೧ ಸಂಧಿಸ್ವರೂಪ
ಪ್ರಕೃತಿಗೆ ಪ್ರತ್ಯಯವಾಗಲಿ, ಪ್ರಕೃತಿಗೆ ಪ್ರಕೃತಿಯಾಗಲಿ, ಪ್ರಕೃತಿ ಪ್ರತ್ಯಯಗಳು ಕೂಡಿ ಆದ ಪದಕ್ಕೆ ಬೇರೊಂದು ಪದವಾಗಲಿ ಉಚ್ಚಾರಸೌಕಯ್ಯಕ್ಕಾಗಿ ಅವ್ಯವಹಿತವಾಗಿ ಕೂಡಿ ದಾಗ ಸಂಧಿಕಾರಗಳು ಜರುಗುತ್ತವೆ. ಈ ಸಂಧಿಕಾರಗಳು ಲೋಪಸಂಧಿ, ಆಗಮಸಂಧಿ ಮತ್ತು ಆದೇಶಸಂಧಿ ಎಂಬುದಾಗಿ ಮೂರು ವಿಧಗಳಲ್ಲಿ ನಡೆಯುತ್ತವೆ. ಲೋಪಾಗಮಗಳು ಸ್ವರಸಂಧಿಗಳು, ಆದೇಶವು ವ್ಯಂಜನಸಂಧಿ, ವ್ಯಂಜನಸಂಧಿಯಲ್ಲಿ ಸಮೀಪವರ್ತಿ ವ್ಯಂಜನ ಗಳ ಆದೇಶ, ದ್ವಿತ್ವಸಂಧಿ ಇವುಗಳಿಂದಾಗಿ ವ್ಯಾಪ್ತಿ ಹೆಚ್ಚು ಎನ್ನಬಹುದು. ವೈಯಾಕರಣರು ಸಂಧಿವಿಕಲ್ಪ ಸಂಧಿದೋಷ ಶ್ರುತಿಕಷ್ಟಸಂಧಿ ಮೊದಲಾಗಿ ಇನ್ನೂ ಕೆಲವು ಪ್ರಕ್ರಿಯೆಗಳನ್ನು ಲಕ್ಷಣ-ಲಕ್ಷಪೂರ್ವಕವಾಗಿ ವಿವರಿಸಿದರೂ ಇವು ಗೌಣವಾದ ಸಂಗತಿಗಳು. ಸಂಧಿಕಾರ ಗಳು ಏನೂ ನಡೆಯದೆ ಇದ್ದರೂ ಶಬ್ದಗಳ ಅವಿರಲೋಚ್ಚಾರಣೆಯನ್ನೇ ಸಂಧಿಪ್ರಕ್ರಿಯೆಯಾಗಿ ತಿಳಿದಿರುವುದು ಕೂಡ ಉಂಟು.
ಸಂಧಿಕಾರ್ಯವನ್ನು ಗುರುತಿಸುವಾಗ, ಪೂರ್ವಪದವಾಗಿ ಬರುವ ಪ್ರಕೃತಿ ಅಥವಾ ಪ್ರತ್ಯಯದ ಸ್ವರೂಪವನ್ನು, ಪ್ರಕೃತಿ ಪ್ರತ್ಯಯಗಳು ಕೂಡಿ ಆದ ಪದದ ಸ್ವರೂಪವನ್ನು ಹಳಗನ್ನಡ ಭಾಷೆಯ ಮಾದಗೆ ಅನುಗುಣವಾಗಿಯೇ ಗುರುತಿಸುವುದಾಗಬೇಕು. ಪ್ರಕೃತಿ ಪ್ರತ್ಯಯಗಳು ಸ್ವರಾಂತಗಳೇ ವ್ಯಂಜನಾಂತಗಳೇ ಎಂಬುದರ ಬಗಗೆ ಎಚ್ಚರ ಬೇಕು.
ನಾಮಪ್ರಕೃತಿಗಳಿಗೆ ಲಿಂಗವಚನಸೂಚಕ ಪ್ರತ್ಯಯಗಳೋ ವಿಭಕ್ತಿ ಪ್ರತ್ಯಯಗಳೂ ತದ್ಧಿತ ಪ್ರತ್ಯಯಗಳೊ ಸೇರುವಾಗ ಸಂಧಿಕಾರಗಳು ಘಟಿಸುತ್ತವೆ. ಅಚ್ಚ ಕನ್ನಡ ನಾಮ ಪ್ರಕೃತಿಗಳು ಸ್ವರಾಂತಗಳೂ ವ್ಯಂಜನಾಂತಗಳೂ ಆಗಿರುತ್ತವೆ; ಸಂಸ್ಕೃತ ಪ್ರಾಕೃತ ಮೂಲ ದವಾಗಿದ್ದರೆ ಅವು ಕನ್ನಡದ ಭಾಷಾಮಯ್ಯಾದೆಗೆ ಅನುಗುಣವಾಗಿ ತದ್ಭವವೂ ಸಮ ಸಂಸ್ಕೃತವೋ ಆಗಿ ಪ್ರಾತಿಪದಿಕಗಳಾಗಿ ರೂಪಗೊಳ್ಳುತ್ತವೆ. ಬಳಿಕವೇ ಎರಡು ಬಗೆಯವೂ ಸಂಧಿಕಾರಗಳಿಗೆ ಅವಕಾಶ ಮಾಡಿಕೊಡುವುದು ಸಾಧ್ಯ. ಕ್ರಿಯಾಪ್ರಕೃತಿಗಳಿಗೆ ಕಾಲವಾಚಕ ಪ್ರತ್ಯಯವೂ ಆಖ್ಯಾತವಿಭಕ್ತಿಪ್ರತ್ಯಯವೂ ಸೇರಿ ಕ್ರಿಯಾಪದಗಳಾಗಿ ರೂಪುಗೊಂಡು ಬಳಿಕ ಸಂಧಿಕಾರಿಗಳಿಗೆ ಅವಕಾಶವಾಗುತ್ತದೆ.
೨. ಲೋಪಸಂಧಿ
ಸಂಸ್ಕೃತ ಕನ್ನಡ ಶಬ್ದಗಳ ವಿಭಕ್ತಿಸ್ವರಕ್ಕೆ ಆಗಲಿ, ಸಹಜಸ್ವರಕ್ಕೆ ಆಗಲಿ ಪರದಲ್ಲಿ ಸ್ವರವಿದ್ದರೆ, ಅರ್ಥಪ್ರತೀತಿಗೆ (=ನಾಮರೂಢಿ) ಹಾನಿಯಾಗದಿದ್ದ ಪಕ್ಷದಲ್ಲಿ ಪೂರ್ವ ಸ್ವರಕ್ಕೆ ಲೋಷವಾಗುತ್ತದೆ.
