ವಾಸುದೇವನ_ಪದಪರಿಕ್ರಮ 👣👣👣👣👣👣👣👣
ಶ್ರೀಮಧ್ವಾಚಾರ್ಯರು ಪೂರ್ವಾಶ್ರಮದ ನಾಮ ವಾಸುದೇವ .ಒಮ್ಮೆ ವಾಸುದೇವ ಕೇವಲ ಮೂರು ವರ್ಷದ ಪುಟ್ಟ ಮಗುವಾಗಿದ್ದಾಗ ತಂದೆತಾಯಿಗಳಾದ ಮಧ್ಯಗೇಹಭಟ್ಟದಂಪತಿಗಳು ತಮ್ಮ ಬಂಧುಗಳ ಗೃಹಕ್ಕೆ ವಿವಾಹಕ್ಕಾಗಿ ಹೋಗಿದ್ದರು. ಆ ಊರಿನ ಹೆಸರು (ಆಗ ನಡುವೈರಿ ಎಂದಾಗಿತ್ತು- ಈಗ ಇದು ನಿಡಿಯೂರು ಎಂದು ಪ್ರಸಿದ್ಧವಾಗಿದೆ.) ಆಗ ಮದುವೆಯ ಸಡಗರದಲ್ಲಿ ತಂದೆತಾಯಿಗಳು ಬಂಧುಗಳೊಡನೆ ಸಂಭ್ರಮದಲ್ಲಿ ತೊಡಗಿ ತನ್ನನ್ನು ಗಮನಿಸದೇ ಇರುವುದನ್ನು ಕಂಡು ವಾಸುದೇವ ಅಲ್ಲಿಂದ ಹೊರಟುಬಿಟ್ಟ. ಹೀಗೆ ವಾಸುದೇವ ಕಾಲ್ನಡಿಗೆಯಲ್ಲಿಯೇ ಅನೇಕ ದೇವಾಲಯಗಳನ್ನು ಸಂದರ್ಶಿಸಿ ನಿಡಿಯೂರಿನಿಂದ ಅನೇಕ ದೇವಳಗಳನ್ನು ಕಂಡು ಕೊನೆಗೆ ಉಡುಪಿಯ ಅನಂತಾಸನ ದೇವಸ್ಥಾನವನ್ನು ತಲುಪುತ್ತಾನೆ.
ನಿಡಿಯೂರಿನಿಂದ <—> ಕೊಡವೂರು = 3.8km ಕೊಡವೂರಿನಿಂದ<—>ಬನ್ನಂಜೆ = 4.3km ಬನ್ನಂಜೆಯಿಂದ<—> ರಜತಪೀಠಪುರ =1.8km
ಹೀಗೆ 3 -ವರ್ಷದ ಶಿಶು ವಾಸುದೇವ ಸಂದರ್ಶಿಸಿದ್ದು ತನ್ನ ಪುಟ್ಟ ಹೆಜ್ಜೆಗಳಿಂದ ಸಂಚರಿಸಿದ್ದು ಒಟ್ಟು ಸರಿಸುಮಾರು “ಹತ್ತು ಕಿಲೋಮೀಟರ್ (10.km) ಗಳಷ್ಟು ದೂರವನ್ನು ಮನುಷ್ಯರ ಊಹೆಗೂ ನಿಲುಕದ ಅತಿಮಾನುಷವ್ಯಕ್ತಿತ್ವ ಈ ವಾಯುದೇವರ ಅವತಾರವಾದ ವಾಸುದೇವನದ್ದು.
ಈ ಸಂಚರಣದಲ್ಲಿ ವಾಸುದೇವ ಒಟ್ಟು 4 ದೇವಸ್ಥಾನಗಳನ್ನು ಸಂದರ್ಶಿಸುತ್ತಾನೆ.
ನಿಡಿಯೂರು- ಕೊಡವೂರು-ಬನ್ನಂಜೆ -ಉಡುಪಿ
ದೇವಾಲಯದ ಲಘು ಪರಿಚಯ 🛕🛕🛕🛕🛕🛕🛕 ೧)ನಿಡಿಯೂರು ಪ್ರಾಚೀನ ನಾಮ (ನಡುವೈರಿ) ಇದು ಮಧ್ವಾಚಾರ್ಯರ ಬಂಧುಗೃಹ ಈಗ ಇಲ್ಲಿ ಸಂನ್ಯಾಸಿಮಠವೆಂಬುದು ಇದೆ.ಇಲ್ಲಿ ಪಡುಮಠವೆಂಬ ಸ್ಥಳವಿದ್ದು ಅಲ್ಲಿ ಶ್ರೀಮದಾಚಾರ್ಯರು ದುರ್ಗಾದೇವಸ್ಥಾನಕ್ಕೆ ಭೇಟಿಕೊಟ್ಟಿದ್ದು ಪ್ರತಿಮೆಯೊಂದನ್ನು ಅಲ್ಲಿನ ಬ್ರಾಹ್ಮಣ ಕುಟುಂಬಕ್ಕೆ ಕೊಟ್ಟರು ಎಂದು ಅಲ್ಲಿನ ಅರ್ಚಕರು ತಿಳಿಸುತ್ತಾರೆ. ಈ ಐತಿಹ್ಯವಿದೆ ಮಧ್ವಾಚಾರ್ಯರ ಬಂಧುಗೃಹ ಯಾವುದು ಎಂಬ ಮಾಹಿತಿ ಇಲ್ಲ.
