ಹಳಗನ್ನಡ ಭಾಷೆಯ ಸಹಜವಾದ ಸತ್ಯ ವಿಶೇಷತೆಗಳು ಕಂಡುಬರುವುದು ಆ ಭಾಷೆಯ ದೇಶ್ಯ ಶಬ್ದಗಳಲ್ಲಿ, ಅದರ ಶಬ್ದರಚನೆಯನ್ನು ಈಗ ಗುರುತಿಸಬಹುದಾಗಿದೆ.
೧. ಮೂಲಶಬ್ದಗಳು ಒಂದಕ್ಷರದಿಂದ ಮೂರು-ನಾಲ್ಕು ಅಕ್ಷರಗಳ ವರೆಗೆ ಮಾತ್ರ ಇರಬಹುದು.
ಈ ಬೇ ಮೀ ಪೂ ಮೇ ಇ, ಎಲೆ ಕೆಳ ಗಿಡು ತಲೆ ಮಳೆ ಮಗು ಇ.; ಅಲಂಪು ಕಡಲೆ ಬೆಡಂಗು ಕರುಳ್ ತಿಗುರ್ ಪೆಸರ್ ಇ, ಬಿಸವಂದ ಕಡಂದಲು ಪೊಅವಾಜ್
ಬೆಲಗಸೆ
೨. ಒಂದಕ್ಕಿಂತ ಹೆಚ್ಚು ಅಕ್ಷರಗಳ ಕ್ರಿಯಾರ್ಥಕ ನಾಮಾರ್ಥಕ ಮೂಲಶಬ್ದಗಳು ಸಾಮಾನ್ಯವಾಗಿ ವ್ಯಂಜನಾಂತಗಳಾಗಿರುವುದು ಯ ರ ಲ ಣ ನ ಳ ಅಂತ್ಯವಾಗಿ ಬರುವ ಅಂತಹ ಶಬ್ದಗಳಲ್ಲಿ ಕಂಡುಬರುತ್ತದೆ.
ಕ್ರಿಯಾರ್ಥಕಗಳಿಗೆ ಉದಾಹರಣೆ : ತೊಯ್ ಬಯ್ ಪೊಯ್ ಸಯ್ ಪಾಯ್; ಕೆಳ ಅದಿರ್ ಉದಿರ್ ಕೊನರ್ ತೊಡರ್, ಅಟಲ್ ಎಬಿಲ್ ಮಡಲ್ ಸಿಡಿಲ್ ಸೋಲ್; ಉಣ್ ಕಾಣ್ ಪಣ್ ಪೂಣ್ಮಾಣ್; ಆನ್ ಈನ್ ತಿನ್ ನಾನ್ ಎನ್; ಉರುಲ್ ಊಳ್ ಕಟ್ ಮುಗುಳ್ ಸುರುಳ್ ಅಳಬ್ ಎಡಚ್ ಒಳಗ್ ಪೆಳಟ್ ಸಮಟ್; ಆಗುಚ್ ಏಟ್ ಕಿಟ್ ನೆಗಲ್ ಬಾಟ್.
ಸ್ವರಾಂತಗಳಾದ ಕ್ರಿಯಾರ್ಥಕ ದಶ್ಯ ಶಬ್ದಗಳು ಕೂಡ ಬಹುಸಂಖ್ಯೆಯಲ್ಲಿರು ವುದರಿಂದ ಯಾವುವು ವ್ಯಂಜನಾಂತಗಳು, ಯಾವುವು ಸ್ವರಾಂತಗಳು ಎನ್ನುವುದನ್ನು ಶಬ್ದಮಣಿದರ್ಪಣದ ಪದಪಟ್ಟಿಗಳ ಸಹಾಯದಿಂದ ಪರಿಚಯಮಾಡಿಕೊಳ್ಳಬೇಕು. ಅಲ್ಲದೆ ಆ ಕಾರಾಂತಗಳನ್ನು ಅಲ್ಲಿಯೇ ಸ್ವರಾಂತಗಳಾಗಿ ತೋರಿಸಿರುವುದರಿಂದ ವಿಕಲ್ಪವಾಗಿ ಅವನ್ನು ವ್ಯಂಜನಾಂತಗಳಾಗಿಯೂ ಸ್ವರಾಂತಗಳಾಗಿಯೂ ತಿಳಿಯಲವಕಾಶವಿದೆ.
ನಾಮಾರ್ಥಕಗಳಿಗೆ ಉದಾಹರಣೆ : ಕಯ್ ಮಯ್ ತಾಯ್ ಬಾಯ್ ಕಾಯ್; ನಾರ್ ಬೇರ್ ತಳಿ ಕುಳಿ ಮೊಸರ್; ಕೇಲ್ ಪಾಲ್ ಕೂಲ್ ಕಲ್ ತಂದಲ್; ಪವಣ್ ನಾಣ್ ಜಾಣ್ ಗಣ್ ಕಣ್; ಪೊನ್ ಬೆನ್ ಮೀನ್ ಟೇನ್ ಬಾನ್ ; ಕುರುಳ್ ಕೊರಳ್ ತಿರುಳ್ ಮುಗುಳ್ ಪುರುಳ್; ಬಸಿಟ್ ಪೆಸಟ್ ಕೆಸಟ್ ನೇಸಲ್ ಪೊವಾಟ್; ತೇಲ್ ಬಾಟ್ ಬಾಸುಟ್ ಪೋಟ್ ಚಾಟ್
ಸ್ವರಾಂತಗಳಾದ ನಾಮಾರ್ಥಕ ಶಬ್ದಗಳು ಕೂಡ ಬಹುಸಂಖ್ಯೆಯಲ್ಲಿರುವುದರಿಂದ ಯಾವುವು ವ್ಯಂಜನಾಂತಗಳು ಯಾವುವು ಸ್ವರಾಂತಗಳು ಎನ್ನುವುದನ್ನು ಶಬ್ಬಮಣಿ ದರ್ಪಣವ ಪದಪಟ್ಟಿಗಳಿಂದ ಪರಿಚಯಮಾಡಿಕೊಳ್ಳುವುದು ಒಳ್ಳೆಯದು, ಈ ವಿಷಯ೨೦
ದಲ್ಲಿ ಹಳಗನ್ನಡ ಕವಿಕೃತಿಗಳ ಪದಪ್ರಯೋಗಕೋಶಗಳೂ ಶಬ್ದಕೋಶಗಳೂ ಸಹಾಯ ಮಾಡಬಹುದಾಗಿವೆ.
