೦೨ ಹಳಗನ್ನಡ ವರ್ಣಮಾಲೆ

ಡಿ

ವರ್ಣಗಳು

ಸ್ವರಗಳು (೧೪)

ಅ ಆ ಇ ಈ ಉ ಊ ಋ ಋ ಎ ಏ ಐ ಒ ಓ ಔ ವ್ಯಂಜನಗಳು : ವರ್ಗಿಯಗಳು (೨೫) ಕ ವರ್ಗ : ಕ ಖ ಗ ಘ ಜಿ

ಚ ವರ್ಗ : ಚ ಛ ಜ ಝ ಞ ಟ ವರ್ಗ :

ಠ ಡ ಢ ಣ ತ ವರ್ಗ :

ತ ಥ ದ ಧ ನ ಪ ವರ್ಗ : ಪ ಫ ಬ ಭ ಮ ವ್ಯಂಜನಗಳು : ಅವರ್ಗಿಯಗಳು (೧೧)

ಯ ರ ಲ ವ ಶ ಷ ಸ ಹ ಳ ಆ ಆ ಯೋಗವಾಹಗಳು (೨)

ಅನುಸ್ವಾರ (೦), ವಿಸರ್ಗ (8) ವರ್ಣೋಚ್ಚಾರಣೆಯ ದೃಷ್ಟಿಯಿಂದ ಆಧುನಿಕ ಭಾಷಾವಿಜ್ಞಾನಿಗಳು ಈ ವರ್ಣ ಮಾಲೆಯ ವರ್ಣಗಳನ್ನು ಹೀಗೆ ಗುರುತಿಸುತ್ತಾರೆ.

ಸ್ವರಗಳು

ವಿಸ್ತತೋಷ್ ಇ ಎ; ವೃತ್ಕಷ್ಟ ಉ ಓ ಪೂರ್ವ ಇ ಎ; ಮಧ್ಯ ಅ; ಪಶ್ಚ ಉ ಓ

ಸಂವೃತ ಈ ಊ; ವಿವೃತ ಆ ವ್ಯಂಜನಗಳು : ವರ್ಗಿಯಗಳು

ಕಂಠ ಕವರ್ಗ; ತಾಲವ್ಯ ಚ ವರ್ಗ; ಮೂರ್ಧನ್ಮ ಟ ವರ್ಗ, ದಂತ್ಯ ತ ವರ್ಗ : ಓಹ್ಮ ಪ ವರ್ಗ ವ್ಯಂಜನಗಳು : ಅವರ್ಗಿಯಗಳು

ಕಂಠ ಹ; ತಾಲವ್ಯ ಯ ಶ; ಮೂರ್ಧನ್ಯ ರ ಷ ಳ; ದಂತ್ಯಲ ಸ; ಓಷ್ಮವ ಹಳಗನ್ನಡಕ್ಕೆ ವಿಶಿಷ್ಟ ಧ್ವನಿಗಳಾಗಿರುವ ಅ ವರ್ತೃ (ದಂತಮೂಲೀಯ) ಟಿ (ಮೂರ್ಧನ್ಯ; ರೂಢಿಯಾಗಿ ಕಾರವನ್ನು ರಥದಂತೆ ಮೂರ್ಧನ್ಯವೆಂದೇ ತಿಳಿಯು ವುದಿದೆ.

ಇಲ್ಲಿ ಇನ್ನೂ ಸೂಕ್ಷ್ಮವಾಗಿ ‘ರಲ’ಗಳನ್ನು ವರ್ತೃ (ದಂತಮೂಲೀಯ), ‘ವ’ವನ್ನು ದಂತೋಷವೆಂದೂ ‘ಹ’ವನ್ನು ಗಲೀಯವೆಂದೂ ತಿಳಿಯುವುದಿದೆ. ಸಂಸ್ಕೃತ ವ್ಯಾಕರಣ ಕಾರರು ಯ ರ ಲ ವ ಎಂಬುವನ್ನು ಅಂತಃಸ್ಟವರ್ಣಗಳೆಂದೂ ಶ ಷ ಸ ಹ ಗಳನ್ನು ಊಷ್ಮವರ್ಣಗಳೆಂದೂ ತಿಳಿಯುವುದಿದೆ.