೧. ಕ್ರಮದ + ಆಯ್ತು = ಕ್ರಮದಾಯ್ತು; ಈಶ್ವರನ + ಒಲವು = ಈಶ್ವರನೊಲವು
ಇಂದ್ರಂಗೆ + ಐರಾವತಮ್ = ಇಂದ್ರಂಗೃರಾವತಮ್ ೨. ನೆಲದಿಂದ + ಉಬ್ಬನ್ = ನೆಲದಿಂದುನ್; ಲೇಸಿಂಗ+ ಒಡೆಯನ್ *
ಲೆಸಿಂಗೊಡೆಯನ್. ೩. ಬುಧ + ಅರ್ = ಬುಧರ್; ದೇವ + ಎಂಬ = ದೇವೆಂಬ ೪. ಅಚ್ಚ + ಆನೆ = ಅಚಾನ; ದಾಣಿ + ಇನ್ = ದಾಟಿನ್; ಮುಡಿಗೆ +
ಇಕ್ಕಿದನ್ = ಮುಡಿಗಿಕ್ಕಿದನ್; ಲೇಸು + ಎಲ್ಲಮ್ = ಲೇಸಲ್ಲಮ್ ೫. ಮಾಡಿದೆವು + ಒನ್ = ಮಾಡಿದವೋಳ್ಳನ್; ಪರಸಿದೆವು + ಎಲ್ಲರ್ = - ಪರಸಿದವಲ್ಲರ್ ೬, ಕೂಡಿ + ಇರ್ದನ್ = ಕೂಡಿರ್ದನ್: ಪಸಿದು + ಉಂಡನ್ = ಪಸಿದುಂಡನ್ ೭. ಪೋಲದೆ + ಎಂದನ್ = ಪೊಲಚಿಂದನ್
ಈ ಪರಿಸರಗಳಲ್ಲಿ ಪೂರ್ವಾಪರ ಘಟಕಗಳ ವ್ಯಾಕರಣದೃಷ್ಟಿಯ ಪದಸ್ವರೂಪ ಮುಖ್ಯವಲ್ಲ, ಸ್ವರಕ್ಕೆ ಸ್ವರ ಪರವಾಗಿ ಬರುವ ಪ್ರಕ್ರಿಯೆ ಮುಖ್ಯ. ಇಂಥ ಸಂದರ್ಭಗಳಲ್ಲಿ ಪೂರ್ವಪದದ ಕೊನೆಯ ಸ್ವರಕ್ಕೆ ಮಾತ್ರ ಲೋಪ, ಈ ಲೋಪ ಘಟಿಸುವಾಗ ಅರ್ಥ ಪ್ರತೀತಿಗೆ ಭಂಗವಾಗದಿರಬೇಕು ಎನ್ನುವುದನ್ನು ಮರೆಯುವಂತಿಲ್ಲ. ಪಟು + ಏಕವಾಕ್ಕನ್; ವಿಧು + ಇದು ಇವು ಪಟೇಕವಾಕ್ಯನ್, ವಿಧಿದು ಎಂದಾದರೆ ಅರ್ಥ ಕೆಡುತ್ತದೆ; ಪಟು ವಾಕ್ಯನ್, ವಿಧುವಿದು ಎಂದು ಆಗಮಸಂಧಿ ಮಾಡಿದರೆ ಅರ್ಥ ಸ್ಪಷ್ಟವಾಗುತ್ತದೆ. ಇದನ್ನು ಲೋಕರೂಢಿ ಶಿಷ್ಟಪ್ರಯೋಗಗಳಿಂದ ಸುಲಭವಾಗಿ ತಿಳಿಯಬಹುದು. ಈ ಪ್ರಕ್ರಿಯೆಯನ್ನು ವೈಯಾಕರಣರು ‘ಅವಿನಷ ನಾಮಭಾಗ ೩’ ಎಂದೂ (ಶಬ್ದಸ್ಮತಿ), ‘ನಾಮರೂಢಿ. ಬಿಯದ ಪಕ್ಷಮ್’ ಎಂದೂ (ಶಬ್ದಮಣಿದರ್ಪಣ) ಗುರುತಿಸಿದ್ದಾರೆ.
೩. ಆಗಮಸಂಧಿ
ಸಂಸ್ಕೃತ ಕನ್ನಡ ಪ್ರಕೃತಿಗಳಿಗೆ ಸಂಸ್ಕೃತ ಕನ್ನಡ ಪ್ರಕೃತಿಗಳಾಗಲಿ ಕನ್ನಡ ವಿಭಕ್ಕಾ. ಪ್ರತ್ಯಯಗಳಾಗಲಿ ಪರವಾದಾಗ ಪೂರ್ವಘಟಕದ ಅಂತ್ಯದಲ್ಲಿ ಬರುವ ಸ್ವರ ಲ* ವಾಗದೆ ಹೋದರೆ, ಅದರ ಸ್ವರೂಪವನ್ನು ಅನುಸರಿಸಿ, ಎಂದರೆ ಉತ್ಪತ್ತಿಸ್ಥಾನವು ಅವಲಂಬಿಸಿ, ಯಕಾರವೋ ವಕಾರವೋ ಪೂರ್ವೋತರಘಟಕಗಳ ನಡುವೆ ಹೊಸದಾಗಿ ಬಂದು ಸೇರುತ್ತದೆ. ಈ ರೀತಿಯಲ್ಲಿ ಸ್ವರಸಂಧಿ ಘಟಿಸಿದಾಗ, ಅದನ್ನು ಆಗಮನ ಎನ್ನುತ್ತಾರೆ.
ಪೂರ್ವಘಟಕದ ಅಂತ್ಯಸ್ವರ ತಾಲವ್ಯವಾದರೆ ತಾಲವ್ಯ ಯ ಕಾರದ ಆಗ? ಓಷ್ಟವಾದರೆ ಓಹ್ಮವಾದ ವ ಕಾರದ ಆಗಮ.
ಯಕಾರಾಗಮ : ಇಈ ಎಏಐ ಓಗಳಿಗೆ ಸ್ವರ ಪರವಾದಾಗ ಯಕಾರಾಗಮ: ಪೂರ್ವ ಸ್ವರಗಳಾಗಿ ಅಆಕಾರಗಳು ಬಂದಾಗಲೂ ಯಕಾರವೇ ಎಂಬುದನ್ನು ಇಲ್ಲಿ ಕೂಡಿಸಿಕೊಳ್ಳ
ಬೇಕು.
