೦೬ ಸಮಾಸ ಪ್ರಕರಣ

ಸಮಾಸ ಎಂದರೆ ಏನು?

ಬೇರೆ ಬೇರೆಯಾದ ಅರ್ಥಗಳಲ್ಲಿ ವ್ಯವಹಾರವಾಗುವ ಎರಡು ನಾಮಪ್ರಕೃತಿಗಳು ಅವು ಕೊಡುವ ಅರ್ಥಗಳಿಂದ ಬೇರೆಯಾದ ಒಂದು ಅರ್ಥವನ್ನು ಕೊಡುವುದಕ್ಕಾಗಿ ನಡುವಣ ವಿಭಕ್ತಿ ಪ್ರತ್ಯಯಗಳನ್ನು ಕಳೆದುಕೊಂಡು ಒಗ್ಗೂಡುವ ಪ್ರಕ್ರಿಯೆಗೆ ಸಮಾಸ ಎಂದು ಹೆಸರು. ಹೀಗೆ ಒಗ್ಗೂಡುವಾಗ ಆ ಪ್ರಕೃತಿಗಳ ನಡುವೆ ಲೋಪಾಗಮಾವೇಶಗಳಲ್ಲಿ ಯಾವುದಾದರೂ ಒಂದು ವ್ಯತ್ಯಾಸ ಘಟಿಸಬಹುದು.

ಒಂದು ಉದಾಹರಣೆಯಿಂದ ಇದನ್ನು ತಿಳಿಯೋಣ. ತೋಳ ಮತ್ತು ಮಾವು ಭಿನ್ನಾರ್ಥದ ಎರಡು ಶಬ್ದಗಳು, ತೊರೆಯ ದಡದಲ್ಲಿ ಬೆಳೆದ ಮಾವಿನ ಮರ ಎಂಬ ಆಶಯವನ್ನು ಸಂಕ್ಷೇಪವಾಗಿ ಹೇಳಲು ತೊಳೆಯ ಮಾವು ತೋಚಿಮಾವು ಎಂದು ಹೇಳಿದರ ಸಾಕಾಗುತ್ತದೆ. ಇಲ್ಲಿ ತೂಚಿಯ ಮಾವು ಎಂಬ

ವಾಕ್ಕಾಂಗಭಾಗ ವಿಗ್ರಹವಾಕ್ಕ; ತೋಳಮಾವು ಸಮಾಸಪದ.

ಮಾತಿನ ಬಲ್ಲಹಂ - ಮಾತುವಲ್ಲಹಂ (ಇನಾಗಮಲೋಪ, ವಕಾರಾದೇಶ) ನೂಲಿಬಿ ಪತ್ತು - ನೂಪತ್ತು (ಅಟಾಗಮ ಲೋಪ) ತೆಂಕಣ ವಂಕ - ತೆಂಕವಂಕ (ಅಣಾಗಮ ಲೋಪ)

ಇಲ್ಲಿ ವಿಗ್ರಹವಾಕ್ಯವಾಗುವ ಬಗೆಯನ್ನು ಮುಖ್ಯವಾಗಿ ತೋರಿಸಿದ. ಆದರೆ ಲೋಪಾಗಮಗಳ ಬಗ್ಗೆ ಇನ್ನೂ ಗಾಢವಾದುದು.

ಉದಾ : ಒಳ್ಳಿದಳ್ + ಪಣ್ = ಒಳ್ಳಣ್ (ಪ > ವ)

ಒಳ್ಳೆದನ್ + ಮಾನಿಸನ್ = ಒಳ್ವಾನಿಸನ್ (ಮ > ವ) ಆಡುವುದು + ಪೂಲನ್ = ಆಡುಂಬೋಲನ್ (ಪ > ಬ) ತೂಗುವುದು + ತೊಟ್ಟಿಲ್ = ತೂಗುಂದೊಟ್ಟಿಲ್ (ತ > ದ) ಕಿದು + ಈ = ಕಿತ್ತಳೆ (ಕಿಹೌದು > ಕಿತ್ತ)

ನಿಡಿದು + ಅಡಕಿಲ್ = ನಿಟ್ಟಡಕಿಲ್ (ನಿಡಿದು > ನಿಟ್ಟ) ಸಮಾಸಗಳ ಆಶಯ ಸ್ಪಷ್ಟವಾಗಬೇಕಾದರೆ, ವಿಗ್ರಹವಾಕ್ಯವನ್ನು ಅದಕ್ಕೆ ತಕ್ಕಂತ ಮಾಡಿ ಪೂರ್ವಪದವನ್ನಿಡಬೇಕು. ಈ ಪ್ರಯತ್ನದಲ್ಲಿ ಹಳಗನ್ನಡ ಭಾಷೆಯ ವ್ಯಾಕರಣವಿಧಿಗಳನ್ನು ಅನುಸರಿಸುವುದು ಅವಶ್ಯ ಮತ್ತು ಆ ಪೂರ್ವಪದವನ್ನು ನಾಮಪದವಾಗಿಯೇ ಗುರುತಿಸು ವುದನ್ನು ಮರೆಯಬಾರದು.

ಹಳಗನ್ನಡ ವ್ಯಾಕರಣ ಗ್ರಂಥಗಳಲ್ಲಿ ಸಂಸ್ಕೃತ ವ್ಯಾಕರಣದ ಪರಿಭಾಷೆಯನ್ನು ಬಲು ಮಟ್ಟಿಗೆ ಅನುಸರಿಸಿ ತತ್ಪುರುಷ, ಕರ್ಮಧಾರಯ, ದ್ವಿಗು, ಅವ್ಯಯೀಭಾವ (ಅಂಶಿ), ದ್ವಂದ್ಯ ಮತ್ತು ಬಹುಪ್ರೀಹಿ ಎಂಬ ಆರು ಬಗೆಯ ಸಮಾಸಗಳನ್ನು ವಿವರಿಸಿದೆ. ಗಮಕ ಮತ್ತು ಕ್ರಿಯಾ ಎಂಬ ಎರಡು ಹೆಚ್ಚಿನ ಬಗೆಗಳನ್ನು ಕುರಿತಿರುವುದೂ ಉಂಟು. ಗಮಕದ ವಿಚಾರವನ್ನು ಇಲ್ಲಿ ಗಮನಿಸಬೇಕಾಗಿಲ್ಲ.

ತತ್ಪುರುಷ ಸಮಾಸ

ಇದು ಉತ್ತರಪದದ ಅರ್ಥ ಮುಖ್ಯವಾದ ಸಮಾಸ, ಪೂರ್ವಪದ ತೃತೀಯಾದ ವಿಭಕ್ತಿಗಳಲ್ಲಿರುವುದು ವಿಗ್ರಹವಾಕ್ಯವನ್ನು ಗುರುತಿಸುವಾಗ ತಿಳಿದುಬರುತ್ತದೆ. ಆದ್ದರಿಂದ ಇದು ಭಿನ್ನಾಧಿಕರಣದಲ್ಲಿರುವ ಸಮಾಸ.

ತೃ, ತ. : ಮನ್ ಕಲಿ - ಮಯ್ಯಲಿ ಚ, ತ, : ತೇರ್ಗ ಮರನ್ - ತೇರ್ಮರನ್ ಪಂ.ತ. : ಪುಲಿಯತ್ತಣಿಂದೆ ಅಳ್ಳು - ಪುಲಿಯನ್ನು ಷ, ತ, : ಮಾತಿನ ಬಲ್ಲಹನ್ - ಮಾತುವಲ್ಲ ಹನ್ ಸ, ತ, : ಬಿಲ್ಗೊಳ್ ಜಾಣನ್ - ಬಿಲ್ಯಾಣನ್ ಪೂರ್ವಾಪದಗಳ ಸ್ವರೂಪವನ್ನು ಅನುಸರಿಸಿ ಸಂಧಿಕಾರಗಳು ನಡೆದಿರುವುದನ್ನೂ ಇಲ್ಲಿ ಗಮನಿಸಬಹುದು.

ಕೆಲವು ಕಡೆ ಸಂಧಿಕಾರಗಳನ್ನು ಎಚ್ಚರಿಕೆಯಿಂದ ಗುರುತಿಸಿದಲ್ಲದೆ, ಸುಲಭವಾಗಿ ತಿಳಿಯುವುದಿಲ್ಲ.

ಆಂಗೋಳಗು ತಂಬೆಲರ್ ಇಂಥ ಸಮಾಸಗಳಲಿ ಆಏನ ಕೊಳಗು, ತೆಂಕಣದ ಎಲ್ಲ ? ಎಂದು ವಿವರಿಸಬೇಕಾಗುತ್ತದೆ. ತಂಬೆಲರ್ (ತಣು+ಎಲ‌) ಎಂಬುದರ ಸಾದೃಶ್ಯದ ಮೇಲೆ ಬಕಾರಾದೇಶವಾದ ತಂಬೆಲರ್ ಹುಟ್ಟಿರುವಂತೆ ತೋರುವುದು.

ಹೀಗೆಯೇ ನಡುವಣ ಬಾನ್ > ನಟ > ವಟ್ಟೆ = ನಟೈವಾನ್; ನಡುವಣ ಮಳ ನಟ್ಟೆ > ನಟ್ಟೆವನ; ಕೆಂಗಣ ಕೊಂಬು > ಕೆಲಗು > ಕಿಟ್ = ಕಿಂಬು, ಕದ ನೆಲನ್ > ಕೆಟಗು > ಕಿನ್ = ಕಿನ್ನೆಲನ್ ಇಂತಹ ಸಮಾಸಶಬ್ದಗಳಲ್ಲಿ ಕೂಡ ವಟ್ಟು

ಬೇಕು.

ನಡುವಣ ನಡು, ಕಡೆಯ ಕಡೆ ನಟ್ಟನಡು ಕಟ್ಟಕಡೆಗಳಾಗುವ ಹಾಗೆಯೇ ಮೋದಿ ಮೊದಲ್ ಮೊತ್ತಮೊದಲ್, ತುದಿಯ ತುದಿ ತುತ್ತತುದಿ ಆಗುವುದನ್ನೂ ** ಹೇಳಬೇಕು. ಇವು ವಿಶೇಷವನ್ನು ಹೇಳುವಂತಹವು.

ಉದಾ:

ಮೊತ್ತಮೊದಲ್’ ಚಿತ್ರಾವನಿ | ಗೊತ್ತಿರ್ದುದು ನಟ್ಟನಡು ಪೂದಳ್ಳುದು ದೆಸೆಯೊಳ್ ತುತ್ತ ತುದಿ ಋತುವಿಮಾನಮ | ನೂರುರ್ದುದು ನಗದ ಪಂಪನದನೇವೊಗಟೈನ್ || (ಅಜಪು.

11ನ್

1 (ಆಜಿಪು. xn-೬)

(ಹಾಗೆಯೇ ನೋಡಿ : ಅನಂಪು ೪-೪೦) ಕಟ್ಟಕಡ ನಟ್ಟನಡುಗಳ ಸಾದೃಶ್ಯದಿಂದಾಗಿ ಮೊಟ್ಟಮೊದಲ್ ತುಟ್ಟತುದಿ ಎಂಬ ಅಶುದ್ಧ ರೂಪಗಳು ಕಲ್ಪಿತವಾಗಿರುವಂತಿದೆ.

