೦೦

ವೆಂಕಟಾಚಲ ಶಾಸ್ತ್ರಿ

ಟಿ. ವಿ. ವೆಂಕಟಾಚಲ ಶಾಸ್ತ್ರಿ ಅವರು (ಜನನ : ೧೯೩೩) ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಎಂ.ಎ. (೧೯೫೪) ಮತ್ತು ಪಿಎಚ್. ಡಿ. ಪದವಿ (೧೯೭೨) ಪಡೆದವರು. ಮೊದಲು ಕನಕಪುರ ಬೆಂಗಳೂರು ಖಾಸಗಿ ಕಾಲೇಜುಗಳಲ್ಲಿಯೂ (೧೯೫೫-೫೯), ಅನಂತರ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿಯೂ (೧೯೫೯-೬೦೮) ಅಧ್ಯಾಪಕ ರಾಗಿದ್ದು, ೧೯೬೮ರಿಂದ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ, ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ ೧೯೯೪ರಲ್ಲಿ ನಿವೃತ್ತಿ ಪಡೆದರು. ಕನ್ನಡ ಭಾಷೆ ವ್ಯಾಕರಣ ಛಂದಸ್ಸು ಅಲಂಕಾರಶಾಸ್ತ್ರ ಗ್ರಂಥಸಂಪಾದನೆ, ನಿಘಂಟುರಚನ ಮೊದಲಾದ ಶಾಸ್ತ್ರವಿಷಯಗಳಲ್ಲಿಯೂ ವಿವಿಧ ಕಾಲಘಟ್ಟ ಗಳ ಸಾಹಿತ್ಮಚರಿತ್ರೆ ಶಾಸನಸಾಹಿತ್ಯ ಸಾಹಿತ್ಯವಿಮರ್ಶಗಳ ಕ್ಷೇತ್ರಗಳಲ್ಲಿಯೂ ಪೂರ್ವಸೂರಿಗಳ ವ್ಯಕ್ತಿವಿಚಾರ ಸಾಹಿತ್ಯಕಾರಗಳ ಶೋಧದಲ್ಲಿಯೂ ದಶಕ ಗಳ ಉದ್ದಕ್ಕೆ ನಿರಂತರ ವ್ಯಾಸಂಗತತ್ಪರರಾಗಿ ಕೆಲಸ ಮಾಡುತ್ತಿರುವ ಶಾಸ್ತ್ರಿ ಗಳು ತಮ್ಮ ಹಳಗನ್ನಡ ಭಾಷಾಪಾಂಡಿತ್ಯದ ಬಲದಿಂದ ರಾಷ್ಟ್ರೀಯ ಅಂತಾ ರಾಷ್ಟ್ರೀಯ ವ್ಯಾಪ್ತಿಯಲ್ಲಿ ಖ್ಯಾತರಾಗಿರುವ ಕರ್ನಾಟಕದ ಅಗ್ರಮಾನ್ಯ ವಿದ್ವನ್ಮಣಿಗಳೆನ್ನಿಸಿದ್ದಾರೆ. ಶತಾಧಿಕವಾಗಿ ಸಾಹಿತ್ಯಕೃತಿಗಳನ್ನು ರಚಿಸಿರುವ ಸಂಪಾದಿಸಿರುವ, ಸಂಕಲಿ ಸಿರುವ ಅನುವಾದಿಸಿರುವ ಶಾಸ್ತ್ರಿಗಳು ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಸಮ್ಮಾನ್ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಮತ್ತು ಪಂಪಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳಿಗೆ, ಸನ್ಮಾನಗಳಿಗೆ ಪಾತ್ರರಾಗಿದ್ದಾರೆ.

