೦೫ ನಾಮಪದ ಪ್ರಕರಣ

ಪ್ರಕೃತಿ-ಪ್ರಾತಿಪದಿಕ

ಕ್ರಿಯಾವಾಚಕವಲ್ಲದುದು, ಅರ್ಥವುಳ್ಳುದು ಹಾಗೂ ನಾಮವಿಭಕ್ತಿಗಳನ್ನು ಸೇರಿಸಲು ಸಾಧ್ಯವಾದುದು ಆದ ಶಬ್ದಗಳನ್ನು (=ವಸ್ತುವಾಚಕಗಳನ್ನು) ಪ್ರಾಚೀನ ವೈಯಾಕರಣರು ಲಿಂಗವೆಂದು ಕರೆದಿದ್ದಾರೆ. ಇದು ಪುಂ-ಸ್ತ್ರೀ-ನಟ್ ಎಂಬುದಾಗಿ ಲಿಂಗತ್ರಯವನ್ನು ಹೇಳುವ ಸಂಜ್ಞೆಯಲ್ಲ; ನಾಮವಿಭಕ್ತಿಸ್ವೀಕಾರಸಮರ್ಥವಾದ ನಾಮಪ್ರಕೃತಿ, ಪ್ರಾತಿಪದಿಕ.

ನಾಮಪ್ರಕೃತಿ ನಾಮಪದದ ಕನಿಷ್ಠರೂಪ, ಮೂಲಶಬ್ದ, ಲಿಂಗ ಅಥವಾ ಪ್ರಾತಿಪದಿಕ ಎನ್ನುವುದು ವಿಭಕ್ತಿ ಸ್ವೀಕಾರಕ್ಕೆ ಸಿದ್ಧವಾದ ರೂಪ. ಆದರೆ ನಾಮಪ್ರಕೃತಿಗಳೂ ಪ್ರಾತಿಪದಿಕ ಗಳೂ ಸಮಾನವಾಗಿ ವಿಭಕ್ತಿಗಳನ್ನು ಸ್ವೀಕರಿಸಲು ಸಮರ್ಥವಾಗಿರುತ್ತವೆ. - ನಾಮಪ್ರಕೃತಿಯೂ ಪ್ರಾತಿಪದಿಕವೂ ಎಷ್ಟು ವಿಧಗಳಲ್ಲಿರಬಹುದು ಎನ್ನುವುದನ್ನು ಈ ಮುಂದ ಗಮನಿಸಬಹುದು. - ೧. ನಾಮಪ್ರಕೃತಿಗಳು ವಸ್ತುವಾಚಕಗಳಾದ ಮೂಲಶಬ್ದಗಳಾಗಿರಬಹುದು; ಇವು ನಾಮಲಿಂಗಗಳು.

ಪೂ, ಕಲ್, ಪುಲ್, ಮಣ್, ಕಲು, ಆನೆ, ಆಮ, ಎಲೆ, ಕರಡಿ, ನವಿರ್, ಪಸುರ್ -ಹೀಗೆ ದೇಶಬ್ದಗಳು.

ತೀರ, ಭಯ, ದುಃಖ, ಸುಖ, ರೂಪ, ಅಂಕುರ, ಶಪಥ-ಹೀಗೆ ಸಮಸಂಸ್ಕೃತ ಶಬ್ದಗಳು.

ತಿಸುಳ, ಬಿತ್ತರ, ಅಕ್ಕರ, ದಸ, ಬಲ್ಲಹ, ಅಂದುಗೆ, ಅಮರ್ದು ಹೀಗೆ ತದ್ಭವಗಳು. ೨. ಪ್ರಕೃತಿಗೆ ಪ್ರಕೃತಿ ಕೂಡಿ ಸಮಾಸಗಳಾಗುವುದು ಸಮಾಸಲಿಂಗಗಳು, ಸಮಾಸ ಲಿಂಗಗಳ ವಿಷಯದಲ್ಲಿ, ಗುಣವಚನಗಳು ಪೂರ್ವಪದಗಳಾಗಿ ಬಂದಾಗ ಗುಣವಚನಗಳ ಪ್ರಕೃತಿಗಳೂ ಸಮಾಸಲಿಂಗಗಳನ್ನು ರೂಪಿಸಬಹುದು.

ಕಿಸುಗಲ್, ತಂಗಾಳಿ, ಪುಲ್ಲೊದಲು, ಆನೆಗವರ್ತೆ, ಪಿಂಗಾಲ್, ಮುಂಗಯ್, ನೀಲೋ ತಲ, ಪುರವನ, ದುಗ್ದಾಂಬುಧಿ, ಸುರಲೋಕ, ಹಸ್ತಾಮಲಕ, ಉನ್ನತಾಸನ, ಪರಮ

ಕವೀಂದ್ರ.

೩. ಪ್ರಕೃತಿಗೆ ನಾಮಾರ್ಥಕಗಳಾದ ತದ್ಧಿತ ಪ್ರತ್ಯಯಗಳು ಕೂಡಿ ತದ್ಧಿತಾಂತನಾಮಪದ ಗಳಾಗಬಹುದು; ಇವು ತದ್ದಿತಲಿಂಗಗಳು ರೂಪಿಸಿ ಸಿದ್ಧವಾದಂತಹವು.

ಅಡಪವಳ, ಜೂದಾಳಿ, ಮಾಲೆಗಾದಿ, ಅಕ್ಕರಿಗ, ಕಮ್ಮಆತಿ, ಕಲ್ಕುಟಿಗ, ಕಳ್ಳುಣಿ, ಪೋರ್ಕುಳಿ, ಪಿಡ್ತಿನಿ

ಕ್ರಿಯಾಪ್ರಕೃತಿಗೆ ಕೃತ್ಪತ್ಯಯ ಸೇರಿ ಕೃಲ್ಲಿಂಗಗಳಾಗಬಹುದು; ಇವು ಕೃನ್ನಾಮಗಳು,

ಮಾಡಿದುದು, ಬರ್ಪುದು, ತಿಂಬುದು, ಕೊಂಬುದು; ತೀರಮ, ಪಸುಗ, ನೋಟ, ಕಲ್ಪಿ, ನೋಂಪಿ,

ಈ ಗುಂಪಿನವು ಮಾತ್ರವಲ್ಲದೆ, ಸರ್ವನಾಮಶಬ್ದಗಳು, ಸಂಖ್ಯಾವಾಚಕಗಳು, ಸ್ಥಾನ ವಾಚಕಗಳು, ಪ್ರಕಾರ ಮತ್ತು ಪ್ರಮಾಣ ವಾಚಕಗಳು ಹಾಗೂ ಗುಣವಾಚಕಗಳು ಸೂಕ್ತವಾಗಿ ಸ್ವತಂತ್ರವಾಗಿ ಪ್ರತ್ಯಯಾದಿಗಳ ಸೇರ್ಪಡೆಯಿಂದಲೋ ವಿಭಕ್ತಿಸ್ವೀಕಾರ ಸಮರ್ಥವಾದ ನಾಮಪ್ರಕೃತಿಗಳಾಗುತ್ತವೆ.

ಕೃಲ್ಲಿಂಗಗಳು

ಮಾಡು ನೋಡು ಪೀರ್ ಪಾರ್ ಮುಂತಾದ ಬಹುಸಂಖ್ಯೆಯ ಧಾತುಗಳನ್ನು ಕೃಂಗ ಗಳಾಗಿ ಪರಿವರ್ತಿಸಿಕೊಳ್ಳುವ ಸಾಧ್ಯತೆಯನ್ನು ಪ್ರಾಚೀನ ವೈಯಾಕರಣರು ವಿವರಿಸಿದ್ದಾರೆ: ಧಾತು / ನಿಷ್ಪನ್ನಧಾತು + ಭೂತ / ಭವಿಷ್ಯತ್ಕಾಲ ಪ್ರ. + ವಿಭಕ್ತಿ ಪ್ರ.

ಉದಾ.ಗೆ ಮಾಡು + ದ + ಅನ್ = ಮಾಡಿದನ್ (ಭೂತಕಾಲ), ಮಾಡಿದನನ್ ಮಾಡಿದನಿನ್ ಮಾಡಿದನತ್ತಣಿನ್, ಮಾಡಿದನ, ಮಾಡಿದನೋಳ್ ಎಂದಾಗಲಿ, ಮಾಡು + ವ + ಅನ್ = ಮಾಡುವನ್ (ಭವಿಷ್ಯತ್ಕಾಲ) ಮಾಡುವನನ್‌ (ಮಾನನ್‌) ಎಂದಾಗಲಿ ನಡೆಸಬಹುದು. ಹಾಗೆಯೇ ಮಾಡು + ದ + ಉದು = ಮಾಡಿದುದು, ಮಾಡು + ವ + ಉದು = ಮಾಟ್ಟುದು (ಭೂತ ಮತ್ತು ಭವಿಷ್ಯತ್ಕಾಲದ) ಎಂದಿಟ್ಟು ಮಾಡಿದುದು, ಮಾಡಿದುದನ್, ಮಾಡಿದುದನ್ ಎಂದು ಮುಂತಾಗಿಯೂ ಮಾಡುವುದು (ಮಾಟ್ಟುದು), ಮಾಡುವುದನ್ (ಮಾಟ್ಟುದನ್), ಮಾಡುವುದನ್ (ಮಾಟ್ಟುದನ್) ಎಂದು ಮುಂತಾಗಿಯೂ ನಡಸಬಹುದು.

ಕೃನ್ನಾಮಗಳ ರಚನೆಯಲ್ಲಿ ಭೂತ ಮತ್ತು ಭವಿಷ್ಯತ್ಕಾಲದ ನಡೆ ಮಾತ್ರ ಸಾಧ್ಯ. ವರ್ತಮಾನ ಕಾಲದ ನಡ ಸಾಧ್ಯವಿಲ್ಲ. ಎಂದರೆ ಮಾಡಿದವನ್, ಮಾಡಿದವನನ್, ಮಾಡಿದವನಿನ್ ಎಂಬಂತೆ ರಚನೆಯಿರುವುದಿಲ್ಲ. ತೀರ ವಿರಳವಾಗಿ ಅಂತಹ ಪ್ರಯೋಗ ಗಳು ಕಂಡುಬಂದಿರುವುದೇನೋ ಉಂಟು (ಸುಕುಮಾ, ೨-೨೨, ಚಾತತಿ. ಪೀ.ಪ. ೧೬; ಅನಂಪು. ೧೪-೭೯)

ನಿಷೇಧಕ ಕ್ರಿಯೆಯ ಕೃದಂತ ರೂಪಗಳಿಂದಲೂ ಕೃನ್ನಾಮಗಳಾಗಬಹುದು. ಮಾಡದನ್ ಮಾಡದನನ್, ಮಾಡದನಿನ್ ಎಂಬಂತೆ ನಡೆ ಸಾಗುತ್ತದೆ. ಆದರೆ ನಿಷೇಧಕ ಕ್ರಿಯೆಯಿಂ ದಾಗುವ ಈ ರೂಪಗಳು ಭೂತಕಾಲದಲ್ಲಿ ಮಾತ್ರವೇ ನಡೆಯತಕ್ಕವು.

ಕ್ರಿಯಾರ್ಥಕಗಳಾದ ಸಂಸ್ಕೃತ ಭಾವವಚನಗಳನ್ನು ಆಯ್ದುಕೊಂಡು ಇಸು ಪ್ರತ್ಯಯ ಹತ್ತಿಸಿಯೂ ಕೃನ್ನಾಮಗಳನ್ನು ಮಾಡಬಹುದು; ಭಾವಿಸಿದನ್ ಭಾವಿಸಿದನನ್ ಭಾವಿಸಿದ ನಿನ್, ಪ್ರೇರಿಸಿದನ್ ಪ್ರೇರಿಸಿದನನ್ ಪ್ರೇರಿಸಿದನಿನ್ ಎಂದು ಮುಂತಾಗಿ ನಡೆಸಬಹುದು.

೩೯

ಇವುಗಳ ನಿಷೇಧಕ ಕ್ರಿಯಾರೂಪಗಳಿಗೂ ಅವಕಾಶವುಂಟು, ಭಾವಿಸದನ್, ಪ್ರೇರಿಸದನ್ ಎಂದು ಮುಂತಾಗಿ,

ಎರಡು ವಿಶೇಷ ಸಂದರ್ಭಗಳು

೧. ಸಮುಪಾತ್ರಕ್ರಿಯೆ (=ನಡದ ಕ್ರಿಯೆಯನ್ನು ಹೇಳುವುದು) ನಮೋಸ್ತು = ನಮಸ್ಕಾರವಾಗಲಿ ಎಂಬ ವಾಕ್ಯದ ಅರ್ಥ ಸವಣರು ಎಂಬ ರೂಢಿಯ ಅರ್ಥದಲ್ಲಿ ಪ್ರಚುರವಾದ ಮೇಲೆ ಅದೇ ವಿಭಕ್ತಿ ಸ್ವೀಕರಿಸಲು ಸಮರ್ಥವಾಗಬಹುದು, ನಮೋಸ್ತುಗಳ್, ನಮೋಸ್ತುಗಳನ್, ನಮೋಸ್ತುಗಳಿನ್ ಎಂದು ಮುಂತಾಗಿ,

೨. ವಾಕ್ಯಮಾಲೆ (=ವಿಭಕ್ಕಂತ ಪದಗಳು ಕೂಡಿ ಒಂದು ಅರ್ಥ ಕೊಡುವ ಒಂದೇ ನಾಮಪದವಾಗುವುದು) .

ಕೈದುವೊತ್ತರ ದೇವನ್, ತೋಳ್ಕೊಪ್ಪುವನ್, ಆಳ್ವನ ಕೆಯ್ತು, ಗುಣಕ್ಕೆ ನಲ್ಲಿ ಗಣೇಶನ್, ಇವನ್ನು ಕ್ರಮವಾಗಿ ಏಳು ವಿಭಕ್ತಿಗಳಲ್ಲಿಯೂ ನಡೆಸಬಹುದು.

ನಾಮವಾಚಕಗಳಲ್ಲಿ ದೇಶ್ಯ ಶಬ್ದಗಳು ಕನ್ನಡ ಭಾಷೆಗೆ ಮೂಲಧನ, ವೈಯಾಕರಣರು ರೂಢನಾಮ, ಅನ್ವರ್ಥನಾಮ, ಅಂಕಿತನಾಮಗಳೆಂದು ವಿಭಜಿಸುವುದು ತಿಳಿದ ಸಂಗತಿ, ದೇಶಗಳಾದ ರೂಢನಾಮಗಳು ಪೂ ಪಣ್ ಪಸುರ್ ಬಲಗಸೆ ಹೀಗೆ ಒಂದರಿಂದ ನಾಲ್ಕು ಅಕ್ಷರಗಳ ವ್ಯಾಪ್ತಿಯಲ್ಲಿರುತ್ತವೆ. ಸಮಸಂಸ್ಕೃತಗಳೂ ತದ್ಭವಗಳೂ ಸಮಾಸಶಬ್ದಗಳೂ ಇನ್ನೂ ಹೆಚ್ಚು ಅಕ್ಷರಗಳ ವ್ಯಾಪ್ತಿಯನ್ನುಳ್ಳುವು,

ರೂಢನಾಮಗಳು ವಸ್ತುವಾಚಕಗಳಾಗಿಯೇ ಹೆಚ್ಚು ಪ್ರಚುರವಾದವು; ಅನ್ವರ್ಥನಾಮ ಗಳು ಕಿವುಡನ್ ಮೂಗನ್ ಪವನ್ ಕೂನನ್ ಹೀಗೆ ಅರ್ಥಾನುರೂಪವಾಗಿಯೂ ಒಳ್ಳೆಗಾಲ ನಿಡುಮೂಗ ಕುಸಿಗೊರಲ ಹೀಗೆ ಸಮಾಸಪದಗಳಾಗಿಯೂ ಇರಬಹುದು; ಕಳ್ಳ ಬೆಕ್ಕನ್ ಸುಳ್ಳನ್ ಹೀಗೆ ಗುಣಾನುರೂಪವಾಗಿಯೂ ಇರಬಹುದು. ಇನ್ನು ಅಂಕಿತ ನಾಮಗಳು ಸಾಂಕೇತಿಕ ಸ್ವರೂಪದವು; ಕಸವ ಕೇತ ತಿಪ್ಪ ಏಚ ದೂಳಿಗ ಮಾರ ಕಾಟ ಮಾಚ ಸಂಕಮ ಹೀಗೆ ಇಟ್ಟ ಹೆಸರಾಗಿರುವಂಥವು. ರೂಢನಾಮ ಮೊದಲುಗೊಂಡು ಮೂರು ವಿಧದ ನಾಮವಾಚಕಗಳಿಗೂ ಹೀಗೆಯೇ ಸಂಸ್ಕೃತ/ಸಮಸಂಸ್ಕೃತ ಶಬ್ದಗಳನ್ನು ಕೂಡ ಉದಾಹರಣೆಗಳಾಗಿ ಕೊಡಬಹುದಾಗಿದೆ.

ಸ್ವರಾಂತ ಲಿಂಗಗಳು : ಸಮಸಂಸ್ಕೃತ

ಸಮಸಂಸ್ಕೃತ ಶಬ್ದಗಳು : ಹಳಗನ್ನಡ ಭಾಷೆಯ ಮಾದೆಗೆ ಅನುಸಾರವಾಗಿ ಸಂಸ್ಕೃತ ಶಬ್ದಗಳ ಕೊನೆಯಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸಗಳನ್ನು ಮಾಡಿಕೊಂಡು ವಿಭಕ್ತಿಸ್ವೀಕಾರಕ್ಕೆ ಅನುಗೊಳಿಸಿದ ಶಬ್ದಗಳು, ಇವು.ಹಳಗನ್ನಡ ವ್ಯಾಕರಣ ಪ್ರವೇಶಿಕೆ

  • ೧. ಅಕಾರಾಂತಗಳು : ಲಿಂಗ / ವಚನನಿರ್ದೆಶಕ ಪ್ರತ್ಯಯದೊಂದಿಗೆ ಇವು ವಿಭಕ್ತಿ ಸ್ವೀಕಾರಯೋಗ್ಯವಾಗುತ್ತವೆ.

ಕಾಮನ್‌, ರಾಮನ್, ಭೀಮನ್, ಲಕ್ಷ್ಮಣನ್; ಜಲಮ್, ಬಲಮ್, ಕುಲಮ್, ಸ್ನಾನಮ್, ದೇಶಮ್, ಪಾಶಮ್

೨. ಆಕಾರಾಂತ > ಎಕರಾಂತ : ಮಾಲಾ-ಮಾಲೆ, ಶಾಲಾ-ಶಾಲೆ, ಕಲಾ-ಕಲೆ, ತ್ರೇತಾ ತೇತ, ಶಿಖಾ-ಶಿಖೆ, ನಿದ್ರಾ-ನಿದ್ರೆ, ಭಾಷಾ-ಭಾಷೆ - ೩. ಆಕಾರಾಂತ > (ಹಸ್ತ) ಅಕಾರಾಂತ : ಕಂಧರಾ-ಕಂಧರ, ಕರುಣಾ-ಕರುಣ, ದಂಷ್ಟಾ ದಂಷ್ಟ್ರ

ಆಕಾರಾಂತ > ಅಕಾರಾಂತ / ಎಕಾರಾಂತ : ಭಿಕ್ಷಾ-ಭಿಕ್ಷ, ಭಿಕ್ಷೆ; ಗ್ರೀವಾ-ಗ್ರೀವ, ಗ್ರೀವ. ಅಕಾರಾಂತ > ಎಕಾರಾಂತ : ವಧ-ವಧೆ, ದರ್ಭ-ದರ್ಭೆ, ಪ್ರಶ್ನ-ಪ್ರಶ್ನೆ, ಊಹ-ಊಹೆ. ಈಕಾರಾಂತ > (ಪ್ರಸ್ತ) ಇಕಾರಾಂತ : ಲಕ್ಷ್ಮೀ-ಲಕ್ಷ್ಮಿ, ಗೌರೀ>ಗೌರಿ, ಸರಸ್ವತೀ ಸರಸ್ವತಿ, ಶಚೀ-ಶಚಿ, ನಾರೀ-ನಾರಿ, ಭಾಮಿನೀ-ಭಾಮಿನಿ

ಊಕಾರಾಂತ > (ಹಸ್ತ) ಉಕಾರಾಂತ : ಸರಯೂ-ಸರಯು, ಜಂಬೂ-ಜಂಬು, ಸ್ವಯಂಭೂ-ಸ್ವಯಂಭು, ಅಭ್ರಮ-ಅಧ್ರಮು, ಚಮೂ-ಚಮು

ಏಕಾಕ್ಷರಗಳು ಯಥಾರೂಪದಲ್ಲಿ : ಶ್ರೀ, ಸ್ತ್ರೀ, ಭ್ರೂ, ಚ್ಯಾ

ಅಕಾರಾಂತಗಳು ಯಥಾರೂಪದಲ್ಲಿ : ಭುವನ, ನಳಿನ, ನಯನ, ಕಲಶ, ಕರಣ, ದೇಶ, ಕೋಶ, ಮೌನ, ಧ್ಯಾನ

ಇಕಾರಾಂತಗಳು ಯಥಾರೂಪದಲ್ಲಿ : ಶ್ರುತಿ, ಸ್ಮೃತಿ, ಕವಿ, ಲಿಪಿ, ಪತಿ, ಗತಿ, ಶುದ್ಧಿ’ ಸಿದ್ದಿ, ವೃದ್ಧಿ, ಕವಿ, ರವಿ, ಧ್ವನಿ, ಮುನಿ

ಉಕಾರಾಂತಗಳು ಯಥಾರೂಪದಲ್ಲಿ : ಪಶು, ಶಿಶು, ರಿಪು, ಭಾನು, ಧೇನು, ಬಂಧು, ಸಿಂಧು, ಭೀರು, ಸೇತು, ಕೇತು

ಋಕಾರಾಂತಗಳು ಯಥಾರೂಪದಲ್ಲಿ : ಪಿತೃ ಸವಿತೃ ಕರ್ತೃ, ಹೋತೃ, ಮಾತೃ ಭ್ರಾತೃ ದಾತೃ, ದುಹಿತ್ಯ

ಕೆಲವು ಋಕಾರಾಂತಗಳಿಗೆ ಆರಾದೇಶವಾಗಿ: ಸವಿತೃ-ಸವಿತಾರ, ಕರ್ತೃ-ಕರ್ತಾರ, ನೇತ್ರ ನೇತಾರ, ದುಹಿತೃ-ದುಹಿತಾರ, ದಾತೃ-ದಾತಾರ.

ದಾತೃವಿಗೆ ದಾತಾರ, ದಾತ ಎರಡು ರೂಪಗಳಿರುವುದನ್ನೂ ಮಾಂಧಾತೃವಿಗೆ ಮಾಂಧಾತ ಮತ್ತು ವಿಧಾತೃ ಶಬ್ದಕ್ಕೆ ವಿಧಾತ್ರ ಹೀಗೆ ಸಮಸಂಸ್ಕೃತರೂಪವೇರ್ಪಡುವುದನ್ನು ಗಮನಿಸಬೇಕು.

ಪಿತ್ಯ ಮತ್ತು ಸಖಿ ಶಬ್ದಗಳ ವಿಚಾರದಲ್ಲಿ ಜಿಜ್ಞಾಸೆಗೆ ಅವಕಾಶವುಂಟು. (ನೋಡಿ: ದರ್ಪಣವಿವರಣ, ಪು. ೩೯-೪೧, ೨೫೦-೫೩)

ವ್ಯಂಜನಾಂತಲಿಂಗಗಳು : ಸಮಸಂಸ್ಕೃತ

ಸಂಸ್ಕೃತ ವ್ಯಂಜನಾಂತ ನಾಮವಾಚಕಗಳನ್ನು ಕನ್ನಡಕ್ಕೆ ತಂದುಕೊಳ್ಳುವ ಬಗೆ ಕೂಡ ಹೀಗೆ ವಿವಿಧ ರೀತಿಯಲ್ಲಿದೆ.

ಅಕಾರಾಂತಗಳಾಗಿ : ಮರುತ್ -ಮರುತ, ವೇದವಿತ್-ವೇದವಿದ, ಸಮವಯಸ್. ಸಮಯವಸ, ಸಂಪತ್-ಸಂಪದ

ಉಕಾರಾಂತ ದ್ವಿತ್ವಗಳಾಗಿ : ಅಪ್-ಅಪ್ಪು, ಋಕ್-ಋಕ್ಕು, ಕುತ್-ಕ್ಷುತ್ತು, ವಾಕ್ ವಾಕ್ಕು, ವಿದ್ಯುತ್‌-ವಿದ್ಯುತ್ತು.