೩. -ರಲ - ಪರಿಸರದ ಶಬ್ದಗಳಲ್ಲಿ ಆ ಶಬ್ದಗಳ ಅಂತ್ಯ ಲಕಾರದ ವ್ಯಂಜನಕ್ಕೆಳಕಾರದ ವಿನಿಮಯ ಕೂಡದು; ಅವನ್ನು ಲಾಂತ ಶಬ್ದಗಳಾಗಿಯೇ ಬಳಸಬೇಕು. ಉದಾಹರಣೆ:
ಒರಲ್ ಕೊರಲ್ ನರಲ್ ಬೆರಲ್ ಮರಲ್ ಪರಲ್ ಅರಲ್ ಈ ಆಕೃತಿಗಣದ ಶಬ್ದಗಳನ್ನು ಒರಳ್ ಕೊರಳ್ ಎಂದು ಮುಂತಾಗಿ ಬರೆಯಲೂ ಉಚ್ಚರಿಸಲೂ ತಕ್ಕುದಲ್ಲ.
೪. ಬಹುಸಂಖ್ಯೆಯ ದೇಶ್ಯವಾದ ಧಾತುಗಳು, ಸಹಜನಾಮ ಮತ್ತು ತದ್ಧಿತನಾಮ ಪದಗಳು ಸಬಿಂದುಗಳಾಗಿರುವುದು ಹಳಗನ್ನಡ ಶಬ್ದ ಭಂಡಾರದಲ್ಲಿ ಕಂಡುಬಂದಿದೆ. ಅವುಗಳನ್ನು ಅಬಿಂದುಕಗಳಾಗಿ ಪ್ರಮಾಣಪುರುಷರು ಬಳಸುವುದಿಲ್ಲ; ಹಾಗೆ ಬಳಸುವುದು ಒಮ್ಮೊಮ್ಮ ವಿರಳವಾಗಿ ಕಾಣಿಸಿಕೊಂಡರೂ, ಅದು ಸಾಮಾನ್ಯ ಪ್ರವೃತ್ತಿಯಲ್ಲಿ ಕಾಣಿಸುವು ದಿಲ್ಲ. ಉದಾ: ಅಡಂಗು ಅವುಂಕು ಕೊಡಂತಿ ಕೊಅಂತ ಗಳಂತಿಕೆ ತಜುಂಬು ತೋಂಕು ತೋಡಂಕು ತೋಂಟ ದಾಂಟು ದೂಂಟಿ ನಾಂದು ಪಡಂಗು ಪಲುಂಬು ಪಳಂಚು ಪೊಸಂತಿಲ್ ಬಣಂಬೆ ಬೆಡಂಗು ಬೇಂಟೆ ಮೀಂಟು ಮೇಂಟಿ ಸಾಂದು ಸೀಟು ಸಟಿಂಗು ಸೇಂದು ಹಸುಂಬರಿ ಹಸುಂಬೆ.
ಪ್ರಮಾಣಪುರುಷರು ನಿತ್ಯಬಿಂದುಗಳಾಗಿ, ಕೆಲವೊಮ್ಮೆ ವಿಕಲ್ಪಬಿಂದುಗಳಾಗಿ ಬಳಸುವ ಶಬ್ದಗಳು ಕನ್ನಡ ಭಾಷಯ ಮುಂದು ಮುಂದಿನ ಕಾಲಘಟ್ಟಗಳಲ್ಲಿ ಏಕೆ ಅಬಿಂದುಕಗಳಾಗಿ ಸ್ಥಿರಪಟ್ಟುವು ಎನ್ನುವುದನ್ನು ಭಾಷಿಕವಾಗಿ ವೈಯಾಕರಣರು ಹಾಗೂ ಭಾಷಾವಿಜ್ಞಾನಿಗಳು ಸಯುಕ್ತಿಕವಾಗಿ ವಿವರಿಸಿದ್ದಾರೆ. ವ್ಯಂಜನ-ಪ್ರಸ್ವಸ್ವರ-ವ್ಯಂಜನ-ಪ್ರಸ್ವಸ್ವರ-ಬಿಂದು ಹೀಗೆ ಪರಿಸರವಿದ್ದಾಗ ಬಿಂದು ಬಿದ್ದು ಹೋಗುವ ಸಂಭವ ಹೆಚ್ಚು. ವ್ಯಂಜನ-ದೀರ್ಘಸ್ವರ" ಬಿಂದು ಇಲ್ಲವೆ ದೀರ್ಘಸ್ವರ-ಬಿಂದು ಈ ಪರಿಸರವಿದ್ದಾಗಲೂ ಬಿಂದು ಬಿದ್ದು ಹೋಗುವು ದುಂಟು. ಆದರೆ ವ್ಯಂಜನ-ಪ್ರಸ್ವಸ್ವರ-ಬಿಂದು ಇಲ್ಲವೆ ಪ್ರಸ್ವಸ್ವರ-ಬಿಂದು ಇರುವಾಗ ಬಿಂದು ತಪ್ಪದೆ ಉಳಿದುಕೊಳ್ಳುತ್ತದೆ. ಕ್ರಮವಾಗಿ ಉದಾ: ೧. ಅಡಂಗು-ಅಡಗು, ಒಲಿಂಕ್ ಒಳಿತ, ಕಡಂಗು-ಕಡಗು, ಬೆಡಂಗು-ಬೆಡಗು, ೨. ತೆಂಕು-ತೇಕು, ಮೀಂಟು-ಮೀಟು, ಸಾಂದು-ಸಾದು, ೩. ಅಂಕ-ಆಕೆ, ಇನ್-ಇ, ೪, ನಂಟು-ನಂಟು, ಗಂಡು-ಗಂಡು, ಪಿಂಗ ಪಿಂಗು, ೫ ಅಂಟು-ಅಂಟು, ಅಂಜು-ಅಂಜು, ಒಂದು-ಒಂದು.
