೦೭ ತದ್ಧಿತಾಂತ ನಾಮಪದಗಳು

ನಾಮಪ್ರಕೃತಿಗಳಿಗೆ ಬೇರೆ ಬೇರೆ ಅರ್ಥಗಳನ್ನು ಕೊಡುವ ತದ್ದಿತಪ್ರತ್ಯಯಗಳೆಂಬುವನ್ನು ಹತ್ನಿಸಿದಾಗ ಅಡಕವಾಗಿ ಹೊಸ ನಾಮಪದಗಳು ರೂಪುಗೊಳ್ಳುತ್ತವೆ. ಇವು ತದ್ದಿತಾಂತಗಳು ಅಥವಾ ತದ್ಧಿತನಾಮಪದಗಳು, ವಿವಿಧಾರ್ಥಗಳ ನಾಮಪದಗಳನ್ನು ಸಂಕ್ಷೇಪವಾಗಿ ಕಲ್ಪಿಸುವ ಪ್ರಯತ್ನಗಳ ಫಲವಾಗಿ ಹುಟ್ಟಿದವು, ಈ ನಿಷ್ಪನ್ನ ನಾಮಪದಗಳು, ಪ್ರಾಚೀನ ವ್ಯಾಕರಣಗಳಲ್ಲಿ ಸುಮಾರು ೪೦ ತದ್ಧಿತ ಪ್ರತ್ಯಯಗಳನ್ನು ಗುರುತಿಸಿದ್ದರೂ, ಗುರುತಿಸದೇ ಇರುವ ಇನ್ನೂ ಕೆಲವುಂಟು, ವಿವಿಧ ಅರ್ಥಚ್ಯಾಯಗಳನ್ನು ಅಥವಾ ಅರ್ಥಾಂತರಗಳನ್ನು ತರಲು ಒಂದೇ ಪ್ರಕೃತಿಗೆ ಬೇರೆ ಬೇರೆ ಪ್ರತ್ಯಯಗಳನ್ನು ಸೇರಿಸುವ ಹಾಗೂ ಒಂದೇ ಪ್ರತ್ಯಯ ಬೇರೆ ಬೇರೆ ಅರ್ಥಗಳ ತದ್ಧಿತಾಂತಗಳನ್ನು ರೂಪಿಸುವ ಈ ಭಾಷಾವ್ಯಾಪಾರ ಕುತೂಹಲಕರವಾದುದು,

ಮುಂದೆ ಕೊಡುವ ಶಬ್ದರೂಪಗಳ ಅರ್ಥ ಪ್ರಯೋಗಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟುವನ್ನೂ ‘ದರ್ಪಣವಿವರಣ’ ಮೊದಲಾದ ವಿಮರ್ಶಗ್ರಂಥಗಳನ್ನೂ ನೋಡುವುದು ಸೂಕ್ತ. ತೀರ ಅವಶ್ಯವಿದ್ದಡೆ ಅಲ್ಲಲ್ಲಿ ಕೆಲವು ವಿವರಣೆಗಳನ್ನು ಕೊಟ್ಟಿದೆ.

ಅಕಾರಾಂತ ಪುಂ ವಾಚಕಗಳು ವ್ಯಂಜನ ನಕಾರಾಂತಗಳಾಗಿಯೂ ನಪ್ ವಾಚಕಗಳು ವ್ಯಂಜನ ಮಕಾರಾಂತಗಳಾಗಿಯೂ ಇರುತ್ತವೆ. ಅದಕ್ಕೆ ಅನುಗುಣವಾಗಿ ಮುಂದಿನ ಉದಾಹರಣೆಗಳನ್ನು ಪರಿವರ್ತಿಸಿಕೊಳ್ಳಬಹುದು.

೧. ಅಟಿಗ : ಗಳ ಹಿಡಿದು ಆಡುವುದು ಇತ್ಯಾದಿ ವಿಶಿಷ್ಟ ಸಂದರ್ಭಗಳನ್ನು ಹೇಳುವುದು ಆಡು+ಇಗು > ಅಟೆಗ(?) ಕೋಟಿಗ, ದೀವಟಿಗ

೨. ಅಡಿಗ : ಕ್ರೀಡಿಸು, ವ್ಯವಹರಿಸು ಎಂಬ ಅರ್ಥವನ್ನು ಹೇಳುವುದು. ಆಡು+ಇಗ > ಅಡಿಗ

ಪಾವಡಿಗ, ಪೂವಡಿಗ, ದೇವಡಿಗ ೩. ಆಯ್ಕೆ : ಈ ನಿಯೋಗವನ್ನು ಈತ ನಡಸುವವನು ಎಂಬ ಅರ್ಥವನ್ನು ಹೇಳು ವುದು, ಸಂ, ಆಯತ > ಆಯ್ಕೆ (?)

ಅಚ್ಚುಳಾಯ್ಕ, ಝಳಂಬಾಯ್ಕ, ಸೋಲಾಯ್ಕ, ನಾಗಾಯ್ಕ, ಗೋಟಾಯ್ಕ ೪. ಆಳಿ : ಶೀಲ ಮೊದಲಾಗಿ ಹಲವು ಅರ್ಥಗಳಿಗಾಗಿ ಬಳಕೆಯಾಗುವುದು. ಸಂ ಆಲಚ್/ಆಲ > ಆಳಿ ಅಥವಾ ಆಡು+ಇ>ಆಳಿ (2)

ಓದಾಳಿ, ಮಾತಾಳಿ, ಜೂದಾಳಿ, ಕೇಡಾಳಿ, ಸಿಗ್ದಾಳಿ, ಪಡಪಾಳಿ ೫. ಇಕ : ಶೀಲ ಮೊದಲಾದ ಹಲವು ಅರ್ಥಗಳಿಗಾಗಿ ಬಳಕೆಯಾಗುವ ಇನ್ನೊಂದು

೯೧

ಪ್ರತ್ಯಯ. ಇದು ಇಕ/ಉಕ, ಕ ಗುಂಪಿನಲ್ಲಿ ಬರುತ್ತದೆ.

ಕರಿಕ, ದಸಿಕ, ಪುಸಿಕ, ಬಾರಿಕ ೬. ಇಗ : ಶೀಲ ಮೊದಲಾದ ಹಲವು ಅರ್ಥಗಳಿಗಾಗಿ ಬಳಕೆಯಾಗುವ ಮತ್ತೊಂದು ಪ್ರತ್ಯಯ. ಇದು ಕೂಡ ಇಕ/ಕ, ಕ ಗುಂಪಿಗೇ ಬರುತ್ತವೆ. ಆದರೆ ಇದರ ಮೂಲ ಸಂಸ್ಕೃತದ ವೈದಿಕ ಧಾರ್ಮಿಕ ಇತ್ಯಾದಿ ಶಬ್ದಗಳಲ್ಲಿ ಕಾಣುವ ಠಕ್/ಇಕ ಪ್ರತ್ಯಯವೂ ಇರಬಹುದು.