ಅಂತ್ಯಾಕ್ಷರಲೋಪದೊಂದಿಗೆ : ರಾಜನ್-ರಾಜ, ಮೂರ್ಧನ್-ಮೂರ್ಧ, ಅರ್ಯ ಮನ್-ಅರ್ಯಮ, ಮಘವನ್‌-ಮಘವ, ಬ್ರಹ್ಮನ್-ಬ್ರಹ್ಮ,

ಯಶಸ್ ತೇಜಸ್ ಮುಂತಾದ ಸಕಾರಾಂತ ಶಬ್ದಗಳಲ್ಲಿ ಲೋಪ ಇಲ್ಲವ ದ್ವಿತ್ವ ದೊಂದಿಗೆ : ಯಶ-ಯಶಸ್ಸು, ತೇಜ-ತೇಜಸ್ಸು, ವಯ-ವಯಸ್ಸು, ಶ್ರೇಯ-ಶ್ರೇಯಸ್ಸು (ಸಕಾರದ್ವಿತ್ವ ರೂಪಗಳನ್ನು ಹಳಗನ್ನಡ ರೂಪಗಳೆಂದು ಸ್ವೀಕರಿಸುವುದು ಕಷ್ಟ)

ಸೀಮನ್, ಊಷ್ಯನ್‌ಗಳಿಗೆ ಎರಡು ರೂಪಗಳು : ಸೀಮ-ಸೀಮ, ಊಷ್ಮ-ಊಷ್ಮ,

ಪ್ರ.ವಿ.-ಬ.ವ. ರೂಪದ ಸಂಸ್ಕೃತ ವಿಸರ್ಗಾಂತ ಪ್ರಕೃತಿಗಳು ವಿಸರ್ಗಲೋಪದೊಂದಿಗೆ ಏ.ವ. ಲಿಂಗಗಳಾಗುತ್ತವೆ: ಶ್ವಾನಃ-ಶ್ವಾನ, ಅಧ್ಯಾನಃ-ಅಧ್ವಾನ, ವಿದ್ವಾಂಸಃ-ವಿದ್ವಾಂಸ, ಶ್ರೀಮಂತಃ-ಶ್ರೀಮಂತ.

ವಿರಳವಾಗಿ ಕೆಲವು ಸಂಸ್ಕೃತ ವ್ಯಂಜನಾಂತಗಳು ಇರುವಂತೆಯೇ ವಿಭಕ್ತಿಸ್ವೀಕಾರ ಮಾಡಬಲ್ಲವು; ಯುಗಪದ್, ವಾಕ್, ಗೀರ್, ವಾಸ್ತವವಾಗಿ ವೈಯಾಕರಣರು ಈ ಉದಾ.ಗಳನ್ನು ತೋರಿಸಿದ್ದರೂ ಕಾವ್ಯ ಪ್ರಯೋಗಗಳಿಂದ ಇವನ್ನು ಸ್ಥಿರಪಡಿಸಿಕೊಳ್ಳಬೇಕು.

ಗುಣವಚನಗಳು / ಗುಣವಾಚಕಗಳು

ಸಾಮಾನ್ಯವಾಗಿ ವೈಯಾಕರಣರು ಗುಣವಾಚಕಗಳನ್ನು ಅವುಗಳ ಪ್ರಕೃತಿರೂಪದಲ್ಲಿ ತೋರಿಸದೆ ತು/ದು ಪ್ರತ್ಯಯಾಂತವಾದ ನಾಮಪ್ರಕೃತಿಗಳಾಗಿಯೋ ಸಮಾಸಪದವೊಂದರ ವಿಶೇಷಣವಾಗಿಯೋ ಗುರುತಿಸುವ ಹಾಗೆ ಮಾಡಿರುತ್ತಾರೆ.

ಒಳ್ಳೆತು ಮಲ್ಲಿತು ನಲ್ಲದು ಪೊಲ್ಲದು ತಳ್ಳಿತು ತಣ್ಣಿತು ನಳಿದು ಬಿಸಿದು ಅಸಿದು ನಿಡಿದು ಕಡಿದು ಬಿಟ್ಟಿತು ಪಿರಿದು ತಿಳಿದು ಹೀಗೆ ನಾಮಪ್ರಕೃತಿಗಳು ಪ್ರಯೋಗವಾಗುವು ದನ್ನು ಗಮನಿಸಿದರೆ, ಇವುಗಳ ಒಳ್ ಮೆಲ್ ನಲ್ ಪೂಲ್ ತೆಳ್ ತಣ್ ನಳಿ ಬಸಿ ಅಸಿ ನಿಡು ಕಡು ಬಿಜು ಪಿರಿ ಕಿಟ್ ಇವು ಗುಣವಾಚಕಗಳ ಪ್ರಕೃತಿಗಳೆಂದು ಹೇಳಬಹುದಾಗಿದೆ. ಹೀಗೆಯೇ ಒಳುಡಿ ಮೆಲ್ಕಾತು ನಲ್ವೆಳಗು ಪೊಲ್ಲವಾತು ತೆಳಸಿರ್‌ ತಣ್ಣೀರ್ ಬೆನ್ನೀರ್ ಮೊದಲಾದ ಸಮಾಸಶಬ್ದಗಳ ಮೂಲಕವೂ ಅವನ್ನು ಗುರುತಿಸಬಹುದು,

ತುಕಾರಾಂತ ಗುಣವಾಚಕಗಳಲ್ಲಿ ಕೆಲವು ದ್ವಿತ್ವಗಳಾಗಿಯೂ ಪ್ರಯೋಗವಾಗುತ್ತವೆ. ಒಳ್ಳಿತ್ತು, ಸೇರಿತ್ತು, ತೋರಿತ್ತು, ಬಟ್ಟಿತ್ತು, ಬಲ್ಲಿತ್ತು-ಹೀಗೆ, ಕುಡು, ಕುಟು, ಬಿಡಿ ಈ ಕೆಲವು ಗುಣವಾಚಕಗಳ ನಪ್-ನಾಮಪ್ರಕೃತಿಗಳು ವಿಶೇಷವಾಗಿ ಗಮನಿಸಬೇಕಾದುವು. ವೈಯಾಕರಣರು ಇವನ್ನು ಕೊಂಕಿದುದು, ಕಿಳಿದು, ಬೆಟ್ಟಿತು ಎಂಬುದಾಗಿ ಗುರುತಿಸುತ್ತಾರೆ. ಇದನ್ನು ಒಪ್ಪಲಾಗದು; ಅವನ್ನು ಸಮಾಸಶಬ್ದಗಳ ಮೂಲಕ ವಿಶೇಷಣಗಳಾಗಿಯೇ ಗುರುತಿಸಬೇಕು.

ಸರ್ವನಾಮ ಶಬ್ದಗಳು

ಯಾವುದೇ ಭಾಷೆಯ ಜೀವಾಳವಾದ ಶಬ್ದ ಭಂಡಾರದಲ್ಲಿ ಸರ್ವನಾಮಶಬ್ದಗಳ ಗುಂಪು ಒಂದು ಅನಿವಾರವಾದ, ಮೇಲಾದ ಸ್ಥಾನವನ್ನು ಪಡೆದುಕೊಂಡಿರುತ್ತದೆ. ಹಳಗನ್ನಡ ಸರ್ವನಾಮಗಳ ವಿಚಾರವನ್ನು ಈಗ ಗಮನಿಸೋಣ.

ಪುರುಷ ತ್ರಯಗಳು ಉತ್ತಮ ಪುರುಷ ಪುಂ/ಸ್ತ್ರೀ

ಏಕವಚನ

ಬಹುವಚನ ಆನ್ { ನಾನ್

ಆಮ್ / ನಾಮ್

ಆವು / ನಾವು ಮಧ್ಯಮ ಪುರುಷ ಪುಂ/ಸ್ತ್ರೀ

ಏಕವಚನ

ಬಹುವಚನ ನೀನ್

ನೀಮ್/ನೀವು ಪ್ರಥಮ ಪುರುಷ ಪುಂ ಸ್ತ್ರೀ ನಪ್

ಏಕವಚನ

ಬಹುವಚನ ಅವನ್ ಇವನ್ ಉವನ್

ಅವರ್ ಇವರ್ ಉವರ್ ಅವಳ್ ಇವಳ್ ಉವಳ

ಅವರ್ ಇವರ್ ಉವರ್ ಅದು ಇದು ಉದು

ಅವು ಇವು ಉವು ಆತ್ಮಾರ್ಥಕ ಪುಂ/ಸೀನಪ್

ಏಕವಚನ ತಾನ್

ಬಹುವಚನ

ತಾಮ್/ತಾವು ಪ್ರಶ್ನಾರ್ಥಕ ಪುಂ ಸ್ತ್ರೀ ನಪ್

ಏಕವಚನ

ಬಹುವಚನ ಆರ್ ಆರ್ ಆವುವು

ಆವನ್ ಅವಳ್ ಆವುದು

೪೩

ಏನ್ ಏನ್ ಏನ್/ಏತಟ್ ವಿನ್ ನಿರ್ದೆಶನಾರ್ಥಕ ಪುಂ ಸ್ತ್ರೀ ನಪ್

ಏಕವಚನ

ಬಹುವಚನ ಆ ಈ

ಆ ಈ ಊ ಅನ್ಮಾರ್ಥಕ ಪುಂ ಸ್ತ್ರೀ ನಪ್

ಏಕವಚನ

ಬಹುವಚನ ಪೆಜನ್ ಪೆಲ್ ಪಂತು/ಪೆಂದು ಪುರ್ ಪೆಟರ್‌ ಪದವು ಸಕಲಾರ್ಥಕ ಪುಂ ಸ್ತ್ರೀ ನಪ್

ಏಕವಚನ

ಬಹುವಚನ ಎಲ್ಬನ್ ಎಲ್ಲಳ್

ಎಲ್ಲ‌ ಎಲ್ಲ‌ ಎಲ್ಲವು ಎಲ್ಲದು / ಎಲ್ಲಮ್ ಸಕಲಾರ್ಥಕ ಸರ್ವನಾಮ ಶಬ್ಬವಾದ ಎಲ್ಲ ಎಲ್ಲದು/ಎಲ್ಲಮ್ ಶ್ರೇಣಿಯ ಸಕಲ ರೂಪಗಳನ್ನೂ ವೈಯಾಕರಣರು ಬಿಡಿಸಿ ತೋರಿಸಿಲ್ಲ. ಪ್ರಯೋಗ ಕೂಡ ಸೀಮಿತವಾದುದು. ಗುಂಪಿನಲ್ಲಿ ಒಂದೊಂದನ್ನೂ ಒಬ್ಬೊಬ್ಬರನ್ನೂ ಲೆಕ್ಕಿಸಿ ಹೇಳುವಾಗ ಕೂಡ ಬಳಸುವ ಈ ಸರ್ವನಾಮ ಲಿಂಗತ್ರಯ ವಚನದ್ವಯ ಭೇದವಿಲ್ಲದ ‘ಎಲ್ಲ’ ಎಂಬ ಒಂದೇ ರೂಪದಲ್ಲಿ ಕೂಡ ಬಳಕೆಯಾಗಬಹುದಾಗಿದೆ.

ಒಂದೆರಡು ವಿಶೇಷಗಳು:

೧. ಪ್ರಶ್ನಾರ್ಥಕ ಆವನ್ ರೂಪ ಹಳೆಯ ಪ್ರಯೋಗಗಳಲ್ಲಿ ಆವೊನ್ ಎಂದೂ ಕಂಡುಬರುತ್ತದೆ (ಅನ್ > ಒನ್) :

ಆವೊನ್ ಕಾವೊನ್ ಲೋಕಮ

ನಾವೊನಿನಮರಾರ್ಕಳಮರರೆನಿಸಿದರ್ , . (ಕಾವ್ಯಾವ. ೬೬-೩೦೩) ೨. ಪ್ರ.ಪು.ದ. ಪುಂ ಸ್ತ್ರೀ ರೂಪಗಳಲ್ಲಿ ಗೌರವಾರ್ಥ ಬಹುವಚನದಲ್ಲಿ ಆತನ್ ಈತನ್ ಊತನ್, ಆಕೆ ಈಕೆ ಊಕೆ ಎಂಬ ರೂಪಗಳೂ ಉಂಟು. ಕ್ರಿಯಾಪದವೇನೋ ಏ.ವ.ದಲ್ಲಿಯೇ. ನಡುವಣ ವಸ್ತುವನ್ನಾಗಲಿ ವ್ಯಕ್ತಿಯನ್ನಾಗಲಿ ನಿರ್ದೇಶಿಸಲು ಬಳಸುವ ಉದು ಸರ್ವನಾಮದ ಪುಂ..ನಪ್ ರೂಪಗಳು ಹೆಚ್ಚು ಪ್ರಚುರವೇನೂ ಅಲ್ಲ. ಆದರೆ ಪ್ರಯೋಗಗಳುಂಟು.

ಉದಾಗ:

ಕಟ ತಡೆದತ್ತು ಕಂಚನುಣಲೂ ಮನೆಯೂಕೆಗಳುಯ್ದರ್ (ಸೂಕ್ತಿಸು. ೮-೧೩೪); ಆತನ್ ಮರೋಧವನೀತನ್ ರವಿಜಾತನೂತನಶ್ವತ್ಥಾಮನ್ (ಶಮದ, ೧೬೧-೧) ಆ ಬನವೀ ಬನಮ್ಮ ಬನವನ್ನದೆ ತೊಟ್ಟು ಫಗೊಯ್ದರವರ್ (ಶಮದ. ೧೮೦-೪)

ತ್ರಿವಿಧ ಲಿಂಗಗಳು ಮತ್ತು ದ್ವಿವಿಧ ವಚನಗಳು

ಪುರುಷವಾಚಕಗಳು ಪುಲ್ಲಿಂಗ, ಸ್ತ್ರೀವಾಚಕಗಳು ಸ್ತ್ರೀಲಿಂಗ, ತಿರ್ಯಗ್ಲಾತಿಗಳು ಸೇರಿದಂತೆ ಚೇತನಾಚೇತನಗಳು ನಪುಂಸಕ ಲಿಂಗ, ಕ್ರಮವಾಗಿ ಉದಾಹರಣೆಗಳು:

೧. ಪುಲ್ಲಿಂಗ: ಆರಸನ್, ಕಾಮನ್‌, ನಾರಾಯಣನ್, ಶಂಕರನ್; ಅಣ್ಣನ್, ತಮ್ಮನ್, ಬೊಪ್ಪನ್, ಮಯ್ತುನನ್

೨. ಸ್ತ್ರೀಲಿಂಗ : ಗೌರಿ, ಲಕ್ಷ್ಮಿ, ಸರಸ್ವತಿ, ರೋಹಿಣಿ; ತಂಗಿ, ಸೊಸೆ, ನಾದಿನಿ, ಮಗಳ್ ೩. ನಪುಂಸಕಲಿಂಗ : ಪರ್ವತಮ್, ಪುರಮ್, ಫಲಮ್, ಜಲಮ್, ವೃಕ್ಷಮ್, ಬಳ್ಳಿ, ಪುಲಿ, ಪುಲ್, ಕನ್ನಡಿ, ಕಲು, ತುಲು, ಕೊಳನ್

ದ್ರಾವಿಡ ಭಾಷೆಗಳಲ್ಲಿ ದಿಟವಾಗಿ ಮಹತ್ (=ಸಬುದ್ದಿ ಕ) ಮತ್ತು ಅಮಹತ್ (=ಅಬುದ್ದಿಕ) ಎಂದು ಎರಡು ರೀತಿಗಳಲ್ಲಿ ಲಿಂಗವಿವಕ್ಷೆಯಿರುತ್ತದೆ. ಬಳಸುವಾತನ ಇಷ್ಟದಂತೆ ವ್ಯತ್ಯಾಸವೂ ಸಾಧ್ಯ; ಎಂದರೆ ನಾಮವಾಚಕವನ್ನು ಸಬುದ್ದಿಕವೆಂದು ತಿಳಿದರೆ ಪುಂ ಸ್ತ್ರೀ ವಿವಕ್ಷೆ, ಅಬುದ್ದಿಕವೆಂದು ತಿಳಿದರೆ ನದ್ವಿವಕ್ಷೆ,

ಕೆಲವು ಅಕಾರಾಂತ ಸ್ತ್ರೀಲಿಂಗ ಶಬ್ದಗಳು ಪುಲ್ಲಿಂಗ ಶಬ್ದಗಳ ಹಾಗೆ ನಡೆಯುತ್ತವೆ ಉದಾ. ಅಕ್ಕನ್, ಅಕ್ಕನನ್, ಅಕ್ಕನಿನ್ ಎಂಬಂತೆ, ಆದರೆ ವಿರಳವಾಗಿ ಮಾತ್ರ ಅಕ್ಕ ರೂಪಕ್ಕೆ ಪ್ರಯೋಗವುಂಟು. (ಪಂಪಭಾ, ೪-೯೪, ೧೨-೧೨೫)

ಹೀಗೆಯೇ ಕೆಲವು ಅಕಾರಾಂತ ನಪುಂಸಕಲಿಂಗ ಶಬ್ದಗಳು ಪುಲ್ಲಿಂಗ ಶಬ್ದಗಳ ಹಾಗೆ ನಡೆಯುತ್ತವೆ. ಉದಾ :

ಹರಿಣನ್ ಹರಿಣನನ್ ಹರಿಣನಿನ್ ಎಂಬಂತೆ; ವಿಕಲ್ಪವೂ ಉಂಟು. ವರಾಹನಿನ್ ವರಾಹದಿನ್, ವರಾಹಂಗೆ-ವರಾಹಕ್ಕೆ; ಹೀಗೆಯೇ ಪಣನ್, ಕೊಣನ್, ಕೊಳವೆ ಮರನ್, ನೆಲನ್, ಪೋಲನ್ ಇ,

ಕೆಲವು ನಾಮವಾಚಕಗಳ ಲಿಂಗವಿವಕ್ಷೆಯನ್ನು ಎಚ್ಚರಿಕೆಯಿಂದ ಗಮನಿಸಬೇಕು. ವಿಶೇಷವಾಗಿ ಸಂಸ್ಕೃತದ ‘ಜನ’ ಶಬ್ದ ಮತ್ತು ‘ಸಖಿ’ ಶಬ್ದಗಳನ್ನು,

ಉಪಸರ್ಗಸಹಿತವಾಗಿ ಜನ ಶಬ್ದವನ್ನು ಏ.ವ.ದಲ್ಲಿ ದುರ್ಜನನ್, ಸಜ್ಜನನ್ ಸುಜನನ್ ಎಂದು ಬಳಸುವಾಗ ಅವು ಪುಲ್ಲಿಂಗದಲ್ಲಿರುತ್ತವೆ; ಬ.ವದಲ್ಲಿ ದುರ್ಜನರ್, ಸಜ್ಜನರ್, ಸುಜನರ್‌. ವಿರಳವಾಗಿ ದುರ್ಜನ ಶಬ್ದಕ್ಕೆ ನಪುಂಸಕ ಏವದ ಪ್ರಯೋಗವಿದೆ (ಕವಿರಾ ೧-೧೧೨).

ಸಮುದಾಯವಾಚಕವಾಗಿ ಜನಮ್ ಶಬ್ದ ನಪುಂಸಕಲಿಂಗದ ಏಕವಚನದಲ್ಲಿರುವುದೇ ಸಾಮಾನ್ಯ. ಉದಾ ಬಗೆದುದಂದು ಜನಮ್’, ‘ಶೋಕರಸಭಾಜನವಾದುದು ತಭಾಜನಯ್’. ಆದರೆ ವಿರಳವಾಗಿ ಗಳ್, ಪ್ರತ್ಯಯಾಂತವಾದ ಬಹುವಚನರೂಪವೂ ಉಂಟು. ‘ಪೊಲೀಲ ಜನಂಗಳೆಲ್ಲಮ್ ಕೇಳು’ (ವಡ್ಡಾರಾ, ೮೩-೪), ಜನ‌ ಮಹಾಜನ‌ ಎಂಬ ಪುಂ.

ರೂಪಗಳ ಪ್ರಯೋಗ ಬಹುಶಃ ಹಳಗನ್ನಡದಲ್ಲಿ ಕಾಣಿಸದು.

ಕುಲವಧುವೆಂಬ ಅರ್ಥದ ಸಜ್ಜನ ಶಬ್ದ ನಪ್‌ವಾಚಕ ಎನ್ನುವುದನ್ನು ಮರೆಯಬಾರದು (ಪಂಪಭಾ. ೯-೪೬; ೧೧-೧೨೨ ವ., ಮದತಿ. ೮-೭, ೧೨). ಸಜ್ಜನವನಿತೆ, ಸಜ್ಜನವೆಂಡತಿ ಹೀಗೆ ಬಳಸಿದಾಗ ವಿಶೇಷ್ಯದ ಬಲದಿಂದ ಅವು ಸ್ತ್ರೀಲಿಂಗ ಶಬ್ದಗಳಾಗುತ್ತವೆ. ವಿರಳವಾಗಿ ಮಾತ್ರ ಸಜ್ಜನ ಎಂಬ ಪ್ರಯೋಗವೂ ಉಂಟು (ಧರ್ಮಾಮೃ. ೧೧-೩೭). - ಸಂಸ್ಕೃತ ನಾಮವಾಚಕಗಳಿಗೆ ಕನ್ನಡದಲ್ಲಿ ಸ್ತ್ರೀಲಿಂಗ ರೂಪವನ್ನು ಎಪ್ರತ್ಯಯ ಕೂಡಿಸಿ ತರಬಹುದಾಗಿದೆ. ಇದೊಂದು ವಿಶೇಷ. ಇಲ್ಲಿ ದೇಶ್ಯ ಸಂಸ್ಕೃತ ಎಂಬ ಭೇದವಿಲ್ಲ.

೧. ಸಂ. ಜಾರ, ಮೂರ್ಖ, ಶಠ, ದುರಾತ್ಮ; ದೇ. ಕಳ್ಳ, ಪಿಸುಣೆ, ಕಿಸುಗುಳ, ಸಿತಗೆ. ಆಲಂಕಾರಿಕ ಪ್ರಯೋಗವಾಗಿ ನಪ್ ವಿಶೇಷ್ಯ ಸಾಧ್ಯ.

ಆತನ್ ಜಗದ್ದರ್ಪಣಮ್ (=ಆತನು ಜಗತ್ತಿನ ಕನ್ನಡಿ), ಆ ಪೆಣ್ ಜಗದ್ದರ್ಪಣಮ್ (=ಆಕೆ ಜಗತ್ತಿನ ಕನ್ನಡಿ), ಅದು ಜಗದ್ದರ್ಪಣಮ್ (=ಅದು ಜಗತ್ತಿನ ಕನ್ನಡಿ)

ಲಿಂಗತ್ರಯದ ಮುಖಾಮುಖ್ಯತೆ

ವಾಕ್ಯವೊಂದರಲ್ಲಿಯೇ ತ್ರಿವಿಧ ಲಿಂಗಗಳಿಗೆ ಅವಕಾಶವಾಗುವಂಥ ಸಂದರ್ಭವಿದ್ದರೆ, ಯಾವ ಒಂದು ಲಿಂಗಕ್ಕೂ ಮುಖ್ಯತೆಯಾಗಲಿ ಅಮುಖ್ಯತೆಯಾಗಲಿ ಇಲ್ಲ. ಅವುಗಳಲ್ಲಿ ಕಡೆಯ ನಾಮ ಪದ ಯಾವ ಲಿಂಗದಲ್ಲಿದೆಯೋ ಆ ಲಿಂಗಕ್ಕೆ ಅನುಸಾರವಾಗಿ ಬಹುವಚನದ ಕ್ರಿಯಾಪದವು ಪ್ರಯೋಗವಾಗುತ್ತದೆ.

೧ ಸೇನೆಯುಮರಸಿಯುಮರಸನು ಬಂದರ್‌ ೨. ಅರಸನುಮರಸಿಯುಮ್ ಚತುರಂಗಬಲಮುಮ್ ಬಂದುವು ಪ್ರಾಚೀನ ವೈಯಾಕರಣರ ಗ್ರಹಿಕೆಯಿದು. ಆದರೆ ವಾಕ್ಯದಲ್ಲಿ ಪುಂ ಸ್ತ್ರೀ ನಪ್ ವಾಚಕಗಳು ಯಾವುದೇ ಸ್ಥಾನದಲ್ಲಿರಲಿ, ಸಬುದ್ದಿಕಗಳಾದ ಪುಂ ಸ್ತ್ರೀ ಲಿಂಗಗಳಿಗೇ ಮುಖ್ಯತೆಯಂದು ತಿಳಿಯುವುದೇ ಸೂಕ್ತ.