ಪ್ರಾಚೀನ ಕವಿಕೃತಿಗಳಲ್ಲೇ ಸಬಿಂದುಕ-ಅಬಿಂದುಕ ವಿಕಲ್ಪ ರೂಪಗಳು ಕಾಣಸಿಗುತ್ತವೆ ಇಜಂಪ್ರ-ಇಲಪ್ಪ ಕದಂಪು-ಕಪ್ಪು, ಕೊಡಂಕೆ-ಕೊಡಕ, ಜಿನುಂಗು-ಜಿನುಗು, ನೊರಂಜು ನೊರಜು, ಮುಸುಂಕು-ಮುಸುಕು. ಉಚ್ಚಾರಸೌಕಯ್ಯ ನಾಮರೂಢಿ ಇವನ್ನು ಅವಲಂಬಿಸಿ ಈ ಕ್ರಿಯೆಗಳಾಗುತ್ತವೆ.
೫. ಅಚ್ಚಕನ್ನಡ ಶಬ್ದಗಳು ಒತ್ತಕ್ಷರಗಳಿಂದ ಆರಂಭವಾಗುವುದಿಲ್ಲ, ಆತ
೨೧
ಸ್ಥಾನದಲ್ಲಿ ಬರುವ ಒತ್ತಕ್ಷರಗಳು ಸಜಾತೀಯಗಳೇ ಆಗಿರುತ್ತವೆ.
ಉದಾ. ಅಕ್ಕ ಗುಡ್ಡ ದಡ್ಡ ಕಕ್ಕು ಕೊಕ್ಕು ಕೊಪ್ಪು ಸೊಪ್ಪು ಚಿಮ್ಮು ಸೊಮ್ಮು. ವಿರಳವಾಗಿ ವರ್ಗಿಯ-ಅವರ್ಗೀಯ ವ್ಯಂಜನಗಳು ಬೆರತು ವಿಜಾತೀಯ ದ್ವಿತ್ವಗಳಾಗಿ ಬಳಕೆಯಾಗುತ್ತವೆ.
ಸೂರ್ಕು ಕಿರ್ಚು ಗಟ್ಟಿ ಕರ್ಪು ಪೊಲ್ಕು ಕೆರ್ಪು ಮರ್ಗು ತಿರ್ದು ಉರ್ಕು ಪರ್ಚು ಉರ್ಚು ಕುರ್ಗು ಸಿರ್ಪ ವರ್ಗು ತರ್ದು ಪರ್ದು ಗುರ್ದು ಮರ್ದು.
ಗ-ಗರ್ದ, ಕ-ಕರ್ತೆ, ಕಟ್ಟು-ಕರ್ಚು ಹೀಗೆ ಪರಿವರ್ತಿಸುವ ಪ್ರವೃತ್ತಿಯೂ ಹಳಗನ್ನಡದಲ್ಲಿ ವಿಕಲ್ಪವಾಗಿ ಉಂಟು; ಇವು ಮುಂದ ಸೊಕ್ಕು ಕಿಚ್ಚು ಪೂತ್ತು ಕಪ್ಪು ಮಗು ಎಂದು ಮುಂತಾಗಿಯೂ ಗದ್ದ ಕತ್ತೆ ಕಚ್ಚು ಎಂದು ಮುಂತಾಗಿಯೂ ಸಾಮಾನ್ಯವಾಗಿ ನಡುಗನ್ನಡ ಹೂಸಗನ್ನಡದ ಕಾಲಘಟ್ಟಗಳಲ್ಲಿ ಪರಿವರ್ತಿಸುವುದನ್ನು ಕಾಣಬಹುದು.
೬. ಸರೇಫನ್ನಿತ್ವದ ಉಪಾಂತ್ಯವರ್ಣ ದೀರ್ಘ ಸ್ವರವಾಗಿದ್ದಾಗ ಇಲ್ಲವ ದೀರ್ಘಸ್ವರ ಯುಕ್ತ ವ್ಯಂಜನವಾಗಿದ್ದಾಗ ಕೆಲವು ಭೂತ ಭವಿಷ್ಯತ್ಕಾಲದ ಕೃದ್ರೂಪಗಳು ತಂತಮ್ಮ ಸ್ವಸ್ವರೂಪಗಳಲ್ಲಿರುತ್ತವೆ. ಉದಾ: ಆರ್-ಆರ್ದ ಆರ್ವ; ತೀರ್-ತೀರ್ದ ತೀರ್ವ, ಪಾರ್
ಪಾರ್ದ ಪಾರ್ವ, ಪೋರ್-ಪೋರ್ದ ಪೋರ್ವ, ಪೂಣರ್-ಪೂಣರ್ದ ಪೂಣರ್ವ,
ನಡುಗನ್ನಡ ಹೊಸಗನ್ನಡ ಪ್ರಯೋಗಗಳಲ್ಲಿ ಧಾತುಗಳು ಆರು ತೀರು ಪಾರು ಪೋರು ಪೂಣರು ಹೀಗೆ ಸ್ವರಾಂತಗಳಾಗಿ ಪರಿವರ್ತಿಸಿದುವು.
೭. ಸರೇಫ ದ್ವಿತ್ವದ ಹಾಗೂ ಳಕಾರ ದ್ವಿತ್ವದ ಕೆಲವು ನಾಮಪ್ರಕೃತಿಗಳ ವಿಷಯದಲ್ಲಿ ಕೂಡ ಹೀಗೆಯೇ ಸ್ವಸ್ವರೂಪದ ಲಕ್ಷಣವುಂಟು.
