೧. ಭೂಮಿಕೆ
ಕನ್ನಡ ಭಾಷೆ ಸುಮಾರು ೧೫೦೦ ವರ್ಷಗಳಿಗೂ ಹಿಂದಿನಿಂದ ಆಡುಮಾತಿನ ರೂಪ ದಲ್ಲಿಯೂ ಬರವಣಿಗೆಯ ಮೂಲಕವಾಗಿಯೂ ಬೆಳೆದುಕೊಂಡು ಬಂದಿದೆ. ಈಗ ನಾವು ರೂಢಿಯಾಗಿ ದೈನಂದಿನ ವ್ಯವಹಾರಕ್ಕೆ, ಸಾಹಿತ್ಯದ ಹಾಗೂ ಸಾಹಿತ್ಯೇತರವಾದ ಬರೆವಣಿಗೆಗೆ ಬಳಸುತ್ತಿರುವ ಕನ್ನಡ ಭಾಷೆಯನ್ನು ‘ಹೊಸಗನ್ನಡ’ ಎಂದು ಕರೆಯುತ್ತಿದ್ದೇವೆ. ಸ್ಕೂಲ ವಾಗಿ ಗುರುತಿಸುವುದಾದರೆ ಸುಮಾರು ೨೦೦-೨೫೦ ವರ್ಷಗಳ ಹಿಂದಿನಿಂದ ನಾವು ಮಾತಾ ಡುತ್ತ, ಬರವಣಿಗೆಗೆ ಬಳಕೆಮಾಡುತ್ತ ಬಂದಿರುವ ಭಾಷೆ ‘ಹೊಸಗನ್ನಡ’. ಆ ಕಾಲಘಟ್ಟ ದಿಂದ ಹಿಂದುಹಿಂದಕ್ಕೆ ಹೋದ ಹಾಗೆ ಕನ್ನಡ ಭಾಷೆ ಶಬ್ದಭಂಡಾರ, ವಾಕ್ಯರಚನೆ ವ್ಯಾಕರಣ ಲಕ್ಷಣಗಳ ದೃಷ್ಟಿಯಿಂದ ಸ್ಥಿತ್ಯಂತರಗಳನ್ನು ತೋರಿಸುತ್ತ, ನಡುಗನ್ನಡ-ಹೂಸಗನ್ನಡ, ನಡುಗನ್ನಡ, ಹಳಗನ್ನಡ-ನಡುಗನ್ನಡ, ಹಳಗನ್ನಡ, ಹಳಗನ್ನಡ-ಪೂರ್ವದ ಹಳಗನ್ನಡ ಎಂಬ ಸ್ಥಿತಿಗತಿಗಳ ಮಿಶ್ರವೋ ಅಮಿಶ್ರವೋ ಆದ ರೂಪಭೇದಗಳಲ್ಲಿ ಬೆಳೆದುಕೊಂಡು ಬಂದುದು ಕಾಣುತ್ತದೆ. - ಹೊಸಗನ್ನಡವನ್ನು ಮಾತಾಡುತ್ತಿರುವ, ಹೊಸಗನ್ನಡದಲ್ಲಿ ಬರೆಯುತ್ತಿರುವ ಇಂದಿನ ಕನ್ನಡ ಭಾಷಿಕರಿಗೆ, ತಮಗೆ ಹಿಂದಿನ ಕಾಲಘಟ್ಟದ ಕನ್ನಡ ಭಾಷಿಕರ ಆಡುಮಾತಿನ ಸ್ವರೂಪ ಹೀಗೆಯೇ ಇದ್ದಿರಬೇಕೆಂದು ತಿಳಿಯುವುದು ಸ್ವಲ್ಪ ಕಷ್ಟವೇ. ಆದರ ಆಯಾ ಕಾಲಘಟ್ಟದ ಬರವಣಿಗೆಯಲ್ಲಿ ರಚಿತವಾದ ಸಾಹಿತ್ಯದ, ವಿಶೇಷವಾಗಿ ಗದ್ಯಸಾಹಿತ್ಯದ, ಇನ್ನೂ ಮುಖ್ಯವಾಗಿ ಶಾಸನಗಳ ಗದ್ಯಸಾಹಿತ್ಯದ, ಕಥನ ಸಂಭಾಷಣೆ ವರ್ಣನೆ ವಿವರಣೆ ನಿವೇದನೆ ಗಳನ್ನು ಗಮನವಿಟ್ಟು ಓದಿದರೆ, ಅವು ಈಗ ನಾವು ಮಾತಾಡುತ್ತಿರುವ ಹಾಗೂ ಬರೆಯು ತಿರುವ ಕನ್ನಡ ಭಾಷೆಗಿಂತ ಸ್ವಲ್ಪ ಬೇರೆಯೇ ಆದ ಶಬ್ದಭಂಡಾರ, ವಾಕ್ಯರಚನೆ ಮತ್ತು ವ್ಯಾಕರಣಲಕ್ಷಣಗಳಿಂದ ಕೂಡಿರುವುದು ಕಂಡುಬರುತ್ತದೆ. ಪ್ರೌಢಕವಿಗಳ ರಚನೆಯಾಗಿ ರುವ ವೃತ್ತ ಕಂದಗಳನ್ನು ಬಳಸದೆ ದೇಶ್ಯಗಳಾದ ಛಂದೋಬಂಧಗಳಲ್ಲಿ ಬರೆದ ಪದ್ಯ ಶಾಸನಗಳು, ದಾನದತ್ತಿಗಳ ಸಾಮಾನ್ಯ ವಿವರಣೆ ನಿವೇದನಗಳಿಂದ ಹೊರಟ ಗದ್ಯಶಾಸನ ಗಳು, ಶಿವಶರಣರ ವಚನಗಳು, ತ್ರಿಪದಿಗಳು, ರಗಳೆ ಷಟ್ಟದಿ ಮತ್ತು ಸಾಂಗತ್ಯ ಕಾವ್ಯಗಳು, ದಾಸರ ಕೀರ್ತನೆಗಳು, ತತ್ವಪದಗಳು ಇಂಥವನ್ನು ಓದಿದಾಗ ಅದರ ಸ್ವರೂಪವನ್ನು ನಮಗೆ ಗುರುತಿಸಲು ಸಾಧ್ಯವಾಗುತ್ತದೆ. ವಿಶೇಷವಾಗಿ ೧೨ನೆಯ ಶತಮಾನದ ಮಧ್ಯಭಾಗ ದಿಂದ ಈಚೆಗೆ ಸಮೃದ್ದವಾಗಿ ಕಾಣಿಸಿಕೊಂಡ ವಚನಸಾಹಿತ್ಯವನ್ನು ಪರಿಶೀಲಿಸಿದರೆ, ಹಾಗೆಯೇ ೧೫ನೆಯ ಶತಮಾನದ ಮಧ್ಯಭಾಗದಿಂದ ಈಚೆಗೆ ವಿಪುಲವಾಗಿ ಕಂಡುಬಂದ ಹರಿದಾಸರ ಕೀರ್ತನ ಸಾಹಿತ್ಯವನ್ನು ಪರಿಶೀಲಿಸಿದರೆ, ಕನ್ನಡ ಆಡುಮಾತಿನ ಹಾಗೂ ಸಾಹಿತ.
ಶಕ್ತಿಯ ಸಾಮಾನ್ಯ ಸ್ವರೂಪದ ಒಳ್ಳೆಯ ಮಾದರಿಗಳಾಗಿ ಅವು ಕಂಡುಬರುತ್ತವೆ. ಸ್ಕೂಲ ವಾಗಿ ೧೨ನೆಯ ಶತಮಾನದ ಮಧ್ಯಭಾಗದಿಂದ ೧೮ನೆಯ ಶತಮಾನದ ಮಧ್ಯಭಾಗದ ವರೆಗಿನ ಕಾಲಘಟ್ಟವನ್ನು ನಾವು ನಡುಗನ್ನಡ ಭಾಷೆಯ ಕಾಲಘಟ್ಟವೆಂದು ತಿಳಿಯಬಹು ದಾಗಿದೆ.
