೧.ಪುಂಗ್ನೂರ ಮದುವೆಯಲಿ ಕರಸ್ಕೊಳ್ದೇ ಹೋದವರು
ಹಳೆ ಚಪ್ಲಿ ಕದ್ದವರು ನೀವಲ್ಲವೇ
ಕದ್ದು ಸಿಕ್ಬಿದ್ದಗ ಮರೆತು ಕಾಲಿಟ್ನೆಂದು ಕಣ್ಕಟ್ಟಿ ಬಿಟ್ಟವರು ಣೀವಲ್ಲವೇ
೨.B A ಪಾಸಾಯ್ತೆಂದು ಬುರುಡೆಯ ಕೊಚ್ದೊವೊರು
ಶುದ್ಧ ಶುಂಡೇಕಾಯಿ ನೀವಲ್ಲವೇ
ನನ್ನ ತಮ್ಮ ನಿಮ್ಮತ್ರ doing well ಅಂದಾಗ
ಟುಸ್ ಪುಸ್ ಎಂದವರು ನೀವಲ್ಲವೇ ನೀವಲ್ಲವೇ
೩. ಅಮಾವಸ್ಯೆ ರಾತ್ರಿಯಲಿ ಕಳ್ಳಾರು ನುಗ್ದಾಗ
ಬೆದ್ರಿ ಬೆಂಡಾದವರು ನೀವಲ್ಲವೇ ನೀವಲ್ಲವೇ
ಬಾಚಿ ತಬ್ಕೊಂಡು ಮುಸುಕನ್ನು ಬೀರಿದವರು ನೀವಲ್ಲವೇ
ಮನೆ ಲೂಟಿ ಆದ್ಮೇಲೆ ಮಡಿಕೋಲ ಬೀಸುತ್ತ
ಮಿಸೆಯ ತಿರುವಿದವರು ನೀವಲ್ಲವೇ ನೀವಲ್ಲವೇ
೪.ಎಲೆ ಮುಣ್ದೆ ಕೂತಾಗ ಚಿರೋಟ ಬಡಿಸ್ದಾಗ
ಇಪ್ಪತ್ತು ನುಂಗಿದವರು ನೀವಲ್ಲವೇ
ಇಪ್ಪತ್ತು ನುಂಗ್ಬಿಟ್ಟು ಹೊಟ್ಟೆ ಉಬ್ಬರಿಸಿಕೊಂಡು
ಬಕ್ಕೇಟು ಹಿಡಿದವರು ನೀವಲ್ಲವೇ ನೀವಲ್ಲವೇ
೫.ಕರಿಸೀರೆ ಉಟ್ಟವಳ ಬಳೆಪೇಟೆಲಿ ಕಂಡಾಗ
ಲೇ ಲೇ ಲೇ ಎಂದವರು ನೀವಲ್ಲವೇ
ಕೆನ್ನೆಗೆರಡು ಬಿಟ್ಟಗ ಅಯ್ಯೋ ಅವಳಲ್ಲೆಂದು
ಗೋಳಾಡ್ತಾ ಹೋದವರು ನೀವಲ್ಲವೆ
೬.ಭಾರಿ ಮಳೆ ಬಂದಾಗ ಛತ್ರಿ ನೆನೆಯುತ್ತೆಂದು
ಬರಿಕೈಲಿ ಹೋದವರು ನೀವಲ್ಲವೇ?
ಮಳೆ stop ಆದ್ಮೇಲೆ ಛತ್ರಿ ಬಿಚ್ಚಿ ಹೋದವರು ನೀವಲ್ಲವೇ
City side ಉ ಹೋಗ್ಬಿಟ್ಟು sweets ತನ್ನಿ ಎಂದಾಗ
Bruclax ತಂದವರು ನೀವಲ್ಲವೇ
ಯಾಕೆಂದು ರೇಗ್ದಾಗ ಬೆದ್ರಿ ಬ್ರೂಸ್ಲಾಕ್ಸ್ ಎಲ್ಲ ನುಂಗಿ ಸುಸ್ತಾದವರು ನೀವಲ್ಲವೇ
ಭಾಷೆ ಕಾಂಪಿಟೇಷನಲ್ಲಿ 1prize ಉ ತನಗೆಂದು ಎದೆ ಕಟ್ಟಿ ಹೊರಟವರು ನೀವಲ್ಲವೇ
Mike ಮುಂದೆ ನಿಂತಾಗ ಕೈ ಕಾಲು ನಡುಗುತ್ತ
Swoon ಆಗಿ ಬಿದ್ದವ್ರು ನೀವಲ್ಲವೇ
ಕೂಸೇ ನೀ ಇಸ್ಶಿಯಾ ಮಾಡೋ (೩ ಬಾರಿ)
(ಸಲ್ಪ ಹೊತ್ತದ ನಂತರ ಕೂಸು ಇಸ್ಶಿಯ ಮಾಡಿತು ರಭಸದಿಂದ)
(ಹೆಂಡತಿಗೆ ಗಂಡ ಹೇಳಿದ್ದು)
ಕೂಸು ಇಸ್ಶಿಯ ಮಾಡಿ ಸುಸ್ತಾಯ್ತು
ತತ್ತಾರೆ ಬಟ್ಟೆಯ ಒರೆಸಿ ತೊಟ್ಲಲ್ಲಿ
ಉರುಡಿ ಹಾಕುವಾ(ಹೆಂಡತಿ ಬರುವುದು ನಿಧಾನ್ವಾಯ್ತು)
(ಗಂಡ) ತಾರದಿದ್ದರೆ ಪಂಸೆಯಲ್ಲೇ
ಒರೆಸಿಬಿಡುವೆನು ಎನಲು ಗಂಡನು
ಬೆದರಿ ಕುದಿಯುವ ನೀರ ಸುರಿದಳು
ಬೊಬ್ಬೆ ಎದ್ದಿತು ಅಂಡ್ ಮ್ಯಾಲೇ