  • ವರ್ಣಮಾಲೆಯ ವರ್ಣಗಳನ್ನು ಹೀಗೆ ಗುರುತಿಸುವುದರಿಂದ, ಎಂದರ ವರ್ಣೋ ತ್ಪತ್ತಿಯ ಸ್ಥಾನ ಮತ್ತು ಪ್ರಯತ್ನಗಳನ್ನು ತಿಳಿಸುವುದರಿಂದ ಏನು ಪ್ರಯೋಜನವಿದೆ? ಸಂಧಿಕಾರಗಳನ್ನೂ ಸಮಾಸಕಾರಗಳನ್ನೂ ತಪ್ಪಿಲ್ಲದೆ, ತೊಡಕಿಲ್ಲದೆ ಗುರುತಿಸುವಲ್ಲಿ ಈ ವಿಶ್ಲೇಷಣೆ ಸಹಕಾರಿಯಾಗುತ್ತದೆ ಎನ್ನುವುದೇ ಇದರ ಉತ್ತರ,

ಹಳಗನ್ನಡ ಭಾಷೆಯಲ್ಲಿ ರಚಿತವಾದ ಸಾಹಿತ್ಯದ ಶಬ್ದಭಂಡಾರ ಸಂಸ್ಕೃತ ಪ್ರಾಕೃತ ಭಾಷೆಗಳ ಸಾಹಿತ್ಯಗಳಲ್ಲಿ ಬಳಕೆಯಾಗುವ ಶಬ್ದಗಳನ್ನು ಕೂಡ ಧಾರಾಳವಾಗಿಯೂ ಅನಿವಾರವಾಗಿಯೂ ಒಳಕೊಳ್ಳುವ ಕಾರಣದಿಂದಾಗಿ, ಹಳಗನ್ನಡ ವರ್ಣಮಾಲೆ ೫೨ ವರ್ಣಗಳ ಒಂದು ಸಮಾಮ್ರಾಯವಾಗಿದೆ. ಹಳಗನ್ನಡ ವ್ಯಾಕರಣವಾಗಿರುವ ‘ಶಬ್ದಮಣಿ ದರ್ಪಣ’ದ ಕರ್ತೃ ಕೇಶಿರಾಜನು ಮೊದಲು ಪೂರ್ಣಸ್ವರೂಪದ ಸಂಸ್ಕೃತ ವರ್ಣಮಾಲೆ ಯನ್ನು ನಿರೂಪಿಸಿ, ಬಳಿಕ ಸೂಕ್ತ ವಿವರಣೆಗಳ ಮೂಲಕ ಅಚ್ಚಗನ್ನಡ ಅಥವಾ ದೇಶೀಯ ಎಂಬ ವರ್ಣಮಾಲೆಯ ೪೭ ವರ್ಣಗಳನ್ನು ಅಲ್ಲಿ ಗುರುತಿಸಿದ್ದಾನೆ, ಆದರೆ ಹಳಗನ್ನಡದ ಅಭ್ಯಾಸಕ್ಕೆ ಎಲ್ಲ ೫೨ ವರ್ಣಗಳೂ ಬೇಕಾಗುತ್ತವೆ ಎನ್ನುವುದು ವಿದಿತ.

ವರ್ಣಗಳ ಹಾಗೂ ಅವುಗಳ ಸ್ವರೂಪದ ಕೆಲವು ಸಾಮಾನ್ಯ ಸಂಗತಿಗಳು:

(೧) ಸ್ವರಗಳು

ಈ ಶ್ರೇಣಿಯಲ್ಲಿ ದೀರ್ಘಸ್ವರಗಳಾದ ಐ ಔ ಗಳನ್ನು ಅಯ್ ಅವ್ ಎಂಬ ರೂಪಗಳಲ್ಲಿ ಸಂಧ್ಯಕ್ಷರಗಳಾಗಿ ತಿಳಿದು ಅಚ್ಚಗನ್ನಡ ಶಬ್ದಗಳನ್ನು ಆಯ್ದು ಕದ್ದು, ಅವುಂಡು ಅವುಗು ಹೀಗೆ ಬರೆಯುವುದು ರೂಢಿ (ಇವುಗಳ ಪ್ರಚಲಿತ ಪರ್ಯಾಯ ರೂಪಗಳು ಐದು, ಕೈದು, ಔಂಡು ಔಗು ಹೀಗಿರುತ್ತವೆ). ಈ ರೂಢಿ ಹಳಗನ್ನಡ ವೃತ್ತ ಕಂದಗಳ ಬರಹ ರೂಪವನ್ನು ಗಮನಿಸಿದಾಗ ನಮಗೆ ಮನವರಿಕೆಯಾಗುತ್ತದೆ (ನೋಡಿ: ಆದಿಪು. ೭-೮೨, ಪಂಪಭಾ. ೧೩-೮೬, ಶಾಂತಿಪು. ೧೧-೯೮, ೧೨-೭೩, ಪಂಪರಾ, ೬ ೯, ಮಲ್ಟಿಪು. ೮-೩ ಇ.)

(೨) ವರ್ಗೀಯ ವ್ಯಂಜನಗಳು

ಕನ್ನಡವೂ ಸೇರಿದಂತೆ ದ್ರಾವಿಡ ಭಾಷೆಗಳಲ್ಲಿ ಮಹಾ ಪ್ರಾಣ ವರ್ಣಗಳು ಸ್ವಾಭಾವಿಕವಾಗಿ ಕಂಡುಬರುವುದಿಲ್ಲ. ಆದರೆ ಸಂಸ್ಕೃತ ಪ್ರಾಕೃತ ಶಬ್ದ ಗಳನ್ನು ಸ್ವೀಕರಿಸುವಾಗಲೂ ಅನುಕರಣೆಯ ಶಬ್ದಗಳಲ್ಲಿ ಭಾವತೀವ್ರತೆಯ ಕಾರಣ ದಿಂದಲೂ ಅವನ್ನು ಬಳಸುವುದು ರೂಢಿ. ಹಳಗನ್ನಡ ಸಾಹಿತ್ಯದಲ್ಲಿ ಅನುಕರಣಾತ್ಮಕ ಶಬ್ದಗಳನ್ನು ಅಲ್ಪಪ್ರಾಣಘಟಿತವಾಗಿಯೇ ಬಳಸುವುದನ್ನು ಸಾಮಾನ್ಯವಾಗಿ ಕಾಣಬಹುದು. ಸಂಸ್ಕೃತ, ಪ್ರಾಕೃತ ಮಹಾಪ್ರಾಣಘಟಿತ ಶಬ್ದಗಳು ಯಥಾರೀತಿ ಬಳಕೆಯಾಗುವಂತೆಯೇ

೧೬

ಕೆಲವು ಶಬ್ದಗಳು ಪರಂಪರಾಗತವಾಗಿ ಅಲ್ಪಪ್ರಾಣಘಟಿತವಾಗಿ ಕೂಡ ತದ್ಭವರೂಪಗಳಲ್ಲಿ ಬಳಕೆಯಾಗುತ್ತಿವೆ. ಶಬ್ದಮಣಿದರ್ಪಣದ ಅಪಭ್ರಂಶ ಪ್ರಕರಣದಲ್ಲಿ ಅದರ ಲಕ್ಷಣ ಲಕ್ಷ್ಮಗಳ ಸ್ವರೂಪವನ್ನು ಗುರುತಿಸಿದ್ದು, ಆಸಕ್ತರು ಅದನ್ನು ಗಮನಿಸಬಹುದಾಗಿದೆ.

ಸಂಯುಕ್ತಾಕ್ಷರಗಳಲ್ಲಿ ವರ್ಗ ಪಂಚಮಾಕ್ಷರಗಳನ್ನು ಬಳಸುವುದು ವರ್ಣೋಚ್ಚಾರದ ಸ್ಪಷ್ಟತೆಯ ದೃಷ್ಟಿಯಿಂದ ಸೂಕ್ತವೆಂದು ತಿಳಿದಿದ್ದರೂ ಆ ಅಕ್ಷರಗಳಿಗೆ ಪಠ್ಯಾಯವಾಗಿ ಅನುಸ್ವಾರವೊಂದನ್ನೇ ಪ್ರಾತಿನಿಧಿಕವಾಗಿ ಸೌಲಭ್ಯದ ದೃಷ್ಟಿಯಿಂದ ಬಳಸುತ್ತಿದೆ. ಅನುಸ್ವಾರ ವನ್ನು ವಿಶಿಷ್ಟವಾದೊಂದು ವರ್ಣವೆಂದು ತಿಳಿಯದೆ, ಒಂದು ಲಿಪಿಸಂಕೇತವಾಗಿ ಮಾತ್ರ ಗ್ರಹಿಸಬೇಕು.

