ತೇಜಸ್ವಿ 86 ಪತ್ರಗಳು |
But sorry I couldn’t use your font. There is no anger in my response to you; nor a false ‘vinaya’
- Believe me regards ananthamurthy
Original Message From: K.P. Purnachanda Tejasvi To: Ananthamurthy Sent: Saturday, July 13, 2002 3:53 PM Subject: Dear sir,
Dear Ananthamurthy Iam sending two font files attached to this letter. You have to install them to window font directory to read this Kannada letter. If you find any difficulty to install please kindly let me know.
Tejasvi
ಪ್ರಿಯ ಅನಂತಮೂರ್ತಿ
ಗೌರಿ ಜೊತೆ ನಿಮ್ಮ ಅಭಿಪ್ರಾಯಗಳ ಬಗ್ಗೆ ನನಗಿರುವ ತೀವ್ರ ಭಿನ್ನಾಭಿಪ್ರಾಯಗಳನ್ನು ತಿಳಿಸಿದ್ದು ನಿಜ. ಆದರೆ ನನಗೆ ಕೋಪ ಅಥವಾ ಸಿಟ್ಟು ಏನಿಲ್ಲ. ಆ ವರದಿಯಲ್ಲಿರುವ ಅವಹೇಳನದ, ತಿರಸ್ಕಾರದ ದನಿ ಮತ್ತು ಏಕವಚನ ಇತ್ಯಾದಿಗಳು ವರದಿಗಾರ್ತಿಯ ಕೊಡುಗೆ ಪತ್ರಿಕೆಯವರ ನುಡಿಗಟೇ ಈಗ ಬಯ್ತುಳ ಅಥವಾ ಮುಖಸ್ತುತಿಯಾಗಿರುತ್ತದೆ. ನಿಮಗೆ ಬೇಸರವಾಗಿದ್ದರೆ ಕ್ಷಮಿಸಿ. ಇನ್ನು ಅವರ ಪತ್ರಿಕೆಗೂ ಬರೆಯಬಲ್ಲೆ. ಅದರಿಂದ ಇನ್ನೊಂದು ಹಗರಣ ಸೃಷ್ಟಿಯಾಗು ವಂತಿದ್ದರೆ ಎಂದು ಸುಮ್ಮನಾದೆ. ನೀವು ಶ್ರೀ ಕುವೆಂಪುರವರ ಮತ್ತು ನಾವು ಕೆಲವರ ಜಾತ್ಯತೀತ ಧೋರಣೆಯನ್ನು ಬ್ರಾಹ್ಮಣ ದ್ವೇಷವೆಂದೂ ಬ್ರಾಹ್ಮಣ್ಯದ ನಾಶಕ್ಕೆ ಪ್ರಯತ್ನಿಸುವವರೆಂದೂ ಬಹುಕಾಲದಿಂದ ಪ್ರಚಾರ ಮಾಡುತ್ತಾ ಜಾತ್ಯತೀತ ಆಂದೋಳನಕ್ಕೆ ಬಹಳ ದೊಡ್ಡ ಅನ್ಯಾಯ ಮಾಡುತ್ತಿದ್ದೀರಿ. ಅಷ್ಟೇ ಅಲ್ಲ, ಎಲ್ಲ ಉದಾತ್ತ ಧೈಯ ಧೋರಣೆ, ಆದರ್ಶ ಮೊದಲಾದುವನ್ನು ಬ್ರಾಹ್ಮಣ್ಯದ ಬೇಲಿಯೊಳಗೆಳೆದು ವಿಜೃಂಭಿಸಲು ಪ್ರಯತ್ನಿಸುತ್ತಿದ್ದೀರಿ. ಇದು ನಿಮ್ಮೊಳಗಿರುವ ಶುದ್ದ ಜಾತಿ ಅಹಂಕಾರದ ಮೂಲದಿಂದ ಬಂದಿದ್ದು, ನಿಮ್ಮ ವಿನಯ, ಸನ್ನಡತೆಗಳ ಆಳದಲ್ಲಿ ಕುಳಿತಿರುವ ಇಂಥ ಕ್ರೂರ ವಾಂಛಗಳು ಹೇಗೆ ಹಠಾತ್ತಾಗಿ ಹೊಮ್ಮುತ್ತವೆ ಗಮನಿಸಿ. ಇವೆಲ್ಲಾ ಬ್ರಾಹ್ಮಣ್ಯವಾದರೆ ಅಸ್ಪಶ್ಯತೆ, ಸತಿಪದ್ಧತಿ, ಸ್ತ್ರೀ ಅಸಮಾನತೆ, ಸನಾತನ ಧರ್ಮದ ಮೂಲಭೂತವಾದ ಇವೆಲ್ಲಾ ಯಾರವು? ಶೂದ್ರರು ಮತ್ತು ದಲಿತರಲ್ಲವೆ. ಕುವೆಂಪು ಬ್ರಾಹ್ಮಣ ದ್ವೇಷಿಯಾಗಿದ್ದರೆ ರಾಮಾಯಣ ದರ್ಶನವನ್ನು ವೆಂಕಣ್ಣಯ್ಯನವರಿಗೆ ಸಮರ್ಪಿಸುತ್ತಿರಲಿಲ್ಲ. ನಮಗೆ ಬ್ರಾಹ್ಮಣ್ಯದ ನಾಶದಿಂದ ಆಗಬೇಕಾದದ್ದು ಏನಿದೆ. ಶೂದ್ರನ ಕೈಯಲ್ಲಿದ್ದ ಕಸಬರಿಕೆಯನ್ನೂ, ದಲಿತನ ತಲೆಯ ಮೇಲಿದ್ದ ಮಲದ ಬುಟ್ಟಿಯನ್ನೂ ಬ್ರಾಹ್ಮಣನ ಮೇಲೆ ಹೊರಿಸಿ ಸಂತುಷ್ಟರಾಗುವುದು ಜಾತ್ಯತೀತ ಧೋರಣೆಯೇ? ಕೆಲವು ಕ್ಷುಲ್ಲಕ ಅನುಕೂಲಗಳಿಗಾಗಿ ನೀವೂ ನಿಮ್ಮ ಪರಿಸರದವರೂ ಕುವೆಂಪು ಅವರ ಮೇಲೆ ಅಪಪ್ರಚಾರ ಮಾಡುತ್ತಾ ಭಾರತದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ತಡೆಯಲು ಪ್ರಯತ್ನಿಸುತ್ತಿದ್ದೀರಿ. ಕುವೆಂಪು ತಮ್ಮ ಕೊನೆಯ ವಿಶ್ವಮಾನವ ಸಂದೇಶದಲ್ಲಿ ಹೇಳಿರುವ ಸಪ್ತ ಸೂತ್ರಗಳಲ್ಲಿ ಯಾವ ಒಂದನ್ನಾದರೂ ತಮ್ಮ ಅಷ್ಟ ಮಠಗಳಲ್ಲಿರುವ ಒಬ್ಬರಾದರೂ ಮಠಾಧೀಶರು ಒಪ್ಪಿ ಅನುಷ್ಠಾನಕ್ಕೆ ತರಲು ತಯಾರಿದ್ದಾರೆಯೇ? ಬಿಜೆಪಿ ಪ್ರಾಬಲ್ಯ ಹೆಚ್ಚುತ್ತಿದ್ದಂತೆಯೇ ನಿಮಗೆ ಜಾತಿಗಳು ಶಾಶ್ವತ, ಜಾತೀಯತೆಯೂ ಕ್ರಿಯೇಟಿವ್ ಆಗಬಲ್ಲವು, ಜಾತಿಗಳನ್ನು ಸಾಂಸ್ಕೃತಿಕ ಕಾರಣಗಳಿಗಾಗಿ ಉಳಿಸಬೇಕು ಇತ್ಯಾದಿಗಳೆಲ್ಲಾ ಹೊರಬರಲಾರಂಭಿಸಿದುವಲ್ಲವೆ? ಈ ರೀತಿಯ ವರ್ತನೆಯಿಂದ ನೀವು ನಿಮ್ಮ ವಿಶ್ವಾಸಾರ್ಹತೆ ಯನ್ನೇ ಕಳಕೊಳ್ಳುತ್ತಿದ್ದೀರಿ, ಶ್ರೀ ಭೈರಪ್ಪನವರ ಬರವಣಿಗೆಯಲ್ಲಿ ಬೇಕಾದಷ್ಟು ನ್ಯೂನತೆ ಗಳಿರಬಹುದು. ಆದರೆ ಅವರು ಈ ರೀತಿ ವಿಶ್ವಾಸಾರ್ಹತೆಯನ್ನು ಕಳಕೊಂಡಿಲ್ಲ.
ನಿಮ್ಮ ತೇಜಸ್ವಿ
विश्वास-प्रस्तुतिः
ಅತ್ರ ಭೈರಪ್ಪವಿಷಯೇ ಕಿಮ್ ಉಚ್ಯತ ಇತಿ ಜಿಜ್ಞಾಸೇ। ಅಪಿ ಚಾನೇನ ಪುರಾನನ್ತಮೂರ್ತಿರ್ ಬ್ರಾಹ್ಮಣ್ಯರಕ್ಷಣಪರ ಆಸೀದ್ ಇತ್ಯ್ ಅನುಮಾತುಮ್ ಉಚಿತಮ್?! ವಿಚಿತ್ರಮ್! ಅಥವಾ ಸರ್ವಮ್ ಏತನ್ ಮಾತ್ಸರ್ಯಜನ್ಯಂ ಕಿಂಚನ ಕಲ್ಪನಮ್?
मूलम्
ಅತ್ರ ಭೈರಪ್ಪವಿಷಯೇ ಕಿಮ್ ಉಚ್ಯತ ಇತಿ ಜಿಜ್ಞಾಸೇ