ಕರ್ಮಧಾರಯ ಸಮಾಸ

ಉತ್ತರಪದದ ಅರ್ಥ ಮುಖ್ಯವಾದ ಸಮಾಸ, ಪೂರ್ವಪದ ವಿಶೇಷ್ಯವಾದ ಉತ್ತರ ಪದಕ್ಕೆ ವಿಶೇಷಣವಾಗಿದ್ದು, ಈ ವಿಶೇಷಣ ಗುಣವಾಚಕವೋ ಕೃದಂತವೋ ಆಗಿರುತ್ತದೆ. ವಿಗ್ರಹವಾಕ್ಯ ಮಾಡುವಾಗ ಈ ಪೂರ್ವಪದ ಪ್ರಥಮಾವಿಭಕ್ತಿಯಲ್ಲಿರುವುದರಿಂದ ಇದು ಸಮಾನಾಧಿಕರಣದಲ್ಲಿರುವ ಸಮಾಸ

ವಿಶೇಷಣ ಗುಣವಾಚಕಗಳಾದ ಉದಾ:

ತಳ್ಳಿತು + ಕದಪು = ತೆಳ ದಂಪು (ನುಣುಪಾದ ಕೆನ್ನೆ) ಮೆಲ್ಲಿತು + ನುಡಿ = ಮಲ್ಕುಡಿ (ಮೃದುವಾದ ಮಾತು)

ಕಿಳಿದು + ಕೂಸು = ಕಿರುಗೂಸು (ಸಣ್ಣ ಪ್ರಾಯದ ಕೂಸು) ಉತ್ತರಪದ ನಪ್‌ ಪ್ರಕೃತಿಗಳಾದ್ದರಿಂದ ವಿಗ್ರಹವಾಕ್ಯದಲ್ಲಿ ಪೂರ್ವಪದಗಳು ನಪ್ ಗುಣವಾಚಕಗಳಾಗಿವೆ.

ಒಳ್ಳೆದನ್ + ಮಾನಿಸನ್ = ಒಳ್ವಾನಿಸನ್

ಒಳ್ಳಿದಳ್ + ಪಣ್ = ಒಳ್ಳೆಣ್ ಉತ್ತರಪದ ಕ್ರಮವಾಗಿ ಪುಲ್ಲಿಂಗ ಹಾಗೂ ಸ್ತ್ರೀಲಿಂಗದಲ್ಲಿರುವುದರಿಂದ ಪೂರ್ವಪದ ಗಳು ಪುಂ ಸ್ತ್ರೀ ಗುಣವಾಚಕಗಳಾಗಿವೆ.

ಕರ್ಮಧಾರಯ ಸಮಾಸದಲ್ಲಿ ವಿಶೇಷಣವು ವಿಶೇಷ್ಯದ ಲಿಂಗ ವಚನ ವಿಭಕ್ತಿಗೆ ಅನುಸಾರವಾಗಿರುತ್ತದೆ ಎಂದು ತಿಳಿಯಬೇಕು.

ವಿಶೇಷಣ ಕೃದಂತಗಳಾಗಿರುವ ಉದಾ.: ಆಕಾರಾಂತ ಕ್ರಿಯಾರೂಪಗಳಿಗೆ ಕಕಾರಾದಿ ಪದಗಳು ಪರದಲ್ಲಿದ್ದಾಗ ಗಕಾರಾದೇಶ

ದೂಂದಿಗೆ:

ಪೊತ್ತುವುದು + ಕೊಂಡು = ಪೊತ್ತುಂಗೋಡು (ಹೊತ್ತುವ ಕೊರಡು) ಚುರ್ಚುವುದು + ಕೊಳ್ಳಿ = ಚುರ್ಚುಂಗೊಳ್ಳಿ (ಸುಡುವ ಕೊಳ್ಳಿ)

ಇಕ್ಕುವುದು + ಕೂಟ್ = ಇಕ್ಕುಂಗೂಚ್ (ಇಕ್ಕುವ ಕೂಳು) ಆಕಾರಾಂತ ಕ್ರಿಯಾರೂಪಗಳಿಗೆ ಪಕಾರಾದಿ ಪದ ಪರದಲ್ಲಿದ್ದಾಗ ಬಕಾರಾದೇಶ

ದೊಂದಿಗೆ:

ಆಡುವುದು + ಪೋಲನ್ - ಆಡುಂಬೋಲನ್ (ಆಡುವ ಬಯಲು)

ಬತ್ತುವುದು + ಪಯನ್ = ಬತ್ತುಂಬಯನ್ (ಬತ್ತಿದ ಹಸು)

ಮಿಂಚುವುದು + ಪುಟು = ಮಿಂಚುಂಬುಲು (ಮಿಂಚುಹುಳು) ಉಕಾರಾಂತ ಕ್ರಿಯಾಪದಗಳಿಗೆ ಸಕಾರಾದಿ ಪದ ಪರದಲ್ಲಿದ್ದಾಗ ಜಕಾರಾದೇಶ :

ತೂಗುವುದು + ಸೊಡರ್ = ತೂಗುಂಜೊಡರ್ (ತೂಗುದೀಪ)

ಕಟ್ಟುವುದು + ಸುರಿಗೆ = ಕಟ್ಟುಂಜುರಿಗೆ (ಕಟ್ಟುವ ಸಣ್ಣ ಕತ್ತಿ) ಆದೇಶರೂಪಗಳಲ್ಲದ ಸಹಜವಾಗಿಯೇ ಸಮಾಸಗಳೇರ್ಪಡಬಹುದು. ಉದಾ: ಕುತ್ತುಂಗ, ಒತ್ತುಂಬಿ ಪಾಟುಂಬಳ, ಏಟುಂಜವನಂ, ಇಂಥವುಗಳಲ್ಲಿ ಗಟ್ ಬಳ್ಳಿ ಬಳ ಜವ್ವನ ಹಾಗೆಯೇ ಸೇರಿರುವ ಉತ್ತರಪದಗಳು.

ಇಕಾರಾಂತ ಕ್ರಿಯಾರೂಪಗಳಲ್ಲಿ ಕೂಡ

ಸಿಡಿವುದು + ತಲೆ = ಸಿಡಿಯುಂದಲೆ (ಸಿಡಿಯುವ ತಲೆ)

ಇಳಿವುದು + ಪೊಲ್ಕು = ಇಳಿಯುಂಬೊಟ್ಟು (ಇಳಿಹೊತ್ತು) ಈ ಶ್ರೇಣಿಯ ಉದಾಹರಣೆಗಳಿಗೆ ಕ್ರಿಯಾಪ್ರಕೃತಿಗಳು ಉಕಾರಾಂತವೂ ** ರಾಂತವೋ ಹೇಗೆ ಇರಲಿ, ನಡುವ ಅನುಸ್ವಾರ ಬರುವುದು ಒಂದು ಕುತೂಹಲಕರ ಇಲಿ ವಿದ್ಯಮಾನ. ಈ ವಿದ್ಯಮಾನ ಗರಗಸದಂತ ಹಲ್ಲುಗಳಿರುವ ಆಯುಧ ಎಂಬರ್ಥ 4 ಕೊಡುವ ಕಕ್ಕಿನ ತಳ = ಕಕ್ಕುಂದ ಮತ್ತು ಶೂಲದ ಮೇಲಣ ತಲೆ ಎಂಬರ್ಥ ಕೊಡುವ ದನ ತಲೆ = ದಕುಂದಲೆ ಎಂಬ ತತುರುಷಸಮಾಸದ ಪದಗಳಲ್ಲಿ ಈ ಕಾಣುತ್ತದೆ. ಕರ್ಮಧಾರಯವೇ ಆದರೂ ಗುಣವಾಚಕ ಪೂರ್ವಪದವಾದ ಬೆಟ್ಟ ಪೊಜೆ = ಬೆಟ್ಟುಂಬೋಜ (ಭಾರವಾದ ಹೊರೆ) ಎಂಬ ಪದದಲ್ಲಿಯೂ ಅದನ್ನು ಬಹುದು, ಇದೇ ವಿದ್ಯಮಾನದ ತಾಚುಂಬ, ಕಳ್ಳಂಗಡಲೆ ಜಕಂದೊದಿಲಿ ಮೀನ ಬಾನಂಗುಳಿಗ ಕಣ್ಣಂದೂಟಲಿ ಬೆಳ್ಳಂಬಟ್ಟೆ ಇವುಗಳ ವಿಗ್ರಹವಾಕ್ಕ ಅಷ್ಟು ವಿಶದವಾಗಿ *,

ಉಕಾರಾಂತ ಕೃದೂತ ಪೂರ್ವಪದವಾಗಿ, ಪರದಲ್ಲಿ ಗದ/ವಜ ಆದ ಪದವಿರುತ್ತಿದ್ದರೂ ಕೆಲವು ಸಲ ಸಮಾಸಶಬ್ದಗಳಿಗೆ ನಡುವೆ ಬಿಂದು ಬರುವುದೇ* ಉದಾಗ: ಸುಡುಗಾಡು, ಇಡುಗಿರ್ಚು, ಆಡುಗೂಬ್, ಉಡುಗೊ, ಮಾಜ ಬಿಡುಗಣ್, ಬಿಡುವಾಯ್, ತುಡುಜೊಡರ್, ಅಜುಗೆ. ಇವು ಕೂಡ ಕರ್ಮಧಾರಯ ಸಮಾಸಶಬ್ಬಗಳೇ. ಉಕಾರಾಂತಗಳಾದ ಪೊತ್ತುವುದು + ಕೊಂಡು ಮೊದಲಾದ, ಇಕಾರಾಂತಗw ಸಿಡಿವುದು+ತಲ ಮೊದಲಾದ ರೀತಿಗಳಲ್ಲಿ ವಿಗ್ರಹವಾಕ್ಯಗಳನ್ನು ಮಾಡಿಕೊಳ್ಳುವಂತ ಪೊತ್ತಿದುದು+ಕೊಂಡು, ಸಿಡಿದುದು+ತಲೆ ಎಂದು ಮುಂತಾಗಿ ಅನ್ಯಕಾಲ ವಿವಳು ಯಿಂದಲೂ, ಆಶಯಕ್ಕೆ ಭಂಗಬಾರದಿದ್ದಲ್ಲಿ, ವಿಗ್ರಹವಾಕ್ಯ ಮಾಡಿಕೊಳ್ಳುವುದು ಸಾಧ್ಯ

ಉಡುಗೊಯ್, ಮಾಟುದಾಂಟು,

೭೭

ಕರ್ಮಧಾರಯದ ಸಮಾಸ ಕಾರಗಳ ವೈವಿಧ್ಯವನ್ನೂ ಇಲ್ಲಿ ಗುರುತಿಸಬಹುದು. (1) ಪೂರ್ವಪದಾಂತ್ಯಲೋಪ :

ಬಡವು + ನಡು = ಬದನು; ಅರಸು + ನೇಲ್ = ಅರನೇಲ್; ಪೊಲ್ಲರ್‌ + ಮಾನಸರ್ = ಪೊಲ್ಲಮಾನಸರ್ (ii) ನಡುವೆ ಅಕಾರದ ಆದೇಶ:

ಬಿಟ್ಟಿತ್ತು + ತೊಡೆ = ಬಟ್ಟದೊಡೆ, ಬೆಟ್ಟಿತ್ತು + ಬೇಸಗೆ = ಬೆಟ್ಟವೇಸಗೆ;

ದಟ್ಟಿತ್ತು + ಅಡಿ = ದಟ್ಟಡಿ (iii) ನಡುವಣ ಪದದ ಲೋಪ :

ಅಲರಂತಪ್ಪುದು + ಕಣ್ = ಅಲರ್ಗಣ್; ತುಂಬಿಯಂತಪ್ಪದ + ಕುರುಳ್ =

ತುಂಬಿಗುರುಳ್, ಪಳೆಯಂತಪ್ಪುದು + ನೊಸಲ್ = ಪೆನೊಸಲ್ (iv) ಉಪಾಂತ್ಯಸ್ವರಲೋಪ :

ತೆಳ್ಳಿತು + ಬಸಿಟ್ = ತಟ್ಟಸಿಟ್; ಒಳ್ಳಿತು + ನುಡಿ = ಒಟ್ಟುಡಿ; ಬಲ್ಲಿತು +

ಮುಗುಳ್ = ಬಲ್ಕುಗುಳ್ (V) ivರ ಪರಿಸರದಲ್ಲಿಯೇ ಆದಿಸ್ವರ ಎತ್ವವಾಗುವುದು :

ಬಿಳಿದು + ತಿಂಗಳ್ = ಬೆಂಗಳ; ಪಿರಿದು + ಮರನ್ = ಪರ್ಮರನ್ (ಪೂರ್ವಪ್ರಕೃತಿಗಳು ಬೆಳ್, ಪೆರ್ ಎಂಬುದರಿಂದ). ಇದಕ್ಕೆ ಅಪವಾದ; ಬಿಣಿತು + ಗೊನೆ = ಬಿಸ್ಕೊನೆ (ಬೆಣ್ಣನೆ ಅಲ್ಲ); ಇನಿದು + ಮಾವು = ಇಮ್ಮಾವು (ಎಮಾವು ಅಲ್ಲ) (ಪೂರ್ವಪ್ರಕೃತಿಗಳು ಬಿಣ್, ಇನಿ/ಇನ್ ಎಂಬುದರಿಂದ).