Pages: 144

Price Rs: 10/

T. V. Venkatachala Sastry (1933)

ಹಳಗನ್ನಡ ಭಾಷೆಯಲ್ಲಿರುವ ಸಾಹಿತ್ಯಕೃತಿಗಳನ್ನು ಚೆನ್ನಾಗಿ ಓದಿ ಅರ್ಥಮಾಡಿಕೊಳ್ಳಲು ಹಳಗನ್ನಡ ವ್ಯಾಕರಣದ ಅವಲೋಕನ ಅಧ್ಯಯನಗಳು ಅತ್ಯವಶ್ಯವನ್ನುವುದು ತಿಳಿದ ಸಂಗತಿ. ಆ ಉದ್ದೇಶಕ್ಕೆ ಕೇಶಿರಾಜನ ‘ಶಬ್ದಮಣಿದರ್ಪಣಂ’ ಎಂಬ ಹಳಗನ್ನಡ ವ್ಯಾಕರಣ ಗ್ರಂಥದಿಂದ ಆಗುವ ಸಹಾಯ ಅತಿಶಯವಾದುದು. ನಾಗವರ್ಮನ ‘ಶಬ್ದಸ್ಮೃತಿ’, ‘ಕರ್ಣಾಟಕ ಭಾಷಾಭೂಷಣ’ಗಳಿಂದ, ಭಟ್ಟಾಕಳಂಕನ ‘ಕರ್ಣಾಟಕ ಶಬ್ದಾನುಶಾಸನ’ ದಿಂದ ಕೂಡ ಸಹಾಯವಾಗಬಹುದಾದರೂ, ಹಳಗನ್ನಡ ಭಾಷೆಯ ಸಮಗ್ರವೂ ಸಮೀ ಚೀನವೂ ಆದ ತಿಳಿವಳಿಕೆಗೆ ಕೇಶಿರಾಜನ ಕೃತಿಯೇ ಹೆಚ್ಚು ಸಹಕಾರಿಯಾದುದು. ಇದು ಬಳಸುವವರ ಅನುಭವಕ್ಕೆ ಬಂದ ಸಂಗತಿಯೇ ಆಗಿದೆ. ಹಾಗೆಂದೇ ಪ್ರೌಢವ್ಯಾಸಂಗದ ಕನ್ನಡ ವಿದ್ಯಾರ್ಥಿಗಳಿಗೆ ಎಂದಿನಿಂದಲೂ ‘ಶಬ್ದಮಣಿದರ್ಪಣ’ವನ್ನು ಒಂದು ಪಠ್ಯಗ್ರಂಥ ವಾಗಿ ಗೊತ್ತುಮಾಡುವುದು ರೂಢಿಯಲ್ಲಿದೆ. ಪದ್ಯದ ಅರ್ಥ ಆಶಯಗಳ ಸೌಲಭ್ಯಕ್ಕಾಗಿ ಪೀಠಿಕೆ-ಸಂಗ್ರಹಗಳೂ ವಿವರಣೆ-ವಿಮರ್ಶಗಳೂ ಬಿಡಿಬರಹಗಳೂ-ಟಿಪ್ಪಣಿಗಳೂ ಹಳೆಯ ವೃತ್ತಿವ್ಯಾಖ್ಯಾನಗಳ ಜೊತೆಜೊತೆಗೇ ಈಚಿನ ಕಾಲದಲ್ಲಿ ರಚಿತವಾಗುತ್ತ ಬಂದಿರುವುದು ಕೂಡ ಅದರ ವ್ಯಾಸಂಗದ ದೃಷ್ಟಿಯಿಂದಲೇ, ಆಸಕ್ತಿ ವ್ಯವಧಾನಗಳಿದ್ದವರು ಇವನ್ನೆಲ್ಲ ಸಾವಕಾಶವಾಗಿ ಓದಿ ಹಳಗನ್ನಡದ ಮರ್ಮಗಳನ್ನು ತಿಳಿದುಕೊಳ್ಳಬಹುದಾಗಿದೆ, ಸಮಸ್ಯ ಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. - ಇದು ಹೀಗಿದ್ದೂ, ಹಳಗನ್ನಡ ಭಾಷೆಯ ಸ್ವರೂಪವನ್ನೂ ಲಕ್ಷಣವನ್ನೂ ಹೊಸ ದೃಷ್ಟಿಯಲ್ಲಿ ಸಂಗ್ರಹವಾಗಿ ಪರಿಚಯಿಸುವ ಒಂದು ಸ್ವತಂತ್ರವಾದ ಕೈಪಿಡಿಯ ಆವಶ್ಯಕತೆ ಯಂತೂ ಇದ್ದೇ ಇದೆ. ಈ ವಿಷಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ‘ಕನ್ನಡ ಕೈಪಿಡಿ’ಯ ಹಳಗನ್ನಡ ವ್ಯಾಕರಣವೂ (ಸಂಪುಟ ೧-ಭಾಗ ೧) ಕನ್ನಡ ಭಾಷೆಯ ಚರಿತ್ರೆಯೂ (ಸಂಪುಟ ೧-ಭಾಗ ೪) ತಕ್ಕಮಟ್ಟಿಗೆ ಸಹಾಯಮಾಡುತ್ತವೆ. ಅವನ್ನು ಪ್ರಕಟಿ ಸುವ ಕಾಲಕ್ಕೆ (೧೯೨೭, ೧೯೩೬) ಸಭಾಧ್ಯಕ್ಷರಾಗಿದ್ದ ಬಿ. ಎಂ. ಶ್ರೀಕಂಠಯ್ಯನವರು “ಬಿ. ಎ. ಪರೀಕ್ಷೆಯಲ್ಲಿ ಉತ್ತೀರ್ಣನಾಗುವ ವಿದ್ಯಾರ್ಥಿ ತಿಳಿದಿರಬೇಕಾದಷ್ಟು ಅಂಶಗಳು” ಉದ್ದೇಶಿಸಿದ ಕೈಪಿಡಿಯಲ್ಲಿದ್ದರೆ ಸಾಕಾಗುತ್ತದೆ ಎಂಬುದಾಗಿ ಮಿತಿಯನ್ನು ಹಾಕಿಕೊಂಡರು. ಈ ಮಿತಿ ಕಾರಣವಾಗಿ ಹಳಗನ್ನಡದ ಎಲ್ಲ ಭಾಷಾಲಕ್ಷಣಗಳೂ ತಕ್ಕ ವಿವರಣೆ ವಿಮರ್ಶ ಗಳೊಂದಿಗೆ, ಹೆಚ್ಚು ಪ್ರಯೋಗೋದಾಹರಣೆಗಳೊಂದಿಗೆ ಅಲ್ಲಿ ಪ್ರಸ್ತಾವಗೊಳ್ಳುವುದು ಸಾಧ್ಯವಾಗಿಲ್ಲ. - ಪ್ರಸ್ತುತ, ಈಗ ಪ್ರಕಟವಾಗುತ್ತಿರುವ ‘ಹಳಗನ್ನಡ ವ್ಯಾಕರಣ ಪ್ರವೇಶಿಕೆ’ ಕೊಂಚ ವಿವರ ವಿಶದವಾದ ನಿರೂಪಣೆಯಿಂದ ಕೂಡಿದ್ದಾಗಿ, ಅಭ್ಯಾಸಕ್ಕೆ ಹೆಚ್ಚು ಅನುಕೂಲಮಾಡ ಬಹುದು ಎಂಬ ನಿರೀಕ್ಷೆಯನ್ನಿಟ್ಟುಕೊಂಡಿದೆ. ಇಲ್ಲಿ ಕೂಡ ತೀರ ವಿರಳವೂ ಅಪವಾದ ರೀತಿಯದೂ ಆದ, ಸೂಕ್ಷ್ಮವೂ ಜಟಿಲವೂ ಆದ ಸಂಗತಿಗಳ ಕಡೆಗೆ ವಿಶೇಷವಾಗಿ ಗಮನ ಕೊಟ್ಟಿಲ್ಲ. ಅವನ್ನು ಬೇರೆ ಮೂಲಗಳ ವಿಮರ್ಶೆಗಳಿಂದ ತಿಳಿಯಬಹುದಾಗಿದೆ. ಈಗ ಸಿದ್ಧಪಡಿಸಿರುವ ಪ್ರವೇಶಿಕೆಯಲ್ಲಿ ಕೂಡ ಕೆಲವು ಕುಂದು ಕೊರತೆಗಳಿರುವುದು ಸಾಧ್ಯ. ಅವನ್ನು ಬಲ್ಲವರೂ ಅಭ್ಯಾಸಿಗಳೂ ಗಮನಕ್ಕೆ ತಂದರೆ, ಮುಂದಿನ ಮುದ್ರಣದಲ್ಲಿ ಅವನ್ನು ಸರಿಪಡಿಸಬಹುದಾಗಿದೆ.