ಕಬ್ಬಿಗ, ಸಿಂಗರಿಗ (ಮಾಡುವವನು), ಗಂದಿಗ, ದೂಸಿಗ (ಮಾರುವವನು), ಹಡಪಿಗ, ಚಾಮರಿಗ (ಒಪ್ಪಿಸಿದ ಕೆಲಸವನ್ನು ನಿರ್ವಹಿಸುವವನು), ಜೋಯಿಸಿಗ, ಲೆಕ್ಕಿಗ (ಬಲ್ಲ ವನು), ಅಟಮಟಿಗ, ಪುಸಿಗ (ಸುಳ್ಳಾಡುವವನು), ಸಾಲಿಗ, ಹಂಗಿಗ (ಋಣದಲ್ಲಿರು ವವನು), ಚಿಪ್ಪಿಗ (ಶಿಲ್ಪಕಾರದಲ್ಲಿ ತೊಡಗಿರುವವನು), ಮೂಲಿಗ (ಮೂಲ ಎಂದರೆ ಆಸಲು, ಬಂಡವಾಳ: ಇದರ ವ್ಯವಹಾರದವನು)

ಕೆಲವು ತದ್ಭವಗಳಿಗೂ ಇಗ ಪ್ರತ್ಯಯ ಹತ್ತಬಹುದು. ತಂಬುಲಿಗ (<ತಾಂಬೂಲಿಕ), ಜೋಯಿಸಿಗ (<ಜ್ಯೋತಿಷಿಕ) 4. ಇಚ : ಇದರಲ್ಲಿ ಹುಟ್ಟಿದವನು ಎಂಬುದನ್ನು ಹೇಳುವ ಪ್ರತ್ಯಯ, ಸಂ.ಜ>ಚ!

ಇಚ (?)

ಅಲರಿಚ, ಪೋಲಿಚ, ಕಾಲುಂಚ ೮. ಇಲ/ಅಯಿಲ/ಆಯಿಲ/ಆಯ : ದೀನ್ ಎಂಬ ಅರ್ಥದಲ್ಲಿ (=ಕ್ರೀಡಿಸು,

ಮಾರು, ಪ್ರಕಾಶಿಸು ಇ) ಬರುವ ಪ್ರತ್ಯಯ, ಮೂಲ ಇಲ ಎಂದಿದ್ದು ಅಖಿಲ ಮೊದಲಾದವು ಬೆಳೆವಣಿಗೆಯ ರೂಪಗಳಿರಬೇಕು.

ಪಡೆಯಲ, ಘೋಟಯಿಲ/ಗೋಟಾಯಿಲ/ಘೋಟಾಯಿಲಘಟಾಯ್ಕ, ಓಜಾ ಯಲ, ಅಡ್ಡಾಯಿಲ, ಪುಗ್ಗಾಯಿಲ/ಪುಗ್ಗಾಯ್ಕ, ಗಾವಿಲ.

ಸಂಸ್ಕೃತರೂಪಗಳಿಗೆ ಸಹ ಹತ್ತಬಹುದು: ಗಾಢಾಯಿಲ, ರೇಖಾಯಿಲ.

• ಉಕ : ಶೀಲಾದ್ಯರ್ಥದ ಪ್ರತ್ಯಯಗಳ ಗುಂಪಿಗೆ ಸೇರಿದ ಒಂದು ಪ್ರತ್ಯಯ : ಇಕ! ಉಕ/ಕ, ಬಹುಶಃ ಮೂಲ ಕ ಎಂದೇ.

ಕಟ್ಟುಕ, ಕಾರುಕ; ವಸ್ತುಕ, ಘಾತುಕ (ಸಂ.)

  1. ಉಗ : ವ್ಯವಹರಿಸುವವನು, ವರ್ತಿಸುವವನು ಎಂಬ ಅರ್ಥದ ಪ್ರತ್ಯಯ. ಕೂಡ ಇಕ/ಇಗ/ಕ/ಗ/ಉಕ ಎಂಬ ಶ್ರೇಣಿಗೇ ಸೇರಿದ್ದು, ಉಕ>ಉಗ ಎಂಬ

ಇದು ಕೂಡ ಇಕ/ಇಗ

ಬೆಳವಣಿಗೆಯೇ ಇರಬಹುದು.

ನಾರುಗ, ಬೇರುಗ, ನೇಣುಗ, ಮಣ್ಣುಗ, ಹೆಣ್ಣುಗ

೧೧ ಉಣಿ : ಇದು ಉಣ್ ಧಾತುವಿಗೆ ಇ ಹತ್ತಿ ಸಿದ್ಧವಾದ ರೂಪ : ಇದರ ತದ್ಧಿತಾಂತಗಳು ತ್ರಿಲಿಂಗಕ್ಕೂ ಅನ್ವಯಿಸುವುದು ಸಾಧ್ಯ. ಅಮರ್ದುಣಿ, ಕುಣಿ, ಬಂಡುಣಿ, ತುಡುಗುಣಿ | ೧೨, ಉಳಿಗ : ಇದರಲ್ಲಿ ಇವನು ಬಾಳುವವನು ಎಂಬುದನ್ನು ಹೇಳುವ ಪ್ರತ್ಯಯ. ಈ ಪ್ರತ್ಯಯ ಬಹುಶಃ ಜೀವನ ಲಾಭಾರ್ಥಗಳನ್ನು ಕೊಡುವ ಉಿ ಎಂಬ ಧಾತು ಮೂಲವಾಗಿ ಹುಟ್ಟಿ ಉಣಿಗ > ಊಳಿಗ ಎಂದು ಪರಿವರ್ತಿಸಿರಬೇಕು.

ದುಂಡುಟಿಗ ದಂಡುಳಿಗ, ದೇವುಳಿಗ, ಮಣ್ಣುಳಿಗ

೧೩. ಉಳ್ಳ/ಒಡೆಯ : ಇವು ಇದೆ, ಉಂಟು ಎಂಬರ್ಥದ (ಅರ್ಥ) ಪ್ರತ್ಯಯ ಉಳ್ ಧಾತುವಿನಿಂದ ಉಳ್ಳ ಪ್ರತ್ಯಯವಾಗಿದೆ. ಒಡೆಯ (<ಒಡೆ) ಸ್ವತಂತ್ರವಾದ ಈ ರೂಪವೇ ಪ್ರತ್ಯಯವಾಗಿ ಸಿದ್ಧವಾಗಿದೆ.

