001 ಶ್ರೀವಿಷ್ಣು ವಿಶ್ವಾದಿಮೂಲ ...{Loading}...
ಶ್ರೀ-ವಿಷ್ಣು ವಿಶ್ವಾಽಽದಿಮೂಲ ಮಾಯಾ-ಲೋಲ
ದೇವ ಸರ್ವೇಶ ಪರ-ಬೊಮ್ಮನ್ ಎಂದು ಜನಂ ॥
ಆವುದನು ಕಾಣದೊಡಮ್ ಅಳ್ತಿಯಿಂ(=ಪ್ರೀತಿಯಿಂ) ನಂಬಿಹುದೋ
ಆ ವಿಚಿತ್ರಕೆ ನಮಿಸೊ – ಮಂಕು ತಿಮ್ಮ ॥
ಚೈತನ್ಯಮ್
002 ಜೀವ ಜಡರೂಪ ...{Loading}...
ಜೀವ ಜಡರೂಪ ಪ್ರಪಂಚವನ್ ಅದ್ ಆವುದೋ
ಆವರಿಸಿಕೊಂಡುಮ್ ಒಳನೆರೆದುಮ್ ಇಹುದಂತೆ॥
ಭಾವಕ್ ಒಳ-ಪಡದಂತೆ ಅಳತೆಗ್ ಅಳವಡದಂತೆ(=ಹೊಂದದನ್ತೆ)
ಆ ವಿಶೇಷಕೆ ಮಣಿಯೋ(=ಸೋಲೋ) -ಮಂಕುತಿಮ್ಮ॥ (5)
003 ಇಹುದೊ ಇಲ್ಲವೊ ...{Loading}...
ಇಹುದೋ ಇಲ್ಲವೋ ತಿಳಿಯಗೊಡದ್ ಒಂದು ವಸ್ತು ನಿಜ
ಮಹಿಯಿಂ ಜಗವಾಗಿ ಜೀವ-ವೇಷದಲಿ ॥
ವಿಹರಿಪುದ್ ಅದ್ ಒಳ್ಳಿತ್ ಎಂಬುದು ನಿಸದವ್(=ವಿಶದ) ಆದ್-ಒಡ್-ಆ
ಗಹನ ತತ್ತ್ವಕೆ ಶರಣೋ – ಮಂಕುತಿಮ್ಮ ॥ (4)
ದೇವಾಃ ಕೇ? ಕತಿ? ಜೀವನಾರ್ಥಃ?
004 ಏನು ಜೀವನದರ್ಥ? ...{Loading}...
ಏನು ಜೀವನದ್ ಅರ್ಥ? ಏನು ಪ್ರಪಂಚಾರ್ಥ ?
ಏನು ಜೀವಪ್ರಪಂಚಗಳ ಸಬಂಧ?
ಕಾಣದ್ ಇಲ್ಲ್ ಇರ್ಪುದ್ ಏನಾನುಮ್ ಉಂಟೆ ? ಅದೇನು?
ಜ್ಞಾನ-ಪ್ರಮಾಣವ್ ಏಮ್? ಮಂಕುತಿಮ್ಮ
005 ದೇವರೆಮ್ಬುದದೇನು ಕಗ್ಗತ್ತಲೆಯ ...{Loading}...
ದೇವರ್ ಎಂಬುದ್ ಅದ್ ಏನು ಕಗ್-ಗತ್ತಲ ಗವಿಯೆ?
ನಾವ್ ಅರಿಯಲಾದ್-ಎಲ್ಲದರ್ ಒಟ್ಟು ಹೆಸರೇ?
ಕಾವನ್ ಒರ್ವನ್ ಇರಲ್ಕೆ ಜಗದ ಕಥೆಯ್ ಏಕಿಂತು ?
ಸಾವು ಹುಟ್ಟುಗಳ್ ಏನು?- ಮಂಕುತಿಮ್ಮ (5)
006 ಒಗಟೆಯೇನೀ ಸೃಷ್ಟಿ? ...{Loading}...
ಒಗಟೆಯ್ ಏನ್ ಈ ಸೃಷ್ಟಿ? ಬಾಳಿನ್ ಅರ್ಥವ್ ಏನು ?