ಊರ್-ಊರ್ಗೆ ಊರ್ಗಳ್; ತೇರ್-ತೇರ್ಗೆ ತೇರ್ಗಳ್; ನೀರ್-ನೀರ್ಗೆ ನೀರ್ಗಲ್; ತೋಳ್-ತೋಳೆ ತೋಳಲ್; ಬಾಳ್-ಬಾಳೆ ಬಾಳ ಳ್.
ನಡುಗನ್ನಡ ಹೂಸಗನ್ನಡ ಪ್ರಯೋಗಗಳಲ್ಲಿ ನಾಮ ಪ್ರಕೃತಿಗಳು ಊರು ತೇರು ನೀರು ಎಂದೂ ತೊಳು ಬಾಳು ಎಂದೂ ಮುಂತಾಗಿ ಸ್ವರಾಂತಗೊಂಡು ಬಳಿಕ ವಿಭಕ್ತಿಸ್ವೀಕಾರ ಸಮರ್ಥವಾಗುತ್ತವೆ.
- ೮, ಹಳಗನ್ನಡ ಶಬ್ದ ಭಂಡಾರದ ಹಲವು ದೇಶ್ಯ ಶಬ್ದಗಳು ಈಗ ಪ್ರಯೋಗದಿಂದ ಕಣ್ಮರೆಯಾಗಿದ್ದು ಇವನ್ನು ಪ್ರಾಚೀನ ಕವಿಕೃತಿಗಳಿಂದ, ಅವುಗಳ ಪದಪ್ರಯೋಗಕೋಶ ಗಳಿಂದ ತಿಳಿದುಕೊಳ್ಳಬೇಕಾಗುವುದು. ಉದಾಹರಣೆಗೆ:
ಎಡವ ತೊಳಂಕು ಕರ್ಜರ ಪತ್ತೊಂದಿ ಪುಳುಂಗಾಬಿ ಪೋಡುಂಗಾಟ ಬಿಸವಂದ ಬೆಲಗಸೆ ಬಿಸುಗ ಕೊಸರು ಸೋಡಂಬಾಡ ನೂಳದು ಕುತ್ತುಪೆನ ಸುಸಿಲ್ ಮರಸುರಿಗೆ ಪೊಗಸು ಸವಳದ ಇಳಿಲೆ ಇತ್ಯಾದಿ.
೯. ಹಳಗನ್ನಡದ ಧಾತುಗಳು ಮೂಲತಃ ಏಕಾಕ್ಷರಿಗಳು, ಧಾತುಗಳ ಆದ್ಯಂತಗಳಲ್ಲಿ
5 5
ಜ ಇ, ಮಹಾಪ್ರಾಣಗಳು, ಶ ಷ ಹ ಬರುವುದಿಲ್ಲ. ಯಕಾರ ರಕಾರಗಳು ಧಾತುಗಳ ಆದ್ಯಕ್ಷರಗಳಾಗಿ ಬರುವುದಿಲ್ಲ. ಲಕಾರ ವಕಾರಗಳು ಆದ್ಯಕ್ಷರಗಳಾಗಿ ವಿರಳವಾಗಿ ಮಾತ್ರ ಬರುತ್ತವೆ.
೧೦. ದೀರ್ಘಸ್ವರಗಳಾದ ಕೂಡಲೇ ದ್ವಿತ್ವಗಳು ಬರುವುದಿಲ್ಲ; ಮೊದಲ ಪ್ರಸ್ವಸ್ವರದ ಅಥವಾ ಪ್ರಸ್ವಸ್ವರಸಹಿತ ವ್ಯಂಜನದ ಬಳಿಕ ದೀರ್ಘಸ್ವರಸಹಿತ ವ್ಯಂಜನ ಬರುವುದಿಲ್ಲ.
೧೧. ಹಳಗನ್ನಡ ಭಾಷೆಯ ಒಂದು ವಿಶೇಷಲಕ್ಷಣವಾಗಿ ಶಿಥಿಲದ್ವಿತ್ವವೆಂಬ ಪ್ರಕ್ರಿಯೆ ಯಿದ್ದು ಅದರ ಪ್ರಯೋಗ ಕೆಲವು ಭಾಷಿಕವಿಧಿಗಳನ್ವಯ ಆ ಭಾಷೆಯ ಕೃತಿಗಳಲ್ಲಿ ವಿರಳ ವಾಗಿ ಕಂಡುಬರುತ್ತವೆ,
ವಿಶಿಷ್ಟವಾದ ಒಂದು ಪರಿಸರದಲ್ಲಿ ದ್ವಿತ್ವಸಹಿತವಾದ ಶಬ್ದವೊಂದು ಇದ್ದಾಗ, ಕೆಲವು ಸಲ ಅಥವಾ ಹಲವು ಸಲ, ಆ ಶಬ್ದದ ದೈತ್ಯಾಕ್ಷರವನ್ನು ತೇಲಿಸಿ, ಎಂದರೆ ಒತ್ತದೆ. ಉಚ್ಚರಿಸುವುದುಂಟು. ಹಾಗೆ ಉಚ್ಚರಿಸಲಾಗುವ ದ್ವಿತ್ವ ಶಿಥಿಲದ್ವಿತ್ವವೆನ್ನಿಸುತ್ತದೆ. ಅದನ್ನು ಒಳಗೊಂಡ ಪದ ಶಿಥಿಲದ್ವಿತ್ವದ ಪದವಾಗಿರುತ್ತದೆ. ಹೀಗೆ ದೈತ್ಯವು ಶಿಥಿಲತೆಯನ್ನು ಪಡೆದರೆ, ಆ ದ್ವಿತ್ವದ ಹಿಂದಿನ ಅಕ್ಷರ ಲಘುವಾಗಿದ್ದರೆ ಲಘುವಿನ ಬೆಲೆಯನ್ನೇ ಪಡೆಯು ಇದೆ, ಗುರುವಾಗುವುದಿಲ್ಲ; ಗುರುವಿನ ಬೆಲೆಯನ್ನು ಪಡೆಯುವುದಿಲ್ಲ.