ಧನಮುಳ್ಳವ್, ಅವಳನ್; ಸಿರಿಯೊಡೆಯನ್, ಪರ್ಮಯೊಡೆಯನ್: * ದೊಡೆಯನ್, ವಡ್ಡಾರಾಧನೆಯಲ್ಲಿ ಒಡೆಯನ್, ಒಡೆಯಳ್, ಒಡೆಯರ್, ಒಡಿ { ಒಡತು, ಒಡೆಯವ ಈ ಎಲ ರೂಪಗಳೂ ಇವೆ: ಬಹುಪ್ರಚುರವಾಗಿಯೂ ಬುದ್ದಿಯೊಡೆಯರ್‌ ಪಂಪನ ಪ್ರಯೋಗ (ಪಂಪಭಾ, ೩-೩೪ ವ.)

೧೪. ಕ : ಯಾವುದಾದರೂ ಒಂದು ಭಾವವುಂಟೆಂದು ಹೇಳುವ ಪ್ರತ್ಯಯ ಇಲ್ ಉಕ ಗುಂಪಿಗೆ ಸೇರಿದ್ದು, ಕುತ್ತಿತಾರ್ಥ, ಅನುಕಂಪಾರ್ಥದ ಸಂ ಅಕಚ್ (ಅ) ಪು ಪ್ರಭಾವದಿಂದ ಹುಟ್ಟಿರಬಹುದು.

ಬಡಕ, ನಿಡುಕ, ಕಿಡುಕ, ಒಣಕ, ಅಟಕ, ಬೆಳುಕ ೧೫. ಕಾಜಗಾದಿ : ಇವುಗಳಲ್ಲಿ ಇವನು ವ್ಯವಹರಿಸುವವನು (ಕಾದಿ), ಮಾಡುವ (ಗಾಳಿ) ಎಂಬ ಅರ್ಥಗಳನ್ನು ಕೊಡುವ ಪ್ರತ್ಯಯ. ಶಮದದ ವೃತ್ತಿಯಲ್ಲಿ ಕಾಡಿ ಗಾಳಿ ಪ್ರತ್ಯಯಗಳನ್ನು ಭಿನ್ನಾರ್ಥಕಗಳೆಂದು ಹೇಳಿದ್ದರೂ, ಕಾಣಿಸಿರುವ ಪ್ರಯೋಗ ಅದಕ್ಕೆ ಅನುಗುಣವಾಗಿಯೇ ಇದ್ದರೂ, ಈ ಪ್ರತ್ಯಯಗಳ ಮೂಲ ಒಂದೇ ಆಗರ ತೋರುವುದು.

ಇಕ/ಇಗ 8) ಪ್ರತ್ಯಯದ

  • ಬೇಹುಕಾಟ, ನಗವಡಿಕಾರಿ,

ನಡೆವಳಿಕಾಳಿ, ಕಯುಕಾಟ, ಬಂದಿಕಾಯಿ, ಗುಕಾಟ, ಬೇಹುಕಾಟ, ನಗೆ ಜಗಕಾದಿ, ಒಳುಡಿಕಾರಿ;

ಮಾಲೆಗಾಯಿ, ಕಂಚಗಾವಿ, ಬಳೆಗಾ ಗೆಜ್ಜೆಗಾರಿ, ಮಣಿಗಾವಿ, ಒಳಗಾವಿ ಒಂದು ವಿಶೇಷ : ಕಮ್ಮ (>ಕಮಾರ) ಮತ್ತು ಕುಂಬs (>ಕುಂಬಾರ) ರೂಪಗಳಲ್ಲಿ ಕೂಡ ಇವೇ ಪ್ರತ್ಯಯಗಳುಂಟೇ? ಅವು ಅಡಗಿ ಅಲ್ಲಿ ಸೇರಿವೆಯೇ? ಎಂಬ ಪ್ರ" ಅವಕಾಶವಿದೆ. ಕಮ್ಮ+ಗಾಂ=ಕಮ್ಮಜಂ ಎಂದೂ ಕುಂಬ+ಗಾದಿಂ=ಕುಂಬವಿ ಎಂ ಪರಿವರ್ತಿಸಿರಬಹುದು. ಆದರ ಕಮ್ಮಟ ಶಬ್ದ ಸಂ. ಕರ್ಮಾರ > ಪ್ರಾ.ಕಮ್ಮಾರೆ?

ಕಮ್ಮರ / ಕಮ್ಮ ಎಂದು ಆಗಿರುವುದು ಕೂಡ ಶಕ್ಯವೇ. ಹಾಗೆಯೇ ಸಂ, ಕುಂಭಕಾರ > ಕ.ಕುಂಬಗಾರ > ಕುಂಬರ / ಕುಂಬಜ ಆಗಿರಲೂಬಹುದು. ಕಾರ-ಕಾಟ ಪ್ರತ್ಯಯಗಳ ಬಳಕೆಯಲ್ಲಿ ಗೊಂದಲವೂ ಇದೆ (ಈ ವಿಷಯದ ಚರ್ಚೆಗೆ ನೋಡಿ : ದರ್ಪಣವಿವರಣ, ತದ್ಧಿತಪ್ರಕರಣ, ಪು. ೩೩೮-೩೯)

ಕಾದಿ, ಗಾಡಿ ಪ್ರತ್ಯಯಗಳೆರಡೂ ಒಂದೇ ಪ್ರಕೃತಿಗೆ ಸೇರಿರುವುದು ಕೂಡ ವಿರಳವಾಗಿ ಕಂಡುಬರುತ್ತದೆ.

ಇಚ್ಚಕಾ-ಇಚ್ಚಗಾದಿ, ಕಯ್ದುಕಾ-ಕಯ್ದುಗಾಡಿ ಉಕಾರಾಂತವಾದ ಕೆಲವು ಪ್ರಕೃತಿಗಳು, ಸಬಿಂದುಕ ಉಕಾರಾಂತ ಕರ್ಮಧಾರಯಗಳಂತೆ, ತಾವೂ ಸಬಿಂದುಕಗಳಾಗಿ ಕಾಯ>ಗಾಟ ಆಗಿ ಪರಿವರ್ತಿಸಿವೆ.

ಪಾಡುಂಗಾಟ, ಅಲಸುಂಗಾ, ಜೂಮಂಗಾಟ, ಓದುಂಗಾಟ ೧೬. ಕುಟಿಗ : ಇದರಲ್ಲಿ ವಿಶೇಷವಾಗಿ ವರ್ತಿಸುವವನು, ವೃತ್ತಿಯಾಗಿರುವವನು ಎಂಬುದನ್ನು ಈ ಪ್ರತ್ಯಯ ಹೇಳುವುದು. ಈ ಪ್ರತ್ಯಯದ ಮೂಲ ಅನಿಶ್ಚಿತ.