ಈ ಕಾಲಘಟ್ಟದಿಂದ ನಾವು ಹಿಂದಕ್ಕೆ ಸರಿದರೆ, ಪದ್ಯ ಗದ್ಯಗಳು ಬೆರೆತು ಬರುವ, ಚಂಪುವೆಂದು ರೂಢಿಯಾಗಿ ಗುರುತಿಸುವ, ಬಹುಸಂಖ್ಯೆ ದೊಡ್ಡಗಾತ್ರದ ಪ್ರೌಢವಾದ ಕಾವ್ಯಗಳೂ ವಿರಳಸಂಖ್ಯೆಯ ಅಮಿಶ್ರಿತ ಪದ್ಯಕಾವ್ಯಗಳೂ ಗದ್ಯಕಾವ್ಯಗಳೂ ೯-೧೦ ನೆಯ ಶತಮಾನಗಳಿಂದ ರಚಿತವಾಗಿರುವುದು ಕಾಣುತ್ತದೆ; ಹಾಗೆಯೇ ಯಥೋಚಿತ ವಿಸ್ತಾರದ ಶಾಸನಲೇಖನಗಳು ಕೂಡ ಇವನ್ನು ಓದಿದರೆ, ಇವು ನಡುಗನ್ನಡ ಹೊಸಗನ್ನಡಗಳಲ್ಲಿರುವ ಬರಹಗಳು ಅರ್ಥವಾಗುವ ಮಟ್ಟಿಗೆ ಸುಲಭವಾಗಿ ಅರ್ಥವಾಗುವುದಿಲ್ಲ; ತ್ವರಿತವಾಗಿ ಓದಲೂ ಸಾಧ್ಯವಾಗುವುದಿಲ್ಲ. ಇದರ ಕಾರಣಗಳೇನೆಂದು ವಿಚಾರ ಮಾಡಿದರೆ, ಈ ಸಂಗತಿಗಳು ಎದುರು ನಿಲ್ಲುತ್ತವೆ.
(೧) ಸಂಸ್ಕೃತ ಪ್ರಾಕೃತ ಪ್ರಭಾವದ ಪ್ರೌಢವಾದ, ಸುಪರಿಚಿತವಲ್ಲದ ಪದಭಂಡಾರ; ಅಂತಹ ಪದಭಂಡಾರದಿಂದ ಎತ್ತಿದ ಅಥವಾ ಕಟ್ಟಿದ ಪ್ರಸ್ವವೋ ದೀರ್ಘವೋ ಆದ ಸಮಾಸಪದಗಳ ಬಳಕೆ; ಆ ಸಮಾಸಪದಗಳು ಜಟಿಲವಾಗಿ ಹೆಣೆದುಕೊಂಡು ಸಾಗುವ ವಾಕ್ಯರಚನೆ.
(೨) ವಾಕ್ಯರಚನೆಯ ಜಟಿಲತೆಗೆ ಸಮಾಸಘಟಿತ ಪದರಚನ ಒಂದು ಕಾರಣವಾದರೆ, ಬಲುಮಟ್ಟಿಗೆ ವ್ಯಂಜನಾಂತಗಳಾಗಿರುವ ನಾಮವಿಭಕ್ತಿಗಳೂ ಕ್ರಿಯಾವಿಭಕ್ತಿಗಳೂ ಕ್ರಿಯಾ ಪದಗಳನ್ನು ರೂಪಿಸುವುದರಲ್ಲಿ ವಿಕರಣ ಪ್ರತ್ಯಯಗಳೆಂಬ ಕಾಲವಾಚಕಗಳು ಪಡೆಯುವ ವಿಶೇಷವಾದ ರೂಪಭೇದಗಳೂ ಇತರ ಕಾರಣಗಳಾಗಿವೆಯೆನ್ನುವುದು ಗಮನಾರ್ಹವಾದ ಸಂಗತಿ,
(೩) ಸಮಸಂಸ್ಕೃತಶಬ್ದಗಳೂ ವ್ಯಂಜನಾಂತಗಳಾದ ಅಚ್ಚಕನ್ನಡ ಶಬ್ದಗಳೂ ಅನು ಸರಿಸಬೇಕಾಗಿ ಬರುವ ಸಂಧಿನಿಯಮಗಳ ಕಾರಣವಾಗಿಯೂ ವಾಕ್ಯರಚನೆಯಲ್ಲಿ ಜಟಿಲತೆ ಕಾಣಿಸಿಕೊಳ್ಳುತ್ತದೆ.