ಆತನ + ಅ = ಆತನಯೆ, ಆ + ಇರ್ದ = ಆಯಿರ್ದ; ಶುದ್ಧ + ಇಸು = ಶುದ್ದಯಿಸು; ಕಲಿ + ಆರ್ = ಕಲಿಯಾರ್; ಸ್ತ್ರೀ + ಎಂಬ = ಸ್ತ್ರೀಯೆಂಬ ಪಸ
- ಇರ್ದನ್ = ಪಸೆಯಿರ್ದನ್; ರೈ + ಒದವಿತ್ತು = ರೈಯೊದವಿತ್ತು. ದಿಟವಾಗಿ ಏ ಓ ದೀರ್ಘಸ್ವರಾಂತ್ಯ ಪ್ರಕೃತಿಗಳಿಲ್ಲ; ಅವು ಅವಧಾರಣೆ ನಿಪಾತಾವ್ಯಯ ಗಳಲ್ಲಿ ಕಾಣಿಸಿಕೊಂಡಾಗ ಸಂಧಿಯ ಅಗತ್ಯವೂ ಇಲ್ಲ, ಸ್ನೇಹಾರ್ಥದ ಓ ಎಂಬ ಧಾತು ಹೊರತುಪಡಿಸಿ (ಓ + ವ + ಉದು = ಓವುದು).
ಅವಧಾರಣೆಯಲ್ಲಿ ಎ ಕಾರಕ್ಕೆ ಸ್ವರ ಪರವಾದಾಗ ಕೂಡ: ಕುಲಹೀನನ ಅಫ್ಘಡೆ | ಕೇವಲಬೋಧನ್ ಪರಶುರಾಮನೇನೀಗುಮ , , , (ಪಂಪಭಾ. ೧೨-೯೭) ಕೆಲವೊಮ್ಮೆ ಯಕಾರಾಗಮ ಐಚ್ಛಿಕವಾಗಿ ವರ್ತಿಸುತ್ತದೆ: ಉದಾ. ಒತ್ತೆ + ಇಟ್ಟನ್ = ಒತ್ತೆಯಿಟ್ಟನ್, ಒತ್ತಿಟ್ಟನ್; ತಗವ + ಅಷ್ಟೂಡ = ತಗವೆಯಪ್ರೊಡೆ, ತಗವೊಪ್ಯೂಡ.
ಪ್ರಕೃತಿ ಸಂಸ್ಕೃತಿ ಕನ್ನಡವೋ ಯಾವುದಾದರೂ ಇರಲಿ, ನಾಮರೂಢಿ ಎಂದರೆ ಅರ್ಥಪ್ರತೀತಿ ಅಳಿದ ಹಾಗೆ ತೋರಿದರೂ ಕವಿಪ್ರಯೋಗಗಳಲ್ಲಿ ವಿರಳವಾಗಿ ಯಕಾರಾ ಗಮವಾಗಬೇಕಾದ ಸಂದರ್ಭಗಳಲ್ಲಿ, ಲೋಪಸಂಧಿಯೇ ಆಗಿರುವುದುಂಟು.
ಪಳ್ಳಿ + ಇರಲ್ = ಪಳ್ಳಿರಲ್, ನಿಚ್ಚಣಿಗೆ + ಇಪ್ಪವೋಲ್ = ನಿಚ್ಚಣಿಗಿಪ್ಪವೋಲ್, ರಾಯ + ಎಂಬ = ರಾಯೆಂಬ, ಜೀಯ + ಎಂಬ = ಜೀಯೆಂಬ, ಆಯ + ಇಲ್ಲದ = ಆಯಿಲ್ಲದೆ (ಆಕರಗಳಿಗೆ ನೋಡಿ; ಶಬ್ದಮಣಿದರ್ಪಣ, ಕಸಂನಿ, ೧೯೯೪, ಉಪೋದ್ಘಾತ,
ಪು. ೨೩)
ವಕಾರಾಗಮ : ಉ ಋಗೂ ಓಔ ಸ್ವರಗಳಿಗೆ ಸ್ವರ ಪರವಾದಾಗ ವಕಾರಾಗಮ ವಾಗುತ್ತದೆ.
ವಿಧು + ಇಲ್ಲ = ವಿಧುವಿಲ್ಲ; ಸುರಗುರು + ಎಂದು = ಸುರಗುರುವಂದು; ಲಲಿತಭೂ + ಅಂಗಜನ = ಲಲಿತಭೂವಂಗಜನ; ಪೂ + ಅ = ಪೂವ; ಭ್ರಾತೃ + ಎ = ಭ್ರಾತೃವೆ; ಹೋತೃ + ಎ = ಹೋತ್ಸವ; ಋ + ಎಂದನ್ = ಋವಂದನ್; ಗೋ + ಇವನ್ = ಗೋವಿವನ್; ನೌ + ಅನ್ = ನೌವನ್; ಗೌ + ಅನ್ = ಗೌವನ್
ಕನ್ನಡ ಪ್ರಕೃತಿಗಳ ಮಟ್ಟಿಗೆ ಯಕಾರಾಗಮದ ವಿಷಯದಲ್ಲಿ ನೋಡಿದಂತೆಯೇ ವಕಾರಾಗಮದ ವಿಷಯದಲ್ಲಿಯೂ ಲೋಪಾಗಮಗಳಿಗೆ ಅವಕಾಶವುಂಟು.
ತೂಗು + ಉಯ್ಯಲ್ = ತೂಗುವುಯ್ಯಲ್, ತೂಗುಯ್ಯಲ್; ಮಾತು + ಎಲ್ಲ = ಮಾತುವೆಲ್ಲ, ಮಾತೆಲ್ಲಹಳಗನ್ನಡ ವ್ಯಾಕರಣ ಪ್ರವೇಶಿಕೆ
೪. ಪ್ರಕೃತಿಭಾವ
ಯಾವ ಸಂಧಿಕಾರವೂ ನಡೆಯದೆ, ಪೂರ್ವೋತ್ತರ ಸ್ವರಗಳು ತಮ್ಮ ಪ್ರಕೃತಿಯನ್ನು, ಎಂದರೆ ಸ್ವಭಾವವನ್ನು, ಹಾಗೆಯೇ ಉಳಿಸಿಕೊಳ್ಳುವುದು ಪ್ರಕೃತಿಭಾವ ಎನ್ನಿಸುವುದು, ಇದು ಪ್ರಕೃತಿ ಪ್ರಕೃತಿಗಳ ವಿಷಯದಲ್ಲಿ ಆಗಬಹುದು, ಪ್ರಕೃತಿ ಪ್ರತ್ಯಯಗಳ ವಿಷಯದಲ್ಲಿ ಕೂಡ ಆಗಬಹುದು.