ಕಲ್ಕುಟಿಗ, ನೀರ್ಕುಟಿಗ, ಮರಕುಟಿಗ, ಕಿಕುಟಿಗ, ಕಲುಕುಟಿಗ,

೧೭. ಕುಳಿ : ಶೀಲಾದ್ಯರ್ಥಗಳಲ್ಲಿ ವಿನಿಯೋಗವಾಗುವ ಪ್ರತ್ಯಯ. ಈ ಪ್ರತ್ಯಯವೂ ಗಳ ಪ್ರತ್ಯಯವೂ ಸಮಾನಮೂಲ ಸಮಾನಾರ್ಥಗಳೇ ಆಗಿವೆ. ಕೊಳ್ ಧಾತುವಿಗೆ ಇತ್ಯ ಸೇರಿ ಆಗಿರುವುದೆಂದು ತೋರುವುದು (ಕೊ+ಇ=ಕುಳಿ>ಗುಳಿ)

ಆಯ್ತುಳಿ, ಓಡುಕುಳಿ, ಪೋರ್ಕುಳಿ, ಪಂಕುಳಿ, ಇಜ್‌ಕುಳಿ, ಪಡುಕುಳಿ ಪೋರ್ಕುಳಿಚೊಜಂಗ, ಪಂಕುಳಿನಾಯ್, ಪಡುಕುಳಿಯತ್ತು ಇತ್ಯಾದಿ ಸಮಾಸಗಳಲ್ಲಿ ಇವನ್ನು ಸಾಮಾನ್ಯವಾಗಿ ಗುರುತಿಸಬಹುದು.

೧೮. ಗ : ಕುಟಿಗ ಪ್ರತ್ಯಯದಂತೆಯೇ ಈ ಪ್ರತ್ಯಯ ಕೂಡ. ಬೂತುಗ, ಮಾತುಗ, ಅಗ, ಕಂತೆಗ, ಬೊಂತೆಗೆ, ಬೀದಿಗ, ಸಟೆಗೆ, ಎಡಗ, ನವನಿಗೆ

೧೯. ಗುಳಿ : ಕುಳಿ (<ಕೊಳ್+ಇ) ಪ್ರತ್ಯಯದ ಹಾಗೆಯೇ. ಕುಳಿ>ಗುಳಿ ತ್ರಿಲಿಂಗಕ್ಕೆ ಸಮಾನವಾಗಿ ಅನ್ವಯಿಸುತ್ತದೆ. ಬಿಂದುಸಹಿತವಾಗಿಯೂ ಬಿಂದುರಹಿತವಾಗಿಯೂ ಪ್ರಯೋಗವುಂಟು.

ಕುತ್ತಂಗಳಿ, ಲಂಚಂಗುಳಿ, ಸಾಲಂಗುಳಿ, ಬೈಕಂಗುಳಿ, ಆಡುಂಗುಳಿ; ಕುದುಗುಳಿ.

೨೦. ವಡಿಗ : ಇದನ್ನು ಇವನು ಇಕ್ಕುವನು ಎಂಬ ಅರ್ಥವನ್ನು ಕೊಡುವ ಪ್ರತ್ಯಯ ವಿದು. ಈ ಪ್ರತ್ಯಯ ವಳವಳ್ಳ ಮೂಲದಿಂದ ಬಂದಿರಬಹುದು.

ಕಳಸವಡಿಗ, ಕುಂಚವಡಿಗ, ಪುಲ್ಲವಡಿಗ

೨೧. ವಣಿಗೆ : ಉಣ್ಣುವುದೇ ಜೀವಿತವಾಗಿ ಸುಮ್ಮನೆ ತಿನ್ನುತ್ತಿರುವವನು ಎಂಬರ್ಥದ ಪ್ರತ್ಯಯವಂದು ಶಮದದಲ್ಲಿ ಗ್ರಹಿಸಿದೆ. ಆದರೆ ಬಡಿ ಧಾತು ಮೂಲವಾಗಿ ಬಡಿಗ >

೯೪

ವಣಿಗೆ ಇರಬಹುದು.

ಕೂಟ್ಟಣಿಗ, ಲಂಚವಣಿಗ, ಸಾಲವಣಿಗ

೨೨. ವಂತ : ಉಳ್ಳ ಒಡೆಯ ಶ್ರೇಣಿಯ ಅರ್ಥದ ಪ್ರತ್ಯಯ, ಸಂಸ್ಕೃತ ಪ್ರಥಮ ವಿಭಕ್ತಿಯ ಬಹುವಚನ ರೂಪಗಳು ಅಂತ್ಯವಿಸರ್ಗ ಲೋಪದೊಂದಿಗೆ ಕನ್ನಡದಲ್ಲಿ ಪ್ರಥಮ್ಮಕವಚನ ಪ್ರಕೃತಿಗಳಾಗಿ ರೂಪುಗೊಳ್ಳುತ್ತವೆ. ಉದಾ. ಶ್ರೀಮಾನ್ ಶ್ರೀಮಂತ ಶ್ರೀಮಂತಃ > ಶ್ರೀಮಂತ, ಈ ಮಂತ ಕೆಲವೆಡೆ ವಂತ ಆಗಿ ಪರಿಣಮಿಸಿದೆ. ಬುದ್ಧಿಮಂತಿ > ಬುದ್ಧಿವಂತ. ಹೀಗೆಯೇ ವತ್ ಸೇರುವುದಾಗಿ (ಸಂ. ಮತುಪ್>ಮತ್>ವತ್) ಜಯವಾನ್ ಪುಣವಾನ್ ಇವುಗಳ ಬ.ವ ರೂಪಗಳಿಂದ ಜಯವಂತ ಪುಣ್ಯವಂತ ಮೊದಲಾದ ಪ್ರಥಮೈಕ ವಚನದ ರೂಪಗಳಾಗುತ್ತವೆ.

೨೩. ವಳವಳ್ಳ : ಈ ನಿಯೋಗವನ್ನು ಈತ ನಡಸುತ್ತಾನೆ ಎಂಬರ್ಥವನ್ನು ಕೊಡಿ ಪ್ರತ್ಯಯ. ಈ ಪ್ರತ್ಯಯಗಳ ಮೂಲ ಸಂ. ವಲ/ಪಾಲ ಅಥವಾ ಪ್ರಾ, ವಾಲ ಎಂದು ಊಹಿಸಿದೆ.

