತಿಳಿದುಬರುತ್ತದೆ. ಶೃಂಗೇರಿಯ ಕಡತದಿಂದಲೂ, ಇನ್ನಿತರ ಐತಿಹಾಸಿಕ ದಾಖಲೆಗಳಿಂದಲೂ, ಎಲ್ಲ ಅಗ್ರಗಣ್ಯ ಇತಿಹಾಸಕಾರರು ಒಪ್ಪಿಕೊಂಡಂತೆ, ಇದೇ ಕ್ರಿ.ಶ.1356 ರಲ್ಲಿ, ಕಾಶಿಗೆ ಹೋಗಿದ್ದ ವಿದಾರಣ್ಯರನ್ನು ತಿರುಗಿ ಕರೆಯಿಸಿಕೊಳ್ಳಲು ಬುಕ್ಕ ಭೂಪಾಲನು ತಾನೇ ಸ್ವತಃ ಶೃಂಗೇರಿಗೆ ಹೋಗಿ, ಭಾರತೀತೀರ್ಥರನ್ನು ಕಂಡು, ವಿಜಯನಗರದ ಇಕ್ಕಟ್ಟಿನ ಸಂದರ್ಭವನ್ನು ವಿವರಿಸಿ, ಇಂಥ ಇಕ್ಕಟ್ಟಿನ ಸಂದರ್ಭದಲ್ಲಿ, ಮೊದಲಿನಿಂದಲೂ ರಾಜ್ಯದ ಒಳಹೊರಗುಗಳನ್ನು ಬಲ್ಲ, ಆ ಎಲ್ಲ ಆಗುಹೋಗುಗಳಿಗೆ ನೇರ‐ಸಾಕ್ಷಿಗಳಾದ, ಎಲ್ಲ ಪ್ರಜಾಜನರ ಪ್ರೀತಿ ಗೌರವ ವಿಶ್ವಾಸಗಳಿಗೆ ಪಾತ್ರರಾದ, ರಾಜ್ಯಸ್ಥಾಪನೆಗೆ ಒಬ್ಬ [[15]] ಮೂಲ ಕಾರಣಕರ್ತರಾದ, ಮಾಧವಾಚಾರ್ಯರ ಅನುಪಸ್ಥಿತಿಯಲ್ಲಿ, ಇಂಥ ಇಕ್ಕಟ್ಟಿನ ಪ್ರಸಂಗವನ್ನು ನಿಭಾಯಿಸುವದು ಬೇರೆ ಯಾರಿಂದಲೂ ಸಾಧ್ಯವಿಲ್ಲ ಎಂಬ ಅಂಶವನ್ನು ಶ್ರೀ ಭಾರತೀತೀರ್ಥರಿಗೆ ಮನವರಿಕೆ ಮಾಡಿಕೊಟ್ಟು, ಅವರಿಂದ ಶ್ರೀಮುಖ, ನಿರೋಪ ಪಡೆದು, ತನ್ನ ಅತ್ಯಂತ ವಿಶ್ವಾಸಿಕರನ್ನು ಕಳಿಸಿ ಶ್ರೀ ಮಾಧವಾಚಾರ್ಯರನ್ನು [ವಿದ್ಯಾರಣ್ಯರನ್ನು] ಬರಮಾಡಿಕೊಂಡು, ಅವರಿಗೆ ಪ್ರಧಾನಾಮಾತ್ಯ ಪದವಿಯನ್ನು ಒಪ್ಪಿಸುತ್ತಾನೆ. ಈ ರೀತಿ ಶ್ರೀ ಮಾಧವಾಚಾರ್ಯರು [ವಿದ್ಯಾರಣ್ಯರು] ಕಾಶಿಗೆ ಹೋದದ್ದು ತಿರುಗಿ ಬಂದು ಪುನಃ ರಾಜ್ಯದ ಪ್ರಧಾನಾಮಾತ್ಯರಾಗಿ ಕಾರ್ಯಭಾರ ವಹಿಸಿಕೊಂಡದ್ದು ಇದೆಲ್ಲ 1356‐57 ರ ಮಧ್ಯದಲ್ಲಿ ನಡೆದದ್ದೆಂಬುದು ಸರ್ವಸುವಿದಿತ. ಈ ಅವಧಿಯಲ್ಲಿ ಮಾಧವಾಚಾರ್ಯರು] ವಿದ್ಯಾರಣ್ಯರು ವಿಜಯನಗರ ದಿಂದ ಹೊರಗಡೆ ಇದ್ದದ್ದರಿಂದ ವಾದ ನಡೆದಿರುವದು ಸಾಧ್ಯವೇ ಇಲ್ಲ. ತಿರುಗಿ ಬಂದನಂತರ ಪ್ರಧಾನಾ ಮಾತ್ಯರಾಗಿ ಪ್ರಜಾಹಿತ ಕಾರ್ಯ ಮಾಡುವದನ್ನು ಬಿಟ್ಟು, ಬುಕ್ಕರಾಜನ ಆಸ್ಥಾನದಲ್ಲಿ ಅಥವಾ ಮತ್ತೆಲ್ಲಿಯೋ ಅಕ್ಷೋಭ್ಯರೊಡನೆ ದ್ವೈತಾದ್ವೈತ ಚರ್ಚೆಯಲ್ಲಿ ತೊಡಗಿದರೆಂದರೆ, ಎಂಥ ಆಭಾಸ? ಬುಕ್ಕರಾಜನಾದರೂ ಒಪ್ಪಿಕೊಂಡಿರಬಹುದೆ? ವಿದ್ಯಾರಣ್ಯರು ಕಾಶಿಗೆ ಯಾಕೆ ಹೋಗಿರಬಹುದು? ಈ ಬಗ್ಗೆ ಬೇರೆಬೇರೆಯವರು ಭಿನ್ನಭಿನ್ನ ಊಹೆ ಮಾಡಿದ್ದಾರೆ. ನನಗೆ ಅನ್ನಿಸುವದು ಇಷ್ಟು. ಅವರು ಕಾಶಿಗೆಹೋಗಲು ಒಂದು ಮುಖ್ಯಕಾರಣ ಮೊದಲನೆಯ ಹರಿಹರನ ಸಾವು. ಅದು ಅವರಲ್ಲಿ ಮೂಡಿಸಿದ ಕಡುತರ‐ವೈರಾಗ್ಯಭಾವ. ಡಾ.ವೇಣೀಮಾಧವಶಾಸ್ತ್ರಿಗಳೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಕಾರಣವೆಂದರೆ, ವೇದಭಾಷ್ಯಗಳ ರಚನೆಯ ಪೂರ್ವ ತಯಾರಿ. [ಇದರ ವಿವರಗಳನ್ನು ಅಕ್ಷೋಭ್ಯ ವಿಜಯ ವಿಭ್ರಮ ಪುಟ 106‐108 ನೋಡಿ] ಆದರೆ ಅವರು ರಾಜ್ಯವನ್ನು ಬಿಟ್ಟರೆ ರಾಜ್ಯ ಅವರನ್ನು ಬಿಡಬೇಕಲ್ಲ? ತಿರುಗಿ ಬರಲು ಶೃಂಗೇರಿಯ ಆಳುವ ಜಗದ್ಗುರುಗಳಾದ, ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳಿಂದ, ಶ್ರೀಮುಖ ಬಂತು. ತಿರುಗಿ ಬರಲೇ ಬೇಕಾಯಿತು. ಬಂದರು. ಮತ್ತೆ ‘ಬುಕ್ಕರಾಜ್ಯಧುರಂಧರ’ ರಾಗಲೇಬೇಕಾಯಿತು. ಆದರು. ಈ ಎಲ್ಲ ಗದ್ದಲ ನಡೆದದ್ದು ಕ್ರಿ.ಶ. 1356 ರ ಆಸುಪಾಸಿನಲ್ಲಿ. ಅಂಥ ಆಂತರಿಕ ಹಾಗೂ ಬಾಹ್ಯ ತುಮುಲಗಳ ಮಧ್ಯದಲ್ಲಿ ತೊಳಲಾಡುತ್ತಿದ್ದ ಮಾಧವಾಚಾರ್ಯರಿಗೆ ಅಕ್ಷೋಭ್ಯರೊಡನೆ ವಾದಮಾಡಲು ಪುರಸೊತ್ತು, ಬಿಡುವು ಹೇಗೆ ದೊರೆತಿದ್ದೀತು? ಇದಕ್ಕಿಂತ ಹೆಚ್ಚಿನ ಕಾರಣವೆಂದರೆ, ಕ್ರಿ.ಶ. 1356 ರಲ್ಲಿ, ಸಾಯಣಸೋದರ ಮಾಧವಾಚಾರ್ಯರು ಇನ್ನೂ ಸನ್ಯಾಸವನ್ನೇ ಸ್ವೀಕರಿಸಿರಲಿಲ್ಲ. ಆದ್ದರಿಂದ ಈ ಕಾಲಖಂಡದಲ್ಲಿ ವಾದ ನಡೆದಿರಲಿಕ್ಕೆ ಸಾಧ್ಯವೇ ಇಲ್ಲ.
          • ನಾವು ಮುಂದುವರಿಯೋಣ. ಸಾಯಣಸೋದರ ಮಾಧವ‐–ವಿದ್ಯಾರಣ್ಯರೊಡನೆ ವಾದ ನಡೆದಿರಲು ಸಾಧ್ಯವೇ ಇಲ್ಲ ಎಂಬ ಆಂಶಕ್ಕೆ ಪೂರಕವಾದ ಇನ್ನೂ ಬೇರೆಬೇರೆ ಕಾರಣಗಳನ್ನು ನಾವು ಈಗ ಪರಿಶೀಲಿಸೋಣ. ಇಲ್ಲಿ, ಹೊ.ಶ್ರೀಯವರು, ಶ್ರೀ ರಘುನಾಥ ಸೂರಿಗಳ ಮಾಣ ಿಕ್ಯಮಂಜರಿಯನ್ನೇ ಅನುಲಕ್ಷಿಸಿ, ಅದನ್ನೇ ಆಧರಿಸಿ, ತಮ್ಮ ವಾದವನ್ನು ಮಂಡಿಸುತ್ತಿರುವದರಿಂದ, ನಾವೂ ಅದನ್ನೇ ಅನುಸರಿಸೋಣ. ಈ ಸಂದರ್ಭದಲ್ಲಿ, ನಾವು ಪ್ರಪ್ರಥಮವಾಗಿ ಗಮನಿಸಬೇಕಾದ ಅಂಶವೆಂದರೆ, ಅಕ್ಷೋಣ್ಯ ವಿದ್ಯಾರಣ್ಯರ ವಾದ ನಡೆಯುವಾಗ, ಎಲ್ಲಕ್ಕೂ ಮುಂಚೆ, ಅವರ ಮಧ್ಯೆ ನಡೆದದ್ದು ತತ್ತ್ವಮಸಿ ವಾಕ್ಯಾರ್ಥವಲ್ಲ; ಪರಂತು ಅದು ಶಿವೋತ್ಕರ್ಷ‐ವಿಚಾರ, ತಪ್ತಮುದ್ರಾಧಾರಣ‐ವಿಚಾರ, ಹಾಗೂ ಕೊನೆಗೆ ಆತತ್ತ್ವಮಸಿ‐ವಿಚಾರ. ಈ ಅಂಶಗಳಿಂದ ಸ್ಪಷ್ಟವಾಗಿ ತಿಳಿದುಬರುವದೇನೆಂದರೆ, ಅದ್ವೈತ ವೇದಾಂತದ ಯಾವ ಪ್ರಮೇಯ ಗಳೂ ಈ ಚರ್ಚೆಯಲ್ಲಿ ಪರಾಮೃಷ್ಟವಾಗಲೇ ಇಲ್ಲ ಎಂಬುದು. ಮಾಣಿಕ್ಯಮಂಜರಿಯ ಪ್ರಕಾರ, ಮಾಧವ‐ಅಕ್ಷೋಭ್ಯರ ನಡುವೆ ಮೊದಲಿಗೆ ವಾದ ನಡೆದದ್ದು ಶಿವ‐ಸರ್ವೋತ್ತಮವನ್ನು ಕುರಿತು. ಶಿವೋತ್ಕರ್ಷವನ್ನು ಕುರಿತು ಅಕ್ಷೋಭ್ಯರು ಇಬ್ಬರೊಡನೆ ವಾದಮಾಡಿರಲು ಸಾಧ್ಯ ಒಬ್ಬರು ಕಾಶೀ ವಿಳಾಸ ಕ್ರಿಯಾಶಕ್ತಿಗಳು; ಇನ್ನೊಬ್ಬರು ಮಾಧವ ಮಂತ್ರಿಗಳು. ಕಾಶೀವಿಳಾಸ ಕ್ರಿಯಾಶಕ್ತಿಗಳೊಡನೆ ವಾದ ನಡೆದಿರಲು ಸಾಧ್ಯವಿಲ್ಲ. ಯಾಕೆಂದರೆ, ಮಣಿಮಂಜರೀಕಾರರು ವಾದ ನಡೆದದ್ದು ಮಾಧವನೊಡನೆ ಎಂದು ಹೇಳಿದ್ದಾರೆ. ಆದ್ದರಿಂದ ವಾದವು ಮಾಧವ‐ವಿದ್ಯಾರಣ್ಯ ಅಥವಾ ಮಾಧವ ಮಂತ್ರಿ ಇಬ್ಬರಲ್ಲಿ ಒಬ್ಬರೊಡನೆ ನಡೆದಿರಬೇಕು. ಮಾಧವ‐ವಿದ್ಯಾರಣ್ಯರೊಡನೆ ವಾದ ನಡೆದಿರಲು ಸಾಧ್ಯವಿಲ್ಲ. ಯಾಕೆಂದರೆ, ಅವರು [[16]] ಶಿವೋತ್ಕರ್ಷವಾದಿಗಳಲ್ಲ. ಇನ್ನುಳಿದವರು ಮಾಧವ ಮಂತ್ರಿಗಳು ಮಾತ್ರ. ಆದ್ದರಿಂದ ಈ ವಾದ ನಡೆದಿದ್ದರೆ, ಅದು ಅಕ್ಷೋಭ್ಯ‐ಮಾಧವ ಮಂತ್ರಿಗಳ ಮಧ್ಯೆಯೇ ನಡೆದಿರಬೇಕು. ಅದರಲ್ಲಿ ಅಕ್ಷೋಭ್ಯರು ಸೋತರು, ಮಾಧವ ಮಂತ್ರಿಗಳು ಗೆದ್ದರೆಂಬುದು ರಘುನಾಥ ಸೂರಿಗಳ ಹೇಳಿಕೆ.
          • ಮಾಧವ ಮಂತ್ರಿಗಳು ಶಿವೋತ್ಕರ್ಷವಾದಿಗಳಾಗಿದ್ದರೆನ್ನಲು ಸಾಕಷ್ಟು ಸಾಕ್ಷ್ಯಗಳು ದೊರಕುತ್ತವೆ. ಅವುಗಳಲ್ಲಿ 1. ಅವರು ಕಾಳಾಮುಖ ಸಂಪ್ರದಾಯಕ್ಕೆ ಸೇರಿದ್ದರೆಂಬ ಅಂಶ. 2 ಅವರು “ಸೂತಸಂಹಿತಾ” ಕ್ಕೆ ಬರೆದ “ತಾತ್ಪರ್ಯದೀಪಿಕಾ” ಎಂಬ ವ್ಯಾಖ್ಯಾನವನ್ನು ಬರೆದಿದ್ದಾರೆಂಬ ಅಂಶ. 3 ಅವರು ಮಾರಪ್ಪನಿಗೆ “ಶೈವಾಗಮಸಾರ” ಎಂಬ ಗ್ರಂಥವನ್ನು ಬರೆಯಲು ಸಹಾಯ ಮಾಡಿದರೆಂಬ ಅಂಶ ಈಗ ನಾವು ಸೂತಸಂಹಿತೆಯನ್ನು ಕುರಿತು ಕೆಲವು ಅಂಶಗಳನ್ನು ಸಂಕ್ಷಿಪ್ತವಾಗಿ ಗಮನಿಸೋಣ. ಸೂತ ಸಂಹಿತೆಯು ಸ್ಕಂದಪುರಾಣದ ಒಂದು ಭಾಗ. ಈ ಗ್ರಂಥಕ್ಕೆ ಕಾಶೀವಿಳಾಸ ಕ್ರಿಯಾಶಕ್ತಿ ಎಂಬ ಶೈವಾಚಾರ್ಯರ ಶಿಷ್ಯರಾದ ಮಾಧವ ಮಂತ್ರಿಗಳು “ತಾತ್ಪರ್ಯದೀಪಿಕಾ” ಎಂಬ ವ್ಯಾಖ್ಯಾನವನ್ನು ಬರೆದಿದ್ದಾರೆ. ಇದರ ಮಂಗಲಾಚರಣದಲ್ಲಿ, ಶ್ರೀಮತ್ಕಾಶೀವಿಲಾಸಾಖ್ಯ ಕ್ರಿಯಾಶಕ್ತೀಶ ಸೇವಿನಾ । ಶ್ರೀಮತ್‐ತ್ರ್ಯಂಬಕಪಾದಾಬ್ಜ ಸೇವಾನಿಷ್ಣಾತ ಚೇತಸಾ ॥ ವೇದಶಾಸ್ತ್ರ‐ಪ್ರತಿಷ್ಠಾತ್ರಾ ಶ್ರೀಮನ್ಮಾಧವ ಮಂತ್ರಿಣಾ । ತಾತ್ಪರ್ಯದೀಪಿಕಾ ಸೂತಸಂಹಿತಾಯಾ ವಿಧೀಯತೇ ॥ ಎಂದುಬರೆದಿರುವದರಿಂದ, ಇದನ್ನು ಕಾಶೀವಿಲಾಸಕ್ರಿಯಾಶಕ್ತಿಗಳ ಶಿಷ್ಯರೂ ತ್ರ್ಯಂಬಕೋಪಾಸಕರೂ ಆದ, ಮಾಧವ ಮಂತ್ರಿಗಳು ಬರೆದಿದ್ದಾರೆಂಬುದು ಸ್ಪಷ್ಟಪಡುತ್ತದೆ. ಮೈಸೂರು ವಿಶ್ವವಿದ್ಯಾಲಯದ, ನಿವೃತ್ತ ತತ್ತ್ವಶಾಸ್ತ್ರ ಪ್ರಾಧ್ಯಾಪಕ ಪ್ರೊ. ಎಸ್.ಎಸ್. ರಾಘವಾಚಾರ್ ರವರು, ಈ ಗ್ರಂಥವನ್ನು ಆಮೂಲಾಗ್ರವಾಗಿ ಅಭ್ಯಸಿಸಿ, ಅದರ ವಿಮರ್ಶೆಯನ್ನು ಮಾಡಿದ್ದಾರೆ. ಅವುಗಳಲ್ಲಿ ಕೆಲವು ಅಭಿಪ್ರಾಯಗಳನ್ನು ಮುಂದೆ ಕೊಡಲಾಗಿದೆ. In its philosophy it is definitely an Advaitic work The traditional terminology of Advait is fully utilized in it and its extensive interpretations of the principal passages in the great Upanishads faithfully reflect Shankara’s commen taries….. But the work can not be regarded as an Advaitic work 1 The work, in sipte of its Advaitic affirmations, adopts and promulgates a strong version of Shaivism both in respect of the exaltation of Shiva to the stastus of Brahman of Vedanta, and in respect of rituals and symbols of Shaivism. This is a tendency not found in any of the undisputedly authentic works of Shankara. [a] It goes further and denounces Vaishnavism in very strong terms. Some instances may be cited [b] It is asserted that he who regards Vishnu as equal to Shiva is destined to eternal bondage. [d] It is said that only the pure will see the superiority of Shiva over Vishnu, while only the spiritually degraded do exalt Vishnu over Shiva. As a [[17]] matter of fact, Vishnu appears *Sattvic *from outside, while in his inner nature, he is full of Tamas. [e] It is said that he, who, instead of applying names like Shiva and Mahadeva to the Supreme Being, applies names like Narayana, heading towards completre ruin. [f[ We learn that Vishnu is to Shiva, what a glow-worm is to The sun. Only the worst of men, entertain the cursed idea of equality. [g] We learn that Vishnu is subject to birth and death as ordained by Shiva. [ಅನುವಾದ:‐ತತ್ತ್ವಶಾಸ್ತ್ರೀಯ ದೃಷ್ಟಿಯಿಂದ ಈ ಗ್ರಂಥವು ಖಂಡಿತವಾಗಿಯೂ ಅದ್ವೈತ‐ಕೃತಿಯೇ ಹೌದು. ಗ್ರಂಥದುದ್ದಕ್ಕೂ, ಅದ್ವೈತದ ಸಾಂಪ್ರದಾಯಿಕ ಪಾರಿಭಾಷಿಕ ಪದಗಳು ಹೇರಳವಾಗಿ ಪ್ರಯುಕ್ತವಾಗಿವೆ. ಇದರಲ್ಲಿ ಉದ್ಧರಿಸಲಾದ ಪ್ರಧಾನವಾದ ಉಪನಿಷನ್ಮಂತ್ರಗಳ ವ್ಯಾಖ್ಯಾನವು ಶಾಂಕರಭಾಷ್ಯಗಳನ್ನು ನಿಷ್ಠೆಯಿಂದ ಪ್ರತಿಬಿಂಬಿಸುತ್ತದೆ. ಆದರೆ, ಸಗುಣಬ್ರಹ್ಮದ ವಿಷಯ ಬಂದಾಗ ಮಾತ್ರ ಈ ಗ್ರಂಥವು ಸ್ಪಷ್ಟವಾಗಿ ಹಾಗೂ ಉಗ್ರವಾಗಿ ಶಿವಪಾರಮ್ಯವನ್ನು ಪ್ರತಿಪಾದಿಸುತ್ತದೆ. ಉದಾಹರಣೆಗೆ, 1. ವಿಷ್ಣುವು ಶಿವನಿಗೆ ಸಮಾನನೆಂದು ಭಾವಿಸುವವನು, ಎಂದಿಗೂ ಸಂಸಾರದಿಂದ ಮುಕ್ತನಾಗಲಾರನು. 