ಕಾವ್ಯದಲ್ಲಿ ರಮಣ

[[230]]
ಅಧ್ಯಾಯ : 16
ಲಿಖಿತ ಕೃತಿಗಳು

ಶ್ರೀ ಭಗವಾನರ ಎಲ್ಲ ಕೃತಿಗಳು ಗಾತ್ರದಲ್ಲಿ ಬಹಳ ತುಸುವೇ ಇವೆ ಮತ್ತು ಅವುಗಳಲ್ಲಿಯೂ ಕೂಡ ಬಹುಶಃ ಎಲ್ಲವೂ ಭಕ್ತರ ವಿಶಿಷ್ಟವಾದ ಅವಶ್ಯಕತೆಗಳನ್ನು ಪೂರೈಸುವ ಉದ್ದೇಶದಿಂದ ಬರೆಯಲಾಗಿದ್ದವು. ಭಗವಾನರು ಆಗುಂತುಕನಾದ ಕವಿಯೊಬ್ಬನ ಬಗ್ಗೆ ಮಾತನಾಡುವಾಗ ಈ ವಿಷಯದಲ್ಲಿ ಏನು ಹೇಳಿದರೆಂಬುದನ್ನು ದೇವರಾಜ ಮೊದಲಿಯಾರರು ತಮ್ಮ ದಿನಚರಿಯಲ್ಲಿ ಬರೆದಿಟ್ಟಿದ್ದಾರೆ:-

ಇವೆಲ್ಲವೂ ಬರೇ ಮನಸ್ಸಿನ ಚಟುವಟಿಕೆಯಷ್ಟೇ ಆಗಿವೆ. ಮನಸ್ಸನ್ನು ಹೆಚ್ಚೆಚ್ಚಾಗಿ ಕಾರ್ಯಪ್ರವೃತ್ತಗೊಳಿಸಿದಂತೆ ಮತ್ತು ಕವಿತೆಗಳನ್ನು ರಚಿಸುವಲ್ಲಿ ಹೆಚ್ಚೆಚ್ಚಾಗಿ ನೀವು ಯಶಸ್ಸನ್ನು ಗಳಿಸಿದಂತೆ ನಿಮಗೆ ಕಡಿಮೆ ಶಾಂತತೆಯು ಪ್ರಾಪ್ತವಾಗುತ್ತದೆ. ನೀವು ಶಾಂತಿಯನ್ನು ಪಡೆಯದೇ ಅಂಥ ಸಿದ್ಧಿಗಳನ್ನು ಸಂಪಾದಿಸುವುದರಿಂದ ಪ್ರಯೋಜನವಾದರೂ ಏನು?

ಆದರೆ, ಅಂಥ ಜನರಿಗೆ ನೀವು ಈ ರೀತಿ ಹೇಳಿದರೆ ಅದು ಅವರಿಗೆ ಒಗ್ಗುವದಿಲ್ಲ. ಅವರಿಗೆ ಸುಮ್ಮನುಳಿಯುವುದೆಂದರೆ ಆಗದು. ಅವರು ಪದ್ಯಗಳನ್ನು ರಚಿಸುತ್ತಲೇ ಇರಬೇಕು. ಏನೇ ಇದ್ದರೂ ಒಂದು ಪುಸ್ತಕವನ್ನು ಬರೆಯಬೇಕೆಂದಾಗಲೀ ಅಥವಾ ಪದ್ಯಗಳನ್ನು ರಚಿಸಬೇಕೆಂದಾಗಲೀ ನನಗೆ ಯಾವಾಗಲೂ ಅನಿಸುವುದೇ ಇಲ್ಲ. ನಾನು ರಚಿಸಿರುವ ಎಲ್ಲ ಕವಿತೆಗಳೂ ಯಾವುದೇ ಒಂದು ಏಶಿಷ್ಟವಾದ ಘಟನೆಗೆ ಸಂಬಂಧಿಸಿದಂತೆ, ಒಬ್ಬರಲ್ಲದಿದ್ದರೆ ಇನ್ನೊಬ್ಬರಿಂದ ಮಾಡಲಾದ ವಿನಂತಿಯ ಮೇರೆಗೆ ರಚಿತವಾದದ್ದಿರುತ್ತವೆ. ಈಗ ಅವೆಷ್ಟೋ ಭಾಷ್ಯಗಳನ್ನು ಮತ್ತು ಅನುವಾದಗಳನ್ನು ಹೊಂದಿರುವಂಥ ಉಳ್ಳದು ನಾರ್ಪದು (ಸದ್ದರ್ಶನಂ) ವಾದರೂ ಕೂಡಾ ಪುಸ್ತಕರೂಪದಲ್ಲಿ ಯೋಜಿತವಾದುದಲ್ಲವಾಗಿತ್ತು. ಆದರೆ ಬೇರೆ ಬೇರೆ ಸಮಯದಲ್ಲಿ ರಚಿತವಾದಂಥ ಮತ್ತು ತದನಂತರ ಮುರುಗನಾ‌ ಮತ್ತು ಇತರರಿಂದ ಪುಸ್ತಕರೂಪದಲ್ಲಿ ಅಳವಡಿಸಲ್ಪಟ್ಟಂಥ ಶ್ಲೋಕಗಳನ್ನು ಒಳಗೊಂಡಿದೆ. ಯಾರೊಬ್ಬರೂ ನನ್ನನ್ನು ಒತ್ತಾಯ ಪಡಿಸದೆಯೇ ಇದ್ದಕ್ಕಿದ್ದಂತೆ ತನ್ನಷ್ಟಕ್ಕೆ ತಾನೇ ನನ್ನಿಂದ ಹೊರಹೊಮ್ಮಿ ಬರೆಯುವುದಕ್ಕೆ ನನ್ನನ್ನು ಒತ್ತಾಯದಿಂದ ತೊಡಗಿಸಿದ ಪದ್ಯಗಳೆಂದರೆ ‘ಶ್ರೀ ಅರುಣಾಚಲನಿಗಾಗಿ ಹನ್ನೊಂದು ಶ್ಲೋಕಗಳು’ ಮತ್ತು ‘ಶ್ರೀ ಅರುಣಾಚಲನಿಗಾಗಿ ಎಂಟು ಶ್ಲೋಕಗಳು’, ಹನ್ನೊಂದು ಶ್ಲೋಕಗಳ ಪ್ರಾರಂಭಿಕ ಶಬ್ದಗಳು ಒಂದು ದಿನ ಮುಂಜಾನೆಯ ಸಮಯದಲ್ಲಿ ನನಗೆ ತಂತಾನೆಯೇ ಬಂದವು ಮತ್ತು ‘ಈ ಶಬ್ದಗಳಿಂದ ನಾನೇನು ಮಾಡಬೇಕಾಗಿದೆ?’ ಎಂದುಕೊಳ್ಳುತ್ತಾ ನಾನು ಅವುಗಳನ್ನು ಅದುಮಿ ಹಿಡಿಯಲು ಪ್ರಯತ್ನಿಸಿದರೂ ಕೂಡಾ ಅವುಗಳನ್ನು ಅದುಮಿ ಹಿಡಿಯಲು ಸಾಧ್ಯವಾಗದೇ ನಾನು ಅವುಗಳನ್ನು ಸೇರಿಸಿ ಶ್ಲೋಕವೊಂದನ್ನು ರಚಿಸಿದನು ಮತ್ತು ಯಾವುದೇ ಪ್ರಯತ್ನವಿಲ್ಲದೇ