ಅಡಪವಳ/ಅಡಪವಳ್ಳ, ಮಾಸವಳ(ಳ), ಮಡಿವಳ(ಳ), ಪಡವಳ(ಳ), ಸಜ್ಜೆವಳ(ಳ) ಅಡುವಳ(ತೃ) ,

ಸ್ತ್ರೀಲಿಂಗದ ತದ್ಧಿತ ಪ್ರತ್ಯಯಗಳು

ಈ ಪ್ರತ್ಯಯಗಳಲ್ಲಿ ‘ಇತಿ’ ಎನ್ನುವುದು ಮುಖ್ಯವಾದ ಪ್ರತ್ಯಯ; ‘ತಿ’ ಸಹ . ವಾದ್ದು, ಇವು ಸಂ. ಸ್ತ್ರೀ>ಪ್ರಾ. ಇತ್ತೀ > ಕ ಇ | ಇತಿ / ತಿ ಹೀಗೆ ನಿಷ್ಪನ್ನಗೂ ಇವು ಪುಲ್ಲಿಂಗ ತದ್ಧಿತಪ್ರತ್ಯಯಗಳು ಹತ್ತಿದ ತದ್ಧಿತಾಂತಗಳ ಮೇಲೆ ಸೇರುವ ಸಾಮಾನ್ಯ.

ಚಾಮರಿಗಿತಿ, ಮಕ್ಕಳಿಗಿತಿ, ಬೋಸರಿಗಿತಿ, ಕಂಚಗಾರ್ತಿ, ಗಂಡವಳ್ಳಿ, ಗಾಡಿಕಾ’ ಘಟ್ಟಿವಳ್ಳಿ, ಮಣಿಗಾರ್ತಿ, ಸೆಪ್ಟೆವಳ್ಳಿ, ದೇಸಿಗಿತಿ, ಜಾಲಗಾರ್ತಿ

ಅದಂತವಲ್ಲದಲ್ಲಿಯೂ ಉಂಟು : ಅಕ್ಕಸಾಲಿತಿ, ಒಕ್ಕಲಿತಿ, ಸೆಟ್ಟಿತಿ. ತದ್ಧಿತ ಪ್ರತ್ಯಯ ಹತ್ತದ ಪ್ರಕೃತಿಗಳ ಮೇಲೆ ನೇರವಾಗಿಯೇ ಬರಬಹುದು. ನಾವಿದಿತಿ, ಬೇಡಿತಿ, ಎಡತಿ, ನರತಿ, ಪೂಲತಿ ಸಂಸ್ಕೃತ ಕನ್ನಡ ಪ್ರಕೃತಿಗಳಿಗೆ ಭೇದವಿಲ್ಲದೆ ಹತ್ತುವುದು ನಾಯಕಿತಿ, ನಿಷಾದ ಶ್ರಾನಿಕಿತಿ, ಕುಟುಂಬಿತಿ ಇಂತಹ ಉದಾ.ಗಳ ಮೂಲಕ ತಿಳಿಯುವುದು.

ರೂಪಭೇದಗಳು ಸಾಮಾನ್ಯವಾಗಿ ಉಂಟು:

ಅಡಪವಳಿ | ವಳ್ಳಿ, ಪಾರ್ವತಿ/ಪಾರ್ವಿತಿ, ಕಮಾತಿ/ಕಮ್ಮಾರಗಿತಿ, ಕಮಾಲ್’ ಕಮ್ಮಾರಗಾತಿ, ಇಚ್ಚಕಾರ್ತಿಇಚ್ಚೆಗಾರ್ತಿ

೯೫

ಸ್ತ್ರೀಲಿಂಗ ಪ್ರತ್ಯಯವಾಗಿ ಎತ್ವ ದೇಶ್ಯ ಶಬ್ದಗಳಾದ ಪುಲ್ಲಿಂಗ ಪ್ರಕೃತಿಗಳಿಗೆ ಹತ್ತುವುದು ಕೂಡ ಸಾಮಾನ್ಯ.

ಚದುರೆ, ಪಾಣೆ, ಸಿತಗೆ, ಜೋಡ ವಿರಳವಾಗಿ ಇತ್ಯ ಸಹ ಉಂಟು: ಗಾವುಂಡಿ, ವರದಿ, ಕೆಳದಿ

ಹೆಚ್ಚಿನ ತದ್ಧಿತಪ್ರತ್ಯಯಗಳು

  • ‘ಶಬ್ದಮಣಿದರ್ಪಣ’ ಮೊದಲಾದ ಮೂಲಗಳಲ್ಲಿ ಪ್ರಸ್ತಾವವಾಗಿರದ ಇನ್ನೂ ಹಲವು ತದ್ಧಿತ ಪ್ರತ್ಯಯಗಳು ನಾಮಪದಗಳ ರಚನೆಗೆ ಒದಗಿರುವುದು ಪರಿಶೀಲನೆಯಿಂದ ತಿಳಿಯುವುದು :

ಅಸಿಗ : ಕಳ್ಳಸಿಗ ; ಇ : ಕೆಲಸಿ, ಹೀನಿ, ಪಲ್ಲಡಕಿ, ಕುಡಿಕಿ; ಕುಚಿಗ : ಕಣಕುಚಿಗ; ತಿನಿ/ತೀನಿ: ಪಣದಿನಿ, ಪಿಜಿತಿನಿ, ಸರದೀನಿ (ತಿನ್ತೀನಿ/ತಿನಿ)

ಮಯ; ಪಣಮಯ: ವಡಿಚ : ವೇಳವಡಿಚ: ವಾಳ : ಆಕೆವಾಳ, ಸೂಳೆವಾಳ ಬಹುವೀಹಿಸಮಾಸದಲ್ಲಿ ಸೇರುವ ಇಲಿ/ಇಲಿಗ, ಕುಟಿ/ಕುಟಿಗ>ಗುಳಿಗ ಇಲ್ಲಿಯೇ ಸೇರಬೇಕಾದ ತದ್ಧಿತ ಪ್ರತ್ಯಯಗಳು. ಇಲ್/ಇಲ್ಲ > ಇಲಿ+ಗ, ಕೋಲ್ > ಕುಲಿ+ಗ > ಕುಲಿಗ > ಗುಲಿಗ ಹೀಗೆ ಇವು ಸಿದ್ದವಾಗಿದೆ.

ಉದಾ. ನಾಣ್ : ನಾಣಿಲಿ/ನಾಣಿಲಿಗ : ಅಜಿ : ಅಜಗುಲಿ ಅಂಗುಲಿಗ : ಮೀನ್ : ಮೀಂಗುಲಿ | ಮೀಂಗುಲಿಗ,

ಇಲಿ ಅಂತ್ಯವಾದ ರೂಪಗಳು ಲಿಂಗಕ್ಕೂ ಸಲ್ಲಬಹುದು.

