ಪಂಕ್ತಿಪಾವನರು ವ್ಯಕ್ತಿವಿಭೂತಿಯ ಕಾರ್ಯಕ್ರಮಕ್ಕೆ ಕಚೇರಿಯ ಒತ್ತಡದ ಶುಕ್ರವಾರದ ಹಾಗರಣೆ, ಶನಿವಾರಕ್ಕೂ ಮುಂದುವರೆದ ಕೆಲಸದಿಂದ ಬರಲಾಗಲಿಲ್ಲ.
ಈಗಷ್ಟೇ ವ್ಯಕ್ತಿ ವಿಭೂತಿಯ ಭಾಗವನ್ನ ನೋಡಿದೆ. ಗಣೇಶರು ಭಾಗವಹಿಸಿದ ಹಿಂದಿನ ನೂರಾರು ಕಾರ್ಯಕ್ರಮಗಳಲ್ಲಿ ಗಣೇಶರನ್ನ ವೇದಿಕೆಯಮೇಲೆ ಕೂರಿಸಿ ಅವರ ಬಗ್ಗೆ ಒಂದೆರಡು ಪರಿಚಯಾತ್ಮಕವಾದ ಮಾತುಗಳನ್ನಾಡಲು ಔಪಚಾರಿಕವಾಗಿ ಈ ವಿದ್ಯಾಭ್ಯಾಸಮಾಡಿದ್ದಾರೆ, ಇಷ್ಟು ಭಾಷೆಗಳು ಗೊತ್ತು, ಇಷ್ಟು ಅವಧಾನಮಾಡಿದ್ದಾರೆ ಎಂದು ಮುಂದುವರೆಯುವಷ್ಟರಲ್ಲೇ.. ಈ ಮುಜುಗುರವನ್ನ ಸಹಿಸಲಾಗದೆ ಸ್ವಾಗತ ಮಾಡುವವರನ್ನ ಸಮಯ ವ್ಯರ್ಥಮಾಡಬೇಡಿರೆಂಬುವಂತೆ ತೀಕ್ಷ್ಣವಾಗಿ ತಡೆದು ಕಾರ್ಯಕ್ರಮ ಮುಂದುವರಿಸುವಂತೆ ಸೂಚಿಸಿದ/ಆಜ್ಙಾಪಿಸಿದ ಎಷ್ಟು ಸಂದರ್ಭಗಳನ್ನ ನಾವೆಲ್ಲಾ ನೋಡಿಲ್ಲ. ಆದರೆ ಒಂದು ಸಂದರ್ಭದಲ್ಲಿ ಅವರು ಹೇಳಿದ್ದುಂಟು “ನೀವು ಚೀಟಿಯಲ್ಲಿ ಬರೆದದ್ದನ್ನ ಓದಬೇಡಿ ಅದು ಅವಮಾನ ಮಾಡಿದಂತೆಯೆ, ಆತ್ಮಗತವಾಗಿದ್ದಲ್ಲಿ ಮಾತ್ರ ಪರಿಚಯಿಸಿ” ಎಂದು (ಗಣೇಶರೂ ಮರೆತಿರುತ್ತಾರೆ, ಇದೇ ರೀತಿ ನಡೆದ ಒಂದು ಸಂದರ್ಭವೆಂದರೆ ಗಿರಿಧರ ಕಜೆಯವರ ಪ್ರಶಾಂತಿ ನವಚಿಕಿತ್ಸಾಲಯದ ಉದ್ಘಾಟನೆಯ ಅವಧಾನ). ಗಣೇಶರ ಬಗ್ಗೆ ಯಾರು ಸರಿಯಾಗಿ ಹೇಳಬಲ್ಲರು? ಅಂತಹ ಸಂದರ್ಭ ಬರುವುದೇ? ಬರುವುದೇ ಇಲ್ಲವೇನೋ ಎಂದೇ ತಿಳಿದಿದ್ದೆ. ಬರವಣಿಗೆಯಲ್ಲಾದರೆ.. ಶತಾವಧಾನದ ಸಮಯದಲ್ಲಿ ಗಣೇಶರ ಬಗ್ಗೆ ಲೇಖನಗಳು, ಗಣೇಶರು ತಮ್ಮ ಅರವತ್ತನೇಯ ವರ್ಷಕ್ಕೆ ಕಾಲಿಟ್ಟಾಗ ಹಲವರು ಬರೆದ ಲೇಖನಗಳು, ಭೈರಪ್ಪನವರು, ಮಂಟಪರು ಬರೆದವು ವಿಶೇಷವಾದವು. ಆದರೆ ಗಣೇಶರನ್ನು ವೇದಿಕೆಯಮೇಲಿದ್ದಾಗ ಅವರಬಗ್ಗೆ ಅಚ್ಚುಕಟ್ಟಾಗಿ ಮೂರು ವಿಭಾಗಗಳ ಅರಿವು, ಇರವು, ನಲವುಗಳ ಕನ್ನಡನೆಲದ ಕಂಪನ್ನು ಸೂಚಿಸುವ ಮತ್ತು ವ್ಯಕ್ತಿವಿಭೂತಿಯೆಂಬ ಸಂಸ್ಕೃತದ ಅತ್ಯುತ್ತಮ ವ್ಯಕ್ತಿಚಿತ್ರಣದಲ್ಲಿ ಅವರ ವಿದ್ವತ್ತೆ ಸಾಧನೆಗಳೊಡನೆ ಅವರ ಗುಣಸ್ವಭಾವಗಳನ್ನು ಎಷ್ಟೋ ಒಡನಾಟದ ಸಂದರ್ಭಗಳನ್ನು ರಮಣೀಯವಾಗಿ ಬರೆಯಲು ಹಲವು ವರ್ಷಗಳಿಂದ ಸರಸ್ವತೀಪುತ್ರರಾದ ಗಣೇಶರಿಗೆ ಒಡಹುಟ್ಟಿದವನೇನೋ ಎಂಬಂತೆ ಇರುವ ಶಶಿಯಂತಹವನಿಗೆ ಅಥವಾ ಶಶಿಗೊಬ್ಬನಿಗೇ ಸಾಧ್ಯ.