(೩) ಅವರ್ಗೀಯ ವ್ಯಂಜನಗಳು

ಈ ವರ್ಣಗಳ ಶ್ರೇಣಿಯಲ್ಲಿಲ ಎಂಬ ವರ್ಣವಿದೆ ಯಷ್ಟೆ. ಈ ವರ್ಣ ಬಳಸಿದ ಸಂಸ್ಕೃತ ಶಬ್ದಗಳಿವೆ (ಉದಾ: ಕಮಲ, ಕಲಭ, ಲತಾ); ಹಾಗೆಯೇ ಅಚ್ಚಕನ್ನಡ ಶಬ್ದಗಳೂ (ಉದಾ: ಅಟಲ್, ನೆಲಸು, ಸೋಲ್) ಇವೆ. ಇವು ಗಳಲ್ಲಿ ಸಂಸ್ಕೃತ ಶಬ್ದಗಳ ವಿಷಯಕ್ಕೆ ಬಂದಾಗಲಕಾರ ಘಟಿತ ಶಬ್ದಗಳನ್ನು ಹಳಗನ್ನಡ ಸೇರಿದಂತೆ ಕನ್ನಡದ ಆಡುಮಾತು ಬರವಣಿಗೆಗಳಲ್ಲಿ ಚಕಾರ ಘಟಿತವಾಗಿ ಆಡುವುದೂ ಬರೆಯುವುದೂ ಸಾಮಾನ್ಯ (ಉದಾ: ಕಮಳ, ಕಳಭ, ಛತೆ). ಹೀಗೆ ಸಂಸ್ಕೃತ ಲಕಾರದ ಸ್ಥಾನದಲ್ಲಿ ಬಳಸುವ ಳಕಾರವನ್ನು ಅಚ್ಚಕನ್ನಡ ವರ್ಣವಾದ (=ಕುಳ)ಕಾರದಿಂದ ಬೇರೆ ಯಾಗಿ ಕಳವೆಂದು ಗುರುತಿಸುವ ರೂಢಿಯಿದೆ. ಉಚ್ಚಾರಣೆಯಲ್ಲಿಯೂ ಲಿಪಿರೂಪದ ಲ್ಲಿಯೂ ಅವರಡೂ (‘ಕುಳ’ ಳಕಾರ, ‘ಕಳ’ ಆಕಾರ) ಒಂದೇ ಎಂದು ತಿಳಿದಿರಬೇಕು. ಈ ಲಿಪಿಸಾಮ್ಮ ಪ್ರಾಸಸ್ಥಾನಕ್ಕೂ ಅನ್ವಯಿಸುತ್ತದೆ. ಪದಾದಿಯ ಸಂಸ್ಕೃತ ಲಕಾರ ಕನ್ನಡದಲ್ಲಿ ಕ್ಷಳವಾಗಿ ಉಚ್ಚಾರವಾಗುವುದೂ ಬರೆಯಲ್ಪಡುವುದೂ ತೀರ ವಿರಳ.

ಹಕಾರದ ಬಗೆಗೆ

ಹಳಗನ್ನಡದ ಮೊದಮೊದಲ ಸಾಹಿತ್ಯದಲ್ಲಿ ಹಕಾರದ ಶಬ್ದಗಳು ಸಂಸ್ಕೃತ ಪ್ರಾಕೃತಗಳ ಸ್ವೀಕೃತ ಶಬ್ದಗಳಲ್ಲಿ ಮಾತ್ರ: ಅಚ್ಚಕನ್ನಡ (ದೇಶ) ಶಬ್ದಗಳಲ್ಲಿ ಅಲ್ಲ. ಉತ್ತರೋತ್ತರ ಕಾಲದಲ್ಲಿ ಸಂಸ್ಕೃತ ಪ್ರಾಕೃತಗಳ ಸಂಪರ್ಕ ಹೆಚ್ಚಿದಂತೆ, ಪದಾದಿಯ ಪಕಾರಘಟಿತ ದೇಶಬ್ದಗಳು, ನಡುಗನ್ನಡ ಕಾಲದ ಇತರ ಭಾಷಿಕ ವ್ಯತ್ಯಾಸಗಳೂ ಸೇರಿದಂತೆ, ಹಕಾರಘಟಿತ ಶಬ್ದಗಳಾಗಿ ಪರಿವರ್ತನೆಗೊಳ್ಳತೊಡಗಿ, ಮುಂದೆ ಆ ರೂಪ ಗಳು ಸಾರ್ವತ್ರಿಕ ಎನ್ನುವಂತಾದುವು. ಉದಾ.ಗೆ ಪಣ್-ಹಣ್ಣು, ಪಾಸು-ಹಾಸು, ಪಿಸಿ ಹಿಸಿ, ಪೀಲ-ಹೀರು, ಪುಟ್ಟು-ಹುಟ್ಟು, ಪೂಡು-ಹೂಡು, ಪಡ-ಹೆಡೆ, ಪಸು-ಹೇಸು, ಪೊಡೆ-ಹೊಡೆ, ಪೋಗು-ಹೋಗು, ಪೋಟಲ್-ಹೊಳಲು, ಪೇಟು-ಪೇರು ಇ.