ವಾಕ್ಯದೀಪಕ

ಅಧ್ಯಾಹಾರದ ವ್ಯಾಪ್ತಿಗೆ ಸೇರಿದ ವಿಧಿ ಇದು. ‘ಆತನುಮವನುಮ್ ಬಂದನ್? ಎಂದಿದ್ದರೆ ಒಂದನ್ ಎಂಬ ಕ್ರಿಯಾಪದವನ್ನು ‘ಆತನುಮ್ ಬಂದ, ಅವನು ಚಂದನ್’ ಎಂದು ತಿಳಿಯಬೇಕು ಎಂದು ಪ್ರಾಚೀನ ವೈಯಾಕರಣರ ಗ್ರಹಿಕೆ. ಈ ಗ್ರಹಿಕೆ ಯನ್ನು ಸಮರ್ಥಿಸುವ ಕಾವ್ಯಪ್ರಯೋಗಗಳೇನೂ ಉಂಟು. ಗದಾಯು, ೫-೨೫, ಧರ್ಮಾಮೃ, ೧೦-೨೧೬, ಲೀಲಾವ. ೩-೫೬), ಆದರೆ ಈ ತೆರನ ವಾಕ್ಯರಚನೆಯೇ ವಿಲಕ್ಷಣವಾದ್ದು, ಲಿಂಗತ್ರಯದ ಮುಖ್ಯಾಮುಖ್ಯತೆಯ ವಿಧಿಯ ಹಾಗೆಯೇ.

ಪ-ಹ ವ್ಯತ್ಯಯ

ದೇಶ್ಯ ಶಬ್ದಗಳಲ್ಲಿಯ ಪ್ರಕಾರಕ್ಕೆ ಹಕಾರವಾಗುವುದು ಉತ್ತರೋತ್ತರ ಕಾಲಘಟ್ಟಗಳಲ್ಲಿ ಸಾಮಾನ್ಯ. ಬಹಳ ಹಿಂದೆಯೇ ಕನ್ನಡದ ಮೇಲೆ ಸಂಸ್ಕೃತ ಪ್ರಾಕೃತ ಭಾಷೆಗಳಲ್ಲಿಯ ಹಕಾರಧ್ವನಿಘಟಿತ ಶಬ್ದಗಳ ಸಂಸರ್ಗದ ಫಲವೋ ಪ್ರಾಚುರದ ಕಾರಣವೋ ಹೀಗೆ ಆಗಿರಬಹುದು.

ಪಲಗ-ಹಲಗ, ಪಂದರ್‌-ಹಂದರ, ಪಾಸು-ಹಾಸು, ಪಂದಿ-ಹಂದಿ. ತೋಪು-ತೋಹು, ಮೇಪು-ಮೇಹು, ಸೋಪು-ಸೋಹು, ಕಾಪು-ಕಾಹು. ಪರವಶ-ಹರವಸ, ವಲ್ಲಭ-ಬಲ್ಲಹ ಇಂಥ ತದ್ಭವ ಶಬ್ದಗಳಲ್ಲಿ ಕೂಡ ಉಂಟು. ದ್ವಿತ್ವ ರೂಪಗಳಲ್ಲಿ ಇದು ಸಾಧ್ಯವಿಲ್ಲ: ತಪ್ಪು, ಒಪ್ಪು, ಸೊಪ್ಪು, ಬಿಪ್ಪಂಡಮ್, ಕಪ್ಪುರಮ್, ಕೊಪ್ಪು

ಹೀಗಿದ್ದು, ಅಂತಪ್ಪ, ಇಂತಪ್ಪ, ಎಂತಪ್ಪ, ಅಪ್ಪುದು, ಇಪ್ಪುದು ಈ ಕೆಲವು ಕಡೆ ಅಂತಹ ಇಂತಹ ಎಂತಹ, ಅಹುದು, ಇಹುದು ಎಂಬ ರೂಪಗಳು ಕಂಡುಬರುತ್ತವೆ. ಆದರೆ ಈ ರೂಪಗಳು ಹಳಗನ್ನಡ ಕವಿಗಳ ಪ್ರಯೋಗಗಳಾಗಿ ಕಾಣಿಸುವುದಿಲ್ಲ, ನಡುಗನ್ನಡದಲ್ಲಿ ಸಾಮಾನ್ಯವಾದವು.

ವಚನ

ನಾಮವಾಚಕಗಳು ಸಂಖ್ಯೆಯ ದೃಷ್ಟಿಯಿಂದ ಏಕವಚನ, ಬಹುವಚನ ಎಂದು ವ್ಯವಹಾರಗೊಳ್ಳುತ್ತವೆ, ಏಕವಚನದಲ್ಲಿ ವ್ಯವಹಾರಗೊಳ್ಳುವಾಗ ನಾಮಪ್ರಕೃತಿಗೆ (ಅಥವ ಪ್ರಾತಿಪದಿಕ) ಯಾವುದೇ ಪ್ರತ್ಯಯ ಸೇರಿಸಬೇಕಾದ ಅಗತ್ಯವಿಲ್ಲ. ಬಹುವಚನದಲ್ಲಿ ವ್ಯವಹಾರಗೊಳ್ಳುವಾಗ ನಾಮಪ್ರಕೃತಿಗೆ (ಅಥವಾ ಪ್ರಾತಿಪದಿಕ) ಅದರ ಸ್ವರೂಪವನ್ನು ಅನುಸರಿಸಿ ಪುಂ ಸ್ತ್ರೀ ವಾಚಕಗಳಿಗೆ ಪ್ರಚುರವಾಗಿ ಅರ್, ಇರ್, ದಿಲ್, ವಿ. ಪ್ರತ್ಯಯಗಳೂ ನವ್ವಾಚಕಗಳಿಗೆ ಕಳ್/ಗಲ್, ವಅವುಉವು ಪ್ರತ್ಯಯಗಳೂ ಸೇರುತ್ತವೆ

ಪುಂ ಸ್ತ್ರೀ ವಾಚಕಗಳಿಗೆ ಅರ್ ಸೇರುವ ಸಂದರ್ಭಗಳನ್ನು ಈಗ ತಿಳಿಯಬಹುದು. (೧) ಪುಲ್ಲಿಂಗ ಶಬ್ದಗಳಲ್ಲಿ : ದೇವರ್‌, ನಂಟರ್, ನಲ್ಲರ್‌, ಅರಸರ್, ಕುಲಜರ್’ ದಡಿಗರ್, ದಾಯಿಗರ್

(೨) ಸ್ತ್ರೀಲಿಂಗ ಶಬ್ದಗಳಲ್ಲಿ : ದೇವಿಯರ್, ಕಾಂತೆಯರ್‌, ಅರಸಿಯರ್, ಸ್ತ್ರೀಯರ ವಧುಪರ್

(೩) ಸಂಖ್ಯಾವಾಚಕಗಳಲ್ಲಿ : ಇರ್ವರ್, ಮೂವರ್, ಅಜುವರ್‌, ಎಣ್ಮರ್ ಪಯಿಂಭಾಸಿರ್ವರ್

(೪) ಸರ್ವನಾಮ ಶಬ್ದಗಳಲ್ಲಿ : ಅವರ್, ಇವರ್, ಪೆಲಿವರ್‌, ಆ‌, ಉವರ್ ಎಲ್ಲರ್

(೫) ಕೃದ್ರೂಪಗಳಲ್ಲಿ : ಮಾಡಿದರ್, ಬೇಡಿದರ್‌, ಸೋಲ್ಕರ್, ಗಲ್ಲರ್‌, ಪೇಟ್ಟರ್‌, ಪೂರ್ವ‌್ರ

(೬) ಗುಣವಾಚಕಗಳಲ್ಲಿ : ಒಳ್ಳಿದರ್, ಬಲ್ಲಿದರ್, ಬೆಟ್ಟಿದರ್, ಪೂಸಂಬರ್‌ (೭) ತದ್ಧಿತಗಳಲ್ಲಿ : ಮಣಿಗಾರ್, ಕಂಚಗಾಬರ್ (೮) ಪ್ರಮಾಣ (ಪರಿಮಾಣ) ವಾಚಕಗಳಲ್ಲಿ : ಕೆಲರ್‌ (ಕೆಲಂಬರ್‌/ಕೆಲಬರ್ ಕೂಡ ಉಂಟು), ಪಲರ್‌ (ಪಲಂಬರ್‌/ಪಲಬರ್ ಕೂಡ ಉಂಟು), ಅನಿಬರ್ ಇನಿಬರ್‌ ಎನಿಬರ್ ಎಂಬ ಶಬ್ದಗಳು ನಿತ್ಯ ಬಕಾರದ ರೂಪಗಳು. ಶಮದದಲ್ಲಿ ಹೇಳಿರದಿದ್ದರೂ ಪಲವರ್‌ ಕೆಲವರ್ ಎಂಬ ರೂಪಗಳಿಗೂ ಪ್ರಯೋಗಗಳುಂಟು,

ಬಂಧುವಾಚಕಗಳಲ್ಲಿ ದಿರ್‌ ಮತ್ತು ವಿರ್ ಪ್ರತ್ಯಯಗಳು ಬರುವುದೇ ಸಾಮಾನ್ಯ.

ಭಾವಂದಿರ್, ಅಣ್ಣಂದಿರ್, ಅಕ್ಕಂದಿರ್, ಮಗಂದಿರ್‌, ಮಗಳೋರ್‌, ಅಲ್ಲದೆ ಇವಂದಿರ್, ಅವಂದಿರ್, ಇವಳ್ಳಿ‌ ಈ ಸರ್ವನಾಮಗಳಲ್ಲಿ ಕೂಡ ಉಂಟು.

ಅತ್ಯವಿರ್, ಸೂಸವಿರ್, ತಾಯ್ಕರ್, ತಂದೆವಿ‌; ಅಲ್ಲದೆ ಪಠ್ಯಾಯವಾಗಿ ತಂದೆಗಳ್ ತಾಯ್ಸಳ ಅತ್ತೆಗಳ ರೂಪ ಸಹ ಉಂಟು.

ಇರ್ ಪ್ರತ್ಯಯ ಸ್ತ್ರೀ ವಾಚಕಗಳಲ್ಲಿ ಮಾತ್ರ; ಪೆಂಡಿರ್, ತೋಟ್ರ್‌ ಕೆಲವು ರೂಪಗಳಿಗೆ ಬಳಕೆ ಹೆಚ್ಚು, ಕೆಲವಕ್ಕೆ ಕಡಮ. ಬಹುವಚನ ಪ್ರತ್ಯಯಗಳ ವೈವಿಧ್ಯಕ್ಕೆ ವೈಯಾಕರಣ ನಾಗವರ್ಮ ಹೇಳುವಂತೆ ‘ಜನೊಕ್ರಮ’ದ ಪ್ರಕಾರ ಸ್ವಾತಂತ್ರ್ಯವೂ ಉಂಟು. ಆರ್‌ ದಿ‌ ವಿರ್ ಈ ಬ.ವ. ಪ್ರತ್ಯಯಗಳು ಬಹುತ್ವಸೂಚಕ ಮಾತ್ರವಲ್ಲದ ಏಕತ್ವದಲ್ಲಿ ಗೌರವಾರ್ಥವಾಗಿಯೂ ಬಳಕೆಯಾಗುತ್ತವೆ ಎಂಬುದನ್ನು ನೆನಪಿನಲ್ಲಿಡಬೇಕು.

ಗಳ/ಕಳ್

ನಪುಂಸಕಲಿಂಗದ ಪ್ರಕೃತಿಗಳಿಗೆ ಸಾಮಾನ್ಯವಾಗಿ ಹತ್ತುವ ಪ್ರತ್ಯಯಗಳೆಂದರೆ ಗಳ್| ಕಳ್ ಪ್ರತ್ಯಯಗಳು :

ಕಣ್ಣಳ್, ಕೊಳಂಗಳ್, ತೋಳಳ್, ತುಲುಗಳ್, ತರುಗಳ್, ಪೂಗಳ್, ಪುಷಂಗಳ್. ಅಕಾರಾಂತ ಪುಂ ಸ್ತ್ರೀ ಪ್ರಕೃತಿಗಳಿಗೆ ಕೂಡ ವಿಕಲ್ಪವಾಗಿ ಗಳ ಪ್ರತ್ಯಯ ಹತ್ತಬಹುದು: ಅಣ್ಣಂದಿರ್-ಅಣ್ಣಂಗಳ್, ಅಕ್ಕಂದಿರ್-ಅಕ್ಕಂಗಳ್, ಮಾವಂದಿರ್‌-ಮಾವಂಗಳ್ ಅಲ್ಲದ ತಾಯ್ಕರ್-ತಾಯ್ಡಳ್, ತಂದೆವಿರ್-ತಂದೆಗಳ್ ಎಂಬ ವ್ಯಂಜನಾಂತ ಎಕಾರಾಂತಗಳಲ್ಲಿ ಸಹ ವಿಕಲ್ಪವುಂಟು.

ಆಯತ್ನಕೃತ ಗೌರವಸೂಚನೆಯ ಸಂದರ್ಭಕ್ಕೆ ಕೂಡ ಗಳ ಸಾಧ:

ತಂದೆಗಳ್, ತಾಯ್ತಲ್, ಅತ್ತೆಗಳ್, ಗುರುಗಳ್, ಸ್ವಾಮಿಗಳ ಬಹುವಚನ ಸರ್ವನಾಮಶಬ್ದಗಳಲ್ಲಿ ಕೆಲವೊಮ್ಮೆ ಅಧಿಕಪ್ರತ್ಯಯವಾಗಿ ಹತ್ರ ಬಹುದು.

ಇವರ್‌-ಇವರ್ಗಳ್, ಅವರ್-ಅವರ್ಗಳ್

ಅಕಾರಾಂತ ಪುಂ ಸ್ತ್ರೀ ನಪ್ ವಾಚಕಗಳಿಗೆ ಗಳ ಪರವಾದಾಗ ಲಿಂಗ-ವಚನ ದ್ಯೋತಕವಾಗಿ ನಕಾರ ಮಕಾರಗಳನ್ನು ಪ್ರತಿನಿಧಿಸುವ ಬಿಂದುವಿದ್ದು, ಅದರ ಮೇಲೆ ಗಳ್ ಹತ್ತುವುದು ಸಾಮಾನ್ಯವೆಂದು ತಿಳಿದಿರಬೇಕು.

ನಪ್ ವಾಚಕಗಳ ವಿಷಯವಾಗಿ ಎಚ್ಚರದಿಂದ ಗಮನಿಸುವ ಒಂದು ಲಕ್ಷಣವಿದೆ. ಕೆಲವು ಶಬ್ದಗಳಲ್ಲಿ ಮಾತ್ರ ನಕಾರಾಂತ : ಮರನ್-ಮರಗಳ್, ಪೂಲನ್-ಪೊಲುಗಳೇ, ಕೋಳ-ಕೊಳಂಗಳ್

ಕೆಲವು ಶಬ್ದಗಳಲ್ಲಿ ಮಕಾರಾಂತ: ದೇಶ್ಯ ಶಬ್ದಗಳಲ್ಲಿ ಕುಟಮ್-ಕುಲಂಗಳ್, ಗುಲಮ್ - ಗುಡಿಂಗಳ್, ದಮ್-ದಲಿಂಗ, ಪಲಹಮ್-ಪಟಹಂಗಲ್, ಹಾಗೆಯೇ ಕಡವರಮ್, ದಡ್ಡ ಸಮ್, ಪಳಾಳಮ್, ಸಬ್ಬವಮ್ ಇ.

ಸಂಸ್ಕೃತಶಬ್ದಗಳಲ್ಲಿ : ದೇಶಂಗಳ್, ಕೋಶಂಗಳ್, ಭುಜಂಗಳ್, ಗುಣಂಗಳ್ ದೇಶ್ಯ ಶಬ್ದಗಳಲ್ಲಿ ಆಗಾಗ ಬಿಂದುಲೋಪವಾಗಿ ಪ್ರಯೋಗಗಳಿರಬಹುದು: ಮರಗಳ್, ಪೋಲಗ, ಕೊಳಗಳ್ ಸಂಸ್ಕೃತಶಬ್ದಗಳಲ್ಲಿ ಬಿಂದುಲೋಪವನ್ನು ಮಾಡಬಾರದು; ಸಬಿಂದುಕಗಳ ವಿಧಿ ನಿತ್ಯ ದೇಶಗಳ ಕೋಶಗಳ್ ಮುಂತಾದ ರೂಪಗಳನ್ನು ತರಬಾರದು.

ಕಳ್ ಪ್ರತ್ಯಯ ಆದೇಶಗೊಂಡ ನಾಮವಾಚಕಗಳಿಗೆ ಸೇರುತ್ತದೆ: ನಾಡು+ಕಳ್ನಾಟ್ಕಳ್‌, ಮಗು+ಕಳ್= ಮಕ್ಕಳ್, ಕೋಡು+ಕಳ್=

ಕೋಳ್. ಅಲ್ಲದೆ, ಅರ್ ವಿರ್ ಪ್ರತ್ಯಯಗಳ ಮೇಲೆ ಆಗಮವಾಗಿ ಕೂಡ ಬರಬಹುದು: ಬುಧರ್ಕಳ್, ಗೋವರ್ಕಳ್, ತಾಯ್ಕೆರ್ಕಳ್

ವು / ಅವು / ಉಪ್ಪು

ನಮ್ ಸರ್ವನಾಮ ಗುಣವಚನ ಶಬ್ದಗಳಲ್ಲಿ ವಿ.ವ.ದ ತು | ದು ಗಳಿಗೆ ಬ.ವ.ದಲ್ಲಿ ವುಅವುಉವು ಬರುತ್ತವೆ.

ಪಂತು, ಎಲ್ಲದು-ಪೆಯನ್ನು ಎಲ್ಲವು; ಕಿಳಿದು, ಪಿರಿದು-ಕಿಜ್ಯವು, ಪಿರಿಯವು ಒಳ್ಳಿತು, ತೆಳ್ಳಿತು-ಒಳ್ಳೇದುವು, ತಳ್ಳಿದುವು

ಜಾತಿವಾಚಕಗಳ ವಚನವಿಚಾರ

ವಚನ ಪಲ್ಲಟವೆಂದು ಸಾಮಾನ್ಯವಾಗಿ ತಿಳಿಯುವ ಒಂದು ಬಗೆಯ ವಾಕ್ಯ ವಿನ್ಯಾಸದ ವಿಶೇಷವಿದೆ. ಪ್ರಾಣಿ ಮತ್ತು ವ್ಯಕ್ತಿ ವಾಚಕಗಳಲ್ಲಿ ಸಮೂಹ ಅಥವಾ ಸಮುದಾಯವನ್ನು ಒಟ್ಟಾಗಿ ಹೇಳುವ ಸಂದರ್ಭವನ್ನು ಜಾತಿವಾಚಕವಂಬ ಸಂಜ್ಞೆಯಿಂದ ವ್ಯವಹರಿಸಲಾಗು ವುದು.

ನಪುಂಸಕಲಿಂಗದ ಕಾರಕವು ಏಕವಚನದಲ್ಲಿದ್ದು, ಅದಕ್ಕೆ ಹೊಂದಿ ಬರುವ ಕ್ರಿಯಾಪದ ಬಹುವಚನ ಪ್ರತ್ಯಯದೊಂದಿಗೆ ಇರುವುದಾದರೆ, ಆ ಕಾರಕವೂ ಬಹುವಚನದಲ್ಲಿಯೇ ಇರುವ ಜಾತಿವಾಚಕವಂದು ತಿಳಿಯಬೇಕು.

ಆನೆ ನೂಂಕಿದುವು-ಆನೆಗಳ್ ನೂಂಕಿದುವು; ಕಾಲಾಳ್ ಕವಿದುವು-ಕಾಲಾಳ್ ಕವಿದುವು.

ಇವಲ್ಲದೆ ಕೆಲವು ವಿಶೇಷ ಸಂದರ್ಭಗಳೂ ಇವೆ :

(i) ಅಮೂರ್ತವಿಷಯ : ಮನಂ ಸಂಚಲಮಾದುವು-ಮನಂಗಳ್

ಸಂಚಲಮಾದುವು (ii) ಸಂಖ್ಯೆಯ : ಮೂಲು ಲೋಕಮ್-ಮೂಟು ಲೋಕಂಗಳ

ನಾಲ್ಕು ಯುಗಮ್-ನಾಲ್ಕು ಯುಗಂಗಳ್" (iii) ಸಂಖ್ಯಾನ : ಎರಡಯ್ತು-ಎರಡಯ್ತುಗಳ

ಪತ್ತು ನೂಲು-ಪತ್ತು ನೂಲುಗಳ್ (iv) ಭಾವನಾಮ : ಕಣ್ಣಳ ಕೂರ್ಪು-ಕಣ್ಣಳ ಕೂರ್ಪುಗಲ್

ಪೂಗಳ ಬೆಳ್ಳು-ಪೂಗಳ ಬೆಳ್ಳುಗಳ್ (v) ವಿಶೇಷ್ಯದ ಪ್ರಯೋಗ : ನೇರಿದುವು ಬರಲ್-ನೇರಿದುವು ಬೆರಳ್

ತೋರಿದವು ಜಘನಮ್-ತೋರಿದುವು ಜಘನಂಗಳ ವಾಸ್ತವವಾಗಿ ಭಾವನಾಮದ, ಅಮೂರ್ತವಿಷಯದ ಸಂದರ್ಭಗಳನ್ನು ಬಿಟ್ಟರೆ, ಉಳಿದುವು ಸ್ವರೂಪದಲ್ಲಿ ಜಾತಿವಾಚಕಗಳ ಹಾಗಯೇ.

ವಿಭಕ್ತಿಗಳು

ಕ್ರಿಯೆಗೆ ನಿಮಿತ್ತವಾದ್ದು ಕಾರಕ. ಅದು ಕ್ರಿಯೆಯನ್ನು ಮಾಡಿಸುತ್ತದೆ, ಆಶ್ರಯವಾಗಿರು ಆದ, ಸಂಬಂಧಿಸಿರುತ್ತದೆ. ವಾಕ್ಯದಲ್ಲಿ ಒಂದು ಪದವನ್ನು ಕಾರಕವೆನ್ನಬೇಕಾದರೆ, ಆ ಕಾರಕವಾದ ಪದದ ಅರ್ಥ ಆ ವಾಕ್ಯದ ಕ್ರಿಯಾಪದಕ್ಕೆ ನೇರವಾಗಿ ಸಂಬಂಧಿಸಿರಬೇಕು. ಆ ಸಂಬಂಧ ಆರು ವಿಧವಾದ್ದು. ಅದನ್ನು ಕ್ರಮವಾಗಿ ಕರ್ತೃ ಕರ್ಮ ಕರಣ ಸಂಪ್ರದಾನ ಅಪಾದಾನ ಅಧಿಕರಣ ಎಂದು ತಿಳಿಯಲಾಗಿದೆ.ಚರಿ

ಕರ್ತೃ : ಕ್ರಿಯೆಯನ್ನು ಸ್ವತಂತ್ರವಾಗಿ ನಡಸುವವನು, ನಡಸುವವಳು, ನಡಸುವುದು. ಕರ್ಮ : ಕ್ರಿಯೆಯ ಕರ್ಮವನ್ನು ಸೂಚಿಸುವುದು. ಕರಣ : ಕ್ರಿಯೆಯನ್ನು ಸಾಧ್ಯಮಾಡುವ ಸಾಧನ ಅಥವಾ ಉಪಕರಣವಾಗುವುದು. ಸಂಪ್ರದಾನ : ಕ್ರಿಯೆಗೆ ವಿಷಯವಾದುದನ್ನು ಒಪ್ಪಿಸುವುದು, ಕೊಡುವುದು

ಅಪಾದಾನ : ಕ್ರಿಯೆಗೆ ವಿಷಯವಾದುದು ತನ್ನ ಸ್ಥಾನದಿಂದ ಬೇರ್ಪಡುವುದು, ದೂರವಾಗುವುದು

ಅಧಿಕರಣ : ಕ್ರಿಯೆಗೆ ವಿಷಯವಾದುದರ ಆಧಾರವನ್ನು ಸ್ಥಾನವನ್ನು ಹೇಳುವುದು. ಕ್ರಿಯೆಗೆ ನೇರವಾಗಿ ಸಂಬಂಧವಿರದಿದ್ದರೂ, ಕರ್ತೃವಿಗೆ ವಿಶೇಷಣಸಂಬಂಧವನ್ನುಳ್ಳ ಷಷ್ಟಿಯನ್ನು ಸೇರಿಸಿ, ವಿಭಕ್ತಿಗಳನ್ನು ಪ್ರಥಮಾ (ಕರ್ತೃ), ದ್ವಿತೀಯಾ (ಕರ್ಮ), ತೃತೀಯಾ (ಕರಣ), ಚತುರ್ಥಿ (ಸಂಪ್ರದಾನ), ಪಂಚಮೀ (ಅಪಾದಾನ), ಷಷ್ಠಿ, ಸಪ್ತಮೀ (ಅಧಿಕರಣ) ಎಂದು ಕ್ರಮವಾಗಿ ಗುರುತಿಸಲಾಗುವುದು.

ವಿಭಕ್ತಿಪ್ರತ್ಯಯ ಸೂತ್ರ

“ಮಮಿಂಕೆಯದದೊಳ್" ಎಂಬುದಾಗಿ ವೈಯಾಕರಣರ ಸಾಮಾನ್ಯ ವಿಭಕ್ತಿ ಪ್ರತ್ಯಯ ಸೂತ್ರವಿದೆ. ಈ ಸೂತ್ರವಾಕ್ಯವನ್ನು ಮ್-ಅಮ್-ಇಮ್-ಕೆ-ಅತ್-ಅ (<ಅತ್)-ಒಳ ಎಂಬುದಾಗಿ ಬಿಡಿಸಬೇಕಾಗುತ್ತದೆ. ಆದರೆ ಈ ಸೂತ್ರ ವಿಭಕ್ತಿ ರಚನೆಯನ್ನು ಸಮರ್ಪಕ ವಾಗಿ ತಿಳಿಸುವುದಿಲ್ಲ; ಅಲ್ಲದೆ ಎಲ್ಲ ವಿಭಕ್ತಿ ಪ್ರತ್ಯಯಗಳನ್ನೂ ಇದು ಒಳಕೊಂಡಲ್ಲಿ ಹಳಗನ್ನಡ ಭಾಷೆಯ ವಾಕ್ಯರಚನೆಯಲ್ಲಿ ವಿಭಕ್ತಿಯ ಗತಿ ಹೇಗಿರುತ್ತದೆ ಎಂದು ಮುಂದಿನ ವಿವರಣೆಯಿಂದ ತಿಳಿಯಬಹುದಾಗಿದೆ.

ಪ್ರಥಮಾ ವಿಭಕ್ತಿ

ನಾಮವಾಚಕದ ಪ್ರಕೃತಿರೂಪವೇ (=ಪ್ರಾತಿಪದಿಕವೇ) ಕರ್ತೃಕಾರಕದ ಅರ್ಥ ಕೊಡು ತದೆ. ಒಂದು ವಿಶೇಷವೆಂದರೆ, ಪ್ರಕೃತಿ ಅಕಾರಾಂತವಾಗಿದ್ದರೆ ಅದಕ್ಕೆ ಲಿಂಗ/ವಚನ ಸೂಬೇರೆ ವಾದ ಪ್ರತ್ಯಯದಂತಹ ಅಕ್ಷರ ಸೇರಿರುತ್ತದೆ. ಪುಲ್ಲಿಂಗವಾದಲ್ಲಿ ನ್ (ಕೆಲವು ಸಲ ಅ ನಪ್‌ಗಳಲ್ಲಿ ಕೂಡ), ನಪುಂಸಕಲಿಂಗವಾದಲ್ಲಿ ಮ್ ಸೇರಿರುತ್ತದೆ. ಇದಕ್ಕೆ ಬರಹದಲ್ಲಿ ಸಮಾನವಾಗಿ ಅನುಷ್ಟಾರಚಿಹ್ನೆಯಾದ ಬಿಂದುವನ್ನು ಹಾಕಿರುತ್ತದೆ.

ಪ್ರಕೃತಿ ಕೊಡುತ್ತಿರುವ ಅರ್ಥ ಪುಲ್ಲಿಂಗವಾದಲ್ಲಿನ್ ಎಂದೂ ನಪುಂಸಕಲಿಂಗವಾದಲ್ಲಿ ಮ್ ಎಂದೂ ಆ ಬಿಂದುವಿನ ಆಶಯವನ್ನು ತಿಳಿದು ಅದು ಸೇರಿದ ಪ್ರಕೃತಿ | ಪ್ರಾತಿಪದರ ವನ್ನು ಹಾಗೆಯೇ ನಾವು ಉಚ್ಚರಿಸಬೇಕಾಗುತ್ತದೆ.

ಉದಾಹರಣೆ:

ವೇದವಿದಂ ಕಾಲತ್ರಯ ವೇದಿ ಬಹುಶ್ರುತನಥರ್ವಕುಶಲಂ ಶುಭವಂ ಶೂದಯನುತ್ತಮವಾರೀ

ರ್ವಾದಪರಂ ಪರಹಿತಂ ಪುರೋಹಿತನಕ್ಕುಂ ||

ಎಂಬುದು `ಸೂಕ್ತಿಸುಧಾರ್ಣವ’ದ ಒಂದು ಕಂದಪದ್ಯ (೧೬-೫೩), ಇಲ್ಲಿ ವೇದವಿದು, ಅಥರ್ವಕುಶಲಂ, ಆಶೀರ್ವಾದಪರಂ, ಪರಹಿತಂ ಈ ನಾಲ್ಕು ಸಬಿಂದುಕ ಪದಗಳು ಪುರೋಹಿತನ್ ಎಂಬ ಪುಲ್ಲಿಂಗ ಶಬ್ದಕ್ಕೆ ವಿಶೇಷಣಗಳಾಗಿದ್ದು, ಆ ನಾಲ್ಕು ಶಬ್ದಗಳು ವೇದವಿದನ್, ಅಥರ್ವಕುಶಲನ್, ಆಶೀರ್ವಾದಪರನ್, ಪರಹಿತನ್ ಎಂಬುದಾಗಿ ನಕಾ ರಾಂತ ಪದಗಳಾಗಿವೆಯೆಂದೂ ಅವು ಪ್ರಥಮಾವಿಭಕ್ತಿಯಲ್ಲಿವಯಂದೂ ತಿಳಿಯಬೇಕು. ಈ ಶಬ್ದಗಳು ಸಂಧಿಯಾದ ಶುಭವಂಶೋದಯನ್+ಉತ್ತಮನ್ + ಆಶೀರ್ವಾದಪರಂ, ಪುರೋಹಿತನ್+ಅಕ್ಕುಂ ಎಂಬವುಗಳ ಹಾಗೆಯೇ,

ಧ್ವಜಮಯಮಂಬರಂ ಗಜಮಯಂ ಭುವನಂ ಪ್ರಳಯ ಪ್ರಚಂಡ ಭೂ

ಭುಜಮಯಮಷ್ಟದಿಗ್ಗಳಯಮಶ್ವಮಯಂ ಜಗತೀತಳಂ . . . (ಪಂಪಭಾ. ೯-೯೮) ಇಲ್ಲಿಯೂ ಸಬಿಂದುಕ ಪ್ರಯೋಗದ ಈ ಪ್ರಕೃತಿಗಳಿವೆ: ಅಂಬರಂ, ಗಜಮಯಂ, ಭುವನಂ, ಅಶ್ವಮಯಂ, ಜಗತೀತಳು. ಆದರೆ ಇವು ನಪುಂಸಕಲಿಂಗದ ಶಬ್ದಗಳೆಂದು ಸುಲಭವಾಗಿ ತಿಳಿಯುವಂತಿದ್ದು, ಇಲ್ಲಿ ಆ ಸಬಿಂದುಕಪದಗಳನ್ನು ಅಂಬರಮ್, ಗಜಮಯಮ್, ಭುವನಮ್, ಅಶ್ವಮಯಮ್, ಜಗತೀತಳಮ್ ಎಂಬುದಾಗಿ ಮಕಾ ರಾಂತದ ಶಬ್ದಗಳಾಗಿಯೇ ಓದಬೇಕು. ಇವು ಧ್ವಜಮಯಮ್+ಅಂಬರಂ, ಭೂಭುಜ ಮಯಮ್+ಅಷ್ಟದಿಗ್ಗಳಯಮ್+ಅಶ್ವಮಯಂ ಎಂಬವುಗಳ ಹಾಗೆಯೇ,

ಅಕಾರಾಂತ ದೇಶ್ಯ ಶಬ್ದಗಳಲ್ಲಿ ನವ್ ಪ್ರಕೃತಿಗಳ ನಡೆ ಕೂಡ ಮಕಾರಾಂತವಾಗಿಯೇ. ಉಕ್ಕವಮ್, ಕಸವರಮ್, ಕೃತವಮ್, ಕೊಟ್ಟಜಮ್, ಪಡಣಮ್, ಬಂಡಣಮ್, ಬಿಸವಂದಮ್, ಸಬ್ಬವಮ್, ಸೌಸವಮ್ ಇ.

ಹೀಗಿದ್ದೂ, ವಿರಳವಾಗಿ ನಕಾರಾಂತದ ನಡೆಯೂ ಉಂಟು: ಕೋಣನ್, ಪಣನ್, ಮರ, ತೆಜನ್ ಇ,

ಆಡು ಕುಜ ಕೋತಿ ಕೋಣನ

ಕೂಡಿದ ಪಿಂಡೂಳಟ…… (ಯಶ್ಚ ೧-೨೯) ತುಲು ಪರಿವಾಗಳನ್ನ ಪಣನನ್ ತುಟಿದುಮ್ ಪರಿಗುಮ್ ದಲ್ (ಪಂಪಭಾ, $$-$$) ದೇಗುಲಕ ಪರ್ಮರನನ್ ಕಡಿವಂತ ಮಾಡಿದರ್ (ಪಂಪಭಾ. ೮-೯೫) | ತಜನದೀವ ಕಾರ್ಯವದಂಜುವ…… (ಸೂಕ್ತಿಸು, ೮-೪೦೨) ನಕಾರಾಂತ ನಾಮಪ್ರಕೃತಿ ಪುಂಗದಲ್ಲಿರುವುದು ಸಾಮಾನ್ಯವಿಧಿ, ಆದರೆ ಕೆಲವೊಮ್ಮ ಸ್ತ್ರೀ ನಟ್ ಪ್ರಕೃತಿಗಳು ಕೂಡ ನಕಾರಾಂತವಾಗಿಯೇ ಇರುವುದು ಒಂದು ವಿಶೇಷ.

೫೨

ಸ್ತ್ರೀ : ತಮ್ಮಕ್ಕನನ್ ಕಾಣಲ್ ಪೋದಾತನ್ (ಪಂಪಭಾ. ೮-೮೫ ವ.)

ತಮ್ಮಕ್ಕನಮಟ್ಟಿಯಲ್ಲಿ ಗುಂಡಮಚ್ಚೆ ಬಂದು (ಅಜಿಪು, ೧-೪೬ ವ.) ಇಲ್ಲಿ ಅಕ್ಕನ್+ಅನ್‌, ಅಕ್ಕನ್ +ಅತ್ತಿಮಬ್ಬೆ ಎಂಬುದಾಗಿ ಪದವಿಭಜನೆ. ಕೆಲವು ಲ/ಳಕಾರಾಂತ ದೇಶ ನಪ್ ಪ್ರಕೃತಿಗಳು ವಿಶೇಷವಾಗಿ ನಕಾರವನ್ನೇ ಸ್ವೀಕರಿಸುತ್ತವೆ. ಉದಾ.ಗೆ ಕೆಲ, ನೆಲ, ಪೊಲ; ಕಳ, ಕೊಳ

ತನ್ನಯ ಜನದೂಳ್ ಕಲನಚಿಯ ಕೃತಕಶೋಕಂಗೆಯ್ಸನ್ (ಪಂಪಭಾ, ೩-೪) ಸಮಚತುರಸ್ರಮಾಗೆ ನೆಲನನಳೆದು (ಪಂಪಭಾ. ೨-೬೫ ವ.) ಪುಸಿ ಪೊಲನಲ್ಕು ನಾಲಗೆಗೆ (ಪಂಪರಾ, ೬-೧೪) ಕಾಮನ್ ಕಳನೇಯುವಂತೆ (ಪಂಪಭಾ. ೩-೮೧ ವ.)

ಪೂವಿಲ್ಲದ ಕೊಳವಿಲ್ಲ (ಗಿರಿಕ, ೨-೪) ಆದರೆ ಈ ಶಬ್ದಗಳು ತೃತೀಯಾದಿ ವಿಭಕ್ತಿಗಳಲ್ಲಿ ನಡೆಯುವಾಗ ದಕಾರಾಗಮ ದೊಂದಿಗೆ ಇತರ ಅಕಾರಾಂತ ಸಂಸ್ಕೃತ ಕನ್ನಡ ನಾಮಪ್ರಕೃತಿಗಳ ಹಾಗೆಯೇ ನಡೆಯುತ್ತವೆ. ಎಂದರೆ ಪೊಲದ, ನೆಲದ, ಕೆಲದ, ಕಳದ, ಕೊಳದ ಎಂಬಂತೆ, ಅಕಾರಾಂತ ಸಂಸ್ಕೃತಿ ನಪ್‌ ಪ್ರಕೃತಿಗಳಲ್ಲಿ ಸರ್ವತ್ರ ದಕಾರಾಗಮ ನಿತ್ಯ: ಎಂದರೆ ಕುಲದ, ಚಲದ, ಜಲದ, ಬಲದ, ಸ್ಥಲದ ಇತ್ಯಾದಿ; ಮುಖ ಸುಖ ತತ್ತ್ವ ಶಾಸ್ತ್ರ ಇತ್ಯಾದಿ ಪ್ರಕೃತಿಗಳಲ್ಲಿ ಕೂಡ

ದ್ವಿತೀಯಾ ವಿಭಕ್ತಿ

ಮಮಿಂಕೆಯದದೊಳ್ ಎಂಬ ಸೂತ್ರದಂತೆ ಅಮ್ ದ್ವಿತೀಯಾವಿಭಕ್ತಿಯೆಂದು ಭ್ರಮಿಸುವುದಕ್ಕೆ ಪ್ರಥಮಾವಿಭಕ್ತಿಯ ವಿಷಯದಲ್ಲಿ ನೋಡಿದಂತೆ ಇಲ್ಲಿಯೂ ಬಿಂದು ಕಾರಣ. ಆದರೆ ಇದನ್ನು ಅನ್ ಎಂದು ತಿಳಿಯಬೇಕು, ಉಚ್ಚರಿಸಬೇಕು. ಈ ಆದ ಹಳೆಯ ಕಾವ್ಯಪ್ರಯೋಗಗಳಲ್ಲಿ ಆನ್ ಎಂಬುದಾಗಿ ಕೂಡ ದೀರ್ಘಕರಣಗೊಂಡು ವಿರಳವಾಗಿ ಪ್ರಯೋಗವಾಗಿರುತ್ತದೆ.

ಅನ್ ಪ್ರತ್ಯಯ

ಬೆಟ್ಟಮಂ-ಬೆಟ್ಸಮನ್, ಘಟ್ಟಮಂ-ಘಟ್ಟಿಮನ್, ಬಳ್ಳಮಂ-ಬಳ್ಳಮನೆ’’ ಕೊಳಗಮಂ-ಕೊಳಗಮನ್ ಇ

ಕುಲಮಂ ಚಲಮಂ ವಿದ್ಯಾ

ಬಲಮು ಕೌಲ್ಕಾವಲೇಪಮಂ ಪೊಗಟ್ ನಲಂ . . . (ಕಾವ್ಯಾವ. ೧೯೭) ಇದನ್ನು ಓದುವ ರೀತಿ:

ಕುಲಮನ್‌ ಚಲಮನ್ ವಿದ್ಯಾ ಬಲಮ ಪೌರಾವಲೇಪಮನ್ ಪೊಗಟೆ ನಲನ್ , , ,

ಕುಲಮ್ ಚಲಮ್ ವಿದ್ಯಾಬಲಮ್ ಶೌದ್ಮಾವಲೇಪಮ್ ಎಂಬ ಪ್ರಕೃತಿಗಳಿಗೆ ಅನ್ ಎಂಬ ದ್ವಿತೀಯಾವಿಭಕ್ತಿ ಪ್ರತ್ಯಯ ಸೇರಿರುವುದು ಆಗ ಸ್ಪಷ್ಟವಾಗುತ್ತದೆ. ತೃತೀಯಾದಿ ವಿಭಕ್ತಿಗಳಲ್ಲಿ ಕುಲದಿನ್, ಚಲದಿನ್ ಇ, ವಿಭಕ್ತಿಗತಿಯಿರುತ್ತದೆ.

ಆನ್ ಪ್ರತ್ಯಯ: ಕಲ್ಲನ್+ವಿಚಿದನ್ = ಕಲ್ಲನೇದನ್; ಕಲ್ಟಾನ್+ಏದನ್ = ಕಲ್ಲಾನೇಜ್‌ದನ್ ಬಿಲ್ಲನ್+ಅದನ್ = ಬಿಲ್ಲನದನ್; ಬಿಲ್ಲಾನ್+ಅದನ್ = ಬಿಲ್ಲಾನದನ್. ಹೀಗೆಯೇ ಸ್ವರ್ಗಾಗ್ರಮಾನ್, ಪ್ರಾಸಾದಾಂತರಮಾನ್ ಎಂಬಂತಹ ಶಾಸನ ಪ್ರಯೋಗ ಗಳೂ ಉಂಟು.

ಇಲ್ಲಿಯೇ ಒಂದು ವಿಶೇಷವನ್ನು ಹೇಳಬೇಕು. ಇದರ ವಿಭಕ್ತಿಗಳ ಗತಿಯಲ್ಲಿ ಸಮು ಚ್ಚಯದ ಉಮ್ ಪ್ರತ್ಯಯ ಆಯಾ ವಿಭಕ್ತಿ ಪ್ರತ್ಯಯದ ಅನಂತರದಲ್ಲಿ ಹತ್ತುತ್ತದೆ. ಉದಾ: ಕಾಲಿಂದೆಯುಮ್, ಕಲಿತನದೊಳಮ್, ಆದರೆ ದ್ವಿತೀಯಾವಿಭಕ್ತಿಯ ವಿಷಯ ದಲ್ಲಿ, ಆ ವಿಭಕ್ತಿಗೆ ಮೊದಲೇ ಸಮುಚ್ಚಯದ ಉಮ್ ಸೇರುತ್ತದೆ.

‘ಒಂದಡೆಯೋಳ್ ಕಟ್ಟುವುವ ಪುಳಿಯುಮನ್ ಕವಿಯುಮನ್’ ಇಲ್ಲಿ ಪುಲಿ+ಉವ+ಅನ್=ಪುಲಿಯುಮನ್, ಕವಿಲೆ+ಉವ+ಅನ್ = ಕವಿಲೆಯುಮನ್ ಎಂದು ಕ್ರಮ (=ಹುಲಿಯನ್ನೂ ಕಪಿಲೆಯನ್ನೂ)

ತೃತೀಯಾ ವಿಭಕ್ತಿ

ಈ ವಿಭಕ್ತಿಯ ಪ್ರತ್ಯಯಗಳಲ್ಲಿ ಇಮ್ ಮಾಡಿರುವುದು ಸರಿಯಲ್ಲ; ಇನ್ ಎಂದೇ ತಿಳಿಯಬೇಕು, ಉಚ್ಚರಿಸಬೇಕು. ಇನ್/ಇಂದಮ್/ಇಂದೆ ಮತ್ತು ವಿಶೇಷವಾಗಿ ಎ ಇವು ತೃತೀಯೆಯ ಪ್ರತ್ಯಯಗಳು. ಕಾವ್ಯಭಾಗಗಳಲ್ಲಿ ಶಬ್ದಗಳು ಹೆಣೆದುಕೊಂಡು ಬಂದಾಗ್ಗೆ, ಇಂದಮ್/ಇಂದೆ ಎಂಬುದನ್ನು ಈಗ ಹೊಸಗನ್ನಡದಲ್ಲಿ ವ್ಯವಹಾರದಲ್ಲಿರುವ ಹಾಗೆ ಇಂದ ಎಂದು ಬಿಡಿಸಿ ಓದಬಾರದು, ಉಚ್ಚರಿಸಬಾರದು. ಅಲ್ಲಿ ಘಟಿಸಿರುವ ವ್ಯಂಜನ ಸಂಧಿಯನ್ನೋ ಲೋಪಸಂಧಿಯನ್ನೂ ಗಮನಿಸಿ ಇಂದಮ್/ಇಂದೆ ಎಂದೇ ಓದಬೇಕು, ಉಚ್ಚರಿಸಬೇಕು.

ಇನ್ : ತುರಗದ ವಾಹಳಿಯನ್ ಇಂದಮ್ : ಭಯದಿಂದ ಮುಳಿಸಿಂದಮ್ ಇಂದೆ : ಕುಡಿಯಳ್ಳಿಗಳಿಂದ

ಆ ದುಶ್ಯಾಸನನಿಂದನ

ಗಾದ ಪರಾಭವಮನೇನುಮನ್ . . . (ಪಂಪಭಾ, ೭-೪೯) ದುಶ್ಯಾಸವನ್-+-ಇಂದ+ಎನಗಾದ ಹೀಗೆ ಪದಚ್ಛೇದವಾಗಬೇಕು. ಪರಸ್ವರ ಎಕಾರ

ಲೋಪಸಂಧಿಯಿಂದಾಗಿ `ದುಶ್ಯಾಸನನಿಂದನಗಾದ’ ಎಂದಾಗಿದೆ.

ದೇಸಯಿನಾಂತು ವಿಳಾಸದಿಂದಿಚುಂಕಿದ ನಿಣ (ಪಂಪಭಾ, ೪-೩೫) ವಿಳಾಸದಿಂದ + ಇಸುಂಕಿದ ಹೀಗೆ ಪದಚ್ಛೇದವಾಗಬೇಕು. ಪರಸ್ಪರ ವಿಕಾರ ಲೋಪಸಂಧಿಯಿಂದಾಗಿ ‘ವಿಳಾಸದಿಂದಿಚುಂಕಿದ’ ಎಂದಾಗಿದೆ.

ಮನಸಂತಸದಿಂದಮಾಂತು … ಕರುಮಾಡಮನಾದರದಿಂದಮಜ , .

ಬೇಡಿದ ನಾಡುಗಳನವಯವದಿಂದಮಿತ್ತು . . . (ಪಂಪಭಾ, ೪-೧೦) ಇಲ್ಲಿ ಸಂತಸದಿಂದಮ್+ಆಂತು, ಆದರದಿಂದಮ್+ಏಜ್, ಅವಯವದಿಂದಮ್ +ಇತ್ತು ಎಂದು ಬಿಡಿಸುವುದಾಗಬೇಕು.

ಎ ಪ್ರತ್ಯಯ ಸಹ ತೃತೀಯೆಯಲ್ಲಿ ಉಪಯೋಗವಾಗುವುದು ವಿರಳವಾಗಿ ಉಂಟು. ಇದು ಆಕಾರಾಂತ ನಫ್ ಪ್ರಕೃತಿಗಳಲ್ಲಿ ಸಾಮಾನ್ಯ (ದಕಾರಾಗಮದೊಂದಿಗೆ) : ಕ್ರಮದಿಂದ ಕ್ರಮದೆ; ನಯದೆ, ಭಯದೆ. ವಿರಳವಾಗಿ ಇಕಾರಾಂತದಲ್ಲಿ ಕೂಡ:ಅಜ್ಜಿಯಿಂದೆ-

ಅಯ.

ಚತುರ್ಥಿವಿಭಕ್ತಿ

ಈ ವಿಭಕ್ತಿಗೆಗೆ, ಕೆಳಕ್ಕೆ ಎಂಬುವು ಪ್ರತ್ಯಯಗಳು, ಪೂರ್ವೋಕ್ತ ವಿಭಕ್ತಿಸೂತ್ರ ಅಸಮಗ್ರ ವೆಂಬುದು ಸ್ಪಷ್ಟ.

ಅಕಾರಾಂತ ಪು ಪ್ರಕೃತಿಗಳಿಗೆ, ಅಕಾರಾಂತವಲ್ಲದ ಉಳಿದ ಸ್ವರಾಂತ ವ್ಯಂಜನಾಂತ ಪ್ರಕೃತಿಗಳಿಗೆ (ಅವು ಯಾವುದೇ ಲಿಂಗ ವಚನದಲ್ಲಿರಲಿ) ಗೆ ಸೇರುತ್ತದೆ.