ಈಚೆಯ ದಶಕಗಳಲ್ಲಿ ಪಾಶ್ಚಾತ್ಯ ದೇಶಗಳ ಭಾಷೆ ಧರ್ಮ ಮತ್ತು ತತ್ತ್ವಶಾಸ್ತ್ರ ವಿಭಾಗ ಗಳಲ್ಲಿ ಪ್ರಾಚೀನ ಕನ್ನಡ ಸಾಹಿತ್ಯದ ಅಧ್ಯಯನದಲ್ಲಿ ಆಸಕ್ತಿ ಕುತೂಹಲಗಳು ಹೆಚ್ಚುತ್ತಿವೆ. ಅವರಿಗಾಗಿ ಇಂಗ್ಲೀಷ್ ಭಾಷೆಯಲ್ಲಿ ಹಳಗನ್ನಡ ವ್ಯಾಕರಣದ ಕೈಪಿಡಿಯಂತಹ ಗ್ರಂಥದ ಆವಶ್ಯಕತೆಯಿದೆ. ಕನ್ನಡದ ಎಲ್ಲ ಅವಸ್ವಾಭೇದಗಳಿಗೂ ಸಂಬಂಧಿಸಿದಂತೆ ರಚಿತವಾದ ಆಂಗ್ಲ ಭಾಷೆಯ ಕನ್ನಡ ವ್ಯಾಕರಣವೊಂದು ಎಫ್. ಕಿಟ್ಟೆಲರ ಕೃತಿಯಾಗಿ ಪ್ರಸಿದ್ಧವಿದೆ (A Grammar of the Kannada Language, comprising the three Dialects of the Language : Ancient, Medieval and Modern, Basel Mission Book and Tract Depository, Mangalore, 1903). ಆದರೆ ಹಳಗನ್ನಡ ಭಾಷೆಯ ಸ್ವರೂಪ ಲಕ್ಷಣಗಳನ್ನೇ ಮುಖ್ಯವಿಷಯವಾಗಿ ಅದು ಒಳಗೊಂಡಿರದ ಕಾರಣ ದಿಂದ, ಅದನ್ನು ಬಳಸಲು ತಕ್ಕ ಸೌಲಭ್ಯವಿರುವುದಿಲ್ಲ. ಪ್ರಾತಿನಿಧಿಕ ಹಳಗನ್ನಡ ಭಾಷಾಕೃತಿ ಯಾದ ಪಂಪಭಾರತದ ವರ್ಣನಾತ್ಮಕ ವ್ಯಾಕರಣವೊಂದು ಇಂಗ್ಲೀಷ್ ಭಾಷೆಯಲ್ಲಿ ಪ್ರಕಟ??? (A Descriptive Grammar of Pampa Bharata, Dr. B. Rama chandra Rao, Prasaranga, University of Mysore, 1972), Edo ವ್ಯಾಕರಣಭಾಗ ಮತ್ತು ಪದಪಟ್ಟಿಗಳಿಂದ ಸಾಕಷ್ಟು ಪ್ರಯೋಜನವನ್ನು ಪಡೆಯುವುದು ಸಾಧ್ಯವಿದೆ. ಹೀಗಿದ್ದು ಕೂಡ ಸ್ವತಂತ್ರವಾದ, ಸಂಕ್ಷಿಪ್ತವಾದ ಒಂದು ಹಳಗನ್ನಡ ಭಾಷಾ ವ್ಯಾಕರಣ ಇಂಗ್ಲಿಷ್ ಭಾಷೆಯಲ್ಲಿ ಸಿದ್ಧವಾಗುವ ಅಗತ್ಯವಂತೂ ಇದ್ದೇ ಇದೆ. ಇದೇ ಲೇಖಕರ ‘ಕನ್ನಡ ಭಾಷಯ ಇತಿಹಾಸ’ದ (ಡಿ.ವಿ.ಕೆ. ಮೂರ್ತಿ, ಪ್ರಕಾಶಕರು, ಮೈಸೂರು, ೧೯೯೮), ‘ಶಾಸನಗಳಲ್ಲಿ ಕನಡ’ ಮತ್ತು ‘ಸಾಹಿತ್ಯ ಮಾಧ್ಯಮವಾದ ಹಳಗನ್ನಡ’ ಎಂಬ ೨ ಮತ್ತು ೩ನೆಯ ಅಧ್ಯಾಯಗಳು ಕನ್ನಡದಲ್ಲಿಯೇ ವಿಷಯದ ತಿಳಿವಳಿಕೆ ಬೇಕೆನ್ನುವವರಿಗೆ ಉಪಯುಕ್ತ ವಿವರಗಳಿಂದ ಕೂಡಿರುವುದನ್ನೂ ಇಲ್ಲಿ ನೆನೆಯಬಹುದು.