ಬಗೆದು ಬಿಡಿಸುವರ್ ಆರು ಸೋಜಿಗವನ್(=ವಿಸ್ಮಯವನ್) ಇದನು ?
ಜಗವ ನಿರವಿಸಿದ(=ಒಪ್ಪಿಸಿದ) ಕೈಯ್ ಒಂದ್ ಆದ್-ಒಡ್ ಏಕಿಂತು
ಬಗೆ ಬಗೆಯ ಜೀವ-ಗತಿ ? – ಮಂಕುತಿಮ್ಮ
007 ಬದುಕಿಗಾರ್ ನಾಯಕರು, ...{Loading}...
ಬದುಕಿಗ್ ಆರ್ ನಾಯಕರು, ಏಕನೋ ಅನೇಕರೋ?
ವಿಧಿಯೋ ಪೌರುಷವೋ ಧರುಮವೋ ಅಂಧಬಲವೋ?
ಕುದುರುವುದ್(=ಸಂಸ್ಥಿತವಾಗುವುದು) ಎಂತು(=ಹೇಗೆ) ಈಯ್ ಅವ್ಯವಸ್ಥೆಯ ಪಾಡು?
ಅದಿಗುದಿಯೆ(=ತಳಮಳ) ಗತಿಯ್ ಏನೋ? – ಮಂಕುತಿಮ್ಮ ॥ (4)
008 ಕ್ರಮವೊನ್ದು ಲಕ್ಷ್ಯವೊನ್ದುಣ್ಟೇನು ...{Loading}...
ಕ್ರಮವ್ ಒಂದು ಲಕ್ಷ್ಯವ್ ಒಂದ್ ಉಂಟ್ ಏನು ಸೃಷ್ಟಿಯಲಿ?
ಭ್ರಮಿಪುದೇನ್ ಆಗ್ ಆಗ ಕರ್ತೃವಿನ ಮನಸು?
ಮಮತೆಯುಳ್ಳ್-ಅವನ್ ಆತನ್-ಆದೊಡ್ ಈ ಜೀವಗಳು
ಶ್ರಮ-ಪಡುವುದ್ ಏಕಿಂತು -ಮಂಕುತಿಮ್ಮ ? (5)
ಕದನಭೂಮಿರ್ ಜೀವಿತಮ್
009 ಏನು ಭೈರವಲೀಲೆಯೀ ...{Loading}...
ಏನು ಭೈರವ-ಲೀಲೆಯ್ ಈ ವಿಶ್ವ-ಭ್ರಮಣೆ!
ಏನು ಭೂತ-ಗ್ರಾಮ-ನರ್ತನೋನ್ಮಾದ !
ಏನ್ ಅಗ್ನಿ ಗೋಳಗಳು ! ಏನ್ ಅಂತರ್-ಆಳಗಳು !
ಏನು ವಿಸ್ಮಯ ಸೃಷ್ಟಿ! – ಮಂಕುತಿಮ್ಮ ॥ (5)
010 ಏನು ಪ್ರಪಞ್ಚವಿದು! ...{Loading}...
ಏನು ಪ್ರಪಂಚವ್ ಇದು! ಏನು ಧಾಳಾಧಾಳಿ।
ಏನ್ ಅದ್ಭುತಾಪಾರ-ಶಕ್ತಿ-ನಿರ್ಘಾತ! ॥
ಮಾನವನ ಗುರಿಯ್ ಏನು? ಬೆಲೆಯ್ ಏನು? ಮುಗಿವ್ ಏನು? ।
ಏನರ್ಥವ್ ಇದಕೆಲ್ಲ? – ಮಂಕುತಿಮ್ಮ ॥
011 ಮುತ್ತಿರುವುದಿನ್ದು ಭೂಮಿಯನೊನ್ದು ...{Loading}...
