“ರಾಜಾರಾಮನು ರಾಜನು ಅಲ್ಲ
ಬೇಟೆಯಗಾರನು ತಿಳಿದಿಲ್ವಾ?
ರಾಮನು ಕ್ಷತ್ರಿಯಪುಂಗವನ್ ಅಲ್ಲ
ಸಾಮ್ಯವಾದಿಯು ಕೇಳಿಲ್ವಾ?
ರಾಜಧರ್ಮದ ಗನ್ಧವು ಇಲ್ಲ
ರಾಜಕೀಯವು ಎಲ್ಲಿನ್ದ?
ರಾಮನ ಗುರುಗಳು ಬ್ರಾಹ್ಮಣರಲ್ಲ
ಲೆನಿನ್ನು-ಮಾರ್ಕ್ಸು-ಮಾವುಗಳು!
ರಾಮನು ನಾಸ್ತಿಕ-ನಿನ್ದಕನಲ್ಲ
ತಾನೇ ನಾಸ್ತಿಕರನ್ತಿದ್ದ!
ರಾಮನು ರಾಕ್ಷಸದ್ವೇಷಿಯು ಅಲ್ಲ
ಹೇಳೋ ಕಾಮ್ರೇಡ್ “ಬಿಸ್ಮಿಲ್ಲಾ”!
ರಾಮನು ಗುಡಿಯಲಿ ಪೂಜಿಸಲಿಲ್ಲ
ಮತ್ತೇ ಬಾಬರಿ ಎಲ್ಲಿನ್ದ?
ರಾಮನ ಕಥೆಯನು ಬ್ರಾಹ್ಮಣಸೇನೆ
ತಿರುಚಿ ತಿರುಚಿ ಹೇಳಿದರು!”
ಇನ್ತು ಹೇಳುವ ಕಲಿಗತಿಕವಿಗಳ
ಮತಿ ಕಪಿಸೇವಿತ! ಸರಿಪಡಿಸು!