(1) ಪರವಾದ ಪದ ಸ್ವರಾದಿಯಾಗಿದ್ದರೆ, ಪೂರ್ವಪದದ ಆದ್ಯಕ್ಷರ ದೀರ್ಘವಾಗು ವುದು

ಪಿರಿದು+ಆನೆ = ಪೇರಾನೆ; ಪಿರಿದು + ಅಡವಿ = ಪೇರಡವಿ; ಕಿಸಿದು + ಅಕ್ಕಿ =

ಕೇಸಕ್ಕಿ

*1) Iಳನೆಯ ಪರಿಸರದಲ್ಲಿಯೇ ಪರವಾದ ಪದ ಸ್ವರಾದಿಯಾಗಿದ್ದರೆ, ಪೂರ್ವಪದ ವಾದ ಗುಣವಾಚಕ ಪ್ರಕೃತಿಗೆ ದ್ವಿತ್ವವಾಗುವುದು.

ನುಣ್ಣಿತು + ಅರಿಸಿನ = ನುಣ್ಣರಿಸಿನ; ಬಿಳಿದು + ಆನೆ = ಬೆಳ್ಳಾನೆ; ಇನಿದು + ಉಣಿಸು = ಇನ್ನುಣಿಸು (111) 1ಳನೆಯ ಪರಿಸರದಲ್ಲಿಯೇ, ಪರವಾದ ಪದ ಸ್ವರಾದಿಯಾಗಿದ್ದರೆ, ಪೂರ್ವ ಪದದ ಕಡು, ನಿಡು ರೂಪಗಳಿಗೆ ಟತ್ವ ಬರುವುದು:

ಇದು + ಆಯಮ್ = ಕಟ್ಟಾಯಮ್; ಕಡಿದು + ಅನ್ನು ಕಾಲ = ಕಟ್ಟಣ್ಮುಕಾಟ,

೭೮

ಕಡಿದು + ಅದಟು = ಕಟ್ಟದಟು; ನಿಡಿದು + ಎಸಟ್ = ನಿಟ್ಟೆಸಟ್. ನಡುವೆ ಎಂಬುದು ಸ್ಥಾನವಾಚಕ; ನಡು = ನಟ್ಟ ಆಗಬಹುದು. ನಡು + ಅಡವಿ = ನಟ್ಟಡವಿ

(ix) ivನೆಯ ಪರಿಸರದಲ್ಲಿಯೇ, ಪರವಾದ ಪದ ಸ್ವರಾದಿಯಾಗಿದ್ದಾಗ ಪೂರ್ವ ಪದದ ಕಿದು ಕಿತ್ ಎಂದಾಗುವುದು; ಕುಲು (< ಕುಣಿದು ?) ಕುತ್ ಎಂದಾಗುವುದು.

ಕಿಳಿದು+ಈಳೆ = ಕಿತ್ತೀಳೆ, ಕಿಳಿದು+ ಅಡಿ = ಕಿತ್ತಡಿ ಕಿಡ್ದು + ಅನಿವಮ್ = ಕಿತ್ಯನಿವಮ್; ಕುಲು / ಕುಣಿದು ? + ಅಡಿ = ಕುಡಿ, ಕುಬು / ಕುದು ? + ಎಸಟ್ = ಕುಸಟ್ ಶಮದ,ದಲ್ಲಿ ಕಿಳದು ಎಂಬುದಕ್ಕೆ ಕಿಚ್ಚು, ಕುದು ಎಂದು ಎರಡು ಆದೇಶಗಳನ್ನು ಹೇಳಿರುವುದು ಸರಿಯಲ್ಲ. ಕಿರು = ಚಿಕ್ಕ, ಸ್ವಲ್ಪ ಎಂದೂ ಕುಟು = ಗಿಡ್ಡ, ಮೋಟು ಎಂದೂ ಅರ್ಥಭೇದವಿದೆ. ಆದರೆ ಕಿದು ಗುಣವಾಚಕಕ್ಕೆ ಪ್ರಯೋಗವಿರುವಂತೆ ಕುಣಿದು ಗುಣವಾಚಕಕ್ಕೆ ಸ್ವತಂತ್ರವಾಗಿ ಪ್ರಯೋಗ ಕಾಣಿಸುತ್ತಿಲ್ಲ.

(x) ಪೂರ್ವಪದದ ಕಡಿದು ನಿಡಿದು ನಡುವೆ ಎಂಬವುಗಳಿಗೆ ವ್ಯಂಜನ ಪರವಾದ ಕಡು ನಿಡು ನಡು ಎಂಬ ರೂಪಗಳು ಸಮಾಸದ ಪೂರ್ವಪದಗಳಾಗುತ್ತವೆ.

ಕಡುಗುದುರ, ಕಡುಗಾಳಿ; ನಿಡುದೂಳ್, ನಿಡುವಯಣಮ್; ನಡುಸಜಂಗು

ನಡುಮಾಳಮ್ (xi) xನೆಯ ಪರಿಸರದಲಿ ರುವಂತೆಯೇ ಕಿದು, ಕುಟು/ಕುಣಿದು ಎಂಬವುಗಳ ವ್ಯಂಜನಪರವಾದಾಗ ಕಿಲು, ಕುಲು ರೂಪಗಳು ಸಮಾಸದ ಪೂರ್ವಪದಗಳಾಗುತ್ತವೆ

ಕಿರುಗೂಸು, ಕಿಲುವಿದಿರ್‌; ಕುಲವಡಿ, ಕುಜುಗಿಡು. ಇಲ್ಲಿ ಉತ್ತರ ಪದಗಳು ಕ್ರಮವಾಗಿ ಕೂಸು, ಬಿದಿರ್, ಮಡಿ ಮತ್ತು ಗಿಡು ಎಂಬ ವ್ಯಂಜನಾದಿ ಪದಗಳಾಗಿವೆ.

(xii) xನೆಯ ಪರಿಸರದಲ್ಲಿರುವಂತೆಯೇ ಪರವಾದ ಪದ ವ್ಯಂಜನಾದಿಯಾಗಿದ್ದೆ’ ಪೂರ್ವಪದದ ಆದ್ಯಕ್ಷರ ವಿಕಲ್ಪವಾಗಿ ದೀರ್ಘವಾಗುವುದನ್ನು ಇನಿದು ಎಂಬ ಒಂದೇ ಶಬ್ದದ ವಿಷಯದಲ್ಲಿ ಮಾತ್ರ ಕಾಣುತ್ತೇವೆ.

ಇನಿದು + ಸರ = ಇಂಚರಮ್, ಇಂಚರಮ್;

ಇನಿದು+ತುಟಿ = ಇಂದುಟಿ, ಇಂದುಟಿ, ಪ್ರಯೋಗಗಳಿಗೆ ನೋಡಿ : ಈಂಗಡಲ್ (ಪಂಪರಾ, ೭-೧೬೩), ಇಂಗೊರಲ್ (ಭಾಷಾಭೂ, ೬-೧೩೮), ಇಂಚರಮ್ (ಮಲ್ಟಿಪು. ೧-೪೪), ಈಂದುಟಿ (ಶಮದ. ೧೯೧)

(xiii) ivನೆಯ ಪರಿಸರದಲ್ಲಿಯೇ ಪೂರ್ವಪದ ಪಸಿದು, ಕಿಸಿದು, ಬಿಸಿದು (ಹಳೆಯ ವ್ಯಾಕರಣಕಾರರು ಪಚ್ಚನೆ, ಕೆಚ್ಚನೆ, ಬೆಚ್ಚನೆ ಎಂದು ಗುರುತಿಸುತ್ತಾರೆ) ಎಂದಿದ್ದು, ಪರದಲ್ಲಿ ವ್ಯಂಜನಾದಿ ಪದವಿದ್ದರೆ ಪೂರ್ವಪದ ಸಮಾಸದಲ್ಲಿ ಪಸು/ವಂ, ಕಿಸುಕೆಂಚೆಂ, ಬಿಸು

೭೯

ಬೆಂ ಎಂದು (ವರ್ಗಾಂತ್ಯ ಅನುನಾಸಿಕ) ಪರಿವರ್ತಿಸುತ್ತದೆ.

(ಅ) ಪಸಿದು + ಗಜ = ಪಸುಂಗ (ನಡುವೆ ಅನುಸ್ವಾರ ವಿಶೇಷ):

ಪಸಿದು + ತಳಿರ್ = ಪಂದಳಿರ್, ಪಸಿದು + ತಲೆ = ಪಂದಲೆ (ಆ) ಕಿಸಿದು+ಪೊನ್ = ಕಿಸುವೊನ್, ಕಿಸು+ಪೊಟಲ್ = ಕಿಸುವೊಲ್: ಕಿಸಿದು + ಗಜ್ = ಕಂಗ, ಕಿಸಿದು + ತಳಿರ್ = ಕೆಂದಳಿರ್, ಕಿಸಿದು+ಕಣಗಿಲೆ = ಚೆಂಗಣಗಿಲೆ, ಕಿಸಿದು+ನೆಯ್ದಿಲ್ = ಚೆನ್ನಯೀಲ್ (ಕ > ಚ ಇಲ್ಲಿಯ

ಭಾಷಿಕ ಪರಿವರ್ತನೆ) (ಇ) ಬಿಸಿದು + ನೆತ್ತರ್ = ಬಿಸುನೆತ್ತರ್; ಬಿಸಿದು + ನೀರ್ = ಬಿಸುನೀರ್‌,

ಬಿಸಿದು + ಕದಿರ್ = ಬೆಂಗದಿರ್, ಬಿಸಿದು + ನೀರ್ = ಬೆನ್ನೀರ್. (XIV) 1ನೆಯ ಮತ್ತು xiiiನೆಯ ಪರಿಸರದಲ್ಲಿಯೇ ಉತ್ತರ ಪದದ ಆದಿ ಸ್ವರವಾಗಿರುವ ಸಂದರ್ಭಗಳಲ್ಲಿ ಪಸಿದು ಕಿಸಿದು ಬಿಸಿದು ಎಂಬ ಪ್ರಕೃತಿಗಳಿಗೆ ಪಚ್ಚ ಕೇಸು, ಬೆಚ್ಚ ಎಂಬ ಪರಿವರ್ತಿತ ರೂಪಗಳು ಸಮಾಸದಲ್ಲಿ ಬರುತ್ತವೆ.