- ೧. ನಿಪಾತಾವ್ಯಯಗಳಿಗೆ ಸ್ವರ ಪರವಾದಾಗ ಅರಮೆ ಅರು; ಎಲೇ ಇದಕ್ಕೆ
- ೨. ಅವಧಾರಣೆಯ ಎವಿ ಕಾರಗಳಿಗೆ ಸ್ವರ ಪರವಾದಾಗ ಕೂರ್ಪನೆ ಆಪ್ಪನ್; ನುಡಿದನ ಕಾವುದನೇ ಎರ್ದೆಗಿಡದಿರು
- ೩. ಶಂಕೆಯನ್ನು ಸೂಚಿಸುವ ಎಒ ವರ್ಣಗಳಿಗೆ ಸ್ವರ ಪರವಾದಾಗ ಬಿಸುನೆ : ಬಿಸುಟ್ಟಿನೆಂತು; ಆನೆಯೊ ಅದ್ರಿಯೊ
- ೪. ಮಚ್ಚುಗೆ ಆಕ್ಷೇಪಗಳನ್ನು ಸೂಚಿಸುವ ಓಕಾರಕ್ಕೆ ಏನೇನೂ ಓದಿನ ಪರಿ ಲೇಸು ಲೇಸು ಮುತ್ತಿದನೋ ಇಂದ ಕೋಂಟೆ ಧೂಳೀಪಟ್ಟಮ್
- ೫. ಅಂಗೀಕಾರಾರ್ಥದ ಎಮ ಶಬ್ದಕ್ಕೆ ಸಿಂಗಮಕ್ಕೆಮ ಅಂಚನ್
- ೬. ಗಡಾರ್ಥದ (=ಅಲ್ಲವೇ ಎಂಬ ಅರ್ಥದ) ಆಕಾರಕ್ಕೆ ಪಾಲಾ ಅಮರ್ದಾ
- ೭. ಖೇದವನ್ನು ಸೂಚಿಸುವ ಆಕಾರ ಓಕಾರಗಳಿಗೆ ಅಯ್ಯೋ ಅಕ್ಕಟಾ ಇಂದ್ರಂಗೆ ಕೇಡಾಯ
- ೮. ಪೊಂಗು ಒಳಗು ಪೊಸತು ಪುದು ಮುಂತಾದ ಕೆಲವು ಆಯ್ದ ಶಬ್ದಗಳಿಗೆ ಸಮಾನ ವಿಷಯದಲ್ಲಿ ಉಪಾಂತ್ಯಕ್ಷರ ಲೋಪವಾಗಿ ಸ್ವರ ಪರವಾದಾಗ ಸಂಧಿಯಾಗುವುದಿಲ್ವ ಪೊಂಗು + ಅಡಿ = ಪೋಡಿ ಅಡಿ; ಒಳಗು + ಅಟಮ್ = ಒಳ ಅಟ್ರಮ್; ಎಳೆದ + ಎಕ್ಕೆ ಎಳ ಎಕ್ಕೆ; ಎಳದು + ಅಡಿಕೆ = ಎಳ ಅಡಿಕೆ; ಪೊಸ ಆಳ್, ಒಳ ಊಳಿಗಮ ಒಳ ಓಲಗಮ್, ಪೊಸ ಒಲುಮೆ, ಪು ವಿಜ್. ಅಲ್ಲದೆ ಪೆಂಗು + ಉ = ಪೆಜಿ ಉಜ್, ಅರೆ ಉಣಿಸು, ಅರೆ ಎಡೆ, ಅರೆ ಉಟೆ. ಇಂತಹ ಅನ್ಯ ಸಂದರ್ಭಗಳಲ್ಲಿಯೂ ಸಂಧಿಯಾಗುವುದಿಲ್ಲ. ಕಾವ್ಯ ಪ್ರಯೋಗಗನ್.
ಇಂತಹ ಹಲವು ಲಕ್ಷಗಳನ್ನು ಕಂಡುಕೊಳ್ಳಬಹುದಾಗಿದೆ. ಕೆಲವು ಹಳಗನ್ನಡ ಕಾವ್ಯ “. ಮುದ್ರಿತ ಪರಿಷ್ಕರಣಗಳಲ್ಲಿ ಸಂಧಿಗತರೂಪಗಳಲ್ಲಿ ಇವನ್ನು ತಪ್ಪಾಗಿ ಬಳಸಿರುವುದು ಕಾಣುತ್ತದೆ.
೩೧
೫. ಆದೇಶಸಂಧಿ
ವ್ಯಂಜನಗಳ ವ್ಯವಹಾರದಲ್ಲಿ ನಡೆಯುವ ಸಂಧಿಗಳಲ್ಲಿ ಮೊದಲು ಗಮನಿಸಬೇಕಾ ದುದು ಆದೇಶಸಂಧಿಯನ್ನು, ಚ ಟ ವರ್ಗದ ವರ್ಣಗಳನ್ನು ಹೊರತುಪಡಿಸಿ ಉಳಿದ ವರ್ಗಗಳು ಎಂದರೆ ಕತಪ ವರ್ಗಗಳ ಆದ್ಯಕ್ಷರಗಳು ಉತ್ತರಪದದ ಆದಿಯಲ್ಲಿ ಬಂದಾಗ ಸಮಾಸವಿಷಯದಲ್ಲಿ ಅವಕ್ಕೆ ಆಯಾ ವರ್ಗದ ತೃತೀಯಾಕ್ಷರಗಳು ಎಂದರೆ ಗದಬಗಳು ಬಹುಳವಾಗಿ (ಸಾಮಾನ್ಯವಾಗಿ) ಆದೇಶವಾಗುತ್ತವೆ.
೧. ಕಕಾರದ ತೃತೀಯತ್ವಕ್ಕೆ
ಪಟಿ + ಕನ್ನಡ = ಪಳಗನ್ನಡ, ಅಟ್ + ಕವಿ = ಅಳಗವಿ, ಪುದುಂ + ಕೊಳೆ =
ಪುದುಂಗೊಳೆ, ಎರ್ದೆ + ಕೊಳಿಸು = ಎರ್ದಗೊಳಿಸು
೨. ತಕಾರದ ತೃತೀಯತ್ವಕ್ಕೆ
ಉಡೆ + ತೊವಲುಮ್ = ಉಡದೂವಲುಮ್; ಬಾಯ್+ತೆ = ಬಾಯ್ದೆ
೩. ಪಕಾರದ ತೃತೀಯತ್ವಕ್ಕೆ
ತಣ್ + ಪುಲ್ = ತಣ್ಮುಲ್, ಕಣ್ + ಪೊಲಿನಾಗೆ = ಕಣೋಲನಾಗೆ ಇವಕ್ಕೆ ಅಪವಾದವೆಂಬಂತೆ ಕೆಲವು ಸಂದರ್ಭಗಳಲ್ಲಿ, ಸಮಾಸವಿಷಯದಲ್ಲಿಯೇ, ಪದವಾದಿಯ ಕತಪಗಳಿಗೆ ಗದಬಗಳ ಆದೇಶವಾಗುವುದಿಲ್ಲ.