ತದ್ದಿತ ಭಾವನಾಮಗಳು

ತದ್ಧಿತ ನಾಮಪಗಳು ನಾಮಪದಗಳ ಒಂದು ಬಗೆಯಾದರ, ತದ್ದಿತ ಭಾವನಾಮಗಳು ನಾಮಪದಗಳ ಸ್ಥಿತಿ ಅವಸ ಧರ್ಮ ಪ್ರತಿ ಇವನ್ನು ಗುರುತಿಸಲೆಂದು ಸಿದ್ಧವಾಗುವ ಇನ್ನೊಂದು ಬಗೆ, ತದ್ದಿತ ಭಾವನಾಮಗಳಲ್ಲಿ ಪ್ರತ್ಯಯಗಳ ವೈವಿಧ್ಯ ಹೆಚ್ಚು.

ಚೇತನಭಾವವನ್ನು ಜ್ಯೋತಿಸುವ ಪ್ರತ್ಯಯಗಳು :

18 ಇಕ್ಕೆ : ಉನ್ನತಿಕೆ (ಉನ ತನ ಧರ್ಮ), ಉದ ತಿಕ (ಉದ್ಧತನ ಭಾವ) ಹೀಗಯ ಆಯತಿ;

ವತಿಕೆ, ಪನ್ನತಿಕ, ಬಲ್ಲ ಅಡಿಕೆ, ಮಾಸರಿಕೆ ಇ. ಉನ್ನತಿ, ಪಂಡಿತಿ, ಮಾಸರಿ ಹೀಗೆ ದ್ವಿತ್ವರೂಪಗಳೂ ಉಂಟು.

ಈ : ಕಿವುಡು, ಕುರುಡು, ತಳಾಟ (ವಡ್ಡಾರಾ. ೧೨ ೧೬೩-೨೩) ಕಿವುಡನ ಅವಸ್ಥೆ ಇ

ತು, ತಳಾಟ (ವಡ್ಡಾರಾ. ೧೨೯-೧೭) ಪರದು (ವಡ್ಡಾರಾ,

ತನ : ಆಳ್ವನ, ಎಣ್ಣತನ, ಕಲಿತನ, ಕೂಸುತನ, ಗಂಡಾಳನ, ಮರುಳನ ಇ. ಆಳ್ ಎಂದರೆ ಪುರುಷನ ಧರ್ಮ ಇ. ತನ ಪ್ರತ್ಯಯ ಕನ್ನಡ ಶಬ್ದಗಳಿಗೆ ಮಾತ್ರ ಹತ್ತುವುದು, ಸಂಸ್ಕೃತ ಶಬ್ದಗಳಿಗಲ್ಲ. ಆದರ ಈ ವಿಧಿ ಹಳೆಯ ವೈಯಾಕರಣರಲ್ಲಿ ಕೇಶಿರಾಜನಿಗೆ ಸಮ್ಮತವಿದ್ದರೂ ಈಚಿನ ವೈಯಾಕರಣ ಭಟ್ಟಾಕಳಂಕ ಕನ್ನಡ ಮತ್ತು ಸಂಸ್ಕೃತ ಶಬ್ದಗಳ ನಡುವೆ ಭೇದಮಾಡದ ತನ ಹತ್ತುವುದೆಂದಿದ್ದಾನೆ.

ಪ್ರಾಚೀನ ಕವಿಗಳು ವಿರಳವಾಗಿ ಕನ್ನಡ ಶಬ್ದದ ಈ ವಿಧಿಯನ್ನು ಅಲಕ್ಷಿಸಿ ಆಗಾಗ ಒಂದೊಂದು ಪ್ರಯೋಗವನ್ನು ತಂದಿದ್ದಾರೆ. ಬಾಲತನಮ್ (ಪಂಪಭಾ. ೧೧-೧೩೪) ಆರೋಹಕತನಮ್ (ಅನಂಪು, ೨-೩೦). ಇನ್ನೂ ಈಚೆಗೆ ಈ ವಿಧಿ ಸಡಿಲಗೊಂಡು ಶೂರತನ ಪುರುಷತನ ವೀರತನ ಮೊದಲಾದ ಪ್ರಯೋಗಗಳಿಗೆ ಅವಕಾಶವಾಗಿದೆ’ ವಾಸ್ತವವಾಗಿ ಬಾಲತ್ಯ, ಶೂರತ್ಯ, ಪುರುಷ, ವೀರತ್ವ ಹೀಗೆ ಸಂಸ್ಕೃತ ಭಾವನಾಮ ಪ್ರಯೋಗ ಗ್ರಾಹ್ಮ. - ಧರ್ಮಾಮೃತದಂತಹ ಹಳೆಯ ಚಂಪೂ ಕಾವ್ಯದಲ್ಲಿ ದುಷ್ಟತನ, ನಿರ್ಬುದ್ಧ? ನಾಯಕತನ, ಕಷ್ಟತನ, ಇಂತಹ ಪ್ರಯೋಗಗಳು ಅಲ್ಲಲ್ಲಿ ದೊರೆಯುತ್ತವೆಯಾದ ಈ ಗ್ರಂಥವನ್ನು ಹಳಗನ್ನಡದ ಪ್ರಾತಿನಿಧಿಕ ಗ್ರಂಥವೆಂದು ಒಪ್ಪುವುದು ಕಷ್ಟ, ವಿರಳವಾದ ಅಥವಾ ಅಪವಾದವಾದ ಪ್ರಯೋಗಗಳೆಂದು ಗ್ರಹಿಸಬೇಕು.

ರೂಢಿಯ ರೂಪಗಳಿಗೆ ವಿಶೇಷ ರೂಪಗಳು (ನಂಟು/ನಂಟತನ-ನಂಟರ್ತನ), ಆ, ನಾಮಪದ ಪ್ರಕೃತಿಗೆ ನೇರವಾಗಿ ಸೇರುವುದು (ಇಚ್ಛೆಕಾದಿತನ/ಇಚ್ಚಕಾರ್ತನ), ತದ್ಭವ ಪ್ರತ್ಯಯ ಸೇರುವುದು (ಕನ್ನತನ, ಕರತನ, ಮಾಂತನ, ಬಕವೇಸಿತನ), ಸಮಾಸ ಸೇರುವುದು (ಬಲ್ಲಾಳನ, ಮಯಲಿತನ, ಕಲ್ಲೆರ್ದೆತನ, ಗಂಡುಗೂಸುತನ) ಇಂತಿ ಈ ತನ ಪ್ರತ್ಯಯದ ಬಳಕೆಯ ವೈವಿಧ್ಯವನ್ನು ಸೂಚಿಸುತ್ತದೆ.