2. ಶುದ್ಧಾಂತಃಕರಣವುಳ್ಳವರು ಶಿವನು ವಿಷ್ಣುವಿಗಿಂತಲೂ ಶ್ರೇಷ್ಠನೆಂಬುದನ್ನು ಅರಿತುಕೊಳ್ಳುತ್ತಾರೆ. 3 ಪತಿತಾಂತಃಕರಣವುಳ್ಳವರು ಮಾತ್ರ ವಿಷ್ಣುವು ಶಿವನಿಗಿಂತ ಶ್ರೇಷ್ಠನೆಂದು ಭಾವಿಸುತ್ತಾರೆ. 4 ವಿಷ್ಣುವು ಹೊರಗಿನಿಂದ ಸಾತ್ತ್ವಿಕನಂತೆ ಕಂಡರೂ, ಅವನ ಅಂತರಂಗವು ಅಂಧತಮಸ್ಸಿನಿಂದ ತುಂಬಿದೆ. 4 ಪರಬ್ರಹ್ಮವನ್ನು ಶಿವ, ಮಹಾದೇವ ಎಂದು ಕರೆಯದೆ, ನಾರಾಯಣ ಎಂದು ಕರೆದರೆ, ಅಂಥವರು ಪೂರ್ಣವಾಗಿ ನಾಶಹೊಂದುತ್ತಾರೆ. 6. ವಿಷ್ಣುವನ್ನು ಶಿವನಿಗೆ ಹೋಲಿಸುವದು, ದೀಪದಹುಳುವನ್ನು ಸೂರ್ಯನಿಗೆ ಹೋಲಿಸಿದಂತೆ. ಮಾನವಾಧಮರಿಗೆ ಮಾತ್ರ, ಶಿವ ಮತ್ತು ವಿಷ್ಣು ಸಮಾನರೆಂಬ ಹೇಯ ಭಾವನೆ ಉಂಟಾಗುವದು. 7. ಶಿವನ ಆಜ್ಞೆಯಂತೆ ವಿಷ್ಣುವು ಜನನ ಮರಣಗಳನ್ನನುಭವಿಸುತ್ತಾನೆ. ಈ ಮೇಲಿನ ವಿವರಗಳಿಂದ ತಿಳಿಯುವದೇನೆಂದರೆ, “ಸೂತಸಂಹಿತೆ”ಯು ಅದ್ವೈತ ತತ್ತ್ವವನ್ನು ಪ್ರತಿಪಾದಿಸುವ ಗ್ರಂಥವಾದರೂ, ಶಿವಪಾರಮ್ಯವನ್ನು ಉಗ್ರವಾಗಿ ಪ್ರತಿಪಾದಿಸುವ ಗ್ರಂಥವಾಗಿದೆ. ಆದ್ದರಿಂದ, ಈ ಗ್ರಂಥಕ್ಕೆ ಅತ್ಯಂತ ಸಮರ್ಥವಾದ ವ್ಯಾಖ್ಯಾನವನ್ನು ಬರೆದಿದ್ದಾರೆಂಬ ಹೆಗ್ಗಳಿಕೆಗೆ ಪಾತ್ರರಾದ ಮಾಧವಮಂತ್ರಿಗಳು ಉಗ್ರ‐ಶಿವಾದ್ವೈತಿಗಳೇ ಹೊರತು ವೈದಿಕಾದ್ವೈತಿಗಳಲ್ಲ. ಮಾಧವ ಮಂತ್ರಿಗಳನ್ನು ಸಮಕಾಲೀನ ಸಾಹಿತ್ಯದಲ್ಲಿ, ಶಾಸನಗಳಲ್ಲಿ “ಉಪನಿಷನ್ಮಾರ್ಗೋಪದೇಕ‐ ಗುರು” ಎಂದೇ ಬಿಂಬಿಸಲಾಗಿದೆ. “…… was praised by the wise as the Guru, who esta - blished the path of the upanishads] ಎಂದು ವರ್ಣಿಸಲಾಗಿದೆ. [ಕ್ರಿ.ಶ. 1353 ರ ಶಿಕಾರಿಪುರ [[18]] ಶಾಸನ ನೋಡಿ‐ ಈ ಭಾಗವನ್ನು Mysore Gazetteer Edi by C Hayavadava Rao Volume II - Part II – page 1443] ದಿಂದ ಉದ್ಧರಿಸಲಾಗಿದೆ. ಮೇಲ್ಕಾಣಿಸಿದ ಸೂತಸಂಹಿತಾ ವ್ಯಾಖ್ಯಾನವಾದ “ತಾತ್ಪರ್ಯ ದೀಪಿಕಾ ”ದಲ್ಲಿ ಕೂಡ ಇವರನ್ನು **“ವೇದಶಾಸ್ತ್ರ‐ಪ್ರತಿಷ್ಠಾತ್ರಾ ಶ್ರೀಮನ್ಮಾಧವ ಮಂತ್ರಿಣಾ” **ಎಂದು ವರ್ಣಿಸಿಲಾಗಿದೆ. ಅದ್ವೈತಿಗಳು ದೇವತಾ‐ಪಾರಮ್ಯವಾದಿಗಳಲ್ಲ. ಶಿವಸರ್ವೋತ್ತಮತ್ವವನ್ನಾಗಲಿ, ವಿಷ್ಣುಸರ್ವೋತ್ತಮತ್ವ ವನ್ನೇ ಆಗಲಿ, ಅವರು ಸಾಧಿಸುವದಿಲ್ಲ. ಅಲ್ಲದೆ, ಶ್ರೀಶಂಕರರಿಗೆ ದೇವತಾ ತಾರತಮ್ಯದಲ್ಲಿ ವಿಶ್ವಾಸವಿರಲಿಲ್ಲ. ಅಲ್ಲದೆ, ಸೂತಸಂಹಿತೆಯ ಈ ವಿಚಾರಗಳು ವೇದವಿಹಿತವಾಗಿಲ್ಲ. ಆದ್ದರಿಂದ ಈ ವಿಚಾರಗಳು ಆಚಾರ್ಯ ಶ್ರೀ ಶಂಕರರಿಗೆ ಒಪ್ಪಿತವಾಗಿಲ್ಲ. ಅದರಂತೆಯೇ ಶ್ರೀ ವಿದ್ಯಾರಣ್ಯರಿಗೂ ಈ ವಿಚಾರಗಳು ಖಂಡಿತವಾಗಿಯೂ ಒಪ್ಪಿತವಲ್ಲ. ಆದ್ದರಿಂದ ಈ ವಿಚಾರಗಳನ್ನು ಅಕ್ಷೋಭ್ಯರು ವೈದಿಕ‐ವಿದ್ಯಾರಣ್ಯರ ಮುಂದೆ ಪ್ರಸ್ತಾಪಿಸಿರುವದು ಅಸಂಭವವೇ ಸರಿ! ಅಕಸ್ಮಾತ್ ಪ್ರಸ್ತಾಪಿಸಿದ್ದರೆ, ಅದು ಅವೈದಿಕ ವಿದ್ಯಾರಣ್ಯರ ಹತ್ತರ ಮಾತ್ರ. ಆದ್ದರಿಂದ, ಈ ವಿಷಯವು ಅದ್ವೈತಿಗಳಿಗೆ ಸಂಬಂಧಿಸಿದಂತೆ, ಅಸಂಬದ್ಧ ವಿಷಯ. ಹೊ.ಶ್ರೀ ಯವರೇ ಒಪ್ಪಿದಂತೆ, ಅಸಂಬದ್ಧ ವಿಷಯದಲ್ಲಿ ವಾದ ಹೇಗೆ ನಡೆದೀತು? ಆದ್ದರಿಂದ ಈ ವಾದವು ಆದ್ವೈತಿಗಳಾದ ಶ್ರೀ ವಿದ್ಯಾರಣ್ಯರೊಡನೆ ನಡೆದಿರಲು ಸಾಧ್ಯವೇ ಇಲ್ಲ ಎಂಬುದು ಸ್ಪಷ್ಟ. *** * * * *** ಅಕ್ಷೋಭ್ಯ‐ಮಾಧವರ ಮಧ್ಯೆ ನಡೆಯಿತೆಂದು ರಘುನಾಥ ಸೂರಿಗಳು ಹೇಳಿದ ತಪ್ತಮುದ್ರಾಧಾರಣ ವಿಚಾರವೂ ಅಷ್ಟೇ! ಅದು ಮಾಧ್ವರ ಆಚಾರಸಂಹಿತೆಗೆ ಸಂಬಂಧಪಟ್ಟ ವಿಚಾರ. ಅದ್ವೈತಿಗಳ ಪ್ರಕಾರ ಅದು ಅವೈದಿಕ ಆಚಾರ. ಆದ್ದರಿಂದ, ಅದಕ್ಕೆ ಅದ್ವೈತಿಗಳು ತಲೆಕೆಡಿಸಿಕೊಳ್ಳುವ ಕಾರಣವಿಲ್ಲ. ಆದ್ದರಿಂದ ಇಂಥ ವಾದವನ್ನು ಶೃಂಗೇರಿ ವಿದ್ಯಾರಣ್ಯರು ಪುರಸ್ಕಿರಿಸಿರುವದು ಸಾಧ್ಯವೇ ಇಲ್ಲ. ಇನ್ನು ಮೂರನೆಯದು ತತ್ತ್ವಮಸಿ ವಿಚಾರ. ಇದು ಅದ್ವೈತಿಗಳಿಗೆ ತೀರನಿಕಟವಾಗಿ ಸಂಬಂಧಿಸಿದ ವಿಚಾರ. ಆದರೆ, ಅಲ್ಲಿ ನಡೆದದ್ದು “ಅತತ್ತ್ವಮಸಿ”ಯನ್ನು ಕುರಿತ ವಿಚಾರ. ಆದ್ದರಿಂದ ಈ ವಿಚಾರವೂ ಅದ್ವೈತಿಗಳ ಜೊತೆಗೆ ವಾದ ಮಾಡುವಾಗ ಅಪ್ರಸ್ತುತವೇ! ಇದರ ವಿವರ ಚರ್ಚೆ ಮುಂದಿನ ಪುಟಗಳಲ್ಲಿದೆ. ಹಾಗಾದರೆ, ಇದೇ ವಿಷಯಕುರಿತು ವಾದ ನಡೆಯಿತೆಂದು ಶ್ರೀ ರಘುನಾಥ ಸೂರಿಗಳು ಹೇಳಿದ್ದರ ಕತೆ ಏನು? ಎಂದರೆ, ಆಗ, “ವಾದ ನಡೆದದ್ದು ನಿಜ, ಆದರೆ, ವೈದಿಕ ವಿದ್ಯಾರಣ್ಯರ ಜೊತೆಗಲ್ಲ” ಎಂಬುದು ಇದರಿಂದ ನಿಷ್ಪನ್ನವಾಗುತ್ತದೆ. ಹಾಗಾದರೆ, ಯಾರ ಜೊತೆಗೆ ವಾದ ನಡೆಯಿತು ಎಂದರೆ, ಮಾಧವಾ ಚಾರ್ಯರ ಜೊತೆಗೆ ಎಂಬುದು ರಘುನಾಥಸೂರಿಗಳ ಉತ್ತರ. ಯಾವ ಮಾಧವಾಚಾರ್ಯರು ಎಂಬುದನ್ನು ರಘುನಾಥ ಸೂರಿಗಳು ಹೇಳಿಲ್ಲ. ಈಗ ನಾವು ನಿರ್ಣಯಿಸಬೇಕಾಗಿದೆ. * * * * * ವಿಜಯನಗರ ಸಾಮ್ರಾಜ್ಯದ ಆಡಳಿತದಲ್ಲಿ, ಅದಕ್ಕೆ ಸಂಬಂಧಿಸಿದಂತೆ, ಇಬ್ಬರು ಮಾಧವಾಚಾರ್ಯ ರಿದ್ದರೆಂಬ ವಾಸ್ತವವು ತೀರ‐ತೀರ ಇತ್ತೀಚಿನವರೆಗೂ, ಎಂದರೆ, ಕ್ರಿ.ಶ.1916 ರ ವರೆಗೂ, ಸಾಂಪ್ರದಾಯಿಕ‐ ವಿದ್ವಾಂಸರಿಗಾಗಲಿ, ಆಧುನಿಕ ವಿದ್ವಾಂಸರಿಗೇ ಆಗಲಿ, ನಿಖರವಾಗಿ ತಿಳಿದಿರಲಿಲ್ಲ. 1916 ನೆಯ ಇಸ್ವಿಯ Indian Antiquery ಯಲ್ಲಿ, ಪ್ರಾಕ್ತನ ವಿಮರ್ಶಾವಿಚಕ್ಷಣ, ರಾವ್ ಬಹಾದ್ದೂರ್ ಆರ್ ನರಸಿಂಹಾಚಾರ್ಯರು ಈ ಬಗ್ಗೆ ವಿವರವಾಗಿ ಬರೆದು, ಆಂಗಿರಸ ಮಾಧವ [ಮಾಧವ ಮಂತ್ರಿ] ಹಾಗೂ ಭಾರದ್ವಾಜ ಮಾಧವ [ಸಾಯಣಸೋದರ ಮಾಧವ] ಇವರಿಬ್ಬರೂ ವಿಭಿನ್ನ ವ್ಯಕ್ತಿಗಳೆಂದು ಸಿದ್ಧಮಾಡಿದ ಬಳಿಕವಷ್ಟೇ ಈ ಗೊಂದಲ ದೂರವಾದದ್ದು. ಇನ್ನೂ ಅಲ್ಲಲ್ಲಿ ಇದು ಮುಂದುವರಿದಿದೆ. ಆದ್ದರಿಂದ ರಘುನಾಥ ಸೂರಿಗಳು ಕೂಡ ಇತರರಂತೆ, ಈ ವಿಷಯದಲ್ಲಿ ಗೊಂದಲಕ್ಕೀಡಾಗಿದ್ದಾರೆ. ಆದ್ದರಿಂದಲೇ, ರಘುನಾಥ ಸೂರಿಗಳು ಹೇಳಿದ ಮಾಧವರೆಂದರೆ, ಅವರು ಅವೈದಿಕ ಮಾಧವ ರೆಂದೇ ಪರಿಗಣಿಸಲ್ಪಡಬೇಕು. ಯಾಕೆಂದರೆ ರಘುನಾಥ ಸೂರಿಗಳ ಪ್ರಕಾರ, ವಾದವು ಪ್ರಾರಂಭವಾದದ್ದೇ, [[19]] ಶಿವಸರ್ವೋತ್ತಮತ್ವವನ್ನು ಕುರಿತು ಎಂದು ಈ ಹಿಂದೆಯೇ ನೋಡಲಾಗಿದೆ. ಅದು ಮಾಧವ ಮಂತ್ರಿಗಳಿಗೆ ಅತ್ಯಂತ ಶಿರೋಧಾರ್ಯವಾದ ವಿಷಯ. ರಘುನಾಥ ಸೂರಿಗಳ ಪ್ರಕಾರ, ಈ ವಾದದಲ್ಲಿ ಮಾಧವಮಂತ್ರಿಗಳೇ ಜಯಶಾಲಿಗಳಾದರೆಂಬದೂ ಅಷ್ಟೇ ಸತ್ಯ.
          • ಇಲ್ಲಿ ಇನ್ನೂ ಒಂದು ವಿಷಯವನ್ನು ವಿವೇಚಿಸಬೇಕಾಗಿದೆ. ಶ್ರೀ ರಘೂತ್ತಮಾಚಾರ್ಯರು ಹೇಳಿದಂತೆ, ಮಾಧವ ಮಂತ್ರಿಗಳು ಅವೈದಿಕರೇ ಎಂಬುದೇ ಆ ವಿಚಾರ. ಪುನಃ ನಾವು, ಸುತ್ತಿಬಳಸಿ, ಅವೈದಿಕ ಶಬ್ದದ ನಿರ್ವಚನ ಏನು? ಯಾರಿಗೆ ಅವೈದಿಕರೆನ್ನಬೇಕು/ ಎಬ ಮೂಲಭೂತ ಪ್ರಶ್ನೆಗೇ ಬರುತ್ತೇವೆ. “ಮಾಧವ ಮಂತ್ರಿಗಳು ಕಾಪಾಲಿಕರು ಅರ್ಥಾತ್ ಅವೈದಿಕರು, ಅರ್ಥಾತ್ ವೇದ‐ಅಪ್ರಾಮಾಣ್ಯ ವಾದಿಗಳು. ಅಂದಮೇಲೆ ಅವರು ತತ್ತ್ವಮಸಿಯನ್ನು ಕುರಿತು ವಾದ ಮಾಡಲು ಹೇಗೆ ಸಾಧ್ಯ?” ಎಂಬುದು ಹೊ.ಶ್ರೀಯವರ ಆಕ್ಷೇಪ. [ಮಾಧವ ಮಂತ್ರಿಗಳು ಕಾಪಾಲಿಕರಲ್ಲ, ಪ್ರತ್ಯುತ ಕಾಳಾಮುಖರು ಎಂಬುದನ್ನು ಈ ಹಿಂದೆಯೇ ನೋಡಲಾಗಿದೆ.] ಆದರೆ, ಮಾಧವಮಂತ್ರಿಗಳಿಗೆ **“ಉಪನಿಷನ್ಮಾರ್ಗ‐ಪ್ರತಿಷ್ಠಾಪನಾಚಾರ್ಯ”**ಎಂಬ ಬಿರುದಿತ್ತು ಎಂಬ ಅಂಶವು ಒಪ್ಪಿಕೊಳ್ಳಲ್ಪಟ್ಟಿದೆ. ಇದೇ ಮಾಧವಮಂತ್ರಿಗಳೇ ತಾವು ಬರೆದ “ತತ್ತ್ವಪ್ರದೀಪಿಕಾ” ಎಂಬ ಸೂತಸಂಹಿತಾ ವ್ಯಾಖ್ಯಾನದಲ್ಲಿ ತಮ್ಮನ್ನು **“ವೇದಶಾಸ್ತ್ರ ಪ್ರತಿಷ್ಠಾತಾ”**ಎಂದು ಕರೆದುಕೊಂಡಿದ್ದಾರೆ. ಅದರ ವಿವರಗಳನ್ನು ಇದೇ ಲೇಖನದ ಇತರೆಡೆಗೆ ಕೊಡಲಾಗಿದೆ. ಅಂದಮೇಲೆ, ಅವರು ಅಕ್ಷೋಭ್ಯರ ಜೊತೆಗೆ **“ತತ್ತ್ವಮಸಿ” **ಎಂಬ ಛಾಂದೋಗ್ಯದ ವಾಕ್ಯವನ್ನು ಕುರಿತು ವಾದಮಾಡಿದ್ದರೆ, ಅದರಲ್ಲಿ, ಹೊ.ಶ್ರೀ ಯವರಿಗೆ ವಿಪ್ರತಿಪತ್ತಿ ಏನು ಕಂಡಿತು? ಅವರಿಗೆ **‘ತತ್ತ್ವಮಸಿ’ **ಯನ್ನು ಕುರಿತು ವಾಕ್ಯಾರ್ಥಮಾಡುವ ಎಲ್ಲ ಅರ್ಹತೆಗಳೂ ಇದ್ದವು. ಯಾಕೆಂದರೆ, ಅವರು, ಚಾರ್ವಾಕ ಜೈನ ಬೌದ್ಧಾದಿಗಳಂತೆ ವೇದ‐ಅಪ್ರಾಮಾಣ್ಯ ವಾದಿಗಳಲ್ಲ, ಅವೈದಿಕರಲ್ಲ, ಕಿಂತು ಶೈವಾಗಮಗಳಿಗೆ ವೇದಗಳಿಗಿಂತ ಹೆಚ್ಚಿನ ಪ್ರಾಧಾನ್ಯಕೊಡುವವರು ಎಂಬ ಕಾರಣಕ್ಕಾಗಿ ಅವನನ್ನು **ಅವೈದಿಕ, ವೇದಬಾಹ್ಯ **ಎನ್ನಲಾಗಿದೆ. ಹೊ.ಶ್ರೀ ಪ್ರಕಾರ, ವೇದಗಳ ನಿಜಾರ್ಥವಾದ ವಿಷ್ಣುಸರ್ವೋತ್ತಮತ್ವವನ್ನು ನಿರಾಕರಿಸಿ, ತಮಗನುಕೂಲವಾಗುವಂತೆ ಅದನ್ನು ತಿರುಚಿ, ಶಿವಸರ್ವೋತ್ತಮತ್ವ ವನ್ನು ಸ್ಥಾಪಿಸಿದ್ದಕ್ಕಾಗಿ, ಅವರನ್ನು ಅವೈದಿಕರೆನ್ನುತ್ತಾರೆಂಬುದನ್ನು ಹೊ.ಶ್ರೀಯವರಿಗೆ ನೆನಪಿಸಬಯಸುತ್ತೇನೆ.