ಈ ಪರಿವರ್ತನೆ ಶಿವಶರಣರ ವಚನಸಾಹಿತ್ಯ ಕಾಲದಿಂದ ಎಂದರೆ ಸುಮಾರು ೧೨ನೆಯ ಶತಮಾನದ ಮಧ್ಯಭಾಗದಿಂದ ಹೆಚ್ಚು ವ್ಯಾಪಕವಾಯಿತಾದರೂ ಆ ಕಾಲಮಾನಕ್ಕೆ ಸ್ವಲ್ಪ ಮೊದಲಿನ ಹಾಗೂ ಅನಂತರದ ಪ್ರೌಢವಾದ ಹಳಗನ್ನಡದ ಗದ್ಯ ಪದ್ಯಕಾವ್ಯಗಳಲ್ಲಿ

೧೭

ಕೂಡ ವಿರಳವಾಗಿ ಅದರ ಕುರುಹುಗಳನ್ನು ಗುರುತಿಸಬಹುದು. ಪ್ರಾಚೀನ ಶಾಸನಗಳ ಲ್ಲಿಯೂ ಸಾಹಿತ್ಯಕೃತಿಗಳಲ್ಲಿಯೂ ಈಗಾಗಲೇ ಈ ಪ್ರವೃತ್ತಿಯನ್ನು ಭಾಷಾ ವಿಜ್ಞಾನಿಗಳು ಕೆಲಮಟ್ಟಿಗೆ ಗುರುತಿಸಿದ್ದಾರೆ. -

ಱ ಮತ್ತು ೞ

ಇದೇ ಶ್ರೇಣಿಯಲ್ಲಿ ಕೊನೆಯದಾಗಿ ಗುರುತಿಸಿರುವ ಱ ಮತ್ತು ೞ ಎಂಬ ಎರಡು ಧ್ವನಿಗಳ ವಿಚಾರವನ್ನು ಅಭ್ಯಾಸಿಗಳು ವಿಶೇಷವಾಗಿ ಗಮನಿಸುವುದು ಸೂಕ್ತ. ಹಳಗನ್ನಡ ದಲ್ಲಿ ಸಾಮಾನ್ಯ ರೇಫನೆಂಬ ರಕಾರದ ಶಬ್ದಗಳೂ ಶಕಟರೇಫವೆಂಬ ಆಕಾರದ ಶಬ್ದಗಳೂ, ಅವು ಕ್ರಿಯಾಪ್ರಕೃತಿಗಳಾಗಿರಲಿ ಇಲ್ಲವ ನಾಮಪ್ರಕೃತಿಗಳಾಗಿರಲಿ, ಬೇರೆ ಬೇರೆ ಅರ್ಥ ಗಳನ್ನು ಕೊಡುವ ಶಬ್ದಗಳು; ಹಾಗೆಯೇ ಕುಳವೆಂಬ ಳಕಾರದ ಶಬ್ದಗಳೂ ಬೀಟ/ರಳವೆಂಬ ಅಕಾರದ ಶಬ್ಬಗಳೂ ಕೂಡ, ಅವು ಕ್ರಿಯಾಪ್ರಕೃತಿಗಳಾಗಿರಲಿ ಇಲ್ಲವ ನಾಮಪ್ರಕೃತಿಗಳಾ ಗಿರಲಿ ಬೇರೆ ಬೇರೆ ಅರ್ಥಗಳನ್ನು ಕೊಡುವ ಶಬ್ದಗಳು. ಇವನ್ನು ಕೆಲವು ಉದಾಹರಣೆ ಗಳಿಂದ ಸ್ಪಷ್ಟಪಡಿಸಿಕೊಳ್ಳಬಹುದು:

