ನೀನಲ್ಲದೇ ಎನ್ನ ಕಾಯ್ವರನ್ನು ಕಾಣೆನೋ
ಚೆನ್ನೀಗರಾಯ ಕಾಪಿಡಲೋ ಕರುಣದಿಂದಲೀ||
ಸಂಸಾರ ಕೂಪವನ್ನು ನಾನು ದಾಟಲಾರೆನೋ
ಸುಖಶಾಂತಿಯನ್ನು ಕಾಣಿಸೋ ಸ್ವಪ್ನದಲ್ಲಿಯೂ||
ಕೇಶವಾ ನೀನೇ ಕಾಯಬೇಕೋ ಪಾಪಿಯಾದೆನ್ನಾ||
ಪುರುಷೋತ್ತಮನೇ ನಿನ್ನ ಪದವನ್ನು ಪೂಜಿಸೆ
ಓ ಕಾಗಿನೆಲೆಯಾದಿ ಕೇಶವನೇ ಸಲಹಲೊ||
ಕರಿರಾಜ ರಕ್ಷಕನೇ ನಿನ್ನ ಶರನು ಹೊಕ್ಕೆನೋ
ಸಿರಿಯ ರಮಣ ಶ್ರೀಲೋಲ ಸೌಮ್ಯ ಕೇಶವನೇ ಕಾಯೋ||