ಪಸಿದು + ಅಡಕೆ = ಪಚ್ಚಡ, ಪಸಿದು + ಓಲೆ = ಪಟ್ಟೋಲೆ; ಕಿಸಿದು + ಅಡಿ = ಕೇಸಡಿ, ಕಿಸಿದು + ಉರಿ = ಕೇಸುರಿ; ಕಿಸಿದು + ಅಕ್ಕಿ = ಕೇಸಕ್ಕಿ; ಬಿಸಿದು + ಅಂಬಿಲ = ಬೆಚ್ಚಂಬಿಲ, ಬಿಸಿದು + ಅಗುಟ್ = ಬೆಚ್ಚಗುಟ್ (ಕೊನೆಯ ಎರಡು

ವಿರಳ ಪ್ರಯೋಗಗಳು) ಕೆಲವು ಸಲ ವಿಗ್ರಹ ವಾಕ್ಯವನ್ನು ಗುರುತಿಸುವಾಗ ತೊಡಕುಗಳು ಎದುರಾಗಬಹುದು. ಇರ್ವ ಪದಗಳ ಪ್ರಕೃತಿಗಳು ನಾಮಪದಗಳಾಗಿ ಪರಿವರ್ತನೆಗೊಳ್ಳುವಲ್ಲಿ ಎದುರಾಗುವ

ತೊಡಕುಗಳು, ಅವು:

ಕುಜುಗಡ್ಡ, ಕುಲುಗಮ್ : ಕುಜದು ಗಡ್ಡ, ಕುಣಿದು ಕಮ್ ಎಂದೂ,

ಉಲ್, ಕುಡುವೆ: ಕುಡುವಪುದು ಕೋಲ್, ಕುಡುವಪ್ಪುದು ಪಟ್ ಎಂದೂ ಸಸಂದೇಹವಾಗಿ ಅಥವಾ ಅನುಕೂಲಕ್ಕಾಗಿ ಹೇಳಿಕೊಳ್ಳಬೇಕು.

ದ್ವಿಗುಸಮಾಸ

ಕರ್ಮಧಾರಯ ಸಮಾಸದಂತೆ ದ್ವಿಗು ಸಮಾಸವೂ ಸಮಾನಾಧಿಕರಣವುಳ್ಳದ್ದು. ಪೂರ್ವ ಪದ ಸಂಖ್ಯಾವಾಚಕವಾಗಿರುವುದು ಅವಶ್ಯ.

ಎರಡು + ಮಾತು = ಎರಾತು; ಎರಡು + ತಡಿ = ಎರಳ್ತಡಿ; ಎರಡು + ದಾಳ್ = ಇರ್ಬಾಳ್ (=ಎರಡು ಉಳುಮೆ); ಮೂರು+ಬಾಳ್ = ಮೂವಾಳ್ (“ಮೂರು ಉಳುಮ): ಇರ್ವರ್ + ಪೆಂಡಿರ್ = ಇರ್ಪಂಡಿರ್ ಮೇಲಿನ ಉದಾ.ಗಳಲ್ಲಿ ಎರಡು > ಇರ್ ಎಂದು ಒಮ್ಮೆ ಆದೇಶವಾದ ಕಾರಣದಿಂದ50

ಬಾಳ್ > ವಾಳ್ ಆಗಿಲ್ಲ, ಆದರೆ ಮೂರು > ಮೂ ಆದೇಶರೂಪವಲ್ಲ, ಆದ್ದರಿಂದ ಬಾಳ್ > ವಾಲ್ ಆಗಿದೆ.

ಎರಡು ಪೂರ್ವಪದವಾಗಿ ದ್ವಿಗುಸಮಾಸವೇರ್ಪಟ್ಟ ಹಲವು ಪ್ರಾಚೀನಪ್ರಯೋಗ ಗಳನ್ನು ಕನ್ನಡ ಕೋಶಕಾರರು ಗುರುತಿಸಿದ್ದಾರೆ. (ಕಸಾಪ, ಕನಿ., ಸಂಪುಟ ೨ - ೧೧೮೯, ೧೦೯೦): ಎರಡಿ, ಎರಡ್, ಎರಣೆ, ಎರರ, ಎರುದುರೆ, ಎರಚ್ಲ, ಎರದು, ಎರಂಡ, ಎರಂಡುಗ, ಎರಂಡ, ಎರಡಿ, ಎರಟ್ ಎರಳ್ಳೋಣೆ, ಎರಲ್ಪಜ್ಜೆ, ಎರಡ, ಎರಲ, ಎರಜ್ವಲಗ, ಇ.

ಸಂಧಿಕಾರಗಳು: (ಆ) ಪೂರ್ವಪದಾಂತ್ಯಲೋಪ :

ಪಲವು + ಕಣ್ = ಪಲಗಣ್; ಪಲವು + ದವಸಮ್ = ಪಲದವಸಮ್ (ಆ) ಪೂರ್ವಪದಾಂತ್ಯ ಡ > ಬಿ ಮತ್ತು ಸ್ವರಲೋಪ :

ಎರಟ್ಟಿರಮ್, ಎರಡಿ, ಎರಾತು, ಎರಟ್ಕಾಲು (ಇ) ಒಂದು > ಓರ್ ಆದೇಶ

ಒಂದು + ನುಡಿ = ಒರ್ನುಡಿ, ಒಂದು + ಪಿಡಿ = ಒರ್ಪಿಡಿ (ಈ) ಎರಡು > ಇರ್‌ ಆದೇಶ

ಎರಡು + ಕಟ್ಟು = ಇರ್ಕಟ್ಟು, ಎರಡು + ಬನ್ = ಇರ್ಬೆನ್ (ಉ) ಮೂಲ > ಮುಕ್ | ಮುಗ್ / ಮುಫ್ /ಮುಮ್

ಮೂಲ + ಕುಪ್ಪೆ = ಮುಕ್ಕುಪ್ಪ ಹಾಗೆಯೇ ಮುಗುಡ್ಡೆ, ಮುಪ್ಪುರಿ, ಮುಮ್ಮಾಲು. ಪರದಲ್ಲಿ ಚ್/ಸ್ ಬಂದರೆ ಮುಚ್; ಬ ಬಂದರೆ ವ :

ಮೂಳು + ಚೋಟು : ಮುಚೋಟು, ಮೂಜು + ಸವಡಿ = ಮುಟ್ಟು

ಮೂಲು + ಬಿಟ್ಟಿ = ಮೂವಿಟ್ಟಿ ಕೆಲವೆಡೆ ಮುಕ್ | ಮುಗ್ ಇಲ್ಲ:

ಮೂಲ + ಕಮ್ 2 ಮೂಗಮ್, ಮೂಜು + ಗೇಣ್ = ಮೂಳೆ 11 (ಊ) ಪರಪದದ ಆದಿಯಲ್ಲಿ ಸ.ರವಿದ್ದರೆ ಒಂದು ಎರಡು ಮೂಲು ಎಂಬ ** ವಾಚಕಗಳಿಗೆ ಓರ್ ಈರ್ ಮುಮ್ ಆದೇಶಗಳು.

ಒಂದು + ಅಡಿ = ಓರಡಿ, ಎರಡು + ಒಡಲ್ - ಈರೋಡಲ್, ಮೂರು + ಅಡಿ = ಮುಯ್ಯಡಿ. ಹೀಗೆಯೇ ಓರೊಂದು, ಇರಾಲ (ಒಂದು+ಒಂದು; ಎರಡು+ಆದು)’ (ಯ) ಪರಪದದ ಆದಿಯಲ್ಲಿ ವ್ಯ

ಎಯಲ್ಲಿ ವ್ಯಂಜನವಿದ್ದರೆ, ನಾಲ್ಕು ಆಯು ಆಡು ಏಟು ಎಂಟು

*ಒಂದು, ಎರಡು+ಟು) ಇ, ರೂಪಗಳು

ಸಂಖ್ಯೆಗಳಿಗೆ ನಾಲ್, ಅಯ್ ಅಯಿ, ಬೀಟ್, ಎಣ್ ಎಂದು ಆದೇಶರೂಪಗಳು ಘಟಿಸು ಇವೆ:

ನಾಲ್ಕು + ಮಡಿ = ನಾಲ್ವಡಿ, ಅಯ್ಯು + ಕಂಡುಗಮ್ = ಅಯ್ಯಂಡುಗಮ್, ಆಡು + ತಿಂಗಳ್ = ಅಡುದಿಂಗಳ್, ಏಟು + ಪೂರ = ವೀರ, ಎಂಟು +

ದೆಸೆ = ಎಣ್ಣಸೆ ಇ. ಒಂಬತ್ತು ಪತ್ತು ನೂಲುಗಳ ವಿಷಯದಲ್ಲಿ ಪರಪದ ಸಂಖ್ಯೆಯಾಗಿರದಿದ್ದರೆ, ಒಂಬತ್ತು ತಿಂಗಳ್, ಒಂಬತುಂ ನಿಧಿ, ಒಂಬತುಂ ಗರಂ, ಪತ್ತುದೆಸ, ನೂರ್ಮಡಿ ಹೀಗೆ ರೂಪಗಳಾ ಗುತ್ತವೆ; ನೂಲು ಪದಕ್ಕೆ ನೂರ್‌ ಆದೇಶರೂಪ.

(M) ದ್ವಿಗುವಿನಲ್ಲಿ ಪೂರ್ವಪದ ಸಂಖ್ಯೆಯಾಗಿರುವುದು; ಕೆಲವು ಸಲ ಉತ್ತರ ಪದವೂ ಸಂಖ್ಯೆಯಾಗಿರಬಹುದು (ಸಂಖ್ಯಾವಿಶೇಷ್ಯ)

ಮೂಲ + ಏತು = ಮುಯ್ಲು (ಮೂರು ಏಳುಗಳು = ೨೧); ಆಡು + ನೂಲು = ಅಜುನೂಲು (ಆರು ನೂರುಗಳು = ೬೦೦); ಒಂಬತ್ತು + ನೂಲು = ಒಂಬಯೂಮಿ (ಒಂಬತ್ತು ನೂರುಗಳು = ೯೦೦); ಪತ್ತು + ಸಾಸಿರಮ್ = ಪಯಿಂಛಾಸಿರಮ್ (ಹತ್ತು ಸಾವಿರಗಳು = ೧೦೦೦೦); ಎರಡು + ಅಯ್ತು = ಈರಯ್ದು (ಎರಡು ಐದುಗಳು = ೧೦) ಎಂಟು + ಪತ್ತು = ಎತ್ತು (ಎಂಟು ಹತ್ತುಗಳು = ೮೦) (ಎ) ಪತ್ತು ಸಂಖ್ಯೆಗೆ ಪತ್ ಪದಿ ಪದಿನ್ ಪನ್ ಪದಿರ್‌ ಹೀಗೆ ಆದೇಶಗಳು ಬಹುವಾಗಿರುವುದು ಒಂದು ವಿಶೇಷ. ಇವು ಸಮಾಸಗಳಲ್ಲಿ ಹೇಗೆ ವರ್ತಿಸುತ್ತವೆ?