ಹೀಗೆ ವಾಸುದೇವ ನಿಡಿಯೂರಿನಿಂದ ಹೊರಟು ಕೊಡವೂರು ತಲುಪಿದ.
೨)ಕೊಡವೂರು ಶಂಕರನಾರಾಯಣ ದೇವಸ್ಥಾನ (ಪ್ರಾಚೀನನಾಮ ಸಂಸ್ಕೃತನಾಮ ಕಾನನದೇವತಾಸದನ) ವಾಸುದೇವ ಈ ದೇವಸ್ಥಾನದಲ್ಲಿರುವ ಶಂಕರನಾರಯಣಲಿಂಗದಲ್ಲಿ ಮುಖ್ಯಸ್ವಾಮಿಯಾದ ರಮಾಪತಿಗೇ ನಮಸ್ಕರಿಸುತ್ತಾನೆ. ಇಲ್ಲಿ ಒಂದೇ ಲಿಂಗದಲ್ಲಿ ಶಂಕರ &ನಾರಾಯಣ ಪೂಜೆಗೊಳ್ಳತ್ತಿರುವರು. ಆಚಾರ್ಯರ ಭೇಟಿಯ ಸ್ಮಾರಕವಾಗಿ ಈಗ ದೇವಸ್ಥಾನದ ಮುಖ್ಯದ್ವಾರದ ಮೇಲೆ ಮಧ್ವಾಚಾರ್ಯರ ಪ್ರತಿಮೆಯನ್ನು ಇರಿಸಲಾಗಿದೆ.)
ಅನಂತರ ವಾಸುದೇವ ಕೊಡವೂರಿನಿಂದ ಹೊರಟು ಬನ್ನಂಜೆಗೆ ತಲುಪಿದ.
೩)ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನ( ಪ್ರಾಚೀನನಾಮ ತಾಳೆಕುಡೆ) ಇದು ಖರ ರಟ್ಟ ಎಂಬಿಬ್ಬರು ರಾಕ್ಷಸರಿಗೊಲಿದ ರುದ್ರದೇವರ ದೇವಸ್ಥಾನ. ಇಲ್ಲಿಗೆ ಬಂದ ವಾಸುದೇವ ರುದ್ರಾಂತರ್ಯಾಮಿಯಾದ ಸಂಕರ್ಷಣನಿಗೇ ನಮಸ್ಕರಿಸುತ್ತಾರೆ.
ಹೀಗೆ ಬನ್ನಂಜೆಯಿಂದ ಹೊರಟು ರಜತಪೀಠಪುರಕ್ಕೆ ತಲುಪಿದ.
೪)ರಜತಪೀಠಪುರ(ಒಡಿಪು ಪ್ರಾಚೀನ ನಾಮ ಈಗ ಉಡುಪಿ) ಇಲ್ಲಿನ ಪೂರ್ವದೇವಾಲಯ &ಪಶ್ಚಿಮದೇವಾಲಯಗಳನ್ನು ವಾಸುದೇವ ಸಂದರ್ಶಿಸುತ್ತಾನೆ.
೧)ಪೂರ್ವದೇವಾಲಯ:- ಪೂರ್ವದೇವಾಲಯವೆಂದರೆ ಪೂರ್ವದಿಕ್ಕಿನಲ್ಲಿರುವ ಗುಡಿ. ಶ್ರೀಚಂದ್ರಮೌಳೀಶ್ವರದೇವಾಲಯ. ಇದು ಚಂದ್ರನತಪಸ್ಸಿಗೆ ಶಿವ ಲಿಂಗರೂಪದಲ್ಲಿ ಅನುಗ್ರಹಿಸಿದ ಸ್ಥಳ. ಇಲ್ಲಿ ವಾಸುದೇವ ಲಿಂಗಾಂತರ್ಗತ ಶ್ರೀಹರಿಗೆ ನಮಸುತ್ತಾನೆ.
೨)ಪಶ್ಚಿಮದೇವಾಲಯ :- ಪೂರ್ವದಿಕ್ಕಿನಲ್ಲಿ ಚಂದ್ರಮೌಳೀಶ್ವರ ಇದ್ದರೆ ಅದರ ಹಿಂದೆಯೇ ಪಶ್ಚಿಮಭಾಗದಲ್ಲಿನ ದೇವಾಲಯ ಅನಂತಾಸನದೇವಸ್ಥಾನ. ಇದು ರಾಮಭೋಜ ಎಂಬ ರಾಜನಿಗೆ ಪರಶುರಾಮ ಅನುಗ್ರಹಮಾಡಲು ಲಿಂಗರೂಪದಲ್ಲಿ ಅನಂತಪದ್ಮನಾಭ ನಾಗಿ ನೆಲೆಸಿದ ಸ್ಥಳ. ಇಲ್ಲಿ ಬಂದವಾಸುದೇವ ಸಾಕ್ಷಾತ್ ಲಿಂಗದಲ್ಲಿನ ನಾರಾಯಣನಿಗೇ ನಮಸ್ಕರಿಸುತ್ತಾನೆ.
