ದೃಷ್ಟಿ-ದಾನ

ವಿವರಣಮ್ ಅತ್ರ.

ಅಲಖ್ ನಿರಂಜನ

೧ ಎಸಳು

ಅಲಖ್ ನಿರಂಜನ ಘಿಲ್ ಘಿಫ್ ಗುಂಜನ
ಭವ-ಭಯ-ಭಂಜನ ಬೈರಾಗಿ,
ದಡದಡ ಬಂದನು, ದ್ವಾರದಿ ನಿಂದನು
ಭಿಕ್ಷೆಯು ಎಂದನು ಆ ಜೋಗಿ

ಕಾಮನೆ ಕಾವಿಯನ್ ಉಟ್ಟನೂ, ತೊಟ್ಟನೊ
ಸೋಮನೆ ಶಾಟಿಯ ರಾಪಾಲಿ(=??) ! ಕಾವ್ಯವೆ ಕಾಯವ ಪಡೆದಿತೋ ಪಿಡಿದಿತೋ
ರಸ ಋಷಿ ಕರವೇ ಜಪಮಾಲಿ !

ಚಂದನ ಚರ್ಜಿತ, ಭಸ್ಮೋಧ್ವರ್ಜಿತ
ಬಂಧುರ ಸುಂದರ ಸನ್ಯಾಸಿ,
ರಾಗ-ಭೋಗ-ವಿಷ-ವಿಷಯಗಳ್ ಎದೆಯನು
ಮೆಟ್ಟುವವೋಲ್ ಪದ ವಿನ್ಯಾಸಿ

ಚಂಡ-ಮರೀಚಿಯ ದಂಡ ಕಮಂಡಲು
ತಾಪಸ-ವೇಷವ ತಳೆದಿಹನೆ ! ಸಂಧ್ಯಾ-ರಾಗದ ಚಂದನ ತಂಪಿಗೆ
ವೈಶ್ವಾನರ ತಪಕ್ ಇಳಿದಿಹನೆ !

ತರುಣಾಽಽರುಣ-ರುಚಿ-ರಂಜಿತ ರೂಪವು
ಗರತಿಯ ಗೌರವ ಕೆಣಕಿತ್ತು,
ಸಂಯಮ-ಮುದ್ರಿತ-ಹೃದಯ ಕವಾಟದಿ
ಕಾಮನ ಕಾರ್ಮುಕ ಮಣಿದಿತ್ತು

ವರ-ವೈರಾಗ್ಯದ ಚಿರ-ಸೌಭಾಗ್ಯಕೆ
ಶೃಂಗಾರವೇ ಶರಣಾಗಿದ್ದು,
ಬ್ರಹ್ಮಜ್ಞಾನದ ಫಲ-ಪರಿಪಾಕಕೆ
ತಾರುಣ್ಯವೇ ತಲೆ ಬಾಗಿತ್ತು.

‘ಅಲಖ್ ನಿರಂಜನ ಅಲಖ್ ನಿರಂಜನ’
ಮಂಜುಳ ಗುಂಜನ ಗುಣಗಿತ್ತು
ಬಾಲ-ಕುತೂಹಲ ಕೆರಳಿಸಿ ಗಣ-ಗಣ
ಘಂಟಾ-ಕಿಂಕಿಣಿ ಕುಣಿದಿತ್ತು

ಬಾಗಿಲು ತೆರೆಯಿತು, ಮುಂತೆರೆ ಸರಿಯಿತು.
ಜವನಿಕೆ ಜರೆಯಿತು ಮರೆಯಲ್ಲಿ
ಪವನವು ಪುಳಕಿತು, ಬಳ್ಳಿಯು ಬಳುಕಿತು(=ಬಗ್ಗಿತು)
ತರುಲತೆ ತುಳುಕಿತು ತೆರೆಯಲ್ಲಿ

ಉರ್ವಿಯ ಊರ್ವಶಿ, ರಂಜಿಪ ರೂಪಸಿ
ರಾಗ-ಪರಾಗವು ಪರಿಮಳಿಸಿ,
ಬಂದಳು ಷೋಡಶಿ, ರಸ-ಸರ-ಸಾರಸಿ
ಒಡೆಯನ ಪ್ರೇಯಸಿ ನಳ ನಳಿಸಿ

ಮೃದು-ಮಂದಸ್ಮಿತ ಆನನ-ಕಾನನ -ಕೆರೆ-ಕೆಂದಾವರೆ ಅರಳಿತ್ತು,
ಉಸುರಿನ ಗಂಧಕೆ ಮುಖ ಮಕರಂದಕೆ
ಬಂಡ್-ಉಣಿ(=ಮಧುಪ)-ದಂಡದು ತೆರಳಿತ್ತು