ಪತ್ತಟ + ಒಂಬತ್ತು = ಪತೊಂಬತು (ಷಷಿ ತತ್ಪುರುಷ), ಪತ್ನದ + ಒಂದು = ಪನ್ನೊಂದು (ಷತ), ಪತ್ರಅ + ಮೂಖು = ಪದಿಮೂಜು (ಷತ) ಹಾಗೆಯೇ ಪದಿನಾಲ್ಕು (ಷ.ತ); ಪತ್ತಟ + ಐದು = ಪದಿನಯು (ಷತ.); ಹಾಗೆಯೇ ಪದಿನಾಜು, ಪದಿನೇಟು,

ಹದಿನೆಂಟು.

ದ್ವಿಗು ಸಮಾಸದಲ್ಲಿ ಪದಿ‌ ಎಂಬ ಆದೇಶದೊಂದಿಗೆ ಪದಿರ್ಮಡಿ, ಪರಿರ್ಕಂಡುಗ, *ಬರ್ಕೊಳಗೆ ಹೀಗೆ ರೂಪಗಳು, ಈ ಪದಿ‌ ಎಂಬ ರೂಪ ನೂಲು > ನೂರ್, ಸಾಸಿರ * ಸಾಸಿರ್ ಇವುಗಳ ಸಾದೃಶ್ಯದ ಮೇಲೆ ರೇಫಾಂತವಾದ ಆದೇಶರೂಪವಿರಬಹುದು.

ಕ್ರಿಯಾಸಮಾಸ

ಸಂಸ್ಕೃತ ಅಥವಾ ಕನ್ನಡ ನಾಮಪ್ರಕೃತಿಗಳಿಗೆ ಕೃನ್ನಾಮಗಳು ಪರದಲ್ಲಿ ಬಂದಾಗ ಕ್ರಿಯಾಸಮಾಸಗಳೆಂದು ಹೇಳಬಹುದು. ಕೃನ್ನಾಮಗಳನ್ನು ರೂಪಿಸುವುದು ಕ್ರಿಯಾಪ್ರಕೃತಿಗಳ, ಆದರೆ ಆ ಕ್ರಿಯಾವಾಚಕಗಳನ್ನು ಕ್ರಿಯಾಪದಗಳಾಗಿಯೇ ಗಣಿಸಿದರೆ ಎರಡು

೮೨

ನಾಮಪ್ರಕೃತಿಗಳಿಗೆ ನಡೆಯುವುದು ಸಮಾಸವೆಂಬ ವಿಧಿಗೆ ವ್ಯತಿರೇಕವಾಗುತ್ತದೆ. ಈ ವಿಷಯದಲ್ಲಿ ಪ್ರಾಚೀನ ಕನ್ನಡ ವೈಯಾಕರಣರ ಗ್ರಹಿಕೆ ವಿಚಾರಣೀಯವಾಗಿ ತೋರು ವುದು.

೧. ಪೂರ್ವಪದ ಸಂಸ್ಕೃತವೋ ಕನ್ನಡವೋ ಆಗಿದ್ದು, ಉತ್ತರ ಪದದ ಕೃನ್ನಾಮ ಕನ್ನಡವೇ ಆಗಿರುತ್ತದೆ.

ರಂಗಮನ್ + ಪೊಕ್ಕನ್ = ರಂಗಂಬೊಕ್ಕನ್ (= ರಂಗವನ್ನು ಹೊಕ್ಕವನು); ಧನಮನ್ + ಪಡೆದನ್ = ಧನಂಬಡೆದನ್ (= ಧನವನ್ನು ಪಡೆದವನು); ಬಳೆಯನ್ + ತೊಟ್ಟನ್ = ಬಳೆದೊಟ್ಟನ್ (= ಬಳೆಯನ್ನು ತೊಟ್ಟವನು) ಮೊಗಮನ್ + ನೋಡಿದನ್ (= ಮೊಗವನ್ನು ನೋಡಿದವನು); ಗೋವು + ಕಾದುದು = ಗೋವುಗಾದುದು (ಗೋವನ್ನು ಕಾದುದು) ಕ್ರಿಯಾಸಮಾಸಗಳಲ್ಲಿ ಸಾಮಾನ್ಯವಾಗಿ ಪೂರ್ವಪದ ದ್ವಿತೀಯಾವಿಭಕ್ತಿಯಲ್ಲಿರುವುದೆ ರಿಂದ ಈ ಸಮಾಸವನ್ನು ದ್ವಿತೀಯಾ ತತ್ಪುರುಷವೆಂದೂ ಹೇಳಬಹುದು. ಸಂಸ್ಕೃತ ಪೂರ್ವಪದಗಳಿಗೆ ಬಂದು ನಿತ್ಯ; ಕನ್ನಡದಲ್ಲಿ ಐಚ್ಛಿಕ.

ಧನಂಬಡದನ್, ಗುಣಂಗೊಂಡನ್; ಗಡಣಂಗೊಂಡನ್-ಗಡಣಗೊಂಡನ್, ಬಿಜಯ ಗಚ್ಚನ್-ಬಿಜಯಗೆಯ್ದನ್

೨. ಕ್ರಿಯಾಸಮಾಸದಲ್ಲಿ ಪೂರ್ವಪದ ದ್ವಿತೀಯಾವಿಭಕ್ತಿಯಲ್ಲಿಯೇ ಅಲ್ಲದೆ ಇತ ವಿಭಕ್ತಿಗಳಲ್ಲಿಯೂ ವಿರಳವಾಗಿ ಉಂಟು.

ಕಡಂಗೊಂಡನ್ : ಕಡಮನ್ ಕೊಂಡನ್, ಕಡಕ್ಕೆ ಕೊಂಡನ್. “ಅಡಿವಚೆಯನ್ ನಾತಂಬಿಡಿದು ಬಂದು’ (ಸುಕುಮಾ, ೧೨-೨೪ ವ.) ಎಂಬಲ್ಲಿ ನಿಲ್ಲ +: ಪಿಡಿದು, “ಕಲನ ಕಾಸಿದ ಕೆಂಡವನ್ ಮೊಗಂಡಿಗಿಡಿವರ್’ (ಅನಂಪು. ೯-೩೫) ಎಳ* “ಮೊಗಕ್ಕೆ ಗಿಡಿಗಿಡಿವರ್”, “ತಲೆಸುತ್ತಿ ಕರಮ್ ಮಣಿದತು’ (ಅನಂಪು. ೯-೭೫) ಎಂಬಲ್ಲಿ ತಲೆಯೊಳ್ ಸುತ್ತಿ’ ಎಂದು ವಿಗ್ರಹವಾಕ್ಯ ಮಾಡಿಕೊಳ್ಳಬೇಕಾಗುವುದು. ಆದರೆ ಇಲ್ಲಿ ಕ್ರಿಯಾಸಮಾಸವೆನ್ನಬೇಕಾದರೆ ಉತ್ತರಪದಗಳು ಕೃನ್ನಾಮಗಳಾಗಬೇಕಾಗುತ್ತವೆ; ಆದ್ದ ಈಗಿರುವಂತೆ ಇವನ್ನು ನಾಮಧಾತುಗಳೆನ್ನಬೇಕಾಗುವುದು.

ಅವ್ಯಯೀಭಾವ (=ಅಂಶಿ) ಸಮಾಸ

ಸಾಮಾನ್ಯವಾಗಿ ಪೂರ್ವಪದ ವಸ್ತುವೊಂದರ ಅಂಶ/ಭಾಗ/ಅವಯವವನ್ನೂ ಪ ಅಂಶಿಯಾಗಿರುವ ವಸ್ತುವನ್ನೂ ಇಲ್ಲಿ ಕುರಿತಿರುತ್ತದೆ. ದಿಟವಾಗಿ ಇಲ್ಲಿ ಮುಖ್ಯವಾಗಿ ವುದು ಅಂಶವೇ ಹೊರತು ಅಂಶಿಯಲ್ಲ. ಪೂರ್ವಪದ ಸಾಮಾನ್ಯವಾಗಿ ದಿಗ್ವಾಚಕವು ಸ್ಥಾನವಾಚಕವೋ ಆದ ನಾಮವಿಶೇಷಣವಾಗಿರುತ್ತದೆ. ವಿಗ್ರಹವಾಕ್ಯ ಮಾಡುವಾಗ

ನಾಗಿರು

&

ಯನ್ನು ಮೊದಲಲ್ಲಿಯೂ ಅಂಶವನ್ನು ಕೊನೆಯಲ್ಲಿಯೂ ಇಡಲಾಗುವುದು. ಇದು ಪೂರ್ವ ಪದಮುಖ್ಯತೆಯ ಸಮಾಸ

ಅಂಗಯ್, ಅಂಗಾಲ್, ಮೇಂಗಯ್, ಮೇಂಗಾಲ್, ಮುಂಗಯ್, ಮುಂಗಾಲ್, ಪಿಂಚದೆ, ಪಿಂಚೊಟ್ಟು, ಕಿಳ್ಳೆ, ಕೀಳ್ಕೊಡೆ, ಪಿಂತಿಲ್, ಪಿಂತೊಲೆ, ಪಡಂಗಮ್, ಪಡಂಗಾಲ್ ಇತ್ಯಾದಿ ಶಬ್ದಗಳಲ್ಲಿ ಪೂರ್ವಪದಗಳು ಅಡಿ, ಮೇಗು, ಮುಂದು, ಪಿಂದು, ಕಟಗು ಪಿಂತು ಪೆಲಗು ಎಂದು ವಿಗ್ರಹವಾಕ್ಯ ಮಾಡುವಾಗ ತಿಳಿಯುವುದು.

ಸಂಧಿಕಾರಗಳು : (ಆ) ಅಡಿ ಮೇಗುಗಳ ಅಂತ್ಯಾಕ್ಷರಕ್ಕೆ ಲೋಪ :

ಕಯ್ಯ ಅಡಿ = ಅಂಗಯ್, ಕಾಲ ಅಡಿ = ಅಂಗಾಲ್; ಕಯ್ಯ ಮೇಗು =

ಮೇಂಗಯ್, ಕಾಲ ಮೇಗು = ಮಂಗಾಲ್. ಆಧುನಿಕರು ವಿಗ್ರಹವಾಕ್ಯವನ್ನು ಅಗಂ ಕಮ್ = ಅಂಗಯ್, ಆಗಂ ಕಾಲ್ = ಅಂಗಾಲ್ ಎಂದು ಮಾಡುವರು. ‘ಅಡಿ’ ಎನ್ನುವುದಕ್ಕಿಂತ ಒಳಭಾಗ ಎಂಬರ್ಥದ ಆಗಮ್’ ಶಬ್ದವೇ ಇಲ್ಲಿ ಸೂಕ್ತ ಹೀಗೆಯೇ ವಿಗ್ರಹವಾಕ್ಯ ಮೇಗಣ ಕಮ್ =

ಆಯಮ್, ಮೆಗಣ ಕಾಲ್ = ಮೇಂಗಾಲ್ ಎನ್ನುವುದಕ್ಕಿಂತ ಮೇಲಣ ಕಟ್ ಮೇಲಣ ಕಾಲ್ ಎಂದಾಗಿ (ಮೇಲ್ > ಮೇರಿ) ಆಗಿರಬಹುದು.