          • ಆದ್ದರಿಂದ, ಇವರು ಜೈನ ಬೌದ್ಧಾದಿಗಳಂತೆ ವೇದವಿರೋಧಿಗಳಲ್ಲ, ವೇದ‐ಅಪ್ರಾಮಾಣ್ಯಪ್ರತಿಪಾದಕ ರಲ್ಲ, ವೇದಪ್ರಾಮಾಣ್ಯವನ್ನು ಒಪ್ಪಿಕೊಳ್ಳುವವರು. ಅಧಿಕೃತವಾಗಿ ಶೃಂಗೇರಿ ಮಠದಿಂದಲೇ ಪ್ರಕಟಿಸಲ್ಪಟ್ಟ “ಪುಣ್ಯಕ್ಷೇತ್ರ ಶೃಂಗೇರಿ” ಎಂಬ ಗ್ರಂಥದಲ್ಲಿ, [ಪುಟ 107] ಈ ಮಾಧವ ಮಂತ್ರಿಗಳನ್ನು “ವೈದಿಕ ವಿದ್ವಾಂಸ” ಎಂದೇ ಸಂಬೋಧಿಸಲಾಗಿದೆ. ಹಾಗಾದರೆ, ಇವನನ್ನು “ಅವೈದಿಕ” ಎಂದು ಸಂಬೋಧಿಸಿದ್ದನ್ನು ಹೇಗೆ ಸಮರ್ಥಿಸಿಕೊಳ್ಳುವದು? ಈ ಸಮಸ್ಯೆಗೆ ಹೊ.ಶ್ರೀಯವರೇ ಉತ್ತರಕೊಟ್ಟಿದ್ದಾರೆ. ಅವೈದಿಕರಲ್ಲಿ ಮಾಧ್ವರ ದೃಷ್ಟಿಯಿಂದ ಎರಡುಬಗೆ. ಒಬ್ಬರು “ವೇದ‐ಅಪ್ರಾಮಾಣ್ಯ” ವಾದಿಗಳಾದರೆ, [ಜೈನ‐ಬೌದ್ಧ‐ಚಾರ್ವಾಕರಂತೆ] ಮತ್ತೊಬ್ಬರು ವೇದನಿಜಾರ್ಥ ದೂಷಕರು; ವೇದನಿಜಾರ್ಥ ಅಪಲಾಪಕರು; ವೇದಗಳನ್ನು ಅಪಾರ್ಥ ಮಾಡುವವನು. ವೇದಗಳ ನಿಜವಾದ ಅರ್ಥವನ್ನು ಮುಚ್ಚಿಹಾಕಿ, ತಮಗೆ ತಿಳಿದಂತೆ, ತಮಗೆ ಅನುಕೂಲವಾಗುವಂತೆ, ವೇದ ಮಂತ್ರಗಳಿಗೆ ಅಪಾರ್ಥಮಾಡುವವರು. ಅರ್ಥಗಳನ್ನು ಹೇಳುವವನು. ಅಂಥವರನ್ನು “ವೇದ‐ಅತತ್ತ್ವಾವೇದಕವಾದಿಗಳು” ಎಂದು ಹೊ.ಶ್ರೀಯವರು ಶ್ರೇಣೀಕರಿಸುತ್ತಾರೆ. ಈ ಭಾವದಿಂದಲೇ ವಿದ್ಯಾರಣ್ಯರು “ಅವೈದಿಕ” ಎಂಬ ಗುಂಪಿಗೆ ಸೇರುತ್ತಾರೆಯೇ ಹೊರತು, ವೇದ‐ [[20]] ಅಪ್ರಾಮಾಣ್ಯ ವಾದಿಗಳು” ಎಂಬರ್ಥದಲ್ಲಿ ಅಲ್ಲ ಎಂದೂ ಹೊ.ಶ್ರೀಯವರು ಅತ್ಯಂತ ಸ್ಪಷ್ಟವಾಗಿ ಈ ಪದವನ್ನು ವ್ಯಾಖ್ಯಾನಿಸಿದ್ದಾರೆ. ಈಗ ಮಾಧವ ಮಂತ್ರಿಗಳು ಯಾವ ವರ್ಗಕ್ಕೆ ಸೇರುತ್ತಾರೆಂದು ನೋಡೋಣ. ಮಾಧವಮಂತ್ರಿಗಳು ಕಾಳಾಮುಖ ಬ್ರಾಹ್ಮಣರು. ವೇದ‐ಅಪ್ರಾಮಾಣ್ಯವಾದಿಗಳಲ್ಲ. “ವೇದಶಾಸ್ತ್ರ‐ ಪ್ರತಿಷ್ಠಾತಾ” ಎಂಬ ಬಿರುದೇ ಇದನ್ನು ಪ್ರಮಾಣೀಕರಿಸುತ್ತದೆ. ಆದರೆ, ಅವರು, ಮಾಧ್ವರಿಗೆ ಅತ್ಯಂತ ಅನಭಿ ಮತವಾದ “ಶಿವಸರ್ವೋತ್ತಮತ್ವ” ಪ್ರತಿಪಾದಕರು. ಮಾಧ್ವರ ಪ್ರಕಾರ, ವೇದವಾಕ್ಯಗಳನ್ನು ತಮಗನುಕೂಲ ವಾಗುವಂತೆ ತಿರುಚಿ ಅಪಾರ್ಥಮಾಡುವ ಗುಂಪಿಗೆ ಸೇರಿದವರು. ಹೊ.ಶ್ರೀಯವರು ಮಾತಿನಲ್ಲಿ ಹೇಳಬೇ ಕೆಂದರೆ, “ವೇದ‐ಅತತ್ತ್ವಾವೇದಕವಾದಿಗಳು.” ಇಂಥವರ ಜೊತೆಗೆ ಅಕ್ಷೋಭ್ಯರು ವಾದಿಸಲು ಹೊ.ಶ್ರೀ ಯವರಿಗೆ ಯಾವ ಅಭ್ಯಂತರವೂ ಕಾಣಬಾರದು. ಯಾಕೆಂದರೆ, ವಿದ್ಯಾರಣ್ಯರು ವೇದ‐ಅತತ್ತ್ವಾವಾವೇದಕ ವಾದಿಗಳಾಗಿದ್ದರೂ, ಅವರ ಜೊತೆಗೆ ಅಕ್ಷೋಭ್ಯತೀರ್ಥರು ವಾದಿಸಿದರೆಂದು ಹೊ.ಶ್ರೀಯವರು ಒಪ್ಪಿಕೊಂಡು ಬಿಟ್ಟಿದ್ದಾರೆ. ವೈದಿಕ ಅವೈದಿಕಾದಿ ವಿಚಾರ ಕುರಿತು ಆಚಾರ್ಯಪಾದ ಶ್ರೀ ಶಂಕರರ ಅಭಿಪ್ರಾಯಗಳು ಏನಿದ್ದವು ಎಂಬುದನ್ನು ನೋಡೋಣ. ಆಚಾರ್ಯ ಶಂಕರರು ಕೂಡ ಈ ವಿಷಯದಲ್ಲಿ ಎರಡು ಭಾಗ ಮಾಡಿದ್ದಾರೆ. [ವಿವರಗಳಿಗೆ ಬ್ರಹ್ಮಸೂತ್ರ ಶಾಂಕರ ಭಾಷ್ಯ 2 ನೆಯ ಅಧ್ಯಾಯ ಎರಡನೆಯ ಪಾದ ನೋಡಿ]. ಬೌದ್ಧ, ಜೈನ ಚಾರ್ವಕಾದಿ ವೇದ‐ಅಪ್ರಾಮಾಣ್ಯವಾದಿಗಳನ್ನು [ವೇದವಿರೋಧಿಗಳನ್ನು] ಅವರು **“ಅವೈದಿಕ” **ಎಂದು ಸಂಬೋಧಿಸಿದ್ದಾರೆ. ಆದರೆ, ಮಾಹೇಶ್ವರ, ಪಾಂಚರಾತ್ರಾದಿ ಮತಾವಲಂಬಿಗಳನ್ನು **“ವೇದಬಾಹ್ಯರು” **ಎಂದಿದ್ದಾರೆ. ಮಾಹೇಶ್ವರ, ಪಾಂಚರಾತ್ರಾದಿ ಮತಗಳವರು ಯದ್ಯಪಿ ವೇದಪ್ರಾಮಾಣ್ಯವನ್ನು ಒಪ್ಪಿಕೊಂಡರೂ, ಅವರು ತಮ್ಮ ತಮ್ಮ ಆಗಮಗಳಿಗೆ ಅರ್ಥಾತ್ ಶೈವರು ಶೈವಾಗಮಗಳಿಗೆ, ಪಾಂಚರಾತ್ರರು ಪಾಂಚರಾತ್ರಾಗಮಕ್ಕೆ ವೇದಕ್ಕಿಂತ ಹೆಚ್ಚಿನ ಮನ್ನಣೆಯನ್ನು ಕೊಡುತ್ತಾರೆ. ಆದ್ದರಿಂದ, ಅವರು ವೇದಬಾಹ್ಯರು ಎಂಬುದು ಆಚಾರ್ಯ ಶಂಕರರ ವಿವರಣೆ. ಇಂಥವರನ್ನೆಲ್ಲ ನಾವು “ಆಗಮಿಕ ಶೈವರು, ಆಗಮಿಕ ವೈಷ್ಣವರು” ಎಂದು ಹೆಸರಿಸಬಹುದು. ಶುದ್ಧವೈದಿಕ ಅದ್ವೈತಿಗಳನ್ನು ಇಂದು **“ಸ್ಮಾರ್ತರು” **ಎಂಬ ಸಂಜ್ಞೆಯಿಂದ ಗುರುತಿಸುತ್ತಾರೆ. **“ಸಾ ಚ ಇಯಂ ವೇದಬಾಹ್ಯೇಶ್ವರಕಲ್ಪನಾ ಅನೇಕ ಪ್ರಕಾರಾ” **[ಈ ವೇದಬಾಹ್ಯಕಲ್ಪನೆಯು ಅನೇಕ ಪ್ರಕಾರದ್ದಾಗಿದೆ] ಎಂದು ಬರೆಯುತ್ತ, ಇದರಲ್ಲಿ ಕೇವಲ ಮಾಹೇಶ್ವರರಲ್ಲ, ಕಿಂತು ಪಾಶುಪತ, ಕಾಶ್ಮೀರ ಶೈವ, ಕಾಳಾಮುಖ ಇತ್ಯಾದಿಗಳೂ ಸೇರಿರುತ್ತಾರೆಂದು ಆಚಾರ್ಯ ಶಂಕರರು ಧ್ವನಿಸಿದ್ದಾರೆ. ಇವರಲ್ಲಿ ಪ್ರಮುಖರಾದ ನಕುಲೀಶ ಪಾಶುಪತ [ಲಾಕುಳ‐ಶೈವ] ದರ್ಶನ, ಶೈವ ದರ್ಶನ ಹಾಗೂ ಪ್ರತ್ಯಭಿಜ್ಞಾ [ಕಾಶ್ಮೀರ‐ಶೈವ=ತ್ರಿಕ‐ ಸಿದ್ಧಾಂತ]ದರ್ಶನಗಳನ್ನು ಕುರಿತು, ಸರ್ವದರ್ಶನಸಂಗ್ರಹದಲ್ಲಿ, ಶ್ರೀ ಮಾಧವಾಚಾರ್ಯರು ವಿವರಿಸಿದ್ದಾರೆ. ಆಸದಕ್ತರು ಅದನ್ನು ಅವಲೋಕಿಸಬಹುದು. ಮಾಹೇಶ್ವರ, ಪಾಶುಪತಾದಿ ಶೈವ ಮತಗಳವರು, ಯದ್ಯಪಿ ವೇದಪ್ರಮಾಣ್ಯವನ್ನು ಒಪ್ಪಿಕೊಂಡಿ ದ್ದರೂ, ಜಗತ್‐ಸೃಷ್ಟಿಗೆ ಸಂಬಂಧಿಸಿದಂತೆ, ಈಶ್ವರನನ್ನು ಕೇವಲ ನಿಮಿತ್ತಕಾರಣ ಎನ್ನುತ್ತಾರೆ, ಎಂಬ ಒಂದೇ ಒಂದು ಚಿಕ್ಕ ಕಾರಣಕ್ಕಾಗಿ, ಅವರನ್ನು “ವೇದಬಾಹ್ಯರು” ಎಂದು ಆಚಾರ್ಯ ಶಂಕರರು, ವರ್ಗೀಕರಿಸಿದ್ದಾರೆ. ಅದರಂತೆಯೇ ಭಾಗವತ ಮತವನ್ನು, ಯದ್ಯಪಿ ಅದರಲ್ಲಿ ಹೇಳಿದ ಈಶ್ವರ ಪ್ರಣಿಧಾನಾದಿಗಳು, ತಮಗೆ ಸರ್ವಮಾನ್ಯವಾಗಿದ್ದರೂ, ಈ ಮತದವರು, ವೇದಗಳು ಪರಮಶ್ರೇಯಸ್ಸಿಗೆ ಕಾರಣವಾಗಲಾರವು ಎಂದು ಪ್ರತಿಪಾದಿಸುತ್ತ, ಭಾಗವತ ಮತವು ವೇದಗಳಿಗಿಂತಲೂ ಶ್ರೇಷ್ಠವಾದದ್ದು ಎಂದು ನಂಬುತ್ತಾರೆ. [[21]] ಆದ್ದರಿಂದ ಅವರೂ ವೇದಬಾಹಿರರೇ! [ಬ್ರಹ್ಮಸೂತ್ರ ಭಾಷ್ಯ ಎರಡನೆಯ ಅಧ್ಯಾಯ ಎರಡನೆಯ ಪಾದದ **“ಉತ್ಪತ್ತ್ಯಸಂಭವಾತ್” **ಸೂತ್ರದ ಭಾಷ್ಯ ನೋಡಿ]. “ಚತುರ್ಷು ವೇದೇಷು ಪರಂ ಶ್ರೇಯೋ ಅಲಬ್ಧ್ವಾ **ಶಾಂಡಿಲ್ಯಃ ಇದಂ ಶಾಸ್ತಂ [ಭಾಗವತಶಾಸ್ತ್ರಂ]ಅಧಿಗತವಾನ್ ಇತ್ಯಾದಿ ವೇದನಿಂದಾ ದರ್ಶನಾತ್” **[ನಾಲ್ಕು ವೇದಗಳಲ್ಲಿಯೂ ಪರಮಶ್ರೇಯಸ್ಸನ್ನು ಹೊಂದದೆ ಇದ್ದದ್ದರಿಂದ ಶಾಂಡಿಲ್ಯನು ಈ ಶಾಸ್ತ್ರವನ್ನು [ಭಾಗವತ ಮತವನ್ನು] ಸಂಪಾದಿಸಿಕೊಂಡನು” ಎಂಬ ರೀತಿಯ ವೇದನಿಂದೆ ಈ ಮತದಲ್ಲಿ ಕಾಣುವದರಿಂದ ಅದು ಅದ್ವೈತಿಗಳಿಗೆ ವೇದಬಾಹ್ಯವಾದ ಶಾಸ್ತ್ರವೇ ಹೌದು]. ಆದ್ದರಿಂದ, ಅದ್ವೈತಿಗಳ ದೃಷ್ಟಿಯಲ್ಲಯೂ, ಪಾಶುಪತ ಕಾಳಾಮುಖಾದಿ ಶೈವಾಗಮಾನುಸಾರಿಗಳು, ವೇದಬಾಹ್ಯರೇ.
          • ಈ ಸಂಬಂಧದಲ್ಲಿ ನಾನು ಇನ್ನೂ ಒಂದು ಮಾತನ್ನು ಓದುಗರ ಗಮನಕ್ಕೆ ತರಬಯಸುತ್ತೇನೆ. ಮಾಧವಮಂತ್ರಿಗಳು “ಆಗಮಿಕ‐ಶೈವ”ರೆ????ೕ ಹೊತರು, ಶುದ್ಧವೈದಿಕ‐ಅದ್ವೈತಿಯಲ್ಲ, [ಸ್ಮಾರ್ತರಲ್ಲ] ಎಂಬುದಕ್ಕೆ ಇನ್ನೂ ಒಂದು ಪ್ರಮಾಣವಿದೆ. ಇದೇ ಮಾಧವ ಮಂತ್ರಿಗಳು “ಒಂದು ವರ್ಷದ ವರೆಗೆ ಕ್ರಿಯಾ ಶಕ್ತಿಯ ನೇತೃತ್ವದಲ್ಲಿ “ಪಾಶುಪತ ವ್ರತ”ವನ್ನು ಮಾಡಿ, ವರ್ಷಾಂತ್ಯದಲ್ಲಿ ದಾನಮಾಡಿದಂತೆ, ಅವರೇ ಬರೆದ ಸೂತಸಂಹಿತಾ ವ್ಯಾಖ್ಯಾನವು ತಿಳಿಸುತ್ತದೆ. [ಕ್ರಿಯಾಶಕ್ತಿ ವಿದ್ಯಾರಣ್ಯ ವಿಮರ್ಶೆ‐ಲೇಖಕರು ಆರ್. ಚಕ್ರವರ್ತಿ‐ ಪುಟ 90‐91 ನೋಡಿ] ಇಷ್ಟೇ ಅಲ್ಲದೆ, ಇದೇ ಮಾಧವ ಮಂತ್ರಿ ಮಾರಪ್ಪನಿಗೆ “ಶೈವಾಗಮ ಸಾರಸಂಗ್ರಹ” ಎಂಬ ಗ್ರಂಥವನ್ನು ಬರೆಯಲು ಸಹಾಯ ಮಾಡಿದ್ದಾಗಿ ಶಾಸನಗಳಿಂದ ತಿಳಿದು ಬರುತ್ತದೆ. [ನೋಡಿ‐ EC VIII, Sorab 375, [Mysore Gazetteer, edited by C. Hayavadana Rao, Volume II part III page 1444] [ಉಪರ್ಯುಕ್ತ ಮಾರಪ್ಪನು ಬುಕ್ಕರಾಯನ ತಮ್ಮ; ಚಂದ್ರಗುತ್ತಿಯನ್ನು ರಾಜಧಾನಿ ಮಾಡಿಕೊಂಡು, ಬನವಾಸಿ ಪ್ರಾಂತವನ್ನು ಆಳುತ್ತಿದ್ದನು] ಅಂದಮೇಲೆ ಮಾಧವಮಂತ್ರಿಗಳು ಕಾಳಾಮುಖ=[ವೇದಬಾಹ್ಯ] ಮತಾವಲಂಬಿಗಳಾಗಿದ್ದರೆಂದು ತಿಳಿಯಲು ಯಾವ ಅಡ್ಡಿ ಇದೆ? ಹೊ.ಶ್ರೀ ಯವರಿಗೆ ಕೆಲವು ವಿಷಯಗಳಲ್ಲಿ ತಪ್ಪು ಗ್ರಹಿಕೆಗಳಿವೆ. ಅವನ್ನು ಹೋಗಲಾಡಿಸುವದು ಅತ್ಯಂತ ಅವಶ್ಯವಾಗಿದೆ. ಮೊದಲನೆಯದು‐ ಮಾಧವ ಮಂತ್ರಿಗಳು ಕಾಪಾಲಿಕ ಮತೀಯರೆಂಬ ಗ್ರಹಿಕೆ. ಅದು ಸರ್ವಥಾ ತಪ್ಪು. ಅವರು ಕಾಳಾಮುಖ‐ಶೈವ ಸಂಪ್ರದಾಯಕ್ಕೆ ಸೇರಿದವರು. ಸೂತಸಂಹಿತಾ ಎಂಬ ಗ್ರಂಥಕ್ಕೆ ತಾವು ಬರೆದ “ತಾತ್ಪರ್ಯದೀಪಿಕಾ” ಎಂಬ ಗ್ರಂಥದಲ್ಲಿ ಅವರೇ ಅದನ್ನು ಹೇಳಿಕೊಂಡಿದ್ದಾರೆ. ಶ್ರೀಮತ್ಕಾಶೀವಿಲಾಸಾಖ್ಯ ಕ್ರಿಯಾಶಕ್ತೀಶ ಸೇವಿನಾ । ಎಂಬುದನ್ನು ನೋಡಿ. ಮಾಧ್ವರು ಹಾಗೂ ರಾಮಾನುಜೀಯರು ಇಬ್ಬರೂ ವೈಷ್ಣವರೇ ಆದರೂ, “ಮಾಧ್ವರು ಮಾಧ್ವರೇ! ರಾಮಾನುಜೀಯರು ರಾಮಾನುಜೀಯರೇ!” ಹೇಗೋ ಹಾಗೆ, ಕಾಪಾಲಿಕರೂ ಶೈವರೇ! ಕಾಳಾಮುಖರೂ ಶೈವರೇ ಆದರೂ, ಕಾಪಾಲಿಕರು ಕಾಪಾಲಿಕರೇ, ಕಾಳಾಮುಖರು ಕಾಳಾಮುಖರೇ! ಅವರಲ್ಲಿ ಸಾಕಷ್ಟು ಅವಾಂತರ ಭೇದಗಳಿವೆ. ಎರಡನೆಯದು ಕಾಳಾಮುಖರು ವೇದ‐ಅಪ್ರಾಮಾಣ್ಯವಾದಿಗಳು ಎಂಬ ಗ್ರಹಿಕೆ. ಇದೂ ತಪ್ಪು. ಜೈನ ಬೌದ್ಧಾದಿಗಳಂತೆ ವೇದ‐ಅಪ್ರಾಮಾಣ್ಯವಾದಿಗಳಲ್ಲ. “ವೇದಶಾಸ್ತ್ರ‐ಪ್ರತಿಷ್ಠಾತಾ” ಎಂಬ ಅವರ ಬಿರುದೇ ಇದಕ್ಕೆ ಪ್ರಮಾಣ. ಈ ಸಂಪ್ರದಾಯಕ್ಕೆ ಸೆರಿದ ಮಾಧವ ಮಂತ್ರಿಗಳು, ಸೀಮಿತ ಅರ್ಥದಲ್ಲಿ, ಅವೈದಿಕರು, ಹಿಂದೆ ಹೇಳಿದಂತೆ, ಆಗಮಿಕ ಶೈವರು, ಅರ್ಥಾತ್ ವೇದಬಾಹ್ಯರು. ಯಾಕೆಂದರೆ, ಅವರು, ಮಾಧ್ವರಿಗೆ ಅತ್ಯಂತ ಅನಭಿಮತವಾದ “ಶಿವಸರ್ವೋತ್ತಮತ್ವ” ಪ್ರತಿಪಾದಕರು. [[22]] ಈ ದೃಷ್ಟಿಯಿಂದ ನೋಡಿದರೆ, ಮಾಧ್ವರಿಗೆ, ವೈದಿಕ‐ವಿದ್ಯಾರಣ್ಯರಲ್ಲಿ ಮತ್ತು ಮಾಧವ ಮಂತ್ರಿಗಳಲ್ಲಿ ಭೇದವೇ ಇಲ್ಲ. ಅವರ ದೃಷ್ಟಿಯಿಂದ ಇಬ್ಬರೂ ಅವೈದಿಕರೇ! “ವೇದ‐ಅತತ್ತ್ವಾವೇದಕವಾದಿ”ಗಳೇ! ಮೋಜಿನಸಂಗತಿಯೆಂದರೆ, “ವೇದ‐ಅತತ್ತ್ವಾವೇದಕವಾದಿ”ಗಳಾದ ಶ್ರೀ ವಿದ್ಯಾರಣ್ಯರು ಅಕ್ಷೋಭ್ಯ ತೀರ್ಥರೊಡನೆ ವಾದಿಸಲು ಅರ್ಹರೆನ್ನುತ್ತಾರೆ, ಹೊ.ಶ್ರೀಯವರು. ಆದರೆ, ಮಾಧವ ಮಂತ್ರಿಗಳು ಕೂಡ “ವೇದ‐ಅತತ್ತ್ವಾವೇದಕವಾದಿ”ಗಳಾಗಿದ್ದರೂ, ಅಕ್ಷೋಭ್ಯರೊಡನೆ ವಾದಿಸಲು ಅನರ್ಹನೆಂದು ಅದೇ ಹೊ.ಶ್ರೀ ಯವರೇ ಹೇಳುತ್ತಾರೆ. ಆಶ್ಚರ್ಯವಲ್ಲವೇ?