ತಲೆಕಟ್ಟು, ಬೆಸೆಕೋಲ್, ಒಳಕಯ್, ಒಳಕೊಳ್, ನಳಿತೋಳ್, ಏದುಪಂದಿ. ಕೆಲವೊಮ್ಮೆ ವಿಕಲ್ಪರೂಪಗಳೂ ಉಂಟು: ಎಡತೊಜಿ - ಎಡದೂ ಸಮಾಸದಲ್ಲಿ ಚಟಗಳಿಗೆ ಜಡಗಳ ಆದೇಶವಿಲ್ಲ; ಕಡುಚಾಗಿ ಕಡುಟಕ್ಕು ಪೊಸಟೊಪ್ಪಿಗೆ ಕಳ್ಳಟಿಪ್ಪಣಂ -
ಈ ಪ್ರಕ್ರಿಯೆಯನ್ನು ದ್ರಾವಿಡ ಭಾಷೆಗಳ ಹಿನ್ನೆಲೆಯಲ್ಲಿ ಭಾಷಾವಿಜ್ಞಾನಿಗಳು ಪರಿಶೀಲಿಸಿ ಸಮರ್ಥಿಸಿದ್ದಾರೆ. ಮೊದಲು ಕನ್ನಡದಲ್ಲಿ ಚ ಇತ್ತೆಂಬುದೇ ಸಂದೇಹಾಸ್ಪದ, ಟಕಾರಾದಿ ಶಬ್ದಗಳು ತೀರ ವಿರಳ ಎಂದು ಅವರು ಕಾರಣ ಸೂಚಿಸಿದ್ದಾರೆ,
ಸಮಾಸವಿಷಯದಲ್ಲಿ ಕತಪಗಳಿಗೆ ಗದಬಗಳ ಆದೇಶ ಬಾರದ ಇನ್ನೂ ಕೆಲವು ಸಂದರ್ಭಗಳಿವೆ.
ಒಮ್ಮೆ ಆದೇಶಗೊಂಡ ಪೂರ್ವಪದದ ರೂಪವಿರುವಾಗ ಇನ್ನೊಮ್ಮೆ ಉತ್ತರಪದದಲ್ಲಿ ಆದೇಶ ಘಟಿಸುವುದಿಲ್ಲ.
ಒಂದು > ಒರ್ ಆದೇಶ ರೂಪ : ಒಕ್ಕಣಸು, ಓರ್ತುತ್ತು, ಒರ್ಪಿಡಿ ಎರಡು > ಇರ್ ಆದೇಶರೂಪ : ಇರ್ಕೂಡಿ, ಇರ್ತಲೆ, ಇರ್ಪತ್ತು. ಅಕಾರ > ರೇಫ ಆದೇಶರೂಪ : ಮಾರ್ಕೊಲ್, ಮಾರ್ತ, ಏರ್ಪಡು ಹೀಗೆಯೇ ಡಕಾರಕ್ಕೆ ಆಕಾರ ಆದೇಶವಾದಾಗ ಸಾಮಾನ್ಯವಾಗಿ ಪದದ ಕತಪ ಗಳಿಗೆ
೩೨
ಗದಬಗಳ ಆದೇಶವಿಲ್ಲ; ಕೆಟಗು > ಕೀಟ್ ಗೆ ಕೂಡ
ಕಾಡು + ಕಿಚ್ಚು = ಕಾಚ್ಚ್ಚು; ಕಾಡು + ತುಲು = ಕಾಲ್ತುದು; ನಾಡು + ತುಡುಗುಣಿ = ನಾಲ್ಕುಡುಗುಣಿ; ನಾಡು + ಪಗರಣಮ್ = ನಾಲ್ಪಗರಣಮ್; ಕೆಂಗು + ಕೆರೆ = ಕಿಟ್ಸ್, ಕೆಂಗು + ಕೊಂಬು = ಕಿಚೊಂಬು.
ಸಮಾಸವಿಷಯದಲ್ಲಿ ಸ್ವರಕ್ಕೆ ಆಗಲಿ, ಆದೇಶರಹಿತವ್ಯಂಜನಕ್ಕೆ ಆಗಲಿ ಪರದಲ್ಲಿ ಪಬಮಗಳಲ್ಲಿ ಯಾವುದಾದರೊಂದು ಬಂದರೆ, ಆ ಪಬಮಗಳಿಗೆ ವಕಾರದ ಆದೇಶವಾಗುತ್ತದೆ.
೧. ಸ್ವರಗಳಿಗೆ ಪ ಬ ಮ ಪರವಾದಾಗ
ಎಳ -+- ಪೆಟ್ = ಎಳವಳ ಚಳ + ಪೊಲನ್ = ಬೆಳವೋಲನ್ (ವಪ್ವಾಚಕವಾಗಿಯೂ ಪೋಲನ್ ಎಂದು ನಕಾರಾಂತವೇ) ಕಡು + ಬೆಳ್ಳು = ಕಡುವಳು ಮರ + ಮಣೆ = ಮರವಣೆ
ಪಟ + ಮಾನಸನ್ = ಪಣವಾನಸನ್ ಕೆಲವೊಮ್ಮೆ ಇಲ್ಲ: ಸುಡುಬಾಡು, ಕತ್ತುರಿಮಿಗಂ, ಪೂಪುಣಂಬು ೨. ಆದೇಶರಹಿತ ವ್ಯಂಜನಕ್ಕೆ
ಬಾಯ್ + ಪಣಿ = ಬಾಯ್ಯ ಮೆಯ್ + ಪಸವು = ಮೆಯ್ಯಸವು ಬೇರ್ + ಬೆರಸು = ಬೇರ್ವೆರಸು ನೀರ್ + ಪೊನಲ್ = ನೀರ್ವೊನಲ್ ಮಲ್ -+ ಮಾತು = ಮಾತು ಗೇಣ್ + ಬಾಯ್ = ಗೇಣ್ಯಾಮ್
ಆಲ್ + ಬಲ್ಮ = ಆಳ್ಳಿ ಬಾಳ್ + ಪಣನ್ = ಬಾಳೋಣನ್ (ನಪ್ವಾಚಕವಾಗಿಯೂ ಪಣನ್ ನಕಾ ರಾಂತಪ) ಕೆಲವೊಮ್ಮೆ ಇಲ್ಲ:
ಪಲ್ಪಗುಟ್ಟು, ಕಣ್ಣಿಡು, ಪಾಲ್ಮನೆ ಆದೇಶವಾದ ವ್ಯಂಜನಕ್ಕೆ ಪಬಮ ಪರವಾದಾಗ ವತ್ಯವಿಲ್ಲ.
