ಶಿವ-ಪ್ರತಿಷ್ಠಾ ೧೯೦೯

ಶುಭಮಸ್ತು,
ಶಿವ ಪ್ರತಿಷ್ಠಾ ಮಹೋತ್ಸವ ಲಗ್ನ ಪತ್ರಿಕಾ

ನಮಸ್ತುಂಗಶುರಶ್ಚಂದ್ರಚಂದ್ರಚಾಮರಚಾರವೆ।
ತ್ರೈಲೋಕ್ಯನಗರಾರಂಭಮೂಲಸ್ತಂಭಾಯಶಂಭವೇ॥ ಮ॥ ರಾ॥ ——- ನ॥ ಕ್ಕೆ, ತಿಪ್ಪಸಂದ್ರದ ಚೌಡಂಭಟ್ಟನು ಮಾಡುವ

ಈವರಿಗೆ
ಉಭಯ ಕುಕಲ, ಸುಂಪ್ರತಂ.

ಕೀಲಕ ಸಂವತ್ಸರದ ಫಾಲ್ಗುಣಬಹುಳ ೪ ಗುರುವಾರ (ತಾ| 11-3-09)
ಪೂರ್ವಾಹ್ನ ೧೦ ಘಳಿಗ್ಗೆ ಸಲ್ಲುವ ವೃಷಭಲಗ್ನದಲ್ಲಿ,
ಮಾಗಡೀ ತಾಲ್ಲೂಕು ತಿಪ್ಪಸಂದ್ರದಲ್ಲಿ
ಶ್ರೀಮದುತ್ಸವರ ಸಮೇತ ಕಾಶೀ-ವಿಶ್ವೇಶ್ವರ-ಸ್ವಾಮಿಯ
ಪಂಚಾಯತನ ನೂತನ ಪ್ರತಿಷ್ಠಾ ಮಹೋತ್ಸವ
ಈಶ್ಷರ ಪ್ರೇರಣೆಯಿಂದ ನಡಿಯುವದ್ದರಿಂದ
ಈ ಮಹೋತ್ಸವಕ್ಕೆ ಅಲ್ಲಿಂದ ಬರತಕ್ಕ ಸರ್ವರೊಡನೆ ದಯಮಾಡಿ
ದೇವತಾಕಾರ್ಯವನ್ನ್ ಆಗಮಾಡಿಸಿ
ಈಶ್ವರಾನುಗ್ರಹಕ್ಕೆ ಪಾತ್ರರ್ ಆಗಿ
ತನ್ಮೂಲಕ ಮನಸ್ಸಂತೋಷ ಪಡಿಸಬೇಕಾಗಿ ಕೋರುವ
ಚೌಡಂಭಟ್ಟ,
ತಿಪ್ಪಸಂದ್ರ,
ಮಾಗಡಿ ತಾಲ್ಲೂಕು.