ರಂಗವಲ್ಲೀ

ಪರಿಚಯ

(ಸದಾಸ್ವಾತಪತ್ರಿಕಾಯಾಮ್ ಮೋಹನಃ।)

The meter is a simple doubled-up caupadi with repeated 3-mātrā elements (‘lā-la’ or ‘la-la-la’):

3-3-3-3
3-3-3-3
3-3-3-3 3-4 Twice

Also of note is the gentleness of the flow — no harsh or even dissimilar half consonants, short words and a middle-Kannada style that is very close to the modern spoken tongue, but just distant enough to mark it out as special.

The temple being referred to is the Yoga Narasimha Swamy temple atop the hill in Melkote.

Rangavalli appears in his collection Haṇate, and is among his finest Bhakti poems.

ಪಾಠಃ

ಮಾಗಿ(ಮಾಸ) ಬಂದು, ಗಿರಿಗೆ ಹಗಲು
ಹಿತದ ಬಿಸಿಲ ಹೊದಿಸಿದ್ ಅಂದು
ಹಸುಳೆ(=ಮಗು)-ಗೂಡಿ ಬೆಟ್ಟ ತುದಿಯ
ಗುಡಿಗೆ ನಡೆದೆನು.

ಬಾಲ ಕೊಳಕೆ ಕಲ್ಲನ್ ಎಸೆದು
ಸುಳಿಯ ರಚಿಸಿ, ನಲಿವ ತೆರದಿ
ಹಗಲ ಮೌನಕ್ ಎಸೆಯುತಿತ್ತು
ಹಕ್ಕಿ ಹಾಡನು. 1 (5)

ಗಿರಿಯ ತುದಿಯ ಗುಡಿಯ ಸೇರಿ
ಹಸುಳೆ-ಗೂಡಿ ನಿಂತೆನ್ ಅಂದು
ಮಂದಿಯ್ ಒಬ್ಬರ್ ಇಲ್ಲವ್ ಅಲ್ಲಿ —
ಮೌನವ್ ಆಳಿತು.

ಹೃದಯದಲ್ಲಿ ಭಕ್ತಿ ಮೂಡಿ
ಮನದ್ ಒಳ್ ಉಚ್ಚ ಭಾವ ಹೂಡೆ
ಗುಡಿಯನ್ ಒಂದು (ಸುತ್ತ)ಬಳಸು ಬಂದು
ಒಳಗೆ ಹೊಕ್ಕೆನು. 2

ಅಲ್ಲಿ ವೇದ ಘೋಷವ್ ಇಲ್ಲ,
ತಮಿಳು ಪದ್ಯವ್ ಒರೆವರ್ ಇಲ್ಲ,
‘ಮಾನ ಸಲಿಸಲ್ ಇಲ್ಲ’ ವೆಂಬ
ಜಗಳವ್ ಇಲ್ಲವು.

ಇರವಿನ್ ಅಳಲನ್(=ಗೋಳನ್) ಎಲ್ಲ ಮರೆಸಿ
ಮನಕ್ ಅದ್ ಒಂದು ತಂಪನ್ ಈವ
ದಿವ್ಯ ಶಾಂತಿಯ್ ಅಂದು ಕಂಡೆ
ಗಿರಿಯ ಗುಡಿಯ್ ಒಳು. 3 (5)

ಗರ್ಭ-ಗುಡಿಯ ಹೊಸಲ ಮುಂದೆ
ಭಕ್ತಿ-ನಮ್ರನ್ ಆಗಿ ನಿಂತೆ;
ಹಸುಳೆ ನನ್ನ ಸೆರಗ ಜಗ್ಗಿ
ಬೆರಳ ತೋರಿತು –

ಅಲ್ಲಿ ಮುಸುಕು ಬೆಳಕಿನ್ ಒಳಗೆ
ಬಾಗಿದ್ ಒಂದು ವ್ಯಕ್ತಿ ಕಂಡೆ
ಹಣ್ಣು ಹಣ್ಣು ಮುದುಕಿಯ್ ಅಲ್ಲಿ!
ಬೆಟ್ಟ-ತುದಿಯೊಳು! 4

ಮುದುಕಿಯ್ ಉಟ್ಟ ಬಟ್ಟೆ ಚಿಂದಿ,
ನೆರತ(=ಫಲಿತ) ಹೆರಳು(=ವೇಣೀ), ಸುಕ್ಕು ಮೋರೆ
ಮುಪ್ಪು ತನ್ನ ಮುದ್ರೆಯ್ ಒತ್ತಿದ್
ಅಂಗವ್ ಅವಳದು.