ಇದನ್ನ ವಾಸು ಬಹಳ ಚೆನ್ನಾಗಿ ಪ್ರಸ್ತಾಪಿಸಿದ. ಶಶಿಯೇ ಬರೆಯಲು ಏಕೆ ಅರ್ಹನೆಂದು ತನ್ನ ಸಾಹಚರ್ಯದ ಸ್ವಾರಸ್ಯಗಳನ್ನೂ ಬೆರೆಸಿ ಮತ್ತೂ ಕಳೆಕಟ್ಟುವ ಹಾಗೆ ವಿಶ್ಲೇಷಿಸಿದ. ಗಣೇಶರ ಅಭಿಮಾನಿಗಳಿಗೆ ವಾಸುವಿನ ಮಾತುಗಳು ಹಿರಿಹಿರಿ ಹಿಗ್ಗಿನ ವಸ್ತುವಾಗಿದ್ದು ನಿಮಿಷನಿಮಿಷಕ್ಕೂ ನೋಡುಗರ ಸಂತಸದ ಚಪ್ಪಳೆಯಂದ ತಿಳಿಯಿತು. ಗಣೇಶರೊಡನೆ ಅವರೇ ಹೇಳುವಹಾಗೆ ‘ಸ್ನೇಹಿತರು ಹಾಸ್ಯಮಾಡಬೇಕು, ಸ್ವಾತಂತ್ರ್ಯ ತೆಗೆದುಕೊಳ್ಳಬೇಕು’ ಎನ್ನುವಲ್ಲಿ ವಾಸುವಿಗಿಂತ ಯಾರಿದ್ದಾರೆ. ಅವನ ಮಾತುಗಳಲ್ಲಿ ಪ್ರಾಮಾಣಿಕತೆ, ನಿಷ್ಠೆ, ಸ್ನೇಹ, ಪ್ರಬುದ್ಧತೆಗಳೊಡನೆ ಗಣೇಶರು ಸಪ್ತರ್ಷಿಗಳಲ್ಲಿ ಮೇನಕೆಯಿಲ್ಲದ ವಿಶ್ವಾಮಿತ್ರನಂತೆ, ಅವರ ಕೃತಿಗಳು ಧೃತರಾಷ್ಟ್ರನ ಸಂತನದ ಹಾಗೆ ಎಂದು ಆಮೇಲೆ ಏಕದೇಶೀಯವಾದ ಉಪಮೆಯೆಂದು ಆ ಹಾಸ್ಯಗಳನ್ನು ಬೆರೆಸಿ ಎಲ್ಲರ ಮನವನ್ನು ಗೆದ್ದ. 🙏🙏🙏👏👏👏
ಶಶಿಗೆ ಮತ್ತೊಮ್ಮೆ 🙏🙏🙏👏👏👌👌
ಕಶ್ಯಪ, ನಾನು ನೇರವಾಗಿ ಇಂದು ಚರ್ಚೆಯಾದ ೧೦ನೇಯ ಪಂಕ್ತಿಪಾವನ ಚಿತ್ರಣಕ್ಕೆ ಬಂದುಬಿಟ್ಟೆ. ಮೊದಲ ೯ ಜನರ ಪ್ರಸ್ತಾಪದ ನಿನ್ನ ಮಾತುಗಳನ್ನೂ ಕೇಳುತ್ತೇನೆ. ನಿನಗೂ, ಕಾರ್ಯಕ್ರಮ ನಿರೂಪಿಸಿಕೊಟ್ಟ ಹರಿಗೂ ಎಲ್ಲರಿಗೂ ಧನ್ಯವಾದಗಳು. 🙏🙏🙏👏👏
ಗಣೇಶರಿಗೆ ಅನಂತಾನಂತ 🙏🙏🙏🙏