(ಸೋಮೇಶ್ವರ ಶತಕದಂತೆ)
ಕೇಳೈ ಗೂರ್ಲು ರೋಗಕ್ಕಿಲ್ಲ ಮದ್ದು ಇಂಗ್ಲೀಷು ಮಿಕ್ಸಚರದೊಳು
ಕೊಳ್ಳಿ ತಾಳಿಸಿ ಚೂರ್ಣ ಅಂದು ಸ್ಪೂನ್ ಜೇನುತುಪ್ಪ ದೊಳು
ಸ್ಮರಿಸೈ ಮನದಲಿ ವೈದ್ಯದೇವರೆಂದು ವಿಶ್ವಾಸಮಂ ಪೊಂದುನೀ
ತೆರಳೈ ಪೋಪುದು ಗೂರ್ಲುರೋಗ ಕ್ಷಣದಿ ಶ್ರೀ ಶಾಂತಿಗ್ರಾಮೇಶ್ವರಾ
After a fortnight
ಚಿನ್ನ ಮೂಳೆ ಮುರಿವೆ ನಾನು ಬುರುಡೆಗ್ಬಿಸಿ ನೀರ್ಬಸಿವೆ ಜೋಕೆ
ನಿನ್ನ ಚೂರ್ಣವ ನುಂಗಿ ನಾನೇ ಚೂರ್ಣ ನಾದೆನು ಪಂಡಿತ|
ದಮ್ಮಯ್ಯಾಂದೆ ದತ್ತಯ್ಯಾಂದೆ ಔಸ್ತಿಕಾಸು ಬೇಡಿ ತಂದೆ
ಜೀವದೊರೆಸೆ ಬಿಟ್ಟರೆನ್ನಿ ಮುಂದೆ ನಾನುಸಿರೆತ್ತೆನು|
ಅಳಲೆಕಾಯ್ಬಡ ವೈದ್ಯ ನೀನು ನಿನ್ನ ಬಡಿದು ಏನ ಪಡೆವೆನು
ಗೂರ್ಲು ರೋಗವು ಎನ್ನ ಕರ್ಮವು ಅನುಭವಿಸಿಕೊಂಡಿರುವೆನು|