ಮುತ್ತಿರುವುದ್ ಇಂದು ಭೂಮಿಯನ್ ಒಂದು ದುರ್ದೈವ।
ಮೃತ್ಯು ಕುಣಿಯುತಲ್ ಇಹನು ಕೇಕೆ-ಹಾಕುತಲಿ ॥
ಸುತ್ತಿಪುದು ತಲೆಯನ್ ಅನುದಿನದ ಲೋಕದ ವಾರ್ತೆ।
ಎತ್ತಲ್(=ಎಲ್ಲಿ) ಇದಕೆಲ್ಲ ಕಡೆ? – ಮಂಕುತಿಮ್ಮ ॥
012 ಮಾನವರೊ ದಾನವರೊ ...{Loading}...
ಮಾನವರೋ ದಾನವರೋ ಭೂಮಾತೆಯನು ತಣಿ(ಣ್ಣಿ)ಸೆ
ಶೋಣಿತವನ್ ಎರೆಯುವರು ಬಾಷ್ಪ-ಸಲುವುದ್ ಇರೆ?
ಏನು ಹಗೆ! ಏನು ಧಗೆ! ಏನು ಹೊಗೆಯ್ ಈ ಧರಿಣಿ
ಸೌನಿಕನ(=ಕಟುಕ) ಕಟ್ಟೆಯೇಂ? – ಮಂಕುತಿಮ್ಮ
013 ಪುರುಷಸ್ವತನ್ತ್ರತೆಯ ...{Loading}...
ಪುರುಷ-ಸ್ವತಂತ್ರತೆಯ ಪರಮ-ಸಿದ್ಧಿಯ್ ಅದ್ ಏನು ?।
ಧರಣಿಗ್ ಅನು-ದಿನದ ರಕ್ತಾಭಿಷೇಚನೆಯೇ? ॥
ಕರವಾಲವನು(=ಖಡ್ಗವನು) ಪುಷ್ಪ-ಸರವ್ ಎಂದು ಸೆಳೆದ್ ಆಡೆ।
ಪರಿಮಳವ ಸೂಸುವುದೆ ? – ಮಂಕುತಿಮ್ಮ
014 ಒನ್ದೆ ಗಗನವ ...{Loading}...
ಒಂದೆ ಗಗನವ ಕಾಣುತ್ ಒಂದೆ ನೆಲವನು ತುಳಿಯುತ್
ಒಂದೆ ಧಾನ್ಯವನ್ ಉಣ್ಣುತ್ ಒಂದೆ ನೀರ್ ಗುಡಿದು ॥
ಒಂದೆ ಗಾಳಿಯನ್ ಉಸಿರ್ವ ನರ-ಜಾತಿಯ್ ಓಳಗ್ ಎಂತು।
ಬಂದುದ್ ಈ ವೈಷಮ್ಯ? – ಮಂಕುತಿಮ್ಮ॥
ಲೋಕದಲ್ಲಿ ಕ್ಷೊಭೆ
015 ಹಳೆಯ ಭಕ್ತಿಶ್ರದ್ಧೆಯಳಿಸಿಹೋಗಿವೆ ...{Loading}...
ಹಳೆಯ ಭಕ್ತಿ ಶ್ರದ್ಧೆಯ್ ಅಳಿಸಿ-ಹೋಗ್ ಇದೆ ಮಾಸಿ(=ಕೊಳಕಾಗಿ)।
ಸುಳಿದಿಲ್ಲವ್ ಆವ ಹೊಸ ದರ್ಶನದ ಹೊಳಪುಂ ॥
ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ(=ರೀತಿಯಲಿ)।
ತಳಮಳಿಸುತಿದೆ ಲೋಕ – ಮಂಕುತಿಮ್ಮ ॥
016 ಇಳೆಯ ಬಿಟ್ಟಿನ್ನು ...{Loading}...
ಇಳೆಯ ಬಿಟ್ಟ್ ಇನ್ನುಮ್ ಎತ್ತಲುಮ್ ಐದದ(=ಸೇರದ) ಪ್ರೇತವ್
ಅಲೆವಂತೆ ಲೋಕ ತಲ್ಲಣಿಸ್ ಇಹುದ್ ಇಂದು ॥
ಹಳೆ-ಧರ್ಮ ಸತ್ತಿಹುದು ಹೊಸ ಧರ್ಮ ಹುಟ್ಟಿಲ್ಲ
ತಳಮಳಕೆ ಕಡೆಯ್ ಎಂದು – ಮಂಕು ತಿಮ್ಮ ॥
017 ತಳಮಳವಿದೇನಿಳೆಗೆ? ದೇವದನುಜರ್ ...{Loading}...