          • ಪ್ರಕೃತದಲ್ಲಿ, ಆನುಷಂಗಿಕವಾಗಿ, “ತತ್ತ್ವಮಸಿ”ಯನ್ನುಕುರಿತು ಸ್ವಲ್ಪ ವಿಚಾರಿಸಬೇಕಾಗಿದೆ. ಈ ಶ್ರುತಿಪಾಠವು “ತತ್ತ್ವಮಸಿ”ಯೇ ಅಥವಾ “ಅತತ್ತ್ವಮಸಿ”ಯೇ ಎಂಬುದು ಸಂದೇಹ. ಈ ವಿಷಯದಲ್ಲಿ ಡಾ. ಬಿ.ಎನ್.ಕೆ. ಶರ್ಮರು ದ್ವೈತ ವಾಙ್ಮಯದ ಇತಿಹಾಸದಲ್ಲಿ ಕೊಟ್ಟ ವಿವರಗಳನ್ನು ಓದುಗರ ಅವಗಾಹನೆಗೆ ಸಲ್ಲಿಸುತ್ತ, ಪ್ರಾಚೀನ ಮತ್ತು ಅಧಿಕೃತ ಪಾಠವು “ತತ್ತ್ವಮಸಿ”ಯೇ ಆಗಿತ್ತೆಂಬುದನ್ನು ತೋರಿಸಲಾಗುತ್ತಿದೆ. ಓದಿ:‐ It is no argument against Madhva’s interpretation of the text that none of his predecessors had split the text as *“Atat Tvam Asi” *——–It is true that Madhva’s interpretation is a new one and stands alone without support or acceptance from any other school ancient or modern. That simply means that he has given a fresh thought to the question and has been bold enough to express dissatisfaction with the received interpretations He is the first to draw attention to the glaring inconsistency of the illustrative instances used in the text with the thesis of identity supposed to be conveyed by Uddalaka. This by itself, is a remarkable achievement and discovery of Madhva, for which he deserves credit, even if we do not accept his new Padccheda, “Atat *Tvam Asi” *It is not with a view to escaping the accepted reading of Tat Tvam Asi that Madva has suggested the new reading *Atat Tvam Asi.—–*But he seems to have felt that the other *Padccheda *would be more *clearly *and directly expressive *of the natural trend of the illustrations *of Uddalaka which indisputably favour the idea of the reality of the difference between Jivas and Brahman, and bring it out *more prominently *than the other reading, from which, it has to be elicited by interpretation. —-It would be uncritical for ancient or modern scholers alike, to reject it simply because it is not “traditional” [foot note 1] or fashionable.” [ from History of Dvaita Phiilosophy –by Dr.B.N.K.Sharma–Third Revised Edition 2000–page 373 ] ಅನುವಾದ:‐ಹಿಂದಿನವರಾರೂ “ಅತತ್ತ್ವಮಸಿ” ಎಂಬಪಾಠವನ್ನು ಹಿಡಿದಿಲ್ಲವೆಂದ ಮಾತ್ರಕ್ಕೆ ಮಧ್ವಾ ಚಾರ್ಯರು ಕೂಡ ಹಾಗೇ ಮಾಡಬೇಕೆಂದೇನಿಲ್ಲ. ಅವರು ಹಿಂದಿನವರ ಪದಚಿಹ್ನೆಯನ್ನು ಅನುಸರಿಸ ಬೇಕೆಂಬ ನಿಯಮವಾಗಲಿ, ಶಾಸ್ತ್ರವಾಗಲಿ ಇಲ್ಲ. ಅಂಧಾನುಕರಣೆಯನ್ನು ಅನುಮೋದಿಸುವದರಿಂದ, ತತ್ತ್ವಶಾಸ್ತ್ರದ ಬೆಳವಣಿಗೆ ಕುಂಠಿತವಾಗುವದು. ಯಾವ ಪ್ರೇಕ್ಷಾವಂತನೂ ಈ ಬಗೆಯ ಅನುಕರಣೆ ಯನ್ನಾಗಲಿ, ಪರಂಪರಾಪ್ರಾಪ್ತ ಅರ್ಥವನ್ನು ಅವಿಮರ್ಶಿತವಾಗಿ ಗಿಳಿಪಾಠ ಒಪ್ಪಿಸುವದನ್ನೇ ಆಗಲಿ, ಪುರುಷಾರ್ಥವೆಂದು ಬಗೆಯಲಾರ. ಮಧ್ವಾಚಾರ್ಯರ ವ್ಯಾಖ್ಯಾನವನ್ನು ಹಿಂದಿನವರು ಒಪ್ಪಿಲ್ಲದಿದ್ದರೂ, ಇಂದಿನ ವಿದ್ವಾಂಸರಲ್ಲಿ ಅನೇಕರು ಅಂಗೀಕರಿಸಲು ಸಿದ್ಧರಿಲ್ಲದಿದ್ದರೂ, ಏನೂ ಹಾನಿ ಇಲ್ಲ. ಅವರು ಒಂದು ಹೊಸ ಪಂಥವನ್ನು ತೋರಿದ್ದಾರೆಂಬುದು ಸತ್ಯ. ಪ್ರಾಚೀನರ ವ್ಯಾಖ್ಯಾನದಲ್ಲಿಯ ಅಸ್ವಾರಸ್ಯವನ್ನು ಕಂಡು, ಹೊಸಪಾಠವನ್ನು ಹಿಡಿಯಲು ಮಾಡಿದಧೈರ್ಯ ಮೆಚ್ಚತಕ್ಕದ್ದೇ! ಉದ್ದಾಲಕರ ಉಪದೇಶದ ತಾತ್ಪರ್ಯ ವೇನೆಂದು ಸಹ ಪರಿಶೀಲಿಸದೆ, ದೃಷ್ಟಾಂತ‐ದಾರ್ಷ್ಟಾಂತಿಕಗಳಿಗೆ ಸಮ್ಮತವಲ್ಲದ ಅರ್ಥವನ್ನೇ ಎಲ್ಲರೂ ಒಪ್ಪಿ ಕೊಂಡುಬಂದುದನ್ನು ಸ್ಪಷ್ಟಪಡಿಸಿ, ಆ ನಿಲುವನ್ನು ಖಂಡಿಸಿ, ಜೀವ‐ಬ್ರಹ್ಮರ ಐಕ್ಯವನ್ನು ಪ್ರತಿಪಾದಿಸುವಲ್ಲಿ ಉದ್ದಾಲಕರು ಎಂದೆಂದಿಗೂ ತಾತ್ಪರ್ಯವನ್ನು ಹೊಂದಿರಲಿಲ್ಲವೆಂದು ಪ್ರಥಮತಃ ತೋರಿಸಿದ ಧೀಮಂತರು [[23]] ಆಚಾರ್ಯಮಧ್ವರು. “ಅತತ್ ತ್ವಂ ಅಸಿ” ಎಂಬ ಪದಚ್ಛೇದವನ್ನು ಒಪ್ಪುವ ಅಥವಾ ಬಿಡುವ ವಿಷಯ ಬೇರೆ. ಅವರ ಸ್ವತಂತ್ರ ಚಿಂತನ ಪದ್ಧತಿಯನ್ನಾದರೂ ಮೆಚ್ಚಬೇಕಲ್ಲವೇ? “ತತ್ತ್ವಮಸಿ” ಎಂಬ ಪ್ರಾಚೀನರ ಪಾಠಕ್ಕೆ ಸರಿಯಾದ [ಪ್ರಾಮಾಣಿಕವಾದ] ಅರ್ಥವನ್ನು ಹೇಳಿದರೆ, ತಮ್ಮ ಸಿದ್ಧಾಂತಕ್ಕೆ ವಿರುದ್ಧವಾಗುತ್ತದೆಂಬ ಕಾರಣದಿಂದ, “ಅತತ್ ತ್ವಂ ಅಸಿ” ಎಂದು ಪದಚ್ಛೇದ ಮಾಡುವ ನವ್ಯಪಂಥವನ್ನು ಮಧ್ವರು ಹಿಡಿದರು ಎಂದು ಲಘವವಾಗಿ ಪರಿಗಣಿಸುವದು ತಪ್ಪು. ಜೀವ‐ಬ್ರಹ್ಮರ ಆಶ್ರಯ‐ಆಶ್ರಯೀಭಾವವನ್ನು ಪರಂಪರಾ ಪ್ರಾಪ್ತ “ತತ್‐ತ್ವಮಸಿ” ಎಂಬ ಪಾಠವನ್ನೇ ಹಿಡಿದು ಅನೇಕ ಗ್ರಂಥಗಳಲ್ಲಿ, ವಿವಿಧವಾಗಿ ಭೇದಪರವಾಗಿಯೇ ಅರ್ಥೈಸಿದ್ದಾರೆ. ಆದರೆ ಈ ಹೊಸ ಪದಚ್ಛೇದ “ತತ್+ತ್ವಂ+ಅಸಿ” ಎಂಬ ಪಾಠಕ್ಕಿಂತ ಸುಲಭವಾಗಿಯೇ ಉದ್ದಾಲಕರ ಅಭಿಪ್ರಾಯವಾದ ಜೀವ‐ಬ್ರಹ್ಮರ ಭೇದ ಸಂಬಂಧವನ್ನು ಮನವರಿಕೆ ಮಾಡಿಕೊಡಬಹುದೆಂಬು ದನ್ನು ತೋರಿಸಿದ್ದಾರಷ್ಟೇ! “ತತ್ ತ್ವಂ ಅಸಿ” ಎಂದು ಪದಚ್ಛೇದ ಮಾಡಿದರೆ, ನೇರವಾಗಿ, ಉದ್ದಾಲಕರ [ಭೇದಪರ] ಅಭಿಪ್ರಾಯ ವಾಗುವದಿಲ್ಲ. ಅದ್ವೈತ ರೀತ್ಯಾ ಲಾಕ್ಷಣಿಕಾರ್ಥವನ್ನು ಹೇಳಬೇಕಾಗುವದು. ಸಾಂಪ್ರದಾಯಿಕವಲ್ಲ, ನೂತನವೆಂದ ಮಾತ್ರಕ್ಕೆ ಪ್ರಾಚೀನ ಅಥವಾ ಆಧುನಿಕ ವಿದ್ವಾಂಸರು ಅದನ್ನು ತಿರಸ್ಕರಿಸುವದು ಸರಿಯಲ್ಲ‐‐‐‐‐‐ಮಧ್ವಾಚಾರ್ಯರು “ಅತತ್ ತ್ವಂ ಅಸಿ” ಎಂದು ಪದಚ್ಛೇದ ಮಾಡಿದ್ದು ತತ್ತ್ವಶಾಸ್ತ್ರದ ಮುನ್ನಡೆಗೆ ಅವರು ಕೊಟ್ಟ ಅಮೂಲ್ಯ ಕೊಡುಗೆ.” [ಭಾರತೀರಮಣಾಚಾರ್ಯರ ಕನ್ನಡ ಅನುವಾದ ಸಂಪುಟ 2, ಪಟ 239‐41 ] Under the foot note shown above, Dr.Sharma writes:- It may be mentioned that Madhva has cited the authority of certain PostUpanishadic interpretative source like the *Sama Samhita *in his Chandogya *Bhashya *in support of his new Padaccheda as Atat Tvam asi ಇಲ್ಲಿ ಒಂದು ಅಡಿ ಟಿಪ್ಪಣಿಯಿದ್ದು ಅದು‐‐**“ಅತತ್ ತ್ವಂ ಅಸಿ” **ಎಂಬ ಪಾಠವನ್ನು ಸಾಮಸಂಹಿತಾ ಎಂಬ, ಉಪನಿಷದುತ್ತರ‐ವ್ಯಾಖ್ಯಾನಮೂಲದಿಂದ ಪಡೆದರೆಂದು, ಶ್ರೀಮಧ್ವಾಚಾರ್ಯರು ತಮ್ಮ ಛಾಂದೋಗ್ಯ ಉಪನಿಷದ್ ಭಾಷ್ಯದಲ್ಲಿ ಹೇಳಿದ್ದಾರೆ. But One Mr. Roque Mesquita, a German Indologist, and Professor of Sansakrit in the University of Vienna [Germany] in his Madhva’s Unknown Literary Sources, [pub. By Aditya Prakashana NewDelhi-2000] has enlisted this *Sama Samhita *as a fictitious work. See page 190 of his above book. ಆದರೆ, ಜರ್ಮನ್ ದೇಶದ ವಿಯೆನ್ನಾ ವಿಶ್ವವಿದ್ಯಾಲಯದಲ್ಲಿ, ಭಾರತಶಾಸ್ತ್ರ ಹಾಗೂ ಸಂಸ್ಕೃತದ ಪ್ರಾಧ್ಯಾಪಕರಾದ, ರಾಕ್ ಮೆಸ್ಕ್ವಿಟಾ ಎಂಬವರು ತಮ್ಮ “ಮಧ್ವರ ಅಜ್ಞಾತ ಆಕರಗಳು” ಎಂಬ ಗ್ರಂಥದಲ್ಲಿ [ಆದಿತ್ಯ ಪ್ರಕಾಶನ ದಿಲ್ಲಿ 2000] ಈ ಮುಂದಿನಂತೆ ಬರೆದಿದ್ದಾರೆ. ಅತತ್ ತ್ವಮಸಿ ಪುತ್ರೇತಿ ಯ ಉಕ್ತೋ ಗೌತಮೇನ ತು । ನವಕೃತ್ವಾ ಸದೃಷ್ಟಾಂತಂ ಸರ್ವಭೇದೇನ ಕೇಶವಃ ॥ ತಸ್ಮೈ ನಮೋ ಭಗವತೇ ಚಿದಚಿತ್ಪ್ರಮಾಯ ತೇ । ಪುರುಷೋತ್ತಮಾಯ ದೇವಾಯ ಪೂರ್ಣಾನಂದೈಕರೂಪಿಣೇ । **ಇತಿ ಸಾಮಸಂಹಿತಾಯಾಮ್ **‐‐‐‐see Madhva’s ChUBh p-437 18 f 445; 13-17 ಆಚಾರ್ಯ ಮಧ್ವರು ಒಂದು ಆಕರ ಗ ್ರಂಥವೆಂದು ಉದ್ಧರಿಸಿದ ಈ ಸಾಮಸಂಹಿತೆಯು ಕೇವಲ ಒಂದು ಕಾಲ್ಪನಿಕ ಗ್ರಂಥವಾಗಿದೆ. “ಆತತ್ ತ್ವಮ್ ಅಸಿ” ಎಂಬ ಪಾಠವು ಶ್ರುತಿಯಂತೂ ಅಲ್ಲ. ಅದು ಕೇವಲ ಕಾಲ್ಪನಿಕವಾಗಿದೆಯೆಂಬುದಂತೂ ಸತ್ಯ. ಆದ್ದರಿಂದಲೇ ಇತರ ಯಾವ ಆಚಾರ್ಯರೂ, ಯಾವ ವೈದಿಕ ಪಂಡಿತರೂ ಇದನ್ನು ಪುರಸ್ಕರಿಸಿಲ್ಲ. ಅವರೆಲ್ಲ ಶುದ್ಧಶ್ರುತಿಯಾದ “ತತ್ತ್ವಮಸಿ”ಯನ್ನೇ ಗ್ರಹಿಸಿದ್ದಾರೆ. * * * * * ಮಾಧ್ವರು ತತ್ತ್ವಮಸಿ ಎಂಬ ಪಾಠವನ್ನೂ ಅಧಿಕೃತ ಎಂದೇ ಪರಿಗಣಿಸಿತ್ತಾರೆ ಎಂದು ಇತ್ತೀಚಿನ ಮಾಧ್ವ ವಿದ್ವಾಂಸರು ಹೇಳತೊಡಗಿದ್ದಾರೆ. ಆಗಲಿ, ಹೇಳುತ್ತಿರಬಹುದು. ಆದರೆ, ಇದನ್ನು ಅರ್ಥಾತ್ “ತತ್ತ್ವಮಸಿ” ಯು ಕೂಡ ಅಧಿಕೃತಪಾಠ ಎಂದು ಒಪ್ಪುವದನ್ನು” ಶ್ರೀ ವ್ಯಾಸತೀರ್ಥರಿಂದ ಈಚೆಗೆ ಪ್ರಾರಂಭಮಾಡಿದ್ದಾರೆ. ಶ್ರೀವ್ಯಾಸತೀರ್ಥರು ಎರಡೂ [[24]] ಪಾಠಗಳಿಂದಲೂ ಜೀವಬ್ರಹ್ಮರ ಭೇದವನ್ನು ಸಾಧಿಸಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಮೇಲೆ ಮಾತ್ರ” ಎಂದು ಡಾ. ಶರ್ಮಾ ಬರೆದಿದ್ದಾರೆ. ನೋಡಿ;‐ page 373 of History of Dvaita Phiilosophy – by Dr.B.N.K. Sharma–Third Revised Edition 2000–] ಮೇಲಿನ ಚರ್ಚೆಯಿಂದ, “ಅತತ್ ತ್ವಂ ಅಸಿ“ ಎಂಬುದೇ ಮಧ್ವರ / ಮಾಧ್ವರ ಅಧಿಕೃತ ಪಾಠ ಎಂಬುದು ನಿಶ್ಚಿತವಾಯಿತು. ಅದೇ ಅವತರಣಿಕೆಯಿಂದ, ಅದ್ವೈತಿಗಳೇ ಆಗಲಿ, ವಿಶಿಷ್ಟಾದ್ವೈತಿಗಳೇ ಆಗಲಿ, ಮಧ್ವರ “ಅತತ್ ತ್ವಮ್ ಅಸಿ” ಎಂವ ಪಾಠವನ್ನು [ಪದಚ್ಛೇದವನ್ನು] ಒಪ್ಪಿಕೊಂಡಿಲ ್ಲ ಎಂಬುದೂ ಅತ್ಯಂತ ಸ್ಪಷ್ಟವಾಯಿತು. “ಅಕ್ಷೋಭ್ಯ‐ವಿದ್ಯಾರಣ್ಯ” ಇಬ್ಬರ ನಡುವೆ ಈ ರೀತಿಯ ಪೂರ್ವ‐ಪಶ್ಚಿಮ ಎಂಬಂಥ ಪರಸ್ಪರ ವಿರುದ್ಧ ಪಾಠಗಳನ್ನಿಟ್ಟುಕೊಂಡು ವಾದ ಹೇಗೆ ನಡೆದಿದ್ದೀತು? ಪ್ರಮಾಣಗಳೇ ಭಿನ್ನವಾಗಿರುವಾಗ ವಾದ ನಡೆಡಯಲು ಸಾಧ್ಯವೇ ಇಲ್ಲ ಎಂಬ ಮಾತನ್ನು ಹೊ.ಶ್ರೀಯವರೇ ಹೇಳಿದ್ದಾರೆಂಬುದನ್ನು ಅವರಿಗೆ ನೆನಪಿಸಬಯಸುತ್ತೇನೆ. ಇನ್ನೂ ಒಂದು ಮಾತು. ವಾದನಡೆದದ್ದು “**ತತ್ತ್ವಮಸಿ”**ಯನ್ನು ಕುರಿತೋ, ಅಥವಾ “ಅತತ್ತ್ವಮಸಿ” ಯನ್ನು ಕುರಿತೋ ಎಂಬ ಜಿಜ್ಞಾಸೆಗೆ ಅವಕಾಶವಿಲ್ಲ. ಯಾಕೆಂದರೆ, ಶ್ರೀ ಅಕ್ಷೋಭ್ಯತೀರ್ಥರ ಅಧಿಕೃತಮಠದ ಇಂದಿನ ಪೀಠಾಧಿಪತಿಗಳಾದ ಶ್ರೀ ರಘುವಿಜಯ ತೀರ್ಥ ಸ್ವಾಮಿಗಳವರು ತಮ್ಮ ಅಕ್ಷೋಭ್ಯ ವಿಜಯ ವೈಭವ ಎಂಬ ಗ್ರಂಥದ ಮುನ್ನುಡಿ ಪುಟ i ರಲ್ಲಿ ಮೂರನೆಯ ಕಂಡಿಕೆಯಲ್ಲಿ, “ ಇಂಥ ಒಂದು ವಾದ [ವಾದಕಥಾ] ಶ್ರೀ ಅಕೋಭ್ಯ ತೀರ್ಥರು ಮತ್ತು ಶ್ರೀ ವಿದ್ಯಾರಣ್ಯರಲ್ಲಿ, ಛಾಂದೋಗ್ಯ ಉಪನಿಷತ್ತಿನಲ್ಲಿ, ಶ್ವೇತಕೇತು‐ಉದ್ದಾಲಕರ **ಸಂವಾದದಲ್ಲಿ ಬರುವ “ಸ ಆತ್ಮಾs ತತ್ತ್ವಮಸಿ” ಎಂಬ ವಾಕ್ಯದ ಬಗ್ಗೆ ನಡೆಯಿತು” **ಎಂದು ದಾಖಲಿಸುತ್ತ, ವಾದ ನಡೆದದ್ದು **“ಅತತ್ತ್ವಮಸಿ”**ಯನ್ನೇ ಕುರಿತು ಎಂಬುದನ್ನು ದೃಢೀಕರಿಸಿದ್ದಾರೆ. ಅದೇ ಗ್ರಂಥದ ಪುಟ viii ರಲ್ಲಿ ‘ಪ್ರಕಾಶಕರ ಎರಡು ಮಾತು’ ಎಂಬಲ್ಲಿ, ಎರಡನೆಯ ಕಂಡಿಕೆಯಲ್ಲಿ, ಪುನಃ **“ಸ ಆತ್ಮಾs ತತ್ತ್ವಮಸಿ” **ಎಂಬ ವಾಕ್ಯದ ಬಗ್ಗೆಯೇ ವಾದನಡೆಯಿತೆಂದು ದಾಖಲಾಗಿದೆ. ಇಂಥ ಅತ್ಯಂತ‐ಅಧಿಕೃತ ದಾಖಲೆಗಳು ಸ್ವಾಭಾವಿಕ ವಾಗಿಯೇ ಅವಲಂಬನೀಯವೇ ಆಗಿರುತ್ತವಲ್ಲವೇ? ಅಂದಮೇಲೆ, ವಾದ ನಡೆದದ್ದು **“ಅತತ್ತ್ವಮಸಿ”**ಯನ್ನು ಕುರಿತಾಗಿಯೇ ಎಂಬುದಂತೂ ನಿಶ್ಚಿತ. ಮೇಲ್ಕಾಣಿಸಿದ ಅವತರಣಿಕೆಯಲ್ಲಿ ಡಾ. ಶರ್ಮಾರು ಒಪ್ಪಿಕೊಂಡಂತೆ, ಶ್ರೀ ಮಾಧವ‐ವಿದ್ಯಾರಣ್ಯರು ಈ ವಾಕ್ಯವನ್ನು [“ಅ”ಕಾರ ಪ್ರಶ್ಲೇಷವಿಲ್ಲದೆ] “ಸ ಆತ್ಮಾ ತತ್ತ್ವಮಸಿ” ಎಂದು ಪ್ರತಿಪಾದಿಸುವ ಪಕ್ಷಕ್ಕೆ ಸೇರಿ ದವರು. ಇಬ್ಬರ ಮಧ್ಯದಲ್ಲಿ ವಾದದ “ವಿಷಯ ವಾಕ್ಯ‐ಶರೀರವೇ ಭಿನ್ನಭಿನ್ನವಾಗಿರುವಾಗ” ಅವರಲ್ಲಿ ವಾದ ನಡೆದದ್ದು ಹೇಗೆ? “ಸ ಆತ್ಮಾಽತತ್ತ್ವಮಸಿ”ಎಂಬ ಪಾಠವನ್ನು ಒಪ್ಪಿಕೊಂಡು ಶ್ರೀ ವಿದ್ಯಾರಣ್ಯರು ವಾದಿಸಿರಲು ಸಾಧ್ಯವೇ? ಅಂದ ಮೇಲೆ ವಾದದ ಪ್ರಸಕ್ತಿ ಎಲ್ಲಿ ಬಂತು? ವಿಷಯವಾಕ್ಯಗಳೇ ಭಿನ್ನವಾಗಿರುವಾಗ ವಾದ ನಡೆಯುವದು ಹೊ. ಶ್ರೀಯವರ ಅಭಿಪ್ರಾಯದಂತೆಯೇ ಅಸಾಧ್ಯವಲ್ಲವೇ? ಹೊ.ಶ್ರೀಯವರ ತರ್ಕವನ್ನೇ ಮುಂದುವರಿಸಿದರೆ, ಅಕ್ಷೋಭ್ಯ ವಿದ್ಯಾರಣ್ಯರ ಮಧ್ಯದಲ್ಲಿ, ತತ್ತ್ವಮಸಿ ಹಾಗೂ ಅತತ್ತ್ವಮಸಿ ಇವೆಡರಲ್ಲಿ ಯಾವುದು ಅಧಿಕೃತ ಪಾಠ ಎಂಬ ಬಗ್ಗೆಯೇ ಚರ್ಚೆಯಾಗಬೇಕಾಗಿತ್ತು. ಇಲ್ಲಿ ಇನ್ನೂಒಂದು ವಿಷಯವು ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಶ್ರೀ ರಾಮಾನುಜೀಯರಾದ ಶ್ರೀವೇದಾಂತ ದೇಶಿಕರು ಕೂಡ “ಸ ಆತ್ಮಾ ತತ್ತ್ವಮಸಿ” ಎಂಬ [“ಅ”ಕಾರ ಪ್ರಶ್ಲೇಷವಿಲ್ಲದ] ಶ್ರುತಿವಾಕ್ಯವನ್ನೇ ಪ್ರಮಾಣವೆಂದು ಗ್ರಹಿಸಿದವರು. ಅವರು ಹೇಗೆ ತಾನೇ ತಮ್ಮ ಮತಕ್ಕೆ ವಿರುದ್ಧವಾದ “ಸ ಆತ್ಮಾಽತತ್ತ್ವಮಸಿ” ಎಂಬ ಶ್ರುತಿವಾಕ್ಯವನ್ನು ಪ್ರಮಾಣವೆಂದು ಗ್ರಹಿಸಿದ ಅಕ್ಷೋಭ್ಯತೀರ್ಥರ ವಾದವನ್ನು ಮನ್ನಿಸಿರಲು ಸಾಧ್ಯ? ಆಗ ಅವರು ತಮ್ಮ ಪರಮಗುರುಗಳಾದ ಶ್ರೀ ರಾಮಾನುಜರ ವಿರುದ್ಧವಾಗಿಯೇ ನಿರ್ಣಯಕೊಟ್ಟಂತೆ ಆಗುವದಿಲ್ಲವೇ? ಈ ವಿಷಯದಲ್ಲಿ ಮುಂದೆ ಕೊಟ್ಟ ಅಂತರ್ಜಾಲ ತಾಣದ ವಿವರಗಳನ್ನು ನೋಡಿ. Vidyatirtha Vilasa-2 It is claimed that the debate was regarding the Mahavakya “Tat-tvam-asi”, and that Shri Vedanta Deshika declared Akshobhya Tirtha as the winner. Madhvacharya explains this Mahavakya as ***“a-tat-tvam-asi”, ***whereas Shrimad Acharya Shankara and Shri Ramanuja explain the same as ***tat-tvam asi ***Assuming that Shri Vedanta Deshika, a great scholar and an ardent devotee of Shri Ramanuja would accept the views opposing those of his own Guru is [[25]] foolish.[http//webache.googleuser content.com/search?q=cache: OPPW-Gi1614J

>>>>> gd2md-html alert: Definition ↓↓ outside of definition list. Missing preceding term(s)?
