ಕೆರೆ ಏರಿ

ಕೆರೆ ಏರಿ ಕಟ್ಟೇ ಮ್ಯಾಗ ಕುರಿ ಅಟ್ಕೊಂಡು ಓಯ್ತಾ ಇದ್ದೆ
ತೊಪ್ಪೆ ಎಕ್ಕೊಂಡು ಹೋಯ್ತಾ ಇದ್ದೆ ಪದಾ ಆಡ್ತಾ ಇದ್ದೇ ಸಿದ್ದೀ
ಕದ್ದೂ ಕದ್ದೂ ನೋಡ್ಬಿಟ್ಟೇ ಕಾಣ್ದಾಂಗೇ ಕೇಳ್ಬುಟ್ಟೇ ಕೇಳ್ಯಾಕೆ
ಬೇಸಾಗಿತ್ತು ಸಿದ್ದೀ ಸಂದಾಗಿತ್ತೂ ಸಿದ್ದೀ ಪಸಂದಾಗಿತ್ತೂ
ಯಾರ್ಲಾ ನೀನು ಇಲ್ಯಾಕ್ ಬಂದಿ ಸಟೇಗಾದ್ರೂ ಮರ್ವಾದಿಲ್ವಾ
ಗ್ಯಾನಾ ಗೀನಾ ಸರ್ಯಾಗಿಲ್ವಾ ಎಡ್ತೀ ಸಾಕೋ ತಾಕತ್ತಿದ್ರೋ
ತೊಕೊಡೋ ಗೈರತ್ತಿದ್ರೆ ನಮ್ಮಪ್ಪಂತಾವ ಮಾತಾಡ್ ಹೋಗು
ದಮ್ಮಯ್ಯಂದೆ ಸಿಟ್ಟು ಬ್ಯಾಡ್ಸಿದ್ದಿ ನಿನ್ಮ್ಯಾಲ್ನಂಗೆ ಬಾಳಾ ಪಿರೀತಿ
ಕೆರ ಕೊಡೋ ಗೈರತ್ತೈತಿ ಗಿಣಿ ಅಂಗೆ ಸಾಕ್ತೀನಿ ನಿನ್ನ
ಏಳ್ದಂಗೆ ಕೇಳ್ತೀನಿ ಚಿನ್ನ ನಿನ್ನ ಬುಟ್ನಾನು ಬದ್ಕಿರ್ಲಾರೆ
ಪಿರುತಿ ಗಿರುತಿ ಕೆಟ್ಮಡುಂಗೆ ನನ್ಮಸಂಗೆ ತಿಳಿತಿಳೀಂಗೆ
ಅಪ್ಪನ್ನಿಲ್ಲಿ ಕರೀಲೋ ಎಂಗೆ ಎದರ್ಬೇಡಿ ಸುಂಕ ಅಂದೆ
ಲಗ್ನ ಮಾಡ್ಕೊತಿನಿ ಅಂದೆ ಅಪ್ಪಂತಾವ ನಡೀ ಮುಂದೆ