ತಳಮಳವ್ ಇದೇನ್ ಇಳೆಗೆ? ದೇವ-ದನುಜರ್ ಮಥಿಸೆ
ಜಳಧಿಯೊಳ್ ಆದ್ ಅಂತೆ ಸುಧೆಗೆ ಪೀಠಿಕೆಯೇಂ?
ಹಾಲಾಹಲವ ಕುಡಿವ ಗಿರೀಶನ್ ಇರ್ದ್ ಒಡ್ ಈ
ಕಳವಳವ್ ಅದ್ ಏತಕ್ ಎಲೋ? – ಮಂಕುತಿಮ್ಮ
018 ನದಿಯ ತೆರೆಯವೊಲುರುಳಿ ...{Loading}...
ನದಿಯ ತೆರೆ(=ಅಲೆ)ಯವೊಲ್ ಉರುಳಿ ಹೊರಳುತ್ ಇರುವುದು ಜೀವ
ಮೊದಲ್ ಇಲ್ಲ ಮುಗಿವ್ ಇಲ್ಲ ನಿಲುವ್ ಇಲ್ಲವ್ ಅದಕೆ ॥
ಬದುಕ್ ಏನು ಸಾವ್ ಏನು ಸೊದೆಯ್ ಏನು ವಿಷವ್ ಏನು?
ಉದಕ-ಬುದ್ಬುದವ್ ಎಲ್ಲ ! – ಮಂಕುತಿಮ್ಮ ॥
ಕೋ ನಿಯನ್ತಾ?
019 ಗಾಳಿ ಮಣ್ಣುಣ್ಡೆಯೊಳಹೊಕ್ಕು ...{Loading}...
ಗಾಳಿ ಮಣ್ಣ್-ಉಂಡೆಯ್ ಒಳ-ಹೊಕ್ಕು ಹೊರ ಹೊರಳಲ್ ಅದು
“ಆಳು” +ಎನಿಪುದ್ ಅಂತ್ ಆಗದ್ ಇರೆ ಬರಿಯ ಹೆಂಟೆ(=ಪಂಕಗೋಲ) ॥
ಬಾಳೇನು ಧೂಳು ಸುಳಿ, ಮರ ತಿಕ್ಕಿದ್ ಉರಿಯ ಹೊಗೆ
ಕ್ಷ್ವೇಳವ್(=ವೆಷವ್) ಏನ್ ಅಮೃತವ್ ಏಂ ? – ಮಂಕುತಿಮ್ಮ ॥
020 ಕಣ್ಡ ದೈವಕ್ಕೆಲ್ಲ ...{Loading}...
ಕಂಡ ದೈವಕ್ಕ್ ಎಲ್ಲ ಕೈಯ ಮುಗಿದ್ ಏನ್ ಅಹುದು?
ಚಂಡ-ಚತುರೋಪಾಯದಿಂದಲ್ ಏನ್ ಅಹುದು ? ॥
ತಂಡುಲದ ಹಿಡಿಯ್ ಒಂದು ತುಂಡು-ಬಟ್ಟೆಯದ್ ಒಂದು
ಅಂಡ್-ಅಲೆತವ್ ಇದಕ್ ಏನೋ? – ಮಂಕುತಿಮ್ಮ ॥
021 ಹೊನ್ನೆನ್ದು ಜಗದಿ ...{Loading}...
ಹೊನ್ನ್ ಎಂದು ಜಗದಿ ನೀಂ ಕೈಗೆ ಕೊಂಡದನು ವಿಧಿ
ಮಣ್ಣ್ ಎನುವನ್, ಅವನ ವರ ಮಣ್ಣ್ ಎನುವೆ ನೀನು ।
ಭಿನ್ನವ್ ಇಂತ್ ಇರೆ ವಸ್ತು-ಮೌಲ್ಯಗಳ ಗಣನೆಯ್ ಈ
ಪಣ್ಯಕ್ಕೆ ಗತಿಯ್ ಅನ್ತೋ? – ಮಂಕುತಿಮ್ಮ ॥