ಕರಿ ಹೊರೆ ಕೇಶ-ಕಲಾಪದ ಕಂಪಿಗೆ
ಸಂಪಿಗೆ ಸೊಂಪನು ಸುರಿದಿತ್ತು
ನೀಲಿಮ-ಕುಂತಲ-ನಿಕಷದಿ ಬೈತಲು(=ಸೀಮನ್ತ)-
ಬಂಗಾರದ ಗೆರೆ ಕೊರೆದಿತ್ತು

ಹೆಜ್ಜೆಯ ರಿಂಗಣ ಕಜ್ಜಕೆ-ಗೆಜ್ಜೆಯ ಹಂಸವೆ ತಾಳವ ಹಿಡಿದಿತ್ತು.
ಮುಗುದೆಯ(=ಮುಗ್ಧೆಯ) ಮೈಸಿರಿ ನವಿಲಿನ ನಾಟ್ಯಕೆ
ಕಾಮನ ಕೊಳಲದು ನುಡಿದಿತ್ತು.

“ಗರತಿಯು ಗುರುತಿಲ್ಲದ ಪರ-ಗುರುವಿಗೆ
ಬಿಕ್ಕೆಯನ್ ಇಕ್ಕಳು” ಎಂದ್ ಅಂದು
ಆಳಿನ ಕೈಯಲಿ ಕಾಳನು ಕಳುಹಿಸಿ
“ಬೋಗಿಯ ಜೋಳಿಗೆ ತುಂಬ್” ಎಂದು

ಜೋಗಿಯು ನಯನದ ನವ-ನೀಲಾಂಜನ
-ನಂದಾದೀಪವನ್ ಎತಿದನು,
ಕಣ್ಣಿನ ಕಾಂತಿಯ ಹೊಳಪಿಗೆ ಕಾಮನು
ಪ್ರೇಮದ ಗುಂಡಿಯನ್ ಒತ್ತಿದನು

ಎದೆ ‘ಝಲ್’ ಎಂದಿತು, ಮೈ ‘ಜುಂ’ ಎಂದಿತು
ಸಂಯಮ ಪಾಶವು ಸಡಿಲಿತ್ತು,
ಕಂಗಳ ಮಂಗಳ ಕಾಂತಿಯ ಶಾಂತಿಯ
ಕಡಲಿನ ಒಡಲಲಿ(=ಕಾಯದಲಿ →ತೀರದಲಿ) ಸಿಡಿಲಿತ್ತು

ನಾಚಿಕೆ ನಲ್ಲೆಯ ಗಲ್ಲ ಗುಲಾಬಿಗೆ
ಮೆಲ್ಲನೆ ಗುಲ್ಲನು ಕೊಟ್ಟಿತ್ತು,
ಸಂಜೆಯ ಛವಿ, ಗುಲ-ಗಂಜಿಯ ರುಚಿ, ಮುಖ ಕುಂಕುಮ ಕರಡಿಗೆಯ್(=ಪೇಟಿಕೆಯ್) ಆಗಿತ್ತು

ಎದೆ ಕಾರಂಜಿಯು(=fount) ರಾಗದ ರಸವನು
ಕಣ್ಣಿನ ಕೆಂಪಿಗೆ ತೂರಿತ್ತು,
ನಿಗ್ರಹ-ಪಂಜರ-ಬದ್ಧ-ವಿಹಂಗಮ
ಆಗಸದ್ ಅಂಗಳಕ್ ಆಗಿತ್ತು

ಹೃದಯವು ಅದುರಿತು, ಧೈರ್ಯವು ಚದುರಿತು
ಕದರಿತು(=ಕಂಪಿಸಿತು) ನೆಲವನು ಕೆಂಗಣ್ಣು,
(ಅ)ಹಮ್ಮಿನ ಹೆಮ್ಮರ ಉರುಳಿತು, ನರಳಿತು
ಚಿತ್ತದ ಚಂಚಲಕ್ ಆ ಹೆಣ್ಣು

ಅಲಖ್ ನಿರಂಜನ ಫಿಲ್ ಫಿಲ್ ಗುಂಜನ್
ಮುಂದಕೆ ಸಾಗಿದನಾ ಜೋಗಿ,
ಹೃದಯದ ಗುಡಿಯಲಿ ಮದನನ ಗಂಟೆಯ
ಢಣಡಣ ಬಾರಿಸಿ ತಿರು-ತಿರುಗಿ

ಮನೆಯಲಿ ಯೋಚಿಸಿ, ಮನದಿ ವಿವೇಚಿಸಿ
ತನ್ನಲಿ ತಾನೇ ನಾಚಿದಳು
ಹಿಂದಿನ ಸತಿಯರ ಸುಂದರ ಗುಣಗಳ
ಗಾನದಿ ಎದೆ ಮರೆ ಮಾಚಿದಳು