(೪) ನಮಗೆ ಅಷ್ಟು ಪರಿಚಿತವಲ್ಲದವೋ ಅಪರಿಚಿತವೋ ಆದ ಅಚ್ಚಕನ್ನಡ ಶಬ್ದಗಳೂ ಆ ಶಬ್ದಗಳಿಂದಾದ ನಿಷ್ಪನ್ನರೂಪಗಳೂ ಅರ್ಥಸೌಕಯ್ಯಕ್ಕೆ ತೊಡಕಾಗಬಹುದು.
(೫) ಸಂಸ್ಕೃತ ಪ್ರಾಕೃತ ಪ್ರಭಾವದ ವೃತ್ತಕಂದಗಳೂ ರಗಳೆಗಳೂ ದೇಶೀಯವಾದ ಛಂದೋಬಂಧಗಳೂ ತಾವು ಹಿಡಿದು ನಡೆಯುವ ಗಣಪತಿಯ ದೃಷ್ಟಿಯಿಂದಲೂ ವಾಕ್ಯ ರಚನ ಜಟಿಲತೆಗೆ ಅವಕಾಶಮಾಡುವಂತಿರಬಹುದು; ಅರ್ಥಾನ್ವಯಗಳು ಸುಕರವಲ್ಲದೆ ಹೋಗಬಹುದು.
೧೩
ಇಂತಹ ಕೆಲವು ಭಾಷಿಕ ಮತ್ತು ಛಂದೋಲಕ್ಷಣಗಳಿಂದ ಕನ್ನಡ ಭಾಷೆಯ ಪ್ರಾಚೀನತೆ ಪ್ರತ್ಯೇಕತೆ ಎಂದು ತೋರುವಂತಾಗಿ, ಈ ಕಾಲಘಟ್ಟದ ಭಾಷ ಹಳಗನ್ನಡವೆಂದು ವ್ಯವಹಾರ ವಲ್ಲಿದೆ.
೨. ಆಕರ ಗ್ರಂಥಗಳು
ಹಳಗನ್ನಡ ಭಾಷೆಯಲ್ಲಿ ರಚಿತವಾದ ಶಾಸನಗಳೂ ವಿವಿಧವಾದ ಶಾಸ್ತ್ರಗ್ರಂಥಗಳೂ ಕಾವ್ಯಗ್ರಂಥಗಳೂ ಹೇರಳವಾಗಿದ್ದು, ಅವುಗಳ ಅಭ್ಯಾಸದಿಂದ ದೊರೆಯಬಹುದಾದ ಲಾಭ ಪ್ರಯೋಜನಗಳು ವಿಶೇಷವಾಗಿವೆ. ಇವು ನಮಗೆ ಪ್ರಾಪ್ತವಾಗಬೇಕಾದರೆ, ಆ ಭಾಷೆಯ ಸ್ವರೂಪವನ್ನು ತಿಳಿಸುವ ಹಳಗನ್ನಡ ವ್ಯಾಕರಣಗಳನ್ನು ಶ್ರದ್ದೆಯಿಂದಲೂ ಎಚ್ಚರಿಕೆ ಯಿಂದಲೂ ವ್ಯಾಸಂಗಮಾಡಿ ಅವುಗಳಲ್ಲಿಯ ವಿವರಣೆ ವಿಶ್ಲೇಷಣೆಗಳನ್ನು ಮನವರಿಕೆ ಮಾಡಿಕೊಳ್ಳುವುದು ಅವಶ್ಯ. ಹಾಗೆ ಮನವರಿಕೆ ಮಾಡಿಕೊಂಡರೆ, ಯಾವುದೇ ಹಳಗನ್ನಡ ಪಠ್ಯಭಾಗದ ಅರ್ಥಗ್ರಹಿಕೆಗೆ, ಅಭಿಪ್ರಾಯವಿಶದತೆಗೆ ಅವು ಚೆನ್ನಾಗಿ ಒದಗುತ್ತವೆ ಎನ್ನ ಬಹುದು.