ಅರಸಂಗೆ, ಆತಂಗೆ; ಕವಿಗೆ, ಆಕೆಗೆ, ತನುಗೆ; ನಿನಗೆ, ಕಿವಿಗಳ ಮರುಳೆ, ಆರ್ಗ ನೆಗಳಿಗೆ

ಸಾಮಾನ್ಯವಾಗಿ ನವ್ ಪ್ರಕೃತಿಗಳಲ್ಲಿ ಡ > ಬಿ, ಏ > ರ ಆದೇಶ ಘಟಿಸುವಾಗ ಕೆ

ಬರುತ್ತದೆ.

ಕಾಡು+ಗೆ = ಕಾಯ್ಕ, ಕೋಡು+ಗೆ = ಕೋಟ್ಯ, ನಾಡು+ಗೆ = ನಾಟ್ಸ್; ಏತಡ್ಕ = ಏತರ್ಕೆ. ಡಕಾರಾಂತಗಳನ್ನು ಹಾಗೆಯೇ ಉಳಿಸಿಕೊಳ್ಳುವುದಾದರೆ, ಕಾಡಿಂಗೆ, ನಾಡಿಂಗೆ ಹೀಗೆ ಇನಾಗಮ ಸಹಿತವಾಗಿ ರೂಪಗಳು ಸಿದ್ಧವಾಗುತ್ತವೆ.

ಆಕಾರಾಂತ ನಟ್‌ಪ್ರಕೃತಿಗಳಿಗೆ ಅಂತ್ಯ ಮ್/ನ್ ಲುಪ್ತವಾಗಿ ಕೆ / ಕ್ಕೆ ಸೇರುತ್ತದೆ. ಬನಕೆ / ಬನಕ್ಕೆ, ಪೊಲಕೆ / ಪೊಲಕ್ಕೆ ನೆಲಕೆ / ನೆಲಕ್ಕೆ, ಜಸಕ್ಕೆ | ಜಸಕ್ಕೆ; ರಥಕ್ಕೆ, ದಾನಕ್ಕೆ, ದಿವಸಕ್ಕೆ

ನವ್ ಪ್ರಕೃತಿಗಳಲ್ಲಿಯೇ ಸರ್ವನಾಮಶಬ್ದಗಳ ವಿಷಯದಲ್ಲಿ ಅಜಾಗಮವನ್ನು ಒಳಕೊಂಡು ರೂಪಗಳು ಸಿದ್ಧವಾಗುತ್ತವೆ.

ಅದು+ಕೆ = ಅದರ್ಕೆ, ಇದು+ಕೆ = ಇದರ್ಕೆ, ಆವುದು + ತೆ = ಆವುದರ್ಕೆ, ಇವನ್ನು ಅದಕ್ಕೆ, ಇದಕ್ಕೆ, ಆವುದಕ್ಕೆ ಎಂದು ಬಳಸುವಂತಿಲ್ಲ. ಆದರೆ ಏನ್ > ಏತತ್ > ಏತರ್ಕ. ಏತಕೆ, ಏಕೆ ಈ ಬೆಳೆವಣಿಗೆಗೆ ಪ್ರಯೋಗಗಳಿವೆ. ಆದರೆ ಇಂಥವು ತೀರ ವಿರಳ.

ಪಂಚಮೀ ವಿಭಕ್ತಿ

ವಿಭಕ್ತಿಸೂತ್ರ ಅತ್ ಎಂದು ಈ ವಿಭಕ್ತಿಯನ್ನು ಗುರುತಿಸಿದ್ದರೂ ಇದು ತೃಪ್ತಿಕರವಲ್ಲ. ಪ್ರಕೃತಿಗೆ ದಿಗ್ವಾಚಕ ಅಥವಾ ಸ್ಥಾನವಾಚಕವಾದ ಅತ್ತ ಎಂಬುದು ಸೇರಿ, ಬಳಿಕ ಅನಾಗಮ ದೊಂದಿಗೆ ತೃತೀಯಾಪ್ರತ್ಯಯವಾದ ಇನ್/ಇಂದ/ಇಂದಮ್ ಹತ್ತಬೇಕಾಗುತ್ತದೆ.

ನಂಟರ್+ಅ+ಅಣ್+ಇನ್ = ನಂಟರತ್ತಣಿನ್, ಕೆ+ಅ+ಅ + ಇಂದ = ಕೆಯತ್ತಣಿಂದೆ ಇ

ನೇರವಾಗಿ ಪ್ರಕೃತಿಗೆ ತೃತೀಯಾಪ್ರತ್ಯಯವೇ ಹತ್ತಿ ಅಪಾದಾನದ ಅರ್ಥವನ್ನು ತರುವುದು ಕೂಡ ಸಾಧ್ಯವಿದೆ.

ಅಭ್ರದತ್ತಣಿನ್-ಅಧ್ರದಿನ್

*ಆಲಿವರಳುಮಿಂದ್ರಗೋಪಮುಮ್ ಸೂಸಿದುವಭ್ರದಿನ್’ ,

“ತಿಳಿಗೊಳದಿಂದ ಪಾಣಿದುವು ಹಂಸಕುಳಮ್’ (ಶಮದ, ೧೨೬-೩,೪) ‘ಕೃಷ್ಣನತ್ತಣಿನ್ ಪಿರಿಯನ್ ಬಲಭದ್ರನ್’ ಎಂಬುದನ್ನು `ಕೃಷ್ಣನಿನ್ ಪಿರಿಯನ್ ಬಲಭದ್ರನ್’ ಎಂದು ಕೂಡ ಹೇಳಬಹುದು. ಕೃಷ್ಣನಿಗಿಂತ ಬಲಭದ್ರನು ಹಿರಿಯನು ಎಂಬುದು ಇಲ್ಲಿ ಆಶಯ.

ಅತ್ತಣಿನ್ ಎಂಬುದೆ ಒಂದು ಸ್ವತಂತ್ರವಾದ ಶಬ್ದವಾಗಿರುವಾಗ (ಅ+ಅನ್+ಇನ್= ಅತ್ತಣಿನ್) ನಂಟರತ್ತಣಿನ್ ಎಂಬುದು ನಂಟರ + ಅತ್ತಣಿನ್ ಎಂದೂ ಕೆಯತ್ತಣಿನ್ ಎಂಬುದು ಕೆಯ+ಅತ್ತಣಿನ್ ಎಂದೂ ಸಿದ್ಧವಾಗಿರಬಾರದೇಕೆ? ಹೀಗಿರುವುದರಿಂದ, ಪಂಚಮಿಯ ಅಪಾದಾನದ ಅರ್ಥವನ್ನು ತೃತೀಯಾವಿಭಕ್ತಿಯ ಪ್ರತ್ಯಯಗಳೇ ತರುತ್ತವೆ ಎಂದು ತಿಳಿಯುವುದು ಸೂಕ್ತವಾದ್ದು.

ಷಷ್ಠೀ ವಿಭಕ್ತಿ

  • ಕ್ರಿಯಾಪದದೊಂದಿಗೆ ನೇರವಾದ ಸಂಬಂಧವನ್ನು ಹೊಂದಿರದೆ, ಎರಡು ನಾಮಪದಗಳ ನಡುವೆ ಸಂಬಂಧಸೂಚನೆಗಾಗಿ ಬಳಸುವ ವಿಶಿಷ್ಟವಾದ ಪ್ರತ್ಯಯ (ಅ)

ಆನೆಯ ಘಟೆ, ಪೂವಿನಸಳ್, ತೋಳ ಬಂದಿ, ನೊಸಲ ಕಣ್ಣ ದೇವನ್ ಪ್ರಾಚೀನ ಕಾವ್ಯಗಳಲ್ಲಿ ಆಕಾರದ ದೀರ್ಘರೂಪವೂ (ಆ) ವಿರಳವಾಗಿ ಉಂಟು. ಒಂದೇ ಕಾವ್ಯದಲ್ಲಿ ಹಸ್ತ ಮತ್ತು ದೀರ್ಘ ರೂಪಗಳರಡಕ್ಕೂ ಪ್ರಯೋಗಗಳನ್ನು

೪೬

ಹಳಗನ್ನಡ ವ್ಯಾಕರಣ ಪ್ರವೇಶಿಸಿ

ಕಾಣಬಹುದು:

ನೃಪನಾ ನೃಪನಂದನನಾ | ನೃಪವಧುವರ್‌ (ಕವಿರಾ. ೨-೨೧) ಕನ್ನಿಕೆಯಾ ಕಾಲದೂಳ್ (ಪಂಪಭಾ. ೧-೧೧೮ ವ) ಪನ್ನತರ ನಡುವನುಡಿಯ | ಲೈನ್ನ ಭುಜಾರ್ಗಳಮ ಸಾಲುಮ್ (ಪಂಪಭಾ, ೬-೨೬) ಗಾಣರ ಗೇಯಮ್ ಓಪಳ ಸೋಂಕು (ಪಂಪಭಾ. ೧೫-೪)

ವರ್ಣೆಯಂಬ ತೊಳಿಯಾ ತಡಿಯೊಲ್ (ವಡ್ಡಾರಾ. ೧೨೮-೧೩) ಷಷ್ಠಿ ವಿಭಕ್ತಿಯ ಪ್ರಯೋಗದ ವಿಷಯದಲ್ಲಿ ಕೆಲವು ವಿಶೇಷಗಳಿವೆ. ೧. ಅವಧಾರಣೆಗಾಗಿ ಎನ್ನುವಂತೆ ಎರಡು ಸಲ ಷಷ್ಟಿಯ ಪ್ರತ್ಯಯ ಹತ್ತಬಹುದು ನಿನ್ನ ರೂಪು-ನಿನ್ನಯ ರೂಪು (ಗದಾಯು, ೫-೨೪); ತನ್ನ ವಧು-ತನ್ನಯ ವಧು (ಶಮದ ೬೫-೧೧)

೨. ವಕಾರವೋ ಇವಾಗಮವೋ ಬಾರದೆ ಪ್ರಕೃತಿಗೇ ಷಷ್ಠಿಯ ಪ್ರತ್ಯಯ ಸೇರುವುದು ತೇರ ಮುರಾರಿಯ ಮಚ್ಚಿನ - ತೇರ ಮುರಾರಿಯ ಮಚ್ಚ (ಪಂಪಭಾ. ೧೨-೮೮) : ಮೆಚ್ಚಿನ ಮಚ್ಚ.

೩. ಷಷ್ಟಿಯಲ್ಲಿ ಸಮುಚ್ಚಯದ ಉಮ್/ಅಮ್ ಹತ್ತುವುದಿಲ್ಲ.

ಸಪ್ತಮೀ ವಿಭಕ್ತಿ

ವಿಭಕ್ತಿಸೂತ್ರದಲ್ಲಿ ಸಪ್ತಮೀ ವಿಭಕ್ತಿಯ ಪ್ರತ್ಯಯವಾಗಿ ಒಳ್’ ಎಂಬುದನ್ನು ಹೇಳದೆ: ಅಲ್ಲಿ ಎಂಬುದನ್ನು ವಿವರಣಭಾಗದಲ್ಲಿ ಗುರುತಿಸಿದೆ. ಆದರೆ ಉಳ್/ಉಳ್ಳ ಎಂಬುವ ಸಪ್ತಮಿಯ ಪ್ರತ್ಯಯಗಳೇ. ಅಲ್ಲದೆ ಅಕಾರಾಂತ ದಿಗ್ವಾಚಕಗಳ ಮೇಲೆ ಅಲ್ ಎಂಬುದು ಉಕಾರಾಂತ ದಿಗ್ಯಾಚಕಗಳ ಮೇಲೆ ಎ ಎಂಬುದೂ ಸಪ್ತಮಿಯ ಪ್ರತ್ಯಯಗಳಾಗಿಯ ಬರುತ್ತವೆ. ಅಲ್ ದಿಗ್ವಾಚಕಗಳಿಗೆ ಮಾತ್ರವೇ ಅಲ್ಲದೆ ಇತರ ಪ್ರಕೃತಿಗಳಿಗೂ ಕೆಲವೊಮ್ಮೆ ಬರಬಹುದು,

ಒಳ್‌ : ಕೊಳದೊಳ್‌, ಬನದೊಳ್; ಅಲ್ಲಿ: ಸಭೆಯಲ್ಲಿ, ಬನದಲ್ಲಿ. ಉಲ್ : ಬೆಟ್ಟದುಳ್, ಮಾಸದುಳ್, ಧರಣಿಯುಳ್ (ಹಳೆಯ ಶಾಸನಗಳಲ್ಲಿ)

ಅಕಾರಾಂತ ದಿಗ್ಯಾಚಕಗಳಲ್ಲಿ ಅಲ್ : ಪಡುವ-ಪಡುವಲ್, ಮೂಡ-ಮೂಡಲ್) ತೆಂಕ-ತಂಕಲ್, ಬಡಗ-ಬಡಗಲ್,

ಸ್ಥಾನವಾಚಕಗಳಲ್ಲಿ ಅಲ್‌: ಅತ್ಯ-ಅತ್ಯಲ್, ಇತ್ಯ-ಇತ್ತಲ್, ಉತ್ತ-ಉತ್ಕಲ್, ಎತ್ತಿ ಎತ್ತಲ್.

ಉಕಾರಾಂತ ಸ್ಥಾನವಾಚಕಗಳಲ್ಲಿ ಎ: ಒಳಗು-ಒಳಗೆ, ಪೊಅಗು-ಪೊಂಗೆ, ರ್ಪಗು ಪೆಂಗೆ, ಮೇಗು-ಮಗೆ, ಕೆಂಗು-ಕೇಟಗೆ; ಮುಂತು-ಮುಂತೆ, ಪಿಂತು-ಪಿಂತೆ, ಮುಂದು

ಮುಂದ, ಪಿಂದು-ಪಿಂದೆ.

ಎ ಪ್ರತ್ಯಯ ದಿಗ್ಯಾಚಕವಲ್ಲದಲ್ಲಿಯೂ ಹತ್ತಬಹುದು: ಮನದೊಳ್-ಮನದಲ್ಲಿ ಮನದಲ್-ಮನದ.

ಜಾಣ್ಮದಾಗಬೇಡ ಮನದಲ್ ನಿಮಗಯ್ಯ ವಿಧಾತೃಯೋಗದಿನ್ ಕುರುಡಾದೊಡೇನೊ ಕುರುಡಾಗಳ ವೇಲ್ಪುದೆ ನಿಮ್ಮ ಬುದ್ದಿಯುಮ್ || (ಪಂಪಭಾ, ೨-೯೧) ನಡುಗನ್ನಡದ ಮನದಿ, ಬನದಿ ಇ ರೂಪಗಳು ಮನದ ಬನದ ಎಂಬ ಹಳೆಯ ರೂಪಗಳ ಬೆಳವಣಿಗೆಯ ಇರಬಹುದು,

ಒಂದು ವಿಶೇಷವನ್ನು ಅವಶ್ಯವಾಗಿ ಗಮನಿಸಬೇಕು. ಅದಂದರೆ, ಸಮುಚ್ಚಯದ ಪ್ರತ್ಯಯಗಳಾದ ಉಮ್ ಮತ್ತು ಅಮ್ ಸಪ್ತಮೀವಿಭಕ್ತಿಯ ಸಂದರ್ಭದಲ್ಲಿ ಹೇಗೆ ಹತ್ತುತ್ತವೆ ಎನ್ನುವುದು.

೧. ಒಳ ಪ್ರತ್ಯಯ ಪ್ರಕೃತಿಗೆ ಸೇರಿದಾಗ ಅಮ್ ಮಾತ್ರ ಸೇರುತ್ತದೆ; ಉಮ್ ಪ್ರತ್ಯಯ ವನ್ನು ಸೇರಿಸಬಾರದು.

ಚಲದೊಳಮ್, ಆಚಾರದೊಳಮ್, ಕಲಿತನದೂಳಮ್ ಎನ್ನುವುದು ವಿಧಿ; ಚಲದೊಳು ಆಚಾರದೊಳುಮ್ ಕಲಿತನದೊಳುಮ್ ಎಂದು ಹೇಳಬಾರದು.

೨. ಅಲ್ಲಿ ಪ್ರತ್ಯಯ ಪ್ರಕೃತಿಗೆ ಸೇರಿದಾಗ ಉಮ್ ಮಾತ್ರ ಸೇರುತ್ತದೆ. ಮನದಲ್ಲಿಯುಮ್, ಬನದಲ್ಲಿಯುಮ್ ಸ್ಥಾನವಾಚಕಗಳಲ್ಲಿ ಅತ್ತ ಇತ್ತ ಉತ್ತ ಎತ್ತ ಶಬ್ದಗಳು ಪ್ರಥಮೆಯ ರೂಪವೆಂದು ವ್ಯಂಜನ ಮಕಾರಾಂತವಾಗಿ (ಅತ್ತಮ್ ಇತ್ಯಮ್ ಉತ್ತಮ್ ಎತ್ತಮ್) ಆಗಲಿ ಸಪ್ತಮಿಯ ರೂಪವೆಂದು ಅಲ್ ಪ್ರತ್ಯಯಾಂತವಾಗಿ ಆಗಲಿ ಬಳಕೆಯಾಗಬಹುದಾದರೂ, ಪ್ರಕೃತಿ ರೂಪದಲ್ಲಿ ಅತ್ತ ಇತ್ತ ಉತ್ತ ಎತ್ತ ಎಂದೇ ಬಳಕೆಯಾಗಿ ಸಪ್ತಮಿಯ ಅರ್ಥವನ್ನು ತರಬಹುದು.

ಅತ್ರ ಸುರೇಶ್ವರಾವಸಥಮಿತ್ತ ಮಹೀತಳಮುತ್ತ ತನ್ನ

ದಾತ್ತ ಸಮಸ್ತಲೋಕಮದಂತಿರ , , , (ಪಂಪಭಾ, ೧-೭೫) ಹೀಗೆಯೇ ಅಲ್ಲಿ ಇಲ್ಲಿ ಎಲ್ಲಿ ಎಂಬ ಸ್ಥಾನವಾಚಕಗಳಿಗೂ ಪ್ರತ್ಯೇಕವಾಗಿ ಪ್ರತ್ಯಯಗಳು

ಹತ್ತುವ ಅಗತ್ಯವಿಲ್ಲ.

ಸಂಬೋಧನ ವಿಭಕ್ತಿ

ಪ್ರಥಮಾವಿಭಕ್ತಿಯೇ ಅಭಿಮುಖೀಕರಣ, ಆಮಂತ್ರಣ ಮೊದಲಾದ ಅರ್ಥಗಳ ಸಲುವಾಗಿ ವಿಶೇಷವಾದ ಕೆಲವು ಪ್ರತ್ಯಯಗಳ ಸಹಾಯದಿಂದ ವ್ಯವಹಾರಗೊಂಡರೆ, ಅದು ಸಂಬೋಧನ ವಿಭಕ್ತಿಯ ಪ್ರಯೋಗವೆಂದು ತಿಳಿಯಬೇಕು. ಪ್ರಕೃತಿಗಳ ಹಸ

೪೮

ದೀರ್ಘ ಕಾಕುಗಳು ಉದ್ದಿಷ್ಟಾರ್ಥವನ್ನು ತರಬಲ್ಲುವು.

ಅಕಾರಾಂತ ಪ್ರಕೃತಿಗಳಲ್ಲಿ (ಅ) |

ದೇವ ಬಿನ್ನಪಮ್, ಕೇಳ ಮಾಧವ ಅಕಾರಾಂತವಲ್ಲದ ಪ್ರಕೃತಿಗಳಲ್ಲಿ (ಎ/ಏ)

ಕೋಕಿಲನಾದೆಯೆ, ಮನುವೇ, ಹಂಸಯಾನೆಯೇ, ಎಳಮಾವೇ

ಹಾ ಸ್ವಯಂಪ್ರಭೆ ಎಂದು ಮೂರ್ಛವೂಪುದುಮಾಗಳ್ (ಆದಿಪು. ೪-೧೬)

ತುಂಬಿ, ತುಂಬಿಯ, ತುಂಬಿ ಏ.ವ.ದಲ್ಲಿ ಲಿಂಗಸೂಚಕ ಪ್ರತ್ಯಯಗಳ ಮೇಲೆ (ಎ/ಏ)

ಚಂದ್ರನೇ, ನಲ್ಗಳೆ, ನಂದನಮೇ ಪ್ರತ್ಯಯಗಳ ವಿಕಲ್ಪ ಪ್ರಯೋಗಗಳಿಗೆ (ಪ್ರಸ್ವ ದೀರ್ಘ ಕಾಕು)

ಅಭಿಮನ್ಯು, ಅಭಿಮನ್ಯುವೆ, ಅಭಿಮನ್ನೂ ಬಹುವಚನ ಪ್ರಕೃತಿಗಳಲ್ಲಿ (ಎ-ಏ/ಇರ-ಇರಾ)

ಭಟ್ಟರ, ದೇವರೇ, ನಂಟರಿರ, ನರಿರ; ಬುಧರ್ಕಳಿರ, ಪಣ್ಣಳಿರ, ದೇವ

ಯರಿರ; ದೇವಿಯರಿರಾ, ದಸಗಳಿರ ಪ್ರಕೃತಿಗಳು ಸ್ವರಾಂತವೇ ವ್ಯಂಜನಾಂತವೇ, ಅವು ಏಕವಚನದಲ್ಲಿ ವಯೇ ಬಹುವಚನ ದಲ್ಲಿವೆಯೇ ಎಂಬುದನ್ನು ಅನುಸರಿಸಿ ಪ್ರತ್ಯಯಗಳ ಸ್ವರೂಪವೂ ಸೇರುವ ವಿಧಾನವೂ ವ್ಯತ್ಯಾಸಗಳಿಗೆ ಅವಕಾಶ ಮಾಡಿಕೊಡುತ್ತವೆ. ಉದಾ.

ಕಳಹಂಸಾಲಸಯಾನಯನ್ ಮೃಗಮದಾಮೋದಾಸ್ಯವಿಶ್ವಾಸಿಯನ್ ತಳಿರೇ ತಾವರಯೇ ಮದಾಳಿಕುಲಮೇ ಕರ್ನಝಿಲೇ ಮತ್ತಕೋಕಿಳಮೇ . . . (ಪಂಪರಾ. ೯-? ತಳಿರ್, ಮದಾಳಿಕುಲಮ್, ಕರ್ನಝಿಲ್, ಮತ್ತಕೋಕಿಳಮ್ ಇವು ವ್ಯಂಜನಾಂತಿ ಗಳು; ಇವಕ್ಕೆ ಸಂಬೋಧನೆಯ ಏ ಪ್ರತ್ಯಯ ಸೇರಿದ್ದರೆ, ತಾವರೆ ಸ್ವರಾಂತವಾದ್ದರಿಂದ ಯಕಾರಾಗಮ ಸಂಧಿರೂಪವಿದೆ.

ವಿಭಕ್ತಿಪಲ್ಲಟ

ವಾಕ್ಯರಚನೆಯಲ್ಲಿ ಕಾರಕಗಳ ಅರ್ಥಕ್ಕೆ ಅನುಗುಣವಾಗಿ ಆಯಾ ವಿಭಕ್ತಿ ಪ್ರತ್ಯಯಗಳು ನಾಮಪದಗಳನ್ನು ರೂಪಿಸುವುದು ಸ್ವಾಭಾವಿಕವಾದುದು. ಆದರೆ ಲೋಕರೂಢಿಯ ಮಾತಿನ ವೈಚಿತ್ರ್ಯ ಕಾರಣವಾಗಿ ಈ ವಿಭಕ್ತಿಪ್ರತ್ಯಯಗಳು ಒಂದು ಮಿತಿಯಲ್ಲಿ ವಿನಿಮಯಗೊಳ್ಳು ವುವು. ಈ ವಿನಿಮಯವನ್ನು ವಿಭಕ್ತಿಪಲ್ಲಟವೆಂದು ಕರೆಯಲಾಗುವುದು. ಶಬ್ದಮಣಿ ದರ್ಪಣಕಾರನು ವಿಭಕ್ತಿಗಳು ‘ಎಂತುಮ್ ಪಲ್ಲಟಿಸುಗುಮ್ ಯಥೇಷ್ಟಮ್’ ಎಂದು ಹೇಳುವುದು (ಸೂ.೧೪೫) ಸರಿಯಾದ ಅಭಿಪ್ರಾಯವಲ್ಲ; ಆತನೇ ಮುಂದೆ ಹೇಳುವಂತೆ

ರ್H

‘ನುಡಿವ ಬಿನ್ನಣದಿನ್ ಕಾರಕಮನಿಯತಾರ್ಥಮಂದಣಿವುದು’ ಎಂದು ಹೇಳುವುದನ್ನು (ಸೂ.೧೪೭) ವಸ್ತುಸ್ಥಿತಿಗೆ ಹತ್ತಿರವೆಂದು ತಿಳಿಯಬಹುದು.

