೧. ರೇಸು ಕುದುರೆ ಬಾಲ ಹಿಡಿದು
ರಾಸಿ ರಾಸಿ ರೊಕ್ಕ ಕಳೆದು
ಜೀವ ರೋಸಿ ಹೋದದ್ದನ್ನ
ಯಾರಿಗೂ ಹೇಳೋಣು ಬ್ಯಾಡ
೨. ರಾತ್ರಿಯೆಲ್ಲಾ ರಮ್ಮಿ ಆಡಿ
ಇದ್ದದ್ದೆಲ್ಲಾ ಕಳೆದುಕೊಂಡು
ಉದ್ರಿ ಹೇಳಿ ಹೋದದ್ದನ್ನ
ಯಾರಿಗೂ ಹೇಳೋಣು ಬ್ಯಾಡ
೩. ಹ್ಯಾಟು ಬೂಟು ಹಾಕಿಕೊಂಡು
ಪುಟ್ಟುಪಾತಿನಲ್ಲಿ ನಿಂತು
ಫ್ಯಾಷನ್ ಗರ್ಲಸ್ನ ನೋಡಿದ್ದನ್ನ
ಯಾರಿಗೂ ಹೇಳೋಣು ಬ್ಯಾಡ
೪. ಬಾರಿಗ್ ಹೋಗಿ ಬ್ಯಾರಲ್ಗಟ್ಲೆ
ಬೀರು ಹೀರಿ ವಾಚು ರಿಂಗು
ಪ್ಲೆಡ್ಜು ಬಂದಿದ್ದನ್ನ
ಯಾರಿಗೂ ಹೇಳೋಣು ಬ್ಯಾಡ
೫.ಹುಡುಗಿ social ಎಂದು
ಸಲಗೆ ಬಳಸಿ ಕೆಣಕಿದಾಗ
ಚಪ್ಲಿ ಏಟು ತಿಂದಿದ್ದನ್ನ
ಯಾರಿಗೂ ಹೇಳೋಣು ಬ್ಯಾಡ
೬. ಎಲ್ಲಿ ಮದ್ವೆ ಚಪ್ರ ಏಳ್ಳಿ
ಅಲ್ಲಿ ಹೋಗಿ ಕವಳ ಹೊಡೆದು
ಬಿಟ್ಟಿ ಕಾಯಿ ತಂದಿದ್ದನ್ನ
ಯಾರಿಗೂ ಹೇಳೋಣು ಬ್ಯಾಡ
ಶ್ರೀ ಬೇಂದ್ರೆಯವರ ಕ್ಷಮೆ ಬೇಡಿ ರಾ.ನಾ. ಶಾಂತಿಗ್ರಾಂ