ತೂಗಿರೋ ಸ್ವಾಮಿಯಾ ತೂಗಿರೋ ದೇವನ
ತೂಗಿರೋ ಶ್ರೀ ಸೌಮ್ಯ ಕೇಶವನ
ಶ್ರೀ ಚನ್ನಕೇಶವ ಸೊಗಸಾದ ಮೂರುತಿ
ನೆಲಸವ್ನೇ ಶಾಂತಿಗ್ರಾಮದಾಗೆ
ಬಂದು ನೆಲಸವ್ನೆ ನಮ್ಮ ಊರಿನಾಗೆ
ಕಾಪಾಡುತವ್ನೇ ಭಕ್ತರನ್ನ
ಕೆರೆಪಕ್ಕದ್ಗುಡಿಯಾಗೆ ಕುಂತವ್ನೆ ನರಸಿಂಹ
ಸ್ವಾಮೀಯ ನೋಡಾಕೆ ಬಲು ಚೆಂದ
ಸ್ವಾಮಿಯ ನೋಡಾಕೆ ಬಲು ಚೆಂದ ನಪ್ಪಪ್ಗೆ
ಪಂಚಾಮೃತದ ಅಭಿಷೇಕ ಮತ್ತೂ ಚೆಂದ
ನಮ್ಮೂರ ತೇರು ನೋಡಾಕೆ ಬಲು ಸೊಗವು
ಎಳೆಯೋಣ ಬನ್ನಿ ಭಕುತರೆಲ್ಲ
ಎಳೆಯುತ್ತ ಎಳೆಯುತ್ತ ನೋಡಿರಿ ಸ್ವಾಮಿಯ
ತೇರ್ಮ್ಯಾಗೆ ಕುಂತು ಬರುವೋದ