ಪ್ರಥಮಗೆ ಷಷ್ಠಿ

ನಿಶ್ಚಂಕೆಯಿನ್ ನೃಪನ್ ಪೇಟೆ - ನಿಶ್ಚಂಕೆಯಿನ್ ನೃಪನ ಪೇಟೆ

ಪ್ರಥಮೆಗೆ ದ್ವಿತೀಯ

ನುಣ್ಣುಳ್ಳನ್ - ನುಣ್ಣನುಳ್ಳನ್ ತೃತೀಯೆಗೆ ಸಪ್ತಮಿ

ಕೊಡಲಿಯಿನ್ ಕಡಿವನ್ - ಕೊಡಲಿಯೊಳ್ ಕಡಿನ್

ಚತುರ್ಥಿಗೆ ದ್ವಿತೀಯ

ಪೊನ್ನನ್ ಬಡ್ಡಿಗೆ ಕೊಟ್ಟನ್ - ಪೊನ್ನನ್ ಬಡ್ಡಿಯನ್ ಕೊಟ್ಟನ್ (ದ್ವಿಕರ್ಮಕ

ಪ್ರಯೋಗ) ಸಾಮಾನ್ಯವಾಗಿ (i) ಪ್ರ.ವಿ.ಗೆ ದ್ವಿ.ವಿ., ಷ.ವಿ.ಗಳೊಂದಿಗೆ (ii) ದ್ವಿ.ವಿ.ಗೆ, ತೃ.ವಿ. ಚ.ವಿ. ಪಂ.ವಿ. ಷ.ವಿ.ಗಳೊಂದಿಗೆ (iii) ತ.ವಿ.ಗೆ ದ್ವಿ.ವಿ. ಪಂ.ವಿ. ಸ.ವಿ.ಗಳೊಂದಿಗೆ (iv) ಚ.ವಿ.ಗೆ ದ್ವಿ.ವಿ. ಷ.ವಿ.ಗಳೊಂದಿಗೆ ಪಲ್ಲಟಗಳುಂಟು.

ಮುನ್ನಿನ ಕಬ್ಬಮನಲ್ಲಮಕ್ಕಿ (ಪಂಪಭಾ. ೧೪-೫೯) ಅದು ತಡವುದಧರ್ಮಮ್ (ಆದಿಪು. ೫-೭೯) ರಾಜಭವನಮನ್ ಪೂಣಮಟ್ಟು (ಆದಿಪು -೧೪ ವ.)

ಪಂಕರುಹವಕ್ಕೆ ಮಸುತನನ್ ನುಡಿದಳ್ (ಪಂಪಭಾ, ೬-೯೭) ಇಲ್ಲಿ ಕ್ರಮವಾಗಿ ಎಲ್ಲಮನ್, ಅದನ್, ರಾಜಭವನದಿನ್, ಮತ್ತ್ವಸುತಂಗ ಹೀಗಿರುವುದು ಸ್ವಾಭಾವಿಕ, ಸಹಜಕಾರಕ ಪ್ರಯೋಗ.

ತಂಕನಾಡ ಮಯನೇನ್ ಮನಮ್ ಬರ್ಕುಮೇ (ಪಂಪಭಾ, ೪-೩೧) ಇಂಥ ಉದಾ.ಗಳನ್ನು ವಿಭಕ್ತಿಪಲ್ಲಟದವು ಎಂದು ತಿಳಿಯಲು ಶಕ್ಯವಿಲ್ಲ. ತೆಂಕ ನಾಡನ್-ತೆಂಕನಾಡ ಹೀಗೆ ಅಂತದ ಅನುನಾಸಿಕ ಸವೆದ ರೂಪವಾಗಿ ಅದನ್ನು ತಿಳಿಯ ಬೇಕು.

ನಾಮಪ್ರಕೃತಿಗೆ ವಿಭಕ್ತಿಪ್ರತ್ಯಯ ಸೇರುವಾಗ ನಡುವ ಬರುವ ಆಗಮಗಳು (ಔಪವಿಭಕ್ತಿಗಳು)

ದಕಾರಾಗಮ

ಆಕಾರಾಂತ ನತ್ ನಾಮಪ್ರಕೃತಿಗಳಿಗೆ ಪ್ರಥಮ, ದ್ವಿತೀಯ ಮತ್ತು ಚತುರ್ಥಿ ಪ್ರತ್ಯಯ ಇನ್ನು ಬಿಟ್ಟು ಉಳಿದ ಪ್ರತ್ಯಯಗಳು ಸೇರುವಾಗ ನಡುವೆ ದಕಾರದ ಆಗಮವಾಗುತ್ತದೆ.೬

ಪ್ರಕೃತಿಯ ಅಂತ್ಯ ನ್/ಮ್ ಲುಪ್ತವಾಗುತ್ತದೆ.

ಕೊಲನ್ : ಕೊಳದಿನ್, ಕೊಳದಿಂದ, ಕೊಳದಿಂದ (ತೃ.), ಕೊಳದ (ಷ), ಕೊಳದೋಳ್, ಕೊಳದುಳ್, ಕೊಳದಲ್ಲಿ (ಸ.)

ಮನಮ್: ಮನದಿನ್, ಮನದಿಂದ, ಮನದಿಂದಮ್ (ತೃ.), ಮನದ (ಷ) ಮನದೊಳ್‌, ಮನದುಳ್, ಮನದಲ್ಲಿ, ಮನದಲ್, ಮನದ (ಸ.)

ಎಕಾರವೆಂಬ ಸಪ್ತಮೀ ವಿಭಕ್ತಿಯ ಬಳಕೆಗೆ ಮಿತಿಯಿದೆ. ಹೀಗೆಯೇ ತಂತ್ರ, ಮಂತ್ರ, ಯಂತ್ರ, ಕೃಚೂ ತಪ, ತೀರ, ದುಗ್ಗ, ಸಾಗರ, ವೃಕ್ಷ’ ಸರ್ಪ, ಗ್ರಹ, ಅಚೋದ ಮೊದಲಾದ ಸಮಸಂಸ್ಕೃತಶಬ್ದಗಳಲ್ಲಿ ಕೂಡ.

ಹೀಗೆಯೇ ಅ, ಬ, ಕುತ್ಯ ಬಳ ತಲ್ಲ, ತಂಬಟ, ಚಾಗ, ದೆವಸ, ಕಳಸ ಲೆಪ್ಪ, ಹಲ್ಲಣ ಮೊದಲಾದ ದೇಶ ಮತ್ತು ತದ್ಭವ ಶಬ್ದಗಳಲ್ಲಿ ಕೂಡ

ಅನ್ಯ ಸ್ವರಾಂತ (ವಿಶೇಷವಾಗಿ ಇ/ಎ) ನಪ್‌ ನಾಮಪ್ರಕೃತಿಗಳಿಗೆ ಯ/ವ ಆಗಮಗಳು ವ್ಯಂಜನಾಂತ ನಫ್ ನಾಮ ಪ್ರಕೃತಿಗಿಳಗೆ ಅವ್ಯವಹಿತ ವ್ಯಂಜನಸಂಧಿ / ದ್ವಿತ್ವ ಸಂಧಿತ ಆಗುತ್ತವೆ.

ಗಿಳಿಯಿನ್, ಗಿಳಿಯಿಂದ, ಗಿಳಿಯಿಂದಮ್ (3.); ಗಿಳಿಯ (ಷ,); ಗಿಳಿಯೊಳ ’ ಗಿಳಿಯುಳ್, ಗಿಳಿಯಲ್ಲಿ (ಸ.); ಪೊಗಯಿನ್, ಪೊಗಯ, ಪೊಗಿಯೊಳ್ ಕೋಲಿನ್, ಕೋಲಿಂದ ಕೋಲಿಂದಮ್, ಕೋಲೊಳ್; ಕಲ್ಲಿನ್, ಕಲ್ಲಿಂದ, ಕಲೀಂದ ಕಲ್ಲೋಳ್,

ಇನಾಗಮ

ಉಊ ಋಗೂ ಓಔ ಇವುಗಳಲ್ಲೊಂದು ಅಂತ್ಯವಾಗಿರುವ ಪುಂ… ನಾಮಪ್ರಕೃತಿಗಳಿಗೆ ತೃತೀಯ ಪಂಚಮಿ ಷಷಿ ಸಪ್ತಮಿ ವಿಭಕ್ತಿಪ್ರತ್ಯಯಗಳಲ್ಲೂ , ಹತ್ತುವಾಗ ನಡುವೆ ಇನ್ ಆಗಮವಾಗುತ್ತದೆ. ಅ ಇ ಈ ಸ್ವರಗಳು ಅಂತ್ಯದಲ್ಲಿ ನವ್ ಪ್ರಕೃತಿಗಳಿಗೆ ಇನಾಗಮವಿಲ್ಲ.

ತಳಿರ್ವಾಸು - ತಳಿರ್ವಾಸಿನಿಂದ, ತಳಿರ್ವಾಸಿನಿಂದಮ್ ಪೂ - ಪೂವಿನ, ಪೂವಿನೊಳ್ ಪಿತೃ - ಪಿತೃವಿನ, ಪಿತೃವಿನೊಳ್ ಋ - ಹೂವಿನ

ಗೌ - ಗೋವಿನ ಉಕಾರಾಂತ ಪ್ರಕೃತಿಗಳಿಗೆ ವಕಾರವೂ ಇನಾಗಮವೂ ವಿಕಲ್ಪವಾಗಿ ಬರುತ್ತವೆ.

ಮಡು - ಮಡುವಿನ್ - ಮಡುವಿನಿನ್; ಮಡುವ-ಮಡುವಿನ,

ಗುರು - ಗುರುವಿನ್ - ಗುರುವಿನಿನ್; ಗುರುವ-ಗುರುವಿನ ಷಷ್ಟಿಯಲ್ಲಿ ಪೂರ್ವಸ್ವರಲೋಪ; ನಾಡು-ನಾಡ, ನಾಡಿನ ಕಾಡು-ಕಾಡ, ಕಾಡಿನ ತೃತೀಯೆಯಲ್ಲಿ ಸಹ ಪೂರ್ವಸ್ವರ ಲೋಪ.

ಮಾತು - ಮಾತಿನ್, ಮಾತಿನಿನ್

ಕಡುಪು - ಕಡುಪಿನ್, ಕಡುಪಿನಿನ್ ವ್ಯಂಜನಾಂತ ಪ್ರಕೃತಿಗಳಲ್ಲಿ ಇನಾಗಮಕ್ಕೆ ಅವಕಾಶವಿರುವುದಿಲ್ಲ, ಆದರೂ ಪೂರ್ವಕವಿ ಪ್ರಯೋಗಗಳಲ್ಲಿ ಅದನ್ನು ವಿರಳವಾಗಿ ಎದುರುಗೊಳ್ಳುವುದು ಸಾಧ್ಯವಿದೆ.

ಇವನ್ನು ವಿಶೇಷ ಎಂಬ ವಿಭಾಗಗದಲ್ಲಿ ಮುಂದೆ ಗಮನಿಸಬಹುದು. ವಿಶೇಷ : (i) ನಿನ್ನ, ಮೊನ್ನ, ನಾಳ, ಮತ್ತೆ, ಪೊಟ್ಯಡೆ, ಬfಕ್ಕೆ ಇವು ಎಕಾರಾಂತ ವಾಗಿಯೂ ಇನಾಗಮ : ನಿನ್ನಿನ, ಮೊನ್ನಿನ, ನಾಳಿನ, ಮತ್ತಿನ, ಪೊಟಡಿನ, ಬಚಿಕ್ಕಿನ

(11) ಸೂಚ್ ವ್ಯಂಜನಾಂತ ಶಬ್ದ; ಆದರೆ ಪ್ರಕೃತಿ ಸೂಟು ಎಂದು ಗ್ರಾಹ್ಯವಾಗಿ ಇನಾಗಮದೊಂದಿಗೆ ಸೂಚಿಂಗ ಎಂಬ ಪ್ರಯೋಗ ಕಾಣುತ್ತದೆ. (ಗದಾಯು, ೭-೫೩)

(iii) ಆಗಳ್ ಈಗಳ್ ವ್ಯಂಜನಾಂತ ಶಬ್ದಗಳಲ್ಲಿ ವಿಕಲ್ಪವಿಲ್ಲ; ಇನಾಗಮ ನಿತ್ಯ: ಆಗಳಿನ, ಈಗಳಿನ

ಹೆಚ್ಚಿನ ಕಾಲವಾಚಕಗಳು ಸ್ವರಾಂತಗಳಾಗಿರುವುದರಿಂದ ಇನಾಗಮಕ್ಕೆ ಅವಕಾಶವಾಗಿರ ಬಹುದು. ಆದರೆ ಕಾಲವಾಚಕಗಳಾಗಿರದ ವ್ಯಂಜನಾಂತ ಶಬ್ದಗಳಲ್ಲಿ ಇನಾಗಮ ಬರ ಬಾರದು: ಉದಾ. ಬೆರಲಿನ, ಕೊರಲಿನ, ತೋಳಿನ, ಬಾಳಿನ ಇಂಥ ರೂಪಗಳು ಪ್ರಯೋಗ ಸಾಧುವಲ್ಲ.

ಅಜಾಗಮ

ನಪುಂಸಕಲಿಂಗದ ಉಕಾರಾಂತಗಳಾದ ಸರ್ವನಾಮ ಗುಣವಾಚಕ ಸಂಖ್ಯಾವಾಚಕ ಪರಿಮಾಣವಾಚಕ ಮತ್ತು ಕೃನ್ನಾಮಗಳಿಗೆ ತೃತೀಯಾದಿ ವಿಭಕ್ತಿ ಪ್ರತ್ಯಯಗಳನ್ನು ಹಚ್ಚುವ ಸಂದರ್ಭ ಬಂದಾಗ್ಗ, ಪ್ರಕೃತಿ ಪ್ರತ್ಯಯಗಳ ನಡುವೆ ಅಟ್ ಎಂಬ ಆಗಮ ಬರುತ್ತದೆ. ಈ ಅಚ್ ಆಗಮ ನಪುಂಸಕಲಿಂಗದ ಪ್ರಕೃತಿಗಳ ಸಂಬಂಧದಲ್ಲಿ ಮಾತ್ರ ಬರುತ್ತದೆ; ಇದಕ್ಕೂ ಪುಂ ಸ್ತ್ರೀ ಪ್ರಕೃತಿಗಳಿಗೆ ಸೇರುವ ಅರ್ ಎಂಬ ಬ.ವ. ಪ್ರತ್ಯಯಕ್ಕೂ ಸಂಬಂಧ ಇಲ್ಲ. ಇದರ ಬಗೆಗೆ ಎಚ್ಚರವಿರಬೇಕು, ವಿಶೇಷವಾಗಿ ಸಂಧಿಯಾದ ಶಬ್ದಗಳಲ್ಲಿ,

ಸರ್ವನಾಮ : ಅದು+ಅಚ್+ಅಲ್ಲಿ = ಅದು, ಪದವು + ಅಟ್ + ಒಳ್ = ಪವಳ್, ಅವುದು+ಅಜ್+ಒಳ್=ಆವುದಳ್, ಎಲ್ಲವು+ಅಟ್+ಇನ್= ಎಲ್ಲವನ್ನೂ

ಗುಣವಾಚಕ: ಕಿರಿದು+ಅಜ್+ಒ=

ಕಿದಳ್, ಪಿರಿದು+ಟ್+ಒಲ್ =

5

ಪಿರಿದ

ಸಂಖ್ಯಾವಾಚಕ : ಎರಡು+ಅಚ್+ಇನ್ = ಎರಡನ್, ನಾಲ್ಕು+ಅಯ್+ಒಲ್ = ನಾಲ್ಕಆಳ್, ಪತ್ತು+ಅಚ್+ಇನ್=ಪತ್ತನ್; ಒಂದು+ಅಚ್+ಕೆ= ಒಂದರ್ಕೆ

ಪರಿಮಾಣವಾಚಕ : ಅನಿತು+ಅನ್+ಇನ್=ಅನಿತನ್, ಇನಿತು + ಅ + ಇಂದ = ಇನಿತಚಿಂದ, ಅನಿತು + ಅ + ಒಳ = ಅನಿತಳ್

ಕೃನ್ನಾಮ : ನೋಡಿದುದು+ಅಲ್+ಇನ್ = ನೋಡಿದುದನ್, ಬಂದುದು+ಅಚ್+ ಇಂದ = ಬಂದುದಂದ, ಪೋದುದು+ಅಲ್+ಒಳ್ = ಪೋದುದ ; ಪೇಟ್ಟುದು +ಅಟ್+ಒಲ್ = ಪೇಟ್ಟುದಳ್, ನೋಬುದು+ಅಚ್+ಒಲ್= ನೋಟ್ಟುದ

ಸಾಮಾನ್ಯ ನಾಮಪ್ರಕೃತಿಗಳಲ್ಲಿ ಇನಾಗಮವಲ್ಲದೆ, ಅಜಾಗಮ ಸಾಮಾನ್ಯವಾಗಿ ಇಲ್ಲ. ಆದರೆ ಗಂಟು, ಮೇಲುದು ಇಂತಹ ನಾಮಪ್ರಕೃತಿಗಳಲ್ಲಿ ತೀರ ವಿರಳಲಿ" ಅಜಾಗಮವುಂಟು, ಗಂಟು+ಅಚ್+ಒಳ್ = ಗಂಟಲ್, ಮೇಲುದು+ಅಜ್+ರ ಮೇಲುದು.

ನಡುಗನ್ನಡದ ಕಾಲದಲ್ಲಿ ಶಕಟರೇಫ ಶಬ್ದಗಳು ಸಾಮಾನ್ಯರೇಫ ಶಬ್ದಗಳ ಬರಹವನ್ನು ಹೊಕ್ಕು ರೂಪಸಾಮ್ಯವೇರ್ಪಟ್ಟು ಅರ್ಥದಲ್ಲಿ ಗೊಂದಲ ಹುಟ್ಟುವು. ಉಂಟು. ಆಗ ಪುಂ ಸ್ತ್ರೀ ಲಿಂಗಗಳ ಸಂಬಂಧದಲ್ಲಿ ಅವರ’, ನಪುಂಸಕ ಲಿಂ ಸಂಬಂಧದಲ್ಲಿ ‘ಅವು’ ಹೀಗೆ ಬರುವುದನ್ನು ವಿಧಿಗೆ ಅನುಗುಣವಾಗಿ ತಿಳಿದು, ಸಂರ್ದ ವಶದಿಂದ ಅರ್ಥವನ್ನು ವಿಶದಪಡಿಸಿಕೊಳ್ಳಬೇಕು.

ಅಣಾಗಮ

ದಿಗ್ವಾಚಕ ಅಥವಾ ಸ್ನಾನವಾಚಕಗಳಿಗೆ ಸೀಮಿತವಾದ್ದು ಅಣ್ ಪ್ರತ್ಯಯ. ಅವು ಪ್ರಥಮಾ ದ್ವಿತೀಯಾ ವಿಭಕ್ತಿಗಳಲ್ಲಿ ಪ್ರಕೃತಿರೂಪವೇ ಕಾರಕವಾಗಿರುತ್ತದೆ. ಆದರೆ ಆ ಯಾದಿ ವಿಭಕ್ತಿಗಳು ಸೇರುವಾಗ ಅಣ್ ತಪ್ಪದೆ ಬರುತ್ತದೆ.

ದೇಶ ಶಬ್ದಗಳಾದ ಮೂಡ ಬಡಗ ತಂಕ ಪಡುವ ಇವು ದಿಗ್ವಾಚಕಗಳು: ಅತ್ಯ ಉತ್ತ ಎತ್ತ ಎಂಬವೂ ಮುಂತು ಪಿಂತು ಒಳಗು ಪೊಆಗು ಮೇರು ಪಂಗು ಕೆಳಗು ಎಂಬವೂ ಕಡೆ ನಡು ಎಂಬವೂ ಸ್ಥಳವಾಚಕಗಳು.

೧. ದಿಗ್ವಾಚಕಗಳಲ್ಲಿ ತೃತೀಯ ಮೊದಲಾದ ವಿಭಕ್ತಿಗಳು ಸೇರುವಾಗ ಅಣ್‌ ಆಗಮ ವಾಗುತ್ತದೆ,

ಮೂಡಣ್ಯ, ತೆಂಕಣ, ಬಡಗಣ; ಅತ್ರಣ, ಅತ್ಯಣಿ, ಎತ್ತಣಿನ್; ಮುಂದೆ ಮುಂತ; ಒಳಗಣ, ಪೊಂಗಣ್, ಮೇಗಣ, ಮೇರ್ಗಣಿನ್, ಮೇಗಣೆ : ಪೆಂಗಣ ಕೆಳಗಣ

೩.

೬೩

ಪ್ರಥಮ ದ್ವಿತೀಯ ಮತ್ತು ಸಪ್ತಮಿಗಳಲ್ಲಿ ಅಲ್ ಪ್ರತ್ಯಯ ಸೇರಿದ ಮೂಡಲ್ ಪಡುವಲ್ ಮುಂತಾಗಿ ರೂಪವೊಂದೇ ನಡೆಯುತ್ತದೆ.

೨. ದಿಗ್ವಾಚಕಗಳಲ್ಲಿ ಅಣ್ ಪ್ರತ್ಯಯದಂತೆಯೇ ಅಲ್ ಪ್ರತ್ಯಯ ಸಹಜವಾಗಿ ಹತ್ತಿ ಮೂಡಲ್ ಪಡುವಲ್ ಬಡಗಲ್ ತಂಕಲ್ ಎಂದು ಆಗಿ ಪ್ರಕೃತಿಗಳಂತೆಯೇ ಅವು ವ್ಯವಹಾರಗೊಳ್ಳುತ್ತವೆ.

ಸ್ಥಳವಾಚಕಗಳಿಗೆ ಕೂಡ ಪ್ರಥಮ ದ್ವಿತೀಯ ಮತ್ತು ಸಪ್ತಮಿ ಹೊರತುಪಡಿಸಿ ಉಳಿದ ವಿಭಕ್ತಿಗಳಿಗೆ ಹಿಂದೆ ಅಣ್ ಹತ್ತುವುದು. ಆದರೆ ಅಲ್ ಎಂಬುದು ಅತ್ತ ಇತ್ತ ಉತ್ತ ಎತ್ತ ಎಂಬವುಗಳಲ್ಲಿ ಮಾತ್ರ; ಉಳಿದಂತೆ ಪಿಂತು, ಮುಂತು, ಪಂಗು, ಪೊಂಗು ಮೊದ ಲಾದ ಸ್ಥಳವಾಚಕಗಳಲ್ಲಿ ಅಲ್ ಹತ್ತುವುದಿಲ್ಲ.

೪. ಪುಂ ಸ್ತ್ರೀ ರೂಪಗಳಲ್ಲಿ ಲಿಂಗಸೂಚಕ ಪ್ರತ್ಯಯಗಳೊಂದಿಗೆ ಮೂಡಣನ್! ಮೂಡಣಬ್ ಮುಂತಾಗಿ ನಡೆಯಿರುತ್ತದೆ; ಹಾಗೆಯೇ ದಕಾರಾಗಮದ ಕೆಲದನ್ ಬಲದನ್ ಅಲ್ಲಿದನ್ ಇಲ್ಲಿದನ್ ಎಲ್ಲಿದನ್ ಎಂಬಂತಹ ರೂಪಗಳು ಬರುತ್ತವೆ. ಸ್ತ್ರೀ ರೂಪಗಳಿಗೆ ಪ್ರಚುರತೆ ಕಡಮ.

೫. ಹತ್ತಿರ ಎಂಬರ್ಥದ ಸಾರೆ ಶಬ್ದಕ್ಕೆ ಚತುರ್ಥಿಯಲ್ಲಿ ಅಣ್ ಹತ್ತಿ ಸಾರಣೆ ಎಂದೂ ಗಂಟು ಎಂಬ ಶಬ್ದಕ್ಕೆ ಪುಲ್ಲಿಂಗದಲ್ಲಿ ಗಂಟಿದನ್ ಎಂದೂ ರೂಪಗಳು ಕಾಣುವುದು ವಿಶೇಷ.