ಕನ್ನಡದಲ್ಲಿ ‘ಕವಿರಾಜಮಾರ್ಗ’ ಎಂಬ ಕಾವ್ಯಲಕ್ಷಣ ಗ್ರಂಥದಲ್ಲಿ, ಬಳಿಕ ಸ್ವತಂತ್ರವಾಗಿ ರಚಿತವಾದ ‘ಶಬ್ದಸ್ಮತಿ’ (‘ಕಾವ್ಯಾವಲೋಕನ’ ಗ್ರಂಥದ ಪ್ರಥಮಾಧಿಕರಣ), ‘ಕರ್ಣಾಟಕ ಭಾಷಾಭೂಷಣ’ (ಸಂಸ್ಕೃತದಲ್ಲಿರುವ ಹಳಗನ್ನಡವ್ಯಾಕರಣ), ‘ಶಬ್ದಮಣಿದರ್ಪಣ’, “ಕರ್ಣಾಟಕ ಶಬ್ದಾನುಶಾಸನ’ (ಸಂಸ್ಕೃತದಲ್ಲಿರುವ ಇನ್ನೊಂದು ಹಳಗನ್ನಡವ್ಯಾಕರಣ) ಎಂಬ ವ್ಯಾಕರಣ ಗ್ರಂಥಗಳಲ್ಲಿ ಹಳಗನ್ನಡ ಭಾಷೆಯ ವ್ಯಾಕರಣ ತತ್ತ್ವಗಳನ್ನು ಯಥೋ ಚಿತವಾದ ವಿಸ್ತಾರದಲ್ಲಿ ವಿವರಿಸಿರುವುದು ಕಾಣುತ್ತದೆ. ಇವುಗಳಲ್ಲಿ ಸಮಗ್ರತೆಯ ದೃಷ್ಟಿಯಿಂದಲೂ ಪ್ರಾಮಾಣ್ಯದ ದೃಷ್ಟಿಯಿಂದಲೂ ಪ್ರಯೋಗಬಾಹುಳ್ಯದ ಆಧಾರದ ದೃಷ್ಟಿಯಿಂದಲೂ ಕೇಶಿರಾಜನ ‘ಶಬ್ದಮಣಿದರ್ಪಣ’ (ಸು. ೧೨೬೦) ಸುಲಭಗ್ರಾಹ್ಯವೂ ವಿಶ್ವಸನೀಯವೂ ಆದ ಹಳಗನ್ನಡ ವ್ಯಾಕರಣವಾಗಿ ಮಾನ್ಯವಾಗಿದೆ. ಹಾಗೆಯೇ ಈ ಗ್ರಂಥಕ್ಕೆ ಪ್ರಾಚೀನರು ಬರೆದ ಟೀಕೆ ವ್ಯಾಖ್ಯಾನಗಳೂ ಆಧುನಿಕರು ಬರದ ವಿವರಣ ಗ್ರಂಥಗಳೂ ಸಾಕಷ್ಟು ಸಂಖ್ಯೆಯಲ್ಲಿ ಕಂಡುಬರುತ್ತಿವೆ. ಈ ಗ್ರಂಥವನ್ನೇ ಆಶ್ರಯಿಸಿ ಹೊಸಗನ್ನಡ ಭಾಷೆಯಲ್ಲಿ ಬರೆದಿರುವ ಹಳಗನ್ನಡ ವ್ಯಾಕರಣಗಳು ಕೂಡ ಸಿದ್ಧವಾಗಿವೆ. ಇಂತಹ ಗ್ರಂಥಗಳಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಕೈಪಿಡಿಯ ಸಂಪುಟ ೧ರ ೧ನೆಯ ಭಾಗವಾದ ‘ಹಳಗನ್ನಡ ವ್ಯಾಕರಣ’ ಪ್ರಥಮಪ್ರವೇಶದ ಅಭ್ಯಾಸಿಗಳಿಗೆ ಹೆಚ್ಚು ಉಪಯುಕ್ತವಾದುದು.