ಶಿಥಿಲದ್ವಿತ್ವದ ಸಾಮಾನ್ಯ ಪರಿಸರದ ಲಕ್ಷಣ ಮತ್ತು ಉದಾಹರಣೆಗಳು
ಶಿಥಿಲದ್ವಿತ್ವಕ್ಕೆ ವಿಷಯವಾದ ಶಬ್ದ ದೇಶ್ಯವಾಗಿರುತ್ತದೆ; ವಿರಳವಾಗಿ ತದ್ಭವವೂ ಆಗಿರಬಹುದು, ಅದು ನಾಮಪ್ರಕೃತಿ, ಸಮಾಸಪದ ಅಥವಾ ಕ್ರಿಯಾಪದ ಇವುಗಳಲ್ಲಿ ಯಾವುದಾದರೂ ಒಂದು ಆಗಬಹುದು,
ಇಂತಹ ಶಬ್ದದ ಪೂರ್ವಭಾಗದಲ್ಲಿ ವ್ಯಂಜನ / ಪ್ರಸ್ವಸ್ವರ - ವ್ಯಂಜನ - ಪ್ರಸ್ವಸ್ವರ - ಪೂರ್ವ ನಿರ್ದಿಷ್ಟ ವ್ಯಂಜನವಾದ ಅ | ಆ { ರ ಎಂಬ ವರ್ಣ ಹೀಗೆ ಆನುಪೂರ್ವಿಯ ವರ್ಣಸಂಘಟನೆಯಿರುತ್ತದೆ; ಆ ಬಗೆಯ ವರ್ಣಸಂಘಟನೆಯಿರುವ ಶಬ್ದದ ಉತ್ತರ ಭಾಗದಲ್ಲಿ ಬಹುವಚನ ಪ್ರತ್ಯಯವಾದ ಗಳ್ | ಚತುರ್ಥಿ ವಿಭಕ್ತಿಯ ಪ್ರತ್ಯಯವಾದ ಗ / ಗ ದ ವ ಜ ಕಾರಗಳು ಪದದ ಆದಿಯಲ್ಲಿ ಸ್ವಾಭಾವಿಕವಾಗಿಯೋ ಸಮಾಸಕಾರದ ಪರಿಣಾಮವಾಗಿಯೋ ಬರುವ ಇನ್ನೊಂದು ಬೇರೆಯೇ ಪದ / ಕಾಲವಾಚಕ ಪ್ರತ್ಯಯಗಳಾದ ದ ದವವ ಕಾರಗಳಲ್ಲಿ ಯಾವುದಾದರೂ ಒಂದು / ವಿಧ್ಯರ್ಥದ ಗೆ ಅಥವಾ ವರ್ತಮಾನ ಕಾಲದ ಗುಂ ಹೀಗೆ ವರ್ಣಸಂಘಟನೆಯಿರುತ್ತದೆ.
ಶಿಥಿಲದ್ವಿತ್ವದ ಸಂದರ್ಭಗಳಿಗೆ ಹೇಳಿದ ಸಾಮಾನ್ಯ ನಿಯಮಗಳೆಲ್ಲ ಪೂರೈಕೆಗೊಂಡ ಶಿಥಿಲತೆಯನ್ನು ಪಡೆಯದ ಕೆಲವು ಶಬ್ದಗಳೂ ಇದ್ದು, ಅವನ್ನು ವಿರಳವಾಗಿ ಕಂಡುಬರುವ ಅಪವಾದಗಳೆಂದು ತಿಳಿಯಬೇಕು.
೨೩
=
ಮುಖ್ಯವಾಗಿ ತಿಳಿಯಬೇಕಾದ್ದು : ಶಿಥಿಲದ್ವಿತ್ವದ ಶಬ್ದಗಳು ಯಾವಾಗಲೂ ಶಿಥಿಲ ದ್ವಿತ್ವದ ಶಬ್ದಗಳಾಗಿಯೇ ಬಳಕೆಯಾಗುತ್ತವ. - ಅಕಾರಾಂತಕ್ಕೆ : ನೆಗಟ್ + ಗಳ್ = ನೆಗಳ್; ಅಗಟ್ + ಗಳ್ = ಆಗಲ್; ಅಗಲ್ + ಗೆ = ಅಗ.
ಆದ್ಯಕ್ಷರ ದೀರ್ಘಸ್ವರಸಹಿತವಾಗಿದ್ದಾಗ ಅಥವಾ ಗುರುವಾಗಿದ್ದಾಗ ದ್ವಿತ್ವಕ್ಕೆ ಶಿಥಿಲತ್ವ ವಿಲ್ಲ.
