Details
Brief biography of ranganAyakamma by her sister srIranganayaki akka. This was read at Pati’s Vaikuntha Samaradhane.
“ಮಾತೃದೇವೋ ಭವ”.
ಬೆಂಗಳೂರು
೧೯.೦೮.೨೦೧೬
ನಮ್ಮ ಭಾರತೀಯಸಂಸ್ಕ್ತಿಯಲ್ಲಿ ಮಾತೃವಿಗೆ ಮೊದಲನೆಯ ಸ್ಥಾನ ದೊರೆತಿದೆ. ಅದನ್ನು ಉಳಿಸಿಕೊಳ್ಳುವುದೇ ನಮ ಆದ್ಯಕರ್ತ್ಯವ್ಯ. ಏಕೆಂದರೆ ಮಾತೃವು ತನ್ನ ಮಕ್ಕಳನ್ನು ೯ ತಿಂಗಳು ಹೊತ್ತು, ಹೆತ್ತು, ಸಾಕಿ, ಸಲಹಿ, ಅವರ ಜೀವನದ ಉದ್ದಕ್ಕೂ ಅವರ ಪುರೋಭಿವೃದ್ಧಿಯನ್ನು ಆಶುಸುವಳು. ಅಂತರಹ ಮಾತೃವನ್ನು ಅವಳ ಜೀವವಿರುವವರೆಗೂ ಅವಳಿಗೆ ಒಂದು ತುತ್ತು ಅನ್ನ ನೀಡಿ ಕಾಪಾಡುವುದು ಮಕ್ಕಳ ಧರ್ಮ. ಮುಂದೆ ಅವರಿಗೂ ಇದೇ ರೀತಿಯ ವಯೋಧರ್ಮ ಬಂದು ಮಕ್ಕಳ ಅಧೀನರಾಗುತ್ತಾರೆ. ಮದುಕಿರುವಾಗ ಅವರನ್ನು ಪ್ರೀತಿಯಿಂದ ನೋಡಿಕೊಳ್ಳಅಬೇಕು. ಸತ್ತಮೀಲೆ ಅವರ ಫೋಟೋವಿಗೆ ಮಲ್ಲ್ಗೆ ಹಾರ ಹಾಕಿ ಭೂರಿ ಭೋಜನ ಮಾಡುವುದು ಅವರಿಗೆ ಶ್ರೇಯಸ್ಸಲ್ಲ. ಅದು ಬರೀ ಹೊಗಳಿಕೆಗೆ ಮಾತ್ರ. ವಯಸ್ಸಾದ ನಂತರ ಅವರನ್ನು ವೃದ್ಧಾಶ್ರಮಕ್ಕೆ ದೂಕುವುದು ಸರಿಯಲ್ಲ. ತಮ್ಮ ಕೈಲಾದಷ್ಟು ಅವರ ಸೇವೆ ಮಾಡುವುದು ಸೂಕ್ತ.
ಇದು ಒಂದು ಮಾದರಿ ಕುಟುಂಬವೆಂಂದು ಹೇಳಬಹುದು. ಉದರಲ್ಲಿ ಉತ್ಪ್ರೇಕ್ಷೆ ಏನೂ ಉಲ್ಲ. ನಾನು ಈ ಕುಟುಂಬದ ಸೂಕ್ಷ್ಮ ಪರಿಚಯ ಮಾಡಲು ಬಯಸುತ್ತೇನೆ.