(ಆ) ಮುಂದು ಹಿಂದುಗಳ ಉತ್ತರಪದಗಳಾಗಿ ವ್ಯಂಜನಾದಿ ವಸ್ತುವಾಚಕಗಳಿದ್ದರೆ, ಪೂರ್ವಪದಗಳ ಅಂತ್ಯಾಕ್ಷರಕ್ಕೆ ಲೋಪ :

ಕಯ್ಯ ಮುಂದು = ಮುಂಗಯ್, ಕಾಲ ಮುಂದು = ಮುಂಗಾಲ್, ಕೊರಲ ಮುಂದು = ಮುಂಗೊರಲ್, ಸೂರ ಮುಂದು = ಮುಂಜೂರ್, ಬಾಗಿಲ ಮುಂದು * ಮುಂಬಾಗಿಲ್, ಮಾಗಿಯ ಮುಂದು = ಮುಮ್ಮಾಗಿ, ಕಾರ ಮುಂದು = ಮುಂಗಾರ್, ಕಾಲ ಪಿಂದು = ಪಿಂಗಾಲ್, ಪದೆಯ ಪಿಂದು = ಪಿಂಚದೆ, ಪೊತ್ತಿದೆ ಒಂದು = ಪಿಂಚೊಕ್ಕಿಟ್ ಇಲ್ಲಿ ಮುನ್ ಪಿನ್‌ ಪ್ರಕೃತಿಗಳೇ ಪೂರ್ವಪದಗಳಾಗಿವೆ. (ಇ) ಮುಂತು ಪಿಂತುಗಳ ಉತರಪದಗಳಾಗಿ ಸ್ವರಾದಿ ವಸ್ತುವಾಚಕಗಳಿದ್ದರೆ, ಪೂರ್ವಪದಗಳ ಅಂತಾ.ಕ.ರಕೆ, ಲೋಪವಿಲ. ಪಂಗುವಿಗೆ ಪಿಂತು ಆದೇಶವಲ್ಲ; ಪಿನ್ * ಆಳು ದು; ಇಲ್ಲ ಪಿಂತು = ಪಿಂಡೀಲ್, ಒಲೆಯ ಪಿಂತು = ಪಿಂತೊಲೆ; ಆಸನದ ಮುಂತು = ಮುಂತಾಸನ (ದಿವ್ಯಚ.೬-೨೩).

(ಈ) ಕೆಟಗು ಎಂಬ ಸಾ ನವಾಚಕಕ, ಕೀಟ್ ಆದೇಶ, ಕಏಯ ಕೆಂಗು = ಕಿಸ್,

ಆಗು = ಕೀಡೆ, ಬರಿಯ ಕೆಟಗು = ಕಿರಿ, ಸೆಟಿಂಗಿನ ಕೇಲಗು =

ಪೂಜೆಯ ಕೇಲಗು = ಕೀಡೆ, ಓ ಕಿ_ಅಂಗು

೬೮೪

(ಉ) ಪಲಗು ಎಂಬ ಸ್ಥಾನವಾಚಕಕ್ಕೆ ಪಡ ಎಂಬುದು ಆದೇಶ. ಪಜ - ಪೆಡ ಭಾಷಿಕ ವಾಗಿ ಸಂಬಂಧವಿರುವ ರೂಪಗಳು, ಅದರ ಪಡ ಸ್ವತಂತ್ರರೂಪದಲ್ಲಿ ಪ್ರಚುರವಿಲ್ಲ.

ಕಯ್ಯ ಪಂಗು = ಪಡಂಗ, ತಲೆಯ ಪಂಗು = ಪಡಂದಲೆ; ಕಾಲ ಷೇರು = ಪಡಂಗಾಲ್; ಇವು ಬಿಂದುರಹಿತ ರೂಪಗಳಲ್ಲಿಯೂ ಪಡಗ, ಪೆಡದಲೆ, ಪಡಗಾಲ್ ಎಂದಿರಬಹುದು.

ಒಂದು ವಿಶೇಷವನ್ನು ಗಮನಿಸಬೇಕು: ಪಿಂತ್ಲೆ ಮುಂಗಾಲ್ ಒಳಕೊಂಟ ಪೂವ್ರ‌ ಮುಂಬಾಗಿಲ್ ಕಿಣಿ ಮೊದಲಾದ ಸಮಸ್ತ ಶಬ್ದಗಳನ್ನು ಅಂಶಿ ಸಮಾಸದ ಹಾಗ ವಿಗ್ರಹವಾಕ್ಯ ಮಾಡುವಂತೆಯೇ ಪಿಂತಣ ಒಲೆ, ಮುಂದಿನ ಕಾಲ್, ಒಳಗಣ ಕೋಂಟೆ, ಪೊಂಗಣ ಊರ್, ಮುಂದಣ ಬಾಗಿಲ್, ಕೆಂಗಣ ಕೆಳ ಮೊದಲಾಗಿ ಷಷ್ಟಿ ತತ್ಪುರುಷ ಸಮಾಸಗಳಾಗಿ ಕೂಡ ವಿಗ್ರಹವಾಕ್ಯ ಮಾಡಬಹುದು. ಅದು ಕರ್ತೃ ಉದ್ದೇಶವನ್ನು ಅನುಸರಿಸಿ ಅರ್ಥಭೇದವನ್ನು ತರುತ್ತದೆ.

ದ್ವಂದ್ವ ಸಮಾಸ

ಎರಡು ಅಥವಾ ಎರಡಕ್ಕಿಂತ ಹೆಚ್ಚು ನಾಮಪ್ರಕೃತಿಗಳು ಸೇರಿ ಸಮಪ್ರಾಮುಖ್ಯವಿರುವ ಸಮಾಸವಾದರ ಅದು ದ್ವಂದ್ವ ಸಮಾಸ, ಪದಾರ್ಥದ ಗಡಣಮ್’, ‘ಪದಾರ್ಥದ ಸಮುಚ್ಚಯಮ್’ ಎಂದು ವೈಯಾಕರಣರು ಈ ಸಮಾಸದ ಪ್ರಕೃತಿಗಳನ್ನು ಕುರಿ ಹೇಳಿದ್ದಾರೆ. ಇಲ್ಲಿ ವಿಗ್ರಹವಾಕ್ಯ ಮಾಡುವಾಗ ಉಮ್ ಎಂಬ ಸಮುಚ್ಚಯಾರ್ಥಿ " ಪ್ರತ್ಯಯವನ್ನಾಗಲಿ, ಮೇಷ್ಮತ್ತಮ್ ಎಂಬ ಸಂಬಂಧಸೂಚಕಾವ್ಯಯವನ್ನಾಗಲಿ ಬ ಬೇಕಾಗುತ್ತದೆ. ವಿವಕ್ಷಿತ ವ್ಯಕ್ತಿ ಅಥವಾ ವಸ್ತುವಿನ ಸಂಖ್ಯೆಯನ್ನು ಅನುಸರಿಸಿ ವಾಕ್ಯದ ಪ್ರತ್ಯಯವನ್ನು ಆ ವ್ಯಕ್ತಿಯ ಅಥವಾ ವಸ್ತುವಿನ ಪ್ರಕೃತಿಗೆ ಹತ್ತಿಸಬೇಕಾಗುವುದು’

ಉಭಯಪದಾರ್ಥಪ್ರಧಾನ ದ್ವಂದ್ಯ:

ಆಟಮುಮ್ ಪಾಟಮುಮ್ = ಆಟಪಾಟಂಗಲ್ | ಆಟಪಾಟಮ್ ಪುಲ್ಲುಮ್ ಪೊದಲುಮ್ = ಪುಲ್ಲೊದಲುಗಳ್ / ಪುಲೋದಳು ರಾಮನುಮ್ ಕೃಷ್ಣನುಮ್ = ರಾಮಕೃಷ್ಟರ್ ಪಶುಗಳುಮ್ ಪಕ್ಷಿಗಳುಮ್ = ಪಶುಪಕ್ಷಿಗಳ್/ಪಶುಪಕ್ಷಿ ಸರ್ವಪದಾರ್ಥಪ್ರಧಾನ ದ್ವಂದ್ವ:

ಆಟಮುಟ್ ಪಾಟಿಮುಮ್ ಕೂಟಮುಮ್ = ಆಟಪಾಟಕೂಟಿಂಗಳ ಪುಲ್ಲುಮ್ ಪೊದಲುಮ್ ಪಕ್ಕಿಯುಮ್ ಮಿಗಮುಮ್ = ಪುಲ್ಲೊದಲು

. ಮಿಗಂಗಳ್’

ಹಳಗನ್ನಡ ವ್ಯಾಕರಣ ಪ್ರವೇಶಿತ

ವಿಶೇಷವಾಗಿ ಹೇಳಬಹುದಾದ್ದು ಎಂದರೆ ಕನ್ನಡದ ಉಭಯಪದಾರ್ಥಶ್ರೇಣಿಯ ದ್ವಂದ್ವ ಸಮಾಸಾಂತ್ಯದಲ್ಲಿ ಬಹುವಚನಪ್ರತ್ಯಯ ಬರಲೇಬೇಕೆಂಬ ನಿಯಮವಿಲ್ಲ. ಆದರೆ ಸರ್ವಪದಾರ್ಥಶ್ರೇಣಿಯಲ್ಲಿ ಬಹುವಚನಪ್ರತ್ಯಯ ನಿತ್ಯ.

ಬಹುವ್ರೀಹಿ ಸಮಾಸ

ಪೂರ್ವೋತ್ತರಪದಗಳ ಅರ್ಥ ಯಾವುದೂ ಮುಖ್ಯವಾಗದೆ ಅವುಗಳಿಂದ ಕೂಡಿ ಹೊರಡುವ ಅನ್ಯಪದದ ಅರ್ಥ ಮುಖ್ಯವಾಗುವುದು ಬಹುಹಿಯ ಲಕ್ಷಣ. ವಿಗ್ರಹ ಮಾಕ್ಕೆ ಸ್ವಲ್ಪ ವಿವರಣಾತ್ಮಕವಾಗಿದ್ದು, ಹಳಗನ್ನಡ ಭಾಷೆಗೆ ಅನುಗುಣವಾಗಿ ಅದನ್ನು ವಿಶದವಾಗುವಂತೆ ನಿರೂಪಿಸುವುದು ಆವಶ್ಯಕವಾಗಿರುತ್ತದೆ. ಹೀಗೆ ಮಾಡುವಾಗ ಉತ್ತರ ಪದದ ಅಂತ್ಯದಲ್ಲಿ ಪ್ರಕೃತಿಗೆ ಲಿಂಗ ವಚನಾನುಸಾರಿಯಾದ ಪ್ರತ್ಯಯವೂಂದಿರುವುದು ಸಾಮಾನ್ಯ. ಪ್ರತ್ಯಯವಿಲ್ಲದ ರೂಪಗಳೇ ದಿಟವಾಗಿ ಬಹುಹಿಸಮಾಸಕ್ಕೆ ತಕ್ಕ ಲಕ್ಷ್ಮಗಳೆಂದು ಹೇಳಬೇಕು.

೧. ಪರಿಚಿತಸಮಾಸಗಳಿಗೆ ಲಿಂಗವಚನಸೂಚಕ ಪ್ರತ್ಯಯಗಳನ್ನು ಹತ್ತಿಸುವುದು. ಅಲರ್ಗಣ್ ಬಟ್ಟದೊಡೆ ಕುಡುವಿಲ್ ಬಲ್ಲಲೆ ಇಂಥವು ಕರ್ಮಧಾರಯಗಳು. ಇವನ್ನು ಆಲರ್ಗಣ್ಣನ್ ಬಟ್ಟದೊಡೆಯನ್ ಕುಡುವಿಲ್ಲನ್ ಬಲೆಯನ್ ಎಂದು ಮಾಡಿದರ ಬಹುವ್ರಹಿಯಾಗುತ್ತದೆ. ಇವನ್ನು ಸ್ತ್ರೀ ವಿ.ವ, ಮತ್ತು ಪುಂ. ಬ.ವ. ರೂಪಗಳ ಲ್ಲಿಯೂ ಕಾಣಬಹುದು.

