ಗೋರ್ಲನ ಗೋಳು

6-3-1953
ಕೆಮ್ಮಿಕೆಮ್ಮಿನಂಗೆ ಕೆಮ್ಮಿ ಕೆಮ್ಮಿ ನಂಗೆ ಸುಸ್ತಾಯ್ತಾ
ಸಾಕಪ್ಪ ಈ ಗೂರ್ಲು ಔಸ್ತಿ ಕೊಡೀ ದಮ್ಮಯ್ಯಾ ಔಸ್ತಿ ಕೊಡಿ
ಸೋಮ್ವಾರ ರಾತ್ರಿ ಮಲಕ್ಕೊಂಡ್ಮೇಲೆ ಗಂಟಲ್ ಗೊರಗೊರ ಅಂತು
ತಿಳ್ಕೊಂಬಿಟ್ಟೆ ಆಗ್ಲೇನೆ ತಿಳ್ಕೊಂಡು ಬಿಟ್ಟೇ ಶುರುವಾಯ್ತು ನಂಗೆ
ಪುನರಾಯೊ ಮಹಾಕಪೀಂತ ಔಸ್ತೀ ಕೊಡಿ ದಮ್ಮಯ್ಯ ಔಸ್ತೀ ಕೊಡಿ
ಕುರಸಾಲ್ ಕುಡ್ದೆ ಎಫೆನಾಲ್ ನುಂಗ್ದೆ Asmac inject ಮಾಡ್ದೆ
ಉಪಯೋಗ್ಸಿಲ್ಲಾ ಏನೇನೋ ಉಪಯೋಗ್ಸಿಲ್ಲಾ
Waste of money merely waste of money
ಆಲೋಪತಿಯಾಯ್ತು ಹೋಮಿಯೊಪತಿ ಆಯ್ತು
ಆಯುರ್ವೇದ ಔಸ್ತಿ ಎಲ್ಲಾ ಆಯ್ತೂ
Waste of money merely waste of money
ಬಾಳೆಹಣ್ಣು ಹಲಸಿನ ಸೊಳೆ players cigerette ಬಿಟ್ಟೆ
ವಾಸಿಯಿಲ್ಲ ಸಲ್ಪನು ವಾಸಿಯಿಲ್ಲಾ breathing excercise
ಶೀರ್ಷಸನವೂ ವರ್ಷವೂ ಬಿಡದೆ ಮಡ್ದೆ ವಾಸಿಯಿಲ್ಲ
ಸ್ವಲ್ಪನೂ ವಾಸಿಯಿಲ್ಲ

ತಿಂಗಳಿಗೆ ನಾಲ್ಕು Weeks ಗಳುಂಟು
Each contains seven days
ಸಂಡೆಯು ನೀನೇ ಮಂಡೆಯು ನೀನೇ
All the seven daysಊ ನೀನೇ
ಸಂಡೆಯು ಬನ್ದರೆ house ನ ಮಡದಿಯು
Spends her time happily ಅಲ್ವೇ
ಪ್ರತಿದಿನದಲ್ಲಿ ನೀನು ಸ್ನಾನವ finish ಮಾಡಿ
ದೇವರ pary ಮಾಡೋ ಮನುಜಾ
ಬೇಡ ಶಾಂತೀ clubಗೆ ಹೋಗಿ ರಮ್ಮಿ ಆಟವು
ಕಾಸು ಹಾಳು ತಲೆಯು ಬೋಳು ನಿನಗೆ ತಿಳಿಯದೆ
Time wasteಉ moneyಯು lostಉ
It is known to you.
ಮಡದಿ ಮುನಿದು ಪೊರಕೆ ಕೈಲಿ ಹಿಡಿದು ನುಡಿವಳು
ನಾಳೆಯಿಂದ late ಆಗಿ ಬಂದ್ರೆ ಪೊರಕೆಲ್ ಹೊಡೆವೆನು
ಇಸ್ಪೀಟು ಬಿಡಲು ಎಷ್ಟೋ try ಮಾಡಿ ಆಯಿತು
ಎಲ್ಲೆಏ ಇರಲಿ ಹೇಗೆ ಇರಲಿ temptಉ ಮಾಡ್ವುದು
ನಿನ್ನ ಹಣವ ಗೆದ್ದು ನಿನಗೆ ಸಾಲ ಹೇಳ್ವರು
ಎಂಥ ಪೆಚ್ಚು ಎಂಥ ಮಂಕು ಬುದ್ಧಿ ನಿನ್ನದು
ಒಪ್ದೆ ಕಣೋ ನಿನ್ನ ಮಾತು ಬಿಟ್ಟೇ ರಮ್ಮಿಯಾ
ಮನೆಯಲಿದ್ದು ಮಕ್ಕಳೊಡನೆ ಕಾಲಕಳೆವೆನೊ