ಎರಡು > ಇರ್ + ಮಡಿ = ಇರ್ಮಡಿ ಎರಡು > ಇರ್ + ಬಾಳ್ = ಇರ್ಬಾಳ್
ಕೆಟಗು » ಕಿಟ್ + ಪೊಡೆ = ಕಿಟೆಡೆ ಸಂಧಿಯ ಸಂದರ್ಭವಿಲ್ಲದಿದ್ದರೂ, ವಿಭಕ್ಕಂತವಾದ ಒಂದು ಪದಕ್ಕೆ ಇನ್ನೊಂದು ಪದ ಪರವಾಗಿ ಬಂದು, ಸಂಧಿನಿಯಮಕ್ಕೆ ಅನುಗುಣವಾಗಿ ಸಂಧಿಕಾರ ನಡೆಯುವ ಒಂದು ವಿಶೇಷ ಸಂದರ್ಭವುಂಟು, ಇದನ್ನು ವಾಕ್ಯಸಂಧಿ ಎನ್ನುತ್ತಾರೆ. ಇದು ವಿಶೇಷವಾಗಿ ಪ > ವ ಆಗಿರುವುದರಲ್ಲಿ ಉಂಟು.
ತಮರೂರ್ಗ ಫೋಪ - ತಮಭೂರ್ಗ ವೂಪ ಕುಲಚಾಂಗನೆಯರ್ (ಕಾವ್ಯಾವ. ೭೨) ಕೆಲಸಕ್ಕೆ ಬರ್ಪ - ದಿವದಿಂ ಕೆಲಸಕ್ಕೆ ವರ್ಪ ದಿವಿಚಾಂಗನೆಯರ್ (ಶಮದ.೭೭-೨೦) ನಂಜಿನ ಮೇಲೆ ಪಾಯ್ಕ - ನಂಜಿನ ಮೇಲೆ ವಾಯ್ಯ ಮಳವಿನಂತೆ (ಪಂಪಭಾ, ೯-೫೯ ವ.)
ಆ ವಿಷ್ಣುವಿನೊರಗೆ ದೂರಗೆ ಬರಲುಣಿದ - ಆ ವಿಷ್ಣುವಿನೊರಗೆ ದೂರೆಗೆ ವರುಲುಚಿದ (ಯಶೋಚ. ೧-೧೨)
ನ ಣಗಳಿಗೆ ಪರದಲ್ಲಿ ಸಕಾರ ಬಂದಾಗ ಬಹಳ ಮಟ್ಟಿಗೆ ಚಕಾರದ ಆದೇಶವಾಗುತ್ತದೆ. ಕೆಲವೆಡೆ ಜಕಾರದ ಆದೇಶವಾಗುತ್ತದೆ; ಉತ್ತರಪದ ಸಂಖ್ಯೆಯಾಗಿದ್ದರ ಛಕಾರವಾಗುತ್ತದೆ.
ಸ > ಚ
ನುಣ್ + ಸರಮ್ = ಮಣ್ಣರಮ್
ಇನ್ + ಸರ = ಇನ್ನರಮ್ ಸ > ಜ
ಪೊನ್ + ಸುರಿಗೆ = ಪೊಂಜುರಿಗೆ ಮುನ್ + ಸೆಟಿಂಗು = ಮುಂಚೆಅಂಗು - ತಣ್ + ಸೊಡರ್ = ತಸ್ಕೋಡರ್
ಪದಿನೇಣ್ + ಸಾಸಿರ = ಪದಿನmಾಸಿರಮ್ (ಎರಡು >) ಇರ್ + ಸಾಸಿರ = ಇರ್ಚ್ಛಾಸಿರಮ್ ನೂಲು + ಸಾಸಿರಂ = ನೂರ್ಛಾಸಿರಮ್ ಕೆಲವೆಡೆ ಸ > ಚ ಪರಿವರ್ತನೆಯಿಲ್ಲ:
ಕಣ್ಣೂಲ, ಪವರಿ, ಕೀರಿ, ಬೆಳ್ಳರಿ, ಕಳ್ಳವಿ ಯ ಲಗಳ ಪರದಲ್ಲಿದ್ದಾಗಲೂ ಸ > ಚ ಪರಿವರ್ತನೆಯಿಲ್ಲ.
ಬಾಯ್ಕವಿ, ಮೆಯ್ವಿ, ಕಯ್ತುರಗಿ, ಬಲ್ಗೊನೆ, ಕಲೈ, ಮೆಲ್ಬರಂ ಕೆಲವು ಸಲ ಸ್ವರಗಳ ಪರದಲ್ಲಿ ಸಕಾರ ಬಂದರ ಚ / ಜ ಪರಿವರ್ತನೆಯುಂಟು :
(ಮೂಲು >) ಮೂ *+ ಸೇರೆ = ಮುಚ್ಚರೆ (ಮೂರು >) ಮೂ + ಸಾಲ್ = ಮುಚ್ಚಾಲ್
ತುಡು + ಸೊಡರ್ = ತುಡುಜೊಡರ್ ಮೂಲು ಎಂಬ ಸಂಖ್ಯಾವಾಚಕದ ಇತರ ಪರಿಸರಗಳು ಗಮನಾರ್ಹ:
(ಮೂರು >) ಮುಕ್ + ಕುಪ್ಪ = ಮುಕ್ಕುಪ್ಪ (ಮೂರು >) ಮುಕ್ + ಕಣ್ಣನ್ = ಮುಕ್ಕಣ್ಣನ್ (ಮೂಲು >) ಮುಫ್ + ಪೊಟಲ್ = ಮುದ್ರೋಲ್ (ಮೂಲು >) ಮೂ + ಮಡಿ = ಮೂವಡಿ (ಮೂಲು >) ಮೂ + ಬಾಳ್ = ಮೂವಾಳ್ ಆದರೆ ಮುಮ್ಮಡಿ ಎಂಬುದು ಇಮ್ಮಡಿ (< ಇರ್ಮಡಿ) ಎಂಬುದರ ಸಾದೃಶ್ಯದಿಂದ ಹುಟ್ಟಿದ ಈಚಿನ ರೂಪ.