ವಿಭಕ್ತಿವ್ಯವಸ್ಥೆಯ ಕೆಲವು ವಿಶೇಷಗಳು

ಸಂಸ್ಕೃತದಲ್ಲಿ ಕರ್ಮಣಿ ಪ್ರಯೋಗ ವಾಕ್ಯರಚನೆಯಲ್ಲಿ ಸ್ವಾಭಾವಿಕವಾದ್ದು. ಹಳಗನ್ನಡ ದಲ್ಲಿ ಕೂಡ ಈ ತೆರನ ವಾಕ್ಯರಚನೆ ಸಾಮಾನ್ಯವಾಗಿ ಕಂಡುಬಂದಿದೆ. ಆಗ ಪ್ರಥಮಾವಿಭಕ್ತಿ ದಲ್ಲಿರುವ ಕರ್ತೃಪದ ತೃತೀಯಾ ವಿಭಕ್ತಿಗ, ದ್ವಿತೀಯಾ ವಿಭಕ್ತಿಯಲ್ಲಿರುವ ಕರ್ಮಪದ ಪ್ರಥಮಾ ವಿಭಕ್ತಿಗೆ ಪರಿವರ್ತನೆಗೊಂಡು ವಾಕ್ಯರಚನೆಯಿರುತ್ತದೆ. ಕರ್ತರಿ ಪ್ರಯೋಗದ ಆರ್ಇ-ಕರ್ಮ-ಕ್ರಿಯ ಈ ಆನುಪೂರ್ವಿ ಕರ್ಮಣಿ ಪ್ರಯೋಗದಲ್ಲಿ ಕರ್ಮ-ಕರ್ತೃ-ಕ್ರಿಯ ಸಂಬ ರೀತಿಯಲ್ಲಿರುತ್ತದೆ. ಆಗ ಅದಕ್ಕೆ ಅನುಕೂಲವಾಗುವಂತೆ ಕರ್ತರಿಯ ಕರ್ಮಪದ ಅಧಮಯಲ್ಲಿಯೂ ಕರ್ತೃಪದ ತೃತೀಯೆಯಲ್ಲಿಯೂ ಇರುತ್ತದೆ. ಕ್ರಿಯಾಪದದ ರಚನೆ ಆಯಾಪ್ರಕೃತಿ + ಎ / ಅಲ್ + ಪಡು + ಆಖ್ಯಾತ ಪ್ರತ್ಯಯ ಹೀಗೆ ನಿರಿಗೆಗೊಳ್ಳುತ್ತದೆ.

ಕರ್ತರಿ - ರಮಣನ್ ತರುಣಿಯನ್ ಬಯಸಿದನ್, ರರ್ಟಣಿ - ತರುಣಿ ರಮಣನಿಫ್ ಬಯಸಲ್ಪಟ್ಟಳ್ / ಬಯಸಪಟ್ಟಳ ವಡ್ಡಾರಾಧನೆಯೆಂಬ ಪ್ರಾಚೀನ ಗದ್ಯಗ್ರಂಥದ ಉಪಸರ್ಗಕೇವಲಿ ಕಥೆಗಳ ಆರಂಭದ ಟ್ರಾಕೃತ ಗಾಹೆಗಳಲ್ಲಿ ತಿನಪಡುತಿರ್ದೊನಾಗಿ, ಕಾದಲಿಸಪಡುವ, ಕೀಲಿಯ್ಯಪಟ್ಟ,

ಸೈರಿಸಪಟ್ಟವು, ಎಳೆಯಪಟ್ಟು, ತಳಿಯಪಟ್ಯೂನಾಗಿ, ಕಾದಲಿಸೆಪಡುವ, ಸೂಡಿವೊಸ ಪಟ್ಟನಂತೆ, ಉರ್ಚಪಟ್ಟನಾಗಿ, ತೀವಪಟ್ಟ, ಪೀಯೆಪಟ್ಟರಾಗಿಯುಂ, ಉರಿಪೆಪಟ್ಟು, ದಾದೊಡೆ ಎಂಬಂತಹ ಭಾಷಾಂತರಗೊಂಡ ರೂಪಗಳಿರುವುದನ್ನು ಗಮನಿಸಿದರೆ, ಹಳಗನ್ನಡದಲ್ಲಿ ಕರ್ಮಣಿಯ ಪ್ರಯೋಗ ಎಂದಿನಿಂದಲೂ ರೂಢಿಯಲ್ಲಿರುವುದೆಂದು ತಿಳಿಯಲು ಅವಕಾಶವಾಗುವುದು.

“ಈ ಕೂಲಪಡುವಾತನರಸರ ಮುಂಡಳಮನ್ ಕಾಮನ್’ ಎಂಬಂತಹ ಪಠ್ಯಭಾಗ 1 ಪ್ರಯೋಗಗಳೂ (೨೨-೫) ಇವೆ.

ಸರ್ವನಾಮಗಳ ವಿಭಕ್ತಿವ್ಯವಸ್ಥೆ

ಉತ್ತಮ ಪುರುಷ

ಆನ್/ನಾನ್ ಆಮ್/ನಾಮ್ - ಆವು/ನಾವು ಏ.ವ. ಎನ್ನನ್/ನನ್ನನ್, ಎನ್ನಿಂದ/ನನ್ನಿಂದ, ಎನಗ/ನನಗೆ, ಎನ್ನತ್ತಣಿನ್/ನನ್ನ ಣಿನ್, ಎನ್ನ/ನನ್ನ, ಎನ್ನೋಳ್/ನನ್ನೋಳ್

ಬ.ವ. ಎಮ್ಮನ್/ನಮ್ಮನ್, ಎಮ್ಮಿಂದ/ನಮ್ಮಿಂದ, ಎಮಗನಮಗ, ಎಮ್ಮತ್ತಣಿನ್! ನಮ್ಮತ್ತಣಿನ್, ಎಮ್ಮ/ನಮ್ಮ, ಎಮ್ಮೂಳ್/ನಮ್ಮೊಳ್.

ಈ ವಿಭಕ್ತಿಗತಿಯಲ್ಲಿ ನಾನ್-ನಾಮ್/ನಾವು ರೂಪಗಳ ನಡೆ ವಿರಳವಾದ್ದು, ಹಾಗು ಬ.ವ.ದ ಆವು, ಎವಗೆ ಇಂತಹ ರೂಪಗಳೂ ವಿರಳ (ವಡ್ಡಾರಾ, ೭೯-೧೯, ಪಂಚ ೯೪-೨೦; ಪಂಪಭಾ. ೧-೧೦೬)

ಆತ್ಮಾರ್ಥಕ

ತಾನ್ - ತಾಮ್/ತಾವು ಏ.ವ. ತನ್ನನ್, ತನ್ನಿಂದ, ತನಗ, ತನ್ನತ್ತಣಿನ್, ತನ್ನ, ತನ್ನೊಳ್ ಬ.ವ. ತಮ್ಮನ್, ತಮ್ಮಿಂದ, ತಮಗೆ, ತಮ್ಮಣಿನ್, ತಮ್ಮ, ತಮ್ಮೊಳ್

ಈ ವಿಭಕ್ತಿ ಗತಿಯಲ್ಲಿ ತಾವು ತಮಗೆ ಎಂಬ ರೂಪಗಳ ಬಳಕೆ ವಿರಳವಾಗಿ ಉಂಟು (ತಾವು: ಪಂಪಭಾ. ೨-೯೭, ೯-೪೮, ೧೧-೧೨೬; ವಡ್ಡಾರಾ ೭೯-೨೯; ಗದಾಯ’ ೪೭: ತವಗ: ಸಮಷ, ೨-೪ - ಕಾದಂಪೂ, ೨೬೬)

ಮಧ್ಯಮ ಪುರುಷ

ನೀನ್ - ನೀಮ್/ನೀವು ಏ.ವ. ನಿನ್ನನ್ ನಿನ್ನಿನ್ ನಿನಗೆ ನಿನ್ನತ್ತಣಿನ್ ನಿನ್ನ ನಿನ್ನೊಳ್

ಬ.ವ. ನಿಮ್ಮನ್ ನಿಮ್ಮಿನ್ ನಿಮಗೆ ನಿಮ್ಮತ್ತಣಿನ್ ನಿಮ್ಮ ನಿಮ್ಮೆಲ್, ನೀಮ್ ರೂಪಕ್ಕೆ ಸ್ವಲ್ಪ ವಿರಳವಾಗಿ ಮಾತ್ರ ನೀವು ರೂಪ ಕಾಣಿಸಿಕೊಳ್ಳುತ್ತದೆ. ಉದಾ:

ಬೇಡುವೂಡ ನೀವಮ್ಮಯ್ಯನನ್ ಬೇಡಿರ (ಪಂಪಭಾ. ೧-೭೦) ನೀವಿದನೇಕಾಗ್ರಪಂಗೆಯ್ಯರ್ (ಪಂಪಭಾ. ೧-೭೮) ಕಡುಪೆಂಪಿನ ಪೊಳಗೆ ನೀವು ಮೊದಲಿಗರಾದಿರ್ (ಪಂಪಭಾ, ೬-೧೨)

ಪರಸಿರ ಪರಸಿರ ನೃಪೇಂದ್ರನನ್ ನೀವನ (

ಯ ಚ. ೧-೩೨)

ಪ್ರಥಮ ಪುರುಷ

ಅವನ್ ಅವಳ್ ಅವರ್ - ಅದು ಅವು ಏ.ವ. ಅವನನ್ ಅವನಿನ್ ಅವಂಗೆ ಅವನತ್ತಣಿನ್ ಅವನ ಅವನೊಳ್ ಏ.ವ. ಅವಳನ್ ಅವಳಿನ್ ಅವಳೆ ಅವಳತ್ತಣಿನ್ ಅವಳ ಅವಳೊಳ್ ಪುಂ.ಶ್ರೀ, ಬ.ವ. ಅವರನ್ ಅವರಿನ್ ಅವರ್ಗೆ ಅವರತ್ತಣಿನ್ ಅವರ ಅವರೂಟ್ ನಪ್. ಅದನ್ ಅದಚಿನ್ ಅದರ್ಕೆ ಅದತ್ತಣಿನ್ ಅದಟ ಅದಾಳ್ ಅವನ್ ಅವಳಿನ್ ಅವರ್ಕೆ ಅವದತ್ತಣಿನ್ ಅವಳ ಅವಳೊಳ್

ಹೀಗೆಯೇ ಇವನ್ ಇವಳ್ ಇವರ್ ಇದು ಇವು ಹಾಗೂ ಉವನ್ ಉವಳ್ ಉವರ್ ಉದು ಉವು ರೂಪಗಳಿಗೆ ಕೂಡ ನಡೆಸಬಹುದು.

ಪ್ರಶ್ನಾರ್ಥಕ ಸರ್ವನಾಮ

ಆವನ್ ಅವಳ್ ಆರ್ – ಆವುದು ಆವುವು ಏ.ವ. ಆವನನ್ ಆವನಿನ್ ಆವಂಗೆ ಆವನತ್ತಣಿನ್ ಆವನ ಆವನೂಬ್ ಏ.ವ. ಆವಳನ್ ಆವಳಿನ್ ಆವಳೆ ಆವಳತ್ತಣಿನ್ ಆವಳ ಆವಳೊಳ್ ಪುಂ., ಬ.ವ. ಆರನ್ ಆರಿನ್ ಆರ್ಗ ಆರyಣಿನ್ ಆರ ಆರೊಲ್ ನಪ್, ಆವುದನ್ ಆವುದನ್ ಆವುದರ್ಕೆ ಆವುದತ್ತನಿನ್ ಆವುದು ಆವುದ | ಆಳ್ ಆವುವನ್ ಆವುವನ್ ಆವುವರ್ಕೆ ಅವುವದಿತ್ತಣಿನ್ ಆವುವು

ಆವುವಳ್ (ನಪ್, ಬ.ವ. ರೂಪಗಳ ಬಳಕೆ ಅಷ್ಟಾಗಿ ಕಾಣಿಸದು) ಅವನ್ ಎಂಬುದಕ್ಕೆ ಅವನ್ ಎಂಬ ಆವಳ್ ಎಂಬುದಕ್ಕೆ ಅವಳ್ ಎಂಬ ಸಾಪೇಕ್ಷ ವಾಕ್ಕರೂಢಿಯು ಕ್ರಮಾಗತವಾದ್ದು (ಮಲ್ಟಿಪು. ೨-೫೬), ಆದರೆ ಆವಾವ ಎಲ್ಲ ಸಕಲ ಸಮಸ್ತ ಎಂಬ ಅರ್ಥಗಳಲ್ಲಿ ಸ್ವತಂತ್ರವಾಗಿಯೇ ಪ್ರಯೋಗವಾಗಬಹುದು (ಶಮದ. ೧-೧).

ಏನ್ ಎಂಬ ಸರ್ವನಾಮದ ವಿಶೇಷವಾದ ನಡೆ: ವಿನ್ ಎಂಬ ಸರ್ವನಾಮಕ್ಕೆ ಏ.ವ. ಬ.ವ.ಗಳಿಗೆ ಒಂದೇ ರೂಪ ತ್ರಿಲಿಂಗಕ್ಕೆ ಕೂಡ

೬೬

ಒಂದೇ ರೂಪ, ಸಪ್ಪವಿಭಕ್ತಿಗಳಲ್ಲಿ ಅದರ ನಡೆ:

ಏನ್/ಏತಜ್, ಏನ್/ಏನನ್, ಏತನ್/ಏತಂದಮ್/ಏತಂದೆ, ಏತರ್ಕ ? ಏತಕೆ?ಏಕೆ, ಏತದತ್ತಣಿನ್, ಏತು, ಏತಳ್.

ಏನ್ ಸರ್ವನಾಮದ ರೂಪ ಕಂಡೂ ಕಾಣದಂತಿರುವುದು ಏಗಯ್ಯನ್, ಏವನ್ ಇಂತಹ ವಿಶೇಷ ರೂಪಗಳಲ್ಲಿ ಇಲ್ಲಿ ಏನ್ ಎಂಬ ಪ್ರಕೃತಿಯ ಅಂತ್ಯ ನಕಾರ ಲೋಪಗೊಂಡು ಏನ್+ಗೆ+ವ+ಎನ್=ಏಗೆಯನ್ (=ಏನು ಮಾಡುವನು, ಏನು ಮಾಡಲಿ) ಎಂದೂ ಏನ್ ಪ್ರಕೃತಿಯ ಮುಂದಿನ ಗಯ್ ಕ್ರಿಯಯೂ ಲೋಪಗೊಂಡು ಏವೆನ್ (=ಏನು ಮಾಡುವೆನು, ಏನು ಮಾಡಲಿ) ಎಂದೂ ಸಂಕ್ಷಿಪ್ತ ವಾಕ್ಯಗಳೇ ಆಗಿವೆ.

ನಿನ್ನದು ಎನ್ನದು ತನ್ನದು ಎಂಬವು ನಿನತು/ನಿನತ್ತು, ಎನತು/ಎನತ್ತು, ತನತುತನತ್ತು ಎಂದು ವಿ.ವದಲ್ಲಿ ನಡೆಯುವುದು; ನಿಮ್ಮದು, ಎಮ್ಮದು, ತಮ್ಮದು ಎಂಬವು ನಿಮ್ಮ ಎಮತ್ತು, ಎಮತು/ಎಮತ್ತು ತಮತುತಮತ್ತು ಎಂದು ಬ.ವ.ದಲ್ಲಿ ನಡೆಯುವುದು ದ್ವಿತ್ವ ರೂಪಗಳೇ ಹೆಚ್ಚು ಪ್ರಚುರವಾದವು.

ನಿನತು ಚಲಮ್, ಎನತು ಶೌರಮ್, ತನತು ಮಹಾದೈತ್ಯಮ್ ಮುನಿಸಿದು ನಿನತ್ತು, ಸೈರಣೆಯನತ್ತು, ಕೆಳದಿಗೆ ತನತ್ತು ಸಂದಿಸುವೆಸಕಮ್ ೧, ಸಾವ ನಿಮತಿಚಯನ (ಪಂಪಭಾ. ೧-೩೧) | ನಿಮತ್ತು ಸವಿಗೂಟಮ್ (ರಸರ, ೪-೧೭೪) ೨. ನಿಮುತಯ್ಯರು ತಮ್ಮುತಿರ್ವರುಮ್ (ಅಜಪು. ೧-೩೪) ೩. ತಮುತೈರ್ (ಅನಂಪು. ೪-೭೬)

ಎಲ್ಲ/ಎಲ್ಲಮ್

ಎಲ್ಲನ್/ಟ್ ಎಲ್ಗರ್ ಎಲ್ಲದು ಎಲ್ಲ ವಎಲ್ಲಮ್ ಸಂಸ್ಕೃತದಲ್ಲಿಯ ಸರ್ವ ಶಬ್ಬ ಹಾಗೆ ಏ.ವ. ಬ.ವ.ಗಳ ಅರ್ಥವನ್ನು ಎಲ್ಲ ಎಂಬ ಒಂದೇ ಸರ್ವನಾಮ ಕೊಡಬಹುದು’ ಆದರೂ ವಿವಿಧ ಲಿಂಗ ವಚನಗಳಿಗೆ ಅನುಸಾರವಾಗಿ ಕೂಡ ಅದು ನಡೆಯಬಹುದು ವುದಕ್ಕೆ ಪ್ರಯೋಗಗಳಿವೆ. ಒಂದೊಂದನ್ನೂ ಒಬ್ಬೊಬ್ಬರನ್ನೂ, ಪ್ರತಿಯೊಂದನ್ನೂ ಸಮಗ್ರ ವನ್ನೂ ಎಂಬ ಅರ್ಥದಲ್ಲಿ ಏ.ವ.ದ ಪ್ರಯೋಗ ಅದಕ್ಕೆ ಸಾಧ್ಯ, ಇದು ಸಕಲಾರ್ಥ ಈ

ಪಱತು/ಪಱದು

ಸಂಸ್ಕೃತದಲ್ಲಿಯ ‘ಅನ್ನ’ ಶಬ್ದದ ಹಾಗ; ಬೇರೆಯಾದುದು ಎಂದರ್ಥ. ಪೆಲಿವ್ಳ್ ಪಜಿರ್ ಪುತು/ಪುದು ಪೆದವು ಮಧ್ಯಮ ಪುರುಷ ಮತ್ತು ಉತ್ತಮ ಪುರುಷಗಳಲ್ಲಿ ಕೂಡ ಈ ಅನ್ಯಾರ್ಥಕ ಸರ್ವನಾ ವನ್ನು ನಡೆಸಬಹುದು.

೬೭

ಕೆಲವು ಸಂಖ್ಯಾವಾಚಕಗಳು

ಏಕವಚನದ ಒರ್‌ಮೂಲವಾಗಿ ಒರ್ವನ್/ಒರ್ಬನ್, ಒರ್ವಲ್/ಒರ್ಬಲ್ ಮತ್ತು ಬಹುವಚನದ ರೂಪಗಳಾಗಿರುವ ಇರ್ವರ್ (<ಇ), ಮೂವರ್ (<ಮೂಳು), ನಾಲ್ವರ್‌ (<ನಾಲ್ಕು), ಅಯ್ಯರ್‌ (<ಅಯ್ಯು), ಅಬಿವರ್‌ (<ಆದು), ಎಟ್ಟರ್‌ (<ಐಟು), ಎಣ್ಣರ್ (<ಎಂಟು), ಒಂಬದಿಂಬರ್ (<ಒಂಬತ್ತು), ಪದಿಂಬರ್ (<ಪತ್ತು) ಪುಂ ಸ್ತ್ರೀ ರೂಪಗಳು.

ಒ‌ಗೆ ವ್ಯಂಜನಾದಿ ಶಬ್ದಗಳು ಪರದಲ್ಲಿ ಬಂದಾಗ ಒರ್ ಎಂದೇ ಪೂರ್ವಪದವಿರು ತದೆ (ಒರ್ದೆಸ, ಒರ್ವಟ್ ಇ.), ವಿರಳವಾಗಿ ಒರ್‌>ಒನ್ ಎಂದಾಗುವುದುಂಟು: (ಒಂದೆವಸ: ಗದಾಯು, ೬-೨೫, ಒಂದೆಸೆ: ಕಬ್ಬಿಕಾ, ೨೮೮)

ಸ್ವರಾದಿ ಶಬ್ದಗಳು ಪರದಲ್ಲಿ ಬಂದಾಗ ಓರ್‌ ಎಂದು ಪೂರ್ವಪದವಿರುತ್ತದೆ (ಓರೊಂದು, ಓರೊರ್ವರ್), ಹಾಗೆಯೇ ಇರ್‌ಗೆ ವ್ಯಂಜನಾದಿ ಶಬ್ದಗಳು ಪರದಲ್ಲಿ ಬಂದಾಗ ಇ‌ ಎಂದೇ ಪೂರ್ವಪದವಿರುತ್ತದೆ (ಇರ್ಕಂಡುಗ, ಇರ್ವತ್ತು); ಸ್ವರಾದಿ ಶಬ್ದಗಳು ಪರದಲ್ಲಿ ಬಂದಾಗ ಈರ್‌ ಎಂದು ಪೂರ್ವಪದವಿರುತ್ತದೆ (ಈರಯ್ದು, ಈರಾಬು, ಈಜಲು) ಈ ಸಂಬಂಧದಲ್ಲಿ ಅಭ್ಯಾಸಿಗಳಲ್ಲಿ ಗೊಂದಲವಿರಬಾರದು.

ಹೊಸಗನ್ನಡದಲ್ಲಿ ನೀವೊಬ್ಬರು, ಅವರೊಬ್ಬರು, ತಾವೊಬ್ಬರು ಇರುವ ಹಾಗೆ ಹಳಗನ್ನಡದಲ್ಲಿ ನೀವೊರ್ಬರ್, ಅವರೊರ್ಬರ್, ತಾಮೊರ್ಬರ್ ಎಂದಿರುವುದಿಲ್ಲ; ನೀನೊರ್ವನ್/ನೀನೊರ್ಬನ್, ಅವನೊರ್ವನ್/ಅವನೊರ್ಬನ್, ತಾನೋರ್ವನ್? ತಾನೂರ್ಬನ್ ಎಂಬುದಾಗಿ ಏ.ವ.ದ ವ್ಯವಹಾರ ಮಾತ್ರ ಸಾಧ್ಯ. ಆದರೆ ಇರ್ವರ್, ಆಯ್ಕರ್, ಅಜುವರ್‌, ಎ‌, ಎಣ್ಮರ್ ಇವುಗಳಿಗೆ ನಿಮ್ಮುತಿರ್ವರ್, ಎಮುತ ಯ್ಯುರ್, ತಮ್ಮು ತಬುವರ್ ಮುಂತಾಗಿ ರೂಪಗಳೇರ್ಪಡಬಹುದು.

ಒಂಬತ್ತು ಪತ್ತು ಈ ಸಂಖ್ಯೆಗಳ ರೂಪಾಂತರಗಳಲ್ಲಿ ಕೆಲವು ವಿಶೇಷಗಳಿವೆ. ಒಂಬತ್ತು ಮಂದಿಯನ್ನು ಕುರಿತಾಗ ಒಂಬದಿಂಬರ್, ತೊಂಬತ್ತು ಮಂದಿಯನ್ನು ಕುರಿತಾಗ ತೊಂಬದಿಂಬರ್ ಎಂದಾಗುವುದು ಒಂಬತು, ತೂಮ್ ಎಂಬ ಪೂರ್ವಪದಗಳ ರಚನೆಗೆ ಎನ್ನಬೇಕು. ನೂಲು, ಸಾಸಿರ ಪದಗಳಿದ್ದಾಗ ಒಂಬಯ್ ಎಂಬುದು ಪೂರ್ವಪದವಾಗು ಆದೆ (ಒಂಬಯ್ಯಲು, ಒಂಬಯಾಸಿರ), ತೊಂಬಯ್ ಎಂಬುದು ಪೂರ್ವಪದವಾದರೆ ತೊಂಬತ್ತೊಂದು, ತೊಂಬತ್ತೆರಡು ಮುಂತಾಗಿ ನಡೆದು ತೊಂಬಯ್ಯಾಸಿರದವರಗೆ ಲೆಕ್ಕ ನಡೆಯಬಹುದು, ಇದು ಪ್ರಯೋಗಗಳ ಶಕ್ಯತೆಯಿದ್ದಂತೆ.