(೧) ಸಾಮಾನ್ಯರೇಫ - ಶಕಟರೇಫ :

ಅರಿ-ಕತ್ತರಿಸು, ಅಲ್-ತಿಳಿ; ಪರಿ- ಮುಂದೆ ಸಾಗು, ಪಜ್ - ಸೀಳು; ಕರೆ - ಕೂಗು, ಕ - ಕಳಂಕ; ಕೆರೆ - ಉಗುರಿನಿಂದ ಗೀರು, ಕೆಳ - ಜಲಾಶಯ; ಪರ - ಹರಡು, ಪತಿ ಒಂದು ಬಗೆಯ ಚರ್ಮವಾದ್ಯ,

(೨) ಕುಳ ಳ ಕಾರ – ಚ ಕಾರ : ಪೂಳೆ - ಪ್ರಕಾಶಿಸು, ಪೂಣಿ - ನದಿ; ಆಳ್ - ವ್ಯಕ್ತಿ, ಸೇವಕ, ಆಟ್ - ಮುಳುಗು; ಬಾಳ್ - ಕತ್ತಿ, ಬಾಟ್ - ಜೀವನ, ಜೀವಿಸು, ಬಾಳೆ - ಒಂದು ಬಗೆಯ ಮೀನು, ಬಾಳೆ - ಒಂದು ಬಗೆಯ ಹಣ್ಣು; ತಳ - ಹೊಂದು, ತೀಟೆ - ಛತ್ರಿ.

ಎಲ್ಲಿಯವರೆಗೆ ರ - ಕಾರದ ಮತ್ತು ಇ - ಆ ಕಾರದ ವರ್ಣಗಳು ತಂತಮ್ಮ ಉಚ್ಚಾರದ ಪ್ರತ್ಯೇಕತೆಯನ್ನು ಉಳಿಸಿಕೊಂಡಿದ್ದುವೋ ಅಲ್ಲಿಯವರೆಗೆ ಆ ವರ್ಣಗಳನ್ನು ಒಳಕೊಂಡ ಶಬ್ದಗಳು ಮಾತು ಬರಹಗಳಲ್ಲಿ, ಪದ್ಯಗಳ ಪ್ರಾಸಸ್ಥಾನಗಳಲ್ಲಿ ಎಚ್ಚರಿಕೆ ಯಿಂದ ಬಳಕೆಯಾಗುತ್ತಿದ್ದುವು. ಈ ಪ್ರತ್ಯೇಕತೆ ಕಾಲಕ್ರಮದಲ್ಲಿ ಕ್ಷೀಣಗೊಂಡು ಅಕಾರ ಘಟಿತವಾದವು ರ ಕಾರದ ಶಬ್ದಗಳೊಂದಿಗೆ, ಬಿ ಕಾರ ಘಟಿತವಾದವು ಳ ಕಾರದ ಶಬ್ದಗಳೊಂದಿಗೆ ಏಕೀಭವಿಸಿ ಬಳಕೆಯಾಗತೊಡಗಿದುವು. ಹೀಗಾದಾಗ ಭಿನ್ನವಾದ ಎರಡರ ಅರ್ಥಗಳೂ ಒಂದೇ ರೂಪಕ್ಕೆ ಕೂಡಿಕೊಂಡುವು. ಹೀಗಾದುದು ನಡುಗನ್ನಡದ ಕಾಲಘಟ್ಟ ದಲ್ಲಿ ಎಂದು ಭಾಷಾವಿಜ್ಞಾನಿಗಳು ತಿಳಿದು, ರೇಫ - ಅಕಾರಗಳು ರಕಾರದಲ್ಲಿ ಐಕ್ಯಗೊಂಡು ದನ್ನು ಸುಮಾರು ೧೬ನೆಯ ಶತಮಾನದಲ್ಲಿ ಎಂದೂ ಳ - ವಿಕಾರಗಳು ಛಕಾರದಲ್ಲಿ ಐಕ್ಯಗೊಂಡುದನ್ನು ಸುಮಾರು ೧೧ನೆಯ ಶತಮಾನದಲ್ಲಿ ಎಂದೂ ಗುರುತಿಸುವ ಪ್ರಯತ್ನ ಮಾಡಿದ್ದಾರೆ. ವರ್ಣಸಾಮ್ಮ ಅವಶ್ಯನಿಯಮವಾಗಿರುವ ದ್ವಿತೀಯಾಕ್ಷರ ಪ್ರಾಸಸ್ಥಾನದಲ್ಲಿ