ಪ್ರಸ್ತುತ, ಈ ‘ಹಳಗನ್ನಡ ವ್ಯಾಕರಣ ಪ್ರವೇಶಿಕೆ’ಯನ್ನು ಅಭಿಮಾನವಿಟ್ಟು ಪ್ರಕಟಿಸು ತಿರುವ ಬೆಂಗಳೂರಿನ ಅಭಿನವ ಪ್ರಕಾಶನದ ಮಾನ್ಯಮಿತ್ರರಾದ ಶ್ರೀ ನ. ರವಿಕುಮಾರ್ ಅವರಿಗೆ, ಎಂದಿನ ವಿಶ್ವಾಸದಿಂದಲೇ ನನ್ನ ಕೋರಿಕೆಯನ್ನು ಮನ್ನಿಸಿ ಸೊಗಸಾಗಿ ಹಾಗೂ ತ್ವರಿತವಾಗಿ ಅಕ್ಷರ ಜೋಡಣೆಯನ್ನು ಮಾಡಿಕೊಟ್ಟಿರುವ ಪ್ರಿಯ ಮಿತ್ರರಾದ ಶ್ರೀ ಆರ್.

ಎಸ್. ಮೋಹನಮೂರ್ತಿ ಅವರಿಗೆ, ಅಂದವಾಗಿ ಮುದ್ರಣಕಾರ್ಯವನ್ನು ನಿರ್ವಹಿಸಿ ಕೊಟ್ಟಿರುವ ಲಕ್ಷ್ಮೀ ಮುದ್ರಣಾಲಯದ ಮಾಲೀಕರು ಮತ್ತು ಸಿಬ್ಬಂದಿವರ್ಗದವರಿಗೆ ನನ್ನ ಕೃತಜ್ಞತಾಪೂರ್ವಕ ವಂದನೆಗಳು ಸಲ್ಲುತ್ತವೆ.