ವಿವರಣಾತ್ಮಕ ವಿಗ್ರಹವಾಕ್ಯಗಳು ಹೀಗಿರುತ್ತವೆ: ಅಲರಂತಪ್ಪ ಕಣ್ ಆವಂಗ ಆವನ್ ಆಲರ್ಗಣ್ಣನ್; ಬಟ್ಟಿತಪ್ಪ ತಡ ಆವಂಗೆ ಅವನ್ ಬಟ್ಟದೊಡೆಯನ್; ಕೊಂಕಿದುದು ಬಿಲ್ ಆವಂಗೆ ಅವನ್ ಕುಡುವಿಲನ್; ಬಲ್ಲಿತಪ್ಪ ತಲೆ ಆವಂಗೆ ಅವನ್ ಬಲ್ಬಲೆಯನ್.

ಸ್ತ್ರೀಲಿಂಗ ರೂಪಗಳು ಅಲರಂತಪ್ಪ ಕಣ್ ಆವಳೆ ಅವಳ್ ಅಲರ್ಗಳ್ ಎಂದು ಮುಂತಾಗಿ ಆಗಬಹುದು.

ತಿ, ಪರಿಚಿತಸಮಾಸಗಳ ಕೊನೆಗೆ ಬಹುಪ್ರೀಹಿಸಾಧಕಪ್ರತ್ಯಯವಾದ ಇತ್ವವನ್ನು ಸೇರಿಸಿ ಬ,ಪ್ರೀ, ಸಮಾಸಮಾಡಬಹುದು:

ಕಡುಚಾಗಮ್, ಮನ್ನಣ, ನಿಡುಮೂಗು ಇಂಥವು ಕರ್ಮಧಾರಯಗಳು. ಇವಕ್ಕೆ ಇತ್ವವನ್ನು ಹತ್ತಿಸುವ ಮೂಲಕ ಕಡುಚಾಗಿ ಮನ್ನಣಿ ನಿಡುಮೂಗಿ ಎಂದು ಮಾಡಿದರ ಬಹುಪ್ರೀಹಿಯಾಗುವುದು. ಸಂದರ್ಭಾನುಸಾರವಾಗಿ ಲಿಂಗತ್ರಯದಲ್ಲಿಯೂ ಇವು

ನಡೆಯಬಲ್ಲುವು.

ವಿವರಣಾತ್ಮಕ ವಿಗ್ರಹವಾಕ್ಯಗಳು ಹೀಗಿರುತ್ತವೆ: ಕಡಿದಪ್ಪ ಚಾಗಮ್ ಆವನೊಳ್ ಅವನ್ ಕಡುಚಾಗಿ; ಮೆಲಿ ತಪ್ಪ ಬಿನ ಣಮ್ ಆವನೊಳ್ ಅವನ್ ಮನ್ನಣಿ; ನಿಡಿದಪ್ಪ

ಮೂಗು ಆವಂಗೆ ಅವನ್ ನಿಡುಮೂಗಿ,

ಸ್ತ್ರೀಲಿಂಗ ರೂಪಗಳು ಕಡಿದಪ್ಪ ಚಾಗ ಆವಳೊಳ್ ಅವಳ್ ಕಡುಚಾಗಿ ಎಂದು ಮುಂತಾಗಿ ಆಗಬಹುದು. ಹೀಗೆಯೇ ನಫ್ ರೂಪಗಳನ್ನೂ ಮಾಡಬಹುದು; ಎಂದರೆ ಇತ್ಯಾಂತ ಬ.ವೀ.ಗಳು ಲಿಂಗತ್ರಯಕ್ಕೆ ಸಮಾನವಾಗಿ ಅನ್ವಯಿಸುತ್ತವೆ.

೩. ಪೂರ್ವಪದಾಂತ್ಯದಲ್ಲಿ ಅತ್ಯವೂ ಪರಪದಾಂತ್ಯದಲ್ಲಿ ಇತ್ಯವೂ ಬಂದು ಪರಸ್ಪರ ವಾಗಿ ಕಾಡುವ ಕ್ರಿಯೆಯಿಂದ ಬಹುಪ್ರೀಹಿಯಾಗುವುದು ಸಂಸ್ಕೃತ ಕನ್ನಡಗಳಲ್ಲಿ ಸಾಮಾನ್ಯ.

ಖಡ್ಡಾಖಡ್ಡಿ, ಮುಷ್ಟಾಮುಷ್ಟಿ, ದಂಡಾದಂಡಿ, ಕಚಾಕಚಿ ಇವೂ ಘಟ್ನಾಘಟ್ಟಿ, ಮಲ್ಲಾಮಲ್ಲಿ, ದಖ್ಯಾದ ಇವೂ ಒಂದು ಶ್ರೇಣಿಯವು; ದಾಟಾದಾಟ, ಕೋಲಾಕೋಲಿ, ಸಿಲ್ಕಾಸಿಲ್ಕಿ ಇವು ಇನ್ನೊಂದು ಶ್ರೇಣಿಯವು.

‘ಶಸ್ತ್ರಾಶಸ್ತಿಯುಮ್ ಖಡ್ಡಾಖಡ್ಡಿಯುಮ್ ದಂಡಾದಂಡಿಯುಮ್ ಕಚಾಕಚಿಯು ಮಾಗಿ ತಳ್ಳಿಹೌದ …’ (ಅನಂಪು. ೧೧-೮೩ ವ.): ವಾಟಾದಾಟಿ (ಧರ್ಮಾಮೃ, ೧೧ ೧೨೭), ಕೋಲಾಕೋಲಿ (ಶಬ್ದಾನು. ೩೧೨), ಸಿಲ್ಕಾಸಿಲ್ಕಿ (ನಾವರ್ಧ, ೮-೨೨).

ಹಕಾರಾದಿಯಾದ ಹಾಹಾಹಾಣಿ, ಹೆಲ್ತಾಹೆ ಇಂಥ ಪ್ರಯೋಗಗಳು ಈಚಿನ ಕಾಲದ ವೆಂದು ತೋರುತ್ತವೆ.

ಕಾದುವ ಕ್ರಿಯೆಯ ಬಹುಪ್ರೀಹಿ ಸಮಾಸಗಳು ನಪುಂಸಕ ಲಿಂಗದಲ್ಲಿಯೇ ಇರುವುದು ಸ್ಪಷ್ಟ.

ಖಡದಿನ್ ಖಡ್ಡದಿನ್ ಮಾಡುವುದಾವ ಯುದ್ದಮದು ಖಡಾಖಡ್ಡಿ, ಕೋಲಿನ್ ಕೋಲಿನ್ ಮಾಡುವುದಾವ ಯುದ್ದಮದು ಕೋಲಾಕೋಲಿ ಎಂದು ವಿಗ್ರಹವಾಕೃವರ ಬಹುದು.

೪, ಇಲಿ (< ಇಲ್ಲ) ಮತ್ತು ಕುಲಿ (< ಕೋಲ್) ಎಂಬ ತದ್ಧಿತ ಪ್ರತ್ಯಯಗಳಿಂದ ಬಹುವೀಹಿ ಶಕ್ಯವಾದರೂ ಸಾಮಾನ್ಯವಾಗಿ ಇಂತಹ ತದ್ಧಿತಾಂತಗಳಿಗೆ ಮುಂದೊಂದು ನಾಮಪದ ಸೇರಿ ಸಮಾಸವಾಗುವುದೇ ಸಾಮಾನ್ಯ. ಇಲಿ, ಕುಲಿ ಪ್ರತ್ಯಯಗಳಿಗೆ ಪದಗಳಾಗಿ ಸ್ವತಂತ್ರಪ್ರಯೋಗವಿಲ್ಲವಾದ ಕಾರಣ ಸಮಾಸವಿಧಿಗೆ ಭಂಗಬರುವುದು. ಹೀಗಿದ್ದೂ ಲಿಂಗತ್ರಯಕ್ಕೂ ಅನ್ವಯಿಸುವ ಬಪ್ರೀ, ಸಮಾಸವೆಂದು ಈ ಶ್ರೇಣಿಯ ಪ್ರಯೋಗವನ್ನು ತಿಳಿಯುವ ಸಾಧ್ಯತೆಯುಂಟು.

ಅಗಿಲಿಲಿ, ವಾಣಿಲಿ, ಪಿ, ಅಜಗುಲಿ ಇವಕ್ಕೆ ಪ್ರಯೋಗಗಳಿವೆ. ಉದಾ : ಆಗಿಲ್ಲ ಗಂಧವ್, ನಾಣಿಲಿವಣ್, ಪಲಿವಾಯ್, ಅಜಗುಲಿ ಜವನ್, ಅಜಗುಲಿ ಶಬ್ಬರು ಸ್ವತಂತ್ರ ಪ್ರಯೋಗವೂ ವಿರಳವಾಗಿ ಉಂಟು.

ಆಗಿಲ್ ಇಲ್ಲದುದು ಆವುದು ಅದು ಅಗಿಲಿಲಿ, ನಾಣ್ ಇಲ್ಲದ ಅವಳ್ ಅವಳ ನಾಣಿಲಿ, ಪತ್ನಿಲ್ಲದುದು ಆವುದು ಅದು ಪಲ್ಟಿಲಿ, ಅಮನ್ ಕೊಲ್ಪವನ್ ಅವನ

೮೭.

ಅವನ್ ಅಜಗುಲಿ, - ಸ್ತ್ರೀ ಏ.ವ. ಮತ್ತು ಪುಂ ಸ್ತ್ರೀ ಬ.ವ. ಇವುಗಳಿಗೆ ಅನುಗುಣವಾಗಿಯೂ ಇವನ್ನು ವಿಗ್ರಹವಾಕ್ಯ ಮಾಡಬಹುದು. ಅಲ್ಲದೆ ನಮ್ ಏವ, ಬ.ವ.ಗಳಂತೆಯೂ ವಿಗ್ರಹವಾಕ್ಯ ಸಾಧ್ಯ,

(೫) ಪ್ರಕೃತಿ | ಪ್ರಾತಿಪದಿಕ ನಾಮಪದಗಳೇ ಬಹುವೀಹಿ ಸಮಾಸಗಳನ್ನು ರೂಪಿಸ ಬಹುದು. ದಿಟವಾಗಿ ಇಂತಹವೇ ನಿಜವಾಗಿ ಬ.ಪ್ರೀ, ಎನ್ನಿಸಿಕೊಳ್ಳಲು ಸೂಕ್ತವಾದುವು.

ಕಲ್ಪರ್ದೆ, ಕಡುಗಲ್ಲರ್ದ, ಧೈರಾಂಬುರಾಶಿ ಇ ಇವುಗಳ ವಿಗ್ರಹವಾಕ್ಯ ಹೀಗಿರ ಬಹುದು:

೧. ಕಲ್ಲಂತಪ್ಪ ಎರ್ದ ಆವಂಗ / ಆವಳೆ | ಆವುದರ್ಕೆ ಅವನ್ / ಅವಳ್ / ಅದು * ಕಲ್ಲೆರ್ದೆ. ೨. ಕಡಿದಪ್ಪ ಕಲ್ಲಂತಪ್ಪ ಎರ್ದ ಆವಂಗ / ಆವಳ | ಆವುದರ್ಕೆ ಅವನ್ | - ಅವಳ್ | ಅದು ಕಡುಗಲೈರ್ದ, 4. ಧೈರದ ಅಂಬುರಾಶಿ ಆವನ್/ಆವಳ್/ಆವುದು ಅವನ್/ಅವಳ್/ಅದು

ಧೈಾಂಬುರಾಶಿ. ಈ ಪ್ರಯೋಗಗಳನ್ನು ನೋಡಬಹುದು.