೧೮

ಈ ವರ್ಣಯುಗಳು ಅಮಿಶ್ರವಾಗಿ ಬಂದಾಗ ಪ್ರತ್ಯೇಕ ವರ್ಣಗಳಾಗಿ ವ್ಯವಹಾರದಲ್ಲಿ ಇದ್ದುವೆಂದೂ ಮಿಶ್ರವಾಗಿ ಹಲವು ಸಲ ಬಂದಾಗ ಅವು ಏಕರೂಪವಾಗಿ ವ್ಯವಹಾರದಲ್ಲಿ ರೂಢವಾಗುತ್ತಿದ್ದುವೆಂದೂ ತಿಳಿಯಬೇಕು. ೧೦-೧೧ನೆಯ ಶತಮಾನಗಳ ಪ್ರೌಢ ಚಂಪೂ ಕಾವ್ಯಗಳ ಪರಿಶೀಲನೆಯಿಂದ -ಧ್ವನಿಗಳ ಪೃಥಕ್ಷ್ಯವನ್ನೂ ೧೫-೧೬ನೆಯ ಶತಮಾನಗಳ ಷಟ್ನದಿ ಕಾವ್ಯಗಳ ಪರಿಶೀಲನೆಯಿಂದ ರ-ಧ್ವನಿಗಳ ಪೃಥಕ್ಕವನ್ನೂ ತಿಳಿಯಬಹುದು. ಹಳಗನ್ನಡ ಸಾಹಿತ್ಯದ ಉತ್ತರಕಾಲೀನ ಲಿಖಿತಪಠ್ಯಗಳ ಮಾತೃಕೆಗಳಲ್ಲಿ ಪ್ರತ್ಯೇಕತೆ ಗುರುತಾಗದಂತೆ ಈ ಎರಡೂ ಧ್ವನಿಯುಗ್ಯಗಳು ಒಂದೇ ರೂಪವಾಗಿ (ರ, ೪) ಲಿಖಿತ ವಾಗಿರುವುದು ಸಾಮಾನ್ಯ. ಆಗ ಇಂತಹ ಕೆಲವು ಗುರುತುಪತ್ಯಗಳ ವಿಧಾನದಿಂದ ಹೊಸ ಕಾಲದ ಗ್ರಂಥಸಂಪಾದಕರು ಅವನ್ನು ತಿದ್ದಿ ಪ್ರಕಟಿಸಿದ್ದಾರೆ; ತಿದ್ದದೆ ಪ್ರಕಟಿಸುವುದು ಕಂಡಾಗ, ಅದು ಅನವಧಾನದಿಂದಾದ ಪ್ರಮಾದವೆಂದು ತಿಳಿದು ಸರಿಪಡಿಸುವುದು ಇತರರ ಕರ್ತವ್ಯವಾಗಿರುತ್ತದೆ; ಈ ವಿಷಯದಲ್ಲಿ ಅನ್ಯ ದ್ರಾವಿಡ ಭಾಷೆಗಳ ಜ್ಞಾತಿಪದಗಳು ಕೂಡ ನಮಗೆ ಸಹಾಯ ಮಾಡುತ್ತವೆ. ಹಳಗನ್ನಡ ಭಾಷೆಯ ಅಭ್ಯಾಸಿಗಳು ರ-ಆ, ಇ.ಟಿ ವರ್ಣಗಳ ಪ್ರತ್ಯೇಕತೆಯ ವಿಷಯದಲ್ಲಿ ಸಂದಿಗ್ಧತೆಗೆ ಅವಕಾಶವಿರದಂತೆ ಆಯಾ ವರ್ಣಗಳ ಶಬ್ದರೂಪಗಳನ್ನೂ ಅವುಗಳ ಅರ್ಥಭೇದಗಳನ್ನೂ ಶಬ್ದಮಣಿದರ್ಪಣದ ಪದಪಟ್ಟಿ ಗಳಿಂದ ಇಲ್ಲವೆ ಪ್ರಮಾಣಭೂತವಾದ ಪದಕೋಶಗಳಿಂದ ಖಚಿತಪಡಿಸಿಕೊಳ್ಳುವುದನ್ನು ರೂಢಿಯಲ್ಲಿಟ್ಟುಕೊಳ್ಳಬೇಕು.