ಈ ನಾಲ್ಕೂಕಡೆ ಮಾಧ್ವರೇ ಪೂಜಾದಿಕೈಂಕರ್ಯವನ್ನು ಭಕ್ತಿಯಿಂದ ಮಾಡುತ್ತಿದ್ದಾರೆ.
ವಾಸುದೇವನ ಈ ಪಯಣ ಮುಗಿದಿದ್ದು ಇಲ್ಲಿಗೆ.
ಹೀಗೆ ಮದುವೆ ಮನೆಯಿಂದ ಹೊರನಡೆದ ವಾಸುದೇವ ಅನಂತಾಸನದಲ್ಲಿ ನಮಸ್ಕರಿಸುತ್ತಿರುವಾಗ ಹುಡುಕಿಕೊಂಡುಬಂದ ಮಧ್ಯಗೇಹಭಟ್ಟರಿಗೆ ಸಿಗುತ್ತಾನೆ. ಅಲ್ಲಿಯವರಿಗೂ ಒಬ್ಬನೇ ಹೇಗೆ ಬಂದೆ ಎಂದು ಮಧ್ಯಗೇಹಭಟ್ಟರ ಪ್ರಶ್ನೆಗೆ ವಾಸುದೇವ “ಎಲ್ಲೆಡೆಯೂ ನನಗೆ ಸಖನಾದವನು ನಾರಾಯಣನೇ “ಎಂಬ ಅಚ್ಚರಿಯ ಉತ್ತರವನ್ನೀಯುತ್ತಾನೆ. ಹೀಗೆ ಇದೊಂದು ವಾಯುದೇವರ ಅಪೂರ್ವಲೀಲೆ.ಅಮೋಘಚೇಷ್ಟೆ.ಅದ್ಭುತವಾದ ಸಾಮರ್ಥ.
ಶ್ರೀನಾರಾಯಣಪಂಡಿತಾಚಾರ್ಯರು “ಸುಮಧ್ವವಿಜಯ”*ದಲ್ಲಿ ಈ ಎಲ್ಲಾ ಘಟನೆಗಳನ್ನೆಲ್ಲಾ ಸಂಗ್ರಹಿಸಿದ್ದಾರೆ. ಒಂದೆಡೆ ಅವರೇ ಭಕ್ತ್ಯುತ್ಕಕಂಠತೆಯಿಂದ ಉದ್ಗರಿಸುತ್ತಾರೆ. ಗಮನಾಸನಸಂಕಥಾದಿಲೀಲಾ: ಸ್ಮೃತಿಮಾತ್ರೇಣ ಭವಾಪವರ್ಗದಾತ್ರೀ: ಇಂತಹಾ ವಾಯುದೇವರ ನಡೆ ನೆಲೆ ನುಡಿ ಮೊದಲಾದ ನಲಿವುಗಳು ಏನಿವೆಯೋ ಇವುಗಳ ನೆನೆಪೇ ಸಜ್ಜನರಿಗೆ ಮೋಕ್ಷವನ್ನು ತಂದುಕೊಡುವಂಥದ್ದು. ಇಂತಹಾ ಆಚಾರ್ಯರ ಅನುಗ್ರಹ ಅವಶ್ಯವಾಗಿ ಸಾಧಕನಾದವನು ಸಂಪಾದಿಸಬೇಕು.
ಇದರ ಬಗ್ಗೆ ಮ್ಯಾಪ್ ನಲ್ಲಿ ಹೀಗೆ ಗಮನಿಸಬಹುದು.
https://maps.app.goo.gl/bu6yaYyw2gMzSoy6A
ಇಂತಹಾ ಕ್ಷೇತ್ರಗಳಿಗೆ ಸಂಚರಿಸಿ ಕ್ಷೇತ್ರದ ಮುಖ್ಯದೇವತೆಯ ಅಂತರ್ಯಾಮಿಯಾದ ಶ್ರೀರಮಾಪತಿಯ &ಕ್ಷೇತ್ರಕ್ಕೆ ಸಂಚರಿಸಿದ ಭಾರತೀಪತಿ ಮತ್ತು ಕ್ಷೇತ್ರಾಧಿಷ್ಠಿತರಾದ ನಾರಾಯಣ &ರುದ್ರದೇವರ ಅನುಗ್ರಹವನ್ನು ಸಂಪಾದಿಸೋಣ.
✍️ಅನಿಲ ಜೋಷಿ
•|| मध्वो देदीप्यतेसौ जगति विजयते सत्सभामङ्गलाय ||•