(Back to top)(Next alert)
>>>>>

:www.kamakotim ........24/2/2011] [ಅನುವಾದ‐ಈ ವಾದವು “ತತ್‐ತ್ವಮಸಿ” ಮಹಾವಾಕ್ಯವನ್ನು ಕುರಿತು ನಡೆಯಿತೆಂದೂ, ಈ ವಾದದಲ್ಲಿ ಅಕ್ಷೋಭ್ಯ ತೀರ್ಥರು ವಿಜಯಿಗಳಾದರೆಂದು ಶ್ರೀವೇದಾಂತದೇಶಿಕರು ನಿರ್ಣಯಕೊಟ್ಟರೆಂದೂ ಹೇಳಲಾಗುತ್ತಿದೆ. ಶ್ರೀ ಶಂಕರರು ಮತ್ತು ಶ್ರೀ ರಾಮಾನುಜರು ಇಬ್ಬರೂ ಈ ಮಹಾವಾಕ್ಯದ ಪಾಠವನ್ನು “ತತ್‐ತ್ವಮಸಿ” ಎಂದು ಗ್ರಹಿಸಿದರೆ, ಮಧ್ವಾಚಾರ್ಯರು ಈ ಮಹಾವಾಕ್ಯದ ಪಾಠವನ್ನು “ಅತತ್‐ ತ್ವಮಸಿ”ಎಂದು ಗ್ರಹಿಸಿದ್ದಾರೆ. ಮಹಾವಿದ್ವಾಂಸರೂ, ಶ್ರೀರಾಮಾನುಜರ ಶ್ರದ್ಧೇಯ ಅನುಯಾಯಿಗಳೂ ಆದ ಶ್ರೀ ವೇದಾಂತ ದೇಶಿಕರು, ತಮ್ಮ ಗುರುವರ್ಯರ ಅಭಿಮತಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ಬೆಂಬಲಿ ಸಿದರೆಂದು ನಿರ್ಣಯಿಸುವದು ಪೆದ್ದುತನವೇ ಸರಿ!
          • ಈಗ ಮುಂದಿನ ವಿಷಯವನ್ನು ನೋಡೋಣ. ಪ್ರಕೃತದಲ್ಲಿ, ಹೊ.ಶ್ರೀಯವರು, ಶೃಂಗೇರಿಮಠದ ಅಂತರ್ಜಾಲತಾಣವನ್ನು ಅತ್ಯಂತ ಅಧಿಕೃತ, ಪ್ರಾಮಾಣಿಕ ದಾಖಲೆ ಎಂದು, ಅದರ ಮುದ್ರಿತಪ್ರತಿಯನ್ನೇ ಎತ್ತಿತೋರಿಸುತ್ತ, ಅದನ್ನು ಸರಿಯಾಗಿಯೇ ಓದಿ ಹೇಳಿದ್ದಾರೆ. ಅದರ ಪ್ರಕಾರ ವಿದ್ಯಾರಣ್ಯರ ಸನ್ಯಾಸವಾದದ್ದು ಕ್ರಿ.ಶ. 1331 ರಲ್ಲಿ. ಆದ್ದರಿಂದ ವಾದ ನಡೆಯಲು ಕಾಲದ ಸಮಸ್ಯೆಯಂತೂ ಬರುವದಿಲ್ಲ” ಎಂದು ಹೇಳಿದ್ದಾರೆ. ಆದರೆ, ಹೊ.ಶ್ರೀಯವರು, ಶೃಂಗೇರಿಯ ಅಂತರ್ಜಾಲತಾಣದ ವಿವರಗಳನ್ನು ಅರ್ಧಂಬರ್ಧ ಪ್ರಸ್ತುತಪಡಿಸುತ್ತ, ತಿಳುವಳಿಕೆಯಿಲ್ಲದ ಓದುಗರ ದಾರಿತಪ್ಪಿಸುವ ಪ್ರಯತ್ನಮಾಡಲು ಹೋಗಿ ತಾವೇ ದಾರಿ ತಪ್ಪಿದ್ದಾರೆಂದು ಖೇದದಿಂದ ಹೇಳಬೇಕಾಗಿದೆ. ಹೊ.ಶ್ರೀಯವರು, ಓದದೆಬಿಟ್ಟ, ಶೃಂಗೇರಿಯ ಜಾಲತಾಣದ ಈ ಮುಂದುವರಿದ ಭಾಗವನ್ನು ಓದುಗರ ಅವಗಾಹನೆಗಾಗಿ, ಇಲ್ಲಿ, ಪ್ರಸ್ತುತಪಡಿಸುತ್ತಿದ್ದೇನೆ. ಈಲೇಖನವನ್ನು ಯಾರು ಬೇಕಾದರೂ, ಶೃಂಗೇರಿ ವೆಬ್‐ಸೈಟನ್ನು ಪರಾಂಬರಿಸಿ, ನನ್ನ ಹೇಳಿಕೆಯ ಸತ್ಯಾಸತ್ಯತೆಯನ್ನು ಪರೀಕ್ಷಿಸಬಹುದು. ಹೊ.ಶ್ರೀಯವರು, ಕೈಬಿಟ್ಟ ಶೃಂಗೇರಿಮಠದ ಜಾಲತಾಣದ ಭಾಗವು ಮುಂದಿನಂತಿದೆ. Returning south, he [Shri Vidyaranya] retired to Matanga hill, near Hampi, where he immersed himself in intense meditation. It was at this time that the two brothers, Madhava and Sayana, the sons of Mayana of Bharadwaja Gotra approached Shri Vidyaranya and sought his blessings…….Later, both the brothers served as ministers in the Vijayanagara empire under Bukkaraya and Harihar I and II…..” [ಅನುವಾದ:‐ಶ್ರೀ ವಿದ್ಯಾರಣ್ಯರು ದಕ್ಷಿಣಕ್ಕೆ ತಿರುಗಿಬಂದು, ಹಂಪಿಯಸಮೀಪದ ಮತಂಗ ಪರ್ವತ ವನ್ನಾಶ್ರಯಿಸಿ, ಅಲ್ಲಿ ತೀವ್ರತರ ಧ್ಯಾನದಲ್ಲಿ ತೊಡಗಿದರು. ಇದೇ ಕಾಲಕ್ಕೆ, ಭಾರದ್ವಾಜ ಗೋತ್ರದ ಮಾಯಣನ ಮಕ್ಕಳಾದ ಮಾಧವ ಸಾಯಣರೆಂಬ ಸೋದರರಿಬ್ಬರು ಶ್ರೀ ವಿದ್ಯಾರಣ್ಯರ ಬಳಿಗೆ ಬಂದು ನಮಸ್ಕರಿಸಿ ಅವರ ಆಶೀರ್ವಾದಗಳನ್ನು ಬಯಸಿದರು….ಅನಂತರ, ಈ ಇಬ್ಬರೂ ಸೋದರರು [ಮಾಧವ ಹಾಗೂ ಸಾಯಣರು] ವಿಜಯನಗರ ಸಾಮ್ರಾಜ್ಯದ ಪ್ರಥಮ ಹರಿಹರ, ಬುಕ್ಕ, ಇಮ್ಮಡಿ ಹರಿಹರ ಇವರೆಲ್ಲರಿಗೂ ಮಂತ್ರಿಗಳಾಗಿ ಕೆಲಸಮಾಡಿದರು.]” ಮೇಲ್ಕಾಣಿಸಿದ ವಾಕ್ಯಪುಂಜದಲ್ಲಿ, “ಮಾಧವ ಸಾಯಣರು, ಶ್ರೀ ವಿದ್ಯಾರಣ್ಯರಿಂದ ಆಶೀರ್ವಾದ ಬಯಸಿದರು” ಎಂದು ದಾಖಲಿಸಲಾಗಿದೆ. ಇದರಿಂದ, ಶೃಂಗೇರಿ ಜಾಲತಾಣದ ಪ್ರಕಾರ, ಶ್ರೀವಿದ್ಯಾರಣ್ಯರು ಮಾಧವ ಸಾಯಣರಿಗಿಂತ ಭಿನ್ನವ್ಯಕ್ತಿಗಳೆಂದೇ ಸಿದ್ಧವಾಯಿತಲ್ಲವೇ? ಆದರೆ, ಇದೇ ಹೊ.ಶ್ರೀಯವರು, ತಮ್ಮ ಇದೇ ಉಪನ್ಯಾಸದಲ್ಲಿ, “ಸಾಯಣರು ಕ್ರಿ.ಶ. 1328 ರಲ್ಲಿ, ಶ್ರೀವಿದ್ಯಾತೀರ್ಥ ಸ್ವಾಮಿಗಳಿಂದ ಯತ್ಯಾಶ್ರಮ ಸ್ವೀಕರಿಸಿದರು. ಮುಂದೆ ಮೂರುವರ್ಷಗಳ ನಂತರ, ಕ್ರಿ.ಶ. 1331 ರಲ್ಲಿ ಶ್ರೀ ಮಾಧವಾಚಾರ್ಯರು, ಅದೇ ಶ್ರೀ ವಿದ್ಯಾತೀರ್ಥಸ್ವಾಮಿಗಳಿಂದ, ತಮ್ಮ ಅನುಜ ಸಾಯಣರ recommendation ಪ್ರಕಾರವೇ ಯತ್ಯಾಶ್ರಮಸ್ವೀಕರಿಸಿ ವಿದ್ಯಾರಣ್ಯರಾದರು. ಸಾಯಣರು ಯದ್ಯಪಿ ಕಿರಿಯ [[26]] ರಾದರೂ ಮೊದಲು ಸನ್ಯಾಸ ಸ್ವೀಕರಿಸಿದ್ದರಿಂದ ಅವರಿಗೆ ಆಶ್ರಮ ಜ್ಯೇಷ್ಠತ್ವ ಬಂದಿತು” ಎಂದು ಅತ್ಯಂತ ಸ್ಪಷ್ಟವಾಗಿ ಒತ್ತಿಒಒತ್ತಿ ಹೇಳಿದ್ದಾರೆ. ಅಲ್ಲದೆ, ಹೊ.ಶ್ರೀಯವರು, ಶೃಂಗೇರಿ ಜಾಲತಾಣದಲ್ಲಿ ಬರೆದದ್ದನ್ನು ತಪ್ಪುತಪ್ಪಾಗಿ ಅನುವಾದ ಮಾಡುತ್ತಿದ್ದುದನ್ನು ಕಂಡು, ನನಗೆ ಆಶ್ಚರ್ಯವಾಗುತ್ತದೆ. “ಸಾಯಣರು ಕ್ರಿ.ಶ. 1328 ರಲ್ಲಿ, ಶ್ರೀವಿದ್ಯಾತೀರ್ಥ ಸ್ವಾಮಿಗಳಿಂದ ಯತ್ಯಾಶ್ರಮ ಸ್ವೀಕರಿಸಿದರು.” ಎಂಬ ಮಾತನ್ನು ಶೃಂಗೇರಿ ಜಾಲತಾಣದಲ್ಲಿ ಎಲ್ಲಿ ಹೇಳಿದೆ? ಆಚಾರ್ಯರು ಇನ್ನೊಮ್ಮೆ ಓದಿನೋಡಲಿ. “The younger of the two” [ಸೋದರರಿಬ್ಬರಲ್ಲಿ ಕಿರಿಯನು] ಎಂದಷ್ಟೇ ಹೇಳಿದೆ. ಇಬ್ಬರು ಸೋದರರಲ್ಲಿ ಕಿರಿಯನು ಎಂದರೆ “ಸಾಯಣ”ಎಂದೇ ಏಕೆ ಅರ್ಥೈಸಬೇಕು? ಜಾಲತಾಣದಲ್ಲಿ ಹಿರಿಯನ ಹೆಸರು “ಮಾಧವ” ಎಂದು ಹೇಳಿದ್ದರಿಂದ ಹೊ.ಶ್ರೀಯವರು, ದಿಕ್ಕುತಪ್ಪಿದ್ದಾರೆ. ಶೃಂಗೇರಿ ಜಾಲತಾಣವು ಹೇಳುವ ಮಾಧವನು ಖಂಡಿತವಾಗಿಯೂ ಸಾಯಣಸೋದರ ಮಾಧವನಲ್ಲ. ಅವನು ಬೇರೆ ಮಾಧವ. ಈ ಜಾಲತಾಣವು ಗುರುವಂಶಕಾವ್ಯವನ್ನು ಆಧರಿಸಿ ಬರೆಯಲ್ಪಟ್ಟದ್ದರಿಂದ, ಅಲ್ಲಿ ನಮಗೆ ವಿವರಗಳು ದೊರೆಯುತ್ತವೆ. ಕಿರಿಯನ ಹೆಸರು ಗುರುವಂಶ ಕಾವ್ಯದಲ್ಲಿಯೂ ಇಲ್ಲ. ಕೆಲವರು ಅವನನ್ನು ಸೋಮನಾಥ ಎಂದು ಕರೆದಿದ್ದಾರೆಂದು ಮೈಸೂರಿನ ವಿದ್ವಾನ್ ಶ್ರೀ ಲ. ನ. ಶಾಸ್ತ್ರಿಗಳು ಬರೆದಿದ್ದಾರೆ. ಅದಕ್ಕೂ ಆಧಾರವಿಲ್ಲ. ಇತ್ತೀಚೆಗೆ, ಶೃಂಗೇರಿ ಮಠದಿಂದ ಪ್ರಕಾಶಿಸಲ್ಪಟ್ಟ “ಪುಣ್ಯಕ್ಷೇತ್ರ‐ಶೃಂಗೇರಿ” ಎಂಬ ಗ್ರಂಥವು ಈ ಬಗ್ಗೆ ವಿವರಗಳನ್ನು ನೀಡುತ್ತದೆ. [ಪುಟ107] ಅದರಲ್ಲಿ ಬರೆದುದನ್ನು ಈ ಮುಂದೆ ಪ್ರತಿಮಾಡಿದ್ದೇನೆ ನೋಡಿ. “ಭಾರದ್ವಾಜ ಗೋತ್ರದ ಮಾಯಣ ಮತ್ತು ಶ್ರೀಮತಿಯವರ ಪುತ್ರನ ಹೆಸರೂ “ಮಾಧವ” ಎಂದೇ ಆಗಿತ್ತು. ಇವರನ್ನು “ಮಾಧವಾಚಾರ್ಯ”ಎಂದು ಕರೆಯಲಾಗುತ್ತಿತ್ತು. ಇವರಿಗೆ ಸಾಯಣ ಭೋಗನಾಥ ಎಂಬ ಇಬ್ಬರು ಸಹೋದರರಿದ್ದರು…………ವಿದ್ಯಾರಣ್ಯರ ಪೂರ್ವಾಶ್ರಮದ ಹೆಸರೂ ಮಾಧವಾಚಾರ್ಯ ಎಂದು. ಇವರೂ ಭಾರದ್ವಾಜ ಗೋತ್ರ, ಯಜುಃಶಾಖೆಯವರು. ಇವರು, ಪೂರ್ವಾಶ್ರಮದಲ್ಲಿ, ಮಾಯಣ ಪುತ್ರರಾದ ಮಾಧವಾಚಾರ್ಯ ಹಾಗೂ ಸಾಯಣಾಚಾರ್ಯರ ಬಂಧುವರ್ಗಕ್ಕೆ ಸೇರಿದವರು. ಸಾಯಣರ ಅಣ ್ಣನ ಹೆಸರೂ “ಮಾಧವ” ಎಂದೇ ಇರುವದರಿಂದ, ಈ ಇಬ್ಬರು ಮಾಧವರ ಹೆಸರಿನ ಸಾಮ್ಯದಿಂದ, ಗೋತ್ರಸೂತ್ರಗಳ ಸಾಮ್ಯದಿಂದ, ವಿದ್ವಾಂಸರಲ್ಲಿ ಗೊಂದಲವುಂಟಾಗಿದೆ……..”.
          • ಈ ಚರ್ಚೆಯಿಂದ, “ಶೃಂಗೇರಿಮಠದ ಅಂತರ್ಜಾಲತಾಣವು ದಾಖಲಿಸಿದ ವಿದ್ಯಾರಣ್ಯರೇ ಬೇರೆ, ಹೊ.ಶ್ರೀಯವರು ಒಪ್ಪಿಕೊಂಡ ವಿದ್ಯಾರಣ್ಯರೇ ಬೇರೆ” ಎಂಬ ಅಂಶವು ಅತ್ಯಂತ ಸ್ಫುಟವಾಗಿ ನಿಷ್ಪನ್ನವಾಗುತ್ತದೆ. ಇದನ್ನು ನಾವು ಮರೆಯಲೇಬಾರದು. ಚೋದ್ಯವೆಂದರೆ, ‘ಸಾಯಣ‐ಸೋದರ‐ಮಾಧವಾಚಾರ್ಯರೇ ವಿದ್ಯಾರಣ್ಯರಾದರು’ ಎಂದು ಹೊ.ಶ್ರೀಯವರು ಈ ಉಪನ್ಯಾಸದಲ್ಲಿ, ಖಚಿತ‐ಉಚ್ಚ‐ಧ್ವನಿಯಲ್ಲಿ, ಪ್ರತಿಪಾದಿಸುತ್ತಾರೆ. ಇದೇ ಉಪನ್ಯಾಸದಲ್ಲಿ, ಅವರೇ, ಶೃಂಗೇರಿ ಮಠದ ಜಾಲತಾಣದಲ್ಲಿ ಹೇಳಿದ್ದು ಅತ್ಯಂತ ಅಧಿಕೃತ ಮಾಹಿತಿ ಎಂದೂ ಸಾರುತ್ತಾರೆ. “ವಿದ್ಯಾರಣ್ಯರು ಮಾಧವ‐ಸಾಯಣರಿಗಿಂತ ಭಿನ್ನರು” ಎಂಬ ಶೃಂಗೇರಿಯ ಜಾಲತಾಣದ ಹೇಳಿಕೆ ಹಾಗೂ, “ಸಾಯಣಸೋದರ‐ಮಾಧವಾಚಾರ್ಯರೇ ಸನ್ಯಾಸಸ್ವೀಕರಿಸಿ ವಿದ್ಯಾರಣ್ಯರಾದರು” ಎಂಬ ಹೊ.ಶ್ರೀ ಯವರಹೇಳಿಕೆ, ಇವೆರಡೂ ಪರಸ್ಪರ ಮುಖಾಮುಖಿ‐ವಿರುದ್ಧವಾಗಿವೆಯೆಂಬುದು [diagonally opposed to each other] ಸ್ಪಷ್ಟವೇ ಇದೆ. ಇವುಗಳನ್ನು ಹೊ.ಶ್ರೀಯವರು, ಹೇಗೆ ಸಮನ್ವಯ ಮಾಡುತ್ತಾರೆ? ಇಬ್ಬರು ವಿದ್ಯಾರಣ್ಯರನ್ನು ಒಪ್ಪಿದರೆ ಮಾತ್ರ ಇದು ಸಾಧ್ಯ.