ಸ್ವರ ಪರವಾದರೆ, ನೂಜು ಸಂಖ್ಯೆ ನೂಂದು ನೂರಡು ಎಂವಾಗಿ ನಡೆದರೆ, ವ್ಯಂಜನ ಪದದಲ್ಲಿ ಬಂದಾಗ ನೂಮೂರು, ನೂಲಿನಾಲ್ಕು ಎಂದು ಅಕಾರಾಂತಗೊಂಡು ನೋಡಿ ಎಂಬುದು ಪೂರ್ವಪದವಾಗಿರುತ್ತದೆ; ಸಾಸಿರ ಪರದಲ್ಲಿ ಬಂದಾಗ ನೂರ್ಛಾಸಿರ

೬೮

ಎಂಬ ರೂಪವಾಗುತ್ತದೆ.

ಸಾಸಿರ ಪದದ ರಚನೆಯಲ್ಲಿ ವಿಶೇಷವುಂಟು, ನಾಲ್ಕಾಸಿರ, ಅಯ್ಯಾಸಿರ, ಆಡುಸಾಸಿರ ಹೀಗೆ ಉತ್ತರಪದ ಅಲ್ಪಪ್ರಾಣದಲ್ಲಿಯೇ ನಿಂತರೆ, ಇರ್ಛಾಸಿರ, ಪನ್ನಿರ್ಛಾಸಿರ (೧೨ ಸಾಸಿರ) ಪಯಿಂಛಾಸಿರ (೧೦ ಸಾವಿರ) ಪದಿನಾಸಿರ, ನೂರ್ಛಾಸಿರ (ಒಂದು ಲಕ್ಷ) ಹೀಗೆ ಉತ್ತರ ಪದದಲ್ಲಿ ಮಹಾಪ್ರಾಣದ ಪರಿವರ್ತನೆಯಿರುತ್ತದೆ. ನೂದಿ ನೂರ್ಛಾಸಿರ ಎಂಬ ವಿಸ್ತರಣೆಯೂ ಉಂಟು. ಮೂರ್ಛಾಸಿರ ಒಂದು ಲಕ್ಷವನ್ನು ಹೇಳಿದರೆ, ನೋಡಿ ನೂರ್ಛಾಸಿರ ಒಂದು ಕೋಟಿಯನ್ನು ಹೇಳುತ್ತದೆ. (ಶಾಂತಿಪು. ೧೦-೨)

ಪತ್ತು ಶಬ್ದಕ್ಕೆ ರೂಪಾಂತರಗಳು ಹೆಚ್ಚು. ಪತ್ತು, ಪನ್, ಪದಿನ್, ಪಯಿನ್ ರೂಪಗಳು ಕೂಡಿ ಪತ್ತೊಂಬತ್ತು, ಪನ್ನೊಂದು, ಪದಿನೆಂಟು, ಪಯಿಂಭಾಸಿರ ಹೀಗೆ ರೂಪಗಳುಂಟು ಪದಿರ್‌ ಮೂಲವಾಗಿ ಪದಿರ್ಮಡಿ (=ಹತ್ತರಷ್ಟು) ಎಂಬಂತಹ ರೂಪಗಳೂ ಇವೆ.

ಮ ಮತ್ತು ಮಡಿ ಸಂಖ್ಯಾವಾಚಕಗಳಿಗೆ ಸೇರುವಾಗ ಅರ್ಥವ್ಯತ್ಯಾಸ ಗಮನಾರ್ಹ ಪಲರ್ಮ, ಸಾಸಿರ್ಮ, ನೂರ್ಮ ಇಂಥವು ಸಲ/ಬಾರಿ ಎಂಬರ್ಥವನ್ನೂ ಅಳವಡಿಸಿ ಐವಡಿ, ನೂರ್ಮಡಿ, ಪದಿರ್ಮಡಿ, ಸಾಸಿರ್ಮಡಿ ಇಂಥವು ಆರರಷ್ಟು, ಐದರಷ್ಟು ಮುಂತಾಗಿ ಪ್ರಮಾಣದ ಹೆಚ್ಚಳವನ್ನೂ ಹೇಳುತ್ತವೆ.

ಏಟ್ಟಿತ್ತು, ಏಡಲ್, ಏಟೆ, ಏರೆ ಇಂತಹ ರೂಪಗಳು ವ್ಯಾಕರಣ ಸಮ್ಮತವಾದವು (ಶಮದ, ೨೦೦-೪); ಆದರೆ ರೂಢಿಯಲ್ಲಿ ಎತ್ತು/ಎರ್ಷ ತ್ತು’ ಎಕ್ಕೋಟೆ ಎಂದಾಗಿರುವುದುಂಟು. ಕಿಸುಕಾಡಿತ್ತುಮನ್ (ಸೌಇಇ. Xi; ೪೧-೬, ೯೬೯) ಎರ್ಪತೂಂದು ಚತುರುಗಂಬರಂ (ಎಇ, xiii, ೪೨-೧೫, ೧೧೧೨), ಎಕ್ಕೋಟ ತಪೋಧನರ್ಗ (ಎಇ, xiii, ೧೭೨-೫೩, ೧೦೫೫) ಇಂತಹ ಉದಾಹರಣೆಗಳನ್ನು ನೋಡಬಹುದು.

ಸಂಖ್ಯಾವಾಚಕಗಳ ಸಮಾಸಗಳಲ್ಲಿ ಸಾಮಾನ್ಯವಾಗಿ ಮಹಾಪ್ರಾಣಗಳು ಬರುವುದಿಲ್ಲ ಆದರೆ ಕೆಲವು ಪ್ರಾಚೀನ ಶಾಸನಗಳಲ್ಲಿಯೂ ಮುದ್ರಿತಗಳಾದ ಕಾವ್ಯಗಳ ಪರಿಷ್ಕರ ಗಳಲ್ಲಿಯೂ ಮಹಾಪ್ರಾಣಗಳು ಬಂದಿರುವುದುಂಟು. ಇವು ಲಿಪಿಕಾರ ಲೇಖ್ಯಗಳ ಕಾಂE ವಾಗಿಯೋ ಸಂಪಾದಕದ ಗ್ರಹಿಕ ಕಾರಣವಾಗಿಯೂ ಬಂದಿರುವುದು ಸಾಧ್ಯ. ಇವರ ವ್ಯಾಕರಣಸಮ್ಮತಿಯಿಲ್ಲ. ಆದರೆ ಇರ್ಛಾಸಿರ, ಎಣ್ಯಾಸಿರ, ಮೂರ್ಛಾಸಿರ ಎಂಬಂತು ಕಡೆ ಮಾತ್ರ ಮಹಾಪ್ರಾಣಗಳಿಗೆ ವ್ಯಾಕರಣಸಮ್ಮತಿಯುಂಟು; ಪ್ರಚುರವಾಗಿ ಕಾಣ ಪ್ರಯೋಗಗಳೂ ಉಂಟು.

ಗುಣವಾಚಕಗಳಲ್ಲಿ ವಿಭಕ್ತಿವ್ಯವಸ್ಥೆ

ಗುಣವಾಚಕಗಳು ತುಕಾರಾಂತ, ದುಕಾರಾಂತ ಹೀಗೆ ಎರಡು ರೀತಿಗಳಲ್ಲಿರುತ್ತವೆ

೬೯

ಇವನ್ನು ನಫ್ ರೂಪದ ನಾಮಪದ/ಪ್ರಾತಿಪದಿಕಗಳಾಗಿಯೇ ತಿಳಿಯಬಹುದು, ತು ದು ಪ್ರತ್ಯಯಗಳನ್ನು ತೆಗೆದು ಅವುಗಳ ಪ್ರಕೃತಿಗಳನ್ನು ಕಂಡುಕೊಳ್ಳುವುದು ಸಾಧ್ಯ.

ಒಳ್ಳೆತು, ಕೂರಿತು, ತಣ್ಣಿತು, ತೆಳ್ಳಿತು, ನೇರಿತು, ಬೆಟ್ಟಿತು, ಮೆಲ್ಲಿತು ಇವುಗಳಲ್ಲಿ ಕೆಲವು ಒಳ್ಳಿತ್ತು, ಬಲ್ಲಿತ್ತು, ಬೆಟ್ಟಿತ್ತು, ಮತ್ತು ಹೀಗೆ ದ್ವಿತ್ವರೂಪಗಳಲ್ಲಿ ಕೂಡ ವ್ಯವಹಾರಗೊಳ್ಳುತ್ತವೆ. ‘ಬಲ್ಲಿ ಆ ಕೋಡು ಕೂರಿತದನಂತಿಂತುಂತನಲ್ಪರ್ಕುಮ’ (ಆದಿಪು ೧-೨೫) ಇಂತಹ ಉದಾಹರಣೆಗಳನ್ನು ಗಮನಿಸಬಹುದು.

ಒಟ್ ಕೂರ್‌ ತಣ್ ತಳ್ ನೇರ್ ಬಿಡು ಮಲ್ ಇವನ್ನು ಪ್ರಕೃತಿಗಳೆಂದು ಒಳುಡಿ, ಕೊರಸಿ, ತಣ್ಣೆಳಲ್, ತೆಳ್ಸಿರ್, ನೇರ್ಗಿಯ,ಬಿಜುಗಾಳಿ, ಮಾತು ಇಂಥ ಸಮಾಸ ಪದಗಳ ಮೂಲಕ ಸುಲಭವಾಗಿ ಗ್ರಹಿಸಬಹುದು. ಸೂಕ್ತ ಭಾಷಿಕ ವ್ಯತ್ಯಾಸಗಳೊಂದಿಗೆ ಒಳ್ಳೆದನ್, ಒಳ್ಳಿದಳ್, ನೇರಿದರ್ ಮುಂತಾಗಿ ಬೇರೆ ಬೇರೆ ವಿಭಕ್ತಿಗತಿಯಲ್ಲಿ ಪುಂ ಸ್ತ್ರೀ ವಾಚಕಗಳನ್ನು ನಡೆಸಲೂ ಬಹುದು.

ಅಸಿದು ಬಿಸಿದು ನಿಡಿದು ಕಡಿದು ಎಳದು ಪದು ಪೊಸದು ಕರಿದು ಕಿಡ್ದು ಇನಿದು ಬಳಿದು ಹೀಗೆ ಮುಕಾರಾಂತಗಳಾಗಿರಬಹುದು; ಇವನ್ನು ವಿಭಕ್ತಿಗತಿಯಲ್ಲಿ ನಡಸಲೂ ಸಾಧ್ಯವಿದೆ. - ಆಸಿದು ಶ್ರೇಣಿಯ ಈ ದುಕಾರಾಂತಗಳನ್ನು ಅಸಿ ಬಿಸಿ ನಿಡು ಕಡು ಎಳ ಪಟ ಪೊಸ ಈ ಕಿಟ್ ಇನಿ ಎಂಬ ಮೂಲರೂಪಗಳಲಿ ಟು ಸಮಾಸಗಳನ್ನು ರೂಪಿಸಬಹುದು.

ಪುರಿ ಸ್ತ್ರೀ ವಾಚಕಗಳಲ್ಲಿ ಸಂದರ್ಭವಶದಿಂದ ಕೆಲಕೆಲವು ರೂಪಗಳು ಮಾತ್ರವೇ ನಡೆಯುತ್ತವೆ. ಇನಿಯನ್-ಇನಿಯಲ್, ಎಳೆಯನ್-ಎಳೆಯಲ್, ಪಣಿಯನ್

ಯಕ್, ನಿಡಿಯನ್ನಿ ಡಿಯಲ್ ಕರಿಯನ್-ಕರಿಯಲ್ ಹೀಗೆ ಕೆಲವು ನಡೆದರ, ಪೊಸಂಬನ್-ಪೂಸಂಬಳ್, ಬಚಬನ್-

ಬಬಲ್ ಹೀಗೆ ಕೆಲವು ನಡೆಯುತ್ತವೆ. ಇರಲಂತೀ ಮಾದ್ರಿಪುತ್ರರ್ ಬಲಬರವರ್ಗಳೇಗಯ್ಯಪರ್‌ , , , (ಗದಾಯು, ೭-೪೨) ಎಂಬಂತಹ ಉದಾಹರಣೆಗಳನ್ನು ಗಮನಿಸಬಹುದು.

ಸಮುಚ್ಚಯದ ವಿಚಾರ

ಮುತ್ತಮ್, ಮೇಣ್ ಈ ಎರಡು ಅವ್ಯಯಗಳೂ ಅಮ್ ಉಮ್ ಈ ಎರಡು ಪ್ರತ್ಯಯ ಗಳೂ ಸಮುಚ್ಚಯದ ಸಲುವಾಗಿ ಬಳಕೆಯಾಗುತ್ತವೆ.

ಮತ್ತಮ್ ಎಂಬುದು ಮತ, ಮನ, ಮಯುಮ್ ಈ ರೂಪಗಳಲ್ಲಿ ಬಳಿಕ, ಅಲ್ಲದೆ, ಮುಂದೆ, ಮತು, ಬೇರೆಯಾದ ಎಂಬ ಕೆಲವು ಅರ್ಥಚ್ಛಾಯಗಳಲ್ಲಿ ಬಳಕೆಯಾಗು ಇದೆ. ಮೇಣ್ ಶಬ್ದಕ್ಕೆ ಮತ್ತು ಆ ಬಳಿಕ, ಅಥವಾ, ಇಲ್ಲಿಂದ ಮುಂದೆ ಈ ಕೆಲವು ಅರ್ಥದ ಛಾಯಗಳಿವೆ. ಮೇಣ್ ಎಂಬ ಅವ್ಯಯ ಅಥವಾ ಎಂಬ ಅರ್ಥಚ್ಛಾಯೆಯಲ್ಲಿ೭t

ಎರಡು ಬಾರಿ ಕಂಡುಬರುವುದುಂಟು:

`ಓಸ ಮೇಣ್ ಮುನಿ ಮೇಣ್

(ಪಂಪಭಾ, ೬-೨೬) “ನಿಲಿಸುವೊಡೆ ನಿನ್ನ ಪುರುಷನ್ | ನಿಲಿಸುಗ ಮೇಣ್ ನಿನ್ನ ಪುತ್ರರುಳೊಡವರ್‌ ಮೇಣ್ | ನಿಲಿಸುಗೆ’

(ಅರ್ಧನೇ. ೧೯೨) ಈಗ ಅಮ್ ಮತ್ತು ಉಮ್‌ಗಳ ವಿಚಾರ ನೋಡೋಣ. ಇವುಗಳಲ್ಲಿ ಉಮ್ ದ್ವಿತೀಯ ವಿಭಕ್ತಿಯ ಹಿಂದೆ ಪ್ರಕೃತಿಗೆ ಸೇರುವುದು ವಿಶೇಷ. ಷಷ್ಠಿ ವಿಭಕ್ತಿಗೆ ಅಮ್ ಆಗಲಿ ಉಮ್ ಆಗಲಿ ಹತ್ತುವುದಿಲ್ಲ.

ಉಮ್ ಪ್ರತ್ಯಯ

ಪ್ರ.ವಿ. ನರನುಮ್ ನರನಂದನನುಮ್

ಗುರುವಮ್ ಗುರುಸುತನುಮಾರ್ಯ ಭೂರಿಶ್ರವನುಮ್ || (ಗದಾಯು.ಟೀಗೆ?

ದ್ವಿ.ವಿ. ಅವರುಮನಂತಕನೊಯ್ಯನ ಸವಿನೋಟ್ಟುದುಮ್ (ಆದಿಪು. ೩-೩೫)

ಇಲಿ ಅವರ್‌+ಉ +ಅನ್ = ಅವರುಮನ್, ಹೀಗೆ ಪ್ರಕೃತಿ ಮತ್ತು ಪ್ರತ್ಯಯಗಳ ನಡುವೆ ಸಮುಚ್ಚಯದ ಪ್ರತ್ಯಯ ಬಂದಿದೆ. ಇದೇ ಕ್ರಮ.

ತೃ.ವಿ. ಕಾಲಿಂದಯುಮ್ ಕೆಮ್ಮಿಂದೆಯುಮ್ ಘಟ್ಟಿಸಿದನ್ (ಶಮದ, ೧೩೩-೪) | ಇನ್, ಇಂದಮ್ ಎಂಬ ತೃತೀಯೆಗಳ ಮೇಲೆ ಉಮ್ ಹತ್ತುವುದಿಲ್ಲ.

ಚ.ವಿ. ಅಮ್ ಉಮ್ ಎರಡರಲ್ಲಿ ಯಾವುದನ್ನಾದರೂ ಪರಾಯವಾಗಿ ಈ ಬಹುದು. ಪುಂ. ಪ್ರಕೃತಿಯಲ್ಲಿ :

(i) ದ್ರೋಣಂಗಮ್ ನಿನಗಮ್ ಬಿ

ಲ್ಯಾಣಿಕೆಯದು ಸಕ್ಕಸಮನ… (ಶಮದ, ೧೩೩-೪) (11) ವಂಚಿಸುವುದವಂಗೆಯು ನಿನಗೆಯುಮ್ ಸಹಜಮ್ (ಶಮದ, ೧೩೩-೬) (ii) ನವ್ ಪ್ರಕೃತಿಯಲ್ಲಿ

ಆತಂಗಮಾಕೆಗಮ್ ಎ | ಖ್ಯಾತಶಯ ಪುಟ್ಟಿದನ್ ಕುಲಕ್ಕಮ್ ಚಲಶಮ್

ಭೂತಳದೊಳಾರ್ಗಮಧಿಕನ್… (ಕಾವ್ಯಾವ. ೧೬) ಪಂ.ವಿ. ಚಾದಿಯತ್ತಣಿಂದೆಯುಮ್ ಕೇದಗೆಯತ್ತಣಿಂದೆಯುಮ್ ಕಂಪು ಬಂದುದು : * * *

ಸವಿ, ಒಳ ಪ್ರತ್ಯಯ ಸೇರಿದ ನಾಮವಾಚಕಗಳಿಗೆ ಅಮ್ ಮಾತ್ರ ಸೇರುವುದು ಕ್ರಮ; ಉಮ್ ಸೇರಕೂಡದು.

(ಶಮದ, ೧೩೩-೭)

೭೧

ಚಲದೊಳಮಾಚಾರದೂಳಮ್ ಕಲಿತನದೊಳಮ್ (ಶಮದ, ೧೩೩.೮) ಆದರೆ ಅಲ್ಲಿ ಎಂಬುದನ್ನು ಸ.ವಿ. ಪ್ರತ್ಯಯವಾಗಿ ಗಣಿಸಿದರೆ ಉಮ್ ಹತ್ತಬಹುದು.

ವಸ್ತುವಿನ ಭಾಗಮನ್ ಪೇಟ್ಟಿಲ್ಲಿಯುಮ್ ಸಂಧಿಯುಂಟು (ಶಮದ, ೭೪ ೬.) ಉಮ್ ಪ್ರತ್ಯಯದ ಪ್ರಾಚುರ ವಿಶೇಷವಾಗಿ ಗಮನಿಸಬೇಕಾದ್ದು. ಏಕೆಂದರೆ ಅದು ಸಹಾರ್ಥಕವಾಗಿ ಮಾತ್ರವಲ್ಲದೆ ಇನ್ನೂ ಬೇರೆ ಬೇರೆ ಉದ್ದೇಶಗಳಿಗೆ ಕೂಡ ಬರುವುದಕ್ಕೆ ಕಾವ್ಯಪ್ರಯೋಗಗಳಿವೆ.

೧. ಆದಾಗ್ಯೂ, ಆದರೂ ಕೂಡ ಎಂಬರ್ಥದಲ್ಲಿ:

ಮೀಂಗುಲಿಗನೆನಾಗಿಯುಮಣಮಾನ್ ಗುಣಮನೆ ಬಿಸುಟೆನಿಲ್ಲ (ಪಂಪಭಾ. ೯-೮೫) (ನಾನು ಬೆಸ್ತನಾಗಿ ಕೂಡ ಗುಣವನ್ನು ಎಷ್ಟು ಮಾತ್ರವೂ ವರ್ಜಿಸಲಿಲ್ಲ) ೨. ಆದರೂ ಎಂಬ ಅರ್ಥದಲ್ಲಿ:

ಲಲಿತಪದಮ್ ಪ್ರಸನ್ನ ಕವಿತಾಗುಣಮಿಲ್ಲದ ಪೂಣ್ಣು ಪಟ್ಟಿ ಬೆ

ಆಳ ಕೃತಿಬಂಧಮುಮ್ ಬರೆಪರ್ಕಾರ ಕೈಗಳ ಕೇಡು , . . (ಪಂಪಭಾ. ೧-೧೨) ಬೆಳ್ಳಳ ಕೃತಿಬಂಧಮುಮ್ = ದಡ್ಡರ, ಮಂದಬುದ್ದಿಯವರ ಕೃತಿಬಂಧವಾದರೂ (ಲಿಪಿಕಾರರ ಕೈಗಳ ಹಾಳು)

೩. ಕಾರದ ನಿರಂತರತೆಯಲ್ಲಿ:

ಕೇಳಿರೆ ಭವಜಳನಿಧಿಕ | ಲೋಳಾವಳಿಯೊಳಗೆ ಮೂಡಿಯುಮ್ ಮುಲುಗಿಯುಮ್ . . .

(ಅನಂಪು. ೯-೨೪)

ಅದಲ್ಲದೆಯುಮಿತ್ಕಲ್ (ಅನಂಪು. ೬-೩೮)

(ಅದಲ್ಲದಯೇ ಈ ಕಡೆ) ೪. ವಿಶೇಷತೆಯಲ್ಲಿ:

ನೀರೊಳಗಿರ್ದುಮ್ ಚಮರ್ತನುರಗಪತಾಕನ್ (ಗದಾಯು, ೭-೨೨) (ತಣ್ಣನೆಯ ನೀರಿನ ಕೊಳವಲ್ಲಿ ದೂ ದುರೂಧನನು ಬೆವತುಹೋದನು) ೫. ಅಷ್ಟರಮಟ್ಟಿಗೆ ಕೂಡ ಎಂಬರ್ಥದಲ್ಲಿ:

ಆತನುಮಣ್ಣನಿಕ್ಕಿದುಗುಳುಮನ್ ದಾಂಟದೆ (ಆರ್ಧನೇ, ೫-೫ ವ.)

(ಆತನಾದರೂ ಅಣ್ಣನು ಇಕ್ಕಿದ ಉಗುಳನ್ನು ಕೂಡ ದಾಟದೆ) ೬. ಕ್ರಿಯಾಪದಗಳಿಗೂ ಸಮುಚ್ಚಯದ ಉಮ್ ಸೇರುವ ಪ್ರಾಚೀನ ಪ್ರಯೋಗ

ಗಳುಂಟು.

ಆನ್ ಸೋನಮ್ ಸತ್ಯನುಮ್ (ವಡ್ಡಾರಾ, ೧೨೫-೯) ೭. ನಾಮವಾಚಕಗಳಿಗೆ ನೇರವಾಗಿ ಆಖ್ಯಾತಪ್ರತ್ಯಯ ಹತ್ತಿ ವಾಕ್ಯದ ಆಶಯವನ್ನು ತರುವ ಸಂದರ್ಭಗಳಿಗೆ ಕೂಡ ಉಮ್ ಹತ್ತುತ್ತದೆ; ಸಮುಚ್ಚಯದ ಅರ್ಥ ಕೊಡುತ್ತದೆ.

ಆಮೆಲ್ಲಮ್ ಕೂಸುಗಳಮ್ ನವಯೌವನರಮುಮ್ (ವಡ್ಡಾರಾ. ೧೦೦-೧) ಆಖ್ಯಾತ ವಿಭಕ್ತಿ ಪ್ರತ್ಯಯಗಳು ನಾಮ ಸಂಖ್ಯಾ ಗುಣವಚನ ಸರ್ವನಾಮ ಶಬ್ದಗಳಿಗೆ ಸೇರಿ ಹೀಗೆ ನಾಮಕ್ರಿಯೆಗಳಾಗುವುದು ಭಾಷೆಯ ಒಂದು ವಿಶೇಷವೆನ್ನಬೇಕು. ಕೆಲವಡ ಇಂಥ ನಾಮಕ್ರಿಯೆಗಳಿಗೆ ಕೂಡ ಸಮುಚ್ಚಯ ಪ್ರತ್ಯಯವಾದ ಉಮ್ ಸೇರುವುದನ್ನೂ ಹೀಗೆ ಸೇರುವಲ್ಲಿ ಕೆಲವು ಕಡೆ ಸೇರದೆ ಇದ್ದು ಅಧ್ಯಾಹಾರಮಾಡಿಕೊಳ್ಳಬಹುದಾದನ್ನೂ ಸಾಮಾನ್ಯ ವಿದ್ಯಮಾನವಾಗಿ ಈಗಾಗಲೇ ಗುರುತಿಸಲಾಗಿದೆ.