ತನ ಪ್ರತ್ಯಯ ಅಪಭ್ರಂಶದ ತೃಣ (<ಸಂ, ತೈತ್ಯನ) ಪ್ರತ್ಯಯದ ಮೂಲಕ ಬಂದ್ ಬಹುದು. ಮುಂದುವರಿದು ಈ ಸಂ.ತನ > ಪಾ.ಪ.ಣ > ಕ.ಪಣ ಆT 1 ಪರಿವರ್ತಿಸಿರುವುದು ವಿಶೇಷ. ಇದಕ್ಕೆ ಹಳೆಯ ಕನ್ನಡ ಕಾವ್ಯಗಳಲ್ಲಿ ಪ್ರಯೋಗ ದೊರೆತಿವ. (ತತುಪಣಂ : ಅಜಿಪು. ೫-೯೫ವ; ಮದತಿ. ೧೦-೭೫, ಸುಕುಮಾ, * ವ.) . - ಉಮ : ಯೋಗ್ಯತೆ ಅತಿಶಯತೆ ಎಂಬ ಅರ್ಥದಲ್ಲಿ ತಕ್ಕು ತಾನೇ ಸಹಜಭಾವನಾ ಆದರೆ ಅತಿಶಯಾರ್ಥದ ಉಮೆ (<ಉಮ್ಮ<ಉರ್ಮೆ<ಉ+ಮೆ) ಸೇರಿ ತಮ್ಮ ಎಂಬ ಪದ ರೂಪಗೊಂಡು ಅದೇ ಅರ್ಥವನ್ನು ತಾನೂ ತರಬಹುದು. ತಕ್ಕೂರ್ಮ ಇದಕ್ಕೆ ಸದೃಶವಾದುದು (ತಕ್ಕು+ಊರ್ಮೆ =ತಕ್ಕೂರ್ಮೆ).

  • ೯೭

ಭಾವಾರ್ಥದಲ್ಲಿ ಗುಣವಾಚಕ ಮತ್ತು ನಾಮವಾಚಕಗಳಿಗೆ ಪು, ಮೆ ಉ ಬರುತ್ತವೆ.

ಪಂಪು (ಪಿರಿದು+ಪು), ತಣ್ಮು, ಗುಬ್ಬು, ಮಲ್ಕು, ಬಲ್ಕು, ಪಸುರ್ಪು, ಕಡುಪು; ಜಾಣ್ಮ, ಪರ್ಮ, ಸಂಖ್ಯಾವಾಚಕಗಳಲ್ಲಿ ಕೂಡ : ಒರ್ಮ, ಇರ್ಮ, ಮೂಮೆ, ಪಲರ ; ಕಿವುಡು, ಕಂಚು, ಗುಜ್ಜು, ಪರದು, ಡೊಂಬು, ಬೆಟ್ಟು; ಕಿವುಡಾಗಿರುವುದರ (ಕಿವುಡುತನ) ಭಾವ ಕಿವುಡು, ಪರದನ ಕೆಲಸ ಪರದು; ಬೆಲ್ಲ (<ವೈದ್ಯ) ಮಾಡುವ ಕೆಲಸ ಬಿಟ್ಟು ಇ

ಹೀಗೆಯೇ ಲೆಕ್ಕವಣಿಗೆ (ಲೆಕ್ಕಾಚಾರ, ಲೆಕ್ಕದ ವಿವರ) ಎಂಬಲ್ಲಿ ವಣಿಗೆ ನಡ್ಕ (ನಂಟು) ಎಂಬಲ್ಲಿ ಕೆ, ಅಂಟು (<ಅಣ್), ನಂಟು (<ನಣ್) ಎಂಬಲ್ಲಿ ಟು ಪ್ರತ್ಯಯಗಳಾಗಿವ.

ಕೃದಂತ ಭಾವನಾಮಗಳು

ಇವು ಧಾತುಗಳ ಮೇಲೆ ಭಾವಾರ್ಥದಲ್ಲಿ ಕತ್ರತ್ಯಯ ಸೇರಿ ಸಿದ್ದವಾಗುತ್ತವೆ. ಶಬ್ದಮಣಿ ದರ್ಪಣಕಾರನು ತದ್ದಿತ ಪ್ರಕರಣದಲ್ಲಿ ಪ್ರಸ್ತಾವಿಸಿರುವುದರಿಂದ ಇಲ್ಲಿಯೂ ಹಾಗೆಯೇ ಮಾಡಿದ, ದಿಟವಾಗಿ ಈ ವಿಷಯ ಕ್ರಿಯಾಪದಗಳನ್ನು ಕುರಿತ ಆಖ್ಯಾತಪ್ರಕರಣದಲ್ಲಿ ಬರಬೇಕಾಗಿದ್ದಿತು. ಈ ಗುಂಪಿನ ಪ್ರತ್ಯಯಗಳು ವಿವಿಧವಾದವು; ಕನ್ನಡ ಭಾಷೆಯ ನಮ್ಯತೆ ವ್ಯಾಪ್ತಿ ವಿಸ್ತಾರಗಳನ್ನು ಮನವರಿಕೆಮಾಡುವಂತಹವು.

ಎ : ತಲೆ, ಧಾತು ತೆಲು
ಕ : ಉಡುಕಮ್, ನಡುಕಮ್, ಧಾ. ಉಡುಗು, ನಡುಗು
ಕ : ಕಾಣ್ಕೆ, ತರಳ್ಕೆ, ತೋರ್ಕೆ, ನಿಮಿರ್ಕ, ಪೂಣೆ, ಮಡಿಕೆ, ಧಾ ಕಾಣ್, ತರಳ್, ತೋಡು, ನಿಮಿರ್, ಪೂಣ್, ಮಡಿ (=ಮಡಚು). ಕಾಣೆ > ಕಾಣಿಕೆ, ಪೂಣೆ > ಪೂಣಿಕೆ ಎಂಬ ಶಿಥಿಲ ಪ್ರಯೋಗಗಳು ಗ್ರಾಹ್ಯವಾಗವು ಗ : ಉಡುಗ, ಪಸುಗೆ, ಪೊಲೆ, ಪುಗೆ, ಬಿಸುಗೆ, ಧಾ, ಉಡು, ಪಸು, ಪೂಲ್,

ಪತ್ತು, ಬಿಸು ಟಿ : ಆಟಮ್, ಓಟಮ್, ಕೂಟಮ್, ನೋಟಮ್, ಪಾಟಮ್, ಧಾ. ಆಡು. ಓಡು,

ಕೂಡು, ನೋಡು, ಪಾಡು

ಆತಮ್, ಉರಿತ, ಏತ, ಓತಮ್, ಕಡಿತಮ್, ಪೋರ್ತಮ್, ಧಾ, ಅಜ ಉರಿ ಏಟು (> ಭೀಮಿತವ

  • ಉರಿ ಏಟು (> ಏಟತಮ > ಏತಮ್), ಓದು (> ಓದುತಮ್ > ಓತಮ್?), ಕಡಿ, ಪೋರ್‌

ಆಗಟ್ ನೆಗ ಪುಗುತ ಪೊಗಟೆ, ಧಾ, ಆಗಟ್, ನೆಗಟ್ ಪುಗು ಪೊಗಟ್ ಪು : ಪಡೆವ / ಪಡಪು (ಪ್ರಾಪ್ತಿ, ಸಂಪಾದನೆ) ಧಾ.ಪಡೆ