ಬಾಸುದ್ಗೀಳ್, ಇಕ್ಕುವ್ಳ್. ಆಕಾರಾಂತಕ್ಕೆ : ಮುಗುಳ್ + ಗಳ್ = ಮುಗುಳಳ್, ಪುಗುಳ್ + ಗಳ್ = ಪುಗುಳಞ. ಇದೇ ಪರಿಸರವಿದ್ದು ಕೂಡ ಶಿಥಿಲ ದ್ವಿತ್ವವಾಗದ ಉದಾ : ಕುರುಳಳ್, ಪುರುಳಳ್, ಮರುಳಳ
ರೇಫಾಂತಕ್ಕೆ : ಎಸರ್ + ಗೆ = ಎಸರ್ಗೆ, ಮೊಸರ್ + ಗೆ = ಮೊಸರ್ಗೆ, ಕೆಸರ್ + ಗಳ್ = ಕೆಸರ್ಗಳ್, ಕೊನರ್ + ಗಳ್ = ಕೊನರ್ಗಳ್
ಅಕಾರಾದೇಶದ ರೇಫೆಗೂ (ಅ > ರ) ಶಿಥಿಲತೃವುಂಟು : ಅಳಿಜ್ + ಗಳ್ = ಅಳಿರ್ಗಳ್; ಪೆಸಟ್ + ಗಳ್ = ಪೆಸರ್ಗಳ್, - ಉತ್ತರ ಭಾಗದಲ್ಲಿ ಗ ದ ವ ಜ ಕಾರಗಳು ಪದದಾದಿಯಲ್ಲಿ ಬರುವ ಸ್ವಾಭಾವಿಕ ಪದ / ಸಮಾಸಕಾರದಿಂದಾಗಿ ಸಿದ್ಧವಾದ ಪದ :
ರಾಂತಕ್ಕೆ ಕುಳಿ + ಗಾಳಿ = ಕುಳಿರ್ಗಾಳಿ; ಅಲರ್ + ತೋಂಟಮ್ = ಅಲರ್ದೊಂ ಟಮ್; ಬೆಮರ್ + ಪನಿ = ಬೆಮರ್ವನಿ; ಅಲರ್ + ಜೊಂಪಮ್ = ಅಲರ್ಜೆಂಪಮ್; ಪೊಗರ್ + ಬಟ್ಟೆ = ಪೊಗರ್ವಟೆ. - ಳಾಂತಕ್ಕೆ : ಮುಗುಳ್ + ಕಾಯ್ = ಮುಗುಳ್ಳಾಯ್, ಅಮಳ್ + ತೊಂಗಲ್ = ಅಮಂಗಲ್, ಎಸಳ್ + ಪಸ = ಎಸಳ್ಳಸ, ಅಮಲ್ + ಜಂತ್ರಮ್ = ಅಮwಂತ್ರಮ್.
ಜಾಂತಕ್ಕೆ, ಟಾಂತಕ್ಕೆ : ಸಮಾಸಪದಗಳಲ್ಲಿ ಪೂರ್ವಪದಾಂತ ಆಕಾರದ ಹಾಗೂ ವಿಕಾರದ ಪ್ರಕೃತಿಗಳಿದ್ದಾಗ ಶಿಥಿಲದ್ವಿತ್ವ ಸಾಧ್ಯ ಎನ್ನುವುದಕ್ಕೆ ತಕ್ಕ ಉದಾಹರಣೆಗಳು ದೊರೆಯು
ಒಂದಕ್ಕಿಂತ ಹೆಚ್ಚು ಸಂಖ್ಯೆಯ ಪ್ರಕೃತಿಗಳಿಂದಾದ ಸಮಾಸಗಳಲ್ಲಿಯೂ ಶಿಥಿಲತ್ನ
ಸಾಧ್ಯ.
ಪಸುರ್ + ತಳಿರ್ + ತೊಂಗಲ್ = ಪರ್ಸುಳಿರ್ದೊಂಗಲ್. ಪ್ರಚುರತಗೆ : ಕೋಸಗಸದುದು | ಮಲರ್ದಲರ್ದುಳ್ಳಲರ್ದ ಮಿಸುಪ ಪೊಸತಲರ್ದಲರಿಮ್ (ಚಂದ್ರವು. ೫-೫೬)
೨೪
ಆದಿಯಲ್ಲಿ ಪ್ರಸ್ತಾಕ್ಷರವಿರುವ, ಅನೇಕಾಕ್ಷರಗಳಿರುವ ಬಿ ಕುಳ ರೇಫಾಂತಗಳಾದ ಧಾತುಗಳಿಗೆ ದ ದಪ ವ ಎಂಬ ಕಾಲವಾಚಕ ಪ್ರತ್ಯಯಗಳಾಗಲಿ, ವಿಧ್ಯರ್ಥದ ಗ ಕಾರವಾಗಲಿ, ವರ್ತಮಾನ ಕಾಲದ ಗುಂ ಪ್ರತ್ಯಯವಾಗಲಿ ಸೇರಿದಾಗ ಏರ್ಪಡುವೆ ದ್ವಿತ್ವಗಳಿಗೆ ಶಿಥಿಲತೆಯುಂಟು. ಉದಾ : - ಚಾಂತಕ್ಕೆ : ಜಗುಟ್ + ದನ್ = ಜಗುಟ್ಟಿನ್, ನೆಗಟ್ + ವಪನ್ = ನೆಗಟೀಪನ್, ನಗಲ್ + ವನ್ = ನೆಗಟ್ಟಿನ್; ತಗಟ್ + ಗೆ = ತೆಗ, ಪೊಗಲ್ + ಗೆ = ಪೊಗಟ್: ತೆಗಲ್ + ಗುಮ್ = ತೆಗಟ್ಟುಮ್.
ಉತ್ತಮಪುರುಷ ವಿಧ್ಯರ್ಥವಾಗಿದ್ದರೆ ನೆಗಟ್ಟಿಮ್, ತೆಗಟ್ಟಿಮ್ ಎಂಬುದು ಮಾಡೋಣ, ತೆಗಳೊಣ ಎಂಬ ಅರ್ಥಗಳನ್ನು ಕೊಡುವುದು ಶಕ್ಯ.
ಕುಳಾಂತಕ್ಕೆ: ನುಸುಳ್ + ದನ್ = ನುಸುನ್, ನುಗುಳ್ + ದನ್ = ಮುಗುಳನ್; ಮಗು + ದಪನ್ = ಮಗುಳಪನ್; ಮಗುಳ್+ವನ್ = ಮಗುಳ್ಳನ್; ಮಸುಳ್ * ಗ = ಮಸುಳ್ಳ ನುಸುಳ್ + ಗ = ನುಸುಳ; ಮಸುಳ್ + ಗುಮ್ = ಮಸುಳ್ಳು; ನುಸುಲ್ + ಗುಮ್ = ನುಸುಳ್ಳು ಮ್.