೬. ವ್ಯಂಜನಸಂಧಿ - ದ್ವಿತ್ವಸಂಧಿ
ವ್ಯಂಜನ / ಪ್ರಸ್ವಸ್ವರ - ನ್ / ಣ್ | ಲ್ / ಮ್ / ಹೀಗೆ ರಚನೆಯುಳ್ಳ ನಾಮ ಪ್ರಕೃತಿಗಳಿಗೆ ಮುಂದೆ ಸ್ವರಪರವಾದರೆ, ಪೂರ್ವಪದಾಂತ್ಯ ವ್ಯಂಜನ ದ್ವಿತ್ವಗೊಳ್ಳುತ್ತದೆ; ಎಂದರೆ ನ್ / ಣ್ / ಲ್ | ಯ್ / ಳ್ ಅಂತ್ಯವಾದ ನಾಮಪ್ರಕೃತಿಗಳಿಗೆ ಹಿಂದೆ ಒಂದೇ ಅಕ್ಷರವಿದ್ದು, ಅದು ಪ್ರಸ್ವಸ್ವರವಾಗಿರಬೇಕು ಇಲ್ಲವ ಪ್ರಸ್ವಸ್ವರಯುಕ್ತ ವ್ಯಂಜನವಾಗಿರ ಬೇಕು ಎನ್ನುವುದು ಇಲ್ಲಿ ಲಕ್ಷಣ. ಈ ಬಗೆಯ ಸಂಧಿಯಲ್ಲಿ ಲೋಪಾಗಮಾದೇಶಗಳ ಸಂಧಿಕಾರವಿಲ್ಲ; ಪೂರ್ವಭಾಗದ ಶಬ್ದದ ಅಂತ್ಯ ವ್ಯಂಜನ ಇಮ್ಮಡಿಸುವುದೇ ಇಲ್ಲಿಯ ವ್ಯತ್ಯಾಸ -
೧. ಒಳ್ + ಆಳ್ = ಒಳ್ವಾಳ್
ಕಣ್ + ಅನ್ = ಕಣ್ಣನ್
ಪುಣ್ + ಏನ್ = ಪುಸ್ಸೇನ್ ಕಲ್ + ಎಲ್ಲಮ್ = ಕಲ್ಲಲ್ಲಮ್
ಮೆಯ್ + ಅ = ಮಯ್ಯ ೨. ದಲ್ ಎಂಬ ಅವ್ಯಯ ಪ್ರಸ್ವಸ್ವರಯುಕ್ತ ವ್ಯಂಜನಾಂತ ಶಬ್ದವಾಗಿದ್ದು ಕೂಡ ದ್ವಿತ್ವವಾಗದು ಎನ್ನುವುದು ಒಂದು ವಿಶೇಷ.
ದಲ್ + ಇವನ್ = ದಲಿವನ್ ಬಂದನೊ | Yಲಿ ದಲಿವನ್ ಜವನಿಯುಂಡಿಗದಂದನೋ (ಕಾವ್ಯಾವ, ೮೨) ೩. ಪೂರ್ವಸ್ವರ ದೀರ್ಘವಾಗಿದ್ದ ಪಕ್ಕದಲ್ಲಿ ದ್ವಿತ್ವ, ಸಾಧ್ಯವಿಲ್ಲ.
ಆಳ್ + ಆಳ್ = ಆಳಾಟ್ ನಾಣ್ + ಆನ್ – ನಾಗಿಣನ್
ಕೀಲ್ + ಅನ್ = ಕೀಲನ್
ತಾಯ್ + ಓರ್ವಳ್ = ತಾಯೋರ್ವಳ್ ೪. ಪೂರ್ವಭಾಗ ಅನೇಕಾಕ್ಷರ ಘಟಿತವಾಗಿದ್ದರೆ ದ್ವಿತ್ವ ಸಾಧ್ಯವಿಲ್ಲ.
ಸರಣ್ + ಆರುಮ್ = ಸರಣಾರುಮ್ ಪರಲ್ + ಎಲ್ಲಮ್ = ಪರಲಮ್ ತೋವಲ್ + ಉಂಟೇ = ತೊದಳುಂಟೇ ನೆಲನ್ + ಎಲ್ಲಮ್ = ನೆಲನೆಲ್ಲಮ್
ಪೂಲನ್ + ಅಜ್ಯದ = ಪೊಲನಯದ ಇನ್ನು ಧಾತುಗಳ ವಿಚಾರದಲ್ಲಿ ದ್ವಿತ್ವಸಂಧಿ ಹೇಗೆ? ಈ ಭಾಗದಲ್ಲಿ ವಿಧಿ ನಿಷೇಧಗಳೂ ವಿಕಲ್ಪಗಳೂ ಹೆಚ್ಚು ಎನ್ನುವುದರಿಂದಾಗಿ ಪ್ರಯೋಗಗಳ ವಿಚಾರದಲ್ಲಿ ಹೆಚ್ಚಿನ ಎಚ್ಚರಿಕೆ ಬೇಕು.
೫. ನ್ / ಣ್ / ಲ್ / ಳ್ ಅಂತ್ಯವಾದ ಪ್ರಸ್ವಸ್ವರ / ಪ್ರಸ್ವ ಸ್ವರಯುಕ್ತ ವ್ಯಂಜನದ ಹಾಗೂ ಅನೇಕಾಕ್ಷರವಲ್ಲದ ಧಾತುಗಳಿಗೆ ಅಲ್ ಎಂಬ ಕ್ರಿಯಾರ್ಥದ ಪ್ರತ್ಯಯ ಪರದಲ್ಲಿ ಬಂದಾಗ ದ್ವಿತ್ವವಿಲ್ಲ.
ತಿನ್ + ಅಲ್ = ತಿನಲ್ ಉಣ್ + ಅಲ್ = ಉಣಲ್ ಕೋಲ್ + ಅ = ಕೋಲಲ್
ಕಳ್ + ಅ = ಕಳಲ್ ೬. ಎಕಾರ ಉಕಾರ ಸ್ವರಗಳು ಪರದಲ್ಲಿ ಬಂದಾಗ ಸಹ ದ್ವಿತ್ವವಿಲ್ಲ.
