ಪ್ರಭೂಜಿ

ಪ್ರಭೂಜಿ ಪ್ರಭೂಜಿ….(ಎಂಬಂತೆ)
ರಮಣೇ ಮಣಿಯೇ ನಿನ್ನ ಎಂತು ಕಾಣುವೆನೋ|
ನಿನ್ನ ಮೂರ್ತಿಯ ಮನದೊಳು ಸ್ಥಾಪಿಸಿ ಜಪದಲಿ ನೆಲಸಿಹನೋ||
ರಾಜ ನಾನು ರಾಣಿ ನೀನು ಪ್ರೇಮರಾಜ್ಯದಿ ಕೂಡುವಾ (ತಳಮಳಿಸುತಿಹುದು)
ಎಲ್ಲಿ ಹೋಗಲಿ ಏನು ಮಾಡಲಿ ಎನ್ನ ಮನವು ತಪಿಸುತಿಹುದು
ಪ್ರೇಮ ರಾಜ್ಯದಿ ಈರ್ವರು ನಲಿವಾ ಎನ್ನ ಮನದನ್ನೇ..
ನಿನ್ನ ಕೂಡಿದ ಸ್ವಪ್ನ ರಾಜ್ಯದಿ ನಿಷ್ಫಲವಾದುದ ಎನ್ನ ಈ ಸ್ವಪ್ನ
ಕಾತುರನಾಗಿರೋ ನಿನ್ನಯ ಕೃಪೆಗೆ ಬಂದು ದಯೆತೋರೈ..
ಚಂದ್ರ ಬಿಂಬವಾ ತೋರೈ ತೋರೈ ಅಮೃತವಾಕ್ಯವಂ ಮುಗುಳ್ನಗೆ ಸೂಸುತ ಬಾರೈ
ಜೀವನನೌಕೆಯು ಮುಳುಗುತಲಿಹುದು
ರಮಣೀ ರಮಣೀ ಬಣ್ದು ಆಸರೆ ನೀಡೈ…
ಎನ್ನ ರಾಣಿ ನೀ ಓಡಿ ಬೇಗ ಬಾರೈ
ನಾ ವಿರಹ ತಾಪ ತಡೆಯಲಾರೇ
ಎನ್ನ ಮನವೆಲ್ಲಾ ನಿನ್ನಲ್ಲೇಯಿಹುದು
ಎನ್ನ ಧ್ಯಾನವೇ ನಿನ್ನಯ ನಾಮ..