ಮೈಸೂರು
ಟಿ. ವಿ. ವೆಂಕಟಾಚಲ ಶಾಸ್ತ್ರೀ

ನುಡಿವ ಬೆಡಗು

ಹಳಗನ್ನಡದ ಕಾಲ ಮುಗಿದುಹೋಯಿತು, ಅದು ನಮ್ಮ ಬದುಕಿಗೆ ಯಾವ ರೀತಿ ಯಲ್ಲೂ ಪ್ರಯೋಜನವಿಲ್ಲ ಎಂಬ ನಿಲುವಿನ ಈ ದಿನಗಳಲ್ಲಿ ಈ ಕೃತಿ ಪ್ರಕಟವಾಗುತ್ತಿರು ವುದಕ್ಕೆ ಮಹತ್ತ್ವವಿದೆ. ಹಾಗೆ ನೋಡಿದರೆ ನಮ್ಮ ಬದುಕಿನಲ್ಲಿ ಯಾವುದು ಯಾವಾಗ ಮಹತ್ವ ಕಳೆದುಕೊಳ್ಳುತ್ತದೆ, ಯಾವಾಗ ಪಡೆಯುತ್ತದೆ ಎಂಬುದನ್ನು ನಿರ್ಧರಿಸುವುದು ಕಷ್ಟ; ಕಾಲವೇ ಕೆಲವನ್ನು ಅರಗಿಸಿಕೊಂಡು, ಕೆಲವನ್ನು ಹಿಂದಕ್ಕೆ ತಳ್ಳಿ ಮುಂದುವರಿಯು ಇದೆ. ಹೇಗೆ ಸಂಸ್ಕೃತಿಯು ಚಲನಶೀಲವೋ ಹಾಗೆಯೇ ಭಾಷೆ, ಸಾಹಿತ್ಯ, ಮೀಮಾಂಸೆ, ವ್ಯಾಕರಣಗಳೆಲ್ಲವೂ ಬದಲಾಗಬೇಕು; ಬದಲಾಗುತ್ತಿರುತ್ತದೆ, ಹೀಗಾಗಿ ಯಾವುದು ಬದಲಾಗಬಲ್ಲದೊ, ಬದಲಾಗಲು ಶಕ್ತವೋ ಅಂತಹದು ಮಾತ್ರ ಉಳಿಯುತ್ತದೆ, ಬೆಳೆಯು ತದೆ,

ಈ ಹೊತ್ತು ಕನ್ನಡ ಭಾಷೆಯ ಅಸ್ತಿತ್ವ ಅನನ್ಯತೆಗಳ ಕುರಿತು ಹೆಚ್ಚು ಮಾತುಗಳು ಕೇಳಿಬರುತ್ತಿವೆ. ಒಂದರ್ಥದಲ್ಲಿ ನಮ್ಮ ಬದುಕಿನ ಪರಿಸರದಲ್ಲಿ ಕನ್ನಡವನ್ನು ಹೇಗೆ ಒಳಗೊಳ್ಳುವಂತೆ ಮಾಡಬೇಕೋ ಹಾಗೆಯೇ ಆ ಭಾಷಯ ಆಂತರಿಕ ಚಹರೆಗಳನ್ನು, ಒಳಧರ್ಮಗಳನ್ನು ಅರಿಯುವುದು, ವಿಸ್ತರಿಸುವುದು ಕೂಡ ಮುಖ್ಯ. ಈ ನಿಟ್ಟಿನಲ್ಲಿ ಈ ಕೃತಿ ಮಹತ್ವದ್ದಾಗಿದೆ. - ಅಪಾರ ಓದು, ಗ್ರಹಿಕೆ, ವ್ಯಾಖ್ಯಾನಗಳಿಂದ ನಮ್ಮ ನಡುವ ಸದ್ದುಗದ್ದಲವಿಲ್ಲದ ಕೆಲಸಮಾಡುತ್ತಿರುವ ಅಪರೂಪದ ವಿದ್ವಾಂಸರಾದ ವೆಂಕಟಾಚಲ ಶಾಸ್ತ್ರಿ ಅವರು ಈ ಕೃತಿಯನ್ನು ಪ್ರಕಟಿಸಲು ಅನುಮತಿ ನೀಡಿದ್ದಕ್ಕೆ ಅಭಿನವ ಋಣಿಯಾಗಿದೆ. ಜೊತೆಗೆ ಅಕ್ಷರ ವಿನ್ಯಾಸ ಮಾಡಿದ ಆರ್, ಎಸ್. ಮೋಹನಮೂರ್ತಿ ಮತ್ತು ಮುದ್ರಿಸಿದ ಲಕ್ಷ್ಮಿ ಮುದ್ರಣಾಲಯದ ಮಾಲೀಕರು ಮತ್ತು ಸಿಬ್ಬಂದಿಗೆ, ಮುಖಪುಟದ ಕಲಾವಿದರಿಗೆ ಮತ್ತು ಕೊಂಡು ಓದುತ್ತಿರುವ, ಪ್ರಯೋಜನ ಪಡೆಯುವ ಸಹೃದಯರಿಗೆ ಧನ್ಯವಾದಗಳು.