          • ಹೊ.ಶ್ರೀಯವರು, ಶೃಂಗೇರಿ ಜಾಲತರಾಣವು ಹೇಳುವ ವಿದ್ಯಾರಣ್ಯರನ್ನೂ ಒಪ್ಪಿದ್ದಾರೆ. ಸಾಯಣ ಸೋದರ ಮಾಧವರು ಸನ್ಯಾಸಸ್ವೀಕರಿಸಿ ವಿದ್ಯಾರಣ್ಯರಾದರು ಎಂದೂ ಇದೇ ಉಪನ್ಯಾಸದಲ್ಲಿಯೇ ಪ್ರತಿಪಾದಿ ಸಿದ್ದಾರೆ. ಹೀಗೆ ಇಬ್ಬರು ವಿದ್ಯಾರಣ್ಯರನ್ನು ಹೊ.ಶ್ರೀಯವರು, ಒಪ್ಪಿದ್ದಾರೆ. ತಮ್ಮದೇ ಆದ ಈ ಅಭಿಪ್ರಾಯ ದಿಂದ ಅವರು ಈಗ, ಹಿಂದೆ ಹೋಗಲಾರರು. [[27]] ಈ ಇಬ್ಬರಲ್ಲಿ ಶೃಂಗೇರಿ ಜಾಲತಾಣವು ಹೇಳುವ ವಿದ್ಯಾರಣ್ಯರು ಕ್ರಿ.ಶ. 1331 ರಲ್ಲಿ ಸನ್ಯಾಸಸ್ವೀಕರಿ ಸಿದರು ಎಂಬುದನ್ನು ತಾವೇ ಒಪ್ಪಿದ್ದಾರೆ. ಹಾಗಾದರೆ, ತಾವು ಹೇಳುವ ಸಾಯಣಸೋದರ ಮಾಧವರು ಯಾವಾಗ ಸನ್ಯಾಸ ಸ್ವೀಕರಿಸಿದರು ಎಂಬುದನ್ನು ಅವರು ಹೇಳಬೇಕಾಗುತ್ತದೆ. ಶೃಂಗೇರಿಮಠದ ಅಂತರ್ಜಾಲತಾಣದ ಪ್ರಕಾರ, ವಿದ್ಯಾರಣ್ಯರು ಸನ್ಯಾಸ ಸ್ವೀಕರಿಸಿದ ದಿನಾಂಕ ಕ್ರಿ.ಶ. 1331. ಈ ಮಿತಿಯನ್ನು ತಾವು ಒಪ್ಪಿದ, ಮಾಧವ‐ವಿದ್ಯಾರಣ್ಯರಿಗೆ ತಪ್ಪುತಪ್ಪಾಗಿ ಆರೋಪಿಸುತ್ತ, “ನೋಡಿ, ವಿದ್ಯಾರಣ್ಯರು ಕ್ರಿ.ಶ. 1331 ರಲ್ಲಿಯೇ ಸನ್ಯಾಸಾಶ್ರಮ ಸ್ವೀಕರಿಸಿದ್ದರಿಂದ, ಅಕ್ಷೋಭ್ಯ ವಿದ್ಯಾರಣ್ಯರ ವಾದಕ್ಕೆ [ಪಾಟೀಲರು ಹೇಳುವಂತೆ] ಕಾಲದ ಸಮಸ್ಯೆಯೇನೂ ಬರಲಾರದು. ಆಶ್ರಮನಾಮದ ಸಮಸ್ಯೆಯೂ ಬರ ಲಾರದು, ಯಾಕೆಂದರೆ ಕ್ರಿ.ಶ.1331 ರಲ್ಲಯೇ ಅವರಿಗೆ “ವಿದ್ಯಾರಣ್ಯ” ಎಂಬ ಆಶ್ರಮನಾಮವೂ ಕೊಡಲ್ಪ ಟ್ಟಿತ್ತು. ಆದ್ದರಿಂದ ಅಕ್ಷೋಭ್ಯ ವಿದ್ಯಾರಣ್ಯರ ವಾದ ನಡೆದದ್ದೂ ನಿಜ ಮತ್ತು ವಿದ್ಯಾರಣ್ಯರು ಪರಾಭವ ಗೊಂಡದ್ದೂ ನಿಜ” ಎಂದು ಏಕಮುಖವಾಗಿ, ಸಾಧಕ‐ಬಾಧಕಗಳನ್ನು ವಿಚಾರಿಸದೆಯೇ, ತಾವೇ ನಿರ್ಣಯ ಕೊಟ್ಟುಬಿಟ್ಟಿದ್ದಾರೆ. ನಿಜವಾಗಿ ಹೇಳಬೇಕೆಂದರೆ, ಶೃಂಗೇರಿಯ ಜಾಲತಾಣವು ಹೇಳುವ ವಿದ್ಯಾರಣ್ಯರು, ಹಾಗೂ ತಾವು ಹೇಳುವ ವಿದ್ಯಾರಣ್ಯರು ವಿಭಿನ್ನ ವ್ಯಕ್ತಿಗಳು ಎಂದು ಒಪ್ಪಿಕೊಂಡಾದ ನಂತರ, ಶೃಂಗೇರಿಯ ಜಾಲತಾಣದಲ್ಲಿ ಉಲ್ಲಿಖಿತರಾದ ವಿದ್ಯಾರಣ್ಯರು ಯಾವಾಗ ಸನ್ಯಾಸಸ್ವೀಕರಿಸಿದರೆ ಹೊ.ಶ್ರೀಯವರಿಗೇನಾಗಬೇಕಾಗಿದೆ? ಅವರು ಕ್ರಿ.ಶ. 1331 ರಲ್ಲಿಯೇ ಸನ್ಯಾಸಿಗಳಾಗಿರಲಿ, ಅಥವಾ ಮತ್ತೆ ಯಾವಾಗಲಾದರೂ ಸನ್ಯಾಸಿಗಳಾಗಿರಲಿ, ಅದು ಹೊ.ಶ್ರೀಯವರಿಗೆ ಸಂಬಂಧಪಡದಿರುವ ವಿಷಯ. ಯಾಕೆಂದರೆ, ಈ ವಿದ್ಯಾರಣ್ಯರೊಡನೆ ಅಕ್ಷೋಭ್ಯರು ವಾದಿಸಿದರೆಂದು ಯಾರೂ ಹೇಳಿಲ್ಲ. ಇತರರಿರಲಿ, ಹೊ.ಶ್ರೀಯವರೇ ಅದನ್ನು ಒಪ್ಪಿಲ್ಲ. ಹಾಗೆ ಒಪ್ಪಿದ್ದರೆ, ಅವರು ಮತ್ತೊಬ್ಬ ವಿದ್ಯಾರಣ್ಯರನ್ನು [ಸಾಯಣಸೋದರ‐ಮಾಧವ‐ವಿದ್ಯಾರಣ್ಯರನ್ನು] ತಮ್ಮ ಈ ಉಪನ್ಯಾಸ ದಲ್ಲಿ, ಉಲ್ಲೇಖಿಸುವ ಪ್ರಮೇಯವೇ ಇರುತ್ತಿರಲಿಲ್ಲ. “ಅಕ್ಷೋಭ್ಯ ವಿಜಯವೈಭವ” ಎಂಬ ಗ್ರಂಥವನ್ನು ಬರೆದ, ಕೂಡಲಿ ಆರ್ಯಅಕ್ಷೋಭ್ಯ ಮಠದ ಶ್ರೀ ರಘುವಿಜಯತೀರ್ಥ ಶ್ರೀಪಾದಂಗಳು, “ಪರಾಶರಮಾಧವೀಯವನ್ನು ಬರೆದ ಮಾಧವಾಚಾರ್ಯರೇ, ಮುಂದೆ ಸನ್ಯಾಸಸ್ವೀಕರಿಸಿ ವಿದ್ಯಾರಣ್ಯರಾದರು. ಅವರಜೊತೆಗೇನೇ ಅಕ್ಷೋಭ್ಯತೀರ್ಥರು ವಾಕ್ಯಾರ್ಥನಡೆಸಿದ್ದು” ಎಂದು ತಮ್ಮ ಗ್ರಂಥದಲ್ಲಿ ಒಪ್ಪಿಕೊಂಡಿದ್ದಾರೆ. ಹನಸೋಗೆ ಮಠದ ಶ್ರೀ ವಿಶ್ವನಂದನ ತೀರ್ಥರು ಕೂಡ, ತಮ್ಮ ಲೇಖನದ 1 ನೆಯ ಕಂಡಿಕೆಯ ಕೊನೆಯಲ್ಲಿ, “ನಾವು ವಿಚಾರ ಮಾಡುತ್ತಿರುವದು ಪ್ರಸಿದ್ಧ ವಿದ್ಯಾರಣ್ಯರ ಕಾಲವನ್ನು. ಬೇರೆಯವರನ್ನು ಮಧ್ಯೆ ತಂದು ಓದುಗರ ದಾರಿತಪ್ಪಿಸಬಬೇಡಿ” ಎಂದುಬರೆಯುತ್ತ, ಈ ಪ್ರಸಿದ್ಧ ವಿದ್ಯಾರಣ್ಯರು ಯಾರು ಎಂಬುದನ್ನು ತಮ್ಮ ಲೇಖನದ ಕಂಡಿಕೆ 6 ರಲ್ಲಿ ವಿವರಿಸುತ್ತ, “ಕಾಲಮಾಧವೀಯದಂಥ ಧರ್ಮಶಾಸ್ತ್ರಗ್ರಂಥ, ಜೈಮಿನೀಯ ನ್ಯಾಯಮಾಲಾದಂಥ ಮೀಮಾಂಸಾ ಗ್ರಂಥ’ಗಳನ್ನು ರಚಿಸಿದ, [ಸಾಯಣ‐ಸೋದರ] ಮಾಧವಾಚಾರ್ಯರೇ ಉತ್ತರ ವಯಸ್ಸಿನಲ್ಲಿ ವಿದ್ಯಾರಣ್ಯರಾದರು ಎಂದು ಒಪ್ಪಿಕೊಂಡಿದ್ದಾರೆ. ಈಗ, ಈ ವಿಚಾರ ಸಂಕಿರಣದಲ್ಲಿ, ಹೊ.ಶ್ರೀಯವರು ಕೂಡ, ಸಾಯಣಸೋದರ ಮಾಧವರು ಸಾಯಣರ ನಂತರ ಸನ್ಯಾಸ ಸ್ವೀಕರಿಸಿದರು ಎಂದ ಹೇಳುತ್ತ, ಈ ವಿದ್ಯಾರಣ್ಯರೇ ಅಕ್ಷೋಭ್ಯರ ಜೊತೆ ವಾಕ್ಯಾರ್ಥ ಮಾಡಿದವರು ಎಂದು ಸ್ವಸಂತೋಷದಿಂದ ಒಪ್ಪಿಕೊಂಡಿದ್ದಾರೆ. ಆದ್ದರಿಂದ, ಶೃಂಗೇರಿ‐ಅಂತರ್ಜಾಲತಾಣದಲ್ಲಿ ಹೇಳಲ್ಪಟ್ಟ ವಿದ್ಯಾರಣ್ಯರು ಯಾವಾಗ ಸನ್ಯಾಸ ಸ್ವೀಕರಿ ಸಿದರೆಂಬುದು ಹೊ.ಶ್ರೀಯವರಿಗೆ ಸಂಬಂಧಪಡದೆ ಇರುವ ವಿಷಯ. ತಾವು ಒಪ್ಪಿ ಪ್ರತಿಪಾದಿಸಿದ ಸಾಯಣ ಸೋದರ ಮಾಧವ‐ವಿದ್ಯಾರಣ್ಯರು ಯಾವಾಗ ಸನ್ಯಾಸ ಸ್ವೀಕರಿಸಿದರು, ಹಾಗೂ ಆ ಕಾಲಕ್ಕೆ ಅಕ್ಷೋಭ್ಯ‐ ವಿದ್ಯಾರಣ್ಯರ ವಾದ ನಡೆಯಲು ಸಾಧ್ಯವಿತ್ತೇ ಎಂಬುದು ಮಾತ್ರ ಹೊ.ಶ್ರೀಯವರಿಗೆ ಸಂಬಂಧಿಸಿದ ವಿಷಯ.
          • ಶ್ರೀ ಮಾಧವರು ಸನ್ಯಾಸ ಸ್ವೀಕರಿಸಿದ ಬಗ್ಗೆ ನಮ್ಮ ಮುಂದೆ ಎರಡು ದಿನಾಂಕಗಳಿವೆ. ಒಂದು ಕ್ರಿ.ಶ. 1331; ಇನ್ನೊಂದು ಕ್ರಿ.ಶ. 1376‐77. ಈ ಎರಡು ದಿನಾಂಕಗಳನ್ನು ಬಿಟ್ಟು ಬೇರೆ ಯಾವ ದಿನಾಂಕಗಳನ್ನೂ ಇದುವರೆಗೂ ಯಾವ ವಿದ್ವಾಂಸರೂ ಪ್ರತಿಪಾದಿಸಿಲ್ಲ; ಪ್ರತಿಪಾದಿಸಲಾರರು. ಈ ಎರಡರಲ್ಲಿ ಶೃಂಗೇರಿ ಜಾಲತಾಣದ ವಿದ್ಯಾರಣ್ಯರು ಕ್ರಿ.ಶ. 1331 ರಲ್ಲಿ ಸನ್ಯಾಸ ಸ್ವೀಕರಿಸಿದರು ಎಂದು ಈಗಾಗಲೇ ದಾಖಲಾಗಿದೆ. ಇನ್ನುಳಿದದ್ದು ಕ್ರಿ.ಶ. 1376‐77. [[28]] **ಸಾಯಣಸೋದರ ಮಾಧವರು ಸನ್ಯಾಸಸ್ವೀಕರಿಸಿ ವಿದ್ಯಾರಣ್ಯರಾದರೆಂದು ಸ್ವಸಂತೋಷದಿಂದ **[suomoto] ಒಪ್ಪಿಕೊಂಡ ಹೊ.ಶ್ರೀಯವರು ತಮಗೆ ಬೇಕಾಗಿರಲಿ, ಬೇಡವಾಗಿರಲಿ, ಕ್ರಿ.ಶ. 1376/77 ನ್ನೇ ತಾವು ಪ್ರತಿಪಾದಿಸಿದ ಶ್ರೀ ವಿದ್ಯಾರಣ್ಯರಿಗೆ ಕೊಡಬೇಕು. ಹಾಗೆ ಕೊಟ್ಟರೆ, ನಾನು ಪ್ರತಿಪಾದಿಸಿದಂತಯೇ, ಕ್ರಿ.ಶ. 1365 ರಲ್ಲಿಯೇ ವೈಕುಂಠಗಮನಮಾಡಿದ ಶ್ರೀಅಕ್ಷೋಭ್ಯತೀರ್ಥರು, 1376/77 ರಲ್ಲಿ ಸನ್ಯಾಸಸ್ವೀಕರಿಸಿದ ವಿದ್ಯಾರಣ್ಯರನ್ನು ಸೋಲಿಸುವದು ಹೇಗೆ ಸಾಧ್ಯ? ಹೊ.ಶ್ರೀಯವರೇ ಹೇಳಬೇಕು. ಅವರಿಗೆ ಬೇರೆಯಾವ ದಾರಿಯೂ ಇಲ್ಲ. ಹಾಗೆ ಒಪ್ಪಿದರೆ, ಕ್ರಿ.ಶ. 1376‐77 ರ ಹೊತ್ತಿಗೆ ಶ್ರೀ ಅಕ್ಷೋಭ್ಯ ತೀರ್ಥರು ಹರಿಪದ ಸೇರಿ ದಶಕಕ್ಕೂ ಮಿಕ್ಕ ಕಾಲವು ಕಳೆದಿರುವದರಿಂದ, ಕಾಲದ ಸಮಸ್ಯೆ ಬಂದೇಬರುತ್ತದೆ. ಕ್ರಿ.ಶ. 1376‐77 ರಲ್ಲಿ ಸನ್ಯಾಸಸ್ವೀಕರಿಸಿದ ಮಾಧವಾ ಚಾರ್ಯರಿಗೆ ಕ್ರಿ.ಶ. 1350‐65 ರ ಕಾಲಖಂಡದಲ್ಲಿ ವಿದ್ಯಾರಣ್ಯ ಎಂಬ ಆಶ್ರಮ ನಾಮವೂ ಇರಲಿಲ್ಲ ಎಂಬುದು ಸ್ವತಃಸಿದ್ಧವಿದೆ. ಆದ್ದರಿಂದ ಆಶ್ರಮನಾಮದ ಸಮಸ್ಯೆಯೂ ಬಂದೇ ಬರುತ್ತದೆ. ಇಂಥ ಅಕಾಲದಲ್ಲಿ, ಶ್ರೀ ಮಾಧವಾಚಾರ್ಯರು ಇನ್ನೂ ವಿದ್ಯಾರಣ್ಯರೇ ಆಗದಿರುವಾಗ, ಅಕ್ಷೋಭ್ಯ‐ ವಿದ್ಯಾರಣ್ಯರ ವಾದವು ನಡೆಯಲೇ ಇಲ್ಲ ಎಂಬ, ಡಾ. ಶತಾವಧಾನಿ ಆರ್ ಗಣೇಶರವರ ಮಾತು ತಂತಾನೇ ಸಿದ್ಧವಾಗುತ್ತದೆ. ನಾವೂ ಅದನ್ನೇ ಪ್ರತಿಪಾದಿಸಿದ್ದೇವೆ. ಸಾಯಣಸೋದರ ಮಾಧವಾಚಾರ್ಯರು ಸನ್ಯಾಸಸ್ವೀಕರಿಸಿ ವಿದ್ಯಾರಣ್ಯರಾದದ್ದು ಕ್ರಿ.ಶ. 1376‐77 ಎಂದು ಒಪ್ಪಿದ್ದೇವೆ. ಅದಕ್ಕಾಗಿ ವೇದಭಾಷ್ಯಗಳ ಹದಿನೆಂಟೂ ಗ್ರಂಥ ಗಳಿಂದ ಸಮಾಪ್ತಿಪುಷ್ಪಿಕೆಗಳನ್ನು ಉಲ್ಲೇಖಿಸಿ, ಸಿದ್ಧಮಾಡಿದ್ದೇವೆ. ಹೀಗೆ, ಕಾಲ ಹಾಗೂ ನಾಮ ವೈಷಮ್ಯಗಳಿಂದ, “ಅಕ್ಷೋಭ್ಯ‐ವಿದ್ಯಾರಣ್ಯರ ವಾದವು” ನಡೆಯಲೇ ಇಲ್ಲ” ಎಂಬ ವಾಸ್ತವವನ್ನು ಮಂಡಿಸಿದ್ದೇವೆ. ಇದರಲ್ಲಿ ಪ್ರಮಾಣವಿರುದ್ಧವಾದುದು, ತರ್ಕವಿರುದ್ಧವಾದುದು, ಯುಕ್ತಿವಿರುದ್ಧವಾದುದು ಏನಿದೆ ?
        • ಇನ್ನು ಮುಳಬಾಗಿಲ ಜಯಸ್ತಂಬದ ಬಗ್ಗೆ ಒಂದು ಮಾತು. ಉಕ್ತ ಜಯಸ್ತಂಭವು ಅಧಿಕೃತವಾದ ದ್ದಲ್ಲವೇ ಅಲ್ಲ ಎಂದು ಮೂವರೂ ಉಪನ್ಯಾಸದಕರು ಏಕಕಂಠದಿಂದ ಒಪ್ಪಿಕೊಂಡದ್ದಕ್ಕೆ ಧನ್ಯವಾದದಗಳು.
