ಕಾಯೌ ಶ್ರೀ ಗೌರಿ ಕರುಣಾಲಹರಿ
ತೋಯಜಾಕ್ಷಿ ಶಂಕರೀಶ್ವರಿ
೧. ವೈಮಾನಿಕ-ಭಾಮಾರ್ಚಿತ-ಕೋಮಲ-ಕರ-ಪಾದೇ
ಶ್ರೀಮಾನಿತ+++(ಮಾನ್ವಿತ)+++-ಭೂಮಾಸ್ಪದೆ ಕಾಮಿತ-ಫಲದೇ
೨. ಶುಂಭಾದಿ-ಮದಾಂಭೋನಿಧಿ-ಕುಂಭಜ-ನಿಭ-ದೇವೀ
ಜಂಭಾಹಿತ+++(=इन्द्र)+++-ಸಂಭಾವಿತೆ ಶಾಂಭವಿ ಸುಭವಿ
೩. ಶ್ರೀ-ಜಯಚಾಮುಂಡಿಕೆ ಶ್ರೀ-ಜಯಚಾಮೆಂದ್ರ-
ನಾಮಾಂಕಿತ-ಭೂಮೀಂದ್ರ-ಲಲಾಮನ ಮುದದೇ
ಚಿರಮ್ ಅಭಿವರ್ಧತಾಂ ಯದುಕುಲಸನ್ತಾನಶ್ರೀಃ! (೩)
ಪರಿವರ್ತನೆಗಳು
ಶ್ಯಾಮಾಲಿಕೆ ಚಾಮುಂಡಿಕೆ ಸೊಮಕುಲಜ-ಕೃಷ್ಣ
ನಾಮಾಂಕಿತ-ಭೂಮೀಂದ್ರ-ಲಲಾಮನ ಮುದದೇ ||೩||
ಯದುವೀರ-ಶ್ರೀ-ಕೃಷ್ಣದತ್ತ-ಚಾಮೇಂದ್ರ-ನೃಪನ
ಮಹಿಶೂರ ಸಿರಿಪುರದ ಲಲಾಮನ ಮುದದೇ. |೩|