ನ. ರವಿಕುಮಾರ ಅಭಿನವದ ಪರವಾಗಿ
ಸಂಕ್ಷಿಪ್ತ ವಿವರಣಸೂಚಿ

ಅಜಪ್ಪ ಆನಂದ್ರು ಅಭಿರ, ಆರ್ಧನ. ಆದಿಪು.

ಎ, ಕರ್ಣನ. ಕಟರಾ, ಕಾದಂಪ. ಕಾವ್ಯಾವ. ಗದಾಯು. Thರಿಕ, ಚಂದ್ರಪು. ಜಗಪಿ. ಜಾತ್ರ ಜೀವಸಂ. ದಶಕು. ದಿವ್ಯಚ. ಧರ್ಮಾಮ್ಮ. ನಾವರ್ಧ. ಪಂಚತಂ. ಪಂಪಭಾ. ಪಂಪರಾ, ಪಾರ್ಶ್ವಪು. ಮವತಿ, ಮಲ್ಟಿಪು. ಯಶೋಚ. ರಸರ ಲೀಲಾವ ವಡ್ಡಾರಾ, ಶಬ್ದಸ್ಮ, ಶಬ್ದಾನು. ತಮದ ಫಾಂಕಿವು.

ಅಜಿತತೀರ್ಥಕರ ಪುರಾಣತಿಲಕ-ರನ್ನ ಆನಂತನಾಥಘರಾಣ-ಜನ್ನ ಅಭಿಧಾನ ರತ್ನಮಾಲಾ ಕರ್ಣಾಟಕ ರ್ಟಿಕ ಆರ್ಧನೇಮಿಪುರಾಣಂ (ನೇಮಿನಾಥಪುರಾಣಂ)-ನೇಮಿಚಂದ್ರ ಆದಿಪುರಾಣ ಪಂಪ ಎಪಿಗ್ರಾಫಿಯ ಇಂಜಕ ನೇಮಿನಾಥಪುರಾಣ-ಕರ್ಣಪಾರ್ಯ” ಕವಿರಾಜಮಾರ್ಗ-ಶ್ರೀವಿಜಯ ಕರ್ಣಾಟಕ ಕಾದಂಬರಿ (ಪಾರ್ವಭಾಗ-ನಾಗವರ್ಮ ಕಾವ್ಯಾವಲೋಕನ ನಾಗವರ್ಮ ಗದಾಯುದ್ದಂ (ಸಾಹಸಭೀಮವಿಜಯಂ ರನ್ನ fWರಿಜಾಕಲ್ಯಾಣ-ಪರಿಹರ ಚಂದ್ರಪ್ರಭಪುರಾಣ-ಆಗ್ಯಳ ಜಗನ್ನಾಥವಿಜಯ-ರುದ್ರಭಟ್ಟ ಜಾತಕತಿಲಕಂ-ಶ್ರೀಧರಾಚಾರ್ಯ ಜೀವಸಂಬೋಧನ-ಬಂಧುವರ್ಮ