          • ಇನ್ನೂ ಒಂದು ಮಾತು. “ಶೃಂಗೇರಿಯ ಶ್ರೀವಿದ್ಯಾರಣ್ಯರೊಡನೆ ವಾದ ನಡೆಯಲೇ ಇಲ್ಲ” ಎಂಬುದನ್ನು ಸಮರ್ಥಿಸಲು ನಮ್ಮ ಹತ್ತರ, ಮಾಧ್ವಮಠದ ಸ್ವಾಮಿಗಳೇ ಪ್ರಾಂಜಲಮನಸ್ಸಿನಿಂದ ಒಪ್ಪಿಕೊಂಡ, ಇನ್ನೂ ಒಂದು ಪುರಾವೆ ಇದೆ. **“ವಿಷ್ಣುಸರ್ವೋತ್ತಮತ್ವಂ ತು ಸರ್ವದಾ ಪ್ರತಿಪಾದಯ’’**ಎಂಬುದು ಶ್ರೀ ಮಧ್ವಾಚಾರ್ಯರ ಪ್ರಧಾನ ಪ್ರತಿಜ್ಞಾವಾಕ್ಯ. ತಮ್ಮಶಿಷ್ಯರಿಗೆ ಮಧ್ವರು ಒಪ್ಪಿಸಿದ ಒಂದೇಒಂದು ಕರ್ತವ್ಯವೆಂದರೆ, ಸದಾಕಾಲ ವಿಷ್ಣುಸರ್ವೋತ್ತ ಮತ್ವವನ್ನು ಪ್ರತಿಪಾದಿಸುವದು. ಅವರು ಉಡುಪಿಯಲ್ಲಿ ಅನಂತೇಶ್ವರನ ಸನ್ನಿಧಾನದಲ್ಲಿ ಅದೃಶ್ಯರಾಗು ವಾಗಲೂ ಕೂಡ, ತಮ್ಮಶಿಷ್ಯರಿಗೆ ತಮ್ಮ ಚರಮಾದೇಶ [parting message]ಎಂಬರ್ಥದಲ್ಲಿ ಇದನ್ನೇ ಹೇಳಿದ್ದು ಎಂಬುದು ಸಕಲ ಮಾಧ್ವರ ಅಭಿಮತ. ಯಾಕೆಂದರೆ, ವಿಷ್ಣುಸರ್ವೋತ್ತಮತ್ವವೇ ಮಾಧ್ವಮತದ ಜೀವಾಳ. ವಿಷ್ಣುಸರ್ವೋತ್ತಮತ್ವವನ್ನು ಸ್ಥಾಪಿಸಿದರೆ, ಜಗತ್ಸತ್ಯತ್ವ, ಮೋಕ್ಷಪ್ರದತ್ವ, ಪಂಚಭೇದ, ತಾರತಮ್ಯಗಳೆಲ್ಲವೂ **ತಮ್ಮಷ್ಟಕ್ಕೆ ತಾವೇ ಸಿದ್ಧಿಸುತ್ತವೆ ಎಂಬುದು ಮಾಧ್ವರ ನಿಲುವು. **[ದ್ವೈತ ವಾಙ್ಮಯದ ಇತಿಹಾಸ ಕನ್ನಡಾನುವಾದ ಸಂಪುಟ‐2 ಪುಟ2 ನೋಡಿ.] ಇದು ಶ್ರೀ ಮಧ್ವರು‐ಮಾಧ್ವರು ವಿಷ್ಣುಸರ್ವೋತ್ತಮತ್ವದ ಬಗ್ಗೆ ಹೊಂದಿದ ಖಚಿತನಿಲುವು. ಅತ ಏವ, ವಿಷ್ಣುಸರ್ವೋತ್ತಮತ್ವವನ್ನು ವಿರೋಧಿಸುವ ಎಲ್ಲರನ್ನೂ, ಮುಖತಃ ವಾದಿಸಿ, ಅವರಿಗೆ ಈ ಪ್ರಮೇಯವನ್ನು ಮನದಟ್ಟು ಮಾಡಿಕೊಡುವದು ಎಲ್ಲ ಮಧ್ವಶಿಷ್ಯರ ಆದ್ಯ ಕರ್ತವ್ಯವೇ ಆಗಿತ್ತು. ಈ ದೃಷ್ಟಿಯಿಂದ ವಿಚಾರಿಸಿದರೆ, ಶೃಂಗೇರಿ ವಿದ್ಯಾರಣ್ಯರೊಡನೆ ಅಕ್ಷೋಭ್ಯರು ವಾದಮಾಡುವದು ವ್ಯರ್ಥವೇ ಆಗುತ್ತಿತ್ತು. ಯಾಕೆಂದರೆ, ಅದ್ವೈತಿಗಳು ವಿಷ್ಣುಸರ್ವೋತ್ತಮತ್ವದ ವಿರೋಧಿಗಳಲ್ಲ. ಕೂಡಲಿ ಆರ್ಯ ಅಕ್ಷೋಭ್ಯ ಮಠದ ಇಂದಿನ ಪೀಠಾಧಿಪತಿಗಳಾದ ಶ್ರೀ ರಘುವಿಜಯ ತೀರ್ಥರು ತಮ್ಮ “ಅಕ್ಷೋಭ್ಯ ವಿಜಯ ವೈಭವ” ಎಂಬ ಗ್ರಂಥದ ಪುಟ 87 ರಲ್ಲಿ, “ವಿಷ್ಣುವಿನ ಪಾರಮ್ಯವನ್ನು ಕೇವಲ ಮಾಧ್ವರಷ್ಟೇ ಅಲ್ಲ, ಸ್ವತಃ ರುದ್ರ ಅವತಾರವೆಂದು, ಶ್ರೀ ಪಾಟೀಲರಾದಿಯಾಗಿ ಎಲ್ಲ ಅದ್ವೈತಗಳು ನಂಬಿದ ಶ್ರೀ **ಶಂಕರಾಚಾರ್ಯರು ಕೂಡ ಸ್ಥಾಪಿಸಿದ್ದಾರೆ” **ಎಂದು ಬರೆಯುತ್ತ, ಶಾಂತಾಕಾರಂ ಭುಜಗಶಯನಂ ಪದ್ಮನಾಭಂ **ಸುರೇಶಂ । **ಎಂಬ ವಿಷ್ಣುಧ್ಯಾನ ಸ್ತೋತ್ರವನ್ನೂ, ಶ್ರೀ ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರದಲ್ಲಿ ಬರುವ [[29]] ಬ್ರಹ್ಮೇಂದ್ರರುದ್ರಮರುದರ್ಕಕಿರೀಟಕೋಟಿ । ಸಂಘಟ್ಟಿತಾಂಘ್ರಿಕಮಲಾಮಲಕಾಂತಿಕಾಂತ ॥ ಎಂಬ ದ್ವಿತೀಯ ಶ್ಲೋಕವನ್ನೂ ಉದಾಹರಿಸಿದ್ದಾರೆ. ಅದೇ ಆಚಾರ್ಯ ಶ್ರೀಶಂಕರ‐ಸ್ಥಾಪಿತ ಶೃಂಗೇರಿ ಪೀಠಾಧಿಪತಿಗಳಾದ ಶ್ರೀ ವಿದ್ಯಾರಣ್ಯರು ಕೂಡ, ಮಾಧ್ವರ ದೃಷ್ಟಿಯಲ್ಲಿ ವಿಷ್ಣುಸರ್ವೋತ್ತಮತ್ವದ ಕಟ್ಟಾ ಪ್ರತಿಪಾದಕರೇ ಆಗಿರಲೇಬೇಕಲ್ಲವೇ? ಆಚಾರ್ಯ ಮಧ್ವರಿಗೆ ಅತ್ಯಂತ ಪ್ರಿಯವಾದ ಈ ಕೆಲಸ ಮಾಡಿದ ಶ್ರೀ ವಿದ್ಯಾರಣ್ಯರು ಶ್ರೀ ಅಕ್ಷೋಭ್ಯ ತೀರ್ಥರಿಗೆ ಪ್ರತಿಕಕ್ಷಿ ಯಾಗುದಂತೂ ಸಾಧ್ಯವೇ ಇಲ್ಲ. ಇನ್ನೂ ಹೆಚ್ಚಿನ ವಿವರಗಳಿಗೆ ವಿದ್ಯಾರಣ್ಯ ವಿಜಯ ದುಂದುಬಿ???? ಪುಟ 223‐ 227 ನೋಡಿ.
          • ಈಗ ನೋಡಿ‐ಶ್ರೀಮಾಧವಮಂತ್ರಿಗಳು ಶತಪ್ರತಿಶತ ಶೈವರು. “ಶಿವಸರ್ವೋತ್ತಮತ್ವ” ಪ್ರತಿಪಾದಕರು. ಅವರನ್ನು ವಾದದಲ್ಲಿ ಎದುರಿಸಿ, ಅವರಿಗೆ ವಿಷ್ಣುಸರ್ವೋತ್ತಮತ್ವವನ್ನು ಮನಗಾಣಿಸಿ ಕೊಡುವದು ಶ್ರೀ ಮಧ್ವರ ಚರಮಾದೇಶದಂತೆಯೇ, ಅಕ್ಷೋಭ್ಯತೀರ್ಥರ ಆದ್ಯ ಕರ್ತವ್ಯವೇ ಆಗಿತ್ತು. ಶಿವಸರ್ವೋತ್ತಮತ್ವವನ್ನು ನಿರಾಕರಿಸಿ, ವಿಷ್ಣುಸರ್ವೋತ್ತಮತ್ವವನ್ನು ಎತ್ತಿಹಿಯುವ ಇಂಥ ಸುವರ್ಣಾವಕಾಶವೊಂದು ಅಕ್ಷೋಭ್ಯತೀರ್ಥ ರಿಗೆ ಅಯಾಚಿತವಾಗಿ ಬಂದಾಗ, ಅದನ್ನು ಕೈಜಾರಿಹೋಗಬಿಟ್ಟು, ವಿಷ್ಣು ಸರ್ವೋತ್ತಮತ್ವವನ್ನು ವಿರೋಧಿಸದೆ, ಅದನ್ನು ಪ್ರತಿಪಾದಿಸುವ ಗುಂಪಿಗೆ ಸೇರಿದ ವೈದಿಕೋತ್ತಮಶಿಖಾಮಣಿಗಳಾದ, ಮಾಧವಾಚಾರ್ಯರನ್ನು ವಾದಕ್ಕೆ ಕರೆದರು ಎಂಬುದು ಆಚಾರ್ಯ ಮಧ್ವರ ಚರಮಾದೇಶದ ಸ್ಪಷ್ಟ ಉಲ್ಲಂಘನೆಯೇ ಅಲ್ಲವೇ? ಪ್ರಾಜ್ಞರೇ ವಿಚಾರಿಸಲಿ.
        • ನಾನು, ಇಲ್ಲಿ ಇನ್ನೂ ಒಂದು ಮಾತನ್ನು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ಭಾರದ್ವಾಜ ಮಾಧವಾ ಚಾರ್ಯರು, ಅರ್ಥಾತ್ ಶೃಂಗೇರಿ ಜಗದ್ಗುರು ಶ್ರೀವಿದ್ಯಾರಣ್ಯರ ಹಾಗೂ ಅಕ್ಷೋಭ್ಯತೀರ್ಥರ ಮಧ್ಯೆ ವಾದವೇ ನಡೆಯಲಿಲ್ಲ, ಶ್ರೀವಿದ್ಯಾರಣ್ಯರು ಸೋಲಲೇ ಇಲ್ಲ ಎಂಬುದಂತೂ ನಿರ್ವಿವಾದವೇ. ಅದರಲ್ಲಿ ಪುನರ್ವಿಚಾರದ ಪ್ರಶ್ನೆಯೇ ಇಲ್ಲ. ಈ ವಿಷಯವು ಮಾಧ್ವ ವಿದ್ವಾಂಸರಿಗೂ ಮನದಟ್ಟಾಗಿ, ಇದನ್ನು ಒಬ್ಬೊಬ್ಬರೇ ಒಪ್ಪಿಕೊಳ್ಳ ತೊಡಗಿದ್ದಾರೆ. ಇಲ್ಲಿಯ ವರೆಗೂ, ಅಕ್ಷೋಭ್ಯರ ಚರಮಶ್ಲೋಕವಾಗಲಿ, ಅಥವಾ ಮುಳಬಾಗಿಲಿನ ಜಯಸ್ತಂಭವೇ ಆಗಲಿ, ಈ ವಿಷಯದಲ್ಲಿ ಖಚಿತ ಹಾಗೂ ನಿರವಕಾಶ ಪ್ರಮಾಣಗಳೇ ಹೌದು ಎಂದು ವಾದಿಸುತ್ತಿದ್ದ ಮಾಧ್ವ ವಿದ್ವಾಂಸರು ಈಗ, ಹಿಮ್ಮುಖವಾಗಿ ಚಲಿಸುತ್ತ, ಅವುಗಳು ಪ್ರಮಾಣವಲ್ಲ ಎಂಬ ನಿಷ್ಕರ್ಷೆಗೆ ಬಂದಿದ್ದಾರೆ. ಇನ್ನು ಈ ಕುರಿತಂತೆ ಶ್ರೀ ರಘೂತ್ತಮಾಚಾರ್ಯರು ಮಂಡಿಸಿದ ಮತ್ತೊಂದು ಪರ್ಯಾಯ, ಅರ್ಥಾತ್ ಮಾಧವ ಮಂತ್ರಿಗಳನ್ನೇ ವಿದ್ಯಾರಣ್ಯರೆಂದು ಬಿಂಬಿಸುತ್ತ, ಅವರೇ ಅವೈದಿಕಾಗ್ರ್ಯರು, ಅವೈದಿಕೋತ್ತ ಮರು. ಅವರ ಜೊತೆಗೇ ವಾದನಡೆದು ಅಕ್ಷೋಭ್ಯರು ಜಯಶಾಲಿಗಳಾದರು ಎಂಬುದನ್ನು ಸ್ಥಾಪಿಸಲು ತೊಡಗಿದ್ದಾರೆ. ಆದರೆ, ಹೀಗೆ ಸಾಧಿಸಲು ಸದ್ಯಕ್ಕೆ ಪ್ರಮಾಣಗಳು ಸಾಲವು. ಶ್ರೀ ಮಾಧವ ಮಂತ್ರಿಗಳೇ ಆಗಲಿ, ಅವರ ಗುರುಗಳಾದ ಕಾಶೀವಿಳಾಸಕ್ರಿಯಾಶಕ್ತಿಗಳೇ ಆಗಲಿ, ಶ್ರೀ ಅಕ್ಷೋಭ್ಯ ತೀರ್ಥರ ಸಮಕಾಲೀನರೇ ಆಗಿದ್ದರು ಎಂದು ಸಿದ್ಧವಾದ ಮಾತ್ರಕ್ಕೆ, ಅಥವಾ, ಮಾಧ್ವರ ಹಾಗೂ ಅದ್ವೈತಿಗಳ ಪ್ರಕಾರ ಅವರು ಸೀಮಿತ ಅರ್ಥದಲ್ಲಿ “ಅವೈದಿಕರು” [ವೇದಬಾಹ್ಯರು] ಎಂಬುದು ಸಿದ್ಧವಾದ ಮಾತ್ರಕ್ಕೆ, ಅವರ ಹಾಗೂ ಅಕ್ಷೋಭ್ಯ ತೀರ್ಥರ ಮಧ್ಯೆ ವಾದನಡೆಯಿತು ಮತ್ತು ಅಕ್ಷೋಭ್ಯ ತೀರ್ಥರು ಜಯಶಾಲಿಗಳಾದರು ಎಂದು ಸ್ಥಾಪಿಸಿದಂತೆ ಆಗುವದಿಲ್ಲ. ಹಾಗೂ ಒಬ್ಬರ ಗೆಲವು ಇನ್ನೊಬ್ಬರ ಸೋಲನ್ನು ನಾನು ಒಪ್ಪಿದ್ದೇನೆ ಎಂದೂ ಅರ್ಥವಲ್ಲ.
          • ಇಲ್ಲಿ, ಇನ್ನೂ ಒಂದು ಪ್ರಮುಖ ವಿಚಾರವನ್ನು ಓದುಗರ ಮುಂದಿಡಬೇಕಾಗಿದೆ. [[30]] “ಅತತ್ತ್ವಾವೇದಕ” ಎಂಬ ಪದದ ಜಿಜ್ಞಾಸೆಯನ್ನು ಹೊ.ಶ್ರೀಯವರು ಪ್ರಸ್ತಾಪಿಸಿದ್ದರಿಂದ, ಆ ಬಗ್ಗೆ ಸ್ವಲ್ಪ ಬರೆಯಬೇಕಾಗಿದೆ. “ಅತತ್ತ್ವಾವೇದಕ” ಎಂದರೆ, ತತ್ತ್ವವನ್ನು ಸರಿಯಾಗಿ ತಿಳಿಸಲು ಅಸಮರ್ಥವಾದದ್ದು ಎಂದರ್ಥ. ಕರ್ಮಕಾಂಡವನ್ನೂ, ಉಪನಿಷತ್ತುಗಳನ್ನೂ ಒಳಗೊಂಡಂತೆ, ಅತ್ಯಂತ ವಿಸ್ತಾರವಾದ ಅಖಂಡ ವೇದರಾಶಿಯು, “ಅತತ್ತ್ವಾವೇದಕ” ಎಂದು ಅದ್ವೈತಿಗಳು ಪ್ರತಿಪಾದಿಸುತ್ತಾರೆಂದು ಹೊ.ಶ್ರೀಯವರು ಹೇಳಿದ್ದಾರೆ. ಅವರಷ್ಟೇ ಏಕೆ ಎಲ್ಲ ಮಾಧ್ವರೂ ಇದೇ ಆರೋಪವನ್ನು ಅದ್ವೈತಿಗಳ ಮೇಲೆ ಮಾಡುತ್ತಾರೆ.. ಇಲ್ಲಿ ನಾನೂ ಈ ವಿಷಯಕ್ಕೆ ಸಂಬಂಧಿಸಿದಂತೆ ತಾತ್ತ್ವಿಕ ವಿವೇಚನೆಗೆ ತೊಡಗುವದಿಲ್ಲ. ಅದಕ್ಕೆ ಇಲ್ಲಿ ಜಾಗವಿಲ್ಲ. ಆದರೆ, ಈ ನಿಲುವು ಅದ್ವೈತಿಗಳು ತಳೆದಿದ್ದಲ್ಲ. ಸ್ವತಃ ವೇದಗಳೇ ತಾವು “ಅತತ್ತ್ವಾವೇದಕ” ಎಂದು ಒಪ್ಪಿಕೊಂಡಿವೆ. ಆದ್ದರಿಂದ ಮಾಧ್ವರ ಆಕ್ಷೇಪವೇನಾದರೂ ಇದ್ದರೆ ಅದು ಅದ್ವೈತಿಗಳ ಮೇಲೆ ಇರಬಾರದು, ಕಿಂತು ವೇದಗಳ ಮೇಲೆಯೇ ಇರಬೇಕು. ನ ಕರ್ಮಣಾ ನ ಪ್ರಜಯಾ ಧನೇನ ತ್ಯಾಗೇನೈಕೇ ಅಮೃತತ್ತ್ವಮಾನಶುಃ “ಯಜ್ಞಯಾಗಾದಿ ಕರ್ಮಗಳಿಂದಾಗಲಿ, ಧನಾದಿ ಸಂಪತ್ತುಗಳಿಂದಾಗಲಿ, ಮೋಕ್ಷ ದೊರಕಲಾರದು. ಅದು ದೊರಕುವದು ಕೇವಲ ತ್ಯಾಗದಿಂದಮಾತ್ರ” ಎಂದು ಮಹಾನಾರಾಯಣೋಪನಿಷತ್ತು ಉದ್ಘೋಷಿಸುತ್ತ, ವೇದಗಳ ಕರ್ಮಕಾಂಡವು ಪರತತ್ತ್ವವನ್ನು ದೊರಕಿಸಿಕೊಡಲು ಅಸಮರ್ಥವಾಗಿದೆ ಎಂದು ತಾನೇ ಸ್ವತಃ ಒಪ್ಪಿಕೊಂಡಿದೆ. **“ಯತ್ರ ವೇದಾ ಅವೇದಾ ಭವಂತಿ” **ಎಂಬ ಮಾತಿನಿಂದ, ಪರತತ್ತ್ವದ ವಿಷಯದಲ್ಲಿ ವೇದಗಳು ಅವೇದಗಳಾಗುತ್ತವೆ, ಅರ್ಥಾತ್ ಅವು ಪರತತ್ತ್ವವನ್ನು ಯಥಾರ್ಥವಾಗಿ ತಿಳಿಸಿಕೊಡಲು ಅಸಮರ್ಥವಾಗಿವೆ ಎಂಬುದು ವೇದಗಳದ್ದೇ ಖಚಿತ ನಿಲುವು. ಇನ್ನು, ಉಪನಿಷತ್ತುಗಳಿಗೆ ಬಂದರೆ, “ ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ” [ಪರತತ್ತ್ವವನ್ನು ಮುಟ್ಟಲಾರದೆ ಅರ್ಥಾತ್ ತಿಳಿಯಲಾರದೆ ವೇದಗಳು ಮನಃಸಮೇತ ತಿರುಗಿ ಬಂದವು] ಎಂದು ತೈತ್ತಿರೀಯ ಉಪನಿಷತ್ತು ಒಪ್ಪಿಕೊಂಡಿದೆ. ವಿಷ್ಣುಸಹಸ್ರನಾಮವು ಶ್ರೀಮಹಾವಿಷ್ಣುವನ್ನು **ಶಬ್ದಾತಿಗಃ (**ವೇದಗಳ ತಿಳುವಳಿಯನ್ನೂ ಮೀರಿ, ಆಚೆ ಇರುವವನು) ಎಂಬ ಶ್ರೀನಾಮದಿಂದ ವರ್ಣಿಸುತ್ತ, ಪರತತ್ತ್ವವು ಶಬ್ದಾತೀತವಾಗಿದೆ ಎನ್ನುತ್ತದೆ. ಈ ಉದಾಹರಣೆಗಳಿಂದ, ವೇದಗಳು **“ಅತತ್ತ್ವಾವೇದಕ”**ವಾಗಿವೆ ಎಂಬುದು ವೇದಗಳದ್ದೇ ನಿಲುವು ಎಂಬುದು ಸ್ಪಷ್ಟವಾಗಿದೆ. ಅದರಲ್ಲಿ ಅದ್ವೈತಿಗಳನ್ನು ಆರೋಪಿಸುವದು ಏನೂ ಇಲ್ಲ. ವೇದಗಳೇ ಹೇಳಿದ್ದನ್ನು ಅದ್ವೈತಿಗಳು ಪ್ರಾಮಾಣಿಕವಾಗಿ ಅನುವಾದ ಮಾಡುತ್ತಾರಷ್ಟೇ!