ವಿಶೇಷವೆಂದರೆ “ನುಗುಳ್ನ್’ಗೆ ಸದೃಶವಾದ್ದು ‘ತಗುಳ್ಳನ್’. ಆದರೂ ಇದರ ಕಾವ್ಯ ಪ್ರಯೋಗಗಳಲ್ಲಿ ಒಮ್ಮೆ ಶಿಥಿಲದ್ವಿತ್ವವಾಗಿ, ಇನ್ನೊಮ್ಮ ಸ್ವಭಾವದ್ವಿತ್ವವಾಗಿ ಕಂಡು ಬಂದಿದೆ. ಉದಾ: ಪಂಪಭಾರತದ “ಕೊಂಡು ನಿರಂತರಂ ತಗುಳ್ಳು ಕೀರ್ತಿಸ’ (೧-೩) ಎಂ ಪ್ರಯೋಗದಲ್ಲಿ ಶಿಥಿಲ; ಆದಿಪುರಾಣದ “ಮರನಂ ತಗುಳುದಂ | ಬನೂಳಣೆಯಾಗ” (೯-೫೯) ಎಂಬ ಪ್ರಯೋಗದಲ್ಲಿ ದ್ವಿತ್ವ.
-ರಳ-ಪರಿಸರದಲ್ಲಿ ಶಿಥಿಲವಿಲ್ಲ ಎನ್ನುವುದು ಒಂದು ವಿಶೇಷ. ಉದಾ: ತೆರಳನ್ ಪೊರಟ್ಟನ್ ಸುರುಟ್ಟನ್ ಇಂಥವು. ಹೀಗಿದೂ, ಕವಿಪ್ರಯೋಗದಲ್ಲಿ ಶಿಥಿಲತಕ್ಕೆ ವಿರಳವಾಗಿ ಅವಕಾಶವಾಗಿರುವುದೂ ಉಂಟು. (ಗದಾಯುದ್ದದಲ್ಲಿ ಉರುಳ ಎಂಬ ೩-೬ರ ಪ್ರಯೋ! ಅಭಿನವದಶಕುಮಾರ ಚರಿತೆಯಲ್ಲಿ ಮರುಳ್ಳಡೆ ಎಂಬ ೫-೪ರ ಪ್ರಯೋಗ.) .
ರೇಖಾಂತಕ್ಕೆ : ತೊಡರ್ +ದನ್ = ತೊಡರ್ದನ್, ತಳ + ದನ್ = ತಳರ್ದನ್? ನಿಮಿರ್ + ದಪನ್ = ನಿಮಿರ್ದಪನ್, ನಿಮಿರ್ + ವನ್ = ನಿಮಿರ್ವನ್; ಅದರ = ಅಡರ್ಗ, ಅದಿರ್+ಪ = ಆದಿರ್ಗ: ಅಮರ್ + ಗುಯ್ = ಅಮರ್ಗುಮ್, ನಿಮಿರ್ + ಗುಮ್ = ನಿಮಿರ್ಗುಮ್,
ಲಾಂತ ಧಾತುಗಳಿಗೆ ಶಿಥಿಲತೆಯಿಲ್ಲ. ಆದರೆ ವಿರಳವಾಗಿ ನಿದರ್ಶನಗಳೇನೋ ಉಂಟು. ಇವನ್ನು ಗಮನಿಸುವಾಗ ಅಪವಾದಗಳೆಂಬಂತೆ ಇದನ್ನು ಭಾವಿಸಬೇಕಲ್ಲದೆ ಸಾಮಾನ್ಯ ನಿಯಮವಾಗಿ ಅಲ್ಲ. ಉದಾ.ಗೆ ಅಗಲ್ಲ + ಉ = ಆಗಲ್ಲುರ (ಆದಿಪು. ೧೨-೯೫)
ರ್ಮಿ
ನ್: ಅಡರ್ + ಗೆ.
ಎಟಲ್ + ವ = ಎಬಿ (ಶಾಂತೀಶ್ವ, ೧೨-೪೬)
5ು .
ಪ್ರಕೃತಿಗಳ ಅಂತರಾಳದಲ್ಲಿಯೇ ಶಿಥಿಲತ್ವವಿರುವ ದ್ವಿತ್ವದ ಕೆಲವು ಶಬ್ದಗಳುಂಟು. ಈ ಶಬ್ದಗಳಿಗೆ ಪ್ರತ್ಯಯಗಳಾವುವೂ ಸೇರದೆಯೇ ಸ್ವಾಭಾವಿಕವಾಗಿಯೇ ಶಿಥಿಲತ್ವವುಂಟು. ಇವು ‘ಸಹಜ ಶಿಥಿಲವೃತ್ತಿ’ಯ ಶಬ್ದಗಳು. - ಬರ್ದಿಲ, ಗರ್ದುಗು, ಅಮರ್ದು, ಅಮರ್ದವಳ್ಳಿ, ಎರ್ದವಾಯ್, ಅದಿರ್ಮುತ್ತೆ, ಎರ್ದೆ, ಕರ್ದುಂಕು, ಬರ್ದುಂಕು.
ಈವರಗೆ ನೋಡಿದ ಶಿಥಿಲದ್ವಿತ್ವದ ಪರಿಸರ, ವರ್ಣಗಳ ಆನುಪೂರ್ವಿ ಇವು ಯಾವುವೂ ಇಲ್ಲದೆಯೂ ಇವು ಹೇಗೆ ದ್ವಿತ್ವಶೈಥಿಲ್ಯವನ್ನು ಪಡೆದುವು ಎನ್ನುವುದು ಪ್ರಶ್ನೆ. ಈ ಪ್ರಶ್ನೆಗೆ ಭಾಷಿಕವಾಗಿ ಈಗಾಗಲೇ ವಿವರಣೆಗಳನ್ನು ಕೊಡಲಾಗಿದೆ. ಈ ಶಬ್ದಗಳು ಪರಿಮಿತ ಸಂಖ್ಯೆಯವು; ರೇಖೆಗೆ ಮಾತ್ರ ಅನ್ವಯಿಸುವಂಥವು.