ಆದರ್ ಅವಳ ಕಂಗಳ್ ಎರಡು
ಜರೆಯನ್ ಅಣಕಿಸುತ್ತ ಹೊಳೆದು
ಮುಖಕೆ ಕೊಡುತಲ್ ಇದ್ದುವ್ ಒಂದು
ಬಗೆಯ ಠೀವಿಯ(=ಗಾಂಭೀರ್ಯವ). 5 (5)

ಬೆಟ್ಟ ಹತ್ತಿ ಬಂದಳ್ ಎಂತು(=ಹೇಗೆ)?
ಚಿಂದಿಯ್ ಉಟ್ಟ ತೀರ ಬಡವೆ
ಮಲೆಯ ನಾರಸಿಂಹಗ್ ಈವಳ್
ಆವ ಕಾಣಿಕೆ?

“ಎಲ್ಲರ್ ಎದೆಯ ಹೊ(=ಹೋ)ಗುವ ದೇವ
ಹೊನ್ನು ಹಣ್ಣೊಳ್ ಅಳೆಯನ್ ಒಲವ”
ಎನ್ನುವ್ ಅರಿವು - ಆಕೆಗ್ ಇತ್ತೊ? —
ಎನಗೆ ತಿಳಿಯದು 6

ಸೆರಗಿನಿಂದ ನೆಲವ ಗುಡಿಸಿ
ಮಡಿಲೊಳ್ ಇಟ್ಟು ಮುಚ್ಚಿ ತಂದ
ರಂಗವಲ್ಲಿಯಿಂದ ಹಸೆಯ(=ಆಸನ)
ಮುದುಕಿ ಬರೆದಳು —

ಮೊದಲು ನೂರು ದಳದ ಪದ್ಮ
ಅದರ ಸುತ್ತ ಬಳ್ಳಿ ಹೆಣಿಗೆ(=pleat)
ಬಳ್ಳಿಯ್ ಎಲೆಯ ಮೇಲೆ ಪಕ್ಷಿ-
ಯುಗದ(=ಯುಗ್ಮದ) ಬೇಟವು(=ಮೇಲನ). 7

ಇಂತು ತನ್ನ ಮನಕೆ ಚೆಲುವು
ಹೊಳೆಯುವ್ ಅಂತ ರೂಪು-ಗೊಡುತ
ಹಸೆಯ ಬರೆಯುತ್- ಇರುವ ಮರೆತಳ್
ಅಂದು ಮುದುಕಿಯು.

ಅವಳ ಕಲೆಗೆ ಮುಗ್ಧನ್ ಆದೆ;
ಒಂದು ಡೊಂಕು ಗೆರೆಯನ್ ಎಳೆಯದ್
ಅವಳ ಕೈಯ ಚಳಕವ್ ಎನ್ನ
ಬೆರಗು ಮಾಡಿತು! 8

ಹಣ್ಣು ಮುದುಕಿ ತೀರ ಬಡವೆ,
‘ಅಯ್ಯೋ’ ಎಂಬರ್ ಇಲ್ಲವೇನೊ —
ಮಲೆಯ ನಾರಸಿಂಹ-ದೇವನ್
ಒಬ್ಬನ್ ಅಲ್ಲದೆ ?

ಅವನು ಮೆಚ್ಚಲೆಂದು ತನ್ನ
ಮುಪ್ಪಿನ್ ಅಳಲ(=ಗೋಳ) ಮೂಲೆಗ್ ಒತ್ತಿ
ಬೆಟ್ಟವ್ ಏರಿ ಹಸೆಯ ಬರೆವ
ಭಕ್ತಿ ಎಂಥದು? 9

(ಗರ್ಭಗೃಹ)ತೆರೆಯ ತೆಗೆಸಿ, ಹಣ್ಣು ಕಾಯ
ಪೂಜೆ ಸಲಿಸಿ, ಸೊಡರ(=ದೀಪ) ಬೆಳಗಲ್
ಅವನ ಕಂಡೆ – ಹಸುಳೆ ಇತ್ತ
ಕಡೆಯೆ ತಿರುಗದು!