          • ಈಗ, ಮತ್ತೊಂದು ವಿಷಯಕ್ಕೆ ಬರೋಣ. ತಮ್ಮ ಉಪನ್ಯಾಸದಲ್ಲಿ, ಹೊ.ಶ್ರೀಯವರು—ಕಾಪಾಲಿಕರು ವೇದ‐ಅಪ್ರಾಮಾಣ್ಯವಾದಿಗಳು. ಅವರೊಡನೆ ಅಕ್ಷೋಭ್ಯರು ವಾದಮಾಡಿರಲು ಸಾಧ್ಯವಿಲ್ಲ. ಅಕಸ್ಮಾತ್ ವಾದ ಮಾಡಿದ್ದರೆ, ಆಗ, ವೇದಪ್ರಾಮಾಣ್ಯವಾದವನ್ನು ಕುರಿತು ಚರ್ಚೆಯಾಗಬೇಕಾಗಿತ್ತೇ ಹೊರತು “ತತ್ತ್ವಮಸಿ”ಯನ್ನು ಕುರಿತು ಅಲ್ಲ. [[31]] ವೇದಗಳನ್ನೇ ನಂಬದ ಕಾಪಾಲಿಕರು “ತತ್ತ್ವಮಸಿ”ಯನ್ನು ಕುರಿತು ಹೇಗೇ ವಾದ ಮಾಡಿಯಾರು? ಎಂಬ ಯುಕ್ತಿಯನ್ನು ಮುಂಚಾಚಿದ್ದಾರೆ. ಸರಿ. ಸದ್ಯಕ್ಕೆ ಅಂಗೀಕಾರವಾದರೂಪವಾಗಿ, ಅದನ್ನು ಒಪ್ಪೋಣ. ಆದರೆ, ಆಗ, ಹೊ.ಶ್ರೀಯವರು ಇನ್ನೊಂದು ಪ್ರಶ್ನೆಗೆ ಉತ್ತರಿಸಬೇಕಾಗುತ್ತದೆ. ತಮ್ಮ ಉಪನ್ಯಾಸದಲ್ಲಿ ಹೊ.ಶ್ರೀಯವರು, “ಬೌದ್ಧರು ವೇದ‐ ಅಪ್ರಾಮಾಣ್ಯವಾದಿಗಳೆಂಬುದು ಜಗತ್ತಿಗೇತಿಳಿದಿದೆ. ಅದರಂತೆಯೇ, ಕಾಪಾಲಿಕರು ಕೂಡ ವೇದ‐ಅಪ್ರಾಮಾಣ್ಯ ವಾದಿಗಳೇ”ಎಂದಿದ್ದಾರೆ. ಅಷ್ಟೇ ಆಗಿದ್ದರೆ ಪ್ರಶ್ನೆ ಇರುತ್ತಿರಲಿಲ್ಲ. ಅವರು ಮುಂದೆಹೋಗಿ, ಆಚಾರ್ಯ ಮಧ್ವರ “ತತ್ತ್ವೋದ್ಯೋತ”ವನ್ನು ಆಧರಿಸಿ, ಬೌದ್ಧರು ಹಾಗೂ ಅದ್ವೈತಿಗಳು ಡಿಟ್ಟೋ [Ditto] ಎಂದು ಅಪ್ಪಣೆಕೊಡಿ ಸಿದ್ದಾರೆ. ಆಚಾರ್ಯ ಮಧ್ವರು ಹೇಳಿದ್ದಾರೋ ಇಲ್ಲವೋ, ಇವರಂತೂ ಹೇಳಿದ್ದಾರೆ. ಅಂದರೆ, ಇವರ ಪ್ರಕಾರ, ಅದ್ವೈತಿಗಳೂ ವೇದ‐ಅಪ್ರಾಮಾಣ್ಯವಾದಿಗಳೇ ಆದರಲ್ಲ. ಅದೇ ಕಾರಣಕ್ಕಾಗಿ, ವಿದ್ಯಾರಣ್ಯರೊಡ ನೆಯೂ ಅಕ್ಷೋಭ್ಯರು ವಾಕ್ಯಾರ್ಥ ಮಾಡಬಾರದಾಗಿತ್ತಲ್ಲ? ಆದರೆ, ವಾದ ಮಾಡಿದ್ದಾರೆ, ಗೆದ್ದಿದ್ದಾರೆ ಎಂದೂ ಇದೇ ಹೊ.ಶ್ರೀಯವರೇ ಹೇಳುತ್ತಾರೆ. ಎಂಥ ಸ್ವವ್ಯಾಹತಿ! ತಾವು ಏನು ಹೇಳಿದ್ದೇವೆಂಬ ನೆನಪೂ ಈ ಆಚಾರ್ಯರಿಗೆ ಇರುವದಿಲ್ಲ. ಆಶ್ಚರ್ಯ! ಅದ್ವೈತಿಗಳು ಹಾಗೂ ಬೌದ್ಧರು “ಡಿಟೋ” ಹೌದೇ ಎಂಬುದನ್ನು ಕುರಿತು ನಡೆದ ಜಿಜ್ಞಾಸೆಯನ್ನು ಕುರಿತು ಒಂದು ಮಾತು. ಕೆಲವೇ ಕೆಲವರ್ಷಗಳ ಹಿಂದೆ, ಮಹಾಬೋಧಿ ಸೊಸೈಟೀ ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ, ಬೆಂಗಳೂರಿನ ಬಸವನಗುಡಿಯ, ಬಿ.ಪಿ.ವಾಡಿಯಾ ರಸ್ತೆಯಲ್ಲಿರುವ Institute of World Culture ನಲ್ಲಿ ಒಂದು ವಿಚಾರಸಂಕಿರಣ ನಡೆಯಿತು. ಆ ಸಂದರ್ಭದಲ್ಲಿ ಈ ನಾಡಿನ ಹಿರಿಯ ವಿದ್ವಾಂಸ ಡಾ. ಡಿ. ಪ್ರಹ್ಲದಾಚಾರ್ಯರು [ಈಗ ಅದೇ ಮಾನ್ಯರೇ ಇದೇ ಸೋಸಲೆ ವ್ಯಾಸರಾಯ ಮಠದ ಅಧಿಪತಿಗಳಾಗಿದ್ದಾರೆ] ಉಕ್ತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ, ತಮ್ಮ ಅಮೂಲ್ಯವಾದ ಅಭಿಪ್ರಾಯಗಳನ್ನು ಹಂಚಿಕೊಂಡರು. “ಅದ್ವೈತಿಗಳು ಹಾಗೂ ಬೌದ್ಧರು ಇಬ್ಬರೂ ಜಗತ್ತಿನ ಮಿಥ್ಯಾತ್ವವನ್ನು ಒಪ್ಪಿಕೊಳ್ಳುತ್ತಾರೆ. ಅದ್ವೈತಿಗಳು‐ಜಗತ್ತು ಬ್ರಹ್ಮದಮೇಲೆ ಆರೋಪಿಸಲ್ಪಟ್ಟಿದೆ. ಆದ್ದರಿಂದ, ಪರಬ್ರಹ್ಮ ತತ್ತ್ವವೇ ಜಗತ್ತಿಗೆ ಆಧಾರಭೂತವಾಗಿದೆ‐ಎಂದು ಪ್ರತಿಪಾದಿಸುತ್ತಾರೆ, ಆದರೆ, ಬೌದ್ಧರು ಇಂಥ **ಯಾವದೇ ಆಧಾರವನ್ನೂ ಒಪ್ಪಿಕೊಳ್ಳುವದಿಲ್ಲ. [ಇದೇ ಆ ಎರಡೂ ಮತಗಳಲ್ಲಿಯ ವೈಷಮ್ಯ]”**ಎಂದು ಹೇಳುತ್ತ, **ಅದ್ವೈತಿಗಳು ಹಾಗೂ ಬೌದ್ಧರು ‘ಡಿಟೋ’ ಎನ್ನುವದು ತಪ್ಪು ಕಲ್ಪನೆ **ಎಂದು ಹೇಳಿದರು. ಈ ವಿಚಾರ ಸಂಕಿರಣವು ಅದೇ ಸೋಸಲೆ ವ್ಯಾಸರಾಯ ಮಠದಲ್ಲಿ ನಡೆದಿರುವದರಿಂದ, ಹೊ.ಶ್ರೀಯವರು ಶ್ರೀಗಳನ್ನು ಈ ಸಂಬಂಧದಲ್ಲಿ ಇನ್ನೊಮ್ಮೆ ವಿಚಾರಿಸಬಹುದು. ಆಚಾರ್ಯ ಮಧ್ವರ ತತ್ತ್ವೋದ್ಯೋತವನ್ನು ಸೋಸಲೆ ಮಠದ ಶ್ರೀಗಳು ಸರಿಯಾಗಿ ತಿಳಿದುಕೊಂಡಿಲ್ಲವೆಂದು ಹೊ.ಶ್ರೀಯವರು ಹೇಳುತ್ತಾರೆಯೇ?
          • ಇನ್ನು, ಈ ವಿಚಾರಸಂಕಿರಣದ ಸಾನ್ನಿಧ್ಯವಹಿಸಿದ್ದ ಶ್ರೀ ವಿದ್ಯಾಶ್ರೀಶತೀರ್ಥರು, ಉಯಪಸಂಹಾರ ಭಾಷಣದಲ್ಲಿ, “ಶ್ರೀ ವಿದ್ಯಾರಣ್ಯರೊಡನೆಯೇ ಅಕ್ಷೋಭ್ಯರು ವಾದಮಾಡಿ ಗೆದ್ದರೆಂದು ನಾವು ನಂಬೋಣ. ಆದರೆ, ವಿಮತೀಯರು, [ಜಿ.ಆರ್.ಪಾಟೀಲ ಇತ್ಯಾದಿ] ಈ ವಿಷಯದಲ್ಲಿ ಎತ್ತಿದ ಆಕ್ಷೇಪಗಳಿಗೆ ಸರಿಯಾದ, ಪ್ರಮಾಣ ಪ್ರಮಿತವಾದ ಉತ್ತರಗಳನ್ನು ನಾವು ಕೊಡಲೇಬೇಕಾಗುತ್ತದೆ. ಈ ವಿಷಯದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ, ಅಭ್ಯಾಸ ನಡೆಯಲಿ” ಎಂದು ಅಪ್ಪಣೆಕೊಡುವ ಮೂಲಕ, ಹೊ.ಶ್ರೀ ಇತ್ಯಾದ ವಿದ್ವಾಂಸರು, ಹೇಳಿದ್ದು ಪರ್ಯಾಪ್ತ ವಾಗಿಲ್ಲವೆಂದು ಧ್ವನಿಸಿದರು. “ಮುಂದಿನ ವಿಚಾರಸಂಕಿರಣದಲ್ಲಿ, ಅಂಥ ತರ್ಕ, ಯುಕ್ತಿ, ಪ್ರಮಾಣಗಳು ಪ್ರಸ್ತಾಪಿಸಲ್ಪಡಲಿ” ಎಂದರು. [[32]] ನಾನು ಕೂಡ, ಮುಂದಿನ ವಿಚಾರಸಂಕಿರಣದ ವಿವರಗಳಿಗಾಗಿ ಕಾಯುತ್ತೇನೆ.
            • ಒಂದು ಸಮಾಧಾನದ ಸಂಗತಿಯು ನನಗೆ ಎದ್ದುಕಾಣುತ್ತಿದೆ. “ಅಕ್ಷೋಭ್ಯವಿಜಯವಿಭ್ರಮ”ವು ಪ್ರಕಾಶಿತವಾದ ಕೆಲವೇ ದಿನಗಳಲ್ಲಿ, ಶ್ರೀ ಭೀಮಾಚಾರ್ಯ ಕರಜಗಿ ಎಂಬ ಮಹನೀಯರು, ನಂತರ, ಬಾಳಗಾರು ಶ್ರೀನಿವಾಸಾಚಾರ್ಯರೆಂಬ ಮಾಧ್ವ ವಿದ್ವಾಂಸರು, ಅಕ್ಷೋಭ್ಯ ತೀರ್ಥರ ಚರಮ‐ಶ್ಲೋಕವನ್ನಿಟ್ಟುಕೊಂಡು ತುಂಬ ಚರ್ಚೆನಡೆಸಿದರು. ಅದಕ್ಕೆ ನಾನು ಆ ಚರಮ‐ಶ್ಲೋಕಗಳ ಬುಡವನ್ನೇ ಹೊಕ್ಕುನೋಡಿ, ಅದು ಪ್ರಮಾಣವಾಲಾರದೆಂದು ಪ್ರಮಾಣ‐ಪ್ರಮಿತವಾಗಿ ಉತ್ತರಿಸಿದೆ. ಅವರಿಬ್ಬರೂ ಸುಮ್ಮನಾದರು. ಮುಂದೆ ಈಬಗ್ಗೆ ಬರೆದ ಮಾಧ್ವವಿದ್ವಾಂಸರು, ಶ್ರೀ ರಘುವಿಜಯ ತೀರ್ಥ ಸ್ವಾಮಿಗಳನ್ನೂ ಒಳಗೊಂಡಂತೆ, ಮಾಧ್ವರು ಚರಮ‐ಶ್ಲೋಕವನ್ನು ತೆಪ್ಪಗೆ ಕೈಬಿಟ್ಟರು. ಚರಮ‐ಶ್ಲೋಕದ ನಂತರ ಈಗ, ಮುಳಬಾಗಿಲ ಜಯಸ್ತಂಭದ ಸರದಿಬಂದಿದೆ. ಇಲ್ಲಿಯ ವರೆಗೂ, ಆ ಸ್ತಂಭವು ಅತ್ಯಂತ‐ಅಧಿಕೃತ ಐತಿಹಾಸಿಕ‐ದಾಖಲೆಯೆಂದೇ ಉಗ್ರವಾಗಿ, ಪ್ರತಿಪಾದಿಸಲಾಗುತ್ತಿತ್ತು. ಆದರೆ ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ ಮೂವರೂ ವಿದ್ವಾಂಸರು, ಆ ಸ್ತಂಭದ ಅಧಿಕೃತ ಐತಿಹಾಸಿಕತೆ ಯನ್ನು ತಳ್ಳಿಹಾಕುತ್ತ, ಅದನ್ನು ಅಲ್ಲಗಳೆದಿದ್ದಾರೆ. ಜಯಸ್ತಂಭವು ಅನಧಿಕೃತವೆಂದೊಪ್ಪಿಕೊಂಡರೆ, ವೈದಿಕ‐ವಿದ್ಯಾರಣ್ಯರು ಒತ್ತಟ್ಟಿಗಿರಲಿ, ಅವೈದಿಕ ‐ ವಿದ್ಯಾರಣ್ಯರ ಜೊತೆಗೂ ವಾದ ನಡೆಯಲಿಲ್ಲ, ಅವರೂ ಸೋಲಲಿಲ್ಲ ಎಂಬುದು ಕೂಡ ಸಿದ್ಧವೇ ಆಗುತ್ತದೆ. ಈ ಜಯಸ್ತಂಭದ ಬಗ್ಗೆ ಇನ್ನೂ ಒಂದು ವಿಚಿತ್ರವನ್ನು, ನನಗೆ ಬರೆದ ಪತ್ರದಲ್ಲಿ, ಹನಸೋಗೆ ಶ್ರೀ ವಿಶ್ವನಂದನ ತೀರ್ಥರು ದಾಖಲಿಸಿದ್ದಾರೆ. “ಹಿಂದೆ ಈ ವಿಜಯಸ್ತಂಭದ ಬಗ್ಗೆ ಚರ್ಚೆಬಂದಾಗ, ಅಂದಿನ ಮುಳಬಾಗಿಲ ಶ್ರೀಪಾದರಾಜ ಮಠಾಧೀಶರಾಗಿದ್ದ ಶ್ರೀವಿಜ್ಞಾನನಿಧಿತೀರ್ಥರು “ಕೋಲಾರವಾಣಿ” ಎಂಬ ಪತ್ರಿಕೆಯಲ್ಲಿ ಹೇಳಿಕೆಯನ್ನು ಕೊಟ್ಟು ಅಕ್ಷೋಭ್ಯ ತೀರ್ಥರ ದ್ವೈತವಾದವನ್ನು ಮೆಚ್ಚಿಕೊಂಡ, ವಿದ್ಯಾರಣ್ಯರೇ ಈ ವಿಜಯ ಸ್ತಂಭವನ್ನು ಸ್ಥಾಪಿಸಿದರು ಎಂದು ಸ್ಪಷ್ಟಪಡಿಸಿದ್ದರು.” ಇದು ಎಂದಾದರೂ ಸಾಧ್ಯವೇ? ಸೋತವರು “ಜಯಸ್ತಂಭ [?]” ನಿಲ್ಲಿಸಿದ್ದು ಅಶ್ರುತಪೂರ್ವ ಆಘಾತಕರ ಅಂಶ. ಇದು ನಿಜವೇ ಆಗಿದ್ದರೆ, ಸುಮಾರು ಎರಡು ಶತಕಗಳ ಹಿಂದೆ, ವ್ಯಾಸತೀರ್ಥ ಪೂಜ್ಯ ಚರಣರು ತಮ್ಮ ಬೃಹಜ್ಜಯತೀರ್ಥ ವಿಜಯದಲ್ಲಿ, [2‐69] ಸ್ತಂಭಂ ಪ್ರತಿಷ್ಠಾಪ್ಯ ಜಯಾಂಕಮಶ್ಮನಃ । ತತೋ ಯಯೌ ಭೀಮರಥೀ ತಟಂ ಸಃ ॥ ಅಕ್ಷೋಭ್ಯ ತೀರ್ಥರು ಕಲ್ಲಿನ ಜಯಸ್ತಂಭವನ್ನು ನಿಲ್ಲಿಸಿ, ಭೀಮರಥೀ ತೀರಕ್ಕೆ ಹೊರಟು ಹೋದರು ಎಂದು ಬರೆದದ್ದು, ಮಾಧ್ವರ ಪ್ರಕಾರವೇ ಅಪ್ರಾಮಾಣಿಕ ಎಂದೇ ಸಿದ್ಧವಾಯಿತಲ್ಲ? [ವಿವರಗಳಿಗಾಗಿ, ಅಕ್ಷೋಭ್ಯ ವಿಜಯ ವಿಭ್ರಮ ಪು. 293, ವಿದ್ಯಾರಣ್ಯ ವಿಜಯ ದುಂದುಭಿ ಭಾಗ 2, ಪು. 8 ನೋಡಿ]. ಈಗ ಎಲ್ಲರೂ ಜಯಸ್ತಂಭದ ಅಧಿಕೃತತೆಯನ್ನು ತಳ್ಳಿ ಹಾಕಿದ್ದರಿಂದ, ಆ ಬಗ್ಗೆ ಹೆಚ್ಚಿನ ಚರ್ಚೆ ಬೇಕಾಗಿಲ್ಲ.] ಮಾಧ್ವರು, ಸಂದರ್ಭಕ್ಕೆ ತಕ್ಕಂತೆ, ತತ್ಕ್ಷಣ ಹೇಗೆ ರಾಗ ಬದಲಾಯಿಸುತ್ತಾರೆ ನೋಡಿ. ಇಲ್ಲಿಯ ವರೆಗೆ, ಈ ಸ್ತಂಭವು ಮಾಧ್ವರಿಗೆ ಪರಮ‐ಅಭಿಮಾನದ ಕುರುಹಾಗಿಕಾಣುತ್ತಿತ್ತು. ಈಗ ಅದು ಖೊಟ್ಟಿ ಎಂದು [[33]] ತಿಳಿದಾಕ್ಷಣ, ಈಗ ಹೊ.ಶ್ರೀಯವರು “ಅದೇನೂ ದೊಡ್ಡಮಾತಲ್ಲ ಬಿಡಿ, ಅದಿಲ್ಲದಿದ್ದರೇನಂತೆ? ನಾವೆಲ್ಲ ಲಕ್ಷ‐ಲಕ್ಷ ಜನ ಜೀವಂತ ಜಯಸ್ತಂಭವೇ ಆಗಿದ್ದೇವಲ್ಲ” ಎಂದು ಸಮಾಧಾನ ಮಾಡಿಕೊಂಡಿದ್ದಾರೆ. ಅಷ್ಟೇ ಯಾಕೆ? “ವಾದ ನಡೆದದ್ದೂ ನಿಜ, ಅದರಲ್ಲಿ ಶೃಂಗೇರಿ ಜಗದ್ಗುರು ಶ್ರೀ ವಿದ್ಯಾರಣ್ಯರೇ **ಸೋತದ್ದೂ ಅಷ್ಟೇ ನಿಜ” **ಎಂದು ಅತ್ಯಂತ ಜಿಗುಟಿನಿಂದ, ಭಾವಾವೇಶಪೂರ್ಣವಾಗಿ, [vehemently] ವಾದಿಸಲಾಗುತ್ತಿತ್ತು. ಅದು ಈಗ, “ವಾದ ನಡೆದದ್ದೇನೋ ನಿಜ, ಆದರೆ ಸೋತವರು ಶೃಂಗೇರಿ ಜಗದ್ಗುರು ಶ್ರೀ **ವಿದ್ಯಾರಣ್ಯರಲ್ಲ, ಕಿಂತು ಅವೈದಿಕರಾದ ಮಾಧವ ಮಂತ್ರಿಗಳು” **ಎಂಬಲ್ಲಿ ವರೆಗೆ ಬಂದು ನಿಂತಿದೆ. ಮಧ್ವಾಚಾರ್ಯರ ಚರಿತ್ರಯನ್ನು ಕುರಿತು ಮಧ್ವವಿಜಯವೊಂದೇ ಅಧಿಕೃತಕೃತಿ ಎಂದು ನಾನು ಈ ವರೆಗೂ ತಿಳಿದುಕೊಂಡಿದ್ದೆ. ಆದರೆ, ನನ್ನ ಸನ್ಮಿತ್ರ ಶ್ರೀ ಆನಂದ ಝಂಜರವಾಡ ಅವರು, ಅಲ್ಲ ಎಂದರು. ಝಂಜರವಾಡರು ಜನ್ಮದಿಂದಲೂ, ಶ್ರದ್ಧೆಯಿಂದಲೂ ನಿಷ್ಠಾವಂತ ಮಾಧ್ವರೇ! ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರಾದ ಸತ್ಯನಾಥ ತೀರ್ಥರೇ ಬರೆದ **“ಮಧ್ವ ವಿಲಾಸ” **ಎಂಬ ಗ್ರಂಥವೊಂದಿದೆಯಂತೆ. ಅದು ಇತ್ತೀಚೆಗೆ ಕನ್ನಡಕ್ಕೆ ಅನುವಾದವಾಗಿದೆ, ಅದರ ಪ್ರತಿಯನ್ನು ತಂದು ಕೊಡುವದಾಗಿ ಅವರು ನನಗೆ ತಿಳಿಸಿದ್ದಾರೆ. ಅವರು ಈ ರೀತಿ ಬರೆದಿದ್ದಾರೆ. “ಮಧ್ವವಿಲಾಸದ ಕನ್ನಡ ಆವೃತ್ತಿ ದೊರಕಿದೆ. ತಂದು ಕೊಡುವೆ. ಮಾಧ್ವ ಮಠ, ಪೀಠ, ಸನ್ಯಾಸಿ, ಗುರು, ಶಿಷ್ಯ, ಎಲ್ಲ ವಿಷಯ ಎಷ್ಟು ಗೊಂದಲದ ಗೂಡು ಆಗಿವೆ ಎನ್ನೋದು ನೋಡಿದರೆ, ವಿದ್ಯಾರಣ್ಯರು ಅಕ್ಷೋಭ್ಯರ ನಡುವೆ ವಾದ ನಡೆಯಿತು ಅನ್ನೋದು ಕೂಡ, ಹೇಗೆ ಒಂದು “ಕಿಯೇಟೆಡ್” **[created] ದಾಖಲೆ [ಕಟ್ಟುಕಥೆ] ಎನಿಸಿಬಿಡುತ್ತದೆ”**ಎನ್ನುತ್ತ, ಈ ವಾದವು ಕೇವಲ ಕಪೋಲಕಲ್ಪಿತ ಗುಮ್ಮವಾಗಿದೆ ಎಂದು ಅಭಿಪ್ರಾಯಪಡಟ್ಟಿದ್ದಾರೆ. ಹೀಗೆ ಮಾಧ್ವರು ಒಬ್ಬೊಬ್ಬರಾಗಿ ಸರದಿಯಂತೆ, “ಕೈಚೆಲ್ಲುತ್ತಿದ್ದಾರೆ, ನಮ್ಮ ಕೈ ಬಲಪಡಿಸುತ್ತಿದ್ದಾರೆ. “ಕ್ಲೇಶಃ ಫಲೇನ ಹಿ ಪುನರ್ನವತಾಂ ವಿಧತ್ತೇ” ಎಂಬ ಕಾಲಿದಾಸೋಕ್ತಿಯಂತೆ, ನನ್ನ ಶ್ರಮವು ಸಾರ್ಥಕ್ಯವನ್ನು ಕಂಡಿದೆ. ನನ್ನಲ್ಲಿ ಹೊಸ ಚೈತನ್ಯವನ್ನು ತಂದಿದೆ. ಶ್ರೀ ಮಾಧವ‐ವಿದ್ಯಾರಣ್ಯ ಮಹಾಸ್ವಾಮಿಗಳ ಜೊತೆಗೆ ಅಕ್ಷೋಭ್ಯರ ವಾದವು ನಡೆಯಲೇ ಇಲ್ಲ ಎಂಬ ಸತ್ಯವು ಸಾವಕಾಶವಾಗಿ, “ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ‐‐‐‐ಮಜ್ಜಿಗೆಯೊಳಗಿನ ಬೆಣ್ಣೆಯಂತೆ” ಮೆತ್ತಗೆ ಮೆತ್ತಗೆ, ಮೆಲ್ಲಮೆಲ್ಲನೆ ಮಾಧ್ವಮೂಲಗಳಿಂದಲೇ ಹೊರಬರುತ್ತಿದೆ. ಅದರ ಪೂರ್ಣೋದಯಕ್ಕಾಗಿ, ನಾವು ಕಾಯುತ್ತಿದ್ದೇವೆ.

‐‐‐ ಗ.ರಾ.ಪಾಟೀಲ. ಧಾರವಾಡ.
॥ ಮಂಗಲ ವಿದ್ಯಾರಣ್ಯ ಗುರುವರಗೆ ಮಂಗಲಂ ಜಯಮಂಗಲಮ್ ॥