ಎನ್ + ಎ = ಎನೆ: ಎಸ್ + ಉತುಮ್ = ಎನುತುಮ್ ಉಣ್ + ಎ = ಉಣೆ, ಉಣ್ + ಉತುಮ್ = ಉಣುತುಮ್ ಕೊಲ್ + ಎ = ಕೂಲ; ಕೋಲ್ + ಉತುಮ್ = ಕೊಲುತುಮ್
ಕೊಲ್ + = ಕೊಳೆ; ಕೊಳ್ + ಉತುಮ್ = ಕೊಳುತುಮ್ ೭. ಸಮಾನ ಪರಿಸರದ ಯ್ ಅಂತ್ಯವಾದ ಧಾತುಗಳಲ್ಲಿ ದ್ವಿತ್ವಸಂಧಿಗೆ ವಿಕಲ್ಪ; ಎಂದರೆ ದ್ವಿತ್ವ, ಅದ್ವಿತ್ವ ಎರಡು ರೂಪಗಳೂ ಉಂಟು.
ಕೊಯ್ + ಅಲ್ = ಕೊಯಲ್, ಕೊಯ್ಯಲ್ ಗೆಯ್ + ಅಲ್ = ಗೆಯಲ್, ಗೆಯ್ಯ.
ಪೊಯ್ + ಅಲ್ = ಪೋಯಲ್, ಪೂಂಯ್ಕಲ್ ೮. ಸಮಾನ ಪರಿಸರದಲ್ಲಿಯೇ, ಎಂದರೆ ಇದೇ ರಚನೆಯ ಉಯ್ ನೆಯ್ ಸುಯ್ ಬಯ್ ಎಂಬ ಧಾತುಗಳಿಗೆ ಕ್ರಿಯಾರ್ಥದ ಅಲ್ ಪರವಾದಾಗ ದ್ವಿತ್ವ ತಪ್ಪದೆ ಬರುತ್ತದೆ.
೩೬
ಅಲ್ ಸ್ಥಾನದಲ್ಲಿ ಅದರ ಪರಾಯವಾಗಿ ಎ ಪ್ರತ್ಯಯ ಬರುವಾಗಲೂ ದ್ವಿತ್ವ ತಪ್ಪದೆ ಬರುತ್ತದೆ.
ಉಯ್ಕಲ್, ನಯ್ಯಲ್, ಸುಯ್ಯಲ್, ಬಯ್ಯಲ್; ಉಯ್ಯ, ನೆಮ್ಮೆ, ಸುಯ್ಕೆ, ಬಯ್ಕೆ (ವಿರಳವಾಗಿ ಪ್ರಾಚೀನ ಶಾಸನಗಳಲ್ಲಿ ಉಯ ಎಂಬ ಅದ್ವಿತ್ವರೂಪವು ಬಂದಿದೆ).
೯. ವಿಧಿ ೮ರಲ್ಲಿ ಕೊಯ್ ಗೆಯ್ ಪೊಯ್ ಎಂಬ ಮೂರು ಧಾತುಗಳ ಸಂಬಂಧದಲ್ಲಿ ದ್ವಿತ್ವವಿಕಲ್ಪವುಂಟೆಂದು ಹೇಳಿದೆಯಷ್ಟೆ. ಆದರೆ ಅನೇಕಾಕ್ಷರವಿದ್ದು ಕೂಡ, ದೀರ್ಘ ಸ್ವರಾದಿಯಾಗಿ ಕೂಡ, ಆರಯ್ ಧಾತುವಿಗೆ ದ್ವಿತ್ವವಿಕಲ್ಪ ಕಾಣುತ್ತಿರುವುದು ವಿಶೇಷ.
ಆರಯಲ್-ಆರಯ್ಕಲ್; ಆರಯಿಮ್-ಆರಮ್; ಆರಯೆ-ಆರಯ್ಯ ೧೦. ಸಮಾನ ಪರಿಸರದಲ್ಲಿ ನ್ ಣ್ ಲ್ ಯ್ ಳ್ ಅಂತ್ಯವಾದ ಧಾತುಗಳಿಗೆ ಪ್ರತ್ಯಯ ಗಳ (ಪುರುಷವಾಚಕಗಳು) ಆಧ್ಯಸ್ವರಗಳು ಪರವಾಗಿ ಪ್ರತಿಷೇಧಾರ್ಥ ಬರುವಂತಿದ್ದರೆ, ಭೂತಕಾಲದ ಕ್ರಿಯೆಯಲ್ಲಿ ಅದೆ ಎಂಬ ಪ್ರತಿಷೇಧಾರ್ಥಕ ಪ್ರತ್ಯಯ ಸೇರುವಂತಿದ್ದರೆ ದ್ವಿತ್ವ ತಪ್ಪದೆ ಬರುತ್ತದೆ.
ಎನ್ನೆನ್, ಎನ್ನೆವು; ಉಣ್ಣನ್ ಉಣ್ಣರ್; ಕೊಲ್ಲನ್, ಕೊಲ್ಕರ್; ಎನ್ನದೆ, ತಿನ್ನದೆ ಉಣ್ಣದ, ಕೊಲ್ಲದ
ಆದರ ಳ್ ಅಂತ್ಯದ ಕಳ್ ಧಾತುವಿಗೆ ಆಖ್ಯಾತ ಪ್ರತ್ಯಯಗಳು ಸೇರಿ ಪ್ರತಿಷೇಧಾರ್ಥ ಹೊರಡುವಾಗಲೂ ಅದೆ ಎಂಬ ಪ್ರತ್ಯಯ ಸೇರಿ ಪ್ರತಿಷೇದಾರ್ಥ ಹೊರಡುವಾಗಲೂ, ಪ್ರಯೋಜನಾರ್ಥದ ಅಲ್ ಪರವಾದಾಗಲೂ ದ್ವಿತ್ವ ಬರುವುದಿಲ್ಲ ಎನ್ನುವುದು ವಿಶೇಷ. ಕಳನ್ ಕಳವು; ಕಳನ್ ಕಳರ್; ಕಳ್ + ಅ = ಕಳದೆ; ಕಳ್ + ಅಲ್ = ಕಳಲ್ ಇ.
ಅದರ ವಿರಳವಾಗಿ ಪ್ರಾಚೀನಪ್ರಯೋಗಗಳಲ್ಲಿಯೇ ದೈತ್ಯರೂಪವೂ ಕಂಡುಬಂದಿರು ವುದುಂಟು.
ಕೊ | ಲ್ಲದ ಪರನಾರಿಗಾಟಿಸದ ಕಳ್ಳದ ಸತ್ಯದೊಳೊಂದದಾಗಳುಂ • • . (ಆದಿಪು. ೬-೭)
ಕೋಲೆಯೊಳ್ ಪೊರೆಯದ ಪರ ಲಲನೆಗೆ ಬರಗುಡದ ಕಳ್ಳದು ಪುಸಿಯದ . . . (ಶಾಂತಿಪು. ೧-೮೮)