ಮುದುಕಿ ಬರೆವ ಹಸೆಯ ಮೇಲೆ
ಅದರ ಮನವು, ನೆಟ್ಟ ನೋಟ,
ದೇವಗ್ ಒಲಿದು ಕೈಯ ಮುಗಿಯುವ್
ಅರಿವೆ ಇಲ್ಲವು! 10 (5)

“ಕಿಟ್ಟು, ನೋಡು, ತಲೆಯ ಮೇಲೆ
ಹೊಳೆವ ಹೊನ್ನು ರನ್ನದ್ ಒಡವೆ,
ದೇವರ್ ಉಟ್ಟ ಸೆರಿಗೆ ಪಂಚೆ
ಕೊರಳ ಪದಕವ;

ಮಲೆಯ ದೇವರ್ ಎಷ್ಟು ಚೆಲುವು!”
ಹಸುಳೆ ನೋಡದ್ ಅತ್ತ! ಅದಕೆ
ದೇವನ್ ಅಲ್ಲ — ಮುದುಕಿ ಬರೆವ
ಹಸೆಯೆ ಸೋಜಿಗ(=ವಿಸ್ಮಯ)! 11

ಅದರ ನಡತೆ ಹೊಳಿಸಿತ್ ಅಂದು
ಮನಕ್ ಅದ್ ಒಂದು ಹೊಸದು ನಿಜವ -
ದೇವನ್ ಅಲ್ಲ – ಬರಿಯ ಬೊಂಬೆ! –
ಹಸೆಯೆ ಸೋಜಿಗ!

ಭಕ್ತಿಮೂರ್ತಿ ಮುದುಕಿಯ್ ಒಮ್ಮೆ,
ದೇವನ್ ಒಮ್ಮೆ ನೋಡುತ್ ಎಂದೆ -
ದೇವ ಬೊಂಬೆ, ಪೂಜೆ ಆಟ,
ಭಕ್ತಿ ಸೋಜಿಗ! 12 (5)

ದೇವನ್ ಇರುವು ದಿಟವೊ, ಸಟೆಯೊ(=ಶಾಠ್ಯವೋ)
“ಹೆರರು(=ಇತರರು) ತಿಳಿಯದ್ ಇರಿತಗಳನು(=ತಿವಿತಗಳನು),
ಹುದುಗಿ(=ಮುಚ್ಚಿ) ಇರುವ ಪಾಪಗಳನು
ಗುಟ್ಟನ್ ಎಲ್ಲವ

ಎದೆಯ ಹೊಗುತಲ್(=ಹೋಗುತ್ತಲ್), ಎಲ್ಲ ತಿಳಿದು
ಸಂತವ್ ಇಡುವನ್ ಒಬ್ಬನ್ ಉಂಟು”
ಎನ್ನುವ್ ಅಚಲ ಭಕ್ತಿ ದಿಟವು
ಮತ್ತು ಸೋಜಿಗ(=ವಿಸ್ಮಯ)! 13 (ರ4)

ಮುದುಕಿ ಇಹವ ಬಿಟ್ಟಳ್ ಏನೊ?
ಮಲೆಯ ದೇವ ಮೆಚ್ಚಲ್ ಎಂದು
ಇನ್ನು ಹಸೆಯ ಬರೆಯಳ್ ಏನೊ?
ಗಿರಿಯ ಗುಡಿಯೊಳು?

ಆದರ್ ಅವನನ್ ಓಲಿಸುವುದನೆ
ಬಾಳಿನ್ ಒಂದೆ ಗುರಿಯ ಮಾಡಿದ್
ಅವಳ ನೆನಪು ಎಂದು ಮನಕೆ
ತಂಪನೀವುದು. 14 (5)