  • •1.ಒಳ್ಳಬ್ಬಮುಮೊ | Yುಡಿಯುಮ್ ಗೇಯಮುಮುರ್ಚದ / ಕಡುಗಲ್ಬರ್ದಯರ್ದಯನಂಬು

ಮುರ್ಚುಗು (ಕಾವ್ಯಾವ. ೨೦೯) ೨. ಆ | ಗೃಲಿಸಿಯ ನಿಂದುದಂತುಮಸು ಪೋಗದೆ ಕಲ್ಲೆರ್ದೆಯನ್ ಮಹೀಪತೀ (ಕಾದಂಪೂ. ೯

೨೧)

೩. ಅರಸನೇನ್ ಕಲ್ಲೆರ್ದೆಯೂ | ಮರವಾನಿಸನೋ (ಅಜಿಪು ೧೦-೫೩) ೪. ಕರುಣಂಗೆಟ್ಟಾಕ ಕರ್ದಯುಮ್ (ಪಂಪರಾ, ೬-೧೬೪) ೫. ಜನಪತಿ ಧ್ಯರಾಂಬುರಾಶಿ ಚಳಿಯಿಸಿದವನೇ (ಆಜಿಪು. ೧೦-೪೮)

ಅರಿಸಮಾಸ

ಇತ್ಯ ತದ್ಭವ ಶಬ್ದಗಳನ್ನೂ ಸಂಸ್ಕೃತ ಶಬ್ದಗಳನ್ನೂ ಕೂಡಿಸಿ, ಕಿವಿಗೆ ಹಿತವಲ್ಲದ

ಹಾಗೆ ಮಾಡುವ ಸಮಾಸ ಅರಿಸಮಾಸ

ಉದಾಹರಣೆಗೆ : ಮುಖತಾವರ (ಸಂt8)

ಸಮತಮ್ (ಕ+ಸಂ) ಇವು ಕ್ರಮ ಅರಿಸಮಾಸಗಳು.

5 : ಮುಖತಾವರ (ಸಂ+ಕ), ಅರಸುಕುಮಾರನ್ (ಕ+ಸಂ), ಕೆಳದಿ ಸಿರಿ) ಇವು ಕ್ರಮವಾಗಿ ಕರ್ಮಧಾರಯ, ತತುರುಷ ಸಮಾಸಗಳಾಗಿರುವ

ಹರಣೆಗಳು ಕವಿರಾಜಮಾರ್ಗದ ಈ ಕಂದಪದದೊಳಗಿನವು:

ಅರಸುಕುಮಾರನನಾಯತ ತರಕಡಗಣ್ಣಿಂದ ನೋಡಿ ಕಳರಿಸಮೇತಮ್ ಪರಿಗತನಗೆಯಿಂದಿರ್ದನ್

ಗುರುವಾರದಿಂದಮಲಗಿ ಮುಖತಾವರಯನ್ || (೧-೫೯) ಆಯತತರಕಡೆಗಣ್, ಪರಿಗತನಗ, ಗುರುವಾರ ಇವು ಸಹ ಸಂಸ್ಕೃತ ಕನ್ನಡಗಳ ಮಿಶ್ರಣದ ಸಮಾಸಗಳೇ. ಶುದ್ಧವಾದ ಸಮಾಸಸಂಘಟನೆಗೆ ಈ ಪದ್ಯವನ್ನು ಪರಿವರ್ತಿಸಿದರೆ ಹೀಗಿರುತ್ತದೆಯೆಂದು ಅಲ್ಲಿಯೇ ಮುಂದಿನ ಕಂದಪದ್ಯದಲ್ಲಿ ತೋರಿಸಿದೆ:

ನರಪತಿತನಯನವಾಯತ ತರಳಾಪಾಂಗಳ ನೋಡಿ ಕೆಳದಿಯರೂಡನಾನ್ ಪರಿಗತಹಾಸ್ಯದೊಳರ್ದನ್

ಗುರುಲಚ್ಚಾಭರದಿನ ಮುಖಸರಸಿಜಮನ್ || (೧-೬೦) ಇದು ನಿಯಮ. ಆದರೆ ಪ್ರಾಚೀನಕವಿಗಳಲ್ಲಿ ಕೆಲವರು ಈಗಾಗಲೇ ಮಾಡಿರುವ ಹಲವು ಅರಿಸಮಾಸಗಳೂ ಇವೆ. ಇವನ್ನು ಮಾನ್ಯಮಾಡಬಹುದು ಎನ್ನುವುದು ವೈಯಾಕರಣ ಅಭಿಪ್ರಾಯ, ಹೀಗೆ ಒಪ್ಪಿಗೆ ಕೊಡುತ್ತಲೇ, ಇಂಥ ಸಮಾಸಗಳನ್ನು ಹೊಸದಾಗಿ ಕವಿಗಳು ಮಾಡಬಾರದು ಎಂದು ನಿಷೇಧವನ್ನೂ ಹೇರಿದ್ದಾರೆ. ಅಲ್ಲದೆ ಕ್ರಿಯಾಸಮಾಸ ಮತ್ತು ಗಮಕಸಮಾಸಗಳಿಗೆ ಈ ನಿಷೇಧ ಬೇಕಾಗಿಲ್ಲ, ಸಂಸ್ಕೃತ ಕನ್ನಡ ಶಬ್ದಗಳಿಗೆ ಸಮಾನ ನಡೆಯಬಹುದು ಎಂದೂ ಹೇಳಿದ್ದಾರೆ,

ಪ್ರಾಚೀನಕವಿಗಳು ಮಾಡಿರುವ, ಮಾನ್ಯಮಾಡಬಹುದೆಂದು ಅಂಗೀಕರಿಸಿರುವ ಅರಿಸಮಾಸಗಳ ಕೆಲವು ಉದಾಹರಣೆಗಳು:

ಕಡುರಾಗಮ್ (ಕ.ಧಾ.), ಮೊಗರಾಗಮ್ (ತ.ಪು. ಅಕೆಯ ನಾಯಕನ್ (ಗ.ಸ.) ಅಣಿಗವಿ (ಕ.ಧಾ.), ಇರ್ಬಲಮ್ (ದ್ವಿ.ಸ.), ಕಟ್ಟೆಕಾಂತಮ್ (ಕ.ಧಾ.), ಕೊ . (ಕ.ಧಾ.)

ಪ್ರಾಚೀನರು ಇಂತಹ ಇನ್ನೂ ಹಲವು ಅರಿಸಮಾಸಗಳನ್ನು ನಿಷೇಧದ ಯೋ ಯಿಲ್ಲದೆ ಬಳಸಿರುವುದಕ್ಕೆ ಸಾಕ್ಷ್ಯಗಳಿವೆ. ಕೆಲವು ಉದಾಹರಣೆಗಳು

ನಾಳಾಸಮ್ (ಆದಿಪು. ೧-೪೬), ಅಗಲುರ, ಪಂಚಜಡೆ, ಜನವಡೆ, ಮಣ ಸಂತಸಮ್, ಒಳ್ಳುಲಮ್, ಆಜಂಗಮ್, ಒಟ್ಟುಣಮ್, ನಿಟ್ಟಾಯು (ಪಂಪಭಾ. ೨* ೪, ೩-೬೦ ವ. ೪-೧೦, ೬-೫೦, ೮-೫೩, ೧೦-೮೩, ೧೨-೯೮, ೧೪-೧೭), ಒಬ್ಬ ಕವಿಯ ಕೃತಿಗಳಲ್ಲಿ ಇವುಗಳ ಪ್ರಚುರತೆ ಗಮನಾರ್ಹ. ಇತರ ಕವಿಗಳಲ್ಲಿಯೂ ಉಂಟು ಅರಶುಕಮ್ (ಅಜಿಪು. ೨-೭ರ.), ಪೆಜಮುಖಿ (ಧರ್ಮಾಮೃ, ೧೦-೨೦೮)? ಮಯ್ಯುಖಮ್ (ಧರ್ಮಾಮೃ, ೧೧-೧೧೩),

ಬಿರುದಾವಳಿಗಳಲ್ಲಿ ನಿಷೇಧವಿಲ್ಲವೆಂದು ವೈಯಾಕರಣರ ಮತ.

ನರಲೋಕದಲ್ಲಣನ್ (ಸಂ + ಕ), ಅಂಕಣೇತ್ರನ್ (ಕ + ಸಂ), ರಾಯಗೋಳಾ

ಹಳನ್ (ತದ್ಭವ+ಸಂ) ಇ. ವೈಯಾಕರಣರ ಲಕ್ಷಣ-ಲಕ್ಷ್ಮ ವಿಚಾರಗಳನ್ನೂ ಕಾವ್ಯಪ್ರಯೋಗಗಳನ್ನೂ ಲಕ್ಷಿಸಿದಾಗ ತಿಳಿದುಬರುವ ಸಂಗತಿಗಳೆಂದರೆ:

ಅಚ್ಚಕನ್ನಡ/ದೇಶ/ತದ್ಭವಗಳೆಂಬ ಶಬ್ದಗಳಿಗೆ ಮೊದಲಲ್ಲಿಯೂ ಅನಂತರದಲ್ಲಿಯೋ ಸೇರುವ ಸಂಸ್ಕೃತಶಬ್ದಗಳು ಯಾವುದೇ ತದ್ರವಗಳಿಗೆ ಪರಿವರ್ತನೆಗೊಳ್ಳುವ ಸಾಧ್ಯತೆಯಿರದ ಅಥವಾ ಸಂಸ್ಕೃತ ಭಾಷೆಯ ಶಬ್ದಗಳಿಗೆ ಅನುಗುಣವಾದ ವಿಜಾತೀಯ ದ್ವಿತ್ವ ಮೊದಲಾದ ವಿಶಿಷ್ಟ ವರ್ಣಸಂಘಟನೆಯಿರುವ ಶಬ್ದಗಳಾಗಿ ತೋರದ ಕನ್ನಡ ಭಾಷೆಗೆ ಸಹಜವಾದ ಶಬ್ದಗಳ ಹಾಗೆಯೇ ಕಂಡುಬರುವುದರಿಂದ ಅವು ಕನ್ನಡದ ಶಬ್ದಗಳೊಂದಿಗೆ ಶ್ರುತಿವೈಗುಣ್ಯ ವಿಲ್ಲದೆ ಹೊಂದಿಕೊಳ್ಳುವುವು. ಅರಶಕಂ, ಪೆಜಮುಖಿ, ಮಯ್ಸುಖಂ ಇಂಥವುಗಳಲ್ಲಿ ಮಾತ್ರ ವಿರಸತೆಯುಂಟು, ಇನ್ನು ಬಿರುದಾವಳಿಗಳ ವಿಚಾರ: ವಿಲಕ್ಷಣ ಅಥವಾ ವಿಶಿಷ್ಟ ರ್ಜಾ ಸಂಘಟನೆಯಿಂದ ಒಂದು ಪ್ರತ್ಯೇಕ ಧ್ವನಿಪ್ರಭಾವವನ್ನು ತರುವುದೇ ಇಲ್ಲಿ ಉದ್ದೇಶ ಇಾದ್ದರಿಂದ ಅವು ಸಹ್ಯವಾಗಬಹುದಾಗಿವೆ (ಹೆಚ್ಚಿನ ವಿವೇಚನೆಗೆ ನೋಡಿ : ‘ದರ್ಪಣ ವಿವರಣ’, ಉಪೋದ್ಘಾತ ೧,೨).