ಜೋಗಿಯ ಬೈದಳು, ಯೌವನ ಜರಿದಳು
ಜಾರಿದ ಹೃದಯವ ಹೀಗ್-ಅಳೆದು,
“ಕಾಮನ ಕುಟ್ಟುವೆ, ಪ್ರೇಮವ ಮೆಟ್ಟುವೆ”
ಎಂದಳು ಹಟದಿಂದ್ ಅದ ತುಳಿದು

“ನಾಳೆಗೆ ಜೋಗಿಯು ಬಂದರೆ, ನಿಂದರೆ
ನನ್ ದೊರೆಯ್ ಆಣೆಗೂ ನಾ ಕಾಣೆ,
ಆಳಿನ ಕೈಯಲಿ ಕಾಳನು ಕಳುಹಿಸಿ
ನುಗಿಸುವನ್ ಆಚಿಗೆ ನಾ ಜಾಣೆ”

‘ಅಲಖ್ ನಿರಂಜನ ಅಲಖ್ ನಿರಂಜನ’
ಕಂಚಿನ ಕಂಠವು ಮೊಳಗಿತ್ತು
ಹೆಣ್ಣಿನ ಕಣ್ಣಿಗೆ ಹಬ್ಬವ ಹಬ್ಬಿಸಿ
ಮಿಂಚಿನ ಮೂರುತಿ ಬೆಳಗಿತ್ತು

ಶಪಥವು ಮರೆಯಿತು, ಕುಪಥವು ತೆರೆಯಿತು
ಕರೆಯಿತು ಕಿಂಕಿಣಿ ಝೇಂಕಾರ,
ಕರಣವ ಎಳೆಯಿತು, ಹರಣವ ಸೆಳೆಯಿತು
ಹೂಂಕರಿಸುವ ಸ್ಮರ ಟಂಕಾರ

ನಿಲ್ಲದ ಮೇಲ್-ಉದ(=ಉತ್ತರೀಯ) ಮೆಲ್ಲನೆ ತೀಡುತ
ಸಂದಳು ಪ್ರಣಯದ ರಂಗ್ ಏರಿ,
ಕರದಲಿ ಕಾಳಿನ ಮೊರವನು ಮರೆಯಿಸಿ
ಹೊಸ ಹೊಂಗನಸಿನ ಸಿಂಗಾರಿ

ಜೋಗಿಯ ಜೋಳಿಗೆ ಜಾರನ ಚಾಳಿಗೆ
ತೆರದಲಿ ನೀರೆಗೆ(=ನಾರಿಗೆ) ತೋರಿತ್ತು
ಅವನದ ಬರವನು ಹಿಂಗಿಸಿ(=ಸರಿಸಿ) ತೆರವನು
ತುಂಬಲು, ಎದೆ ರಸ ತೊರೆದಿತ್ತು

ತನ್ನ್ ಎದೆ ಹಾಕಿದ ತೆರದಲ್ಲಿ ಜೋಳಿಗೆ-
ತಳದಲ್ಲಿ ಧಾನ್ಯವು ಬಿದ್ದಿತ್ತು,
ಸತಿಯ ವಿವೇಕವು ಬದುಕಲು ಹಚ್ಚಿದ
ಕಂಟಕದೋಲ್ ನವಿರ್(=ಕೂದಲು) ಎದ್ದಿತ್ತು

ಜೋಗಿಯ ವದನದ ತಬಕದಿ ಬೆಳಗುವ
ಕಣ್ಮಣಿ ಆರತಿ ಬೆಳಗಿತ್ತು.
‘‘ತ್ವಂ ಸೌಭಾಗ್ಯವತೀ ಭವ !! " ಆಶಿಷ
ಕಂಠಾಕಾಶದಿ ಮೊಳಗಿತ್ತು

ಕಾಮನು ತರಳೆಯ ಕರುಳಿನ ಬೆರಳಿಗೆ
ಮರಳಿನ ಮುರಳಿಯ ಮಡಿಸಿದನು,
ಭಾವದ ಕಾವಿಗೆ ಕರಗಿದ ಚಿದ್ರಸಕ್
ಅಕ್ಷರ ಕವಚವ ತೊಡಿಸಿದನು.