ದ್ವಿತ್ವಗಳು ಶಿಥಿಲದ್ವಿತ್ವಗಳಾಗಿ ನಡೆಯುವುದು ಯಾವ ವ್ಯಾಕರಣಪ್ರಕ್ರಿಯೆ ಕಾರಣ ವಾಗಿ? ರೇಫಯನ್ನೂ ಮೂರ್ಧನ್ಯವಾಗಿ ಸಂದರ್ಭೋಚಿತವಾಗಿ ಪರಿಗಣಿಸಿದರೆ, ಪೂರ್ವ ಭಾಗಾಂತ್ಯದ ಧ್ವನಿಗಳಲ್ಲ ಮೂರ್ಧನ್ಯಗಳು; ಪರಭಾಗದವು ಮೂರ್ಧನೋತರಗಳು; ಆದರ ಸರಳಾಕ್ಷರಗಳು, ಘೋಷವರ್ಣಗಳು. ಈ ಕಾರಣವಾಗಿ ಇಲ್ಲಿ ಏರ್ಪಡುವ ದೈತ್ಯ ನೈಸರ್ಗಿಕ ವಾಗಿ ಶಿಥಿಲತ್ವ ಪಡೆಯಲು ಅವಕಾಶವಾಗಿದೆ. ಪರುಷಾಕ್ಷರಗಳ ದ್ವಿತ್ವವಾಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ ಬಹುಪಾಲು ಉದಾಹರಣೆಗಳು ನಡುಗನ್ನಡದಲ್ಲಿ ದ್ವಿತ್ವ ವಿರಳಗಳಾಗಿ ಪರಿವರ್ತಿಸಿವ (ಉದಾ.ಗೆ ಎಸಳ್ - ಎಸಳುಗಳು, ನಿಮಿರ್ದನ್ - ನಿಮಿರಿದನ್, ಮುಗುಳ್ - ಮುಗುಳುಗಳು); ಸಜಾತೀಯದ್ವಿತ್ವಗಳಾಗಿ ಅಲ್ಲ. ದ್ವಿತ್ವ ಶೈಥಿಲ್ಯಕ್ಕೂ ಈ ವಿರಳತೆಗೂ ಸಂಬಂಧವಿರಬಹುದು.
ಪ್ರಾಚೀನ ಕವಿಕೃತಿಗಳ ಛಂದೋಬದ್ಧವಾದ ಪಠಭಾಗಗಳಲ್ಲಿ, ಎಂದರೆ ವೃತ್ತ ಕಂದಾದಿಗಳಲ್ಲಿ, ಶಿಥಿಲದ್ವಿತ್ವದ ಸಂದರ್ಭಗಳನ್ನು ಅಭ್ಯಾಸಿಗಳು ನಿರ್ದುಷ್ಟವಾಗಿ, ನಿರ್ದಿಷ್ಟ ವಾಗಿ ಗುರುತಿಸುವುದು ಸುಲಭವಲ್ಲ. ಕಾವ್ಯಕಲಾನಿಧಿ ಕಾವ್ಯಮಂಜರಿ ಮೊದಲಾದವುಗಳ ಮೊದಮೊದಲ ಪರಿಷ್ಕರಣಗಳಲ್ಲಿ ಶಿಥಿಲದ್ವಿತ್ವದ ಶಬ್ದಗಳ ದ್ವಿತ್ವಗಳ ಮೇಲೆ ಒಂದು ನಕ್ಷತ್ರಚಿಹ್ನೆಯನ್ನು ತೋರಿಸಿ, ಆ ಸಂದರ್ಭಗಳನ್ನು ಸೂಚಿಸುವ ಒಂದು ಕ್ರಮವನ್ನು ರೂಢಿಸಿದ್ದರು. ಈಚಿನ ಸಂಪಾದಕರ ಪರಿಷ್ಕರಣಗಳಲ್ಲಿ ಆ ಕ್ರಮ ಕಾಣಿಸುವುದಿಲ್ಲ. ಶಬ್ದಮಣಿದರ್ಷಣದಂತಹ ವ್ಯಾಕರಣಗಳ ಶಿಥಿಲದ್ವಿತ್ವದ ಲಕ್ಷಣ ಲಕ್ಷ್ಮಭಾಗಗಳನ್ನು ಮೊದಲಲ್ಲಿಯೆ ಹೃದ್ಗತ ಮಾಡಿಕೊಂಡಿದ್ದರೆ, ಸುಲಭವಾಗಿ ಗುರುತಿಸುವುದು ಸಾಧ್ಯವಿದೆ; ಪದ್ಯವಾಚನದಲ್ಲಿ ಲಯವನ್ನು ಹಿಡಿದು ಕೂಡ ಗುರುತಿಸುವುದು ಶಕ್ಯವಿದೆ. ಹಾಗಲ್ಲ ವಾದರೆ, ಹಳಗನ್ನಡ ಭಾಷೆಯ ಒಂದು ಅವಶ್ಯ ವ್ಯಾಕರಣಾಂಶದ ಪರಿಚಯವಿಲ್ಲದೆ, ವಾಚನ ಅರ್ಥಗ್ರಹಣಗಳು ಆಭಾಸಕರವಾಗಿ ಪರಿಣಮಿಸುತ್ತವೆ.
ವ್ಯಾಕರಣ ಪಠ್ಯಗಳಲ್ಲಿ ಕೆಲವು ಇತ್ವ, ಉತ್ಪಾದಿ ಧಾತುಗಳನ್ನು ತೋರಿಸಿದ್ದರೂ ಅವುಗಳ
೨೬
ನಿಷ್ಪನ್ನರೂಪಗಳ ಆಧಾರದ ಮೇಲೆ ಅವು ಎತ್ಮ ಒತ್ಯಾದಿ ರೂಪಗಳಲ್ಲಿರುವುದೇ ಸ್ವಾಭಾವಿಕವೆಂದು ಭಾವಿಸಲವಕಾಶವಿದೆ.
ಉದಾ. ಇತ್ಯಾದಿ : ಕಿಡು-ಕೆಡು, ತಿಳು-ತಲು, ಇ-ಎ; ಉತ್ಪಾದಿ: ಪುಗು-ಪೊಗು, ಕುಡು-ಕೊಡು; ಇಸು-ಎಸು.