  • ಇಲ್ಲಮ, ಒ, ಕೂರ್ಮ, ಧಾ, ಇಲ್ಲ (ಇಲ್), ಒಲ್, ಕೂರ್ * : ನಡವಳಿ, ನುಡಿವಿ ಸಲ. ದಾ. ನಡೆ ನುಡಿ ಸಲ್

ಪ್ರ : ೨

ತೆ : ಅಗಿ

ನಗಚ್

ಮ : ಇಳಿ

EES

ವಿ : ತೊರವಿ, ಅಳವಿ, ಬಳವಿ, ಧಾ. ತೊಆ, ಅಲೆ, ಬಳೆ. ವು : ಎರವು, ಸೆಳವು, ತೆಂವು: ಧಾ. ಎರ (=ಬೇಡು) ಸಳ, ತೆಲು; ನಿಲವು ಒಲವು ಸಲವು ಗೆಲವು: ಧಾ ನಿಲ್‌ ಒಲ್ ಸಲ್; ಉಳಿವು ಕಟ್‌ವು, ತಿಳಿವು, ಅವು ಪವು: ಧಾ. ಉಣಿ, ಕಣಿ, ತಿಳಿ, ಅಣಿ, ಪ. ವ : ಮಜವ ತುವ ಧಾ, ಮತಿ ತತಿ (ತೆಗೆ ರೂಪಾಂತರಗಳು : ಅದು

ತಳಿವು, ತೆಂಹು) ಆದಿದೀರ್ಘಕರಣ : ಇ> ಏ : ಕಿಡು > ಕೇಡು, ಇಸು > ಏಸು ಉ > ಓ : ಕುಡು > ಕೋಡು, ತುಡು > ತೊಡು ಇ > ಈ : ಇಡು > ಇಡು, ಬಿಡು > ಬೀಡು ಉ > ಊ : ಸುಡು > ಸೂಡು ಕೆಲವು ಉದಾ.ಗಳು :

“ಮುತ್ತಿನ ಕೇಡನೆ ನೋಡಿ ನೋಡಿ” (ಪಂಪಭಾ. ೯-೬೯) “ಬುಧ ಮಾಗಧ ವಂದಿ ಜನಕ್ಕೆ ಕೊಟ್ಟ ಕೊಡು” (ಪಂಪಭಾ. ೧-೯೯) ‘ಎರಡು ಕಯೋ ತೋಡುಂಬಿಡುಂ ಕಾಣಲಾಗದಂತೆವೋಲ್” (ಪಂಪಭಾ. ೫-೯೬ವ) ಲಂಕೆಯ ಸೂಡುನ್ನತಿಯ ಕೇಡನವಂಗೆ ನಿವೇದಿಸಂತೆವೋಲ್’’ (ಪಂಪರಾ, ೯-೧೦೯)

ಸಹಜಧಾತುಗಳೇ ನಾಮರೂಪಗಳಾಗುವುವು : ತಡೆ, ನಡ, ಉರ್ಕು, ಸೊರ್ಕು, ಓದು, ಪಾಡು. ಇವು ಸಾಮಾನ್ಯರ್ಥಗಳ ಕೃದಂತ ಭಾವನಾಮಗಳು. ಇಂತಹ ಇನ್ನೂ ಕೆಲವು ವೈಯಾಕರಣರು ಗುರುತಿಸಿರದ, ಭಾವನಾಮದ ಪ್ರತ್ಯಯ ಗಳೂ ಉಂಟು. ಅವನ್ನಿಗ ಗುರುತಿಸೋಣ.

ಅ : ಸೋಲ, ಗಲ್ಲ, ಆರಯ, ಧಾ. ಸೋಲ್, ಗಲ್, ಆರಮ್ ಇಲ್ : ತವಿಲ್, ಪುಗಿಲ್, ಧಾ. ತವು, ಪುಗು ಎ : ಸೇದ, ಧಾ, ಸೇದು ಉಗೆ : ಪುಗೆ, ಧಾಪಣ್ ಉಮೆ : ಅಂಜುಮ, ಧಾ. ಅಂಜು ಕಲ್ : ತವುಕಲ್ | ತಕಲ್, ತುಟಿಕಲ್ ಧಾ. ತವು, ತುಟಿ ಕು : ಕೆಡುಕು, ಧಾ. ಕೆಡು : ಇಡುಕು, ಧಾ, ಇಡಿ ಗುಳ್ : ಬಯ್ದು, ಪೊಯ್ಯುಳ್, ಧಾ. ಬಯ್, ಪೊಯ್ ಟೆ : ತೀಂಟೆ, ಧಾ, ತೀನ್

ರ್೯

ದಲೆ : ತವುದಲೆ / ತಾದಳ, ಅಗುಂದಲೆ, ಧಾ. ತವು, ಆಗು; ದಿಗ್ವಾಚಕ ಪ್ರತ್ಯಯವಾಗಿ

ಕೂಡ : ಆದಲ, ಇದಲೆ ದಿ : ಇಟ್ಸ್ (<ಈಟ್+ದಿ), ಬಿಡದಿ, ಧಾ, ಈಟ್, ಬಿಡು ಪ : ಕುದಿಪ, ಕುಜಪ, ಧಾ, ಕುದಿ, ಕುಜ ಸರ : ಬೀಸರ, ಧಾ. ಬೀ ನಿಷೇಧಾರ್ಥದಲ್ಲಿ ಆ ಪ್ರತ್ಯಯ ಕೂಡಿಕೊಂಡು ಅಮ ಎಂದು ಆಗಿರುವುದು: ತೀರಮೆ (ತೀರ್+ಅ+ಅಮೆ), ಅಮೆ (ಅ+ಅ+ಮೆ), ಅಂಜಮೆ (ಅಂಜು+ಅ +ಮ)

ಇವು ಕ್ರಮವಾಗಿ ಮುಗಿಯದಿರುವಿಕೆ, ಜೀರ್ಣವಾಗದಿರುವಿಕೆ, ಹೆದರಿಕೆಯಾಗದಿರುವಿಕೆ ಎಂಬ ಅರ್ಥಗಳನ್ನು ಕೊಡುತ್ತವೆ.