“ನಿಲ್ಲೆಲೆ ಜೋಗಿಯೆ, ನಿನ್ನಯ ಕಣ್ಣಲಿ
ಎಂತಹ ಕಾಂತಿಯು ಕುಣಿಯುತಿದೆ,
ತೇಜಃ ಪುಂಜದ ಕಾಂತಿ-ವಿಲಾಸಕೆ
ರವಿ-ಶಶಿ-ನೈದಿಲೆ ಮಣಿಯುತಿವೆ”

“ಏನಿದು ಜ್ಯೋತಿಯು? ಚೆಲುವಿನ ಚಿಲುಮೆಯ
ಚಿಮ್ಮಿಸಿ ಚಾಕ್ಷುಷ ಕುಕ್ಕಿಸಿದ
ಕಂಜ ನಿಕುಂಜದ ಸಾರವ ಹೀರಿದೆ
ಜೊನ್ನಿನ(=ಜ್ಯೋತ್ಸ್ನೇ) ಜೇಂಗಡಲ್ ಉಕ್ಕಿಸಿದೆ”

“ಚೆಲುವಿಕೆ ಚಂಚಲತೆಗೆ ಕಣ(=ಬಟ್ಟೆ)ಕಟ್ಟಿದೆ
ಮಿಂಚಿನ ಹೊಳೆ ಮಡುಗಟ್ಟಿಹುದು
ವಿಧಿ ನಿನ್ ನೋಟದ ತಟ್ಟೆಯಲ್ ಎಂತಹ
ದೀಪದ ಕುಡಿಗಳ್ ಅಟ್ಟಿಹುದು

ಜೋಗಿಯು ಬೆಚ್ಚಿದ, ಕಣ್ ಕಿವಿ ಮುಚ್ಚಿದ
ಹೆಣ್ಣಿನ ಮೆಚ್ಚಿಗೆ ಹುಚ್ಚಾದ
ಹದಿಬದೆ(=ಸತೀ)-ಧರ್ಮದ ಬಳ್ಳಿಗೆ ಕೊಳ್ಳಿಯ
ಹಚ್ಚುವ ಕಾನನ ಕಿಚ್ಚಾದ

‘ಅಲಖ್ ನಿರಂಜನ, ಅಲಖ್ ನಿರಂಜನ’
ಮರುದಿನ ಬಂದನು ಆ ಜೋಗಿ
ಉಕ್ಕಿನ ಬಾಗಿಲು ಗಕ್ಕನೆ ತೆರೆಯಿತು
ತವಕದಿ ಬಂದಳು ಅನುರಾಗಿ

ಜೋಗಿಯನ್ ಇಬ್ಬರು ಜೊತೆಗಾರರು ತೋಳ್
ಪಿಡಿದೇ ನಡೆಸುತ ತರುತಿಹರು
ಕಣ್ಣಿನ ಕಲಶವ ಮಣ್ಣಿಗೆ ಬಗ್ಗಿಸಿ
ಬಾಷ್ಪ ಸ್ನಾನವ ನಡೆಸಿಹರು

ಹಲ್ಲಣ ಹಾರಿತು, ತಲ್ಲಣಿಸಿತು ಎದೆ
ನಿಲ್ಲದೆ ತೊಳಲಿದಳ್ ಆ ನಾರಿ
‘ಜೋಗಿಯೇ ನಿನಗ್ ಏನ್ ಆಗಿದೆ’’ ಎಂದಳು
ಬಂದಳು ನಿಂದಳು ಬಳಿ ಸಾರಿ

‘ತಾಯಿಯೆ, ತೆಗೆದುಕೋ’ಎನ್ನುತ ಜೋಗಿಯು
ನೀರೆಗೆ(=ನಾರಿಗೆ) ಥಾಲಿಯ ಕೊಟ್ಟಿದ್ದ
ಥಾಲಿಯ ತಳದಲಿ ಥಳ ಥಳ ಹೊಳೆಯುವ
ಕಣ್ಣುಗಳ್ ಎರಡನು ಇಟ್ಟಿದ್ದ

‘ತಾಯಿಯೆ ನಿನ್ನೆಯ ದಿನ ನೀನ್ ಎನ್ನಯ
ಕಣ್ಣಿನ ಬಣ್ಣನೆ ಮಾಡಿದ್ದಿ
ಗರತಿಯ ಗೋರಿಯ(=ಮೃಗಯಾ-ಪಶು) ಕಟ್ಟಿದ ತೊಗಲಿನ(=ಬಾಹ್ಯಾಂಗದ)
ಆ ಕಣ್ ಕಿತ್ತ್ ಇದೋ ತಂದಿಹೆನು’

“ಅಲಖ್ ನಿರಂಜನ, ಅಲಖ್ ನಿರಂಜನ”
ನಡೆದನು ನಿರ್ವ್ಯಥೆಯಾs ಜೋಗಿ
ತೊಗಲಿನ ಕಣ್-ಬಲಿಯಿಂದಲಿ, ಜ್ಞಾನದ
ಒಳ-ಗಣ್ ತೆರೆಯಿಸಿ ಕುರುಡಾಗಿ