ಅಭಿನವದಶಕುಮಾರಚರಿತ ಚೌಂಡರಸ ದಿವ್ಯಸೂರಿಚರಿತೆ ಚಿಕುಪಾಧ್ಯಾಯ ಧರ್ಮಾಮೃತ-ನಯಸೇನ ವರ್ಧಮಾನಪುರಾಣಂ ನಾಗವರ್ಮ ಕರ್ಣಾಟಕ ಪಂಚತಂತ್ರ-ಮರ್ಗಸಿಂಹ ಪಂಪಭಾರತಂ (ವಿಕ್ರಮಾರ್ಜುನವಿಜಯಂ}-ಪಂಪ ಪಂಪರಾಮಾಯಣಂ (ರಾಮಚಂದ್ರಚರಿತಪುರಾಣಂ}-ನಾಗಚಂದ್ರ ಪಾರ್ಶ್ವನಾಥಪುರಾಣಂ-ಪಾರ್ಶ್ವಪಂಡಿತ ಮದನತಿಲಕಂ-ಚಂದ್ರರಾಜ ಮಲ್ಲಿನಾಥಪುರಾಣ-ನಾಗಚಂದ್ರ ಯಶೋಧರಚರಿತೆ-ಜನ್ನ ರಸರತ್ನಾಕರ-ಸಾಳ ಲೀಲಾವತೀಪ್ರಬಂಧಂ-ನೇಮಿಚಂದ್ರ ವಡ್ಡಾರಾಧನ-ಶಿವಕೋಟ್ಯಾಚಾರ ಶಬ್ದಸ್ಮನಾಗವರ್ಮ ಕರ್ಣಾಟಕ ಶಬ್ದಾನುಶಾಸನ-ಭಟ್ಟಾಕಳಂಕ ಶಬ್ದಮಣಿದರ್ಪಣ-ಕೇಶಿರಾಜ ಶಾಂತಿಪುರಾಣಂಪನ್ನ ಶಾಂತೀಶ್ವರವುರ್ರಾಣ-ಕಮಲಭವ ಸಮಯಪರಿಕ್ಷ-ಬ್ರಹ್ಮಶಿವ ಸುಕುಮಾರಚರಿತೆ-ಶಾಂತಿನಾಥ ಸೂಕ್ತಿಸುಧಾರ್ಣವರಿ-ಮಲ್ಲಿಕಾರ್ಜುನ ಸೌತ್ ಇಂಡಿಯನ್ ಇನ್ಸ್ಕ್ರಿಪ್ಪಲ್ಸ್ (ಸಂ.-Se)

ಸಮವ. ಸುಕುಮಾ. ಸೂಕ್ತಿಸು. ಸೌಇಇ,

ವಿಷಯಸೂಚಿ

೧ ಪ್ರವೇಶ

ಗಿ

೨ ಹಳಗನ್ನಡ ವರ್ಣಮಾಲೆ

ಹಳಗನ್ನಡ ಶಬ್ದರಚನ

೧೯

೪ ಸಂಧಿ - ಸಂಧಿಕಾರ್ಯ

೫ ನಾಮಪದಪ್ರಕರಣ

೬ ಸಮಾಸಪ್ರಕರಣ

೬ ತದ್ಧಿತಾಂತ ನಾಮಪದಗಳು

೯೦

ಆಖ್ಯಾತಪ್ರಕರಣ

೧೦೦

೯ ಅವ್ಯಯಗಳ ವಿಚಾರ

೧೨

೧೦ ಒಂದು ಪ್ರಯೋಗಪಾಠ