ಶ್ರೀರಂಗರಾಜ ಮತ್ತು ಶ್ರೀಮತಿ ರಂಗನಾಯಕಮ್ಮ - ಇವರ ವಿವಾಹ ೧೯೩೯ ಜೂನ್ ೧೮ರಂದು ಹೊಳೇನರಸೀಪುರದಲ್ಲಿ ನಾಮ-ನಕ್ಷತ್ರದ ಮೇಲೆ ನಿಶ್ಚಯವಾಗಿ ನೆರವೇರಿತು. ಅಂತರಪಟ ಸರಿದಾಗಲೇ ಇಬ್ಬರ ಕಣ್ಣುಗಳ ಸಮಾಗಮವಾಯಿತು. ನಂತರ ವಿವಾಗವಾಗಿ ಮುಂಬೈ ಪಯಣ. ಅಲ್ಲಿ ಸುಮಾರ ೧೫-೧೬ ವರ್ಷಗಳು ಸಂಸಾಅರ ನಡೆಸಿಕೊಂಡುಬಂದರೇ ಸಪ್ತಸ್ವರಗಳ ಜನನವಾಯಿತು. ೭ನೇ-ಸ್ವರ-ಜನನ ಬೆಂಗಳೂರಿನಲ್ಲಿ ಆಯಿತು. ಮಕ್ಕಳಿಗೆ ಒಂದು ಡಿಗ್ರಿ ಪಡೆಯುವಷ್ಟು ಶಿಕ್ಷಣ ಕೊಟ್ಟರು. ಮಕ್ಕಳು ಅವರವರ ಕಾಲುಗಳ ಮೇಲೆ ನಿಂತು ಸಂಸಾರ ನದೆಸುವಂತೆ ಮಾಡಿದರು. ಚಾಮರಾಜಪೇಟೆ-ಚಿಕ್ಕಮನೆಯಲ್ಲಿ ವಾಸ. ಅಲ್ಲಿ ಛತ್ರದಂತೆ ಬಂದು ಹೋಗುವವರಿಗೆ ಲೆಖ್ಖವಿಲ್ಲ. ಎಲ್ಲರಿಗೂ ಒಂದೇ ವಿಧವಾದ ಊಟ ಉಪಚಾರ.
ಮಕ್ಕಳು ದೊಡ್ಡವರಾದಂತೆ ಒಬ್ಬೊಬ್ಬರಾಗಿ ವಿವಾಹವಾಯಿತು. ಸ್ಥಳಸಂಕೋಚದಿಂದ ಬೇರೆ ಬೇರೆ ಮನೆಗಳಲ್ಲಿ ವಾಸಮಾಡಭೇಕಾಯಿತು. ಒಬ್ಬೊಬ್ಬರಾಗಿ ನೂತನಗೃಹಗಳನ್ನು ಮಾಡಿಕೊಂಡು ಅಪ್ಪ, ಅಮ್ಮನೊಂದಿಗೆ ವಾಸಿಸಿದರು. ಇಬ್ಬರು ಮಕ್ಕಳು ವಿದೇಶದಲ್ಲಿ ಕೆಲಸ ಮಾಡಿ ಅಮ್ಮನಿಗೆ ದುಬಾಯಿ, ಅಬೂದಾಬಿ ದೇಶಗಳಿಗೆ ಕರೆದುಕೊಂಡು ಹೋಗಿ ಕೆಲಕಾಲ ಸಂತೋಷದಿಂದ ಇಟ್ಟುಕೊಂಡರು. ೨೦೦೦ದಲ್ಲಿ ಒಬ್ಬ ಪುತ್ರನ ವಿಯೋಗವಾಯಿತು. ೨೦೦೮ರಲ್ಲಿ ಪತಿ, ೨೦೧೧ರಲ್ಲಿ ಇನ್ನೊಬ್ಬ ಪಿತ್ರನನ್ನೂ ಕಳೆದುಕೊಂಡರು.
ಇವರು ಸಂಗೀತ, ಸಾಹಿತ್ಯದಲ್ಲಿ ಅಣ್ಣನ ಪ್ರೇರಣೆಯಿಂದ ಆಕಾಶವಾಣಿನಾಟಕ, laughing club ಗಳಲ್ಲಿ ಪಾತ್ರವಹಿಸಿ ಸಂತೋಷದಿಂದ ತುಮ್ಬು ಜೀವನ ನಡೆಸಿದರು. ಮೊಮ್ಮಕ್ಕಳು, ವಿದೇಶವಾಸ, ಅವರ ಮದುವೆ, ಮರಿಮಕ್ಕಳನ್ನು ನೋಡುವ ಯೋಗ ಪಡೆದರು. ಸೊಸೆಯಂದಿರನ್ನು ಹೆಣ್ಣುಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಇಂತಹ ಮಾತೆ ಇನ್ನಿಲ್ಲ. ಅವರ ನೆನಪು ಮಾತ್ರ ಅಷ್ಟೆ. ಅವರು ೨೦೧೬ ಆಗಸ್ಟ್ ೭ರಂದು ದೇವರ ಪಾದಾರವಿಂದಗಳಲ್ಲಿ ಲೀನವಾದರು. ಅವರ ಆತ್ಮಕ್ಕೆ ಶಾಂತಿ ದೊರೆಯಲಿ.
ಇತಿ ಅತ್ತಿಗೆ
ಶ್ರೀರಂಗಮ್ಮ ಶಾಂತಿಗ್ರಾಮ್